MyDugsiStart learning

Surah An-Nazi'at in Kannada: translation and audio

Surah 79 · النازعات · Those who drag forth · 46 verses

Surah An-Nazi'at verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah An-Nazi'at word by word in English.

Verse 1

وَٱلنَّـٰزِعَـٰتِ غَرْقًا

Transliteration wal-nāziʿāti gharqan

Kannada ಆಳಕ್ಕಿಳಿದು ನಿಷ್ಠುರವಾಗಿ ಎಳೆದೊಯ್ಯುವವರಾಣೆ!

Verse 2

وَٱلنَّـٰشِطَـٰتِ نَشْطًا

Transliteration wal-nāshiṭāti nashṭan

Kannada ಮೃದುವಾಗಿ ಹೊರತೆಗೆಯುವವರಾಣೆ!

Verse 3

وَٱلسَّـٰبِحَـٰتِ سَبْحًا

Transliteration wal-sābiḥāti sabḥan

Kannada ವೇಗವಾಗಿ ಈಜಿ ಬರುತ್ತಿರುವವರಾಣೆ!

Verse 4

فَٱلسَّـٰبِقَـٰتِ سَبْقًا

Transliteration fal-sābiqāti sabqan

Kannada ಧಾವಿಸಿ ಮುನ್ನೇರುತ್ತಿರುವವರಾಣೆ!

Verse 5

فَٱلْمُدَبِّرَٰتِ أَمْرًا

Transliteration fal-mudabirāti amran

Kannada (ಪ್ರಪಂಚದ) ಕಾರ್ಯಗಳನ್ನು ನಿಯಂತ್ರಿಸುವವರಾಣೆ!

Verse 6

يَوْمَ تَرْجُفُ ٱلرَّاجِفَةُ

Transliteration yawma tarjufu l-rājifatu

Kannada ಕಂಪಿಸುವುದೆಲ್ಲಾ ಕಂಪಿಸುವ ದಿನ.

Verse 7

تَتْبَعُهَا ٱلرَّادِفَةُ

Transliteration tatbaʿuhā l-rādifatu

Kannada ನಂತರದ ಕಾರ್ಯವು ಆದರ ಹಿಂದೆಯೇ ಬರುವುದು.

Verse 8

قُلُوبٌ يَوْمَئِذٍ وَاجِفَةٌ

Transliteration qulūbun yawma-idhin wājifatun

Kannada ಹೃದಯಗಳು ಅಂದು ಭಯದಿಂದ ತತ್ತರಿಸಿವೆ.

Verse 9

أَبْصَـٰرُهَا خَـٰشِعَةٌ

Transliteration abṣāruhā khāshiʿatun

Kannada ಅಂದು ಅವರ ಕಣ್ಣುಗಳು ಭಯಗ್ರಸ್ತವಾಗಿವೆ.

Verse 10

يَقُولُونَ أَءِنَّا لَمَرْدُودُونَ فِى ٱلْحَافِرَةِ

Transliteration yaqūlūna a-innā lamardūdūna fī l-ḥāfirati

Kannada ಅವರು ಈಗ ಕೇಳುವರು, (ಸತ್ತ ನಂತರ) ನಮ್ಮನ್ನು ಪೂರ್ವಸ್ಥಿತಿಗೆ ಮರಳಿಸಲಾಗುವುದೇ?!

Verse 11

أَءِذَا كُنَّا عِظَـٰمًا نَّخِرَةً

Transliteration a-idhā kunnā ʿiẓāman nakhiratan

Kannada ನಾವು ಜೀರ್ಣಿಸಿದ ಎಲುಬುಗಳಾಗಿ ಬಿಟ್ಟರೂ,

Verse 12

قَالُوا۟ تِلْكَ إِذًا كَرَّةٌ خَاسِرَةٌ

Transliteration qālū til'ka idhan karratun khāsiratun

Kannada ಹಾಗಾದರೆ ಅದೊಂದು ನಷ್ಟದ ಮರಳುವಿಕೆಯೇ ಸರಿ ಎನ್ನುತ್ತಾರವರು.

Verse 13

فَإِنَّمَا هِىَ زَجْرَةٌ وَٰحِدَةٌ

Transliteration fa-innamā hiya zajratun wāḥidatun

Kannada ಅದು ಒಂದೇ ಒಂದು ಭೀಕರ ಘರ್ಜನೆ ಮಾತ್ರ ವಾಗಿರುವುದು.

Verse 14

فَإِذَا هُم بِٱلسَّاهِرَةِ

Transliteration fa-idhā hum bil-sāhirati

Kannada ಅಷ್ಟರಲ್ಲೇ ಅವರು (ಸತ್ತವರು) ಭೂಮಿಯ ಮೇಲೆ ಬರುವರು.

Verse 15

هَلْ أَتَىٰكَ حَدِيثُ مُوسَىٰٓ

Transliteration hal atāka ḥadīthu mūsā

Kannada ತಮಗೆ ಮೂಸಾರ ವೃತ್ತಾಂತವು ತಲುಪಿದೆಯೇ?

Verse 16

إِذْ نَادَىٰهُ رَبُّهُۥ بِٱلْوَادِ ٱلْمُقَدَّسِ طُوًى

Transliteration idh nādāhu rabbuhu bil-wādi l-muqadasi ṭuwan

Kannada ಅಂದರೆ ಪವಿತ್ರ ‘ಥುವಾ’ ಕಣಿವೆಯಲ್ಲಿ ಅವರ ಪ್ರಭುವು ಅವರನ್ನು ಕರೆದಾಗ!

Verse 17

ٱذْهَبْ إِلَىٰ فِرْعَوْنَ إِنَّهُۥ طَغَىٰ

Transliteration idh'hab ilā fir'ʿawna innahu ṭaghā

Kannada ಫಿರ್‍ಔನನ ಬಳಿಗೆ ಹೋಗು. ಖಂಡಿತ, ಅವನು ಮಹಾ ಧಿಕ್ಕಾರಿಯಾಗಿದ್ದಾನೆ.

Verse 18

فَقُلْ هَل لَّكَ إِلَىٰٓ أَن تَزَكَّىٰ

Transliteration faqul hal laka ilā an tazakkā

Kannada ಶುದ್ಧನಾಗಲು ನೀನು ಬಯಸುತ್ತೀಯಾ? ಎಂದು ಕೇಳು.

Verse 19

وَأَهْدِيَكَ إِلَىٰ رَبِّكَ فَتَخْشَىٰ

Transliteration wa-ahdiyaka ilā rabbika fatakhshā

Kannada ನಿನಗೆ ನಾನು ನಿನ್ನ ಪ್ರಭುವಿನ ದಾರಿ ತೋರಿಸುವೆನು. ಆಗ ನೀನು ಅವನನ್ನು ಭಯಪಟ್ಟು ಜೀವಿಸುವೆ.

Verse 20

فَأَرَىٰهُ ٱلْـَٔايَةَ ٱلْكُبْرَىٰ

Transliteration fa-arāhu l-āyata l-kub'rā

Kannada ತರುವಾಯ ಮೂಸಾ ಅವನಿಗೆ ದೊಡ್ಡ ದೃಷ್ಟಾಂತವನ್ನು ತೋರಿಸಿದರು.

Verse 21

فَكَذَّبَ وَعَصَىٰ

Transliteration fakadhaba waʿaṣā

Kannada ಅವನು ನಿಷೇಧಿಸಿದನು ಹಾಗೂ ಧಿಕ್ಕರಿಸಿದನು.

Verse 22

ثُمَّ أَدْبَرَ يَسْعَىٰ

Transliteration thumma adbara yasʿā

Kannada ನಂತರ ಬಹಿರ್ಮುಖನಾದನು. ಕ್ಷೋಭೆಯಲ್ಲಿ ತೀವ್ರೋನ್ಮುಖನಾಗಿ.

Verse 23

فَحَشَرَ فَنَادَىٰ

Transliteration faḥashara fanādā

Kannada (ತನ್ನವರನ್ನು) ಒಗ್ಗೂಡಿಸಿದನು. ಕೂಗಿ ಕರೆದನು.

Verse 24

فَقَالَ أَنَا۠ رَبُّكُمُ ٱلْأَعْلَىٰ

Transliteration faqāla anā rabbukumu l-aʿlā

Kannada ನಾನೇ ನಿಮ್ಮ ಪರಮೋಚ್ಚ ಪ್ರಭು ಎಂದು ಘೋಷಿಸಿದನು.

Verse 25

فَأَخَذَهُ ٱللَّهُ نَكَالَ ٱلْـَٔاخِرَةِ وَٱلْأُولَىٰٓ

Transliteration fa-akhadhahu l-lahu nakāla l-ākhirati wal-ūlā

Kannada ಕೊನೆಗೆ ಅಲ್ಲಾಹನು ಆತನನ್ನು ಪಾರತ್ರಿಕ ಮತ್ತು ಐಹಿಕ ಶಿಕ್ಷೆಗಳಿಗೆ ಗುರಿಪಡಿಸಿದನು.

Verse 26

إِنَّ فِى ذَٰلِكَ لَعِبْرَةً لِّمَن يَخْشَىٰٓ

Transliteration inna fī dhālika laʿib'ratan liman yakhshā

Kannada ಈ ಹೇಳಿದುದರಲ್ಲಿ ಅಲ್ಲಾಹನನ್ನು ಭಯ ಪಡುವವರಿಗೆ ಖಂಡಿತ ಪಾಠವಿದೆ.

Verse 27

ءَأَنتُمْ أَشَدُّ خَلْقًا أَمِ ٱلسَّمَآءُ ۚ بَنَىٰهَا

Transliteration a-antum ashaddu khalqan ami l-samāu banāhā

Kannada ನಿಮ್ಮನ್ನು ಸೃಷ್ಟಿಸುವುದೋ ಅಥವಾ ಆಕಾಶವನ್ನು ಸೃಷ್ಟಿಸುವುದೋ ಹೆಚ್ಚು ಪ್ರಯಾಸಕರ? ಅವನು ಆಕಾಶವನ್ನು ಸೃಷ್ಟಿಸಿದನು.

Verse 28

رَفَعَ سَمْكَهَا فَسَوَّىٰهَا

Transliteration rafaʿa samkahā fasawwāhā

Kannada ಅದರ ಛಾವಣಿಯನ್ನು ಎತ್ತರಿಸಿದನು ಹಾಗೂ ಅದನ್ನು ಸಮರ್ಪಕಗೊಳಿಸಿದನು.

Verse 29

وَأَغْطَشَ لَيْلَهَا وَأَخْرَجَ ضُحَىٰهَا

Transliteration wa-aghṭasha laylahā wa-akhraja ḍuḥāhā

Kannada ಅವನು ಅದರ ರಾತ್ರಿಗೆ ಕತ್ತಲು ಕವಿಸಿದನು ಹಾಗೂ ಅದರ ಬೆಳಕನ್ನು ಪ್ರಕಟಗೊಳಿಸಿದನು.

Verse 30

وَٱلْأَرْضَ بَعْدَ ذَٰلِكَ دَحَىٰهَآ

Transliteration wal-arḍa baʿda dhālika daḥāhā

Kannada ಅದರ ನಂತರ ಭೂಮಿಯನ್ನು ಹಾಸಿದನು.

Verse 31

أَخْرَجَ مِنْهَا مَآءَهَا وَمَرْعَىٰهَا

Transliteration akhraja min'hā māahā wamarʿāhā

Kannada ಅದರಿಂದ ಅದರ ನೀರನ್ನೂ ಮೇವನ್ನೂ ಹೊರಡಿಸಿದನು.

Verse 32

وَٱلْجِبَالَ أَرْسَىٰهَا

Transliteration wal-jibāla arsāhā

Kannada ಅದರಲ್ಲಿ ಪರ್ವತಗಳನ್ನು ನಾಟಿದನು.

Verse 33

مَتَـٰعًا لَّكُمْ وَلِأَنْعَـٰمِكُمْ

Transliteration matāʿan lakum wali-anʿāmikum

Kannada ನಿಮ್ಮ ಹಾಗೂ ನಿಮ್ಮ ಜಾನುವಾರುಗಳ ಪ್ರಯೋಜನಕ್ಕಾಗಿ.

Verse 34

فَإِذَا جَآءَتِ ٱلطَّآمَّةُ ٱلْكُبْرَىٰ

Transliteration fa-idhā jāati l-ṭāmatu l-kub'rā

Kannada ಮುಂದೆ ಅತೀ ಭಯಂಕರವಾದ ವಿಪತ್ತು ಬಂದಾಗ,

Verse 35

يَوْمَ يَتَذَكَّرُ ٱلْإِنسَـٰنُ مَا سَعَىٰ

Transliteration yawma yatadhakkaru l-insānu mā saʿā

Kannada ಮನುಷ್ಯನು ತಾನು ಮಾಡಿದ್ದನ್ನು ಸ್ಮರಿಸುವ ದಿನವದು!

Verse 36

وَبُرِّزَتِ ٱلْجَحِيمُ لِمَن يَرَىٰ

Transliteration waburrizati l-jaḥīmu liman yarā

Kannada ಜ್ವಲಿಸುವ ನರಕವು ನೋಡುಗರಿಗೆ ಪ್ರದರ್ಶಿಸಲ್ಪಡುವ ದಿನ.

Verse 37

فَأَمَّا مَن طَغَىٰ

Transliteration fa-ammā man ṭaghā

Kannada ಯಾವನು ದುರ್ಮಾರ್ಗಿಯಾಗಿರುವನೋ,

Verse 38

وَءَاثَرَ ٱلْحَيَوٰةَ ٱلدُّنْيَا

Transliteration waāthara l-ḥayata l-dun'yā

Kannada ಹಾಗೂ ಕೇವಲ ಭೌತಿಕ ಜೀವನವನ್ನು ಆಯ್ದು ಕೊಂಡಿರುವನೋ,

Verse 39

فَإِنَّ ٱلْجَحِيمَ هِىَ ٱلْمَأْوَىٰ

Transliteration fa-inna l-jaḥīma hiya l-mawā

Kannada ಖಂಡಿತವಾಗಿಯೂ ನರಕವೇ ಅವನ ಅಂತಿಮ ನೆಲೆಯಾಗಿರುವುದು.

Verse 40

وَأَمَّا مَنْ خَافَ مَقَامَ رَبِّهِۦ وَنَهَى ٱلنَّفْسَ عَنِ ٱلْهَوَىٰ

Transliteration wa-ammā man khāfa maqāma rabbihi wanahā l-nafsa ʿani l-hawā

Kannada ಯಾವನು ತನ್ನ ಪ್ರಭುವಿನ ಸನ್ನಿಧಾನವನ್ನು ಭಯಪಟ್ಟಿರುವನೋ ಹಾಗೂ ದೇಹವನ್ನು ಕಾಮನೆಗಳಿಂದ ದೂರವಿರಿಸಿಕೊಳ್ಳುವನೋ,

Verse 41

فَإِنَّ ٱلْجَنَّةَ هِىَ ٱلْمَأْوَىٰ

Transliteration fa-inna l-janata hiya l-mawā

Kannada ಖಂಡಿತ, ಸ್ವರ್ಗವೇ ಅವನ ಅಂತಿಮ ನೆಲೆಯಾಗಿರುವುದು.

Verse 42

يَسْـَٔلُونَكَ عَنِ ٱلسَّاعَةِ أَيَّانَ مُرْسَىٰهَا

Transliteration yasalūnaka ʿani l-sāʿati ayyāna mur'sāhā

Kannada ಅವರು ಅಂತ್ಯದಿನ ಬರುವುದು ಯಾವಾಗ ಎಂದು ತಮ್ಮಲ್ಲಿ ಪ್ರಶ್ನಿಸುತ್ತಾರೆ.

Verse 43

فِيمَ أَنتَ مِن ذِكْرَىٰهَآ

Transliteration fīma anta min dhik'rāhā

Kannada ಅದನ್ನು ಅವರಿಗೆ ತಿಳಿಸಿಕೊಡುವ ಅರಿವು ತಮಗೆಲ್ಲಿದೆ?

Verse 44

إِلَىٰ رَبِّكَ مُنتَهَىٰهَآ

Transliteration ilā rabbika muntahāhā

Kannada ಅದರ ಅರಿವಿನ ಪಾರಮ್ಯವು ನಿಮ್ಮ ಪ್ರಭುವಿನ ಕಡೆಗಿದೆ.

Verse 45

إِنَّمَآ أَنتَ مُنذِرُ مَن يَخْشَىٰهَا

Transliteration innamā anta mundhiru man yakhshāhā

Kannada ಅಂತ್ಯದಿನವನ್ನು ಭಯಪಡುವವರಿಗೆ ತಾವು ಎಚ್ಚರಿಕೆಯನ್ನು ನೀಡುವವರು ಮಾತ್ರವಾಗಿರುವಿರಿ.

Verse 46

كَأَنَّهُمْ يَوْمَ يَرَوْنَهَا لَمْ يَلْبَثُوٓا۟ إِلَّا عَشِيَّةً أَوْ ضُحَىٰهَا

Transliteration ka-annahum yawma yarawnahā lam yalbathū illā ʿashiyyatan aw ḍuḥāhā

Kannada ಅಂತ್ಯದಿನವನ್ನು ಅವರು ಕಣ್ಣಾರೆ ಕಾಣುವ ದಿನ ನಾವು ಭೂಮಿಯಲ್ಲಿ ತಂಗಿದ್ದು ಕೇವಲ ಸಂಜೆ ಅಥವಾ ಮುಂಜಾನೆ ಮಾತ್ರವಾಗಿದೆಯೆಂದು ಅವರು ಭಾವಿಸುವರು.

Read Surah An-Nazi'at in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.