MyDugsiStart learning

Surah Al-Qiyamah in Kannada: translation and audio

Surah 75 · القيامة · The Resurrection · 40 verses

Surah Al-Qiyamah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Qiyamah word by word in English.

Verse 1

لَآ أُقْسِمُ بِيَوْمِ ٱلْقِيَـٰمَةِ

Transliteration lā uq'simu biyawmi l-qiyāmati

Kannada ನಾನು ಪುನರುತ್ಥಾನ ದಿನದ ಆಣೆ ಹಾಕಿ ಹೇಳುತ್ತೇನೆ.

Verse 2

وَلَآ أُقْسِمُ بِٱلنَّفْسِ ٱللَّوَّامَةِ

Transliteration walā uq'simu bil-nafsi l-lawāmati

Kannada ಸ್ವದೂಷಣೆ ಮಾಡಿಕೊಳ್ಳುತ್ತಿರುವ ಮನಸ್ಸಿನ ಆಣೆ ಹಾಕುತ್ತಿದ್ದೇನೆ.

Verse 3

أَيَحْسَبُ ٱلْإِنسَـٰنُ أَلَّن نَّجْمَعَ عِظَامَهُۥ

Transliteration ayaḥsabu l-insānu allan najmaʿa ʿiẓāmahu

Kannada ನಾವು ಅವನ ಎಲುಬುಗಳನ್ನು (ಅವು ದ್ರವಿಸಿದ ಬಳಿಕ) ಒಟ್ಟುಗೂಡಿಸಲಾರೆವೆಂದು ಮಾನವನು ಭಾವಿಸುತ್ತಿರುವನೇ?

Verse 4

بَلَىٰ قَـٰدِرِينَ عَلَىٰٓ أَن نُّسَوِّىَ بَنَانَهُۥ

Transliteration balā qādirīna ʿalā an nusawwiya banānahu

Kannada ಹೌದು, ನಾವು ಅವನ ಬೆರಳುಗಳ ತುದಿಗಳನ್ನು ಕೂಡಾ ಸರಿಯಾಗಿ ರಚಿಸಲು ಶಕ್ತರಾಗಿದ್ದೇವೆ.

Verse 5

بَلْ يُرِيدُ ٱلْإِنسَـٰنُ لِيَفْجُرَ أَمَامَهُۥ

Transliteration bal yurīdu l-insānu liyafjura amāmahu

Kannada ಆದರೆ ಮಾನವನು ತನ್ನ ಭವಿಷ್ಯವನ್ನು (ಪುನರುತ್ಥಾನವನ್ನು) ಸುಳ್ಳಾಗಿಸಲು ಬಯಸುತ್ತಿದ್ದಾನೆ.

Verse 6

يَسْـَٔلُ أَيَّانَ يَوْمُ ٱلْقِيَـٰمَةِ

Transliteration yasalu ayyāna yawmu l-qiyāmati

Kannada ಅವನು, ಪುನರುತ್ಥಾನ ದಿನ ಯಾವಾಗ? ಎಂದು ಕೇಳುತ್ತಾನೆ.

Verse 7

فَإِذَا بَرِقَ ٱلْبَصَرُ

Transliteration fa-idhā bariqa l-baṣaru

Kannada ಆದರೆ, ದೃಷ್ಟಿಗಳು ಸ್ಥಂಭೀಭೂತವಾದಾಗ!

Verse 8

وَخَسَفَ ٱلْقَمَرُ

Transliteration wakhasafa l-qamaru

Kannada ಚಂದ್ರನು ಕಳೆಗುಂದಿದಾಗ;

Verse 9

وَجُمِعَ ٱلشَّمْسُ وَٱلْقَمَرُ

Transliteration wajumiʿa l-shamsu wal-qamaru

Kannada ಮತ್ತು ಸೂರ್ಯ ಚಂದ್ರರು ಒಟ್ಟು ಸೇರಿಸಲ್ಪಟ್ಟಾಗ.

Verse 10

يَقُولُ ٱلْإِنسَـٰنُ يَوْمَئِذٍ أَيْنَ ٱلْمَفَرُّ

Transliteration yaqūlu l-insānu yawma-idhin ayna l-mafaru

Kannada ಆ ದಿನ ಮನುಷ್ಯನು ``ಎಲ್ಲಿಗೆ ಓಡಿ ಹೋಗಿ ರಕ್ಷೆ ಪಡೆಯಲಿ?’’ ಎಂದು ಹೇಳುವನು.

Verse 11

كَلَّا لَا وَزَرَ

Transliteration kallā lā wazara

Kannada ಖಂಡಿತ ಇಲ್ಲ, ಯಾವ ಅಭಯ ಸ್ಥಾನವೂ ಇಲ್ಲ.

Verse 12

إِلَىٰ رَبِّكَ يَوْمَئِذٍ ٱلْمُسْتَقَرُّ

Transliteration ilā rabbika yawma-idhin l-mus'taqaru

Kannada ಅಂದು ತನ್ನ ಪ್ರಭುವಿನ ಮುಂದೆಯೇ (ಎಲ್ಲರೂ) ಹೋಗಿ ತಲುಪಬೇಕಾಗುವುದು.

Verse 13

يُنَبَّؤُا۟ ٱلْإِنسَـٰنُ يَوْمَئِذٍۭ بِمَا قَدَّمَ وَأَخَّرَ

Transliteration yunabba-u l-insānu yawma-idhin bimā qaddama wa-akhara

Kannada ಅಂದು ಮಾನವನಿಗೆ ಅವನ ಹಿಂದಿನ ಮತ್ತು ಮುಂದಿನ ಎಲ್ಲಾ ಕರ್ಮಗಳನ್ನೂ ತೋರಿಸಿ ಕೊಡಲಾಗುವುದು.

Verse 14

بَلِ ٱلْإِنسَـٰنُ عَلَىٰ نَفْسِهِۦ بَصِيرَةٌ

Transliteration bali l-insānu ʿalā nafsihi baṣīratun

Kannada ಅಷ್ಟೇ ಅಲ್ಲ, ಮಾನವನು ತನಗೆ ವಿರುದ್ಧ ತಾನೇ ಒಂದು ರುಜುವಾಗಿದ್ದಾನೆ. (ಪುರಾವೆಯಾಗಿದ್ದಾನೆ)

Verse 15

وَلَوْ أَلْقَىٰ مَعَاذِيرَهُۥ

Transliteration walaw alqā maʿādhīrahu

Kannada ಅವನು ತನಗಾಗಿ ಎಷ್ಟೇ ನೆಪಗಳನ್ನೊಡ್ಡಿದ್ದರೂ ಸರಿ.

Verse 16

لَا تُحَرِّكْ بِهِۦ لِسَانَكَ لِتَعْجَلَ بِهِۦٓ

Transliteration lā tuḥarrik bihi lisānaka litaʿjala bihi

Kannada (ಸಂದೇಶವಾಹಕರೇ,) ತಾವು ಖುರ್‍ಆನನ್ನು ದೃತಿಯಿಂದ ಕಂಠಪಾಠ ಮಾಡಿಕೊಳ್ಳಲಿಕ್ಕಾಗಿ ತಮ್ಮ ನಾಲಗೆಯನ್ನು ಚಲಿಸಬೇಡಿರಿ.

Verse 17

إِنَّ عَلَيْنَا جَمْعَهُۥ وَقُرْءَانَهُۥ

Transliteration inna ʿalaynā jamʿahu waqur'ānahu

Kannada ಅದನ್ನು ಒಗ್ಗೂಡಿಸಿಕೊಡುವ ಮತ್ತು ಓದಿಸಿ ಕೊಡುವ ಹೊಣೆ ನಮ್ಮದೇ ಆಗಿರುತ್ತದೆ.

Verse 18

فَإِذَا قَرَأْنَـٰهُ فَٱتَّبِعْ قُرْءَانَهُۥ

Transliteration fa-idhā qaranāhu fa-ittabiʿ qur'ānahu

Kannada ಆದುದರಿಂದ ನಾವು ಅದನ್ನು ಓದಿ ಕೊಟ್ಟರೆ, ತಾವು ಅದರ ಪಠಣವನ್ನು ಅನುಗಮಿಸಿರಿ.

Verse 19

ثُمَّ إِنَّ عَلَيْنَا بَيَانَهُۥ

Transliteration thumma inna ʿalaynā bayānahu

Kannada ಬಳಿಕ ಅದನ್ನು ವಿವರಿಸುವ ಹೊಣೆಯೂ ನಮ್ಮ ಮೇಲಿದೆ.

Verse 20

كَلَّا بَلْ تُحِبُّونَ ٱلْعَاجِلَةَ

Transliteration kallā bal tuḥibbūna l-ʿājilata

Kannada ಖಂಡಿತ ಬೇಡ. ನೀವು ಕ್ಷಣಿಕವಾದ ಈ (ಐಹಿಕ) ಬದುಕನ್ನು ಪ್ರೀತಿಸುತ್ತೀರಿ.

Verse 21

وَتَذَرُونَ ٱلْـَٔاخِرَةَ

Transliteration watadharūna l-ākhirata

Kannada ಪರಲೋಕವನ್ನು ನೀವು ಬಿಟ್ಟು ಬಿಡುತ್ತೀರಿ.

Verse 22

وُجُوهٌ يَوْمَئِذٍ نَّاضِرَةٌ

Transliteration wujūhun yawma-idhin nāḍiratun

Kannada ಅಂದು ಕೆಲವು ಮುಖಗಳು ಪ್ರಸನ್ನಗೊಂಡಿವೆ.

Verse 23

إِلَىٰ رَبِّهَا نَاظِرَةٌ

Transliteration ilā rabbihā nāẓiratun

Kannada ತಮ್ಮ ಪ್ರಭುವಿನ ಕಡೆಗೆ ದೃಷ್ಟಿನೆಟ್ಟಿವೆ.

Verse 24

وَوُجُوهٌ يَوْمَئِذٍۭ بَاسِرَةٌ

Transliteration wawujūhun yawma-idhin bāsiratun

Kannada ಅಂದು ಕೆಲವು ಮುಖಗಳು ಖಿನ್ನವಾಗಿವೆ.

Verse 25

تَظُنُّ أَن يُفْعَلَ بِهَا فَاقِرَةٌ

Transliteration taẓunnu an yuf'ʿala bihā fāqiratun

Kannada ಮತ್ತು ತಮ್ಮೊಂದಿಗೆ ಅಮಿತಾಪತ್ತಿನಿಂದ ವರ್ತಿಸಲಾಗುವುದೆಂದು (ಯಾವುದೋ ದುರಂತ ತಮ್ಮನ್ನು ಬಾಧಿಸಲಿವೆ ಎಂದು) ಭಾವಿಸುತ್ತಿರುವುವು.

Verse 26

كَلَّآ إِذَا بَلَغَتِ ٱلتَّرَاقِىَ

Transliteration kallā idhā balaghati l-tarāqiya

Kannada ತಿಳಿಯಿರಿ, ಪ್ರಾಣವು ಗಂಟಲಿಗೆ ತಲಪಿದಾಗ,

Verse 27

وَقِيلَ مَنْ ۜ رَاقٍ

Transliteration waqīla man rāqin

Kannada ``ಯಾರಾದರೂ ಮಂತ್ರಿಸುವವನು ಇದ್ದಾನೆಯೇ?’’ ಎಂದು ಕೇಳಲಾದಾಗ,

Verse 28

وَظَنَّ أَنَّهُ ٱلْفِرَاقُ

Transliteration waẓanna annahu l-firāqu

Kannada ಇದು ತನ್ನ ಅಗಲುವ ಸಮಯವೆಂದು ಅವನು ಖಚಿತಪಡಿಸಿಕೊಂಡಾಗ,

Verse 29

وَٱلْتَفَّتِ ٱلسَّاقُ بِٱلسَّاقِ

Transliteration wal-tafati l-sāqu bil-sāqi

Kannada ಮತ್ತು ಮೊಣಕಾಲು ಮೊಣಕಾಲಿನೊಂದಿಗೆ ಸೇರಿಕೊಂಡಾಗ,

Verse 30

إِلَىٰ رَبِّكَ يَوْمَئِذٍ ٱلْمَسَاقُ

Transliteration ilā rabbika yawma-idhin l-masāqu

Kannada ಅಂದು ತಮ್ಮ ಪ್ರಭುವಿನ ಕಡೆಗೆ (ಅವನನ್ನು) ಕೊಂಡುಹೋಗಲಾಗುವುದು.

Verse 31

فَلَا صَدَّقَ وَلَا صَلَّىٰ

Transliteration falā ṣaddaqa walā ṣallā

Kannada ಆದರೆ, ಅವನಾಗ ಸತ್ಯವನ್ನು ಅಂಗೀಕರಿಸಲೂ ಇಲ್ಲ, ನಮಾಝ್ ನಿರ್ವಹಿಸಲೂ ಇಲ್ಲ.

Verse 32

وَلَـٰكِن كَذَّبَ وَتَوَلَّىٰ

Transliteration walākin kadhaba watawallā

Kannada ವಾಸ್ತವದಲ್ಲಿ, ಅವನು (ಸತ್ಯವನ್ನು) ಸುಳ್ಳಾಗಿಸಿ ದನು ಮತ್ತು ವಿಮುಖನಾದನು.

Verse 33

ثُمَّ ذَهَبَ إِلَىٰٓ أَهْلِهِۦ يَتَمَطَّىٰٓ

Transliteration thumma dhahaba ilā ahlihi yatamaṭṭā

Kannada ಮಾತ್ರವಲ್ಲ, ಅವನು ದುರಭಿಮಾನ ತೋರಿಕೊಂಡು ತನ್ನ ಕುಟುಂಬದ ಕಡೆಗೆ ನಡೆದುಬಿಟ್ಟನು.

Verse 34

أَوْلَىٰ لَكَ فَأَوْلَىٰ

Transliteration awlā laka fa-awlā

Kannada (ಓ ಮಾನವ ನೀನು ಅನಿಷ್ಟಪಡುವಂತಹುದು) ನಿನಗೆ ಒದಗಿ ಬಂದಿದೆ. ಅದು ನಿನಗೆ ತಕ್ಕುದಾಗಿಯೇ ಇದೆ.

Verse 35

ثُمَّ أَوْلَىٰ لَكَ فَأَوْلَىٰٓ

Transliteration thumma awlā laka fa-awlā

Kannada ಪುನಃ ಅದು ನಿನಗೆ ಒದಗಿ ಬಂದಿದೆ. ಅದು ನಿನಗೆ ತಕ್ಕುದಾಗಿಯೇ ಇದೆ.

Verse 36

أَيَحْسَبُ ٱلْإِنسَـٰنُ أَن يُتْرَكَ سُدًى

Transliteration ayaḥsabu l-insānu an yut'raka sudan

Kannada ತನ್ನನ್ನು ಸುಮ್ಮನೆ ಬಿಟ್ಟು ಬಿಡಬಹುದೆಂದು ಮಾನವನು ಭಾವಿಸಿಕೊಂಡಿರುವನೇ?

Verse 37

أَلَمْ يَكُ نُطْفَةً مِّن مَّنِىٍّ يُمْنَىٰ

Transliteration alam yaku nuṭ'fatan min maniyyin yum'nā

Kannada ಅವನು (ಮಾತೆಯ ಗರ್ಭಾಶಯದೊಳಗೆ) ಸುರಿಯಲ್ಪಡುವ ಒಂದು ಶುಕ್ಲ ಬಿಂದು ಮಾತ್ರವಾಗಿರಲಿಲ್ಲವೇ?

Verse 38

ثُمَّ كَانَ عَلَقَةً فَخَلَقَ فَسَوَّىٰ

Transliteration thumma kāna ʿalaqatan fakhalaqa fasawwā

Kannada ನಂತರ ಅವನು ಒಂದು ರಕ್ತ ಪಿಂಡವಾದನು. (ಭ್ರೂಣವಾದನು) ಅನಂತರ ಅಲ್ಲಾಹನು ಅವನನ್ನು (ಒಂದು ಮನುಷ್ಯನಾಗಿ) ಸೃಷ್ಟಿಸಿ ರೂಪುಗೊಳಿಸಿದನು.

Verse 39

فَجَعَلَ مِنْهُ ٱلزَّوْجَيْنِ ٱلذَّكَرَ وَٱلْأُنثَىٰٓ

Transliteration fajaʿala min'hu l-zawjayni l-dhakara wal-unthā

Kannada ಆ ರೀತಿಯಲ್ಲಿ ಅವನು ಅದರಿಂದ ಪುರುಷ ಮತ್ತು ಸ್ತ್ರೀ ಎಂಬೆರಡು ವರ್ಗವನ್ನು ಮಾಡಿದನು.

Verse 40

أَلَيْسَ ذَٰلِكَ بِقَـٰدِرٍ عَلَىٰٓ أَن يُحْـِۧىَ ٱلْمَوْتَىٰ

Transliteration alaysa dhālika biqādirin ʿalā an yuḥ'yiya l-mawtā

Kannada (ಅಂತಹ) ಅಲ್ಲಾಹನು ಮೃತರನ್ನು ಪುನಃ ಜೀವಂತಗೊಳಿಸಲು ಶಕ್ತನಲ್ಲವೇ?

Read Surah Al-Qiyamah in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.