Surah Ash-Shu'ara in Kannada: translation and audio
Surah 26 · الشعراء · The Poets · 227 verses
Surah Ash-Shu'ara verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ash-Shu'ara word by word in English.
Verse 1
طسٓمٓ
Transliteration tta-seen-meem
Kannada ತ್ವಾ ಸೀನ್ ಮೀಮ್.
Verse 2
تِلْكَ ءَايَـٰتُ ٱلْكِتَـٰبِ ٱلْمُبِينِ
Transliteration til'ka āyātu l-kitābi l-mubīni
Kannada ಮಹತ್ತರವಾದ ಈ ಅಧ್ಯಾಯದ ವಾಕ್ಯಗಳು ಸುಸ್ಪಷ್ಟವಾದ ಖುರ್ಆನ್ ಗ್ರಂಥದ ಸೂಕ್ತಗ ಳಾಗಿವೆ.
Verse 3
لَعَلَّكَ بَـٰخِعٌ نَّفْسَكَ أَلَّا يَكُونُوا۟ مُؤْمِنِينَ
Transliteration laʿallaka bākhiʿun nafsaka allā yakūnū mu'minīna
Kannada (ಸಂದೇಶವಾಹಕರೇ,) ಇವರು ಸತ್ಯವಿಶ್ವಾಸವನ್ನು ಸ್ವೀಕರಿಸುವುದಿಲ್ಲವೆಂಬ ಕಾರಣಕ್ಕೆ ನೀವು ನಿಮ್ಮ ಜೀವವನ್ನೇ ಅಪಾಯಕ್ಕೆ ಎಳೆಯಬೇಡಿರಿ.
Verse 4
إِن نَّشَأْ نُنَزِّلْ عَلَيْهِم مِّنَ ٱلسَّمَآءِ ءَايَةً فَظَلَّتْ أَعْنَـٰقُهُمْ لَهَا خَـٰضِعِينَ
Transliteration in nasha nunazzil ʿalayhim mina l-samāi āyatan faẓallat aʿnāquhum lahā khāḍiʿīna
Kannada ನಾವಿಚ್ಛಿಸಿದರೆ ಇವರ ಮೇಲೆ ಆಕಾಶದಿಂದ ದೃಷ್ಟಾಂತವನ್ನು ಇಳಿಸಿ, ಅದಕ್ಕೆ ಇವರ ಕೊರಳು ಗಳು ಮಣಿಯುವಂತೆ ಮಾಡುತ್ತಿದ್ದೆವು.
Verse 5
وَمَا يَأْتِيهِم مِّن ذِكْرٍ مِّنَ ٱلرَّحْمَـٰنِ مُحْدَثٍ إِلَّا كَانُوا۟ عَنْهُ مُعْرِضِينَ
Transliteration wamā yatīhim min dhik'rin mina l-raḥmāni muḥ'dathin illā kānū ʿanhu muʿ'riḍīna
Kannada ಇವರ ಬಳಿಗೆ ದಯಾನಿಧಿಯಾದ ಅಲ್ಲಾಹನ ಕಡೆ ಯಿಂದ ಹೊಸತಾಗಿ ಯಾವ ಉಪದೇಶ ಬಂದರೂ ಇವರು ಅದರಿಂದ ವಿಮುಖರಾಗುತ್ತಾರೆ.
Verse 6
فَقَدْ كَذَّبُوا۟ فَسَيَأْتِيهِمْ أَنۢبَـٰٓؤُا۟ مَا كَانُوا۟ بِهِۦ يَسْتَهْزِءُونَ
Transliteration faqad kadhabū fasayatīhim anbāu mā kānū bihi yastahziūna
Kannada ಕೊನೆಗೆ ಇವರು ಸುಳ್ಳಾಗಿಸಿ ಬಿಟ್ಟರು. ಆದ್ದರಿಂದ ಇವರು ಯಾವುದನ್ನು ಪರಿಹಾಸ್ಯ ಮಾಡುತ್ತಿರು ವರೋ ಅದರ ವೃತ್ತಾಂತವು ಇವರಿಗೆ ಸದ್ಯವೇ ತಿಳಿದು ಬರಲಿದೆ.
Verse 7
أَوَلَمْ يَرَوْا۟ إِلَى ٱلْأَرْضِ كَمْ أَنۢبَتْنَا فِيهَا مِن كُلِّ زَوْجٍ كَرِيمٍ
Transliteration awalam yaraw ilā l-arḍi kam anbatnā fīhā min kulli zawjin karīmin
Kannada ಎಲ್ಲ ವಿಧದ ಅತ್ಯುತ್ತಮ ಸಸ್ಯಗಳನ್ನು ನಾವು ಇಲ್ಲಿ ಎಷ್ಟೆಲ್ಲ ಬೆಳೆಸಿದ್ದೇವೆ ಎಂದು ಇವರು ಭೂಮಿಯ ಕಡೆಗೆ ನೋಡುವುದಿಲ್ಲವೇ?
Verse 8
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
Transliteration inna fī dhālika laāyatan wamā kāna aktharuhum mu'minīna
Kannada ಇದರಲ್ಲಿ ಖಂಡಿತ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ವಿಶ್ವಾಸವಿರಿಸುವವರಲ್ಲ.
Verse 9
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Transliteration wa-inna rabbaka lahuwa l-ʿazīzu l-raḥīmu
Kannada ಖಂಡಿತ ನಿಮ್ಮ ಪ್ರಭು ಪ್ರಬಲನೂ ಕರುಣಾನಿಧಿ ಯೂ ಆಗಿರುವನು.
Verse 10
وَإِذْ نَادَىٰ رَبُّكَ مُوسَىٰٓ أَنِ ٱئْتِ ٱلْقَوْمَ ٱلظَّـٰلِمِينَ
Transliteration wa-idh nādā rabbuka mūsā ani i'ti l-qawma l-ẓālimīna
Kannada ನಿನ್ನ ಪ್ರಭು ಮೂಸಾರನ್ನು ಕರೆದು “ನೀವು ಅಕ್ರಮಿ ಜನಾಂಗದ ಅಂದರೆ ಫಿರ್ಔನನ ಜನಾಂಗದ ಕಡೆಗೆ ಹೋಗಿರಿ” ಹೇಳಿದ ಸಂದರ್ಭವನ್ನು ನೆನಪಿಸಿರಿ.
Verse 11
قَوْمَ فِرْعَوْنَ ۚ أَلَا يَتَّقُونَ
Transliteration qawma fir'ʿawna alā yattaqūna
Kannada ಅಂದರೆ ಫಿರ್ಔನನ ಜನಾಂಗದ ಕಡೆಗೆ. ‘ಅವರು ಅಲ್ಲಾಹನನ್ನು ಭಯ ಪಡುವುದಿಲ್ಲವೇ?’ ಎಂದು ಕೇಳಿರಿ”.
Verse 12
قَالَ رَبِّ إِنِّىٓ أَخَافُ أَن يُكَذِّبُونِ
Transliteration qāla rabbi innī akhāfu an yukadhibūni
Kannada ಆಗ ಅವರು ಹೇಳಿದರು, `ನನ್ನ ಪ್ರಭೂ, ಅವರು ನನ್ನನ್ನು ಸುಳ್ಳಾಗಿಸುವರೆಂಬ ಭಯ ನನಗಿದೆ.
Verse 13
وَيَضِيقُ صَدْرِى وَلَا يَنطَلِقُ لِسَانِى فَأَرْسِلْ إِلَىٰ هَـٰرُونَ
Transliteration wayaḍīqu ṣadrī walā yanṭaliqu lisānī fa-arsil ilā hārūna
Kannada ನನ್ನ ಎದೆ ಮುದುಡುತ್ತಿದೆ. ನನ್ನ ನಾಲಿಗೆ ಚಲಿಸು ವುದಿಲ್ಲ. ಆದ್ದರಿಂದ ಹಾರೂನರಿಗೂ ಸಂದೇಶ ಕಳುಹಿಸು.
Verse 14
وَلَهُمْ عَلَىَّ ذَنۢبٌ فَأَخَافُ أَن يَقْتُلُونِ
Transliteration walahum ʿalayya dhanbun fa-akhāfu an yaqtulūni
Kannada ಮಾತ್ರವಲ್ಲ ಅವರಿಗೆ ನನ್ನ ಮೇಲೆ ಒಂದು ಅಪ ರಾಧದ ಆರೋಪವಿದೆ. ಆದುದರಿಂದ ಅವರು ನನ್ನನ್ನು ಕೊಂದು ಬಿಡುವರೆಂದು ನಾನು ಹೆದರುತ್ತೇನೆ’’.
Verse 15
قَالَ كَلَّا ۖ فَٱذْهَبَا بِـَٔايَـٰتِنَآ ۖ إِنَّا مَعَكُم مُّسْتَمِعُونَ
Transliteration qāla kallā fa-idh'habā biāyātinā innā maʿakum mus'tamiʿūna
Kannada ಆಗ ಅಲ್ಲಾಹನು ಹೇಳಿದನು; `ಖಂಡಿತ ಅದೇನೂ ನಡೆಯದು. ನೀವಿಬ್ಬರೂ ನಮ್ಮ ನಿದರ್ಶನಗಳನ್ನು ತೆಗೆದುಕೊಂಡು ಹೋಗಿರಿ. ನಾವು ನಿಮ್ಮೊಂದಿಗೇ ಇದ್ದೇವೆ. ಎಲ್ಲವನ್ನೂ ಆಲಿಸುತ್ತಿದ್ದೇವೆ.
Verse 16
فَأْتِيَا فِرْعَوْنَ فَقُولَآ إِنَّا رَسُولُ رَبِّ ٱلْعَـٰلَمِينَ
Transliteration fatiyā fir'ʿawna faqūlā innā rasūlu rabbi l-ʿālamīna
Kannada ಫಿರ್ಔನನ ಬಳಿಗೆ ಹೋಗಿರಿ. ಆಮೇಲೆ ಹೀಗೆ ಹೇಳಿರಿ; ಸರ್ವ ಜಗತ್ತಿನ ಪ್ರಭು ಅಲ್ಲಾಹನ ದೂತರು ನಾವು.
Verse 17
أَنْ أَرْسِلْ مَعَنَا بَنِىٓ إِسْرَٰٓءِيلَ
Transliteration an arsil maʿanā banī is'rāīla
Kannada ನೀನು ಇಸ್ರಾಈಲ ಜನಾಂಗವನ್ನು ನಮ್ಮ ಜೊತೆ ಕಳುಹಿಸಿಕೊಡು.
Verse 18
قَالَ أَلَمْ نُرَبِّكَ فِينَا وَلِيدًا وَلَبِثْتَ فِينَا مِنْ عُمُرِكَ سِنِينَ
Transliteration qāla alam nurabbika fīnā walīdan walabith'ta fīnā min ʿumurika sinīna
Kannada ಫಿರ್ಔನನು ಹೇಳಿದನು; “ನೀನು ಮಗುವಾಗಿ ದ್ದಾಗ ನಮ್ಮ ಜೊತೆಗೆ ನೆಲೆಗೊಟ್ಟು ನಾವು ನಿನ್ನನ್ನು ಸಾಕಿರಲಿಲ್ಲವೇ? ನಿನ್ನ ಜೀವಮಾನದ ಅನೇಕ ವರ್ಷಗಳನ್ನು ನೀನು ನಮ್ಮಲ್ಲಿ ಕಳೆದಿರುವೆ.
Verse 19
وَفَعَلْتَ فَعْلَتَكَ ٱلَّتِى فَعَلْتَ وَأَنتَ مِنَ ٱلْكَـٰفِرِينَ
Transliteration wafaʿalta faʿlataka allatī faʿalta wa-anta mina l-kāfirīna
Kannada ಅನಂತರ ನೀನು ಮಾಡುವುದೆಲ್ಲವನ್ನೂ ಮಾಡಿದೆ. ನೀನು ಮಹಾಕೃತಘ್ನನಾಗಿರುವೆ’’.
Verse 20
قَالَ فَعَلْتُهَآ إِذًا وَأَنَا۠ مِنَ ٱلضَّآلِّينَ
Transliteration qāla faʿaltuhā idhan wa-anā mina l-ḍālīna
Kannada ಆಗ ಮೂಸಾ ಹೇಳಿದರು; “ನಾನು ಆಗ ಆ ಕೃತ್ಯವನ್ನು ಮಾಡಿದ್ದು ನಿಜ. ಆದರೆ ಅಂದು ನಾನು ಅಜ್ಞರಲ್ಲಿ ಸೇರಿದ್ದೆ.
Verse 21
فَفَرَرْتُ مِنكُمْ لَمَّا خِفْتُكُمْ فَوَهَبَ لِى رَبِّى حُكْمًا وَجَعَلَنِى مِنَ ٱلْمُرْسَلِينَ
Transliteration fafarartu minkum lammā khif'tukum fawahaba lī rabbī ḥuk'man wajaʿalanī mina l-mur'salīna
Kannada ತರುವಾಯ ನಾನು ನಿಮಗೆ ಹೆದರಿ ಓಡಿಹೋದೆ. ಆ ಬಳಿಕ ನನ್ನ ಪ್ರಭು ನನಗೆ ವಿಜ್ಞಾನವನ್ನು ದಯಪಾಲಿಸಿದನು. ನನ್ನನ್ನು ಸಂದೇಶವಾಹಕ ರಲ್ಲಿ ಸೇರಿಸಿದನು.
Verse 22
وَتِلْكَ نِعْمَةٌ تَمُنُّهَا عَلَىَّ أَنْ عَبَّدتَّ بَنِىٓ إِسْرَٰٓءِيلَ
Transliteration watil'ka niʿ'matun tamunnuhā ʿalayya an ʿabbadtta banī is'rāīla
Kannada ನೀನು ಇಸ್ರಾಈಲ ಜನಾಂಗವನ್ನು ಗುಲಾಮರನ್ನಾಗಿ ಮಾಡಿಕೊಂಡದ್ದೇ ನೀನು ನನಗೆ ಮಾಡಿದ ಉಪಕಾರ” .
Verse 23
قَالَ فِرْعَوْنُ وَمَا رَبُّ ٱلْعَـٰلَمِينَ
Transliteration qāla fir'ʿawnu wamā rabbu l-ʿālamīna
Kannada ಫಿರ್ಔನನು ‘ಸರ್ವ ಜಗತ್ತಿನ ಪ್ರಭು ಎಂದ ರೇನು?’ ಎಂದು ಕೇಳಿದನು.
Verse 24
قَالَ رَبُّ ٱلسَّمَـٰوَٰتِ وَٱلْأَرْضِ وَمَا بَيْنَهُمَآ ۖ إِن كُنتُم مُّوقِنِينَ
Transliteration qāla rabbu l-samāwāti wal-arḍi wamā baynahumā in kuntum mūqinīna
Kannada ಮೂಸಾ `ಭೂಮಿ-ಆಕಾಶಗಳ ಪ್ರಭು ಮತ್ತು ಅವುಗಳ ನಡುವೆ ಇರುವ ಸಕಲದರ ಪ್ರಭು. ನೀವು ದೃಢವಿಶ್ವಾಸವಿರಿಸುವವರಾಗಿದ್ದರೆ’, ಎಂದು ಹೇಳಿದರು.
Verse 25
قَالَ لِمَنْ حَوْلَهُۥٓ أَلَا تَسْتَمِعُونَ
Transliteration qāla liman ḥawlahu alā tastamiʿūna
Kannada ಫಿರ್ಔನನು ತನ್ನ ಸುತ್ತಮುತ್ತಲಿದ್ದ ಜನರೊಡನೆ `ಇವನು ಹೇಳುತ್ತಿರುವುದನ್ನು ನೀವು ಸರಿಯಾಗಿ ಕೇಳಿದಿರಾ?’ ಎಂದನು.
Verse 26
قَالَ رَبُّكُمْ وَرَبُّ ءَابَآئِكُمُ ٱلْأَوَّلِينَ
Transliteration qāla rabbukum warabbu ābāikumu l-awalīna
Kannada ಆಗ ಮೂಸಾ `ನಿಮ್ಮ ಪ್ರಭುವೂ ಗತಿಸಿ ಹೋಗಿರುವ ನಿಮ್ಮ ಪೂರ್ವಿಕರ ಪ್ರಭುವೂ’ ಎಂದರು.
Verse 27
قَالَ إِنَّ رَسُولَكُمُ ٱلَّذِىٓ أُرْسِلَ إِلَيْكُمْ لَمَجْنُونٌ
Transliteration qāla inna rasūlakumu alladhī ur'sila ilaykum lamajnūnun
Kannada ಫಿರ್ಔನನು ``ನಿಮ್ಮ ಕಡೆಗೆ ಕಳುಹಿಸಲ್ಪಟ್ಟಿರುವ ನಿಮ್ಮ ದೂತರು ಖಂಡಿತ ಹುಚ್ಚರು’’ ಎಂದನು.
Verse 28
قَالَ رَبُّ ٱلْمَشْرِقِ وَٱلْمَغْرِبِ وَمَا بَيْنَهُمَآ ۖ إِن كُنتُمْ تَعْقِلُونَ
Transliteration qāla rabbu l-mashriqi wal-maghribi wamā baynahumā in kuntum taʿqilūna
Kannada ಆಗ ಮೂಸಾ `ಪೂರ್ವ, ಪಶ್ಚಿಮ ಮತ್ತು ಅವೆರಡರ ನಡುವೆ ಇರುವುದರ ಪ್ರಭು. ನೀವು ಯೋಚಿಸ ಬಲ್ಲವರಾಗಿದ್ದರೆ’ ಎಂದರು.
Verse 29
قَالَ لَئِنِ ٱتَّخَذْتَ إِلَـٰهًا غَيْرِى لَأَجْعَلَنَّكَ مِنَ ٱلْمَسْجُونِينَ
Transliteration qāla la-ini ittakhadhta ilāhan ghayrī la-ajʿalannaka mina l-masjūnīna
Kannada ಆಗ ಫಿರ್ಔನನು, “ನನ್ನ ಹೊರತು ಬೇರೆ ದೇವನನ್ನುಂ ನೀನು ಸ್ವೀಕರಿಸಿದರೆ ಬಂಧಿಸಲ್ಪಟ್ಟ ಕೈದಿಗಳೊಂದಿಗೆ ನಿನ್ನನ್ನು ಜೈಲಿಗೆ ತಳ್ಳುವೆನು’’ ಎಂದು ಹೇಳಿದನು.
Verse 30
قَالَ أَوَلَوْ جِئْتُكَ بِشَىْءٍ مُّبِينٍ
Transliteration qāla awalaw ji'tuka bishayin mubīnin
Kannada ಆಗ ಮೂಸಾ ‘ನಾನು ಒಂದು ಸುಸ್ಪಷ್ಟವಾದ ದೃಷ್ಟಾಂತವನ್ನು ನಿನಗೆ ತಂದರೂ ನೀನು ಒಪ್ಪುವುದಿಲ್ಲವೇ?’ ಎಂದು ಕೇಳಿದರು.
Verse 31
قَالَ فَأْتِ بِهِۦٓ إِن كُنتَ مِنَ ٱلصَّـٰدِقِينَ
Transliteration qāla fati bihi in kunta mina l-ṣādiqīna
Kannada ಆಗ ಫಿರ್ಔನನು, `ನೀನು ಸತ್ಯವಾದಿಯಾಗಿದ್ದರೆ ಅದನ್ನು ತಂದು ತೋರಿಸು’ ಎಂದನು.
Verse 32
فَأَلْقَىٰ عَصَاهُ فَإِذَا هِىَ ثُعْبَانٌ مُّبِينٌ
Transliteration fa-alqā ʿaṣāhu fa-idhā hiya thuʿ'bānun mubīnun
Kannada ಮೂಸಾ ತಮ್ಮ ದಂಡವನ್ನು ನೆಲಕ್ಕೆಸೆದರು. ಅದು ಹಠಾತ್ತನೆ ಒಂದು ಪ್ರತ್ಯಕ್ಷ ಹೆಬ್ಬಾವಾಗಿ ಮಾರ್ಪಟ್ಟಿತು.
Verse 33
وَنَزَعَ يَدَهُۥ فَإِذَا هِىَ بَيْضَآءُ لِلنَّـٰظِرِينَ
Transliteration wanazaʿa yadahu fa-idhā hiya bayḍāu lilnnāẓirīna
Kannada ತರುವಾಯ ಅವರು ತಮ್ಮ ಹಸ್ತವನ್ನು ಬಗಲಿನಿಂದ ಹೊರಕ್ಕೆಳೆದರು. ಆಗ ಅದು ಪ್ರೇಕ್ಷಕರ ಮುಂದೆ ಬೆಳ್ಳಗಾಗಿ ತೋರುತ್ತಿತ್ತು.
Verse 34
قَالَ لِلْمَلَإِ حَوْلَهُۥٓ إِنَّ هَـٰذَا لَسَـٰحِرٌ عَلِيمٌ
Transliteration qāla lil'mala-i ḥawlahu inna hādhā lasāḥirun ʿalīmun
Kannada ಫಿರ್ಔನನು ತನ್ನ ಸುತ್ತಲಿನ ಸರದಾರರೊಡನೆ ಹೇಳಿದನು; ‘ಈತನು ಒಬ್ಬ ಪರಿಣತ ಮಾಂತ್ರಿ ಕನೇ ಹೌದು!
Verse 35
يُرِيدُ أَن يُخْرِجَكُم مِّنْ أَرْضِكُم بِسِحْرِهِۦ فَمَاذَا تَأْمُرُونَ
Transliteration yurīdu an yukh'rijakum min arḍikum bisiḥ'rihi famādhā tamurūna
Kannada ತನ್ನ ಮಂತ್ರ ವಶೀಕರಣದಿಂದ ನಿಮ್ಮನ್ನು ನಿಮ್ಮ ಭೂಮಿಯಿಂದ ಹೊರಗಟ್ಟ ಬಯಸುತ್ತಾನೆ. ಆದ್ದರಿಂದ ಅವನ ಕಾರ್ಯದಲ್ಲಿ ನೀವೇನು ಅಪ್ಪಣೆ ಕೊಡುವಿರಿ?’
Verse 36
قَالُوٓا۟ أَرْجِهْ وَأَخَاهُ وَٱبْعَثْ فِى ٱلْمَدَآئِنِ حَـٰشِرِينَ
Transliteration qālū arjih wa-akhāhu wa-ib'ʿath fī l-madāini ḥāshirīna
Kannada ಆಗ ಅವರು ಹೇಳಿದರು; ‘ಇವನಿಗೂ ಇವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಜನರನ್ನು ಒಟ್ಟು ಸೇರಿಸಲಿಕ್ಕಾಗಿ ತಾವು ನಗರಗಳಿಗೆ ದೂತರನ್ನು ಹೇಳಿ ಕಳುಹಿಸಿ.
Verse 37
يَأْتُوكَ بِكُلِّ سَحَّارٍ عَلِيمٍ
Transliteration yatūka bikulli saḥḥārin ʿalīmin
Kannada ಸಕಲ ನುರಿತ ಮಾಂತ್ರಿಕರನ್ನು ಅವರು ತಮ್ಮ ಬಳಿಗೆ ಕರೆತರಲಿ.
Verse 38
فَجُمِعَ ٱلسَّحَرَةُ لِمِيقَـٰتِ يَوْمٍ مَّعْلُومٍ
Transliteration fajumiʿa l-saḥaratu limīqāti yawmin maʿlūmin
Kannada ಒಂದು ದಿನದ ನಿಶ್ಚಿತ ಸಮಯಕ್ಕೆ ಜಾದುಗಾ ರರನ್ನು ಒಟ್ಟುಗೂಡಿಸಲಾಯಿತು.
Verse 39
وَقِيلَ لِلنَّاسِ هَلْ أَنتُم مُّجْتَمِعُونَ
Transliteration waqīla lilnnāsi hal antum muj'tamiʿūna
Kannada ಜನರೊಡನೆ ಕೇಳಲಾಯಿತು; ‘ನೀವು ಒಟ್ಟು ಸೇರುತ್ತೀರಲ್ಲವೇ?
Verse 40
لَعَلَّنَا نَتَّبِعُ ٱلسَّحَرَةَ إِن كَانُوا۟ هُمُ ٱلْغَـٰلِبِينَ
Transliteration laʿallanā nattabiʿu l-saḥarata in kānū humu l-ghālibīna
Kannada ಮಾಂತ್ರಿಕರು ವಿಜಯಿಗಳಾದರೆ ನಮಗೆ ಅವರ ನ್ನೇ ಹಿಂಬಾಲಿಸಬಹುದಲ್ಲ?’
Verse 41
فَلَمَّا جَآءَ ٱلسَّحَرَةُ قَالُوا۟ لِفِرْعَوْنَ أَئِنَّ لَنَا لَأَجْرًا إِن كُنَّا نَحْنُ ٱلْغَـٰلِبِينَ
Transliteration falammā jāa l-saḥaratu qālū lifir'ʿawna a-inna lanā la-ajran in kunnā naḥnu l-ghālibīna
Kannada ಮಾಂತ್ರಿಕರು ಬಂದಾಗ ಅವರು ಫಿರ್ಔನನೊಡನೆ, ‘ನಾವು ವಿಜಯಿಗಳಾದರೆ ನಮಗೆ ಪ್ರತಿಫಲ ವಿದೆಯೇ?’ ಎಂದು ಕೇಳಿದರು.
Verse 42
قَالَ نَعَمْ وَإِنَّكُمْ إِذًا لَّمِنَ ٱلْمُقَرَّبِينَ
Transliteration qāla naʿam wa-innakum idhan lamina l-muqarabīna
Kannada ಅದಕ್ಕೆ ಅವನು, ‘ಹೌದು, ಮಾತ್ರವಲ್ಲ, ಆಗ ನೀವು ನಮ್ಮ ಆಪ್ತರಲ್ಲಿ ಸೇರಿ ಬಿಡುವಿರಿ’ ಎಂದನು.
Verse 43
قَالَ لَهُم مُّوسَىٰٓ أَلْقُوا۟ مَآ أَنتُم مُّلْقُونَ
Transliteration qāla lahum mūsā alqū mā antum mul'qūna
Kannada ಆಗ ಮೂಸಾ ಅವರೊಡನೆ, ‘ನೀವು ಎಸೆಯ ಬೇಕಾದುದನ್ನು ಎಸೆಯಿರಿ’ ಎಂದರು
Verse 44
فَأَلْقَوْا۟ حِبَالَهُمْ وَعِصِيَّهُمْ وَقَالُوا۟ بِعِزَّةِ فِرْعَوْنَ إِنَّا لَنَحْنُ ٱلْغَـٰلِبُونَ
Transliteration fa-alqaw ḥibālahum waʿiṣiyyahum waqālū biʿizzati fir'ʿawna innā lanaḥnu l-ghālibūna
Kannada ಕೂಡಲೇ ಅವರು ತಮ್ಮ ಹಗ್ಗಗಳನ್ನೂ, ದಂಡ ಗಳನ್ನೂ ಕೆಳಗೆ ಎಸೆದರು ಮತ್ತು ‘ಫಿರ್ಔನನ ಪ್ರತಾಪದ ಆಣೆ, ನಾವೇ ವಿಜೇತರು’ ಎಂದು ಘೋಷಿಸಿದರು.
Verse 45
فَأَلْقَىٰ مُوسَىٰ عَصَاهُ فَإِذَا هِىَ تَلْقَفُ مَا يَأْفِكُونَ
Transliteration fa-alqā mūsā ʿaṣāhu fa-idhā hiya talqafu mā yafikūna
Kannada ಆಮೇಲೆ ಮೂಸಾ ತಮ್ಮ ದಂಡವನ್ನು ಎಸೆದರು. ತಕ್ಷಣ ಅದು ಅವರು ಕಣ್ಣು ಕಟ್ಟಿ ಕಾಣಿಸಿದ್ದನ್ನು ನುಂಗುತ್ತಾ ಸಾಗಿತು.
Verse 46
فَأُلْقِىَ ٱلسَّحَرَةُ سَـٰجِدِينَ
Transliteration fa-ul'qiya l-saḥaratu sājidīna
Kannada ಕೂಡಲೇ ಎಲ್ಲ ಮಾಂತ್ರಿಕರು ತಾವಾಗಿಯೇ ಸಾಷ್ಟಾಂಗವೆರಗುತ್ತ ನೆಲಕ್ಕೆ ಬಿದ್ದರು.
Verse 47
قَالُوٓا۟ ءَامَنَّا بِرَبِّ ٱلْعَـٰلَمِينَ
Transliteration qālū āmannā birabbi l-ʿālamīna
Kannada ಮತ್ತು ಹೀಗೆ ಹೇಳಿದರು ‘ಸರ್ವಲೋಕಗಳ ಪಾಲಕ ಪ್ರಭುವಿನಲ್ಲಿ- ನಾವಿದೋ ವಿಶ್ವಾಸವಿರಿಸಿದ್ದೇವೆ.
Verse 48
رَبِّ مُوسَىٰ وَهَـٰرُونَ
Transliteration rabbi mūsā wahārūna
Kannada ಮೂಸಾ ಮತ್ತು ಹಾರೂನರ ಪ್ರಭುವಿನಲ್ಲಿ’ .
Verse 49
قَالَ ءَامَنتُمْ لَهُۥ قَبْلَ أَنْ ءَاذَنَ لَكُمْ ۖ إِنَّهُۥ لَكَبِيرُكُمُ ٱلَّذِى عَلَّمَكُمُ ٱلسِّحْرَ فَلَسَوْفَ تَعْلَمُونَ ۚ لَأُقَطِّعَنَّ أَيْدِيَكُمْ وَأَرْجُلَكُم مِّنْ خِلَـٰفٍ وَلَأُصَلِّبَنَّكُمْ أَجْمَعِينَ
Transliteration qāla āmantum lahu qabla an ādhana lakum innahu lakabīrukumu alladhī ʿallamakumu l-siḥ'ra falasawfa taʿlamūna la-uqaṭṭiʿanna aydiyakum wa-arjulakum min khilāfin wala-uṣallibannakum ajmaʿīna
Kannada ಆಗ ಫಿರ್ಔನನು, ‘ನಾನು ನಿಮಗೆ ಅನುಮತಿ ಕೊಡುವುದಕ್ಕೆ ಮುಂಚೆ ನೀವು ಮೂಸಾನನ್ನು ನಂಬಿದಿರಾ? ಖಂಡಿತ ಇವನು ನಿಮಗೆ ವಾಮಾ ಚಾರವನ್ನು ಕಲಿಸಿದ ನಿಮ್ಮ ಗುರುವಾಗಿದ್ದಾನೆ. ಆದ್ದರಿಂದ ನಿಮಗೆ ಇದರ ಫಲ ಈಗಲೇ ತಿಳಿಯಲಿದೆ. ನಾನು ನಿಮ್ಮ ಕೈಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿಸುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆ ಗೇರಿಸುವೆನು’ ಎಂದನು.
Verse 50
قَالُوا۟ لَا ضَيْرَ ۖ إِنَّآ إِلَىٰ رَبِّنَا مُنقَلِبُونَ
Transliteration qālū lā ḍayra innā ilā rabbinā munqalibūna
Kannada ಅವರು ಹೇಳಿದರು ‘ಪರವಾಗಿಲ್ಲ, ನಾವು ನಮ್ಮ ಪ್ರಭುವಿನ ಸನ್ನಿಧಿಗೆ ಮರಳಿ ಹೋಗುವ ವರಾಗಿರುತ್ತೇವೆ.
Verse 51
إِنَّا نَطْمَعُ أَن يَغْفِرَ لَنَا رَبُّنَا خَطَـٰيَـٰنَآ أَن كُنَّآ أَوَّلَ ٱلْمُؤْمِنِينَ
Transliteration innā naṭmaʿu an yaghfira lanā rabbunā khaṭāyānā an kunnā awwala l-mu'minīna
Kannada ನಾವೀಗ ಪ್ರಥಮ ವಿಶ್ವಾಸಿಗಳಾಗುವ ಮೂಲಕ ನಮ್ಮ ಪ್ರಭು ಪಾಪಗಳನ್ನು ಕ್ಷಮಿಸಿ ಬಿಡುವ ನೆಂದು ನಾವು ಆಶಿಸಿದ್ದೇವೆ.
Verse 52
۞ وَأَوْحَيْنَآ إِلَىٰ مُوسَىٰٓ أَنْ أَسْرِ بِعِبَادِىٓ إِنَّكُم مُّتَّبَعُونَ
Transliteration wa-awḥaynā ilā mūsā an asri biʿibādī innakum muttabaʿūna
Kannada ನನ್ನ ದಾಸರನ್ನು ರಾತೋರಾತ್ರಿ ಕರಕೊಂಡು ಹೋಗಿರಿ. ನಿಮ್ಮನ್ನು (ಫಿರ್ಔನ್ ಹಾಗೂ ಸಂಘವು) ಬೆನ್ನಟ್ಟಲಿದ್ದಾರೆ ಎಂದು ನಾವು ಮೂಸಾ ರಿಗೆ ಸಂದೇಶ ಕಳುಹಿಸಿದೆವು.
Verse 53
فَأَرْسَلَ فِرْعَوْنُ فِى ٱلْمَدَآئِنِ حَـٰشِرِينَ
Transliteration fa-arsala fir'ʿawnu fī l-madāini ḥāshirīna
Kannada ಆಗ ಅವರು ಹೋದ ವಿವರವನ್ನು ತಿಳಿದು ಫಿರ್ ಔನನು ಸೇನೆಗಳನ್ನು ಸಜ್ಜುಗೊಳಿಸುವ ರಾಜ ಘೋಷಕರನ್ನು ನಗರಗಳಿಗೆ ಹೀಗೆ ಹೇಳಿ ಕಳುಹಿಸಿದನು.
Verse 54
إِنَّ هَـٰٓؤُلَآءِ لَشِرْذِمَةٌ قَلِيلُونَ
Transliteration inna hāulāi lashir'dhimatun qalīlūna
Kannada `ಇವರು (ಇಸ್ರಾಈಲರು) ಕೇವಲ ಬೆರಳೆಣಿಕೆಯ ಜನರು.
Verse 55
وَإِنَّهُمْ لَنَا لَغَآئِظُونَ
Transliteration wa-innahum lanā laghāiẓūna
Kannada ಮತ್ತು ನಮ್ಮನ್ನು ಬಹಳ ರೇಗಿಸಿದವರು.
Verse 56
وَإِنَّا لَجَمِيعٌ حَـٰذِرُونَ
Transliteration wa-innā lajamīʿun ḥādhirūna
Kannada ನಾವು ಸುಸಜ್ಜಿತ ಸಮೂಹವಾಗಿದ್ದೇವೆ’ .
Verse 57
فَأَخْرَجْنَـٰهُم مِّن جَنَّـٰتٍ وَعُيُونٍ
Transliteration fa-akhrajnāhum min jannātin waʿuyūnin
Kannada ಹೀಗೆ ನಾವು ಅವರನ್ನು ಅವರ ಉದ್ಯಾನಗಳಿಂ ದಲೂ ಚಿಲುಮೆಗಳಿಂದಲೂ
Verse 58
وَكُنُوزٍ وَمَقَامٍ كَرِيمٍ
Transliteration wakunūzin wamaqāmin karīmin
Kannada ಖಜಾನೆಗಳಿಂದಲೂ ಗೌರವದ ನಿವಾಸಗಳಿಂ ದಲೂ ಹೊರ ಹಾಕಿದೆವು.
Verse 59
كَذَٰلِكَ وَأَوْرَثْنَـٰهَا بَنِىٓ إِسْرَٰٓءِيلَ
Transliteration kadhālika wa-awrathnāhā banī is'rāīla
Kannada ಹಾಗಿದೆ ನಮ್ಮ ಪ್ರವೃತಿ. ಆಮೇಲೆ ಇಸ್ರಾಈಲ ಜನಾಂಗಕ್ಕೆ ಅವುಗಳನ್ನು ನಾವು ಉತ್ತರಾಧಿಕಾರ ಹಕ್ಕನ್ನಾಗಿ ಮಾಡಿದೆವು.
Verse 60
فَأَتْبَعُوهُم مُّشْرِقِينَ
Transliteration fa-atbaʿūhum mush'riqīna
Kannada ಫಿರ್ಔನ್ ಹಾಗೂ ಸೇನೆಯು ಸೂರ್ಯೋದಯ ಸಮಯದಲ್ಲಿ ಇಸ್ರಾಈಲರ ಬಳಿಗೆ ತಲುಪಿದರು.
Verse 61
فَلَمَّا تَرَٰٓءَا ٱلْجَمْعَانِ قَالَ أَصْحَـٰبُ مُوسَىٰٓ إِنَّا لَمُدْرَكُونَ
Transliteration falammā tarāā l-jamʿāni qāla aṣḥābu mūsā innā lamud'rakūna
Kannada ಹಾಗೆ ಎರಡು ಗುಂಪು ಪರಸ್ಪರ ಕಂಡಾಗ ಮೂಸಾರ ಸಂಗಾತಿಗಳು `ನಾವು ಹಿಡಿಯಲ್ಪಡುತ್ತೇವೆ’ ಎಂದರು.
Verse 62
قَالَ كَلَّآ ۖ إِنَّ مَعِىَ رَبِّى سَيَهْدِينِ
Transliteration qāla kallā inna maʿiya rabbī sayahdīni
Kannada ಆಗ ಮೂಸಾ, ‘ಖಂಡಿತ ಇಲ್ಲ. ನನ್ನ ಸಂಗಡ ನನ್ನ ಪ್ರಭು ಇದ್ದಾನೆ. ಅವನು ನನಗೆ ದಾರಿ ತೋರುವನು’ ಎಂದರು .
Verse 63
فَأَوْحَيْنَآ إِلَىٰ مُوسَىٰٓ أَنِ ٱضْرِب بِّعَصَاكَ ٱلْبَحْرَ ۖ فَٱنفَلَقَ فَكَانَ كُلُّ فِرْقٍ كَٱلطَّوْدِ ٱلْعَظِيمِ
Transliteration fa-awḥaynā ilā mūsā ani iḍ'rib biʿaṣāka l-baḥra fa-infalaqa fakāna kullu fir'qin kal-ṭawdi l-ʿaẓīmi
Kannada ನಾವು ಮೂಸಾರಿಗೆ ಹೀಗೆ ಸಂದೇಶವಿತ್ತೆವು; `ನಿಮ್ಮ ದಂಡವನ್ನು ಸಮುದ್ರಕ್ಕೆ ಹೊಡೆಯಿರಿ’ (ಅವರು ಹೊಡೆದರು). ತಕ್ಷಣ ಸಮುದ್ರ ಸೀಳಿತು. ಅದರ ಪ್ರತಿಯೊಂದು ಸೀಳು ದೊಡ್ಡ ಬೆಟ್ಟದಂತೆ ಆಯಿತು.
Verse 64
وَأَزْلَفْنَا ثَمَّ ٱلْـَٔاخَرِينَ
Transliteration wa-azlafnā thamma l-ākharīna
Kannada ಇತರರನ್ನು ನಾವು ಅಲ್ಲಿಗೆ ಹತ್ತಿರಗೊಳಿಸಿದೆವು.
Verse 65
وَأَنجَيْنَا مُوسَىٰ وَمَن مَّعَهُۥٓ أَجْمَعِينَ
Transliteration wa-anjaynā mūsā waman maʿahu ajmaʿīna
Kannada ಮೂಸಾ ಮತ್ತು ಅವರ ಜೊತೆಗಿದ್ದವರೆಲ್ಲರನ್ನೂ ನಾವು ರಕ್ಷಿಸಿದೆವು.
Verse 66
ثُمَّ أَغْرَقْنَا ٱلْـَٔاخَرِينَ
Transliteration thumma aghraqnā l-ākharīna
Kannada ನಂತರ ಇತರರನ್ನು ನಾವು ನೀರಿನಲ್ಲಿ ಮುಳುಗಿಸಿ ನಾಶ ಮಾಡಿದೆವು.
Verse 67
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
Transliteration inna fī dhālika laāyatan wamā kāna aktharuhum mu'minīna
Kannada ಈ ಘಟನೆಯಲ್ಲಿ ದೊಡ್ಡ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.
Verse 68
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Transliteration wa-inna rabbaka lahuwa l-ʿazīzu l-raḥīmu
Kannada ನಿಮ್ಮ ಪ್ರಭು ಖಂಡಿತ ಮಹಾಪ್ರಬಲನೂ ದಯಾನಿಧಿಯೂ ಆಗಿರುತ್ತಾನೆ.
Verse 69
وَٱتْلُ عَلَيْهِمْ نَبَأَ إِبْرَٰهِيمَ
Transliteration wa-ut'lu ʿalayhim naba-a ib'rāhīma
Kannada ಇಬ್ರಾಹೀಮರ ವೃತ್ತಾಂತವನ್ನು ಇವರಿಗೆ ತಾವು ಓದಿ ಕೇಳಿಸಿರಿ.
Verse 70
إِذْ قَالَ لِأَبِيهِ وَقَوْمِهِۦ مَا تَعْبُدُونَ
Transliteration idh qāla li-abīhi waqawmihi mā taʿbudūna
Kannada ಅವರು ತಮ್ಮ ತಂದೆ ಮತ್ತು ಜನಾಂಗದೊಡನೆ ‘ನೀವು ಏನನ್ನು ಪೂಜಿಸುತ್ತಿರುವಿರಿ’ ಎಂದು ಕೇಳಿದಾಗ
Verse 71
قَالُوا۟ نَعْبُدُ أَصْنَامًا فَنَظَلُّ لَهَا عَـٰكِفِينَ
Transliteration qālū naʿbudu aṣnāman fanaẓallu lahā ʿākifīna
Kannada ಅವರು, ‘ನಾವು ಕೆಲವು ವಿಗ್ರಹಗಳನ್ನು ಪೂಜಿಸುತ್ತೇವೆ ಮತ್ತು ಇವುಗಳ ಮುಂದೆ ಸದಾ ಜಪ ಕೂರುತ್ತೇವೆ’ ಎಂದರು.
Verse 72
قَالَ هَلْ يَسْمَعُونَكُمْ إِذْ تَدْعُونَ
Transliteration qāla hal yasmaʿūnakum idh tadʿūna
Kannada ಆಗ ಇವರು ಕೇಳಿದರು `ನೀವು ಕರೆಯುವಾಗ ಇವು ನಿಮ್ಮನ್ನಾಲಿಸಿ ಕೇಳುತ್ತವೆಯೇನು?
Verse 73
أَوْ يَنفَعُونَكُمْ أَوْ يَضُرُّونَ
Transliteration aw yanfaʿūnakum aw yaḍurrūna
Kannada ಅಥವಾ ಇವು ನಿಮಗೆ ಉಪಕಾರ ಮಾಡುವುದೇ? ಅಥವಾ ಉಪದ್ರವಿಸುವುದೇ?
Verse 74
قَالُوا۟ بَلْ وَجَدْنَآ ءَابَآءَنَا كَذَٰلِكَ يَفْعَلُونَ
Transliteration qālū bal wajadnā ābāanā kadhālika yafʿalūna
Kannada ಅದಕ್ಕೆ ಅವರು, “ಇಲ್ಲ, ಆದರೆ ನಮ್ಮ ಪಿತಾಮ ಹರು ಹೀಗೆಯೇ ಮಾಡುತ್ತಿರುವುದನ್ನು ನಾವು ಕಂಡಿದ್ದೇವೆ ಅಷ್ಟೆ. (ಅವರನ್ನು ನಾವು ಅನುಸರಿಸಿದ್ದೇವೆ)” ಎಂದರು.
Verse 75
قَالَ أَفَرَءَيْتُم مَّا كُنتُمْ تَعْبُدُونَ
Transliteration qāla afara-aytum mā kuntum taʿbudūna
Kannada ಆಗ ಇಬ್ರಾಹೀಮರು ಹೇಳಿದರು, `ನೀವು ಏನನ್ನು ಆರಾಧಿಸುತ್ತಿದ್ದರೆಂದು ನೀವು ಯೋಚಿಸಿದ್ದೀರಾ?
Verse 76
أَنتُمْ وَءَابَآؤُكُمُ ٱلْأَقْدَمُونَ
Transliteration antum waābāukumu l-aqdamūna
Kannada ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು.
Verse 77
فَإِنَّهُمْ عَدُوٌّ لِّىٓ إِلَّا رَبَّ ٱلْعَـٰلَمِينَ
Transliteration fa-innahum ʿaduwwun lī illā rabba l-ʿālamīna
Kannada ಅವರು ನನ್ನ ಶತ್ರುಗಳು, ಸರ್ವಲೋಕಗಳ ಪಾಲಕ ಪ್ರಭುವನ್ನೇ ಹೊರತು. (ನಾನು ಆರಾಧಿಸಲಾರೆ).
Verse 78
ٱلَّذِى خَلَقَنِى فَهُوَ يَهْدِينِ
Transliteration alladhī khalaqanī fahuwa yahdīni
Kannada ನನ್ನನ್ನು ಸೃಷ್ಟಿಸಿದವನು. ಅವನೇ ನನ್ನನ್ನು ಸತ್ಪಥಕ್ಕೆ ಸೇರಿಸುವನು.
Verse 79
وَٱلَّذِى هُوَ يُطْعِمُنِى وَيَسْقِينِ
Transliteration wa-alladhī huwa yuṭ'ʿimunī wayasqīni
Kannada ನನಗೆ ಉಣಿಸುವವನೂ ಕುಡಿಸುವವನೂ ಅವನೇ.
Verse 80
وَإِذَا مَرِضْتُ فَهُوَ يَشْفِينِ
Transliteration wa-idhā mariḍ'tu fahuwa yashfīni
Kannada ನಾನು ಕಾಯಿಲೆ ಬಿದ್ದಾಗ ವಾಸಿ ಮಾಡುವವನೂ ಅವನೇ.
Verse 81
وَٱلَّذِى يُمِيتُنِى ثُمَّ يُحْيِينِ
Transliteration wa-alladhī yumītunī thumma yuḥ'yīni
Kannada ನನ್ನನ್ನು ಸಾಯಿಸುವವನೂ, ಬದುಕಿಸುವವನೂ ಅವನೇ.
Verse 82
وَٱلَّذِىٓ أَطْمَعُ أَن يَغْفِرَ لِى خَطِيٓـَٔتِى يَوْمَ ٱلدِّينِ
Transliteration wa-alladhī aṭmaʿu an yaghfira lī khaṭīatī yawma l-dīni
Kannada ಪ್ರತಿಫಲ ನೀಡಲಾಗುವ ದಿನ ಅವನು ನನ್ನ ಪಾಪ ಗಳನ್ನು ಕ್ಷಮಿಸುವನೆಂದೂ ನಾನು ಆಶಿಸುತ್ತೇನೆ.
Verse 83
رَبِّ هَبْ لِى حُكْمًا وَأَلْحِقْنِى بِٱلصَّـٰلِحِينَ
Transliteration rabbi hab lī ḥuk'man wa-alḥiq'nī bil-ṣāliḥīna
Kannada ಓ ನನ್ನ ಪ್ರಭೂ, ನನಗೆ ಸುಜ್ಞಾನ ನೀಡು ಮತ್ತು ನನ್ನನ್ನು ಸಜ್ಜನರೊಂದಿಗೆ ಸೇರಿಸು.
Verse 84
وَٱجْعَل لِّى لِسَانَ صِدْقٍ فِى ٱلْـَٔاخِرِينَ
Transliteration wa-ij'ʿal lī lisāna ṣid'qin fī l-ākhirīna
Kannada ಮುಂದಿನ ಪೀಳಿಗೆಗಳಲ್ಲಿ ನನಗೆ ಸತ್ಕೀರ್ತಿಯನ್ನು ದಯಪಾಲಿಸು .
Verse 85
وَٱجْعَلْنِى مِن وَرَثَةِ جَنَّةِ ٱلنَّعِيمِ
Transliteration wa-ij'ʿalnī min warathati jannati l-naʿīmi
Kannada ಅನುಗ್ರಹೀತ ಸ್ವರ್ಗದ ಉತ್ತರಾಧಿಕಾರಿಗಳಲ್ಲಿ ನನ್ನನ್ನು ಸೇರಿಸು.
Verse 86
وَٱغْفِرْ لِأَبِىٓ إِنَّهُۥ كَانَ مِنَ ٱلضَّآلِّينَ
Transliteration wa-igh'fir li-abī innahu kāna mina l-ḍālīna
Kannada ನನ್ನ ತಂದೆಗೆ ಕ್ಷಮೆ ನೀಡು, ನಿಜಕ್ಕೂ ಅವರು ಪಥಭ್ರಷ್ಟರಲ್ಲಿ ಸೇರಿ ಹೋಗಿದ್ದಾರೆ .
Verse 87
وَلَا تُخْزِنِى يَوْمَ يُبْعَثُونَ
Transliteration walā tukh'zinī yawma yub'ʿathūna
Kannada ಜನರನ್ನು ಜೀವಂತಗೊಳಿಸಿ ಎಬ್ಬಿಸಲ್ಪಡುವ ದಿನ ನನ್ನನ್ನು ಅವಮಾನಿಸದಿರು.
Verse 88
يَوْمَ لَا يَنفَعُ مَالٌ وَلَا بَنُونَ
Transliteration yawma lā yanfaʿu mālun walā banūna
Kannada ಸೊತ್ತಾಗಲಿ ಸಂತತಿಗಳಾಗಲಿ ಯಾವುದೇ ಪ್ರಯೋಜನಕ್ಕೆ ಬಾರದ ದಿನ.
Verse 89
إِلَّا مَنْ أَتَى ٱللَّهَ بِقَلْبٍ سَلِيمٍ
Transliteration illā man atā l-laha biqalbin salīmin
Kannada ಸುರಕ್ಷಿತ ಹೃದಯದೊಂದಿಗೆ ಅಲ್ಲಾಹನ ಸನ್ನಿಧಿಗೆ ಬಂದವನ ಹೊರತು.
Verse 90
وَأُزْلِفَتِ ٱلْجَنَّةُ لِلْمُتَّقِينَ
Transliteration wa-uz'lifati l-janatu lil'muttaqīna
Kannada ಸ್ವರ್ಗವನ್ನು ಧರ್ಮನಿಷ್ಟರಿಗೆ ನಿಕಟ ಗೊಳಿಸಲಾಗಿದೆ.
Verse 91
وَبُرِّزَتِ ٱلْجَحِيمُ لِلْغَاوِينَ
Transliteration waburrizati l-jaḥīmu lil'ghāwīna
Kannada ನರಕವನ್ನು ಪಥಭ್ರಷ್ಟರಿಗೆ ಪ್ರದರ್ಶಿಸಲಾಗಿದೆ.
Verse 92
وَقِيلَ لَهُمْ أَيْنَ مَا كُنتُمْ تَعْبُدُونَ
Transliteration waqīla lahum ayna mā kuntum taʿbudūna
Kannada ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿದ್ದ ವಸ್ತುಗಳೆಲ್ಲಿ? ಎಂದು ಅವರನ್ನು ಕೇಳಲಾಗುವುದು.
Verse 93
مِن دُونِ ٱللَّهِ هَلْ يَنصُرُونَكُمْ أَوْ يَنتَصِرُونَ
Transliteration min dūni l-lahi hal yanṣurūnakum aw yantaṣirūna
Kannada ಅಲ್ಲಾಹನನ್ನು ಬಿಟ್ಟು ಅವರು ನಿಮಗೆ ಸಹಾಯ ಮಾಡುವರೇ? ಅಥವಾ ಅವರೇ ಸಹಾಯವನ್ನು ಬೇಡುತ್ತಿರುವರೇ?
Verse 94
فَكُبْكِبُوا۟ فِيهَا هُمْ وَٱلْغَاوُۥنَ
Transliteration fakub'kibū fīhā hum wal-ghāwūna
Kannada ನಂತರ ಆ ಆರಾಧ್ಯ ವಸ್ತುಗಳೂ ಅವುಗಳನ್ನು ಆರಾಧಿಸಿದ ಪಥಭ್ರಷ್ಟ ಜನರನ್ನೂ ನರಕದಲ್ಲಿ ಅಧೋ ಮುಖರಾಗಿ ತಳ್ಳಲ್ಪಡಲಾಗುವುದು.
Verse 95
وَجُنُودُ إِبْلِيسَ أَجْمَعُونَ
Transliteration wajunūdu ib'līsa ajmaʿūna
Kannada ಇಬ್ಲೀಸನ ಸೇನೆಯೂ ಎಲ್ಲರೂ.
Verse 96
قَالُوا۟ وَهُمْ فِيهَا يَخْتَصِمُونَ
Transliteration qālū wahum fīhā yakhtaṣimūna
Kannada ಅಲ್ಲಿ ಪರಸ್ಪರ ಜಗಳಾಡುತ್ತ ಅವರು ತಮ್ಮ ಆರಾಧ್ಯರೊಡನೆ ಹೀಗೆ ಹೇಳುವರು.
Verse 97
تَٱللَّهِ إِن كُنَّا لَفِى ضَلَـٰلٍ مُّبِينٍ
Transliteration tal-lahi in kunnā lafī ḍalālin mubīnin
Kannada “ಅಲ್ಲಾಹನಾಣೆ! ನಾವು ಪ್ರತ್ಯಕ್ಷವಾದ ದುರ್ಮಾರ್ಗದಲ್ಲಿದ್ದೆವು.
Verse 98
إِذْ نُسَوِّيكُم بِرَبِّ ٱلْعَـٰلَمِينَ
Transliteration idh nusawwīkum birabbi l-ʿālamīna
Kannada ಸರ್ವಲೋಕಗಳ ಪಾಲಕ ಪ್ರಭುವಿಗೆ ನಿಮ್ಮನ್ನು ನಾವು ಸಮಾನಗೊಳಿಸಿದಾಗ.
Verse 99
وَمَآ أَضَلَّنَآ إِلَّا ٱلْمُجْرِمُونَ
Transliteration wamā aḍallanā illā l-muj'rimūna
Kannada ಅಪರಾಧಿಗಳೇ ಹೊರತು ನಮ್ಮನ್ನು ದಾರಿ ತಪ್ಪಿಸಿಲ್ಲ.
Verse 100
فَمَا لَنَا مِن شَـٰفِعِينَ
Transliteration famā lanā min shāfiʿīna
Kannada ಹೀಗಾಗಿ ನಮಗೆ ಯಾರೂ ಶಿಫಾರಸ್ಸುದಾರರಿಲ್ಲ.
Verse 101
وَلَا صَدِيقٍ حَمِيمٍ
Transliteration walā ṣadīqin ḥamīmin
Kannada ಅನುಕಂಪವಿರುವ ಆಪ್ತ ಸ್ನೇಹಿತನೂ ಇಲ್ಲ.
Verse 102
فَلَوْ أَنَّ لَنَا كَرَّةً فَنَكُونَ مِنَ ٱلْمُؤْمِنِينَ
Transliteration falaw anna lanā karratan fanakūna mina l-mu'minīna
Kannada ಇನ್ನು (ಭೂಲೋಕಕ್ಕೆ) ಮರಳುವ ಒಂದವಕಾಶ ನಮಗಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು.
Verse 103
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
Transliteration inna fī dhālika laāyatan wamā kāna aktharuhum mu'minīna
Kannada ಇದರಲ್ಲಿ ಖಂಡಿತ ದೃಷ್ಟಾಂತವಿದೆ. ಆದರೆ ಇವರಲ್ಲಿ ಹೆಚ್ಚಿನವರು ವಿಶ್ವಾಸವಿಡುವವರಲ್ಲ.
Verse 104
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Transliteration wa-inna rabbaka lahuwa l-ʿazīzu l-raḥīmu
Kannada ನಿಜಕ್ಕೂ ನಿಮ್ಮ ಪ್ರಭು ಮಹಾ ಪ್ರಬಲನೂ ದಯಾನಿಧಿಯೂ ಆಗಿರುತ್ತಾನೆ.
Verse 105
كَذَّبَتْ قَوْمُ نُوحٍ ٱلْمُرْسَلِينَ
Transliteration kadhabat qawmu nūḥin l-mur'salīna
Kannada ನೂಹರ ಜನಾಂಗವು ದೇವದೂತರನ್ನು ಸುಳ್ಳಾಗಿಸಿತು.
Verse 106
إِذْ قَالَ لَهُمْ أَخُوهُمْ نُوحٌ أَلَا تَتَّقُونَ
Transliteration idh qāla lahum akhūhum nūḥun alā tattaqūna
Kannada ಅವರ ಸಹೋದರ ನೂಹರು, ಅವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯ ಪಡುವುದಿಲ್ಲವೇ?
Verse 107
إِنِّى لَكُمْ رَسُولٌ أَمِينٌ
Transliteration innī lakum rasūlun amīnun
Kannada ನಾನು ನಿಮ್ಮ ಪಾಲಿಗೆ ಒಬ್ಬ ಪ್ರಾಮಾಣಿಕ ದೇವ ದೂತನಾಗಿದ್ದೇನೆ.
Verse 108
فَٱتَّقُوا۟ ٱللَّهَ وَأَطِيعُونِ
Transliteration fa-ittaqū l-laha wa-aṭīʿūni
Kannada ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 109
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
Transliteration wamā asalukum ʿalayhi min ajrin in ajriya illā ʿalā rabbi l-ʿālamīna
Kannada ಇದಕ್ಕಾಗಿ ನಾನು ಯಾವ ಪ್ರತಿಫಲವನ್ನೂ ನಿಮ್ಮಲ್ಲಿ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ.
Verse 110
فَٱتَّقُوا۟ ٱللَّهَ وَأَطِيعُونِ
Transliteration fa-ittaqū l-laha wa-aṭīʿūni
Kannada ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 111
۞ قَالُوٓا۟ أَنُؤْمِنُ لَكَ وَٱتَّبَعَكَ ٱلْأَرْذَلُونَ
Transliteration qālū anu'minu laka wa-ittabaʿaka l-ardhalūna
Kannada ಅವರು ಹೇಳಿದರು, ‘ನಿನ್ನನ್ನು ಅನುಸರಿಸಿದ್ದು ಅತ್ಯಂತ ಕೀಳು ಜನರಾಗಿರುವಾಗ ನಾವು ನಿನ್ನನ್ನು ನಂಬುವುದೇ?’
Verse 112
قَالَ وَمَا عِلْمِى بِمَا كَانُوا۟ يَعْمَلُونَ
Transliteration qāla wamā ʿil'mī bimā kānū yaʿmalūna
Kannada ನೂಹರು ಹೇಳಿದರು, `ಅವರೆಸಗುತ್ತಿದ್ದ ಕರ್ಮಗಳ ಬಗ್ಗೆ ನನ್ನ ಅರಿವೇನು?
Verse 113
إِنْ حِسَابُهُمْ إِلَّا عَلَىٰ رَبِّى ۖ لَوْ تَشْعُرُونَ
Transliteration in ḥisābuhum illā ʿalā rabbī law tashʿurūna
Kannada ಅವರ ವಿಚಾರಣೆ ಕೇವಲ ನನ್ನ ಪ್ರಭುವಿನ ಮೇಲಿದೆ. ನೀವು ಕಾರ್ಯ ಪ್ರಜ್ಞೆಯುಳ್ಳವರಾಗಿದ್ದರೆ !
Verse 114
وَمَآ أَنَا۠ بِطَارِدِ ٱلْمُؤْمِنِينَ
Transliteration wamā anā biṭāridi l-mu'minīna
Kannada ಸತ್ಯವಿಶ್ವಾಸ ಸ್ವೀಕರಿಸಿದವರನ್ನು ನಾನು ಅಟ್ಟಿ ಓಡಿಸುವವನಲ್ಲ.
Verse 115
إِنْ أَنَا۠ إِلَّا نَذِيرٌ مُّبِينٌ
Transliteration in anā illā nadhīrun mubīnun
Kannada ನಾನೊಬ್ಬ ಸುಸ್ಪಷ್ಟ ಎಚ್ಚರಿಕೆ ಕೊಡುವವನು ಮಾತ್ರ’
Verse 116
قَالُوا۟ لَئِن لَّمْ تَنتَهِ يَـٰنُوحُ لَتَكُونَنَّ مِنَ ٱلْمَرْجُومِينَ
Transliteration qālū la-in lam tantahi yānūḥu latakūnanna mina l-marjūmīna
Kannada ಆಗ ಅವರು, ‘ನೀನು ಇದನ್ನು ತೊರೆಯದಿದ್ದರೆ ಓ ನೂಹ್, ಖಂಡಿತ ಕಲ್ಲೆಸೆದು ಕೊಲ್ಲಲ್ಪಡುವವರಲ್ಲಿ ನೀನು ಸೇರುವೆ’ ಎಂದರು.
Verse 117
قَالَ رَبِّ إِنَّ قَوْمِى كَذَّبُونِ
Transliteration qāla rabbi inna qawmī kadhabūni
Kannada ನೂಹರು ಪ್ರಾರ್ಥಿಸಿದರು `ನನ್ನ ಪ್ರಭೂ, ನನ್ನ ಜನಾಂಗವು ನನ್ನನ್ನು ಸುಳ್ಳಾಗಿಸಿದೆ.
Verse 118
فَٱفْتَحْ بَيْنِى وَبَيْنَهُمْ فَتْحًا وَنَجِّنِى وَمَن مَّعِىَ مِنَ ٱلْمُؤْمِنِينَ
Transliteration fa-if'taḥ baynī wabaynahum fatḥan wanajjinī waman maʿiya mina l-mu'minīna
Kannada ಇನ್ನು ನನ್ನ ಮತ್ತು ಅವರ ನಡುವೆ ಒಂದು ಪರಿಹಾರವನ್ನು ನೀಡು. ನನ್ನನ್ನೂ ನನ್ನೊಂದಿಗಿರುವ ಸತ್ಯವಿಶ್ವಾಸಿಗಳನ್ನೂ ರಕ್ಷಿಸು’.
Verse 119
فَأَنجَيْنَـٰهُ وَمَن مَّعَهُۥ فِى ٱلْفُلْكِ ٱلْمَشْحُونِ
Transliteration fa-anjaynāhu waman maʿahu fī l-ful'ki l-mashḥūni
Kannada ಕೊನೆಗೆ ನಾವು ಅವರನ್ನೂ ಅವರ ಜೊತೆಗಾರರನ್ನೂ ಒಂದು ತುಂಬಿದ ನಾವೆಯಲ್ಲಿ ರಕ್ಷಿಸಿದೆವು.
Verse 120
ثُمَّ أَغْرَقْنَا بَعْدُ ٱلْبَاقِينَ
Transliteration thumma aghraqnā baʿdu l-bāqīna
Kannada ಅವರನ್ನು ರಕ್ಷಿಸಿದ ನಂತರ ಉಳಿದವರನ್ನು ನೀರಿನಲ್ಲಿ ಮುಳುಗಿಸಿ ನಾಶ ಮಾಡಿದೆವು.
Verse 121
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
Transliteration inna fī dhālika laāyatan wamā kāna aktharuhum mu'minīna
Kannada ಇದರಲ್ಲಿ ಖಂಡಿತ ದೊಡ್ಡ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.
Verse 122
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Transliteration wa-inna rabbaka lahuwa l-ʿazīzu l-raḥīmu
Kannada ಖಂಡಿತ ನಿಮ್ಮ ಪ್ರಭು ಮಹಾಪ್ರಬಲನೂ ವಿಶಿಷ್ಟ ಕೃಪಾ ನಿಧಿಯೂ ಆಗಿರುತ್ತಾನೆ.
Verse 123
كَذَّبَتْ عَادٌ ٱلْمُرْسَلِينَ
Transliteration kadhabat ʿādun l-mur'salīna
Kannada ಆದ್ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು.
Verse 124
إِذْ قَالَ لَهُمْ أَخُوهُمْ هُودٌ أَلَا تَتَّقُونَ
Transliteration idh qāla lahum akhūhum hūdun alā tattaqūna
Kannada ಅವರ ಸಹೋದರ ಹೂದರು ಅವರಿಗೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ: ‘ಅಲ್ಲಾಹನನ್ನು ನೀವು ಭಯ ಪಡುವುದಿಲ್ಲವೇ?
Verse 125
إِنِّى لَكُمْ رَسُولٌ أَمِينٌ
Transliteration innī lakum rasūlun amīnun
Kannada ಖಂಡಿತ ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾ ಣಿಕ ದೇವದೂತನಾಗಿರುತ್ತೇನೆ.
Verse 126
فَٱتَّقُوا۟ ٱللَّهَ وَأَطِيعُونِ
Transliteration fa-ittaqū l-laha wa-aṭīʿūni
Kannada ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 127
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
Transliteration wamā asalukum ʿalayhi min ajrin in ajriya illā ʿalā rabbi l-ʿālamīna
Kannada ಇದಕ್ಕಾಗಿ ನಾನು ಯಾವ ಪ್ರತಿಫಲವನ್ನೂ ನಿಮ್ಮಲ್ಲಿ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ.
Verse 128
أَتَبْنُونَ بِكُلِّ رِيعٍ ءَايَةً تَعْبَثُونَ
Transliteration atabnūna bikulli rīʿin āyatan taʿbathūna
Kannada ನೀವು ಸುಮ್ಮಸುಮ್ಮನೆ ಪ್ರತಿಯೊಂದು ಏರು ಜಾಗಗಳಲ್ಲಿ ಸ್ಮಾರಕ ಕಟ್ಟಡವನ್ನು ಕಟ್ಟುತ್ತೀರಲ್ಲವೇ?
Verse 129
وَتَتَّخِذُونَ مَصَانِعَ لَعَلَّكُمْ تَخْلُدُونَ
Transliteration watattakhidhūna maṣāniʿa laʿallakum takhludūna
Kannada ನೀವು ಶಾಶ್ವತರಾಗಿ ಬದುಕುಳಿಯುತ್ತೀರೇನೋ ಎಂಬಂತೆ ಕೋಟೆ ಕೊತ್ತಳಗಳನ್ನು ನಿರ್ಮಿಸುತ್ತೀರಿ.
Verse 130
وَإِذَا بَطَشْتُم بَطَشْتُمْ جَبَّارِينَ
Transliteration wa-idhā baṭashtum baṭashtum jabbārīna
Kannada ನೀವು ಯಾರನ್ನಾದರೂ ಶಿಕ್ಷಿಸುವಾಗ ನಿಷ್ಟುರವಾಗಿ ಶಿಕ್ಷಿಸುತ್ತೀರಿ .
Verse 131
فَٱتَّقُوا۟ ٱللَّهَ وَأَطِيعُونِ
Transliteration fa-ittaqū l-laha wa-aṭīʿūni
Kannada ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 132
وَٱتَّقُوا۟ ٱلَّذِىٓ أَمَدَّكُم بِمَا تَعْلَمُونَ
Transliteration wa-ittaqū alladhī amaddakum bimā taʿlamūna
Kannada ನಿಮಗೆ ತಿಳಿದಿರುವ ಅನುಗ್ರಹಗಳ ಮೂಲಕ ನಿಮಗೆ ಸಹಾಯ ಮಾಡಿದ ಅಲ್ಲಾಹನನ್ನು ಭಯಪಡಿರಿ.
Verse 133
أَمَدَّكُم بِأَنْعَـٰمٍ وَبَنِينَ
Transliteration amaddakum bi-anʿāmin wabanīna
Kannada ಅವನು ನಿಮಗೆ ಪ್ರಾಣಿಗಳನ್ನೂ, ಸಂತತಿಯನ್ನೂ ಕೊಟ್ಟು ಸಹಾಯ ಮಾಡಿದನು.
Verse 134
وَجَنَّـٰتٍ وَعُيُونٍ
Transliteration wajannātin waʿuyūnin
Kannada ತೋಟಗಳನ್ನೂ ಚಿಲುಮೆಗಳನ್ನೂ ಕೊಟ್ಟೂ.
Verse 135
إِنِّىٓ أَخَافُ عَلَيْكُمْ عَذَابَ يَوْمٍ عَظِيمٍ
Transliteration innī akhāfu ʿalaykum ʿadhāba yawmin ʿaẓīmin
Kannada ನಿಮ್ಮ ಮೇಲೆ ಒಂದು ಮಹಾದಿನದ ಯಾತನೆಯನ್ನು ನಾನು ಭಯಪಡುತ್ತೇನೆ.
Verse 136
قَالُوا۟ سَوَآءٌ عَلَيْنَآ أَوَعَظْتَ أَمْ لَمْ تَكُن مِّنَ ٱلْوَٰعِظِينَ
Transliteration qālū sawāon ʿalaynā awaʿaẓta am lam takun mina l-wāʿiẓīna
Kannada ಆಗ ಅವರು ಹೇಳಿದರು; “ನೀನು ಉಪದೇಶ ಮಾಡಿದರೂ ಮಾಡದಿದ್ದರೂ ನಮ್ಮ ಮಟ್ಟಿಗೆ ಸಮಾನ.
Verse 137
إِنْ هَـٰذَآ إِلَّا خُلُقُ ٱلْأَوَّلِينَ
Transliteration in hādhā illā khuluqu l-awalīna
Kannada ಇದು ಕೇವಲ ಹಿಂದಿನವರ ರೂಢಿ ಸಂಪ್ರದಾಯ ಮಾತ್ರ.
Verse 138
وَمَا نَحْنُ بِمُعَذَّبِينَ
Transliteration wamā naḥnu bimuʿadhabīna
Kannada ನಾವು (ಮರಣಾನಂತರ) ಶಿಕ್ಷೆಗೊಳಗಾಗು ವವರಲ್ಲ”.
Verse 139
فَكَذَّبُوهُ فَأَهْلَكْنَـٰهُمْ ۗ إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
Transliteration fakadhabūhu fa-ahlaknāhum inna fī dhālika laāyatan wamā kāna aktharuhum mu'minīna
Kannada ಹೀಗೆ ಅವರು ಹೂದರನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ನಾಶಗೊಳಿಸಿದೆವು. ಖಂಡಿತ ಇದರಲ್ಲಿ ದೊಡ್ಡ ನಿದರ್ಶನವಿದೆ. ಆದರೆ, ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.
Verse 140
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Transliteration wa-inna rabbaka lahuwa l-ʿazīzu l-raḥīmu
Kannada ಖಂಡಿತ, ನಿಮ್ಮ ಪ್ರಭು ಮಹಾ ಪ್ರಬಲನೂ ದಯಾಮಯನೂ ಆಗಿರುತ್ತಾನೆ.
Verse 141
كَذَّبَتْ ثَمُودُ ٱلْمُرْسَلِينَ
Transliteration kadhabat thamūdu l-mur'salīna
Kannada ಸಮೂದ್ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು.
Verse 142
إِذْ قَالَ لَهُمْ أَخُوهُمْ صَـٰلِحٌ أَلَا تَتَّقُونَ
Transliteration idh qāla lahum akhūhum ṣāliḥun alā tattaqūna
Kannada ಅವರ ಸಹೋದರ ಸಾಲಿಹರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
Verse 143
إِنِّى لَكُمْ رَسُولٌ أَمِينٌ
Transliteration innī lakum rasūlun amīnun
Kannada ಖಂಡಿತ ನಾನು ನಿಮ್ಮ ಪಾಲಿಗೆ ಒಬ್ಬ ಪ್ರಾಮಾಣಿಕ ದೇವದೂತನಾಗಿರುತ್ತೇನೆ.
Verse 144
فَٱتَّقُوا۟ ٱللَّهَ وَأَطِيعُونِ
Transliteration fa-ittaqū l-laha wa-aṭīʿūni
Kannada ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 145
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
Transliteration wamā asalukum ʿalayhi min ajrin in ajriya illā ʿalā rabbi l-ʿālamīna
Kannada ಇದಕ್ಕಾಗಿ ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವ ಲೋಕಗಳ ಪಾಲಕ ಪ್ರಭುವಾದ ಅಲ್ಲಾಹನ ಮೇಲೆ ಇದೆ.
Verse 146
أَتُتْرَكُونَ فِى مَا هَـٰهُنَآ ءَامِنِينَ
Transliteration atut'rakūna fī mā hāhunā āminīna
Kannada ನೀವು ಇಲ್ಲಿರುವ ಭೌತಿಕ ಸುಖಗಳಲ್ಲಿ ನಿಶ್ಚಿಂತರಾಗಿ ಮೈಮರೆತ ಸ್ಥಿತಿಯಲ್ಲಿ ನಿಮ್ಮನ್ನು ತೊರೆ ದು ಬಿಡಲಾಗುವುದೇ?
Verse 147
فِى جَنَّـٰتٍ وَعُيُونٍ
Transliteration fī jannātin waʿuyūnin
Kannada ಅಂದರೆ ಉದ್ಯಾನಗಳಲ್ಲೂ ಕಾಲುವೆಗಳಲ್ಲೂ.
Verse 148
وَزُرُوعٍ وَنَخْلٍ طَلْعُهَا هَضِيمٌ
Transliteration wazurūʿin wanakhlin ṭalʿuhā haḍīmun
Kannada ಹೊಲಗಳಲ್ಲೂ ಹಣ್ಣುಗಳ ಭಾರದಿಂದ ಗೊನೆ ಇಳಿದು ನಿಂತ ಖರ್ಜೂರದ ತೋಟಗಳಲ್ಲೂ ?
Verse 149
وَتَنْحِتُونَ مِنَ ٱلْجِبَالِ بُيُوتًا فَـٰرِهِينَ
Transliteration watanḥitūna mina l-jibāli buyūtan fārihīna
Kannada ನೀವು ಅಮಿತ ಆಹ್ಲಾದ ಭರಿತರಾಗಿ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತೀರಿ.
Verse 150
فَٱتَّقُوا۟ ٱللَّهَ وَأَطِيعُونِ
Transliteration fa-ittaqū l-laha wa-aṭīʿūni
Kannada ಆದ್ದರಿಂದ ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 151
وَلَا تُطِيعُوٓا۟ أَمْرَ ٱلْمُسْرِفِينَ
Transliteration walā tuṭīʿū amra l-mus'rifīna
Kannada ಅತಿಕ್ರಮಿಗಳ ಆದೇಶವನ್ನು ನೀವು ಪಾಲಿಸಬೇಡಿರಿ.
Verse 152
ٱلَّذِينَ يُفْسِدُونَ فِى ٱلْأَرْضِ وَلَا يُصْلِحُونَ
Transliteration alladhīna yuf'sidūna fī l-arḍi walā yuṣ'liḥūna
Kannada ಭೂಮಿಯಲ್ಲಿ ಗೊಂದಲವನ್ನುಂಟು ಮಾಡುವ ಮತ್ತು ಯಾವ ಒಳಿತಿನ ಕಾರ್ಯವನ್ನೂ ಮಾಡದ.
Verse 153
قَالُوٓا۟ إِنَّمَآ أَنتَ مِنَ ٱلْمُسَحَّرِينَ
Transliteration qālū innamā anta mina l-musaḥarīna
Kannada ಆಗ ಅವರು ಹೇಳಿದರು, ನೀನು ಕೇವಲ ಒಬ್ಬ ಮಾಟ ಬಾಧಿತ ವ್ಯಕ್ತಿ.
Verse 154
مَآ أَنتَ إِلَّا بَشَرٌ مِّثْلُنَا فَأْتِ بِـَٔايَةٍ إِن كُنتَ مِنَ ٱلصَّـٰدِقِينَ
Transliteration mā anta illā basharun mith'lunā fati biāyatin in kunta mina l-ṣādiqīna
Kannada ನೀನು ನಮ್ಮಂಥ ಒಬ್ಬ ಮನುಷ್ಯನಲ್ಲದೆ ಅಲ್ಲ. ನೀನು ಸತ್ಯವಾದಿಯಾಗಿದ್ದರೆ ಒಂದು ದೃಷ್ಟಾಂತವನ್ನು ತೆಗೆದುಕೊಂಡು ಬಾ.
Verse 155
قَالَ هَـٰذِهِۦ نَاقَةٌ لَّهَا شِرْبٌ وَلَكُمْ شِرْبُ يَوْمٍ مَّعْلُومٍ
Transliteration qāla hādhihi nāqatun lahā shir'bun walakum shir'bu yawmin maʿlūmin
Kannada ಆಗ ಸಾಲಿಹ್ ಹೇಳಿದರು “ಇದೊಂದು ಒಂಟೆ. ಒಂದು ನಿಗದಿತ ದಿನ ನೀರು ಕುಡಿಯುವ ಹಕ್ಕು ಇದಕ್ಕೂ ಇನ್ನೊಂದು ನಿಗದಿತ ದಿನ ನೀರು ಪಡೆಯುವ ಹಕ್ಕು ನಿಮಗೂ ಇದೆ.
Verse 156
وَلَا تَمَسُّوهَا بِسُوٓءٍ فَيَأْخُذَكُمْ عَذَابُ يَوْمٍ عَظِيمٍ
Transliteration walā tamassūhā bisūin fayakhudhakum ʿadhābu yawmin ʿaẓīmin
Kannada ಯಾವುದೇ ರೀತಿಯ ಕೆಡುಕಿನಿಂದ ನೀವದನ್ನು ಮುಟ್ಟಬೇಡಿರಿ. ಇಲ್ಲವೇ ಒಂದು ಮಹಾ ದಿನದ ಶಿಕ್ಷೆಯು ನಿಮ್ಮನ್ನು ಬಾಧಿಸುವುದು”.
Verse 157
فَعَقَرُوهَا فَأَصْبَحُوا۟ نَـٰدِمِينَ
Transliteration faʿaqarūhā fa-aṣbaḥū nādimīna
Kannada ಆದರೆ ಅವರು ಅದನ್ನು ಕೊಯ್ದು ಬಿಟ್ಟರು. ಕೊನೆಗೆ ಪಶ್ಚಾತ್ತಾಪಪಟ್ಟರು .
Verse 158
فَأَخَذَهُمُ ٱلْعَذَابُ ۗ إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
Transliteration fa-akhadhahumu l-ʿadhābu inna fī dhālika laāyatan wamā kāna aktharuhum mu'minīna
Kannada ಆಗ ಶಿಕ್ಷೆಯು ಅವರನ್ನು ಬಾಧಿಸಿತು. ಖಂಡಿತ ಇದರಲ್ಲಿ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.
Verse 159
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Transliteration wa-inna rabbaka lahuwa l-ʿazīzu l-raḥīmu
Kannada ಖಂಡಿತ ನಿಮ್ಮ ಪ್ರಭು ಪ್ರತಾಪಶಾಲಿಯೂ, ಕೃಪಾನಿಧಿಯೂ ಆಗಿರುತ್ತಾನೆ.
Verse 160
كَذَّبَتْ قَوْمُ لُوطٍ ٱلْمُرْسَلِينَ
Transliteration kadhabat qawmu lūṭin l-mur'salīna
Kannada ಲೂಥರ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು.
Verse 161
إِذْ قَالَ لَهُمْ أَخُوهُمْ لُوطٌ أَلَا تَتَّقُونَ
Transliteration idh qāla lahum akhūhum lūṭun alā tattaqūna
Kannada ಅವರ ಸಹೋದರ ಲೂಥರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
Verse 162
إِنِّى لَكُمْ رَسُولٌ أَمِينٌ
Transliteration innī lakum rasūlun amīnun
Kannada ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾಣಿಕ ದೇವದೂತನಾಗಿರುತ್ತೇನೆ.
Verse 163
فَٱتَّقُوا۟ ٱللَّهَ وَأَطِيعُونِ
Transliteration fa-ittaqū l-laha wa-aṭīʿūni
Kannada ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 164
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
Transliteration wamā asalukum ʿalayhi min ajrin in ajriya illā ʿalā rabbi l-ʿālamīna
Kannada ಇದಕ್ಕಾಗಿ ನಾನು ಯಾವುದೇ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವ ಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ.
Verse 165
أَتَأْتُونَ ٱلذُّكْرَانَ مِنَ ٱلْعَـٰلَمِينَ
Transliteration atatūna l-dhuk'rāna mina l-ʿālamīna
Kannada ನೀವು ಜಗತ್ತಿನವರ ಪೈಕಿ (ಕಾಮ ತೀರಿಸಲು) ಪುರುಷರ ಬಳಿಗೆ ಹೋಗುತ್ತೀರಾ?
Verse 166
وَتَذَرُونَ مَا خَلَقَ لَكُمْ رَبُّكُم مِّنْ أَزْوَٰجِكُم ۚ بَلْ أَنتُمْ قَوْمٌ عَادُونَ
Transliteration watadharūna mā khalaqa lakum rabbukum min azwājikum bal antum qawmun ʿādūna
Kannada ನಿಮ್ಮ ಪ್ರಭು ನಿಮಗಾಗಿ ಸೃಷ್ಟಿಸಿರುವ ಪತ್ನಿ ಯರನ್ನು ತೊರೆದು ಬಿಡುತ್ತೀರಾ? ನಿಜಕ್ಕೂ ನೀವು ಮಿತಿಮೀರಿದ ಜನಾಂಗವಾಗಿದ್ದೀರಿ .
Verse 167
قَالُوا۟ لَئِن لَّمْ تَنتَهِ يَـٰلُوطُ لَتَكُونَنَّ مِنَ ٱلْمُخْرَجِينَ
Transliteration qālū la-in lam tantahi yālūṭu latakūnanna mina l-mukh'rajīna
Kannada ಆಗ ಅವರು, “ಲೂಥ್, ನೀನು ಇದರಿಂದ ವಿರಮಿಸದಿದ್ದರೆ ಹೊರಕ್ಕೆ ಅಟ್ಟಲ್ಪಟ್ಟವರ ಸಾಲಿಗೆ ನೀನೂ ಸೇರುವೆ” ಎಂದರು.
Verse 168
قَالَ إِنِّى لِعَمَلِكُم مِّنَ ٱلْقَالِينَ
Transliteration qāla innī liʿamalikum mina l-qālīna
Kannada ಆಗ ಅವರು ಹೇಳಿದರು, ‘ನಿಮ್ಮ ದುಷ್ಕøತ್ಯಕ್ಕೆ ಮರುಗುವವರಲ್ಲಿ ನಾನು ಸೇರಿದ್ದೇನೆ.
Verse 169
رَبِّ نَجِّنِى وَأَهْلِى مِمَّا يَعْمَلُونَ
Transliteration rabbi najjinī wa-ahlī mimmā yaʿmalūna
Kannada ಪ್ರಭೂ, ನನ್ನನ್ನೂ ನನ್ನ ಕುಟುಂಬವನ್ನೂ ಇವರು ಮಾಡುತ್ತಿರುವ ದುಷ್ಕøತ್ಯಗಳಿಂದ ರಕ್ಷಿಸು’.
Verse 170
فَنَجَّيْنَـٰهُ وَأَهْلَهُۥٓ أَجْمَعِينَ
Transliteration fanajjaynāhu wa-ahlahu ajmaʿīna
Kannada ಆಗ ಅವರನ್ನೂ ಅವರ ಎಲ್ಲ ಕುಟುಂಬದವರನ್ನೂ ನಾವು ರಕ್ಷಿಸಿದೆವು.
Verse 171
إِلَّا عَجُوزًا فِى ٱلْغَـٰبِرِينَ
Transliteration illā ʿajūzan fī l-ghābirīna
Kannada ಕೊನೆಗೆ ಹಿಂದೆ ಉಳಿದವರಲ್ಲಾಗಿದ್ದ ಓರ್ವ ವೃದ್ಧೆಯ ಹೊರತು.
Verse 172
ثُمَّ دَمَّرْنَا ٱلْـَٔاخَرِينَ
Transliteration thumma dammarnā l-ākharīna
Kannada ಅನಂತರ ಉಳಿದವರನ್ನು ಸಮೂಲ ನಾಶ ಮಾಡಿದೆವು.
Verse 173
وَأَمْطَرْنَا عَلَيْهِم مَّطَرًا ۖ فَسَآءَ مَطَرُ ٱلْمُنذَرِينَ
Transliteration wa-amṭarnā ʿalayhim maṭaran fasāa maṭaru l-mundharīna
Kannada ಅವರ ಮೇಲೆ ಒಂದು ವಿಶೇಷ ಮಳೆಯನ್ನು ಮಳೆಗೆರೆದೆವು. ಎಚ್ಚರಿಕೆ ಕೊಡಲ್ಪಟ್ಟವರ ಅತ್ಯಂತ ಕೆಟ್ಟ ಮಳೆ.
Verse 174
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
Transliteration inna fī dhālika laāyatan wamā kāna aktharuhum mu'minīna
Kannada ಇದರಲ್ಲಿ ಖಂಡಿತ ನಿದರ್ಶನವಿದೆ . ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.
Verse 175
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Transliteration wa-inna rabbaka lahuwa l-ʿazīzu l-raḥīmu
Kannada ನಿಮ್ಮ ಪ್ರಭು ಮಹಾಪ್ರತಾಪಶಾಲಿಯೂ, ದಯಾನಿಧಿಯೂ ಆಗಿರುತ್ತಾನೆ.
Verse 176
كَذَّبَ أَصْحَـٰبُ لْـَٔيْكَةِ ٱلْمُرْسَلِينَ
Transliteration kadhaba aṣḥābu al'aykati l-mur'salīna
Kannada ಐಕಃದವರು ದೇವದೂತರುಗಳನ್ನು ಸುಳ್ಳಾಗಿಸಿದರು.
Verse 177
إِذْ قَالَ لَهُمْ شُعَيْبٌ أَلَا تَتَّقُونَ
Transliteration idh qāla lahum shuʿaybun alā tattaqūna
Kannada ಶುಐಬರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ, “ನೀವು ಅಲ್ಲಾಹನನ್ನು ಭಯ ಪಡುವುದಿಲ್ಲವೇ?
Verse 178
إِنِّى لَكُمْ رَسُولٌ أَمِينٌ
Transliteration innī lakum rasūlun amīnun
Kannada ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾಣಿಕ ದೇವದೂತನಾಗಿರುತ್ತೇನೆ.
Verse 179
فَٱتَّقُوا۟ ٱللَّهَ وَأَطِيعُونِ
Transliteration fa-ittaqū l-laha wa-aṭīʿūni
Kannada ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 180
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
Transliteration wamā asalukum ʿalayhi min ajrin in ajriya illā ʿalā rabbi l-ʿālamīna
Kannada ಇದಕ್ಕಾಗಿ ನಾನು ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವ ಲೋಕಗಳ ಪಾಲಕ ಪ್ರಭುವಿನ ಮೇಲೆ ಮಾತ್ರವಿದೆ.
Verse 181
۞ أَوْفُوا۟ ٱلْكَيْلَ وَلَا تَكُونُوا۟ مِنَ ٱلْمُخْسِرِينَ
Transliteration awfū l-kayla walā takūnū mina l-mukh'sirīna
Kannada ಅಳತೆ ಪಾತ್ರೆಯನ್ನು ಪೂರ್ತಿಯಾಗಿ ತುಂಬಿರಿ ಮತ್ತು ಕಡಿತ ಮಾಡಿಕೊಡುವವರಲ್ಲಿ ನೀವಾ ಗದಿರಿ.
Verse 182
وَزِنُوا۟ بِٱلْقِسْطَاسِ ٱلْمُسْتَقِيمِ
Transliteration wazinū bil-qis'ṭāsi l-mus'taqīmi
Kannada ಸರಿಯಾದ ತಕ್ಕಡಿಯಿಂದ ತೂಗಿರಿ.
Verse 183
وَلَا تَبْخَسُوا۟ ٱلنَّاسَ أَشْيَآءَهُمْ وَلَا تَعْثَوْا۟ فِى ٱلْأَرْضِ مُفْسِدِينَ
Transliteration walā tabkhasū l-nāsa ashyāahum walā taʿthaw fī l-arḍi muf'sidīna
Kannada ಜನರಿಗೆ ಅವರ ವಸ್ತುಗಳನ್ನು ನಷ್ಟಗೊಳಿಸಬೇಡಿರಿ ಮತ್ತು ಭೂಮಿಯಲ್ಲಿ ನಾಶವನ್ನು ಹರಡಬೇಡಿರಿ.
Verse 184
وَٱتَّقُوا۟ ٱلَّذِى خَلَقَكُمْ وَٱلْجِبِلَّةَ ٱلْأَوَّلِينَ
Transliteration wa-ittaqū alladhī khalaqakum wal-jibilata l-awalīna
Kannada ನಿಮ್ಮನ್ನೂ ಗತಪೀಳಿಗೆಗಳನ್ನೂ ಸೃಷ್ಟಿಸಿದ ಅಲ್ಲಾಹನನ್ನು ಭಯಪಡಿರಿ”.
Verse 185
قَالُوٓا۟ إِنَّمَآ أَنتَ مِنَ ٱلْمُسَحَّرِينَ
Transliteration qālū innamā anta mina l-musaḥarīna
Kannada ಆಗ ಅವರು ಹೇಳಿದರು `ನೀನೊಬ್ಬ ಮಾಟ ಬಾಧಿತನಾಗಿರುವೆ.
Verse 186
وَمَآ أَنتَ إِلَّا بَشَرٌ مِّثْلُنَا وَإِن نَّظُنُّكَ لَمِنَ ٱلْكَـٰذِبِينَ
Transliteration wamā anta illā basharun mith'lunā wa-in naẓunnuka lamina l-kādhibīna
Kannada ನೀನು ಕೇವಲ ನಮ್ಮಂಥ ಓರ್ವ ಮಾನವ. ನಿನ್ನನ್ನು ಬರಿಯ ಸುಳ್ಳುಗಾರನೆಂದು ನಾವು ಭಾವಿಸುತ್ತೇವೆ.
Verse 187
فَأَسْقِطْ عَلَيْنَا كِسَفًا مِّنَ ٱلسَّمَآءِ إِن كُنتَ مِنَ ٱلصَّـٰدِقِينَ
Transliteration fa-asqiṭ ʿalaynā kisafan mina l-samāi in kunta mina l-ṣādiqīna
Kannada ಆದ್ದರಿಂದ ನೀನು ಸತ್ಯವಾದಿಯಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಉದುರಿಸು.
Verse 188
قَالَ رَبِّىٓ أَعْلَمُ بِمَا تَعْمَلُونَ
Transliteration qāla rabbī aʿlamu bimā taʿmalūna
Kannada ಶುಐಬರು “ನೀವು ಮಾಡುತ್ತಿರುವುದನ್ನು ನನ್ನ ಪ್ರಭು ಚೆನ್ನಾಗಿ ತಿಳಿದಿರುವನು. (ಅವನು ಯುಕ್ತವಾದುದನ್ನು ಮಾಡುವನು). ಎಂದರು.
Verse 189
فَكَذَّبُوهُ فَأَخَذَهُمْ عَذَابُ يَوْمِ ٱلظُّلَّةِ ۚ إِنَّهُۥ كَانَ عَذَابَ يَوْمٍ عَظِيمٍ
Transliteration fakadhabūhu fa-akhadhahum ʿadhābu yawmi l-ẓulati innahu kāna ʿadhāba yawmin ʿaẓīmin
Kannada ಅವರು, ಶುಐಬರನ್ನು ಸುಳ್ಳಾಗಿಸಿದರು, ಕೊನೆಗೆ ಮೋಡದ ನೆರಳಿನ ದಿನದ ಶಿಕ್ಷೆ ಅವರ ನ್ನು ಹಿಡಿಯಿತು. ಅದು ನಿಜಕ್ಕೂ ಅತಿ ಭಯಾನಕ ದಿನದ ಶಿಕ್ಷೆಯಾಗಿತ್ತು.
Verse 190
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
Transliteration inna fī dhālika laāyatan wamā kāna aktharuhum mu'minīna
Kannada ಇದರಲ್ಲಿ ಖಂಡಿತ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.
Verse 191
وَإِنَّ رَبَّكَ لَهُوَ ٱلْعَزِيزُ ٱلرَّحِيمُ
Transliteration wa-inna rabbaka lahuwa l-ʿazīzu l-raḥīmu
Kannada ನಿಮ್ಮ ಪ್ರಭು ಮಹಾ ಪ್ರತಾಪಶಾಲಿಯೂ, ದಯಾನಿಧಿಯೂ ಆಗಿರುತ್ತಾನೆ.
Verse 192
وَإِنَّهُۥ لَتَنزِيلُ رَبِّ ٱلْعَـٰلَمِينَ
Transliteration wa-innahu latanzīlu rabbi l-ʿālamīna
Kannada ಇದು ಸರ್ವಲೋಕಗಳ ಪಾಲಕನ ಅವತೀರ್ಣವೇ ಹೌದು.
Verse 193
نَزَلَ بِهِ ٱلرُّوحُ ٱلْأَمِينُ
Transliteration nazala bihi l-rūḥu l-amīnu
Kannada ಪ್ರಾಮಾಣಿಕ ಆತ್ಮವು (ದೇವಚರ ಜಿಬ್ರೀಲರು) ಇದರ ಜೊತೆ ಇಳಿದಿದೆ.
Verse 194
عَلَىٰ قَلْبِكَ لِتَكُونَ مِنَ ٱلْمُنذِرِينَ
Transliteration ʿalā qalbika litakūna mina l-mundhirīna
Kannada ನಿಮ್ಮ ಹೃದಯಕ್ಕೆ ಇಳಿದಿದೆ. ಇದು ನೀವು ಎಚ್ಚರಿಕೆ ನೀಡುವವರಲ್ಲಿ ಸೇರಲಿಕ್ಕಾಗಿ.
Verse 195
بِلِسَانٍ عَرَبِىٍّ مُّبِينٍ
Transliteration bilisānin ʿarabiyyin mubīnin
Kannada ಸುಸ್ಪಷ್ಟವಾದ ಅರಬೀ ಭಾಷೆಯಲ್ಲಿ .
Verse 196
وَإِنَّهُۥ لَفِى زُبُرِ ٱلْأَوَّلِينَ
Transliteration wa-innahu lafī zuburi l-awalīna
Kannada ಅದು ಗತಜನಾಂಗಗಳ ಗ್ರಂಥಗಳಲ್ಲೂ ಇದೆ.
Verse 197
أَوَلَمْ يَكُن لَّهُمْ ءَايَةً أَن يَعْلَمَهُۥ عُلَمَـٰٓؤُا۟ بَنِىٓ إِسْرَٰٓءِيلَ
Transliteration awalam yakun lahum āyatan an yaʿlamahu ʿulamāu banī is'rāīla
Kannada ಇಸ್ರಾಈಲ ಸಂತತಿಯ ವಿದ್ವಾಂಸರು ಅದನ್ನು ತಿಳಿದಿರುವುದು ಇವರಿಗೆ (ಸತ್ಯನಿಷೇಧಿ ಗಳಿಗೆ) ಒಂದು ನಿದರ್ಶನವಲ್ಲವೇ?
Verse 198
وَلَوْ نَزَّلْنَـٰهُ عَلَىٰ بَعْضِ ٱلْأَعْجَمِينَ
Transliteration walaw nazzalnāhu ʿalā baʿḍi l-aʿjamīna
Kannada ನಾವು ಇದನ್ನು ಓರ್ವ ಅರಬೇತರನ ಮೇಲೆ ಅವತೀರ್ಣಗೊಳಿಸುತ್ತಿದ್ದರೆ,
Verse 199
فَقَرَأَهُۥ عَلَيْهِم مَّا كَانُوا۟ بِهِۦ مُؤْمِنِينَ
Transliteration faqara-ahu ʿalayhim mā kānū bihi mu'minīna
Kannada ಆಮೇಲೆ ಅವನು ಇದನ್ನು ಅವರಿಗೆ ಓದಿ ಹೇಳುತ್ತಿದ್ದರೆ ಇವರು ಅದನ್ನು ನಂಬುತ್ತಿರಲಿಲ್ಲ.
Verse 200
كَذَٰلِكَ سَلَكْنَـٰهُ فِى قُلُوبِ ٱلْمُجْرِمِينَ
Transliteration kadhālika salaknāhu fī qulūbi l-muj'rimīna
Kannada ಹಾಗೆಯೇ ಅದನ್ನು (ಸತ್ಯನಿಷೇಧವನ್ನು) ಅಪ ರಾಧಿಗಳ ಹೃದಯಗಳಲ್ಲಿ ನಾವು ಹಾಯಿಸಿ ದ್ದೇವೆ.
Verse 201
لَا يُؤْمِنُونَ بِهِۦ حَتَّىٰ يَرَوُا۟ ٱلْعَذَابَ ٱلْأَلِيمَ
Transliteration lā yu'minūna bihi ḥattā yarawū l-ʿadhāba l-alīma
Kannada ವೇದನಾತ್ಮಕ ಶಿಕ್ಷೆಯನ್ನು ಕಂಡುಕೊಳ್ಳುವವ ರೆಗೂ ಅವರು ಇದರಲ್ಲಿ (ಖುರ್ಆನಿನಲ್ಲಿ) ವಿಶ್ವಾ ಸವಿರಿಸಲಾರರು.
Verse 202
فَيَأْتِيَهُم بَغْتَةً وَهُمْ لَا يَشْعُرُونَ
Transliteration fayatiyahum baghtatan wahum lā yashʿurūna
Kannada ಅವರಿಗೆ ಯಾವುದೇ ಪರಿವೆಯಿಲ್ಲದಂತೆ ಹಠಾ ತ್ತನೆ ಅದು ಅವರ ಮೇಲೆ ಬಂದೆರಗುವುದು.
Verse 203
فَيَقُولُوا۟ هَلْ نَحْنُ مُنظَرُونَ
Transliteration fayaqūlū hal naḥnu munẓarūna
Kannada ‘ನಮಗೆ (ಸ್ವಲ್ಪ) ಕಾಲಾವಕಾಶ ಸಿಗಬಹುದೇ?’ ಎಂದು ಆಗ ಅವರು ಕೇಳುವರು.
Verse 204
أَفَبِعَذَابِنَا يَسْتَعْجِلُونَ
Transliteration afabiʿadhābinā yastaʿjilūna
Kannada ಅಂದರೆ ನಮ್ಮ ಶಿಕ್ಷೆಗಾಗಿ ಅವರು ತವಕಪಡು ತ್ತಿರುವರೇ?
Verse 205
أَفَرَءَيْتَ إِن مَّتَّعْنَـٰهُمْ سِنِينَ
Transliteration afara-ayta in mattaʿnāhum sinīna
Kannada ತಾವು ಆಲೋಚಿಸಿ ನೋಡಿದ್ದೀರಾ? ಇವರಿಗೆ ನಾವು ವರ್ಷಗಟ್ಟಲೆ ಸುಖ ಸೌಕರ್ಯವನ್ನು ಕೊಟ್ಟರೆ,
Verse 206
ثُمَّ جَآءَهُم مَّا كَانُوا۟ يُوعَدُونَ
Transliteration thumma jāahum mā kānū yūʿadūna
Kannada ಅನಂತರ ಇವರಿಗೆ ಎಚ್ಚರಿಕೆ ಕೊಡಲಾಗುತ್ತಿ ರುವ ಶಿಕ್ಷೆ ಇವರಿಗೆ ಬಂದು ಬಿಟ್ಟರೆ,
Verse 207
مَآ أَغْنَىٰ عَنْهُم مَّا كَانُوا۟ يُمَتَّعُونَ
Transliteration mā aghnā ʿanhum mā kānū yumattaʿūna
Kannada ಇವರಿಗೆ ನೀಡಲಾದ ಆ ಸುಖ ಸವಲತ್ತುಗಳು ಅವರಿಗೆ ಯಾವುದೇ ಪ್ರಯೋಜನ ಕೊಡು ತ್ತಿರಲಿಲ್ಲ.
Verse 208
وَمَآ أَهْلَكْنَا مِن قَرْيَةٍ إِلَّا لَهَا مُنذِرُونَ
Transliteration wamā ahlaknā min qaryatin illā lahā mundhirūna
Kannada ಯಾವ ನಾಡನ್ನೂ ನಾವು ನಾಶ ಮಾಡಿಲ್ಲ; ಅದಕ್ಕೆ ತಾಕೀತುಗಾರರಿಲ್ಲದೆ.
Verse 209
ذِكْرَىٰ وَمَا كُنَّا ظَـٰلِمِينَ
Transliteration dhik'rā wamā kunnā ẓālimīna
Kannada ನೆನಪಿಸಲಿಕ್ಕಾಗಿ ಅದು. ನಾವು ಅಕ್ರಮಿಗಳಾಗಿರಲಿಲ್ಲ.
Verse 210
وَمَا تَنَزَّلَتْ بِهِ ٱلشَّيَـٰطِينُ
Transliteration wamā tanazzalat bihi l-shayāṭīnu
Kannada ಇದನ್ನು (ಖುರ್ಆನ್ ಗ್ರಂಥವನ್ನು) ಶೈತಾನರು ತಂದಿಳಿಸಲಿಲ್ಲ.
Verse 211
وَمَا يَنۢبَغِى لَهُمْ وَمَا يَسْتَطِيعُونَ
Transliteration wamā yanbaghī lahum wamā yastaṭīʿūna
Kannada ಅದು ಅವರಿಗೆ ಉಚಿತವೂ ಅಲ್ಲ. ಅದಕ್ಕೆ ಅವರು ಸಮರ್ಥರೂ ಅಲ್ಲ.
Verse 212
إِنَّهُمْ عَنِ ٱلسَّمْعِ لَمَعْزُولُونَ
Transliteration innahum ʿani l-samʿi lamaʿzūlūna
Kannada ಖಂಡಿತ ಅವರು (ದಿವ್ಯ ಸಂದೇಶವನ್ನು) ಆಲಿಸುವುದರಿಂದ ದೂರವಿರಿಸಲ್ಪಟ್ಟವರು.
Verse 213
فَلَا تَدْعُ مَعَ ٱللَّهِ إِلَـٰهًا ءَاخَرَ فَتَكُونَ مِنَ ٱلْمُعَذَّبِينَ
Transliteration falā tadʿu maʿa l-lahi ilāhan ākhara fatakūna mina l-muʿadhabīna
Kannada ಆದುದರಿಂದ (ಸಂದೇಶವಾಹಕರೇ,) ಅಲ್ಲಾಹನೊಂದಿಗೆ ಬೇರೆ ಆರಾಧ್ಯನನ್ನು ಆರಾಧಿಸ ಬೇಡಿರಿ. ಅನ್ಯಥಾ ನೀವು ಶಿಕ್ಷಿಸಲ್ಪಡುವವರ ಸಾಲಿಗೆ ಸೇರುವಿರಿ.
Verse 214
وَأَنذِرْ عَشِيرَتَكَ ٱلْأَقْرَبِينَ
Transliteration wa-andhir ʿashīrataka l-aqrabīna
Kannada ನಿಮ್ಮ ಅತ್ಯಂತ ನಿಕಟ ಸಂಬಂಧಿಕರಿಗೆ ಎಚ್ಚರಿಕೆ ನೀಡಿರಿ.
Verse 215
وَٱخْفِضْ جَنَاحَكَ لِمَنِ ٱتَّبَعَكَ مِنَ ٱلْمُؤْمِنِينَ
Transliteration wa-ikh'fiḍ janāḥaka limani ittabaʿaka mina l-mu'minīna
Kannada ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗೆ ನಿಮ್ಮ (ವಿನಯದ) ರೆಕ್ಕೆಯನ್ನು ತಗ್ಗಿಸಿರಿ.
Verse 216
فَإِنْ عَصَوْكَ فَقُلْ إِنِّى بَرِىٓءٌ مِّمَّا تَعْمَلُونَ
Transliteration fa-in ʿaṣawka faqul innī barīon mimmā taʿmalūna
Kannada ಇನ್ನು ಅವರು ನಿಮಗೆ ಎದುರಾದರೆ, ನೀವು ಮಾಡುವ ಕಾರ್ಯಗಳಿಂದ ನಾನು ಮುಕ್ತನು ಎಂದು ಹೇಳಿರಿ.
Verse 217
وَتَوَكَّلْ عَلَى ٱلْعَزِيزِ ٱلرَّحِيمِ
Transliteration watawakkal ʿalā l-ʿazīzi l-raḥīmi
Kannada ಪ್ರತಾಪಿಯೂ, ಕರುಣಾನಿಧಿಯೂ ಆಗಿರುವ ಅಲ್ಲಾಹನ ಮೇಲೆ ಭರವಸೆ ತಾಳಿರಿ.
Verse 218
ٱلَّذِى يَرَىٰكَ حِينَ تَقُومُ
Transliteration alladhī yarāka ḥīna taqūmu
Kannada ನೀವು (ನಮಾಝ್ಗೆ) ನಿಂತಾಗ ನಿಮ್ಮನ್ನು ನೋಡಬಲ್ಲವನು ಅವನು.
Verse 219
وَتَقَلُّبَكَ فِى ٱلسَّـٰجِدِينَ
Transliteration wataqallubaka fī l-sājidīna
Kannada ಸಾಷ್ಟಾಂಗವೆರಗುವವರ ಮಧ್ಯೆ ನಿಮ್ಮ ಚಲನ ವಲನವನ್ನು (ನೋಡಬಲ್ಲವನು).
Verse 220
إِنَّهُۥ هُوَ ٱلسَّمِيعُ ٱلْعَلِيمُ
Transliteration innahu huwa l-samīʿu l-ʿalīmu
Kannada ನಿಜಕ್ಕೂ ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.
Verse 221
هَلْ أُنَبِّئُكُمْ عَلَىٰ مَن تَنَزَّلُ ٱلشَّيَـٰطِينُ
Transliteration hal unabbi-ukum ʿalā man tanazzalu l-shayāṭīnu
Kannada ಜನರೇ, ಶೈತಾನರು ಯಾರ ಮೇಲೆ ಇಳಿಯು ತ್ತಾರೆಂದು ನಾನು ನಿಮಗೆ ತಿಳಿಸಿಕೊಡಲೇ?
Verse 222
تَنَزَّلُ عَلَىٰ كُلِّ أَفَّاكٍ أَثِيمٍ
Transliteration tanazzalu ʿalā kulli affākin athīmin
Kannada ಧಾರಾಳ ಸುಳ್ಳು ಹೇಳುವ ಹಾಗೂ ಸಾಕಷ್ಟು ಪಾಪ ಮಾಡುತ್ತಿರುವ ಎಲ್ಲ ಜನರ ಮೇಲೆ ಅವರು (ಶೈತಾನರು) ಇಳಿಯುತ್ತಾರೆ.
Verse 223
يُلْقُونَ ٱلسَّمْعَ وَأَكْثَرُهُمْ كَـٰذِبُونَ
Transliteration yul'qūna l-samʿa wa-aktharuhum kādhibūna
Kannada ಅವರು ಕಿವಿ ಕೊಟ್ಟು ಕೇಳುತ್ತಾರೆ. ಅವರಲ್ಲಿ ಹೆಚ್ಚಿನವರು ಸುಳ್ಳುಗಾರರು.
Verse 224
وَٱلشُّعَرَآءُ يَتَّبِعُهُمُ ٱلْغَاوُۥنَ
Transliteration wal-shuʿarāu yattabiʿuhumu l-ghāwūna
Kannada ಕವಿಗಳನ್ನು ದಾರಿಗೆಟ್ಟವರು ಹಿಂಬಾಲಿಸುತ್ತಾರೆ.
Verse 225
أَلَمْ تَرَ أَنَّهُمْ فِى كُلِّ وَادٍ يَهِيمُونَ
Transliteration alam tara annahum fī kulli wādin yahīmūna
Kannada ಅವರು ಎಲ್ಲ ತಪ್ಪಲಲ್ಲೂ ಅಲೆದಾಡುವುದನ್ನು ನೀವು ಕಾಣುತ್ತಿಲ್ಲವೇ?
Verse 226
وَأَنَّهُمْ يَقُولُونَ مَا لَا يَفْعَلُونَ
Transliteration wa-annahum yaqūlūna mā lā yafʿalūna
Kannada ಅವರು ತಾವು ಮಾಡದ್ದನ್ನು ಆಡುತ್ತಾರೆ ಎಂಬುದನ್ನೂ ,
Verse 227
إِلَّا ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ وَذَكَرُوا۟ ٱللَّهَ كَثِيرًا وَٱنتَصَرُوا۟ مِنۢ بَعْدِ مَا ظُلِمُوا۟ ۗ وَسَيَعْلَمُ ٱلَّذِينَ ظَلَمُوٓا۟ أَىَّ مُنقَلَبٍ يَنقَلِبُونَ
Transliteration illā alladhīna āmanū waʿamilū l-ṣāliḥāti wadhakarū l-laha kathīran wa-intaṣarū min baʿdi mā ẓulimū wasayaʿlamu alladhīna ẓalamū ayya munqalabin yanqalibūna
Kannada ಸತ್ಯವಿಶ್ವಾಸವನ್ನು ಸ್ವೀಕರಿಸಿದ, ಸತ್ಕರ್ಮಗಳನ್ನು ಮಾಡಿದ, ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಿದ ಮತ್ತು ತಾವು ಅಕ್ರಮಕ್ಕೊಳಗಾದ ನಂತರ ಆತ್ಮ ರಕ್ಷಣೆಗೆ ಕ್ರಮ ಕೈಗೊಳ್ಳುವವರು ಇದಕ್ಕೆ ಹೊರತಾಗಿದ್ದಾರೆ. ಅಕ್ರಮವೆಸಗಿದವರು, ಅವರು ಯಾವ ಕಡೆಗೆ ತಿರುಗಿ ಹೋಗಲಿದ್ದಾ ರೆಂದು ಸದ್ಯದಲ್ಲೇ ತಿಳಿಯುವರು.
Read Surah Ash-Shu'ara in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.