Surah Ya-Sin in Kannada: translation and audio
Surah 36 · يس · Ya Sin · 83 verses
Surah Ya-Sin verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ya-Sin word by word in English.
Verse 1
يسٓ
Transliteration ya-seen
Kannada ಯಾಸೀನ್
Verse 2
وَٱلْقُرْءَانِ ٱلْحَكِيمِ
Transliteration wal-qur'āni l-ḥakīmi
Kannada ಸತ್ವಪೂರ್ಣವಾದ ಖುರ್‍ಆನಿನಾಣೆ.
Verse 3
إِنَّكَ لَمِنَ ٱلْمُرْسَلِينَ
Transliteration innaka lamina l-mur'salīna
Kannada ಖಂಡಿತ ತಾವು ಸಂದೇಶವಾಹಕರಲ್ಲಿ ಸೇರಿದವರು.
Verse 4
عَلَىٰ صِرَٰطٍ مُّسْتَقِيمٍ
Transliteration ʿalā ṣirāṭin mus'taqīmin
Kannada ತಾವು ನೇರ ಮಾರ್ಗದಲ್ಲೇ ಇರುವಿರಿ.
Verse 5
تَنزِيلَ ٱلْعَزِيزِ ٱلرَّحِيمِ
Transliteration tanzīla l-ʿazīzi l-raḥīmi
Kannada (ಈ ಖುರ್‍ಆನ್) ಅತ್ಯಂತ ಪ್ರತಾಪಶಾಲಿಯೂ ಪರಮದಯಾಳುವೂ ಆದ ಅಲ್ಲಾಹನಿಂದ ಅವತೀ ರ್ಣಗೊಂಡಿದೆ.
Verse 6
لِتُنذِرَ قَوْمًا مَّآ أُنذِرَ ءَابَآؤُهُمْ فَهُمْ غَـٰفِلُونَ
Transliteration litundhira qawman mā undhira ābāuhum fahum ghāfilūna
Kannada ಇದು ಒಂದು ಜನಾಂಗಕ್ಕೆ ನೀವು ಎಚ್ಚರಿಕೆ ಕೊಡುವಂತಾಗಲು. ಅವರ ಪೂರ್ವಜರಿಗೆ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಆದ್ದರಿಂದ ಅವರು ನಿರ್ಲಕ್ಷರಾಗಿರುವರು.
Verse 7
لَقَدْ حَقَّ ٱلْقَوْلُ عَلَىٰٓ أَكْثَرِهِمْ فَهُمْ لَا يُؤْمِنُونَ
Transliteration laqad ḥaqqa l-qawlu ʿalā aktharihim fahum lā yu'minūna
Kannada ಅವರಲ್ಲಿ ಹೆಚ್ಚಿನವರ ಮೇಲೂ ವಚನವು ನಿಜಗೊಂಡಿದೆ. ಆದುದರಿಂದ ಅವರು ವಿಶ್ವಾಸವಿರಿಸಲಾರರು.
Verse 8
إِنَّا جَعَلْنَا فِىٓ أَعْنَـٰقِهِمْ أَغْلَـٰلًا فَهِىَ إِلَى ٱلْأَذْقَانِ فَهُم مُّقْمَحُونَ
Transliteration innā jaʿalnā fī aʿnāqihim aghlālan fahiya ilā l-adhqāni fahum muq'maḥūna
Kannada ನಿಜವಾಗಿಯೂ ನಾವು ಅವರ ಕೊರಳುಗಳಿಗೆ ಬೇಡಿ ತೊಡಿಸಿದ್ದೇವೆ. ಅದು ಗಡ್ಡಮೂಳೆಗೆ ಬಿಗಿಯಲ್ಪಟ್ಟಿದೆ. ಅವರು ತಲೆಯನ್ನು ಮೇಲೆತ್ತಿರುತ್ತಾರೆ .
Verse 9
وَجَعَلْنَا مِنۢ بَيْنِ أَيْدِيهِمْ سَدًّا وَمِنْ خَلْفِهِمْ سَدًّا فَأَغْشَيْنَـٰهُمْ فَهُمْ لَا يُبْصِرُونَ
Transliteration wajaʿalnā min bayni aydīhim saddan wamin khalfihim saddan fa-aghshaynāhum fahum lā yub'ṣirūna
Kannada ನಾವು ಒಂದು ತಡೆಯನ್ನು ಅವರ ಹಿಂದೆಯೂ ಇನ್ನೊಂದು ತಡೆಯನ್ನು ಅವರ ಮುಂದೆಯೂ ನಿಲ್ಲಿಸಿದ್ದೇವೆ. ಹೀಗೆ ನಾವು ಅವರನ್ನು ಮುಚ್ಚಿ ಬಿಟ್ಟಿದ್ದೇವೆ. ಅವರಿಗೆ ಈಗ ಏನೂ ಕಾಣುವುದಿಲ್ಲ.
Verse 10
وَسَوَآءٌ عَلَيْهِمْ ءَأَنذَرْتَهُمْ أَمْ لَمْ تُنذِرْهُمْ لَا يُؤْمِنُونَ
Transliteration wasawāon ʿalayhim a-andhartahum am lam tundhir'hum lā yu'minūna
Kannada ಅವರಿಗೆ ತಾವು ಎಚ್ಚರಿಕೆ ಕೊಟ್ಟರೂ ಕೊಡದಿದ್ದರೂ ಸರಿಯೇ. ಅವರು ವಿಶ್ವಾಸ ಸ್ವೀಕರಿಸುವವರಲ್ಲ.
Verse 11
إِنَّمَا تُنذِرُ مَنِ ٱتَّبَعَ ٱلذِّكْرَ وَخَشِىَ ٱلرَّحْمَـٰنَ بِٱلْغَيْبِ ۖ فَبَشِّرْهُ بِمَغْفِرَةٍ وَأَجْرٍ كَرِيمٍ
Transliteration innamā tundhiru mani ittabaʿa l-dhik'ra wakhashiya l-raḥmāna bil-ghaybi fabashir'hu bimaghfiratin wa-ajrin karīmin
Kannada ಖುರ್‍ಆನನ್ನು ಅನುಸರಿಸುವವರಿಗೆ ಮತ್ತು ದಯಾಮಯನಾದ ಅಲ್ಲಾಹನನ್ನು ಪ್ರತ್ಯಕ್ಷ ನೋಡದೆಯೇ ಭಯಪಡುವವರಿಗೆ ಮಾತ್ರ ನೀವು ಎಚ್ಚರಿಕೆ ನೀಡಬಲ್ಲಿರಿ. ಅಂಥವರಿಗೆ ಕ್ಷಮಾದಾನ ಮತ್ತು ಸನ್ಮಾನ್ಯ ಪ್ರತಿಫಲದ ಶುಭವಾರ್ತೆ ನೀಡಿರಿ.
Verse 12
إِنَّا نَحْنُ نُحْىِ ٱلْمَوْتَىٰ وَنَكْتُبُ مَا قَدَّمُوا۟ وَءَاثَـٰرَهُمْ ۚ وَكُلَّ شَىْءٍ أَحْصَيْنَـٰهُ فِىٓ إِمَامٍ مُّبِينٍ
Transliteration innā naḥnu nuḥ'yī l-mawtā wanaktubu mā qaddamū waāthārahum wakulla shayin aḥṣaynāhu fī imāmin mubīnin
Kannada ಮೃತರನ್ನು ನಾವು ಖಂಡಿತ ಜೀವಂತ ಗೊಳಿಸಲಿದ್ದೇವೆ. ಅವರು ಮಾಡಿದ ಕರ್ಮಗಳನ್ನೂ ಅವರನ್ನು ಅನುಕರಿಸಿದ ಅವರ ಹಿಂಗಾಮಿಗಳ ಕರ್ಮಗಳನ್ನೂ ನಾವು ಬರೆಯುತ್ತಿದ್ದೇವೆ. ಎಲ್ಲವನ್ನು ನಾವು ಒಂದು ಸ್ಪಷ್ಟವಾದ ಗ್ರಂಥದಲ್ಲಿ ಕ್ಲಪ್ತ ಗೊಳಿಸಿದ್ದೇವೆ.
Verse 13
وَٱضْرِبْ لَهُم مَّثَلًا أَصْحَـٰبَ ٱلْقَرْيَةِ إِذْ جَآءَهَا ٱلْمُرْسَلُونَ
Transliteration wa-iḍ'rib lahum mathalan aṣḥāba l-qaryati idh jāahā l-mur'salūna
Kannada ಇವರಿಗೆ ಒಂದು ಗ್ರಾಮದವರ ಉದಾಹರಣೆಯನ್ನು ಕೊಡಿರಿ. ಆ ಗ್ರಾಮದವರಿಗೆ ದೂತರು ಬಂದಾಗ.
Verse 14
إِذْ أَرْسَلْنَآ إِلَيْهِمُ ٱثْنَيْنِ فَكَذَّبُوهُمَا فَعَزَّزْنَا بِثَالِثٍ فَقَالُوٓا۟ إِنَّآ إِلَيْكُم مُّرْسَلُونَ
Transliteration idh arsalnā ilayhimu ith'nayni fakadhabūhumā faʿazzaznā bithālithin faqālū innā ilaykum mur'salūna
Kannada ನಾವು ಅವರ ಕಡೆಗೆ ಇಬ್ಬರು ಸಂದೇಶವಾಹ ಕರನ್ನು ಕಳುಹಿಸಿದೆವು. ಆಗ ಅವರು ಇಬ್ಬರನ್ನೂ ಸುಳ್ಳಾಗಿಸಿದರು. ಅನಂತರ ನಾವು ಮೂರನೆಯವನನ್ನು ಕಳುಹಿಸಿ ಅವರಿಬ್ಬರನ್ನು ಬಲಪಡಿಸಿದೆವು. ಅವರೆಲ್ಲರೂ `ನಾವು ನಿಮ್ಮ ಕಡೆಗೆ ಸಂದೇಶ ವಾಹಕರಾಗಿ ಕಳುಹಿಸಲ್ಪಟ್ಟವರು’ ಎಂದರು.
Verse 15
قَالُوا۟ مَآ أَنتُمْ إِلَّا بَشَرٌ مِّثْلُنَا وَمَآ أَنزَلَ ٱلرَّحْمَـٰنُ مِن شَىْءٍ إِنْ أَنتُمْ إِلَّا تَكْذِبُونَ
Transliteration qālū mā antum illā basharun mith'lunā wamā anzala l-raḥmānu min shayin in antum illā takdhibūna
Kannada ನಾಡಿನವರು `ನೀವು ನಮ್ಮಂತಹ ಮನುಷ್ಯರಲ್ಲದೆ ಇನ್ನೇನೂ ಅಲ್ಲ. ದಯಾಮಯನಾದ ಅಲ್ಲಾಹನು ಏನನ್ನೂ ಇಳಿಸಿಲ್ಲ. ನೀವು ಬರೇ ಸುಳ್ಳರು’ ಎಂದರು.
Verse 16
قَالُوا۟ رَبُّنَا يَعْلَمُ إِنَّآ إِلَيْكُمْ لَمُرْسَلُونَ
Transliteration qālū rabbunā yaʿlamu innā ilaykum lamur'salūna
Kannada ಸಂದೇಶವಾಹಕರು ಹೇಳಿದರು, ‘ನಾವು ಖಂಡಿತ ವಾಗಿಯೂ ನಿಮ್ಮ ಕಡೆಗೆ ಕಳುಹಿಸಲಾದ ಸಂದೇಶ ವಾಹಕರೆಂದು ನಮ್ಮ ಪ್ರಭು ತಿಳಿದಿದ್ದಾನೆ.
Verse 17
وَمَا عَلَيْنَآ إِلَّا ٱلْبَلَـٰغُ ٱلْمُبِينُ
Transliteration wamā ʿalaynā illā l-balāghu l-mubīnu
Kannada ಪ್ರಮಾಣಬದ್ಧ ಸಂದೇಶವನ್ನು ತಲುಪಿಸುವ ಹೊರತು ಇನ್ನಾವ ಹೊಣೆಯೂ ನಮ್ಮ ಮೇಲಿಲ್ಲ’.
Verse 18
قَالُوٓا۟ إِنَّا تَطَيَّرْنَا بِكُمْ ۖ لَئِن لَّمْ تَنتَهُوا۟ لَنَرْجُمَنَّكُمْ وَلَيَمَسَّنَّكُم مِّنَّا عَذَابٌ أَلِيمٌ
Transliteration qālū innā taṭayyarnā bikum la-in lam tantahū lanarjumannakum walayamassannakum minnā ʿadhābun alīmun
Kannada ಅವರು ಹೇಳಿದರು; ‘ನಿಮ್ಮ ದೆಸೆಯಿಂದ ನಮಗೆ ಅಶುಭವುಂಟಾಗಿದೆ. ನೀವು ಈ ಕಾರ್ಯವನ್ನು ಕೈ ಬಿಡದಿದ್ದರೆ, ನಾವು ನಿಮಗೆ ಕಲ್ಲೆಸೆಯುತ್ತೇವೆ. ಮತ್ತು ನಿಮಗೆ ನಮ್ಮಿಂದ ವೇದನಾಯುಕ್ತ ಶಿಕ್ಷೆ ತಟ್ಟಲಿದೆ!’
Verse 19
قَالُوا۟ طَـٰٓئِرُكُم مَّعَكُمْ ۚ أَئِن ذُكِّرْتُم ۚ بَلْ أَنتُمْ قَوْمٌ مُّسْرِفُونَ
Transliteration qālū ṭāirukum maʿakum a-in dhukkir'tum bal antum qawmun mus'rifūna
Kannada ಅದಕ್ಕೆ ಸಂದೇಶವಾಹಕರು “ನಿಮ್ಮ ಅಪಶಕು ನವು ನಿಮ್ಮಲ್ಲೇ ಇದೆ. ನಿಮಗೆ ಉಪದೇಶ ನೀಡಿದ ನಂತರವೂ! (ನೀವು ಹೀಗೆ ಹೇಳುತ್ತಿರುವಿರಾ?) ನಿಜಕ್ಕೂ ನೀವು ಮಿತಿಮೀರಿದವರಾಗಿರುತ್ತೀರಿ” ಎಂದು ಉತ್ತರಿಸಿದರು.
Verse 20
وَجَآءَ مِنْ أَقْصَا ٱلْمَدِينَةِ رَجُلٌ يَسْعَىٰ قَالَ يَـٰقَوْمِ ٱتَّبِعُوا۟ ٱلْمُرْسَلِينَ
Transliteration wajāa min aqṣā l-madīnati rajulun yasʿā qāla yāqawmi ittabiʿū l-mur'salīna
Kannada ನಗರದ ಕೊನೆಯ ಅಂಚಿನಿಂದ ಒಬ್ಬನು ಓಡುತ್ತಾ ಬಂದು ಹೀಗೆಂದನು, “ಓ ನನ್ನ ಜನಾಂಗದವರೇ, ನೀವು ಈ ಸಂದೇಶವಾಹಕರನ್ನು ಅನುಸರಿಸಿರಿ.
Verse 21
ٱتَّبِعُوا۟ مَن لَّا يَسْـَٔلُكُمْ أَجْرًا وَهُم مُّهْتَدُونَ
Transliteration ittabiʿū man lā yasalukum ajran wahum muh'tadūna
Kannada ನಿಮ್ಮಿಂದ ಯಾವ ಪ್ರತಿಫಲವನ್ನೂ ಕೇಳದ ಹಾಗೂ ಸನ್ಮಾರ್ಗ ಪ್ರಾಪ್ತರಾದ ಇವರನ್ನು ಅನುಸರಿಸಿರಿ.
Verse 22
وَمَا لِىَ لَآ أَعْبُدُ ٱلَّذِى فَطَرَنِى وَإِلَيْهِ تُرْجَعُونَ
Transliteration wamā liya lā aʿbudu alladhī faṭaranī wa-ilayhi tur'jaʿūna
Kannada ಯಾವನು ನನ್ನನ್ನು ಸೃಷ್ಟಿಸಿರುವನೋ ಮತ್ತು ಯಾವನ ಕಡೆಗೆ ನೀವೆಲ್ಲರೂ ಮರಳಿ ಹೋಗಲಿರುವಿರೋ ಅವನನ್ನು ಆರಾಧಿಸದಿರಲು ನನಗೇನು ತಡೆಯಿದೆ?
Verse 23
ءَأَتَّخِذُ مِن دُونِهِۦٓ ءَالِهَةً إِن يُرِدْنِ ٱلرَّحْمَـٰنُ بِضُرٍّ لَّا تُغْنِ عَنِّى شَفَـٰعَتُهُمْ شَيْـًٔا وَلَا يُنقِذُونِ
Transliteration a-attakhidhu min dūnihi ālihatan in yurid'ni l-raḥmānu biḍurrin lā tugh'ni ʿannī shafāʿatuhum shayan walā yunqidhūni
Kannada ನಾನೇನು ಅವನನ್ನು ಬಿಟ್ಟು ಇತರ ಆರಾಧ್ಯರನ್ನು ಸ್ವೀಕರಿಸಿಕೊಳ್ಳಬೇಕೆ? ದಯಾಮಯನಾದ ಅಲ್ಲಾಹನು ನನಗೇನಾದರೂ ಕೇಡನ್ನು ಬಯಸಿದರೆ ಈ ಆರಾಧ್ಯರ ಶಿಫಾರಸು ನನಗೇನೂ ಫಲಕಾರಿಯಾಗದು. ಅವರು ನನ್ನನ್ನು ಪಾರುಗೊಳಿಸಲಾರರು.
Verse 24
إِنِّىٓ إِذًا لَّفِى ضَلَـٰلٍ مُّبِينٍ
Transliteration innī idhan lafī ḍalālin mubīnin
Kannada ಹಾಗೆ ಮಾಡಿದರೆ ನಾನು ಖಂಡಿತವಾಗಿಯೂ ಸ್ಪಷ್ಟವಾದ ದುರ್ಮಾಗದಲ್ಲೇ ಉಳಿಯುವೆನು.
Verse 25
إِنِّىٓ ءَامَنتُ بِرَبِّكُمْ فَٱسْمَعُونِ
Transliteration innī āmantu birabbikum fa-is'maʿūni
Kannada ನಾನು ನಿಮ್ಮ ಪ್ರಭುವಿನ ಮೇಲೆ ಖಂಡಿತ ವಿಶ್ವಾಸವಿರಿಸಿದ್ದೇನೆ. ಆದ್ದರಿಂದ ನೀವು ನನ್ನ ಮಾತನ್ನು ಕೇಳಿರಿ”.
Verse 26
قِيلَ ٱدْخُلِ ٱلْجَنَّةَ ۖ قَالَ يَـٰلَيْتَ قَوْمِى يَعْلَمُونَ
Transliteration qīla ud'khuli l-janata qāla yālayta qawmī yaʿlamūna
Kannada
Verse 27
بِمَا غَفَرَ لِى رَبِّى وَجَعَلَنِى مِنَ ٱلْمُكْرَمِينَ
Transliteration bimā ghafara lī rabbī wajaʿalanī mina l-muk'ramīna
Kannada . ‘ಸ್ವರ್ಗದಲ್ಲಿ ಪ್ರವೇಶಿಸು’ ಎಂದು ಆ ವ್ಯಕ್ತಿಗೆ ಹೇಳಲಾಯಿತು. ಅವನು, “ಹಾ! ನನ್ನ ಪ್ರಭುವು ನನ್ನನ್ನು ಕ್ಷಮಿಸಿದ್ದನ್ನೂ ನನ್ನನ್ನು ಸನ್ಮಾನ್ಯ ಜನರಲ್ಲಿ ಸೇರಿಸಿದ್ದನ್ನೂ ನನ್ನ ಜನಾಂಗ ತಿಳಿದಿರುತ್ತಿದ್ದರೆ ಚೆನ್ನಾಗಿತ್ತು !” ಎಂದನು 6.
Verse 28
۞ وَمَآ أَنزَلْنَا عَلَىٰ قَوْمِهِۦ مِنۢ بَعْدِهِۦ مِن جُندٍ مِّنَ ٱلسَّمَآءِ وَمَا كُنَّا مُنزِلِينَ
Transliteration wamā anzalnā ʿalā qawmihi min baʿdihi min jundin mina l-samāi wamā kunnā munzilīna
Kannada ಅವನ ನಂತರ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಸೈನ್ಯವನ್ನೇನೂ ಇಳಿಸಲಿಲ್ಲ. ನಾವು ಸೇನೆಯನ್ನು ಕಳುಹಿಸುವುದೂ ಇಲ್ಲ !
Verse 29
إِن كَانَتْ إِلَّا صَيْحَةً وَٰحِدَةً فَإِذَا هُمْ خَـٰمِدُونَ
Transliteration in kānat illā ṣayḥatan wāḥidatan fa-idhā hum khāmidūna
Kannada ಕೇವಲ ಒಂದು ಅಟ್ಟಹಾಸದ ಹೊರತು ಬೇರೇನೂ ಇರಲಿಲ್ಲ. ಆಗಲೇ ಅವರೆಲ್ಲರೂ ನಂದಿಹೋದರು.
Verse 30
يَـٰحَسْرَةً عَلَى ٱلْعِبَادِ ۚ مَا يَأْتِيهِم مِّن رَّسُولٍ إِلَّا كَانُوا۟ بِهِۦ يَسْتَهْزِءُونَ
Transliteration yāḥasratan ʿalā l-ʿibādi mā yatīhim min rasūlin illā kānū bihi yastahziūna
Kannada ಅಯ್ಯೋ ಈ ದಾಸರ ವ್ಯಥೆಯೇ! ಅವರ ಬಳಿಗೆ ಯಾವ ಸಂದೇಶವಾಹಕನು ಬಂದರೂ ಅವರು ಅವನನ್ನು ಗೇಲಿ ಮಾಡದೇ ಬಿಡಲಿಲ್ಲ.
Verse 31
أَلَمْ يَرَوْا۟ كَمْ أَهْلَكْنَا قَبْلَهُم مِّنَ ٱلْقُرُونِ أَنَّهُمْ إِلَيْهِمْ لَا يَرْجِعُونَ
Transliteration alam yaraw kam ahlaknā qablahum mina l-qurūni annahum ilayhim lā yarjiʿūna
Kannada ನಾವು ಅವರಿಗಿಂತ ಮುಂಚೆ ಎಷ್ಟೋ ಜನಾಂಗಗಳನ್ನು ಅವರೆಂದೂ ಮುಂದೆ ಇವರ ಕಡೆಗೆ ಮರಳಿ ಬಾರದಂತೆ ನಾಶಗೊಳಿಸಿದ್ದನ್ನು ಅವರು ಕಂಡಿಲ್ಲವೇ?
Verse 32
وَإِن كُلٌّ لَّمَّا جَمِيعٌ لَّدَيْنَا مُحْضَرُونَ
Transliteration wa-in kullun lammā jamīʿun ladaynā muḥ'ḍarūna
Kannada ಅವರೆಲ್ಲರೂ ಒಂದು ದಿನ ನಮ್ಮ ಮುಂದೆ ಒಟ್ಟಾಗಿ ಹಾಜರಾಗದೆ ಇರುವುದಿಲ್ಲ.
Verse 33
وَءَايَةٌ لَّهُمُ ٱلْأَرْضُ ٱلْمَيْتَةُ أَحْيَيْنَـٰهَا وَأَخْرَجْنَا مِنْهَا حَبًّا فَمِنْهُ يَأْكُلُونَ
Transliteration waāyatun lahumu l-arḍu l-maytatu aḥyaynāhā wa-akhrajnā min'hā ḥabban famin'hu yakulūna
Kannada ನಿರ್ಜೀವ ಭೂಮಿಯು ಇವರಿಗೊಂದು ನಿದರ್ಶನವಾಗಿದೆ. ನಾವು ಅದನ್ನು ಸಜೀವಗೊಳಿಸಿದ್ದೇವೆ. ಅದರಿಂದ ಧಾನ್ಯಗಳನ್ನು ಹೊರತಂದಿದ್ದೇವೆ. ಅದರಿಂದಲೇ ಇವರು ಉಣ್ಣುತ್ತಾರೆ.
Verse 34
وَجَعَلْنَا فِيهَا جَنَّـٰتٍ مِّن نَّخِيلٍ وَأَعْنَـٰبٍ وَفَجَّرْنَا فِيهَا مِنَ ٱلْعُيُونِ
Transliteration wajaʿalnā fīhā jannātin min nakhīlin wa-aʿnābin wafajjarnā fīhā mina l-ʿuyūni
Kannada ನಾವು ಅದರಲ್ಲಿ ಖರ್ಜೂರ ಮತ್ತು ದ್ರಾಕ್ಷಿಗಳ ತೋಟಗಳನ್ನು ಉಂಟು ಮಾಡಿದ್ದೇವೆ ಮತ್ತು ಅದರೊಳಗಿಂದ ಚಿಲುಮೆಗಳನ್ನು ಹೊಮ್ಮಿಸಿದ್ದೇವೆ.
Verse 35
لِيَأْكُلُوا۟ مِن ثَمَرِهِۦ وَمَا عَمِلَتْهُ أَيْدِيهِمْ ۖ أَفَلَا يَشْكُرُونَ
Transliteration liyakulū min thamarihi wamā ʿamilathu aydīhim afalā yashkurūna
Kannada ಅದರ ಫಲಗಳಿಂದ ಇವರು ತಿನ್ನಲಿಕ್ಕಾಗಿ. ಇದನ್ನು ಇವರ ಕೈಗಳು ನಿರ್ಮಿಸಿಲ್ಲ. ಹಾಗಿದ್ದೂ ಇವರು ಕೃತಜ್ಞರಾಗುವುದಿಲ್ಲವೇ?
Verse 36
سُبْحَـٰنَ ٱلَّذِى خَلَقَ ٱلْأَزْوَٰجَ كُلَّهَا مِمَّا تُنۢبِتُ ٱلْأَرْضُ وَمِنْ أَنفُسِهِمْ وَمِمَّا لَا يَعْلَمُونَ
Transliteration sub'ḥāna alladhī khalaqa l-azwāja kullahā mimmā tunbitu l-arḍu wamin anfusihim wamimmā lā yaʿlamūna
Kannada ಭೂಮಿ ಉತ್ಪಾದಿಸುವ ವಸ್ತುವಿನಿಂದಲೂ ಇವರ ವರ್ಗಗಳಿಂದಲೂ ಮತ್ತು ಇವರಿಗೆ ತಿಳಿಯದಿರುವ ವಸ್ತುವಿನಿಂದಲೂ ಜೋಡಿಗಳನ್ನು ಸೃಷ್ಟಿಸಿದವನು ಪರಮ ಪಾವನನು.
Verse 37
وَءَايَةٌ لَّهُمُ ٱلَّيْلُ نَسْلَخُ مِنْهُ ٱلنَّهَارَ فَإِذَا هُم مُّظْلِمُونَ
Transliteration waāyatun lahumu al-laylu naslakhu min'hu l-nahāra fa-idhā hum muẓ'limūna
Kannada ರಾತ್ರಿಯು ಇವರಿಗೊಂದು ನಿದರ್ಶನವಾಗಿದ್ದು ನಾವು ಅದರಿಂದ ಹಗಲನ್ನು ಅನಾವರಣಗೊಳಿಸುತ್ತೇವೆ. ಆಗ ಇವರ ಮೇಲೆ ಕತ್ತಲು ಕವಿಯುತ್ತದೆ.
Verse 38
وَٱلشَّمْسُ تَجْرِى لِمُسْتَقَرٍّ لَّهَا ۚ ذَٰلِكَ تَقْدِيرُ ٱلْعَزِيزِ ٱلْعَلِيمِ
Transliteration wal-shamsu tajrī limus'taqarrin lahā dhālika taqdīru l-ʿazīzi l-ʿalīmi
Kannada ಸೂರ್ಯನು ತನ್ನ ನೆಲೆಗೆ ಚಲಿಸುತ್ತಿದ್ದಾನೆ. ಪ್ರತಾಪನೂ ಸರ್ವಜ್ಞನೂ ಆದವನ ನಿರ್ಣಯವಿದು.
Verse 39
وَٱلْقَمَرَ قَدَّرْنَـٰهُ مَنَازِلَ حَتَّىٰ عَادَ كَٱلْعُرْجُونِ ٱلْقَدِيمِ
Transliteration wal-qamara qaddarnāhu manāzila ḥattā ʿāda kal-ʿur'jūni l-qadīmi
Kannada ಚಂದ್ರನಿಗೆ ನಾವು ಸ್ಥಾನಗಳನ್ನು ನಿಶ್ಚಯಿಸಿಕೊಟ್ಟಿದ್ದು ಕೊನೆಗೆ ಅದು ಖರ್ಜೂರದ ಗೊನೆಯ ಹಳೆಯ ದಿಂಡಿನ ಸ್ಥಿತಿಗೆ ಮರಳುತ್ತದೆ.
Verse 40
لَا ٱلشَّمْسُ يَنۢبَغِى لَهَآ أَن تُدْرِكَ ٱلْقَمَرَ وَلَا ٱلَّيْلُ سَابِقُ ٱلنَّهَارِ ۚ وَكُلٌّ فِى فَلَكٍ يَسْبَحُونَ
Transliteration lā l-shamsu yanbaghī lahā an tud'rika l-qamara walā al-laylu sābiqu l-nahāri wakullun fī falakin yasbaḥūna
Kannada ಸೂರ್ಯನಿಗೆ ಚಂದ್ರನನ್ನು ತಲುಪಲಾಗದು. ರಾತ್ರಿಯು ಹಗಲನ್ನು ಮೀರಿ ಹೋಗದು. ಎಲ್ಲವೂ ಅವುಗಳ ಭ್ರಮಣ ಪಥದಲ್ಲಿ ತೇಲುತ್ತಿವೆ.
Verse 41
وَءَايَةٌ لَّهُمْ أَنَّا حَمَلْنَا ذُرِّيَّتَهُمْ فِى ٱلْفُلْكِ ٱلْمَشْحُونِ
Transliteration waāyatun lahum annā ḥamalnā dhurriyyatahum fī l-ful'ki l-mashḥūni
Kannada ತುಂಬಿದ ನಾವೆಯಲ್ಲಿ ಇವರ ಸಂತತಿಯನ್ನು ನಾವು ಹೊತ್ತು ತೇಲುವಂತೆ ಮಾಡಿದ್ದು ಇವರಿಗೊಂದು ನಿದರ್ಶನವಾಗಿದೆ.
Verse 42
وَخَلَقْنَا لَهُم مِّن مِّثْلِهِۦ مَا يَرْكَبُونَ
Transliteration wakhalaqnā lahum min mith'lihi mā yarkabūna
Kannada ಇವರು ಸವಾರಿ ಮಾಡುವ, ಅದೇ ತರದ ವಾಹನಗಳನ್ನು ನಾವು ಇವರಿಗಾಗಿ ಸೃಷ್ಟಿಸಿದೆವು.
Verse 43
وَإِن نَّشَأْ نُغْرِقْهُمْ فَلَا صَرِيخَ لَهُمْ وَلَا هُمْ يُنقَذُونَ
Transliteration wa-in nasha nugh'riq'hum falā ṣarīkha lahum walā hum yunqadhūna
Kannada ನಾವಿಚ್ಛಿಸಿದರೆ, ಇವರನ್ನು ಮುಳುಗಿಸಬಲ್ಲೆವು. ಆಗ ಇವರಿಗೆ ಸಹಾಯಕರಾರೂ ಇರುತ್ತಿರಲಿಲ್ಲ. ಇವರು ಪಾರಾಗುತ್ತಲೂ ಇರಲಿಲ್ಲ.
Verse 44
إِلَّا رَحْمَةً مِّنَّا وَمَتَـٰعًا إِلَىٰ حِينٍ
Transliteration illā raḥmatan minnā wamatāʿan ilā ḥīnin
Kannada ಕೇವಲ ನಮ್ಮ ಕಡೆಯಿಂದಿರುವ ಅನುಗ್ರಹ ಹಾಗೂ ನಿರ್ದಿಷ್ಟ ಅವಧಿಯವರೆಗಿನ ಸುಖ ಭೋಗವಲ್ಲದೆ!
Verse 45
وَإِذَا قِيلَ لَهُمُ ٱتَّقُوا۟ مَا بَيْنَ أَيْدِيكُمْ وَمَا خَلْفَكُمْ لَعَلَّكُمْ تُرْحَمُونَ
Transliteration wa-idhā qīla lahumu ittaqū mā bayna aydīkum wamā khalfakum laʿallakum tur'ḥamūna
Kannada ನಿಮ್ಮ ಎದುರಿಗೇ ಇರುವ (ಇಹಲೋಕದ ಶಿಕ್ಷೆ) ಹಾಗೂ ನಿಮ್ಮ ಬೆನ್ನ ಹಿಂದೆ ಇರುವ (ಪರಲೋಕದ ಶಿಕ್ಷೆಯ) ಬಗ್ಗೆ ಜಾಗೃತರಾಗಿರಿ. ನೀವು ದೇವಾ ನುಗ್ರಹಕ್ಕೆ ಪಾತ್ರರಾಗುವಿರಿ ಎಂದು ಇವರಿಗೆ ಹೇಳಲಾದರೆ! (ಇವರು ಗಮನಹರಿಸುವುದಿಲ್ಲ).
Verse 46
وَمَا تَأْتِيهِم مِّنْ ءَايَةٍ مِّنْ ءَايَـٰتِ رَبِّهِمْ إِلَّا كَانُوا۟ عَنْهَا مُعْرِضِينَ
Transliteration wamā tatīhim min āyatin min āyāti rabbihim illā kānū ʿanhā muʿ'riḍīna
Kannada ಇವರ ಮುಂದೆ ಇವರ ಪ್ರಭುವಿನ ನಿದರ್ಶನಗಳ ಪೈಕಿ ಯಾವ ನಿದರ್ಶನ ಬಂದರೂ ಇವರು ಅದರಿಂದ ವಿಮುಖರಾಗುತ್ತಾರೆ.
Verse 47
وَإِذَا قِيلَ لَهُمْ أَنفِقُوا۟ مِمَّا رَزَقَكُمُ ٱللَّهُ قَالَ ٱلَّذِينَ كَفَرُوا۟ لِلَّذِينَ ءَامَنُوٓا۟ أَنُطْعِمُ مَن لَّوْ يَشَآءُ ٱللَّهُ أَطْعَمَهُۥٓ إِنْ أَنتُمْ إِلَّا فِى ضَلَـٰلٍ مُّبِينٍ
Transliteration wa-idhā qīla lahum anfiqū mimmā razaqakumu l-lahu qāla alladhīna kafarū lilladhīna āmanū anuṭ'ʿimu man law yashāu l-lahu aṭʿamahu in antum illā fī ḍalālin mubīnin
Kannada ಅಲ್ಲಾಹನು ನಿಮಗೆ ನೀಡಿರುವ ಜೀವನಾ ಧಾರದಿಂದ ಒಂದಿಷ್ಟನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ ಎಂದು ಹೇಳಲಾದರೆ, ಈ ಸತ್ಯ ನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ - “ಅಲ್ಲಾಹು ಇಚ್ಛಿಸುತ್ತಿದ್ದರೆ ಸ್ವತಃ ಅವನೇ ಆಹಾರ ಕೊಡುತ್ತಿರುವಾಗ ನಾವು ಯಾಕೆ ಆಹಾರ ಕೊಡ ಬೇಕು? ನೀವು ಸ್ಪಷ್ಟವಾಗಿ ದಾರಿಗೆಟ್ಟು ಹೋಗಿದ್ದೀರಿ” ಎಂದು ಹೇಳುತ್ತಾರೆ.
Verse 48
وَيَقُولُونَ مَتَىٰ هَـٰذَا ٱلْوَعْدُ إِن كُنتُمْ صَـٰدِقِينَ
Transliteration wayaqūlūna matā hādhā l-waʿdu in kuntum ṣādiqīna
Kannada “(ಪ್ರಳಯ ದಿನದ) ಈ ತಾಕೀತು ಯಾವಾಗ ಬರುವುದು? ನೀವು ಸತ್ಯವಂತರಾಗಿದ್ದರೆ ತಿಳಿಸಿರಿ” ಎಂದು ಇವರು ಹೇಳುತ್ತಾರೆ.
Verse 49
مَا يَنظُرُونَ إِلَّا صَيْحَةً وَٰحِدَةً تَأْخُذُهُمْ وَهُمْ يَخِصِّمُونَ
Transliteration mā yanẓurūna illā ṣayḥatan wāḥidatan takhudhuhum wahum yakhiṣṣimūna
Kannada ಒಂದು ಘೋರ ಅಟ್ಟಹಾಸದ ಹೊರತು ಇವರು ಇನ್ನೇನೂ ನಿರೀಕ್ಷಿಸುತ್ತಿಲ್ಲ. ಇವರು ತರ್ಕ ಮಾಡುತ್ತಿರುವಂತೆಯೇ ಅದು ಇವರನ್ನು ಹಿಡಿಯುವುದು.
Verse 50
فَلَا يَسْتَطِيعُونَ تَوْصِيَةً وَلَآ إِلَىٰٓ أَهْلِهِمْ يَرْجِعُونَ
Transliteration falā yastaṭīʿūna tawṣiyatan walā ilā ahlihim yarjiʿūna
Kannada ಆಗ ಇವರಿಗೆ ಮರಣಪೂರ್ವ ಹೇಳಿಕೆಗೂ ಸಾಧ್ಯವಾಗದು. ತಮ್ಮ ಮನೆಯವರೆಡೆಗೆ ಮರಳಲಿಕ್ಕೂ ಆಗದು.
Verse 51
وَنُفِخَ فِى ٱلصُّورِ فَإِذَا هُم مِّنَ ٱلْأَجْدَاثِ إِلَىٰ رَبِّهِمْ يَنسِلُونَ
Transliteration wanufikha fī l-ṣūri fa-idhā hum mina l-ajdāthi ilā rabbihim yansilūna
Kannada ಕಹಳೆಯನ್ನು ಊದಲಾಗುವುದು. ಆಗ ಇವರು ತಮ್ಮ ಪ್ರಭುವಿನ ಕಡೆಗೆ ತಮ್ಮ ಸಮಾಧಿಗಳಿಂದ ಧಾವಿಸಿ ಬರುವರು.
Verse 52
قَالُوا۟ يَـٰوَيْلَنَا مَنۢ بَعَثَنَا مِن مَّرْقَدِنَا ۜ ۗ هَـٰذَا مَا وَعَدَ ٱلرَّحْمَـٰنُ وَصَدَقَ ٱلْمُرْسَلُونَ
Transliteration qālū yāwaylanā man baʿathanā min marqadinā hādhā mā waʿada l-raḥmānu waṣadaqa l-mur'salūna
Kannada ಇವರು ಕೇಳುವರು; ಅಯ್ಯೋ, ನಮ್ಮ ನಾಶವೇ, ನಮ್ಮನ್ನು ನಮ್ಮ ಶಯನ ಗೃಹದಿಂದ ಎಬ್ಬಿಸಿದವರಾರು?’ ಇದು ದಯಾಮಯನಾದ ಅಲ್ಲಾಹನು ಮಾಡಿದ ವಾಗ್ದಾನವಾಗಿದ್ದು ಸಂದೇಶವಾಹಕರು ಸತ್ಯವನ್ನೇ ಹೇಳಿದ್ದರು.
Verse 53
إِن كَانَتْ إِلَّا صَيْحَةً وَٰحِدَةً فَإِذَا هُمْ جَمِيعٌ لَّدَيْنَا مُحْضَرُونَ
Transliteration in kānat illā ṣayḥatan wāḥidatan fa-idhā hum jamīʿun ladaynā muḥ'ḍarūna
Kannada ಅದು ಒಂದೇ ಒಂದು ಅಟ್ಟಹಾಸವಲ್ಲದೆ ಮತ್ತೇ ನಲ್ಲ. ಆಗ ಅವರೆಲ್ಲರೂ ನಮ್ಮ ಮುಂದೆ ಹಾಜರು ಗೊಳಿಸಲ್ಪಡುವರು.
Verse 54
فَٱلْيَوْمَ لَا تُظْلَمُ نَفْسٌ شَيْـًٔا وَلَا تُجْزَوْنَ إِلَّا مَا كُنتُمْ تَعْمَلُونَ
Transliteration fal-yawma lā tuẓ'lamu nafsun shayan walā tuj'zawna illā mā kuntum taʿmalūna
Kannada ಇಂದು ಯಾರ ಮೇಲೂ ಸ್ವಲ್ಪವೂ ಅನ್ಯಾಯವಾಗದು. ನೀವು ಮಾಡುತ್ತಿದ್ದ ಕರ್ಮಗಳಿಗಲ್ಲದೆ ನಿಮಗೆ ಪ್ರತಿಫಲ ನೀಡಲಾಗುವುದಿಲ್ಲ.
Verse 55
إِنَّ أَصْحَـٰبَ ٱلْجَنَّةِ ٱلْيَوْمَ فِى شُغُلٍ فَـٰكِهُونَ
Transliteration inna aṣḥāba l-janati l-yawma fī shughulin fākihūna
Kannada ಅಂದು ಸ್ವರ್ಗವಾಸಿಗಳು ಕಾರ್ಯನಿರತರು. ಸುಖಾನುಭವಿಗಳು.
Verse 56
هُمْ وَأَزْوَٰجُهُمْ فِى ظِلَـٰلٍ عَلَى ٱلْأَرَآئِكِ مُتَّكِـُٔونَ
Transliteration hum wa-azwājuhum fī ẓilālin ʿalā l-arāiki muttakiūna
Kannada ಅವರೂ ಅವರ ಪತ್ನಿಯರೂ ದಟ್ಟ ನೆರಳುಗಳಲ್ಲಿ ಸುಖಾಸನಗಳ ಮೇಲೆ ಒರಗಿಕೊಂಡಿರುವರು.
Verse 57
لَهُمْ فِيهَا فَـٰكِهَةٌ وَلَهُم مَّا يَدَّعُونَ
Transliteration lahum fīhā fākihatun walahum mā yaddaʿūna
Kannada ಅವರಿಗಲ್ಲಿ ಹಣ್ಣುಹಂಪಲುಗಳಿವೆ. ಅವರೇನು ಬಯಸುತ್ತಾರೋ ಅದೆಲ್ಲವೂ ಅವರಿಗಾಗಿ ಸಿದ್ಧವಿದೆ.
Verse 58
سَلَـٰمٌ قَوْلًا مِّن رَّبٍّ رَّحِيمٍ
Transliteration salāmun qawlan min rabbin raḥīmin
Kannada ದಯಾನಿಧಿ ಪ್ರಭುವಿನ ಕಡೆಯಿಂದ ಅವರಿಗೆ ವಾಚ್ಯ ಸಲಾಮ್!
Verse 59
وَٱمْتَـٰزُوا۟ ٱلْيَوْمَ أَيُّهَا ٱلْمُجْرِمُونَ
Transliteration wa-im'tāzū l-yawma ayyuhā l-muj'rimūna
Kannada ಓ ಅಪರಾಧಿಗಳೇ, ಇಂದು ನೀವು ಬೇರ್ಪಟ್ಟು ನಿಲ್ಲಿರಿ.
Verse 60
۞ أَلَمْ أَعْهَدْ إِلَيْكُمْ يَـٰبَنِىٓ ءَادَمَ أَن لَّا تَعْبُدُوا۟ ٱلشَّيْطَـٰنَ ۖ إِنَّهُۥ لَكُمْ عَدُوٌّ مُّبِينٌ
Transliteration alam aʿhad ilaykum yābanī ādama an lā taʿbudū l-shayṭāna innahu lakum ʿaduwwun mubīnun
Kannada ಓ ಆದಮರ ಮಕ್ಕಳೇ, ನಿಮಗೆ ನಾನು ಆದೇ ಶಿಸಲಿಲ್ಲವೇ? ‘ನೀವು ಶೈತಾನನಿಗೆ ಆರಾಧಿಸ ಬೇಡಿರಿ, ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿ ರುವನು.
Verse 61
وَأَنِ ٱعْبُدُونِى ۚ هَـٰذَا صِرَٰطٌ مُّسْتَقِيمٌ
Transliteration wa-ani uʿ'budūnī hādhā ṣirāṭun mus'taqīmun
Kannada ನನ್ನನ್ನು ಆರಾಧಿಸಿರಿ, ಇದು ನೇರ ಮಾರ್ಗವಾಗಿರುತ್ತದೆ’ ಎಂದು.
Verse 62
وَلَقَدْ أَضَلَّ مِنكُمْ جِبِلًّا كَثِيرًا ۖ أَفَلَمْ تَكُونُوا۟ تَعْقِلُونَ
Transliteration walaqad aḍalla minkum jibillan kathīran afalam takūnū taʿqilūna
Kannada ಆದರೆ, ಅವನು ನಿಮ್ಮ ಪೈಕಿ ಅಧಿಕ ಜನರನ್ನು ದಾರಿ ತಪ್ಪಿಸಿದನು. ನಿಮಗೆ ಯೋಚಿಸುವವ ರಾಗಬಹುದಿತ್ತಲ್ಲ?
Verse 63
هَـٰذِهِۦ جَهَنَّمُ ٱلَّتِى كُنتُمْ تُوعَدُونَ
Transliteration hādhihi jahannamu allatī kuntum tūʿadūna
Kannada ಇದು ನಿಮಗೆ ಎಚ್ಚರಿಕೆ ನೀಡಲಾಗುತ್ತಿದ್ದ ನರಕವಾಗಿದೆ.
Verse 64
ٱصْلَوْهَا ٱلْيَوْمَ بِمَا كُنتُمْ تَكْفُرُونَ
Transliteration iṣ'lawhā l-yawma bimā kuntum takfurūna
Kannada ನೀವು (ಭೂಲೋಕದಲ್ಲಿ) ಮಾಡುತ್ತಿದ್ದ ಸತ್ಯನಿಷೇಧದ ಫಲವಾಗಿ ಈಗ ಈ ನರಕದಲ್ಲಿ ಪ್ರವೇಶವಾಗಿರಿ.
Verse 65
ٱلْيَوْمَ نَخْتِمُ عَلَىٰٓ أَفْوَٰهِهِمْ وَتُكَلِّمُنَآ أَيْدِيهِمْ وَتَشْهَدُ أَرْجُلُهُم بِمَا كَانُوا۟ يَكْسِبُونَ
Transliteration al-yawma nakhtimu ʿalā afwāhihim watukallimunā aydīhim watashhadu arjuluhum bimā kānū yaksibūna
Kannada ಅಂದು ನಾವು ಇವರ ಬಾಯಿಗಳಿಗೆ ಮುದ್ರೆ ಹಾಕುತ್ತೇವೆ. ಇವರು (ಭೂಲೋಕದಲ್ಲಿ) ಏನು ಸಂಪಾದಿಸುತ್ತಿದ್ದರೆಂದು ಇವರ ಕೈಗಳು ನಮ್ಮೊಡನೆ ಮಾತಾಡಲಿವೆ. ಮತ್ತು ಇವರ ಕಾಲುಗಳು ಸಾಕ್ಷ್ಯ ಹೇಳಲಿವೆ.
Verse 66
وَلَوْ نَشَآءُ لَطَمَسْنَا عَلَىٰٓ أَعْيُنِهِمْ فَٱسْتَبَقُوا۟ ٱلصِّرَٰطَ فَأَنَّىٰ يُبْصِرُونَ
Transliteration walaw nashāu laṭamasnā ʿalā aʿyunihim fa-is'tabaqū l-ṣirāṭa fa-annā yub'ṣirūna
Kannada ನಾವಿಚ್ಛಿಸಿದರೆ, ಇವರ ಕಣ್ಣುಗಳನ್ನು ಉಜ್ಜಿ ಬಿಡುತ್ತಿದ್ದೆವು. ಆಗ ಇವರು ದಾರಿಯೆಡೆಗೆ ಧಾವಿಸುತ್ತಿದ್ದರು. ಆದರೆ ಇವರು ಹೇಗೆ ಕಾಣುವರು?
Verse 67
وَلَوْ نَشَآءُ لَمَسَخْنَـٰهُمْ عَلَىٰ مَكَانَتِهِمْ فَمَا ٱسْتَطَـٰعُوا۟ مُضِيًّا وَلَا يَرْجِعُونَ
Transliteration walaw nashāu lamasakhnāhum ʿalā makānatihim famā is'taṭāʿū muḍiyyan walā yarjiʿūna
Kannada ನಾವಿಚ್ಛಿಸಿದರೆ, ಇವರಿದ್ದ ಸ್ಥಳದಲ್ಲೇ ರೂಪಾಂತರಗೊಳಿಸಬಹುದಿತ್ತು. ಆಗ ಇವರಿಗೆ ಮುಂದೆ ನಡೆಯಲಿಕ್ಕೂ ಹಿಂದಕ್ಕೆ ಮರಳಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.
Verse 68
وَمَن نُّعَمِّرْهُ نُنَكِّسْهُ فِى ٱلْخَلْقِ ۖ أَفَلَا يَعْقِلُونَ
Transliteration waman nuʿammir'hu nunakkis'hu fī l-khalqi afalā yaʿqilūna
Kannada ನಾವು ಯಾರಿಗೆ ದೀರ್ಘಾಯುಷ್ಯ ನೀಡುತ್ತೇವೋ ಅವನ ಪ್ರಕೃತಿಯನ್ನು ಪೂರ್ವಸ್ಥಿತಿಗೆ ಮರಳಿಸುತ್ತೇವೆ. ಅವರೇಕೆ ಚಿಂತಿಸುವುದಿಲ್ಲ?
Verse 69
وَمَا عَلَّمْنَـٰهُ ٱلشِّعْرَ وَمَا يَنۢبَغِى لَهُۥٓ ۚ إِنْ هُوَ إِلَّا ذِكْرٌ وَقُرْءَانٌ مُّبِينٌ
Transliteration wamā ʿallamnāhu l-shiʿ'ra wamā yanbaghī lahu in huwa illā dhik'run waqur'ānun mubīnun
Kannada ನಾವು ಈ ಪ್ರವಾದಿಗೆ ಕವಿತೆ ಕಲಿಸಿಲ್ಲ. ಕವಿತೆಯು ಅವರಿಗೆ ಭೂಷಣವೂ ಅಲ್ಲ. ಇದೊಂದು ಉಪ ದೇಶ ಹಾಗೂ ಸ್ಪಷ್ಟವಾಗಿ ಓದಲ್ಪಡುವ (ಖುರ್ ಆನ್) ಗ್ರಂಥವಲ್ಲದೆ ಬೇರೇನೂ ಅಲ್ಲ.
Verse 70
لِّيُنذِرَ مَن كَانَ حَيًّا وَيَحِقَّ ٱلْقَوْلُ عَلَى ٱلْكَـٰفِرِينَ
Transliteration liyundhira man kāna ḥayyan wayaḥiqqa l-qawlu ʿalā l-kāfirīna
Kannada ಇದು ಜೀವಂತವಿರುವ ಪ್ರತಿಯೊಬ್ಬನಿಗೆ ಎಚ್ಚ ರಿಕೆ ನೀಡಲಿಕ್ಕಾಗಿ ಮತ್ತು ಸತ್ಯನಿಷೇಧಿಗಳ ಮೇಲೆ ನಿರ್ದಿಷ್ಟ ವಚನವು ನಿಜಗೊಳ್ಳಲಿಕ್ಕಾಗಿ ಬಂದಿದೆ.
Verse 71
أَوَلَمْ يَرَوْا۟ أَنَّا خَلَقْنَا لَهُم مِّمَّا عَمِلَتْ أَيْدِينَآ أَنْعَـٰمًا فَهُمْ لَهَا مَـٰلِكُونَ
Transliteration awalam yaraw annā khalaqnā lahum mimmā ʿamilat aydīnā anʿāman fahum lahā mālikūna
Kannada ನಾವು ನಮ್ಮ ಶಕ್ತಿಯಿಂದ ಇವರಿಗಾಗಿ ಜಾನುವಾರುಗಳನ್ನು ಸೃಷ್ಟಿಸಿರುವುದು ಗೊತ್ತಿಲ್ಲವೆ? ಈಗ ಇವರು ಅವುಗಳ ಮಾಲಿಕರು.
Verse 72
وَذَلَّلْنَـٰهَا لَهُمْ فَمِنْهَا رَكُوبُهُمْ وَمِنْهَا يَأْكُلُونَ
Transliteration wadhallalnāhā lahum famin'hā rakūbuhum wamin'hā yakulūna
Kannada ನಾವು ಅವುಗಳನ್ನು ಇವರ ಹತೋಟಿಯಲ್ಲಿರಿಸಿದ್ದೇವೆ. ಅವುಗಳಲ್ಲಿ ಕೆಲವುದರ ಮೇಲೆ ಇವರು ಸವಾರಿ ಮಾಡುತ್ತಾರೆ. ಇನ್ನು ಕೆಲವುದರ ಮಾಂಸ ಇವರು ತಿನ್ನುತ್ತಾರೆ.
Verse 73
وَلَهُمْ فِيهَا مَنَـٰفِعُ وَمَشَارِبُ ۖ أَفَلَا يَشْكُرُونَ
Transliteration walahum fīhā manāfiʿu wamashāribu afalā yashkurūna
Kannada ಅವುಗಳಲ್ಲಿ ಇವರಿಗಾಗಿ ತರತರದ ಪ್ರಯೋಜನಗಳೂ ಪೇಯಗಳೂ ಇವೆ. ಆದರೂ ಇವರು ಕೃತಜ್ಞರಾಗುವುದಿಲ್ಲವೇ?
Verse 74
وَٱتَّخَذُوا۟ مِن دُونِ ٱللَّهِ ءَالِهَةً لَّعَلَّهُمْ يُنصَرُونَ
Transliteration wa-ittakhadhū min dūni l-lahi ālihatan laʿallahum yunṣarūna
Kannada ಇವರು ತಮಗೆ ಸಹಾಯ ಲಭಿಸಬಹುದೆಂದು ಅಲ್ಲಾಹನ ಹೊರತು ಇತರರನ್ನು ದೇವರುಗಳಾಗಿ ಮಾಡಿಕೊಂಡರು.
Verse 75
لَا يَسْتَطِيعُونَ نَصْرَهُمْ وَهُمْ لَهُمْ جُندٌ مُّحْضَرُونَ
Transliteration lā yastaṭīʿūna naṣrahum wahum lahum jundun muḥ'ḍarūna
Kannada ಆ ದೇವರುಗಳು ಇವರಿಗೆ ನೆರವು ನೀಡಲು ಶಕ್ತರಾಗುವುದಿಲ್ಲ. ಅವರು ಇವರ ಜೊತೆಗೆ (ನರಕ ದಲ್ಲಿ) ಹಾಜರುಗೊಳಿಸಲ್ಪಡುವ ಸೇನೆಯಾಗಿರುತ್ತಾರೆ.
Verse 76
فَلَا يَحْزُنكَ قَوْلُهُمْ ۘ إِنَّا نَعْلَمُ مَا يُسِرُّونَ وَمَا يُعْلِنُونَ
Transliteration falā yaḥzunka qawluhum innā naʿlamu mā yusirrūna wamā yuʿ'linūna
Kannada ಆದ್ದರಿಂದ ಇವರ ಮಾತುಗಳು ನಿಮ್ಮನ್ನು ದುಃಖ ಕ್ಕೀಡು ಮಾಡದಿರಲಿ. ಇವರು ಅಡಗಿಸುವ ಮತ್ತು ತೆರೆದಿಡುವ ಎಲ್ಲ ವಿಷಯಗಳನ್ನು ನಾವು ಬಲ್ಲೆವು.
Verse 77
أَوَلَمْ يَرَ ٱلْإِنسَـٰنُ أَنَّا خَلَقْنَـٰهُ مِن نُّطْفَةٍ فَإِذَا هُوَ خَصِيمٌ مُّبِينٌ
Transliteration awalam yara l-insānu annā khalaqnāhu min nuṭ'fatin fa-idhā huwa khaṣīmun mubīnun
Kannada ಮನುಷ್ಯನಿಗೆ ಗೊತ್ತಿಲ್ಲವೆ? ಅವನನ್ನು ನಾವು ವೀರ್ಯದಿಂದ ಸೃಷ್ಟಿಸಿದ್ದೇವೆ ಎಂಬುದನ್ನು. ಇದೀಗ ಅವನು ಸ್ಪಷ್ಟ ಜಗಳಗಂಟನಾಗಿರುವನು.
Verse 78
وَضَرَبَ لَنَا مَثَلًا وَنَسِىَ خَلْقَهُۥ ۖ قَالَ مَن يُحْىِ ٱلْعِظَـٰمَ وَهِىَ رَمِيمٌ
Transliteration waḍaraba lanā mathalan wanasiya khalqahu qāla man yuḥ'yī l-ʿiẓāma wahiya ramīmun
Kannada ಈಗ ಅವನು ನಮಗೆ ಹೋಲಿಕೆ ಕೊಡುತ್ತಾನೆ ಮತ್ತು ತಾನು ಸೃಷ್ಠಿಯಾದುದನ್ನು ಮರೆತು ಬಿಡುತ್ತಾನೆ. ‘ಈ ಎಲುಬುಗಳು ಶಿಥಿಲವಾಗಿ ಹೋದ ಬಳಿಕ ಇವುಗಳನ್ನು ಜೀವಂತಗೊಳಿಸುವವನಾರು?’ ಎಂದು ಕೇಳುತ್ತಾನೆ.
Verse 79
قُلْ يُحْيِيهَا ٱلَّذِىٓ أَنشَأَهَآ أَوَّلَ مَرَّةٍ ۖ وَهُوَ بِكُلِّ خَلْقٍ عَلِيمٌ
Transliteration qul yuḥ'yīhā alladhī ansha-ahā awwala marratin wahuwa bikulli khalqin ʿalīmun
Kannada ಹೇಳಿರಿ, ಇವುಗಳನ್ನು ಪ್ರಥಮ ಬಾರಿ ಸೃಷ್ಟಿಸಿದವನೇ ಪುನಃ ಜೀವಂತಗೊಳಿಸುವನು. ಅವನು ಪ್ರತಿಯೊಂದು ಸೃಷ್ಟಿಯ ಬಗ್ಗೆಯೂ ಚೆನ್ನಾಗಿ ಬಲ್ಲನು.
Verse 80
ٱلَّذِى جَعَلَ لَكُم مِّنَ ٱلشَّجَرِ ٱلْأَخْضَرِ نَارًا فَإِذَآ أَنتُم مِّنْهُ تُوقِدُونَ
Transliteration alladhī jaʿala lakum mina l-shajari l-akhḍari nāran fa-idhā antum min'hu tūqidūna
Kannada ನಿಮಗಾಗಿ ಹಚ್ಚಹಸಿರಾದ ಮರದಿಂದ ಬೆಂಕಿ ಯನ್ನುಂಟು ಮಾಡಿದವನು ಅವನೇ. ನೀವು ಅದರಿಂದ ಬೆಂಕಿ ಉರಿಸುತ್ತಿರುವಿರಿ.
Verse 81
أَوَلَيْسَ ٱلَّذِى خَلَقَ ٱلسَّمَـٰوَٰتِ وَٱلْأَرْضَ بِقَـٰدِرٍ عَلَىٰٓ أَن يَخْلُقَ مِثْلَهُم ۚ بَلَىٰ وَهُوَ ٱلْخَلَّـٰقُ ٱلْعَلِيمُ
Transliteration awalaysa alladhī khalaqa l-samāwāti wal-arḍa biqādirin ʿalā an yakhluqa mith'lahum balā wahuwa l-khalāqu l-ʿalīmu
Kannada ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಇವರಂಥವರನ್ನು ಸೃಷ್ಟಿಸಲು ಶಕ್ತನಲ್ಲವೇ? ಶಕ್ತನಾಗಿರುವನು. ಅವನು ಮಹಾ ಸೃಷ್ಟಿ ಕರ್ತನೂ ಸರ್ವಜ್ಞಾನಿಯೂ ಆಗಿರುವನು.
Verse 82
إِنَّمَآ أَمْرُهُۥٓ إِذَآ أَرَادَ شَيْـًٔا أَن يَقُولَ لَهُۥ كُن فَيَكُونُ
Transliteration innamā amruhu idhā arāda shayan an yaqūla lahu kun fayakūnu
Kannada ಅವನು ಯಾವುದಾದರೊಂದು ವಿಷಯದ ಸಂಕಲ್ಪ ಮಾಡಿದರೆ, ಅದಕ್ಕೆ `ಆಗು’ ಎನ್ನುವನು. ಆಗಲೇ ಅದು ಆಗಿ ಬಿಡುವುದು.
Verse 83
فَسُبْحَـٰنَ ٱلَّذِى بِيَدِهِۦ مَلَكُوتُ كُلِّ شَىْءٍ وَإِلَيْهِ تُرْجَعُونَ
Transliteration fasub'ḥāna alladhī biyadihi malakūtu kulli shayin wa-ilayhi tur'jaʿūna
Kannada ಸಕಲ ವಸ್ತುಗಳ ಪ್ರಭುತ್ವವು ಯಾವನ ಅಧೀನ ದಲ್ಲಿದೆಯೋ ಅವನೇ ಪರಮಪಾವನನು. ನೀವು ಅವನ ಕಡೆಗೇ ಮರಳಿಸಲ್ಪಡುವಿರಿ.
Read Surah Ya-Sin in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.