MyDugsiStart learning

Surah Az-Zumar in Kannada: translation and audio

Surah 39 · الزمر · The Troops · 75 verses

Surah Az-Zumar verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Az-Zumar word by word in English.

Verse 1

تَنزِيلُ ٱلْكِتَـٰبِ مِنَ ٱللَّهِ ٱلْعَزِيزِ ٱلْحَكِيمِ

Transliteration tanzīlu l-kitābi mina l-lahi l-ʿazīzi l-ḥakīmi

Kannada ಈ ಗ್ರಂಥದ ಅವತೀರ್ಣವು ಅಜೇಯನೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದಾಗಿದೆ.

Verse 2

إِنَّآ أَنزَلْنَآ إِلَيْكَ ٱلْكِتَـٰبَ بِٱلْحَقِّ فَٱعْبُدِ ٱللَّهَ مُخْلِصًا لَّهُ ٱلدِّينَ

Transliteration innā anzalnā ilayka l-kitāba bil-ḥaqi fa-uʿ'budi l-laha mukh'liṣan lahu l-dīna

Kannada ಈ ಗ್ರಂಥವನ್ನು ನಾವು ನಿಮ್ಮ ಕಡೆಗೆ ಪರಮ ಸತ್ಯವಾಗಿ ಅವತೀರ್ಣಗೊಳಿಸಿದ್ದೇವೆ. ಆದುದರಿಂದ ನೀವು ವಿಧೇಯತೆಯನ್ನು ಅಲ್ಲಾಹನಿಗಾಗಿಯೇ ಮೀಸಲಿಟ್ಟು ಅಲ್ಲಾಹನಿಗೆ ಆರಾಧಿಸಿರಿ.

Verse 3

أَلَا لِلَّهِ ٱلدِّينُ ٱلْخَالِصُ ۚ وَٱلَّذِينَ ٱتَّخَذُوا۟ مِن دُونِهِۦٓ أَوْلِيَآءَ مَا نَعْبُدُهُمْ إِلَّا لِيُقَرِّبُونَآ إِلَى ٱللَّهِ زُلْفَىٰٓ إِنَّ ٱللَّهَ يَحْكُمُ بَيْنَهُمْ فِى مَا هُمْ فِيهِ يَخْتَلِفُونَ ۗ إِنَّ ٱللَّهَ لَا يَهْدِى مَنْ هُوَ كَـٰذِبٌ كَفَّارٌ

Transliteration alā lillahi l-dīnu l-khāliṣu wa-alladhīna ittakhadhū min dūnihi awliyāa mā naʿbuduhum illā liyuqarribūnā ilā l-lahi zul'fā inna l-laha yaḥkumu baynahum fī mā hum fīhi yakhtalifūna inna l-laha lā yahdī man huwa kādhibun kaffārun

Kannada ತಿಳಿಯಿರಿ, ನಿಷ್ಕಳಂಕವಾದ ವಿಧೇಯತ್ವವು ಕೇವಲ ಅಲ್ಲಾಹನ ಹಕ್ಕಾಗಿದೆ. ಅವನ ಹೊರತು ಇತರರನ್ನು ಆರಾಧ್ಯರನ್ನಾಗಿ ಮಾಡಿಕೊಂಡವರು “ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸಲಿಕ್ಕಾಗಿ ಮಾತ್ರ ನಾವು ಅವರನ್ನು ಆರಾಧಿಸುತ್ತಿದ್ದೇವೆ” ಎಂದು ಹೇಳುತ್ತಾರೆ. ಅವರು ಭಿನ್ನತೆ ತೋರಿದ ವಿಷಯದಲ್ಲಿ ಅಲ್ಲಾಹು ಅವರ ನಡುವೆ ತೀರ್ಮಾನ ಮಾಡುವನು. ಸುಳ್ಳುಗಾರನೂ, ಕೃತಘ್ನನೂ ಆಗಿರುವಾತನಿಗೆ ಅಲ್ಲಾಹನು ಖಂಡಿತ ಸತ್ಪಥ ನೀಡುವುದಿಲ್ಲ.

Verse 4

لَّوْ أَرَادَ ٱللَّهُ أَن يَتَّخِذَ وَلَدًا لَّٱصْطَفَىٰ مِمَّا يَخْلُقُ مَا يَشَآءُ ۚ سُبْحَـٰنَهُۥ ۖ هُوَ ٱللَّهُ ٱلْوَٰحِدُ ٱلْقَهَّارُ

Transliteration law arāda l-lahu an yattakhidha waladan la-iṣ'ṭafā mimmā yakhluqu mā yashāu sub'ḥānahu huwa l-lahu l-wāḥidu l-qahāru

Kannada ಅಲ್ಲಾಹನು ಯಾರನ್ನಾದರೂ ಪುತ್ರನಾಗಿ ಮಾಡಿ ಕೊಳ್ಳಲು ಇಚ್ಚಿಸುತ್ತಿದ್ದರೆ, ತನ್ನ ಸೃಷ್ಟಿಯಲ್ಲಿ ತಾನಿಚ್ಛಿಸಿದವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದನು. ಅವನು ಪರಿಶುದ್ಧನು. ಅವನು ಅಲ್ಲಾಹನು - ಏಕೈಕನು ಮತ್ತು ಸರ್ವಾಧಿಪತಿಯು.

Verse 5

خَلَقَ ٱلسَّمَـٰوَٰتِ وَٱلْأَرْضَ بِٱلْحَقِّ ۖ يُكَوِّرُ ٱلَّيْلَ عَلَى ٱلنَّهَارِ وَيُكَوِّرُ ٱلنَّهَارَ عَلَى ٱلَّيْلِ ۖ وَسَخَّرَ ٱلشَّمْسَ وَٱلْقَمَرَ ۖ كُلٌّ يَجْرِى لِأَجَلٍ مُّسَمًّى ۗ أَلَا هُوَ ٱلْعَزِيزُ ٱلْغَفَّـٰرُ

Transliteration khalaqa l-samāwāti wal-arḍa bil-ḥaqi yukawwiru al-layla ʿalā l-nahāri wayukawwiru l-nahāra ʿalā al-layli wasakhara l-shamsa wal-qamara kullun yajrī li-ajalin musamman alā huwa l-ʿazīzu l-ghafāru

Kannada ಭೂಮಿ-ಆಕಾಶಗಳನ್ನು ಸತ್ಯಬದ್ಧವಾಗಿ ಅವನು ಸೃಷ್ಟಿಸಿರುವನು. ಹಗಲಿನ ಮೇಲೆ ರಾತ್ರಿಯನ್ನೂ, ರಾತ್ರಿಯ ಮೇಲೆ ಹಗಲನ್ನೂ ಅವನು ಸುತ್ತಿಸುತ್ತಿರು ತ್ತಾನೆ. ಸೂರ್ಯ ಮತ್ತು ಚಂದ್ರನನ್ನು ಅವನು ನಿಯಂ ತ್ರಿಸುತ್ತಾನೆ. ಎಲ್ಲವೂ ಒಂದು ನಿಗದಿತ ಕಾಲದವ ರೆಗೆ ಚಲಿಸುತ್ತಿರುವುದು. ತಿಳಿಯಿರಿ, ಅವನು ಅಜೇ ಯನೂ ಪರಮಕ್ಷಮಾಶೀಲನೂ ಆಗಿರುತ್ತಾನೆ.

Verse 6

خَلَقَكُم مِّن نَّفْسٍ وَٰحِدَةٍ ثُمَّ جَعَلَ مِنْهَا زَوْجَهَا وَأَنزَلَ لَكُم مِّنَ ٱلْأَنْعَـٰمِ ثَمَـٰنِيَةَ أَزْوَٰجٍ ۚ يَخْلُقُكُمْ فِى بُطُونِ أُمَّهَـٰتِكُمْ خَلْقًا مِّنۢ بَعْدِ خَلْقٍ فِى ظُلُمَـٰتٍ ثَلَـٰثٍ ۚ ذَٰلِكُمُ ٱللَّهُ رَبُّكُمْ لَهُ ٱلْمُلْكُ ۖ لَآ إِلَـٰهَ إِلَّا هُوَ ۖ فَأَنَّىٰ تُصْرَفُونَ

Transliteration khalaqakum min nafsin wāḥidatin thumma jaʿala min'hā zawjahā wa-anzala lakum mina l-anʿāmi thamāniyata azwājin yakhluqukum fī buṭūni ummahātikum khalqan min baʿdi khalqin fī ẓulumātin thalāthin dhālikumu l-lahu rabbukum lahu l-mul'ku lā ilāha illā huwa fa-annā tuṣ'rafūna

Kannada ನಿಮ್ಮನ್ನು ಒಂದೇ ಒಂದು ದೇಹದಿಂದ ಅವನು ಸೃಷ್ಟಿಸಿದನು. ತರುವಾಯ ಆ ದೇಹದಿಂದ ಅದರ ಸಂಗಾತಿಯನ್ನು ಅವನು ಸೃಷ್ಟಿಸಿದನು. ಜಾನು ವಾರುಗಳಿಂದ ಎಂಟು (ಗಂಡು-ಹೆಣ್ಣು) ಜೋಡಿಗಳನ್ನು ಅವನು ನಿಮಗಾಗಿ ಒದಗಿಸಿದನು. ನಿಮ್ಮ ಮಾತೆಯರ ಉದರಗಳಲ್ಲಿ ಸೃಷ್ಟಿಯ ನಂತರ ಮೂರು ರೀತಿಯ ಕತ್ತಲುಗಳೊಳಗೆ ನಿಮ್ಮನ್ನು ಅವನು ಸೃಷ್ಟಿಸುತ್ತಾನೆ. ಅಂಥವನೇ ನಿಮ್ಮ ಪಾಲಕ ಪ್ರಭುವಾದ ಅಲ್ಲಾಹು. ಪ್ರಭುತ್ವವು ಅವನಿಗೇ ಸೇರಿದೆ. ಅವನ ಹೊರತು ಬೇರೆ ಆರಾಧ್ಯನಿಲ್ಲ. ಹೀಗಿರುವಾಗ ನಿಮ್ಮನ್ನು ಬೇರೊಬ್ಬನ ಆರಾಧನೆಗೆ ಹೇಗೆ ತಿರುಗಿಸಲಾಗುತ್ತಿದೆ ?

Verse 7

إِن تَكْفُرُوا۟ فَإِنَّ ٱللَّهَ غَنِىٌّ عَنكُمْ ۖ وَلَا يَرْضَىٰ لِعِبَادِهِ ٱلْكُفْرَ ۖ وَإِن تَشْكُرُوا۟ يَرْضَهُ لَكُمْ ۗ وَلَا تَزِرُ وَازِرَةٌ وِزْرَ أُخْرَىٰ ۗ ثُمَّ إِلَىٰ رَبِّكُم مَّرْجِعُكُمْ فَيُنَبِّئُكُم بِمَا كُنتُمْ تَعْمَلُونَ ۚ إِنَّهُۥ عَلِيمٌۢ بِذَاتِ ٱلصُّدُورِ

Transliteration in takfurū fa-inna l-laha ghaniyyun ʿankum walā yarḍā liʿibādihi l-kuf'ra wa-in tashkurū yarḍahu lakum walā taziru wāziratun wiz'ra ukh'rā thumma ilā rabbikum marjiʿukum fayunabbi-ukum bimā kuntum taʿmalūna innahu ʿalīmun bidhāti l-ṣudūri

Kannada ನೀವು ಕೃತಘ್ನತೆ ತೋರಿದರೆ ಅಲ್ಲಾಹು ನಿಮ್ಮಿಂದ ನಿರಪೇಕ್ಷನಾಗಿದ್ದಾನೆ. ಅವನು ತನ್ನ ದಾಸರ ಪಾಲಿ ಗೆ ಕೃತಘ್ನತೆಯನ್ನು ಮೆಚ್ಚುವುದಿಲ್ಲ. ನೀವು ಕೃತಜ್ಞ ರಾದರೆ ಅದನ್ನು ಅವನು ನಿಮ್ಮ ಪಾಲಿಗೆ ಮೆಚ್ಚು ತ್ತಾನೆ. ಪಾಪ ಹೊರೆ ಹೊರುವವನಾರೂ ಇನ್ನೊಬ್ಬನ ಹೊರೆಯನ್ನು ಹೊರಲಾರನುಂ. ಕೊನೆಗೆ ನಿಮ್ಮ ಪ್ರಭುವಿನ ಕಡೆಗೇ ನಿಮ್ಮ ನಿರ್ಗಮನ. ನೀವು ಮಾಡು ತ್ತಿರುವುದರ ಬಗ್ಗೆ ಆಗ ಅವನು ನಿಮಗೆ ವಿವರವನ್ನು ಕೊಡುವನು. ಖಂಡಿತ ಅವನು ಮನದೊಳಗಿನ ಸಂಗತಿಯನ್ನು ಬಲ್ಲವನಾಗಿರುತ್ತಾನೆ.

Verse 8

۞ وَإِذَا مَسَّ ٱلْإِنسَـٰنَ ضُرٌّ دَعَا رَبَّهُۥ مُنِيبًا إِلَيْهِ ثُمَّ إِذَا خَوَّلَهُۥ نِعْمَةً مِّنْهُ نَسِىَ مَا كَانَ يَدْعُوٓا۟ إِلَيْهِ مِن قَبْلُ وَجَعَلَ لِلَّهِ أَندَادًا لِّيُضِلَّ عَن سَبِيلِهِۦ ۚ قُلْ تَمَتَّعْ بِكُفْرِكَ قَلِيلًا ۖ إِنَّكَ مِنْ أَصْحَـٰبِ ٱلنَّارِ

Transliteration wa-idhā massa l-insāna ḍurrun daʿā rabbahu munīban ilayhi thumma idhā khawwalahu niʿ'matan min'hu nasiya mā kāna yadʿū ilayhi min qablu wajaʿala lillahi andādan liyuḍilla ʿan sabīlihi qul tamattaʿ bikuf'rika qalīlan innaka min aṣḥābi l-nāri

Kannada ಮನುಷ್ಯನಿಗೆ ಯಾವುದೇ ವಿಪತ್ತು ಬಾಧಿಸಿದರೆ ಅವನು ದೈನ್ಯನಾಗಿ ತನ್ನ ಪ್ರಭುವಿನ ಕಡೆಗೆ ಮರಳಿ ಅವನನ್ನು ಪ್ರಾರ್ಥಿಸುತ್ತಾನೆ. ನಂತರ ಅವನ ಪ್ರಭು ತನ್ನ ಕಡೆಯಿಂದ ಯಾವುದೇ ಅನುಗ್ರಹವನ್ನು ಅವನಿಗೆ ದಾನ ನೀಡಿದರೆ ಅವ ನು, ಹಿಂದೆ ತಾನು ಯಾವುದರ ಬಗ್ಗೆ ಪ್ರಾರ್ಥಿಸಿದ್ದನೋ ಅದನ್ನು ಮರೆತು ಬಿಡುತ್ತಾನೆ. ಅಲ್ಲಾಹನ ಮಾರ್ಗದಿಂದ ತಪ್ಪಿಸಲಿಕ್ಕಾಗಿ ಅವನಿಗೆ ಸಮಾನ ರನ್ನು ಸ್ಥಾಪಿಸುತ್ತಾನೆ. (ಸಂದೇಶವಾಹಕರೇ) ಹೇಳಿರಿ, “ಸ್ವಲ್ಪ ಕಾಲ ನಿನ್ನ ಸತ್ಯನಿಷೇಧದ ಸುಖ ಭೋಗವನ್ನು ಆಸ್ವಾದಿಸುತ್ತಿರು, ಖಂಡಿತವಾಗಿಯೂ ನೀನು ನರಕ ವಾಸಿಗಳಲ್ಲಿ ಸೇರಿರುವೆ”.

Verse 9

أَمَّنْ هُوَ قَـٰنِتٌ ءَانَآءَ ٱلَّيْلِ سَاجِدًا وَقَآئِمًا يَحْذَرُ ٱلْـَٔاخِرَةَ وَيَرْجُوا۟ رَحْمَةَ رَبِّهِۦ ۗ قُلْ هَلْ يَسْتَوِى ٱلَّذِينَ يَعْلَمُونَ وَٱلَّذِينَ لَا يَعْلَمُونَ ۗ إِنَّمَا يَتَذَكَّرُ أُو۟لُوا۟ ٱلْأَلْبَـٰبِ

Transliteration amman huwa qānitun ānāa al-layli sājidan waqāiman yaḥdharu l-ākhirata wayarjū raḥmata rabbihi qul hal yastawī alladhīna yaʿlamūna wa-alladhīna lā yaʿlamūna innamā yatadhakkaru ulū l-albābi

Kannada ಇಂತಹ ವ್ಯಕ್ತಿ ತನ್ನ ಪ್ರಭುವಿನ ಅನುಗ್ರಹವನ್ನು ಆಗ್ರಹಿಸಿ ಪರಲೋಕವನ್ನು ಭಯಪಟ್ಟು ರಾತ್ರಿಯ ಜಾವಗಳಲ್ಲಿ ಸಾಷ್ಟಾಂಗ ಪ್ರಣಾಮ ಮಾಡುತ್ತ, ನಿಂತು ಪ್ರಾರ್ಥಿಸುತ್ತ ಇರುವ ಉಪಾಸಕನಂತಾಗುವನೇ? ಕೇಳಿರಿ, ತಿಳಿದವರೂ ತಿಳಿಯದವರೂ ಸಮಾನರೇ? ಬುದ್ಧಿವಂತರು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.

Verse 10

قُلْ يَـٰعِبَادِ ٱلَّذِينَ ءَامَنُوا۟ ٱتَّقُوا۟ رَبَّكُمْ ۚ لِلَّذِينَ أَحْسَنُوا۟ فِى هَـٰذِهِ ٱلدُّنْيَا حَسَنَةٌ ۗ وَأَرْضُ ٱللَّهِ وَٰسِعَةٌ ۗ إِنَّمَا يُوَفَّى ٱلصَّـٰبِرُونَ أَجْرَهُم بِغَيْرِ حِسَابٍ

Transliteration qul yāʿibādi alladhīna āmanū ittaqū rabbakum lilladhīna aḥsanū fī hādhihi l-dun'yā ḥasanatun wa-arḍu l-lahi wāsiʿatun innamā yuwaffā l-ṣābirūna ajrahum bighayri ḥisābin

Kannada ಹೇಳಿರಿ; “ಸತ್ಯವಿಶ್ವಾಸಿಗಳಾದ ನನ್ನ ದಾಸರೇ! ನಿಮ್ಮ ಪ್ರಭುವನ್ನು ಭಯಪಡಿರಿ. ಇಹಲೋಕದಲ್ಲಿ ಸದಾಚಾರ ಕೈಗೊಂಡವರಿಗೆ ಪುಣ್ಯವಿದೆ. ಅಲ್ಲಾಹನ ಭೂಮಿ ವಿಶಾಲವಾಗಿದೆ. ಸಹನಶೀಲ ರಿಗೆ ಅವರ ಪ್ರತಿಫಲವನ್ನು ಲೆಕ್ಕವಿಲ್ಲದೆ ಪೂರ್ತಿ ಮಾಡಿ ಕೊಡಲಾಗುವುದು”.

Verse 11

قُلْ إِنِّىٓ أُمِرْتُ أَنْ أَعْبُدَ ٱللَّهَ مُخْلِصًا لَّهُ ٱلدِّينَ

Transliteration qul innī umir'tu an aʿbuda l-laha mukh'liṣan lahu l-dīna

Kannada ಹೇಳಿರಿ; “ಧರ್ಮವನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕಗೊಳಿಸಿ ಅವನನ್ನು ಆರಾಧಿಸಬೇಕೆಂದು ನನಗೆ ಅಪ್ಪಣೆ ಕೊಡಲಾಗಿದೆ.

Verse 12

وَأُمِرْتُ لِأَنْ أَكُونَ أَوَّلَ ٱلْمُسْلِمِينَ

Transliteration wa-umir'tu li-an akūna awwala l-mus'limīna

Kannada ನಾನು ಮುಸ್ಲಿಮರಲ್ಲಿ ಮೊದಲಿಗನಾಗಬೇಕೆಂದೂ ನನಗೆ ಆಜ್ಞಾಪಿಸಲಾಗಿದೆ”.

Verse 13

قُلْ إِنِّىٓ أَخَافُ إِنْ عَصَيْتُ رَبِّى عَذَابَ يَوْمٍ عَظِيمٍ

Transliteration qul innī akhāfu in ʿaṣaytu rabbī ʿadhāba yawmin ʿaẓīmin

Kannada ಹೇಳಿರಿ; “ನಾನು ನನ್ನ ಪ್ರಭುವಿಗೆ ದಿಕ್ಕಾರ ತೋರಿದರೆ, ಒಂದು ಮಹಾದಿನದ ಶಿಕ್ಷೆಯನ್ನು ಖಂಡಿತ ನಾನು ಭಯಪಡುವೆನು”.

Verse 14

قُلِ ٱللَّهَ أَعْبُدُ مُخْلِصًا لَّهُۥ دِينِى

Transliteration quli l-laha aʿbudu mukh'liṣan lahu dīnī

Kannada ಹೇಳಿರಿ, “ನನ್ನ ಧರ್ಮವನ್ನು ಅಲ್ಲಾಹನಿಗೆ ಮಾತ್ರ ಮೀಸಲಾಗಿಟ್ಟು ಅವನನ್ನೇ ಆರಾಧಿಸುವೆನು.

Verse 15

فَٱعْبُدُوا۟ مَا شِئْتُم مِّن دُونِهِۦ ۗ قُلْ إِنَّ ٱلْخَـٰسِرِينَ ٱلَّذِينَ خَسِرُوٓا۟ أَنفُسَهُمْ وَأَهْلِيهِمْ يَوْمَ ٱلْقِيَـٰمَةِ ۗ أَلَا ذَٰلِكَ هُوَ ٱلْخُسْرَانُ ٱلْمُبِينُ

Transliteration fa-uʿ'budū mā shi'tum min dūnihi qul inna l-khāsirīna alladhīna khasirū anfusahum wa-ahlīhim yawma l-qiyāmati alā dhālika huwa l-khus'rānu l-mubīnu

Kannada ನೀವು ಅವನ ಹೊರತು ನೀವಿಚ್ಚಿಸುವುದನ್ನು ಆರಾಧಿಸಿರಿ” . ಹೇಳಿರಿ; “ಪುನರುತ್ಥಾನ ದಿನ ತಮ್ಮನ್ನೂ ತಮ್ಮ ಕುಟುಂಬದವರನ್ನೂ ನಷ್ಟ ಕ್ಕೀಡು ಮಾಡಿದವರೇ ನಿಜವಾದ ನಷ್ಟವಂತರು”. ತಿಳಿಯಿರಿ. ಇದೇ ಸ್ಪಷ್ಟವಾದ ನಷ್ಟ.

Verse 16

لَهُم مِّن فَوْقِهِمْ ظُلَلٌ مِّنَ ٱلنَّارِ وَمِن تَحْتِهِمْ ظُلَلٌ ۚ ذَٰلِكَ يُخَوِّفُ ٱللَّهُ بِهِۦ عِبَادَهُۥ ۚ يَـٰعِبَادِ فَٱتَّقُونِ

Transliteration lahum min fawqihim ẓulalun mina l-nāri wamin taḥtihim ẓulalun dhālika yukhawwifu l-lahu bihi ʿibādahu yāʿibādi fa-ittaqūni

Kannada ಅವರ ಮೇಲ್ಭಾಗದಲ್ಲಿ ಅವರಿಗೆ ಅಗ್ನಿಯ ಮುಚ್ಚ ಳಗಳಿವೆ. ಅವರ ಕೆಳಭಾಗದಲ್ಲಿ ಹಾಸುಗಳಿವೆ . ಅಲ್ಲಾಹನು ತನ್ನ ದಾಸರನ್ನು ಎಚ್ಚರಿಸುತ್ತಿರುವನು. ನನ್ನ ದಾಸರೇ, ನನ್ನನ್ನು ನೀವು ಭಯಪಡಿರಿ ಎಂದು.

Verse 17

وَٱلَّذِينَ ٱجْتَنَبُوا۟ ٱلطَّـٰغُوتَ أَن يَعْبُدُوهَا وَأَنَابُوٓا۟ إِلَى ٱللَّهِ لَهُمُ ٱلْبُشْرَىٰ ۚ فَبَشِّرْ عِبَادِ

Transliteration wa-alladhīna ij'tanabū l-ṭāghūta an yaʿbudūhā wa-anābū ilā l-lahi lahumu l-bush'rā fabashir ʿibādi

Kannada

Verse 18

ٱلَّذِينَ يَسْتَمِعُونَ ٱلْقَوْلَ فَيَتَّبِعُونَ أَحْسَنَهُۥٓ ۚ أُو۟لَـٰٓئِكَ ٱلَّذِينَ هَدَىٰهُمُ ٱللَّهُ ۖ وَأُو۟لَـٰٓئِكَ هُمْ أُو۟لُوا۟ ٱلْأَلْبَـٰبِ

Transliteration alladhīna yastamiʿūna l-qawla fayattabiʿūna aḥsanahu ulāika alladhīna hadāhumu l-lahu wa-ulāika hum ulū l-albābi

Kannada ಅಲ್ಲಾಹೇತರ ಆರಾಧ್ಯರ ಆರಾಧನೆಯನ್ನು ತೊರೆದು ಅಲ್ಲಾಹನ ಕಡೆಗೆ ವಿನಯಾನ್ವಿತರಾಗಿ ಮರಳುವವರಿಗೆ ಶುಭವಾರ್ತೆಯಿದೆ. ಆದು ದರಿಂದ ವಚನವನ್ನು ಚೆನ್ನಾಗಿ ಆಲಿಸುವ ಹಾಗೂ ಅದರಲ್ಲಿ ಅತ್ಯುತ್ತಮವಾದುದನ್ನು ಅನುಸರಿಸುವ ನನ್ನ ದಾಸರಿಗೆ ಶುಭವಾರ್ತೆ ನೀಡಿರಿ. ಅಲ್ಲಾಹು ಸನ್ಮಾರ್ಗ ನೀಡಿದ ಜನರವರು. ಅವರೇ ಬುದ್ದಿವಂತರು.

Verse 19

أَفَمَنْ حَقَّ عَلَيْهِ كَلِمَةُ ٱلْعَذَابِ أَفَأَنتَ تُنقِذُ مَن فِى ٱلنَّارِ

Transliteration afaman ḥaqqa ʿalayhi kalimatu l-ʿadhābi afa-anta tunqidhu man fī l-nāri

Kannada ಯಾರ ಮೇಲೆ ಶಿಕ್ಷೆಯ ವಚನವು ನಿಜ ಗೊಂಡಿದೆಯೋ ಅಂಥವನನ್ನು ನರಕಾಗ್ನಿಯಿಂದ ನೀವು ರಕ್ಷಿಸಬಲ್ಲಿರಾ?

Verse 20

لَـٰكِنِ ٱلَّذِينَ ٱتَّقَوْا۟ رَبَّهُمْ لَهُمْ غُرَفٌ مِّن فَوْقِهَا غُرَفٌ مَّبْنِيَّةٌ تَجْرِى مِن تَحْتِهَا ٱلْأَنْهَـٰرُ ۖ وَعْدَ ٱللَّهِ ۖ لَا يُخْلِفُ ٱللَّهُ ٱلْمِيعَادَ

Transliteration lākini alladhīna ittaqaw rabbahum lahum ghurafun min fawqihā ghurafun mabniyyatun tajrī min taḥtihā l-anhāru waʿda l-lahi lā yukh'lifu l-lahu l-mīʿāda

Kannada ಆದರೆ ತಮ್ಮ ಪ್ರಭುವನ್ನು ಭಯಪಟ್ಟು ನಡೆದ ವರಿಗೆ ಅಂತಸ್ತಿನ ಮೇಲೆ ಅಂತಸ್ತಿರುವ ಉನ್ನತ ಭವನಗಳಿವೆ. ಅವುಗಳ ತಳಭಾಗದಲ್ಲಿ ಕಾಲು ವೆಗಳು ಹರಿಯುತ್ತಿವೆ. ಅಲ್ಲಾಹನ ವಾಗ್ದಾನವಿದು. ಅಲ್ಲಾಹನು ತನ್ನ ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.

Verse 21

أَلَمْ تَرَ أَنَّ ٱللَّهَ أَنزَلَ مِنَ ٱلسَّمَآءِ مَآءً فَسَلَكَهُۥ يَنَـٰبِيعَ فِى ٱلْأَرْضِ ثُمَّ يُخْرِجُ بِهِۦ زَرْعًا مُّخْتَلِفًا أَلْوَٰنُهُۥ ثُمَّ يَهِيجُ فَتَرَىٰهُ مُصْفَرًّا ثُمَّ يَجْعَلُهُۥ حُطَـٰمًا ۚ إِنَّ فِى ذَٰلِكَ لَذِكْرَىٰ لِأُو۟لِى ٱلْأَلْبَـٰبِ

Transliteration alam tara anna l-laha anzala mina l-samāi māan fasalakahu yanābīʿa fī l-arḍi thumma yukh'riju bihi zarʿan mukh'talifan alwānuhu thumma yahīju fatarāhu muṣ'farran thumma yajʿaluhu ḥuṭāman inna fī dhālika ladhik'rā li-ulī l-albābi

Kannada ನೀವು ನೋಡುತ್ತಿಲ್ಲವೇ? ಅಲ್ಲಾಹನು ಆಕಾಶ ದಿಂದ ನೀರು ಇಳಿಸಿದನು. ಅನಂತರ ಅದನ್ನು ಭೂಮಿಯ ಒರತೆಗಳಿಗೆ ಹರಿಸಿದನು. ತರುವಾಯ ಆ ನೀರಿನ ಮೂಲಕ ಅವನು ವಿವಿಧ ಬಣ್ಣದ ಬೆಳೆಯನ್ನು ಹೊರತೆಗೆಯುತ್ತಾನೆ. ಅನಂತರ ಆ ಬೆಳೆ ಹಣ್ಣಾಗಿ ಒಣಗುತ್ತವೆ. ಆಗ ಅದು ಹಳದಿ ಬಣ್ಣ ತಾಳುವುದನ್ನು ನೀವು ನೋಡುತ್ತಿರಿ. ಕೊನೆಗೆ ಅಲ್ಲಾಹನು ಅದನ್ನು ಹೊಟ್ಟಾಗಿ ಮಾಡುತ್ತಾನೆ. ವಾಸ್ತವದಲ್ಲಿ ಇದರಲ್ಲಿ ಬುದ್ಧಿಜೀವಿಗಳಿಗೆ ಗುಣ ಪಾಠವಿದೆ.

Verse 22

أَفَمَن شَرَحَ ٱللَّهُ صَدْرَهُۥ لِلْإِسْلَـٰمِ فَهُوَ عَلَىٰ نُورٍ مِّن رَّبِّهِۦ ۚ فَوَيْلٌ لِّلْقَـٰسِيَةِ قُلُوبُهُم مِّن ذِكْرِ ٱللَّهِ ۚ أُو۟لَـٰٓئِكَ فِى ضَلَـٰلٍ مُّبِينٍ

Transliteration afaman sharaḥa l-lahu ṣadrahu lil'is'lāmi fahuwa ʿalā nūrin min rabbihi fawaylun lil'qāsiyati qulūbuhum min dhik'ri l-lahi ulāika fī ḍalālin mubīnin

Kannada ಅಲ್ಲಾಹನು ಯಾರ ಹೃದಯವನ್ನು ಇಸ್ಲಾಮಿಗಾಗಿ ವಿಶಾಲಗೊಳಿಸುತ್ತಾನೋ ಅವನು ತನ್ನ ಪ್ರಭು ವಿನ ಕಡೆಯಿಂದ ಒಂದು ಪ್ರಕಾಶದ ಮೇಲಿರುವನು. ಆದರೆ ಅಲ್ಲಾಹನ ಸ್ಮರಣೆಯಿಂದ ಹೃದಯಗಳು ದೂರವಾದವರು - ಅವರಿಗೆ ವಿನಾಶವಿದೆ. ಅವರು ಸುವ್ಯಕ್ತ ವಾದ ದುರ್ಮಾ ರ್ಗದಲ್ಲೇ ಇರುವರು.

Verse 23

ٱللَّهُ نَزَّلَ أَحْسَنَ ٱلْحَدِيثِ كِتَـٰبًا مُّتَشَـٰبِهًا مَّثَانِىَ تَقْشَعِرُّ مِنْهُ جُلُودُ ٱلَّذِينَ يَخْشَوْنَ رَبَّهُمْ ثُمَّ تَلِينُ جُلُودُهُمْ وَقُلُوبُهُمْ إِلَىٰ ذِكْرِ ٱللَّهِ ۚ ذَٰلِكَ هُدَى ٱللَّهِ يَهْدِى بِهِۦ مَن يَشَآءُ ۚ وَمَن يُضْلِلِ ٱللَّهُ فَمَا لَهُۥ مِنْ هَادٍ

Transliteration al-lahu nazzala aḥsana l-ḥadīthi kitāban mutashābihan mathāniya taqshaʿirru min'hu julūdu alladhīna yakhshawna rabbahum thumma talīnu julūduhum waqulūbuhum ilā dhik'ri l-lahi dhālika hudā l-lahi yahdī bihi man yashāu waman yuḍ'lili l-lahu famā lahu min hādin

Kannada ಅಲ್ಲಾಹನು ಅತ್ಯುತ್ತಮ ವೃತ್ತಾಂತವನ್ನು - ಗ್ರಂಥ ವನ್ನು ಅವತೀರ್ಣಗೊಳಿಸಿರುವನು. ಪರಸ್ಪರ ಸಾಮ್ಯವಿರುವ ಹಾಗೂ ಪುನರಾವರ್ತಿಸಲ್ಪಡುವ ವಚನಗಳನ್ನೊಳಗೊಂಡಿರುವ ಗ್ರಂಥವಿದು. ಇದರಿಂದ ತಮ್ಮ ಪ್ರಭುವನ್ನು ಭಯಪಡುವವರ ಚರ್ಮಗಳು ಕಂಪಿಸುತ್ತವೆ. ಕೊನೆಗೆ ಅವರ ಚರ್ಮ ಹಾಗೂ ಹೃದಯಗಳು ಅಲ್ಲಾಹನ ಸ್ಮರಣೆಯಿಂದ ಶಾಂತವಾಗುವುದು. ಇದು ಅಲ್ಲಾ ಹನ ಮಾರ್ಗದರ್ಶನ. ಆತನು ಇದರ ಮೂಲಕ ತಾನಿಚ್ಛಿಸಿದವರನ್ನು ಸತ್ಪಥಕ್ಕೆ ತರುವನು. ಅಲ್ಲಾಹನು ದಾರಿ ತಪ್ಪಿಸಿದರೆ ಅಂಥವನಿಗೆ ಬೇರಾವ ಮಾರ್ಗದರ್ಶಕನೂ ಇಲ್ಲ.

Verse 24

أَفَمَن يَتَّقِى بِوَجْهِهِۦ سُوٓءَ ٱلْعَذَابِ يَوْمَ ٱلْقِيَـٰمَةِ ۚ وَقِيلَ لِلظَّـٰلِمِينَ ذُوقُوا۟ مَا كُنتُمْ تَكْسِبُونَ

Transliteration afaman yattaqī biwajhihi sūa l-ʿadhābi yawma l-qiyāmati waqīla lilẓẓālimīna dhūqū mā kuntum taksibūna

Kannada ಪುನರುತ್ಥಾನದಿನ ಕಠೋರವಾದ ಶಿಕ್ಷೆಗೆ ತನ್ನ ಮುಖವನ್ನು ಒಡ್ಡುವವನು (ಅದರಿಂದ ಪಾರಾ ದವನಿಗೆ) ಸಮಾನನೇ? ‘ನೀವು ಸಂಪಾದಿಸುತ್ತಿದ್ದ ಗಳಿಕೆಯ ರುಚಿಯನ್ನು ಸವಿಯಿರಿ’ ಎಂದು ಅಕ್ರಮಿಗಳಿಗೆ ಹೇಳಲಾಗುವುದು.

Verse 25

كَذَّبَ ٱلَّذِينَ مِن قَبْلِهِمْ فَأَتَىٰهُمُ ٱلْعَذَابُ مِنْ حَيْثُ لَا يَشْعُرُونَ

Transliteration kadhaba alladhīna min qablihim fa-atāhumu l-ʿadhābu min ḥaythu lā yashʿurūna

Kannada ಇವರಿಗಿಂತ ಮುಂಚಿನವರೂ ಸುಳ್ಳಾಗಿಸಿದ್ದಾರೆ. ಕೊನೆಗೆ ಅವರು ಗ್ರಹಿಸಿಯೇ ಇರದ ಕಡೆಯಿಂದ ಅವರಿಗೆ ಶಿಕ್ಷೆ ಬಂತು.

Verse 26

فَأَذَاقَهُمُ ٱللَّهُ ٱلْخِزْىَ فِى ٱلْحَيَوٰةِ ٱلدُّنْيَا ۖ وَلَعَذَابُ ٱلْـَٔاخِرَةِ أَكْبَرُ ۚ لَوْ كَانُوا۟ يَعْلَمُونَ

Transliteration fa-adhāqahumu l-lahu l-khiz'ya fī l-ḥayati l-dun'yā walaʿadhābu l-ākhirati akbaru law kānū yaʿlamūna

Kannada ತರುವಾಯ ಅಲ್ಲಾಹನು ಅವರಿಗೆ ಲೌಕಿಕ ಜೀವನದಲ್ಲೇ ಅಪಮಾನದ ರುಚಿ ತೋರಿಸಿದನು. ಪರಲೋಕದ ಯಾತನೆಯು ಇದಕ್ಕಿಂತಲೂ ಕಠೋರ. ಇವರು ಅರಿಯುತ್ತಿದ್ದರೆ!

Verse 27

وَلَقَدْ ضَرَبْنَا لِلنَّاسِ فِى هَـٰذَا ٱلْقُرْءَانِ مِن كُلِّ مَثَلٍ لَّعَلَّهُمْ يَتَذَكَّرُونَ

Transliteration walaqad ḍarabnā lilnnāsi fī hādhā l-qur'āni min kulli mathalin laʿallahum yatadhakkarūna

Kannada ನಾವು ಖುರ್‍ಆನ್‍ನಲ್ಲಿ ಜನರಿಗೆ ಎಲ್ಲ ತರದ ಉದಾಹರಣೆಗಳನ್ನು ನೀಡಿದ್ದೇವೆ. ಅವರು ಜಾಗೃತರಾಗಲೆಂದು.

Verse 28

قُرْءَانًا عَرَبِيًّا غَيْرَ ذِى عِوَجٍ لَّعَلَّهُمْ يَتَّقُونَ

Transliteration qur'ānan ʿarabiyyan ghayra dhī ʿiwajin laʿallahum yattaqūna

Kannada ಹೌದು, ಯಾವುದೇ ಅಂಕುಡೊಂಕಿಲ್ಲದ, ಅರಬೀ ಭಾಷೆಯಲ್ಲಿರುವ ಖುರ್‍ಆನ್. ಇವರು ಧರ್ಮ ನಿಷ್ಠೆ ಪಾಲಿಸಲಿಕ್ಕಾಗಿ.

Verse 29

ضَرَبَ ٱللَّهُ مَثَلًا رَّجُلًا فِيهِ شُرَكَآءُ مُتَشَـٰكِسُونَ وَرَجُلًا سَلَمًا لِّرَجُلٍ هَلْ يَسْتَوِيَانِ مَثَلًا ۚ ٱلْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ

Transliteration ḍaraba l-lahu mathalan rajulan fīhi shurakāu mutashākisūna warajulan salaman lirajulin hal yastawiyāni mathalan l-ḥamdu lillahi bal aktharuhum lā yaʿlamūna

Kannada ಅಲ್ಲಾಹು ಓರ್ವ ವ್ಯಕ್ತಿಯನ್ನು ಉದಾಹರಣೆಯಾಗಿ ತೋರಿಸಿರುವನು. ಪರಸ್ಪರ ಕಚ್ಚಾಡುವ ಕೆಲವು ಪಾಲುದಾರರೇ ಆತನ ಯಜಮಾನರು. ಇನ್ನೊಬ್ಬನು ಕೇವಲ ಒಬ್ಬ ಯಜಮಾನನಿಗೆ ಮಾತ್ರ ಶರಣಾದವನು. ಇವರಿಬ್ಬರೂ ಸಮಾನರೇ? ಸರ್ವಸ್ತುತಿಗಳೂ ಅಲ್ಲಾಹನಿಗೆ ಮೀಸಲು. ಆದರೆ ಹೆಚ್ಚಿನವರು ತಿಳಿಯುವುದಿಲ್ಲ.

Verse 30

إِنَّكَ مَيِّتٌ وَإِنَّهُم مَّيِّتُونَ

Transliteration innaka mayyitun wa-innahum mayyitūna

Kannada (ಸಂದೇಶವಾಹಕರೇ) ನೀವೂ ಮೃತರಾಗುವವರು. ಅವರೂ ಮೃತರಾಗುವವರು.

Verse 31

ثُمَّ إِنَّكُمْ يَوْمَ ٱلْقِيَـٰمَةِ عِندَ رَبِّكُمْ تَخْتَصِمُونَ

Transliteration thumma innakum yawma l-qiyāmati ʿinda rabbikum takhtaṣimūna

Kannada ತರುವಾಯ ಪುನರುತ್ಥಾನ ದಿನ ನೀವೆಲ್ಲರೂ ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿ ತರ್ಕಹೂಡಿ ಸೇಡು ತೀರಿಸಿಕೊಳ್ಳುವಿರಿ.

Verse 32

۞ فَمَنْ أَظْلَمُ مِمَّن كَذَبَ عَلَى ٱللَّهِ وَكَذَّبَ بِٱلصِّدْقِ إِذْ جَآءَهُۥٓ ۚ أَلَيْسَ فِى جَهَنَّمَ مَثْوًى لِّلْكَـٰفِرِينَ

Transliteration faman aẓlamu mimman kadhaba ʿalā l-lahi wakadhaba bil-ṣid'qi idh jāahu alaysa fī jahannama mathwan lil'kāfirīna

Kannada ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಮತ್ತು ಸತ್ಯವು ತನ್ನ ಮುಂದೆ ಬಂದಾಗ ಅದನ್ನು ಸುಳ್ಳಾಗಿಸಿದವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾರೆ? ಸತ್ಯನಿಷೇಧಿಗಳ ನೆಲೆ ನರಕದಲ್ಲೇ ಅಲ್ಲವೇ!

Verse 33

وَٱلَّذِى جَآءَ بِٱلصِّدْقِ وَصَدَّقَ بِهِۦٓ ۙ أُو۟لَـٰٓئِكَ هُمُ ٱلْمُتَّقُونَ

Transliteration wa-alladhī jāa bil-ṣid'qi waṣaddaqa bihi ulāika humu l-mutaqūna

Kannada ಸತ್ಯವನ್ನು ತಂದು, ಅದನ್ನು ಸತ್ಯವೆಂದು ನಂಬಿದವರು ಯಾರು, ಅವರೇ ಧರ್ಮನಿಷ್ಠರು.

Verse 34

لَهُم مَّا يَشَآءُونَ عِندَ رَبِّهِمْ ۚ ذَٰلِكَ جَزَآءُ ٱلْمُحْسِنِينَ

Transliteration lahum mā yashāūna ʿinda rabbihim dhālika jazāu l-muḥ'sinīna

Kannada ಅವರು ಬಯಸಿದ್ದೆಲ್ಲವೂ ಅವರ ಪ್ರಭುವಿನ ಬಳಿ ಅವರಿಗೆ ಸಿಗುವುದು. ಇದು ಸದಾಚಾರಿಗಳ ಸತ್ಫಲ.

Verse 35

لِيُكَفِّرَ ٱللَّهُ عَنْهُمْ أَسْوَأَ ٱلَّذِى عَمِلُوا۟ وَيَجْزِيَهُمْ أَجْرَهُم بِأَحْسَنِ ٱلَّذِى كَانُوا۟ يَعْمَلُونَ

Transliteration liyukaffira l-lahu ʿanhum aswa-a alladhī ʿamilū wayajziyahum ajrahum bi-aḥsani alladhī kānū yaʿmalūna

Kannada ಅವರು ಮಾಡಿದ್ದ ನಿಕೃಷ್ಟ ಕರ್ಮಗಳನ್ನು ಅಲ್ಲಾಹನು ಅವರಿಂದ ಅಳಿಸಿ ಹಾಕಲಿಕ್ಕಾಗಿ. ಮತ್ತು ಅವರಿಗೆ ಅವರು ಮಾಡುತ್ತಿದ್ದ ಉತ್ತಮ ಕರ್ಮಗಳಿಗನುಸಾರ ಪ್ರತಿಫಲ ನೀಡಲಿಕ್ಕಾಗಿ.

Verse 36

أَلَيْسَ ٱللَّهُ بِكَافٍ عَبْدَهُۥ ۖ وَيُخَوِّفُونَكَ بِٱلَّذِينَ مِن دُونِهِۦ ۚ وَمَن يُضْلِلِ ٱللَّهُ فَمَا لَهُۥ مِنْ هَادٍ

Transliteration alaysa l-lahu bikāfin ʿabdahu wayukhawwifūnaka bi-alladhīna min dūnihi waman yuḍ'lili l-lahu famā lahu min hādin

Kannada ಅಲ್ಲಾಹನು ತನ್ನ ದಾಸನಿಗೆ (ಪ್ರವಾದಿಯವರಿಗೆ) ಸಾಕಾಗಲಾರನೇ? ಇವರು ಅಲ್ಲಾಹನ ಹೊರತಾಗಿರುವ ಆರಾಧ್ಯರನ್ನು ತೋರಿಸಿ ನಿಮ್ಮನ್ನು ಹೆದರಿಸುತ್ತಾರೆ. ಅಲ್ಲಾಹನು ದಾರಿ ತಪ್ಪಿಸಿದರೆ ಅವನಿಗೆ ಯಾವ ಮಾರ್ಗದರ್ಶಕನೂ ಇಲ್ಲ.

Verse 37

وَمَن يَهْدِ ٱللَّهُ فَمَا لَهُۥ مِن مُّضِلٍّ ۗ أَلَيْسَ ٱللَّهُ بِعَزِيزٍ ذِى ٱنتِقَامٍ

Transliteration waman yahdi l-lahu famā lahu min muḍillin alaysa l-lahu biʿazīzin dhī intiqāmin

Kannada ಯಾರಿಗೆ ಅಲ್ಲಾಹನು ನೇರ ದಾರಿ ತೋರಿದ ನೋ, ಅವನನ್ನು ದಾರಿಗೆಡಿಸುವವನೂ ಯಾರೂ ಇಲ್ಲ. ಅಲ್ಲಾಹು ದುಷ್ಟ ಸಂಹಾರಕನಾದ ಅಜೇ ಯನಲ್ಲವೇ?

Verse 38

وَلَئِن سَأَلْتَهُم مَّنْ خَلَقَ ٱلسَّمَـٰوَٰتِ وَٱلْأَرْضَ لَيَقُولُنَّ ٱللَّهُ ۚ قُلْ أَفَرَءَيْتُم مَّا تَدْعُونَ مِن دُونِ ٱللَّهِ إِنْ أَرَادَنِىَ ٱللَّهُ بِضُرٍّ هَلْ هُنَّ كَـٰشِفَـٰتُ ضُرِّهِۦٓ أَوْ أَرَادَنِى بِرَحْمَةٍ هَلْ هُنَّ مُمْسِكَـٰتُ رَحْمَتِهِۦ ۚ قُلْ حَسْبِىَ ٱللَّهُ ۖ عَلَيْهِ يَتَوَكَّلُ ٱلْمُتَوَكِّلُونَ

Transliteration wala-in sa-altahum man khalaqa l-samāwāti wal-arḍa layaqūlunna l-lahu qul afara-aytum mā tadʿūna min dūni l-lahi in arādaniya l-lahu biḍurrin hal hunna kāshifātu ḍurrihi aw arādanī biraḥmatin hal hunna mum'sikātu raḥmatihi qul ḥasbiya l-lahu ʿalayhi yatawakkalu l-mutawakilūna

Kannada ಭೂಮಿ-ಆಕಾಶಗಳನ್ನು ಸೃಷ್ಟಿಸಿದವನಾರೆಂದು ನೀವು ಇವರೊಡನೆ ಕೇಳಿದರೆ, ಅಲ್ಲಾಹನೆಂದು ಇವರು ಖಂಡಿತ ಹೇಳುವರು. ಹೇಳಿರಿ, ‘ಅಲ್ಲಾಹನ ಹೊರತು ನೀವು ಆರಾಧಿಸುವುದನ್ನು ಕೇಳಿ ತಿಳಿದು ನೋಡಿರುವಿರಾ? ಅಲ್ಲಾಹನು ನನಗೇನಾದರೂ ಹಾನಿಯನ್ನು ಉಂಟು ಮಾಡಲಿಚ್ಛಿಸಿದರೆ ಅವನ ಹಾನಿಯಿಂದ ಅವು ನನ್ನನ್ನು ರಕ್ಷಿಸಬಲ್ಲವೇ ಅಥವಾ ಅಲ್ಲಾಹು ನನ್ನ ಮೇಲೆ ಕೃಪೆ ತೋರಲಿಚ್ಛಿಸಿದರೆ ಅವು ಅವನ ಕೃಪೆಯನ್ನು ತಡೆಯಬಲ್ಲವೇ?’ ಹೇಳಿರಿ, ನನಗೆ ಅಲ್ಲಾಹನೇ ಸಾಕು. ಭರವಸೆ ಇಡುವವರು ಅವನ ಮೇಲೆ ಯೇ ಭರವಸೆಯನ್ನಿಡುತ್ತಾರೆ .

Verse 39

قُلْ يَـٰقَوْمِ ٱعْمَلُوا۟ عَلَىٰ مَكَانَتِكُمْ إِنِّى عَـٰمِلٌ ۖ فَسَوْفَ تَعْلَمُونَ

Transliteration qul yāqawmi iʿ'malū ʿalā makānatikum innī ʿāmilun fasawfa taʿlamūna

Kannada ಹೇಳಿರಿ. ‘ನನ್ನ ಜನಾಂಗದವರೇ, ನೀವು ನಿಮ್ಮ ಅವಸ್ಥೆ ಪ್ರಕಾರ ಕಾರ್ಯಾಚರಿಸಿರಿ. ನಾನೂ ಕಾರ್ಯ ಮಾಡುತ್ತಲಿರುವೆನು. ಸದ್ಯದಲ್ಲೇ ನೀವು ತಿಳಿಯುವಿರಿ.

Verse 40

مَن يَأْتِيهِ عَذَابٌ يُخْزِيهِ وَيَحِلُّ عَلَيْهِ عَذَابٌ مُّقِيمٌ

Transliteration man yatīhi ʿadhābun yukh'zīhi wayaḥillu ʿalayhi ʿadhābun muqīmun

Kannada ಯಾರಿಗೆ ಅಪಮಾನಕರ ಶಿಕ್ಷೆ ಬರುತ್ತದೆ ಮತ್ತು ಶಾಶ್ವತವಾದ ಶಿಕ್ಷೆ ಯಾರಿಗೆ ಎರಗುತ್ತದೆ’ ಎಂದು.

Verse 41

إِنَّآ أَنزَلْنَا عَلَيْكَ ٱلْكِتَـٰبَ لِلنَّاسِ بِٱلْحَقِّ ۖ فَمَنِ ٱهْتَدَىٰ فَلِنَفْسِهِۦ ۖ وَمَن ضَلَّ فَإِنَّمَا يَضِلُّ عَلَيْهَا ۖ وَمَآ أَنتَ عَلَيْهِم بِوَكِيلٍ

Transliteration innā anzalnā ʿalayka l-kitāba lilnnāsi bil-ḥaqi famani ih'tadā falinafsihi waman ḍalla fa-innamā yaḍillu ʿalayhā wamā anta ʿalayhim biwakīlin

Kannada (ಸಂದೇಶವಾಹಕರೇ) ನಿಶ್ಚಯವಾಗಿಯೂ ನಾವು ಜನರಿಗಾಗಿ ಈ ಪರಮ ಸತ್ಯದಿಂದ ಕೂಡಿರುವ ಈ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿ ದ್ದೇವೆ. ಆಗ ಯಾರು ನೇರ ದಾರಿ ಹಿಡಿಯು ತ್ತಾರೋ ಅದು ಆತನ ಹಿತಕ್ಕಾಗಿಯೇ ಇದೆ. ಯಾರು ತಪ್ಪು ದಾರಿ ತುಳಿಯುತ್ತಾರೋ ಅವನು ತನ್ನ ಮೇಲೆಯೇ ತಪ್ಪು ದಾರಿ ತುಳಿಯುತ್ತಾನೆ. ನೀವು ಅವರ ಮೇಲೆ ಹೊಣೆಗಾರರಲ್ಲ.

Verse 42

ٱللَّهُ يَتَوَفَّى ٱلْأَنفُسَ حِينَ مَوْتِهَا وَٱلَّتِى لَمْ تَمُتْ فِى مَنَامِهَا ۖ فَيُمْسِكُ ٱلَّتِى قَضَىٰ عَلَيْهَا ٱلْمَوْتَ وَيُرْسِلُ ٱلْأُخْرَىٰٓ إِلَىٰٓ أَجَلٍ مُّسَمًّى ۚ إِنَّ فِى ذَٰلِكَ لَـَٔايَـٰتٍ لِّقَوْمٍ يَتَفَكَّرُونَ

Transliteration al-lahu yatawaffā l-anfusa ḥīna mawtihā wa-allatī lam tamut fī manāmihā fayum'siku allatī qaḍā ʿalayhā l-mawta wayur'silu l-ukh'rā ilā ajalin musamman inna fī dhālika laāyātin liqawmin yatafakkarūna

Kannada ಅಲ್ಲಾಹನು ಆತ್ಮಗಳನ್ನು ಅವುಗಳ ಮರಣದ ವೇಳೆ ವಶಪಡಿಸಿಕೊಳ್ಳುವನು. ಮರಣ ಹೊಂದದ ಆತ್ಮವನ್ನು ನಿದ್ರಾವಸ್ಥೆಯಲ್ಲಿ ವಶಪಡಿಸಿ ಕೊಳ್ಳುವನು. ತರುವಾಯ ಅವನು ಯಾವುದರ ಮೇಲೆ ಮರಣ ವಿಧಿಸಿರುವನೋ ಅವುಗಳನ್ನು ತಡೆಹಿಡಿಯುತ್ತಾನೆ. ಇತರ ಆತ್ಮಗಳನ್ನು ಒಂದು ನಿರ್ದಿಷ್ಟ ಕಾಲದವರೆಗೆ ಬಿಟ್ಟುಬಿಡುತ್ತಾನೆ. ವಿಚಾರ ಶೀಲರಿಗೆ ಇದರಲ್ಲಿ ಖಂಡಿತ ನಿದರ್ಶನಗಳಿವೆ.

Verse 43

أَمِ ٱتَّخَذُوا۟ مِن دُونِ ٱللَّهِ شُفَعَآءَ ۚ قُلْ أَوَلَوْ كَانُوا۟ لَا يَمْلِكُونَ شَيْـًٔا وَلَا يَعْقِلُونَ

Transliteration ami ittakhadhū min dūni l-lahi shufaʿāa qul awalaw kānū lā yamlikūna shayan walā yaʿqilūna

Kannada ಅದಲ್ಲ, ಅಲ್ಲಾಹನನ್ನು ಬಿಟ್ಟು ಇತರರನ್ನು ಶಿಫಾರಸ್ಸು ದಾರರಾಗಿ ಅವರು ಸ್ವೀಕರಿಸಿಕೊಂಡರೇ? ಹೇಳಿರಿ; ‘ಅವರು ಏನನ್ನೂ ಒಡೆತನಗೊಳಿಸದಿದ್ದರೂ ಅವರು ಯೋಚಿಸಿ ಅರ್ಥಮಾಡಿಕೊಳ್ಳ ದಿದ್ದರೂ (ಅವರು ಹಾಗೆ ಮಾಡುವರೇ?’)

Verse 44

قُل لِّلَّهِ ٱلشَّفَـٰعَةُ جَمِيعًا ۖ لَّهُۥ مُلْكُ ٱلسَّمَـٰوَٰتِ وَٱلْأَرْضِ ۖ ثُمَّ إِلَيْهِ تُرْجَعُونَ

Transliteration qul lillahi l-shafāʿatu jamīʿan lahu mul'ku l-samāwāti wal-arḍi thumma ilayhi tur'jaʿūna

Kannada ಹೇಳಿರಿ; ಶಿಫಾರಸ್ಸು ಸಂಪೂರ್ಣವಾಗಿ ಅಲ್ಲಾಹನ ಅಧಿಕಾರದಲ್ಲಿದೆ. ಭೂಮಿ ಆಕಾಶಗಳ ಆಧಿಪತ್ಯ ಆತನಿಗೇ ಸೇರಿದ್ದು. ಅನಂತರ ನೀವು ಅವನ ಕಡೆಗೇ ಮರಳಿಸಲ್ಪಡುವಿರಿ.

Verse 45

وَإِذَا ذُكِرَ ٱللَّهُ وَحْدَهُ ٱشْمَأَزَّتْ قُلُوبُ ٱلَّذِينَ لَا يُؤْمِنُونَ بِٱلْـَٔاخِرَةِ ۖ وَإِذَا ذُكِرَ ٱلَّذِينَ مِن دُونِهِۦٓ إِذَا هُمْ يَسْتَبْشِرُونَ

Transliteration wa-idhā dhukira l-lahu waḥdahu ish'ma-azzat qulūbu alladhīna lā yu'minūna bil-ākhirati wa-idhā dhukira alladhīna min dūnihi idhā hum yastabshirūna

Kannada ಅಲ್ಲಾಹನ ಬಗ್ಗೆ ಮಾತ್ರ ಪ್ರತಿಪಾದಿಸಲಾದರೆ ಪರಲೋಕದ ಮೇಲೆ ವಿಶ್ವಾಸವಿಲ್ಲದವರ ಹೃದಯಗಳು ಅಸ್ವಸ್ಥಗೊಳ್ಳುತ್ತವೆ. ಅವನ ಹೊರತು ಇತರರ ಪ್ರಸ್ತಾಪವೆತ್ತಿದರೆ ಅವರು ತಕ್ಷಣ ಸಂತುಷ್ಟಗೊಳ್ಳುತ್ತಾರೆ .

Verse 46

قُلِ ٱللَّهُمَّ فَاطِرَ ٱلسَّمَـٰوَٰتِ وَٱلْأَرْضِ عَـٰلِمَ ٱلْغَيْبِ وَٱلشَّهَـٰدَةِ أَنتَ تَحْكُمُ بَيْنَ عِبَادِكَ فِى مَا كَانُوا۟ فِيهِ يَخْتَلِفُونَ

Transliteration quli l-lahuma fāṭira l-samāwāti wal-arḍi ʿālima l-ghaybi wal-shahādati anta taḥkumu bayna ʿibādika fī mā kānū fīhi yakhtalifūna

Kannada ಹೇಳಿರಿ; “ಓ ಅಲ್ಲಾಹ್! ಭೂಮಿ-ಆಕಾಶಗಳ ಸೃಷ್ಟಿಕರ್ತನೇ! ಪ್ರತ್ಯಕ್ಷ ಪರೋಕ್ಷಗಳ ಜ್ಞಾನಿಯೇ, ನಿನ್ನ ದಾಸರು ಪರಸ್ಪರ ಭಿನ್ನಾಭಿಪ್ರಾಯ ತಾಳಿದ ವಿಷಯದಲ್ಲಿ ಅವರ ನಡುವೆ ನೀನೇ ತೀರ್ಮಾನ ಮಾಡಲಿರುವೆ”.

Verse 47

وَلَوْ أَنَّ لِلَّذِينَ ظَلَمُوا۟ مَا فِى ٱلْأَرْضِ جَمِيعًا وَمِثْلَهُۥ مَعَهُۥ لَٱفْتَدَوْا۟ بِهِۦ مِن سُوٓءِ ٱلْعَذَابِ يَوْمَ ٱلْقِيَـٰمَةِ ۚ وَبَدَا لَهُم مِّنَ ٱللَّهِ مَا لَمْ يَكُونُوا۟ يَحْتَسِبُونَ

Transliteration walaw anna lilladhīna ẓalamū mā fī l-arḍi jamīʿan wamith'lahu maʿahu la-if'tadaw bihi min sūi l-ʿadhābi yawma l-qiyāmati wabadā lahum mina l-lahi mā lam yakūnū yaḥtasibūna

Kannada ಭೂಮಿಯಲ್ಲಿರುವ ಸಕಲ ಸಂಪತ್ತು ಮಾತ್ರವಲ್ಲ, ಅಷ್ಟೇ ಬೇರೆಯೂ ಅಕ್ರಮಿಗಳ ವಶದಲ್ಲಿದ್ದರೂ ಕೂಡ ಅವರು ಇದೆಲ್ಲವನ್ನು ಪನರುತ್ಥಾನ ದಿನದ ಉಗ್ರ ಯಾತನೆಯಿಂದ ಪಾರಾಗಲಿಕ್ಕಾಗಿ ದಂಡ ತರಲು ಸಿದ್ಧರಾಗುವರು. ಅವರು ಊಹಿಸಿಯೂ ಇಲ್ಲದ ಹಲವು ಕಾರ್ಯಗಳು ಅಲ್ಲಾಹನ ಕಡೆ ಯಿಂದ ಅವರಿಗೆ ಬಯಲಾಗಿ ಬಿಟ್ಟಿತು.

Verse 48

وَبَدَا لَهُمْ سَيِّـَٔاتُ مَا كَسَبُوا۟ وَحَاقَ بِهِم مَّا كَانُوا۟ بِهِۦ يَسْتَهْزِءُونَ

Transliteration wabadā lahum sayyiātu mā kasabū waḥāqa bihim mā kānū bihi yastahziūna

Kannada ಅವರ ಗಳಿಕೆಯ ದುಷ್ಪರಿಣಾಮಗಳೆಲ್ಲವೂ ಅವರಿಗೆ ಬಯಲಾಗಿ ಬಿಟ್ಟಿತು. ಯಾವುದನ್ನು ಅವರು ಪರಿಹಾಸ್ಯ ಮಾಡುತ್ತಿದ್ದರೋ ಅದೇ ಅವರನ್ನು ಸುತ್ತುವರಿಯಿತು.

Verse 49

فَإِذَا مَسَّ ٱلْإِنسَـٰنَ ضُرٌّ دَعَانَا ثُمَّ إِذَا خَوَّلْنَـٰهُ نِعْمَةً مِّنَّا قَالَ إِنَّمَآ أُوتِيتُهُۥ عَلَىٰ عِلْمٍۭ ۚ بَلْ هِىَ فِتْنَةٌ وَلَـٰكِنَّ أَكْثَرَهُمْ لَا يَعْلَمُونَ

Transliteration fa-idhā massa l-insāna ḍurrun daʿānā thumma idhā khawwalnāhu niʿ'matan minnā qāla innamā ūtītuhu ʿalā ʿil'min bal hiya fit'natun walākinna aktharahum lā yaʿlamūna

Kannada ಮಾನವನಿಗೆ ಏನಾದರೂ ಸಂಕಷ್ಟವು ಬಂದರೆ ಅವನು ನಮ್ಮನ್ನು ಪ್ರಾರ್ಥಿಸುತ್ತಾನೆ. ಅನಂತರ ನಾವು ಅವನಿಗೆ ನಮ್ಮ ಕಡೆಯಿಂದ ಯಾವುದೇ ಅನುಗ್ರಹವನ್ನು ಕೊಟ್ಟರೆ ಇದನ್ನು ನನಗೆ ಜ್ಞಾನದ ಆಧಾರದಲ್ಲಿ ಕೊಡಲಾಗಿದೆ ಎನ್ನುತ್ತಾನೆ. ಅಲ್ಲ, ವಾಸ್ತವದಲ್ಲಿ ಇದು ಪರೀಕ್ಷೆಯಾಗಿದೆ. ಆದರೆ ಇವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.

Verse 50

قَدْ قَالَهَا ٱلَّذِينَ مِن قَبْلِهِمْ فَمَآ أَغْنَىٰ عَنْهُم مَّا كَانُوا۟ يَكْسِبُونَ

Transliteration qad qālahā alladhīna min qablihim famā aghnā ʿanhum mā kānū yaksibūna

Kannada ಇವರಿಗಿಂತ ಮುಂಚೆ ಗತಿಸಿದವರೂ ಹೀಗೆ ಹೇಳಿದ್ದಾರೆ. ಆದರೆ ಅವರು ಗಳಿಸಿಟ್ಟದ್ದೇನೂ ಅವರಿಗೆ ಫಲಕಾರಿಯಾಗಲಿಲ್ಲ.

Verse 51

فَأَصَابَهُمْ سَيِّـَٔاتُ مَا كَسَبُوا۟ ۚ وَٱلَّذِينَ ظَلَمُوا۟ مِنْ هَـٰٓؤُلَآءِ سَيُصِيبُهُمْ سَيِّـَٔاتُ مَا كَسَبُوا۟ وَمَا هُم بِمُعْجِزِينَ

Transliteration fa-aṣābahum sayyiātu mā kasabū wa-alladhīna ẓalamū min hāulāi sayuṣībuhum sayyiātu mā kasabū wamā hum bimuʿ'jizīna

Kannada ಹಾಗೆ ಅವರು ತಮ್ಮ ಗಳಿಕೆಯ ಕೆಟ್ಟ ಫಲವನ್ನು ಅನುಭವಿಸಿದರು. ಅವರ ಪೈಕಿ ಅಕ್ರಮವೆಸಗಿದ ವರು ಸದ್ಯದಲ್ಲೇ ತಮ್ಮ ಗಳಿಕೆಯ ದುಷ್ಫಲವನ್ನು ಅನುಭವಿಸುವರು. ಅವರು ನಮ್ಮನ್ನು ಸೋಲಿಸಲಾರರು.

Verse 52

أَوَلَمْ يَعْلَمُوٓا۟ أَنَّ ٱللَّهَ يَبْسُطُ ٱلرِّزْقَ لِمَن يَشَآءُ وَيَقْدِرُ ۚ إِنَّ فِى ذَٰلِكَ لَـَٔايَـٰتٍ لِّقَوْمٍ يُؤْمِنُونَ

Transliteration awalam yaʿlamū anna l-laha yabsuṭu l-riz'qa liman yashāu wayaqdiru inna fī dhālika laāyātin liqawmin yu'minūna

Kannada ಅಲ್ಲಾಹನು ತಾನಿಚ್ಚಿಸಿದವರಿಗೆ ಉಪಜೀವನ ವನ್ನು ವಿಶಾಲಗೊಳಿಸುತ್ತಾನೆಂದೂ ತಾನಿಚ್ಚಿಸಿದವರಿಗೆ ಅದನ್ನು ಪರಿಮಿತಗೊಳಿಸುತ್ತಾನೆಂದೂ ಇವರಿಗೆ ಗೊತ್ತಿಲ್ಲವೇ? ವಿಶ್ವಾಸವಿರಿಸುವ ಜನರಿಗೆ ಇದರಲ್ಲಿ ನಿದರ್ಶನಗಳಿವೆ.

Verse 53

۞ قُلْ يَـٰعِبَادِىَ ٱلَّذِينَ أَسْرَفُوا۟ عَلَىٰٓ أَنفُسِهِمْ لَا تَقْنَطُوا۟ مِن رَّحْمَةِ ٱللَّهِ ۚ إِنَّ ٱللَّهَ يَغْفِرُ ٱلذُّنُوبَ جَمِيعًا ۚ إِنَّهُۥ هُوَ ٱلْغَفُورُ ٱلرَّحِيمُ

Transliteration qul yāʿibādiya alladhīna asrafū ʿalā anfusihim lā taqnaṭū min raḥmati l-lahi inna l-laha yaghfiru l-dhunūba jamīʿan innahu huwa l-ghafūru l-raḥīmu

Kannada ಹೇಳಿರಿ; ತಮ್ಮ ಮೇಲೆಯೇ ಅತಿರೇಕವೆಸಗಿ ಕೊಂಡ ಓ ನನ್ನ ದಾಸರೇ, ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗದಿರಿ. ಅಲ್ಲಾಹು ಸಕಲ ಪಾಪ ಗಳನ್ನು ಖಂಡಿತ ಕ್ಷಮಿಸುತ್ತಾನೆ. ಅವನು ಕ್ಷಮಾ ಶೀಲನೂ ಕರುಣಾಮಯಿಯೂ ಆಗಿರುತ್ತಾನೆ.

Verse 54

وَأَنِيبُوٓا۟ إِلَىٰ رَبِّكُمْ وَأَسْلِمُوا۟ لَهُۥ مِن قَبْلِ أَن يَأْتِيَكُمُ ٱلْعَذَابُ ثُمَّ لَا تُنصَرُونَ

Transliteration wa-anībū ilā rabbikum wa-aslimū lahu min qabli an yatiyakumu l-ʿadhābu thumma lā tunṣarūna

Kannada ನಿಮ್ಮ ಪ್ರಭುವಿನ ಕಡೆಗೆ ಮರಳಿರಿ. ಆತನಿಗೆ ಶರಣಾಗಿರಿ. ನಿಮ್ಮ ಮೇಲೆ ಶಿಕ್ಷೆ ಬರುವ ಮುನ್ನ . ನಂತರ ನೀವು ಸಹಾಯ ಪಡೆಯಲಾರಿರಿ.

Verse 55

وَٱتَّبِعُوٓا۟ أَحْسَنَ مَآ أُنزِلَ إِلَيْكُم مِّن رَّبِّكُم مِّن قَبْلِ أَن يَأْتِيَكُمُ ٱلْعَذَابُ بَغْتَةً وَأَنتُمْ لَا تَشْعُرُونَ

Transliteration wa-ittabiʿū aḥsana mā unzila ilaykum min rabbikum min qabli an yatiyakumu l-ʿadhābu baghtatan wa-antum lā tashʿurūna

Kannada ನೀವು ತಿಳಿಯದಂತೆ ಹಠಾತ್ತನೆ ನಿಮಗೆ ಶಿಕ್ಷೆ ಬರುವ ಮುನ್ನ ನಿಮ್ಮ ಪ್ರಭುವಿನ ಕಡೆಯಿಂದ ನಿಮಗೆ ಕಳುಹಿಸಲಾಗಿರುವ ಪೈಕಿ ಅತ್ಯುತ್ತಮವಾದುದನ್ನು ಅನುಸರಿಸಿರಿ.

Verse 56

أَن تَقُولَ نَفْسٌ يَـٰحَسْرَتَىٰ عَلَىٰ مَا فَرَّطتُ فِى جَنۢبِ ٱللَّهِ وَإِن كُنتُ لَمِنَ ٱلسَّـٰخِرِينَ

Transliteration an taqūla nafsun yāḥasratā ʿalā mā farraṭtu fī janbi l-lahi wa-in kuntu lamina l-sākhirīna

Kannada ‘ಓ ನನ್ನ ಖೇದವೇ, ಅಲ್ಲಾಹನ ಭಾಗದಲ್ಲಿ ಮಾಡ ಬೇಕಾದ ಕರ್ಮದಲ್ಲಿ ನಾನು ಲೋಪ ಮಾಡಿದೆ, ನಾನು ಗೇಲಿ ಮಾಡುವವರ ಸಾಲಿಗೆ ಸೇರಿದ್ದೆನು’ ಎಂದು ಹೇಳಲಿಕ್ಕಾಗಿ,

Verse 57

أَوْ تَقُولَ لَوْ أَنَّ ٱللَّهَ هَدَىٰنِى لَكُنتُ مِنَ ٱلْمُتَّقِينَ

Transliteration aw taqūla law anna l-laha hadānī lakuntu mina l-mutaqīna

Kannada ‘ಅಥವಾ ಅಲ್ಲಾಹನು ನನಗೆ ಮಾರ್ಗದರ್ಶನ ನೀಡಿರುತ್ತಿದ್ದರೆ ನಾನೂ ದೇವನಿಷ್ಟರಲ್ಲಾಗುತ್ತಿದ್ದೆ’ ಎಂದು ಹೇಳುವುದಕ್ಕಾಗಿ.

Verse 58

أَوْ تَقُولَ حِينَ تَرَى ٱلْعَذَابَ لَوْ أَنَّ لِى كَرَّةً فَأَكُونَ مِنَ ٱلْمُحْسِنِينَ

Transliteration aw taqūla ḥīna tarā l-ʿadhāba law anna lī karratan fa-akūna mina l-muḥ'sinīna

Kannada ‘ಅಥವಾ ಶಿಕ್ಷೆಯನ್ನು ಕಣ್ಣಾರೆ ಕಾಣುವಾಗ, ನನಗೆ ಮರಳಿ ಹೋಗಲು ಸಾಧ್ಯವಿರುತ್ತಿದ್ದರೆ ನಾನೂ ಸದ್ಭಕ್ತರಲ್ಲಿ ಸೇರಿ ಬಿಡುತ್ತಿದ್ದೆ’ ಎಂದು ಹೇಳುವುದಕ್ಕಾಗಿ.

Verse 59

بَلَىٰ قَدْ جَآءَتْكَ ءَايَـٰتِى فَكَذَّبْتَ بِهَا وَٱسْتَكْبَرْتَ وَكُنتَ مِنَ ٱلْكَـٰفِرِينَ

Transliteration balā qad jāatka āyātī fakadhabta bihā wa-is'takbarta wakunta mina l-kāfirīna

Kannada (ಆಗ ಅಲ್ಲಾಹನ ಕಡೆಯಿಂದ ಹೀಗೆ ಹೇಳಲಾ ಗುವುದು) ಹೌದು, ನನ್ನ ದೃಷ್ಟಾಂತಗಳು ನಿನ್ನ ಬಳಿಗೆ ಬಂದಿವೆ. ಆಗ ನೀನು ಅವುಗಳನ್ನು ಸುಳ್ಳಾಗಿಸಿದೆ ಮತ್ತು ದುರಹಂಕಾರ ತೋರಿದೆ, ನೀನು ಸತ್ಯನಿಷೇಧಿಗಳಲ್ಲಿ ಸೇರಿ ಹೋದೆ.

Verse 60

وَيَوْمَ ٱلْقِيَـٰمَةِ تَرَى ٱلَّذِينَ كَذَبُوا۟ عَلَى ٱللَّهِ وُجُوهُهُم مُّسْوَدَّةٌ ۚ أَلَيْسَ فِى جَهَنَّمَ مَثْوًى لِّلْمُتَكَبِّرِينَ

Transliteration wayawma l-qiyāmati tarā alladhīna kadhabū ʿalā l-lahi wujūhuhum mus'waddatun alaysa fī jahannama mathwan lil'mutakabbirīna

Kannada ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವರ ಮುಖಗಳು ಪುನರುತ್ಥಾನ ದಿನ ಕಪ್ಪಾಗಿ ಬಿಟ್ಟಿರು ವುದನ್ನು ನೀವು ಕಾಣುವಿರಿ. ದುರಹಂಕಾರಿಗಳ ವಾಸಸ್ಥಳ ನರಕಾಗ್ನಿಯಲ್ಲೇ ಅಲ್ಲವೇ?

Verse 61

وَيُنَجِّى ٱللَّهُ ٱلَّذِينَ ٱتَّقَوْا۟ بِمَفَازَتِهِمْ لَا يَمَسُّهُمُ ٱلسُّوٓءُ وَلَا هُمْ يَحْزَنُونَ

Transliteration wayunajjī l-lahu alladhīna ittaqaw bimafāzatihim lā yamassuhumu l-sūu walā hum yaḥzanūna

Kannada ದೇವಭಯವುಳ್ಳವರನ್ನು ತಮ್ಮ ಸುರಕ್ಷಿತ ತಾಣದಲ್ಲಿ (ತಂದಿರಿಸುವ ಮೂಲಕ) ಅಲ್ಲಾಹನು ಸಂರಕ್ಷಿಸುವನು. ಯಾವ ಹಾನಿಯೂ ಅವರಿಗೆ ತಟ್ಟದು. ಅವರು ದುಃಖಿಸುವವರೂ ಅಲ್ಲ.

Verse 62

ٱللَّهُ خَـٰلِقُ كُلِّ شَىْءٍ ۖ وَهُوَ عَلَىٰ كُلِّ شَىْءٍ وَكِيلٌ

Transliteration al-lahu khāliqu kulli shayin wahuwa ʿalā kulli shayin wakīlun

Kannada ಅಲ್ಲಾಹು ಸಕಲ ವಸ್ತುಗಳ ಸೃಷ್ಟಿಕರ್ತನು. ಅವನು ಸಕಲ ವಸ್ತುಗಳ ಮೇಲ್ವಿಚಾರಕನು.

Verse 63

لَّهُۥ مَقَالِيدُ ٱلسَّمَـٰوَٰتِ وَٱلْأَرْضِ ۗ وَٱلَّذِينَ كَفَرُوا۟ بِـَٔايَـٰتِ ٱللَّهِ أُو۟لَـٰٓئِكَ هُمُ ٱلْخَـٰسِرُونَ

Transliteration lahu maqālīdu l-samāwāti wal-arḍi wa-alladhīna kafarū biāyāti l-lahi ulāika humu l-khāsirūna

Kannada ಭೂಮಿ-ಆಕಾಶಗಳ ಕೀಲಿ ಕೈಗಳು ಅವನ ವಶದಲ್ಲಿವೆ. ಅಲ್ಲಾಹನ ನಿದರ್ಶನಗಳನ್ನು ನಿಷೇಧಿಸುವವರೇ ನಷ್ಟ ಹೊಂದಿದವರು.

Verse 64

قُلْ أَفَغَيْرَ ٱللَّهِ تَأْمُرُوٓنِّىٓ أَعْبُدُ أَيُّهَا ٱلْجَـٰهِلُونَ

Transliteration qul afaghayra l-lahi tamurūnnī aʿbudu ayyuhā l-jāhilūna

Kannada (ಸಂದೇಶವಾಹಕರೇ) ಹೇಳಿರಿ: ತಿಳಿಗೇಡಿಗಳೇ, ಅಲ್ಲಾಹನ ಹೊರತು ಇತರರನ್ನು ನಾನು ಆರಾ ಧಿಸುವಂತೆ ನನಗೆ ನೀವು ಆದೇಶ ಕೊಡುತ್ತಿ ರುವಿರಾ?

Verse 65

وَلَقَدْ أُوحِىَ إِلَيْكَ وَإِلَى ٱلَّذِينَ مِن قَبْلِكَ لَئِنْ أَشْرَكْتَ لَيَحْبَطَنَّ عَمَلُكَ وَلَتَكُونَنَّ مِنَ ٱلْخَـٰسِرِينَ

Transliteration walaqad ūḥiya ilayka wa-ilā alladhīna min qablika la-in ashrakta layaḥbaṭanna ʿamaluka walatakūnanna mina l-khāsirīna

Kannada ನೀವು ದೇವಸಹಭಾಗಿತ್ವವೆಸಗಿದರೆ ನಿಮ್ಮ ಕರ್ಮವು ನಿರರ್ಥಕಗೊಳ್ಳುವುದು ಮತ್ತು ನೀವು ನಷ್ಟ ಹೊಂದಿದವರಲ್ಲಾಗುವಿರೆಂದು ನಿಮಗೂ ನಿಮಗಿಂತ ಮುಂಚಿನವರಿಗೂ ದಿವ್ಯವಾಣಿ ಕಳುಹಿಸಲಾಗಿದೆ.

Verse 66

بَلِ ٱللَّهَ فَٱعْبُدْ وَكُن مِّنَ ٱلشَّـٰكِرِينَ

Transliteration bali l-laha fa-uʿ'bud wakun mina l-shākirīna

Kannada ಆದುದರಿಂದ (ಸಂದೇಶವಾಹಕರೇ) ಅಲ್ಲಾಹ ನನ್ನೇ ನೀವು ಆರಾಧಿಸಿರಿ. ಕೃತಜ್ಞರಲ್ಲಿ ಸೇರಿರಿ.

Verse 67

وَمَا قَدَرُوا۟ ٱللَّهَ حَقَّ قَدْرِهِۦ وَٱلْأَرْضُ جَمِيعًا قَبْضَتُهُۥ يَوْمَ ٱلْقِيَـٰمَةِ وَٱلسَّمَـٰوَٰتُ مَطْوِيَّـٰتٌۢ بِيَمِينِهِۦ ۚ سُبْحَـٰنَهُۥ وَتَعَـٰلَىٰ عَمَّا يُشْرِكُونَ

Transliteration wamā qadarū l-laha ḥaqqa qadrihi wal-arḍu jamīʿan qabḍatuhu yawma l-qiyāmati wal-samāwātu maṭwiyyātun biyamīnihi sub'ḥānahu wataʿālā ʿammā yush'rikūna

Kannada ಇವರು ಅಲ್ಲಾಹನನ್ನು ಗೌರವಿಸಬೇಕಾದ ರೀತಿಯಲ್ಲಿ ಗೌರವಿಸಲಿಲ್ಲ. ಪುನರುತ್ಥಾನ ದಿನ ಇಡೀ ಭೂಮಿಯು ಅವನ ಹಿಡಿತದಲ್ಲಿರುವುದು. ಆಕಾಶಗಳು ಅವನ ಶಕ್ತಿಯಲ್ಲಿ ಸುತ್ತಿಕೊಂಡಿರುವವು . ಇವರು ಎಸಗುತ್ತಿರುವ ಬಹುದೇವಾರಾಧನೆಯಿಂದ ಅವನು ಪಾವನನೂ ಪರಮೋ ನ್ನತನೂ ಆಗಿರುತ್ತಾನೆ.

Verse 68

وَنُفِخَ فِى ٱلصُّورِ فَصَعِقَ مَن فِى ٱلسَّمَـٰوَٰتِ وَمَن فِى ٱلْأَرْضِ إِلَّا مَن شَآءَ ٱللَّهُ ۖ ثُمَّ نُفِخَ فِيهِ أُخْرَىٰ فَإِذَا هُمْ قِيَامٌ يَنظُرُونَ

Transliteration wanufikha fī l-ṣūri faṣaʿiqa man fī l-samāwāti waman fī l-arḍi illā man shāa l-lahu thumma nufikha fīhi ukh'rā fa-idhā hum qiyāmun yanẓurūna

Kannada ಕಹಳೆಯಲ್ಲಿ ಊದಲಾಗುವುದು. ಆಗ ಭೂಮಿ- ಆಕಾಶಗಳಲ್ಲಿರುವವರೆಲ್ಲರೂ ಸತ್ತು ಬೀಳುವರು. ಅಲ್ಲಾಹು ಇಚ್ಚಿಸುವವರ ಹೊರತು. ತರುವಾಯ ಇನ್ನೊಂದು ಕಹಳೆ ಊದಲಾಗುವುದು. ಆಗ ಎಲ್ಲರೂ ಎದ್ದು ನಿಂತು ನಿರೀಕ್ಷಿಸುವರು.

Verse 69

وَأَشْرَقَتِ ٱلْأَرْضُ بِنُورِ رَبِّهَا وَوُضِعَ ٱلْكِتَـٰبُ وَجِا۟ىٓءَ بِٱلنَّبِيِّـۧنَ وَٱلشُّهَدَآءِ وَقُضِىَ بَيْنَهُم بِٱلْحَقِّ وَهُمْ لَا يُظْلَمُونَ

Transliteration wa-ashraqati l-arḍu binūri rabbihā wawuḍiʿa l-kitābu wajīa bil-nabiyīna wal-shuhadāi waquḍiya baynahum bil-ḥaqi wahum lā yuẓ'lamūna

Kannada ಭೂಮಿಯು ತನ್ನ ಪ್ರಭುವಿನ ಪ್ರಕಾಶದಿಂದ ಬೆಳಗುವುದು. ಕರ್ಮಗ್ರಂಥವನ್ನು ತಂದಿಡ ಲಾಗುವುದು. ಪ್ರವಾದಿಗಳು ಮತ್ತು ಸಾಕ್ಷಿಗಳನ್ನು ತರಲಾಗುವುದು. ಜನರ ನಡುವೆ ಸತ್ಯ-ನ್ಯಾಯ ಪ್ರಕಾರ ತೀರ್ಮಾನ ಮಾಡಲಾಗುವುದು. ಅವರಿಗೆ ಅನ್ಯಾಯವೆಸಗಲಾಗುವುದಿಲ್ಲ.

Verse 70

وَوُفِّيَتْ كُلُّ نَفْسٍ مَّا عَمِلَتْ وَهُوَ أَعْلَمُ بِمَا يَفْعَلُونَ

Transliteration wawuffiyat kullu nafsin mā ʿamilat wahuwa aʿlamu bimā yafʿalūna

Kannada ಪ್ರತಿಯೊಬ್ಬ ವ್ಯಕ್ತಿಗೂ ತಾನು ಮಾಡಿದ್ದ ಕರ್ಮಗಳ ಸರ್ವಸಂಪೂರ್ಣ ಪ್ರತಿಫಲ ನೀಡಲಾಗುವುದು. ಅವರು ಮಾಡುತ್ತಿರುವುದನ್ನು ಅಲ್ಲಾಹು ಚೆನ್ನಾಗಿ ಬಲ್ಲನು.

Verse 71

وَسِيقَ ٱلَّذِينَ كَفَرُوٓا۟ إِلَىٰ جَهَنَّمَ زُمَرًا ۖ حَتَّىٰٓ إِذَا جَآءُوهَا فُتِحَتْ أَبْوَٰبُهَا وَقَالَ لَهُمْ خَزَنَتُهَآ أَلَمْ يَأْتِكُمْ رُسُلٌ مِّنكُمْ يَتْلُونَ عَلَيْكُمْ ءَايَـٰتِ رَبِّكُمْ وَيُنذِرُونَكُمْ لِقَآءَ يَوْمِكُمْ هَـٰذَا ۚ قَالُوا۟ بَلَىٰ وَلَـٰكِنْ حَقَّتْ كَلِمَةُ ٱلْعَذَابِ عَلَى ٱلْكَـٰفِرِينَ

Transliteration wasīqa alladhīna kafarū ilā jahannama zumaran ḥattā idhā jāūhā futiḥat abwābuhā waqāla lahum khazanatuhā alam yatikum rusulun minkum yatlūna ʿalaykum āyāti rabbikum wayundhirūnakum liqāa yawmikum hādhā qālū balā walākin ḥaqqat kalimatu l-ʿadhābi ʿalā l-kāfirīna

Kannada ಸತ್ಯನಿಷೇಧಿಗಳನ್ನು ನರಕಕ್ಕೆ ವಿವಿಧ ಗುಂಪು ಗಳಾಗಿ ಅಟ್ಟಲಾಗುವುದು. ಅವರು ಅಲ್ಲಿಗೆ ತಲುಪುವಾಗ ಅದರ ಪ್ರವೇಶ ದ್ವಾರಗಳನ್ನು ತೆರೆಯಲಾಗುವುದು. ಅದರ ಪಾಳೆಯಗಾರರು ಕೇಳುವರು, “ಏನು, ನಿಮ್ಮ ಪ್ರಭುವಿನ ವಚನಗಳನ್ನು ಓದಿ ಹೇಳುವ ಹಾಗೂ ನಿಮ್ಮ ಈ ದಿನವನ್ನು ಕಾಣಬೇಕಾಗುವ ಬಗ್ಗೆ ನಿಮ್ಮನ್ನು ಎಚ್ಚರಿಸುವ ದೇವದೂತರು ನಿಮ್ಮಿಂದಲೇ ನಿಮ್ಮ ಬಳಿ ಬಂದಿರಲಿಲ್ಲವೇ?”. ಅವರು ಹೀಗೆ ಉತ್ತರ ಕೊಡು ವರು; ಹೌದು ಬಂದಿದ್ದರು, ಆದರೆ ಸತ್ಯ ನಿಷೇಧಿ ಗಳ ಮೇಲೆ ಶಿಕ್ಷೆಯ ವಚನವು ನಿಜಗೊಂಡಿದೆ.

Verse 72

قِيلَ ٱدْخُلُوٓا۟ أَبْوَٰبَ جَهَنَّمَ خَـٰلِدِينَ فِيهَا ۖ فَبِئْسَ مَثْوَى ٱلْمُتَكَبِّرِينَ

Transliteration qīla ud'khulū abwāba jahannama khālidīna fīhā fabi'sa mathwā l-mutakabirīna

Kannada ಆಗ ಅವರೊಡನೆ `ನರಕದ ದ್ವಾರಗಳ ಮೂಲಕ ಒಳಗೆ ನುಗ್ಗಿರಿ. ನೀವು ಇದರಲ್ಲಿ ಶಾಶ್ವತವಾಗಿ ನೆಲೆಗೊಳ್ಳುವಿರಿ. ದುರಹಂಕಾರಿಗಳ ತಾಣವು ಎಷ್ಟು ನಿಕೃಷ್ಟ’ ಎನ್ನಲಾಗುವುದು.

Verse 73

وَسِيقَ ٱلَّذِينَ ٱتَّقَوْا۟ رَبَّهُمْ إِلَى ٱلْجَنَّةِ زُمَرًا ۖ حَتَّىٰٓ إِذَا جَآءُوهَا وَفُتِحَتْ أَبْوَٰبُهَا وَقَالَ لَهُمْ خَزَنَتُهَا سَلَـٰمٌ عَلَيْكُمْ طِبْتُمْ فَٱدْخُلُوهَا خَـٰلِدِينَ

Transliteration wasīqa alladhīna ittaqaw rabbahum ilā l-janati zumaran ḥattā idhā jāūhā wafutiḥat abwābuhā waqāla lahum khazanatuhā salāmun ʿalaykum ṭib'tum fa-ud'khulūhā khālidīna

Kannada ತಮ್ಮ ಒಡೆಯನ ಮೇಲೆ ಭಕ್ತಿಯಿರಿಸಿಕೊಂಡ ಧರ್ಮ ನಿಷ್ಠರನ್ನು ಸ್ವರ್ಗಕ್ಕೆ ವಿವಿಧ ಗುಂಪುಗ ಳಾಗಿ ಕರೆದೊಯ್ಯಲಾಗುವುದು. ಅದರ ಬಾಗಿಲುಗಳನ್ನು ತೆರೆದಿಡಲಾದ ಸ್ಥಿತಿಯಲ್ಲಿ ಅವರು ಅಲ್ಲಿಗೆ ತಲುಪುವಾಗ ಅದರ ಕಾವಲುಗಾರರು ಅವರೊಡನೆ, ‘ನಿಮಗೆ ಶುಭವಾಗಲಿ. ನೀವು ಪುನೀ ತರಾಗಿದ್ದಿರಿ. ಆದ್ದರಿಂದ ಸದಾಕಾಲ ನೆಲೆಸಲಿ ಕ್ಕಾಗಿ ಒಳಗೆ ಚಿತ್ತೈಸಿರಿ’ ಎನ್ನುವರು.

Verse 74

وَقَالُوا۟ ٱلْحَمْدُ لِلَّهِ ٱلَّذِى صَدَقَنَا وَعْدَهُۥ وَأَوْرَثَنَا ٱلْأَرْضَ نَتَبَوَّأُ مِنَ ٱلْجَنَّةِ حَيْثُ نَشَآءُ ۖ فَنِعْمَ أَجْرُ ٱلْعَـٰمِلِينَ

Transliteration waqālū l-ḥamdu lillahi alladhī ṣadaqanā waʿdahu wa-awrathanā l-arḍa natabawwa-u mina l-janati ḥaythu nashāu faniʿ'ma ajru l-ʿāmilīna

Kannada ಆಗ ಇವರು ಹೇಳುವರು; ನಮ್ಮೊಂದಿಗೆ ತನ್ನ ವಾಗ್ದಾನವನ್ನು ಸತ್ಯಗೊಳಿಸಿದ ಹಾಗೂ ಸ್ವರ್ಗ ದಲ್ಲಿ ನಮಗಿಷ್ಟ ಬಂದ ಕಡೆ ನೆಲೆಸುವ ರೀತಿ ಯಲ್ಲಿ ನಮ್ಮನ್ನು ಈ ಭೂಮಿಯ ವಾರೀಸು ದಾರರಾಗಿ ಮಾಡಿದ ಅಲ್ಲಾಹನಿಗೆ ಕೃತಜ್ಞತೆಗಳು. ಅಂದ ಮೇಲೆ ಕರ್ಮಶಾಲಿಗಳ ಪ್ರತಿಫಲ ಎಷ್ಟು ವಿಶಿಷ್ಟವಾದುದು.

Verse 75

وَتَرَى ٱلْمَلَـٰٓئِكَةَ حَآفِّينَ مِنْ حَوْلِ ٱلْعَرْشِ يُسَبِّحُونَ بِحَمْدِ رَبِّهِمْ ۖ وَقُضِىَ بَيْنَهُم بِٱلْحَقِّ وَقِيلَ ٱلْحَمْدُ لِلَّهِ رَبِّ ٱلْعَـٰلَمِينَ

Transliteration watarā l-malāikata ḥāffīna min ḥawli l-ʿarshi yusabbiḥūna biḥamdi rabbihim waquḍiya baynahum bil-ḥaqi waqīla l-ḥamdu lillahi rabbi l-ʿālamīna

Kannada ದೇವಚರರು ತಮ್ಮ ಪ್ರಭುವಿಗೆ ಸ್ತುತಿ ಕೀರ್ತ ನೆಗಳನ್ನು ಅರ್ಪಿಸುತ್ತ ಅರ್ಶ್‍ನ ಸುತ್ತಲೂ ಪ್ರದ ಕ್ಷಿಣೆ ಬರುತ್ತಿರುವುದನ್ನು ನೀವು ನೋಡುವಿರಿ. ಸೃಷ್ಟಿಗಳ ನಡುವೆ ನ್ಯಾಯಪೂರ್ಣ ತೀರ್ಮಾನ ಮಾಡಲಾಗುವುದು. ಸರ್ವಲೋಕ ಪಾಲಕನಾದ ಅಲ್ಲಾಹನಿಗೇ ಸಕಲ ಸ್ತೋತ್ರಗಳೂ ಮೀಸಲೆಂದು ಹೇಳಲಾಗುವುದು.

Read Surah Az-Zumar in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.