MyDugsiStart learning

Surah Az-Zukhruf in Kannada: translation and audio

Surah 43 · الزخرف · The Ornaments of Gold · 89 verses

Surah Az-Zukhruf verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Az-Zukhruf word by word in English.

Verse 1

حمٓ

Transliteration hha-meem

Kannada ಹಾಮೀಮ್.

Verse 2

وَٱلْكِتَـٰبِ ٱلْمُبِينِ

Transliteration wal-kitābi l-mubīni

Kannada ಸುವ್ಯಕ್ತವಾದ ಈ ಗ್ರಂಥದಾಣೆ.

Verse 3

إِنَّا جَعَلْنَـٰهُ قُرْءَٰنًا عَرَبِيًّا لَّعَلَّكُمْ تَعْقِلُونَ

Transliteration innā jaʿalnāhu qur'ānan ʿarabiyyan laʿallakum taʿqilūna

Kannada ನೀವು ಗ್ರಹಿಸಿಕೊಳ್ಳಲಿಕ್ಕಾಗಿ ನಾವು ಇದನ್ನು ಅರಬಿ ಭಾಷೆಯ ಖುರ್‍ಆನ್ (ಗ್ರಂಥ) ಆಗಿ ಮಾಡಿರುತ್ತೇವೆ.

Verse 4

وَإِنَّهُۥ فِىٓ أُمِّ ٱلْكِتَـٰبِ لَدَيْنَا لَعَلِىٌّ حَكِيمٌ

Transliteration wa-innahu fī ummi l-kitābi ladaynā laʿaliyyun ḥakīmun

Kannada ವಾಸ್ತವದಲ್ಲಿ ಅದು ಮೂಲಗ್ರಂಥದಲ್ಲಿ ಲಿಖಿತವಿದ್ದು ನಮ್ಮ ಬಳಿ ಅತ್ಯುನ್ನತ ಸ್ಥಾನ ಹೊಂದಿರುವ ತತ್ವ ಪೂರ್ಣ ಗ್ರಂಥ.

Verse 5

أَفَنَضْرِبُ عَنكُمُ ٱلذِّكْرَ صَفْحًا أَن كُنتُمْ قَوْمًا مُّسْرِفِينَ

Transliteration afanaḍribu ʿankumu l-dhik'ra ṣafḥan an kuntum qawman mus'rifīna

Kannada ಹೀಗಿರುವಾಗ ಇದನ್ನು ನಿಮಗೆ ರವಾನಿಸದೆ ನಾವು ತಡೆದಿರಿಸಬೇಕೆ? ನೀವು ಹದ್ದುಮೀರಿದ ಜನತೆ ಎಂಬ ಕಾರಣಕ್ಕೆ?

Verse 6

وَكَمْ أَرْسَلْنَا مِن نَّبِىٍّ فِى ٱلْأَوَّلِينَ

Transliteration wakam arsalnā min nabiyyin fī l-awalīna

Kannada ಪೂರ್ವಿಕರಲ್ಲೂ ನಾವು ಎಷ್ಟೆಷ್ಟೋ ಪ್ರವಾದಿಗಳನ್ನು ಕಳುಹಿಸಿದ್ದೇವೆ.

Verse 7

وَمَا يَأْتِيهِم مِّن نَّبِىٍّ إِلَّا كَانُوا۟ بِهِۦ يَسْتَهْزِءُونَ

Transliteration wamā yatīhim min nabiyyin illā kānū bihi yastahziūna

Kannada ಅವರ ಬಳಿಗೆ ಬಂದ ಯಾವೊಬ್ಬ ಪ್ರವಾದಿಯನ್ನೂ ಅವರು ಪರಿಹಾಸ ಮಾಡದೇ ಬಿಟ್ಟಿರಲಿಲ್ಲ.

Verse 8

فَأَهْلَكْنَآ أَشَدَّ مِنْهُم بَطْشًا وَمَضَىٰ مَثَلُ ٱلْأَوَّلِينَ

Transliteration fa-ahlaknā ashadda min'hum baṭshan wamaḍā mathalu l-awalīna

Kannada ಆಗ ಇವರಿಗಿಂತ ಅದೆಷ್ಟೋ ಸಮರ್ಥ ಬಲಶಾಲಿಗಳಾಗಿದ್ದವರನ್ನು ನಾವು ನಾಶ ಗೊಳಿಸಿದ್ದೇವೆ. ಪೂರ್ವಿಕರ ಉದಾಹರಣೆ (ಖುರ್‍ಆನಿನಲ್ಲಿ) ಪ್ರಸ್ತಾಪಿಸಲಾಗಿದೆ.

Verse 9

وَلَئِن سَأَلْتَهُم مَّنْ خَلَقَ ٱلسَّمَـٰوَٰتِ وَٱلْأَرْضَ لَيَقُولُنَّ خَلَقَهُنَّ ٱلْعَزِيزُ ٱلْعَلِيمُ

Transliteration wala-in sa-altahum man khalaqa l-samāwāti wal-arḍa layaqūlunna khalaqahunna l-ʿazīzu l-ʿalīmu

Kannada ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದ್ದು ಯಾರೆಂದು ತಾವು ಅವರೊಂದಿಗೆ ಕೇಳಿದರೆ, ಅವುಗಳನ್ನು ಪ್ರಬಲನೂ ಅಭಿಜ್ಞನೂ ಆದವನು (ಅಲ್ಲಾಹು) ಸೃಷ್ಟಿಸಿದನೆಂದು ಅವರು ಹೇಳುವರು .

Verse 10

ٱلَّذِى جَعَلَ لَكُمُ ٱلْأَرْضَ مَهْدًا وَجَعَلَ لَكُمْ فِيهَا سُبُلًا لَّعَلَّكُمْ تَهْتَدُونَ

Transliteration alladhī jaʿala lakumu l-arḍa mahdan wajaʿala lakum fīhā subulan laʿallakum tahtadūna

Kannada (ಹೌದು) ನಿಮಗಾಗಿ ಈ ಭೂಮಿಯನ್ನು ಒಂದು ಹಾಸನ್ನಾಗಿಯೂ ಗುರಿ ತಲುಪುವಂತಾಗಲು ಅದರಲ್ಲಿ ನಿಮಗೆ ದಾರಿಗಳನ್ನೂ ಮಾಡಿಕೊಟ್ಟವನು ಅವನೇ.

Verse 11

وَٱلَّذِى نَزَّلَ مِنَ ٱلسَّمَآءِ مَآءًۢ بِقَدَرٍ فَأَنشَرْنَا بِهِۦ بَلْدَةً مَّيْتًا ۚ كَذَٰلِكَ تُخْرَجُونَ

Transliteration wa-alladhī nazzala mina l-samāi māan biqadarin fa-ansharnā bihi baldatan maytan kadhālika tukh'rajūna

Kannada ಅವನು ಆಕಾಶದಿಂದ ಒಂದು ನಿಶ್ಚಿತ ಪ್ರಮಾಣದಲ್ಲಿ ನೀರನ್ನು ಸುರಿಸಿಕೊಟ್ಟನು. ಹಾಗೆ ನಾವು ಅದರ ಮೂಲಕ ನಿರ್ಜೀವಗೊಂಡಿದ್ದ ಭೂಪ್ರದೇ ಶವನ್ನು ಜೀವಂತಗೊಳಿಸಿದೆವು. ಅಂತೆಯೇ ನೀವು (ಒಂದು ದಿನ ಸಮಾಧಿಯಿಂದ) ಹೊರ ತರಲ್ಪಡುವಿರಿ.

Verse 12

وَٱلَّذِى خَلَقَ ٱلْأَزْوَٰجَ كُلَّهَا وَجَعَلَ لَكُم مِّنَ ٱلْفُلْكِ وَٱلْأَنْعَـٰمِ مَا تَرْكَبُونَ

Transliteration wa-alladhī khalaqa l-azwāja kullahā wajaʿala lakum mina l-ful'ki wal-anʿāmi mā tarkabūna

Kannada ಎಲ್ಲಾ ಜೋಡಿಗಳನ್ನು ಸೃಷ್ಟಿಸಿದವನು ಅವನೇ. ಅವನು ನಿಮಗೆ ಯಾತ್ರೆಗಿರುವ ನೌಕೆಗಳನ್ನು ಮತ್ತು ಪ್ರಾಣಿಗಳನ್ನು (ವಾಹನಗಳಾಗಿ) ಮಾಡಿ ಕೊಟ್ಟಿರುವನು.

Verse 13

لِتَسْتَوُۥا۟ عَلَىٰ ظُهُورِهِۦ ثُمَّ تَذْكُرُوا۟ نِعْمَةَ رَبِّكُمْ إِذَا ٱسْتَوَيْتُمْ عَلَيْهِ وَتَقُولُوا۟ سُبْحَـٰنَ ٱلَّذِى سَخَّرَ لَنَا هَـٰذَا وَمَا كُنَّا لَهُۥ مُقْرِنِينَ

Transliteration litastawū ʿalā ẓuhūrihi thumma tadhkurū niʿ'mata rabbikum idhā is'tawaytum ʿalayhi wataqūlū sub'ḥāna alladhī sakhara lanā hādhā wamā kunnā lahu muq'rinīna

Kannada ನೀವು ಅವುಗಳ ಬೆನ್ನೇರಿ ಕುಳಿತುಕೊಳ್ಳಲು ಆಮೇಲೆ ನೀವು ಅವುಗಳ ಮೇಲೆ ಕುಳಿತಾಗ ನಿಮ್ಮ ಪ್ರಭುವಿನ ಅನುಗ್ರಹವನ್ನು ನೀವು ಸ್ಮರಿಸಿಕೊಳ್ಳಲು ಹಾಗೂ ನೀವು ಹೀಗೆ ಹೇಳಲಿಕ್ಕಾಗಿ: ``ನಮಗೆ ಇದನ್ನು ಅಧೀನಪಡಿಸಿಕೊಟ್ಟವನು ಪರಮ ಪರಿಶುದ್ಧನು. ನಾವು ಸ್ವಂತವಾಗಿ ಇದನ್ನು ಅಧೀನಪಡಿಸಲು ಶಕ್ತರಾಗಿಲ್ಲ.

Verse 14

وَإِنَّآ إِلَىٰ رَبِّنَا لَمُنقَلِبُونَ

Transliteration wa-innā ilā rabbinā lamunqalibūna

Kannada ಖಂಡಿತ. ನಾವು ನಮ್ಮ ಪ್ರಭುವಿನ ಕಡೆಗೇ ಮರಳಿ ಹೋಗಲಿಕ್ಕಿದೆ”.

Verse 15

وَجَعَلُوا۟ لَهُۥ مِنْ عِبَادِهِۦ جُزْءًا ۚ إِنَّ ٱلْإِنسَـٰنَ لَكَفُورٌ مُّبِينٌ

Transliteration wajaʿalū lahu min ʿibādihi juz'an inna l-insāna lakafūrun mubīnun

Kannada ಅವರು ಅವನ (ಅಲ್ಲಾಹನ) ದಾಸರುಗಳಲ್ಲಿ ಕೆಲವರನ್ನು ಅವನ ಅಂಶವನ್ನಾಗಿ (ಸಂತಾನವಾಗಿ) ಮಾಡಿಬಿಟ್ಟರು. ಖಂಡಿತ, ಮನುಷ್ಯನು ಪ್ರತ್ಯಕ್ಷ ಕೃತಘ್ನನಾಗಿರುತ್ತಾನೆ.

Verse 16

أَمِ ٱتَّخَذَ مِمَّا يَخْلُقُ بَنَاتٍ وَأَصْفَىٰكُم بِٱلْبَنِينَ

Transliteration ami ittakhadha mimmā yakhluqu banātin wa-aṣfākum bil-banīna

Kannada ಅದಲ್ಲ, ತಾನು ಸೃಷ್ಟಿಸುವುದರಲ್ಲಿ ಕೆಲವರನ್ನು ಅವನು ಪುತ್ರಿಯರಾಗಿ ಮಾಡಿ ಪುತ್ರರನ್ನು ನಿಮಗೆ ಪ್ರತ್ಯೇಕಗೊಳಿಸಿಕೊಟ್ಟಿರುವನೇ?

Verse 17

وَإِذَا بُشِّرَ أَحَدُهُم بِمَا ضَرَبَ لِلرَّحْمَـٰنِ مَثَلًا ظَلَّ وَجْهُهُۥ مُسْوَدًّا وَهُوَ كَظِيمٌ

Transliteration wa-idhā bushira aḥaduhum bimā ḍaraba lilrraḥmāni mathalan ẓalla wajhuhu mus'waddan wahuwa kaẓīmun

Kannada ಅವರಲ್ಲಿ ಒಬ್ಬನಿಗೆ- ಅವನು ಕರುಣಾನಿಧಿಯಾದ ಅಲ್ಲಾಹನಿಗೆ ಉಪಮೆಗೊಳಿಸಿದ್ದನ್ನು (ಹೆಣ್ಮಕ್ಕಳನ್ನು)- ಸುವಾರ್ತೆಯಾಗಿ ನೀಡಲ್ಪಟ್ಟರೆ ಅವನು ಮಹಾ ದುಃಖಿತನಾಗಿ, ಅವನ ಮುಖ ಕಪ್ಪಾಗಿ ಬಿಡುತ್ತದೆ.

Verse 18

أَوَمَن يُنَشَّؤُا۟ فِى ٱلْحِلْيَةِ وَهُوَ فِى ٱلْخِصَامِ غَيْرُ مُبِينٍ

Transliteration awaman yunasha-u fī l-ḥil'yati wahuwa fī l-khiṣāmi ghayru mubīnin

Kannada ಆಭರಣಾಲಂಕಾರಗಳಿಂದ ಬೆಳೆಸಲ್ಪಡುವವರ ನ್ನೋ (ನೀವು ಅಲ್ಲಾಹನಿಗೆ ಸಂತಾನಗಳಾಗಿ ಮಾಡಿ ಬಿಡುವುದು?) ವಾಸ್ತವದಲ್ಲಿ ಅವರು ವಾಗ್ವಾದದಲ್ಲಿ ತಮ್ಮ ಮನದಿಂಗಿತವನ್ನು ಕೂಡ ವ್ಯಕ್ತಪಡಿಸಲು ಸಾಧ್ಯವಾಗದವರಾಗಿದ್ದಾರೆ .

Verse 19

وَجَعَلُوا۟ ٱلْمَلَـٰٓئِكَةَ ٱلَّذِينَ هُمْ عِبَـٰدُ ٱلرَّحْمَـٰنِ إِنَـٰثًا ۚ أَشَهِدُوا۟ خَلْقَهُمْ ۚ سَتُكْتَبُ شَهَـٰدَتُهُمْ وَيُسْـَٔلُونَ

Transliteration wajaʿalū l-malāikata alladhīna hum ʿibādu l-raḥmāni ināthan ashahidū khalqahum satuk'tabu shahādatuhum wayus'alūna

Kannada ಮಹಾ ಕಾರುಣಿಕನಾದ ಅಲ್ಲಾಹನ ದಾಸರಾಗಿ ರುವ ದೇವಚರರನ್ನು ಅವರು ಸ್ತ್ರೀಯರೆಂದು ವಾದಿಸಿಕೊಂಡರು. ಅವರನ್ನು ಸೃಷ್ಟಿಸುವಾಗ ಇವರು ಅಲ್ಲಿ ಸನ್ನಿಹಿತರಾಗಿದ್ದರೇ? ಅವರ ಸಾಕ್ಷಿ ಯನ್ನು ಬರೆದಿರಿಸಿಕೊಳ್ಳಲಾಗುವುದು ಮತ್ತು ಅವರು ಅದರ ಕುರಿತು ವಿಚಾರಿಸಲ್ಪಡುವರು.

Verse 20

وَقَالُوا۟ لَوْ شَآءَ ٱلرَّحْمَـٰنُ مَا عَبَدْنَـٰهُم ۗ مَّا لَهُم بِذَٰلِكَ مِنْ عِلْمٍ ۖ إِنْ هُمْ إِلَّا يَخْرُصُونَ

Transliteration waqālū law shāa l-raḥmānu mā ʿabadnāhum mā lahum bidhālika min ʿil'min in hum illā yakhruṣūna

Kannada ``ಕಾರುಣ್ಯವಂತನಾದ ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ದೇವಚರರನ್ನು ಆರಾಧಿಸುತ್ತಿರಲಿಲ್ಲ’’ ಎಂದು ಅವರು ಹೇಳುತ್ತಾರೆ . ಅದರ ಕುರಿತು ಅವರಿಗೆ ಯಾವುದೇ ಅರಿವಿಲ್ಲ. ಅವರು ಕೇವಲ ಊಹೆಯಿಂದ ಹೇಳುತ್ತಿದ್ದಾರಷ್ಟೆ.

Verse 21

أَمْ ءَاتَيْنَـٰهُمْ كِتَـٰبًا مِّن قَبْلِهِۦ فَهُم بِهِۦ مُسْتَمْسِكُونَ

Transliteration am ātaynāhum kitāban min qablihi fahum bihi mus'tamsikūna

Kannada ಅದಲ್ಲ, (ಈ ವಿಷಯದಲ್ಲಿ) ಇದಕ್ಕೆ ಮೊದಲು ನಾವು ಯಾವುದಾದರೂ ವೇದಗ್ರಂಥವನ್ನು ಅವರಿಗೆ ನೀಡಿದ್ದು, ಅದನ್ನವರು ಬಲವಾಗಿ ಹಿಡಿದಿದ್ದರೇನು? (ಇಲ್ಲ)

Verse 22

بَلْ قَالُوٓا۟ إِنَّا وَجَدْنَآ ءَابَآءَنَا عَلَىٰٓ أُمَّةٍ وَإِنَّا عَلَىٰٓ ءَاثَـٰرِهِم مُّهْتَدُونَ

Transliteration bal qālū innā wajadnā ābāanā ʿalā ummatin wa-innā ʿalā āthārihim muh'tadūna

Kannada ಆದರೆ, ಅವರು ಹೇಳುತ್ತಾರೆ; ``ನಮ್ಮ ಪೂರ್ವಜರನ್ನು ಒಂದು ಮಾರ್ಗದಲ್ಲಿದ್ದುದಾಗಿ ನಾವು ಕಂಡಿದ್ದೇವೆ. ನಾವು ಅವರ ಹೆಜ್ಜೆ ಗುರುತುಗಳ ಮೇಲೆ ಸನ್ಮಾರ್ಗ ಗಳಿಸಿಕೊಂಡವರಾಗಿದ್ದೇವೆ.’’

Verse 23

وَكَذَٰلِكَ مَآ أَرْسَلْنَا مِن قَبْلِكَ فِى قَرْيَةٍ مِّن نَّذِيرٍ إِلَّا قَالَ مُتْرَفُوهَآ إِنَّا وَجَدْنَآ ءَابَآءَنَا عَلَىٰٓ أُمَّةٍ وَإِنَّا عَلَىٰٓ ءَاثَـٰرِهِم مُّقْتَدُونَ

Transliteration wakadhālika mā arsalnā min qablika fī qaryatin min nadhīrin illā qāla mut'rafūhā innā wajadnā ābāanā ʿalā ummatin wa-innā ʿalā āthārihim muq'tadūna

Kannada (ಪ್ರವಾದಿಯರೇ) ಇದೇ ರೀತಿಯಲ್ಲಿ ತಮಗಿಂತ ಮುಂಚೆ ನಾವು ಪ್ರತಿಯೊಂದು ನಾಡಲ್ಲೂ ಒಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗ ಅಲ್ಲಿ ಸುಖಲೋಲುಪರು (ಈ ರೀತಿ) ಹೇಳದೆ ಬಿಟ್ಟಿಲ್ಲ; ``ನಮ್ಮ ಪೂರ್ವಜರನ್ನು ಒಂದು ಮಾರ್ಗದಲ್ಲಿ ನಾವು ಕಂಡರಿತೆವು. ನಾವು ಕೂಡಾ ಅವರ ಹೆಜ್ಜೆ ಗುರುತುಗಳನ್ನು ಅನುಕರಿಸುತ್ತೇವೆ .

Verse 24

۞ قَـٰلَ أَوَلَوْ جِئْتُكُم بِأَهْدَىٰ مِمَّا وَجَدتُّمْ عَلَيْهِ ءَابَآءَكُمْ ۖ قَالُوٓا۟ إِنَّا بِمَآ أُرْسِلْتُم بِهِۦ كَـٰفِرُونَ

Transliteration qāla awalaw ji'tukum bi-ahdā mimmā wajadttum ʿalayhi ābāakum qālū innā bimā ur'sil'tum bihi kāfirūna

Kannada ಅವರು (ಪ್ರವಾದಿ) ಕೇಳಿದರು; ನೀವು ನಿಮ್ಮ ಪೂರ್ವಿಕರನ್ನು ಕಂಡರಿತ ಮಾರ್ಗಕ್ಕಿಂತ ಸಂಶುದ್ಧ ಮಾರ್ಗವನ್ನು ನಾನು ನಿಮಗೆ ತಂದು ಕೊಟ್ಟರೆ? (ನೀವು ಅದೇ ಮಾರ್ಗದಲ್ಲಿ ಚಲಿ ಸುವಿರಾ?) ಅವರು (ಆ ಜನತೆ) ಹೇಳಿದರು; ``ನೀವು ಯಾವ ಮಾರ್ಗ ದೆಡೆಗೆ ಅಹ್ವಾನಿಸಲು ನಿಯೋಗಿಸಲ್ಪಟ್ಟಿರುವಿರೋ ಅದನ್ನು ನಾವು ನಿಷೇಧಿಸುವವರಾಗಿದ್ದೇವೆ”.

Verse 25

فَٱنتَقَمْنَا مِنْهُمْ ۖ فَٱنظُرْ كَيْفَ كَانَ عَـٰقِبَةُ ٱلْمُكَذِّبِينَ

Transliteration fa-intaqamnā min'hum fa-unẓur kayfa kāna ʿāqibatu l-mukadhibīna

Kannada (ಕೊನೆಗೆ) ಅವರನ್ನು ನಾವು ಶಿಕ್ಷಿಸಿದೆವು. ಆ ಸತ್ಯ ನಿಷೇಧಿಗಳ ಅಂತಿಮ ಸ್ಥಿತಿ ಏನಾಯಿತೆಂಬು ದನ್ನು ಕಂಡುಕೊಳ್ಳಿರಿ.

Verse 26

وَإِذْ قَالَ إِبْرَٰهِيمُ لِأَبِيهِ وَقَوْمِهِۦٓ إِنَّنِى بَرَآءٌ مِّمَّا تَعْبُدُونَ

Transliteration wa-idh qāla ib'rāhīmu li-abīhi waqawmihi innanī barāon mimmā taʿbudūna

Kannada (ಪ್ರವಾದಿ) ಇಬ್‍ರಾಹೀಮರು ತನ್ನ ತಂದೆ ಯೊಂದಿಗೆ ಮತ್ತು ಜನತೆಯೊಂದಿಗೆ ಹೀಗೆ ಹೇಳಿದ ಸಂದರ್ಭ ವನ್ನು ಸ್ಮರಿಸಿರಿ. `ನೀವು ಯಾವುದನ್ನು ಆರಾಧಿಸುತ್ತೀರೋ ಅದರಿಂದ ನಾನು ಮುಕ್ತನಾಗಿದ್ದೇನೆ.

Verse 27

إِلَّا ٱلَّذِى فَطَرَنِى فَإِنَّهُۥ سَيَهْدِينِ

Transliteration illā alladhī faṭaranī fa-innahu sayahdīni

Kannada ತನ್ನನ್ನು ಸೃಷ್ಟಿಸಿದ (ಅಲ್ಲಾಹನ) ಹೊರತು. ಅವನೇ ನನಗೆ ಸನ್ಮಾರ್ಗದರ್ಶನ ಮಾಡುವನು.

Verse 28

وَجَعَلَهَا كَلِمَةًۢ بَاقِيَةً فِى عَقِبِهِۦ لَعَلَّهُمْ يَرْجِعُونَ

Transliteration wajaʿalahā kalimatan bāqiyatan fī ʿaqibihi laʿallahum yarjiʿūna

Kannada ಅವರು (ಇಬ್‍ರಾಹೀಮ್) ಅದನ್ನು (ಆ ಘೋಷಣೆಯನ್ನು) ತನ್ನ ಸಂತತಿಗಳಲ್ಲಿ ಬಿಟ್ಟು ಹೋದ ಒಂದು ವಚನವನ್ನಾಗಿ ಮಾಡಿದರು. ಅವರು (ಅನುಯಾಯಿಗಳು ಸತ್ಯದ ಕಡೆಗೆ) ಮರಳು ವಂತಾಗಲು.

Verse 29

بَلْ مَتَّعْتُ هَـٰٓؤُلَآءِ وَءَابَآءَهُمْ حَتَّىٰ جَآءَهُمُ ٱلْحَقُّ وَرَسُولٌ مُّبِينٌ

Transliteration bal mattaʿtu hāulāi waābāahum ḥattā jāahumu l-ḥaqu warasūlun mubīnun

Kannada ಇಷ್ಟಾಗಿಯೂ ಇವರಿಗೆ ಮತ್ತು ಇವರ ಪೂರ್ವ ಜರಿಗೆ ಸತ್ಯ (ಖುರ್‍ಆನ್) ಮತ್ತು ಸುವ್ಯಕ್ತ ವಿವರಣೆ ನೀಡುವ ಪ್ರವಾದಿ ಆಗಮಿಸುವ ತನಕ ನಾನು ಜೀವನ ಸಾಧನ ಕೊಡುತ್ತಲೇ ಇದ್ದೆನು.

Verse 30

وَلَمَّا جَآءَهُمُ ٱلْحَقُّ قَالُوا۟ هَـٰذَا سِحْرٌ وَإِنَّا بِهِۦ كَـٰفِرُونَ

Transliteration walammā jāahumu l-ḥaqu qālū hādhā siḥ'run wa-innā bihi kāfirūna

Kannada ಹಾಗೆ, ಅವರ ಬಳಿಗೆ ಸತ್ಯವು ಬಂದು ತಲುಪಿದಾಗ ``ಇದು ಮಾರಣ (ಸಿಹ್‍ರ್) ಆಗಿರುತ್ತದೆ. ನಾವಿದನ್ನು ನಿಷೇಧಿಸುತ್ತೇವೆ” ಎಂದವರು ಹೇಳಿ ಬಿಟ್ಟರು.

Verse 31

وَقَالُوا۟ لَوْلَا نُزِّلَ هَـٰذَا ٱلْقُرْءَانُ عَلَىٰ رَجُلٍ مِّنَ ٱلْقَرْيَتَيْنِ عَظِيمٍ

Transliteration waqālū lawlā nuzzila hādhā l-qur'ānu ʿalā rajulin mina l-qaryatayni ʿaẓīmin

Kannada ಅವರು ಕೇಳಿದರು; ``ಈ ಖುರ್‍ಆನನ್ನು ಈ ಎರಡು ನಾಡುಗಳಲ್ಲಿರುವ ಮಹಾನ್ ವ್ಯಕ್ತಿಯೊ ಬ್ಬರ ಮೇಲೆ ಅವತೀರ್ಣಗೊಳಿಸಲ್ಪಟ್ಟಿಲ್ಲವೇಕೆ?”

Verse 32

أَهُمْ يَقْسِمُونَ رَحْمَتَ رَبِّكَ ۚ نَحْنُ قَسَمْنَا بَيْنَهُم مَّعِيشَتَهُمْ فِى ٱلْحَيَوٰةِ ٱلدُّنْيَا ۚ وَرَفَعْنَا بَعْضَهُمْ فَوْقَ بَعْضٍ دَرَجَـٰتٍ لِّيَتَّخِذَ بَعْضُهُم بَعْضًا سُخْرِيًّا ۗ وَرَحْمَتُ رَبِّكَ خَيْرٌ مِّمَّا يَجْمَعُونَ

Transliteration ahum yaqsimūna raḥmata rabbika naḥnu qasamnā baynahum maʿīshatahum fī l-ḥayati l-dun'yā warafaʿnā baʿḍahum fawqa baʿḍin darajātin liyattakhidha baʿḍuhum baʿḍan sukh'riyyan waraḥmatu rabbika khayrun mimmā yajmaʿūna

Kannada (ಪ್ರವಾದಿಯರೇ) ತಮ್ಮ ಪ್ರಭುವಿನ ಕೃಪೆಯನ್ನು ಹಂಚಿಕೊಡುವವರು ಅವರಾಗಿರುವರೇ? ಐಹಿಕ ಜೀವನದಲ್ಲಿ ಅವರ ಉಪಜೀವನ ಸಾಧನಗಳನ್ನು ಅವರ ಮಧ್ಯೆ ನಾವು ಭಾಗಿಸಿಕೊಟ್ಟಿದ್ದೇವೆ. ಅವರಲ್ಲಿ ಕೆಲವರು ಇನ್ನು ಕೆಲವರನ್ನು ಅಧೀನದಲ್ಲಿಟ್ಟು ಕೊಳ್ಳಲಿಕ್ಕಾಗಿ ಅವರ ಪೈಕಿ ಕೆಲವರನ್ನು ಇನ್ನು ಕೆಲವರಿಗಿಂತ ನಾವು ಮೇಲೇರಿಸಿರುವೆವು. ತಮ್ಮ ಪ್ರಭುವಿನ ಕೃಪೆಯು ಅವರು ಸಂಗ್ರಹಿಸುತ್ತಿರುವ ಸಂಪತ್ತಿಗಿಂತ ಅದೆಷ್ಟೋ ಉತ್ತಮವಾಗಿದೆ.

Verse 33

وَلَوْلَآ أَن يَكُونَ ٱلنَّاسُ أُمَّةً وَٰحِدَةً لَّجَعَلْنَا لِمَن يَكْفُرُ بِٱلرَّحْمَـٰنِ لِبُيُوتِهِمْ سُقُفًا مِّن فِضَّةٍ وَمَعَارِجَ عَلَيْهَا يَظْهَرُونَ

Transliteration walawlā an yakūna l-nāsu ummatan wāḥidatan lajaʿalnā liman yakfuru bil-raḥmāni libuyūtihim suqufan min fiḍḍatin wamaʿārija ʿalayhā yaẓharūna

Kannada ಮನುಷ್ಯರು ಸತ್ಯನಿಷೇಧದಲ್ಲಿ ಏಕ ಸಮುದಾ ಯವಾಗುವ ಸಂಭವ ಇಲ್ಲದಿರುತ್ತಿದ್ದರೆ ಕಾರುಣ್ಯ ವಂತನಾದ ಅಲ್ಲಾಹನನ್ನು ನಿಷೇಧಿಸುವವರ ಮನೆಗಳಿಗೆ ಬೆಳ್ಳಿಯ ಛಾವಣಿಗಳನ್ನೂ ಅವರು ತಮ್ಮ ಮಾಳಿಗೆಗೇರಲು (ಬೆಳ್ಳಿಯ) ಮೆಟ್ಟಲು ಗಳನ್ನೂ

Verse 34

وَلِبُيُوتِهِمْ أَبْوَٰبًا وَسُرُرًا عَلَيْهَا يَتَّكِـُٔونَ

Transliteration walibuyūtihim abwāban wasururan ʿalayhā yattakiūna

Kannada

Verse 35

وَزُخْرُفًا ۚ وَإِن كُلُّ ذَٰلِكَ لَمَّا مَتَـٰعُ ٱلْحَيَوٰةِ ٱلدُّنْيَا ۚ وَٱلْـَٔاخِرَةُ عِندَ رَبِّكَ لِلْمُتَّقِينَ

Transliteration wazukh'rufan wa-in kullu dhālika lammā matāʿu l-ḥayati l-dun'yā wal-ākhiratu ʿinda rabbika lil'muttaqīna

Kannada ಅವರ ಮನೆಗಳಿಗೆ (ಬೆಳ್ಳಿಯ) ಬಾಗಿಲು ಗಳನ್ನೂ ಅವರಿಗೆ ಒರಗಿ ಕುಳಿತುಕೊಳ್ಳಲು (ಬೆಳ್ಳಿಯ) ಮಂಚಗಳನ್ನೂ ಚಿನ್ನದ ಅಲಂಕಾರ ವನ್ನೂ ನಾವು ಮಾಡಿಕೊಡುತ್ತಿದ್ದೆವು. (ವಾಸ್ತವ ದಲ್ಲಿ) ಅವೆಲ್ಲವೂ ಐಹಿಕ ಜೀವನದ ಸರಕು (ದೊಡ್ಡಸ್ತಿಕೆ)ಗಳಾಗಿವೆ . ಪರಲೋಕವು ತಮ್ಮ ಪ್ರಭುವಿನ ಬಳಿ ಭಯ-ಭಕ್ತಿಯುಳ್ಳವರಿಗೆ ಮಾತ್ರ ಇರುವುದಾಗಿದೆ.

Verse 36

وَمَن يَعْشُ عَن ذِكْرِ ٱلرَّحْمَـٰنِ نُقَيِّضْ لَهُۥ شَيْطَـٰنًا فَهُوَ لَهُۥ قَرِينٌ

Transliteration waman yaʿshu ʿan dhik'ri l-raḥmāni nuqayyiḍ lahu shayṭānan fahuwa lahu qarīnun

Kannada ಕಾರುಣ್ಯವಂತನಾದ ಅಲ್ಲಾಹನ ಸ್ಮರಣೆಯಿಂದ ಯಾವನಾದರೂ ಹಿಂದೆ ಸರಿದರೆ ನಾವು ಅವನಿಗೆ ಒಂದು ಪಿಶಾಚಿಯನ್ನು ಏರ್ಪಡಿಸಿ ಕೊಡುವೆವು. ಆಗ ಆ ಪಿಶಾಚಿ ಅವನ ಆಪ್ತ ಸಂಗಾತಿಯಾಗಿ ಬಿಡುವನು.

Verse 37

وَإِنَّهُمْ لَيَصُدُّونَهُمْ عَنِ ٱلسَّبِيلِ وَيَحْسَبُونَ أَنَّهُم مُّهْتَدُونَ

Transliteration wa-innahum layaṣuddūnahum ʿani l-sabīli wayaḥsabūna annahum muh'tadūna

Kannada ಆ ಪಿಶಾಚಿಗಳು ಅವರನ್ನು ಸನ್ಮಾರ್ಗದಿಂದ ತಡೆಯುತ್ತಾರೆ. ಅವರಾದರೆ, ನಾವು ಸನ್ಮಾರ್ಗ ಪ್ರಾಪ್ತಿಸಿಕೊಂಡಿದ್ದೇವೆಂದು ತಮ್ಮಷ್ಟಕ್ಕೆ ತಿಳಿದು ಕೊಂಡಿರುತ್ತಾರೆ.

Verse 38

حَتَّىٰٓ إِذَا جَآءَنَا قَالَ يَـٰلَيْتَ بَيْنِى وَبَيْنَكَ بُعْدَ ٱلْمَشْرِقَيْنِ فَبِئْسَ ٱلْقَرِينُ

Transliteration ḥattā idhā jāanā qāla yālayta baynī wabaynaka buʿ'da l-mashriqayni fabi'sa l-qarīnu

Kannada ಕೊನೆಗೆ, ನಮ್ಮ ಬಳಿ ಬಂದಾಗ ಅವರು (ತಮ್ಮ ಸಂಗಾತಿಯೊಂದಿಗೆ) ಹೇಳುತ್ತಾರೆ; ``ಅಯ್ಯೋ, ನನ್ನ ಮತ್ತು ನಿನ್ನ ಮಧ್ಯೆ ಪೂರ್ವ ಪಶ್ಚಿಮಗಳ ಅಂತರವಿರುತ್ತಿದ್ದರೆ ಬಹಳ ಉತ್ತಮವಿತ್ತು’’. ಹಾಗಾದರೆ ಆ ಸಂಗಾತಿ ಎಷ್ಟು ನಿಕೃಷ್ಟ !

Verse 39

وَلَن يَنفَعَكُمُ ٱلْيَوْمَ إِذ ظَّلَمْتُمْ أَنَّكُمْ فِى ٱلْعَذَابِ مُشْتَرِكُونَ

Transliteration walan yanfaʿakumu l-yawma idh ẓalamtum annakum fī l-ʿadhābi mush'tarikūna

Kannada ಇಂದು ಅದು (ನಿಮ್ಮ ಆಗ್ರಹ ಪ್ರಕಟನೆ) ನೀವೆಸಗಿದ ಅಕ್ರಮವು ಬಹಿರಂಗಗೊಂಡ ಸಂದರ್ಭದಲ್ಲಿ ನಿಮಗೆ ಫಲಕಾರಿಯಾಗದು. ನೀವು ಶಿಕ್ಷೆಯಲ್ಲಿ ಎರಡು ವಿಭಾಗದವರೂ ಪಾಲುದಾರರೇ ಆಗಿರುವಿರಿ.

Verse 40

أَفَأَنتَ تُسْمِعُ ٱلصُّمَّ أَوْ تَهْدِى ٱلْعُمْىَ وَمَن كَانَ فِى ضَلَـٰلٍ مُّبِينٍ

Transliteration afa-anta tus'miʿu l-ṣuma aw tahdī l-ʿum'ya waman kāna fī ḍalālin mubīnin

Kannada (ಪ್ರವಾದಿಯರೇ) ತಾವು ಕಿವುಡರಿಗೆ ಕೇಳಿಸ ಬಲ್ಲಿರಾ? ಅಥವಾ ಅಂಧರನ್ನು ಮತ್ತು ಸುವ್ಯಕ್ತ ಪಥಭೃಷ್ಟತೆಯಲ್ಲಿ ಬಿದ್ದಿರುವವರನ್ನು ಸನ್ಮಾರ್ಗದಲ್ಲಿ ಮಾಡುವಿರಾ?

Verse 41

فَإِمَّا نَذْهَبَنَّ بِكَ فَإِنَّا مِنْهُم مُّنتَقِمُونَ

Transliteration fa-immā nadhhabanna bika fa-innā min'hum muntaqimūna

Kannada ಇನ್ನು (ಇಲ್ಲಿಂದ ವಫಾತ್ ಮುಖಾಂತರ) ತಮ್ಮ ನ್ನು ನಾವು ಎತ್ತಿಕೊಂಡು ಹೋದರೂ ಅವರನ್ನು ನಾವು ಶಿಕ್ಷಿಸಿಯೇ ಬಿಡುವೆವು.

Verse 42

أَوْ نُرِيَنَّكَ ٱلَّذِى وَعَدْنَـٰهُمْ فَإِنَّا عَلَيْهِم مُّقْتَدِرُونَ

Transliteration aw nuriyannaka alladhī waʿadnāhum fa-innā ʿalayhim muq'tadirūna

Kannada ಅಲ್ಲದಿದ್ದಲ್ಲಿ, ಅವರಿಗೆ ನಾವು ವಾಗ್ದಾನ ನೀಡಿರುವ ಶಿಕ್ಷೆಯನ್ನು ತಮಗೆ ಕಾಣಿಸಿಕೊಡಲಾಗುವುದು. ಅವರ ಮೇಲೆ ನಾವು ಸಂಪೂರ್ಣ ನಿಯಂತ್ರಣವುಳ್ಳವ (ಶಕ್ತ)ರೇ ಆಗಿದ್ದೇವೆ.

Verse 43

فَٱسْتَمْسِكْ بِٱلَّذِىٓ أُوحِىَ إِلَيْكَ ۖ إِنَّكَ عَلَىٰ صِرَٰطٍ مُّسْتَقِيمٍ

Transliteration fa-is'tamsik bi-alladhī ūḥiya ilayka innaka ʿalā ṣirāṭin mus'taqīmin

Kannada ಹಾಗಾಗಿ, ತಮಗೆ ನೀಡಲ್ಪಟ್ಟ ಸಂದೇಶವನ್ನು ತಾವು ಬಲವಾಗಿ ಹಿಡಿದುಕೊಳ್ಳಿರಿ. ಖಂಡಿತವಾಗಿಯೂ ತಾವು ನೇರ ಮಾರ್ಗದಲ್ಲಿದ್ದೀರಿ.

Verse 44

وَإِنَّهُۥ لَذِكْرٌ لَّكَ وَلِقَوْمِكَ ۖ وَسَوْفَ تُسْـَٔلُونَ

Transliteration wa-innahu ladhik'run laka waliqawmika wasawfa tus'alūna

Kannada ಇದು (ಖುರ್‍ಆನ್) ತಮಗೂ ತಮ್ಮ ಜನತೆಗೂ ಒಂದು ಉದ್ಬೋಧನೆಯಾಗಿದೆ. ಕೊನೆಯಲ್ಲಿ ನೀವೆಲ್ಲರೂ ಪ್ರಶ್ನಿಸಲ್ಪಡುವಿರಿ.

Verse 45

وَسْـَٔلْ مَنْ أَرْسَلْنَا مِن قَبْلِكَ مِن رُّسُلِنَآ أَجَعَلْنَا مِن دُونِ ٱلرَّحْمَـٰنِ ءَالِهَةً يُعْبَدُونَ

Transliteration wasal man arsalnā min qablika min rusulinā ajaʿalnā min dūni l-raḥmāni ālihatan yuʿ'badūna

Kannada ನಾವು ತಮಗಿಂತ ಮುಂಚೆ ಕಳುಹಿಸಿದ್ದ ನಮ್ಮ ಸಂದೇಶವಾಹಕರುಗಳೊಂದಿಗೆ ತಾವು ಕೇಳಿ ನೋಡಿರಿ. “ಕಾರುಣ್ಯವಂತನಾದ ಅಲ್ಲಾ ಹನ ಹೊರತು ಆರಾಧಿಸಲ್ಪಡುವ ಯಾವುದೇ ದೇವರುಗಳನ್ನು ನಾವು ನಿಶ್ಚಯಿಸಿದ್ದೇವೆಯೇ?”

Verse 46

وَلَقَدْ أَرْسَلْنَا مُوسَىٰ بِـَٔايَـٰتِنَآ إِلَىٰ فِرْعَوْنَ وَمَلَإِي۟هِۦ فَقَالَ إِنِّى رَسُولُ رَبِّ ٱلْعَـٰلَمِينَ

Transliteration walaqad arsalnā mūsā biāyātinā ilā fir'ʿawna wamala-ihi faqāla innī rasūlu rabbi l-ʿālamīna

Kannada ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫಿರ್‍ಔನ್ ಮತ್ತು ಅವನ ಆಸ್ಥಾನಿಕರ ಬಳಿಗೆ ಕಳುಹಿಸಿದೆವು. ಅವರು (ಹೋಗಿ) ``ನಾನು ಸರ್ವಲೋಕ ಪರಿಪಾಲಕನಾದ ಪ್ರಭು ವಿನ ಸಂದೇಶವಾಹಕನಾಗಿದ್ದೇನೆ’’ ಎಂದು ಹೇಳಿದರು.

Verse 47

فَلَمَّا جَآءَهُم بِـَٔايَـٰتِنَآ إِذَا هُم مِّنْهَا يَضْحَكُونَ

Transliteration falammā jāahum biāyātinā idhā hum min'hā yaḍḥakūna

Kannada ಹಾಗೆಯೇ ಅವರು ನಮ್ಮ ದೃಷ್ಟಾಂತಗಳೊಂದಿಗೆ ಅವರ ಬಳಿ ಹೋದಾಗ ಅವರು ಅದರ ಕುರಿತು (ಪರಿಹಾಸದಿಂದ) ನಕ್ಕುಬಿಟ್ಟರು.

Verse 48

وَمَا نُرِيهِم مِّنْ ءَايَةٍ إِلَّا هِىَ أَكْبَرُ مِنْ أُخْتِهَا ۖ وَأَخَذْنَـٰهُم بِٱلْعَذَابِ لَعَلَّهُمْ يَرْجِعُونَ

Transliteration wamā nurīhim min āyatin illā hiya akbaru min ukh'tihā wa-akhadhnāhum bil-ʿadhābi laʿallahum yarjiʿūna

Kannada ಅವರಿಗೆ ನಾವು ಕಾಣಿಸಿಕೊಡುತ್ತಿದ್ದ ಪ್ರತಿಯೊಂದು ದೃಷ್ಠಾಂತವು ಒಂದು ಮತ್ತೊಂದಕ್ಕಿಂತ ಮಿಗಿಲಾದುದಾಗಿತ್ತು. (ಹಲವು ತರದ) ಶಿಕ್ಷೆಗಳಿಂದ ಅವರನ್ನು ನಾವು ಬಂಧಿಸಿದೆವು. ಅವರು (ಸತ್ಯದ ಕಡೆ) ಹಿಂತಿರುಗುವಂತಾಗಲಿಕ್ಕಾಗಿ.

Verse 49

وَقَالُوا۟ يَـٰٓأَيُّهَ ٱلسَّاحِرُ ٱدْعُ لَنَا رَبَّكَ بِمَا عَهِدَ عِندَكَ إِنَّنَا لَمُهْتَدُونَ

Transliteration waqālū yāayyuha l-sāḥiru ud'ʿu lanā rabbaka bimā ʿahida ʿindaka innanā lamuh'tadūna

Kannada ಅವರು ಹೇಳಿದರು; “ಓ ಮಾಟಗಾರ! ನಿನ್ನ ಪ್ರಭು ನಿನಗೆ ತಿಳಿಸಿಕೊಟ್ಟ ಆಧಾರದಲ್ಲಿ ನಿನ್ನ ಪ್ರಭುವಿನಲ್ಲಿ ನಮಗಾಗಿ ಪ್ರಾರ್ಥಿಸು. ನಾವು ಖಂಡಿತ ಸನ್ಮಾರ್ಗಕ್ಕೆ ಬರುತ್ತೇವೆ”.

Verse 50

فَلَمَّا كَشَفْنَا عَنْهُمُ ٱلْعَذَابَ إِذَا هُمْ يَنكُثُونَ

Transliteration falammā kashafnā ʿanhumu l-ʿadhāba idhā hum yankuthūna

Kannada ಹಾಗೆಯೇ ನಾವು ಅವರ ಮೇಲಿನ ಶಿಕ್ಷೆಯನ್ನು ತೊಲಗಿಸಿದಾಗ ಅವರು ಕರಾರು ಮುರಿದು ಬಿಡುತ್ತಿದ್ದರು.

Verse 51

وَنَادَىٰ فِرْعَوْنُ فِى قَوْمِهِۦ قَالَ يَـٰقَوْمِ أَلَيْسَ لِى مُلْكُ مِصْرَ وَهَـٰذِهِ ٱلْأَنْهَـٰرُ تَجْرِى مِن تَحْتِىٓ ۖ أَفَلَا تُبْصِرُونَ

Transliteration wanādā fir'ʿawnu fī qawmihi qāla yāqawmi alaysa lī mul'ku miṣ'ra wahādhihi l-anhāru tajrī min taḥtī afalā tub'ṣirūna

Kannada ಫಿರ್‍ಔನ್ (ಒಮ್ಮೆ) ತನ್ನ ಜನತೆಯನ್ನು ಕರೆದು ಕೇಳಿದನು; ``ನನ್ನ ಜನರೇ, ಈಜಿಪ್ತಿನ ಆಧಿಪತ್ಯ ನನ್ನದಲ್ಲವೇ? ಈ ನದಿಗಳು ಹರಿಯುವುದು ನನ್ನ ಅಧೀನದಲ್ಲಲ್ಲವೇ? ನೀವು ಇವುಗಳನ್ನು ಕಂಡರಿತಿಲ್ಲವೇ?

Verse 52

أَمْ أَنَا۠ خَيْرٌ مِّنْ هَـٰذَا ٱلَّذِى هُوَ مَهِينٌ وَلَا يَكَادُ يُبِينُ

Transliteration am anā khayrun min hādhā alladhī huwa mahīnun walā yakādu yubīnu

Kannada ಅಥವಾ ಅಧಮನೂ ಸ್ಪಷ್ಟವಾಗಿ ಮಾತನಾಡಲಾಗದವನೂ ಆದ ಇವನಿಗಿಂತ (ಮೂಸಾ ಗಿಂತ) ಉತ್ತಮನು ನಾನೇ ಅಲ್ಲವೇ?

Verse 53

فَلَوْلَآ أُلْقِىَ عَلَيْهِ أَسْوِرَةٌ مِّن ذَهَبٍ أَوْ جَآءَ مَعَهُ ٱلْمَلَـٰٓئِكَةُ مُقْتَرِنِينَ

Transliteration falawlā ul'qiya ʿalayhi aswiratun min dhahabin aw jāa maʿahu l-malāikatu muq'tarinīna

Kannada ಇನ್ನು (ಇವನು ಹೇಳುವುದು ಸತ್ಯವೆಂದಾದರೆ) ಇವನಿಗೆ ಚಿನ್ನದ ಕಂಕಣಗಳೇಕೆ ಧರಿಸಲ್ಪಟ್ಟಿಲ್ಲ? ಅಥವಾ ಇವನೊಂದಿಗೆ ದೇವಚರರ ತುಕಡಿ ಗಳೇಕೆ ಬಂದಿಲ್ಲ?”

Verse 54

فَٱسْتَخَفَّ قَوْمَهُۥ فَأَطَاعُوهُ ۚ إِنَّهُمْ كَانُوا۟ قَوْمًا فَـٰسِقِينَ

Transliteration fa-is'takhaffa qawmahu fa-aṭāʿūhu innahum kānū qawman fāsiqīna

Kannada ಹಾಗೆ, ಅವನು ತನ್ನ ಜನತೆಯನ್ನು ಮೂಢರ ನ್ನಾಗಿ ಮಾಡಿದನು ಮತ್ತು ಅವರು ಅವನನ್ನು ಅನುಸರಿಸಿದರು. ನಿಶ್ಚಯವಾಗಿಯೂ ಅವರು ಧಿಕ್ಕಾರಿಗಳೇ ಆಗಿದ್ದರು.

Verse 55

فَلَمَّآ ءَاسَفُونَا ٱنتَقَمْنَا مِنْهُمْ فَأَغْرَقْنَـٰهُمْ أَجْمَعِينَ

Transliteration falammā āsafūnā intaqamnā min'hum fa-aghraqnāhum ajmaʿīna

Kannada (ಈ ರೀತಿ) ಅವರು ನಮ್ಮನ್ನು ರೇಗಿಸಿದಾಗ ನಾವು ಅವರನ್ನು ಶಿಕ್ಷಿಸಿದೆವು ಮತ್ತು ಅವರೆಲ್ಲರನ್ನೂ ನಾವು ಮುಳುಗಿಸಿ ಕೊಂದೆವು.

Verse 56

فَجَعَلْنَـٰهُمْ سَلَفًا وَمَثَلًا لِّلْـَٔاخِرِينَ

Transliteration fajaʿalnāhum salafan wamathalan lil'ākhirīna

Kannada ಹಾಗೆಯೇ, ಅವರನ್ನು ನಾವು ಅನಂತರದವರಿಗೆ ಒಂದು ಮಾದರಿಯೂ, ಉಪಮೆಯೂ ಆಗಿ ಮಾಡಿದೆವು.

Verse 57

۞ وَلَمَّا ضُرِبَ ٱبْنُ مَرْيَمَ مَثَلًا إِذَا قَوْمُكَ مِنْهُ يَصِدُّونَ

Transliteration walammā ḍuriba ub'nu maryama mathalan idhā qawmuka min'hu yaṣiddūna

Kannada (ಪ್ರವಾದಿಯರೇ) ಮರ್ಯಮರ ಪುತ್ರ ಈಸಾರನ್ನು ಒಂದು ಉಪಮೆಯಾಗಿ ಮಾಡಲ್ಪ(ಕಾಣಿ ಸಲ್ಪ)ಟ್ಟಾಗ ತಮ್ಮ ಜನತೆ ಅದರ ಕುರಿತು ಗೋಳಿಟ್ಟರು.

Verse 58

وَقَالُوٓا۟ ءَأَـٰلِهَتُنَا خَيْرٌ أَمْ هُوَ ۚ مَا ضَرَبُوهُ لَكَ إِلَّا جَدَلًۢا ۚ بَلْ هُمْ قَوْمٌ خَصِمُونَ

Transliteration waqālū aālihatunā khayrun am huwa mā ḍarabūhu laka illā jadalan bal hum qawmun khaṣimūna

Kannada ‘ನಮ್ಮ ದೇವರುಗಳೋ ಉತ್ತಮ? ಅಥವಾ ಅವರೋ?’ ಎಂದು ಅವರು ಕೇಳುವರು. ಒಂದು ತರ್ಕವಾಗಿ ಮಾತ್ರವೇ ಅವರದನ್ನು ತಮ್ಮ ಮುಂದಿಟ್ಟಿರುವುದು. ಮಾತ್ರವಲ್ಲ ಅವರು ಕಚ್ಚಾಡುವ ಜನತೆಯೇ ಆಗಿರುತ್ತಾರೆ.

Verse 59

إِنْ هُوَ إِلَّا عَبْدٌ أَنْعَمْنَا عَلَيْهِ وَجَعَلْنَـٰهُ مَثَلًا لِّبَنِىٓ إِسْرَٰٓءِيلَ

Transliteration in huwa illā ʿabdun anʿamnā ʿalayhi wajaʿalnāhu mathalan libanī is'rāīla

Kannada ಅವರು (ಮರ್ಯಮರ ಪುತ್ರ) ನಾವು ಅನುಗ್ರಹಿಸಿದ ಓರ್ವ ದಾಸನೇ ಹೊರತು ಬೇರೇನೂ ಆಗಿರಲಿಲ್ಲ. ಇಸ್ರಾಈಲ್ ಸಂತತಿಗಳಿಗೆ ಅವರನ್ನು ನಾವು (ಅದ್ಭುತ ದೃಷ್ಟಾಂತಕ್ಕೆ) ಒಂದು ಉಪ ಮೆಯಾಗಿ ಮಾಡಿಬಿಟ್ಟೆವು.

Verse 60

وَلَوْ نَشَآءُ لَجَعَلْنَا مِنكُم مَّلَـٰٓئِكَةً فِى ٱلْأَرْضِ يَخْلُفُونَ

Transliteration walaw nashāu lajaʿalnā minkum malāikatan fī l-arḍi yakhlufūna

Kannada ನಾವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿ ನಿಮ್ಮ ಉತ್ತರಾಧಿಕಾರಿಯಾಗಲು ನಿಮ್ಮಿಂದಲೇ ನಾವು ದೇವಚರರನ್ನು ಸೃಷ್ಟಿಸಿ ಬಿಡುತ್ತಿದ್ದೆವು.

Verse 61

وَإِنَّهُۥ لَعِلْمٌ لِّلسَّاعَةِ فَلَا تَمْتَرُنَّ بِهَا وَٱتَّبِعُونِ ۚ هَـٰذَا صِرَٰطٌ مُّسْتَقِيمٌ

Transliteration wa-innahu laʿil'mun lilssāʿati falā tamtarunna bihā wa-ittabiʿūni hādhā ṣirāṭun mus'taqīmun

Kannada ಅವರು (ಮರ್ಯಮರ ಪುತ್ರ) ಲೋಕಾಂತ್ಯದ ಒಂದು ಅರಿವು (ಕುರುಹು) ಆಗಿದ್ದಾರೆ. ಆದು ದರಿಂದ ನೀವು ಅದರ ಕುರಿತು ಸ್ವಲ್ಪವೂ ಸಂಶಯ ಪಡಬೇಡಿರಿ. ನನ್ನನ್ನು (ನನ್ನ ಮಾರ್ಗವನ್ನು) ಅನುಸರಿಸಿರಿ. ಇದು ನೇರ ಮಾರ್ಗವಾಗಿದೆ.

Verse 62

وَلَا يَصُدَّنَّكُمُ ٱلشَّيْطَـٰنُ ۖ إِنَّهُۥ لَكُمْ عَدُوٌّ مُّبِينٌ

Transliteration walā yaṣuddannakumu l-shayṭānu innahu lakum ʿaduwwun mubīnun

Kannada ಪಿಶಾಚಿ ನಿಮ್ಮನ್ನು (ಈ ಮಾರ್ಗದಿಂದ) ತಡೆಯದಿರಲಿ. ಖಂಡಿತ, ಅವನು ನಿಮಗೆ ಪ್ರತ್ಯಕ್ಷ ಶತ್ರುವಾಗಿದ್ದಾನೆ.

Verse 63

وَلَمَّا جَآءَ عِيسَىٰ بِٱلْبَيِّنَـٰتِ قَالَ قَدْ جِئْتُكُم بِٱلْحِكْمَةِ وَلِأُبَيِّنَ لَكُم بَعْضَ ٱلَّذِى تَخْتَلِفُونَ فِيهِ ۖ فَٱتَّقُوا۟ ٱللَّهَ وَأَطِيعُونِ

Transliteration walammā jāa ʿīsā bil-bayināti qāla qad ji'tukum bil-ḥik'mati wali-ubayyina lakum baʿḍa alladhī takhtalifūna fīhi fa-ittaqū l-laha wa-aṭīʿūni

Kannada ಸುವ್ಯಕ್ತ ದೃಷ್ಟಾಂತಗಳೊಂದಿಗೆ ಈಸಾ (ನಬಿ) ಬಂದಾಗ ಹೇಳಿದ್ದರು; ``ನಾನು ನಿಮಗೆ ಜ್ಞಾನ ವನ್ನು (ಹಿಕ್ಮತ್) ತಂದಿರುವೆನು. ಮತ್ತು ನೀವು ಪರಸ್ಪರ ಭಿನ್ನಾಭಿಪ್ರಾಯದಲ್ಲಿರುವ ಕೆಲವು ವಿಚಾರಗಳನ್ನು ನಿಮಗೆ ವಿವರಿಸಿಕೊಡಲು ಬಂದಿರುವೆನು. ಆದುದರಿಂದ ನೀವು ಅಲ್ಲಾಹ ನನ್ನು ಭಯಪಟ್ಟು ನನ್ನನ್ನು ಅನುಸರಿಸಿರಿ.

Verse 64

إِنَّ ٱللَّهَ هُوَ رَبِّى وَرَبُّكُمْ فَٱعْبُدُوهُ ۚ هَـٰذَا صِرَٰطٌ مُّسْتَقِيمٌ

Transliteration inna l-laha huwa rabbī warabbukum fa-uʿ'budūhu hādhā ṣirāṭun mus'taqīmun

Kannada ನನ್ನ ಮತ್ತು ನಿಮ್ಮ ಪ್ರಭು ಅಲ್ಲಾಹುವಾಗಿದ್ದಾನೆ. ಆದುದರಿಂದ ನೀವು ಅವನನ್ನು ಮಾತ್ರ ಆರಾಧಿಸಿರಿ, ಅದುವೇ ನೇರ ಮಾರ್ಗ” .

Verse 65

فَٱخْتَلَفَ ٱلْأَحْزَابُ مِنۢ بَيْنِهِمْ ۖ فَوَيْلٌ لِّلَّذِينَ ظَلَمُوا۟ مِنْ عَذَابِ يَوْمٍ أَلِيمٍ

Transliteration fa-ikh'talafa l-aḥzābu min baynihim fawaylun lilladhīna ẓalamū min ʿadhābi yawmin alīmin

Kannada ಆದರೆ ಅವರ ಮಧ್ಯೆ ಪಂಗಡಗಳು ಪರಸ್ಪರ ಭಿನ್ನ ಭೇದಗೊಂಡವು . ಆದುದರಿಂದ (ಆ) ಅಕ್ರಮಿಗಳಿಗೆ ಒಂದು ದಿನದ ವೇದನಾಜನಕವಾದ ಶಿಕ್ಷೆ ಮೂಲಕ ಮಹಾ ನಾಶವಿದೆ.

Verse 66

هَلْ يَنظُرُونَ إِلَّا ٱلسَّاعَةَ أَن تَأْتِيَهُم بَغْتَةً وَهُمْ لَا يَشْعُرُونَ

Transliteration hal yanẓurūna illā l-sāʿata an tatiyahum baghtatan wahum lā yashʿurūna

Kannada ಸುದ್ದಿಯೇ ಇಲ್ಲದಂತೆ ಅನಿರೀಕ್ಷಿತವಾಗಿ ಇವರ ಮೇಲೆ ಆ ಪುನರುತ್ಥಾನ ದಿನವು ಬಂದೆರಗುವುದರ ಹೊರತು ಬೇರೇನನ್ನಾದರೂ ಅವರು ಕಾಯುತ್ತಿರುವರೇ?

Verse 67

ٱلْأَخِلَّآءُ يَوْمَئِذٍۭ بَعْضُهُمْ لِبَعْضٍ عَدُوٌّ إِلَّا ٱلْمُتَّقِينَ

Transliteration al-akhilāu yawma-idhin baʿḍuhum libaʿḍin ʿaduwwun illā l-mutaqīna

Kannada ಅಂದು ಭಯಭಕ್ತಿಯುಳ್ಳ ಧರ್ಮನಿಷ್ಠರ ಹೊರತು ಇತರ ಮಿತ್ರರೆಲ್ಲರೂ ಪರಸ್ಪರ ಶತ್ರುಗಳಾಗಿ ಬಿಡುವರು.

Verse 68

يَـٰعِبَادِ لَا خَوْفٌ عَلَيْكُمُ ٱلْيَوْمَ وَلَآ أَنتُمْ تَحْزَنُونَ

Transliteration yāʿibādi lā khawfun ʿalaykumu l-yawma walā antum taḥzanūna

Kannada

Verse 69

ٱلَّذِينَ ءَامَنُوا۟ بِـَٔايَـٰتِنَا وَكَانُوا۟ مُسْلِمِينَ

Transliteration alladhīna āmanū biāyātinā wakānū mus'limīna

Kannada (ಅಂದು) ನಮ್ಮ ವಚನಗಳಲ್ಲಿ ವಿಶ್ವಾಸ ಹೊಂದಿದ ಮತ್ತು ಆಜ್ಞಾಪಾಲಕರಾದ ಮುಸ್ಲಿಮರೊಡನೆ ``ಓ ನನ್ನ ದಾಸರುಗಳೇ, ಇಂದು ನಿಮಗೇನೂ ಭಯವಿಲ್ಲ. ನಿಮಗೆ ದುಃಖವೂ ಉಂಟಾಗದು’’ (ಎಂದು ಹೇಳಲಾಗುವುದು)

Verse 70

ٱدْخُلُوا۟ ٱلْجَنَّةَ أَنتُمْ وَأَزْوَٰجُكُمْ تُحْبَرُونَ

Transliteration ud'khulū l-janata antum wa-azwājukum tuḥ'barūna

Kannada ನೀವೂ ನಿಮ್ಮ ಪತ್ನಿಯರೂ ಸಂತೋಷಪೂರ್ವಕ ಸ್ವರ್ಗದೊಳಗೆ ಪ್ರವೇಶಿಸಿರಿ.

Verse 71

يُطَافُ عَلَيْهِم بِصِحَافٍ مِّن ذَهَبٍ وَأَكْوَابٍ ۖ وَفِيهَا مَا تَشْتَهِيهِ ٱلْأَنفُسُ وَتَلَذُّ ٱلْأَعْيُنُ ۖ وَأَنتُمْ فِيهَا خَـٰلِدُونَ

Transliteration yuṭāfu ʿalayhim biṣiḥāfin min dhahabin wa-akwābin wafīhā mā tashtahīhi l-anfusu wataladhu l-aʿyunu wa-antum fīhā khālidūna

Kannada ಸ್ವರ್ಣದ ತಟ್ಟೆಗಳು ಮತ್ತು ಲೋಟೆಗಳೊಂದಿಗೆ ಅವರ ಸುತ್ತ ನಡೆಯಲ್ಪಡುವುದು. ಅದರಲ್ಲಿ ದೇಹಗಳು ಇಚ್ಛಿಸುವ ಮತ್ತು ಕಣ್ಣುಗಳು ರಸಾನುಭವಿಸುವ ಎಲ್ಲವೂ ಸಿದ್ಧವಿರುವುವು. ಇದರಲ್ಲಿ ನೀವು ಸ್ಥಿರವಾಸಿಗಳಾಗಿರುವಿರಿ.

Verse 72

وَتِلْكَ ٱلْجَنَّةُ ٱلَّتِىٓ أُورِثْتُمُوهَا بِمَا كُنتُمْ تَعْمَلُونَ

Transliteration watil'ka l-janatu allatī ūrith'tumūhā bimā kuntum taʿmalūna

Kannada ನೀವು (ಭೂಲೋಕದಲ್ಲಿ) ನಿರ್ವಹಿಸುತ್ತಿದ್ದ ಸತ್ಕರ್ಮಗಳ ನಿಮಿತ್ತ ನಿಮಗೆ ವಾರೀಸು ಹಕ್ಕಾಗಿ ಲಭಿಸಲ್ಪಟ್ಟ ಸ್ವರ್ಗವಿದು.

Verse 73

لَكُمْ فِيهَا فَـٰكِهَةٌ كَثِيرَةٌ مِّنْهَا تَأْكُلُونَ

Transliteration lakum fīhā fākihatun kathīratun min'hā takulūna

Kannada ನಿಮಗಿಲ್ಲಿ ಧಾರಾಳ ಹಣ್ಣು ಹಂಪಲುಗಳಿವೆ. ನೀವು ಅವುಗಳಿಂದ ತಿಣ್ಣುವಿರಿ.

Verse 74

إِنَّ ٱلْمُجْرِمِينَ فِى عَذَابِ جَهَنَّمَ خَـٰلِدُونَ

Transliteration inna l-muj'rimīna fī ʿadhābi jahannama khālidūna

Kannada ಅಪರಾಧಿಗಳು ನರಕ ಶಿಕ್ಷೆಯಲ್ಲಿ ಖಂಡಿತ ಸ್ಥಿರವಾಸಿಗಳಾಗಿರುವರು.

Verse 75

لَا يُفَتَّرُ عَنْهُمْ وَهُمْ فِيهِ مُبْلِسُونَ

Transliteration lā yufattaru ʿanhum wahum fīhi mub'lisūna

Kannada ಆ ಶಿಕ್ಷೆಯಲ್ಲಿ ಅವರಿಗೆ ಕಡಿತ ಲಭಿಸದು. ಅವರದರಲ್ಲಿ ನಿರಾಶರಾಗಿರುವರು.

Verse 76

وَمَا ظَلَمْنَـٰهُمْ وَلَـٰكِن كَانُوا۟ هُمُ ٱلظَّـٰلِمِينَ

Transliteration wamā ẓalamnāhum walākin kānū humu l-ẓālimīna

Kannada ನಾವು ಅವರನ್ನು ಅಕ್ರಮಿಸಿಲ್ಲ. ಬದಲಾಗಿ ಸ್ವತಃ ಅವರೇ ಅಕ್ರಮಿಗಳಾಗಿಬಿಟ್ಟರು.

Verse 77

وَنَادَوْا۟ يَـٰمَـٰلِكُ لِيَقْضِ عَلَيْنَا رَبُّكَ ۖ قَالَ إِنَّكُم مَّـٰكِثُونَ

Transliteration wanādaw yāmāliku liyaqḍi ʿalaynā rabbuka qāla innakum mākithūna

Kannada ಅವರು ಕೂಗಿ ಹೇಳುತ್ತಾರೆ; ``ಓ ಮಾಲಿಕ್, ತಮ್ಮ ಪ್ರಭು ನಮ್ಮನ್ನು ಮುಗಿಸಿ ಬಿಡುವಂತಾಗಲಿ! ಆಗ ಅವರು (ಮಾಲಿಕ್) ಹೇಳುತ್ತಾರೆ; ``ನೀವು (ಶಿಕ್ಷೆಯಲ್ಲೇ) ವಾಸಿಸುವವರಾಗಿರುವಿರಿ.

Verse 78

لَقَدْ جِئْنَـٰكُم بِٱلْحَقِّ وَلَـٰكِنَّ أَكْثَرَكُمْ لِلْحَقِّ كَـٰرِهُونَ

Transliteration laqad ji'nākum bil-ḥaqi walākinna aktharakum lil'ḥaqqi kārihūna

Kannada ನಿಮಗೆ ನಾವು ಸತ್ಯವನ್ನು ತಂದು ಕೊಟ್ಟೆವು. ಆದರೆ, ನಿಮ್ಮ ಪೈಕಿ ಹೆಚ್ಚಿನವರು ಸತ್ಯವನ್ನು ತಿರಸ್ಕರಿಸುವವರಾದರು”.

Verse 79

أَمْ أَبْرَمُوٓا۟ أَمْرًا فَإِنَّا مُبْرِمُونَ

Transliteration am abramū amran fa-innā mub'rimūna

Kannada ಅವರೇನಾದರೂ ತೀರ್ಮಾನಿಸಿಕೊಂಡಿರುವರೋ? ಹಾಗಾದರೆ ನಾವೂ ಕೆಲವೊಂದನ್ನು ತೀರ್ಮಾನಿಸಿ ಕೊಳ್ಳುವವರಾಗಿದ್ದೇವೆ.

Verse 80

أَمْ يَحْسَبُونَ أَنَّا لَا نَسْمَعُ سِرَّهُمْ وَنَجْوَىٰهُم ۚ بَلَىٰ وَرُسُلُنَا لَدَيْهِمْ يَكْتُبُونَ

Transliteration am yaḥsabūna annā lā nasmaʿu sirrahum wanajwāhum balā warusulunā ladayhim yaktubūna

Kannada ಅವರ ರಹಸ್ಯಗಳನ್ನೂ ಗೂಢಾಲೋಚನೆಯನ್ನೂ ನಾವು ಆಲಿಸುವುದಿಲ್ಲವೆಂದು ಅವರು ಗ್ರಹಿಸಿ ಕೊಂಡಿರುವರೇ? ವಾಸ್ತವದಲ್ಲಿ (ನಾವು ಆಲಿಸುತ್ತಿದ್ದೇವೆ). ನಮ್ಮ ದೂತರು (ಮಲಕುಗಳು) ಅವರ ಬಳಿಯಲ್ಲೇ ಬರೆಯುತ್ತಿದ್ದಾರೆ.

Verse 81

قُلْ إِن كَانَ لِلرَّحْمَـٰنِ وَلَدٌ فَأَنَا۠ أَوَّلُ ٱلْعَـٰبِدِينَ

Transliteration qul in kāna lilrraḥmāni waladun fa-anā awwalu l-ʿābidīna

Kannada (ಪ್ರವಾದಿಯರೇ) ತಾವು ಹೇಳಿರಿ; ``ಕಾರುಣ್ಯವಂತನಾದ ಅಲ್ಲಾಹನಿಗೆ ಒಂದು ಸಂತಾನವಿರುತ್ತಿದ್ದರೆ ಅದನ್ನು ಆರಾಧಿಸುವವರಲ್ಲಿ ನಾನು ಮೊದಲಿಗ ನಾಗುತ್ತಿದ್ದೆನು’’. ಂ.

Verse 82

سُبْحَـٰنَ رَبِّ ٱلسَّمَـٰوَٰتِ وَٱلْأَرْضِ رَبِّ ٱلْعَرْشِ عَمَّا يَصِفُونَ

Transliteration sub'ḥāna rabbi l-samāwāti wal-arḍi rabbi l-ʿarshi ʿammā yaṣifūna

Kannada ಆಕಾಶಗಳ ಮತ್ತು ಭೂಮಿಯ ಪ್ರಭು ಹಾಗೂ ಅರ್ಶ್‍ನ ಒಡೆಯನಾದವನು, ಅವರು ವರ್ಣಿಸಿ ಹೇಳುವ ಎಲ್ಲಾ ದೋಷಗಳಿಂದ ಪರಿಶುದ್ಧನಾಗಿ ರುತ್ತಾನೆ.

Verse 83

فَذَرْهُمْ يَخُوضُوا۟ وَيَلْعَبُوا۟ حَتَّىٰ يُلَـٰقُوا۟ يَوْمَهُمُ ٱلَّذِى يُوعَدُونَ

Transliteration fadharhum yakhūḍū wayalʿabū ḥattā yulāqū yawmahumu alladhī yūʿadūna

Kannada ಆದುದರಿಂದ ಅವರನ್ನು ಬಿಟ್ಟು ಬಿಡಿರಿ. ಅವರು ತಾಕೀತು ನೀಡಲಾಗುತ್ತಿರುವ ದಿನವನ್ನು ಕಂಡು ತಲುಪುವವರೆಗೂ ಅವರು (ದುರ್ಮಾರ್ಗದಲ್ಲಿ) ವಿಹರಿಸುತ್ತಾ ವಿನೋದಪಡುತ್ತಾ ಇರಲಿ!

Verse 84

وَهُوَ ٱلَّذِى فِى ٱلسَّمَآءِ إِلَـٰهٌ وَفِى ٱلْأَرْضِ إِلَـٰهٌ ۚ وَهُوَ ٱلْحَكِيمُ ٱلْعَلِيمُ

Transliteration wahuwa alladhī fī l-samāi ilāhun wafī l-arḍi ilāhun wahuwa l-ḥakīmu l-ʿalīmu

Kannada ಅವನು (ಅಲ್ಲಾಹು) ಆಕಾಶದಲ್ಲೂ ಅರಾಧ್ಯನು, ಭೂಮಿಯಲ್ಲೂ ಆರಾಧ್ಯನು. ಅವನು ತಂತ್ರಜ್ಞನೂ ಸರ್ವಜ್ಞನೂ ಆಗಿರುತ್ತಾನೆ.

Verse 85

وَتَبَارَكَ ٱلَّذِى لَهُۥ مُلْكُ ٱلسَّمَـٰوَٰتِ وَٱلْأَرْضِ وَمَا بَيْنَهُمَا وَعِندَهُۥ عِلْمُ ٱلسَّاعَةِ وَإِلَيْهِ تُرْجَعُونَ

Transliteration watabāraka alladhī lahu mul'ku l-samāwāti wal-arḍi wamā baynahumā waʿindahu ʿil'mu l-sāʿati wa-ilayhi tur'jaʿūna

Kannada ಆಕಾಶಗಳು ಮತ್ತು ಭೂಮಿ ಹಾಗೂ ಅವುಗಳ ಮಧ್ಯೆ ಇರುವ ಪ್ರತಿಯೊಂದು ವಸ್ತುಗಳ ಆಧಿಪತ್ಯ ಯಾವನಿಗಿರುವುದೋ ಅವನು ಮಹೋನ್ನತನು. ಅಂತ್ಯ ಘಳಿಗೆಯ ಕುರಿತುಳ್ಳ ಅರಿವು ಅವನಿಗಿದೆ. ನೀವೆಲ್ಲರೂ ಅವನ ಬಳಿಗೇ ಮರಳಿಸಲ್ಪಡುವಿರಿ.

Verse 86

وَلَا يَمْلِكُ ٱلَّذِينَ يَدْعُونَ مِن دُونِهِ ٱلشَّفَـٰعَةَ إِلَّا مَن شَهِدَ بِٱلْحَقِّ وَهُمْ يَعْلَمُونَ

Transliteration walā yamliku alladhīna yadʿūna min dūnihi l-shafāʿata illā man shahida bil-ḥaqi wahum yaʿlamūna

Kannada ಅವನನ್ನು ಬಿಟ್ಟು ಅವರು ಯಾರನ್ನು ಆರಾಧಿಸುತ್ತಿರುವರೋ ಅವರು ಶಿಫಾರಸ್ಸಿನ ಅಧಿಕಾರವನ್ನು ಹೊಂದಿಲ್ಲ. ಅರಿವು ಉಳ್ಳವರಾಗಿ ಸತ್ಯದಲ್ಲಿ ಸಾಕ್ಷ್ಯವಹಿಸಿದವರ ಹೊರತು .

Verse 87

وَلَئِن سَأَلْتَهُم مَّنْ خَلَقَهُمْ لَيَقُولُنَّ ٱللَّهُ ۖ فَأَنَّىٰ يُؤْفَكُونَ

Transliteration wala-in sa-altahum man khalaqahum layaqūlunna l-lahu fa-annā yu'fakūna

Kannada ಅವನನ್ನು ಸೃಷ್ಟಿಸಿದವನು ಯಾರೆಂದು ತಾವು ಅವರಲ್ಲಿ ಕೇಳಿದರೆ ಅಲ್ಲಾಹನೆಂದು ಅವರು ಹೇಳುವರು. ಮತ್ತೆ ಅವರು (ಸತ್ಯದಿಂದ) ಹೇಗೆ ತಪ್ಪಿ ಹೋಗುತ್ತಿದ್ದಾರೆ?

Verse 88

وَقِيلِهِۦ يَـٰرَبِّ إِنَّ هَـٰٓؤُلَآءِ قَوْمٌ لَّا يُؤْمِنُونَ

Transliteration waqīlihi yārabbi inna hāulāi qawmun lā yu'minūna

Kannada ``ನನ್ನ ಪ್ರಭೂ, ಈ ಕೂಟದವರು ವಿಶ್ವಾಸ ಹೊಂದದ ಜನತೆಯಾಗಿರುವರು’’ ಎಂಬ ಅವರ (ನಬಿಯರ) ಮಾತಿನ ಕುರಿತೂ (ಅಲ್ಲಾಹನಿಗೆ ಅರಿವಿದೆ)

Verse 89

فَٱصْفَحْ عَنْهُمْ وَقُلْ سَلَـٰمٌ ۚ فَسَوْفَ يَعْلَمُونَ

Transliteration fa-iṣ'faḥ ʿanhum waqul salāmun fasawfa yaʿlamūna

Kannada (ಪ್ರವಾದಿಯರೇ) ತಾವು ಅವರಿಂದ ದೂರ ಸರಿಯಿರಿ ಮತ್ತು ಸಲಾಮ್ ಎಂದು ಹೇಳಿರಿ. ಅವರಿಗೆ ಸದ್ಯದಲ್ಲೆ (ವಾಸ್ತವಿಕತೆ) ತಿಳಿದು ಬರುವುದು.

Read Surah Az-Zukhruf in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.