MyDugsiStart learning

Surah Ash-Shuraa in Kannada: translation and audio

Surah 42 · الشورى · The Consultation · 53 verses

Surah Ash-Shuraa verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ash-Shuraa word by word in English.

Verse 1

حمٓ

Transliteration hha-meem

Kannada ಹಾಮೀಮ್.

Verse 2

عٓسٓقٓ

Transliteration ain-seen-qaf

Kannada ಐನ್ ಸೀನ್ ಖಾಫ್.

Verse 3

كَذَٰلِكَ يُوحِىٓ إِلَيْكَ وَإِلَى ٱلَّذِينَ مِن قَبْلِكَ ٱللَّهُ ٱلْعَزِيزُ ٱلْحَكِيمُ

Transliteration kadhālika yūḥī ilayka wa-ilā alladhīna min qablika l-lahu l-ʿazīzu l-ḥakīmu

Kannada (ಓ ಪೈಗಂಬರರೇ) ಪ್ರತಾಪಶಾಲಿಯೂ ಯುಕ್ತಿ ಪೂರ್ಣನೂ ಆಗಿರುವ ಅಲ್ಲಾಹು ನಿಮಗೂ ನಿಮಗಿಂತ ಮುಂಚಿನವರಿಗೂ ಇದೇ ರೀತಿಯಲ್ಲಿ ವಹ್ಯ್ (ಸಂದೇಶ) ಕಳುಹಿಸುತ್ತಲಿದ್ದಾನೆ.

Verse 4

لَهُۥ مَا فِى ٱلسَّمَـٰوَٰتِ وَمَا فِى ٱلْأَرْضِ ۖ وَهُوَ ٱلْعَلِىُّ ٱلْعَظِيمُ

Transliteration lahu mā fī l-samāwāti wamā fī l-arḍi wahuwa l-ʿaliyu l-ʿaẓīmu

Kannada ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವೂ ಅವನದೇ. ಅವನು ಪರಮೋನ್ನತನೂ ಮಹಾನನೂ ಆಗಿರುತ್ತಾನೆ.

Verse 5

تَكَادُ ٱلسَّمَـٰوَٰتُ يَتَفَطَّرْنَ مِن فَوْقِهِنَّ ۚ وَٱلْمَلَـٰٓئِكَةُ يُسَبِّحُونَ بِحَمْدِ رَبِّهِمْ وَيَسْتَغْفِرُونَ لِمَن فِى ٱلْأَرْضِ ۗ أَلَآ إِنَّ ٱللَّهَ هُوَ ٱلْغَفُورُ ٱلرَّحِيمُ

Transliteration takādu l-samāwātu yatafaṭṭarna min fawqihinna wal-malāikatu yusabbiḥūna biḥamdi rabbihim wayastaghfirūna liman fī l-arḍi alā inna l-laha huwa l-ghafūru l-raḥīmu

Kannada ಆಕಾಶಗಳು ಅವುಗಳ ಮೇಲ್ಗಡೆಯಿಂದ ಸಿಡಿದು ಬೀಳುವುದರಲ್ಲಿದೆ. ದೇವಚರರು (ಮಲಕ್‍ಗಳು) ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪರಿಶು ದ್ಧತೆಯನ್ನು ಪ್ರಕೀರ್ತಿಸುತ್ತಿದ್ದಾರೆ ಮತ್ತು ಭೂವಾಸಿಗಳಿಗಾಗಿ ಪಾಪ ಮುಕ್ತಿಯನ್ನು ಬೇಡು ತ್ತಿರುತ್ತಾರೆ. ತಿಳಿಯಿರಿ, ನಿಜಕ್ಕೂ ಅಲ್ಲಾಹನು ಮಹಾ ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ.

Verse 6

وَٱلَّذِينَ ٱتَّخَذُوا۟ مِن دُونِهِۦٓ أَوْلِيَآءَ ٱللَّهُ حَفِيظٌ عَلَيْهِمْ وَمَآ أَنتَ عَلَيْهِم بِوَكِيلٍ

Transliteration wa-alladhīna ittakhadhū min dūnihi awliyāa l-lahu ḥafīẓun ʿalayhim wamā anta ʿalayhim biwakīlin

Kannada ಅಲ್ಲಾಹನನ್ನು ಬಿಟ್ಟು ಇತರರನ್ನು ತಮ್ಮ ರಕ್ಷಕರಾಗಿ ಮಾಡಿಕೊಂಡಿರುವವರ ಮೇಲ್ವಿಚಾರಕನು ಅಲ್ಲಾಹನೇ ಆಗಿರುತ್ತಾನೆ. ನೀವು ಅವರ ಮೇಲೆ ಹೊಣೆಗಾರರಲ್ಲ.

Verse 7

وَكَذَٰلِكَ أَوْحَيْنَآ إِلَيْكَ قُرْءَانًا عَرَبِيًّا لِّتُنذِرَ أُمَّ ٱلْقُرَىٰ وَمَنْ حَوْلَهَا وَتُنذِرَ يَوْمَ ٱلْجَمْعِ لَا رَيْبَ فِيهِ ۚ فَرِيقٌ فِى ٱلْجَنَّةِ وَفَرِيقٌ فِى ٱلسَّعِيرِ

Transliteration wakadhālika awḥaynā ilayka qur'ānan ʿarabiyyan litundhira umma l-qurā waman ḥawlahā watundhira yawma l-jamʿi lā rayba fīhi farīqun fī l-janati wafarīqun fī l-saʿīri

Kannada (ಪ್ರವಾದಿಯರೇ,) ಇದೇ ರೀತಿಯಲ್ಲಿ ಖುರ್‍ಆ ನನ್ನು ನಾವು ನಿಮ್ಮ ಕಡೆಗೆ ಅರಬಿ ಭಾಷೆಯಲ್ಲಿ ವಹ್ಯ್ ಮಾಡಿರುತ್ತೇವೆ. ನಾಡುಗಳ ಕೇಂದ್ರ ಮಕ್ಕಾ ಹಾಗೂ ಅದರ ಸುತ್ತಮುತ್ತ ಇರುವವರನ್ನು ನೀವು ಎಚ್ಚರಿಸುವಂತಾಗಲು ಮತ್ತು ಸರ್ವರನ್ನು ಒಗ್ಗೂಡಿಸುವ ಯಾವುದೇ ಸಂಶಯವಿಲ್ಲದ ಒಂದು ದಿನದ ಬಗ್ಗೆ ಎಚ್ಚರಿಕೆ ನೀಡುವಂತಾಗಲು. ಅಂದು ಒಂದು ಕೂಟವು ಸ್ವರ್ಗಕ್ಕೆ ಇನ್ನೊಂದು ಕೂಟವು ನರಕಕ್ಕೆ ಹೋಗಲಿಕ್ಕಿದೆ.

Verse 8

وَلَوْ شَآءَ ٱللَّهُ لَجَعَلَهُمْ أُمَّةً وَٰحِدَةً وَلَـٰكِن يُدْخِلُ مَن يَشَآءُ فِى رَحْمَتِهِۦ ۚ وَٱلظَّـٰلِمُونَ مَا لَهُم مِّن وَلِىٍّ وَلَا نَصِيرٍ

Transliteration walaw shāa l-lahu lajaʿalahum ummatan wāḥidatan walākin yud'khilu man yashāu fī raḥmatihi wal-ẓālimūna mā lahum min waliyyin walā naṣīrin

Kannada ಅಲ್ಲಾಹನು ಬಯಸುತ್ತಿದ್ದರೆ ಇವರೆಲ್ಲರನ್ನೂ ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವನು ತನಗೆ ಇಷ್ಟವಿದ್ದವರನ್ನು ತನ್ನ ಕೃಪೆಯೊಳಗೆ ಸೇರಿಸಿಕೊಳ್ಳುತ್ತಾನೆ ಮತ್ತು ಅಕ್ರಮಿಗಳಿಗೆ ಯಾವುದೇ ರಕ್ಷಕ ಮಿತ್ರನಾಗಲಿ ಸಹಾಯಕನಾಗಲಿ ಇಲ್ಲ.

Verse 9

أَمِ ٱتَّخَذُوا۟ مِن دُونِهِۦٓ أَوْلِيَآءَ ۖ فَٱللَّهُ هُوَ ٱلْوَلِىُّ وَهُوَ يُحْىِ ٱلْمَوْتَىٰ وَهُوَ عَلَىٰ كُلِّ شَىْءٍ قَدِيرٌ

Transliteration ami ittakhadhū min dūnihi awliyāa fal-lahu huwa l-waliyu wahuwa yuḥ'yī l-mawtā wahuwa ʿalā kulli shayin qadīrun

Kannada ಇವರು ಅಲ್ಲಾಹನನ್ನು ಬಿಟ್ಟು ಇತರರನ್ನು ರಕ್ಷಕ (ಆರಾಧ್ಯ)ರನ್ನಾಗಿ ಸ್ವೀಕರಿಸಿಕೊಳ್ಳುವರೇ? ಅಲ್ಲಾಹನೇ ರಕ್ಷಕ ಪ್ರಭು. ಅವನೇ ಮೃತರನ್ನು ಜೀವಂತಗೊಳಿಸುವವನು. ಮತ್ತು ಸಕಲ ವಿಷಯಗಳಿಗೂ ಸಾಮಥ್ರ್ಯವುಳ್ಳವನು.

Verse 10

وَمَا ٱخْتَلَفْتُمْ فِيهِ مِن شَىْءٍ فَحُكْمُهُۥٓ إِلَى ٱللَّهِ ۚ ذَٰلِكُمُ ٱللَّهُ رَبِّى عَلَيْهِ تَوَكَّلْتُ وَإِلَيْهِ أُنِيبُ

Transliteration wamā ikh'talaftum fīhi min shayin faḥuk'muhu ilā l-lahi dhālikumu l-lahu rabbī ʿalayhi tawakkaltu wa-ilayhi unību

Kannada ನಿಮ್ಮೊಳಗೆ ಯಾವ ವಿಷಯದಲ್ಲೇ ಭಿನ್ನಮತವುಂ ಟಾದರೂ ಅದರ ತೀರ್ಮಾನ ಅಲ್ಲಾಹನಿಂದಲೇ ನಡೆಯುತ್ತದೆ . ಅವನೇ ನನ್ನ ಪ್ರಭುವಾದ ಅಲ್ಲಾಹು. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ ಮತ್ತು ಅವನ ಕಡೆಗೇ ನಾನು ಮರಳುತ್ತೇನೆ.

Verse 11

فَاطِرُ ٱلسَّمَـٰوَٰتِ وَٱلْأَرْضِ ۚ جَعَلَ لَكُم مِّنْ أَنفُسِكُمْ أَزْوَٰجًا وَمِنَ ٱلْأَنْعَـٰمِ أَزْوَٰجًا ۖ يَذْرَؤُكُمْ فِيهِ ۚ لَيْسَ كَمِثْلِهِۦ شَىْءٌ ۖ وَهُوَ ٱلسَّمِيعُ ٱلْبَصِيرُ

Transliteration fāṭiru l-samāwāti wal-arḍi jaʿala lakum min anfusikum azwājan wamina l-anʿāmi azwājan yadhra-ukum fīhi laysa kamith'lihi shayon wahuwa l-samīʿu l-baṣīru

Kannada ಅವನು ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಕರ್ತ. ಅವನು ನಿಮ್ಮ ವರ್ಗದಿಂದಲೇ ನಿಮಗಾಗಿ ಜೋಡಿಗಳನ್ನು ಸೃಷ್ಟಿಸಿದನು, ಹಾಗೆಯೇ ಪ್ರಾಣಿ ಗಳಲ್ಲೂ ಜೋಡಿಗಳನ್ನು ಉಂಟು ಮಾಡಿದನು. ಈ ಮೂಲಕ ಅವನು ನಿಮ್ಮನ್ನು ಹೆಚ್ಚಿಸುತ್ತಾನೆ. ಯಾವ ವಸ್ತುವೂ ಅವನಂತೆ ಇಲ್ಲ. ಅವನು ಎಲ್ಲ ವನ್ನು ಆಲಿಸುವವನೂ ವೀಕ್ಷಿಸುವವನೂ ಆಗಿದ್ದಾನೆ.

Verse 12

لَهُۥ مَقَالِيدُ ٱلسَّمَـٰوَٰتِ وَٱلْأَرْضِ ۖ يَبْسُطُ ٱلرِّزْقَ لِمَن يَشَآءُ وَيَقْدِرُ ۚ إِنَّهُۥ بِكُلِّ شَىْءٍ عَلِيمٌ

Transliteration lahu maqālīdu l-samāwāti wal-arḍi yabsuṭu l-riz'qa liman yashāu wayaqdiru innahu bikulli shayin ʿalīmun

Kannada ಭೂಮಿ-ಆಕಾಶಗಳ (ಭಂಡಾರಗಳ) ಬೀಗದ ಕೈಗಳು ಅವನ ಅಧೀನದಲ್ಲಿವೆ. ತಾನಿಚ್ಛಿಸಿದವರಿಗೆ ಅವನು ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ಮತ್ತು ಬೇರೆ ಕೆಲವರಿಗೆ ಪರಿಮಿತಗೊಳಿಸುತ್ತಾನೆ. ಖಂಡಿತಾ ಅವನು ಸಕಲ ವಿಷಯಗಳ ಜ್ಞಾನಿ.

Verse 13

۞ شَرَعَ لَكُم مِّنَ ٱلدِّينِ مَا وَصَّىٰ بِهِۦ نُوحًا وَٱلَّذِىٓ أَوْحَيْنَآ إِلَيْكَ وَمَا وَصَّيْنَا بِهِۦٓ إِبْرَٰهِيمَ وَمُوسَىٰ وَعِيسَىٰٓ ۖ أَنْ أَقِيمُوا۟ ٱلدِّينَ وَلَا تَتَفَرَّقُوا۟ فِيهِ ۚ كَبُرَ عَلَى ٱلْمُشْرِكِينَ مَا تَدْعُوهُمْ إِلَيْهِ ۚ ٱللَّهُ يَجْتَبِىٓ إِلَيْهِ مَن يَشَآءُ وَيَهْدِىٓ إِلَيْهِ مَن يُنِيبُ

Transliteration sharaʿa lakum mina l-dīni mā waṣṣā bihi nūḥan wa-alladhī awḥaynā ilayka wamā waṣṣaynā bihi ib'rāhīma wamūsā waʿīsā an aqīmū l-dīna walā tatafarraqū fīhi kabura ʿalā l-mush'rikīna mā tadʿūhum ilayhi l-lahu yajtabī ilayhi man yashāu wayahdī ilayhi man yunību

Kannada ನೂಹ್‍ರಿಗೆ ಅಜ್ಞಾಪಿಸಿದ್ದ ಈಗ ನಾವು ನಿಮಗೆ ದಿವ್ಯ ಸಂದೇಶ ಕಳುಹಿಸಿದ, ಇಬ್‍ರಾಹೀಂ ಮೂಸಾ ಮತ್ತು ಈಸಾರಿಗೂ ನಾವು ಬೋಧಿಸಿದ ಅಂದರೆ, ಈ ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಇದರಲ್ಲಿ ವಿಭಿನ್ನರಾಗದಿರಿ ಎಂಬ ಆದೇಶವನ್ನು ಅವನು ನಿಮಗೆ ಧರ್ಮಶಾಸ್ತ್ರವಾಗಿ ನಿಶ್ಚಯಿಸಿದ್ದಾನೆ. ಬಹುದೇವವಿಶ್ವಾಸಿಗಳನ್ನು ತಾವು ಯಾವೊಂದಕ್ಕೆ ಆಹ್ವಾನಿಸುತ್ತೀರೋ ಅದು ಅವರಿಗೆ ದೊಡ್ಡ ಹೊರೆಯಾಗಿದೆ. ಅಲ್ಲಾಹನು ತಾನಿಚ್ಛಿಸುವವರನ್ನು ತನ್ನ ಕಡೆಗೆ ಆರಿಸಿಕೊಳ್ಳುತ್ತಾನೆ ಮತ್ತು ತನ್ನತ್ತ ಮರಳುವವರನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ಯುತ್ತಾನೆ.

Verse 14

وَمَا تَفَرَّقُوٓا۟ إِلَّا مِنۢ بَعْدِ مَا جَآءَهُمُ ٱلْعِلْمُ بَغْيًۢا بَيْنَهُمْ ۚ وَلَوْلَا كَلِمَةٌ سَبَقَتْ مِن رَّبِّكَ إِلَىٰٓ أَجَلٍ مُّسَمًّى لَّقُضِىَ بَيْنَهُمْ ۚ وَإِنَّ ٱلَّذِينَ أُورِثُوا۟ ٱلْكِتَـٰبَ مِنۢ بَعْدِهِمْ لَفِى شَكٍّ مِّنْهُ مُرِيبٍ

Transliteration wamā tafarraqū illā min baʿdi mā jāahumu l-ʿil'mu baghyan baynahum walawlā kalimatun sabaqat min rabbika ilā ajalin musamman laquḍiya baynahum wa-inna alladhīna ūrithū l-kitāba min baʿdihim lafī shakkin min'hu murībin

Kannada ಅವರು (ಪೂರ್ವ ವೈದಿಕರು) ಭಿನ್ನಾಭಿಪ್ರಾಯ ಕ್ಕೊಳಗಾಗಿರುವುದು ಅವರ ಬಳಿಗೆ ಜ್ಞಾನ ಬಂದ ಬಳಿಕವಾಗಿತ್ತು. ಅವರ ನಡುವಣ ವೈರಾಗ್ಯದಿಂದ. ಒಂದು ನಿಶ್ಚಿತ ಸಮಯದವರೆಗೆ ವಿಧಿಸಲಾದ ಒಂದು ವಚನವನ್ನು ನಿಮ್ಮ ಪ್ರಭು ಮೊದಲೇ ಸಾದರಗೊಳಿಸದಿರುತ್ತಿದ್ದರೆ (ತಕ್ಷಣ) ಅವರಿಗೆ ಶಿಕ್ಷೆಯ ತೀರ್ಮಾನ ಮಾಡಲಾಗುತ್ತಿತ್ತು. ಅವರ ಬಳಿಕ ವೇದಗ್ರಂಥ ವಾರೀಸಾಗಿ ಲಭಿಸಲ್ಪಟ್ಟವರು ಅವುಗಳ ಕುರಿತು ಅತೀವ ಅನುಮಾನದಲ್ಲಿ ಬಿದ್ದಿರುತ್ತಾರೆ .

Verse 15

فَلِذَٰلِكَ فَٱدْعُ ۖ وَٱسْتَقِمْ كَمَآ أُمِرْتَ ۖ وَلَا تَتَّبِعْ أَهْوَآءَهُمْ ۖ وَقُلْ ءَامَنتُ بِمَآ أَنزَلَ ٱللَّهُ مِن كِتَـٰبٍ ۖ وَأُمِرْتُ لِأَعْدِلَ بَيْنَكُمُ ۖ ٱللَّهُ رَبُّنَا وَرَبُّكُمْ ۖ لَنَآ أَعْمَـٰلُنَا وَلَكُمْ أَعْمَـٰلُكُمْ ۖ لَا حُجَّةَ بَيْنَنَا وَبَيْنَكُمُ ۖ ٱللَّهُ يَجْمَعُ بَيْنَنَا ۖ وَإِلَيْهِ ٱلْمَصِيرُ

Transliteration falidhālika fa-ud'ʿu wa-is'taqim kamā umir'ta walā tattabiʿ ahwāahum waqul āmantu bimā anzala l-lahu min kitābin wa-umir'tu li-aʿdila baynakumu l-lahu rabbunā warabbukum lanā aʿmālunā walakum aʿmālukum lā ḥujjata baynanā wabaynakumu l-lahu yajmaʿu baynanā wa-ilayhi l-maṣīru

Kannada (ಓ ಪೈಗಂಬರರೇ,) ಹೀಗಾಗಿ ನೀವು (ಅದೇ ಧರ್ಮದ ಕಡೆಗೆ) ಕರೆ ನೀಡಿರಿ ಮತ್ತು ನಿಮಗೆ ಆಜ್ಞಾಪಿಸಲಾಗಿರುವ ಪ್ರಕಾರ ಅದರಲ್ಲೇ ಸ್ಥಿರ ವಾಗಿರಿ. ಅವರ ಸ್ವೇಚ್ಛೆಗಳನ್ನು ಅನುಸರಿಸ ಬೇಡಿರಿ. ಮತ್ತು (ಅವರೊಡನೆ) ಹೇಳಿರಿ; ಅಲ್ಲಾ ಹನು ಅವತೀರ್ಣಗೊಳಿಸಿದ ಪ್ರತಿಯೊಂದು ಗ್ರಂಥದ ಮೇಲೆ ನಾನು ವಿಶ್ವಾಸವಿರಿಸಿದೆನು. ನಿಮ್ಮ ನಡುವೆ ನ್ಯಾಯಪಾಲಿಸಬೇಕೆಂದು ನನಗೆ ಆದೇ ಶಿಸಲಾಗಿದೆ. ಅಲ್ಲಾಹನು ನಮ್ಮ ಮತ್ತು ನಿಮ್ಮ ಪ್ರಭುವೂ ಆಗಿರುತ್ತಾನೆ. ನಮ್ಮ ಕರ್ಮ (ಫಲ) ಗಳು ನಮಗೆ, ನಿಮ್ಮ ಕರ್ಮ(ಫಲ)ಗಳು ನಿಮಗೆ, ನಮ್ಮ ನಿಮ್ಮೊಳಗೆ ಯಾವ ವಿವಾದವೂ ಇಲ್ಲ. ಅಲ್ಲಾಹನು ನಮ್ಮೆಲ್ಲರನ್ನು ಒಟ್ಟುಗೂಡಿಸುವನು ಮತ್ತು ಎಲ್ಲರ ಮರಳಿಕೆ ಅವನ ಕಡೆಗೇ ಇದೆ.

Verse 16

وَٱلَّذِينَ يُحَآجُّونَ فِى ٱللَّهِ مِنۢ بَعْدِ مَا ٱسْتُجِيبَ لَهُۥ حُجَّتُهُمْ دَاحِضَةٌ عِندَ رَبِّهِمْ وَعَلَيْهِمْ غَضَبٌ وَلَهُمْ عَذَابٌ شَدِيدٌ

Transliteration wa-alladhīna yuḥājjūna fī l-lahi min baʿdi mā us'tujība lahu ḥujjatuhum dāḥiḍatun ʿinda rabbihim waʿalayhim ghaḍabun walahum ʿadhābun shadīdun

Kannada ಅಲ್ಲಾಹನ ಕರೆಗೆ (ಧರ್ಮಕ್ಕೆ) ಓಗೊಟ್ಟ ಬಳಿಕ ಆ ಕರೆಯ ಕುರಿತು ತರ್ಕಿಸುವವರ ಪುರಾವೆಗಳು ಅವರ ಪ್ರಭುವಿನ ಬಳಿ ನಿರರ್ಥಕವಾಗಿದೆ. ಅವರ ಮೇಲೆ ಅವನ ಪ್ರಕೋಪವೂ ಅವರಿಗೆ ಕಠಿಣ ಶಿಕ್ಷೆಯೂ ಇದೆ.

Verse 17

ٱللَّهُ ٱلَّذِىٓ أَنزَلَ ٱلْكِتَـٰبَ بِٱلْحَقِّ وَٱلْمِيزَانَ ۗ وَمَا يُدْرِيكَ لَعَلَّ ٱلسَّاعَةَ قَرِيبٌ

Transliteration al-lahu alladhī anzala l-kitāba bil-ḥaqi wal-mīzāna wamā yud'rīka laʿalla l-sāʿata qarībun

Kannada ಸತ್ಯ ಸಮೇತ ಗ್ರಂಥವನ್ನೂ ತಕ್ಕಡಿ (ನೀತಿ) ಯನ್ನೂ ಇಳಿಸಿದವನು ಅಲ್ಲಾಹನೇ. ತಮಗೇನು ಗೊತ್ತು? (ಅಂತ್ಯ) ಘಳಿಗೆಯು ಹತ್ತಿರ ಬಂದಿರಲೂಬಹುದು.

Verse 18

يَسْتَعْجِلُ بِهَا ٱلَّذِينَ لَا يُؤْمِنُونَ بِهَا ۖ وَٱلَّذِينَ ءَامَنُوا۟ مُشْفِقُونَ مِنْهَا وَيَعْلَمُونَ أَنَّهَا ٱلْحَقُّ ۗ أَلَآ إِنَّ ٱلَّذِينَ يُمَارُونَ فِى ٱلسَّاعَةِ لَفِى ضَلَـٰلٍۭ بَعِيدٍ

Transliteration yastaʿjilu bihā alladhīna lā yu'minūna bihā wa-alladhīna āmanū mush'fiqūna min'hā wayaʿlamūna annahā l-ḥaqu alā inna alladhīna yumārūna fī l-sāʿati lafī ḍalālin baʿīdin

Kannada ಅದರಲ್ಲಿ (ಅಂತ್ಯ ಸಮಯದಲ್ಲಿ) ನಂಬಿಕೆ ಇಲ್ಲದವರು ಅದಕ್ಕಾಗಿ ದುಡುಕುತ್ತಿದ್ದಾರೆ. ಅದರಲ್ಲಿ ನಂಬಿಕೆಯುಳ್ಳವರು ಅದನ್ನು ಭಯಪಡು ತ್ತಾರೆ ಮತ್ತು ಅದು ಸತ್ಯ ಎಂಬುದನ್ನು ಅರಿತಿದ್ದಾರೆ. ತಿಳಿಯಿರಿ; ಅಂತ್ಯ ದಿನದ ಕುರಿತು ತರ್ಕಿಸುವವರು ಬಹುದೂರವಾದ ಪಥಭ್ರಷ್ಟತೆಯಲ್ಲಿ ಬಿದ್ದಿದ್ದಾರೆ.

Verse 19

ٱللَّهُ لَطِيفٌۢ بِعِبَادِهِۦ يَرْزُقُ مَن يَشَآءُ ۖ وَهُوَ ٱلْقَوِىُّ ٱلْعَزِيزُ

Transliteration al-lahu laṭīfun biʿibādihi yarzuqu man yashāu wahuwa l-qawiyu l-ʿazīzu

Kannada ಅಲ್ಲಾಹನು ತನ್ನ ದಾಸರಲ್ಲಿ ಅತ್ಯಂತ ಕರುಣೆಯುಳ್ಳವನಾಗಿದ್ದಾನೆ. ತಾನಿಚ್ಛಿಸಿದವರಿಗೆ ಅವನು ಆಹಾರ ನೀಡುತ್ತಾನೆ. ಅವನು ಅತಿ ಪ್ರಬಲನೂ, ಪ್ರತಾಪಶಾಲಿಯೂ ಆಗಿರುತ್ತಾನೆ.

Verse 20

مَن كَانَ يُرِيدُ حَرْثَ ٱلْـَٔاخِرَةِ نَزِدْ لَهُۥ فِى حَرْثِهِۦ ۖ وَمَن كَانَ يُرِيدُ حَرْثَ ٱلدُّنْيَا نُؤْتِهِۦ مِنْهَا وَمَا لَهُۥ فِى ٱلْـَٔاخِرَةِ مِن نَّصِيبٍ

Transliteration man kāna yurīdu ḥartha l-ākhirati nazid lahu fī ḥarthihi waman kāna yurīdu ḥartha l-dun'yā nu'tihi min'hā wamā lahu fī l-ākhirati min naṣībin

Kannada ಯಾವನು (ತನ್ನ ಕರ್ಮದಿಂದ) ಪರಲೋಕದ ಬೆಳೆಯನ್ನು ಬಯಸುತ್ತಾನೋ ಅವನ ಬೆಳೆಯಲ್ಲಿ ನಾವು ವರ್ಧನೆ ಉಂಟುಮಾಡುತ್ತೇವೆ. ಯಾವನು ಇಹಲೋಕದ ಬೆಳೆಯನ್ನು ಬಯಸುತ್ತಾನೋ ಅವನಿಗೆ ನಾವು ಅದರಿಂದಲೇ ಕೊಟ್ಟುಬಿಡುತ್ತೇವೆ. ಆದರೆ ಪರಲೋಕದಲ್ಲಿ ಅವನಿಗೆ ಯಾವ ಪಾಲೂ ಇರುವುದಿಲ್ಲ.

Verse 21

أَمْ لَهُمْ شُرَكَـٰٓؤُا۟ شَرَعُوا۟ لَهُم مِّنَ ٱلدِّينِ مَا لَمْ يَأْذَنۢ بِهِ ٱللَّهُ ۚ وَلَوْلَا كَلِمَةُ ٱلْفَصْلِ لَقُضِىَ بَيْنَهُمْ ۗ وَإِنَّ ٱلظَّـٰلِمِينَ لَهُمْ عَذَابٌ أَلِيمٌ

Transliteration am lahum shurakāu sharaʿū lahum mina l-dīni mā lam yadhan bihi l-lahu walawlā kalimatu l-faṣli laquḍiya baynahum wa-inna l-ẓālimīna lahum ʿadhābun alīmun

Kannada ಅವರಿಗೆ ಅಲ್ಲಾಹು ಅನುಮತಿಸದ ಕಾರ್ಯವನ್ನು ಧರ್ಮವಾಗಿ ನಿರ್ಣಯಿಸಿಕೊಟ್ಟ ಸಹಭಾಗಿಗಳು ಅವರಿಗೆ ಇದ್ದಾರೆಯೇ? ನಿರ್ಣಾಯಕ ವಿಧಿಯ ಕುರಿತು ಆಜ್ಞೆಯು ಅಸ್ತಿತ್ವದಲ್ಲಿರದಿರುತ್ತಿದ್ದರೆ ಇವರ ಮಧ್ಯೆ ತಕ್ಷಣ ತೀರ್ಮಾನ ಮಾಡಿ ಬಿಡಲಾಗುತ್ತಿತ್ತು. ನಿಶ್ಚಯವಾಗಿಯೂ ಅಕ್ರಮಿಗಳಿಗೆ ವೇದ ನಾಜನಕ ಶಿಕ್ಷೆಯಿದೆ.

Verse 22

تَرَى ٱلظَّـٰلِمِينَ مُشْفِقِينَ مِمَّا كَسَبُوا۟ وَهُوَ وَاقِعٌۢ بِهِمْ ۗ وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ فِى رَوْضَاتِ ٱلْجَنَّاتِ ۖ لَهُم مَّا يَشَآءُونَ عِندَ رَبِّهِمْ ۚ ذَٰلِكَ هُوَ ٱلْفَضْلُ ٱلْكَبِيرُ

Transliteration tarā l-ẓālimīna mush'fiqīna mimmā kasabū wahuwa wāqiʿun bihim wa-alladhīna āmanū waʿamilū l-ṣāliḥāti fī rawḍāti l-janāti lahum mā yashāūna ʿinda rabbihim dhālika huwa l-faḍlu l-kabīru

Kannada (ಪರಲೋಕದಲ್ಲಿ) ಈ ಅಕ್ರಮಿಗಳು ತಮ್ಮ ಸಂಪಾದನೆಯ ಪರಿಣಾಮದಿಂದ ಭಯಪಡುವುದನ್ನು ತಾವು ಕಾಣುವಿರಿ. ಆ ಶಿಕ್ಷೆ ಅವರ ಮೇಲೆ ಸಂಭವಿಸಿಯೇ ತೀರುವುದು. ಸತ್ಯವಿಶ್ವಾಸ ಸ್ವೀಕರಿಸಿ ಸತ್ಕರ್ಮಗಳನ್ನು ಅನುಷ್ಠಿಸಿದವರು ಸ್ವರ್ಗೋದ್ಯಾನದಲ್ಲಿರುವರು. ತಮ್ಮ ಪ್ರಭುವಿನಿಂದ ಅವರು ಬಯಸಿದುದನ್ನೆಲ್ಲಾ ಪಡೆಯು ವರು. ಅದುವೇ ಮಹಾ ಅನುಗ್ರಹವಾಗಿದೆ .

Verse 23

ذَٰلِكَ ٱلَّذِى يُبَشِّرُ ٱللَّهُ عِبَادَهُ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ ۗ قُل لَّآ أَسْـَٔلُكُمْ عَلَيْهِ أَجْرًا إِلَّا ٱلْمَوَدَّةَ فِى ٱلْقُرْبَىٰ ۗ وَمَن يَقْتَرِفْ حَسَنَةً نَّزِدْ لَهُۥ فِيهَا حُسْنًا ۚ إِنَّ ٱللَّهَ غَفُورٌ شَكُورٌ

Transliteration dhālika alladhī yubashiru l-lahu ʿibādahu alladhīna āmanū waʿamilū l-ṣāliḥāti qul lā asalukum ʿalayhi ajran illā l-mawadata fī l-qur'bā waman yaqtarif ḥasanatan nazid lahu fīhā ḥus'nan inna l-laha ghafūrun shakūrun

Kannada ಇದು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮ ನಿರ್ವಹಿಸಿದಂತಹ ತನ್ನ ದಾಸರಿಗೆ ಅಲ್ಲಾಹು ನೀಡುತ್ತಿರುವ ಸುವಾರ್ತೆಯಾಗಿದೆ. (ಪ್ರವಾದಿ ಯರೇ!) ತಾವು ಹೇಳಿರಿ; ನಾನು ಈ ಕಾರ್ಯ ಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ. (ಬದಲಾಗಿ) ಸಾಮಿಪ್ಯ ಬಾಂ ಧವ್ಯದ ಪ್ರೀತಿಯನ್ನು ಖಂಡಿತ ಅಪೇಕ್ಷಿಸುತ್ತೇನೆ. ಯಾವನಾದರೂ ಒಂದು ಒಳಿತನ್ನು ಗಳಿಸಿದರೆ ಅದರಲ್ಲಿ ನಾವು ಅವನಿಗೆ ಗುಣವನ್ನು ವರ್ಧಿಸಿಕೊಡುವೆವು. ಖಂಡಿತ, ಅಲ್ಲಾಹು ಕ್ಷಮಾಶೀಲನೂ ಹಿರಿಯ ಕೃತಜ್ಞನೂ ಆಗಿರುತ್ತಾನೆ.

Verse 24

أَمْ يَقُولُونَ ٱفْتَرَىٰ عَلَى ٱللَّهِ كَذِبًا ۖ فَإِن يَشَإِ ٱللَّهُ يَخْتِمْ عَلَىٰ قَلْبِكَ ۗ وَيَمْحُ ٱللَّهُ ٱلْبَـٰطِلَ وَيُحِقُّ ٱلْحَقَّ بِكَلِمَـٰتِهِۦٓ ۚ إِنَّهُۥ عَلِيمٌۢ بِذَاتِ ٱلصُّدُورِ

Transliteration am yaqūlūna if'tarā ʿalā l-lahi kadhiban fa-in yasha-i l-lahu yakhtim ʿalā qalbika wayamḥu l-lahu l-bāṭila wayuḥiqqu l-ḥaqa bikalimātihi innahu ʿalīmun bidhāti l-ṣudūri

Kannada ಈ ವ್ಯಕ್ತಿ ಅಲ್ಲಾಹನ ಹೆಸರಲ್ಲಿ ಸುಳ್ಳಾರೋಪ ಹೊರಿಸುತ್ತಾನೆಂದು ಅವರು ಹೇಳುತ್ತಾರೆಯೆ? ಅಲ್ಲಾಹು ಇಚ್ಛಿಸಿದರೆ ನಿಮ್ಮ ಹೃದಯಕ್ಕೆ ಮುದ್ರೆಯೊತ್ತ ಬಹುದಿತ್ತು. ಅವನು ಮಿಥ್ಯವನ್ನು ಅಳಿಸಿ ಬಿಡುತ್ತಾನೆ. ಸತ್ಯವನ್ನು ತನ್ನ ವಚನಗಳ ಮೂಲಕ ಸ್ಥಿರಪಡಿಸಿ ತೋರಿಸುತ್ತಾನೆ. ಖಂಡಿತ, ಹೃದಯಗಳಲ್ಲಿ ಅವಿತಿರುವುದನ್ನು ಅವನು ಸ್ಪಷ್ಟವಾಗಿ ಅರಿಯುವವನಾಗಿದ್ದಾನೆ.

Verse 25

وَهُوَ ٱلَّذِى يَقْبَلُ ٱلتَّوْبَةَ عَنْ عِبَادِهِۦ وَيَعْفُوا۟ عَنِ ٱلسَّيِّـَٔاتِ وَيَعْلَمُ مَا تَفْعَلُونَ

Transliteration wahuwa alladhī yaqbalu l-tawbata ʿan ʿibādihi wayaʿfū ʿani l-sayiāti wayaʿlamu mā tafʿalūna

Kannada ತನ್ನ ದಾಸರಿಂದ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಪಾಪಗಳನ್ನು ಕ್ಷಮಿಸುವವನು ಅವನೇ. ವಸ್ತುತಃ ನಿಮ್ಮ ಕರ್ಮಗಳ ಅರಿವು ಅವನಿಗಿದೆ.

Verse 26

وَيَسْتَجِيبُ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ وَيَزِيدُهُم مِّن فَضْلِهِۦ ۚ وَٱلْكَـٰفِرُونَ لَهُمْ عَذَابٌ شَدِيدٌ

Transliteration wayastajību alladhīna āmanū waʿamilū l-ṣāliḥāti wayazīduhum min faḍlihi wal-kāfirūna lahum ʿadhābun shadīdun

Kannada ಅವನು ಸತ್ಯವಿಶ್ವಾಸಿಗಳ ಹಾಗೂ ಸತ್ಕರ್ಮಿಗಳ ಪ್ರಾರ್ಥನೆ ಸ್ವೀಕರಿಸುತ್ತಾನೆ ಮತ್ತು ಅವರಿಗೆ ತನ್ನ ಅನುಗ್ರಹದಿಂದ ಇನ್ನಷ್ಟು ಹೆಚ್ಚು ನೀಡುತ್ತಾನೆ. ಇನ್ನು ಸತ್ಯನಿಷೇಧಿಗಳ ವಿಷಯ. ಅವರಿಗಂತೂ ಘೋರ ಯಾತನೆ ಕಾದಿದೆ.

Verse 27

۞ وَلَوْ بَسَطَ ٱللَّهُ ٱلرِّزْقَ لِعِبَادِهِۦ لَبَغَوْا۟ فِى ٱلْأَرْضِ وَلَـٰكِن يُنَزِّلُ بِقَدَرٍ مَّا يَشَآءُ ۚ إِنَّهُۥ بِعِبَادِهِۦ خَبِيرٌۢ بَصِيرٌ

Transliteration walaw basaṭa l-lahu l-riz'qa liʿibādihi labaghaw fī l-arḍi walākin yunazzilu biqadarin mā yashāu innahu biʿibādihi khabīrun baṣīrun

Kannada ಅಲ್ಲಾಹನು ತನ್ನ ಎಲ್ಲ ದಾಸರಿಗೂ ವಿಶಾಲ ಜೀವ ನಾಧಾರ ಕೊಟ್ಟು ಬಿಡುತ್ತಿದ್ದರೆ, ಅವರು ಭೂಮಿಯಲ್ಲಿ ಅನ್ಯಾಯವೆಸಗುತ್ತಿದ್ದರು. ಆದರೆ ಅವನು ಒಂದು ಪ್ರಮಾಣಕ್ಕನುಸಾರವಾಗಿ ತಾನಿಚ್ಛಿಸಿದಷ್ಟು ಇಳಿಸುತ್ತಾನೆ. ಖಂಡಿತ ವಾಗಿಯೂ ಅವನು ತನ್ನ ದಾಸರ ಬಗ್ಗೆ ತಿಳಿದಿರು ವವನೂ ಅವರನ್ನು ನೋಡುತ್ತಿರುವವನೂ ಆಗಿರುವನು.

Verse 28

وَهُوَ ٱلَّذِى يُنَزِّلُ ٱلْغَيْثَ مِنۢ بَعْدِ مَا قَنَطُوا۟ وَيَنشُرُ رَحْمَتَهُۥ ۚ وَهُوَ ٱلْوَلِىُّ ٱلْحَمِيدُ

Transliteration wahuwa alladhī yunazzilu l-ghaytha min baʿdi mā qanaṭū wayanshuru raḥmatahu wahuwa l-waliyu l-ḥamīdu

Kannada ಜನರು ನಿರಾಶರಾಗಿ ಬಿಟ್ಟ ಬಳಿಕ ಮಳೆಗರೆಯು ವವನೂ ತನ್ನ ಕೃಪೆಯನ್ನು ಹರಡುವವನೂ ಅವನೇ. ಪ್ರಶಂಸಾರ್ಹನಾದ ರಕ್ಷಕ ಮಿತ್ರನೂ ಅವನೇ.

Verse 29

وَمِنْ ءَايَـٰتِهِۦ خَلْقُ ٱلسَّمَـٰوَٰتِ وَٱلْأَرْضِ وَمَا بَثَّ فِيهِمَا مِن دَآبَّةٍ ۚ وَهُوَ عَلَىٰ جَمْعِهِمْ إِذَا يَشَآءُ قَدِيرٌ

Transliteration wamin āyātihi khalqu l-samāwāti wal-arḍi wamā batha fīhimā min dābbatin wahuwa ʿalā jamʿihim idhā yashāu qadīrun

Kannada ಆಕಾಶಗಳು ಮತ್ತು ಭೂಮಿಯ ಸೃಷ್ಟಿಯೂ ಅವನು ಇವೆರಡರಲ್ಲಿ ಹರಡಿಸಿರುವ ಈ ಜೀವಿಗಳೂ ಅವನ ನಿದರ್ಶನಗಳಿಗೆ ಸೇರಿದ್ದು. ತಾನಿಚ್ಛಿಸಿದಾಗ ಅವನು ಅವುಗಳನ್ನು ಒಟ್ಟು ಗೂಡಿಸಬಲ್ಲನು.

Verse 30

وَمَآ أَصَـٰبَكُم مِّن مُّصِيبَةٍ فَبِمَا كَسَبَتْ أَيْدِيكُمْ وَيَعْفُوا۟ عَن كَثِيرٍ

Transliteration wamā aṣābakum min muṣībatin fabimā kasabat aydīkum wayaʿfū ʿan kathīrin

Kannada ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ಗಳಿಕೆಯಿಂದಲೇ ಆಗಿದೆ. ಅನೇಕ ಪಾಪಗಳನ್ನು ಅವನು ಹಾಗೆಯೇ ಕ್ಷಮಿಸಿ ಬಿಡುತ್ತಾನೆ.

Verse 31

وَمَآ أَنتُم بِمُعْجِزِينَ فِى ٱلْأَرْضِ ۖ وَمَا لَكُم مِّن دُونِ ٱللَّهِ مِن وَلِىٍّ وَلَا نَصِيرٍ

Transliteration wamā antum bimuʿ'jizīna fī l-arḍi wamā lakum min dūni l-lahi min waliyyin walā naṣīrin

Kannada ನೀವು ಭೂಮಿಯಲ್ಲಿ ಅವನನ್ನು ಮಣಿಸಲಾರಿರಿ. ಮತ್ತು ನಿಮಗೆ ಅಲ್ಲಾಹನ ವಿರುದ್ಧ ಯಾವುದೇ ರಕ್ಷಕನಾಗಲಿ ಸಹಾಯಕನಾಗಲಿ ಇಲ್ಲ.

Verse 32

وَمِنْ ءَايَـٰتِهِ ٱلْجَوَارِ فِى ٱلْبَحْرِ كَٱلْأَعْلَـٰمِ

Transliteration wamin āyātihi l-jawāri fī l-baḥri kal-aʿlāmi

Kannada ಸಮುದ್ರದಲ್ಲಿ ಚಲಿಸುವ ಬೆಟ್ಟಗಳಂಥ ಹಡಗುಗಳು ಅವನ ನಿದರ್ಶನಕ್ಕೆ ಸೇರಿದೆ.

Verse 33

إِن يَشَأْ يُسْكِنِ ٱلرِّيحَ فَيَظْلَلْنَ رَوَاكِدَ عَلَىٰ ظَهْرِهِۦٓ ۚ إِنَّ فِى ذَٰلِكَ لَـَٔايَـٰتٍ لِّكُلِّ صَبَّارٍ شَكُورٍ

Transliteration in yasha yus'kini l-rīḥa fayaẓlalna rawākida ʿalā ẓahrihi inna fī dhālika laāyātin likulli ṣabbārin shakūrin

Kannada ಅಲ್ಲಾಹನು ತಾನಿಚ್ಛಿಸಿದಾಗ ಗಾಳಿಯನ್ನು ಸ್ತಬ್ದಗೊಳಿಸಬಲ್ಲನು. ಆಗ ಗಾಳಿಯು ಸಮುದ್ರದ ಮೇಲೆ ನಿಂತಲ್ಲೇ ನಿಂತು ಬಿಡುವುದು. ತೀವ್ರ ಸಹನಶೀಲ ಹಾಗೂ ತೀವ್ರ ಕೃತಜ್ಞನಿಗೆ ಇದರಲ್ಲಿ ದೊಡ್ಡ ನಿದರ್ಶನಗಳಿವೆ.

Verse 34

أَوْ يُوبِقْهُنَّ بِمَا كَسَبُوا۟ وَيَعْفُ عَن كَثِيرٍ

Transliteration aw yūbiq'hunna bimā kasabū wayaʿfu ʿan kathīrin

Kannada ಅಥವಾ ಅವರ ಕೆಲವೊಂದು ದುಷ್ಕøತ್ಯಗಳ ಫಲವಾಗಿ ಅವರನ್ನು ಮುಳುಗಿಸಿ ಬಿಡಲೂಬ ಹುದು. ಅವರ ಪೈಕಿ ಹೆಚ್ಚಿನವರಿಗೆ ಕ್ಷಮಿಸಲೂಬಹುದು.

Verse 35

وَيَعْلَمَ ٱلَّذِينَ يُجَـٰدِلُونَ فِىٓ ءَايَـٰتِنَا مَا لَهُم مِّن مَّحِيصٍ

Transliteration wayaʿlama alladhīna yujādilūna fī āyātinā mā lahum min maḥīṣin

Kannada ಆಗ ನಮ್ಮ ನಿದರ್ಶನಗಳ ಕುರಿತು ಜಗಳಾಡುವವರಿಗೆ, ತಮಗೆಲ್ಲೂ ಅಭಯ ಸ್ಥಾನವಿಲ್ಲವೆಂದು ತಿಳಿದು ಬರುವುದು.

Verse 36

فَمَآ أُوتِيتُم مِّن شَىْءٍ فَمَتَـٰعُ ٱلْحَيَوٰةِ ٱلدُّنْيَا ۖ وَمَا عِندَ ٱللَّهِ خَيْرٌ وَأَبْقَىٰ لِلَّذِينَ ءَامَنُوا۟ وَعَلَىٰ رَبِّهِمْ يَتَوَكَّلُونَ

Transliteration famā ūtītum min shayin famatāʿu l-ḥayati l-dun'yā wamā ʿinda l-lahi khayrun wa-abqā lilladhīna āmanū waʿalā rabbihim yatawakkalūna

Kannada ನಿಮಗೆ ನೀಡಲಾಗಿರುವ ಪ್ರತಿಯೊಂದು ವಸ್ತುವು ಕೇವಲ ಇಹಲೋಕದ ನಶ್ವರ ಜೀವನ ಸಾಧನಗಳಾಗಿವೆ. ಅಲ್ಲಾಹನ ಬಳಿಯಲ್ಲಿರುವುದೆಲ್ಲ ಉತ್ತಮವೂ ಶಾಶ್ವತವೂ ಆಗಿರುತ್ತದೆ. ಅದು ಇರುವುದು ಸತ್ಯವಿಶ್ವಾಸಿಗಳಿಗಾಗಿ ಮತ್ತು ತಮ್ಮ ಪ್ರಭುವಿನ ಮೇಲೆ ಭರವಸೆ ಇಡುವವರಿಗಾಗಿ.

Verse 37

وَٱلَّذِينَ يَجْتَنِبُونَ كَبَـٰٓئِرَ ٱلْإِثْمِ وَٱلْفَوَٰحِشَ وَإِذَا مَا غَضِبُوا۟ هُمْ يَغْفِرُونَ

Transliteration wa-alladhīna yajtanibūna kabāira l-ith'mi wal-fawāḥisha wa-idhā mā ghaḍibū hum yaghfirūna

Kannada ಅವರು ದೊಡ್ಡ ದೊಡ್ಡ ಪಾಪಗಳಿಂದ ಮತ್ತು ಅಶ್ಲೀಲ ಕಾರ್ಯಗಳಿಂದ ದೂರವಿರುವವರೂ ಸಿಟ್ಟು ಬಂದಾಗ ಕ್ಷಮಿಸಿ ಬಿಡುವವರೂ ಆಗಿರುತ್ತಾರೆ.

Verse 38

وَٱلَّذِينَ ٱسْتَجَابُوا۟ لِرَبِّهِمْ وَأَقَامُوا۟ ٱلصَّلَوٰةَ وَأَمْرُهُمْ شُورَىٰ بَيْنَهُمْ وَمِمَّا رَزَقْنَـٰهُمْ يُنفِقُونَ

Transliteration wa-alladhīna is'tajābū lirabbihim wa-aqāmū l-ṣalata wa-amruhum shūrā baynahum wamimmā razaqnāhum yunfiqūna

Kannada ಅವರು ತಮ್ಮ ಪ್ರಭುವಿನ ಆಜ್ಞೆಗಳನ್ನು ಪಾಲಿ ಸುತ್ತಾರೆ, ನಮಾಝನ್ನು ಸಂಸ್ಥಾಪಿಸುತ್ತಾರೆ, ತಮ್ಮ ವ್ಯವಹಾರಗಳನ್ನು ಪರಸ್ಪರ ಸಮಾ ಲೋಚನೆಯಿಂದ ನಡೆಸುತ್ತಾರೆ, ನಾವು ಅವರಿಗೆ ಕೊಟ್ಟಿರುವ ಜೀವನಾಧಾರಗಳಿಂದ ಖರ್ಚು ಮಾಡುತ್ತಾರೆ.

Verse 39

وَٱلَّذِينَ إِذَآ أَصَابَهُمُ ٱلْبَغْىُ هُمْ يَنتَصِرُونَ

Transliteration wa-alladhīna idhā aṣābahumu l-baghyu hum yantaṣirūna

Kannada ಮತ್ತು ಅವರಿಗೇನಾದರೂ ಅತಿರೇಕ ಸಂಭವಿಸಿದರೆ ಅದನ್ನು ಪ್ರತಿರೋಧಿಸುತ್ತಾರೆ.

Verse 40

وَجَزَٰٓؤُا۟ سَيِّئَةٍ سَيِّئَةٌ مِّثْلُهَا ۖ فَمَنْ عَفَا وَأَصْلَحَ فَأَجْرُهُۥ عَلَى ٱللَّهِ ۚ إِنَّهُۥ لَا يُحِبُّ ٱلظَّـٰلِمِينَ

Transliteration wajazāu sayyi-atin sayyi-atun mith'luhā faman ʿafā wa-aṣlaḥa fa-ajruhu ʿalā l-lahi innahu lā yuḥibbu l-ẓālimīna

Kannada ಕೆಡುಕಿಗೆ ಅದಕ್ಕೆ ಸಮಾನವಾದ ಕೆಡುಕು ಪ್ರತಿಕ್ರಮವಾಗಿರುತ್ತದೆ. ಇನ್ನು ಯಾರಾದರೂ ಕ್ಷಮಿಸಿಬಿಟ್ಟರೆ ಹಾಗೂ ಸುಧಾರಿಸಿಕೊಂಡರೆ ಅವನ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ. ನಿಶ್ಚಯವಾಗಿಯೂ ಅವನು ಅಕ್ರಮಿಗಳನ್ನು ಮೆಚ್ಚುವುದಿಲ್ಲ.

Verse 41

وَلَمَنِ ٱنتَصَرَ بَعْدَ ظُلْمِهِۦ فَأُو۟لَـٰٓئِكَ مَا عَلَيْهِم مِّن سَبِيلٍ

Transliteration walamani intaṣara baʿda ẓul'mihi fa-ulāika mā ʿalayhim min sabīlin

Kannada ಯಾರು ತಾನು ಅಕ್ರಮಕ್ಕೊಳಗಾದ ಬಳಿಕ ಪ್ರತೀಕಾರ ಕ್ರಮ ಕೈಗೊಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಯಾವ ದಾರಿಯೂ ಇಲ್ಲ.

Verse 42

إِنَّمَا ٱلسَّبِيلُ عَلَى ٱلَّذِينَ يَظْلِمُونَ ٱلنَّاسَ وَيَبْغُونَ فِى ٱلْأَرْضِ بِغَيْرِ ٱلْحَقِّ ۚ أُو۟لَـٰٓئِكَ لَهُمْ عَذَابٌ أَلِيمٌ

Transliteration innamā l-sabīlu ʿalā alladhīna yaẓlimūna l-nāsa wayabghūna fī l-arḍi bighayri l-ḥaqi ulāika lahum ʿadhābun alīmun

Kannada ವಾಸ್ತವದಲ್ಲಿ ಇತರರ ಮೇಲೆ ನ್ಯಾಯವಿಲ್ಲದೆ ಅಕ್ರಮವೆಸಗುವವರು ಮತ್ತು ಭೂಮಿಯಲ್ಲಿ ಅತಿರೇಕವೆಸಗುವವರ ಮೇಲೆ ಮಾತ್ರ ಪ್ರತಿಕ್ರಮಕ್ಕೆ ದಾರಿಯಿದೆ. ಅಂತಹವರಿಗೆ ವೇದನಾಯುಕ್ತ ಶಿಕ್ಷೆ ಇದೆ.

Verse 43

وَلَمَن صَبَرَ وَغَفَرَ إِنَّ ذَٰلِكَ لَمِنْ عَزْمِ ٱلْأُمُورِ

Transliteration walaman ṣabara waghafara inna dhālika lamin ʿazmi l-umūri

Kannada ಆದರೆ ಯಾರಾದರೂ ಸಹನೆಯಿಂದ ವರ್ತಿಸಿದರೆ ಹಾಗೂ ಕ್ಷಮಿಸಿದರೆ ಇದೊಂದು ಮನೋದಾಡ್ರ್ಯತೆಯ ಕಾರ್ಯಗಳಲ್ಲಾಗುವುದು .

Verse 44

وَمَن يُضْلِلِ ٱللَّهُ فَمَا لَهُۥ مِن وَلِىٍّ مِّنۢ بَعْدِهِۦ ۗ وَتَرَى ٱلظَّـٰلِمِينَ لَمَّا رَأَوُا۟ ٱلْعَذَابَ يَقُولُونَ هَلْ إِلَىٰ مَرَدٍّ مِّن سَبِيلٍ

Transliteration waman yuḍ'lili l-lahu famā lahu min waliyyin min baʿdihi watarā l-ẓālimīna lammā ra-awū l-ʿadhāba yaqūlūna hal ilā maraddin min sabīlin

Kannada ಯಾರನ್ನು ಅಲ್ಲಾಹನು ಪಥಭ್ರಷ್ಟಗೊಳಿಸಿ ಬಿಡುವನೋ ಆ ಬಳಿಕ ಅವನನ್ನು ರಕ್ಷಿಸಬಲ್ಲವರು ಯಾರೂ ಇಲ್ಲ. ಅಕ್ರಮಿಗಳು ಶಿಕ್ಷೆಯನ್ನು ಕಂಡಾಗ, ‘ಇನ್ನು (ಇಹಲೋಕಕ್ಕೆ) ಮರಳಿ ಹೋಗಲು ದಾರಿಯೇನಾದರೂ ಇದೆಯೇ?’ ಎಂದು ಹೇಳುವುದನ್ನು ನೀವು ಕಾಣುವಿರಿ.

Verse 45

وَتَرَىٰهُمْ يُعْرَضُونَ عَلَيْهَا خَـٰشِعِينَ مِنَ ٱلذُّلِّ يَنظُرُونَ مِن طَرْفٍ خَفِىٍّ ۗ وَقَالَ ٱلَّذِينَ ءَامَنُوٓا۟ إِنَّ ٱلْخَـٰسِرِينَ ٱلَّذِينَ خَسِرُوٓا۟ أَنفُسَهُمْ وَأَهْلِيهِمْ يَوْمَ ٱلْقِيَـٰمَةِ ۗ أَلَآ إِنَّ ٱلظَّـٰلِمِينَ فِى عَذَابٍ مُّقِيمٍ

Transliteration watarāhum yuʿ'raḍūna ʿalayhā khāshiʿīna mina l-dhuli yanẓurūna min ṭarfin khafiyyin waqāla alladhīna āmanū inna l-khāsirīna alladhīna khasirū anfusahum wa-ahlīhim yawma l-qiyāmati alā inna l-ẓālimīna fī ʿadhābin muqīmin

Kannada ಅವಮಾನಿತರಾಗಿ ತಲೆ ತಗ್ಗಿಸುತ್ತ ನರಕಾಗ್ನಿಯ ಮುಂದೆ ಅವರನ್ನು ಪ್ರದರ್ಶಿಸಲ್ಪಡುವುದನ್ನೂ ಅದನ್ನು ಕುಡಿನೋಟದೊಂದಿಗೆ ಕದ್ದು ನೋಡು ವುದನ್ನೂ ನೀವು ಕಾಣುವಿರಿ. ಪುನರುತ್ಥಾನದ ಈ ದಿನ ತಮ್ಮನ್ನೂ ತಮ್ಮ ಸಂಬಂಧಿಕರನ್ನೂ ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾದ ನಷ್ಟಕ್ಕೊಳಗಾದವರೆಂದು ಸತ್ಯವಿಶ್ವಾಸಿಗಳು ಆಗ ಹೇಳುವರು. ತಿಳಿಯಿರಿ, ಅಕ್ರಮಿಗಳು ಶಾಶ್ವತ ವಾದ ಶಿಕ್ಷೆಯಲ್ಲಿರುವರು.

Verse 46

وَمَا كَانَ لَهُم مِّنْ أَوْلِيَآءَ يَنصُرُونَهُم مِّن دُونِ ٱللَّهِ ۗ وَمَن يُضْلِلِ ٱللَّهُ فَمَا لَهُۥ مِن سَبِيلٍ

Transliteration wamā kāna lahum min awliyāa yanṣurūnahum min dūni l-lahi waman yuḍ'lili l-lahu famā lahu min sabīlin

Kannada ಅಲ್ಲಾಹನ ಹೊರತಾಗಿ ಅವರ ಸಹಾಯಕ್ಕೆ ಬರಬಲ್ಲ ಯಾವ ರಕ್ಷಕರೂ ಅವರಿಗಿರಲಾರರು. ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸಿರು ವನೋ ಅವನ ಪಾಲಿಗೆ ರಕ್ಷಣೆಯ ಯಾವ ಮಾರ್ಗವೂ ಇಲ್ಲ.

Verse 47

ٱسْتَجِيبُوا۟ لِرَبِّكُم مِّن قَبْلِ أَن يَأْتِىَ يَوْمٌ لَّا مَرَدَّ لَهُۥ مِنَ ٱللَّهِ ۚ مَا لَكُم مِّن مَّلْجَإٍ يَوْمَئِذٍ وَمَا لَكُم مِّن نَّكِيرٍ

Transliteration is'tajībū lirabbikum min qabli an yatiya yawmun lā maradda lahu mina l-lahi mā lakum min malja-in yawma-idhin wamā lakum min nakīrin

Kannada ಯಾವ ಖಿಯಾಮತ್ ದಿನದ ರದ್ದತಿಗೆ ಅಲ್ಲಾಹನು ಯಾವುದೇ ಅವಕಾಶವನ್ನಿಟ್ಟಿಲ್ಲವೋ ಆ ದಿನವು ಬರುವುದಕ್ಕೆ ಮುಂಚೆ ನಿಮ್ಮ ಪ್ರಭುವಿನ ಕರೆಗೆ ಓಗೊಡಿರಿ. ಅಂದು ನಿಮಗಾಗಿ ಯಾವುದೇ ಅಭಯ ಸ್ಥಾನ ಇರಲಾರದು. ನಿಮ್ಮ ಅಪರಾಧಗಳನ್ನು ನಿರಾಕರಿಸಲೂ ನಿಮಗಾಗದು.

Verse 48

فَإِنْ أَعْرَضُوا۟ فَمَآ أَرْسَلْنَـٰكَ عَلَيْهِمْ حَفِيظًا ۖ إِنْ عَلَيْكَ إِلَّا ٱلْبَلَـٰغُ ۗ وَإِنَّآ إِذَآ أَذَقْنَا ٱلْإِنسَـٰنَ مِنَّا رَحْمَةً فَرِحَ بِهَا ۖ وَإِن تُصِبْهُمْ سَيِّئَةٌۢ بِمَا قَدَّمَتْ أَيْدِيهِمْ فَإِنَّ ٱلْإِنسَـٰنَ كَفُورٌ

Transliteration fa-in aʿraḍū famā arsalnāka ʿalayhim ḥafīẓan in ʿalayka illā l-balāghu wa-innā idhā adhaqnā l-insāna minnā raḥmatan fariḥa bihā wa-in tuṣib'hum sayyi-atun bimā qaddamat aydīhim fa-inna l-insāna kafūrun

Kannada ಹೀಗಿದ್ದೂ ಇವರು ವಿಮುಖರಾದರೆ (ಸಂದೇಶ ವಾಹಕರೇ,) ನಾವು ನಿಮ್ಮನ್ನು ಇವರ ಕಾವಲುಗಾರ ನಾಗಿ ಕಳುಹಿಸಿಲ್ಲ. ದೌತ್ಯವನ್ನು ತಲುಪಿಸಿ ಬಿಡುವ ಹೊಣೆಗಾರಿಕೆ ಮಾತ್ರ ನಿಮ್ಮ ಮೇಲಿದೆ. ನಾವು ಮನುಷ್ಯನಿಗೆ ನಮ್ಮ ಕಡೆಯಿಂದ ಕೃಪೆಯ ಸವಿಯನ್ನು ಉಣಿಸಿದಾಗ ಅವನು ಅದರಿಂದ ಹರ್ಷಗೊಳ್ಳುತ್ತಾನೆ. ಆದರೆ ಅವರ ಕರಗಳು ಸ್ವತಃ ಮಾಡಿದ ಕರ್ಮಗಳ ಫಲವಾಗಿ ಯಾವುದೇ ವಿಪತ್ತು ಎರಗಿ ಬಿಟ್ಟಾಗ ಅವರು ಮಹಾ ಕೃತಘ್ನರಾಗಿ ಬಿಡುತ್ತಾರೆ.

Verse 49

لِّلَّهِ مُلْكُ ٱلسَّمَـٰوَٰتِ وَٱلْأَرْضِ ۚ يَخْلُقُ مَا يَشَآءُ ۚ يَهَبُ لِمَن يَشَآءُ إِنَـٰثًا وَيَهَبُ لِمَن يَشَآءُ ٱلذُّكُورَ

Transliteration lillahi mul'ku l-samāwāti wal-arḍi yakhluqu mā yashāu yahabu liman yashāu ināthan wayahabu liman yashāu l-dhukūra

Kannada ಆಕಾಶಗಳು ಮತ್ತು ಭೂಮಿಯ ಒಡೆತನ ಅಲ್ಲಾ ಹನದ್ದು. ತಾನಿಚ್ಛಿಸಿದ್ದನ್ನು ಅವನು ಸೃಷ್ಟಿಸುತ್ತಾನೆ. ತಾನಿಚ್ಛಿಸಿದವರಿಗೆ ಹೆಣ್ಣು ಮಕ್ಕಳನ್ನು ಕೊಡು ತ್ತಾನೆ. ತಾನಿಚ್ಛಿಸಿದವರಿಗೆ ಗಂಡು ಮಕ್ಕಳನ್ನು ಕೊಡುತ್ತಾನೆ.

Verse 50

أَوْ يُزَوِّجُهُمْ ذُكْرَانًا وَإِنَـٰثًا ۖ وَيَجْعَلُ مَن يَشَآءُ عَقِيمًا ۚ إِنَّهُۥ عَلِيمٌ قَدِيرٌ

Transliteration aw yuzawwijuhum dhuk'rānan wa-ināthan wayajʿalu man yashāu ʿaqīman innahu ʿalīmun qadīrun

Kannada ತಾನಿಚ್ಛಿಸಿದವರಿಗೆ ಗಂಡು-ಹೆಣ್ಣುಗಳೆರಡನ್ನೂ ಸೇರಿಸಿಕೊಡುತ್ತಾನೆ, ತಾನಿಚ್ಛಿಸಿದವರನ್ನು ಬಂಜೆಯಾಗಿ ಮಾಡುತ್ತಾನೆ. ಅವನು ಸರ್ವಜ್ಞನೂ ಸರ್ವ ಸಮರ್ಥನೂ ಆಗಿರುತ್ತಾನೆ.

Verse 51

۞ وَمَا كَانَ لِبَشَرٍ أَن يُكَلِّمَهُ ٱللَّهُ إِلَّا وَحْيًا أَوْ مِن وَرَآئِ حِجَابٍ أَوْ يُرْسِلَ رَسُولًا فَيُوحِىَ بِإِذْنِهِۦ مَا يَشَآءُ ۚ إِنَّهُۥ عَلِىٌّ حَكِيمٌ

Transliteration wamā kāna libasharin an yukallimahu l-lahu illā waḥyan aw min warāi ḥijābin aw yur'sila rasūlan fayūḥiya bi-idh'nihi mā yashāu innahu ʿaliyyun ḥakīmun

Kannada ಮನುಷ್ಯನೊಂದಿಗೆ ಅಲ್ಲಾಹನು ಖುದ್ದು ಮಾತಾ ಡುವ ಸಂಭವವಿಲ್ಲ. ಬೋಧನೆಯ ರೂಪದಲ್ಲಿ ಅಥವಾ ತೆರೆಯಮರೆಯಿಂದ ಅಥವಾ ಓರ್ವ ದೂತನನ್ನು ಕಳುಹಿಸಿ ಅಲ್ಲಾಹನ ಅನುಮತಿಯಂತೆ ಅವನಿಚ್ಚಿಸಿದ್ದನ್ನು ಆ ದೂತರು ಬೋಧನೆ ಕೊಡುವ ರೂಪದಲ್ಲಿ ಹೊರತು. ಅವನು ಮಹೋನ್ನತನೂ ಮಹಾಯುಕ್ತಿವಂತನೂ ಆಗಿರುತ್ತಾನೆ.

Verse 52

وَكَذَٰلِكَ أَوْحَيْنَآ إِلَيْكَ رُوحًا مِّنْ أَمْرِنَا ۚ مَا كُنتَ تَدْرِى مَا ٱلْكِتَـٰبُ وَلَا ٱلْإِيمَـٰنُ وَلَـٰكِن جَعَلْنَـٰهُ نُورًا نَّهْدِى بِهِۦ مَن نَّشَآءُ مِنْ عِبَادِنَا ۚ وَإِنَّكَ لَتَهْدِىٓ إِلَىٰ صِرَٰطٍ مُّسْتَقِيمٍ

Transliteration wakadhālika awḥaynā ilayka rūḥan min amrinā mā kunta tadrī mā l-kitābu walā l-īmānu walākin jaʿalnāhu nūran nahdī bihi man nashāu min ʿibādinā wa-innaka latahdī ilā ṣirāṭin mus'taqīmin

Kannada ಇದೇ ರೀತಿಯಲ್ಲಿ ನಿಮಗೆ ನಾವು ನಮ್ಮ ಅಪ್ಪಣೆ ಯಿಂದ ಒಂದು ಆತ್ಮ ಚೈತನ್ಯದಾಯಕ ದಿವ್ಯ ಸಂದೇಶವನ್ನು ನೀಡಿರುತ್ತೇವೆ. ವೇದ ಗ್ರಂಥವಾಗಲಿ, ಸತ್ಯವಿಶ್ವಾಸವಾಗಲಿ ಏನೆಂದು ನಿಮಗೆ ಗೊತ್ತಿರಲಿಲ್ಲ . ಆದರೆ ಅದನ್ನು ನಾವು ಒಂದು ಪ್ರಕಾಶವಾಗಿ ಮಾಡಿದೆವು. ಆ ಮೂಲಕ ನಾವು ನಮ್ಮ ದಾಸರ ಪೈಕಿ ನಾವಿಚ್ಛಿಸುವವರಿಗೆ ದಾರಿ ತೋರಿಸುತ್ತೇವೆ. ನಿಸ್ಸಂದೇಹವಾಗಿಯೂ ನೀವು ನೇರಮಾರ್ಗದ ಕಡೆಗೆ ಮಾರ್ಗದರ್ಶನ ಮಾಡಿಸುತ್ತಿರುವಿರಿ.

Verse 53

صِرَٰطِ ٱللَّهِ ٱلَّذِى لَهُۥ مَا فِى ٱلسَّمَـٰوَٰتِ وَمَا فِى ٱلْأَرْضِ ۗ أَلَآ إِلَى ٱللَّهِ تَصِيرُ ٱلْأُمُورُ

Transliteration ṣirāṭi l-lahi alladhī lahu mā fī l-samāwāti wamā fī l-arḍi alā ilā l-lahi taṣīru l-umūru

Kannada ಆಗಸಗಳು ಮತ್ತು ಭೂಮಿಯಲ್ಲಿರುವ ಸರ್ವದರ ಮಾಲಿಕನಾದ ಅಲ್ಲಾಹನ ಮಾರ್ಗದೆಡೆಗೆ. ತಿಳಿಯಿರಿ; ಎಲ್ಲ ಕಾರ್ಯಗಳೂ ಅಲ್ಲಾಹನೆಡೆಗೇ ಮರಳುತ್ತವೆ.

Read Surah Ash-Shuraa in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.