MyDugsiStart learning

Surah Al-Anfal in Kannada: translation and audio

Surah 8 · الأنفال · The Spoils of War · 75 verses

Surah Al-Anfal verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Anfal word by word in English.

Verse 1

يَسْـَٔلُونَكَ عَنِ ٱلْأَنفَالِ ۖ قُلِ ٱلْأَنفَالُ لِلَّهِ وَٱلرَّسُولِ ۖ فَٱتَّقُوا۟ ٱللَّهَ وَأَصْلِحُوا۟ ذَاتَ بَيْنِكُمْ ۖ وَأَطِيعُوا۟ ٱللَّهَ وَرَسُولَهُۥٓ إِن كُنتُم مُّؤْمِنِينَ

Transliteration yasalūnaka ʿani l-anfāli quli l-anfālu lillahi wal-rasūli fa-ittaqū l-laha wa-aṣliḥū dhāta baynikum wa-aṭīʿū l-laha warasūlahu in kuntum mu'minīna

Kannada (ನಬಿಯೇ) ಅವರು ನಿಮ್ಮೊಡನೆ ಯುದ್ಧಾಸ್ತಿಯ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ಯುದ್ಧಾಸ್ತಿಯು ಅಲ್ಲಾಹು ಮತ್ತು ಅವನ ರಸೂಲರದ್ದು. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ಸಂಬಂಧಗಳನ್ನು ಸರಿಪಡಿಸಿರಿ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹು ಹಾಗೂ ಅವನ ರಸೂಲರನ್ನು ಅನುಸರಿಸಿರಿ.

Verse 2

إِنَّمَا ٱلْمُؤْمِنُونَ ٱلَّذِينَ إِذَا ذُكِرَ ٱللَّهُ وَجِلَتْ قُلُوبُهُمْ وَإِذَا تُلِيَتْ عَلَيْهِمْ ءَايَـٰتُهُۥ زَادَتْهُمْ إِيمَـٰنًا وَعَلَىٰ رَبِّهِمْ يَتَوَكَّلُونَ

Transliteration innamā l-mu'minūna alladhīna idhā dhukira l-lahu wajilat qulūbuhum wa-idhā tuliyat ʿalayhim āyātuhu zādathum īmānan waʿalā rabbihim yatawakkalūna

Kannada ನಿಜವಾಗಿಯೂ ಸತ್ಯವಿಶ್ವಾಸಿಗಳು ಯಾರೆಂದರೆ ಅಲ್ಲಾಹನ ಬಗ್ಗೆ ಪ್ರಸ್ತಾಪಿಸಲಾದರೆ ಅವರ ಹೃದಯ ನಡುಗುವುದು. ಅವರ ಮುಂದೆ ಅಲ್ಲಾಹನ ನಿದರ್ಶನಗಳನ್ನು ಓದಲ್ಪಟ್ಟಾಗ ಅದು ಅವರ ವಿಶ್ವಾಸವನ್ನು ವೃದ್ಧಿಗೊಳಿಸುವುದು ಮತ್ತು ಅವರು ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು.

Verse 3

ٱلَّذِينَ يُقِيمُونَ ٱلصَّلَوٰةَ وَمِمَّا رَزَقْنَـٰهُمْ يُنفِقُونَ

Transliteration alladhīna yuqīmūna l-ṣalata wamimmā razaqnāhum yunfiqūna

Kannada ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ನೀಡಿದುದರಿಂದ ಖರ್ಚು ಮಾಡುವವರು.

Verse 4

أُو۟لَـٰٓئِكَ هُمُ ٱلْمُؤْمِنُونَ حَقًّا ۚ لَّهُمْ دَرَجَـٰتٌ عِندَ رَبِّهِمْ وَمَغْفِرَةٌ وَرِزْقٌ كَرِيمٌ

Transliteration ulāika humu l-mu'minūna ḥaqqan lahum darajātun ʿinda rabbihim wamaghfiratun wariz'qun karīmun

Kannada ಇಂಥವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗಾಗಿ ಅವರ ಪ್ರಭುವಿನ ಬಳಿ ಉನ್ನತ ಸ್ಥಾನಗಳಿವೆ. ಪಾಪ ಮುಕ್ತಿಯೂ ಅತ್ಯುತ್ತಮ ಜೀವನಾನುಕೂಲವೂ ಇದೆ.

Verse 5

كَمَآ أَخْرَجَكَ رَبُّكَ مِنۢ بَيْتِكَ بِٱلْحَقِّ وَإِنَّ فَرِيقًا مِّنَ ٱلْمُؤْمِنِينَ لَكَـٰرِهُونَ

Transliteration kamā akhrajaka rabbuka min baytika bil-ḥaqi wa-inna farīqan mina l-mu'minīna lakārihūna

Kannada ನಿಮ್ಮ ಪ್ರಭು ನಿಮ್ಮನ್ನು ನಿಮ್ಮ ನಿವಾಸದಿಂದ ನ್ಯಾಯೋಚಿತವಾಗಿ ಹೊರ ತಂದಿದ್ದನು. ವಿಶ್ವಾಸಿಗಳ ಪೈಕಿ ಒಂದು ಪಂಗಡಕ್ಕೆ ಇದು ಅಪ್ರಿಯವಾಗಿತ್ತು.

Verse 6

يُجَـٰدِلُونَكَ فِى ٱلْحَقِّ بَعْدَ مَا تَبَيَّنَ كَأَنَّمَا يُسَاقُونَ إِلَى ٱلْمَوْتِ وَهُمْ يَنظُرُونَ

Transliteration yujādilūnaka fī l-ḥaqi baʿdamā tabayyana ka-annamā yusāqūna ilā l-mawti wahum yanẓurūna

Kannada ಆ ನ್ಯಾಯವು ಸ್ಪಷ್ಟವಾಗಿದ್ದೂ ಕೂಡ ಅವರು ಅದರ ಔಚಿತ್ಯದ ಕುರಿತು ನಿಮ್ಮೊಂದಿಗೆ ತರ್ಕಿಸುತ್ತಿದ್ದರು. ಅವರನ್ನು ನೋಡುತ್ತಿದ್ದಂತೆಯೇ ಮರಣಕ್ಕೆ ಎಳೆದೊಯ್ಯುತ್ತಿರುವಂತಾಗಿದ್ದರು.

Verse 7

وَإِذْ يَعِدُكُمُ ٱللَّهُ إِحْدَى ٱلطَّآئِفَتَيْنِ أَنَّهَا لَكُمْ وَتَوَدُّونَ أَنَّ غَيْرَ ذَاتِ ٱلشَّوْكَةِ تَكُونُ لَكُمْ وَيُرِيدُ ٱللَّهُ أَن يُحِقَّ ٱلْحَقَّ بِكَلِمَـٰتِهِۦ وَيَقْطَعَ دَابِرَ ٱلْكَـٰفِرِينَ

Transliteration wa-idh yaʿidukumu l-lahu iḥ'dā l-ṭāifatayni annahā lakum watawaddūna anna ghayra dhāti l-shawkati takūnu lakum wayurīdu l-lahu an yuḥiqqa l-ḥaqa bikalimātihi wayaqṭaʿa dābira l-kāfirīna

Kannada ಎರಡು ತಂಡಗಳ ಪೈಕಿ ಒಂದು ನಿಮಗೆ ಸಿಗು ವುದೆಂದು ಅಲ್ಲಾಹು ನಿಮಗೆ ವಾಗ್ದಾನ ಮಾಡು ತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ನಿರಾಯುಧ ತಂಡವು ನಿಮಗೆ ಸಿಗಬೇಕೆಂದು ನೀವು ಇಚ್ಛಿಸುತ್ತಿದ್ದಿರಿ. ಆದರೆ ಅಲ್ಲಾಹು ಇಚ್ಛಿಸಿದ್ದು ತನ್ನ ಪೂರ್ವವಚನಗಳಿಂದ ಸತ್ಯವಾದುದನ್ನು ನಿಜ ಮಾಡಿ ತೋರಿಸಬೇಕೆಂದೂ ಸತ್ಯನಿಷೇಧಿಗಳ ಬುಡವನ್ನೇ ಕಿತ್ತು ಹಾಕಬೇಕೆಂದೂ ಆಗಿತ್ತು .

Verse 8

لِيُحِقَّ ٱلْحَقَّ وَيُبْطِلَ ٱلْبَـٰطِلَ وَلَوْ كَرِهَ ٱلْمُجْرِمُونَ

Transliteration liyuḥiqqa l-ḥaqa wayub'ṭila l-bāṭila walaw kariha l-muj'rimūna

Kannada ಇದು ಅಪರಾಧಿಗಳಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸತ್ಯವನ್ನು ಸತ್ಯಗೊಳಿಸಲಿಕ್ಕೂ ಮಿಥ್ಯವನ್ನು ಮಿಥ್ಯಗೊಳಿಸಲಿಕ್ಕೂ ಆಗಿತ್ತು.

Verse 9

إِذْ تَسْتَغِيثُونَ رَبَّكُمْ فَٱسْتَجَابَ لَكُمْ أَنِّى مُمِدُّكُم بِأَلْفٍ مِّنَ ٱلْمَلَـٰٓئِكَةِ مُرْدِفِينَ

Transliteration idh tastaghīthūna rabbakum fa-is'tajāba lakum annī mumiddukum bi-alfin mina l-malāikati mur'difīna

Kannada ನೀವು ನಿಮ್ಮ ಪ್ರಭುವಿನೊಡನೆ ಸಹಾಯ ಬೇಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ನಾನು ಒಂದು ಸಾವಿರ ದೇವಚರರನ್ನು ಸರದಿ ಪ್ರಕಾರ ಕಳುಹಿಸಿ ಕೊಟ್ಟು ನಿಮಗೆ ಸಹಾಯ ಮಾಡುತ್ತೇನೆಂದು ಅವನು ಉತ್ತರಿಸಿದನು.

Verse 10

وَمَا جَعَلَهُ ٱللَّهُ إِلَّا بُشْرَىٰ وَلِتَطْمَئِنَّ بِهِۦ قُلُوبُكُمْ ۚ وَمَا ٱلنَّصْرُ إِلَّا مِنْ عِندِ ٱللَّهِ ۚ إِنَّ ٱللَّهَ عَزِيزٌ حَكِيمٌ

Transliteration wamā jaʿalahu l-lahu illā bush'rā walitaṭma-inna bihi qulūbukum wamā l-naṣru illā min ʿindi l-lahi inna l-laha ʿazīzun ḥakīmun

Kannada ಈ ವ್ಯವಸ್ಥೆಯನ್ನು ಮಾಡಿದ್ದು ನಿಮಗೆ ಸುವಾರ್ತೆಗೆ ಹಾಗೂ ಅದರಿಂದ ನಿಮ್ಮ ಮನಸ್ಸಿನ ಶಾಂತಿಗೆ ಮಾತ್ರವಾಗಿತ್ತು. ನಿಜದಲ್ಲಿ ಸಹಾಯವು ಅಲ್ಲಾಹನನಿಂದಲ್ಲದೆ ಬೇರಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಮಹಾ ಪ್ರತಾಪಿಯೂ ಪರಮ ಧೀಮಂತನೂ ಆಗಿರುತ್ತಾನೆ.

Verse 11

إِذْ يُغَشِّيكُمُ ٱلنُّعَاسَ أَمَنَةً مِّنْهُ وَيُنَزِّلُ عَلَيْكُم مِّنَ ٱلسَّمَآءِ مَآءً لِّيُطَهِّرَكُم بِهِۦ وَيُذْهِبَ عَنكُمْ رِجْزَ ٱلشَّيْطَـٰنِ وَلِيَرْبِطَ عَلَىٰ قُلُوبِكُمْ وَيُثَبِّتَ بِهِ ٱلْأَقْدَامَ

Transliteration idh yughashīkumu l-nuʿāsa amanatan min'hu wayunazzilu ʿalaykum mina l-samāi māan liyuṭahhirakum bihi wayudh'hiba ʿankum rij'za l-shayṭāni waliyarbiṭa ʿalā qulūbikum wayuthabbita bihi l-aqdāma

Kannada ಅಲ್ಲಾಹನು ತನ್ನ ಕಡೆಯಿಂದ ನಿಮ್ಮ ನಿರ್ಭ ಯತೆಗಾಗಿ ನಿದ್ರಾ ಮಂಪರನ್ನು ಆವರಣಗೊಳಿಸಿದ್ದ ಹಾಗೂ ನಿಮ್ಮ ಶುಚೀಕರಣ ಮತ್ತು ಶೈತಾನನ ಮಾಲಿನ್ಯವನ್ನು ನಿಮ್ಮಿಂದ ನಿವಾರಿಸಲು ಮತ್ತು ನಿಮ್ಮ ಹೃದಯಗಳಲ್ಲಿ ಧೈರ್ಯ ತುಂಬಲಿಕ್ಕೂ ತನ್ಮೂಲಕ ನಿಮ್ಮ ಪಾದಗಳನ್ನು ನೆಲೆಯೂರಿಸಲಿಕ್ಕೂ ಆಕಾಶದಿಂದ ನಿಮ್ಮ ಮೇಲೆ ಮಳೆ ಸುರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ .

Verse 12

إِذْ يُوحِى رَبُّكَ إِلَى ٱلْمَلَـٰٓئِكَةِ أَنِّى مَعَكُمْ فَثَبِّتُوا۟ ٱلَّذِينَ ءَامَنُوا۟ ۚ سَأُلْقِى فِى قُلُوبِ ٱلَّذِينَ كَفَرُوا۟ ٱلرُّعْبَ فَٱضْرِبُوا۟ فَوْقَ ٱلْأَعْنَاقِ وَٱضْرِبُوا۟ مِنْهُمْ كُلَّ بَنَانٍ

Transliteration idh yūḥī rabbuka ilā l-malāikati annī maʿakum fathabbitū alladhīna āmanū sa-ul'qī fī qulūbi alladhīna kafarū l-ruʿ'ba fa-iḍ'ribū fawqa l-aʿnāqi wa-iḍ'ribū min'hum kulla banānin

Kannada ನಿಮ್ಮ ಪ್ರಭು ದೇವಚರರಿಗೆ, ನಾನು ನಿಮ್ಮೊಂದಿಗೆ ಇದ್ದೇನೆ. ಆದ್ದರಿಂದ ನೀವು ಸತ್ಯವಿಶ್ವಾಸಿಗಳನ್ನು ಸುಸ್ಥಿರಗೊಳಿಸಿರಿ. ಸತ್ಯನಿಷೇಧಿಗಳ ಹೃದಯ ಗಳಲ್ಲಿ ಭೀತಿಯನ್ನು ಹುಟ್ಟಿಸಲಿದ್ದೇನೆ. ನೀವು ಅವರ ಶಿರಚ್ಛೇದನ ಮಾಡಿರಿ ಮತ್ತು ಅವರ ಕೈಕಾಲುಗಳ ಬೆರಳುಗಳನ್ನು ಕತ್ತರಿಸಿರಿ ಎಂದು ಸೂಚನೆ ಕೊಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ.

Verse 13

ذَٰلِكَ بِأَنَّهُمْ شَآقُّوا۟ ٱللَّهَ وَرَسُولَهُۥ ۚ وَمَن يُشَاقِقِ ٱللَّهَ وَرَسُولَهُۥ فَإِنَّ ٱللَّهَ شَدِيدُ ٱلْعِقَابِ

Transliteration dhālika bi-annahum shāqqū l-laha warasūlahu waman yushāqiqi l-laha warasūlahu fa-inna l-laha shadīdu l-ʿiqābi

Kannada ಇದು ಅಲ್ಲಾಹ್ ಮತ್ತು ಅವನ ಸಂದೇಶವಾ ಹಕರಿಗೆ ಅವರು ಎದುರಾದುದರಿಂದ, ಅಲ್ಲಾಹು ಮತ್ತು ಅವನ ಸಂದೇಶವಾಹಕನನ್ನು ವಿರೋಧಿಸಿದವನನ್ನು ಅಲ್ಲಾಹು ಅತ್ಯಂತ ಕಠಿಣವಾಗಿ ದಂಡಿಸುವವನಾಗಿರುತ್ತಾನೆ.

Verse 14

ذَٰلِكُمْ فَذُوقُوهُ وَأَنَّ لِلْكَـٰفِرِينَ عَذَابَ ٱلنَّارِ

Transliteration dhālikum fadhūqūhu wa-anna lil'kāfirīna ʿadhāba l-nāri

Kannada ಇದು ನಿಮಗಿರುವ ಶಿಕ್ಷೆ. ಇದನ್ನು ಸವಿಯಿರಿ. ಸತ್ಯನಿಷೇಧಿಗಳಿಗೆ ನರಕದ ಶಿಕ್ಷೆ ಇದೆ (ಯೆಂಬುದು ನಿಮಗೆ ತಿಳಿದಿರಲಿ.)

Verse 15

يَـٰٓأَيُّهَا ٱلَّذِينَ ءَامَنُوٓا۟ إِذَا لَقِيتُمُ ٱلَّذِينَ كَفَرُوا۟ زَحْفًا فَلَا تُوَلُّوهُمُ ٱلْأَدْبَارَ

Transliteration yāayyuhā alladhīna āmanū idhā laqītumu alladhīna kafarū zaḥfan falā tuwallūhumu l-adbāra

Kannada ಓ ಸತ್ಯವಿಶ್ವಾಸಿಗಳೇ, ಸತ್ಯನಿಷೇಧಿಗಳು ಯುದ್ಧ ಸನ್ನಾಹರಾಗಿ ಜಮಾವಣೆಗೊಂಡ ಸ್ಥಿತಿಯಲ್ಲಿ ಎದುರುಗೊಂಡರೆ ಅವರಿಂದ ಹಿಮ್ಮೆಟ್ಟಬೇಡಿರಿ.

Verse 16

وَمَن يُوَلِّهِمْ يَوْمَئِذٍ دُبُرَهُۥٓ إِلَّا مُتَحَرِّفًا لِّقِتَالٍ أَوْ مُتَحَيِّزًا إِلَىٰ فِئَةٍ فَقَدْ بَآءَ بِغَضَبٍ مِّنَ ٱللَّهِ وَمَأْوَىٰهُ جَهَنَّمُ ۖ وَبِئْسَ ٱلْمَصِيرُ

Transliteration waman yuwallihim yawma-idhin duburahu illā mutaḥarrifan liqitālin aw mutaḥayyizan ilā fi-atin faqad bāa bighaḍabin mina l-lahi wamawāhu jahannamu wabi'sa l-maṣīru

Kannada ಯುದ್ಧ ತಂತ್ರಕ್ಕಾಗಿ ಅಥವಾ (ಸ್ವಂತ) ಸೈನ್ಯ ದೊಂದಿಗೆ ಹೋಗಿ ಸೇರಿಕೊಳ್ಳಲಿಕ್ಕಾಗಿ ಹೊರತು ಯಾರಾದರೂ (ಶತ್ರುಗಳ ಎದುರಿನಿಂದ) ಹಿಮ್ಮೆಟ್ಟಿದರೆ ಅವನು ಅಲ್ಲಾಹನ ಕ್ರೋಧದೊಂದಿಗೆ ಮರಳಿದನು. ಅವನ ವಾಸಸ್ಥಾನವು ನರಕವಾಗಿ ರುವುದು. ಅದು ಹಿಂತೆರಳುವ ಅತಿ ನಿಕೃಷ್ಟ ತಾಣ.

Verse 17

فَلَمْ تَقْتُلُوهُمْ وَلَـٰكِنَّ ٱللَّهَ قَتَلَهُمْ ۚ وَمَا رَمَيْتَ إِذْ رَمَيْتَ وَلَـٰكِنَّ ٱللَّهَ رَمَىٰ ۚ وَلِيُبْلِىَ ٱلْمُؤْمِنِينَ مِنْهُ بَلَآءً حَسَنًا ۚ إِنَّ ٱللَّهَ سَمِيعٌ عَلِيمٌ

Transliteration falam taqtulūhum walākinna l-laha qatalahum wamā ramayta idh ramayta walākinna l-laha ramā waliyub'liya l-mu'minīna min'hu balāan ḥasanan inna l-laha samīʿun ʿalīmun

Kannada ನೀವು ಅವರನ್ನು ವಧಿಸಲಿಲ್ಲ. ನಿಜವಾಗಿ ಅವರನ್ನು ವಧಿಸಿದ್ದು ಅಲ್ಲಾಹು (ಓ ಪೈಗಂಬರರೇ,) ನೀವು ಎಸೆದಾಗ ನಿಜದಲ್ಲಿ ಎಸೆದದ್ದು ನೀವಲ್ಲ. ನಿಜವಾಗಿ ಅಲ್ಲಾಹನು ಎಸೆದನು. ಇದು ಅಲ್ಲಾಹು ತನ್ನ ಕಡೆಯಿಂದ ಸತ್ಯವಿಶ್ವಾಸಿಗಳನ್ನು ಒಂದು ಅತ್ಯುತ್ತಮ ಪರೀಕ್ಷೆಯಿಂದ ಪರೀಕ್ಷಿಸಲಿಕ್ಕಾಗಿತ್ತು. ನಿಶ್ಚಯವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

Verse 18

ذَٰلِكُمْ وَأَنَّ ٱللَّهَ مُوهِنُ كَيْدِ ٱلْكَـٰفِرِينَ

Transliteration dhālikum wa-anna l-laha mūhinu kaydi l-kāfirīna

Kannada ಈ ಪರೀಕ್ಷೆಯು ನಿಶ್ಚಯವಾಗಿಯೂ ಸತ್ಯ. ಅಲ್ಲಾಹನು ಸತ್ಯನಿಷೇಧಿಗಳ ಕುತಂತ್ರಗಳನ್ನು ದುರ್ಬಲಗೊಳಿಸುವವನಾಗಿರುವನು.

Verse 19

إِن تَسْتَفْتِحُوا۟ فَقَدْ جَآءَكُمُ ٱلْفَتْحُ ۖ وَإِن تَنتَهُوا۟ فَهُوَ خَيْرٌ لَّكُمْ ۖ وَإِن تَعُودُوا۟ نَعُدْ وَلَن تُغْنِىَ عَنكُمْ فِئَتُكُمْ شَيْـًٔا وَلَوْ كَثُرَتْ وَأَنَّ ٱللَّهَ مَعَ ٱلْمُؤْمِنِينَ

Transliteration in tastaftiḥū faqad jāakumu l-fatḥu wa-in tantahū fahuwa khayrun lakum wa-in taʿūdū naʿud walan tugh'niya ʿankum fi-atukum shayan walaw kathurat wa-anna l-laha maʿa l-mu'minīna

Kannada (ಸತ್ಯನಿಷೇಧಿಗಳೇ) ನೀವು ಬಯಸುತ್ತೀರಾದರೆ, ಇದೋ ಸತ್ಯಕ್ಕೆ ವಿಜಯ ಬಂದು ಬಿಟ್ಟಿದೆ. ಇನ್ನಾದರೂ (ಸತ್ಯನಿಷೇಧವನ್ನು) ತೊರೆದರೆ ನಿಮಗೇ ಒಳಿತು. ಮುಂದೆ ಇದನ್ನೇ ಪುನರಾ ವರ್ತಿಸಿದರೆ ನಾವೂ ಇದೇ ಶಿಕ್ಷೆಯನ್ನು ಪುನರಾ ವರ್ತಿಸುವೆವು. ನಿಮ್ಮ ಜನಬಲವು ಅದೆಷ್ಟೇ ದೊಡ್ಡದಿದ್ದರೂ ನಿಮಗೇನೂ ಪ್ರಯೋಜ ನವಾಗದು. ಅಲ್ಲಾಹು ಸತ್ಯವಿಶ್ವಾಸಿಗಳೊಂದಿಗೆ ಇದ್ದಾನೆ .

Verse 20

يَـٰٓأَيُّهَا ٱلَّذِينَ ءَامَنُوٓا۟ أَطِيعُوا۟ ٱللَّهَ وَرَسُولَهُۥ وَلَا تَوَلَّوْا۟ عَنْهُ وَأَنتُمْ تَسْمَعُونَ

Transliteration yāayyuhā alladhīna āmanū aṭīʿū l-laha warasūlahu walā tawallaw ʿanhu wa-antum tasmaʿūna

Kannada ಓ ಸತ್ಯವಿಶ್ವಾಸಿಗಳೇ, ಅಲ್ಲಾಹು ಮತ್ತು ಅವನ ರಸೂಲರನ್ನು ಅನುಸರಿಸಿರಿ. ನೀವು (ಸತ್ಯ ಸಂದೇಶವನ್ನು) ಕೇಳುತ್ತ ಅವರಿಂದ ವಿಮುಖ ರಾಗಬೇಡಿರಿ.

Verse 21

وَلَا تَكُونُوا۟ كَٱلَّذِينَ قَالُوا۟ سَمِعْنَا وَهُمْ لَا يَسْمَعُونَ

Transliteration walā takūnū ka-alladhīna qālū samiʿ'nā wahum lā yasmaʿūna

Kannada ಆಲಿಸದೆಯೇ ನಾವು ಆಲಿಸಿದೆವು ಎನ್ನುವವರಂತೆ ನೀವಾಗಬೇಡಿರಿ.

Verse 22

۞ إِنَّ شَرَّ ٱلدَّوَآبِّ عِندَ ٱللَّهِ ٱلصُّمُّ ٱلْبُكْمُ ٱلَّذِينَ لَا يَعْقِلُونَ

Transliteration inna sharra l-dawābi ʿinda l-lahi l-ṣumu l-buk'mu alladhīna lā yaʿqilūna

Kannada ಯೋಚಿಸಿ ಅರ್ಥ ಮಾಡಿಕೊಳ್ಳದ ಕಿವುಡ, ಮೂಕ ಜನರೇ ಅಲ್ಲಾಹನ ಬಳಿ ಅತ್ಯಂತ ಕೀಳ್ತರದ ಜಂತುಗಳು.

Verse 23

وَلَوْ عَلِمَ ٱللَّهُ فِيهِمْ خَيْرًا لَّأَسْمَعَهُمْ ۖ وَلَوْ أَسْمَعَهُمْ لَتَوَلَّوا۟ وَّهُم مُّعْرِضُونَ

Transliteration walaw ʿalima l-lahu fīhim khayran la-asmaʿahum walaw asmaʿahum latawallaw wahum muʿ'riḍūna

Kannada ಅವರಲ್ಲಿ ಕಿಂಚಿತ್ತಾದರೂ ಒಳಿತಿದೆಯೆಂದು ಅಲ್ಲಾಹು ತಿಳಿಯುತ್ತಿದ್ದರೆ ನಿಶ್ಚಯವಾಗಿಯೂ ಅವನು ಅವರಿಗೆ (ಗ್ರಹಿಸುವಂತೆ) ಕೇಳಿಸು ತ್ತಿದ್ದನು. ಅವನು ಅವರಿಗೆ ಕೇಳಿಸುತ್ತಿದ್ದರೂ ಅವರು ಅವಗಣಿಸಿ ತಿರುಗಿ ಬಿಡುತ್ತಿದ್ದರು.

Verse 24

يَـٰٓأَيُّهَا ٱلَّذِينَ ءَامَنُوا۟ ٱسْتَجِيبُوا۟ لِلَّهِ وَلِلرَّسُولِ إِذَا دَعَاكُمْ لِمَا يُحْيِيكُمْ ۖ وَٱعْلَمُوٓا۟ أَنَّ ٱللَّهَ يَحُولُ بَيْنَ ٱلْمَرْءِ وَقَلْبِهِۦ وَأَنَّهُۥٓ إِلَيْهِ تُحْشَرُونَ

Transliteration yāayyuhā alladhīna āmanū is'tajībū lillahi walilrrasūli idhā daʿākum limā yuḥ'yīkum wa-iʿ'lamū anna l-laha yaḥūlu bayna l-mari waqalbihi wa-annahu ilayhi tuḥ'sharūna

Kannada ಓ ಸತ್ಯವಿಶ್ವಾಸಿಗಳೇ, ನಿಮಗೆ ಚಿರಂಜೀವ ನೀಡುವಂಥ ವಿಷಯದ ಕಡೆಗೆ ಅಲ್ಲಾಹು ಮತ್ತು ರಸೂಲರು ನಿಮ್ಮನ್ನು ಕರೆದಾಗ ಓಗೊಡಿರಿ. ಅಲ್ಲಾಹು ಮನುಷ್ಯನ ಮತ್ತು ಅವನ ಹೃದಯದ ನಡುವೆ ಮರೆ ಇಡುವನೆಂದೂ ನೀವು ಅವನ ಕಡೆಗೆ ಒಟ್ಟುಗೂಡಿಸಲ್ಪಡುವಿರೆಂದೂ ಅರಿತು ಕೊಳ್ಳಿರಿ.

Verse 25

وَٱتَّقُوا۟ فِتْنَةً لَّا تُصِيبَنَّ ٱلَّذِينَ ظَلَمُوا۟ مِنكُمْ خَآصَّةً ۖ وَٱعْلَمُوٓا۟ أَنَّ ٱللَّهَ شَدِيدُ ٱلْعِقَابِ

Transliteration wa-ittaqū fit'natan lā tuṣībanna alladhīna ẓalamū minkum khāṣṣatan wa-iʿ'lamū anna l-laha shadīdu l-ʿiqābi

Kannada ಯಾವ ಶಿಕ್ಷೆಯು ನಿಮ್ಮ ಪೈಕಿ ಅಕ್ರಮವೆಸಗಿ ದವರಿಗೆ ಮಾತ್ರ ಸೀಮಿತವಾಗಿರಲಾರದೋ ಆ ಪರೀಕ್ಷೆಯನ್ನು ಭಯಪಡಿರಿ. ಅಲ್ಲಾಹು ಉಗ್ರದಂಡಕನೆಂಬುದು ನಿಮಗೆ ತಿಳಿದಿರಲಿ .

Verse 26

وَٱذْكُرُوٓا۟ إِذْ أَنتُمْ قَلِيلٌ مُّسْتَضْعَفُونَ فِى ٱلْأَرْضِ تَخَافُونَ أَن يَتَخَطَّفَكُمُ ٱلنَّاسُ فَـَٔاوَىٰكُمْ وَأَيَّدَكُم بِنَصْرِهِۦ وَرَزَقَكُم مِّنَ ٱلطَّيِّبَـٰتِ لَعَلَّكُمْ تَشْكُرُونَ

Transliteration wa-udh'kurū idh antum qalīlun mus'taḍʿafūna fī l-arḍi takhāfūna an yatakhaṭṭafakumu l-nāsu faāwākum wa-ayyadakum binaṣrihi warazaqakum mina l-ṭayibāti laʿallakum tashkurūna

Kannada ನೀವು ಅಲ್ಪ ಸಂಖ್ಯಾತರಾಗಿದ್ದು ಭೂಮಿಯಲ್ಲಿ ನಿಮ್ಮನ್ನು ಬಲಹೀನರೆಂದು ಪರಿಗಣಿಸಲ್ಪಡುತ್ತಿದ್ದ ಸಂದರ್ಭವನ್ನು ಜ್ಞಾಪಿಸಿರಿ. ಜನರು ನಿಮ್ಮನ್ನು ಎಗರಿಸಿ ಬಿಡುತ್ತಾರೆಂದು ಹೆದರುತ್ತಲಿದ್ದೀರಿ. ಅನಂತರ ಅಲ್ಲಾಹನು ನಿಮಗೆ ಆಶ್ರಯವನ್ನು ಒದಗಿಸಿದನು. ತನ್ನ ಸಹಾಯದಿಂದ ನಿಮ್ಮನ್ನು ಬಲಪಡಿಸಿದನು ಮತ್ತು ನಿಮಗೆ ಉತ್ತಮ ಜೀವನಾನುಕೂಲ ಒದಗಿಸಿದನು. ನೀವು ಕೃತಜ್ಞರಾಗಬಹುದೆಂದು.

Verse 27

يَـٰٓأَيُّهَا ٱلَّذِينَ ءَامَنُوا۟ لَا تَخُونُوا۟ ٱللَّهَ وَٱلرَّسُولَ وَتَخُونُوٓا۟ أَمَـٰنَـٰتِكُمْ وَأَنتُمْ تَعْلَمُونَ

Transliteration yāayyuhā alladhīna āmanū lā takhūnū l-laha wal-rasūla watakhūnū amānātikum wa-antum taʿlamūna

Kannada ಓ ಸತ್ಯವಿಶ್ವಾಸಿಗಳೇ, ಅಲ್ಲಾಹು ಮತ್ತು ರಸೂಲರನ್ನು ವಂಚಿಸಬೇಡಿರಿ ಮತ್ತು ನಿಮ್ಮ ಅಮಾನತ್ತುಗಳಲ್ಲಿ ತಿಳಿದುಕೊಂಡೇ ವಿದ್ರೋಹ ವೆಸಗಬೇಡಿರಿ .

Verse 28

وَٱعْلَمُوٓا۟ أَنَّمَآ أَمْوَٰلُكُمْ وَأَوْلَـٰدُكُمْ فِتْنَةٌ وَأَنَّ ٱللَّهَ عِندَهُۥٓ أَجْرٌ عَظِيمٌ

Transliteration wa-iʿ'lamū annamā amwālukum wa-awlādukum fit'natun wa-anna l-laha ʿindahu ajrun ʿaẓīmun

Kannada ನಿಮ್ಮ ಸೊತ್ತುಗಳು ಮತ್ತು ನಿಮ್ಮ ಸಂತತಿಗಳು ಪರೀಕ್ಷಾಸಾಧನಗಳೆಂದೂ ಘನವೆತ್ತ ಪ್ರತಿಫಲವು ಅಲ್ಲಾಹನ ಬಳಿಯೆಂದೂ ತಿಳಿದುಕೊಳ್ಳಿರಿ.

Verse 29

يَـٰٓأَيُّهَا ٱلَّذِينَ ءَامَنُوٓا۟ إِن تَتَّقُوا۟ ٱللَّهَ يَجْعَل لَّكُمْ فُرْقَانًا وَيُكَفِّرْ عَنكُمْ سَيِّـَٔاتِكُمْ وَيَغْفِرْ لَكُمْ ۗ وَٱللَّهُ ذُو ٱلْفَضْلِ ٱلْعَظِيمِ

Transliteration yāayyuhā alladhīna āmanū in tattaqū l-laha yajʿal lakum fur'qānan wayukaffir ʿankum sayyiātikum wayaghfir lakum wal-lahu dhū l-faḍli l-ʿaẓīmi

Kannada ಓ ಸತ್ಯವಿಶ್ವಾಸಿಗಳೇ, ನೀವು ದೇವಭಯ ವನ್ನಿರಿಸಿಕೊಂಡರೆ ಅಲ್ಲಾಹು ನಿಮಗೊಂದು ವಿವೇಚನೆಯ ಮಾರ್ಗವನ್ನು ಒದಗಿಸುವನು. ನಿಮ್ಮ ದೋಷಗಳನ್ನು ನಿಮ್ಮಿಂದ ಪರಿಹರಿ ಸುವನು. ಮತ್ತು ನಿಮಗೆ ಕ್ಷಮಿಸುವನು. ಅಲ್ಲಾ ಹನು ಪರಮಗಣ್ಯ ಪರಮೋಧಾರಿ.

Verse 30

وَإِذْ يَمْكُرُ بِكَ ٱلَّذِينَ كَفَرُوا۟ لِيُثْبِتُوكَ أَوْ يَقْتُلُوكَ أَوْ يُخْرِجُوكَ ۚ وَيَمْكُرُونَ وَيَمْكُرُ ٱللَّهُ ۖ وَٱللَّهُ خَيْرُ ٱلْمَـٰكِرِينَ

Transliteration wa-idh yamkuru bika alladhīna kafarū liyuth'bitūka aw yaqtulūka aw yukh'rijūka wayamkurūna wayamkuru l-lahu wal-lahu khayru l-mākirīna

Kannada ಸತ್ಯನಿಷೇಧಿಗಳು ನಿಮ್ಮನ್ನು ಸೆರೆಹಿಡಿಯಲಿಕ್ಕೆ ಅಥವಾ ವಧಿಸಲಿಕ್ಕೆ ಅಥವಾ ಹೊರಹಾಕಲಿಕ್ಕೆ ಗೂಢಾಲೋಚನೆ ನಡೆಸುತ್ತಿದ್ದ ಸಂದರ್ಭವೂ ಸ್ಮರಣೀಯವಾಗಿದೆ . ಅವರು ತಮ್ಮ ಕುತಂತ್ರ ಗಳನ್ನು ಹೂಡುತ್ತಿದ್ದರು. ಅಲ್ಲಾಹು ಪ್ರತಿತಂತ್ರ ಹೂಡುತ್ತಿದ್ದನು ಪ್ರತಿತಂತ್ರದಲ್ಲಿ ಅಲ್ಲಾಹನು ಪರಮ ನಿಪುಣನು.

Verse 31

وَإِذَا تُتْلَىٰ عَلَيْهِمْ ءَايَـٰتُنَا قَالُوا۟ قَدْ سَمِعْنَا لَوْ نَشَآءُ لَقُلْنَا مِثْلَ هَـٰذَآ ۙ إِنْ هَـٰذَآ إِلَّآ أَسَـٰطِيرُ ٱلْأَوَّلِينَ

Transliteration wa-idhā tut'lā ʿalayhim āyātunā qālū qad samiʿ'nā law nashāu laqul'nā mith'la hādhā in hādhā illā asāṭīru l-awalīna

Kannada ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸಿ ದಾಗ ಅವರು, ಹೌದು ನಾವು ಕೇಳಿದೆವು. ನಾವು ಇಚ್ಛಿಸಿದರೆ ಇದೇ ರೀತಿ ನಾವೂ ಸೃಷ್ಟಿಸಿ ಹೇಳ ಬಲ್ಲೆವು. ಇವು ಪೂರ್ವಿಕರ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ ಎನ್ನುತ್ತಿದ್ದರು .

Verse 32

وَإِذْ قَالُوا۟ ٱللَّهُمَّ إِن كَانَ هَـٰذَا هُوَ ٱلْحَقَّ مِنْ عِندِكَ فَأَمْطِرْ عَلَيْنَا حِجَارَةً مِّنَ ٱلسَّمَآءِ أَوِ ٱئْتِنَا بِعَذَابٍ أَلِيمٍ

Transliteration wa-idh qālū l-lahuma in kāna hādhā huwa l-ḥaqa min ʿindika fa-amṭir ʿalaynā ḥijāratan mina l-samāi awi i'tinā biʿadhābin alīmin

Kannada ಓ ಅಲ್ಲಾಹ್, ಇದು ನಿಜವಾಗಿಯೂ ನಿನ್ನ ಕಡೆ ಯಿಂದ ಬಂದ ಸತ್ಯವಾಗಿದ್ದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಗರೆಸು ಅಥವಾ ನಮಗೆ ಇನ್ನಾವುದೇ ವೇದನಾತ್ಮಕ ಶಿಕ್ಷೆಯನ್ನು ತಾ ಎಂದು ಅವರು (ಅವಿಶ್ವಾಸಿಗಳು) ಹೇಳಿದ್ದ ಮಾತೂ ಜ್ಞಾಪಕದಲ್ಲಿದೆ.

Verse 33

وَمَا كَانَ ٱللَّهُ لِيُعَذِّبَهُمْ وَأَنتَ فِيهِمْ ۚ وَمَا كَانَ ٱللَّهُ مُعَذِّبَهُمْ وَهُمْ يَسْتَغْفِرُونَ

Transliteration wamā kāna l-lahu liyuʿadhibahum wa-anta fīhim wamā kāna l-lahu muʿadhibahum wahum yastaghfirūna

Kannada ನೀವು ಅವರಲ್ಲಿ ಇರುವಾಗ ಅಲ್ಲಾಹು ಅವರನ್ನು ಶಿಕ್ಷಿಸಲಾರ. ಅವರು ಕ್ಷಮಾಯಾಚನೆ ಮಾಡುತ್ತಿರುವಾಗಲೂ ಅಲ್ಲಾಹು ಅವರನ್ನು ಶಿಕ್ಷಿಸಲಾರ.

Verse 34

وَمَا لَهُمْ أَلَّا يُعَذِّبَهُمُ ٱللَّهُ وَهُمْ يَصُدُّونَ عَنِ ٱلْمَسْجِدِ ٱلْحَرَامِ وَمَا كَانُوٓا۟ أَوْلِيَآءَهُۥٓ ۚ إِنْ أَوْلِيَآؤُهُۥٓ إِلَّا ٱلْمُتَّقُونَ وَلَـٰكِنَّ أَكْثَرَهُمْ لَا يَعْلَمُونَ

Transliteration wamā lahum allā yuʿadhibahumu l-lahu wahum yaṣuddūna ʿani l-masjidi l-ḥarāmi wamā kānū awliyāahu in awliyāuhu illā l-mutaqūna walākinna aktharahum lā yaʿlamūna

Kannada ಮಸ್ಜಿದುಲ್ ಹರಾಮ್'ನ ದಾರಿಯನ್ನು ಜನರಿಗೆ ತಡೆಯುತ್ತಿರುವ ಇವರನ್ನು ಅಲ್ಲಾಹು ಶಿಕ್ಷೆಗೊಳಪಡಿಸದಿರಲು ಕಾರಣವಿಲ್ಲ. ವಸ್ತುತಃ ಅವರು ಆ ಮಸ್ಜಿದ್‍ನ ಅರ್ಹ ಉಸ್ತುವಾರಿದಾ ರರಲ್ಲ. ಅದರ ಅರ್ಹ ಉಸ್ತುವಾರಿದಾರರು ಧರ್ಮನಿಷ್ಠರು ಮಾತ್ರವೇ ಆಗಬಲ್ಲರು. ಆದರೆ ಹೆಚ್ಚಿನವರು ಇದನ್ನು ತಿಳಿದು ಕೊಳ್ಳುವುದಿಲ್ಲ.

Verse 35

وَمَا كَانَ صَلَاتُهُمْ عِندَ ٱلْبَيْتِ إِلَّا مُكَآءً وَتَصْدِيَةً ۚ فَذُوقُوا۟ ٱلْعَذَابَ بِمَا كُنتُمْ تَكْفُرُونَ

Transliteration wamā kāna ṣalātuhum ʿinda l-bayti illā mukāan wataṣdiyatan fadhūqū l-ʿadhāba bimā kuntum takfurūna

Kannada ಕಅïಬಾ ಭವನದ ಬಳಿ ಅವರ ಪ್ರಾರ್ಥನೆ ಕೇವಲ ಸಿಳ್ಳು ಹೊಡೆಯುವುದು, ಚಪ್ಪಾಳೆ ಹೊಡೆಯು ವುದು ಹೊರತು ಇನ್ನೇನೂ ಆಗಿರಲಿಲ್ಲ. ಆದುದರಿಂದ ಇದೋ ನೀವು ಸತ್ಯವನ್ನು ನಿಷೇಧಿಸಿದುದರ ಫಲವಾಗಿ ಶಿಕ್ಷೆಯನ್ನು ಸವಿಯಿರಿ.

Verse 36

إِنَّ ٱلَّذِينَ كَفَرُوا۟ يُنفِقُونَ أَمْوَٰلَهُمْ لِيَصُدُّوا۟ عَن سَبِيلِ ٱللَّهِ ۚ فَسَيُنفِقُونَهَا ثُمَّ تَكُونُ عَلَيْهِمْ حَسْرَةً ثُمَّ يُغْلَبُونَ ۗ وَٱلَّذِينَ كَفَرُوٓا۟ إِلَىٰ جَهَنَّمَ يُحْشَرُونَ

Transliteration inna alladhīna kafarū yunfiqūna amwālahum liyaṣuddū ʿan sabīli l-lahi fasayunfiqūnahā thumma takūnu ʿalayhim ḥasratan thumma yugh'labūna wa-alladhīna kafarū ilā jahannama yuḥ'sharūna

Kannada ಸತ್ಯನಿಷೇಧಿಗಳು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯಲಿಕ್ಕಾಗಿ ತಮ್ಮ ಸಂಪತ್ತನ್ನು ವಿನಿಯೋಗಿಸುತ್ತಾರೆ. ಇನ್ನೂ ವಿನಿಯೋಗಿಸಲಿದ್ದಾರೆ. ಕೊನೆಗೆ ಅದು ಅವರಿಗೆ ವಿಷಾದಕ್ಕೆ ಕಾರಣವಾಗುವುದು. ಅನಂತರ ಅವರು ಪರಾಜಿತರಾಗುವರು. ಸತ್ಯನಿಷೇಧಿಗಳು ನರಕದ ಕಡೆಗೆ ಅಟ್ಟಲ್ಪಡುವರು.

Verse 37

لِيَمِيزَ ٱللَّهُ ٱلْخَبِيثَ مِنَ ٱلطَّيِّبِ وَيَجْعَلَ ٱلْخَبِيثَ بَعْضَهُۥ عَلَىٰ بَعْضٍ فَيَرْكُمَهُۥ جَمِيعًا فَيَجْعَلَهُۥ فِى جَهَنَّمَ ۚ أُو۟لَـٰٓئِكَ هُمُ ٱلْخَـٰسِرُونَ

Transliteration liyamīza l-lahu l-khabītha mina l-ṭayibi wayajʿala l-khabītha baʿḍahu ʿalā baʿḍin fayarkumahu jamīʿan fayajʿalahu fī jahannama ulāika humu l-khāsirūna

Kannada ಇದು ಅಲ್ಲಾಹು ಮಾಲಿನ್ಯವನ್ನು ನೈರ್ಮಲ್ಯದಿಂದ ಬೇರ್ಪಡಿಸಲೂ ಎಲ್ಲಾ ವಿಧದ ಮಾಲಿನ್ಯಗಳನ್ನು ಪೇರಿಸಿಟ್ಟು ರಾಶಿ ಮಾಡಿ ನರಕಕ್ಕೆ ತಳ್ಳಿ ಬಿಡಲೂ ಆಗಿರುತ್ತದೆ. ನಿಜವಾಗಿ ನಷ್ಟ ಹೊಂದಿದವರು ಇವರೇ.

Verse 38

قُل لِّلَّذِينَ كَفَرُوٓا۟ إِن يَنتَهُوا۟ يُغْفَرْ لَهُم مَّا قَدْ سَلَفَ وَإِن يَعُودُوا۟ فَقَدْ مَضَتْ سُنَّتُ ٱلْأَوَّلِينَ

Transliteration qul lilladhīna kafarū in yantahū yugh'far lahum mā qad salafa wa-in yaʿūdū faqad maḍat sunnatu l-awalīna

Kannada (ಓ ಪೈಗಂಬರರೇ,) ಈ ಸತ್ಯನಿಷೇಧಿಗಳಿಗೆ ಹೇಳಿರಿ:- ಅವರು (ವೈರತ್ವದಿಂದ) ವಿರಮಿಸಿದರೆ ಅವರಿಂದ ಕಳೆದು ಹೋದ ಪಾಪಗಳನ್ನು ಕ್ಷಮಿಸಿ ಬಿಡಲಾಗುವುದು. ಆದರೆ ಇವರು ಹಿಂ ದಿನ ಅವಸ್ಥೆಗೆ ಮರಳಿದರೆ ಪೂರ್ವಿಕರ ಮೇಲಿನ ನಮ್ಮ ಕಾರ್ಯಾಚರಣೆ ಗತಿಸಿ ಹೋಗಿದೆ ತಾನೇ?

Verse 39

وَقَـٰتِلُوهُمْ حَتَّىٰ لَا تَكُونَ فِتْنَةٌ وَيَكُونَ ٱلدِّينُ كُلُّهُۥ لِلَّهِ ۚ فَإِنِ ٱنتَهَوْا۟ فَإِنَّ ٱللَّهَ بِمَا يَعْمَلُونَ بَصِيرٌ

Transliteration waqātilūhum ḥattā lā takūna fit'natun wayakūna l-dīnu kulluhu lillahi fa-ini intahaw fa-inna l-laha bimā yaʿmalūna baṣīrun

Kannada ಓ ಸತ್ಯವಿಶ್ವಾಸಿಗಳೇ, ಕ್ಷೋಭೆ ಅಳಿದು ಹೋಗು ವವರೆಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿ ಗಾಗಿ ಆಗುವವರೆಗೂ ಸತ್ಯನಿಷೇಧಿಗಳ ವಿರುದ್ಧ ಹೋರಾಡಿರಿ. ಇನ್ನು ಅವರು ವಿರಮಿಸಿದರೆ ಅಲ್ಲಾಹು ಅವರ ಕರ್ಮಗಳನ್ನು ವೀಕ್ಷಿಸುವವ ನಾಗಿರುತ್ತಾನೆ .

Verse 40

وَإِن تَوَلَّوْا۟ فَٱعْلَمُوٓا۟ أَنَّ ٱللَّهَ مَوْلَىٰكُمْ ۚ نِعْمَ ٱلْمَوْلَىٰ وَنِعْمَ ٱلنَّصِيرُ

Transliteration wa-in tawallaw fa-iʿ'lamū anna l-laha mawlākum niʿ'ma l-mawlā waniʿ'ma l-naṣīru

Kannada ಅವರು (ಸತ್ಯದಿಂದ) ಹಿಂಜರಿದರೆ ಅಲ್ಲಾಹು ನಿಮ್ಮ ಸಂರಕ್ಷಕನೆಂದೂ ಅವನು ಅತ್ಯಂತ ಶ್ರೇಷ್ಟ ರಕ್ಷಕನೂ ಸಹಾಯಕನೂ ಆಗಿರುತ್ತಾನೆಂದೂ ತಿಳಿದುಕೊಳ್ಳಿರಿ .

Verse 41

۞ وَٱعْلَمُوٓا۟ أَنَّمَا غَنِمْتُم مِّن شَىْءٍ فَأَنَّ لِلَّهِ خُمُسَهُۥ وَلِلرَّسُولِ وَلِذِى ٱلْقُرْبَىٰ وَٱلْيَتَـٰمَىٰ وَٱلْمَسَـٰكِينِ وَٱبْنِ ٱلسَّبِيلِ إِن كُنتُمْ ءَامَنتُم بِٱللَّهِ وَمَآ أَنزَلْنَا عَلَىٰ عَبْدِنَا يَوْمَ ٱلْفُرْقَانِ يَوْمَ ٱلْتَقَى ٱلْجَمْعَانِ ۗ وَٱللَّهُ عَلَىٰ كُلِّ شَىْءٍ قَدِيرٌ

Transliteration wa-iʿ'lamū annamā ghanim'tum min shayin fa-anna lillahi khumusahu walilrrasūli walidhī l-qur'bā wal-yatāmā wal-masākīni wa-ib'ni l-sabīli in kuntum āmantum bil-lahi wamā anzalnā ʿalā ʿabdinā yawma l-fur'qāni yawma l-taqā l-jamʿāni wal-lahu ʿalā kulli shayin qadīrun

Kannada ತಿಳಿಯಿರಿ! ನೀವು ಗಳಿಸಿದ ಸಮರಾರ್ಜಿತ ಸೊತ್ತಿನ ಐದನೇ ಒಂದಂಶವು ಅಲ್ಲಾಹನಿಗೆ, ಅವನ ಸಂದೇಶವಾಹಕರಿಗೆ, (ಅವರ) ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ ಮತ್ತು ಪ್ರಯಾಣಿಕರಿಗಾಗಿರುತ್ತದೆ. ನೀವು ಅಲ್ಲಾಹನ ಮೇಲೆ ಮತ್ತು ಸತ್ಯಾಸತ್ಯದ ಇತ್ಯರ್ಥದ ದಿನ ಅರ್ಥಾತ್ ಎರಡು ಪಕ್ಷಗಳು ಎದುರ್ಗೊಂಡ ದಿನ (ಬದ್‍ರ್‍ದಿನ) ನಾವು ನಮ್ಮ ದಾಸನ ಮೇಲೆ ಅವತೀರ್ಣಗೊಳಿಸಿದುದರ ಮೇಲೆ ವಿಶ್ವಾಸವಿಟ್ಟಿದ್ದರೆ. ಅಲ್ಲಾಹು ಪ್ರತಿಯೊಂದು ವಿಷಯದಲ್ಲಿ ಸಾಮಥ್ರ್ಯವುಳ್ಳವನು.

Verse 42

إِذْ أَنتُم بِٱلْعُدْوَةِ ٱلدُّنْيَا وَهُم بِٱلْعُدْوَةِ ٱلْقُصْوَىٰ وَٱلرَّكْبُ أَسْفَلَ مِنكُمْ ۚ وَلَوْ تَوَاعَدتُّمْ لَٱخْتَلَفْتُمْ فِى ٱلْمِيعَـٰدِ ۙ وَلَـٰكِن لِّيَقْضِىَ ٱللَّهُ أَمْرًا كَانَ مَفْعُولًا لِّيَهْلِكَ مَنْ هَلَكَ عَنۢ بَيِّنَةٍ وَيَحْيَىٰ مَنْ حَىَّ عَنۢ بَيِّنَةٍ ۗ وَإِنَّ ٱللَّهَ لَسَمِيعٌ عَلِيمٌ

Transliteration idh antum bil-ʿud'wati l-dun'yā wahum bil-ʿud'wati l-quṣ'wā wal-rakbu asfala minkum walaw tawāʿadttum la-ikh'talaftum fī l-mīʿādi walākin liyaqḍiya l-lahu amran kāna mafʿūlan liyahlika man halaka ʿan bayyinatin wayaḥyā man ḥayya ʿan bayyinatin wa-inna l-laha lasamīʿun ʿalīmun

Kannada ನೀವು ಹತ್ತಿರದ ಕಣಿವೆಯಲ್ಲೂ ಅವರು ದೂರದ ಕಣಿವೆಯಲ್ಲೂ ಮತ್ತು ವರ್ತಕರು ನಿಮಗಿಂತ ಕೆಳಗಡೆ ಇದ್ದ ಸಂದರ್ಭವನ್ನು ಸ್ಮರಿಸಿರಿ. (ನಿಮ್ಮ ಮತ್ತು ಅವರ ನಡುವೆ) (ಯುದ್ಧದ) ನಿಶ್ಚ ಯವಾಗಿರುತ್ತಿದ್ದರೆ, ನೀವು ಆ ನಿಶ್ಚಯಕ್ಕೆ ಎದುರಾಗುತ್ತಿದ್ದಿರಿ. ಆದರೆ ಉಂಟಾಗಬೇಕಾದ ಕಾರ್ಯ ವನ್ನು ಅಲ್ಲಾಹು ವಿಧಿಸಲಿಕ್ಕಾಗಿತ್ತು ಇದು. ನಾಶ ವಾದವರು ಪ್ರತ್ಯಕ್ಷ ಪ್ರಮಾಣದೊಂದಿಗೆ ನಾಶ ಹೊಂದಲೂ ಬದುಕಿದವರು ಪ್ರತ್ಯಕ್ಷ ಪ್ರಮಾಣದೊಂದಿಗೆ ಬದುಕಲೂಬೇಕಾಗಿ. (ಇದೆಲ್ಲ ಸಂಭವಿಸಿತು.) ನಿಶ್ಚಯವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ .

Verse 43

إِذْ يُرِيكَهُمُ ٱللَّهُ فِى مَنَامِكَ قَلِيلًا ۖ وَلَوْ أَرَىٰكَهُمْ كَثِيرًا لَّفَشِلْتُمْ وَلَتَنَـٰزَعْتُمْ فِى ٱلْأَمْرِ وَلَـٰكِنَّ ٱللَّهَ سَلَّمَ ۗ إِنَّهُۥ عَلِيمٌۢ بِذَاتِ ٱلصُّدُورِ

Transliteration idh yurīkahumu l-lahu fī manāmika qalīlan walaw arākahum kathīran lafashil'tum walatanāzaʿtum fī l-amri walākinna l-laha sallama innahu ʿalīmun bidhāti l-ṣudūri

Kannada (ಓ ಸಂದೇಶವಾಹಕರೇ,) ಅಲ್ಲಾಹನು ಅವರನ್ನು ನಿಮಗೆ ಸ್ವಪ್ನದಲ್ಲಿ ಕಡಿಮೆ ಸಂಖ್ಯೆಯಲ್ಲಿ ತೋರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಅವನು ನಿಮಗೆ ಅವರ ಸಂಖ್ಯೆಯನ್ನು ಅಧಿಕವಾಗಿ ತೋರಿಸುತ್ತಿದ್ದರೆ, ಖಂಡಿತ ನೀವು ಧೈರ್ಯಗೆಡುತ್ತಿದ್ದಿರಿ ಮತ್ತು (ಯುದ್ಧದ) ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದುತ್ತಿದ್ದೀರಿ. ಆದರೆ ಅಲ್ಲಾಹನೇ (ನಿಮ್ಮನ್ನು ಇದರಿಂದ) ರಕ್ಷಿಸಿದನು. ನಿಶ್ಚಯವಾಗಿಯೂ ಅವನು ಹೃದ್ಗತವನ್ನು ಅರಿಯುವವನಾಗಿರುತ್ತಾನೆ.

Verse 44

وَإِذْ يُرِيكُمُوهُمْ إِذِ ٱلْتَقَيْتُمْ فِىٓ أَعْيُنِكُمْ قَلِيلًا وَيُقَلِّلُكُمْ فِىٓ أَعْيُنِهِمْ لِيَقْضِىَ ٱللَّهُ أَمْرًا كَانَ مَفْعُولًا ۗ وَإِلَى ٱللَّهِ تُرْجَعُ ٱلْأُمُورُ

Transliteration wa-idh yurīkumūhum idhi l-taqaytum fī aʿyunikum qalīlan wayuqallilukum fī aʿyunihim liyaqḍiya l-lahu amran kāna mafʿūlan wa-ilā l-lahi tur'jaʿu l-umūru

Kannada ಸಂಗ್ರಾಮದ ವೇಳೆ ನಿಮ್ಮ ದೃಷ್ಟಿಯಲ್ಲಿ ಅವರನ್ನು (ಶತ್ರುಗಳನ್ನು) ಕಡಿಮೆಯಾಗಿಯೂ ಅವರ ದೃಷ್ಟಿಯಲ್ಲಿ ನಿಮ್ಮನ್ನು ಕಡಿಮೆಯಾಗಿಯೂ ಅಲ್ಲಾಹನು ತೋರಿಸಿಕೊಟ್ಟ ಸಂದರ್ಭವನ್ನು ಸ್ಮರಿಸಿರಿ. ಸಂಭವಿಸಬೇಕಾದ ಕಾರ್ಯವನ್ನು ಅಲ್ಲಾಹನು ನೆರವೇರಿಸಲಿಕ್ಕಾಗಿ, ಸಕಲ ಕಾರ್ಯಗಳೂ ಅಲ್ಲಾಹನ ಕಡೆಗೆ ಮರಳುತ್ತವೆ.

Verse 45

يَـٰٓأَيُّهَا ٱلَّذِينَ ءَامَنُوٓا۟ إِذَا لَقِيتُمْ فِئَةً فَٱثْبُتُوا۟ وَٱذْكُرُوا۟ ٱللَّهَ كَثِيرًا لَّعَلَّكُمْ تُفْلِحُونَ

Transliteration yāayyuhā alladhīna āmanū idhā laqītum fi-atan fa-uth'butū wa-udh'kurū l-laha kathīran laʿallakum tuf'liḥūna

Kannada ಓ ಸತ್ಯವಿಶ್ವಾಸಿಗಳೇ, ನೀವು ಯಾವುದೇ (ಸೈನ್ಯ) ತಂಡವನ್ನು ಎದುರುಗೊಂಡರೆ ನೀವು ಸುಸ್ಥಿರರಾಗಿರಿ ಮತ್ತು ಅಲ್ಲಾಹನನ್ನು ಅತಿ ಹೆಚ್ಚಾಗಿ ಸ್ಮರಿಸಿರಿ. ಹಾಗಾದರೆ ನಿಮಗೆ ಜಯದ ನಿರೀಕ್ಷೆಯಿಡಬಹುದು.

Verse 46

وَأَطِيعُوا۟ ٱللَّهَ وَرَسُولَهُۥ وَلَا تَنَـٰزَعُوا۟ فَتَفْشَلُوا۟ وَتَذْهَبَ رِيحُكُمْ ۖ وَٱصْبِرُوٓا۟ ۚ إِنَّ ٱللَّهَ مَعَ ٱلصَّـٰبِرِينَ

Transliteration wa-aṭīʿū l-laha warasūlahu walā tanāzaʿū fatafshalū watadhhaba rīḥukum wa-iṣ'birū inna l-laha maʿa l-ṣābirīna

Kannada ಅಲ್ಲಾಹು ಮತ್ತು ಅವನ ರಸೂಲರನ್ನು ಅನು ಸರಿಸಿರಿ. ಪರಸ್ಪರ ಜಗಳಾಡಬೇಡಿರಿ. ಅನ್ಯಥಾ ನಿಮ್ಮಲ್ಲಿ ಅಂಜಿಕೆ ಹುಟ್ಟುವುದು. ನಿಮ್ಮ ಕೆಚ್ಚು ಕೊಚ್ಚಿ ಹೋಗುವುದು. ಸಹನೆಯಿಂದ ವರ್ತಿಸಿರಿ. ನಿಜವಾಗಿಯೂ ಅಲ್ಲಾಹನಿರುವುದು ಸಹನಶೀಲರೊಂದಿಗೆ.

Verse 47

وَلَا تَكُونُوا۟ كَٱلَّذِينَ خَرَجُوا۟ مِن دِيَـٰرِهِم بَطَرًا وَرِئَآءَ ٱلنَّاسِ وَيَصُدُّونَ عَن سَبِيلِ ٱللَّهِ ۚ وَٱللَّهُ بِمَا يَعْمَلُونَ مُحِيطٌ

Transliteration walā takūnū ka-alladhīna kharajū min diyārihim baṭaran wariāa l-nāsi wayaṣuddūna ʿan sabīli l-lahi wal-lahu bimā yaʿmalūna muḥīṭun

Kannada ಅಹಂಭಾವದಿಂದಲೂ ಜನರಿಗೆ ತಮ್ಮ ಠೀವಿಯನ್ನು ತೋರಿಸುತ್ತಲೂ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಲೂ ತಮ್ಮ ನಿವಾಸಗಳಿಂದ ಹೊರಟು ಬಂದವರಂತೆ ನೀವಾಗಬಾರದು. ಅವರ ಕೃತ್ಯಗಳನ್ನು ಅಲ್ಲಾಹನು ಆವರಿಸಿ ಅರಿತಿರುವನು.

Verse 48

وَإِذْ زَيَّنَ لَهُمُ ٱلشَّيْطَـٰنُ أَعْمَـٰلَهُمْ وَقَالَ لَا غَالِبَ لَكُمُ ٱلْيَوْمَ مِنَ ٱلنَّاسِ وَإِنِّى جَارٌ لَّكُمْ ۖ فَلَمَّا تَرَآءَتِ ٱلْفِئَتَانِ نَكَصَ عَلَىٰ عَقِبَيْهِ وَقَالَ إِنِّى بَرِىٓءٌ مِّنكُمْ إِنِّىٓ أَرَىٰ مَا لَا تَرَوْنَ إِنِّىٓ أَخَافُ ٱللَّهَ ۚ وَٱللَّهُ شَدِيدُ ٱلْعِقَابِ

Transliteration wa-idh zayyana lahumu l-shayṭānu aʿmālahum waqāla lā ghāliba lakumu l-yawma mina l-nāsi wa-innī jārun lakum falammā tarāati l-fi-atāni nakaṣa ʿalā ʿaqibayhi waqāla innī barīon minkum innī arā mā lā tarawna innī akhāfu l-laha wal-lahu shadīdu l-ʿiqābi

Kannada ಇಂದು ನಿಮ್ಮನ್ನು ಸೋಲಿಸುವ ಜನರೇ ಇಲ್ಲ, ಖಂಡಿತ ನಾನು ನಿಮ್ಮ ಜೊತೆಗೆ ಇದ್ದೇನೆ. ಎನ್ನುತ್ತಾ ಶೈತಾನನು ಅವರಿಗೆ ತಮ್ಮ ಕುಕೃತ್ಯ ಗಳನ್ನು ಚಂದಗಾಣಿಸಿ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ.ಆದರೆ ಇತ್ತಂಡಗಳು ಪರಸ್ಪರ ಎದುರುಗೊಂಡಾಗ ಅವನು ಹಿಮ್ಮೆಟ್ಟಿ ಓಡಿದನು ಮತ್ತು ‘ನನ್ನ ಮತ್ತು ನಿಮ್ಮ ನಡುವೆ ಒಡನಾಟವಿಲ್ಲ. ನೀವು ಕಾಣ ದ್ದನ್ನು ನಾನು ಕಾಣುತ್ತಿದ್ದೇನೆ. ನನಗೆ ಅಲ್ಲಾಹನ ಭಯವಾಗುತ್ತದೆ. ಮತ್ತು ಅಲ್ಲಾಹು ಅತ್ಯಂತ ಕಠಿಣವಾಗಿ ಶಿಕ್ಷಿಸುವವನು’ ಎಂದು ಹೇಳಿದನು.

Verse 49

إِذْ يَقُولُ ٱلْمُنَـٰفِقُونَ وَٱلَّذِينَ فِى قُلُوبِهِم مَّرَضٌ غَرَّ هَـٰٓؤُلَآءِ دِينُهُمْ ۗ وَمَن يَتَوَكَّلْ عَلَى ٱللَّهِ فَإِنَّ ٱللَّهَ عَزِيزٌ حَكِيمٌ

Transliteration idh yaqūlu l-munāfiqūna wa-alladhīna fī qulūbihim maraḍun gharra hāulāi dīnuhum waman yatawakkal ʿalā l-lahi fa-inna l-laha ʿazīzun ḥakīmun

Kannada ಇವರನ್ನು (ಮುಸ್ಲಿಮರನ್ನು) ಇವರ ಧರ್ಮವು ವಂಚಿಸಿದೆ ಎಂದು ಕಪಟಿಗಳೂ ಹೃದಯಗಳಲ್ಲಿ ರೋಗ ತಗಲಿದವರೂ ಹೇಳುತ್ತಿದ್ದ ಸಂದರ್ಭ ವನ್ನು ಸ್ಮರಿಸಿರಿ. ವಸ್ತುತಃ ಯಾರಾದರೂ ಅಲ್ಲಾಹನ ಮೇಲೆ ಭರವಸೆಯನ್ನಿಟ್ಟರೆ (ಅವನು ಸೋಲ ಲಾರನು) ಅಲ್ಲಾಹು ಮಹಾಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ.

Verse 50

وَلَوْ تَرَىٰٓ إِذْ يَتَوَفَّى ٱلَّذِينَ كَفَرُوا۟ ۙ ٱلْمَلَـٰٓئِكَةُ يَضْرِبُونَ وُجُوهَهُمْ وَأَدْبَـٰرَهُمْ وَذُوقُوا۟ عَذَابَ ٱلْحَرِيقِ

Transliteration walaw tarā idh yatawaffā alladhīna kafarū l-malāikatu yaḍribūna wujūhahum wa-adbārahum wadhūqū ʿadhāba l-ḥarīqi

Kannada ಸತ್ಯನಿಷೇಧಿಗಳನ್ನು ಅವರ ಮುಖಗಳು ಹಾಗೂ ನಿತಂಬಗಳಿಗೆ ಹೊಡೆಯುತ್ತಾ ಮಲಕ್‍ಗಳು ಸಾಯಿಸುತ್ತಿದ್ದ ಅವಸ್ಥೆಯನ್ನು ನೀವು ಕಾಣಬೇಕಿತ್ತು. ಇದೋ ಈಗ ಸುಡುವ ಶಿಕ್ಷೆಯನ್ನು ಸವಿಯಿರಿ . (ಎನ್ನುತ್ತಾ!)

Verse 51

ذَٰلِكَ بِمَا قَدَّمَتْ أَيْدِيكُمْ وَأَنَّ ٱللَّهَ لَيْسَ بِظَلَّـٰمٍ لِّلْعَبِيدِ

Transliteration dhālika bimā qaddamat aydīkum wa-anna l-laha laysa biẓallāmin lil'ʿabīdi

Kannada ನಿಮ್ಮ ಕೈಗಳು ಈ ಮೊದಲು ಎಸಗಿದ ಪಾಪಗಳ ಪ್ರತಿಫಲವಿದು. ಅಲ್ಲಾಹು ತನ್ನ ದಾಸರ ಮೇಲೆ ಅಕ್ರ ಮವೆಸಗುವವನಲ್ಲ ಎಂಬ ಕಾರಣಕ್ಕಾಗಿದೆ ಇದು.

Verse 52

كَدَأْبِ ءَالِ فِرْعَوْنَ ۙ وَٱلَّذِينَ مِن قَبْلِهِمْ ۚ كَفَرُوا۟ بِـَٔايَـٰتِ ٱللَّهِ فَأَخَذَهُمُ ٱللَّهُ بِذُنُوبِهِمْ ۗ إِنَّ ٱللَّهَ قَوِىٌّ شَدِيدُ ٱلْعِقَابِ

Transliteration kadabi āli fir'ʿawna wa-alladhīna min qablihim kafarū biāyāti l-lahi fa-akhadhahumu l-lahu bidhunūbihim inna l-laha qawiyyun shadīdu l-ʿiqābi

Kannada ಇದು ಫಿರ್‍ಔನನ ಜನಾಂಗ ಮತ್ತು ಅವರ ಪೂರ್ವಿಕರ ರೂಡಿಯಂತೆ. ಅವರು ಅಲ್ಲಾಹನ ನಿದರ್ಶನಗಳನ್ನು ನಿರಾಕರಿಸಿದರು. ಆಗ ಅಲ್ಲಾ ಹನು ಅವರ ಪಾಪಗಳಿಗಾಗಿ ಅವರನ್ನು ಶಿಕ್ಷಿಸಿದನು. ಅಲ್ಲಾಹನು ಪರಮ ಬಲಿಷ್ಟನೂ ಉಗ್ರವಾಗಿ ದಂಡಿಸುವವನೂ ಆಗಿರುವನು.

Verse 53

ذَٰلِكَ بِأَنَّ ٱللَّهَ لَمْ يَكُ مُغَيِّرًا نِّعْمَةً أَنْعَمَهَا عَلَىٰ قَوْمٍ حَتَّىٰ يُغَيِّرُوا۟ مَا بِأَنفُسِهِمْ ۙ وَأَنَّ ٱللَّهَ سَمِيعٌ عَلِيمٌ

Transliteration dhālika bi-anna l-laha lam yaku mughayyiran niʿ'matan anʿamahā ʿalā qawmin ḥattā yughayyirū mā bi-anfusihim wa-anna l-laha samīʿun ʿalīmun

Kannada ಇದೇಕೆಂದರೆ ಅಲ್ಲಾಹನು ಯಾವುದೇ ಜನಾಂಗಕ್ಕೆ ಕೊಡಮಾಡಿದ ಅನುಕೂಲವನ್ನು ಆ ಜನಾಂಗ ಸ್ವತಃ ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹನು ಬದಲಾಯಿಸುವವನಾಗಿರಲಿಲ್ಲ. (ಅಂತಹ ರೂಢಿ ಇರುವುದಿಲ್ಲ). ಅಲ್ಲಾಹು ಸರ್ವ ಶ್ರುತನೂ ಸರ್ವಜ್ಞನೂ ಆಗಿರುತ್ತಾನೆ .

Verse 54

كَدَأْبِ ءَالِ فِرْعَوْنَ ۙ وَٱلَّذِينَ مِن قَبْلِهِمْ ۚ كَذَّبُوا۟ بِـَٔايَـٰتِ رَبِّهِمْ فَأَهْلَكْنَـٰهُم بِذُنُوبِهِمْ وَأَغْرَقْنَآ ءَالَ فِرْعَوْنَ ۚ وَكُلٌّ كَانُوا۟ ظَـٰلِمِينَ

Transliteration kadabi āli fir'ʿawna wa-alladhīna min qablihim kadhabū biāyāti rabbihim fa-ahlaknāhum bidhunūbihim wa-aghraqnā āla fir'ʿawna wakullun kānū ẓālimīna

Kannada ಫಿರ್‍ಔನನ ಜನಾಂಗ ಮತ್ತು ಅವರ ಪೂರ್ವ ಜನಾಂಗದವರ ಸಂಪ್ರದಾಯದಂತೆ ಅವರು ತಮ್ಮ ಪ್ರಭುವಿನ ನಿದರ್ಶನಗಳನ್ನು ಸುಳ್ಳಾಗಿಸಿದರು. ಆಗ ಅವರ ಪಾಪಗಳ ಫಲವಾಗಿ ಅವರನ್ನು ನಾಶಗೊಳಿಸಿದೆವು. ಫಿರ್‍ಔನನ ಜನಾಂಗವನ್ನು ಮುಳುಗಿಸಿದೆವು. ಅವರೆಲ್ಲ ದುಷ್ಕರ್ಮಿಗಳಾಗಿದ್ದರು.

Verse 55

إِنَّ شَرَّ ٱلدَّوَآبِّ عِندَ ٱللَّهِ ٱلَّذِينَ كَفَرُوا۟ فَهُمْ لَا يُؤْمِنُونَ

Transliteration inna sharra l-dawābi ʿinda l-lahi alladhīna kafarū fahum lā yu'minūna

Kannada ಸತ್ಯವನ್ನು ಧಿಕ್ಕರಿಸಿದ ಹಾಗೂ ಎಂದಿಗೂ ಸತ್ಯ ಪ್ರಾಪ್ತರಾಗದವರು ಅಲ್ಲಾಹನ ಬಳಿ ಅತ್ಯಂತ ನೀಚ ಜಂತುಗಳು.

Verse 56

ٱلَّذِينَ عَـٰهَدتَّ مِنْهُمْ ثُمَّ يَنقُضُونَ عَهْدَهُمْ فِى كُلِّ مَرَّةٍ وَهُمْ لَا يَتَّقُونَ

Transliteration alladhīna ʿāhadtta min'hum thumma yanquḍūna ʿahdahum fī kulli marratin wahum lā yattaqūna

Kannada ಅವರ ಪೈಕಿ ನಿಮ್ಮೊಡನೆ ಒಪ್ಪಂದ ಮಾಡಿಕೊಂಡ ವರು. ಅವರು ಪ್ರತಿ ಸಲವೂ ಅದನ್ನು ಮುರಿಯು ತ್ತಾರೆ ಅವರು ಅಲ್ಲಾಹನ ಬಗ್ಗೆ ಜಾಗೃತೆ ವಹಿಸುವುದಿಲ್ಲ.

Verse 57

فَإِمَّا تَثْقَفَنَّهُمْ فِى ٱلْحَرْبِ فَشَرِّدْ بِهِم مَّنْ خَلْفَهُمْ لَعَلَّهُمْ يَذَّكَّرُونَ

Transliteration fa-immā tathqafannahum fī l-ḥarbi fasharrid bihim man khalfahum laʿallahum yadhakkarūna

Kannada ಅವರು ಯುದ್ಧದಲ್ಲಿ ನಿಮಗೆ ಮುಖಾಮುಖಿ ಯಾದಾಗ ಅವರ ಬೆನ್ನಹಿಂದಿನವರಿಂದ ಅವರನ್ನು ಬೇರ್ಪಡಿಸಿ (ಬೆನ್ನ ಹಿಂದಿನವರಿಗೆ) ಒಂದು ಪಾಠವಾಗತಕ್ಕ ರೀತಿಯಲ್ಲಿ ಶಿಕ್ಷೆ ನೀಡಿರಿ.

Verse 58

وَإِمَّا تَخَافَنَّ مِن قَوْمٍ خِيَانَةً فَٱنۢبِذْ إِلَيْهِمْ عَلَىٰ سَوَآءٍ ۚ إِنَّ ٱللَّهَ لَا يُحِبُّ ٱلْخَآئِنِينَ

Transliteration wa-immā takhāfanna min qawmin khiyānatan fa-inbidh ilayhim ʿalā sawāin inna l-laha lā yuḥibbu l-khāinīna

Kannada ನಿಮಗೆ ಯಾವುದೇ ಜನಾಂಗದಿಂದ ವಂಚನೆಯ ಆಶಂಕೆಯಿದ್ದರೆ ಅವರೊಂದಿಗಿನ ಕರಾರನ್ನು ಅವರೆಡೆಗೇ ತತ್ಸಮಾನ ರೀತಿಯಲ್ಲಿ ಎಸೆದು ಬಿಡಿರಿ. ನಿಶ್ಚಯವಾಗಿಯೂ ಅಲ್ಲಾಹು ವಂಚಕರನ್ನು ಮೆಚ್ಚುವುದಿಲ್ಲ .

Verse 59

وَلَا يَحْسَبَنَّ ٱلَّذِينَ كَفَرُوا۟ سَبَقُوٓا۟ ۚ إِنَّهُمْ لَا يُعْجِزُونَ

Transliteration walā yaḥsabanna alladhīna kafarū sabaqū innahum lā yuʿ'jizūna

Kannada ಸತ್ಯನಿಷೇಧಿಗಳು ಅಲ್ಲಾಹನನ್ನು ಹಿಂದಿಕ್ಕುವರೆಂದು ಖಂಡಿತ ಭಾವಿಸಬಾರದು. ಖಂಡಿತವಾಗಿಯೂ ಅವರು ಅವನನ್ನು ಸೋಲಿಸಲಾರರು.

Verse 60

وَأَعِدُّوا۟ لَهُم مَّا ٱسْتَطَعْتُم مِّن قُوَّةٍ وَمِن رِّبَاطِ ٱلْخَيْلِ تُرْهِبُونَ بِهِۦ عَدُوَّ ٱللَّهِ وَعَدُوَّكُمْ وَءَاخَرِينَ مِن دُونِهِمْ لَا تَعْلَمُونَهُمُ ٱللَّهُ يَعْلَمُهُمْ ۚ وَمَا تُنفِقُوا۟ مِن شَىْءٍ فِى سَبِيلِ ٱللَّهِ يُوَفَّ إِلَيْكُمْ وَأَنتُمْ لَا تُظْلَمُونَ

Transliteration wa-aʿiddū lahum mā is'taṭaʿtum min quwwatin wamin ribāṭi l-khayli tur'hibūna bihi ʿaduwwa l-lahi waʿaduwwakum waākharīna min dūnihim lā taʿlamūnahumu l-lahu yaʿlamuhum wamā tunfiqū min shayin fī sabīli l-lahi yuwaffa ilaykum wa-antum lā tuẓ'lamūna

Kannada ನೀವು ನಿಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಶಕ್ತಿಯನ್ನು ಹಾಗೂ ಕಟ್ಟಿ ಅಣಿಗೊಳಿಸಿದ ಪಡೆ ಕುದುರೆಗಳನ್ನು ಅವರೊಡನೆ ಹೋರಾಟ ನಡೆಸಲಿಕ್ಕಾಗಿ ಸಜ್ಜುಗೊಳಿಸಿರಿ. ಇದರ ಮೂಲಕ ಅಲ್ಲಾಹನ ಶತ್ರು, ನಿಮ್ಮ ಶತ್ರು ಮತ್ತು ನಿಮಗೆ ಅರಿವಿಲ್ಲದ ಹಾಗೂ ಅಲ್ಲಾಹನಿಗೆ ಅರಿವಿರುವ ಇತರ ಶತ್ರುಗಳನ್ನು ಭೀತಿಗೊಳಿಸಲಿಕ್ಕಾಗಿ, ಅಲ್ಲಾಹನ ಮಾರ್ಗದಲ್ಲಿ ನೀವು ಏನೇ ಖರ್ಚು ಮಾಡಿದರೂ ಅದರ ಸಂಪೂರ್ಣ ಪ್ರತಿಫಲವನ್ನು ನಿಮಗೆ ಕೊಡಲಾಗುವುದು. ನಿಮ್ಮೊಂದಿಗೆ ಎಷ್ಟು ಮಾತ್ರ ಕ್ಕೂ ಅನ್ಯಾಯ ಮಾಡಲಾಗದು.

Verse 61

۞ وَإِن جَنَحُوا۟ لِلسَّلْمِ فَٱجْنَحْ لَهَا وَتَوَكَّلْ عَلَى ٱللَّهِ ۚ إِنَّهُۥ هُوَ ٱلسَّمِيعُ ٱلْعَلِيمُ

Transliteration wa-in janaḥū lilssalmi fa-ij'naḥ lahā watawakkal ʿalā l-lahi innahu huwa l-samīʿu l-ʿalīmu

Kannada (ಓ ಪೈಗಂಬರರೇ,) ಅವರು ಶಾಂತಿ ಸಂಧಾನ ಗಳ ಕಡೆಗೆ ವಾಲಿದರೆ ನೀವೂ ಅದಕ್ಕೆ ವಾಲಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯನ್ನಿರಿಸಿರಿ. ನಿಶ್ಚಯವಾಗಿಯೂ ಅವನೇ ಸರ್ವ ಶ್ರುತನೂ ಸರ್ವಜ್ಞನೂ ಆಗಿರುತ್ತಾನೆ .

Verse 62

وَإِن يُرِيدُوٓا۟ أَن يَخْدَعُوكَ فَإِنَّ حَسْبَكَ ٱللَّهُ ۚ هُوَ ٱلَّذِىٓ أَيَّدَكَ بِنَصْرِهِۦ وَبِٱلْمُؤْمِنِينَ

Transliteration wa-in yurīdū an yakhdaʿūka fa-inna ḥasbaka l-lahu huwa alladhī ayyadaka binaṣrihi wabil-mu'minīna

Kannada ಅವರು ನಿಮ್ಮನ್ನು ವಂಚಿಸಲು ಬಯಸಿದರೆ ನಿಮಗೆ ಅಲ್ಲಾಹು ಸಾಕು. ಅವನು ತನ್ನ ಸಹಾ ಯದಿಂದಲೂ ಸತ್ಯವಿಶ್ವಾಸಿಗಳ ಮೂಲಕವೂ ನಿಮಗೆ ಬಲ ನೀಡಿರುವನು.

Verse 63

وَأَلَّفَ بَيْنَ قُلُوبِهِمْ ۚ لَوْ أَنفَقْتَ مَا فِى ٱلْأَرْضِ جَمِيعًا مَّآ أَلَّفْتَ بَيْنَ قُلُوبِهِمْ وَلَـٰكِنَّ ٱللَّهَ أَلَّفَ بَيْنَهُمْ ۚ إِنَّهُۥ عَزِيزٌ حَكِيمٌ

Transliteration wa-allafa bayna qulūbihim law anfaqta mā fī l-arḍi jamīʿan mā allafta bayna qulūbihim walākinna l-laha allafa baynahum innahu ʿazīzun ḥakīmun

Kannada ಅವರ (ಸತ್ಯವಿಶ್ವಾಸಿಗಳ) ಹೃದಯಗಳನ್ನು ಅವನು ಪರಸ್ಪರ ಜೋಡಿಸಿದವನು. ನೀವು ಭೂಮಿಯಲ್ಲಿರುವ ಸಕಲ ಸಂಪತ್ತನ್ನು ಖರ್ಚು ಮಾಡಿದರೂ ಇವರ ಹೃದಯಗಳನ್ನು ಜೋಡಿಸ ಲಾಗುತ್ತಿರಲಿಲ್ಲ. ಆದರೆ ಅವರೆಡೆಯಲ್ಲಿ ಅಲ್ಲಾಹನು ಅನ್ಯೋನ್ಯತೆ ನೆಲೆಗೊಳಿಸಿದನು. ನಿಶ್ಚಯವಾಗಿಯೂ ಅವನು ಮಹಾಪ್ರತಾಪಿಯೂ ಪರಮ ತಂತ್ರಜ್ಞನೂ ಆಗಿರುತ್ತಾನೆ .

Verse 64

يَـٰٓأَيُّهَا ٱلنَّبِىُّ حَسْبُكَ ٱللَّهُ وَمَنِ ٱتَّبَعَكَ مِنَ ٱلْمُؤْمِنِينَ

Transliteration yāayyuhā l-nabiyu ḥasbuka l-lahu wamani ittabaʿaka mina l-mu'minīna

Kannada ಓ ಪೈಗಂಬರರೇ, ನಿಮಗೆ ಅಲ್ಲಾಹು ಮತ್ತು ನಿಮ್ಮನ್ನು ಅನುಸರಿಸಿದ ಸತ್ಯವಿಶ್ವಾಸಿಗಳು ಸಾಕು .

Verse 65

يَـٰٓأَيُّهَا ٱلنَّبِىُّ حَرِّضِ ٱلْمُؤْمِنِينَ عَلَى ٱلْقِتَالِ ۚ إِن يَكُن مِّنكُمْ عِشْرُونَ صَـٰبِرُونَ يَغْلِبُوا۟ مِا۟ئَتَيْنِ ۚ وَإِن يَكُن مِّنكُم مِّا۟ئَةٌ يَغْلِبُوٓا۟ أَلْفًا مِّنَ ٱلَّذِينَ كَفَرُوا۟ بِأَنَّهُمْ قَوْمٌ لَّا يَفْقَهُونَ

Transliteration yāayyuhā l-nabiyu ḥarriḍi l-mu'minīna ʿalā l-qitāli in yakun minkum ʿish'rūna ṣābirūna yaghlibū mi-atayni wa-in yakun minkum mi-atun yaghlibū alfan mina alladhīna kafarū bi-annahum qawmun lā yafqahūna

Kannada ಓ ಪೈಗಂಬರರೇ, ಸತ್ಯವಿಶ್ವಾಸಿಗಳನ್ನು ಯುದ್ದಕ್ಕೆ ಪ್ರೇರೇಪಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನ ಶೀಲರಿದ್ದರೆ ಅವರು ಇನ್ನೂರು ಮಂದಿಯ ವಿರುದ್ಧ ಜಯಗಳಿಸುವರು ಮತ್ತು ನಿಮ್ಮಲ್ಲಿ (ಇಂತಹ) ನೂರು ಮಂದಿ ಇದ್ದರೆ ಸತ್ಯನಿಷೇಧಿಗಳ ಸಾವಿರ ಮಂದಿಯನ್ನು ಜೈಸಬಲ್ಲರು. ಏಕೆಂದರೆ ಅವರು ತಿಳಿಗೇಡಿಗಳು.

Verse 66

ٱلْـَٔـٰنَ خَفَّفَ ٱللَّهُ عَنكُمْ وَعَلِمَ أَنَّ فِيكُمْ ضَعْفًا ۚ فَإِن يَكُن مِّنكُم مِّا۟ئَةٌ صَابِرَةٌ يَغْلِبُوا۟ مِا۟ئَتَيْنِ ۚ وَإِن يَكُن مِّنكُمْ أَلْفٌ يَغْلِبُوٓا۟ أَلْفَيْنِ بِإِذْنِ ٱللَّهِ ۗ وَٱللَّهُ مَعَ ٱلصَّـٰبِرِينَ

Transliteration al-āna khaffafa l-lahu ʿankum waʿalima anna fīkum ḍaʿfan fa-in yakun minkum mi-atun ṣābiratun yaghlibū mi-atayni wa-in yakun minkum alfun yaghlibū alfayni bi-idh'ni l-lahi wal-lahu maʿa l-ṣābirīna

Kannada ಈಗ ಅಲ್ಲಾಹನು ನಿಮ್ಮ ಭಾರವನ್ನು ಹಗುರ ಗೊಳಿಸಿದನು. ನಿಮ್ಮ ದೌರ್ಬಲ್ಯವನ್ನೂ ಅರಿತನು. ಆದುದರಿಂದ ನಿಮ್ಮಲ್ಲಿ ನೂರು ಮಂದಿ ಸಹನಶೀಲರಿದ್ದರೆ ಅವರು ಇನ್ನೂರರ ಮೇಲೂ ಸಾವಿರ ಮಂದಿ ಇಂಥವರಿದ್ದರೆ ಎರಡು ಸಾವಿರದ ಮೇಲೂ ಅಲ್ಲಾಹನ ನೆರವಿನಿಂದ ವಿಜಯಿಗಳಾಗುವರು. ಅಲ್ಲಾಹು ಸಹನಶೀಲರ ಜೊತೆಗಿದ್ದಾನೆ.

Verse 67

مَا كَانَ لِنَبِىٍّ أَن يَكُونَ لَهُۥٓ أَسْرَىٰ حَتَّىٰ يُثْخِنَ فِى ٱلْأَرْضِ ۚ تُرِيدُونَ عَرَضَ ٱلدُّنْيَا وَٱللَّهُ يُرِيدُ ٱلْـَٔاخِرَةَ ۗ وَٱللَّهُ عَزِيزٌ حَكِيمٌ

Transliteration mā kāna linabiyyin an yakūna lahu asrā ḥattā yuth'khina fī l-arḍi turīdūna ʿaraḍa l-dun'yā wal-lahu yurīdu l-ākhirata wal-lahu ʿazīzun ḥakīmun

Kannada ಭೂಮಿಯಲ್ಲಿ ಪ್ರಾಬಲ್ಯ ಸಾಧಿಸುವವರೆಗೂ ತನ್ನ ಬಳಿ ಯುದ್ದ ಸೆರೆಯಾಳುಗಳಿರುವುದು ಓರ್ವ ಪ್ರವಾದಿಗೆ ಶೋಭಿಸುವುದಿಲ್ಲ. ನೀವು ಐಹಿಕ ಲಾಭಗಳನ್ನು ಬಯಸುತ್ತೀರಿ. ಅಲ್ಲಾಹನು ಪರಲೋಕವನ್ನು ಬಯಸುತ್ತಾನೆ. ಅಲ್ಲಾಹು ಮಹಾಪ್ರತಾಪಿಯೂ ಯುಕ್ತಿವಂತನೂ ಆಗಿರುತ್ತಾನೆ.

Verse 68

لَّوْلَا كِتَـٰبٌ مِّنَ ٱللَّهِ سَبَقَ لَمَسَّكُمْ فِيمَآ أَخَذْتُمْ عَذَابٌ عَظِيمٌ

Transliteration lawlā kitābun mina l-lahi sabaqa lamassakum fīmā akhadhtum ʿadhābun ʿaẓīmun

Kannada ಅಲ್ಲಾಹನಿಂದ ಮೊದಲೇ ಲಿಖಿತಗೊಂಡಿಲ್ಲದಿರುತ್ತಿದ್ದರೆ, ನೀವು ಪಡೆದುದರ ಫಲವಾಗಿ ನಿಮಗೆ ಘೋರ ಶಿಕ್ಷೆ ಸಿಗುತ್ತಿತ್ತು .

Verse 69

فَكُلُوا۟ مِمَّا غَنِمْتُمْ حَلَـٰلًا طَيِّبًا ۚ وَٱتَّقُوا۟ ٱللَّهَ ۚ إِنَّ ٱللَّهَ غَفُورٌ رَّحِيمٌ

Transliteration fakulū mimmā ghanim'tum ḥalālan ṭayyiban wa-ittaqū l-laha inna l-laha ghafūrun raḥīmun

Kannada ಆದುದರಿಂದ ನೀವು ಗಳಿಸಿರುವ ಧರ್ಮಬದ್ಧವೂ ಶುದ್ಧವೂ ಆಗಿರುವ ಸೊತ್ತನ್ನು ಭುಜಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹ್ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.

Verse 70

يَـٰٓأَيُّهَا ٱلنَّبِىُّ قُل لِّمَن فِىٓ أَيْدِيكُم مِّنَ ٱلْأَسْرَىٰٓ إِن يَعْلَمِ ٱللَّهُ فِى قُلُوبِكُمْ خَيْرًا يُؤْتِكُمْ خَيْرًا مِّمَّآ أُخِذَ مِنكُمْ وَيَغْفِرْ لَكُمْ ۗ وَٱللَّهُ غَفُورٌ رَّحِيمٌ

Transliteration yāayyuhā l-nabiyu qul liman fī aydīkum mina l-asrā in yaʿlami l-lahu fī qulūbikum khayran yu'tikum khayran mimmā ukhidha minkum wayaghfir lakum wal-lahu ghafūrun raḥīmun

Kannada ಓ ಪೈಗಂಬರರೇ, ನಿಮ್ಮ ವಶದಲ್ಲಿರುವ ಸೆರೆಯಾಳುಗಳಿಗೆ ಹೇಳಿರಿ; ನಿಮ್ಮ ಹೃದಯಗಳಲ್ಲೇ ನಾದರೂ ಒಳಿತು ಇರುವುದೆಂದು ಅಲ್ಲಾಹು ತಿಳಿದರೆ ಅವನು ನಿಮ್ಮಿಂದ ಪಡೆದುದಕ್ಕಿಂತಲೂ ಉತ್ತಮವಾದುದನ್ನು ನಿಮಗೆ ನೀಡುವನು ಮತ್ತು ನಿಮ್ಮ ಅಪರಾಧಗಳನ್ನು ಕ್ಷಮಿಸುವನು. ಅಲ್ಲಾಹು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ .

Verse 71

وَإِن يُرِيدُوا۟ خِيَانَتَكَ فَقَدْ خَانُوا۟ ٱللَّهَ مِن قَبْلُ فَأَمْكَنَ مِنْهُمْ ۗ وَٱللَّهُ عَلِيمٌ حَكِيمٌ

Transliteration wa-in yurīdū khiyānataka faqad khānū l-laha min qablu fa-amkana min'hum wal-lahu ʿalīmun ḥakīmun

Kannada ಆದರೆ ನಿಮ್ಮನ್ನು ವಂಚಿಸುವ ಇರಾದೆ ಅವರಿಗಿದ್ದರೆ (ಚಿಂತೆ ಬೇಡ). ಅವರು ಇದಕ್ಕಿಂತ ಮುಂಚೆ ಅಲ್ಲಾಹನನ್ನು ವಂಚಿಸಿದ್ದಾರೆ. ಇದರ ಫಲವಾಗಿಯೇ ಅವರನ್ನು ನಿಮ್ಮ ವಶಕ್ಕೆ ಒಪ್ಪಿಸಿದನು. ಅಲ್ಲಾಹು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ .

Verse 72

إِنَّ ٱلَّذِينَ ءَامَنُوا۟ وَهَاجَرُوا۟ وَجَـٰهَدُوا۟ بِأَمْوَٰلِهِمْ وَأَنفُسِهِمْ فِى سَبِيلِ ٱللَّهِ وَٱلَّذِينَ ءَاوَوا۟ وَّنَصَرُوٓا۟ أُو۟لَـٰٓئِكَ بَعْضُهُمْ أَوْلِيَآءُ بَعْضٍ ۚ وَٱلَّذِينَ ءَامَنُوا۟ وَلَمْ يُهَاجِرُوا۟ مَا لَكُم مِّن وَلَـٰيَتِهِم مِّن شَىْءٍ حَتَّىٰ يُهَاجِرُوا۟ ۚ وَإِنِ ٱسْتَنصَرُوكُمْ فِى ٱلدِّينِ فَعَلَيْكُمُ ٱلنَّصْرُ إِلَّا عَلَىٰ قَوْمٍۭ بَيْنَكُمْ وَبَيْنَهُم مِّيثَـٰقٌ ۗ وَٱللَّهُ بِمَا تَعْمَلُونَ بَصِيرٌ

Transliteration inna alladhīna āmanū wahājarū wajāhadū bi-amwālihim wa-anfusihim fī sabīli l-lahi wa-alladhīna āwaw wanaṣarū ulāika baʿḍuhum awliyāu baʿḍin wa-alladhīna āmanū walam yuhājirū mā lakum min walāyatihim min shayin ḥattā yuhājirū wa-ini is'tanṣarūkum fī l-dīni faʿalaykumu l-naṣru illā ʿalā qawmin baynakum wabaynahum mīthāqun wal-lahu bimā taʿmalūna baṣīrun

Kannada ಸತ್ಯವಿಶ್ವಾಸ ಸ್ವೀಕರಿಸಿದವರೂ, ದೇಶತ್ಯಾಗ ಮಾಡಿದವರೂ ಅಲ್ಲಾಹನ ಮಾರ್ಗದಲ್ಲಿ ತಮ್ಮ ಸೊತ್ತು ಹಾಗೂ ದೇಹಗಳಿಂದ ಹೋರಾಡಿದವರೂ (ಹಿಜ್ರತ್ ಮಾಡಿದವರಿಗೆ) ಆಶ್ರಯ ಮತ್ತು ಸಹಾಯವನ್ನು ಕೊಟ್ಟವರೂ ವಾಸ್ತವದಲ್ಲಿ ಅವರು ಪರಸ್ಪರ ಬಂಧುಮಿತ್ರರು. ವಿಶ್ವಾಸವಿರಿಸಿದರೂ ದೇಶತ್ಯಾಗ ಮಾಡದೆ ಇದ್ದವರು ದೇಶ ತ್ಯಾಗ ಮಾಡಿ ಬರುವವರೆಗೂ ಅವರನ್ನು ರಕ್ಷಿಸುವ ಯಾ ವುದೇ ಹೊಣೆ ನಿಮಗಿಲ್ಲ. ಅವರು ಧರ್ಮ ಕಾರ್ಯದಲ್ಲಿ ನಿಮ್ಮಿಂದ ಸಹಾಯ ಕೋರಿದರೆ ಅವರಿಗೆ ಸಹಾಯ ಮಾಡಬೇಕಾದುದು ನಿಮ್ಮ ಹೊಣೆಯಾಗಿರುತ್ತದೆ. ಆದರೆ, ಇದು (ಸಹಾಯವು) ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ವಿರುದ್ಧವಾಗಿರಬಾರದು. ನೀವು ಮಾಡುತ್ತಿರುವುದನ್ನು ಅಲ್ಲಾಹು ವೀಕ್ಷಿಸುತ್ತಾನೆ

Verse 73

وَٱلَّذِينَ كَفَرُوا۟ بَعْضُهُمْ أَوْلِيَآءُ بَعْضٍ ۚ إِلَّا تَفْعَلُوهُ تَكُن فِتْنَةٌ فِى ٱلْأَرْضِ وَفَسَادٌ كَبِيرٌ

Transliteration wa-alladhīna kafarū baʿḍuhum awliyāu baʿḍin illā tafʿalūhu takun fit'natun fī l-arḍi wafasādun kabīrun

Kannada ಸತ್ಯನಿಷೇಧಿಗಳು ಪರಸ್ಪರ ಬಂಧುಗಳು. ನೀವು ಹಾಗೆ ಮಾಡದಿದ್ದರೆ ಭೂಮಿಯಲ್ಲಿ ಕ್ಷೋಭೆಯೂ ಗಂಭೀರ ನಾಶವೂ ಉಂಟಾದೀತು.

Verse 74

وَٱلَّذِينَ ءَامَنُوا۟ وَهَاجَرُوا۟ وَجَـٰهَدُوا۟ فِى سَبِيلِ ٱللَّهِ وَٱلَّذِينَ ءَاوَوا۟ وَّنَصَرُوٓا۟ أُو۟لَـٰٓئِكَ هُمُ ٱلْمُؤْمِنُونَ حَقًّا ۚ لَّهُم مَّغْفِرَةٌ وَرِزْقٌ كَرِيمٌ

Transliteration wa-alladhīna āmanū wahājarū wajāhadū fī sabīli l-lahi wa-alladhīna āwaw wanaṣarū ulāika humu l-mu'minūna ḥaqqan lahum maghfiratun wariz'qun karīmun

Kannada ಸತ್ಯವಿಶ್ವಾಸವನ್ನು ಅವಲಂಬಿಸಿದ, ದೇಶತ್ಯಾಗ ಮಾಡಿದ ಹಾಗೂ ಅಲ್ಲಾಹನ ಮಾರ್ಗದಲ್ಲಿ ಧರ್ಮ ಯುದ್ಧ ಮಾಡಿದವರು ಮತ್ತು ಆಶ್ರಯವನ್ನೂ ಸಹಾಯವನ್ನೂ ನೀಡಿದವರು ಯಾರೋ ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ಪಾಪ ಮುಕ್ತಿಯೂ ಗೌರವಪೂರ್ಣ ಆಹಾರವೂ ಇದೆ.

Verse 75

وَٱلَّذِينَ ءَامَنُوا۟ مِنۢ بَعْدُ وَهَاجَرُوا۟ وَجَـٰهَدُوا۟ مَعَكُمْ فَأُو۟لَـٰٓئِكَ مِنكُمْ ۚ وَأُو۟لُوا۟ ٱلْأَرْحَامِ بَعْضُهُمْ أَوْلَىٰ بِبَعْضٍ فِى كِتَـٰبِ ٱللَّهِ ۗ إِنَّ ٱللَّهَ بِكُلِّ شَىْءٍ عَلِيمٌۢ

Transliteration wa-alladhīna āmanū min baʿdu wahājarū wajāhadū maʿakum fa-ulāika minkum wa-ulū l-arḥāmi baʿḍuhum awlā bibaʿḍin fī kitābi l-lahi inna l-laha bikulli shayin ʿalīmun

Kannada ನಂತರ ಸತ್ಯವಿಶ್ವಾಸವಿಟ್ಟವರು, ದೇಶತ್ಯಾಗ ಮಾಡಿ ಬಂದವರು ಮತ್ತು ನಿಮ್ಮ ಜೊತೆಗೆ ಯುದ್ಧ ಮಾಡಿದವರು ನಿಮ್ಮೊಂದಿಗೆ ಸೇರಿದ್ದಾರೆಂ. ಆದರೆ ಅಲ್ಲಾಹನ ಗ್ರಂಥದಲ್ಲಿ ರಕ್ತ ಸಂಬಂಧಿಕರು (ವಾರೀಸು ಹಕ್ಕಿಗೆ) ಪರಸ್ಪರ ಹೆಚ್ಚು ಹಕ್ಕುದಾರರು. ನಿಶ್ಚಯವಾಗಿಯೂ ಅಲ್ಲಾಹು ಸಕಲ ವಸ್ತುಗಳ ಬಗ್ಗೆ ಅಗಾಧ ಜ್ಞಾನಿಯಾಗಿರುತ್ತಾನೆ.

Read Surah Al-Anfal in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.