MyDugsiStart learning

Surah Ghafir in Kannada: translation and audio

Surah 40 · غافر · The Forgiver · 85 verses

Surah Ghafir verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ghafir word by word in English.

Verse 1

حمٓ

Transliteration hha-meem

Kannada ಹಾಮೀಮ್.

Verse 2

تَنزِيلُ ٱلْكِتَـٰبِ مِنَ ٱللَّهِ ٱلْعَزِيزِ ٱلْعَلِيمِ

Transliteration tanzīlu l-kitābi mina l-lahi l-ʿazīzi l-ʿalīmi

Kannada ಈ ಗ್ರಂಥವು ಪರಮ ಪ್ರತಾಪಿಯೂ, ಸರ್ವಜ್ಞನೂ ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ.

Verse 3

غَافِرِ ٱلذَّنۢبِ وَقَابِلِ ٱلتَّوْبِ شَدِيدِ ٱلْعِقَابِ ذِى ٱلطَّوْلِ ۖ لَآ إِلَـٰهَ إِلَّا هُوَ ۖ إِلَيْهِ ٱلْمَصِيرُ

Transliteration ghāfiri l-dhanbi waqābili l-tawbi shadīdi l-ʿiqābi dhī l-ṭawli lā ilāha illā huwa ilayhi l-maṣīru

Kannada ಅವನು ಪಾಪಗಳನ್ನು ಕ್ಷಮಿಸುವವನೂ ಪಶ್ಚಾತ್ತಾಪ ಸ್ವೀಕರಿಸುವವನೂ ಕಠಿಣ ಶಿಕ್ಷೆ ಕೊಡುವವನೂ, ಅನುಗ್ರಹದಾತನೂ ಆಗಿರುತ್ತಾನೆ. ಅವನ ಹೊರತು ಬೇರೆ ಆರಾಧ್ಯರಿಲ್ಲ, ಸರ್ವರಿಗೂ ಅವನ ಕಡೆಗೇ ಮರಳಬೇಕಾಗಿದೆ.

Verse 4

مَا يُجَـٰدِلُ فِىٓ ءَايَـٰتِ ٱللَّهِ إِلَّا ٱلَّذِينَ كَفَرُوا۟ فَلَا يَغْرُرْكَ تَقَلُّبُهُمْ فِى ٱلْبِلَـٰدِ

Transliteration mā yujādilu fī āyāti l-lahi illā alladhīna kafarū falā yaghrur'ka taqallubuhum fī l-bilādi

Kannada ಅಲ್ಲಾಹನ ವಚನಗಳ ಬಗ್ಗೆ ಸತ್ಯನಿಷೇಧಿಗಳು ಮಾತ್ರವೇ ಜಗಳಾಡಬಲ್ಲರು. ಆದುದರಿಂದ ಜಗತ್ತಿನ ನಾಡುಗಳಲ್ಲಿ ಅವರು ಸ್ಥೈರ್ಯವಾಗಿ ವಿಹರಿಸುವುದನ್ನು ಕಂಡು ಮೋಸ ಹೋಗಬೇಡಿರಿ.

Verse 5

كَذَّبَتْ قَبْلَهُمْ قَوْمُ نُوحٍ وَٱلْأَحْزَابُ مِنۢ بَعْدِهِمْ ۖ وَهَمَّتْ كُلُّ أُمَّةٍۭ بِرَسُولِهِمْ لِيَأْخُذُوهُ ۖ وَجَـٰدَلُوا۟ بِٱلْبَـٰطِلِ لِيُدْحِضُوا۟ بِهِ ٱلْحَقَّ فَأَخَذْتُهُمْ ۖ فَكَيْفَ كَانَ عِقَابِ

Transliteration kadhabat qablahum qawmu nūḥin wal-aḥzābu min baʿdihim wahammat kullu ummatin birasūlihim liyakhudhūhu wajādalū bil-bāṭili liyud'ḥiḍū bihi l-ḥaqa fa-akhadhtuhum fakayfa kāna ʿiqābi

Kannada ಇವರಿಗಿಂತ ಮುಂಚೆ ನೂಹರ ಜನಾಂಗವೂ ಆ ಬಳಿಕ ಇತರ ಅನೇಕ ಸಂಘ ಪರಿವಾರಗಳೂ ಸತ್ಯ ವನ್ನು ನಿಷೇಧಿಸಿವೆ. ಪ್ರತಿಯೊಂದು ಜನಾಂಗವೂ ತನ್ನ ಸಂದೇಶವಾಹಕನನ್ನು ಸೆರೆ ಹಿಡಿಯಲಿಕ್ಕೂ ಮಿಥ್ಯದ ಅಸ್ತ್ರಗಳಿಂದ ಸತ್ಯವನ್ನು ನಾಶ ಮಾಡಲಿ ಕ್ಕೂ ಯತ್ನಿಸಿತು. ಆಗ ನಾನು ಅವರನ್ನು ಹಿಡಿದು ಬಿಟ್ಟೆನು. ನನ್ನ ಪ್ರತೀಕಾರವು ಎಷ್ಟು ಕಠಿಣವಾಗಿ ತ್ತೆಂದು ಬಲ್ಲಿರಾ?

Verse 6

وَكَذَٰلِكَ حَقَّتْ كَلِمَتُ رَبِّكَ عَلَى ٱلَّذِينَ كَفَرُوٓا۟ أَنَّهُمْ أَصْحَـٰبُ ٱلنَّارِ

Transliteration wakadhālika ḥaqqat kalimatu rabbika ʿalā alladhīna kafarū annahum aṣḥābu l-nāri

Kannada ಸತ್ಯನಿಷೇಧಕರು ನರಕವಾಸಿಗಳಾಗಲಿರು ವರೆಂಬ ನಿಮ್ಮ ಪ್ರಭುವಿನ ವಚನವು ಹಾಗೆ ನಿಜವಾಯಿತು.

Verse 7

ٱلَّذِينَ يَحْمِلُونَ ٱلْعَرْشَ وَمَنْ حَوْلَهُۥ يُسَبِّحُونَ بِحَمْدِ رَبِّهِمْ وَيُؤْمِنُونَ بِهِۦ وَيَسْتَغْفِرُونَ لِلَّذِينَ ءَامَنُوا۟ رَبَّنَا وَسِعْتَ كُلَّ شَىْءٍ رَّحْمَةً وَعِلْمًا فَٱغْفِرْ لِلَّذِينَ تَابُوا۟ وَٱتَّبَعُوا۟ سَبِيلَكَ وَقِهِمْ عَذَابَ ٱلْجَحِيمِ

Transliteration alladhīna yaḥmilūna l-ʿarsha waman ḥawlahu yusabbiḥūna biḥamdi rabbihim wayu'minūna bihi wayastaghfirūna lilladhīna āmanū rabbanā wasiʿ'ta kulla shayin raḥmatan waʿil'man fa-igh'fir lilladhīna tābū wa-ittabaʿū sabīlaka waqihim ʿadhāba l-jaḥīmi

Kannada ಅರ್ಶನ್ನು ಹೊತ್ತ ದೇವಚರರು ಮತ್ತು ಅದರ ಸುತ್ತಲೂ ನೆರೆದವರು ತಮ್ಮ ಪ್ರಭುವಿನ ಪ್ರಕೀ ರ್ತನೆ ಮಾಡುತ್ತ ಅವನನ್ನು ಸ್ತುತಿಸುತ್ತ ಅವನ ಮೇಲೆ ವಿಶ್ವಾಸವಿರಿಸುತ್ತಾರೆ. ಸತ್ಯವಿಶ್ವಾಸಿಗಳ ಪಾಪ ವಿಮೋಚನೆಗಾಗಿ ಅವರು ಹೀಗೆ ಪ್ರಾರ್ಥಿಸುತ್ತಾರೆ. “ನಮ್ಮ ಪ್ರಭೂ! ನಿನ್ನ ಕೃಪೆಯೂ ಜ್ಞಾನವೂ ಸಕಲ ವಸ್ತುಗಳನ್ನು ಆವರಿಸಿಕೊಂಡಿದೆ. ಆದುದರಿಂದ ಪಶ್ಚಾತ್ತಾಪಪಟ್ಟು ಮರಳಿದ ಹಾಗೂ ನಿನ್ನ ಮಾರ್ಗವನ್ನು ಸ್ವೀಕರಿಸಿಕೊಂಡವರಿಗೆ ಕ್ಷಮಾದಾನ ನೀಡು ಮತ್ತು ನರಕಯಾತನೆಯಿಂದ ಅವರನ್ನು ರಕ್ಷಿಸು.

Verse 8

رَبَّنَا وَأَدْخِلْهُمْ جَنَّـٰتِ عَدْنٍ ٱلَّتِى وَعَدتَّهُمْ وَمَن صَلَحَ مِنْ ءَابَآئِهِمْ وَأَزْوَٰجِهِمْ وَذُرِّيَّـٰتِهِمْ ۚ إِنَّكَ أَنتَ ٱلْعَزِيزُ ٱلْحَكِيمُ

Transliteration rabbanā wa-adkhil'hum jannāti ʿadnin allatī waʿadttahum waman ṣalaḥa min ābāihim wa-azwājihim wadhurriyyātihim innaka anta l-ʿazīzu l-ḥakīmu

Kannada ನಮ್ಮ ಪ್ರಭೂ, ಅವರನ್ನೂ ಸಜ್ಜನರಾದ ಅವರ ಪಿತರನ್ನೂ, ಪತ್ನಿಯರನ್ನೂ, ಮಕ್ಕಳನ್ನೂ ಅವರಿಗಾಗಿ ನೀನು ವಾಗ್ದಾನ ಮಾಡಿರುವ ಶಾಶ್ವ ತವಾದ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಗೊಳಿಸು. ನಿಶ್ಚಯವಾಗಿ ನೀನು ಪ್ರಬಲನೂ ಯುಕ್ತಿವಂತನೂ ಆಗಿರುವೆ.

Verse 9

وَقِهِمُ ٱلسَّيِّـَٔاتِ ۚ وَمَن تَقِ ٱلسَّيِّـَٔاتِ يَوْمَئِذٍ فَقَدْ رَحِمْتَهُۥ ۚ وَذَٰلِكَ هُوَ ٱلْفَوْزُ ٱلْعَظِيمُ

Transliteration waqihimu l-sayiāti waman taqi l-sayiāti yawma-idhin faqad raḥim'tahu wadhālika huwa l-fawzu l-ʿaẓīmu

Kannada ಅವರನ್ನು ಕೇಡುಗಳಿಂದ ರಕ್ಷಿಸು. ನೀನು ಆ ದಿನ ಯಾರನ್ನು ಕೇಡುಗಳಿಂದ ರಕ್ಷಿಸಿದೆಯೋ ಅವನ ಮೇಲೆ ನೀನು ಕರುಣೆ ತೋರಿದೆ. ಇದುವೇ ಮಹಾ ವಿಜಯ.

Verse 10

إِنَّ ٱلَّذِينَ كَفَرُوا۟ يُنَادَوْنَ لَمَقْتُ ٱللَّهِ أَكْبَرُ مِن مَّقْتِكُمْ أَنفُسَكُمْ إِذْ تُدْعَوْنَ إِلَى ٱلْإِيمَـٰنِ فَتَكْفُرُونَ

Transliteration inna alladhīna kafarū yunādawna lamaqtu l-lahi akbaru min maqtikum anfusakum idh tud'ʿawna ilā l-īmāni fatakfurūna

Kannada ಸತ್ಯನಿಷೇಧಿಗಳೊಡನೆ ಹೀಗೆ ಕೂಗಿ ಹೇಳಲಾ ಗುವುದು - “ನಿಮ್ಮನ್ನು ಸತ್ಯವಿಶ್ವಾಸದ ಕಡೆಗೆ ಕರೆಯಲಾಗುತ್ತಿದ್ದ ವೇಳೆ ನೀವು ಅವಿಶ್ವಾಸ ತಾಳಿದ ಸಂದರ್ಭದಲ್ಲಿ ಅಲ್ಲಾಹನಿಗೆ ನಿಮ್ಮ ಮೇಲೆ ಬಂದ ಕೋಪವು ಇದೀಗ ನಿಮಗೆ ನಿಮ್ಮಲ್ಲೇ ಇರುವ ಕೋಪಕ್ಕಿಂತ ಮಿಗಿಲಾಗಿದೆ”.

Verse 11

قَالُوا۟ رَبَّنَآ أَمَتَّنَا ٱثْنَتَيْنِ وَأَحْيَيْتَنَا ٱثْنَتَيْنِ فَٱعْتَرَفْنَا بِذُنُوبِنَا فَهَلْ إِلَىٰ خُرُوجٍ مِّن سَبِيلٍ

Transliteration qālū rabbanā amattanā ith'natayni wa-aḥyaytanā ith'natayni fa-iʿ'tarafnā bidhunūbinā fahal ilā khurūjin min sabīlin

Kannada ಅವರು ಹೇಳುವರು; “ನಮ್ಮ ಪ್ರಭೂ, ನಿಜಕ್ಕೂ ನೀನು ನಮಗೆ ಎರಡು ಸಲ ಮರಣವನ್ನೂ ಎರಡು ಸಲ ಜೀವನವನ್ನೂ ನೀಡಿರುವೆ. ಈಗ ನಾವು ನಮ್ಮ ಅಪರಾಧಗಳನ್ನು ಒಪ್ಪಿಕೊಳ್ಳುತ್ತೇವೆ. ಆದ್ದರಿಂದ ಈಗ ಇಲ್ಲಿಂದ ಹೊರ ಹೋಗಲು ಯಾವುದಾದರೂ ದಾರಿ ಇದೆಯೇ?”

Verse 12

ذَٰلِكُم بِأَنَّهُۥٓ إِذَا دُعِىَ ٱللَّهُ وَحْدَهُۥ كَفَرْتُمْ ۖ وَإِن يُشْرَكْ بِهِۦ تُؤْمِنُوا۟ ۚ فَٱلْحُكْمُ لِلَّهِ ٱلْعَلِىِّ ٱلْكَبِيرِ

Transliteration dhālikum bi-annahu idhā duʿiya l-lahu waḥdahu kafartum wa-in yush'rak bihi tu'minū fal-ḥuk'mu lillahi l-ʿaliyi l-kabīri

Kannada ಇದು ಏಕೆ ಸಂಭವಿಸಿತೆಂದರೆ ನಿಮ್ಮನ್ನು ಏಕಮಾತ್ರ ಅಲ್ಲಾಹನ ಕಡೆಗೆ ಕರೆಯುತ್ತಿದ್ದಾಗ ನೀವು ನಿರಾಕರಿಸಿದ್ದೀರಿ. ಅವನ ಜೊತೆ ಇತರ ರನ್ನು ಪಾಲು ಸೇರಿಸಿದಾಗ ನೀವು ವಿಶ್ವಾಸವಿ ರಿಸುತ್ತಿದ್ದಿರಿ. ಈಗ ತೀರ್ಮಾನದ ಅಧಿಕಾರವು ಅತ್ಯುನ್ನತನೂ ಮಹಾನನೂ ಆದ ಅಲ್ಲಾಹ ನಿಗಾಗಿದೆ.

Verse 13

هُوَ ٱلَّذِى يُرِيكُمْ ءَايَـٰتِهِۦ وَيُنَزِّلُ لَكُم مِّنَ ٱلسَّمَآءِ رِزْقًا ۚ وَمَا يَتَذَكَّرُ إِلَّا مَن يُنِيبُ

Transliteration huwa alladhī yurīkum āyātihi wayunazzilu lakum mina l-samāi riz'qan wamā yatadhakkaru illā man yunību

Kannada ಅವನು ನಿಮಗೆ ತನ್ನ ನಿದರ್ಶನಗಳನ್ನು ತೋರಿಸುತ್ತಾನೆ. ಆಕಾಶದಿಂದ ನಿಮಗಾಗಿ (ಮಳೆಯ ಮೂಲಕ) ಆಹಾರವನ್ನು ಇಳಿಸು ತ್ತಾನೆ. ಆದರೆ ಅಲ್ಲಾಹನ ಕಡೆಗೆ ಮರಳುವವನು ಮಾತ್ರ ಯೋಚಿಸಿ ಗ್ರಹಿಸಿಕೊಳ್ಳುತ್ತಾರೆ.

Verse 14

فَٱدْعُوا۟ ٱللَّهَ مُخْلِصِينَ لَهُ ٱلدِّينَ وَلَوْ كَرِهَ ٱلْكَـٰفِرُونَ

Transliteration fa-id'ʿū l-laha mukh'liṣīna lahu l-dīna walaw kariha l-kāfirūna

Kannada ಆದುದರಿಂದ ನಿಮ್ಮ ಧರ್ಮವನ್ನು ಅಲ್ಲಾಹನಿಗೆ ಏಕನಿಷ್ಠಗೊಳಿಸಿದವರಾಗಿರುತ್ತ ನೀವು ಅವನಿಗೆ ಆರಾಧಿಸಿರಿ. ಇದು ಸತ್ಯನಿಷೇಧಿಗಳಿಗೆ ಎಷ್ಟು ಅಪ್ರಿಯವಾಗಿದ್ದರೂ ಸರಿಯೇ.

Verse 15

رَفِيعُ ٱلدَّرَجَـٰتِ ذُو ٱلْعَرْشِ يُلْقِى ٱلرُّوحَ مِنْ أَمْرِهِۦ عَلَىٰ مَن يَشَآءُ مِنْ عِبَادِهِۦ لِيُنذِرَ يَوْمَ ٱلتَّلَاقِ

Transliteration rafīʿu l-darajāti dhū l-ʿarshi yul'qī l-rūḥa min amrihi ʿalā man yashāu min ʿibādihi liyundhira yawma l-talāqi

Kannada ಅವನು ಅತ್ಯುನ್ನತ ಪದವಿಯುಳ್ಳವನೂ ಅರ್ಶ್‍ನ ಒಡೆಯನೂ ಆಗಿರುತ್ತಾನೆ. ಪರಸ್ಪರ ಭೇಟಿಯಾಗುವ ದಿನದ ಬಗೆಗೆ ಎಚ್ಚರಿಕೆ ಕೊಡಲಿ ಕ್ಕಾಗಿ ಅವನು ತನ್ನ ದಾಸರ ಪೈಕಿ ತಾನಿಚ್ಛಿ ಸಿದವರ ಮೇಲೆ ತನ್ನ ವಚನದ ಮೂಲಕ ದಿವ್ಯಸಂದೇಶವನ್ನು ಹಾಕುತ್ತಾನೆ.

Verse 16

يَوْمَ هُم بَـٰرِزُونَ ۖ لَا يَخْفَىٰ عَلَى ٱللَّهِ مِنْهُمْ شَىْءٌ ۚ لِّمَنِ ٱلْمُلْكُ ٱلْيَوْمَ ۖ لِلَّهِ ٱلْوَٰحِدِ ٱلْقَهَّارِ

Transliteration yawma hum bārizūna lā yakhfā ʿalā l-lahi min'hum shayon limani l-mul'ku l-yawma lillahi l-wāḥidi l-qahāri

Kannada ಅವರು ಹೊರಬರುವ ದಿನ ಅವರ ಯಾವ ವಿಷಯವೂ ಅಲ್ಲಾಹನಿಂದ ಅಡಗಿರಲಾರದು. ‘ಇಂದು ರಾಜಪ್ರಭುತ್ವ ಯಾರದು?’ ‘ಏಕೈಕನೂ ಸರ್ವಾಧಿಪತಿಯೂ ಆದ ಅಲ್ಲಾಹನದು’.

Verse 17

ٱلْيَوْمَ تُجْزَىٰ كُلُّ نَفْسٍۭ بِمَا كَسَبَتْ ۚ لَا ظُلْمَ ٱلْيَوْمَ ۚ إِنَّ ٱللَّهَ سَرِيعُ ٱلْحِسَابِ

Transliteration al-yawma tuj'zā kullu nafsin bimā kasabat lā ẓul'ma l-yawma inna l-laha sarīʿu l-ḥisābi

Kannada ಆಗ ಪ್ರತಿಯೊಬ್ಬ ಜೀವಿಗೆ ಅವನು ಸಂಪಾದಿ ಸಿದುದರ ಪ್ರತಿಫಲ ನೀಡಲಾಗುವುದು. ಅಂದು ಯಾರ ಮೇಲೂ ಅನ್ಯಾಯವಿಲ್ಲ. ಅಲ್ಲಾಹನು ಲೆಕ್ಕ ಪರಿಶೋದನೆಯಲ್ಲಿ ಖಂಡಿತ ಅತಿ ಶೀಘ್ರನಾಗಿರುತ್ತಾನೆ.

Verse 18

وَأَنذِرْهُمْ يَوْمَ ٱلْـَٔازِفَةِ إِذِ ٱلْقُلُوبُ لَدَى ٱلْحَنَاجِرِ كَـٰظِمِينَ ۚ مَا لِلظَّـٰلِمِينَ مِنْ حَمِيمٍ وَلَا شَفِيعٍ يُطَاعُ

Transliteration wa-andhir'hum yawma l-āzifati idhi l-qulūbu ladā l-ḥanājiri kāẓimīna mā lilẓẓālimīna min ḥamīmin walā shafīʿin yuṭāʿu

Kannada (ಸಂದೇಶವಾಹಕರೇ,) ಸನ್ನಿಹಿತವಾಗಲಿರುವ ಅಂತ್ಯ ದಿನದ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರಿ. ಹೃದಯಗಳು ಗಂಟಲಿಗೇರಿ ಗಲಿಬಿಲಿಗೊಳ್ಳುವ ಆ ದಿನ ಅಕ್ರಮಿಗಳಿಗೆ ಆಪ್ತಮಿತ್ರನಾಗಲಿ ಅನುಸ ರಿಸಲ್ಪಡುವ ಶಿಫಾರಸ್ಸುದಾರನಾಗಲಿ ಇರಲಾರನು.

Verse 19

يَعْلَمُ خَآئِنَةَ ٱلْأَعْيُنِ وَمَا تُخْفِى ٱلصُّدُورُ

Transliteration yaʿlamu khāinata l-aʿyuni wamā tukh'fī l-ṣudūru

Kannada ಅಲ್ಲಾಹನು ದೃಷ್ಟಿಯ ಕದ್ದು ನೋಟವನ್ನೂ ಹೃದಯದೊಳಗೆ ಬಚ್ಚಿಟ್ಟಿರುವ ರಹಸ್ಯಗಳನ್ನೂ ತಿಳಿಯುತ್ತಾನೆ.

Verse 20

وَٱللَّهُ يَقْضِى بِٱلْحَقِّ ۖ وَٱلَّذِينَ يَدْعُونَ مِن دُونِهِۦ لَا يَقْضُونَ بِشَىْءٍ ۗ إِنَّ ٱللَّهَ هُوَ ٱلسَّمِيعُ ٱلْبَصِيرُ

Transliteration wal-lahu yaqḍī bil-ḥaqi wa-alladhīna yadʿūna min dūnihi lā yaqḍūna bishayin inna l-laha huwa l-samīʿu l-baṣīru

Kannada ಅಲ್ಲಾಹನು ನ್ಯಾಯಪೂರ್ಣ ತೀರ್ಮಾನವೆಸಗು ವನು. ಅಲ್ಲಾಹನನ್ನು ಬಿಟ್ಟು ಅವರು ಯಾರನ್ನು ಪೂಜಿಸುತ್ತಾರೋ ಅವರು ಯಾವ ವಿಷಯವನ್ನೂ ತೀರ್ಮಾನಿಸುವವರಲ್ಲ. ನಿಶ್ಚಯವಾಗಿಯೂ ಅಲ್ಲಾಹನು ಎಲ್ಲವನ್ನು ಕೇಳುವವನೂ ಕಾಣು ವವನೂ ಆಗಿರುವನು.

Verse 21

۞ أَوَلَمْ يَسِيرُوا۟ فِى ٱلْأَرْضِ فَيَنظُرُوا۟ كَيْفَ كَانَ عَـٰقِبَةُ ٱلَّذِينَ كَانُوا۟ مِن قَبْلِهِمْ ۚ كَانُوا۟ هُمْ أَشَدَّ مِنْهُمْ قُوَّةً وَءَاثَارًا فِى ٱلْأَرْضِ فَأَخَذَهُمُ ٱللَّهُ بِذُنُوبِهِمْ وَمَا كَانَ لَهُم مِّنَ ٱللَّهِ مِن وَاقٍ

Transliteration awalam yasīrū fī l-arḍi fayanẓurū kayfa kāna ʿāqibatu alladhīna kānū min qablihim kānū hum ashadda min'hum quwwatan waāthāran fī l-arḍi fa-akhadhahumu l-lahu bidhunūbihim wamā kāna lahum mina l-lahi min wāqin

Kannada ಇವರು ಭೂಮಿಯಲ್ಲಿ ಸಂಚರಿಸಿಲ್ಲವೇ? ಆಗ ಇವರಿಗೆ ಮುಂಚೆ ಗತಿಸಿದವರ ಅಂತಿಮ ಪರಿ ಣಾಮವೇನಾಯಿತೆಂದು ನೋಡಬಹುದಲ್ಲವೇ? ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು ಮತ್ತು ಇವರಿಗಿಂತ ಭದ್ರಸ್ಮಾರಕಗಳನ್ನು ಭೂಮಿಯಲ್ಲಿ ಬಿಟ್ಟುಹೋಗಿರುವರು. ಆದರೆ ಅಲ್ಲಾಹನು ಅವರನ್ನು ಅವರ ಪಾಪಗಳಿಗಾಗಿ ಹಿಡಿದು ಬಿಟ್ಟನು. ಅವರನ್ನು ಅಲ್ಲಾಹನ ಶಿಕ್ಷೆ ಯಿಂದ ರಕ್ಷಿಸುವವನಾರೂ ಇರಲಿಲ್ಲ.

Verse 22

ذَٰلِكَ بِأَنَّهُمْ كَانَت تَّأْتِيهِمْ رُسُلُهُم بِٱلْبَيِّنَـٰتِ فَكَفَرُوا۟ فَأَخَذَهُمُ ٱللَّهُ ۚ إِنَّهُۥ قَوِىٌّ شَدِيدُ ٱلْعِقَابِ

Transliteration dhālika bi-annahum kānat tatīhim rusuluhum bil-bayināti fakafarū fa-akhadhahumu l-lahu innahu qawiyyun shadīdu l-ʿiqābi

Kannada ಇದು ಏಕೆಂದರೆ, ಅವರ ಸಂದೇಶವಾಹಕರು ಸುಸ್ಪಷ್ಟ ನಿದರ್ಶನಗಳನ್ನು ಅವರ ಬಳಿಗೆ ತಂದಿ ದ್ದರು. ಆಗ ಅವರು ನಿಷೇಧಿಸಿಬಿಟ್ಟರು. ಕೊನೆಗೆ ಅಲ್ಲಾಹನು ಅವರನ್ನು ಹಿಡಿದುಬಿಟ್ಟನು. ನಿಶ್ಚ ಯವಾಗಿಯೂ ಅವನು ಪ್ರಬಲನೂ ಕಠಿಣವಾಗಿ ಶಿಕ್ಷಿಸುವವನೂ ಆಗಿರುತ್ತಾನೆ.

Verse 23

وَلَقَدْ أَرْسَلْنَا مُوسَىٰ بِـَٔايَـٰتِنَا وَسُلْطَـٰنٍ مُّبِينٍ

Transliteration walaqad arsalnā mūsā biāyātinā wasul'ṭānin mubīnin

Kannada

Verse 24

إِلَىٰ فِرْعَوْنَ وَهَـٰمَـٰنَ وَقَـٰرُونَ فَقَالُوا۟ سَـٰحِرٌ كَذَّابٌ

Transliteration ilā fir'ʿawna wahāmāna waqārūna faqālū sāḥirun kadhābun

Kannada ನಾವು ಮೂಸಾರನ್ನು ಫಿರ್‍ಔನ್, ಹಾಮಾನ್ ಮತ್ತು ಖಾರೂನ್‍ರ ಕಡೆಗೆ ನಮ್ಮ ನಿದರ್ಶನಗಳು ಹಾಗೂ ಸುವ್ಯಕ್ತವಾದ ಪ್ರಮಾಣ ದೊಂದಿಗೆ ರವಾನಿಸಿದೆವು. ಆಗ ಅವರು, ಇವನು ಮಾಟಗಾರ, ಸುಳ್ಳುಗಾರ ಎಂದರು.

Verse 25

فَلَمَّا جَآءَهُم بِٱلْحَقِّ مِنْ عِندِنَا قَالُوا۟ ٱقْتُلُوٓا۟ أَبْنَآءَ ٱلَّذِينَ ءَامَنُوا۟ مَعَهُۥ وَٱسْتَحْيُوا۟ نِسَآءَهُمْ ۚ وَمَا كَيْدُ ٱلْكَـٰفِرِينَ إِلَّا فِى ضَلَـٰلٍ

Transliteration falammā jāahum bil-ḥaqi min ʿindinā qālū uq'tulū abnāa alladhīna āmanū maʿahu wa-is'taḥyū nisāahum wamā kaydu l-kāfirīna illā fī ḍalālin

Kannada ತರುವಾಯ ಅವರು ನನ್ನ ಕಡೆಯಿಂದ ಸತ್ಯ ವನ್ನು ಅವರ ಮುಂದೆ ತಂದಾಗ ಅವರು, ‘ಇವನ ಜೊತೆ ನಂಬುವವರ ಗಂಡು ಮಕ್ಕಳನ್ನು ವಧಿಸಿರಿ ಮತ್ತು ಹೆಣ್ಣು ಮಕ್ಕಳನ್ನು ಜೀವಂತ ಬಿಡಿರಿ’ ಎಂದರು. ಆದರೆ ಸತ್ಯನಿಷೇಧಿಗಳ ಕುತಂತ್ರವು ಪರಾಭವಗೊಳ್ಳದೆ ಇಲ್ಲ.

Verse 26

وَقَالَ فِرْعَوْنُ ذَرُونِىٓ أَقْتُلْ مُوسَىٰ وَلْيَدْعُ رَبَّهُۥٓ ۖ إِنِّىٓ أَخَافُ أَن يُبَدِّلَ دِينَكُمْ أَوْ أَن يُظْهِرَ فِى ٱلْأَرْضِ ٱلْفَسَادَ

Transliteration waqāla fir'ʿawnu dharūnī aqtul mūsā walyadʿu rabbahu innī akhāfu an yubaddila dīnakum aw an yuẓ'hira fī l-arḍi l-fasāda

Kannada ಫಿರ್‍ಔನನು “ನನ್ನನ್ನು ಬಿಡಿರಿ, ನಾನು ಈ ಮೂಸಾನನ್ನು ಕೊಂದು ಬಿಡುತ್ತೇನೆ. ಇವನು ತನ್ನ ಪ್ರಭುವನ್ನು ರಕ್ಷಣೆಗೆ ಕರೆಯಲಿ, ಇವನು ನಿಮ್ಮ ಧರ್ಮವನ್ನು ಬದಲಾಯಿಸುವನು ಅಥವಾ ದೇಶದಲ್ಲಿ ನಾಶವನ್ನು ಹರಡುವನು ಎಂಬ ಭಯ ನನಗೆ ಕಾಡಿದೆ” ಎಂದನು.

Verse 27

وَقَالَ مُوسَىٰٓ إِنِّى عُذْتُ بِرَبِّى وَرَبِّكُم مِّن كُلِّ مُتَكَبِّرٍ لَّا يُؤْمِنُ بِيَوْمِ ٱلْحِسَابِ

Transliteration waqāla mūsā innī ʿudh'tu birabbī warabbikum min kulli mutakabbirin lā yu'minu biyawmi l-ḥisābi

Kannada ಆಗ ಮೂಸಾ, “ವಿಚಾರಣೆಯ ದಿನದ ಮೇಲೆ ವಿಶ್ವಾಸವಿರಿಸದ ಪ್ರತಿಯೊಬ್ಬ ಅಹಂಕಾರಿಯ ವಿರುದ್ಧ ನಾನು ನನ್ನ ಹಾಗೂ ನಿಮ್ಮ ಪ್ರಭುವಿನ ಅಭಯ ಪಡೆದಿರುತ್ತೇನೆ” ಎಂದರು.

Verse 28

وَقَالَ رَجُلٌ مُّؤْمِنٌ مِّنْ ءَالِ فِرْعَوْنَ يَكْتُمُ إِيمَـٰنَهُۥٓ أَتَقْتُلُونَ رَجُلًا أَن يَقُولَ رَبِّىَ ٱللَّهُ وَقَدْ جَآءَكُم بِٱلْبَيِّنَـٰتِ مِن رَّبِّكُمْ ۖ وَإِن يَكُ كَـٰذِبًا فَعَلَيْهِ كَذِبُهُۥ ۖ وَإِن يَكُ صَادِقًا يُصِبْكُم بَعْضُ ٱلَّذِى يَعِدُكُمْ ۖ إِنَّ ٱللَّهَ لَا يَهْدِى مَنْ هُوَ مُسْرِفٌ كَذَّابٌ

Transliteration waqāla rajulun mu'minun min āli fir'ʿawna yaktumu īmānahu ataqtulūna rajulan an yaqūla rabbiya l-lahu waqad jāakum bil-bayināti min rabbikum wa-in yaku kādhiban faʿalayhi kadhibuhu wa-in yaku ṣādiqan yuṣib'kum baʿḍu alladhī yaʿidukum inna l-laha lā yahdī man huwa mus'rifun kadhābun

Kannada ಆಗ ತನ್ನ ಸತ್ಯವಿಶ್ವಾಸವನ್ನು ಬಚ್ಚಿಟ್ಟುಕೊಂಡಿದ್ದ ಫಿರ್‍ಔನನ ವಂಶದ ಓರ್ವ ಸತ್ಯವಿಶ್ವಾಸಿಯು ಹೀಗೆ ಹೇಳಿದನು, “ನನ್ನ ಪ್ರಭು ಅಲ್ಲಾಹನಾಗಿರು ತ್ತಾನೆಂದು ಹೇಳಿದುದಕ್ಕಾಗಿ ಮಾತ್ರ ನೀವು ಒಬ್ಬನನ್ನು ಕೊಂದು ಬಿಡುವಿರಾ? ವಸ್ತುತಃ ಅವರು ನಿಮ್ಮ ಪ್ರಭುವಿನ ಕಡೆಯಿಂದ ನಿಮ್ಮ ಬಳಿಗೆ ಸುವ್ಯಕ್ತ ಪ್ರಮಾಣಗಳನ್ನು ತಂದಿದ್ದಾರೆ. ಇನ್ನು ಅವರು ಸುಳ್ಳುಗಾರರಾಗಿದ್ದರೆ ಅವರ ಸುಳ್ಳಿನ ಕೇಡು ಅವರ ಮೇಲೆಯೇ ಇರುವುದು. ಅವರು ಸತ್ಯವಾದಿಯಾಗಿದ್ದರೆ ಅವರು ನಿಮ್ಮನ್ನು ಎಚ್ಚರಿಸುತ್ತಿರುವ ಕೆಲವು ಶಿಕ್ಷೆಗಳು ನಿಮ್ಮನ್ನು ಖಂಡಿತ ಬಾಧಿಸಬಲ್ಲವು. ಅತಿಕ್ರಮಿ ಮತ್ತು ಸುಳ್ಳುಗಾರನಿಗೆ ಅಲ್ಲಾಹನು ಸನ್ಮಾರ್ಗದರ್ಶನ ನೀಡುವುದಿಲ್ಲ.

Verse 29

يَـٰقَوْمِ لَكُمُ ٱلْمُلْكُ ٱلْيَوْمَ ظَـٰهِرِينَ فِى ٱلْأَرْضِ فَمَن يَنصُرُنَا مِنۢ بَأْسِ ٱللَّهِ إِن جَآءَنَا ۚ قَالَ فِرْعَوْنُ مَآ أُرِيكُمْ إِلَّا مَآ أَرَىٰ وَمَآ أَهْدِيكُمْ إِلَّا سَبِيلَ ٱلرَّشَادِ

Transliteration yāqawmi lakumu l-mul'ku l-yawma ẓāhirīna fī l-arḍi faman yanṣurunā min basi l-lahi in jāanā qāla fir'ʿawnu mā urīkum illā mā arā wamā ahdīkum illā sabīla l-rashādi

Kannada ನನ್ನ ಜನಾಂಗವೇ, ಭೂಮಿಯಲ್ಲಿ ಮೇಲುಗೈ ಸಾಧಿಸಿದವರು ಎಂಬ ನೆಲೆಯಲ್ಲಿ ಇಂದು ನಿಮಗೆ ಅಧಿಕಾರ ಪ್ರಾಪ್ತವಿದೆ. ಆದರೆ, ಅಲ್ಲಾಹನ ಯಾತನೆ ನಮ್ಮ ಮೇಲೆ ಬಂದು ಬಿಟ್ಟರೆ ಅದರಿಂದ ನಮ್ಮ ನ್ನು ರಕ್ಷಿಸಿ ನೆರವಾಗಬಲ್ಲವರು ಯಾರು?” ಆಗ ಫಿರ್‍ಔನನು, ‘ನಿಮಗೆ ನಾನು ನನಗೆ ಯುಕ್ತ ಕಂಡ ಮಾರ್ಗವಲ್ಲದೆ ತೋರಿಸಿಕೊಡುತ್ತಿಲ್ಲ. ಸತ್ಪಥಕ್ಕಲ್ಲದೆ ನಾನು ನಿಮಗೆ ಮಾರ್ಗದರ್ಶನ ಮಾಡುತ್ತಿಲ್ಲ’ ಎಂದನು.

Verse 30

وَقَالَ ٱلَّذِىٓ ءَامَنَ يَـٰقَوْمِ إِنِّىٓ أَخَافُ عَلَيْكُم مِّثْلَ يَوْمِ ٱلْأَحْزَابِ

Transliteration waqāla alladhī āmana yāqawmi innī akhāfu ʿalaykum mith'la yawmi l-aḥzābi

Kannada ಸತ್ಯವಿಶ್ವಾಸಿ ವ್ಯಕ್ತಿ ಹೇಳಿದನು, ‘ನನ್ನ ಜನಾಂ ಗದವರೇ, ಸಂಘಪರಿವಾರದ ದಿನದಂಥ ದಿನ ನಿಮ್ಮ ಮೇಲೂ ಬಂದು ಬಿಡುವುದೋ ಎಂದು ನಾನು ಭಯಪಡುತ್ತಿದ್ದೇನೆ.

Verse 31

مِثْلَ دَأْبِ قَوْمِ نُوحٍ وَعَادٍ وَثَمُودَ وَٱلَّذِينَ مِنۢ بَعْدِهِمْ ۚ وَمَا ٱللَّهُ يُرِيدُ ظُلْمًا لِّلْعِبَادِ

Transliteration mith'la dabi qawmi nūḥin waʿādin wathamūda wa-alladhīna min baʿdihim wamā l-lahu yurīdu ẓul'man lil'ʿibādi

Kannada ಅಥವಾ ನೂಹರ ಜನಾಂಗ, ಆದ್, ಸಮೂದ್ ಮತ್ತು ಅವರ ನಂತರದ ಜನಾಂಗದ ಅನುಭವಕ್ಕೆ ಸಮಾನವಾದದ್ದು. ತನ್ನ ದಾಸರ ಮೇಲೆ ಅಕ್ರಮವೆಸಗುವ ಉದ್ದೇಶ ಅಲ್ಲಾಹನಿಗೆ ಇಲ್ಲ.

Verse 32

وَيَـٰقَوْمِ إِنِّىٓ أَخَافُ عَلَيْكُمْ يَوْمَ ٱلتَّنَادِ

Transliteration wayāqawmi innī akhāfu ʿalaykum yawma l-tanādi

Kannada ನನ್ನ ಜನಾಂಗವೇ, ಗೋಳು ಹೊಯ್ಯುವ ದಿನ ವನ್ನು ನಿಮ್ಮ ಮೇಲೆ ನಾನು ಭಯ ಪಡುತ್ತೇನೆ.

Verse 33

يَوْمَ تُوَلُّونَ مُدْبِرِينَ مَا لَكُم مِّنَ ٱللَّهِ مِنْ عَاصِمٍ ۗ وَمَن يُضْلِلِ ٱللَّهُ فَمَا لَهُۥ مِنْ هَادٍ

Transliteration yawma tuwallūna mud'birīna mā lakum mina l-lahi min ʿāṣimin waman yuḍ'lili l-lahu famā lahu min hādin

Kannada ಅಥವಾ ನೀವು ಬೆನ್ನು ತಿರುಗಿಸಿ ಓಡುವ ದಿನ. ಅಲ್ಲಾಹನಿಂದ ರಕ್ಷಿಸುವವರು ಯಾರೂ ನಿಮಗೆ ಇರಲಾರರು. ಯಾರನ್ನು ಅಲ್ಲಾಹು ದಾರಿಗೆಡಿಸಿರುವನೋ ಅವನಿಗೆ ಬೇರಾರೂ ದಾರಿತೋರಿಸುವವರಿಲ್ಲ.

Verse 34

وَلَقَدْ جَآءَكُمْ يُوسُفُ مِن قَبْلُ بِٱلْبَيِّنَـٰتِ فَمَا زِلْتُمْ فِى شَكٍّ مِّمَّا جَآءَكُم بِهِۦ ۖ حَتَّىٰٓ إِذَا هَلَكَ قُلْتُمْ لَن يَبْعَثَ ٱللَّهُ مِنۢ بَعْدِهِۦ رَسُولًا ۚ كَذَٰلِكَ يُضِلُّ ٱللَّهُ مَنْ هُوَ مُسْرِفٌ مُّرْتَابٌ

Transliteration walaqad jāakum yūsufu min qablu bil-bayināti famā zil'tum fī shakkin mimmā jāakum bihi ḥattā idhā halaka qul'tum lan yabʿatha l-lahu min baʿdihi rasūlan kadhālika yuḍillu l-lahu man huwa mus'rifun mur'tābun

Kannada ಇದಕ್ಕೆ ಮುಂಚೆ ಯೂಸುಫರು ನಿಮ್ಮ ಬಳಿಗೆ ಸುವ್ಯಕ್ತ ನಿದರ್ಶನಗಳನ್ನು ತಂದಿದ್ದರು. ಆಗ ಅವರು ತಂದ ದೃಷ್ಟಾಂತದ ಬಗೆಗೆ ನೀವು ಸಂಶಯಪಡುತ್ತಲೇ ಇದ್ದಿರಿ. ತರುವಾಯ ಅವರು ನಿಧನರಾದಾಗ ನೀವು, ‘ಇನ್ನು ಅವರ ಬಳಿಕ ಅಲ್ಲಾಹನು ಸಂದೇಶವಾಹಕರನ್ನು ನಿಯೋಗಿಸ ಲಿಕ್ಕಿಲ್ಲ’ ಎಂದಿರಿ. ಇದೇ ರೀತಿಯಲ್ಲಿ ಅಲ್ಲಾಹನು, ಅತಿಕ್ರಮಿಗಳು ಹಾಗೂ ಸಂಶಯಗ್ರಸ್ತರನ್ನು ದಾರಿ ತಪ್ಪಿಸುತ್ತಾನೆ.

Verse 35

ٱلَّذِينَ يُجَـٰدِلُونَ فِىٓ ءَايَـٰتِ ٱللَّهِ بِغَيْرِ سُلْطَـٰنٍ أَتَىٰهُمْ ۖ كَبُرَ مَقْتًا عِندَ ٱللَّهِ وَعِندَ ٱلَّذِينَ ءَامَنُوا۟ ۚ كَذَٰلِكَ يَطْبَعُ ٱللَّهُ عَلَىٰ كُلِّ قَلْبِ مُتَكَبِّرٍ جَبَّارٍ

Transliteration alladhīna yujādilūna fī āyāti l-lahi bighayri sul'ṭānin atāhum kabura maqtan ʿinda l-lahi waʿinda alladhīna āmanū kadhālika yaṭbaʿu l-lahu ʿalā kulli qalbi mutakabbirin jabbārin

Kannada ಅಥವಾ ತಮ್ಮ ಬಳಿಗೆ ಬಂದಂತಹ ಯಾವುದೇ ಪುರಾವೆಗಳಿಲ್ಲದೆಯೇ ಅಲ್ಲಾಹನ ನಿದರ್ಶನ ಗಳಲ್ಲಿ ಜಗಳ ಮಾಡುವವರು ಯಾರೋ ಅವರ ಈ ಜಗಳವು ಅಲ್ಲಾಹು ಮತ್ತು ಸತ್ಯವಿಶ್ವಾಸಿಗಳ ಬಳಿ ಅತ್ಯಂತ ಕ್ರೋಧಕ್ಕೀಡಾದ ಸಂಗತಿಯಾಗಿದೆ. ಇದೇ ರೀತಿಯಲ್ಲಿ ಪ್ರತಿಯೊಬ್ಬ ಅಹಂಕಾರಿ ಹಾಗೂ ಗರ್ವಿಷ್ಟನ ಹೃದಯಕ್ಕೆ ಅಲ್ಲಾಹು ಮುದ್ರೆ ಹಾಕುವನು.

Verse 36

وَقَالَ فِرْعَوْنُ يَـٰهَـٰمَـٰنُ ٱبْنِ لِى صَرْحًا لَّعَلِّىٓ أَبْلُغُ ٱلْأَسْبَـٰبَ

Transliteration waqāla fir'ʿawnu yāhāmānu ib'ni lī ṣarḥan laʿallī ablughu l-asbāba

Kannada

Verse 37

أَسْبَـٰبَ ٱلسَّمَـٰوَٰتِ فَأَطَّلِعَ إِلَىٰٓ إِلَـٰهِ مُوسَىٰ وَإِنِّى لَأَظُنُّهُۥ كَـٰذِبًا ۚ وَكَذَٰلِكَ زُيِّنَ لِفِرْعَوْنَ سُوٓءُ عَمَلِهِۦ وَصُدَّ عَنِ ٱلسَّبِيلِ ۚ وَمَا كَيْدُ فِرْعَوْنَ إِلَّا فِى تَبَابٍ

Transliteration asbāba l-samāwāti fa-aṭṭaliʿa ilā ilāhi mūsā wa-innī la-aẓunnuhu kādhiban wakadhālika zuyyina lifir'ʿawna sūu ʿamalihi waṣudda ʿani l-sabīli wamā kaydu fir'ʿawna illā fī tabābin

Kannada ಫಿರ್‍ಔನ್ ಹೇಳಿದನು; ‘ಓ ಹಾಮಾನ್, ನಾನು ಆ ಮಾರ್ಗಗಳನ್ನು ಅಥವಾ ಆಕಾಶ ಮಾರ್ಗಗಳನ್ನು ತಲುಪಿ ಮೂಸಾನ ದೇವನನ್ನು ಇಣುಕಿ ನೋಡುವಂತಾಗಲು ನನಗಾಗಿ ಒಂದು ಎತ್ತರದ ಕಟ್ಟಡವನ್ನು ನಿರ್ಮಿಸು, ನಾನಂತೂ ಈ ಮೂಸಾ ಸುಳ್ಳುಗಾರನೆಂದೇ ಭಾವಿಸಿದ್ದೇನೆ’. ಹೀಗೆ ಫಿರ್‍ಔನನಿಗೆ ಅವನ ದುಷ್ಕರ್ಮವನ್ನು ಅಲಂಕೃತಗೊಳಿಸಲಾಯಿತು. ಮತ್ತು ಅವನನ್ನು ಸನ್ಮಾರ್ಗದಿಂದ ತಡೆಯಲಾಯಿತು. ಫಿರ್‍ಔನನ ಕುತಂತ್ರವು ನಷ್ಟದಲ್ಲೇ ಬಿದ್ದು ಹೋಯಿತು.

Verse 38

وَقَالَ ٱلَّذِىٓ ءَامَنَ يَـٰقَوْمِ ٱتَّبِعُونِ أَهْدِكُمْ سَبِيلَ ٱلرَّشَادِ

Transliteration waqāla alladhī āmana yāqawmi ittabiʿūni ahdikum sabīla l-rashādi

Kannada ಆ ಸತ್ಯವಿಶ್ವಾಸಿ ವ್ಯಕ್ತಿ ಹೇಳಿದನು, ‘ನನ್ನ ಜನಾಂ ಗದವರೇ, ನನ್ನನ್ನು ಅನುಸರಿಸಿರಿ. ನಾನು ನಿಮಗೆ ಸತ್ಪಥವನ್ನು ತೋರಿಸುತ್ತೇನೆ.

Verse 39

يَـٰقَوْمِ إِنَّمَا هَـٰذِهِ ٱلْحَيَوٰةُ ٱلدُّنْيَا مَتَـٰعٌ وَإِنَّ ٱلْـَٔاخِرَةَ هِىَ دَارُ ٱلْقَرَارِ

Transliteration yāqawmi innamā hādhihi l-ḥayatu l-dun'yā matāʿun wa-inna l-ākhirata hiya dāru l-qarāri

Kannada ಜನಾಂಗವೇ, ಈ ಲೌಕಿಕ ಜೀವನವು ಕ್ಷಣಿಕ ಸಾಧನ. ಶಾಶ್ವತ ನಿವಾಸವು ಪರಲೋಕವೇ ಆಗಿದೆ.

Verse 40

مَنْ عَمِلَ سَيِّئَةً فَلَا يُجْزَىٰٓ إِلَّا مِثْلَهَا ۖ وَمَنْ عَمِلَ صَـٰلِحًا مِّن ذَكَرٍ أَوْ أُنثَىٰ وَهُوَ مُؤْمِنٌ فَأُو۟لَـٰٓئِكَ يَدْخُلُونَ ٱلْجَنَّةَ يُرْزَقُونَ فِيهَا بِغَيْرِ حِسَابٍ

Transliteration man ʿamila sayyi-atan falā yuj'zā illā mith'lahā waman ʿamila ṣāliḥan min dhakarin aw unthā wahuwa mu'minun fa-ulāika yadkhulūna l-janata yur'zaqūna fīhā bighayri ḥisābin

Kannada ಯಾರು ಪಾಪ ಮಾಡುತ್ತಾನೆ, ಅವನಿಗೆ ಅದರಷ್ಟೇ ಪ್ರತಿಫಲ ಸಿಗುವುದು. ಪುರುಷನಿರಲಿ ಸ್ತ್ರೀ ಇರಲಿ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮ ವೆಸಗುತ್ತಾರೆ, ಅಂಥವರು ಸ್ವರ್ಗವನ್ನು ಪ್ರವೇಶಿಸು ವರು, ಅಲ್ಲಿ ಅವರಿಗೆ ಲೆಕ್ಕವಿಲ್ಲದಷ್ಟು ಜೀವನಾ ಧಾರ ನೀಡಲಾಗುವುದು.

Verse 41

۞ وَيَـٰقَوْمِ مَا لِىٓ أَدْعُوكُمْ إِلَى ٱلنَّجَوٰةِ وَتَدْعُونَنِىٓ إِلَى ٱلنَّارِ

Transliteration wayāqawmi mā lī adʿūkum ilā l-najati watadʿūnanī ilā l-nāri

Kannada ಜನಾಂಗವೇ! ಇದೇನು, ನಾನು ನಿಮ್ಮನ್ನು ರಕ್ಷೆಯ ಕಡೆಗೆ ಕರೆಯುತ್ತಿದ್ದೇನೆ; ಆದರೆ ನೀವು ನನ್ನನ್ನು ನರಕಾಗ್ನಿಯತ್ತ ಕರೆಯುತ್ತಿರುವಿರಿ!

Verse 42

تَدْعُونَنِى لِأَكْفُرَ بِٱللَّهِ وَأُشْرِكَ بِهِۦ مَا لَيْسَ لِى بِهِۦ عِلْمٌ وَأَنَا۠ أَدْعُوكُمْ إِلَى ٱلْعَزِيزِ ٱلْغَفَّـٰرِ

Transliteration tadʿūnanī li-akfura bil-lahi wa-ush'rika bihi mā laysa lī bihi ʿil'mun wa-anā adʿūkum ilā l-ʿazīzi l-ghafāri

Kannada ನಾನು ಅಲ್ಲಾಹನಲ್ಲಿ ಅವಿಶ್ವಾಸ ತಾಳಬೇಕೆಂದೂ ನಾನರಿಯದ್ದನ್ನು ಅವನಿಗೆ ದಿವ್ಯತ್ವದಲ್ಲಿ ಪಾಲು ಕಲ್ಪಿಸಬೇಕೆಂದೂ ನೀವು ನನಗೆ ಕರೆ ಕೊಡುತ್ತಿದ್ದೀರಿ. ಆದರೆ ನಾನು ನಿಮ್ಮನ್ನು ಅಜೇಯನೂ ಮಹಾ ಕ್ಷಮಾದಾನಿಯೂ ಆಗಿರುವ ಅಲ್ಲಾಹನ ಕಡೆಗೆ ಕರೆಯುತ್ತಿದ್ದೇನೆ.

Verse 43

لَا جَرَمَ أَنَّمَا تَدْعُونَنِىٓ إِلَيْهِ لَيْسَ لَهُۥ دَعْوَةٌ فِى ٱلدُّنْيَا وَلَا فِى ٱلْـَٔاخِرَةِ وَأَنَّ مَرَدَّنَآ إِلَى ٱللَّهِ وَأَنَّ ٱلْمُسْرِفِينَ هُمْ أَصْحَـٰبُ ٱلنَّارِ

Transliteration lā jarama annamā tadʿūnanī ilayhi laysa lahu daʿwatun fī l-dun'yā walā fī l-ākhirati wa-anna maraddanā ilā l-lahi wa-anna l-mus'rifīna hum aṣḥābu l-nāri

Kannada ನೀವು ನನ್ನನ್ನು ಯಾವುದರ ಕಡೆಗೆ ಕರೆಯುತ್ತಿರು ವಿರೋ ಅದಕ್ಕೆ ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಯಾವುದೇ ಪ್ರಾರ್ಥನೆ ಇಲ್ಲ. ಅಲ್ಲಾಹ ನ ಕಡೆಗೇ ನಮಗೆ ಮರಳಿ ಹೋಗಬೇಕಾಗಿದೆ ಮತ್ತು ಅತಿಕ್ರಮಿಗಳೇ ನರಕವಾಸಿಗಳು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

Verse 44

فَسَتَذْكُرُونَ مَآ أَقُولُ لَكُمْ ۚ وَأُفَوِّضُ أَمْرِىٓ إِلَى ٱللَّهِ ۚ إِنَّ ٱللَّهَ بَصِيرٌۢ بِٱلْعِبَادِ

Transliteration fasatadhkurūna mā aqūlu lakum wa-ufawwiḍu amrī ilā l-lahi inna l-laha baṣīrun bil-ʿibādi

Kannada ಆದರೆ ನಾನು ನಿಮ್ಮಲ್ಲಿ ಹೇಳುತ್ತಿರುವ ಮಾತನ್ನು ಸದ್ಯದಲ್ಲೇ ನೀವು ಜ್ಞಾಪಿಸಿಕೊಳ್ಳುವಿರಿ. ನನ್ನ ಕಾರ್ಯವನ್ನು ಅಲ್ಲಾಹನಿಗೆ ನಾನು ಒಪ್ಪಿಸಿ ಬಿಡುತ್ತೇನೆ. ಅಲ್ಲಾಹನು ತನ್ನ ದಾಸರ ವೀಕ್ಷಕ ನಾಗಿರುತ್ತಾನೆ.

Verse 45

فَوَقَىٰهُ ٱللَّهُ سَيِّـَٔاتِ مَا مَكَرُوا۟ ۖ وَحَاقَ بِـَٔالِ فِرْعَوْنَ سُوٓءُ ٱلْعَذَابِ

Transliteration fawaqāhu l-lahu sayyiāti mā makarū waḥāqa biāli fir'ʿawna sūu l-ʿadhābi

Kannada ಕೊನೆಗೆ ಅವರು ನಡೆಸಿದ್ದ ಎಲ್ಲ ಕುತಂತ್ರಗಳ ದುಷ್ಫಲಗಳಿಂದ ಅಲ್ಲಾಹನು ಆ ಸತ್ಯವಿಶ್ವಾಸಿ ಯನ್ನು ಕಾಪಾಡಿದನು. ಫಿರ್‍ಔನನ ಜನರನ್ನು ಅತ್ಯಂತ ಕೆಟ್ಟ ಯಾತನೆಯು ಸುತ್ತುವರಿಯಿತು.

Verse 46

ٱلنَّارُ يُعْرَضُونَ عَلَيْهَا غُدُوًّا وَعَشِيًّا ۖ وَيَوْمَ تَقُومُ ٱلسَّاعَةُ أَدْخِلُوٓا۟ ءَالَ فِرْعَوْنَ أَشَدَّ ٱلْعَذَابِ

Transliteration al-nāru yuʿ'raḍūna ʿalayhā ghuduwwan waʿashiyyan wayawma taqūmu l-sāʿatu adkhilū āla fir'ʿawna ashadda l-ʿadhābi

Kannada ಬೆಳಗು ಬೈಗುಗಳಲ್ಲಿ ಅವರನ್ನು ನರಕಾಗ್ನಿಯ ಮುಂದೆ ಪ್ರದರ್ಶಿಸಲಾಗುವುದು. ಅಂತಿಮ ಘಳಿಗೆ ಜಾರಿಯಾಗುವ ದಿನ ಫಿರ್‍ಔನನ ಜನರನ್ನು ಅತ್ಯುಗ್ರ ಶಿಕ್ಷೆಯಲ್ಲಿ ಪ್ರವೇಶಗೊಳಿಸಿರೆಂದು ಅಪ್ಪಣೆಯಾಗುವುದು.

Verse 47

وَإِذْ يَتَحَآجُّونَ فِى ٱلنَّارِ فَيَقُولُ ٱلضُّعَفَـٰٓؤُا۟ لِلَّذِينَ ٱسْتَكْبَرُوٓا۟ إِنَّا كُنَّا لَكُمْ تَبَعًا فَهَلْ أَنتُم مُّغْنُونَ عَنَّا نَصِيبًا مِّنَ ٱلنَّارِ

Transliteration wa-idh yataḥājjūna fī l-nāri fayaqūlu l-ḍuʿafāu lilladhīna is'takbarū innā kunnā lakum tabaʿan fahal antum mugh'nūna ʿannā naṣīban mina l-nāri

Kannada ನರಕಾಗ್ನಿಯಲ್ಲಿ ಅವರು ಪರಸ್ಪರ ವಾದ ಹೂಡುವ ಸನ್ನಿವೇಶವನ್ನು ಊಹಿಸಿರಿ. ಆಗ ದುರ್ಬಲರು ಅಹಂಕಾರಿಗಳಲ್ಲಿ ಹೀಗೆ ಹೇಳುವರು, ‘ನಾವು ನಿಮಗೆ ವಿಧೇಯರಾಗಿದ್ದೆವು. ಆದ್ದರಿಂದ ನರಕಾ ಗ್ನಿಯಿಂದ ಯಾವುದೆ ಅಂಶವನ್ನು ನಮ್ಮಿಂದ ನಿವಾರಿಸಿ ರಕ್ಷಿಸುವಿರಾ?’

Verse 48

قَالَ ٱلَّذِينَ ٱسْتَكْبَرُوٓا۟ إِنَّا كُلٌّ فِيهَآ إِنَّ ٱللَّهَ قَدْ حَكَمَ بَيْنَ ٱلْعِبَادِ

Transliteration qāla alladhīna is'takbarū innā kullun fīhā inna l-laha qad ḥakama bayna l-ʿibādi

Kannada ಅಹಂಕಾರಿಗಳು ಹೀಗೆ ಉತ್ತರ ಕೊಡುವರು; ‘ನಾವೆಲ್ಲರೂ ಈಗ ನರಕದಲ್ಲಿದ್ದೇವೆ. ಅಲ್ಲಾಹನು ದಾಸರ ನಡುವೆ ತೀರ್ಮಾನ ಮಾಡಿ ಮುಗಿ ಯಿತು’.

Verse 49

وَقَالَ ٱلَّذِينَ فِى ٱلنَّارِ لِخَزَنَةِ جَهَنَّمَ ٱدْعُوا۟ رَبَّكُمْ يُخَفِّفْ عَنَّا يَوْمًا مِّنَ ٱلْعَذَابِ

Transliteration waqāla alladhīna fī l-nāri likhazanati jahannama id'ʿū rabbakum yukhaffif ʿannā yawman mina l-ʿadhābi

Kannada ನರಕದಲ್ಲಿರುವವರು ನರಕಪಾಲಕರೊಡನೆ, ‘ನೀವು ನಿಮ್ಮ ಪ್ರಭುವನ್ನು ಪ್ರಾರ್ಥಿಸಿ, ಒಂದು ದಿನದ ಶಿಕ್ಷೆಯನ್ನಾದರೂ ಅವನು ಹಗುರ ಮಾಡಲಿ’ ಎನ್ನುವರು.

Verse 50

قَالُوٓا۟ أَوَلَمْ تَكُ تَأْتِيكُمْ رُسُلُكُم بِٱلْبَيِّنَـٰتِ ۖ قَالُوا۟ بَلَىٰ ۚ قَالُوا۟ فَٱدْعُوا۟ ۗ وَمَا دُعَـٰٓؤُا۟ ٱلْكَـٰفِرِينَ إِلَّا فِى ضَلَـٰلٍ

Transliteration qālū awalam taku tatīkum rusulukum bil-bayināti qālū balā qālū fa-id'ʿū wamā duʿāu l-kāfirīna illā fī ḍalālin

Kannada ಆಗ “ನಿಮ್ಮ ಸಂದೇಶವಾಹಕರು ಸುವ್ಯಕ್ತ ನಿದರ್ಶನಗಳನ್ನು ತರುತ್ತಿರಲಿಲ್ಲವೇ?” ಎಂದು ನರಕಪಾಲಕರು ಕೇಳುವರು. ಆಗ ಅವರು ‘ಹೌದು’ ಎನ್ನುವರು. ಆಗ ನರಕಪಾಲಕರು, “ಹಾಗಾದರೆ, ಅಲ್ಲಾಹನಲ್ಲಿ ನೀವೇ ಪ್ರಾರ್ಥಿಸಿರಿ” ಎನ್ನುವರು. ಸತ್ಯನಿಷೇಧಿಗಳ ಪ್ರಾರ್ಥನೆ ವ್ಯರ್ಥವೇ ಆಗಿದೆ.

Verse 51

إِنَّا لَنَنصُرُ رُسُلَنَا وَٱلَّذِينَ ءَامَنُوا۟ فِى ٱلْحَيَوٰةِ ٱلدُّنْيَا وَيَوْمَ يَقُومُ ٱلْأَشْهَـٰدُ

Transliteration innā lananṣuru rusulanā wa-alladhīna āmanū fī l-ḥayati l-dun'yā wayawma yaqūmu l-ashhādu

Kannada ನಾವು ನಮ್ಮ ಸಂದೇಶವಾಹಕರಿಗೆ ಹಾಗೂ ಸತ್ಯವಿಶ್ವಾಸಿಗಳಿಗೆ ಐಹಿಕ ಜೀವನದಲ್ಲಿಯೂ ಸಾಕ್ಷಿದಾರರು ಸಾಕ್ಷಿ ನಿಲ್ಲುವ ದಿನದಂದೂ ಸಹಾಯ ಮಾಡುತ್ತೇವೆ.

Verse 52

يَوْمَ لَا يَنفَعُ ٱلظَّـٰلِمِينَ مَعْذِرَتُهُمْ ۖ وَلَهُمُ ٱللَّعْنَةُ وَلَهُمْ سُوٓءُ ٱلدَّارِ

Transliteration yawma lā yanfaʿu l-ẓālimīna maʿdhiratuhum walahumu l-laʿnatu walahum sūu l-dāri

Kannada ಅಥವಾ ಅಕ್ರಮಿಗಳಿಗೆ ತನ್ನ ನೆಪಗಳು ಯಾವುದೇ ಪ್ರಯೋಜನವಾಗದ ದಿನ. ಅವರಿಗೆ ಶಾಪವಿದೆ. ಕೆಟ್ಟ ಭವನವೂ ಅವರಿಗುಂಟು.

Verse 53

وَلَقَدْ ءَاتَيْنَا مُوسَى ٱلْهُدَىٰ وَأَوْرَثْنَا بَنِىٓ إِسْرَٰٓءِيلَ ٱلْكِتَـٰبَ

Transliteration walaqad ātaynā mūsā l-hudā wa-awrathnā banī is'rāīla l-kitāba

Kannada ಮೂಸಾರಿಗೆ ನಾವು ಮಾರ್ಗದರ್ಶನವನ್ನು ಕೊಟ್ಟೆವು. ಇಸ್ರಾಈಲರನ್ನು ನಾವು ವೇದಗ್ರಂಥದ ಹಕ್ಕುದಾರರಾಗಿ ಮಾಡಿದೆವು.

Verse 54

هُدًى وَذِكْرَىٰ لِأُو۟لِى ٱلْأَلْبَـٰبِ

Transliteration hudan wadhik'rā li-ulī l-albābi

Kannada ಅದು ಬುದ್ಧಿಜೀವಿಗಳಿಗೆ ಸನ್ಮಾರ್ಗದರ್ಶನವೂ ಬೋಧನೆಯೂ ಆಗಿತ್ತು.

Verse 55

فَٱصْبِرْ إِنَّ وَعْدَ ٱللَّهِ حَقٌّ وَٱسْتَغْفِرْ لِذَنۢبِكَ وَسَبِّحْ بِحَمْدِ رَبِّكَ بِٱلْعَشِىِّ وَٱلْإِبْكَـٰرِ

Transliteration fa-iṣ'bir inna waʿda l-lahi ḥaqqun wa-is'taghfir lidhanbika wasabbiḥ biḥamdi rabbika bil-ʿashiyi wal-ib'kāri

Kannada ಆದುದರಿಂದ (ಸಂದೇಶವಾಹಕರೇ,) ತಾಳ್ಮೆ ವಹಿಸಿರಿ. ಅಲ್ಲಾಹನ ವಾಗ್ದಾನವು ಪರಮ ಸತ್ಯ ವಾಗಿದೆ. ನಿಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿರಿ. ಬೆಳಗು ಬೈಗುಗಳಲ್ಲಿ ನಿಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನಿಗೆ ನಮಾಝ್ ನಿರ್ವಹಿಸಿರಿ.

Verse 56

إِنَّ ٱلَّذِينَ يُجَـٰدِلُونَ فِىٓ ءَايَـٰتِ ٱللَّهِ بِغَيْرِ سُلْطَـٰنٍ أَتَىٰهُمْ ۙ إِن فِى صُدُورِهِمْ إِلَّا كِبْرٌ مَّا هُم بِبَـٰلِغِيهِ ۚ فَٱسْتَعِذْ بِٱللَّهِ ۖ إِنَّهُۥ هُوَ ٱلسَّمِيعُ ٱلْبَصِيرُ

Transliteration inna alladhīna yujādilūna fī āyāti l-lahi bighayri sul'ṭānin atāhum in fī ṣudūrihim illā kib'run mā hum bibālighīhi fa-is'taʿidh bil-lahi innahu huwa l-samīʿu l-baṣīru

Kannada ಅವರ ಬಳಿ ಬಂದಿರುವ ಅಲ್ಲಾಹನ ನಿದರ್ಶನಗಳ ಬಗ್ಗೆ ಯಾವುದೇ ಆಧಾರವಿಲ್ಲದೆ ಜಗಳ ಹೂಡುವವರ ಹೃದಯಗಳಲ್ಲಿ ಅಹಂಕಾರವಲ್ಲದೆ ಬೇರೇನಿಲ್ಲ. ಆದರೆ ಅವರು ಗುರಿ ತಲುಪುವ ವರಲ್ಲ. ಆದ್ದರಿಂದ ಅಲ್ಲಾಹನಲ್ಲಿ ಅಭಯವನ್ನು ಯಾಚಿಸಿರಿ. ಅವನು ಸರ್ವ ಶ್ರೋತೃನೂ, ಸರ್ವ ದರ್ಶಕನೂ ಆಗಿರುತ್ತಾನೆ.

Verse 57

لَخَلْقُ ٱلسَّمَـٰوَٰتِ وَٱلْأَرْضِ أَكْبَرُ مِنْ خَلْقِ ٱلنَّاسِ وَلَـٰكِنَّ أَكْثَرَ ٱلنَّاسِ لَا يَعْلَمُونَ

Transliteration lakhalqu l-samāwāti wal-arḍi akbaru min khalqi l-nāsi walākinna akthara l-nāsi lā yaʿlamūna

Kannada ಖಂಡಿತವಾಗಿ ಆಕಾಶಗಳನ್ನು ಮತ್ತು ಭೂಮಿ ಯನ್ನು ಸೃಷ್ಟಿಸುವುದು ಮಾನವನ ಮರು ಸೃಷ್ಟಿಗಿಂತ ದೊಡ್ಡದಾದ ಕಾರ್ಯವಾಗಿದೆ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.

Verse 58

وَمَا يَسْتَوِى ٱلْأَعْمَىٰ وَٱلْبَصِيرُ وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ وَلَا ٱلْمُسِىٓءُ ۚ قَلِيلًا مَّا تَتَذَكَّرُونَ

Transliteration wamā yastawī l-aʿmā wal-baṣīru wa-alladhīna āmanū waʿamilū l-ṣāliḥāti walā l-musīu qalīlan mā tatadhakkarūna

Kannada ಕುರುಡನೂ ಕಣ್ಣಿದ್ದವನೂ ಸಮಾನರಲ್ಲ. ಸತ್ಯ ವಿಶ್ವಾಸವಿರಿಸಿ ಸದಾಚಾರ ಕೈಗೊಂಡವರೂ ದುಷ್ಕರ್ಮಿಗಳೂ ಸಮಾನರಲ್ಲ. ಆದರೆ ಅವರು ಸ್ವಲ್ಪ ಮಾತ್ರವೇ ಯೋಚಿಸಿ ಅರ್ಥ ಮಾಡಿ ಕೊಳ್ಳುತ್ತಾರೆ.

Verse 59

إِنَّ ٱلسَّاعَةَ لَـَٔاتِيَةٌ لَّا رَيْبَ فِيهَا وَلَـٰكِنَّ أَكْثَرَ ٱلنَّاسِ لَا يُؤْمِنُونَ

Transliteration inna l-sāʿata laātiyatun lā rayba fīhā walākinna akthara l-nāsi lā yu'minūna

Kannada ಪುನರುತ್ಥಾನದ ಘಳಿಗೆ ಖಂಡಿತ ಬರಲಿದೆ. ಅದರಲ್ಲಿ ಏನೂ ಸಂದೇಹವಿಲ್ಲ. ಆದರೆ ಹೆಚ್ಚಿನ ಜನರು ನಂಬುವುದಿಲ್ಲ.

Verse 60

وَقَالَ رَبُّكُمُ ٱدْعُونِىٓ أَسْتَجِبْ لَكُمْ ۚ إِنَّ ٱلَّذِينَ يَسْتَكْبِرُونَ عَنْ عِبَادَتِى سَيَدْخُلُونَ جَهَنَّمَ دَاخِرِينَ

Transliteration waqāla rabbukumu id'ʿūnī astajib lakum inna alladhīna yastakbirūna ʿan ʿibādatī sayadkhulūna jahannama dākhirīna

Kannada ನಿಮ್ಮ ಪ್ರಭು ಹೀಗೆ ಹೇಳುತ್ತಾನೆ; ನನ್ನನ್ನು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರಿಸುವೆನು. ಅಹಂಕಾರದಿಂದ ನನ್ನ ಆರಾಧನೆಯನ್ನು ತೊರೆಯುವವರು ಯಾರೋ ಖಂಡಿತವಾಗಿಯೂ ಅವರು ಅಪಮಾನಿತರಾಗಿ ನರಕದಲ್ಲಿ ಪ್ರವೇಶಿಸಲಿರುವರು.

Verse 61

ٱللَّهُ ٱلَّذِى جَعَلَ لَكُمُ ٱلَّيْلَ لِتَسْكُنُوا۟ فِيهِ وَٱلنَّهَارَ مُبْصِرًا ۚ إِنَّ ٱللَّهَ لَذُو فَضْلٍ عَلَى ٱلنَّاسِ وَلَـٰكِنَّ أَكْثَرَ ٱلنَّاسِ لَا يَشْكُرُونَ

Transliteration al-lahu alladhī jaʿala lakumu al-layla litaskunū fīhi wal-nahāra mub'ṣiran inna l-laha ladhū faḍlin ʿalā l-nāsi walākinna akthara l-nāsi lā yashkurūna

Kannada ಅಲ್ಲಾಹನು, ನೀವು ವಿಶ್ರಾಂತಿ ಪಡೆಯಲೆಂದು ನಿಮಗೆ ರಾತ್ರಿಯನ್ನು ಒದಗಿಸಿದನು. ಹಗಲನ್ನು ಪ್ರಕಾಶಿತಗೊಳಿಸಿದನು. ಅಲ್ಲಾಹನು ಜನರ ಮೇಲೆ ಮಹಾ ಅನುಗ್ರಹದಾತನು. ಆದರೆ ಹೆಚ್ಚಿನ ಜನ ಕೃತಜ್ಞತೆ ಸಲ್ಲಿಸುವುದಿಲ್ಲ.

Verse 62

ذَٰلِكُمُ ٱللَّهُ رَبُّكُمْ خَـٰلِقُ كُلِّ شَىْءٍ لَّآ إِلَـٰهَ إِلَّا هُوَ ۖ فَأَنَّىٰ تُؤْفَكُونَ

Transliteration dhālikumu l-lahu rabbukum khāliqu kulli shayin lā ilāha illā huwa fa-annā tu'fakūna

Kannada ಅವನೇ ನಿಮ್ಮ ಪ್ರಭು, ಸಕಲ ವಸ್ತುಗಳ ಕರ್ತೃನಾದ ಅಲ್ಲಾಹು. ಅವನ ಹೊರತು ಬೇರೆ ಆರಾಧ್ಯರಿಲ್ಲ. ಹೀಗಿರಲು ಹೇಗೆ ನೀವು ದಾರಿಗೆಡಿಸಲ್ಪಡುತ್ತಿರುವಿರಿ?

Verse 63

كَذَٰلِكَ يُؤْفَكُ ٱلَّذِينَ كَانُوا۟ بِـَٔايَـٰتِ ٱللَّهِ يَجْحَدُونَ

Transliteration kadhālika yu'faku alladhīna kānū biāyāti l-lahi yajḥadūna

Kannada ಅಲ್ಲಾಹನ ನಿದರ್ಶನಗಳನ್ನು ನಿಷೇಧಿಸುತ್ತಿದ್ದವರು ದಾರಿ ಕೆಟ್ಟಂತೆ ಇವರೂ ದಾರಿಗೆಡುತ್ತಾರೆ.

Verse 64

ٱللَّهُ ٱلَّذِى جَعَلَ لَكُمُ ٱلْأَرْضَ قَرَارًا وَٱلسَّمَآءَ بِنَآءً وَصَوَّرَكُمْ فَأَحْسَنَ صُوَرَكُمْ وَرَزَقَكُم مِّنَ ٱلطَّيِّبَـٰتِ ۚ ذَٰلِكُمُ ٱللَّهُ رَبُّكُمْ ۖ فَتَبَارَكَ ٱللَّهُ رَبُّ ٱلْعَـٰلَمِينَ

Transliteration al-lahu alladhī jaʿala lakumu l-arḍa qarāran wal-samāa bināan waṣawwarakum fa-aḥsana ṣuwarakum warazaqakum mina l-ṭayibāti dhālikumu l-lahu rabbukum fatabāraka l-lahu rabbu l-ʿālamīna

Kannada ಅಲ್ಲಾಹನು ಭೂಮಿಯನ್ನು ನಿಮಗೆ ನೆಲೆಯನ್ನಾಗಿಯೂ ಆಕಾಶವನ್ನು ಛಾವಣಿಯನ್ನಾಗಿ ಯೂ ಮಾಡಿದವನು. ಅವನು ನಿಮಗೆ ರೂಪ ಕೊಟ್ಟನು. ನಿಮ್ಮ ರೂಪವನ್ನು ಸುಂದರಗೊಳಿಸಿದನು. ಅವನು ನಿಮಗೆ ಶುದ್ಧ ವಸ್ತುಗಳಿಂದ ಆಹಾರ ನೀಡಿದನು. ಅವನೇ ನಿಮ್ಮ ಪ್ರಭುವಾದ ಅಲ್ಲಾಹು. ಸಕಲ ಲೋಕಗಳ ಪ್ರಭುವಾದ ಅಲ್ಲಾಹನು ಪರಮ ಸಮೃದ್ಧನು.

Verse 65

هُوَ ٱلْحَىُّ لَآ إِلَـٰهَ إِلَّا هُوَ فَٱدْعُوهُ مُخْلِصِينَ لَهُ ٱلدِّينَ ۗ ٱلْحَمْدُ لِلَّهِ رَبِّ ٱلْعَـٰلَمِينَ

Transliteration huwa l-ḥayu lā ilāha illā huwa fa-id'ʿūhu mukh'liṣīna lahu l-dīna l-ḥamdu lillahi rabbi l-ʿālamīna

Kannada ಅವನು ಚಿರಂಜೀವಿಯು, ಅವನ ಹೊರತು ಅನ್ಯ ಆರಾಧ್ಯರಿಲ್ಲ. ಆದ್ದರಿಂದ ನಿಮ್ಮ ಧರ್ಮವನ್ನು ಅವನಿಗೆ ಮಾತ್ರ ಮೀಸಲಾಗಿಟ್ಟು ಅವನನ್ನು ಆರಾಧಿಸಿರಿ. ಸರ್ವಸ್ತುತಿಯು ಸಕಲ ಲೋಕಗಳ ಪಾಲಕ ಪ್ರಭುವಾದ ಅಲ್ಲಾಹನಿಗೆ ಮೀಸಲು.

Verse 66

۞ قُلْ إِنِّى نُهِيتُ أَنْ أَعْبُدَ ٱلَّذِينَ تَدْعُونَ مِن دُونِ ٱللَّهِ لَمَّا جَآءَنِىَ ٱلْبَيِّنَـٰتُ مِن رَّبِّى وَأُمِرْتُ أَنْ أُسْلِمَ لِرَبِّ ٱلْعَـٰلَمِينَ

Transliteration qul innī nuhītu an aʿbuda alladhīna tadʿūna min dūni l-lahi lammā jāaniya l-bayinātu min rabbī wa-umir'tu an us'lima lirabbi l-ʿālamīna

Kannada ಸಂದೇಶವಾಹಕರೇ, ಹೇಳಿರಿ; “ನನ್ನ ಪ್ರಭುವಿನ ವತಿಯಿಂದ ನನಗೆ ಪುರಾವೆಗಳು ಬಂದಿರುವಾಗ, ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವವುಗಳಿಗೆ ನಾನು ಆರಾಧಿಸದಂತೆ ನನಗೆ ನಿಷೇಧ ವಿಧಿಸಲಾಗಿದೆ ಹಾಗೂ ಸಕಲ ಲೋಕ ಪಾಲಕನಿಗೆ ವಿಧೇಯನಾಗಬೇಕೆಂದು ನನಗೆ ಅಪ್ಪಣೆ ಕೊಡಲಾಗಿದೆ”.

Verse 67

هُوَ ٱلَّذِى خَلَقَكُم مِّن تُرَابٍ ثُمَّ مِن نُّطْفَةٍ ثُمَّ مِنْ عَلَقَةٍ ثُمَّ يُخْرِجُكُمْ طِفْلًا ثُمَّ لِتَبْلُغُوٓا۟ أَشُدَّكُمْ ثُمَّ لِتَكُونُوا۟ شُيُوخًا ۚ وَمِنكُم مَّن يُتَوَفَّىٰ مِن قَبْلُ ۖ وَلِتَبْلُغُوٓا۟ أَجَلًا مُّسَمًّى وَلَعَلَّكُمْ تَعْقِلُونَ

Transliteration huwa alladhī khalaqakum min turābin thumma min nuṭ'fatin thumma min ʿalaqatin thumma yukh'rijukum ṭif'lan thumma litablughū ashuddakum thumma litakūnū shuyūkhan waminkum man yutawaffā min qablu walitablughū ajalan musamman walaʿallakum taʿqilūna

Kannada ಮಣ್ಣಿನಿಂದ, ತರುವಾಯ ವೀರ್ಯದಿಂದ, ಅನಂ ತರ ರಕ್ತಪಿಂಡದಿಂದ ನಿಮ್ಮನ್ನು ಸೃಷ್ಟಿಸಿದವನು ಅವನೇ. ಆಮೇಲೆ ಅವನು ನಿಮ್ಮನ್ನು ಶಿಶುವಿನ ರೂಪದಲ್ಲಿ ಹೊರತರುತ್ತಾನೆ. ಆ ಬಳಿಕ ನೀವು ನಿಮ್ಮ ಸಂಪೂರ್ಣ ಶಕ್ತಿಯನ್ನು ತಲುಪಲಿಕ್ಕಾಗಿ, ಅನಂತರ ನೀವು ವೃದ್ಧರಾಗಲಿಕ್ಕಾಗಿ ನಿಮ್ಮನ್ನು ಉಳಿಸುತ್ತಾನೆ. ನಿಮ್ಮಲ್ಲಿ ಕೆಲವರು ಇದಕ್ಕೆ ಮೊದ ಲೇ ಮರಣ ಹೊಂದುತ್ತಾರೆ. ನಿಶ್ಚಿತ ಕಾಲಾವಧಿ ಯನ್ನು ನೀವು ತಲುಪಲಿಕ್ಕಾಗಿ ಹಾಗೂ ನೀವು ಯೋಚಿಸಲಿಕ್ಕಾಗಿ.

Verse 68

هُوَ ٱلَّذِى يُحْىِۦ وَيُمِيتُ ۖ فَإِذَا قَضَىٰٓ أَمْرًا فَإِنَّمَا يَقُولُ لَهُۥ كُن فَيَكُونُ

Transliteration huwa alladhī yuḥ'yī wayumītu fa-idhā qaḍā amran fa-innamā yaqūlu lahu kun fayakūnu

Kannada ಅವನೇ ಜೀವಂತಗೊಳಿಸುವವನು ಮತ್ತು ಮರಣ ಕೊಡುವವನು. ಅವನು ಒಂದು ವಿಷಯ ವನ್ನು ತೀರ್ಮಾನ ಮಾಡಿದರೆ ‘ಆಗು’ ಎಂದು ಅದಕ್ಕೆ ಹೇಳುವನು. ಆಗಲೇ ಅದು ಆಗಿ ಬಿಡುವುದು.

Verse 69

أَلَمْ تَرَ إِلَى ٱلَّذِينَ يُجَـٰدِلُونَ فِىٓ ءَايَـٰتِ ٱللَّهِ أَنَّىٰ يُصْرَفُونَ

Transliteration alam tara ilā alladhīna yujādilūna fī āyāti l-lahi annā yuṣ'rafūna

Kannada ಅಲ್ಲಾಹನ ನಿದರ್ಶನಗಳ ಬಗ್ಗೆ ತರ್ಕ ಹೂಡುವವರನ್ನು ನೀವು ನೋಡಿಲ್ಲವೇ? ಅವರನ್ನು ಸತ್ಯದಿಂದ ಹೇಗೆ ತಿರುಗಿಸಲಾಗುತ್ತಿದೆ!

Verse 70

ٱلَّذِينَ كَذَّبُوا۟ بِٱلْكِتَـٰبِ وَبِمَآ أَرْسَلْنَا بِهِۦ رُسُلَنَا ۖ فَسَوْفَ يَعْلَمُونَ

Transliteration alladhīna kadhabū bil-kitābi wabimā arsalnā bihi rusulanā fasawfa yaʿlamūna

Kannada ವೇದ ಗ್ರಂಥವನ್ನೂ ನಮ್ಮ ಸಂದೇಶವಾಹಕರಿಗೆ ನಾವು ಯಾವುದನ್ನು ಕೊಟ್ಟು ಕಳುಹಿಸಿದ್ದೆವೋ. ಅದನ್ನೂ ಸುಳ್ಳಾಗಿಸಿದವರು ಅವರು. ಸದ್ಯವೇ ಇವರಿಗೆ ಗೊತ್ತಾಗಲಿದೆ.

Verse 71

إِذِ ٱلْأَغْلَـٰلُ فِىٓ أَعْنَـٰقِهِمْ وَٱلسَّلَـٰسِلُ يُسْحَبُونَ

Transliteration idhi l-aghlālu fī aʿnāqihim wal-salāsilu yus'ḥabūna

Kannada

Verse 72

فِى ٱلْحَمِيمِ ثُمَّ فِى ٱلنَّارِ يُسْجَرُونَ

Transliteration fī l-ḥamīmi thumma fī l-nāri yus'jarūna

Kannada ಆಗ ಅವರ ಕೊರಳುಗಳಲ್ಲಿ ಬೇಡಿಗಳು ಮತ್ತು ಸಂಕೋಲೆಗಳಿದ್ದು ಅವರನ್ನು ಕುದಿಯುತ್ತಿರುವ ನರಕಾಗ್ನಿಯಲ್ಲಿಗೆ ಎಳೆದೊಯ್ಯುವ ಸಂದರ್ಭ. ತರುವಾಯ ಅವರನ್ನು ನರಕಾಗ್ನಿಯಲ್ಲಿ ಹೊತ್ತಿ ಸಲಾಗುವುದು.

Verse 73

ثُمَّ قِيلَ لَهُمْ أَيْنَ مَا كُنتُمْ تُشْرِكُونَ

Transliteration thumma qīla lahum ayna mā kuntum tush'rikūna

Kannada

Verse 74

مِن دُونِ ٱللَّهِ ۖ قَالُوا۟ ضَلُّوا۟ عَنَّا بَل لَّمْ نَكُن نَّدْعُوا۟ مِن قَبْلُ شَيْـًٔا ۚ كَذَٰلِكَ يُضِلُّ ٱللَّهُ ٱلْكَـٰفِرِينَ

Transliteration min dūni l-lahi qālū ḍallū ʿannā bal lam nakun nadʿū min qablu shayan kadhālika yuḍillu l-lahu l-kāfirīna

Kannada ಅನಂತರ ಅವರೊಡನೆ ಕೇಳಲಾಗುವುದು, ‘ನೀವು ಅಲ್ಲಾಹನನ್ನು ಬಿಟ್ಟು ದೇವ ಸಹಭಾಗಿಗಳನ್ನಾಗಿ ಮಾಡಿದವರು ಎಲ್ಲಿದ್ದಾರೆ?’ ಆಗ ‘ಅವರು ಹೇಳುವರು, ಅವರು ನಮ್ಮಿಂದ ಕಳೆದು ಹೋದರು. ಅಲ್ಲ, ಇದಕ್ಕೆ ಮುಂಚೆ ಯಾವುದನ್ನೂ ನಾವು ಆರಾಧಿಸುತ್ತಿರಲಿಲ್ಲ’. ಹೀಗೆ ಸತ್ಯನಿಷೇಧಿ ಗಳನ್ನು ಅಲ್ಲಾಹನು ಮಾರ್ಗ ಭ್ರಂಶಗೊಳಿಸುವನು.

Verse 75

ذَٰلِكُم بِمَا كُنتُمْ تَفْرَحُونَ فِى ٱلْأَرْضِ بِغَيْرِ ٱلْحَقِّ وَبِمَا كُنتُمْ تَمْرَحُونَ

Transliteration dhālikum bimā kuntum tafraḥūna fī l-arḍi bighayri l-ḥaqi wabimā kuntum tamraḥūna

Kannada (ಆಗ ಹೇಳಲಾಗುವುದು) “ನೀವು ಭೂಮಿಯಲ್ಲಿ ಅನ್ಯಾಯವಾಗಿ ಆಹ್ಲಾದಿಸುತ್ತಿದ್ದ ಹಾಗೂ ವಿಲಾಸಿಗಳಾಗಿ ಬದುಕಿದುದರ ಫಲವಿದು.

Verse 76

ٱدْخُلُوٓا۟ أَبْوَٰبَ جَهَنَّمَ خَـٰلِدِينَ فِيهَا ۖ فَبِئْسَ مَثْوَى ٱلْمُتَكَبِّرِينَ

Transliteration ud'khulū abwāba jahannama khālidīna fīhā fabi'sa mathwā l-mutakabirīna

Kannada ನರಕ ದ್ವಾರಗಳಲ್ಲಿ ಪ್ರವೇಶಿಸಿರಿ. ಅದರಲ್ಲಿ ನಿತ್ಯವಾಸಿ ಗಳಾಗಿ. ಅಹಂಕಾರಿಗಳ ವಾಸಸ್ಥಾನ ಎಷ್ಟು ಕೆಟ್ಟದು”.

Verse 77

فَٱصْبِرْ إِنَّ وَعْدَ ٱللَّهِ حَقٌّ ۚ فَإِمَّا نُرِيَنَّكَ بَعْضَ ٱلَّذِى نَعِدُهُمْ أَوْ نَتَوَفَّيَنَّكَ فَإِلَيْنَا يُرْجَعُونَ

Transliteration fa-iṣ'bir inna waʿda l-lahi ḥaqqun fa-immā nuriyannaka baʿḍa alladhī naʿiduhum aw natawaffayannaka fa-ilaynā yur'jaʿūna

Kannada ಆದುದರಿಂದ (ಸಂದೇಶವಾಹಕರೇ,) ತಾಳ್ಮೆ ವಹಿಸಿರಿ, ಅಲ್ಲಾಹನ ವಾಗ್ದಾನವು ಪರಮ ಸತ್ಯವಾಗಿದೆ. ಇನ್ನು ನಾವು ಇವರಿಗೆ ಎಚ್ಚರಿಕೆ ನೀಡುತ್ತಿರುವ ಶಿಕ್ಷೆಗಳಲ್ಲಿ ಕೆಲವನ್ನು ಇವರು ಅನುಭವಿಸುತ್ತಿರುವುದನ್ನು ತಮಗೆ ನಾವು ತೋರಿಸಿದರೂ ಅಥವಾ (ಅದಕ್ಕೂ ಮುನ್ನ) ನಿಮ್ಮನ್ನು ನಾವು ಮರಣಗೊಳಿಸಿದರೂ ಇವರ ನಿರ್ಗಮನ ನಮ್ಮ ಕಡೆಗೇ ಇದೆ.

Verse 78

وَلَقَدْ أَرْسَلْنَا رُسُلًا مِّن قَبْلِكَ مِنْهُم مَّن قَصَصْنَا عَلَيْكَ وَمِنْهُم مَّن لَّمْ نَقْصُصْ عَلَيْكَ ۗ وَمَا كَانَ لِرَسُولٍ أَن يَأْتِىَ بِـَٔايَةٍ إِلَّا بِإِذْنِ ٱللَّهِ ۚ فَإِذَا جَآءَ أَمْرُ ٱللَّهِ قُضِىَ بِٱلْحَقِّ وَخَسِرَ هُنَالِكَ ٱلْمُبْطِلُونَ

Transliteration walaqad arsalnā rusulan min qablika min'hum man qaṣaṣnā ʿalayka wamin'hum man lam naqṣuṣ ʿalayka wamā kāna lirasūlin an yatiya biāyatin illā bi-idh'ni l-lahi fa-idhā jāa amru l-lahi quḍiya bil-ḥaqi wakhasira hunālika l-mub'ṭilūna

Kannada (ಸಂದೇಶವಾಹಕರೇ,) ನಾವು ನಿಮಗಿಂತ ಮುಂಚೆ ಅನೇಕ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಅವರಲ್ಲಿ ಕೆಲವರ ವೃತ್ತಾಂತ ಗಳನ್ನು ನಾವು ನಿಮಗೆ ಬಿತ್ತರಿಸಿದ್ದೇವೆ. ಕೆಲವರ ವೃತ್ತಾಂತಗಳನ್ನು ಬಿತ್ತರಿಸಿಲ್ಲ. ಅಲ್ಲಾಹನ ಅನುಮತಿ ಇಲ್ಲದೆ ಯಾವುದೇ ನಿದರ್ಶನವನ್ನು ತರಲು ಯಾವ ಸಂದೇಶವಾಹಕರಿಗೂ ಸಾಧ್ಯ ವಿರಲಿಲ್ಲ. ಅಲ್ಲಾಹನ ಆಜ್ಞೆ ಬಂದರೆ ಸತ್ಯಕ್ಕನು ಸಾರ ತೀರ್ಮಾನ ಮಾಡಲಾಗುವುದು. ಆಗ ಅಸತ್ಯವಾದಿಗಳು ನಷ್ಟಕ್ಕೆ ಬೀಳುವರು.

Verse 79

ٱللَّهُ ٱلَّذِى جَعَلَ لَكُمُ ٱلْأَنْعَـٰمَ لِتَرْكَبُوا۟ مِنْهَا وَمِنْهَا تَأْكُلُونَ

Transliteration al-lahu alladhī jaʿala lakumu l-anʿāma litarkabū min'hā wamin'hā takulūna

Kannada ಅಲ್ಲಾಹನು ನಿಮಗಾಗಿ ಜಾನುವಾರುಗಳನ್ನು ಉಂಟು ಮಾಡಿದನು. ಅವುಗಳ ಪೈಕಿ ಕೆಲವನ್ನು, ನೀವು ಸವಾರಿ ಮಾಡಲಿಕ್ಕಾಗಿ, ಅವುಗಳಿಂದಲೇ ನೀವು ಭಕ್ಷಿಸುವ ಸಲುವಾಗಿಯೂ.

Verse 80

وَلَكُمْ فِيهَا مَنَـٰفِعُ وَلِتَبْلُغُوا۟ عَلَيْهَا حَاجَةً فِى صُدُورِكُمْ وَعَلَيْهَا وَعَلَى ٱلْفُلْكِ تُحْمَلُونَ

Transliteration walakum fīhā manāfiʿu walitablughū ʿalayhā ḥājatan fī ṣudūrikum waʿalayhā waʿalā l-ful'ki tuḥ'malūna

Kannada ಅವುಗಳಲ್ಲಿ ನಿಮಗೆ ಅನೇಕ ಪ್ರಯೋಜನಗಳಿವೆ. ನಿಮ್ಮ ಮನಗಳಲ್ಲಿರುವ ಅಗತ್ಯಕ್ಕೆ ಅವುಗಳ ಮೂಲಕ ನೀವು ತಲುಪಬಲ್ಲಿರಿ. ಅವುಗಳ ಬೆನ್ನ ಮೇಲೂ, ನಾವೆಗಳ ಮೇಲೂ ನಿಮ್ಮನ್ನು ಒಯ್ಯಲಾಗುತ್ತದೆ.

Verse 81

وَيُرِيكُمْ ءَايَـٰتِهِۦ فَأَىَّ ءَايَـٰتِ ٱللَّهِ تُنكِرُونَ

Transliteration wayurīkum āyātihi fa-ayya āyāti l-lahi tunkirūna

Kannada ಅವನು ತನ್ನ ಈ ನಿದರ್ಶನಗಳನ್ನು ನಿಮಗೆ ತೋರಿಸಿ ಕೊಡುವನು. ಆಗ ನೀವು ಅವನ ಯಾವ ನಿದರ್ಶನಗಳನ್ನು ನಿರಾಕರಿಸಬಲ್ಲಿರಿ?

Verse 82

أَفَلَمْ يَسِيرُوا۟ فِى ٱلْأَرْضِ فَيَنظُرُوا۟ كَيْفَ كَانَ عَـٰقِبَةُ ٱلَّذِينَ مِن قَبْلِهِمْ ۚ كَانُوٓا۟ أَكْثَرَ مِنْهُمْ وَأَشَدَّ قُوَّةً وَءَاثَارًا فِى ٱلْأَرْضِ فَمَآ أَغْنَىٰ عَنْهُم مَّا كَانُوا۟ يَكْسِبُونَ

Transliteration afalam yasīrū fī l-arḍi fayanẓurū kayfa kāna ʿāqibatu alladhīna min qablihim kānū akthara min'hum wa-ashadda quwwatan waāthāran fī l-arḍi famā aghnā ʿanhum mā kānū yaksibūna

Kannada ಇವರು ಭೂಮಿಯಲ್ಲಿ ಸಂಚರಿಸಿಕೊಂಡು ಇವರಿಗಿಂತ ಮುಂಚೆ ಗತಿಸಿದವರ ಗತಿಯೇ ನಾಯಿ ತೆಂದು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು, ಶಕ್ತಿ- ಸಾಮಥ್ರ್ಯ ಹಾಗೂ ಭೂಮಿಯಲ್ಲಿ ಬಿಟ್ಟು ಹೋದ ಕುರುಹುಗಳಲ್ಲಿ ಇವರಿಗಿಂತ ಹೆಚ್ಚು ಗಟ್ಟಿಗರಾ ಗಿದ್ದರು. ಅದಾಗ್ಯೂ ಅವರು ಸಂಪಾದಿಸಿದ್ದು ಅವರ ಪ್ರಯೋಜನಕ್ಕೆ ಬರಲಿಲ್ಲ.

Verse 83

فَلَمَّا جَآءَتْهُمْ رُسُلُهُم بِٱلْبَيِّنَـٰتِ فَرِحُوا۟ بِمَا عِندَهُم مِّنَ ٱلْعِلْمِ وَحَاقَ بِهِم مَّا كَانُوا۟ بِهِۦ يَسْتَهْزِءُونَ

Transliteration falammā jāathum rusuluhum bil-bayināti fariḥū bimā ʿindahum mina l-ʿil'mi waḥāqa bihim mā kānū bihi yastahziūna

Kannada ಅವರ ಸಂದೇಶವಾಹಕರು ಅವರ ಬಳಿಗೆ ಪ್ರತ್ಯಕ್ಷ ಪ್ರಮಾಣಗಳನ್ನು ತಂದಾಗ ಅವರು ತಮ್ಮಲ್ಲಿದ್ದ ಜ್ಞಾನದಲ್ಲೇ ಸಂತುಷ್ಟರಾದರು. ಯಾವುದನ್ನು ಅವರು ಗೇಲಿ ಮಾಡುತ್ತಿದ್ದರೋ ಅದು ಅವರ ಮೇಲೆ ಎರಗಿತು.

Verse 84

فَلَمَّا رَأَوْا۟ بَأْسَنَا قَالُوٓا۟ ءَامَنَّا بِٱللَّهِ وَحْدَهُۥ وَكَفَرْنَا بِمَا كُنَّا بِهِۦ مُشْرِكِينَ

Transliteration falammā ra-aw basanā qālū āmannā bil-lahi waḥdahu wakafarnā bimā kunnā bihi mush'rikīna

Kannada ಅವರು ನಮ್ಮ ಕಠಿಣ ಶಿಕ್ಷೆಯನ್ನು ಕಂಡಾಗ ಅಲ್ಲಾಹನ ಏಕತ್ವದ ಸ್ವೀಕೃತಿಯೊಂದಿಗೆ “ನಾವು ಅವನಲ್ಲಿ ವಿಶ್ವಾಸ ತಾಳಿದೆವು, ಅವನಿಗೆ ದಿವ್ಯತ್ವದಲ್ಲಿ ನಾವು ಪಾಲು ಸೇರಿಸಿದ ಸಹ ಆರಾಧ್ಯರುಗಳನ್ನು ತಿರಸ್ಕರಿಸಿದೆವು” ಎಂದರು.

Verse 85

فَلَمْ يَكُ يَنفَعُهُمْ إِيمَـٰنُهُمْ لَمَّا رَأَوْا۟ بَأْسَنَا ۖ سُنَّتَ ٱللَّهِ ٱلَّتِى قَدْ خَلَتْ فِى عِبَادِهِۦ ۖ وَخَسِرَ هُنَالِكَ ٱلْكَـٰفِرُونَ

Transliteration falam yaku yanfaʿuhum īmānuhum lammā ra-aw basanā sunnata l-lahi allatī qad khalat fī ʿibādihi wakhasira hunālika l-kāfirūna

Kannada ಆದರೆ ನಮ್ಮ ಕಠಿಣ ಸಜೆಯನ್ನು ಕಂಡಾಗ ಅವರು ತೋರಿದ ಈ ವಿಶ್ವಾಸವು ಅವರಿಗೆ ಏನೂ ಫಲಕಾರಿಯಾಗಲಿಲ್ಲ . ತನ್ನ ದಾಸರ ಕಾರ್ಯದಲ್ಲಿ ಮೊದಲೇ ಜಾರಿಯಲ್ಲಿದ್ದ ಅಲ್ಲಾಹನ ಸಂಪ್ರದಾಯವಾಗಿತ್ತದು. ಆಗ ಸತ್ಯನಿಷೇಧಿಗಳ ನಿಶ್ಚಿತ ನಷ್ಟ ಸಾಕಾರಗೊಂಡಿತು.

Read Surah Ghafir in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.