MyDugsiStart learning

Surah Fussilat in Kannada: translation and audio

Surah 41 · فصلت · Explained in Detail · 54 verses

Surah Fussilat verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Fussilat word by word in English.

Verse 1

حمٓ

Transliteration hha-meem

Kannada ಹಾ ಮೀಮ್.

Verse 2

تَنزِيلٌ مِّنَ ٱلرَّحْمَـٰنِ ٱلرَّحِيمِ

Transliteration tanzīlun mina l-raḥmāni l-raḥīmi

Kannada ಇದು ಪರಮ ದಯಾಳುವೂ, ಪರಮ ವತ್ಸಲನೂ ಆದವನ ಕಡೆಯಿಂದ ಅವತೀರ್ಣಗೊಂಡಿದೆ.

Verse 3

كِتَـٰبٌ فُصِّلَتْ ءَايَـٰتُهُۥ قُرْءَانًا عَرَبِيًّا لِّقَوْمٍ يَعْلَمُونَ

Transliteration kitābun fuṣṣilat āyātuhu qur'ānan ʿarabiyyan liqawmin yaʿlamūna

Kannada ಗ್ರಹಿಸಿಕೊಳ್ಳುವ ಜನರಿಗೆ ವಚನಗಳನ್ನು ವಿಶದೀಕರಿಸಲ್ಪಟ್ಟ ಅರಬಿ ಭಾಷೆಯಲ್ಲಿರುವ ಖುರ್‍ಆನ್ ಗ್ರಂಥವಾಗಿದೆ.

Verse 4

بَشِيرًا وَنَذِيرًا فَأَعْرَضَ أَكْثَرُهُمْ فَهُمْ لَا يَسْمَعُونَ

Transliteration bashīran wanadhīran fa-aʿraḍa aktharuhum fahum lā yasmaʿūna

Kannada ಸುವಾರ್ತೆ ಹಾಗೂ ಮುನ್ನೆಚ್ಚರಿಕೆ ನೀಡುವ ಗ್ರಂಥ. ಆಗ ಇವರಲ್ಲಿ ಹೆಚ್ಚಿನವರು ಇದರಿಂದ ವಿಮುಖರಾದರು. ಅವರು ಕಿವಿಗೊಡುವುದಿಲ್ಲ.

Verse 5

وَقَالُوا۟ قُلُوبُنَا فِىٓ أَكِنَّةٍ مِّمَّا تَدْعُونَآ إِلَيْهِ وَفِىٓ ءَاذَانِنَا وَقْرٌ وَمِنۢ بَيْنِنَا وَبَيْنِكَ حِجَابٌ فَٱعْمَلْ إِنَّنَا عَـٰمِلُونَ

Transliteration waqālū qulūbunā fī akinnatin mimmā tadʿūnā ilayhi wafī ādhāninā waqrun wamin bayninā wabaynika ḥijābun fa-iʿ'mal innanā ʿāmilūna

Kannada ಅವರು ಹೇಳುತ್ತಾರೆ ``ನೀವು ಯಾವುದರ ಕಡೆಗೆ ನಮ್ಮನ್ನು ಕರೆಯುತ್ತಿರುವಿರೋ ಅದರ ಬಗ್ಗೆ ನಮ್ಮ ಹೃದಯಗಳು ಮುಚ್ಚಿಹೋಗಿವೆ. ನಮ್ಮ ಕಿವಿಗಳು ಕಿವುಡಾಗಿವೆ. ನಮ್ಮ - ನಿಮ್ಮ ನಡುವೆ ಒಂದು ತೆರೆ ಬಿದ್ದಿದೆ. ಆದ್ದರಿಂದ ನೀನು ನಿನ್ನ ಧರ್ಮದಲ್ಲಿ ವರ್ತಿಸು. ನಾವು ನಮ್ಮ ಧರ್ಮದಲ್ಲಿ ವರ್ತಿಸುತ್ತೇವೆ”.

Verse 6

قُلْ إِنَّمَآ أَنَا۠ بَشَرٌ مِّثْلُكُمْ يُوحَىٰٓ إِلَىَّ أَنَّمَآ إِلَـٰهُكُمْ إِلَـٰهٌ وَٰحِدٌ فَٱسْتَقِيمُوٓا۟ إِلَيْهِ وَٱسْتَغْفِرُوهُ ۗ وَوَيْلٌ لِّلْمُشْرِكِينَ

Transliteration qul innamā anā basharun mith'lukum yūḥā ilayya annamā ilāhukum ilāhun wāḥidun fa-is'taqīmū ilayhi wa-is'taghfirūhu wawaylun lil'mush'rikīna

Kannada (ಸಂದೇಶವಾಹಕರೇ,) ಹೇಳಿರಿ, ನಾನು ನಿಮ್ಮಂ ತೆಯೇ ಇರುವ ಒಬ್ಬ ಮನುಷ್ಯ. ನಿಮ್ಮ ಆರಾಧ್ಯ ನು ಏಕಮಾತ್ರ ಆರಾಧ್ಯನೆಂದು ನನಗೆ ದಿವ್ಯ ಸಂದೇಶ ನೀಡಲಾಗಿದೆ. ಆದುದರಿಂದ ನೀವು ಅವನ ಕಡೆಗಿರುವ ಋಜುವಾದ ದಿಕ್ಕಿನಲ್ಲೇ ನೆಲೆಯೂರಿರಿ. ಅವನಲ್ಲಿ ಕ್ಷಮೆಯಾಚಿಸಿರಿ. ಬಹುದೇವ ವಿಶ್ವಾಸಿಗಳಿಗೆ ವಿನಾಶವಿದೆ.

Verse 7

ٱلَّذِينَ لَا يُؤْتُونَ ٱلزَّكَوٰةَ وَهُم بِٱلْـَٔاخِرَةِ هُمْ كَـٰفِرُونَ

Transliteration alladhīna lā yu'tūna l-zakata wahum bil-ākhirati hum kāfirūna

Kannada ಅವರು ಝಕಾತ್ ಕೊಡುವುದಿಲ್ಲ. ಪರಲೋಕ ವನ್ನು ನಿಷೇಧಿಸುತ್ತಾರೆ.

Verse 8

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَهُمْ أَجْرٌ غَيْرُ مَمْنُونٍ

Transliteration inna alladhīna āmanū waʿamilū l-ṣāliḥāti lahum ajrun ghayru mamnūnin

Kannada ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮವೆಸಗುವವರು ಯಾರೋ, ಅವರಿಗೆ ಎಂದೂ ಮುರಿಯದ ಸತ್ಫಲವಿದೆ.

Verse 9

۞ قُلْ أَئِنَّكُمْ لَتَكْفُرُونَ بِٱلَّذِى خَلَقَ ٱلْأَرْضَ فِى يَوْمَيْنِ وَتَجْعَلُونَ لَهُۥٓ أَندَادًا ۚ ذَٰلِكَ رَبُّ ٱلْعَـٰلَمِينَ

Transliteration qul a-innakum latakfurūna bi-alladhī khalaqa l-arḍa fī yawmayni watajʿalūna lahu andādan dhālika rabbu l-ʿālamīna

Kannada (ಸಂದೇಶವಾಹಕರೇ) ಹೇಳಿರಿ;“ಭೂಮಿಯನ್ನು ಎರಡು ದಿನಗಳಲ್ಲಿ ಸೃಷ್ಟಿಸಿದ ದೇವನನ್ನು ನೀವು ನಿರಾಕರಿಸುತ್ತೀರಾ? ಅವನಿಗೆ ಸಮಾನರನ್ನು ಕಲ್ಪಿಸುತ್ತೀರಾ? ಅವನೇ ಸರ್ವ ಲೋಕಗಳ ಪಾಲಕ ಪ್ರಭು.

Verse 10

وَجَعَلَ فِيهَا رَوَٰسِىَ مِن فَوْقِهَا وَبَـٰرَكَ فِيهَا وَقَدَّرَ فِيهَآ أَقْوَٰتَهَا فِىٓ أَرْبَعَةِ أَيَّامٍ سَوَآءً لِّلسَّآئِلِينَ

Transliteration wajaʿala fīhā rawāsiya min fawqihā wabāraka fīhā waqaddara fīhā aqwātahā fī arbaʿati ayyāmin sawāan lilssāilīna

Kannada ಅವನು ಭೂಮಿಯ ಮೇಲೆ ಪರ್ವತಗಳನ್ನು ನಾಟಿದನು. ಅದರಲ್ಲಿ ಅನುಗ್ರಹ ಬೀರಿದನು ಮತ್ತು ಭೂಮಿಯ ಸೃಷ್ಟಿಯ ಬಗ್ಗೆ ಅನ್ವೇಷಕರಿಗೆ ಕ್ಲಪ್ತವಾಗಿ ಉತ್ತರಿಸಬಹುದಾದ ಕ್ರಮದಲ್ಲಿ ನಾಲ್ಕು ದಿವಸಗಳೊಳಗೆ ಭೂಮಿಯಲ್ಲಿ ಅವನು ಜೀವಿಗಳಿಗೆ ಆಹಾರಗಳನ್ನು ನಿರ್ಣಯಿಸಿದನು.

Verse 11

ثُمَّ ٱسْتَوَىٰٓ إِلَى ٱلسَّمَآءِ وَهِىَ دُخَانٌ فَقَالَ لَهَا وَلِلْأَرْضِ ٱئْتِيَا طَوْعًا أَوْ كَرْهًا قَالَتَآ أَتَيْنَا طَآئِعِينَ

Transliteration thumma is'tawā ilā l-samāi wahiya dukhānun faqāla lahā walil'arḍi i'tiyā ṭawʿan aw karhan qālatā ataynā ṭāiʿīna

Kannada ಅನಂತರ ಅವನು ಆಕಾಶದ ಕಡೆಗೆ ಗಮನ ಹರಿಸಿದನು. ಅದೊಂದು ದಟ್ಟ ಧೂಮಪಟಲ ವಾಗಿತ್ತು. ಆಗ ಅವನು ಆಕಾಶ-ಭೂಮಿಗಳೊಡನೆ, ‘ನೀವು ವಿಧೇಯರಾಗಿ ಇಲ್ಲವೇ ಬಲಾತ್ಕಾರವಾಗಿ ಬನ್ನಿರಿ’ ಎಂದನು. ಅವೆರಡೂ, ‘ನಾವು ವಿಧೇಯರಾಗಿ ಬಂದಿದ್ದೇವೆ’ ಎಂದವು.

Verse 12

فَقَضَىٰهُنَّ سَبْعَ سَمَـٰوَاتٍ فِى يَوْمَيْنِ وَأَوْحَىٰ فِى كُلِّ سَمَآءٍ أَمْرَهَا ۚ وَزَيَّنَّا ٱلسَّمَآءَ ٱلدُّنْيَا بِمَصَـٰبِيحَ وَحِفْظًا ۚ ذَٰلِكَ تَقْدِيرُ ٱلْعَزِيزِ ٱلْعَلِيمِ

Transliteration faqaḍāhunna sabʿa samāwātin fī yawmayni wa-awḥā fī kulli samāin amrahā wazayyannā l-samāa l-dun'yā bimaṣābīḥa waḥif'ẓan dhālika taqdīru l-ʿazīzi l-ʿalīmi

Kannada ಆಗ ಅವನು ಎರಡು ದಿನಗಳಲ್ಲಿ ಸಪ್ತಗಗನ ಗಳನ್ನು ರೂಪಿಸಿದನು. ಎಲ್ಲ ಆಕಾಶಗಳಲ್ಲೂ ಅದರ ಕಾರ್ಯವನ್ನು ಬೋಧಿಸಿದನು. ಭೂಮಿಗೆ ಹತ್ತಿರದ ಆಕಾಶವನ್ನು ನಾವು ದೀಪಗಳಿಂದ ಅಲಂಕರಿಸಿದೆವು ಮತ್ತು ಅದನ್ನು ಸಂರಕ್ಷಣೆಯನ್ನಾಗಿ ಮಾಡಿದೆವು. ಅಜೇಯನೂ, ಸರ್ವಜ್ಞನೂ ಆದ ಅಲ್ಲಾಹನ ನಿರ್ಣಯವಿದು.

Verse 13

فَإِنْ أَعْرَضُوا۟ فَقُلْ أَنذَرْتُكُمْ صَـٰعِقَةً مِّثْلَ صَـٰعِقَةِ عَادٍ وَثَمُودَ

Transliteration fa-in aʿraḍū faqul andhartukum ṣāʿiqatan mith'la ṣāʿiqati ʿādin wathamūda

Kannada ಇನ್ನು ಅವರು ವಿಮುಖರಾದರೆ ಹೇಳಿರಿ; ನಾನು ನಿಮ್ಮನ್ನು ಆದ್ ಮತ್ತು ಸಮೂದರಿಗೆ ಬಾಧಿಸಿದ ಉಗ್ರ ಶಿಕ್ಷೆಯಂಥ ಒಂದು ಶಿಕ್ಷೆಯ ಬಗ್ಗೆ ಎಚ್ಚರಿಸುತ್ತೇನೆ.

Verse 14

إِذْ جَآءَتْهُمُ ٱلرُّسُلُ مِنۢ بَيْنِ أَيْدِيهِمْ وَمِنْ خَلْفِهِمْ أَلَّا تَعْبُدُوٓا۟ إِلَّا ٱللَّهَ ۖ قَالُوا۟ لَوْ شَآءَ رَبُّنَا لَأَنزَلَ مَلَـٰٓئِكَةً فَإِنَّا بِمَآ أُرْسِلْتُم بِهِۦ كَـٰفِرُونَ

Transliteration idh jāathumu l-rusulu min bayni aydīhim wamin khalfihim allā taʿbudū illā l-laha qālū law shāa rabbunā la-anzala malāikatan fa-innā bimā ur'sil'tum bihi kāfirūna

Kannada ಪ್ರವಾದಿಗಳು ಅವರ ಸಮಕಾಲೀನರಾಗಿಯೂ ಅವರ ಪೂರ್ವಕಾಲದಲ್ಲೂ ಅವರ ಬಳಿ ಬಂದು, ‘ನೀವು ಅಲ್ಲಾಹನ ಹೊರತು ಇನ್ನಾರಿಗೂ ಆರಾಧಿಸಬೇಡಿರಿ’ ಎಂದು ಹೇಳಿದಾಗ ಅವರು, ‘ನಮ್ಮ ಪ್ರಭು ಇಚ್ಛಿಸುತ್ತಿದ್ದರೆ ದೇವಚರರನ್ನು ಕಳುಹಿಸುತ್ತಿದ್ದನು. ಆದುದರಿಂದ ನಿಮ್ಮನ್ನು ಯಾವ ಸಂದೇಶದೊಂದಿಗೆ ಕಳುಹಿಸಲಾಗಿ ದೆಯೋ ಅದನ್ನು ನಾವು ನಿರಾಕರಿಸುತ್ತೇವೆ’ ಎಂದರು.

Verse 15

فَأَمَّا عَادٌ فَٱسْتَكْبَرُوا۟ فِى ٱلْأَرْضِ بِغَيْرِ ٱلْحَقِّ وَقَالُوا۟ مَنْ أَشَدُّ مِنَّا قُوَّةً ۖ أَوَلَمْ يَرَوْا۟ أَنَّ ٱللَّهَ ٱلَّذِى خَلَقَهُمْ هُوَ أَشَدُّ مِنْهُمْ قُوَّةً ۖ وَكَانُوا۟ بِـَٔايَـٰتِنَا يَجْحَدُونَ

Transliteration fa-ammā ʿādun fa-is'takbarū fī l-arḍi bighayri l-ḥaqi waqālū man ashaddu minnā quwwatan awalam yaraw anna l-laha alladhī khalaqahum huwa ashaddu min'hum quwwatan wakānū biāyātinā yajḥadūna

Kannada ಆದ್ ಜನಾಂಗ ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಪಡುತ್ತಿದ್ದರು. ‘ಶಕ್ತಿಯಲ್ಲಿ ನಮ್ಮನ್ನು ಮೀರಿಸುವವರು ಯಾರಿದ್ದಾರೆ?’ ಎಂದರು. ಅವರನ್ನು ಸೃಷ್ಟಿಸಿದ ಅಲ್ಲಾಹನು ಅವರಿಗಿಂತ ಎಷ್ಟೋ ಅಧಿಕ ಶಕ್ತಿಶಾಲಿಯೆಂದು ಅವರಿಗೆ ಕಾಣ ಲಿಲ್ಲವೇ? ಅವರು ನಮ್ಮ ನಿದರ್ಶನಗಳನ್ನು ನಿರಾಕರಿಸುತ್ತಿದ್ದರು.

Verse 16

فَأَرْسَلْنَا عَلَيْهِمْ رِيحًا صَرْصَرًا فِىٓ أَيَّامٍ نَّحِسَاتٍ لِّنُذِيقَهُمْ عَذَابَ ٱلْخِزْىِ فِى ٱلْحَيَوٰةِ ٱلدُّنْيَا ۖ وَلَعَذَابُ ٱلْـَٔاخِرَةِ أَخْزَىٰ ۖ وَهُمْ لَا يُنصَرُونَ

Transliteration fa-arsalnā ʿalayhim rīḥan ṣarṣaran fī ayyāmin naḥisātin linudhīqahum ʿadhāba l-khiz'yi fī l-ḥayati l-dun'yā walaʿadhābu l-ākhirati akhzā wahum lā yunṣarūna

Kannada ಕೊನೆಗೆ ಕೆಲವು ಅಶುಭ ದಿನಗಳಲ್ಲಿ ಅವರ ಮೇಲೆ ಪ್ರಚಂಡ ಶೀತ ಗಾಳಿಯನ್ನು ನಾವು ಕಳುಹಿಸಿದೆವು. ಲೌಕಿಕ ಜೀವನದಲ್ಲೇ ಅವರಿಗೆ ನಾವು ಅಪಮಾನಕರ ಶಿಕ್ಷೆಯನ್ನು ಉಣಿಸಲಿಕ್ಕಾಗಿ. ಪರಲೋಕದ ಯಾತನೆಯು ಇದಕ್ಕಿಂತಲೂ ಹೆಚ್ಚು ಕಠಿಣಕರ. ಅಲ್ಲಿ ಅವರಿಗೆ ಯಾವ ಸಹಾಯವೂ ಸಿಗದು.

Verse 17

وَأَمَّا ثَمُودُ فَهَدَيْنَـٰهُمْ فَٱسْتَحَبُّوا۟ ٱلْعَمَىٰ عَلَى ٱلْهُدَىٰ فَأَخَذَتْهُمْ صَـٰعِقَةُ ٱلْعَذَابِ ٱلْهُونِ بِمَا كَانُوا۟ يَكْسِبُونَ

Transliteration wa-ammā thamūdu fahadaynāhum fa-is'taḥabbū l-ʿamā ʿalā l-hudā fa-akhadhathum ṣāʿiqatu l-ʿadhābi l-hūni bimā kānū yaksibūna

Kannada ಸಮೂದ್ ಗೋತ್ರಕ್ಕೆ ನಾವು ನೇರ ಮಾರ್ಗವನ್ನು ತೋರಿಸಿಕೊಟ್ಟೆವು. ಆದರೆ ಅವರು ಸನ್ಮಾರ್ಗಕ್ಕಿಂತ ಅಂಧತೆಯನ್ನು ಮೆಚ್ಚಿಕೊಂಡರು. ಕೊನೆಗೆ ಅವರ ದುಷ್ಕರ್ಮಗಳ ಫಲವಾಗಿ ಅವರಿಗೆ ಅಪಮಾನಕರವಾದ ಘೋರ ಶಿಕ್ಷೆಯೊಂದು ಬಾಧಿಸಿತು.

Verse 18

وَنَجَّيْنَا ٱلَّذِينَ ءَامَنُوا۟ وَكَانُوا۟ يَتَّقُونَ

Transliteration wanajjaynā alladhīna āmanū wakānū yattaqūna

Kannada ಸತ್ಯವಿಶ್ವಾಸವನ್ನು ಸ್ವೀಕರಿಸಿ ದೇವನಿಷ್ಟೆ ತೋರುತ್ತಿದ್ದವರನ್ನು ನಾವು ರಕ್ಷಿಸಿದೆವು.

Verse 19

وَيَوْمَ يُحْشَرُ أَعْدَآءُ ٱللَّهِ إِلَى ٱلنَّارِ فَهُمْ يُوزَعُونَ

Transliteration wayawma yuḥ'sharu aʿdāu l-lahi ilā l-nāri fahum yūzaʿūna

Kannada ಅಲ್ಲಾಹನ ಶತ್ರುಗಳನ್ನು ನರಕಾಗ್ನಿಯ ಕಡೆಗೆ ಒಟ್ಟುಗೂಡಿಸುವ ಮತ್ತು ಅಟ್ಟಿಸಿಕೊಂಡು ಹೋಗುವ ದಿನದ ಬಗ್ಗೆ ಯೋಚಿಸಿರಿ .

Verse 20

حَتَّىٰٓ إِذَا مَا جَآءُوهَا شَهِدَ عَلَيْهِمْ سَمْعُهُمْ وَأَبْصَـٰرُهُمْ وَجُلُودُهُم بِمَا كَانُوا۟ يَعْمَلُونَ

Transliteration ḥattā idhā mā jāūhā shahida ʿalayhim samʿuhum wa-abṣāruhum wajulūduhum bimā kānū yaʿmalūna

Kannada ಅವರೆಲ್ಲರೂ ಅಲ್ಲಿಗೆ ತಲಪಿದಾಗ ಅವರ ಕಿವಿಗಳೂ ಕಣ್ಣುಗಳೂ ಅವರ ಚರ್ಮಗಳೂ ಅವರು ಮಾಡುತ್ತಿದ್ದುದರ ಕುರಿತು ಅವರ ವಿರುದ್ಧ ಸಾಕ್ಷಿ ಹೇಳುವುವು.

Verse 21

وَقَالُوا۟ لِجُلُودِهِمْ لِمَ شَهِدتُّمْ عَلَيْنَا ۖ قَالُوٓا۟ أَنطَقَنَا ٱللَّهُ ٱلَّذِىٓ أَنطَقَ كُلَّ شَىْءٍ وَهُوَ خَلَقَكُمْ أَوَّلَ مَرَّةٍ وَإِلَيْهِ تُرْجَعُونَ

Transliteration waqālū lijulūdihim lima shahidttum ʿalaynā qālū anṭaqanā l-lahu alladhī anṭaqa kulla shayin wahuwa khalaqakum awwala marratin wa-ilayhi tur'jaʿūna

Kannada ಅವರು ತಮ್ಮ ಚರ್ಮಗಳೊಡನೆ ಹೀಗೆ ಕೇಳು ವರು,-‘ನೀವು ನಮ್ಮ ವಿರುದ್ಧ ಸಾಕ್ಷಿ ಹೇಳಿದ್ದೇಕೆ?’ ಆಗ ಅವು `ಸಕಲ ವಸ್ತುವಿಗೂ ಮಾತನಾಡುವ ಶಕ್ತಿಯನ್ನು ದಯಪಾಲಿಸಿದ ಅಲ್ಲಾಹನೇ ನಮಗೂ ಮಾತಾಡುವ ಶಕ್ತಿಯನ್ನು ನೀಡಿರುವನು. ಅವನೇ ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದ್ದನು. ಅವನ ಕಡೆಗೇ ನಿಮ್ಮನ್ನು ಮರಳಿಸಲಾಗುವುದು.

Verse 22

وَمَا كُنتُمْ تَسْتَتِرُونَ أَن يَشْهَدَ عَلَيْكُمْ سَمْعُكُمْ وَلَآ أَبْصَـٰرُكُمْ وَلَا جُلُودُكُمْ وَلَـٰكِن ظَنَنتُمْ أَنَّ ٱللَّهَ لَا يَعْلَمُ كَثِيرًا مِّمَّا تَعْمَلُونَ

Transliteration wamā kuntum tastatirūna an yashhada ʿalaykum samʿukum walā abṣārukum walā julūdukum walākin ẓanantum anna l-laha lā yaʿlamu kathīran mimmā taʿmalūna

Kannada ನಿಮ್ಮ ಕಿವಿಗಳು, ಕಣ್ಣುಗಳು ಮತ್ತು ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಲಿರುವುದನ್ನು ತಪ್ಪಿಸಿ ನೀವೇನೂ (ಪಾಪಕೃತ್ಯದಿಂದ) ದೂರವಾಗಿರಲಿಲ್ಲ . ಅಲ್ಲದೆ ನೀವು ನಿಮ್ಮ ಮಿಕ್ಕ ಕರ್ಮಗಳ ಬಗ್ಗೆ ಅಲ್ಲಾಹು ಅರಿತಿಲ್ಲ ಎಂದು ಭಾವಿಸಿಕೊಂಡಿದ್ದೀರಿ.

Verse 23

وَذَٰلِكُمْ ظَنُّكُمُ ٱلَّذِى ظَنَنتُم بِرَبِّكُمْ أَرْدَىٰكُمْ فَأَصْبَحْتُم مِّنَ ٱلْخَـٰسِرِينَ

Transliteration wadhālikum ẓannukumu alladhī ẓanantum birabbikum ardākum fa-aṣbaḥtum mina l-khāsirīna

Kannada ನಿಮ್ಮ ಪ್ರಭುವಿನ ಬಗೆಗೆ ನೀವಿರಿಸಿಕೊಂಡಿದ್ದ ಭಾವನೆಯಿದು. ಇದೇ ನಿಮ್ಮನ್ನು ಕೆಡಿಸಿತು. ಇದರಿಂದ ನೀವು ಪರಾಜಿತರ ಕೂಟಕ್ಕೆ ಸೇರಿದಿರಿ’.

Verse 24

فَإِن يَصْبِرُوا۟ فَٱلنَّارُ مَثْوًى لَّهُمْ ۖ وَإِن يَسْتَعْتِبُوا۟ فَمَا هُم مِّنَ ٱلْمُعْتَبِينَ

Transliteration fa-in yaṣbirū fal-nāru mathwan lahum wa-in yastaʿtibū famā hum mina l-muʿ'tabīna

Kannada ಇನ್ನು ಅವರು ತಾಳ್ಮೆವಹಿಸಿದರೂ ನರಕಾಗ್ನಿಯೇ ಅವರ ವಾಸಸ್ಥಳ. ಅವರು ತೃಪ್ತಿಯನ್ನು ಬಯಸಿದರೂ ಅವರಿಗೆ ತೃಪ್ತಿ ದೊರೆಯಲಾರದು.

Verse 25

۞ وَقَيَّضْنَا لَهُمْ قُرَنَآءَ فَزَيَّنُوا۟ لَهُم مَّا بَيْنَ أَيْدِيهِمْ وَمَا خَلْفَهُمْ وَحَقَّ عَلَيْهِمُ ٱلْقَوْلُ فِىٓ أُمَمٍ قَدْ خَلَتْ مِن قَبْلِهِم مِّنَ ٱلْجِنِّ وَٱلْإِنسِ ۖ إِنَّهُمْ كَانُوا۟ خَـٰسِرِينَ

Transliteration waqayyaḍnā lahum quranāa fazayyanū lahum mā bayna aydīhim wamā khalfahum waḥaqqa ʿalayhimu l-qawlu fī umamin qad khalat min qablihim mina l-jini wal-insi innahum kānū khāsirīna

Kannada ಅವರಿಗೆ ನಾವು ಕೆಲವು ಸಂಗಾತಿಗಳನ್ನು ನಿಶ್ಚಯಿಸಿದೆವು. ಆ ಸಂಗಡಿಗರು ಅವರ ಮುಂದೆ ಮತ್ತು ಹಿಂದೆ ಇರುವ ವಿಷಯಗಳನ್ನು ಅವರಿಗೆ ಮೋಡಿ ಮಾಡಿ ತೋರಿಸಿದರು. ಅವರಿಗೆ ಮುಂಚೆ ವಿನಾಶಕ್ಕೊಳಗಾದ ಜಿನ್ನ್ ಮತ್ತು ಮನುಷ್ಯ ಸಮುದಾಯಗಳ ಗುಂಪಿನಲ್ಲಿ ನಮ್ಮ ಶಿಕ್ಷೆಯ ತೀರ್ಮಾನ ಇವರಿಗೂ ನಿಜಗೊಂಡಿತು. ಅವರು ನಷ್ಟ ಹೊಂದಿದವರಾಗಿದ್ದರು.

Verse 26

وَقَالَ ٱلَّذِينَ كَفَرُوا۟ لَا تَسْمَعُوا۟ لِهَـٰذَا ٱلْقُرْءَانِ وَٱلْغَوْا۟ فِيهِ لَعَلَّكُمْ تَغْلِبُونَ

Transliteration waqāla alladhīna kafarū lā tasmaʿū lihādhā l-qur'āni wal-ghaw fīhi laʿallakum taghlibūna

Kannada ‘ಈ ಖುರ್‍ಆನನ್ನು ಆಲಿಸಬೇಡಿರಿ. ಇದನ್ನು ಕೇಳಿಸಲಾದರೆ ನೀವು ಗುಲ್ಲೆಬ್ಬಿಸಿರಿ. ನೀವು ಗೆಲ್ಲುವಿರಂತೆ’ ಎಂದರು ಸತ್ಯನಿಷೇಧಿಗಳು.

Verse 27

فَلَنُذِيقَنَّ ٱلَّذِينَ كَفَرُوا۟ عَذَابًا شَدِيدًا وَلَنَجْزِيَنَّهُمْ أَسْوَأَ ٱلَّذِى كَانُوا۟ يَعْمَلُونَ

Transliteration falanudhīqanna alladhīna kafarū ʿadhāban shadīdan walanajziyannahum aswa-a alladhī kānū yaʿmalūna

Kannada ಆದರೆ ನಾವು ಸತ್ಯನಿಷೇಧಿಗಳಿಗೆ ಘೋರ ಶಿಕ್ಷೆಯನ್ನು ಉಣಿಸಲಿದ್ದೇವೆ. ಇವರು ಮಾಡುತ್ತಿದ್ದ ಈ ದುಷ್ಕರ್ಮಗಳ ಪ್ರತಿಫಲವನ್ನು ಅತ್ಯಂತ ಅಮಾನುಷ ರೀತಿಯಲ್ಲಿ ನೀಡಲಿದ್ದೇವೆ.

Verse 28

ذَٰلِكَ جَزَآءُ أَعْدَآءِ ٱللَّهِ ٱلنَّارُ ۖ لَهُمْ فِيهَا دَارُ ٱلْخُلْدِ ۖ جَزَآءًۢ بِمَا كَانُوا۟ بِـَٔايَـٰتِنَا يَجْحَدُونَ

Transliteration dhālika jazāu aʿdāi l-lahi l-nāru lahum fīhā dāru l-khul'di jazāan bimā kānū biāyātinā yajḥadūna

Kannada ಅಲ್ಲಾಹನ ಶತ್ರುಗಳಿಗೆ ಪ್ರತಿಫಲವಾಗಿ ಸಿಗಲಿರುವ ಕಠಿಣ ಸಜೆಯ ನರಕವದು. ಇವರ ಶಾಶ್ವತ ನೆಲೆಯು ಅದರಲ್ಲೇ ಇರುವುದು. ಅವರು ನಮ್ಮ ನಿದರ್ಶನಗಳನ್ನು ತಿರಸ್ಕರಿಸುತ್ತಿದ್ದ ಅಪರಾಧಕ್ಕೆ ಶಿಕ್ಷೆಯಿದು.

Verse 29

وَقَالَ ٱلَّذِينَ كَفَرُوا۟ رَبَّنَآ أَرِنَا ٱلَّذَيْنِ أَضَلَّانَا مِنَ ٱلْجِنِّ وَٱلْإِنسِ نَجْعَلْهُمَا تَحْتَ أَقْدَامِنَا لِيَكُونَا مِنَ ٱلْأَسْفَلِينَ

Transliteration waqāla alladhīna kafarū rabbanā arinā alladhayni aḍallānā mina l-jini wal-insi najʿalhumā taḥta aqdāminā liyakūnā mina l-asfalīna

Kannada ಸತ್ಯನಿಷೇಧಿಗಳು ಹೇಳುವರು, ‘ನಮ್ಮ ಪ್ರಭೂ, ಜಿನ್ನ್ ಮತ್ತು ಮಾನವರ ಪೈಕಿ ನಮ್ಮನ್ನು ದಾರಿ ತಪ್ಪಿಸಿದ ಎರಡು ವಿಭಾಗವನ್ನು ನಮಗೊಮ್ಮೆ ತೋರಿಸಿಕೊಡು. ಅವರು ತೀವ್ರ ಅಪಮಾನಿತರಾಗುವಂತೆ ನಮ್ಮ ಕಾಲಡಿಗೆ ಹಾಕಿ ನಾವು ಅವರನ್ನು ತುಳಿದು ಬಿಡುತ್ತೇವೆ’.

Verse 30

إِنَّ ٱلَّذِينَ قَالُوا۟ رَبُّنَا ٱللَّهُ ثُمَّ ٱسْتَقَـٰمُوا۟ تَتَنَزَّلُ عَلَيْهِمُ ٱلْمَلَـٰٓئِكَةُ أَلَّا تَخَافُوا۟ وَلَا تَحْزَنُوا۟ وَأَبْشِرُوا۟ بِٱلْجَنَّةِ ٱلَّتِى كُنتُمْ تُوعَدُونَ

Transliteration inna alladhīna qālū rabbunā l-lahu thumma is'taqāmū tatanazzalu ʿalayhimu l-malāikatu allā takhāfū walā taḥzanū wa-abshirū bil-janati allatī kuntum tūʿadūna

Kannada ‘ನಮ್ಮ ಪ್ರಭು ಅಲ್ಲಾಹನು’ ಎಂದು ಸಾರಿ ಆ ಬಳಿಕ ಕರ್ತವ್ಯ ಬದ್ಧರಾದವರ ಬಳಿಗೆ ದೇವಚರರು ಇಳಿದು ಬಂದು ಹೇಳುತ್ತಾರೆ. “ಹೆದರಬೇಡಿರಿ, ದುಃಖಿಸಬೇಡಿರಿ. ನಿಮಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಸುವಾರ್ತೆಯಿಂದ ಸಂತಸಗೊಳ್ಳಿರಿ.

Verse 31

نَحْنُ أَوْلِيَآؤُكُمْ فِى ٱلْحَيَوٰةِ ٱلدُّنْيَا وَفِى ٱلْـَٔاخِرَةِ ۖ وَلَكُمْ فِيهَا مَا تَشْتَهِىٓ أَنفُسُكُمْ وَلَكُمْ فِيهَا مَا تَدَّعُونَ

Transliteration naḥnu awliyāukum fī l-ḥayati l-dun'yā wafī l-ākhirati walakum fīhā mā tashtahī anfusukum walakum fīhā mā taddaʿūna

Kannada ನಾವು ಇಹ ಜೀವನದಲ್ಲೂ, ಪರಲೋಕದಲ್ಲೂ ನಿಮ್ಮ ಸಹಾಯಕರಾಗಿದ್ದೇವೆ. ಅಲ್ಲಿ ನಿಮ್ಮ ಮನಸ್ಸು ಬಯಸಿದ್ದೆಲ್ಲವೂ ನಿಮಗೆ ಸಿಗುವುದು. ನೀವು ಕೇಳುವ ಪ್ರತಿಯೊಂದು ವಸ್ತುವೂ ನಿಮಗಲ್ಲಿ ಸಿಗುವುದು.

Verse 32

نُزُلًا مِّنْ غَفُورٍ رَّحِيمٍ

Transliteration nuzulan min ghafūrin raḥīmin

Kannada ಪರಮ ಕ್ಷಮಾಶೀಲನೂ, ಕರುಣಾವಾರಿಧಿಯೂ ಆದ ಅಲ್ಲಾಹನ ಕಡೆಯಿಂದ ನಿಮಗಿರುವ ಆತಿಥ್ಯವಿದು”.

Verse 33

وَمَنْ أَحْسَنُ قَوْلًا مِّمَّن دَعَآ إِلَى ٱللَّهِ وَعَمِلَ صَـٰلِحًا وَقَالَ إِنَّنِى مِنَ ٱلْمُسْلِمِينَ

Transliteration waman aḥsanu qawlan mimman daʿā ilā l-lahi waʿamila ṣāliḥan waqāla innanī mina l-mus'limīna

Kannada ಅಲ್ಲಾಹನ ಕಡೆಗೆ ಅಹ್ವಾನಿಸಿ, ಸತ್ಕರ್ಮವೆಸಗಿ ಮತ್ತು ‘ಖಂಡಿತ ನಾನೊಬ್ಬ ಮುಸ್ಲಿಮ್’ ಎಂದು ಹೇಳುವ ವ್ಯಕ್ತಿಗಿಂತ ಶ್ರೇಷ್ಠ ಮಾತನ್ನು ಹೇಳಿದವನು ಬೇರೆ ಯಾರಿದ್ದಾನೆ?

Verse 34

وَلَا تَسْتَوِى ٱلْحَسَنَةُ وَلَا ٱلسَّيِّئَةُ ۚ ٱدْفَعْ بِٱلَّتِى هِىَ أَحْسَنُ فَإِذَا ٱلَّذِى بَيْنَكَ وَبَيْنَهُۥ عَدَٰوَةٌ كَأَنَّهُۥ وَلِىٌّ حَمِيمٌ

Transliteration walā tastawī l-ḥasanatu walā l-sayi-atu id'faʿ bi-allatī hiya aḥsanu fa-idhā alladhī baynaka wabaynahu ʿadāwatun ka-annahu waliyyun ḥamīmun

Kannada ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀನು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ತಟ್ಟಿ ಹಾಕು. ಹಾಗಾದಾಗ ನಿನ್ನೊಂದಿಗೆ ಹಗೆತನ ಕಟ್ಟಿಕೊಂಡವನು ನಿನ್ನ ಆಪ್ತಮಿತ್ರನಾಗಿ ಮಾರ್ಪಡುವನು.

Verse 35

وَمَا يُلَقَّىٰهَآ إِلَّا ٱلَّذِينَ صَبَرُوا۟ وَمَا يُلَقَّىٰهَآ إِلَّا ذُو حَظٍّ عَظِيمٍ

Transliteration wamā yulaqqāhā illā alladhīna ṣabarū wamā yulaqqāhā illā dhū ḥaẓẓin ʿaẓīmin

Kannada ಸಹನಶೀಲರಿಗಲ್ಲದೆ ಅದು ಲಭಿಸದು. ಮಹಾ ಭಾಗ್ಯಶಾಲಿಗಳ ಹೊರತು ಇನ್ನಾರಿಗೂ ಅದು ಒಲಿಯದು.

Verse 36

وَإِمَّا يَنزَغَنَّكَ مِنَ ٱلشَّيْطَـٰنِ نَزْغٌ فَٱسْتَعِذْ بِٱللَّهِ ۖ إِنَّهُۥ هُوَ ٱلسَّمِيعُ ٱلْعَلِيمُ

Transliteration wa-immā yanzaghannaka mina l-shayṭāni nazghun fa-is'taʿidh bil-lahi innahu huwa l-samīʿu l-ʿalīmu

Kannada ಶೈತಾನನ ಕಡೆಯಿಂದೇನಾದರೂ ದುಷ್ಟ ಪ್ರೇರಣೆ ನಿಮ್ಮನ್ನು ದಾರಿ ತಪ್ಪಿಸಿದರೆ ನೀವು ಅಲ್ಲಾ ಹನ ಅಭಯವನ್ನು ಯಾಚಿಸಿರಿ. ಅವನು ಸರ್ವಶ್ರುತನೂ, ಸರ್ವಜ್ಞನೂ ಆಗಿರುವನು.

Verse 37

وَمِنْ ءَايَـٰتِهِ ٱلَّيْلُ وَٱلنَّهَارُ وَٱلشَّمْسُ وَٱلْقَمَرُ ۚ لَا تَسْجُدُوا۟ لِلشَّمْسِ وَلَا لِلْقَمَرِ وَٱسْجُدُوا۟ لِلَّهِ ٱلَّذِى خَلَقَهُنَّ إِن كُنتُمْ إِيَّاهُ تَعْبُدُونَ

Transliteration wamin āyātihi al-laylu wal-nahāru wal-shamsu wal-qamaru lā tasjudū lilshamsi walā lil'qamari wa-us'judū lillahi alladhī khalaqahunna in kuntum iyyāhu taʿbudūna

Kannada ರಾತ್ರಿ ಹಗಲೂ ಸೂರ್ಯಚಂದ್ರರೂ ಅಲ್ಲಾಹನ ನಿದರ್ಶನಗಳಲ್ಲಿ ಸೇರಿವೆ. ಸೂರ್ಯನಿಗಾಗಲಿ, ಚಂದ್ರನಿಗಾಗಲೀ ಸಾಷ್ಟಾಂಗವೆರಗಬೇಡಿರಿ. ಪರಂತು ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೇ ಸಾಷ್ಟಾಂಗವೆರಗಿರಿ. ನೀವು ನಿಜಕ್ಕೂ ಅವನನ್ನೇ ಆರಾಧಿಸುವವರಾಗಿದ್ದರೆ !

Verse 38

فَإِنِ ٱسْتَكْبَرُوا۟ فَٱلَّذِينَ عِندَ رَبِّكَ يُسَبِّحُونَ لَهُۥ بِٱلَّيْلِ وَٱلنَّهَارِ وَهُمْ لَا يَسْـَٔمُونَ ۩

Transliteration fa-ini is'takbarū fa-alladhīna ʿinda rabbika yusabbiḥūna lahu bi-al-layli wal-nahāri wahum lā yasamūna

Kannada ಇನ್ನು ಇವರು ಅಹಂಕರಿಸುವುದಾದರೆ ನಿಮ್ಮ ಪ್ರಭುವಿನ ಬಳಿ ಇರುವವರು (ದೇವಚರರು) ಆಹೋರಾತ್ರಿ ಅವನನ್ನು ಸ್ತುತಿಸುವರು. ಅವರೆಂದಿಗೂ ಬಳಲುವುದಿಲ್ಲ.

Verse 39

وَمِنْ ءَايَـٰتِهِۦٓ أَنَّكَ تَرَى ٱلْأَرْضَ خَـٰشِعَةً فَإِذَآ أَنزَلْنَا عَلَيْهَا ٱلْمَآءَ ٱهْتَزَّتْ وَرَبَتْ ۚ إِنَّ ٱلَّذِىٓ أَحْيَاهَا لَمُحْىِ ٱلْمَوْتَىٰٓ ۚ إِنَّهُۥ عَلَىٰ كُلِّ شَىْءٍ قَدِيرٌ

Transliteration wamin āyātihi annaka tarā l-arḍa khāshiʿatan fa-idhā anzalnā ʿalayhā l-māa ih'tazzat warabat inna alladhī aḥyāhā lamuḥ'yī l-mawtā innahu ʿalā kulli shayin qadīrun

Kannada ಇದು ಅಲ್ಲಾಹನ ನಿದರ್ಶನಗಳಲ್ಲೊಂದು, ಭೂಮಿಯು ಒಣಗಿ ಬಿದ್ದಿರುವುದನ್ನು ನೀವು ಕಾಣುತ್ತೀರಿ, ಆ ಬಳಿಕ ನಾವು ಅದರ ಮೇಲೆ ನೀರನ್ನು ಸುರಿದರೆ, ತಕ್ಷಣ ಅದು ಅರಳುತ್ತದೆ ಹಾಗೂ ಬೆಳೆಯುತ್ತದೆ. ಖಂಡಿತವಾಗಿಯೂ ಭೂಮಿಯನ್ನು ಹೀಗೆ ಜೀವಂತಗೊಳಿಸುವವನೇ ಮೃತರ ಪುನರುಜ್ಜೀವಕನು. ನಿಶ್ಚಯವಾಗಿಯೂ ಅವನು ಎಲ್ಲ ವಸ್ತುಗಳ ಮೇಲೆ ಸಾಮಥ್ರ್ಯವುಳ್ಳವನು.

Verse 40

إِنَّ ٱلَّذِينَ يُلْحِدُونَ فِىٓ ءَايَـٰتِنَا لَا يَخْفَوْنَ عَلَيْنَآ ۗ أَفَمَن يُلْقَىٰ فِى ٱلنَّارِ خَيْرٌ أَم مَّن يَأْتِىٓ ءَامِنًا يَوْمَ ٱلْقِيَـٰمَةِ ۚ ٱعْمَلُوا۟ مَا شِئْتُمْ ۖ إِنَّهُۥ بِمَا تَعْمَلُونَ بَصِيرٌ

Transliteration inna alladhīna yul'ḥidūna fī āyātinā lā yakhfawna ʿalaynā afaman yul'qā fī l-nāri khayrun am man yatī āminan yawma l-qiyāmati iʿ'malū mā shi'tum innahu bimā taʿmalūna baṣīrun

Kannada ನಮ್ಮ ದೃಷ್ಟಾಂತಗಳ ವಿರುದ್ಧ ಅಪಾರ್ಥ ಕಟ್ಟು ವವರು ನಮ್ಮ ದೃಷ್ಟಿಯಿಂದ ಮರೆಯಾಗಿಲ್ಲ. ನರ ಕಾಗ್ನಿಗೆ ಎಸೆಯಲ್ಪಡುವವನು ಉತ್ತಮನೋ ಅಥವಾ ಪುನರುತ್ಥಾನ ದಿನ ನಿರ್ಬಿಡೆಯಿಂದ ಹಾಜರಾಗುವವನು ಉತ್ತಮನೋ? ನೀವಿಚ್ಛಿಸು ವುದನ್ನು ಮಾಡಿರಿ. ನಿಮ್ಮ ಎಲ್ಲ ಕರ್ಮಗಳನ್ನು ಅಲ್ಲಾಹು ವೀಕ್ಷಿಸುತ್ತಿದ್ದಾನೆ.

Verse 41

إِنَّ ٱلَّذِينَ كَفَرُوا۟ بِٱلذِّكْرِ لَمَّا جَآءَهُمْ ۖ وَإِنَّهُۥ لَكِتَـٰبٌ عَزِيزٌ

Transliteration inna alladhīna kafarū bil-dhik'ri lammā jāahum wa-innahu lakitābun ʿazīzun

Kannada ಬೋಧನೆಯು ತಮ್ಮ ಮುಂದೆ ಬಂದಾಗ ಅದನ್ನು ನಿಷೇಧಿಸಿದವರು ಇವರು. ಇದೊಂದು ಪ್ರತಾಪವುಳ್ಳ ಗ್ರಂಥವೇ ಸರಿ.

Verse 42

لَّا يَأْتِيهِ ٱلْبَـٰطِلُ مِنۢ بَيْنِ يَدَيْهِ وَلَا مِنْ خَلْفِهِۦ ۖ تَنزِيلٌ مِّنْ حَكِيمٍ حَمِيدٍ

Transliteration lā yatīhi l-bāṭilu min bayni yadayhi walā min khalfihi tanzīlun min ḥakīmin ḥamīdin

Kannada ಇದರ ಮುಂದಿನಿಂದಾಗಲಿ ಹಿಂದಿನಿಂದಾಗಲಿ ಮಿಥ್ಯ ನುಸುಳದು. ಇದು ಯುಕ್ತಿಪೂರ್ಣನೂ ಸ್ತುತ್ಯರ್ಹನೂ ಆದ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥ.

Verse 43

مَّا يُقَالُ لَكَ إِلَّا مَا قَدْ قِيلَ لِلرُّسُلِ مِن قَبْلِكَ ۚ إِنَّ رَبَّكَ لَذُو مَغْفِرَةٍ وَذُو عِقَابٍ أَلِيمٍ

Transliteration mā yuqālu laka illā mā qad qīla lilrrusuli min qablika inna rabbaka ladhū maghfiratin wadhū ʿiqābin alīmin

Kannada (ಸಂದೇಶವಾಹಕರೇ,) ನಿಮಗಿಂತ ಮುಂಚೆ ಗತಿ ಸಿದ ಸಂದೇಶವಾಹಕರಿಗೆ ಹೇಳದ ವಿಷಯವ ನ್ನೇನೂ ನಿಮಗೆ ಹೇಳಲಾಗುತ್ತಿಲ್ಲ. ನಿಸ್ಸಂದೇಹ ವಾಗಿಯೂ ನಿಮ್ಮ ಪ್ರಭು ಮಹಾ ಕ್ಷಮಾಶೀಲ ನೂ, ವೇದನಾಜನಕ ಶಿಕ್ಷೆಕೊಡುವವನೂ ಆಗಿ ದ್ದಾನೆ.

Verse 44

وَلَوْ جَعَلْنَـٰهُ قُرْءَانًا أَعْجَمِيًّا لَّقَالُوا۟ لَوْلَا فُصِّلَتْ ءَايَـٰتُهُۥٓ ۖ ءَا۬عْجَمِىٌّ وَعَرَبِىٌّ ۗ قُلْ هُوَ لِلَّذِينَ ءَامَنُوا۟ هُدًى وَشِفَآءٌ ۖ وَٱلَّذِينَ لَا يُؤْمِنُونَ فِىٓ ءَاذَانِهِمْ وَقْرٌ وَهُوَ عَلَيْهِمْ عَمًى ۚ أُو۟لَـٰٓئِكَ يُنَادَوْنَ مِن مَّكَانٍۭ بَعِيدٍ

Transliteration walaw jaʿalnāhu qur'ānan aʿjamiyyan laqālū lawlā fuṣṣilat āyātuhu āʿ'jamiyyun waʿarabiyyun qul huwa lilladhīna āmanū hudan washifāon wa-alladhīna lā yu'minūna fī ādhānihim waqrun wahuwa ʿalayhim ʿaman ulāika yunādawna min makānin baʿīdin

Kannada ನಾವು ಇದನ್ನು ಅನರಬಿ ಖುರ್‍ಆನನ್ನಾಗಿ ಮಾಡಿ ಕಳುಹಿಸುತ್ತಿದ್ದರೆ ಇವರು ಹೀಗೆ ಹೇಳುತ್ತಿದ್ದರು: “ಇದರ ಸೂಕ್ತಗಳನ್ನು ಸುಸ್ಪಷ್ಟವಾಗಿ ವಿವರಿ ಸಲಾಗಿಲ್ಲವೇಕೆ? ಗ್ರಂಥ ಅನರಬಿಯೂ ದೂತರು ಅರಬರೂ ಆಗಿದ್ದೇಕೆ? ಹೇಳಿರಿ, ಸತ್ಯವಿಶ್ವಾಸ ಸ್ವೀಕರಿಸುವವರ ಪಾಲಿಗೆ ಅದು (ಖುರ್‍ಆನ್) ಮಾರ್ಗದರ್ಶನವೂ ದಿವ್ಯಔಷಧವೂ ಆಗಿದೆ. ಆದರೆ ಸತ್ಯನಿಷೇಧಿಗಳ ಕಿವಿಗಳಲ್ಲಿ ಗಂಟು ಬಿದ್ದಿದೆ. ಅದು ಅವರ ಮೇಲೆ ಕುರುಡಾಗಿದೆ. ಅವರ ಅವಸ್ಥೆಯು ಅವರನ್ನು ದೂರದಿಂದ ಕರೆಯಲಾಗುತ್ತಿದೆಯೋ ಎಂಬಂತಿದೆ.

Verse 45

وَلَقَدْ ءَاتَيْنَا مُوسَى ٱلْكِتَـٰبَ فَٱخْتُلِفَ فِيهِ ۗ وَلَوْلَا كَلِمَةٌ سَبَقَتْ مِن رَّبِّكَ لَقُضِىَ بَيْنَهُمْ ۚ وَإِنَّهُمْ لَفِى شَكٍّ مِّنْهُ مُرِيبٍ

Transliteration walaqad ātaynā mūsā l-kitāba fa-ukh'tulifa fīhi walawlā kalimatun sabaqat min rabbika laquḍiya baynahum wa-innahum lafī shakkin min'hu murībin

Kannada ನಾವು ಮೂಸಾರಿಗೆ ವೇದಗ್ರಂಥ ನೀಡಿದ್ದೆವು. ಆಮೇಲೆ ಅದರಲ್ಲಿ ಭಿನ್ನಮತ ತಲೆದೋರಿತು. ನಿಮ್ಮ ಪ್ರಭುವಿನ ಕಡೆಯಿಂದ ವಚನವು ಪೂರ್ವ ನಿರ್ಧರಿತವಾಗದೆ ಇರುತ್ತಿದ್ದರೆ ಅವರ ನಡುವೆ (ಈಗಲೇ) ತೀರ್ಮಾನ ಮಾಡಲಾಗುತ್ತಿತ್ತು. ನಿಜಕ್ಕೂ ಇವರು ಅದರ ಕುರಿತು ತೀವ್ರ ಸಂಶ ಯಕ್ಕೆ ಈಡಾಗಿದ್ದಾರೆ.

Verse 46

مَّنْ عَمِلَ صَـٰلِحًا فَلِنَفْسِهِۦ ۖ وَمَنْ أَسَآءَ فَعَلَيْهَا ۗ وَمَا رَبُّكَ بِظَلَّـٰمٍ لِّلْعَبِيدِ

Transliteration man ʿamila ṣāliḥan falinafsihi waman asāa faʿalayhā wamā rabbuka biẓallāmin lil'ʿabīdi

Kannada ಯಾವನು ಪುಣ್ಯಕಾರ್ಯಗಳನ್ನು ಮಾಡುತ್ತಾನೋ, ಅವನು ತನ್ನ ಹಿತಕ್ಕಾಗಿಯೇ ಮಾಡುತ್ತಾನೆ. ಯಾವನು ಪಾಪ ಮಾಡುತ್ತಾನೋ ಅದು ಅವನ ಮೇಲೆಯೇ ಇರುವುದು. ನಿಮ್ಮ ಪ್ರಭು ತನ್ನ ದಾಸರ ಪಾಲಿಗೆ ಅಕ್ರಮಿಯಲ್ಲ.

Verse 47

۞ إِلَيْهِ يُرَدُّ عِلْمُ ٱلسَّاعَةِ ۚ وَمَا تَخْرُجُ مِن ثَمَرَٰتٍ مِّنْ أَكْمَامِهَا وَمَا تَحْمِلُ مِنْ أُنثَىٰ وَلَا تَضَعُ إِلَّا بِعِلْمِهِۦ ۚ وَيَوْمَ يُنَادِيهِمْ أَيْنَ شُرَكَآءِى قَالُوٓا۟ ءَاذَنَّـٰكَ مَا مِنَّا مِن شَهِيدٍ

Transliteration ilayhi yuraddu ʿil'mu l-sāʿati wamā takhruju min thamarātin min akmāmihā wamā taḥmilu min unthā walā taḍaʿu illā biʿil'mihi wayawma yunādīhim ayna shurakāī qālū ādhannāka mā minnā min shahīdin

Kannada ಅಂತ್ಯ ಘಳಿಗೆಯ ಜ್ಞಾನವು ಅಲ್ಲಾಹನ ಕಡೆಗೇ ಮರಳುತ್ತದೆ. ಅವನ ಅರಿವಿಲ್ಲದೆ ಹಣ್ಣು ತಮ್ಮ ಮೊಗ್ಗುಗಳಿಂದ ಹೊರಬರುವುದಾಗಲಿ, ಯಾವಳೇ ಹೆಣ್ಣು ಗರ್ಭಧರಿಸುವುದಾಗಲಿ, ಹೆರುವುದಾಗಲಿ ಮಾಡುತ್ತಿಲ್ಲ. ‘ನನ್ನ ಸಹಭಾಗಿಗಳು ಎಲ್ಲಿದ್ದಾರೆ?’ ಎಂದು ಅವನು ಇವರನ್ನು ಕಡಿದು ಕೇಳುವ ದಿನ ಇವರು, `ಅದಕ್ಕೆ ಸಾಕ್ಷಿಯಾಗಿ ನಮ್ಮಲ್ಲಾರೂ ಇಲ್ಲ’ ಎಂದು ನಿನಗೆ ತಿಳಿಸುತ್ತಿದ್ದೇವೆ ಎನ್ನುವರು.

Verse 48

وَضَلَّ عَنْهُم مَّا كَانُوا۟ يَدْعُونَ مِن قَبْلُ ۖ وَظَنُّوا۟ مَا لَهُم مِّن مَّحِيصٍ

Transliteration waḍalla ʿanhum mā kānū yadʿūna min qablu waẓannū mā lahum min maḥīṣin

Kannada ಆಗ ಈ ಹಿಂದೆ ಇವರು ಆರಾಧಿಸುತ್ತಿದ್ದ ಎಲ್ಲ ಆರಾಧ್ಯರೂ ಇವರಿಂದ ತಪ್ಪಿ ಹೋಗುವರು. ತಮಗೆ ಯಾವುದೇ ಅಭಯ ಸ್ಥಾನ ಇಲ್ಲವೆಂದು ಅವರಿಗೆ ಮನದಟ್ಟಾಗುವುದು.

Verse 49

لَّا يَسْـَٔمُ ٱلْإِنسَـٰنُ مِن دُعَآءِ ٱلْخَيْرِ وَإِن مَّسَّهُ ٱلشَّرُّ فَيَـُٔوسٌ قَنُوطٌ

Transliteration lā yasamu l-insānu min duʿāi l-khayri wa-in massahu l-sharu fayaūsun qanūṭun

Kannada ಮಾನವನು ಒಳಿತಿಗಾಗಿ ಪ್ರಾರ್ಥಿಸಿ ದಣಿ ಯುವುದಿಲ್ಲ. ತನಗೇನಾದರೂ ವಿಪತ್ತು ಬಾಧಿಸಿದರೆ, ಆಗ ಅವನು ನಿರಾಶನೂ ಹತಾಶ ನೂ ಆಗಿ ಬಿಡುತ್ತಾನೆ.

Verse 50

وَلَئِنْ أَذَقْنَـٰهُ رَحْمَةً مِّنَّا مِنۢ بَعْدِ ضَرَّآءَ مَسَّتْهُ لَيَقُولَنَّ هَـٰذَا لِى وَمَآ أَظُنُّ ٱلسَّاعَةَ قَآئِمَةً وَلَئِن رُّجِعْتُ إِلَىٰ رَبِّىٓ إِنَّ لِى عِندَهُۥ لَلْحُسْنَىٰ ۚ فَلَنُنَبِّئَنَّ ٱلَّذِينَ كَفَرُوا۟ بِمَا عَمِلُوا۟ وَلَنُذِيقَنَّهُم مِّنْ عَذَابٍ غَلِيظٍ

Transliteration wala-in adhaqnāhu raḥmatan minnā min baʿdi ḍarrāa massathu layaqūlanna hādhā lī wamā aẓunnu l-sāʿata qāimatan wala-in rujiʿ'tu ilā rabbī inna lī ʿindahu lalḥus'nā falanunabbi-anna alladhīna kafarū bimā ʿamilū walanudhīqannahum min ʿadhābin ghalīẓin

Kannada ಆದರೆ ಅವನಿಗೆ ಕಷ್ಟ ಬಾಧಿಸಿದ ನಂತರ ನಾವು ಇವನಿಗೆ ನಮ್ಮ ಕೃಪೆಯ ಸವಿಯನ್ನುಣಿಸಿದಾಗ ಇವನು, “ಇದು ನನ್ನ ಹಕ್ಕು. ಪುನರುತ್ಥಾನವು ನೆಲೆಗೊಂಡೀತೆಂದು ನಾನು ಭಾವಿಸುವುದಿಲ್ಲ. ಇನ್ನು ಒಂದು ವೇಳೆ ನಾನು ನನ್ನ ಪ್ರಭುವಿನ ಕಡೆಗೆ ಮರಳಿಸಲ್ಪಟ್ಟರೂ ಅಲ್ಲೂ ನನಗೆ ಸುಖವೇ ಇರುವುದು” ಎನ್ನುತ್ತಾನೆ. ವಾಸ್ತವದಲ್ಲಿ ನಾವು ಸತ್ಯನಿಷೇಧಿಗಳಿಗೆ, ಅವರೆಸಗಿದ ಕರ್ಮದ ಬಗ್ಗೆ ಖಂಡಿತ ತಿಳಿಸುತ್ತೇವೆ. ಅಲ್ಲದೆ ನಾವು ಅವರಿಗೆ ಕರಾಳವಾದ ಶಿಕ್ಷೆಯ ಸವಿಯುಣಿಸುತ್ತೇವೆ.

Verse 51

وَإِذَآ أَنْعَمْنَا عَلَى ٱلْإِنسَـٰنِ أَعْرَضَ وَنَـَٔا بِجَانِبِهِۦ وَإِذَا مَسَّهُ ٱلشَّرُّ فَذُو دُعَآءٍ عَرِيضٍ

Transliteration wa-idhā anʿamnā ʿalā l-insāni aʿraḍa wanaā bijānibihi wa-idhā massahu l-sharu fadhū duʿāin ʿarīḍin

Kannada ನಾವು ಮಾನವನಿಗೆ ಅನುಗ್ರಹವನ್ನು ನೀಡಿದರೆ ಅವನು ವಿಮುಖನಾಗುತ್ತಾನೆ. ಅವನ ಪಾಡಿಗೆ ಹೋಗುತ್ತಾನೆ. ಅವನಿಗೇನಾದರೂ ವಿಪತ್ತು ತಟ್ಟಿದರೆ ಬಹಳ ಹೆಚ್ಚು ಪ್ರಾರ್ಥಿಸುತ್ತಾನೆ.

Verse 52

قُلْ أَرَءَيْتُمْ إِن كَانَ مِنْ عِندِ ٱللَّهِ ثُمَّ كَفَرْتُم بِهِۦ مَنْ أَضَلُّ مِمَّنْ هُوَ فِى شِقَاقٍۭ بَعِيدٍ

Transliteration qul ara-aytum in kāna min ʿindi l-lahi thumma kafartum bihi man aḍallu mimman huwa fī shiqāqin baʿīdin

Kannada ಹೇಳಿರಿ, “ಇದು (ಖುರ್‍ಆನ್) ಅಲ್ಲಾಹನ ಕಡೆಯಿಂದಲೇ ಬಂದಿದ್ದರೆ ಮತ್ತೆ ನೀವು ಇದನ್ನು ನಿಷೇಧಿಸಿದರೆ, ಸತ್ಯದಿಂದ ದೂರವಾದ ವಿರೋಧದಲ್ಲಿ ಬಿದ್ದವನಿಗಿಂತ ದೊಡ್ಡ ಪಥಭ್ರಷ್ಟನು ಯಾರೆಂದು ನೀವು ಆಲೋಚಿಸಿದಿರಾ?”

Verse 53

سَنُرِيهِمْ ءَايَـٰتِنَا فِى ٱلْـَٔافَاقِ وَفِىٓ أَنفُسِهِمْ حَتَّىٰ يَتَبَيَّنَ لَهُمْ أَنَّهُ ٱلْحَقُّ ۗ أَوَلَمْ يَكْفِ بِرَبِّكَ أَنَّهُۥ عَلَىٰ كُلِّ شَىْءٍ شَهِيدٌ

Transliteration sanurīhim āyātinā fī l-āfāqi wafī anfusihim ḥattā yatabayyana lahum annahu l-ḥaqu awalam yakfi birabbika annahu ʿalā kulli shayin shahīdun

Kannada ಈ ಖುರ್‍ಆನ್ ನಿಜವಾಗಿಯೂ ಸತ್ಯವಾಗಿದೆಯೆಂಬುದು ಇವರಿಗೆ ವ್ಯಕ್ತವಾಗುವ ತನಕ, ದಿಗಂತಗಳಲ್ಲೂ, ಅವರೊಳಗೂ ನಮ್ಮ ದೃಷ್ಟಾಂತಗಳನ್ನು ಅವರಿಗೆ ನಾವು ತೋರಿಸಿ ಕೊಡುವೆವು. ನಿಮ್ಮ ಪ್ರಭು ಸಕಲ ವಿಷಯಗಳಿಗೂ ಸಾಕ್ಷಿ ಎಂಬುದು ನಿಮಗೆ ಸಾಲದೇ?

Verse 54

أَلَآ إِنَّهُمْ فِى مِرْيَةٍ مِّن لِّقَآءِ رَبِّهِمْ ۗ أَلَآ إِنَّهُۥ بِكُلِّ شَىْءٍ مُّحِيطٌۢ

Transliteration alā innahum fī mir'yatin min liqāi rabbihim alā innahu bikulli shayin muḥīṭun

Kannada ತಿಳಿಯಿರಿ. ಇವರು ತಮ್ಮ ಪ್ರಭುವನ್ನು ಅಭಿ ಮುಖ ಗೊಳ್ಳಲಿರುವ ಕುರಿತು ಸಂದೇಹದಲ್ಲಿದ್ದಾರೆ. ತಿಳಿಯಿರಿ. ಅವನು ಸಕಲ ವಸ್ತುಗಳನ್ನು ಆವರಿಸಿರುತ್ತಾನೆ.

Read Surah Fussilat in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.