Surah Al-Haqqah in Kannada: translation and audio
Surah 69 · الحاقة · The Reality · 52 verses
Surah Al-Haqqah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Haqqah word by word in English.
Verse 1
ٱلْحَآقَّةُ
Transliteration al-ḥāqatu
Kannada ಖಚಿತವಾದ ಆ ಮಹಾ ಘಟನೆ!
Verse 2
مَا ٱلْحَآقَّةُ
Transliteration mā l-ḥāqatu
Kannada ಆ ಮಹಾ ಘಟನೆ ಏನದು?
Verse 3
وَمَآ أَدْرَىٰكَ مَا ٱلْحَآقَّةُ
Transliteration wamā adrāka mā l-ḥāqatu
Kannada ಆ ಖಚಿತವಾದ ಮಹಾ ಸಂಭವ ಏನೆಂಬುದು ತಮಗೆ ಗೊತ್ತೆ?
Verse 4
كَذَّبَتْ ثَمُودُ وَعَادٌۢ بِٱلْقَارِعَةِ
Transliteration kadhabat thamūdu waʿādun bil-qāriʿati
Kannada ಸಮೂದ್ ಮತ್ತು ಆದ್ ಸಮುದಾಯವು ಆ ಭಯಾನಕ ಘಟನೆಯನ್ನು ನಿರಾಕರಿಸಿಬಿಟ್ಟವು!
Verse 5
فَأَمَّا ثَمُودُ فَأُهْلِكُوا۟ بِٱلطَّاغِيَةِ
Transliteration fa-ammā thamūdu fa-uh'likū bil-ṭāghiyati
Kannada ಸಮೂದ್ ಸಮುದಾಯ ಒಂದು ಭೀಕರ ಶಿಕ್ಷೆಯ ಮೂಲಕ ನಾಶಗೊಳಿಸಲ್ಪಟ್ಟರು.
Verse 6
وَأَمَّا عَادٌ فَأُهْلِكُوا۟ بِرِيحٍ صَرْصَرٍ عَاتِيَةٍ
Transliteration wa-ammā ʿādun fa-uh'likū birīḥin ṣarṣarin ʿātiyatin
Kannada ಆದ್ ಜನಾಂಗದವರು ರುದ್ರನಾದದ ಒಂದು ಪ್ರಚಂಡ ಚಂಡಮಾರುತದಿಂದ ನಾಶವಾದರು.
Verse 7
سَخَّرَهَا عَلَيْهِمْ سَبْعَ لَيَالٍ وَثَمَـٰنِيَةَ أَيَّامٍ حُسُومًا فَتَرَى ٱلْقَوْمَ فِيهَا صَرْعَىٰ كَأَنَّهُمْ أَعْجَازُ نَخْلٍ خَاوِيَةٍ
Transliteration sakharahā ʿalayhim sabʿa layālin wathamāniyata ayyāmin ḥusūman fatarā l-qawma fīhā ṣarʿā ka-annahum aʿjāzu nakhlin khāwiyatin
Kannada ಅವನು (ಅಲ್ಲಾಹನು) ಅದನ್ನು ನಿರಂತರ ಏಳು ರಾತ್ರೆ ಮತ್ತು ಎಂಟು ಹಗಲುಗಳ ಕಾಲ ಅವರ ಮೇಲೆ ಛೂ ಬಿಟ್ಟನು. ಅದರಿಂದಾಗಿ ಆ ಜನಾಂಗ ಖರ್ಜೂರದ ವೃಕ್ಷಗಳು ಬುಡಕಳಚಿ ಬಿದ್ದಂತೆ ಬಿದ್ದು ಕೊಂಡಿರುವುದನ್ನು ನಿನಗೆ ಕಾಣಬಹುದಾಗಿತ್ತು!
Verse 8
فَهَلْ تَرَىٰ لَهُم مِّنۢ بَاقِيَةٍ
Transliteration fahal tarā lahum min bāqiyatin
Kannada ಇನ್ನು ಅವರಿಗೆ ಏನಾದರೂ ಉಳಿದಿರುವುದು ತಮಗೆ ಕಾಣಿಸುತ್ತಿದೆಯೇ?
Verse 9
وَجَآءَ فِرْعَوْنُ وَمَن قَبْلَهُۥ وَٱلْمُؤْتَفِكَـٰتُ بِٱلْخَاطِئَةِ
Transliteration wajāa fir'ʿawnu waman qablahu wal-mu'tafikātu bil-khāṭi-ati
Kannada ಫಿರ್‍ಔನ್ ಮತ್ತು ಅವನಿಗಿಂತ ಹಿಂದಿನವರು ಮತ್ತು ಬುಡಮೇಲಾದ ನಾಡುಗಳ ಜನರು ಮಹಾಪರಾಧವನ್ನು ಎಸಗಿದ್ದರು.
Verse 10
فَعَصَوْا۟ رَسُولَ رَبِّهِمْ فَأَخَذَهُمْ أَخْذَةً رَّابِيَةً
Transliteration faʿaṣaw rasūla rabbihim fa-akhadhahum akhdhatan rābiyatan
Kannada ಅವರೆಲ್ಲರೂ ತಮ್ಮ ಪ್ರಭುವಿನ ದೂತರನ್ನು ಧಿಕ್ಕರಿಸಿದರು. ಆಗ ಅವನು ಅವರನ್ನು ಅತ್ಯು ಗ್ರವಾಗಿ ಹಿಡಿದನು.
Verse 11
إِنَّا لَمَّا طَغَا ٱلْمَآءُ حَمَلْنَـٰكُمْ فِى ٱلْجَارِيَةِ
Transliteration innā lammā ṭaghā l-māu ḥamalnākum fī l-jāriyati
Kannada ಜಲವು ಮಿತಿಮೀರಿದಾಗ ನಾವು ನಿಮ್ಮನ್ನು ಹಡಗಿಗೆ ಹತ್ತಿಸಿ ರಕ್ಷಿಸಿದ್ದೆವು .
Verse 12
لِنَجْعَلَهَا لَكُمْ تَذْكِرَةً وَتَعِيَهَآ أُذُنٌ وَٰعِيَةٌ
Transliteration linajʿalahā lakum tadhkiratan wataʿiyahā udhunun wāʿiyatun
Kannada ಅದನ್ನು ನಿಮ್ಮ ಪಾಲಿಗೆ ಒಂದು ಪಾಠ ಬೋಧಕ ಸ್ಮರಣೆಯಾಗಿ ಮಾಡಲು ಮತ್ತು ಕಿವಿಗೊಟ್ಟು ಆಲಿಸುವ ಕಿವಿಗಳು ಇದರ ನೆನಪನ್ನು ಅಚ್ಚಳಿಯದೆ ಉಳಿಸಲು.
Verse 13
فَإِذَا نُفِخَ فِى ٱلصُّورِ نَفْخَةٌ وَٰحِدَةٌ
Transliteration fa-idhā nufikha fī l-ṣūri nafkhatun wāḥidatun
Kannada ಮುಂದೆ ಒಂದೇ ಒಂದು ಬಾರಿ ಕಹಳೆಯನ್ನೂದಿದಾಗ!
Verse 14
وَحُمِلَتِ ٱلْأَرْضُ وَٱلْجِبَالُ فَدُكَّتَا دَكَّةً وَٰحِدَةً
Transliteration waḥumilati l-arḍu wal-jibālu fadukkatā dakkatan wāḥidatan
Kannada ಹಾಗೂ ಭೂಮಿ ಮತ್ತು ಪರ್ವತಗಳನ್ನೆತ್ತಿ ಒಂದೇ ಏಟಿಗೆ ನುಚ್ಚುನೂರು ಮಾಡಲಾದಾಗ.
Verse 15
فَيَوْمَئِذٍ وَقَعَتِ ٱلْوَاقِعَةُ
Transliteration fayawma-idhin waqaʿati l-wāqiʿatu
Kannada ಅಂದು, ಆ ಘಟನೆಯು ಸಂಭವಿಸಿ ಬಿಡುವುದು.
Verse 16
وَٱنشَقَّتِ ٱلسَّمَآءُ فَهِىَ يَوْمَئِذٍ وَاهِيَةٌ
Transliteration wa-inshaqqati l-samāu fahiya yawma-idhin wāhiyatun
Kannada ಆಕಾಶವು ಬಿರಿಯುವುದು. ಅಂದು ಅದು ದುರ್ಬಲವಾಗಿರುವುದು.
Verse 17
وَٱلْمَلَكُ عَلَىٰٓ أَرْجَآئِهَا ۚ وَيَحْمِلُ عَرْشَ رَبِّكَ فَوْقَهُمْ يَوْمَئِذٍ ثَمَـٰنِيَةٌ
Transliteration wal-malaku ʿalā arjāihā wayaḥmilu ʿarsha rabbika fawqahum yawma-idhin thamāniyatun
Kannada ದೇವಚರರು ಅದರ ನಾನಾ ಅಂಚುಗಳಲ್ಲಿರುವರು. ಮತ್ತು ಅವರ ಮೇಲಕ್ಕೆ ತಮ್ಮ ಪ್ರಭುವಿನ ಅರ್ಶ್‍ನ್ನು ಎಂಟು ಮಲಕ್‍ಗಳು ಹೊತ್ತಿರುವರು.
Verse 18
يَوْمَئِذٍ تُعْرَضُونَ لَا تَخْفَىٰ مِنكُمْ خَافِيَةٌ
Transliteration yawma-idhin tuʿ'raḍūna lā takhfā minkum khāfiyatun
Kannada ಅದು ನಿಮ್ಮನ್ನು (ಅಲ್ಲಾಹನ ಸನ್ನಿಧಿಯಲ್ಲಿ) ಪ್ರದರ್ಶಿಸಲ್ಪಡುವ ದಿನವಾಗಿರುವುದು. ಯಾವ ರಹಸ್ಯವೂ ನಿಮ್ಮಿಂದ ಅಡಗಿರಲಾರದು.
Verse 19
فَأَمَّا مَنْ أُوتِىَ كِتَـٰبَهُۥ بِيَمِينِهِۦ فَيَقُولُ هَآؤُمُ ٱقْرَءُوا۟ كِتَـٰبِيَهْ
Transliteration fa-ammā man ūtiya kitābahu biyamīnihi fayaqūlu hāumu iq'raū kitābiyah
Kannada ಅಂದು ಯಾವನ ಕರ್ಮಗ್ರಂಥವನ್ನು ಅವನ ಬಲಗೈಯಲ್ಲಿ ಕೊಡಲಾಗುವುದೋ ಅವನು ಹೇಳುವನು; `ಇದೋ ನನ್ನ ಕರ್ಮಗ್ರಂಥ. ಒಮ್ಮೆ ಹಿಡಿದುಕೊಂಡು ಓದಿ ನೋಡಿರಿ.
Verse 20
إِنِّى ظَنَنتُ أَنِّى مُلَـٰقٍ حِسَابِيَهْ
Transliteration innī ẓanantu annī mulāqin ḥisābiyah
Kannada ನನಗೆ ವಿಚಾರಣೆಯನ್ನು ಎದುರಿಸಲಿಕ್ಕಿದೆ ಎಂದು ನಾನು ಮೊದಲೇ ನಂಬಿಕೊಂಡಿದ್ದೆ.
Verse 21
فَهُوَ فِى عِيشَةٍ رَّاضِيَةٍ
Transliteration fahuwa fī ʿīshatin rāḍiyatin
Kannada ಆಗ ಅವನು ಸಂತೃಪ್ತಿಯ ಜೀವನದಲ್ಲಿರುವನು.
Verse 22
فِى جَنَّةٍ عَالِيَةٍ
Transliteration fī jannatin ʿāliyatin
Kannada ಅಂದರೆ, ಅತ್ಯುನ್ನತ ಸ್ವರ್ಗೋದ್ಯಾನದಲ್ಲಿ.
Verse 23
قُطُوفُهَا دَانِيَةٌ
Transliteration quṭūfuhā dāniyatun
Kannada ಅದರ ಹಣ್ಣುಗಳ ಗೊಂಚಲುಗಳು (ಕೊಯ್ದು ತೆಗೆಯಲು ಸುಲಭವಾಗುವಂತೆ) ಅವರಿಗೆ ನಿಕಟವಾಗಿರುವುವು.
Verse 24
كُلُوا۟ وَٱشْرَبُوا۟ هَنِيٓـًٔۢا بِمَآ أَسْلَفْتُمْ فِى ٱلْأَيَّامِ ٱلْخَالِيَةِ
Transliteration kulū wa-ish'rabū hanīan bimā aslaftum fī l-ayāmi l-khāliyati
Kannada ಕಳೆದು ಹೋದ ದಿನಗಳಲ್ಲಿ ನೀವು ಮಾಡಿರುವ ಸತ್ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ತಿನ್ನಿರಿ ಮತ್ತು ಕುಡಿಯಿರಿ. (ಎಂದು ಅವರೊಂದಿಗೆ ಹೇಳಲಾಗುವುದು.)
Verse 25
وَأَمَّا مَنْ أُوتِىَ كِتَـٰبَهُۥ بِشِمَالِهِۦ فَيَقُولُ يَـٰلَيْتَنِى لَمْ أُوتَ كِتَـٰبِيَهْ
Transliteration wa-ammā man ūtiya kitābahu bishimālihi fayaqūlu yālaytanī lam ūta kitābiyah
Kannada ಯಾವನ ಕರ್ಮಗ್ರಂಥವನ್ನು ಅವನ ಎಡಗೈಯಲ್ಲಿ ಕೊಡಲಾಗುವುದೋ ಅವನು ಹೇಳುವನು, ‘ಅಯ್ಯೋ! ನನ್ನ ಕರ್ಮಗ್ರಂಥವನ್ನು ನನಗೆ ಕೊಡದೆ ಇರುತ್ತಿದ್ದರೆ !
Verse 26
وَلَمْ أَدْرِ مَا حِسَابِيَهْ
Transliteration walam adri mā ḥisābiyah
Kannada ಮತ್ತು ನನ್ನ ವಿಚಾರಣಾ ಫಲವೇನೆಂದು ನನಗೆ ತಿಳಿಯದೆ ಇರುತ್ತಿದ್ದರೆ ಉತ್ತಮವಿತ್ತು.
Verse 27
يَـٰلَيْتَهَا كَانَتِ ٱلْقَاضِيَةَ
Transliteration yālaytahā kānati l-qāḍiyata
Kannada ಅಯ್ಯೋ ನನ್ನ ಮರಣವೇ ಅಂತಿಮವಾಗಿರುತ್ತಿದ್ದರೆ (ಉತ್ತಮವಿತ್ತು.)
Verse 28
مَآ أَغْنَىٰ عَنِّى مَالِيَهْ ۜ
Transliteration mā aghnā ʿannī māliyah
Kannada ನನ್ನ ಸಂಪತ್ತು (ಇಂದು) ನನಗೇನೂ ಪ್ರಯೋಜನ ಕೊಡಲಿಲ್ಲ.
Verse 29
هَلَكَ عَنِّى سُلْطَـٰنِيَهْ
Transliteration halaka ʿannī sul'ṭāniyah
Kannada ನನ್ನ ಅಧಿಕಾರವೆಲ್ಲವೂ ನನಗೆ ನಷ್ಟಗೊಂಡಿತು.
Verse 30
خُذُوهُ فَغُلُّوهُ
Transliteration khudhūhu faghullūhu
Kannada (ದೇವಚರರೊಂದಿಗೆ ಅಲ್ಲಾಹು ಹೇಳುವನು) ಅವನನ್ನು ಹಿಡಿಯಿರಿ ಮತ್ತು ಅವನಿಗೆ (ಕೈ, ಕೊರಳಿಗೆ) ಬೇಡಿ ತೊಡಿಸಿರಿ.
Verse 31
ثُمَّ ٱلْجَحِيمَ صَلُّوهُ
Transliteration thumma l-jaḥīma ṣallūhu
Kannada ಅನಂತರ ಅವನನ್ನು ನರಕದೊಳಕ್ಕೆ ಪೂರ್ಣವಾಗಿ ಮುಳುಗಿಸಿರಿ.
Verse 32
ثُمَّ فِى سِلْسِلَةٍ ذَرْعُهَا سَبْعُونَ ذِرَاعًا فَٱسْلُكُوهُ
Transliteration thumma fī sil'silatin dharʿuhā sabʿūna dhirāʿan fa-us'lukūhu
Kannada ಆ ಬಳಿಕ ಅವನನ್ನು ಎಪ್ಪತ್ತು ಮೊಳ ಉದ್ದದ ಸಂಕೋಲೆಯೊಳಕ್ಕೆ ಬಿಗಿಯಿರಿ.
Verse 33
إِنَّهُۥ كَانَ لَا يُؤْمِنُ بِٱللَّهِ ٱلْعَظِيمِ
Transliteration innahu kāna lā yu'minu bil-lahi l-ʿaẓīmi
Kannada ಅವನು ಮಹಾನನಾದ ಅಲ್ಲಾಹನ ಮೇಲೆ ವಿಶ್ವಾ ಸವಿರಿಸುತ್ತಿರಲಿಲ್ಲ.
Verse 34
وَلَا يَحُضُّ عَلَىٰ طَعَامِ ٱلْمِسْكِينِ
Transliteration walā yaḥuḍḍu ʿalā ṭaʿāmi l-mis'kīni
Kannada ಮತ್ತು ಬಡವರಿಗೆ (ಮಿಸ್ಕೀನರಿಗೆ) ಆಹಾರ ಕೊಡಲು ಪ್ರೇರೇಪಿಸುತ್ತಲೂ ಇರಲಿಲ್ಲ.
Verse 35
فَلَيْسَ لَهُ ٱلْيَوْمَ هَـٰهُنَا حَمِيمٌ
Transliteration falaysa lahu l-yawma hāhunā ḥamīmun
Kannada ಆದುದರಿಂದ ಇಂದು ಅವನಿಗೆ ಇಲ್ಲಿ ಬಂಧುಗಳು ಯಾರೂ ಇಲ್ಲ.
Verse 36
وَلَا طَعَامٌ إِلَّا مِنْ غِسْلِينٍ
Transliteration walā ṭaʿāmun illā min ghis'līnin
Kannada ಗಿಸ್ಲೀನ್ (ನರಕದಲ್ಲಿ ಮಡುಗಟ್ಟುವ ರಕ್ತ, ಕೀವು, ಕೊಳಚೆ ನೀರುಗಳ ಸಂಗ್ರಹ) ಹೊರತು ಅವನಿಗೆ ಬೇರೆ ಯಾವ ಆಹಾರವೂ ಇಲ್ಲ.
Verse 37
لَّا يَأْكُلُهُۥٓ إِلَّا ٱلْخَـٰطِـُٔونَ
Transliteration lā yakuluhu illā l-khāṭiūna
Kannada ಅದನ್ನು ಪಾಪಿಗಳ ಹೊರತು ಇನ್ನಾರೂ ತಿನ್ನುವುದಿಲ್ಲ.
Verse 38
فَلَآ أُقْسِمُ بِمَا تُبْصِرُونَ
Transliteration falā uq'simu bimā tub'ṣirūna
Kannada
Verse 39
وَمَا لَا تُبْصِرُونَ
Transliteration wamā lā tub'ṣirūna
Kannada ನೀವು ಕಾಣುವ ವಸ್ತುಗಳ ಮತ್ತು ಕಾಣದ ವಸ್ತುಗಳ ಆಣೆ ಹಾಕುತ್ತೇನೆ!
Verse 40
إِنَّهُۥ لَقَوْلُ رَسُولٍ كَرِيمٍ
Transliteration innahu laqawlu rasūlin karīmin
Kannada ಇದು (ಖುರ್‍ಆನ್) ಓರ್ವ ಗೌರವಾನ್ವಿತ ದೂತರ ಮಾತಾಗಿದೆ.
Verse 41
وَمَا هُوَ بِقَوْلِ شَاعِرٍ ۚ قَلِيلًا مَّا تُؤْمِنُونَ
Transliteration wamā huwa biqawli shāʿirin qalīlan mā tu'minūna
Kannada (ಇದು) ಯಾವುದೇ ಒಂದು ಕವಿಯ ಮಾತಲ್ಲ. ನೀವು ಸ್ವಲ್ಪ ಮಾತ್ರವೇ ವಿಶ್ವಾಸ ಹೊಂದಿರುತ್ತೀರಿ.
Verse 42
وَلَا بِقَوْلِ كَاهِنٍ ۚ قَلِيلًا مَّا تَذَكَّرُونَ
Transliteration walā biqawli kāhinin qalīlan mā tadhakkarūna
Kannada ಇದೊಂದು ಜ್ಯೋತಿಷಿಯ ಮಾತೂ ಅಲ್ಲ. ನೀವು ಅತ್ಯಲ್ಪವೇ ಯೋಚಿಸಿ ಅರ್ಥ ಮಾಡಿಕೊಳ್ಳುತ್ತೀರಿ.
Verse 43
تَنزِيلٌ مِّن رَّبِّ ٱلْعَـٰلَمِينَ
Transliteration tanzīlun min rabbi l-ʿālamīna
Kannada ಇದು ಸರ್ವಲೋಕ ಪಾಲಕ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದೆ.
Verse 44
وَلَوْ تَقَوَّلَ عَلَيْنَا بَعْضَ ٱلْأَقَاوِيلِ
Transliteration walaw taqawwala ʿalaynā baʿḍa l-aqāwīli
Kannada ಪ್ರವಾದಿಯು ನಮ್ಮ ಮೇಲೆ (ನಾವು ಹೇಳದ) ಯಾವುದೇ ಮಾತುಗಳನ್ನು ಸ್ವಂತದ್ದಾಗಿ ರಚಿಸಿ ಹೇಳಿರುತ್ತಿದ್ದರೆ,
Verse 45
لَأَخَذْنَا مِنْهُ بِٱلْيَمِينِ
Transliteration la-akhadhnā min'hu bil-yamīni
Kannada ಖಂಡಿತ ನಾವು ನಮ್ಮ ಬಲದಿಂದ ಅವರಿಗೆ ಶಿಕ್ಷೆ ಯನ್ನು ಕೊಡುತ್ತಿದ್ದೆವು.
Verse 46
ثُمَّ لَقَطَعْنَا مِنْهُ ٱلْوَتِينَ
Transliteration thumma laqaṭaʿnā min'hu l-watīna
Kannada ಮತ್ತು ಅವರ ಹೃದಯದ ಜೀವನಾಡಿಯನ್ನು ಕತ್ತರಿಸಿ ಹಾಕುತ್ತಿದ್ದೆವು.
Verse 47
فَمَا مِنكُم مِّنْ أَحَدٍ عَنْهُ حَـٰجِزِينَ
Transliteration famā minkum min aḥadin ʿanhu ḥājizīna
Kannada ಆಗ, ನಿಮ್ಮ ಪೈಕಿ ಯಾರಿಗೂ ಅವರಿಂದ ನನ್ನ ಶಿಕ್ಷೆಯನ್ನು ತಡೆಯಲು ಸಾಧ್ಯವಿರುತ್ತಿರಲಿಲ್ಲ.
Verse 48
وَإِنَّهُۥ لَتَذْكِرَةٌ لِّلْمُتَّقِينَ
Transliteration wa-innahu latadhkiratun lil'muttaqīna
Kannada ಇದು (ಖುರ್‍ಆನ್) ದೇವಭಯವುಳ್ಳವರಿ ಗೊಂದು ಉಪದೇಶವಾಗಿದೆ.
Verse 49
وَإِنَّا لَنَعْلَمُ أَنَّ مِنكُم مُّكَذِّبِينَ
Transliteration wa-innā lanaʿlamu anna minkum mukadhibīna
Kannada ನಿಮ್ಮ ಪೈಕಿ ಇದನ್ನು (ಖುರ್‍ಆನನ್ನು) ನಿಷೇಧಿಸಿ ತಳ್ಳುವವರಿದ್ದಾರೆಂಬುದನ್ನು ನಾವು ಬಲ್ಲೆವು.
Verse 50
وَإِنَّهُۥ لَحَسْرَةٌ عَلَى ٱلْكَـٰفِرِينَ
Transliteration wa-innahu laḥasratun ʿalā l-kāfirīna
Kannada ಸತ್ಯನಿಷೇಧಿಗಳಿಗೆ ಖಂಡಿತವಾಗಿಯೂ ಇದು ಖೇದವೇ ಆಗಿರುತ್ತದೆ.
Verse 51
وَإِنَّهُۥ لَحَقُّ ٱلْيَقِينِ
Transliteration wa-innahu laḥaqqu l-yaqīni
Kannada ಖಂಡಿತ ಇದು ಅತ್ಯಂತ ಖಚಿತವಾದ ಸತ್ಯವಾಗಿದೆ.
Verse 52
فَسَبِّحْ بِٱسْمِ رَبِّكَ ٱلْعَظِيمِ
Transliteration fasabbiḥ bi-is'mi rabbika l-ʿaẓīmi
Kannada ಆದುದರಿಂದ (ಸಂದೇಶವಾಹಕರೇ,) ತಾವು ತಮ್ಮ ಮಹೋನ್ನತ ಪ್ರಭುವಿನ ನಾಮವನ್ನು ಕೊಂಡಾಡಿರಿ.
Read Surah Al-Haqqah in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.