MyDugsiStart learning

Surah Al-'Ankabut in Kannada: translation and audio

Surah 29 · العنكبوت · The Spider · 69 verses

Surah Al-'Ankabut verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-'Ankabut word by word in English.

Verse 1

الٓمٓ

Transliteration alif-lam-meem

Kannada ಅಲಿಫ್ ಲಾಮ್ ಮೀಮ್.

Verse 2

أَحَسِبَ ٱلنَّاسُ أَن يُتْرَكُوٓا۟ أَن يَقُولُوٓا۟ ءَامَنَّا وَهُمْ لَا يُفْتَنُونَ

Transliteration aḥasiba l-nāsu an yut'rakū an yaqūlū āmannā wahum lā yuf'tanūna

Kannada `ನಾವು ವಿಶ್ವಾಸವಿರಿಸಿದ್ದೇವೆ’ ಎಂದ ಮಾತ್ರಕ್ಕೆ ಅವರನ್ನು ಪರೀಕ್ಷೆಗೊಳಪಡಿಸದೆ ಬಿಟ್ಟು ಬಿಡಲಾಗುವುದೆಂದು ಜನರು ಭಾವಿಸಿದ್ದಾರೆಯೇ?

Verse 3

وَلَقَدْ فَتَنَّا ٱلَّذِينَ مِن قَبْلِهِمْ ۖ فَلَيَعْلَمَنَّ ٱللَّهُ ٱلَّذِينَ صَدَقُوا۟ وَلَيَعْلَمَنَّ ٱلْكَـٰذِبِينَ

Transliteration walaqad fatannā alladhīna min qablihim falayaʿlamanna l-lahu alladhīna ṣadaqū walayaʿlamanna l-kādhibīna

Kannada ಸತ್ಯವಂತರು ಯಾರು ಎಂದು ಅಲ್ಲಾಹನು ಕಂಡರಿತೇ ತೀರುವಂತೆಯೂ ಸುಳ್ಳುಗಾರರು ಯಾರು ಎಂದು ಕಂಡರಿತೇ ತೀರುವಂತೆಯೂ ಇವರಿಗೆ ಮುಂಚಿನವರನ್ನು ನಾವು ನಿಜವಾಗಿಯೂ ಪರೀಕ್ಷೆಗೆ ಒಡ್ಡಿದ್ದೇವೆ.

Verse 4

أَمْ حَسِبَ ٱلَّذِينَ يَعْمَلُونَ ٱلسَّيِّـَٔاتِ أَن يَسْبِقُونَا ۚ سَآءَ مَا يَحْكُمُونَ

Transliteration am ḥasiba alladhīna yaʿmalūna l-sayiāti an yasbiqūnā sāa mā yaḥkumūna

Kannada ಅಥವಾ ತಪ್ಪು ಮಾಡುವವರು ನಮ್ಮ ಹಿಡಿತಕ್ಕೆ ಸಿಗದೆ ಮೀರಿ ಮುಂದೆ ಹೋಗುವರೆಂದು ಭಾವಿಸಿದ್ದಾರೆಯೇ? ಅವರು ಕೈಗೊಂಡ ತೀರ್ಮಾನವು ಅತ್ಯಂತ ಕೆಟ್ಟದ್ದು.

Verse 5

مَن كَانَ يَرْجُوا۟ لِقَآءَ ٱللَّهِ فَإِنَّ أَجَلَ ٱللَّهِ لَـَٔاتٍ ۚ وَهُوَ ٱلسَّمِيعُ ٱلْعَلِيمُ

Transliteration man kāna yarjū liqāa l-lahi fa-inna ajala l-lahi laātin wahuwa l-samīʿu l-ʿalīmu

Kannada ಯಾರು ಅಲ್ಲಾಹನ ಮುಖಾಮುಖಿಯನ್ನು ನಿರೀಕ್ಷಿಸುತ್ತಾರೆ, (ಅವನು ಅದರ ಸಿದ್ಧತೆಯನ್ನು ಮಾಡಿಕೊಳ್ಳಲಿ). ಅಲ್ಲಾಹು ನಿಗದಿಗೊಳಿಸಿದ ಸಮಯವು ಖಂಡಿತ ಬರಲಿದೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

Verse 6

وَمَن جَـٰهَدَ فَإِنَّمَا يُجَـٰهِدُ لِنَفْسِهِۦٓ ۚ إِنَّ ٱللَّهَ لَغَنِىٌّ عَنِ ٱلْعَـٰلَمِينَ

Transliteration waman jāhada fa-innamā yujāhidu linafsihi inna l-laha laghaniyyun ʿani l-ʿālamīna

Kannada ಯಾರು ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುತ್ತಾನೆ, ಅವನು ತನ್ನ ಹಿತಕ್ಕಾಗಿಯೇ ಹೋರಾಡುವನು. ನಿಶ್ಚಯ, ಅಲ್ಲಾಹು ಸಕಲ ಲೋಕದವರಿಂದ ನಿರಪೇಕ್ಷನು.

Verse 7

وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَنُكَفِّرَنَّ عَنْهُمْ سَيِّـَٔاتِهِمْ وَلَنَجْزِيَنَّهُمْ أَحْسَنَ ٱلَّذِى كَانُوا۟ يَعْمَلُونَ

Transliteration wa-alladhīna āmanū waʿamilū l-ṣāliḥāti lanukaffiranna ʿanhum sayyiātihim walanajziyannahum aḥsana alladhī kānū yaʿmalūna

Kannada ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗುವವರ ಪಾಪಗಳನ್ನು ನಾವು ಅವರಿಂದ ತೆರೆವುಗೊಳಿಸುತ್ತೇವೆ. ಮತ್ತು ಅವರು ಮಾಡುತ್ತಿದ್ದ ಒಳಿತಿಗೆ ತಕ್ಕುದಾದ ಸತ್ಫಲವನ್ನು ನೀಡುತ್ತೇವೆ.

Verse 8

وَوَصَّيْنَا ٱلْإِنسَـٰنَ بِوَٰلِدَيْهِ حُسْنًا ۖ وَإِن جَـٰهَدَاكَ لِتُشْرِكَ بِى مَا لَيْسَ لَكَ بِهِۦ عِلْمٌ فَلَا تُطِعْهُمَآ ۚ إِلَىَّ مَرْجِعُكُمْ فَأُنَبِّئُكُم بِمَا كُنتُمْ تَعْمَلُونَ

Transliteration wawaṣṣaynā l-insāna biwālidayhi ḥus'nan wa-in jāhadāka litush'rika bī mā laysa laka bihi ʿil'mun falā tuṭiʿ'humā ilayya marjiʿukum fa-unabbi-ukum bimā kuntum taʿmalūna

Kannada ತನ್ನ ಮಾತಾಪಿತರಿಗೆ ಒಳಿತು ಮಾಡುವಂತೆ ನಾವು ಮಾನವನಿಗೆ ಆದೇಶಿಸಿದ್ದೇವೆ. ಆದರೆ ನೀನು ಅರಿಯದಿರುವ ಒಂದು ವಸ್ತುವನ್ನು ನನಗೆ ಪಾಲು ಗೊಳಿಸಬೇಕೆಂದು ಅವರು ನಿನ್ನ ಮೇಲೆ ಒತ್ತಡ ಹೇರಿದರೆ, ಅವರನ್ನು ಅನುಸರಿಸಬೇಡ . ನಿಮ್ಮ ಮರಳುವಿಕೆ ನನ್ನ ಕಡೆಗೇ ಇದೆ. ಆಗ ನೀವು ಎಸಗಿದ ಕರ್ಮಕ್ಕೆ ನಾನು (ಅಲ್ಲಿ) ಪ್ರತಿಫಲ ನೀಡುವೆನು.

Verse 9

وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَنُدْخِلَنَّهُمْ فِى ٱلصَّـٰلِحِينَ

Transliteration wa-alladhīna āmanū waʿamilū l-ṣāliḥāti lanud'khilannahum fī l-ṣāliḥīna

Kannada ಸತ್ಯವಿಶ್ವಾಸ ತಾಳಿ ಸತ್ಕರ್ಮವೆಸಗಿದವರನ್ನು ನಾವು ಖಂಡಿತ ಸಜ್ಜನರ ಸಾಲಿಗೆ ಸೇರಿಸುತ್ತೇವೆ.

Verse 10

وَمِنَ ٱلنَّاسِ مَن يَقُولُ ءَامَنَّا بِٱللَّهِ فَإِذَآ أُوذِىَ فِى ٱللَّهِ جَعَلَ فِتْنَةَ ٱلنَّاسِ كَعَذَابِ ٱللَّهِ وَلَئِن جَآءَ نَصْرٌ مِّن رَّبِّكَ لَيَقُولُنَّ إِنَّا كُنَّا مَعَكُمْ ۚ أَوَلَيْسَ ٱللَّهُ بِأَعْلَمَ بِمَا فِى صُدُورِ ٱلْعَـٰلَمِينَ

Transliteration wamina l-nāsi man yaqūlu āmannā bil-lahi fa-idhā ūdhiya fī l-lahi jaʿala fit'nata l-nāsi kaʿadhābi l-lahi wala-in jāa naṣrun min rabbika layaqūlunna innā kunnā maʿakum awalaysa l-lahu bi-aʿlama bimā fī ṣudūri l-ʿālamīna

Kannada ನಾವು ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದೇವೆ ಎಂದು ಹೇಳುವ ಕೆಲವರು ಜನರಲ್ಲಿದ್ದಾರೆ. ಆದರೆ ಅವರು ಅಲ್ಲಾಹನ ಮಾರ್ಗದಲ್ಲಿ ಪೀಡಿಸಲ್ಪಟ್ಟಾಗ ಜನರ ಪೀಡೆಯನ್ನು ಅಲ್ಲಾಹನ ಶಿಕ್ಷೆಯಂತೆ ಗಣಿಸುತ್ತಾರೆ. ತಮ್ಮ ಪ್ರಭುವಿನಿಂದ ಏನಾದರೂ ಸಹಾಯ ಬಂದರೆ, ‘ಖಂಡಿತ ನಾವು ನಿಮ್ಮ ಜೊತೆಗಿದ್ದೆವು’ ಎಂದು ಹೇಳುತ್ತಾರೆ. ಲೋಕವಾಸಿಗಳ ಹೃದಯಗಳಲ್ಲಿರುವುದನ್ನು ಅಲ್ಲಾಹು ಚೆನ್ನಾಗಿ ತಿಳಿದಿಲ್ಲವೇ?

Verse 11

وَلَيَعْلَمَنَّ ٱللَّهُ ٱلَّذِينَ ءَامَنُوا۟ وَلَيَعْلَمَنَّ ٱلْمُنَـٰفِقِينَ

Transliteration walayaʿlamanna l-lahu alladhīna āmanū walayaʿlamanna l-munāfiqīna

Kannada ಸತ್ಯವಿಶ್ವಾಸಿಗಳು ಯಾರೆಂದು ಅಲ್ಲಾಹನು ಖಂಡಿತ ತಿಳಿಯುವನು. ಕಪಟವಿಶ್ವಾಸಿಗಳು ಯಾರು ಎಂದೂ ಖಂಡಿತ ತಿಳಿಯುವನು.

Verse 12

وَقَالَ ٱلَّذِينَ كَفَرُوا۟ لِلَّذِينَ ءَامَنُوا۟ ٱتَّبِعُوا۟ سَبِيلَنَا وَلْنَحْمِلْ خَطَـٰيَـٰكُمْ وَمَا هُم بِحَـٰمِلِينَ مِنْ خَطَـٰيَـٰهُم مِّن شَىْءٍ ۖ إِنَّهُمْ لَكَـٰذِبُونَ

Transliteration waqāla alladhīna kafarū lilladhīna āmanū ittabiʿū sabīlanā walnaḥmil khaṭāyākum wamā hum biḥāmilīna min khaṭāyāhum min shayin innahum lakādhibūna

Kannada ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ, ‘ನೀವು ನಮ್ಮ ಮಾರ್ಗವನ್ನು ಅನುಸರಿಸಿರಿ. ನಿಮ್ಮ ಪಾಪಗಳನ್ನು ನಾವು ಹೊತ್ತುಕೊಳ್ಳುತ್ತೇವೆ’ ಎನ್ನುತ್ತಾರೆ. ವಾಸ್ತವದಲ್ಲಿ ಇವರ ಪಾಪಗಳ ಪೈಕಿ ಏನನ್ನೂ ಅವರು ಹೊತ್ತುಕೊಳ್ಳುವವರಲ್ಲ. ಅವರು ಖಂಡಿತ ಸುಳ್ಳು ಹೇಳುತ್ತಿದ್ದಾರೆ.

Verse 13

وَلَيَحْمِلُنَّ أَثْقَالَهُمْ وَأَثْقَالًا مَّعَ أَثْقَالِهِمْ ۖ وَلَيُسْـَٔلُنَّ يَوْمَ ٱلْقِيَـٰمَةِ عَمَّا كَانُوا۟ يَفْتَرُونَ

Transliteration walayaḥmilunna athqālahum wa-athqālan maʿa athqālihim walayus'alunna yawma l-qiyāmati ʿammā kānū yaftarūna

Kannada ಆದರೆ ಅವರು ತಮ್ಮ ಪಾಪ ಹೊರೆಯನ್ನು ಹೊರುವ ಜೊತೆಗೆ ಇತರ ಅನೇಕ ಪಾಪ ಹೊರೆಗಳನ್ನೂ ಖಂಡಿತ ಹೊರಬೇಕಾಗುವುದು . ಅವರು ಕಥೆಕಟ್ಟಿ ಹೇಳುತ್ತಿದ್ದ ಸುಳ್ಳುಗಳ ಬಗ್ಗೆ ಅಂತ್ಯದಿನ ವಿಚಾರಣೆ ನಡೆಸಲಾಗುವುದು.

Verse 14

وَلَقَدْ أَرْسَلْنَا نُوحًا إِلَىٰ قَوْمِهِۦ فَلَبِثَ فِيهِمْ أَلْفَ سَنَةٍ إِلَّا خَمْسِينَ عَامًا فَأَخَذَهُمُ ٱلطُّوفَانُ وَهُمْ ظَـٰلِمُونَ

Transliteration walaqad arsalnā nūḥan ilā qawmihi falabitha fīhim alfa sanatin illā khamsīna ʿāman fa-akhadhahumu l-ṭūfānu wahum ẓālimūna

Kannada ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ಅವರು ಅವರ ನಡುವೆ ಐವತ್ತು ಕಡಿಮೆ ಒಂದು ಸಾವಿರ ವರ್ಷಗಳ ಕಾಲ ನೆಲೆಸಿದರು. (ಆದರೂ ಅವರು ನೇರ ದಾರಿಗೆ ಬರಲಿಲ್ಲ). ಕೊನೆಗೆ ಆ ಜನರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಅವರನ್ನು ಜಲಪ್ರಳಯ ಹಿಡಿದುಬಿಟ್ಟಿತು.

Verse 15

فَأَنجَيْنَـٰهُ وَأَصْحَـٰبَ ٱلسَّفِينَةِ وَجَعَلْنَـٰهَآ ءَايَةً لِّلْعَـٰلَمِينَ

Transliteration fa-anjaynāhu wa-aṣḥāba l-safīnati wajaʿalnāhā āyatan lil'ʿālamīna

Kannada ಆಗ ನೂಹರನ್ನೂ ಅವರ ಜೊತೆಗೆ ನಾವೆಯಲ್ಲಿದ್ದವರನ್ನೂ ನಾವು ಕಾಪಾಡಿದೆವು ಮತ್ತು ಲೋಕದ ಜನತೆಗೆ ಅದನ್ನೊಂದು ದೃಷ್ಟಾಂತವನ್ನಾಗಿ ಮಾಡಿದೆವು.

Verse 16

وَإِبْرَٰهِيمَ إِذْ قَالَ لِقَوْمِهِ ٱعْبُدُوا۟ ٱللَّهَ وَٱتَّقُوهُ ۖ ذَٰلِكُمْ خَيْرٌ لَّكُمْ إِن كُنتُمْ تَعْلَمُونَ

Transliteration wa-ib'rāhīma idh qāla liqawmihi uʿ'budū l-laha wa-ittaqūhu dhālikum khayrun lakum in kuntum taʿlamūna

Kannada ಇಬ್‍ರಾಹೀಮರನ್ನು ನೆನಪಿಸಿರಿ. ಒಮ್ಮೆ ಅವರು ತಮ್ಮ ಜನಾಂಗದೊಡನೆ ಹೀಗೆ ಹೇಳಿದ್ದರು. ‘ನೀವು ಅಲ್ಲಾಹನಿಗೆ ಆರಾಧನೆ ಮಾಡಿರಿ ಮತ್ತು ಅವನನ್ನು ಭಯಪಡಿರಿ. ನೀವು ಸತ್ಯವನ್ನು ಅರಿಯುವವರಾಗಿದ್ದರೆ ಇದು ನಿಮಗೆ ಉತ್ತಮ ವಾಗಿದೆ.

Verse 17

إِنَّمَا تَعْبُدُونَ مِن دُونِ ٱللَّهِ أَوْثَـٰنًا وَتَخْلُقُونَ إِفْكًا ۚ إِنَّ ٱلَّذِينَ تَعْبُدُونَ مِن دُونِ ٱللَّهِ لَا يَمْلِكُونَ لَكُمْ رِزْقًا فَٱبْتَغُوا۟ عِندَ ٱللَّهِ ٱلرِّزْقَ وَٱعْبُدُوهُ وَٱشْكُرُوا۟ لَهُۥٓ ۖ إِلَيْهِ تُرْجَعُونَ

Transliteration innamā taʿbudūna min dūni l-lahi awthānan watakhluqūna if'kan inna alladhīna taʿbudūna min dūni l-lahi lā yamlikūna lakum riz'qan fa-ib'taghū ʿinda l-lahi l-riz'qa wa-uʿ'budūhu wa-ush'kurū lahu ilayhi tur'jaʿūna

Kannada ನೀವು ಅಲ್ಲಾಹನನ್ನು ಬಿಟ್ಟು ಕೇವಲ ವಿಗ್ರಹಗಳನ್ನು ಪೂಜಿಸುತ್ತೀರಿ. (ಅವು ಅಲ್ಲಾಹನ ಪಾಲುದಾರರೆಂದು)ಒಂದು ಸುಳ್ಳನ್ನೂ ಸೃಷ್ಟಿಸುತ್ತಿರುವಿರಿ. ನಿಜದಲ್ಲಿ ಅಲ್ಲಾಹನ ಹೊರತು ನೀವು ಪೂಜಿ ಸುತ್ತಿರುವವರು ನಿಮಗೆ ಯಾವುದೇ ಜೀವನಾಧಾರವನ್ನು ಒಡೆತನಗೊಳಿಸಿಲ್ಲ. ಆದ್ದರಿಂದ ಅಲ್ಲಾಹನ ಬಳಿ ಉಪಜೀವನವನ್ನು ಯಾಚಿಸಿರಿ. ಅವನನ್ನೇ ಆರಾಧಿಸಿರಿ. ಅವನಿಗೆ ಕೃತಜ್ಞತೆ ಸಲ್ಲಿಸಿರಿ. ಅವನ ಕಡೆಗೇ ನೀವು ಮರಳಿಸಲ್ಪಡುವಿರಿ .

Verse 18

وَإِن تُكَذِّبُوا۟ فَقَدْ كَذَّبَ أُمَمٌ مِّن قَبْلِكُمْ ۖ وَمَا عَلَى ٱلرَّسُولِ إِلَّا ٱلْبَلَـٰغُ ٱلْمُبِينُ

Transliteration wa-in tukadhibū faqad kadhaba umamun min qablikum wamā ʿalā l-rasūli illā l-balāghu l-mubīnu

Kannada ನೀವು ಸುಳ್ಳಾಗಿಸುವಿರಾದರೆ ಅದರಲ್ಲಿ ಅಚ್ಚರಿಯಿಲ್ಲ. ನಿಮಗಿಂತ ಮುಂಚೆ ಅನೇಕ ಜನಾಂಗಗಳು ಸುಳ್ಳಾಗಿಸಿವೆ. ಸ್ಪಷ್ಟವಾಗಿ ಸಂದೇಶವನ್ನು ತಲಪಿಸಿಕೊಡುವುದು ಮಾತ್ರವೇ ಸಂದೇಶವಾಹಕರ ಹೊಣೆ.

Verse 19

أَوَلَمْ يَرَوْا۟ كَيْفَ يُبْدِئُ ٱللَّهُ ٱلْخَلْقَ ثُمَّ يُعِيدُهُۥٓ ۚ إِنَّ ذَٰلِكَ عَلَى ٱللَّهِ يَسِيرٌ

Transliteration awalam yaraw kayfa yub'di-u l-lahu l-khalqa thumma yuʿīduhu inna dhālika ʿalā l-lahi yasīrun

Kannada ಅಲ್ಲಾಹನು ಸೃಷ್ಟಿಯನ್ನು ಆರಂಭಿಸುವುದು, ಅನಂತರ ಅದರ ಪುನರಾವರ್ತನೆ ಮಾಡುವುದು ಹೇಗೆಂದು ಇವರು ನೋಡಲಿಲ್ಲವೇ? ನಿಶ್ಚಯ ಇದು ಅಲ್ಲಾಹನ ಮೇಲೆ ಅತಿ ಸುಲಭವಾಗಿದೆ.

Verse 20

قُلْ سِيرُوا۟ فِى ٱلْأَرْضِ فَٱنظُرُوا۟ كَيْفَ بَدَأَ ٱلْخَلْقَ ۚ ثُمَّ ٱللَّهُ يُنشِئُ ٱلنَّشْأَةَ ٱلْـَٔاخِرَةَ ۚ إِنَّ ٱللَّهَ عَلَىٰ كُلِّ شَىْءٍ قَدِيرٌ

Transliteration qul sīrū fī l-arḍi fa-unẓurū kayfa bada-a l-khalqa thumma l-lahu yunshi-u l-nashata l-ākhirata inna l-laha ʿalā kulli shayin qadīrun

Kannada ಹೇಳಿರಿ, ನೀವು ಭೂಮಿಯಲ್ಲಿ ಸಂಚರಿಸಿ ಅವನು ಸೃಷ್ಟಿಯ ಆರಂಭ ಹೇಗೆ ಮಾಡಿರುತ್ತಾನೆಂದು ನೋಡಿ ತಿಳಿದುಕೊಳ್ಳಿರಿ. ನಂತರ ಅಲ್ಲಾಹನು ಎರಡನೇ ಬಾರಿಯೂ ಸೃಷ್ಟಿಸುವನು. ನಿಜವಾಗಿ ಅಲ್ಲಾಹು ಸಕಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.

Verse 21

يُعَذِّبُ مَن يَشَآءُ وَيَرْحَمُ مَن يَشَآءُ ۖ وَإِلَيْهِ تُقْلَبُونَ

Transliteration yuʿadhibu man yashāu wayarḥamu man yashāu wa-ilayhi tuq'labūna

Kannada ಅವನು ತಾನಿಚ್ಛಿಸುವವರಿಗೆ ಶಿಕ್ಷೆ ನೀಡುತ್ತಾನೆ. ತಾನಿಚ್ಛಿಸುವವರಿಗೆ ಕರುಣೆ ತೋರುತ್ತಾನೆ. ನೀವು ಅವನ ಕಡೆಗೆ ಮರಳಿಸಲ್ಪಡುವಿರಿ.

Verse 22

وَمَآ أَنتُم بِمُعْجِزِينَ فِى ٱلْأَرْضِ وَلَا فِى ٱلسَّمَآءِ ۖ وَمَا لَكُم مِّن دُونِ ٱللَّهِ مِن وَلِىٍّ وَلَا نَصِيرٍ

Transliteration wamā antum bimuʿ'jizīna fī l-arḍi walā fī l-samāi wamā lakum min dūni l-lahi min waliyyin walā naṣīrin

Kannada ನೀವು ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಅವನನ್ನು ಸೋಲಿಸಲಾರಿರಿ. ಅಲ್ಲಾಹನನ್ನು ಬಿಟ್ಟು ಯಾವ ರಕ್ಷಕಮಿತ್ರನೂ ಸಹಾಯಕನೂ ನಿಮಗಿಲ್ಲ.

Verse 23

وَٱلَّذِينَ كَفَرُوا۟ بِـَٔايَـٰتِ ٱللَّهِ وَلِقَآئِهِۦٓ أُو۟لَـٰٓئِكَ يَئِسُوا۟ مِن رَّحْمَتِى وَأُو۟لَـٰٓئِكَ لَهُمْ عَذَابٌ أَلِيمٌ

Transliteration wa-alladhīna kafarū biāyāti l-lahi waliqāihi ulāika ya-isū min raḥmatī wa-ulāika lahum ʿadhābun alīmun

Kannada ಅಲ್ಲಾಹನ ದೃಷ್ಟಾಂತಗಳನ್ನೂ ಅವನ ಭೇಟಿ ಯನ್ನೂ ನಿಷೇಧಿಸಿದವರು ನನ್ನ ಕೃಪೆಯ ಬಗ್ಗೆ ನಿರಾಶರಾಗುವರು . ಅವರಿಗೆ ವೇದನಾಯುಕ್ತ ಶಿಕ್ಷೆ ಇದೆ.

Verse 24

فَمَا كَانَ جَوَابَ قَوْمِهِۦٓ إِلَّآ أَن قَالُوا۟ ٱقْتُلُوهُ أَوْ حَرِّقُوهُ فَأَنجَىٰهُ ٱللَّهُ مِنَ ٱلنَّارِ ۚ إِنَّ فِى ذَٰلِكَ لَـَٔايَـٰتٍ لِّقَوْمٍ يُؤْمِنُونَ

Transliteration famā kāna jawāba qawmihi illā an qālū uq'tulūhu aw ḥarriqūhu fa-anjāhu l-lahu mina l-nāri inna fī dhālika laāyātin liqawmin yu'minūna

Kannada ‘ಇವನನ್ನು ಕೊಂದು ಹಾಕಿರಿ ಇಲ್ಲವೇ ಇವನನ್ನು ಸುಟ್ಟು ಹಾಕಿರಿ’ ಎನ್ನುವ ಹೊರತು ತಮ್ಮ ಜನಾಂಗಕ್ಕೆ ಬೇರೇನೂ ಉತ್ತರವಿರಲಿಲ್ಲ. ಕೊನೆಗೆ ಅಲ್ಲಾಹನು ಅವರನ್ನು ಅಗ್ನಿಯಿಂದ ರಕ್ಷಿಸಿದನು. ಸತ್ಯವಿಶ್ವಾಸವಿರಿಸುವ ಜನರಿಗೆ ಇದರಲ್ಲಿ ಖಂಡಿತ ಅನೇಕ ನಿದರ್ಶನಗಳಿವೆ.

Verse 25

وَقَالَ إِنَّمَا ٱتَّخَذْتُم مِّن دُونِ ٱللَّهِ أَوْثَـٰنًا مَّوَدَّةَ بَيْنِكُمْ فِى ٱلْحَيَوٰةِ ٱلدُّنْيَا ۖ ثُمَّ يَوْمَ ٱلْقِيَـٰمَةِ يَكْفُرُ بَعْضُكُم بِبَعْضٍ وَيَلْعَنُ بَعْضُكُم بَعْضًا وَمَأْوَىٰكُمُ ٱلنَّارُ وَمَا لَكُم مِّن نَّـٰصِرِينَ

Transliteration waqāla innamā ittakhadhtum min dūni l-lahi awthānan mawaddata baynikum fī l-ḥayati l-dun'yā thumma yawma l-qiyāmati yakfuru baʿḍukum bibaʿḍin wayalʿanu baʿḍukum baʿḍan wamawākumu l-nāru wamā lakum min nāṣirīna

Kannada ಅವರು ಹೀಗೆಂದರು; ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು ಲೌಕಿಕ ಜೀವನದಲ್ಲಿ ಪರಸ್ಪರ ಪ್ರೀತಿ ಬಾಂಧವ್ಯಕ್ಕಾಗಿ ಆರಾಧ್ಯರನ್ನಾಗಿ ಮಾಡಿಕೊಂಡಿರುವಿರಿ. ಆದರೆ ಅಂತ್ಯದಿನ ನೀವು ಪರಸ್ಪರರನ್ನು ನಿರಾಕರಿಸುವಿರಿ ಮತ್ತು ಪರಸ್ಪರರನ್ನು ಶಪಿಸುವಿರಿ. ನೀವೆಲ್ಲರೂ ಮರಳಿ ಹೋಗುವ ನಿವಾಸ ನರಕವಾಗಿರುವುದು. ನಿಮಗೆ ಸಹಾಯಕರಾಗಿ ಯಾರೂ ಇರಲಾರರು.

Verse 26

۞ فَـَٔامَنَ لَهُۥ لُوطٌ ۘ وَقَالَ إِنِّى مُهَاجِرٌ إِلَىٰ رَبِّىٓ ۖ إِنَّهُۥ هُوَ ٱلْعَزِيزُ ٱلْحَكِيمُ

Transliteration faāmana lahu lūṭun waqāla innī muhājirun ilā rabbī innahu huwa l-ʿazīzu l-ḥakīmu

Kannada ಆಗ ಲೂಥರು ಅವರಲ್ಲಿ ವಿಶ್ವಾಸವಿಟ್ಟರು. ಇಬ್ ರಾಹೀಮರು ಹೇಳಿದರು; ‘ನಾನು ನನ್ನ ಪ್ರಭುವಿ ನತ್ತ (ಅವನ್ನು ಆಜ್ಞಾಪಿಸಿದ ಸ್ಥಳಕ್ಕೆ) ಹಿಜ್ರತ್ ಹೋಗುತ್ತೇನೆ. ಅವನು ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ’.

Verse 27

وَوَهَبْنَا لَهُۥٓ إِسْحَـٰقَ وَيَعْقُوبَ وَجَعَلْنَا فِى ذُرِّيَّتِهِ ٱلنُّبُوَّةَ وَٱلْكِتَـٰبَ وَءَاتَيْنَـٰهُ أَجْرَهُۥ فِى ٱلدُّنْيَا ۖ وَإِنَّهُۥ فِى ٱلْـَٔاخِرَةِ لَمِنَ ٱلصَّـٰلِحِينَ

Transliteration wawahabnā lahu is'ḥāqa wayaʿqūba wajaʿalnā fī dhurriyyatihi l-nubuwata wal-kitāba waātaynāhu ajrahu fī l-dun'yā wa-innahu fī l-ākhirati lamina l-ṣāliḥīna

Kannada ನಾವು ಅವರಿಗೆ ಇಸ್‍ಹಾಖ್ ಮತ್ತು ಯಅïಖೂಬರನ್ನು ದಯಪಾಲಿಸಿದೆವು. ಅವರ ಸಂತತಿಯಲ್ಲಿ ಪ್ರವಾದಿತ್ವವನ್ನೂ ವೇದ ಗ್ರಂಥವನ್ನೂ ಇರಿಸಿದೆವು . ಅವರಿಗೆ ಈ ಲೋಕದಲ್ಲಿ ಅದರ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ಅವರು ಖಂಡಿತ ಸಜ್ಜನರಲ್ಲಿ ಒಬ್ಬರಾಗಿರುವರು.

Verse 28

وَلُوطًا إِذْ قَالَ لِقَوْمِهِۦٓ إِنَّكُمْ لَتَأْتُونَ ٱلْفَـٰحِشَةَ مَا سَبَقَكُم بِهَا مِنْ أَحَدٍ مِّنَ ٱلْعَـٰلَمِينَ

Transliteration walūṭan idh qāla liqawmihi innakum latatūna l-fāḥishata mā sabaqakum bihā min aḥadin mina l-ʿālamīna

Kannada ಲೂಥರನ್ನು ಸ್ಮರಿಸಿರಿ. ಅವರು ತಮ್ಮ ಜನಾಂಗಕ್ಕೆ ಹೀಗೆ ಹೇಳಿದರು, ‘ನಿಮಗಿಂತ ಮುಂಚೆ ಲೋಕವಾಸಿಗಳಲ್ಲಿ ಯಾರೂ ಮಾಡಿರದ ನೀಚ ಕಾರ್ಯವನ್ನು ನೀವು ಮಾಡುತ್ತಿದ್ದೀರಿ .

Verse 29

أَئِنَّكُمْ لَتَأْتُونَ ٱلرِّجَالَ وَتَقْطَعُونَ ٱلسَّبِيلَ وَتَأْتُونَ فِى نَادِيكُمُ ٱلْمُنكَرَ ۖ فَمَا كَانَ جَوَابَ قَوْمِهِۦٓ إِلَّآ أَن قَالُوا۟ ٱئْتِنَا بِعَذَابِ ٱللَّهِ إِن كُنتَ مِنَ ٱلصَّـٰدِقِينَ

Transliteration a-innakum latatūna l-rijāla wataqṭaʿūna l-sabīla watatūna fī nādīkumu l-munkara famā kāna jawāba qawmihi illā an qālū i'tinā biʿadhābi l-lahi in kunta mina l-ṣādiqīna

Kannada ನೀವು (ಕಾಮ ತೀರಿಸಲು) ಪುರುಷರ ಬಳಿಗೆ ಹೋಗುವುದೇ? ದಾರಿಹೋಕರನ್ನು ದರೋಡೆ ಮಾಡುವುದೇ? ನಿಮ್ಮ ಸಭೆ ಸಮಾರಂಭಗಳಲ್ಲಿ ನಿಷಿದ್ಧ ಕಾರ್ಯಕ್ರಮಗಳನ್ನು ಏರ್ಪಡಿಸುವುದೇ? ಆಗ ಅವರ ಜನಾಂಗದ ಉತ್ತರವು ‘ನೀನು ಸತ್ಯವಾದಿಯಾಗಿದ್ದರೆ ಅಲ್ಲಾಹನ ಶಿಕ್ಷೆಯನ್ನು ನಮಗೆ ತಂದು ಕೊಡು’ ಎನ್ನುವ ಹೊರತು ಬೇರೇನೂ ಆಗಿರಲಿಲ್ಲ.

Verse 30

قَالَ رَبِّ ٱنصُرْنِى عَلَى ٱلْقَوْمِ ٱلْمُفْسِدِينَ

Transliteration qāla rabbi unṣur'nī ʿalā l-qawmi l-muf'sidīna

Kannada ಲೂಥರು, ‘ನನ್ನ ಪ್ರಭೂ, ಈ ದುಷ್ಟ ಜನಾಂಗದ ವಿರುದ್ಧ ನನಗೆ ಸಹಾಯ ನೀಡು’ ಎಂದರು.

Verse 31

وَلَمَّا جَآءَتْ رُسُلُنَآ إِبْرَٰهِيمَ بِٱلْبُشْرَىٰ قَالُوٓا۟ إِنَّا مُهْلِكُوٓا۟ أَهْلِ هَـٰذِهِ ٱلْقَرْيَةِ ۖ إِنَّ أَهْلَهَا كَانُوا۟ ظَـٰلِمِينَ

Transliteration walammā jāat rusulunā ib'rāhīma bil-bush'rā qālū innā muh'likū ahli hādhihi l-qaryati inna ahlahā kānū ẓālimīna

Kannada ನಮ್ಮ ದೂತರು (ಮಲಕ್‍ಗಳು) ಇಬ್‍ರಾಹೀಮರ ಬಳಿ ಸುವಾರ್ತೆಯನ್ನು ತಂದಾಗ ಆ ದೂತರು ‘ನಾವು ಈ ನಾಡಿನ ಜನರನ್ನು ನಾಶಗೊಳಿಸಲು ಬಂದವರು, ಇದರ ನಿವಾಸಿಗಳು ಮಹಾ ಅಕ್ರಮಿಗಳಾಗಿದ್ದಾರೆ’ ಎಂದರು.

Verse 32

قَالَ إِنَّ فِيهَا لُوطًا ۚ قَالُوا۟ نَحْنُ أَعْلَمُ بِمَن فِيهَا ۖ لَنُنَجِّيَنَّهُۥ وَأَهْلَهُۥٓ إِلَّا ٱمْرَأَتَهُۥ كَانَتْ مِنَ ٱلْغَـٰبِرِينَ

Transliteration qāla inna fīhā lūṭan qālū naḥnu aʿlamu biman fīhā lanunajjiyannahu wa-ahlahu illā im'ra-atahu kānat mina l-ghābirīna

Kannada ಆಗ ಇಬ್‍ರಾಹೀಮರು, ಅಲ್ಲಿ ಲೂಥರಿದ್ದಾರಲ್ಲ! ಎಂದಾಗ ಅವರು, ‘ಅಲ್ಲಿ ಇರುವವರ ಬಗ್ಗೆ ನಾವು ಚೆನ್ನಾಗಿ ಬಲ್ಲೆವು. ನಾವು ಅವರನ್ನೂ ಅವರ ಪತ್ನಿಯ ಹೊರತು ಅವರ ಮನೆಯವರೆಲ್ಲರನ್ನೂ ರಕ್ಷಿಸುವೆವು. ಅವರ ಪತ್ನಿ ನಾಶಕ್ಕೆ ಬಲಿಯಾಗುವವರಲ್ಲಿ ಸೇರಿರುವಳು’ ಎಂದು ಹೇಳಿದರು.

Verse 33

وَلَمَّآ أَن جَآءَتْ رُسُلُنَا لُوطًا سِىٓءَ بِهِمْ وَضَاقَ بِهِمْ ذَرْعًا وَقَالُوا۟ لَا تَخَفْ وَلَا تَحْزَنْ ۖ إِنَّا مُنَجُّوكَ وَأَهْلَكَ إِلَّا ٱمْرَأَتَكَ كَانَتْ مِنَ ٱلْغَـٰبِرِينَ

Transliteration walammā an jāat rusulunā lūṭan sīa bihim waḍāqa bihim dharʿan waqālū lā takhaf walā taḥzan innā munajjūka wa-ahlaka illā im'ra-ataka kānat mina l-ghābirīna

Kannada ನಮ್ಮ ದೂತರು ಲೂಥರ ಬಳಿಗೆ ತಲುಪಿದಾಗ ಅವರ ಬಗ್ಗೆ ಲೂಥರು ಕಳವಳಗೊಂಡರು. ಅವರ ಹೃದಯ ಇಕ್ಕಟ್ಟಾಯಿತು. ಆಗ ಅವರು ಹೇಳಿದರು; ‘ಹೆದರಬೇಡಿರಿ, ವ್ಯಥೆ ಪಡಬೇಡಿರಿ. ನಾಶಕ್ಕೆ ಬಲಿಯಾಗುವವರಲ್ಲಿ ಸೇರಿರುವ ನಿಮ್ಮ ಪತ್ನಿಯ ಹೊರತು ನಿಮ್ಮನ್ನೂ ನಿಮ್ಮ ಮನೆಯ ವರನ್ನೂ ನಾವು ರಕ್ಷಿಸಲಿದ್ದೇವೆ.

Verse 34

إِنَّا مُنزِلُونَ عَلَىٰٓ أَهْلِ هَـٰذِهِ ٱلْقَرْيَةِ رِجْزًا مِّنَ ٱلسَّمَآءِ بِمَا كَانُوا۟ يَفْسُقُونَ

Transliteration innā munzilūna ʿalā ahli hādhihi l-qaryati rij'zan mina l-samāi bimā kānū yafsuqūna

Kannada ಇವರು ಮಾಡುವ ನೀಚ ಪ್ರವೃತ್ತಿಯ ಕಾರಣ ನಾವು ಈ ನಾಡಿನವರ ಮೇಲೆ ಆಕಾಶದಿಂದ ಇಂದು ಶಿಕ್ಷೆಯನ್ನು ಇಳಿಸುವವರಿದ್ದೇವೆ’

Verse 35

وَلَقَد تَّرَكْنَا مِنْهَآ ءَايَةًۢ بَيِّنَةً لِّقَوْمٍ يَعْقِلُونَ

Transliteration walaqad taraknā min'hā āyatan bayyinatan liqawmin yaʿqilūna

Kannada ಯೋಚಿಸುವ ಜನರಿಗಾಗಿ ಒಂದು ಬಹಿರಂಗ ನಿದರ್ಶನವನ್ನು ಅಲ್ಲಿ ನಾವು ಉಳಿಸಿ ಬಿಟ್ಟಿರುತ್ತೇವೆ.

Verse 36

وَإِلَىٰ مَدْيَنَ أَخَاهُمْ شُعَيْبًا فَقَالَ يَـٰقَوْمِ ٱعْبُدُوا۟ ٱللَّهَ وَٱرْجُوا۟ ٱلْيَوْمَ ٱلْـَٔاخِرَ وَلَا تَعْثَوْا۟ فِى ٱلْأَرْضِ مُفْسِدِينَ

Transliteration wa-ilā madyana akhāhum shuʿayban faqāla yāqawmi uʿ'budū l-laha wa-ir'jū l-yawma l-ākhira walā taʿthaw fī l-arḍi muf'sidīna

Kannada ಮದ್‍ಯನ್‍ನ ಕಡೆಗೆ ಅವರ ಸಹೋದರ ಶುಐಬರನ್ನು ನಾವು ನಿಯೋಗಿಸಿದೆವು. ಅವರು, ‘ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅಂತಿಮ ದಿನವನ್ನು ಹಂಬಲಿಸಿರಿ. ಭೂಮಿಯಲ್ಲಿ ದುಷ್ಟರಾಗಿ ಗೊಂದಲ ನಿರ್ಮಿಸ ಬೇಡಿರಿ’ ಎಂದರು.

Verse 37

فَكَذَّبُوهُ فَأَخَذَتْهُمُ ٱلرَّجْفَةُ فَأَصْبَحُوا۟ فِى دَارِهِمْ جَـٰثِمِينَ

Transliteration fakadhabūhu fa-akhadhathumu l-rajfatu fa-aṣbaḥū fī dārihim jāthimīna

Kannada ಆದರೆ ಅವರು ಇವರನ್ನು ಸುಳ್ಳಾಗಿಸಿದರು. ಕೊನೆಗೆ ಒಂದು ಪ್ರಚಂಡ ಭೂಕಂಪವು ಅವರಿಗೆ ಬಾಧಿಸಿತು. ಆಗ ಅವರು ತಮ್ಮ ಮನೆಗಳಲ್ಲಿ ಮಂಡಿಯೂರಿ ಸತ್ತು ಬಿದ್ದರು.

Verse 38

وَعَادًا وَثَمُودَا۟ وَقَد تَّبَيَّنَ لَكُم مِّن مَّسَـٰكِنِهِمْ ۖ وَزَيَّنَ لَهُمُ ٱلشَّيْطَـٰنُ أَعْمَـٰلَهُمْ فَصَدَّهُمْ عَنِ ٱلسَّبِيلِ وَكَانُوا۟ مُسْتَبْصِرِينَ

Transliteration waʿādan wathamūdā waqad tabayyana lakum min masākinihim wazayyana lahumu l-shayṭānu aʿmālahum faṣaddahum ʿani l-sabīli wakānū mus'tabṣirīna

Kannada ಆದ್ ಮತ್ತು ಸಮೂದರನ್ನು ನಾವು ನಾಶ ಮಾಡಿದ್ದೇವೆ. ಅವರ ವಾಸ ಸ್ಥಳಗಳಿಂದಲೇ ನಿಮಗದು ಸ್ಪಷ್ಟವಾಗಿದೆ. ಅವರ ಕರ್ಮಗಳನ್ನು ಶೈತಾನನು ಅವರಿಗೆ ಚಂದಗಾಣಿಸಿ ಕೊಟ್ಟನು. ಹಾಗೆ ಅವರನ್ನು ನೇರ ಮಾರ್ಗದಿಂದ ತಡೆದನು. ನಿಜದಲ್ಲಿ ಅವರು ಯೋಚಿಸಿ ಅರ್ಥ ಮಾಡಿ ಕೊಳ್ಳಲು ಸಮರ್ಥರಾಗಿದ್ದರು. (ಆದರೆ ಹಾಗೆ ಮಾಡಲಿಲ್ಲ).

Verse 39

وَقَـٰرُونَ وَفِرْعَوْنَ وَهَـٰمَـٰنَ ۖ وَلَقَدْ جَآءَهُم مُّوسَىٰ بِٱلْبَيِّنَـٰتِ فَٱسْتَكْبَرُوا۟ فِى ٱلْأَرْضِ وَمَا كَانُوا۟ سَـٰبِقِينَ

Transliteration waqārūna wafir'ʿawna wahāmāna walaqad jāahum mūsā bil-bayināti fa-is'takbarū fī l-arḍi wamā kānū sābiqīna

Kannada ಖಾರೂನ್, ಫಿರ್‍ಔನ್ ಹಾಗೂ ಹಾಮಾನರನ್ನೂ ನಾವು ನಾಶಗೊಳಿಸಿದ್ದೇವೆ. ಅವರ ಬಳಿಗೆ ಪ್ರತ್ಯಕ್ಷ ಪ್ರಮಾಣಗಳೊಂದಿಗೆ ಮೂಸಾ ಬಂದಿದ್ದರು. ಆದರೆ ಅವರು ಭೂಮಿಯಲ್ಲಿ ದುರಹಂಕಾರವನ್ನು ಮೆರೆದರು. (ಆದರೆ ನಮ್ಮ ಶಿಕ್ಷೆಯಿಂದ) ಅವರು ಓಡಿ ತಪ್ಪಿಸುವವರಾಗಿರಲಿಲ್ಲ.

Verse 40

فَكُلًّا أَخَذْنَا بِذَنۢبِهِۦ ۖ فَمِنْهُم مَّنْ أَرْسَلْنَا عَلَيْهِ حَاصِبًا وَمِنْهُم مَّنْ أَخَذَتْهُ ٱلصَّيْحَةُ وَمِنْهُم مَّنْ خَسَفْنَا بِهِ ٱلْأَرْضَ وَمِنْهُم مَّنْ أَغْرَقْنَا ۚ وَمَا كَانَ ٱللَّهُ لِيَظْلِمَهُمْ وَلَـٰكِن كَانُوٓا۟ أَنفُسَهُمْ يَظْلِمُونَ

Transliteration fakullan akhadhnā bidhanbihi famin'hum man arsalnā ʿalayhi ḥāṣiban wamin'hum man akhadhathu l-ṣayḥatu wamin'hum man khasafnā bihi l-arḍa wamin'hum man aghraqnā wamā kāna l-lahu liyaẓlimahum walākin kānū anfusahum yaẓlimūna

Kannada ಆದ್ದರಿಂದ ನಾವು ಅವರೆಲ್ಲರನ್ನೂ ಅವರ ಪಾಪ ಗಳಿಗಾಗಿ ಹಿಡಿದು ಶಿಕ್ಷಿಸಿದೆವು. ನಾವು ಅವರಲ್ಲಿ ಕೆಲವರ ಮೇಲೆ ಸುಂಟರಗಾಳಿಯನ್ನು ಬೀಸಿ ದೆವು. ಕೆಲವರ ಮೇಲೆ ಘೋರ ಅಟ್ಟಹಾಸವು ಬಂದೆರಗಿತು. ಮತ್ತೆ ಕೆಲವರನ್ನು ನಾವು ಭೂಮಿ ಯಲ್ಲಿ ಹುದುಗಿಸಿದೆವು. ಬೇರೆ ಕೆಲವರನ್ನು ನೀರಿನಲ್ಲಿ ಮುಳುಗಿಸಿ ಕೊಂದೆವು. ಅಲ್ಲಾಹು ಅವರ ಮೇಲೆ ಅಕ್ರಮವೆಸಗಿಲ್ಲ. ಆದರೆ ಅವರು ತಮಗೆ ತಾವೇ ಅಕ್ರಮವೆಸಗುವವರಾಗಿದ್ದರು.

Verse 41

مَثَلُ ٱلَّذِينَ ٱتَّخَذُوا۟ مِن دُونِ ٱللَّهِ أَوْلِيَآءَ كَمَثَلِ ٱلْعَنكَبُوتِ ٱتَّخَذَتْ بَيْتًا ۖ وَإِنَّ أَوْهَنَ ٱلْبُيُوتِ لَبَيْتُ ٱلْعَنكَبُوتِ ۖ لَوْ كَانُوا۟ يَعْلَمُونَ

Transliteration mathalu alladhīna ittakhadhū min dūni l-lahi awliyāa kamathali l-ʿankabūti ittakhadhat baytan wa-inna awhana l-buyūti labaytu l-ʿankabūti law kānū yaʿlamūna

Kannada ಅಲ್ಲಾಹನನ್ನು ಬಿಟ್ಟು ಬೇರೆ ವಸ್ತುಗಳನ್ನು ಆರಾಧ್ಯರನ್ನಾಗಿ ಮಾಡಿಕೊಂಡವರ ಉದಾಹರಣೆಯು ಬಲೆಯಿಂದ ಮನೆ ಕಟ್ಟುವ ಜೇಡರ ಹುಳುವಿನಂತಿದೆ. ಮನೆಗಳ ಪೈಕಿ ಜೇಡರ ಹುಳುವಿನ ಮನೆಯು ಅತ್ಯಂತ ದುರ್ಬಲ. ಇವರು ಅರಿತವರಾಗಿದ್ದರೆ ಅಲ್ಲಾಹನ ಹೊರತು ಬೇರೆಯವರನ್ನು ದೇವರನ್ನಾಗಿ ಮಾಡುತ್ತಿರಲಿಲ್ಲ.

Verse 42

إِنَّ ٱللَّهَ يَعْلَمُ مَا يَدْعُونَ مِن دُونِهِۦ مِن شَىْءٍ ۚ وَهُوَ ٱلْعَزِيزُ ٱلْحَكِيمُ

Transliteration inna l-laha yaʿlamu mā yadʿūna min dūnihi min shayin wahuwa l-ʿazīzu l-ḥakīmu

Kannada ಅಲ್ಲಾಹನನ್ನು ಬಿಟ್ಟು ಅವರು ಆರಾಧಿಸುವ ಯಾವುದೇ ವಸ್ತುವಿರಲಿ, ಅಲ್ಲಾಹು ಅದನ್ನು ಚೆನ್ನಾಗಿ ತಿಳಿದಿರುತ್ತಾನೆ. ಅವನೇ ಪ್ರತಾಪನೂ ಯುಕ್ತಿಪೂರ್ಣನೂ ಆಗಿರುತ್ತಾನೆ.

Verse 43

وَتِلْكَ ٱلْأَمْثَـٰلُ نَضْرِبُهَا لِلنَّاسِ ۖ وَمَا يَعْقِلُهَآ إِلَّا ٱلْعَـٰلِمُونَ

Transliteration watil'ka l-amthālu naḍribuhā lilnnāsi wamā yaʿqiluhā illā l-ʿālimūna

Kannada ಈ ಉಪಮೆಗಳನ್ನು ನಾವು ಜನರಿಗಾಗಿ ನಿರೂಪಿ ಸುತ್ತಿದ್ದೇವೆ. ಆದರೆ, ಬಲ್ಲಿದರಲ್ಲದೆ ಅದನ್ನು ಯೋಚಿಸಿ ಗ್ರಹಿಸಲಾರರು.

Verse 44

خَلَقَ ٱللَّهُ ٱلسَّمَـٰوَٰتِ وَٱلْأَرْضَ بِٱلْحَقِّ ۚ إِنَّ فِى ذَٰلِكَ لَـَٔايَةً لِّلْمُؤْمِنِينَ

Transliteration khalaqa l-lahu l-samāwāti wal-arḍa bil-ḥaqi inna fī dhālika laāyatan lil'mu'minīna

Kannada ಅಲ್ಲಾಹನು ಭೂಮಿ-ಆಕಾಶಗಳನ್ನು ಸತ್ಯ ಪೂರ್ಣವಾಗಿ ಸೃಷ್ಟಿಸಿದನು. ನಿಜಕ್ಕೂ ಇದರಲ್ಲಿ ಸತ್ಯವಿಶ್ವಾಸಿಗಳಿಗೆ ದೊಡ್ಡ ನಿದರ್ಶನವಿದೆ.

Verse 45

ٱتْلُ مَآ أُوحِىَ إِلَيْكَ مِنَ ٱلْكِتَـٰبِ وَأَقِمِ ٱلصَّلَوٰةَ ۖ إِنَّ ٱلصَّلَوٰةَ تَنْهَىٰ عَنِ ٱلْفَحْشَآءِ وَٱلْمُنكَرِ ۗ وَلَذِكْرُ ٱللَّهِ أَكْبَرُ ۗ وَٱللَّهُ يَعْلَمُ مَا تَصْنَعُونَ

Transliteration ut'lu mā ūḥiya ilayka mina l-kitābi wa-aqimi l-ṣalata inna l-ṣalata tanhā ʿani l-faḥshāi wal-munkari waladhik'ru l-lahi akbaru wal-lahu yaʿlamu mā taṣnaʿūna

Kannada (ಪೈಗಂಬರರೇ) ನಿಮ್ಮ ಕಡೆಗೆ ಸಂದೇಶ ನೀಡ ಲಾದ ಖುರ್‍ಆನ್ ಗ್ರಂಥವನ್ನು ಪಠಿಸಿರಿ, ನಮಾಝನ್ನು ಸಂಸ್ಥಾಪಿಸಿರಿ. ನಿಜಕ್ಕೂ ನಮಾಝ್ ದುಷ್ಕøತ್ಯ ಹಾಗೂ ನಿಷಿದ್ಧ ಕರ್ಮಗಳಿಂದ ತಡೆಯುತ್ತದೆ. ಅಲ್ಲಾಹನ ಸ್ಮರಣೆ ಎಲ್ಲಕ್ಕಿಂತಲೂ ದೊಡ್ಡದು. ನೀವು ಮಾಡುತ್ತಿರುವುದನ್ನು ಅಲ್ಲಾಹನು ಅರಿಯುತ್ತಾನೆ.

Verse 46

۞ وَلَا تُجَـٰدِلُوٓا۟ أَهْلَ ٱلْكِتَـٰبِ إِلَّا بِٱلَّتِى هِىَ أَحْسَنُ إِلَّا ٱلَّذِينَ ظَلَمُوا۟ مِنْهُمْ ۖ وَقُولُوٓا۟ ءَامَنَّا بِٱلَّذِىٓ أُنزِلَ إِلَيْنَا وَأُنزِلَ إِلَيْكُمْ وَإِلَـٰهُنَا وَإِلَـٰهُكُمْ وَٰحِدٌ وَنَحْنُ لَهُۥ مُسْلِمُونَ

Transliteration walā tujādilū ahla l-kitābi illā bi-allatī hiya aḥsanu illā alladhīna ẓalamū min'hum waqūlū āmannā bi-alladhī unzila ilaynā wa-unzila ilaykum wa-ilāhunā wa-ilāhukum wāḥidun wanaḥnu lahu mus'limūna

Kannada ನೀವು ಗ್ರಂಥದವರೊಡನೆ ಅತ್ಯಂತ ಉತ್ತಮ ರೀತಿಯಿಂದಲೇ ಹೊರತು ಸಂವಾದ ನಡೆಸಬೇಡಿರಿ. ಆದರೆ ಅವರ ಪೈಕಿ ಅಕ್ರಮಿಗಳೊಡನೆ ಹೊರತು. ನೀವು ಹೇಳಿರಿ: ‘ನಮ್ಮ ಕಡೆಗೆ ಇಳಿಸಲಾಗಿರುವುದರ ಮೇಲೂ ನಿಮ್ಮ ಕಡೆಗೆ ಇಳಿಸಲಾಗಿದ್ದುದರ ಮೇಲೂ ನಾವು ವಿಶ್ವಾಸವಿರಿಸಿದ್ದೇವೆ. ನಮ್ಮ ಆರಾಧ್ಯನೂ ನಿಮ್ಮ ಆರಾಧ್ಯನೂ ಒಬ್ಬನೇ ಆಗಿದ್ದು ನಾವು ಅವನಿಗೆ ವಿಧೇಯರೂ (ಮುಸ್ಲಿಮರೂ) ಆಗಿರುತ್ತೇವೆ’.

Verse 47

وَكَذَٰلِكَ أَنزَلْنَآ إِلَيْكَ ٱلْكِتَـٰبَ ۚ فَٱلَّذِينَ ءَاتَيْنَـٰهُمُ ٱلْكِتَـٰبَ يُؤْمِنُونَ بِهِۦ ۖ وَمِنْ هَـٰٓؤُلَآءِ مَن يُؤْمِنُ بِهِۦ ۚ وَمَا يَجْحَدُ بِـَٔايَـٰتِنَآ إِلَّا ٱلْكَـٰفِرُونَ

Transliteration wakadhālika anzalnā ilayka l-kitāba fa-alladhīna ātaynāhumu l-kitāba yu'minūna bihi wamin hāulāi man yu'minu bihi wamā yajḥadu biāyātinā illā l-kāfirūna

Kannada ಇದೇ ರೀತಿಯಲ್ಲಿ ನಿಮ್ಮ ಕಡೆಗೆ ನಾವು ಈ ಗ್ರಂಥವನ್ನು (ಖುರ್‍ಆನ್) ಅವತೀರ್ಣಗೊಳಿಸಿದ್ದೇವೆ. ನಾವು ಯಾರಿಗೆ ಗ್ರಂಥ ನೀಡಿದ್ದೇವೋ ಅವರು (ಅರ್ಥಾತ್ ಗ್ರಂಥವನ್ನು ನಿಜವೆಂದು ಅಂಗೀಕರಿಸಿದವರು) ಇದರ ಮೇಲೆ ವಿಶ್ವಾಸವಿರಿಸುತ್ತಾರೆ. ಇವರಲ್ಲೂ (ಅರಬರಲ್ಲೂ) ಅನೇಕರು ಇದರ ಮೇಲೆ ವಿಶ್ವಾಸವಿರಿಸುತ್ತಾರೆ. ಕೇವಲ ಸತ್ಯನಿಷೇಧಿಗಳು ಮಾತ್ರ ನಮ್ಮ ದೃಷ್ಟಾಂತಗಳನ್ನು ಅಂಧವಾಗಿ ನಿಷೇಧಿಸುತ್ತಾರೆ .

Verse 48

وَمَا كُنتَ تَتْلُوا۟ مِن قَبْلِهِۦ مِن كِتَـٰبٍ وَلَا تَخُطُّهُۥ بِيَمِينِكَ ۖ إِذًا لَّٱرْتَابَ ٱلْمُبْطِلُونَ

Transliteration wamā kunta tatlū min qablihi min kitābin walā takhuṭṭuhu biyamīnika idhan la-ir'tāba l-mub'ṭilūna

Kannada ಖುರ್‍ಆನ್ ಲಭಿಸುವ ಮುಂಚೆ ನೀವು ಯಾವುದೇ ಗ್ರಂಥ ಪಠಿಸುತ್ತಿರಲಿಲ್ಲ. ನಿಮ್ಮ ಕೈಯಿಂದ ಬರೆಯುತ್ತಲೂ ಇರಲಿಲ್ಲ. ಹಾಗಾಗಿರುತ್ತಿದ್ದರೆ ಮಿಥ್ಯವಾದಿಗಳು ಸಂಶಯಪಡುತ್ತಿದ್ದರು.

Verse 49

بَلْ هُوَ ءَايَـٰتٌۢ بَيِّنَـٰتٌ فِى صُدُورِ ٱلَّذِينَ أُوتُوا۟ ٱلْعِلْمَ ۚ وَمَا يَجْحَدُ بِـَٔايَـٰتِنَآ إِلَّا ٱلظَّـٰلِمُونَ

Transliteration bal huwa āyātun bayyinātun fī ṣudūri alladhīna ūtū l-ʿil'ma wamā yajḥadu biāyātinā illā l-ẓālimūna

Kannada ಆದರೆ ಯಾರಿಗೆ ಜ್ಞಾನ ನೀಡಲ್ಪಟ್ಟಿರುವುದೋ ಅವರ ಹೃದಯಗಳಲ್ಲಿ ಈ ಖುರ್‍ಆನ್ ಪ್ರತ್ಯಕ್ಷ ವಾಗಿರುವ ಪುರಾವೆಗಳಾಗಿವೆ . ಅಕ್ರಮಿಗಳ ಹೊರತು ಇನ್ಯಾರೂ ನಮ್ಮ ಪುರಾವೆಗಳನ್ನು ನಿಷೇಧಿಸುವುದಿಲ್ಲ.

Verse 50

وَقَالُوا۟ لَوْلَآ أُنزِلَ عَلَيْهِ ءَايَـٰتٌ مِّن رَّبِّهِۦ ۖ قُلْ إِنَّمَا ٱلْـَٔايَـٰتُ عِندَ ٱللَّهِ وَإِنَّمَآ أَنَا۠ نَذِيرٌ مُّبِينٌ

Transliteration waqālū lawlā unzila ʿalayhi āyātun min rabbihi qul innamā l-āyātu ʿinda l-lahi wa-innamā anā nadhīrun mubīnun

Kannada ಸತ್ಯನಿಷೇಧಿಗಳು ಕೇಳಿದರು, ‘ಇವನ ಪ್ರಭುವಿ ನಿಂದ ಇವನ ಮೇಲೆ ನಿದರ್ಶನಗಳೇಕೆ ಇಳಿಸಲಾಗಿಲ್ಲ?’ ಹೇಳಿರಿ, ‘ನಿದರ್ಶನಗಳು ಕೇವಲ ಅಲ್ಲಾಹನ ಬಳಿ ಇವೆ. ನಾನು ಕೇವಲ ಸ್ಪಷ್ಟವಾದ ಎಚ್ಚರಿಕೆ ನೀಡುವವನು ಮಾತ್ರ’.

Verse 51

أَوَلَمْ يَكْفِهِمْ أَنَّآ أَنزَلْنَا عَلَيْكَ ٱلْكِتَـٰبَ يُتْلَىٰ عَلَيْهِمْ ۚ إِنَّ فِى ذَٰلِكَ لَرَحْمَةً وَذِكْرَىٰ لِقَوْمٍ يُؤْمِنُونَ

Transliteration awalam yakfihim annā anzalnā ʿalayka l-kitāba yut'lā ʿalayhim inna fī dhālika laraḥmatan wadhik'rā liqawmin yu'minūna

Kannada ಇವರಿಗೆ ಓದಿ ಹೇಳಲಾಗುತ್ತಿರುವ ಈ ಗ್ರಂಥ ವನ್ನು ನಿಮ್ಮ ಮೇಲೆ ನಾವು ಅವತೀರ್ಣಗೊಳಿಸಿ ಕೊಟ್ಟಿರುವುದು ಇವರಿಗೆ ನಿದರ್ಶನಕ್ಕೆ ಸಾಲದೇ? ನಿಶ್ಚಯವಾಗಿ ಸತ್ಯವಿಶ್ವಾಸವಿರಿಸುವವರಿಗೆ ಇದರಲ್ಲಿ ಕಾರುಣ್ಯ ಹಾಗೂ ಉಪದೇಶವಿದೆ.

Verse 52

قُلْ كَفَىٰ بِٱللَّهِ بَيْنِى وَبَيْنَكُمْ شَهِيدًا ۖ يَعْلَمُ مَا فِى ٱلسَّمَـٰوَٰتِ وَٱلْأَرْضِ ۗ وَٱلَّذِينَ ءَامَنُوا۟ بِٱلْبَـٰطِلِ وَكَفَرُوا۟ بِٱللَّهِ أُو۟لَـٰٓئِكَ هُمُ ٱلْخَـٰسِرُونَ

Transliteration qul kafā bil-lahi baynī wabaynakum shahīdan yaʿlamu mā fī l-samāwāti wal-arḍi wa-alladhīna āmanū bil-bāṭili wakafarū bil-lahi ulāika humu l-khāsirūna

Kannada ತಾವು ಹೇಳಿರಿ, ‘ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಅವನು ಭೂಮಿ-ಆಕಾಶಗಳಲ್ಲಿರುವ ಎಲ್ಲವನ್ನೂ ಬಲ್ಲವನು. ಮಿಥ್ಯವನ್ನು ನಂಬುವ ಮತ್ತು ಅಲ್ಲಾಹ ನನ್ನು ನಿಷೇಧಿಸುವ ಜನರೇ ನಷ್ಟವಂತರು’.

Verse 53

وَيَسْتَعْجِلُونَكَ بِٱلْعَذَابِ ۚ وَلَوْلَآ أَجَلٌ مُّسَمًّى لَّجَآءَهُمُ ٱلْعَذَابُ وَلَيَأْتِيَنَّهُم بَغْتَةً وَهُمْ لَا يَشْعُرُونَ

Transliteration wayastaʿjilūnaka bil-ʿadhābi walawlā ajalun musamman lajāahumu l-ʿadhābu walayatiyannahum baghtatan wahum lā yashʿurūna

Kannada ಇವರು ತಮ್ಮಲ್ಲಿ ಶಿಕ್ಷೆಗಾಗಿ ದುಡುಕುತ್ತಾರೆ. ಒಂದು ನಿರ್ಧಿಷ್ಟ ಅವಧಿ ಇಲ್ಲದಿರುತ್ತಿದ್ದರೆ ಇವರಿಗೆ ಶಿಕ್ಷೆ ಕೂಡಲೇ ಬಂದು ಬಿಡುತ್ತಿತ್ತು. ಅವರಿಗೆ ಸುಳಿವೇ ಇಲ್ಲದ ರೂಪದಲ್ಲಿ ಆ ಶಿಕ್ಷೆ ಹಠಾತ್ತಾಗಿ ಬಂದೇ ತೀರುವುದು.

Verse 54

يَسْتَعْجِلُونَكَ بِٱلْعَذَابِ وَإِنَّ جَهَنَّمَ لَمُحِيطَةٌۢ بِٱلْكَـٰفِرِينَ

Transliteration yastaʿjilūnaka bil-ʿadhābi wa-inna jahannama lamuḥīṭatun bil-kāfirīna

Kannada ಇವರು ತಮ್ಮಲ್ಲಿ ಶಿಕ್ಷೆಗಾಗಿ ದುಡುಕುತ್ತಾರೆ. ಖಂಡಿತ, ನರಕವು ಸತ್ಯನಿಷೇಧಿಗಳನ್ನು ಸುತ್ತು ವರಿದಿದೆ.

Verse 55

يَوْمَ يَغْشَىٰهُمُ ٱلْعَذَابُ مِن فَوْقِهِمْ وَمِن تَحْتِ أَرْجُلِهِمْ وَيَقُولُ ذُوقُوا۟ مَا كُنتُمْ تَعْمَلُونَ

Transliteration yawma yaghshāhumu l-ʿadhābu min fawqihim wamin taḥti arjulihim wayaqūlu dhūqū mā kuntum taʿmalūna

Kannada ಇವರ ಮೇಲ್ಭಾಗದಿಂದಲೂ ಕಾಲಿನಡಿಯಿಂದಲೂ ಶಿಕ್ಷೆ ಅವರನ್ನು ಆವರಿಸಿಕೊಳ್ಳುವ ದಿನ (ಅದು ಸಂಭವಿಸುವುದು). ‘ನೀವು ಮಾಡುತ್ತಿದ್ದ ಕರ್ಮಗಳ ಫಲವುಣ್ಣಿರಿ’ ಎಂದು ಅಲ್ಲಾಹು ಹೇಳುವನು.

Verse 56

يَـٰعِبَادِىَ ٱلَّذِينَ ءَامَنُوٓا۟ إِنَّ أَرْضِى وَٰسِعَةٌ فَإِيَّـٰىَ فَٱعْبُدُونِ

Transliteration yāʿibādiya alladhīna āmanū inna arḍī wāsiʿatun fa-iyyāya fa-uʿ'budūni

Kannada ಸತ್ಯವಿಶ್ವಾಸಿಗಳಾದ ಓ ನನ್ನ ದಾಸರೇ, ಖಂಡಿತ ನನ್ನ ಭೂಮಿ ವಿಶಾಲವಾಗಿದೆ. ಆದುದರಿಂದ (ಎತ್ತ ಹೋದರೂ) ನೀವು ನನ್ನನ್ನೇ ಆರಾಧಿಸಿರಿ.

Verse 57

كُلُّ نَفْسٍ ذَآئِقَةُ ٱلْمَوْتِ ۖ ثُمَّ إِلَيْنَا تُرْجَعُونَ

Transliteration kullu nafsin dhāiqatu l-mawti thumma ilaynā tur'jaʿūna

Kannada ಪ್ರತಿಯೊಂದು ಜೀವಿಯೂ ಮರಣದ ರುಚಿಯುಣ್ಣಲಿದೆ. ತರುವಾಯ ನಿಮ್ಮನ್ನು ನಮ್ಮ ಕಡೆಗೆ ಮರಳಿಸಲಾಗುವುದು.

Verse 58

وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَنُبَوِّئَنَّهُم مِّنَ ٱلْجَنَّةِ غُرَفًا تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا ۚ نِعْمَ أَجْرُ ٱلْعَـٰمِلِينَ

Transliteration wa-alladhīna āmanū waʿamilū l-ṣāliḥāti lanubawwi-annahum mina l-janati ghurafan tajrī min taḥtihā l-anhāru khālidīna fīhā niʿ'ma ajru l-ʿāmilīna

Kannada ಸತ್ಯವಿಶ್ವಾಸ ಸ್ವೀಕಾರ ಮಾಡಿದ ಹಾಗೂ ಸತ್ಕರ್ಮ ವೆಸಗಿದ ಜನರನ್ನು ಸ್ವರ್ಗದ ಕೊಠಡಿಗಳಲ್ಲಿ ನಾವು ವಾಸ್ತವ್ಯಗೊಳಿಸುವೆವು. ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುತ್ತವೆ. ಅಲ್ಲಿ ಅವರು ಸದಾಕಾಲ ನೆಲೆಸುವರು. ಸತ್ಕರ್ಮವೆಸಗುವವರಿಗೆ ಲಭಿಸುವ ಸತ್ಪಲ ಅದೆಷ್ಟು ಉತ್ಕøಷ್ಟ !

Verse 59

ٱلَّذِينَ صَبَرُوا۟ وَعَلَىٰ رَبِّهِمْ يَتَوَكَّلُونَ

Transliteration alladhīna ṣabarū waʿalā rabbihim yatawakkalūna

Kannada ಅವರು ಕಷ್ಟಗಳನ್ನು ಸಹಿಸಿದವರು. ತಮ್ಮ ಪ್ರಭುವಿನ ಮೇಲೆ ಎಲ್ಲವನ್ನು ಅರ್ಪಿಸುವರು .

Verse 60

وَكَأَيِّن مِّن دَآبَّةٍ لَّا تَحْمِلُ رِزْقَهَا ٱللَّهُ يَرْزُقُهَا وَإِيَّاكُمْ ۚ وَهُوَ ٱلسَّمِيعُ ٱلْعَلِيمُ

Transliteration waka-ayyin min dābbatin lā taḥmilu riz'qahā l-lahu yarzuquhā wa-iyyākum wahuwa l-samīʿu l-ʿalīmu

Kannada ತಮ್ಮ ಆಹಾರವನ್ನು ತೆಗೆದಿರಿಸಲಾಗದ ಎಷ್ಟೋ ಪ್ರಾಣಿಗಳಿವೆ. ಅಲ್ಲಾಹನು ಅವುಗಳಿಗೂ ನಿಮಗೂ ಆಹಾರ ಕೊಡುತ್ತಿದ್ದಾನೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

Verse 61

وَلَئِن سَأَلْتَهُم مَّنْ خَلَقَ ٱلسَّمَـٰوَٰتِ وَٱلْأَرْضَ وَسَخَّرَ ٱلشَّمْسَ وَٱلْقَمَرَ لَيَقُولُنَّ ٱللَّهُ ۖ فَأَنَّىٰ يُؤْفَكُونَ

Transliteration wala-in sa-altahum man khalaqa l-samāwāti wal-arḍa wasakhara l-shamsa wal-qamara layaqūlunna l-lahu fa-annā yu'fakūna

Kannada ಭೂಮಿ-ಆಕಾಶಗಳನ್ನು ಸೃಷ್ಟಿಸಿದವನು ಮತ್ತು ಸೂರ್ಯ-ಚಂದ್ರರನ್ನು ನಿಯಂತ್ರಿಸುವವನು ಯಾರೆಂದು ತಾವು ಇವರಲ್ಲಿ (ಬಹು ದೇವಾರಾ ಧಕರಲ್ಲಿ) ಕೇಳಿದರೆ `ಅಲ್ಲಾಹನು’ ಎಂದು ಇವರು ಖಂಡಿತ ಹೇಳುವರು’ ಹಾಗಾದರೆ ಇವರನ್ನು ಹೇಗೆ (ತೌಹೀದ್ ನಿಂದ) ತಿರುಗಿಸಲಾಗುತ್ತಿದೆ?

Verse 62

ٱللَّهُ يَبْسُطُ ٱلرِّزْقَ لِمَن يَشَآءُ مِنْ عِبَادِهِۦ وَيَقْدِرُ لَهُۥٓ ۚ إِنَّ ٱللَّهَ بِكُلِّ شَىْءٍ عَلِيمٌ

Transliteration al-lahu yabsuṭu l-riz'qa liman yashāu min ʿibādihi wayaqdiru lahu inna l-laha bikulli shayin ʿalīmun

Kannada ಅಲ್ಲಾಹನು ತನ್ನ ದಾಸರ ಪೈಕಿ, ತಾನಿಚ್ಛಿಸಿ ದವರಿಗೆ ಆಹಾರವನ್ನು ವಿಸ್ತøತಗೊಳಿಸುತ್ತಾನೆ. ತಾನಿಚ್ಚಿಸಿದವರಿಗೆ ಕಡಿತಗೊಳಿಸುತ್ತಾನೆ. ನಿಶ್ಚಯವಾಗಿ ಅಲ್ಲಾಹು ಸಕಲ ವಸ್ತುಗಳನ್ನು ಬಲ್ಲವನಾಗಿದ್ದಾನೆ.

Verse 63

وَلَئِن سَأَلْتَهُم مَّن نَّزَّلَ مِنَ ٱلسَّمَآءِ مَآءً فَأَحْيَا بِهِ ٱلْأَرْضَ مِنۢ بَعْدِ مَوْتِهَا لَيَقُولُنَّ ٱللَّهُ ۚ قُلِ ٱلْحَمْدُ لِلَّهِ ۚ بَلْ أَكْثَرُهُمْ لَا يَعْقِلُونَ

Transliteration wala-in sa-altahum man nazzala mina l-samāi māan fa-aḥyā bihi l-arḍa min baʿdi mawtihā layaqūlunna l-lahu quli l-ḥamdu lillahi bal aktharuhum lā yaʿqilūna

Kannada ಆಕಾಶದಿಂದ ನೀರನ್ನು ಸುರಿಸಿ, ಅದರ ಮೂಲಕ, ನಿರ್ಜೀವಗೊಂಡು ಬಿದ್ದಿರುವ ಭೂಮಿಯನ್ನು ಸಜೀವಗೊಳಿಸಿದವನು ಯಾರೆಂದು ತಾವು ಇವರಲ್ಲಿ ಕೇಳಿದರೆ, ಇವರು `ಅಲ್ಲಾಹು’ ಎಂದು ಖಂಡಿತ ಹೇಳುವರು. ತಾವು ಹೇಳಿರಿ; ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು. ಆದರೆ ಇವರಲ್ಲಿ ಹೆಚ್ಚಿನವರು ಬುದ್ಧಿ ಕೊಟ್ಟು ಚಿಂತಿಸುವುದಿಲ್ಲ.

Verse 64

وَمَا هَـٰذِهِ ٱلْحَيَوٰةُ ٱلدُّنْيَآ إِلَّا لَهْوٌ وَلَعِبٌ ۚ وَإِنَّ ٱلدَّارَ ٱلْـَٔاخِرَةَ لَهِىَ ٱلْحَيَوَانُ ۚ لَوْ كَانُوا۟ يَعْلَمُونَ

Transliteration wamā hādhihi l-ḥayatu l-dun'yā illā lahwun walaʿibun wa-inna l-dāra l-ākhirata lahiya l-ḥayawānu law kānū yaʿlamūna

Kannada ಈ ಲೌಕಿಕ ಜೀವನವು ಒಂದು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ . ಪರಲೋಕ ಜೀವನವೇ ನಿಜವಾದ ಜೀವನ. ಇವರು ಅರಿಯುತ್ತಿದ್ದರೆ (ಈ ಲೌಕಿಕ ಜೀವನಕ್ಕೆ ಮಹತ್ವ ಕೊಡುತ್ತಿರಲಿಲ್ಲ).

Verse 65

فَإِذَا رَكِبُوا۟ فِى ٱلْفُلْكِ دَعَوُا۟ ٱللَّهَ مُخْلِصِينَ لَهُ ٱلدِّينَ فَلَمَّا نَجَّىٰهُمْ إِلَى ٱلْبَرِّ إِذَا هُمْ يُشْرِكُونَ

Transliteration fa-idhā rakibū fī l-ful'ki daʿawū l-laha mukh'liṣīna lahu l-dīna falammā najjāhum ilā l-bari idhā hum yush'rikūna

Kannada ಇವರು (ಬಹುದೇವ ವಿಶ್ವಾಸಿಗಳು) ಹಡಗಿನಲ್ಲಿ ಪ್ರಯಾಣಿಸುವಾಗ (ಯಾವುದೇ ದುರಂತವುಂಟಾದರೆ) ತಮ್ಮ ಧರ್ಮವನ್ನು ಅಲ್ಲಾಹನಿಗೆ ಮಾತ್ರ ಮೀಸಲಾಗಿಟ್ಟು ಅವನನ್ನು ಪ್ರಾರ್ಥಿಸುತ್ತಾರೆ. ಇನ್ನು ಅವನು ಇವರನ್ನು ಸಂರಕ್ಷಿಸಿ ದಡಕ್ಕೆ ತಂದರೆ ಅವರು ಅವನಿಗೆ ಸಹಭಾಗಿತ್ವವನ್ನು ಕಲ್ಪಿಸುತ್ತಾರೆ .

Verse 66

لِيَكْفُرُوا۟ بِمَآ ءَاتَيْنَـٰهُمْ وَلِيَتَمَتَّعُوا۟ ۖ فَسَوْفَ يَعْلَمُونَ

Transliteration liyakfurū bimā ātaynāhum waliyatamattaʿū fasawfa yaʿlamūna

Kannada ಈ ಪ್ರವೃತ್ತಿಯು ನಾವು ಅವರಿಗೆ ನೀಡಿದ ಅನು ಗ್ರಹಕ್ಕೆ ಕೃತಘ್ನತೆಯಾಗಿಯೂ ಮತ್ತು ಲೌಕಿಕ ಜೀವನದ ಸವಿಯನ್ನು ಅನುಭವಿಸುವುದಾಗಿಯೂ ಪರಿಣಮಿಸುತ್ತದೆ. ಸದ್ಯದಲ್ಲೇ ಅದರ ಫಲ ಇವರಿಗೆ ತಿಳಿದು ಬರುವುದು.

Verse 67

أَوَلَمْ يَرَوْا۟ أَنَّا جَعَلْنَا حَرَمًا ءَامِنًا وَيُتَخَطَّفُ ٱلنَّاسُ مِنْ حَوْلِهِمْ ۚ أَفَبِٱلْبَـٰطِلِ يُؤْمِنُونَ وَبِنِعْمَةِ ٱللَّهِ يَكْفُرُونَ

Transliteration awalam yaraw annā jaʿalnā ḥaraman āminan wayutakhaṭṭafu l-nāsu min ḥawlihim afabil-bāṭili yu'minūna wabiniʿ'mati l-lahi yakfurūna

Kannada (ಮಕ್ಕಾ ದೇಶವನ್ನು) ಅವರಿಗೆ ನಾವು ನಿರ್ಭಯವಾದ ಶಾಂತಿಯ ನೆಲೆವೀಡನ್ನಾಡಿ ಮಾಡಿರುವುದು ಇವರಿಗೆ ಗೊತ್ತಿಲ್ಲವೆ? ಇವರ ಆಸುಪಾಸಿನಿಂದ ಜನರು ಅಪಹರಿಸಲ್ಪಡುತ್ತಿದ್ದಾರೆ. ಹೀಗಿದ್ದೂ ಇವರು ಮಿಥ್ಯವನ್ನೇ ನಂಬುವುದೇ? ಅಲ್ಲಾಹನ ಅನುಗ್ರಹಕ್ಕೇ ಕೃತಘ್ನರಾಗುವುದೇ?

Verse 68

وَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًا أَوْ كَذَّبَ بِٱلْحَقِّ لَمَّا جَآءَهُۥٓ ۚ أَلَيْسَ فِى جَهَنَّمَ مَثْوًى لِّلْكَـٰفِرِينَ

Transliteration waman aẓlamu mimmani if'tarā ʿalā l-lahi kadhiban aw kadhaba bil-ḥaqi lammā jāahu alaysa fī jahannama mathwan lil'kāfirīna

Kannada ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸು ವವನಿಗಿಂತ ಅಥವಾ ಸತ್ಯವು ತನ್ನ ಬಳಿ ಬಂದಾಗ ಅದನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನರಕದಲ್ಲಲ್ಲವೇ ಸತ್ಯ ನಿಷೇಧಿಗಳ ವಾಸಸ್ಥಳ?

Verse 69

وَٱلَّذِينَ جَـٰهَدُوا۟ فِينَا لَنَهْدِيَنَّهُمْ سُبُلَنَا ۚ وَإِنَّ ٱللَّهَ لَمَعَ ٱلْمُحْسِنِينَ

Transliteration wa-alladhīna jāhadū fīnā lanahdiyannahum subulanā wa-inna l-laha lamaʿa l-muḥ'sinīna

Kannada ನಮ್ಮ ಕಾರ್ಯದಲ್ಲಿ ಹೋರಾಡುವವರನ್ನು ನಾವು ನಮ್ಮ ಮಾರ್ಗಗಳಿಗೆ ಮುನ್ನಡೆಸುತ್ತೇವೆ. ನಿಶ್ಚಯವಾಗಿಯೂ ಅಲ್ಲಾಹು ಇರುವುದು ಸಚ್ಚರಿತರ ಜೊತೆಯಲ್ಲಿ.

Read Surah Al-'Ankabut in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.