Surah Al-Ahqaf in Kannada: translation and audio
Surah 46 · الأحقاف · The Wind-Curved Sandhills · 35 verses
Surah Al-Ahqaf verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Ahqaf word by word in English.
Verse 1
حمٓ
Transliteration hha-meem
Kannada ಹಾಮೀಮ್.
Verse 2
تَنزِيلُ ٱلْكِتَـٰبِ مِنَ ٱللَّهِ ٱلْعَزِيزِ ٱلْحَكِيمِ
Transliteration tanzīlu l-kitābi mina l-lahi l-ʿazīzi l-ḥakīmi
Kannada ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತ ಜ್ಞನೂ ಆದ ಅಲ್ಲಾಹನ ಕಡೆಯಿಂದಾಗಿರುತ್ತದೆ.
Verse 3
مَا خَلَقْنَا ٱلسَّمَـٰوَٰتِ وَٱلْأَرْضَ وَمَا بَيْنَهُمَآ إِلَّا بِٱلْحَقِّ وَأَجَلٍ مُّسَمًّى ۚ وَٱلَّذِينَ كَفَرُوا۟ عَمَّآ أُنذِرُوا۟ مُعْرِضُونَ
Transliteration mā khalaqnā l-samāwāti wal-arḍa wamā baynahumā illā bil-ḥaqi wa-ajalin musamman wa-alladhīna kafarū ʿammā undhirū muʿ'riḍūna
Kannada ಆಕಾಶಗಳನ್ನೂ, ಭೂಮಿಯನ್ನೂ ಅವುಗಳ ನಡುವೆ ಇರುವುದೆಲ್ಲವನ್ನೂ ಪರಮ ಸತ್ಯವಾಗಿ ಹಾಗೂ ಒಂದು ನಿಶ್ಚಿತ ಅವಧಿಯನ್ನು ನಿರ್ಧರಿಸಿ ನಾವು ಸೃಷ್ಟಿಸಿದ್ದೇವೆ. ಆದರೆ ಸತ್ಯನಿಷೇಧಿಗಳು ತಮಗೆ ನೀಡಲಾದ ಎಚ್ಚರಿಕೆಯನ್ನು ಗಮನಿಸದೆ ವಿಮುಖರಾಗಿದ್ದಾರೆ.
Verse 4
قُلْ أَرَءَيْتُم مَّا تَدْعُونَ مِن دُونِ ٱللَّهِ أَرُونِى مَاذَا خَلَقُوا۟ مِنَ ٱلْأَرْضِ أَمْ لَهُمْ شِرْكٌ فِى ٱلسَّمَـٰوَٰتِ ۖ ٱئْتُونِى بِكِتَـٰبٍ مِّن قَبْلِ هَـٰذَآ أَوْ أَثَـٰرَةٍ مِّنْ عِلْمٍ إِن كُنتُمْ صَـٰدِقِينَ
Transliteration qul ara-aytum mā tadʿūna min dūni l-lahi arūnī mādhā khalaqū mina l-arḍi am lahum shir'kun fī l-samāwāti i'tūnī bikitābin min qabli hādhā aw athāratin min ʿil'min in kuntum ṣādiqīna
Kannada (ನಬಿಯರೇ,) ಹೇಳಿರಿ; ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ವಸ್ತುಗಳ ಬಗ್ಗೆ ನೀವು ಯೋಚಿಸಿದ್ದೀರಾ? ಭೂಮಿಯಲ್ಲಿ ಅವರು ಏನನ್ನು ಸೃಷ್ಟಿಸಿದ್ದಾರೆಂಬುದನ್ನು ನೀವು ನನಗೆ ತೋರಿಸು ವಿರಾ? ಅಥವಾ ಆಕಾಶಗಳ ಸೃಷ್ಟಿಯಲ್ಲಿ ಅವರಿಗೇ ನಾದರೂ ಪಾಲಿದೆಯೇ? ನೀವು ಸತ್ಯವಾದಿಗಳಾಗಿದ್ದರೆ ಇದಕ್ಕಿಂತ ಮುಂಚೆ ಬಂದ ಯಾವುದೇ ಗ್ರಂಥ ಅಥವಾ ಜ್ಞಾನದ ಯಾವುದೇ ಅವಶೇಷವನ್ನು ನನಗೆ ನೀವು ತಂದು ಕೊಡುವಿರಾ?
Verse 5
وَمَنْ أَضَلُّ مِمَّن يَدْعُوا۟ مِن دُونِ ٱللَّهِ مَن لَّا يَسْتَجِيبُ لَهُۥٓ إِلَىٰ يَوْمِ ٱلْقِيَـٰمَةِ وَهُمْ عَن دُعَآئِهِمْ غَـٰفِلُونَ
Transliteration waman aḍallu mimman yadʿū min dūni l-lahi man lā yastajību lahu ilā yawmi l-qiyāmati wahum ʿan duʿāihim ghāfilūna
Kannada ಅಲ್ಲಾಹನನ್ನು ಬಿಟ್ಟು, ಪುನರುತ್ಥಾನ ದಿನದವರೆಗೂ ಉತ್ತರ ಕೊಡಲಾಗದಂತಹವರನ್ನು ಆರಾಧಿಸುವುದಕ್ಕಿಂತಲೂ ಹೆಚ್ಚು ದಾರಿಗೆಟ್ಟವನು ಇನ್ನಾರು? ಅವರಂತೂ ಇವರ ಆರಾಧನೆಯಿಂದ ಅಶೃದ್ಧರಾಗಿರುವರು.
Verse 6
وَإِذَا حُشِرَ ٱلنَّاسُ كَانُوا۟ لَهُمْ أَعْدَآءً وَكَانُوا۟ بِعِبَادَتِهِمْ كَـٰفِرِينَ
Transliteration wa-idhā ḥushira l-nāsu kānū lahum aʿdāan wakānū biʿibādatihim kāfirīna
Kannada ಜನರನ್ನು ಒಟ್ಟುಗೂಡಿಸಲ್ಪಡುವಾಗ ಅವರು ಇವರ ಶತ್ರುಗಳಾಗಿ ಬಿಡುವರು. ಇವರು ತಮ್ಮ ಆರಾಧನೆಯನ್ನೇ ನಿರಾಕರಿಸಿ ಬಿಡುವರು .
Verse 7
وَإِذَا تُتْلَىٰ عَلَيْهِمْ ءَايَـٰتُنَا بَيِّنَـٰتٍ قَالَ ٱلَّذِينَ كَفَرُوا۟ لِلْحَقِّ لَمَّا جَآءَهُمْ هَـٰذَا سِحْرٌ مُّبِينٌ
Transliteration wa-idhā tut'lā ʿalayhim āyātunā bayyinātin qāla alladhīna kafarū lil'ḥaqqi lammā jāahum hādhā siḥ'run mubīnun
Kannada ಸುಸ್ಪಷ್ಟವಾಗಿ ನಮ್ಮ ಸೂಕ್ತಗಳನ್ನು ಓದಿ ಹೇಳು ವಾಗ ಹಾಗೂ ಸತ್ಯವು ಇವರ ಮುಂದೆ ಬಂದು ಬಿಡುವಾಗ ಅದರ ಬಗ್ಗೆ ಈ ಸತ್ಯ ನಿಷೇಧಿಗಳು ‘ಇದು ಸ್ಪಷ್ಟವಾದ ಮಾರಣವಾಗಿರುತ್ತದೆ’ ಎಂದು ಹೇಳುತ್ತಾರೆ.
Verse 8
أَمْ يَقُولُونَ ٱفْتَرَىٰهُ ۖ قُلْ إِنِ ٱفْتَرَيْتُهُۥ فَلَا تَمْلِكُونَ لِى مِنَ ٱللَّهِ شَيْـًٔا ۖ هُوَ أَعْلَمُ بِمَا تُفِيضُونَ فِيهِ ۖ كَفَىٰ بِهِۦ شَهِيدًۢا بَيْنِى وَبَيْنَكُمْ ۖ وَهُوَ ٱلْغَفُورُ ٱلرَّحِيمُ
Transliteration am yaqūlūna if'tarāhu qul ini if'taraytuhu falā tamlikūna lī mina l-lahi shayan huwa aʿlamu bimā tufīḍūna fīhi kafā bihi shahīdan baynī wabaynakum wahuwa l-ghafūru l-raḥīmu
Kannada ಅದಲ್ಲ, ಅವರು (ದೂತರು) ಇದನ್ನು ಸ್ವತಃ ಸೃಷ್ಟಿಸಿದ್ದೆಂದು ಅವರು ಹೇಳುತ್ತಿರುವರೇ? (ತಾವು) ಹೇಳಿರಿ; “ಇದನ್ನು ಸ್ವತಃ ನಾನೇ ರಚಿಸಿ ದ್ದೆಂದಾದರೆ, ನೀವು ನನ್ನನ್ನು ಅಲ್ಲಾಹನ ಶಿಕ್ಷೆಯಿಂದ ಸ್ವಲ್ಪವೂ ರಕ್ಷಿಸಲಾರಿರಿ. ನೀವು ಖುರ್ ಆನಿನ ಕುರಿತು ಕಟ್ಟುತ್ತಿರುವ ಮಾತುಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅವನೇ ಸಾಕು. ಅವನು ಮಹಾ ಕ್ಷಮಾಶೀಲನೂ ದಯಾನಿಧಿಯೂ ಆಗಿರುತ್ತಾನೆ.
Verse 9
قُلْ مَا كُنتُ بِدْعًا مِّنَ ٱلرُّسُلِ وَمَآ أَدْرِى مَا يُفْعَلُ بِى وَلَا بِكُمْ ۖ إِنْ أَتَّبِعُ إِلَّا مَا يُوحَىٰٓ إِلَىَّ وَمَآ أَنَا۠ إِلَّا نَذِيرٌ مُّبِينٌ
Transliteration qul mā kuntu bid'ʿan mina l-rusuli wamā adrī mā yuf'ʿalu bī walā bikum in attabiʿu illā mā yūḥā ilayya wamā anā illā nadhīrun mubīnun
Kannada ತಾವು ಹೇಳಿರಿ; “ನಾನು ದೇವದೂತರಲ್ಲಿ ಹೊಸ ಬನಲ್ಲ. ನನ್ನನ್ನಾಗಲಿ, ನಿಮ್ಮನ್ನಾಗಲಿ ಏನು ಮಾಡಲಾಗುತ್ತದೆ ಎಂಬುದು ನನಗರಿಯದು. ನನ್ನ ಬಳಿಗೆ ಭೋದಿಸಲ್ಪಡುವುದನ್ನು ಮಾತ್ರ ನಾನು ಅನುಸರಿಸುತ್ತೇನೆ. ನಾನು ಸುಸ್ಪಷ್ಟ ಎಚ್ಚರಿಕೆ ನೀಡುವವನು ಮಾತ್ರ.
Verse 10
قُلْ أَرَءَيْتُمْ إِن كَانَ مِنْ عِندِ ٱللَّهِ وَكَفَرْتُم بِهِۦ وَشَهِدَ شَاهِدٌ مِّنۢ بَنِىٓ إِسْرَٰٓءِيلَ عَلَىٰ مِثْلِهِۦ فَـَٔامَنَ وَٱسْتَكْبَرْتُمْ ۖ إِنَّ ٱللَّهَ لَا يَهْدِى ٱلْقَوْمَ ٱلظَّـٰلِمِينَ
Transliteration qul ara-aytum in kāna min ʿindi l-lahi wakafartum bihi washahida shāhidun min banī is'rāīla ʿalā mith'lihi faāmana wa-is'takbartum inna l-laha lā yahdī l-qawma l-ẓālimīna
Kannada (ಪ್ರವಾದಿಯವರೇ,) ಹೇಳಿರಿ! ನಿಮ್ಮ ಅವಸ್ಥೆಯೇನೆಂದು ತಿಳಿಸುವಿರಾ? ಈ ಖುರ್‍ಆನ್ ಅಲ್ಲಾಹನ ಕಡೆಯಿಂದಾಗಿದ್ದು ಅದನ್ನು ನೀವು ಧಿಕ್ಕರಿಸಿದ ಸ್ಥಿತಿಯಲ್ಲೇ ಇಸ್ರಾಈಲ್ ವರ್ಗದ ಓರ್ವ ಸಾಕ್ಷಿದಾರನು. ಅದು ದೈವಿಕವಾಣಿ ಎಂಬುದಕ್ಕೆ ಸಾಕ್ಷಿ ನಿಂತಿರುವುದಲ್ಲದೆ ಖುರ್‍ಆನಿಗೆ ವಿಶ್ವಾಸ ನಿಷ್ಠೆಯನ್ನು ತೋರಿರುತ್ತಾರೆ. ನೀವು ಅಹಂಭಾವ ತೋರಿದ್ದೀರಿ. (ನೀವು ಅಕ್ರಮಿ ಗಳಲ್ಲವೇ?) ಅಕ್ರಮಿ ಜನತೆಗೆ ಅಲ್ಲಾಹನು ಖಂಡಿತವಾಗಿಯೂ ಸತ್ಪಥ ತೋರುವುದಿಲ್ಲ.
Verse 11
وَقَالَ ٱلَّذِينَ كَفَرُوا۟ لِلَّذِينَ ءَامَنُوا۟ لَوْ كَانَ خَيْرًا مَّا سَبَقُونَآ إِلَيْهِ ۚ وَإِذْ لَمْ يَهْتَدُوا۟ بِهِۦ فَسَيَقُولُونَ هَـٰذَآ إِفْكٌ قَدِيمٌ
Transliteration waqāla alladhīna kafarū lilladhīna āmanū law kāna khayran mā sabaqūnā ilayhi wa-idh lam yahtadū bihi fasayaqūlūna hādhā if'kun qadīmun
Kannada ಇದು (ಖುರ್‍ಆನ್) ಒಳಿತಾಗಿರುತ್ತಿದ್ದರೆ ಇದರ ಸ್ವೀಕೃತಿಯಲ್ಲಿ ಇವರು ನಮಗಿಂತ ಮೊದಲಿಗರಾಗುತ್ತಿರಲಿಲ್ಲ ಎಂದು ವಿಶ್ವಾಸಿಗಳನ್ನುದ್ದೇಶಿಸಿ ನಿಷೇಧಿಗಳು ಹೇಳಿದರು . ವಾಸ್ತವದಲ್ಲಿ ಇವರು ಖುರ್‍ಆನ್‍ನಿಂದ ಸತ್ಯದರ್ಶನ ಹೊಂದದಿರುವುದರಿಂದ ‘ಇದು ಹಳೇ ಸುಳ್ಳು’ ಎನ್ನಲಿರುವರು.
Verse 12
وَمِن قَبْلِهِۦ كِتَـٰبُ مُوسَىٰٓ إِمَامًا وَرَحْمَةً ۚ وَهَـٰذَا كِتَـٰبٌ مُّصَدِّقٌ لِّسَانًا عَرَبِيًّا لِّيُنذِرَ ٱلَّذِينَ ظَلَمُوا۟ وَبُشْرَىٰ لِلْمُحْسِنِينَ
Transliteration wamin qablihi kitābu mūsā imāman waraḥmatan wahādhā kitābun muṣaddiqun lisānan ʿarabiyyan liyundhira alladhīna ẓalamū wabush'rā lil'muḥ'sinīna
Kannada ಇದಕ್ಕಿಂತ ಮುಂಚೆ ಮೂಸಾರ ಗ್ರಂಥವು (ಜನ ರಿಗೆ) ನಾಯಕನಾಗಿ ಮತ್ತು ಕೃಪೆಯಾಗಿ ಬಂದಿತ್ತು. ಅದನ್ನು ಸಮರ್ಥಿಸುವ ಈ ಗ್ರಂಥವು ಅರಬೀ ಭಾಷೆಯಲ್ಲಿ ಬಂದಿದೆ. ಅಕ್ರಮಿಗಳಿಗೆ ಎಚ್ಚರಿಕೆ ಕೊಡಲಿಕ್ಕಾಗಿ ಹಾಗೂ ಸಜ್ಜನರಿಗೆ ಸುವಾರ್ತೆ ನೀಡಲಿಕ್ಕಾಗಿ.
Verse 13
إِنَّ ٱلَّذِينَ قَالُوا۟ رَبُّنَا ٱللَّهُ ثُمَّ ٱسْتَقَـٰمُوا۟ فَلَا خَوْفٌ عَلَيْهِمْ وَلَا هُمْ يَحْزَنُونَ
Transliteration inna alladhīna qālū rabbunā l-lahu thumma is'taqāmū falā khawfun ʿalayhim walā hum yaḥzanūna
Kannada ನಿಜದಲ್ಲಿ ಅಲ್ಲಾಹನೇ ನಮ್ಮ ಪ್ರಭು ಎಂದು ಹೇಳಿ ದೇವಾರಾಧನೆಯಲ್ಲಿ ನೆಲೆಗೊಂಡವರಿಗೆ ಯಾವ ಭಯವೂ ಇಲ್ಲ. ಅವರು ದುಃಖತಪ್ತರೂ ಆಗಲಿ ಕ್ಕಿಲ್ಲ.
Verse 14
أُو۟لَـٰٓئِكَ أَصْحَـٰبُ ٱلْجَنَّةِ خَـٰلِدِينَ فِيهَا جَزَآءًۢ بِمَا كَانُوا۟ يَعْمَلُونَ
Transliteration ulāika aṣḥābu l-janati khālidīna fīhā jazāan bimā kānū yaʿmalūna
Kannada ಅವರೇ ಸ್ವರ್ಗಕ್ಕೆ ಅರ್ಹರಾದವರು. ಅದರಲ್ಲವರು ನಿತ್ಯ ನಿವಾಸಿಗಳು. ಅವರು ಮಾಡುತ್ತಿದ್ದ ಸತ್ಕರ್ಮ ಗಳ ಪ್ರತಿಫಲವಾಗಿ (ಈ ಫಲ ಪಡೆಯುವರು).
Verse 15
وَوَصَّيْنَا ٱلْإِنسَـٰنَ بِوَٰلِدَيْهِ إِحْسَـٰنًا ۖ حَمَلَتْهُ أُمُّهُۥ كُرْهًا وَوَضَعَتْهُ كُرْهًا ۖ وَحَمْلُهُۥ وَفِصَـٰلُهُۥ ثَلَـٰثُونَ شَهْرًا ۚ حَتَّىٰٓ إِذَا بَلَغَ أَشُدَّهُۥ وَبَلَغَ أَرْبَعِينَ سَنَةً قَالَ رَبِّ أَوْزِعْنِىٓ أَنْ أَشْكُرَ نِعْمَتَكَ ٱلَّتِىٓ أَنْعَمْتَ عَلَىَّ وَعَلَىٰ وَٰلِدَىَّ وَأَنْ أَعْمَلَ صَـٰلِحًا تَرْضَىٰهُ وَأَصْلِحْ لِى فِى ذُرِّيَّتِىٓ ۖ إِنِّى تُبْتُ إِلَيْكَ وَإِنِّى مِنَ ٱلْمُسْلِمِينَ
Transliteration wawaṣṣaynā l-insāna biwālidayhi iḥ'sānan ḥamalathu ummuhu kur'han wawaḍaʿathu kur'han waḥamluhu wafiṣāluhu thalāthūna shahran ḥattā idhā balagha ashuddahu wabalagha arbaʿīna sanatan qāla rabbi awziʿ'nī an ashkura niʿ'mataka allatī anʿamta ʿalayya waʿalā wālidayya wa-an aʿmala ṣāliḥan tarḍāhu wa-aṣliḥ lī fī dhurriyyatī innī tub'tu ilayka wa-innī mina l-mus'limīna
Kannada ತನ್ನ ಮಾತಾಪಿತರಿಗೆ ಒಳಿತು ಮಾಡಬೇಕೆಂದು ನಾವು ಮಾನವನಿಗೆ ಆದೇಶಿಸಿದೆವು. ಅವನ ತಾಯಿಯು ಬಹಳ ಕಷ್ಟಪಟ್ಟು ಅವನನ್ನು ಗರ್ಭದಲ್ಲಿರಿಸಿ, ಕಷ್ಟದಿಂದ ಅವನನ್ನು ಹೆತ್ತಳು. ಅವನನ್ನು ಗರ್ಭ ಧರಿಸಿದ ಕಾಲ ಮತ್ತು ಮೊಲೆ ಹಾಲು ಬಿಡಿಸುವ ಕಾಲವು (ಒಟ್ಟು) ಮೂವತ್ತು ತಿಂಗಳುಗಳು. ಅವನು ಪೂರ್ಣ ಪ್ರಾಬಲ್ಯಕ್ಕೆ ಬಂದು ಆಮೇಲೆ ನಲ್ವತ್ತು ವರ್ಷದವನಾದಾಗ, “ನನ್ನ ಪ್ರಭೂ, ನೀನು ನನಗೂ ನನ್ನ ಮಾತಾಪಿ ತರಿಗೂ ಕರುಣಿಸಿರುವ ಅನುಗ್ರಹಗಳಿಗೆ ಕೃತಜ್ಞತೆಸಲ್ಲಿಸುವ ಹಾಗೂ ನೀನು ಸಂತೃಪ್ತನಾಗುವಂತಹ ಸತ್ಕರ್ಮಗಳನ್ನು ಮಾಡುವ ಸೌಭಾಗ್ಯವನ್ನು ನನಗೆ ನೀಡು. ಮತ್ತು ನನ್ನ ಸಂತಾನಗಳಲ್ಲಿ ನನಗೆ ನೀನು ಒಳಿತನ್ನು ದಯಪಾಲಿಸು. ನಾನು ನಿನ್ನ ಕಡೆಗೆ ಪಶ್ಚಾತ್ತಾಪಪಟ್ಟು ಮರಳಿದ್ದೇನೆ ಮತ್ತು ಖಂಡಿತ ನಾನು ಶರಣಾಗತ ದಾಸರಲ್ಲಾಗಿರುತ್ತೇನೆ ಎಂದನು.
Verse 16
أُو۟لَـٰٓئِكَ ٱلَّذِينَ نَتَقَبَّلُ عَنْهُمْ أَحْسَنَ مَا عَمِلُوا۟ وَنَتَجَاوَزُ عَن سَيِّـَٔاتِهِمْ فِىٓ أَصْحَـٰبِ ٱلْجَنَّةِ ۖ وَعْدَ ٱلصِّدْقِ ٱلَّذِى كَانُوا۟ يُوعَدُونَ
Transliteration ulāika alladhīna nataqabbalu ʿanhum aḥsana mā ʿamilū wanatajāwazu ʿan sayyiātihim fī aṣḥābi l-janati waʿda l-ṣid'qi alladhī kānū yūʿadūna
Kannada ನಾವು ಇಂತಹವರ ಉತ್ತಮ ಕರ್ಮಗಳನ್ನು ಸ್ವೀಕರಿಸುತ್ತೇವೆ ಮತ್ತು ಅವರ ಪಾಪಗಳನ್ನು ನಾವು ಮನ್ನಿಸಿ ಕೊಡುತ್ತೇವೆ. ಅವರು ಸ್ವರ್ಗೀಯರಲ್ಲಿ ಒಳಪಟ್ಟವರಾಗಿರುತ್ತಾರೆ. ಇದು ಅವರಿಗೆ ನೀಡಲಾಗುತ್ತಿದ್ದ ವಾಗ್ದಾನದ ಸಾಕ್ಷಾತ್ಕಾರ ವಾಗಿದೆ.
Verse 17
وَٱلَّذِى قَالَ لِوَٰلِدَيْهِ أُفٍّ لَّكُمَآ أَتَعِدَانِنِىٓ أَنْ أُخْرَجَ وَقَدْ خَلَتِ ٱلْقُرُونُ مِن قَبْلِى وَهُمَا يَسْتَغِيثَانِ ٱللَّهَ وَيْلَكَ ءَامِنْ إِنَّ وَعْدَ ٱللَّهِ حَقٌّ فَيَقُولُ مَا هَـٰذَآ إِلَّآ أَسَـٰطِيرُ ٱلْأَوَّلِينَ
Transliteration wa-alladhī qāla liwālidayhi uffin lakumā ataʿidāninī an ukh'raja waqad khalati l-qurūnu min qablī wahumā yastaghīthāni l-laha waylaka āmin inna waʿda l-lahi ḥaqqun fayaqūlu mā hādhā illā asāṭīru l-awalīna
Kannada ಓರ್ವನು, ತನ್ನ ಮಾತಾಪಿತರೊಡನೆ ‘ಛೀ, ನೀವಿ ಬ್ಬರ ಕಾರ್ಯ ಕಷ್ಟ. ನನ್ನನ್ನು (ಮರಣಾನಂತರ ಗೋರಿಯಿಂದ) ಹೊರತರಲಾಗುವುದು ಎಂದು ನೀವು ನನ್ನನ್ನು ಹೆದರಿಸುತ್ತಿರುವಿರಾ? ವಸ್ತುತಃ ನನಗಿಂತ ಮುಂಚೆ ಅನೇಕ ವಂಶಗಳು ಗತಿಸಿವೆ. (ಅವರಾರೂ ಈ ತನಕ ಹೊರಬಂದಿಲ್ಲ)’ ಎಂದನು. ಅವನ ಮಾತಾಪಿತರು ಅಲ್ಲಾಹನಲ್ಲಿ ಸಹಾಯ ಬೇಡುತ್ತ, ‘ನಿನಗೆ ನಾಶ! ನೀನು ನಂಬಿಕೋ, ಅಲ್ಲಾಹನ ವಾಗ್ದಾನವು ಸತ್ಯವಾ ದುದು’ ಎನ್ನುತ್ತಾರೆ. ಆದರೆ ಅವನು, ‘ಇವೆಲ್ಲ ಪ್ರಾಚೀನರ ಕಟ್ಟುಕತೆಗಳಾಗಿವೆ’ ಎನ್ನುತ್ತಾನೆ.
Verse 18
أُو۟لَـٰٓئِكَ ٱلَّذِينَ حَقَّ عَلَيْهِمُ ٱلْقَوْلُ فِىٓ أُمَمٍ قَدْ خَلَتْ مِن قَبْلِهِم مِّنَ ٱلْجِنِّ وَٱلْإِنسِ ۖ إِنَّهُمْ كَانُوا۟ خَـٰسِرِينَ
Transliteration ulāika alladhīna ḥaqqa ʿalayhimu l-qawlu fī umamin qad khalat min qablihim mina l-jini wal-insi innahum kānū khāsirīna
Kannada ನಮ್ಮ (ಶಿಕ್ಷೆಯ) ತೀರ್ಮಾನವು ಇಂತಹ ಜನರ ಮೇಲೆ ಸ್ಥಿರಗೊಂಡಿರುತ್ತದೆ. ಇವರಿಗಿಂತ ಮೊದಲು ಗತಿಸಿರುವ ಜಿನ್ನ್ ಮತ್ತು ಮಾನವರ ಗುಂಪಿಗೆ ಇವರೂ ಸೇರಿಕೊಳ್ಳುವರು. ಖಂಡಿತ ಇವರು ನಷ್ಟಕ್ಕೊಳಗಾದವರೇ ಆಗಿದ್ದಾರೆ.
Verse 19
وَلِكُلٍّ دَرَجَـٰتٌ مِّمَّا عَمِلُوا۟ ۖ وَلِيُوَفِّيَهُمْ أَعْمَـٰلَهُمْ وَهُمْ لَا يُظْلَمُونَ
Transliteration walikullin darajātun mimmā ʿamilū waliyuwaffiyahum aʿmālahum wahum lā yuẓ'lamūna
Kannada ಎರಡು ತಂಡಗಳ ಪೈಕಿ ಪ್ರತಿಯೊಂದು ತಂಡದವರಿಗೂ ಅವರವರ ಕರ್ಮಕ್ಕನುಸಾರವಾದ ಸ್ಥಾನ ವಿದೆ. ಅಲ್ಲಾಹನು ಅವರಿಗೆ ಅವರ ಕರ್ಮಗಳ ಪರಿಪೂರ್ಣ ಪ್ರತಿಫಲ ನೀಡುವಂತಾಗಲಿಕ್ಕಾಗಿ. ಅವರು ಖಂಡಿತ ಅನ್ಯಾಯಕ್ಕೊಳಗಾಗುವುದಿಲ್ಲ.
Verse 20
وَيَوْمَ يُعْرَضُ ٱلَّذِينَ كَفَرُوا۟ عَلَى ٱلنَّارِ أَذْهَبْتُمْ طَيِّبَـٰتِكُمْ فِى حَيَاتِكُمُ ٱلدُّنْيَا وَٱسْتَمْتَعْتُم بِهَا فَٱلْيَوْمَ تُجْزَوْنَ عَذَابَ ٱلْهُونِ بِمَا كُنتُمْ تَسْتَكْبِرُونَ فِى ٱلْأَرْضِ بِغَيْرِ ٱلْحَقِّ وَبِمَا كُنتُمْ تَفْسُقُونَ
Transliteration wayawma yuʿ'raḍu alladhīna kafarū ʿalā l-nāri adhhabtum ṭayyibātikum fī ḥayātikumu l-dun'yā wa-is'tamtaʿtum bihā fal-yawma tuj'zawna ʿadhāba l-hūni bimā kuntum tastakbirūna fī l-arḍi bighayri l-ḥaqi wabimā kuntum tafsuqūna
Kannada ಸತ್ಯನಿಷೇಧಿಗಳನ್ನು ನರಕದ ಮುಂದೆ ಪ್ರದರ್ಶಿ ಸಲ್ಪಡುವ ದಿನ (ಅವರೊಡನೆ,) “ನೀವು ನಿಮ್ಮ ಲೌಕಿಕ ಜೀವನದಲ್ಲೇ ನಿಮ್ಮ ಉತ್ತಮ ವಸ್ತುಗಳನ್ನು (ಸುಖಿಸಿ) ಕಳೆದು ಕೊಂಡಿರಿ. ಮತ್ತು ಅವುಗಳ ಸವಿಯನ್ನು ಆಸ್ವಾದಿಸಿಕೊಂಡಿರಿ. ನೀವು ಭೂಮಿಯಲ್ಲಿ ಯಾವುದೇ ಹಕ್ಕಿಲ್ಲದೆ ತೋರುತ್ತಿದ್ದ ಅಹಂಕಾರದ ಹಾಗೂ ನೀವು ಮಾಡಿದ್ದ ಪಾಪದ ಫಲವಾಗಿ ಇಂದು ನಿಮಗೆ ಅವಮಾನಕಾರಿ ಶಿಕ್ಷೆ ಕೊಡಲಾಗುವುದು” ಎಂದು ಹೇಳಲಾಗುವುದು.
Verse 21
۞ وَٱذْكُرْ أَخَا عَادٍ إِذْ أَنذَرَ قَوْمَهُۥ بِٱلْأَحْقَافِ وَقَدْ خَلَتِ ٱلنُّذُرُ مِنۢ بَيْنِ يَدَيْهِ وَمِنْ خَلْفِهِۦٓ أَلَّا تَعْبُدُوٓا۟ إِلَّا ٱللَّهَ إِنِّىٓ أَخَافُ عَلَيْكُمْ عَذَابَ يَوْمٍ عَظِيمٍ
Transliteration wa-udh'kur akhā ʿādin idh andhara qawmahu bil-aḥqāfi waqad khalati l-nudhuru min bayni yadayhi wamin khalfihi allā taʿbudū illā l-laha innī akhāfu ʿalaykum ʿadhāba yawmin ʿaẓīmin
Kannada `ಆದ್’ರ ಸಹೋದರನನ್ನು (ಹೂದ್‍ರನ್ನು) ಸ್ಮರಿಸಿರಿ. ಅವರು `ಅಹ್‍ಖಾಫ್’ನಲ್ಲಿರುವ ತಮ್ಮ ಜನಾಂಗಕ್ಕೆ; ‘ಅಲ್ಲಾಹನ ಹೊರತು ಯಾರನ್ನೂ ಆರಾಧಿಸಬೇಡಿರಿ, ನನಗೆ ನಿಮ್ಮ ವಿಷಯದಲ್ಲಿ ಒಂದು ಭಯಾನಕ ದಿನದ ಯಾತನೆಯ ಭಯ ವಿದೆ’ ಎಂಬ ಎಚ್ಚರಿಕೆ ಕೊಟ್ಟ ಸಂದರ್ಭ. ಇಂತಹ ಎಚ್ಚರಿಕೆ ನೀಡುವವರು ಅವರಿಗಿಂತ ಮುಂಚೆ ಯೂ ಅವರ ನಂತರವೂ ಆಗಿ ಹೋಗಿದ್ದಾರೆ.
Verse 22
قَالُوٓا۟ أَجِئْتَنَا لِتَأْفِكَنَا عَنْ ءَالِهَتِنَا فَأْتِنَا بِمَا تَعِدُنَآ إِن كُنتَ مِنَ ٱلصَّـٰدِقِينَ
Transliteration qālū aji'tanā litafikanā ʿan ālihatinā fatinā bimā taʿidunā in kunta mina l-ṣādiqīna
Kannada ಅವರು ಹೇಳಿದರು; ‘ನೀನು ನಮ್ಮನ್ನು ಮೋಸ ಗೊಳಿಸಿ ನಮ್ಮ ಆರಾಧ್ಯರಿಂದ ಬೇರ್ಪಡಿಸಲಿಕ್ಕಾಗಿ ಬಂದಿರುವೆಯಾ? ನೀನು ನಿಜಕ್ಕೂ ಸತ್ಯ ವಾದಿಯಾಗಿದ್ದರೆ ನಮ್ಮನ್ನು ಬೆದರಿಸುತ್ತಿರುವಂತಹ ನಿನ್ನ ಆ ಶಿಕ್ಷೆಯನ್ನು ತಂದು ಬಿಡು’.
Verse 23
قَالَ إِنَّمَا ٱلْعِلْمُ عِندَ ٱللَّهِ وَأُبَلِّغُكُم مَّآ أُرْسِلْتُ بِهِۦ وَلَـٰكِنِّىٓ أَرَىٰكُمْ قَوْمًا تَجْهَلُونَ
Transliteration qāla innamā l-ʿil'mu ʿinda l-lahi wa-uballighukum mā ur'sil'tu bihi walākinnī arākum qawman tajhalūna
Kannada ಆಗ ಅವರು, `ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರವಾಗಿದೆ. ನಾನು ನನಗೆ ಕೊಟ್ಟು ಕಳು ಹಿಸಲಾಗಿರುವಂತಹ ಸಂದೇಶವನ್ನು ಮಾತ್ರ ನಿಮಗೆ ತಲುಪಿಸುತ್ತಿದ್ದೇನೆ. ಆದರೆ, ನಿಮ್ಮನ್ನು ನಾನು (ಶಿಕ್ಷೆಗಾಗಿ ದುಡುಕುತ್ತಿರುವ) ಮೌಢ್ಯ ಜನಾಂಗವನ್ನಾಗಿ ಕಾಣುತ್ತಿದ್ದೇನೆ’ ಎಂದರು.
Verse 24
فَلَمَّا رَأَوْهُ عَارِضًا مُّسْتَقْبِلَ أَوْدِيَتِهِمْ قَالُوا۟ هَـٰذَا عَارِضٌ مُّمْطِرُنَا ۚ بَلْ هُوَ مَا ٱسْتَعْجَلْتُم بِهِۦ ۖ رِيحٌ فِيهَا عَذَابٌ أَلِيمٌ
Transliteration falammā ra-awhu ʿāriḍan mus'taqbila awdiyatihim qālū hādhā ʿāriḍun mum'ṭirunā bal huwa mā is'taʿjaltum bihi rīḥun fīhā ʿadhābun alīmun
Kannada ತರುವಾಯ ಅವರು ಆ ಶಿಕ್ಷೆಯು ತಮ್ಮ ಕಣಿವೆ ಗಳತ್ತ ಒಂದು ಮೇಘವಾಗಿ ಬರುತ್ತಿದ್ದುದನ್ನು ಕಂಡು, “ಇದು ನಮ್ಮ ಮೇಲೆ ಮಳೆ ಸುರಿಸಲಿ ಕ್ಕಾಗಿ ಬರುತ್ತಿರುವ ಮೋಡ” ಎಂದರು. ಅಲ್ಲ, ವಾಸ್ತವದಲ್ಲಿ ಇದು ನೀವು ಅವಸರಪಡಿಸಿದ್ದೇ ಆಗಿದೆ. ಹೌದು, ವೇದನಾಜನಕ ಶಿಕ್ಷೆ ಅಡಗಿದ ಒಂದು ಬಿರುಗಾಳಿ.
Verse 25
تُدَمِّرُ كُلَّ شَىْءٍۭ بِأَمْرِ رَبِّهَا فَأَصْبَحُوا۟ لَا يُرَىٰٓ إِلَّا مَسَـٰكِنُهُمْ ۚ كَذَٰلِكَ نَجْزِى ٱلْقَوْمَ ٱلْمُجْرِمِينَ
Transliteration tudammiru kulla shayin bi-amri rabbihā fa-aṣbaḥū lā yurā illā masākinuhum kadhālika najzī l-qawma l-muj'rimīna
Kannada ಇದು ತನ್ನ ಪ್ರಭುವಿನ ಅಪ್ಪಣೆಯಂತೆ ಸಕಲ ವಸ್ತುಗಳನ್ನೂ ನಾಶಗೊಳಿಸಿಬಿಡುವುದು. ಕೊನೆಗೆ ಅವರ ವಾಸಸ್ಥಾನಗಳ ಹೊರತು ಅಲ್ಲಿ ಬೇರೇನೂ ಕಂಡುಬಾರದ ಸ್ಥಿತಿ ಉಂಟಾಯಿತು. ಈ ರೀತಿಯಲ್ಲಿ ನಾವು ಅಪರಾಧಿಗಳಾದ ಜನತೆಗೆ ಪ್ರತಿಫಲ ಕೊಡುತ್ತೇವೆ.
Verse 26
وَلَقَدْ مَكَّنَّـٰهُمْ فِيمَآ إِن مَّكَّنَّـٰكُمْ فِيهِ وَجَعَلْنَا لَهُمْ سَمْعًا وَأَبْصَـٰرًا وَأَفْـِٔدَةً فَمَآ أَغْنَىٰ عَنْهُمْ سَمْعُهُمْ وَلَآ أَبْصَـٰرُهُمْ وَلَآ أَفْـِٔدَتُهُم مِّن شَىْءٍ إِذْ كَانُوا۟ يَجْحَدُونَ بِـَٔايَـٰتِ ٱللَّهِ وَحَاقَ بِهِم مَّا كَانُوا۟ بِهِۦ يَسْتَهْزِءُونَ
Transliteration walaqad makkannāhum fīmā in makkannākum fīhi wajaʿalnā lahum samʿan wa-abṣāran wa-afidatan famā aghnā ʿanhum samʿuhum walā abṣāruhum walā afidatuhum min shayin idh kānū yajḥadūna biāyāti l-lahi waḥāqa bihim mā kānū bihi yastahziūna
Kannada ನಾವು ನಿಮಗೆ ಪ್ರಭಾವ ಕೊಡದ ರಂಗಗಳಲ್ಲಿ ಅವರಿಗೆ (ಆದ್ ಸಮುದಾಯಕ್ಕೆ) ನಾವು ಪ್ರಭಾವ ಕೊಟ್ಟಿದ್ದೆವು. ನಾವು ಅವರಿಗೆ ಕಿವಿ, ಕಣ್ಣು ಮತ್ತು ಮನಸ್ಸುಗಳನ್ನೂ ಕೊಟ್ಟಿದ್ದೆವು. ಆದರೆ ಅವರ ಕಿವಿಗಳಾಗಲಿ, ಕಣ್ಣುಗಳಾಗಲಿ, ಮನಸ್ಸುಗಳಾಗಲಿ, ಅವರಿಗೆ ಯಾವ ಪ್ರಯೋಜನವನ್ನೂ ನೀಡಿಲ್ಲ. (ಏಕೆಂದರೆ) ಅವರು ಅಲ್ಲಾಹನ ದೃಷ್ಠಾಂತಗಳನ್ನು ನಿರಾಕರಿಸುತ್ತಿದ್ದರು. ಅವರು ಪರಿಹಾಸ್ಯ ಮಾಡುತ್ತಿದ್ದುದು (ಶಿಕ್ಷೆ) ಅವರಿಗೆ ಬಂದೇ ಬಿಟ್ಟಿತು.
Verse 27
وَلَقَدْ أَهْلَكْنَا مَا حَوْلَكُم مِّنَ ٱلْقُرَىٰ وَصَرَّفْنَا ٱلْـَٔايَـٰتِ لَعَلَّهُمْ يَرْجِعُونَ
Transliteration walaqad ahlaknā mā ḥawlakum mina l-qurā waṣarrafnā l-āyāti laʿallahum yarjiʿūna
Kannada ನಾವು ನಿಮ್ಮ ಪರಿಸರ ಪ್ರದೇಶಗಳಲ್ಲಿದ್ದ ಅನೇಕ ನಾಡುಗಳನ್ನು ನಾಶಗೊಳಿಸಿಬಿಟ್ಟಿದ್ದೇವೆ. ಅವರು ಸತ್ಯದ ಕಡೆಗೆ ಮರಳುವಂತಾಗಲು ನಾವು ತರತರದ ನಿದರ್ಶನಗಳನ್ನು ವಿವರಿಸಿ ಕೊಟ್ಟಿದ್ದೆವು.
Verse 28
فَلَوْلَا نَصَرَهُمُ ٱلَّذِينَ ٱتَّخَذُوا۟ مِن دُونِ ٱللَّهِ قُرْبَانًا ءَالِهَةًۢ ۖ بَلْ ضَلُّوا۟ عَنْهُمْ ۚ وَذَٰلِكَ إِفْكُهُمْ وَمَا كَانُوا۟ يَفْتَرُونَ
Transliteration falawlā naṣarahumu alladhīna ittakhadhū min dūni l-lahi qur'bānan ālihatan bal ḍallū ʿanhum wadhālika if'kuhum wamā kānū yaftarūna
Kannada ಅಲ್ಲಾಹನನ್ನು ಬಿಟ್ಟು, ದೇವ ಸಾಮೀಪ್ಯದ ಮಾಧ್ಯಮಗಳಾಗಿ ಮಾಡಿಕೊಂಡಿದ್ದ ಆರಾಧ್ಯ ವಸ್ತುಗಳು ಆ ಸಂದರ್ಭದಲ್ಲಿ ಅವರಿಗೇಕೆ ನೆರವಾಗಲಿಲ್ಲ? ಮಾತ್ರವಲ್ಲ, ಆ ಇಲಾಹ್‍ಗಳು ಅವರಿಂದ ಅಪ್ರತ್ಯಕ್ಷರಾಗಿ ಬಿಟ್ಟರು. ಅದು (ವಿಗ್ರಹಾ ರಾಧನೆ) ಅವರ ಕಡೆಯ ವ್ಯಾಜ ಹಾಗೂ ಅವರು ಕಟ್ಟಿಕೊಂಡಿದ್ದ ಕೃತಕ ವಿಶ್ವಾಸವಾಗಿತ್ತು.
Verse 29
وَإِذْ صَرَفْنَآ إِلَيْكَ نَفَرًا مِّنَ ٱلْجِنِّ يَسْتَمِعُونَ ٱلْقُرْءَانَ فَلَمَّا حَضَرُوهُ قَالُوٓا۟ أَنصِتُوا۟ ۖ فَلَمَّا قُضِىَ وَلَّوْا۟ إِلَىٰ قَوْمِهِم مُّنذِرِينَ
Transliteration wa-idh ṣarafnā ilayka nafaran mina l-jini yastamiʿūna l-qur'āna falammā ḥaḍarūhu qālū anṣitū falammā quḍiya wallaw ilā qawmihim mundhirīna
Kannada ಖುರ್‍ಆನನ್ನು ಆಲಿಸಲಿಕ್ಕಾಗಿ ಜಿನ್ನ್‍ಗಳ ಒಂದು ತಂಡವನ್ನು ನಾವು ನಿಮ್ಮ ಕಡೆಗೆ ತಿರುಗಿಸಿ ಬಿಟ್ಟ ಸಂದರ್ಭ. ಅವರು (ನೀವು ಖುರ್‍ಆನ್ ಪಠಿಸುತ್ತಿದ್ದ) ಆ ಸ್ಥಳಕ್ಕೆ ಹಾಜರಾದಾಗ `ಮೌನವಾಗಿ ಆಲಿಸಿರಿ’ ಎಂದು (ಪರಸ್ಪರ) ಹೇಳಿದರು. ಓದಿ ಮುಗಿದಾಗ ಅವರು ತಮ್ಮ ಜನಾಂಗದ ಕಡೆಗೆ ಮರಳಿದರು, ತಮ್ಮವರಿಗೆ ಮುನ್ನೆಚ್ಚರಿಕೆ ನೀಡುವವರಾಗಿ.
Verse 30
قَالُوا۟ يَـٰقَوْمَنَآ إِنَّا سَمِعْنَا كِتَـٰبًا أُنزِلَ مِنۢ بَعْدِ مُوسَىٰ مُصَدِّقًا لِّمَا بَيْنَ يَدَيْهِ يَهْدِىٓ إِلَى ٱلْحَقِّ وَإِلَىٰ طَرِيقٍ مُّسْتَقِيمٍ
Transliteration qālū yāqawmanā innā samiʿ'nā kitāban unzila min baʿdi mūsā muṣaddiqan limā bayna yadayhi yahdī ilā l-ḥaqi wa-ilā ṭarīqin mus'taqīmin
Kannada ಅವರು (ಹೋಗಿ ತಮ್ಮ ಜನತೆಯೊಂದಿಗೆ) ಹೇಳಿದರು; `ನಮ್ಮ ಜನಾಂಗದವರೇ, ನಾವು ಒಂದು ಗ್ರಂಥವನ್ನು ಆಲಿಸಿದೆವು. ಅದು ಮೂಸಾರ ಬಳಿಕ ಅವತೀರ್ಣಗೊಳಿಸಲ್ಪಟ್ಟಿದೆ. ಅದು ತನಗಿಂತ ಮುಂಚೆ ಬಂದ ಗ್ರಂಥಗಳನ್ನು ಸಮರ್ಥಿಸುತ್ತದೆ ಮತ್ತು ಸತ್ಯ ಹಾಗೂ ಸನ್ಮಾರ್ಗದೆಡೆಗೆ ಮಾರ್ಗ ದರ್ಶನ ಮಾಡುತ್ತದೆ.
Verse 31
يَـٰقَوْمَنَآ أَجِيبُوا۟ دَاعِىَ ٱللَّهِ وَءَامِنُوا۟ بِهِۦ يَغْفِرْ لَكُم مِّن ذُنُوبِكُمْ وَيُجِرْكُم مِّنْ عَذَابٍ أَلِيمٍ
Transliteration yāqawmanā ajībū dāʿiya l-lahi waāminū bihi yaghfir lakum min dhunūbikum wayujir'kum min ʿadhābin alīmin
Kannada ನಮ್ಮ ಜನಾಂಗದವರೇ, ಅಲ್ಲಾಹನತ್ತ ಕರೆಯುವ ವ್ಯಕ್ತಿಯ ಕರೆಗೆ ಉತ್ತರಿಸಿರಿ. ಮತ್ತು ಅದರಲ್ಲಿ ವಿಶ್ವಾಸವಿಡಿರಿ. ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ವೇದನಾಜನಕ ಶಿಕ್ಷೆ ಯಿಂದ ನಿಮ್ಮನ್ನು ರಕ್ಷಿಸುವನು.
Verse 32
وَمَن لَّا يُجِبْ دَاعِىَ ٱللَّهِ فَلَيْسَ بِمُعْجِزٍ فِى ٱلْأَرْضِ وَلَيْسَ لَهُۥ مِن دُونِهِۦٓ أَوْلِيَآءُ ۚ أُو۟لَـٰٓئِكَ فِى ضَلَـٰلٍ مُّبِينٍ
Transliteration waman lā yujib dāʿiya l-lahi falaysa bimuʿ'jizin fī l-arḍi walaysa lahu min dūnihi awliyāu ulāika fī ḍalālin mubīnin
Kannada ಅಲ್ಲಾಹನ ಕಡೆಗೆ ಕರೆ ನೀಡುವವನ ಕರೆಗೆ ಓಗೊಡದವನಿಗೆ ಭೂಮಿಯಲ್ಲಿ ಅಲ್ಲಾಹನನ್ನು ಜೈಸಲು ಸಾಧ್ಯವಿಲ್ಲ. ಅಲ್ಲಾಹನ ಹೊರತಾಗಿ ಯಾವುದೇ ರಕ್ಷಕ ಮಿತ್ರರೂ ಅವನಿಗೆ ಇಲ್ಲ. ಇಂತ ಹವರು ಸ್ಪಷ್ಟ ಪಥಭ್ರಷ್ಟತೆಯಲ್ಲಿ ಬಿದ್ದಿರುವರು.
Verse 33
أَوَلَمْ يَرَوْا۟ أَنَّ ٱللَّهَ ٱلَّذِى خَلَقَ ٱلسَّمَـٰوَٰتِ وَٱلْأَرْضَ وَلَمْ يَعْىَ بِخَلْقِهِنَّ بِقَـٰدِرٍ عَلَىٰٓ أَن يُحْـِۧىَ ٱلْمَوْتَىٰ ۚ بَلَىٰٓ إِنَّهُۥ عَلَىٰ كُلِّ شَىْءٍ قَدِيرٌ
Transliteration awalam yaraw anna l-laha alladhī khalaqa l-samāwāti wal-arḍa walam yaʿya bikhalqihinna biqādirin ʿalā an yuḥ'yiya l-mawtā balā innahu ʿalā kulli shayin qadīrun
Kannada ಅಲ್ಲಾಹನ ಕಡೆಗೆ ಕರೆ ನೀಡುವವನ ಕರೆಗೆ ಓಗೊಡದವನಿಗೆ ಭೂಮಿಯಲ್ಲಿ ಅಲ್ಲಾಹನನ್ನು ಜೈಸಲು ಸಾಧ್ಯವಿಲ್ಲ. ಅಲ್ಲಾಹನ ಹೊರತಾಗಿ ಯಾವುದೇ ರಕ್ಷಕ ಮಿತ್ರರೂ ಅವನಿಗೆ ಇಲ್ಲ. ಇಂತ ಹವರು ಸ್ಪಷ್ಟ ಪಥಭ್ರಷ್ಟತೆಯಲ್ಲಿ ಬಿದ್ದಿರುವರು.
Verse 34
وَيَوْمَ يُعْرَضُ ٱلَّذِينَ كَفَرُوا۟ عَلَى ٱلنَّارِ أَلَيْسَ هَـٰذَا بِٱلْحَقِّ ۖ قَالُوا۟ بَلَىٰ وَرَبِّنَا ۚ قَالَ فَذُوقُوا۟ ٱلْعَذَابَ بِمَا كُنتُمْ تَكْفُرُونَ
Transliteration wayawma yuʿ'raḍu alladhīna kafarū ʿalā l-nāri alaysa hādhā bil-ḥaqi qālū balā warabbinā qāla fadhūqū l-ʿadhāba bimā kuntum takfurūna
Kannada ಈ ಸತ್ಯನಿಷೇಧಿಗಳು ನರಕಾಗ್ನಿಯ ಮೇಲೆ ಕಾಣಿಸಲ್ಪಡುವ ದಿವಸ (ಅವರೊಡನೆ,) ‘ಇದು ಸತ್ಯವಲ್ಲವೇ?’ ಎಂದು ಕೇಳಲಾಗುವುದು. ಆಗ ಅವರು `ಹೌದು! ನಮ್ಮ ಪ್ರಭುವಿನಾಣೆ ಸತ್ಯ’ ಎನ್ನುವರು. ಆಗ ಅಲ್ಲಾಹನು - ‘ಹಾಗಿದ್ದರೆ ನೀವು ತಾಳಿದ ಅವಿಶ್ವಾಸದ ಫಲವಾಗಿ ಈಗ ನೀವು ಶಿಕ್ಷೆಯ ಸವಿಯನ್ನು ಅನುಭವಿಸಿರಿ’ ಎಂದು ಹೇಳುವನು.
Verse 35
فَٱصْبِرْ كَمَا صَبَرَ أُو۟لُوا۟ ٱلْعَزْمِ مِنَ ٱلرُّسُلِ وَلَا تَسْتَعْجِل لَّهُمْ ۚ كَأَنَّهُمْ يَوْمَ يَرَوْنَ مَا يُوعَدُونَ لَمْ يَلْبَثُوٓا۟ إِلَّا سَاعَةً مِّن نَّهَارٍۭ ۚ بَلَـٰغٌ ۚ فَهَلْ يُهْلَكُ إِلَّا ٱلْقَوْمُ ٱلْفَـٰسِقُونَ
Transliteration fa-iṣ'bir kamā ṣabara ulū l-ʿazmi mina l-rusuli walā tastaʿjil lahum ka-annahum yawma yarawna mā yūʿadūna lam yalbathū illā sāʿatan min nahārin balāghun fahal yuh'laku illā l-qawmu l-fāsiqūna
Kannada ಆದುದರಿಂದ (ಪ್ರವಾದಿಯರೇ,) ದೃಢಚಿತ್ತರಾಗಿದ್ದ ಪ್ರವಾದಿಗಳು ತಾಳ್ಮೆ ವಹಿಸಿದಂತೆ ನೀವೂ ತಾಳ್ಮೆ ವಹಿಸಿರಿ. ಇವರ (ಸತ್ಯನಿಷೇಧಿಗಳ) ವಿಷಯದಲ್ಲಿ ತಾವು ಅವಸರ ಪಡಬೇಡಿರಿ. ಇವರಿಗೆ ಎಚ್ಚರಿಕೆ ನೀಡಲಾಗುತ್ತಿದ್ದುದನ್ನು (ಶಿಕ್ಷೆ) ಇವರು ಕಣ್ಣಾರೆ ಕಾಣುವ ದಿನದಂದು ನಾವು (ಭೂಲೋಕದಲ್ಲಿ) ಒಂದು ಹಗಲಿನ ಒಂದು ತಾಸಿಗಿಂತ ಹೆಚ್ಚು ಕಾಲ ತಂಗಲಿಲ್ಲವೋ ಎಂಬಂತೆ ಇವರಿಗೆ ಭಾಸ ವಾಗುವುದು. ಇದೊಂದು ಉದ್ಭೋದನೆಯಾಗಿದೆ. ದುರ್ಮಾರ್ಗಿಗಳಾದ ಜನತೆಯಲ್ಲದೆ ಇನ್ನಾರಾದರೂ ನಾಶ ಹೊಂದುವರೇ?
Read Surah Al-Ahqaf in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.