Surah Adh-Dhariyat in Kannada: translation and audio
Surah 51 · الذاريات · The Winnowing Winds · 60 verses
Surah Adh-Dhariyat verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Adh-Dhariyat word by word in English.
Verse 1
وَٱلذَّٰرِيَـٰتِ ذَرْوًا
Transliteration wal-dhāriyāti dharwan
Kannada ಧೂಳೆಬ್ಬಿಸುವ ಗಾಳಿಗಳ ಆಣೆ.
Verse 2
فَٱلْحَـٰمِلَـٰتِ وِقْرًا
Transliteration fal-ḥāmilāti wiq'ran
Kannada ಭಾರವೇರಿದ ಘನೀಕೃತ ಮೋಡಗಳ ಆಣೆ.
Verse 3
فَٱلْجَـٰرِيَـٰتِ يُسْرًا
Transliteration fal-jāriyāti yus'ran
Kannada ಅನಾಯಾಸವಾಗಿ ಚಲಿಸುತ್ತಿರುವ ಹಡಗುಗಳ ಆಣೆ.
Verse 4
فَٱلْمُقَسِّمَـٰتِ أَمْرًا
Transliteration fal-muqasimāti amran
Kannada ಯೋಜನೆಗಳನ್ನು ವಿತರಿಸುವ ದೇವಚರರುಗಳಾಣೆ.
Verse 5
إِنَّمَا تُوعَدُونَ لَصَادِقٌ
Transliteration innamā tūʿadūna laṣādiqun
Kannada ಖಂಡಿತವಾಗಿಯೂ ನಿಮಗೆ ತಾಕೀತು ನೀಡಲಾದ ವಿಷಯಗಳು ಪರಮಸತ್ಯ.
Verse 6
وَإِنَّ ٱلدِّينَ لَوَٰقِعٌ
Transliteration wa-inna l-dīna lawāqiʿun
Kannada (ಅಂತ್ಯ ದಿನದ) ವಿಧಿಯ ತೀರ್ಪು ಖಂಡಿತವಾಗಿಯೂ ಸಂಭವನೀಯವಾಗಿದೆ .
Verse 7
وَٱلسَّمَآءِ ذَاتِ ٱلْحُبُكِ
Transliteration wal-samāi dhāti l-ḥubuki
Kannada ವಿವಿಧ ಪಥಗಳಿರುವ ಗಗನದ ಆಣೆ.
Verse 8
إِنَّكُمْ لَفِى قَوْلٍ مُّخْتَلِفٍ
Transliteration innakum lafī qawlin mukh'talifin
Kannada ನಿಜವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲೇ ಇದ್ದೀರಿ .
Verse 9
يُؤْفَكُ عَنْهُ مَنْ أُفِكَ
Transliteration yu'faku ʿanhu man ufika
Kannada ವಿಮುಖನಾಗಲ್ಪಟ್ಟವನು ನಬಿಯವರಿಂದ ವಿಮುಖನಾಗಲ್ಪಡುವನು.
Verse 10
قُتِلَ ٱلْخَرَّٰصُونَ
Transliteration qutila l-kharāṣūna
Kannada ಸುಳ್ಳುಗಾರರು ಶಪಿಸಲ್ಪಟ್ಟಿರುವರು .
Verse 11
ٱلَّذِينَ هُمْ فِى غَمْرَةٍ سَاهُونَ
Transliteration alladhīna hum fī ghamratin sāhūna
Kannada ಅವರು ಅಜ್ಞಾನದ ಮಡುವಿನಲ್ಲಿ ಮುಳುಗಿ ನಿರ್ಲಕ್ಷ್ಯರಾಗಿರುವರು.
Verse 12
يَسْـَٔلُونَ أَيَّانَ يَوْمُ ٱلدِّينِ
Transliteration yasalūna ayyāna yawmu l-dīni
Kannada ಪ್ರತಿಫಲದ ದಿನ ಯಾವಾಗ ಬರಲಿದೆ? ಎಂದು ಅವರು ಕುಚೋದ್ಯವಾಡುತ್ತಿದ್ದಾರೆ.
Verse 13
يَوْمَ هُمْ عَلَى ٱلنَّارِ يُفْتَنُونَ
Transliteration yawma hum ʿalā l-nāri yuf'tanūna
Kannada ಅದು, ಅವರು ಅಗ್ನಿಯಲ್ಲಿ ಶಿಕ್ಷಿಸಲ್ಪಡುವಂದು (ಬರಲಿದೆ.)
Verse 14
ذُوقُوا۟ فِتْنَتَكُمْ هَـٰذَا ٱلَّذِى كُنتُم بِهِۦ تَسْتَعْجِلُونَ
Transliteration dhūqū fit'natakum hādhā alladhī kuntum bihi tastaʿjilūna
Kannada ಈಗ ನೀವು ನಿಮ್ಮ ವಿನಾಶದ ರುಚಿಯನ್ನು ಸವಿಯಿರಿ. ನೀವು ಯಾವುದಕ್ಕಾಗಿ ಇಹದಲ್ಲಿ ತ್ವರೆ ಮಾಡುತ್ತಿದ್ದಿರೋ ಅದುವೇ ಇದು. (ಎಂದು ಅವರೊಡನೆ ಹೇಳಲಾಗುವುದು.)
Verse 15
إِنَّ ٱلْمُتَّقِينَ فِى جَنَّـٰتٍ وَعُيُونٍ
Transliteration inna l-mutaqīna fī jannātin waʿuyūnin
Kannada ಖಂಡಿತವಾಗಿಯೂ ಧರ್ಮನಿಷ್ಟರು ಅಂದು ಉದ್ಯಾನಗಳಲ್ಲೂ ಚಿಲುಮೆಗಳಲ್ಲೂ ಇರುವರು.
Verse 16
ءَاخِذِينَ مَآ ءَاتَىٰهُمْ رَبُّهُمْ ۚ إِنَّهُمْ كَانُوا۟ قَبْلَ ذَٰلِكَ مُحْسِنِينَ
Transliteration ākhidhīna mā ātāhum rabbuhum innahum kānū qabla dhālika muḥ'sinīna
Kannada ಅವರ ಪ್ರಭು ಅವರಿಗೆ ದಯಪಾಲಿಸಿದ್ದನ್ನು ಸಂತೋಷದಿಂದ ಸ್ವೀಕರಿಸುತ್ತಿರುವರು. ಅವರು ಅದಕ್ಕೂ ಮುನ್ನ ಸಚ್ಚರಿತರಾಗಿದ್ದರು.
Verse 17
كَانُوا۟ قَلِيلًا مِّنَ ٱلَّيْلِ مَا يَهْجَعُونَ
Transliteration kānū qalīlan mina al-layli mā yahjaʿūna
Kannada ರಾತ್ರೆಯಲ್ಲಿ ಅವರು ಸ್ವಲ್ಪ ಸಮಯವೇ ನಿದ್ರಿಸುತ್ತಿದ್ದರು
Verse 18
وَبِٱلْأَسْحَارِ هُمْ يَسْتَغْفِرُونَ
Transliteration wabil-asḥāri hum yastaghfirūna
Kannada ಅವರು ರಾತ್ರಿಯ ಕೊನೆಯ ಜಾವಗಳಲ್ಲಿ ಕ್ಷಮಾಯಾಚನೆ ಮಾಡುತ್ತಿದ್ದರು.
Verse 19
وَفِىٓ أَمْوَٰلِهِمْ حَقٌّ لِّلسَّآئِلِ وَٱلْمَحْرُومِ
Transliteration wafī amwālihim ḥaqqun lilssāili wal-maḥrūmi
Kannada ಅವರ ಸೊತ್ತುಗಳಲ್ಲಿ ಬೇಡುವವನಿಗೂ ಬೇಡಲು ತಟಸ್ಥವಿದ್ದವನಿಗೂ ಹಕ್ಕಿರುವುದು.
Verse 20
وَفِى ٱلْأَرْضِ ءَايَـٰتٌ لِّلْمُوقِنِينَ
Transliteration wafī l-arḍi āyātun lil'mūqinīna
Kannada ದೃಢ ವಿಶ್ವಾಸಿಗಳಿಗೆ ಭೂಮಿಯಲ್ಲಿ ಅಸಂಖ್ಯಾತ ನಿದರ್ಶನಗಳಿವೆ.
Verse 21
وَفِىٓ أَنفُسِكُمْ ۚ أَفَلَا تُبْصِرُونَ
Transliteration wafī anfusikum afalā tub'ṣirūna
Kannada ಸ್ವತಃ ನಿಮ್ಮಲ್ಲೂ (ನಿದರ್ಶನಗಳು) ಇವೆ. ನೀವು ಕಂಡರಿಯುವುದಿಲ್ಲವೇ?
Verse 22
وَفِى ٱلسَّمَآءِ رِزْقُكُمْ وَمَا تُوعَدُونَ
Transliteration wafī l-samāi riz'qukum wamā tūʿadūna
Kannada ಆಕಾಶದಲ್ಲಿ ನಿಮ್ಮ ಜೀವನಾಧಾರವೂ ನಿಮಗೆ ವಾಗ್ದಾನ ಮಾಡಲಾಗುತ್ತಿರುವವುಗಳೂ ಇವೆ .
Verse 23
فَوَرَبِّ ٱلسَّمَآءِ وَٱلْأَرْضِ إِنَّهُۥ لَحَقٌّ مِّثْلَ مَآ أَنَّكُمْ تَنطِقُونَ
Transliteration fawarabbi l-samāi wal-arḍi innahu laḥaqqun mith'la mā annakum tanṭiqūna
Kannada ಆದುದರಿಂದ ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಇದು ಸತ್ಯವಾಗಿದೆ. ನೀವು ಆ ಕುರಿತು ಮಾತನಾಡಿಕೊಳ್ಳುವಷ್ಟೇ ಅದು ಖಚಿತವಾಗಿದೆ.
Verse 24
هَلْ أَتَىٰكَ حَدِيثُ ضَيْفِ إِبْرَٰهِيمَ ٱلْمُكْرَمِينَ
Transliteration hal atāka ḥadīthu ḍayfi ib'rāhīma l-muk'ramīna
Kannada (ಸಂದೇಶವಾಹಕರೇ,) ಇಬ್‍ರಾಹೀಮರ ಮಾನ್ಯ ಅತಿಥಿಗಳ ವೃತ್ತಾಂತವು ನಿಮಗೆ ತಲುಪಿದೆಯೇ?
Verse 25
إِذْ دَخَلُوا۟ عَلَيْهِ فَقَالُوا۟ سَلَـٰمًا ۖ قَالَ سَلَـٰمٌ قَوْمٌ مُّنكَرُونَ
Transliteration idh dakhalū ʿalayhi faqālū salāman qāla salāmun qawmun munkarūna
Kannada ಅವರು, ಅವರ (ಇಬ್ರಾಹೀಮರ) ಬಳಿಗೆ ಬಂದು ಸಲಾಮ್ ಹೇಳಿದ ಸಂದರ್ಭ, ಅವರು (ಇಬ್‍ರಾ ಹೀಮ್) ಸಲಾಮ್, ನೀವು ಅಪರಿಚಿತರು ಎಂದರು.
Verse 26
فَرَاغَ إِلَىٰٓ أَهْلِهِۦ فَجَآءَ بِعِجْلٍ سَمِينٍ
Transliteration farāgha ilā ahlihi fajāa biʿij'lin samīnin
Kannada ಅನಂತರ ಅವರು ದೃತಿಯಿಂದ ತಮ್ಮ ಮನೆ ಯವರ ಬಳಿಗೆ ಹೋದರು. ಆಮೇಲೆ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು.
Verse 27
فَقَرَّبَهُۥٓ إِلَيْهِمْ قَالَ أَلَا تَأْكُلُونَ
Transliteration faqarrabahu ilayhim qāla alā takulūna
Kannada ತರುವಾಯ ಅದನ್ನು ಅವರ ಹತ್ತಿರ ಇಟ್ಟರು. ನೀವು ತಿನ್ನುವುದಿಲ್ಲವೇ? ಎಂದು ಕೇಳಿದರು.
Verse 28
فَأَوْجَسَ مِنْهُمْ خِيفَةً ۖ قَالُوا۟ لَا تَخَفْ ۖ وَبَشَّرُوهُ بِغُلَـٰمٍ عَلِيمٍ
Transliteration fa-awjasa min'hum khīfatan qālū lā takhaf wabasharūhu bighulāmin ʿalīmin
Kannada (ಅವರು ತಿನ್ನಲಿಲ್ಲ) ಆಗ ಇಬ್‍ರಾಹೀಮರು ಅವರ ಬಗೆಗೆ ಅಂಜಿದರು. ಆಗ ಅತಿಥಿಗಳು; `ತಾವು ಹೆದರಬೇಡಿ’ ಎಂದರು ಮತ್ತು ಅವರಿಗೆ ಓರ್ವ ಸುಜ್ಞಾನಿ ಪುತ್ರನು ಜನಿಸುವನೆಂಬ ಸುವಾರ್ತೆ ನೀಡಿದರು .
Verse 29
فَأَقْبَلَتِ ٱمْرَأَتُهُۥ فِى صَرَّةٍ فَصَكَّتْ وَجْهَهَا وَقَالَتْ عَجُوزٌ عَقِيمٌ
Transliteration fa-aqbalati im'ra-atuhu fī ṣarratin faṣakkat wajhahā waqālat ʿajūzun ʿaqīmun
Kannada ಆಗ ಅವರ ಪತ್ನಿಯು ಚೀರುತ್ತ ಮುಂದೆ ಬಂದರು ಮತ್ತು ತನ್ನ ಮುಖಕ್ಕೆ ಬಡಿದುಕೊಳ್ಳುತ್ತ, ಬಂಜೆಯಾದ ಓರ್ವ ವೃದ್ಧೆ! (ಹೆರುವುದು ಹೇಗೆ?) ಎಂದು ಕೇಳಿದರು.
Verse 30
قَالُوا۟ كَذَٰلِكِ قَالَ رَبُّكِ ۖ إِنَّهُۥ هُوَ ٱلْحَكِيمُ ٱلْعَلِيمُ
Transliteration qālū kadhāliki qāla rabbuki innahu huwa l-ḥakīmu l-ʿalīmu
Kannada ಆಗ ಅತಿಥಿಗಳು; “ನಿನ್ನ ಪ್ರಭು ಹೀಗೆಯೇ ಹೇಳಿರುತ್ತಾನೆ. ಅವನು ಮಹಾ ಯುಕ್ತಿವಂತನೂ, ಸರ್ವಜ್ಞನೂ ಆಗಿರುತ್ತಾನೆ”ಎಂದರು.
Verse 31
۞ قَالَ فَمَا خَطْبُكُمْ أَيُّهَا ٱلْمُرْسَلُونَ
Transliteration qāla famā khaṭbukum ayyuhā l-mur'salūna
Kannada ಇಬ್ರಾಹೀಮರು ಕೇಳಿದರು, ದೇವದೂತರೇ, ನಿಮ್ಮ ಉದ್ದೇಶವೇನು?
Verse 32
قَالُوٓا۟ إِنَّآ أُرْسِلْنَآ إِلَىٰ قَوْمٍ مُّجْرِمِينَ
Transliteration qālū innā ur'sil'nā ilā qawmin muj'rimīna
Kannada ಅವರು ಹೇಳಿದರು, ನಾವು ಒಂದು ಅಪರಾಧಿ ಜನಾಂಗದೆಡೆಗೆ ಕಳುಹಿಸಲ್ಪಟ್ಟಿದ್ದೇವೆ.
Verse 33
لِنُرْسِلَ عَلَيْهِمْ حِجَارَةً مِّن طِينٍ
Transliteration linur'sila ʿalayhim ḥijāratan min ṭīnin
Kannada ಅವರ ಮೇಲೆ ಸುಡುಮಣ್ಣಿನ ಕಲ್ಲುಗಳ ಮಳೆಗರೆಯಲಿಕ್ಕಾಗಿ.
Verse 34
مُّسَوَّمَةً عِندَ رَبِّكَ لِلْمُسْرِفِينَ
Transliteration musawwamatan ʿinda rabbika lil'mus'rifīna
Kannada ಆ ಕಲ್ಲುಗಳನ್ನು ಅತಿಕ್ರಮಿಗಳಿಗಾಗಿ ನಿಮ್ಮ ಪ್ರಭುವಿನ ಬಳಿ ಗುರುತು ಹಾಕಿಡಲಾಗಿದೆ.
Verse 35
فَأَخْرَجْنَا مَن كَانَ فِيهَا مِنَ ٱلْمُؤْمِنِينَ
Transliteration fa-akhrajnā man kāna fīhā mina l-mu'minīna
Kannada ಆ ನಾಡಿನಲ್ಲಿದ್ದ ಸತ್ಯವಿಶ್ವಾಸಿಗಳನ್ನೆಲ್ಲ ನಾವು ಅಲ್ಲಿಂದ ಹೊರಕಳುಹಿಸಿ ರಕ್ಷಿಸಿದೆವು.
Verse 36
فَمَا وَجَدْنَا فِيهَا غَيْرَ بَيْتٍ مِّنَ ٱلْمُسْلِمِينَ
Transliteration famā wajadnā fīhā ghayra baytin mina l-mus'limīna
Kannada ಅಲ್ಲಿ ಮುಸ್ಲಿಮರ ಒಂದು ಮನೆಯ ಹೊರತು ಬೇರಾವ ಮನೆಯನ್ನೂ ನಾವು ಕಾಣಲಿಲ್ಲ.
Verse 37
وَتَرَكْنَا فِيهَآ ءَايَةً لِّلَّذِينَ يَخَافُونَ ٱلْعَذَابَ ٱلْأَلِيمَ
Transliteration wataraknā fīhā āyatan lilladhīna yakhāfūna l-ʿadhāba l-alīma
Kannada ವೇದನಾಯುಕ್ತ ಶಿಕ್ಷೆಯನ್ನು ಭಯಪಡುವ ಜನರಿಗಾಗಿ ಒಂದು ನಿದರ್ಶನವನ್ನು ಅಲ್ಲಿ ನಾವು ಉಳಿಸಿದೆವು.
Verse 38
وَفِى مُوسَىٰٓ إِذْ أَرْسَلْنَـٰهُ إِلَىٰ فِرْعَوْنَ بِسُلْطَـٰنٍ مُّبِينٍ
Transliteration wafī mūsā idh arsalnāhu ilā fir'ʿawna bisul'ṭānin mubīnin
Kannada ಮೂಸಾರ ವೃತ್ತಾಂತದಲ್ಲಿ (ದೃಷ್ಟಾಂತಗಳಿವೆ). ಸುಸ್ಪಷ್ಟ ಆಧಾರ ಪ್ರಮಾಣದೊಂದಿಗೆ ಫಿರ್‍ಔನನ ಬಳಿಗೆ ನಾವು ಅವರನ್ನು ಕಳುಹಿಸಿದ ಸಂದರ್ಭ.
Verse 39
فَتَوَلَّىٰ بِرُكْنِهِۦ وَقَالَ سَـٰحِرٌ أَوْ مَجْنُونٌ
Transliteration fatawallā biruk'nihi waqāla sāḥirun aw majnūnun
Kannada ಅವನು ತನ್ನ ಸೈನಿಕ ಶಕ್ತಿಯ ಧೈರ್ಯದಿಂದ ಸತ್ಯಕ್ಕೆ ವಿಮುಖನಾದನು. ಮತ್ತು ಇವನು ಮಾಟಗಾರನೋ ಹುಚ್ಚನೋ ಆಗಿದ್ದಾನೆ ಎಂದನು.
Verse 40
فَأَخَذْنَـٰهُ وَجُنُودَهُۥ فَنَبَذْنَـٰهُمْ فِى ٱلْيَمِّ وَهُوَ مُلِيمٌ
Transliteration fa-akhadhnāhu wajunūdahu fanabadhnāhum fī l-yami wahuwa mulīmun
Kannada ಕೊನೆಗೆ ನಾವು ಅವನನ್ನೂ ಅವನ ಸೇನೆಗಳನ್ನೂ ಹಿಡಿದೆವು. ಅನಂತರ ಅವರನ್ನು ಸಮುದ್ರಕ್ಕೆ ಎಸೆದು ಬಿಟ್ಟೆವು ಮತ್ತು ಅವನು ನಿಂದ್ಯನಾಗಿ ಬಿಟ್ಟನು.
Verse 41
وَفِى عَادٍ إِذْ أَرْسَلْنَا عَلَيْهِمُ ٱلرِّيحَ ٱلْعَقِيمَ
Transliteration wafī ʿādin idh arsalnā ʿalayhimu l-rīḥa l-ʿaqīma
Kannada `ಆದ್’ ಜನಾಂಗದಲ್ಲಿ (ದೃಷ್ಟಾಂತವಿದೆ). ನಾವು ಅವರ ಮೇಲೆ ಒಂದು ವಿನಾಶಕರ ಗಾಳಿಯನ್ನು ಕಳುಹಿಸಿದ ಸಂದರ್ಭ.
Verse 42
مَا تَذَرُ مِن شَىْءٍ أَتَتْ عَلَيْهِ إِلَّا جَعَلَتْهُ كَٱلرَّمِيمِ
Transliteration mā tadharu min shayin atat ʿalayhi illā jaʿalathu kal-ramīmi
Kannada ಅದು ಹಾದು ಹೋದ ಯಾವುದೇ ಒಂದು ವಸ್ತುವನ್ನೂ ಧೂಳೀಪಟದಂತೆ ಶಿಥಿಲಗೊಳಿಸದೆ ಬಿಟ್ಟಿಲ್ಲ.
Verse 43
وَفِى ثَمُودَ إِذْ قِيلَ لَهُمْ تَمَتَّعُوا۟ حَتَّىٰ حِينٍ
Transliteration wafī thamūda idh qīla lahum tamattaʿū ḥattā ḥīnin
Kannada `ಸಮೂದ್’ ಜನಾಂಗದಲ್ಲೂ (ನಿದರ್ಶನವಿದೆ). ಒಂದು ನಿಶ್ಚಿತ ಕಾಲದವರೆಗೆ ನೀವು ಸುಖ ಭೋಗಗಳನ್ನು ಅನುಭವಿಸಿಕೊಳ್ಳಿರೆಂದು ಅವರೊಡನೆ ಹೇಳಲ್ಪಟ್ಟ ಸಂದರ್ಭ.
Verse 44
فَعَتَوْا۟ عَنْ أَمْرِ رَبِّهِمْ فَأَخَذَتْهُمُ ٱلصَّـٰعِقَةُ وَهُمْ يَنظُرُونَ
Transliteration faʿataw ʿan amri rabbihim fa-akhadhathumu l-ṣāʿiqatu wahum yanẓurūna
Kannada ಆದರೆ, ಅವರು ತಮ್ಮ ಪ್ರಭುವಿನ ಆಜ್ಞೆಯ ವಿರುದ್ಧ ಧಿಕ್ಕಾರ ತೋರಿದರು. ಕೊನೆಗೆ ಅವರು ನೋಡುತ್ತಿದ್ದಂತೆಯೇ ಹಠಾತ್ತನೆ ಘೋರ ಶಬ್ದ ಅವರ ಮೇಲೆರಗಿತು.
Verse 45
فَمَا ٱسْتَطَـٰعُوا۟ مِن قِيَامٍ وَمَا كَانُوا۟ مُنتَصِرِينَ
Transliteration famā is'taṭāʿū min qiyāmin wamā kānū muntaṣirīna
Kannada ಆಗ ಅವರಿಗೆ ಎದ್ದು ನಿಲ್ಲುವ ಶಕ್ತಿಯಾಗಲಿ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮಥ್ರ್ಯವಾಗಲಿ ಉಳಿಯಲಿಲ್ಲ.
Verse 46
وَقَوْمَ نُوحٍ مِّن قَبْلُ ۖ إِنَّهُمْ كَانُوا۟ قَوْمًا فَـٰسِقِينَ
Transliteration waqawma nūḥin min qablu innahum kānū qawman fāsiqīna
Kannada ಅದಕ್ಕೂ ಮುಂಚೆ `ನೂಹ’ರ ಜನಾಂಗವನ್ನು (ನಾವು ನಾಶಗೊಳಿಸಿದೆವು.) ಅವರು ಕೂಡಾ ಕರ್ಮಭ್ರಪ್ಟರಾದ ಒಂದು ಜನಾಂಗವಾಗಿದ್ದರು.
Verse 47
وَٱلسَّمَآءَ بَنَيْنَـٰهَا بِأَيْي۟دٍ وَإِنَّا لَمُوسِعُونَ
Transliteration wal-samāa banaynāhā bi-aydin wa-innā lamūsiʿūna
Kannada ನಾವು ಆಕಾಶವನ್ನು ನಮ್ಮ ಶಕ್ತಿಯಿಂದಲೇ ನಿರ್ಮಿಸಿರುತ್ತೇವೆ ಮತ್ತು ನಾವು ಅದನ್ನು ವಿಶಾಲಗೊಳಿಸುವವರಾಗಿದ್ದೇವೆ.
Verse 48
وَٱلْأَرْضَ فَرَشْنَـٰهَا فَنِعْمَ ٱلْمَـٰهِدُونَ
Transliteration wal-arḍa farashnāhā faniʿ'ma l-māhidūna
Kannada ಭೂಮಿಯನ್ನು ನಾವು ಹಾಸಿರುತ್ತೇವೆ, ಅದನ್ನು ಜನ ವಾಸಯೋಗ್ಯಗೊಳಿಸಿದವನು ಎಷ್ಟು ಉತ್ತಮನು!
Verse 49
وَمِن كُلِّ شَىْءٍ خَلَقْنَا زَوْجَيْنِ لَعَلَّكُمْ تَذَكَّرُونَ
Transliteration wamin kulli shayin khalaqnā zawjayni laʿallakum tadhakkarūna
Kannada ನಾವು ಪ್ರತಿಯೊಂದು ವಸ್ತುವಿಗೂ ಜೋಡಿಗಳನ್ನು ಸೃಷ್ಟಿಸಿರುತ್ತೇವೆ. ನೀವು ಚಿಂತಿಸುವಂತಾಗಲು.
Verse 50
فَفِرُّوٓا۟ إِلَى ٱللَّهِ ۖ إِنِّى لَكُم مِّنْهُ نَذِيرٌ مُّبِينٌ
Transliteration fafirrū ilā l-lahi innī lakum min'hu nadhīrun mubīnun
Kannada ಆದುದರಿಂದ (ತಾವು ಹೇಳಿರಿ;) ನೀವು ಅಲ್ಲಾಹನ ಕಡೆಗೆ ಧಾವಿಸಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನಾಗಿದ್ದೇನೆ.
Verse 51
وَلَا تَجْعَلُوا۟ مَعَ ٱللَّهِ إِلَـٰهًا ءَاخَرَ ۖ إِنِّى لَكُم مِّنْهُ نَذِيرٌ مُّبِينٌ
Transliteration walā tajʿalū maʿa l-lahi ilāhan ākhara innī lakum min'hu nadhīrun mubīnun
Kannada ಅಲ್ಲಾಹನೊಂದಿಗೆ ಬೇರೆ ಆರಾಧ್ಯರನ್ನು ಮಾಡಿ ಕೊಳ್ಳಬೇಡಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನೇ ಆಗಿ ದ್ದೇನೆ.
Verse 52
كَذَٰلِكَ مَآ أَتَى ٱلَّذِينَ مِن قَبْلِهِم مِّن رَّسُولٍ إِلَّا قَالُوا۟ سَاحِرٌ أَوْ مَجْنُونٌ
Transliteration kadhālika mā atā alladhīna min qablihim min rasūlin illā qālū sāḥirun aw majnūnun
Kannada ಇದೇ ರೀತಿ ಇವರಿಗಿಂತ ಮುಂಚಿನ ಜನಾಂಗ ಗಳ ಬಳಿಗೂ ಯಾವುದೇ ದೂತರು ಬಂದಾಗ ಅವರನ್ನು ಇವರು ಮಾಟಗಾರ ಅಥವಾ ಹುಚ್ಚ ಎಂದು ಹೇಳದೆ ಬಿಡಲಿಲ್ಲ.
Verse 53
أَتَوَاصَوْا۟ بِهِۦ ۚ بَلْ هُمْ قَوْمٌ طَاغُونَ
Transliteration atawāṣaw bihi bal hum qawmun ṭāghūna
Kannada ಅದಕ್ಕೆ (ಹಾಗೆ ಹೇಳುವುದಕ್ಕೆ) ಅವರೇನು ಪರಸ್ಪರ ಒಪ್ಪಂದ ಮಾಡಿಕೊಂಡಿರುವರೇ? ಇಲ್ಲ. ವಾಸ್ತವ ದಲ್ಲಿ ಅವರು ಅತಿಕ್ರಮಿ ಜನತೆಯಾಗಿದ್ದಾರೆ.
Verse 54
فَتَوَلَّ عَنْهُمْ فَمَآ أَنتَ بِمَلُومٍ
Transliteration fatawalla ʿanhum famā anta bimalūmin
Kannada ಆದುದರಿಂದ (ಸಂದೇಶವಾಹಕರೇ,) ಅವರ ಬಗ್ಗೆ ನಿರ್ಲಕ್ಷ್ಯ ತಾಳಿರಿ. (ಅವರ ವಿಮುಖತೆಗೆ) ತಾವು ಆಕ್ಷೇಪಾರ್ಹರಲ್ಲ.
Verse 55
وَذَكِّرْ فَإِنَّ ٱلذِّكْرَىٰ تَنفَعُ ٱلْمُؤْمِنِينَ
Transliteration wadhakkir fa-inna l-dhik'rā tanfaʿu l-mu'minīna
Kannada ತಾವು ಉಪದೇಶ ಮಾಡಿರಿ. ಏಕೆಂದರೆ ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಫಲ ನೀಡುತ್ತದೆ.
Verse 56
وَمَا خَلَقْتُ ٱلْجِنَّ وَٱلْإِنسَ إِلَّا لِيَعْبُدُونِ
Transliteration wamā khalaqtu l-jina wal-insa illā liyaʿbudūni
Kannada ನಾನು ಜಿನ್ನ್‍ಗಳನ್ನೂ ಮನುಷ್ಯರನ್ನೂ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಲಿಲ್ಲ .
Verse 57
مَآ أُرِيدُ مِنْهُم مِّن رِّزْقٍ وَمَآ أُرِيدُ أَن يُطْعِمُونِ
Transliteration mā urīdu min'hum min riz'qin wamā urīdu an yuṭ'ʿimūni
Kannada ನಾನು ಅವರಿಂದ ಜೀವನಾಧಾರವನ್ನೇನೂ ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ಆಗ್ರಹಿಸುವುದಿಲ್ಲ.
Verse 58
إِنَّ ٱللَّهَ هُوَ ٱلرَّزَّاقُ ذُو ٱلْقُوَّةِ ٱلْمَتِينُ
Transliteration inna l-laha huwa l-razāqu dhū l-quwati l-matīnu
Kannada ನಿಜವಾಗಿಯೂ ಅಲ್ಲಾಹನು ಮಹಾ ಅನ್ನದಾತನು , ಮಹಾಶಕ್ತಿಶಾಲಿ ಮತ್ತು ಪ್ರಚಂಡನೂ ಆಗಿರುವನು.
Verse 59
فَإِنَّ لِلَّذِينَ ظَلَمُوا۟ ذَنُوبًا مِّثْلَ ذَنُوبِ أَصْحَـٰبِهِمْ فَلَا يَسْتَعْجِلُونِ
Transliteration fa-inna lilladhīna ẓalamū dhanūban mith'la dhanūbi aṣḥābihim falā yastaʿjilūni
Kannada ಆದುದರಿಂದ (ಇಂದು) ಅಕ್ರಮವೆಸಗಿದವರಿಗೆ (ಪೂರ್ವಿಕರಾದ) ತಮ್ಮ ಸಂಗಡಿಗರಿಗೆ ಸಿಕ್ಕಿದಂತಹ ಯಾತನೆಯ ಪಾಲು ಸಿದ್ಧವಿದೆ. ಆದ್ದರಿಂದ ಶಿಕ್ಷೆಗಾಗಿ ಅವರು ನನ್ನೊಡನೆ ಆತುರ ತೋರುವುದು ಬೇಡ.
Verse 60
فَوَيْلٌ لِّلَّذِينَ كَفَرُوا۟ مِن يَوْمِهِمُ ٱلَّذِى يُوعَدُونَ
Transliteration fawaylun lilladhīna kafarū min yawmihimu alladhī yūʿadūna
Kannada ಯಾವ ದಿನದ ಬಗ್ಗೆ ಎಚ್ಚರಿಸಲಾಗುತ್ತಿದೆಯೋ ಆ ದಿನ ಸತ್ಯನಿಷೇಧಿಗಳಿಗೆ ಕಠಿಣ ಶಿಕ್ಷೆಯಿದೆ.
Read Surah Adh-Dhariyat in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.