Surah Saba in Kannada: translation and audio
Surah 34 · سبإ · Sheba · 54 verses
Surah Saba verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Saba word by word in English.
Verse 1
ٱلْحَمْدُ لِلَّهِ ٱلَّذِى لَهُۥ مَا فِى ٱلسَّمَـٰوَٰتِ وَمَا فِى ٱلْأَرْضِ وَلَهُ ٱلْحَمْدُ فِى ٱلْـَٔاخِرَةِ ۚ وَهُوَ ٱلْحَكِيمُ ٱلْخَبِيرُ
Transliteration al-ḥamdu lillahi alladhī lahu mā fī l-samāwāti wamā fī l-arḍi walahu l-ḥamdu fī l-ākhirati wahuwa l-ḥakīmu l-khabīru
Kannada ಸರ್ವ ಸ್ತುತಿಯು ಭೂಮಿ - ಆಕಾಶಗಳಲ್ಲಿರುವ ಸರ್ವದರ ಒಡೆಯನಾಗಿರುವ ಅಲ್ಲಾಹನಿಗೆ ಮೀಸಲು. ಪರಲೋಕದಲ್ಲೂ ಸಕಲ ಸ್ತುತಿಗಳು ಅವನಿಗೇ ಸಲ್ಲುತ್ತವೆ. ಅವನು ವಿವೇಕಪೂರ್ಣನೂ ಸೂಕ್ಷ್ಮಜ್ಞಾನಿಯೂ ಆಗಿರುತ್ತಾನೆ.
Verse 2
يَعْلَمُ مَا يَلِجُ فِى ٱلْأَرْضِ وَمَا يَخْرُجُ مِنْهَا وَمَا يَنزِلُ مِنَ ٱلسَّمَآءِ وَمَا يَعْرُجُ فِيهَا ۚ وَهُوَ ٱلرَّحِيمُ ٱلْغَفُورُ
Transliteration yaʿlamu mā yaliju fī l-arḍi wamā yakhruju min'hā wamā yanzilu mina l-samāi wamā yaʿruju fīhā wahuwa l-raḥīmu l-ghafūru
Kannada ಭೂಮಿಯ ಒಳ ನುಗ್ಗುವ ಹಾಗೂ ಅದರಿಂದ ಹೊರಬರುವ ಮತ್ತು ಆಕಾಶದಿಂದ ಇಳಿಯುವ ಹಾಗೂ ಅದರ ಮೇಲೇರುವ ಪ್ರತಿಯೊಂದನ್ನೂ ಅವನು ಬಲ್ಲನು. ಅವನು ಕರುಣಾನಿಧಿಯೂ ಕ್ಷಮಾಶೀಲನೂ ಆಗಿರುತ್ತಾನೆ.
Verse 3
وَقَالَ ٱلَّذِينَ كَفَرُوا۟ لَا تَأْتِينَا ٱلسَّاعَةُ ۖ قُلْ بَلَىٰ وَرَبِّى لَتَأْتِيَنَّكُمْ عَـٰلِمِ ٱلْغَيْبِ ۖ لَا يَعْزُبُ عَنْهُ مِثْقَالُ ذَرَّةٍ فِى ٱلسَّمَـٰوَٰتِ وَلَا فِى ٱلْأَرْضِ وَلَآ أَصْغَرُ مِن ذَٰلِكَ وَلَآ أَكْبَرُ إِلَّا فِى كِتَـٰبٍ مُّبِينٍ
Transliteration waqāla alladhīna kafarū lā tatīnā l-sāʿatu qul balā warabbī latatiyannakum ʿālimi l-ghaybi lā yaʿzubu ʿanhu mith'qālu dharratin fī l-samāwāti walā fī l-arḍi walā aṣgharu min dhālika walā akbaru illā fī kitābin mubīnin
Kannada ಪುನರುತ್ಥಾನದ ಘಳಿಗೆ ನಮಗೆ ಬರುವುದಿಲ್ಲ ಎಂದು ಸತ್ಯನಿಷೇಧಿಗಳು ಹೇಳಿದರು. (ಪ್ರವಾದಿ ಯರೇ) ಹೇಳಿರಿ - ‘ಪರೋಕ್ಷ ಜ್ಞಾನಿಯಾದ ನನ್ನ ಪ್ರಭುವಿನಾಣೆಗೂ ಅದು ನಿಮಗೆ ಬಂದೇ ತೀರುವುದು. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ, ಅಣು ತೂಕದಷ್ಟು ವಸ್ತುವೂ ಅಣುವಿಗಿಂತ ದೊಡ್ಡದಿರಲಿ, ಅದಕ್ಕಿಂತ ಸಣ್ಣದಿರಲಿ, ಒಂದು ಸುಸ್ಪಷ್ಟ ಗ್ರಂಥದಲ್ಲಿ ಲಿಖಿತವಿಲ್ಲದೆ ಅವನಿಂದ ಮರೆಯಾಗಿಲ್ಲ.
Verse 4
لِّيَجْزِىَ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ ۚ أُو۟لَـٰٓئِكَ لَهُم مَّغْفِرَةٌ وَرِزْقٌ كَرِيمٌ
Transliteration liyajziya alladhīna āmanū waʿamilū l-ṣāliḥāti ulāika lahum maghfiratun wariz'qun karīmun
Kannada ಸತ್ಯವಿಶ್ವಾಸವನ್ನು ಸ್ವೀಕರಿಸಿದ ಹಾಗೂ ಸತ್ಕರ್ಮ ಕೈಗೊಂಡವರಿಗೆ, ಅವನು ಪ್ರತಿಫಲ ನೀಡಲಿಕ್ಕಾಗಿ (ಆ ದಿನ ಬರುವುದು). ಅವರಿಗೆ ಪಾಪ ಮುಕ್ತಿಯೂ ಸನ್ಮಾನ್ಯ ಜೀವನಾಧಾರವೂ ಇವೆ.
Verse 5
وَٱلَّذِينَ سَعَوْ فِىٓ ءَايَـٰتِنَا مُعَـٰجِزِينَ أُو۟لَـٰٓئِكَ لَهُمْ عَذَابٌ مِّن رِّجْزٍ أَلِيمٌ
Transliteration wa-alladhīna saʿaw fī āyātinā muʿājizīna ulāika lahum ʿadhābun min rij'zin alīmun
Kannada ನಮ್ಮನ್ನು ಸೋಲಿಸಬಲ್ಲವೆಂದುನಮ್ಮ ಆಯತ್ತು ಗಳಲ್ಲಿ (ಗೊಂದಲವೆಬ್ಬಿಸಲು) ಓಡಾಡಿ ಕೊಂಡಿರುವವರಿಗೆ ಅತಿ ನಿಕೃಷ್ಟ ತರದ ವೇದನಾತ್ಮಕ ಶಿಕ್ಷೆ ಇದೆ.
Verse 6
وَيَرَى ٱلَّذِينَ أُوتُوا۟ ٱلْعِلْمَ ٱلَّذِىٓ أُنزِلَ إِلَيْكَ مِن رَّبِّكَ هُوَ ٱلْحَقَّ وَيَهْدِىٓ إِلَىٰ صِرَٰطِ ٱلْعَزِيزِ ٱلْحَمِيدِ
Transliteration wayarā alladhīna ūtū l-ʿil'ma alladhī unzila ilayka min rabbika huwa l-ḥaqa wayahdī ilā ṣirāṭi l-ʿazīzi l-ḥamīdi
Kannada ನಿಮ್ಮ ಪ್ರಭುವಿನಿಂದ ನಿಮಗೆ ಅವತೀರ್ಣಗೊಳಿಸಲ್ಪಟ್ಟ ಸಂದೇಶ ಪರಮಸತ್ಯವೆಂದೂ ಪ್ರಬಲನೂ ಸ್ತುತ್ತ್ಯರ್ಹನೂ ಆದ ಅಲ್ಲಾಹನ ಮಾರ್ಗಕ್ಕೆ ಅದು ದಾರಿ ತೋರಿಸುತ್ತದೆಂದೂ ಜ್ಞಾನ ನೀಡಲ್ಪಟ್ಟವರು ತಿಳಿಯುತ್ತಾರೆ.
Verse 7
وَقَالَ ٱلَّذِينَ كَفَرُوا۟ هَلْ نَدُلُّكُمْ عَلَىٰ رَجُلٍ يُنَبِّئُكُمْ إِذَا مُزِّقْتُمْ كُلَّ مُمَزَّقٍ إِنَّكُمْ لَفِى خَلْقٍ جَدِيدٍ
Transliteration waqāla alladhīna kafarū hal nadullukum ʿalā rajulin yunabbi-ukum idhā muzziq'tum kulla mumazzaqin innakum lafī khalqin jadīdin
Kannada ಸತ್ಯನಿಷೇಧಿಗಳು ಹೇಳಿದರು, ‘ನೀವು ಸರ್ವ ರೀತಿಯಲ್ಲೂ ಛಿದ್ರಛಿದ್ರವಾಗಿ ನಾಶವಾದ ಬಳಿಕ ನೀವು ಪುನಃ ಹೊಸತಾಗಿ ಸೃಷ್ಟಿಸಲ್ಪಡುವಿರೆಂಬ ಸುದ್ದಿಯನ್ನು ತಿಳಿಸುವಂಥ ಒಬ್ಬ ವ್ಯಕ್ತಿಯನ್ನು ನಾವು ನಿಮಗೆ ತೋರಿಸಿಕೊಡಲೇ?
Verse 8
أَفْتَرَىٰ عَلَى ٱللَّهِ كَذِبًا أَم بِهِۦ جِنَّةٌۢ ۗ بَلِ ٱلَّذِينَ لَا يُؤْمِنُونَ بِٱلْـَٔاخِرَةِ فِى ٱلْعَذَابِ وَٱلضَّلَـٰلِ ٱلْبَعِيدِ
Transliteration aftarā ʿalā l-lahi kadhiban am bihi jinnatun bali alladhīna lā yu'minūna bil-ākhirati fī l-ʿadhābi wal-ḍalāli l-baʿīdi
Kannada ಆ ವ್ಯಕ್ತಿ ಅಲ್ಲಾಹನ ಹೆಸರಿನಲ್ಲಿ ಸುಳ್ಳನ್ನು ಸೃಷ್ಟಿಸುವನೋ ಅಥವಾ ಅವನಿಗೆ ಹುಚ್ಚು ಹಿಡಿದಿದೆಯೋ?’ ಹಾಗಲ್ಲ, ವಾಸ್ತವದಲ್ಲಿ ಪರಲೋಕವನ್ನು ನಂಬದವರು (ಅಲ್ಲಿ) ಯಾತನೆಯಲ್ಲೂ (ಇಹ ಲೋಕದಲ್ಲಿ) ವಿದೂರವಾದ ಪಥಭ್ರಷ್ಟತೆಯಲ್ಲೂ ಇರುವರು.
Verse 9
أَفَلَمْ يَرَوْا۟ إِلَىٰ مَا بَيْنَ أَيْدِيهِمْ وَمَا خَلْفَهُم مِّنَ ٱلسَّمَآءِ وَٱلْأَرْضِ ۚ إِن نَّشَأْ نَخْسِفْ بِهِمُ ٱلْأَرْضَ أَوْ نُسْقِطْ عَلَيْهِمْ كِسَفًا مِّنَ ٱلسَّمَآءِ ۚ إِنَّ فِى ذَٰلِكَ لَـَٔايَةً لِّكُلِّ عَبْدٍ مُّنِيبٍ
Transliteration afalam yaraw ilā mā bayna aydīhim wamā khalfahum mina l-samāi wal-arḍi in nasha nakhsif bihimu l-arḍa aw nus'qiṭ ʿalayhim kisafan mina l-samāi inna fī dhālika laāyatan likulli ʿabdin munībin
Kannada ಆದರೆ ಇವರನ್ನು ಮುಂದಿನಿಂದಲೂ ಹಿಂದಿನಿಂದಲೂ ಸುತ್ತುವರಿದುಕೊಂಡಿರುವ ಭೂಮಿ- ಆಕಾಶಗಳನ್ನು ಇವರು ನೋಡುವುದಿಲ್ಲವೇ? ನಾವಿಚ್ಚಿಸಿದರೆ ಇವರನ್ನು ಭೂಮಿಯಲ್ಲಿ ಹುಗಿದು ಬಿಡಲೂ ಅಥವಾ ಆಕಾಶದ ಕೆಲವು ತುಂಡುಗಳನ್ನು ಇವರ ಮೇಲೆ ಬೀಳಿಸಲೂ ನಾವು ಶಕ್ತರು. ವಾಸ್ತವದಲ್ಲಿ ತನ್ನ ಪ್ರಭುವಿನ ಕಡೆಗೆ ಮರಳುವಂತಹ ಪ್ರತಿಯೊಬ್ಬ ದಾಸನಿಗೂ ಇದರಲ್ಲಿ ಬಲು ದೊಡ್ಡ ನಿದರ್ಶನವಿದೆ.
Verse 10
۞ وَلَقَدْ ءَاتَيْنَا دَاوُۥدَ مِنَّا فَضْلًا ۖ يَـٰجِبَالُ أَوِّبِى مَعَهُۥ وَٱلطَّيْرَ ۖ وَأَلَنَّا لَهُ ٱلْحَدِيدَ
Transliteration walaqad ātaynā dāwūda minnā faḍlan yājibālu awwibī maʿahu wal-ṭayra wa-alannā lahu l-ḥadīda
Kannada ನಾವು ದಾವೂದರಿಗೆ ನಮ್ಮಿಂದ ಔದಾರ್ಯವನ್ನು ಕೊಟ್ಟಿದ್ದೇವೆ. ಪರ್ವತಗಳೇ, ಪಕ್ಷಿಗಳೇ, ದಾವೂದರೊಡನೆ ನೀವು ಕೀರ್ತನೆಯನ್ನು ಪುನರಾವರ್ತಿಸಿರಿ (ಎಂದು ನಾವು ಅಪ್ಪಣೆ ಕೊಟ್ಟೆವು). ಅವರಿಗೆ ನಾವು ಕಬ್ಬಿಣವನ್ನು ಮೃದುಗೊಳಿಸಿದೆವು.
Verse 11
أَنِ ٱعْمَلْ سَـٰبِغَـٰتٍ وَقَدِّرْ فِى ٱلسَّرْدِ ۖ وَٱعْمَلُوا۟ صَـٰلِحًا ۖ إِنِّى بِمَا تَعْمَلُونَ بَصِيرٌ
Transliteration ani iʿ'mal sābighātin waqaddir fī l-sardi wa-iʿ'malū ṣāliḥan innī bimā taʿmalūna baṣīrun
Kannada ಎದೆ ಕವಚಗಳನ್ನು ತಯಾರಿಸಿರಿ. ಅದರ ಸರಪಳಿಗಳನ್ನು ಸರಿಯಾದ ಅಳತೆಯಲ್ಲಿ ಮಾಡಿರಿ. ನೀವೆಲ್ಲರೂ ಸತ್ಕರ್ಮವೆಸಗಿರಿ, ನೀವು ಮಾಡುವುದನ್ನು ನಾನು ಚೆನ್ನಾಗಿ ಕಾಣುತ್ತಿರುವವನಾಗಿರುವೆ. (ಎಂದೂ ಅಪ್ಪಣೆ ಕೊಟ್ಟೆವು)
Verse 12
وَلِسُلَيْمَـٰنَ ٱلرِّيحَ غُدُوُّهَا شَهْرٌ وَرَوَاحُهَا شَهْرٌ ۖ وَأَسَلْنَا لَهُۥ عَيْنَ ٱلْقِطْرِ ۖ وَمِنَ ٱلْجِنِّ مَن يَعْمَلُ بَيْنَ يَدَيْهِ بِإِذْنِ رَبِّهِۦ ۖ وَمَن يَزِغْ مِنْهُمْ عَنْ أَمْرِنَا نُذِقْهُ مِنْ عَذَابِ ٱلسَّعِيرِ
Transliteration walisulaymāna l-rīḥa ghuduwwuhā shahrun warawāḥuhā shahrun wa-asalnā lahu ʿayna l-qiṭ'ri wamina l-jini man yaʿmalu bayna yadayhi bi-idh'ni rabbihi waman yazigh min'hum ʿan amrinā nudhiq'hu min ʿadhābi l-saʿīri
Kannada ಸುಲೈಮಾನರಿಗೆ ನಾವು ಗಾಳಿಯನ್ನು ನಿಯಂತ್ರಿಸಿ ಕೊಟ್ಟೆವು. ಅದರ ಬೆಳಗಿನ ಸಂಚಾರವು ಒಂದು ತಿಂಗಳ ದೂರವೂ ಸಂಜೆಯ ಸಂಚಾರವು ಒಂದು ತಿಂಗಳ ದೂರವೂ ಆಗಿತ್ತು. ನಾವು ಅವರಿಗಾಗಿ ತಾಮ್ರದ ಲಾವಾರಸದ ಚಿಲುಮೆಯನ್ನು ಹರಿಸಿದೆವು. ತಮ್ಮ ಪ್ರಭುವಿನ ಅಪ್ಪಣೆ ಪ್ರಕಾರ ಅವರ ಮುಂದೆ ಕೆಲಸ ಮಾಡುತ್ತಿದ್ದ ಕೆಲವು ಜಿನ್ನ್ಗಳನ್ನು ಅವರ ಅಧೀನಕ್ಕೆ ಕೊಟ್ಟೆವು. ಅವರ ಪೈಕಿ ಯಾವನಾದರೂ ನಮ್ಮ ಆಜ್ಞೆಯಿಂದ ತಪ್ಪಿದರೆ ಆತನಿಗೆ ನಾವು ಉರಿದೇಳುವ ಅಗ್ನಿಯ ಶಿಕ್ಷೆಯಿಂದ ಸವಿಯನ್ನುಣಿಸುವೆವು.
Verse 13
يَعْمَلُونَ لَهُۥ مَا يَشَآءُ مِن مَّحَـٰرِيبَ وَتَمَـٰثِيلَ وَجِفَانٍ كَٱلْجَوَابِ وَقُدُورٍ رَّاسِيَـٰتٍ ۚ ٱعْمَلُوٓا۟ ءَالَ دَاوُۥدَ شُكْرًا ۚ وَقَلِيلٌ مِّنْ عِبَادِىَ ٱلشَّكُورُ
Transliteration yaʿmalūna lahu mā yashāu min maḥārība watamāthīla wajifānin kal-jawābi waqudūrin rāsiyātin iʿ'malū āla dāwūda shuk'ran waqalīlun min ʿibādiya l-shakūru
Kannada ಅವರು ಸುಲೈಮಾನರಿಗಾಗಿ ಕಟ್ಟಡಗಳು, ಪ್ರತಿಮೆಗಳು, ಕೊಳಗಳಂತಹ ತೊಟ್ಟಿ ಪಾತ್ರೆಗಳು ಮತ್ತು ಸ್ಥಿರಗೊಳಿಸಿ ಊರಲಾದ ಬೃಹತ್ ಅಡುಗೆಯ ಕಡಾಯಗಳು. ಹೀಗೆ ಅವರು ಇಚ್ಚಿ ಸುವುದನ್ನೆಲ್ಲ ಅವರು ಮಾಡಿಕೊಡುತ್ತಿದ್ದರು. ದಾವೂದರ ಸಂತತಿಯೇ, ಕೃತಜ್ಞತೆಯಾಗಿ ನೀವು ಕರ್ಮವೆಸಗಿರಿ. ನನ್ನ ದಾಸರಲ್ಲಿ ಕೃತಜ್ಞರು ಬಹಳ ಕಡಿಮೆ.
Verse 14
فَلَمَّا قَضَيْنَا عَلَيْهِ ٱلْمَوْتَ مَا دَلَّهُمْ عَلَىٰ مَوْتِهِۦٓ إِلَّا دَآبَّةُ ٱلْأَرْضِ تَأْكُلُ مِنسَأَتَهُۥ ۖ فَلَمَّا خَرَّ تَبَيَّنَتِ ٱلْجِنُّ أَن لَّوْ كَانُوا۟ يَعْلَمُونَ ٱلْغَيْبَ مَا لَبِثُوا۟ فِى ٱلْعَذَابِ ٱلْمُهِينِ
Transliteration falammā qaḍaynā ʿalayhi l-mawta mā dallahum ʿalā mawtihi illā dābbatu l-arḍi takulu minsa-atahu falammā kharra tabayyanati l-jinu an law kānū yaʿlamūna l-ghayba mā labithū fī l-ʿadhābi l-muhīni
Kannada ಅನಂತರ ನಾವು ಸುಲೈಮಾನರಿಗೆ ಮರಣವನ್ನು ವಿಧಿಸಿದಾಗ ಜಿನ್ನ್ಗಳಿಗೆ ಅವರ ಮರಣದ ಬಗ್ಗೆ ತಿಳಿಸಿದ್ದು ಅವರ ಊರುಗೋಲನ್ನು ತಿನ್ನುತ್ತಿದ್ದ ಗೆದ್ದಲಿನ ಹೊರತು ಬೇರೇನೂ ಅಲ್ಲ. ಹೀಗೆ ಸುಲೈ ಮಾನರು (ಮರಣದ ನಂತರ) ನೆಲಕ್ಕೆ ಬಿದ್ದಾಗ, ತಮಗೆ ಪರೋಕ್ಷ ಜ್ಞಾನವಿರುತ್ತಿದ್ದರೆ ತಾವು ಇಂತಹ ಅಪಮಾನಕರ ಶಿಕ್ಷೆಯಲ್ಲಿ ಬೀಳುತ್ತಿರಲಿಲ್ಲ ವೆಂದು ಜಿನ್ನ್ಗಳಿಗೆ ಸ್ಪಷ್ಟವಾಗಿ ತಿಳಿಯಿತು.
Verse 15
لَقَدْ كَانَ لِسَبَإٍ فِى مَسْكَنِهِمْ ءَايَةٌ ۖ جَنَّتَانِ عَن يَمِينٍ وَشِمَالٍ ۖ كُلُوا۟ مِن رِّزْقِ رَبِّكُمْ وَٱشْكُرُوا۟ لَهُۥ ۚ بَلْدَةٌ طَيِّبَةٌ وَرَبٌّ غَفُورٌ
Transliteration laqad kāna lisaba-in fī maskanihim āyatun jannatāni ʿan yamīnin washimālin kulū min riz'qi rabbikum wa-ush'kurū lahu baldatun ṭayyibatun warabbun ghafūrun
Kannada `ಸಬಅï’ ಗೋತ್ರದವರಿಗೆ ಅವರ ವಾಸಸ್ಥಾನದ ಹತ್ತಿರದಲ್ಲೇ ಒಂದು ದೊಡ್ಡ ನಿದರ್ಶನವಿತ್ತು. ಅಂದರೆ ಬಲಭಾಗದಲ್ಲೂ ಎಡಭಾಗದಲ್ಲೂ ಇರುವ ಎರಡು ತೋಟಗಳು. (ನಾವು ಅವರಲ್ಲಿ ಹೇಳಿದೆವು) ‘ನಿಮ್ಮ ಪ್ರಭು ಕೊಟ್ಟ ಆಹಾರ ಉಣ್ಣಿರಿ. ಅವನಿಗೆ ಕೃತಜ್ಞತೆ ಸಲ್ಲಿಸಿರಿ’. ಪರಿಶುದ್ಧವಾದ ನಾಡು! ಅತ್ಯಂತ ಕ್ಷಮಾಶೀಲನಾದ ಪ್ರಭುವೂ!
Verse 16
فَأَعْرَضُوا۟ فَأَرْسَلْنَا عَلَيْهِمْ سَيْلَ ٱلْعَرِمِ وَبَدَّلْنَـٰهُم بِجَنَّتَيْهِمْ جَنَّتَيْنِ ذَوَاتَىْ أُكُلٍ خَمْطٍ وَأَثْلٍ وَشَىْءٍ مِّن سِدْرٍ قَلِيلٍ
Transliteration fa-aʿraḍū fa-arsalnā ʿalayhim sayla l-ʿarimi wabaddalnāhum bijannatayhim jannatayni dhawātay ukulin khamṭin wa-athlin washayin min sid'rin qalīlin
Kannada ಆಮೇಲೆ ಅವರು ವಿಮುಖರಾದರು. ತನ್ನಿಮಿತ್ತ ನಾವು ಅವರ ಮೇಲೆ ಅಣೆಕಟ್ಟು ಮುರಿದ ಜಲ ಪ್ರವಾಹವನ್ನು ಕಳುಹಿಸಿದೆವು. ಅವರ ಹಿಂದಿನ ಎರಡು ತೋಟಗಳ ಸ್ಥಾನದಲ್ಲಿ ಕಹಿ ಫಲಗಳು, ಮುಳ್ಳು ಗಿಡಗಂಟಿಗಳು ಮತ್ತು ಕೆಲವು ಬೋರೆ ಮರಗಳಿಂದ ಕೂಡಿದ ಬೇರೆ ಎರಡು ತೋಟಗ ಳನ್ನು ಅವರಿಗೆ ಬದಲಿ ಕೊಟ್ಟೆವು.
Verse 17
ذَٰلِكَ جَزَيْنَـٰهُم بِمَا كَفَرُوا۟ ۖ وَهَلْ نُجَـٰزِىٓ إِلَّا ٱلْكَفُورَ
Transliteration dhālika jazaynāhum bimā kafarū wahal nujāzī illā l-kafūra
Kannada ಇದು, ನಾವು ಅವರ ಸತ್ಯನಿಷೇಧಕ್ಕೆ ನೀಡಿದ ಪ್ರತಿಫಲವಾಗಿತ್ತು. ಇಂತಹ ಪ್ರತಿಫಲವನ್ನು ಸತ್ಯನಿಷೇಧಿಗಳ ಹೊರತು ಇನ್ನಾರಿಗೂ ನಾವು ಕೊಡುವುದಿಲ್ಲ.
Verse 18
وَجَعَلْنَا بَيْنَهُمْ وَبَيْنَ ٱلْقُرَى ٱلَّتِى بَـٰرَكْنَا فِيهَا قُرًى ظَـٰهِرَةً وَقَدَّرْنَا فِيهَا ٱلسَّيْرَ ۖ سِيرُوا۟ فِيهَا لَيَالِىَ وَأَيَّامًا ءَامِنِينَ
Transliteration wajaʿalnā baynahum wabayna l-qurā allatī bāraknā fīhā quran ẓāhiratan waqaddarnā fīhā l-sayra sīrū fīhā layāliya wa-ayyāman āminīna
Kannada ಅವರ (ಸಬಅï ಗೋತ್ರದ) ಮತ್ತು ನಾವು ಸಮೃ ದ್ಧಗೊಳಿಸಿದ ನಾಡುಗಳ ನಡುವೆ ಪ್ರತ್ಯಕ್ಷವಾದ ಹಲವು ನಾಡುಗಳನ್ನು ನಾವು ಸ್ಥಾಪಿಸಿದೆವು. ಅವು ಗಳಲ್ಲಿ ಸಂಚಾರವನ್ನೂ ನಾವು ಸುಗಮಗೊಳಿ ಸಿದೆವು. (ನಾವು ಹೇಳಿದೆವು) ‘ರಾತ್ರಿ- ಹಗಲು ಗಳಲ್ಲಿ ಸಂಪೂರ್ಣ ನಿರ್ಭಯರಾಗಿ ಈ ದಾರಿ ಗಳಲ್ಲಿ ಸಂಚರಿಸಿರಿ’.
Verse 19
فَقَالُوا۟ رَبَّنَا بَـٰعِدْ بَيْنَ أَسْفَارِنَا وَظَلَمُوٓا۟ أَنفُسَهُمْ فَجَعَلْنَـٰهُمْ أَحَادِيثَ وَمَزَّقْنَـٰهُمْ كُلَّ مُمَزَّقٍ ۚ إِنَّ فِى ذَٰلِكَ لَـَٔايَـٰتٍ لِّكُلِّ صَبَّارٍ شَكُورٍ
Transliteration faqālū rabbanā bāʿid bayna asfārinā waẓalamū anfusahum fajaʿalnāhum aḥādītha wamazzaqnāhum kulla mumazzaqin inna fī dhālika laāyātin likulli ṣabbārin shakūrin
Kannada ಆದರೆ ಅವರು, ‘ನಮ್ಮ ಪ್ರಭೂ! ನಮ್ಮ ಪ್ರಯಾಣದ ದೂರವನ್ನು ಹೆಚ್ಚಿಸು’ ಎಂದರು. ಅವರು ತಮಗೆ ತಾವೇ ಅಕ್ರಮವೆಸಗಿದರು. ತನ್ನಿಮಿತ್ತ ನಾವು ಅವರನ್ನು ದಂತಕಥೆಗಳನ್ನಾಗಿ ಮಾಡಿ ಸಂಪೂರ್ಣ ಭಿನ್ನಭಿನ್ನಗೊಳಿಸಿದೆವು. ನಿಶ್ಚಯವಾಗಿಯೂ ಹೆಚ್ಚು ಸಹನಶೀಲ ಹಾಗೂ ಕೃತಜ್ಞನಾಗಿ ರುವ ಪ್ರತಿಯೊಬ್ಬನಿಗೂ ಇದರಲ್ಲಿ ನಿದರ್ಶನಗಳಿವೆ.
Verse 20
وَلَقَدْ صَدَّقَ عَلَيْهِمْ إِبْلِيسُ ظَنَّهُۥ فَٱتَّبَعُوهُ إِلَّا فَرِيقًا مِّنَ ٱلْمُؤْمِنِينَ
Transliteration walaqad ṣaddaqa ʿalayhim ib'līsu ẓannahu fa-ittabaʿūhu illā farīqan mina l-mu'minīna
Kannada ಅವರ ವಿಷಯದಲ್ಲಿ ಇಬ್ಲೀಸನು ತನ್ನ ಗುಮಾನಿಯನ್ನು ನಿಜಗೊಳಿಸಿದನು. ಸತ್ಯ ವಿಶ್ವಾಸಿಗಳಾಗಿದ್ದ ಒಂದು ಗುಂಪಿನ ಹೊರತು ಅವರೆಲ್ಲರೂ ಅವನನ್ನೇ ಅನುಸರಿಸಿದರು.
Verse 21
وَمَا كَانَ لَهُۥ عَلَيْهِم مِّن سُلْطَـٰنٍ إِلَّا لِنَعْلَمَ مَن يُؤْمِنُ بِٱلْـَٔاخِرَةِ مِمَّنْ هُوَ مِنْهَا فِى شَكٍّ ۗ وَرَبُّكَ عَلَىٰ كُلِّ شَىْءٍ حَفِيظٌ
Transliteration wamā kāna lahu ʿalayhim min sul'ṭānin illā linaʿlama man yu'minu bil-ākhirati mimman huwa min'hā fī shakkin warabbuka ʿalā kulli shayin ḥafīẓun
Kannada ಇಬ್ಲೀಸನಿಗೆ ಅವರ ಮೇಲೇನೂ ಅಧಿಕಾರ ವಿರಲಿಲ್ಲ. ಪರಲೋಕದ ಬಗ್ಗೆ ಸಂಶಯದಲ್ಲಿ ಬಿದ್ದವರ ಕೂಟದಿಂದ ಅದರಲ್ಲಿ ನಂಬುವವರನ್ನು ನಾವು ಪ್ರತ್ಯಕ್ಷವಾಗಿ ಬೇರ್ಪಡಿಸಿ ತಿಳಿಯಲಿಕ್ಕಾಗಿ ಮಾತ್ರವಿದು. ನಿನ್ನ ಪ್ರಭು ಎಲ್ಲ ವಸ್ತುವಿನ ಮೇಲೆ ಮೇಲ್ನೋಟವುಳ್ಳವನು.
Verse 22
قُلِ ٱدْعُوا۟ ٱلَّذِينَ زَعَمْتُم مِّن دُونِ ٱللَّهِ ۖ لَا يَمْلِكُونَ مِثْقَالَ ذَرَّةٍ فِى ٱلسَّمَـٰوَٰتِ وَلَا فِى ٱلْأَرْضِ وَمَا لَهُمْ فِيهِمَا مِن شِرْكٍ وَمَا لَهُۥ مِنْهُم مِّن ظَهِيرٍ
Transliteration quli id'ʿū alladhīna zaʿamtum min dūni l-lahi lā yamlikūna mith'qāla dharratin fī l-samāwāti walā fī l-arḍi wamā lahum fīhimā min shir'kin wamā lahu min'hum min ẓahīrin
Kannada (ಪೈಗಂಬರರೇ,) ಹೇಳಿರಿ, ‘ನೀವು ಅಲ್ಲಾಹನ ಹೊರತಾಗಿ ನಿಮ್ಮ ಆರಾಧ್ಯರೆಂದು ಭಾವಿಸಿ ಕೊಂಡವರನ್ನು ಕರೆಯಿರಿ’. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅವರು ಅಣು ತೂಕದ ವಸ್ತುವಿಗೂ ಒಡೆಯರಲ್ಲ. ಭೂಮಿ-ಆಕಾಶಗಳಲ್ಲಿ ಅವರಿಗೆ ಯಾವುದೇ ಪಾಲು ಇಲ್ಲ. ಅವರ ಪೈಕಿ ಅಲ್ಲಾಹನಿಗೆ ಯಾವ ಸಹಾಯಕನೂ ಇಲ್ಲ.
Verse 23
وَلَا تَنفَعُ ٱلشَّفَـٰعَةُ عِندَهُۥٓ إِلَّا لِمَنْ أَذِنَ لَهُۥ ۚ حَتَّىٰٓ إِذَا فُزِّعَ عَن قُلُوبِهِمْ قَالُوا۟ مَاذَا قَالَ رَبُّكُمْ ۖ قَالُوا۟ ٱلْحَقَّ ۖ وَهُوَ ٱلْعَلِىُّ ٱلْكَبِيرُ
Transliteration walā tanfaʿu l-shafāʿatu ʿindahu illā liman adhina lahu ḥattā idhā fuzziʿa ʿan qulūbihim qālū mādhā qāla rabbukum qālū l-ḥaqa wahuwa l-ʿaliyu l-kabīru
Kannada ಅಲ್ಲಾಹನು ಅನುಮತಿ ನೀಡಿದ ವ್ಯಕ್ತಿಯ ಹೊರತು ಅಲ್ಲಾಹನ ಸನ್ನಿಧಿಯಲ್ಲಿ ಯಾವ ಶಿಫಾ ರಸೂ ಫಲಕಾರಿಯಾಗದು. ಹಾಗೆ ಜನರ ಹೃದ ಯದಿಂದ ಭೀತಿಯು ದೂರವಾದರೆ ಅವರು ಕೇಳುವರು, ‘ನಿಮ್ಮ ಪ್ರಭು ಹೇಳಿದ್ದೇನು?’ ಆಗ ಅವರು, ‘ಅವನು ಹೇಳಿದ್ದು ಸತ್ಯವೇ, ಅವನು ಮಹೋನ್ನತನೂ ಮಹಾನನೂ ಆಗಿರುತ್ತಾನೆ’ ಎಂದು ಹೇಳುವರು.
Verse 24
۞ قُلْ مَن يَرْزُقُكُم مِّنَ ٱلسَّمَـٰوَٰتِ وَٱلْأَرْضِ ۖ قُلِ ٱللَّهُ ۖ وَإِنَّآ أَوْ إِيَّاكُمْ لَعَلَىٰ هُدًى أَوْ فِى ضَلَـٰلٍ مُّبِينٍ
Transliteration qul man yarzuqukum mina l-samāwāti wal-arḍi quli l-lahu wa-innā aw iyyākum laʿalā hudan aw fī ḍalālin mubīnin
Kannada (ಪೈಗಂಬರರೇ) ಕೇಳಿರಿ, ‘ನಿಮಗೆ ಭೂಮಿ- ಆಕಾಶಗಳಿಂದ ಜೀವನಾಧಾರ ಕೊಡುವವನು ಯಾರು?’ ಹೇಳಿರಿ; “ಅಲ್ಲಾಹು, ನಿಶ್ಚಯವಾಗಿ ಯೂ ನಾವು ಇಲ್ಲವೇ ನೀವು ಇರುವುದು ಸನ್ಮಾರ್ಗ ದಲ್ಲಿ ಅಥವಾ ಸುವ್ಯಕ್ತ ಪಥಭ್ರಷ್ಟತೆಯಲ್ಲಿ”.
Verse 25
قُل لَّا تُسْـَٔلُونَ عَمَّآ أَجْرَمْنَا وَلَا نُسْـَٔلُ عَمَّا تَعْمَلُونَ
Transliteration qul lā tus'alūna ʿammā ajramnā walā nus'alu ʿammā taʿmalūna
Kannada ತಾವು ಹೇಳಿರಿ, “ನಾವು ಮಾಡಿದ ಅಪರಾಧದ ಕುರಿತು ನಿಮ್ಮನ್ನು ಪ್ರಶ್ನಿಸಲಾಗದು. ನೀವು ಮಾಡುತ್ತಿರುವುದರ ಕುರಿತು ನಮ್ಮನ್ನು ಪ್ರಶ್ನಿಸಲಾಗದು”.
Verse 26
قُلْ يَجْمَعُ بَيْنَنَا رَبُّنَا ثُمَّ يَفْتَحُ بَيْنَنَا بِٱلْحَقِّ وَهُوَ ٱلْفَتَّاحُ ٱلْعَلِيمُ
Transliteration qul yajmaʿu baynanā rabbunā thumma yaftaḥu baynanā bil-ḥaqi wahuwa l-fatāḥu l-ʿalīmu
Kannada ತಾವು ಹೇಳಿರಿ, “ನಮ್ಮ ಪ್ರಭು ನಮ್ಮನ್ನು ಒಟ್ಟು ಗೂಡಿಸುವನು. ನಂತರ ನಮ್ಮ ನಡುವೆ ನ್ಯಾಯ ಪ್ರಕಾರ ತೀರ್ಮಾನ ಮಾಡುವನು. ಅವನು ಸರ್ವ ಜ್ಞನೂ ಪ್ರಬಲ ನ್ಯಾಯಾಧೀಶನೂ ಆಗಿರುವನು”.
Verse 27
قُلْ أَرُونِىَ ٱلَّذِينَ أَلْحَقْتُم بِهِۦ شُرَكَآءَ ۖ كَلَّا ۚ بَلْ هُوَ ٱللَّهُ ٱلْعَزِيزُ ٱلْحَكِيمُ
Transliteration qul arūniya alladhīna alḥaqtum bihi shurakāa kallā bal huwa l-lahu l-ʿazīzu l-ḥakīmu
Kannada ತಾವು ಹೇಳಿರಿ; “ನೀವು ಅವನೊಂದಿಗೆ ಸಹ ಭಾಗಿಗಳಾಗಿ ಸೇರಿಸಿಕೊಂಡಿರುವವರನ್ನು ನನಗೆ ತೋರಿಸಿಕೊಡಿರಿ. ಎಷ್ಟು ಮಾತ್ರಕ್ಕೂ (ಅವನಿಗೆ ಸಹಭಾಗಿಗಳು) ಇಲ್ಲ, ಆದರೆ ಅಲ್ಲಾಹನು ಅತ್ಯಂತ ಪ್ರಬಲನೂ ಧೀಮಂತನೂ ಆಗಿರು ವನು”.
Verse 28
وَمَآ أَرْسَلْنَـٰكَ إِلَّا كَآفَّةً لِّلنَّاسِ بَشِيرًا وَنَذِيرًا وَلَـٰكِنَّ أَكْثَرَ ٱلنَّاسِ لَا يَعْلَمُونَ
Transliteration wamā arsalnāka illā kāffatan lilnnāsi bashīran wanadhīran walākinna akthara l-nāsi lā yaʿlamūna
Kannada (ಪೈಗಂಬರರೇ) ನಾವು ನಿಮ್ಮನ್ನು ಸಮಗ್ರ ಮಾನವರಿಗಾಗಿ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ನೀಡುವವರಾಗಿಯೂ ಕಳುಹಿಸಿರುತ್ತೇವೆ. ಆದರೆ ಹೆಚ್ಚಿನವರು (ಈ ವಾಸ್ತವಿಕತೆಯನ್ನು) ಅರಿಯುವುದಿಲ್ಲ.
Verse 29
وَيَقُولُونَ مَتَىٰ هَـٰذَا ٱلْوَعْدُ إِن كُنتُمْ صَـٰدِقِينَ
Transliteration wayaqūlūna matā hādhā l-waʿdu in kuntum ṣādiqīna
Kannada ‘ನೀವು ಸತ್ಯವಂತರಾಗಿದ್ದರೆ, ಈ (ಪ್ರಳಯ ಕಾಲದ) ವಾಗ್ದಾನ ಯಾವಾಗ ನೆರವೇರುವುದು?’ ಎಂದು ಸತ್ಯನಿಷೇಧಿಗಳು ಕೇಳುತ್ತಾರೆ.
Verse 30
قُل لَّكُم مِّيعَادُ يَوْمٍ لَّا تَسْتَـْٔخِرُونَ عَنْهُ سَاعَةً وَلَا تَسْتَقْدِمُونَ
Transliteration qul lakum mīʿādu yawmin lā tastakhirūna ʿanhu sāʿatan walā tastaqdimūna
Kannada ಹೇಳಿರಿ; “ನಿಮಗೆ ಒಂದು ನಿಶ್ಚಿತ ದಿನದ ವಾಗ್ದಾನವಿದೆ. (ಅದು ಬರುವಾಗ) ಒಂದು ಘಳಿಗೆಯೂ ಅದನ್ನು ಬಿಟ್ಟು ನೀವು ಹಿಂದೆ ಹೋಗಲಾರಿರಿ. ಮುಂದೆಯೂ ಹೋಗಲಾರಿರಿ”.
Verse 31
وَقَالَ ٱلَّذِينَ كَفَرُوا۟ لَن نُّؤْمِنَ بِهَـٰذَا ٱلْقُرْءَانِ وَلَا بِٱلَّذِى بَيْنَ يَدَيْهِ ۗ وَلَوْ تَرَىٰٓ إِذِ ٱلظَّـٰلِمُونَ مَوْقُوفُونَ عِندَ رَبِّهِمْ يَرْجِعُ بَعْضُهُمْ إِلَىٰ بَعْضٍ ٱلْقَوْلَ يَقُولُ ٱلَّذِينَ ٱسْتُضْعِفُوا۟ لِلَّذِينَ ٱسْتَكْبَرُوا۟ لَوْلَآ أَنتُمْ لَكُنَّا مُؤْمِنِينَ
Transliteration waqāla alladhīna kafarū lan nu'mina bihādhā l-qur'āni walā bi-alladhī bayna yadayhi walaw tarā idhi l-ẓālimūna mawqūfūna ʿinda rabbihim yarjiʿu baʿḍuhum ilā baʿḍin l-qawla yaqūlu alladhīna us'tuḍ'ʿifū lilladhīna is'takbarū lawlā antum lakunnā mu'minīna
Kannada ಈ ಖುರ್ಆನನ್ನೂ ಇದಕ್ಕಿಂತ ಮುಂಚೆ ಬಂದಿ ರುವ ಯಾವ ಗ್ರಂಥವನ್ನೂ ನಾವು ನಂಬುವುದಿ ಲ್ಲವೆಂದು ಸತ್ಯನಿಷೇಧಿಗಳು ಹೇಳುತ್ತಾರೆ. ಈ ಅಕ್ರಮಿಗಳು ಪರಸ್ಪರ ಆರೋಪ ಹೊರಿಸುತ್ತ ತಮ್ಮ ಪ್ರಭುವಿನ ಮುಂದೆ ನಿಲ್ಲುವ ಸಂದರ್ಭ, ಇವರನ್ನು ನೀವು ಕಾಣುತ್ತಿದ್ದರೆ! (ಅದು ಗಂಭೀರ ದೃಶ್ಯವಾಗುತ್ತಿತ್ತು). ಅಂದರೆ ಈ ಲೋಕದಲ್ಲಿ ದುರ್ಬಲರಾಗಿದ್ದವರು ಅಹಂಕಾರಿಗಳೊಡನೆ, “ನೀವಿಲ್ಲದಿರುತ್ತಿದ್ದರೆ ನಾವು ಸತ್ಯ ವಿಶ್ವಾಸಿಗ ಳಾಗುತ್ತಿದ್ದೆವು.” ಎನ್ನುವರು.
Verse 32
قَالَ ٱلَّذِينَ ٱسْتَكْبَرُوا۟ لِلَّذِينَ ٱسْتُضْعِفُوٓا۟ أَنَحْنُ صَدَدْنَـٰكُمْ عَنِ ٱلْهُدَىٰ بَعْدَ إِذْ جَآءَكُم ۖ بَلْ كُنتُم مُّجْرِمِينَ
Transliteration qāla alladhīna is'takbarū lilladhīna us'tuḍ'ʿifū anaḥnu ṣadadnākum ʿani l-hudā baʿda idh jāakum bal kuntum muj'rimīna
Kannada ಗಣ್ಯರೆನಿಸಿಕೊಂಡವರು ದುರ್ಬಲರೊಡನೆ, “ನಿಮ್ಮ ಬಳಿಗೆ ಸನ್ಮಾರ್ಗ ಬಂದ ನಂತರ ಅದರಿಂದ ನಿಮ್ಮನ್ನು ನಾವು ತಡೆದಿದ್ದೇವೆಯೇ? ಇಲ್ಲ, ಪರಂತು ಸ್ವತಃ ನೀವೇ ಅಪರಾಧಿಗಳಾಗಿದ್ದಿರಿ” ಎಂದು ಉತ್ತರಿಸುವರು.
Verse 33
وَقَالَ ٱلَّذِينَ ٱسْتُضْعِفُوا۟ لِلَّذِينَ ٱسْتَكْبَرُوا۟ بَلْ مَكْرُ ٱلَّيْلِ وَٱلنَّهَارِ إِذْ تَأْمُرُونَنَآ أَن نَّكْفُرَ بِٱللَّهِ وَنَجْعَلَ لَهُۥٓ أَندَادًا ۚ وَأَسَرُّوا۟ ٱلنَّدَامَةَ لَمَّا رَأَوُا۟ ٱلْعَذَابَ وَجَعَلْنَا ٱلْأَغْلَـٰلَ فِىٓ أَعْنَاقِ ٱلَّذِينَ كَفَرُوا۟ ۚ هَلْ يُجْزَوْنَ إِلَّا مَا كَانُوا۟ يَعْمَلُونَ
Transliteration waqāla alladhīna us'tuḍ'ʿifū lilladhīna is'takbarū bal makru al-layli wal-nahāri idh tamurūnanā an nakfura bil-lahi wanajʿala lahu andādan wa-asarrū l-nadāmata lammā ra-awū l-ʿadhāba wajaʿalnā l-aghlāla fī aʿnāqi alladhīna kafarū hal yuj'zawna illā mā kānū yaʿmalūna
Kannada ಬಲಹೀನರು ಅಹಂಕಾರಿಗಳೊಡನೆ, “ಆದರೆ (ಅದು ನಿಮ್ಮದೇ) ಹಗಲು ರಾತ್ರಿಯ ಕುತಂತ್ರ ವಾಗಿತ್ತು. ನಾವು ಅಲ್ಲಾಹನನ್ನು ನಿಷೇಧಿಸಬೇ ಕೆಂದೂ ಅವನಿಗೆ ಸರಿಸಮಾನರನ್ನು ರೂಪಿಸ ಬೇಕೆಂದೂ ನೀವು ನಮಗೆ ಆದೇಶಿಸುತ್ತಿದ್ದಿರಿ” ಎಂದು ಹೇಳುವರು. ಶಿಕ್ಷೆ ಯನ್ನು ಕಾಣುವಾಗ (ಉಭಯ ವಿಭಾಗದವರ) ಒಳಗೇ ಖೇದ ಅಡಗಿ ರುವುದು. ನಾವು ಸತ್ಯನಿಷೇಧಿಗಳ ಕೊರಳುಗಳಿಗೆ ಸಂಕೋಲೆಗಳನ್ನು ಬಿಗಿದಿದ್ದೇವೆ. ಜನರಿಗೆ ಅವರ ಕರ್ಮಗಳಿಗೆ ತಕ್ಕ ಪ್ರತಿಫಲವನ್ನೇ ಹೊರತು ಬೇರೆ ಪ್ರತಿಫಲವನ್ನು ಕೊಡಲಾಗುವುದೇ?
Verse 34
وَمَآ أَرْسَلْنَا فِى قَرْيَةٍ مِّن نَّذِيرٍ إِلَّا قَالَ مُتْرَفُوهَآ إِنَّا بِمَآ أُرْسِلْتُم بِهِۦ كَـٰفِرُونَ
Transliteration wamā arsalnā fī qaryatin min nadhīrin illā qāla mut'rafūhā innā bimā ur'sil'tum bihi kāfirūna
Kannada ನಾವು ಯಾವುದೇ ನಾಡಿಗೆ ಎಚ್ಚರಿಕೆ ನೀಡುವ ವನನ್ನು (ಪ್ರವಾದಿಯನ್ನು) ಕಳುಹಿಸಿದಾಗಲೆಲ್ಲಾ ಆ ನಾಡಿನ ಸುಖಲೋಲುಪರು - “ನೀವು ತಂದಿರುವ ಸಂದೇಶವನ್ನು ಖಂಡಿತ ನಾವು ನಿಷೇಧಿಸುತ್ತೇವೆ” ಎಂದು ಹೇಳದೆ ಇರಲಿಲ್ಲ.
Verse 35
وَقَالُوا۟ نَحْنُ أَكْثَرُ أَمْوَٰلًا وَأَوْلَـٰدًا وَمَا نَحْنُ بِمُعَذَّبِينَ
Transliteration waqālū naḥnu aktharu amwālan wa-awlādan wamā naḥnu bimuʿadhabīna
Kannada ‘ನಾವು ಹೆಚ್ಚು ಸಂಪತ್ತನ್ನೂ ಸಂತತಿಯನ್ನೂ ಹೊಂದಿದ್ದು ನಾವು ಎಂದಿಗೂ ಶಿಕ್ಷೆಗೊಳಗಾಗುವರಲ್ಲ’ ಎಂದೂ ಅವರು ಹೇಳಿದ್ದರು.
Verse 36
قُلْ إِنَّ رَبِّى يَبْسُطُ ٱلرِّزْقَ لِمَن يَشَآءُ وَيَقْدِرُ وَلَـٰكِنَّ أَكْثَرَ ٱلنَّاسِ لَا يَعْلَمُونَ
Transliteration qul inna rabbī yabsuṭu l-riz'qa liman yashāu wayaqdiru walākinna akthara l-nāsi lā yaʿlamūna
Kannada (ಪೈಗಂಬರರೇ,) ತಾವು ಹೀಗೆ ಹೇಳಿರಿ; “ನನ್ನ ಪ್ರಭು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಸ್ತøತಗೊಳಿಸುತ್ತಾನೆ. ತಾನಿಚ್ಛಿಸಿದವರಿಗೆ ಕಡಿತ ಗೊಳಿಸುತ್ತಾನೆ. ಆದರೆ ಹೆಚ್ಚಿನ ಜನರು ಇದರ ನಿಜಸ್ಥಿತಿಯನ್ನು ತಿಳಿಯುವುದಿಲ್ಲ”.
Verse 37
وَمَآ أَمْوَٰلُكُمْ وَلَآ أَوْلَـٰدُكُم بِٱلَّتِى تُقَرِّبُكُمْ عِندَنَا زُلْفَىٰٓ إِلَّا مَنْ ءَامَنَ وَعَمِلَ صَـٰلِحًا فَأُو۟لَـٰٓئِكَ لَهُمْ جَزَآءُ ٱلضِّعْفِ بِمَا عَمِلُوا۟ وَهُمْ فِى ٱلْغُرُفَـٰتِ ءَامِنُونَ
Transliteration wamā amwālukum walā awlādukum bi-allatī tuqarribukum ʿindanā zul'fā illā man āmana waʿamila ṣāliḥan fa-ulāika lahum jazāu l-ḍiʿ'fi bimā ʿamilū wahum fī l-ghurufāti āminūna
Kannada ನಿಮ್ಮ ಸಂಪತ್ತಾಗಲೀ ನಿಮ್ಮ ಸಂತಾನವಾಗಲೀ ನಿಮಗೆ ನಮ್ಮ ಬಳಿ ಸಾಮಿಪ್ಯವನ್ನು ದೊರಕಿಸಿ ಕೊಡಲಾರದು. ಆದರೆ ಸತ್ಯವಿಶ್ವಾಸ ಸ್ವೀಕರಿಸಿ ಸತ್ಕರ್ಮವೆಸಗುವವರು ಇದಕ್ಕೆ ಹೊರತಾಗಿದ್ದು ಅವರಿಗೆ ಅವರ ಕರ್ಮದ ಇಮ್ಮಡಿ ಪ್ರತಿಫಲವಿದೆ ಮತ್ತು ಅವರು ಅತ್ಯುನ್ನತ ಭವನಗಳಲ್ಲಿ ನಿರ್ಭಯರಾಗಿರುವರು.
Verse 38
وَٱلَّذِينَ يَسْعَوْنَ فِىٓ ءَايَـٰتِنَا مُعَـٰجِزِينَ أُو۟لَـٰٓئِكَ فِى ٱلْعَذَابِ مُحْضَرُونَ
Transliteration wa-alladhīna yasʿawna fī āyātinā muʿājizīna ulāika fī l-ʿadhābi muḥ'ḍarūna
Kannada ಇನ್ನು (ನನ್ನ) ಹಿಡಿತದಿಂದ ಪಾರಾಗಬಲ್ಲೆವೆಂದು ಭಾವಿಸಿ ನಮ್ಮ ಆಯತ್ತುಗಳಲ್ಲಿ ಗೊಂದಲ ನಿರ್ಮಿಸಲು ಓಡಿ ನಡೆಯುವವರು ಯಾತನೆಗೆ ಹಾಜ ರಾಗುವರು.
Verse 39
قُلْ إِنَّ رَبِّى يَبْسُطُ ٱلرِّزْقَ لِمَن يَشَآءُ مِنْ عِبَادِهِۦ وَيَقْدِرُ لَهُۥ ۚ وَمَآ أَنفَقْتُم مِّن شَىْءٍ فَهُوَ يُخْلِفُهُۥ ۖ وَهُوَ خَيْرُ ٱلرَّٰزِقِينَ
Transliteration qul inna rabbī yabsuṭu l-riz'qa liman yashāu min ʿibādihi wayaqdiru lahu wamā anfaqtum min shayin fahuwa yukh'lifuhu wahuwa khayru l-rāziqīna
Kannada ಹೇಳಿರಿ, “ನನ್ನ ಪ್ರಭು ತನ್ನ ದಾಸರಲ್ಲಿ ತಾನಿಚ್ಛಿಸಿ ದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಚಿಸಿದವರಿಗೆ ಪರಿಮಿತಗೊಳಿಸುತ್ತಾನೆ. ನೀವು (ದೇವ ಮಾರ್ಗದಲ್ಲಿ) ಏನನ್ನು ಖರ್ಚು ಮಾಡಿದರೂ ಅದಕ್ಕೆ ಬದಲಾಗಿ ಅವನು ನಿಮಗೆ ಇನ್ನಷ್ಟು ಕೊಡುತ್ತಾನೆ. ಅವನು ಜೀವನಾಧಾರ ನೀಡುವವರಲ್ಲೇ ಅತ್ಯುತ್ತಮನು”.
Verse 40
وَيَوْمَ يَحْشُرُهُمْ جَمِيعًا ثُمَّ يَقُولُ لِلْمَلَـٰٓئِكَةِ أَهَـٰٓؤُلَآءِ إِيَّاكُمْ كَانُوا۟ يَعْبُدُونَ
Transliteration wayawma yaḥshuruhum jamīʿan thumma yaqūlu lil'malāikati ahāulāi iyyākum kānū yaʿbudūna
Kannada ಅವನು ಜನರನ್ನು ಒಟ್ಟುಗೂಡಿಸುವ ದಿನ ದೇವ ಚರರೊಡನೆ - “ಇವರು ನಿಮ್ಮನ್ನು ಆರಾಧಿಸುತ್ತಿದ್ದರೆ?” ಎಂದು ಕೇಳುವನು.
Verse 41
قَالُوا۟ سُبْحَـٰنَكَ أَنتَ وَلِيُّنَا مِن دُونِهِم ۖ بَلْ كَانُوا۟ يَعْبُدُونَ ٱلْجِنَّ ۖ أَكْثَرُهُم بِهِم مُّؤْمِنُونَ
Transliteration qālū sub'ḥānaka anta waliyyunā min dūnihim bal kānū yaʿbudūna l-jina aktharuhum bihim mu'minūna
Kannada ಆಗ ಅವರು, “ನೀನು ಪರಮಪಾವನನು, ನಮ್ಮ ರಕ್ಷಕ ನೀನು, ಅವರಲ್ಲ. ಆದರೆ ಇವರು ಜಿನ್ನ್ಗಳನ್ನು ಆರಾಧಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಅವರ ಮೇಲೆಯೇ ವಿಶ್ವಾಸವಿರಿಸಿ ದರು” ಎಂದು ಉತ್ತರಿಸುವರು.
Verse 42
فَٱلْيَوْمَ لَا يَمْلِكُ بَعْضُكُمْ لِبَعْضٍ نَّفْعًا وَلَا ضَرًّا وَنَقُولُ لِلَّذِينَ ظَلَمُوا۟ ذُوقُوا۟ عَذَابَ ٱلنَّارِ ٱلَّتِى كُنتُم بِهَا تُكَذِّبُونَ
Transliteration fal-yawma lā yamliku baʿḍukum libaʿḍin nafʿan walā ḍarran wanaqūlu lilladhīna ẓalamū dhūqū ʿadhāba l-nāri allatī kuntum bihā tukadhibūna
Kannada ಈ ದಿನ ನೀವು ಪರಸ್ಪರ ಯಾರಿಗೂ ಲಾಭವನ್ನಾಗಲಿ, ನಷ್ಟವನ್ನಾಗಲಿ ಒಡೆತನ ಗೊಳಿಸುವುದಿಲ್ಲ. ಅಕ್ರಮಿಗಳಿಗೆ, ‘ನೀವು ಸುಳ್ಳಾಗಿಸುತ್ತಿದ್ದ ನರಕ ಶಿಕ್ಷೆಯ ರುಚಿಯನ್ನು ಸವಿಯಿರಿ’ ಎಂದು ಹೇಳುವೆವು.
Verse 43
وَإِذَا تُتْلَىٰ عَلَيْهِمْ ءَايَـٰتُنَا بَيِّنَـٰتٍ قَالُوا۟ مَا هَـٰذَآ إِلَّا رَجُلٌ يُرِيدُ أَن يَصُدَّكُمْ عَمَّا كَانَ يَعْبُدُ ءَابَآؤُكُمْ وَقَالُوا۟ مَا هَـٰذَآ إِلَّآ إِفْكٌ مُّفْتَرًى ۚ وَقَالَ ٱلَّذِينَ كَفَرُوا۟ لِلْحَقِّ لَمَّا جَآءَهُمْ إِنْ هَـٰذَآ إِلَّا سِحْرٌ مُّبِينٌ
Transliteration wa-idhā tut'lā ʿalayhim āyātunā bayyinātin qālū mā hādhā illā rajulun yurīdu an yaṣuddakum ʿammā kāna yaʿbudu ābāukum waqālū mā hādhā illā if'kun muf'taran waqāla alladhīna kafarū lil'ḥaqqi lammā jāahum in hādhā illā siḥ'run mubīnun
Kannada ನಮ್ಮ ಸುವ್ಯಕ್ತ ಸೂಕ್ತಗಳನ್ನು ಇವರಿಗೆ ಓದಿ ಹೇಳಿದಾಗ ಇವರು, ‘ಇವರು ಕೇವಲ ನಿಮ್ಮ ಪೂರ್ವಜರು ಪೂಜಿಸುತ್ತಾ ಬಂದಿರುವÀ ಆರಾಧ್ಯರಿಂದ ನಿಮ್ಮನ್ನು ತಡೆಯಲು ಉದ್ದೇಶಿಸುವ ವ್ಯಕ್ತಿ’ ಎನ್ನುತ್ತಾರೆ. ‘ಇದು ಖುರ್ಆನ್ ಕೇವಲ ಒಂದು ಕಲ್ಪಿತ ಸುಳ್ಳು’ ಎಂದೂ ಹೇಳುತ್ತಾರೆ. ಆ ಸತ್ಯನಿಷೇಧಿಗಳಿಗೆ ಸತ್ಯವು ಬಂದೊದಗಿದಾಗ ಇವರು, “ಇದು ಸ್ಪಷ್ಟವಾದ ಜಾಲ ವಿದ್ಯೆಯೇ ಹೊರತು ಇನ್ನೇನೂ ಅಲ್ಲ” ಎಂದು ಹೇಳಿದರು.
Verse 44
وَمَآ ءَاتَيْنَـٰهُم مِّن كُتُبٍ يَدْرُسُونَهَا ۖ وَمَآ أَرْسَلْنَآ إِلَيْهِمْ قَبْلَكَ مِن نَّذِيرٍ
Transliteration wamā ātaynāhum min kutubin yadrusūnahā wamā arsalnā ilayhim qablaka min nadhīrin
Kannada ನಾವು ಈ ಮುಂಚೆ ಇವರಿಗೆ ಓದಿ ಕಲಿಯಬಲ್ಲ ಯಾವುದೇ ಗ್ರಂಥವನ್ನೂ ಕೊಡಲಿಲ್ಲ. ನಿಮಗಿಂತ ಮುಂಚೆ ಇವರ ಕಡೆಗೆ ಯಾವ ಎಚ್ಚರಿಕೆದಾರನನ್ನು ಕಳುಹಿಸಿದ್ದೂ ಇಲ್ಲ.
Verse 45
وَكَذَّبَ ٱلَّذِينَ مِن قَبْلِهِمْ وَمَا بَلَغُوا۟ مِعْشَارَ مَآ ءَاتَيْنَـٰهُمْ فَكَذَّبُوا۟ رُسُلِى ۖ فَكَيْفَ كَانَ نَكِيرِ
Transliteration wakadhaba alladhīna min qablihim wamā balaghū miʿ'shāra mā ātaynāhum fakadhabū rusulī fakayfa kāna nakīri
Kannada ಇವರ ಮುಂಚೆ ಗತಿಸಿದವರು ಸುಳ್ಳಾಗಿಸಿದ್ದರು. ನಾವು ಅವರಿಗೆ ನೀಡಿದುದರ ಹತ್ತರಲ್ಲಿ ಒಂದಂಶಕ್ಕೂ ಇವರು ತಲುಪಿಲ್ಲ. ಆದರೆ ಅವರು ನನ್ನ ಸಂದೇಶವಾಹಕರನ್ನು ಸುಳ್ಳಾಗಿಸಿದರು. ಆಗ ನನ್ನ ಶಿಕ್ಷೆ ಎಷ್ಟು ಕಠಿಣವಾಗಿ ನಾಟಿತೆಂದು ನೋಡಿರಿ.
Verse 46
۞ قُلْ إِنَّمَآ أَعِظُكُم بِوَٰحِدَةٍ ۖ أَن تَقُومُوا۟ لِلَّهِ مَثْنَىٰ وَفُرَٰدَىٰ ثُمَّ تَتَفَكَّرُوا۟ ۚ مَا بِصَاحِبِكُم مِّن جِنَّةٍ ۚ إِنْ هُوَ إِلَّا نَذِيرٌ لَّكُم بَيْنَ يَدَىْ عَذَابٍ شَدِيدٍ
Transliteration qul innamā aʿiẓukum biwāḥidatin an taqūmū lillahi mathnā wafurādā thumma tatafakkarū mā biṣāḥibikum min jinnatin in huwa illā nadhīrun lakum bayna yaday ʿadhābin shadīdin
Kannada (ಪೈಗಂಬರರೇ,) ಹೇಳಿರಿ; “ನಾನು ನಿಮಗೆ ಕೇವಲ ಒಂದು ಉಪದೇಶ ನೀಡುತ್ತೇನೆ. ನೀವು ಅಲ್ಲಾಹನಿಗಾಗಿ ತಲಾ ಇಬ್ಬರಂತೆಯೂ ಒಬ್ಬರಂತೆಯೂ ಸಿದ್ಧರಾಗಿರಿ. ಆಮೇಲೆ ಆಲೋ ಚಿಸಿರಿ”. ನಿಮ್ಮ ಸಂಗಾತಿಯಲ್ಲಿ ಯಾವುದೇ ಹುಚ್ಚು ಭಾದಿಸಿಲ್ಲ. ಅವರು ಒಂದು ಘೋರ ಯಾತನೆಯ ಮುಂದೆ ನಿಮಗೆ ಎಚ್ಚರಿಕೆ ನೀಡುವವರು ಮಾತ್ರ.
Verse 47
قُلْ مَا سَأَلْتُكُم مِّنْ أَجْرٍ فَهُوَ لَكُمْ ۖ إِنْ أَجْرِىَ إِلَّا عَلَى ٱللَّهِ ۖ وَهُوَ عَلَىٰ كُلِّ شَىْءٍ شَهِيدٌ
Transliteration qul mā sa-altukum min ajrin fahuwa lakum in ajriya illā ʿalā l-lahi wahuwa ʿalā kulli shayin shahīdun
Kannada ಹೇಳಿರಿ; “ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲ ಕೇಳಿದ್ದರೆ ಅದು ನಿಮಗೇ ಇರಲಿ. ನನ್ನ ಪ್ರತಿಫಲ ಕೇವಲ ಅಲ್ಲಾಹನ ಮೇಲಿದೆ. ಅವನು ಎಲ್ಲ ವಸ್ತುವಿನ ಮೇಲೆ ಸಾಕ್ಷಿಯಾಗಿರುತ್ತಾನೆ”.
Verse 48
قُلْ إِنَّ رَبِّى يَقْذِفُ بِٱلْحَقِّ عَلَّـٰمُ ٱلْغُيُوبِ
Transliteration qul inna rabbī yaqdhifu bil-ḥaqi ʿallāmu l-ghuyūbi
Kannada ಹೇಳಿರಿ; “ನನ್ನ ಪ್ರಭು ಸತ್ಯವನ್ನು ಇಳಿಸಿ ಕೊಡುತ್ತಾನೆ. ಅವನು ಸಕಲ ಪರೋಕ್ಷಗಳನ್ನು ಬಲ್ಲವನು”.
Verse 49
قُلْ جَآءَ ٱلْحَقُّ وَمَا يُبْدِئُ ٱلْبَـٰطِلُ وَمَا يُعِيدُ
Transliteration qul jāa l-ḥaqu wamā yub'di-u l-bāṭilu wamā yuʿīdu
Kannada ಹೇಳಿರಿ; ‘ಸತ್ಯ ಬಂತು. ಮಿಥ್ಯ ಆರಂಭವಾಗದು. ಮರಳಿಯೂ ಬಾರದು.
Verse 50
قُلْ إِن ضَلَلْتُ فَإِنَّمَآ أَضِلُّ عَلَىٰ نَفْسِى ۖ وَإِنِ ٱهْتَدَيْتُ فَبِمَا يُوحِىٓ إِلَىَّ رَبِّىٓ ۚ إِنَّهُۥ سَمِيعٌ قَرِيبٌ
Transliteration qul in ḍalaltu fa-innamā aḍillu ʿalā nafsī wa-ini ih'tadaytu fabimā yūḥī ilayya rabbī innahu samīʿun qarībun
Kannada ಹೇಳಿರಿ; “ನಾನು ದಾರಿ ತಪ್ಪಿದರೆ ನನ್ನ ಮೇಲೆ ಯೇ ನಾನು ದಾರಿ ತಪ್ಪಿದೆ. ನಾನು ನೇರ ದಾರಿ ಹಿಡಿದರೆ, ಅದು ನನ್ನ ಪ್ರಭು ನನ್ನ ಮೇಲೆ ಅವತೀರ್ಣಗೊಳಿಸುವ ದಿವ್ಯವಾಣಿಯ ಪ್ರಕಾರವಿದೆ . ಅವನು ಸರ್ವಶ್ರುತನೂ ಅತ್ಯಂತ ನಿಕಟನೂ ಆಗಿರುತ್ತಾನೆ” .
Verse 51
وَلَوْ تَرَىٰٓ إِذْ فَزِعُوا۟ فَلَا فَوْتَ وَأُخِذُوا۟ مِن مَّكَانٍ قَرِيبٍ
Transliteration walaw tarā idh faziʿū falā fawta wa-ukhidhū min makānin qarībin
Kannada (ಪೈಗಂಬರರೇ) ಅವರು ಭಯದಿಂದ ತಲ್ಲಣಿಸುವ ಸಂದರ್ಭವನ್ನು ತಾವು ಕಾಣುತ್ತಿದ್ದರೆ, (ಅದೆಷ್ಟು ಭಯಂಕರ!). ಆಗ ಅವರಿಗೆ (ಅಲ್ಲಾಹನ ಹಿಡಿತದಿಂದ) ತಪ್ಪಿಸಿಕೊಳ್ಳಲಾಗದು. ಮಾತ್ರವಲ್ಲ ಹತ್ತಿರದಿಂದಲೇ ಅವರನ್ನು ಸೆರೆಹಿಡಿಯಲಾಗುವುದು.
Verse 52
وَقَالُوٓا۟ ءَامَنَّا بِهِۦ وَأَنَّىٰ لَهُمُ ٱلتَّنَاوُشُ مِن مَّكَانٍۭ بَعِيدٍ
Transliteration waqālū āmannā bihi wa-annā lahumu l-tanāwushu min makānin baʿīdin
Kannada ಆಗ ಅವರು ‘ಅದನ್ನು ನಾವು ನಂಬಿದ್ದೇವೆ’ ಎನ್ನುವರು. ಆದರೆ ದೂರ ಸ್ಥಳದಿಂದ ಅದು ಅವರ ಕೈಗೆಟಕುವುದು ಹೇಗೆ?
Verse 53
وَقَدْ كَفَرُوا۟ بِهِۦ مِن قَبْلُ ۖ وَيَقْذِفُونَ بِٱلْغَيْبِ مِن مَّكَانٍۭ بَعِيدٍ
Transliteration waqad kafarū bihi min qablu wayaqdhifūna bil-ghaybi min makānin baʿīdin
Kannada ಇದಕ್ಕೆ ಮುಂಚೆ ಅವರು ಇದನ್ನು ನಿರಾಕರಿಸಿದ್ದರು. (ಗುರಿಯಿಂದ) ದೂರವಾದ ಸ್ಥಳದಿಂದ ಊಹಾಸ್ತ್ರವನ್ನು ಎಸೆಯತ್ತಿದ್ದರು.
Verse 54
وَحِيلَ بَيْنَهُمْ وَبَيْنَ مَا يَشْتَهُونَ كَمَا فُعِلَ بِأَشْيَاعِهِم مِّن قَبْلُ ۚ إِنَّهُمْ كَانُوا۟ فِى شَكٍّ مُّرِيبٍۭ
Transliteration waḥīla baynahum wabayna mā yashtahūna kamā fuʿila bi-ashyāʿihim min qablu innahum kānū fī shakkin murībin
Kannada ಅವರ ಹಾಗೂ ಅವರು ಇಚ್ಚಿಸುವುದರ ನಡುವೆ ತಡೆಯನ್ನು ಇಡಲಾಗುವುದು. ಅವರ ಮುಂಚೆ ಇದ್ದ ಪಂಗಡಗಳ ಮೂಲಕ ಮಾಡಲಾದಂತೆ. ನಿಜವಾಗಿಯೂ ಅವರು ಭಾರೀ ಸಂದೇಹದ ಸುಳಿಯಲ್ಲಿ ಶಂಕಿತರಾಗಿದ್ದರು,
Read Surah Saba in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.