MyDugsiStart learning

Surah Luqman in Kannada: translation and audio

Surah 31 · لقمان · Luqman · 34 verses

Surah Luqman verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Luqman word by word in English.

Verse 1

الٓمٓ

Transliteration alif-lam-meem

Kannada ಅಲಿಫ್ ಲಾಮ್ ಮೀಮ್

Verse 2

تِلْكَ ءَايَـٰتُ ٱلْكِتَـٰبِ ٱلْحَكِيمِ

Transliteration til'ka āyātu l-kitābi l-ḥakīmi

Kannada ಇವು ಯುಕ್ತಿಪೂರ್ಣ ಗ್ರಂಥದ ಸೂಕ್ತಗಳು.

Verse 3

هُدًى وَرَحْمَةً لِّلْمُحْسِنِينَ

Transliteration hudan waraḥmatan lil'muḥ'sinīna

Kannada ಸಚ್ಚರಿತರಿಗೆ ಮಾರ್ಗದರ್ಶನವೂ ಅನುಗ್ರಹವೂ ಆಗಿ ಇದು ನೆಲೆಗೊಂಡಿದೆ.

Verse 4

ٱلَّذِينَ يُقِيمُونَ ٱلصَّلَوٰةَ وَيُؤْتُونَ ٱلزَّكَوٰةَ وَهُم بِٱلْـَٔاخِرَةِ هُمْ يُوقِنُونَ

Transliteration alladhīna yuqīmūna l-ṣalata wayu'tūna l-zakata wahum bil-ākhirati hum yūqinūna

Kannada ಅಂದರೆ ನಮಾಝನ್ನು ಸಂಸ್ಥಾಪಿಸುವ, ಝಕಾತ್ ಕೊಡುವ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸುವ ಸಚ್ಚರಿತರು.

Verse 5

أُو۟لَـٰٓئِكَ عَلَىٰ هُدًى مِّن رَّبِّهِمْ ۖ وَأُو۟لَـٰٓئِكَ هُمُ ٱلْمُفْلِحُونَ

Transliteration ulāika ʿalā hudan min rabbihim wa-ulāika humu l-muf'liḥūna

Kannada ಅವರು ತಮ್ಮ ಪ್ರಭುವಿನ ಕಡೆಯಿಂದಿರುವ ಸನ್ಮಾರ್ಗದಲ್ಲಿದ್ದಾರೆ. ಅವರೇ ಯಶಸ್ವಿಯಾದವರು.

Verse 6

وَمِنَ ٱلنَّاسِ مَن يَشْتَرِى لَهْوَ ٱلْحَدِيثِ لِيُضِلَّ عَن سَبِيلِ ٱللَّهِ بِغَيْرِ عِلْمٍ وَيَتَّخِذَهَا هُزُوًا ۚ أُو۟لَـٰٓئِكَ لَهُمْ عَذَابٌ مُّهِينٌ

Transliteration wamina l-nāsi man yashtarī lahwa l-ḥadīthi liyuḍilla ʿan sabīli l-lahi bighayri ʿil'min wayattakhidhahā huzuwan ulāika lahum ʿadhābun muhīnun

Kannada ಕೆಲವು ಜನರು ವಿನೋದ ವಸ್ತುಗಳನ್ನು ಖರೀದಿಸುತ್ತಾರೆ. ಯಾವುದೇ ಜ್ಞಾನವಿಲ್ಲದೆ ಅಲ್ಲಾಹನ ಮಾರ್ಗದಿಂದ ಜನರನ್ನು ದಾರಿಗೆಡಿಸಲಿಕ್ಕಾಗಿ ಮತ್ತು ಆ ಮಾರ್ಗವನ್ನು ಪರಿಹಾಸಕ್ಕೀಡು ಮಾಡಲಿಕ್ಕಾಗಿ. ಇಂಥವರಿಗೆ ಬಹಳ ನಿಂದ್ಯವಾದ ಶಿಕ್ಷೆ ಇದೆ.

Verse 7

وَإِذَا تُتْلَىٰ عَلَيْهِ ءَايَـٰتُنَا وَلَّىٰ مُسْتَكْبِرًا كَأَن لَّمْ يَسْمَعْهَا كَأَنَّ فِىٓ أُذُنَيْهِ وَقْرًا ۖ فَبَشِّرْهُ بِعَذَابٍ أَلِيمٍ

Transliteration wa-idhā tut'lā ʿalayhi āyātunā wallā mus'takbiran ka-an lam yasmaʿhā ka-anna fī udhunayhi waqran fabashir'hu biʿadhābin alīmin

Kannada ಅವನಿಗೆ ನಮ್ಮ ಸೂಕ್ತಗಳನ್ನು ಓದಿ ಕೇಳಿಸ ಲಾದರೆ ಅವುಗಳನ್ನು ತಾನು ಕೇಳಲೇ ಇಲ್ಲವೆಂ ಬಂತೆ, ಅಥವಾ ತನ್ನ ಎರಡು ಕಿವಿಗಳಲ್ಲಿ ಕಿವುಡು ಬಾಧಿಸಿದಂತೆ ದರ್ಪದಿಂದ ಮುಖ ತಿರುಗಿಸುತ್ತಾನೆ. ಆದ್ದರಿಂದ ಅವನಿಗೆ ಒಂದು ವೇದನಾಯುಕ್ತ ಶಿಕ್ಷೆಯ ಸುವಾರ್ತೆ ಕೊಡಿರಿ.

Verse 8

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَهُمْ جَنَّـٰتُ ٱلنَّعِيمِ

Transliteration inna alladhīna āmanū waʿamilū l-ṣāliḥāti lahum jannātu l-naʿīmi

Kannada ಆದರೆ, ಸತ್ಯವಿಶ್ವಾಸ ಸ್ವೀಕರಿಸುವ ಮತ್ತು ಸತ್ಕರ್ಮವೆಸಗುವ ಜನರಿಗೆ ಅನುಗ್ರಹಗಳು ತುಂ ಬಿದ ಸ್ವರ್ಗೋದ್ಯಾನಗಳಿವೆ.

Verse 9

خَـٰلِدِينَ فِيهَا ۖ وَعْدَ ٱللَّهِ حَقًّا ۚ وَهُوَ ٱلْعَزِيزُ ٱلْحَكِيمُ

Transliteration khālidīna fīhā waʿda l-lahi ḥaqqan wahuwa l-ʿazīzu l-ḥakīmu

Kannada ಅವುಗಳಲ್ಲಿ ಅವರು ಸದಾಕಾಲ ವಾಸಿಸುವರು. ಇದು ಅಲ್ಲಾಹನ ಸತ್ಯವಾದ ವಾಗ್ದಾನ. ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.

Verse 10

خَلَقَ ٱلسَّمَـٰوَٰتِ بِغَيْرِ عَمَدٍ تَرَوْنَهَا ۖ وَأَلْقَىٰ فِى ٱلْأَرْضِ رَوَٰسِىَ أَن تَمِيدَ بِكُمْ وَبَثَّ فِيهَا مِن كُلِّ دَآبَّةٍ ۚ وَأَنزَلْنَا مِنَ ٱلسَّمَآءِ مَآءً فَأَنۢبَتْنَا فِيهَا مِن كُلِّ زَوْجٍ كَرِيمٍ

Transliteration khalaqa l-samāwāti bighayri ʿamadin tarawnahā wa-alqā fī l-arḍi rawāsiya an tamīda bikum wabatha fīhā min kulli dābbatin wa-anzalnā mina l-samāi māan fa-anbatnā fīhā min kulli zawjin karīmin

Kannada ನಿಮಗೆ ಕಾಣುವಂಥ ಸ್ಥಂಭಗಳಿಲ್ಲದೆ ಅವನು ಆಕಾಶಗಳನ್ನು ಸೃಷ್ಟಿಸಿದನು. ಭೂಮಿಯು ನಿಮ್ಮೊಂದಿಗೆ ವಾಲಿ ಬಿಡದಿರಲು ಅವನು ಅದರಲ್ಲಿ ಪರ್ವತಗಳನ್ನು ನಾಟಿದನು. ಅವನು ಎಲ್ಲ ತರದ ಚರಜೀವಿಗಳನ್ನು ಭೂಮಿಯಲ್ಲಿ ಹಬ್ಬಿಸಿದನು. ಆಕಾಶದಿಂದ ನಾವು (ಅಲ್ಲಾಹು) ನೀರನ್ನು ಸುರಿಸಿ ಭೂಮಿಯಲ್ಲಿ ಎಲ್ಲ ತರದ ಉತ್ತಮ ಜೋಡಿಗಳನ್ನು ಬೆಳೆಸಿದ್ದೇವೆ.

Verse 11

هَـٰذَا خَلْقُ ٱللَّهِ فَأَرُونِى مَاذَا خَلَقَ ٱلَّذِينَ مِن دُونِهِۦ ۚ بَلِ ٱلظَّـٰلِمُونَ فِى ضَلَـٰلٍ مُّبِينٍ

Transliteration hādhā khalqu l-lahi fa-arūnī mādhā khalaqa alladhīna min dūnihi bali l-ẓālimūna fī ḍalālin mubīnin

Kannada ಇದು ಅಲ್ಲಾಹನ ಸೃಷ್ಟಿ. ಇನ್ನು ಅವನ ಹೊರತಾ ದವರು ಏನನ್ನು ಸೃಷ್ಟಿಸಿದ್ದಾರೆಂದು ನನಗೆ ತೋರಿಸಿರಿ. ಹಾಗಲ್ಲ; ಅಕ್ರಮಿಗಳು ಸುವ್ಯಕ್ತ ದುರ್ಮಾರ್ಗದಲ್ಲಿದ್ದಾರೆ.

Verse 12

وَلَقَدْ ءَاتَيْنَا لُقْمَـٰنَ ٱلْحِكْمَةَ أَنِ ٱشْكُرْ لِلَّهِ ۚ وَمَن يَشْكُرْ فَإِنَّمَا يَشْكُرُ لِنَفْسِهِۦ ۖ وَمَن كَفَرَ فَإِنَّ ٱللَّهَ غَنِىٌّ حَمِيدٌ

Transliteration walaqad ātaynā luq'māna l-ḥik'mata ani ush'kur lillahi waman yashkur fa-innamā yashkuru linafsihi waman kafara fa-inna l-laha ghaniyyun ḥamīdun

Kannada ಲುಖ್ಮಾನರಿಗೆ ನಾವು ತತ್ವಜ್ಞಾನವನ್ನು ದಯ ಪಾಲಿಸಿದೆವು. ‘ಅಲ್ಲಾಹನಿಗೆ ಕೃತಜ್ಞನಾಗು’ ಎಂದೆವು. ಯಾವನು ಅಲ್ಲಾಹನಿಗೆ ಕೃತಜ್ಞನಾಗುತ್ತಾನೋ ಅವನು ತನಗಾಗಿಯೇ ಕೃತಜ್ಞನಾದನು. ಯಾವನು ಕೃತಘ್ನನಾಗುತ್ತಾನೋ ವಾಸ್ತವದಲ್ಲಿ ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.

Verse 13

وَإِذْ قَالَ لُقْمَـٰنُ لِٱبْنِهِۦ وَهُوَ يَعِظُهُۥ يَـٰبُنَىَّ لَا تُشْرِكْ بِٱللَّهِ ۖ إِنَّ ٱلشِّرْكَ لَظُلْمٌ عَظِيمٌ

Transliteration wa-idh qāla luq'mānu li-ib'nihi wahuwa yaʿiẓuhu yābunayya lā tush'rik bil-lahi inna l-shir'ka laẓul'mun ʿaẓīmun

Kannada ಲುಖ್ಮಾನರು ತಮ್ಮ ಪುತ್ರನಿಗೆ ಉಪದೇಶಿಸುತ್ತಾ ಹೇಳಿದ ಸಂದರ್ಭವನ್ನು ಸ್ಮರಿಸಿರಿ. “ನನ್ನ ಪ್ರೀತಿಯ ಮಗನೇ, ಅಲ್ಲಾಹನಿಗೆ ಯಾರನ್ನೂ ಸಹಭಾಗಿ ಮಾಡಬೇಡ, ನಿಜವಾಗಿಯೂ ಬಹುದೇವತ್ವವು ಮಹಾ ಅಕ್ರಮವಾಗಿದೆ”.

Verse 14

وَوَصَّيْنَا ٱلْإِنسَـٰنَ بِوَٰلِدَيْهِ حَمَلَتْهُ أُمُّهُۥ وَهْنًا عَلَىٰ وَهْنٍ وَفِصَـٰلُهُۥ فِى عَامَيْنِ أَنِ ٱشْكُرْ لِى وَلِوَٰلِدَيْكَ إِلَىَّ ٱلْمَصِيرُ

Transliteration wawaṣṣaynā l-insāna biwālidayhi ḥamalathu ummuhu wahnan ʿalā wahnin wafiṣāluhu fī ʿāmayni ani ush'kur lī waliwālidayka ilayya l-maṣīru

Kannada ಮಾನವನಿಗೆ ತನ್ನ ಮಾತಾಪಿತರ ಬಗ್ಗೆ ನಾವು ವಸಿಯ್ಯತ್ ಮಾಡಿರುತ್ತೇವೆ. ಅವನ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು ಗರ್ಭ ಹೊತ್ತಳು. ಅವನ ಸ್ತನಪಾನದ ಮುಕ್ತಾಯವು ಎರಡು ವರ್ಷಗಳಲ್ಲಾಗಿದೆ. (ಆದ್ದರಿಂದ ಓ ಮಾನವ,) ನನಗೂ ನಿನ್ನ ಮಾತಾಪಿತರಿಗೂ ಕೃತಜ್ಞತೆ ಸಲ್ಲಿಸು. ನೀನು ನನ್ನ ಕಡೆಗೇ ಮರಳಬೇಕಾಗಿದೆ.

Verse 15

وَإِن جَـٰهَدَاكَ عَلَىٰٓ أَن تُشْرِكَ بِى مَا لَيْسَ لَكَ بِهِۦ عِلْمٌ فَلَا تُطِعْهُمَا ۖ وَصَاحِبْهُمَا فِى ٱلدُّنْيَا مَعْرُوفًا ۖ وَٱتَّبِعْ سَبِيلَ مَنْ أَنَابَ إِلَىَّ ۚ ثُمَّ إِلَىَّ مَرْجِعُكُمْ فَأُنَبِّئُكُم بِمَا كُنتُمْ تَعْمَلُونَ

Transliteration wa-in jāhadāka ʿalā an tush'rika bī mā laysa laka bihi ʿil'mun falā tuṭiʿ'humā waṣāḥib'humā fī l-dun'yā maʿrūfan wa-ittabiʿ sabīla man anāba ilayya thumma ilayya marjiʿukum fa-unabbi-ukum bimā kuntum taʿmalūna

Kannada ಆದರೆ ನಿನಗೆ ಯಥಾಥ್ರ್ಯವೇನೆಂದು ತಿಳಿಯದ ಯಾವುದೇ ವಸ್ತುವನ್ನು ನನಗೆ ಪಾಲು ಸೇರಿಸುವಂತೆ ಅವರು ನಿನ್ನ ಮೇಲೆ ಒತ್ತಡ ಹಾಕಿದರೆ ನೀನು ಅವರನ್ನು ಅನುಸರಿಸಬೇಡ. ಈ ಲೋಕ ದಲ್ಲಿ ಅವರೊಂದಿಗೆ ಸದ್ವರ್ತನೆ ಮಾಡು. ನನ್ನ ಕಡೆಗೆ ಮರಳಿ ಬಂದವರ ಮಾರ್ಗವನ್ನು ಅನುಗಮಿಸು. ಮುಂದೆ ನಿಮಗೆಲ್ಲರಿಗೂ ನನ್ನ ಕಡೆಗೇ ಮರಳಲಿಕ್ಕಿದೆ. ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಆಗ ನಾನು ನಿಮಗೆ ಮಾಹಿತಿ ಕೊಡಲಿರುವೆನು,

Verse 16

يَـٰبُنَىَّ إِنَّهَآ إِن تَكُ مِثْقَالَ حَبَّةٍ مِّنْ خَرْدَلٍ فَتَكُن فِى صَخْرَةٍ أَوْ فِى ٱلسَّمَـٰوَٰتِ أَوْ فِى ٱلْأَرْضِ يَأْتِ بِهَا ٱللَّهُ ۚ إِنَّ ٱللَّهَ لَطِيفٌ خَبِيرٌ

Transliteration yābunayya innahā in taku mith'qāla ḥabbatin min khardalin fatakun fī ṣakhratin aw fī l-samāwāti aw fī l-arḍi yati bihā l-lahu inna l-laha laṭīfun khabīrun

Kannada ನನ್ನ ಮುದ್ದು ಮಗನೇ! ನೀನು ಎಸಗಿದ ಕಾರ್ಯವು ಸಾಸಿವೆ ಕಾಳಿನಷ್ಟಿರುವ ಒಂದು ವಸ್ತುವೇ ಇರಲಿ, ಅದು ಒಂದು ಬಂಡೆಯಲ್ಲಿ ಅಥವಾ ಆಕಾ ಶಗಳಲ್ಲಿ ಅಥವಾ ಭೂಮಿಯೊಳಗೆ ಎಲ್ಲೇ ಇರಲಿ, ಅಲ್ಲಾಹನು ಅದನ್ನು (ನಿರ್ಣಾಯಕ ದಿನದಲ್ಲಿ) ಹೊರತರುವನು. ಅವನು ಸೂಕ್ಷ್ಮದರ್ಶಿ ಮತ್ತು ವಿವರಪೂರ್ಣನಾಗಿರುತ್ತಾನೆ.

Verse 17

يَـٰبُنَىَّ أَقِمِ ٱلصَّلَوٰةَ وَأْمُرْ بِٱلْمَعْرُوفِ وَٱنْهَ عَنِ ٱلْمُنكَرِ وَٱصْبِرْ عَلَىٰ مَآ أَصَابَكَ ۖ إِنَّ ذَٰلِكَ مِنْ عَزْمِ ٱلْأُمُورِ

Transliteration yābunayya aqimi l-ṣalata wamur bil-maʿrūfi wa-in'ha ʿani l-munkari wa-iṣ'bir ʿalā mā aṣābaka inna dhālika min ʿazmi l-umūri

Kannada ನನ್ನ ಮುದ್ದು ಮಗನೇ, ನಮಾಝನ್ನು ವಿಧಿವತ್ತಾಗಿ ನಿರ್ವಹಿಸು, ಒಳಿತನ್ನು ಬೋಧಿಸು, ಕೆಡುಕನ್ನು ತಡೆ, ನಿನಗೆ ತಟ್ಟಿದ ಕಷ್ಟಕ್ಕೆ ಸಹನೆ ತಾಳು. ಇವು ಬಿಡಲೊಲ್ಲದ ಅಚಲ ವಿಷಯಗಳು.

Verse 18

وَلَا تُصَعِّرْ خَدَّكَ لِلنَّاسِ وَلَا تَمْشِ فِى ٱلْأَرْضِ مَرَحًا ۖ إِنَّ ٱللَّهَ لَا يُحِبُّ كُلَّ مُخْتَالٍ فَخُورٍ

Transliteration walā tuṣaʿʿir khaddaka lilnnāsi walā tamshi fī l-arḍi maraḥan inna l-laha lā yuḥibbu kulla mukh'tālin fakhūrin

Kannada ಜನರಿಂದ ನೀನು ಮುಖ ತಿರುಗಿಸಬೇಡ. ಭೂಮಿಯ ಮೇಲೆ ದರ್ಪದಿಂದ ನಡೆಯಬೇಡ, ದರ್ಪತೋರುವ ಹಾಗೂ ಜಂಭ ಕೊಚ್ಚುವ ಯಾರನ್ನೂ ಅಲ್ಲಾಹನು ಮೆಚ್ಚುವುದಿಲ್ಲ.

Verse 19

وَٱقْصِدْ فِى مَشْيِكَ وَٱغْضُضْ مِن صَوْتِكَ ۚ إِنَّ أَنكَرَ ٱلْأَصْوَٰتِ لَصَوْتُ ٱلْحَمِيرِ

Transliteration wa-iq'ṣid fī mashyika wa-ugh'ḍuḍ min ṣawtika inna ankara l-aṣwāti laṣawtu l-ḥamīri

Kannada ನಿನ್ನ ನಡೆಯಲ್ಲಿ ಮಿತಿ ಪಾಲಿಸು. ನಿನ್ನ ಸ್ವರವನ್ನು ತಗ್ಗಿಸು. ಎಲ್ಲ ಸ್ವರಗಳಿಗಿಂತ ಕೆಟ್ಟ ಸ್ವರವು ಕತ್ತೆಯ ಸ್ವರವಾಗಿರುತ್ತದೆ.

Verse 20

أَلَمْ تَرَوْا۟ أَنَّ ٱللَّهَ سَخَّرَ لَكُم مَّا فِى ٱلسَّمَـٰوَٰتِ وَمَا فِى ٱلْأَرْضِ وَأَسْبَغَ عَلَيْكُمْ نِعَمَهُۥ ظَـٰهِرَةً وَبَاطِنَةً ۗ وَمِنَ ٱلنَّاسِ مَن يُجَـٰدِلُ فِى ٱللَّهِ بِغَيْرِ عِلْمٍ وَلَا هُدًى وَلَا كِتَـٰبٍ مُّنِيرٍ

Transliteration alam taraw anna l-laha sakhara lakum mā fī l-samāwāti wamā fī l-arḍi wa-asbagha ʿalaykum niʿamahu ẓāhiratan wabāṭinatan wamina l-nāsi man yujādilu fī l-lahi bighayri ʿil'min walā hudan walā kitābin munīrin

Kannada ಅಲ್ಲಾಹನು ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲ ವಸ್ತುಗಳನ್ನು ನಿಮಗೆ ಅಧೀನ ಗೊಳಿಸಿದ್ದನ್ನೂ ತನ್ನ ಪ್ರತ್ಯಕ್ಷ ಹಾಗೂ ಆಂತರಿಕ ಅನುಗ್ರಹಗಳನ್ನು ನಿಮಗೆ ಪೂರ್ತಿಗೊಳಿಸಿ ಕೊಟ್ಟಿದ್ದನ್ನೂ ನೀವು ನೋಡುತ್ತಿಲ್ಲವೇ? ಹೀಗಿದ್ದೂ ಮಾನವರಲ್ಲಿ ಕೆಲವರು ತಮ್ಮ ಬಳಿ ಯಾವುದೇ ಜ್ಞಾನವಾಗಲಿ ಸನ್ಮಾರ್ಗದರ್ಶನವಾಗಲಿ ಬೆಳಕು ತೋರಿಸುವ ಯಾವುದೇ ಗ್ರಂಥವಾಗಲಿ ಇಲ್ಲದೆ ಅಲ್ಲಾಹನ (ತೌಹೀದ್‍ನ) ವಿಚಾರದಲ್ಲಿ ಜಗಳಾಡುತ್ತಾರೆ.

Verse 21

وَإِذَا قِيلَ لَهُمُ ٱتَّبِعُوا۟ مَآ أَنزَلَ ٱللَّهُ قَالُوا۟ بَلْ نَتَّبِعُ مَا وَجَدْنَا عَلَيْهِ ءَابَآءَنَآ ۚ أَوَلَوْ كَانَ ٱلشَّيْطَـٰنُ يَدْعُوهُمْ إِلَىٰ عَذَابِ ٱلسَّعِيرِ

Transliteration wa-idhā qīla lahumu ittabiʿū mā anzala l-lahu qālū bal nattabiʿu mā wajadnā ʿalayhi ābāanā awalaw kāna l-shayṭānu yadʿūhum ilā ʿadhābi l-saʿīri

Kannada ಅಲ್ಲಾಹನು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರೆಂದು ಅವರಿಗೆ ಹೇಳಲಾದರೆ ಅವರು “ಅಲ್ಲ, ನಮ್ಮ ಪೂರ್ವಜರು ನಡೆದು ಕಂಡ ಮಾರ್ಗವನ್ನೇ ನಾವು ಅನುಸರಿಸುತ್ತೇವೆ” ಎನ್ನುತ್ತಾರೆ. ಶೈತಾನನು ಅವರನ್ನು ನರಕ ಶಿಕ್ಷೆಯ ಕಡೆಗೇ ಕರೆಯುತ್ತಿದ್ದರೂ ಇವರು ಅವರನ್ನೇ ಅನು ಸರಿಸುವರೇ?

Verse 22

۞ وَمَن يُسْلِمْ وَجْهَهُۥٓ إِلَى ٱللَّهِ وَهُوَ مُحْسِنٌ فَقَدِ ٱسْتَمْسَكَ بِٱلْعُرْوَةِ ٱلْوُثْقَىٰ ۗ وَإِلَى ٱللَّهِ عَـٰقِبَةُ ٱلْأُمُورِ

Transliteration waman yus'lim wajhahu ilā l-lahi wahuwa muḥ'sinun faqadi is'tamsaka bil-ʿur'wati l-wuth'qā wa-ilā l-lahi ʿāqibatu l-umūri

Kannada ಯಾರು ಸತ್ಕರ್ಮಿಯಾಗಿದ್ದುಕೊಂಡು ತನ್ನ ದೇಹವನ್ನು ಅಲ್ಲಾಹನಿಗೆ ಅರ್ಪಿಸಿಕೊಳ್ಳುತ್ತಾನೋ, ಅವನು ಅತ್ಯಂತ ಬಿಗಿಯಾದ ಪಾಶವನ್ನು ಬಿಗಿ ಹಿಡಿದನು. ಸಕಲ ವಿಷಯಗಳ ಅಂತ್ಯವು ಅಲ್ಲಾಹನ ಕಡೆಗೇ ಇದೆ.

Verse 23

وَمَن كَفَرَ فَلَا يَحْزُنكَ كُفْرُهُۥٓ ۚ إِلَيْنَا مَرْجِعُهُمْ فَنُنَبِّئُهُم بِمَا عَمِلُوٓا۟ ۚ إِنَّ ٱللَّهَ عَلِيمٌۢ بِذَاتِ ٱلصُّدُورِ

Transliteration waman kafara falā yaḥzunka kuf'ruhu ilaynā marjiʿuhum fanunabbi-uhum bimā ʿamilū inna l-laha ʿalīmun bidhāti l-ṣudūri

Kannada ಯಾರು ಸತ್ಯವನ್ನು ನಿಷೇಧಿಸುತ್ತಾನೆ, ಆತನ ಸತ್ಯ ನಿಷೇಧವು (ಪ್ರವಾದಿಯರೇ) ನಿಮ್ಮನ್ನು ವ್ಯಥೆಗೀಡು ಮಾಡದಿರಲಿ. ಅವರ ಮರಳಿಕೆ ನಮ್ಮ ಕಡೆಗೇ ಆಗಿದೆ. ಅವರು ಎಸಗಿದ ಕರ್ಮಗಳ ಬಗ್ಗೆ ಆವಾಗ ನಾವು ಅವರಿಗೆ ತೋರಿಸಿ ಕೊಡುತ್ತೇವೆ. ನಿಶ್ಚಯವಾಗಿಯೂ ಅಲ್ಲಾಹು ಎದೆಗಳೊಳಗೆ ಅವಿತಿರುವ ರಹಸ್ಯಗಳನ್ನು ಚೆನ್ನಾಗಿ ತಿಳಿದಿರುತ್ತಾನೆ.

Verse 24

نُمَتِّعُهُمْ قَلِيلًا ثُمَّ نَضْطَرُّهُمْ إِلَىٰ عَذَابٍ غَلِيظٍ

Transliteration numattiʿuhum qalīlan thumma naḍṭarruhum ilā ʿadhābin ghalīẓin

Kannada ನಾವು ಅವರಿಗೆ ಸ್ವಲ್ಪ ಕಾಲ (ಭೂಮಿಯಲ್ಲಿ) ಸುಖ ನೀಡುತ್ತಿದ್ದೇವೆ. ಆ ಬಳಿಕ ಅವರನ್ನು ಒಂದು ಕಠಿಣ ಶಿಕ್ಷೆಯ ಕಡೆಗೆ ಬಲವಂತವಾಗಿ ಎಳೆದೊಯ್ಯುತ್ತೇವೆ.

Verse 25

وَلَئِن سَأَلْتَهُم مَّنْ خَلَقَ ٱلسَّمَـٰوَٰتِ وَٱلْأَرْضَ لَيَقُولُنَّ ٱللَّهُ ۚ قُلِ ٱلْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ

Transliteration wala-in sa-altahum man khalaqa l-samāwāti wal-arḍa layaqūlunna l-lahu quli l-ḥamdu lillahi bal aktharuhum lā yaʿlamūna

Kannada ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದವರು ಯಾರು ಎಂದು ತಾವು ಇವರನ್ನು ಕೇಳಿದರೆ, ಇವರು ಅಲ್ಲಾಹನೆಂದೇ ಉತ್ತರಿಸುವರು. ತಾವು ಹೇಳಿರಿ, ‘ಅಲ್ ಹಮ್ದುಲಿಲ್ಲಾಹ್’ (ಅಲ್ಲಾಹನಿಗೆ ಸ್ತುತಿ). ಆದರೆ ಇವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

Verse 26

لِلَّهِ مَا فِى ٱلسَّمَـٰوَٰتِ وَٱلْأَرْضِ ۚ إِنَّ ٱللَّهَ هُوَ ٱلْغَنِىُّ ٱلْحَمِيدُ

Transliteration lillahi mā fī l-samāwāti wal-arḍi inna l-laha huwa l-ghaniyu l-ḥamīdu

Kannada ಆಕಾಶಗಳಲ್ಲೂ ಭೂಮಿಯಲ್ಲೂ ಇರುವುದೆಲ್ಲವೂ ಅಲ್ಲಾಹನದು. ನಿಶ್ಚಯವಾಗಿಯೂ ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.

Verse 27

وَلَوْ أَنَّمَا فِى ٱلْأَرْضِ مِن شَجَرَةٍ أَقْلَـٰمٌ وَٱلْبَحْرُ يَمُدُّهُۥ مِنۢ بَعْدِهِۦ سَبْعَةُ أَبْحُرٍ مَّا نَفِدَتْ كَلِمَـٰتُ ٱللَّهِ ۗ إِنَّ ٱللَّهَ عَزِيزٌ حَكِيمٌ

Transliteration walaw annamā fī l-arḍi min shajaratin aqlāmun wal-baḥru yamudduhu min baʿdihi sabʿatu abḥurin mā nafidat kalimātu l-lahi inna l-laha ʿazīzun ḥakīmun

Kannada ಭೂಮಿಯಲ್ಲಿರುವ ಮರಗಳೆಲ್ಲ ಲೇಖನಿಗಳಾಗಿ ಮಾರ್ಪಟ್ಟು (ಈಗಿರುವ) ಸಾಗರವು ಮಸಿಯಾಗಿ- ಅದಕ್ಕೆ ಇನ್ನೂ ಸಪ್ತಸಾಗರಗಳು ಮಸಿಯನ್ನು ಒದಗಿಸಿದರೂ - ಅಲ್ಲಾಹನ ವಚನಗಳು ಬರೆದು ಮುಗಿಯಲಾರವು. ನಿಶ್ಚಯವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ ಅಗಾದಜ್ಞನೂ ಆಗಿರುತ್ತಾನೆ.

Verse 28

مَّا خَلْقُكُمْ وَلَا بَعْثُكُمْ إِلَّا كَنَفْسٍ وَٰحِدَةٍ ۗ إِنَّ ٱللَّهَ سَمِيعٌۢ بَصِيرٌ

Transliteration mā khalqukum walā baʿthukum illā kanafsin wāḥidatin inna l-laha samīʿun baṣīrun

Kannada ನಿಮ್ಮೆಲ್ಲರನ್ನು ಸೃಷ್ಟಿಸುವುದೂ ಪುನಃ ಜೀವಂತಗೊಳಿಸಿ ಎಬ್ಬಿಸುವುದೂ ಅವನ ಮಟ್ಟಿಗೆ ಕೇವಲ ಒಂದು ಜೀವಿಯನ್ನು ಸೃಷ್ಟಿಸುವ ಮತ್ತು ಪುನಃ ಜೀವಂತಗೊಳಿಸುವಂತೆ ಮಾತ್ರವಿದೆ. ನಿಜವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವ ವೀಕ್ಷಕನೂ ಆಗಿರುತ್ತಾನೆ.

Verse 29

أَلَمْ تَرَ أَنَّ ٱللَّهَ يُولِجُ ٱلَّيْلَ فِى ٱلنَّهَارِ وَيُولِجُ ٱلنَّهَارَ فِى ٱلَّيْلِ وَسَخَّرَ ٱلشَّمْسَ وَٱلْقَمَرَ كُلٌّ يَجْرِىٓ إِلَىٰٓ أَجَلٍ مُّسَمًّى وَأَنَّ ٱللَّهَ بِمَا تَعْمَلُونَ خَبِيرٌ

Transliteration alam tara anna l-laha yūliju al-layla fī l-nahāri wayūliju l-nahāra fī al-layli wasakhara l-shamsa wal-qamara kullun yajrī ilā ajalin musamman wa-anna l-laha bimā taʿmalūna khabīrun

Kannada ಅಲ್ಲಾಹು ಇರುಳನ್ನು ಹಗಲಿನೊಳಗೂ ಹಗಲನ್ನು ಇರುಳಿನೊಳಗೂ ತೂರಿಸುತ್ತಿರುವುದನ್ನೂ ಸೂರ್ಯಚಂದ್ರರನ್ನು ನಿಯಂತ್ರಿಸಿಟ್ಟಿರುವುದನ್ನೂ ನೀನು ನೋಡುತ್ತಿಲ್ಲವೇ? ಎಲ್ಲವೂ ಒಂದು ನಿಶ್ಚಿತ ಕಾಲದವರೆಗೆ ಚಲಿಸುತ್ತಿವೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮಜ್ಞನಾಗಿದ್ದಾನೆ.

Verse 30

ذَٰلِكَ بِأَنَّ ٱللَّهَ هُوَ ٱلْحَقُّ وَأَنَّ مَا يَدْعُونَ مِن دُونِهِ ٱلْبَـٰطِلُ وَأَنَّ ٱللَّهَ هُوَ ٱلْعَلِىُّ ٱلْكَبِيرُ

Transliteration dhālika bi-anna l-laha huwa l-ḥaqu wa-anna mā yadʿūna min dūnihi l-bāṭilu wa-anna l-laha huwa l-ʿaliyu l-kabīru

Kannada ಇದು ಯಾಕೆಂದರೆ, ಅಲ್ಲಾಹನೇ ಚಿರಂತನ ಸತ್ಯವಾಗಿದ್ದಾನೆ. ಅವನನ್ನು ಬಿಟ್ಟು ಇವರು ಆರಾಧಿಸುತ್ತಿರುವ ಇತರ ಎಲ್ಲವೂ ಮಿಥ್ಯವಾಗಿವೆ. ಅಲ್ಲಾಹನೇ ಉನ್ನತನೂ ಮಹಾನನೂ ಆಗಿರುತ್ತಾನೆ.

Verse 31

أَلَمْ تَرَ أَنَّ ٱلْفُلْكَ تَجْرِى فِى ٱلْبَحْرِ بِنِعْمَتِ ٱللَّهِ لِيُرِيَكُم مِّنْ ءَايَـٰتِهِۦٓ ۚ إِنَّ فِى ذَٰلِكَ لَـَٔايَـٰتٍ لِّكُلِّ صَبَّارٍ شَكُورٍ

Transliteration alam tara anna l-ful'ka tajrī fī l-baḥri biniʿ'mati l-lahi liyuriyakum min āyātihi inna fī dhālika laāyātin likulli ṣabbārin shakūrin

Kannada ಅಲ್ಲಾಹನ ಅನುಗ್ರಹದಿಂದ ನಾವೆಯು ಸಮುದ್ರದಲ್ಲಿ ಚಲಿಸುತ್ತಿರುವುದನ್ನು ನೀನು ನೋಡು ವುದಿಲ್ಲವೇ? ಇದು ಅವನ ಕೆಲವು ನಿದರ್ಶನ ಗಳನ್ನು ನಿಮಗೆ ತೋರಿಸಿ ಕೊಡಲಿಕ್ಕಾಗಿ ವಾಸ್ತವದಲ್ಲಿ ಕೃತಜ್ಞನಾಗಿರುವ ಎಲ್ಲ ಕ್ಷಮಾಶೀಲರಿಗೂ ಇದರಲ್ಲಿ ಅನೇಕ ದೃಷ್ಟಾಂತಗಳಿವೆ.

Verse 32

وَإِذَا غَشِيَهُم مَّوْجٌ كَٱلظُّلَلِ دَعَوُا۟ ٱللَّهَ مُخْلِصِينَ لَهُ ٱلدِّينَ فَلَمَّا نَجَّىٰهُمْ إِلَى ٱلْبَرِّ فَمِنْهُم مُّقْتَصِدٌ ۚ وَمَا يَجْحَدُ بِـَٔايَـٰتِنَآ إِلَّا كُلُّ خَتَّارٍ كَفُورٍ

Transliteration wa-idhā ghashiyahum mawjun kal-ẓulali daʿawū l-laha mukh'liṣīna lahu l-dīna falammā najjāhum ilā l-bari famin'hum muq'taṣidun wamā yajḥadu biāyātinā illā kullu khattārin kafūrin

Kannada ಸಮುದ್ರದಲ್ಲಿ ಬೆಟ್ಟಗಳಂಥ ತೆರೆಮಾಲೆಗಳು ಇವರ ಮೇಲೆ ಆವರಿಸಿದಾಗ ಇವರು ತಮ್ಮ ವಿಧೇಯತೆಯನ್ನು ಸಂಪೂರ್ಣವಾಗಿ ಅಲ್ಲಾಹನಿಗೇ ಮೀಸಲಾಗಿಸಿ ಅವನನ್ನು ಪ್ರಾರ್ಥಿಸುತ್ತಾರೆ. ತರುವಾಯ ಅವನು ಇವರನ್ನು ರಕ್ಷಿಸಿ ದಡಕ್ಕೆ ತಂದರೆ ಅವರಲ್ಲಿ ಕೆಲವರು ಎಡತಾಕ ನೀತಿಯನ್ನನುಸರಿಸುತ್ತಾರೆ. ಕೃತಘ್ನರಾದ ವಿಶ್ವಾಸಘಾತಕರಲ್ಲದೆ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವುದಿಲ್ಲ.

Verse 33

يَـٰٓأَيُّهَا ٱلنَّاسُ ٱتَّقُوا۟ رَبَّكُمْ وَٱخْشَوْا۟ يَوْمًا لَّا يَجْزِى وَالِدٌ عَن وَلَدِهِۦ وَلَا مَوْلُودٌ هُوَ جَازٍ عَن وَالِدِهِۦ شَيْـًٔا ۚ إِنَّ وَعْدَ ٱللَّهِ حَقٌّ ۖ فَلَا تَغُرَّنَّكُمُ ٱلْحَيَوٰةُ ٱلدُّنْيَا وَلَا يَغُرَّنَّكُم بِٱللَّهِ ٱلْغَرُورُ

Transliteration yāayyuhā l-nāsu ittaqū rabbakum wa-ikh'shaw yawman lā yajzī wālidun ʿan waladihi walā mawlūdun huwa jāzin ʿan wālidihi shayan inna waʿda l-lahi ḥaqqun falā taghurrannakumu l-ḥayatu l-dun'yā walā yaghurrannakum bil-lahi l-gharūru

Kannada ಜನರೇ, ನಿಮ್ಮ ಪ್ರಭುವಿನ ಬಗ್ಗೆ ಜಾಗ್ರತೆ ಪಾಲಿಸಿರಿ. ಒಂದು ದಿನವನ್ನು ಭಯಪಡಿರಿ. ಅಂದು ಯಾವ ತಂದೆಯೂ ತನ್ನ ಮಗನ ಪರವಾಗಿ ಪರಿಹಾರಕೊಡಲಾರ. ಯಾವ ಮಗನೂ ತನ್ನ ತಂದೆಯ ಪರವಾಗಿ ಯಾವುದೇ ಪರಿಹಾರ ಕೊಡುವವನಲ್ಲ. ಅಲ್ಲಾಹನ ವಾಗ್ದಾನವು ಸತ್ಯವಾಗಿದೆ . ಆದುದರಿಂದ ಈ ಲೌಕಿಕ ಜೀವನವು ನಿಮ್ಮನ್ನು ಮೋಸಗೊಳಿಸದಿರಲಿ. ಮಹಾವಂಚಕ (ಶೈತಾನನು) ನಿಮ್ಮನ್ನು ಅಲ್ಲಾಹನ ವಿಷಯದಲ್ಲಿ ವಂಚಿಸದಿರಲಿ.

Verse 34

إِنَّ ٱللَّهَ عِندَهُۥ عِلْمُ ٱلسَّاعَةِ وَيُنَزِّلُ ٱلْغَيْثَ وَيَعْلَمُ مَا فِى ٱلْأَرْحَامِ ۖ وَمَا تَدْرِى نَفْسٌ مَّاذَا تَكْسِبُ غَدًا ۖ وَمَا تَدْرِى نَفْسٌۢ بِأَىِّ أَرْضٍ تَمُوتُ ۚ إِنَّ ٱللَّهَ عَلِيمٌ خَبِيرٌۢ

Transliteration inna l-laha ʿindahu ʿil'mu l-sāʿati wayunazzilu l-ghaytha wayaʿlamu mā fī l-arḥāmi wamā tadrī nafsun mādhā taksibu ghadan wamā tadrī nafsun bi-ayyi arḍin tamūtu inna l-laha ʿalīmun khabīrun

Kannada ಅಂತಿಮ ಘಳಿಗೆಯ ಜ್ಞಾನ ಅಲ್ಲಾಹನ ಬಳಿಯಲ್ಲೇ ಇದೆ. ಅವನೇ ಮಳೆ ಸುರಿಸುತ್ತಾನೆ. ತಾಯಂದಿರ ಗರ್ಭಗಳಲ್ಲಿರುವುದು ಏನೆಂದು ಅವನು ತಿಳಿಯುತ್ತಾನೆ. ಯಾವ ಜೀವಿಯೂ ತಾನು ನಾಳೆ ಏನನ್ನು ಮಾಡುವೆ ಎಂಬುದನ್ನು ತಿಳಿದಿಲ್ಲ. ತಾನು ಯಾವ ಭೂಭಾಗದಲ್ಲಿ ಮರಣ ಹೊಂದುವೆನು ಎಂಬ ಅರಿವೂ ಯಾರಿಗೂ ಇಲ್ಲ. ನಿಜದಲ್ಲಿ ಅಲ್ಲಾಹನೇ ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುತ್ತಾನೆ .

Read Surah Luqman in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.