Surah Al-Anbya in Kannada: translation and audio
Surah 21 · الأنبياء · The Prophets · 112 verses
Surah Al-Anbya verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Anbya word by word in English.
Verse 1
ٱقْتَرَبَ لِلنَّاسِ حِسَابُهُمْ وَهُمْ فِى غَفْلَةٍ مُّعْرِضُونَ
Transliteration iq'taraba lilnnāsi ḥisābuhum wahum fī ghaflatin muʿ'riḍūna
Kannada ಜನರಿಗೆ ತಮ್ಮ ವಿಚಾರಣೆ ಸಮೀಪಿಸಿದೆ. ಆದರೆ ಅವರು ಅಶ್ರದ್ಧೆಯಿಂದ ವಿಮುಖರಾಗುತ್ತಿದ್ದಾರೆ.
Verse 2
مَا يَأْتِيهِم مِّن ذِكْرٍ مِّن رَّبِّهِم مُّحْدَثٍ إِلَّا ٱسْتَمَعُوهُ وَهُمْ يَلْعَبُونَ
Transliteration mā yatīhim min dhik'rin min rabbihim muḥ'dathin illā is'tamaʿūhu wahum yalʿabūna
Kannada ಅವರು, ತಮ್ಮ ಪ್ರಭುವಿನ ಕಡೆಯಿಂದ ತಮಗೆ ಬರುವ ಯಾವುದೇ ಹೊಸ ಉಪದೇಶವನ್ನು ಕೇವಲ ಪರಿಹಾಸ್ಯ ಭಾವದಿಂದ ಕೇಳುತ್ತಾರೆ.
Verse 3
لَاهِيَةً قُلُوبُهُمْ ۗ وَأَسَرُّوا۟ ٱلنَّجْوَى ٱلَّذِينَ ظَلَمُوا۟ هَلْ هَـٰذَآ إِلَّا بَشَرٌ مِّثْلُكُمْ ۖ أَفَتَأْتُونَ ٱلسِّحْرَ وَأَنتُمْ تُبْصِرُونَ
Transliteration lāhiyatan qulūbuhum wa-asarrū l-najwā alladhīna ẓalamū hal hādhā illā basharun mith'lukum afatatūna l-siḥ'ra wa-antum tub'ṣirūna
Kannada ಅವರ ಹೃದಯಗಳು ಪ್ರಜ್ಞಾಹೀನವಾಗಿವೆ. “ಇವನು ನಿಮ್ಮಂತೆಯೇ ಇರುವ ಓರ್ವ ಮನುಷ್ಯನಲ್ಲವೇ? ಹೀಗಿರುವಾಗ ನೀವು ಕಣ್ಣಾರೆ ಕಾಣುತ್ತ ಜಾದುವಿನ ಕಡೆಗೆ ಹೋಗುವಿರಾ?” ಎಂದು ಅಕ್ರಮಿಗಳು ಪರಸ್ಪರ ಪಿಸುಗುಟ್ಟಿದರು.
Verse 4
قَالَ رَبِّى يَعْلَمُ ٱلْقَوْلَ فِى ٱلسَّمَآءِ وَٱلْأَرْضِ ۖ وَهُوَ ٱلسَّمِيعُ ٱلْعَلِيمُ
Transliteration qāla rabbī yaʿlamu l-qawla fī l-samāi wal-arḍi wahuwa l-samīʿu l-ʿalīmu
Kannada ಪ್ರವಾದಿಯು ಹೇಳಿದರು; “ನನ್ನ ಪ್ರಭು ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಮಾತನ್ನೂ ಅರಿಯುತ್ತಾನೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.”
Verse 5
بَلْ قَالُوٓا۟ أَضْغَـٰثُ أَحْلَـٰمٍۭ بَلِ ٱفْتَرَىٰهُ بَلْ هُوَ شَاعِرٌ فَلْيَأْتِنَا بِـَٔايَةٍ كَمَآ أُرْسِلَ ٱلْأَوَّلُونَ
Transliteration bal qālū aḍghāthu aḥlāmin bali if'tarāhu bal huwa shāʿirun falyatinā biāyatin kamā ur'sila l-awalūna
Kannada ಆದರೆ ಅಕ್ರಮಿಗಳು; “ಇದು ಕೇವಲ ಕೆಟ್ಟ ಕನ ಸುಗಳು. ಅಲ್ಲ, ಇದನ್ನು ಇವನೇ ಹೆಣೆದಿರುವನು. ಮಾತ್ರವಲ್ಲ, ಇವನೊಬ್ಬ ಕವಿ. ಅನ್ಯಥಾ ಹಿಂದಿನವರು ನಿದರ್ಶನಗಳೊಂದಿಗೆ ಕಳುಹಿಸಲ್ಪಟ್ಟಿರು ವಂತೆ ಇವನೂ ನಮಗೆ ಒಂದು ನಿದರ್ಶನ ತರಲಿ” ಎಂದು ಹೇಳಿದರು .
Verse 6
مَآ ءَامَنَتْ قَبْلَهُم مِّن قَرْيَةٍ أَهْلَكْنَـٰهَآ ۖ أَفَهُمْ يُؤْمِنُونَ
Transliteration mā āmanat qablahum min qaryatin ahlaknāhā afahum yu'minūna
Kannada ಆದರೆ ಇವರಿಗಿಂತ ಮುಂಚೆ ನಾವು ನಾಶಗೊಳಿಸಿದ ಯಾವ ನಾಡೂ ನಮ್ಮ ದೃಷ್ಟಾಂತವನ್ನು ನೋಡಿ ವಿಶ್ವಾಸವಿರಿಸಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿರಿಸುವರೇ?
Verse 7
وَمَآ أَرْسَلْنَا قَبْلَكَ إِلَّا رِجَالًا نُّوحِىٓ إِلَيْهِمْ ۖ فَسْـَٔلُوٓا۟ أَهْلَ ٱلذِّكْرِ إِن كُنتُمْ لَا تَعْلَمُونَ
Transliteration wamā arsalnā qablaka illā rijālan nūḥī ilayhim fasalū ahla l-dhik'ri in kuntum lā taʿlamūna
Kannada (ಪೈಗಂಬರರೇ,) ನಿಮಗಿಂತ ಮುಂಚೆ ಪುರುಷರನ್ನು ಮಾತ್ರವೇ ನಾವು ಪ್ರವಾದಿಗಳಾಗಿ ಕಳುಹಿಸಿದ್ದು. ಅವರಿಗೆ ನಾವು ಸಂದೇಶ ಕೊಡುತ್ತಿದ್ದೆವು. ಬೇಕಾದರೆ ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರಲ್ಲಿ ಕೇಳಿರಿ.
Verse 8
وَمَا جَعَلْنَـٰهُمْ جَسَدًا لَّا يَأْكُلُونَ ٱلطَّعَامَ وَمَا كَانُوا۟ خَـٰلِدِينَ
Transliteration wamā jaʿalnāhum jasadan lā yakulūna l-ṭaʿāma wamā kānū khālidīna
Kannada ಅವರನ್ನು (ಸಂದೇಶವಾಹಕರನ್ನು) ನಾವು ಆಹಾರ ಸೇವಿಸದಂತಹ ಶರೀರವನ್ನಾಗಿ ಮಾಡಿರಲಿಲ್ಲ. ಅವರು ಸದಾಕಾಲ ಬದುಕುವವರೂ ಆಗಿರಲಿಲ್ಲ.
Verse 9
ثُمَّ صَدَقْنَـٰهُمُ ٱلْوَعْدَ فَأَنجَيْنَـٰهُمْ وَمَن نَّشَآءُ وَأَهْلَكْنَا ٱلْمُسْرِفِينَ
Transliteration thumma ṣadaqnāhumu l-waʿda fa-anjaynāhum waman nashāu wa-ahlaknā l-mus'rifīna
Kannada ನಂತರ ಅವರಿಗೆ ಮಾಡಿದ ನಮ್ಮ ವಾಗ್ದಾನವನ್ನು ನಾವು ಪೂರೈಸಿದ್ದೇವೆ. ಅವರನ್ನೂ ನಾವಿಚ್ಛಿಸಿದ ಇತರರನ್ನೂ ರಕ್ಷಿಸಿದ್ದೇವೆ. ಮೀರಿ ನಡೆದವರನ್ನು ನಾಶ ಮಾಡಿದ್ದೇವೆ .
Verse 10
لَقَدْ أَنزَلْنَآ إِلَيْكُمْ كِتَـٰبًا فِيهِ ذِكْرُكُمْ ۖ أَفَلَا تَعْقِلُونَ
Transliteration laqad anzalnā ilaykum kitāban fīhi dhik'rukum afalā taʿqilūna
Kannada ಜನರೇ, ನಾವು ನಿಮ್ಮದೇ ಉದ್ಭೋದೆಯುಳ್ಳ ಒಂದು ಗ್ರಂಥವನ್ನು ನಿಮ್ಮ ಕಡೆಗೆ ಕಳುಹಿಸಿದ್ದೇವೆ. ನೀವು ಯೋಚಿಸುವುದಿಲ್ಲವೇ?”
Verse 11
وَكَمْ قَصَمْنَا مِن قَرْيَةٍ كَانَتْ ظَالِمَةً وَأَنشَأْنَا بَعْدَهَا قَوْمًا ءَاخَرِينَ
Transliteration wakam qaṣamnā min qaryatin kānat ẓālimatan wa-anshanā baʿdahā qawman ākharīna
Kannada ಎಷ್ಟೋ ಅಕ್ರಮಿ ನಾಡುಗಳನ್ನು ನಾವು ಧ್ವಂಸ ಮಾಡಿದ್ದೇವೆ. ಅವರ ಬಳಿಕ ಬೇರೊಂದು ಹೊಸ ಜನಾಂಗವನ್ನು ನಿರ್ಮಿಸಿದ್ದೇವೆ.
Verse 12
فَلَمَّآ أَحَسُّوا۟ بَأْسَنَآ إِذَا هُم مِّنْهَا يَرْكُضُونَ
Transliteration falammā aḥassū basanā idhā hum min'hā yarkuḍūna
Kannada ಅವರಿಗೆ ನಮ್ಮ ಶಿಕ್ಷೆಯ ಸ್ಪರ್ಶವಾದಾಗ ಅಲ್ಲಿಂದ ಓಡ ಹತ್ತಿದರು. .
Verse 13
لَا تَرْكُضُوا۟ وَٱرْجِعُوٓا۟ إِلَىٰ مَآ أُتْرِفْتُمْ فِيهِ وَمَسَـٰكِنِكُمْ لَعَلَّكُمْ تُسْـَٔلُونَ
Transliteration lā tarkuḍū wa-ir'jiʿū ilā mā ut'rif'tum fīhi wamasākinikum laʿallakum tus'alūna
Kannada (ಆಗ ಹೇಳಲಾಯಿತು:) “ಓಡಬೇಡಿರಿ, ನೀವು ಸುಖಿಸುತ್ತಿದ್ದ ಭೋಗದ ಕಡೆಗೆ ಮತ್ತು ನಿಮ್ಮ ನಿವಾಸಗಳಿಗೇ ಮರಳಿ ಹೋಗಿರಿ, ನಿಮ್ಮಲ್ಲಿ ಏನಾದರೂ ಪ್ರಶ್ನಿಸಲಾದೀತು”.
Verse 14
قَالُوا۟ يَـٰوَيْلَنَآ إِنَّا كُنَّا ظَـٰلِمِينَ
Transliteration qālū yāwaylanā innā kunnā ẓālimīna
Kannada ಆಗ ಅವರು, “ಅಯ್ಯೋ, ನಮ್ಮ ನಾಶವೇ! ನಿಜ ಕ್ಕೂ ನಾವು ಅಪರಾಧಿಗಳಾಗಿದ್ದೆವು” ಎಂದರು.
Verse 15
فَمَا زَالَت تِّلْكَ دَعْوَىٰهُمْ حَتَّىٰ جَعَلْنَـٰهُمْ حَصِيدًا خَـٰمِدِينَ
Transliteration famā zālat til'ka daʿwāhum ḥattā jaʿalnāhum ḥaṣīdan khāmidīna
Kannada ಹಾಗೆ ನಾವು ಅವರನ್ನು ಕೊಯ್ದು ತೆಗೆದ ಪೈರಾಗಿ, ಕಿಡಿಯಾರಿದ ಕೆಂಡದ ಬೂದಿಯಾಗಿ ಮಾಡು ವವರೆಗೂ ಅವರು ರೋದಿಸುತ್ತಲೇ ಇದ್ದರು .
Verse 16
وَمَا خَلَقْنَا ٱلسَّمَآءَ وَٱلْأَرْضَ وَمَا بَيْنَهُمَا لَـٰعِبِينَ
Transliteration wamā khalaqnā l-samāa wal-arḍa wamā baynahumā lāʿibīna
Kannada ಆಕಾಶವನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಕ್ರೀಡೆಯಾಡಲು ನಾವು ಸೃಷ್ಟಿಸಲಿಲ್ಲ.
Verse 17
لَوْ أَرَدْنَآ أَن نَّتَّخِذَ لَهْوًا لَّٱتَّخَذْنَـٰهُ مِن لَّدُنَّآ إِن كُنَّا فَـٰعِلِينَ
Transliteration law aradnā an nattakhidha lahwan la-ittakhadhnāhu min ladunnā in kunnā fāʿilīna
Kannada ನಾವು ವಿನೋದವನ್ನು ಉಂಟು ಮಾಡ ಬಯಸಿದ್ದರೆ ನಾವದನ್ನು ನಮ್ಮ ಕಡೆಯಿಂದಲೇ ಮಾಡಿಕೊಳ್ಳುತ್ತಿದ್ದೆವು. (ಆದರೆ ಹಾಗೆ) ನಾವು ಮಾಡಲಾರೆವು .
Verse 18
بَلْ نَقْذِفُ بِٱلْحَقِّ عَلَى ٱلْبَـٰطِلِ فَيَدْمَغُهُۥ فَإِذَا هُوَ زَاهِقٌ ۚ وَلَكُمُ ٱلْوَيْلُ مِمَّا تَصِفُونَ
Transliteration bal naqdhifu bil-ḥaqi ʿalā l-bāṭili fayadmaghuhu fa-idhā huwa zāhiqun walakumu l-waylu mimmā taṣifūna
Kannada ಆದರೆ ನಾವು ಮಿಥ್ಯದ ಮೇಲೆ ಸತ್ಯದಿಂದ ಹೊಡೆಯುತ್ತೇವೆ. ಅದು ಮಿಥ್ಯದ ಮರ್ಮಕ್ಕೆ ತಾಗುತ್ತದೆ. ಆಗ ಅದು ಅಳಿದು ಹೋಗುತ್ತದೆ . (ಸತ್ಯನಿಷೇಧಿಗಳೇ,) ನೀವು ಅಲ್ಲಾಹನ ಬಗ್ಗೆ ಸೃಷ್ಟಿಸುವ ಮಾತುಗಳಿಂದ ನಿಮಗೆ ವಿನಾಶ ಕಾದಿದೆ.
Verse 19
وَلَهُۥ مَن فِى ٱلسَّمَـٰوَٰتِ وَٱلْأَرْضِ ۚ وَمَنْ عِندَهُۥ لَا يَسْتَكْبِرُونَ عَنْ عِبَادَتِهِۦ وَلَا يَسْتَحْسِرُونَ
Transliteration walahu man fī l-samāwāti wal-arḍi waman ʿindahu lā yastakbirūna ʿan ʿibādatihi walā yastaḥsirūna
Kannada ಆಕಾಶಗಳಲ್ಲೂ ಭೂಮಿಯಲ್ಲೂ ಇರುವುದೆಲ್ಲವೂ ಅಲ್ಲಾಹನದ್ದು. ಅವನ ಬಳಿಯಲ್ಲಿರುವವರು (ದೇವಚರರು) ಅವನ ಆರಾಧನೆಯನ್ನು ಬಿಟ್ಟು ದರ್ಪ ತೋರುವುದಿಲ್ಲ. ಬಳಲುವುದೂ ಇಲ್ಲ.
Verse 20
يُسَبِّحُونَ ٱلَّيْلَ وَٱلنَّهَارَ لَا يَفْتُرُونَ
Transliteration yusabbiḥūna al-layla wal-nahāra lā yafturūna
Kannada ಹಗಲು ಇರುಳೂ ಅವನ ಕೀರ್ತನೆ ಮಾಡುತ್ತಾರೆ, ದಣಿಯುವುದಿಲ್ಲ.
Verse 21
أَمِ ٱتَّخَذُوٓا۟ ءَالِهَةً مِّنَ ٱلْأَرْضِ هُمْ يُنشِرُونَ
Transliteration ami ittakhadhū ālihatan mina l-arḍi hum yunshirūna
Kannada ಅದಲ್ಲ, ಇವರು ಭೂಮಿಯಿಂದ ನಿರ್ಮಿಸಿದಂತಹ ದೇವರುಗಳು ಸತ್ತವರನ್ನು ಜೀವಂತ ಎಬ್ಬಿಸಬಲ್ಲರೇ?
Verse 22
لَوْ كَانَ فِيهِمَآ ءَالِهَةٌ إِلَّا ٱللَّهُ لَفَسَدَتَا ۚ فَسُبْحَـٰنَ ٱللَّهِ رَبِّ ٱلْعَرْشِ عَمَّا يَصِفُونَ
Transliteration law kāna fīhimā ālihatun illā l-lahu lafasadatā fasub'ḥāna l-lahi rabbi l-ʿarshi ʿammā yaṣifūna
Kannada ಭೂಮಿ-ಆಕಾಶಗಳಲ್ಲಿ (ಏಕೈಕ) ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಅವೆರಡೂ ಹದಗೆಡುತ್ತಿತ್ತು . ಆದುದರಿಂದ ಅರ್ಶ್‍ನ ಪ್ರಭುವಾಗಿರುವ ಅಲ್ಲಾಹನು, ಇವರು ಹೊರಿಸುವ ಆರೋಪಗಳಿಂದ ಅದೆಷ್ಟು ಪರಿಶುದ್ಧನು!.
Verse 23
لَا يُسْـَٔلُ عَمَّا يَفْعَلُ وَهُمْ يُسْـَٔلُونَ
Transliteration lā yus'alu ʿammā yafʿalu wahum yus'alūna
Kannada ಅವನು ಮಾಡುವ ಕಾರ್ಯದ ಬಗ್ಗೆ ಆತನಲ್ಲಿ ಪ್ರಶ್ನಿಸಲಾಗುವುದಿಲ್ಲ. ಆದರೆ ಉಳಿದವರೆಲ್ಲರೂ ಪ್ರಶ್ನಿಸಲ್ಪಡುವರು.
Verse 24
أَمِ ٱتَّخَذُوا۟ مِن دُونِهِۦٓ ءَالِهَةً ۖ قُلْ هَاتُوا۟ بُرْهَـٰنَكُمْ ۖ هَـٰذَا ذِكْرُ مَن مَّعِىَ وَذِكْرُ مَن قَبْلِى ۗ بَلْ أَكْثَرُهُمْ لَا يَعْلَمُونَ ٱلْحَقَّ ۖ فَهُم مُّعْرِضُونَ
Transliteration ami ittakhadhū min dūnihi ālihatan qul hātū bur'hānakum hādhā dhik'ru man maʿiya wadhik'ru man qablī bal aktharuhum lā yaʿlamūna l-ḥaqa fahum muʿ'riḍūna
Kannada ಇವರು ಅವನನ್ನು ಬಿಟ್ಟು ಇತರ ದೇವರುಗಳನ್ನು ಮಾಡಿಕೊಂಡರೇ? (ಪೈಗಂಬರರೇ,) ಹೇಳಿರಿ; “ನಿಮ್ಮ ಪುರಾವೆಯನ್ನು ತನ್ನಿರಿ. ಇದೇ ನನ್ನ ಜೊತೆಯಿದ್ದವರ ಗ್ರಂಥ ಮತ್ತು ನನಗಿಂತ ಮುಂಚಿನವರ ಗ್ರಂಥ”. ಆದರೆ ಇವರಲ್ಲಿ ಹೆಚ್ಚಿನ ವರು ನಿಜವನ್ನು ಅರಿತಿಲ್ಲ. ಆದುದರಿಂದ ಅವರು ವಿಮುಖರಾಗಿದ್ದಾರೆ.
Verse 25
وَمَآ أَرْسَلْنَا مِن قَبْلِكَ مِن رَّسُولٍ إِلَّا نُوحِىٓ إِلَيْهِ أَنَّهُۥ لَآ إِلَـٰهَ إِلَّآ أَنَا۠ فَٱعْبُدُونِ
Transliteration wamā arsalnā min qablika min rasūlin illā nūḥī ilayhi annahu lā ilāha illā anā fa-uʿ'budūni
Kannada “ನನ್ನ ಹೊರತು ಬೇರೆ ಆರಾಧ್ಯರಿಲ್ಲ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ” ಎಂಬ ಸಂದೇ ಶವನ್ನು ನೀಡದೆ ತಮಗೆ ಮುಂಚೆ ಯಾವುದೇ ದೂತರನ್ನು ನಾವು ಕಳುಹಿಸಿಲ್ಲ .
Verse 26
وَقَالُوا۟ ٱتَّخَذَ ٱلرَّحْمَـٰنُ وَلَدًا ۗ سُبْحَـٰنَهُۥ ۚ بَلْ عِبَادٌ مُّكْرَمُونَ
Transliteration waqālū ittakhadha l-raḥmānu waladan sub'ḥānahu bal ʿibādun muk'ramūna
Kannada ಕರುಣಾಮಯನಾದ ಅಲ್ಲಾಹನು ಮಕ್ಕಳನ್ನು ಉಂಟು ಮಾಡಿರುವನೆಂದು ಇವರು ಹೇಳುತ್ತಾರೆ. ಅಲ್ಲಾಹು ಪರಮ ಪಾವನನು. ವಾಸ್ತವದಲ್ಲಿ ಅವರು (ದೇವಚರರು) ಆದರಣೀಯ ದಾಸರಾಗಿರುತ್ತಾರೆ.
Verse 27
لَا يَسْبِقُونَهُۥ بِٱلْقَوْلِ وَهُم بِأَمْرِهِۦ يَعْمَلُونَ
Transliteration lā yasbiqūnahu bil-qawli wahum bi-amrihi yaʿmalūna
Kannada ಅವರು ಅವನ ಮಾತಿನ ನಡುವೆ ಬಾಯಿ ಹಾಕಲಾರರು. ಅವರು ಅವನ ಅಪ್ಪಣೆ ಪ್ರಕಾರ ಮಾತ್ರಕಾರ್ಯವೆಸಗುತ್ತಾರೆ
Verse 28
يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يَشْفَعُونَ إِلَّا لِمَنِ ٱرْتَضَىٰ وَهُم مِّنْ خَشْيَتِهِۦ مُشْفِقُونَ
Transliteration yaʿlamu mā bayna aydīhim wamā khalfahum walā yashfaʿūna illā limani ir'taḍā wahum min khashyatihi mush'fiqūna
Kannada ಅವರ ಮುಂದಿರುವುದನ್ನೂ ಅವರ ಹಿಂದಿರು ವುದನ್ನೂ ಅವನು ಬಲ್ಲನು. ಅಲ್ಲಾಹು ತೃಪ್ತಿಪಟ್ಟವರಿಗಲ್ಲದೆ ಅವರು ಶಿಫಾರಸ್ಸು ಮಾಡುವುದಿಲ್ಲ. ಅವರು ಆತನ ಭಯದಿಂದ ತತ್ತರಿಸುವವರು.
Verse 29
۞ وَمَن يَقُلْ مِنْهُمْ إِنِّىٓ إِلَـٰهٌ مِّن دُونِهِۦ فَذَٰلِكَ نَجْزِيهِ جَهَنَّمَ ۚ كَذَٰلِكَ نَجْزِى ٱلظَّـٰلِمِينَ
Transliteration waman yaqul min'hum innī ilāhun min dūnihi fadhālika najzīhi jahannama kadhālika najzī l-ẓālimīna
Kannada ಅಲ್ಲಾಹನ ಹೊರತು ನಾನೂ ಒಬ್ಬ ದೇವನೆಂದು ಅವರ ಪೈಕಿ ಯಾರಾದರೂ ಹೇಳಿದರೆ ಅವನಿಗೆ ನಾವು ನರಕಾಗ್ನಿಯ ಪ್ರತಿಫಲ ಕೊಡುವೆವು. ಅಕ್ರಮಿಗಳಿಗೆ ನಾವು ಇದೇ ರೀತಿಯ ಪ್ರತಿಫಲ ಕೊಡುತ್ತೇವೆ.
Verse 30
أَوَلَمْ يَرَ ٱلَّذِينَ كَفَرُوٓا۟ أَنَّ ٱلسَّمَـٰوَٰتِ وَٱلْأَرْضَ كَانَتَا رَتْقًا فَفَتَقْنَـٰهُمَا ۖ وَجَعَلْنَا مِنَ ٱلْمَآءِ كُلَّ شَىْءٍ حَىٍّ ۖ أَفَلَا يُؤْمِنُونَ
Transliteration awalam yara alladhīna kafarū anna l-samāwāti wal-arḍa kānatā ratqan fafataqnāhumā wajaʿalnā mina l-māi kulla shayin ḥayyin afalā yu'minūna
Kannada ಆಕಾಶಗಳೂ ಭೂಮಿಯೂ ಮೊದಲು ಕೂಡಿ ಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನೂ ಪ್ರತಿಯೊಂದು ಜೀವಿಯನ್ನು ನೀರಿನಿಂದ ಸೃಷ್ಟಿಸಿದ್ದನ್ನೂ ಸತ್ಯನಿಷೇಧಿಗಳು ಕಾಣಲಿಲ್ಲವೇ? ಅವರಿನ್ನೂ ವಿಶ್ವಾಸ ವಿರಿಸುವುದಿಲ್ಲವೇ?
Verse 31
وَجَعَلْنَا فِى ٱلْأَرْضِ رَوَٰسِىَ أَن تَمِيدَ بِهِمْ وَجَعَلْنَا فِيهَا فِجَاجًا سُبُلًا لَّعَلَّهُمْ يَهْتَدُونَ
Transliteration wajaʿalnā fī l-arḍi rawāsiya an tamīda bihim wajaʿalnā fīhā fijājan subulan laʿallahum yahtadūna
Kannada ಭೂಮಿ ಮನುಷ್ಯರೊಂದಿಗೆ ವಾಲದಂತೆ ಅದರಲ್ಲಿ ನಾವು ಅಚಲವಾದ ಪರ್ವತಗಳನ್ನು ನಾಟಿದ್ದೇವೆ. ಅವರು ತಮ್ಮ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಪರ್ವತಗಳಲ್ಲಿ ವಿಶಾಲ ವಾದ ಮಾರ್ಗಗಳನ್ನು ಮಾಡಿದ್ದೇವೆ .
Verse 32
وَجَعَلْنَا ٱلسَّمَآءَ سَقْفًا مَّحْفُوظًا ۖ وَهُمْ عَنْ ءَايَـٰتِهَا مُعْرِضُونَ
Transliteration wajaʿalnā l-samāa saqfan maḥfūẓan wahum ʿan āyātihā muʿ'riḍūna
Kannada ಆಕಾಶವನ್ನು ಒಂದು ಸುರಕ್ಷಿತವಾದ ಮೇಲು ಛಾವಣೆಯನ್ನಾಗಿ ನಾವು ಮಾಡಿದ್ದೇವೆ. ಆದರೆ ಇವರು ಅದರ ನಿದರ್ಶನಗಳಿಂದ ವಿಮುಖರಾಗುತ್ತಾರೆ .
Verse 33
وَهُوَ ٱلَّذِى خَلَقَ ٱلَّيْلَ وَٱلنَّهَارَ وَٱلشَّمْسَ وَٱلْقَمَرَ ۖ كُلٌّ فِى فَلَكٍ يَسْبَحُونَ
Transliteration wahuwa alladhī khalaqa al-layla wal-nahāra wal-shamsa wal-qamara kullun fī falakin yasbaḥūna
Kannada ಅವನು ರಾತ್ರಿ ಹಗಲುಗಳನ್ನು ಉಂಟು ಮಾಡಿದವನು. ಸೂರ್ಯ ಚಂದ್ರನನ್ನು ಸೃಷ್ಟಿಸಿದವನು. ಎಲ್ಲವೂ ಕಕ್ಷೆಯಲ್ಲಿ ತೇಲುತ್ತಿವೆ.
Verse 34
وَمَا جَعَلْنَا لِبَشَرٍ مِّن قَبْلِكَ ٱلْخُلْدَ ۖ أَفَإِي۟ن مِّتَّ فَهُمُ ٱلْخَـٰلِدُونَ
Transliteration wamā jaʿalnā libasharin min qablika l-khul'da afa-in mitta fahumu l-khālidūna
Kannada (ಪೈಗಂಬರರೇ,) ನಿಮಗೆ ಮುಂಚೆ ಯಾವ ಮನುಷ್ಯನಿಗೂ ನಾವು ಅಮರತ್ವವನ್ನು ನೀಡಲಿಲ್ಲ. ಹೀಗಿದ್ದು ನೀವು ಮರಣ ಹೊಂದಿದರೂ ಕೂಡಾ ಇವರೇನು ಶಾಶ್ವತರೇ?
Verse 35
كُلُّ نَفْسٍ ذَآئِقَةُ ٱلْمَوْتِ ۗ وَنَبْلُوكُم بِٱلشَّرِّ وَٱلْخَيْرِ فِتْنَةً ۖ وَإِلَيْنَا تُرْجَعُونَ
Transliteration kullu nafsin dhāiqatu l-mawti wanablūkum bil-shari wal-khayri fit'natan wa-ilaynā tur'jaʿūna
Kannada ಪ್ರತಿಯೊಂದು ಜೀವಿಯೂ ಮರಣದ ಸವಿಯು ಣ್ಣಲಿದೆ. ನಿಮ್ಮನ್ನು ನಾವು ಕಷ್ಟ - ಸುಖಗಳಿಂದ ಪರೀಕ್ಷಿಸುತ್ತಿದ್ದೇವೆ, ಕೊನೆಗೆ ನೀವು ನಮ್ಮ ಕಡೆಗೇ ಮರಳಲಿದ್ದೀರಿ.
Verse 36
وَإِذَا رَءَاكَ ٱلَّذِينَ كَفَرُوٓا۟ إِن يَتَّخِذُونَكَ إِلَّا هُزُوًا أَهَـٰذَا ٱلَّذِى يَذْكُرُ ءَالِهَتَكُمْ وَهُم بِذِكْرِ ٱلرَّحْمَـٰنِ هُمْ كَـٰفِرُونَ
Transliteration wa-idhā raāka alladhīna kafarū in yattakhidhūnaka illā huzuwan ahādhā alladhī yadhkuru ālihatakum wahum bidhik'ri l-raḥmāni hum kāfirūna
Kannada “ನಿಮ್ಮ ದೇವರುಗಳನ್ನು ಪ್ರಸ್ತಾವಿಸುತ್ತಿರುವವನು ಇವನೋ?” ಎನ್ನುತ್ತ ಸತ್ಯನಿಷೇಧಿಗಳು ನಿಮ್ಮನ್ನು ಕಂಡಾಗ ಪರಿಹಾಸ್ಯ ಮಾಡದೇ ಬಿಡುವುದಿಲ್ಲ. ಅವರೇ ಕರುಣಾನಿಧಿಯಾದ ಅಲ್ಲಾಹನ ಉದ್ಭೋದೆಯನ್ನು ತಿರಸ್ಕರಿಸುವವರು.
Verse 37
خُلِقَ ٱلْإِنسَـٰنُ مِنْ عَجَلٍ ۚ سَأُو۟رِيكُمْ ءَايَـٰتِى فَلَا تَسْتَعْجِلُونِ
Transliteration khuliqa l-insānu min ʿajalin sa-urīkum āyātī falā tastaʿjilūni
Kannada ಮಾನವನನ್ನು ದುಡುಕಿನಿಂದ ಸೃಷ್ಟಿಸಲಾಗಿದೆ. ನನ್ನ ನಿದರ್ಶನಗಳನ್ನು ನಿಮಗೆ ನಾನು ತೋರಿಸಿ ಕೊಡಲಿದ್ದೇನೆ. ಆದ್ದರಿಂದ ನನ್ನೊಡನೆ ದುಡುಕಬೇಡಿರಿ.
Verse 38
وَيَقُولُونَ مَتَىٰ هَـٰذَا ٱلْوَعْدُ إِن كُنتُمْ صَـٰدِقِينَ
Transliteration wayaqūlūna matā hādhā l-waʿdu in kuntum ṣādiqīna
Kannada “ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನ ಯಾವಾಗ?” ಎಂದು ಇವರು ಕೇಳುತ್ತಾರೆ.
Verse 39
لَوْ يَعْلَمُ ٱلَّذِينَ كَفَرُوا۟ حِينَ لَا يَكُفُّونَ عَن وُجُوهِهِمُ ٱلنَّارَ وَلَا عَن ظُهُورِهِمْ وَلَا هُمْ يُنصَرُونَ
Transliteration law yaʿlamu alladhīna kafarū ḥīna lā yakuffūna ʿan wujūhihimu l-nāra walā ʿan ẓuhūrihim walā hum yunṣarūna
Kannada ಸತ್ಯನಿಷೇಧಿಗಳು ತಮ್ಮ ಮುಖಗಳಿಂದಾಗಲಿ ತಮ್ಮ ಬೆನ್ನುಗಳಿಂದಾಗಲಿ ನರಕಾಗ್ನಿಯನ್ನು ತಡೆದಿರಿಸಲಾಗದ ಹಾಗೂ ಅವರಿಗೆ ಸಹಾಯ ನೀಡಲಾಗದ ಸಂದರ್ಭದ ಬಗ್ಗೆ ಅರಿಯುತ್ತಿದ್ದರೆ! (ಅವರು ಹೀಗೆ ದುಡುಕುತ್ತಿರಲಿಲ್ಲ).
Verse 40
بَلْ تَأْتِيهِم بَغْتَةً فَتَبْهَتُهُمْ فَلَا يَسْتَطِيعُونَ رَدَّهَا وَلَا هُمْ يُنظَرُونَ
Transliteration bal tatīhim baghtatan fatabhatuhum falā yastaṭīʿūna raddahā walā hum yunẓarūna
Kannada ಆದರೆ ಆ ವಿಪತ್ತು ದಿಢೀರನೆ ಅವರ ಮೇಲೆರಗು ವುದು. ಆಗ ಅವರನ್ನು ಅದು ಕಂಗೆಡಿಸುವುದು. ಅವರಿಗೆ ಅದನ್ನು ತಡೆಯಲು ಸಾಧ್ಯವಾಗದು ಮತ್ತು ಸಮಯಾವಕಾಶವನ್ನೂ ಕೊಡಲಾಗದು.
Verse 41
وَلَقَدِ ٱسْتُهْزِئَ بِرُسُلٍ مِّن قَبْلِكَ فَحَاقَ بِٱلَّذِينَ سَخِرُوا۟ مِنْهُم مَّا كَانُوا۟ بِهِۦ يَسْتَهْزِءُونَ
Transliteration walaqadi us'tuh'zi-a birusulin min qablika faḥāqa bi-alladhīna sakhirū min'hum mā kānū bihi yastahziūna
Kannada (ನಬಿಯವರೇ) ನಿಮಗಿಂತ ಮುಂಚೆಯೂ ಸಂದೇಶ ವಾಹಕರನ್ನು ಪರಿಹಾಸ್ಯ ಮಾಡಲಾ ಗಿದೆ. ಆದರೆ ಅವರನ್ನು ಗೇಲಿ ಮಾಡಿದವರಿಗೆ ಅವರು ಪರಿಹಾಸ್ಯ ಮಾಡುತ್ತಿದ್ದುದೇ ಬಂದೆರಗಿತು ಂ.
Verse 42
قُلْ مَن يَكْلَؤُكُم بِٱلَّيْلِ وَٱلنَّهَارِ مِنَ ٱلرَّحْمَـٰنِ ۗ بَلْ هُمْ عَن ذِكْرِ رَبِّهِم مُّعْرِضُونَ
Transliteration qul man yakla-ukum bi-al-layli wal-nahāri mina l-raḥmāni bal hum ʿan dhik'ri rabbihim muʿ'riḍūna
Kannada (ಪೈಗಂಬರರೇ,) ಕೇಳಿರಿ, ನಿಮ್ಮನ್ನು ಹಗಲೂ ರಾತ್ರಿಯೂ ಕರುಣಾಮಯನಾದ ಅಲ್ಲಾಹನಿಂದ ರಕ್ಷಿಸುವವನು ಯಾರು? ಆದರೆ ಇವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.
Verse 43
أَمْ لَهُمْ ءَالِهَةٌ تَمْنَعُهُم مِّن دُونِنَا ۚ لَا يَسْتَطِيعُونَ نَصْرَ أَنفُسِهِمْ وَلَا هُم مِّنَّا يُصْحَبُونَ
Transliteration am lahum ālihatun tamnaʿuhum min dūninā lā yastaṭīʿūna naṣra anfusihim walā hum minnā yuṣ'ḥabūna
Kannada ನಮ್ಮ ವಿರುದ್ಧ ಇವರನ್ನು ತಡೆದು ರಕ್ಷಿಸುವ ದೇವ ರುಗಳು ಇವರಿಗಿದ್ದಾರೆಯೇನು? ಆ ದೇವರುಗಳು ಸ್ವಯಂ ತಮಗೇ ಸಹಾಯ ಮಾಡಿಕೊಳ್ಳಲಾರರು ಮತ್ತು ನಮ್ಮಿಂದ ಅವರು ಸಹಾಯ ಪಡಕೊಳ್ಳಲಾರರು.
Verse 44
بَلْ مَتَّعْنَا هَـٰٓؤُلَآءِ وَءَابَآءَهُمْ حَتَّىٰ طَالَ عَلَيْهِمُ ٱلْعُمُرُ ۗ أَفَلَا يَرَوْنَ أَنَّا نَأْتِى ٱلْأَرْضَ نَنقُصُهَا مِنْ أَطْرَافِهَآ ۚ أَفَهُمُ ٱلْغَـٰلِبُونَ
Transliteration bal mattaʿnā hāulāi waābāahum ḥattā ṭāla ʿalayhimu l-ʿumuru afalā yarawna annā natī l-arḍa nanquṣuhā min aṭrāfihā afahumu l-ghālibūna
Kannada ವಾಸ್ತವದಲ್ಲಿ ನಾವು ಇವರಿಗೂ ಇವರ ಪೂರ್ವ ಜರಿಗೂ ಜೀವನ ಸವಲತ್ತುಗಳನ್ನು ಕೊಟ್ಟಿದ್ದೆವು. ಹೀಗೆ ಅವರ ಜೀವನಾವಧಿ ದೀರ್ಘವಾಯಿತು. ಆದರೆ ನಾವು ಭೂಮಿಯನ್ನು ಅದರ ವಿವಿಧ ದಿಸೆಗಳಿಂದ ಕಡಿತಗೊಳಿಸುತ್ತ ಬರುತ್ತಿರುವುದು ಇವರು ಕಾಣುವುದಿಲ್ಲವೇ? ಹೀಗಿರುವಾಗ ಇವರು ಮೇಲುಗೈ ಸಾಧಿಸುವರೇ?
Verse 45
قُلْ إِنَّمَآ أُنذِرُكُم بِٱلْوَحْىِ ۚ وَلَا يَسْمَعُ ٱلصُّمُّ ٱلدُّعَآءَ إِذَا مَا يُنذَرُونَ
Transliteration qul innamā undhirukum bil-waḥyi walā yasmaʿu l-ṣumu l-duʿāa idhā mā yundharūna
Kannada ನಾನಂತು ಅಲ್ಲಾಹನ ಸಂದೇಶದ ಆಧಾರದಲ್ಲೇ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆಂದು ಇವರೊಡನೆ ಹೇಳಿರಿ. ಆದರೆ ಕಿವುಡರಿಗೆ ಎಷ್ಟು ಎಚ್ಚರಿಸಿದರೂ ಅವರು ಕರೆಯನ್ನು ಕೇಳುವುದಿಲ್ಲ.
Verse 46
وَلَئِن مَّسَّتْهُمْ نَفْحَةٌ مِّنْ عَذَابِ رَبِّكَ لَيَقُولُنَّ يَـٰوَيْلَنَآ إِنَّا كُنَّا ظَـٰلِمِينَ
Transliteration wala-in massathum nafḥatun min ʿadhābi rabbika layaqūlunna yāwaylanā innā kunnā ẓālimīna
Kannada ನಿನ್ನ ಪ್ರಭುವಿನ ಶಿಕ್ಷೆಯಿಂದ ಇವರಿಗೆ ಕಿಂಚಿತ್ತಾದರೂ ಸೋಂಕಿ ಬಿಟ್ಟರೆ. “ಅಯ್ಯೋ ನಮ್ಮ ನಾಶವೇ! ನಿಜಕ್ಕೂ ನಾವು ಅಪರಾಧಿಗಳೇ ಆಗಿದ್ದೆವು” ಎಂದು ಖಂಡಿತ ಹೇಳುವರು.
Verse 47
وَنَضَعُ ٱلْمَوَٰزِينَ ٱلْقِسْطَ لِيَوْمِ ٱلْقِيَـٰمَةِ فَلَا تُظْلَمُ نَفْسٌ شَيْـًٔا ۖ وَإِن كَانَ مِثْقَالَ حَبَّةٍ مِّنْ خَرْدَلٍ أَتَيْنَا بِهَا ۗ وَكَفَىٰ بِنَا حَـٰسِبِينَ
Transliteration wanaḍaʿu l-mawāzīna l-qis'ṭa liyawmi l-qiyāmati falā tuẓ'lamu nafsun shayan wa-in kāna mith'qāla ḥabbatin min khardalin ataynā bihā wakafā binā ḥāsibīna
Kannada ಪುನರುತ್ಥಾನ ದಿನ ನಾವು ನಿಖರವಾಗಿ ತೂಗುವ ನ್ಯಾಯ ತಕ್ಕಡಿಯನ್ನಿಟ್ಟು ಬಿಡುವೆವು. ಆಗ ಯಾರ ಮೇಲೂ ಸ್ವಲ್ಪವೂ ಅಕ್ರಮವಾಗದು. ಮನುಷ್ಯನ ಕರ್ಮವು ಸಾಸಿವೆ ಕಾಳಿನಷ್ಟಾಗಿದ್ದರೂ ನಾವು ಅದನ್ನು ಮುಂದೆ ತರುವೆವು . ಲೆಕ್ಕ ಪರಿಶೋಧಕರಾಗಿ ನಾವೇ ಸಾಕು.
Verse 48
وَلَقَدْ ءَاتَيْنَا مُوسَىٰ وَهَـٰرُونَ ٱلْفُرْقَانَ وَضِيَآءً وَذِكْرًا لِّلْمُتَّقِينَ
Transliteration walaqad ātaynā mūsā wahārūna l-fur'qāna waḍiyāan wadhik'ran lil'muttaqīna
Kannada ಈ ಮುಂಚೆ ಮೂಸಾ ಮತ್ತು ಹಾರೂನರಿಗೆ ಸತ್ಯ-ಅಸತ್ಯಗಳ ವಿವೇಚನೆ ಹಾಗೂ ಬೆಳಕನ್ನೂ ಧರ್ಮನಿಷ್ಠರಿಗಿರುವ ಉದ್ಬೋಧನೆಯನ್ನೂ ನಾವು ನೀಡಿದ್ದೇವೆ.
Verse 49
ٱلَّذِينَ يَخْشَوْنَ رَبَّهُم بِٱلْغَيْبِ وَهُم مِّنَ ٱلسَّاعَةِ مُشْفِقُونَ
Transliteration alladhīna yakhshawna rabbahum bil-ghaybi wahum mina l-sāʿati mush'fiqūna
Kannada ತಮ್ಮ ಪ್ರಭುವನ್ನು ಅದೃಶ್ಯದಲ್ಲಿ ಭಯಪಡುವ ಹಾಗೂ (ವಿಚಾರಣೆಯ) ಆ ಘಳಿಗೆಯ ಬಗ್ಗೆ ಸದಾ ಭೀತರಾಗಿರುವ (ಧರ್ಮನಿಷ್ಟರಿಗಾಗಿ).
Verse 50
وَهَـٰذَا ذِكْرٌ مُّبَارَكٌ أَنزَلْنَـٰهُ ۚ أَفَأَنتُمْ لَهُۥ مُنكِرُونَ
Transliteration wahādhā dhik'run mubārakun anzalnāhu afa-antum lahu munkirūna
Kannada ಇದು (ಖುರ್‍ಆನ್) ನಾವು ಅವತೀರ್ಣಗೊಳಿಸಿದ ಅನುಗ್ರಹೀತ ಉದ್ಬೋಧೆಯಾಗಿದೆ. ನೀವೇನು ಇದನ್ನು ನಿರಾಕರಿಸುವಿರಾ?
Verse 51
۞ وَلَقَدْ ءَاتَيْنَآ إِبْرَٰهِيمَ رُشْدَهُۥ مِن قَبْلُ وَكُنَّا بِهِۦ عَـٰلِمِينَ
Transliteration walaqad ātaynā ib'rāhīma rush'dahu min qablu wakunnā bihi ʿālimīna
Kannada ಅದಕ್ಕಿಂತಲೂ ಮುಂಚೆ ನಾವು ಇಬ್‍ರಾಹೀಮ ರಿಗೆ ಅವರ ಸನ್ಮಾರ್ಗವನ್ನು ದಯಪಾಲಿಸಿದ್ದೆವು ಮತ್ತು ನಾವು ಅವರನ್ನು ಚೆನ್ನಾಗಿ ಅರಿತಿದ್ದೆವು.
Verse 52
إِذْ قَالَ لِأَبِيهِ وَقَوْمِهِۦ مَا هَـٰذِهِ ٱلتَّمَاثِيلُ ٱلَّتِىٓ أَنتُمْ لَهَا عَـٰكِفُونَ
Transliteration idh qāla li-abīhi waqawmihi mā hādhihi l-tamāthīlu allatī antum lahā ʿākifūna
Kannada ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗ ದೊಡನೆ, “ನೀವು ಭಜನೆ ಕೂರುತ್ತಿರುವ ಈ ವಿಗ್ರಹಗಳು ಎಂತಹವು?” ಎಂದು ಕೇಳಿದ್ದ ಸಂದರ್ಭವನ್ನು ಸ್ಮರಿಸಿರಿ.
Verse 53
قَالُوا۟ وَجَدْنَآ ءَابَآءَنَا لَهَا عَـٰبِدِينَ
Transliteration qālū wajadnā ābāanā lahā ʿābidīna
Kannada ಆಗ ಅವರು, ‘`ನಮ್ಮ ಪೂರ್ವಜರು ಇವುಗಳನ್ನು ಪೂಜಿಸುತ್ತಿರುವುದನ್ನು ನಾವು ಕಂಡಿದ್ದೇವೆ” ಎಂದು ಉತ್ತರಕೊಟ್ಟರು.
Verse 54
قَالَ لَقَدْ كُنتُمْ أَنتُمْ وَءَابَآؤُكُمْ فِى ضَلَـٰلٍ مُّبِينٍ
Transliteration qāla laqad kuntum antum waābāukum fī ḍalālin mubīnin
Kannada ಇವರು, “ನೀವೂ ನಿಮ್ಮ ಪೂರ್ವಜರೂ ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ” ಎಂದಾಗ
Verse 55
قَالُوٓا۟ أَجِئْتَنَا بِٱلْحَقِّ أَمْ أَنتَ مِنَ ٱللَّـٰعِبِينَ
Transliteration qālū aji'tanā bil-ḥaqi am anta mina l-lāʿibīna
Kannada ಅವರು, “ನೀನೊಂದು ಸತ್ಯ ವಿಚಾರವನ್ನು ತಂದಿದ್ದೀಯಾ? ಅಥವಾ ಸುಮ್ಮನೆ ಮೋಜು ಮಾಡುತ್ತಿರುವೆಯಾ ?” ಎಂದು ಕೇಳಿದರು.
Verse 56
قَالَ بَل رَّبُّكُمْ رَبُّ ٱلسَّمَـٰوَٰتِ وَٱلْأَرْضِ ٱلَّذِى فَطَرَهُنَّ وَأَنَا۠ عَلَىٰ ذَٰلِكُم مِّنَ ٱلشَّـٰهِدِينَ
Transliteration qāla bal rabbukum rabbu l-samāwāti wal-arḍi alladhī faṭarahunna wa-anā ʿalā dhālikum mina l-shāhidīna
Kannada ಆಗ ಇವರು, “ಸುಮ್ಮನೆಯಲ್ಲ, ವಾಸ್ತವದಲ್ಲಿ ಭೂಮಿ-ಆಕಾಶಗಳನ್ನು ಸೃಷ್ಟಿಸಿದ ಪ್ರಭುವೇ ನಿಮ್ಮ ಪ್ರಭುವಾಗಿರುವನು. ಈ ಬಗೆಗೆ ನಾನು ನಿಮ್ಮ ಮುಂದೆ ಸಾಕ್ಷ್ಯ ವಹಿಸುತ್ತೇನೆ.
Verse 57
وَتَٱللَّهِ لَأَكِيدَنَّ أَصْنَـٰمَكُم بَعْدَ أَن تُوَلُّوا۟ مُدْبِرِينَ
Transliteration watal-lahi la-akīdanna aṣnāmakum baʿda an tuwallū mud'birīna
Kannada ಅಲ್ಲಾಹನಾಣೆ, ನೀವು ಹಿಂತಿರುಗಿ ಹೋದ ನಂತರ ನಾನು ಖಂಡಿತವಾಗಿಯೂ ನಿಮ್ಮ ವಿಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುವೆನು” ಎಂದರು.
Verse 58
فَجَعَلَهُمْ جُذَٰذًا إِلَّا كَبِيرًا لَّهُمْ لَعَلَّهُمْ إِلَيْهِ يَرْجِعُونَ
Transliteration fajaʿalahum judhādhan illā kabīran lahum laʿallahum ilayhi yarjiʿūna
Kannada ಆ ಪ್ರಕಾರ ಇವರು ಅವರನ್ನು (ವಿಗ್ರಹಗಳನ್ನು) ತುಂಡು ತುಂಡಾಗಿ ಮುರಿದು ಹಾಕಿದರು ಮತ್ತು ಅದರ ಕಡೆಗೆ ಅವರು ಮರಳಿ ಬರಲೆಂದು ಅವರಲ್ಲಿ ದೊಡ್ಡ ವಿಗ್ರಹವನ್ನು ಬಿಟ್ಟುಬಿಟ್ಟರು .
Verse 59
قَالُوا۟ مَن فَعَلَ هَـٰذَا بِـَٔالِهَتِنَآ إِنَّهُۥ لَمِنَ ٱلظَّـٰلِمِينَ
Transliteration qālū man faʿala hādhā biālihatinā innahu lamina l-ẓālimīna
Kannada ಅವರು “ನಮ್ಮ ದೇವರುಗಳಿಗೆ ಈ ಗತಿ ಮಾಡಿ ದವನಾರು? ಅವನೊಬ್ಬ ಮಹಾ ಅಕ್ರಮಿಯಾಗಿರುವನು” ಎಂದರು.
Verse 60
قَالُوا۟ سَمِعْنَا فَتًى يَذْكُرُهُمْ يُقَالُ لَهُۥٓ إِبْرَٰهِيمُ
Transliteration qālū samiʿ'nā fatan yadhkuruhum yuqālu lahu ib'rāhīmu
Kannada ಕೆಲವರು ಹೀಗೆ ಹೇಳಿದರು; “ಇಬ್‍ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವರ ಬಗ್ಗೆ ಹೀಗಳೆಯುತ್ತಿದ್ದುದನ್ನು ನಾವು ಕೇಳಿದ್ದೇವೆ’’.
Verse 61
قَالُوا۟ فَأْتُوا۟ بِهِۦ عَلَىٰٓ أَعْيُنِ ٱلنَّاسِ لَعَلَّهُمْ يَشْهَدُونَ
Transliteration qālū fatū bihi ʿalā aʿyuni l-nāsi laʿallahum yashhadūna
Kannada ಆಗ ಅವರು, “ಹಾಗಾದರೆ ಅವನನ್ನು ಹಿಡಿದು ಜನರೆದುರು ಕರೆತನ್ನಿ. ಅವರು ಸಾಕ್ಷಿ ಹೇಳುವವ ರಾಗಲಿ” ಎಂದರು.
Verse 62
قَالُوٓا۟ ءَأَنتَ فَعَلْتَ هَـٰذَا بِـَٔالِهَتِنَا يَـٰٓإِبْرَٰهِيمُ
Transliteration qālū a-anta faʿalta hādhā biālihatinā yāib'rāhīmu
Kannada “ಓ ಇಬ್ರಾಹೀಮ್! ನಮ್ಮ ದೇವರುಗಳನ್ನು ಹೀಗೆ ಮಾಡಿರುವುದು ನೀನೋ?” ಎಂದು ಕೇಳಿದರು.
Verse 63
قَالَ بَلْ فَعَلَهُۥ كَبِيرُهُمْ هَـٰذَا فَسْـَٔلُوهُمْ إِن كَانُوا۟ يَنطِقُونَ
Transliteration qāla bal faʿalahu kabīruhum hādhā fasalūhum in kānū yanṭiqūna
Kannada ಅವರು “ಅಲ್ಲ, ಅದನ್ನು ಅವರ ಈ ಹಿರಿಯನು ಮಾಡಿರುತ್ತಾನೆ. ಅವರು ಮಾತಾಡುವುದಿದ್ದರೆ ಅವರನ್ನೇ ಕೇಳಿಕೊಳ್ಳಿರಿ” ಎಂದರು.
Verse 64
فَرَجَعُوٓا۟ إِلَىٰٓ أَنفُسِهِمْ فَقَالُوٓا۟ إِنَّكُمْ أَنتُمُ ٱلظَّـٰلِمُونَ
Transliteration farajaʿū ilā anfusihim faqālū innakum antumu l-ẓālimūna
Kannada ಆಗ ಅವರು ತಮ್ಮ ಅಂತಃಕರಣದ ಕಡೆಗೆ ಮರ ಳಿದರು. ಆಮೇಲೆ ತಮ್ಮೊಳಗೆ “ನಿಜಕ್ಕೂ ನೀವೇ ಅಕ್ರಮಿಗಳು” ಎಂದರು.
Verse 65
ثُمَّ نُكِسُوا۟ عَلَىٰ رُءُوسِهِمْ لَقَدْ عَلِمْتَ مَا هَـٰٓؤُلَآءِ يَنطِقُونَ
Transliteration thumma nukisū ʿalā ruūsihim laqad ʿalim'ta mā hāulāi yanṭiqūna
Kannada ನಂತರ ಅವರನ್ನು ಪೂರ್ವಸ್ಥಿತಿಗೆ ಮರಳಿಸಲಾಯಿತು. “ಇವರು ಮಾತನಾಡುವುದಿಲ್ಲ ವೆಂದು ನಿನಗೆ ಗೊತ್ತಿದೆ.” ಎಂದರು.
Verse 66
قَالَ أَفَتَعْبُدُونَ مِن دُونِ ٱللَّهِ مَا لَا يَنفَعُكُمْ شَيْـًٔا وَلَا يَضُرُّكُمْ
Transliteration qāla afataʿbudūna min dūni l-lahi mā lā yanfaʿukum shayan walā yaḍurrukum
Kannada ಆಗ ಇಬ್‍ರಾಹೀಮ್, “ಹಾಗಾದರೆ ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಉಪಕಾರ ಮಾಡದ ಹಾಗೂ ಉಪದ್ರವಿಸದ ವಸ್ತುಗಳನ್ನು ಪೂಜಿಸುತ್ತಿರುವಿರಲ್ಲ?
Verse 67
أُفٍّ لَّكُمْ وَلِمَا تَعْبُدُونَ مِن دُونِ ٱللَّهِ ۖ أَفَلَا تَعْقِلُونَ
Transliteration uffin lakum walimā taʿbudūna min dūni l-lahi afalā taʿqilūna
Kannada ಛೇ, ನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುತ್ತಿರುವ ನಿಮ್ಮ ಆರಾದ್ಯ ವಸ್ತುಗಳಿಗೆ ಧಿಕ್ಕಾರವಿರಲಿ. ನೀವೇನು ಯೋಚಿ ಸುವುದಿಲ್ಲವೇ?”ಎಂದರು.
Verse 68
قَالُوا۟ حَرِّقُوهُ وَٱنصُرُوٓا۟ ءَالِهَتَكُمْ إِن كُنتُمْ فَـٰعِلِينَ
Transliteration qālū ḥarriqūhu wa-unṣurū ālihatakum in kuntum fāʿilīna
Kannada ಆಗ ಅವರು “ಈತನ ಮೇಲೆ ನೀವು ಯಾವುದೇ ಕ್ರಮ ಕೈಗೊಳ್ಳುವುದಾದರೆ, ಇವನನ್ನು ಸುಟ್ಟುಹಾಕಿರಿ. ನಿಮ್ಮ ದೇವರುಗಳಿಗೆ ನೆರವಾಗಿರಿ” ಎಂದರು .
Verse 69
قُلْنَا يَـٰنَارُ كُونِى بَرْدًا وَسَلَـٰمًا عَلَىٰٓ إِبْرَٰهِيمَ
Transliteration qul'nā yānāru kūnī bardan wasalāman ʿalā ib'rāhīma
Kannada ನಾವು ಹೇಳಿದೆವು; “ಓ ಅಗ್ನಿಯೇ, ಇಬ್‍ರಾ ಹೀಮ್‍ರ ಪಾಲಿಗೆ ತಣ್ಣಗಾಗು, ಸುರಕ್ಷೆಯಾಗು”.
Verse 70
وَأَرَادُوا۟ بِهِۦ كَيْدًا فَجَعَلْنَـٰهُمُ ٱلْأَخْسَرِينَ
Transliteration wa-arādū bihi kaydan fajaʿalnāhumu l-akhsarīna
Kannada ಅವರು ಇಬ್‍ರಾಹೀಮರಿಗೆ ಕೇಡು ಮಾಡಲು ಬಯಸಿದ್ದರು. ಆದರೆ ಅವರನ್ನು ಅತ್ಯಂತ ನಷ್ಟ ವಂತರನ್ನಾಗಿ ನಾವು ಮಾಡಿದೆವು.
Verse 71
وَنَجَّيْنَـٰهُ وَلُوطًا إِلَى ٱلْأَرْضِ ٱلَّتِى بَـٰرَكْنَا فِيهَا لِلْعَـٰلَمِينَ
Transliteration wanajjaynāhu walūṭan ilā l-arḍi allatī bāraknā fīhā lil'ʿālamīna
Kannada ಅವರನ್ನೂ ಲೂಥರನ್ನೂ ಲೋಕವಾಸಿಗಳಿಗೆ ನಾವು ಸಮೃದ್ಧಿಯನ್ನಿರಿಸಿದ ಪ್ರದೇಶಕ್ಕೆ ಕಳುಹಿಸಿ ನಾವು ರಕ್ಷಿಸಿದೆವು.
Verse 72
وَوَهَبْنَا لَهُۥٓ إِسْحَـٰقَ وَيَعْقُوبَ نَافِلَةً ۖ وَكُلًّا جَعَلْنَا صَـٰلِحِينَ
Transliteration wawahabnā lahu is'ḥāqa wayaʿqūba nāfilatan wakullan jaʿalnā ṣāliḥīna
Kannada ಅವರಿಗೆ ನಾವು ಇಸ್‍ಹಾಖರನ್ನು, ಹೆಚ್ಚುವರಿಯಾಗಿ ಯಅïಖೂಬರನ್ನೂ ದಾನ ನೀಡಿದೆವು ಮತ್ತು ಅವರನ್ನೆಲ್ಲ ಸಜ್ಜನರಾಗಿ ಮಾಡಿದೆವು.
Verse 73
وَجَعَلْنَـٰهُمْ أَئِمَّةً يَهْدُونَ بِأَمْرِنَا وَأَوْحَيْنَآ إِلَيْهِمْ فِعْلَ ٱلْخَيْرَٰتِ وَإِقَامَ ٱلصَّلَوٰةِ وَإِيتَآءَ ٱلزَّكَوٰةِ ۖ وَكَانُوا۟ لَنَا عَـٰبِدِينَ
Transliteration wajaʿalnāhum a-immatan yahdūna bi-amrinā wa-awḥaynā ilayhim fiʿ'la l-khayrāti wa-iqāma l-ṣalati waītāa l-zakati wakānū lanā ʿābidīna
Kannada ಅವರನ್ನು ನಾವು ನಮ್ಮ ಅಪ್ಪಣೆಯಂತೆ ಮಾರ್ಗ ದರ್ಶನ ನೀಡುವ ನಾಯಕರನ್ನಾಗಿ ಮಾಡಿದೆವು. ಸತ್ಕರ್ಮವೆಸಗಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ಅವರಿಗೆ ನಾವು ಸಂದೇಶ ನೀಡಿದೆವು. ಅವರು ನಮ್ಮ ಉಪಾಸಕರಾಗಿದ್ದರು.
Verse 74
وَلُوطًا ءَاتَيْنَـٰهُ حُكْمًا وَعِلْمًا وَنَجَّيْنَـٰهُ مِنَ ٱلْقَرْيَةِ ٱلَّتِى كَانَت تَّعْمَلُ ٱلْخَبَـٰٓئِثَ ۗ إِنَّهُمْ كَانُوا۟ قَوْمَ سَوْءٍ فَـٰسِقِينَ
Transliteration walūṭan ātaynāhu ḥuk'man waʿil'man wanajjaynāhu mina l-qaryati allatī kānat taʿmalu l-khabāitha innahum kānū qawma sawin fāsiqīna
Kannada ಲೂಥರಿಗೆ ನಾವು ನ್ಯಾಯವಿಧಿ ಮತ್ತು ಜ್ಞಾನವನ್ನು ದಯಪಾಲಿಸಿದೆವು. ಅವರನ್ನು ಕೆಟ್ಟ ಕೆಲಸ ಮಾಡುತ್ತಿದ್ದ ಆ ನಾಡಿನಿಂದ ಪಾರು ಮಾಡಿದೆವು. ವಾಸ್ತವದಲ್ಲಿ ಅವರು ಅತ್ಯಂತ ದುಷ್ಟರಾದ ದುರ್ವೃತ್ತ ಜನಾಂಗವಾಗಿದ್ದರು.
Verse 75
وَأَدْخَلْنَـٰهُ فِى رَحْمَتِنَآ ۖ إِنَّهُۥ مِنَ ٱلصَّـٰلِحِينَ
Transliteration wa-adkhalnāhu fī raḥmatinā innahu mina l-ṣāliḥīna
Kannada ಲೂಥರನ್ನು ನಾವು ನಮ್ಮ ಕೃಪೆಯಲ್ಲಿ ಪ್ರವೇಶ ಗೊಳಿಸಿದೆವು. ಅವರು ಸಜ್ಜನರಲ್ಲಾಗಿದ್ದರು.
Verse 76
وَنُوحًا إِذْ نَادَىٰ مِن قَبْلُ فَٱسْتَجَبْنَا لَهُۥ فَنَجَّيْنَـٰهُ وَأَهْلَهُۥ مِنَ ٱلْكَرْبِ ٱلْعَظِيمِ
Transliteration wanūḥan idh nādā min qablu fa-is'tajabnā lahu fanajjaynāhu wa-ahlahu mina l-karbi l-ʿaẓīmi
Kannada ನೂಹರನ್ನು ಸ್ಮರಿಸಿರಿ. ಮುಂಚೆ ಅವರು ಕೂಗಿ ಪ್ರಾರ್ಥಿಸಿದ ಸಂದರ್ಭ. ನಾವು ಅವರಿಗೆ ಉತ್ತರಿಸಿ ದೆವು. ಅವರನ್ನೂ ಅವರ ಮನೆಯವರನ್ನೂ ಮಹಾ ಸಂಕಷ್ಟದಿಂದ ಪಾರುಗೊಳಿಸಿದೆವು.
Verse 77
وَنَصَرْنَـٰهُ مِنَ ٱلْقَوْمِ ٱلَّذِينَ كَذَّبُوا۟ بِـَٔايَـٰتِنَآ ۚ إِنَّهُمْ كَانُوا۟ قَوْمَ سَوْءٍ فَأَغْرَقْنَـٰهُمْ أَجْمَعِينَ
Transliteration wanaṣarnāhu mina l-qawmi alladhīna kadhabū biāyātinā innahum kānū qawma sawin fa-aghraqnāhum ajmaʿīna
Kannada ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದ ಜನಾಂಗದಿಂದ ಅವರನ್ನು ಪಾರುಗೊಳಿಸಿ ಸಹಾಯ ಮಾಡಿದೆವು. ಅವರು ಬಹಳ ಕೆಟ್ಟ ಜನಾಂಗವಾಗಿದ್ದರು. ಆದುದರಿಂದ ನಾವು ಅವೆರಲ್ಲರನ್ನೂ ಮುಳುಗಿಸಿ ಕೊಂದೆವು.
Verse 78
وَدَاوُۥدَ وَسُلَيْمَـٰنَ إِذْ يَحْكُمَانِ فِى ٱلْحَرْثِ إِذْ نَفَشَتْ فِيهِ غَنَمُ ٱلْقَوْمِ وَكُنَّا لِحُكْمِهِمْ شَـٰهِدِينَ
Transliteration wadāwūda wasulaymāna idh yaḥkumāni fī l-ḥarthi idh nafashat fīhi ghanamu l-qawmi wakunnā liḥuk'mihim shāhidīna
Kannada ದಾವೂದ್ ಮತ್ತು ಸುಲೈಮಾನರನ್ನು ಸ್ಮರಿಸಿರಿ. ರಾತ್ರಿ ವೇಳೆ ಒಂದು ಜನಾಂಗದ ಆಡುಗಳು ಮೇಯ್ದು ಕೃಷಿ ನಾಶ ಮಾಡಿದ ಒಂದು ಹೊಲದ ಮೊಕದ್ದಮೆಯಲ್ಲಿ (ಅವರಿಬ್ಬರೂ) ತೀರ್ಪು ನೀಡುತ್ತಿದ್ದ ಸಂದರ್ಭ. ಅವರ ನ್ಯಾಯ ತೀರ್ಮಾನಕ್ಕೆ ನಾವು ಸಾಕ್ಷ್ಯ ವಹಿಸುತ್ತಿದ್ದೆವು.
Verse 79
فَفَهَّمْنَـٰهَا سُلَيْمَـٰنَ ۚ وَكُلًّا ءَاتَيْنَا حُكْمًا وَعِلْمًا ۚ وَسَخَّرْنَا مَعَ دَاوُۥدَ ٱلْجِبَالَ يُسَبِّحْنَ وَٱلطَّيْرَ ۚ وَكُنَّا فَـٰعِلِينَ
Transliteration fafahhamnāhā sulaymāna wakullan ātaynā ḥuk'man waʿil'man wasakharnā maʿa dāwūda l-jibāla yusabbiḥ'na wal-ṭayra wakunnā fāʿilīna
Kannada ಅದರ ಕುರಿತಾಗಿ ಸುಲೈಮಾನರಿಗೆ ನಾವು ಮನವರಿಕೆ ಮಾಡಿಕೊಟ್ಟೆವು. ನ್ಯಾಯ ವಿಧಿ ಮತ್ತು ಜ್ಞಾನವನ್ನು ನಾವು ಇಬ್ಬರಿಗೂ ದಯ ಪಾಲಿಸಿದ್ದೆವು. ನಾವು ದಾವೂದರ ಜೊತೆಗೆ ಅಲ್ಲಾಹನ ಪಾವಿತ್ರ್ಯವನ್ನು ಕೊಂಡಾಡುವ ಸ್ಥಿತಿಯಲ್ಲಿ ಪರ್ವತಗಳನ್ನೂ ಪಕ್ಷಿಗಳನ್ನೂ ಅಧೀನಗೊಳಿಸಿಕೊಟ್ಟೆವು, ಇದನ್ನು ಮಾಡಿದವರು ನಾವೇ ಆಗಿದ್ದೆವು.
Verse 80
وَعَلَّمْنَـٰهُ صَنْعَةَ لَبُوسٍ لَّكُمْ لِتُحْصِنَكُم مِّنۢ بَأْسِكُمْ ۖ فَهَلْ أَنتُمْ شَـٰكِرُونَ
Transliteration waʿallamnāhu ṣanʿata labūsin lakum lituḥ'ṣinakum min basikum fahal antum shākirūna
Kannada ನೀವು ಎದುರಿಸುವ ಯುದ್ಧದ ವಿಪತ್ತುಗಳಿಂದ ನಿಮ್ಮನ್ನು ರಕ್ಷಿಸಲಿಕ್ಕಾಗಿ ಬಳಸುವ ಎದೆಗವಚದ ನಿರ್ಮಾಣವನ್ನು ನಾವು ಅವರಿಗೆ ಕಲಿಸಿದ್ದೆವು . ಹೀಗಿರುವಾಗ ನೀವು ಕೃತಜ್ಞರಾಗುವಿರಾ?
Verse 81
وَلِسُلَيْمَـٰنَ ٱلرِّيحَ عَاصِفَةً تَجْرِى بِأَمْرِهِۦٓ إِلَى ٱلْأَرْضِ ٱلَّتِى بَـٰرَكْنَا فِيهَا ۚ وَكُنَّا بِكُلِّ شَىْءٍ عَـٰلِمِينَ
Transliteration walisulaymāna l-rīḥa ʿāṣifatan tajrī bi-amrihi ilā l-arḍi allatī bāraknā fīhā wakunnā bikulli shayin ʿālimīna
Kannada ನಾವು ಸುಲೈಮಾನರಿಗೆ ಬಲವಾಗಿ ಬೀಸುವ ಗಾಳಿಯನ್ನು ಅಧೀನಗೊಳಿಸಿಕೊಟ್ಟೆವು. ನಾವು ಅನುಗ್ರಹಿಸಿದ ಪ್ರದೇಶಕ್ಕೆ ಅದು ಅವರ ಅಪ್ಪಣೆ ಪ್ರಕಾರ ಚಲಿಸುತ್ತಿತ್ತು. ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿರುತ್ತೇವೆ.
Verse 82
وَمِنَ ٱلشَّيَـٰطِينِ مَن يَغُوصُونَ لَهُۥ وَيَعْمَلُونَ عَمَلًا دُونَ ذَٰلِكَ ۖ وَكُنَّا لَهُمْ حَـٰفِظِينَ
Transliteration wamina l-shayāṭīni man yaghūṣūna lahu wayaʿmalūna ʿamalan dūna dhālika wakunnā lahum ḥāfiẓīna
Kannada ಶೈತಾನರ ಪೈಕಿ ಅವರಿಗಾಗಿ ಮುಳುಗೇಳುವ ಕೆಲವರನ್ನು ನಾವು ಅವರ ನಿಯಂತ್ರಣಕ್ಕೆ ತಂದು ಕೊಟ್ಟಿದ್ದೆವು. ಇದಕ್ಕೆ ಹೊರತಾಗಿ ಇತರ ಕೆಲಸಗಳನ್ನೂ ಅವರು ಮಾಡುತ್ತಿದ್ದರು. ಇವರೆಲ್ಲರ ಸಂರಕ್ಷಕರು ನಾವೇ ಆಗಿದ್ದೆವು .
Verse 83
۞ وَأَيُّوبَ إِذْ نَادَىٰ رَبَّهُۥٓ أَنِّى مَسَّنِىَ ٱلضُّرُّ وَأَنتَ أَرْحَمُ ٱلرَّٰحِمِينَ
Transliteration wa-ayyūba idh nādā rabbahu annī massaniya l-ḍuru wa-anta arḥamu l-rāḥimīna
Kannada ಅಯ್ಯೂಬರನ್ನು ಸ್ಮರಿಸಿರಿ. ಅವರು, “ನನಗೆ ರೋಗ ಹಿಡಿದಿದೆ, ನೀನು ಕರುಣಾಳುಗಳಲ್ಲಿ ಅತ್ಯಂತ ಕರುಣಾಳು ಆಗಿರುವಿ” ಎಂದು ತಮ್ಮ ಪ್ರಭುವನ್ನು ಕೂಗಿ ಕರೆದ ಸಂದರ್ಭ .
Verse 84
فَٱسْتَجَبْنَا لَهُۥ فَكَشَفْنَا مَا بِهِۦ مِن ضُرٍّ ۖ وَءَاتَيْنَـٰهُ أَهْلَهُۥ وَمِثْلَهُم مَّعَهُمْ رَحْمَةً مِّنْ عِندِنَا وَذِكْرَىٰ لِلْعَـٰبِدِينَ
Transliteration fa-is'tajabnā lahu fakashafnā mā bihi min ḍurrin waātaynāhu ahlahu wamith'lahum maʿahum raḥmatan min ʿindinā wadhik'rā lil'ʿābidīna
Kannada ಆಗ ನಾವು ಅವರಿಗೆ ಉತ್ತರಕೊಟ್ಟೆವು. ಅವರಿಗೆ ಬಾಧಿಸಿದ ಸಂಕಷ್ಟವನ್ನು ದೂರೀಕರಿಸಿದೆವು. ಅವರಿಗೆ ಸ್ವಂತ ಮನೆಯವರನ್ನೂ ಅವರೊಂದಿಗೆ ಅಷ್ಟೇ ಮಂದಿ ಬೇರೆಯವರನ್ನೂ ಕೊಟ್ಟೆವು. ನಮ್ಮ ಬಳಿಯಿಂದ ವಿಶೇಷ ಕಾರುಣ್ಯವೂ ಆರಾಧಕರಿಗೆ ಒಂದು ಸ್ಮರಣೆಯೂ ಆಗಲೆಂದು.
Verse 85
وَإِسْمَـٰعِيلَ وَإِدْرِيسَ وَذَا ٱلْكِفْلِ ۖ كُلٌّ مِّنَ ٱلصَّـٰبِرِينَ
Transliteration wa-is'māʿīla wa-id'rīsa wadhā l-kif'li kullun mina l-ṣābirīna
Kannada ಇಸ್ಮಾಈಲ್, ಇದ್ರೀಸ್ ಮತ್ತು ದ್ಸುಲ್‍ಕಿಫ್ಲ್‍ರನ್ನೂ ಸ್ಮರಿಸಿರಿ. ಇವರೆಲ್ಲರೂ ಸಹನಶೀಲರಾಗಿದ್ದರು.
Verse 86
وَأَدْخَلْنَـٰهُمْ فِى رَحْمَتِنَآ ۖ إِنَّهُم مِّنَ ٱلصَّـٰلِحِينَ
Transliteration wa-adkhalnāhum fī raḥmatinā innahum mina l-ṣāliḥīna
Kannada ಇವರನ್ನು ನಾವು ನಮ್ಮ ಕೃಪೆಯಲ್ಲಿ ಸೇರಿಸಿಕೊಂಡೆವು. ಖಂಡಿತ ಅವರು ಸಜ್ಜನರಲ್ಲಾಗಿದ್ದರು.
Verse 87
وَذَا ٱلنُّونِ إِذ ذَّهَبَ مُغَـٰضِبًا فَظَنَّ أَن لَّن نَّقْدِرَ عَلَيْهِ فَنَادَىٰ فِى ٱلظُّلُمَـٰتِ أَن لَّآ إِلَـٰهَ إِلَّآ أَنتَ سُبْحَـٰنَكَ إِنِّى كُنتُ مِنَ ٱلظَّـٰلِمِينَ
Transliteration wadhā l-nūni idh dhahaba mughāḍiban faẓanna an lan naqdira ʿalayhi fanādā fī l-ẓulumāti an lā ilāha illā anta sub'ḥānaka innī kuntu mina l-ẓālimīna
Kannada ಮತ್ಸ್ಯದವರನ್ನು (ಪ್ರವಾದಿ ಯೂನುಸ್) ಸ್ಮರಿಸಿರಿ. ಅವರು ಕೋಪಗೊಂಡು ಹೊರಟು ಹೋಗಿದ್ದ ಸಂದರ್ಭ. ಅವರನ್ನು ನಾವು ಇಕ್ಕಟ್ಟಿಗೆ ಸಿಲುಕಿಸಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರದೊಳಗಿಂದ ಕೂಗಿ ಪ್ರಾರ್ಥಿಸಿದರು, “(ಪ್ರಭು)-ನಿನ್ನ ಹೊರತು ಅನ್ಯ ಆರಾಧ್ಯನಿಲ್ಲ. ನೀನು ಪರಮ ಪಾವನನು. ನಿಶ್ಚಯ, ನಾನು ಅಕ್ರಮಿಗಳ ಗಣಕ್ಕೆ ಸೇರಿ ಹೋದೆ”.
Verse 88
فَٱسْتَجَبْنَا لَهُۥ وَنَجَّيْنَـٰهُ مِنَ ٱلْغَمِّ ۚ وَكَذَٰلِكَ نُـۨجِى ٱلْمُؤْمِنِينَ
Transliteration fa-is'tajabnā lahu wanajjaynāhu mina l-ghami wakadhālika nunjī l-mu'minīna
Kannada ಆಗ ನಾವು ಅವರಿಗೆ ಉತ್ತರ ಕೊಟ್ಟೆವು. ಅವರನ್ನು ದುಃಖದಿಂದ ಪಾರುಗೊಳಿಸಿದೆವು. ಇದೇ ರೀತಿ ನಾವು ಸತ್ಯವಿಶ್ವಾಸಿಗಳನ್ನು ರಕ್ಷಿಸಿಕೊಳ್ಳುತ್ತೇವೆ.
Verse 89
وَزَكَرِيَّآ إِذْ نَادَىٰ رَبَّهُۥ رَبِّ لَا تَذَرْنِى فَرْدًا وَأَنتَ خَيْرُ ٱلْوَٰرِثِينَ
Transliteration wazakariyyā idh nādā rabbahu rabbi lā tadharnī fardan wa-anta khayru l-wārithīna
Kannada `ಝಕರಿಯ್ಯಾರನ್ನು ಸ್ಮರಿಸಿರಿ. ಅವರು, ‘ನನ್ನ ಪ್ರಭೂ, ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡ ಬೇಡ. ವಾರೀಸುದಾರರ ಪೈಕಿ ನೀನೇ ಉತ್ತಮನಾಗಿರುವಿ’ ಎಂದು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭ.
Verse 90
فَٱسْتَجَبْنَا لَهُۥ وَوَهَبْنَا لَهُۥ يَحْيَىٰ وَأَصْلَحْنَا لَهُۥ زَوْجَهُۥٓ ۚ إِنَّهُمْ كَانُوا۟ يُسَـٰرِعُونَ فِى ٱلْخَيْرَٰتِ وَيَدْعُونَنَا رَغَبًا وَرَهَبًا ۖ وَكَانُوا۟ لَنَا خَـٰشِعِينَ
Transliteration fa-is'tajabnā lahu wawahabnā lahu yaḥyā wa-aṣlaḥnā lahu zawjahu innahum kānū yusāriʿūna fī l-khayrāti wayadʿūnanā raghaban warahaban wakānū lanā khāshiʿīna
Kannada ಆಗ ನಾವು ಅವರಿಗೆ ಉತ್ತರಿಸಿದೆವು. ಅವರಿಗೆ (ಪುತ್ರ) ಯಹ್ಯಾರನ್ನು ನೀಡಿದೆವು. ಅವರ ಪತ್ನಿಯನ್ನು ಗರ್ಭ ಧಾರಣೆಗೆ ಪ್ರಾಪ್ತಗೊಳಿಸಿದೆವು. ಇವರು (ಪ್ರವಾದಿ ಗಳು) ಪುಣ್ಯ ಕಾರ್ಯಗಳಲ್ಲಿ ಉತ್ಸುಕರಾಗಿದ್ದರು. ನಮ್ಮನ್ನು ಒಲವು ಹಾಗೂ ಭಯದೊಂದಿಗೆ ಪ್ರಾರ್ಥಿಸುತ್ತಿದ್ದರು. ನಮ್ಮ ಮುಂದೆ ಭಕ್ತಿಯಿಂದ ವಿನಯ ತೋರುತ್ತಿದ್ದರು
Verse 91
وَٱلَّتِىٓ أَحْصَنَتْ فَرْجَهَا فَنَفَخْنَا فِيهَا مِن رُّوحِنَا وَجَعَلْنَـٰهَا وَٱبْنَهَآ ءَايَةً لِّلْعَـٰلَمِينَ
Transliteration wa-allatī aḥṣanat farjahā fanafakhnā fīhā min rūḥinā wajaʿalnāhā wa-ib'nahā āyatan lil'ʿālamīna
Kannada ತನ್ನ ಗೌಪ್ಯವನ್ನು ಕಾಪಾಡಿದ ಆ ಸ್ತ್ರೀಯನ್ನು (ಮರ್ಯಮರನ್ನು) ಸ್ಮರಿಸಿರಿ. ನಮ್ಮ ಆತ್ಮದ (ಜಿಬ್ರೀಲ) ಮೂಲಕ ಅವಳಲ್ಲಿ ನಾವು ಊದಿದೆವು. ಅವಳನ್ನೂ ಅವಳ ಪುತ್ರನನ್ನೂ (ಈಸಾರನ್ನು) ಜಗತ್ತಿಗೆ ನಿದರ್ಶನವಾಗಿ ಮಾಡಿದೆವು.
Verse 92
إِنَّ هَـٰذِهِۦٓ أُمَّتُكُمْ أُمَّةً وَٰحِدَةً وَأَنَا۠ رَبُّكُمْ فَٱعْبُدُونِ
Transliteration inna hādhihi ummatukum ummatan wāḥidatan wa-anā rabbukum fa-uʿ'budūni
Kannada ಓ ಜನರೇ! ಇದು ನಿಮ್ಮ ಧರ್ಮ. ಏಕೈಕ ಧರ್ಮ. ನಾನು ನಿಮ್ಮ ಪ್ರಭುವಾಗಿದ್ದೇನೆ. ಆದುದರಿಂದ ನೀವು ನನಗೆ ಆರಾಧಿಸಿರಿ.
Verse 93
وَتَقَطَّعُوٓا۟ أَمْرَهُم بَيْنَهُمْ ۖ كُلٌّ إِلَيْنَا رَٰجِعُونَ
Transliteration wataqaṭṭaʿū amrahum baynahum kullun ilaynā rājiʿūna
Kannada ಆದರೆ ಅವರು ಪರಸ್ಪರ ತಮ್ಮ ಕಾರ್ಯವನ್ನು ಛಿನ್ನಭಿನ್ನ ಮಾಡಿದರು. ಎಲ್ಲರೂ ನಮ್ಮ ಕಡೆಗೇ ಮರಳುವವರು.
Verse 94
فَمَن يَعْمَلْ مِنَ ٱلصَّـٰلِحَـٰتِ وَهُوَ مُؤْمِنٌ فَلَا كُفْرَانَ لِسَعْيِهِۦ وَإِنَّا لَهُۥ كَـٰتِبُونَ
Transliteration faman yaʿmal mina l-ṣāliḥāti wahuwa mu'minun falā kuf'rāna lisaʿyihi wa-innā lahu kātibūna
Kannada ಆದ್ದರಿಂದ ಯಾರು ಸತ್ಯವಿಶ್ವಾಸಿಯಾಗಿದ್ದು ಕೊಂಡು ಸತ್ಕರ್ಮವೆಸಗುತ್ತಾರೋ ಅವನ ಪ್ರಯತ್ನ ಫಲವನ್ನು ನಿಷೇಧಿಸಲಾಗದು. ನಾವು ಅದನ್ನು ದಾಖಲಿಸುತ್ತಿದ್ದೇವೆ.
Verse 95
وَحَرَٰمٌ عَلَىٰ قَرْيَةٍ أَهْلَكْنَـٰهَآ أَنَّهُمْ لَا يَرْجِعُونَ
Transliteration waḥarāmun ʿalā qaryatin ahlaknāhā annahum lā yarjiʿūna
Kannada ನಾವು ನಾಶ ಮಾಡಿರುವ ಯಾವುದೇ ನಾಡಿನ ಜನರು ಪುನಃ ಮರಳಿ ಬರುವುದು ಸಾಧ್ಯವಿಲ್ಲ ಎಂಬುದು ಖಂಡಿತ .
Verse 96
حَتَّىٰٓ إِذَا فُتِحَتْ يَأْجُوجُ وَمَأْجُوجُ وَهُم مِّن كُلِّ حَدَبٍ يَنسِلُونَ
Transliteration ḥattā idhā futiḥat yajūju wamajūju wahum min kulli ḥadabin yansilūna
Kannada ಹಾಗೆ ಯಅïಜೂಜ, ಮಅïಜೂಜರು ಬಿಡು ಗಡೆ ಗೊಳಿಸಲ್ಪಡುವ ತನಕ - ಅವರು ಎಲ್ಲ ಎತ್ತರದ ಸ್ಥಳಗಳಿಂದ ನುಗ್ಗಿ ಬರುವರು.
Verse 97
وَٱقْتَرَبَ ٱلْوَعْدُ ٱلْحَقُّ فَإِذَا هِىَ شَـٰخِصَةٌ أَبْصَـٰرُ ٱلَّذِينَ كَفَرُوا۟ يَـٰوَيْلَنَا قَدْ كُنَّا فِى غَفْلَةٍ مِّنْ هَـٰذَا بَلْ كُنَّا ظَـٰلِمِينَ
Transliteration wa-iq'taraba l-waʿdu l-ḥaqu fa-idhā hiya shākhiṣatun abṣāru alladhīna kafarū yāwaylanā qad kunnā fī ghaflatin min hādhā bal kunnā ẓālimīna
Kannada ಸತ್ಯ ವಾಗ್ದಾನ ಸಮಯ ಸನ್ನಿಹಿತವಾದರೆ, ಸತ್ಯ ನಿಷೇಧಿಗಳ ತೆರೆದ ಕಣ್ಣುಗಳು ಮೇಲಕ್ಕೆ ದಿಟ್ಟಿಸಿ ನಿಲ್ಲುವುದು. ಅವರು ಹೇಳುವರು; “ಅಯ್ಯೋ, ನಮ್ಮ ನಾಶವೇ! ನಾವು ಇದರಿಂದ ಅಲಕ್ಷ್ಯರಾಗಿದ್ದೆವು. ಅಲ್ಲ, ನಿಜವಾಗಿ ನಾವು ಅಕ್ರಮಿಗಳಾಗಿದ್ದೆವು”.
Verse 98
إِنَّكُمْ وَمَا تَعْبُدُونَ مِن دُونِ ٱللَّهِ حَصَبُ جَهَنَّمَ أَنتُمْ لَهَا وَٰرِدُونَ
Transliteration innakum wamā taʿbudūna min dūni l-lahi ḥaṣabu jahannama antum lahā wāridūna
Kannada ಸತ್ಯ ನಿಷೇಧಿಗಳೇ, ನೀವು ಮತ್ತು ಅಲ್ಲಾಹ ನನ್ನು ಬಿಟ್ಟು ನೀವು ಪೂಜಿಸುವ ಆರಾಧ್ಯ ವಸ್ತುಗಳು ನರಕಾಗ್ನಿಯ ಇಂಧನಗಳು, ನೀವೂ ಅದಕ್ಕೆ ಸೇರಬೇಕಾದವರು.
Verse 99
لَوْ كَانَ هَـٰٓؤُلَآءِ ءَالِهَةً مَّا وَرَدُوهَا ۖ وَكُلٌّ فِيهَا خَـٰلِدُونَ
Transliteration law kāna hāulāi ālihatan mā waradūhā wakullun fīhā khālidūna
Kannada ಅವುಗಳು ನಿಜಕ್ಕೂ ದೇವರಾಗಿರುತ್ತಿದ್ದರೆ ಅವು ನರಕಕ್ಕೆ ಹೋಗುತ್ತಿರಲಿಲ್ಲ. ಎಲ್ಲರೂ ಅದರಲ್ಲಿ ಶಾಶ್ವತರು.
Verse 100
لَهُمْ فِيهَا زَفِيرٌ وَهُمْ فِيهَا لَا يَسْمَعُونَ
Transliteration lahum fīhā zafīrun wahum fīhā lā yasmaʿūna
Kannada ಅಲ್ಲಿ ಅವರು ನಿಡುಸುಯ್ಯುವರು. ಅಲ್ಲಿ ಅವರಿಗೇನೂ ಕೇಳಿಸದು.
Verse 101
إِنَّ ٱلَّذِينَ سَبَقَتْ لَهُم مِّنَّا ٱلْحُسْنَىٰٓ أُو۟لَـٰٓئِكَ عَنْهَا مُبْعَدُونَ
Transliteration inna alladhīna sabaqat lahum minnā l-ḥus'nā ulāika ʿanhā mub'ʿadūna
Kannada ಯಾರಿಗೆ ಮೊದಲೇ ನಮ್ಮಿಂದ ಉತ್ತಮ ಸ್ಥಾನ ಪ್ರಾಪ್ತವಾಗಿದೆಯೋ ಅವರು ನರಕದಿಂದ ದೂರವಾಗುವರು.
Verse 102
لَا يَسْمَعُونَ حَسِيسَهَا ۖ وَهُمْ فِى مَا ٱشْتَهَتْ أَنفُسُهُمْ خَـٰلِدُونَ
Transliteration lā yasmaʿūna ḥasīsahā wahum fī mā ish'tahat anfusuhum khālidūna
Kannada ಅದರ ಮೆಲು ದನಿಯನ್ನೂ ಅವರು ಕೇಳಲಾರರು. ಅವರು ತಮ್ಮ ಮನಮೆಚ್ಚುವ ಅನುಗ್ರಹ ಗಳ ನಡುವೆ ಶಾಶ್ವತವಾಗಿ ನೆಲೆಸುವರು.
Verse 103
لَا يَحْزُنُهُمُ ٱلْفَزَعُ ٱلْأَكْبَرُ وَتَتَلَقَّىٰهُمُ ٱلْمَلَـٰٓئِكَةُ هَـٰذَا يَوْمُكُمُ ٱلَّذِى كُنتُمْ تُوعَدُونَ
Transliteration lā yaḥzunuhumu l-fazaʿu l-akbaru watatalaqqāhumu l-malāikatu hādhā yawmukumu alladhī kuntum tūʿadūna
Kannada ಅತಿ ಭಯಂಕರ ಭಯಭೀತಿಯು ಅವರನ್ನು ವ್ಯಥೆಗೊಳಿಸದು. ಇದು ನಿಮಗೆ ವಾಗ್ದಾನ ಮಾಡಲಾಗಿದ್ದ ಅದೇ ನಿಮ್ಮ ದಿನ ಎನ್ನುತ್ತಾ ದೇವಚರರು ಅವರನ್ನು ಇದಿರ್ಗೊಳ್ಳುವರು.
Verse 104
يَوْمَ نَطْوِى ٱلسَّمَآءَ كَطَىِّ ٱلسِّجِلِّ لِلْكُتُبِ ۚ كَمَا بَدَأْنَآ أَوَّلَ خَلْقٍ نُّعِيدُهُۥ ۚ وَعْدًا عَلَيْنَآ ۚ إِنَّا كُنَّا فَـٰعِلِينَ
Transliteration yawma naṭwī l-samāa kaṭayyi l-sijili lil'kutubi kamā badanā awwala khalqin nuʿīduhu waʿdan ʿalaynā innā kunnā fāʿilīna
Kannada ಬರೆಯಲಾದ ಹೊತ್ತಗೆಯ ಹಾಳೆಗಳನ್ನು ಸುತ್ತುವ ಹಾಗೆ ನಾವು ಆಕಾಶವನ್ನು ಸುರುಟು ವ ದಿನವನ್ನು ನೆನೆಸಿರಿ. ಮೊದಲು ಸೃಷ್ಟಿಯ ಆರಂಭ ಮಾಡಿದಂತೆ ಅದನ್ನು ನಾವು ಪುನರ್ ಸೃಷ್ಟಿಸುತ್ತೇವೆ. ಇದು ನಮ್ಮ ಮೇಲಿನ ವಾಗ್ದಾನ ವಾಗಿದ್ದು ಈ ಕಾರ್ಯವನ್ನು ನಾವು ಖಂಡಿತ ಮಾಡುತ್ತೇವೆ.
Verse 105
وَلَقَدْ كَتَبْنَا فِى ٱلزَّبُورِ مِنۢ بَعْدِ ٱلذِّكْرِ أَنَّ ٱلْأَرْضَ يَرِثُهَا عِبَادِىَ ٱلصَّـٰلِحُونَ
Transliteration walaqad katabnā fī l-zabūri min baʿdi l-dhik'ri anna l-arḍa yarithuhā ʿibādiya l-ṣāliḥūna
Kannada ನಮ್ಮ ಸಜ್ಜನ ದಾಸರು ಭೂಮಿಯನ್ನು ವಾರೀಸು ಪಡೆಯಲಿದ್ದಾರೆಂದು ಮೂಲ ಪ್ರಮಾಣದಲ್ಲಿ ಉಲ್ಲೇಖಿಸಿದ ಬಳಿಕ ನಾವು ವೇದಗ್ರಂಥದಲ್ಲಿ ಬರೆದಿರುತ್ತೇವೆ.
Verse 106
إِنَّ فِى هَـٰذَا لَبَلَـٰغًا لِّقَوْمٍ عَـٰبِدِينَ
Transliteration inna fī hādhā labalāghan liqawmin ʿābidīna
Kannada ಇದರಲ್ಲಿ ದೇವೋಪಾಸಕರಿಗೆ ಒಂದು ದೊಡ್ಡ ಸಂದೇಶವಿದೆ
Verse 107
وَمَآ أَرْسَلْنَـٰكَ إِلَّا رَحْمَةً لِّلْعَـٰلَمِينَ
Transliteration wamā arsalnāka illā raḥmatan lil'ʿālamīna
Kannada (ಪೈಗಂಬರರೇ,) ನಾವು ನಿಮ್ಮನ್ನು ಸಕಲ ಜಗತ್ತಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ .
Verse 108
قُلْ إِنَّمَا يُوحَىٰٓ إِلَىَّ أَنَّمَآ إِلَـٰهُكُمْ إِلَـٰهٌ وَٰحِدٌ ۖ فَهَلْ أَنتُم مُّسْلِمُونَ
Transliteration qul innamā yūḥā ilayya annamā ilāhukum ilāhun wāḥidun fahal antum mus'limūna
Kannada ಹೇಳಿರಿ. “ನಿಮ್ಮ ದೇವನು ಏಕೈಕ ದೇವನೆಂದು ನನ್ನ ಬಳಿಗೆ ದಿವ್ಯ ಸಂದೇಶ ಬಂದಿದೆ. ಆದ್ದ ರಿಂದ ಅವನನ್ನು ನೀವು ಅನುಸರಿಸುವಿರಾ?”
Verse 109
فَإِن تَوَلَّوْا۟ فَقُلْ ءَاذَنتُكُمْ عَلَىٰ سَوَآءٍ ۖ وَإِنْ أَدْرِىٓ أَقَرِيبٌ أَم بَعِيدٌ مَّا تُوعَدُونَ
Transliteration fa-in tawallaw faqul ādhantukum ʿalā sawāin wa-in adrī aqarībun am baʿīdun mā tūʿadūna
Kannada ಇನ್ನು ಅವರು ವಿಮುಖರಾದರೆ ಹೇಳಿರಿ, “ನಾನು ಸರಿಯಾದ ರೀತಿಯಲ್ಲಿ ನಿಮಗೆ ಎಚ್ಚರಿಕೆ ನೀಡಿ ರುತ್ತೇನೆ. ಆದರೆ ನಿಮಗೆ ಮಾಡಲಾದ ವಾಗ್ದಾ ನವು ಹತ್ತಿರವಿದೆಯೋ ಅಥವಾ ದೂರವಿದೆಯೋ ಎಂದು ನಾನರಿಯೆನು.
Verse 110
إِنَّهُۥ يَعْلَمُ ٱلْجَهْرَ مِنَ ٱلْقَوْلِ وَيَعْلَمُ مَا تَكْتُمُونَ
Transliteration innahu yaʿlamu l-jahra mina l-qawli wayaʿlamu mā taktumūna
Kannada ನೀವು ಜೋರಾಗಿ ಹೇಳುವುದನ್ನೂ ಅವನು ಅರಿಯುತ್ತಾನೆ. ಗುಟ್ಟಾಗಿ ಹೇಳುವುದನ್ನೂ ಅವನು ಅರಿಯುತ್ತಾನೆ.
Verse 111
وَإِنْ أَدْرِى لَعَلَّهُۥ فِتْنَةٌ لَّكُمْ وَمَتَـٰعٌ إِلَىٰ حِينٍ
Transliteration wa-in adrī laʿallahu fit'natun lakum wamatāʿun ilā ḥīnin
Kannada ನಾನು ತಿಳಿದಿಲ್ಲ. ಪ್ರಾಯಶಃ ಈ ವಿಳಂಬವು ನಿಮಗೊಂದು ಪರೀಕ್ಷೆಯಾಗಿದೆ ಮತ್ತು ನಿಮಗೆ ಒಂದು ನಿರ್ದಿಷ್ಟ ಕಾಲದವರೆಗೆ ಸುಖಿಸುವ ಅವಕಾಶ ಕೊಡಲಾಗುತ್ತಿದೆ” .
Verse 112
قَـٰلَ رَبِّ ٱحْكُم بِٱلْحَقِّ ۗ وَرَبُّنَا ٱلرَّحْمَـٰنُ ٱلْمُسْتَعَانُ عَلَىٰ مَا تَصِفُونَ
Transliteration qāla rabbi uḥ'kum bil-ḥaqi warabbunā l-raḥmānu l-mus'taʿānu ʿalā mā taṣifūna
Kannada ಸಂದೇಶವಾಹಕರು ಹೇಳಿದರು, “ಓ ನನ್ನ ಪ್ರಭೂ, ಸತ್ಯವಾದ ನೆಲೆಯಲ್ಲಿ ತೀರ್ಪು ಕಲ್ಪಿಸು. ದಯಾಮಯನಾದ ಅಲ್ಲಾಹನೇ ನಮ್ಮ ಪ್ರಭು. ನೀವು (ಸತ್ಯ ನಿಷೇಧಿಗಳು) ವರ್ಣಿಸುತ್ತಿರುವ ಮಾತುಗಳ ವಿರುದ್ಧ ಅವನು ಸಹಾಯ ಕೇಳಲ್ಪಡಬೇಕಾದವನು’’
Read Surah Al-Anbya in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.