MyDugsiStart learning

Surah Muhammad in Kannada: translation and audio

Surah 47 · محمد · Muhammad · 38 verses

Surah Muhammad verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Muhammad word by word in English.

Verse 1

ٱلَّذِينَ كَفَرُوا۟ وَصَدُّوا۟ عَن سَبِيلِ ٱللَّهِ أَضَلَّ أَعْمَـٰلَهُمْ

Transliteration alladhīna kafarū waṣaddū ʿan sabīli l-lahi aḍalla aʿmālahum

Kannada ಸತ್ಯವನ್ನು ನಿಷೇಧಿಸಿ, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಯಾರೋ ಅವರ ಕರ್ಮ ಗಳನ್ನು ಅಲ್ಲಾಹನು ವ್ಯರ್ಥಗೊಳಿಸಿಬಿಟ್ಟನು.

Verse 2

وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ وَءَامَنُوا۟ بِمَا نُزِّلَ عَلَىٰ مُحَمَّدٍ وَهُوَ ٱلْحَقُّ مِن رَّبِّهِمْ ۙ كَفَّرَ عَنْهُمْ سَيِّـَٔاتِهِمْ وَأَصْلَحَ بَالَهُمْ

Transliteration wa-alladhīna āmanū waʿamilū l-ṣāliḥāti waāmanū bimā nuzzila ʿalā muḥammadin wahuwa l-ḥaqu min rabbihim kaffara ʿanhum sayyiātihim wa-aṣlaḥa bālahum

Kannada ಸತ್ಯವಿಶ್ವಾಸ ಸ್ವೀಕರಿಸಿದ ಹಾಗೂ ಸತ್ಕರ್ಮ ಮಾಡಿದ, ಮುಹಮ್ಮದರ ಮೇಲೆ ಅವತೀರ್ಣ ಗೊಂಡದ್ದನ್ನು ಅವರ ಪ್ರಭುವಿನ ಕಡೆಯಿಂದ ಪರಮ ಸತ್ಯವಾದುದೆಂದು ನಂಬಿದವರ ಪಾಪಗಳನ್ನು ಅಲ್ಲಾಹು ಅವರಿಂದ ದೂರೀಕರಿಸಿ, ಅವರ ಸ್ಥಿತಿಯನ್ನು ಸರಿಪಡಿಸಿದನು.

Verse 3

ذَٰلِكَ بِأَنَّ ٱلَّذِينَ كَفَرُوا۟ ٱتَّبَعُوا۟ ٱلْبَـٰطِلَ وَأَنَّ ٱلَّذِينَ ءَامَنُوا۟ ٱتَّبَعُوا۟ ٱلْحَقَّ مِن رَّبِّهِمْ ۚ كَذَٰلِكَ يَضْرِبُ ٱللَّهُ لِلنَّاسِ أَمْثَـٰلَهُمْ

Transliteration dhālika bi-anna alladhīna kafarū ittabaʿū l-bāṭila wa-anna alladhīna āmanū ittabaʿū l-ḥaqa min rabbihim kadhālika yaḍribu l-lahu lilnnāsi amthālahum

Kannada ಅದೇಕೆಂದರೆ, ಸತ್ಯನಿಷೇಧಿಗಳು ಮಿಥ್ಯವನ್ನು ಅನುಸರಿಸಿದರು ಮತ್ತು ಸತ್ಯವಿಶ್ವಾಸಿಗಳು ಅವರ ಪ್ರಭುವಿನ ಕಡೆಯಿಂದ ಬಂದಿರುವ ಸತ್ಯವನ್ನು ಅನುಸರಿಸಿದರು. ಈ ರೀತಿಯಲ್ಲಿ ಅಲ್ಲಾಹನು ಜನರಿಗೆ ಅವರ ಉಪಮೆಗಳನ್ನು ವಿವರಿಸಿ ಕೊಡುತ್ತಾನೆ.

Verse 4

فَإِذَا لَقِيتُمُ ٱلَّذِينَ كَفَرُوا۟ فَضَرْبَ ٱلرِّقَابِ حَتَّىٰٓ إِذَآ أَثْخَنتُمُوهُمْ فَشُدُّوا۟ ٱلْوَثَاقَ فَإِمَّا مَنًّۢا بَعْدُ وَإِمَّا فِدَآءً حَتَّىٰ تَضَعَ ٱلْحَرْبُ أَوْزَارَهَا ۚ ذَٰلِكَ وَلَوْ يَشَآءُ ٱللَّهُ لَٱنتَصَرَ مِنْهُمْ وَلَـٰكِن لِّيَبْلُوَا۟ بَعْضَكُم بِبَعْضٍ ۗ وَٱلَّذِينَ قُتِلُوا۟ فِى سَبِيلِ ٱللَّهِ فَلَن يُضِلَّ أَعْمَـٰلَهُمْ

Transliteration fa-idhā laqītumu alladhīna kafarū faḍarba l-riqābi ḥattā idhā athkhantumūhum fashuddū l-wathāqa fa-immā mannan baʿdu wa-immā fidāan ḥattā taḍaʿa l-ḥarbu awzārahā dhālika walaw yashāu l-lahu la-intaṣara min'hum walākin liyabluwā baʿḍakum bibaʿḍin wa-alladhīna qutilū fī sabīli l-lahi falan yuḍilla aʿmālahum

Kannada ಆದುದರಿಂದ ಸತ್ಯನಿಷೇಧಿಗಳನ್ನು (ಯುದ್ಧದಲ್ಲಿ) ನೀವು ಎದುರುಗೊಂಡರೆ, ನೀವು ಅವರ ಕತ್ತು ಕಡಿಯಿರಿ. ನೀವು ಅವರನ್ನು ಸದೆಬಡಿದ ಬಳಿಕ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಆ ಬಳಿಕ ನೀವು ಅವರ ಮೇಲೆ ಸೌಜನ್ಯ ತೋರಿ ಬಿಡಬಹುದು ಅಥವಾ ಮೋಕ್ಷದ್ರವ್ಯ ಪಡೆದು ಬಿಟ್ಟು ಬಿಡಬಹುದು. ಇದು ಯುದ್ಧವು ಅದರ (ಆಯುಧ) ಹೊರೆಗಳನ್ನು ಕೆಳಗಿಡುವ ತನಕ. ಇದು ಯುದ್ಧದ ವಿಧಾನ. ಅಲ್ಲಾಹನಿಚ್ಛಿಸುತ್ತಿದ್ದರೆ (ಯುದ್ಧ ರಹಿತವಾಗಿ) ಸ್ವತಃ ಅವನೇ ಅವರನ್ನು ಶಿಕ್ಷಿಸುತ್ತಿದ್ದನು. ಆದರೆ, ನಿಮ್ಮನ್ನು ಪರಸ್ಪರರ ಮೂಲಕ ಪರೀಕ್ಷಿಸಲಿಕ್ಕಾಗಿ (ಅವನು ನಿಮ್ಮೊಂದಿಗೆ ಯುದ್ಧಕ್ಕೆ ಆದೇಶಿಸಿದನು) . ಅಲ್ಲಾಹನು ತನ್ನ ಮಾರ್ಗದಲ್ಲಿ ಹತರಾಗುವವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು.

Verse 5

سَيَهْدِيهِمْ وَيُصْلِحُ بَالَهُمْ

Transliteration sayahdīhim wayuṣ'liḥu bālahum

Kannada ಅವನು ಅವರಿಗೆ (ಗೆಲುವಿಗೆ) ಮಾರ್ಗದರ್ಶನ ಮಾಡುವನು, ಅವರ ಸ್ಥಿತಿಯನ್ನು ಉತ್ತಮ ಗೊಳಿಸುವನು.

Verse 6

وَيُدْخِلُهُمُ ٱلْجَنَّةَ عَرَّفَهَا لَهُمْ

Transliteration wayud'khiluhumu l-janata ʿarrafahā lahum

Kannada ಅವನು ಅವರಿಗೆ (ಮೊದಲೇ) ಪರಿಚಯಿಸಿ ಕೊಟ್ಟಿರುವಂತಹ ಸ್ವರ್ಗದಲ್ಲಿ ಅವರನ್ನು ಪ್ರವೇಶಗೊಳಿಸುವನು.

Verse 7

يَـٰٓأَيُّهَا ٱلَّذِينَ ءَامَنُوٓا۟ إِن تَنصُرُوا۟ ٱللَّهَ يَنصُرْكُمْ وَيُثَبِّتْ أَقْدَامَكُمْ

Transliteration yāayyuhā alladhīna āmanū in tanṣurū l-laha yanṣur'kum wayuthabbit aqdāmakum

Kannada ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ, ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಳಿಸುವನು.

Verse 8

وَٱلَّذِينَ كَفَرُوا۟ فَتَعْسًا لَّهُمْ وَأَضَلَّ أَعْمَـٰلَهُمْ

Transliteration wa-alladhīna kafarū fataʿsan lahum wa-aḍalla aʿmālahum

Kannada ಸತ್ಯನಿಷೇಧಿಗಳಿಗೆ ವಿನಾಶ ಕಾದಿದೆ ಮತ್ತು ಅಲ್ಲಾಹನು ಅವರ ಕರ್ಮಗಳನ್ನು ವ್ಯರ್ಥಗೊಳಿಸಿಬಿಟ್ಟಿರುವನು.

Verse 9

ذَٰلِكَ بِأَنَّهُمْ كَرِهُوا۟ مَآ أَنزَلَ ٱللَّهُ فَأَحْبَطَ أَعْمَـٰلَهُمْ

Transliteration dhālika bi-annahum karihū mā anzala l-lahu fa-aḥbaṭa aʿmālahum

Kannada ಏಕೆಂದರೆ ಅವರು ಅಲ್ಲಾಹನು ಅವತೀರ್ಣಗೊಳಿಸಿದುದನ್ನು ಅನಿಷ್ಟಪಟ್ಟರು. ಆದುದರಿಂದ ಅಲ್ಲಾಹನು ಅವರ ಕರ್ಮಗಳನ್ನು ನಿಷ್ಪಲಗೊಳಿಸಿಬಿಟ್ಟನು.

Verse 10

۞ أَفَلَمْ يَسِيرُوا۟ فِى ٱلْأَرْضِ فَيَنظُرُوا۟ كَيْفَ كَانَ عَـٰقِبَةُ ٱلَّذِينَ مِن قَبْلِهِمْ ۚ دَمَّرَ ٱللَّهُ عَلَيْهِمْ ۖ وَلِلْكَـٰفِرِينَ أَمْثَـٰلُهَا

Transliteration afalam yasīrū fī l-arḍi fayanẓurū kayfa kāna ʿāqibatu alladhīna min qablihim dammara l-lahu ʿalayhim walil'kāfirīna amthāluhā

Kannada ಅವರಿಗಿಂತ ಮುಂಚೆ ಗತಿಸಿದವರ ಗತಿಯೇ ನಾಯಿತೆಂಬುದನ್ನು ಕಂಡುಕೊಳ್ಳಲು ಅವರು ಭೂಮಿಯಲ್ಲಿ ಸಂಚರಿಸಲಿಲ್ಲವೇ? ಅಲ್ಲಾಹನು ಅವರನ್ನು ಧ್ವಂಸಗೊಳಿಸಿದನು. ಸತ್ಯನಿಷೇಧಿಗಳಿಗೆ ಇಂತಹದೇ ಆದ ಅನುಭವಗಳಿವೆ.

Verse 11

ذَٰلِكَ بِأَنَّ ٱللَّهَ مَوْلَى ٱلَّذِينَ ءَامَنُوا۟ وَأَنَّ ٱلْكَـٰفِرِينَ لَا مَوْلَىٰ لَهُمْ

Transliteration dhālika bi-anna l-laha mawlā alladhīna āmanū wa-anna l-kāfirīna lā mawlā lahum

Kannada ಇದೇಕೆಂದರೆ, ಅಲ್ಲಾಹನು ಸತ್ಯವಿಶ್ವಾಸಿಗಳ ಸಹಾಯಕನಾಗಿದ್ದಾನೆ ಮತ್ತು ಸತ್ಯನಿಷೇಧಿಗಳಿಗೆ ಯಾರೂ ಸಹಾಯಕರಿಲ್ಲ.

Verse 12

إِنَّ ٱللَّهَ يُدْخِلُ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ جَنَّـٰتٍ تَجْرِى مِن تَحْتِهَا ٱلْأَنْهَـٰرُ ۖ وَٱلَّذِينَ كَفَرُوا۟ يَتَمَتَّعُونَ وَيَأْكُلُونَ كَمَا تَأْكُلُ ٱلْأَنْعَـٰمُ وَٱلنَّارُ مَثْوًى لَّهُمْ

Transliteration inna l-laha yud'khilu alladhīna āmanū waʿamilū l-ṣāliḥāti jannātin tajrī min taḥtihā l-anhāru wa-alladhīna kafarū yatamattaʿūna wayakulūna kamā takulu l-anʿāmu wal-nāru mathwan lahum

Kannada ಸತ್ಯವಿಶ್ವಾಸವನ್ನು ಸ್ವೀಕರಿಸಿ ಸದಾಚಾರ ಕೈ ಗೊಂಡವರನ್ನು ಅಲ್ಲಾಹನು ತಳಭಾಗದಲ್ಲಿ ನದಿಗಳು ಹರಿಯುವಂತಹ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಸತ್ಯನಿಷೇಧಿಗಳು (ಇಹಲೋಕದಲ್ಲಿ) ಸುಖಿಸುತ್ತಾ ಪಶುಗಳಂತೆ ತಿನ್ನುತ್ತಿದ್ದಾರೆ. ನರಕವೇ ಅವರ ಅಂತಿಮ ನೆಲೆಯಾಗಿದೆ.

Verse 13

وَكَأَيِّن مِّن قَرْيَةٍ هِىَ أَشَدُّ قُوَّةً مِّن قَرْيَتِكَ ٱلَّتِىٓ أَخْرَجَتْكَ أَهْلَكْنَـٰهُمْ فَلَا نَاصِرَ لَهُمْ

Transliteration waka-ayyin min qaryatin hiya ashaddu quwwatan min qaryatika allatī akhrajatka ahlaknāhum falā nāṣira lahum

Kannada (ಸಂದೇಶವಾಹಕರೇ,) ತಮ್ಮನ್ನು ಹೊರಹಾಕಿದ ತಮ್ಮ ನಾಡಿಗಿಂತ ಬಹಳಷ್ಟು ಬಲಿಷ್ಠವಾಗಿದ್ದ ಅದೆ ಷ್ಟೋ ನಾಡುಗಳಿವೆ. ನಾವು ಅವರನ್ನು ನಾಶಗೊಳಿಸಿದ್ದೇವೆ. ಆಗ ಅವರನ್ನು ರಕ್ಷಿಸುವ ಯಾವ ಸಹಾಯಕನೂ ಇರಲಿಲ್ಲ.

Verse 14

أَفَمَن كَانَ عَلَىٰ بَيِّنَةٍ مِّن رَّبِّهِۦ كَمَن زُيِّنَ لَهُۥ سُوٓءُ عَمَلِهِۦ وَٱتَّبَعُوٓا۟ أَهْوَآءَهُم

Transliteration afaman kāna ʿalā bayyinatin min rabbihi kaman zuyyina lahu sūu ʿamalihi wa-ittabaʿū ahwāahum

Kannada ತನ್ನ ಪ್ರಭುವಿನ ಕಡೆಯಿಂದ ಒಂದು ಸುಸ್ಪಷ್ಟ ಆಧಾರದಡಿಯಲ್ಲಿ ನೆಲೆಗೊಳ್ಳುವ ಒಬ್ಬನು ಸ್ವಯಂ ದುಷ್ಕøತ್ಯ ಚಂದಗಾಣಿಸಲ್ಪಟ್ಟು ತಮ್ಮ ಸ್ವೇಚ್ಛೆಗಳ ಬೆನ್ನು ಹತ್ತಿರುವ ಒಬ್ಬನಂತೆ ಆಗಬಲ್ಲನೇ? (ಒಮ್ಮೆಯೂ ಇಲ್ಲ).

Verse 15

مَّثَلُ ٱلْجَنَّةِ ٱلَّتِى وُعِدَ ٱلْمُتَّقُونَ ۖ فِيهَآ أَنْهَـٰرٌ مِّن مَّآءٍ غَيْرِ ءَاسِنٍ وَأَنْهَـٰرٌ مِّن لَّبَنٍ لَّمْ يَتَغَيَّرْ طَعْمُهُۥ وَأَنْهَـٰرٌ مِّنْ خَمْرٍ لَّذَّةٍ لِّلشَّـٰرِبِينَ وَأَنْهَـٰرٌ مِّنْ عَسَلٍ مُّصَفًّى ۖ وَلَهُمْ فِيهَا مِن كُلِّ ٱلثَّمَرَٰتِ وَمَغْفِرَةٌ مِّن رَّبِّهِمْ ۖ كَمَنْ هُوَ خَـٰلِدٌ فِى ٱلنَّارِ وَسُقُوا۟ مَآءً حَمِيمًا فَقَطَّعَ أَمْعَآءَهُمْ

Transliteration mathalu l-janati allatī wuʿida l-mutaqūna fīhā anhārun min māin ghayri āsinin wa-anhārun min labanin lam yataghayyar ṭaʿmuhu wa-anhārun min khamrin ladhatin lilshāribīna wa-anhārun min ʿasalin muṣaffan walahum fīhā min kulli l-thamarāti wamaghfiratun min rabbihim kaman huwa khālidun fī l-nāri wasuqū māan ḥamīman faqaṭṭaʿa amʿāahum

Kannada ಧರ್ಮನಿಷ್ಟರಿಗೆ ವಾಗ್ಧಾನ ಮಾಡಲಾಗಿರುವ ಸ್ವರ್ಗದ ಉಪಮೆಯೇನೆಂದರೆ ಅದರಲ್ಲಿ ಕಳಂಕ ವಿಲ್ಲದ ತಿಳಿನೀರಿನ ಕಾಲುವೆಗಳಿವೆ. ಸ್ವಲ್ಪವೂ ರುಚಿ ಬದಲಾಗಿರದಂತಹ ಹಾಲಿನ ಕಾಲುವೆ ಗಳೂ ಕುಡಿಯುವವರಿಗೆ ಅತ್ಯಂತ ರುಚಿಕರವಾಗಿರುವ ಮದಿರೆಯ ಕಾಲುವೆಗಳೂ, ಸಂಸ್ಕರಿತ ಶುದ್ಧ ಜೇನಿನ ಕಾಲುವೆಗಳೂ ಇವೆ. ಅದರಲ್ಲಿ ಅವರಿಗಾಗಿ ಎಲ್ಲ ಬಗೆಯ ಫಲ ಮೂಲಗಳಿವೆ ಮತ್ತು ತಮ್ಮ ಪ್ರಭುವಿನ ಕಡೆಯಿಂದ ಅವರಿಗೆ ಕ್ಷಮೆಯೂ ಇದೆ. (ಇವರು) ಸದಾಕಾಲ ನರಕದಲ್ಲೇ ವಾಸಿಸಲಿರುವ ಜನರಿಗೆ ಸಮಾನರಾಗ ಬಲ್ಲರೇ? ಅವರಿಗೆ ಕರುಳುಗಳನ್ನು ಕತ್ತರಿಸಿ ಬಿಡುವಂತಹ ಕುದಿಯುವ ನೀರನ್ನು ಕುಡಿಸಲಾ ಗುವುದು .

Verse 16

وَمِنْهُم مَّن يَسْتَمِعُ إِلَيْكَ حَتَّىٰٓ إِذَا خَرَجُوا۟ مِنْ عِندِكَ قَالُوا۟ لِلَّذِينَ أُوتُوا۟ ٱلْعِلْمَ مَاذَا قَالَ ءَانِفًا ۚ أُو۟لَـٰٓئِكَ ٱلَّذِينَ طَبَعَ ٱللَّهُ عَلَىٰ قُلُوبِهِمْ وَٱتَّبَعُوٓا۟ أَهْوَآءَهُمْ

Transliteration wamin'hum man yastamiʿu ilayka ḥattā idhā kharajū min ʿindika qālū lilladhīna ūtū l-ʿil'ma mādhā qāla ānifan ulāika alladhīna ṭabaʿa l-lahu ʿalā qulūbihim wa-ittabaʿū ahwāahum

Kannada ಅವರ ಪೈಕಿ ಕೆಲವರು ತಮ್ಮ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಾರೆ. ಆ ಬಳಿಕ ನಿಮ್ಮಲ್ಲಿಂದ ಹೊರಟು ಹೋದಾಗ, ವೇದಜ್ಞಾನದ ಅನುಗ್ರಹ ನೀಡಲ್ಪಟ್ಟವರೊಡನೆ, ಅವರು (ಪರಿಹಾಸಪೂರ್ವ) ಈಗ ಅವರು ಹೇಳಿದ್ದೇನು?’ ಎಂದು ಕೇಳುತ್ತಾರೆ. ಅಂಥವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರುವನು. ಮತ್ತು ಅವರು ತಮ್ಮ ಸ್ವೇಚ್ಛೆಗಳ ಬೆನ್ನು ಹತ್ತಿರುವರು .

Verse 17

وَٱلَّذِينَ ٱهْتَدَوْا۟ زَادَهُمْ هُدًى وَءَاتَىٰهُمْ تَقْوَىٰهُمْ

Transliteration wa-alladhīna ih'tadaw zādahum hudan waātāhum taqwāhum

Kannada ಸನ್ಮಾರ್ಗ ಹೊಂದಿದವರಿಗೆ ಅಲ್ಲಾಹನು ಇನ್ನಷ್ಟು ಸನ್ಮಾರ್ಗ ಬೋಧವನ್ನು ವರ್ಧಿಸಿ ಕೊಡುತ್ತಾನೆ. ಮತ್ತು ಅವರಿಗೆ ಭಕ್ತಿಯ ಬೋಧವನ್ನೂ ದಯಪಾಲಿಸುತ್ತಾನೆ.

Verse 18

فَهَلْ يَنظُرُونَ إِلَّا ٱلسَّاعَةَ أَن تَأْتِيَهُم بَغْتَةً ۖ فَقَدْ جَآءَ أَشْرَاطُهَا ۚ فَأَنَّىٰ لَهُمْ إِذَا جَآءَتْهُمْ ذِكْرَىٰهُمْ

Transliteration fahal yanẓurūna illā l-sāʿata an tatiyahum baghtatan faqad jāa ashrāṭuhā fa-annā lahum idhā jāathum dhik'rāhum

Kannada ಇನ್ನು ಲೋಕಾಂತ್ಯವು ಹಠಾತ್ತನೆ ಅವರಿಗೆ ಬಂದೆರಗುವುದನ್ನೇ ಹೊರತು ಬೇರೇನನ್ನಾದರೂ ಅವರು ಕಾಯುತ್ತಿರುವರೇ? ಆದರೆ ಅದರ ಕುರುಹುಗಳು ಬಂದೇ ಬಿಟ್ಟಿವೆ. ಇನ್ನು ಅದುವೇ ಅವರಿಗೆ ಬಂದುಬಿಟ್ಟಾಗ, ಅವರ ನೆನಪು ಅವರಿಗೆ ಪ್ರಯೋಜನವಾಗುವುದೆಂತು?

Verse 19

فَٱعْلَمْ أَنَّهُۥ لَآ إِلَـٰهَ إِلَّا ٱللَّهُ وَٱسْتَغْفِرْ لِذَنۢبِكَ وَلِلْمُؤْمِنِينَ وَٱلْمُؤْمِنَـٰتِ ۗ وَٱللَّهُ يَعْلَمُ مُتَقَلَّبَكُمْ وَمَثْوَىٰكُمْ

Transliteration fa-iʿ'lam annahu lā ilāha illā l-lahu wa-is'taghfir lidhanbika walil'mu'minīna wal-mu'mināti wal-lahu yaʿlamu mutaqallabakum wamathwākum

Kannada (ಪ್ರವಾದಿಯರೇ,) ನಿಮಗೆ ತಿಳಿದಿರಲಿ! ಅಲ್ಲಾಹನ ಹೊರತು ಖಂಡಿತವಾಗಿಯೂ ಬೇರೆ ಆರಾಧ್ಯನಿಲ್ಲ ಎಂಬುದು. ನಿಮ್ಮ ಪಾಪಮೋಚನೆಗಾಗಿಯೂ ಸತ್ಯವಿಶ್ವಾಸಿಗಳಾದ ಪುರುಷರಿಗಾಗಿಯೂ, ಸ್ತ್ರೀಯರಿಗಾಗಿಯೂ ಪ್ರಾರ್ಥಿಸಿರಿ. ಅಲ್ಲಾಹನು ನಿಮ್ಮ ಹಗಲಿನ ಚಲನವನ್ನೂ ನಿಮ್ಮ ರಾತ್ರಿಯ ವಿಶ್ರಮ ತಾಣವನ್ನೂ ಬಲ್ಲನು.

Verse 20

وَيَقُولُ ٱلَّذِينَ ءَامَنُوا۟ لَوْلَا نُزِّلَتْ سُورَةٌ ۖ فَإِذَآ أُنزِلَتْ سُورَةٌ مُّحْكَمَةٌ وَذُكِرَ فِيهَا ٱلْقِتَالُ ۙ رَأَيْتَ ٱلَّذِينَ فِى قُلُوبِهِم مَّرَضٌ يَنظُرُونَ إِلَيْكَ نَظَرَ ٱلْمَغْشِىِّ عَلَيْهِ مِنَ ٱلْمَوْتِ ۖ فَأَوْلَىٰ لَهُمْ

Transliteration wayaqūlu alladhīna āmanū lawlā nuzzilat sūratun fa-idhā unzilat sūratun muḥ'kamatun wadhukira fīhā l-qitālu ra-ayta alladhīna fī qulūbihim maraḍun yanẓurūna ilayka naẓara l-maghshiyi ʿalayhi mina l-mawti fa-awlā lahum

Kannada ಸತ್ಯವಿಶ್ವಾಸಿಗಳು ಹೇಳುವರು; `(ಯುದ್ಧದ ಕುರಿ ತು) ಒಂದು ಅಧ್ಯಾಯ ಅವತೀರ್ಣಗೊಳಿಸಲಾಗಿಲ್ಲವೇಕೆ?’. ಆದರೆ ನಿಯಮ ವ್ಯಕ್ತವಾಗಿ ವಿವರಿ ಸಲ್ಪಟ್ಟ ಅಧ್ಯಾಯವೊಂದನ್ನು ಅವತೀರ್ಣಗೊಳಿಸಿ, ಅದರಲ್ಲಿ ಯುದ್ಧದ ಕುರಿತು ಹೇಳಲ್ಪಟ್ಟಾಗ, ಹೃದಯದೊಳಗೆ ರೋಗವಿದ್ದವರು, ಮೃತ್ಯು ಆವರಿಸಿ ಪ್ರಜ್ಞಾಹೀನನಾದ ವ್ಯಕ್ತಿ ನೋಡುವಂತೆ ತಮ್ಮ ಕಡೆ ನೋಡುವುದನ್ನು ಕಾಣುವಿರಿ. ಆಗ ಅವರಿಗೆ ಅತ್ಯಂತ ಸೂಕ್ತವಾದುದು.

Verse 21

طَاعَةٌ وَقَوْلٌ مَّعْرُوفٌ ۚ فَإِذَا عَزَمَ ٱلْأَمْرُ فَلَوْ صَدَقُوا۟ ٱللَّهَ لَكَانَ خَيْرًا لَّهُمْ

Transliteration ṭāʿatun waqawlun maʿrūfun fa-idhā ʿazama l-amru falaw ṣadaqū l-laha lakāna khayran lahum

Kannada ಅನುಸರಣೆ ಮತ್ತು ಹಿತದ ಮಾತು. ಕಾರ್ಯವು ನಿರ್ಧಾರವಾದಾಗ (ಯುದ್ಧ ಕಡ್ಡಾಯವಾದಾಗ) ಅವರು ಅಲ್ಲಾಹನೊಂದಿಗೆ (ಮಾಡಿಕೊಂಡ ಕರಾರಿನಲ್ಲಿ) ಸತ್ಯಸಂಧತೆಯನ್ನು ತೋರುತ್ತಿದ್ದರೆ ಅದು ಅವರಿಗೇ ಹಿತಕರವಾಗಿರುತ್ತಿತ್ತು.

Verse 22

فَهَلْ عَسَيْتُمْ إِن تَوَلَّيْتُمْ أَن تُفْسِدُوا۟ فِى ٱلْأَرْضِ وَتُقَطِّعُوٓا۟ أَرْحَامَكُمْ

Transliteration fahal ʿasaytum in tawallaytum an tuf'sidū fī l-arḍi watuqaṭṭiʿū arḥāmakum

Kannada ನೀವು ಈ ಧರ್ಮದಿಂದ ವಿಮುಖರಾದರೆ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡಿ, ನಿಮ್ಮ ಕುಟುಂಬ ಸಂಬಂಧಗಳನ್ನು ಮುರಿದು ಹಾಕು ತ್ತೀರೇನೋ?

Verse 23

أُو۟لَـٰٓئِكَ ٱلَّذِينَ لَعَنَهُمُ ٱللَّهُ فَأَصَمَّهُمْ وَأَعْمَىٰٓ أَبْصَـٰرَهُمْ

Transliteration ulāika alladhīna laʿanahumu l-lahu fa-aṣammahum wa-aʿmā abṣārahum

Kannada ಅಂಥವರನ್ನು ಅಲ್ಲಾಹನು ಶಪಿಸಿರುತ್ತಾನೆ. ಹೀಗಾಗಿ ಅವರನ್ನು ಕಿವುಡರಾಗಿಯೂ, ಕುರುಡರಾಗಿಯೂ ಮಾಡಿಬಿಟ್ಟಿರುತ್ತಾನೆ.

Verse 24

أَفَلَا يَتَدَبَّرُونَ ٱلْقُرْءَانَ أَمْ عَلَىٰ قُلُوبٍ أَقْفَالُهَآ

Transliteration afalā yatadabbarūna l-qur'āna am ʿalā qulūbin aqfāluhā

Kannada ಅವರು ಖುರ್‍ಆನ್‍ನ ಬಗ್ಗೆ ಮನಸ್ಸಿಟ್ಟು ಚಿಂತನೆ ನಡೆಸಲಿಲ್ಲವೇ? ಅಥವಾ ಹೃದಯಗಳ ಮೇಲೆ ಅವುಗಳ ಬೀಗಮುದ್ರೆ ಬಿದ್ದಿದೆಯೇ?

Verse 25

إِنَّ ٱلَّذِينَ ٱرْتَدُّوا۟ عَلَىٰٓ أَدْبَـٰرِهِم مِّنۢ بَعْدِ مَا تَبَيَّنَ لَهُمُ ٱلْهُدَى ۙ ٱلشَّيْطَـٰنُ سَوَّلَ لَهُمْ وَأَمْلَىٰ لَهُمْ

Transliteration inna alladhīna ir'taddū ʿalā adbārihim min baʿdi mā tabayyana lahumu l-hudā l-shayṭānu sawwala lahum wa-amlā lahum

Kannada ಸನ್ಮಾರ್ಗವು ಸ್ಪಷ್ಟಗೊಂಡ ಬಳಿಕ ಅದರಿಂದ ಹಿಂದಕ್ಕೆ ಮರಳಿ ಬಿಟ್ಟವರಿಗೆ ಶೈತಾನನು (ಅವರ ಕರ್ಮವನ್ನು) ಚಂದಗಾಣಿಸಿರುವನು ಹಾಗೂ ಅವರಿಗೆ ವ್ಯಾಮೋಹಗಳನ್ನು ದೀರ್ಘ ಮಾಡಿ ಕೊಟ್ಟಿರುವನು.

Verse 26

ذَٰلِكَ بِأَنَّهُمْ قَالُوا۟ لِلَّذِينَ كَرِهُوا۟ مَا نَزَّلَ ٱللَّهُ سَنُطِيعُكُمْ فِى بَعْضِ ٱلْأَمْرِ ۖ وَٱللَّهُ يَعْلَمُ إِسْرَارَهُمْ

Transliteration dhālika bi-annahum qālū lilladhīna karihū mā nazzala l-lahu sanuṭīʿukum fī baʿḍi l-amri wal-lahu yaʿlamu is'rārahum

Kannada ಅವರಿಗೆ ಈ ದುರ್ಮಾರ್ಗವು ಏಕೆ ಒದಗಿತೆಂದರೆ ಅಲ್ಲಾಹನು ಅವತೀರ್ಣಗೊಳಿಸಿದ ಧರ್ಮವನ್ನು ಮೆಚ್ಚದವರೊಡನೆ, “ಕೆಲವು ವಿಷಯಗಳಲ್ಲಿ ನಾವು ನಿಮ್ಮನ್ನು ಅನುಸರಿಸುವೆವು” ಎಂದು ಅವರು ಹೇಳಿಬಿಟ್ಟ ಕಾರಣಕ್ಕಾಗಿದೆ. ಅವರು ರಹಸ್ಯಗೊಳಿಸುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.

Verse 27

فَكَيْفَ إِذَا تَوَفَّتْهُمُ ٱلْمَلَـٰٓئِكَةُ يَضْرِبُونَ وُجُوهَهُمْ وَأَدْبَـٰرَهُمْ

Transliteration fakayfa idhā tawaffathumu l-malāikatu yaḍribūna wujūhahum wa-adbārahum

Kannada ದೇವಚರರು ಅವರ ಮುಖಗಳಿಗೂ ಬೆನ್ನುಗಳಿಗೂ ಹೊಡೆಯುತ್ತಾ ಅವರನ್ನು ಮರಣಗೊಳಿಸುವಾಗ ಅವರ ಸ್ಥಿತಿ ಏನಾದೀತು?

Verse 28

ذَٰلِكَ بِأَنَّهُمُ ٱتَّبَعُوا۟ مَآ أَسْخَطَ ٱللَّهَ وَكَرِهُوا۟ رِضْوَٰنَهُۥ فَأَحْبَطَ أَعْمَـٰلَهُمْ

Transliteration dhālika bi-annahumu ittabaʿū mā askhaṭa l-laha wakarihū riḍ'wānahu fa-aḥbaṭa aʿmālahum

Kannada ಅದು ಏಕೆಂದರೆ, ಅಲ್ಲಾಹನನ್ನು ಕುಪಿತಗೊಳಿಸುವಂತಹ ಕಾರ್ಯವನ್ನು ಅವರು ಅನುಸರಿಸಿದರು ಮತ್ತು ಅವನ ಮೆಚ್ಚುಗೆಯನ್ನು ಅನಿಷ್ಟಪಟ್ಟರು. ಆದುದರಿಂದಲೇ ಅವರ ಕರ್ಮಗಳನ್ನು ಅಲ್ಲಾಹು ನಿರರ್ಥಕಗೊಳಿಸಿಬಿಟ್ಟನು.

Verse 29

أَمْ حَسِبَ ٱلَّذِينَ فِى قُلُوبِهِم مَّرَضٌ أَن لَّن يُخْرِجَ ٱللَّهُ أَضْغَـٰنَهُمْ

Transliteration am ḥasiba alladhīna fī qulūbihim maraḍun an lan yukh'rija l-lahu aḍghānahum

Kannada ಅದಲ್ಲ, ಹೃದಯಗಳಲ್ಲಿ ರೋಗವುಳ್ಳವರು, ಅವರ ಹೃದಯಗಳೊಲಗಿರುವ ಹಗೆಯನ್ನು ಅಲ್ಲಾಹು ಹೊರತರಲಾರನೆಂದು ಭಾವಿಸಿಕೊಂಡಿರುವರೇ?

Verse 30

وَلَوْ نَشَآءُ لَأَرَيْنَـٰكَهُمْ فَلَعَرَفْتَهُم بِسِيمَـٰهُمْ ۚ وَلَتَعْرِفَنَّهُمْ فِى لَحْنِ ٱلْقَوْلِ ۚ وَٱللَّهُ يَعْلَمُ أَعْمَـٰلَكُمْ

Transliteration walaw nashāu la-araynākahum falaʿaraftahum bisīmāhum walataʿrifannahum fī laḥni l-qawli wal-lahu yaʿlamu aʿmālakum

Kannada (ಪ್ರವಾದಿಯರೇ,) ನಾವಿಚ್ಛಿಸಿದರೆ ಅವರನ್ನು ನಿಮಗೆ ತೋರಿಸಿಕೊಡುತ್ತಿದ್ದೆವು. ಆಗ ನೀವು ಅವರನ್ನು ಅವರ ಲಕ್ಷಣಗಳಿಂದಲೇ ಗುರುತಿಸ ಬಲ್ಲಿರಿ. ಅವರ ಮಾತಿನ ಶೈಲಿಯಿಂದಲೂ ನೀವು ಅವರನ್ನು ಗುರುತಿಸಿಯೇ ತೀರುವಿರಿ. ಅಲ್ಲಾಹು ನಿಮ್ಮ ಕರ್ಮಗಳನ್ನು ಚೆನ್ನಾಗಿ ಬಲ್ಲನು.

Verse 31

وَلَنَبْلُوَنَّكُمْ حَتَّىٰ نَعْلَمَ ٱلْمُجَـٰهِدِينَ مِنكُمْ وَٱلصَّـٰبِرِينَ وَنَبْلُوَا۟ أَخْبَارَكُمْ

Transliteration walanabluwannakum ḥattā naʿlama l-mujāhidīna minkum wal-ṣābirīna wanabluwā akhbārakum

Kannada ನಿಮ್ಮಲ್ಲಿ ಧರ್ಮಯೋಧರೂ ಕ್ಷಮಾಶೀಲರೂ ಯಾರೆಂದು ತಿಳಿಯಲಿಕ್ಕಾಗಿ ಹಾಗೂ ನಿಮ್ಮ ಸ್ಥಿತಿಗತಿಗಳನ್ನು ಬೆಳಕಿಗೆ ತರುವ ತನಕ ನಾವು ಖಂಡಿತವಾಗಿಯೂ ನಿಮ್ಮನ್ನು ಪರೀಕ್ಷೆಗೆ ಒಳಪಡಿಸುವೆವು.

Verse 32

إِنَّ ٱلَّذِينَ كَفَرُوا۟ وَصَدُّوا۟ عَن سَبِيلِ ٱللَّهِ وَشَآقُّوا۟ ٱلرَّسُولَ مِنۢ بَعْدِ مَا تَبَيَّنَ لَهُمُ ٱلْهُدَىٰ لَن يَضُرُّوا۟ ٱللَّهَ شَيْـًٔا وَسَيُحْبِطُ أَعْمَـٰلَهُمْ

Transliteration inna alladhīna kafarū waṣaddū ʿan sabīli l-lahi washāqqū l-rasūla min baʿdi mā tabayyana lahumu l-hudā lan yaḍurrū l-laha shayan wasayuḥ'biṭu aʿmālahum

Kannada ಸತ್ಯವನ್ನು ನಿಷೇಧಿಸಿದವರು, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಮತ್ತು ತಮಗೆ ಸನ್ಮಾರ್ಗ ಸ್ಪಷ್ಟವಾಗಿ ತಿಳಿದ ಬಳಿಕ ದೇವ ದೂತರೊಡನೆ ಜಗಳವಾಡಿದವರು ಯಾರೋ ವಾಸ್ತವದಲ್ಲಿ ಅವರು ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರರು, ಕೊನೆಗೆ ಅವರ ಕರ್ಮಗಳನ್ನು ಅಲ್ಲಾಹನೇ ನಿಷ್ಪಲಗೊಳಿಸುವನು.

Verse 33

۞ يَـٰٓأَيُّهَا ٱلَّذِينَ ءَامَنُوٓا۟ أَطِيعُوا۟ ٱللَّهَ وَأَطِيعُوا۟ ٱلرَّسُولَ وَلَا تُبْطِلُوٓا۟ أَعْمَـٰلَكُمْ

Transliteration yāayyuhā alladhīna āmanū aṭīʿū l-laha wa-aṭīʿū l-rasūla walā tub'ṭilū aʿmālakum

Kannada ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅನುಸರಿಸಿರಿ. ದೇವದೂತರನ್ನೂ ಅನುಸರಿಸಿರಿ, ಮತ್ತು ನಿಮ್ಮ ಸ್ವಂತ ಕರ್ಮಗಳನ್ನು ನಿರರ್ಥಕ ಗೊಳಿಸಬೇಡಿರಿ.

Verse 34

إِنَّ ٱلَّذِينَ كَفَرُوا۟ وَصَدُّوا۟ عَن سَبِيلِ ٱللَّهِ ثُمَّ مَاتُوا۟ وَهُمْ كُفَّارٌ فَلَن يَغْفِرَ ٱللَّهُ لَهُمْ

Transliteration inna alladhīna kafarū waṣaddū ʿan sabīli l-lahi thumma mātū wahum kuffārun falan yaghfira l-lahu lahum

Kannada ಸತ್ಯವನ್ನು ನಿಷೇಧಿಸಿ, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದು, ಆ ನಂತರ ಸತ್ಯನಿಷೇಧಿಗಳಾಗಿಯೇ ಸತ್ತವರನ್ನು ಅಲ್ಲಾಹನು ಖಂಡಿತ ಕ್ಷಮಿಸಲಾರನು.

Verse 35

فَلَا تَهِنُوا۟ وَتَدْعُوٓا۟ إِلَى ٱلسَّلْمِ وَأَنتُمُ ٱلْأَعْلَوْنَ وَٱللَّهُ مَعَكُمْ وَلَن يَتِرَكُمْ أَعْمَـٰلَكُمْ

Transliteration falā tahinū watadʿū ilā l-salmi wa-antumu l-aʿlawna wal-lahu maʿakum walan yatirakum aʿmālakum

Kannada ಆದುದರಿಂದ (ಸತ್ಯವಿಶ್ವಾಸಿಗಳೇ,) ನೀವು ಬಲಹೀನರಾಗದಿರಿ. ನೀವು ಸಂಧಾನಕ್ಕಾಗಿ ನಿವೇದಿಸಬೇಡಿರಿ. ನೀವು ಉನ್ನತರು. ಅಲ್ಲಾಹು ನಿಮ್ಮ ಜೊತೆಗಿದ್ದಾನೆ ಮತ್ತು ಅವನು ನಿಮ್ಮ ಕರ್ಮಗಳನ್ನು (ಅದರ ಪ್ರತಿಫಲವನ್ನು) ಖಂಡಿತ ಕಡಿತಗೊಳಿಸಲಾರನು.

Verse 36

إِنَّمَا ٱلْحَيَوٰةُ ٱلدُّنْيَا لَعِبٌ وَلَهْوٌ ۚ وَإِن تُؤْمِنُوا۟ وَتَتَّقُوا۟ يُؤْتِكُمْ أُجُورَكُمْ وَلَا يَسْـَٔلْكُمْ أَمْوَٰلَكُمْ

Transliteration innamā l-ḥayatu l-dun'yā laʿibun walahwun wa-in tu'minū watattaqū yu'tikum ujūrakum walā yasalkum amwālakum

Kannada ಇಹಲೋಕದ ಜೀವನವು ಕೇವಲ ಆಟ ಮತ್ತು ವಿನೋದವಾಗಿದೆ. ನೀವು ವಿಶ್ವಾಸವಿರಿಸಿದರೆ ಮತ್ತು (ಧರ್ಮನಿಷ್ಟರಾಗಿ ಅಲ್ಲಾಹನನ್ನು) ಭಯ ಪಟ್ಟರೆ ಅಲ್ಲಾಹನು ನಿಮಗೆ ನಿಮ್ಮ ಪ್ರತಿಫಲವನ್ನು ನೀಡುವನು. ಅವನು ನಿಮ್ಮಿಂದ ನಿಮ್ಮ ಸೊತ್ತುಗಳನ್ನು ಕೇಳಲಾರನು.

Verse 37

إِن يَسْـَٔلْكُمُوهَا فَيُحْفِكُمْ تَبْخَلُوا۟ وَيُخْرِجْ أَضْغَـٰنَكُمْ

Transliteration in yasalkumūhā fayuḥ'fikum tabkhalū wayukh'rij aḍghānakum

Kannada ಇನ್ನು ಅವನು ನಿಮ್ಮಿಂದ ನಿಮ್ಮ ಸಂಪತ್ತನ್ನು ಕೇಳಿ ನಿಮ್ಮನ್ನು ತೊಂದರೆಗೊಳಿಸುತ್ತಿದ್ದರೆ, ನೀವು ಜಿಪುಣತೆ ತೋರುವಿರಿ. ಅದು ನಿಮಗೆ ಧರ್ಮದ ಮೇಲೆ ಜಿಗುಪ್ಸೆ ಮೂಡಿಸುತ್ತಿತ್ತು.

Verse 38

هَـٰٓأَنتُمْ هَـٰٓؤُلَآءِ تُدْعَوْنَ لِتُنفِقُوا۟ فِى سَبِيلِ ٱللَّهِ فَمِنكُم مَّن يَبْخَلُ ۖ وَمَن يَبْخَلْ فَإِنَّمَا يَبْخَلُ عَن نَّفْسِهِۦ ۚ وَٱللَّهُ ٱلْغَنِىُّ وَأَنتُمُ ٱلْفُقَرَآءُ ۚ وَإِن تَتَوَلَّوْا۟ يَسْتَبْدِلْ قَوْمًا غَيْرَكُمْ ثُمَّ لَا يَكُونُوٓا۟ أَمْثَـٰلَكُم

Transliteration hāantum hāulāi tud'ʿawna litunfiqū fī sabīli l-lahi faminkum man yabkhalu waman yabkhal fa-innamā yabkhalu ʿan nafsihi wal-lahu l-ghaniyu wa-antumu l-fuqarāu wa-in tatawallaw yastabdil qawman ghayrakum thumma lā yakūnū amthālakum

Kannada ತಿಳಿಯಿರಿ, ಓ ಸಮೂಹವೇ, ಅಲ್ಲಾಹನ ಮಾರ್ಗದಲ್ಲಿ ಸಂಪತ್ತನ್ನು ಖರ್ಚು ಮಾಡಬೇಕೆಂದು ನಿಮಗೆ ಕರೆ ನೀಡಲಾಗುತ್ತಿದೆ. ಆಗ ನಿಮ್ಮಲ್ಲಿ ಕೆಲವರು ಜಿಪುಣತೆ ತೋರುತ್ತಿದ್ದಾರೆ. ಯಾವನು ಜಿಪುಣತೆ ತೋರುವನೋ ವಾಸ್ತವದಲ್ಲಿ ಅವನು ತನ್ನ ಮೇಲೆ ತಾನೇ ಜಿಪುಣತೆ ತೋರುತ್ತಿದ್ದಾನೆ. ಅಲ್ಲಾಹನು ಶ್ರೀಮಂತನು. ನೀವು ಬಡವರು. ನೀವು ವಿಮುಖರಾದರೆ ಅಲ್ಲಾಹನು ನೀವಲ್ಲದ ಬೇರೊಂದು ಜನಾಂಗವನ್ನು ಬದಲಿಗೆ ತರುವನು. ಅವರು ನಿಮ್ಮಂತೆ ಆಗಲಾರರು.

Read Surah Muhammad in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.