MyDugsiStart learning

Surah At-Taghabun in Kannada: translation and audio

Surah 64 · التغابن · The Mutual Disillusion · 18 verses

Surah At-Taghabun verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah At-Taghabun word by word in English.

Verse 1

يُسَبِّحُ لِلَّهِ مَا فِى ٱلسَّمَـٰوَٰتِ وَمَا فِى ٱلْأَرْضِ ۖ لَهُ ٱلْمُلْكُ وَلَهُ ٱلْحَمْدُ ۖ وَهُوَ عَلَىٰ كُلِّ شَىْءٍ قَدِيرٌ

Transliteration yusabbiḥu lillahi mā fī l-samāwāti wamā fī l-arḍi lahu l-mul'ku walahu l-ḥamdu wahuwa ʿalā kulli shayin qadīrun

Kannada ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನ ಪರಿಶುದ್ಧತೆಯನ್ನು ಪ್ರಕೀರ್ತಿಸುತ್ತಿವೆ. ಪ್ರಭುತ್ವವು ಅವನದ್ದು. ಸ್ತುತಿಯು ಅವನಿಗೇ ಮೀಸಲು. ಅವನು ಎಲ್ಲ ಕಾರ್ಯಗಳಿಗೂ ಪರಮ ಸಮರ್ಥನಾಗಿದ್ದಾನೆ.

Verse 2

هُوَ ٱلَّذِى خَلَقَكُمْ فَمِنكُمْ كَافِرٌ وَمِنكُم مُّؤْمِنٌ ۚ وَٱللَّهُ بِمَا تَعْمَلُونَ بَصِيرٌ

Transliteration huwa alladhī khalaqakum faminkum kāfirun waminkum mu'minun wal-lahu bimā taʿmalūna baṣīrun

Kannada ಅವನೇ ನಿಮ್ಮನ್ನು ಸೃಷ್ಟಿಸಿದನು. ಹಾಗಿದ್ದೂ ನಿಮ್ಮ ಪೈಕಿ ಸತ್ಯನಿಷೇಧಿ ಇದ್ದಾನೆ ಮತ್ತು ಸತ್ಯವಿಶ್ವಾಸಿ ಇದ್ದಾನೆ. ನೀವು ಮಾಡುತ್ತಿರುವುದನ್ನು ಅಲ್ಲಾಹನು ವೀಕ್ಷಿಸುತ್ತಿದ್ದಾನೆ.

Verse 3

خَلَقَ ٱلسَّمَـٰوَٰتِ وَٱلْأَرْضَ بِٱلْحَقِّ وَصَوَّرَكُمْ فَأَحْسَنَ صُوَرَكُمْ ۖ وَإِلَيْهِ ٱلْمَصِيرُ

Transliteration khalaqa l-samāwāti wal-arḍa bil-ḥaqi waṣawwarakum fa-aḥsana ṣuwarakum wa-ilayhi l-maṣīru

Kannada ಅವನು ಆಕಾಶಗಳನ್ನೂ ಭೂಮಿಯನ್ನೂ, ಸತ್ಯ ಪೂರ್ಣವಾಗಿ ಸೃಷ್ಟಿಸಿರುವನು ಮತ್ತು ನಿಮಗೆ ಒಂದು ರೂಪಕೊಟ್ಟನು ಹಾಗೂ ನಿಮ್ಮ ರೂಪವನ್ನು ಅತಿ ಶ್ರೇಷ್ಠಗೊಳಿಸಿದನು. ಕೊನೆಗೆ ಅವನ ಕಡೆಗೇ ನಿಮ್ಮ ನಿರ್ಗಮನ.

Verse 4

يَعْلَمُ مَا فِى ٱلسَّمَـٰوَٰتِ وَٱلْأَرْضِ وَيَعْلَمُ مَا تُسِرُّونَ وَمَا تُعْلِنُونَ ۚ وَٱللَّهُ عَلِيمٌۢ بِذَاتِ ٱلصُّدُورِ

Transliteration yaʿlamu mā fī l-samāwāti wal-arḍi wayaʿlamu mā tusirrūna wamā tuʿ'linūna wal-lahu ʿalīmun bidhāti l-ṣudūri

Kannada ಭೂಮಿ ಮತ್ತು ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವನ್ನೂ ಅವನು ಬಲ್ಲನು. ನೀವು ಗುಟ್ಟಾ ಗಿಸಿಡುವುದನ್ನೂ, ಪ್ರಕಟಗೊಳಿಸುವುದನ್ನೂ ಅವನು ಬಲ್ಲನು. ಅಲ್ಲಾಹನು ಹೃದಯಗಳ ಅಂತರಾಳಗಳಲ್ಲಿ ಇರುವುದನ್ನು ಅರಿಯುವ ಪರಮಜ್ಞಾನಿ ಯು.

Verse 5

أَلَمْ يَأْتِكُمْ نَبَؤُا۟ ٱلَّذِينَ كَفَرُوا۟ مِن قَبْلُ فَذَاقُوا۟ وَبَالَ أَمْرِهِمْ وَلَهُمْ عَذَابٌ أَلِيمٌ

Transliteration alam yatikum naba-u alladhīna kafarū min qablu fadhāqū wabāla amrihim walahum ʿadhābun alīmun

Kannada ನಿಮಗಿಂತ ಮುಂಚೆ ಸತ್ಯವನ್ನು ನಿಷೇಧಿಸಿದ ಹಾಗೂ ಕೊನೆಗೆ ತಮ್ಮ ದುಷ್ಕøತ್ಯಗಳ ಫಲವನ್ನು ಸವಿದವರ ವೃತ್ತಾಂತವು ನಿಮಗೆ ತಲಪಿಲ್ಲವೇ? (ಪರಲೋಕದಲ್ಲಿ) ಅವರಿಗೆ ವೇದನಾಯುಕ್ತ ಶಿಕ್ಷೆ ಇದೆ.

Verse 6

ذَٰلِكَ بِأَنَّهُۥ كَانَت تَّأْتِيهِمْ رُسُلُهُم بِٱلْبَيِّنَـٰتِ فَقَالُوٓا۟ أَبَشَرٌ يَهْدُونَنَا فَكَفَرُوا۟ وَتَوَلَّوا۟ ۚ وَّٱسْتَغْنَى ٱللَّهُ ۚ وَٱللَّهُ غَنِىٌّ حَمِيدٌ

Transliteration dhālika bi-annahu kānat tatīhim rusuluhum bil-bayināti faqālū abasharun yahdūnanā fakafarū watawallaw wa-is'taghnā l-lahu wal-lahu ghaniyyun ḥamīdun

Kannada ಅವರ ಇಂತಹ ದುರ್ಗತಿಗೆ ಕಾರಣ (ಇದಾಗಿದೆ), ಅವರ ಬಳಿಗೆ ದೂತರು ಸುಸ್ಪಷ್ಟ ಆಧಾರ ಪ್ರಮಾಣ ಗಳೊಂದಿಗೆ ಬರುತ್ತಿದ್ದರು. ಆಗ ಅವರು, ಒಬ್ಬ ಮನುಷ್ಯ ನಮಗೆ ಸನ್ಮಾರ್ಗದರ್ಶನ ನೀಡುವುದೇ? ಎಂದು ಕೇಳಿದರು. ಹೀಗೆ ಅವರು ಸತ್ಯ ವನ್ನು ನಿಷೇಧಿಸಿದರು ಮತ್ತು ವಿಮುಖರಾದರು. ಆಗ ಅಲ್ಲಾಹನೂ ಅವರ ಬಗ್ಗೆ ನಿರ್ಲಕ್ಷ್ಯ ತಾಳಿದನು. ಅಲ್ಲಾಹನು ನಿರಪೇಕ್ಷನೂ ಸ್ವಯಂಸ್ತುತ್ಯರ್ಹನೂ ಆಗಿರುತ್ತಾನೆ.

Verse 7

زَعَمَ ٱلَّذِينَ كَفَرُوٓا۟ أَن لَّن يُبْعَثُوا۟ ۚ قُلْ بَلَىٰ وَرَبِّى لَتُبْعَثُنَّ ثُمَّ لَتُنَبَّؤُنَّ بِمَا عَمِلْتُمْ ۚ وَذَٰلِكَ عَلَى ٱللَّهِ يَسِيرٌ

Transliteration zaʿama alladhīna kafarū an lan yub'ʿathū qul balā warabbī latub'ʿathunna thumma latunabba-unna bimā ʿamil'tum wadhālika ʿalā l-lahi yasīrun

Kannada ನಮ್ಮನ್ನು ಪುನರುಜ್ಜೀವನಗೊಳಿಸಲಾಗದೆಂದು ಸತ್ಯನಿಷೇಧಿಗಳು ವಾದಿಸಿದರು. (ಪ್ರವಾದಿಯರೇ,) ಹೇಳಿರಿ - ಹಾಗಲ್ಲ, ನನ್ನ ಪ್ರಭುವಿನಾಣೆ, ನೀವು ಖಂಡಿತ ಪುನರುಜ್ಜೀವನಗೊಳಿಸಿ ಎಬ್ಬಿಸಲ್ಪಡುವಿರಿ. ತರುವಾಯ ನೀವು ಮಾಡಿದ ಕರ್ಮದ ಬಗ್ಗೆ ನಿಮಗೆ ಖಂಡಿತ ವಿವರಿಸಿ ಕೊಡಲಾಗುವುದು. ಹೀಗೆ ಮಾಡುವುದು ಅಲ್ಲಾಹನ ಮಟ್ಟಿಗೆ ಬಹಳ ಸುಲಭವಾಗಿದೆ.

Verse 8

فَـَٔامِنُوا۟ بِٱللَّهِ وَرَسُولِهِۦ وَٱلنُّورِ ٱلَّذِىٓ أَنزَلْنَا ۚ وَٱللَّهُ بِمَا تَعْمَلُونَ خَبِيرٌ

Transliteration faāminū bil-lahi warasūlihi wal-nūri alladhī anzalnā wal-lahu bimā taʿmalūna khabīrun

Kannada ಆದುದರಿಂದ ಅಲ್ಲಾಹನ ಮೇಲೂ ಅವನ ದೂತರ ಮೇಲೂ ನಾವು ಅವತೀರ್ಣಗೊಳಿಸಿರುವ ಪ್ರಕಾಶದ (ಖುರ್‍ಆನಿನ) ಮೇಲೂ ವಿಶ್ವಾಸವಿರಿಸಿರಿ. ನೀವು ಮಾಡುತ್ತಿರುವುದನ್ನು ಅಲ್ಲಾಹನು ಸೂಕ್ಷ್ಮವಾಗಿ ಅರಿತಿರುತ್ತಾನೆ.

Verse 9

يَوْمَ يَجْمَعُكُمْ لِيَوْمِ ٱلْجَمْعِ ۖ ذَٰلِكَ يَوْمُ ٱلتَّغَابُنِ ۗ وَمَن يُؤْمِنۢ بِٱللَّهِ وَيَعْمَلْ صَـٰلِحًا يُكَفِّرْ عَنْهُ سَيِّـَٔاتِهِۦ وَيُدْخِلْهُ جَنَّـٰتٍ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَآ أَبَدًا ۚ ذَٰلِكَ ٱلْفَوْزُ ٱلْعَظِيمُ

Transliteration yawma yajmaʿukum liyawmi l-jamʿi dhālika yawmu l-taghābuni waman yu'min bil-lahi wayaʿmal ṣāliḥan yukaffir ʿanhu sayyiātihi wayud'khil'hu jannātin tajrī min taḥtihā l-anhāru khālidīna fīhā abadan dhālika l-fawzu l-ʿaẓīmu

Kannada ಆ ಸಮ್ಮೇಳನದ ದಿನಕ್ಕೆ ಅವನು ನಿಮ್ಮೆಲ್ಲರನ್ನೂ ಒಟ್ಟುಗೂಡಿಸುವ ದಿನ (ಸ್ಮರಣೀಯವಾಗಿದೆ). ಅದು ನಷ್ಟವು ಸ್ಪಷ್ಟವಾಗುವ ದಿನವಾಗಿರುವುದು. ಯಾರು ಅಲ್ಲಾಹನ ಮೇಲೆ ವಿಶ್ವಾಸವಿರಿಸಿ ಸತ್ಕ ರ್ಮವೆಸಗುತ್ತಾನೋ ಅವನ ಪಾಪಗಳನ್ನು ಅಲ್ಲಾಹು ಅಳಿಸಿ ಬಿಡುವನು ಮತ್ತು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅವುಗಳಲ್ಲಿ ಸದಾಕಾಲ ವಾಸಿಸುವರು. ಅದುವೇ ಮಹಾ ಯಶಸ್ಸು.

Verse 10

وَٱلَّذِينَ كَفَرُوا۟ وَكَذَّبُوا۟ بِـَٔايَـٰتِنَآ أُو۟لَـٰٓئِكَ أَصْحَـٰبُ ٱلنَّارِ خَـٰلِدِينَ فِيهَا ۖ وَبِئْسَ ٱلْمَصِيرُ

Transliteration wa-alladhīna kafarū wakadhabū biāyātinā ulāika aṣḥābu l-nāri khālidīna fīhā wabi'sa l-maṣīru

Kannada ಅವಿಶ್ವಾಸ ತಾಳಿದ ಮತ್ತು ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದವರು ನರಕವಾಸಿಗಳಾಗಿರುವರು. ಅದರಲ್ಲಿ ಅವರು ಸದಾಕಾಲ ವಾಸಿಸುವರು ಅದು ಅತ್ಯಂತ ನಿಕೃಷ್ಟ ವಾಸಸ್ಥಾನವಾಗಿದೆ.

Verse 11

مَآ أَصَابَ مِن مُّصِيبَةٍ إِلَّا بِإِذْنِ ٱللَّهِ ۗ وَمَن يُؤْمِنۢ بِٱللَّهِ يَهْدِ قَلْبَهُۥ ۚ وَٱللَّهُ بِكُلِّ شَىْءٍ عَلِيمٌ

Transliteration mā aṣāba min muṣībatin illā bi-idh'ni l-lahi waman yu'min bil-lahi yahdi qalbahu wal-lahu bikulli shayin ʿalīmun

Kannada ಯಾವ ದುರಂತವೂ ಅಲ್ಲಾಹನ ಅಪ್ಪಣೆಯಿಲ್ಲದೆ ಸಂಭವಿಸುವುದಿಲ್ಲ. ಯಾವನಾದರೂ ಅಲ್ಲಾಹನ ಮೇಲೆ ವಿಶ್ವಾಸವಿರಿಸಿದರೆ ಅವನ ಹೃದಯಕ್ಕೆ ಅಲ್ಲಾಹನು ಮಾರ್ಗದರ್ಶನ ನೀಡುತ್ತಾನೆ. ಅಲ್ಲಾಹನು ಸಕಲ ವಸ್ತುವಿನ ಬಗ್ಗೆ ಪರಮಜ್ಞಾನಿ.

Verse 12

وَأَطِيعُوا۟ ٱللَّهَ وَأَطِيعُوا۟ ٱلرَّسُولَ ۚ فَإِن تَوَلَّيْتُمْ فَإِنَّمَا عَلَىٰ رَسُولِنَا ٱلْبَلَـٰغُ ٱلْمُبِينُ

Transliteration wa-aṭīʿū l-laha wa-aṭīʿū l-rasūla fa-in tawallaytum fa-innamā ʿalā rasūlinā l-balāghu l-mubīnu

Kannada ನೀವು ಅಲ್ಲಾಹನನ್ನು ಅನುಸರಿಸಿ ಮತ್ತು ದೇವ ದೂತರನ್ನೂ ಅನುಸರಿಸಿರಿ. ಇನ್ನು ನೀವು ಅನು ಸರಣೆಯಿಂದ ವಿಮುಖರಾದರೆ, ನಮ್ಮ ದೂತರ ಮೇಲೆ ಸುಸ್ಪಷ್ಟವಾಗಿ ಸತ್ಯವನ್ನು ತಲುಪಿಸುವ ಹೊಣೆ ಮಾತ್ರವೇ ಇರುವುದು.

Verse 13

ٱللَّهُ لَآ إِلَـٰهَ إِلَّا هُوَ ۚ وَعَلَى ٱللَّهِ فَلْيَتَوَكَّلِ ٱلْمُؤْمِنُونَ

Transliteration al-lahu lā ilāha illā huwa waʿalā l-lahi falyatawakkali l-mu'minūna

Kannada ಅಲ್ಲಾಹು - ಅವನ ಹೊರತು ಬೇರೆ ಆರಾಧ್ಯನಿಲ್ಲ, ಆದುದರಿಂದ ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯನ್ನಿಟ್ಟುಕೊಳ್ಳಲಿ.

Verse 14

يَـٰٓأَيُّهَا ٱلَّذِينَ ءَامَنُوٓا۟ إِنَّ مِنْ أَزْوَٰجِكُمْ وَأَوْلَـٰدِكُمْ عَدُوًّا لَّكُمْ فَٱحْذَرُوهُمْ ۚ وَإِن تَعْفُوا۟ وَتَصْفَحُوا۟ وَتَغْفِرُوا۟ فَإِنَّ ٱللَّهَ غَفُورٌ رَّحِيمٌ

Transliteration yāayyuhā alladhīna āmanū inna min azwājikum wa-awlādikum ʿaduwwan lakum fa-iḥ'dharūhum wa-in taʿfū wataṣfaḥū wataghfirū fa-inna l-laha ghafūrun raḥīmun

Kannada ಸತ್ಯವಿಶ್ವಾಸಿಗಳೇ, ನಿಮ್ಮ ಪತ್ನಿಯರಲ್ಲಿ ಮತ್ತು ನಿಮ್ಮ ಮಕ್ಕಳಲ್ಲಿ ನಿಮಗೆ ಶತ್ರುಗಳಿದ್ದಾರೆ. ಆದುದರಿಂದ ಅವರ ಬಗ್ಗೆ ಜಾಗರೂಕರಾಗಿರಿ. ನೀವು ಮಾಪಿ ಮಾಡಿದರೆ, ರಿಯಾಯಿತಿ ತೋರಿದರೆ ಹಾಗೂ ಕ್ಷಮಿಸಿ ಬಿಡುತ್ತೀರೆಂದಾದರೆ ಅಲ್ಲಾಹನು ಮಹಾ ಕ್ಷಮಾಶೀಲನೂ, ದಯಾನಿಧಿಯೂ ಆಗಿರುತ್ತಾನೆ.

Verse 15

إِنَّمَآ أَمْوَٰلُكُمْ وَأَوْلَـٰدُكُمْ فِتْنَةٌ ۚ وَٱللَّهُ عِندَهُۥٓ أَجْرٌ عَظِيمٌ

Transliteration innamā amwālukum wa-awlādukum fit'natun wal-lahu ʿindahu ajrun ʿaẓīmun

Kannada ನಿಮ್ಮ ಸಂಪತ್ತು ಮತ್ತು ಸಂತತಿಗಳು ಒಂದು ಪೀಡೆಯಾಗಿದೆ. ಘನವೆತ್ತ ಪ್ರತಿಫಲವು ಅಲ್ಲಾಹನ ಬಳಿಯಲ್ಲೇ ಇದೆ.

Verse 16

فَٱتَّقُوا۟ ٱللَّهَ مَا ٱسْتَطَعْتُمْ وَٱسْمَعُوا۟ وَأَطِيعُوا۟ وَأَنفِقُوا۟ خَيْرًا لِّأَنفُسِكُمْ ۗ وَمَن يُوقَ شُحَّ نَفْسِهِۦ فَأُو۟لَـٰٓئِكَ هُمُ ٱلْمُفْلِحُونَ

Transliteration fa-ittaqū l-laha mā is'taṭaʿtum wa-is'maʿū wa-aṭīʿū wa-anfiqū khayran li-anfusikum waman yūqa shuḥḥa nafsihi fa-ulāika humu l-muf'liḥūna

Kannada ಆದುದರಿಂದ ನಿಮ್ಮಿಂದ ಸಾಧ್ಯವಿರುವಷ್ಟು ನೀವು ಅಲ್ಲಾಹನನ್ನು ಭಯಪಡಿರಿ. ನೀವು ಆಲಿಸಿರಿ, ಅನುಸರಿಸಿರಿ ಮತ್ತು ನಿಮಗೆ ಗುಣಕರವಾಗುವ ರೀತಿಯಲ್ಲಿ ಸಂಪತ್ತನ್ನು ಖರ್ಚು ಮಾಡಿರಿ. ಯಾರು ತಮ್ಮ ಸ್ವಂತ ಲೋಭದಿಂದ ಮುಕ್ತರಾದರೋ ಅವರು ಮಾತ್ರವೇ ವಿಜಯಿಗಳು.

Verse 17

إِن تُقْرِضُوا۟ ٱللَّهَ قَرْضًا حَسَنًا يُضَـٰعِفْهُ لَكُمْ وَيَغْفِرْ لَكُمْ ۚ وَٱللَّهُ شَكُورٌ حَلِيمٌ

Transliteration in tuq'riḍū l-laha qarḍan ḥasanan yuḍāʿif'hu lakum wayaghfir lakum wal-lahu shakūrun ḥalīmun

Kannada ನೀವು ಅಲ್ಲಾಹನಿಗೆ ಉತ್ತಮ ಸಾಲ ನೀಡಿದರೆ ಅವನು ನಿಮಗೆ ಅನೇಕ ಪಟ್ಟು ಹೆಚ್ಚಿಸಿಕೊಡುವನು ಮತ್ತು ನಿಮಗೆ ಕ್ಷಮಿಸುವನು. ಅಲ್ಲಾಹನು ಮಹಾ ಕೃತಜ್ಞನೂ ಸಹನಶೀಲನೂ ಆಗಿರುತ್ತಾನೆ.

Verse 18

عَـٰلِمُ ٱلْغَيْبِ وَٱلشَّهَـٰدَةِ ٱلْعَزِيزُ ٱلْحَكِيمُ

Transliteration ʿālimu l-ghaybi wal-shahādati l-ʿazīzu l-ḥakīmu

Kannada ದೃಶ್ಯ - ಅದೃಶ್ಯಗಳ ಜ್ಞಾನಿ. ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.

Read Surah At-Taghabun in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.