MyDugsiStart learning

Surah Ar-Rum in Kannada: translation and audio

Surah 30 · الروم · The Romans · 60 verses

Surah Ar-Rum verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ar-Rum word by word in English.

Verse 1

الٓمٓ

Transliteration alif-lam-meem

Kannada ಅಲಿಫ್ ಲಾಮ್ ಮೀಮ್.

Verse 2

غُلِبَتِ ٱلرُّومُ

Transliteration ghulibati l-rūmu

Kannada ರೋಮನರು (ಅರೇಬಿಯಾದ) ಅತ್ಯಂತ ಸಮೀಪದ ಭೂಪ್ರದೇಶದಲ್ಲಿ ಪರಾಜಿತರಾದರು.

Verse 3

فِىٓ أَدْنَى ٱلْأَرْضِ وَهُم مِّنۢ بَعْدِ غَلَبِهِمْ سَيَغْلِبُونَ

Transliteration fī adnā l-arḍi wahum min baʿdi ghalabihim sayaghlibūna

Kannada ತಮ್ಮ ಪರಾ ಜಯದ ನಂತರದ ಕೆಲವೇ ವರ್ಷಗಳಲ್ಲಿ ಅವರು ಜಯಿಸಲಿರುವರು.

Verse 4

فِى بِضْعِ سِنِينَ ۗ لِلَّهِ ٱلْأَمْرُ مِن قَبْلُ وَمِنۢ بَعْدُ ۚ وَيَوْمَئِذٍ يَفْرَحُ ٱلْمُؤْمِنُونَ

Transliteration fī biḍ'ʿi sinīna lillahi l-amru min qablu wamin baʿdu wayawma-idhin yafraḥu l-mu'minūna

Kannada ಅದರ ಹಿಂದೆಯೂ ನಂತರವೂ ಪ್ರಭುತ್ವ ಅಲ್ಲಾಹನದ್ದು. ಅಂದು ಸತ್ಯವಿಶ್ವಾಸಿಗಳು ಅಲ್ಲಾಹನ ಸಹಾಯದಿಂದ ಸಂತೋಷಗೊಳ್ಳುವರು.

Verse 5

بِنَصْرِ ٱللَّهِ ۚ يَنصُرُ مَن يَشَآءُ ۖ وَهُوَ ٱلْعَزِيزُ ٱلرَّحِيمُ

Transliteration binaṣri l-lahi yanṣuru man yashāu wahuwa l-ʿazīzu l-raḥīmu

Kannada ಅಲ್ಲಾಹು ತಾನಿಚ್ಚಿಸಿದವರಿಗೆ ಸಹಾಯ ಮಾಡುತ್ತಾನೆ. ಅವನು ಮಹಾಪ್ರತಾಪನೂ ಕರುಣಾಮಯನೂ ಆಗಿರುತ್ತಾನೆ.

Verse 6

وَعْدَ ٱللَّهِ ۖ لَا يُخْلِفُ ٱللَّهُ وَعْدَهُۥ وَلَـٰكِنَّ أَكْثَرَ ٱلنَّاسِ لَا يَعْلَمُونَ

Transliteration waʿda l-lahi lā yukh'lifu l-lahu waʿdahu walākinna akthara l-nāsi lā yaʿlamūna

Kannada ಇದು ಅಲ್ಲಾಹನ ವಾಗ್ದಾನ. ಅಲ್ಲಾಹು ತನ್ನ ವಾಗ್ದಾನವನ್ನು ಉಲ್ಲಂಘಿಸಲಾರ. ಆದರೆ ಹೆಚ್ಚಿನವರು ಅದನ್ನು ತಿಳಿಯುವುದಿಲ್ಲ.

Verse 7

يَعْلَمُونَ ظَـٰهِرًا مِّنَ ٱلْحَيَوٰةِ ٱلدُّنْيَا وَهُمْ عَنِ ٱلْـَٔاخِرَةِ هُمْ غَـٰفِلُونَ

Transliteration yaʿlamūna ẓāhiran mina l-ḥayati l-dun'yā wahum ʿani l-ākhirati hum ghāfilūna

Kannada ಲೌಕಿಕ ಜೀವನದ ಬಾಹ್ಯ ಮುಖವನ್ನು ಮಾತ್ರ ಅವರು ತಿಳಿಯುತ್ತಾರೆ. ಆದರೆ ಪರಲೋಕದ ಕುರಿತು ಅವರು ಅಶೃದ್ಧರಾಗಿದ್ದಾರೆ .

Verse 8

أَوَلَمْ يَتَفَكَّرُوا۟ فِىٓ أَنفُسِهِم ۗ مَّا خَلَقَ ٱللَّهُ ٱلسَّمَـٰوَٰتِ وَٱلْأَرْضَ وَمَا بَيْنَهُمَآ إِلَّا بِٱلْحَقِّ وَأَجَلٍ مُّسَمًّى ۗ وَإِنَّ كَثِيرًا مِّنَ ٱلنَّاسِ بِلِقَآئِ رَبِّهِمْ لَكَـٰفِرُونَ

Transliteration awalam yatafakkarū fī anfusihim mā khalaqa l-lahu l-samāwāti wal-arḍa wamā baynahumā illā bil-ḥaqi wa-ajalin musamman wa-inna kathīran mina l-nāsi biliqāi rabbihim lakāfirūna

Kannada ತಮ್ಮ ಕುರಿತಾಗಿಯೇ ಅವರು ಯೋಚಿಸಲಿ ಲ್ಲವೇ? ಅವರು ಸ್ವಯಂ ಆಲೋಚಿಸುತ್ತಿರಲಿ ಲ್ಲವೇ? ಅಲ್ಲಾಹನು ಆಕಾಶಗಳನ್ನೂ ಭೂಮಿ ಯನ್ನೂ ಅವುಗಳ ನಡುವೆ ಇರುವುದನ್ನೂ ಸತ್ಯ ಪೂರ್ಣವಾಗಿ ಮತ್ತು ಒಂದು ನಿರ್ದಿಷ್ಟ ಅವಧಿ ನಿರ್ಣಯದೊಂದಿಗೇ ಸೃಷ್ಟಿಸಿದ್ದಾನೆ. ಆದರೆ ಜನರಲ್ಲಿ ಅನೇಕರು ತಮ್ಮ ಪ್ರಭುವಿನ ಮುಖಾ ಮುಖಿಯನ್ನು ನಿರಾಕರಿಸುತ್ತಾರೆ.

Verse 9

أَوَلَمْ يَسِيرُوا۟ فِى ٱلْأَرْضِ فَيَنظُرُوا۟ كَيْفَ كَانَ عَـٰقِبَةُ ٱلَّذِينَ مِن قَبْلِهِمْ ۚ كَانُوٓا۟ أَشَدَّ مِنْهُمْ قُوَّةً وَأَثَارُوا۟ ٱلْأَرْضَ وَعَمَرُوهَآ أَكْثَرَ مِمَّا عَمَرُوهَا وَجَآءَتْهُمْ رُسُلُهُم بِٱلْبَيِّنَـٰتِ ۖ فَمَا كَانَ ٱللَّهُ لِيَظْلِمَهُمْ وَلَـٰكِن كَانُوٓا۟ أَنفُسَهُمْ يَظْلِمُونَ

Transliteration awalam yasīrū fī l-arḍi fayanẓurū kayfa kāna ʿāqibatu alladhīna min qablihim kānū ashadda min'hum quwwatan wa-athārū l-arḍa waʿamarūhā akthara mimmā ʿamarūhā wajāathum rusuluhum bil-bayināti famā kāna l-lahu liyaẓlimahum walākin kānū anfusahum yaẓlimūna

Kannada ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚೆ ಗತಿಸಿ ಹೋದವರ ಅಂತಿಮ ಪರಿಣಾಮ ಏನಾಯಿತೆಂದು ನೋಡುವುದಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಬಲಶಾಲಿಗಳಾಗಿದ್ದರು. ಅವರು ನೆಲವನ್ನು ಚೆನ್ನಾಗಿ ಅಗೆದು ಕೃಷಿ ಭೂಮಿ ಯಲ್ಲಿ ಬಿತ್ತನೆಯನ್ನು ನಡೆಸಿದರು. ಇವರು ನಡೆ ಸಿದ ಇಮಾರತುಗಳಿಗಿಂತ ಹೆಚ್ಚು ಇಮಾರತು ಗಳನ್ನು ಅವರು ನಡೆಸಿದ್ದರು. ಅವರಿಗೆ ಅವರ ಸಂದೇಶವಾಹಕರು ಸುವ್ಯಕ್ತ ನಿದರ್ಶನಗಳನ್ನು ತಂದರು. (ಪ್ರವಾದಿಗಳನ್ನು ತಳ್ಳಿ ಹಾಕಿದ ಕಾರಣ ಅವರು ಶಿಕ್ಷೆಗೆ ಬಲಿಯಾದರು). ಅಲ್ಲಾಹು ಅವ ರಿಗೆ ಅಕ್ರಮವೆಸಗುವವನಾಗಿರಲಿಲ್ಲ. ಆದರೆ ಅವರು ತಾವೇ ತಮ್ಮ ಮೇಲೆ ಅಕ್ರಮ ವೆಸಗು ವವರಾಗಿದ್ದರು.

Verse 10

ثُمَّ كَانَ عَـٰقِبَةَ ٱلَّذِينَ أَسَـٰٓـُٔوا۟ ٱلسُّوٓأَىٰٓ أَن كَذَّبُوا۟ بِـَٔايَـٰتِ ٱللَّهِ وَكَانُوا۟ بِهَا يَسْتَهْزِءُونَ

Transliteration thumma kāna ʿāqibata alladhīna asāū l-sūā an kadhabū biāyāti l-lahi wakānū bihā yastahziūna

Kannada ತರುವಾಯ ಪಾಪಕರ್ಮಗಳನ್ನು ಎಸಗಿದ್ದವರ ಪರಿಣಾಮವು ಬಹಳ ಕೆಟ್ಟದಾಯಿತು. ಏಕೆಂದರೆ ಅವರು ಅಲ್ಲಾಹನ ದೃಷ್ಟಾಂತಗಳನ್ನು ಸುಳ್ಳಾಗಿಸಿದ್ದರು ಮತ್ತು ಅವರು ಅವುಗಳನ್ನು ಅಪಹಾಸ್ಯ ಮಾಡುತ್ತಿದ್ದರು.

Verse 11

ٱللَّهُ يَبْدَؤُا۟ ٱلْخَلْقَ ثُمَّ يُعِيدُهُۥ ثُمَّ إِلَيْهِ تُرْجَعُونَ

Transliteration al-lahu yabda-u l-khalqa thumma yuʿīduhu thumma ilayhi tur'jaʿūna

Kannada ಅಲ್ಲಾಹನು ಸೃಷ್ಟಿಯನ್ನು ಆರಂಭಿಸುವನು. ನಂತರ ಅದನ್ನು ಮರಳಿ ಸೃಷ್ಟಿಸುವನು. ಮುಂದೆ ಅವನ ಕಡೆಗೇ ನೀವು ಮರಳಿಸಲ್ಪಡುವಿರಿ.

Verse 12

وَيَوْمَ تَقُومُ ٱلسَّاعَةُ يُبْلِسُ ٱلْمُجْرِمُونَ

Transliteration wayawma taqūmu l-sāʿatu yub'lisu l-muj'rimūna

Kannada ಲೋಕಾವಸಾನದ ಘಳಿಗೆ ನೆಲೆಗೊಳ್ಳುವ ದಿನ ಅಪರಾಧಿಗಳು ನಿರುತ್ತರರಾಗುವರು.

Verse 13

وَلَمْ يَكُن لَّهُم مِّن شُرَكَآئِهِمْ شُفَعَـٰٓؤُا۟ وَكَانُوا۟ بِشُرَكَآئِهِمْ كَـٰفِرِينَ

Transliteration walam yakun lahum min shurakāihim shufaʿāu wakānū bishurakāihim kāfirīna

Kannada ಅಂದು ಅವರ ಸಹಭಾಗಿಗಳ ಪೈಕಿ ಅವರಿಗೆ ಶಿಫಾರಸು ಮಾಡುವವರಿರುವುದಿಲ್ಲ. ಅವರು ತಮ್ಮ ಸಹಭಾಗಿಗಳನ್ನು ನಿಷೇಧಿಸುವರು.

Verse 14

وَيَوْمَ تَقُومُ ٱلسَّاعَةُ يَوْمَئِذٍ يَتَفَرَّقُونَ

Transliteration wayawma taqūmu l-sāʿatu yawma-idhin yatafarraqūna

Kannada ಅಂತಿಮ ಘಳಿಗೆಯು ನೆಲೆಗೊಳ್ಳುವ ದಿನ ಅವರು (ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳು) ಹರಿ ಹಂಚಾಗಿ ಒಡೆದು ಹೋಗುವರು.

Verse 15

فَأَمَّا ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ فَهُمْ فِى رَوْضَةٍ يُحْبَرُونَ

Transliteration fa-ammā alladhīna āmanū waʿamilū l-ṣāliḥāti fahum fī rawḍatin yuḥ'barūna

Kannada ಆದರೆ ಸತ್ಯವಿಶ್ವಾಸವಿರಿಸಿದ ಮತ್ತು ಸತ್ಕರ್ಮ ವೆಸಗಿದವರು ಸ್ವರ್ಗೋದ್ಯಾನದಲ್ಲಿ ಹರ್ಷೋಲ್ಲಾಸದಿಂದ ನಲಿದಾಡುವರು.

Verse 16

وَأَمَّا ٱلَّذِينَ كَفَرُوا۟ وَكَذَّبُوا۟ بِـَٔايَـٰتِنَا وَلِقَآئِ ٱلْـَٔاخِرَةِ فَأُو۟لَـٰٓئِكَ فِى ٱلْعَذَابِ مُحْضَرُونَ

Transliteration wa-ammā alladhīna kafarū wakadhabū biāyātinā waliqāi l-ākhirati fa-ulāika fī l-ʿadhābi muḥ'ḍarūna

Kannada ಸತ್ಯವನ್ನು ನಿಷೇಧಿಸಿದ ಮತ್ತು ನಮ್ಮ ನಿದರ್ಶನ ಗಳನ್ನೂ ಪರಲೋಕದ ಮುಖಾಮುಖಿ ಯನ್ನೂ ಸುಳ್ಳಾಗಿಸಿದ ಜನರು ಶಿಕ್ಷೆಯಲ್ಲಿ ಹಾಜರಾಗುವರು.

Verse 17

فَسُبْحَـٰنَ ٱللَّهِ حِينَ تُمْسُونَ وَحِينَ تُصْبِحُونَ

Transliteration fasub'ḥāna l-lahi ḥīna tum'sūna waḥīna tuṣ'biḥūna

Kannada ಆದುದರಿಂದ ನೀವು ಸಂಧ್ಯಾಕಾಲದಲ್ಲೂ, ಪ್ರಾತಃಕಾಲದಲ್ಲೂ ಅಲ್ಲಾಹನ ಪಾವಿತ್ರ್ಯವನ್ನು ಕೊಂಡಾಡಿರಿ.

Verse 18

وَلَهُ ٱلْحَمْدُ فِى ٱلسَّمَـٰوَٰتِ وَٱلْأَرْضِ وَعَشِيًّا وَحِينَ تُظْهِرُونَ

Transliteration walahu l-ḥamdu fī l-samāwāti wal-arḍi waʿashiyyan waḥīna tuẓ'hirūna

Kannada ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಸರ್ವಸ್ತುತಿ ಅವನಿಗೇ ಮೀಸಲು. ಸಾಯಾಹ್ನ ವೇಳೆಯಲ್ಲೂ ನಿಮಗೆ ಮಧ್ಯಾಹ್ನ ಸಮಯ ಬಂದಾಗಲೂ ಅವನನ್ನು ಪ್ರಕೀರ್ತಿಸಿರಿ.

Verse 19

يُخْرِجُ ٱلْحَىَّ مِنَ ٱلْمَيِّتِ وَيُخْرِجُ ٱلْمَيِّتَ مِنَ ٱلْحَىِّ وَيُحْىِ ٱلْأَرْضَ بَعْدَ مَوْتِهَا ۚ وَكَذَٰلِكَ تُخْرَجُونَ

Transliteration yukh'riju l-ḥaya mina l-mayiti wayukh'riju l-mayita mina l-ḥayi wayuḥ'yī l-arḍa baʿda mawtihā wakadhālika tukh'rajūna

Kannada ಅವನು ಸಜೀವಿಯನ್ನು ನಿರ್ಜೀವಿಯಿಂದ ಹೊರತರುತ್ತಾನೆ. ನಿರ್ಜೀವಿಯನ್ನು ಸಜೀವಿಯಿಂದ ಹೊರತರುತ್ತಾನೆ. ಭೂಮಿಗೆ ಅದರ ಸಾವಿನ ಬಳಿಕ ಮತ್ತೆ ಜೀವದಾನ ಮಾಡುತ್ತಾನೆ. ಇದೇ ರೀತಿಯಲ್ಲಿ ನೀವು (ಮರಣಾನಂತರ ಸ್ಥಿತಿಯಿಂದ) ಹೊರ ತೆಗೆಯಲ್ಪಡುವಿರಿ.

Verse 20

وَمِنْ ءَايَـٰتِهِۦٓ أَنْ خَلَقَكُم مِّن تُرَابٍ ثُمَّ إِذَآ أَنتُم بَشَرٌ تَنتَشِرُونَ

Transliteration wamin āyātihi an khalaqakum min turābin thumma idhā antum basharun tantashirūna

Kannada ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದ್ದು ತರುವಾಯ ನೀವು ಭೂಮಿಯಲ್ಲಿ ಹರಡುತ್ತಿರುವ ಮನುಷ್ಯರಾಗಿರುವುದು ಅವನ ನಿದರ್ಶನಗಳಲ್ಲೊಂದು.

Verse 21

وَمِنْ ءَايَـٰتِهِۦٓ أَنْ خَلَقَ لَكُم مِّنْ أَنفُسِكُمْ أَزْوَٰجًا لِّتَسْكُنُوٓا۟ إِلَيْهَا وَجَعَلَ بَيْنَكُم مَّوَدَّةً وَرَحْمَةً ۚ إِنَّ فِى ذَٰلِكَ لَـَٔايَـٰتٍ لِّقَوْمٍ يَتَفَكَّرُونَ

Transliteration wamin āyātihi an khalaqa lakum min anfusikum azwājan litaskunū ilayhā wajaʿala baynakum mawaddatan waraḥmatan inna fī dhālika laāyātin liqawmin yatafakkarūna

Kannada ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರಿಂದ ಶಾಂತಿ ಹೊಂದುವಂತೆ ಮಾಡಿದ್ದು ಮತ್ತು ನಿಮ್ಮ ನಡುವೆ ಪ್ರೀತಿ ಮತ್ತು ವಾತ್ಸಲ್ಯವನ್ನುಂಟು ಮಾಡಿದ್ದು ಅವನ ನಿದರ್ಶನಗಳಲ್ಲೊಂದು. ವಿವೇಚಿಸುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.

Verse 22

وَمِنْ ءَايَـٰتِهِۦ خَلْقُ ٱلسَّمَـٰوَٰتِ وَٱلْأَرْضِ وَٱخْتِلَـٰفُ أَلْسِنَتِكُمْ وَأَلْوَٰنِكُمْ ۚ إِنَّ فِى ذَٰلِكَ لَـَٔايَـٰتٍ لِّلْعَـٰلِمِينَ

Transliteration wamin āyātihi khalqu l-samāwāti wal-arḍi wa-ikh'tilāfu alsinatikum wa-alwānikum inna fī dhālika laāyātin lil'ʿālimīna

Kannada ಆಕಾಶಗಳು ಮತ್ತು ಭೂಮಿಯ ಸೃಷ್ಟಿಯೂ ನಿಮ್ಮ ಭಾಷೆಗಳು ಹಾಗೂ ವರ್ಣಗಳ ವ್ಯತ್ಯಾ ಸವೂ ಅವನ ನಿದರ್ಶನಗಳಲ್ಲಿ ಸೇರಿವೆ. ಜ್ಞಾನವಂತರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.

Verse 23

وَمِنْ ءَايَـٰتِهِۦ مَنَامُكُم بِٱلَّيْلِ وَٱلنَّهَارِ وَٱبْتِغَآؤُكُم مِّن فَضْلِهِۦٓ ۚ إِنَّ فِى ذَٰلِكَ لَـَٔايَـٰتٍ لِّقَوْمٍ يَسْمَعُونَ

Transliteration wamin āyātihi manāmukum bi-al-layli wal-nahāri wa-ib'tighāukum min faḍlihi inna fī dhālika laāyātin liqawmin yasmaʿūna

Kannada ಹಗಲು-ರಾತ್ರಿಯಲ್ಲಿ ನಿಮ್ಮ ನಿದ್ರೆಯೂ ನೀವು ಅವನ ಅನುಗ್ರಹದಿಂದ ಉಪಜೀವನ ಮಾರ್ಗ ವನ್ನು ಹುಡುಕುವುದೂ ಅವನ ನಿದರ್ಶನ ಗಳಲ್ಲೊಂದು. ಆಲಿಸುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.

Verse 24

وَمِنْ ءَايَـٰتِهِۦ يُرِيكُمُ ٱلْبَرْقَ خَوْفًا وَطَمَعًا وَيُنَزِّلُ مِنَ ٱلسَّمَآءِ مَآءً فَيُحْىِۦ بِهِ ٱلْأَرْضَ بَعْدَ مَوْتِهَآ ۚ إِنَّ فِى ذَٰلِكَ لَـَٔايَـٰتٍ لِّقَوْمٍ يَعْقِلُونَ

Transliteration wamin āyātihi yurīkumu l-barqa khawfan waṭamaʿan wayunazzilu mina l-samāi māan fayuḥ'yī bihi l-arḍa baʿda mawtihā inna fī dhālika laāyātin liqawmin yaʿqilūna

Kannada ಅವನು ನಿಮಗೆ ಭಯ ಹಾಗೂ ಆಶೆ ಹುಟ್ಟಿಸಿ ಮಿಂಚಿನ ಹೊಳಪನ್ನು ತೋರಿಸುವುದು ಹಾಗೂ ಆಕಾಶದಿಂದ ಮಳೆ ನೀರನ್ನು ಸುರಿಸುವುದು ಅನಂತರ ಅದರ ಮೂಲಕ ಭೂಮಿಗೆ ಅದರ ಮರಣದ ಬಳಿಕ ಮತ್ತೆ ಜೀವ ನೀಡುವುದು ಅವನ ನಿದರ್ಶನಗಳಲ್ಲಿ ಸೇರಿವೆ. ಯೋಚಿಸುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.

Verse 25

وَمِنْ ءَايَـٰتِهِۦٓ أَن تَقُومَ ٱلسَّمَآءُ وَٱلْأَرْضُ بِأَمْرِهِۦ ۚ ثُمَّ إِذَا دَعَاكُمْ دَعْوَةً مِّنَ ٱلْأَرْضِ إِذَآ أَنتُمْ تَخْرُجُونَ

Transliteration wamin āyātihi an taqūma l-samāu wal-arḍu bi-amrihi thumma idhā daʿākum daʿwatan mina l-arḍi idhā antum takhrujūna

Kannada ಆಕಾಶ, ಭೂಮಿಯು ಆತನ ಆಜ್ಞೆ ಪ್ರಕಾರ ನೆಲೆ ನಿಂತಿರುವುದು ಆತನ ನಿದರ್ಶನ. ನಂತರ ಭೂಮಿಯಿಂದ ನಿಮ್ಮನ್ನು ಅವನು ಒಂದು ಕರೆ ಕರೆದರೆ ತಕ್ಷಣ ನೀವು (ಭೂಮಿಯಿಂದ ಜೀವಂತರಾಗಿ) ಹೊರಬರುವಿರಿ.

Verse 26

وَلَهُۥ مَن فِى ٱلسَّمَـٰوَٰتِ وَٱلْأَرْضِ ۖ كُلٌّ لَّهُۥ قَـٰنِتُونَ

Transliteration walahu man fī l-samāwāti wal-arḍi kullun lahu qānitūna

Kannada ಭೂಮ್ಯಾಕಾಶಗಳಲ್ಲಿ ಇರುವವರು ಅವನಿಗೆ ಸೇರಿದ್ದು. ಅವರೆಲ್ಲರೂ ಅವನಿಗೆ ಶರಣರು.

Verse 27

وَهُوَ ٱلَّذِى يَبْدَؤُا۟ ٱلْخَلْقَ ثُمَّ يُعِيدُهُۥ وَهُوَ أَهْوَنُ عَلَيْهِ ۚ وَلَهُ ٱلْمَثَلُ ٱلْأَعْلَىٰ فِى ٱلسَّمَـٰوَٰتِ وَٱلْأَرْضِ ۚ وَهُوَ ٱلْعَزِيزُ ٱلْحَكِيمُ

Transliteration wahuwa alladhī yabda-u l-khalqa thumma yuʿīduhu wahuwa ahwanu ʿalayhi walahu l-mathalu l-aʿlā fī l-samāwāti wal-arḍi wahuwa l-ʿazīzu l-ḥakīmu

Kannada ಸೃಷ್ಟಿಯ ಆರಂಭ ಮಾಡುವವನೂ ಅದರ ಪುನ ರಾವರ್ತನೆ ಮಾಡುವವನೂ ಅವನೇ. ಇದು ಅವನಿಗೆ ಬಲು ಸುಲಭ. ಭೂಮಿ-ಆಕಾಶಗಳಲ್ಲಿ ಅವನಿಗೆ ಸರ್ವಶ್ರೇಷ್ಟಗುಣವಿದ್ದು ಅವನು ಪ್ರಬಲನೂ ಅಗಾಧ ತಂತ್ರಜ್ಞನೂ ಆಗಿರುತ್ತಾನೆ.

Verse 28

ضَرَبَ لَكُم مَّثَلًا مِّنْ أَنفُسِكُمْ ۖ هَل لَّكُم مِّن مَّا مَلَكَتْ أَيْمَـٰنُكُم مِّن شُرَكَآءَ فِى مَا رَزَقْنَـٰكُمْ فَأَنتُمْ فِيهِ سَوَآءٌ تَخَافُونَهُمْ كَخِيفَتِكُمْ أَنفُسَكُمْ ۚ كَذَٰلِكَ نُفَصِّلُ ٱلْـَٔايَـٰتِ لِقَوْمٍ يَعْقِلُونَ

Transliteration ḍaraba lakum mathalan min anfusikum hal lakum min mā malakat aymānukum min shurakāa fī mā razaqnākum fa-antum fīhi sawāon takhāfūnahum kakhīfatikum anfusakum kadhālika nufaṣṣilu l-āyāti liqawmin yaʿqilūna

Kannada ನಿಮ್ಮಿಂದಲೇ ಒಂದು ಉಪಮೆಯನ್ನು ನಿಮಗೆ ಅವನು ವಿವರಿಸಿ ಕೊಡುತ್ತಾನೆ. ನಾವು ನಿಮಗೆ ನೀಡಿರುವ ಸಂಪತ್ತಿನಲ್ಲಿ ಸಮಾನ ಹಕ್ಕುದಾರರಾ ಗಿದ್ದು, ನಿಮ್ಮ ಸ್ವಂತ ಜನರನ್ನು ಹೆದರುವಂತೆ ನೀವು ಹೆದರುವ ಪಾಲುದಾರರು ನಿಮ್ಮ ಒಡೆತನ ದಲ್ಲಿರುವ ನಿಮ್ಮ ಗುಲಾಮರ ಪೈಕಿ ಯಾರಾದರೂ ಇರುವರೇ? ಈ ರೀತಿಯಲ್ಲಿ ನಾವು ಯೋಚಿ ಸುವ ಜನರಿಗೆ ನಮ್ಮ ನಿದರ್ಶನಗಳನ್ನು ವಿವರ ವಾಗಿ ನಿರೂಪಿಸುತ್ತೇವೆ.

Verse 29

بَلِ ٱتَّبَعَ ٱلَّذِينَ ظَلَمُوٓا۟ أَهْوَآءَهُم بِغَيْرِ عِلْمٍ ۖ فَمَن يَهْدِى مَنْ أَضَلَّ ٱللَّهُ ۖ وَمَا لَهُم مِّن نَّـٰصِرِينَ

Transliteration bali ittabaʿa alladhīna ẓalamū ahwāahum bighayri ʿil'min faman yahdī man aḍalla l-lahu wamā lahum min nāṣirīna

Kannada ಆದರೆ ಅಕ್ರಮಿಗಳು ಏನೂ ಅರಿವಿಲ್ಲದೆ ತಮ್ಮ ತನ್ನಿಚ್ಚೆಗಳನ್ನು ಅನುಸರಿಸುತ್ತಿದ್ದಾರೆ. ಅಲ್ಲಾಹನು ದಾರಿಗೆಡಿಸಿ ಬಿಟ್ಟವನಿಗೆ ನೇರ ದಾರಿ ತೋರು ವವನು ಯಾರು? ಇಂತಹವರಿಗೆ ಸಹಾ ಯಕರಾಗಿ ಯಾರೂ ಇರಲಾರರು.

Verse 30

فَأَقِمْ وَجْهَكَ لِلدِّينِ حَنِيفًا ۚ فِطْرَتَ ٱللَّهِ ٱلَّتِى فَطَرَ ٱلنَّاسَ عَلَيْهَا ۚ لَا تَبْدِيلَ لِخَلْقِ ٱللَّهِ ۚ ذَٰلِكَ ٱلدِّينُ ٱلْقَيِّمُ وَلَـٰكِنَّ أَكْثَرَ ٱلنَّاسِ لَا يَعْلَمُونَ

Transliteration fa-aqim wajhaka lilddīni ḥanīfan fiṭ'rata l-lahi allatī faṭara l-nāsa ʿalayhā lā tabdīla likhalqi l-lahi dhālika l-dīnu l-qayimu walākinna akthara l-nāsi lā yaʿlamūna

Kannada ಆದುದರಿಂದ (ಸಂದೇಶವಾಹಕರೇ) ಶುದ್ಧ ಮನಸ್ಕರಾಗಿ ನಿಮ್ಮ ಮುಖವನ್ನು ಧರ್ಮದ ನೇರ ನಿಲ್ಲಿಸಿರಿ. ಅಲ್ಲಾಹನು ಮಾನವನನ್ನು ಯಾವ ಪ್ರಕೃತಿಯಲ್ಲಿ ಸೃಷ್ಟಿಸಿರುವನೋ, ಅದೇ ಪ್ರಕೃತಿಯಲ್ಲೇ ಸ್ಥಿರವಾಗಿರಿ. ಅಲ್ಲಾಹನ ಸೃಷ್ಟಿಗೆ ತಿದ್ದುಪಡಿಯಿಲ್ಲ. ಇದುವೇ ವಕ್ರತೆಯಿಲ್ಲದೆ ನೆಲೆ ನಿಲ್ಲುವ ಸರಿಯಾದ ಧರ್ಮ. ಆದರೆ ಹೆಚ್ಚಿನವರು ಅರಿಯುವುದಿಲ್ಲ.

Verse 31

۞ مُنِيبِينَ إِلَيْهِ وَٱتَّقُوهُ وَأَقِيمُوا۟ ٱلصَّلَوٰةَ وَلَا تَكُونُوا۟ مِنَ ٱلْمُشْرِكِينَ

Transliteration munībīna ilayhi wa-ittaqūhu wa-aqīmū l-ṣalata walā takūnū mina l-mush'rikīna

Kannada ಅಲ್ಲಾಹನೆಡೆಗೆ ಮರಳುತ್ತ ಇದರಲ್ಲೇ ಸ್ಥಿರವಾಗಿರಿ. ಅಲ್ಲಾಹನನ್ನು ಭಯಪಡಿರಿ, ನಮಾಝನ್ನು ಸಂಸ್ಥಾಪಿಸಿರಿ. ನೀವು ಬಹುದೇವ ವಿಶ್ವಾಸಿಗಳಲ್ಲಿ ಸೇರಿ ಹೋಗಬೇಡಿರಿ.

Verse 32

مِنَ ٱلَّذِينَ فَرَّقُوا۟ دِينَهُمْ وَكَانُوا۟ شِيَعًا ۖ كُلُّ حِزْبٍۭ بِمَا لَدَيْهِمْ فَرِحُونَ

Transliteration mina alladhīna farraqū dīnahum wakānū shiyaʿan kullu ḥiz'bin bimā ladayhim fariḥūna

Kannada ಅಂದರೆ ತಮ್ಮ ಧರ್ಮವನ್ನು ಭಿನ್ನ ಭಿನ್ನಗೊಳಿಸಿ ಪಂಗಡಗಳಾಗಿರುವವರ ಕೂಟದಲ್ಲಿ! ಪ್ರತಿ ಯೊಂದು ಪಂಗಡವೂ ತನ್ನ ಬಳಿ ಏನಿದೆಯೋ ಅದರಲ್ಲೇ ಹರ್ಷಗೊಂಡಿದೆ.

Verse 33

وَإِذَا مَسَّ ٱلنَّاسَ ضُرٌّ دَعَوْا۟ رَبَّهُم مُّنِيبِينَ إِلَيْهِ ثُمَّ إِذَآ أَذَاقَهُم مِّنْهُ رَحْمَةً إِذَا فَرِيقٌ مِّنْهُم بِرَبِّهِمْ يُشْرِكُونَ

Transliteration wa-idhā massa l-nāsa ḍurrun daʿaw rabbahum munībīna ilayhi thumma idhā adhāqahum min'hu raḥmatan idhā farīqun min'hum birabbihim yush'rikūna

Kannada

Verse 34

لِيَكْفُرُوا۟ بِمَآ ءَاتَيْنَـٰهُمْ ۚ فَتَمَتَّعُوا۟ فَسَوْفَ تَعْلَمُونَ

Transliteration liyakfurū bimā ātaynāhum fatamattaʿū fasawfa taʿlamūna

Kannada ಯಾವುದೇ ವಿಪತ್ತು ಜನರಿಗೆ ತಟ್ಟಿದರೆ ಅವರು ತಮ್ಮ ಪ್ರಭುವಿನೆಡೆಗೆ ಮರಳಿ ಅವನಲ್ಲಿ ಪ್ರಾರ್ಥಿಸುತ್ತಾರೆ. ನಂತರ ಅವನು ಅವರಿಗೆ ತನ್ನ ಕರುಣೆಯ ರುಚಿಯನ್ನು ಮುಟ್ಟಿಸಿದರೆ ಹಠಾತ್ತನೆ ಅವರಲ್ಲಿ ಒಂದು ವಿಭಾಗವು ನಾವು ಮಾಡಿದ ಉಪಕಾರಕ್ಕೆ ಕೃತಘ್ನತೆ ತೋರಿಸಲಿಕ್ಕಾಗಿ ತಮ್ಮ ಪ್ರಭುವಿನೊಂದಿಗೆ ಇತರ ವಸ್ತುಗಳನ್ನು ಪಾಲು ಸೇರಿಸುತ್ತಾರೆ12. ಆದ್ದರಿಂದ ನೀವು ಸುಖಪಡಿರಿ. ನಂತರ ಅದರ ಪರಿಣಾಮವನ್ನು ತಿಳಿಯಲಿರುವಿರಿ.

Verse 35

أَمْ أَنزَلْنَا عَلَيْهِمْ سُلْطَـٰنًا فَهُوَ يَتَكَلَّمُ بِمَا كَانُوا۟ بِهِۦ يُشْرِكُونَ

Transliteration am anzalnā ʿalayhim sul'ṭānan fahuwa yatakallamu bimā kānū bihi yush'rikūna

Kannada ಇವರು ಅಲ್ಲಾಹನಿಗೆ ಪಾಲು ಸೇರಿಸುವ ಕುರಿತಂತೆ ಮಾತನಾಡುವ ಯಾವುದೇ ಪುರಾವೆಯನ್ನು ನಾವು ಇವರ ಮೇಲೆ ಅವತೀರ್ಣಗೊಳಿಸಿದ್ದುಂಟೇ?

Verse 36

وَإِذَآ أَذَقْنَا ٱلنَّاسَ رَحْمَةً فَرِحُوا۟ بِهَا ۖ وَإِن تُصِبْهُمْ سَيِّئَةٌۢ بِمَا قَدَّمَتْ أَيْدِيهِمْ إِذَا هُمْ يَقْنَطُونَ

Transliteration wa-idhā adhaqnā l-nāsa raḥmatan fariḥū bihā wa-in tuṣib'hum sayyi-atun bimā qaddamat aydīhim idhā hum yaqnaṭūna

Kannada ನಾವು ಮನುಷ್ಯರಿಗೆ ಯಾವುದೇ ಕೃಪೆಯ ಸವಿ ಯುಣಿಸಿದಾಗ ಅವರು ಅದರಿಂದ ಹಿರಿಹಿರಿ ಹಿಗ್ಗುತ್ತಾರೆ. ಆದರೆ ಅವರು ಮೊದಲು ಮಾಡಿದ ದುಷ್ಕøತ್ಯಗಳಿಂದಾಗಿ ಅವರಿಗೆ ಯಾವುದೇ ವಿಪತ್ತು ತಟ್ಟಿದರೆ ಕೂಡಲೇ ಅವರು ಹತಾಶರಾಗುತ್ತಾರೆ.

Verse 37

أَوَلَمْ يَرَوْا۟ أَنَّ ٱللَّهَ يَبْسُطُ ٱلرِّزْقَ لِمَن يَشَآءُ وَيَقْدِرُ ۚ إِنَّ فِى ذَٰلِكَ لَـَٔايَـٰتٍ لِّقَوْمٍ يُؤْمِنُونَ

Transliteration awalam yaraw anna l-laha yabsuṭu l-riz'qa liman yashāu wayaqdiru inna fī dhālika laāyātin liqawmin yu'minūna

Kannada ಅಲ್ಲಾಹನು ತಾನಿಚ್ಛಿಸಿದವರಿಗೆ ಆಹಾರವನ್ನು ವಿಸ್ತøತಗೊಳಿಸುವುದನ್ನೂ, ಕಡಿತಗೊಳಿಸುವುದನ್ನೂ ಇವರು ನೋಡುತ್ತಿಲ್ಲವೇ? ಇದರಲ್ಲಿ ಸತ್ಯ ವಿಶ್ವಾಸಿಗಳಿಗೆ ಅನೇಕ ದೃಷ್ಟಾಂತಗಳಿವೆ.

Verse 38

فَـَٔاتِ ذَا ٱلْقُرْبَىٰ حَقَّهُۥ وَٱلْمِسْكِينَ وَٱبْنَ ٱلسَّبِيلِ ۚ ذَٰلِكَ خَيْرٌ لِّلَّذِينَ يُرِيدُونَ وَجْهَ ٱللَّهِ ۖ وَأُو۟لَـٰٓئِكَ هُمُ ٱلْمُفْلِحُونَ

Transliteration faāti dhā l-qur'bā ḥaqqahu wal-mis'kīna wa-ib'na l-sabīli dhālika khayrun lilladhīna yurīdūna wajha l-lahi wa-ulāika humu l-muf'liḥūna

Kannada ಆದುದರಿಂದ ಹತ್ತಿರದ ಸಂಬಂಧಿಕನಿಗೂ, ಬಡವನಿಗೂ ಯಾತ್ರಿಕನಿಗೂ ಅವನವನ ಹಕ್ಕನ್ನು ಕೊಡಿರಿ. ಅಲ್ಲಾಹನ ಸಂತೃಪ್ತಿಯನ್ನು ಬಯಸುವವರಿಗೆ ಇದು ಉತ್ತಮವಾಗಿದ್ದು ಅವರೇ ಯಶಸ್ವಿಯಾಗುವವರು.

Verse 39

وَمَآ ءَاتَيْتُم مِّن رِّبًا لِّيَرْبُوَا۟ فِىٓ أَمْوَٰلِ ٱلنَّاسِ فَلَا يَرْبُوا۟ عِندَ ٱللَّهِ ۖ وَمَآ ءَاتَيْتُم مِّن زَكَوٰةٍ تُرِيدُونَ وَجْهَ ٱللَّهِ فَأُو۟لَـٰٓئِكَ هُمُ ٱلْمُضْعِفُونَ

Transliteration wamā ātaytum min riban liyarbuwā fī amwāli l-nāsi falā yarbū ʿinda l-lahi wamā ātaytum min zakatin turīdūna wajha l-lahi fa-ulāika humu l-muḍ'ʿifūna

Kannada ಜನರ ಸೊತ್ತಿನಲ್ಲಿ ಸೇರಿ ವೃದ್ಧಿಯಾಗಬೇಕೆಂದು ನೀವು ಕೊಡುವ ಬಡ್ಡಿಯು ಅಲ್ಲಾಹನ ಬಳಿ ವೃದ್ಧಿಸುವುದಿಲ್ಲ. ನೀವು ಅಲ್ಲಾಹನ ಸಂತೃಪ್ತಿ ಬಯಸಿ ಏನಾದರೂ ಝಕಾತ್ ಕೊಟ್ಟರೆ, ಅಂಥವರೇ ವಾಸ್ತವದಲ್ಲಿ ತಮ್ಮ ಪ್ರತಿಫಲವನ್ನು ವೃದ್ಧಿಸಿಕೊಳ್ಳುತ್ತಾರೆ.

Verse 40

ٱللَّهُ ٱلَّذِى خَلَقَكُمْ ثُمَّ رَزَقَكُمْ ثُمَّ يُمِيتُكُمْ ثُمَّ يُحْيِيكُمْ ۖ هَلْ مِن شُرَكَآئِكُم مَّن يَفْعَلُ مِن ذَٰلِكُم مِّن شَىْءٍ ۚ سُبْحَـٰنَهُۥ وَتَعَـٰلَىٰ عَمَّا يُشْرِكُونَ

Transliteration al-lahu alladhī khalaqakum thumma razaqakum thumma yumītukum thumma yuḥ'yīkum hal min shurakāikum man yafʿalu min dhālikum min shayin sub'ḥānahu wataʿālā ʿammā yush'rikūna

Kannada ನಿಮ್ಮನ್ನು ಸೃಷ್ಟಿಸಿದವನೂ, ನಂತರ ನಿಮಗೆ ಜೀವನಾಧಾರ ನೀಡಿದವನೂ, ಅನಂತರ ನಿಮಗೆ ಮರಣ ಕೊಡುವವನೂ ಆಮೇಲೆ ನಿಮ್ಮನ್ನು ಜೀವಂತಗೊಳಿಸುವವನೂ ಅಲ್ಲಾಹನಾಗಿರುವನು. ಆದರೆ ಈ ಕಾರ್ಯಗಳ ಪೈಕಿ ಯಾವುದ ನ್ನಾದರೂ ಮಾಡುವವರು ನಿಮ್ಮ ಭಾಗೀದಾರರಲ್ಲಿ ಯಾರಾದರೂ ಇರುವರೇ? ಇವರು ಪಾಲು ಸೇರಿಸುತ್ತಿರುವ ವಸ್ತುಗಳಿಂದ ಅವನು ಪರಮ ಪಾವನನೂ ಅತ್ಯುನ್ನತನೂ ಆಗಿರುತ್ತಾನೆ.

Verse 41

ظَهَرَ ٱلْفَسَادُ فِى ٱلْبَرِّ وَٱلْبَحْرِ بِمَا كَسَبَتْ أَيْدِى ٱلنَّاسِ لِيُذِيقَهُم بَعْضَ ٱلَّذِى عَمِلُوا۟ لَعَلَّهُمْ يَرْجِعُونَ

Transliteration ẓahara l-fasādu fī l-bari wal-baḥri bimā kasabat aydī l-nāsi liyudhīqahum baʿḍa alladhī ʿamilū laʿallahum yarjiʿūna

Kannada ಜನರ ಸ್ವಂತ ಕೈಗಳು ಮಾಡಿದ ಪಾಪದ ಫಲವಾಗಿ ನೆಲ-ಜಲಗಳಲ್ಲಿ ಕ್ಷೋಭೆ ಪ್ರತ್ಯಕ್ಷವಾಗಿದೆ. ಇದು ಅವರ ಕೆಲವು ಕರ್ಮಗಳ ಫಲವನ್ನು ಅವರಿಗೆ ಉಣಿಸಲಿಕ್ಕಾಗಿ. ಅವರು ಮರಳ ಬಹುದೆಂದು.

Verse 42

قُلْ سِيرُوا۟ فِى ٱلْأَرْضِ فَٱنظُرُوا۟ كَيْفَ كَانَ عَـٰقِبَةُ ٱلَّذِينَ مِن قَبْلُ ۚ كَانَ أَكْثَرُهُم مُّشْرِكِينَ

Transliteration qul sīrū fī l-arḍi fa-unẓurū kayfa kāna ʿāqibatu alladhīna min qablu kāna aktharuhum mush'rikīna

Kannada (ಸಂದೇಶವಾಹಕರೇ,) ತಾವು ಹೇಳಿರಿ, ನೀವು ಭೂಮಿಯಲ್ಲಿ ಸಂಚರಿಸಿ, ಆಮೇಲೆ ಹಿಂದೆ ಗತಿಸಿ ಹೋದವರ ಅಂತಿಮ ಪರಿಣಾಮ ಹೇಗಿತ್ತೆಂದು ನೋಡಿರಿ. ಅವರಲ್ಲಿ ಹೆಚ್ಚಿನವರು ಅಲ್ಲಾಹನಿಗೆ ಪಾಲು ಸೇರಿಸುವ ಬಹುದೇವಾರಾಧಕರಾಗಿದ್ದರು.

Verse 43

فَأَقِمْ وَجْهَكَ لِلدِّينِ ٱلْقَيِّمِ مِن قَبْلِ أَن يَأْتِىَ يَوْمٌ لَّا مَرَدَّ لَهُۥ مِنَ ٱللَّهِ ۖ يَوْمَئِذٍ يَصَّدَّعُونَ

Transliteration fa-aqim wajhaka lilddīni l-qayimi min qabli an yatiya yawmun lā maradda lahu mina l-lahi yawma-idhin yaṣṣaddaʿūna

Kannada ಆದುದರಿಂದ ಯಾವ ವಿಧದಲ್ಲೂ ತಡೆಯಲು ಸಾಧ್ಯವಿಲ್ಲದ ಒಂದು ದಿನವು ಅಲ್ಲಾಹನ ಕಡೆಯಿಂದ ಬರುವುದಕ್ಕೆ ಮುನ್ನ ನಿಮ್ಮ ಮುಖವನ್ನು ಸತ್ಯ ಧರ್ಮಕ್ಕೆ ಸ್ಥಿರಗೊಳಿಸಿರಿ. ಅಂದು ಜನರು ಪರಸ್ಪರ ಬೇರ್ಪಡುವರು.

Verse 44

مَن كَفَرَ فَعَلَيْهِ كُفْرُهُۥ ۖ وَمَنْ عَمِلَ صَـٰلِحًا فَلِأَنفُسِهِمْ يَمْهَدُونَ

Transliteration man kafara faʿalayhi kuf'ruhu waman ʿamila ṣāliḥan fali-anfusihim yamhadūna

Kannada ಯಾರು ಸತ್ಯವನ್ನು ನಿಷೇಧಿಸುತ್ತಾನೆ, ಅವನ ನಿಷೇಧದ ಫಲಾನುಭವ ಅವನ ಮೇಲೆಯೇ ಇದೆ. ಯಾರು ಸತ್ಕರ್ಮವೆಸಗುತ್ತಾರೆ, ಅವರು ತಮಗಾಗಿಯೇ ಸ್ವರ್ಗದ ಪದವಿಗಳನ್ನು ಸಿದ್ಧಗೊಳಿಸುತ್ತಾರೆ.

Verse 45

لِيَجْزِىَ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ مِن فَضْلِهِۦٓ ۚ إِنَّهُۥ لَا يُحِبُّ ٱلْكَـٰفِرِينَ

Transliteration liyajziya alladhīna āmanū waʿamilū l-ṣāliḥāti min faḍlihi innahu lā yuḥibbu l-kāfirīna

Kannada (ಹೀಗೆ ಸಿಡಿದು ಬೇರ್ಪಡುವುದು) ಸತ್ಯ ವಿಶ್ವಾಸ ವಿರಿಸಿದ ಮತ್ತು ಸತ್ಕರ್ಮವೆಸಗಿದವರಿಗೆ ಅಲ್ಲಾ ಹನು ತನ್ನ ಅನುಗ್ರಹದಿಂದ ಸತ್ಫಲ ನೀಡಲಿ ಕ್ಕಾಗಿದೆ. ನಿಶ್ಚಯವಾಗಿಯೂ ಅವನು ಸತ್ಯ ನಿಷೇಧಿಗಳನ್ನು ಮೆಚ್ಚುವುದಿಲ್ಲ.

Verse 46

وَمِنْ ءَايَـٰتِهِۦٓ أَن يُرْسِلَ ٱلرِّيَاحَ مُبَشِّرَٰتٍ وَلِيُذِيقَكُم مِّن رَّحْمَتِهِۦ وَلِتَجْرِىَ ٱلْفُلْكُ بِأَمْرِهِۦ وَلِتَبْتَغُوا۟ مِن فَضْلِهِۦ وَلَعَلَّكُمْ تَشْكُرُونَ

Transliteration wamin āyātihi an yur'sila l-riyāḥa mubashirātin waliyudhīqakum min raḥmatihi walitajriya l-ful'ku bi-amrihi walitabtaghū min faḍlihi walaʿallakum tashkurūna

Kannada ಸುವಾರ್ತೆ ನೀಡುತ್ತ ಮಾರುತಗಳನ್ನು ಕಳುಹಿಸುವುದು ಅಲ್ಲಾಹನ ನಿದರ್ಶನಗಳಲ್ಲಿ ಸೇರಿದೆ. ನಿಮಗೆ ತನ್ನ ಕೃಪೆಯಿಂದ ಆಸ್ವಾಧನೆ ನೀಡಲು ಹಾಗೂ ನಾವೆಗಳು ಅವನ ಆಜ್ಞೆಯಿಂದ ಚಲಿಸುತ್ತಿರಲು, ಆ ಮೂಲಕ ನೀವು ಅವನ ಅನುಗ್ರಹದಿಂದ ಉಪಜೀವನವನ್ನು ಅರಸಲು ಮತ್ತು ಅವನಿಗೆ ಕೃತಜ್ಞರಾಗಿರಲು.

Verse 47

وَلَقَدْ أَرْسَلْنَا مِن قَبْلِكَ رُسُلًا إِلَىٰ قَوْمِهِمْ فَجَآءُوهُم بِٱلْبَيِّنَـٰتِ فَٱنتَقَمْنَا مِنَ ٱلَّذِينَ أَجْرَمُوا۟ ۖ وَكَانَ حَقًّا عَلَيْنَا نَصْرُ ٱلْمُؤْمِنِينَ

Transliteration walaqad arsalnā min qablika rusulan ilā qawmihim fajāūhum bil-bayināti fa-intaqamnā mina alladhīna ajramū wakāna ḥaqqan ʿalaynā naṣru l-mu'minīna

Kannada ನಿಮಗಿಂತ ಮುಂಚೆ ಅನೇಕ ಸಂದೇಶವಾಹಕರನ್ನು ನಾವು ಅವರ ಜನಾಂಗದ ಕಡೆಗೆ ಖಂಡಿತ ರವಾನಿಸಿದ್ದೇವೆ. ಹಾಗೆ ಅವರು ಅವರ ಮುಂದೆ ಸುವ್ಯಕ್ತವಾದ ಅನೇಕ ನಿದರ್ಶನಗಳನ್ನು ತಂದರು. (ಆಗ ಅವರು ಅದನ್ನು ನಿಷೇಧಿಸಿದರು). ತನ್ನಿಮಿತ್ತ ಅಪರಾಧವೆಸಗಿದವರ ವಿರುದ್ಧ ನಾವು ಪ್ರತೀಕಾರ ಕ್ರಮ ಕೈಗೊಂಡಿದ್ದೇವೆ. ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಹೊಣೆಯಾಗಿತ್ತು. (ಅದನ್ನು ನಾವು ಮಾಡಿದೆವು).

Verse 48

ٱللَّهُ ٱلَّذِى يُرْسِلُ ٱلرِّيَـٰحَ فَتُثِيرُ سَحَابًا فَيَبْسُطُهُۥ فِى ٱلسَّمَآءِ كَيْفَ يَشَآءُ وَيَجْعَلُهُۥ كِسَفًا فَتَرَى ٱلْوَدْقَ يَخْرُجُ مِنْ خِلَـٰلِهِۦ ۖ فَإِذَآ أَصَابَ بِهِۦ مَن يَشَآءُ مِنْ عِبَادِهِۦٓ إِذَا هُمْ يَسْتَبْشِرُونَ

Transliteration al-lahu alladhī yur'silu l-riyāḥa fatuthīru saḥāban fayabsuṭuhu fī l-samāi kayfa yashāu wayajʿaluhu kisafan fatarā l-wadqa yakhruju min khilālihi fa-idhā aṣāba bihi man yashāu min ʿibādihi idhā hum yastabshirūna

Kannada ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಹಾಗೆ ಅವು ಮೋಡಗಳನ್ನು ಚದುರಿಸುತ್ತವೆ. ಅನಂತರ ಅವನು ತಾನಿಚ್ಛಿಸುವಂತೆ ಮೋಡಗಳನ್ನು ಆಕಾಶದಲ್ಲಿ ಹರಡುತ್ತಾನೆ. ಅವುಗಳನ್ನು ವಿಭಿನ್ನ ತುಂಡುಗಳನ್ನಾಗಿ ಮಾಡುತ್ತಾನೆ. ಆ ಬಳಿಕ ಮಳೆ ಹನಿಗಳು ಅದರೆಡೆಯಿಂದ ಹೊರಬರುವುದನ್ನು ತಾವು ನೋಡುತ್ತೀರಿ. ಅವನು ತನ್ನ ದಾಸರಲ್ಲಿ ತನಗಿಷ್ಟ ಬಂದವರ ಮೇಲೆ ಮಳೆಯನ್ನು ಸುರಿಸಿದಾಗ ಅವರು ಸಂತೋಷಪಡುತ್ತಾರೆ.

Verse 49

وَإِن كَانُوا۟ مِن قَبْلِ أَن يُنَزَّلَ عَلَيْهِم مِّن قَبْلِهِۦ لَمُبْلِسِينَ

Transliteration wa-in kānū min qabli an yunazzala ʿalayhim min qablihi lamub'lisīna

Kannada ಅವರು ತಮ್ಮ ಮೇಲೆ ಮಳೆ ಬೀಳುವ ಮುನ್ನ ನಿಜವಾಗಿಯೂ ನಿರಾಶರಾಗಿದ್ದರು.

Verse 50

فَٱنظُرْ إِلَىٰٓ ءَاثَـٰرِ رَحْمَتِ ٱللَّهِ كَيْفَ يُحْىِ ٱلْأَرْضَ بَعْدَ مَوْتِهَآ ۚ إِنَّ ذَٰلِكَ لَمُحْىِ ٱلْمَوْتَىٰ ۖ وَهُوَ عَلَىٰ كُلِّ شَىْءٍ قَدِيرٌ

Transliteration fa-unẓur ilā āthāri raḥmati l-lahi kayfa yuḥ'yī l-arḍa baʿda mawtihā inna dhālika lamuḥ'yī l-mawtā wahuwa ʿalā kulli shayin qadīrun

Kannada ಆದ್ದರಿಂದ ಅಲ್ಲಾಹನ ಅನುಗ್ರಹದ ಪರಿಣಾಮ ವನ್ನು ನೋಡಿರಿ. ಸತ್ತು ಬಿದ್ದ ನೆಲವನ್ನು ಅವನು ಹೇಗೆ ಜೀವಂತಗೊಳಿಸುತ್ತಾನೆ? ಹಾಗೆ ಸಜೀವಗೊಳಿಸುವವನೇ ಖಂಡಿತ ಮೃತರನ್ನು ಜೀವಂತಗೊಳಿಸುವವನು. ಸಕಲ ವಿಷಯಗಳ ಮೇಲೆ ಸಾಮಥ್ರ್ಯವುಳ್ಳವನು.

Verse 51

وَلَئِنْ أَرْسَلْنَا رِيحًا فَرَأَوْهُ مُصْفَرًّا لَّظَلُّوا۟ مِنۢ بَعْدِهِۦ يَكْفُرُونَ

Transliteration wala-in arsalnā rīḥan fara-awhu muṣ'farran laẓallū min baʿdihi yakfurūna

Kannada ನಾವೊಂದು ಸುಳಿಗಾಳಿಯನ್ನು ಕಳುಹಿಸಿದರೆ ಆಗ ಅವರು ಆ ಹೊಲವನ್ನು ಹಳದಿಯಾಗಿ ಕಂಡ ನಂತರ (ಹಿಂದಿನ) ಅನುಗ್ರಹವನ್ನು ತಳ್ಳಿ ಹಾಕುವರು.

Verse 52

فَإِنَّكَ لَا تُسْمِعُ ٱلْمَوْتَىٰ وَلَا تُسْمِعُ ٱلصُّمَّ ٱلدُّعَآءَ إِذَا وَلَّوْا۟ مُدْبِرِينَ

Transliteration fa-innaka lā tus'miʿu l-mawtā walā tus'miʿu l-ṣuma l-duʿāa idhā wallaw mud'birīna

Kannada (ಪೈಗಂಬರರೇ) ನೀವು ಮೃತರಿಗೆ ಕೇಳಿಸಲಾರಿರಿ, ಬೆನ್ನು ತಿರುಗಿಸಿ ಓಡುತ್ತಿರುವ ಕಿವುಡರಿಗೂ ನೀವು ಕರೆ ಕೇಳಿಸಲಾರಿರಿ.

Verse 53

وَمَآ أَنتَ بِهَـٰدِ ٱلْعُمْىِ عَن ضَلَـٰلَتِهِمْ ۖ إِن تُسْمِعُ إِلَّا مَن يُؤْمِنُ بِـَٔايَـٰتِنَا فَهُم مُّسْلِمُونَ

Transliteration wamā anta bihādi l-ʿum'yi ʿan ḍalālatihim in tus'miʿu illā man yu'minu biāyātinā fahum mus'limūna

Kannada ನೀವು ಕುರುಡರನ್ನು ಅವರ ದುರ್ಮಾರ್ಗದಿಂದ ರಕ್ಷಿಸಿ ಅವರಿಗೆ ಸನ್ಮಾರ್ಗದರ್ಶನ ಮಾಡಲಾರಿರಿ. ನಮ್ಮ ನಿದರ್ಶನಗಳ ಮೇಲೆ ವಿಶ್ವಾಸವಿರಿಸುವ ಹಾಗೂ ವಿಧೇಯರಾಗುವವರಿಗೆ (ಮುಸ್ಲಿಮ ರಾಗುವವರಿಗೆ) ಮಾತ್ರ ನೀವು ಕೇಳಿಸಬಲ್ಲಿರಿ.

Verse 54

۞ ٱللَّهُ ٱلَّذِى خَلَقَكُم مِّن ضَعْفٍ ثُمَّ جَعَلَ مِنۢ بَعْدِ ضَعْفٍ قُوَّةً ثُمَّ جَعَلَ مِنۢ بَعْدِ قُوَّةٍ ضَعْفًا وَشَيْبَةً ۚ يَخْلُقُ مَا يَشَآءُ ۖ وَهُوَ ٱلْعَلِيمُ ٱلْقَدِيرُ

Transliteration al-lahu alladhī khalaqakum min ḍaʿfin thumma jaʿala min baʿdi ḍaʿfin quwwatan thumma jaʿala min baʿdi quwwatin ḍaʿfan washaybatan yakhluqu mā yashāu wahuwa l-ʿalīmu l-qadīru

Kannada ನಿಮ್ಮನ್ನು ದುರ್ಬಲಾವಸ್ಥೆಯಿಂದ ಸೃಷ್ಟಿಸಿದವನು ಅಲ್ಲಾಹನು. ಮತ್ತೆ ದೌರ್ಬಲ್ಯದ ನಂತರ ಅವನು ಶಕ್ತಿಯನ್ನು ನೀಡಿದನು. ಈ ಶಕ್ತಿಯ ನಂತರ ನಿಮ್ಮನ್ನು ಬಲಹೀನತೆಗೆ ತಂದನು. ನೆರೆತವನ್ನೂ ಉಂಟು ಮಾಡಿದನು. ಅವನು ತಾನಿಚ್ಚಿಸಿದುದನ್ನು ಸೃಷ್ಟಿಸುತ್ತಾನೆ. ಅವನು ಸರ್ವಜ್ಞನೂ ಸರ್ವಶಕ್ತನೂ ಆಗಿರುತ್ತಾನೆ.

Verse 55

وَيَوْمَ تَقُومُ ٱلسَّاعَةُ يُقْسِمُ ٱلْمُجْرِمُونَ مَا لَبِثُوا۟ غَيْرَ سَاعَةٍ ۚ كَذَٰلِكَ كَانُوا۟ يُؤْفَكُونَ

Transliteration wayawma taqūmu l-sāʿatu yuq'simu l-muj'rimūna mā labithū ghayra sāʿatin kadhālika kānū yu'fakūna

Kannada ಅಂತ್ಯ ಘಳಿಗೆ ನೆಲೆಗೊಂಡರೆ ಅಪರಾಧಿಗಳು ನಾವು ಒಂದು ಘಳಿಗೆಗಿಂತ ಹೆಚ್ಚುಕಾಲ (ಇಹ ಲೋಕದಲ್ಲಿ) ತಂಗಿರಲಿಲ್ಲವೆಂದು ಆಣೆ ಹಾಕಿ ಹೇಳುವರು. ಅವರು ಐಹಿಕ ಜೀವನದಲ್ಲಿ ಹೀಗೆಯೇ ಸತ್ಯದಿಂದ ವಿಮುಖರಾದರು.

Verse 56

وَقَالَ ٱلَّذِينَ أُوتُوا۟ ٱلْعِلْمَ وَٱلْإِيمَـٰنَ لَقَدْ لَبِثْتُمْ فِى كِتَـٰبِ ٱللَّهِ إِلَىٰ يَوْمِ ٱلْبَعْثِ ۖ فَهَـٰذَا يَوْمُ ٱلْبَعْثِ وَلَـٰكِنَّكُمْ كُنتُمْ لَا تَعْلَمُونَ

Transliteration waqāla alladhīna ūtū l-ʿil'ma wal-īmāna laqad labith'tum fī kitābi l-lahi ilā yawmi l-baʿthi fahādhā yawmu l-baʿthi walākinnakum kuntum lā taʿlamūna

Kannada ಆದರೆ ಜ್ಞಾನ ಹಾಗೂ ಸತ್ಯವಿಶ್ವಾಸವನ್ನು ಹೊಂದಿ ದವರು ಹೀಗೆ ಹೇಳುವರು; ‘ಅಲ್ಲಾಹನ ಗ್ರಂಥದಲ್ಲಿ ಉಲ್ಲೇಖಿಸಿದ ಪ್ರಕಾರ ಪುನರುತ್ಥಾನ ದಿನದವರೆಗೂ ನೀವು ನೆಲೆಸಿದ್ದೀರಿ. ಇದು ಅದೇ ಪುನರುತ್ಥಾನ ದಿನ. ಆದರೆ ನೀವು ಇದನ್ನು ಅರಿತಿರಲಿಲ್ಲ’.

Verse 57

فَيَوْمَئِذٍ لَّا يَنفَعُ ٱلَّذِينَ ظَلَمُوا۟ مَعْذِرَتُهُمْ وَلَا هُمْ يُسْتَعْتَبُونَ

Transliteration fayawma-idhin lā yanfaʿu alladhīna ẓalamū maʿdhiratuhum walā hum yus'taʿtabūna

Kannada ಆ ದಿನದಂದು ಅಕ್ರಮಿಗಳಿಗೆ ಅವರ ನೆಪವೇನೂ ಫಲ ಕೊಡದು. ಅಲ್ಲದೆ, ಪರಿಹಾರ ಮಾಡಿಕೊಳ್ಳಲಿಕ್ಕೂ ಅವರನ್ನು ಕೇಳಿಕೊಳ್ಳಲಾಗದು.

Verse 58

وَلَقَدْ ضَرَبْنَا لِلنَّاسِ فِى هَـٰذَا ٱلْقُرْءَانِ مِن كُلِّ مَثَلٍ ۚ وَلَئِن جِئْتَهُم بِـَٔايَةٍ لَّيَقُولَنَّ ٱلَّذِينَ كَفَرُوٓا۟ إِنْ أَنتُمْ إِلَّا مُبْطِلُونَ

Transliteration walaqad ḍarabnā lilnnāsi fī hādhā l-qur'āni min kulli mathalin wala-in ji'tahum biāyatin layaqūlanna alladhīna kafarū in antum illā mub'ṭilūna

Kannada ಈ ಖುರ್‍ಆನ್‍ನಲ್ಲಿ ಜನರಿಗಾಗಿ ಎಲ್ಲ ತರದ ಉಪಮೆಯನ್ನು ನಾವು ನೀಡಿದ್ದೇವೆ. ನೀವು ಯಾವುದೇ ನಿದರ್ಶನವನ್ನು ಅವರಿಗೆ ತಂದರೂ ಸತ್ಯನಿಷೇಧಿಗಳು `ನೀವು ಮಿಥ್ಯವಾದಿಗಳು’ ಎಂದೇ ಖಂಡಿತ ಹೇಳುವರು.

Verse 59

كَذَٰلِكَ يَطْبَعُ ٱللَّهُ عَلَىٰ قُلُوبِ ٱلَّذِينَ لَا يَعْلَمُونَ

Transliteration kadhālika yaṭbaʿu l-lahu ʿalā qulūbi alladhīna lā yaʿlamūna

Kannada ಹೀಗೆ ಸತ್ಯವನ್ನು ತಿಳಿಯದವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತುವನು.

Verse 60

فَٱصْبِرْ إِنَّ وَعْدَ ٱللَّهِ حَقٌّ ۖ وَلَا يَسْتَخِفَّنَّكَ ٱلَّذِينَ لَا يُوقِنُونَ

Transliteration fa-iṣ'bir inna waʿda l-lahi ḥaqqun walā yastakhiffannaka alladhīna lā yūqinūna

Kannada ಆದುದರಿಂದ (ಪೈಗಂಬರರೇ) ತಾಳ್ಮೆ ವಹಿಸಿರಿ. ಅಲ್ಲಾಹನ ವಾಗ್ದಾನ ಖಂಡಿತ ಸತ್ಯ. ಸತ್ಯದಲ್ಲಿ ಅಚಲ ನಂಬಿಕೆ ಇರಿಸದ ಜನರು ತಮ್ಮ ಸ್ಥೈರ್ಯವನ್ನು ಚಂಚಲಗೊಳಿಸದಿರಲಿ.

Read Surah Ar-Rum in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.