Surah An-Nahl in Kannada: translation and audio
Surah 16 · النحل · The Bee · 128 verses
Surah An-Nahl verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah An-Nahl word by word in English.
Verse 1
أَتَىٰٓ أَمْرُ ٱللَّهِ فَلَا تَسْتَعْجِلُوهُ ۚ سُبْحَـٰنَهُۥ وَتَعَـٰلَىٰ عَمَّا يُشْرِكُونَ
Transliteration atā amru l-lahi falā tastaʿjilūhu sub'ḥānahu wataʿālā ʿammā yush'rikūna
Kannada ಅಲ್ಲಾಹನ ಆಜ್ಞೆ ಬಂದು ಬಿಟ್ಟಿತು. ಇನ್ನು ಅದನ್ನು ಅವಸರಪಡಿಸಬೇಡಿರಿ. ಅವರು (ಅಲ್ಲಾಹನಿಗೆ ಇತರರನ್ನು) ಪಾಲು ಸೇರಿಸುವುದರಿಂದ ಅಲ್ಲಾಹು ಪರಿಶುದ್ಧನು. ಮಹೋನ್ನತನು.
Verse 2
يُنَزِّلُ ٱلْمَلَـٰٓئِكَةَ بِٱلرُّوحِ مِنْ أَمْرِهِۦ عَلَىٰ مَن يَشَآءُ مِنْ عِبَادِهِۦٓ أَنْ أَنذِرُوٓا۟ أَنَّهُۥ لَآ إِلَـٰهَ إِلَّآ أَنَا۠ فَٱتَّقُونِ
Transliteration yunazzilu l-malāikata bil-rūḥi min amrihi ʿalā man yashāu min ʿibādihi an andhirū annahu lā ilāha illā anā fa-ittaqūni
Kannada ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಮೇಲೆ ತನ್ನ ಅನುಜ್ಞೆಯಿಂದ ದಿವ್ಯಸಂದೇಶದೊಂದಿಗೆ ದೇವಚರರನ್ನು ಅವತೀರ್ಣಗೊಳಿಸುತ್ತಾನೆ. ‘ನನ್ನ ಹೊರತು ಯಾರೂ ಆರಾಧ್ಯನಿಲ್ಲ. ಆದುದರಿಂದ ನೀವು ನನ್ನನ್ನು ಭಯಪಡಿರಿ ಎಂದು ಜನರನ್ನು ಎಚ್ಚರಿಸಿರಿ’ ಎಂದು.
Verse 3
خَلَقَ ٱلسَّمَـٰوَٰتِ وَٱلْأَرْضَ بِٱلْحَقِّ ۚ تَعَـٰلَىٰ عَمَّا يُشْرِكُونَ
Transliteration khalaqa l-samāwāti wal-arḍa bil-ḥaqi taʿālā ʿammā yush'rikūna
Kannada ಅವನು ಆಕಾಶಗಳನ್ನೂ ಭೂಮಿಯನ್ನೂ ಸತ್ಯ ಪೂರ್ಣವಾಗಿ ಸೃಷ್ಟಿಸಿರುತ್ತಾನೆ. ಇವರು ಮಾಡುವ ದೇವ ಸಹಭಾಗಿತ್ವ ಕಲ್ಪನೆಗಿಂತ ಅವನು ಮಹೋನ್ನತನು.
Verse 4
خَلَقَ ٱلْإِنسَـٰنَ مِن نُّطْفَةٍ فَإِذَا هُوَ خَصِيمٌ مُّبِينٌ
Transliteration khalaqa l-insāna min nuṭ'fatin fa-idhā huwa khaṣīmun mubīnun
Kannada ಅವನು ಮಾನವನನ್ನು ಒಂದು ವೀರ್ಯಾಣುವಿನಿಂದ ಸೃಷ್ಟಿಸಿದನು. ಅದೇ ಮಾನವ ಪ್ರತ್ಯಕ್ಷ ಜಗಳಗಂಟನಾಗಿ ಮಾರ್ಪಟ್ಟನು.
Verse 5
وَٱلْأَنْعَـٰمَ خَلَقَهَا ۗ لَكُمْ فِيهَا دِفْءٌ وَمَنَـٰفِعُ وَمِنْهَا تَأْكُلُونَ
Transliteration wal-anʿāma khalaqahā lakum fīhā dif'on wamanāfiʿu wamin'hā takulūna
Kannada ಅವನು ಆಡು, ದನ, ಒಂಟೆಗಳನ್ನು ನಿಮಗಾಗಿ ಸೃಷ್ಟಿಸಿದನು. ಅವುಗಳಲ್ಲಿ ನಿಮಗೆ ಬೆಚ್ಚನೆಯ ಉಣ್ಣೆಗಳೂ ಇತರ ಪ್ರಯೋಜನಗಳೂ ಇವೆ. ಅವುಗಳಿಂದಲೇ ನೀವು ತಿನ್ನುತ್ತೀರಿ.
Verse 6
وَلَكُمْ فِيهَا جَمَالٌ حِينَ تُرِيحُونَ وَحِينَ تَسْرَحُونَ
Transliteration walakum fīhā jamālun ḥīna turīḥūna waḥīna tasraḥūna
Kannada ನೀವು ಸಂಜೆ ಅವುಗಳನ್ನು ಹಟ್ಟಿಗೆ ಮರಳಿ ತರುವಾಗಲೂ ಮುಂಜಾನೆ ಮೇವಿಗೆ ಬಿಡುವಾಗಲೂ ನಿಮಗೆ ಅವುಗಳಲ್ಲಿ ಸೊಬಗಿದೆ.
Verse 7
وَتَحْمِلُ أَثْقَالَكُمْ إِلَىٰ بَلَدٍ لَّمْ تَكُونُوا۟ بَـٰلِغِيهِ إِلَّا بِشِقِّ ٱلْأَنفُسِ ۚ إِنَّ رَبَّكُمْ لَرَءُوفٌ رَّحِيمٌ
Transliteration wataḥmilu athqālakum ilā baladin lam takūnū bālighīhi illā bishiqqi l-anfusi inna rabbakum laraūfun raḥīmun
Kannada ದೈಹಿಕ ಕ್ಲೇಷವಿಲ್ಲದೆ ನಿಮಗೆ ತಲುಪಲಾಗದಂತಹ ಸ್ಥಳಗಳಿಗೆ ಅವು ನಿಮ್ಮ ಹೊರೆಯನ್ನು ಹೊತ್ತು ಕೊಂಡು ಹೋಗುತ್ತವೆ. ವಾಸ್ತವದಲ್ಲಿ ನಿಮ್ಮ ಪ್ರಭು ಮಹಾವತ್ಸಲನೂ ದಯಾನಿಧಿಯೂ ಆಗಿರುತ್ತಾನೆ.
Verse 8
وَٱلْخَيْلَ وَٱلْبِغَالَ وَٱلْحَمِيرَ لِتَرْكَبُوهَا وَزِينَةً ۚ وَيَخْلُقُ مَا لَا تَعْلَمُونَ
Transliteration wal-khayla wal-bighāla wal-ḥamīra litarkabūhā wazīnatan wayakhluqu mā lā taʿlamūna
Kannada ಅವನು ಕುದುರೆಗಳನ್ನೂ ಹೇಸರಕತ್ತೆಗಳನ್ನೂ ಕತ್ತೆಗಳನ್ನೂ ನಿಮ್ಮ ಸವಾರಿಗಾಗಿಯೂ (ನಿಮಗೆ ವಾಹನವಾಗಿ ಬಳಸಲು) ಸೊಗಸಿಗಾಗಿಯೂ ಸೃಷ್ಟಿಸಿದನು. ನಿಮಗೆ ತಿಳಿಯದ ಅನೇಕ (ಅದ್ಭುತ) ವಸ್ತುಗಳನ್ನು ಅವನು ಸೃಷ್ಟಿಸುತ್ತಾನೆ.
Verse 9
وَعَلَى ٱللَّهِ قَصْدُ ٱلسَّبِيلِ وَمِنْهَا جَآئِرٌ ۚ وَلَوْ شَآءَ لَهَدَىٰكُمْ أَجْمَعِينَ
Transliteration waʿalā l-lahi qaṣdu l-sabīli wamin'hā jāirun walaw shāa lahadākum ajmaʿīna
Kannada ಅಡ್ಡ ಮಾರ್ಗಗಳೂ ಇರುವಾಗ ನೇರ ಮಾರ್ಗವನ್ನು ತೋರಿಸುವ ಹೊಣೆ ಅಲ್ಲಾಹನ ಮೇಲೆಯೇ ಇದೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನೂ ನೇರದಾರಿಗೆ ಸೇರಿಸುತ್ತಿದ್ದನು.
Verse 10
هُوَ ٱلَّذِىٓ أَنزَلَ مِنَ ٱلسَّمَآءِ مَآءً ۖ لَّكُم مِّنْهُ شَرَابٌ وَمِنْهُ شَجَرٌ فِيهِ تُسِيمُونَ
Transliteration huwa alladhī anzala mina l-samāi māan lakum min'hu sharābun wamin'hu shajarun fīhi tusīmūna
Kannada ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು. ಅದರಿಂದಲೇ ನಿಮ್ಮ ಕುಡಿಯುವ ನೀರು. ಮತ್ತು ಅದರಿಂದಲೇ ಸಸ್ಯ, ಮರಗಳು. ಅದರಿಂದ ನೀವು ನಿಮ್ಮ ಪ್ರಾಣಿಗಳನ್ನು ಮೇಯಿ ಸುತ್ತಿರುವಿರಿ.
Verse 11
يُنۢبِتُ لَكُم بِهِ ٱلزَّرْعَ وَٱلزَّيْتُونَ وَٱلنَّخِيلَ وَٱلْأَعْنَـٰبَ وَمِن كُلِّ ٱلثَّمَرَٰتِ ۗ إِنَّ فِى ذَٰلِكَ لَـَٔايَةً لِّقَوْمٍ يَتَفَكَّرُونَ
Transliteration yunbitu lakum bihi l-zarʿa wal-zaytūna wal-nakhīla wal-aʿnāba wamin kulli l-thamarāti inna fī dhālika laāyatan liqawmin yatafakkarūna
Kannada ಅವನು ಈ ನೀರಿನ ಮೂಲಕ ಕೃಷಿ, ಝೈತೂನ್, ಖರ್ಜೂರ, ದ್ರಾಕ್ಷೆ ಮತ್ತು ಇತರ ನಾನಾ ವಿಧದ ಫಲಗಳನ್ನು ಉತ್ಪಾದಿಸುತ್ತಾನೆ. ಯೋಚಿ ಸುವವರಿಗೆ ನಿಶ್ಚಯವಾಗಿಯೂ ಇದರಲ್ಲಿ ನಿದರ್ಶನವಿದೆ.
Verse 12
وَسَخَّرَ لَكُمُ ٱلَّيْلَ وَٱلنَّهَارَ وَٱلشَّمْسَ وَٱلْقَمَرَ ۖ وَٱلنُّجُومُ مُسَخَّرَٰتٌۢ بِأَمْرِهِۦٓ ۗ إِنَّ فِى ذَٰلِكَ لَـَٔايَـٰتٍ لِّقَوْمٍ يَعْقِلُونَ
Transliteration wasakhara lakumu al-layla wal-nahāra wal-shamsa wal-qamara wal-nujūmu musakharātun bi-amrihi inna fī dhālika laāyātin liqawmin yaʿqilūna
Kannada ಅವನು ನಿಮಗಾಗಿ ಇರುಳನ್ನೂ ಹಗಲನ್ನೂ ಸೂರ್ಯನನ್ನೂ ಚಂದ್ರನನ್ನೂ ನಕ್ಷತ್ರಗಳನ್ನೂ ಅವನ ಇರಾದೆಯಂತೆ ನಿಯಂತ್ರಿಸಿರುತ್ತಾನೆ. ವಿವೇಚಿಸುವ ಜನರಿಗೆ ಇದರಲ್ಲಿ ನಿಜವಾಗಿಯೂ ಅನೇಕ ನಿದರ್ಶನಗಳಿವೆ.
Verse 13
وَمَا ذَرَأَ لَكُمْ فِى ٱلْأَرْضِ مُخْتَلِفًا أَلْوَٰنُهُۥٓ ۗ إِنَّ فِى ذَٰلِكَ لَـَٔايَةً لِّقَوْمٍ يَذَّكَّرُونَ
Transliteration wamā dhara-a lakum fī l-arḍi mukh'talifan alwānuhu inna fī dhālika laāyatan liqawmin yadhakkarūna
Kannada ಅವನು ನಿಮಗಾಗಿ ಭೂಮಿಯಲ್ಲಿ ಸೃಷ್ಟಿಸಿರುವ ವಿವಿಧ ಬಣ್ಣಗಳ ವಸ್ತುಗಳನ್ನೂ ಕೂಡಾ. (ಅವನು ನಿಮಗೆ ವಿಧೇಯಗೊಳಿಸಿರುತ್ತಾನೆ). ಮನಗಾಣುವವರಿಗೆ ಖಂಡಿತವಾಗಿಯೂ ಇದರಲ್ಲಿ ನಿದರ್ಶನವಿದೆ.
Verse 14
وَهُوَ ٱلَّذِى سَخَّرَ ٱلْبَحْرَ لِتَأْكُلُوا۟ مِنْهُ لَحْمًا طَرِيًّا وَتَسْتَخْرِجُوا۟ مِنْهُ حِلْيَةً تَلْبَسُونَهَا وَتَرَى ٱلْفُلْكَ مَوَاخِرَ فِيهِ وَلِتَبْتَغُوا۟ مِن فَضْلِهِۦ وَلَعَلَّكُمْ تَشْكُرُونَ
Transliteration wahuwa alladhī sakhara l-baḥra litakulū min'hu laḥman ṭariyyan watastakhrijū min'hu ḥil'yatan talbasūnahā watarā l-ful'ka mawākhira fīhi walitabtaghū min faḍlihi walaʿallakum tashkurūna
Kannada ನಿಮಗೆ ತಾಜಾ ಮಾಂಸ ಪಡೆದು ತಿನ್ನಲಿಕ್ಕೂ ನೀವು ಧರಿಸುವ ಆಭರಣಗಳನ್ನು ಹೊರತೆಗೆಯಲಿಕ್ಕೂ ಕಡಲನ್ನು ವಿಧೇಯಗೊಳಿಸಿದವನು ಅವನೇ. ನಾವೆಯು ಕಡಲನ್ನು ಸೀಳುತ್ತ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ನೀವು ನಿಮ್ಮ ಪ್ರಭುವಿನ ಅನುಗ್ರಹದಿಂದ ಅರಸಲಿಕ್ಕೂ ಅವನಿಗೆ ಕೃತಜ್ಞರಾಗಲಿಕ್ಕೂ.
Verse 15
وَأَلْقَىٰ فِى ٱلْأَرْضِ رَوَٰسِىَ أَن تَمِيدَ بِكُمْ وَأَنْهَـٰرًا وَسُبُلًا لَّعَلَّكُمْ تَهْتَدُونَ
Transliteration wa-alqā fī l-arḍi rawāsiya an tamīda bikum wa-anhāran wasubulan laʿallakum tahtadūna
Kannada ಭೂಮಿಯು ನಿಮ್ಮೊಂದಿಗೆ ಅಲುಗಾಡದಂತೆ ಅವನು ಭೂಮಿಯಲ್ಲಿ ಊರಿನಿಂತ ಪರ್ವತಗಳನ್ನು ನಾಟಿರುತ್ತಾನೆ. ನದಿಗಳನ್ನು ಸೀಳಿರುತ್ತಾನೆ. ಮತ್ತು ಮಾರ್ಗಗಳನ್ನು ಮಾಡಿರುತ್ತಾನೆ. ನೀವು ದಾರಿ ಹಿಡಿಯುವ ಸಲುವಾಗಿ.
Verse 16
وَعَلَـٰمَـٰتٍ ۚ وَبِٱلنَّجْمِ هُمْ يَهْتَدُونَ
Transliteration waʿalāmātin wabil-najmi hum yahtadūna
Kannada (ಇದಲ್ಲದೆ) ಮಾರ್ಗಗಳನ್ನು ತೋರಿಸುವ ಕುರು ಹುಗಳನ್ನೂ, ಮತ್ತು ಜನರು ನಕ್ಷತ್ರಗಳಿಂದಲೂ ದಾರಿಗಾಣುತ್ತಾರೆ.
Verse 17
أَفَمَن يَخْلُقُ كَمَن لَّا يَخْلُقُ ۗ أَفَلَا تَذَكَّرُونَ
Transliteration afaman yakhluqu kaman lā yakhluqu afalā tadhakkarūna
Kannada ಹೀಗಿರುವಾಗ ಸೃಷ್ಟಿಸುವಾತನು ಏನನ್ನೂ ಸೃಷ್ಟಿಸದವರಿಗೆ ಸಮಾನನೆ? ನೀವು ಯೋಚಿಸುವುದಿಲ್ಲವೆ?
Verse 18
وَإِن تَعُدُّوا۟ نِعْمَةَ ٱللَّهِ لَا تُحْصُوهَآ ۗ إِنَّ ٱللَّهَ لَغَفُورٌ رَّحِيمٌ
Transliteration wa-in taʿuddū niʿ'mata l-lahi lā tuḥ'ṣūhā inna l-laha laghafūrun raḥīmun
Kannada ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸುವುದಾದರೆ ನಿಮಗೆ ಅದರ ಲೆಕ್ಕತೆಗೆಯಲು ಸಾಧ್ಯವಿಲ್ಲ. ವಾಸ್ತವದಲ್ಲಿ ಅವನು ಮಹಾ ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ.
Verse 19
وَٱللَّهُ يَعْلَمُ مَا تُسِرُّونَ وَمَا تُعْلِنُونَ
Transliteration wal-lahu yaʿlamu mā tusirrūna wamā tuʿ'linūna
Kannada ನೀವು ರಹಸ್ಯಗೊಳಿಸುವುದನ್ನೂ ಬಹಿರಂಗಗೊಳಿಸುವುದನ್ನೂ ಅಲ್ಲಾಹನು ಬಲ್ಲವನಾಗಿರುತ್ತಾನೆ.
Verse 20
وَٱلَّذِينَ يَدْعُونَ مِن دُونِ ٱللَّهِ لَا يَخْلُقُونَ شَيْـًٔا وَهُمْ يُخْلَقُونَ
Transliteration wa-alladhīna yadʿūna min dūni l-lahi lā yakhluqūna shayan wahum yukh'laqūna
Kannada ಇವರು ಅಲ್ಲಾಹನನ್ನು ಬಿಟ್ಟು ಇತರ ಯಾರನ್ನು ಆರಾಧಿಸುತ್ತಿರುವರೋ ಅವರು ಯಾವುದೇ ವಸ್ತುವನ್ನು ಸೃಷ್ಟಿಸಲಿಲ್ಲ. ನಿಜವಾಗಿ ಅವರು ಸ್ವತಃ ಸೃಷ್ಟಿಸಲ್ಪಟ್ಟವರು.
Verse 21
أَمْوَٰتٌ غَيْرُ أَحْيَآءٍ ۖ وَمَا يَشْعُرُونَ أَيَّانَ يُبْعَثُونَ
Transliteration amwātun ghayru aḥyāin wamā yashʿurūna ayyāna yub'ʿathūna
Kannada ಅವರು ಮೃತರು, ಜೀವಂತರಲ್ಲ. ಸೃಷ್ಟಿಗಳನ್ನು ಯಾವಾಗ ಮರಳಿ ಎಬ್ಬಿಸಲಾಗುವುದೆಂದು ಅವರಿಗೆ ತಿಳಿದಿರುವುದಿಲ್ಲ.
Verse 22
إِلَـٰهُكُمْ إِلَـٰهٌ وَٰحِدٌ ۚ فَٱلَّذِينَ لَا يُؤْمِنُونَ بِٱلْـَٔاخِرَةِ قُلُوبُهُم مُّنكِرَةٌ وَهُم مُّسْتَكْبِرُونَ
Transliteration ilāhukum ilāhun wāḥidun fa-alladhīna lā yu'minūna bil-ākhirati qulūbuhum munkiratun wahum mus'takbirūna
Kannada ನಿಮ್ಮ ಆರಾಧ್ಯನು ಕೇವಲ ಏಕ ಆರಾಧ್ಯನು. ಆದರೆ ಪರಲೋಕದ ಮೇಲೆ ವಿಶ್ವಾಸವಿರಿಸದವರ ಹೃದಯಗಳು (ಏಕದೇವತ್ವವನ್ನು) ನಿರಾಕರಿಸಿವೆ. ಮತ್ತು ಅವರು ಗರ್ವಿಷ್ಟರಾಗಿದ್ದಾರೆ.
Verse 23
لَا جَرَمَ أَنَّ ٱللَّهَ يَعْلَمُ مَا يُسِرُّونَ وَمَا يُعْلِنُونَ ۚ إِنَّهُۥ لَا يُحِبُّ ٱلْمُسْتَكْبِرِينَ
Transliteration lā jarama anna l-laha yaʿlamu mā yusirrūna wamā yuʿ'linūna innahu lā yuḥibbu l-mus'takbirīna
Kannada ಸಂಶಯಬೇಡ, ಅವರು ರಹಸ್ಯಗೊಳಿಸುವ ಮತ್ತು ಬಹಿರಂಗಗೊಳಿಸುವ ಸರ್ವಕರ್ಮಗಳನ್ನೂ ಅಲ್ಲಾಹು ಅರಿಯುತ್ತಾನೆ. ಅಹಂಭಾವಿಗಳನ್ನು ಖಂಡಿತ ಅಲ್ಲಾಹನು ಮೆಚ್ಚುವುದಿಲ್ಲ.
Verse 24
وَإِذَا قِيلَ لَهُم مَّاذَآ أَنزَلَ رَبُّكُمْ ۙ قَالُوٓا۟ أَسَـٰطِيرُ ٱلْأَوَّلِينَ
Transliteration wa-idhā qīla lahum mādhā anzala rabbukum qālū asāṭīru l-awalīna
Kannada ನಿಮ್ಮ ಪ್ರಭು ಅವತೀರ್ಣಗೊಳಿಸಿರುವುದು ಏನನ್ನು ಎಂದು ಅವರೊಡನೆ ಕೇಳಲಾದರೆ, ‘ಅದೆ ಲ್ಲಾ ಹಿಂದಿನವರ ಹರಟೆ ಪುರಾಣಗಳು’ ಎಂದು ಇವರು ಹೇಳುತ್ತಾರೆ.
Verse 25
لِيَحْمِلُوٓا۟ أَوْزَارَهُمْ كَامِلَةً يَوْمَ ٱلْقِيَـٰمَةِ ۙ وَمِنْ أَوْزَارِ ٱلَّذِينَ يُضِلُّونَهُم بِغَيْرِ عِلْمٍ ۗ أَلَا سَآءَ مَا يَزِرُونَ
Transliteration liyaḥmilū awzārahum kāmilatan yawma l-qiyāmati wamin awzāri alladhīna yuḍillūnahum bighayri ʿil'min alā sāa mā yazirūna
Kannada ಜನರನ್ನು ದಾರಿಗೆಡಿಸಿದ ಪಾಪದ ಹೊರೆಯನ್ನು ಪೂರ್ಣವಾಗಿಯೂ ಯಾವುದೇ ಜ್ಞಾನವಿಲ್ಲದೆ ಇವರು ದಾರಿತಪ್ಪಿಸಿದವರ ಪಾಪದ ಹೊರೆಯನ್ನು ಆಂಶಿಕವಾಗಿಯೂ ಅಂತ್ಯದಿನದಲ್ಲಿ ಇವರು ಹೊತ್ತುಕೊಳ್ಳಬೇಕಾದ ಅವಸ್ಥೆಗೆ ಈ ಮಾತು ಇವರನ್ನು ತಲುಪಿಸುತ್ತದೆ. ತಿಳಿಯಿರಿ; ಇವರು ಹೇರಿಕೊಳ್ಳುತ್ತಿರುವ ಹೊರೆ ಅದೆಷ್ಟು ಕೆಟ್ಟದು!
Verse 26
قَدْ مَكَرَ ٱلَّذِينَ مِن قَبْلِهِمْ فَأَتَى ٱللَّهُ بُنْيَـٰنَهُم مِّنَ ٱلْقَوَاعِدِ فَخَرَّ عَلَيْهِمُ ٱلسَّقْفُ مِن فَوْقِهِمْ وَأَتَىٰهُمُ ٱلْعَذَابُ مِنْ حَيْثُ لَا يَشْعُرُونَ
Transliteration qad makara alladhīna min qablihim fa-atā l-lahu bun'yānahum mina l-qawāʿidi fakharra ʿalayhimu l-saqfu min fawqihim wa-atāhumu l-ʿadhābu min ḥaythu lā yashʿurūna
Kannada ಇವರಿಗಿಂತ ಮುಂಚಿನವರೂ ಕುತಂತ್ರಗಳನ್ನು ಹೂಡಿರುತ್ತಾರೆ. ಆದರೆ ಅಲ್ಲಾಹನು ಅವರ ಕಟ್ಟಡಗಳನ್ನು ಬುಡದಿಂದಲೇ ಕಿತ್ತೆಸೆದನು. ಹಾಗೆ ಮೇಲಿಂದ ಅದರ ಮೇಲ್ಛಾವಣಿ ಅವರ ಮೇಲೆಯೇ ಮಗುಚಿಬಿತ್ತು. ಅವರು ಊಹಿಸಿಯೂ ಇರದಂಥ ದಿಕ್ಕಿನಿಂದ ಅವರಿಗೆ ಶಿಕ್ಷೆ ಬಂತು.
Verse 27
ثُمَّ يَوْمَ ٱلْقِيَـٰمَةِ يُخْزِيهِمْ وَيَقُولُ أَيْنَ شُرَكَآءِىَ ٱلَّذِينَ كُنتُمْ تُشَـٰٓقُّونَ فِيهِمْ ۚ قَالَ ٱلَّذِينَ أُوتُوا۟ ٱلْعِلْمَ إِنَّ ٱلْخِزْىَ ٱلْيَوْمَ وَٱلسُّوٓءَ عَلَى ٱلْكَـٰفِرِينَ
Transliteration thumma yawma l-qiyāmati yukh'zīhim wayaqūlu ayna shurakāiya alladhīna kuntum tushāqqūna fīhim qāla alladhīna ūtū l-ʿil'ma inna l-khiz'ya l-yawma wal-sūa ʿalā l-kāfirīna
Kannada ಮುಂದೆ ಪುನರುತ್ಥಾನ ದಿನದಂದು ಅಲ್ಲಾಹನು ಅವರನ್ನು ಅಪಮಾನಗೊಳಿಸುವನು. ‘ನನ್ನ ಯಾವ ಸಹಭಾಗಿಗಳಿಗೋಸ್ಕರ ನೀವು ತರ್ಕಿಸುತ್ತಿದ್ದಿರೊ ಅವರೀಗ ಎಲ್ಲಿದ್ದಾರೆ?’ ಎಂದು ಅವರೊಡನೆ ಕೇಳುವನು. ಜ್ಞಾನ ಪ್ರಾಪ್ತವಾಗಿದ್ದವರು ಹೇಳುವರು, ನಿಶ್ಚಯವಾಗಿಯೂ ಇಂದು ಅಪಮಾನವೂ ದುರ್ದೆಶೆಯೂ ಸತ್ಯನಿಷೇಧಿಗಳಿಗಾಗಿದೆ.
Verse 28
ٱلَّذِينَ تَتَوَفَّىٰهُمُ ٱلْمَلَـٰٓئِكَةُ ظَالِمِىٓ أَنفُسِهِمْ ۖ فَأَلْقَوُا۟ ٱلسَّلَمَ مَا كُنَّا نَعْمَلُ مِن سُوٓءٍۭ ۚ بَلَىٰٓ إِنَّ ٱللَّهَ عَلِيمٌۢ بِمَا كُنتُمْ تَعْمَلُونَ
Transliteration alladhīna tatawaffāhumu l-malāikatu ẓālimī anfusihim fa-alqawū l-salama mā kunnā naʿmalu min sūin balā inna l-laha ʿalīmun bimā kuntum taʿmalūna
Kannada ತಮ್ಮ ಮೇಲೆ ತಾವೇ ದ್ರೋಹವೆಸಗಿದ ಸತ್ಯ ನಿಷೇಧಿಗಳವರು. ಅವರನ್ನು ದೇವಚರರು ಮೃತ ಪಡಿಸುತ್ತಾರೆ. ನಾವೇನೂ ದುಷ್ಕøತ್ಯ ವೆಸಗುತ್ತಿರಲಿಲ್ಲ ಎನ್ನುತ್ತಾ ಆಗ ಅವರು ಶರಣಾಗುತ್ತಾರೆ. ಹಾಗಲ್ಲ ; ನೀವು ಮಾಡುತ್ತಿದ್ದ ದುಷ್ಕøತ್ಯಗಳನ್ನು ಅಲ್ಲಾಹು ಚೆನ್ನಾಗಿ ಬಲ್ಲವನಾಗಿದ್ದಾನೆ.
Verse 29
فَٱدْخُلُوٓا۟ أَبْوَٰبَ جَهَنَّمَ خَـٰلِدِينَ فِيهَا ۖ فَلَبِئْسَ مَثْوَى ٱلْمُتَكَبِّرِينَ
Transliteration fa-ud'khulū abwāba jahannama khālidīna fīhā falabi'sa mathwā l-mutakabirīna
Kannada ಆದ್ದರಿಂದ ನರಕದ ದ್ವಾರಗಳ ಮೂಲಕ ಪ್ರವೇಶಿಸಿರಿ. ಅದರಲ್ಲಿ ಶಾಶ್ವತರಾಗುವ ಸ್ಥಿತಿಯಲ್ಲಿ. ಅಹಂಕಾರಿಗಳ ವಾಸಸ್ಥಳವು ಅತ್ಯಂತ ನಿಕೃಷ್ಟವಾಗಿದೆ.
Verse 30
۞ وَقِيلَ لِلَّذِينَ ٱتَّقَوْا۟ مَاذَآ أَنزَلَ رَبُّكُمْ ۚ قَالُوا۟ خَيْرًا ۗ لِّلَّذِينَ أَحْسَنُوا۟ فِى هَـٰذِهِ ٱلدُّنْيَا حَسَنَةٌ ۚ وَلَدَارُ ٱلْـَٔاخِرَةِ خَيْرٌ ۚ وَلَنِعْمَ دَارُ ٱلْمُتَّقِينَ
Transliteration waqīla lilladhīna ittaqaw mādhā anzala rabbukum qālū khayran lilladhīna aḥsanū fī hādhihi l-dun'yā ḥasanatun waladāru l-ākhirati khayrun walaniʿ'ma dāru l-mutaqīna
Kannada ನಿಮ್ಮ ಪ್ರಭು ಏನನ್ನು ಅವತೀರ್ಣಗೊಳಿಸಿದ್ದಾನೆಂದು ದೇವನಿಷ್ಟರೊಡನೆ ಕೇಳಲಾಯಿತು. ಅವರು, ಹೇಳಿದರು, ‘ಉತ್ತಮವಾದುದನ್ನು’ ಎಂದು. ಸಜ್ಜನರಿಗೆ ಇಹಲೋಕದಲ್ಲೂ ಒಳಿತಿದೆ ಮತ್ತು ಪರಲೋಕ ಭವನವಂತೂ ಅತ್ಯುತ್ತಮವೇ ಆಗಿದೆ. ಧರ್ಮನಿಷ್ಟರ ಭವನ ಬಹಳ ಚೆನ್ನಾಗಿದೆ.
Verse 31
جَنَّـٰتُ عَدْنٍ يَدْخُلُونَهَا تَجْرِى مِن تَحْتِهَا ٱلْأَنْهَـٰرُ ۖ لَهُمْ فِيهَا مَا يَشَآءُونَ ۚ كَذَٰلِكَ يَجْزِى ٱللَّهُ ٱلْمُتَّقِينَ
Transliteration jannātu ʿadnin yadkhulūnahā tajrī min taḥtihā l-anhāru lahum fīhā mā yashāūna kadhālika yajzī l-lahu l-mutaqīna
Kannada ಶಾಶ್ವತ ನಿವಾಸದ ಉದ್ಯಾನವನಗಳು. ಅದಕ್ಕೆ ಅವರು ಪ್ರವೇಶಿಸುವರು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರಿಗೆ ಅವರು ಇಚ್ಛಿಸುವುದೆಲ್ಲವೂ ಅಲ್ಲಿವೆ. ಇದೇ ಪ್ರಕಾರ ಅಲ್ಲಾಹನು ಧರ್ಮನಿಷ್ಟರಿಗೆ ಪ್ರತಿಫಲ ಕೊಡುತ್ತಾನೆ.
Verse 32
ٱلَّذِينَ تَتَوَفَّىٰهُمُ ٱلْمَلَـٰٓئِكَةُ طَيِّبِينَ ۙ يَقُولُونَ سَلَـٰمٌ عَلَيْكُمُ ٱدْخُلُوا۟ ٱلْجَنَّةَ بِمَا كُنتُمْ تَعْمَلُونَ
Transliteration alladhīna tatawaffāhumu l-malāikatu ṭayyibīna yaqūlūna salāmun ʿalaykumu ud'khulū l-janata bimā kuntum taʿmalūna
Kannada ಆ ಧರ್ಮನಿಷ್ಠರು ಎಂತವರೆಂದರೆ ದೇವಚರರು ಅವರನ್ನು ಪರಿಶುದ್ಧರಾದ ಸ್ಥಿತಿಯಲ್ಲಿ ಮರಣ ಗೊಳಿಸುತ್ತಾರೆ. ‘ನಿಮ್ಮ ಮೇಲೆ ಶಾಂತಿ ಇರಲಿ. ನಿಮ್ಮ ಕರ್ಮಗಳ ಪ್ರತಿಫಲವಾಗಿ ಸ್ವರ್ಗದೊಳಗೆ ಪ್ರವೇಶಿಸಿರಿ’ ಎನ್ನುವರು.
Verse 33
هَلْ يَنظُرُونَ إِلَّآ أَن تَأْتِيَهُمُ ٱلْمَلَـٰٓئِكَةُ أَوْ يَأْتِىَ أَمْرُ رَبِّكَ ۚ كَذَٰلِكَ فَعَلَ ٱلَّذِينَ مِن قَبْلِهِمْ ۚ وَمَا ظَلَمَهُمُ ٱللَّهُ وَلَـٰكِن كَانُوٓا۟ أَنفُسَهُمْ يَظْلِمُونَ
Transliteration hal yanẓurūna illā an tatiyahumu l-malāikatu aw yatiya amru rabbika kadhālika faʿala alladhīna min qablihim wamā ẓalamahumu l-lahu walākin kānū anfusahum yaẓlimūna
Kannada ತಮ್ಮ ಬಳಿ ದೇವಚರರು ಬರಲಿ ಅಥವಾ ನಿನ್ನ ಪ್ರಭುವಿನ ಆಜ್ಞೆಯು ಬರಲಿ ಎಂಬುದನ್ನೇ ಇವರು ನಿರೀಕ್ಷಿಸುತ್ತಿರುವರೇನು? ಇದೇ ಪ್ರಕಾರ ಇವರಿಗಿಂತ ಮುಂಚಿನವರೂ ಮಾಡಿದ್ದರು. (ಕೊನೆಗೆ ನಾಶವಾಗಿದ್ದರು). ಅಲ್ಲಾಹನು ಅವರಿಗೆ ಅಕ್ರಮವೆಸಗಲಿಲ್ಲ. ವಾಸ್ತವದಲ್ಲಿ ಅವರು ತಮಗೆ ತಾವೇ ಅಕ್ರಮವೆಸಗಿಕೊಂಡಿದ್ದರು.
Verse 34
فَأَصَابَهُمْ سَيِّـَٔاتُ مَا عَمِلُوا۟ وَحَاقَ بِهِم مَّا كَانُوا۟ بِهِۦ يَسْتَهْزِءُونَ
Transliteration fa-aṣābahum sayyiātu mā ʿamilū waḥāqa bihim mā kānū bihi yastahziūna
Kannada ಅವರ ದುಷ್ಕರ್ಮಗಳ ದುಷ್ಪರಿಣಾಮಗಳು ಅವರಿಗೆ ತಟ್ಟಿದುವು. ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದೇ ಅವರನ್ನು ಸುತ್ತುವರಿಯಿತು.
Verse 35
وَقَالَ ٱلَّذِينَ أَشْرَكُوا۟ لَوْ شَآءَ ٱللَّهُ مَا عَبَدْنَا مِن دُونِهِۦ مِن شَىْءٍ نَّحْنُ وَلَآ ءَابَآؤُنَا وَلَا حَرَّمْنَا مِن دُونِهِۦ مِن شَىْءٍ ۚ كَذَٰلِكَ فَعَلَ ٱلَّذِينَ مِن قَبْلِهِمْ ۚ فَهَلْ عَلَى ٱلرُّسُلِ إِلَّا ٱلْبَلَـٰغُ ٱلْمُبِينُ
Transliteration waqāla alladhīna ashrakū law shāa l-lahu mā ʿabadnā min dūnihi min shayin naḥnu walā ābāunā walā ḥarramnā min dūnihi min shayin kadhālika faʿala alladhīna min qablihim fahal ʿalā l-rusuli illā l-balāghu l-mubīnu
Kannada ಬಹುದೇವ ವಿಶ್ವಾಸಿಗಳು ಹೇಳಿದರು; ‘ಅಲ್ಲಾಹ ನು ಇಚ್ಚಿಸುತ್ತಿದ್ದರೆ ನಾವಾಗಲಿ ನಮ್ಮ ಹಿರಿಯರಾಗಲಿ ಅವನ ಹೊರತು ಬೇರೆ ಯಾವುದನ್ನೂ ಆರಾಧಿಸುತ್ತಿರಲಿಲ್ಲ ಮತ್ತು ಅವನ ಅಪ್ಪಣೆಯ ವಿನಾ ಯಾವುದನ್ನೂ ನಿಷಿದ್ಧಗೊಳಿಸುತ್ತಿರಲಿಲ್ಲ ಎಂದು. ಹೀಗೆಯೇ ಇವರಿಗಿಂತ ಮುಂಚಿನ ವರೂ ಮಾಡಿದ್ದರು. ಆದರೆ ದೇವದೂತರ ಮೇಲೆ ಸುಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊರತು ಬೇರಾವ ಹೊಣೆಗಾರಿಕೆಯೂ ಇರುವುದಿಲ್ಲ.
Verse 36
وَلَقَدْ بَعَثْنَا فِى كُلِّ أُمَّةٍ رَّسُولًا أَنِ ٱعْبُدُوا۟ ٱللَّهَ وَٱجْتَنِبُوا۟ ٱلطَّـٰغُوتَ ۖ فَمِنْهُم مَّنْ هَدَى ٱللَّهُ وَمِنْهُم مَّنْ حَقَّتْ عَلَيْهِ ٱلضَّلَـٰلَةُ ۚ فَسِيرُوا۟ فِى ٱلْأَرْضِ فَٱنظُرُوا۟ كَيْفَ كَانَ عَـٰقِبَةُ ٱلْمُكَذِّبِينَ
Transliteration walaqad baʿathnā fī kulli ummatin rasūlan ani uʿ'budū l-laha wa-ij'tanibū l-ṭāghūta famin'hum man hadā l-lahu wamin'hum man ḥaqqat ʿalayhi l-ḍalālatu fasīrū fī l-arḍi fa-unẓurū kayfa kāna ʿāqibatu l-mukadhibīna
Kannada ಪ್ರತಿಯೊಂದು ಸಮುದಾಯದಲ್ಲಿ ನಾವು ದೂತ ರನ್ನು ಕಳುಹಿಸಿದೆವು. ಅಲ್ಲಾಹನನ್ನು ಆರಾಧಿಸಿರಿ. ಮತ್ತು ದುರ್ಮೂರ್ತಿಗಳಿಂದ ದೂರವಿರಿ (ಎಂದು). ಅನಂತರ ಅಲ್ಲಾಹನು ಕೆಲವರಿಗೆ ಸನ್ಮಾರ್ಗದರ್ಶನ ಮಾಡಿಸಿದನು. ಮತ್ತು ಕೆಲವರ ಮೇಲೆ ಪಥಭ್ರಷ್ಟತೆ ನಿಜಗೊಂಡಿತು. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿರಿ. ಸುಳ್ಳಾಗಿಸಿ ದವರ ಅಂತಿಮ ಪರಿಣಾಮವೇನಾಗಿದೆಯೆಂಬು ದನ್ನು ನೋಡಿರಿ.
Verse 37
إِن تَحْرِصْ عَلَىٰ هُدَىٰهُمْ فَإِنَّ ٱللَّهَ لَا يَهْدِى مَن يُضِلُّ ۖ وَمَا لَهُم مِّن نَّـٰصِرِينَ
Transliteration in taḥriṣ ʿalā hudāhum fa-inna l-laha lā yahdī man yuḍillu wamā lahum min nāṣirīna
Kannada (ಓ ಪೈಗಂಬರರೇ,) ನೀವು ಅವರ ಸನ್ಮಾರ್ಗ ದರ್ಶನಕ್ಕಾಗಿ ಹಂಬಲಿಸಿದರೂ (ನಿಮಗದು ಸಾಧ್ಯವಿಲ್ಲ). ಏಕೆಂದರೆ ಅಲ್ಲಾಹನು ಯಾರನ್ನು ಪಥಭ್ರಷ್ಟ ಗೊಳಿಸುತ್ತಾನೋ ಅವನನ್ನು ಸನ್ಮಾರ್ಗಕ್ಕೆ ಸೇರಿಸಲಾರ. ಅವರಿಗೆ ಸಹಾಯಕರೇ ಇಲ್ಲ.
Verse 38
وَأَقْسَمُوا۟ بِٱللَّهِ جَهْدَ أَيْمَـٰنِهِمْ ۙ لَا يَبْعَثُ ٱللَّهُ مَن يَمُوتُ ۚ بَلَىٰ وَعْدًا عَلَيْهِ حَقًّا وَلَـٰكِنَّ أَكْثَرَ ٱلنَّاسِ لَا يَعْلَمُونَ
Transliteration wa-aqsamū bil-lahi jahda aymānihim lā yabʿathu l-lahu man yamūtu balā waʿdan ʿalayhi ḥaqqan walākinna akthara l-nāsi lā yaʿlamūna
Kannada ಮೃತರನ್ನು ಅಲ್ಲಾಹನು ಪುನರುತ್ಥಾನಗೊಳಿಸಲಾರನೆಂದು ಅವರು ದೃಢವಾಗಿ ಅಲ್ಲಾಹನ ಮೇಲೆ ಆಣೆ ಹಾಕುವರು; ಆದರೆ ಪುನರುತ್ಥಾನವು ಅಲ್ಲಾಹನು ತನಗೆ ತಾನೇ ವಾಗ್ದಾನ ಮಾಡಿ ಕೊಂಡ ಸತ್ಯ. ಆದರೆ ಹೆಚ್ಚಿನವರು ತಿಳಿಯುವುದಿಲ್ಲ.
Verse 39
لِيُبَيِّنَ لَهُمُ ٱلَّذِى يَخْتَلِفُونَ فِيهِ وَلِيَعْلَمَ ٱلَّذِينَ كَفَرُوٓا۟ أَنَّهُمْ كَانُوا۟ كَـٰذِبِينَ
Transliteration liyubayyina lahumu alladhī yakhtalifūna fīhi waliyaʿlama alladhīna kafarū annahum kānū kādhibīna
Kannada ಯಾವ ವಿಷಯದ ಬಗ್ಗೆ ಇವರು ಭಿನ್ನಾಭಿಪ್ರಾಯ ತಾಳಿರುವರೋ ಅದನ್ನು ಅಲ್ಲಾಹ್ ಇವರಿಗೆ ಸ್ಪಷ್ಟ ಪಡಿಸಲಿಕ್ಕಾಗಿ ಮತ್ತು ಸತ್ಯನಿಷೇಧಿಗಳಿಗೆ ತಾವು ಸುಳ್ಳುಗಾರರೆಂದು ಅರಿಯುವಂತಾಗಲಿಕ್ಕಾಗಿ. (ಪುನರುತ್ಥಾನ ನೀಡಿಯೇ ನೀಡುತ್ತಾನೆ)
Verse 40
إِنَّمَا قَوْلُنَا لِشَىْءٍ إِذَآ أَرَدْنَـٰهُ أَن نَّقُولَ لَهُۥ كُن فَيَكُونُ
Transliteration innamā qawlunā lishayin idhā aradnāhu an naqūla lahu kun fayakūnu
Kannada ನಾವು ಯಾವುದೇ ವಸ್ತುವಿನ ಅಸ್ತಿತ್ವ ಬಯಸಿದರೆ ಅದಕ್ಕೆ ನಾವು `ಆಗು’ ಎಂದು ಹೇಳುವುದೊಂದೇ ನಮ್ಮ ವಚನ. ಆಗ ಅದು ಆಗಿ ಬಿಡುತ್ತದೆ.
Verse 41
وَٱلَّذِينَ هَاجَرُوا۟ فِى ٱللَّهِ مِنۢ بَعْدِ مَا ظُلِمُوا۟ لَنُبَوِّئَنَّهُمْ فِى ٱلدُّنْيَا حَسَنَةً ۖ وَلَأَجْرُ ٱلْـَٔاخِرَةِ أَكْبَرُ ۚ لَوْ كَانُوا۟ يَعْلَمُونَ
Transliteration wa-alladhīna hājarū fī l-lahi min baʿdi mā ẓulimū lanubawwi-annahum fī l-dun'yā ḥasanatan wala-ajru l-ākhirati akbaru law kānū yaʿlamūna
Kannada ತುಳಿತಕ್ಕೊಳಗಾದ ನಂತರ ಅಲ್ಲಾಹನಿಗಾಗಿ ಸ್ವಂತ ನಾಡನ್ನು ತ್ಯಜಿಸಿ ಹೊರಟವರಿಗೆ ನಾವು ಇಹದಲ್ಲೇ ಉತ್ತಮ ವಾಸಸ್ಥಾನವನ್ನು ನೀಡು ವೆವು. ಪರಲೋಕದ ಪ್ರತಿಫಲವೂ ಅತ್ಯಂತ ಹಿರಿದಾಗಿದೆ. ಅವರು (ಅವಿಶ್ವಾಸಿಗಳು) ಅರಿತು ಕೊಂಡಿದ್ದರೆ!
Verse 42
ٱلَّذِينَ صَبَرُوا۟ وَعَلَىٰ رَبِّهِمْ يَتَوَكَّلُونَ
Transliteration alladhīna ṣabarū waʿalā rabbihim yatawakkalūna
Kannada ಅವರು ಸಂಕಷ್ಟವನ್ನು ಸಹಿಸಿದವರು ಹಾಗೂ ತಮ್ಮ ಪ್ರಭುವಿನ ಮೇಲೆ ಭಾರವರ್ಪಿಸಿದವರು.
Verse 43
وَمَآ أَرْسَلْنَا مِن قَبْلِكَ إِلَّا رِجَالًا نُّوحِىٓ إِلَيْهِمْ ۚ فَسْـَٔلُوٓا۟ أَهْلَ ٱلذِّكْرِ إِن كُنتُمْ لَا تَعْلَمُونَ
Transliteration wamā arsalnā min qablika illā rijālan nūḥī ilayhim fasalū ahla l-dhik'ri in kuntum lā taʿlamūna
Kannada (ಓ ಪೈಗಂಬರರೇ,) ದಿವ್ಯಸಂದೇಶದೊಂದಿಗೆ ನಾನು ಸಂದೇಶವಾಹಕರನ್ನು ಕಳುಹಿಸಿದಾ ಗಲೆಲ್ಲ ಪುರುಷರನ್ನೇ ಕಳುಹಿಸಿದ್ದೇವೆ. (ಓ ನಿಷೇ ಧಿಗಳೇ!) ನಿಮಗೆ ಗೊತ್ತಿಲ್ಲದಿದ್ದರೆ ಬಲ್ಲವರಲ್ಲಿ ಕೇಳಿರಿ .
Verse 44
بِٱلْبَيِّنَـٰتِ وَٱلزُّبُرِ ۗ وَأَنزَلْنَآ إِلَيْكَ ٱلذِّكْرَ لِتُبَيِّنَ لِلنَّاسِ مَا نُزِّلَ إِلَيْهِمْ وَلَعَلَّهُمْ يَتَفَكَّرُونَ
Transliteration bil-bayināti wal-zuburi wa-anzalnā ilayka l-dhik'ra litubayyina lilnnāsi mā nuzzila ilayhim walaʿallahum yatafakkarūna
Kannada ಗತ ಸಂದೇಶವಾಹಕರಿಗೆ ನಾವು ಪ್ರತ್ಯಕ್ಷ ಪ್ರಮಾಣಗಳನ್ನೂ ಗ್ರಂಥಗಳನ್ನೂ ಕೊಟ್ಟು ಕಳು ಹಿಸಿದ್ದೆವು ಮತ್ತು ಈಗ ಈ ಉದ್ಭೋದನೆಯನ್ನು ನಿಮಗೂ ಅವತೀರ್ಣಗೊಳಿಸಿದ್ದೇವೆ, ನೀವು ಅವರಿಗಾಗಿ ಅವತೀರ್ಣವಾದ ಬೋಧನೆಯನ್ನು ವಿವರಿಸಿ ಕೊಡುವ ಹಾಗೂ ಅವರು ಯೋಚಿಸುವ ಸಲುವಾಗಿ.
Verse 45
أَفَأَمِنَ ٱلَّذِينَ مَكَرُوا۟ ٱلسَّيِّـَٔاتِ أَن يَخْسِفَ ٱللَّهُ بِهِمُ ٱلْأَرْضَ أَوْ يَأْتِيَهُمُ ٱلْعَذَابُ مِنْ حَيْثُ لَا يَشْعُرُونَ
Transliteration afa-amina alladhīna makarū l-sayiāti an yakhsifa l-lahu bihimu l-arḍa aw yatiyahumu l-ʿadhābu min ḥaythu lā yashʿurūna
Kannada ಹೀನ ಕುತಂತ್ರಗಳನ್ನು ಹೆಣೆಯುವವರು, ತಮ್ಮನ್ನು ಅಲ್ಲಾಹನು ಭೂಮಿಯೊಳಗೆ ಹೂತು ಹೋಗುವಂತೆ ಮಾಡುವುದರಿಂದ ಅಥವಾ ಅನಿ ರೀಕ್ಷಿತವಾಗಿ ಶಿಕ್ಷೆಯು ಬಂದೆರಗುವುದರಿಂದ ನಿರ್ಭೀತರಾಗಿರುವರೇ?
Verse 46
أَوْ يَأْخُذَهُمْ فِى تَقَلُّبِهِمْ فَمَا هُم بِمُعْجِزِينَ
Transliteration aw yakhudhahum fī taqallubihim famā hum bimuʿ'jizīna
Kannada ಅಥವಾ ಅವರು ಅತ್ತಿತ್ತ ನಡೆದಾಡುವಾಗ ಅವರನ್ನು ನಾಶಗೊಳಿಸುವುದರಿಂದ ಅವರು ನಿರ್ಭಯರೇ? ಅದರಿಂದ ಅವರು ತಡೆಯಲು ಶಕ್ತರಲ್ಲ.
Verse 47
أَوْ يَأْخُذَهُمْ عَلَىٰ تَخَوُّفٍ فَإِنَّ رَبَّكُمْ لَرَءُوفٌ رَّحِيمٌ
Transliteration aw yakhudhahum ʿalā takhawwufin fa-inna rabbakum laraūfun raḥīmun
Kannada ಅಥವಾ ಅವರು ಸ್ವಲ್ಪ ಸ್ವಲ್ಪವಾಗಿ ವಿನಾಶಕ್ಕೆ ತಲುಪುವುದರ ಬಗ್ಗೆ ನಿರ್ಭೀತರಾಗಿರುವರೇ? ಖಂಡಿತ ನಿಮ್ಮ ಪ್ರಭು ಮಹಾ ದಯಾಳುವೂ ಕರುಣಾಶೀಲನೂ ಆಗಿರುತ್ತಾನೆ.
Verse 48
أَوَلَمْ يَرَوْا۟ إِلَىٰ مَا خَلَقَ ٱللَّهُ مِن شَىْءٍ يَتَفَيَّؤُا۟ ظِلَـٰلُهُۥ عَنِ ٱلْيَمِينِ وَٱلشَّمَآئِلِ سُجَّدًا لِّلَّهِ وَهُمْ دَٰخِرُونَ
Transliteration awalam yaraw ilā mā khalaqa l-lahu min shayin yatafayya-u ẓilāluhu ʿani l-yamīni wal-shamāili sujjadan lillahi wahum dākhirūna
Kannada ಅಲ್ಲಾಹನು ಸೃಷ್ಟಿಸಿರುವ ವಸ್ತುಗಳ ನೆರಳು ಎಡಕ್ಕೂ ಬಲಕ್ಕೂ ವಾಲುತ್ತಾ ಶರಣಾಗುತ್ತಾ ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತಿರುವುದನ್ನು ಇವರು ನೋಡುವುದಿಲ್ಲವೇ?
Verse 49
وَلِلَّهِ يَسْجُدُ مَا فِى ٱلسَّمَـٰوَٰتِ وَمَا فِى ٱلْأَرْضِ مِن دَآبَّةٍ وَٱلْمَلَـٰٓئِكَةُ وَهُمْ لَا يَسْتَكْبِرُونَ
Transliteration walillahi yasjudu mā fī l-samāwāti wamā fī l-arḍi min dābbatin wal-malāikatu wahum lā yastakbirūna
Kannada ಆಕಾಶಗಳಲ್ಲಿಯೂ ಭೂಮಿಯಲ್ಲೂ ಇರುವ ಸರ್ವಜೀವ ಜಾಲಗಳೂ ದೇವಚರರೂ ಸಕಲವೂ ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತವೆ. ಅವು ಅಹಂಭಾವ ತೋರುವುದಿಲ್ಲ.
Verse 50
يَخَافُونَ رَبَّهُم مِّن فَوْقِهِمْ وَيَفْعَلُونَ مَا يُؤْمَرُونَ ۩
Transliteration yakhāfūna rabbahum min fawqihim wayafʿalūna mā yu'marūna
Kannada ತಮ್ಮ ಮೇಲೆ ಸರ್ವಾಧಿಕಾರವುಳ್ಳ ಸರ್ವ ಸಮ ರ್ಥನಾದ ತಮ್ಮ ಪ್ರಭುವನ್ನು ಅವರು ಭಯ ಪಡುತ್ತಾರೆ. ಕೊಟ್ಟ ಅಪ್ಪಣೆಯನ್ನು ಪಾಲಿಸುತ್ತಾರೆ.
Verse 51
۞ وَقَالَ ٱللَّهُ لَا تَتَّخِذُوٓا۟ إِلَـٰهَيْنِ ٱثْنَيْنِ ۖ إِنَّمَا هُوَ إِلَـٰهٌ وَٰحِدٌ ۖ فَإِيَّـٰىَ فَٱرْهَبُونِ
Transliteration waqāla l-lahu lā tattakhidhū ilāhayni ith'nayni innamā huwa ilāhun wāḥidun fa-iyyāya fa-ir'habūni
Kannada ಇಬ್ಬರು ಆರಾಧ್ಯರನ್ನು ಸ್ವೀಕರಿಸಬೇಡಿರಿ, ಅವನೊಬ್ಬನೇ ಆರಾಧ್ಯನು, ಆದುದರಿಂದ ನನ್ನನ್ನು ಮಾತ್ರ ಭಯಪಡಿರಿ ಎಂದು ಅಲ್ಲಾಹನು ಅಜ್ಞಾಪಿಸಿದ್ದಾನೆ.
Verse 52
وَلَهُۥ مَا فِى ٱلسَّمَـٰوَٰتِ وَٱلْأَرْضِ وَلَهُ ٱلدِّينُ وَاصِبًا ۚ أَفَغَيْرَ ٱللَّهِ تَتَّقُونَ
Transliteration walahu mā fī l-samāwāti wal-arḍi walahu l-dīnu wāṣiban afaghayra l-lahi tattaqūna
Kannada ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲವೂ ಅವನ ಒಡೆತನಕ್ಕೆ ಸೇರಿವೆ. ಖಾಯಂ ಅನು ಸರಣಿಯೂ ಅವನಿಗೇ ಸೇರಿದೆ. ಹೀಗಿರುತ್ತ ನೀವು ಅಲ್ಲಾಹನಲ್ಲದವರಲ್ಲಿ ಭಕ್ತಿ ತೋರುತ್ತೀರಾ?
Verse 53
وَمَا بِكُم مِّن نِّعْمَةٍ فَمِنَ ٱللَّهِ ۖ ثُمَّ إِذَا مَسَّكُمُ ٱلضُّرُّ فَإِلَيْهِ تَجْـَٔرُونَ
Transliteration wamā bikum min niʿ'matin famina l-lahi thumma idhā massakumu l-ḍuru fa-ilayhi tajarūna
Kannada ನಿಮ್ಮಲ್ಲಿರುವ ಪ್ರತಿಯೊಂದು ಅನುಗ್ರಹವೂ ಅಲ್ಲಾಹನಿಂದಲೇ ಬಂದಿದೆ. ನಿಮಗೆ ಹಾನಿ ತಟ್ಟಿದರೆ ನೀವು ರಕ್ಷಣೆಗಾಗಿ ಅವನಲ್ಲೇ ಮೊರೆಯಿಡುತ್ತೀರಿ.
Verse 54
ثُمَّ إِذَا كَشَفَ ٱلضُّرَّ عَنكُمْ إِذَا فَرِيقٌ مِّنكُم بِرَبِّهِمْ يُشْرِكُونَ
Transliteration thumma idhā kashafa l-ḍura ʿankum idhā farīqun minkum birabbihim yush'rikūna
Kannada ಆದರೆ ಅಲ್ಲಾಹನು ನಿಮ್ಮಿಂದ ಸಂಕಷ್ಟವನ್ನು ನಿವಾರಿಸಿದರೆ ನಿಮ್ಮಲ್ಲೊಂದು ವಿಭಾಗವು ತನ್ನ ಪ್ರಭುವಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುತ್ತಾರೆ.
Verse 55
لِيَكْفُرُوا۟ بِمَآ ءَاتَيْنَـٰهُمْ ۚ فَتَمَتَّعُوا۟ ۖ فَسَوْفَ تَعْلَمُونَ
Transliteration liyakfurū bimā ātaynāhum fatamattaʿū fasawfa taʿlamūna
Kannada ಇದು ಅಲ್ಲಾಹನ ಅನುಗ್ರಹಕ್ಕೆ ಕೃತಘ್ನತೆ ತೋರಲಿಕ್ಕಾಗಿ. ಆದ್ದರಿಂದ ನೀವು ಸುಖ ಅನುಭವಿಸಿರಿ! ನಂತರ ನಿಮಗೆ ತಿಳಿಯುವುದು!
Verse 56
وَيَجْعَلُونَ لِمَا لَا يَعْلَمُونَ نَصِيبًا مِّمَّا رَزَقْنَـٰهُمْ ۗ تَٱللَّهِ لَتُسْـَٔلُنَّ عَمَّا كُنتُمْ تَفْتَرُونَ
Transliteration wayajʿalūna limā lā yaʿlamūna naṣīban mimmā razaqnāhum tal-lahi latus'alunna ʿammā kuntum taftarūna
Kannada ನಾವು ಅವರಿಗೆ ನೀಡಿದ ಸಂಪತ್ತಿನಿಂದ ಒಂದಂ ಶವನ್ನು ಯಾವ ವಸ್ತುಗಳ ಬಗ್ಗೆ (ಗುಣದೋಷ ನೀಡುವ ಶಕ್ತಿಯಿಲ್ಲವೆಂದು) ಅವರು ಸ್ವತಃ ಅರಿತಿಲ್ಲವೋ ಅಂಥ ವಸ್ತುಗಳಿಗೆ (ವಿಗ್ರಹಗಳಿಗೆ) ನೀಡುತ್ತಾರೆ. ಅಲ್ಲಾಹನಾಣೆ, ನೀವು ಕಟ್ಟುವ ಸುಳ್ಳುಗಳ ಬಗ್ಗೆ ಖಂಡಿತವಾಗಿಯೂ ನಿಮ್ಮನ್ನು ಪ್ರಶ್ನಿಸಲಾಗುವುದು.
Verse 57
وَيَجْعَلُونَ لِلَّهِ ٱلْبَنَـٰتِ سُبْحَـٰنَهُۥ ۙ وَلَهُم مَّا يَشْتَهُونَ
Transliteration wayajʿalūna lillahi l-banāti sub'ḥānahu walahum mā yashtahūna
Kannada ಅವರು (ಸ್ವತಃ ಅನಿಷ್ಟಪಡುವ) ಪುತ್ರಿಯರನ್ನು ಅಲ್ಲಾಹನಿಗೆ ನಿಶ್ಚಯಿಸುತ್ತಾರೆ. ಅವನು ಪರಮಪಾವನನು. ಅವರು ಸ್ವತಃ ಇಷ್ಟಪಡುವುದನ್ನು (ಗಂಡು ಮಕ್ಕಳನ್ನು) ತಮಗಾಗಿ ನಿಶ್ಚಯಿಸಿ ಕೊಳ್ಳುತ್ತಾರೆ.
Verse 58
وَإِذَا بُشِّرَ أَحَدُهُم بِٱلْأُنثَىٰ ظَلَّ وَجْهُهُۥ مُسْوَدًّا وَهُوَ كَظِيمٌ
Transliteration wa-idhā bushira aḥaduhum bil-unthā ẓalla wajhuhu mus'waddan wahuwa kaẓīmun
Kannada ಅವರ ಪೈಕಿ ಯಾರಿಗಾದರೂ ಹೆಣ್ಣು ಮಗು ಹುಟ್ಟಿದ ಸುವಾರ್ತೆ ನೀಡಲಾದರೆ, ಅವನು ದುಃಖಿತನಾಗಿ ಅವನ ಮುಖ ಕಳೆಗುಂದಿ ಹೋಗುತ್ತದೆ.
Verse 59
يَتَوَٰرَىٰ مِنَ ٱلْقَوْمِ مِن سُوٓءِ مَا بُشِّرَ بِهِۦٓ ۚ أَيُمْسِكُهُۥ عَلَىٰ هُونٍ أَمْ يَدُسُّهُۥ فِى ٱلتُّرَابِ ۗ أَلَا سَآءَ مَا يَحْكُمُونَ
Transliteration yatawārā mina l-qawmi min sūi mā bushira bihi ayum'sikuhu ʿalā hūnin am yadussuhu fī l-turābi alā sāa mā yaḥkumūna
Kannada ಅವನಿಗೆ ದೊರೆತ ಶುಭವಾರ್ತೆಯ ಅಪಮಾನದಿಂದಾಗಿ ಅವನು ಜನರಿಂದ ತಲೆಮರೆಸಿ ಕೊಳ್ಳು ತ್ತಾನೆ. ಅಪಮಾನದೊಂದಿಗೆ ಮಗುವನ್ನಿರಿಸಿ ಕೊಳ್ಳಲೇ ಅಥವಾ ಮಣ್ಣಿನಲ್ಲಿ ಹುಗಿದು ಬಿಡಲೇ ಎಂದು ಯೋಚಿಸುತ್ತಾನೆ. ತಿಳಿಯಿರಿ; ಅವರು ಅಲ್ಲಾಹನ ಬಗ್ಗೆ ಕೈಗೊಳ್ಳುವ ನಿರ್ಣಯ ಅತಿ ಕೆಟ್ಟದು.
Verse 60
لِلَّذِينَ لَا يُؤْمِنُونَ بِٱلْـَٔاخِرَةِ مَثَلُ ٱلسَّوْءِ ۖ وَلِلَّهِ ٱلْمَثَلُ ٱلْأَعْلَىٰ ۚ وَهُوَ ٱلْعَزِيزُ ٱلْحَكِيمُ
Transliteration lilladhīna lā yu'minūna bil-ākhirati mathalu l-sawi walillahi l-mathalu l-aʿlā wahuwa l-ʿazīzu l-ḥakīmu
Kannada ಪರಲೋಕದಲ್ಲಿ ವಿಶ್ವಾಸವಿರಿಸದವರಿಗೆ ಕೆಟ್ಟ ವಿಶೇಷಣವಿದೆ. ಅಲ್ಲಾಹನಿಗೆ ಅತ್ಯುನ್ನತ ಗುಣವಿಶೇಷಣವಿದೆ. ಅವನೇ ಮಹಾಪ್ರತಾಪಿಯೂ ಮಹಾ ಯುಕ್ತಿವಂತನೂ ಆಗಿರುತ್ತಾನೆ.
Verse 61
وَلَوْ يُؤَاخِذُ ٱللَّهُ ٱلنَّاسَ بِظُلْمِهِم مَّا تَرَكَ عَلَيْهَا مِن دَآبَّةٍ وَلَـٰكِن يُؤَخِّرُهُمْ إِلَىٰٓ أَجَلٍ مُّسَمًّى ۖ فَإِذَا جَآءَ أَجَلُهُمْ لَا يَسْتَـْٔخِرُونَ سَاعَةً ۖ وَلَا يَسْتَقْدِمُونَ
Transliteration walaw yuākhidhu l-lahu l-nāsa biẓul'mihim mā taraka ʿalayhā min dābbatin walākin yu-akhiruhum ilā ajalin musamman fa-idhā jāa ajaluhum lā yastakhirūna sāʿatan walā yastaqdimūna
Kannada ಅಲ್ಲಾಹನು ಜನರನ್ನು ಅವರ ಅಕ್ರಮಗಳಿಗೆ ಪ್ರತಿಯಾಗಿ ತಕ್ಷಣ ಹಿಡಿದು ಶಿಕ್ಷಿಸುತ್ತಿದ್ದರೆ ಭೂಮಿಯ ಮೇಲೆ ಒಂದೇ ಒಂದು ಜೀವಿಯನ್ನೂ ಬಿಡುತ್ತಿರಲಿಲ್ಲ. ಆದರೆ ಒಂದು ನಿಶ್ಚಿತ ಅವಧಿಯ ತನಕ ಶಿಕ್ಷೆಯನ್ನು ಮುಂದೂಡುತ್ತಾನೆ. ಅವರ ಅವಧಿ ಬಂದರೆ ಒಂದು ಕ್ಷಣವೂ ಹಿಂದೆ ಮುಂದೆ ಆಗುವಂತಿಲ್ಲ.
Verse 62
وَيَجْعَلُونَ لِلَّهِ مَا يَكْرَهُونَ وَتَصِفُ أَلْسِنَتُهُمُ ٱلْكَذِبَ أَنَّ لَهُمُ ٱلْحُسْنَىٰ ۖ لَا جَرَمَ أَنَّ لَهُمُ ٱلنَّارَ وَأَنَّهُم مُّفْرَطُونَ
Transliteration wayajʿalūna lillahi mā yakrahūna wataṣifu alsinatuhumu l-kadhiba anna lahumu l-ḥus'nā lā jarama anna lahumu l-nāra wa-annahum muf'raṭūna
Kannada ಅವರು ತಮಗಿಷ್ಟವಿಲ್ಲದನ್ನು ಅಲ್ಲಾಹನಿಗೆ ನಿಶ್ಚಯಿಸುತ್ತಾರೆ. ಹಾಗಿದ್ದೂ ಒಳಿತು ತಮಗೇ ಎಂದು ಅವರ ನಾಲಗೆಗಳು ಸುಳ್ಳಾಡುತ್ತಿವೆ. ಸತ್ಯವಾಗಿಯೂ ಅವರಿಗಿರುವುದು ನರಕಾಗ್ನಿ ಮಾತ್ರ. ನಿಶ್ಚಯವಾಗಿಯೂ ಅವರು ಎಲ್ಲರಿಗಿಂತಲೂ ಮೊದಲು ಅದಕ್ಕೆ ಪ್ರವೇಶ ಮಾಡುತ್ತಾರೆ.
Verse 63
تَٱللَّهِ لَقَدْ أَرْسَلْنَآ إِلَىٰٓ أُمَمٍ مِّن قَبْلِكَ فَزَيَّنَ لَهُمُ ٱلشَّيْطَـٰنُ أَعْمَـٰلَهُمْ فَهُوَ وَلِيُّهُمُ ٱلْيَوْمَ وَلَهُمْ عَذَابٌ أَلِيمٌ
Transliteration tal-lahi laqad arsalnā ilā umamin min qablika fazayyana lahumu l-shayṭānu aʿmālahum fahuwa waliyyuhumu l-yawma walahum ʿadhābun alīmun
Kannada (ಓ ಪೈಗಂಬರರೇ,) ಅಲ್ಲಾಹನಾಣೆ! ನಾವು ನಿಮಗಿಂತ ಮೊದಲಿನ ಸಮುದಾಯಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಶೈತಾನನು ಅವರ ದುಷ್ಕರ್ಮಗಳನ್ನು ಅವರಿಗೆ ಮನೋಹರವನ್ನಾಗಿ ಮಾಡಿ ತೋರಿಸಿದನು. ಇಹದಲ್ಲಿ ಆ ಶೈತಾನನೇ ಅವರ ಸಹಾಯಕ. ಅವರಿಗೆ (ಪರಲೋಕದಲ್ಲಿ) ಯಾತನಾಮಯ ಶಿಕ್ಷೆ ಇದೆ.
Verse 64
وَمَآ أَنزَلْنَا عَلَيْكَ ٱلْكِتَـٰبَ إِلَّا لِتُبَيِّنَ لَهُمُ ٱلَّذِى ٱخْتَلَفُوا۟ فِيهِ ۙ وَهُدًى وَرَحْمَةً لِّقَوْمٍ يُؤْمِنُونَ
Transliteration wamā anzalnā ʿalayka l-kitāba illā litubayyina lahumu alladhī ikh'talafū fīhi wahudan waraḥmatan liqawmin yu'minūna
Kannada ಅವರು ಹೊಂದಿರುವ ಭಿನ್ನಾಭಿಪ್ರಾಯಗಳ ವಸ್ತುಸ್ಥಿತಿಯನ್ನು ಅವರಿಗೆ ವಿವರಿಸಲಿಕ್ಕಾಗಿಯೇ ನಾವು ಈ ಗ್ರಂಥವನ್ನು ನಿಮಗೆ ಅವತೀರ್ಣ ಗೊಳಿಸಿರುತ್ತೇವೆ. ಹಾಗೂ ಸತ್ಯವಿಶ್ವಾಸ ಹೊಂದುವ ಜನತೆಗೆ ಮಾರ್ಗದರ್ಶಕ ಹಾಗೂ ಅನುಗ್ರಹವಾಗಿ ಇದು ಅವತೀರ್ಣಗೊಂಡಿರುತ್ತದೆ.
Verse 65
وَٱللَّهُ أَنزَلَ مِنَ ٱلسَّمَآءِ مَآءً فَأَحْيَا بِهِ ٱلْأَرْضَ بَعْدَ مَوْتِهَآ ۚ إِنَّ فِى ذَٰلِكَ لَـَٔايَةً لِّقَوْمٍ يَسْمَعُونَ
Transliteration wal-lahu anzala mina l-samāi māan fa-aḥyā bihi l-arḍa baʿda mawtihā inna fī dhālika laāyatan liqawmin yasmaʿūna
Kannada ಅಲ್ಲಾಹನು ಆಕಾಶದಿಂದ ಜಲವನ್ನು ಸುರಿಸಿದನು. ನಿರ್ಜೀವವಾಗಿದ್ದ ಭೂಮಿಯನ್ನು ಆ ಮೂಲಕ ಜೀವಂತಗೊಳಿಸಿದನು. ಸತ್ಯವನ್ನು ಆಲಿಸುವ ಜನತೆಗೆ ಇದರಲ್ಲಿ ಖಂಡಿತ ನಿದರ್ಶನವಿದೆ.
Verse 66
وَإِنَّ لَكُمْ فِى ٱلْأَنْعَـٰمِ لَعِبْرَةً ۖ نُّسْقِيكُم مِّمَّا فِى بُطُونِهِۦ مِنۢ بَيْنِ فَرْثٍ وَدَمٍ لَّبَنًا خَالِصًا سَآئِغًا لِّلشَّـٰرِبِينَ
Transliteration wa-inna lakum fī l-anʿāmi laʿib'ratan nus'qīkum mimmā fī buṭūnihi min bayni farthin wadamin labanan khāliṣan sāighan lilshāribīna
Kannada ಜಾನುವಾರುಗಳಲ್ಲಿ ನಿಮಗೆ ಖಂಡಿತ ಪಾಠವಿದೆ. ಅವುಗಳ ಹೊಟ್ಟೆಯೊಳಗಿರುವ ಸೆಗಣಿ ಮತ್ತು ರಕ್ತದ ನಡುವಿನಿಂದ ಶುದ್ಧ ಹಾಲನ್ನು ಕುಡಿ ಯುವವರಿಗೆ ಸುಗಮ ಪೇಯವನ್ನಾಗಿ ನಾವು ನಿಮಗೆ ಕುಡಿಸುತ್ತಿದ್ದೇವೆ.
Verse 67
وَمِن ثَمَرَٰتِ ٱلنَّخِيلِ وَٱلْأَعْنَـٰبِ تَتَّخِذُونَ مِنْهُ سَكَرًا وَرِزْقًا حَسَنًا ۗ إِنَّ فِى ذَٰلِكَ لَـَٔايَةً لِّقَوْمٍ يَعْقِلُونَ
Transliteration wamin thamarāti l-nakhīli wal-aʿnābi tattakhidhūna min'hu sakaran wariz'qan ḥasanan inna fī dhālika laāyatan liqawmin yaʿqilūna
Kannada ಖರ್ಜೂರದ ಮರಗಳಿಂದಲೂ ದ್ರಾಕ್ಷೆಯ ಬಳ್ಳಿಗಳಿಂದಲೂ (ನಾವು ನಿಮಗೆ ಕುಡಿಸುತ್ತೇವೆ.) ಅದರಿಂದ ನೀವು ಮಾದಕ ಪೇಯವನ್ನೂ ಉತ್ತಮ ಆಹಾರವನ್ನೂ ಸಿದ್ಧಪಡಿಸುವಿರಿ. ನಿಶ್ಚಯವಾಗಿಯೂ ಚಿಂತನಾಶೀಲರಿಗೆ ಇದರಲ್ಲಿ ನಿದರ್ಶನವಿದೆ.
Verse 68
وَأَوْحَىٰ رَبُّكَ إِلَى ٱلنَّحْلِ أَنِ ٱتَّخِذِى مِنَ ٱلْجِبَالِ بُيُوتًا وَمِنَ ٱلشَّجَرِ وَمِمَّا يَعْرِشُونَ
Transliteration wa-awḥā rabbuka ilā l-naḥli ani ittakhidhī mina l-jibāli buyūtan wamina l-shajari wamimmā yaʿrishūna
Kannada ‘ಪರ್ವತಗಳಲ್ಲೂ ಮರಗಳಲ್ಲೂ ಮನುಷ್ಯರು ನಿನಗಾಗಿ ನಿರ್ಮಿಸುವ ಗೂಡುಗಳಲ್ಲೂ ಮನೆಗಳನ್ನು ಕಟ್ಟು ಎಂದು ನಿಮ್ಮ ಪ್ರಭುವು ಜೇನು ನೊಣಕ್ಕೆ ದಿವ್ಯ ಸಂದೇಶವನ್ನು ನೀಡಿದನು
Verse 69
ثُمَّ كُلِى مِن كُلِّ ٱلثَّمَرَٰتِ فَٱسْلُكِى سُبُلَ رَبِّكِ ذُلُلًا ۚ يَخْرُجُ مِنۢ بُطُونِهَا شَرَابٌ مُّخْتَلِفٌ أَلْوَٰنُهُۥ فِيهِ شِفَآءٌ لِّلنَّاسِ ۗ إِنَّ فِى ذَٰلِكَ لَـَٔايَةً لِّقَوْمٍ يَتَفَكَّرُونَ
Transliteration thumma kulī min kulli l-thamarāti fa-us'lukī subula rabbiki dhululan yakhruju min buṭūnihā sharābun mukh'talifun alwānuhu fīhi shifāon lilnnāsi inna fī dhālika laāyatan liqawmin yatafakkarūna
Kannada ಆಮೇಲೆ ಎಲ್ಲಾ ವಿಧದ ಫಲಗಳಿಂದ ರಸವನ್ನು ಹೀರು, ನಿನ್ನ ಪ್ರಭು ಸುಗಮ ವಿಧೇಯಗೊಳಿಸಿದ ದಾರಿಗಳಲ್ಲಿ ವಿಧೇಯನಾಗಿ ಚಲಿಸುತ್ತಿರು’ ಆ ನೊಣದ ಹೊಟ್ಟೆಯಿಂದ ವಿವಿಧ ಬಣ್ಣಗಳ ಪೇಯ ಹೊರಡುತ್ತದೆ. ಅದರಲ್ಲಿ ಜನರಿಗೆ ಶಮನವಿದೆ. ನಿಶ್ಚಯವಾಗಿಯೂ ಚಿಂತನಶೀಲರಿಗೆ ಇದರಲ್ಲಿ ನಿದರ್ಶನವಿದೆ.
Verse 70
وَٱللَّهُ خَلَقَكُمْ ثُمَّ يَتَوَفَّىٰكُمْ ۚ وَمِنكُم مَّن يُرَدُّ إِلَىٰٓ أَرْذَلِ ٱلْعُمُرِ لِكَىْ لَا يَعْلَمَ بَعْدَ عِلْمٍ شَيْـًٔا ۚ إِنَّ ٱللَّهَ عَلِيمٌ قَدِيرٌ
Transliteration wal-lahu khalaqakum thumma yatawaffākum waminkum man yuraddu ilā ardhali l-ʿumuri likay lā yaʿlama baʿda ʿil'min shayan inna l-laha ʿalīmun qadīrun
Kannada . ಅಲ್ಲಾಹನು ನಿಮ್ಮನ್ನು ಸೃಷ್ಟಿಸಿದನು. ಆಮೇಲೆ ಅವನು ನಿಮಗೆ ಮರಣ ಕೊಡುತ್ತಾನೆ. ಮತ್ತು ನಿಮ್ಮಲ್ಲಿ ಕೆಲವರು ತಿಳಿದ ಅನಂತರವೂ ಏನೂ ತಿಳಿಯದವರಾಗುವಂತೆ ಅತಿ ವೃದ್ಧಾಪ್ಯಕ್ಕೆ ಮರಳಿಸಲ್ಪಡುತ್ತಾರೆ. ವಾಸ್ತವದಲ್ಲಿ ಅಲ್ಲಾಹನು ಸರ್ವಜ್ಞನೂ ಸರ್ವಶಕ್ತನೂ ಆಗಿರುತ್ತಾನೆ.
Verse 71
وَٱللَّهُ فَضَّلَ بَعْضَكُمْ عَلَىٰ بَعْضٍ فِى ٱلرِّزْقِ ۚ فَمَا ٱلَّذِينَ فُضِّلُوا۟ بِرَآدِّى رِزْقِهِمْ عَلَىٰ مَا مَلَكَتْ أَيْمَـٰنُهُمْ فَهُمْ فِيهِ سَوَآءٌ ۚ أَفَبِنِعْمَةِ ٱللَّهِ يَجْحَدُونَ
Transliteration wal-lahu faḍḍala baʿḍakum ʿalā baʿḍin fī l-riz'qi famā alladhīna fuḍḍilū birāddī riz'qihim ʿalā mā malakat aymānuhum fahum fīhi sawāon afabiniʿ'mati l-lahi yajḥadūna
Kannada ಅಲ್ಲಾಹನು ನಿಮ್ಮ ಪೈಕಿ ಕೆಲವರಿಗೆ ಕೆಲವರಿಗಿಂತ ಸಂಪತ್ತಿನಲ್ಲಿ ಶ್ರೇಷ್ಠತೆಯನ್ನು ದಯಪಾಲಿಸಿದ್ದಾನೆ. ಆದರೆ ಶ್ರೇಷ್ಟತೆ ದೊರೆತವರು ತಮ್ಮ ಸಂಪತ್ತನ್ನು ತಮ್ಮ ದಾಸರಿಗೆ ಬಿಟ್ಟುಕೊಟ್ಟು ಅವರನ್ನು ಅದರಲ್ಲಿ ಸಮಾನಗೊಳಿಸಲಾರರು. ಹಾಗಿದ್ದು ಕೂಡಾ ಅವರು ಅಲ್ಲಾಹನ ಅನುಗ್ರಹಕ್ಕೆ ದ್ರೋಹವೆಸಗುವುದೇ?
Verse 72
وَٱللَّهُ جَعَلَ لَكُم مِّنْ أَنفُسِكُمْ أَزْوَٰجًا وَجَعَلَ لَكُم مِّنْ أَزْوَٰجِكُم بَنِينَ وَحَفَدَةً وَرَزَقَكُم مِّنَ ٱلطَّيِّبَـٰتِ ۚ أَفَبِٱلْبَـٰطِلِ يُؤْمِنُونَ وَبِنِعْمَتِ ٱللَّهِ هُمْ يَكْفُرُونَ
Transliteration wal-lahu jaʿala lakum min anfusikum azwājan wajaʿala lakum min azwājikum banīna waḥafadatan warazaqakum mina l-ṭayibāti afabil-bāṭili yu'minūna wabiniʿ'mati l-lahi hum yakfurūna
Kannada ಅಲ್ಲಾಹನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನುಂಟು ಮಾಡಿದನು ಮತ್ತು ನಿಮ್ಮ ಜೋಡಿಗಳಿಂದ ಅವನು ನಿಮಗೆ ಪುತ್ರರನ್ನೂ ಪೌತ್ರರನ್ನೂ ದಯಪಾಲಿಸಿದನು. ಮತ್ತು ವಿಶಿಷ್ಟ ವಸ್ತುಗಳಿಂದ ಅವನು ನಿಮಗೆ ಸಂಪತ್ತನ್ನು ಕೊಟ್ಟನು. ಆದರೂ ಕೂಡಾ ಅವರು ಅಸತ್ಯದಲ್ಲಿ ವಿಶ್ವಾಸವಿರಿಸುತ್ತಿದ್ದಾರಲ್ಲ? ಅಲ್ಲಾಹನ ಅನುಗ್ರಹಗಳಿಗೆ ದ್ರೋಹ ಬಗೆಯುತ್ತಾರಲ್ಲ ?
Verse 73
وَيَعْبُدُونَ مِن دُونِ ٱللَّهِ مَا لَا يَمْلِكُ لَهُمْ رِزْقًا مِّنَ ٱلسَّمَـٰوَٰتِ وَٱلْأَرْضِ شَيْـًٔا وَلَا يَسْتَطِيعُونَ
Transliteration wayaʿbudūna min dūni l-lahi mā lā yamliku lahum riz'qan mina l-samāwāti wal-arḍi shayan walā yastaṭīʿūna
Kannada ಅಲ್ಲಾಹನನ್ನು ಬಿಟ್ಟು ಆಕಾಶಗಳಿಂದಾಗಲೀ ಭೂಮಿಯಿಂದಾಗಲೀ ಅವರಿಗೆ ಜೀವನಾಧಾರ ವನ್ನು ಅಧೀನಗೊಳಿಸಿ ಕೊಡದ ಮತ್ತು ಯಾವು ದಕ್ಕೂ ಸಮರ್ಥರಾಗದಂತಹ ಇತರರನ್ನು ಅವರು ಆರಾಧಿಸುತ್ತಾರೆ.
Verse 74
فَلَا تَضْرِبُوا۟ لِلَّهِ ٱلْأَمْثَالَ ۚ إِنَّ ٱللَّهَ يَعْلَمُ وَأَنتُمْ لَا تَعْلَمُونَ
Transliteration falā taḍribū lillahi l-amthāla inna l-laha yaʿlamu wa-antum lā taʿlamūna
Kannada ಆದುದರಿಂದ ಅಲ್ಲಾಹನಿಗೆ ಉಪಮೆಗಳನ್ನು ಕಲ್ಪಿಸಬೇಡಿರಿ. ಅಲ್ಲಾಹನಿಗೆ ತಿಳಿದಿದೆ, ನಿಮಗೆ ತಿಳಿದಿಲ್ಲ.
Verse 75
۞ ضَرَبَ ٱللَّهُ مَثَلًا عَبْدًا مَّمْلُوكًا لَّا يَقْدِرُ عَلَىٰ شَىْءٍ وَمَن رَّزَقْنَـٰهُ مِنَّا رِزْقًا حَسَنًا فَهُوَ يُنفِقُ مِنْهُ سِرًّا وَجَهْرًا ۖ هَلْ يَسْتَوُۥنَ ۚ ٱلْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ
Transliteration ḍaraba l-lahu mathalan ʿabdan mamlūkan lā yaqdiru ʿalā shayin waman razaqnāhu minnā riz'qan ḥasanan fahuwa yunfiqu min'hu sirran wajahran hal yastawūna l-ḥamdu lillahi bal aktharuhum lā yaʿlamūna
Kannada ಪರಾಧೀನನಾದ, ಯಾವುದಕ್ಕೂ ಸಮರ್ಥನಾಗದ (ಸ್ವಂತ ಅಧಿಕಾರವಿಲ್ಲದ) ಒಬ್ಬ ಗುಲಾಮ ಮತ್ತು ನಮ್ಮ ಕಡೆಯಿಂದ ಉತ್ತಮ ಜೀವನಾಧಾರವನ್ನು ನೀಡಿದ್ದು ಅದರಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುತ್ತಿರುವ ಇನ್ನೊಬ್ಬ ವ್ಯಕ್ತಿಯನ್ನು ಅಲ್ಲಾಹನು ಉಪಮೆ ಮಾಡಿರುತ್ತಾನೆ. ಇವರಿಬ್ಬರು ಸಮಾನರಾಗಿರುವರೇ? ಸಕಲ ಸ್ತೋತ್ರಗಳೂ ಅಲ್ಲಾಹನಿಗೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ.
Verse 76
وَضَرَبَ ٱللَّهُ مَثَلًا رَّجُلَيْنِ أَحَدُهُمَآ أَبْكَمُ لَا يَقْدِرُ عَلَىٰ شَىْءٍ وَهُوَ كَلٌّ عَلَىٰ مَوْلَىٰهُ أَيْنَمَا يُوَجِّههُّ لَا يَأْتِ بِخَيْرٍ ۖ هَلْ يَسْتَوِى هُوَ وَمَن يَأْمُرُ بِٱلْعَدْلِ ۙ وَهُوَ عَلَىٰ صِرَٰطٍ مُّسْتَقِيمٍ
Transliteration waḍaraba l-lahu mathalan rajulayni aḥaduhumā abkamu lā yaqdiru ʿalā shayin wahuwa kallun ʿalā mawlāhu aynamā yuwajjihhu lā yati bikhayrin hal yastawī huwa waman yamuru bil-ʿadli wahuwa ʿalā ṣirāṭin mus'taqīmin
Kannada ಅಲ್ಲಾಹನು ಇಬ್ಬರು ಪುರುಷರ ಉಪಮೆ ಕೊಡುತ್ತಾನೆ; ಅವರಲ್ಲಿ ಒಬ್ಬನು ಯಾವುದಕ್ಕೂ ಸಮರ್ಥನಲ್ಲದ ಮೂಕನು. ಅವನು ತನ್ನ ಯಜಮಾನನಿಗೆ ಹೊರೆಯಾಗಿದ್ದಾನೆ. ಅವನು ಇವನನ್ನು ಎತ್ತ ಕಳುಹಿಸಿದರೂ ಯಾವ ಒಳಿತನ್ನೂ ಅವನು ತರುವುದಿಲ್ಲ. ಅವನೂ, ಸ್ವತಃ ನೇರಮಾರ್ಗದಲ್ಲಿ ನೆಲೆ ನಿಂತಿದ್ದು ನ್ಯಾಯದ ಆಜ್ಞೆ ಕೊಡುವವನೂ ಸಮಾನರಾಗಿರುವರೇ?
Verse 77
وَلِلَّهِ غَيْبُ ٱلسَّمَـٰوَٰتِ وَٱلْأَرْضِ ۚ وَمَآ أَمْرُ ٱلسَّاعَةِ إِلَّا كَلَمْحِ ٱلْبَصَرِ أَوْ هُوَ أَقْرَبُ ۚ إِنَّ ٱللَّهَ عَلَىٰ كُلِّ شَىْءٍ قَدِيرٌ
Transliteration walillahi ghaybu l-samāwāti wal-arḍi wamā amru l-sāʿati illā kalamḥi l-baṣari aw huwa aqrabu inna l-laha ʿalā kulli shayin qadīrun
Kannada ಭೂಮಿ-ಆಕಾಶಗಳ ಅದೃಶ್ಯ ಜ್ಞಾನ ಅಲ್ಲಾಹನಿಗೆ ಮಾತ್ರವಿದೆ. ಪ್ರಳಯದ ಸಂಭವವು ರೆಪ್ಪೆ ಬಡಿ ಯುವಷ್ಟು ಅಥವಾ ಅದಕ್ಕಿಂತಲೂ ಸುಲಭವಿದೆ. ನಿಜವಾಗಿಯೂ ಅಲ್ಲಾಹನು ಎಲ್ಲ ವಸ್ತುವಿನ ಮೇಲೆ ಪರಮ ಸಮರ್ಥನು.
Verse 78
وَٱللَّهُ أَخْرَجَكُم مِّنۢ بُطُونِ أُمَّهَـٰتِكُمْ لَا تَعْلَمُونَ شَيْـًٔا وَجَعَلَ لَكُمُ ٱلسَّمْعَ وَٱلْأَبْصَـٰرَ وَٱلْأَفْـِٔدَةَ ۙ لَعَلَّكُمْ تَشْكُرُونَ
Transliteration wal-lahu akhrajakum min buṭūni ummahātikum lā taʿlamūna shayan wajaʿala lakumu l-samʿa wal-abṣāra wal-afidata laʿallakum tashkurūna
Kannada ನೀವು ಏನೂ ಅರಿಯದ ಸ್ಥಿತಿಯಲ್ಲಿ ಅಲ್ಲಾಹು ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ಹೊರತಂದನು. ಅವನು ನಿಮಗೆ ಶ್ರವಣ ಶಕ್ತಿಯನ್ನೂ ದೃಷ್ಟಿಗಳನ್ನೂ ಹೃದಯಗಳನ್ನೂ ನೀಡಿ ದನು. ನೀವು ಕೃತಜ್ಞತೆಯುಳ್ಳವರಾಗಲು.
Verse 79
أَلَمْ يَرَوْا۟ إِلَى ٱلطَّيْرِ مُسَخَّرَٰتٍ فِى جَوِّ ٱلسَّمَآءِ مَا يُمْسِكُهُنَّ إِلَّا ٱللَّهُ ۗ إِنَّ فِى ذَٰلِكَ لَـَٔايَـٰتٍ لِّقَوْمٍ يُؤْمِنُونَ
Transliteration alam yaraw ilā l-ṭayri musakharātin fī jawwi l-samāi mā yum'sikuhunna illā l-lahu inna fī dhālika laāyātin liqawmin yu'minūna
Kannada ಬಾನಿನ ಅಂತರಿಕ್ಷದಲ್ಲಿ ನಿಯಂತ್ರಣಕ್ಕೊಳಗಾಗಿರುವ ಹಾರುವ ಹಕ್ಕಿಗಳ ಕಡೆಗೆ ಅವರು ನೋಡಲಿಲ್ಲವೇ? ಅವುಗಳನ್ನು ಅಲ್ಲಾಹನ ಹೊರತು ಇನ್ನಾರೂ ಹವೆಯಲ್ಲಿ ಹಿಡಿದಿರಿಸುವುದಿಲ್ಲ. ಸತ್ಯ ವಿಶ್ವಾಸವಿರಿಸುವವರಿಗೆ ಇದರಲ್ಲಿ ನಿದರ್ಶನ ಗಳಿವೆ.
Verse 80
وَٱللَّهُ جَعَلَ لَكُم مِّنۢ بُيُوتِكُمْ سَكَنًا وَجَعَلَ لَكُم مِّن جُلُودِ ٱلْأَنْعَـٰمِ بُيُوتًا تَسْتَخِفُّونَهَا يَوْمَ ظَعْنِكُمْ وَيَوْمَ إِقَامَتِكُمْ ۙ وَمِنْ أَصْوَافِهَا وَأَوْبَارِهَا وَأَشْعَارِهَآ أَثَـٰثًا وَمَتَـٰعًا إِلَىٰ حِينٍ
Transliteration wal-lahu jaʿala lakum min buyūtikum sakanan wajaʿala lakum min julūdi l-anʿāmi buyūtan tastakhiffūnahā yawma ẓaʿnikum wayawma iqāmatikum wamin aṣwāfihā wa-awbārihā wa-ashʿārihā athāthan wamatāʿan ilā ḥīnin
Kannada ಅಲ್ಲಾಹನು ನಿಮಗಾಗಿ ನಿಮ್ಮ ಮನೆಗಳನ್ನು ವಿಶ್ರಾಂತಿಯ ತಾಣವನ್ನಾಗಿ ಮಾಡಿದನು. ಪ್ರಾಣಿಗಳ ಚರ್ಮದಿಂದ ನಿಮಗಾಗಿ ಮನೆಗಳ ನ್ನು ಮಾಡಿದನು. ನೀವು ಪ್ರಯಾಣ ಮಾಡುವ ದಿನ ಮತ್ತು ತಂಗುವ ದಿನ ಅವುಗಳನ್ನು ಅನಾ ಯಾಸ ಬಳಸುತ್ತೀರಿ. ಅಲ್ಲಾಹನು ಅವುಗಳತು ಪ್ಪಳ, ಉಣ್ಣೆ ಮತ್ತು ರೋಮಗಳಿಂದ ಉಪಕರಣ ಗಳನ್ನೂ ಒಂದು ನಿರ್ದಿಷ್ಟ ಅವಧಿಯವರೆಗೆ ನಿಮ್ಮ ಉಪಯೋಗಕ್ಕೆ ಬರುವಂತಹ ವಸ್ತು ಗಳನ್ನೂ ಸೃಷ್ಟಿಸಿದನು.
Verse 81
وَٱللَّهُ جَعَلَ لَكُم مِّمَّا خَلَقَ ظِلَـٰلًا وَجَعَلَ لَكُم مِّنَ ٱلْجِبَالِ أَكْنَـٰنًا وَجَعَلَ لَكُمْ سَرَٰبِيلَ تَقِيكُمُ ٱلْحَرَّ وَسَرَٰبِيلَ تَقِيكُم بَأْسَكُمْ ۚ كَذَٰلِكَ يُتِمُّ نِعْمَتَهُۥ عَلَيْكُمْ لَعَلَّكُمْ تُسْلِمُونَ
Transliteration wal-lahu jaʿala lakum mimmā khalaqa ẓilālan wajaʿala lakum mina l-jibāli aknānan wajaʿala lakum sarābīla taqīkumu l-ḥara wasarābīla taqīkum basakum kadhālika yutimmu niʿ'matahu ʿalaykum laʿallakum tus'limūna
Kannada ಅಲ್ಲಾಹನು ತಾನು ಸೃಷ್ಟಿಸಿದ ವಸ್ತುಗಳಿಂದ ನಿಮಗಾಗಿ ನೆರಳಿನ ವ್ಯವಸ್ಥೆ ಮಾಡಿದನು. ಪರ್ವತ ಗಳಲ್ಲಿ ನಿಮಗಾಗಿ ಅಭಯ ಕೇಂದ್ರಗಳನ್ನು ಮಾಡಿದನು. ನಿಮಗೆ ಉಷ್ಣದಿಂದ ರಕ್ಷಿಸತಕ್ಕ ಉಡುಪನ್ನೂ ಪರಸ್ಪರರೊಳಗಿನ ಆಕ್ರಮಣದಲ್ಲಿ ನಿಮಗೆ ರಕ್ಷಣೆ ನೀಡುವಂತಹ ಕವಚಗಳನ್ನೂ ದಯಪಾಲಿಸಿದನು. ಹೀಗೆ ಅವನು ನಿಮ್ಮ ಮೇಲೆ ತನ್ನ ಅನುಗ್ರಹವನ್ನು ಪೂರ್ತಿಗೊಳಿಸುತ್ತಾನೆ. ನೀವು (ಅವನಿಗೆ) ವಿಧೇಯರಾಗಲೆಂದು.
Verse 82
فَإِن تَوَلَّوْا۟ فَإِنَّمَا عَلَيْكَ ٱلْبَلَـٰغُ ٱلْمُبِينُ
Transliteration fa-in tawallaw fa-innamā ʿalayka l-balāghu l-mubīnu
Kannada ಇನ್ನೂ ಅವರು ವಿಮುಖರಾಗುತ್ತಾರಾದರೆ, (ಓ ಪೈಗಂಬರರೇ,) ಸಂದೇಶವನ್ನು ಸುವ್ಯಕ್ತವಾಗಿ ತಲುಪಿಸುವುದಷ್ಟೇ ನಿಮ್ಮ ಹೊಣೆಯಾಗಿರುತ್ತದೆ.
Verse 83
يَعْرِفُونَ نِعْمَتَ ٱللَّهِ ثُمَّ يُنكِرُونَهَا وَأَكْثَرُهُمُ ٱلْكَـٰفِرُونَ
Transliteration yaʿrifūna niʿ'mata l-lahi thumma yunkirūnahā wa-aktharuhumu l-kāfirūna
Kannada ಅವರು ಅಲ್ಲಾಹನ ಅನುಗ್ರಹವನ್ನು ಅರಿಯುತ್ತಾರೆ; ಅನಂತರ ಅದನ್ನು ನಿರಾಕರಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಕೃತಘ್ನರಾಗಿದ್ದಾರೆ.
Verse 84
وَيَوْمَ نَبْعَثُ مِن كُلِّ أُمَّةٍ شَهِيدًا ثُمَّ لَا يُؤْذَنُ لِلَّذِينَ كَفَرُوا۟ وَلَا هُمْ يُسْتَعْتَبُونَ
Transliteration wayawma nabʿathu min kulli ummatin shahīdan thumma lā yu'dhanu lilladhīna kafarū walā hum yus'taʿtabūna
Kannada ಪ್ರತಿಯೊಂದು ಸಮುದಾಯದಿಂದ ಒಬ್ಬೊಬ್ಬ ಸಾಕ್ಷಿಯನ್ನು ನಾವು ಎದ್ದೇಳಿಸುವ ದಿನ. ನಂತರ ಸತ್ಯನಿಷೇಧಿಗಳಿಗೆ ನೆಪವೊಡ್ಡಲು ಅವಕಾಶ ನೀಡಲಾಗುವುದಿಲ್ಲ. ದೈವಿಕ ತೃಪ್ತಿ ಹುಡುಕಲೂ ಅವಕಾಶ ನೀಡಲಾಗುವುದಿಲ್ಲ.
Verse 85
وَإِذَا رَءَا ٱلَّذِينَ ظَلَمُوا۟ ٱلْعَذَابَ فَلَا يُخَفَّفُ عَنْهُمْ وَلَا هُمْ يُنظَرُونَ
Transliteration wa-idhā raā alladhīna ẓalamū l-ʿadhāba falā yukhaffafu ʿanhum walā hum yunẓarūna
Kannada ಅಕ್ರಮಿಗಳು ಶಿಕ್ಷೆಯನ್ನು ಕಂಡಾಗ ಅವರಿಂದ ಅದನ್ನು ಸ್ವಲ್ಪವೂ ಹಗುರಗೊಳಿಸಲಾಗದು ಮತ್ತು ಯಾವುದೇ ಕಾಲಾವಕಾಶವನ್ನೂ ಕೊಡಲಾಗದು.
Verse 86
وَإِذَا رَءَا ٱلَّذِينَ أَشْرَكُوا۟ شُرَكَآءَهُمْ قَالُوا۟ رَبَّنَا هَـٰٓؤُلَآءِ شُرَكَآؤُنَا ٱلَّذِينَ كُنَّا نَدْعُوا۟ مِن دُونِكَ ۖ فَأَلْقَوْا۟ إِلَيْهِمُ ٱلْقَوْلَ إِنَّكُمْ لَكَـٰذِبُونَ
Transliteration wa-idhā raā alladhīna ashrakū shurakāahum qālū rabbanā hāulāi shurakāunā alladhīna kunnā nadʿū min dūnika fa-alqaw ilayhimu l-qawla innakum lakādhibūna
Kannada ಬಹುದೇವಾರಾಧನೆ ಮಾಡಿದವರು ತಾವು ನಿಶ್ಚ ಯಿಸಿ ಕೊಂಡಿದ್ದ ಸಹಭಾಗಿಗಳನ್ನು (ಪರಲೋಕ ದಲ್ಲಿ) ಕಂಡಾಗ, ‘ಓ ನಮ್ಮ ಪ್ರಭೂ, ನಿನ್ನನ್ನು ಬಿಟ್ಟು ನಾವು ಆರಾಧಿಸುತ್ತಿದ್ದ ಸಹಭಾಗಿಗಳು ಇವರೇ’ ಎಂದು ಹೇಳುವರು. ಆಗ ಅವರು (ಸಹಭಾಗಿಗಳು) “ನೀವು ಸುಳ್ಳುಗಾರರು” ಎಂಬ ಉತ್ತರವನ್ನು ಅವರಿಗೆ ಕೊಡುವರು.
Verse 87
وَأَلْقَوْا۟ إِلَى ٱللَّهِ يَوْمَئِذٍ ٱلسَّلَمَ ۖ وَضَلَّ عَنْهُم مَّا كَانُوا۟ يَفْتَرُونَ
Transliteration wa-alqaw ilā l-lahi yawma-idhin l-salama waḍalla ʿanhum mā kānū yaftarūna
Kannada ಆ ದಿನ ಅವರೆಲ್ಲರೂ ಅಲ್ಲಾಹನೆಡೆಗೆ ಶರಣು ಹೋಗುವರು ಮತ್ತು ಅವರ ಸುಳ್ಳು ಸೃಷ್ಟನೆಗಳೆಲ್ಲ ಅವರನ್ನು ಬಿಟ್ಟು ದೂರವಾಗುವುವು.
Verse 88
ٱلَّذِينَ كَفَرُوا۟ وَصَدُّوا۟ عَن سَبِيلِ ٱللَّهِ زِدْنَـٰهُمْ عَذَابًا فَوْقَ ٱلْعَذَابِ بِمَا كَانُوا۟ يُفْسِدُونَ
Transliteration alladhīna kafarū waṣaddū ʿan sabīli l-lahi zid'nāhum ʿadhāban fawqa l-ʿadhābi bimā kānū yuf'sidūna
Kannada ನಿಷೇಧಿಸುವವರಿಗೆ ಮತ್ತು ಅಲ್ಲಾಹನ ಮಾರ್ಗ ದಿಂದ (ಜನರನ್ನು) ತಡೆಯುವವರಿಗೆ ಅವರು ಮಾಡಿದ ಪಿತೂರಿಗಾಗಿ ನಾವು ಶಿಕ್ಷೆಯ ಮೇಲೆ ಶಿಕ್ಷೆ ನೀಡುವೆವು.
Verse 89
وَيَوْمَ نَبْعَثُ فِى كُلِّ أُمَّةٍ شَهِيدًا عَلَيْهِم مِّنْ أَنفُسِهِمْ ۖ وَجِئْنَا بِكَ شَهِيدًا عَلَىٰ هَـٰٓؤُلَآءِ ۚ وَنَزَّلْنَا عَلَيْكَ ٱلْكِتَـٰبَ تِبْيَـٰنًا لِّكُلِّ شَىْءٍ وَهُدًى وَرَحْمَةً وَبُشْرَىٰ لِلْمُسْلِمِينَ
Transliteration wayawma nabʿathu fī kulli ummatin shahīdan ʿalayhim min anfusihim waji'nā bika shahīdan ʿalā hāulāi wanazzalnā ʿalayka l-kitāba tib'yānan likulli shayin wahudan waraḥmatan wabush'rā lil'mus'limīna
Kannada ಪ್ರತಿಯೊಂದು ಸಮುದಾಯದಲ್ಲಿ ಅದರ ವಿರುದ್ಧ ಸಾಕ್ಷ್ಯ ಹೇಳುವ ಒಬ್ಬ ಸಾಕ್ಷಿದಾರನನ್ನು ಅದರೊಳಗಿಂದಲೇ ಎಬ್ಬಿಸುವ, ಮತ್ತು ಇವರ ವಿರುದ್ಧ ಸಾಕ್ಷ್ಯ ಹೇಳಲು ನಾವು ನಿಮ್ಮನ್ನು ತರುವದಿನ (ವನ್ನು ಸ್ಮರಿಸಿರಿ). ಎಲ್ಲ ವಸ್ತುವಿನ ಸುವ್ಯಕ್ತ ವಿವರಣೆಯಾಗಿಯೂ ಆಜ್ಞಾನುಸರಣೆ ಮಾಡುವವರಿಗೆ ಮಾರ್ಗದರ್ಶನವಾಗಿಯೂ ಕೃಪೆ ಹಾಗೂ ಸುವಾರ್ತೆಯಾಗಿಯೂ ನಿಮಗೆ ನಾವು ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ.
Verse 90
۞ إِنَّ ٱللَّهَ يَأْمُرُ بِٱلْعَدْلِ وَٱلْإِحْسَـٰنِ وَإِيتَآئِ ذِى ٱلْقُرْبَىٰ وَيَنْهَىٰ عَنِ ٱلْفَحْشَآءِ وَٱلْمُنكَرِ وَٱلْبَغْىِ ۚ يَعِظُكُمْ لَعَلَّكُمْ تَذَكَّرُونَ
Transliteration inna l-laha yamuru bil-ʿadli wal-iḥ'sāni waītāi dhī l-qur'bā wayanhā ʿani l-faḥshāi wal-munkari wal-baghyi yaʿiẓukum laʿallakum tadhakkarūna
Kannada ಅಲ್ಲಾಹನು ನ್ಯಾಯ, ಪರೋಪಕಾರ ಹಾಗೂ ಕುಟುಂಬಸ್ಥರಿಗೆ ಔದಾರ್ಯ ತೋರುವ ಆಜ್ಞೆ ಯನ್ನು ನೀಡುತ್ತಿದ್ದಾನೆ. ಮತ್ತು ಅಶ್ಲೀಲ ಕಾರ್ಯ, ದುರಾಚಾರ, ಅತಿಕ್ರಮದಿಂದ ನಿಮ್ಮನ್ನು ವಿರೋಧಿಸುತ್ತಿದ್ದಾನೆ. ಅವನು ನಿಮಗೆ ಉಪದೇಶ ನೀಡುತ್ತಾನೆ. ನೀವು ಉಪದೇಶ ಸ್ವೀಕರಿಸುವವರಾಗಲು.
Verse 91
وَأَوْفُوا۟ بِعَهْدِ ٱللَّهِ إِذَا عَـٰهَدتُّمْ وَلَا تَنقُضُوا۟ ٱلْأَيْمَـٰنَ بَعْدَ تَوْكِيدِهَا وَقَدْ جَعَلْتُمُ ٱللَّهَ عَلَيْكُمْ كَفِيلًا ۚ إِنَّ ٱللَّهَ يَعْلَمُ مَا تَفْعَلُونَ
Transliteration wa-awfū biʿahdi l-lahi idhā ʿāhadttum walā tanquḍū l-aymāna baʿda tawkīdihā waqad jaʿaltumu l-laha ʿalaykum kafīlan inna l-laha yaʿlamu mā tafʿalūna
Kannada ನೀವು ಅಲ್ಲಾಹನ ಹೆಸರಲ್ಲಿ ಕರಾರು ಮಾಡಿದ್ದರೆ ಅದನ್ನು ಪಾಲಿಸಿರಿ. ನೀವು ಅಲ್ಲಾಹನನ್ನು ನಿಮ್ಮ ಮೇಲೆ ಜಾಮೀನು ನಿಲ್ಲಿಸಿಕೊಂಡು ಪ್ರತಿಜ್ಞೆಯನ್ನು ದೃಢಪಡಿಸಿದ ಬಳಿಕ ಅದನ್ನು ಮುರಿಯಬೇಡಿರಿ. ನಿಶ್ಚಯವಾಗಿಯೂ ನಿಮ್ಮ ಸಕಲ ಕರ್ಮ ಗಳನ್ನೂ ಅಲ್ಲಾಹನು ತಿಳಿದಿರುತ್ತಾನೆ.
Verse 92
وَلَا تَكُونُوا۟ كَٱلَّتِى نَقَضَتْ غَزْلَهَا مِنۢ بَعْدِ قُوَّةٍ أَنكَـٰثًا تَتَّخِذُونَ أَيْمَـٰنَكُمْ دَخَلًۢا بَيْنَكُمْ أَن تَكُونَ أُمَّةٌ هِىَ أَرْبَىٰ مِنْ أُمَّةٍ ۚ إِنَّمَا يَبْلُوكُمُ ٱللَّهُ بِهِۦ ۚ وَلَيُبَيِّنَنَّ لَكُمْ يَوْمَ ٱلْقِيَـٰمَةِ مَا كُنتُمْ فِيهِ تَخْتَلِفُونَ
Transliteration walā takūnū ka-allatī naqaḍat ghazlahā min baʿdi quwwatin ankāthan tattakhidhūna aymānakum dakhalan baynakum an takūna ummatun hiya arbā min ummatin innamā yablūkumu l-lahu bihi walayubayyinanna lakum yawma l-qiyāmati mā kuntum fīhi takhtalifūna
Kannada ನೂಲು ಹೊಸೆದು ಅದು ಗಟ್ಟಿಯಾದ ಬಳಿಕ ಅದನ್ನು ಪುನಃ ಅರಳೆಯನ್ನಾಗಿ ಬಿಚ್ಚುವ ಒಬ್ಬಳಂತೆ ನೀವಾಗಬಾರದು. ಒಂದು ವಿಭಾಗದವರಿಗಿಂತ ಇನ್ನೊಂದು ವಿಭಾಗದವರು ಹೆಚ್ಚು ಪ್ರಭಾವಿಗಳಾದರೆ (ಅವರೊಡನೆ ಕೈ ಜೋಡಿಸುತ್ತಾ) ನಿಮ್ಮ ಪ್ರತಿಜ್ಞೆಯನ್ನು ನಿಮ್ಮೊಳಗಿನ ಕುಟಿಲತೆಗಾಗಿ ಬಳಸುತ್ತಿರುವಿರಾ? ಅಲ್ಲಾಹನು ಈ ಪ್ರತಿಜ್ಞೆಗಳ ಮೂಲಕ ನಿಮ್ಮನ್ನು ಪರೀಕ್ಷೆಗೊಳಪಡಿಸುತ್ತಾನೆ. ನೀವು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನಿರಿಸಿ ಕೊಂಡಿರೋ, ಅದನ್ನು ಪುನರುತ್ಥಾನ ದಿನದಂದು ಅವನು ನಿಮಗೆ ಸ್ಪಷ್ಟಗೊಳಿಸುವನು.
Verse 93
وَلَوْ شَآءَ ٱللَّهُ لَجَعَلَكُمْ أُمَّةً وَٰحِدَةً وَلَـٰكِن يُضِلُّ مَن يَشَآءُ وَيَهْدِى مَن يَشَآءُ ۚ وَلَتُسْـَٔلُنَّ عَمَّا كُنتُمْ تَعْمَلُونَ
Transliteration walaw shāa l-lahu lajaʿalakum ummatan wāḥidatan walākin yuḍillu man yashāu wayahdī man yashāu walatus'alunna ʿammā kuntum taʿmalūna
Kannada ಅಲ್ಲಾಹನು ಇಚ್ಛಿಸಿದ್ದರೆ ಅವನು ನಿಮ್ಮೆಲ್ಲರನ್ನೂ ಒಂದೇ ಧಾರ್ಮಿಕ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವನು ತಾನಿಚ್ಚಿಸಿದವರನ್ನು ದಾರಿಗೆಡಿಸುತ್ತಾನೆ ಹಾಗೂ ತಾನಿಚ್ಛಿಸಿದವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ. ಖಂಡಿತವಾಗಿಯೂ ನಿಮ್ಮ ಕರ್ಮಗಳ ಬಗ್ಗೆ ನಿಮ್ಮನ್ನು ವಿಚಾರಣೆಗೊಳ ಪಡಿಸಲಾಗುವುದು.
Verse 94
وَلَا تَتَّخِذُوٓا۟ أَيْمَـٰنَكُمْ دَخَلًۢا بَيْنَكُمْ فَتَزِلَّ قَدَمٌۢ بَعْدَ ثُبُوتِهَا وَتَذُوقُوا۟ ٱلسُّوٓءَ بِمَا صَدَدتُّمْ عَن سَبِيلِ ٱللَّهِ ۖ وَلَكُمْ عَذَابٌ عَظِيمٌ
Transliteration walā tattakhidhū aymānakum dakhalan baynakum fatazilla qadamun baʿda thubūtihā watadhūqū l-sūa bimā ṣadadttum ʿan sabīli l-lahi walakum ʿadhābun ʿaẓīmun
Kannada ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರರನ್ನು ವಂಚಿಸುವ ಮಾರ್ಗವನ್ನಾಗಿ ಮಾಡಿಕೊಳ್ಳಬೇ ಡಿರಿ. ಹಾಗಾದರೆ (ಇಸ್ಲಾಮಿನಲ್ಲಿ) ನಿಮ್ಮ ಪಾದ ಗಳು ಸ್ಥಿರಗೊಂಡ ಬಳಿಕ ಕಾಲು ಜಾರಿ ಬೀಳುವಿರಿ. ನೀವು ಜನರನ್ನು ಅಲ್ಲಾಹನ ಮಾರ್ಗದಿಂದ ತಡೆದ ಅಪರಾಧಕ್ಕಾಗಿ ಕೇಡನ್ನು ಅನುಭವಿಸುವಿರಿ. ಹಾಗೂ (ಪರಲೋಕದಲ್ಲಿ) ಘೋರ ಶಿಕ್ಷೆ ಯೂ ನಿಮಗಿರುತ್ತದೆ.
Verse 95
وَلَا تَشْتَرُوا۟ بِعَهْدِ ٱللَّهِ ثَمَنًا قَلِيلًا ۚ إِنَّمَا عِندَ ٱللَّهِ هُوَ خَيْرٌ لَّكُمْ إِن كُنتُمْ تَعْلَمُونَ
Transliteration walā tashtarū biʿahdi l-lahi thamanan qalīlan innamā ʿinda l-lahi huwa khayrun lakum in kuntum taʿlamūna
Kannada ಅಲ್ಲಾಹನ ಕರಾರಿನ ಬದಲಿಗೆ ಅಲ್ಪ ಬೆಲೆಯನ್ನು ಖರೀದಿಸಬೇಡಿರಿ. ಖಂಡಿತವಾಗಿಯೂ ಅಲ್ಲಾಹನ ಬಳಿಯಲ್ಲಿರುವುದು ನಿಮಗೆ ಹೆಚ್ಚು ಉತ್ತಮವಾಗಿದೆ; ನೀವು ಅದನ್ನು ತಿಳಿದವರಾಗಿದ್ದರೆ (ಕರಾರನ್ನು ಮುರಿಯಬೇಡಿರಿ).
Verse 96
مَا عِندَكُمْ يَنفَدُ ۖ وَمَا عِندَ ٱللَّهِ بَاقٍ ۗ وَلَنَجْزِيَنَّ ٱلَّذِينَ صَبَرُوٓا۟ أَجْرَهُم بِأَحْسَنِ مَا كَانُوا۟ يَعْمَلُونَ
Transliteration mā ʿindakum yanfadu wamā ʿinda l-lahi bāqin walanajziyanna alladhīna ṣabarū ajrahum bi-aḥsani mā kānū yaʿmalūna
Kannada ನಿಮ್ಮ ಬಳಿಯಿರುವುದು ಅಳಿದು(ಮುಗಿದು) ಹೋಗಲಿದೆ. ಅಲ್ಲಾಹನ ಬಳಿಯಲ್ಲಿರುವುದು ಮಾತ್ರ ಬಾಕಿ ಉಳಿದಿರುವುದು. ನಿಶ್ಚಯವಾಗಿಯೂ ಕ್ಷಮೆ ಕೈಗೊಂಡವರಿಗೆ ಅವರ ಪ್ರತಿಫಲವನ್ನು ಅವರ ಉತ್ತಮ ಕರ್ಮಗಳಿಗನುಸಾರ ನಾವು ನೀಡುವೆವು.
Verse 97
مَنْ عَمِلَ صَـٰلِحًا مِّن ذَكَرٍ أَوْ أُنثَىٰ وَهُوَ مُؤْمِنٌ فَلَنُحْيِيَنَّهُۥ حَيَوٰةً طَيِّبَةً ۖ وَلَنَجْزِيَنَّهُمْ أَجْرَهُم بِأَحْسَنِ مَا كَانُوا۟ يَعْمَلُونَ
Transliteration man ʿamila ṣāliḥan min dhakarin aw unthā wahuwa mu'minun falanuḥ'yiyannahu ḥayatan ṭayyibatan walanajziyannahum ajrahum bi-aḥsani mā kānū yaʿmalūna
Kannada ಪುರುಷನಾಗಿರಲಿ ಸ್ತ್ರೀಯಾಗಿರಲಿ ಯಾವನು ಸತ್ಯ ವಿಶ್ವಾಸಿಯಾಗಿದ್ದುಕೊಂಡು ಸತ್ಕರ್ಮವೆಸಗುವನೋ ಅವನಿಗೆ ನಾವು ಪರಿಶುದ್ಧ ಜೀವ ನವನ್ನು ದಯ ಪಾಲಿಸುವೆವು. ಮತ್ತು ಅಂತಹವರಿಗೆ ಅವರ ಉತ್ತಮ ಕರ್ಮಗಳಿಗನುಸಾರ ಪ್ರತಿಫಲ ನೀಡುವೆವು.
Verse 98
فَإِذَا قَرَأْتَ ٱلْقُرْءَانَ فَٱسْتَعِذْ بِٱللَّهِ مِنَ ٱلشَّيْطَـٰنِ ٱلرَّجِيمِ
Transliteration fa-idhā qarata l-qur'āna fa-is'taʿidh bil-lahi mina l-shayṭāni l-rajīmi
Kannada ನೀವು ಖುರ್‍ಆನನ್ನು ಪಠಿಸುವುದಾದರೆ ದೈವಿಕ ಅವಕೃಪೆಗೊಳಗಾದ ಶೈತಾನನಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿಕೊಳ್ಳಿರಿ.
Verse 99
إِنَّهُۥ لَيْسَ لَهُۥ سُلْطَـٰنٌ عَلَى ٱلَّذِينَ ءَامَنُوا۟ وَعَلَىٰ رَبِّهِمْ يَتَوَكَّلُونَ
Transliteration innahu laysa lahu sul'ṭānun ʿalā alladhīna āmanū waʿalā rabbihim yatawakkalūna
Kannada ಸತ್ಯವಿಶ್ವಾಸವಿರಿಸುವವರ ಹಾಗೂ ತಮ್ಮ ಪ್ರಭುವಿನ ಮೇಲೆ ಭರವಸೆಯನ್ನಿರಿಸುವವರ ಮೇಲೆ ಅವನಿಗೆ (ಶೈತಾನನಿಗೆ) ಯಾವುದೇ ಅಧಿಕಾರ ಇಲ್ಲ.
Verse 100
إِنَّمَا سُلْطَـٰنُهُۥ عَلَى ٱلَّذِينَ يَتَوَلَّوْنَهُۥ وَٱلَّذِينَ هُم بِهِۦ مُشْرِكُونَ
Transliteration innamā sul'ṭānuhu ʿalā alladhīna yatawallawnahu wa-alladhīna hum bihi mush'rikūna
Kannada ಅವನ ಅಧಿಕಾರವಿರುವುದು ಅವನನ್ನು ತಮ್ಮ ಸಂರಕ್ಷಕನನ್ನಾಗಿ ಮಾಡಿಕೊಳ್ಳುವವರ ಮೇಲೆ ಮತ್ತು ಅಲ್ಲಾಹನಿಗೆ ಸಹಭಾಗಿಗಳನ್ನಾಗಿ ಮಾಡುವವರ ಮೇಲೆ ಮಾತ್ರ.
Verse 101
وَإِذَا بَدَّلْنَآ ءَايَةً مَّكَانَ ءَايَةٍ ۙ وَٱللَّهُ أَعْلَمُ بِمَا يُنَزِّلُ قَالُوٓا۟ إِنَّمَآ أَنتَ مُفْتَرٍۭ ۚ بَلْ أَكْثَرُهُمْ لَا يَعْلَمُونَ
Transliteration wa-idhā baddalnā āyatan makāna āyatin wal-lahu aʿlamu bimā yunazzilu qālū innamā anta muf'tarin bal aktharuhum lā yaʿlamūna
Kannada ನಾವು ಒಂದು ವೇದವಾಕ್ಯದ ಸ್ಥಾನದಲ್ಲಿ ಇನ್ನೊಂದು ವೇದವಾಕ್ಯವನ್ನು ಬದಲಿಸಿದಾಗ ಏನನ್ನು ಅವತೀರ್ಣಗೊಳಿಸಬೇಕೆಂದು ಅಲ್ಲಾಹನೇ ಚೆನ್ನಾಗಿ ಬಲ್ಲವನಾಗಿರುವಾಗ “ನೀನೇ ಸೃಷ್ಟಿಸಿ ಹೇಳುತ್ತಿರುವೆ” ಎಂದು ಇವರು (ಪ್ರವಾದಿಯವರಲ್ಲಿ) ಹೇಳುತ್ತಾರೆ. ಅವರಲ್ಲಿ ಹೆಚ್ಚಿನವರು ಅರಿತಿರುವುದಿಲ್ಲ.
Verse 102
قُلْ نَزَّلَهُۥ رُوحُ ٱلْقُدُسِ مِن رَّبِّكَ بِٱلْحَقِّ لِيُثَبِّتَ ٱلَّذِينَ ءَامَنُوا۟ وَهُدًى وَبُشْرَىٰ لِلْمُسْلِمِينَ
Transliteration qul nazzalahu rūḥu l-qudusi min rabbika bil-ḥaqi liyuthabbita alladhīna āmanū wahudan wabush'rā lil'mus'limīna
Kannada ಹೇಳಿರಿ; ವಿಶ್ವಾಸವಿರಿಸಿದವರನ್ನು ಅಚಲ ಗೊಳಿಸಲಿಕ್ಕಾಗಿಯೂ ವಿಧೇಯರಾಗಿ ಬಾಳುವವರಿಗೆ ಮಾರ್ಗದರ್ಶನ ಹಾಗೂ ಸುವಾರ್ತೆಯಾಗಿಯೂ ಇದನ್ನು ಪವಿತ್ರಾತ್ಮನು ನಿಮ್ಮ ಪ್ರಭುವಿನ ಕಡೆಯಿಂದ ಸಸತ್ಯ ಅವತೀರ್ಣಗೊಳಿಸಿದನು.
Verse 103
وَلَقَدْ نَعْلَمُ أَنَّهُمْ يَقُولُونَ إِنَّمَا يُعَلِّمُهُۥ بَشَرٌ ۗ لِّسَانُ ٱلَّذِى يُلْحِدُونَ إِلَيْهِ أَعْجَمِىٌّ وَهَـٰذَا لِسَانٌ عَرَبِىٌّ مُّبِينٌ
Transliteration walaqad naʿlamu annahum yaqūlūna innamā yuʿallimuhu basharun lisānu alladhī yul'ḥidūna ilayhi aʿjamiyyun wahādhā lisānun ʿarabiyyun mubīnun
Kannada ಈ ವ್ಯಕ್ತಿಗೆ (ಪ್ರವಾದಿಗೆ) ಒಬ್ಬನು ಕಲಿಸಿ ಕೊಡು ತ್ತಾನೆಂದು ನಿಮ್ಮ ಕುರಿತು ಅವರು ಹೇಳುತ್ತಾರೆಂದು ನಮಗೆ ಖಂಡಿತ ಗೊತ್ತಿದೆ. ಅವರು ಯಾರ ಕಡೆಗೆ ಬೊಟ್ಟು ಮಾಡುತ್ತಿರುವರೋ ಅವನ ಭಾಷೆ ಅನರಬಿ! ಈ ಖುರ್‍ಆನಾದರೋ ಸುಸ್ಪಷ್ಟ ಅರಬೀ ಭಾಷೆಯಾಗಿರುತ್ತದೆ.
Verse 104
إِنَّ ٱلَّذِينَ لَا يُؤْمِنُونَ بِـَٔايَـٰتِ ٱللَّهِ لَا يَهْدِيهِمُ ٱللَّهُ وَلَهُمْ عَذَابٌ أَلِيمٌ
Transliteration inna alladhīna lā yu'minūna biāyāti l-lahi lā yahdīhimu l-lahu walahum ʿadhābun alīmun
Kannada ಅಲ್ಲಾಹನ ನಿದರ್ಶನಗಳಲ್ಲಿ ವಿಶ್ವಾಸವಿರಿಸದವರನ್ನು ಅಲ್ಲಾಹನು ಸನ್ಮಾರ್ಗಕ್ಕೆ ಸೇರಿಸುವುದಿಲ್ಲ. ಇಂತಹವರಿಗೆ ಯಾತನಾಮಯ ಶಿಕ್ಷೆ ಇದೆ.
Verse 105
إِنَّمَا يَفْتَرِى ٱلْكَذِبَ ٱلَّذِينَ لَا يُؤْمِنُونَ بِـَٔايَـٰتِ ٱللَّهِ ۖ وَأُو۟لَـٰٓئِكَ هُمُ ٱلْكَـٰذِبُونَ
Transliteration innamā yaftarī l-kadhiba alladhīna lā yu'minūna biāyāti l-lahi wa-ulāika humu l-kādhibūna
Kannada ಅಲ್ಲಾಹನ ನಿದರ್ಶನಗಳಲ್ಲಿ ವಿಶ್ವಾಸವಿರಿಸದವರೇ ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ನಿಜಕ್ಕೂ ಸುಳ್ಳುಗಾರರು ಅವರೇ!
Verse 106
مَن كَفَرَ بِٱللَّهِ مِنۢ بَعْدِ إِيمَـٰنِهِۦٓ إِلَّا مَنْ أُكْرِهَ وَقَلْبُهُۥ مُطْمَئِنٌّۢ بِٱلْإِيمَـٰنِ وَلَـٰكِن مَّن شَرَحَ بِٱلْكُفْرِ صَدْرًا فَعَلَيْهِمْ غَضَبٌ مِّنَ ٱللَّهِ وَلَهُمْ عَذَابٌ عَظِيمٌ
Transliteration man kafara bil-lahi min baʿdi īmānihi illā man uk'riha waqalbuhu muṭ'ma-innun bil-īmāni walākin man sharaḥa bil-kuf'ri ṣadran faʿalayhim ghaḍabun mina l-lahi walahum ʿadhābun ʿaẓīmun
Kannada ನಂಬಿದ ಬಳಿಕ ಯಾವನು ಅಲ್ಲಾಹನಲ್ಲಿ ಅವಿಶ್ವಾಸ ತಾಳುತ್ತಾನೋ (ಅವನಿಗೆ ಘೋರ ತಾಕೀತು ಇದೆ). ಆದರೆ ತಮ್ಮ ಹೃದಯವು ನಂಬಿಕೆಯಲ್ಲಿ ಶಾಂತವಾಗಿದ್ದು ಬಲಾತ್ಕರಿಸಲ್ಪಟ್ಟವನ ಹೊರತು. ಆದರೆ ತೆರೆದ ಮನಸ್ಸಿನಲ್ಲಿ ಅವಿ ಶ್ವಾಸ ಕೈಗೊಂಡವರ ಮೇಲೆ ಅಲ್ಲಾಹನಕೋಪವಿದೆ. ಅವರಿಗೆ ಘೋರ ಶಿಕ್ಷೆಯೂ ಇದೆ.
Verse 107
ذَٰلِكَ بِأَنَّهُمُ ٱسْتَحَبُّوا۟ ٱلْحَيَوٰةَ ٱلدُّنْيَا عَلَى ٱلْـَٔاخِرَةِ وَأَنَّ ٱللَّهَ لَا يَهْدِى ٱلْقَوْمَ ٱلْكَـٰفِرِينَ
Transliteration dhālika bi-annahumu is'taḥabbū l-ḥayata l-dun'yā ʿalā l-ākhirati wa-anna l-laha lā yahdī l-qawma l-kāfirīna
Kannada ಇದೇಕೆಂದರೆ ಅವರು ಇಹಲೋಕ ಜೀವನ ವನ್ನು ಪರಲೋಕಕ್ಕಿಂತ ಮಿಗಿಲಾಗಿ ಪ್ರೀತಿಸಿದರು. ಅಲ್ಲಾಹನು ಸತ್ಯನಿಷೇಧಿಗಳಿಗೆ ಸನ್ಮಾರ್ಗ ನೀಡುವುದಿಲ್ಲ.
Verse 108
أُو۟لَـٰٓئِكَ ٱلَّذِينَ طَبَعَ ٱللَّهُ عَلَىٰ قُلُوبِهِمْ وَسَمْعِهِمْ وَأَبْصَـٰرِهِمْ ۖ وَأُو۟لَـٰٓئِكَ هُمُ ٱلْغَـٰفِلُونَ
Transliteration ulāika alladhīna ṭabaʿa l-lahu ʿalā qulūbihim wasamʿihim wa-abṣārihim wa-ulāika humu l-ghāfilūna
Kannada ಅವರೇ ಹೃದಯಗಳಿಗೂ ಶ್ರವಣಗಳಿಗೂ ದೃಷ್ಟಿಗಳ ಮೇಲೂ ಅಲ್ಲಾಹು ಮುದ್ರೆ ಹಾಕಿದಂತಹವರು. ಅವರೇ ಅಶೃದ್ಧರು.
Verse 109
لَا جَرَمَ أَنَّهُمْ فِى ٱلْـَٔاخِرَةِ هُمُ ٱلْخَـٰسِرُونَ
Transliteration lā jarama annahum fī l-ākhirati humu l-khāsirūna
Kannada ಸಂಶಯವಿಲ್ಲ. ಅವರೇ ಪರಲೋಕದಲ್ಲಿ ನಷ್ಟ ಹೊಂದುವವರು.
Verse 110
ثُمَّ إِنَّ رَبَّكَ لِلَّذِينَ هَاجَرُوا۟ مِنۢ بَعْدِ مَا فُتِنُوا۟ ثُمَّ جَـٰهَدُوا۟ وَصَبَرُوٓا۟ إِنَّ رَبَّكَ مِنۢ بَعْدِهَا لَغَفُورٌ رَّحِيمٌ
Transliteration thumma inna rabbaka lilladhīna hājarū min baʿdi mā futinū thumma jāhadū waṣabarū inna rabbaka min baʿdihā laghafūrun raḥīmun
Kannada ತರುವಾಯ ನಿಮ್ಮ ಪ್ರಭುವಿನ ಅನುಗ್ರಹವು ಪೀಡನೆಗೊಳಗಾದ ನಂತರ ಹಿಜ್‍ರಾ ಹೊರಟು ಆನಂತರ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದ ಮತ್ತು ಸಹನೆ ಪಾಲಿಸಿದವರಿಗೆ ಇರುವುದು. ಅದರ ನಂತರ ಖಂಡಿತ ನಿನ್ನ ಪ್ರಭುವು ಕ್ಷಮಾ ದಾನಿಯೂ ಅನುಗ್ರಹಿಯೂ ಆಗಿರುವನು.
Verse 111
۞ يَوْمَ تَأْتِى كُلُّ نَفْسٍ تُجَـٰدِلُ عَن نَّفْسِهَا وَتُوَفَّىٰ كُلُّ نَفْسٍ مَّا عَمِلَتْ وَهُمْ لَا يُظْلَمُونَ
Transliteration yawma tatī kullu nafsin tujādilu ʿan nafsihā watuwaffā kullu nafsin mā ʿamilat wahum lā yuẓ'lamūna
Kannada ಪ್ರತಿಯೊಬ್ಬರೂ ತನಗಾಗಿ ವಾದಿಸುತ್ತಾ ಬರುವ ಹಾಗೂ ಪ್ರತಿಯೊಬ್ಬರಿಗೂ ಕರ್ಮಫಲವನ್ನು ಕೊಡುವ ದಿನದಂದು ಯಾರ ಮೇಲೂ ಅಕ್ರಮವಿಲ್ಲ.
Verse 112
وَضَرَبَ ٱللَّهُ مَثَلًا قَرْيَةً كَانَتْ ءَامِنَةً مُّطْمَئِنَّةً يَأْتِيهَا رِزْقُهَا رَغَدًا مِّن كُلِّ مَكَانٍ فَكَفَرَتْ بِأَنْعُمِ ٱللَّهِ فَأَذَٰقَهَا ٱللَّهُ لِبَاسَ ٱلْجُوعِ وَٱلْخَوْفِ بِمَا كَانُوا۟ يَصْنَعُونَ
Transliteration waḍaraba l-lahu mathalan qaryatan kānat āminatan muṭ'ma-innatan yatīhā riz'quhā raghadan min kulli makānin fakafarat bi-anʿumi l-lahi fa-adhāqahā l-lahu libāsa l-jūʿi wal-khawfi bimā kānū yaṣnaʿūna
Kannada ಸುರಕ್ಷಿತ ಹಾಗೂ ಶಾಂತವಾದ ಒಂದು ನಗರ ವನ್ನು ಅಲ್ಲಾಹು ಉದಾಹರಣೆ ಮಾಡುತ್ತಾನೆ. ಎಲ್ಲಾ ಕಡೆಗಳಿಂದಲೂ ಅದಕ್ಕೆ ಹೇರಳ ಜೀವ ನಾಧಾರ ದೊರಕುತ್ತಿದೆ. ಆಮೇಲೆ ಅದು ಅಲ್ಲಾಹನ ಅನುಗ್ರಹಗಳಿಗೆ ದ್ರೋಹ ಬಗೆಯಿತು. ಆಗ ಅಲ್ಲಾಹನು ಅದರ ನಿವಾಸಿಗಳಿಗೆ ಅವರ ದುಷ್ಕøತ್ಯಗಳ ಫಲವಾಗಿ ಹಸಿವೆ ಮತ್ತು ಭಯದ ವಸ್ತ್ರವನ್ನು ತೊಡಿಸಿದನು.
Verse 113
وَلَقَدْ جَآءَهُمْ رَسُولٌ مِّنْهُمْ فَكَذَّبُوهُ فَأَخَذَهُمُ ٱلْعَذَابُ وَهُمْ ظَـٰلِمُونَ
Transliteration walaqad jāahum rasūlun min'hum fakadhabūhu fa-akhadhahumu l-ʿadhābu wahum ẓālimūna
Kannada ನಿಜವಾಗಿಯೂ ಅವರ ಕೂಟದಿಂದಲೇ ಓರ್ವ ದೂತರು ಅವರ ಬಳಿಗೆ ಬಂದರು. ಆದರೆ, ಅವರು ಅವರನ್ನು ಸುಳ್ಳಾಗಿಸಿದರು. ಕೊನೆಗೆ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಶಿಕ್ಷೆಯು ಅವರನ್ನು ಹಿಡಿಯಿತು.
Verse 114
فَكُلُوا۟ مِمَّا رَزَقَكُمُ ٱللَّهُ حَلَـٰلًا طَيِّبًا وَٱشْكُرُوا۟ نِعْمَتَ ٱللَّهِ إِن كُنتُمْ إِيَّاهُ تَعْبُدُونَ
Transliteration fakulū mimmā razaqakumu l-lahu ḥalālan ṭayyiban wa-ush'kurū niʿ'mata l-lahi in kuntum iyyāhu taʿbudūna
Kannada ಆದುದರಿಂದ ಅಲ್ಲಾಹನು ನಿಮಗೆ ದಯ ಪಾಲಿಸಿರುವ ಧರ್ಮಬದ್ಧ ಹಾಗೂ ಶುದ್ಧವಾದ ಆಹಾರವನ್ನು ಭುಜಿಸಿರಿ. ಮತ್ತು ಅಲ್ಲಾಹನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಿರಿ. ನೀವು ಅವನನ್ನೇ ಆರಾಧಿಸುವವರಾಗಿದ್ದರೆ.
Verse 115
إِنَّمَا حَرَّمَ عَلَيْكُمُ ٱلْمَيْتَةَ وَٱلدَّمَ وَلَحْمَ ٱلْخِنزِيرِ وَمَآ أُهِلَّ لِغَيْرِ ٱللَّهِ بِهِۦ ۖ فَمَنِ ٱضْطُرَّ غَيْرَ بَاغٍ وَلَا عَادٍ فَإِنَّ ٱللَّهَ غَفُورٌ رَّحِيمٌ
Transliteration innamā ḥarrama ʿalaykumu l-maytata wal-dama walaḥma l-khinzīri wamā uhilla lighayri l-lahi bihi famani uḍ'ṭurra ghayra bāghin walā ʿādin fa-inna l-laha ghafūrun raḥīmun
Kannada ನಿಜವಾಗಿಯೂ ಅಲ್ಲಾಹನು ನಿಮಗೆ ನಿಷಿದ್ಧ ಗೊಳಿಸಿರುವುದು ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹು ಅಲ್ಲದವರ ನಾಮ ಉಚ್ಛರಿಸಲ್ಪಟ್ಟದ್ದನ್ನು. ಆದರೆ ಯಾರಾದರೂ (ತಿನ್ನಲು) ನಿರ್ಭಂಧಿತನಾದರೆ, ಅವನು ಅದರ ಅಪೇಕ್ಷೆ ಇಲ್ಲದವನೂ ಮೇರೆ ಮೀರದವನೂ ಆಗಿದ್ದರೆ, ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ.
Verse 116
وَلَا تَقُولُوا۟ لِمَا تَصِفُ أَلْسِنَتُكُمُ ٱلْكَذِبَ هَـٰذَا حَلَـٰلٌ وَهَـٰذَا حَرَامٌ لِّتَفْتَرُوا۟ عَلَى ٱللَّهِ ٱلْكَذِبَ ۚ إِنَّ ٱلَّذِينَ يَفْتَرُونَ عَلَى ٱللَّهِ ٱلْكَذِبَ لَا يُفْلِحُونَ
Transliteration walā taqūlū limā taṣifu alsinatukumu l-kadhiba hādhā ḥalālun wahādhā ḥarāmun litaftarū ʿalā l-lahi l-kadhiba inna alladhīna yaftarūna ʿalā l-lahi l-kadhiba lā yuf'liḥūna
Kannada ಅಲ್ಲಾಹನ ಮೇಲೆ ಸುಳ್ಳಾರೋಪದ ಪ್ರೇರಣೆಯಿಂದ ನಿಮ್ಮ ನಾಲಗೆಗಳು ಸುಳ್ಳನ್ನು ಬಣ್ಣಿಸುತ್ತಿರುವ ದೆಸೆಯಿಂದಾಗಿ ‘ಇದು ಹಲಾಲ್, ಇದು ಹರಾಮ್’ ಎಂದು ನೀವು ಹೇಳದಿರಿ. ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸುವವರು ಯಶಸ್ವಿಯಾಗುವುದಿಲ್ಲ.
Verse 117
مَتَـٰعٌ قَلِيلٌ وَلَهُمْ عَذَابٌ أَلِيمٌ
Transliteration matāʿun qalīlun walahum ʿadhābun alīmun
Kannada ಅವರ ಸುಖ ಭೋಗ ಕೇವಲ ಅಲ್ಪಾವಧಿಯದು. ಅವರಿಗೆ (ಪರಲೋಕದಲ್ಲಿ) ಯಾತನಾಮಯ ಶಿಕ್ಷೆ ಇದೆ.
Verse 118
وَعَلَى ٱلَّذِينَ هَادُوا۟ حَرَّمْنَا مَا قَصَصْنَا عَلَيْكَ مِن قَبْلُ ۖ وَمَا ظَلَمْنَـٰهُمْ وَلَـٰكِن كَانُوٓا۟ أَنفُسَهُمْ يَظْلِمُونَ
Transliteration waʿalā alladhīna hādū ḥarramnā mā qaṣaṣnā ʿalayka min qablu wamā ẓalamnāhum walākin kānū anfusahum yaẓlimūna
Kannada ಮುಂಚೆ ನಾವು ನಿಮಗೆ ವಿವರಿಸಿದ ವಸ್ತುಗಳನ್ನು ಯಹೂದಿಯರಿಗೆ ನಿಷಿದ್ಧಗೊಳಿಸಿದ್ದೆವು. ನಾವು ಅವರ ಮೇಲೆ ಅಕ್ರಮಮಾಡಿರಲಿಲ್ಲ. ಆದರೆ ಅವರೇ ಸ್ವತಃ ತಮ್ಮ ಮೇಲೆ ಅಕ್ರಮ ವೆಸಗಿಕೊಂಡರು.
Verse 119
ثُمَّ إِنَّ رَبَّكَ لِلَّذِينَ عَمِلُوا۟ ٱلسُّوٓءَ بِجَهَـٰلَةٍ ثُمَّ تَابُوا۟ مِنۢ بَعْدِ ذَٰلِكَ وَأَصْلَحُوٓا۟ إِنَّ رَبَّكَ مِنۢ بَعْدِهَا لَغَفُورٌ رَّحِيمٌ
Transliteration thumma inna rabbaka lilladhīna ʿamilū l-sūa bijahālatin thumma tābū min baʿdi dhālika wa-aṣlaḥū inna rabbaka min baʿdihā laghafūrun raḥīmun
Kannada ಮತ್ತೆ ನಿನ್ನ ಪ್ರಭುವು ಅಜ್ಞಾನದಿಂದಾಗಿ ದುಷ್ಕ ರ್ಮಗಳನ್ನು ಮಾಡಿ ಅನಂತರ ಪಶ್ಚಾತ್ತಾಪಪಟ್ಟು ಮರಳಿ ಕರ್ಮಗಳನ್ನು ಸರಿಪಡಿಸಿಕೊಂಡವರಿಗೆ ನಿಶ್ಚಯವಾಗಿಯೂ ನಿನ್ನ ಪ್ರಭು ಅದರ ನಂತರ (ಅಜ್ಞಾನ ಮತ್ತು ಪಶ್ಚಾತ್ತಾಪದ ಅನಂತರ) ಕ್ಷಮಾಶೀಲನೂ ದಯಾನಿಧಿಯೂ ಆಗಿರುತ್ತಾನೆ.
Verse 120
إِنَّ إِبْرَٰهِيمَ كَانَ أُمَّةً قَانِتًا لِّلَّهِ حَنِيفًا وَلَمْ يَكُ مِنَ ٱلْمُشْرِكِينَ
Transliteration inna ib'rāhīma kāna ummatan qānitan lillahi ḥanīfan walam yaku mina l-mush'rikīna
Kannada ಖಂಡಿತ ಇಬ್‍ರಾಹೀಮರು ಅಲ್ಲಾಹನ ಅಜ್ಞಾ ನುವರ್ತಿಯಾದ, ಸನ್ಮಾರ್ಗದಲ್ಲಿ (ತಪ್ಪದೆ) ನೆಲೆಗೊಳ್ಳುವ ಒಂದು ಸಮುದಾಯವಾಗಿದ್ದರು. ಅವರು ಮುಶ್ರಿಕರ ಕೂಟದವರಾಗಿರಲಿಲ್ಲ.
Verse 121
شَاكِرًا لِّأَنْعُمِهِ ۚ ٱجْتَبَىٰهُ وَهَدَىٰهُ إِلَىٰ صِرَٰطٍ مُّسْتَقِيمٍ
Transliteration shākiran li-anʿumihi ij'tabāhu wahadāhu ilā ṣirāṭin mus'taqīmin
Kannada ಅವರು ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸುವವರಾಗಿದ್ದರು. ಅಲ್ಲಾಹನು ಅವರನ್ನು ಆಯ್ದುಕೊಂಡನು ಮತ್ತು ನೇರ ಮಾರ್ಗಕ್ಕೆ ಕೊಂಡೊಯ್ದನು .
Verse 122
وَءَاتَيْنَـٰهُ فِى ٱلدُّنْيَا حَسَنَةً ۖ وَإِنَّهُۥ فِى ٱلْـَٔاخِرَةِ لَمِنَ ٱلصَّـٰلِحِينَ
Transliteration waātaynāhu fī l-dun'yā ḥasanatan wa-innahu fī l-ākhirati lamina l-ṣāliḥīna
Kannada ಇಹಲೋಕದಲ್ಲಿ ಅವರಿಗೆ ನಾವು ಶ್ರೇಯಸ್ಸನ್ನು ದಯಪಾಲಿಸಿದೆವು ಮತ್ತು ಪರಲೋಕದಲ್ಲಿ ಅವರು ನಿಶ್ಚಯವಾಗಿಯೂ ಸಜ್ಜನರಲ್ಲಾಗಿರುವರು.
Verse 123
ثُمَّ أَوْحَيْنَآ إِلَيْكَ أَنِ ٱتَّبِعْ مِلَّةَ إِبْرَٰهِيمَ حَنِيفًا ۖ وَمَا كَانَ مِنَ ٱلْمُشْرِكِينَ
Transliteration thumma awḥaynā ilayka ani ittabiʿ millata ib'rāhīma ḥanīfan wamā kāna mina l-mush'rikīna
Kannada ಅನಂತರ ನೀವು ಸನ್ಮಾರ್ಗದಲ್ಲಿ ಅಚಲರಾದ ಇಬ್‍ರಾಹೀಮರ ಪಥವನ್ನು ಅನುಸರಿಸಲಿ ಕ್ಕಾಗಿ ನಾವು ನಿಮ್ಮ ಕಡೆಗೆ ದಿವ್ಯಸಂದೇಶ ಕಳುಹಿಸಿದೆವು. ಅವರು ಬಹುದೇವವಿಶ್ವಾಸಿಗಳಲ್ಲಾಗಿರಲಿಲ್ಲ.
Verse 124
إِنَّمَا جُعِلَ ٱلسَّبْتُ عَلَى ٱلَّذِينَ ٱخْتَلَفُوا۟ فِيهِ ۚ وَإِنَّ رَبَّكَ لَيَحْكُمُ بَيْنَهُمْ يَوْمَ ٱلْقِيَـٰمَةِ فِيمَا كَانُوا۟ فِيهِ يَخْتَلِفُونَ
Transliteration innamā juʿila l-sabtu ʿalā alladhīna ikh'talafū fīhi wa-inna rabbaka layaḥkumu baynahum yawma l-qiyāmati fīmā kānū fīhi yakhtalifūna
Kannada ‘ಸಬ್ತ್’ ದಿನಾಚರಣೆಯನ್ನು ನಿಶ್ಚಯಿಸಲಾಗಿರುವುದು ಅದರ ವಿಧಿಗಳ ಕುರಿತು ಭಿನ್ನಾ ಭಿಪ್ರಾಯ ತಾಳಿದವರ ಮೇಲೆಯೇ ಆಗಿದ್ದಿತು. ಅವರು ಭಿನ್ನಾಭಿಪ್ರಾಯ ಹೊಂದಿದ್ದ ವಿಷಯದಲ್ಲಿ ನಿಮ್ಮ ಪ್ರಭು ಪುನರುತ್ಥಾನ ದಿನ ಅವರ ನಡುವೆ ತೀರ್ಮಾನಿಸಿ ಬಿಡುವನು.
Verse 125
ٱدْعُ إِلَىٰ سَبِيلِ رَبِّكَ بِٱلْحِكْمَةِ وَٱلْمَوْعِظَةِ ٱلْحَسَنَةِ ۖ وَجَـٰدِلْهُم بِٱلَّتِى هِىَ أَحْسَنُ ۚ إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِۦ ۖ وَهُوَ أَعْلَمُ بِٱلْمُهْتَدِينَ
Transliteration ud'ʿu ilā sabīli rabbika bil-ḥik'mati wal-mawʿiẓati l-ḥasanati wajādil'hum bi-allatī hiya aḥsanu inna rabbaka huwa aʿlamu biman ḍalla ʿan sabīlihi wahuwa aʿlamu bil-muh'tadīna
Kannada (ಓ ಪೈಗಂಬರರೇ,) ಯುಕ್ತಿ ಹಾಗೂ ಸದುಪದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ. ಅವರೊಂದಿಗೆ ಅತ್ಯುತ್ತಮ ರೀತಿಯಿಂದ ಸಂವಾದ ನಡೆಸಿರಿ, ನಿಮ್ಮ ಪ್ರಭು ತನ್ನ ಮಾರ್ಗದಿಂದ ಭ್ರಷ್ಟರಾದವರ ಬಗ್ಗೆ ಚೆನ್ನಾಗಿ ಬಲ್ಲನು. ನೇರ ಮಾರ್ಗದಲ್ಲಿದ್ದವರ ಬಗ್ಗೆಯೂ ನಿಮ್ಮ ಪ್ರಭು ಚೆನ್ನಾಗಿ ಬಲ್ಲನು.
Verse 126
وَإِنْ عَاقَبْتُمْ فَعَاقِبُوا۟ بِمِثْلِ مَا عُوقِبْتُم بِهِۦ ۖ وَلَئِن صَبَرْتُمْ لَهُوَ خَيْرٌ لِّلصَّـٰبِرِينَ
Transliteration wa-in ʿāqabtum faʿāqibū bimith'li mā ʿūqib'tum bihi wala-in ṣabartum lahuwa khayrun lilṣṣābirīna
Kannada ನೀವು ಪ್ರತೀಕಾರವೆಸಗುವುದಿದ್ದರೆ ನಿಮ್ಮ ಮೇಲೆ ಅತಿರೇಕವೆಸಗಲಾಗಿದ್ದಷ್ಟು ಮಾತ್ರ ಪ್ರತೀಕಾರ ಎಸಗಿರಿ. ಆದರೆ ನೀವು ತಾಳ್ಮೆವಹಿಸಿದರೆ ನಿಶ್ಚಯವಾಗಿಯೂ ಅದುವೇ ಸಹನ ಶೀಲರಿಗೆ ಅತ್ಯುತ್ತಮ.
Verse 127
وَٱصْبِرْ وَمَا صَبْرُكَ إِلَّا بِٱللَّهِ ۚ وَلَا تَحْزَنْ عَلَيْهِمْ وَلَا تَكُ فِى ضَيْقٍ مِّمَّا يَمْكُرُونَ
Transliteration wa-iṣ'bir wamā ṣabruka illā bil-lahi walā taḥzan ʿalayhim walā taku fī ḍayqin mimmā yamkurūna
Kannada (ಓ ಪೈಗಂಬರರೇ,) ಸಹನೆ ಪಾಲಿಸಿರಿ. ನಿಮ್ಮ ಸಹನೆಯು ಅಲ್ಲಾಹನ ಅನುಗ್ರಹದಿಂದಲೇ ಸಾಧ್ಯವಾಗಿದೆ. ಸತ್ಯನಿಷೇಧಿಗಳ ಬಗ್ಗೆ ವ್ಯಥೆಗೊಳ್ಳದಿರಿ. ಮತ್ತು ಅವರ ಕುತಂತ್ರಗಳಿಂದ ಎದೆ ಗುಂದಬೇಡಿರಿ.
Verse 128
إِنَّ ٱللَّهَ مَعَ ٱلَّذِينَ ٱتَّقَوا۟ وَّٱلَّذِينَ هُم مُّحْسِنُونَ
Transliteration inna l-laha maʿa alladhīna ittaqaw wa-alladhīna hum muḥ'sinūna
Kannada ನಿಶ್ಚಯವಾಗಿಯೂ ಅಲ್ಲಾಹನು ಧರ್ಮ ನಿಷ್ಠರೊಂದಿಗೂ ಸದ್ಭಕ್ತರೊಂದಿಗೂ ಇರುವನು .
Read Surah An-Nahl in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.