MyDugsiStart learning

Surah Al-Jathiyah in Kannada: translation and audio

Surah 45 · الجاثية · The Crouching · 37 verses

Surah Al-Jathiyah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Jathiyah word by word in English.

Verse 1

حمٓ

Transliteration hha-meem

Kannada ಹಾಮೀಮ್.

Verse 2

تَنزِيلُ ٱلْكِتَـٰبِ مِنَ ٱللَّهِ ٱلْعَزِيزِ ٱلْحَكِيمِ

Transliteration tanzīlu l-kitābi mina l-lahi l-ʿazīzi l-ḥakīmi

Kannada ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಜ್ಞನೂ ಆದ ಅಲ್ಲಾಹನ ಕಡೆಯಿಂದ ಬಂದಿದೆ.

Verse 3

إِنَّ فِى ٱلسَّمَـٰوَٰتِ وَٱلْأَرْضِ لَـَٔايَـٰتٍ لِّلْمُؤْمِنِينَ

Transliteration inna fī l-samāwāti wal-arḍi laāyātin lil'mu'minīna

Kannada ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಿಗೆ ಆಕಾಶಗಳಲ್ಲೂ ಭೂಮಿಯಲ್ಲೂ ಅನೇಕ ದೃಷ್ಟಾಂತಗಳಿವೆ.

Verse 4

وَفِى خَلْقِكُمْ وَمَا يَبُثُّ مِن دَآبَّةٍ ءَايَـٰتٌ لِّقَوْمٍ يُوقِنُونَ

Transliteration wafī khalqikum wamā yabuthu min dābbatin āyātun liqawmin yūqinūna

Kannada ದೃಢನಂಬಿಕೆಯುಳ್ಳ ಜನರಿಗೆ ನಿಮ್ಮ ಸೃಷ್ಟಿಯಲ್ಲೂ (ಭೂಮಿಯ ಮೇಲೆ) ಅಲ್ಲಾಹನು ಹಬ್ಬಿಸುತ್ತಿರುವ, ಪ್ರಾಣಿಗಳಲ್ಲೂ ಹಲವು ದೃಷ್ಟಾಂತಗಳಿವೆ.

Verse 5

وَٱخْتِلَـٰفِ ٱلَّيْلِ وَٱلنَّهَارِ وَمَآ أَنزَلَ ٱللَّهُ مِنَ ٱلسَّمَآءِ مِن رِّزْقٍ فَأَحْيَا بِهِ ٱلْأَرْضَ بَعْدَ مَوْتِهَا وَتَصْرِيفِ ٱلرِّيَـٰحِ ءَايَـٰتٌ لِّقَوْمٍ يَعْقِلُونَ

Transliteration wa-ikh'tilāfi al-layli wal-nahāri wamā anzala l-lahu mina l-samāi min riz'qin fa-aḥyā bihi l-arḍa baʿda mawtihā wataṣrīfi l-riyāḥi āyātun liqawmin yaʿqilūna

Kannada ರಾತ್ರೆ ಹಗಲುಗಳ ಆವರ್ತನೆಯಲ್ಲೂ ಅಲ್ಲಾಹನು ಆಕಾಶದಿಂದ ಜೀವನಾಧಾರವನ್ನಿಳಿಸಿ ಆ ಮೂಲಕ ಭೂಮಿಯನ್ನು ಅದರ ನಿರ್ಜೀವಾವಸ್ಥೆಯ ಬಳಿಕ ಜೀವಂತಗೊಳಿಸುವುದರಲ್ಲೂ ಮತ್ತು ಮಾರುತಗಳ ಗತಿ ನಿಯಂತ್ರಣದಲ್ಲೂ ಯೋಚಿಸುವ ಜನರಿಗೆ ಅನೇಕ ನಿದರ್ಶನಗಳಿವೆ.

Verse 6

تِلْكَ ءَايَـٰتُ ٱللَّهِ نَتْلُوهَا عَلَيْكَ بِٱلْحَقِّ ۖ فَبِأَىِّ حَدِيثٍۭ بَعْدَ ٱللَّهِ وَءَايَـٰتِهِۦ يُؤْمِنُونَ

Transliteration til'ka āyātu l-lahi natlūhā ʿalayka bil-ḥaqi fabi-ayyi ḥadīthin baʿda l-lahi waāyātihi yu'minūna

Kannada ಅವು ಅಲ್ಲಾಹನ ನಿದರ್ಶನಗಳಾಗಿದ್ದು ಅವುಗಳನ್ನು ನಾವು ಸತ್ಯ ಪ್ರಕಾರ ತಮ್ಮ ಮೇಲೆ ಓದಿ ಕೇಳಿಸುತ್ತೇವೆ. ಹೀಗಿರುತ್ತಾ ಅಲ್ಲಾಹನ ಹಾಗೂ ಅವನ ಪುರಾವೆಗಳ ಬಳಿಕ ಇನ್ನಾವ ವಾರ್ತೆಯ ಮೇಲೆ ಅವರು (ಜನರು) ವಿಶ್ವಾಸವಿರಿಸುವರು?

Verse 7

وَيْلٌ لِّكُلِّ أَفَّاكٍ أَثِيمٍ

Transliteration waylun likulli affākin athīmin

Kannada ಸುಳ್ಳ ಹಾಗೂ ಮಹಾಪಾಪಿಯಾದ ಪ್ರತಿ ಯೊಬ್ಬನಿಗೆ ವಿನಾಶವಿದೆ.

Verse 8

يَسْمَعُ ءَايَـٰتِ ٱللَّهِ تُتْلَىٰ عَلَيْهِ ثُمَّ يُصِرُّ مُسْتَكْبِرًا كَأَن لَّمْ يَسْمَعْهَا ۖ فَبَشِّرْهُ بِعَذَابٍ أَلِيمٍ

Transliteration yasmaʿu āyāti l-lahi tut'lā ʿalayhi thumma yuṣirru mus'takbiran ka-an lam yasmaʿhā fabashir'hu biʿadhābin alīmin

Kannada ಅಲ್ಲಾಹನ ಸೂಕ್ತಗಳನ್ನು ಆತನ ಮೇಲೆ ಓದಿ ಹೇಳಲಾಗುತ್ತದೆ. ಅವನು ಅದನ್ನು ಆಲಿಸುತ್ತಾನೆ. ಅನಂತರ ಅವನು ಕೇಳಲೇ ಇಲ್ಲವೆಂಬಂತೆ ಅಹಂಕಾರಿಯಾಗಿರುತ್ತ ನೆಲೆಗೊಳ್ಳುತ್ತಾನೆ. ಹೀಗಾಗಿ ಅವನಿಗೆ ವೇದನಾಯುಕ್ತ ಶಿಕ್ಷೆಯ ಸುವಾರ್ತೆಯನ್ನು ತಿಳಿಸಿ ಬಿಡಿರಿ.

Verse 9

وَإِذَا عَلِمَ مِنْ ءَايَـٰتِنَا شَيْـًٔا ٱتَّخَذَهَا هُزُوًا ۚ أُو۟لَـٰٓئِكَ لَهُمْ عَذَابٌ مُّهِينٌ

Transliteration wa-idhā ʿalima min āyātinā shayan ittakhadhahā huzuwan ulāika lahum ʿadhābun muhīnun

Kannada ನಮ್ಮ ಸೂಕ್ತಗಳ ಪೈಕಿ ಏನಾದರೊಂದು ವಿಷಯ ಅವನಿಗೆ ತಿಳಿದಾಗ ಅವನು ಅದನ್ನು ಗೇಲಿಯ ವಿಷಯವನ್ನಾಗಿ ಮಾಡುತ್ತಾನೆ. ಅಂತಹವರಿಗೆ ನಿಂದನೀಯ ಶಿಕ್ಷೆಯಿದೆ.

Verse 10

مِّن وَرَآئِهِمْ جَهَنَّمُ ۖ وَلَا يُغْنِى عَنْهُم مَّا كَسَبُوا۟ شَيْـًٔا وَلَا مَا ٱتَّخَذُوا۟ مِن دُونِ ٱللَّهِ أَوْلِيَآءَ ۖ وَلَهُمْ عَذَابٌ عَظِيمٌ

Transliteration min warāihim jahannamu walā yugh'nī ʿanhum mā kasabū shayan walā mā ittakhadhū min dūni l-lahi awliyāa walahum ʿadhābun ʿaẓīmun

Kannada ಅವರ ಹಿಂದೆ ನರಕವಿದೆ. ಅವರು ಸಂಪಾದಿಸಿ ಟ್ಟದ್ದಾಗಲಿ, ಅವರು ಅಲ್ಲಾಹನನ್ನು ಬಿಟ್ಟು ತಮ್ಮ ರಕ್ಷಕ ಮಿತ್ರರಾಗಿ ಮಾಡಿ ಕೊಂಡಿರುವವರಾಗಲಿ ಅವರಿಗೆ (ನರಕಯಾತನೆ ಯಿಂದ ರಕ್ಷಿಸಲು) ಯಾವ ಪ್ರಯೋಜನವನ್ನೂ ಮಾಡಲಾರರು. ಅವರಿಗೆ ಘೋರ ಶಿಕ್ಷೆಯಿದೆ.

Verse 11

هَـٰذَا هُدًى ۖ وَٱلَّذِينَ كَفَرُوا۟ بِـَٔايَـٰتِ رَبِّهِمْ لَهُمْ عَذَابٌ مِّن رِّجْزٍ أَلِيمٌ

Transliteration hādhā hudan wa-alladhīna kafarū biāyāti rabbihim lahum ʿadhābun min rij'zin alīmun

Kannada ಇದು (ಖುರ್‍ಆನ್) ಮಾರ್ಗದರ್ಶನವಾಗಿದೆ. ತಮ್ಮ ಪ್ರಭುವಿನ ಸೂಕ್ತಗಳನ್ನು ನಿಷೇಧಿಸಿದವರಿಗೆ ತೀವ್ರ ವೇದನಾಯುಕ್ತವಾದ ಶಿಕ್ಷೆಯಿದೆ.

Verse 12

۞ ٱللَّهُ ٱلَّذِى سَخَّرَ لَكُمُ ٱلْبَحْرَ لِتَجْرِىَ ٱلْفُلْكُ فِيهِ بِأَمْرِهِۦ وَلِتَبْتَغُوا۟ مِن فَضْلِهِۦ وَلَعَلَّكُمْ تَشْكُرُونَ

Transliteration al-lahu alladhī sakhara lakumu l-baḥra litajriya l-ful'ku fīhi bi-amrihi walitabtaghū min faḍlihi walaʿallakum tashkurūna

Kannada ನಿಮಗೆ ಸಮುದ್ರವನ್ನು ಅಧೀನಪಡಿಸಿಕೊಟ್ಟವನು ಅಲ್ಲಾಹನೇ. ಅವನ ಅಪ್ಪಣೆಯಂತೆ ಅದರಲ್ಲಿ ನಾವೆಗಳು ಚಲಿಸುವಂತೆಯೂ ಅವನ ಅನುಗ್ರಹ ದಿಂದ ನೀವು ಅರಸುವಂತೆಯೂ ಕೃತಜ್ಞರಾಗು ವಂತೆಯೂ ಆಗಲಿಕ್ಕಾಗಿ.

Verse 13

وَسَخَّرَ لَكُم مَّا فِى ٱلسَّمَـٰوَٰتِ وَمَا فِى ٱلْأَرْضِ جَمِيعًا مِّنْهُ ۚ إِنَّ فِى ذَٰلِكَ لَـَٔايَـٰتٍ لِّقَوْمٍ يَتَفَكَّرُونَ

Transliteration wasakhara lakum mā fī l-samāwāti wamā fī l-arḍi jamīʿan min'hu inna fī dhālika laāyātin liqawmin yatafakkarūna

Kannada ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ತನ್ನ ವತಿಯಿಂದ ಅವನು ನಿಮಗಾಗಿ ಅಧೀನಪಡಿಸಿಕೊಟ್ಟನು. ಚಿಂತಿಸುವ ಜನರಿಗೆ ಇದರಲ್ಲಿ ಧಾರಾಳ ನಿದರ್ಶನಗಳಿವೆ.

Verse 14

قُل لِّلَّذِينَ ءَامَنُوا۟ يَغْفِرُوا۟ لِلَّذِينَ لَا يَرْجُونَ أَيَّامَ ٱللَّهِ لِيَجْزِىَ قَوْمًۢا بِمَا كَانُوا۟ يَكْسِبُونَ

Transliteration qul lilladhīna āmanū yaghfirū lilladhīna lā yarjūna ayyāma l-lahi liyajziya qawman bimā kānū yaksibūna

Kannada (ನಬಿಯರೇ) ಅಲ್ಲಾಹನ (ಶಿಕ್ಷೆಯ) ದಿನಗಳ (ಸಂಭವ್ಯತೆಯ)ನ್ನು ಭಯದಿಂದ ನಿರೀಕ್ಷಿಸದ (ಸತ್ಯನಿಷೇಧಿ) ಜನರನ್ನು ಕ್ಷಮಿಸುವಂತೆ ಸತ್ಯವಿಶ್ವಾಸಿಗಳಿಗೆ ಹೇಳಿರಿ. (ಏಕೆಂದರೆ) ಒಂದು ಜನಾಂಗಕ್ಕೆ ಅವರೆಸಗಿದ ಕ್ಷಮೆಯ ಫಲವನ್ನು ಅಲ್ಲಾಹನು ನೀಡುವಂತಾಗಲು.

Verse 15

مَنْ عَمِلَ صَـٰلِحًا فَلِنَفْسِهِۦ ۖ وَمَنْ أَسَآءَ فَعَلَيْهَا ۖ ثُمَّ إِلَىٰ رَبِّكُمْ تُرْجَعُونَ

Transliteration man ʿamila ṣāliḥan falinafsihi waman asāa faʿalayhā thumma ilā rabbikum tur'jaʿūna

Kannada ಯಾರಾದರೂ ಸತ್ಕರ್ಮ ಮಾಡಿದರೆ ಅದು ಅವನ ಹಿತಕ್ಕೆ. ದುಷ್ಕರ್ಮವೆಸಗಿದರೆ ಅದರ ಪಾಪ ಅವನಿಗೆ. ಅನಂತರ ನಿಮ್ಮ ಪ್ರಭುವಿನ ಕಡೆಗೇ ನೀವು ಮರಳಲ್ಪಡುವಿರಿ.

Verse 16

وَلَقَدْ ءَاتَيْنَا بَنِىٓ إِسْرَٰٓءِيلَ ٱلْكِتَـٰبَ وَٱلْحُكْمَ وَٱلنُّبُوَّةَ وَرَزَقْنَـٰهُم مِّنَ ٱلطَّيِّبَـٰتِ وَفَضَّلْنَـٰهُمْ عَلَى ٱلْعَـٰلَمِينَ

Transliteration walaqad ātaynā banī is'rāīla l-kitāba wal-ḥuk'ma wal-nubuwata warazaqnāhum mina l-ṭayibāti wafaḍḍalnāhum ʿalā l-ʿālamīna

Kannada ಇಸ್ರಾಈಲ್ ಸಂತತಿಗಳಿಗೆ ವೇದಗ್ರಂಥ, (ತೌರಾತ್) ವಿಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದ್ದೆವು. ಉತ್ತಮ ವಸ್ತುಗಳಿಂದ ನಾವು ಅವರಿಗೆ ಆಹಾರ ಕರುಣಿಸಿದೆವು. ಜಗತ್ತಿನವರಿಗಿಂತ ಅವರಿಗೆ ನಾವು ಶ್ರೇಷ್ಠತೆ ದಯಪಾಲಿಸಿದೆವು.

Verse 17

وَءَاتَيْنَـٰهُم بَيِّنَـٰتٍ مِّنَ ٱلْأَمْرِ ۖ فَمَا ٱخْتَلَفُوٓا۟ إِلَّا مِنۢ بَعْدِ مَا جَآءَهُمُ ٱلْعِلْمُ بَغْيًۢا بَيْنَهُمْ ۚ إِنَّ رَبَّكَ يَقْضِى بَيْنَهُمْ يَوْمَ ٱلْقِيَـٰمَةِ فِيمَا كَانُوا۟ فِيهِ يَخْتَلِفُونَ

Transliteration waātaynāhum bayyinātin mina l-amri famā ikh'talafū illā min baʿdi mā jāahumu l-ʿil'mu baghyan baynahum inna rabbaka yaqḍī baynahum yawma l-qiyāmati fīmā kānū fīhi yakhtalifūna

Kannada ಅವರಿಗೆ ನಾವು ಧರ್ಮದ ವಿಷಯದಲ್ಲಿ ಸುವ್ಯಕ್ತ ನಿದರ್ಶನಗಳನ್ನು ಕೊಟ್ಟೆವು. ಆದರೆ ಅವರು ಭಿನ್ನಾಭಿಪ್ರಾಯ ತಾಳಿದ್ದು ಜ್ಞಾನ ಬಂದ ಬಳಿಕವಾಗಿತ್ತು. ಅದು ಪರಸ್ಪರರ ಜಿದ್ದಿನ ನಿಮಿತ್ತವಾಗಿತ್ತು. ಅವರು ಭಿನ್ನಾಭಿಪ್ರಾಯ ತಾಳುತ್ತಾ ಬಂದಿರುವ ವಿಷಯಗಳಲ್ಲಿ ಪುನರುತ್ಥಾನದ ದಿನ ಅವರ ನಡುವೆ ತಮ್ಮ ಪ್ರಭು ವಿಧಿ ನೀಡುವನು.

Verse 18

ثُمَّ جَعَلْنَـٰكَ عَلَىٰ شَرِيعَةٍ مِّنَ ٱلْأَمْرِ فَٱتَّبِعْهَا وَلَا تَتَّبِعْ أَهْوَآءَ ٱلَّذِينَ لَا يَعْلَمُونَ

Transliteration thumma jaʿalnāka ʿalā sharīʿatin mina l-amri fa-ittabiʿ'hā walā tattabiʿ ahwāa alladhīna lā yaʿlamūna

Kannada (ಪೈಗಂಬರರೇ,) ಅನಂತರ ತಮ್ಮನ್ನು ನಾವು ಧರ್ಮದ ವಿಷಯದಲ್ಲಿ ಒಂದು ಸುಸ್ಪಷ್ಟ ಮಾರ್ಗದಲ್ಲಿ (ಧರ್ಮಶಾಸ್ತ್ರದಲ್ಲಿ) ಇರಿಸಿದ್ದೇವೆ. ಆದುದರಿಂದ ತಾವು ಅದನ್ನು ಅನುಸರಿಸಿ. ಅಜ್ಞಾನಿಗಳ ತನ್ನಿಷ್ಟಗಳನ್ನು ಅನುಸರಿಸಬೇಡಿರಿ.

Verse 19

إِنَّهُمْ لَن يُغْنُوا۟ عَنكَ مِنَ ٱللَّهِ شَيْـًٔا ۚ وَإِنَّ ٱلظَّـٰلِمِينَ بَعْضُهُمْ أَوْلِيَآءُ بَعْضٍ ۖ وَٱللَّهُ وَلِىُّ ٱلْمُتَّقِينَ

Transliteration innahum lan yugh'nū ʿanka mina l-lahi shayan wa-inna l-ẓālimīna baʿḍuhum awliyāu baʿḍin wal-lahu waliyyu l-mutaqīna

Kannada ಅಲ್ಲಾಹನಿಂದ ಯಾವ ಕಾರ್ಯಕ್ಕೂ ಅವರು ತಮಗೆ ಎಳ್ಳಷ್ಟೂ ಪ್ರಯೋಜನವಾಗಲಾರರು. ಅಕ್ರಮಿಗಳು ಪರಸ್ಪರ ಮಿತ್ರರು. ಅಲ್ಲಾಹನು ಧರ್ಮನಿಷ್ಟರ ಮಿತ್ರನಾಗಿರುವನು.

Verse 20

هَـٰذَا بَصَـٰٓئِرُ لِلنَّاسِ وَهُدًى وَرَحْمَةٌ لِّقَوْمٍ يُوقِنُونَ

Transliteration hādhā baṣāiru lilnnāsi wahudan waraḥmatun liqawmin yūqinūna

Kannada ಇದು ಮನುಷ್ಯರ ಕಣ್ತೆರೆಸುವ ದಿವ್ಯಜ್ಞಾನ ಮತ್ತು ದೃಢವಿಶ್ವಾಸವುಳ್ಳವರಿಗೆ ಸನ್ಮಾರ್ಗ ದರ್ಶನವೂ ಕೃಪೆಯೂ ಆಗಿದೆ.

Verse 21

أَمْ حَسِبَ ٱلَّذِينَ ٱجْتَرَحُوا۟ ٱلسَّيِّـَٔاتِ أَن نَّجْعَلَهُمْ كَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ سَوَآءً مَّحْيَاهُمْ وَمَمَاتُهُمْ ۚ سَآءَ مَا يَحْكُمُونَ

Transliteration am ḥasiba alladhīna ij'taraḥū l-sayiāti an najʿalahum ka-alladhīna āmanū waʿamilū l-ṣāliḥāti sawāan maḥyāhum wamamātuhum sāa mā yaḥkumūna

Kannada ಅದಲ್ಲ, ದುಷ್ಕರ್ಮಗಳನ್ನೆಸಗಿದವರು ಭಾವಿಸಿರುವರೇ? ನಾವು ಅವರನ್ನು ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮವೆಸಗಿದವರಿಗೆ ಸಮಾನರಾಗಿ ಅಂದರೆ ಅವರಿಬ್ಬರ ಜೀವನ ಹಾಗೂ ಮರಣಗಳು ಸಮಾನ ರೂಪದಲ್ಲಿ ಮಾಡುತ್ತೇವೆಂದು. ಅವರು ಮಾಡುವ ತೀರ್ಮಾನ ಬಹಳ ಕೆಟ್ಟದ್ದೇ ಸರಿ.

Verse 22

وَخَلَقَ ٱللَّهُ ٱلسَّمَـٰوَٰتِ وَٱلْأَرْضَ بِٱلْحَقِّ وَلِتُجْزَىٰ كُلُّ نَفْسٍۭ بِمَا كَسَبَتْ وَهُمْ لَا يُظْلَمُونَ

Transliteration wakhalaqa l-lahu l-samāwāti wal-arḍa bil-ḥaqi walituj'zā kullu nafsin bimā kasabat wahum lā yuẓ'lamūna

Kannada ಆಕಾಶಗಳನ್ನೂ ಭೂಮಿಯನ್ನೂ ಅಲ್ಲಾಹನು ಸತ್ಯಪೂರ್ಣವಾಗಿ ಸೃಷ್ಟಿಸಿರುತ್ತಾನೆ. ಅದು ಪ್ರತಿ ಯೊಬ್ಬ ವ್ಯಕ್ತಿಗೆ ತನ್ನ ದುಡಿಮೆಯ ಪ್ರತಿಫಲ ನೀಡಲಿಕ್ಕಾಗಿ, ಖಂಡಿತ ಅವರು ದ್ರೋಹಿಸಲ್ಪಡಲಾರರು.

Verse 23

أَفَرَءَيْتَ مَنِ ٱتَّخَذَ إِلَـٰهَهُۥ هَوَىٰهُ وَأَضَلَّهُ ٱللَّهُ عَلَىٰ عِلْمٍ وَخَتَمَ عَلَىٰ سَمْعِهِۦ وَقَلْبِهِۦ وَجَعَلَ عَلَىٰ بَصَرِهِۦ غِشَـٰوَةً فَمَن يَهْدِيهِ مِنۢ بَعْدِ ٱللَّهِ ۚ أَفَلَا تَذَكَّرُونَ

Transliteration afara-ayta mani ittakhadha ilāhahu hawāhu wa-aḍallahu l-lahu ʿalā ʿil'min wakhatama ʿalā samʿihi waqalbihi wajaʿala ʿalā baṣarihi ghishāwatan faman yahdīhi min baʿdi l-lahi afalā tadhakkarūna

Kannada ತನ್ನ ಸ್ವೇಚ್ಚೆಯನ್ನು ತನ್ನ ದೇವರಾಗಿ ಮಾಡಿ ಕೊಂಡವನನ್ನು ನೀವು ಕಂಡಿರಾ? ಅಲ್ಲಾಹನು ಅರಿತುಕೊಂಡೇ ಅವನನ್ನು ದಾರಿ ತಪ್ಪಿಸಿದನು. ಅವನ ಹೃದಯ ಹಾಗೂ ಕಿವಿಗಳಿಗೆ ಮುದ್ರೆಯನ್ನು ಒತ್ತಿ ಬಿಟ್ಟನು. ಮತ್ತು ಅವನ ದೃಷ್ಟಿಗಳ ಮೇಲೆ ತೆರೆಯೆಳೆದುಬಿಟ್ಟನು. ಅಲ್ಲಾಹನ ಬಳಿಕ ಅವನಿಗೆ ಸನ್ಮಾರ್ಗ ನೀಡಲು ಇನ್ನಾರಿದ್ದಾರೆ? ಹೀಗಿರಲು ನೀವು ಯೋಚಿಸಿ ಗ್ರಹಿಸುವುದಿಲ್ಲವೇ?

Verse 24

وَقَالُوا۟ مَا هِىَ إِلَّا حَيَاتُنَا ٱلدُّنْيَا نَمُوتُ وَنَحْيَا وَمَا يُهْلِكُنَآ إِلَّا ٱلدَّهْرُ ۚ وَمَا لَهُم بِذَٰلِكَ مِنْ عِلْمٍ ۖ إِنْ هُمْ إِلَّا يَظُنُّونَ

Transliteration waqālū mā hiya illā ḥayātunā l-dun'yā namūtu wanaḥyā wamā yuh'likunā illā l-dahru wamā lahum bidhālika min ʿil'min in hum illā yaẓunnūna

Kannada ಅವರು ಹೇಳಿದರು; ``ಜೀವನವೆಂದರೆ ನಮ್ಮ ಈ ಲೋಕದ ಜೀವನ ಮಾತ್ರ. ನಾವು ಸಾಯುತ್ತೇವೆ ಮತ್ತು ಬದುಕುತ್ತೇವೆ. ಕಾಲದ ಹೊರತು ನಮ್ಮನ್ನು ನಾಶಗೊಳಿಸುವುದಿಲ್ಲ’’. (ವಾಸ್ತವದಲ್ಲಿ) ಅವರಿಗೆ ಅದರ ಕುರಿತು ಯಾವ ಜ್ಞಾನವೂ ಇಲ್ಲ. ಅವರು ಕೇವಲ ಊಹಿಸುತ್ತಿದ್ದಾರೆ.

Verse 25

وَإِذَا تُتْلَىٰ عَلَيْهِمْ ءَايَـٰتُنَا بَيِّنَـٰتٍ مَّا كَانَ حُجَّتَهُمْ إِلَّآ أَن قَالُوا۟ ٱئْتُوا۟ بِـَٔابَآئِنَآ إِن كُنتُمْ صَـٰدِقِينَ

Transliteration wa-idhā tut'lā ʿalayhim āyātunā bayyinātin mā kāna ḥujjatahum illā an qālū i'tū biābāinā in kuntum ṣādiqīna

Kannada ನಮ್ಮ ಸೂಕ್ತಗಳನ್ನು ವ್ಯಕ್ತವಾಗಿ ಅವರಿಗೆ ಓದಿ ಕೇಳಿಸಲಾದರೆ ಅವರ ನ್ಯಾಯವಾದವು `ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು ಎಬ್ಬಿಸಿ ತನ್ನಿರಿ’ ಎಂದು ಹೇಳುವುದು ಮಾತ್ರ ವಾಗಿತ್ತು.

Verse 26

قُلِ ٱللَّهُ يُحْيِيكُمْ ثُمَّ يُمِيتُكُمْ ثُمَّ يَجْمَعُكُمْ إِلَىٰ يَوْمِ ٱلْقِيَـٰمَةِ لَا رَيْبَ فِيهِ وَلَـٰكِنَّ أَكْثَرَ ٱلنَّاسِ لَا يَعْلَمُونَ

Transliteration quli l-lahu yuḥ'yīkum thumma yumītukum thumma yajmaʿukum ilā yawmi l-qiyāmati lā rayba fīhi walākinna akthara l-nāsi lā yaʿlamūna

Kannada ತಾವು ಹೇಳಿರಿ;-ಅಲ್ಲಾಹನು ನಿಮ್ಮನ್ನು ಬದು ಕಿಸುತ್ತಾನೆ. ಅನಂತರ ಅವನು ನಿಮಗೆ ಮರಣ ಕೊಡುತ್ತಾನೆ. ಆ ಬಳಿಕ ಪುನರುತ್ಥಾನದ ದಿನ ಅವನು ನಿಮ್ಮನ್ನು (ಜೀವಂತಗೊಳಿಸಿ) ಒಟ್ಟುಗೂಡಿಸುವನು. ಅದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಹೆಚ್ಚಿನವರು ತಿಳಿಯುವುದಿಲ್ಲ.

Verse 27

وَلِلَّهِ مُلْكُ ٱلسَّمَـٰوَٰتِ وَٱلْأَرْضِ ۚ وَيَوْمَ تَقُومُ ٱلسَّاعَةُ يَوْمَئِذٍ يَخْسَرُ ٱلْمُبْطِلُونَ

Transliteration walillahi mul'ku l-samāwāti wal-arḍi wayawma taqūmu l-sāʿatu yawma-idhin yakhsaru l-mub'ṭilūna

Kannada ಆಕಾಶಗಳ ಮತ್ತು ಭೂಮಿಯ ಅಧಿಪತ್ಯ ಅಲ್ಲಾಹನಿಗೇ ಆಗಿದೆ. ಪುನರುತ್ಥಾನದ ಘಳಿಗೆ ಬರುವ ದಿನದಂದು ಅಸತ್ಯವಾದಿಗಳು ನಷ್ಟಕ್ಕೊಳಗಾಗುವ ದಿನ.

Verse 28

وَتَرَىٰ كُلَّ أُمَّةٍ جَاثِيَةً ۚ كُلُّ أُمَّةٍ تُدْعَىٰٓ إِلَىٰ كِتَـٰبِهَا ٱلْيَوْمَ تُجْزَوْنَ مَا كُنتُمْ تَعْمَلُونَ

Transliteration watarā kulla ummatin jāthiyatan kullu ummatin tud'ʿā ilā kitābihā l-yawma tuj'zawna mā kuntum taʿmalūna

Kannada (ಅಂದು) ಪ್ರತಿಯೊಂದು ಸಮುದಾಯವನ್ನು ಮೊಣಕಾಲೂರಿ ಬಿದ್ದ ಸ್ಥಿತಿಯಲ್ಲಿ ತಾವು ಕಾಣುವಿರಿ. ಪ್ರತಿಯೊಂದು ಸಮುದಾಯವು ತಮ್ಮ ಕರ್ಮ ಪತ್ರವನ್ನು ನೋಡಲಿಕ್ಕಾಗಿ ಕರೆಯಲ್ಪಡುವುದು. (ಅವರೊಡನೆ ಹೇಳಲಾಗುವುದು.) ಇಂದು ನಿಮಗೆ ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನು ನೀಡಲಾಗುವುದು.

Verse 29

هَـٰذَا كِتَـٰبُنَا يَنطِقُ عَلَيْكُم بِٱلْحَقِّ ۚ إِنَّا كُنَّا نَسْتَنسِخُ مَا كُنتُمْ تَعْمَلُونَ

Transliteration hādhā kitābunā yanṭiqu ʿalaykum bil-ḥaqi innā kunnā nastansikhu mā kuntum taʿmalūna

Kannada ಇದು ನಾವು ದಾಖಲಿಸಿದ ಕರ್ಮಪತ್ರವಾಗಿದ್ದು ಇದು ನಿಮ್ಮೆದುರು ಸತ್ಯಸಂಧವಾಗಿ ಮಾತನಾಡುತ್ತದೆ. ನೀವು ಮಾಡುತ್ತಿದ್ದ ಎಲ್ಲವನ್ನು ನಾವು ಬರೆಸುತ್ತಲೇ ಇದ್ದೆವು.

Verse 30

فَأَمَّا ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ فَيُدْخِلُهُمْ رَبُّهُمْ فِى رَحْمَتِهِۦ ۚ ذَٰلِكَ هُوَ ٱلْفَوْزُ ٱلْمُبِينُ

Transliteration fa-ammā alladhīna āmanū waʿamilū l-ṣāliḥāti fayud'khiluhum rabbuhum fī raḥmatihi dhālika huwa l-fawzu l-mubīnu

Kannada ಅಂದ ಮೇಲೆ ಸತ್ಯವಿಶ್ವಾಸವಿರಿಸಿ ಸತ್ಕರ್ಮ ಮಾಡುತ್ತಿದ್ದವರನ್ನು ಅವರ ಪ್ರಭು ತನ್ನ ಕೃಪೆಯೊಳಗೆ ಪ್ರವೇಶಗೊಳಿಸುವನು. ಇದುವೇ ಸುವ್ಯಕ್ತ ವಿಜಯ.

Verse 31

وَأَمَّا ٱلَّذِينَ كَفَرُوٓا۟ أَفَلَمْ تَكُنْ ءَايَـٰتِى تُتْلَىٰ عَلَيْكُمْ فَٱسْتَكْبَرْتُمْ وَكُنتُمْ قَوْمًا مُّجْرِمِينَ

Transliteration wa-ammā alladhīna kafarū afalam takun āyātī tut'lā ʿalaykum fa-is'takbartum wakuntum qawman muj'rimīna

Kannada ಆದರೆ ಸತ್ಯನಿಷೇಧಿಗಳೊಡನೆ `ನನ್ನ ಸೂಕ್ತ ಗಳನ್ನು ನಿಮಗೆ ಓದಿ ಹೇಳಲಾಗುತ್ತಿರಲಿಲ್ಲವೇ? ಆದರೆ, ನೀವು ಅಹಂಕಾರಪಟ್ಟಿರಿ ಮತ್ತು ಅಪರಾಧಿಗಳಾಗಿ ಬಾಳಿದಿರಿ’ (ಎನ್ನಲಾಗುವುದು.)

Verse 32

وَإِذَا قِيلَ إِنَّ وَعْدَ ٱللَّهِ حَقٌّ وَٱلسَّاعَةُ لَا رَيْبَ فِيهَا قُلْتُم مَّا نَدْرِى مَا ٱلسَّاعَةُ إِن نَّظُنُّ إِلَّا ظَنًّا وَمَا نَحْنُ بِمُسْتَيْقِنِينَ

Transliteration wa-idhā qīla inna waʿda l-lahi ḥaqqun wal-sāʿatu lā rayba fīhā qul'tum mā nadrī mā l-sāʿatu in naẓunnu illā ẓannan wamā naḥnu bimus'tayqinīna

Kannada ‘ಅಲ್ಲಾಹನ ವಾಗ್ದಾನ ಸತ್ಯಪೂರ್ಣವಾಗಿದೆ. ಅಂತಿಮ ಘಳಿಗೆಯಲ್ಲಿ ಯಾವ ಸಂದೇಹವೂ ಇಲ್ಲ’, ಎಂದು ಹೇಳಲಾದಾಗ ನೀವು, ‘ಅಂತಿಮ ಘಳಿಗೆಯೇನೆಂದು ನಮಗೆ ತಿಳಿಯದು. ನಮಗೊಂದು ಊಹೆ ಮಾತ್ರ ಇದೆ, ನಾವು ದೃಢವಾಗಿ ನಂಬಿದವರಲ್ಲ’ ಎಂದು ಹೇಳುತ್ತಿದ್ದಿರಿ.

Verse 33

وَبَدَا لَهُمْ سَيِّـَٔاتُ مَا عَمِلُوا۟ وَحَاقَ بِهِم مَّا كَانُوا۟ بِهِۦ يَسْتَهْزِءُونَ

Transliteration wabadā lahum sayyiātu mā ʿamilū waḥāqa bihim mā kānū bihi yastahziūna

Kannada (ಆಗ) ಅವರ ಕರ್ಮಗಳ ದೋಷಗಳು ಅವರಿಗೆ ವ್ಯಕ್ತವಾಗುವುವು. ಅವರು ಯಾವುದನ್ನು ಗೇಲಿ ಮಾಡುತ್ತಿದ್ದರೋ ಅದು (ಶಿಕ್ಷೆ) ಅವರನ್ನು ಸುತ್ತುವರಿಯಿತು.

Verse 34

وَقِيلَ ٱلْيَوْمَ نَنسَىٰكُمْ كَمَا نَسِيتُمْ لِقَآءَ يَوْمِكُمْ هَـٰذَا وَمَأْوَىٰكُمُ ٱلنَّارُ وَمَا لَكُم مِّن نَّـٰصِرِينَ

Transliteration waqīla l-yawma nansākum kamā nasītum liqāa yawmikum hādhā wamawākumu l-nāru wamā lakum min nāṣirīna

Kannada (ಅವರೊಡನೆ ಹೀಗೆ) ಹೇಳಲಾಗುವುದು, ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತು ಬಿಟ್ಟಂತೆಯೇ ಇಂದು ನಾವು ನಿಮ್ಮನ್ನು ಮರೆತು ಬಿಡುತ್ತೇವೆ. ನರಕಾಗ್ನಿಯೇ ನಿಮ್ಮ ನೆಲೆಯಾಗಿದೆ. ನಿಮಗೆ ಯಾರೂ ಸಹಾಯಕರಿಲ್ಲ.

Verse 35

ذَٰلِكُم بِأَنَّكُمُ ٱتَّخَذْتُمْ ءَايَـٰتِ ٱللَّهِ هُزُوًا وَغَرَّتْكُمُ ٱلْحَيَوٰةُ ٱلدُّنْيَا ۚ فَٱلْيَوْمَ لَا يُخْرَجُونَ مِنْهَا وَلَا هُمْ يُسْتَعْتَبُونَ

Transliteration dhālikum bi-annakumu ittakhadhtum āyāti l-lahi huzuwan wagharratkumu l-ḥayatu l-dun'yā fal-yawma lā yukh'rajūna min'hā walā hum yus'taʿtabūna

Kannada ಅಲ್ಲಾಹನ ಸೂಕ್ತಗಳನ್ನು ನೀವು ಪರಿಹಾಸ್ಯ ಮಾಡಿದ್ದುದರಿಂದಲೂ ಭೂಲೋಕದ ಜೀವನವು ನಿಮ್ಮನ್ನು ವಂಚಿಸಿ ಬಿಟ್ಟಿದ್ದರಿಂದಲೂ ಹೀಗೆ ಸಂಭವಿಸಿತು. ಆದುದರಿಂದ ಇಂದು ಇವರನ್ನು ನರಕದಿಂದ ಹೊರಹಾಕಲಾಗುವುದಿಲ್ಲ. ಇವರೊಡನೆ ಪ್ರಾಯಶ್ಚಿತ್ತವನ್ನು ಕೇಳಲಾಗುವುದಿಲ್ಲ.

Verse 36

فَلِلَّهِ ٱلْحَمْدُ رَبِّ ٱلسَّمَـٰوَٰتِ وَرَبِّ ٱلْأَرْضِ رَبِّ ٱلْعَـٰلَمِينَ

Transliteration falillahi l-ḥamdu rabbi l-samāwāti warabbi l-arḍi rabbi l-ʿālamīna

Kannada ಆದುದರಿಂದ ಆಕಾಶಗಳ ಪ್ರಭು, ಭೂಮಿಯ ಪ್ರಭು ಮತ್ತು ಸಕಲ ಲೋಕವಾಸಿಗಳ ಪ್ರಭು ವಾಗಿರುವ ಅಲ್ಲಾಹನಿಗೇ ಸರ್ವ ಸ್ತುತಿ.

Verse 37

وَلَهُ ٱلْكِبْرِيَآءُ فِى ٱلسَّمَـٰوَٰتِ وَٱلْأَرْضِ ۖ وَهُوَ ٱلْعَزِيزُ ٱلْحَكِيمُ

Transliteration walahu l-kib'riyāu fī l-samāwāti wal-arḍi wahuwa l-ʿazīzu l-ḥakīmu

Kannada ಆಕಾಶಗಳಲ್ಲೂ ಭೂಮಿಯಲ್ಲೂ ಆತನಿಗೆ ಘನತೆಯಿದೆ. ಅವನೇ ಪ್ರಬಲನೂ ಯುಕ್ತಜ್ಞನೂ ಆಗಿರುತ್ತಾನೆ.

Read Surah Al-Jathiyah in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.