MyDugsiStart learning

Surah Al-Hijr in Kannada: translation and audio

Surah 15 · الحجر · The Rocky Tract · 99 verses

Surah Al-Hijr verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Hijr word by word in English.

Verse 1

الٓر ۚ تِلْكَ ءَايَـٰتُ ٱلْكِتَـٰبِ وَقُرْءَانٍ مُّبِينٍ

Transliteration alif-lam-ra til'ka āyātu l-kitābi waqur'ānin mubīnin

Kannada ಅಲಿಫ್ ಲಾಮ್ ರಾ, ದೇವಗ್ರಂಥ ಹಾಗೂ ಸುವ್ಯಕ್ತ ಖುರ್‍ಆನಿನ ಸೂಕ್ತಗಳಿವು.

Verse 2

رُّبَمَا يَوَدُّ ٱلَّذِينَ كَفَرُوا۟ لَوْ كَانُوا۟ مُسْلِمِينَ

Transliteration rubamā yawaddu alladhīna kafarū law kānū mus'limīna

Kannada ‘ನಾವೂ ಮುಸ್ಲಿಮರಾಗಿದ್ದರೆ ಎಷ್ಟು ಚೆನ್ನಾಗಿತ್ತು’ ಎಂದು ಸತ್ಯನಿಷೇಧಿಗಳು ತೀವ್ರ ಆಶೆಪಡುವರು.

Verse 3

ذَرْهُمْ يَأْكُلُوا۟ وَيَتَمَتَّعُوا۟ وَيُلْهِهِمُ ٱلْأَمَلُ ۖ فَسَوْفَ يَعْلَمُونَ

Transliteration dharhum yakulū wayatamattaʿū wayul'hihimu l-amalu fasawfa yaʿlamūna

Kannada ತಾವು ಅವರನ್ನು ಬಿಟ್ಟುಬಿಡಿರಿ. ಅವರು ತಿನ್ನಲಿ, ಸುಖಪಡಲಿ, ಹುಸಿ ಭರವಸೆಯಲ್ಲಿ ಮೈಮರೆಯಲಿ. ನಂತರ ಅವರು ತಿಳಿದುಕೊಳ್ಳುವರು.

Verse 4

وَمَآ أَهْلَكْنَا مِن قَرْيَةٍ إِلَّا وَلَهَا كِتَابٌ مَّعْلُومٌ

Transliteration wamā ahlaknā min qaryatin illā walahā kitābun maʿlūmun

Kannada ಒಂದು ನಿರ್ದಿಷ್ಟ ಅವಧಿಯನ್ನು ಲಿಖಿತಗೊಳಿಸದೆ ಯಾವುದೇ ನಾಡನ್ನು ನಾವು ನಾಶಗೊಳಿಸಿಲ್ಲ.

Verse 5

مَّا تَسْبِقُ مِنْ أُمَّةٍ أَجَلَهَا وَمَا يَسْتَـْٔخِرُونَ

Transliteration mā tasbiqu min ummatin ajalahā wamā yastakhirūna

Kannada ಯಾವ ಜನಾಂಗವೂ ತನಗೆ ನಿಶ್ಚಯಿಸಲ್ಪಟ್ಟ ಕಾಲಕ್ಕಿಂತ ಮುಂದೆ ಹೋಗದು. (ಕಾಲಕ್ಕಿಂತ) ಅವರು ಹಿಂದೆ ಹೋಗರು.

Verse 6

وَقَالُوا۟ يَـٰٓأَيُّهَا ٱلَّذِى نُزِّلَ عَلَيْهِ ٱلذِّكْرُ إِنَّكَ لَمَجْنُونٌ

Transliteration waqālū yāayyuhā alladhī nuzzila ʿalayhi l-dhik'ru innaka lamajnūnun

Kannada ಅವರು (ಅವಿಶ್ವಾಸಿಗಳು) ಹೇಳುತ್ತಾರೆ, ಓ, ಉದ್ಭೋಧೆ ಅವತೀರ್ಣಗೊಂಡವನೇ! ಖಂಡಿತ ನೀನೊಬ್ಬ ಹುಚ್ಚನಾಗಿರುವಿ.

Verse 7

لَّوْ مَا تَأْتِينَا بِٱلْمَلَـٰٓئِكَةِ إِن كُنتَ مِنَ ٱلصَّـٰدِقِينَ

Transliteration law mā tatīnā bil-malāikati in kunta mina l-ṣādiqīna

Kannada ನೀನು ಸತ್ಯವಾದಿಯಾಗಿದ್ದರೆ ನಮ್ಮ ಬಳಿ ದೇವಚ ರರನ್ನೇಕೆ ತರುವುದಿಲ್ಲ ?

Verse 8

مَا نُنَزِّلُ ٱلْمَلَـٰٓئِكَةَ إِلَّا بِٱلْحَقِّ وَمَا كَانُوٓا۟ إِذًا مُّنظَرِينَ

Transliteration mā nunazzilu l-malāikata illā bil-ḥaqi wamā kānū idhan munẓarīna

Kannada ನ್ಯಾಯವಾದ ಕಾರಣವಿಲ್ಲದೆ ನಾವು ದೇವಚರರನ್ನು ಇಳಿಸುವುದಿಲ್ಲ. ಮತ್ತು ಆಗ ಅವರಿಗೆ (ಸತ್ಯ ನಿಷೇಧಿಗಳಿಗೆ) ಕಾಲಾವಕಾಶ ನೀಡಲಾಗುವುದಿಲ್ಲ.

Verse 9

إِنَّا نَحْنُ نَزَّلْنَا ٱلذِّكْرَ وَإِنَّا لَهُۥ لَحَـٰفِظُونَ

Transliteration innā naḥnu nazzalnā l-dhik'ra wa-innā lahu laḥāfiẓūna

Kannada ನಿಶ್ಚಯವಾಗಿಯೂ ನಾವು ಈ ಉದ್ಭೋ ದನೆಯನ್ನು ಅವತೀರ್ಣಗೊಳಿಸಿರುತ್ತೇವೆ. ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ.

Verse 10

وَلَقَدْ أَرْسَلْنَا مِن قَبْلِكَ فِى شِيَعِ ٱلْأَوَّلِينَ

Transliteration walaqad arsalnā min qablika fī shiyaʿi l-awalīna

Kannada (ಓ ಪೈಗಂಬರರೇ), ನಾವು ನಿಮಗಿಂತ ಮುಂಚೆ ಪೂರ್ವಿಕರ ಅನೇಕ ಪಂಗಡಗಳಲ್ಲಿ ಸಂದೇಶವಾ ಹಕರನ್ನು ಕಳುಹಿಸಿದ್ದೇವೆ.

Verse 11

وَمَا يَأْتِيهِم مِّن رَّسُولٍ إِلَّا كَانُوا۟ بِهِۦ يَسْتَهْزِءُونَ

Transliteration wamā yatīhim min rasūlin illā kānū bihi yastahziūna

Kannada ಯಾವುದೇ ಸಂದೇಶವಾಹಕ ಅವರ ಬಳಿ ಬಂದಾಗ ಎಂದೂ ಪರಿಹಾಸ್ಯ ಮಾಡದೆ ಬಿಡಲಿಲ್ಲ.

Verse 12

كَذَٰلِكَ نَسْلُكُهُۥ فِى قُلُوبِ ٱلْمُجْرِمِينَ

Transliteration kadhālika naslukuhu fī qulūbi l-muj'rimīna

Kannada ಅದೇ ರೀತಿಯಲ್ಲಿ ಅಪರಾಧಿಗಳ ಹೃದಯದೊಳಗೆ ಅದನ್ನು (ಪರಿಹಾಸ್ಯವನ್ನು) ನಾವು ಹಾಯಿಸುತ್ತೇವೆ.

Verse 13

لَا يُؤْمِنُونَ بِهِۦ ۖ وَقَدْ خَلَتْ سُنَّةُ ٱلْأَوَّلِينَ

Transliteration lā yu'minūna bihi waqad khalat sunnatu l-awalīna

Kannada ಅವರು ಪ್ರವಾದಿಯವರಲ್ಲಿ ವಿಶ್ವಾಸವಿರಿಸುವುದಿಲ್ಲ. ಪೂರ್ವಿಕರಲ್ಲಿ (ಅಲ್ಲಾಹನ) ಕ್ರಮ ಗತಿಸಿ ಹೋಗಿದೆ.

Verse 14

وَلَوْ فَتَحْنَا عَلَيْهِم بَابًا مِّنَ ٱلسَّمَآءِ فَظَلُّوا۟ فِيهِ يَعْرُجُونَ

Transliteration walaw fataḥnā ʿalayhim bāban mina l-samāi faẓallū fīhi yaʿrujūna

Kannada ನಾವು ಅವರಿಗೆ ಆಕಾಶದಿಂದ ದ್ವಾರವೊಂದನ್ನು ತೆರೆದು, ಅವರು ಅದರ ಮೂಲಕ ಏರಿ ಹೋಗುತ್ತಿದ್ದರೆ,

Verse 15

لَقَالُوٓا۟ إِنَّمَا سُكِّرَتْ أَبْصَـٰرُنَا بَلْ نَحْنُ قَوْمٌ مَّسْحُورُونَ

Transliteration laqālū innamā sukkirat abṣārunā bal naḥnu qawmun masḥūrūna

Kannada “ನಮ್ಮ ಕಣ್ಣುಗಳು ಮತ್ತೇರಿವೆ ಅಷ್ಟೆ. ಅಲ್ಲದೆ ನಾವು ಮಾಟಕ್ಕೊಳಗಾಗಿದ್ದೇವೆ” ಎಂದೇ ಅವರು ಹೇಳುತ್ತಿದ್ದರು.

Verse 16

وَلَقَدْ جَعَلْنَا فِى ٱلسَّمَآءِ بُرُوجًا وَزَيَّنَّـٰهَا لِلنَّـٰظِرِينَ

Transliteration walaqad jaʿalnā fī l-samāi burūjan wazayyannāhā lilnnāẓirīna

Kannada ಆಕಾಶದಲ್ಲಿ ನಾವು ಅನೇಕ ಭ್ರಮಣ ಪಥಗಳನ್ನು ಮಾಡಿರುತ್ತೇವೆ. ಅವುಗಳನ್ನು ನೋಡುವವರಿಗಾಗಿ ಅಲಂಕರಿಸಿರುತ್ತೇವೆ.

Verse 17

وَحَفِظْنَـٰهَا مِن كُلِّ شَيْطَـٰنٍ رَّجِيمٍ

Transliteration waḥafiẓ'nāhā min kulli shayṭānin rajīmin

Kannada ಮತ್ತು ಬಹಿಷ್ಕøತರಾದ ಎಲ್ಲ ಶೈತಾನರಿಂದ ಅವುಗಳನ್ನು ಕಾಪಾಡಿರುತ್ತೇವೆ.

Verse 18

إِلَّا مَنِ ٱسْتَرَقَ ٱلسَّمْعَ فَأَتْبَعَهُۥ شِهَابٌ مُّبِينٌ

Transliteration illā mani is'taraqa l-samʿa fa-atbaʿahu shihābun mubīnun

Kannada ಒಂದಿಷ್ಟು ಕದ್ದು ಕೇಳುವವನ ಹೊರತು, ಅವನು ಕದ್ದಾಲಿಸಲು ಪ್ರಯತ್ನಿಸುವಾಗ ಪ್ರತ್ಯಕ್ಷವಾದ ಒಂದು ಅಗ್ನಿಜ್ವಾಲೆಯು ಅವನನ್ನು ಬೆನ್ನಟ್ಟುತ್ತದೆ.

Verse 19

وَٱلْأَرْضَ مَدَدْنَـٰهَا وَأَلْقَيْنَا فِيهَا رَوَٰسِىَ وَأَنۢبَتْنَا فِيهَا مِن كُلِّ شَىْءٍ مَّوْزُونٍ

Transliteration wal-arḍa madadnāhā wa-alqaynā fīhā rawāsiya wa-anbatnā fīhā min kulli shayin mawzūnin

Kannada ನಾವು ಭೂಮಿಯನ್ನು ಹರಡಿದೆವು. ಅದರಲ್ಲಿ ಊರಿನಿಂತ ಪರ್ವತಗಳನ್ನು ನಾಟಿದೆವು. ಸರಿ ಯಾಗಿ ನಿಶ್ಚಿತ ಪ್ರಮಾಣದದಲ್ಲಿ ಬೆಳೆಸಿದೆವು.

Verse 20

وَجَعَلْنَا لَكُمْ فِيهَا مَعَـٰيِشَ وَمَن لَّسْتُمْ لَهُۥ بِرَٰزِقِينَ

Transliteration wajaʿalnā lakum fīhā maʿāyisha waman lastum lahu birāziqīna

Kannada ಮತ್ತು ಅದರಲ್ಲಿ ನಿಮಗಾಗಿಯೂ ನೀವು ಅನ್ನ ನೀಡದಂತಹ ಅನೇಕ ಸೃಷ್ಟಿಗಳಿಗೂ ಜೀವನ ಸಾಧನಗಳನ್ನು ಒದಗಿಸಿದೆವು.

Verse 21

وَإِن مِّن شَىْءٍ إِلَّا عِندَنَا خَزَآئِنُهُۥ وَمَا نُنَزِّلُهُۥٓ إِلَّا بِقَدَرٍ مَّعْلُومٍ

Transliteration wa-in min shayin illā ʿindanā khazāinuhu wamā nunazziluhu illā biqadarin maʿlūmin

Kannada ಯಾವುದೇ ವಸ್ತುವಿನ ಭಂಡಾರ ನಮ್ಮ ಬಳಿ ಇಲ್ಲದಿಲ್ಲ. ಅದನ್ನು ನಾವು ಒಂದು ನಿಗದಿತ ಪ್ರಮಾಣದಲ್ಲಿ ಮಾತ್ರ ಇಳಿಸುತ್ತೇವೆ.

Verse 22

وَأَرْسَلْنَا ٱلرِّيَـٰحَ لَوَٰقِحَ فَأَنزَلْنَا مِنَ ٱلسَّمَآءِ مَآءً فَأَسْقَيْنَـٰكُمُوهُ وَمَآ أَنتُمْ لَهُۥ بِخَـٰزِنِينَ

Transliteration wa-arsalnā l-riyāḥa lawāqiḥa fa-anzalnā mina l-samāi māan fa-asqaynākumūhu wamā antum lahu bikhāzinīna

Kannada ಜಲಾಂಶವನ್ನು ಹೊತ್ತ ಮಾರುತಗಳನ್ನು ನಾವೇ ಕಳುಹಿಸುತ್ತೇವೆ . ಹಾಗೆ ಆಕಾಶದಿಂದ ನೀರನ್ನು ಸುರಿಸುತ್ತೇವೆ. ಮತ್ತು ಅದನ್ನು ನಿಮಗೆ ಕುಡಿಸುತ್ತೇವೆ. ನೀವೇನೂ ಅದರ ಸಂಗ್ರಾಹಕರಾಗಿಲ್ಲ .

Verse 23

وَإِنَّا لَنَحْنُ نُحْىِۦ وَنُمِيتُ وَنَحْنُ ٱلْوَٰرِثُونَ

Transliteration wa-innā lanaḥnu nuḥ'yī wanumītu wanaḥnu l-wārithūna

Kannada ನಿಜವಾಗಿಯೂ ನಾವು ಬದುಕಿಸುತ್ತೇವೆ. ಮೃತ ಗೊಳಿಸುತ್ತೇವೆ. ನಾವೇ ಎಲ್ಲರ ವಾರೀಸುದಾರರು.

Verse 24

وَلَقَدْ عَلِمْنَا ٱلْمُسْتَقْدِمِينَ مِنكُمْ وَلَقَدْ عَلِمْنَا ٱلْمُسْتَـْٔخِرِينَ

Transliteration walaqad ʿalim'nā l-mus'taqdimīna minkum walaqad ʿalim'nā l-mus'takhirīna

Kannada ನಿಮ್ಮ ಪೈಕಿ ಈ ಮುಂಚೆ ಗತಿಸಿ ಹೋದವರನ್ನೂ ನಾವು ಬಲ್ಲೆವು. ಮುಂದೆ ಬರಲಿರುವವರನ್ನೂ ನಾವು ಬಲ್ಲೆವು .

Verse 25

وَإِنَّ رَبَّكَ هُوَ يَحْشُرُهُمْ ۚ إِنَّهُۥ حَكِيمٌ عَلِيمٌ

Transliteration wa-inna rabbaka huwa yaḥshuruhum innahu ḥakīmun ʿalīmun

Kannada ನಿಶ್ಚಯವಾಗಿಯೂ ನಿಮ್ಮ ಪ್ರಭು ಅವರೆಲ್ಲರನ್ನೂ ಒಟ್ಟುಗೂಡಿಸುವನು. ಅವನು ಮಹಾಯುಕ್ತಿವಂತನೂ ಸರ್ವಜ್ಞನೂ ಆಗಿರುತ್ತಾನೆ.

Verse 26

وَلَقَدْ خَلَقْنَا ٱلْإِنسَـٰنَ مِن صَلْصَـٰلٍ مِّنْ حَمَإٍ مَّسْنُونٍ

Transliteration walaqad khalaqnā l-insāna min ṣalṣālin min ḥama-in masnūnin

Kannada ನಾವು ಮಾನವನನ್ನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದೆವು .

Verse 27

وَٱلْجَآنَّ خَلَقْنَـٰهُ مِن قَبْلُ مِن نَّارِ ٱلسَّمُومِ

Transliteration wal-jāna khalaqnāhu min qablu min nāri l-samūmi

Kannada ಅದಕ್ಕಿಂತ ಮುಂಚೆ `ಜಿನ್ನ್’ಅನ್ನು ಧೂಮರಹಿತ ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದೆವು .

Verse 28

وَإِذْ قَالَ رَبُّكَ لِلْمَلَـٰٓئِكَةِ إِنِّى خَـٰلِقٌۢ بَشَرًا مِّن صَلْصَـٰلٍ مِّنْ حَمَإٍ مَّسْنُونٍ

Transliteration wa-idh qāla rabbuka lil'malāikati innī khāliqun basharan min ṣalṣālin min ḥama-in masnūnin

Kannada ನಿಮ್ಮ ಪ್ರಭು ದೇವಚರರೊಡನೆ, ಹೀಗೆ ಹೇಳಿದ ಸಂದರ್ಭ; ‘ನಾನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿ ಸುವವನಿದ್ದೇನೆ.

Verse 29

فَإِذَا سَوَّيْتُهُۥ وَنَفَخْتُ فِيهِ مِن رُّوحِى فَقَعُوا۟ لَهُۥ سَـٰجِدِينَ

Transliteration fa-idhā sawwaytuhu wanafakhtu fīhi min rūḥī faqaʿū lahu sājidīna

Kannada ನಾನು ಅವನನ್ನು ಸಂಪೂರ್ಣಗೊಳಿಸಿ ಅವನೊಳಗೆ ನನ್ನ ಆತ್ಮದಿಂದ ಊದಿದರೆ ನೀವೆಲ್ಲರೂ ಅವನಿಗೆ ಸಾಷ್ಟಾಂಗವೆರಗಿರಿ’.

Verse 30

فَسَجَدَ ٱلْمَلَـٰٓئِكَةُ كُلُّهُمْ أَجْمَعُونَ

Transliteration fasajada l-malāikatu kulluhum ajmaʿūna

Kannada ಆ ಪ್ರಕಾರ ಎಲ್ಲ ದೇವಚರರೂ ಸಾಷ್ಟಾಂಗವೆರಗಿದರು.

Verse 31

إِلَّآ إِبْلِيسَ أَبَىٰٓ أَن يَكُونَ مَعَ ٱلسَّـٰجِدِينَ

Transliteration illā ib'līsa abā an yakūna maʿa l-sājidīna

Kannada ಇಬ್‍ಲೀಸನ ಹೊರತು. ಸಾಷ್ಟಾಂಗವೆರಗಿದವರ ಜೊತೆ ಸೇರಲು ಅವನು ನಿರಾಕರಿಸಿದನು.

Verse 32

قَالَ يَـٰٓإِبْلِيسُ مَا لَكَ أَلَّا تَكُونَ مَعَ ٱلسَّـٰجِدِينَ

Transliteration qāla yāib'līsu mā laka allā takūna maʿa l-sājidīna

Kannada ಅಲ್ಲಾಹು ಕೇಳಿದನು, ಓ ಇಬ್‍ಲೀಸ್, ನೀನು ಸಾಷ್ಟಾಂಗವೆರಗಿದವರೊಂದಿಗೆ ಸೇರದಿರಲು ಕಾರಣವೇನು?

Verse 33

قَالَ لَمْ أَكُن لِّأَسْجُدَ لِبَشَرٍ خَلَقْتَهُۥ مِن صَلْصَـٰلٍ مِّنْ حَمَإٍ مَّسْنُونٍ

Transliteration qāla lam akun li-asjuda libasharin khalaqtahu min ṣalṣālin min ḥama-in masnūnin

Kannada ಅವನು ಹೇಳಿದನು; ‘ನೀನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದ ಈ ಮಾನವನಿಗೆ ನಾನು ಸಾಷ್ಟಾಂಗವೆರಗಲಾರೆ’.

Verse 34

قَالَ فَٱخْرُجْ مِنْهَا فَإِنَّكَ رَجِيمٌ

Transliteration qāla fa-ukh'ruj min'hā fa-innaka rajīmun

Kannada ಅಲ್ಲಾಹು ಹೇಳಿದನು; ‘ಇಲ್ಲಿಂದ ಹೊರಗೆ ನಡೆ, ನಿಜವಾಗಿಯೂ ನೀನು ಬಹಿಷ್ಕøತನು.

Verse 35

وَإِنَّ عَلَيْكَ ٱللَّعْنَةَ إِلَىٰ يَوْمِ ٱلدِّينِ

Transliteration wa-inna ʿalayka l-laʿnata ilā yawmi l-dīni

Kannada ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ’.

Verse 36

قَالَ رَبِّ فَأَنظِرْنِىٓ إِلَىٰ يَوْمِ يُبْعَثُونَ

Transliteration qāla rabbi fa-anẓir'nī ilā yawmi yub'ʿathūna

Kannada ಅವನು, ಹೇಳಿದನು; ‘ಓ ನನ್ನ ಪ್ರಭೂ, ಹಾಗಿದ್ದರೆ ಅವರು ಎಬ್ಬಿಸಲ್ಪಡುವ ದಿನದವರೆಗೆ ನನಗೆ ಕಾಲಾವಕಾಶ ನೀಡು’.

Verse 37

قَالَ فَإِنَّكَ مِنَ ٱلْمُنظَرِينَ

Transliteration qāla fa-innaka mina l-munẓarīna

Kannada ಆಗ, ಅಲ್ಲಾಹನು ಹೇಳಿದನು ‘ನೀನು ಕಾಲಾವ ಕಾಶವನ್ನು ನೀಡಲಾಗಿರುವವರ ಸಾಲಿಗೆ ಸೇರಿರುವೆ.

Verse 38

إِلَىٰ يَوْمِ ٱلْوَقْتِ ٱلْمَعْلُومِ

Transliteration ilā yawmi l-waqti l-maʿlūmi

Kannada ಆ ನಿಶ್ಚಿತ ಸಮಯದವರೆಗೆ’.

Verse 39

قَالَ رَبِّ بِمَآ أَغْوَيْتَنِى لَأُزَيِّنَنَّ لَهُمْ فِى ٱلْأَرْضِ وَلَأُغْوِيَنَّهُمْ أَجْمَعِينَ

Transliteration qāla rabbi bimā aghwaytanī la-uzayyinanna lahum fī l-arḍi wala-ugh'wiyannahum ajmaʿīna

Kannada ಅವನೆಂದನು, ‘ಓ ನನ್ನ ಪ್ರಭೂ, ನೀನು ನನ್ನನ್ನು ದಾರಿಗೆಡಿಸಿದಂತೆಯೇ ಭೂಮಿಯಲ್ಲಿ ಅವರಿಗೆ ನಾನು (ದುಷ್ಪøವರ್ತಿಗಳನ್ನು) ಅಲಂಕೃತವಾಗಿ ತೋರಿಸಿಕೊಡುವೆನು ಮತ್ತು ಅವರೆಲ್ಲರನ್ನೂ ನಾನು ದಾರಿಗೆಡಿಸಿಬಿಡುವೆನು ಖಂಡಿತ.

Verse 40

إِلَّا عِبَادَكَ مِنْهُمُ ٱلْمُخْلَصِينَ

Transliteration illā ʿibādaka min'humu l-mukh'laṣīna

Kannada ಅವರ ಪೈಕಿ ನಿನ್ನ ನಿಷ್ಕಂಳಕರಾದ ದಾಸರನ್ನು ಹೊರತು’ .

Verse 41

قَالَ هَـٰذَا صِرَٰطٌ عَلَىَّ مُسْتَقِيمٌ

Transliteration qāla hādhā ṣirāṭun ʿalayya mus'taqīmun

Kannada ಅವನು (ಅಲ್ಲಾಹು) ಹೇಳಿದನು; ‘ನೇರವಾಗಿ ನನ್ನನ್ನು ತಲಪುವ ಮಾರ್ಗವಿದು .

Verse 42

إِنَّ عِبَادِى لَيْسَ لَكَ عَلَيْهِمْ سُلْطَـٰنٌ إِلَّا مَنِ ٱتَّبَعَكَ مِنَ ٱلْغَاوِينَ

Transliteration inna ʿibādī laysa laka ʿalayhim sul'ṭānun illā mani ittabaʿaka mina l-ghāwīna

Kannada ನಿಶ್ಚಯವಾಗಿಯೂ ನನ್ನ (ನಿಷ್ಟಾವಂತ) ದಾಸರ ಮೇಲೆ ನಿನಗೆ ಅಧಿಕಾರವಿಲ್ಲ. ನಿನ್ನನ್ನು ಅನುಸರಿಸುವ ಪಥಭ್ರಷ್ಟರ ಮೇಲೆಯೇ ಹೊರತು.

Verse 43

وَإِنَّ جَهَنَّمَ لَمَوْعِدُهُمْ أَجْمَعِينَ

Transliteration wa-inna jahannama lamawʿiduhum ajmaʿīna

Kannada ನಿಶ್ಚಯವಾಗಿಯೂ ನರಕವು ಅವರೆಲ್ಲರಿಗೂ ನಿಶ್ಚಯಿಸಲಾದ ಸ್ಥಾನವಾಗಿದೆ’.

Verse 44

لَهَا سَبْعَةُ أَبْوَٰبٍ لِّكُلِّ بَابٍ مِّنْهُمْ جُزْءٌ مَّقْسُومٌ

Transliteration lahā sabʿatu abwābin likulli bābin min'hum juz'on maqsūmun

Kannada ಅದಕ್ಕೆ (ನರಕಕ್ಕೆ) ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೆ ನಿಗಧಿಪಡಿಸಲಾದ ಒಂದೊಂದು ವಿಭಾಗವಿದೆ.

Verse 45

إِنَّ ٱلْمُتَّقِينَ فِى جَنَّـٰتٍ وَعُيُونٍ

Transliteration inna l-mutaqīna fī jannātin waʿuyūnin

Kannada ಧರ್ಮನಿಷ್ಟರು ಉದ್ಯಾನಗಳಲ್ಲಿಯೂ ಚಿಲುಮೆ ಗಳಲ್ಲಿಯೂ ಇರುವರು.

Verse 46

ٱدْخُلُوهَا بِسَلَـٰمٍ ءَامِنِينَ

Transliteration ud'khulūhā bisalāmin āminīna

Kannada ನಿರ್ಭಯರಾಗಿ ಶಾಂತಿಯಿಂದ ಅದರಲ್ಲಿ ಪ್ರವೇಶಿಸಿರಿ (ಎಂದು ಅವರಿಗೆ ಹೇಳಲಾಗುವುದು.)

Verse 47

وَنَزَعْنَا مَا فِى صُدُورِهِم مِّنْ غِلٍّ إِخْوَٰنًا عَلَىٰ سُرُرٍ مُّتَقَـٰبِلِينَ

Transliteration wanazaʿnā mā fī ṣudūrihim min ghillin ikh'wānan ʿalā sururin mutaqābilīna

Kannada ಅವರ ಹೃದಯಗಳಿಂದ ವಿದ್ವೇಷವನ್ನು ನಾವು ತೆಗೆದುಬಿಡುವೆವು. ಅವರು ಪರಸ್ಪರ ಸಹೋದ ರರಾಗಿ ಅಭಿಮುಖರಾಗಿ ಆಸನಗಳಲ್ಲಿ ಕುಳಿತು ಕೊಳ್ಳುವರು.

Verse 48

لَا يَمَسُّهُمْ فِيهَا نَصَبٌ وَمَا هُم مِّنْهَا بِمُخْرَجِينَ

Transliteration lā yamassuhum fīhā naṣabun wamā hum min'hā bimukh'rajīna

Kannada ಅವರಿಗೆ ಅಲ್ಲಿ ಯಾವುದೇ ಕ್ಲೇಶ ತಟ್ಟದು. ಮತ್ತು ಅವರು ಅಲ್ಲಿಂದ ಹೊರಹಾಕಲ್ಪಡುವುದೂ ಇಲ್ಲ.

Verse 49

۞ نَبِّئْ عِبَادِىٓ أَنِّىٓ أَنَا ٱلْغَفُورُ ٱلرَّحِيمُ

Transliteration nabbi ʿibādī annī anā l-ghafūru l-raḥīmu

Kannada (ಓ ಪೈಗಂಬರರೇ,) ನಾನು ಮಹಾ ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತೇನೆಂದು ನನ್ನ ದಾಸರಿಗೆ ತಿಳಿಸಿಬಿಡಿರಿ.

Verse 50

وَأَنَّ عَذَابِى هُوَ ٱلْعَذَابُ ٱلْأَلِيمُ

Transliteration wa-anna ʿadhābī huwa l-ʿadhābu l-alīmu

Kannada ನನ್ನ ಶಿಕ್ಷೆಯೂ ಅತ್ಯಂತ ವೇದನಾಯುಕ್ತ ವಾಗಿದೆ. (ಎಂದೂ ತಿಳಿಸಿಬಿಡಿರಿ).

Verse 51

وَنَبِّئْهُمْ عَن ضَيْفِ إِبْرَٰهِيمَ

Transliteration wanabbi'hum ʿan ḍayfi ib'rāhīma

Kannada ಅವರಿಗೆ ಇಬ್‍ರಾಹೀಮರ ಅತಿಥಿಗಳ ವೃತ್ತಾಂತವನ್ನೂ ತಿಳಿಸಿರಿ.

Verse 52

إِذْ دَخَلُوا۟ عَلَيْهِ فَقَالُوا۟ سَلَـٰمًا قَالَ إِنَّا مِنكُمْ وَجِلُونَ

Transliteration idh dakhalū ʿalayhi faqālū salāman qāla innā minkum wajilūna

Kannada ಅವರು ಇವರ ಬಳಿ ಬಂದು, ‘ಸಲಾಮ್ (ನಿಮಗೆ ಶಾಂತಿ ಇರಲಿ)’ ಎಂದರು. ಆಗ ಇವರು, ‘ನಾವು ನಿಮ್ಮ ಬಗ್ಗೆ ಹೆದರಿದ್ದೇವೆ’ ಎಂದರು.

Verse 53

قَالُوا۟ لَا تَوْجَلْ إِنَّا نُبَشِّرُكَ بِغُلَـٰمٍ عَلِيمٍ

Transliteration qālū lā tawjal innā nubashiruka bighulāmin ʿalīmin

Kannada ಆಗ ಅವರು, ಹೆದರಬೇಡಿರಿ, ನಾವು ನಿಮಗೆ ಓರ್ವ ಜ್ಞಾನಿಯಾದ ಪುತ್ರನ ಸುವಾರ್ತೆ ನೀಡುತ್ತೇವೆ’. ಎಂದರು.

Verse 54

قَالَ أَبَشَّرْتُمُونِى عَلَىٰٓ أَن مَّسَّنِىَ ٱلْكِبَرُ فَبِمَ تُبَشِّرُونَ

Transliteration qāla abashartumūnī ʿalā an massaniya l-kibaru fabima tubashirūna

Kannada ‘ನನಗೆ ವೃದ್ಧಾಪ್ಯ ತಟ್ಟಿದ ಮೇಲೆ ನೀವು ನನಗೆ ಸುವಾರ್ತೆ ನೀಡುತ್ತೀರಾ? ನೀವು ಯಾವುದರ ಬಗ್ಗೆ ಸುವಾರ್ತೆ ನೀಡುತ್ತಿರುವಿರಿ’ ಎಂದು ಇಬ್ರಾಹೀಮರು ಹೇಳಿದರು.

Verse 55

قَالُوا۟ بَشَّرْنَـٰكَ بِٱلْحَقِّ فَلَا تَكُن مِّنَ ٱلْقَـٰنِطِينَ

Transliteration qālū basharnāka bil-ḥaqi falā takun mina l-qāniṭīna

Kannada ಆಗ ಅವರು, ಹೇಳಿದರು; ‘ನಾವು ನಿಮಗೆ ಸತ್ಯವಾದ ಸುವಾರ್ತೆಯನ್ನೇ ನೀಡುತ್ತಿದ್ದೇವೆ. ನೀವು ನಿರಾಶರಲ್ಲಿ ಸೇರಬೇಡಿರಿ.

Verse 56

قَالَ وَمَن يَقْنَطُ مِن رَّحْمَةِ رَبِّهِۦٓ إِلَّا ٱلضَّآلُّونَ

Transliteration qāla waman yaqnaṭu min raḥmati rabbihi illā l-ḍālūna

Kannada ‘ತಮ್ಮ ಪ್ರಭುವಿನ ಕಾರುಣ್ಯದ ಬಗ್ಗೆ ಪಥ ಭ್ರಷ್ಟರಲ್ಲದೆ ಯಾರು ನಿರಾಶರಾಗುತ್ತಾರೆ’ ಎಂದು ಇಬ್ರಾಹೀಮರು ಹೇಳಿದರು.

Verse 57

قَالَ فَمَا خَطْبُكُمْ أَيُّهَا ٱلْمُرْسَلُونَ

Transliteration qāla famā khaṭbukum ayyuhā l-mur'salūna

Kannada ‘ಓ ದೇವದೂತರೇ, ನಿಮ್ಮ (ಮುಖ್ಯ) ವಿಷಯವೇನು?’ ಎಂದು ಕೇಳಿದರು.

Verse 58

قَالُوٓا۟ إِنَّآ أُرْسِلْنَآ إِلَىٰ قَوْمٍ مُّجْرِمِينَ

Transliteration qālū innā ur'sil'nā ilā qawmin muj'rimīna

Kannada ಅವರು, ಹೇಳಿದರು; ‘ನಾವು ಒಂದು ಅಪರಾಧಿ ಜನಾಂಗದ ಕಡೆಗೆ ಕಳುಹಿಸಲ್ಪಟ್ಟಿದ್ದೇವೆ.

Verse 59

إِلَّآ ءَالَ لُوطٍ إِنَّا لَمُنَجُّوهُمْ أَجْمَعِينَ

Transliteration illā āla lūṭin innā lamunajjūhum ajmaʿīna

Kannada ಆದರೆ `ಲೂಥ’ರ ಕುಟುಂಬದವರು ಇದಕ್ಕೆ ಹೊರ ತಾಗಿದ್ದಾರೆ. ಅವರೆಲ್ಲರನ್ನೂ ನಾವು ರಕ್ಷಿಸುವೆವು.

Verse 60

إِلَّا ٱمْرَأَتَهُۥ قَدَّرْنَآ ۙ إِنَّهَا لَمِنَ ٱلْغَـٰبِرِينَ

Transliteration illā im'ra-atahu qaddarnā innahā lamina l-ghābirīna

Kannada `ಲೂಥ’ರ ಪತ್ನಿಯ ಹೊರತು; ಆಕೆ ನಾಶಕ್ಕೀಡಾಗುವವರಲ್ಲಿ ಸೇರಿದವಳೆಂದು ನಾವು ಲೆಕ್ಕ ಹಾಕಿದ್ದೇವೆ’ ಎಂದರು.

Verse 61

فَلَمَّا جَآءَ ءَالَ لُوطٍ ٱلْمُرْسَلُونَ

Transliteration falammā jāa āla lūṭin l-mur'salūna

Kannada ಅನಂತರ ಆ ದೂತರು ಲೂಥರ ಕುಟುಂಬದಲ್ಲಿಗೆ ತಲಪಿದಾಗ

Verse 62

قَالَ إِنَّكُمْ قَوْمٌ مُّنكَرُونَ

Transliteration qāla innakum qawmun munkarūna

Kannada ‘ನೀವು ನನಗೆ ಅಪರಿಚಿತರಾಗಿ ತೋರುತ್ತೀರಿ’ ಎಂದು ಅವರು ಹೇಳಿದರು.

Verse 63

قَالُوا۟ بَلْ جِئْنَـٰكَ بِمَا كَانُوا۟ فِيهِ يَمْتَرُونَ

Transliteration qālū bal ji'nāka bimā kānū fīhi yamtarūna

Kannada ಆಗ ಅವರು, (ದೂತರು) ಹೇಳಿದರು; ‘ಅಲ್ಲ, ಯಾವುದರ ಬಗ್ಗೆ ಇವರು (ಜನರು) ಸಂದೇಹ ಪಡುತ್ತಿದ್ದರೋ ಅದನ್ನು ವಹಿಸಿಕೊಂಡು ನಾವು ನಿಮ್ಮ ಬಳಿಗೆ ಬಂದಿದ್ದೇವೆ.

Verse 64

وَأَتَيْنَـٰكَ بِٱلْحَقِّ وَإِنَّا لَصَـٰدِقُونَ

Transliteration wa-ataynāka bil-ḥaqi wa-innā laṣādiqūna

Kannada ನಾವು ಸತ್ಯಸಹಿತ ನಿಮ್ಮ ಬಳಿಗೆ ಬಂದಿರುತ್ತೇವೆ ಮತ್ತು ನಾವು ಸತ್ಯವನ್ನೇ ಹೇಳುತ್ತೇವೆ.

Verse 65

فَأَسْرِ بِأَهْلِكَ بِقِطْعٍ مِّنَ ٱلَّيْلِ وَٱتَّبِعْ أَدْبَـٰرَهُمْ وَلَا يَلْتَفِتْ مِنكُمْ أَحَدٌ وَٱمْضُوا۟ حَيْثُ تُؤْمَرُونَ

Transliteration fa-asri bi-ahlika biqiṭ'ʿin mina al-layli wa-ittabiʿ adbārahum walā yaltafit minkum aḥadun wa-im'ḍū ḥaythu tu'marūna

Kannada ಆದುದರಿಂದ ನೀವು ರಾತ್ರಿಯಿಂದ ಸ್ವಲ್ಪ ಉಳಿದಿರುವಾಗಲೇ ನಿಮ್ಮ ಕುಟುಂಬವನ್ನು ಕರಕೊಂಡು ಹೊರಟು ಹೋಗಿರಿ ಮತ್ತು ನೀವು ಅವರ ಹಿಂದೆಯೇ ಅನುಗಮಿಸಿರಿ. ನಿಮ್ಮ ಪೈಕಿ ಯಾರೂ ಹಿಂತಿರುಗಿ ನೋಡಬಾರದು. ನಿಮಗೆ ಆಜ್ಞಾಪಿಸಲಾದ ಭಾಗಕ್ಕೆ ನೇರವಾಗಿ ಸಾಗಿರಿ’. ಎಂದು ಹೇಳಿದರು.

Verse 66

وَقَضَيْنَآ إِلَيْهِ ذَٰلِكَ ٱلْأَمْرَ أَنَّ دَابِرَ هَـٰٓؤُلَآءِ مَقْطُوعٌ مُّصْبِحِينَ

Transliteration waqaḍaynā ilayhi dhālika l-amra anna dābira hāulāi maqṭūʿun muṣ'biḥīna

Kannada ಆ ಕಾರ್ಯ ಅಂದರೆ ಬೆಳಗಾಗುವುದರೊಳಗಾಗಿ ಈ ಮಂದಿಗಳ ಬುಡವನ್ನೇ ಕಿತ್ತೊಗೆಯಲಾಗುವುದೆಂಬ ಕಾರ್ಯವನ್ನು ನಾವು ಅವರಿಗೆ ನಿಖರವಾಗಿ ತಿಳಿಸಿಬಿಟ್ಟೆವು.

Verse 67

وَجَآءَ أَهْلُ ٱلْمَدِينَةِ يَسْتَبْشِرُونَ

Transliteration wajāa ahlu l-madīnati yastabshirūna

Kannada ನಗರದವರು ಸಂತೋಷದಿಂದ ಲೂಥರ ಮನೆಗೆ ಧಾವಿಸಿ ಬಂದರು.

Verse 68

قَالَ إِنَّ هَـٰٓؤُلَآءِ ضَيْفِى فَلَا تَفْضَحُونِ

Transliteration qāla inna hāulāi ḍayfī falā tafḍaḥūni

Kannada ಲೂಥರು ಹೇಳಿದರು, ‘ಇವರು ನನ್ನ ಅತಿಥಿಗಳು, ನನ್ನನ್ನು ಅವಮಾನಿಸಬೇಡಿರಿ.

Verse 69

وَٱتَّقُوا۟ ٱللَّهَ وَلَا تُخْزُونِ

Transliteration wa-ittaqū l-laha walā tukh'zūni

Kannada ಅಲ್ಲಾಹನನ್ನು ಭಯಪಡಿರಿ, ನನ್ನನ್ನು ನಿಂದಿಸಬೇಡಿರಿ’.

Verse 70

قَالُوٓا۟ أَوَلَمْ نَنْهَكَ عَنِ ٱلْعَـٰلَمِينَ

Transliteration qālū awalam nanhaka ʿani l-ʿālamīna

Kannada ಆಗ ಅವರು, ‘ಜನರಿಗೆ ಆತಿಥ್ಯ ನೀಡಬಾರದು ಎಂದು ನಾವು ನಿಮ್ಮನ್ನು ತಡೆ ಹೇರಿಲ್ಲವೇ?’ ಎಂದು ಕೇಳಿದರು.

Verse 71

قَالَ هَـٰٓؤُلَآءِ بَنَاتِىٓ إِن كُنتُمْ فَـٰعِلِينَ

Transliteration qāla hāulāi banātī in kuntum fāʿilīna

Kannada ಲೂಥರು ಹೇಳಿದರು: ‘ಇದೋ ನನ್ನ ಪುತ್ರಿಯರು. ನೀವು ಆಸೆ ತೀರಿಸುವವರಾಗಿದ್ದರೆ (ಅವರನ್ನು ಮದುವೆಯಾಗಬಹುದಲ್ಲ?).

Verse 72

لَعَمْرُكَ إِنَّهُمْ لَفِى سَكْرَتِهِمْ يَعْمَهُونَ

Transliteration laʿamruka innahum lafī sakratihim yaʿmahūna

Kannada ನಿಮ್ಮ ಜೀವದಾಣೆ! ಆಗ ಆ ಜನರುಮದೋ ನ್ಮತ್ತರಾಗಿ ಮೈಮರೆತಿದ್ದರು.

Verse 73

فَأَخَذَتْهُمُ ٱلصَّيْحَةُ مُشْرِقِينَ

Transliteration fa-akhadhathumu l-ṣayḥatu mush'riqīna

Kannada ಹಾಗೆ ಸೂರ್ಯೋದಯದ ಹೊತ್ತಲ್ಲಿ ಉಷಃಕಾಲವಾದೊಡನೆ ಒಂದು ಘೋರ ಶಬ್ದವು ಅವರನ್ನು ಹಿಡಿಯಿತು.

Verse 74

فَجَعَلْنَا عَـٰلِيَهَا سَافِلَهَا وَأَمْطَرْنَا عَلَيْهِمْ حِجَارَةً مِّن سِجِّيلٍ

Transliteration fajaʿalnā ʿāliyahā sāfilahā wa-amṭarnā ʿalayhim ḥijāratan min sijjīlin

Kannada ಹಾಗೆ ನಾವು ಆ ನಾಡನ್ನು ಬುಡಮೇಲು ಮಾಡಿ ಬಿಟ್ಟೆವು ಮತ್ತು ಅವರ ಮೇಲೆ ಸುಡುಮಣ್ಣಿನ ಕಲ್ಲುಗಳ ಮಳೆಗರೆದೆವು.

Verse 75

إِنَّ فِى ذَٰلِكَ لَـَٔايَـٰتٍ لِّلْمُتَوَسِّمِينَ

Transliteration inna fī dhālika laāyātin lil'mutawassimīna

Kannada ವಿಚಾರಶೀಲರಿಗೆ ಅದರಲ್ಲಿ ಅನೇಕ ನಿದರ್ಶನಗಳಿವೆ.

Verse 76

وَإِنَّهَا لَبِسَبِيلٍ مُّقِيمٍ

Transliteration wa-innahā labisabīlin muqīmin

Kannada ಅದು (ಆ ಪ್ರದೇಶವು) (ಇಂದಿಗೂ) ನೆಲೆನಿಂತಿರುವ ಒಂದು ಮಾರ್ಗದಲ್ಲೇ ಇದೆ.

Verse 77

إِنَّ فِى ذَٰلِكَ لَـَٔايَةً لِّلْمُؤْمِنِينَ

Transliteration inna fī dhālika laāyatan lil'mu'minīna

Kannada ಇದರಲ್ಲಿ ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಿಗೆ ಒಂದು ನಿದರ್ಶನವಿದೆ.

Verse 78

وَإِن كَانَ أَصْحَـٰبُ ٱلْأَيْكَةِ لَظَـٰلِمِينَ

Transliteration wa-in kāna aṣḥābu l-aykati laẓālimīna

Kannada ಐಕಃದ ಜನರು ಅಕ್ರಮಿಗಳಾಗಿದ್ದರು.

Verse 79

فَٱنتَقَمْنَا مِنْهُمْ وَإِنَّهُمَا لَبِإِمَامٍ مُّبِينٍ

Transliteration fa-intaqamnā min'hum wa-innahumā labi-imāmin mubīnin

Kannada ನಾವು ಅವರ ಮೇಲೆ ಶಿಸ್ತುಕ್ರಮ ಕೈಗೊಂಡೆವು. ಈ ಎರಡೂ ಪ್ರದೇಶವೂ ತೆರೆದ ಮಾರ್ಗದಲ್ಲೇ ಇವೆ .

Verse 80

وَلَقَدْ كَذَّبَ أَصْحَـٰبُ ٱلْحِجْرِ ٱلْمُرْسَلِينَ

Transliteration walaqad kadhaba aṣḥābu l-ḥij'ri l-mur'salīna

Kannada ಖಂಡಿತ ಹಿಜ್ರ್‍ನವರೂ ಸಂದೇಶವಾಹಕರನ್ನು ಸುಳ್ಳಾಗಿಸಿದ್ದರು.

Verse 81

وَءَاتَيْنَـٰهُمْ ءَايَـٰتِنَا فَكَانُوا۟ عَنْهَا مُعْرِضِينَ

Transliteration waātaynāhum āyātinā fakānū ʿanhā muʿ'riḍīna

Kannada ನಮ್ಮ ನಿದರ್ಶನಗಳನ್ನು ಅವರಿಗೆ ನಾವು ನೀಡಿದೆವು. ಆದರೆ ಅವರು ಅವೆಲ್ಲವನ್ನೂ ಅವಗಣಿಸುತ್ತಿದ್ದರು.

Verse 82

وَكَانُوا۟ يَنْحِتُونَ مِنَ ٱلْجِبَالِ بُيُوتًا ءَامِنِينَ

Transliteration wakānū yanḥitūna mina l-jibāli buyūtan āminīna

Kannada ಅವರು ಪರ್ವತಗಳಿಂದ ಬಂಡೆಗಳನ್ನು ಕೊರೆದು ಮನೆಗಳನ್ನು ಮಾಡಿ ನಿರ್ಭಯರಾಗಿ ಕಳೆಯುತ್ತಿದ್ದರು.

Verse 83

فَأَخَذَتْهُمُ ٱلصَّيْحَةُ مُصْبِحِينَ

Transliteration fa-akhadhathumu l-ṣayḥatu muṣ'biḥīna

Kannada ಹೀಗಿರುತ್ತ ಬೆಳಗಾಗುತ್ತಲೇ ಒಂದು ಪ್ರಚಂಡ ಶಬ್ಧವು ಅವರನ್ನು ಹಿಡಿದು ಬಿಟ್ಟಿತು.

Verse 84

فَمَآ أَغْنَىٰ عَنْهُم مَّا كَانُوا۟ يَكْسِبُونَ

Transliteration famā aghnā ʿanhum mā kānū yaksibūna

Kannada ಅವರ ಸಂಪಾದನೆಯು ಅವರ ಉಪಯೋಗಕ್ಕೆ ಬರಲಿಲ್ಲ.

Verse 85

وَمَا خَلَقْنَا ٱلسَّمَـٰوَٰتِ وَٱلْأَرْضَ وَمَا بَيْنَهُمَآ إِلَّا بِٱلْحَقِّ ۗ وَإِنَّ ٱلسَّاعَةَ لَـَٔاتِيَةٌ ۖ فَٱصْفَحِ ٱلصَّفْحَ ٱلْجَمِيلَ

Transliteration wamā khalaqnā l-samāwāti wal-arḍa wamā baynahumā illā bil-ḥaqi wa-inna l-sāʿata laātiyatun fa-iṣ'faḥi l-ṣafḥa l-jamīla

Kannada ಭೂಮಿ-ಆಕಾಶಗಳನ್ನೂ ಅವುಗಳ ನಡುವೆ ಇರು ವುದೆಲ್ಲವನ್ನೂ ನಾವು ವ್ಯರ್ಥವಾಗಿ ಸೃಷ್ಟಿಸಲಿಲ್ಲ ಮತ್ತು ಅಂತ್ಯ ಘಳಿಗೆಯೂ ಖಂಡಿತ ಬರಲಿದೆ. ಆದುದರಿಂದ ಓ ಪೈಗಂಬರರೇ, ಅವರ ಬಗ್ಗೆ ನೀವು ನಿರ್ಲಿಪ್ತರಾಗಿ ನಿರ್ಲಕ್ಯವಹಿಸಿರಿ.

Verse 86

إِنَّ رَبَّكَ هُوَ ٱلْخَلَّـٰقُ ٱلْعَلِيمُ

Transliteration inna rabbaka huwa l-khalāqu l-ʿalīmu

Kannada ನಿಶ್ಚಯವಾಗಿಯೂ ನಿಮ್ಮ ಪ್ರಭು ಎಲ್ಲರ ಸೃಷ್ಟಿ ಕರ್ತನೂ ಸರ್ವಜ್ಞನೂ ಆಗಿರುತ್ತಾನೆ.

Verse 87

وَلَقَدْ ءَاتَيْنَـٰكَ سَبْعًا مِّنَ ٱلْمَثَانِى وَٱلْقُرْءَانَ ٱلْعَظِيمَ

Transliteration walaqad ātaynāka sabʿan mina l-mathānī wal-qur'āna l-ʿaẓīma

Kannada ಪುನರಾವರ್ತಿಸಲ್ಪಡುವ ಸಪ್ತ ಸೂಕ್ತಗಳನ್ನೂ ಮಹತ್ತಾದ ಖುರ್‍ಆನನ್ನೂ ನಾವು ನಿಮಗೆ ದಯಪಾಲಿಸಿದ್ದೇವೆ.

Verse 88

لَا تَمُدَّنَّ عَيْنَيْكَ إِلَىٰ مَا مَتَّعْنَا بِهِۦٓ أَزْوَٰجًا مِّنْهُمْ وَلَا تَحْزَنْ عَلَيْهِمْ وَٱخْفِضْ جَنَاحَكَ لِلْمُؤْمِنِينَ

Transliteration lā tamuddanna ʿaynayka ilā mā mattaʿnā bihi azwājan min'hum walā taḥzan ʿalayhim wa-ikh'fiḍ janāḥaka lil'mu'minīna

Kannada ಅವರ (ಅವಿಶ್ವಾಸಿಗಳ)ಲ್ಲಿರುವ ಜನರಿಗೆ ಅನೇಕ ವಿಧಗಳಲ್ಲಿ ನಾವು ಕೊಟ್ಟಿರುವ ಲೌಕಿಕ ಸುಖ ಭೋಗಗಳ ಕಡೆಗೆ ನೀವು ಕಣ್ಣೆತ್ತಿ ನೋಡಬೇಡಿರಿ ಮತ್ತು ಅವರಿಗಾಗಿ ವ್ಯಾಕುಲಗೊಳ್ಳದಿರಿ. ಸತ್ಯ ವಿಶ್ವಾಸಿಗಳಿಗೆ ನೀವು ವಿನಯಾನ್ವಿತರಾಗಿರಿ.

Verse 89

وَقُلْ إِنِّىٓ أَنَا ٱلنَّذِيرُ ٱلْمُبِينُ

Transliteration waqul innī anā l-nadhīru l-mubīnu

Kannada ನಾನು ಸುಸ್ಪಷ್ಟವಾಗಿ ಎಚ್ಚರಿಕೆ ನೀಡುವವನು ಎಂದು ಹೇಳಿರಿ.

Verse 90

كَمَآ أَنزَلْنَا عَلَى ٱلْمُقْتَسِمِينَ

Transliteration kamā anzalnā ʿalā l-muq'tasimīna

Kannada ವಿಂಗಡನೆಗಾರರ ಮೇಲೆ ನಾವು ಕಳುಹಿಸಿದ್ದಂತೆ.

Verse 91

ٱلَّذِينَ جَعَلُوا۟ ٱلْقُرْءَانَ عِضِينَ

Transliteration alladhīna jaʿalū l-qur'āna ʿiḍīna

Kannada ಅಂದರೆ ಖುರ್‍ಆನನ್ನು ವಿಭಿನ್ನ ಭಾಗಗಳಾಗಿ ಮಾರ್ಪಡಿಸಿದವರ ಮೇಲೆ.

Verse 92

فَوَرَبِّكَ لَنَسْـَٔلَنَّهُمْ أَجْمَعِينَ

Transliteration fawarabbika lanasalannahum ajmaʿīna

Kannada ನಿಮ್ಮ ಪ್ರಭುವಿನಾಣೆ! ನಾವು ಅವರೆಲ್ಲರೊಡನೆ ವಿಚಾರಿಸಿಯೇ ತೀರುವೆವು.

Verse 93

عَمَّا كَانُوا۟ يَعْمَلُونَ

Transliteration ʿammā kānū yaʿmalūna

Kannada ಅವರು ಮಾಡುತ್ತಲಿದ್ದ ಕರ್ಮದ ಬಗ್ಗೆ.

Verse 94

فَٱصْدَعْ بِمَا تُؤْمَرُ وَأَعْرِضْ عَنِ ٱلْمُشْرِكِينَ

Transliteration fa-iṣ'daʿ bimā tu'maru wa-aʿriḍ ʿani l-mush'rikīna

Kannada ಆದುದರಿಂದ (ಓ ಪೈಗಂಬರರೇ,) ನಿಮಗೆ ಆಜ್ಞಾ ಪಿಸಲಾಗುತ್ತಿರುವ ಆದೇಶಗಳನ್ನು ಘಂಟಾ ಘೋಷವಾಗಿ ಸಾರಿ ಬಿಡಿರಿ ಮತ್ತು ಬಹುದೇವ ವಿಶ್ವಾಸಿಗಳನ್ನು ಅವಗಣಿಸಿರಿ.

Verse 95

إِنَّا كَفَيْنَـٰكَ ٱلْمُسْتَهْزِءِينَ

Transliteration innā kafaynāka l-mus'tahziīna

Kannada ಪರಿಹಾಸ್ಯ ಮಾಡುವವರಿಂದ ನಿಮ್ಮನ್ನು ರಕ್ಷಿಸಲು ನಾವು ಸಾಕು.

Verse 96

ٱلَّذِينَ يَجْعَلُونَ مَعَ ٱللَّهِ إِلَـٰهًا ءَاخَرَ ۚ فَسَوْفَ يَعْلَمُونَ

Transliteration alladhīna yajʿalūna maʿa l-lahi ilāhan ākhara fasawfa yaʿlamūna

Kannada ಅಲ್ಲಾಹನೊಂದಿಗೆ ಬೇರೆ ದೇವರನ್ನು ಸ್ಥಾಪಿಸುವವರವರು. ಮುಂದೆ ಅವರಿಗೆ ಗೊತ್ತಾಗಲಿದೆ.

Verse 97

وَلَقَدْ نَعْلَمُ أَنَّكَ يَضِيقُ صَدْرُكَ بِمَا يَقُولُونَ

Transliteration walaqad naʿlamu annaka yaḍīqu ṣadruka bimā yaqūlūna

Kannada ಅವರಾಡುತ್ತಿರುವ (ಸುಳ್ಳು ಹಾಗೂ ಅಪಹಾಸ್ಯದ) ಮಾತುಗಳಿಂದ ನಿಮ್ಮ ಎದೆ ಇಕ್ಕಟ್ಟಾಗುತ್ತಿದೆಯೆಂಬುದನ್ನು ನಾವು ಬಲ್ಲೆವು.

Verse 98

فَسَبِّحْ بِحَمْدِ رَبِّكَ وَكُن مِّنَ ٱلسَّـٰجِدِينَ

Transliteration fasabbiḥ biḥamdi rabbika wakun mina l-sājidīna

Kannada ನಿಮ್ಮ ಪ್ರಭುವಿನ ಕೀರ್ತನೆಯೊಂದಿಗೆ ಅವನನ್ನು ಸ್ತುತಿಸಿರಿ. ಸಾಷ್ಟಾಂಗವೆರಗುವವರಲ್ಲಿ ಸೇರಿರಿ.

Verse 99

وَٱعْبُدْ رَبَّكَ حَتَّىٰ يَأْتِيَكَ ٱلْيَقِينُ

Transliteration wa-uʿ'bud rabbaka ḥattā yatiyaka l-yaqīnu

Kannada ಖಚಿತವಾದ ಕಾರ್ಯ (ಮರಣ) ನಿಮಗೆ ಬರುವ ವರೆಗೂ ನೀವು ನಿಮ್ಮ ಪ್ರಭುವಿಗೆ ಆರಾಧಿಸಿರಿ.

Read Surah Al-Hijr in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.