Surah Al-Furqan in Kannada: translation and audio
Surah 25 · الفرقان · The Criterion · 77 verses
Surah Al-Furqan verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Furqan word by word in English.
Verse 1
تَبَارَكَ ٱلَّذِى نَزَّلَ ٱلْفُرْقَانَ عَلَىٰ عَبْدِهِۦ لِيَكُونَ لِلْعَـٰلَمِينَ نَذِيرًا
Transliteration tabāraka alladhī nazzala l-fur'qāna ʿalā ʿabdihi liyakūna lil'ʿālamīna nadhīran
Kannada ಸಮಸ್ತ ಜಗತ್ತಿನವರಿಗೆ ಎಚ್ಚರಿಕೆಗಾರನಾಗಲಿಕ್ಕಾಗಿ ತನ್ನ ದಾಸನ ಮೇಲೆ ಸತ್ಯಾಸತ್ಯವನ್ನು ಬೇರ್ಪಡಿಸಿ ತೋರಿಸುವ ವೇದಗ್ರಂಥವನ್ನು ಅವತೀರ್ಣಗೊಳಿಸಿದವನು ಪರಮಸುಮಂಗಲನು.
Verse 2
ٱلَّذِى لَهُۥ مُلْكُ ٱلسَّمَـٰوَٰتِ وَٱلْأَرْضِ وَلَمْ يَتَّخِذْ وَلَدًا وَلَمْ يَكُن لَّهُۥ شَرِيكٌ فِى ٱلْمُلْكِ وَخَلَقَ كُلَّ شَىْءٍ فَقَدَّرَهُۥ تَقْدِيرًا
Transliteration alladhī lahu mul'ku l-samāwāti wal-arḍi walam yattakhidh waladan walam yakun lahu sharīkun fī l-mul'ki wakhalaqa kulla shayin faqaddarahu taqdīran
Kannada ಅವನಿಗೆ ಭೂಮಿ-ಆಕಾಶಗಳ ಪ್ರಭುತ್ವವಿದೆ. ಅವನು ಪುತ್ರನನ್ನು ಉಂಟುಮಾಡಿಲ್ಲ. ಪ್ರಭುತ್ವದಲ್ಲಿ ಅವನಿಗೆ ಯಾರೂ ಸಹಭಾಗಿ ಇಲ್ಲ. ಅವನು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿದನು. ನಂತರ ಅದಕ್ಕೊಂದು ವಿಧಿ ನಿಯಮವನ್ನು ನಿಶ್ಚಯಿಸಿದನು.
Verse 3
وَٱتَّخَذُوا۟ مِن دُونِهِۦٓ ءَالِهَةً لَّا يَخْلُقُونَ شَيْـًٔا وَهُمْ يُخْلَقُونَ وَلَا يَمْلِكُونَ لِأَنفُسِهِمْ ضَرًّا وَلَا نَفْعًا وَلَا يَمْلِكُونَ مَوْتًا وَلَا حَيَوٰةً وَلَا نُشُورًا
Transliteration wa-ittakhadhū min dūnihi ālihatan lā yakhluqūna shayan wahum yukh'laqūna walā yamlikūna li-anfusihim ḍarran walā nafʿan walā yamlikūna mawtan walā ḥayatan walā nushūran
Kannada ಅವರು ಅವನನ್ನು ಬಿಟ್ಟು, ಇತರರನ್ನು ಆರಾಧ್ಯರನ್ನಾಗಿ ಮಾಡಿದರು. ಅವರು ಯಾವ ವಸ್ತುವನ್ನೂ ಸೃಷ್ಟಿಸಲಿಲ್ಲ. ಪರಂತು ಅವರೇ ಸೃಷ್ಟಿಸಲ್ಪಟ್ಟವರು. ಅವರು ಸ್ವತಃ ತಮಗೂ ಯಾವುದೇ ಲಾಭ ಅಥವಾ ಹಾನಿಯನ್ನುಂಟು ಮಾಡುವ ಒಡೆತನ ಹೊಂದಿಲ್ಲ. ಸಾವನ್ನಾಗಲಿ, ಬದುಕನ್ನಾಗಲಿ ಪುನರ್ಜೀವನವನ್ನಾಗಲಿ ಅವರು ಅಧೀನಗೊಳಿಸಿಲ್ಲ .
Verse 4
وَقَالَ ٱلَّذِينَ كَفَرُوٓا۟ إِنْ هَـٰذَآ إِلَّآ إِفْكٌ ٱفْتَرَىٰهُ وَأَعَانَهُۥ عَلَيْهِ قَوْمٌ ءَاخَرُونَ ۖ فَقَدْ جَآءُو ظُلْمًا وَزُورًا
Transliteration waqāla alladhīna kafarū in hādhā illā if'kun if'tarāhu wa-aʿānahu ʿalayhi qawmun ākharūna faqad jāū ẓul'man wazūran
Kannada ಸತ್ಯನಿಷೇಧಿಗಳು “ಇದು (ಖುರ್‍ಆನ್) ಇವನೇ ಸ್ವಂತವಾಗಿ ನಿರ್ಮಿಸಿದ ಸುಳ್ಳು ಸೃಷ್ಟಿಯಾಗಿದ್ದು, ಬೇರೆ ಕೆಲವರು ಈ ಕಾರ್ಯದಲ್ಲಿ ಇವನಿಗೆ ಸಹಾ ಯ ಮಾಡಿದ್ದಾರೆ” ಎಂದರು. ಇವರು ದೊಡ್ಡ ಅಕ್ರಮ ಹಾಗೂ ಹಸಿ ಸುಳ್ಳನ್ನೇ ತಂದಿದ್ದಾರೆ.
Verse 5
وَقَالُوٓا۟ أَسَـٰطِيرُ ٱلْأَوَّلِينَ ٱكْتَتَبَهَا فَهِىَ تُمْلَىٰ عَلَيْهِ بُكْرَةً وَأَصِيلًا
Transliteration waqālū asāṭīru l-awalīna ik'tatabahā fahiya tum'lā ʿalayhi buk'ratan wa-aṣīlan
Kannada “ಇವು ಹಳೆಯ ಕಾಲದವರ ಕಟ್ಟು ಕಥೆಗಳು. ಅದನ್ನು ಇವನು ಬರೆಯಿಸಿಕೊಳ್ಳುತ್ತಿದ್ದು ಬೆಳಗು ಬೈಗುಗಳಲ್ಲಿ ಅವನಿಗೆ ಅದನ್ನು ಓದಿ ಕೇಳಿಸಲಾ ಗುತ್ತದೆ” ಎಂದೂ ಅವರು ಹೇಳಿದರು.
Verse 6
قُلْ أَنزَلَهُ ٱلَّذِى يَعْلَمُ ٱلسِّرَّ فِى ٱلسَّمَـٰوَٰتِ وَٱلْأَرْضِ ۚ إِنَّهُۥ كَانَ غَفُورًا رَّحِيمًا
Transliteration qul anzalahu alladhī yaʿlamu l-sira fī l-samāwāti wal-arḍi innahu kāna ghafūran raḥīman
Kannada (ಪೈಗಂಬರರೇ) ಹೇಳಿರಿ, “ಭೂಮಿ-ಆಕಾಶಗಳ ರಹಸ್ಯವನ್ನು ಅರಿಯುವವನೇ ಇದನ್ನು (ಖುರ್ ಆನನ್ನು) ಅವತೀರ್ಣಗೊಳಿಸಿದ್ದಾನೆ” ಖಂಡಿತ ಅವನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.
Verse 7
وَقَالُوا۟ مَالِ هَـٰذَا ٱلرَّسُولِ يَأْكُلُ ٱلطَّعَامَ وَيَمْشِى فِى ٱلْأَسْوَاقِ ۙ لَوْلَآ أُنزِلَ إِلَيْهِ مَلَكٌ فَيَكُونَ مَعَهُۥ نَذِيرًا
Transliteration waqālū māli hādhā l-rasūli yakulu l-ṭaʿāma wayamshī fī l-aswāqi lawlā unzila ilayhi malakun fayakūna maʿahu nadhīran
Kannada ಅವರು ಹೇಳಿದರು, “ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ಸಂಚರಿಸುವ ಈ ಪ್ರವಾದಿಗೆ ಏನಾಗಿದೆ? ಇವನ ಜೊತೆಗೆ ಒಬ್ಬ ತಾಕೀತುಗಾರನಾಗ ಬಲ್ಲ ಒಬ್ಬ ದೇವಚರನನ್ನೇಕೆ ಇವನ ಬಳಿಗೆ ಕಳುಹಿಸಲಾಗಿಲ್ಲ?
Verse 8
أَوْ يُلْقَىٰٓ إِلَيْهِ كَنزٌ أَوْ تَكُونُ لَهُۥ جَنَّةٌ يَأْكُلُ مِنْهَا ۚ وَقَالَ ٱلظَّـٰلِمُونَ إِن تَتَّبِعُونَ إِلَّا رَجُلًا مَّسْحُورًا
Transliteration aw yul'qā ilayhi kanzun aw takūnu lahu jannatun yakulu min'hā waqāla l-ẓālimūna in tattabiʿūna illā rajulan masḥūran
Kannada ಅಥವಾ ಈತನ ಬಳಿಗೆ ಒಂದು ನಿಧಿಯನ್ನೇಕೆ ಇಡಲಾಗಿಲ್ಲ. ತನಗೆ ತಿನ್ನಲಿಕ್ಕಾಗಿ ಒಂದು ತೋಟವಾದರೂ ಏಕಿಲ್ಲ? “ಈ ಅಕ್ರಮಿಗಳು “ನೀವು ಬುದ್ಧಿಗೆ ಮಂಕು ಬಡಿದ ಕೇವಲ ಒಬ್ಬ ವ್ಯಕ್ತಿಯನ್ನು ಹಿಂಬಾಲಿಸುತ್ತಿರುವಿರಿ” ಎಂದೂ ಹೇಳಿದರು.
Verse 9
ٱنظُرْ كَيْفَ ضَرَبُوا۟ لَكَ ٱلْأَمْثَـٰلَ فَضَلُّوا۟ فَلَا يَسْتَطِيعُونَ سَبِيلًا
Transliteration unẓur kayfa ḍarabū laka l-amthāla faḍallū falā yastaṭīʿūna sabīlan
Kannada ನೋಡಿರಿ, ಇವರು ಎಂತಹ ಉಪಮೆಗಳನ್ನು ನಿಮ್ಮ ಮುಂದಿಟ್ಟರು? ಹೀಗೆ ಅವರು ಸತ್ಯ ದಾರಿಯಿಂದ ತಪ್ಪಿ ನಡೆದರು. ಸರಿಯಾದ ದಾರಿಯನ್ನು ಸೇರಲು ಅವರಿಗೆ ಸಾಧ್ಯವಾಗುತ್ತಿಲ್ಲ.
Verse 10
تَبَارَكَ ٱلَّذِىٓ إِن شَآءَ جَعَلَ لَكَ خَيْرًا مِّن ذَٰلِكَ جَنَّـٰتٍ تَجْرِى مِن تَحْتِهَا ٱلْأَنْهَـٰرُ وَيَجْعَل لَّكَ قُصُورًۢا
Transliteration tabāraka alladhī in shāa jaʿala laka khayran min dhālika jannātin tajrī min taḥtihā l-anhāru wayajʿal laka quṣūran
Kannada ಅವನು ಅನುಗ್ರಹಪೂರ್ಣನು. ಅವನಿಚ್ಚಿಸಿದರೆ, ಇವರು ಹೇಳುವುದಕ್ಕಿಂತ ಉತ್ತಮವಾದುದನ್ನೂ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಉದ್ಯಾನಗಳನ್ನೂ ನಿಮಗೆ ಮಾಡಿಕೊಡುವನು. ದೊಡ್ಡ ದೊಡ್ಡ ಅರಮನೆಗಳನ್ನೂ ದಯಪಾಲಿಸುವನು.
Verse 11
بَلْ كَذَّبُوا۟ بِٱلسَّاعَةِ ۖ وَأَعْتَدْنَا لِمَن كَذَّبَ بِٱلسَّاعَةِ سَعِيرًا
Transliteration bal kadhabū bil-sāʿati wa-aʿtadnā liman kadhaba bil-sāʿati saʿīran
Kannada ಆದರೆ ಇವರು, `ಅಂತಿಮ ಘಳಿಗೆಯನ್ನು ನಿಷೇಧಿಸಿದ್ದಾರೆ. ಅಂತ್ಯದಿನವನ್ನು ನಿಷೇಧಿಸಿ ತಳ್ಳಿ ಹಾಕಿದವನಿಗಾಗಿ ಹೊತ್ತಿ ಉರಿಯುವ ಬೆಂಕಿಯನ್ನು ನಾವು ಸಿದ್ಧಗೊಳಿಸಿದ್ದೇವೆ.
Verse 12
إِذَا رَأَتْهُم مِّن مَّكَانٍۭ بَعِيدٍ سَمِعُوا۟ لَهَا تَغَيُّظًا وَزَفِيرًا
Transliteration idhā ra-athum min makānin baʿīdin samiʿū lahā taghayyuẓan wazafīran
Kannada ಅದು ಇವರನ್ನು ದೂರ ಸ್ಥಳದಿಂದ ಕಂಡಾಗಲೇ ಇವರು ಅದರ ಕೋಪದ ಕಿಡಿಯನ್ನು ಮತ್ತು ಕಿರುಚುವ ಚೀತ್ಕಾರವನ್ನು ಕೇಳುವರು.
Verse 13
وَإِذَآ أُلْقُوا۟ مِنْهَا مَكَانًا ضَيِّقًا مُّقَرَّنِينَ دَعَوْا۟ هُنَالِكَ ثُبُورًا
Transliteration wa-idhā ul'qū min'hā makānan ḍayyiqan muqarranīna daʿaw hunālika thubūran
Kannada ಇವರು ಸಂಕೋಲೆಗಳಲ್ಲಿ ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ಅದರ ಒಂದು ಇಕ್ಕಟ್ಟಾದ ಜಾಗಕ್ಕೆ ಎಸೆಯಲ್ಪಟ್ಟರೆ ಅಲ್ಲಿ ಅವರು, ಅಯ್ಯೋ, ನಮ್ಮ ನಾಶವೆಂದು ಕೂಗಾಡುವರು.
Verse 14
لَّا تَدْعُوا۟ ٱلْيَوْمَ ثُبُورًا وَٰحِدًا وَٱدْعُوا۟ ثُبُورًا كَثِيرًا
Transliteration lā tadʿū l-yawma thubūran wāḥidan wa-id'ʿū thubūran kathīran
Kannada “ಇಂದು ಒಂದು ನಾಶವನ್ನಲ್ಲ, ಅನೇಕ ನಾಶಗಳಿಗಾಗಿ ಕೂಗಿರಿ” ಎನ್ನಲಾಗುವುದು.
Verse 15
قُلْ أَذَٰلِكَ خَيْرٌ أَمْ جَنَّةُ ٱلْخُلْدِ ٱلَّتِى وُعِدَ ٱلْمُتَّقُونَ ۚ كَانَتْ لَهُمْ جَزَآءً وَمَصِيرًا
Transliteration qul adhālika khayrun am jannatu l-khul'di allatī wuʿida l-mutaqūna kānat lahum jazāan wamaṣīran
Kannada ಹೇಳಿರಿ, “ಅದು ಉತ್ತಮವೋ? ಅಥವಾ ಧರ್ಮ ನಿಷ್ಟರಿಗೆ ವಾಗ್ದಾನ ಮಾಡಲಾಗಿರುವ, ಅವರ ಪ್ರತಿಫಲವೂ ನಿರ್ಗಮನ ಸ್ಥಾನವೂ ಆಗಿರುವ ಶಾಶ್ವತ ಸ್ವರ್ಗ ಉತ್ತಮವೋ?”
Verse 16
لَّهُمْ فِيهَا مَا يَشَآءُونَ خَـٰلِدِينَ ۚ كَانَ عَلَىٰ رَبِّكَ وَعْدًا مَّسْـُٔولًا
Transliteration lahum fīhā mā yashāūna khālidīna kāna ʿalā rabbika waʿdan masūlan
Kannada ಸ್ವರ್ಗದಲ್ಲಿ ಸದಾಕಾಲ ವಾಸಿಸುವ ಅವರು ತಾವೇನು ಇಚ್ಛಿಸುವರೋ ಅವೆಲ್ಲ ಅವರಿಗಲ್ಲಿ ಸಿಗುವುದು. ನಿಮ್ಮ ಪ್ರಭುವಿನ ಮೇಲೆ ಅಪೇಕ್ಷಿ ಸಲ್ಪಡುವ ಒಂದು ವಾಗ್ದಾನವಾಗಿತ್ತದು.
Verse 17
وَيَوْمَ يَحْشُرُهُمْ وَمَا يَعْبُدُونَ مِن دُونِ ٱللَّهِ فَيَقُولُ ءَأَنتُمْ أَضْلَلْتُمْ عِبَادِى هَـٰٓؤُلَآءِ أَمْ هُمْ ضَلُّوا۟ ٱلسَّبِيلَ
Transliteration wayawma yaḥshuruhum wamā yaʿbudūna min dūni l-lahi fayaqūlu a-antum aḍlaltum ʿibādī hāulāi am hum ḍallū l-sabīla
Kannada ಇವರನ್ನೂ ಇವರು ಅಲ್ಲಾಹನನ್ನು ಬಿಟ್ಟು ಪೂಜಿ ಸುತ್ತಿರುವ ವಸ್ತುಗಳನ್ನೂ ಅವನು ಒಟ್ಟು ಸೇರಿ ಸುವ ದಿನವನ್ನು ನೆನಪಿಸಿರಿ. ಆಗ ಅವನು ಕೇಳುವನು. “ನಮ್ಮ ಈ ದಾಸರನ್ನು ದಾರಿತಪ್ಪಿಸಿದ್ದು ನೀವೋ ಅಥವಾ ಇವರು ಸ್ವತಃ ದಾರಿ ತಪ್ಪಿದರೋ?”
Verse 18
قَالُوا۟ سُبْحَـٰنَكَ مَا كَانَ يَنۢبَغِى لَنَآ أَن نَّتَّخِذَ مِن دُونِكَ مِنْ أَوْلِيَآءَ وَلَـٰكِن مَّتَّعْتَهُمْ وَءَابَآءَهُمْ حَتَّىٰ نَسُوا۟ ٱلذِّكْرَ وَكَانُوا۟ قَوْمًۢا بُورًا
Transliteration qālū sub'ḥānaka mā kāna yanbaghī lanā an nattakhidha min dūnika min awliyāa walākin mattaʿtahum waābāahum ḥattā nasū l-dhik'ra wakānū qawman būran
Kannada ಆಗ ಅವರು ಹೇಳುವರು, “ನೀನು ಪರಮ ಪಾವ ನನು, ನಿನ್ನ ಹೊರತು ಇತರರನ್ನು ಆರಾಧ್ಯರ ನ್ನಾಗಿ ಮಾಡುವುದು ನಮಗೆ ಭೂಷಣವಾಗಿರಲಿಲ್ಲ. ಆದರೆ ನೀನು ಇವರಿಗೂ ಇವರ ಪೂರ್ವಿಕರಿಗೂ ಸಾಕಷ್ಟು ಸುಖ-ಭೋಗಗಳನ್ನು ನೀಡಿದೆ. ಕೊನೆಗೆ ಇವರು ನಿನ್ನ ಉಪದೇಶವನ್ನು ಮರೆತರು. ನಾಶವಾದ ಜನಾಂಗವಾದರು”.
Verse 19
فَقَدْ كَذَّبُوكُم بِمَا تَقُولُونَ فَمَا تَسْتَطِيعُونَ صَرْفًا وَلَا نَصْرًا ۚ وَمَن يَظْلِم مِّنكُمْ نُذِقْهُ عَذَابًا كَبِيرًا
Transliteration faqad kadhabūkum bimā taqūlūna famā tastaṭīʿūna ṣarfan walā naṣran waman yaẓlim minkum nudhiq'hu ʿadhāban kabīran
Kannada (ಆಗ ಅಲ್ಲಾಹನು ಬಹುದೇವಾರಾಧಕರಲ್ಲಿ ಹೇಳುವನು) “ನೀವು ಹೇಳುತ್ತಿರುವ ಮಾತು ಗಳನ್ನು ಇವರು ಸುಳ್ಳಾಗಿಸಿದ್ದಾರೆ. (ಇವರು ಆರಾಧ್ಯರು ಎಂಬ ವಾದವನ್ನು ನಿಷೇಧಿಸಿದ್ದಾರೆ.) ಇನ್ನು ನೀವು ಶಿಕ್ಷೆಯನ್ನು ನಿವಾರಿಸಲಿಕ್ಕಾಗಲಿ ಸಹಾಯವನ್ನು ಪಡೆಯಲಿಕ್ಕಾಗಿ ಶಕ್ತರಲ್ಲ. ನಿಮ್ಮಲ್ಲಿ ಯಾರೇ ಅಕ್ರಮವೆಸಗಿದರೂ ಅವನಿಗೆ ನಾವು ಮಹಾ ಶಿಕ್ಷೆಯನ್ನು ಉಣಿಸುತ್ತೇವೆ.
Verse 20
وَمَآ أَرْسَلْنَا قَبْلَكَ مِنَ ٱلْمُرْسَلِينَ إِلَّآ إِنَّهُمْ لَيَأْكُلُونَ ٱلطَّعَامَ وَيَمْشُونَ فِى ٱلْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا
Transliteration wamā arsalnā qablaka mina l-mur'salīna illā innahum layakulūna l-ṭaʿāma wayamshūna fī l-aswāqi wajaʿalnā baʿḍakum libaʿḍin fit'natan ataṣbirūna wakāna rabbuka baṣīran
Kannada (ಪೈಗಂಬರರೇ,) ಸಂದೇಶವಾಹಕರ ಪೈಕಿ ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ಸಂಚರಿಸುವವರನ್ನೇ ಹೊರತು ನಿಮಗೆ ಮುನ್ನ ನಾವು ನಿಯೋಗಿಸಿಲ್ಲ. ನಾವು ನಿಮ್ಮನ್ನು ಪರಸ್ಪರರ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ಮಾಡಿರುತ್ತೇವೆ. ನೀವು ತಾಳ್ಮೆ ವಹಿಸುವಿರಾ? ನಿಮ್ಮ ಪ್ರಭು ಸರ್ವ ವೀಕ್ಷಕನಾಗಿರುವನು.
Verse 21
۞ وَقَالَ ٱلَّذِينَ لَا يَرْجُونَ لِقَآءَنَا لَوْلَآ أُنزِلَ عَلَيْنَا ٱلْمَلَـٰٓئِكَةُ أَوْ نَرَىٰ رَبَّنَا ۗ لَقَدِ ٱسْتَكْبَرُوا۟ فِىٓ أَنفُسِهِمْ وَعَتَوْ عُتُوًّا كَبِيرًا
Transliteration waqāla alladhīna lā yarjūna liqāanā lawlā unzila ʿalaynā l-malāikatu aw narā rabbanā laqadi is'takbarū fī anfusihim waʿataw ʿutuwwan kabīran
Kannada ನಮ್ಮನ್ನು ಭೇಟಿಯಾಗಲಿಕ್ಕಿದೆಯೆಂಬ ಆಗ್ರಹ ವನ್ನಿರಿಸಿಕೊಳ್ಳದವರು, “ನಮ್ಮ ಮೇಲೆ ದೇವಚ ರರನ್ನೇಕೆ ಇಳಿಸಲಾಗಿಲ್ಲ? ಅಥವಾ ನಾವು ನಮ್ಮ ಪ್ರಭುವನ್ನು ಏಕೆ ಕಣ್ಣಾರೆ ಕಾಣುತ್ತಿಲ್ಲ?” ಎನ್ನುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿ ದೊಡ್ಡ ಗರ್ವ ತೋರಿದ್ದಾರೆ ಮತ್ತು ಅತಿ ದೊಡ್ಡ ದಿಕ್ಕಾರ ವನ್ನು ತೋರ್ಪಡಿಸಿದ್ದಾರೆ .
Verse 22
يَوْمَ يَرَوْنَ ٱلْمَلَـٰٓئِكَةَ لَا بُشْرَىٰ يَوْمَئِذٍ لِّلْمُجْرِمِينَ وَيَقُولُونَ حِجْرًا مَّحْجُورًا
Transliteration yawma yarawna l-malāikata lā bush'rā yawma-idhin lil'muj'rimīna wayaqūlūna ḥij'ran maḥjūran
Kannada ಇವರು ದೇವಚರರನ್ನು ಕಾಣುವ ದಿನವನ್ನು ನೆನೆಸಿರಿ. ಅಪರಾಧಿಗಳ ಪಾಲಿಗೆ ಅಂದು ಯಾವುದೇ ಸಂತಸದ ವಾರ್ತೆ ಇರಲಾರದು. `ಬಲವಾದ ತಡೆ’ ಎಂದು ಮಲಕ್‍ಗಳು ಹೇಳುವರು.
Verse 23
وَقَدِمْنَآ إِلَىٰ مَا عَمِلُوا۟ مِنْ عَمَلٍ فَجَعَلْنَـٰهُ هَبَآءً مَّنثُورًا
Transliteration waqadim'nā ilā mā ʿamilū min ʿamalin fajaʿalnāhu habāan manthūran
Kannada ಅವರು ಮಾಡಿಟ್ಟಿರುವ ಎಲ್ಲಾ ಕರ್ಮಗಳತ್ತ ನಾವು ಗಮನಹರಿಸುವೆವು. ನಂತರ ಅದನ್ನು ನಾವು ಧೂಳಿನಂತೆ ಹಾರಿಸಿಬಿಡುವೆವು.
Verse 24
أَصْحَـٰبُ ٱلْجَنَّةِ يَوْمَئِذٍ خَيْرٌ مُّسْتَقَرًّا وَأَحْسَنُ مَقِيلًا
Transliteration aṣḥābu l-janati yawma-idhin khayrun mus'taqarran wa-aḥsanu maqīlan
Kannada ಸ್ವರ್ಗದವರು ಆ ದಿನ ಒಳ್ಳೆಯ ಜಾಗದಲ್ಲಿ ತಂಗುವರು ಮತ್ತು ಉತ್ತಮ ವಿಶ್ರಾಂತಿಯ ಸ್ಥಳವನ್ನು ಪಡೆಯುವರು.
Verse 25
وَيَوْمَ تَشَقَّقُ ٱلسَّمَآءُ بِٱلْغَمَـٰمِ وَنُزِّلَ ٱلْمَلَـٰٓئِكَةُ تَنزِيلًا
Transliteration wayawma tashaqqaqu l-samāu bil-ghamāmi wanuzzila l-malāikatu tanzīlan
Kannada ಮೋಡದೊಂದಿಗೆ ಆಕಾಶವು ಸೀಳುವ ಮತ್ತು ದೇವಚರರು ತಂಡ ತಂಡವಾಗಿ ಇಳಿಸಲ್ಪಡುವ ದಿನ.
Verse 26
ٱلْمُلْكُ يَوْمَئِذٍ ٱلْحَقُّ لِلرَّحْمَـٰنِ ۚ وَكَانَ يَوْمًا عَلَى ٱلْكَـٰفِرِينَ عَسِيرًا
Transliteration al-mul'ku yawma-idhin l-ḥaqu lilrraḥmāni wakāna yawman ʿalā l-kāfirīna ʿasīran
Kannada ಅಂದು ನಿಜವಾದ ಸಾರ್ವಭೌಮತೆಯು ದಯಾನಿಧಿಯಾದ ಅಲ್ಲಾಹನಿಗಾಗಿರುವುದು. ಅದು ಸತ್ಯನಿಷೇಧಿಗಳಿಗೆ ಬಹಳ ಕಠಿಣ ದಿನವಾಗಿರುವುದು.
Verse 27
وَيَوْمَ يَعَضُّ ٱلظَّالِمُ عَلَىٰ يَدَيْهِ يَقُولُ يَـٰلَيْتَنِى ٱتَّخَذْتُ مَعَ ٱلرَّسُولِ سَبِيلًا
Transliteration wayawma yaʿaḍḍu l-ẓālimu ʿalā yadayhi yaqūlu yālaytanī ittakhadhtu maʿa l-rasūli sabīlan
Kannada ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಳ್ಳುವ ದಿನ. ಅವನು ಹೇಳುವನು, “ಅಯ್ಯೋ, ನಾನು ಪ್ರವಾದಿಯೊಂದಿಗೆ ಸನ್ಮಾರ್ಗವನ್ನು ಸ್ವೀಕರಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
Verse 28
يَـٰوَيْلَتَىٰ لَيْتَنِى لَمْ أَتَّخِذْ فُلَانًا خَلِيلًا
Transliteration yāwaylatā laytanī lam attakhidh fulānan khalīlan
Kannada ಅಯ್ಯೋ ನನ್ನ ಕಷ್ಟವೇ, ನಾನು ಆ ವ್ಯಕ್ತಿಯನ್ನು ಮಿತ್ರನಾಗಿ ಮಾಡಿಕೊಳ್ಳದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
Verse 29
لَّقَدْ أَضَلَّنِى عَنِ ٱلذِّكْرِ بَعْدَ إِذْ جَآءَنِى ۗ وَكَانَ ٱلشَّيْطَـٰنُ لِلْإِنسَـٰنِ خَذُولًا
Transliteration laqad aḍallanī ʿani l-dhik'ri baʿda idh jāanī wakāna l-shayṭānu lil'insāni khadhūlan
Kannada ನನ್ನ ಬಳಿಗೆ (ಖುರ್‍ಆನಿನ) ಸದ್ಭೋಧನೆ ಬಂದ ಬಳಿಕ ಅವನು ಅದರಿಂದ ನನ್ನನ್ನು ದಾರಿ ತಪ್ಪಿಸಿದನು. ಶೈತಾನನು ಮನುಷ್ಯನಿಗೆ ಮಹಾ ವಂಚಕನಾಗಿರುವನು.
Verse 30
وَقَالَ ٱلرَّسُولُ يَـٰرَبِّ إِنَّ قَوْمِى ٱتَّخَذُوا۟ هَـٰذَا ٱلْقُرْءَانَ مَهْجُورًا
Transliteration waqāla l-rasūlu yārabbi inna qawmī ittakhadhū hādhā l-qur'āna mahjūran
Kannada ಸಂದೇಶವಾಹಕರು, “ನನ್ನ ಪ್ರಭೂ, ನನ್ನ ಜನಾಂಗದವರು ಈ ಖುರ್‍ಆನನ್ನು ತ್ಯಾಜ ವಸ್ತುವನ್ನಾಗಿ ಮಾಡಿದರು” ಎನ್ನುವರು .
Verse 31
وَكَذَٰلِكَ جَعَلْنَا لِكُلِّ نَبِىٍّ عَدُوًّا مِّنَ ٱلْمُجْرِمِينَ ۗ وَكَفَىٰ بِرَبِّكَ هَادِيًا وَنَصِيرًا
Transliteration wakadhālika jaʿalnā likulli nabiyyin ʿaduwwan mina l-muj'rimīna wakafā birabbika hādiyan wanaṣīran
Kannada (ಪೈಗಂಬರರೇ,) ಇದೇ ರೀತಿಯಲ್ಲಿ ಪ್ರತಿಯೊಬ್ಬ ಪ್ರವಾದಿಗೆ ಶತ್ರುವನ್ನು ನಾವು ಮಾಡಿರುತ್ತೇವೆ. ಮಾರ್ಗದರ್ಶಕನೂ, ಸಹಾಯಕನೂ ಆಗಿ ನಿಮ್ಮ ಪ್ರಭುವೇ ಸಾಕು.
Verse 32
وَقَالَ ٱلَّذِينَ كَفَرُوا۟ لَوْلَا نُزِّلَ عَلَيْهِ ٱلْقُرْءَانُ جُمْلَةً وَٰحِدَةً ۚ كَذَٰلِكَ لِنُثَبِّتَ بِهِۦ فُؤَادَكَ ۖ وَرَتَّلْنَـٰهُ تَرْتِيلًا
Transliteration waqāla alladhīna kafarū lawlā nuzzila ʿalayhi l-qur'ānu jum'latan wāḥidatan kadhālika linuthabbita bihi fuādaka warattalnāhu tartīlan
Kannada ಸತ್ಯನಿಷೇಧಿಗಳು, “ಇವನ ಮೇಲೆ ಇಡೀ ಖುರ್ ಅನ್ ಒಮ್ಮೆಲೆ ಒಟ್ಟಾಗಿ ಏಕೆ ಅವತೀರ್ಣ ಗೊಂಡಿಲ್ಲ?” ಎಂದು ಕೇಳುತ್ತಾರೆ. ತಮ್ಮ ಹೃದಯ ವನ್ನು ಇದರ ಮೂಲಕ ಬಲಪಡಿಸುವುದಕ್ಕಾಗಿ ಹೀಗೆ ಮಾಡಲಾಗಿದೆ. ಆದ್ದರಿಂದ ಸಾವಧಾನ ಕ್ರಮದಲ್ಲಿ ಅದನ್ನು ನಾವು ಓದಿ ಕೊಡುತ್ತಿದ್ದೇವೆ.
Verse 33
وَلَا يَأْتُونَكَ بِمَثَلٍ إِلَّا جِئْنَـٰكَ بِٱلْحَقِّ وَأَحْسَنَ تَفْسِيرًا
Transliteration walā yatūnaka bimathalin illā ji'nāka bil-ḥaqi wa-aḥsana tafsīran
Kannada ಅವರು ನಿಮ್ಮ ಮುಂದೆ ಸತ್ಯವನ್ನು ವಿರೋಧಿಸಲು ಯಾವ ಮಾತನ್ನು ಬಳಸಿದರೂ ನಾವು ಅದಕ್ಕೆ ಸಮರ್ಪಕವಾದ ಉತ್ತರವನ್ನೂ ಅತ್ಯುತ್ತಮ ವಿವರಣೆಯನ್ನೂ ಕೊಡದೆ ಇರುವುದಿಲ್ಲ.
Verse 34
ٱلَّذِينَ يُحْشَرُونَ عَلَىٰ وُجُوهِهِمْ إِلَىٰ جَهَنَّمَ أُو۟لَـٰٓئِكَ شَرٌّ مَّكَانًا وَأَضَلُّ سَبِيلًا
Transliteration alladhīna yuḥ'sharūna ʿalā wujūhihim ilā jahannama ulāika sharrun makānan wa-aḍallu sabīlan
Kannada ಅಧೋಮುಖರಾಗಿ ನರಕದ ಕಡೆಗೆ ಒಯ್ಯಲ್ಪಡು ವವರು ಬಹಳ ಕೆಟ್ಟ ನೆಲೆಯವರು ಮತ್ತು ತೀರಾ ತಪ್ಪು ದಾರಿ ತುಳಿದವರು.
Verse 35
وَلَقَدْ ءَاتَيْنَا مُوسَى ٱلْكِتَـٰبَ وَجَعَلْنَا مَعَهُۥٓ أَخَاهُ هَـٰرُونَ وَزِيرًا
Transliteration walaqad ātaynā mūsā l-kitāba wajaʿalnā maʿahu akhāhu hārūna wazīran
Kannada ಮೂಸಾರಿಗೆ ನಾವು ವೇದ ಗ್ರಂಥ ನೀಡಿದೆವು. ಅವರ ಜೊತೆಗೆ ಅವರ ಸಹೋದರ ಹಾರೂನರನ್ನು ಸಹಾಯಕನಾಗಿ ನೇಮಿಸಿದೆವು.
Verse 36
فَقُلْنَا ٱذْهَبَآ إِلَى ٱلْقَوْمِ ٱلَّذِينَ كَذَّبُوا۟ بِـَٔايَـٰتِنَا فَدَمَّرْنَـٰهُمْ تَدْمِيرًا
Transliteration faqul'nā idh'habā ilā l-qawmi alladhīna kadhabū biāyātinā fadammarnāhum tadmīran
Kannada ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಆ ಜನಾಂಗದ ಕಡೆಗೆ ನೀವಿಬ್ಬರೂ ಹೋಗಿರೆಂದು ಅವರಿಗೆ ಹೇಳಿದೆವು. (ಆ ಜನತೆ ಅವರಿಬ್ಬರನ್ನೂ ನಿಷೇಧಿಸಿತು). ಕೊನೆಗೆ ನಾವು ಅವರನ್ನು ಸಮೂಲ ನಾಶಗೊಳಿಸಿದೆವು.
Verse 37
وَقَوْمَ نُوحٍ لَّمَّا كَذَّبُوا۟ ٱلرُّسُلَ أَغْرَقْنَـٰهُمْ وَجَعَلْنَـٰهُمْ لِلنَّاسِ ءَايَةً ۖ وَأَعْتَدْنَا لِلظَّـٰلِمِينَ عَذَابًا أَلِيمًا
Transliteration waqawma nūḥin lammā kadhabū l-rusula aghraqnāhum wajaʿalnāhum lilnnāsi āyatan wa-aʿtadnā lilẓẓālimīna ʿadhāban alīman
Kannada ನೂಹರ ಜನಾಂಗವು ಪ್ರವಾದಿಗಳನ್ನು ಸುಳ್ಳಾಗಿ ಸಿದಾಗ ನಾವು ಅವರನ್ನು ನೀರಿನಲ್ಲಿ ಮುಳುಗಿ ಸಿನಾಶ ಮಾಡಿದೆವು. ಅದನ್ನು ಜನರಿಗೆ ಒಂದು ದೃಷ್ಟಾಂತವಾಗಿ ಮಾಡಿದೆವು. ಅಕ್ರಮಿಗಳಿಗೆ ನಾವು ವೇದನಾಯುಕ್ತ ಶಿಕ್ಷೆಯನ್ನು (ಪರ ಲೋಕದಲ್ಲಿ) ಸಿದ್ಧಗೊಳಿಸಿದ್ದೇವೆ.
Verse 38
وَعَادًا وَثَمُودَا۟ وَأَصْحَـٰبَ ٱلرَّسِّ وَقُرُونًۢا بَيْنَ ذَٰلِكَ كَثِيرًا
Transliteration waʿādan wathamūdā wa-aṣḥāba l-rasi waqurūnan bayna dhālika kathīran
Kannada ಇದೇ ರೀತಿ ಆದ್, ಸಮೂದ್ ಮತ್ತು ರಸ್ಸ್‍ನವರ ಹಾಗೂ ಅವರ ಮಧ್ಯದ ಶತಮಾನಗಳ ಅನೇಕರನ್ನು ನೆನಪಿಸಿರಿ.
Verse 39
وَكُلًّا ضَرَبْنَا لَهُ ٱلْأَمْثَـٰلَ ۖ وَكُلًّا تَبَّرْنَا تَتْبِيرًا
Transliteration wakullan ḍarabnā lahu l-amthāla wakullan tabbarnā tatbīran
Kannada ಎಲ್ಲರಿಗೂ ನಾವು ಉದಾಹರಣೆಗಳನ್ನು ವಿವರಿಸಿ ಕೊಟ್ಟೆವು. ಕೊನೆಗೆ ಎಲ್ಲರನ್ನೂ ಸರ್ವ ನಾಶಗೊಳಿಸಿದೆವು.
Verse 40
وَلَقَدْ أَتَوْا۟ عَلَى ٱلْقَرْيَةِ ٱلَّتِىٓ أُمْطِرَتْ مَطَرَ ٱلسَّوْءِ ۚ أَفَلَمْ يَكُونُوا۟ يَرَوْنَهَا ۚ بَلْ كَانُوا۟ لَا يَرْجُونَ نُشُورًا
Transliteration walaqad ataw ʿalā l-qaryati allatī um'ṭirat maṭara l-sawi afalam yakūnū yarawnahā bal kānū lā yarjūna nushūran
Kannada ಕೆಟ್ಟ ಮಳೆಗೆರೆಯಲಾಗಿದ್ದ ಆ ನಾಡನ್ನು ಅವರು ಹಾದು ಹೋಗಿದ್ದಾರೆ. ಆಗ ಅವರದನ್ನು ಕಾಣಲಿಲ್ಲವೇ? ಆದರೆ ಅವರು ಪುನರುತ್ಥಾನದ ನಿರೀಕ್ಷೆಯನ್ನೇ ಇಟ್ಟುಕೊಂಡಿಲ್ಲ.
Verse 41
وَإِذَا رَأَوْكَ إِن يَتَّخِذُونَكَ إِلَّا هُزُوًا أَهَـٰذَا ٱلَّذِى بَعَثَ ٱللَّهُ رَسُولًا
Transliteration wa-idhā ra-awka in yattakhidhūnaka illā huzuwan ahādhā alladhī baʿatha l-lahu rasūlan
Kannada (ಪೈಗಂಬರರೇ,) “ಅವರು ನಿಮ್ಮನ್ನು ಕಂಡಾಗಲೆಲ್ಲಾ ನಿಮ್ಮನ್ನು ಗೇಲಿಯ ವಸ್ತುವನ್ನಾಗಿ ಮಾಡುತ್ತಾರೆ. `ಅಲ್ಲಾಹನು ಸಂದೇಶವಾಹಕನಾಗಿ ಮಾಡಿ ಕಳುಹಿಸಿದ್ದು ಇವನನ್ನೇ?.
Verse 42
إِن كَادَ لَيُضِلُّنَا عَنْ ءَالِهَتِنَا لَوْلَآ أَن صَبَرْنَا عَلَيْهَا ۚ وَسَوْفَ يَعْلَمُونَ حِينَ يَرَوْنَ ٱلْعَذَابَ مَنْ أَضَلُّ سَبِيلًا
Transliteration in kāda layuḍillunā ʿan ālihatinā lawlā an ṣabarnā ʿalayhā wasawfa yaʿlamūna ḥīna yarawna l-ʿadhāba man aḍallu sabīlan
Kannada ನಮ್ಮ ಆರಾಧ್ಯರ ಪೂಜೆಯಲ್ಲಿ ನಾವು ಅಚಲ ರಾಗದೆ ನಿಂತಿದ್ದರೆ ಇವನು ನಮ್ಮನ್ನು ದಾರಿ ತಪ್ಪಿಸುತ್ತಿದ್ದನು” ಎಂದು. ಶಿಕ್ಷೆಯನ್ನು ಕಾಣುವ ವೇಳೆ ತೀರಾ ತಪ್ಪು ದಾರಿ ತುಳಿದವನು ಯಾರೆಂದು ಸ್ವತಃ ಅವರಿಗೇ ತಿಳಿದು ಬರುವುದು.
Verse 43
أَرَءَيْتَ مَنِ ٱتَّخَذَ إِلَـٰهَهُۥ هَوَىٰهُ أَفَأَنتَ تَكُونُ عَلَيْهِ وَكِيلًا
Transliteration ara-ayta mani ittakhadha ilāhahu hawāhu afa-anta takūnu ʿalayhi wakīlan
Kannada ತನ್ನ ದೇಹೇಚ್ಚೆಯನ್ನು ತನ್ನ ದೇವನಾಗಿ ಮಾಡಿದವನನ್ನು ತಾವು ಕಂಡಿರಾ? ನೀವು ಈತನ ಮೇಲೆ ಹೊಣೆ ವಹಿಸಿಕೊಳ್ಳುವಿರಾ?
Verse 44
أَمْ تَحْسَبُ أَنَّ أَكْثَرَهُمْ يَسْمَعُونَ أَوْ يَعْقِلُونَ ۚ إِنْ هُمْ إِلَّا كَٱلْأَنْعَـٰمِ ۖ بَلْ هُمْ أَضَلُّ سَبِيلًا
Transliteration am taḥsabu anna aktharahum yasmaʿūna aw yaʿqilūna in hum illā kal-anʿāmi bal hum aḍallu sabīlan
Kannada ಅದಲ್ಲ, ಇವರಲ್ಲಿ ಹೆಚ್ಚಿನವರು ಆಲಿಸುತ್ತಾರೆ, ಇಲ್ಲವೇ ಯೋಚಿಸುತ್ತಾರೆ ಎಂದು ನೀವು ಭಾವಿ ಸುತ್ತೀರಾ? ಇವರು ಪ್ರಾಣಿಗಳಂತಿದ್ದಾರೆ. ಅಲ್ಲ, ಅವಕ್ಕಿಂತಲೂ ಪಥಭ್ರಷ್ಟರು.
Verse 45
أَلَمْ تَرَ إِلَىٰ رَبِّكَ كَيْفَ مَدَّ ٱلظِّلَّ وَلَوْ شَآءَ لَجَعَلَهُۥ سَاكِنًا ثُمَّ جَعَلْنَا ٱلشَّمْسَ عَلَيْهِ دَلِيلًا
Transliteration alam tara ilā rabbika kayfa madda l-ẓila walaw shāa lajaʿalahu sākinan thumma jaʿalnā l-shamsa ʿalayhi dalīlan
Kannada ನಿಮ್ಮ ಪ್ರಭು ನೆರಳನ್ನು ಹೇಗೆ ಹರಡಿಸುತ್ತಾ ನೆಂಬುದನ್ನು ನೀವು ಕಂಡಿಲ್ಲವೇ? ಅವನು ಇಚ್ಛಿಸಿದ್ದರೆ ಅದನ್ನು ನಿಶ್ಚಲಗೊಳಿಸುತ್ತಿದ್ದನು. ನಂತರ ನಾವು ಸೂರ್ಯನನ್ನು ಆ ನೆರಳಿಗೆ ಸಂಕೇತವನ್ನಾಗಿ ಮಾಡಿದ್ದೇವೆ .
Verse 46
ثُمَّ قَبَضْنَـٰهُ إِلَيْنَا قَبْضًا يَسِيرًا
Transliteration thumma qabaḍnāhu ilaynā qabḍan yasīran
Kannada ಅನಂತರ ನಾವು ಆ ನೆರಳನ್ನು ಕ್ರಮೇಣ ನಮ್ಮ ಕಡೆಗೆ ಕುಗ್ಗಿಸುತ್ತ ಹೋಗುತ್ತೇವೆ .
Verse 47
وَهُوَ ٱلَّذِى جَعَلَ لَكُمُ ٱلَّيْلَ لِبَاسًا وَٱلنَّوْمَ سُبَاتًا وَجَعَلَ ٱلنَّهَارَ نُشُورًا
Transliteration wahuwa alladhī jaʿala lakumu al-layla libāsan wal-nawma subātan wajaʿala l-nahāra nushūran
Kannada ರಾತ್ರಿಯನ್ನು ನಿಮಗೆ ಉಡುಪಾಗಿಯೂ ನಿದ್ದೆಯನ್ನು ವಿಶ್ರಾಂತಿಯಾಗಿಯೂ ಹಗಲನ್ನು ಎಚ್ಚೆತ್ತುಕೊಂಡು ಸಂಚರಿಸುವ ಸಮಯವಾಗಿಯೂ ಮಾಡಿದವನು ಅಲ್ಲಾಹನೇ ಆಗಿರುತ್ತಾನೆ.
Verse 48
وَهُوَ ٱلَّذِىٓ أَرْسَلَ ٱلرِّيَـٰحَ بُشْرًۢا بَيْنَ يَدَىْ رَحْمَتِهِۦ ۚ وَأَنزَلْنَا مِنَ ٱلسَّمَآءِ مَآءً طَهُورًا
Transliteration wahuwa alladhī arsala l-riyāḥa bush'ran bayna yaday raḥmatihi wa-anzalnā mina l-samāi māan ṭahūran
Kannada ಅವನು ತನ್ನ ಕೃಪೆಗೆ (ಮಳೆಗೆ) ಮುಂಚಿತವಾಗಿ ಮಾರುತಗಳನ್ನು ಸುವಾರ್ತೆಯಾಗಿ ಕಳುಹಿಸು ವವನು. ಅನಂತರ ನಾವು ಆಕಾಶದಿಂದ ಶುದ್ಧ ತಿಳಿನೀರನ್ನು ಇಳಿಸುತ್ತೇವೆ.
Verse 49
لِّنُحْـِۧىَ بِهِۦ بَلْدَةً مَّيْتًا وَنُسْقِيَهُۥ مِمَّا خَلَقْنَآ أَنْعَـٰمًا وَأَنَاسِىَّ كَثِيرًا
Transliteration linuḥ'yiya bihi baldatan maytan wanus'qiyahu mimmā khalaqnā anʿāman wa-anāsiyya kathīran
Kannada ಒಂದು ನಿರ್ಜೀವ ಪ್ರದೇಶಕ್ಕೆ ಇದರಿಂದ ಜೀವ ದಾನ ಮಾಡಲಿಕ್ಕಾಗಿ ಮತ್ತು ತನ್ನ ಸೃಷ್ಟಿಯ ಪೈಕಿ ಅನೇಕ ಜಾನುವಾರುಗಳಿಗೂ ಮನುಷ್ಯರಿಗೂ ಅದನ್ನು ಕುಡಿಸಲಿಕ್ಕಾಗಿ.
Verse 50
وَلَقَدْ صَرَّفْنَـٰهُ بَيْنَهُمْ لِيَذَّكَّرُوا۟ فَأَبَىٰٓ أَكْثَرُ ٱلنَّاسِ إِلَّا كُفُورًا
Transliteration walaqad ṣarrafnāhu baynahum liyadhakkarū fa-abā aktharu l-nāsi illā kufūran
Kannada ಅವರು ಯೋಚಿಸಲಿಕ್ಕಾಗಿ ನಾವು ಅದನ್ನು ನಿರೂಪಿಸಿದ್ದೇವೆ. ಆದರೆ ಹೆಚ್ಚಿನವರು ಕೃತಘ್ನತೆಯ ಹೊರತು ಬೇರೇನನ್ನೂ ಅಂಗೀಕರಿಸುತ್ತಿಲ್ಲ.
Verse 51
وَلَوْ شِئْنَا لَبَعَثْنَا فِى كُلِّ قَرْيَةٍ نَّذِيرًا
Transliteration walaw shi'nā labaʿathnā fī kulli qaryatin nadhīran
Kannada ನಾವಿಚ್ಛಿಸುತ್ತಿದ್ದರೆ ಪ್ರತಿಯೊಂದು ನಾಡಿಗೂ ಎಚ್ಚರಿಕೆದಾರನನ್ನು ನಿಯೋಗಿಸುತ್ತಿದ್ದೆವು.
Verse 52
فَلَا تُطِعِ ٱلْكَـٰفِرِينَ وَجَـٰهِدْهُم بِهِۦ جِهَادًا كَبِيرًا
Transliteration falā tuṭiʿi l-kāfirīna wajāhid'hum bihi jihādan kabīran
Kannada ಆದುದರಿಂದ (ಪೈಗಂಬರರೇ,) ಸತ್ಯನಿಷೇಧಿಗಳನ್ನು ಅನುಸರಿಸಬೇಡಿರಿ. ಈ ಖುರ್‍ಆನಿನ ಮೂಲಕ ಅವರ ವಿರುದ್ಧ ಉಗ್ರ ಹೋರಾಟ ನಡೆಸಿರಿ .
Verse 53
۞ وَهُوَ ٱلَّذِى مَرَجَ ٱلْبَحْرَيْنِ هَـٰذَا عَذْبٌ فُرَاتٌ وَهَـٰذَا مِلْحٌ أُجَاجٌ وَجَعَلَ بَيْنَهُمَا بَرْزَخًا وَحِجْرًا مَّحْجُورًا
Transliteration wahuwa alladhī maraja l-baḥrayni hādhā ʿadhbun furātun wahādhā mil'ḥun ujājun wajaʿala baynahumā barzakhan waḥij'ran maḥjūran
Kannada ಅವನು ಎರಡು ಸಮುದ್ರಗಳನ್ನು ಸೇರಿಸಿಟ್ಟಿರು ವವನು. ಒಂದು ರುಚಿಕರವಾದ ಸಿಹಿ ನೀರು. ಇನ್ನೊಂದು ಕಹಿಯಾದ ಉಪ್ಪು ನೀರು. ಇವೆರಡರ ಮಧ್ಯೆ ಒಂದು ಬಲವಾದ ತೆರೆಯನ್ನು ನಿರ್ಮಿಸಿರುವನು. (ಅವು ಪರಸ್ಪರ ಬೆರೆಯದಂತೆ ಮಾಡುವ) ಒಂದು ಗಟ್ಟಿಯಾದ ತಡೆಯನ್ನೂ ನಿರ್ಮಿಸಿರುವನು .
Verse 54
وَهُوَ ٱلَّذِى خَلَقَ مِنَ ٱلْمَآءِ بَشَرًا فَجَعَلَهُۥ نَسَبًا وَصِهْرًا ۗ وَكَانَ رَبُّكَ قَدِيرًا
Transliteration wahuwa alladhī khalaqa mina l-māi basharan fajaʿalahu nasaban waṣih'ran wakāna rabbuka qadīran
Kannada ಅವನೇ ನೀರಿನಿಂದ ಮಾನವನನ್ನು ಸೃಷ್ಟಿಸಿದವನು. ತರುವಾಯ ಅವನು ಮನುಷ್ಯನಿಂದ ವಂಶೀಯ ಮತ್ತು ವೈವಾಹಿಕ ಸಂಬಂಧವನ್ನು ಉಂಟು ಮಾಡಿದನು. ನಿನ್ನ ಪ್ರಭು ಸರ್ವ ಸಮರ್ಥನಾಗಿರುವನು.
Verse 55
وَيَعْبُدُونَ مِن دُونِ ٱللَّهِ مَا لَا يَنفَعُهُمْ وَلَا يَضُرُّهُمْ ۗ وَكَانَ ٱلْكَافِرُ عَلَىٰ رَبِّهِۦ ظَهِيرًا
Transliteration wayaʿbudūna min dūni l-lahi mā lā yanfaʿuhum walā yaḍurruhum wakāna l-kāfiru ʿalā rabbihi ẓahīran
Kannada ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಲಾಭವಾಗಲಿ ನಷ್ಟವಾಗಲಿ ಉಂಟು ಮಾಡಲಾರದ ಕೆಲವು ವಸ್ತುಗಳನ್ನು ಆರಾಧಿಸುತ್ತಾರೆ. ಸತ್ಯ ನಿಷೇಧಿಯು ತನ್ನ ಪ್ರಭುವಿನ ವಿರುದ್ಧ (ಪಿಶಾಚಿಯ ಮಾರ್ಗದ) ಸಹಾಯಕನಾಗಿರುವನು.
Verse 56
وَمَآ أَرْسَلْنَـٰكَ إِلَّا مُبَشِّرًا وَنَذِيرًا
Transliteration wamā arsalnāka illā mubashiran wanadhīran
Kannada (ಪೈಗಂಬರರೇ,) ನಾವು ನಿಮ್ಮನ್ನು ಓರ್ವ ಶುಭ ವಾರ್ತೆ ಹಾಗೂ ಎಚ್ಚರಿಕೆ ನೀಡುವವರಾಗಿ ಮಾತ್ರ ಕಳುಹಿಸಿರುತ್ತೇವೆ.
Verse 57
قُلْ مَآ أَسْـَٔلُكُمْ عَلَيْهِ مِنْ أَجْرٍ إِلَّا مَن شَآءَ أَن يَتَّخِذَ إِلَىٰ رَبِّهِۦ سَبِيلًا
Transliteration qul mā asalukum ʿalayhi min ajrin illā man shāa an yattakhidha ilā rabbihi sabīlan
Kannada ಇವರಿಗೆ “ನಾನು ಈ ದೌತ್ಯ ನಿರ್ವಹಣೆಗಾಗಿ ನಿಮ್ಮಿಂದ ಯಾವುದೇ ಪ್ರತಿಫಲ ಕೇಳುವುದಿಲ್ಲ. ಆದರೆ ಯಾರಾದರೂ ತನ್ನ ಪ್ರಭುವಿನೆಡೆಗೆ ಉತ್ತಮ ಮಾರ್ಗವನ್ನು ಸ್ಥಾಪಿಸಲು (ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಲು) ಉದ್ದೇಶಿಸಿದರೆ ಹಾಗೆ ಮಾಡಲಿ” ಎಂದು ಹೇಳಿರಿ.
Verse 58
وَتَوَكَّلْ عَلَى ٱلْحَىِّ ٱلَّذِى لَا يَمُوتُ وَسَبِّحْ بِحَمْدِهِۦ ۚ وَكَفَىٰ بِهِۦ بِذُنُوبِ عِبَادِهِۦ خَبِيرًا
Transliteration watawakkal ʿalā l-ḥayi alladhī lā yamūtu wasabbiḥ biḥamdihi wakafā bihi bidhunūbi ʿibādihi khabīran
Kannada (ಪೈಗಂಬರರೇ,) ಎಂದೂ ಮರಣ ಹೊಂದದ, ಅಮರನಾಗಿರುವ ಅಲ್ಲಾಹನ ಮೇಲೆ ಭರವಸೆ ಯಿಡಿರಿ. ಅವನ ಸ್ತುತಿಯೊಂದಿಗೆ ಅವನ ಪರಿಶುದ್ಧ ತೆಯನ್ನು ಕೊಂಡಾಡಿರಿ. ತನ್ನ ದಾಸರ ಪಾಪಗಳ ಬಗ್ಗೆ ಸೂಕ್ಷ್ಮಜ್ಞಾನಿಯಾಗಿ ಅವನು ಮಾತ್ರ ಸಾಕು.
Verse 59
ٱلَّذِى خَلَقَ ٱلسَّمَـٰوَٰتِ وَٱلْأَرْضَ وَمَا بَيْنَهُمَا فِى سِتَّةِ أَيَّامٍ ثُمَّ ٱسْتَوَىٰ عَلَى ٱلْعَرْشِ ۚ ٱلرَّحْمَـٰنُ فَسْـَٔلْ بِهِۦ خَبِيرًا
Transliteration alladhī khalaqa l-samāwāti wal-arḍa wamā baynahumā fī sittati ayyāmin thumma is'tawā ʿalā l-ʿarshi l-raḥmānu fasal bihi khabīran
Kannada ಅವನು ಭೂಮಿ-ಆಕಾಶಗಳನ್ನೂ ಅವುಗಳ ನಡುವೆ ಇರುವುದನ್ನೂ ಆರು ದಿನಗಳಲ್ಲಿ ಸೃಷ್ಟಿಸಿ ದನು. ತರುವಾಯ ಅವುಗಳ ತರುವಾಯ ಅವನಿ ಗೆ ಸಂಗತವಾದ ರೀತಿಯಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನುಂ. ಪರಮ ದಯಾಮಯ, ಅವನ ಘನತೆಯನ್ನು ಸೂಕ್ಷ್ಮವಾಗಿ ಬಲ್ಲವರೊಡನೆ ಕೇಳಿರಿ.
Verse 60
وَإِذَا قِيلَ لَهُمُ ٱسْجُدُوا۟ لِلرَّحْمَـٰنِ قَالُوا۟ وَمَا ٱلرَّحْمَـٰنُ أَنَسْجُدُ لِمَا تَأْمُرُنَا وَزَادَهُمْ نُفُورًا ۩
Transliteration wa-idhā qīla lahumu us'judū lilrraḥmāni qālū wamā l-raḥmānu anasjudu limā tamurunā wazādahum nufūran
Kannada ‘ರಹ್ಮಾನನಿಗೆ ಸಾಷ್ಟಾಂಗವೆರಗಿರಿ’ ಎಂದು ಅವರಿಗೆ ಹೇಳಿದರೆ, “ರಹ್ಮಾನ್ ಎಂದರೇನು? ನೀನು ಆಜ್ಞಾಪಿಸುವ ವಸ್ತುವಿಗೆ ನಾವು ಸಾಷ್ಟಾಂ ಗವೆರಗಬೇಕೆ?” ಎಂದು ಕೇಳುತ್ತಾರೆ. ಈ ಉಪದೇಶವು ಅವರ ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸುತ್ತದೆ.
Verse 61
تَبَارَكَ ٱلَّذِى جَعَلَ فِى ٱلسَّمَآءِ بُرُوجًا وَجَعَلَ فِيهَا سِرَٰجًا وَقَمَرًا مُّنِيرًا
Transliteration tabāraka alladhī jaʿala fī l-samāi burūjan wajaʿala fīhā sirājan waqamaran munīran
Kannada ಆಕಾಶದಲ್ಲಿ ನಕ್ಷತ್ರ ರಾಶಿಗಳನ್ನು ಮಾಡಿದವನು ಮತ್ತು ಅದರಲ್ಲಿ ಒಂದು ಸೂರ್ಯ ಮತ್ತು ಹೊಳೆಯುವ ಚಂದ್ರನನ್ನು ಬೆಳಗಿದವನು ಪರಮ ಮಂಗಳನು.
Verse 62
وَهُوَ ٱلَّذِى جَعَلَ ٱلَّيْلَ وَٱلنَّهَارَ خِلْفَةً لِّمَنْ أَرَادَ أَن يَذَّكَّرَ أَوْ أَرَادَ شُكُورًا
Transliteration wahuwa alladhī jaʿala al-layla wal-nahāra khil'fatan liman arāda an yadhakkara aw arāda shukūran
Kannada ಯೋಚಿಸಲು ಅಥವಾ ಕೃತಜ್ಞನಾಗಲು ಬಯಸುವ ಪ್ರತಿಯೊಬ್ಬನಿಗಾಗಿ ರಾತ್ರಿ ಹಗಲುಗಳನ್ನು ಪದೇ ಪದೇ ಮರಳಿ ಬರುವ ವಸ್ತುವನ್ನಾಗಿ ಮಾಡಿದವನು ಅವನೇ.
Verse 63
وَعِبَادُ ٱلرَّحْمَـٰنِ ٱلَّذِينَ يَمْشُونَ عَلَى ٱلْأَرْضِ هَوْنًا وَإِذَا خَاطَبَهُمُ ٱلْجَـٰهِلُونَ قَالُوا۟ سَلَـٰمًا
Transliteration waʿibādu l-raḥmāni alladhīna yamshūna ʿalā l-arḍi hawnan wa-idhā khāṭabahumu l-jāhilūna qālū salāman
Kannada ಪರಮ ದಯಾಳುವಾದ ಅಲ್ಲಾಹನ ನಿಜವಾದ ದಾಸರು ಭೂಮಿಯ ಮೇಲೆ ವಿನಯದಿಂದ ನಡೆಯುತ್ತಾರೆ. ತಿಳಿಗೇಡಿಗಳು ಎದುರುಗೊಂಡು ಮಾತನಾಡಿದರೆ, ರಕ್ಷಣೆಯ ಮಾತನ್ನು ಹೇಳುತ್ತಾರೆ.
Verse 64
وَٱلَّذِينَ يَبِيتُونَ لِرَبِّهِمْ سُجَّدًا وَقِيَـٰمًا
Transliteration wa-alladhīna yabītūna lirabbihim sujjadan waqiyāman
Kannada ಅವರು ತಮ್ಮ ಪ್ರಭುವಿಗೆ ಸಾಷ್ಟಾಂಗವೆರಗುತ್ತಲೂ ನಿಂತು ಪ್ರಾರ್ಥಿಸುತ್ತಲೂ ರಾತ್ರಿಗಳನ್ನು ಕಳೆಯುತ್ತಾರೆ.
Verse 65
وَٱلَّذِينَ يَقُولُونَ رَبَّنَا ٱصْرِفْ عَنَّا عَذَابَ جَهَنَّمَ ۖ إِنَّ عَذَابَهَا كَانَ غَرَامًا
Transliteration wa-alladhīna yaqūlūna rabbanā iṣ'rif ʿannā ʿadhāba jahannama inna ʿadhābahā kāna gharāman
Kannada ಅವರು ಹೀಗೆ ಪ್ರಾರ್ಥಿಸುತ್ತಾರೆ, “ನಮ್ಮ ಪ್ರಭೂ, ನಮ್ಮನ್ನು ನರಕದ ಶಿಕ್ಷೆಯಿಂದ ರಕ್ಷಿಸು. ನಿಜಕ್ಕೂ ಅದರ ಶಿಕ್ಷೆಯು ನಿತ್ಯ ದುರಂತವಾಗಿದೆ .
Verse 66
إِنَّهَا سَآءَتْ مُسْتَقَرًّا وَمُقَامًا
Transliteration innahā sāat mus'taqarran wamuqāman
Kannada ಅದು ಅತ್ಯಂತ ನಿಕೃಷ್ಟ ನೆಲೆ ಮತ್ತು ಸ್ಥಾನವಾಗಿರುತ್ತದೆ’’.
Verse 67
وَٱلَّذِينَ إِذَآ أَنفَقُوا۟ لَمْ يُسْرِفُوا۟ وَلَمْ يَقْتُرُوا۟ وَكَانَ بَيْنَ ذَٰلِكَ قَوَامًا
Transliteration wa-alladhīna idhā anfaqū lam yus'rifū walam yaqturū wakāna bayna dhālika qawāman
Kannada ಅವರು ಖರ್ಚು ಮಾಡುವಾಗ ದುಂದುವೆಚ್ಚ ವನ್ನೂ ಮಾಡುವುದಿಲ್ಲ. ಜಿಪುಣತೆಯನ್ನೂ ತೋರುವುದಿಲ್ಲ. ಅವರ ಖರ್ಚು ಇವೆರಡರ ಮಧ್ಯೆ ನೆಲೆಯಲ್ಲಾಗಿರುವುದು.
Verse 68
وَٱلَّذِينَ لَا يَدْعُونَ مَعَ ٱللَّهِ إِلَـٰهًا ءَاخَرَ وَلَا يَقْتُلُونَ ٱلنَّفْسَ ٱلَّتِى حَرَّمَ ٱللَّهُ إِلَّا بِٱلْحَقِّ وَلَا يَزْنُونَ ۚ وَمَن يَفْعَلْ ذَٰلِكَ يَلْقَ أَثَامًا
Transliteration wa-alladhīna lā yadʿūna maʿa l-lahi ilāhan ākhara walā yaqtulūna l-nafsa allatī ḥarrama l-lahu illā bil-ḥaqi walā yaznūna waman yafʿal dhālika yalqa athāman
Kannada ಅವರು ಅಲ್ಲಾಹನ ಹೊರತು ಬೇರೆ ಯಾವ ಆರಾಧ್ಯನನ್ನೂ ಆರಾಧಿಸುವುದಿಲ್ಲ. ಅಲ್ಲಾಹನು ವಿರೋಧಿಸಿದ ಯಾವ ಜೀವವನ್ನೂ ಅನ್ಯಾಯವಾಗಿ ಕೊಲೆ ಮಾಡುವುದಿಲ್ಲ. ವ್ಯಭಿಚಾರವೆಸಗುವುದಿಲ್ಲ. ಈ ಕಾರ್ಯಗಳನ್ನು ಯಾರಾದರೂ ಮಾಡಿದರೆ ಅದರ ಶಿಕ್ಷೆಯನ್ನು ಪಡೆಯುವನು.
Verse 69
يُضَـٰعَفْ لَهُ ٱلْعَذَابُ يَوْمَ ٱلْقِيَـٰمَةِ وَيَخْلُدْ فِيهِۦ مُهَانًا
Transliteration yuḍāʿaf lahu l-ʿadhābu yawma l-qiyāmati wayakhlud fīhi muhānan
Kannada ಅಂತ್ಯ ದಿನದಂದು ಅವನಿಗೆ ಇಮ್ಮಡಿ ಶಿಕ್ಷೆ ನೀಡಲಾಗುವುದು. ಅವನು ಅದರಲ್ಲೇ ನಿಂದ್ಯನಾಗಿ ಸದಾ ಬಿದ್ದುಕೊಂಡಿರುವನು.
Verse 70
إِلَّا مَن تَابَ وَءَامَنَ وَعَمِلَ عَمَلًا صَـٰلِحًا فَأُو۟لَـٰٓئِكَ يُبَدِّلُ ٱللَّهُ سَيِّـَٔاتِهِمْ حَسَنَـٰتٍ ۗ وَكَانَ ٱللَّهُ غَفُورًا رَّحِيمًا
Transliteration illā man tāba waāmana waʿamila ʿamalan ṣāliḥan fa-ulāika yubaddilu l-lahu sayyiātihim ḥasanātin wakāna l-lahu ghafūran raḥīman
Kannada ಆದರೆ ಪಶ್ಚಾತ್ತಾಪಪಟ್ಟು, ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಮಾಡಿದರೆ ಅಲ್ಲಾಹನು ಅವರ ಪಾಪಗಳನ್ನು ಪುಣ್ಯಗಳಾಗಿ ಪರಿವರ್ತಿಸುವನು, ಅಲ್ಲಾಹು ಅತ್ಯಂತ ಕ್ಷಮಾಶೀಲನೂ ದಯಾ ನಿಧಿಯೂ ಆಗಿರುತ್ತಾನೆ.
Verse 71
وَمَن تَابَ وَعَمِلَ صَـٰلِحًا فَإِنَّهُۥ يَتُوبُ إِلَى ٱللَّهِ مَتَابًا
Transliteration waman tāba waʿamila ṣāliḥan fa-innahu yatūbu ilā l-lahi matāban
Kannada ಯಾರು ಪಾಪದಿಂದ ಪಶ್ಚಾತ್ತಾಪಪಟ್ಟು ಸತ್ಕರ್ಮಗಳನ್ನು ಮಾಡುತ್ತಾರೆ, ಅವರು ಅಲ್ಲಾಹನ ಕಡೆಗೆ ತೃಪ್ತಿಕರವಾದ ರೀತಿಯಲ್ಲಿ ಮರಳುತ್ತಾರೆ.
Verse 72
وَٱلَّذِينَ لَا يَشْهَدُونَ ٱلزُّورَ وَإِذَا مَرُّوا۟ بِٱللَّغْوِ مَرُّوا۟ كِرَامًا
Transliteration wa-alladhīna lā yashhadūna l-zūra wa-idhā marrū bil-laghwi marrū kirāman
Kannada ಅವರು ಸುಳ್ಳಿಗೆ ಸಾಕ್ಷಿಗಳಾಗುವುದಿಲ್ಲ. ಅವರು ವ್ಯರ್ಥ ವಿಷಯಗಳ ಸಮೀಪದಿಂದ ಹಾದು ಹೋಗುವುದಾದರೆ, ಮಾನ್ಯರಾಗಿ ಹಾದು ಹೋಗುತ್ತಾರೆ.
Verse 73
وَٱلَّذِينَ إِذَا ذُكِّرُوا۟ بِـَٔايَـٰتِ رَبِّهِمْ لَمْ يَخِرُّوا۟ عَلَيْهَا صُمًّا وَعُمْيَانًا
Transliteration wa-alladhīna idhā dhukkirū biāyāti rabbihim lam yakhirrū ʿalayhā ṣumman waʿum'yānan
Kannada ತಮ್ಮ ಪ್ರಭುವಿನ (ಖುರ್‍ಆನ್) ವಚನಗಳನ್ನು ಹೇಳಿ ಉಪದೇಶ ಮಾಡಿದರೆ, ಅವರು ಅದರ ಬಗ್ಗೆ ಕುರುಡರೂ ಕಿವುಡರೂ ಆಗಿ ಬಿದ್ದುಕೊಂಡಿ ರುವುದಿಲ್ಲ.
Verse 74
وَٱلَّذِينَ يَقُولُونَ رَبَّنَا هَبْ لَنَا مِنْ أَزْوَٰجِنَا وَذُرِّيَّـٰتِنَا قُرَّةَ أَعْيُنٍ وَٱجْعَلْنَا لِلْمُتَّقِينَ إِمَامًا
Transliteration wa-alladhīna yaqūlūna rabbanā hab lanā min azwājinā wadhurriyyātinā qurrata aʿyunin wa-ij'ʿalnā lil'muttaqīna imāman
Kannada ಅವರು, `ನಮ್ಮ ಪ್ರಭೂ, ನಮ್ಮ ಪತ್ನಿಯರಿಂದಲೂ ಮಕ್ಕಳಿಂದಲೂ ನಮ್ಮ ಕಣ್ಣುಗಳನ್ನು ತಣಿಸು ವವರನ್ನು ನಮಗೆ ದಯಪಾಲಿಸು. ನಮ್ಮನ್ನು ಧರ್ಮನಿಷ್ಟರ ಪಾಲಿಗೆ ಆದರ್ಶ ನಾಯಕರಾಗಿ ಮಾಡು’ ಎಂದು ಪ್ರಾರ್ಥಿಸುತ್ತಾರೆ .
Verse 75
أُو۟لَـٰٓئِكَ يُجْزَوْنَ ٱلْغُرْفَةَ بِمَا صَبَرُوا۟ وَيُلَقَّوْنَ فِيهَا تَحِيَّةً وَسَلَـٰمًا
Transliteration ulāika yuj'zawna l-ghur'fata bimā ṣabarū wayulaqqawna fīhā taḥiyyatan wasalāman
Kannada ತಮ್ಮ ಸಹನೆಯ ಕಾರಣದಿಂದ ಅವರಿಗೆ (ಪರಲೋಕದಲ್ಲಿ) ಉನ್ನತ ಅಂತಸ್ತಿನ ಸ್ವರ್ಗವನ್ನು ಪ್ರತಿಫಲ ನೀಡಲಾಗುವುದು. ಅವರನ್ನು ಗೌರವ ಪೂರ್ಣ ಅಭಿನಂದನೆ ಹಾಗೂ ಶಾಂತಿ ಸಂದೇಶಗಳೊಂದಿಗೆ ಸ್ವಾಗತಿಸಲಾಗುವುದು.
Verse 76
خَـٰلِدِينَ فِيهَا ۚ حَسُنَتْ مُسْتَقَرًّا وَمُقَامًا
Transliteration khālidīna fīhā ḥasunat mus'taqarran wamuqāman
Kannada ಅವರು ಅದರಲ್ಲಿ ಶಾಶ್ವತವಾಗಿ ನೆಲೆಸುವರು. ಆ ನೆಲೆ ಮತ್ತು ಆ ಸ್ಥಾನ ಎಷ್ಟು ಉತ್ತಮವಾದುದು!
Verse 77
قُلْ مَا يَعْبَؤُا۟ بِكُمْ رَبِّى لَوْلَا دُعَآؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًۢا
Transliteration qul mā yaʿba-u bikum rabbī lawlā duʿāukum faqad kadhabtum fasawfa yakūnu lizāman
Kannada (ಪೈಗಂಬರರೇ,) ಹೇಳಿರಿ. ನೀವು ನನ್ನ ಪ್ರಭು ವನ್ನು ಆರಾಧಿಸದಿದ್ದರೆ ಅವನು ನಿಮ್ಮನ್ನು ಲೆಕ್ಕಿಸ ಲಾರನು. ಆದರೆ ನೀವು ಸತ್ಯವನ್ನು ಸುಳ್ಳಾಗಿಸಿದ್ದೀರಿ, ಆದ್ದರಿಂದ ನಂತರ ಅದರ ಶಿಕ್ಷೆ ಅನಿವಾರ್ಯ ವಾಗುವುದು.
Read Surah Al-Furqan in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.