MyDugsiStart learning

Surah Yusuf in Kannada: translation and audio

Surah 12 · يوسف · Joseph · 111 verses

Surah Yusuf verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Yusuf word by word in English.

Verse 1

الٓر ۚ تِلْكَ ءَايَـٰتُ ٱلْكِتَـٰبِ ٱلْمُبِينِ

Transliteration alif-lam-ra til'ka āyātu l-kitābi l-mubīni

Kannada ಅಲಿಫ್ ಲಾಮ್ ರಾ. ಸುವ್ಯಕ್ತ ವಿವರಣೆಯ ಗ್ರಂಥದ ಸೂಕ್ತಗಳಿವು.

Verse 2

إِنَّآ أَنزَلْنَـٰهُ قُرْءَٰنًا عَرَبِيًّا لَّعَلَّكُمْ تَعْقِلُونَ

Transliteration innā anzalnāhu qur'ānan ʿarabiyyan laʿallakum taʿqilūna

Kannada ನೀವು ಯೋಚಿಸಿ ಗ್ರಹಿಸುವಂತಾಗಲು ನಾವು ಇದನ್ನು ಅರಬಿ ಭಾಷೆಯಲ್ಲಿರುವ ಖುರ್‍ಆನನ್ನಾಗಿ ಅವತೀರ್ಣಗೊಳಿಸಿದೆವು.

Verse 3

نَحْنُ نَقُصُّ عَلَيْكَ أَحْسَنَ ٱلْقَصَصِ بِمَآ أَوْحَيْنَآ إِلَيْكَ هَـٰذَا ٱلْقُرْءَانَ وَإِن كُنتَ مِن قَبْلِهِۦ لَمِنَ ٱلْغَـٰفِلِينَ

Transliteration naḥnu naquṣṣu ʿalayka aḥsana l-qaṣaṣi bimā awḥaynā ilayka hādhā l-qur'āna wa-in kunta min qablihi lamina l-ghāfilīna

Kannada ನಿಮಗೆ ನಮ್ಮ ಈ ಖುರ್‍ಆನ್ ಅವತರಣಿಕೆ ಯಿಂದ ಅತ್ಯಂತ ಸುಂದರವಾದ ಒಂದು ಚರಿತ್ರೆ ಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇದಕ್ಕಿಂತ ಮುಂಚೆ ಈ ಚರಿತ್ರೆಯ ಬಗ್ಗೆ ನೀವು ಅಪ್ರಜ್ಞರಲ್ಲಾಗಿದ್ದಿರಿ.

Verse 4

إِذْ قَالَ يُوسُفُ لِأَبِيهِ يَـٰٓأَبَتِ إِنِّى رَأَيْتُ أَحَدَ عَشَرَ كَوْكَبًا وَٱلشَّمْسَ وَٱلْقَمَرَ رَأَيْتُهُمْ لِى سَـٰجِدِينَ

Transliteration idh qāla yūsufu li-abīhi yāabati innī ra-aytu aḥada ʿashara kawkaban wal-shamsa wal-qamara ra-aytuhum lī sājidīna

Kannada ಯೂಸುಫರು ತಮ್ಮ ಪಿತರೊಡನೆ ಹೇಳಿದ ಸಂದರ್ಭ. `ಅಪ್ಪಾ, ಹನ್ನೊಂದು ನಕ್ಷತ್ರಗಳೂ ಸೂರ್ಯನೂ ಚಂದ್ರನೂ ನನಗೆ ಸಾಷ್ಟಾಂಗವೆರಗುತ್ತಿರುವುದಾಗಿ ನಾನು ಸ್ವಪ್ನದಲ್ಲಿ ಕಂಡಿರುತ್ತೇನೆ’ .

Verse 5

قَالَ يَـٰبُنَىَّ لَا تَقْصُصْ رُءْيَاكَ عَلَىٰٓ إِخْوَتِكَ فَيَكِيدُوا۟ لَكَ كَيْدًا ۖ إِنَّ ٱلشَّيْطَـٰنَ لِلْإِنسَـٰنِ عَدُوٌّ مُّبِينٌ

Transliteration qāla yābunayya lā taqṣuṣ ru'yāka ʿalā ikh'watika fayakīdū laka kaydan inna l-shayṭāna lil'insāni ʿaduwwun mubīnun

Kannada ಆಗ ಅವರ ತಂದೆ ಇಂತೆಂದರು, ‘ನನ್ನ ಮುದ್ದು ಮಗನೇ, ನಿನ್ನ ಈ ಸ್ವಪ್ನವನ್ನು ನಿನ್ನ ಸಹೋದರರಿಗೆ ವಿವರಿಸಿ ಕೊಡಬೇಡ. ಅನ್ಯಥಾ ಅವರು ನಿನ್ನ ವಿರುದ್ಧ ಒಳಸಂಚು ನಡೆಸುವರು. ವಾಸ್ತವದಲ್ಲಿ ಶೈತಾನನು ಮಾನವನ ಪ್ರತ್ಯಕ್ಷ ಶತ್ರುವಾಗಿರುವನು.

Verse 6

وَكَذَٰلِكَ يَجْتَبِيكَ رَبُّكَ وَيُعَلِّمُكَ مِن تَأْوِيلِ ٱلْأَحَادِيثِ وَيُتِمُّ نِعْمَتَهُۥ عَلَيْكَ وَعَلَىٰٓ ءَالِ يَعْقُوبَ كَمَآ أَتَمَّهَا عَلَىٰٓ أَبَوَيْكَ مِن قَبْلُ إِبْرَٰهِيمَ وَإِسْحَـٰقَ ۚ إِنَّ رَبَّكَ عَلِيمٌ حَكِيمٌ

Transliteration wakadhālika yajtabīka rabbuka wayuʿallimuka min tawīli l-aḥādīthi wayutimmu niʿ'matahu ʿalayka waʿalā āli yaʿqūba kamā atammahā ʿalā abawayka min qablu ib'rāhīma wa-is'ḥāqa inna rabbaka ʿalīmun ḥakīmun

Kannada ಅದೇ ಪ್ರಕಾರ (ಸ್ವಪ್ನದಲ್ಲಿ ಕಂಡಂತೆ) ನಿನ್ನ ಪ್ರಭುವು ನಿನ್ನನ್ನು ಆಯ್ದುಕೊಳ್ಳುವನು. ನಿನಗೆ ಸ್ವಪ್ನಗಳ ವ್ಯಾಖ್ಯಾನವನ್ನು ಕಲಿಸಿ ಕೊಡುವನು ಮತ್ತು ಇದಕ್ಕೆ ಮುಂಚೆ ನಿನ್ನ ಪೂರ್ವಜರಾಗಿದ್ದ ಇಬ್‍ರಾಹೀ ಮ್ ಮತ್ತು ಇಸ್‍ಹಾಖರ ಮೇಲೆ ಅವನು ತನ್ನ (ಪ್ರವಾದಿತ್ವದ) ಅನುಗ್ರಹವನ್ನು ಪೂರ್ಣಗೊಳಿಸಿ ದಂತೆ ನಿನ್ನ ಮೇಲೂ ಯಅïಖೂಬರ ವಂಶಜರ ಮೇಲೂ ಆ ಅನುಗ್ರಹವನ್ನು ಪೂರ್ಣಗೊಳಿಸುವನು. ನಿಶ್ಚಯವಾಗಿಯೂ ನಿನ್ನ ಪ್ರಭು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ.

Verse 7

۞ لَّقَدْ كَانَ فِى يُوسُفَ وَإِخْوَتِهِۦٓ ءَايَـٰتٌ لِّلسَّآئِلِينَ

Transliteration laqad kāna fī yūsufa wa-ikh'watihi āyātun lilssāilīna

Kannada ಯೂಸುಫ್ ಮತ್ತು ಅವರ ಸಹೋದರರ ಚರಿತ್ರೆ ಯಲ್ಲಿ ಆ ಚರಿತ್ರೆಯ ಬಗ್ಗೆ ಪ್ರಶ್ನಿಸುವವರಿಗೆ ಖಂಡಿತ ನಿದರ್ಶನಗಳಿವೆ.

Verse 8

إِذْ قَالُوا۟ لَيُوسُفُ وَأَخُوهُ أَحَبُّ إِلَىٰٓ أَبِينَا مِنَّا وَنَحْنُ عُصْبَةٌ إِنَّ أَبَانَا لَفِى ضَلَـٰلٍ مُّبِينٍ

Transliteration idh qālū layūsufu wa-akhūhu aḥabbu ilā abīnā minnā wanaḥnu ʿuṣ'batun inna abānā lafī ḍalālin mubīnin

Kannada ಅವರ ಸಹೋದರರು ಪರಸ್ಪರ ಹೇಳಿದರು; ಯೂಸುಫ್ ಹಾಗೂ ಅವನ ಸಹೋದರನೇ ನಮ್ಮ ತಂದೆಗೆ ನಮ್ಮೆಲ್ಲರಿಗಿಂತ ಹೆಚ್ಚು ಪ್ರೀತಿ. ನಾವಂತೂ ಬಲ ಪ್ರಾಪ್ತಿಯುಳ್ಳ ಒಂದು ಕೂಟವಾಗಿರುತ್ತೇವೆ. ವಾಸ್ತವದಲ್ಲಿ ನಮ್ಮ ಪಿತೃವರ್ಯರು ಸ್ಪಷ್ಟ ಪ್ರಮಾದದಲ್ಲಿದ್ದಾರೆ.

Verse 9

ٱقْتُلُوا۟ يُوسُفَ أَوِ ٱطْرَحُوهُ أَرْضًا يَخْلُ لَكُمْ وَجْهُ أَبِيكُمْ وَتَكُونُوا۟ مِنۢ بَعْدِهِۦ قَوْمًا صَـٰلِحِينَ

Transliteration uq'tulū yūsufa awi iṭ'raḥūhu arḍan yakhlu lakum wajhu abīkum watakūnū min baʿdihi qawman ṣāliḥīna

Kannada ನೀವು ಯೂಸುಫನನ್ನು ಕೊಂದು ಹಾಕಿರಿ, ಇಲ್ಲವೆ ಎಲ್ಲಾದರೂ ದೂರ ಸ್ಥಳಕ್ಕೆ ಎಸೆದುಬಿಡಿರಿ. ಹಾಗಾದರೆ ನಿಮ್ಮ ತಂದೆಯ ಒಲವು ಕೇವಲ ನಿಮ್ಮ ಕಡೆಗೇ ಇರುವುದು. ಈ ಕಾರ್ಯವನ್ನು ಮಾಡಿಯಾದ ಬಳಿಕ ನಿಮಗೆ ಪಾಪ ಮುಕ್ತರಾಗಬಹುದು.

Verse 10

قَالَ قَآئِلٌ مِّنْهُمْ لَا تَقْتُلُوا۟ يُوسُفَ وَأَلْقُوهُ فِى غَيَـٰبَتِ ٱلْجُبِّ يَلْتَقِطْهُ بَعْضُ ٱلسَّيَّارَةِ إِن كُنتُمْ فَـٰعِلِينَ

Transliteration qāla qāilun min'hum lā taqtulū yūsufa wa-alqūhu fī ghayābati l-jubi yaltaqiṭ'hu baʿḍu l-sayārati in kuntum fāʿilīna

Kannada ಆಗ ಅವರಲ್ಲೊಬ್ಬನು ಹೇಳಿದನು `ಯೂಸುಫ ನನ್ನು ಕೊಲ್ಲಬೇಡಿರಿ. ತಂದೆಯವರಿಂದ ಅವನನ್ನು ಬೇರ್ಪಡಿಸಬೇಕೆಂದಿದ್ದರೆ ಯಾವುದಾದರೊಂದು ಆಳವಾದ ಬಾವಿಯಲ್ಲಿ ಹಾಕಿಬಿಡಿರಿ. ಯಾರಾದರೂ ಪ್ರಯಾಣಿಕರು ಅವನನ್ನು ಎತ್ತಿಕೊಂಡು ಹೋಗುತ್ತಾರೆ’ .

Verse 11

قَالُوا۟ يَـٰٓأَبَانَا مَا لَكَ لَا تَأْمَ۫نَّا عَلَىٰ يُوسُفَ وَإِنَّا لَهُۥ لَنَـٰصِحُونَ

Transliteration qālū yāabānā mā laka lā tamannā ʿalā yūsufa wa-innā lahu lanāṣiḥūna

Kannada ಬಳಿಕ ಅವರು ತಮ್ಮ ತಂದೆಯವರ ಬಳಿಸಾಗಿ ಹೀಗೆಂದರು; ನಮ್ಮ ಅಪ್ಪಾ, ನಿಮಗೇನಾಗಿದೆ? ನೀವು ಯೂಸುಫನ ಬಗೆಗೆ ನಮ್ಮನ್ನೇಕೆ ನಂಬುವುದಿಲ್ಲ? ವಸ್ತುತಃ ನಾವು ಅವನ ನೈಜ ಹಿತಾಕಾಂಕ್ಷಿಗಳಾಗಿರುತ್ತೇವೆ.

Verse 12

أَرْسِلْهُ مَعَنَا غَدًا يَرْتَعْ وَيَلْعَبْ وَإِنَّا لَهُۥ لَحَـٰفِظُونَ

Transliteration arsil'hu maʿanā ghadan yartaʿ wayalʿab wa-innā lahu laḥāfiẓūna

Kannada ನಾಳೆ ಅವನನ್ನು ನಮ್ಮ ಸಂಗಡ (ಮರುಭೂ ಮಿಗೆ) ಕಳುಹಿಸಿರಿ. ಅವನು ಹಣ್ಣುಗಳನ್ನು ತಿಂದು ಆನಂದಪಡಲಿ. ಹಾಗೂ ಆಟವಾಡಲಿ. ಖಂಡಿತ ವಾಗಿಯೂ ನಾವು ಅವನ ರಕ್ಷಕರಾಗಿದ್ದೇವೆ.

Verse 13

قَالَ إِنِّى لَيَحْزُنُنِىٓ أَن تَذْهَبُوا۟ بِهِۦ وَأَخَافُ أَن يَأْكُلَهُ ٱلذِّئْبُ وَأَنتُمْ عَنْهُ غَـٰفِلُونَ

Transliteration qāla innī layaḥzununī an tadhhabū bihi wa-akhāfu an yakulahu l-dhi'bu wa-antum ʿanhu ghāfilūna

Kannada ಆಗ ತಂದೆ ಹೇಳಿದರು, ‘ನೀವು ಅವನನ್ನು ಕರೆದೊಯ್ಯುವುದು ನನಗೆ ಬಹಳ ಬೇಸರ ತರುತ್ತಿದೆ. ನೀವು ಅವನಿಂದ ಅಶ್ರದ್ಧೆಯಲ್ಲಿರುವಾಗ ಅವನ ನ್ನು ತೋಳ ಹಿಡಿದುತಿಂದೀತೆಂಬ ಭಯ ನನ್ನ ನ್ನು ಕಾಡುತ್ತಿದೆ’.

Verse 14

قَالُوا۟ لَئِنْ أَكَلَهُ ٱلذِّئْبُ وَنَحْنُ عُصْبَةٌ إِنَّآ إِذًا لَّخَـٰسِرُونَ

Transliteration qālū la-in akalahu l-dhi'bu wanaḥnu ʿuṣ'batun innā idhan lakhāsirūna

Kannada ಆಗ ಅವರು, ‘ನಾವು ಒಂದು ಬಲಿಷ್ಟ ತಂಡವೇ ಆಗಿರುವಾಗ, ನಾವಿರುತ್ತ ಅವನನ್ನು ತೋಳ ಹಿಡಿದು ತಿಂದರೆ, ನಾವು ನಿಜಕ್ಕೂ ನಷ್ಟವಂತರಾಗುತ್ತೇವೆ’ ಎಂದರು.

Verse 15

فَلَمَّا ذَهَبُوا۟ بِهِۦ وَأَجْمَعُوٓا۟ أَن يَجْعَلُوهُ فِى غَيَـٰبَتِ ٱلْجُبِّ ۚ وَأَوْحَيْنَآ إِلَيْهِ لَتُنَبِّئَنَّهُم بِأَمْرِهِمْ هَـٰذَا وَهُمْ لَا يَشْعُرُونَ

Transliteration falammā dhahabū bihi wa-ajmaʿū an yajʿalūhu fī ghayābati l-jubi wa-awḥaynā ilayhi latunabbi-annahum bi-amrihim hādhā wahum lā yashʿurūna

Kannada ಕೊನೆಗೆ ಅವರು ಯೂಸುಫರನ್ನು ಕರೆದೊಯ್ದರು. ಒಂದು ಆಳವಾದ ಬಾವಿಗೆ ತಳ್ಳಿಬಿಡಬೇಕೆಂದು ಒಮ್ಮತದಿಂದ ನಿರ್ಧರಿಸಿದರು. ಆಗ ನಾವು ಯೂಸುಫರಿಗೆ; “ಇವರ ಈ ವರ್ತನೆಯ ಬಗ್ಗೆ ಇವರಿಗೆ ನೀನು ವಿವರಿಸಿ ಕೊಡುವ ಕಾಲ ಬರಲಿದೆ. ಆದರೆ ಈಗ ಇವರಿಗೆ ಅದೇನೂ ತಿಳಿದಿರು ವುದಿಲ್ಲ” ಎಂದು ಸಂದೇಶ ಕಳುಹಿಸಿದೆವು .

Verse 16

وَجَآءُوٓ أَبَاهُمْ عِشَآءً يَبْكُونَ

Transliteration wajāū abāhum ʿishāan yabkūna

Kannada ಸಂಜೆ ಹೊತ್ತಿಗೆ ಅವರು ಅಳುತ್ತ ತಮ್ಮ ತಂದೆಯ ಬಳಿಗೆ ಬಂದರು.

Verse 17

قَالُوا۟ يَـٰٓأَبَانَآ إِنَّا ذَهَبْنَا نَسْتَبِقُ وَتَرَكْنَا يُوسُفَ عِندَ مَتَـٰعِنَا فَأَكَلَهُ ٱلذِّئْبُ ۖ وَمَآ أَنتَ بِمُؤْمِنٍ لَّنَا وَلَوْ كُنَّا صَـٰدِقِينَ

Transliteration qālū yāabānā innā dhahabnā nastabiqu wataraknā yūsufa ʿinda matāʿinā fa-akalahu l-dhi'bu wamā anta bimu'minin lanā walaw kunnā ṣādiqīna

Kannada ‘ಅಪ್ಪಾ, ನಾವು ಬಿಲ್ಲು ಪಂದ್ಯಾಟದಲ್ಲಿ ನಿರತರಾಗಿದ್ದೆವು. ಯೂಸುಫನನ್ನು ನಮ್ಮ ಸಾಮಾನುಗಳ ಹತ್ತಿರ ಬಿಟ್ಟಿದ್ದೆವು. ಅಷ್ಟರಲ್ಲಿ ತೋಳ ಬಂದು ಅವನನ್ನು ತಿಂದು ಹಾಕಿತು. ನಾವು ಸತ್ಯವಂತರಾಗಿದ್ದರೂ ತಾವು ನಮ್ಮ ಮಾತನ್ನು ನಂಬಲಾರಿರಿ’ ಎಂದರು.

Verse 18

وَجَآءُو عَلَىٰ قَمِيصِهِۦ بِدَمٍ كَذِبٍ ۚ قَالَ بَلْ سَوَّلَتْ لَكُمْ أَنفُسُكُمْ أَمْرًا ۖ فَصَبْرٌ جَمِيلٌ ۖ وَٱللَّهُ ٱلْمُسْتَعَانُ عَلَىٰ مَا تَصِفُونَ

Transliteration wajāū ʿalā qamīṣihi bidamin kadhibin qāla bal sawwalat lakum anfusukum amran faṣabrun jamīlun wal-lahu l-mus'taʿānu ʿalā mā taṣifūna

Kannada ಅವರು ಯೂಸುಫರ ಅಂಗಿಗೆ ಸುಳ್ಳು ರಕ್ತ ಹಚ್ಚಿ ತಂದಿದ್ದರು. ಯಅïಖೂಬರು ಹೇಳಿದರು; `ಆದರೆ ಈ ಕೃತ್ಯವನ್ನು ನಿಮ್ಮ ದೇಹೇಚ್ಛೆಯು ಚಂದಗಾಣಿಸಿಬಿಟ್ಟಿತು. ಚಿಂತಿಲ್ಲ, ನಾನು ಚೆನ್ನಾಗಿ ಸಹಿಸಿಕೊಳ್ಳುವೆನು. ನಿಮ್ಮ ಮಾತುಗಳ ನಿಜಸ್ಥಿತಿಯ ಬಗ್ಗೆ ಸಹಾಯ ಬೇಡಲು ಅಲ್ಲಾಹನೇ ಅರ್ಹನು.

Verse 19

وَجَآءَتْ سَيَّارَةٌ فَأَرْسَلُوا۟ وَارِدَهُمْ فَأَدْلَىٰ دَلْوَهُۥ ۖ قَالَ يَـٰبُشْرَىٰ هَـٰذَا غُلَـٰمٌ ۚ وَأَسَرُّوهُ بِضَـٰعَةً ۚ وَٱللَّهُ عَلِيمٌۢ بِمَا يَعْمَلُونَ

Transliteration wajāat sayyāratun fa-arsalū wāridahum fa-adlā dalwahu qāla yābush'rā hādhā ghulāmun wa-asarrūhu biḍāʿatan wal-lahu ʿalīmun bimā yaʿmalūna

Kannada ಅತ್ತ ಪ್ರವಾಸಿಗರ ತಂಡವೊಂದು ಬಂದಿತು. ಅದು ನೀರು ಸೇದುವವನನ್ನು (ನೀರು ತರಲು) ಕಳುಹಿಸಿತು. ಅವನು ತೊಟ್ಟಿಯನ್ನು ಬಾವಿಗೆ ಇಳಿಸಿದಾಗ ‘ಶುಭವಾಗಲಿ! ಇದೋ ಇಲ್ಲೊಬ್ಬ ಬಾಲಕ ! ಎಂದು ಕೂಗಿದನು. (ಇದು ತಿಳಿದು ಸಹೋದರರು ಬಂದು) ಯೂಸುಫರ ನಿಜಸ್ಥಿತಿ ಬಚ್ಚಿಟ್ಟು ಅವರನ್ನು ಸರಕನ್ನಾಗಿ ಮಾಡಿಕೊಂ ಡರು. ಅವರು ಮಾಡುತ್ತಿದ್ದುದನ್ನು ಅಲ್ಲಾಹು ಬಲ್ಲವನಾಗಿದ್ದನು.

Verse 20

وَشَرَوْهُ بِثَمَنٍۭ بَخْسٍ دَرَٰهِمَ مَعْدُودَةٍ وَكَانُوا۟ فِيهِ مِنَ ٱلزَّٰهِدِينَ

Transliteration washarawhu bithamanin bakhsin darāhima maʿdūdatin wakānū fīhi mina l-zāhidīna

Kannada ಕೊನೆಗೆ ಸಹೋದರರು ಕೆಲವೇ ದಿರ್‍ಹಮ್‍ಗಳ ತುಚ್ಛ ಬೆಲೆಗೆ ಯೂಸುಫರನ್ನು (ಯಾತ್ರಾ ತಂಡದ ವರಿಗೆ) ಮಾರಿಬಿಟ್ಟರು. ಅವರು ಯೂಸುಫರ ಬಗ್ಗೆ ನಿರ್ಲಕ್ಷಿತರಾಗಿದ್ದರು.

Verse 21

وَقَالَ ٱلَّذِى ٱشْتَرَىٰهُ مِن مِّصْرَ لِٱمْرَأَتِهِۦٓ أَكْرِمِى مَثْوَىٰهُ عَسَىٰٓ أَن يَنفَعَنَآ أَوْ نَتَّخِذَهُۥ وَلَدًا ۚ وَكَذَٰلِكَ مَكَّنَّا لِيُوسُفَ فِى ٱلْأَرْضِ وَلِنُعَلِّمَهُۥ مِن تَأْوِيلِ ٱلْأَحَادِيثِ ۚ وَٱللَّهُ غَالِبٌ عَلَىٰٓ أَمْرِهِۦ وَلَـٰكِنَّ أَكْثَرَ ٱلنَّاسِ لَا يَعْلَمُونَ

Transliteration waqāla alladhī ish'tarāhu min miṣ'ra li-im'ra-atihi akrimī mathwāhu ʿasā an yanfaʿanā aw nattakhidhahu waladan wakadhālika makkannā liyūsufa fī l-arḍi walinuʿallimahu min tawīli l-aḥādīthi wal-lahu ghālibun ʿalā amrihi walākinna akthara l-nāsi lā yaʿlamūna

Kannada ಈಜಿಪ್ತಿನಿಂದ ಅವರನ್ನು ಖರೀದಿಸಿದ ವ್ಯಕ್ತಿ ಯು ತನ್ನ ಪತ್ನಿಯೊಡನೆ, ‘ಇವನ ವಾಸವನ್ನು ಚೆನ್ನಾಗಿರಿಸು. ಇವನು ನಮಗೆ ಫಲಕಾರಿಯಾ ಗಲೂ ಬಹುದು ಅಥವಾ ನಾವು ಇವನನ್ನು ದತ್ತು ಪುತ್ರನನ್ನಾಗಿಯೂ ಮಾಡಿಕೊಳ್ಳಬಹುದು’ ಎಂದನು. ಈ ರೀತಿ ನಾವು ಯೂಸುಫರಿಗೆ ಭೂ ಭಾಗದಲ್ಲಿ ನೆಲೆಯೂರಲು ಅವಕಾಶ ಮಾಡಿ ಕೊಟ್ಟೆವು ಮತ್ತು ಅವರಿಗೆ ಸ್ವಪ್ನ ವ್ಯಾಖ್ಯಾನವನ್ನು ತಿಳಿಸಿಕೊಡುವ ವ್ಯವಸ್ಥೆ ಮಾಡಿದೆವು. ಅಲ್ಲಾಹು ತನ್ನ ಕಾರ್ಯವನ್ನು ಯಶಸ್ವಿಯಾಗಿ ಮಾಡಲು ಸುಶಕ್ತನು. ಆದರೆ ಹೆಚ್ಚಿನವರು ತಿಳಿಯುವುದಿಲ್ಲ.

Verse 22

وَلَمَّا بَلَغَ أَشُدَّهُۥٓ ءَاتَيْنَـٰهُ حُكْمًا وَعِلْمًا ۚ وَكَذَٰلِكَ نَجْزِى ٱلْمُحْسِنِينَ

Transliteration walammā balagha ashuddahu ātaynāhu ḥuk'man waʿil'man wakadhālika najzī l-muḥ'sinīna

Kannada ಯೂಸುಫರು ತಮ್ಮ ತುಂಬು ಯೌವನಕ್ಕೆ ತಲುಪಿದಾಗ ನಾವು ಅವರಿಗೆ ತತ್ವಜ್ಞಾನ ಮತ್ತು ಜ್ಞಾನವನ್ನು ನೀಡಿದೆವು. ಸಜ್ಜನರಿಗೆ ನಾವು ಈ ರೀತಿ ಪ್ರತಿಫಲ ನೀಡುತ್ತೇವೆ .

Verse 23

وَرَٰوَدَتْهُ ٱلَّتِى هُوَ فِى بَيْتِهَا عَن نَّفْسِهِۦ وَغَلَّقَتِ ٱلْأَبْوَٰبَ وَقَالَتْ هَيْتَ لَكَ ۚ قَالَ مَعَاذَ ٱللَّهِ ۖ إِنَّهُۥ رَبِّىٓ أَحْسَنَ مَثْوَاىَ ۖ إِنَّهُۥ لَا يُفْلِحُ ٱلظَّـٰلِمُونَ

Transliteration warāwadathu allatī huwa fī baytihā ʿan nafsihi waghallaqati l-abwāba waqālat hayta laka qāla maʿādha l-lahi innahu rabbī aḥsana mathwāya innahu lā yuf'liḥu l-ẓālimūna

Kannada ಯೂಸುಫರು ವಾಸಿಸುತ್ತಿದ್ದ ಮನೆಯೊಡತಿ ಯೂಸುಫರ ದೇಹವನ್ನು ಬಯಸಿದಳು. ಒಂದು ದಿನ ಕದಗಳನ್ನು ಮುಚ್ಚಿ, `ಇತ್ತ ಬಾ’ ಎಂದಳು. ಆಗ ಯೂಸುಫರು; ‘ಅಲ್ಲಾಹನಲ್ಲಿ ಶರಣು! ನನ್ನ ಪ್ರಭು ನನ್ನ ವಾಸವನ್ನು ಸುಸ್ಥಿತಿಯಲ್ಲಿಟ್ಟಿದ್ದಾನೆ. ಅಕ್ರಮಿಗಳು ಎಂದೂ ಯಶಸ್ವಿಯಾಗಲಾರರು’ ಎಂದರು.

Verse 24

وَلَقَدْ هَمَّتْ بِهِۦ ۖ وَهَمَّ بِهَا لَوْلَآ أَن رَّءَا بُرْهَـٰنَ رَبِّهِۦ ۚ كَذَٰلِكَ لِنَصْرِفَ عَنْهُ ٱلسُّوٓءَ وَٱلْفَحْشَآءَ ۚ إِنَّهُۥ مِنْ عِبَادِنَا ٱلْمُخْلَصِينَ

Transliteration walaqad hammat bihi wahamma bihā lawlā an raā bur'hāna rabbihi kadhālika linaṣrifa ʿanhu l-sūa wal-faḥshāa innahu min ʿibādinā l-mukh'laṣīna

Kannada ಆಕೆ ಅವರಿಂದ ದೇಹ ಸುಖಕ್ಕೆ ನಿಶ್ಚಯ ಮಾಡಿ ಬಿಟ್ಟಿದ್ದಳು. ಆದರೆ ತಮ್ಮ ಪ್ರಭುವಿನ ದೃಷ್ಟಾಂತವನ್ನು ಯೂಸುಫರು ಕಾಣದಿರುತ್ತಿದ್ದರೆ ಅವರೂ ಅವಳನ್ನು ಬಯಸುತ್ತಿದ್ದರು. ಹೀಗಾದುದು ನಾವು ಅವರಿಂದ ಅನೈತಿಕತೆಯ ವಾಂಛೆಯನ್ನು ನಿವಾರಿಸುವ ಸಲುವಾಗಿ. ಅವರು ನಮ್ಮ ನಿರ್ಮಲ ದಾಸರಲ್ಲೊಬ್ಬರಾಗಿದ್ದರು.

Verse 25

وَٱسْتَبَقَا ٱلْبَابَ وَقَدَّتْ قَمِيصَهُۥ مِن دُبُرٍ وَأَلْفَيَا سَيِّدَهَا لَدَا ٱلْبَابِ ۚ قَالَتْ مَا جَزَآءُ مَنْ أَرَادَ بِأَهْلِكَ سُوٓءًا إِلَّآ أَن يُسْجَنَ أَوْ عَذَابٌ أَلِيمٌ

Transliteration wa-is'tabaqā l-bāba waqaddat qamīṣahu min duburin wa-alfayā sayyidahā ladā l-bābi qālat mā jazāu man arāda bi-ahlika sūan illā an yus'jana aw ʿadhābun alīmun

Kannada ಅವರಿಬ್ಬರೂ ಬಾಗಿಲಿನತ್ತ ಓಡಿದರು. ಅವಳು ಹಿಂದಿನಿಂದ ಯೂಸುಫರ ಅಂಗಿಯನ್ನು ಹರಿದಳು. ಅವರಿಬ್ಬರೂ ಬಾಗಿಲ ಬಳಿ ಅವಳ ಪತಿ ಉಪಸ್ಥಿತನಿದ್ದುದನ್ನು ಕಂಡರು. ಆಕೆ ಹೇಳಿದಳು, `ನಿಮ್ಮ ಮನೆಯಾಕೆಯ ಮೇಲೆ ಕೇಡು ಬಗೆಯಲು ಬಂದ ಇವನಿಗೆ ತಕ್ಕ ಶಿಕ್ಷೆ ಸೆರೆಮನೆಯಲ್ಲಿ ಬಂದಿಸಿಡುವುದು ಅಥವಾ ಕಠಿಣ ಸಜೆ’.

Verse 26

قَالَ هِىَ رَٰوَدَتْنِى عَن نَّفْسِى ۚ وَشَهِدَ شَاهِدٌ مِّنْ أَهْلِهَآ إِن كَانَ قَمِيصُهُۥ قُدَّ مِن قُبُلٍ فَصَدَقَتْ وَهُوَ مِنَ ٱلْكَـٰذِبِينَ

Transliteration qāla hiya rāwadatnī ʿan nafsī washahida shāhidun min ahlihā in kāna qamīṣuhu qudda min qubulin faṣadaqat wahuwa mina l-kādhibīna

Kannada ಯೂಸುಫರು, ‘ಇವಳೇ ನನ್ನನ್ನು ಸೆಳೆಯಲು ಯತ್ನಿಸಿದ್ದು’ ಎಂದರು. ಅವಳ ಬಂಧುವೊಬ್ಬನು ಸಾಕ್ಷ್ಯ ಪ್ರಸ್ತುತಪಡಿಸಿದನು. ‘ಇವನ ಅಂಗಿ ಎದುರಿನಿಂದ ಹರಿದಿದ್ದರೆ ಇವಳದ್ದು ಸತ್ಯ. ಈತ ಸುಳ್ಳುಗಾರ.

Verse 27

وَإِن كَانَ قَمِيصُهُۥ قُدَّ مِن دُبُرٍ فَكَذَبَتْ وَهُوَ مِنَ ٱلصَّـٰدِقِينَ

Transliteration wa-in kāna qamīṣuhu qudda min duburin fakadhabat wahuwa mina l-ṣādiqīna

Kannada ಇವನ ಅಂಗಿ ಹಿಂಭಾಗದಿಂದ ಹರಿದಿದ್ದರೆ ಸ್ತ್ರಿಯು ಸುಳ್ಳುಗಾರ್ತಿ ಮತ್ತು ಇವನು ಸತ್ಯವಂತ’ .

Verse 28

فَلَمَّا رَءَا قَمِيصَهُۥ قُدَّ مِن دُبُرٍ قَالَ إِنَّهُۥ مِن كَيْدِكُنَّ ۖ إِنَّ كَيْدَكُنَّ عَظِيمٌ

Transliteration falammā raā qamīṣahu qudda min duburin qāla innahu min kaydikunna inna kaydakunna ʿaẓīmun

Kannada ಆಕೆಯ ಪತಿಯು ಯೂಸುಫರ ಅಂಗಿಯು ಹಿಂಭಾಗದಿಂದ ಹರಿದಿದ್ದುದನ್ನು ಕಂಡಾಗ ಇಂತೆಂದನು; ‘ಇದು ಸ್ತ್ರೀಯರಾದ ನಿಮ್ಮ ಕುತಂತ್ರ. ನಿಜಕ್ಕೂ ನಿಮ್ಮ ಕುತಂತ್ರ ಬಹಳ ಗಂಭೀರವಾಗಿದೆ .

Verse 29

يُوسُفُ أَعْرِضْ عَنْ هَـٰذَا ۚ وَٱسْتَغْفِرِى لِذَنۢبِكِ ۖ إِنَّكِ كُنتِ مِنَ ٱلْخَاطِـِٔينَ

Transliteration yūsufu aʿriḍ ʿan hādhā wa-is'taghfirī lidhanbiki innaki kunti mina l-khāṭiīna

Kannada ಯೂಸುಫ್ ! ಈ ವಿಷಯವನ್ನು ಕಡೆಗಣಿಸು. (ಓ ಸ್ತ್ರೀಯೇ) ನೀನು ನಿನ್ನ ತಪ್ಪಿಗಾಗಿ ಕ್ಷಮೆ ಯಾಚಿಸು. ವಾಸ್ತವದಲ್ಲಿ ನೀನೇ ತಪ್ಪು ಗಾರ್ತಿಯಾಗಿದ್ದಿ’.

Verse 30

۞ وَقَالَ نِسْوَةٌ فِى ٱلْمَدِينَةِ ٱمْرَأَتُ ٱلْعَزِيزِ تُرَٰوِدُ فَتَىٰهَا عَن نَّفْسِهِۦ ۖ قَدْ شَغَفَهَا حُبًّا ۖ إِنَّا لَنَرَىٰهَا فِى ضَلَـٰلٍ مُّبِينٍ

Transliteration waqāla nis'watun fī l-madīnati im'ra-atu l-ʿazīzi turāwidu fatāhā ʿan nafsihi qad shaghafahā ḥubban innā lanarāhā fī ḍalālin mubīnin

Kannada ನಗರದ ಕೆಲವು ಮಹಿಳೆಯರು ಹೇಳಿದರು. ‘ರಾಜನ ಪತ್ನಿ ತನ್ನ ತರುಣ ಗುಲಾಮನಲ್ಲಿ ಅನುರಕ್ತಳಾಗಿದ್ದಾಳೆ. ಅವಳಿಗೆ ಪ್ರೇಮಾಂಧತೆ ಬಾಧಿಸಿದೆ. ಆಕೆ ತಪ್ಪು ದಾರಿ ಹಿಡಿದಿದ್ದಾಳೆಂದೇ ನಮ್ಮ ಭಾವನೆ’.

Verse 31

فَلَمَّا سَمِعَتْ بِمَكْرِهِنَّ أَرْسَلَتْ إِلَيْهِنَّ وَأَعْتَدَتْ لَهُنَّ مُتَّكَـًٔا وَءَاتَتْ كُلَّ وَٰحِدَةٍ مِّنْهُنَّ سِكِّينًا وَقَالَتِ ٱخْرُجْ عَلَيْهِنَّ ۖ فَلَمَّا رَأَيْنَهُۥٓ أَكْبَرْنَهُۥ وَقَطَّعْنَ أَيْدِيَهُنَّ وَقُلْنَ حَـٰشَ لِلَّهِ مَا هَـٰذَا بَشَرًا إِنْ هَـٰذَآ إِلَّا مَلَكٌ كَرِيمٌ

Transliteration falammā samiʿat bimakrihinna arsalat ilayhinna wa-aʿtadat lahunna muttaka-an waātat kulla wāḥidatin min'hunna sikkīnan waqālati ukh'ruj ʿalayhinna falammā ra-aynahu akbarnahu waqaṭṭaʿna aydiyahunna waqul'na ḥāsha lillahi mā hādhā basharan in hādhā illā malakun karīmun

Kannada ಅವಳು ಅವರ ಈ ನಿಂದನೆಯ ಮಾತುಗಳನ್ನು ಕೇಳಿದಾಗ ಅವರಿಗೆ ಆಹ್ವಾನ ನೀಡಿದಳು. ಅವರಿ ಗಾಗಿ ಒಂದು ಔತಣವೇರ್ಪಡಿಸಿದಳು. ಔತಣ ದಲ್ಲಿ ಪ್ರತಿಯೊಬ್ಬರಿಗೂ ಹಣ್ಣು ಕೊಯ್ಯಲು ಒಂದೊಂದು ಚಾಕುವನ್ನು ಕೊಟ್ಟಳು. ಅವಳು ಯೂಸುಫರಿಗೆ ‘ನೀನು ಅವರ ಮುಂದೆ ಹೊರಟು ಬಾ’ ಎಂದಳು. ಆ ಸ್ತ್ರೀಯರು ಯೂಸುಫರನ್ನು ಕಂಡಾಗ ದಂಗಾದರು. ಮತ್ತು ತಮ್ಮ ಕೈಗಳನ್ನೇ ಕೊಯ್ದುಕೊಂಡರು. ‘ಅಲ್ಲಾಹು ಎಷ್ಟು ಪರಿಶುದ್ಧನು! ಈತನು ಮನುಷ್ಯ ಖಂಡಿತ ಅಲ್ಲ. ಇದಾರೋ ಸನ್ಮಾನ್ಯ ದೇವಚರನೇ ಇರಬೇಕು’ ಎಂದರವರು.

Verse 32

قَالَتْ فَذَٰلِكُنَّ ٱلَّذِى لُمْتُنَّنِى فِيهِ ۖ وَلَقَدْ رَٰوَدتُّهُۥ عَن نَّفْسِهِۦ فَٱسْتَعْصَمَ ۖ وَلَئِن لَّمْ يَفْعَلْ مَآ ءَامُرُهُۥ لَيُسْجَنَنَّ وَلَيَكُونًا مِّنَ ٱلصَّـٰغِرِينَ

Transliteration qālat fadhālikunna alladhī lum'tunnanī fīhi walaqad rāwadttuhu ʿan nafsihi fa-is'taʿṣama wala-in lam yafʿal mā āmuruhu layus'jananna walayakūnan mina l-ṣāghirīna

Kannada ಆಕೆ ಹೇಳಿದಳು, ‘ಯಾರ ವಿಷಯವಾಗಿ ನೀವು ನನ್ನ ಕುರಿತು ಆಕ್ಷೇಪದ ಮಾತುಗಳನ್ನೆತ್ತಿದ್ದೀರೋ ಆ ವ್ಯಕ್ತಿ ಇವನೇ. ನಿಜಕ್ಕೂ ನಾನು ಇವನನ್ನು ವಶೀಕರಿಸಲು ಪ್ರಯತ್ನಿಸಿದ್ದೆ. ಆದರೆ ಇವನು ತಪ್ಪಿಸಿಕೊಂಡನು. ಇನ್ನು ಇವನು ನನ್ನ ಅಪ್ಪಣೆ ಯಂತೆ ನಡೆಯದಿದ್ದರೆ, ಸೆರೆಮನೆ ಸೇರುವನು ಮತ್ತು ನಿಂದ್ಯರಲ್ಲಾಗುವನು’ .

Verse 33

قَالَ رَبِّ ٱلسِّجْنُ أَحَبُّ إِلَىَّ مِمَّا يَدْعُونَنِىٓ إِلَيْهِ ۖ وَإِلَّا تَصْرِفْ عَنِّى كَيْدَهُنَّ أَصْبُ إِلَيْهِنَّ وَأَكُن مِّنَ ٱلْجَـٰهِلِينَ

Transliteration qāla rabbi l-sij'nu aḥabbu ilayya mimmā yadʿūnanī ilayhi wa-illā taṣrif ʿannī kaydahunna aṣbu ilayhinna wa-akun mina l-jāhilīna

Kannada ಯೂಸುಫ್ ಹೇಳಿದರು, ‘ಓ ನನ್ನ ಪ್ರಭೂ, ಇವರು ನನ್ನನ್ನು ಕರೆಯುವ ಕಾರ್ಯಕ್ಕಿಂತ ನನಗೆ ಕಾರಾಗೃಹವೇ ವಾಸಿ. ನೀನು ಇವರ ಕುತಂತ್ರಗಳಿಂದ ನನ್ನನ್ನು ಪಾರು ಮಾಡದೇ ಹೋದರೆ ನಾನು ಅವರ ಬಲೆಯಲ್ಲಿ ಸಿಕ್ಕಿ ಬೀಳುವೆನು ಮತ್ತು ಅಜ್ಞಾನಿಗಳಲ್ಲಿ ಸೇರಿಹೋಗುವೆನು’.

Verse 34

فَٱسْتَجَابَ لَهُۥ رَبُّهُۥ فَصَرَفَ عَنْهُ كَيْدَهُنَّ ۚ إِنَّهُۥ هُوَ ٱلسَّمِيعُ ٱلْعَلِيمُ

Transliteration fa-is'tajāba lahu rabbuhu faṣarafa ʿanhu kaydahunna innahu huwa l-samīʿu l-ʿalīmu

Kannada ಆಗ ಅವರ ಪ್ರಭು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು ಮತ್ತು ಆ ಸ್ತ್ರೀಯರ ಕುತಂತ್ರಗಳನ್ನು ಅವರಿಂದ ನೀಗಿಸಿದನು. ಅವನು ಪರಮಶ್ರೋತೃನೂ ಪರಮ ತಜ್ಞನೂ ಆಗಿರುವನು.

Verse 35

ثُمَّ بَدَا لَهُم مِّنۢ بَعْدِ مَا رَأَوُا۟ ٱلْـَٔايَـٰتِ لَيَسْجُنُنَّهُۥ حَتَّىٰ حِينٍ

Transliteration thumma badā lahum min baʿdi mā ra-awū l-āyāti layasjununnahu ḥattā ḥīnin

Kannada ತರುವಾಯ (ಯೂಸುಫರ ನಿರ್ದೋಷಿತ್ವದ ಬಗ್ಗೆ) ಅವರಿಗೆ ಪುರಾವೆ ದೊರೆತ ನಂತರವೂ ಒಂದು ಕಾಲಾವಧಿಯವರೆಗೆ ಇವರನ್ನು ಸೆರೆಯಲ್ಲಿಡಬೇಕೆಂದು ಅವರಿಗೆ ತೋರಿತು .

Verse 36

وَدَخَلَ مَعَهُ ٱلسِّجْنَ فَتَيَانِ ۖ قَالَ أَحَدُهُمَآ إِنِّىٓ أَرَىٰنِىٓ أَعْصِرُ خَمْرًا ۖ وَقَالَ ٱلْـَٔاخَرُ إِنِّىٓ أَرَىٰنِىٓ أَحْمِلُ فَوْقَ رَأْسِى خُبْزًا تَأْكُلُ ٱلطَّيْرُ مِنْهُ ۖ نَبِّئْنَا بِتَأْوِيلِهِۦٓ ۖ إِنَّا نَرَىٰكَ مِنَ ٱلْمُحْسِنِينَ

Transliteration wadakhala maʿahu l-sij'na fatayāni qāla aḥaduhumā innī arānī aʿṣiru khamran waqāla l-ākharu innī arānī aḥmilu fawqa rasī khub'zan takulu l-ṭayru min'hu nabbi'nā bitawīlihi innā narāka mina l-muḥ'sinīna

Kannada ಕಾರಾಗೃಹದೊಳಗೆ ಇನ್ನಿಬ್ಬರು ಗುಲಾಮರೂ ಬಂದು ಸೇರಿದರು. ಒಂದು ದಿನ ಅವರಲ್ಲೊಬ್ಬನು ‘ನಾನು ದ್ರಾಕ್ಷ ಮದ್ಯ ಹಿಂಡುತ್ತಿರುವುದಾಗಿ ಕನಸು ಕಂಡೆನು’ ಎಂದನು. ಇನ್ನೊಬ್ಬನು, ‘ನನ್ನ ತಲೆಯ ಮೇಲೆ ರೊಟ್ಟಿಯನ್ನು ಹೊತ್ತುಕೊಂಡಿದ್ದೆ. ಪಕ್ಷಿಗಳು ಅದನ್ನು ಕುಕ್ಕಿ ತಿನ್ನುತ್ತಿರುವುದಾಗಿ ಕನಸು ಕಂಡೆನು’ ಎಂದನು. ಅವರಿಬ್ಬರೂ ‘ನಮಗೆ ಇದರ ವ್ಯಾಖ್ಯಾನ ತಿಳಿಸಿಕೊಡಿರಿ. ನೀವೊಬ್ಬ ಸಜ್ಜನರಾಗಿರುವುದನ್ನು ನಾವು ಕಾಣುತ್ತೇವೆ’ ಎಂದರು.

Verse 37

قَالَ لَا يَأْتِيكُمَا طَعَامٌ تُرْزَقَانِهِۦٓ إِلَّا نَبَّأْتُكُمَا بِتَأْوِيلِهِۦ قَبْلَ أَن يَأْتِيَكُمَا ۚ ذَٰلِكُمَا مِمَّا عَلَّمَنِى رَبِّىٓ ۚ إِنِّى تَرَكْتُ مِلَّةَ قَوْمٍ لَّا يُؤْمِنُونَ بِٱللَّهِ وَهُم بِٱلْـَٔاخِرَةِ هُمْ كَـٰفِرُونَ

Transliteration qāla lā yatīkumā ṭaʿāmun tur'zaqānihi illā nabbatukumā bitawīlihi qabla an yatiyakumā dhālikumā mimmā ʿallamanī rabbī innī taraktu millata qawmin lā yu'minūna bil-lahi wahum bil-ākhirati hum kāfirūna

Kannada ಯೂಸುಫ್ ಹೇಳಿದರು; ‘ನಿಮಗಿಬ್ಬರಿಗೂ (ಕನಸಿನಲ್ಲಿ) ನೀಡಲಾದ ಆಹಾರದ ವ್ಯಾಖ್ಯಾನ ವನ್ನು ಅದು ನಿಮಗೆ ಬಂದು ತಲುಪುವ ಮುಂಚೆಯೇ ನಿಮಗೆ ನಾನು ಹೇಳಬಲ್ಲೆ. ಇದು ನನ್ನ ಪ್ರಭು ನನಗೆ ಕೊಟ್ಟಿರುವ ಜ್ಞಾನಗಳಲ್ಲೊಂದು . ನಾನು ಅಲ್ಲಾಹನ ಮೇಲೆ ವಿಶ್ವಾಸವಿಡದವರ ಮತ್ತು ಪರಲೋಕವನ್ನು ನಿರಾಕರಿಸುವವರ ಮಾರ್ಗವನ್ನು ತ್ಯಜಿಸಿರುವೆನು.

Verse 38

وَٱتَّبَعْتُ مِلَّةَ ءَابَآءِىٓ إِبْرَٰهِيمَ وَإِسْحَـٰقَ وَيَعْقُوبَ ۚ مَا كَانَ لَنَآ أَن نُّشْرِكَ بِٱللَّهِ مِن شَىْءٍ ۚ ذَٰلِكَ مِن فَضْلِ ٱللَّهِ عَلَيْنَا وَعَلَى ٱلنَّاسِ وَلَـٰكِنَّ أَكْثَرَ ٱلنَّاسِ لَا يَشْكُرُونَ

Transliteration wa-ittabaʿtu millata ābāī ib'rāhīma wa-is'ḥāqa wayaʿqūba mā kāna lanā an nush'rika bil-lahi min shayin dhālika min faḍli l-lahi ʿalaynā waʿalā l-nāsi walākinna akthara l-nāsi lā yashkurūna

Kannada ನನ್ನ ಪೂರ್ವಜರಾಗಿರುವ ಇಬ್‍ರಾಹೀಮ್, ಇಸ್‍ಹಾಖ್ ಮತ್ತು ಯಅïಖೂಬರ ಮಾರ್ಗ ವನ್ನು ನಾನು ಅವಲಂಬಿಸಿದ್ದೇನೆ . ಅಲ್ಲಾಹ ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿಸುವುದು ನಮಗೆ ಸಲ್ಲದು. ಇದು (ಸನ್ಮಾರ್ಗ) ನಮ್ಮ ಮೇಲೆ ಮತ್ತು ಮಾನವರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ.

Verse 39

يَـٰصَـٰحِبَىِ ٱلسِّجْنِ ءَأَرْبَابٌ مُّتَفَرِّقُونَ خَيْرٌ أَمِ ٱللَّهُ ٱلْوَٰحِدُ ٱلْقَهَّارُ

Transliteration yāṣāḥibayi l-sij'ni a-arbābun mutafarriqūna khayrun ami l-lahu l-wāḥidu l-qahāru

Kannada ಓ ಸೆರೆಮನೆಯ ನನ್ನ ಸಂಗಾತಿಗಳೇ, ಬೇರೆ ಬೇರೆ ವಿಧದ ದೇವರುಗಳು ಲೇಸೋ ಅಥವಾ ಸರ್ವಾಧಿಕಾರಿಯಾದ ಏಕ ಅಲ್ಲಾಹನೋ?

Verse 40

مَا تَعْبُدُونَ مِن دُونِهِۦٓ إِلَّآ أَسْمَآءً سَمَّيْتُمُوهَآ أَنتُمْ وَءَابَآؤُكُم مَّآ أَنزَلَ ٱللَّهُ بِهَا مِن سُلْطَـٰنٍ ۚ إِنِ ٱلْحُكْمُ إِلَّا لِلَّهِ ۚ أَمَرَ أَلَّا تَعْبُدُوٓا۟ إِلَّآ إِيَّاهُ ۚ ذَٰلِكَ ٱلدِّينُ ٱلْقَيِّمُ وَلَـٰكِنَّ أَكْثَرَ ٱلنَّاسِ لَا يَعْلَمُونَ

Transliteration mā taʿbudūna min dūnihi illā asmāan sammaytumūhā antum waābāukum mā anzala l-lahu bihā min sul'ṭānin ini l-ḥuk'mu illā lillahi amara allā taʿbudū illā iyyāhu dhālika l-dīnu l-qayimu walākinna akthara l-nāsi lā yaʿlamūna

Kannada ಅಲ್ಲಾಹನ ಹೊರತು ನೀವು ಆರಾಧಿಸುತ್ತಿರುವ ಬೇರೆ ಬೇರೆ ವಸ್ತುಗಳೆಲ್ಲ ನೀವೂ ನಿಮ್ಮ ಪೂರ್ವಿ ಕರೂ ಹಾಕಿಕೊಂಡಿರುವ ಬರೇ ಹೆಸರುಗಳು ಮಾತ್ರ. ಅಲ್ಲಾಹನು ಅವುಗಳ ಬಗ್ಗೆ ಯಾವ ಆಧಾರವನ್ನೂ ಇಳಿಸಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೆ ಮಾತ್ರ. ಅವನ ಹೊರತು ಬೇರೆ ಯಾರಿಗೂ ಆರಾ ಧನೆ ಸಲ್ಲಿಸಬಾರದೆಂದು ಅವನ ಕಟ್ಟಪ್ಪಣೆ ಇದೆ. ಇದೇ ಅಪ್ಪಟ ಋಜು ಮಾರ್ಗ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ .

Verse 41

يَـٰصَـٰحِبَىِ ٱلسِّجْنِ أَمَّآ أَحَدُكُمَا فَيَسْقِى رَبَّهُۥ خَمْرًا ۖ وَأَمَّا ٱلْـَٔاخَرُ فَيُصْلَبُ فَتَأْكُلُ ٱلطَّيْرُ مِن رَّأْسِهِۦ ۚ قُضِىَ ٱلْأَمْرُ ٱلَّذِى فِيهِ تَسْتَفْتِيَانِ

Transliteration yāṣāḥibayi l-sij'ni ammā aḥadukumā fayasqī rabbahu khamran wa-ammā l-ākharu fayuṣ'labu fatakulu l-ṭayru min rasihi quḍiya l-amru alladhī fīhi tastaftiyāni

Kannada ಓ ಸೆರೆಮನೆಯ ನನ್ನ ಸಂಗಾತಿಗಳೇ, ನಿಮ್ಮ ಸ್ವಪ್ನದ ಫಲವೇನೆಂದರೆ; ನಿಮ್ಮಲ್ಲೋರ್ವನು ತನ್ನ ರಾಜನಿಗೆ ಮದ್ಯ ಸುರಿದು ಕೊಡುವ ಹುದ್ದೆಗೆ ಮರಳುವನು. ಇನ್ನೊಬ್ಬನು ಗಲ್ಲಿಗೇರಿಸಲ್ಪಡು ವನು ಮತ್ತು ಪಕ್ಷಿಗಳು ಅವನ ತಲೆಯನ್ನು ಕುಕ್ಕಿ ಕುಕ್ಕಿ ತಿನ್ನಲಿವೆ. ನೀವು ಕೇಳಿದ ಸ್ವಪ್ನ ವ್ಯಾಖ್ಯಾ ನದ ಫಲ ಅಲ್ಲಾಹನ ಬಳಿ ದಾಖಲಾಯಿತು.

Verse 42

وَقَالَ لِلَّذِى ظَنَّ أَنَّهُۥ نَاجٍ مِّنْهُمَا ٱذْكُرْنِى عِندَ رَبِّكَ فَأَنسَىٰهُ ٱلشَّيْطَـٰنُ ذِكْرَ رَبِّهِۦ فَلَبِثَ فِى ٱلسِّجْنِ بِضْعَ سِنِينَ

Transliteration waqāla lilladhī ẓanna annahu nājin min'humā udh'kur'nī ʿinda rabbika fa-ansāhu l-shayṭānu dhik'ra rabbihi falabitha fī l-sij'ni biḍ'ʿa sinīna

Kannada ಅವರಿಬ್ಬರ ಪೈಕಿ ಬಿಡುಗಡೆಯಾಗುವನೆಂದು ತಾನು ಭಾವಿಸಿದ ವ್ಯಕ್ತಿಯೊಡನೆ ಯೂಸುಫ್‍ರು, ‘ನಿನ್ನ ಪ್ರಭುವಿನ ಬಳಿ ನನ್ನ ಬಗ್ಗೆ ತಿಳಿಸು’ ಎಂದು ಹೇಳಿದರು. ಆದರೆ ಅವನು ತನ್ನ ಯಜಮಾನ ನೊಡನೆ ಯೂಸುಫರ ಪ್ರಸ್ತಾಪವೆತ್ತಲು ಶೈತಾನ ನು ಅವನಿಗೆ ಮರೆವೆಗೊಳಿಸಿದ್ದನು. ಹೀಗೆ ಅವರು ಅನೇಕ ವರ್ಷಗಳವರೆಗೆ ಸೆರೆಮನೆಯಲ್ಲೇ ಕಳೆದರು.

Verse 43

وَقَالَ ٱلْمَلِكُ إِنِّىٓ أَرَىٰ سَبْعَ بَقَرَٰتٍ سِمَانٍ يَأْكُلُهُنَّ سَبْعٌ عِجَافٌ وَسَبْعَ سُنۢبُلَـٰتٍ خُضْرٍ وَأُخَرَ يَابِسَـٰتٍ ۖ يَـٰٓأَيُّهَا ٱلْمَلَأُ أَفْتُونِى فِى رُءْيَـٰىَ إِن كُنتُمْ لِلرُّءْيَا تَعْبُرُونَ

Transliteration waqāla l-maliku innī arā sabʿa baqarātin simānin yakuluhunna sabʿun ʿijāfun wasabʿa sunbulātin khuḍ'rin wa-ukhara yābisātin yāayyuhā l-mala-u aftūnī fī ru'yāya in kuntum lilrru'yā taʿburūna

Kannada (ಒಂದು ದಿನ) ಅರಸನು, ‘ನಾನು ಸ್ವಪ್ನದಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು ಬಡಕಲು ಹಸು ಗಳು ತಿನ್ನುತ್ತಿರುವುದನ್ನೂ ಧಾನ್ಯದ ಏಳುತೆನೆ ಗಳು ಹಸಿರಾಗಿದ್ದು ಇತರ ಏಳು ತೆನೆಗಳು ಒಣಗಿರುವುದನ್ನು ಕಂಡಿರುತ್ತೇನೆ. ಓ ನನ್ನ ಆಸ್ಥಾನದ ವರೇ, ನೀವು ಸ್ವಪ್ನಗಳ ಫಲ ಬಲ್ಲವರಾಗಿದ್ದರೆ, ನನಗೆ ಈ ಸ್ವಪ್ನದ ಬಗ್ಗೆ ತೀರ್ಪು ನೀಡಿರಿ’ ಎಂದನು.

Verse 44

قَالُوٓا۟ أَضْغَـٰثُ أَحْلَـٰمٍ ۖ وَمَا نَحْنُ بِتَأْوِيلِ ٱلْأَحْلَـٰمِ بِعَـٰلِمِينَ

Transliteration qālū aḍghāthu aḥlāmin wamā naḥnu bitawīli l-aḥlāmi biʿālimīna

Kannada ಆಗ ಅವರು ‘ಇದು ಕನಸುಗಳ ಕಂತೆ. ಇಂತಹ ಕಂತೆ ಕನಸುಗಳ ಫಲ ನಮಗೆ ತಿಳಿಯದು’ ಎಂದರು.

Verse 45

وَقَالَ ٱلَّذِى نَجَا مِنْهُمَا وَٱدَّكَرَ بَعْدَ أُمَّةٍ أَنَا۠ أُنَبِّئُكُم بِتَأْوِيلِهِۦ فَأَرْسِلُونِ

Transliteration waqāla alladhī najā min'humā wa-iddakara baʿda ummatin anā unabbi-ukum bitawīlihi fa-arsilūni

Kannada ಆ ಇಬ್ಬರು ಸೆರೆಯಾಳುಗಳ ಪೈಕಿ ಬಿಡುಗಡೆ ಹೊಂದಿ ದವನು ದೀರ್ಘಕಾಲದ ತರುವಾಯ (ಇದೀಗ ಯೂಸುಫರನ್ನು) ನೆನಪಿಸಿಕೊಳ್ಳುತ್ತ `ನಿಮಗೆ ಇದರ ಫಲ ನಾನು ತಿಳಿಸಿಕೊಡುತ್ತೇನೆ. ನನ್ನನ್ನು (ಯೂಸುಫರ ಬಳಿಗೆ) ಕಳುಹಿಸಿರಿ’ ಎಂದನು.

Verse 46

يُوسُفُ أَيُّهَا ٱلصِّدِّيقُ أَفْتِنَا فِى سَبْعِ بَقَرَٰتٍ سِمَانٍ يَأْكُلُهُنَّ سَبْعٌ عِجَافٌ وَسَبْعِ سُنۢبُلَـٰتٍ خُضْرٍ وَأُخَرَ يَابِسَـٰتٍ لَّعَلِّىٓ أَرْجِعُ إِلَى ٱلنَّاسِ لَعَلَّهُمْ يَعْلَمُونَ

Transliteration yūsufu ayyuhā l-ṣidīqu aftinā fī sabʿi baqarātin simānin yakuluhunna sabʿun ʿijāfun wasabʿi sunbulātin khuḍ'rin wa-ukhara yābisātin laʿallī arjiʿu ilā l-nāsi laʿallahum yaʿlamūna

Kannada (ಅವನು ಯೂಸುಫರ ಬಳಿ ಹೋಗಿ ಇಂತೆಂ ದನು;) ‘ಓ ಸತ್ಯಸಂಧರಾದ ಯೂಸುಫರೇ, ಏಳು ಕೊಬ್ಬಿದ ಹಸುಗಳನ್ನು ಏಳು ಕೃಶವಾದ ಹಸುಗಳು ತಿನ್ನುತ್ತಿವೆ ಮತ್ತು ಏಳು ತೆನೆಗಳು ಹಸುರಾಗಿಯೂ ಇನ್ನು ಏಳು ತೆನೆಗಳು ಒಣಗಿಯೂ ಇವೆ. ಈ ಸ್ವಪ್ನದ ಫಲವನ್ನು ನನಗೆ ಹೇಳಿರಿ. ಹಾಗಾದರೆ ನಾನು ಆ ವಿವರದೊಂದಿಗೆ ಅವರ ಬಳಿ ಮರಳುತ್ತೇನೆ. ಅವರಿಗೆ ನಿಜಸ್ಥಿತಿ ತಿಳಿಯಬಹುದು’.

Verse 47

قَالَ تَزْرَعُونَ سَبْعَ سِنِينَ دَأَبًا فَمَا حَصَدتُّمْ فَذَرُوهُ فِى سُنۢبُلِهِۦٓ إِلَّا قَلِيلًا مِّمَّا تَأْكُلُونَ

Transliteration qāla tazraʿūna sabʿa sinīna da-aban famā ḥaṣadttum fadharūhu fī sunbulihi illā qalīlan mimmā takulūna

Kannada ಯೂಸುಫ್ ಹೇಳಿದರು ‘ಏಳು ವರ್ಷಗಳ ಕಾಲ ನೀವು ನಿರಂತರವಾಗಿ ಕೃಷಿ ಮಾಡಿರಿ. ಆಮೇಲೆ ನೀವು ಕೊಯ್ಯುವ ಬೆಳೆಯಿಂದ ನಿಮ್ಮ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು ಅದರ ತೆನೆಗಳಲ್ಲೇ ಇರಗೊಡಿರಿ.

Verse 48

ثُمَّ يَأْتِى مِنۢ بَعْدِ ذَٰلِكَ سَبْعٌ شِدَادٌ يَأْكُلْنَ مَا قَدَّمْتُمْ لَهُنَّ إِلَّا قَلِيلًا مِّمَّا تُحْصِنُونَ

Transliteration thumma yatī min baʿdi dhālika sabʿun shidādun yakul'na mā qaddamtum lahunna illā qalīlan mimmā tuḥ'ṣinūna

Kannada ಅನಂತರ ಏಳು ವರ್ಷಗಳ ಕಾಲ ಬರಗಾಲ ಬರ ಲಿವೆ. ಆ ವರ್ಷಗಳು ಅಂದಿಗಾಗಿ ನೀವು ಮೊದಲೇ ಸಂಗ್ರಹಿಸಿಟ್ಟುದನ್ನು ತಿಂದು ಮುಗಿಸಲಿವೆ. ನೀವು ಜೋಪಾನವಾಗಿರಿಸಿದ ಅಲ್ಪಾಂಶವನ್ನು ಹೊರತುಪಡಿಸಿ.

Verse 49

ثُمَّ يَأْتِى مِنۢ بَعْدِ ذَٰلِكَ عَامٌ فِيهِ يُغَاثُ ٱلنَّاسُ وَفِيهِ يَعْصِرُونَ

Transliteration thumma yatī min baʿdi dhālika ʿāmun fīhi yughāthu l-nāsu wafīhi yaʿṣirūna

Kannada ಅನಂತರ ಬರುವ ಇನ್ನೊಂದು ವರ್ಷದಲ್ಲಿ ಜನ ರಿಗೆ ಸಮೃದ್ಧಿ ಸಿಗುವುದು. ಮತ್ತು ಅವರು ದ್ರಾಕ್ಷಾರಸ ಹಿಂಡುವರು .

Verse 50

وَقَالَ ٱلْمَلِكُ ٱئْتُونِى بِهِۦ ۖ فَلَمَّا جَآءَهُ ٱلرَّسُولُ قَالَ ٱرْجِعْ إِلَىٰ رَبِّكَ فَسْـَٔلْهُ مَا بَالُ ٱلنِّسْوَةِ ٱلَّـٰتِى قَطَّعْنَ أَيْدِيَهُنَّ ۚ إِنَّ رَبِّى بِكَيْدِهِنَّ عَلِيمٌ

Transliteration waqāla l-maliku i'tūnī bihi falammā jāahu l-rasūlu qāla ir'jiʿ ilā rabbika fasalhu mā bālu l-nis'wati allātī qaṭṭaʿna aydiyahunna inna rabbī bikaydihinna ʿalīmun

Kannada ಅರಸನು, ‘ಅವರನ್ನು ನನ್ನ ಬಳಿಗೆ ಕರೆ ತನ್ನಿರಿ’ ಎಂದನು. ಆದರೆ ರಾಜದೂತನು ಯೂಸುಫರ ಬಳಿಗೆ ಬಂದಾಗ ಯೂಸುಫರು ಹೇಳಿದರು ‘ನಿನ್ನ ರಾಜನ ಬಳಿಗೆ ನೀನು ಹಿಂದಿರುಗಿ ಹೋಗು ಮತ್ತು ಅಂದು ತಮ್ಮ ಕೈಗಳನ್ನು ಕೊಯ್ದುಕೊಂಡ ಮಹಿ ಳೆಯರ ಅಭಿಪ್ರಾಯವೇನೆಂದು ಅವನೊಡನೆ ಕೇಳು. ನನ್ನ ಪ್ರಭು ಅವರ ಕುತಂತ್ರಗಳನ್ನು ಚೆನ್ನಾಗಿ ಬಲ್ಲನು’.

Verse 51

قَالَ مَا خَطْبُكُنَّ إِذْ رَٰوَدتُّنَّ يُوسُفَ عَن نَّفْسِهِۦ ۚ قُلْنَ حَـٰشَ لِلَّهِ مَا عَلِمْنَا عَلَيْهِ مِن سُوٓءٍ ۚ قَالَتِ ٱمْرَأَتُ ٱلْعَزِيزِ ٱلْـَٔـٰنَ حَصْحَصَ ٱلْحَقُّ أَنَا۠ رَٰوَدتُّهُۥ عَن نَّفْسِهِۦ وَإِنَّهُۥ لَمِنَ ٱلصَّـٰدِقِينَ

Transliteration qāla mā khaṭbukunna idh rāwadttunna yūsufa ʿan nafsihi qul'na ḥāsha lillahi mā ʿalim'nā ʿalayhi min sūin qālati im'ra-atu l-ʿazīzi l-āna ḥaṣḥaṣa l-ḥaqu anā rāwadttuhu ʿan nafsihi wa-innahu lamina l-ṣādiqīna

Kannada ಅರಸನು (ಆ ಸ್ತ್ರೀಯರನ್ನು ತನ್ನ ಬಳಿಗೆ ಕರೆಸಿ) ‘ನೀವು ಯೂಸುಫರನ್ನು ವಶೀಕರಿಸಲು ಕುತಂತ್ರವನ್ನು ಹೆಣೆದಾಗ ನಿಮಗಾದ ಅನುಭವವೇನು?’ ಎಂದು ಕೇಳಿದನು. ಅವರು ‘ಅಲ್ಲಾಹು ಪರಿಶುದ್ಧನು. ಅವರಲ್ಲಿ ಯಾವ ದೋಷವನ್ನೂ ನಾವು ಅರಿತಿಲ್ಲ’ ಎಂದರು. ಅಝೀಝನ ಪತ್ನಿ ಯು, ‘ಈಗ ಸತ್ಯವು ಬಯಲಾಗಿದೆ. ಅವರನ್ನು ಪುಸಲಾಯಿಸಲು ನಾನೇ ಪ್ರಯತ್ನಿಸಿದ್ದೆ. ಖಂಡಿತವಾಗಿಯೂ ಅವರು ಸತ್ಯಸಂಧರು’ ಎಂದು ಹೇಳಿದಳು.

Verse 52

ذَٰلِكَ لِيَعْلَمَ أَنِّى لَمْ أَخُنْهُ بِٱلْغَيْبِ وَأَنَّ ٱللَّهَ لَا يَهْدِى كَيْدَ ٱلْخَآئِنِينَ

Transliteration dhālika liyaʿlama annī lam akhun'hu bil-ghaybi wa-anna l-laha lā yahdī kayda l-khāinīna

Kannada (ಯೂಸುಫ್ ಹೇಳಿದರು,) ‘ಇದರ ಉದ್ದೇಶವು ನಾನು ಯಜಮಾನರಿಗೆ ಅವರ ಅಭಾವದಲ್ಲಿ ದ್ರೋಹವೆಸಗಲಿಲ್ಲವೆಂದೂ ಅಲ್ಲಾಹು ದ್ರೋಹಿಗಳ ಕುತಂತ್ರವನ್ನು ಸಫಲಗೊಳಿಸಲು ಬಿಡುವುದಿಲ್ಲವೆಂದೂ ಯಜಮಾನರು ತಿಳಿದುಕೊಳ್ಳಬೇಕು ಎಂಬುದಾಗಿದೆ’.

Verse 53

۞ وَمَآ أُبَرِّئُ نَفْسِىٓ ۚ إِنَّ ٱلنَّفْسَ لَأَمَّارَةٌۢ بِٱلسُّوٓءِ إِلَّا مَا رَحِمَ رَبِّىٓ ۚ إِنَّ رَبِّى غَفُورٌ رَّحِيمٌ

Transliteration wamā ubarri-u nafsī inna l-nafsa la-ammāratun bil-sūi illā mā raḥima rabbī inna rabbī ghafūrun raḥīmun

Kannada ನನ್ನ ಮನಸ್ಸು ನಿರ್ದೋಷಿಯೆಂದು ನಾನೇನೂ ಹೇಳಿಕೊಳ್ಳಲಾರೆ. ನನ್ನ ಪ್ರಭುವಿನ ಕೃಪೆಯಿಲ್ಲದೆ ಹೋದರೆ ಮನಸ್ಸು ಕೇಡಿನ ಕಡೆಗೇ ಪ್ರೇರೇಪಿಸುತ್ತದೆ. ನಿಶ್ಚಯವಾಗಿಯೂ ನನ್ನ ಪ್ರಭು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ.

Verse 54

وَقَالَ ٱلْمَلِكُ ٱئْتُونِى بِهِۦٓ أَسْتَخْلِصْهُ لِنَفْسِى ۖ فَلَمَّا كَلَّمَهُۥ قَالَ إِنَّكَ ٱلْيَوْمَ لَدَيْنَا مَكِينٌ أَمِينٌ

Transliteration waqāla l-maliku i'tūnī bihi astakhliṣ'hu linafsī falammā kallamahu qāla innaka l-yawma ladaynā makīnun amīnun

Kannada ಅರಸನು ಹೇಳಿದನು, ಅವನನ್ನು ನನ್ನ ಬಳಿಗೆ ಕರೆ ತನ್ನಿರಿ, ನಾನು ಅವನನ್ನು ಉನ್ನತ ಅಧಿಕಾರಿಯಾಗಿ ನೇಮಿಸಲಿದ್ದೇನೆ. ಯೂಸುಫರು ಅವ ನೊಡನೆ ಮಾತುಕತೆ ನಡೆಸಿದಾಗ ಅವನು ಹೀಗೆಂದನು, ‘ನೀವು ಇಂದಿನಿಂದ ನಮ್ಮ ಬಳಿ ಉನ್ನತ ಸ್ಥಾನೀಯರೂ ವಿಶ್ವಾಸಯೋಗ್ಯರೂ ಆಗಿರುವಿರಿ’.

Verse 55

قَالَ ٱجْعَلْنِى عَلَىٰ خَزَآئِنِ ٱلْأَرْضِ ۖ إِنِّى حَفِيظٌ عَلِيمٌ

Transliteration qāla ij'ʿalnī ʿalā khazāini l-arḍi innī ḥafīẓun ʿalīmun

Kannada ಯೂಸುಫ್ ಹೇಳಿದರು, ‘ಹಾಗಾದರೆ ದೇಶದ ಹಣಕಾಸಿನ ಖಾತೆಯನ್ನು ನನ್ನ ವಶಕ್ಕೆ ಬಿಡಿರಿ. ನಿಶ್ಚಯವಾಗಿಯೂ ನಾನು ರಕ್ಷಣೆ ಮಾಡುವವನೂ ತಿಳುವಳಿಕೆಯುಳ್ಳವನೂ ಆಗಿರುತ್ತೇನೆ’ .

Verse 56

وَكَذَٰلِكَ مَكَّنَّا لِيُوسُفَ فِى ٱلْأَرْضِ يَتَبَوَّأُ مِنْهَا حَيْثُ يَشَآءُ ۚ نُصِيبُ بِرَحْمَتِنَا مَن نَّشَآءُ ۖ وَلَا نُضِيعُ أَجْرَ ٱلْمُحْسِنِينَ

Transliteration wakadhālika makkannā liyūsufa fī l-arḍi yatabawwa-u min'hā ḥaythu yashāu nuṣību biraḥmatinā man nashāu walā nuḍīʿu ajra l-muḥ'sinīna

Kannada ಹೀಗೆ ನಾವು ಯೂಸುಫರಿಗೆ ಆ ಭೂಭಾಗದಲ್ಲಿ ತಾನಿಚ್ಛಿಸಿದಲ್ಲಿ ವಾಸ್ತವ್ಯ ಹೂಡಲು ಅಧಿಕಾರ ವನ್ನು ಸುಗಮಗೊಳಿಸಿದೆವು . ನಾವು ನಮಗಿ ಷ್ಟವಿದ್ದವರಿಗೆ ನಮ್ಮ ಕೃಪೆಯನ್ನು ಕರುಣಿಸುತ್ತೇವೆ. ಸದ್ಭಕ್ತರ ಪ್ರತಿಫಲವನ್ನು ನಾವು ನಷ್ಟಗೊಳಿಸುವುದಿಲ್ಲ.

Verse 57

وَلَأَجْرُ ٱلْـَٔاخِرَةِ خَيْرٌ لِّلَّذِينَ ءَامَنُوا۟ وَكَانُوا۟ يَتَّقُونَ

Transliteration wala-ajru l-ākhirati khayrun lilladhīna āmanū wakānū yattaqūna

Kannada ಸತ್ಯವಿಶ್ವಾಸವನ್ನಿರಿಸಿ, ದೇವಭಯದೊಂದಿಗೆ ಸೂಕ್ಷ್ಮತೆ ಪಾಲಿಸಿದವರಿಗೆ ಪರಲೋಕದ ಪ್ರತಿಫಲವು ಇನ್ನಷ್ಟು ಉತ್ತಮವಾಗಿರುತ್ತದೆ.

Verse 58

وَجَآءَ إِخْوَةُ يُوسُفَ فَدَخَلُوا۟ عَلَيْهِ فَعَرَفَهُمْ وَهُمْ لَهُۥ مُنكِرُونَ

Transliteration wajāa ikh'watu yūsufa fadakhalū ʿalayhi faʿarafahum wahum lahu munkirūna

Kannada ಯೂಸುಫರ ಸಹೋದರರು (ಆಹಾರ ಧಾನ್ಯ ವನ್ನು ತರಲು) ಈಜಿಫ್ತಿಗೆ ಬಂದರು ಮತ್ತು ಯೂಸುಫರ ಮುಂದೆ ಹಾಜರಾದರು. ಯೂಸುಫರಿಗೆ ಸಹೋದರರ ಗುರುತು ಸಿಕ್ಕಿತು. ಆದರೆ ಸಹೋದರರಿಗೆ ಯೂಸುಫರ ಗುರುತು ಸಿಗಲಿಲ್ಲ.

Verse 59

وَلَمَّا جَهَّزَهُم بِجَهَازِهِمْ قَالَ ٱئْتُونِى بِأَخٍ لَّكُم مِّنْ أَبِيكُمْ ۚ أَلَا تَرَوْنَ أَنِّىٓ أُوفِى ٱلْكَيْلَ وَأَنَا۠ خَيْرُ ٱلْمُنزِلِينَ

Transliteration walammā jahhazahum bijahāzihim qāla i'tūnī bi-akhin lakum min abīkum alā tarawna annī ūfī l-kayla wa-anā khayru l-munzilīna

Kannada ಅವರ ಸರಂಜಾಮುಗಳನ್ನು ಕಟ್ಟಿ ಅವರನ್ನು ಯಾತ್ರೆಗೆ ಅಣಿಗೊಳಿಸಿದಾಗ ಯೂಸುಫರು ಹೀಗೆ ಹೇಳಿದರು, ‘ನಿಮ್ಮ ಮಲ ಸಹೋದರನನ್ನು ನನ್ನ ಬಳಿಗೆ ಕರೆತರಬೇಕು. ನಾನು ಧಾನ್ಯಗ ಳನ್ನು ಕೊಂಡುಹೋಗಲು ಬರುವ ಪ್ರತಿಯೊಬ್ಬರಿಗೆ ನೀತಿಪೂರ್ವಕವಾಗಿ ಆಹಾರ ಧಾನ್ಯ ಗಳನ್ನು ಅಳತೆ ಪಾತ್ರೆ ತುಂಬಿ ಹಂಚುತ್ತಿರುವುದು ನೀವು ಗಮನಿಸುತ್ತಿಲ್ಲವೇ? ಅಲ್ಲದೆ ನಾನು ಎಷ್ಟು ಉತ್ತಮ ಅತಿಥೇಯನಾಗಿದ್ದೇನೆಂಬುದನ್ನೂ ಕಾಣುತ್ತೀರಲ್ಲವೆ?’

Verse 60

فَإِن لَّمْ تَأْتُونِى بِهِۦ فَلَا كَيْلَ لَكُمْ عِندِى وَلَا تَقْرَبُونِ

Transliteration fa-in lam tatūnī bihi falā kayla lakum ʿindī walā taqrabūni

Kannada ಮುಂದಿನ ಬಾರಿ ನೀವು ಅವನನ್ನು ಜತೆಯಲ್ಲಿ ಕರೆತರದಿದ್ದರೆ ನನ್ನಲ್ಲಿ ನಿಮಗೆ ಧಾನ್ಯವಿಲ್ಲ. ಮಾತ್ರವಲ್ಲ ನೀವು ಇತ್ತ ಬರುವುದೇ ಬೇಡ’ .

Verse 61

قَالُوا۟ سَنُرَٰوِدُ عَنْهُ أَبَاهُ وَإِنَّا لَفَـٰعِلُونَ

Transliteration qālū sanurāwidu ʿanhu abāhu wa-innā lafāʿilūna

Kannada ಅವರು ಹೇಳಿದರು, ‘ತಂದೆಯವರು ಅವನನ್ನು ಕಳುಹಿಸಲು ಒಪ್ಪುವಂತೆ ಮಾಡಲು ಪ್ರಯತ್ನಿಸುವೆವು. ಹೇಗಾದರೂ ಮಾಡಿ ತಮ್ಮನನ್ನು ಕರಕೊಂಡು ಬರುತ್ತೇವೆ’ .

Verse 62

وَقَالَ لِفِتْيَـٰنِهِ ٱجْعَلُوا۟ بِضَـٰعَتَهُمْ فِى رِحَالِهِمْ لَعَلَّهُمْ يَعْرِفُونَهَآ إِذَا ٱنقَلَبُوٓا۟ إِلَىٰٓ أَهْلِهِمْ لَعَلَّهُمْ يَرْجِعُونَ

Transliteration waqāla lifit'yānihi ij'ʿalū biḍāʿatahum fī riḥālihim laʿallahum yaʿrifūnahā idhā inqalabū ilā ahlihim laʿallahum yarjiʿūna

Kannada ಯೂಸುಫರು ಸೇವಕರಲ್ಲಿ ಸಹೋದರರು ಧಾನ್ಯದ ಬೆಲೆಯಾಗಿ ಕೊಟ್ಟ ಬೆಳ್ಳಿ ನಾಣ್ಯವನ್ನು ಅವರ ಅರಿವಿಗೆ ಬಾರದಂತೆ ಧಾನ್ಯದ ಚೀಲಕ್ಕೆ ಹಾಕಲು ಸೂಚಿಸಿದರು. ಸಹೋದರರು ತಮ್ಮ ಕುಟುಂಬದ ಕಡೆ ಮರಳಿದಾಗ ಅದು ಗೊತ್ತಾಗಿ ಮರಳಿ ಬರುವ ಸಲುವಾಗಿ.

Verse 63

فَلَمَّا رَجَعُوٓا۟ إِلَىٰٓ أَبِيهِمْ قَالُوا۟ يَـٰٓأَبَانَا مُنِعَ مِنَّا ٱلْكَيْلُ فَأَرْسِلْ مَعَنَآ أَخَانَا نَكْتَلْ وَإِنَّا لَهُۥ لَحَـٰفِظُونَ

Transliteration falammā rajaʿū ilā abīhim qālū yāabānā muniʿa minnā l-kaylu fa-arsil maʿanā akhānā naktal wa-innā lahu laḥāfiẓūna

Kannada ಅವರು ತಮ್ಮ ತಂದೆಯವರ ಬಳಿಗೆ ಮರಳಿದಾಗ ಹೀಗೆಂದರು, ‘ಅಪ್ಪಾ, ನಮಗೆ ಧಾನ್ಯವನ್ನು ಅಳೆದು ಕೊಡಲು ನಿರಾಕರಿಸಲಾಗಿದೆ. ಆದುದ ರಿಂದ ನಮಗೆ ಧಾನ್ಯವನ್ನು ಅಳೆದು ಕೊಡುವಂತಾಗಲು ತಾವು ನಮ್ಮ ಸಂಗಡ ನಮ್ಮ ಸಹೋದ ರನನ್ನು ಕಳುಹಿಸಿಕೊಡಿರಿ. ಅವನ ರಕ್ಷಣೆಗೆ ನಾವು ಹೊಣೆಗಾರರು’

Verse 64

قَالَ هَلْ ءَامَنُكُمْ عَلَيْهِ إِلَّا كَمَآ أَمِنتُكُمْ عَلَىٰٓ أَخِيهِ مِن قَبْلُ ۖ فَٱللَّهُ خَيْرٌ حَـٰفِظًا ۖ وَهُوَ أَرْحَمُ ٱلرَّٰحِمِينَ

Transliteration qāla hal āmanukum ʿalayhi illā kamā amintukum ʿalā akhīhi min qablu fal-lahu khayrun ḥāfiẓan wahuwa arḥamu l-rāḥimīna

Kannada ಆಗ ತಂದೆಯು ಹೇಳಿದರು; `ಇವನ ಅಣ್ಣನ ವಿಷಯದಲ್ಲಿ ಮುಂಚೆ ನಾನು ನಿಮ್ಮನ್ನು ನಂಬಿದಂತೆಯೇ ಹೊರತು ಇವನ ವಿಷಯದಲ್ಲೂ ನನಗೆ ನಿಮ್ಮನ್ನು ನಂಬಲಾದೀತೇ ? ಅಲ್ಲಾಹನೇ ಅತ್ಯುತ್ತಮ ರಕ್ಷಕನು ಮತ್ತು ಅವನು ಎಲ್ಲರಿಗಿಂತಲೂ ಹೆಚ್ಚು ಕರುಣಾಳುವಾಗಿರುತ್ತಾನೆ’.

Verse 65

وَلَمَّا فَتَحُوا۟ مَتَـٰعَهُمْ وَجَدُوا۟ بِضَـٰعَتَهُمْ رُدَّتْ إِلَيْهِمْ ۖ قَالُوا۟ يَـٰٓأَبَانَا مَا نَبْغِى ۖ هَـٰذِهِۦ بِضَـٰعَتُنَا رُدَّتْ إِلَيْنَا ۖ وَنَمِيرُ أَهْلَنَا وَنَحْفَظُ أَخَانَا وَنَزْدَادُ كَيْلَ بَعِيرٍ ۖ ذَٰلِكَ كَيْلٌ يَسِيرٌ

Transliteration walammā fataḥū matāʿahum wajadū biḍāʿatahum ruddat ilayhim qālū yāabānā mā nabghī hādhihi biḍāʿatunā ruddat ilaynā wanamīru ahlanā wanaḥfaẓu akhānā wanazdādu kayla baʿīrin dhālika kaylun yasīrun

Kannada ಅವರು ತಮ್ಮ ಸರಕನ್ನು ಬಿಚ್ಚಿದಾಗ ಅವರು ಕೊಟ್ಟ ಮೊಬಲಗು ಅವರಿಗೆ ಹಿಂದಿರುಗಿಸಲಾಗಿರುವುದನ್ನು ಕಂಡು, ಅಪ್ಪಾ, ನಮಗೆ ಇನ್ನೇನು ಬೇಕು? ಇದೋ, ನಮ್ಮ ಹಣವನ್ನೂ ನಮಗೆ ಹಿಂದಿರುಗಿ ಸಲಾಗಿದೆ. (ತಾವು ನಮ್ಮ ತಮ್ಮನನ್ನು ಕಳುಹಿಸಿ ಕೊಟ್ಟರೆ) ನಮ್ಮ ಕುಟುಂಬಕ್ಕೆ ಬೇಕಾದ ಆಹಾರ ಧಾನ್ಯ ತರುವೆವು. ನಮ್ಮ ತಮ್ಮನನ್ನು ಜಾಗೃತೆಯಿಂದ ನೋಡಿ ಕೊಳ್ಳುವೆವು. ಮತ್ತು ಒಂದು ಒಂಟೆ ಹೊರೆಯನ್ನು ಹೆಚ್ಚುವರಿಯಾಗಿ ಪಡೆಯುತ್ತೇವೆ. ಅದು (ರಾಜನಿಂದ ಸಿಗುವ) ಬಹಳ ಅನಾಯಾಸದ ತೂಕ’ ಎಂದರು.

Verse 66

قَالَ لَنْ أُرْسِلَهُۥ مَعَكُمْ حَتَّىٰ تُؤْتُونِ مَوْثِقًا مِّنَ ٱللَّهِ لَتَأْتُنَّنِى بِهِۦٓ إِلَّآ أَن يُحَاطَ بِكُمْ ۖ فَلَمَّآ ءَاتَوْهُ مَوْثِقَهُمْ قَالَ ٱللَّهُ عَلَىٰ مَا نَقُولُ وَكِيلٌ

Transliteration qāla lan ur'silahu maʿakum ḥattā tu'tūni mawthiqan mina l-lahi latatunnanī bihi illā an yuḥāṭa bikum falammā ātawhu mawthiqahum qāla l-lahu ʿalā mā naqūlu wakīlun

Kannada ಅವರ ತಂದೆ ಹೇಳಿದರು ‘ನಿಮ್ಮನ್ನು ವಿಪತ್ತುಗಳು ಆವರಿಸದ ಹೊರತು ಅವನನ್ನು ನನ್ನ ಬಳಿಗೆ ಮರಳಿ ಕರೆತರುವಿರೆಂದು ನೀವು ನನಗೆ ಅಲ್ಲಾ ಹನ ಹೆಸರಲ್ಲಿ ಖಾತರಿಯನ್ನು ನೀಡುವ ತನಕ ನಾನು ಅವನನ್ನು ನಿಮ್ಮ ಸಂಗಡ ಕಳುಹಿಸಿ ಕೊಡ ಲಾರೆ’. ಅವರು ಆ ಬಗ್ಗೆ ಖಾತರಿ ನೀಡಿದಾಗ ಅವರು ಹೇಳಿದರು, ‘ನಮ್ಮ ಈ ಹೇಳಿಕೆಗೆ ಅಲ್ಲಾಹನೇ ಸಾಕ್ಷಿ’.

Verse 67

وَقَالَ يَـٰبَنِىَّ لَا تَدْخُلُوا۟ مِنۢ بَابٍ وَٰحِدٍ وَٱدْخُلُوا۟ مِنْ أَبْوَٰبٍ مُّتَفَرِّقَةٍ ۖ وَمَآ أُغْنِى عَنكُم مِّنَ ٱللَّهِ مِن شَىْءٍ ۖ إِنِ ٱلْحُكْمُ إِلَّا لِلَّهِ ۖ عَلَيْهِ تَوَكَّلْتُ ۖ وَعَلَيْهِ فَلْيَتَوَكَّلِ ٱلْمُتَوَكِّلُونَ

Transliteration waqāla yābaniyya lā tadkhulū min bābin wāḥidin wa-ud'khulū min abwābin mutafarriqatin wamā ugh'nī ʿankum mina l-lahi min shayin ini l-ḥuk'mu illā lillahi ʿalayhi tawakkaltu waʿalayhi falyatawakkali l-mutawakilūna

Kannada ಅವರು ಹೇಳಿದರು, ‘ಓ ನನ್ನ ಮಕ್ಕಳೇ, ನೀವು ಈಜಿಪ್ತಿನ ರಾಜಧಾನಿಯೊಳಗೆ ಒಂದೇ ದ್ವಾರದ ಮೂಲಕ ಪ್ರವೇಶ ಮಾಡದಿರಿ. ಬೇರೆ ಬೇರೆ ದ್ವಾರ ಗಳಿಂದ ಪ್ರವೇಶ ಮಾಡಿರಿ. ಆದರೆ ಅಲ್ಲಾಹನ ವಿಧಿಯಿಂದ ನಿಮ್ಮನ್ನು ನಾನು ತಪ್ಪಿಸಲಾರೆ. ಆಜ್ಞಾ ಧಿಕಾರವು ಅಲ್ಲಾಹನಿಗಲ್ಲದೆ ಬೇರಾರಿಗೂ ಇಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿರಿಸಿ ದ್ದೇನೆ ಮತ್ತು ಭರವಸೆಯನ್ನಿರಿಸುವವರು ಅವನ ಮೇಲೆಯೇ ಇರಿಸಲಿ’.

Verse 68

وَلَمَّا دَخَلُوا۟ مِنْ حَيْثُ أَمَرَهُمْ أَبُوهُم مَّا كَانَ يُغْنِى عَنْهُم مِّنَ ٱللَّهِ مِن شَىْءٍ إِلَّا حَاجَةً فِى نَفْسِ يَعْقُوبَ قَضَىٰهَا ۚ وَإِنَّهُۥ لَذُو عِلْمٍ لِّمَا عَلَّمْنَـٰهُ وَلَـٰكِنَّ أَكْثَرَ ٱلنَّاسِ لَا يَعْلَمُونَ

Transliteration walammā dakhalū min ḥaythu amarahum abūhum mā kāna yugh'nī ʿanhum mina l-lahi min shayin illā ḥājatan fī nafsi yaʿqūba qaḍāhā wa-innahu ladhū ʿil'min limā ʿallamnāhu walākinna akthara l-nāsi lā yaʿlamūna

Kannada ಅವರು ತಮ್ಮ ತಂದೆಯ ಆದೇಶದಂತೆ ನಗರ ದೊಳಗೆ (ಬೇರೆ ಬೇರೆಯಾಗಿ) ಪ್ರವೇಶಿಸಿದಾಗ ಅದು ಅಲ್ಲಾಹನ ವಿದಿಯಿಂದ ಅವರನ್ನು ತಡೆಯಲಿಲ್ಲ. ಯಅïಖೂಬರು ತಮ್ಮ ಮನಸ್ಸಿನಲ್ಲಿದ್ದ ಒಂದು ಅಂಜಿಕೆಯನ್ನು ದೂರ ಮಾಡ ಬಯ ಸಿದ್ದರಷ್ಟೆ. ನಿಸ್ಸಂದೇಹವಾಗಿಯೂ ನಾವು ನೀಡಿದ ಶಿಕ್ಷಣದಿಂದ ಅವರು ಸುಶಿಕ್ಷಿತರಾಗಿದ್ದರು. ಆದರೆ ಹೆಚ್ಚಿನವರು ಪರಮಾರ್ಥವನ್ನು ತಿಳಿಯುವುದಿಲ್ಲ.

Verse 69

وَلَمَّا دَخَلُوا۟ عَلَىٰ يُوسُفَ ءَاوَىٰٓ إِلَيْهِ أَخَاهُ ۖ قَالَ إِنِّىٓ أَنَا۠ أَخُوكَ فَلَا تَبْتَئِسْ بِمَا كَانُوا۟ يَعْمَلُونَ

Transliteration walammā dakhalū ʿalā yūsufa āwā ilayhi akhāhu qāla innī anā akhūka falā tabta-is bimā kānū yaʿmalūna

Kannada ಇವರು ಯೂಸುಫರ ಸನ್ನಿಧಿಗೆ ತಲುಪಿದಾಗ ಯೂಸುಫರು ತಮ್ಮ ತಮ್ಮನನ್ನು ಒತ್ತಟ್ಟಿಗೆ ಕರೆದು, ‘ನಿನ್ನ ಆ ಸಹೋದರನೇ ನಾನು. ಆದ್ದರಿಂದ ಇವರು ಈ ತನಕ ಮಾಡಿದ ಕೃತ್ಯಗಳ ಬಗ್ಗೆ ನೀನು ದುಃಖಿಸಬೇಡ’ ಎಂದರು .

Verse 70

فَلَمَّا جَهَّزَهُم بِجَهَازِهِمْ جَعَلَ ٱلسِّقَايَةَ فِى رَحْلِ أَخِيهِ ثُمَّ أَذَّنَ مُؤَذِّنٌ أَيَّتُهَا ٱلْعِيرُ إِنَّكُمْ لَسَـٰرِقُونَ

Transliteration falammā jahhazahum bijahāzihim jaʿala l-siqāyata fī raḥli akhīhi thumma adhana mu-adhinun ayyatuhā l-ʿīru innakum lasāriqūna

Kannada ಯೂಸುಫ್ ತಮ್ಮ ಸಹೋದರರ ಸರಕುಗಳನ್ನು ಕಟ್ಟಿ ಅವರನ್ನು ಯಾನಕ್ಕೆ ಸಿದ್ಧಗೊಳಿಸಿದಾಗ ತಮ್ಮ ತಮ್ಮನ ಸರಕಿನಲ್ಲಿ ಅಳತೆ ಪಾತ್ರೆಯನ್ನು ಇಟ್ಟುಬಿಟ್ಟರು. ತರುವಾಯ ಕೂಗುವವನೊಬ್ಬನು, ‘ಓ ಯಾತ್ರಿಕ ತಂಡದವರೇ, ನೀವು ಕಳ್ಳರಿದ್ದೀರಿ’ ಎಂದು ಕೂಗಿದನು.

Verse 71

قَالُوا۟ وَأَقْبَلُوا۟ عَلَيْهِم مَّاذَا تَفْقِدُونَ

Transliteration qālū wa-aqbalū ʿalayhim mādhā tafqidūna

Kannada ಅವರು (ಅವನತ್ತ) ತಿರುಗಿ, ‘ನಿಮ್ಮದೇನು ಕಳೆದು ಹೋಗಿದೆ?’ ಎಂದು ಕೇಳಿದರು.

Verse 72

قَالُوا۟ نَفْقِدُ صُوَاعَ ٱلْمَلِكِ وَلِمَن جَآءَ بِهِۦ حِمْلُ بَعِيرٍ وَأَنَا۠ بِهِۦ زَعِيمٌ

Transliteration qālū nafqidu ṣuwāʿa l-maliki waliman jāa bihi ḥim'lu baʿīrin wa-anā bihi zaʿīmun

Kannada ಆಗ ಅವರು ಹೇಳಿದರು; ‘ರಾಜನ ಅಳತೆ ಪಾತ್ರೆಯು ಕಳೆದು ಹೋಗಿದೆ. ಅದನ್ನು ತಂದು ಕೊಟ್ಟವನಿಗೆ ಒಂದು ಒಂಟೆ ಹೊರುವಷ್ಟು ಧಾನ್ಯವಿದೆ. ಇದಕ್ಕೆ ನಾನು ಜವಾಬ್ದಾರನಾಗಿದ್ದೇನೆ’.

Verse 73

قَالُوا۟ تَٱللَّهِ لَقَدْ عَلِمْتُم مَّا جِئْنَا لِنُفْسِدَ فِى ٱلْأَرْضِ وَمَا كُنَّا سَـٰرِقِينَ

Transliteration qālū tal-lahi laqad ʿalim'tum mā ji'nā linuf'sida fī l-arḍi wamā kunnā sāriqīna

Kannada ಆ ಸಹೋದರರು, ‘ಅಲ್ಲಾಹನಾಣೆ! ನಾವು ಈ ದೇಶದಲ್ಲಿ ಕೇಡು ಮಾಡಲು ಬಂದಿಲ್ಲವೆಂದೂ ನಾವು ಕಳ್ಳರಲ್ಲವೆಂದೂ ನೀವು ಚೆನ್ನಾಗಿ ಬಲ್ಲಿರಿ’ ಎಂದರು.

Verse 74

قَالُوا۟ فَمَا جَزَٰٓؤُهُۥٓ إِن كُنتُمْ كَـٰذِبِينَ

Transliteration qālū famā jazāuhu in kuntum kādhibīna

Kannada ‘ನೀವು ಸುಳ್ಳುಗಾರರಾದರೆ ಆ ಸುಳ್ಳಿಗೇನು ಶಿಕ್ಷೆ?’ ಎಂದು ಅವರು ಕೇಳಿದರು.

Verse 75

قَالُوا۟ جَزَٰٓؤُهُۥ مَن وُجِدَ فِى رَحْلِهِۦ فَهُوَ جَزَٰٓؤُهُۥ ۚ كَذَٰلِكَ نَجْزِى ٱلظَّـٰلِمِينَ

Transliteration qālū jazāuhu man wujida fī raḥlihi fahuwa jazāuhu kadhālika najzī l-ẓālimīna

Kannada ಅದಕ್ಕೆ ಅವರು, ‘ಅದಕ್ಕಿರುವ ಶಿಕ್ಷೆಯಿಷ್ಟೇ, ಯಾರ ಸರಕಿನಲ್ಲಿ ಅದು ಸಿಗುವುದೋ ಆತ ವಶವಾಗು ವುದೇ ತಕ್ಕ ಶಿಕ್ಷೆ. ನಾವು ಅಕ್ರಮಿಗಳಿಗೆ ಈ ಕ್ರಮ ದಲ್ಲೇ ಶಿಕ್ಷೆ ಕೊಡುತ್ತೇವೆ’, ಎಂದು ಹೇಳಿದರು.

Verse 76

فَبَدَأَ بِأَوْعِيَتِهِمْ قَبْلَ وِعَآءِ أَخِيهِ ثُمَّ ٱسْتَخْرَجَهَا مِن وِعَآءِ أَخِيهِ ۚ كَذَٰلِكَ كِدْنَا لِيُوسُفَ ۖ مَا كَانَ لِيَأْخُذَ أَخَاهُ فِى دِينِ ٱلْمَلِكِ إِلَّآ أَن يَشَآءَ ٱللَّهُ ۚ نَرْفَعُ دَرَجَـٰتٍ مَّن نَّشَآءُ ۗ وَفَوْقَ كُلِّ ذِى عِلْمٍ عَلِيمٌ

Transliteration fabada-a bi-awʿiyatihim qabla wiʿāi akhīhi thumma is'takhrajahā min wiʿāi akhīhi kadhālika kid'nā liyūsufa mā kāna liyakhudha akhāhu fī dīni l-maliki illā an yashāa l-lahu narfaʿu darajātin man nashāu wafawqa kulli dhī ʿil'min ʿalīmun

Kannada ಆಗ ಯೂಸುಫ್ ತಮ್ಮ ಸಹೋದರನ ಸರಕಿನ ಚೀಲಕ್ಕಿಂತ ಮುಂಚೆ ಇತರ ಸಹೋದರರ ಚೀಲಗಳನ್ನು ತಪಾಸಣೆ ನಡೆಸಿದರು. ಆ ಬಳಿಕ ತನ್ನ ತಮ್ಮನ ಚೀಲದಿಂದ ಅದನ್ನು (ಅಳತೆ ಪಾತ್ರೆ ಯನ್ನು) ಹೊರತೆಗೆದರು. ಹೀಗೆ ನಾವು ಯೂಸು ಫರಿಗೆ ಉಪಾಯವನ್ನು ಕಲಿಸಿಕೊಟ್ಟೆವು . ಅಲ್ಲಾ ಹನು ಇಚ್ಛಿಸಿದ ಹೊರತು ರಾಜಧರ್ಮಶಾಸನದಲ್ಲಿ ತನ್ನ ತಮ್ಮನನ್ನು ವಶಪಡಿಸಿಕೊಳ್ಳುವ ಅವಕಾಶವಿರುತ್ತಿರಲಿಲ್ಲ. ನಾವು ನಮಗಿಷ್ಟ ಬಂದ ವರ ಸ್ಥಾನವನ್ನು ಉನ್ನತಗೊಳಿಸುತ್ತೇವೆ. ಪ್ರತಿಯೊಬ್ಬ ಜ್ಞಾನಿಗೂ ಮೇಲಾಗಿ ಓರ್ವ ಸರ್ವಜ್ಞನಿದ್ದಾನೆ.

Verse 77

۞ قَالُوٓا۟ إِن يَسْرِقْ فَقَدْ سَرَقَ أَخٌ لَّهُۥ مِن قَبْلُ ۚ فَأَسَرَّهَا يُوسُفُ فِى نَفْسِهِۦ وَلَمْ يُبْدِهَا لَهُمْ ۚ قَالَ أَنتُمْ شَرٌّ مَّكَانًا ۖ وَٱللَّهُ أَعْلَمُ بِمَا تَصِفُونَ

Transliteration qālū in yasriq faqad saraqa akhun lahu min qablu fa-asarrahā yūsufu fī nafsihi walam yub'dihā lahum qāla antum sharrun makānan wal-lahu aʿlamu bimā taṣifūna

Kannada ಆ ಸಹೋದರರು ಹೇಳಿದರು, ಈತನು ಕದ್ದರೆ ಆಶ್ಚರ್ಯವಿಲ್ಲ. ಇದಕ್ಕಿಂತ ಮುಂಚೆ ಇವನ ಅಣ್ಣ ಯೂಸುಫನೂ ಕದ್ದಿದ್ದಾನೆ. ಯೂಸುಫ್, ಅದನ್ನು ತನ್ನ ಮನದಲ್ಲಿ ಗುಟ್ಟಾಗಿಟ್ಟರು. ಹೊರಗೆ ತೋರ್ಪಡಿಸಿಕೊಳ್ಳಲಿಲ್ಲ. ‘ಮಹಾ ನೀಚರು ನೀವು! ನೀವು ಹೊರಿಸುತ್ತಿರುವ ಅಪವಾದದ ನಿಜ ಸ್ಥಿತಿಯನ್ನು ಅಲ್ಲಾಹು ಚೆನ್ನಾಗಿ ಬಲ್ಲವನಾಗಿರುತ್ತಾನೆ’ ಎಂದಿಷ್ಟೇ (ಸ್ವಗತಃ) ಹೇಳಿಕೊಂಡರು.

Verse 78

قَالُوا۟ يَـٰٓأَيُّهَا ٱلْعَزِيزُ إِنَّ لَهُۥٓ أَبًا شَيْخًا كَبِيرًا فَخُذْ أَحَدَنَا مَكَانَهُۥٓ ۖ إِنَّا نَرَىٰكَ مِنَ ٱلْمُحْسِنِينَ

Transliteration qālū yāayyuhā l-ʿazīzu inna lahu aban shaykhan kabīran fakhudh aḥadanā makānahu innā narāka mina l-muḥ'sinīna

Kannada ಅವರು ಹೇಳಿದರು, ‘ಓ ರಾಜರೇ, ಇವನ ತಂದೆ ತುಂಬಾ ವಯೋವೃದ್ಧರು. ತಾವು ಇವನ ಬದಲಿಗೆ ನಮ್ಮ ಪೈಕಿ ಯಾರನ್ನಾದರೂ ತಡೆದಿರಿಸಿಕೊಳ್ಳಿರಿ. ನಾವು ನಿಮ್ಮನ್ನು ಮಹಾ ಸಜ್ಜನರನ್ನಾಗಿ ಕಾಣು ತ್ತೇವೆ’.

Verse 79

قَالَ مَعَاذَ ٱللَّهِ أَن نَّأْخُذَ إِلَّا مَن وَجَدْنَا مَتَـٰعَنَا عِندَهُۥٓ إِنَّآ إِذًا لَّظَـٰلِمُونَ

Transliteration qāla maʿādha l-lahi an nakhudha illā man wajadnā matāʿanā ʿindahu innā idhan laẓālimūna

Kannada ಆಗ ಯೂಸುಫ್ ಹೇಳಿದರು, ‘ಅಲ್ಲಾಹನಲ್ಲಿ ಶರಣು! ನಾವು ನಮ್ಮ ಸೊತ್ತನ್ನು ಯಾರಲ್ಲಿ ಕಂಡೆವೋ ಅವನನ್ನು ಬಿಟ್ಟು ಇನ್ನೊಬ್ಬನನ್ನು ಇರಿಸಿಕೊಂಡರೆ ನಾವು ಅಕ್ರಮಿಗಳಾಗುವೆವು’ .

Verse 80

فَلَمَّا ٱسْتَيْـَٔسُوا۟ مِنْهُ خَلَصُوا۟ نَجِيًّا ۖ قَالَ كَبِيرُهُمْ أَلَمْ تَعْلَمُوٓا۟ أَنَّ أَبَاكُمْ قَدْ أَخَذَ عَلَيْكُم مَّوْثِقًا مِّنَ ٱللَّهِ وَمِن قَبْلُ مَا فَرَّطتُمْ فِى يُوسُفَ ۖ فَلَنْ أَبْرَحَ ٱلْأَرْضَ حَتَّىٰ يَأْذَنَ لِىٓ أَبِىٓ أَوْ يَحْكُمَ ٱللَّهُ لِى ۖ وَهُوَ خَيْرُ ٱلْحَـٰكِمِينَ

Transliteration falammā is'tayasū min'hu khalaṣū najiyyan qāla kabīruhum alam taʿlamū anna abākum qad akhadha ʿalaykum mawthiqan mina l-lahi wamin qablu mā farraṭtum fī yūsufa falan abraḥa l-arḍa ḥattā yadhana lī abī aw yaḥkuma l-lahu lī wahuwa khayru l-ḥākimīna

Kannada ಸಹೋದರರು ಬಿನ್ಯಾಮನ ಬಗ್ಗೆ ನಿರಾಶರಾ ದಾಗ ಅವರು ಒತ್ತಟ್ಟಿಗೆ ಹೋಗಿ ಪರಸ್ಪರ ಸಮಾಲೋಚಿಸಿದರು. ಅವರಲ್ಲಿ ಎಲ್ಲರಿಗೂ ಹಿರಿಯನಾಗಿದ್ದವನು ಹೇಳಿದನು, “(ತಮ್ಮನನ್ನು ಸುರಕ್ಷಿತ ವಾಗಿ ಮರಳಿಸುವ ಬಗ್ಗೆ) ನಿಮ್ಮ ತಂದೆ ನಿಮ್ಮೊಡನೆ ಅಲ್ಲಾಹನ ಹೆಸರಲ್ಲಿ ಕರಾರು ಪಡೆದಿರುವುದು ನಿಮಗೆ ತಿಳಿದಿಲ್ಲವೇ? ಇದಕ್ಕೆ ಮುಂಚೆ ಯೂಸುಫನ ವಿಷಯದಲ್ಲಿ ನೀವು ಎಡವಟ್ಟು ಮಾಡಿಕೊಂಡಿದ್ದೀರಲ್ಲ? ಆದ್ದರಿಂದ ನನ್ನ ತಂದೆಯವರು ನನಗೆ ಅನುಮತಿ ಕೊಡುವವರೆಗೆ ಅಥವಾ ಅಲ್ಲಾಹನೇ ನನ್ನ ಬಗ್ಗೆ ಇತ್ಯರ್ಥ ಮಾಡುವವರೆಗೆ ನಾನು ಈ ನೆಲದಿಂದ ಎಷ್ಟು ಮಾತ್ರಕ್ಕೂ ಕದಲಲಾರೆ. ಅಲ್ಲಾಹು ಅತ್ಯುತ್ತಮ ತೀರ್ಪುಗಾರನು.

Verse 81

ٱرْجِعُوٓا۟ إِلَىٰٓ أَبِيكُمْ فَقُولُوا۟ يَـٰٓأَبَانَآ إِنَّ ٱبْنَكَ سَرَقَ وَمَا شَهِدْنَآ إِلَّا بِمَا عَلِمْنَا وَمَا كُنَّا لِلْغَيْبِ حَـٰفِظِينَ

Transliteration ir'jiʿū ilā abīkum faqūlū yāabānā inna ib'naka saraqa wamā shahid'nā illā bimā ʿalim'nā wamā kunnā lil'ghaybi ḥāfiẓīna

Kannada ನೀವು ತಂದೆಯ ಬಳಿ ಮರಳಿ ಹೋಗಿ ಹೇಳಿರಿ; ‘ಅಪ್ಪಾ, ನಿಮ್ಮ ಮಗನು ಕದ್ದಿದ್ದಾನೆ. ಅವನು ಕಳವು ಮಾಡುವುದನ್ನು ನಾವು ನೋಡಲಿಲ್ಲ. ನಮಗೆ ಗೊತ್ತಿರುವುದನ್ನು ಮಾತ್ರ ನಾವು ಹೇಳು ತ್ತೇವೆ. ಅದೃಶ್ಯ ಸಂಗತಿಗಳ ಬಗ್ಗೆ ಮೇಲ್ನೋಟ ವಹಿಸಲು ನಮ್ಮಿಂದ ಸಾಧ್ಯವಿರಲಿಲ್ಲ.

Verse 82

وَسْـَٔلِ ٱلْقَرْيَةَ ٱلَّتِى كُنَّا فِيهَا وَٱلْعِيرَ ٱلَّتِىٓ أَقْبَلْنَا فِيهَا ۖ وَإِنَّا لَصَـٰدِقُونَ

Transliteration wasali l-qaryata allatī kunnā fīhā wal-ʿīra allatī aqbalnā fīhā wa-innā laṣādiqūna

Kannada ಬೇಕಾದರೆ ತಾವು ನಾವಿದ್ದ ನಾಡಿನ ಜನರಲ್ಲಿ ಹಾಗೂ ನಾವು ಬಂದ ಯಾತ್ರಾ ತಂಡದೊಂದಿಗೆ ವಿಚಾರಿಸಿ ನೋಡಿರಿ. ನಾವು ಸಂಪೂರ್ಣ ಸತ್ಯವಾದಿಗಳು’ ಎಂದು”.

Verse 83

قَالَ بَلْ سَوَّلَتْ لَكُمْ أَنفُسُكُمْ أَمْرًا ۖ فَصَبْرٌ جَمِيلٌ ۖ عَسَى ٱللَّهُ أَن يَأْتِيَنِى بِهِمْ جَمِيعًا ۚ إِنَّهُۥ هُوَ ٱلْعَلِيمُ ٱلْحَكِيمُ

Transliteration qāla bal sawwalat lakum anfusukum amran faṣabrun jamīlun ʿasā l-lahu an yatiyanī bihim jamīʿan innahu huwa l-ʿalīmu l-ḥakīmu

Kannada ತಂದೆಯು ಹೇಳಿದರು; ‘ಅಲ್ಲ, ನಿಮ್ಮ ಚಿತ್ತಗಳು ನಿಮಗೆ ಇನ್ನೊಂದು ದೊಡ್ಡ ವಿಷಯವನ್ನು ಚಂದ ಗಾಣಿಸಿಕೊಟ್ಟಿವೆ. ಆದ್ದರಿಂದ ಎಲ್ಲವನ್ನೂ ಚೆನ್ನಾಗಿ ತಾಳಿಕೊಳ್ಳುವೆನು. ಅಲ್ಲಾಹು ಅವರೆಲ್ಲರನ್ನೂ ತಂದು ನನ್ನೊಂದಿಗೆ ಸೇರಿಸಿಡುವ ಭರವಸೆ ನನಗಿದೆ. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು’.

Verse 84

وَتَوَلَّىٰ عَنْهُمْ وَقَالَ يَـٰٓأَسَفَىٰ عَلَىٰ يُوسُفَ وَٱبْيَضَّتْ عَيْنَاهُ مِنَ ٱلْحُزْنِ فَهُوَ كَظِيمٌ

Transliteration watawallā ʿanhum waqāla yāasafā ʿalā yūsufa wa-ib'yaḍḍat ʿaynāhu mina l-ḥuz'ni fahuwa kaẓīmun

Kannada ಅನಂತರ ಅವರು ಅವರಿಂದ (ಬೇರೊಂದು ದಿಕ್ಕಿಗೆ) ತಿರುಗಿ ಬಿಟ್ಟರು. ಮತ್ತು ‘ಅಕಟಾ! ಯೂ ಸುಫ್! ನನ್ನ ದುಃಖವೇ’ ಎಂದು ಮರುಗಿದರು. ಅಂತರಂಗದಲ್ಲಿ ಸಂಕಟವನ್ನು ಅದುಮಿಡುತ್ತಿ ದ್ದರು. ಅತ್ತು ಅತ್ತು ಅವರ ಕಣ್ಣುಗಳು ಬಿಳುಪೇರಿ ಬಿಟ್ಟಿದ್ದುವು.

Verse 85

قَالُوا۟ تَٱللَّهِ تَفْتَؤُا۟ تَذْكُرُ يُوسُفَ حَتَّىٰ تَكُونَ حَرَضًا أَوْ تَكُونَ مِنَ ٱلْهَـٰلِكِينَ

Transliteration qālū tal-lahi tafta-u tadhkuru yūsufa ḥattā takūna ḥaraḍan aw takūna mina l-hālikīna

Kannada ಮಕ್ಕಳು ಹೇಳಿದರು, `ಅಲ್ಲಾಹನಾಣೆ ! ತಾವಂತು ಯೂಸುಫನನ್ನೇ ನೆನೆಸುತ್ತ ದುಃಖದಿಂದ ಕರಗಿ ಬಿಟ್ಟಿದ್ದೀರಿ. ಅಥವಾ ತಮ್ಮ ಜೀವವನ್ನೇ ನಾಶ ಗೊಳಿಸಿ ಕೊಳ್ಳುವಿರಿ’.

Verse 86

قَالَ إِنَّمَآ أَشْكُوا۟ بَثِّى وَحُزْنِىٓ إِلَى ٱللَّهِ وَأَعْلَمُ مِنَ ٱللَّهِ مَا لَا تَعْلَمُونَ

Transliteration qāla innamā ashkū bathī waḥuz'nī ilā l-lahi wa-aʿlamu mina l-lahi mā lā taʿlamūna

Kannada ಅವರು ಹೀಗೆ ಹೇಳಿದರು; ನಾನು ನನ್ನ ಅಳಲು ಮತ್ತು ದುಃಖದ ಮೊರೆಯನ್ನು ಅಲ್ಲಾಹನ ಹೊರತು ಇನ್ನಾರಲ್ಲೂ ಇಡುವುದಿಲ್ಲ. ಅಲ್ಲಾಹನಿಂದ ನೀವು ತಿಳಿಯದ ಕೆಲವು ಕಾರ್ಯಗಳನ್ನು ನಾನುತಿಳಿದುಕೊಂಡಿದ್ದೇನೆ

Verse 87

يَـٰبَنِىَّ ٱذْهَبُوا۟ فَتَحَسَّسُوا۟ مِن يُوسُفَ وَأَخِيهِ وَلَا تَا۟يْـَٔسُوا۟ مِن رَّوْحِ ٱللَّهِ ۖ إِنَّهُۥ لَا يَا۟يْـَٔسُ مِن رَّوْحِ ٱللَّهِ إِلَّا ٱلْقَوْمُ ٱلْكَـٰفِرُونَ

Transliteration yābaniyya idh'habū fataḥassasū min yūsufa wa-akhīhi walā tāy'asū min rawḥi l-lahi innahu lā yāy'asu min rawḥi l-lahi illā l-qawmu l-kāfirūna

Kannada ಓ ನನ್ನ ಮಕ್ಕಳೇ, ನೀವು ಹೋಗಿ ಯೂಸುಫನ ನ್ನೂ ಅವನ ತಮ್ಮನನ್ನೂ ಪತ್ತೆ ಹಚ್ಚಿರಿ. ಅಲ್ಲಾಹನ ಅನುಗ್ರಹದ ಬಗ್ಗೆ ನಿರಾಶರಾಗಬೇಡಿರಿ. ಅವನ ಅನುಗ್ರಹದ ಬಗ್ಗೆ ಸತ್ಯನಿಷೇಧಿಗಳು ಮಾತ್ರ ನಿರಾಶರಾಗುತ್ತಾರೆ’ .

Verse 88

فَلَمَّا دَخَلُوا۟ عَلَيْهِ قَالُوا۟ يَـٰٓأَيُّهَا ٱلْعَزِيزُ مَسَّنَا وَأَهْلَنَا ٱلضُّرُّ وَجِئْنَا بِبِضَـٰعَةٍ مُّزْجَىٰةٍ فَأَوْفِ لَنَا ٱلْكَيْلَ وَتَصَدَّقْ عَلَيْنَآ ۖ إِنَّ ٱللَّهَ يَجْزِى ٱلْمُتَصَدِّقِينَ

Transliteration falammā dakhalū ʿalayhi qālū yāayyuhā l-ʿazīzu massanā wa-ahlanā l-ḍuru waji'nā bibiḍāʿatin muz'jātin fa-awfi lanā l-kayla wataṣaddaq ʿalaynā inna l-laha yajzī l-mutaṣadiqīna

Kannada ತರುವಾಯ ಅವರು ಯೂಸುಫರ ಮುಂದೆ ಹಾಜರಾಗಿ ಹೀಗೆ ಬಿನ್ನವಿಸಿದರು, ‘ಓ ಪ್ರಭು!, ನಮಗೂ ನಮ್ಮ ಕುಟುಂಬಕ್ಕೂ ಕ್ಷಾಮ ಬಾಧಿಸಿದೆ. ನಾವು ಅಗ್ಗದ ಮಾಲನ್ನು ತಂದಿದ್ದೇವೆ. ಆದ್ದರಿಂದ ತಾವು ನಮಗೆ ಪೂರ್ತಿ ಅಳೆದು ಧಾನ್ಯ ನೀಡಿರಿ ಮತ್ತು ನಮಗೆ ದಾನ ಮಾಡಿರಿ. ಅಲ್ಲಾಹು ಉದಾರ ಮತಿಗಳಿಗೆ ಪ್ರತಿಫಲ ನೀಡುತ್ತಾನೆ’.

Verse 89

قَالَ هَلْ عَلِمْتُم مَّا فَعَلْتُم بِيُوسُفَ وَأَخِيهِ إِذْ أَنتُمْ جَـٰهِلُونَ

Transliteration qāla hal ʿalim'tum mā faʿaltum biyūsufa wa-akhīhi idh antum jāhilūna

Kannada ಅವರು ಹೇಳಿದರು; ನೀವು ಅಜ್ಞಾನಿಗಳಾಗಿದ್ದಾಗ ಯೂಸುಫ್ ಮತ್ತು ಅವನ ತಮ್ಮನ ವಿಷಯದಲ್ಲಿ ಹೇಗೆ ವರ್ತಿಸಿದ್ದಿರೆಂದೂ ನಿಮಗೆ ತಿಳಿದಿದೆಯೇ?

Verse 90

قَالُوٓا۟ أَءِنَّكَ لَأَنتَ يُوسُفُ ۖ قَالَ أَنَا۠ يُوسُفُ وَهَـٰذَآ أَخِى ۖ قَدْ مَنَّ ٱللَّهُ عَلَيْنَآ ۖ إِنَّهُۥ مَن يَتَّقِ وَيَصْبِرْ فَإِنَّ ٱللَّهَ لَا يُضِيعُ أَجْرَ ٱلْمُحْسِنِينَ

Transliteration qālū a-innaka la-anta yūsufu qāla anā yūsufu wahādhā akhī qad manna l-lahu ʿalaynā innahu man yattaqi wayaṣbir fa-inna l-laha lā yuḍīʿu ajra l-muḥ'sinīna

Kannada ಅವರು (ಬೆರಗಾಗಿ) ಕೇಳಿದರು; ‘ನಿಜವಾಗಿಯೂ ನೀವೇ ಯೂಸುಫರೇ?’ ಅವರು ಹೇಳಿದರು; ‘ಹೌದು!, ನಾನು ಯೂಸುಫ್ ಮತ್ತು ಇವನು ನನ್ನ ತಮ್ಮ. ಅಲ್ಲಾಹನು ನಮ್ಮ ಮೇಲೆ ಔದಾರ್ಯ ತೋರಿದ್ದಾನೆ. ವಾಸ್ತವದಲ್ಲಿ ಯಾರು ಸೂಕ್ಷ್ಮತೆ ಪಾಲಿಸುತ್ತಾರೆ ಮತ್ತು ಕ್ಷಮಿಸುತ್ತಾರೆ ಆ ಸಜ್ಜನರ ಪ್ರತಿಫಲವನ್ನು ಅಲ್ಲಾಹನು ವ್ಯರ್ಥಗೊಳಿಸುವುದಿಲ್ಲ’.

Verse 91

قَالُوا۟ تَٱللَّهِ لَقَدْ ءَاثَرَكَ ٱللَّهُ عَلَيْنَا وَإِن كُنَّا لَخَـٰطِـِٔينَ

Transliteration qālū tal-lahi laqad ātharaka l-lahu ʿalaynā wa-in kunnā lakhāṭiīna

Kannada ಅವರು ಹೇಳಿದರು, ‘ಅಲ್ಲಾಹನಾಣೆ! ನಿಮಗೆ ಅಲ್ಲಾಹು ನಮಗಿಂತ ಶ್ರೇಷ್ಟತೆ ದಯಪಾಲಿಸಿ ದ್ದಾನೆ. ನಿಜಕ್ಕೂ ನಾವು ತಪ್ಪಿತಸ್ಥರಾಗಿದ್ದೆವು’.

Verse 92

قَالَ لَا تَثْرِيبَ عَلَيْكُمُ ٱلْيَوْمَ ۖ يَغْفِرُ ٱللَّهُ لَكُمْ ۖ وَهُوَ أَرْحَمُ ٱلرَّٰحِمِينَ

Transliteration qāla lā tathrība ʿalaykumu l-yawma yaghfiru l-lahu lakum wahuwa arḥamu l-rāḥimīna

Kannada ಆಗ ಯೂಸುಫರೆಂದರು; ‘ಇಂದು ನಿಮ್ಮ ಮೇಲೆ ಯಾವುದೇ ದೋಷಾರೋಪಣೆ ಇಲ್ಲ. ಅಲ್ಲಾಹು ನಿಮ್ಮನ್ನು ಕ್ಷಮಿಸಲಿ. ಅವನು ಪರಮ ಶ್ರೇಷ್ಟ ಕಾರುಣ್ಯವಂತನು

Verse 93

ٱذْهَبُوا۟ بِقَمِيصِى هَـٰذَا فَأَلْقُوهُ عَلَىٰ وَجْهِ أَبِى يَأْتِ بَصِيرًا وَأْتُونِى بِأَهْلِكُمْ أَجْمَعِينَ

Transliteration idh'habū biqamīṣī hādhā fa-alqūhu ʿalā wajhi abī yati baṣīran watūnī bi-ahlikum ajmaʿīna

Kannada ‘ನನ್ನ ಈ ಅಂಗಿಯನ್ನು ಕೊಂಡು ಹೋಗಿರಿ. ನನ್ನ ತಂದೆಯವರ ಮುಖದ ಮೇಲೆ ಹಾಕಿ ಬಿಡಿರಿ. ಅವರ ದೃಷ್ಟಿ ಮರಳಿ ಬರುವುದು ಮತ್ತು ನಿಮ್ಮ ಕುಟುಂಬ ಸಮೇತ ನನ್ನ ಬಳಿಗೆ ಕರೆತನ್ನಿರಿ’.

Verse 94

وَلَمَّا فَصَلَتِ ٱلْعِيرُ قَالَ أَبُوهُمْ إِنِّى لَأَجِدُ رِيحَ يُوسُفَ ۖ لَوْلَآ أَن تُفَنِّدُونِ

Transliteration walammā faṣalati l-ʿīru qāla abūhum innī la-ajidu rīḥa yūsufa lawlā an tufannidūni

Kannada ಈ ತಂಡವು (ಈಜಿಪ್ಟ್‍ನಿಂದ) ಹೊರಟಾಗ ಅವರ ತಂದೆಯು ಹೇಳಿದರು; ‘ನನಗೆ ಯೂಸುಫನ ಪರಿಮಳ ಹೊಮ್ಮಿ ಬರುತ್ತಿದೆ . ಆದರೆ ನೀವು ನನಗೆ ಬುದ್ಧಿಭ್ರಮೆ ಬಾಧಿಸಿದೆ ಎಂದು ಹೇಳದಿದ್ದರೆ (ನಿಮಗಿದನ್ನು ನಂಬಬಹುದು).

Verse 95

قَالُوا۟ تَٱللَّهِ إِنَّكَ لَفِى ضَلَـٰلِكَ ٱلْقَدِيمِ

Transliteration qālū tal-lahi innaka lafī ḍalālika l-qadīmi

Kannada ಆಗ ಮನೆಯವರು, ‘ಅಲ್ಲಾಹನಾಣೆ, ನೀವಿನ್ನೂ ಅದೇ ಹಳೆಯ ಪ್ರಮಾದದಲ್ಲೇ ಬಿದ್ದಿರುವಿರಿ’ ಎಂದರು.

Verse 96

فَلَمَّآ أَن جَآءَ ٱلْبَشِيرُ أَلْقَىٰهُ عَلَىٰ وَجْهِهِۦ فَٱرْتَدَّ بَصِيرًا ۖ قَالَ أَلَمْ أَقُل لَّكُمْ إِنِّىٓ أَعْلَمُ مِنَ ٱللَّهِ مَا لَا تَعْلَمُونَ

Transliteration falammā an jāa l-bashīru alqāhu ʿalā wajhihi fa-ir'tadda baṣīran qāla alam aqul lakum innī aʿlamu mina l-lahi mā lā taʿlamūna

Kannada ತರುವಾಯ ಸುವಾರ್ತೆ ತರುವವನು ಬಂದಾಗ ಅವನು ಯೂಸುಫರ ಅಂಗಿಯನ್ನು ಯಅïಖೂ ಬರ ಮುಖದ ಮೇಲೆ ಹಾಕಿದನು. ಕೂಡಲೇ ಅವರ ದೃಷ್ಟಿ ಮರಳಿ ಬಂತು. ಆಗ ಅವರು ಹೇಳಿದರು, ‘ನಾನು ನಿಮ್ಮಲ್ಲಿ ಹೇಳುತ್ತಿರಲಿಲ್ಲವೇ? ನಾನು ಅಲ್ಲಾಹನ ಕಡೆಯಿಂದ ನಿಮಗೆ ತಿಳಿಯದುದನ್ನು ತಿಳಿಯುತ್ತೇನೆ’ .

Verse 97

قَالُوا۟ يَـٰٓأَبَانَا ٱسْتَغْفِرْ لَنَا ذُنُوبَنَآ إِنَّا كُنَّا خَـٰطِـِٔينَ

Transliteration qālū yāabānā is'taghfir lanā dhunūbanā innā kunnā khāṭiīna

Kannada ಆಗ ಅವರೆಲ್ಲರೂ ‘ಅಪ್ಪಾ, ತಾವು ನಮ್ಮ ಪಾಪ ಗಳಿಗಾಗಿ ಕ್ಷಮೆ ಯಾಚಿಸಿರಿ. ನಿಜಕ್ಕೂ ನಾವು ತಪ್ಪಿತಸ್ಥರಾಗಿದ್ದೆವು’ ಎಂದರು.

Verse 98

قَالَ سَوْفَ أَسْتَغْفِرُ لَكُمْ رَبِّىٓ ۖ إِنَّهُۥ هُوَ ٱلْغَفُورُ ٱلرَّحِيمُ

Transliteration qāla sawfa astaghfiru lakum rabbī innahu huwa l-ghafūru l-raḥīmu

Kannada ಆಗ ಅವರು ಹೇಳಿದರು, ನಾನು ನನ್ನ ಪ್ರಭುವಿನೊಡನೆ ನಿಮ್ಮನ್ನು ಕ್ಷಮಿಸಲಿಕ್ಕಾಗಿ ಪ್ರಾರ್ಥಿಸಲಿರುವೆನು. ಅವನು ಮಹಾಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ’.

Verse 99

فَلَمَّا دَخَلُوا۟ عَلَىٰ يُوسُفَ ءَاوَىٰٓ إِلَيْهِ أَبَوَيْهِ وَقَالَ ٱدْخُلُوا۟ مِصْرَ إِن شَآءَ ٱللَّهُ ءَامِنِينَ

Transliteration falammā dakhalū ʿalā yūsufa āwā ilayhi abawayhi waqāla ud'khulū miṣ'ra in shāa l-lahu āminīna

Kannada ಅನಂತರ ಅವರು, ಯೂಸುಫರ ಬಳಿಗೆ ತಲುಪಿದಾಗ ಅವರು ತಮ್ಮ ಮಾತಾಪಿತರನ್ನು ತನ್ನೆಡೆಗೆ ಅಪ್ಪಿಕೊಂಡರು. ಅವರು ಹೇಳಿದರು; ‘ನೀವೆಲ್ಲರೂ ಈಜಿಪ್ತಿಗೆ ಪ್ರವೇಶಿಸಿರಿ. ಅಲ್ಲಾಹನಿಚ್ಚಿಸಿದರೆ ನೀವು ನಿರ್ಭಯರು’.

Verse 100

وَرَفَعَ أَبَوَيْهِ عَلَى ٱلْعَرْشِ وَخَرُّوا۟ لَهُۥ سُجَّدًا ۖ وَقَالَ يَـٰٓأَبَتِ هَـٰذَا تَأْوِيلُ رُءْيَـٰىَ مِن قَبْلُ قَدْ جَعَلَهَا رَبِّى حَقًّا ۖ وَقَدْ أَحْسَنَ بِىٓ إِذْ أَخْرَجَنِى مِنَ ٱلسِّجْنِ وَجَآءَ بِكُم مِّنَ ٱلْبَدْوِ مِنۢ بَعْدِ أَن نَّزَغَ ٱلشَّيْطَـٰنُ بَيْنِى وَبَيْنَ إِخْوَتِىٓ ۚ إِنَّ رَبِّى لَطِيفٌ لِّمَا يَشَآءُ ۚ إِنَّهُۥ هُوَ ٱلْعَلِيمُ ٱلْحَكِيمُ

Transliteration warafaʿa abawayhi ʿalā l-ʿarshi wakharrū lahu sujjadan waqāla yāabati hādhā tawīlu ru'yāya min qablu qad jaʿalahā rabbī ḥaqqan waqad aḥsana bī idh akhrajanī mina l-sij'ni wajāa bikum mina l-badwi min baʿdi an nazagha l-shayṭānu baynī wabayna ikh'watī inna rabbī laṭīfun limā yashāu innahu huwa l-ʿalīmu l-ḥakīmu

Kannada ಅವರು ತಮ್ಮ ಮಾತಾಪಿತರನ್ನು ರಾಜಪೀಠದಲ್ಲಿ ಹತ್ತಿಸಿ ಕುಳ್ಳಿರಿಸಿಕೊಂಡರು. ಎಲ್ಲರೂ ಅವರ ಮುಂದೆ ತಲೆ ಬಾಗಿದರು . ಆಗ ಯೂಸುಫ್ ಹೇಳಿದರು; ‘ಅಪ್ಪಾ, ನಾನು ಹಿಂದೆ ಕಂಡಿದ್ದ ಸ್ವಪ್ನದ ವ್ಯಾಖ್ಯಾನವಿದು. ನನ್ನ ಪ್ರಭು ಅದನ್ನು ಸತ್ಯವಾಗಿ ನೆರೆವೇರಿಸಿದನು. ನನ್ನನ್ನು ಸೆರೆಮನೆಯಿಂದ ಬಿಡಿಸಿದ ಸಂರ್ಭದಲ್ಲೂ ನನ್ನ ಮತ್ತು ನನ್ನ ಸಹೋದರರ ನಡುವೆ ಶೈತಾನನು ಪಿತೂರಿಯನ್ನುಂಟು ಮಾಡಿದ ಬಳಿಕ ಹಳ್ಳಿಗಾಡಿನಿಂದ ಅವನು ನಿಮ್ಮೆಲ್ಲರನ್ನೂ (ನನ್ನ ಬಳಿ) ತಂದು ಸೇರಿಸಿದ ಸಂದರ್ಭದಲ್ಲೂ ಅವನು ನನಗೆ ಉಪಕಾರ ಮಾಡಿದ್ದಾನೆ. ವಾಸ್ತವದಲ್ಲಿ ನನ್ನ ಪ್ರಭು ತಾನಿಚ್ಛಿಸುವ ಕಾರ್ಯಗಳನ್ನು ಸೂಕ್ಷ್ಮವಾಗಿ ನಿಯಂತ್ರಿಸುತ್ತಾನೆ. ನಿಶ್ಚಯವಾಗಿಯೂ ಅವನು ಸರ್ವಜ್ಞನೂ ಧೀಮಂತನೂ ಆಗಿರುತ್ತಾನೆ.

Verse 101

۞ رَبِّ قَدْ ءَاتَيْتَنِى مِنَ ٱلْمُلْكِ وَعَلَّمْتَنِى مِن تَأْوِيلِ ٱلْأَحَادِيثِ ۚ فَاطِرَ ٱلسَّمَـٰوَٰتِ وَٱلْأَرْضِ أَنتَ وَلِىِّۦ فِى ٱلدُّنْيَا وَٱلْـَٔاخِرَةِ ۖ تَوَفَّنِى مُسْلِمًا وَأَلْحِقْنِى بِٱلصَّـٰلِحِينَ

Transliteration rabbi qad ātaytanī mina l-mul'ki waʿallamtanī min tawīli l-aḥādīthi fāṭira l-samāwāti wal-arḍi anta waliyyī fī l-dun'yā wal-ākhirati tawaffanī mus'liman wa-alḥiq'nī bil-ṣāliḥīna

Kannada ಓ ನನ್ನ ಪ್ರಭೂ, ನೀನು ನನಗೆ ರಾಜಾಧಿಕಾರ ಕೊಟ್ಟೆ. ಓ ಆಕಾಶಗಳ ಮತ್ತು ಭೂಮಿಯ ನಿರ್ಮಾಪಕನೇ! ಇಹದಲ್ಲೂ ಪರದಲ್ಲೂ ನೀನೇ ನನ್ನ ರಕ್ಷಕನು. ನೀನು ನನ್ನನ್ನು ಮುಸ್ಲಿಮನ ನ್ನಾಗಿ ಮೃತ್ಯುಗೊಳಿಸು ಮತ್ತು ನಿನ್ನ ಸಜ್ಜನ ದಾಸರ ಸಾಲಿಗೆ ಸೇರಿಸು’.

Verse 102

ذَٰلِكَ مِنْ أَنۢبَآءِ ٱلْغَيْبِ نُوحِيهِ إِلَيْكَ ۖ وَمَا كُنتَ لَدَيْهِمْ إِذْ أَجْمَعُوٓا۟ أَمْرَهُمْ وَهُمْ يَمْكُرُونَ

Transliteration dhālika min anbāi l-ghaybi nūḥīhi ilayka wamā kunta ladayhim idh ajmaʿū amrahum wahum yamkurūna

Kannada (ಓ ಪೈಗಂಬರರೇ,) ಇದು ನಿಮ್ಮ ಮೇಲೆ ನಾವು ಸಂದೇಶ ನೀಡುತ್ತಿರುವ ಅದೃಶ್ಯ ವೃತ್ತಾಂತಗಳಿಗೆ ಸೇರಿದೆ. ಅನ್ಯಥಾ ಯೂಸುಫರ ಸಹೋದರರು ಪರಸ್ಪರ ಒಮ್ಮತದೊಂದಿಗೆ ಕುತಂತ್ರ ಹೂಡಿದಾಗ ನೀವು ಅಲ್ಲಿರಲಿಲ್ಲ.

Verse 103

وَمَآ أَكْثَرُ ٱلنَّاسِ وَلَوْ حَرَصْتَ بِمُؤْمِنِينَ

Transliteration wamā aktharu l-nāsi walaw ḥaraṣta bimu'minīna

Kannada ಆದರೆ ನೀವು ಎಷ್ಟೇ ಆಗ್ರಹಿಸಿದರೂ ಈ ಜನರಲ್ಲಿ ಹೆಚ್ಚಿನವರು ವಿಶ್ವಾಸ ಹೊಂದುವವರಲ್ಲ.

Verse 104

وَمَا تَسْـَٔلُهُمْ عَلَيْهِ مِنْ أَجْرٍ ۚ إِنْ هُوَ إِلَّا ذِكْرٌ لِّلْعَـٰلَمِينَ

Transliteration wamā tasaluhum ʿalayhi min ajrin in huwa illā dhik'run lil'ʿālamīna

Kannada ವಸ್ತುತಃ ನೀವು ಅವರಿಂದ ಇದರ ಹೆಸರಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ಇದು ಜಗತ್ತಿನವರಿಗೊಂದು ಉಪದೇಶ ಮಾತ್ರ.

Verse 105

وَكَأَيِّن مِّنْ ءَايَةٍ فِى ٱلسَّمَـٰوَٰتِ وَٱلْأَرْضِ يَمُرُّونَ عَلَيْهَا وَهُمْ عَنْهَا مُعْرِضُونَ

Transliteration waka-ayyin min āyatin fī l-samāwāti wal-arḍi yamurrūna ʿalayhā wahum ʿanhā muʿ'riḍūna

Kannada ಆಕಾಶಗಳಲ್ಲೂ ಭೂಮಿಯಲ್ಲೂ ಎಷ್ಟೋ ನಿದರ್ಶನಗಳಿವೆ. ಅವುಗಳನ್ನು ಅವಗಣಿಸುತ್ತ ಅವರು ಅವುಗಳ ಹತ್ತಿರದಲ್ಲೇ ಹಾದು ಹೋಗುತ್ತಿರುತ್ತಾರೆ.

Verse 106

وَمَا يُؤْمِنُ أَكْثَرُهُم بِٱللَّهِ إِلَّا وَهُم مُّشْرِكُونَ

Transliteration wamā yu'minu aktharuhum bil-lahi illā wahum mush'rikūna

Kannada ಇವರಲ್ಲಿ ಹೆಚ್ಚಿನವರು ಅಲ್ಲಾಹನನ್ನು, ಅವ ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿಸಿ ಕೊಂಡೇ ನಂಬುತ್ತಾರೆ.

Verse 107

أَفَأَمِنُوٓا۟ أَن تَأْتِيَهُمْ غَـٰشِيَةٌ مِّنْ عَذَابِ ٱللَّهِ أَوْ تَأْتِيَهُمُ ٱلسَّاعَةُ بَغْتَةً وَهُمْ لَا يَشْعُرُونَ

Transliteration afa-aminū an tatiyahum ghāshiyatun min ʿadhābi l-lahi aw tatiyahumu l-sāʿatu baghtatan wahum lā yashʿurūna

Kannada ಅಲ್ಲಾಹನಿಂದ ಅವರನ್ನು ಆವರಿಸಿಬಿಡುವ ಯಾತನೆಯು ಅವರಿಗೆ ಬಂದೆರಗುವ ಬಗ್ಗೆ ಅಥವಾ ಅವರಿಗೆ ತಿಳಿಯದಂತೆ, ಹಠಾತ್ತನೆ ಅಂತ್ಯದಿನ ಅವರ ಮೇಲೆ ಬಂದು ತಲುಪುವ ಬಗ್ಗೆ ಇವರೇನು ನಿಶ್ಚಿಂತರಾಗಿರುವರೇ?

Verse 108

قُلْ هَـٰذِهِۦ سَبِيلِىٓ أَدْعُوٓا۟ إِلَى ٱللَّهِ ۚ عَلَىٰ بَصِيرَةٍ أَنَا۠ وَمَنِ ٱتَّبَعَنِى ۖ وَسُبْحَـٰنَ ٱللَّهِ وَمَآ أَنَا۠ مِنَ ٱلْمُشْرِكِينَ

Transliteration qul hādhihi sabīlī adʿū ilā l-lahi ʿalā baṣīratin anā wamani ittabaʿanī wasub'ḥāna l-lahi wamā anā mina l-mush'rikīna

Kannada (ಪೈಗಂಬರರೇ) ಹೇಳಿರಿ; ಇದೇ ನನ್ನ ಮಾರ್ಗ. ನಾನು ಅಲ್ಲಾಹನ ಕಡೆಗೆ ಕರೆ ನೀಡುತ್ತಿದ್ದೇನೆ. ನಾನೂ ನನ್ನ ಸಂಗಾತಿಗಳೂ ಸ್ಪಷ್ಟವಾದ ಆಧಾರದಲ್ಲಿದ್ದೇವೆ. ಅಲ್ಲಾಹು ಅತ್ಯಂತ ಪಾವನನು. ಸಹಭಾಗಿಗಳಾಗಿಸುವವರೊಂದಿಗೆ ನಾನು ಸೇರಿದವನಲ್ಲ.

Verse 109

وَمَآ أَرْسَلْنَا مِن قَبْلِكَ إِلَّا رِجَالًا نُّوحِىٓ إِلَيْهِم مِّنْ أَهْلِ ٱلْقُرَىٰٓ ۗ أَفَلَمْ يَسِيرُوا۟ فِى ٱلْأَرْضِ فَيَنظُرُوا۟ كَيْفَ كَانَ عَـٰقِبَةُ ٱلَّذِينَ مِن قَبْلِهِمْ ۗ وَلَدَارُ ٱلْـَٔاخِرَةِ خَيْرٌ لِّلَّذِينَ ٱتَّقَوْا۟ ۗ أَفَلَا تَعْقِلُونَ

Transliteration wamā arsalnā min qablika illā rijālan nūḥī ilayhim min ahli l-qurā afalam yasīrū fī l-arḍi fayanẓurū kayfa kāna ʿāqibatu alladhīna min qablihim waladāru l-ākhirati khayrun lilladhīna ittaqaw afalā taʿqilūna

Kannada (ಓ ಪೈಗಂಬರರೇ,) ನಾಡುಗಳಲ್ಲಿ ವಾಸಿಸುತ್ತಿದ್ದ ಪುರುಷರನ್ನು ಮಾತ್ರವೇ ನಿಮಗಿಂತ ಮುಂಚೆ ನಾವು ದಿವ್ಯ ಸಂದೇಶದೊಂದಿಗೆ ಪ್ರವಾದಿಗಳಾಗಿ ಕಳುಹಿಸಿದ್ದೇವೆ. ಅವರು (ಅವಿಶ್ವಾಸಿ ಗಳು) ಭೂಮಿಯಲ್ಲಿ ಸಂಚರಿಸಿ ಇವರಿಗಿಂತ ಮುಂಚಿನ ಜನಾಂಗಗಳ ಪರಿಣಾಮವು ಏನಾಗಿತ್ತೆಂದು ನೋಡಲಿಲ್ಲವೇ? ದೇವನಿಷ್ಠರಿಗೆ ಪರ ಲೋಕ ಗೇಹವು ಇನ್ನಷ್ಟು ಉತ್ತಮ. ನೀವು ಯೋಚಿಸಲಾರಿರಾ?

Verse 110

حَتَّىٰٓ إِذَا ٱسْتَيْـَٔسَ ٱلرُّسُلُ وَظَنُّوٓا۟ أَنَّهُمْ قَدْ كُذِبُوا۟ جَآءَهُمْ نَصْرُنَا فَنُجِّىَ مَن نَّشَآءُ ۖ وَلَا يُرَدُّ بَأْسُنَا عَنِ ٱلْقَوْمِ ٱلْمُجْرِمِينَ

Transliteration ḥattā idhā is'tayasa l-rusulu waẓannū annahum qad kudhibū jāahum naṣrunā fanujjiya man nashāu walā yuraddu basunā ʿani l-qawmi l-muj'rimīna

Kannada ಕೊನೆಗೆ ಪ್ರವಾದಿಗಳು ನಿರಾಶೆಗೊಂಡಾಗ ಹಾಗೂ ಅವರೊಡನೆ ಹೇಳಿದ್ದು ಸುಳ್ಳಾಗಿತ್ತೆಂದೂ ಜನರು ಭಾವಿಸಿದಾಗ ಹಠಾತ್ತನೆ ನಮ್ಮ ಸಹಾಯವು ಪ್ರವಾದಿಗಳಿಗೆ ಬಂದು ತಲುಪಿತು. ಆಗ ನಾವಿಚ್ಛಿಸಿದವರನ್ನು ರಕ್ಷಿಸಲಾಯಿತು. ಅಪರಾಧಿ ಜನಾಂಗದಿಂದ ನಮ್ಮ ಸಜೆಯು ಎಷ್ಟಕ್ಕೂ ಸರಿಯಲಾರದು.

Verse 111

لَقَدْ كَانَ فِى قَصَصِهِمْ عِبْرَةٌ لِّأُو۟لِى ٱلْأَلْبَـٰبِ ۗ مَا كَانَ حَدِيثًا يُفْتَرَىٰ وَلَـٰكِن تَصْدِيقَ ٱلَّذِى بَيْنَ يَدَيْهِ وَتَفْصِيلَ كُلِّ شَىْءٍ وَهُدًى وَرَحْمَةً لِّقَوْمٍ يُؤْمِنُونَ

Transliteration laqad kāna fī qaṣaṣihim ʿib'ratun li-ulī l-albābi mā kāna ḥadīthan yuf'tarā walākin taṣdīqa alladhī bayna yadayhi watafṣīla kulli shayin wahudan waraḥmatan liqawmin yu'minūna

Kannada ಅವರ ಚರಿತ್ರೆ ಕಥೆಗಳಲ್ಲಿ ಬುದ್ಧಿಜೀವಿಗಳಿಗೆ ಖಂಡಿತ ಪಾಠವಿದೆ. ಈ ಖುರ್‍ಆನ್ ಕೃತಕ ವಾಗಿ ಸೃಷ್ಟಿಸಲಾಗುವ ವೃತ್ತಾಂತವಲ್ಲ. ಪರಂತು ಅದಕ್ಕಿಂತ ಮುಂಚೆ ಬಂದಿರುವ ಗ್ರಂಥಗಳ ದೃಢೀಕರಣವೂ ಪ್ರತಿಯೊಂದು ವಿಷಯದ ವಿವರಣೆಯೂ ಸತ್ಯವಿಶ್ವಾಸವನ್ನು ಕೈಗೊಂಡ ಜನರಿಗೆ ಸನ್ಮಾರ್ಗದರ್ಶನವೂ ಕಾರುಣ್ಯವೂ ಆಗಿರುತ್ತದೆ

Read Surah Yusuf in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.