MyDugsiStart learning

Surah Yunus in Kannada: translation and audio

Surah 10 · يونس · Jonah · 109 verses

Surah Yunus verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Yunus word by word in English.

Verse 1

الٓر ۚ تِلْكَ ءَايَـٰتُ ٱلْكِتَـٰبِ ٱلْحَكِيمِ

Transliteration alif-lam-ra til'ka āyātu l-kitābi l-ḥakīmi

Kannada ಅಲಿಫ್ ಲಾಮ್ ರಾ, ಇವು ಸತ್ವಪೂರ್ಣ ಗ್ರಂಥದ ಸೂಕ್ತಗಳು.

Verse 2

أَكَانَ لِلنَّاسِ عَجَبًا أَنْ أَوْحَيْنَآ إِلَىٰ رَجُلٍ مِّنْهُمْ أَنْ أَنذِرِ ٱلنَّاسَ وَبَشِّرِ ٱلَّذِينَ ءَامَنُوٓا۟ أَنَّ لَهُمْ قَدَمَ صِدْقٍ عِندَ رَبِّهِمْ ۗ قَالَ ٱلْكَـٰفِرُونَ إِنَّ هَـٰذَا لَسَـٰحِرٌ مُّبِينٌ

Transliteration akāna lilnnāsi ʿajaban an awḥaynā ilā rajulin min'hum an andhiri l-nāsa wabashiri alladhīna āmanū anna lahum qadama ṣid'qin ʿinda rabbihim qāla l-kāfirūna inna hādhā lasāḥirun mubīnun

Kannada ಜನರಿಗೆ ಎಚ್ಚರಿಕೆ ನೀಡಲಿಕ್ಕೂ ಸತ್ಯವಿಶ್ವಾಸಿಗಳಿಗೆ ಅವರ ಪ್ರಭುವಿನ ಬಳಿ ಸತ್ಯದ ಸ್ಥಾನವಿದೆ ಎಂಬ ಸುವಾರ್ತೆ ನೀಡಲಿಕ್ಕೂ ಅವರೊಳಗಿಂದಲೇ ಓರ್ವ ಮನುಷ್ಯನ ಕಡೆಗೆ ನಾವು ಸಂದೇಶ ಕಳುಹಿಸಿರುವುದು ಜನರಿಗೆ ಆಶ್ಚರ್ಯವಾಯಿತೇ? ಸತ್ಯನಿಷೇಧಿಗಳು ಹೇಳಿದರು - `ಇವನೊಬ್ಬ ಪ್ರತ್ಯಕ್ಷವಾದ ಮಾಟಗಾರನೇ ಹೌದು’ .

Verse 3

إِنَّ رَبَّكُمُ ٱللَّهُ ٱلَّذِى خَلَقَ ٱلسَّمَـٰوَٰتِ وَٱلْأَرْضَ فِى سِتَّةِ أَيَّامٍ ثُمَّ ٱسْتَوَىٰ عَلَى ٱلْعَرْشِ ۖ يُدَبِّرُ ٱلْأَمْرَ ۖ مَا مِن شَفِيعٍ إِلَّا مِنۢ بَعْدِ إِذْنِهِۦ ۚ ذَٰلِكُمُ ٱللَّهُ رَبُّكُمْ فَٱعْبُدُوهُ ۚ أَفَلَا تَذَكَّرُونَ

Transliteration inna rabbakumu l-lahu alladhī khalaqa l-samāwāti wal-arḍa fī sittati ayyāmin thumma is'tawā ʿalā l-ʿarshi yudabbiru l-amra mā min shafīʿin illā min baʿdi idh'nihi dhālikumu l-lahu rabbukum fa-uʿ'budūhu afalā tadhakkarūna

Kannada ಆಕಾಶಗಳನ್ನೂ ಭೂಮಿಯನ್ನೂ ಆರು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಪ್ರಭು. ನಂತರ ಅವನಿಗೆ ಸಂಗತವಾಗುವ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿ ಕಾರ್ಯಗಳನ್ನು ನಿಯಂತ್ರಿಸುತ್ತಿರುವನು. ಅವನ ಅನುಮತಿಯ ಹೊರತಾಗಿ ಶಿಫಾರಸು ಮಾಡುವವನು ಯಾವನೂ ಇಲ್ಲ. ಅವನೇ ನಿಮ್ಮ ಪ್ರಭುವಾದ ಅಲ್ಲಾಹು. ಆದುದರಿಂದ ನೀವು ಅವನನ್ನು ಆರಾಧಿಸಿರಿ. ನೀವು ಯೋಚಿಸಿ ಅರ್ಥ ಮಾಡಿಕೊಳ್ಳುವುದಿಲ್ಲವೇ?

Verse 4

إِلَيْهِ مَرْجِعُكُمْ جَمِيعًا ۖ وَعْدَ ٱللَّهِ حَقًّا ۚ إِنَّهُۥ يَبْدَؤُا۟ ٱلْخَلْقَ ثُمَّ يُعِيدُهُۥ لِيَجْزِىَ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ بِٱلْقِسْطِ ۚ وَٱلَّذِينَ كَفَرُوا۟ لَهُمْ شَرَابٌ مِّنْ حَمِيمٍ وَعَذَابٌ أَلِيمٌۢ بِمَا كَانُوا۟ يَكْفُرُونَ

Transliteration ilayhi marjiʿukum jamīʿan waʿda l-lahi ḥaqqan innahu yabda-u l-khalqa thumma yuʿīduhu liyajziya alladhīna āmanū waʿamilū l-ṣāliḥāti bil-qis'ṭi wa-alladhīna kafarū lahum sharābun min ḥamīmin waʿadhābun alīmun bimā kānū yakfurūna

Kannada ಅವನೆಡೆಗೇ ನಿಮ್ಮೆಲ್ಲರ ನಿರ್ಗಮನ. ಇದು ಅಲ್ಲಾಹನ ಸತ್ಯ ವಾಗ್ದಾನ. ನಿಶ್ಚಯವಾಗಿಯೂ ಸೃಷ್ಟಿಯ ಆರಂಭವನ್ನು ಅವನೇ ಮಾಡುತ್ತಾನೆ. ಅನಂತರ ಅವನೇ ಇನ್ನೊಮ್ಮೆ ಸೃಷ್ಟಿಸುವನು. ಸತ್ಯ ವಿಶ್ವಾಸವಿರಿಸಿ ಸತ್ಕರ್ಮವೆಸಗುವವರಿಗೆ ನ್ಯಾಯೋ ಚಿತ ಪ್ರತಿಫಲ ನೀಡುವುದಕ್ಕಾಗಿ. ಸತ್ಯ ನಿಷೇಧಿಗಳಿಗೆ ಕುದಿಯುವ ಪಾನೀಯ ಹಾಗೂ ವೇದನಾ ಯುಕ್ತ ಶಿಕ್ಷೆಯನ್ನು ಅವರ ಸತ್ಯನಿಷೇಧಕ್ಕೆ ಪ್ರತಿಫಲವಾಗಿ ನೀಡಲಾಗುತ್ತದೆ.

Verse 5

هُوَ ٱلَّذِى جَعَلَ ٱلشَّمْسَ ضِيَآءً وَٱلْقَمَرَ نُورًا وَقَدَّرَهُۥ مَنَازِلَ لِتَعْلَمُوا۟ عَدَدَ ٱلسِّنِينَ وَٱلْحِسَابَ ۚ مَا خَلَقَ ٱللَّهُ ذَٰلِكَ إِلَّا بِٱلْحَقِّ ۚ يُفَصِّلُ ٱلْـَٔايَـٰتِ لِقَوْمٍ يَعْلَمُونَ

Transliteration huwa alladhī jaʿala l-shamsa ḍiyāan wal-qamara nūran waqaddarahu manāzila litaʿlamū ʿadada l-sinīna wal-ḥisāba mā khalaqa l-lahu dhālika illā bil-ḥaqi yufaṣṣilu l-āyāti liqawmin yaʿlamūna

Kannada ಅವನೇ ಸೂರ್ಯನನ್ನು ಪ್ರಕಾಶಮಾನವನ್ನಾಗಿ ಮಾಡಿದವನು. ಚಂದ್ರನಿಗೆ ಹೊಳಪನ್ನು ಕೊಟ್ಟವನು. ನೀವು ವರ್ಷಗಳ ಎಣಿಕೆಗಳನ್ನೂ ತಾರೀಕುಗಳ ಗಣನೆಯನ್ನೂ ತಿಳಿದುಕೊಳ್ಳಲಿಕ್ಕಾಗಿ ಅದಕ್ಕೆ (ವೃದ್ಧಿ ಕ್ಷಯಗಳ) ಘಟ್ಟಗಳನ್ನೂ ಸರಿಯಾಗಿ ನಿರ್ಣಯಿಸಿಕೊಟ್ಟವನು. ಒಂದು ನಿಜವಾದ ಗುರಿಯಿಲ್ಲದೆ ಅಲ್ಲಾಹು ಏನನ್ನೂ ಸೃಷ್ಟಿಸಲಿಲ್ಲ. ಅವನು ಅರಿವುಳ್ಳವರಿಗೆ ತನ್ನ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತಾನೆ.

Verse 6

إِنَّ فِى ٱخْتِلَـٰفِ ٱلَّيْلِ وَٱلنَّهَارِ وَمَا خَلَقَ ٱللَّهُ فِى ٱلسَّمَـٰوَٰتِ وَٱلْأَرْضِ لَـَٔايَـٰتٍ لِّقَوْمٍ يَتَّقُونَ

Transliteration inna fī ikh'tilāfi al-layli wal-nahāri wamā khalaqa l-lahu fī l-samāwāti wal-arḍi laāyātin liqawmin yattaqūna

Kannada ಖಂಡಿತವಾಗಿಯೂ ರಾತ್ರಿಹಗಲುಗಳ ವ್ಯತ್ಯಾಸದಲ್ಲೂ ಅಲ್ಲಾಹನು ಭೂಮಿ-ಆಕಾಶಗಳಲ್ಲಿ ಸೃಷ್ಟಿಸಿರುವ ಪ್ರತಿಯೊಂದು ವಸ್ತುವಿನಲ್ಲಿಯೂ ಸೂಕ್ಷತೆ ಪಾಲಿಸುವ ಜನರಿಗೆ ನಿದರ್ಶನಗಳಿವೆ.

Verse 7

إِنَّ ٱلَّذِينَ لَا يَرْجُونَ لِقَآءَنَا وَرَضُوا۟ بِٱلْحَيَوٰةِ ٱلدُّنْيَا وَٱطْمَأَنُّوا۟ بِهَا وَٱلَّذِينَ هُمْ عَنْ ءَايَـٰتِنَا غَـٰفِلُونَ

Transliteration inna alladhīna lā yarjūna liqāanā waraḍū bil-ḥayati l-dun'yā wa-iṭ'ma-annū bihā wa-alladhīna hum ʿan āyātinā ghāfilūna

Kannada ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದ, ಐಹಿಕ ಜೀವನದಿಂದ ತೃಪ್ತರಾಗಿರುವ ಹಾಗೂ ನಮ್ಮ ದೃಷ್ಟಾಂತಗಳಿಂದ ಯಾವ ಜನರು ಅಲಕ್ಷ್ಯರಾಗಿರುವರೋ

Verse 8

أُو۟لَـٰٓئِكَ مَأْوَىٰهُمُ ٱلنَّارُ بِمَا كَانُوا۟ يَكْسِبُونَ

Transliteration ulāika mawāhumu l-nāru bimā kānū yaksibūna

Kannada ಅವರ ಅಂತಿಮ ವಾಸಸ್ಥಾನವು ಘೋರ ನರಕವಾಗಿರುವುದು. ಇದು ಅವರು ಎಸಗಿದ ಕೆಡುಕುಗಳಫಲವಾಗಿದೆ.

Verse 9

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ يَهْدِيهِمْ رَبُّهُم بِإِيمَـٰنِهِمْ ۖ تَجْرِى مِن تَحْتِهِمُ ٱلْأَنْهَـٰرُ فِى جَنَّـٰتِ ٱلنَّعِيمِ

Transliteration inna alladhīna āmanū waʿamilū l-ṣāliḥāti yahdīhim rabbuhum biīmānihim tajrī min taḥtihimu l-anhāru fī jannāti l-naʿīmi

Kannada ಖಂಡಿತವಾಗಿಯೂ ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು ಅವರ ಪ್ರಭು ಅವರ ಸತ್ಯವಿಶ್ವಾಸದ ನಿಮಿತ್ತವಾಗಿ ಸನ್ಮಾರ್ಗದಲ್ಲಿ ನಡೆಸುವನು; ಅನುಗ್ರಹಭರಿತ ಸ್ವರ್ಗೋದ್ಯಾನಗಳಲ್ಲಿ ಅವರಿಗೆ ವಾಸಸ್ಥಾನವಿರುವುದು. ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು.

Verse 10

دَعْوَىٰهُمْ فِيهَا سُبْحَـٰنَكَ ٱللَّهُمَّ وَتَحِيَّتُهُمْ فِيهَا سَلَـٰمٌ ۚ وَءَاخِرُ دَعْوَىٰهُمْ أَنِ ٱلْحَمْدُ لِلَّهِ رَبِّ ٱلْعَـٰلَمِينَ

Transliteration daʿwāhum fīhā sub'ḥānaka l-lahuma wataḥiyyatuhum fīhā salāmun waākhiru daʿwāhum ani l-ḥamdu lillahi rabbi l-ʿālamīna

Kannada ಅಲ್ಲಿ ಅವರ ಪ್ರಾರ್ಥನೆಯು `ಓ ಅಲ್ಲಾಹ್, ನೀನುಪರಿಶುದ್ಧನು, ನಾವು ನಿನ್ನ ಸಂಕೀರ್ತನೆ ಮಾಡುವೆವು’ ಎಂದಾಗಿರುತ್ತದೆ. ಅವರ ಪರಸ್ಪರ ಅಭಿವಾದನ ‘ಸಲಾಮ್’ ಎಂದಾಗಿರುವುದು. ಅವರ ಪ್ರಾರ್ಥನೆಯ ಮಾತಿನ ಕೊನೆಯ ನುಡಿಯು; ಸರ್ವಸ್ತುತಿ ಸ್ತೋತ್ರಗಳೂ ಸಕಲ ಲೋಕಗಳ ಪ್ರಭುವಾದ ಅಲ್ಲಾಹನಿಗೆ ಎಂದೇ ಆಗಿರುವುದು .

Verse 11

۞ وَلَوْ يُعَجِّلُ ٱللَّهُ لِلنَّاسِ ٱلشَّرَّ ٱسْتِعْجَالَهُم بِٱلْخَيْرِ لَقُضِىَ إِلَيْهِمْ أَجَلُهُمْ ۖ فَنَذَرُ ٱلَّذِينَ لَا يَرْجُونَ لِقَآءَنَا فِى طُغْيَـٰنِهِمْ يَعْمَهُونَ

Transliteration walaw yuʿajjilu l-lahu lilnnāsi l-shara is'tiʿ'jālahum bil-khayri laquḍiya ilayhim ajaluhum fanadharu alladhīna lā yarjūna liqāanā fī ṭugh'yānihim yaʿmahūna

Kannada ಜನರು ಹಿತಕ್ಕೆ ತವಕಪಡುವಂತೆ ಅವರಿಗೆ ಕೇಡುಂಟುಮಾಡಲು ಅಲ್ಲಾಹನು ತವಕಪಡುತ್ತಿದ್ದರೆ, ಅವರ ಜೀವನಾವಧಿಯನ್ನು ಮುಗಿಸಿ ಬಿಡಲಾ ಗುತ್ತಿತ್ತು. ಆದುದರಿಂದ ನಮ್ಮ ಭೇಟಿಯನ್ನು ನಿರೀಕ್ಷಿಸದವರನ್ನು ನಾವು ಅವರ ಧಿಕ್ಕಾರದಲ್ಲಿ ಅಲೆದಾಡುತ್ತಿರಲು ಬಿಟ್ಟುಬಿಡುತ್ತೇವೆ.

Verse 12

وَإِذَا مَسَّ ٱلْإِنسَـٰنَ ٱلضُّرُّ دَعَانَا لِجَنۢبِهِۦٓ أَوْ قَاعِدًا أَوْ قَآئِمًا فَلَمَّا كَشَفْنَا عَنْهُ ضُرَّهُۥ مَرَّ كَأَن لَّمْ يَدْعُنَآ إِلَىٰ ضُرٍّ مَّسَّهُۥ ۚ كَذَٰلِكَ زُيِّنَ لِلْمُسْرِفِينَ مَا كَانُوا۟ يَعْمَلُونَ

Transliteration wa-idhā massa l-insāna l-ḍuru daʿānā lijanbihi aw qāʿidan aw qāiman falammā kashafnā ʿanhu ḍurrahu marra ka-an lam yadʿunā ilā ḍurrin massahu kadhālika zuyyina lil'mus'rifīna mā kānū yaʿmalūna

Kannada ಮನುಷ್ಯನು ನಿಂತೂ ಕುಳಿತೂ ಮಲಗಿಯೂ ನಮ್ಮೊಡನೆ ಮೊರೆಯಿಡುತ್ತಾನೆ. ಆದರೆ ನಾವು ಅವನ ಕಷ್ಟವನ್ನು ದೂರ ಮಾಡಿದರೆ, ಅವನಿಗೆ ತಟ್ಟಿದ ಸಂಕಷ್ಟದ ವಿಷಯದಲ್ಲಿ ನಮ್ಮೊಡನೆ ಅವನು ಮೊರೆಯಿಡಲೇ ಇಲ್ಲವೋ ಎಂಬಂತೆ ನಡೆದು ಬಿಡುತ್ತಾನೆ. ಹೀಗೆ ಅತಿಕ್ರಮಿಸಿ ನಡೆಯುವವರಿಗೆ ಅವರ ಕೃತ್ಯಗಳನ್ನು ಮನೋಹರಗೊಳಿಸಲಾಗಿದೆ.

Verse 13

وَلَقَدْ أَهْلَكْنَا ٱلْقُرُونَ مِن قَبْلِكُمْ لَمَّا ظَلَمُوا۟ ۙ وَجَآءَتْهُمْ رُسُلُهُم بِٱلْبَيِّنَـٰتِ وَمَا كَانُوا۟ لِيُؤْمِنُوا۟ ۚ كَذَٰلِكَ نَجْزِى ٱلْقَوْمَ ٱلْمُجْرِمِينَ

Transliteration walaqad ahlaknā l-qurūna min qablikum lammā ẓalamū wajāathum rusuluhum bil-bayināti wamā kānū liyu'minū kadhālika najzī l-qawma l-muj'rimīna

Kannada (ಓ ಜನರೇ;) ನಿಮಗಿಂತ ಮುಂಚಿನ ಜನಾಂ ಗಗಳನ್ನು ಅವರು ಅಕ್ರಮವೆಸಗಿದಾಗ ನಾವು ನಾಶ ಮಾಡಿದ್ದೇವೆ. ಅವರ ಸಂದೇಶವಾಹಕರು ಸುವ್ಯಕ್ತ ಪ್ರಮಾಣಗಳನ್ನು ಅವರ ಬಳಿಗೆ ತಂದರು. ಆದರೂ ಅವರು ವಿಶ್ವಾಸವಿಡಲಿಲ್ಲ. ನಾವು ಅಪರಾಧಿಗಳಿಗೆ ಪ್ರತಿಫಲವನ್ನು ಇದೇ ರೀತಿಯಲ್ಲಿ ಕೊಡುತ್ತೇವೆ.

Verse 14

ثُمَّ جَعَلْنَـٰكُمْ خَلَـٰٓئِفَ فِى ٱلْأَرْضِ مِنۢ بَعْدِهِمْ لِنَنظُرَ كَيْفَ تَعْمَلُونَ

Transliteration thumma jaʿalnākum khalāifa fī l-arḍi min baʿdihim linanẓura kayfa taʿmalūna

Kannada ನೀವು ಹೇಗೆ ವರ್ತಿಸುತ್ತೀರೆಂದು ನೋಡಲಿಕ್ಕಾಗಿ ನಾವು ಅವರ ತರುವಾಯ ನಿಮ್ಮನ್ನು ಭೂಮಿ ಯಲ್ಲಿ ಪ್ರತಿನಿಧಿಯನ್ನಾಗಿ ಮಾಡಿದೆವು.

Verse 15

وَإِذَا تُتْلَىٰ عَلَيْهِمْ ءَايَاتُنَا بَيِّنَـٰتٍ ۙ قَالَ ٱلَّذِينَ لَا يَرْجُونَ لِقَآءَنَا ٱئْتِ بِقُرْءَانٍ غَيْرِ هَـٰذَآ أَوْ بَدِّلْهُ ۚ قُلْ مَا يَكُونُ لِىٓ أَنْ أُبَدِّلَهُۥ مِن تِلْقَآئِ نَفْسِىٓ ۖ إِنْ أَتَّبِعُ إِلَّا مَا يُوحَىٰٓ إِلَىَّ ۖ إِنِّىٓ أَخَافُ إِنْ عَصَيْتُ رَبِّى عَذَابَ يَوْمٍ عَظِيمٍ

Transliteration wa-idhā tut'lā ʿalayhim āyātunā bayyinātin qāla alladhīna lā yarjūna liqāanā i'ti biqur'ānin ghayri hādhā aw baddil'hu qul mā yakūnu lī an ubaddilahu min til'qāi nafsī in attabiʿu illā mā yūḥā ilayya innī akhāfu in ʿaṣaytu rabbī ʿadhāba yawmin ʿaẓīmin

Kannada ನಮ್ಮ ಸುವ್ಯಕ್ತ ಪುರಾವೆಗಳನ್ನು ಅವರಿಗೆ ಓದಿ ಕೇಳಿಸುವಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆಯನ್ನಿರಿಸದವರು, ಇದರ ಬದಲಿಗೆ ಇನ್ನೊಂದು ಖುರ್‍ಆನನ್ನು ತನ್ನಿರಿ, ಇಲ್ಲವೆ ಇದರಲ್ಲಿ ಸ್ವಲ್ಪ ತಿದ್ದುಪಡಿ ಮಾಡಿರಿ ಎಂದು ಹೇಳುತ್ತಾರೆ . (ಓ ಪೈಗಂಬರರೇ,) ಹೇಳಿರಿ ನನ್ನ ಕಡೆಯಿಂದ ಅದನ್ನು ಮಾರ್ಪಾಟು ಮಾಡುವುದು ನನಗೆ ಸಲ್ಲದು. ನನಗೆ ಕಳುಹಿಸಲ್ಪಡುವ ಸಂದೇಶಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ನಾನು ನನ್ನ ಪ್ರಭುವಿಗೆ ಧಿಕ್ಕಾರ ತೋರಿದರೆ ಒಂದು ಭಯಾನಕ ದಿನದ ಶಿಕ್ಷೆಯನ್ನು ನಾನು ಭಯಪಡುತ್ತೇನೆ.

Verse 16

قُل لَّوْ شَآءَ ٱللَّهُ مَا تَلَوْتُهُۥ عَلَيْكُمْ وَلَآ أَدْرَىٰكُم بِهِۦ ۖ فَقَدْ لَبِثْتُ فِيكُمْ عُمُرًا مِّن قَبْلِهِۦٓ ۚ أَفَلَا تَعْقِلُونَ

Transliteration qul law shāa l-lahu mā talawtuhu ʿalaykum walā adrākum bihi faqad labith'tu fīkum ʿumuran min qablihi afalā taʿqilūna

Kannada ಹೇಳಿರಿ - ಅಲ್ಲಾಹನು (ಇದನ್ನು ಅವತೀರ್ಣ ಗೊಳಿಸದಿರಲು) ಬಯಸಿದ್ದರೆ, ನಾನು ನಿಮಗೆ ಈ ಖುರ್‍ಆನನ್ನು ಓದಿ ಕೇಳಿಸುತ್ತಿರಲಿಲ್ಲ. ಮತ್ತು ಅವನು ನಿಮಗೆ ಇದನ್ನು ತಿಳಿಸುತ್ತಲೂ ಇರಲಿಲ್ಲ. ನಾನು ಇದಕ್ಕೆ ಮುಂಚೆ ನಿಮ್ಮ ನಡುವೆ ಕೆಲವು ಕಾಲ ಕಳೆದಿರುವೆನಲ್ಲ? ನೀವೇನು ಯೋಚಿಸುವುದಿಲ್ಲವೇ?

Verse 17

فَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًا أَوْ كَذَّبَ بِـَٔايَـٰتِهِۦٓ ۚ إِنَّهُۥ لَا يُفْلِحُ ٱلْمُجْرِمُونَ

Transliteration faman aẓlamu mimmani if'tarā ʿalā l-lahi kadhiban aw kadhaba biāyātihi innahu lā yuf'liḥu l-muj'rimūna

Kannada ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿ ಹೊರಿಸುವವನಿಗಿಂತ ಅಥವಾ ವಚನಗಳನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾರೆ? ನಿಶ್ಚಯವಾಗಿಯೂ ಅಪರಾಧಿಗಳು ಎಂದೂ ವಿಜಯಹೊಂದಲಾರರು.

Verse 18

وَيَعْبُدُونَ مِن دُونِ ٱللَّهِ مَا لَا يَضُرُّهُمْ وَلَا يَنفَعُهُمْ وَيَقُولُونَ هَـٰٓؤُلَآءِ شُفَعَـٰٓؤُنَا عِندَ ٱللَّهِ ۚ قُلْ أَتُنَبِّـُٔونَ ٱللَّهَ بِمَا لَا يَعْلَمُ فِى ٱلسَّمَـٰوَٰتِ وَلَا فِى ٱلْأَرْضِ ۚ سُبْحَـٰنَهُۥ وَتَعَـٰلَىٰ عَمَّا يُشْرِكُونَ

Transliteration wayaʿbudūna min dūni l-lahi mā lā yaḍurruhum walā yanfaʿuhum wayaqūlūna hāulāi shufaʿāunā ʿinda l-lahi qul atunabbiūna l-laha bimā lā yaʿlamu fī l-samāwāti walā fī l-arḍi sub'ḥānahu wataʿālā ʿammā yush'rikūna

Kannada ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಉಪದ್ರವವನ್ನಾಗಲಿ ಉಪಕಾರವನ್ನಾಗಲಿ ಉಂಟು ಮಾಡ ದವುಗಳನ್ನು ಆರಾಧಿಸುತ್ತಾರೆ. ‘ಆ ಆರಾಧ್ಯರು ಅಲ್ಲಾಹನ ಬಳಿ ನಮ್ಮ ಶಿಫಾರಸ್ಸುಗಾರರು’ ಎಂದು ಅವರು ಹೇಳುತ್ತಾರೆ. (ಓ ಪೈಗಂಬ ರರೇ,) ಹೇಳಿರಿ, ‘ಅಲ್ಲಾಹನು ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ತಿಳಿಯದಂತಹ ಸುದ್ದಿಯನ್ನು ನೀವು ಅವನಿಗೆ ತಿಳಿಸುತ್ತೀರಾ?’ ಇವರು ಸಹಭಾಗಿಗಳನ್ನಾಗಿ ಮಾಡುತ್ತಿರುವವುಗಳಿಂದ ಅವನು ಅತಿ ಪಾವನನೂ ಉನ್ನತನೂ ಆಗಿರುತ್ತಾನೆ.

Verse 19

وَمَا كَانَ ٱلنَّاسُ إِلَّآ أُمَّةً وَٰحِدَةً فَٱخْتَلَفُوا۟ ۚ وَلَوْلَا كَلِمَةٌ سَبَقَتْ مِن رَّبِّكَ لَقُضِىَ بَيْنَهُمْ فِيمَا فِيهِ يَخْتَلِفُونَ

Transliteration wamā kāna l-nāsu illā ummatan wāḥidatan fa-ikh'talafū walawlā kalimatun sabaqat min rabbika laquḍiya baynahum fīmā fīhi yakhtalifūna

Kannada ಮಾನವರು ಒಂದೇ ಸಮುದಾಯವಾಗಿದ್ದರು. ಅನಂತರ ಅವರು ಭಿನ್ನಾಭಿಪ್ರಾಯ ತಾಳಿದರು . ನಿಮ್ಮ ಪ್ರಭುವಿನ ಕಡೆಯಿಂದ ಒಂದು ವಚನವು ಮೊದಲೇ ಇಲ್ಲದಿರುತ್ತಿದ್ದರೆ ಅವರು ಪರಸ್ಪರ ಭಿನ್ನಾಭಿಪ್ರಾಯ ವಿರಿಸುತ್ತಿರುವ ವಿಷಯದಲ್ಲಿ ಅವರ ನಡುವೆ (ಈಗಾಗಲೇ) ತೀರ್ಮಾನ ಮಾಡಿ ಬಿಡಲಾಗುತ್ತಿತ್ತು.

Verse 20

وَيَقُولُونَ لَوْلَآ أُنزِلَ عَلَيْهِ ءَايَةٌ مِّن رَّبِّهِۦ ۖ فَقُلْ إِنَّمَا ٱلْغَيْبُ لِلَّهِ فَٱنتَظِرُوٓا۟ إِنِّى مَعَكُم مِّنَ ٱلْمُنتَظِرِينَ

Transliteration wayaqūlūna lawlā unzila ʿalayhi āyatun min rabbihi faqul innamā l-ghaybu lillahi fa-intaẓirū innī maʿakum mina l-muntaẓirīna

Kannada ಈ ಪ್ರವಾದಿಯ ಮೇಲೆ ಇವನ ಪ್ರಭುವಿನ ಕಡೆಯಿಂದ ಒಂದು ದೃಷ್ಟಾಂತವೇಕೆ ಇಳಿಸಿಕೊಡಲಾ ಗಿಲ್ಲವೆಂದು ಇವರು ಕೇಳುತ್ತಾರೆ. ಅವರೊಡನೆ, ಹೇಳಿರಿ, ಅದೃಶ್ಯ ಜ್ಞಾನ ಅಲ್ಲಾಹನಿಗೆ ಮಾತ್ರವಿದೆ. ಆದ್ದರಿಂದ ನೀವು ಕಾಯುತ್ತಿರಿ, ನಾನೂ ನಿಮ್ಮೊಂದಿಗೆ ಕಾದುಕೊಂಡಿರುತ್ತೇನೆ ಎಂದು.

Verse 21

وَإِذَآ أَذَقْنَا ٱلنَّاسَ رَحْمَةً مِّنۢ بَعْدِ ضَرَّآءَ مَسَّتْهُمْ إِذَا لَهُم مَّكْرٌ فِىٓ ءَايَاتِنَا ۚ قُلِ ٱللَّهُ أَسْرَعُ مَكْرًا ۚ إِنَّ رُسُلَنَا يَكْتُبُونَ مَا تَمْكُرُونَ

Transliteration wa-idhā adhaqnā l-nāsa raḥmatan min baʿdi ḍarrāa massathum idhā lahum makrun fī āyātinā quli l-lahu asraʿu makran inna rusulanā yaktubūna mā tamkurūna

Kannada ಜನರಿಗೆ ಕಷ್ಟತಟ್ಟಿದ ಬಳಿಕ ಕಾರುಣ್ಯದ ಸವಿ ಯನ್ನುಣಿಸಿದಾಗ ಆ ಕೂಡಲೆ ಅವರು ನಮ್ಮ ನಿದರ್ಶನಗಳ ಬಗ್ಗೆ ಕುತಂತ್ರಗಳನ್ನು ಆರಂಭಿಸಿ ಬಿಡುತ್ತಾರೆ. ಹೇಳಿರಿ; ಅಲ್ಲಾಹು ತಂತ್ರಗಾರಿ ಕೆಯಲ್ಲಿ ಅತಿ ಶೀಘ್ರನು. ನಮ್ಮ ದೂತರು ನಿಮ್ಮ ಎಲ್ಲ ಕುತಂತ್ರಗಳನ್ನೂ ಬರೆದಿಡುತ್ತಿದ್ದಾರೆ ಎಂದು.

Verse 22

هُوَ ٱلَّذِى يُسَيِّرُكُمْ فِى ٱلْبَرِّ وَٱلْبَحْرِ ۖ حَتَّىٰٓ إِذَا كُنتُمْ فِى ٱلْفُلْكِ وَجَرَيْنَ بِهِم بِرِيحٍ طَيِّبَةٍ وَفَرِحُوا۟ بِهَا جَآءَتْهَا رِيحٌ عَاصِفٌ وَجَآءَهُمُ ٱلْمَوْجُ مِن كُلِّ مَكَانٍ وَظَنُّوٓا۟ أَنَّهُمْ أُحِيطَ بِهِمْ ۙ دَعَوُا۟ ٱللَّهَ مُخْلِصِينَ لَهُ ٱلدِّينَ لَئِنْ أَنجَيْتَنَا مِنْ هَـٰذِهِۦ لَنَكُونَنَّ مِنَ ٱلشَّـٰكِرِينَ

Transliteration huwa alladhī yusayyirukum fī l-bari wal-baḥri ḥattā idhā kuntum fī l-ful'ki wajarayna bihim birīḥin ṭayyibatin wafariḥū bihā jāathā rīḥun ʿāṣifun wajāahumu l-mawju min kulli makānin waẓannū annahum uḥīṭa bihim daʿawū l-laha mukh'liṣīna lahu l-dīna la-in anjaytanā min hādhihi lanakūnanna mina l-shākirīna

Kannada ನಿಮ್ಮನ್ನು ನೆಲ-ಜಲಗಳಲ್ಲಿ ಚಲಾಯಿಸುವವನೇ ಅವನು. ನೀವು ನಾವೆಗಳಲ್ಲಿರುತ್ತ ಅನುಕೂಲಕರ ಮಾರುತವು ಯಾತ್ರಿಕರನ್ನು ಕೊಂಡೊಯ್ಯುತ್ತ ಆನಂದ ತುಂದಿಲರಾಗಿರುವಾಗ ಹಠಾತ್ತನೆ ಸುಂಟರ ಗಾಳಿಯು ಅವರಿಗೆ ಬಲವಾಗಿ ಬೀಸಿ ಎಲ್ಲ ಕಡೆ ಗಳಿಂದಲೂ ತೆರೆಗಳು ಅಪ್ಪಳಿಸುತ್ತಿರುವಾಗ ಮತ್ತು ಅಪಾಯ ಆವರಿಸಿದೆ ಎಂದವರು ಭಾವಿಸುತ್ತಿರುವಾಗ ಎಲ್ಲರೂ ತಮ್ಮ ಪ್ರಾರ್ಥನೆಯನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕ ವಾಗಿರಿಸಿಕೊಂಡು ಅವನೊಡನೆ, ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ನಾವು ಕೃತಜ್ಞರಲ್ಲಾಗುವೆವು ಎಂದು ಪ್ರಾರ್ಥಿಸುತ್ತಾರೆ.

Verse 23

فَلَمَّآ أَنجَىٰهُمْ إِذَا هُمْ يَبْغُونَ فِى ٱلْأَرْضِ بِغَيْرِ ٱلْحَقِّ ۗ يَـٰٓأَيُّهَا ٱلنَّاسُ إِنَّمَا بَغْيُكُمْ عَلَىٰٓ أَنفُسِكُم ۖ مَّتَـٰعَ ٱلْحَيَوٰةِ ٱلدُّنْيَا ۖ ثُمَّ إِلَيْنَا مَرْجِعُكُمْ فَنُنَبِّئُكُم بِمَا كُنتُمْ تَعْمَلُونَ

Transliteration falammā anjāhum idhā hum yabghūna fī l-arḍi bighayri l-ḥaqi yāayyuhā l-nāsu innamā baghyukum ʿalā anfusikum matāʿa l-ḥayati l-dun'yā thumma ilaynā marjiʿukum fanunabbi-ukum bimā kuntum taʿmalūna

Kannada ಆದರೆ, ಅವನು (ಅಲ್ಲಾಹು) ಅವರನ್ನು ರಕ್ಷಿಸಿದಾಗ ಅವರು ನ್ಯಾಯವಿಲ್ಲದೆ ಭೂಮಿಯಲ್ಲಿ ಬಂಡಾಯವೇಳುತ್ತಾರೆ. ಓ ಜನರೇ, ನಿಮ್ಮ ಈ ಬಂಡಾಯವು ನಿಮ್ಮ ವಿರುದ್ಧವೇ ಆಗಿದೆ. ಐಹಿಕ ಜೀವನದ ಸುಖಾನಂದ ಮಾತ್ರ ಇದರಿಂದ ಸಿಗುತ್ತದೆ. ಆದರೆ ಅನಂತರ ನಿಮಗೆ ನಮ್ಮ ಕಡೆಗೆ ಮರಳಿ ಬರಲಿಕ್ಕಿದೆ. ಆಗ ನೀವು ಮಾಡುತ್ತಿದ್ದುದನ್ನು ನಾವು ನಿಮಗೆ ತಿಳಿಸಲಿದ್ದೇವೆ.

Verse 24

إِنَّمَا مَثَلُ ٱلْحَيَوٰةِ ٱلدُّنْيَا كَمَآءٍ أَنزَلْنَـٰهُ مِنَ ٱلسَّمَآءِ فَٱخْتَلَطَ بِهِۦ نَبَاتُ ٱلْأَرْضِ مِمَّا يَأْكُلُ ٱلنَّاسُ وَٱلْأَنْعَـٰمُ حَتَّىٰٓ إِذَآ أَخَذَتِ ٱلْأَرْضُ زُخْرُفَهَا وَٱزَّيَّنَتْ وَظَنَّ أَهْلُهَآ أَنَّهُمْ قَـٰدِرُونَ عَلَيْهَآ أَتَىٰهَآ أَمْرُنَا لَيْلًا أَوْ نَهَارًا فَجَعَلْنَـٰهَا حَصِيدًا كَأَن لَّمْ تَغْنَ بِٱلْأَمْسِ ۚ كَذَٰلِكَ نُفَصِّلُ ٱلْـَٔايَـٰتِ لِقَوْمٍ يَتَفَكَّرُونَ

Transliteration innamā mathalu l-ḥayati l-dun'yā kamāin anzalnāhu mina l-samāi fa-ikh'talaṭa bihi nabātu l-arḍi mimmā yakulu l-nāsu wal-anʿāmu ḥattā idhā akhadhati l-arḍu zukh'rufahā wa-izzayyanat waẓanna ahluhā annahum qādirūna ʿalayhā atāhā amrunā laylan aw nahāran fajaʿalnāhā ḥaṣīdan ka-an lam taghna bil-amsi kadhālika nufaṣṣilu l-āyāti liqawmin yatafakkarūna

Kannada ನಾವು ಆಕಾಶದಿಂದ ಮಳೆಗೆರೆದು, ಆ ಮೂಲಕ ಜನರೂ, ಜಾನುವಾರುಗಳೂ ತಿನ್ನುವ ಭೂಮಿ ಯ ಬೆಳೆಯು ಹುಲುಸಾಗಿ ಬೆಳೆಯಿತು. ಕೊನೆಗೆ ಭೂಮಿಯು ಅದರ ಅಲಂಕಾರ ಹೊದ್ದು ಮಿರುಗಿ ಬೆಳಗಿತು. ಹಾಗೂ ಅವುಗಳ ಮಾಲೀಕರು ನಾವೀಗ ಇದರಿಂದ ಫಲ ಹೊಂದಲು ಸಮರ್ಥರಾಗಿದ್ದೇವೆಂದು ಭಾವಿಸುತ್ತಿದ್ದಾಗ ಹಠಾತ್ತನೆ ರಾತ್ರೆ ಅಥವಾ ಹಗಲಲ್ಲಿ ನಮ್ಮ ಅಪ್ಪಣೆ ಬಂದು ಬಿಟ್ಟಿತು ಮತ್ತು ನಿನ್ನೆ ಅಲ್ಲೇನೂ ಇರಲೇ ಇಲ್ಲವೋ ಎಂಬಂತೆ ನಾವು ಅದನ್ನು ಅಳಿಸಿ ಬಿಟ್ಟೆವು. ಕೇವಲ ಹೀಗಿದೆ ಐಹಿಕ ಜೀವನದ ಉಪಮೆ. ವಿವೇಚಿಸುವ ಜನರಿಗೆ ನಾವು ಈ ರೀತಿಯಲ್ಲಿ ದೃಷ್ಟಾಂತಗಳನ್ನು ಸ್ಪಷ್ಟಪಡಿಸುತ್ತಿದ್ದೇವೆ.

Verse 25

وَٱللَّهُ يَدْعُوٓا۟ إِلَىٰ دَارِ ٱلسَّلَـٰمِ وَيَهْدِى مَن يَشَآءُ إِلَىٰ صِرَٰطٍ مُّسْتَقِيمٍ

Transliteration wal-lahu yadʿū ilā dāri l-salāmi wayahdī man yashāu ilā ṣirāṭin mus'taqīmin

Kannada ಅಲ್ಲಾಹು ನಿಮ್ಮನ್ನು ಶಾಂತಿ ಸದನಕ್ಕೆ ಕರೆಯುತ್ತಿದ್ದಾನೆ. ಅವನು ತಾನಿಚ್ಛಿಸಿದವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ.

Verse 26

۞ لِّلَّذِينَ أَحْسَنُوا۟ ٱلْحُسْنَىٰ وَزِيَادَةٌ ۖ وَلَا يَرْهَقُ وُجُوهَهُمْ قَتَرٌ وَلَا ذِلَّةٌ ۚ أُو۟لَـٰٓئِكَ أَصْحَـٰبُ ٱلْجَنَّةِ ۖ هُمْ فِيهَا خَـٰلِدُونَ

Transliteration lilladhīna aḥsanū l-ḥus'nā waziyādatun walā yarhaqu wujūhahum qatarun walā dhillatun ulāika aṣḥābu l-janati hum fīhā khālidūna

Kannada ಸುಕೃತ ಮಾಡಿದವರಿಗೆ ಅತ್ಯಂತ ಉತ್ತಮ ಪ್ರತಿಫಲವೂ ಇನ್ನೂ ಹೆಚ್ಚಿನ ಅನುಗ್ರಹವೂ ಇದೆ. ಅವರಿಗೆ ಕಳಂಕವೋ, ನಿಂದೆಯೋ ಆವರಿಸಲಾರದು. ಅವರೇ ಸ್ವರ್ಗದವರು. ಅಲ್ಲಿ ಅವರು ಶಾಶ್ವತರು.

Verse 27

وَٱلَّذِينَ كَسَبُوا۟ ٱلسَّيِّـَٔاتِ جَزَآءُ سَيِّئَةٍۭ بِمِثْلِهَا وَتَرْهَقُهُمْ ذِلَّةٌ ۖ مَّا لَهُم مِّنَ ٱللَّهِ مِنْ عَاصِمٍ ۖ كَأَنَّمَآ أُغْشِيَتْ وُجُوهُهُمْ قِطَعًا مِّنَ ٱلَّيْلِ مُظْلِمًا ۚ أُو۟لَـٰٓئِكَ أَصْحَـٰبُ ٱلنَّارِ ۖ هُمْ فِيهَا خَـٰلِدُونَ

Transliteration wa-alladhīna kasabū l-sayiāti jazāu sayyi-atin bimith'lihā watarhaquhum dhillatun mā lahum mina l-lahi min ʿāṣimin ka-annamā ugh'shiyat wujūhuhum qiṭaʿan mina al-layli muẓ'liman ulāika aṣḥābu l-nāri hum fīhā khālidūna

Kannada ಪಾಪ ಗಳಿಸಿದವರು ಅವರ ಪಾಪಗಳ ತಕ್ಕಂತೆ ಪ್ರತಿಫಲವು ಅದಕ್ಕೆ ಸಮಾನವಾದುದೇ ಆಗಿದೆ. ಅವಮಾನವು ಅವರನ್ನು ಆವರಿಸುವುದು. ಅವರನ್ನು ಅಲ್ಲಾಹನಿಂದ ರಕ್ಷಿಸುವವನಾರೂ ಇರಲಾರನು. ಕಾರಿರುಳ ತುಂಡುಗಳಿಂದ ಅವರ ಮುಖಗಳನ್ನು ಮುಚ್ಚಿದಂತಿದೆ. ಅವರೇ ನರಕದವರು. ಅದರಲ್ಲಿ ಅವರು ಶಾಶ್ವತರು.

Verse 28

وَيَوْمَ نَحْشُرُهُمْ جَمِيعًا ثُمَّ نَقُولُ لِلَّذِينَ أَشْرَكُوا۟ مَكَانَكُمْ أَنتُمْ وَشُرَكَآؤُكُمْ ۚ فَزَيَّلْنَا بَيْنَهُمْ ۖ وَقَالَ شُرَكَآؤُهُم مَّا كُنتُمْ إِيَّانَا تَعْبُدُونَ

Transliteration wayawma naḥshuruhum jamīʿan thumma naqūlu lilladhīna ashrakū makānakum antum washurakāukum fazayyalnā baynahum waqāla shurakāuhum mā kuntum iyyānā taʿbudūna

Kannada ಅವರೆಲ್ಲರನ್ನೂ ನಾವು ಒಟ್ಟಾಗಿ ಸೇರಿಸುವ ಮತ್ತು ಬಹುದೇವಾರಾಧಕರೊಡನೆ, ನೀವೂ ನೀವು ಮಾಡಿಕೊಂಡ ಸಹಭಾಗಿಗಳೂ ಅಲ್ಲೇ ನಿಲ್ಲಿರೆಂದು ಹೇಳುವ ದಿನ. ಆ ಬಳಿಕ ನಾವು ಅವರನ್ನು ಪರಸ್ಪರ ಬೇರ್ಪಡಿಸುವೆವು. ಅವರ ಸಹಭಾಗಿಗಳು ಹೇಳುವರು, ನೀವು ನಮ್ಮನ್ನು ಆರಾಧಿಸುತ್ತಿರಲಿಲ್ಲ.

Verse 29

فَكَفَىٰ بِٱللَّهِ شَهِيدًۢا بَيْنَنَا وَبَيْنَكُمْ إِن كُنَّا عَنْ عِبَادَتِكُمْ لَغَـٰفِلِينَ

Transliteration fakafā bil-lahi shahīdan baynanā wabaynakum in kunnā ʿan ʿibādatikum laghāfilīna

Kannada ಆದ್ದರಿಂದ ನಮ್ಮ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ನಿಮ್ಮ ಆರಾಧನೆಯ ಬಗ್ಗೆ ನಾವು ಸಂಪೂರ್ಣ ಅಲಕ್ಷರಾಗಿದ್ದೆವು.

Verse 30

هُنَالِكَ تَبْلُوا۟ كُلُّ نَفْسٍ مَّآ أَسْلَفَتْ ۚ وَرُدُّوٓا۟ إِلَى ٱللَّهِ مَوْلَىٰهُمُ ٱلْحَقِّ ۖ وَضَلَّ عَنْهُم مَّا كَانُوا۟ يَفْتَرُونَ

Transliteration hunālika tablū kullu nafsin mā aslafat waruddū ilā l-lahi mawlāhumu l-ḥaqi waḍalla ʿanhum mā kānū yaftarūna

Kannada ಅಲ್ಲಿ ಪ್ರತಿಯೊಂದು ದೇಹವು ತಾನು ಮೊದಲೇ ಮಾಡಿದ ಕರ್ಮದ ಫಲವನ್ನು ಅನುಭವಿಸಿ ತಿಳಿಯುವುದು. ಅವರು ತಮ್ಮ ನೈಜ ಒಡೆ ಯನಾದ ಅಲ್ಲಾಹನ ಕಡೆಗೆ ಮರಳಿಸಲ್ಪಡುವರು ಮತ್ತು ಅವರು ಸೃಷ್ಟಿಸಿಕೊಂಡದ್ದೆಲ್ಲವೂ ಅವರಿಂದ ಕಾಣೆಯಾಗುವುವು .

Verse 31

قُلْ مَن يَرْزُقُكُم مِّنَ ٱلسَّمَآءِ وَٱلْأَرْضِ أَمَّن يَمْلِكُ ٱلسَّمْعَ وَٱلْأَبْصَـٰرَ وَمَن يُخْرِجُ ٱلْحَىَّ مِنَ ٱلْمَيِّتِ وَيُخْرِجُ ٱلْمَيِّتَ مِنَ ٱلْحَىِّ وَمَن يُدَبِّرُ ٱلْأَمْرَ ۚ فَسَيَقُولُونَ ٱللَّهُ ۚ فَقُلْ أَفَلَا تَتَّقُونَ

Transliteration qul man yarzuqukum mina l-samāi wal-arḍi amman yamliku l-samʿa wal-abṣāra waman yukh'riju l-ḥaya mina l-mayiti wayukh'riju l-mayita mina l-ḥayi waman yudabbiru l-amra fasayaqūlūna l-lahu faqul afalā tattaqūna

Kannada ಕೇಳಿರಿ- ಆಕಾಶಗಳಿಂದಲೂ ಭೂಮಿಯಿಂದಲೂ ನಿಮಗೆ ಆಹಾರ ನೀಡುವವನು ಯಾರು? ಶ್ರವಣ ಮತ್ತು ದೃಷ್ಟಿಗಳನ್ನು ಅಧೀನಗೊಳಿಸಿದ್ದು ಯಾರು? ನಿರ್ಜಿವಿಯಿಂದ ಸಜೀವಿಯನ್ನು ಸಜೀವಿಯಿಂದ ನಿರ್ಜೀವಿಯನ್ನು ಹೊರತರುವುದು ಯಾರು? ಕಾರ್ಯವನ್ನು ನಿಯಂತ್ರಿಸುವುದು ಯಾರು? ಅಲ್ಲಾಹು ಎಂದೇ ಅವರು ಹೇಳುವರು. ಹಾಗಾದರೆ ಹೇಳಿರಿ; ಇಷ್ಟಾದರೂ ನೀವು ಜಾಗೃತರಾಗುವುದಿಲ್ಲವೇ?

Verse 32

فَذَٰلِكُمُ ٱللَّهُ رَبُّكُمُ ٱلْحَقُّ ۖ فَمَاذَا بَعْدَ ٱلْحَقِّ إِلَّا ٱلضَّلَـٰلُ ۖ فَأَنَّىٰ تُصْرَفُونَ

Transliteration fadhālikumu l-lahu rabbukumu l-ḥaqu famādhā baʿda l-ḥaqi illā l-ḍalālu fa-annā tuṣ'rafūna

Kannada ಅವನೇ ನಿಮ್ಮ ಯಥಾರ್ಥ ಪ್ರಭುವಾದ ಅಲ್ಲಾಹು. ಹೀಗಿದ್ದು ಸತ್ಯದ ಬಳಿಕ ಪಥ ಭ್ರಷ್ಟತೆಯ ವಿನಾ ಬೇರೇನು ಉಳಿದಿದೆ? ಹೇಗೆ ನೀವು ತಪ್ಪಿಸಲ್ಪಡುತ್ತಿರುವಿರಿ?

Verse 33

كَذَٰلِكَ حَقَّتْ كَلِمَتُ رَبِّكَ عَلَى ٱلَّذِينَ فَسَقُوٓا۟ أَنَّهُمْ لَا يُؤْمِنُونَ

Transliteration kadhālika ḥaqqat kalimatu rabbika ʿalā alladhīna fasaqū annahum lā yu'minūna

Kannada ಆ ಪ್ರಕಾರ ಕರ್ಮಭ್ರಷ್ಟರ ವಿಷಯದಲ್ಲಿ, ಅವರು ವಿಶ್ವಾಸವಿರಿಸಲಾರರೆಂಬ ನಿಮ್ಮ ಪ್ರಭುವಿನ ಮಾತು ನಿಜವಾಯಿತು.

Verse 34

قُلْ هَلْ مِن شُرَكَآئِكُم مَّن يَبْدَؤُا۟ ٱلْخَلْقَ ثُمَّ يُعِيدُهُۥ ۚ قُلِ ٱللَّهُ يَبْدَؤُا۟ ٱلْخَلْقَ ثُمَّ يُعِيدُهُۥ ۖ فَأَنَّىٰ تُؤْفَكُونَ

Transliteration qul hal min shurakāikum man yabda-u l-khalqa thumma yuʿīduhu quli l-lahu yabda-u l-khalqa thumma yuʿīduhu fa-annā tu'fakūna

Kannada (ಪ್ರವಾದಿಯವರೇ) ಹೇಳಿರಿ; ಸೃಷ್ಟಿಯ ಆರಂಭ ಮಾಡಿ, ನಂತರ ಅದನ್ನು ಪುನರಾವರ್ತಿಸುವ ಯಾರಾದರೂ ನೀವು ಸಹಭಾಗಿಗಳಾಗಿ ಸೇರಿಸಿ ದವರ ಕೂಟದಲ್ಲಿ ಇದ್ದಾರೇನು? ಹೇಳಿರಿ - ಸೃಷ್ಟಿಯನ್ನು ಆರಂಭಿಸುವವನೂ ಅದನ್ನು ಪುನರಾ ವರ್ತಿಸುವವನೂ ಕೇವಲ ಅಲ್ಲಾಹನೇ ಆಗಿರುವನು. ಹೀಗಿರುತ್ತ ನೀವು ಹೇಗೆ ತಪ್ಪಿಸಲ್ಪ ಡುತ್ತಿರುವಿರಿ?

Verse 35

قُلْ هَلْ مِن شُرَكَآئِكُم مَّن يَهْدِىٓ إِلَى ٱلْحَقِّ ۚ قُلِ ٱللَّهُ يَهْدِى لِلْحَقِّ ۗ أَفَمَن يَهْدِىٓ إِلَى ٱلْحَقِّ أَحَقُّ أَن يُتَّبَعَ أَمَّن لَّا يَهِدِّىٓ إِلَّآ أَن يُهْدَىٰ ۖ فَمَا لَكُمْ كَيْفَ تَحْكُمُونَ

Transliteration qul hal min shurakāikum man yahdī ilā l-ḥaqi quli l-lahu yahdī lil'ḥaqqi afaman yahdī ilā l-ḥaqi aḥaqqu an yuttabaʿa amman lā yahiddī illā an yuh'dā famā lakum kayfa taḥkumūna

Kannada ಹೇಳಿರಿ, ಸತ್ಯದ ಕಡೆಗೆ ಮಾರ್ಗದರ್ಶನ ನೀಡುವ ಯಾರಾದರೂ ನೀವಿರಿಸಿಕೊಂಡ ಸಹ ಭಾಗಿಗಳ ಕೂಟದಲ್ಲಿ ಇದ್ದಾರೇನು? ಹೇಳಿರಿ - ಅಲ್ಲಾಹನೇ ಸತ್ಯಕ್ಕೆ ದಾರಿ ತೋರುತ್ತಾನೆ. ಹೀಗಿದ್ದು ಸತ್ಯದ ಕಡೆಗೆ ಮಾರ್ಗದರ್ಶನ ಮಾಡು ವವನೋ ಅಥವಾ ತನಗೆ ಮಾರ್ಗದರ್ಶನ ಮಾಡಿಸದಿದ್ದರೆ ಸ್ವತಃ ಸನ್ಮಾರ್ಗ ಹೊಂದದವನೋ ಯಾರು ಅನುಸರಣೆಗೆ ಹೆಚ್ಚು ಅರ್ಹನು? ನಿಮ ಗೇನಾಗಿದೆ? ಹೇಗೆ ನೀವು ತೀರ್ಮಾನ ಕೈಗೊಳ್ಳುತ್ತೀರಿ?”

Verse 36

وَمَا يَتَّبِعُ أَكْثَرُهُمْ إِلَّا ظَنًّا ۚ إِنَّ ٱلظَّنَّ لَا يُغْنِى مِنَ ٱلْحَقِّ شَيْـًٔا ۚ إِنَّ ٱللَّهَ عَلِيمٌۢ بِمَا يَفْعَلُونَ

Transliteration wamā yattabiʿu aktharuhum illā ẓannan inna l-ẓana lā yugh'nī mina l-ḥaqi shayan inna l-laha ʿalīmun bimā yafʿalūna

Kannada ಅವರ ಪೈಕಿ ಹೆಚ್ಚಿನವರು ಊಹೆಯನ್ನು ಮಾತ್ರ ಹಿಂಬಾಲಿಸುತ್ತಾರೆ. ವಸ್ತುತಃ ಊಹೆಯು ಸತ್ಯದ ಸ್ಥಾನದಲ್ಲಿ ಒಂದಿಷ್ಟೂ ಪರ್ಯಾಪ್ತವಲ್ಲ. ಅಲ್ಲಾಹನು ಇವರು ಮಾಡುತ್ತಿರುವುದನ್ನೆಲ್ಲಾ ಚೆನ್ನಾಗಿ ಅರಿಯುತ್ತಾನೆ.

Verse 37

وَمَا كَانَ هَـٰذَا ٱلْقُرْءَانُ أَن يُفْتَرَىٰ مِن دُونِ ٱللَّهِ وَلَـٰكِن تَصْدِيقَ ٱلَّذِى بَيْنَ يَدَيْهِ وَتَفْصِيلَ ٱلْكِتَـٰبِ لَا رَيْبَ فِيهِ مِن رَّبِّ ٱلْعَـٰلَمِينَ

Transliteration wamā kāna hādhā l-qur'ānu an yuf'tarā min dūni l-lahi walākin taṣdīqa alladhī bayna yadayhi watafṣīla l-kitābi lā rayba fīhi min rabbi l-ʿālamīna

Kannada ಈ ಖುರ್‍ಆನ್ ಅಲ್ಲಾಹನಲ್ಲದವರಿಂದ ನಿರ್ಮಿಸಲಾಗಿಲ್ಲ. ನಿಜವಾಗಿ ಅದು ಹಿಂದೆ ಬಂದಿದ್ದ ದಿವ್ಯ ಸಂದೇಶದ ದೃಢೀಕರಣವೂ ದಿವ್ಯ ಗ್ರಂಥದ ವಿವರಣೆಯೂ ಆಗಿರುತ್ತದೆ. ಅದರಲ್ಲಿ ಯಾವ ಸಂದೇಹವೂ ಇಲ್ಲ. ಅದು ಸರ್ವಲೋಕಾಧಿಪತಿಯ ಕಡೆಯಿಂದ ಬಂದಿದೆ.

Verse 38

أَمْ يَقُولُونَ ٱفْتَرَىٰهُ ۖ قُلْ فَأْتُوا۟ بِسُورَةٍ مِّثْلِهِۦ وَٱدْعُوا۟ مَنِ ٱسْتَطَعْتُم مِّن دُونِ ٱللَّهِ إِن كُنتُمْ صَـٰدِقِينَ

Transliteration am yaqūlūna if'tarāhu qul fatū bisūratin mith'lihi wa-id'ʿū mani is'taṭaʿtum min dūni l-lahi in kuntum ṣādiqīna

Kannada ಅದಲ್ಲ, ಇದನ್ನು ಪೈಗಂಬರರು ಸ್ವತಃ ರಚಿಸಿ ಕೊಂಡರೆಂದು ಇವರು ಹೇಳುತ್ತಾರೆಯೇ? ಹೇಳಿರಿ; ನೀವು (ನಿಮ್ಮ ಈ ಆಪಾದನೆಯ ಬಗ್ಗೆ) ಸತ್ಯವಾದಿಗಳಾಗಿದ್ದರೆ ಇದಕ್ಕೆ ಸಮಾನವಾದ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನನ್ನು ಬಿಟ್ಟು ಯಾರನ್ನು ನಿಮಗೆ ಕರೆಯಲು ಸಾಧ್ಯವಿದೆಯೋ ಅವರನ್ನೆಲ್ಲ ಕರೆದುಕೊಳ್ಳಿರಿ .

Verse 39

بَلْ كَذَّبُوا۟ بِمَا لَمْ يُحِيطُوا۟ بِعِلْمِهِۦ وَلَمَّا يَأْتِهِمْ تَأْوِيلُهُۥ ۚ كَذَٰلِكَ كَذَّبَ ٱلَّذِينَ مِن قَبْلِهِمْ ۖ فَٱنظُرْ كَيْفَ كَانَ عَـٰقِبَةُ ٱلظَّـٰلِمِينَ

Transliteration bal kadhabū bimā lam yuḥīṭū biʿil'mihi walammā yatihim tawīluhu kadhālika kadhaba alladhīna min qablihim fa-unẓur kayfa kāna ʿāqibatu l-ẓālimīna

Kannada ಆದರೆ ಅದರ (ಖುರ್‍ಆನಿನ) ಜ್ಞಾನವನ್ನು ಅವರು ಸೂಕ್ಷ್ಮವಾಗಿ ತಿಳಿದಿಲ್ಲದ ಕಾರಣ ಅದರ ಭವಿಷ್ಯ ಫಲಗಳು ಅವರಿಗೆ ಬಾರದಿರುವ ಸ್ಥಿತಿಯಲ್ಲಿ ಇವರು ಸುಳ್ಳಾಗಿಸಿದರು. ಇದೇ ರೀತಿಯಲ್ಲಿ ಇವರ ಪೂರ್ವಿಕರೂ ಸುಳ್ಳಾಗಿಸಿದ್ದರು. ಆದ್ದರಿಂದ ಆ ಅಕ್ರಮಿಗಳ ಗತಿಯೇನಾಯಿತೆಂದು ನೋಡಿರಿ.

Verse 40

وَمِنْهُم مَّن يُؤْمِنُ بِهِۦ وَمِنْهُم مَّن لَّا يُؤْمِنُ بِهِۦ ۚ وَرَبُّكَ أَعْلَمُ بِٱلْمُفْسِدِينَ

Transliteration wamin'hum man yu'minu bihi wamin'hum man lā yu'minu bihi warabbuka aʿlamu bil-muf'sidīna

Kannada ಇದರಲ್ಲಿ (ಖುರ್‍ಆನಿನಲ್ಲಿ) ಕೆಲವರು ವಿಶ್ವಾಸವಿರಿಸುವರು ಮತ್ತು ಇನ್ನು ಕೆಲವರು ವಿಶ್ವಾಸವಿರಿಸಲಾರರು. ನಿಮ್ಮ ಪ್ರಭುವು ಗೊಂದಲಕಾರಿಗಳನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ.

Verse 41

وَإِن كَذَّبُوكَ فَقُل لِّى عَمَلِى وَلَكُمْ عَمَلُكُمْ ۖ أَنتُم بَرِيٓـُٔونَ مِمَّآ أَعْمَلُ وَأَنَا۠ بَرِىٓءٌ مِّمَّا تَعْمَلُونَ

Transliteration wa-in kadhabūka faqul lī ʿamalī walakum ʿamalukum antum barīūna mimmā aʿmalu wa-anā barīon mimmā taʿmalūna

Kannada ಇವರು ನಿಮ್ಮನ್ನು ಸುಳ್ಳಾಗಿಸುತ್ತಿದ್ದರೆ ಹೇಳಿರಿ;- `ನನ್ನ ಕರ್ಮ ನನಗೆ, ನಿಮ್ಮ ಕರ್ಮ ನಿಮಗೆ. ನಾನು ಮಾಡುತ್ತಿರುವ ಕರ್ಮದ ಹೊಣೆಯಿಂದ ನೀವು ಮುಕ್ತರು. ನೀವು ಮಾಡುತ್ತಿರುವ ಕರ್ಮದ ಹೊಣೆಯಿಂದ ನಾನು ಮುಕ್ತನು.

Verse 42

وَمِنْهُم مَّن يَسْتَمِعُونَ إِلَيْكَ ۚ أَفَأَنتَ تُسْمِعُ ٱلصُّمَّ وَلَوْ كَانُوا۟ لَا يَعْقِلُونَ

Transliteration wamin'hum man yastamiʿūna ilayka afa-anta tus'miʿu l-ṣuma walaw kānū lā yaʿqilūna

Kannada ಅವರ ಪೈಕಿ ನಿಮ್ಮ ಕಡೆಗೆ ಶೃದ್ಧೆಯಿಂದ ಕೇಳಿಸಿಕೊಳ್ಳುವವರೂ ಇದ್ದಾರೆ. ಆದರೆ ಕಿವುಡರು ಏನನ್ನೂ ಗ್ರಹಿಸದಿದ್ದರೂ ನೀವು ಅವರಿಗೆ ಕೇಳಿಸುವಿರಾ?

Verse 43

وَمِنْهُم مَّن يَنظُرُ إِلَيْكَ ۚ أَفَأَنتَ تَهْدِى ٱلْعُمْىَ وَلَوْ كَانُوا۟ لَا يُبْصِرُونَ

Transliteration wamin'hum man yanẓuru ilayka afa-anta tahdī l-ʿum'ya walaw kānū lā yub'ṣirūna

Kannada ಅವರ ಪೈಕಿ ನಿಮ್ಮತ್ತ ದಿಟ್ಟಿಸಿ ನೋಡುವವರೂ ಇದ್ದಾರೆ. ಆದರೆ ಕುರುಡರಿಗೆ ಏನೂ ಕಾಣದಿದ್ದರೂ ನೀವು ಅವರನ್ನು ಸನ್ಮಾರ್ಗಕ್ಕೆ ಹಚ್ಚುವಿರಾ?

Verse 44

إِنَّ ٱللَّهَ لَا يَظْلِمُ ٱلنَّاسَ شَيْـًٔا وَلَـٰكِنَّ ٱلنَّاسَ أَنفُسَهُمْ يَظْلِمُونَ

Transliteration inna l-laha lā yaẓlimu l-nāsa shayan walākinna l-nāsa anfusahum yaẓlimūna

Kannada ವಾಸ್ತವದಲ್ಲಿ ಅಲ್ಲಾಹ್ ಜನರಿಗೆ ಎಳ್ಳಷ್ಟೂ ಅನೀತಿ ತೋರಲಾರನು. ಆದರೆ ಜನರು ಪರಸ್ಪರ ಅನೀತಿ ತೋರುತ್ತಾರೆ.

Verse 45

وَيَوْمَ يَحْشُرُهُمْ كَأَن لَّمْ يَلْبَثُوٓا۟ إِلَّا سَاعَةً مِّنَ ٱلنَّهَارِ يَتَعَارَفُونَ بَيْنَهُمْ ۚ قَدْ خَسِرَ ٱلَّذِينَ كَذَّبُوا۟ بِلِقَآءِ ٱللَّهِ وَمَا كَانُوا۟ مُهْتَدِينَ

Transliteration wayawma yaḥshuruhum ka-an lam yalbathū illā sāʿatan mina l-nahāri yataʿārafūna baynahum qad khasira alladhīna kadhabū biliqāi l-lahi wamā kānū muh'tadīna

Kannada ಅಲ್ಲಾಹ್ ಅವರನ್ನು ಒಟ್ಟು ಸೇರಿಸುವ ದಿನದಂದು ಹಗಲಿನ ಒಂದು ಕ್ಷಣಕಾಲ ಮಾತ್ರ (ಇಹಲೋಕದಲ್ಲಿ) ತಾವು ತಂಗಿದ್ದಂತೆ ತೋರುವುದು. ಅವರು ಪರಸ್ಪರ ಗುರುತಿಸುವರು. ಅಲ್ಲಾಹನ ಭೇಟಿಯನ್ನು ಸುಳ್ಳಾಗಿಸಿದವರು ನಿಜಕ್ಕೂ ನಷ್ಟ ಹೊಂದಿದರು. ಅವರು ಸತ್ಪಥಿಕರಾಗಲಿಲ್ಲ.

Verse 46

وَإِمَّا نُرِيَنَّكَ بَعْضَ ٱلَّذِى نَعِدُهُمْ أَوْ نَتَوَفَّيَنَّكَ فَإِلَيْنَا مَرْجِعُهُمْ ثُمَّ ٱللَّهُ شَهِيدٌ عَلَىٰ مَا يَفْعَلُونَ

Transliteration wa-immā nuriyannaka baʿḍa alladhī naʿiduhum aw natawaffayannaka fa-ilaynā marjiʿuhum thumma l-lahu shahīdun ʿalā mā yafʿalūna

Kannada (ನಬಿಯರೇ) ಅವರಿಗೆ ನಾವು ತಾಕೀತು ಮಾಡು ತ್ತಿರುವ ಶಿಕ್ಷೆಗಳಲ್ಲಿ ಕೆಲವನ್ನು ನಾವು (ನಿಮ್ಮ ಜೀವಮಾನದಲ್ಲೇ) ನಿಮಗೆ ತೋರಿಸಬಹುದು ಅಥವಾ ಅದಕ್ಕಿಂತ ಮುಂಚೆಯೇ ನಿಮ್ಮನ್ನು ಮರಣಗೊಳಿಸಬಹುದು. ಹೇಗಿದ್ದರೂ ಇವರು ನಮ್ಮ ಕಡೆಗೆ ಬರಲಿಕ್ಕಿದೆ. ನಂತರ ಇವರು ಮಾಡುತ್ತಿರುವುದಕ್ಕೆಲ್ಲ ಅಲ್ಲಾಹು ಸಾಕ್ಷಿಯಾಗಿರುತ್ತಾನೆ.

Verse 47

وَلِكُلِّ أُمَّةٍ رَّسُولٌ ۖ فَإِذَا جَآءَ رَسُولُهُمْ قُضِىَ بَيْنَهُم بِٱلْقِسْطِ وَهُمْ لَا يُظْلَمُونَ

Transliteration walikulli ummatin rasūlun fa-idhā jāa rasūluhum quḍiya baynahum bil-qis'ṭi wahum lā yuẓ'lamūna

Kannada ಪ್ರತಿಯೊಂದು ಸಮುದಾಯಕ್ಕೂ ಓರ್ವ ಸಂದೇಶವಾಹಕರಿರುತ್ತಾನೆ. ಒಂದು ಸಮುದಾಯದ ಬಳಿಗೆ ಅದರ ಸಂದೇಶವಾಹಕರು ಬಂದಾಗ ಅವರ ನಡುವೆ ನ್ಯಾಯಪೂರ್ಣವಾಗಿ ವಿಧಿಸಲಾ ಗುತ್ತದೆ. ಅವರ ಮೇಲೆ ಅಕ್ರಮವೆಸಗಲಾಗುವುದಿಲ್ಲ.

Verse 48

وَيَقُولُونَ مَتَىٰ هَـٰذَا ٱلْوَعْدُ إِن كُنتُمْ صَـٰدِقِينَ

Transliteration wayaqūlūna matā hādhā l-waʿdu in kuntum ṣādiqīna

Kannada ಅವರು (ಸತ್ಯನಿಷೇಧಿಗಳು) ಹೇಳುತ್ತಾರೆ; ಈ ತಾಕೀತು ನೆರವೇರುವುದು ಯಾವಾಗ? ನೀವು ಸತ್ಯವಂತರಾಗಿದ್ದರೆ ಹೇಳಿರಿ.

Verse 49

قُل لَّآ أَمْلِكُ لِنَفْسِى ضَرًّا وَلَا نَفْعًا إِلَّا مَا شَآءَ ٱللَّهُ ۗ لِكُلِّ أُمَّةٍ أَجَلٌ ۚ إِذَا جَآءَ أَجَلُهُمْ فَلَا يَسْتَـْٔخِرُونَ سَاعَةً ۖ وَلَا يَسْتَقْدِمُونَ

Transliteration qul lā amliku linafsī ḍarran walā nafʿan illā mā shāa l-lahu likulli ummatin ajalun idhā jāa ajaluhum falā yastakhirūna sāʿatan walā yastaqdimūna

Kannada ಹೇಳಿರಿ, ಸ್ವತಃ ನನ್ನ ಲಾಭ-ಹಾನಿಗಳೂ ನನ್ನ ಅಧೀನದಲ್ಲಿಲ್ಲ. ಅಲ್ಲಾಹನು ಇಚ್ಛಿಸಿದ್ದು ಹೊರತು. ಪ್ರತಿಯೊಂದು ಸಮುದಾಯಕ್ಕೂ ಒಂದು ನಿಶ್ಚಿತ ಕಾಲಾವಧಿ ಇದೆ. ಆ ಕಾಲಾವಧಿ ಮುಗಿದಾಗ ಕ್ಷಣ ಮಾತ್ರವೂ ಹಿಂದೆ ಬರಲಾರರು, ಮುಂದೆ ಯೂ ಸರಿಯಲಾರರು.

Verse 50

قُلْ أَرَءَيْتُمْ إِنْ أَتَىٰكُمْ عَذَابُهُۥ بَيَـٰتًا أَوْ نَهَارًا مَّاذَا يَسْتَعْجِلُ مِنْهُ ٱلْمُجْرِمُونَ

Transliteration qul ara-aytum in atākum ʿadhābuhu bayātan aw nahāran mādhā yastaʿjilu min'hu l-muj'rimūna

Kannada (ಪ್ರವಾದಿಯವರೇ) ಹೇಳಿರಿ; - ಅಲ್ಲಾಹನ ಶಿಕ್ಷೆ ಯು ರಾತ್ರೆ ಅಥವಾ ಹಗಲಲ್ಲಿ ಹಠಾತ್ತನೆ ಬಂದೆರ ಗಿದ ನಂತರ ಶಿಕ್ಷಾರ್ಹರು ಆ ಶಿಕ್ಷೆಯ ವಿಚಾರ ದಲ್ಲಿ ತವಕಪಡುವ ಅಗತ್ಯವಾದರೂ ಏನಿದೆ?

Verse 51

أَثُمَّ إِذَا مَا وَقَعَ ءَامَنتُم بِهِۦٓ ۚ ءَآلْـَٔـٰنَ وَقَدْ كُنتُم بِهِۦ تَسْتَعْجِلُونَ

Transliteration athumma idhā mā waqaʿa āmantum bihi āl'āna waqad kuntum bihi tastaʿjilūna

Kannada ಇನ್ನು ಅದು (ಶಿಕ್ಷೆ) ನಿಮ್ಮ ಮೇಲೆ ಬಂದೆರಗುವಾಗಲೇ ನೀವು ಅದನ್ನು ನಂಬುವಿರಾ? ನೀವು ಈ ಶಿಕ್ಷೆಗೆ ತ್ವರೆ ಮಾಡುತ್ತಿದ್ದೀರಲ್ಲ. ಇದೀಗ ನಂಬಿ ಫಲವುಂಟೇ?

Verse 52

ثُمَّ قِيلَ لِلَّذِينَ ظَلَمُوا۟ ذُوقُوا۟ عَذَابَ ٱلْخُلْدِ هَلْ تُجْزَوْنَ إِلَّا بِمَا كُنتُمْ تَكْسِبُونَ

Transliteration thumma qīla lilladhīna ẓalamū dhūqū ʿadhāba l-khul'di hal tuj'zawna illā bimā kuntum taksibūna

Kannada ಆ ಬಳಿಕ ಅಕ್ರಮಿಗಳೊಡನೆ ಹೇಳಲಾಗುವುದು. ನೀವು ಶಾಶ್ವತ ಶಿಕ್ಷೆಯನ್ನು ಸವಿಯಿರಿ. ನೀವು ಗಳಿಸುತ್ತಿದ್ದುದರ ಪ್ರತಿಫಲದ ಹೊರತು ಇನ್ನಾವ ಪ್ರತಿಫಲವನ್ನು ನಿಮಗೆ ಕೊಡಲಾಗುವುದೇ?

Verse 53

۞ وَيَسْتَنۢبِـُٔونَكَ أَحَقٌّ هُوَ ۖ قُلْ إِى وَرَبِّىٓ إِنَّهُۥ لَحَقٌّ ۖ وَمَآ أَنتُم بِمُعْجِزِينَ

Transliteration wayastanbiūnaka aḥaqqun huwa qul ī warabbī innahu laḥaqqun wamā antum bimuʿ'jizīna

Kannada `ನೀವು ಹೇಳುತ್ತಿರುವುದು ನಿಜಕ್ಕೂ ಸತ್ಯವೇ? ಎಂದು ಅವರು ಕೇಳುತ್ತಾರೆ. ಹೇಳಿರಿ; `ನನ್ನ ಪ್ರಭುವಿನಾಣೆ, ಇದು ಖಂಡಿತವಾಗಿಯೂ ಸತ್ಯ. ತಡೆದು ಸೋಲಿಸುವ ಸಾಮಥ್ರ್ಯ ನಿಮಗಿಲ್ಲ.

Verse 54

وَلَوْ أَنَّ لِكُلِّ نَفْسٍ ظَلَمَتْ مَا فِى ٱلْأَرْضِ لَٱفْتَدَتْ بِهِۦ ۗ وَأَسَرُّوا۟ ٱلنَّدَامَةَ لَمَّا رَأَوُا۟ ٱلْعَذَابَ ۖ وَقُضِىَ بَيْنَهُم بِٱلْقِسْطِ ۚ وَهُمْ لَا يُظْلَمُونَ

Transliteration walaw anna likulli nafsin ẓalamat mā fī l-arḍi la-if'tadat bihi wa-asarrū l-nadāmata lammā ra-awū l-ʿadhāba waquḍiya baynahum bil-qis'ṭi wahum lā yuẓ'lamūna

Kannada ಅಕ್ರಮವೆಸಗಿದ ಪ್ರತಿಯೊಬ್ಬನ ಬಳಿ ಭೂಮಿಯ ಸಕಲ ಸಂಪತ್ತು ಇದ್ದರೂ ಅವನು ಅದನ್ನೆಲ್ಲ ಪ್ರಾಯಶ್ಚಿತ್ತವಾಗಿ ಕೊಡುತ್ತಿದ್ದನು. ಅವರು ಆ ಶಿಕ್ಷೆಯನ್ನು ಕಂಡಾಗ ಖೇದವನ್ನು ಮನದಲ್ಲೇ ಬಚ್ಚಿಡುವರು. ಆದರೆ ಅವರ ನಡುವೆ ನ್ಯಾಯೋಚಿತವಾದ ತೀರ್ಮಾನ ಕೈಕೊಳ್ಳಲಾ ಗುವುದು. ಅವರ ಮೇಲೆ ಯಾವ ಅಕ್ರಮವೂ ಆಗಲಾರದು.

Verse 55

أَلَآ إِنَّ لِلَّهِ مَا فِى ٱلسَّمَـٰوَٰتِ وَٱلْأَرْضِ ۗ أَلَآ إِنَّ وَعْدَ ٱللَّهِ حَقٌّ وَلَـٰكِنَّ أَكْثَرَهُمْ لَا يَعْلَمُونَ

Transliteration alā inna lillahi mā fī l-samāwāti wal-arḍi alā inna waʿda l-lahi ḥaqqun walākinna aktharahum lā yaʿlamūna

Kannada ತಿಳಿಯಿರಿ! ಆಕಾಶಗಳಲ್ಲೂ ಭೂಮಿಯಲ್ಲೂ ಇರುವುದೆಲ್ಲವೂ ಅಲ್ಲಾಹನದೇ. ತಿಳಿಯಿರಿ ಅಲ್ಲಾಹನ ವಾಗ್ದಾನ ಸತ್ಯವಾದುದು. ಆದರೆ ಹೆಚ್ಚಿನವರು ಅರಿತಿರುವುದಿಲ್ಲ.

Verse 56

هُوَ يُحْىِۦ وَيُمِيتُ وَإِلَيْهِ تُرْجَعُونَ

Transliteration huwa yuḥ'yī wayumītu wa-ilayhi tur'jaʿūna

Kannada ಅವನೇ ಜೀವದಾನ ಮಾಡುತ್ತಾನೆ. ಅವನೇ ಮರಣ ಕೊಡುತ್ತಾನೆ. ಮತ್ತು ಅವನ ಕಡೆಗೇ ನಿಮ್ಮನ್ನು ಮರಳಿಸಲಾಗುವುದು.

Verse 57

يَـٰٓأَيُّهَا ٱلنَّاسُ قَدْ جَآءَتْكُم مَّوْعِظَةٌ مِّن رَّبِّكُمْ وَشِفَآءٌ لِّمَا فِى ٱلصُّدُورِ وَهُدًى وَرَحْمَةٌ لِّلْمُؤْمِنِينَ

Transliteration yāayyuhā l-nāsu qad jāatkum mawʿiẓatun min rabbikum washifāon limā fī l-ṣudūri wahudan waraḥmatun lil'mu'minīna

Kannada ಜನರೇ, ನಿಮ್ಮ ಪ್ರಭುವಿನ ಕಡೆಯಿಂದ ಸದುಪದೇಶ ಹಾಗೂ ಮನಸ್ಸುಗಳೊಳಗಿನ ಕಾಯಿಲೆ ಗಳಿಗೆ ಶಮನವೂ ನಿಮಗೆ ಬಂದಿದೆ. ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗದರ್ಶನವೂ ಕೃಪೆಯೂ ಆಗಿರುತ್ತದೆ .

Verse 58

قُلْ بِفَضْلِ ٱللَّهِ وَبِرَحْمَتِهِۦ فَبِذَٰلِكَ فَلْيَفْرَحُوا۟ هُوَ خَيْرٌ مِّمَّا يَجْمَعُونَ

Transliteration qul bifaḍli l-lahi wabiraḥmatihi fabidhālika falyafraḥū huwa khayrun mimmā yajmaʿūna

Kannada (ಓ ಪೈಗಂಬರರೇ,) ಹೇಳಿರಿ; ಇದನ್ನು ಅವತೀರ್ಣಗೊಳಿಸಿದ್ದು ಅಲ್ಲಾಹನ ಔದಾರ್ಯ ಮತ್ತು ಕೃಪೆಯಾಗಿರುತ್ತದೆ. ಈ ಮೂಲಕ ಜನರು ಸಂತೋಷಪಟ್ಟುಕೊಳ್ಳಲಿ. ಅದು ಅವರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಉತ್ತಮವಾಗಿದೆ.

Verse 59

قُلْ أَرَءَيْتُم مَّآ أَنزَلَ ٱللَّهُ لَكُم مِّن رِّزْقٍ فَجَعَلْتُم مِّنْهُ حَرَامًا وَحَلَـٰلًا قُلْ ءَآللَّهُ أَذِنَ لَكُمْ ۖ أَمْ عَلَى ٱللَّهِ تَفْتَرُونَ

Transliteration qul ara-aytum mā anzala l-lahu lakum min riz'qin fajaʿaltum min'hu ḥarāman waḥalālan qul āllahu adhina lakum am ʿalā l-lahi taftarūna

Kannada (ಓ ಪೈಗಂಬರರೇ!) ಇವರೊಡನೆ ಹೇಳಿರಿ; `ಅಲ್ಲಾಹನು ನಿಮಗಾಗಿ ಇಳಿಸಿದ್ದ ಆಹಾರದ ಪೈಕಿ ನೀವಾಗಿಯೇ ಕೆಲವನ್ನು ನಿಷೇಧಗೊಳಿಸಿದ ಮತ್ತು ಕೆಲವನ್ನು ಅನುವದನೀಯಗೊಳಿಸಿ ದುದರ ಬಗ್ಗೆ ನೀವು ವಿವೇಚಿಸಿದ್ದೀರಾ ? ಕೇಳಿರಿ; ಅಲ್ಲಾಹನು ನಿಮಗೆ ಇದರ ಅನುಮತಿ ನೀಡಿದ್ದನೋ ಅಥವಾ ನೀವು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿರುವಿರೋ?

Verse 60

وَمَا ظَنُّ ٱلَّذِينَ يَفْتَرُونَ عَلَى ٱللَّهِ ٱلْكَذِبَ يَوْمَ ٱلْقِيَـٰمَةِ ۗ إِنَّ ٱللَّهَ لَذُو فَضْلٍ عَلَى ٱلنَّاسِ وَلَـٰكِنَّ أَكْثَرَهُمْ لَا يَشْكُرُونَ

Transliteration wamā ẓannu alladhīna yaftarūna ʿalā l-lahi l-kadhiba yawma l-qiyāmati inna l-laha ladhū faḍlin ʿalā l-nāsi walākinna aktharahum lā yashkurūna

Kannada ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವವರ ಊಹೆಯು ನಿರ್ಣಾಯಕ ದಿನದಂದು ಹೇಗಿರುವುದು? ಅಲ್ಲಾಹನು ಜನರ ಮೇಲೆ ಔದಾರ್ಯದಾತನು. ಆದರೆ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.

Verse 61

وَمَا تَكُونُ فِى شَأْنٍ وَمَا تَتْلُوا۟ مِنْهُ مِن قُرْءَانٍ وَلَا تَعْمَلُونَ مِنْ عَمَلٍ إِلَّا كُنَّا عَلَيْكُمْ شُهُودًا إِذْ تُفِيضُونَ فِيهِ ۚ وَمَا يَعْزُبُ عَن رَّبِّكَ مِن مِّثْقَالِ ذَرَّةٍ فِى ٱلْأَرْضِ وَلَا فِى ٱلسَّمَآءِ وَلَآ أَصْغَرَ مِن ذَٰلِكَ وَلَآ أَكْبَرَ إِلَّا فِى كِتَـٰبٍ مُّبِينٍ

Transliteration wamā takūnu fī shanin wamā tatlū min'hu min qur'ānin walā taʿmalūna min ʿamalin illā kunnā ʿalaykum shuhūdan idh tufīḍūna fīhi wamā yaʿzubu ʿan rabbika min mith'qāli dharratin fī l-arḍi walā fī l-samāi walā aṣghara min dhālika walā akbara illā fī kitābin mubīnin

Kannada (ಓ ಪೈಗಂಬರರೇ,) ನೀವು ಯಾವುದೇ ಕಾರ್ಯದಲ್ಲಿ ಏರ್ಪಟ್ಟಿದ್ದರೂ ಖುರ್‍ಆನಿನಿಂದ ಅದರ ಬಗ್ಗೆ ಏನನ್ನು ಕೇಳಿಸುತ್ತಿದ್ದರೂ ಮತ್ತು (ಓ, ಜನರೇ,) ನೀವೂ ಯಾವುದೇ ಕರ್ಮವನ್ನು ಮಾಡುತ್ತಲಿದ್ದರೂ ಆ ವೇಳೆ ನಿಮ್ಮ ಮೇಲೆ ಸಾಕ್ಷಿಯಾಗಿ ನಾವು ಇರದೇ ಇಲ್ಲ. ನಿಮ್ಮ ಪ್ರಭುವಿನ ದೃಷ್ಟಿಯಿಂದ ಅಣುತೂಕದಷ್ಟೂ ಮರೆಯಾಗಿಲ್ಲ. ಭೂಮಿಯಲ್ಲೂ ಆಕಾಶದಲ್ಲೂ ಅಣುವಿಗಿಂತ ಸಣ್ಣದಿರಲಿ, ದೊಡ್ಡದಿರಲಿ ಎಲ್ಲವೂ ಸ್ಪಷ್ಟ ಗ್ರಂಥದಲ್ಲಿ ದಾಖಲುಗೊಂಡಿದೆ .

Verse 62

أَلَآ إِنَّ أَوْلِيَآءَ ٱللَّهِ لَا خَوْفٌ عَلَيْهِمْ وَلَا هُمْ يَحْزَنُونَ

Transliteration alā inna awliyāa l-lahi lā khawfun ʿalayhim walā hum yaḥzanūna

Kannada ತಿಳಿಯಿರಿ, ನಿಶ್ಚಯವಾಗಿಯೂ ಅಲ್ಲಾಹನ ಔಲಿಯಾಗಳಿಗೆ ಯಾವತ್ತೂ ಭಯವಿಲ್ಲ. ಅವರು ದುಃಖಿಸುವವರೂ ಅಲ್ಲ.

Verse 63

ٱلَّذِينَ ءَامَنُوا۟ وَكَانُوا۟ يَتَّقُونَ

Transliteration alladhīna āmanū wakānū yattaqūna

Kannada ಅವರು ಸತ್ಯವಿಶ್ವಾಸವಿರಿಸಿಕೊಂಡವರು ಮತ್ತು ಸೂಕ್ಷತೆ ಪಾಲಿಸುವವರು.

Verse 64

لَهُمُ ٱلْبُشْرَىٰ فِى ٱلْحَيَوٰةِ ٱلدُّنْيَا وَفِى ٱلْـَٔاخِرَةِ ۚ لَا تَبْدِيلَ لِكَلِمَـٰتِ ٱللَّهِ ۚ ذَٰلِكَ هُوَ ٱلْفَوْزُ ٱلْعَظِيمُ

Transliteration lahumu l-bush'rā fī l-ḥayati l-dun'yā wafī l-ākhirati lā tabdīla likalimāti l-lahi dhālika huwa l-fawzu l-ʿaẓīmu

Kannada ಇಹ-ಪರ ಜೀವನದಲ್ಲ್ಲಿ ಅವರಿಗೆ ಭಾರೀ ಶುಭವಾರ್ತೆ ಇದೆ. ಅಲ್ಲಾಹನ ವಚನಗಳಿಗೆ ಬದಲಾವಣೆಯಿಲ್ಲ. ಅದೇ ಅತಿ ಹಿರಿದಾದ ಯಶಸ್ಸು.

Verse 65

وَلَا يَحْزُنكَ قَوْلُهُمْ ۘ إِنَّ ٱلْعِزَّةَ لِلَّهِ جَمِيعًا ۚ هُوَ ٱلسَّمِيعُ ٱلْعَلِيمُ

Transliteration walā yaḥzunka qawluhum inna l-ʿizata lillahi jamīʿan huwa l-samīʿu l-ʿalīmu

Kannada (ಓ ಪೈಗಂಬರರೇ,) ಅವರ ಮಾತು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ, ಪ್ರತಿಷ್ಟೆಯು ಸರ್ವ ಸಂಪೂರ್ಣವಾಗಿ ಅಲ್ಲಾಹನದ್ದು. ಅವನುಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

Verse 66

أَلَآ إِنَّ لِلَّهِ مَن فِى ٱلسَّمَـٰوَٰتِ وَمَن فِى ٱلْأَرْضِ ۗ وَمَا يَتَّبِعُ ٱلَّذِينَ يَدْعُونَ مِن دُونِ ٱللَّهِ شُرَكَآءَ ۚ إِن يَتَّبِعُونَ إِلَّا ٱلظَّنَّ وَإِنْ هُمْ إِلَّا يَخْرُصُونَ

Transliteration alā inna lillahi man fī l-samāwāti waman fī l-arḍi wamā yattabiʿu alladhīna yadʿūna min dūni l-lahi shurakāa in yattabiʿūna illā l-ẓana wa-in hum illā yakhruṣūna

Kannada ತಿಳಿಯಿರಿ - ಆಕಾಶಗಳಲ್ಲಿರುವವರಿರಲಿ ಅಥವಾ ಭೂಮಿಯ ಮೇಲಿರುವವರಿರಲಿ ಎಲ್ಲರೂ ಅಲ್ಲಾಹನ ಅಧೀನರು, ಅಲ್ಲಾಹನ ಹೊರತು (ಇತರರನ್ನು) ಆರಾಧಿಸುತ್ತಿರುವವರು (ನೈಜ) ಸಹಭಾಗಿಗಳನ್ನು ಹಿಂಬಾಲಿಸುತ್ತಿಲ್ಲ. ಅವರು ಬರೇ ಊಹೆಯನ್ನಷ್ಟೇ ಹಿಂಬಾಲಿಸುತ್ತಾರೆ. ಅವರು ಅದರಲ್ಲಿ ಸುಳ್ಳನ್ನೇ ಅನುಸರಿಸುತ್ತಿದ್ದಾರೆ.

Verse 67

هُوَ ٱلَّذِى جَعَلَ لَكُمُ ٱلَّيْلَ لِتَسْكُنُوا۟ فِيهِ وَٱلنَّهَارَ مُبْصِرًا ۚ إِنَّ فِى ذَٰلِكَ لَـَٔايَـٰتٍ لِّقَوْمٍ يَسْمَعُونَ

Transliteration huwa alladhī jaʿala lakumu al-layla litaskunū fīhi wal-nahāra mub'ṣiran inna fī dhālika laāyātin liqawmin yasmaʿūna

Kannada ನೀವು ಪ್ರಶಾಂತಿಯನ್ನು ಪಡೆಯಲಾಗುವಂತೆ ನಿಮಗಾಗಿ ರಾತ್ರಿಯನ್ನು ಮಾಡಿದವನೂ ಪ್ರಕಾಶಮಾನವಾಗಿ ಹಗಲನ್ನು ಮಾಡಿದವನೂ ಅಲ್ಲಾಹನೇ ಆಗಿರುತ್ತಾನೆ. ಇದರಲ್ಲಿ ಆಲಿಸುವ ಜನರಿಗೆ ದೃಷ್ಪಾಂತಗಳಿವೆ.

Verse 68

قَالُوا۟ ٱتَّخَذَ ٱللَّهُ وَلَدًا ۗ سُبْحَـٰنَهُۥ ۖ هُوَ ٱلْغَنِىُّ ۖ لَهُۥ مَا فِى ٱلسَّمَـٰوَٰتِ وَمَا فِى ٱلْأَرْضِ ۚ إِنْ عِندَكُم مِّن سُلْطَـٰنٍۭ بِهَـٰذَآ ۚ أَتَقُولُونَ عَلَى ٱللَّهِ مَا لَا تَعْلَمُونَ

Transliteration qālū ittakhadha l-lahu waladan sub'ḥānahu huwa l-ghaniyu lahu mā fī l-samāwāti wamā fī l-arḍi in ʿindakum min sul'ṭānin bihādhā ataqūlūna ʿalā l-lahi mā lā taʿlamūna

Kannada ಅಲ್ಲಾಹನು ತನಗೋರ್ವ ಪುತ್ರನನ್ನು ಮಾಡಿ ಕೊಂಡಿದ್ದಾನೆಂದು ಅವರು ಹೇಳಿದರು. ಅದ ರಿಂದ ಅವನು ಮುಕ್ತನು. ಪರಿಶುದ್ಧನು. ಪರಾಶ್ರಯ ರಹಿತನು. ಭೂಮಿ ಮತ್ತು ಆಕಾಶಗಳಲ್ಲಿರುವುದೆಲ್ಲವೂ ಅವನದ್ದು. ಇದಕ್ಕೆ (ದೇವನಿಗೆ ಸಂತಾನವಿದೆ ಎಂಬ ಮಾತಿಗೆ) ನಿಮ್ಮ ಬಳಿ ಯಾವುದೇ ಆಧಾರ ಪ್ರಮಾಣ ವಿಲ್ಲ. ಅಲ್ಲಾಹನ ಬಗ್ಗೆ ನಿಮಗೆ ತಿಳಿಯದಿದ್ದುದನ್ನು ಹೇಳುವಿರಾ?

Verse 69

قُلْ إِنَّ ٱلَّذِينَ يَفْتَرُونَ عَلَى ٱللَّهِ ٱلْكَذِبَ لَا يُفْلِحُونَ

Transliteration qul inna alladhīna yaftarūna ʿalā l-lahi l-kadhiba lā yuf'liḥūna

Kannada (ಓ ಪೈಗಂಬರರೇ,) ಹೇಳಿರಿ; ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವವರು ಯಶಸ್ವಿಯಾಗಲಾರರು.

Verse 70

مَتَـٰعٌ فِى ٱلدُّنْيَا ثُمَّ إِلَيْنَا مَرْجِعُهُمْ ثُمَّ نُذِيقُهُمُ ٱلْعَذَابَ ٱلشَّدِيدَ بِمَا كَانُوا۟ يَكْفُرُونَ

Transliteration matāʿun fī l-dun'yā thumma ilaynā marjiʿuhum thumma nudhīquhumu l-ʿadhāba l-shadīda bimā kānū yakfurūna

Kannada (ಅವರಿಗಿರುವುದು) ಇಹಲೋಕ ಜೀವನದ ಸುಖಾನುಭವ ಮಾತ್ರ. ಆಮೇಲೆ ಅವರು ನಮ್ಮ ಕಡೆಗೆ ಮರಳಬೇಕಾಗಿದೆ ಅನಂತರ ಅವರು ಸತ್ಯನಿಷೇಧ ಹೊಂದಿದ್ದ ಕಾರಣಕ್ಕಾಗಿ ನಾವು ಅವರನ್ನು ಘೋರ ಯಾತನೆಗೆ ಗುರಿಪಡಿಸುವೆವು.

Verse 71

۞ وَٱتْلُ عَلَيْهِمْ نَبَأَ نُوحٍ إِذْ قَالَ لِقَوْمِهِۦ يَـٰقَوْمِ إِن كَانَ كَبُرَ عَلَيْكُم مَّقَامِى وَتَذْكِيرِى بِـَٔايَـٰتِ ٱللَّهِ فَعَلَى ٱللَّهِ تَوَكَّلْتُ فَأَجْمِعُوٓا۟ أَمْرَكُمْ وَشُرَكَآءَكُمْ ثُمَّ لَا يَكُنْ أَمْرُكُمْ عَلَيْكُمْ غُمَّةً ثُمَّ ٱقْضُوٓا۟ إِلَىَّ وَلَا تُنظِرُونِ

Transliteration wa-ut'lu ʿalayhim naba-a nūḥin idh qāla liqawmihi yāqawmi in kāna kabura ʿalaykum maqāmī watadhkīrī biāyāti l-lahi faʿalā l-lahi tawakkaltu fa-ajmiʿū amrakum washurakāakum thumma lā yakun amrukum ʿalaykum ghummatan thumma iq'ḍū ilayya walā tunẓirūni

Kannada ಇವರಿಗೆ ನೂಹರ ಸಮಾಚಾರ ಓದಿ ಕೇಳಿಸಿರಿ. ಅವರು ತಮ್ಮ ಜನಾಂಗಕ್ಕೆ ಹೇಳಿದ ಸಂದರ್ಭ. ಓ ನನ್ನ ಜನಾಂಗ ಬಾಂಧವರೇ, ನನ್ನ ಸಾನಿಧ್ಯವೂ ಅಲ್ಲಾಹನ ದೃಷ್ಟಾಂತಗಳ ಕುರಿತ ನನ್ನ ವಿಜ್ಞಾಪನೆಯೂ ನಿಮಗೆ ದೊಡ್ಡ ಭಾರವಾಗಿರುವುದಾದರೆ ಅಲ್ಲಾಹನ ಮೇಲೆ ನಾನು ಭರವಸೆಯಿಸಿದ್ದೇನೆ. ನಿಮ್ಮ ಸಹಭಾಗಿ ಗಳನ್ನು ಜತೆಗೂಡಿಸಿಕೊಂಡು ಒಂದು ಒಮ್ಮತದ ನಿರ್ಧಾರಕ್ಕೆ ಬನ್ನಿರಿ. ಅನಂತರ ಅದನ್ನು ನನ್ನ ವಿರುದ್ಧ ಕಾರ್ಯಾಚರಣೆಗೆ ತನ್ನಿರಿ ನನಗೆ ಕಾಲಾವಕಾಶ ಕೊಡಲೇ ಬೇಡಿರಿ.

Verse 72

فَإِن تَوَلَّيْتُمْ فَمَا سَأَلْتُكُم مِّنْ أَجْرٍ ۖ إِنْ أَجْرِىَ إِلَّا عَلَى ٱللَّهِ ۖ وَأُمِرْتُ أَنْ أَكُونَ مِنَ ٱلْمُسْلِمِينَ

Transliteration fa-in tawallaytum famā sa-altukum min ajrin in ajriya illā ʿalā l-lahi wa-umir'tu an akūna mina l-mus'limīna

Kannada ಇನ್ನು ನೀವು (ನನ್ನ ಉಪದೇಶದಿಂದ) ವಿಮುಖರಾದರೆ, ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳಿಲ್ಲ. ನನ್ನ ಪ್ರತಿಫಲವು ಅಲ್ಲಾಹನಲ್ಲಿದೆ. ನಾನು (ಅಲ್ಲಾಹನಿಗೆ) ವಿಧೇಯರಾದವರಲ್ಲಿ ಸೇರುವಂತೆ ನನಗೆ ಆಜ್ಞಾಪಿಸಲಾಗಿರುತ್ತದೆ.

Verse 73

فَكَذَّبُوهُ فَنَجَّيْنَـٰهُ وَمَن مَّعَهُۥ فِى ٱلْفُلْكِ وَجَعَلْنَـٰهُمْ خَلَـٰٓئِفَ وَأَغْرَقْنَا ٱلَّذِينَ كَذَّبُوا۟ بِـَٔايَـٰتِنَا ۖ فَٱنظُرْ كَيْفَ كَانَ عَـٰقِبَةُ ٱلْمُنذَرِينَ

Transliteration fakadhabūhu fanajjaynāhu waman maʿahu fī l-ful'ki wajaʿalnāhum khalāifa wa-aghraqnā alladhīna kadhabū biāyātinā fa-unẓur kayfa kāna ʿāqibatu l-mundharīna

Kannada ಆದರೆ ಆ ಜನರು ಅವರನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನೂ ಅವರ ಸಂಗಡ ನಾವೆಯಲ್ಲಿದ್ದವರೆಲ್ಲರನ್ನೂ ರಕ್ಷಿಸಿದೆವು. ಅವರನ್ನು ನಾವು ಭೂಮಿಯಲ್ಲಿ ಉತ್ತರಾಧಿಕಾರಿಗಳಾಗಿ ಮಾಡಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರನ್ನು ಮುಳುಗಿಸಿಬಿಟ್ಟೆವು. ಆದುದರಿಂದ ಎಚ್ಚರಿಕೆ ನೀಡಲ್ಪಟ್ಟಿದ್ದವರ ಗತಿಯೇನಾಯಿತೆಂದು ನೋಡಿಕೊಳ್ಳಿರಿ.

Verse 74

ثُمَّ بَعَثْنَا مِنۢ بَعْدِهِۦ رُسُلًا إِلَىٰ قَوْمِهِمْ فَجَآءُوهُم بِٱلْبَيِّنَـٰتِ فَمَا كَانُوا۟ لِيُؤْمِنُوا۟ بِمَا كَذَّبُوا۟ بِهِۦ مِن قَبْلُ ۚ كَذَٰلِكَ نَطْبَعُ عَلَىٰ قُلُوبِ ٱلْمُعْتَدِينَ

Transliteration thumma baʿathnā min baʿdihi rusulan ilā qawmihim fajāūhum bil-bayināti famā kānū liyu'minū bimā kadhabū bihi min qablu kadhālika naṭbaʿu ʿalā qulūbi l-muʿ'tadīna

Kannada ಮತ್ತೆ ಅವರ (`ನೂಹ’ರ) ತರುವಾಯ ಅನೇಕ ಸಂದೇಶವಾಹಕರನ್ನು ಆಯಾ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ಅವರ ಬಳಿಗೆ ದೃಷ್ಟಾಂತಗಳ ಸಹಿತ ಅವರು ಬಂದರು. ಆದರೆ ಅವರು ಈ ಮುಂಚೆ ಯಾವುದನ್ನು ಸುಳ್ಳಾಗಿಸಿ ದರೋ ಅದರಲ್ಲಿ ನಂಬಲು ಅವರು ಸಿದ್ದರಿರಲಿಲ್ಲ. ಹದ್ದು ಮೀರಿ ಸಾಗುವವರ ಹೃದಯಗಳ ಮೇಲೆ ಅದೇ ಪ್ರಕಾರ ನಾವು ಮುದ್ರೆಯೊತ್ತಿ ಬಿಡುತ್ತೇವೆ.

Verse 75

ثُمَّ بَعَثْنَا مِنۢ بَعْدِهِم مُّوسَىٰ وَهَـٰرُونَ إِلَىٰ فِرْعَوْنَ وَمَلَإِي۟هِۦ بِـَٔايَـٰتِنَا فَٱسْتَكْبَرُوا۟ وَكَانُوا۟ قَوْمًا مُّجْرِمِينَ

Transliteration thumma baʿathnā min baʿdihim mūsā wahārūna ilā fir'ʿawna wamala-ihi biāyātinā fa-is'takbarū wakānū qawman muj'rimīna

Kannada ಮತ್ತೆ ಅವರ ನಂತರ, ನಾವು ನಮ್ಮ ನಿದರ್ಶನಗಳ ಸಹಿತ ಫಿರ್‍ಔನ್ ಮತ್ತು ಅವನ ಸರದಾರರ ಕಡೆಗೆ ಮೂಸಾ ಹಾಗೂ ಹಾರೂನರನ್ನು ನಿಯೋಗಿಸಿದೆವು. ಆದರೆ ಅವರು ದರ್ಪವನ್ನು ತೋರಿದರು. ಅವರು ಅಪರಾಧಿ ಜನಾಂಗವಾಗಿದ್ದರು.

Verse 76

فَلَمَّا جَآءَهُمُ ٱلْحَقُّ مِنْ عِندِنَا قَالُوٓا۟ إِنَّ هَـٰذَا لَسِحْرٌ مُّبِينٌ

Transliteration falammā jāahumu l-ḥaqu min ʿindinā qālū inna hādhā lasiḥ'run mubīnun

Kannada ಹಾಗೆ ನಮ್ಮ ಕಡೆಯಿಂದ ಸತ್ಯವು ಅವರಿಗೆ ಬಂದಾಗ ‘ಇದು ಸುವ್ಯಕ್ತ ಜಾಲವಿದ್ಯೆಯಾಗಿದೆ’ ಎಂದರವರು.

Verse 77

قَالَ مُوسَىٰٓ أَتَقُولُونَ لِلْحَقِّ لَمَّا جَآءَكُمْ ۖ أَسِحْرٌ هَـٰذَا وَلَا يُفْلِحُ ٱلسَّـٰحِرُونَ

Transliteration qāla mūsā ataqūlūna lil'ḥaqqi lammā jāakum asiḥ'run hādhā walā yuf'liḥu l-sāḥirūna

Kannada `ಮೂಸಾ’ರು ಹೇಳಿದರು, ಸತ್ಯವು ನಿಮಗೆ ಬಂದು ಮುಟ್ಟಿದಾಗ ಅದನ್ನು (ಜಾಲವಿದ್ಯೆ ಯೆಂದು) ಹೇಳುತ್ತೀರಾ? ಇದು ಜಾಲವಿದ್ಯೆ ಯೇ? ವಸ್ತುತಃ ಜಾಲವಿದ್ಯೆಗಾರರು ಯಶಸ್ವಿಗಳಾಗುವುದಿಲ್ಲ.

Verse 78

قَالُوٓا۟ أَجِئْتَنَا لِتَلْفِتَنَا عَمَّا وَجَدْنَا عَلَيْهِ ءَابَآءَنَا وَتَكُونَ لَكُمَا ٱلْكِبْرِيَآءُ فِى ٱلْأَرْضِ وَمَا نَحْنُ لَكُمَا بِمُؤْمِنِينَ

Transliteration qālū aji'tanā litalfitanā ʿammā wajadnā ʿalayhi ābāanā watakūna lakumā l-kib'riyāu fī l-arḍi wamā naḥnu lakumā bimu'minīna

Kannada ಅವರು ಹೇಳಿದರು, ನಮ್ಮ ಪೂರ್ವಿಕರು ಯಾವುದರಲ್ಲಿ ನೆಲೆಗೊಂಡಿದ್ದನ್ನು ನಾವು ಕಂಡಿದ್ದೇವೋ ಅದರಿಂದ ನಮ್ಮನ್ನು ತಿರುಗಿಸಿ ಬಿಡಲಿಕ್ಕಾಗಿಯೂ ಭೂಮಿಯಲ್ಲಿ ನಿಮಗೆ ಹಿರಿಮೆ ಸಂಸ್ಥಾಪಿಸಲಿಕ್ಕಾಗಿಯೂ ನೀನು ಬಂದಿರುವೆಯಾ? ನಾವು ನಿಮ್ಮಿಬ್ಬರನ್ನು ನಂಬುವವರಲ್ಲ.

Verse 79

وَقَالَ فِرْعَوْنُ ٱئْتُونِى بِكُلِّ سَـٰحِرٍ عَلِيمٍ

Transliteration waqāla fir'ʿawnu i'tūnī bikulli sāḥirin ʿalīmin

Kannada ಫಿರ್‍ಔನನು ಹೇಳಿದನು, ‘ಪ್ರತಿಯೊಬ್ಬ ನುರಿತ ಮಾಟಗಾರನನ್ನು ನೀವು ನನ್ನ ಮುಂದೆ ತನ್ನಿರಿ’.

Verse 80

فَلَمَّا جَآءَ ٱلسَّحَرَةُ قَالَ لَهُم مُّوسَىٰٓ أَلْقُوا۟ مَآ أَنتُم مُّلْقُونَ

Transliteration falammā jāa l-saḥaratu qāla lahum mūsā alqū mā antum mul'qūna

Kannada ಹಾಗೆ ಮಾಟಗಾರರು ಬಂದಾಗ ಮೂಸಾ, ‘ನೀವು ಎಸೆಯಬೇಕಾದುದನ್ನು ಎಸೆಯಿರಿ’ ಎಂದರು.

Verse 81

فَلَمَّآ أَلْقَوْا۟ قَالَ مُوسَىٰ مَا جِئْتُم بِهِ ٱلسِّحْرُ ۖ إِنَّ ٱللَّهَ سَيُبْطِلُهُۥٓ ۖ إِنَّ ٱللَّهَ لَا يُصْلِحُ عَمَلَ ٱلْمُفْسِدِينَ

Transliteration falammā alqaw qāla mūsā mā ji'tum bihi l-siḥ'ru inna l-laha sayub'ṭiluhu inna l-laha lā yuṣ'liḥu ʿamala l-muf'sidīna

Kannada ಅವರು ಎಸೆದಾಗ ಮೂಸಾರು ಹೇಳಿದರು, ‘ನೀವೀಗ ತಂದದ್ದು ಜಾದುವಾಗಿರುತ್ತದೆ. ಖಂಡಿತ ಅಲ್ಲಾಹು ಇದನ್ನು ಮಿಥ್ಯಗೊಳಿಸು ವನು. ಅಲ್ಲಾಹು ಕಿಡಿಗೇಡಿಗಳ ಪ್ರವೃತ್ತಿಯನ್ನು ಸರಿಯಾಗಲು ಬಿಡುವುದಿಲ್ಲ’.

Verse 82

وَيُحِقُّ ٱللَّهُ ٱلْحَقَّ بِكَلِمَـٰتِهِۦ وَلَوْ كَرِهَ ٱلْمُجْرِمُونَ

Transliteration wayuḥiqqu l-lahu l-ḥaqa bikalimātihi walaw kariha l-muj'rimūna

Kannada ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸತ್ಯವನ್ನಾಗಿಯೇ ಮಾಡಿ ತೋರಿಸುವನು. ಇದರಿಂದ ಅಪರಾಧಿಗಳಿಗೆ ಎಷ್ಟೇ ಅನಿಷ್ಟಕರವಾದರೂ ಸರಿಯೇ.

Verse 83

فَمَآ ءَامَنَ لِمُوسَىٰٓ إِلَّا ذُرِّيَّةٌ مِّن قَوْمِهِۦ عَلَىٰ خَوْفٍ مِّن فِرْعَوْنَ وَمَلَإِي۟هِمْ أَن يَفْتِنَهُمْ ۚ وَإِنَّ فِرْعَوْنَ لَعَالٍ فِى ٱلْأَرْضِ وَإِنَّهُۥ لَمِنَ ٱلْمُسْرِفِينَ

Transliteration famā āmana limūsā illā dhurriyyatun min qawmihi ʿalā khawfin min fir'ʿawna wamala-ihim an yaftinahum wa-inna fir'ʿawna laʿālin fī l-arḍi wa-innahu lamina l-mus'rifīna

Kannada ಆದರೆ ಮೂಸಾರನ್ನು ಆ ಜನಾಂಗದ ವಂಶದಿಂದ ಒಂದು ವಿಭಾಗದ ಹೊರತು ಇನ್ನಾರೂ ವಿಶ್ವಾಸವಿರಿಸಲಿಲ್ಲ. (ಅದು ಕೂಡಾ)ಫಿರ್‍ಔನ ಹಾಗೂ ತಮ್ಮ ಜನಾಂಗದ ಮುಖಂಡರು ಯಾತನೆಗೊಳಪಡಿಸುವರೇನೋ ಎಂಬ ಭಯದೊಂದಿಗಾಗಿತ್ತು. ಫಿರ್‍ಔನನು ಭೂಮಿಯ ಮೇಲೆ ಪ್ರಾಬಲ್ಯ ಹೊಂದಿದವನೂ ಹದ್ದುಮೀರಿದವನೂ ಆಗಿದ್ದನು.

Verse 84

وَقَالَ مُوسَىٰ يَـٰقَوْمِ إِن كُنتُمْ ءَامَنتُم بِٱللَّهِ فَعَلَيْهِ تَوَكَّلُوٓا۟ إِن كُنتُم مُّسْلِمِينَ

Transliteration waqāla mūsā yāqawmi in kuntum āmantum bil-lahi faʿalayhi tawakkalū in kuntum mus'limīna

Kannada ಮೂಸಾ ಹೇಳಿದರು; ನನ್ನ ಜನರೇ, ನಿಜಕ್ಕೂ ಅಲ್ಲಾಹನ ಮೇಲೆ ವಿಶ್ವಾಸವಿಡುತ್ತೀರಾದರೆ ಅವನ ಮೇಲೆ ಭರವಸೆಯನ್ನಿರಿಸಿರಿ - ನೀವು ನಿಜಕ್ಕೂ ಅವನಿಗೆ ಶರಣಾಗತರಾಗಿದ್ದರೆ.

Verse 85

فَقَالُوا۟ عَلَى ٱللَّهِ تَوَكَّلْنَا رَبَّنَا لَا تَجْعَلْنَا فِتْنَةً لِّلْقَوْمِ ٱلظَّـٰلِمِينَ

Transliteration faqālū ʿalā l-lahi tawakkalnā rabbanā lā tajʿalnā fit'natan lil'qawmi l-ẓālimīna

Kannada ಆಗ ಅವರು ಹೇಳಿದರು; ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ಓ ನಮ್ಮ ಪ್ರಭೂ, ನಮ್ಮನ್ನು ಈ ಅಕ್ರಮಿ ಜನಾಂಗಕ್ಕೆ ಪರೀಕ್ಷಾ ಸಾಧನವನ್ನಾಗಿ ಮಾಡದಿರು. (ಮರ್ದನಕ್ಕೆ ಒಳಪಡಿಸದಿರು)

Verse 86

وَنَجِّنَا بِرَحْمَتِكَ مِنَ ٱلْقَوْمِ ٱلْكَـٰفِرِينَ

Transliteration wanajjinā biraḥmatika mina l-qawmi l-kāfirīna

Kannada ನಿನ್ನ ಕೃಪೆಯಿಂದ ನಮ್ಮನ್ನು ಸತ್ಯನಿಷೇಧಿ ಜನಾಂಗದಿಂದ ರಕ್ಷಿಸು.

Verse 87

وَأَوْحَيْنَآ إِلَىٰ مُوسَىٰ وَأَخِيهِ أَن تَبَوَّءَا لِقَوْمِكُمَا بِمِصْرَ بُيُوتًا وَٱجْعَلُوا۟ بُيُوتَكُمْ قِبْلَةً وَأَقِيمُوا۟ ٱلصَّلَوٰةَ ۗ وَبَشِّرِ ٱلْمُؤْمِنِينَ

Transliteration wa-awḥaynā ilā mūsā wa-akhīhi an tabawwaā liqawmikumā bimiṣ'ra buyūtan wa-ij'ʿalū buyūtakum qib'latan wa-aqīmū l-ṣalata wabashiri l-mu'minīna

Kannada ಮೂಸಾ ಮತ್ತು ಅವರ ಸಹೋದರನಿಗೆ ನಾವು ಹೀಗೆ ಸೂಚನೆ ಕೊಟ್ಟೆವು. ನೀವಿಬ್ಬರೂ ನಿಮ್ಮ ಜನರಿಗಾಗಿ ಈಜಿಪ್ಟ್‍ನಲ್ಲಿ ಕೆಲವು (ಪ್ರತ್ಯೇಕ) ನಿವೇಶನಗಳನ್ನು ಒದಗಿಸಿರಿ, ನಿಮ್ಮ ಆ ನಿವೇಶನಗಳನ್ನು ಕಿಬ್ಲಃವನ್ನಾಗಿ ಮಾಡಿರಿ, ಂ ನಮಾಝನ್ನು ಸಂಸ್ಥಾಪಿಸಿರಿ ಮತ್ತು ಸತ್ಯವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ.

Verse 88

وَقَالَ مُوسَىٰ رَبَّنَآ إِنَّكَ ءَاتَيْتَ فِرْعَوْنَ وَمَلَأَهُۥ زِينَةً وَأَمْوَٰلًا فِى ٱلْحَيَوٰةِ ٱلدُّنْيَا رَبَّنَا لِيُضِلُّوا۟ عَن سَبِيلِكَ ۖ رَبَّنَا ٱطْمِسْ عَلَىٰٓ أَمْوَٰلِهِمْ وَٱشْدُدْ عَلَىٰ قُلُوبِهِمْ فَلَا يُؤْمِنُوا۟ حَتَّىٰ يَرَوُا۟ ٱلْعَذَابَ ٱلْأَلِيمَ

Transliteration waqāla mūsā rabbanā innaka ātayta fir'ʿawna wamala-ahu zīnatan wa-amwālan fī l-ḥayati l-dun'yā rabbanā liyuḍillū ʿan sabīlika rabbanā iṭ'mis ʿalā amwālihim wa-ush'dud ʿalā qulūbihim falā yu'minū ḥattā yarawū l-ʿadhāba l-alīma

Kannada ಮೂಸಾರವರು ಹೇಳಿದರು, ಓ ನಮ್ಮ ಪ್ರಭೂ, ನೀನು ಫಿರ್‍ಔನ್ ಮತ್ತು ಅವನ ಸರದಾರರಿಗೆ ಲೌಕಿಕ ಜೀವನದಲ್ಲಿ ಅಲಂಕಾರ ಹಾಗೂ ಸಂಪ ತ್ತನ್ನು ಕೊಟ್ಟಿರುವಿ. ಓ ಪ್ರಭೂ, ಈ ಸಿರಿಸಂಪತ್ತು ಅವರು ಜನರನ್ನು ನಿನ್ನ ಮಾರ್ಗದಿಂದ ತಪ್ಪಿಸಲು ಕಾರಣವಾಗಿದೆ. ಓ ಪ್ರಭೂ, ಅವರ ಸಂಪತ್ತನ್ನು ನಾಶಪಡಿಸು ಮತ್ತು ಅವರು ವೇದನಾಯುಕ್ತ ಶಿಕ್ಷೆಯನ್ನು ಕಣ್ಣಾರೆ ಕಾಣುವವರೆಗೂ ಅವರು ವಿಶ್ವಾಸವಿರಿಸದಂತೆ ಅವರ ಹೃದಯಗಳ ಮೇಲೆ ಕಾಠಿಣ್ಯ ನೀಡು.

Verse 89

قَالَ قَدْ أُجِيبَت دَّعْوَتُكُمَا فَٱسْتَقِيمَا وَلَا تَتَّبِعَآنِّ سَبِيلَ ٱلَّذِينَ لَا يَعْلَمُونَ

Transliteration qāla qad ujībat daʿwatukumā fa-is'taqīmā walā tattabiʿānni sabīla alladhīna lā yaʿlamūna

Kannada ಅಲ್ಲಾಹ್ ಹೇಳಿದನು; ನಿಮ್ಮಿಬ್ಬರ ಪ್ರಾರ್ಥನೆಯು ಸ್ವೀಕರಿಸಲ್ಪಟ್ಟಿದೆ. ಆದ್ದರಿಂದ ನೀವು ದೃಢ ಚಿತ್ತರಾಗಿರಿ, ಅಜ್ಞಾನಿಗಳ ಮಾರ್ಗವನ್ನೆಂದಿಗೂ ಅನುಸರಿಸ ಬೇಡಿರಿ.

Verse 90

۞ وَجَـٰوَزْنَا بِبَنِىٓ إِسْرَٰٓءِيلَ ٱلْبَحْرَ فَأَتْبَعَهُمْ فِرْعَوْنُ وَجُنُودُهُۥ بَغْيًا وَعَدْوًا ۖ حَتَّىٰٓ إِذَآ أَدْرَكَهُ ٱلْغَرَقُ قَالَ ءَامَنتُ أَنَّهُۥ لَآ إِلَـٰهَ إِلَّا ٱلَّذِىٓ ءَامَنَتْ بِهِۦ بَنُوٓا۟ إِسْرَٰٓءِيلَ وَأَنَا۠ مِنَ ٱلْمُسْلِمِينَ

Transliteration wajāwaznā bibanī is'rāīla l-baḥra fa-atbaʿahum fir'ʿawnu wajunūduhu baghyan waʿadwan ḥattā idhā adrakahu l-gharaqu qāla āmantu annahu lā ilāha illā alladhī āmanat bihi banū is'rāīla wa-anā mina l-mus'limīna

Kannada ಇಸ್‍ರಾಈಲ ಸಂತತಿಯನ್ನು ನಾವು ಸಮುದ್ರ ದಾಟಿಸಿಕೊಂಡೊಯ್ದೆವು. ಅನಂತರ ಫಿರ್‍ಔನನೂ ಅವನ ಸೇನೆಯೂ ದಿಕ್ಕಾರ ಹಾಗೂ ವೈರದಿಂದ ಅವರನ್ನು ಬೆನ್ನಟ್ಟಿದರು . ಕೊನೆಗೆ ಫಿರ್‍ಔನನು ಮುಳುಗುತ್ತಿರುವಾಗ ಹೀಗೆಂದನು, ಇಸ್‍ರಾ ಈಲ ಸಂತತಿಯು ವಿಶ್ವಾಸವಿಟ್ಟಿರುವ ದೇವನ ಹೊರತು ಅನ್ಯ ದೇವನಿಲ್ಲವೆಂದು ನಾನು ವಿಶ್ವಾಸವಿಟ್ಟೆನು. ಮತ್ತು ನಾನೂ ಶರಣಾಗತರಾದವರಲ್ಲಿ ಸೇರಿದ್ದೇನೆ.

Verse 91

ءَآلْـَٔـٰنَ وَقَدْ عَصَيْتَ قَبْلُ وَكُنتَ مِنَ ٱلْمُفْسِدِينَ

Transliteration āl'āna waqad ʿaṣayta qablu wakunta mina l-muf'sidīna

Kannada (ಅಲ್ಲಾಹು ಹೇಳಿದನು;) ಈಗ ವಿಶ್ವಾಸ ವಿಡುತ್ತೀಯಾ? ವಸ್ತುತಃ ಇದಕ್ಕೆ ಮುಂಚಿನವರೆಗೂ ನೀನು ದಿಕ್ಕರಿಸುತ್ತಿದ್ದೆ ಮತ್ತು ಕಿಡಿಗೇಡಿಗಳಲ್ಲಿ ಒಬ್ಬನಾಗಿದ್ದೆ.

Verse 92

فَٱلْيَوْمَ نُنَجِّيكَ بِبَدَنِكَ لِتَكُونَ لِمَنْ خَلْفَكَ ءَايَةً ۚ وَإِنَّ كَثِيرًا مِّنَ ٱلنَّاسِ عَنْ ءَايَـٰتِنَا لَغَـٰفِلُونَ

Transliteration fal-yawma nunajjīka bibadanika litakūna liman khalfaka āyatan wa-inna kathīran mina l-nāsi ʿan āyātinā laghāfilūna

Kannada ನೀನು ಮುಂದಿನ ತಲೆಮಾರುಗಳಿಗೆ ಒಂದು ದೃಷ್ಟಾಂತವಾಗಿರುವಂತೆ ಇಂದು ನಿನ್ನ ಶವವನ್ನು ಸುರಕ್ಷಿತವಾಗಿರಿಸುವೆವು. ನಿಜಕ್ಕೂ ಜನರಲ್ಲಿ ಹೆಚ್ಚಿನವರು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷ್ಯರಾಗಿದ್ದಾರೆ.

Verse 93

وَلَقَدْ بَوَّأْنَا بَنِىٓ إِسْرَٰٓءِيلَ مُبَوَّأَ صِدْقٍ وَرَزَقْنَـٰهُم مِّنَ ٱلطَّيِّبَـٰتِ فَمَا ٱخْتَلَفُوا۟ حَتَّىٰ جَآءَهُمُ ٱلْعِلْمُ ۚ إِنَّ رَبَّكَ يَقْضِى بَيْنَهُمْ يَوْمَ ٱلْقِيَـٰمَةِ فِيمَا كَانُوا۟ فِيهِ يَخْتَلِفُونَ

Transliteration walaqad bawwanā banī is'rāīla mubawwa-a ṣid'qin warazaqnāhum mina l-ṭayibāti famā ikh'talafū ḥattā jāahumu l-ʿil'mu inna rabbaka yaqḍī baynahum yawma l-qiyāmati fīmā kānū fīhi yakhtalifūna

Kannada ಇಸ್‍ರಾಈಲ ಸಂತತಿಗಳಿಗೆ ಯೋಗ್ಯವಾದ ಒಂದು ನಿವೇಶನದಲ್ಲಿ ನಾವು ನಿವಾಸವನ್ನೊದಗಿಸಿದೆವು. ವಿಶಿಷ್ಟವಾದ ವಸ್ತುಗಳಿಂದ ಅವರಿಗೆ ನಾವು ಆಹಾರ ನೀಡಿದೆವು. ಮತ್ತು ಅವರಿಗೆ ಅತ್ಯುತ್ಕøಷ್ಟ ಜೀವನಾಧಾರಗಳನ್ನು ದಯಪಾಲಿಸಿದೆವು ಅದರೆ, ಅವರು ದಿವ್ಯಜ್ಞಾನ ಹೊಂದಿದ ಬಳಿಕವೂ ಭಿನ್ನಾಭಿಪ್ರಾಯ ತಾಳಿದರು. ನಿಶ್ಚಯವಾಗಿಯೂ ನಿನ್ನ ಪ್ರಭು ಪುನರು ತ್ಥಾನ ದಿನ ಅವರ ನಡುವೆ ಅವರು ಭಿನ್ನಾಭಿಪ್ರಾಯ ತಾಳುತ್ತಿದ್ದ ವಿಷಯದಲ್ಲಿ ತೀರ್ಪು ನೀಡುವನು.

Verse 94

فَإِن كُنتَ فِى شَكٍّ مِّمَّآ أَنزَلْنَآ إِلَيْكَ فَسْـَٔلِ ٱلَّذِينَ يَقْرَءُونَ ٱلْكِتَـٰبَ مِن قَبْلِكَ ۚ لَقَدْ جَآءَكَ ٱلْحَقُّ مِن رَّبِّكَ فَلَا تَكُونَنَّ مِنَ ٱلْمُمْتَرِينَ

Transliteration fa-in kunta fī shakkin mimmā anzalnā ilayka fasali alladhīna yaqraūna l-kitāba min qablika laqad jāaka l-ḥaqu min rabbika falā takūnanna mina l-mum'tarīna

Kannada ನಾವು ನಿಮಗೆ ಅವತೀರ್ಣಗೊಳಿಸಿದ (ಸನ್ಮಾರ್ಗ ದರ್ಶನದ) ಬಗೆಗೆ ನಿಮಗೆ ಯಾವುದೇ ಸಂಶಯವಿದ್ದರೆ, ನಿಮಗಿಂತ ಮುಂಚೆಯೇ ಗ್ರಂಥವನ್ನು ಓದುತ್ತಾ ಬಂದವರನ್ನು ವಿಚಾರಿಸಿರಿ. ವಾಸ್ತವದಲ್ಲಿ ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಸತ್ಯವೇ ಬಂದಿರುತ್ತದೆ. ಆದುದರಿಂದ ಸಂಶಯಗ್ರಸ್ತರಲ್ಲಿ ಸೇರಬೇಡಿರಿ .

Verse 95

وَلَا تَكُونَنَّ مِنَ ٱلَّذِينَ كَذَّبُوا۟ بِـَٔايَـٰتِ ٱللَّهِ فَتَكُونَ مِنَ ٱلْخَـٰسِرِينَ

Transliteration walā takūnanna mina alladhīna kadhabū biāyāti l-lahi fatakūna mina l-khāsirīna

Kannada ಅಲ್ಲಾಹನ ವಚನಗಳನ್ನು ಸುಳ್ಳಾಗಿಸಿ ತಳ್ಳಿ ಹಾಕಿದವರಲ್ಲೂ ನೀವಾಗಬೇಡಿರಿ. ಅನ್ಯಥಾ ನೀವು ನಷ್ಟವಂತರಲ್ಲಿ ಸೇರುವಿರಿ.

Verse 96

إِنَّ ٱلَّذِينَ حَقَّتْ عَلَيْهِمْ كَلِمَتُ رَبِّكَ لَا يُؤْمِنُونَ

Transliteration inna alladhīna ḥaqqat ʿalayhim kalimatu rabbika lā yu'minūna

Kannada ಓoಟಿe

Verse 97

وَلَوْ جَآءَتْهُمْ كُلُّ ءَايَةٍ حَتَّىٰ يَرَوُا۟ ٱلْعَذَابَ ٱلْأَلِيمَ

Transliteration walaw jāathum kullu āyatin ḥattā yarawū l-ʿadhāba l-alīma

Kannada ವಾಸ್ತವದಲ್ಲಿ ಯಾರ ಬಗ್ಗೆ ನಿನ್ನ ಪ್ರಭುವಿನ (ಶಿಕ್ಷೆಯ) ವಚನವು ನಿಜವಾಯಿತೋ ಅವರು ಎಲ್ಲ ನಿದರ್ಶನಗಳು ಬಂದರೂ ವೇದನಾಯುಕ್ತ ಶಿಕ್ಷೆಯನ್ನು ಕಣ್ಣಾರೆ ಕಾಣುವವರೆಗೂ ವಿಶ್ವಾಸವಿರಿಸಲಾರರು.

Verse 98

فَلَوْلَا كَانَتْ قَرْيَةٌ ءَامَنَتْ فَنَفَعَهَآ إِيمَـٰنُهَآ إِلَّا قَوْمَ يُونُسَ لَمَّآ ءَامَنُوا۟ كَشَفْنَا عَنْهُمْ عَذَابَ ٱلْخِزْىِ فِى ٱلْحَيَوٰةِ ٱلدُّنْيَا وَمَتَّعْنَـٰهُمْ إِلَىٰ حِينٍ

Transliteration falawlā kānat qaryatun āmanat fanafaʿahā īmānuhā illā qawma yūnusa lammā āmanū kashafnā ʿanhum ʿadhāba l-khiz'yi fī l-ḥayati l-dun'yā wamattaʿnāhum ilā ḥīnin

Kannada ಯಾವುದೇ ಒಂದು ನಾಡಿನವರು ಶಿಕ್ಷೆಯ ಮೊದಲು ವಿಶ್ವಾಸವಿಟ್ಟು ಅದರ ವಿಶ್ವಾಸವು ಅದಕ್ಕೆ ಫಲಕಾರಿಯಾದುದುಂಟೇ? ಯೂನುಸರ ಜನಾಂಗದ ಹೊರತು. ಆ ಜನಾಂಗವು ಸತ್ಯ ವಿಶ್ವಾಸ ಸ್ವೀಕರಿಸಿದಾಗ ನಾವು ಅವರಿಂದ ಇಹಜೀವನದ ಅಪಮಾನಕರ ಶಿಕ್ಷೆಯನ್ನು ನೀಗಿಸಿ ಬಿಟ್ಟೆವು ಮತ್ತು ಅದಕ್ಕೆ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ನಾವು ಅವರಿಗೆ ಸೌಖ್ಯವನ್ನು ಕೊಟ್ಟೆವು .

Verse 99

وَلَوْ شَآءَ رَبُّكَ لَـَٔامَنَ مَن فِى ٱلْأَرْضِ كُلُّهُمْ جَمِيعًا ۚ أَفَأَنتَ تُكْرِهُ ٱلنَّاسَ حَتَّىٰ يَكُونُوا۟ مُؤْمِنِينَ

Transliteration walaw shāa rabbuka laāmana man fī l-arḍi kulluhum jamīʿan afa-anta tuk'rihu l-nāsa ḥattā yakūnū mu'minīna

Kannada ನಿಮ್ಮ ಪ್ರಭು ಇಚ್ಚಿಸಿರುತ್ತಿದ್ದರೆ, ಭೂವಾಸಿಗಳೆಲ್ಲರೂ ಒಟ್ಟಾಗಿ ವಿಶ್ವಾಸವಿಡುತ್ತಿದ್ದರು. ಹೀಗಿ ರುವಾಗ ಜನರೆಲ್ಲರೂ ಸತ್ಯವಿಶ್ವಾಸಿಗಳಾಗಬೇಕೆಂದು ನೀವು ಒತ್ತಾಯಪಡಿಸುವಿರಾ?

Verse 100

وَمَا كَانَ لِنَفْسٍ أَن تُؤْمِنَ إِلَّا بِإِذْنِ ٱللَّهِ ۚ وَيَجْعَلُ ٱلرِّجْسَ عَلَى ٱلَّذِينَ لَا يَعْقِلُونَ

Transliteration wamā kāna linafsin an tu'mina illā bi-idh'ni l-lahi wayajʿalu l-rij'sa ʿalā alladhīna lā yaʿqilūna

Kannada ಯಾರೊಬ್ಬನೂ ಅಲ್ಲಾಹನ ಅನುಮತಿಯ ಹೊರತು ವಿಶ್ವಾಸವಿಡಲಾರನು. ಚಿಂತಿಸದವರ ಮೇಲೆ ಅಲ್ಲಾಹು ಸಜೆಯನ್ನು ಹೇರುತ್ತಾನೆ.

Verse 101

قُلِ ٱنظُرُوا۟ مَاذَا فِى ٱلسَّمَـٰوَٰتِ وَٱلْأَرْضِ ۚ وَمَا تُغْنِى ٱلْـَٔايَـٰتُ وَٱلنُّذُرُ عَن قَوْمٍ لَّا يُؤْمِنُونَ

Transliteration quli unẓurū mādhā fī l-samāwāti wal-arḍi wamā tugh'nī l-āyātu wal-nudhuru ʿan qawmin lā yu'minūna

Kannada ಹೇಳಿರಿ; ಭೂಮಿ ಮತ್ತು ಆಕಾಶಗಳಲ್ಲಿರುವುದರತ್ತ ನೋಡಿರಿ. ವಿಶ್ವಾಸವಿರಿಸಿಕೊಳ್ಳದ ಜನಾಂಗಕ್ಕೆ ದೃಷ್ಟಾಂತಗಳೂ ಎಚ್ಚರಿಕೆಗಳೂ ಏನೂ ಪ್ರಯೋಜನ ವಾಗಲಾರವು !

Verse 102

فَهَلْ يَنتَظِرُونَ إِلَّا مِثْلَ أَيَّامِ ٱلَّذِينَ خَلَوْا۟ مِن قَبْلِهِمْ ۚ قُلْ فَٱنتَظِرُوٓا۟ إِنِّى مَعَكُم مِّنَ ٱلْمُنتَظِرِينَ

Transliteration fahal yantaẓirūna illā mith'la ayyāmi alladhīna khalaw min qablihim qul fa-intaẓirū innī maʿakum mina l-muntaẓirīna

Kannada ಇವರು ಇವರಿಗಿಂತ ಮುಂಚಿನವರು ಕಂಡಿದ್ದ ದುರ್ದಿನಗಳನ್ನೇ ಕಾಣಬೇಕೆಂದು ನಿರೀಕ್ಷಿಸುತ್ತಾರೇನು? ಹೇಳಿರಿ; ನಿರೀಕ್ಷಿಸುತ್ತಿರಿ, ನಾನೂ ನಿಮ್ಮೊಂದಿಗೆ ನಿರೀಕ್ಷಿಸುತ್ತಿರುತ್ತೇನೆ.’

Verse 103

ثُمَّ نُنَجِّى رُسُلَنَا وَٱلَّذِينَ ءَامَنُوا۟ ۚ كَذَٰلِكَ حَقًّا عَلَيْنَا نُنجِ ٱلْمُؤْمِنِينَ

Transliteration thumma nunajjī rusulanā wa-alladhīna āmanū kadhālika ḥaqqan ʿalaynā nunji l-mu'minīna

Kannada ಆ ಬಳಿಕ ನಾವು ನಮ್ಮ ಸಂದೇಶವಾಹಕರನ್ನು ಸತ್ಯವಿಶ್ವಾಸಿಗಳನ್ನೂ ರಕ್ಷಿಸಿಕೊಳ್ಳುತ್ತೇವೆ. ಇದೇ ಪ್ರಕಾರ ನಮ್ಮ ಮೇಲಿನ ಒಂದು ಹೊಣೆಯಾಗಿ ನಾವು ಸತ್ಯವಿಶ್ವಾಸಿಗಳನ್ನು ರಕ್ಷಿಸುತ್ತೇವೆ.

Verse 104

قُلْ يَـٰٓأَيُّهَا ٱلنَّاسُ إِن كُنتُمْ فِى شَكٍّ مِّن دِينِى فَلَآ أَعْبُدُ ٱلَّذِينَ تَعْبُدُونَ مِن دُونِ ٱللَّهِ وَلَـٰكِنْ أَعْبُدُ ٱللَّهَ ٱلَّذِى يَتَوَفَّىٰكُمْ ۖ وَأُمِرْتُ أَنْ أَكُونَ مِنَ ٱلْمُؤْمِنِينَ

Transliteration qul yāayyuhā l-nāsu in kuntum fī shakkin min dīnī falā aʿbudu alladhīna taʿbudūna min dūni l-lahi walākin aʿbudu l-laha alladhī yatawaffākum wa-umir'tu an akūna mina l-mu'minīna

Kannada (ಓ ಪೈಗಂಬರರೇ) ಹೇಳಿರಿ, ಓ ಜನರೇ, ನನ್ನ ಧರ್ಮದ ಬಗೆಗೆ ನೀವು ಸಂಶಯಗ್ರಸ್ತರಾಗಿದ್ದರೆ, ಇತ್ತ ಕೇಳಿರಿ! ನೀವು ಅಲ್ಲಾಹನ ಹೊರತು ಯಾರನ್ನು ಆರಾಧಿಸುತ್ತೀರೋ ಅವರನ್ನು ನಾನು ಆರಾಧಿಸುತ್ತಿಲ್ಲ. ಬದಲಾಗಿ ನಿಮ್ಮನ್ನು ಮೃತ್ಯು ಗೊಳಿಸುವ ಅಲ್ಲಾಹನನ್ನು ಮಾತ್ರ ನಾನು ಆರಾಧಿಸುತ್ತೇನೆ. ನಾನು ಸತ್ಯವಿಶ್ವಾಸಿಗಳಲ್ಲಾಗಿರ ಬೇಕೆಂದು ಆಜ್ಞಾಪಿಸಲ್ಪಟ್ಟಿರುತ್ತೇನೆ.

Verse 105

وَأَنْ أَقِمْ وَجْهَكَ لِلدِّينِ حَنِيفًا وَلَا تَكُونَنَّ مِنَ ٱلْمُشْرِكِينَ

Transliteration wa-an aqim wajhaka lilddīni ḥanīfan walā takūnanna mina l-mush'rikīna

Kannada ಏಕಾಗ್ರಚಿತ್ತನಾಗಿ ನಿಮ್ಮ ಮುಖವನ್ನು ಧರ್ಮ ದಲ್ಲಿ ಸರಿಯಾಗಿ ನೆಲೆಗೊಳಿಸಿಕೊಳ್ಳಬೇಕೆಂದೂ ಖಂಡಿತಾ ನೀವು ಬಹುದೇವಾರಾಧಕರಲ್ಲಾಗಬಾರದೆಂದೂ ನನ್ನೊಡನೆ ಆಜ್ಞಾಪಿಸಲಾಗಿರುತ್ತದೆ.

Verse 106

وَلَا تَدْعُ مِن دُونِ ٱللَّهِ مَا لَا يَنفَعُكَ وَلَا يَضُرُّكَ ۖ فَإِن فَعَلْتَ فَإِنَّكَ إِذًا مِّنَ ٱلظَّـٰلِمِينَ

Transliteration walā tadʿu min dūni l-lahi mā lā yanfaʿuka walā yaḍurruka fa-in faʿalta fa-innaka idhan mina l-ẓālimīna

Kannada ಅಲ್ಲಾಹನನ್ನು ಬಿಟ್ಟು, ನಿಮಗೆ ಉಪಕಾರವನ್ನಾಗಲಿ ಉಪದ್ರವವನ್ನಾಗಲಿ ಉಂಟು ಮಾಡದ ವಸ್ತುಗಳನ್ನು ನೀವು ಆರಾಧಿಸಬೇಡಿರಿ. ನೀವು ಹಾಗೆ ಮಾಡಿದರೆ ಖಂಡಿತವಾಗಿಯೂ ಅಕ್ರಮಿಗಳಲ್ಲಾಗುವಿರಿ.

Verse 107

وَإِن يَمْسَسْكَ ٱللَّهُ بِضُرٍّ فَلَا كَاشِفَ لَهُۥٓ إِلَّا هُوَ ۖ وَإِن يُرِدْكَ بِخَيْرٍ فَلَا رَآدَّ لِفَضْلِهِۦ ۚ يُصِيبُ بِهِۦ مَن يَشَآءُ مِنْ عِبَادِهِۦ ۚ وَهُوَ ٱلْغَفُورُ ٱلرَّحِيمُ

Transliteration wa-in yamsaska l-lahu biḍurrin falā kāshifa lahu illā huwa wa-in yurid'ka bikhayrin falā rādda lifaḍlihi yuṣību bihi man yashāu min ʿibādihi wahuwa l-ghafūru l-raḥīmu

Kannada ಅಲ್ಲಾಹು ನಿಮ್ಮನ್ನು ಯಾವುದೇ ಕಷ್ಟಕ್ಕೆ ಗುರಿಪಡಿಸಿದರೆ, ಅವನ ಹೊರತು ಆ ಕಷ್ಟವನ್ನು ನಿವಾರಿಸುವವನು ಇನ್ನಾರೂ ಇಲ್ಲ. ಮತ್ತು ಅವನು ನಿಮಗೆ ಹಿತವನ್ನು ಬಯಸಿದರೆ ಅವನ ಔದಾ ರ್ಯವನ್ನು ತಡೆಯುವವನೂ ಯಾರೂ ಇಲ್ಲ. ಅವನು ತನ್ನ ದಾಸರ ಪೈಕಿ ತನಗಿಷ್ಟ ಬಂದವ ರಿಗೆ ಅನುಗ್ರಹ ತಲುಪಿಸುತ್ತಾನೆ. ಅವನು ಕ್ಷಮಾಶೀಲನೂ ದಯಾನಿಧಿಯೂ ಆಗಿರುತ್ತಾನೆ.

Verse 108

قُلْ يَـٰٓأَيُّهَا ٱلنَّاسُ قَدْ جَآءَكُمُ ٱلْحَقُّ مِن رَّبِّكُمْ ۖ فَمَنِ ٱهْتَدَىٰ فَإِنَّمَا يَهْتَدِى لِنَفْسِهِۦ ۖ وَمَن ضَلَّ فَإِنَّمَا يَضِلُّ عَلَيْهَا ۖ وَمَآ أَنَا۠ عَلَيْكُم بِوَكِيلٍ

Transliteration qul yāayyuhā l-nāsu qad jāakumu l-ḥaqu min rabbikum famani ih'tadā fa-innamā yahtadī linafsihi waman ḍalla fa-innamā yaḍillu ʿalayhā wamā anā ʿalaykum biwakīlin

Kannada ಹೇಳಿರಿ, ಜನರೇ, ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಪರಮಸತ್ಯವು ಬಂದಿದೆ. ಆದ್ದರಿಂದ ಯಾರು ಸನ್ಮಾರ್ಗ ಸ್ವೀಕರಿಸುವನೋ ಅವನು ತನ್ನ ಹಿತಕ್ಕಾಗಿಯೇ ಸನ್ಮಾರ್ಗ ಸ್ವೀಕರಿಸುತ್ತಾನೆ ಮತ್ತು ಯಾರು ಪಥಭ್ರಷ್ಟನಾಗಿರುವನೋ ಅವನು ತನ್ನ ವಿರುದ್ಧವೇ ದಾರಿತಪ್ಪಿದನು. ನಾನು ನಿಮ್ಮ ಮೇಲೆ ಜವಾಬ್ದಾರನಲ್ಲ.

Verse 109

وَٱتَّبِعْ مَا يُوحَىٰٓ إِلَيْكَ وَٱصْبِرْ حَتَّىٰ يَحْكُمَ ٱللَّهُ ۚ وَهُوَ خَيْرُ ٱلْحَـٰكِمِينَ

Transliteration wa-ittabiʿ mā yūḥā ilayka wa-iṣ'bir ḥattā yaḥkuma l-lahu wahuwa khayru l-ḥākimīna

Kannada (ಓ ಪೈಗಂಬರರೇ), ನಿಮ್ಮ ಕಡೆಗೆ ಬಿತ್ತರಿಸಲಾಗುವ ದಿವ್ಯವಾಣಿಯನ್ನು ಅನುಸರಿಸಿರಿ. ಮತ್ತು ಅಲ್ಲಾಹನು ತೀರ್ಮಾನ ಮಾಡುವವ ರೆಗೂ ತಾಳ್ಮೆ ವಹಿಸಿರಿ. ಅವನು ಪರಮ ಶ್ರೇಷ್ಠ ತೀರ್ಪುಗಾರನಾಗಿರುವನು.

Read Surah Yunus in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.