MyDugsiStart learning

Surah Taha in Kannada: translation and audio

Surah 20 · طه · Ta-Ha · 135 verses

Surah Taha verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Taha word by word in English.

Verse 1

طه

Transliteration tta-ha

Kannada ತ್ವಾ ಹಾ .

Verse 2

مَآ أَنزَلْنَا عَلَيْكَ ٱلْقُرْءَانَ لِتَشْقَىٰٓ

Transliteration mā anzalnā ʿalayka l-qur'āna litashqā

Kannada ಖುರ್‍ಆನನ್ನು ನಿಮ್ಮ ಮೇಲೆ ನಾವು ಅವತೀರ್ಣ ಗೊಳಿಸಿರುವುದು ನಿಮ್ಮನ್ನು ಕಷ್ಟಪಡಿಸಲಿಕ್ಕಲ್ಲ.

Verse 3

إِلَّا تَذْكِرَةً لِّمَن يَخْشَىٰ

Transliteration illā tadhkiratan liman yakhshā

Kannada ದೇವನನ್ನು ಭಯಪಡುವ ಪ್ರತಿಯೊಬ್ಬನಿಗೆ ಬೋಧಿಸಿ ನೆನಪಿಸಲು ಮಾತ್ರ .

Verse 4

تَنزِيلًا مِّمَّنْ خَلَقَ ٱلْأَرْضَ وَٱلسَّمَـٰوَٰتِ ٱلْعُلَى

Transliteration tanzīlan mimman khalaqa l-arḍa wal-samāwāti l-ʿulā

Kannada ಭೂಮಿಯನ್ನೂ ಉನ್ನತ ಆಕಾಶಗಳನ್ನೂ ಸೃಷಿಸಿದವನ ಕಡೆಯಿಂದ ಇದು ಅವತೀರ್ಣ ಗೊಂಡಿದೆ.

Verse 5

ٱلرَّحْمَـٰنُ عَلَى ٱلْعَرْشِ ٱسْتَوَىٰ

Transliteration al-raḥmānu ʿalā l-ʿarshi is'tawā

Kannada ದಯಾಮಯನಾದ ಅಲ್ಲಾಹನು ತನಗೆ ಸಂಗತವಾದ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನು.

Verse 6

لَهُۥ مَا فِى ٱلسَّمَـٰوَٰتِ وَمَا فِى ٱلْأَرْضِ وَمَا بَيْنَهُمَا وَمَا تَحْتَ ٱلثَّرَىٰ

Transliteration lahu mā fī l-samāwāti wamā fī l-arḍi wamā baynahumā wamā taḥta l-tharā

Kannada ಅವನು, ಆಕಾಶಗಳಲ್ಲೂ ಭೂಮಿಯಲ್ಲೂ ಅವೆರಡರ ನಡುವೆಯೂ ಹಾಗೂ ಮಣ್ಣಿನಡಿಯಲ್ಲಿಯೂ ಇರುವ ಸಕಲ ವಸ್ತುಗಳ ಒಡೆಯನು.

Verse 7

وَإِن تَجْهَرْ بِٱلْقَوْلِ فَإِنَّهُۥ يَعْلَمُ ٱلسِّرَّ وَأَخْفَى

Transliteration wa-in tajhar bil-qawli fa-innahu yaʿlamu l-sira wa-akhfā

Kannada ನೀವು ನಿಮ್ಮ ಮಾತನ್ನು ಉಚ್ಚ ಸ್ವರದಲ್ಲೇ ಹೇಳಿದರೂ ಅವನು ರಹಸ್ಯವನ್ನೂ ಅತ್ಯಂತ ಸುಪ್ತವಾದುದನ್ನೂ ಅರಿಯುತ್ತಾನೆ .

Verse 8

ٱللَّهُ لَآ إِلَـٰهَ إِلَّا هُوَ ۖ لَهُ ٱلْأَسْمَآءُ ٱلْحُسْنَىٰ

Transliteration al-lahu lā ilāha illā huwa lahu l-asmāu l-ḥus'nā

Kannada ಅಲ್ಲಾಹು, ಅವನ ಹೊರತು ಅನ್ಯದೇವನಿಲ್ಲ. ಅವನಿಗೆ ಅತ್ಯುತ್ತಮ ನಾಮಗಳಿವೆ.

Verse 9

وَهَلْ أَتَىٰكَ حَدِيثُ مُوسَىٰٓ

Transliteration wahal atāka ḥadīthu mūsā

Kannada ನಿಮಗೆ ಮೂಸಾರ ವೃತ್ತಾಂತ ತಲುಪಿದೆಯೇ?

Verse 10

إِذْ رَءَا نَارًا فَقَالَ لِأَهْلِهِ ٱمْكُثُوٓا۟ إِنِّىٓ ءَانَسْتُ نَارًا لَّعَلِّىٓ ءَاتِيكُم مِّنْهَا بِقَبَسٍ أَوْ أَجِدُ عَلَى ٱلنَّارِ هُدًى

Transliteration idh raā nāran faqāla li-ahlihi um'kuthū innī ānastu nāran laʿallī ātīkum min'hā biqabasin aw ajidu ʿalā l-nāri hudan

Kannada ಅವರು ಒಂದು ಬೆಂಕಿಯನ್ನು ಕಂಡಾಗ ತನ್ನ ಪತ್ನಿಯೊಡನೆ; “ನೀವಿಲ್ಲಿ ನಿಲ್ಲಿರಿ, ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಬಹುಶಃ ಅದರಿಂದ ನಿಮಗೆ ನಾನು ಕೆಂಡವೊಂದನ್ನು ತರಬಲ್ಲೆ. ಅಥವಾ ಆ ಬೆಂಕಿಯ ಬಳಿ ಮಾರ್ಗದರ್ಶನವನ್ನು ಪಡೆಯ ಬಲ್ಲೆ” ಎಂದು ಹೇಳಿದ ಸಂದರ್ಭ.

Verse 11

فَلَمَّآ أَتَىٰهَا نُودِىَ يَـٰمُوسَىٰٓ

Transliteration falammā atāhā nūdiya yāmūsā

Kannada ಅಲ್ಲಿಗೆ ತಲಪಿದಾಗ ಹೀಗೆ ಕರೆಯಲಾಯಿತು. - ‘ಓ ಮೂಸಾ,

Verse 12

إِنِّىٓ أَنَا۠ رَبُّكَ فَٱخْلَعْ نَعْلَيْكَ ۖ إِنَّكَ بِٱلْوَادِ ٱلْمُقَدَّسِ طُوًى

Transliteration innī anā rabbuka fa-ikh'laʿ naʿlayka innaka bil-wādi l-muqadasi ṭuwan

Kannada ನಾನು ನಿಮ್ಮ ಪ್ರಭು. ಆದ್ದರಿಂದ ನಿಮ್ಮ ಪಾದರಕ್ಷೆಗಳನ್ನು ಕಳಚಿರಿ. ನೀವು ಪವಿತ್ರ `ಥುವಾ’ ಕಣಿವೆಯಲ್ಲಿದ್ದೀರಿ.

Verse 13

وَأَنَا ٱخْتَرْتُكَ فَٱسْتَمِعْ لِمَا يُوحَىٰٓ

Transliteration wa-anā ikh'tartuka fa-is'tamiʿ limā yūḥā

Kannada ನಾನು ನಿಮ್ಮನ್ನು (ಪ್ರವಾದಿತ್ವಕ್ಕಾಗಿ) ಆರಿಸಿ ಕೊಂಡಿದ್ದೇನೆ. ಆದ್ದರಿಂದ ನಿಮಗೆ ಕೊಡಲಾಗುವ ದಿವ್ಯ ಸಂದೇಶವನ್ನು ಚೆನ್ನಾಗಿ ಆಲಿಸಿರಿ.

Verse 14

إِنَّنِىٓ أَنَا ٱللَّهُ لَآ إِلَـٰهَ إِلَّآ أَنَا۠ فَٱعْبُدْنِى وَأَقِمِ ٱلصَّلَوٰةَ لِذِكْرِىٓ

Transliteration innanī anā l-lahu lā ilāha illā anā fa-uʿ'bud'nī wa-aqimi l-ṣalata lidhik'rī

Kannada ನಿಶ್ಚಯ ನಾನೇ ಅಲ್ಲಾಹು, ನನ್ನ ಹೊರತು ಬೇರೆ ದೇವನಿಲ್ಲ. ಆದುದರಿಂದ ನೀವು ನನಗೆ ಆರಾಧಿಸಿರಿ. ನನ್ನ ಸ್ಮರಣೆಗಾಗಿ ನಮಾಝನ್ನು ಕ್ರಮಪ್ರಕಾರ ನೆಲೆಗೊಳಿಸಿರಿ.

Verse 15

إِنَّ ٱلسَّاعَةَ ءَاتِيَةٌ أَكَادُ أُخْفِيهَا لِتُجْزَىٰ كُلُّ نَفْسٍۭ بِمَا تَسْعَىٰ

Transliteration inna l-sāʿata ātiyatun akādu ukh'fīhā lituj'zā kullu nafsin bimā tasʿā

Kannada ಅಂತಿಮ ಘಳಿಗೆಯು ಖಂಡಿತ ಬರಲಿದೆ. ಪ್ರತಿಯೊಬ್ಬ ಜೀವಿಯೂ ತನ್ನ ದುಡಿಮೆಗೆ ತಕ್ಕ ಪ್ರತಿಫಲ ಪಡೆಯಲಿಕ್ಕಾಗಿ ನಾನು ಅದರ ಸಮಯವನ್ನು ರಹಸ್ಯವಾಗಿಡಬಯಸಿದ್ದೇನೆ

Verse 16

فَلَا يَصُدَّنَّكَ عَنْهَا مَن لَّا يُؤْمِنُ بِهَا وَٱتَّبَعَ هَوَىٰهُ فَتَرْدَىٰ

Transliteration falā yaṣuddannaka ʿanhā man lā yu'minu bihā wa-ittabaʿa hawāhu fatardā

Kannada ಆದುದರಿಂದ ಆ ಕೊನೆ ತಾಸಿನ ಮೇಲೆ ವಿಶ್ವಾಸವಿರಿಸದವನು ಮತ್ತು ತನ್ನ ಸ್ವೇಚ್ಛೆಗಳ ಬೆನ್ನು ಹತ್ತಿದವನು ನಿಮ್ಮನ್ನು ಆ ಘಳಿಗೆಯ ವಿಶ್ವಾಸದಿಂದ ತಡೆಯದಿರಲಿ. ಅನ್ಯಥಾ ನೀವು ವಿನಾಶದಲ್ಲಿ ಬೀಳುವಿರಿ.

Verse 17

وَمَا تِلْكَ بِيَمِينِكَ يَـٰمُوسَىٰ

Transliteration wamā til'ka biyamīnika yāmūsā

Kannada ಓ ಮೂಸಾ, ನಿಮ್ಮ ಬಲಗೈಯಲ್ಲಿರುವುದೇನು?”

Verse 18

قَالَ هِىَ عَصَاىَ أَتَوَكَّؤُا۟ عَلَيْهَا وَأَهُشُّ بِهَا عَلَىٰ غَنَمِى وَلِىَ فِيهَا مَـَٔارِبُ أُخْرَىٰ

Transliteration qāla hiya ʿaṣāya atawakka-u ʿalayhā wa-ahushu bihā ʿalā ghanamī waliya fīhā maāribu ukh'rā

Kannada ಮೂಸಾ ಹೀಗೆ ಉತ್ತರಿಸಿದರು - “ಇದು ನನ್ನ ದಂಡ, ನಾನು ಇದನ್ನು ಊರಿಕೊಂಡು ನಡೆಯುತ್ತೇನೆ. ಇದರಿಂದ ಆಡುಗಳಿಗೆ ಮರದ ಎಲೆಗಳನ್ನು ಹೊಡೆದು ಬೀಳಿಸುತ್ತೇನೆ. ಇದರಿಂದ ನಾನು ಬೇರೆ ಅನೇಕ ಪ್ರಯೋಜನಗಳನ್ನು ಪಡೆಯುತ್ತೇನೆ.”

Verse 19

قَالَ أَلْقِهَا يَـٰمُوسَىٰ

Transliteration qāla alqihā yāmūsā

Kannada ಆಗ ಅಲ್ಲಾಹನು, “ಓ ಮೂಸಾ, ಅದನ್ನು ಕೆಳಗೆ ಹಾಕಿರಿ” ಎಂದನು.

Verse 20

فَأَلْقَىٰهَا فَإِذَا هِىَ حَيَّةٌ تَسْعَىٰ

Transliteration fa-alqāhā fa-idhā hiya ḥayyatun tasʿā

Kannada ಆಗ ಅವರು ಕೆಳಗೆ ಹಾಕಿದರು - ಹಠಾತ್ತನೆ ಅದೊಂದು ವೇಗವಾಗಿ ಓಡುತ್ತಿರುವ ಹಾವಾಗಿ ಮಾರ್ಪಟ್ಟಿತು .

Verse 21

قَالَ خُذْهَا وَلَا تَخَفْ ۖ سَنُعِيدُهَا سِيرَتَهَا ٱلْأُولَىٰ

Transliteration qāla khudh'hā walā takhaf sanuʿīduhā sīratahā l-ūlā

Kannada ಅಲ್ಲಾಹು ಹೇಳಿದ; “ಅದನ್ನು ಹಿಡಿದುಕೊಳ್ಳಿ. ಹೆದರಬೇಡ. ನಾವು ಅದನ್ನು ಪೂರ್ವಸ್ಥಿತಿಗೇ ತರುತ್ತೇವೆ.

Verse 22

وَٱضْمُمْ يَدَكَ إِلَىٰ جَنَاحِكَ تَخْرُجْ بَيْضَآءَ مِنْ غَيْرِ سُوٓءٍ ءَايَةً أُخْرَىٰ

Transliteration wa-uḍ'mum yadaka ilā janāḥika takhruj bayḍāa min ghayri sūin āyatan ukh'rā

Kannada ನಿಮ್ಮ ಕೈಯನ್ನು ನಿಮ್ಮ ಪಕ್ಕಕ್ಕೆ ಸೇರಿಸಿಡಿ. ಆಗದು ಯಾವುದೇ ಕೇಡಿಲ್ಲದೆ ಹೊಳೆಯುತ್ತಾ ಹೊರ ಬರುವುದು. ಇದು ಎರಡನೆಯ ನಿದರ್ಶನ.

Verse 23

لِنُرِيَكَ مِنْ ءَايَـٰتِنَا ٱلْكُبْرَى

Transliteration linuriyaka min āyātinā l-kub'rā

Kannada ಏಕೆಂದರೆ ನಾವು ನಿಮಗೆ ನಮ್ಮ ದೊಡ್ಡ ನಿದರ್ಶನಗಳನ್ನು ತೋರಿಸಲಿದ್ದೇವೆ.

Verse 24

ٱذْهَبْ إِلَىٰ فِرْعَوْنَ إِنَّهُۥ طَغَىٰ

Transliteration idh'hab ilā fir'ʿawna innahu ṭaghā

Kannada ಇನ್ನು ನೀವು ಫಿರ್‍ಔನನ ಬಳಿಗೆ ಹೋಗಿರಿ. ಅವನು ಅತಿಕ್ರಮಿಯಾಗಿದ್ದಾನೆ”.

Verse 25

قَالَ رَبِّ ٱشْرَحْ لِى صَدْرِى

Transliteration qāla rabbi ish'raḥ lī ṣadrī

Kannada ಮೂಸಾ ಹೀಗೆ ಹೇಳಿದರು; “ಓ ನನ್ನ ಪ್ರಭೂ, ನನ್ನ ಹೃದಯವನ್ನು ವಿಶಾಲಗೊಳಿಸು.

Verse 26

وَيَسِّرْ لِىٓ أَمْرِى

Transliteration wayassir lī amrī

Kannada ನನ್ನ ಕಾರ್ಯವನ್ನು ನನಗೆ ಸುಲಭಗೊಳಿಸು.

Verse 27

وَٱحْلُلْ عُقْدَةً مِّن لِّسَانِى

Transliteration wa-uḥ'lul ʿuq'datan min lisānī

Kannada ನನ್ನ ನಾಲಗೆಯ ತೊಡಕನ್ನು ನೀಗಿಸು .

Verse 28

يَفْقَهُوا۟ قَوْلِى

Transliteration yafqahū qawlī

Kannada ಜನರು ನನ್ನ ಮಾತನ್ನು ಗ್ರಹಿಸಲು.

Verse 29

وَٱجْعَل لِّى وَزِيرًا مِّنْ أَهْلِى

Transliteration wa-ij'ʿal lī wazīran min ahlī

Kannada ನನಗಾಗಿ ನನ್ನದೇ ಕುಟುಂಬದಿಂದ ಒಬ್ಬ ಸಹಾಯಕನನ್ನು ನೇಮಿಸು.

Verse 30

هَـٰرُونَ أَخِى

Transliteration hārūna akhī

Kannada ನನ್ನ ಸಹೋದರರಾಗಿರುವ ಹಾರೂನರನ್ನು.

Verse 31

ٱشْدُدْ بِهِۦٓ أَزْرِى

Transliteration ush'dud bihi azrī

Kannada ಅವರ ಮೂಲಕ ನನ್ನ ಕೈ ಬಲಪಡಿಸು .

Verse 32

وَأَشْرِكْهُ فِىٓ أَمْرِى

Transliteration wa-ashrik'hu fī amrī

Kannada ಅವರನ್ನು ನನ್ನ ಕರ್ತವ್ಯದಲ್ಲಿ ಸಹಭಾಗಿಯಾಗಿ ಮಾಡು.

Verse 33

كَىْ نُسَبِّحَكَ كَثِيرًا

Transliteration kay nusabbiḥaka kathīran

Kannada ನಿನ್ನ ಪಾವಿತ್ರ್ಯವನ್ನು ನಮಗೆ ಬಹಳವಾಗಿ ಕೊಂಡಾಡಲು,

Verse 34

وَنَذْكُرَكَ كَثِيرًا

Transliteration wanadhkuraka kathīran

Kannada ಹಾಗೂ ಬಹಳವಾಗಿ ನಿನ್ನನ್ನು ಸ್ಮರಿಸಲು.

Verse 35

إِنَّكَ كُنتَ بِنَا بَصِيرًا

Transliteration innaka kunta binā baṣīran

Kannada ನೀನು ಸದಾ ನಮ್ಮ ಸ್ಥಿತಿಯನ್ನು ಚೆನ್ನಾಗಿ ಕಾಣುತ್ತಿರುವಿ

Verse 36

قَالَ قَدْ أُوتِيتَ سُؤْلَكَ يَـٰمُوسَىٰ

Transliteration qāla qad ūtīta su'laka yāmūsā

Kannada ಅಲ್ಲಾಹು ಹೇಳಿದನು ``ಓ ಮೂಸಾ, ನೀವು ಕೇಳಿ ಕೊಂಡದ್ದನ್ನು ನಿಮಗೆ ಕೊಡಲಾಗಿದೆ.

Verse 37

وَلَقَدْ مَنَنَّا عَلَيْكَ مَرَّةً أُخْرَىٰٓ

Transliteration walaqad manannā ʿalayka marratan ukh'rā

Kannada ಇನ್ನೊಂದು ಬಾರಿ ಕೂಡ ನಿಮ್ಮ ಮೇಲೆ ನಾವು ಅನುಗ್ರಹ ತೋರಿದ್ದುಂಟು.

Verse 38

إِذْ أَوْحَيْنَآ إِلَىٰٓ أُمِّكَ مَا يُوحَىٰٓ

Transliteration idh awḥaynā ilā ummika mā yūḥā

Kannada ಸೂಚಿಸಬೇಕಾದ ಸಂಗತಿಯನ್ನು ನಾವು ನಿಮ್ಮ ತಾಯಿಗೆ ಸೂಚಿಸಿದ ಸಂದರ್ಭವನ್ನೂ ಸ್ಮರಿಸಿರಿ.

Verse 39

أَنِ ٱقْذِفِيهِ فِى ٱلتَّابُوتِ فَٱقْذِفِيهِ فِى ٱلْيَمِّ فَلْيُلْقِهِ ٱلْيَمُّ بِٱلسَّاحِلِ يَأْخُذْهُ عَدُوٌّ لِّى وَعَدُوٌّ لَّهُۥ ۚ وَأَلْقَيْتُ عَلَيْكَ مَحَبَّةً مِّنِّى وَلِتُصْنَعَ عَلَىٰ عَيْنِىٓ

Transliteration ani iq'dhifīhi fī l-tābūti fa-iq'dhifīhi fī l-yami falyul'qihi l-yamu bil-sāḥili yakhudh'hu ʿaduwwun lī waʿaduwwun lahu wa-alqaytu ʿalayka maḥabbatan minnī walituṣ'naʿa ʿalā ʿaynī

Kannada “ಅಂದರೆ ನೀನು ಈ ಮಗುವನ್ನು ಪೆಟ್ಟಿಗೆ ಯೊಳಗೆ ಇರಿಸು. ಪೆಟ್ಟಿಗೆಯನ್ನು ನದಿಯಲ್ಲಿ ತೇಲಿ ಬಿಡು. ನದಿಯು ಅದನ್ನು ದಡಕ್ಕೆ ಎಸೆಯುವುದು. ಅದನ್ನು ನನ್ನ ಶತ್ರು ಹಾಗೂ ಈ ಮಗುವಿನ ಶತ್ರುವಾದ ಒಬ್ಬನು ಎತ್ತಿಕೊಳ್ಳುವನು” ಎಂಬುದಾಗಿ. ನಾನು ನನ್ನ ಕಡೆಯಿಂದ ನಿಮ್ಮ ಮೇಲೆ ಪ್ರೀತಿಯನ್ನು ಹಾಕಿದೆನು ಮತ್ತು ನನ್ನ ಸಂರಕ್ಷಣೆಯಲ್ಲೇಂ ನಿಮ್ಮ ಆರೈಕೆಯ ವ್ಯವಸ್ಥೆ ಮಾಡಿದೆನು.

Verse 40

إِذْ تَمْشِىٓ أُخْتُكَ فَتَقُولُ هَلْ أَدُلُّكُمْ عَلَىٰ مَن يَكْفُلُهُۥ ۖ فَرَجَعْنَـٰكَ إِلَىٰٓ أُمِّكَ كَىْ تَقَرَّ عَيْنُهَا وَلَا تَحْزَنَ ۚ وَقَتَلْتَ نَفْسًا فَنَجَّيْنَـٰكَ مِنَ ٱلْغَمِّ وَفَتَنَّـٰكَ فُتُونًا ۚ فَلَبِثْتَ سِنِينَ فِىٓ أَهْلِ مَدْيَنَ ثُمَّ جِئْتَ عَلَىٰ قَدَرٍ يَـٰمُوسَىٰ

Transliteration idh tamshī ukh'tuka fataqūlu hal adullukum ʿalā man yakfuluhu farajaʿnāka ilā ummika kay taqarra ʿaynuhā walā taḥzana waqatalta nafsan fanajjaynāka mina l-ghami wafatannāka futūnan falabith'ta sinīna fī ahli madyana thumma ji'ta ʿalā qadarin yāmūsā

Kannada ನಿಮ್ಮ ಸಹೋದರಿ ನಡೆದು ಹೋಗಿ, “ಈ ಶಿಶುವನ್ನು ಅತ್ಯುತ್ತಮ ರೀತಿಯಿಂದ ಆರೈಕೆ ಮಾಡಬಲ್ಲವಳನ್ನು ನಿಮಗೆ ತೋರಿಸಿ ಕೊಡಲೇ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ. ಹೀಗೆ ನಿಮ್ಮ ತಾಯಿಯ ಕಣ್ತಣಿಯಲು ಹಾಗೂ ಅವಳು ದುಃಖಿಸದಿರಲು ನಾವು ನಿಮ್ಮನ್ನು ಪುನಃ ನಿಮ್ಮ ತಾಯಿಯ ಬಳಿಗೆ ತಲುಪಿಸಿದ್ದೇವೆ. ಇನ್ನೊಂದು ಸಂದರ್ಭದಲ್ಲಿ ನೀವು ಒಬ್ಬನನ್ನು ವಧಿಸಿ ಬಿಟ್ಟಿದ್ದೀರಿ. ನಾವು ನಿಮ್ಮನ್ನು ಆ ದುಃಖದಿಂದ ಪಾರುಗೊಳಿಸಿದ್ದೇವೆ. ನಿಮ್ಮನ್ನು ವಿವಿಧ ಪರೀಕ್ಷಣಗಳಿಗೆ ವಿಧೇಯಗೊಳಿಸಿದ್ದೇವೆ. ನೀವು ಮದ್ಯನದವರ ಜೊತೆ ಅನೇಕ ವರುಷ ನೆಲೆಸಿದಿರಿ. ಅನಂತರ, ಓ ಮೂಸಾ! ನೀವು ನಿಶ್ಚಿತ ಸ್ಥಾನಕ್ಕೆ ತಲುಪಿರುವಿರಿ.

Verse 41

وَٱصْطَنَعْتُكَ لِنَفْسِى

Transliteration wa-iṣ'ṭanaʿtuka linafsī

Kannada ನಾನು ನಿಮ್ಮನ್ನು ನನ್ನ ಕಾರ್ಯಕ್ಕಾಗಿ ಆಯ್ದು ಕೊಂಡಿರುತ್ತೇನೆ.

Verse 42

ٱذْهَبْ أَنتَ وَأَخُوكَ بِـَٔايَـٰتِى وَلَا تَنِيَا فِى ذِكْرِى

Transliteration idh'hab anta wa-akhūka biāyātī walā taniyā fī dhik'rī

Kannada ನೀವು ಮತ್ತು ನಿಮ್ಮ ಸಹೋದರ ನನ್ನ ನಿದರ್ಶನಗಳೊಂದಿಗೆ ಹೋಗಿರಿ. ನೀವು ನನ್ನ ಸ್ಮರಣೆಯಲ್ಲಿ ಲೋಪ ಮಾಡಬೇಡಿರಿ .

Verse 43

ٱذْهَبَآ إِلَىٰ فِرْعَوْنَ إِنَّهُۥ طَغَىٰ

Transliteration idh'habā ilā fir'ʿawna innahu ṭaghā

Kannada ನೀವಿಬ್ಬರೂ ಫಿರ್‍ಔನನ ಬಳಿಗೆ ಹೋಗಿರಿ, ಅವನು ಅತಿಕ್ರಮಿಯಾಗಿದ್ದಾನೆ.

Verse 44

فَقُولَا لَهُۥ قَوْلًا لَّيِّنًا لَّعَلَّهُۥ يَتَذَكَّرُ أَوْ يَخْشَىٰ

Transliteration faqūlā lahu qawlan layyinan laʿallahu yatadhakkaru aw yakhshā

Kannada ಅವನಲ್ಲಿ ನೀವಿಬ್ಬರು ನಯವಾಗಿ ಮಾತನಾಡಿರಿ. ಬಹುಶಃ ಅವನು ಉಪದೇಶ ಸ್ವೀಕರಿಸಿಯಾನು ಅಥವಾ ಭಯಪಟ್ಟಾನು.

Verse 45

قَالَا رَبَّنَآ إِنَّنَا نَخَافُ أَن يَفْرُطَ عَلَيْنَآ أَوْ أَن يَطْغَىٰ

Transliteration qālā rabbanā innanā nakhāfu an yafruṭa ʿalaynā aw an yaṭghā

Kannada ಆಗ ಇಬ್ಬರೂ - “ಓ ನಮ್ಮ ಪ್ರಭೂ, ಅವನು ನಮ್ಮ ಮೇಲೆ ಅತಿರೇಕವೆಸಗುವ ಅಥವಾ ನಮ್ಮ ಮೇಲೆ ಮುಗಿಬೀಳುವ ಆತಂಕ ನಮಗಿದೆ” ಎಂದರು.

Verse 46

قَالَ لَا تَخَافَآ ۖ إِنَّنِى مَعَكُمَآ أَسْمَعُ وَأَرَىٰ

Transliteration qāla lā takhāfā innanī maʿakumā asmaʿu wa-arā

Kannada ಆಗ, ಅಲ್ಲಾಹನು ಹೇಳಿದನು; “ಹೆದರಬೇಡಿರಿ, ನಾನು ನಿಮ್ಮ ಸಂಗಡವಿದ್ದೇನೆ, ಎಲ್ಲವನ್ನೂ ಆಲಿಸುತ್ತಿದ್ದೇನೆ ಮತ್ತು ವೀಕ್ಷಿಸುತ್ತಿದ್ದೇನೆ.

Verse 47

فَأْتِيَاهُ فَقُولَآ إِنَّا رَسُولَا رَبِّكَ فَأَرْسِلْ مَعَنَا بَنِىٓ إِسْرَٰٓءِيلَ وَلَا تُعَذِّبْهُمْ ۖ قَدْ جِئْنَـٰكَ بِـَٔايَةٍ مِّن رَّبِّكَ ۖ وَٱلسَّلَـٰمُ عَلَىٰ مَنِ ٱتَّبَعَ ٱلْهُدَىٰٓ

Transliteration fatiyāhu faqūlā innā rasūlā rabbika fa-arsil maʿanā banī is'rāīla walā tuʿadhib'hum qad ji'nāka biāyatin min rabbika wal-salāmu ʿalā mani ittabaʿa l-hudā

Kannada ಅವನ ಬಳಿಗೆ ಹೋಗಿರಿ. ಹೀಗೆ ಹೇಳಿರಿ, `ನಾವಿ ಬ್ಬರೂ ನಿನ್ನ ಪ್ರಭುವಿನ ಕಡೆಯಿಂದ ಕಳುಹಿ ಸಲ್ಪಟ್ಟ ದೂತರು. ಆದ್ದರಿಂದ ಇಸ್‍ರಾಈಲ ಮಕ್ಕ ಳನ್ನು ನಮ್ಮ ಜೊತೆ ಕಳುಹಿಸಿ ಕೊಡಬೇಕು. ಅವರಿಗೆ ಕಿರುಕುಳ ಕೊಡಬಾರದು, ನಿನ್ನ ಬಳಿಗೆ ನಿನ್ನ ಪ್ರಭುವಿನ ನಿದರ್ಶನವನ್ನು ನಾವು ತಂದಿರುತ್ತೇವೆ. ಸನ್ಮಾರ್ಗವನ್ನು ಅನುಸರಿಸಿ ನಡೆದವನಿಗೆ ಶಾಂತಿ ಸಂರಕ್ಷಣೆಯಿದೆ.

Verse 48

إِنَّا قَدْ أُوحِىَ إِلَيْنَآ أَنَّ ٱلْعَذَابَ عَلَىٰ مَن كَذَّبَ وَتَوَلَّىٰ

Transliteration innā qad ūḥiya ilaynā anna l-ʿadhāba ʿalā man kadhaba watawallā

Kannada ಸುಳ್ಳಾಗಿಸುವವನಿಗೂ ವಿಮುಖನಾದನಿಗೂ ಶಿಕ್ಷೆ ಇದೆಯೆಂದು ನಮಗೆ ದಿವ್ಯವಾಣಿಯ ಮೂಲಕ ತಿಳಿಸಿಕೊಡಲಾಗಿದೆ”.

Verse 49

قَالَ فَمَن رَّبُّكُمَا يَـٰمُوسَىٰ

Transliteration qāla faman rabbukumā yāmūsā

Kannada ಆಗ ಫಿರ್‍ಔನ್ ಹೀಗೆ ಹೇಳಿದನು, “ಸರಿ, ಹಾಗಾದರೆ ನಿಮ್ಮಿಬ್ಬರ ಪ್ರಭು ಯಾರು, ಮೂಸಾ?”

Verse 50

قَالَ رَبُّنَا ٱلَّذِىٓ أَعْطَىٰ كُلَّ شَىْءٍ خَلْقَهُۥ ثُمَّ هَدَىٰ

Transliteration qāla rabbunā alladhī aʿṭā kulla shayin khalqahu thumma hadā

Kannada ಮೂಸಾ ಹೇಳಿದರು, “ಪ್ರತಿಯೊಂದು ವಸ್ತುವಿಗೆ ಅದರದೇ ರೂಪ ಕೊಟ್ಟು ಆ ಬಳಿಕ ಅದಕ್ಕೆ ದಾರಿ ತೋರಿದವನೇ ನಮ್ಮ ಪ್ರಭು” .

Verse 51

قَالَ فَمَا بَالُ ٱلْقُرُونِ ٱلْأُولَىٰ

Transliteration qāla famā bālu l-qurūni l-ūlā

Kannada ಫಿರ್‍ಔನ್ ಹೇಳಿದನು; “ಹಾಗಾದರೆ ಗತ ಪೀಳಿಗೆಗಳ ಸ್ಥಿತಿ ಏನಾಗಿತ್ತು ?”

Verse 52

قَالَ عِلْمُهَا عِندَ رَبِّى فِى كِتَـٰبٍ ۖ لَّا يَضِلُّ رَبِّى وَلَا يَنسَى

Transliteration qāla ʿil'muhā ʿinda rabbī fī kitābin lā yaḍillu rabbī walā yansā

Kannada ಮೂಸಾ ಹೇಳಿದರು, “ಅದರ ಜ್ಞಾನವು ನನ್ನ ಪ್ರಭುವಿನ ಬಳಿಯಿರುವ ಒಂದು ಗ್ರಂಥದಲ್ಲಿ ದಾಖಲಿಸಲಾಗಿದೆ. ನನ್ನ ಪ್ರಭು ತಪ್ಪಲಾರ. ಮತ್ತು ಮರೆಯಲಾರ”.

Verse 53

ٱلَّذِى جَعَلَ لَكُمُ ٱلْأَرْضَ مَهْدًا وَسَلَكَ لَكُمْ فِيهَا سُبُلًا وَأَنزَلَ مِنَ ٱلسَّمَآءِ مَآءً فَأَخْرَجْنَا بِهِۦٓ أَزْوَٰجًا مِّن نَّبَاتٍ شَتَّىٰ

Transliteration alladhī jaʿala lakumu l-arḍa mahdan wasalaka lakum fīhā subulan wa-anzala mina l-samāi māan fa-akhrajnā bihi azwājan min nabātin shattā

Kannada ನಿಮಗಾಗಿ ಭೂಮಿಯನ್ನು ತೊಟ್ಟಿಲಾಗಿ ಮಾಡಿ ದವನೂ ಅದರಲ್ಲಿ ನಿಮಗೆ ಸಂಚರಿಸಲು ಹಲವು ದಾರಿಗಳನ್ನು ತೆರೆದವನೂ ಆಕಾಶದಿಂದ ನೀರನ್ನು ಸುರಿಸಿದವನೂ ಅವನೇ. ಅನಂತರ ಅದರ ಮೂಲಕ ವಿವಿಧ ಸಸ್ಯಗಳಿಂದ ತರತರದ ಜೋಡಿಗಳನ್ನು ನಾವು ಹೊರತರುತ್ತೇವೆ.

Verse 54

كُلُوا۟ وَٱرْعَوْا۟ أَنْعَـٰمَكُمْ ۗ إِنَّ فِى ذَٰلِكَ لَـَٔايَـٰتٍ لِّأُو۟لِى ٱلنُّهَىٰ

Transliteration kulū wa-ir'ʿaw anʿāmakum inna fī dhālika laāyātin li-ulī l-nuhā

Kannada ಅದರಿಂದ ನೀವೂ ತಿನ್ನಿರಿ. ನಿಮ್ಮ ಜಾನುವಾರು ಗಳನ್ನೂ ಮೇಯಿಸಿರಿ. ಬುದ್ಧಿವಂತರಿಗೆ ಖಂಡಿತ ಇದರಲ್ಲಿ ಅನೇಕ ನಿದರ್ಶನಗಳಿವೆ.

Verse 55

۞ مِنْهَا خَلَقْنَـٰكُمْ وَفِيهَا نُعِيدُكُمْ وَمِنْهَا نُخْرِجُكُمْ تَارَةً أُخْرَىٰ

Transliteration min'hā khalaqnākum wafīhā nuʿīdukum wamin'hā nukh'rijukum tāratan ukh'rā

Kannada ಇದೇ ಮಣ್ಣಿನಿಂದ ನಾವು ನಿಮ್ಮನ್ನು ಸೃಷ್ಟಿಸಿದ್ದೇವೆ. ಇದರೊಳಕ್ಕೆ ನಿಮ್ಮನ್ನು ಮರಳಿ ಒಯ್ಯುತ್ತೇವೆ. ಇದರಿಂದಲೇ ನಾವು ನಿಮ್ಮನ್ನು ಪುನಃ ಹೊರತರುತ್ತೇವೆ .

Verse 56

وَلَقَدْ أَرَيْنَـٰهُ ءَايَـٰتِنَا كُلَّهَا فَكَذَّبَ وَأَبَىٰ

Transliteration walaqad araynāhu āyātinā kullahā fakadhaba wa-abā

Kannada ನಾವು ಫಿರ್‍ಔನನಿಗೆ ನಮ್ಮ ಎಲ್ಲ ನಿದರ್ಶನ ಗಳನ್ನೂ ತೋರಿಸಿದೆವು. ಆದರೆ ಅವನು ಸುಳ್ಳಾಗಿಸಿದನು ಮತ್ತು ನಿರಾಕರಿಸಿದನು.

Verse 57

قَالَ أَجِئْتَنَا لِتُخْرِجَنَا مِنْ أَرْضِنَا بِسِحْرِكَ يَـٰمُوسَىٰ

Transliteration qāla aji'tanā litukh'rijanā min arḍinā bisiḥ'rika yāmūsā

Kannada ಅವನು ಹೀಗೆ ಕೇಳಿದನು; “ಓ ಮೂಸಾ, ನೀನು ನಿನ್ನ ಯಕ್ಷಿಣಿಯ ಬಲದಿಂದ ನಮ್ಮನ್ನು ನಮ್ಮ ದೇಶದಿಂದ ಹೊರದಬ್ಬಲು ಬಂದಿದ್ದೀಯಾ?

Verse 58

فَلَنَأْتِيَنَّكَ بِسِحْرٍ مِّثْلِهِۦ فَٱجْعَلْ بَيْنَنَا وَبَيْنَكَ مَوْعِدًا لَّا نُخْلِفُهُۥ نَحْنُ وَلَآ أَنتَ مَكَانًا سُوًى

Transliteration falanatiyannaka bisiḥ'rin mith'lihi fa-ij'ʿal baynanā wabaynaka mawʿidan lā nukh'lifuhu naḥnu walā anta makānan suwan

Kannada ಹಾಗಾದರೆ, ನಾವೂ ನಿನಗೆದುರು ಅಂತಹುದೇ ಮಾಟವನ್ನು ತರುತ್ತೇವೆ. ಆದ್ದರಿಂದ ನಮ್ಮ - ನಿನ್ನ ನಡುವೆ ಒಂದು ಅವಧಿಯನ್ನು ಗೊತ್ತು ಮಾಡು. ನಾವಾಗಲಿ ನೀನಾಗಲಿ ಈ ಕರಾರನ್ನು ಉಲ್ಲಂಘಿಸ ಬಾರದು. ಅದು ನಮಗೆಲ್ಲರಿಗೂ ಸಮಾನ ರೀತಿಯಲ್ಲಿ ಸೌಕರ್ಯವಿರುವ ಒಂದು ಸ್ಥಳದಲ್ಲಾಗಿರಲಿ”.

Verse 59

قَالَ مَوْعِدُكُمْ يَوْمُ ٱلزِّينَةِ وَأَن يُحْشَرَ ٱلنَّاسُ ضُحًى

Transliteration qāla mawʿidukum yawmu l-zīnati wa-an yuḥ'shara l-nāsu ḍuḥan

Kannada ಮೂಸಾ ಹೇಳಿದರು; “ಉತ್ಸವದ ದಿನವೇ ನಿಮಗೆ ನಿಗದಿತ ಅವಧಿ, ಆದ್ದರಿಂದ ಹೊತ್ತೇರಿದಾಗ ಜನರು ಒಟ್ಟು ಸೇರಲಿ” .

Verse 60

فَتَوَلَّىٰ فِرْعَوْنُ فَجَمَعَ كَيْدَهُۥ ثُمَّ أَتَىٰ

Transliteration fatawallā fir'ʿawnu fajamaʿa kaydahu thumma atā

Kannada ಫಿರ್‍ಔನನು ಮರಳಿ ತನ್ನ ಎಲ್ಲ ಕುತಂತ್ರಗಳನ್ನು ಒಟ್ಟುಗೂಡಿಸಿದನು ಮತ್ತು ಸ್ಪರ್ಧೆಗೆ ಇಳಿದನು.

Verse 61

قَالَ لَهُم مُّوسَىٰ وَيْلَكُمْ لَا تَفْتَرُوا۟ عَلَى ٱللَّهِ كَذِبًا فَيُسْحِتَكُم بِعَذَابٍ ۖ وَقَدْ خَابَ مَنِ ٱفْتَرَىٰ

Transliteration qāla lahum mūsā waylakum lā taftarū ʿalā l-lahi kadhiban fayus'ḥitakum biʿadhābin waqad khāba mani if'tarā

Kannada ಮೂಸಾ ರು ಅವರನ್ನು ತನ್ನ ಬಳಿ ಕರೆದು “ನಿಮಗೆ ಮಹಾನಾಶ!, ಅಲ್ಲಾಹನ ಮೇಲೆ ಸುಳ್ಳಾರೋಪಗಳನ್ನು ಹೊರಿಸಬೇಡಿರಿ. ಅನ್ಯಥಾ ಅವನು ಘೋರ ಶಿಕ್ಷೆಯ ಮೂಲಕ ನಿಮ್ಮನ್ನು ನಿರ್ವಂಶ ಮಾಡುವನು. ಮಿಥ್ಯಾರೋಪವನ್ನು ಹೊರಿಸಿದವನು, ಖಂಡಿತ ಭಗ್ನನಾದನು.

Verse 62

فَتَنَـٰزَعُوٓا۟ أَمْرَهُم بَيْنَهُمْ وَأَسَرُّوا۟ ٱلنَّجْوَىٰ

Transliteration fatanāzaʿū amrahum baynahum wa-asarrū l-najwā

Kannada ಇದನ್ನು ಕೇಳಿದಾಗ ಅವರೊಳಗೆ ಭಿನ್ನಾಭಿಪ್ರಾಯ ತಲೆದೋರಿತು. ಅವರು ರಹಸ್ಯವಾಗಿ ಪರಸ್ಪರ ಸಮಾಲೋಚಿಸಿದರು.

Verse 63

قَالُوٓا۟ إِنْ هَـٰذَٰنِ لَسَـٰحِرَٰنِ يُرِيدَانِ أَن يُخْرِجَاكُم مِّنْ أَرْضِكُم بِسِحْرِهِمَا وَيَذْهَبَا بِطَرِيقَتِكُمُ ٱلْمُثْلَىٰ

Transliteration qālū in hādhāni lasāḥirāni yurīdāni an yukh'rijākum min arḍikum bisiḥ'rihimā wayadhhabā biṭarīqatikumu l-muth'lā

Kannada ಕೊನೆಗೆ ಅವರು (ಹೀಗೆ)ಹೇಳಿದರು. “ಇವರಿ ಬ್ಬರೂ ಕೇವಲ ಯಕ್ಷಿಣಿಗಾರರು. ಇವರ ಉದ್ದೇಶವು ತಮ್ಮ ಯಕ್ಷಿಣಿಯ ಬಲದಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕುವುದು ಮತ್ತು ನಿಮ್ಮ ಅತಿ ಶ್ರೇಷ್ಟವಾದ ಮಾರ್ಗವನ್ನು ಕೊನೆಗಾಣಿಸುವುದು.

Verse 64

فَأَجْمِعُوا۟ كَيْدَكُمْ ثُمَّ ٱئْتُوا۟ صَفًّا ۚ وَقَدْ أَفْلَحَ ٱلْيَوْمَ مَنِ ٱسْتَعْلَىٰ

Transliteration fa-ajmiʿū kaydakum thumma i'tū ṣaffan waqad aflaḥa l-yawma mani is'taʿlā

Kannada ಆದುದರಿಂದ ನಿಮ್ಮ ಸಕಲ ತಂತ್ರಗಳನ್ನೂ ಇಂದು ಒಟ್ಟುಗೂಡಿಸಿರಿ. ಒಂದೇ ಅಣಿಯಾಗಿ ರಂಗಕ್ಕೆ ಇಳಿಯಿರಿ. ಎದುರು ಪಕ್ಷದವರನ್ನು ಯಾರು ಸೋಲಿಸಿ ಬಿಡುತ್ತಾರೆ, ಅವರಿಂದು ಖಂಡಿತ ಗೆಲುವು ಸಾಧಿಸುತ್ತಾರೆ.

Verse 65

قَالُوا۟ يَـٰمُوسَىٰٓ إِمَّآ أَن تُلْقِىَ وَإِمَّآ أَن نَّكُونَ أَوَّلَ مَنْ أَلْقَىٰ

Transliteration qālū yāmūsā immā an tul'qiya wa-immā an nakūna awwala man alqā

Kannada ಅವರು ಹೇಳಿದರು; “ಓ ಮೂಸಾ, ಒಂದೋ ನೀವು ಮೊದಲು ಎಸೆಯಿರಿ ಅಥವಾ ಮೊದಲು ನಾವು ಎಸೆಯುತ್ತೇವೆ”.

Verse 66

قَالَ بَلْ أَلْقُوا۟ ۖ فَإِذَا حِبَالُهُمْ وَعِصِيُّهُمْ يُخَيَّلُ إِلَيْهِ مِن سِحْرِهِمْ أَنَّهَا تَسْعَىٰ

Transliteration qāla bal alqū fa-idhā ḥibāluhum waʿiṣiyyuhum yukhayyalu ilayhi min siḥ'rihim annahā tasʿā

Kannada ಆಗ ಮೂಸಾ “ಇಲ್ಲ, ನೀವೇ ಎಸೆಯಿರಿ” ಎಂದರು . ಅಷ್ಟರಲ್ಲಿ ಅವರ ಹಗ್ಗಗಳೂ ಅವರ ದಂಡಗಳೂ ಚಲಿಸುತ್ತಿರುವಂತೆ ಅವರ ಇಂದ್ರ ಜಾಲದ ಬಲದಿಂದ ಮೂಸಾರಿಗೆ ಭಾಸವಾಯಿತು .

Verse 67

فَأَوْجَسَ فِى نَفْسِهِۦ خِيفَةً مُّوسَىٰ

Transliteration fa-awjasa fī nafsihi khīfatan mūsā

Kannada ಅಷ್ಟರಲ್ಲಿ ಮೂಸಾ ತನ್ನ ಮನದೊಳಗೇ ತಣ್ಣನೆ ಹೆದರಿದರು.

Verse 68

قُلْنَا لَا تَخَفْ إِنَّكَ أَنتَ ٱلْأَعْلَىٰ

Transliteration qul'nā lā takhaf innaka anta l-aʿlā

Kannada ಆಗ ನಾವು ಹೇಳಿದೆವು; “ಹೆದರಬೇಡಿರಿ, ನೀವೇ ಗೆಲ್ಲುವಿರಿ.

Verse 69

وَأَلْقِ مَا فِى يَمِينِكَ تَلْقَفْ مَا صَنَعُوٓا۟ ۖ إِنَّمَا صَنَعُوا۟ كَيْدُ سَـٰحِرٍ ۖ وَلَا يُفْلِحُ ٱلسَّاحِرُ حَيْثُ أَتَىٰ

Transliteration wa-alqi mā fī yamīnika talqaf mā ṣanaʿū innamā ṣanaʿū kaydu sāḥirin walā yuf'liḥu l-sāḥiru ḥaythu atā

Kannada ನಿಮ್ಮ ಬಲ ಕೈಯಲ್ಲಿರುವ ದಂಡವನ್ನು ಕೆಳಗೆ ಹಾಕಿರಿ. ಅದು ಅವರ ಕಣ್ಣು ಕಟ್ಟಿದ ವಸ್ತುಗಳನ್ನು ನುಂಗಿ ಹಾಕುವುದು. ಅವರು ಮಾಡಿದ್ದೆಲ್ಲ ಕೇವಲ ಜಾದೂಗಾರನ ಕುತಂತ್ರವಾಗಿದ್ದು ಜಾದೂಗಾರನು ಎಲ್ಲೇ ಬರಲಿ, ಅವನೆಂದೂ ಯಶಸ್ವಿಯಾಗಲಾರ”.

Verse 70

فَأُلْقِىَ ٱلسَّحَرَةُ سُجَّدًا قَالُوٓا۟ ءَامَنَّا بِرَبِّ هَـٰرُونَ وَمُوسَىٰ

Transliteration fa-ul'qiya l-saḥaratu sujjadan qālū āmannā birabbi hārūna wamūsā

Kannada ಕೊನೆಗೆ ಎಲ್ಲ ಜಾದೂಗಾರರೂ ಸಾಷ್ಟಾಂಗವೆರ ಗುತ್ತ ನೆಲಕ್ಕೆ ಬಿದ್ದರು. ಅವರು ಸಾರಿದರು; “ನಾವು ಮೂಸಾ ಮತ್ತು ಹಾರೂನರ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ’’.

Verse 71

قَالَ ءَامَنتُمْ لَهُۥ قَبْلَ أَنْ ءَاذَنَ لَكُمْ ۖ إِنَّهُۥ لَكَبِيرُكُمُ ٱلَّذِى عَلَّمَكُمُ ٱلسِّحْرَ ۖ فَلَأُقَطِّعَنَّ أَيْدِيَكُمْ وَأَرْجُلَكُم مِّنْ خِلَـٰفٍ وَلَأُصَلِّبَنَّكُمْ فِى جُذُوعِ ٱلنَّخْلِ وَلَتَعْلَمُنَّ أَيُّنَآ أَشَدُّ عَذَابًا وَأَبْقَىٰ

Transliteration qāla āmantum lahu qabla an ādhana lakum innahu lakabīrukumu alladhī ʿallamakumu l-siḥ'ra fala-uqaṭṭiʿanna aydiyakum wa-arjulakum min khilāfin wala-uṣallibannakum fī judhūʿi l-nakhli walataʿlamunna ayyunā ashaddu ʿadhāban wa-abqā

Kannada ಫಿರ್‍ಔನ್ (ಹೀಗೆ) ಹೇಳಿದನು; “ನಾನು ನಿಮಗೆ ಅನುಮತಿ ಕೊಡುವುದಕ್ಕೆ ಮುಂಚೆಯೇ ನೀವು ಅವನ ಮೇಲೆ ವಿಶ್ವಾಸವಿಟ್ಟಿರಾ ? ಇವನು ನಿಮಗೆ ಯಕ್ಷಿಣಿ ವಿದ್ಯೆಯನ್ನು ಕಲಿಸಿದ್ದ ಗುರು ಎಂದು ತಿಳಿಯಿತು. ಆದ್ದರಿಂದ ನಾನು ನಿಮ್ಮ ಕೈಕಾಲು ಗಳನ್ನು ವಿರುದ್ಧ ದಿಕ್ಕುಗಳಿಂದ ಕತ್ತರಿಸಿ ಹಾಕು ತ್ತೇನೆ. ಖರ್ಜೂರ ವೃಕ್ಷದ ಕಾಂಡಗಳ ಮೇಲೆ ನಿಮ್ಮನ್ನು ಶಿಲುಬೆಗೇರಿಸುತ್ತೇನೆ. ಆಗ ನಮ್ಮಿಬ್ಬರ ಪೈಕಿ ಯಾರ ಶಿಕ್ಷೆ ಕಠಿಣ ಹಾಗೂ ದೀರ್ಘವಾದುದೆಂದು ನಿಮಗೆ ಚೆನ್ನಾಗಿ ತಿಳಿಯುವುದು” .

Verse 72

قَالُوا۟ لَن نُّؤْثِرَكَ عَلَىٰ مَا جَآءَنَا مِنَ ٱلْبَيِّنَـٰتِ وَٱلَّذِى فَطَرَنَا ۖ فَٱقْضِ مَآ أَنتَ قَاضٍ ۖ إِنَّمَا تَقْضِى هَـٰذِهِ ٱلْحَيَوٰةَ ٱلدُّنْيَآ

Transliteration qālū lan nu'thiraka ʿalā mā jāanā mina l-bayināti wa-alladhī faṭaranā fa-iq'ḍi mā anta qāḍin innamā taqḍī hādhihi l-ḥayata l-dun'yā

Kannada ಜಾದೂಗಾರರು ಹೀಗೆ ಉತ್ತರಕೊಟ್ಟರು, “ನಮಗೆ ಬಂದು ಸಿಕ್ಕಿದ ಪ್ರತ್ಯಕ್ಷ ಪ್ರಮಾಣಗಳು ಹಾಗೂ ನಮ್ಮನ್ನು ಸೃಷ್ಟಿಸಿದ ಅಲ್ಲಾಹನಿಗಿಂತ ಹೆಚ್ಚು ಪ್ರಾಶ ಸ್ತ್ಯವನ್ನು ನಿನಗೆ ಖಂಡಿತ ಕೊಡಲಾರೆವು. ಆದ್ದ ರಿಂದ ನೀನೇನು ವಿಧಿಸುತ್ತೀಯೋ ಅದನ್ನು ವಿಧಿಸು. ನೀನು ಇಹಲೋಕ ಜೀವನದ ತೀರ್ಮಾನ ಮಾತ್ರ ಮಾಡಬಲ್ಲೆ.

Verse 73

إِنَّآ ءَامَنَّا بِرَبِّنَا لِيَغْفِرَ لَنَا خَطَـٰيَـٰنَا وَمَآ أَكْرَهْتَنَا عَلَيْهِ مِنَ ٱلسِّحْرِ ۗ وَٱللَّهُ خَيْرٌ وَأَبْقَىٰٓ

Transliteration innā āmannā birabbinā liyaghfira lanā khaṭāyānā wamā akrahtanā ʿalayhi mina l-siḥ'ri wal-lahu khayrun wa-abqā

Kannada ನಮ್ಮ ಅಪರಾಧಗಳನ್ನೂ ನೀನು ನಮ್ಮ ಮೇಲೆ ಬಲವಂತದಿಂದ ಮಾಡಿಸಿದ ಇಂದ್ರಜಾಲವನ್ನೂ ಕ್ಷಮಿಸಲಿಕ್ಕಾಗಿ ನಾವು ನಮ್ಮ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ. ಅಲ್ಲಾಹನೇ ಉತ್ತಮನು ಮತ್ತು ಅವನೇ ಚಿರಂತನನೂ ಆಗಿರುತ್ತಾನೆ” .

Verse 74

إِنَّهُۥ مَن يَأْتِ رَبَّهُۥ مُجْرِمًا فَإِنَّ لَهُۥ جَهَنَّمَ لَا يَمُوتُ فِيهَا وَلَا يَحْيَىٰ

Transliteration innahu man yati rabbahu muj'riman fa-inna lahu jahannama lā yamūtu fīhā walā yaḥyā

Kannada ತನ್ನ ಪ್ರಭುವಿನ ಸನ್ನಿಧಿಗೆ ಯಾರು ಅಪರಾಧಿಯಾಗಿ ಹಾಜರಾಗುತ್ತಾನೋ ಅವನಿಗೆ ಖಂಡಿತ ನರಕವಿದೆ. ಅದರಲ್ಲಿ ಅವನು ಸಾಯಲಿಕ್ಕೂ ಇಲ್ಲ, ಬದುಕಲಿಕ್ಕೂ ಇಲ್ಲ.

Verse 75

وَمَن يَأْتِهِۦ مُؤْمِنًا قَدْ عَمِلَ ٱلصَّـٰلِحَـٰتِ فَأُو۟لَـٰٓئِكَ لَهُمُ ٱلدَّرَجَـٰتُ ٱلْعُلَىٰ

Transliteration waman yatihi mu'minan qad ʿamila l-ṣāliḥāti fa-ulāika lahumu l-darajātu l-ʿulā

Kannada ಯಾರು ತನ್ನ ಪ್ರಭುವಿನ ಸನ್ನಿಧಿಯಲ್ಲಿ ಸತ್ಕರ್ಮ ವೆಸಗಿದ ಸತ್ಯ ವಿಶ್ವಾಸಿಯ ನೆಲೆಯಲ್ಲಿ ಹಾಜ ರಾಗುತ್ತಾನೋ ಅಂಥವರಿಗೆ ಉನ್ನತ ಸ್ಥಾನ ಮಹಿಮೆಗಳಿವೆ.

Verse 76

جَنَّـٰتُ عَدْنٍ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا ۚ وَذَٰلِكَ جَزَآءُ مَن تَزَكَّىٰ

Transliteration jannātu ʿadnin tajrī min taḥtihā l-anhāru khālidīna fīhā wadhālika jazāu man tazakkā

Kannada ಅಂದರೆ, ಚಿರವಾಸದ ಉದ್ಯಾನಗಳು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ. ಅವರು ಅವುಗಳಲ್ಲಿ ಸದಾಕಾಲ ನೆಲೆಸುವರು. ಪರಿಶುದ್ಧತೆಯನ್ನು ಪಡೆದವರ ಪ್ರತಿಫಲವಿದು.

Verse 77

وَلَقَدْ أَوْحَيْنَآ إِلَىٰ مُوسَىٰٓ أَنْ أَسْرِ بِعِبَادِى فَٱضْرِبْ لَهُمْ طَرِيقًا فِى ٱلْبَحْرِ يَبَسًا لَّا تَخَـٰفُ دَرَكًا وَلَا تَخْشَىٰ

Transliteration walaqad awḥaynā ilā mūsā an asri biʿibādī fa-iḍ'rib lahum ṭarīqan fī l-baḥri yabasan lā takhāfu darakan walā takhshā

Kannada ನಾವು ಮೂಸಾರಿಗೆ ಹೀಗೆ ಸಂದೇಶ ನೀಡಿದೆವು. “ನೀವು ರಾತ್ರೋರಾತ್ರಿ ನನ್ನ ದಾಸ ರನ್ನು ಕರೆದು ಕೊಂಡು ಹೋಗಿರಿ. ಅವರಿಗೆ ಸಮುದ್ರದಲ್ಲಿ ಶುಷ್ಕ ದಾರಿಯನ್ನು ಮಾಡಿರಿ . ಯಾರಾದರೂ ಬೆನ್ನಟ್ಟಿ ಹಿಡಿಯುವರೆಂಬ ಭಯವಾಗಲಿ ಮುಳುಗಿ ಹೋದೀತೆಂಬ ಆತಂಕವಾಗಲಿ ನಿಮಗೆ ಬೇಡ”.

Verse 78

فَأَتْبَعَهُمْ فِرْعَوْنُ بِجُنُودِهِۦ فَغَشِيَهُم مِّنَ ٱلْيَمِّ مَا غَشِيَهُمْ

Transliteration fa-atbaʿahum fir'ʿawnu bijunūdihi faghashiyahum mina l-yami mā ghashiyahum

Kannada ಫಿರ್‍ಔನನು ತನ್ನ ಸೇನೆಯ ಸಹಿತ ಬೆನ್ನಟ್ಟಿ ಬಂದನು. ತರುವಾಯ ಸಮುದ್ರವು ಅವರನ್ನು ಆವರಿಸಬೇಕಾಗಿದ್ದ ರೀತಿಯಲ್ಲಿ ಸಂಪೂರ್ಣವಾಗಿ ಆವರಿಸಿತು.

Verse 79

وَأَضَلَّ فِرْعَوْنُ قَوْمَهُۥ وَمَا هَدَىٰ

Transliteration wa-aḍalla fir'ʿawnu qawmahu wamā hadā

Kannada ಫಿರ್‍ಔನ್ ತನ್ನ ಜನಾಂಗವನ್ನು ದಾರಿಗೆಡಿಸಿ ದನು. ಸರಿಯಾದ ದಾರಿಯನ್ನು ತೋರಿಸಲೂ ಇಲ್ಲ.

Verse 80

يَـٰبَنِىٓ إِسْرَٰٓءِيلَ قَدْ أَنجَيْنَـٰكُم مِّنْ عَدُوِّكُمْ وَوَٰعَدْنَـٰكُمْ جَانِبَ ٱلطُّورِ ٱلْأَيْمَنَ وَنَزَّلْنَا عَلَيْكُمُ ٱلْمَنَّ وَٱلسَّلْوَىٰ

Transliteration yābanī is'rāīla qad anjaynākum min ʿaduwwikum wawāʿadnākum jāniba l-ṭūri l-aymana wanazzalnā ʿalaykumu l-mana wal-salwā

Kannada ಓ ಇಸ್ರಾಈಲ ಮಕ್ಕಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದ್ದೇವೆ. ಥೂರ್‍ಸೀನಾ ಪರ್ವತದ ಬಲಗಡೆಯನ್ನು ನಿಮಗೆ ನಾವು ವಾಗ್ದಾನ ಮಾಡಿದ್ದೇವೆ. ನಿಮ್ಮ ಮೇಲೆ ಮನ್ನ ಮತ್ತು ಸಲ್ವವನ್ನು ಇಳಿಸಿದ್ದೇವೆ.

Verse 81

كُلُوا۟ مِن طَيِّبَـٰتِ مَا رَزَقْنَـٰكُمْ وَلَا تَطْغَوْا۟ فِيهِ فَيَحِلَّ عَلَيْكُمْ غَضَبِى ۖ وَمَن يَحْلِلْ عَلَيْهِ غَضَبِى فَقَدْ هَوَىٰ

Transliteration kulū min ṭayyibāti mā razaqnākum walā taṭghaw fīhi fayaḥilla ʿalaykum ghaḍabī waman yaḥlil ʿalayhi ghaḍabī faqad hawā

Kannada ನಾವು ನೀಡಿದ ಶುದ್ಧ ಆಹಾರವನ್ನು ಉಣ್ಣಿರಿ. ಅದರಲ್ಲಿ ಅತಿಕ್ರಮಿಸಬೇಡಿರಿ. ಅನ್ಯಥಾ ನಿಮ್ಮ ಮೇಲೆ ನನ್ನ ಕೋಪವೆರಗುವುದು. ಯಾರ ಮೇಲೆ ನನ್ನ ಕೋಪವೆರಗಿತೋ ಅವನು (ನರಕಕ್ಕೆ) ಪತನಗೊಂಡನು.

Verse 82

وَإِنِّى لَغَفَّارٌ لِّمَن تَابَ وَءَامَنَ وَعَمِلَ صَـٰلِحًا ثُمَّ ٱهْتَدَىٰ

Transliteration wa-innī laghaffārun liman tāba waāmana waʿamila ṣāliḥan thumma ih'tadā

Kannada ಆದರೆ ಪಶ್ಚಾತ್ತಾಪ ಪಟ್ಟು ವಿಶ್ವಾಸವಿರಿಸಿ, ಸತ್ಕರ್ಮ ಮಾಡಿ, ಆ ಬಳಿಕ ನೇರ ಮಾರ್ಗದಲ್ಲೇ ನಡೆಯು ತ್ತಿರುವವನನ್ನು ನಾನು ಅತಿಯಾಗಿ ಕ್ಷಮಿಸು ತ್ತೇನೆ.

Verse 83

۞ وَمَآ أَعْجَلَكَ عَن قَوْمِكَ يَـٰمُوسَىٰ

Transliteration wamā aʿjalaka ʿan qawmika yāmūsā

Kannada “ಓ ಮೂಸಾ ನೀವು ನಿಮ್ಮ ಜನಾಂಗವನ್ನು ಬಿಟ್ಟು ಇಷ್ಟು ಅವಸರದಲ್ಲಿ ಏಕೆ ಬಂದಿರಿ ?”

Verse 84

قَالَ هُمْ أُو۟لَآءِ عَلَىٰٓ أَثَرِى وَعَجِلْتُ إِلَيْكَ رَبِّ لِتَرْضَىٰ

Transliteration qāla hum ulāi ʿalā atharī waʿajil'tu ilayka rabbi litarḍā

Kannada ಅವರು ಇಂತೆಂದರು; “ಅವರು ನನ್ನ ಬೆನ್ನ ಹಿಂದೆಯೇ ಬರುತ್ತಿದ್ದಾರೆ. ಪ್ರಭೂ, ನಿನ್ನ ಒಲವನ್ನು ಬಯಸಿ ನಿನ್ನ ಹತ್ತಿರಕ್ಕೆ ಅವಸರದಲ್ಲಿ ಬಂದಿದ್ದೇವೆ”.

Verse 85

قَالَ فَإِنَّا قَدْ فَتَنَّا قَوْمَكَ مِنۢ بَعْدِكَ وَأَضَلَّهُمُ ٱلسَّامِرِىُّ

Transliteration qāla fa-innā qad fatannā qawmaka min baʿdika wa-aḍallahumu l-sāmiriyu

Kannada ಆಗ ಅಲ್ಲಾಹು ಹೇಳಿದನು, “ಹಾಗಿದ್ದರೆ ನೀವು ಬಂದ ನಂತರ ನಾವು ನಿಮ್ಮ ಜನಾಂಗವನ್ನು ಪರೀಕ್ಷೆಗೆ ಗುರಿಪಡಿಸಿದ್ದೇವೆ. ಸಾಮಿರೀ ಅವರನ್ನು ತಪ್ಪು ದಾರಿಗೆಳೆದಿದ್ದಾನೆ” .

Verse 86

فَرَجَعَ مُوسَىٰٓ إِلَىٰ قَوْمِهِۦ غَضْبَـٰنَ أَسِفًا ۚ قَالَ يَـٰقَوْمِ أَلَمْ يَعِدْكُمْ رَبُّكُمْ وَعْدًا حَسَنًا ۚ أَفَطَالَ عَلَيْكُمُ ٱلْعَهْدُ أَمْ أَرَدتُّمْ أَن يَحِلَّ عَلَيْكُمْ غَضَبٌ مِّن رَّبِّكُمْ فَأَخْلَفْتُم مَّوْعِدِى

Transliteration farajaʿa mūsā ilā qawmihi ghaḍbāna asifan qāla yāqawmi alam yaʿid'kum rabbukum waʿdan ḥasanan afaṭāla ʿalaykumu l-ʿahdu am aradttum an yaḥilla ʿalaykum ghaḍabun min rabbikum fa-akhlaftum mawʿidī

Kannada ಮೂಸಾ ಅತ್ಯಂತ ಕುಪಿತ ಹಾಗೂ ವ್ಯಾಕುಲ ಚಿತ್ತರಾಗಿ ತನ್ನ ಜನಾಂಗದ ಕಡೆಗೆ ಮರಳಿ ಹೋಗಿ ಹೀಗೆ ಕೇಳಿದರು; “ಓ ನನ್ನ ಜನಾಂಗವೇ, ನಿಮ್ಮ ಪ್ರಭು ನಿಮಗೆ ಉತ್ತಮ ವಾಗ್ದಾನ ಗಳನ್ನು ಮಾಡಿರಲಿಲ್ಲವೇ? ನಂತರ ನಿಮಗೆ ಹೆಚ್ಚು ಕಾಲ ತಗುಲಿತೇ? ಅಥವಾ ನೀವು ನಿಮ್ಮ ಪ್ರಭುವಿನ ಕ್ರೋಧವೇ ನಿಮ್ಮ ಮೇಲೆರ ಗುವುದನ್ನು ಉದ್ದೇಶವಿಟ್ಟಿರುವಿರಾ? ಹಾಗೆಂದು ನೀವು ನನಗೆ ಕೊಟ್ಟಿದ್ದ ವಚನವನ್ನು ಭಂಗ ಗೊಳಿಸಿದಿರಾ?”

Verse 87

قَالُوا۟ مَآ أَخْلَفْنَا مَوْعِدَكَ بِمَلْكِنَا وَلَـٰكِنَّا حُمِّلْنَآ أَوْزَارًا مِّن زِينَةِ ٱلْقَوْمِ فَقَذَفْنَـٰهَا فَكَذَٰلِكَ أَلْقَى ٱلسَّامِرِىُّ

Transliteration qālū mā akhlafnā mawʿidaka bimalkinā walākinnā ḥummil'nā awzāran min zīnati l-qawmi faqadhafnāhā fakadhālika alqā l-sāmiriyu

Kannada ಅವರು ಹೀಗೆಂದರು - “ನಾವು ನಿಮಗೆ ಕೊಟ್ಟಿದ್ದ ವಚನವನ್ನು ನಮ್ಮ ಸ್ವಂತ ಅಣತಿಯಿಂದ ಭಂಗ ಗೊಳಿಸಲಿಲ್ಲ. ನಾವು ಜನರ ಆಭರಣಗಳ ಹೊರೆಯಿಂದ ಹೇರಲ್ಪಟ್ಟಿದ್ದೆವು. ಹಾಗೆ ನಾವು ಅವು ಗಳನ್ನು ಬೆಂಕಿಗೆ ಎಸೆದೆವು. ಅದೇ ರೀತಿಯಲ್ಲಿ ಸಾಮಿರಿಯೂ ತನ್ನ ಬಳಿಯಿರುವುದನ್ನು ಬೆಂಕಿಗೆ ಹಾಕಿದನು.

Verse 88

فَأَخْرَجَ لَهُمْ عِجْلًا جَسَدًا لَّهُۥ خُوَارٌ فَقَالُوا۟ هَـٰذَآ إِلَـٰهُكُمْ وَإِلَـٰهُ مُوسَىٰ فَنَسِىَ

Transliteration fa-akhraja lahum ʿij'lan jasadan lahu khuwārun faqālū hādhā ilāhukum wa-ilāhu mūsā fanasiya

Kannada ಆಮೇಲೆ ಅವನು ಅವರಿಗಾಗಿ ಒಂದು ಕರುವಿನ ರೂಪವನ್ನು ಮಾಡಿ ಹೊರತಂದನು. ಅದರಿಂದ ಎತ್ತಿನಂತಹ ಧ್ವನಿ ಹೊರಡುತ್ತಿತ್ತು. ಆಗ ಜನರು, “ಇದುವೇ ನಿಮ್ಮ ದೇವರು ಮತ್ತು ಮೂಸಾರ ದೇವರು. ಮೂಸಾ ಇದನ್ನು ಮರೆತುಬಿಟ್ಟಿದ್ದಾರೆ” ಎಂದು ಕೊಂಡರು.

Verse 89

أَفَلَا يَرَوْنَ أَلَّا يَرْجِعُ إِلَيْهِمْ قَوْلًا وَلَا يَمْلِكُ لَهُمْ ضَرًّا وَلَا نَفْعًا

Transliteration afalā yarawna allā yarjiʿu ilayhim qawlan walā yamliku lahum ḍarran walā nafʿan

Kannada ಆದರೆ ಆ ಕರುವು ಮಾತಿಗೆ ಉತ್ತರಿಸುವುದಿಲ್ಲ ಎಂದಾಗಲಿ ಅವರಿಗೆ ಗುಣ-ದೋಷಗಳನ್ನು ಕೊಡುವ ಯಾವ ಅಧಿಕಾರವನ್ನೂ ಪಡೆದಿಲ್ಲ ಎಂದಾಗಲಿ ಅವರು ಯೋಚಿಸದಾದರು .

Verse 90

وَلَقَدْ قَالَ لَهُمْ هَـٰرُونُ مِن قَبْلُ يَـٰقَوْمِ إِنَّمَا فُتِنتُم بِهِۦ ۖ وَإِنَّ رَبَّكُمُ ٱلرَّحْمَـٰنُ فَٱتَّبِعُونِى وَأَطِيعُوٓا۟ أَمْرِى

Transliteration walaqad qāla lahum hārūnu min qablu yāqawmi innamā futintum bihi wa-inna rabbakumu l-raḥmānu fa-ittabiʿūnī wa-aṭīʿū amrī

Kannada ಹಾರೂನರು (ಮೂಸಾ)ರು ಬರುವುದಕ್ಕಿಂತ) ಮೊದಲೇ ಅವರೊಡನೆ ಸಾರಿ ಹೇಳಿದ್ದರು; “ಓ ಜನರೇ, ನೀವು ಇದರ ಕಾರಣದಿಂದ ಕ್ಷೋಭೆಗೆ ಗುರಿಯಾಗಿದ್ದೀರಿ. ಪರಮ ದಯಾಳು ವಾದ ಅಲ್ಲಾಹನೇ ನಿಮ್ಮ ಪ್ರಭು, ಆದುದರಿಂದ ನೀವು ನನ್ನನ್ನು ಅನುಸರಿಸಿರಿ. ನನ್ನ ಆಜ್ಞೆಯನ್ನು ಪಾಲಿಸಿರಿ.”

Verse 91

قَالُوا۟ لَن نَّبْرَحَ عَلَيْهِ عَـٰكِفِينَ حَتَّىٰ يَرْجِعَ إِلَيْنَا مُوسَىٰ

Transliteration qālū lan nabraḥa ʿalayhi ʿākifīna ḥattā yarjiʿa ilaynā mūsā

Kannada ಆದರೆ ಜನರು - “ಮೂಸಾ ನಮ್ಮ ಬಳಿಗೆ ಮರಳಿ ಬರುವವರೆಗೂ ನಾವು ಇದರ ಪೂಜೆಯನ್ನೇ ಮಾಡುತ್ತೇವೆ” ಎಂದು ಹೇಳಿದರು.

Verse 92

قَالَ يَـٰهَـٰرُونُ مَا مَنَعَكَ إِذْ رَأَيْتَهُمْ ضَلُّوٓا۟

Transliteration qāla yāhārūnu mā manaʿaka idh ra-aytahum ḍallū

Kannada (ಆಗ ಧಾವಿಸಿ ಬಂದ) ಮೂಸಾ ಕೇಳಿದರು; “ಓ ಹಾರೂನ್, ಇವರು ದಾರಿ ತಪ್ಪುತ್ತಿರುವುದನ್ನು ನೀವು ಕಂಡಾಗ ನಿಮ್ಮನ್ನು ತಡೆದವರಾರು?

Verse 93

أَلَّا تَتَّبِعَنِ ۖ أَفَعَصَيْتَ أَمْرِى

Transliteration allā tattabiʿani afaʿaṣayta amrī

Kannada ಅವರು ನನ್ನ ಮಾರ್ಗದರ್ಶನವನ್ನು ಅನುಸರಿಸದಂತೆ ನೀವು ಮನಸ್ಸಾರೆ ನನ್ನ ಅಪ್ಪಣೆ ವಿರುದ್ಧ ನಡೆದಿರಾ?”

Verse 94

قَالَ يَبْنَؤُمَّ لَا تَأْخُذْ بِلِحْيَتِى وَلَا بِرَأْسِىٓ ۖ إِنِّى خَشِيتُ أَن تَقُولَ فَرَّقْتَ بَيْنَ بَنِىٓ إِسْرَٰٓءِيلَ وَلَمْ تَرْقُبْ قَوْلِى

Transliteration qāla yabna-umma lā takhudh biliḥ'yatī walā birasī innī khashītu an taqūla farraqta bayna banī is'rāīla walam tarqub qawlī

Kannada ಹಾರೂನರು,-‘ಓ ನನ್ನ ಮಾತೆಯ ಪುತ್ರನೇ! ನನ್ನ ಗಡ್ಡವನ್ನು ಹಿಡಿಯಬೇಡ. ನನ್ನ ತಲೆ ಕೂದ ಲನ್ನೂ ಎಳೆಯಬೇಡ. ‘ಇಸ್ರಾಈಲ್ ಜನಾಂಗದ ನಡುವೆ ನೀನು ಒಡಕುಂಟು ಮಾಡಿದೆ, ನನ್ನ ಮಾತ ನ್ನು ಕೇಳಲಿಲ್ಲ’ ಎಂದು ನೀನು ನನ್ನ ಬಗ್ಗೆ ಹೇಳುವಿ’ ಎಂದು ನಾನು ಭಯಪಟ್ಟೆ’ ಎಂದು ಉತ್ತರಿಸಿದರು.

Verse 95

قَالَ فَمَا خَطْبُكَ يَـٰسَـٰمِرِىُّ

Transliteration qāla famā khaṭbuka yāsāmiriyyu

Kannada ಆಗ ಮೂಸಾ, “ಓ ಸಾಮಿರೀ, ನಿನ್ನ ಸಂಗತಿ ಯೇನು? ಎಂದು ಕೇಳಿದರು.

Verse 96

قَالَ بَصُرْتُ بِمَا لَمْ يَبْصُرُوا۟ بِهِۦ فَقَبَضْتُ قَبْضَةً مِّنْ أَثَرِ ٱلرَّسُولِ فَنَبَذْتُهَا وَكَذَٰلِكَ سَوَّلَتْ لِى نَفْسِى

Transliteration qāla baṣur'tu bimā lam yabṣurū bihi faqabaḍtu qabḍatan min athari l-rasūli fanabadhtuhā wakadhālika sawwalat lī nafsī

Kannada ಅವನು, “ಇವರಿಗೆ ಕಾಣಿಸದಿದ್ದ ಕೆಲವು ವಿಚಾರ ವನ್ನು ನಾನು ಕಂಡೆನು. ಆದುದರಿಂದ ದೂತರ ಪಾದದಡಿಯಿಂದ ನಾನು ಮಣ್ಣಿನ ಹಿಡಿಯನ್ನು ತೆಗೆದು ಅದಕ್ಕೆ ಹಾಕಿದೆ. ನನ್ನ ಮನಸ್ಸು ನನಗೆ ಹೀಗೆಯೇ ಚಂದವಾಗಿ ಕಾಣಿಸಿತು” ಎಂದನು .

Verse 97

قَالَ فَٱذْهَبْ فَإِنَّ لَكَ فِى ٱلْحَيَوٰةِ أَن تَقُولَ لَا مِسَاسَ ۖ وَإِنَّ لَكَ مَوْعِدًا لَّن تُخْلَفَهُۥ ۖ وَٱنظُرْ إِلَىٰٓ إِلَـٰهِكَ ٱلَّذِى ظَلْتَ عَلَيْهِ عَاكِفًا ۖ لَّنُحَرِّقَنَّهُۥ ثُمَّ لَنَنسِفَنَّهُۥ فِى ٱلْيَمِّ نَسْفًا

Transliteration qāla fa-idh'hab fa-inna laka fī l-ḥayati an taqūla lā misāsa wa-inna laka mawʿidan lan tukh'lafahu wa-unẓur ilā ilāhika alladhī ẓalta ʿalayhi ʿākifan lanuḥarriqannahu thumma lanansifannahu fī l-yami nasfan

Kannada ಮೂಸಾ ಹೀಗೆ ಹೇಳಿದರು, “ಹಾಗಾದರೆ ಇಲ್ಲಿಂದ ಹೊರಟು ಹೋಗು. ನಿನ್ನ ಜೀವಮಾನವಿಡೀ “ನನ್ನನ್ನು ಮುಟ್ಟಬೇಡಿರಿ” ಎಂದು ಹೇಳುತ್ತಿರು. ನಿನಗೆ ನಿಗದಿ ಮಾಡಲಾದ ದಿನವೊಂದಿದೆ. ಅದು ನಿನಗೆ ಉಲ್ಲಂಘಿಸಲ್ಪಡಲಾರದು. ನೀನು ಪೂಜಿಸಿದ ಈ ಆರಾಧ್ಯ ವಸ್ತುವನ್ನು ನೋಡು, ನಾವಿನ್ನು ಇದನ್ನು ಸುಟ್ಟು ಹಾಕಿ, ಆಮೇಲೆ ಅದನ್ನು ಹುಡಿ ಮಾಡಿ ಸಮುದ್ರದಲ್ಲಿ ಹರಡಿ ಬಿಡುವೆವು.

Verse 98

إِنَّمَآ إِلَـٰهُكُمُ ٱللَّهُ ٱلَّذِى لَآ إِلَـٰهَ إِلَّا هُوَ ۚ وَسِعَ كُلَّ شَىْءٍ عِلْمًا

Transliteration innamā ilāhukumu l-lahu alladhī lā ilāha illā huwa wasiʿa kulla shayin ʿil'man

Kannada ಜನರೇ, ನಿಮ್ಮ ದೇವನು ಏಕಮಾತ್ರ ಅಲ್ಲಾಹನಾಗಿದ್ದು ಅವನ ಹೊರತು ಅನ್ಯ ದೇವನಿಲ್ಲ. ಅವನ ಜ್ಞಾನವು ಸಕಲ ವಸ್ತುಗಳನ್ನು ವ್ಯಾಪಿಸಿ ಕೊಂಡಿದೆ”.

Verse 99

كَذَٰلِكَ نَقُصُّ عَلَيْكَ مِنْ أَنۢبَآءِ مَا قَدْ سَبَقَ ۚ وَقَدْ ءَاتَيْنَـٰكَ مِن لَّدُنَّا ذِكْرًا

Transliteration kadhālika naquṣṣu ʿalayka min anbāi mā qad sabaqa waqad ātaynāka min ladunnā dhik'ran

Kannada ಓ ಪೈಗಂಬರರೇ, ಈ ರೀತಿ ನಾವು ನಿಮಗೆ ಕೆಲವು ಗತ ವೃತ್ತಾಂತವನ್ನು ತಿಳಿಸುತ್ತೇವೆ. ನಮ್ಮ ಕಡೆಯಿಂದ ನೀತಿ ಭೋಧೆಯನ್ನು (ಖುರ್‍ಆನ್) ನಿಮಗೆ ನಾವು ಕೊಟ್ಟಿದ್ದೇವೆ.

Verse 100

مَّنْ أَعْرَضَ عَنْهُ فَإِنَّهُۥ يَحْمِلُ يَوْمَ ٱلْقِيَـٰمَةِ وِزْرًا

Transliteration man aʿraḍa ʿanhu fa-innahu yaḥmilu yawma l-qiyāmati wiz'ran

Kannada ಯಾರು ಇದರಿಂದ ವಿಮುಖನಾಗುತ್ತಾನೋ, ಅವನು ಪುನರುತ್ಥಾನದ ದಿನ ಕಠಿಣವಾದ ಪಾಪಗಳ ಹೊರೆ ಖಂಡಿತ ಹೊರುವನು.

Verse 101

خَـٰلِدِينَ فِيهِ ۖ وَسَآءَ لَهُمْ يَوْمَ ٱلْقِيَـٰمَةِ حِمْلًا

Transliteration khālidīna fīhi wasāa lahum yawma l-qiyāmati ḥim'lan

Kannada ಅದರಲ್ಲಿ ಅವರು ಸದಾ ಕಾಲ ಇರುವರು. ಅಂತ್ಯ ದಿನ, ಅವರು ಹೊರಬೇಕಾದ ಹೊರೆಯು ಅವರಿಗೆ ಅತ್ಯಂತ ಅಸಹನೀಯವೆನಿಸುವುದು.

Verse 102

يَوْمَ يُنفَخُ فِى ٱلصُّورِ ۚ وَنَحْشُرُ ٱلْمُجْرِمِينَ يَوْمَئِذٍ زُرْقًا

Transliteration yawma yunfakhu fī l-ṣūri wanaḥshuru l-muj'rimīna yawma-idhin zur'qan

Kannada ಅಂದರೆ ಸೂರ್ ಕಹಳೆ ಊದಲಾಗುವ ದಿನ’ ನಾವು ಅಪರಾಧಿಗಳನ್ನು ನೀಲನೇತ್ರದವರನ್ನಾಗಿ ಒಟ್ಟುಗೂಡಿಸಲಿದ್ದೇವೆ.

Verse 103

يَتَخَـٰفَتُونَ بَيْنَهُمْ إِن لَّبِثْتُمْ إِلَّا عَشْرًا

Transliteration yatakhāfatūna baynahum in labith'tum illā ʿashran

Kannada ಅವರು ಪರಸ್ಪರ ಪಿಸು ಮಾತಿನಲ್ಲಿ, “ನೀವು ಭೂಲೋಕದಲ್ಲಿ ಬಹುಶಃ ಕೇವಲ ಹತ್ತು ದಿನಗಳನ್ನು ಮಾತ್ರ ಕಳೆದಿರುವಿರಿ’’ ಎನ್ನುವರು.

Verse 104

نَّحْنُ أَعْلَمُ بِمَا يَقُولُونَ إِذْ يَقُولُ أَمْثَلُهُمْ طَرِيقَةً إِن لَّبِثْتُمْ إِلَّا يَوْمًا

Transliteration naḥnu aʿlamu bimā yaqūlūna idh yaqūlu amthaluhum ṭarīqatan in labith'tum illā yawman

Kannada ಆಗ ಅವರಲ್ಲಿ ಅತ್ಯಧಿಕ ಅಂದಾಜು ಮಾಡು ವಾತನು “ನಿಮ್ಮ ಭೂಲೋಕದ ಜೀವನಾವಧಿಯು ಒಂದು ದಿನ ಮಾತ್ರವಿತ್ತು” ಎಂದು ಹೇಳುವುದನ್ನು ನಾವು ಚೆನ್ನಾಗಿ ಬಲ್ಲೆವು.

Verse 105

وَيَسْـَٔلُونَكَ عَنِ ٱلْجِبَالِ فَقُلْ يَنسِفُهَا رَبِّى نَسْفًا

Transliteration wayasalūnaka ʿani l-jibāli faqul yansifuhā rabbī nasfan

Kannada ಪರ್ವತಗಳ ಬಗ್ಗೆ ಇವರು ನಿಮ್ಮಲ್ಲಿ ಕೇಳುತ್ತಾರೆ. ಆಗ ಹೇಳಿರಿ, ನನ್ನ ಪ್ರಭು ಅವುಗಳನ್ನು ಧೂಳನ್ನಾಗಿ ಮಾಡಿ ಗಾಳಿಯಲ್ಲಿ ಹಾರಿಸಿ ಬಿಡುವನು.

Verse 106

فَيَذَرُهَا قَاعًا صَفْصَفًا

Transliteration fayadharuhā qāʿan ṣafṣafan

Kannada ಆಮೇಲೆ ಅವುಗಳನ್ನು ಸಮತಟ್ಟಾದ ಬಟ್ಟ ಬಯಲನ್ನಾಗಿ ಮಾಡುವನು.

Verse 107

لَّا تَرَىٰ فِيهَا عِوَجًا وَلَآ أَمْتًا

Transliteration lā tarā fīhā ʿiwajan walā amtan

Kannada ಯಾವುದೇ ಏರು-ತಗ್ಗುಗಳನ್ನು ಅಲ್ಲಿ ನೀನು ಕಾಣಲಾರೆ.

Verse 108

يَوْمَئِذٍ يَتَّبِعُونَ ٱلدَّاعِىَ لَا عِوَجَ لَهُۥ ۖ وَخَشَعَتِ ٱلْأَصْوَاتُ لِلرَّحْمَـٰنِ فَلَا تَسْمَعُ إِلَّا هَمْسًا

Transliteration yawma-idhin yattabiʿūna l-dāʿiya lā ʿiwaja lahu wakhashaʿati l-aṣwātu lilrraḥmāni falā tasmaʿu illā hamsan

Kannada ಅಂದು ಜನರು ಕೂಗಿ ಕರೆಯುವವನ ಹಿಂದೆ ಯಾವುದೇ ವಕ್ರತೆಯಿಲ್ಲದೆ ನೇರವಾಗಿ ಸಾಗಿ ಬರುವರು. ಸದ್ದು-ಗದ್ದಲಗಳು ಕರುಣಾನಿಧಿಯಾದ ಅಲ್ಲಾಹನ ಮುಂದೆ ಅಡಗಿ ಹೋಗಿವೆ. ಕಾಲ ಸಪ್ಪಳದ ಹೊರತು ಇನ್ನೇನನ್ನೂ ನೀವು ಕೇಳಲಾರಿರಿ.

Verse 109

يَوْمَئِذٍ لَّا تَنفَعُ ٱلشَّفَـٰعَةُ إِلَّا مَنْ أَذِنَ لَهُ ٱلرَّحْمَـٰنُ وَرَضِىَ لَهُۥ قَوْلًا

Transliteration yawma-idhin lā tanfaʿu l-shafāʿatu illā man adhina lahu l-raḥmānu waraḍiya lahu qawlan

Kannada ಅಂದು ಕರುಣಾನಿಧಿಯಾದ ಅಲ್ಲಾಹನು ಯಾರಿಗೆ ಅನುಮತಿ ನೀಡುವನೋ ಮತ್ತು ಯಾರ ಮಾತನ್ನು ಕೇಳಲು ತೃಪ್ತಿಪಡುವನೋ ಅವರ ಹೊರತು ಯಾರ ಶಿಫಾರಸ್ಸೂ ಫಲಕಾರಿಯಾಗದು.

Verse 110

يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يُحِيطُونَ بِهِۦ عِلْمًا

Transliteration yaʿlamu mā bayna aydīhim wamā khalfahum walā yuḥīṭūna bihi ʿil'man

Kannada ಅವನು ಜನರ ಮುಂದಿನ ಮತ್ತು ಹಿಂದಿನ ಎಲ್ಲ ಸ್ಥಿತಿಯನ್ನೂ ಅರಿಯುತ್ತಾನೆ. ಆದರೆ ಇತ ರರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ .

Verse 111

۞ وَعَنَتِ ٱلْوُجُوهُ لِلْحَىِّ ٱلْقَيُّومِ ۖ وَقَدْ خَابَ مَنْ حَمَلَ ظُلْمًا

Transliteration waʿanati l-wujūhu lil'ḥayyi l-qayūmi waqad khāba man ḥamala ẓul'man

Kannada ಚಿರಂತನನೂ ಸರ್ವ ನಿಯಾಮಕನೂ ಆದ ಅಲ್ಲಾಹನ ಮುಂದೆ ಮುಖಗಳು ಬಾಗಿವೆ. ಆಗ ಅಕ್ರಮದ ಪಾಪ ಭಾರ ಹೊತ್ತಿರುವವನು ನಿರಾಶನಾಗುವನು .

Verse 112

وَمَن يَعْمَلْ مِنَ ٱلصَّـٰلِحَـٰتِ وَهُوَ مُؤْمِنٌ فَلَا يَخَافُ ظُلْمًا وَلَا هَضْمًا

Transliteration waman yaʿmal mina l-ṣāliḥāti wahuwa mu'minun falā yakhāfu ẓul'man walā haḍman

Kannada ಯಾರು, ಸತ್ಯ ವಿಶ್ವಾಸಿಯಾಗಿದ್ದುಕೊಂಡು, ಸತ್ಕರ್ಮಗಳನ್ನು ಮಾಡುತ್ತಾನೋ ಆತನಿಗೆ ಯಾವುದೇ ಅನ್ಯಾಯ ಮತ್ತು ಹಕ್ಕುಚ್ಯುತಿಯ ಭಯವಿಲ್ಲ.

Verse 113

وَكَذَٰلِكَ أَنزَلْنَـٰهُ قُرْءَانًا عَرَبِيًّا وَصَرَّفْنَا فِيهِ مِنَ ٱلْوَعِيدِ لَعَلَّهُمْ يَتَّقُونَ أَوْ يُحْدِثُ لَهُمْ ذِكْرًا

Transliteration wakadhālika anzalnāhu qur'ānan ʿarabiyyan waṣarrafnā fīhi mina l-waʿīdi laʿallahum yattaqūna aw yuḥ'dithu lahum dhik'ran

Kannada (ಓ ಪೈಗಂಬರರೇ,) ಈ ರೀತಿ ನಾವು ಇದನ್ನು ಅರಬೀ ಭಾಷೆಯ ಖುರ್‍ಆನ್ ಆಗಿ ಅವತೀರ್ಣಗೊಳಿಸಿದ್ದೇವೆ. ಇದರಲ್ಲಿ ವಿವಿಧ ರೂಪದಲ್ಲಿ ಎಚ್ಚರಿಕೆಯನ್ನು ಆವರ್ತಿಸಿದ್ದೇವೆ. ಇವರು ದುರ್ಮಾರ್ಗದಿಂದ ದೂರವಿರಲಿಕ್ಕಾಗಿ ಅಥವಾ ಅದರ ಮೂಲಕ ಇವರಲ್ಲಿ ಪ್ರಜ್ಞೆ ಮೂಡಲಿಕ್ಕಾಗಿ.

Verse 114

فَتَعَـٰلَى ٱللَّهُ ٱلْمَلِكُ ٱلْحَقُّ ۗ وَلَا تَعْجَلْ بِٱلْقُرْءَانِ مِن قَبْلِ أَن يُقْضَىٰٓ إِلَيْكَ وَحْيُهُۥ ۖ وَقُل رَّبِّ زِدْنِى عِلْمًا

Transliteration fataʿālā l-lahu l-maliku l-ḥaqu walā taʿjal bil-qur'āni min qabli an yuq'ḍā ilayka waḥyuhu waqul rabbi zid'nī ʿil'man

Kannada ಅಲ್ಲಾಹನು ಮಹೋನ್ನತನು, ಯಥಾರ್ಥ ಸಾಮ್ರಾಟನು. ನಿಮ್ಮ ಮೇಲೆ ಖುರ್‍ಆನಿನ ಬೋಧ ನೆಯು ಸಂಪೂರ್ಣವಾಗಿ ಅವತೀರ್ಣಗೊಳ್ಳುವು ದಕ್ಕೆ ಮುಂಚೆ ಅದನ್ನು ಪಠಿಸುವುದ ರಲ್ಲಿ ದುಡು ಕಬೇಡಿರಿ. “ಓ ನನ್ನ ಪ್ರಭೂ ನನಗೆ ಇನ್ನಷ್ಟು ಜ್ಞಾನ ದಯಪಾಲಿಸು” ಎಂದು ಪ್ರಾರ್ಥಿಸಿರಿ.

Verse 115

وَلَقَدْ عَهِدْنَآ إِلَىٰٓ ءَادَمَ مِن قَبْلُ فَنَسِىَ وَلَمْ نَجِدْ لَهُۥ عَزْمًا

Transliteration walaqad ʿahid'nā ilā ādama min qablu fanasiya walam najid lahu ʿazman

Kannada ನಾವು ಇದಕ್ಕೆ ಮುಂಚೆ ಆದಮರಿಗೆ ಅಪ್ಪಣೆ ಕೊಟ್ಟಿದ್ದೆವು. ಆದರೆ ಅವರು ಮರೆತರು. ನಾವು ಅವರಲ್ಲಿ ಸ್ಥಿರಚಿತ್ತವನ್ನು ಕಾಣಲಿಲ್ಲ.

Verse 116

وَإِذْ قُلْنَا لِلْمَلَـٰٓئِكَةِ ٱسْجُدُوا۟ لِـَٔادَمَ فَسَجَدُوٓا۟ إِلَّآ إِبْلِيسَ أَبَىٰ

Transliteration wa-idh qul'nā lil'malāikati us'judū liādama fasajadū illā ib'līsa abā

Kannada ದೇವಚರರೊಡನೆ ಆದಮರಿಗೆ ಸಾಷ್ಟಾಂಗವೆರಗಿರೆಂದು ನಾವು ಆಜ್ಞಾಪಿಸಿದ ಸಂದರ್ಭವನ್ನು ಸ್ಮರಿಸಿರಿ. ಆಗ ಅವರೆಲ್ಲರೂ ಸಾಷ್ಟಾಂಗವೆರಗಿದರು. ಆದರೆ ಇಬ್‍ಲೀಸನು ಮಾತ್ರ ನಿರಾ ಕರಿಸಿದನು.

Verse 117

فَقُلْنَا يَـٰٓـَٔادَمُ إِنَّ هَـٰذَا عَدُوٌّ لَّكَ وَلِزَوْجِكَ فَلَا يُخْرِجَنَّكُمَا مِنَ ٱلْجَنَّةِ فَتَشْقَىٰٓ

Transliteration faqul'nā yāādamu inna hādhā ʿaduwwun laka walizawjika falā yukh'rijannakumā mina l-janati fatashqā

Kannada ಆಗ ನಾವು ಆದಮರಿಗೆ, “ಇವನು ನಿಮ್ಮ ಮತ್ತು ನಿಮ್ಮ ಪತ್ನಿಯ ಶತ್ರು. ಆದ್ದರಿಂದ ಇವನು ನಿಮ್ಮಿಬ್ಬರನ್ನೂ ಸ್ವರ್ಗದಿಂದ ಹೊರಹಾಕಿಸದಿರಲಿ. ಹಾಗಾದರೆ ನೀವು ಕಷ್ಟಕ್ಕೀಡಾಗುವಿರಿ.

Verse 118

إِنَّ لَكَ أَلَّا تَجُوعَ فِيهَا وَلَا تَعْرَىٰ

Transliteration inna laka allā tajūʿa fīhā walā taʿrā

Kannada ನೀವಿಲ್ಲಿ ಹಸಿದಿರಬೇಕಾಗಿಲ್ಲ. ವಿವಸ್ತ್ರರಾಗ ಬೇಕಾಗಿಲ್ಲ.

Verse 119

وَأَنَّكَ لَا تَظْمَؤُا۟ فِيهَا وَلَا تَضْحَىٰ

Transliteration wa-annaka lā taẓma-u fīhā walā taḍḥā

Kannada ಬಾಯಾರಬೇಕಾಗಿಲ್ಲ. ಬಿಸಿಲು ತಟ್ಟಬೇಕಿಲ್ಲ” ಎಂದೆವು.

Verse 120

فَوَسْوَسَ إِلَيْهِ ٱلشَّيْطَـٰنُ قَالَ يَـٰٓـَٔادَمُ هَلْ أَدُلُّكَ عَلَىٰ شَجَرَةِ ٱلْخُلْدِ وَمُلْكٍ لَّا يَبْلَىٰ

Transliteration fawaswasa ilayhi l-shayṭānu qāla yāādamu hal adulluka ʿalā shajarati l-khul'di wamul'kin lā yablā

Kannada ಆದರೆ ಶೈತಾನನು ಅವರನ್ನು ಪುಸಲಾಯಿಸಿ ದನು. “ಓ ಆದಮ್, ನಾನು ನಿಮಗೆ ಅಮರಜೀವನವೂ ಅನಂತ ಸಾಮ್ರಾಜ್ಯವೂ ಸಿಗುವಂತಹ ವೃಕ್ಷವನ್ನು ತೋರಿಸಲೇ?” ಎಂದು ಕೇಳಿದನು.

Verse 121

فَأَكَلَا مِنْهَا فَبَدَتْ لَهُمَا سَوْءَٰتُهُمَا وَطَفِقَا يَخْصِفَانِ عَلَيْهِمَا مِن وَرَقِ ٱلْجَنَّةِ ۚ وَعَصَىٰٓ ءَادَمُ رَبَّهُۥ فَغَوَىٰ

Transliteration fa-akalā min'hā fabadat lahumā sawātuhumā waṭafiqā yakhṣifāni ʿalayhimā min waraqi l-janati waʿaṣā ādamu rabbahu faghawā

Kannada ಕೊನೆಗೆ ಇಬ್ಬರೂ (ಆದಮ್ ಮತ್ತು ಹವ್ವಾ) ಆ ಮರದ ಫಲವನ್ನು ತಿಂದರು. ಆಗ ಅವರ ಗುಪ್ತಾಂಗಗಳು ಪರಸ್ಪರ ಗೋಚರವಾದುವು. ಕೂಡಲೇ ಇಬ್ಬರೂ ಸ್ವರ್ಗದ ಎಲೆಗಳಿಂದ ಮೈ ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ಆದಮರು ತಮ್ಮ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿದರು ಮತ್ತು ನಿರಾಶೆಗೊಳಗಾದರು .

Verse 122

ثُمَّ ٱجْتَبَـٰهُ رَبُّهُۥ فَتَابَ عَلَيْهِ وَهَدَىٰ

Transliteration thumma ij'tabāhu rabbuhu fatāba ʿalayhi wahadā

Kannada ಅನಂತರ ಅವರ ಪ್ರಭು ಅವರನ್ನು ಪುನೀತರಾಗಿ ಆಯ್ಕೆ ಮಾಡಿದನು. ಅವರ ಪಶ್ಚಾತ್ತಾಪ ಸ್ವೀಕರಿಸಿದನು. ಅವರಿಗೆ ಸನ್ಮಾರ್ಗದರ್ಶನ ಮಾಡಿದನು.

Verse 123

قَالَ ٱهْبِطَا مِنْهَا جَمِيعًۢا ۖ بَعْضُكُمْ لِبَعْضٍ عَدُوٌّ ۖ فَإِمَّا يَأْتِيَنَّكُم مِّنِّى هُدًى فَمَنِ ٱتَّبَعَ هُدَاىَ فَلَا يَضِلُّ وَلَا يَشْقَىٰ

Transliteration qāla ih'biṭā min'hā jamīʿan baʿḍukum libaʿḍin ʿaduwwun fa-immā yatiyannakum minnī hudan famani ittabaʿa hudāya falā yaḍillu walā yashqā

Kannada ಅಲ್ಲಾಹು ಹೇಳಿದನು, “ನೀವಿಬ್ಬರೂ (ನಿಮ್ಮ ಪರಿವಾರ ಸಮೇತ) ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಕೆಲವರಿಗೆ ಶತ್ರುಗ ಳಾಗಿರುವಿರಿ. ಮುಂದೆ ನನ್ನ ವತಿಯಿಂದ ಮಾರ್ಗದರ್ಶನ ತಲುಪಿದರೆ, ನನ್ನ ಆ ಮಾರ್ಗ ದರ್ಶನವನ್ನು ಅನುಸರಿಸಿದವನು ದಾರಿಗೆಡಲಾ ರನು. ಪರಲೋಕದಲ್ಲಿ ಸಂಕಷ್ಟಕ್ಕೆ ಒಳಗಾಗ ಲಾರನು” .

Verse 124

وَمَنْ أَعْرَضَ عَن ذِكْرِى فَإِنَّ لَهُۥ مَعِيشَةً ضَنكًا وَنَحْشُرُهُۥ يَوْمَ ٱلْقِيَـٰمَةِ أَعْمَىٰ

Transliteration waman aʿraḍa ʿan dhik'rī fa-inna lahu maʿīshatan ḍankan wanaḥshuruhu yawma l-qiyāmati aʿmā

Kannada ಯಾರು ನನ್ನ ಉದ್ಬೋಧ (ಖುರ್‍ಆನ್)ದಿಂದ ವಿಮುಖನಾಗುತ್ತಾನೋ ಅವನ ಜೀವನವು ಭೂಲೋಕದಲ್ಲಿ ಸಂಕೀರ್ಣವಾಗುವುದು . ಪುನರುತ್ಥಾನದ ದಿನ ನಾವು ಅವನನ್ನು ಕುರು ಡನನ್ನಾಗಿ ಮಾಡಿ ಎಬ್ಬಿಸುತ್ತೇವೆ”.

Verse 125

قَالَ رَبِّ لِمَ حَشَرْتَنِىٓ أَعْمَىٰ وَقَدْ كُنتُ بَصِيرًا

Transliteration qāla rabbi lima ḥashartanī aʿmā waqad kuntu baṣīran

Kannada ಅವನು, “ಓ ನನ್ನ ಪ್ರಭೂ, ಹಿಂದೆ ನಾನು ದೃಷ್ಟಿ ಯುಳ್ಳವನಾಗಿದ್ದೆ. ನನ್ನನ್ನು ಇಲ್ಲೇಕೆ ಕುರು ಡನಾಗಿ ಎಬ್ಬಿಸಿದೆ?” ಎಂದು ಕೇಳುವನು.

Verse 126

قَالَ كَذَٰلِكَ أَتَتْكَ ءَايَـٰتُنَا فَنَسِيتَهَا ۖ وَكَذَٰلِكَ ٱلْيَوْمَ تُنسَىٰ

Transliteration qāla kadhālika atatka āyātunā fanasītahā wakadhālika l-yawma tunsā

Kannada ಆಗ ಅಲ್ಲಾಹು ಹೀಗೆ ಹೇಳುವನು. ``ಸಂಗತಿ ಹಾಗಿದೆ. ಆದರೆ ನಮ್ಮ ನಿದರ್ಶನಗಳು ನಿನ್ನ ಬಳಿಗೆ ಬಂದಾಗ ನೀನು ಮರೆತಿದ್ದೆ. ಹಾಗೆಯೇ (ನೀನು ಮರೆತಂತೆ) ಇಂದು ನೀನು ಮರೆಯಲ್ಪಡುತ್ತಿರುವೆ”.

Verse 127

وَكَذَٰلِكَ نَجْزِى مَنْ أَسْرَفَ وَلَمْ يُؤْمِنۢ بِـَٔايَـٰتِ رَبِّهِۦ ۚ وَلَعَذَابُ ٱلْـَٔاخِرَةِ أَشَدُّ وَأَبْقَىٰٓ

Transliteration wakadhālika najzī man asrafa walam yu'min biāyāti rabbihi walaʿadhābu l-ākhirati ashaddu wa-abqā

Kannada ಹೀಗೆ ಧಿಕ್ಕಾರದಲ್ಲಿ ಮಿತಿ ಮೀರುವ ಹಾಗೂ ತನ್ನ ಪ್ರಭುವಿನ ನಿದರ್ಶನಗಳ ಮೇಲೆ ವಿಶ್ವಾಸ ವಿರಿಸದವನಿಗೆ (ಭೂಲೋಕದಲ್ಲಿ) ನಾವು ಪ್ರತಿ ಫಲ ಕೊಡುತ್ತೇವೆ. ಪರಲೋಕದ ಶಿಕ್ಷೆಯು ಅತಿ ಕಠೋರವೂ ಅತಿ ಶಾಶ್ವತವೂ ಆಗಿರುತ್ತದೆ.

Verse 128

أَفَلَمْ يَهْدِ لَهُمْ كَمْ أَهْلَكْنَا قَبْلَهُم مِّنَ ٱلْقُرُونِ يَمْشُونَ فِى مَسَـٰكِنِهِمْ ۗ إِنَّ فِى ذَٰلِكَ لَـَٔايَـٰتٍ لِّأُو۟لِى ٱلنُّهَىٰ

Transliteration afalam yahdi lahum kam ahlaknā qablahum mina l-qurūni yamshūna fī masākinihim inna fī dhālika laāyātin li-ulī l-nuhā

Kannada ಇವರಿಗಿಂತ ಮುಂಚೆ ನಾವು ಅದೆಷ್ಟೋ ಜನಾಂ ಗಗಳನ್ನು ನಾಶಗೊಳಿಸಿದ್ದೇವೆ. ಅವರ ನಿವಾಸ ಗಳ ದಾರಿಯಾಗಿ ಇವರು ಸಂಚರಿಸುತ್ತಾರೆ. ಇದರಿಂದ ಇವರಿಗೆ ಮಾರ್ಗದರ್ಶನ ಸಿಗಲಿಲ್ಲವೇ? ಖಂಡಿತ ಬುದ್ಧಿಶಾಲಿಗಳಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.

Verse 129

وَلَوْلَا كَلِمَةٌ سَبَقَتْ مِن رَّبِّكَ لَكَانَ لِزَامًا وَأَجَلٌ مُّسَمًّى

Transliteration walawlā kalimatun sabaqat min rabbika lakāna lizāman wa-ajalun musamman

Kannada ನಿನ್ನ ಪ್ರಭುವಿನ ಕಡೆಯಿಂದ ಮೊದಲೇ ನಿರ್ಧರಿತವಾದ ಒಂದು ವಚನ ಹಾಗೂ ನಿಗದಿ ತ ಅವಧಿಯು ಇಲ್ಲದಿರುತ್ತಿದ್ದರೆ, ವಿನಾಶ ಕಾರ್ಯವು (ಇಹದಲ್ಲೆ) ಇವರಿಗೆ ಅನಿವಾರ್ಯವಾಗುತ್ತಿತ್ತು .

Verse 130

فَٱصْبِرْ عَلَىٰ مَا يَقُولُونَ وَسَبِّحْ بِحَمْدِ رَبِّكَ قَبْلَ طُلُوعِ ٱلشَّمْسِ وَقَبْلَ غُرُوبِهَا ۖ وَمِنْ ءَانَآئِ ٱلَّيْلِ فَسَبِّحْ وَأَطْرَافَ ٱلنَّهَارِ لَعَلَّكَ تَرْضَىٰ

Transliteration fa-iṣ'bir ʿalā mā yaqūlūna wasabbiḥ biḥamdi rabbika qabla ṭulūʿi l-shamsi waqabla ghurūbihā wamin ānāi al-layli fasabbiḥ wa-aṭrāfa l-nahāri laʿallaka tarḍā

Kannada ಆದುದರಿಂದ (ಓ ಪೈಗಂಬರರೇ,) ಅವರ ಮಾತುಗಳ ಬಗ್ಗೆ ತಾಳ್ಮೆ ವಹಿಸಿರಿ. ಸೂರ್ಯೋ ದಯ ಹಾಗೂ ಸೂರ್ಯಾಸ್ತಮಾನಕ್ಕೆ ಮುಂಚೆ ನಿಮ್ಮ ಪ್ರಭುವಿನ ಸ್ತುತಿಸ್ತೋತ್ರದೊಂದಿಗೆ ಅವನ ಪಾವಿತ್ರ್ಯವನ್ನು ಕೊಂಡಾಡಿರಿ. ರಾತ್ರಿ ವೇಳೆಗಳಲ್ಲಿಯೂ ಹಗಲಿನ ಅಂಚುಗಳಲ್ಲಿಯೂ ಅವನ ಪಾವಿತ್ರ್ಯವನ್ನು ಸ್ತುತಿಸಿರಿ. ಇದರಿಂದ ನೀವು ಸಂತೃಪ್ತಿ ಪಡೆಯುವಿರಿ.

Verse 131

وَلَا تَمُدَّنَّ عَيْنَيْكَ إِلَىٰ مَا مَتَّعْنَا بِهِۦٓ أَزْوَٰجًا مِّنْهُمْ زَهْرَةَ ٱلْحَيَوٰةِ ٱلدُّنْيَا لِنَفْتِنَهُمْ فِيهِ ۚ وَرِزْقُ رَبِّكَ خَيْرٌ وَأَبْقَىٰ

Transliteration walā tamuddanna ʿaynayka ilā mā mattaʿnā bihi azwājan min'hum zahrata l-ḥayati l-dun'yā linaftinahum fīhi wariz'qu rabbika khayrun wa-abqā

Kannada ಇವರ ಪೈಕಿ ಹಲವರಿಗೆ ನಾವು ಸುಖ ನೀಡಿದ ಐಹಿಕ ಬದುಕಿನ ವಿವಿಧ ಮೋಡಿಗಳತ್ತ ಕಣ್ಣೆತ್ತಿ ನೋಡದಿರಿ. ಏಕೆಂದರೆ ಅವುಗಳನ್ನು ಅವರಿಗೆ ನಾವು ಕೊಟ್ಟಿದ್ದೇವೆ. ನಿಮ್ಮ ಪ್ರಭು ನೀಡುವ ಪಾರತ್ರಿಕ ಜೀವನ ಸುಖವು ಶ್ರೇಷ್ಟವೂ ಶಾಶ್ವತವೂ ಆಗಿದೆ.

Verse 132

وَأْمُرْ أَهْلَكَ بِٱلصَّلَوٰةِ وَٱصْطَبِرْ عَلَيْهَا ۖ لَا نَسْـَٔلُكَ رِزْقًا ۖ نَّحْنُ نَرْزُقُكَ ۗ وَٱلْعَـٰقِبَةُ لِلتَّقْوَىٰ

Transliteration wamur ahlaka bil-ṣalati wa-iṣ'ṭabir ʿalayhā lā nasaluka riz'qan naḥnu narzuquka wal-ʿāqibatu lilttaqwā

Kannada ನಿಮ್ಮ ಕುಟುಂಬದವರಿಗೆ ನಮಾಝಿನ ಅಪ್ಪಣೆ ಕೊಡಿರಿ. ಅದರಲ್ಲಿ ಬರುವ ಕಷ್ಟಗಳನ್ನು ಸಹಿಸಿರಿ. ನಾವು ನಿಮ್ಮಿಂದ ಆಹಾರವನ್ನು ಕೇಳುವುದಿಲ್ಲ. ನಾವೇ ನಿಮಗೆ ಆಹಾರ ಕೊಡುತ್ತಿದ್ದೇವೆ. ಉತ್ತಮ ಪರ್ಯವಸಾನ ಭಕ್ತರಿಗಾಗಿದೆ.

Verse 133

وَقَالُوا۟ لَوْلَا يَأْتِينَا بِـَٔايَةٍ مِّن رَّبِّهِۦٓ ۚ أَوَلَمْ تَأْتِهِم بَيِّنَةُ مَا فِى ٱلصُّحُفِ ٱلْأُولَىٰ

Transliteration waqālū lawlā yatīnā biāyatin min rabbihi awalam tatihim bayyinatu mā fī l-ṣuḥufi l-ūlā

Kannada ‘ಅವರೇಕೆ ತಮ್ಮ ರಕ್ಷಕನ ಕಡೆಯಿಂದ ಒಂದು ಅತಿಮಾನುಷ ದೃಷ್ಠಾಂತವನ್ನು ಕೊಂಡು ಬಂದಿಲ್ಲ?’ ಎಂದು ಅವರು ಪ್ರಶ್ನಿಸುತ್ತಾರೆ. ಪೂರ್ವವೇದ ಗ್ರಂಥಗಳಲ್ಲಿರುವುದನ್ನು ಪುಷ್ಟೀಕರಿಸುತ್ತಿರುವ ಖುರ್‍ಆನ್ ದೃಷ್ಟಾಂತವಾಗಿ ಅವರ ಬಳಿ ಬಂದಿದೆಯಲ್ಲ!

Verse 134

وَلَوْ أَنَّآ أَهْلَكْنَـٰهُم بِعَذَابٍ مِّن قَبْلِهِۦ لَقَالُوا۟ رَبَّنَا لَوْلَآ أَرْسَلْتَ إِلَيْنَا رَسُولًا فَنَتَّبِعَ ءَايَـٰتِكَ مِن قَبْلِ أَن نَّذِلَّ وَنَخْزَىٰ

Transliteration walaw annā ahlaknāhum biʿadhābin min qablihi laqālū rabbanā lawlā arsalta ilaynā rasūlan fanattabiʿa āyātika min qabli an nadhilla wanakhzā

Kannada ಪ್ರವಾದಿಯವರ ಆಗಮನಕ್ಕೆ ಮುನ್ನ ನಾವು ಇವರನ್ನು ಶಿಕ್ಷೆಯಿಂದ ನಾಶಗೊಳಿಸುತ್ತಿದ್ದರೆ, “ಓ ನಮ್ಮ ಪ್ರಭೂ, ನೀನು ನಮ್ಮ ಬಳಿಗೆ ಓರ್ವ ಸಂದೇಶವಾಹಕನನ್ನೇಕೆ ಕಳುಹಿಸಲಿಲ್ಲ? ನಾವು ನಿಂದ್ಯರೂ ನೀಚರೂ ಆಗುವುದಕ್ಕೆ ಮುಂಚೆಯೇ ನಾವು ನಿನ್ನ ಪುರಾವೆಗಳ ಅನುಸರಣೆ ಮಾಡಿಕೊಳ್ಳುತ್ತಿದ್ದೆವಲ್ಲ!” ಎಂದು ಇವರು ಹೇಳುತ್ತಿದ್ದರು .

Verse 135

قُلْ كُلٌّ مُّتَرَبِّصٌ فَتَرَبَّصُوا۟ ۖ فَسَتَعْلَمُونَ مَنْ أَصْحَـٰبُ ٱلصِّرَٰطِ ٱلسَّوِىِّ وَمَنِ ٱهْتَدَىٰ

Transliteration qul kullun mutarabbiṣun fatarabbaṣū fasataʿlamūna man aṣḥābu l-ṣirāṭi l-sawiyi wamani ih'tadā

Kannada (ಓ ಪೈಗಂಬರರೇ,) ಹೇಳಿರಿ; ‘ಪ್ರತಿಯೊಬ್ಬನೂ ಕರ್ಮಫಲದ ನಿರೀಕ್ಷೆಯಲ್ಲೇ ಇದ್ದಾನೆ, ಆದ್ದರಿಂದ ನೀವು ನಿರೀಕ್ಷಿಸುತ್ತಲಿರಿ, ಯಾರು ನೇರವಾದ ಮಾರ್ಗದಲ್ಲಿ ನೆಲೆಗೊಂಡವರು, ಯಾರು ಸನ್ಮಾರ್ಗ ಪಡೆದವರು ಎಂದು ಸದ್ಯವೇ ನಿಮಗೆ ತಿಳಿದು ಬರುವುದು’

Read Surah Taha in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.