MyDugsiStart learning

Surah Hud in Kannada: translation and audio

Surah 11 · هود · Hud · 123 verses

Surah Hud verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Hud word by word in English.

Verse 1

الٓر ۚ كِتَـٰبٌ أُحْكِمَتْ ءَايَـٰتُهُۥ ثُمَّ فُصِّلَتْ مِن لَّدُنْ حَكِيمٍ خَبِيرٍ

Transliteration alif-lam-ra kitābun uḥ'kimat āyātuhu thumma fuṣṣilat min ladun ḥakīmin khabīrin

Kannada ಅಲಿಫ್ ಲಾಮ್ ರಾ, ಇದು ಮಹದ್ಗ್ರಂಥ. ಇದರ ಸೂಕ್ತಗಳು ಸುದೃಢಗೊಳಿಸಲ್ಪಟ್ಟಿವೆ. ನಂತರ ವಿಶಧೀಕರಿಸಲ್ಪಟ್ಟಿವೆ. ಯುಕ್ತಿವಂತನೂ ಸೂಕ್ಷ್ಮಜ್ಞನೂ ಆದ ಅಲ್ಲಾಹನ ವತಿಯಿಂದ ಇದು ಬಂದಿದೆ.

Verse 2

أَلَّا تَعْبُدُوٓا۟ إِلَّا ٱللَّهَ ۚ إِنَّنِى لَكُم مِّنْهُ نَذِيرٌ وَبَشِيرٌ

Transliteration allā taʿbudū illā l-laha innanī lakum min'hu nadhīrun wabashīrun

Kannada ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸ ಬೇಡಿರಿ. ನಾನು ಅವನ ಕಡೆಯಿಂದ ನಿಮಗೆ ಎಚ್ಚರಿಕೆ ಕೊಡುವವನೂ ಸುವಾರ್ತೆ ನೀಡುವವನೂ ಆಗಿರುತ್ತೇನೆ.

Verse 3

وَأَنِ ٱسْتَغْفِرُوا۟ رَبَّكُمْ ثُمَّ تُوبُوٓا۟ إِلَيْهِ يُمَتِّعْكُم مَّتَـٰعًا حَسَنًا إِلَىٰٓ أَجَلٍ مُّسَمًّى وَيُؤْتِ كُلَّ ذِى فَضْلٍ فَضْلَهُۥ ۖ وَإِن تَوَلَّوْا۟ فَإِنِّىٓ أَخَافُ عَلَيْكُمْ عَذَابَ يَوْمٍ كَبِيرٍ

Transliteration wa-ani is'taghfirū rabbakum thumma tūbū ilayhi yumattiʿ'kum matāʿan ḥasanan ilā ajalin musamman wayu'ti kulla dhī faḍlin faḍlahu wa-in tawallaw fa-innī akhāfu ʿalaykum ʿadhāba yawmin kabīrin

Kannada ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ. ತರುವಾಯ ಖೇದಪಟ್ಟುಕೊಂಡು ಅವನತ್ತ ಮರಳಿರಿ. ಆಗ ಅವನು ಒಂದು ನಿಶ್ಚಿತ ಕಾಲಾ ವಧಿಯವರೆಗೆ ನಿಮಗೆ ಉತ್ತಮ ಆರಾಮವನ್ನು ನೀಡುವನು ಮತ್ತು ಪ್ರತಿಯೊಬ್ಬ ಉದಾರಿಗೆ ತನ್ನ ಔದಾರ್ಯದ ಫಲವನ್ನು ನೀಡುವನು . ಆದರೆ ನೀವು ವಿಮುಖರಾದರೆ ನಿಮ್ಮ ಪಾಲಿಗೆ ಒಂದು ಮಹಾ ದಿನದ ಶಿಕ್ಷೆಯನ್ನು ಭಯಪಡುತ್ತಿದ್ದೇನೆ.

Verse 4

إِلَى ٱللَّهِ مَرْجِعُكُمْ ۖ وَهُوَ عَلَىٰ كُلِّ شَىْءٍ قَدِيرٌ

Transliteration ilā l-lahi marjiʿukum wahuwa ʿalā kulli shayin qadīrun

Kannada ಅಲ್ಲಾಹನ ಕಡೆಗೆ ನಿಮ್ಮ ನಿರ್ಗಮನ ಅವನು ಸರ್ವಸಮರ್ಥನು. (ಮುಂತಾದ ವಿಶಧೀಕರಣಗಳಿಂದ ಈ ಗ್ರಂಥವು ವಿಶಧೀಕರಿಸಲ್ಪಟ್ಟಿದೆ)

Verse 5

أَلَآ إِنَّهُمْ يَثْنُونَ صُدُورَهُمْ لِيَسْتَخْفُوا۟ مِنْهُ ۚ أَلَا حِينَ يَسْتَغْشُونَ ثِيَابَهُمْ يَعْلَمُ مَا يُسِرُّونَ وَمَا يُعْلِنُونَ ۚ إِنَّهُۥ عَلِيمٌۢ بِذَاتِ ٱلصُّدُورِ

Transliteration alā innahum yathnūna ṣudūrahum liyastakhfū min'hu alā ḥīna yastaghshūna thiyābahum yaʿlamu mā yusirrūna wamā yuʿ'linūna innahu ʿalīmun bidhāti l-ṣudūri

Kannada ಗಮನಿಸಿರಿ, ಇವರು ಅಲ್ಲಾಹನಿಂದ ಮರೆ ಮಾಡಲಿಕ್ಕಾಗಿ ತಮ್ಮ ಎದೆಗಳನ್ನು ಮುದುಡಿಸಿ ಕೊಳ್ಳುತ್ತಾರೆ. ತಿಳಿಯಿರಿ, ಅವರು ತಮ್ಮನ್ನು ವಸ್ತ್ರಗಳಿಂದ ಮುಚ್ಚಿಕೊಂಡಾಗಲೂ ಕೂಡಾ ಇವರು ರಹಸ್ಯವಾಗಿಡುವುದನ್ನೂ ಪರಸ್ಯಗೊಳಿಸುವುದನ್ನು ಅವನು ತಿಳಿಯುತ್ತಾನೆ. ಅವನಂತೂ ಇವರ ಎದೆಯಂತರಾಳವನ್ನು ಬಲ್ಲನು .

Verse 6

۞ وَمَا مِن دَآبَّةٍ فِى ٱلْأَرْضِ إِلَّا عَلَى ٱللَّهِ رِزْقُهَا وَيَعْلَمُ مُسْتَقَرَّهَا وَمُسْتَوْدَعَهَا ۚ كُلٌّ فِى كِتَـٰبٍ مُّبِينٍ

Transliteration wamā min dābbatin fī l-arḍi illā ʿalā l-lahi riz'quhā wayaʿlamu mus'taqarrahā wamus'tawdaʿahā kullun fī kitābin mubīnin

Kannada ಭೂಮಿಯಲ್ಲಿರುವ ಒಂದೇ ಒಂದು ಚರಜೀವಿ ಕೂಡಾ ಅಲ್ಲಾಹನ ಅನ್ನದ ಹೊಣೆಗಾರಿಕೆಯಿಂದ ಹೊರತಾಗಿಲ್ಲ. ಅವುಗಳ ವಾಸಸ್ಥಳ ಮತ್ತು ಸುರಕ್ಷಿತ ಸ್ಥಳವನ್ನು ಅಲ್ಲಾಹನು ಬಲ್ಲನು. ಎಲ್ಲವೂ ಒಂದು ಸುಸ್ಪಷ್ಟ ಗ್ರಂಥದಲ್ಲಿ ಲಿಖಿತಗೊಂಡಿದೆ.

Verse 7

وَهُوَ ٱلَّذِى خَلَقَ ٱلسَّمَـٰوَٰتِ وَٱلْأَرْضَ فِى سِتَّةِ أَيَّامٍ وَكَانَ عَرْشُهُۥ عَلَى ٱلْمَآءِ لِيَبْلُوَكُمْ أَيُّكُمْ أَحْسَنُ عَمَلًا ۗ وَلَئِن قُلْتَ إِنَّكُم مَّبْعُوثُونَ مِنۢ بَعْدِ ٱلْمَوْتِ لَيَقُولَنَّ ٱلَّذِينَ كَفَرُوٓا۟ إِنْ هَـٰذَآ إِلَّا سِحْرٌ مُّبِينٌ

Transliteration wahuwa alladhī khalaqa l-samāwāti wal-arḍa fī sittati ayyāmin wakāna ʿarshuhu ʿalā l-māi liyabluwakum ayyukum aḥsanu ʿamalan wala-in qul'ta innakum mabʿūthūna min baʿdi l-mawti layaqūlanna alladhīna kafarū in hādhā illā siḥ'run mubīnun

Kannada ಭೂಮಿ ಮತ್ತು ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ. ಅದಕ್ಕಿಂತ ಮುಂಚೆ ಅವನ ಅರ್ಶ್ ನೀರಿನ ಮೇಲಿತ್ತು. ನಿಮ್ಮಲ್ಲಿ ಯಾರು ಸುಕರ್ಮದಲ್ಲಿ ಅತ್ಯಂತ ಉತ್ತಮನು ಎಂದು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ. (ಓ ಪೈಗಂ ಬರರೇ,) ಮರಣಾನಂತರ ನೀವು ಇನ್ನೊಮ್ಮೆ ಎಬ್ಬಿಸಲ್ಪಡುವಿರೆಂದು ಹೇಳಿದಾಗ ಸತ್ಯನಿಷೇ ಧಿಗಳು, “ಇದು ಸುಸ್ಪಷ್ಟ ಮಾಟಗಾರಿಕೆ ಮಾತ್ರ” ಎಂದು ಹೇಳಿಬಿಡುತ್ತಾರೆ.

Verse 8

وَلَئِنْ أَخَّرْنَا عَنْهُمُ ٱلْعَذَابَ إِلَىٰٓ أُمَّةٍ مَّعْدُودَةٍ لَّيَقُولُنَّ مَا يَحْبِسُهُۥٓ ۗ أَلَا يَوْمَ يَأْتِيهِمْ لَيْسَ مَصْرُوفًا عَنْهُمْ وَحَاقَ بِهِم مَّا كَانُوا۟ بِهِۦ يَسْتَهْزِءُونَ

Transliteration wala-in akharnā ʿanhumu l-ʿadhāba ilā ummatin maʿdūdatin layaqūlunna mā yaḥbisuhu alā yawma yatīhim laysa maṣrūfan ʿanhum waḥāqa bihim mā kānū bihi yastahziūna

Kannada ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಅವರಿಂದ ನಾವು ಶಿಕ್ಷೆಯನ್ನು ತಡೆದಿರಿಸಿದಾಗ, ಅದನ್ನು ಯಾವ ವಸ್ತು ತಡೆಹಿಡಿಯಿತು? ಎಂದು ಸತ್ಯ ನಿಷೇಧಿಗಳು ಕೇಳುತ್ತಾರೆ. ತಿಳಿಯಿರಿ ಆ ಶಿಕ್ಷೆಯ ಸಮಯ ಬಂತೆಂದರೆ ಅದನ್ನು ಯಾರಿಂದಲೂ ತಡೆಯಲಾಗದು. ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿರುವರೋ ಅದೇ ಅವರನ್ನು ಮುತ್ತಿಕೊಳ್ಳುವುದು.

Verse 9

وَلَئِنْ أَذَقْنَا ٱلْإِنسَـٰنَ مِنَّا رَحْمَةً ثُمَّ نَزَعْنَـٰهَا مِنْهُ إِنَّهُۥ لَيَـُٔوسٌ كَفُورٌ

Transliteration wala-in adhaqnā l-insāna minnā raḥmatan thumma nazaʿnāhā min'hu innahu layaūsun kafūrun

Kannada ಮಾನವನಿಗೆ ನಾವು ನಮ್ಮಿಂದ ಯಾವುದೇ ಕೃಪೆಯನ್ನು ರುಚಿ ತೋರಿಸಿ ಅನಂತರ ಅದನ್ನು ಅವನಿಂದ ತೆಗೆದು ಹಾಕಿದರೆ ಅವನು ತೀವ್ರ ನಿರಾಶನೂ ತೀವ್ರ ಕೃತಘ್ನನೂ ಆಗುವನು.

Verse 10

وَلَئِنْ أَذَقْنَـٰهُ نَعْمَآءَ بَعْدَ ضَرَّآءَ مَسَّتْهُ لَيَقُولَنَّ ذَهَبَ ٱلسَّيِّـَٔاتُ عَنِّىٓ ۚ إِنَّهُۥ لَفَرِحٌ فَخُورٌ

Transliteration wala-in adhaqnāhu naʿmāa baʿda ḍarrāa massathu layaqūlanna dhahaba l-sayiātu ʿannī innahu lafariḥun fakhūrun

Kannada ಅವನಿಗೆ ತಟ್ಟಿದ್ದ ಕಷ್ಟದ ಅನಂತರ ನಾವು ಅವನಿಗೆ ಅನುಗ್ರಹಗಳ ಸವಿಯನ್ನುಣಿಸಿದರೆ ಅವನು ತನ್ನ ಎಲ್ಲ ಕೆಡುಕುಗಳೂ ನನ್ನಿಂದ ತೊಲಗಿದುವು ಎಂದು ಹೇಳಿಕೊಳ್ಳುತ್ತಾನೆ. ಅವನು ಅತಿ ಹರ್ಷಿತನೂ ಅಹಂಕಾರಿಯೂ ಆಗಿರುತ್ತಾನೆ .

Verse 11

إِلَّا ٱلَّذِينَ صَبَرُوا۟ وَعَمِلُوا۟ ٱلصَّـٰلِحَـٰتِ أُو۟لَـٰٓئِكَ لَهُم مَّغْفِرَةٌ وَأَجْرٌ كَبِيرٌ

Transliteration illā alladhīna ṣabarū waʿamilū l-ṣāliḥāti ulāika lahum maghfiratun wa-ajrun kabīrun

Kannada ತಾಳ್ಮೆ ವಹಿಸಿದ ಮತ್ತು ಸತ್ಕರ್ಮವೆಸಗಿದವರ ಹೊರತು. ಅವರಿಗೆ ಪಾಪ ವಿಮೋಚನೆಯೂ, ಮಹತ್ವಪೂರ್ಣ ಪ್ರತಿಫಲವೂ ಇರುವುದು.

Verse 12

فَلَعَلَّكَ تَارِكٌۢ بَعْضَ مَا يُوحَىٰٓ إِلَيْكَ وَضَآئِقٌۢ بِهِۦ صَدْرُكَ أَن يَقُولُوا۟ لَوْلَآ أُنزِلَ عَلَيْهِ كَنزٌ أَوْ جَآءَ مَعَهُۥ مَلَكٌ ۚ إِنَّمَآ أَنتَ نَذِيرٌ ۚ وَٱللَّهُ عَلَىٰ كُلِّ شَىْءٍ وَكِيلٌ

Transliteration falaʿallaka tārikun baʿḍa mā yūḥā ilayka waḍāiqun bihi ṣadruka an yaqūlū lawlā unzila ʿalayhi kanzun aw jāa maʿahu malakun innamā anta nadhīrun wal-lahu ʿalā kulli shayin wakīlun

Kannada ಓ ಪೈಗಂಬರರೇ, `ಈ ವ್ಯಕ್ತಿಯ ಮೇಲೊಂದು ನಿಧಿಯನ್ನೇಕೆ ಇಳಿಸಲಾಗಲಿಲ್ಲ? ಅಥವಾ ಇವನ ಸಂಗಡ ದೇವಚರನೋರ್ವನೇಕೆ ಬರಲಿಲ್ಲ? ಎಂದು ತಮ್ಮ ಬಗ್ಗೆ ಅವರಾಡುವ ಮಾತುಗಳಿಂದಾಗಿ ನಿಮಗೆ ನೀಡಲಾಗುವ ದಿವ್ಯಸಂದೇಶ ಗಳಿಂದ ಕೆಲವನ್ನು ನೀವು ಉಪೇಕ್ಷಿಸಲೂಬಹುದು. ನಿಮ್ಮ ಮನಸ್ಸು ಇಕ್ಕಟ್ಟಾಗಲೂ ಬಹುದು. ನೀವು ಕೇವಲ ಎಚ್ಚರಿಕೆ ಕೊಡುವವರಾಗಿದ್ದೀರಿ. ಅಲ್ಲಾಹನು ಎಲ್ಲದರ ಮೇಲೆ ನಿಗಾ ಇಟ್ಟವನಾಗಿರುವನು.

Verse 13

أَمْ يَقُولُونَ ٱفْتَرَىٰهُ ۖ قُلْ فَأْتُوا۟ بِعَشْرِ سُوَرٍ مِّثْلِهِۦ مُفْتَرَيَـٰتٍ وَٱدْعُوا۟ مَنِ ٱسْتَطَعْتُم مِّن دُونِ ٱللَّهِ إِن كُنتُمْ صَـٰدِقِينَ

Transliteration am yaqūlūna if'tarāhu qul fatū biʿashri suwarin mith'lihi muf'tarayātin wa-id'ʿū mani is'taṭaʿtum min dūni l-lahi in kuntum ṣādiqīna

Kannada ಪೈಗಂಬರವರು ಈ ಗ್ರಂಥವನ್ನು ತಾವೇ ಸೃಷ್ಠಿ ಮಾಡಿಕೊಂಡರೆಂದು ಇವರು ಹೇಳುತ್ತಾರೆಯೇ! ಹೇಳಿರಿ; ಹಾಗಾದರೆ ಇದರಂತಹ ಹತ್ತು ಸೂರಃಗಳನ್ನು ಸೃಷ್ಟಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಕರೆಯಲು ಸಾಧ್ಯವಿದ್ದವರನ್ನೆಲ್ಲ ಕರೆದು ಕೊಳ್ಳಿರಿ. ನೀವು ಸತ್ಯವಾದಿಗಳಾ ಗಿದ್ದರೆ.

Verse 14

فَإِلَّمْ يَسْتَجِيبُوا۟ لَكُمْ فَٱعْلَمُوٓا۟ أَنَّمَآ أُنزِلَ بِعِلْمِ ٱللَّهِ وَأَن لَّآ إِلَـٰهَ إِلَّا هُوَ ۖ فَهَلْ أَنتُم مُّسْلِمُونَ

Transliteration fa-illam yastajībū lakum fa-iʿ'lamū annamā unzila biʿil'mi l-lahi wa-an lā ilāha illā huwa fahal antum mus'limūna

Kannada ಅವರು ನಿಮಗೆ ಉತ್ತರಿಸದಿದ್ದರೆ, ಇದು ಅಲ್ಲಾಹನ ಜ್ಞಾನದಿಂದ ಅವತೀರ್ಣಗೊಂಡಿದೆ ಮತ್ತು ಅವನ ಹೊರತು ಅನ್ಯ ದೇವನಿಲ್ಲವೆಂದು ಚೆನ್ನಾಗಿ ಅರಿತು ಕೊಳ್ಳಿರಿ. ಇನ್ನಾದರೂ ನೀವು ಮುಸ್ಲಿಮರಾಗುವಿರಾ?

Verse 15

مَن كَانَ يُرِيدُ ٱلْحَيَوٰةَ ٱلدُّنْيَا وَزِينَتَهَا نُوَفِّ إِلَيْهِمْ أَعْمَـٰلَهُمْ فِيهَا وَهُمْ فِيهَا لَا يُبْخَسُونَ

Transliteration man kāna yurīdu l-ḥayata l-dun'yā wazīnatahā nuwaffi ilayhim aʿmālahum fīhā wahum fīhā lā yub'khasūna

Kannada ಯಾರು ಲೌಕಿಕ ಜೀವನ ಮತ್ತು ಅದರ ಸೊಬಗನ್ನು ಬಯಸುವರೋ ಅವರ ಕರ್ಮಗಳ ಪ್ರತಿ ಫಲವನ್ನು ನಾವು ಇಲ್ಲೇ ಕೊಟ್ಟುಬಿಡುತ್ತೇವೆ ಅದರಲ್ಲಿ ಅವರಿಗೆ ಯಾವ ಕೊರತೆಯನ್ನೂ ಮಾಡುವುದಿಲ್ಲ.

Verse 16

أُو۟لَـٰٓئِكَ ٱلَّذِينَ لَيْسَ لَهُمْ فِى ٱلْـَٔاخِرَةِ إِلَّا ٱلنَّارُ ۖ وَحَبِطَ مَا صَنَعُوا۟ فِيهَا وَبَـٰطِلٌ مَّا كَانُوا۟ يَعْمَلُونَ

Transliteration ulāika alladhīna laysa lahum fī l-ākhirati illā l-nāru waḥabiṭa mā ṣanaʿū fīhā wabāṭilun mā kānū yaʿmalūna

Kannada ಆದರೆ ಇಂಥವರಿಗೆ ಪರಲೋಕದಲ್ಲಿ ನರಕಾಗ್ನಿಯ ಹೊರತು ಇನ್ನೇನೂ ಇಲ್ಲ. ಇವರು ಇಲ್ಲಿ ನಿರ್ಮಿಸಿದ್ದೆಲ್ಲವೂ ಅಳಿದು ಹೋಯಿತು ಮತ್ತು ಅವರು ಮಾಡಿದ್ದೆಲ್ಲವೂ ನಿರರ್ಥಕವಾಯಿತು.

Verse 17

أَفَمَن كَانَ عَلَىٰ بَيِّنَةٍ مِّن رَّبِّهِۦ وَيَتْلُوهُ شَاهِدٌ مِّنْهُ وَمِن قَبْلِهِۦ كِتَـٰبُ مُوسَىٰٓ إِمَامًا وَرَحْمَةً ۚ أُو۟لَـٰٓئِكَ يُؤْمِنُونَ بِهِۦ ۚ وَمَن يَكْفُرْ بِهِۦ مِنَ ٱلْأَحْزَابِ فَٱلنَّارُ مَوْعِدُهُۥ ۚ فَلَا تَكُ فِى مِرْيَةٍ مِّنْهُ ۚ إِنَّهُ ٱلْحَقُّ مِن رَّبِّكَ وَلَـٰكِنَّ أَكْثَرَ ٱلنَّاسِ لَا يُؤْمِنُونَ

Transliteration afaman kāna ʿalā bayyinatin min rabbihi wayatlūhu shāhidun min'hu wamin qablihi kitābu mūsā imāman waraḥmatan ulāika yu'minūna bihi waman yakfur bihi mina l-aḥzābi fal-nāru mawʿiduhu falā taku fī mir'yatin min'hu innahu l-ḥaqu min rabbika walākinna akthara l-nāsi lā yu'minūna

Kannada ಒಬ್ಬರು ತನ್ನ ಪ್ರಭುವಿನಿಂದ ದೊರೆತ ಸ್ಪಷ್ಟ ಪ್ರಮಾಣವನ್ನು ಅವಲಂಬಿಸಿದ್ದು ಬಳಿಕ ಪ್ರಭು ವಿನ ಕಡೆಯಿಂದ ಒಂದು ಸಾಕ್ಷ್ಯವೂ ಅದನ್ನು ಓದಿ ಹೇಳುತ್ತಿರುವುದು. ಮತ್ತು ಅದಕ್ಕೆ ಮುಂಚೆ ಮಾರ್ಗದರ್ಶಿ ಹಾಗೂ ಕೃಪೆಯಾಗಿ ಬಂದಿದ್ದ ಮೂಸಾರ ಗ್ರಂಥವೂ ಸಾಕ್ಷ್ಯವಾಗಿ ಇದೆ. (ಇಂತಹ ವ್ಯಕ್ತಿಯು ಹಾಗೆ ಇಲ್ಲದವರಂತಾಗುವರೇ? ಇಲ್ಲ) ಅಂಥವರು ಖಂಡಿತ ಇದರಲ್ಲಿ ವಿಶ್ವಾಸವಿರಿಸುವರು . ಎಲ್ಲ ಸಂಘಗಳ ಪೈಕಿ, ಯಾವನಾದರೂ ಇದನ್ನು ನಿಷೇಧಿಸಿದರೆ ಅವನಿಗೆ ವಾಗ್ದತ್ತ ಸ್ಥಾನವು ನರಕಾಗ್ನಿ ಯಾಗಿರುತ್ತದೆ. ಆದುದರಿಂದ ಇದರ ಬಗ್ಗೆ ನೀವು ಯಾವುದೇ ಸಂದೇಹಕ್ಕೊಳಗಾಗಬೇಡಿರಿ. ಖಂಡಿತ ಇದು ನಿಮ್ಮ ಪ್ರಭುವಿನಿಂದ ಬಂದಿರುವ ಪರಮ ಸತ್ಯ. ಆದರೆ ಹೆಚ್ಚಿನವರು ವಿಶ್ವಾಸವಿರಿಸುವುದಿಲ್ಲ.

Verse 18

وَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًا ۚ أُو۟لَـٰٓئِكَ يُعْرَضُونَ عَلَىٰ رَبِّهِمْ وَيَقُولُ ٱلْأَشْهَـٰدُ هَـٰٓؤُلَآءِ ٱلَّذِينَ كَذَبُوا۟ عَلَىٰ رَبِّهِمْ ۚ أَلَا لَعْنَةُ ٱللَّهِ عَلَى ٱلظَّـٰلِمِينَ

Transliteration waman aẓlamu mimmani if'tarā ʿalā l-lahi kadhiban ulāika yuʿ'raḍūna ʿalā rabbihim wayaqūlu l-ashhādu hāulāi alladhīna kadhabū ʿalā rabbihim alā laʿnatu l-lahi ʿalā l-ẓālimīna

Kannada ಅಲ್ಲಾಹನ ಮೇಲೆ ಸುಳ್ಳಾರೋಪ ಸೃಷ್ಟಿಸಿದವನಿ ಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾರೆ? ಇಂಥ ವರು ತಮ್ಮ ಪ್ರಭುವಿನ ಮುಂದೆ ತರಲ್ಪಡುವರು ಮತ್ತು ತಮ್ಮ ಪ್ರಭುವಿನ ಮೇಲೆ ಸುಳ್ಳಾರೋಪ ಹೊರಿಸಿದವರು ಇವರೇ ಎಂದು ಸಾಕ್ಷಿದಾರರು ಹೇಳುವರು. ತಿಳಿದಿರಲಿ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ.

Verse 19

ٱلَّذِينَ يَصُدُّونَ عَن سَبِيلِ ٱللَّهِ وَيَبْغُونَهَا عِوَجًا وَهُم بِٱلْـَٔاخِرَةِ هُمْ كَـٰفِرُونَ

Transliteration alladhīna yaṣuddūna ʿan sabīli l-lahi wayabghūnahā ʿiwajan wahum bil-ākhirati hum kāfirūna

Kannada ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವ, ಮತ್ತು ಆ ಮಾರ್ಗವನ್ನು ವಕ್ರಗೊಳಿಸ ಬಯಸುವವರು ಅವರು. ಅವರೇ ಪರಲೋಕವನ್ನು ನಿಷೇಧಿಸುವವರು.

Verse 20

أُو۟لَـٰٓئِكَ لَمْ يَكُونُوا۟ مُعْجِزِينَ فِى ٱلْأَرْضِ وَمَا كَانَ لَهُم مِّن دُونِ ٱللَّهِ مِنْ أَوْلِيَآءَ ۘ يُضَـٰعَفُ لَهُمُ ٱلْعَذَابُ ۚ مَا كَانُوا۟ يَسْتَطِيعُونَ ٱلسَّمْعَ وَمَا كَانُوا۟ يُبْصِرُونَ

Transliteration ulāika lam yakūnū muʿ'jizīna fī l-arḍi wamā kāna lahum min dūni l-lahi min awliyāa yuḍāʿafu lahumu l-ʿadhābu mā kānū yastaṭīʿūna l-samʿa wamā kānū yub'ṣirūna

Kannada ಅವರು ಭೂಮಿಯಲ್ಲಿ ಅಲ್ಲಾಹನನ್ನು ಪರಾಜಿತ ಗೊಳಿಸಲು ಶಕ್ತರಾಗಿದ್ದಿಲ್ಲ. ಮತ್ತು ಅಲ್ಲಾಹನ ಹೊರತು ಅವರಿಗಾರೂ ಸಹಾಯಕರೂ ಇರಲಿಲ್ಲ. ಅವರಿಗೆ ಇಮ್ಮಡಿ ಶಿಕ್ಷೆ ಕೊಡಲಾಗುವುದು. ಅವರು ಸತ್ಯವನ್ನು ಕೇಳದಾದರು ಮತ್ತು ಕಂಡರಿಯದಾದರು.

Verse 21

أُو۟لَـٰٓئِكَ ٱلَّذِينَ خَسِرُوٓا۟ أَنفُسَهُمْ وَضَلَّ عَنْهُم مَّا كَانُوا۟ يَفْتَرُونَ

Transliteration ulāika alladhīna khasirū anfusahum waḍalla ʿanhum mā kānū yaftarūna

Kannada ಅವರು ತಮ್ಮನ್ನು ತಾವೇ ನಷ್ಟಕ್ಕೆ ಗುರಿಪಡಿಸಿ ಕೊಂಡವರು. ಅವರು (ಅಲ್ಲಾಹನ ಮೇಲೆ) ಕೃತಕವಾಗಿ ಸೃಷ್ಟಿಸುತ್ತಿದ್ದ ಮಿಥ್ಯ ವಾದವು ಅವರಿಂದ ಕಳೆದುಹೋಯಿತು.

Verse 22

لَا جَرَمَ أَنَّهُمْ فِى ٱلْـَٔاخِرَةِ هُمُ ٱلْأَخْسَرُونَ

Transliteration lā jarama annahum fī l-ākhirati humu l-akhsarūna

Kannada ನಿಸ್ಸಂದೇಹ! ಅವರೇ ಪರಲೋಕದಲ್ಲಿ ಅತ್ಯಧಿಕ ನಷ್ಟ ಹೊಂದಿದವರು.

Verse 23

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ وَأَخْبَتُوٓا۟ إِلَىٰ رَبِّهِمْ أُو۟لَـٰٓئِكَ أَصْحَـٰبُ ٱلْجَنَّةِ ۖ هُمْ فِيهَا خَـٰلِدُونَ

Transliteration inna alladhīna āmanū waʿamilū l-ṣāliḥāti wa-akhbatū ilā rabbihim ulāika aṣḥābu l-janati hum fīhā khālidūna

Kannada ಸತ್ಯವಿಶ್ವಾಸವಿರಿಸಿದ, ಸತ್ಕರ್ಮವೆಸಗಿದ ಹಾಗೂ ತಮ್ಮ ಪ್ರಭುವಿನೆಡೆಗೆ ಶಾಂತಚಿತ್ತರಾದವರು ಯಾರೋ ಅವರೇ ನಿಶ್ಚಯವಾಗಿಯೂ ಸ್ವರ್ಗದವರು. ಅವರು ಅದರಲ್ಲಿ ಸದಾಕಾಲ ವಾಸಿಸುವರು.

Verse 24

۞ مَثَلُ ٱلْفَرِيقَيْنِ كَٱلْأَعْمَىٰ وَٱلْأَصَمِّ وَٱلْبَصِيرِ وَٱلسَّمِيعِ ۚ هَلْ يَسْتَوِيَانِ مَثَلًا ۚ أَفَلَا تَذَكَّرُونَ

Transliteration mathalu l-farīqayni kal-aʿmā wal-aṣami wal-baṣīri wal-samīʿi hal yastawiyāni mathalan afalā tadhakkarūna

Kannada ಈ ಎರಡು ವರ್ಗದವರ ಉಪಮೆ ಕುರುಡನೂ ಕಿವುಡನೂ ಆಗಿರುವ ಒಬ್ಬನಂತೆಯೂ, ದೃಷ್ಟಿ ಮತ್ತು ಶ್ರವಣವುಳ್ಳ ಇನ್ನೊಬ್ಬನಂತೆಯೂ ಆಗಿದೆ. ಇವರಿಬ್ಬರೂ ಉಪಮೆಯಲ್ಲಿ ಸಮಾನರಾಗ ಬಲ್ಲರೇ? ನೀವು ಯೋಚಿಸುವುದಿಲ್ಲವೇ?

Verse 25

وَلَقَدْ أَرْسَلْنَا نُوحًا إِلَىٰ قَوْمِهِۦٓ إِنِّى لَكُمْ نَذِيرٌ مُّبِينٌ

Transliteration walaqad arsalnā nūḥan ilā qawmihi innī lakum nadhīrun mubīnun

Kannada ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದ್ದೆವು. (ನೂಹರು ಇಂತೆಂದರು,) ನಾನು ನಿಮಗೆ ಸುವ್ಯಕ್ತ ಮುನ್ನೆಚ್ಚರಿಕೆದಾರನು.

Verse 26

أَن لَّا تَعْبُدُوٓا۟ إِلَّا ٱللَّهَ ۖ إِنِّىٓ أَخَافُ عَلَيْكُمْ عَذَابَ يَوْمٍ أَلِيمٍ

Transliteration an lā taʿbudū illā l-laha innī akhāfu ʿalaykum ʿadhāba yawmin alīmin

Kannada ನೀವು ಅಲ್ಲಾಹನ ಹೊರತು ಇನ್ಯಾರಿಗೂ ಆರಾಧಿಸ ಬೇಡಿರಿ. ಅನ್ಯಥಾ ನಿಮಗೆ ವೇದನಾಯುಕ್ತ ದಿನದ ಶಿಕ್ಷೆಯನ್ನು ನಾನು ಭಯಪಡುತ್ತಿದ್ದೇನೆ.

Verse 27

فَقَالَ ٱلْمَلَأُ ٱلَّذِينَ كَفَرُوا۟ مِن قَوْمِهِۦ مَا نَرَىٰكَ إِلَّا بَشَرًا مِّثْلَنَا وَمَا نَرَىٰكَ ٱتَّبَعَكَ إِلَّا ٱلَّذِينَ هُمْ أَرَاذِلُنَا بَادِىَ ٱلرَّأْىِ وَمَا نَرَىٰ لَكُمْ عَلَيْنَا مِن فَضْلٍۭ بَلْ نَظُنُّكُمْ كَـٰذِبِينَ

Transliteration faqāla l-mala-u alladhīna kafarū min qawmihi mā narāka illā basharan mith'lanā wamā narāka ittabaʿaka illā alladhīna hum arādhilunā bādiya l-rayi wamā narā lakum ʿalaynā min faḍlin bal naẓunnukum kādhibīna

Kannada ಆಗ ಅವರ ಜನಾಂಗದವರ ಪೈಕಿ ಅವಿಶ್ವಾಸ ತಾಳಿದ ಸರದಾರರು ಹೀಗೆಂದರು- ನೀವು ನಮ್ಮಂತಹ ಒಬ್ಬ ಮನುಷ್ಯನಾಗಿಯೇ ಹೊರತು ನಿಮ್ಮನ್ನು ನಾವು ಕಾಣುತ್ತಿಲ್ಲ. ನಮ್ಮ ಜನಾಂಗದಲ್ಲಿ ಕೆಳವರ್ಗದವರು ಯೋಚನೆಯಿಲ್ಲದೆ ನಿಮ್ಮನ್ನು ಅನುಸರಿಸುತ್ತಿರುವುದನ್ನು ನಾವು ಕಾಣುತ್ತೇವೆ. ನಿಮಗೆ ನಮಗಿಂತ ಯಾವ ಶ್ರೇಷ್ಟ ತೆಯನ್ನೂ ನಾವು ಕಾಣುವುದಿಲ್ಲ. ಮಾತ್ರವಲ್ಲ ನಾವು ನಿಮ್ಮನ್ನು ಸುಳ್ಳುಗಾರನೆಂದೇ ಭಾವಿಸುತ್ತೇವೆ.

Verse 28

قَالَ يَـٰقَوْمِ أَرَءَيْتُمْ إِن كُنتُ عَلَىٰ بَيِّنَةٍ مِّن رَّبِّى وَءَاتَىٰنِى رَحْمَةً مِّنْ عِندِهِۦ فَعُمِّيَتْ عَلَيْكُمْ أَنُلْزِمُكُمُوهَا وَأَنتُمْ لَهَا كَـٰرِهُونَ

Transliteration qāla yāqawmi ara-aytum in kuntu ʿalā bayyinatin min rabbī waātānī raḥmatan min ʿindihi faʿummiyat ʿalaykum anul'zimukumūhā wa-antum lahā kārihūna

Kannada ಅವರು ಹೇಳಿದರು. ಓ ನನ್ನ ಜನಾಂಗ ಬಾಂಧ ವರೇ, ನೀವೇ ಯೋಚಿಸಿರಿ, ನಾನು ನನ್ನ ಪ್ರಭು ವಿನ ಕಡೆಯಿಂದ ಒಂದು ಸ್ಪಷ್ಟ ಆಧಾರ ಪ್ರಮಾಣ ವನ್ನು ಅವಲಂಬಿಸಿದವನಾಗಿದ್ದು ಅವನು ತನ್ನ ವತಿಯಿಂದ ನನಗೆ ಕೃಪೆಯನ್ನೂ ಪ್ರದಾನ ಮಾಡಿರುವನು. ಆದರೆ ಅದು ನಿಮ್ಮನ್ನು ಕುರುಡರನ್ನಾಗಿ ಸಿತು. ಹೀಗಿರುವಾಗ ನೀವದನ್ನು ಅನಿಷ್ಟಪಡುವ ಸ್ಥಿತಿಯಲ್ಲಿ ನಿಮ್ಮನ್ನು ಅದಕ್ಕೆ ಬಲವಂತ ಎಳೆದು ತರಲು ನನ್ನಿಂದ ಸಾಧ್ಯವೇ?

Verse 29

وَيَـٰقَوْمِ لَآ أَسْـَٔلُكُمْ عَلَيْهِ مَالًا ۖ إِنْ أَجْرِىَ إِلَّا عَلَى ٱللَّهِ ۚ وَمَآ أَنَا۠ بِطَارِدِ ٱلَّذِينَ ءَامَنُوٓا۟ ۚ إِنَّهُم مُّلَـٰقُوا۟ رَبِّهِمْ وَلَـٰكِنِّىٓ أَرَىٰكُمْ قَوْمًا تَجْهَلُونَ

Transliteration wayāqawmi lā asalukum ʿalayhi mālan in ajriya illā ʿalā l-lahi wamā anā biṭāridi alladhīna āmanū innahum mulāqū rabbihim walākinnī arākum qawman tajhalūna

Kannada ಓ ನನ್ನ ಜನಾಂಗ ಬಾಂಧವರೇ, ನಾನು ಇದರ ಹೆಸರಲ್ಲಿ ನಿಮ್ಮಿಂದ ಧನ ಕೇಳುವುದಿಲ್ಲ. ನನ್ನ ಪ್ರತಿಫಲ ಅಲ್ಲಾಹನಲ್ಲಿದೆ. ನಂಬಿದವರನ್ನು ಹೊರ ದಬ್ಬಿ ಅಟ್ಟಿ ಓಡಿಸುವವನೂ ನಾನಲ್ಲ. ಅವರು ತಾವೇ ತಮ್ಮ ಪ್ರಭುವಿನ ಸನ್ನಿಧಿಗೆ ಹೋಗುವ ವರು. ಆದರೆ ನೀವು ತಿಳಿಗೇಡಿತನದಿಂದ ವರ್ತಿ ಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ.

Verse 30

وَيَـٰقَوْمِ مَن يَنصُرُنِى مِنَ ٱللَّهِ إِن طَرَدتُّهُمْ ۚ أَفَلَا تَذَكَّرُونَ

Transliteration wayāqawmi man yanṣurunī mina l-lahi in ṭaradttuhum afalā tadhakkarūna

Kannada ಓ ನನ್ನ ಜನಾಂಗ ಬಾಂಧವರೇ, ನಾನು ಇವರನ್ನು ಅಟ್ಟಿ ಓಡಿಸಿದರೆ ಅಲ್ಲಾಹನ ಹಿಡಿ ತದಿಂದ ನನ್ನನ್ನು ಕಾಪಾಡುವವರು ಯಾರು? ನೀವು ಯೋಚಿಸುವುದಿಲ್ಲವೇ?

Verse 31

وَلَآ أَقُولُ لَكُمْ عِندِى خَزَآئِنُ ٱللَّهِ وَلَآ أَعْلَمُ ٱلْغَيْبَ وَلَآ أَقُولُ إِنِّى مَلَكٌ وَلَآ أَقُولُ لِلَّذِينَ تَزْدَرِىٓ أَعْيُنُكُمْ لَن يُؤْتِيَهُمُ ٱللَّهُ خَيْرًا ۖ ٱللَّهُ أَعْلَمُ بِمَا فِىٓ أَنفُسِهِمْ ۖ إِنِّىٓ إِذًا لَّمِنَ ٱلظَّـٰلِمِينَ

Transliteration walā aqūlu lakum ʿindī khazāinu l-lahi walā aʿlamu l-ghayba walā aqūlu innī malakun walā aqūlu lilladhīna tazdarī aʿyunukum lan yu'tiyahumu l-lahu khayran l-lahu aʿlamu bimā fī anfusihim innī idhan lamina l-ẓālimīna

Kannada ನನ್ನ ಬಳಿ ಅಲ್ಲಾಹನ ಭಂಡಾರವಿದೆಯೆಂದು ನಾನು ನಿಮಗೆ ಹೇಳುವುದಿಲ್ಲ. ನಾನು ಪರೋಕ್ಷ ವನ್ನು ಅರಿಯುತ್ತಿಲ್ಲ. ನಾನೊಬ್ಬ ದೇವಚರನೆಂದೂ ನಾನು ಹೇಳುತ್ತಿಲ್ಲ. ನಿಮ್ಮ ದೃಷ್ಟಿಗೆ ಕೀಳಾಗಿ ಕಾಣಿಸುತ್ತಿರುವವರಿಗೆ ಅಲ್ಲಾಹನು ಯಾವುದೇ ಒಳಿತನ್ನು ನೀಡಲಾರನೆಂದೂ ನಾನು ಹೇಳಲಾರೆ. ಅವರ ಅಂತಃಕರಣದ ಸ್ಥಿತಿಯನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು. ಆಗ ನಾನು (ಹಾಗೆ ಹೇಳಿಬಿಟ್ಟರೆ) ಅಕ್ರಮಿಗಳಲ್ಲಿ ಸೇರಿ ಹೋದೇನು.

Verse 32

قَالُوا۟ يَـٰنُوحُ قَدْ جَـٰدَلْتَنَا فَأَكْثَرْتَ جِدَٰلَنَا فَأْتِنَا بِمَا تَعِدُنَآ إِن كُنتَ مِنَ ٱلصَّـٰدِقِينَ

Transliteration qālū yānūḥu qad jādaltanā fa-aktharta jidālanā fatinā bimā taʿidunā in kunta mina l-ṣādiqīna

Kannada ಅವರು ಹೀಗೆಂದರು `ಓ ನೂಹ್! ನೀವು ನಮ್ಮೊ ಡನೆ ವಾಗ್ವಾದ ನಡೆಸಿದಿರಿ, ತುಂಬಾ ನಡೆಸಿದಿರಿ. ಇನ್ನು ನೀವು ಸತ್ಯವಾದಿಯಾಗಿದ್ದರೆ ನೀವು ನಮಗೆ ಹೆದರಿಸುತ್ತಿರುವ ಆ ಶಿಕ್ಷೆಯನ್ನು ಬರ ಮಾಡಿಸಿರಿ.

Verse 33

قَالَ إِنَّمَا يَأْتِيكُم بِهِ ٱللَّهُ إِن شَآءَ وَمَآ أَنتُم بِمُعْجِزِينَ

Transliteration qāla innamā yatīkum bihi l-lahu in shāa wamā antum bimuʿ'jizīna

Kannada ನೂಹ್ ಹೀಗೆ ಹೇಳಿದರು; `ಅಲ್ಲಾಹನಿಚ್ಛಿಸಿದರೆ ಅವನೇ ಅದನ್ನು ತರುವನು. ನೀವು ಆತನನ್ನು ಸೋಲಿಸಲಾರಿರಿ.

Verse 34

وَلَا يَنفَعُكُمْ نُصْحِىٓ إِنْ أَرَدتُّ أَنْ أَنصَحَ لَكُمْ إِن كَانَ ٱللَّهُ يُرِيدُ أَن يُغْوِيَكُمْ ۚ هُوَ رَبُّكُمْ وَإِلَيْهِ تُرْجَعُونَ

Transliteration walā yanfaʿukum nuṣ'ḥī in aradttu an anṣaḥa lakum in kāna l-lahu yurīdu an yugh'wiyakum huwa rabbukum wa-ilayhi tur'jaʿūna

Kannada ಅಲ್ಲಾಹನು ನಿಮ್ಮನ್ನು ದಾರಿ ತಪ್ಪಿಸಲಿಚ್ಛಿಸಿರು ವಾಗ ನನ್ನ ಉಪದೇಶ ನಿಮಗೆ ಫಲ ಕೊಡಲಾರದು. ಅವನೇ ನಿಮ್ಮ ಪ್ರಭು ಮತ್ತು ಅವನಲ್ಲಿಗೇ ನೀವು ಮರಳಲಿಕ್ಕಿದ್ದೀರಿ .

Verse 35

أَمْ يَقُولُونَ ٱفْتَرَىٰهُ ۖ قُلْ إِنِ ٱفْتَرَيْتُهُۥ فَعَلَىَّ إِجْرَامِى وَأَنَا۠ بَرِىٓءٌ مِّمَّا تُجْرِمُونَ

Transliteration am yaqūlūna if'tarāhu qul ini if'taraytuhu faʿalayya ij'rāmī wa-anā barīon mimmā tuj'rimūna

Kannada ಇದನ್ನು ಈ ವ್ಯಕ್ತಿ ಸ್ವಯಂ ರಚಿಸಿಕೊಂಡಿದ್ದಾ ನೆಂದು ಇವರು ಹೇಳುತ್ತಿದ್ದಾರೇನು? ಹೇಳಿರಿ, ಇದನ್ನು ನಾನೇ ರಚಿಸಿದ್ದಾದರೆ ನನ್ನ ಅಪರಾಧದ ಹೊಣೆ ನನ್ನ ಮೇಲೆ ಇದೆ ಮತ್ತು ನೀವು ಮಾಡು ತ್ತಿರುವ ಅಪರಾಧದಿಂದ ನಾನು ಮುಕ್ತನಾಗಿರುತ್ತೇನೆ.

Verse 36

وَأُوحِىَ إِلَىٰ نُوحٍ أَنَّهُۥ لَن يُؤْمِنَ مِن قَوْمِكَ إِلَّا مَن قَدْ ءَامَنَ فَلَا تَبْتَئِسْ بِمَا كَانُوا۟ يَفْعَلُونَ

Transliteration waūḥiya ilā nūḥin annahu lan yu'mina min qawmika illā man qad āmana falā tabta-is bimā kānū yafʿalūna

Kannada ನಿಮ್ಮ ಜನಾಂಗದಲ್ಲಿ ಈಗಾಗಲೇ ವಿಶ್ವಾಸ ಸ್ವೀಕ ರಿಸಿದವರ ಹೊರತು ಇನ್ನಾರೂ ಸ್ವೀಕರಿಸುವವರಿಲ್ಲ. ಅವರ ಕುಕೃತ್ಯಗಳಿಗಾಗಿ ಬೇಸರಿಸಬೇಡಿ ಎಂದು ನೂಹರಿಗೆ ಸಂದೇಶ ನೀಡಲಾಯಿತು.

Verse 37

وَٱصْنَعِ ٱلْفُلْكَ بِأَعْيُنِنَا وَوَحْيِنَا وَلَا تُخَـٰطِبْنِى فِى ٱلَّذِينَ ظَلَمُوٓا۟ ۚ إِنَّهُم مُّغْرَقُونَ

Transliteration wa-iṣ'naʿi l-ful'ka bi-aʿyuninā wawaḥyinā walā tukhāṭib'nī fī alladhīna ẓalamū innahum mugh'raqūna

Kannada ನಮ್ಮ ಮೇಲ್ನೋಟಂ ಹಾಗೂ ನಮ್ಮ ಆದೇಶ ಪ್ರಕಾರ ಒಂದು ನಾವೆಯನ್ನು ಕಟ್ಟಿರಿ. ಅಕ್ರಮಿಗಳ ಪರವಾಗಿ ನನ್ನಲ್ಲಿ ಮಾತಾಡಬಾರದು. ನಿಶ್ಚಯವಾ ಗಿಯೂ ಅವರೆಲ್ಲರೂ ಮುಳುಗಿ ನಾಶವಾಗಲಿರುವವರು.

Verse 38

وَيَصْنَعُ ٱلْفُلْكَ وَكُلَّمَا مَرَّ عَلَيْهِ مَلَأٌ مِّن قَوْمِهِۦ سَخِرُوا۟ مِنْهُ ۚ قَالَ إِن تَسْخَرُوا۟ مِنَّا فَإِنَّا نَسْخَرُ مِنكُمْ كَمَا تَسْخَرُونَ

Transliteration wayaṣnaʿu l-ful'ka wakullamā marra ʿalayhi mala-on min qawmihi sakhirū min'hu qāla in taskharū minnā fa-innā naskharu minkum kamā taskharūna

Kannada ನೂಹರು ನಾವೆಯನ್ನು ನಿರ್ಮಿಸುತ್ತಿದ್ದರು. ಅವರ ಜನಾಂಗದ ಸರದಾರರು ಅವರ ಬಳಿಯಿಂದ ಹಾದು ಹೋಗುತ್ತಿದ್ದಾಗ ಅವರನ್ನು ಗೇಲಿ ಮಾಡುತಿ ್ತದ್ದರು. ನೂಹರು ಹೇಳಿದರು, `ನೀವು ನಮ್ಮನ್ನು ಗೇಲಿ ಮಾಡುವುದಾದರೆ ನೀವು ಗೇಲಿ ಮಾಡಿದಂತೆಯೇ ನಾವೂ ನಿಮ್ಮನ್ನು ಗೇಲಿ ಮಾಡುತ್ತಿದ್ದೇವೆ.

Verse 39

فَسَوْفَ تَعْلَمُونَ مَن يَأْتِيهِ عَذَابٌ يُخْزِيهِ وَيَحِلُّ عَلَيْهِ عَذَابٌ مُّقِيمٌ

Transliteration fasawfa taʿlamūna man yatīhi ʿadhābun yukh'zīhi wayaḥillu ʿalayhi ʿadhābun muqīmun

Kannada ಅಪಮಾನಕರ ಶಿಕ್ಷೆಯು ಯಾರ ಮೇಲೆರಗುತ್ತದೆ, ಮತ್ತು ಸ್ಥಿರವಾದ ಶಿಕ್ಷೆ ಯಾರ ಮೇಲೆ ಬೀಳುತ್ತದೆ ಎಂದು ಸದ್ಯದಲ್ಲೇ ನಿಮಗೆ ತಿಳಿದುಬರುವುದು.

Verse 40

حَتَّىٰٓ إِذَا جَآءَ أَمْرُنَا وَفَارَ ٱلتَّنُّورُ قُلْنَا ٱحْمِلْ فِيهَا مِن كُلٍّ زَوْجَيْنِ ٱثْنَيْنِ وَأَهْلَكَ إِلَّا مَن سَبَقَ عَلَيْهِ ٱلْقَوْلُ وَمَنْ ءَامَنَ ۚ وَمَآ ءَامَنَ مَعَهُۥٓ إِلَّا قَلِيلٌ

Transliteration ḥattā idhā jāa amrunā wafāra l-tanūru qul'nā iḥ'mil fīhā min kullin zawjayni ith'nayni wa-ahlaka illā man sabaqa ʿalayhi l-qawlu waman āmana wamā āmana maʿahu illā qalīlun

Kannada ಕೊನೆಗೆ ನಮ್ಮ ಆಜ್ಞೆ ಬಂತು. ತಂದೂರಿ ಒಲೆ ಯಿಂದ ನೀರು ಚಿಮ್ಮಿತು. ಆಗ ನಾವು ಹೇಳಿ ದೆವು; ಎಲ್ಲವುಗಳ ಎರಡೆರಡು ಜೊತೆಗಳನ್ನು ಮತ್ತು ಯಾರ ಬಗ್ಗೆ ಪೂರ್ವನಿರ್ಧಾರವಾಗಿದೆ ಯೋ ಅವರ ಹೊರತು ನಿಮ್ಮ ಕುಟುಂಬದವ ರನ್ನೂ ಧರ್ಮ ವಿಶ್ವಾಸಿಗಳನ್ನೂ ಹತ್ತಿಸಿಕೊಳ್ಳಿರಿ. ನಿಜಕ್ಕೂ ನೂಹರ (ಪ್ರವಾದಿತ್ವದ) ಮೇಲೆ ವಿಶ್ವಾಸ ವಿಟ್ಟವರು ಕೆಲವೇ ಕೆಲವರು ಮಾತ್ರವಾಗಿದ್ದರು.

Verse 41

۞ وَقَالَ ٱرْكَبُوا۟ فِيهَا بِسْمِ ٱللَّهِ مَجْر۪ىٰهَا وَمُرْسَىٰهَآ ۚ إِنَّ رَبِّى لَغَفُورٌ رَّحِيمٌ

Transliteration waqāla ir'kabū fīhā bis'mi l-lahi majrahā wamur'sāhā inna rabbī laghafūrun raḥīmun

Kannada ನೂಹರು ಹೇಳಿದರು, ಇದರಲ್ಲಿ ಹತ್ತಿಕೊಳ್ಳಿರಿ, ಇದು ಚಲಿಸುವುದೂ ನಿಲ್ಲುವುದೂ ಅಲ್ಲಾಹನ ಹೆಸರಲ್ಲಿ. ನನ್ನ ಪ್ರಭು ಅತ್ಯಂತ ಕ್ಷಮಾಶೀಲನೂ ಕರುಣಾಮಯನೂ ಆಗಿರುತ್ತಾನೆ.

Verse 42

وَهِىَ تَجْرِى بِهِمْ فِى مَوْجٍ كَٱلْجِبَالِ وَنَادَىٰ نُوحٌ ٱبْنَهُۥ وَكَانَ فِى مَعْزِلٍ يَـٰبُنَىَّ ٱرْكَب مَّعَنَا وَلَا تَكُن مَّعَ ٱلْكَـٰفِرِينَ

Transliteration wahiya tajrī bihim fī mawjin kal-jibāli wanādā nūḥun ib'nahu wakāna fī maʿzilin yābunayya ir'kab maʿanā walā takun maʿa l-kāfirīna

Kannada ನಾವೆಯು ಇವರನ್ನು ಹೊತ್ತುಕೊಂಡು ಪರ್ವ ತದಂಥ ತೆರೆ ಮಾಲೆಗಳ ನಡುವೆ ಸಂಚರಿಸಿತು. ನೂಹರ ಮಗನು ದೂರದಲ್ಲಿದ್ದನು. ನೂಹರು ಕೂಗಿ ಕರೆದು; ಮಗನೇ! ನಮ್ಮ ಜೊತೆ ಹಡಗ ನ್ನು ಹತ್ತಿಕೋ, ಸತ್ಯನಿಷೇಧಿಗಳೊಂದಿಗೆ ಸೇರ ಬೇಡ ಎಂದರು.

Verse 43

قَالَ سَـَٔاوِىٓ إِلَىٰ جَبَلٍ يَعْصِمُنِى مِنَ ٱلْمَآءِ ۚ قَالَ لَا عَاصِمَ ٱلْيَوْمَ مِنْ أَمْرِ ٱللَّهِ إِلَّا مَن رَّحِمَ ۚ وَحَالَ بَيْنَهُمَا ٱلْمَوْجُ فَكَانَ مِنَ ٱلْمُغْرَقِينَ

Transliteration qāla saāwī ilā jabalin yaʿṣimunī mina l-māi qāla lā ʿāṣima l-yawma min amri l-lahi illā man raḥima waḥāla baynahumā l-mawju fakāna mina l-mugh'raqīna

Kannada ಅವನು ಹೇಳಿದ; ನಾನು ಒಂದು ಪರ್ವತದ ಮೇಲೆ ಹತ್ತಿಕೊಳ್ಳುತ್ತೇನೆ. ಅದು ನನ್ನನ್ನು ನೀರಿನಿಂದ ರಕ್ಷಿಸುವುದು, ಆಗ ನೂಹರು, ಅಲ್ಲಾಹನು ಅನುಗ್ರಹಿಸಿದವರ ಹೊರತು ಅಲ್ಲಾಹನ ಶಿಕ್ಷೆಯಿಂದ ಇಂದು ರಕ್ಷಣೆಯಿಲ್ಲ ಎಂದರು. ಅಷ್ಟರಲ್ಲಿ ಒಂದು ಅಲೆಯು ಅವರಿಬ್ಬರ ನಡುವೆ ಅಡ್ಡ ಬಂತು. ಅವನೂ ಮುಳುಗಿದವರಲ್ಲಿ ಸೇರಿದನು.

Verse 44

وَقِيلَ يَـٰٓأَرْضُ ٱبْلَعِى مَآءَكِ وَيَـٰسَمَآءُ أَقْلِعِى وَغِيضَ ٱلْمَآءُ وَقُضِىَ ٱلْأَمْرُ وَٱسْتَوَتْ عَلَى ٱلْجُودِىِّ ۖ وَقِيلَ بُعْدًا لِّلْقَوْمِ ٱلظَّـٰلِمِينَ

Transliteration waqīla yāarḍu ib'laʿī māaki wayāsamāu aqliʿī waghīḍa l-māu waquḍiya l-amru wa-is'tawat ʿalā l-jūdiyi waqīla buʿ'dan lil'qawmi l-ẓālimīna

Kannada ಓ ಭೂಮಿಯೇ, ನಿನ್ನ ನೀರನ್ನು ಇಂಗಿಸು. ಮತ್ತು ಓ ಆಕಾಶವೇ, ಮಳೆ ನಿಲ್ಲಿಸು! ಎಂದು ಅಪ್ಪಣೆಯಾಯಿತು. ಆ ಪ್ರಕಾರ ನೀರು ಬತ್ತಿತು. ಆಜ್ಞೆ ಈಡೇರಿತು. ನೌಕೆಯು `ಜೂದಿ’ಯಲ್ಲಿ ತಂಗಿತು. ಅಕ್ರಮಿ ಜನಾಂಗಕ್ಕೆ ನಾಶ ಎನ್ನಲಾಯಿತು.

Verse 45

وَنَادَىٰ نُوحٌ رَّبَّهُۥ فَقَالَ رَبِّ إِنَّ ٱبْنِى مِنْ أَهْلِى وَإِنَّ وَعْدَكَ ٱلْحَقُّ وَأَنتَ أَحْكَمُ ٱلْحَـٰكِمِينَ

Transliteration wanādā nūḥun rabbahu faqāla rabbi inna ib'nī min ahlī wa-inna waʿdaka l-ḥaqu wa-anta aḥkamu l-ḥākimīna

Kannada ನೂಹರು ತಮ್ಮ ಪ್ರಭುವನ್ನು ಕೂಗಿ ಕರೆದರು, ಪ್ರಭೂ, ನನ್ನ ಮಗನು ತನ್ನ ಕುಟುಂಬದವರಲ್ಲಾ ಗಿರುತ್ತಾನೆ. ನಿನ್ನ ವಾಗ್ದಾನವು ಸತ್ಯ ಮತ್ತು ನೀನು ಪರಮ ತೀರ್ಪುಗಾರನಾಗಿರುವೆ.

Verse 46

قَالَ يَـٰنُوحُ إِنَّهُۥ لَيْسَ مِنْ أَهْلِكَ ۖ إِنَّهُۥ عَمَلٌ غَيْرُ صَـٰلِحٍ ۖ فَلَا تَسْـَٔلْنِ مَا لَيْسَ لَكَ بِهِۦ عِلْمٌ ۖ إِنِّىٓ أَعِظُكَ أَن تَكُونَ مِنَ ٱلْجَـٰهِلِينَ

Transliteration qāla yānūḥu innahu laysa min ahlika innahu ʿamalun ghayru ṣāliḥin falā tasalni mā laysa laka bihi ʿil'mun innī aʿiẓuka an takūna mina l-jāhilīna

Kannada ಅಲ್ಲಾಹು ಹೇಳಿದನು; ಓ ನೂಹ್, ಅವನು ಖಂಡಿತ ನಿನ್ನ ಕುಟುಂಬದವನಲ್ಲ. ಅವನೊಂದು ದುಷ್ಟ ಕರ್ಮ ಮಾತ್ರವಾಗಿರುವನು. ಆದುದ ರಿಂದ ನೀನು ನಿನಗೆ ತಿಳಿದಿಲ್ಲದ ವಿಚಾರವನ್ನು ನನ್ನೊಡನೆ ನಿವೇದಿಸಬೇಡ. ನೀನು ಅಜ್ಞಾನಿಗಳ ಸಾಲಿಗೆ ಸೇರಬಾರದೆಂದು ನಿನಗೆ ನಾನು ಖಂಡಿತ ಉಪದೇಶಿಸುತ್ತೇನೆ.

Verse 47

قَالَ رَبِّ إِنِّىٓ أَعُوذُ بِكَ أَنْ أَسْـَٔلَكَ مَا لَيْسَ لِى بِهِۦ عِلْمٌ ۖ وَإِلَّا تَغْفِرْ لِى وَتَرْحَمْنِىٓ أَكُن مِّنَ ٱلْخَـٰسِرِينَ

Transliteration qāla rabbi innī aʿūdhu bika an asalaka mā laysa lī bihi ʿil'mun wa-illā taghfir lī watarḥamnī akun mina l-khāsirīna

Kannada ಅವರು (ನೂಹ್) ಹೇಳಿದರು; ಓ ನನ್ನ ಪ್ರಭೂ, ನನಗೆ ಅರಿವಿಲ್ಲದ ವಿಷಯವನ್ನು ನಿನ್ನಿಂದ ಬೇಡುವುದರ ವಿರುದ್ಧ ನಾನು ನಿನ್ನ ಅಭಯ ಯಾಚಿಸುತ್ತೇನೆ. ನೀನು ನನಗೆ ಕ್ಷಮೆ ನೀಡದಿದ್ದರೆ ಹಾಗೂ ನನ್ನ ಮೇಲೆ ದಯೆ ತೋರದಿದ್ದರೆ ನಾನು ನತದೃಷ್ಟರ ಸಾಲಿಗೆ ಸೇರುವೆನು’.

Verse 48

قِيلَ يَـٰنُوحُ ٱهْبِطْ بِسَلَـٰمٍ مِّنَّا وَبَرَكَـٰتٍ عَلَيْكَ وَعَلَىٰٓ أُمَمٍ مِّمَّن مَّعَكَ ۚ وَأُمَمٌ سَنُمَتِّعُهُمْ ثُمَّ يَمَسُّهُم مِّنَّا عَذَابٌ أَلِيمٌ

Transliteration qīla yānūḥu ih'biṭ bisalāmin minnā wabarakātin ʿalayka waʿalā umamin mimman maʿaka wa-umamun sanumattiʿuhum thumma yamassuhum minnā ʿadhābun alīmun

Kannada ಹೀಗೆ ಹೇಳಲಾಯಿತು; ಓ ನೂಹ್, ನಿನ್ನ ಮೇಲೆ ಮತ್ತು ನಿನ್ನೊಂದಿಗಿರುವ ಸಮುದಾಯಗಳ ಮೇಲೆ ನಮ್ಮ ಕಡೆಯಿಂದ ಬಂದ ಶಾಂತಿ ಮತ್ತು ಸಮೃದ್ಧಿಗಳೊಂದಿಗೆ ಇಳಿದು ಬಿಡು. ಕೆಲವು ಸಮುದಾಯಗಳಿಗೆ ಸ್ವಲ್ಪ ಕಾಲದವರೆಗೆ ಆರಾಮ ನೀಡುವೆವು. ಅನಂತರ ಅವರಿಗೆ ನಮ್ಮ ಕಡೆ ಯಿಂದ ವೇದನಾಯುಕ್ತ ಶಿಕ್ಷೆ ತಟ್ಟುವುದು.

Verse 49

تِلْكَ مِنْ أَنۢبَآءِ ٱلْغَيْبِ نُوحِيهَآ إِلَيْكَ ۖ مَا كُنتَ تَعْلَمُهَآ أَنتَ وَلَا قَوْمُكَ مِن قَبْلِ هَـٰذَا ۖ فَٱصْبِرْ ۖ إِنَّ ٱلْعَـٰقِبَةَ لِلْمُتَّقِينَ

Transliteration til'ka min anbāi l-ghaybi nūḥīhā ilayka mā kunta taʿlamuhā anta walā qawmuka min qabli hādhā fa-iṣ'bir inna l-ʿāqibata lil'muttaqīna

Kannada (ಓ ಪೈಗಂಬರರೇ,) ನಿಮಗೆ ಸಂದೇಶವಾಗಿ ನೀಡುತ್ತಿರುವ ಅದೃಶ್ಯದ ವರ್ತಮಾನಗಳಿವು. ಇದಕ್ಕೆ ಮುಂಚೆ ಇವುಗಳನ್ನು ನೀವಾಗಲಿ ನಿಮ್ಮ ಜನಾಂಗವಾಗಲಿ ಅರಿತಿರಲಿಲ್ಲ. ಆದುದರಿಂದ ತಾಳ್ಮೆ ವಹಿಸಿರಿ. ನಿಜವಾಗಿಯೂ ಉತ್ತಮ ಪರ್ಯ ವಸಾನವು ಭಕ್ತರಿಗಾಗಿದೆ.

Verse 50

وَإِلَىٰ عَادٍ أَخَاهُمْ هُودًا ۚ قَالَ يَـٰقَوْمِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥٓ ۖ إِنْ أَنتُمْ إِلَّا مُفْتَرُونَ

Transliteration wa-ilā ʿādin akhāhum hūdan qāla yāqawmi uʿ'budū l-laha mā lakum min ilāhin ghayruhu in antum illā muf'tarūna

Kannada `ಆದ್’ ಜನಾಂಗದೆಡೆಗೆ ಅವರ ಬಂಧು ಹೂದರನ್ನು ನಾವು ಕಳುಹಿಸಿದೆವು. ಅವರು ಹೀಗೆಂದರು, ಓ ನನ್ನ ಜನಾಂಗ ಬಾಂಧವರೇ, ಅಲ್ಲಾಹ ನನ್ನು ಆರಾಧಿಸಿ. ಅವನ ಹೊರತು ಇನ್ನಾವ ಆರಾಧ್ಯನೂ ನಿಮಗಿಲ್ಲ. ನೀವು ಕೇವಲ ಸುಳ್ಳು ಸೃಷ್ಟಿ ಮಾಡಿ ಕೊಂಡಿರುತ್ತೀರಿ.

Verse 51

يَـٰقَوْمِ لَآ أَسْـَٔلُكُمْ عَلَيْهِ أَجْرًا ۖ إِنْ أَجْرِىَ إِلَّا عَلَى ٱلَّذِى فَطَرَنِىٓ ۚ أَفَلَا تَعْقِلُونَ

Transliteration yāqawmi lā asalukum ʿalayhi ajran in ajriya illā ʿalā alladhī faṭaranī afalā taʿqilūna

Kannada ಓ ನನ್ನ ಜನಾಂಗ ಬಾಂಧವರೇ, ಇದರ ಹೆಸರಲ್ಲಿ ನಾನು ನಿಮ್ಮಿಂದೇನೂ ಪ್ರತಿಫಲ ಕೇಳುವುದಿಲ್ಲ. ನನ್ನ ಪ್ರತಿಫಲವು ನನ್ನನ್ನು ಸೃಷ್ಟಿಸಿದವನ ಬಳಿ ಇದೆ. ನೀವು ಯೋಚಿಸುವುದಿಲ್ಲವೇ?

Verse 52

وَيَـٰقَوْمِ ٱسْتَغْفِرُوا۟ رَبَّكُمْ ثُمَّ تُوبُوٓا۟ إِلَيْهِ يُرْسِلِ ٱلسَّمَآءَ عَلَيْكُم مِّدْرَارًا وَيَزِدْكُمْ قُوَّةً إِلَىٰ قُوَّتِكُمْ وَلَا تَتَوَلَّوْا۟ مُجْرِمِينَ

Transliteration wayāqawmi is'taghfirū rabbakum thumma tūbū ilayhi yur'sili l-samāa ʿalaykum mid'rāran wayazid'kum quwwatan ilā quwwatikum walā tatawallaw muj'rimīna

Kannada ಓ ನನ್ನ ಜನಾಂಗ ಬಾಂಧವರೇ, ನಿಮ್ಮ ಪ್ರಭು ವಿನೊಡನೆ ಕ್ಷಮೆ ಯಾಚಿಸಿರಿ ಮತ್ತು ಪಶ್ಚಾತ್ತಾ ಪಪಟ್ಟು ಆತನ ಕಡೆಗೆ ಮರಳಿರಿ. ಅವನು ನಿಮ್ಮ ಮೇಲೆ ಆಕಾಶದಿಂದ ಸಮೃದ್ಧವಾಗಿ ಮಳೆ ಸುರಿ ಸುವನು ಮತ್ತು ನಿಮ್ಮ ಶಕ್ತಿಗೆ ಇನ್ನಷ್ಟು ಶಕ್ತಿಯ ನ್ನು ಹೆಚ್ಚಿಸಿ ಕೊಡುವನು. ಅಪರಾಧಿಗಳಾಗಿ ವಿಮುಖರಾಗಬೇಡಿರಿ.

Verse 53

قَالُوا۟ يَـٰهُودُ مَا جِئْتَنَا بِبَيِّنَةٍ وَمَا نَحْنُ بِتَارِكِىٓ ءَالِهَتِنَا عَن قَوْلِكَ وَمَا نَحْنُ لَكَ بِمُؤْمِنِينَ

Transliteration qālū yāhūdu mā ji'tanā bibayyinatin wamā naḥnu bitārikī ālihatinā ʿan qawlika wamā naḥnu laka bimu'minīna

Kannada ಅವರು ಹೇಳಿದರು; ಓ ಹೂದ್, ನೀವು ನಮ್ಮ ಬಳಿಗೆ ಸ್ಪಷ್ಟ ಪುರಾವೆಯನ್ನೇನೂ ತಂದಿಲ್ಲ. ನಿಮ್ಮ ಮಾತನ್ನು ಕೇಳಿ ನಾವು ನಮ್ಮ ದೇವ ರುಗಳನ್ನು ತ್ಯಜಿಸಿ ಬಿಡುವವರೇನಲ್ಲ. ನಿಮ್ಮ ಮೇಲೆ ನಾವು ವಿಶ್ವಾಸವಿಡಲಾರೆವು.

Verse 54

إِن نَّقُولُ إِلَّا ٱعْتَرَىٰكَ بَعْضُ ءَالِهَتِنَا بِسُوٓءٍ ۗ قَالَ إِنِّىٓ أُشْهِدُ ٱللَّهَ وَٱشْهَدُوٓا۟ أَنِّى بَرِىٓءٌ مِّمَّا تُشْرِكُونَ

Transliteration in naqūlu illā iʿ'tarāka baʿḍu ālihatinā bisūin qāla innī ush'hidu l-laha wa-ish'hadū annī barīon mimmā tush'rikūna

Kannada ನಮ್ಮ ದೇವರುಗಳ ಪೈಕಿ ಕೆಲವು ದೇವರುಗಳ ಅವಕೃಪೆಗೆ ತುತ್ತಾಗಿ ನಿನ್ನ ಬುದ್ಧಿ ಕೆಟ್ಟಿದೆ ಎಂದೇ ನಮಗೆ ಹೇಳಲಿಕ್ಕಿರುವುದು. ಹೂದ್ ಹೇಳಿದರು: ನಾನು ಅಲ್ಲಾಹನ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ನೀವೂ ಇದಕ್ಕೆ ಸಾಕ್ಷಿಗಳಾಗಿರಿ ನೀವು ಅಲ್ಲಾಹನ ಹೊರತು ದೇವತ್ವದಲ್ಲಿ ಪಾಲುದಾರರಾಗಿಸಿ ಕೊಂ ಡಿರುವ ಎಲ್ಲದರಿಂದ ನಾನು ಸಂಬಂಧ ಕಳೆದು ಕೊಂಡಿದ್ದೇನೆ.

Verse 55

مِن دُونِهِۦ ۖ فَكِيدُونِى جَمِيعًا ثُمَّ لَا تُنظِرُونِ

Transliteration min dūnihi fakīdūnī jamīʿan thumma lā tunẓirūni

Kannada ಈಗ ನೀವೆಲ್ಲ ಸೇರಿ ನನ್ನ ವಿರುದ್ಧ ಸಂಚು ಹೂಡಿರಿ. ನಂತರ ನನಗೆ ಸ್ವಲ್ಪವೂ ಕಾಲಾವಕಾಶ ಕೊಡಬೇಡಿರಿ .

Verse 56

إِنِّى تَوَكَّلْتُ عَلَى ٱللَّهِ رَبِّى وَرَبِّكُم ۚ مَّا مِن دَآبَّةٍ إِلَّا هُوَ ءَاخِذٌۢ بِنَاصِيَتِهَآ ۚ إِنَّ رَبِّى عَلَىٰ صِرَٰطٍ مُّسْتَقِيمٍ

Transliteration innī tawakkaltu ʿalā l-lahi rabbī warabbikum mā min dābbatin illā huwa ākhidhun bināṣiyatihā inna rabbī ʿalā ṣirāṭin mus'taqīmin

Kannada ನಾನು, ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುವ ಅಲ್ಲಾಹನ ಮೇಲೆ ಅಚಲ ಭರವಸೆ ಇಟ್ಟಿದ್ದೇನೆ. ಚಲಿಸುತ್ತಿರುವ ಪ್ರತಿಯೊಂದು ಜೀವಿಯ ಜುಟ್ಟು ಅವನ ಕೈಯಲ್ಲಿದೆ. ನಿಶ್ಚಯವಾಗಿಯೂ ನನ್ನ ಪ್ರಭು ಸ್ಥಿರವಾದ ಸನ್ಮಾರ್ಗದಲ್ಲಿದ್ದಾನೆ.

Verse 57

فَإِن تَوَلَّوْا۟ فَقَدْ أَبْلَغْتُكُم مَّآ أُرْسِلْتُ بِهِۦٓ إِلَيْكُمْ ۚ وَيَسْتَخْلِفُ رَبِّى قَوْمًا غَيْرَكُمْ وَلَا تَضُرُّونَهُۥ شَيْـًٔا ۚ إِنَّ رَبِّى عَلَىٰ كُلِّ شَىْءٍ حَفِيظٌ

Transliteration fa-in tawallaw faqad ablaghtukum mā ur'sil'tu bihi ilaykum wayastakhlifu rabbī qawman ghayrakum walā taḍurrūnahu shayan inna rabbī ʿalā kulli shayin ḥafīẓun

Kannada ನೀವು ವಿಮುಖರಾಗುವುದಾದರೆ, ನಾನು ಯಾವ ಸಂದೇಶವನ್ನು ಕೊಟ್ಟು ನಿಮ್ಮ ಬಳಿಗೆ ಕಳುಹಿ ಸಲ್ಪಟ್ಟಿದ್ದೆನೋ ಅದನ್ನು ನಾನು ನಿಮಗೆ ತಲುಪಿ ಸಿದ್ದೇನೆ. ಇನ್ನು ನನ್ನ ಪ್ರಭು ಇನ್ನೊಂದು ಜನಾಂಗವನ್ನು ನಿಮ್ಮ ಉತ್ತರಾಧಿಕಾರಿಯಾಗಿ ಎಬ್ಬಿಸುವನು. ನೀವು ಅವನಿಗೆ ಯಾವ ಹಾನಿಯನ್ನೂ ಮಾಡಲಾರಿರಿ. ಖಂಡಿತವಾಗಿಯೂ ನನ್ನ ಪ್ರಭು ಸಕಲ ವಸ್ತುಗಳ ಸಂರಕ್ಷಕನು.

Verse 58

وَلَمَّا جَآءَ أَمْرُنَا نَجَّيْنَا هُودًا وَٱلَّذِينَ ءَامَنُوا۟ مَعَهُۥ بِرَحْمَةٍ مِّنَّا وَنَجَّيْنَـٰهُم مِّنْ عَذَابٍ غَلِيظٍ

Transliteration walammā jāa amrunā najjaynā hūdan wa-alladhīna āmanū maʿahu biraḥmatin minnā wanajjaynāhum min ʿadhābin ghalīẓin

Kannada ನಮ್ಮ ಆಜ್ಞೆ ಬಂದಾಗ ನಾವು ನಮ್ಮ ಕೃಪೆ ಯಿಂದ ಹೂದರನ್ನೂ ಅವರ ಮೇಲೆ ವಿಶ್ವಾಸ ವಿರಿಸಿದವರನ್ನೂ ರಕ್ಷಿಸಿದೆವು ಮತ್ತು ನಾವು ಅವ ರನ್ನು ಕಠಿಣ ಶಿಕ್ಷೆಯಿಂದ ಪಾರುಗೊಳಿಸಿದೆವು

Verse 59

وَتِلْكَ عَادٌ ۖ جَحَدُوا۟ بِـَٔايَـٰتِ رَبِّهِمْ وَعَصَوْا۟ رُسُلَهُۥ وَٱتَّبَعُوٓا۟ أَمْرَ كُلِّ جَبَّارٍ عَنِيدٍ

Transliteration watil'ka ʿādun jaḥadū biāyāti rabbihim waʿaṣaw rusulahu wa-ittabaʿū amra kulli jabbārin ʿanīdin

Kannada ಇವರೇ ಆದ್ ಜನಾಂಗದವರು. ಇವರು ತಮ್ಮ ಪ್ರಭುವಿನ ನಿದರ್ಶನಗಳನ್ನು ನಿಷೇಧಿಸಿದರು, ಅವನ ದೂತರುಗಳನ್ನು ಧಿಕ್ಕರಿಸಿದರು. ಹಠವಾದಿಗಳಾದ ಎಲ್ಲ ಸ್ವೇಚ್ಛಾಧಿಪತಿಗಳ ಆದೇಶವನ್ನು ಅವರು ಅನುಸರಿಸಿದರು.

Verse 60

وَأُتْبِعُوا۟ فِى هَـٰذِهِ ٱلدُّنْيَا لَعْنَةً وَيَوْمَ ٱلْقِيَـٰمَةِ ۗ أَلَآ إِنَّ عَادًا كَفَرُوا۟ رَبَّهُمْ ۗ أَلَا بُعْدًا لِّعَادٍ قَوْمِ هُودٍ

Transliteration wa-ut'biʿū fī hādhihi l-dun'yā laʿnatan wayawma l-qiyāmati alā inna ʿādan kafarū rabbahum alā buʿ'dan liʿādin qawmi hūdin

Kannada ಇಹಲೋಕದಲ್ಲಿಯೂ ಪುನರುತ್ಥಾನ ದಿನದಲ್ಲೂ ಶಾಪ ಅವರನ್ನು ಹಿಂಬಾಲಿಸುವುದು. ತಿಳಿದಿರಲಿ. ಆದ್ ಜನಾಂಗವು ತನ್ನ ಪ್ರಭುವನ್ನು ನಿರಾಕರಿಸಿತು. ತಿಳಿದಿರಲಿ! ಹೂದ್‍ರ ಜನಾಂಗದವರಾದ ಆದ್ ದೇವಾನುಗ್ರಹದಿಂದ ದೂರವಾಗಿದೆ.

Verse 61

۞ وَإِلَىٰ ثَمُودَ أَخَاهُمْ صَـٰلِحًا ۚ قَالَ يَـٰقَوْمِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥ ۖ هُوَ أَنشَأَكُم مِّنَ ٱلْأَرْضِ وَٱسْتَعْمَرَكُمْ فِيهَا فَٱسْتَغْفِرُوهُ ثُمَّ تُوبُوٓا۟ إِلَيْهِ ۚ إِنَّ رَبِّى قَرِيبٌ مُّجِيبٌ

Transliteration wa-ilā thamūda akhāhum ṣāliḥan qāla yāqawmi uʿ'budū l-laha mā lakum min ilāhin ghayruhu huwa ansha-akum mina l-arḍi wa-is'taʿmarakum fīhā fa-is'taghfirūhu thumma tūbū ilayhi inna rabbī qarībun mujībun

Kannada ಸಮೂದರ ಕಡೆಗೆ ಅವರ ಸಹೋದರ ಸಾಲಿಹರ ನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹ ನನ್ನು ಆರಾಧಿಸಿರಿ. ಅವನ ಹೊರತು ಬೇರಾವ ಆರಾಧ್ಯನೂ ನಿಮಗಿಲ್ಲ. ಅವನೇ ನಿಮ್ಮನ್ನು ಮಣ್ಣಿ ನಿಂದ ಸೃಷ್ಟಿಸಿದನು ಮತ್ತು ಅದರಲ್ಲಿ ನೆಲೆಗೊ ಳಿಸಿದನು. ಆದುದರಿಂದ ನೀವು ಅವನೊಡನೆ ಕ್ಷಮೆಯಾಚಿಸಿರಿ ಮತ್ತು ಆತನೆಡೆಗೆ ಖೇದಪಟ್ಟು ಮರಳಿರಿ. ನಿಶ್ಚಯವಾಗಿಯೂ ನನ್ನ ಪ್ರಭು ಸೃಷ್ಟಿ ಗಳಿಗೆ ನಿಕಟನೂ (ಪ್ರಾರ್ಥನೆಗಳಿಗೆ) ಉತ್ತರ ಕೊಡುವವನೂ ಆಗಿರುತ್ತಾನೆ.

Verse 62

قَالُوا۟ يَـٰصَـٰلِحُ قَدْ كُنتَ فِينَا مَرْجُوًّا قَبْلَ هَـٰذَآ ۖ أَتَنْهَىٰنَآ أَن نَّعْبُدَ مَا يَعْبُدُ ءَابَآؤُنَا وَإِنَّنَا لَفِى شَكٍّ مِّمَّا تَدْعُونَآ إِلَيْهِ مُرِيبٍ

Transliteration qālū yāṣāliḥu qad kunta fīnā marjuwwan qabla hādhā atanhānā an naʿbuda mā yaʿbudu ābāunā wa-innanā lafī shakkin mimmā tadʿūnā ilayhi murībin

Kannada ಅವರು ಹೀಗೆ ಹೇಳಿದರು; `ಓ ಸಾಲಿಹ್, ಈ ಮೊದಲು ನೀನು ನಮ್ಮಡೆಯಲ್ಲಿ ಅಪೇಕ್ಷಣೀಯ ನಾಗಿದ್ದೆ. ನೀನು ಇದೀಗ ನಮ್ಮ ಪೂರ್ವಿಕರು ಆರಾಧಿಸಿ ಕೊಂಡಿದ್ದವುಗಳನ್ನು ಪೂಜಿಸುವುದ ರಿಂದ ನಮ್ಮನ್ನು ತಡೆಯುತ್ತೀಯಾ? ನೀನು ಯಾವ ದಾರಿಗೆ ನಮ್ಮನ್ನು ಕರೆಯುತ್ತಿರುವಿಯೋ ಅದರ ಬಗ್ಗೆ ನಮಗೆ ತೀವ್ರ ಸಂದೇಹವಿದೆ.

Verse 63

قَالَ يَـٰقَوْمِ أَرَءَيْتُمْ إِن كُنتُ عَلَىٰ بَيِّنَةٍ مِّن رَّبِّى وَءَاتَىٰنِى مِنْهُ رَحْمَةً فَمَن يَنصُرُنِى مِنَ ٱللَّهِ إِنْ عَصَيْتُهُۥ ۖ فَمَا تَزِيدُونَنِى غَيْرَ تَخْسِيرٍ

Transliteration qāla yāqawmi ara-aytum in kuntu ʿalā bayyinatin min rabbī waātānī min'hu raḥmatan faman yanṣurunī mina l-lahi in ʿaṣaytuhu famā tazīdūnanī ghayra takhsīrin

Kannada ಸಾಲಿಹ್ ಹೀಗೆಂದರು, ಓ ನನ್ನ ಜನಾಂಗ ಬಾಂಧ ವರೇ, ನೀವು ಯೋಚಿಸಿದಿರಾ? ನಾನು ನನ್ನ ಪ್ರಭುವಿನ ಕಡೆಯಿಂದ ಸುವ್ಯಕ್ತ ಪ್ರಮಾಣ ವನ್ನಿರಿಸಿಕೊಂಡಿದ್ದರೆ ಹಾಗೂ ಅವನ ಕಡೆಯಿಂ ದಿರುವ ಕೃಪೆಯನ್ನೂ ಅವನು ನನಗೆ ದಯಪಾಲಿಸಿದ್ದರೆ, ಆ ಬಳಿಕ ನಾನು ಅವನ ಆಜ್ಞೋಲ್ಲಂಘನೆ ಮಾಡಿದರೆ, ನನ್ನನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸಿ ನೆರವಾಗುವವರಾರು? ನೀವು ನನ್ನನ್ನು ಇನ್ನಷ್ಟು ನಷ್ಟಕ್ಕೆ ಗುರಿಪಡಿಸುವಿರೇ ವಿನಾ ಇನ್ನೇನೂ ಮಾಡಲಾರಿರಿ.

Verse 64

وَيَـٰقَوْمِ هَـٰذِهِۦ نَاقَةُ ٱللَّهِ لَكُمْ ءَايَةً فَذَرُوهَا تَأْكُلْ فِىٓ أَرْضِ ٱللَّهِ وَلَا تَمَسُّوهَا بِسُوٓءٍ فَيَأْخُذَكُمْ عَذَابٌ قَرِيبٌ

Transliteration wayāqawmi hādhihi nāqatu l-lahi lakum āyatan fadharūhā takul fī arḍi l-lahi walā tamassūhā bisūin fayakhudhakum ʿadhābun qarībun

Kannada ಓ ನನ್ನ ಜನಾಂಗ ಬಾಂಧವರೇ, ಇದೋ ನಿಮಗೊಂದು ನಿದರ್ಶನವಾಗಿ ಅಲ್ಲಾಹನ ಒಂಟೆ. ಇದನ್ನು ಅಲ್ಲಾಹನ ಭೂಮಿಯಲ್ಲಿ ಸ್ವತಂತ್ರವಾಗಿ ನಡೆದು ಮೇಯಲು ಬಿಡಿರಿ. ಕೇಡು ಬಗೆಯಲು ಅದನ್ನು ಸಮೀಪಿಸಬೇಡಿರಿ. ಅನ್ಯಥಾ ಶೀಘ್ರವೇ ನಿಮ್ಮನ್ನು ಶಿಕ್ಷೆ ಬಾದಿಸುವುದು.

Verse 65

فَعَقَرُوهَا فَقَالَ تَمَتَّعُوا۟ فِى دَارِكُمْ ثَلَـٰثَةَ أَيَّامٍ ۖ ذَٰلِكَ وَعْدٌ غَيْرُ مَكْذُوبٍ

Transliteration faʿaqarūhā faqāla tamattaʿū fī dārikum thalāthata ayyāmin dhālika waʿdun ghayru makdhūbin

Kannada ಆದರೆ ಅವರು ಅದನ್ನು ತರಿದು ಕೊಂದರು. ಆಗ ಸಾಲಿಹ್‍ರು ಹೇಳಿದರು; ನೀವಿನ್ನು ಬರೇ ಮೂರು ದಿನಗಳ ತನಕ ನಿಮ್ಮ ಮನೆಗಳಲ್ಲಿ ಸುಖವಾಗಿ ವಾಸಿಸಿರಿ. ಸುಳ್ಳಾಗದಂತಹ ವಾಗ್ದಾನವಿದು.

Verse 66

فَلَمَّا جَآءَ أَمْرُنَا نَجَّيْنَا صَـٰلِحًا وَٱلَّذِينَ ءَامَنُوا۟ مَعَهُۥ بِرَحْمَةٍ مِّنَّا وَمِنْ خِزْىِ يَوْمِئِذٍ ۗ إِنَّ رَبَّكَ هُوَ ٱلْقَوِىُّ ٱلْعَزِيزُ

Transliteration falammā jāa amrunā najjaynā ṣāliḥan wa-alladhīna āmanū maʿahu biraḥmatin minnā wamin khiz'yi yawmi-idhin inna rabbaka huwa l-qawiyu l-ʿazīzu

Kannada ಕೊನೆಗೆ ನಮ್ಮ ಆಜ್ಞೆ ಬಂದಾಗ ನಾವು ನಮ್ಮ ಕೃಪೆಯಿಂದ ಸಾಲಿಹರನ್ನೂ ಅವರ ಮೇಲೆ ವಿಶ್ವಾಸವಿಟ್ಟವರನ್ನೂ ರಕ್ಷಿಸಿದೆವು ಮತ್ತು ಆ ದಿನದ ಅಪಮಾನದಿಂದ ಅವರನ್ನು ಕಾಪಾಡಿದೆವು. ನಿಶ್ಚಯವಾಗಿಯೂ ನಿಮ್ಮ ಪ್ರಭುವೇ ಪ್ರಬಲನೂ ಅಜೇಯನೂ ಆಗಿರುತ್ತಾನೆ.

Verse 67

وَأَخَذَ ٱلَّذِينَ ظَلَمُوا۟ ٱلصَّيْحَةُ فَأَصْبَحُوا۟ فِى دِيَـٰرِهِمْ جَـٰثِمِينَ

Transliteration wa-akhadha alladhīna ẓalamū l-ṣayḥatu fa-aṣbaḥū fī diyārihim jāthimīna

Kannada ಅಕ್ರಮವೆಸಗಿದವರನ್ನು ಒಂದು ಘೋರ ಶಬ್ಧವು ಹಿಡಿಯಿತು. ಅವರು ಅವರ ಮನೆಗಳಲ್ಲಿ ಬೋರಲಾಗಿ ಸತ್ತು ಬಿದ್ದರು!

Verse 68

كَأَن لَّمْ يَغْنَوْا۟ فِيهَآ ۗ أَلَآ إِنَّ ثَمُودَا۟ كَفَرُوا۟ رَبَّهُمْ ۗ أَلَا بُعْدًا لِّثَمُودَ

Transliteration ka-an lam yaghnaw fīhā alā inna thamūdā kafarū rabbahum alā buʿ'dan lithamūda

Kannada ಅವರು ಅಲ್ಲಿ ವಾಸಿಸಿರಲೇ ಇಲ್ಲವೆಂಬಂತೆ (ಅವರು ನಾಶವಾದರು). ತಿಳಿದಿರಲಿ! ಸಮೂದರು ತಮ್ಮ ಪ್ರಭುವನ್ನು ನಿಷೇಧಿಸಿದರು. ತಿಳಿದಿರಲಿ! ಸಮೂದರು ದೇವಾನುಗ್ರಹದಿಂದ ವಿದೂರವಾದರು.

Verse 69

وَلَقَدْ جَآءَتْ رُسُلُنَآ إِبْرَٰهِيمَ بِٱلْبُشْرَىٰ قَالُوا۟ سَلَـٰمًا ۖ قَالَ سَلَـٰمٌ ۖ فَمَا لَبِثَ أَن جَآءَ بِعِجْلٍ حَنِيذٍ

Transliteration walaqad jāat rusulunā ib'rāhīma bil-bush'rā qālū salāman qāla salāmun famā labitha an jāa biʿij'lin ḥanīdhin

Kannada ನಮ್ಮ ದೂತರು ಇಬ್‍ರಾಹೀಮರ ಬಳಿ ಸುವಾರ್ತೆಯೊಂದಿಗೆ ಬಂದರು. ನಿಮಗೆ ಸಲಾಮ್ ಎಂದರು. ಇಬ್‍ರಾಹೀಮರು ನಿಮಗೂ ಸಲಾಮ್ ಎಂದರು. ತಡವಾಗಲಿಲ್ಲ. ಅವರು ಹುರಿದ ಒಂದು ಕರುವನ್ನು ತಂದು ಅವರ (ಭೋಜ ನಕ್ಕಾಗಿ) ಮುಂದಿಟ್ಟರು.

Verse 70

فَلَمَّا رَءَآ أَيْدِيَهُمْ لَا تَصِلُ إِلَيْهِ نَكِرَهُمْ وَأَوْجَسَ مِنْهُمْ خِيفَةً ۚ قَالُوا۟ لَا تَخَفْ إِنَّآ أُرْسِلْنَآ إِلَىٰ قَوْمِ لُوطٍ

Transliteration falammā raā aydiyahum lā taṣilu ilayhi nakirahum wa-awjasa min'hum khīfatan qālū lā takhaf innā ur'sil'nā ilā qawmi lūṭin

Kannada ಆದರೆ ಅವರ ಕೈಗಳು ಆಹಾರದ ಕಡೆಗೆ ಮುಟ್ಟ ದಿರುವುದನ್ನು ಕಂಡಾಗ ಅವರಿಗೆ ಅತಿಥಿಗಳ ಬಗ್ಗೆ ಅಸಹನೆ ತೋರಿತು. ಮತ್ತು ತಣ್ಣನೆ ಭಯ ಆವರಿಸಿತು. ಅವರು ಹೀಗೆಂದರು; `ಹೆದರ ಬೇಡಿರಿ, ನಾವು ಲೂಥರ ಜನಾಂಗದ ಕಡೆಗೆ ಕಳುಹಿಸಲ್ಪಟ್ಟವರು.

Verse 71

وَٱمْرَأَتُهُۥ قَآئِمَةٌ فَضَحِكَتْ فَبَشَّرْنَـٰهَا بِإِسْحَـٰقَ وَمِن وَرَآءِ إِسْحَـٰقَ يَعْقُوبَ

Transliteration wa-im'ra-atuhu qāimatun faḍaḥikat fabasharnāhā bi-is'ḥāqa wamin warāi is'ḥāqa yaʿqūba

Kannada ಇಬ್‍ರಾಹೀಮರ ಪತ್ನಿಯೂ ನಿಂತಿದ್ದರು. ಅವರು ಇದನ್ನು ಕೇಳಿ ನಕ್ಕು ಬಿಟ್ಟರು. ಅನಂತರ ನಾವು ಆಕೆಗೆ ಇಸ್‍ಹಾಖ್ ಮತ್ತು ಇಸ್‍ಹಾಖರ ತರುವಾಯ ಯಅïಖೂಬರ ಬಗೆಗೂ ಸುವಾರ್ತೆ ನೀಡಿದೆವು.

Verse 72

قَالَتْ يَـٰوَيْلَتَىٰٓ ءَأَلِدُ وَأَنَا۠ عَجُوزٌ وَهَـٰذَا بَعْلِى شَيْخًا ۖ إِنَّ هَـٰذَا لَشَىْءٌ عَجِيبٌ

Transliteration qālat yāwaylatā a-alidu wa-anā ʿajūzun wahādhā baʿlī shaykhan inna hādhā lashayon ʿajībun

Kannada ಅವರು ಹೇಳಿದರು: `ಅಯ್ಯೋ’, ನಾನು ಹಣ್ಣು ಮುದುಕಿಯೂ ನನ್ನ ಈ ಪತಿಯಾದರೋ ಕಡು ವೃದ್ಧರೂ ಆಗಿರುವಾಗ ನನ್ನಲ್ಲಿ ಮಕ್ಕಳಾಗುವರೇ? ಇದು ಅತ್ಯಂತ ಸೋಜಿಗದ ವಿಷಯ!

Verse 73

قَالُوٓا۟ أَتَعْجَبِينَ مِنْ أَمْرِ ٱللَّهِ ۖ رَحْمَتُ ٱللَّهِ وَبَرَكَـٰتُهُۥ عَلَيْكُمْ أَهْلَ ٱلْبَيْتِ ۚ إِنَّهُۥ حَمِيدٌ مَّجِيدٌ

Transliteration qālū ataʿjabīna min amri l-lahi raḥmatu l-lahi wabarakātuhu ʿalaykum ahla l-bayti innahu ḥamīdun majīdun

Kannada (ದೇವಚರರು) ಹೇಳಿದರು; ಅಲ್ಲಾಹನ ಕಾರ್ಯದ ಬಗ್ಗೆ ಆಶ್ಚರ್ಯಪಡುತ್ತೀರಾ? ಓ ಮನೆಯವರೇ, ನಿಮ್ಮ ಮೇಲೆ ಅಲ್ಲಾಹನ ದಯೆ ಮತ್ತು ಸಮೃದ್ಧಿ ಉಂಟಾಗಲಿ. ನಿಜವಾಗಿಯೂ ಅಲ್ಲಾಹು ಪರಮ ಸ್ತುತ್ಯರ್ಹನೂ ಮಹಿಮಾವಂತನೂ ಆಗಿರುತ್ತಾನೆ.

Verse 74

فَلَمَّا ذَهَبَ عَنْ إِبْرَٰهِيمَ ٱلرَّوْعُ وَجَآءَتْهُ ٱلْبُشْرَىٰ يُجَـٰدِلُنَا فِى قَوْمِ لُوطٍ

Transliteration falammā dhahaba ʿan ib'rāhīma l-rawʿu wajāathu l-bush'rā yujādilunā fī qawmi lūṭin

Kannada ಹೀಗೆ ಇಬ್‍ರಾಹೀಮರ ಭಯ ನೀಗಿದಾಗ ಮತ್ತು ಅವರಿಗೆ ಸುವಾರ್ತೆ ಸಿಕ್ಕಿದ ನಂತರ ಅವರು ನಮ್ಮೊಡನೆ ಲೂಥ್ ಜನಾಂಗದ ಕುರಿತು ವಾಗ್ವಾದ ನಡೆಸಿದರು.

Verse 75

إِنَّ إِبْرَٰهِيمَ لَحَلِيمٌ أَوَّٰهٌ مُّنِيبٌ

Transliteration inna ib'rāhīma laḥalīmun awwāhun munībun

Kannada ನಿಜಕ್ಕೂ ಇಬ್‍ರಾಹೀಮರು ಸಹನಶೀಲರೂ ಅನುಕಂಪವುಳ್ಳವರೂ ಕೋಮಲ ಹೃದಯಿಯೂ ಪಶ್ಚಾತ್ತಾಪವುಳ್ಳವರೂ ಆಗಿದ್ದರು.

Verse 76

يَـٰٓإِبْرَٰهِيمُ أَعْرِضْ عَنْ هَـٰذَآ ۖ إِنَّهُۥ قَدْ جَآءَ أَمْرُ رَبِّكَ ۖ وَإِنَّهُمْ ءَاتِيهِمْ عَذَابٌ غَيْرُ مَرْدُودٍ

Transliteration yāib'rāhīmu aʿriḍ ʿan hādhā innahu qad jāa amru rabbika wa-innahum ātīhim ʿadhābun ghayru mardūdin

Kannada `ಓ ಇಬ್‍ರಾಹೀಮರೇ, ಈ ತರ್ಕದಿಂದ ಬಿಟ್ಟು ನಿಲ್ಲಿರಿ. ನಿಶ್ಚಯವಾಗಿಯೂ ನಿಮ್ಮ ಪ್ರಭುವಿನ ಅಪ್ಪಣೆ ಬಂದು ಬಿಟ್ಟಿದೆ. ಇನ್ನು ಅವರಿಗೆ ರದ್ದು ಪಡಿಸಲಾಗದಂತಹ ಶಿಕ್ಷೆ ಬಂದೇ ತೀರುವುದು.

Verse 77

وَلَمَّا جَآءَتْ رُسُلُنَا لُوطًا سِىٓءَ بِهِمْ وَضَاقَ بِهِمْ ذَرْعًا وَقَالَ هَـٰذَا يَوْمٌ عَصِيبٌ

Transliteration walammā jāat rusulunā lūṭan sīa bihim waḍāqa bihim dharʿan waqāla hādhā yawmun ʿaṣībun

Kannada ನಮ್ಮ ದೂತರು `ಲೂಥ’ರ ಬಳಿಗೆ ಬಂದಾಗ ಅವರ ಕಾರಣಕ್ಕೆ ಅವರು ತುಂಬಾ ಬೇಸರಗೊಂಡರು ಮತ್ತು ಅವರ ಮನಸ್ಸು ಕುಗ್ಗಿ ಹೋಯಿತು. ಇದೊಂದು ಕಠಿಣ ದಿನ ಎಂದರವರು .

Verse 78

وَجَآءَهُۥ قَوْمُهُۥ يُهْرَعُونَ إِلَيْهِ وَمِن قَبْلُ كَانُوا۟ يَعْمَلُونَ ٱلسَّيِّـَٔاتِ ۚ قَالَ يَـٰقَوْمِ هَـٰٓؤُلَآءِ بَنَاتِى هُنَّ أَطْهَرُ لَكُمْ ۖ فَٱتَّقُوا۟ ٱللَّهَ وَلَا تُخْزُونِ فِى ضَيْفِىٓ ۖ أَلَيْسَ مِنكُمْ رَجُلٌ رَّشِيدٌ

Transliteration wajāahu qawmuhu yuh'raʿūna ilayhi wamin qablu kānū yaʿmalūna l-sayiāti qāla yāqawmi hāulāi banātī hunna aṭharu lakum fa-ittaqū l-laha walā tukh'zūni fī ḍayfī alaysa minkum rajulun rashīdun

Kannada ಅವರ ಜನಾಂಗದವರು ಅವರ ಮನೆಯ ಕಡೆಗೆ ಓಡುತ್ತ ಬಂದರು. ಅವರು ಮುಂಚಿನಿಂದಲೇ ದುಶ್ಚಟವಿದ್ದವರಾಗಿದ್ದರು. ಅವರೊಡನೆ ಲೂಥ್ ಹೀಗೆಂದರು, ಓ ನನ್ನ ಜನಾಂಗದವರೇ, ಇದೋ ನನ್ನ ಹೆಣ್ಣು ಮಕ್ಕಳು. ಇವರು ನಿಮಗೆ ಶುದ್ಧರಾದವರು. (ಅವರನ್ನು ನೀವು ವಿವಾಹವಾಗ ಬಹು ದಲ್ಲ?) ಆದ್ದರಿಂದ ಅಲ್ಲಾಹನನ್ನು ಭಯಪಡಿರಿ. ನನ್ನ ಅತಿಥಿಗಳನ್ನು ಅಪಮಾನಿಸುವ ಮೂಲಕ ನನ್ನನ್ನು ಅಪಮಾನಿಸಬೇಡಿರಿ. ನಿಮ್ಮಲ್ಲಿ ವಿವೇಕವಿರುವ ಒಬ್ಬ ಪುರುಷನೂ ಇಲ್ಲವೇ?

Verse 79

قَالُوا۟ لَقَدْ عَلِمْتَ مَا لَنَا فِى بَنَاتِكَ مِنْ حَقٍّ وَإِنَّكَ لَتَعْلَمُ مَا نُرِيدُ

Transliteration qālū laqad ʿalim'ta mā lanā fī banātika min ḥaqqin wa-innaka lataʿlamu mā nurīdu

Kannada ಅವರು ಹೇಳಿದರು, ನಿಮ್ಮ ಪುತ್ರಿಯರಲ್ಲಿ ನಮ ಗೇನೂ ಅವಶ್ಯಕತೆ ಇಲ್ಲವೆಂಬುದು ನಿಮಗೆ ಗೊತ್ತೇ ಇದೆ. ನಾವು ಇಚ್ಛಿಸುವುದೇನೆಂಬುದೂ ನಿಮಗೆ ತಿಳಿದಿದೆ.

Verse 80

قَالَ لَوْ أَنَّ لِى بِكُمْ قُوَّةً أَوْ ءَاوِىٓ إِلَىٰ رُكْنٍ شَدِيدٍ

Transliteration qāla law anna lī bikum quwwatan aw āwī ilā ruk'nin shadīdin

Kannada ಲೂಥ್ ಹೇಳಿದರು; ನಿಮ್ಮನ್ನು ತಡೆಯುವ ಶಕ್ತಿ ನನಗಿರುತ್ತಿದ್ದರೆ ! ಅಥವಾ ಬಲಿಷ್ಠ ಸಂಘದೆಡೆಗೆ ನಾನು ಆಶ್ರಯ ಪಡೆಯುತ್ತಿದ್ದರೆ, (ನಿಮ್ಮನ್ನು ನಾನು ಮಟ್ಟ ಹಾಕುತ್ತಿದ್ದೆ).

Verse 81

قَالُوا۟ يَـٰلُوطُ إِنَّا رُسُلُ رَبِّكَ لَن يَصِلُوٓا۟ إِلَيْكَ ۖ فَأَسْرِ بِأَهْلِكَ بِقِطْعٍ مِّنَ ٱلَّيْلِ وَلَا يَلْتَفِتْ مِنكُمْ أَحَدٌ إِلَّا ٱمْرَأَتَكَ ۖ إِنَّهُۥ مُصِيبُهَا مَآ أَصَابَهُمْ ۚ إِنَّ مَوْعِدَهُمُ ٱلصُّبْحُ ۚ أَلَيْسَ ٱلصُّبْحُ بِقَرِيبٍ

Transliteration qālū yālūṭu innā rusulu rabbika lan yaṣilū ilayka fa-asri bi-ahlika biqiṭ'ʿin mina al-layli walā yaltafit minkum aḥadun illā im'ra-ataka innahu muṣībuhā mā aṣābahum inna mawʿidahumu l-ṣub'ḥu alaysa l-ṣub'ḥu biqarībin

Kannada ಆಗ ದೇವಚರರು ಹೇಳಿದರು; `ಓ ಲೂಥ್, ನಾವು ನಿಮ್ಮ ಪ್ರಭುವಿನ ದೂತರಾಗಿರುತ್ತೇವೆ. ನಿಮ್ಮ ಕಡೆಗೆ (ಕೇಡುಂಟು ಮಾಡಲು) ಅವರಿಗೆ ಖಂಡಿ ತ ಬರಲಾಗದು. ಆದ್ದರಿಂದ ರಾತ್ರಿಯ ಒಂದು ಯಾಮದಲ್ಲಿ ನಿಮ್ಮ ಕುಟುಂಬದವರನ್ನು ಸಂ ಗಡ ಕರೆದು ಕೊಂಡು ಯಾತ್ರೆ ಹೊರಡಿರಿ. ನಿಮ್ಮಲ್ಲಿ ಯಾರೊಬ್ಬರೂ ಹಿಂದೆ ತಿರುಗಿ ನೋಡಬಾರದು. ಆದರೆ ನಿಮ್ಮ ಪತ್ನಿಯನ್ನು ಹೊರತು. ಏಕೆಂದರೆ ಇವರಿಗೆ ತಲುಪಿದ ಶಿಕ್ಷೆ ಅವಳಿಗೂ ತಲುಪು ವುದು. ಅವರ ವಿನಾಶಕ್ಕಾಗಿ ನಿಶ್ಚಯಿಸಲಾದ ಅವಧಿಯು ಪ್ರಾತಃಕಾಲವಾಗಿದೆ. ಪ್ರಾತಃಕಾಲ ಹತ್ತಿರವೇ ಇದೆಯಲ್ಲ!

Verse 82

فَلَمَّا جَآءَ أَمْرُنَا جَعَلْنَا عَـٰلِيَهَا سَافِلَهَا وَأَمْطَرْنَا عَلَيْهَا حِجَارَةً مِّن سِجِّيلٍ مَّنضُودٍ

Transliteration falammā jāa amrunā jaʿalnā ʿāliyahā sāfilahā wa-amṭarnā ʿalayhā ḥijāratan min sijjīlin manḍūdin

Kannada ಹೀಗೆ ನಮ್ಮ ಆಜ್ಞೆ ಬಂದಾಗ ನಾವು ಆ ನಾಡನ್ನು ಬುಡಮೇಲು ಮಾಡಿಬಿಟ್ಟೆವು ಮತ್ತು ಅವರ ಮೇಲೆ ಸುಡುಕಲ್ಲುಗಳನ್ನು ಎಡೆಬಿಡದೆ ಮಳೆಗರೆದೆವು.

Verse 83

مُّسَوَّمَةً عِندَ رَبِّكَ ۖ وَمَا هِىَ مِنَ ٱلظَّـٰلِمِينَ بِبَعِيدٍ

Transliteration musawwamatan ʿinda rabbika wamā hiya mina l-ẓālimīna bibaʿīdin

Kannada ಅವು ನಿಮ್ಮ ಪ್ರಭುವಿನ ಬಳಿ ಗುರುತು ಹಾಕ ಲಾದ ಕಲ್ಲುಗಳಾಗಿದ್ದುವು. ಆ ನಾಡು ಈ ಅಕ್ರಮಿಗಳಿಂದ ದೂರವಿಲ್ಲ.

Verse 84

۞ وَإِلَىٰ مَدْيَنَ أَخَاهُمْ شُعَيْبًا ۚ قَالَ يَـٰقَوْمِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥ ۖ وَلَا تَنقُصُوا۟ ٱلْمِكْيَالَ وَٱلْمِيزَانَ ۚ إِنِّىٓ أَرَىٰكُم بِخَيْرٍ وَإِنِّىٓ أَخَافُ عَلَيْكُمْ عَذَابَ يَوْمٍ مُّحِيطٍ

Transliteration wa-ilā madyana akhāhum shuʿayban qāla yāqawmi uʿ'budū l-laha mā lakum min ilāhin ghayruhu walā tanquṣū l-mik'yāla wal-mīzāna innī arākum bikhayrin wa-innī akhāfu ʿalaykum ʿadhāba yawmin muḥīṭin

Kannada ನಾವು `ಮದ್‍ಯನ್’ ಜನಾಂಗದ ಕಡೆಗೆ ಅವರ ಸಹೋದರ ಶುಐಬರನ್ನು ಕಳುಹಿಸಿದೆವು. ಅವರು ಹೇಳಿದರು; ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರ ತು ನಿಮಗೆ ಬೇರೆ ಆರಾಧ್ಯನಿಲ್ಲ. ನೀವು ಅಳತೆ ಮತ್ತು ತೂಕದಲ್ಲಿ ಕಡಿತ ಮಾಡಬೇಡಿರಿ. ಇಂದು ನಾನು ನಿಮ್ಮನ್ನು ಉತ್ತಮ ಸ್ಥಿತಿಯಲ್ಲಿ ಕಾಣುತ್ತಿ ದ್ದೇನೆ. ಆದರೆ ನಿಮ್ಮ ಮೇಲೆ, ಸಂಪೂರ್ಣ ಆವರಿ ಸಿಕೊಳ್ಳುವ ಶಿಕ್ಷೆಯ ದಿನವೊಂದು ಎರಗುವುದನ್ನು ನಾನು ಭಯಪಡುತ್ತೇನೆ.

Verse 85

وَيَـٰقَوْمِ أَوْفُوا۟ ٱلْمِكْيَالَ وَٱلْمِيزَانَ بِٱلْقِسْطِ ۖ وَلَا تَبْخَسُوا۟ ٱلنَّاسَ أَشْيَآءَهُمْ وَلَا تَعْثَوْا۟ فِى ٱلْأَرْضِ مُفْسِدِينَ

Transliteration wayāqawmi awfū l-mik'yāla wal-mīzāna bil-qis'ṭi walā tabkhasū l-nāsa ashyāahum walā taʿthaw fī l-arḍi muf'sidīna

Kannada ಓ ನನ್ನ ಜನಾಂಗ ಬಾಂಧವರೇ, ನ್ಯಾಯೋಚಿತ ವಾಗಿ ಅಳೆಯಿರಿ ಮತ್ತು ತೂಗಿರಿ. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ಕೊಡಬೇಡಿರಿ ಮತ್ತು ಭೂಮಿಯಲ್ಲಿ ಕ್ಷೋಭೆ ಹರಡುತ್ತ ಅಲೆಯ ಬೇಡಿರಿ.

Verse 86

بَقِيَّتُ ٱللَّهِ خَيْرٌ لَّكُمْ إِن كُنتُم مُّؤْمِنِينَ ۚ وَمَآ أَنَا۠ عَلَيْكُم بِحَفِيظٍ

Transliteration baqiyyatu l-lahi khayrun lakum in kuntum mu'minīna wamā anā ʿalaykum biḥafīẓin

Kannada ನೀವು ನಿಜಕ್ಕೂ ನಂಬಿಕೆಯುಳ್ಳವರಾಗಿದ್ದರೆ ಅಲ್ಲಾಹನು ನೀಡಿದ ಉಳಿತಾಯವೇ (ಅನ್ಯಾಯದ ಸಂಪಾದನೆಗಿಂತ) ನಿಮಗೆ ಉತ್ತಮ. ನಾನೇನೂ ನಿಮ್ಮ ಕಾವಲುಗಾರನಲ್ಲ.

Verse 87

قَالُوا۟ يَـٰشُعَيْبُ أَصَلَوٰتُكَ تَأْمُرُكَ أَن نَّتْرُكَ مَا يَعْبُدُ ءَابَآؤُنَآ أَوْ أَن نَّفْعَلَ فِىٓ أَمْوَٰلِنَا مَا نَشَـٰٓؤُا۟ ۖ إِنَّكَ لَأَنتَ ٱلْحَلِيمُ ٱلرَّشِيدُ

Transliteration qālū yāshuʿaybu aṣalatuka tamuruka an natruka mā yaʿbudu ābāunā aw an nafʿala fī amwālinā mā nashāu innaka la-anta l-ḥalīmu l-rashīdu

Kannada ಅವರು ಹೇಳಿದರು; `ಓ ಶುಐಬ್, ನಾವು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದುದನ್ನು ತ್ಯಜಿಸ ಬೇಕೆಂದಾಗಲಿ, ನಮ್ಮ ಸೊತ್ತುಗಳಲ್ಲಿ ನಮಗೆ ಇಷ್ಟ ಬಂದ ಪ್ರಕಾರ ಮಾಡಬಾರದೆಂದಾಗಲಿ ನಿನ್ನ ನಮಾಝ್ ನಿನಗೆ ಆಜ್ಞಾಪಿಸುತ್ತಿದೆಯೇ? ನೀನೊಬ್ಬನು ಮಾತ್ರ ಮಹಾ ಸೌಜನ್ಯಶೀಲನೂ ಸನ್ಮಾರ್ಗನಿಷ್ಟನೂ ಆಗಿಬಿಟ್ಟಿರುವೆ!

Verse 88

قَالَ يَـٰقَوْمِ أَرَءَيْتُمْ إِن كُنتُ عَلَىٰ بَيِّنَةٍ مِّن رَّبِّى وَرَزَقَنِى مِنْهُ رِزْقًا حَسَنًا ۚ وَمَآ أُرِيدُ أَنْ أُخَالِفَكُمْ إِلَىٰ مَآ أَنْهَىٰكُمْ عَنْهُ ۚ إِنْ أُرِيدُ إِلَّا ٱلْإِصْلَـٰحَ مَا ٱسْتَطَعْتُ ۚ وَمَا تَوْفِيقِىٓ إِلَّا بِٱللَّهِ ۚ عَلَيْهِ تَوَكَّلْتُ وَإِلَيْهِ أُنِيبُ

Transliteration qāla yāqawmi ara-aytum in kuntu ʿalā bayyinatin min rabbī warazaqanī min'hu riz'qan ḥasanan wamā urīdu an ukhālifakum ilā mā anhākum ʿanhu in urīdu illā l-iṣ'lāḥa mā is'taṭaʿtu wamā tawfīqī illā bil-lahi ʿalayhi tawakkaltu wa-ilayhi unību

Kannada ಶುಐಬ್ ಹೇಳಿದರು; ಓ ನನ್ನ ಜನಾಂಗ ಬಾಂಧವರೇ, ನೀವು ವಿವೇಚಿಸಿ ನೋಡಿದಿರಾ? ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸುಸ್ಪಷ್ಟ ಪ್ರಮಾಣವನ್ನು ಅವಲಂಬಿಸಿದ್ದು, ಅವನು ನನಗೆ ತನ್ನ ಕಡೆಯಿಂದ ಉತ್ತಮ ಜೀವನಾಧಾರವನ್ನೂ ದಯಪಾಲಿಸಿದ್ದರೆ, (ನನಗೆ ಸತ್ಯವನ್ನು ಅಡಗಿಸಿಡಲು ಹೇಗೆ ಸಾಧ್ಯ?) ನಾನು ನಿಮ್ಮನ್ನು ಯಾವುದರಿಂದ ತಡೆಯುತ್ತಿರು ವೆನೋ ಅದನ್ನು ನಾನೇ ಮಾಡಲು ಇಚ್ಚಿಸುವು ದಿಲ್ಲ. ನಾನು ನನ್ನಿಂದ ಸಾಧ್ಯವಾಗುವಷ್ಟು ಸುಧಾರಣೆ ಮಾಡಲಿಚ್ಛಿಸುತ್ತೇನೆ. ಅಲ್ಲಾಹನ ಮುಖೇನ ಮಾತ್ರ ನನಗೆ ಅದರ ಯೋಗ ಬಂದಿದೆ. ನಾನು ಅವನ ಮೇಲೆಯೇ ಭರವಸೆ ಯನ್ನಿರಿಸಿದ್ದೇನೆ ಮತ್ತು ಅವನತ್ತಲೇ ನಾನು ದೈನ್ಯತೆಯಿಂದ ಮರಳುತ್ತೇನೆ.

Verse 89

وَيَـٰقَوْمِ لَا يَجْرِمَنَّكُمْ شِقَاقِىٓ أَن يُصِيبَكُم مِّثْلُ مَآ أَصَابَ قَوْمَ نُوحٍ أَوْ قَوْمَ هُودٍ أَوْ قَوْمَ صَـٰلِحٍ ۚ وَمَا قَوْمُ لُوطٍ مِّنكُم بِبَعِيدٍ

Transliteration wayāqawmi lā yajrimannakum shiqāqī an yuṣībakum mith'lu mā aṣāba qawma nūḥin aw qawma hūdin aw qawma ṣāliḥin wamā qawmu lūṭin minkum bibaʿīdin

Kannada ಓ ನನ್ನ ಜನಾಂಗ ಬಾಂಧವರೇ, ನೂಹರ ಜನಾಂಗ ಅಥವಾ ಹೂದರ ಜನಾಂಗ ಅಥವಾ ಸಾಲಿಹರ ಜನಾಂಗಕ್ಕೆ ಬಾಧಿಸಿದಂತಹ ವಿನಾ ಶವು ನಿಮಗೂ ಬಾಧಿಸಲು ನನ್ನೊಂದಿಗಿರುವ ನಿಮ್ಮ ವಿರೋಧವು ಕಾರಣವಾಗದಿರಲಿ. ಲೂಥರ ಜನಾಂಗವು ನಿಮಗಿಂತ ಹೆಚ್ಚೇನೂ ದೂರವಿಲ್ಲ.

Verse 90

وَٱسْتَغْفِرُوا۟ رَبَّكُمْ ثُمَّ تُوبُوٓا۟ إِلَيْهِ ۚ إِنَّ رَبِّى رَحِيمٌ وَدُودٌ

Transliteration wa-is'taghfirū rabbakum thumma tūbū ilayhi inna rabbī raḥīmun wadūdun

Kannada ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಬೇಡಿರಿ. ಅವನ ಕಡೆಗೆ ಖೇದಿಸಿ ಮರಳಿರಿ. ನಿಶ್ಚಯವಾಗಿಯೂ ನನ್ನ ಪ್ರಭು ಕೃಪಾನಿಧಿಯೂ (ಸತ್ಯ ವಿಶ್ವಾಸಿಗಳಿಗೆ) ಪ್ರಿಯಕರನೂ ಆಗಿರುತ್ತಾನೆ.

Verse 91

قَالُوا۟ يَـٰشُعَيْبُ مَا نَفْقَهُ كَثِيرًا مِّمَّا تَقُولُ وَإِنَّا لَنَرَىٰكَ فِينَا ضَعِيفًا ۖ وَلَوْلَا رَهْطُكَ لَرَجَمْنَـٰكَ ۖ وَمَآ أَنتَ عَلَيْنَا بِعَزِيزٍ

Transliteration qālū yāshuʿaybu mā nafqahu kathīran mimmā taqūlu wa-innā lanarāka fīnā ḍaʿīfan walawlā rahṭuka larajamnāka wamā anta ʿalaynā biʿazīzin

Kannada ಅವರು ಹೀಗೆ ಹೇಳಿದರು; `ಓ ಶುಐಬ್, ನಿನ್ನ ಹೆಚ್ಚಿನ ಮಾತುಗಳು ನಮಗೆ ಅರ್ಥವೇ ಆಗು ವುದಿಲ್ಲ. ನೀನು ನಮ್ಮೊಳಗೆ ಓರ್ವ ನಿಂದ್ಯನಾಗಿ ರುವುದನ್ನು ನಾವು ಕಾಣುತ್ತೇವೆ. ನಿನ್ನ ಸಂಸಾರ ವಿಲ್ಲದಿರುತ್ತಿದ್ದರೆ ನಿನ್ನನ್ನು ನಾವು ಕಲ್ಲೆಸೆದು ಕೊಂದು ಹಾಕುತ್ತಿದ್ದೆವು. ನೀನು ನಮಗಿಂತ ಮಾನ್ಯನೇನೂ ಅಲ್ಲ.

Verse 92

قَالَ يَـٰقَوْمِ أَرَهْطِىٓ أَعَزُّ عَلَيْكُم مِّنَ ٱللَّهِ وَٱتَّخَذْتُمُوهُ وَرَآءَكُمْ ظِهْرِيًّا ۖ إِنَّ رَبِّى بِمَا تَعْمَلُونَ مُحِيطٌ

Transliteration qāla yāqawmi arahṭī aʿazzu ʿalaykum mina l-lahi wa-ittakhadhtumūhu warāakum ẓih'riyyan inna rabbī bimā taʿmalūna muḥīṭun

Kannada ಶುಐಬ್ ಹೇಳಿದರು; ಅಲ್ಲಾಹನನ್ನು ಬೆನ್ನ ಹಿಂದೆ ತಳ್ಳಿ ಬಿಟ್ಟ ನಿಮಗೆ ನನ್ನ ಕುಟುಂಬ ಪರಿವಾರವು ನಿಮ್ಮ ದೃಷ್ಟಿಯಲ್ಲಿ ಅಲ್ಲಾಹನಿಗಿಂತಲೂ ದೊಡ್ಡ ದಾಯಿತೆ? ನಿಮ್ಮ ಕೃತ್ಯಗಳನ್ನು ಅಲ್ಲಾಹನು ಸಂಪೂರ್ಣ ಬಲ್ಲವನಾಗಿರುವನು.

Verse 93

وَيَـٰقَوْمِ ٱعْمَلُوا۟ عَلَىٰ مَكَانَتِكُمْ إِنِّى عَـٰمِلٌ ۖ سَوْفَ تَعْلَمُونَ مَن يَأْتِيهِ عَذَابٌ يُخْزِيهِ وَمَنْ هُوَ كَـٰذِبٌ ۖ وَٱرْتَقِبُوٓا۟ إِنِّى مَعَكُمْ رَقِيبٌ

Transliteration wayāqawmi iʿ'malū ʿalā makānatikum innī ʿāmilun sawfa taʿlamūna man yatīhi ʿadhābun yukh'zīhi waman huwa kādhibun wa-ir'taqibū innī maʿakum raqībun

Kannada ಓ ನನ್ನ ಜನಾಂಗ ಬಾಂಧವರೇ, ನೀವು ನಿಮ್ಮ ನಿಲುವು ಪ್ರಕಾರ ಕಾರ್ಯವೆಸಗಿರಿ, ನಾನು ನನ್ನ ನಿಲುವು ಪ್ರಕಾರ ಕಾರ್ಯವೆಸಗುತ್ತಿರುವೆನು. ಯಾರ ಮೇಲೆ ಅಪಮಾನಕರ ಶಿಕ್ಷೆ ಬರುತ್ತದೆ ಮತ್ತು ಯಾರು ಸುಳ್ಳುಗಾರರು ಎಂಬುದು ನಿಮಗೆ ಶೀಘ್ರವೇ ತಿಳಿದು ಬರುವುದು. ನೀವೂ (ನಿಮ್ಮ ಅಂತಿಮ ಗತಿಯನ್ನು) ನಿರೀಕ್ಷಿಸಿರಿ. ನಾನೂ ನಿಮ್ಮೊಂದಿಗೆ ನಿರೀಕ್ಷಿಸುತ್ತೇನೆ .

Verse 94

وَلَمَّا جَآءَ أَمْرُنَا نَجَّيْنَا شُعَيْبًا وَٱلَّذِينَ ءَامَنُوا۟ مَعَهُۥ بِرَحْمَةٍ مِّنَّا وَأَخَذَتِ ٱلَّذِينَ ظَلَمُوا۟ ٱلصَّيْحَةُ فَأَصْبَحُوا۟ فِى دِيَـٰرِهِمْ جَـٰثِمِينَ

Transliteration walammā jāa amrunā najjaynā shuʿayban wa-alladhīna āmanū maʿahu biraḥmatin minnā wa-akhadhati alladhīna ẓalamū l-ṣayḥatu fa-aṣbaḥū fī diyārihim jāthimīna

Kannada ಕೊನೆಗೆ ನಮ್ಮ ಆದೇಶ ಬಂದಾಗ ನಾವು ನಮ್ಮ ಕಡೆಯ ಕಾರುಣ್ಯದ ಮೇರೆಗೆ ಶುಐಬ್ ಮತ್ತು ಅವರ ಸತ್ಯವಿಶ್ವಾಸಿಗಳಾದ ಸಂಗಡಿಗರನ್ನು ರಕ್ಷಿಸಿದೆವು ಮತ್ತು ಅಕ್ರಮವೆಸಗಿದವರನ್ನು ಒಂದು ಘೋರ ಶಬ್ಧವು ಅಕ್ರಮಿಸಿತು. ಹಾಗೆ ಬೆಳಗಾದಾಗ ಅವರು ತಮ್ಮ ವಸತಿಗಳಲ್ಲೇ ಬೋರಲಾಗಿ ಸತ್ತು ಬಿದ್ದಿದ್ದರು.

Verse 95

كَأَن لَّمْ يَغْنَوْا۟ فِيهَآ ۗ أَلَا بُعْدًا لِّمَدْيَنَ كَمَا بَعِدَتْ ثَمُودُ

Transliteration ka-an lam yaghnaw fīhā alā buʿ'dan limadyana kamā baʿidat thamūdu

Kannada ಅವರು ಅಲ್ಲಿ ನೆಲೆಸಿಯೇ ಇರಲಿಲ್ಲವೋ ಎಂಬಂತೆ (ಸರ್ವನಾಶವಾದರು). ತಿಳಿದಿರಲಿ ಸಮೂದ್ ಜನಾಂಗವು ಕೃಪೆಯಿಂದ ದೂರವಾದಂತೆ ಮದ್‍ಯನಿನವರೂ ದೂರವಾದರು.

Verse 96

وَلَقَدْ أَرْسَلْنَا مُوسَىٰ بِـَٔايَـٰتِنَا وَسُلْطَـٰنٍ مُّبِينٍ

Transliteration walaqad arsalnā mūsā biāyātinā wasul'ṭānin mubīnin

Kannada ಮೂಸಾರನ್ನು ನಮ್ಮ ನಿದರ್ಶನಗಳೊಂದಿಗೂ ಸುವ್ಯಕ್ತ ಆಧಾರದೊಂದಿಗೂ ನಾವು ಕಳುಹಿಸಿದೆವು.

Verse 97

إِلَىٰ فِرْعَوْنَ وَمَلَإِي۟هِۦ فَٱتَّبَعُوٓا۟ أَمْرَ فِرْعَوْنَ ۖ وَمَآ أَمْرُ فِرْعَوْنَ بِرَشِيدٍ

Transliteration ilā fir'ʿawna wamala-ihi fa-ittabaʿū amra fir'ʿawna wamā amru fir'ʿawna birashīdin

Kannada ಫಿರ್‍ಔನ್ ಮತ್ತು ಅವನ ಸರದಾರರ ಕಡೆಗೆ. ಆದರೆ, ಅವರು (ಸರದಾರರು) ಫಿರ್‍ಔನನ ಆಜ್ಞೆ ಯನ್ನು ಅನುಸರಿಸಿದರು. ವಸ್ತುತಃ ಫಿರ್‍ಔನನ ಆಜ್ಞೆಯು ವಿವೇಕಪೂರ್ಣವಾಗಿರಲಿಲ್ಲ.

Verse 98

يَقْدُمُ قَوْمَهُۥ يَوْمَ ٱلْقِيَـٰمَةِ فَأَوْرَدَهُمُ ٱلنَّارَ ۖ وَبِئْسَ ٱلْوِرْدُ ٱلْمَوْرُودُ

Transliteration yaqdumu qawmahu yawma l-qiyāmati fa-awradahumu l-nāra wabi'sa l-wir'du l-mawrūdu

Kannada ಪುನರುತ್ಥಾನ ದಿನದಂದು ಅವನು ತನ್ನ ಜನಾಂ ಗದ ಮುಂಚೂಣಿಯಲ್ಲಿದ್ದುಕೊಂಡು ಅವರನ್ನು ನರಕದ ಕಡೆಗೆ ಒಯ್ಯುವನು. ಅವರು ತಲುಪುವ ಸ್ಥಾನ ಅದೆಷ್ಟು ನಿಕೃಷ್ಟ.

Verse 99

وَأُتْبِعُوا۟ فِى هَـٰذِهِۦ لَعْنَةً وَيَوْمَ ٱلْقِيَـٰمَةِ ۚ بِئْسَ ٱلرِّفْدُ ٱلْمَرْفُودُ

Transliteration wa-ut'biʿū fī hādhihi laʿnatan wayawma l-qiyāmati bi'sa l-rif'du l-marfūdu

Kannada ಇಹಲೋಕದಲ್ಲೂ ಪುನರುತ್ಥಾನದಂದೂ ಶಾಪವು ಅವರ ಹಿಂದೆಯೇ ಅನುಗಮಿಸಿತು. ಒಂದನ್ನೊಂದು ಉಲ್ಬಣಗೊಳಿಸಿದ ಈ ಶಾಪದ ಕೊಡುಗೆ ಅದೆಷ್ಟು ನಿಕೃಷ್ಟ.

Verse 100

ذَٰلِكَ مِنْ أَنۢبَآءِ ٱلْقُرَىٰ نَقُصُّهُۥ عَلَيْكَ ۖ مِنْهَا قَآئِمٌ وَحَصِيدٌ

Transliteration dhālika min anbāi l-qurā naquṣṣuhu ʿalayka min'hā qāimun waḥaṣīdun

Kannada ನಾವು ನಿಮಗೆ ವಿವರಿಸಿ ಹೇಳುವ ಕೆಲವು ನಾಡುಗಳ ವೃತ್ತಾಂತಗಳಿವು . ಇವುಗಳಲ್ಲಿ ಕೆಲವು ನಾಡುಗಳು ಈಗಲೂ ನೆಲೆನಿಂತಿವೆ. ಇನ್ನು ಕೆಲವು ನಿರ್ಮೂಲನಗೊಂಡಿವೆ.

Verse 101

وَمَا ظَلَمْنَـٰهُمْ وَلَـٰكِن ظَلَمُوٓا۟ أَنفُسَهُمْ ۖ فَمَآ أَغْنَتْ عَنْهُمْ ءَالِهَتُهُمُ ٱلَّتِى يَدْعُونَ مِن دُونِ ٱللَّهِ مِن شَىْءٍ لَّمَّا جَآءَ أَمْرُ رَبِّكَ ۖ وَمَا زَادُوهُمْ غَيْرَ تَتْبِيبٍ

Transliteration wamā ẓalamnāhum walākin ẓalamū anfusahum famā aghnat ʿanhum ālihatuhumu allatī yadʿūna min dūni l-lahi min shayin lammā jāa amru rabbika wamā zādūhum ghayra tatbībin

Kannada ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗಿ ಕೊಂಡರು. ನಿಮ್ಮ ಪ್ರಭುವಿನ ಆಜ್ಞೆ ಬಂದಾಗ ಅವರು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿದ್ದ ಅವರ ದೇವರುಗಳು ಅವರ ರಕ್ಷಣೆಗೆ ಬರಲಿಲ್ಲ. ಅವರಿಗೆ ವಿನಾಶವನ್ನು ಹೊರತು ಇನ್ನೇನನ್ನೂ ಅವರು ಹೆಚ್ಚಿಸಲಿಲ್ಲ.

Verse 102

وَكَذَٰلِكَ أَخْذُ رَبِّكَ إِذَآ أَخَذَ ٱلْقُرَىٰ وَهِىَ ظَـٰلِمَةٌ ۚ إِنَّ أَخْذَهُۥٓ أَلِيمٌ شَدِيدٌ

Transliteration wakadhālika akhdhu rabbika idhā akhadha l-qurā wahiya ẓālimatun inna akhdhahu alīmun shadīdun

Kannada ನಿಮ್ಮ ಪ್ರಭು ಯಾವುದಾದರೂ ಅಕ್ರಮಿ ನಾಡನ್ನು ಹಿಡಿಯುವಾಗ ಅವನ ಹಿಡಿತ ಹೀಗೆಯೇ ಇರು ತ್ತದೆ. (ಯಾವ ವಸ್ತುವೂ ಅದನ್ನು ತಡೆಯದು) ವಾಸ್ತವದಲ್ಲಿ ಅವನ ಹಿಡಿತವು ಬಹಳ ವೇದನಾಯುಕ್ತವೂ ಕಠಿಣವೂ ಆಗಿರುತ್ತದೆ.

Verse 103

إِنَّ فِى ذَٰلِكَ لَـَٔايَةً لِّمَنْ خَافَ عَذَابَ ٱلْـَٔاخِرَةِ ۚ ذَٰلِكَ يَوْمٌ مَّجْمُوعٌ لَّهُ ٱلنَّاسُ وَذَٰلِكَ يَوْمٌ مَّشْهُودٌ

Transliteration inna fī dhālika laāyatan liman khāfa ʿadhāba l-ākhirati dhālika yawmun majmūʿun lahu l-nāsu wadhālika yawmun mashhūdun

Kannada ಪರಲೋಕ ಶಿಕ್ಷೆಯನ್ನು ಭಯಪಡುವವರಿಗೆ ಅದರಲ್ಲಿ ನಿದರ್ಶನವಿದೆ. ಅದು ಸಕಲ ಜನರೂ ಒಟ್ಟುಗೂಡುವ ಒಂದು ದಿನವಾಗಿರುವುದು. ಸರ್ವರೂ ಹಾಜರಾಗಿ ಸಾಕ್ಷಿಯಾಗುವ ದಿನವದು .

Verse 104

وَمَا نُؤَخِّرُهُۥٓ إِلَّا لِأَجَلٍ مَّعْدُودٍ

Transliteration wamā nu-akhiruhu illā li-ajalin maʿdūdin

Kannada ನಿಶ್ಚಿತ ಕಾಲಾವಧಿಗೆ ಹೊರತು ನಾವು ಅದನ್ನು ವಿಳಂಬ ಮಾಡುತ್ತಿಲ್ಲ.

Verse 105

يَوْمَ يَأْتِ لَا تَكَلَّمُ نَفْسٌ إِلَّا بِإِذْنِهِۦ ۚ فَمِنْهُمْ شَقِىٌّ وَسَعِيدٌ

Transliteration yawma yati lā takallamu nafsun illā bi-idh'nihi famin'hum shaqiyyun wasaʿīdun

Kannada ಅದು ಬಂದಾಗ ಆತನ ಅನುಮತಿ ಇಲ್ಲದೆ ಯಾರೊಬ್ಬನೂ ಮಾತೆತ್ತಲಾರ. ಅಂದು ಅವರಲ್ಲಿ ನಿರ್ಭಾಗ್ಯ ವಂತರೂ ಸೌಭಾಗ್ಯವಂತರೂ ಇರುವರು.

Verse 106

فَأَمَّا ٱلَّذِينَ شَقُوا۟ فَفِى ٱلنَّارِ لَهُمْ فِيهَا زَفِيرٌ وَشَهِيقٌ

Transliteration fa-ammā alladhīna shaqū fafī l-nāri lahum fīhā zafīrun washahīqun

Kannada ನಿರ್ಭಾಗ್ಯವಂತರು ನರಕಕ್ಕೆ ಹೋಗುವರು. ಅದರಲ್ಲವರು ಆಕ್ರಂಧನ ಮಾಡುತ್ತಲೂ ಮುಸಿಮುಸಿ ಅಳುತ್ತಲೂ ಇರುವರು.

Verse 107

خَـٰلِدِينَ فِيهَا مَا دَامَتِ ٱلسَّمَـٰوَٰتُ وَٱلْأَرْضُ إِلَّا مَا شَآءَ رَبُّكَ ۚ إِنَّ رَبَّكَ فَعَّالٌ لِّمَا يُرِيدُ

Transliteration khālidīna fīhā mā dāmati l-samāwātu wal-arḍu illā mā shāa rabbuka inna rabbaka faʿʿālun limā yurīdu

Kannada ಆಕಾಶಗಳೂ ಭೂಮಿಯೂ ನೆಲೆ ನಿಂತಿರುವ ವರೆಗೂ ಅವರು ಅದರಲ್ಲಿ ನಿತ್ಯ ವಾಸಿಗಳಾಗಿರುವರು. ನಿಮ್ಮ ಪ್ರಭು ಇಚ್ಛಿಸಿದ್ದು ಹೊರತು . ನಿಶ್ಚಯವಾಗಿಯೂ ನಿಮ್ಮ ಪ್ರಭು ತಾನು ಬಯಸಿದ್ದನ್ನು ಮಾಡುವನು.

Verse 108

۞ وَأَمَّا ٱلَّذِينَ سُعِدُوا۟ فَفِى ٱلْجَنَّةِ خَـٰلِدِينَ فِيهَا مَا دَامَتِ ٱلسَّمَـٰوَٰتُ وَٱلْأَرْضُ إِلَّا مَا شَآءَ رَبُّكَ ۖ عَطَآءً غَيْرَ مَجْذُوذٍ

Transliteration wa-ammā alladhīna suʿidū fafī l-janati khālidīna fīhā mā dāmati l-samāwātu wal-arḍu illā mā shāa rabbuka ʿaṭāan ghayra majdhūdhin

Kannada ಸೌಭಾಗ್ಯ ಸಿದ್ದಿಸಿದವರು - ಅವರು ಸ್ವರ್ಗಕ್ಕೆ ಹೋಗುವರು. ಅವರು ಆಕಾಶಗಳೂ ಭೂಮಿಯೂ ನೆಲೆನಿಂತಿರುವವರೆಗೂ ಅದರಲ್ಲಿ ಸದಾ ವಾಸಿಸುತ್ತಿರುವರು. ನಿಮ್ಮ ಪ್ರಭು ಇಚ್ಛಿಸಿದ್ದು ಹೊರತು. ಎಂದೂ ಮುಗಿದು ಹೋಗದ ಕೊಡುಗೆ ಅದು.

Verse 109

فَلَا تَكُ فِى مِرْيَةٍ مِّمَّا يَعْبُدُ هَـٰٓؤُلَآءِ ۚ مَا يَعْبُدُونَ إِلَّا كَمَا يَعْبُدُ ءَابَآؤُهُم مِّن قَبْلُ ۚ وَإِنَّا لَمُوَفُّوهُمْ نَصِيبَهُمْ غَيْرَ مَنقُوصٍ

Transliteration falā taku fī mir'yatin mimmā yaʿbudu hāulāi mā yaʿbudūna illā kamā yaʿbudu ābāuhum min qablu wa-innā lamuwaffūhum naṣībahum ghayra manqūṣin

Kannada ಆದುದರಿಂದ (ಓ ಪೈಗಂಬರರೇ,) ಇವರು ಆರಾಧನೆ ಮಾಡುತ್ತಿರುವವುಗಳ ಬಗ್ಗೆ ನೀವೆಂದೂ ಆಶಂಖೆಗೊಳಗಾಗಬೇಡಿರಿ. ಮುಂಚೆ ಇವರ ಪೂರ್ವಿಕರು ಆರಾಧಿಸಿಕೊಂಡು ಬಂದಂತೆ ಇವರೂ ಆರಾದಿಸುತ್ತಲಿದ್ದಾರೆ ಅಷ್ಟೆ ಮತ್ತು ಅವರಿಗೆ ಅವರ ಪಾಲನ್ನು ಕಡಿತಗೊಳಿಸದೆ ಸಂಪೂರ್ಣವಾಗಿ ಕೊಡುವೆವು.

Verse 110

وَلَقَدْ ءَاتَيْنَا مُوسَى ٱلْكِتَـٰبَ فَٱخْتُلِفَ فِيهِ ۚ وَلَوْلَا كَلِمَةٌ سَبَقَتْ مِن رَّبِّكَ لَقُضِىَ بَيْنَهُمْ ۚ وَإِنَّهُمْ لَفِى شَكٍّ مِّنْهُ مُرِيبٍ

Transliteration walaqad ātaynā mūsā l-kitāba fa-ukh'tulifa fīhi walawlā kalimatun sabaqat min rabbika laquḍiya baynahum wa-innahum lafī shakkin min'hu murībin

Kannada ಮೂಸಾರಿಗೆ ನಾವು ಗ್ರಂಥ ದಯಪಾಲಿಸಿದ್ದೆವು. ಆಗ ಅದರ ಬಗೆಗೂ ಭಿನ್ನಾಭಿಪ್ರಾಯ ತಲೆದೋ ರಿತು. ನಿಮ್ಮ ಪ್ರಭುವಿನ ಕಡೆಯಿಂದ ಒಂದು ವಚನ ಮೊದಲೇ ನಿರ್ಧರಿಸಲ್ಪಡದಿರುತ್ತಿದ್ದರೆ ಅವರ ನಡುವೆ ತೀರ್ಮಾನ ಮಾಡಿಬಿಡಲಾಗು ತ್ತಿತ್ತು. ಖಂಡಿತ ಅವರು ಈ ಬಗ್ಗೆ ಅವಿಶ್ವಾಸಜ ನಕವಾದ ಸಂಶಯದಲ್ಲಿರುತ್ತಾರೆ.

Verse 111

وَإِنَّ كُلًّا لَّمَّا لَيُوَفِّيَنَّهُمْ رَبُّكَ أَعْمَـٰلَهُمْ ۚ إِنَّهُۥ بِمَا يَعْمَلُونَ خَبِيرٌ

Transliteration wa-inna kullan lammā layuwaffiyannahum rabbuka aʿmālahum innahu bimā yaʿmalūna khabīrun

Kannada ಅವರ ಪೈಕಿ ಪ್ರತಿಯೊಬ್ಬರಿಗೂ ನಿಮ್ಮ ಪ್ರಭು ಅವರ ಕರ್ಮಗಳ ಸಂಪೂರ್ಣ ಪ್ರತಿಫಲ ಕೊಟ್ಟೇ ತೀರುವನು. ನಿಶ್ಚಯವಾಗಿಯೂ ಅವನು ಅವರ ಸಕಲ ಕರ್ಮಗಳನ್ನು ಸೂಕ್ಷವಾಗಿ ಬಲ್ಲವನು.

Verse 112

فَٱسْتَقِمْ كَمَآ أُمِرْتَ وَمَن تَابَ مَعَكَ وَلَا تَطْغَوْا۟ ۚ إِنَّهُۥ بِمَا تَعْمَلُونَ بَصِيرٌ

Transliteration fa-is'taqim kamā umir'ta waman tāba maʿaka walā taṭghaw innahu bimā taʿmalūna baṣīrun

Kannada ಆದುದರಿಂದ (ಓ ಪೈಗಂಬರರೇ,) ನಿಮಗೆ ಆಜ್ಞಾಪಿಸಲಾಗಿರುವ ಪ್ರಕಾರ ನೀವೂ ನಿಮ್ಮ ಜೊತೆಗೆ ಮರಳಿದ ಸಂಗಡಿಗರೂ ನೇರ ಮಾರ್ಗದಲ್ಲಿ ಸ್ಥಿರವಾಗಿ ನೆಲೆ ನಿಲ್ಲಿರಿ. ಅಲ್ಲಾಹನಿತ್ತ ಮೇರೆ ಯನ್ನು ಮೀರಬೇಡಿರಿ. ನಿಮ್ಮ ಪ್ರಭು ನೀವು ಮಾಡುತ್ತಿರುವುದನ್ನೆಲ್ಲ ವೀಕ್ಷಿಸುತ್ತಿದ್ದಾನೆ.

Verse 113

وَلَا تَرْكَنُوٓا۟ إِلَى ٱلَّذِينَ ظَلَمُوا۟ فَتَمَسَّكُمُ ٱلنَّارُ وَمَا لَكُم مِّن دُونِ ٱللَّهِ مِنْ أَوْلِيَآءَ ثُمَّ لَا تُنصَرُونَ

Transliteration walā tarkanū ilā alladhīna ẓalamū fatamassakumu l-nāru wamā lakum min dūni l-lahi min awliyāa thumma lā tunṣarūna

Kannada ಅಕ್ರಮಿಗಳ ಕಡೆಗೆ ವಾಲಬೇಡಿರಿ. ಅನ್ಯಥಾ ನರಕಾಗ್ನಿ ನಿಮಗೆ ತಟ್ಟುವುದು. ಅಲ್ಲಾಹನ ಹೊರತು ರಕ್ಷಕರಾರೂ ನಿಮಗಿಲ್ಲ. ನಂತರ ನಿಮಗೆ ಎಲ್ಲಿಂದಲೂ ನೆರವು ಸಿಗದು.

Verse 114

وَأَقِمِ ٱلصَّلَوٰةَ طَرَفَىِ ٱلنَّهَارِ وَزُلَفًا مِّنَ ٱلَّيْلِ ۚ إِنَّ ٱلْحَسَنَـٰتِ يُذْهِبْنَ ٱلسَّيِّـَٔاتِ ۚ ذَٰلِكَ ذِكْرَىٰ لِلذَّٰكِرِينَ

Transliteration wa-aqimi l-ṣalata ṭarafayi l-nahāri wazulafan mina al-layli inna l-ḥasanāti yudh'hib'na l-sayiāti dhālika dhik'rā lildhākirīna

Kannada ಹಗಲಿನ ಉಭಯ ಕೊನೆಗಳಲ್ಲೂ ರಾತ್ರೆಯ ಪ್ರಥಮ ಯಾಮಗಳಲ್ಲೂ ನಮಾಝನ್ನು ಸಂಸ್ಥಾಪಿಸಿರಿ. ವಾಸ್ತವದಲ್ಲಿ ಪುಣ್ಯ ಕಾರ್ಯಗಳು ಪಾಪ ಕಾರ್ಯಗಳನ್ನು ಹೋಗಲಾಡಿಸುತ್ತವೆ. ಇದು ಯೋಚನಾ ಬದ್ಧರಿಗೊಂದು ಯೋಚನಾರ್ಹ ಬೋಧನೆಯಾಗಿದೆ.

Verse 115

وَٱصْبِرْ فَإِنَّ ٱللَّهَ لَا يُضِيعُ أَجْرَ ٱلْمُحْسِنِينَ

Transliteration wa-iṣ'bir fa-inna l-laha lā yuḍīʿu ajra l-muḥ'sinīna

Kannada ತಾಳ್ಮೆಯಿಂದಿರಿ, ಅಲ್ಲಾಹು ಸುಕೃತರ ಪ್ರತಿಫಲ ವನ್ನೆಂದೂ ವ್ಯರ್ಥಗೊಳಿಸುವುದಿಲ್ಲ.

Verse 116

فَلَوْلَا كَانَ مِنَ ٱلْقُرُونِ مِن قَبْلِكُمْ أُو۟لُوا۟ بَقِيَّةٍ يَنْهَوْنَ عَنِ ٱلْفَسَادِ فِى ٱلْأَرْضِ إِلَّا قَلِيلًا مِّمَّنْ أَنجَيْنَا مِنْهُمْ ۗ وَٱتَّبَعَ ٱلَّذِينَ ظَلَمُوا۟ مَآ أُتْرِفُوا۟ فِيهِ وَكَانُوا۟ مُجْرِمِينَ

Transliteration falawlā kāna mina l-qurūni min qablikum ulū baqiyyatin yanhawna ʿani l-fasādi fī l-arḍi illā qalīlan mimman anjaynā min'hum wa-ittabaʿa alladhīna ẓalamū mā ut'rifū fīhi wakānū muj'rimīna

Kannada ಭೂಮಿಯಲ್ಲಿ ಕ್ಷೋಭೆ ನಡೆಸದಂತೆ ಜನರನ್ನು ತಡೆಯುವಂತಹ ಒಂದು ಧರ್ಮಬದ್ಧ ಕೂಟವು ನಿಮ್ಮ ಹಿಂದಿನ ಕಾಲಗಳಲ್ಲಿ ಇದ್ದಿರ ಲಿಲ್ಲ. ನಾವು ಆ ಜನಾಂಗಗಳಿಂದ ರಕ್ಷಿಸಿದಂತಹ ಸ್ವಲ್ಪ ಜನರ ಹೊರತು ಅಕ್ರಮಿಗಳು ಅವರಿಗೆ ಧಾರಾಳವಾಗಿ ದೊರೆತ ಸುಖ ಭೋಗಗಳನ್ನೇ ಹಿಂಬಾಲಿಸುತ್ತಿದ್ದರು. ಅವರು ಅಪರಾಧಿಗ ಳಾಗಿದ್ದರು.

Verse 117

وَمَا كَانَ رَبُّكَ لِيُهْلِكَ ٱلْقُرَىٰ بِظُلْمٍ وَأَهْلُهَا مُصْلِحُونَ

Transliteration wamā kāna rabbuka liyuh'lika l-qurā biẓul'min wa-ahluhā muṣ'liḥūna

Kannada ನಾಡುಗಳ ನಿವಾಸಿಗಳು ಉತ್ತಮರಾಗಿದ್ದಲ್ಲಿ ನಿನ್ನ ಪ್ರಭು ಆ ನಾಡುಗಳನ್ನು ಅನ್ಯಾಯವಾಗಿ ನಾಶಗೊಳಿಸುವವನಲ್ಲ .

Verse 118

وَلَوْ شَآءَ رَبُّكَ لَجَعَلَ ٱلنَّاسَ أُمَّةً وَٰحِدَةً ۖ وَلَا يَزَالُونَ مُخْتَلِفِينَ

Transliteration walaw shāa rabbuka lajaʿala l-nāsa ummatan wāḥidatan walā yazālūna mukh'talifīna

Kannada ನಿಶ್ಚಯವಾಗಿಯೂ ನಿಮ್ಮ ಪ್ರಭು ಇಚ್ಛಿಸುತ್ತಿದ್ದರೆ ಮಾನವರನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವರು ಭಿನ್ನಮತಿಗಳಾಗಿಯೇ ಮುಂದುವರಿಯುವರು .

Verse 119

إِلَّا مَن رَّحِمَ رَبُّكَ ۚ وَلِذَٰلِكَ خَلَقَهُمْ ۗ وَتَمَّتْ كَلِمَةُ رَبِّكَ لَأَمْلَأَنَّ جَهَنَّمَ مِنَ ٱلْجِنَّةِ وَٱلنَّاسِ أَجْمَعِينَ

Transliteration illā man raḥima rabbuka walidhālika khalaqahum watammat kalimatu rabbika la-amla-anna jahannama mina l-jinati wal-nāsi ajmaʿīna

Kannada ನಿಮ್ಮ ಪ್ರಭು ಕೃಪೆ ತೋರಿದವರ ಹೊರತು. ಇದಕ್ಕಾಗಿಯೇ ಅವನು ಅವರನ್ನು ಸೃಷ್ಟಿಸಿರುತ್ತಾನೆ. ಜಿನ್ನ್‍ಗಳು ಮತ್ತು ಮನುಷ್ಯರ ಪೈಕಿ ಉಭಯ ವಿಭಾಗದಿಂದೆಲ್ಲ ನರಕವನ್ನು ತುಂಬಿಸುವೆನೆಂಬ ನಿನ್ನ ಪ್ರಭುವಿನ ವಚನವು ಪೂರ್ಣಗೊಂಡಿದೆ.

Verse 120

وَكُلًّا نَّقُصُّ عَلَيْكَ مِنْ أَنۢبَآءِ ٱلرُّسُلِ مَا نُثَبِّتُ بِهِۦ فُؤَادَكَ ۚ وَجَآءَكَ فِى هَـٰذِهِ ٱلْحَقُّ وَمَوْعِظَةٌ وَذِكْرَىٰ لِلْمُؤْمِنِينَ

Transliteration wakullan naquṣṣu ʿalayka min anbāi l-rusuli mā nuthabbitu bihi fuādaka wajāaka fī hādhihi l-ḥaqu wamawʿiẓatun wadhik'rā lil'mu'minīna

Kannada (ಓ ಪೈಗಂಬರರೇ,) ಸಂದೇಶವಾಹಕರ ವೃತ್ತಾಂ ತಗಳಿಂದ ನಿಮ್ಮ ಮನಸ್ಸನ್ನು ಬಲಪಡಿಸುವ ವಿಚಾರವನ್ನು ನಿಮಗೆ ನಾವು ವಿವರಿಸಿದ್ದೇವೆ. ಇವುಗಳಿಂದ ನಿಮಗೆ ಪರಮಾರ್ಥ ಜ್ಞಾನವೂ ಸತ್ಯವಿಶ್ವಾಸಿಗಳಿಗೆ ಉಪದೇಶ ಹಾಗೂ ಜಾಗೃತಿ ಲಭಿಸಿತು.

Verse 121

وَقُل لِّلَّذِينَ لَا يُؤْمِنُونَ ٱعْمَلُوا۟ عَلَىٰ مَكَانَتِكُمْ إِنَّا عَـٰمِلُونَ

Transliteration waqul lilladhīna lā yu'minūna iʿ'malū ʿalā makānatikum innā ʿāmilūna

Kannada ಸತ್ಯವಿಶ್ವಾಸವನ್ನು ನಿರಾಕರಿಸಿದವರಲ್ಲಿ ಹೇಳಿರಿ - ನೀವು ನಿಮ್ಮ ನಿಲುವು ಪ್ರಕಾರ ಕಾರ್ಯವೆಸಗಿರಿ ಮತ್ತು ನಾವು ಕಾರ್ಯ ವೆಸಗುತ್ತೇವೆ.

Verse 122

وَٱنتَظِرُوٓا۟ إِنَّا مُنتَظِرُونَ

Transliteration wa-intaẓirū innā muntaẓirūna

Kannada ಅಂತಿಮ ಪರಿಣಾಮವನ್ನು ನೀವೂ ನಿರೀಕ್ಷಿಸಿರಿ. ನಾವೂ ನಿರೀಕ್ಷಿಸುತ್ತೇವೆ.

Verse 123

وَلِلَّهِ غَيْبُ ٱلسَّمَـٰوَٰتِ وَٱلْأَرْضِ وَإِلَيْهِ يُرْجَعُ ٱلْأَمْرُ كُلُّهُۥ فَٱعْبُدْهُ وَتَوَكَّلْ عَلَيْهِ ۚ وَمَا رَبُّكَ بِغَـٰفِلٍ عَمَّا تَعْمَلُونَ

Transliteration walillahi ghaybu l-samāwāti wal-arḍi wa-ilayhi yur'jaʿu l-amru kulluhu fa-uʿ'bud'hu watawakkal ʿalayhi wamā rabbuka bighāfilin ʿammā taʿmalūna

Kannada ಆಕಾಶಗಳ ಹಾಗೂ ಭೂಮಿಯ ಅದೃಶ್ಯವು ಅಲ್ಲಾಹನ ಅಧೀನದಲ್ಲಿದೆ. ಸಕಲ ಕಾರ್ಯಗಳೂ ಆತನ ಕಡೆಗೇ ಮರಳಿಸಲ್ಪಡುತ್ತವೆ. ಆದುದರಿಂದ (ಓ ಪೈಗಂಬರರೇ,) ನೀವು ಅವನನ್ನು ಆರಾಧಿಸಿರಿ. ಅವನ ಮೇಲೆ ಭರವಸೆಯನ್ನಿಡಿರಿ. ನೀವು ಮಾಡುತ್ತಿರುವುದರ ಬಗೆಗೆ ನಿಮ್ಮ ಪ್ರಭು ಅಶ್ರದ್ಧನಲ್ಲ.

Read Surah Hud in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.