MyDugsiStart learning

Surah At-Talaq in Kannada: translation and audio

Surah 65 · الطلاق · The Divorce · 12 verses

Surah At-Talaq verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah At-Talaq word by word in English.

Verse 1

يَـٰٓأَيُّهَا ٱلنَّبِىُّ إِذَا طَلَّقْتُمُ ٱلنِّسَآءَ فَطَلِّقُوهُنَّ لِعِدَّتِهِنَّ وَأَحْصُوا۟ ٱلْعِدَّةَ ۖ وَٱتَّقُوا۟ ٱللَّهَ رَبَّكُمْ ۖ لَا تُخْرِجُوهُنَّ مِنۢ بُيُوتِهِنَّ وَلَا يَخْرُجْنَ إِلَّآ أَن يَأْتِينَ بِفَـٰحِشَةٍ مُّبَيِّنَةٍ ۚ وَتِلْكَ حُدُودُ ٱللَّهِ ۚ وَمَن يَتَعَدَّ حُدُودَ ٱللَّهِ فَقَدْ ظَلَمَ نَفْسَهُۥ ۚ لَا تَدْرِى لَعَلَّ ٱللَّهَ يُحْدِثُ بَعْدَ ذَٰلِكَ أَمْرًا

Transliteration yāayyuhā l-nabiyu idhā ṭallaqtumu l-nisāa faṭalliqūhunna liʿiddatihinna wa-aḥṣū l-ʿidata wa-ittaqū l-laha rabbakum lā tukh'rijūhunna min buyūtihinna walā yakhruj'na illā an yatīna bifāḥishatin mubayyinatin watil'ka ḥudūdu l-lahi waman yataʿadda ḥudūda l-lahi faqad ẓalama nafsahu lā tadrī laʿalla l-laha yuḥ'dithu baʿda dhālika amran

Kannada ಓ ಪ್ರವಾದಿವರ್ಯರೇ, ನೀವು (ವಿಶ್ವಾಸಿಗಳು) ಸ್ತ್ರೀಯರನ್ನು (ಪತ್ನಿಯರನ್ನು) ವಿಚ್ಛೇದಿಸುವುದಾದರೆ ಅವರಿಗೆ ಅವರ ಇದ್ದಃ ಕಾಲದಲ್ಲಿ ತಲಾಖ್ ಕೊಡಿರಿ. ಇದ್ದಃದ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ. ನಿಮ್ಮ ಪ್ರಭು ವಾದ ಅಲ್ಲಾಹನನ್ನು ನೀವು ಭಯಪಡಿರಿ. ಅವರು ಸ್ಪಷ್ಟವಾದ ನೀಚ ವೃತ್ತಿಯನ್ನು (ವ್ಯಭಿಚಾರವನ್ನು) ಮಾಡದ ಹೊರತು ನೀವು ಅವರನ್ನು ಅವರ ಮನೆಗಳಿಂದ ಹೊರಹಾಕ ಬೇಡಿರಿ ಮತ್ತು (ಇದ್ದಃ ಮುಗಿಯುವವರೆಗೆ) ಅವರು ಸ್ವತಃ ಹೊರಟು ಹೋಗದಿರಲಿ. ಇವು ಅಲ್ಲಾಹನ ಮೇರೆಗಳು. ಯಾರಾದರೂ ಅಲ್ಲಾಹನ ಮೇರೆಗಳನ್ನು ಮೀರಿದರೆ ಅವನು ತನ್ನನ್ನೇ ಅಕ್ರಮಿಸಿಕೊಂಡನು. ಪ್ರಾಯಶಃ ಇದರ (ತಲಾಖಿನ) ಬಳಿಕ ಅಲ್ಲಾಹನು ಯಾವುದಾದರೂ ಹೊಸ ಕಾರ್ಯವನ್ನು ಉಂಟು ಮಾಡಲೂಬಹುದೆಂದು ತಮಗರಿಯದು.

Verse 2

فَإِذَا بَلَغْنَ أَجَلَهُنَّ فَأَمْسِكُوهُنَّ بِمَعْرُوفٍ أَوْ فَارِقُوهُنَّ بِمَعْرُوفٍ وَأَشْهِدُوا۟ ذَوَىْ عَدْلٍ مِّنكُمْ وَأَقِيمُوا۟ ٱلشَّهَـٰدَةَ لِلَّهِ ۚ ذَٰلِكُمْ يُوعَظُ بِهِۦ مَن كَانَ يُؤْمِنُ بِٱللَّهِ وَٱلْيَوْمِ ٱلْـَٔاخِرِ ۚ وَمَن يَتَّقِ ٱللَّهَ يَجْعَل لَّهُۥ مَخْرَجًا

Transliteration fa-idhā balaghna ajalahunna fa-amsikūhunna bimaʿrūfin aw fāriqūhunna bimaʿrūfin wa-ashhidū dhaway ʿadlin minkum wa-aqīmū l-shahādata lillahi dhālikum yūʿaẓu bihi man kāna yu'minu bil-lahi wal-yawmi l-ākhiri waman yattaqi l-laha yajʿal lahu makhrajan

Kannada ಇನ್ನು ಅವರು ತಮ್ಮ ಕಾಲಾವಧಿಯನ್ನು ತಲು ಪಿದರೆ, (ಇದ್ದಃ ಮುಗಿದರೆ) ಅವರನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳಿರಿ ಅಥವಾ ಉತ್ತಮ ರೀತಿಯಲ್ಲಿ ಬೇರ್ಪಡಿಸಿರಿ. ನಿಮ್ಮ ಪೈಕಿ ನ್ಯಾಯ ಶೀಲರಾದ ಇಬ್ಬರನ್ನು ಸಾಕ್ಷಿ ನಿಲ್ಲಿಸಿರಿ. ಸಾಕ್ಷ್ಯ ವನ್ನು ಅಲ್ಲಾಹನಿಗಾಗಿಯೇ ನೆಲೆಗೊಳಿಸಿರಿ. ಇದು ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸ ವಿರಿಸುವ ಪ್ರತಿಯೊಬ್ಬನಿಗೆ ಉಪದೇಶಿಸಲಾಗುವ ವಿಷಯ. ಯಾವನು ಅಲ್ಲಾಹನನ್ನು ಭಯಪಡುತ್ತ ಧರ್ಮನಿಷ್ಠರಾಗಿ ಬಾಳುತ್ತಾರೋ ಆತನಿಗೆ ಅಲ್ಲಾಹನು (ಸಂಕಷ್ಟಗಳಿಂದ ಪಾರಾಗುವ) ದಾರಿಯನ್ನು ತೆರೆದುಕೊಡುವನು.

Verse 3

وَيَرْزُقْهُ مِنْ حَيْثُ لَا يَحْتَسِبُ ۚ وَمَن يَتَوَكَّلْ عَلَى ٱللَّهِ فَهُوَ حَسْبُهُۥٓ ۚ إِنَّ ٱللَّهَ بَـٰلِغُ أَمْرِهِۦ ۚ قَدْ جَعَلَ ٱللَّهُ لِكُلِّ شَىْءٍ قَدْرًا

Transliteration wayarzuq'hu min ḥaythu lā yaḥtasibu waman yatawakkal ʿalā l-lahi fahuwa ḥasbuhu inna l-laha bālighu amrihi qad jaʿala l-lahu likulli shayin qadran

Kannada ಮತ್ತು ಅವನು ಊಹಿಸದ ಕಡೆಯಿಂದ ಅವನಿಗೆ ಜೀವನಾಧಾರ ನೀಡುವನು. ಯಾವನು, ಅಲ್ಲಾ ಹನ ಮೇಲೆ ಭಾರವನ್ನು ಅರ್ಪಿಸುತ್ತಾನೋ ಅವನಿಗೆ ಅಲ್ಲಾಹನೇ ಸಾಕು. ಅಲ್ಲಾಹನು ತನ್ನ ಕಾರ್ಯವನ್ನು ಗುರಿ ಮುಟ್ಟಿಸಬಲ್ಲವನು. ಅಲ್ಲಾಹನು ಎಲ್ಲ ವಸ್ತುವಿಗೂ ವಿಧಿಯನ್ನು ನಿರ್ಣಯಿಸಿರುವನು.

Verse 4

وَٱلَّـٰٓـِٔى يَئِسْنَ مِنَ ٱلْمَحِيضِ مِن نِّسَآئِكُمْ إِنِ ٱرْتَبْتُمْ فَعِدَّتُهُنَّ ثَلَـٰثَةُ أَشْهُرٍ وَٱلَّـٰٓـِٔى لَمْ يَحِضْنَ ۚ وَأُو۟لَـٰتُ ٱلْأَحْمَالِ أَجَلُهُنَّ أَن يَضَعْنَ حَمْلَهُنَّ ۚ وَمَن يَتَّقِ ٱللَّهَ يَجْعَل لَّهُۥ مِنْ أَمْرِهِۦ يُسْرًا

Transliteration wa-allāī ya-is'na mina l-maḥīḍi min nisāikum ini ir'tabtum faʿiddatuhunna thalāthatu ashhurin wa-allāī lam yaḥiḍ'na wa-ulātu l-aḥmāli ajaluhunna an yaḍaʿna ḥamlahunna waman yattaqi l-laha yajʿal lahu min amrihi yus'ran

Kannada ನಿಮ್ಮ ಸ್ತ್ರೀಯರ ಪೈಕಿ ಋತುಸ್ರಾವದ ಬಗ್ಗೆ ನಿರಾಶರಾದವರ (ಅವರ ಇದ್ದತ್‍ನ) ಕುರಿತು ನಿಮಗೇನಾದರೂ ಸಂಶಯ ಬಂದರೆ, ಅವರ ಇದ್ದತಿನ ಅವಧಿಯು ಮೂರು ತಿಂಗಳಾಗಿದೆ. ಇನ್ನೂ ಋತುಮತಿಯರಾಗದವರಿಗೂ ಇದೇ ನಿಯಮವಿದೆ. ಮತ್ತು ಗರ್ಭಿಣಿಯರ (ಇದ್ದತಿನ) ಅವಧಿಯು ಅವರ ಹೆರಿಗೆಯ ತನಕವಿದೆ . ಅಲ್ಲಾಹನ ಆದೇಶಗಳ ಬಗ್ಗೆ ಕಟ್ಟೆಚ್ಚರ ಪಾಲಿಸುವವರಿಗೆ ಅಲ್ಲಾಹನು ಸರಳತೆಯನ್ನು ದಯಪಾಲಿಸುತ್ತಾನೆ.

Verse 5

ذَٰلِكَ أَمْرُ ٱللَّهِ أَنزَلَهُۥٓ إِلَيْكُمْ ۚ وَمَن يَتَّقِ ٱللَّهَ يُكَفِّرْ عَنْهُ سَيِّـَٔاتِهِۦ وَيُعْظِمْ لَهُۥٓ أَجْرًا

Transliteration dhālika amru l-lahi anzalahu ilaykum waman yattaqi l-laha yukaffir ʿanhu sayyiātihi wayuʿ'ẓim lahu ajran

Kannada ಇದು ಅಲ್ಲಾಹನು ನಿಮ್ಮ ಕಡೆಗೆ ಅವತೀರ್ಣ ಗೊಳಿಸಿರುವ ಅವನ ಅಪ್ಪಣೆಯಾಗಿದೆ. ತನ್ನನ್ನು ಭಯಪಟ್ಟು ಜೀವಿಸುವವನ ದೋಷಗಳನ್ನು ಅಲ್ಲಾಹನು ಅವನಿಂದ ಹೋಗಲಾಡಿಸುವನು ಮತ್ತು ಅವನ ಪ್ರತಿಫಲವನ್ನು ಗಣನೀಯಗೊಳಿಸುವನು.

Verse 6

أَسْكِنُوهُنَّ مِنْ حَيْثُ سَكَنتُم مِّن وُجْدِكُمْ وَلَا تُضَآرُّوهُنَّ لِتُضَيِّقُوا۟ عَلَيْهِنَّ ۚ وَإِن كُنَّ أُو۟لَـٰتِ حَمْلٍ فَأَنفِقُوا۟ عَلَيْهِنَّ حَتَّىٰ يَضَعْنَ حَمْلَهُنَّ ۚ فَإِنْ أَرْضَعْنَ لَكُمْ فَـَٔاتُوهُنَّ أُجُورَهُنَّ ۖ وَأْتَمِرُوا۟ بَيْنَكُم بِمَعْرُوفٍ ۖ وَإِن تَعَاسَرْتُمْ فَسَتُرْضِعُ لَهُۥٓ أُخْرَىٰ

Transliteration askinūhunna min ḥaythu sakantum min wuj'dikum walā tuḍārrūhunna lituḍayyiqū ʿalayhinna wa-in kunna ulāti ḥamlin fa-anfiqū ʿalayhinna ḥattā yaḍaʿna ḥamlahunna fa-in arḍaʿna lakum faātūhunna ujūrahunna watamirū baynakum bimaʿrūfin wa-in taʿāsartum fasatur'ḍiʿu lahu ukh'rā

Kannada ಅವರನ್ನು, (ಇದ್ದತ್‍ನ ಸಮಯದಲ್ಲಿ) ನಿಮ್ಮ ಅನು ಕೂಲಕ್ಕೆ ತಕ್ಕುದಾದ ನೀವಿರುವ ನಿವಾಸದಲ್ಲೇ ವಾಸಗೊಳಿಸಿರಿ ಮತ್ತು ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಸಲುವಾಗಿ ಅವರಿಗೆ ತೊಂದರೆ ಕೊಡದಿರಿ. ಅವರು ಗರ್ಭಿಣಿಯರಾಗಿದ್ದರೆ, ಅವರ ಹೆರಿಗೆಯಾಗುವವರೆಗೂ ಅವರಿಗೆ ಖರ್ಚು ಕೊಡಿರಿ. ಅನಂತರ ಅವರು ನಿಮಗೋಸ್ಕರ ಮಗುವಿಗೆ ಸ್ತನಪಾನ ಮಾಡಿಸಿದರೆ, ಅವರಿಗೆ ಅವರ ಪ್ರತಿಫಲ ವನ್ನು ಕೊಡಿರಿ ಮತ್ತು ನೀವು ಪರಸ್ಪರ ಶಿಷ್ಟಾಚಾರ ಪ್ರಕಾರ ಮಾತುಕತೆ ನಡೆಸಿ (ಸಮಸ್ಯೆಯನ್ನು ಬಗೆಹರಿಸಿ)ರಿ. ಆದರೆ ನಿಮಗೆ ಕಷ್ಟವೆನಿಸುವುದಾದರೆ ಅವನಿಗಾಗಿ (ಶಿಶುವಿಗೆ) ಬೇರೊಬ್ಬ ಸ್ತ್ರೀ ಮೊಲೆಯುಣಿಸಲಿ.

Verse 7

لِيُنفِقْ ذُو سَعَةٍ مِّن سَعَتِهِۦ ۖ وَمَن قُدِرَ عَلَيْهِ رِزْقُهُۥ فَلْيُنفِقْ مِمَّآ ءَاتَىٰهُ ٱللَّهُ ۚ لَا يُكَلِّفُ ٱللَّهُ نَفْسًا إِلَّا مَآ ءَاتَىٰهَا ۚ سَيَجْعَلُ ٱللَّهُ بَعْدَ عُسْرٍ يُسْرًا

Transliteration liyunfiq dhū saʿatin min saʿatihi waman qudira ʿalayhi riz'quhu falyunfiq mimmā ātāhu l-lahu lā yukallifu l-lahu nafsan illā mā ātāhā sayajʿalu l-lahu baʿda ʿus'rin yus'ran

Kannada ಸ್ಥಿತಿವಂತನು ತನ್ನ ಸ್ಥಿತಿಗನುಸಾರ ಖರ್ಚಿಗೆ ಕೊಡಲಿ. ಪರಿಮಿತಿ ಜೀವನಾಧಾರ ನೀಡಲ್ಪಟ್ಟಿರುವವನು ಅಲ್ಲಾಹನು ಆತನಿಗೆ ನೀಡಿರುವುದರಿಂದ ಖರ್ಚು ಮಾಡಲಿ. ಅಲ್ಲಾಹನು ಯಾರಿಗೂ ತಾನು ಒದಗಿಸಿದುದಕ್ಕಿಂತ ಹೆಚ್ಚಿನ ಬಾದ್ಯತೆಯನ್ನು ಹೇರುವುದಿಲ್ಲ. ಪ್ರಾರಬ್ಧ ನೀಡಿದ ನಂತರ ಅಲ್ಲಾಹನು ಅನುಕೂಲವನ್ನು ಒದಗಿಸುತ್ತಾನೆ.

Verse 8

وَكَأَيِّن مِّن قَرْيَةٍ عَتَتْ عَنْ أَمْرِ رَبِّهَا وَرُسُلِهِۦ فَحَاسَبْنَـٰهَا حِسَابًا شَدِيدًا وَعَذَّبْنَـٰهَا عَذَابًا نُّكْرًا

Transliteration waka-ayyin min qaryatin ʿatat ʿan amri rabbihā warusulihi faḥāsabnāhā ḥisāban shadīdan waʿadhabnāhā ʿadhāban nuk'ran

Kannada ಅದೆಷ್ಟೋ ನಾಡಿನವರು ತಮ್ಮ ಪ್ರಭು ಮತ್ತು ಅವನ ದೂತರುಗಳ ಆಜ್ಞೋಲ್ಲಂಘನೆ ಮಾಡಿದರು? ಆಗ ನಾವು ಅವರನ್ನು ಉಗ್ರ ವಿಚಾರಣೆಗೆ ಒಳಪಡಿಸಿದೆವು ಮತ್ತು ಅವರನ್ನು ನಾವು ಹೀನಾಯವಾಗಿ ಶಿಕ್ಷಿಸಿದೆವು.

Verse 9

فَذَاقَتْ وَبَالَ أَمْرِهَا وَكَانَ عَـٰقِبَةُ أَمْرِهَا خُسْرًا

Transliteration fadhāqat wabāla amrihā wakāna ʿāqibatu amrihā khus'ran

Kannada ಹಾಗೆ ಅವರು ತಮ್ಮ ಕರ್ಮಫಲದ ಸವಿಯನ್ನುಂಡರು. ಅದರ ಅಂತಿಮ ಗತಿಯು ನಷ್ಟವೇ ಆಗಿತ್ತು.

Verse 10

أَعَدَّ ٱللَّهُ لَهُمْ عَذَابًا شَدِيدًا ۖ فَٱتَّقُوا۟ ٱللَّهَ يَـٰٓأُو۟لِى ٱلْأَلْبَـٰبِ ٱلَّذِينَ ءَامَنُوا۟ ۚ قَدْ أَنزَلَ ٱللَّهُ إِلَيْكُمْ ذِكْرًا

Transliteration aʿadda l-lahu lahum ʿadhāban shadīdan fa-ittaqū l-laha yāulī l-albābi alladhīna āmanū qad anzala l-lahu ilaykum dhik'ran

Kannada ಅಲ್ಲಾಹನು ಅವರಿಗೆ ಘೋರ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿದ್ದಾನೆ. ಆದುದರಿಂದ ಸತ್ಯ ವಿಶ್ವಾಸಿ ಗಳಾಗಿರುವ ಬುದ್ದಿಜೀವಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹನು ನಿಮ್ಮ ಕಡೆಗೆ ಒಂದು ಉದ್ಭೋಧವನ್ನು ಅವತೀರ್ಣಗೊಳಿಸಿರುತ್ತಾನೆ.

Verse 11

رَّسُولًا يَتْلُوا۟ عَلَيْكُمْ ءَايَـٰتِ ٱللَّهِ مُبَيِّنَـٰتٍ لِّيُخْرِجَ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ مِنَ ٱلظُّلُمَـٰتِ إِلَى ٱلنُّورِ ۚ وَمَن يُؤْمِنۢ بِٱللَّهِ وَيَعْمَلْ صَـٰلِحًا يُدْخِلْهُ جَنَّـٰتٍ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَآ أَبَدًا ۖ قَدْ أَحْسَنَ ٱللَّهُ لَهُۥ رِزْقًا

Transliteration rasūlan yatlū ʿalaykum āyāti l-lahi mubayyinātin liyukh'rija alladhīna āmanū waʿamilū l-ṣāliḥāti mina l-ẓulumāti ilā l-nūri waman yu'min bil-lahi wayaʿmal ṣāliḥan yud'khil'hu jannātin tajrī min taḥtihā l-anhāru khālidīna fīhā abadan qad aḥsana l-lahu lahu riz'qan

Kannada ಅಥವಾ ಅಲ್ಲಾಹನ ಸುಸ್ಪಷ್ಟ ದೃಷ್ಟಾಂತಗಳನ್ನು ನಿಮಗೆ ಓದಿ ಕೇಳಿಸುವ ಒಬ್ಬ ಸಂದೇಶವಾಹಕನನ್ನು ನಿಮ್ಮ ಕಡೆಗೆ (ಅವನು ನಿಯೋಗಿಸಿರುವನು). ವಿಶ್ವಾಸವಿರಿಸಿದ ಮತ್ತು ಸತ್ಕರ್ಮವೆಸಗಿದ ಜನರನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ಒಯ್ಯಲಿಕ್ಕಾಗಿ. ಯಾವನು ಅಲ್ಲಾಹನ ಮೇಲೆ ವಿಶ್ವಾಸವಿರಿಸುತ್ತಾನೋ ಹಾಗೂ ಸತ್ಕರ್ಮ ಮಾಡುತ್ತಾನೋ ಆ ವ್ಯಕ್ತಿಯನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಅಲ್ಲಾಹನು ಪ್ರವೇಶಗೊಳಿಸುವನು. ಅವರು ಅದರಲ್ಲಿ ಸದಾಕಾಲ ವಾಸಿಸುವರು. ಇಂತಹವನಿಗೆ ಅಲ್ಲಾಹನು ಅತ್ಯುತ್ತಮ

Verse 12

ٱللَّهُ ٱلَّذِى خَلَقَ سَبْعَ سَمَـٰوَٰتٍ وَمِنَ ٱلْأَرْضِ مِثْلَهُنَّ يَتَنَزَّلُ ٱلْأَمْرُ بَيْنَهُنَّ لِتَعْلَمُوٓا۟ أَنَّ ٱللَّهَ عَلَىٰ كُلِّ شَىْءٍ قَدِيرٌ وَأَنَّ ٱللَّهَ قَدْ أَحَاطَ بِكُلِّ شَىْءٍ عِلْمًۢا

Transliteration al-lahu alladhī khalaqa sabʿa samāwātin wamina l-arḍi mith'lahunna yatanazzalu l-amru baynahunna litaʿlamū anna l-laha ʿalā kulli shayin qadīrun wa-anna l-laha qad aḥāṭa bikulli shayin ʿil'man

Kannada ಅಲ್ಲಾಹನೇ ಸಪ್ತಗಗನಗಳನ್ನು ಮತ್ತು ಭೂಮಿಯಿಂದ ಅವುಗಳಿಗೆ ಸಮಾನವಾದುದನ್ನು ಸೃಷ್ಟಿಸಿದವನು. ಅವುಗಳ ನಡುವೆ ಅವನ ಆದೇ ಶಗಳು ಇಳಿಯುತ್ತವೆ. ಅಲ್ಲಾಹನು ಎಲ್ಲದಕ್ಕೂ ಸಾಮಥ್ರ್ಯವುಳ್ಳವನು. ಅಲ್ಲಾಹನ ಜ್ಞಾನವು ಎಲ್ಲ ವಿಷಯಗಳಿಗೂ ವ್ಯಾಪಿಸಿಕೊಂಡಿದೆ ಎಂಬುದನ್ನು ನೀವು ತಿಳಿದುಕೊಳ್ಳುವಂತಾಗಲು.

Read Surah At-Talaq in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.