Surah As-Sajdah in Kannada: translation and audio
Surah 32 · السجدة · The Prostration · 30 verses
Surah As-Sajdah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah As-Sajdah word by word in English.
Verse 1
الٓمٓ
Transliteration alif-lam-meem
Kannada ಅಲಿಫ್ ಲಾಮ್ ಮೀಮ್.
Verse 2
تَنزِيلُ ٱلْكِتَـٰبِ لَا رَيْبَ فِيهِ مِن رَّبِّ ٱلْعَـٰلَمِينَ
Transliteration tanzīlu l-kitābi lā rayba fīhi min rabbi l-ʿālamīna
Kannada ಈ ವೇದ ಗ್ರಂಥದ ಅವತೀರ್ಣದಲ್ಲಿ ಸಂದೇಹಕ್ಕೆ ಆಸ್ಪದವೇ ಇಲ್ಲ. ಇದು ವಿಶ್ವಗಳ ಒಡೆಯನಿಂದ ಅವತೀರ್ಣಗೊಂಡಿದೆ.
Verse 3
أَمْ يَقُولُونَ ٱفْتَرَىٰهُ ۚ بَلْ هُوَ ٱلْحَقُّ مِن رَّبِّكَ لِتُنذِرَ قَوْمًا مَّآ أَتَىٰهُم مِّن نَّذِيرٍ مِّن قَبْلِكَ لَعَلَّهُمْ يَهْتَدُونَ
Transliteration am yaqūlūna if'tarāhu bal huwa l-ḥaqu min rabbika litundhira qawman mā atāhum min nadhīrin min qablika laʿallahum yahtadūna
Kannada ಇದನ್ನು ಈ ವ್ಯಕ್ತಿ ಸ್ವತಃ ಸೃಷ್ಟಿ ಮಾಡಿದನೆಂದು ಸತ್ಯನಿಷೇಧಿಗಳು ಹೇಳುತ್ತಾರೆಯೇ? ಅಲ್ಲ; ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯವಾಗಿದೆ. ಇದು ನಿಮಗಿಂತ ಮುಂಚೆ ಎಚ್ಚರಿಕೆ ನೀಡುವವರು ಬಾರದ ಒಂದು ಜನಾಂಗಕ್ಕೆ ನೀವು ಎಚ್ಚರಿಕೆ ನೀಡಲಿಕ್ಕಾಗಿದೆ. ತನ್ಮೂಲಕ ಅವರು ಸನ್ಮಾರ್ಗ ಪಡೆಯಲೆಂದು.
Verse 4
ٱللَّهُ ٱلَّذِى خَلَقَ ٱلسَّمَـٰوَٰتِ وَٱلْأَرْضَ وَمَا بَيْنَهُمَا فِى سِتَّةِ أَيَّامٍ ثُمَّ ٱسْتَوَىٰ عَلَى ٱلْعَرْشِ ۖ مَا لَكُم مِّن دُونِهِۦ مِن وَلِىٍّ وَلَا شَفِيعٍ ۚ أَفَلَا تَتَذَكَّرُونَ
Transliteration al-lahu alladhī khalaqa l-samāwāti wal-arḍa wamā baynahumā fī sittati ayyāmin thumma is'tawā ʿalā l-ʿarshi mā lakum min dūnihi min waliyyin walā shafīʿin afalā tatadhakkarūna
Kannada ಅಲ್ಲಾಹು, ಆಕಾಶಗಳನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವ ವಸ್ತುಗಳನ್ನೂ ಆರು ದಿನಗಳಲ್ಲಿ ಸೃಷ್ಟಿಸಿದವನು. ಅನಂತರ ಅವನಿಗೆ ಸಂಗತವಾದ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನು. ಅವನ ಹೊರತು ನಿಮಗೆ ಯಾರೂ ಸಹಾಯಕನಿಲ್ಲ. ಶಿಫಾರಸು ಮಾಡುವವನೂ ಇಲ್ಲ. ಹೀಗಿರುತ್ತ ನೀವೇಕೆ (ಈ ಯಥಾಥ್ರ್ಯವನ್ನು) ಯೋಚಿಸುವುದಿಲ್ಲ?
Verse 5
يُدَبِّرُ ٱلْأَمْرَ مِنَ ٱلسَّمَآءِ إِلَى ٱلْأَرْضِ ثُمَّ يَعْرُجُ إِلَيْهِ فِى يَوْمٍ كَانَ مِقْدَارُهُۥٓ أَلْفَ سَنَةٍ مِّمَّا تَعُدُّونَ
Transliteration yudabbiru l-amra mina l-samāi ilā l-arḍi thumma yaʿruju ilayhi fī yawmin kāna miq'dāruhu alfa sanatin mimmā taʿuddūna
Kannada ಅವನು ಆಕಾಶದಿಂದ ಭೂಮಿಯವರೆಗೆ ಎಲ್ಲ ಕಾರ್ಯಗಳನ್ನು ಸೂತ್ರಬದ್ಧವಾಗಿ ನಿಯಂತ್ರಿಸುತ್ತಿರುವನು. ಅನಂತರ ಒಂದು ದಿನದಲ್ಲಿ ಅದು ಅವನ ಕಡೆಗೆ ಏರಿ ಹೋಗುವುದು. ಆ ದಿನದ ಅಳತೆಯು (ಗಾತ್ರ) ನೀವು ಲೆಕ್ಕ ಹಾಕುವ ಸಾವಿರ ವರ್ಷವಾಗಿರುವುದು.
Verse 6
ذَٰلِكَ عَـٰلِمُ ٱلْغَيْبِ وَٱلشَّهَـٰدَةِ ٱلْعَزِيزُ ٱلرَّحِيمُ
Transliteration dhālika ʿālimu l-ghaybi wal-shahādati l-ʿazīzu l-raḥīmu
Kannada ಅವನು ಸಕಲ ಪ್ರತ್ಯಕ್ಷಾಪ್ರತ್ಯಕ್ಷಗಳ ಪರಿಜ್ಞಾನಿ. ಅವನು ಪ್ರತಾಪಶಾಲಿ, ಕರುಣಾನಿಧಿ.
Verse 7
ٱلَّذِىٓ أَحْسَنَ كُلَّ شَىْءٍ خَلَقَهُۥ ۖ وَبَدَأَ خَلْقَ ٱلْإِنسَـٰنِ مِن طِينٍ
Transliteration alladhī aḥsana kulla shayin khalaqahu wabada-a khalqa l-insāni min ṭīnin
Kannada ತಾನು ಸೃಷ್ಟಿಸಿದ ಎಲ್ಲ ವಸ್ತುಗಳನ್ನು ಅವನು ಚೆನ್ನಾಗಿಯೇ ಮಾಡಿರುತ್ತಾನೆ. ಅವನು ಮಾನವ ಸೃಷ್ಟಿಯನ್ನು ಕೊಜೆ ಮಣ್ಣಿನಿಂದ ಆರಂಭಿಸಿದನು.
Verse 8
ثُمَّ جَعَلَ نَسْلَهُۥ مِن سُلَـٰلَةٍ مِّن مَّآءٍ مَّهِينٍ
Transliteration thumma jaʿala naslahu min sulālatin min māin mahīnin
Kannada ನಂತರ ಅವನ ಸಂತತಿಯನ್ನು ದುರ್ಬಲ ಜಲದಿಂದ ಉತ್ಪತ್ತಿಯಾದ ರಕ್ತ ಗಡ್ಡೆಯಿಂದ ಉಂಟು ಮಾಡಿದನು.
Verse 9
ثُمَّ سَوَّىٰهُ وَنَفَخَ فِيهِ مِن رُّوحِهِۦ ۖ وَجَعَلَ لَكُمُ ٱلسَّمْعَ وَٱلْأَبْصَـٰرَ وَٱلْأَفْـِٔدَةَ ۚ قَلِيلًا مَّا تَشْكُرُونَ
Transliteration thumma sawwāhu wanafakha fīhi min rūḥihi wajaʿala lakumu l-samʿa wal-abṣāra wal-afidata qalīlan mā tashkurūna
Kannada ತರುವಾಯ ಅದನ್ನು ಬೇಕಾದಂತೆ ಸ್ವರೂಪಗೊಳಿಸಿದನು ಮತ್ತು ಅದರೊಳಗೆ ತನ್ನ ಆತ್ಮ ವನ್ನು ಊದಿದನು. ನಿಮಗೆ ಕಿವಿಗಳನ್ನೂ ಕಣ್ಣುಗಳನ್ನೂ ಹೃದಯಗಳನ್ನೂ ಕೊಟ್ಟನು. (ಹೀಗಿದ್ದೂ) ನೀವು ಅಲ್ಪವೇ ಕೃತಜ್ಞರಾಗುತ್ತೀರಿ.
Verse 10
وَقَالُوٓا۟ أَءِذَا ضَلَلْنَا فِى ٱلْأَرْضِ أَءِنَّا لَفِى خَلْقٍ جَدِيدٍۭ ۚ بَلْ هُم بِلِقَآءِ رَبِّهِمْ كَـٰفِرُونَ
Transliteration waqālū a-idhā ḍalalnā fī l-arḍi a-innā lafī khalqin jadīdin bal hum biliqāi rabbihim kāfirūna
Kannada “ನಾವು ಮಣ್ಣು ಪಾಲಾಗಿ ಹೋದ ಬಳಿಕ ಪುನಃ ಹೊಸತಾಗಿ ಸೃಷ್ಟಿಸಲ್ಪಡುತ್ತೇವೆಯೇ?” ಎಂದು ಸತ್ಯನಿಷೇಧಿಗಳು ಕೇಳುತ್ತಾರೆ. ಅಷ್ಟೇ ಅಲ್ಲ, ಅವರು ತಮ್ಮ ಪ್ರಭುವನ್ನು ಮುಖಾಮುಖಿ ಎದುರುಗೊಳ್ಳುವುದನ್ನು ನಿಷೇಧಿಸುತ್ತಾರೆ.
Verse 11
۞ قُلْ يَتَوَفَّىٰكُم مَّلَكُ ٱلْمَوْتِ ٱلَّذِى وُكِّلَ بِكُمْ ثُمَّ إِلَىٰ رَبِّكُمْ تُرْجَعُونَ
Transliteration qul yatawaffākum malaku l-mawti alladhī wukkila bikum thumma ilā rabbikum tur'jaʿūna
Kannada ತಾವು ಹೇಳಿರಿ, “ನಿಮ್ಮ ಮೇಲೆ ನಿಯಮಿತವಾದ ಮರಣದ ಮಲಕ್ ನಿಮ್ಮನ್ನು ಮೃತ್ಯುಗೊಳಿಸುವರು. ನಂತರ ನಿಮ್ಮನ್ನು ನಿಮ್ಮ ಪ್ರಭುವಿನೆಡೆಗೆ ಮರಳಿಸಲಾಗುವುದು”.
Verse 12
وَلَوْ تَرَىٰٓ إِذِ ٱلْمُجْرِمُونَ نَاكِسُوا۟ رُءُوسِهِمْ عِندَ رَبِّهِمْ رَبَّنَآ أَبْصَرْنَا وَسَمِعْنَا فَٱرْجِعْنَا نَعْمَلْ صَـٰلِحًا إِنَّا مُوقِنُونَ
Transliteration walaw tarā idhi l-muj'rimūna nākisū ruūsihim ʿinda rabbihim rabbanā abṣarnā wasamiʿ'nā fa-ir'jiʿ'nā naʿmal ṣāliḥan innā mūqinūna
Kannada ಅಪರಾಧಿಗಳು ತಮ್ಮ ಪ್ರಭುವಿನ ಮುಂದೆ ತಲೆ ತಗ್ಗಿಸಿ ನಿಂತಿರುವ ಸಂದರ್ಭವನ್ನು ನೀವು ನೋಡುತ್ತಿದ್ದರೆ, (ಆಗ ಅವರು ಹೇಳುವರು), “ನಮ್ಮ ಪ್ರಭೂ, (ನಾವು ನಿಷೇಧಿಸಿದ್ದನ್ನು) ನಾವು ಕಣ್ಣಾರೆ ಕಂಡೆವು ಮತ್ತು ಕೇಳಿದೆವು. ಆದ್ದರಿಂದ ನಮ್ಮನ್ನು (ಇಹಲೋಕಕ್ಕೆ) ಸತ್ಕರ್ಮವೆಸಗಲಿಕ್ಕಾಗಿ ಮರಳಿ ಕಳುಹಿಸಿಕೊಡು. ಈಗ ನಾವು ದೃಢವಾಗಿ ನಂಬಿದ್ದೇವೆ’’.
Verse 13
وَلَوْ شِئْنَا لَـَٔاتَيْنَا كُلَّ نَفْسٍ هُدَىٰهَا وَلَـٰكِنْ حَقَّ ٱلْقَوْلُ مِنِّى لَأَمْلَأَنَّ جَهَنَّمَ مِنَ ٱلْجِنَّةِ وَٱلنَّاسِ أَجْمَعِينَ
Transliteration walaw shi'nā laātaynā kulla nafsin hudāhā walākin ḥaqqa l-qawlu minnī la-amla-anna jahannama mina l-jinati wal-nāsi ajmaʿīna
Kannada ನಾವಿಚ್ಛಿಸುತ್ತಿದ್ದರೆ ಪ್ರತಿಯೊಂದು ಜೀವಕ್ಕೂ ಅದರ ಮಾರ್ಗದರ್ಶನ ನೀಡುತ್ತಿದ್ದೆವು. ಆದರೆ ‘ಜಿನ್ನ್ ಹಾಗೂ ಮಾನವರಿಂದ ನಾನು ನರಕವನ್ನು ತುಂಬಿ ಬಿಡುವೆನು’ ಎಂಬ ಮಾತು ನನ್ನಿಂದ ನಿಜಗೊಂಡಿದೆ.
Verse 14
فَذُوقُوا۟ بِمَا نَسِيتُمْ لِقَآءَ يَوْمِكُمْ هَـٰذَآ إِنَّا نَسِينَـٰكُمْ ۖ وَذُوقُوا۟ عَذَابَ ٱلْخُلْدِ بِمَا كُنتُمْ تَعْمَلُونَ
Transliteration fadhūqū bimā nasītum liqāa yawmikum hādhā innā nasīnākum wadhūqū ʿadhāba l-khul'di bimā kuntum taʿmalūna
Kannada ಆದುದರಿಂದ ನೀವು ಇಂದಿನ ಭೇಟಿಯನ್ನು ಮರೆತು ಬಿಟ್ಟ ಕಾರಣ, ಅದರ ಶಿಕ್ಷೆಯನ್ನು ಸವಿಯಿರಿ. ನಾವು ಈಗ ನಿಮ್ಮನ್ನು ತೊರೆದು ಬಿಟ್ಟಿ ದ್ದೇವೆ (ಶಿಕ್ಷೆಗೆ ತಳ್ಳಿ ಬಿಟ್ಟಿದ್ದೇವೆ). ನಿಮ್ಮ ದುಷ್ಕøತ್ಯಗಳ ಫಲವಾಗಿ ಶಾಶ್ವತ ಶಿಕ್ಷೆಯ ರುಚಿಯನ್ನು ಸವಿಯಿರಿ.
Verse 15
إِنَّمَا يُؤْمِنُ بِـَٔايَـٰتِنَا ٱلَّذِينَ إِذَا ذُكِّرُوا۟ بِهَا خَرُّوا۟ سُجَّدًا وَسَبَّحُوا۟ بِحَمْدِ رَبِّهِمْ وَهُمْ لَا يَسْتَكْبِرُونَ ۩
Transliteration innamā yu'minu biāyātinā alladhīna idhā dhukkirū bihā kharrū sujjadan wasabbaḥū biḥamdi rabbihim wahum lā yastakbirūna
Kannada ನಮ್ಮ ವಚನಗಳನ್ನು ಓದಿ ಹೇಳಿ ಉಪದೇಶಿಸಿ ದಾಗ ಸಾಷ್ಟಾಂಗ ಬೀಳುವ ಮತ್ತು ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪರಿಶುದ್ಧತೆಯನ್ನು ಪ್ರಕೀರ್ತನೆ ಮಾಡುವವರು ಮಾತ್ರವೇ ನಮ್ಮ ವಚನಗಳನ್ನು ನಂಬಬಲ್ಲರು. ಅವರು ಜಂಭ ತೋರಲಾರರು.
Verse 16
تَتَجَافَىٰ جُنُوبُهُمْ عَنِ ٱلْمَضَاجِعِ يَدْعُونَ رَبَّهُمْ خَوْفًا وَطَمَعًا وَمِمَّا رَزَقْنَـٰهُمْ يُنفِقُونَ
Transliteration tatajāfā junūbuhum ʿani l-maḍājiʿi yadʿūna rabbahum khawfan waṭamaʿan wamimmā razaqnāhum yunfiqūna
Kannada (ಶಿಕ್ಷೆಯ) ಭಯ ಹಾಗೂ (ಕರುಣೆಯ) ನಿರೀಕ್ಷೆ ಯೊಂದಿಗೆ ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸಲು ಚಾಪೆಗಳಿಂದ (ಎದ್ದೇಳುವ ಮೂಲಕ) ಅವರ ಪಾಶ್ರ್ವಗಳು ಅಗಲುತ್ತವೆ. ನಾವು ಅವರಿಗೆ ನೀಡಿದವುಗಳಿಂದ (ಧರ್ಮಮಾರ್ಗದಲ್ಲಿ) ವೆಚ್ಚವನ್ನು ಮಾಡುವರು.
Verse 17
فَلَا تَعْلَمُ نَفْسٌ مَّآ أُخْفِىَ لَهُم مِّن قُرَّةِ أَعْيُنٍ جَزَآءًۢ بِمَا كَانُوا۟ يَعْمَلُونَ
Transliteration falā taʿlamu nafsun mā ukh'fiya lahum min qurrati aʿyunin jazāan bimā kānū yaʿmalūna
Kannada ಅವರ ಕರ್ಮಗಳಿಗೆ ಪ್ರತಿಫಲವಾಗಿ ಅವರ ಕಣ್ಣುಗಳಿಗೆ ತಂಪೆರೆಯುವ ಯಾವ ಸತ್ಫಲಗಳನ್ನು ಅವರಿಗಾಗಿ ಗುಪ್ತವಾಗಿಡಲಾಗಿದೆಯೆಂದು ಯಾವನೂ ಅರಿಯನು.
Verse 18
أَفَمَن كَانَ مُؤْمِنًا كَمَن كَانَ فَاسِقًا ۚ لَّا يَسْتَوُۥنَ
Transliteration afaman kāna mu'minan kaman kāna fāsiqan lā yastawūna
Kannada ಅಂದ ಮೇಲೆ ಸತ್ಯವಿಶ್ವಾಸಿಯಾದವನು ಧಿಕ್ಕಾರಿಯಂತೆ ಆಗಬಲ್ಲನೇ? ಅವರು ಸಮಾನರಲ್ಲ.
Verse 19
أَمَّا ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ فَلَهُمْ جَنَّـٰتُ ٱلْمَأْوَىٰ نُزُلًۢا بِمَا كَانُوا۟ يَعْمَلُونَ
Transliteration ammā alladhīna āmanū waʿamilū l-ṣāliḥāti falahum jannātu l-mawā nuzulan bimā kānū yaʿmalūna
Kannada ಸತ್ಯವಿಶ್ವಾಸವಿರಿಸಿದ ಮತ್ತು ಸತ್ಕರ್ಮವೆಸಗಿದ ಜನರಿಗೆ ಅವರ ಸುಕೃತಗಳ ಪ್ರತಿಫಲವಾಗಿ ಕಾದಿರಿಸಿದ ಆತಿಥ್ಯವಾಗಿ ವಾಸಯೋಗ್ಯ ಉದ್ಯಾನಗಳಿವೆಂ.
Verse 20
وَأَمَّا ٱلَّذِينَ فَسَقُوا۟ فَمَأْوَىٰهُمُ ٱلنَّارُ ۖ كُلَّمَآ أَرَادُوٓا۟ أَن يَخْرُجُوا۟ مِنْهَآ أُعِيدُوا۟ فِيهَا وَقِيلَ لَهُمْ ذُوقُوا۟ عَذَابَ ٱلنَّارِ ٱلَّذِى كُنتُم بِهِۦ تُكَذِّبُونَ
Transliteration wa-ammā alladhīna fasaqū famawāhumu l-nāru kullamā arādū an yakhrujū min'hā uʿīdū fīhā waqīla lahum dhūqū ʿadhāba l-nāri alladhī kuntum bihi tukadhibūna
Kannada ಧರ್ಮಭ್ರಷ್ಟ ಪ್ರವೃತ್ತಿ ಕೈಗೊಂಡವರ ವಾಸಸ್ಥಾನವು ನರಕಾಗ್ನಿಯಾಗಿದೆ. ಅವರು ಅಲ್ಲಿಂದ ಹೊರ ಹೋಗಲಿಚ್ಛಿಸಿದಾಗಲೆಲ್ಲ ಅದರೊಳಕ್ಕೆ ಪುನಃ ತಳ್ಳಲ್ಪಡುವರು. ‘ನೀವು ಸುಳ್ಳಾಗಿಸುತ್ತಿದ್ದ ನರಕಾಗ್ನಿಯ ರುಚಿಯನ್ನು ಸವಿಯಿರಿ’ ಎಂದು ಅವರಿಗೆ ಹೇಳಲಾಗುವುದು.
Verse 21
وَلَنُذِيقَنَّهُم مِّنَ ٱلْعَذَابِ ٱلْأَدْنَىٰ دُونَ ٱلْعَذَابِ ٱلْأَكْبَرِ لَعَلَّهُمْ يَرْجِعُونَ
Transliteration walanudhīqannahum mina l-ʿadhābi l-adnā dūna l-ʿadhābi l-akbari laʿallahum yarjiʿūna
Kannada ಮಹಾ ಶಿಕ್ಷೆಗೆ ಮುಂಚೆ ಈ ಲೋಕದಲ್ಲೇ ನಾವು ಸಣ್ಣ ಶಿಕ್ಷೆಯ ರುಚಿಯನ್ನು ಇವರಿಗೆ ಉಣಿಸುತ್ತೇವೆ. ಅವರು (ದಿಕ್ಕಾರದಿಂದ) ಮರಳಲಿಕ್ಕಾಗಿ.
Verse 22
وَمَنْ أَظْلَمُ مِمَّن ذُكِّرَ بِـَٔايَـٰتِ رَبِّهِۦ ثُمَّ أَعْرَضَ عَنْهَآ ۚ إِنَّا مِنَ ٱلْمُجْرِمِينَ مُنتَقِمُونَ
Transliteration waman aẓlamu mimman dhukkira biāyāti rabbihi thumma aʿraḍa ʿanhā innā mina l-muj'rimīna muntaqimūna
Kannada ತನ್ನ ಪ್ರಭುವಿನ ನಿದರ್ಶನಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಅವುಗಳಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಪರಾಧಿಗಳನ್ನು ನಾವು ಖಂಡಿತ ಶಿಕ್ಷಿಸುತ್ತೇವೆ.
Verse 23
وَلَقَدْ ءَاتَيْنَا مُوسَى ٱلْكِتَـٰبَ فَلَا تَكُن فِى مِرْيَةٍ مِّن لِّقَآئِهِۦ ۖ وَجَعَلْنَـٰهُ هُدًى لِّبَنِىٓ إِسْرَٰٓءِيلَ
Transliteration walaqad ātaynā mūsā l-kitāba falā takun fī mir'yatin min liqāihi wajaʿalnāhu hudan libanī is'rāīla
Kannada ನಾವು ಮೂಸಾರಿಗೆ ಗ್ರಂಥ ನೀಡಿದ್ದೇವೆ. ಅವರನ್ನು ಭೇಟಿಯಾಗುವ ಬಗ್ಗೆ ತಾವು ಸಂಶಯದಲ್ಲಿ ಬೀಳದಿರಿ. ಅದನ್ನು (ಆ ಗ್ರಂಥವನ್ನು) ನಾವು ಇಸ್‍ರಾ ಈಲ ಜನಾಂಗಕ್ಕೆ ಸನ್ಮಾರ್ಗದರ್ಶಕವಾಗಿ ಮಾಡಿದ್ದೆವು.
Verse 24
وَجَعَلْنَا مِنْهُمْ أَئِمَّةً يَهْدُونَ بِأَمْرِنَا لَمَّا صَبَرُوا۟ ۖ وَكَانُوا۟ بِـَٔايَـٰتِنَا يُوقِنُونَ
Transliteration wajaʿalnā min'hum a-immatan yahdūna bi-amrinā lammā ṣabarū wakānū biāyātinā yūqinūna
Kannada ನಮ್ಮ ಅಣತಿ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ಮುಂದಾಳುಗಳನ್ನು ಅವರಿಂದ ನಾವು ರೂಪಿಸಿದೆವು. ಅವರು ಪಾಲಿಸಿದ ಸಹನೆಗಾಗಿ, ಅವರು ನಮ್ಮ ನಿದರ್ಶನಗಳಲ್ಲಿ ದೃಢ ವಿಶ್ವಾಸಿಗಳಾಗಿದ್ದರು.
Verse 25
إِنَّ رَبَّكَ هُوَ يَفْصِلُ بَيْنَهُمْ يَوْمَ ٱلْقِيَـٰمَةِ فِيمَا كَانُوا۟ فِيهِ يَخْتَلِفُونَ
Transliteration inna rabbaka huwa yafṣilu baynahum yawma l-qiyāmati fīmā kānū fīhi yakhtalifūna
Kannada ಅವರು ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವ ವಿಷಯದಲ್ಲಿ ನಿಮ್ಮ ಪ್ರಭು ಪುನರುತ್ಥಾನ ದಿನ ಅವರ ನಡುವೆ ತೀರ್ಮಾನವನ್ನು ಮಾಡುವನು.
Verse 26
أَوَلَمْ يَهْدِ لَهُمْ كَمْ أَهْلَكْنَا مِن قَبْلِهِم مِّنَ ٱلْقُرُونِ يَمْشُونَ فِى مَسَـٰكِنِهِمْ ۚ إِنَّ فِى ذَٰلِكَ لَـَٔايَـٰتٍ ۖ أَفَلَا يَسْمَعُونَ
Transliteration awalam yahdi lahum kam ahlaknā min qablihim mina l-qurūni yamshūna fī masākinihim inna fī dhālika laāyātin afalā yasmaʿūna
Kannada ಇವರಿಗೆ ಮುಂಚೆ ಎಷ್ಟು ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ ಎಂಬ ವಿಚಾರವು ಇವರಿಗೆ ದಾರಿತೋರಿಲ್ಲವೇ? ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಈಗ ಇವರು ಸಂಚರಿಸುತ್ತಾರೆ. ಇದರಲ್ಲಿ ದೊಡ್ಡ ನಿದರ್ಶನಗಳಿವೆ. ಹೀಗಿದ್ದೂ ಇವರೇಕೆ ಕಿವಿಗೊಡುವುದಿಲ್ಲ?
Verse 27
أَوَلَمْ يَرَوْا۟ أَنَّا نَسُوقُ ٱلْمَآءَ إِلَى ٱلْأَرْضِ ٱلْجُرُزِ فَنُخْرِجُ بِهِۦ زَرْعًا تَأْكُلُ مِنْهُ أَنْعَـٰمُهُمْ وَأَنفُسُهُمْ ۖ أَفَلَا يُبْصِرُونَ
Transliteration awalam yaraw annā nasūqu l-māa ilā l-arḍi l-juruzi fanukh'riju bihi zarʿan takulu min'hu anʿāmuhum wa-anfusuhum afalā yub'ṣirūna
Kannada ಬರಡು ನೆಲಕ್ಕೆ ನಾವು ನೀರು ಕುಡಿಸುವುದನ್ನು ಇವರು ಕಂಡಿಲ್ಲವೇ? ಆ ಮೂಲಕ ಇವರೂ ಇವರ ಜಾನುವಾರುಗಳೂ ತಿನ್ನುವ ಬೆಳೆಯನ್ನು ನಾವು ಬೆಳೆಸುತ್ತೇವೆ. ಹೀಗಿದ್ದೂ ಇವರು ನೋಡಿ ತಿಳಿಯುವುದಿಲ್ಲವೇ?
Verse 28
وَيَقُولُونَ مَتَىٰ هَـٰذَا ٱلْفَتْحُ إِن كُنتُمْ صَـٰدِقِينَ
Transliteration wayaqūlūna matā hādhā l-fatḥu in kuntum ṣādiqīna
Kannada ‘ನೀವು ಸತ್ಯವಾದಿಯಾಗಿದ್ದರೆ, ಈ ಗೆಲುವು ಯಾವಾಗ?’ ಎಂದು ಇವರು ಕೇಳುತ್ತಾರೆ.
Verse 29
قُلْ يَوْمَ ٱلْفَتْحِ لَا يَنفَعُ ٱلَّذِينَ كَفَرُوٓا۟ إِيمَـٰنُهُمْ وَلَا هُمْ يُنظَرُونَ
Transliteration qul yawma l-fatḥi lā yanfaʿu alladhīna kafarū īmānuhum walā hum yunẓarūna
Kannada (ಪ್ರವಾದಿಯರೇ) ಹೇಳಿರಿ, ಗೆಲುವಿನ ದಿನ ಸತ್ಯನಿಷೇಧಿಗಳಿಗೆ ತಮ್ಮ ವಿಶ್ವಾಸ ಪ್ರಯೋಜನವಾಗದು. ಅವರಿಗೆ (ಶಿಕ್ಷೆಯನ್ನು) ಸ್ವಲ್ಪವೂ ಮುಂದೂಡಲಾಗುವುದಿಲ್ಲ.
Verse 30
فَأَعْرِضْ عَنْهُمْ وَٱنتَظِرْ إِنَّهُم مُّنتَظِرُونَ
Transliteration fa-aʿriḍ ʿanhum wa-intaẓir innahum muntaẓirūna
Kannada ಆದ್ದರಿಂದ ತಾವು ಅವರನ್ನು ನಿರ್ಲಕ್ಷಿಸಿರಿ ಮತ್ತು ಕಾಯುತ್ತಲಿರಿ. ಇವರೂ ಕಾಯುವವರೇ ಸರಿ.
Read Surah As-Sajdah in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.