MyDugsiStart learning

Surah Al-Mu'minun in Kannada: translation and audio

Surah 23 · المؤمنون · The Believers · 118 verses

Surah Al-Mu'minun verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Mu'minun word by word in English.

Verse 1

قَدْ أَفْلَحَ ٱلْمُؤْمِنُونَ

Transliteration qad aflaḥa l-mu'minūna

Kannada ಸತ್ಯವಿಶ್ವಾಸಿಗಳು ಖಂಡಿತ ಜಯಶೀಲರಾದರು.

Verse 2

ٱلَّذِينَ هُمْ فِى صَلَاتِهِمْ خَـٰشِعُونَ

Transliteration alladhīna hum fī ṣalātihim khāshiʿūna

Kannada ಅವರು ತಮ್ಮ ನಮಾಝಿನಲ್ಲಿ ಭಯಭಕ್ತಿಯುಳ್ಳವರು.

Verse 3

وَٱلَّذِينَ هُمْ عَنِ ٱللَّغْوِ مُعْرِضُونَ

Transliteration wa-alladhīna hum ʿani l-laghwi muʿ'riḍūna

Kannada ನಿರರ್ಥಕ ಕಾರ್ಯಗಳಿಂದ ವಿಮುಖರಾದವರು.

Verse 4

وَٱلَّذِينَ هُمْ لِلزَّكَوٰةِ فَـٰعِلُونَ

Transliteration wa-alladhīna hum lilzzakati fāʿilūna

Kannada ಕಡ್ಡಾಯ ದಾನವನ್ನು ಪಾವತಿಸುವವರು.

Verse 5

وَٱلَّذِينَ هُمْ لِفُرُوجِهِمْ حَـٰفِظُونَ

Transliteration wa-alladhīna hum lifurūjihim ḥāfiẓūna

Kannada ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳುವವರು.

Verse 6

إِلَّا عَلَىٰٓ أَزْوَٰجِهِمْ أَوْ مَا مَلَكَتْ أَيْمَـٰنُهُمْ فَإِنَّهُمْ غَيْرُ مَلُومِينَ

Transliteration illā ʿalā azwājihim aw mā malakat aymānuhum fa-innahum ghayru malūmīna

Kannada ತಮ್ಮ ಪತ್ನಿಯರು ಹಾಗೂ ತಮ್ಮ ಅಧೀನವಿರುವ ದಾಸಿಯರ ಹೊರತು. ಇಂಥವರು ಖಂಡಿತ ದೂಷಣೀಯರಲ್ಲ.

Verse 7

فَمَنِ ٱبْتَغَىٰ وَرَآءَ ذَٰلِكَ فَأُو۟لَـٰٓئِكَ هُمُ ٱلْعَادُونَ

Transliteration famani ib'taghā warāa dhālika fa-ulāika humu l-ʿādūna

Kannada ಆದರೆ ಯಾರು, ಇದರಾಚೆಗೆ ದಾಟಿ ಹೋಗುತ್ತಾರೆ, ಅವರೇ ಅತಿರೇಕಿಗಳು.

Verse 8

وَٱلَّذِينَ هُمْ لِأَمَـٰنَـٰتِهِمْ وَعَهْدِهِمْ رَٰعُونَ

Transliteration wa-alladhīna hum li-amānātihim waʿahdihim rāʿūna

Kannada ತಮ್ಮಲ್ಲಿ ವಿಶ್ವಾಸವಿಟ್ಟು ಒಪ್ಪಿಸಲಾದ ಸೊತ್ತುಗಳನ್ನು ಹಾಗೂ ತಮ್ಮ ವಾಗ್ದಾನಗಳನ್ನು ಕಾಪಾ ಡುವವರು.

Verse 9

وَٱلَّذِينَ هُمْ عَلَىٰ صَلَوَٰتِهِمْ يُحَافِظُونَ

Transliteration wa-alladhīna hum ʿalā ṣalawātihim yuḥāfiẓūna

Kannada ತಮ್ಮ ನಮಾಝ್‍ಗಳಲ್ಲಿ ಸಮಯ ನಿಷ್ಠೆ ಪಾಲಿಸುವವರು.

Verse 10

أُو۟لَـٰٓئِكَ هُمُ ٱلْوَٰرِثُونَ

Transliteration ulāika humu l-wārithūna

Kannada ಇವರೇ ವಾರೀಸುದಾರರು.

Verse 11

ٱلَّذِينَ يَرِثُونَ ٱلْفِرْدَوْسَ هُمْ فِيهَا خَـٰلِدُونَ

Transliteration alladhīna yarithūna l-fir'dawsa hum fīhā khālidūna

Kannada ಅಂದರೆ ಫಿರ್‍ದೌಸ್(ಮಹೋನ್ನತ ಸ್ವರ್ಗ) ಅನ್ನು ವಾರೀಸು ಹಕ್ಕಾಗಿ ಪಡೆಯುವವರು. ಅವರು ಅದರಲ್ಲಿ ನಿತ್ಯ ವಾಸಿಗಳು.

Verse 12

وَلَقَدْ خَلَقْنَا ٱلْإِنسَـٰنَ مِن سُلَـٰلَةٍ مِّن طِينٍ

Transliteration walaqad khalaqnā l-insāna min sulālatin min ṭīnin

Kannada ಮಾನವನನ್ನು ಆವೆ ಮಣ್ಣಿನ ಸತ್ವದಿಂದ ನಾವು ಸೃಷ್ಟಿಸಿದ್ದೇವೆ.

Verse 13

ثُمَّ جَعَلْنَـٰهُ نُطْفَةً فِى قَرَارٍ مَّكِينٍ

Transliteration thumma jaʿalnāhu nuṭ'fatan fī qarārin makīnin

Kannada ಆಮೇಲೆ ಆತನನ್ನು ವೀರ್ಯದ ಕಣವಾಗಿ ಒಂದು ಸುರಕ್ಷಿತ ಸ್ಥಳದಲ್ಲಿ (ಗರ್ಭಾಶಯದಲ್ಲಿ) ಇರಿಸಿದೆವು.

Verse 14

ثُمَّ خَلَقْنَا ٱلنُّطْفَةَ عَلَقَةً فَخَلَقْنَا ٱلْعَلَقَةَ مُضْغَةً فَخَلَقْنَا ٱلْمُضْغَةَ عِظَـٰمًا فَكَسَوْنَا ٱلْعِظَـٰمَ لَحْمًا ثُمَّ أَنشَأْنَـٰهُ خَلْقًا ءَاخَرَ ۚ فَتَبَارَكَ ٱللَّهُ أَحْسَنُ ٱلْخَـٰلِقِينَ

Transliteration thumma khalaqnā l-nuṭ'fata ʿalaqatan fakhalaqnā l-ʿalaqata muḍ'ghatan fakhalaqnā l-muḍ'ghata ʿiẓāman fakasawnā l-ʿiẓāma laḥman thumma anshanāhu khalqan ākhara fatabāraka l-lahu aḥsanu l-khāliqīna

Kannada ಅನಂತರ ಆ ವೀರ್ಯಾಣುವನ್ನು ರಕ್ತಪಿಂಡವ ನ್ನಾಗಿ ಮಾಡಿದೆವು. ನಂತರ ಆ ರಕ್ತ ಪಿಂಡವನ್ನು ಮಾಂಸ ಪಿಂಡವನ್ನಾಗಿ ಮಾಡಿದೆವು. ಆಮೇಲೆ ಆ ಮಾಂಸ ಪಿಂಡವನ್ನು ಎಲುಬುಗಳಾಗಿ ಮಾಡಿದೆವು. ತರುವಾಯ ಎಲುಬುಗಳ ಮೇಲೆ ಮಾಂಸ ತೊಡಿಸಿದೆವು. ಆ ಬಳಿಕ ಅದನ್ನೊಂದು ಬೇರೆಯೇ ಸೃಷ್ಟಿಯನ್ನಾಗಿ ಬೆಳೆಸಿಕೊಂಡು ಬಂದೆವು. ಅತ್ಯಂತ ಉತ್ತಮ ಸೃಷ್ಟಿಕರ್ತನಾದ ಅಲ್ಲಾಹನು ಮಹಾ ಸಮೃದ್ಧನು.

Verse 15

ثُمَّ إِنَّكُم بَعْدَ ذَٰلِكَ لَمَيِّتُونَ

Transliteration thumma innakum baʿda dhālika lamayyitūna

Kannada ನಂತರ ಹೀಗೆ ಜನಿಸಿದ ಬಳಿಕ ನೀವು ಮರಣ ಹೊಂದುವಿರಿ.

Verse 16

ثُمَّ إِنَّكُمْ يَوْمَ ٱلْقِيَـٰمَةِ تُبْعَثُونَ

Transliteration thumma innakum yawma l-qiyāmati tub'ʿathūna

Kannada ಮತ್ತೆ ಪುನರುತ್ಥಾನದ ದಿನ ಖಂಡಿತವಾಗಿಯೂ ನೀವು ಎಬ್ಬಿಸಲ್ಪಡುವಿರಿ.

Verse 17

وَلَقَدْ خَلَقْنَا فَوْقَكُمْ سَبْعَ طَرَآئِقَ وَمَا كُنَّا عَنِ ٱلْخَلْقِ غَـٰفِلِينَ

Transliteration walaqad khalaqnā fawqakum sabʿa ṭarāiqa wamā kunnā ʿani l-khalqi ghāfilīna

Kannada ನಾವು ನಿಮ್ಮ ಮೇಲ್ಭಾಗದಲ್ಲಿ ಏಳು (ಆಕಾಶ) ಪಥಗಳನ್ನು ರಚಿಸಿದೆವು. ಸೃಷ್ಟಿಯ ಬಗ್ಗೆ ನಾವು ಅಶೃದ್ಧರಾಗಿರಲಿಲ್ಲ.

Verse 18

وَأَنزَلْنَا مِنَ ٱلسَّمَآءِ مَآءًۢ بِقَدَرٍ فَأَسْكَنَّـٰهُ فِى ٱلْأَرْضِ ۖ وَإِنَّا عَلَىٰ ذَهَابٍۭ بِهِۦ لَقَـٰدِرُونَ

Transliteration wa-anzalnā mina l-samāi māan biqadarin fa-askannāhu fī l-arḍi wa-innā ʿalā dhahābin bihi laqādirūna

Kannada ನಾವು ಆಕಾಶದಿಂದ ನಿರ್ದಿಷ್ಟ ಪ್ರಮಾಣದಲ್ಲಿ ಮಳೆ ನೀರನ್ನು ಸುರಿಸಿದೆವು ಮತ್ತು ಅದನ್ನು ನೆಲದಲ್ಲಿ ತಂಗಿಸಿದೆವು. ಆ ನೀರನ್ನು ಬತ್ತಿಸಲು ಖಂಡಿತ ನಾವು ಶಕ್ತರು .

Verse 19

فَأَنشَأْنَا لَكُم بِهِۦ جَنَّـٰتٍ مِّن نَّخِيلٍ وَأَعْنَـٰبٍ لَّكُمْ فِيهَا فَوَٰكِهُ كَثِيرَةٌ وَمِنْهَا تَأْكُلُونَ

Transliteration fa-anshanā lakum bihi jannātin min nakhīlin wa-aʿnābin lakum fīhā fawākihu kathīratun wamin'hā takulūna

Kannada ಆ ನೀರಿನ ಮೂಲಕ ಖರ್ಜೂರ ಮತ್ತು ದ್ರಾಕ್ಷಾ ತೋಟಗಳನ್ನು ನಿಮಗಾಗಿ ನಾವು ಉತ್ಪಾದಿಸಿದೆವು. ಈ ಭೂಮಿಯಲ್ಲಿ ನಿಮಗಾಗಿ ಅನೇಕ ಫಲಗಳಿವೆ ಮತ್ತು ನೀವು ಅವುಗಳಿಂದ ತಿನ್ನುತ್ತೀರಿ.

Verse 20

وَشَجَرَةً تَخْرُجُ مِن طُورِ سَيْنَآءَ تَنۢبُتُ بِٱلدُّهْنِ وَصِبْغٍ لِّلْـَٔاكِلِينَ

Transliteration washajaratan takhruju min ṭūri saynāa tanbutu bil-duh'ni waṣib'ghin lil'ākilīna

Kannada ಸೀನಾಯಿ ಪರ್ವತದಲ್ಲಿ ಬೆಳೆಯುವ ಒಂದು ಜಾತಿಯ ಮರವನ್ನೂ ನಾವು ಸೃಷ್ಟಿಸಿದೆವು. ಅದು ಎಣ್ಣೆಯನ್ನೂ ಉಣ್ಣುವವರಿಗಾಗಿ ಕೂಟು ಪದಾರ್ಥವನ್ನೂ ಉತ್ಪಾದಿಸುತ್ತದೆ.

Verse 21

وَإِنَّ لَكُمْ فِى ٱلْأَنْعَـٰمِ لَعِبْرَةً ۖ نُّسْقِيكُم مِّمَّا فِى بُطُونِهَا وَلَكُمْ فِيهَا مَنَـٰفِعُ كَثِيرَةٌ وَمِنْهَا تَأْكُلُونَ

Transliteration wa-inna lakum fī l-anʿāmi laʿib'ratan nus'qīkum mimmā fī buṭūnihā walakum fīhā manāfiʿu kathīratun wamin'hā takulūna

Kannada ಜಾನುವಾರುಗಳಲ್ಲಿ ನಿಮಗೆ ಖಂಡಿತ ದೊಡ್ಡ ಪಾಠವಿದೆ. ಅವುಗಳ ಉದರದೊಳಗಿಂದ ನಾವು ನಿಮಗೆ (ಹಾಲು) ಕುಡಿಸುತ್ತೇವೆ. ನಿಮಗೆ ಅವು ಗಳಲ್ಲಿ ಅನೇಕ ಪ್ರಯೋಜನಗಳಿವೆ. ಅವುಗಳನ್ನು ನೀವು ತಿನ್ನುತ್ತೀರಿ.

Verse 22

وَعَلَيْهَا وَعَلَى ٱلْفُلْكِ تُحْمَلُونَ

Transliteration waʿalayhā waʿalā l-ful'ki tuḥ'malūna

Kannada ಅವುಗಳ ಮೇಲೂ ನಾವೆಗಳ ಮೇಲೂ ನಿಮ್ಮನ್ನು ವಹಿಸಲಾಗುತ್ತದೆ.

Verse 23

وَلَقَدْ أَرْسَلْنَا نُوحًا إِلَىٰ قَوْمِهِۦ فَقَالَ يَـٰقَوْمِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥٓ ۖ أَفَلَا تَتَّقُونَ

Transliteration walaqad arsalnā nūḥan ilā qawmihi faqāla yāqawmi uʿ'budū l-laha mā lakum min ilāhin ghayruhu afalā tattaqūna

Kannada ನೂಹರನ್ನು ಅವರ ಜನಾಂಗದ ಕಡೆಗೆ ನಾವು ದೂತರಾಗಿ ನಿಯೋಗಿಸಿದೆವು. ಅವರು ಹೇಳಿ ದರು; “ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರೆ ಆರಾಧ್ಯನಿಲ್ಲ. ಹೀಗಿರುತ್ತ ಆತನನ್ನು ನೀವು ಭಯಪಡುವು ದಿಲ್ಲವೇ?”

Verse 24

فَقَالَ ٱلْمَلَؤُا۟ ٱلَّذِينَ كَفَرُوا۟ مِن قَوْمِهِۦ مَا هَـٰذَآ إِلَّا بَشَرٌ مِّثْلُكُمْ يُرِيدُ أَن يَتَفَضَّلَ عَلَيْكُمْ وَلَوْ شَآءَ ٱللَّهُ لَأَنزَلَ مَلَـٰٓئِكَةً مَّا سَمِعْنَا بِهَـٰذَا فِىٓ ءَابَآئِنَا ٱلْأَوَّلِينَ

Transliteration faqāla l-mala-u alladhīna kafarū min qawmihi mā hādhā illā basharun mith'lukum yurīdu an yatafaḍḍala ʿalaykum walaw shāa l-lahu la-anzala malāikatan mā samiʿ'nā bihādhā fī ābāinā l-awalīna

Kannada ಆದರೆ ಸತ್ಯವನ್ನು ನಿಷೇಧಿಸಿದ ಅವರ ಜನಾಂಗದ ಸರದಾರರು ಹೀಗೆ ಹೇಳಿದರು; “ಇವನು ನಿಮ್ಮಂತೆಯೇ ಇರುವ ಕೇವಲ ಒಬ್ಬ ಮನುಷ್ಯ. ನಿಮ್ಮ ಮೇಲೆ ಹಿರಿಮೆ ಸಾಧಿಸುವುದೇ ಇವನ ಉದ್ದೇಶ. ಅಲ್ಲಾಹನು ದೂತನನ್ನು ಕಳುಹಿ ಸಲಿಚ್ಛಿಸಿದರೆ ದೇವಚರರನ್ನು ಕಳುಹಿಸುತ್ತಿದ್ದನು. ನಮ್ಮ ಪೂರ್ವಿಕ ಪಿತಾಮಹರಲ್ಲೇನೂ ಇಂಥ ವಿಷ ಯವನ್ನು ನಾವು ಕೇಳಿಯೇ ಇಲ್ಲ.

Verse 25

إِنْ هُوَ إِلَّا رَجُلٌۢ بِهِۦ جِنَّةٌ فَتَرَبَّصُوا۟ بِهِۦ حَتَّىٰ حِينٍ

Transliteration in huwa illā rajulun bihi jinnatun fatarabbaṣū bihi ḥattā ḥīnin

Kannada ಇವನೊಬ್ಬ ಹುಚ್ಚು ಹಿಡಿದ ವ್ಯಕ್ತಿಯೇ ಸರಿ. ಆದ್ದರಿಂದ ಈತನ ಬಗ್ಗೆ ಸ್ವಲ್ಪ ಕಾಲ ಕಾದು ನೋಡಿರಿ”.

Verse 26

قَالَ رَبِّ ٱنصُرْنِى بِمَا كَذَّبُونِ

Transliteration qāla rabbi unṣur'nī bimā kadhabūni

Kannada ನೂಹ್ ಹೇಳಿದರು; “ನನ್ನ ಪ್ರಭೂ, ಇವರು ನನ್ನನ್ನು ಸುಳ್ಳಾಗಿಸಿರುವುದರಿಂದ ನನಗೆ ನೀನು ಸಹಾಯ ಮಾಡು.”

Verse 27

فَأَوْحَيْنَآ إِلَيْهِ أَنِ ٱصْنَعِ ٱلْفُلْكَ بِأَعْيُنِنَا وَوَحْيِنَا فَإِذَا جَآءَ أَمْرُنَا وَفَارَ ٱلتَّنُّورُ ۙ فَٱسْلُكْ فِيهَا مِن كُلٍّ زَوْجَيْنِ ٱثْنَيْنِ وَأَهْلَكَ إِلَّا مَن سَبَقَ عَلَيْهِ ٱلْقَوْلُ مِنْهُمْ ۖ وَلَا تُخَـٰطِبْنِى فِى ٱلَّذِينَ ظَلَمُوٓا۟ ۖ إِنَّهُم مُّغْرَقُونَ

Transliteration fa-awḥaynā ilayhi ani iṣ'naʿi l-ful'ka bi-aʿyuninā wawaḥyinā fa-idhā jāa amrunā wafāra l-tanūru fa-us'luk fīhā min kullin zawjayni ith'nayni wa-ahlaka illā man sabaqa ʿalayhi l-qawlu min'hum walā tukhāṭib'nī fī alladhīna ẓalamū innahum mugh'raqūna

Kannada ಆಗ ಅವರಿಗೆ ನಾವು (ಈ ರೀತಿ) ಸಂದೇಶ ಕೊಟ್ಟೆವು. “ನಮ್ಮ ಮೇಲ್ನೋಟದಲ್ಲಿ ಮತ್ತು ನಮ್ಮ ನಿರ್ದೇಶ ಪ್ರಕಾರ ನಾವೆಯನ್ನು ನಿರ್ಮಿಸಿರಿ. ಅನಂತರ ನಮ್ಮ ಆಜ್ಞೆ ಬಂದಾಗ ಹಾಗೂ ತಂದೂರಿ ಒಲೆಯಲ್ಲಿ ನೀರೊರತೆ ಹರಿದಾಗ ಪ್ರತಿ ಯೊಂದು ಜಾತಿಯ ಪ್ರಾಣಿಗಳಿಂದ ಒಂದೊಂದು ಜೊತೆಯನ್ನೂ (ಒಂದು ಗಂಡು, ಒಂದು ಹೆಣ್ಣಿ ನಂತೆ) ತಮ್ಮ ಕುಟುಂಬವನ್ನೂ ಅದರಲ್ಲಿ ಹತ್ತಿ ಸಿರಿ. ಅವರ ಪೈಕಿ ಯಾರ ವಿರುದ್ಧ ಶಿಕ್ಷೆಯ ವಚನ ಪೂರ್ವಗತವಾಗಿದೆಯೋ ಅವರನ್ನು ಬಿಟ್ಟು. ಅಕ್ರ ಮಿಗಳ ವಿಷಯದಲ್ಲಿ ನನ್ನಲ್ಲಿ ಮಾತಾಡಬೇಡಿರಿ. ಇವರು ಖಂಡಿತ ಮುಳುಗಿ ನಾಶ ಹೊಂದಲಿ ದ್ದಾರೆ.

Verse 28

فَإِذَا ٱسْتَوَيْتَ أَنتَ وَمَن مَّعَكَ عَلَى ٱلْفُلْكِ فَقُلِ ٱلْحَمْدُ لِلَّهِ ٱلَّذِى نَجَّىٰنَا مِنَ ٱلْقَوْمِ ٱلظَّـٰلِمِينَ

Transliteration fa-idhā is'tawayta anta waman maʿaka ʿalā l-ful'ki faquli l-ḥamdu lillahi alladhī najjānā mina l-qawmi l-ẓālimīna

Kannada ಅನಂತರ ನೀವು ನಿಮ್ಮ ಜೊತೆಗಾರರ ಸಹಿತ ನಾವೆಯ ಮೇಲೇರಿ ಕುಳಿತರೆ, “ಅಕ್ರಮಿ ಜನಾಂ ಗದಿಂದ ನಮ್ಮನ್ನು ಪಾರುಗೊಳಿಸಿದ ಅಲ್ಲಾಹನಿಗೆ ಸರ್ವಸ್ತುತಿಗಳು” ಎಂದು ಹೇಳಿರಿ”.

Verse 29

وَقُل رَّبِّ أَنزِلْنِى مُنزَلًا مُّبَارَكًا وَأَنتَ خَيْرُ ٱلْمُنزِلِينَ

Transliteration waqul rabbi anzil'nī munzalan mubārakan wa-anta khayru l-munzilīna

Kannada “ನನ್ನ ಪ್ರಭೂ, ನನ್ನನ್ನು ಅನುಗ್ರಹ ಸಮೃದ್ಧಿ ಯಿರುವ ನಿಲ್ದಾಣವೊಂದರಲ್ಲಿ ಇಳಿಸು, ನೀನು ಇಳಿಸಿ ಕೊಡುವವರಲ್ಲಿ ಅತ್ಯಂತ ಉತ್ತಮನು” ಎಂದು ಪ್ರಾರ್ಥಿಸಿರಿ.

Verse 30

إِنَّ فِى ذَٰلِكَ لَـَٔايَـٰتٍ وَإِن كُنَّا لَمُبْتَلِينَ

Transliteration inna fī dhālika laāyātin wa-in kunnā lamub'talīna

Kannada ಈ ಘಟನೆಯಲ್ಲಿ ದೊಡ್ಡ ನಿದರ್ಶನಗಳಿವೆ. ನಾವು ಮನುಷ್ಯರನ್ನು ಪರೀಕ್ಷಿಸಿ ನೋಡಿಯೇ ತೀರುತ್ತೇವೆ .

Verse 31

ثُمَّ أَنشَأْنَا مِنۢ بَعْدِهِمْ قَرْنًا ءَاخَرِينَ

Transliteration thumma anshanā min baʿdihim qarnan ākharīna

Kannada ನಂತರ ಅವರ ಬಳಿಕ ಇನ್ನೊಂದು ಜನಾಂಗ ವನ್ನು ನಾವು ನಿರ್ಮಿಸಿದೆವು.

Verse 32

فَأَرْسَلْنَا فِيهِمْ رَسُولًا مِّنْهُمْ أَنِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥٓ ۖ أَفَلَا تَتَّقُونَ

Transliteration fa-arsalnā fīhim rasūlan min'hum ani uʿ'budū l-laha mā lakum min ilāhin ghayruhu afalā tattaqūna

Kannada ಆಗ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಅವರಿಗೆ ನಾವು ಕಳುಹಿಸಿದೆವು. (ಅವರು ಹೇಳಿದರು): “ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ಇನ್ನಾವ ಆರಾಧ್ಯನೂ ನಿಮಗಿಲ್ಲ. ಹೀಗಿರುತ್ತ ನೀವು ಅವನನ್ನು ಭಯಪಡುವುದಿಲ್ಲವೇ?

Verse 33

وَقَالَ ٱلْمَلَأُ مِن قَوْمِهِ ٱلَّذِينَ كَفَرُوا۟ وَكَذَّبُوا۟ بِلِقَآءِ ٱلْـَٔاخِرَةِ وَأَتْرَفْنَـٰهُمْ فِى ٱلْحَيَوٰةِ ٱلدُّنْيَا مَا هَـٰذَآ إِلَّا بَشَرٌ مِّثْلُكُمْ يَأْكُلُ مِمَّا تَأْكُلُونَ مِنْهُ وَيَشْرَبُ مِمَّا تَشْرَبُونَ

Transliteration waqāla l-mala-u min qawmihi alladhīna kafarū wakadhabū biliqāi l-ākhirati wa-atrafnāhum fī l-ḥayati l-dun'yā mā hādhā illā basharun mith'lukum yakulu mimmā takulūna min'hu wayashrabu mimmā tashrabūna

Kannada ಸತ್ಯವನ್ನು ನಿಷೇಧಿಸಿದ, ಪರಲೋಕದ ಸಂದರ್ಶ ನವನ್ನು ಸುಳ್ಳಾಗಿಸಿದ, ಲೌಕಿಕ ಜೀವನದಲ್ಲಿ ನಮ್ಮ ಸುಖ ಸವಲತ್ತುಗಳನ್ನು ಅನುಭವಿಸಿದ ಆ ಜನಾಂಗದ ಸರದಾರರು (ಹೀಗೆ) ಹೇಳಿದರು. “ಈತನು ನಿಮ್ಮಂತೆಯೇ ಇರುವ ಒಬ್ಬ ಕೇವಲ ಮನುಷ್ಯನೇ ಹೊರತು ಬೇರೇನಲ್ಲ. ನೀವು ತಿನ್ನು ವುದನ್ನೇ ಇವನೂ ತಿನ್ನುತ್ತಿದ್ದಾನೆ. ನೀವು ಕುಡಿ ಯುವುದನ್ನೇ ಇವನೂ ಕುಡಿಯುತ್ತಿದ್ದಾನೆ.

Verse 34

وَلَئِنْ أَطَعْتُم بَشَرًا مِّثْلَكُمْ إِنَّكُمْ إِذًا لَّخَـٰسِرُونَ

Transliteration wala-in aṭaʿtum basharan mith'lakum innakum idhan lakhāsirūna

Kannada ನಿಮ್ಮಂತೆಯೇ ಇರುವ ಒಬ್ಬ ಮನುಷ್ಯನಿಗೆ ನೀವು ವಿಧೇಯರಾದರೆ ನೀವು ದೇವರಾಣೆಗೂ ನಷ್ಟಕ್ಕೊಳಗಾಗುವಿರಿ.

Verse 35

أَيَعِدُكُمْ أَنَّكُمْ إِذَا مِتُّمْ وَكُنتُمْ تُرَابًا وَعِظَـٰمًا أَنَّكُم مُّخْرَجُونَ

Transliteration ayaʿidukum annakum idhā mittum wakuntum turāban waʿiẓāman annakum mukh'rajūna

Kannada ನೀವು ಸತ್ತು ಮಣ್ಣಾಗಿ, ಅಸ್ಥಿಪಂಜರವಾಗಿ ಬಿಟ್ಟ ಬಳಿಕ ಪುನಃ ನಿಮ್ಮನ್ನು ಹೊರ ತೆಗೆಯ ಲಾಗುವುದೆಂದು ಇವನು ನಿಮಗೆ ತಾಕೀತು ನೀಡುತ್ತಿರುವನೇ?

Verse 36

۞ هَيْهَاتَ هَيْهَاتَ لِمَا تُوعَدُونَ

Transliteration hayhāta hayhāta limā tūʿadūna

Kannada ನಿಮಗೆ ನೀಡಲಾಗುತ್ತಿರುವ ಈ ತಾಕೀತು ನಿಜಗೊಳ್ಳುವುದು ಬಲು ದೂರದ ಮಾತು.

Verse 37

إِنْ هِىَ إِلَّا حَيَاتُنَا ٱلدُّنْيَا نَمُوتُ وَنَحْيَا وَمَا نَحْنُ بِمَبْعُوثِينَ

Transliteration in hiya illā ḥayātunā l-dun'yā namūtu wanaḥyā wamā naḥnu bimabʿūthīna

Kannada ನಾವು ಸಾಯುವ ಮತ್ತು ಬದುಕುವ ಈ ಲೋಕದ ಜೀವನ ಮಾತ್ರವಲ್ಲದೆ ಬೇರೆ ಜೀವನವಿಲ್ಲ. ಖಂಡಿತವಾಗಿಯೂ ನಾವು ಯಾವತ್ತೂ ಪುನರುಜ್ಜೀವನ ಪಡೆಯುವವರಲ್ಲ.

Verse 38

إِنْ هُوَ إِلَّا رَجُلٌ ٱفْتَرَىٰ عَلَى ٱللَّهِ كَذِبًا وَمَا نَحْنُ لَهُۥ بِمُؤْمِنِينَ

Transliteration in huwa illā rajulun if'tarā ʿalā l-lahi kadhiban wamā naḥnu lahu bimu'minīna

Kannada ಈತ ಅಲ್ಲಾಹನ ಹೆಸರಲ್ಲಿ ಸುಳ್ಳು ಸೃಷ್ಟಿಸುವ ವ್ಯಕ್ತಿ. ನಾವು ಇವನನ್ನು ನಂಬುವವರಲ್ಲ”.

Verse 39

قَالَ رَبِّ ٱنصُرْنِى بِمَا كَذَّبُونِ

Transliteration qāla rabbi unṣur'nī bimā kadhabūni

Kannada ಸಂದೇಶವಾಹಕರು ಹೇಳಿದರು, “ನನ್ನ ಪ್ರಭೂ, ಇವರು ನನ್ನನ್ನು ಸುಳ್ಳಾಗಿಸಿರುವುದರಿಂದ ನೀನು ನನಗೆ ಸಹಾಯ ಮಾಡು.”

Verse 40

قَالَ عَمَّا قَلِيلٍ لَّيُصْبِحُنَّ نَـٰدِمِينَ

Transliteration qāla ʿammā qalīlin layuṣ'biḥunna nādimīna

Kannada ಅಲ್ಲಾಹು ಹೇಳಿದನು “ಸ್ವಲ್ಪ ಸಮಯದಲ್ಲೇ ಇವರು ಖೇದಕ್ಕೊಳಗಾಗಲಿದ್ದಾರೆ.”

Verse 41

فَأَخَذَتْهُمُ ٱلصَّيْحَةُ بِٱلْحَقِّ فَجَعَلْنَـٰهُمْ غُثَآءً ۚ فَبُعْدًا لِّلْقَوْمِ ٱلظَّـٰلِمِينَ

Transliteration fa-akhadhathumu l-ṣayḥatu bil-ḥaqi fajaʿalnāhum ghuthāan fabuʿ'dan lil'qawmi l-ẓālimīna

Kannada ಕೊನೆಗೆ ನ್ಯಾಯ ಪ್ರಕಾರ ಒಂದು ಭಯಂಕರ ಅಟ್ಟಹಾಸವು ಅವರನ್ನು ಬಿಗಿಹಿಡಿಯಿತು. ಆಗ ಅವರನ್ನು ನಾವು ಒಣಕಲು ಗಿಡಗಳಂತೆ ಮಾಡಿ ಬಿಟ್ಟೆವು. ಅಕ್ರಮಿ ಜನಾಂಗ (ಅಲ್ಲಾಹನ ಕಾರುಣ್ಯದಿಂದ) ತೊಲಗಲಿ!

Verse 42

ثُمَّ أَنشَأْنَا مِنۢ بَعْدِهِمْ قُرُونًا ءَاخَرِينَ

Transliteration thumma anshanā min baʿdihim qurūnan ākharīna

Kannada ನಂತರ ನಾವು ಅವರ ಬಳಿಕ ಬೇರೆ ಜನಾಂಗಗಳನ್ನು ಉತ್ಪಾದಿಸಿದೆವು.

Verse 43

مَا تَسْبِقُ مِنْ أُمَّةٍ أَجَلَهَا وَمَا يَسْتَـْٔخِرُونَ

Transliteration mā tasbiqu min ummatin ajalahā wamā yastakhirūna

Kannada ಯಾವ ಜನಾಂಗವೂ ತನ್ನ ಅವಧಿಗಿಂತ ಮುಂದೆ ಹೋಗಿಲ್ಲ. ಹಿಂದೆ ಉಳಿಯಲೂ ಇಲ್ಲ .

Verse 44

ثُمَّ أَرْسَلْنَا رُسُلَنَا تَتْرَا ۖ كُلَّ مَا جَآءَ أُمَّةً رَّسُولُهَا كَذَّبُوهُ ۚ فَأَتْبَعْنَا بَعْضَهُم بَعْضًا وَجَعَلْنَـٰهُمْ أَحَادِيثَ ۚ فَبُعْدًا لِّقَوْمٍ لَّا يُؤْمِنُونَ

Transliteration thumma arsalnā rusulanā tatrā kulla mā jāa ummatan rasūluhā kadhabūhu fa-atbaʿnā baʿḍahum baʿḍan wajaʿalnāhum aḥādītha fabuʿ'dan liqawmin lā yu'minūna

Kannada ಅನಂತರ ನಮ್ಮ ಸಂದೇಶವಾಹಕರನ್ನು ನಾವು ನಿರಂತರವಾಗಿ ಕಳುಹಿಸಿದೆವು. ಪ್ರತಿಯೊಂದು ಜನಾಂಗಕ್ಕೂ ಅದರ ಸಂದೇಶವಾಹಕರು ಬಂದಾಗಲೆಲ್ಲ ಆ ಜನಾಂಗವು ತಮ್ಮ ಸಂದೇಶ ವಾಹಕರನ್ನು ಸುಳ್ಳಾಗಿಸಿತು. ಹೀಗಾಗಿ ಒಂದರ ಹಿಂದೆ ಇನ್ನೊಂದರಂತೆ ಅವರನ್ನು ನಾವು ನಾಶ ಮಾಡಿದೆವು. ಹೀಗೆ ಅವರನ್ನು ಇತಿಹಾಸಗಳನ್ನಾಗಿ ನಾವು ಮಾಡಿದೆವು. ಸತ್ಯದಲ್ಲಿ ನಂಬಿಕೆಯಿರಿಸದ ಜನಾಂಗವು (ಅಲ್ಲಾಹನ ಕಾರುಣ್ಯ ದಿಂದ) ದೂರವಾಗಲಿ.

Verse 45

ثُمَّ أَرْسَلْنَا مُوسَىٰ وَأَخَاهُ هَـٰرُونَ بِـَٔايَـٰتِنَا وَسُلْطَـٰنٍ مُّبِينٍ

Transliteration thumma arsalnā mūsā wa-akhāhu hārūna biāyātinā wasul'ṭānin mubīnin

Kannada ಅನಂತರ ಮೂಸಾ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ದೃಷ್ಟಾಂತಗಳು ಹಾಗೂ ಸುವ್ಯಕ್ತ ಪ್ರಮಾಣ ಸಹಿತ ನಾವು ಕಳುಹಿಸಿದೆವು. .

Verse 46

إِلَىٰ فِرْعَوْنَ وَمَلَإِي۟هِۦ فَٱسْتَكْبَرُوا۟ وَكَانُوا۟ قَوْمًا عَالِينَ

Transliteration ilā fir'ʿawna wamala-ihi fa-is'takbarū wakānū qawman ʿālīna

Kannada ಫಿರ್‍ಔನ್ ಹಾಗೂ ಅವನ ಆಸ್ಥಾನಿಕರ ಕಡೆಗೆ, ಆದರೆ ಅವರು ಅಹಂಕಾರ ತೋರಿದರು. ಅವರು ದಬ್ಬಾಳಿಕೆ ನಡೆಸುತ್ತಿರುವ ಜನಾಂಗವಾಗಿದ್ದರು.

Verse 47

فَقَالُوٓا۟ أَنُؤْمِنُ لِبَشَرَيْنِ مِثْلِنَا وَقَوْمُهُمَا لَنَا عَـٰبِدُونَ

Transliteration faqālū anu'minu libasharayni mith'linā waqawmuhumā lanā ʿābidūna

Kannada ಆಗ ಅವರು ಹೇಳಿದರು; “ನಮ್ಮಂತೆಯೇ ಇರುವ ಇಬ್ಬರು ವ್ಯಕ್ತಿಗಳ ಮೇಲೆ ನಾವು ವಿಶ್ವಾಸ ವಿರಿಸಬೇಕೆ? ಅದರಲ್ಲೂ, ಅವರಿಬ್ಬರ ಜನಾಂಗವು ನಮ್ಮ ಉಪಾಸಕರಾಗಿರುವಾಗ?

Verse 48

فَكَذَّبُوهُمَا فَكَانُوا۟ مِنَ ٱلْمُهْلَكِينَ

Transliteration fakadhabūhumā fakānū mina l-muh'lakīna

Kannada ಹಾಗೆ ಇಬ್ಬರನ್ನು ಅವರು ಸುಳ್ಳಾಗಿಸಿಬಿಟ್ಟರು. ಹೀಗಾಗಿ ಅವರು ನಾಶ ಹೊಂದುವವರಲ್ಲಿ ಸೇರಿ ಹೋದರು.

Verse 49

وَلَقَدْ ءَاتَيْنَا مُوسَى ٱلْكِتَـٰبَ لَعَلَّهُمْ يَهْتَدُونَ

Transliteration walaqad ātaynā mūsā l-kitāba laʿallahum yahtadūna

Kannada ಅವರು ಸನ್ಮಾರ್ಗದರ್ಶನ ಪಡೆಯಲೆಂದು ಮೂಸಾರಿಗೆ ನಾವು ವೇದ ಗ್ರಂಥವನ್ನು ದಯ ಪಾಲಿಸಿದೆವು.

Verse 50

وَجَعَلْنَا ٱبْنَ مَرْيَمَ وَأُمَّهُۥٓ ءَايَةً وَءَاوَيْنَـٰهُمَآ إِلَىٰ رَبْوَةٍ ذَاتِ قَرَارٍ وَمَعِينٍ

Transliteration wajaʿalnā ib'na maryama wa-ummahu āyatan waāwaynāhumā ilā rabwatin dhāti qarārin wamaʿīnin

Kannada ಮರ್ಯಮರ ಪುತ್ರ (ಈಸಾ) ಮತ್ತು ಅವರ ಮಾತೆಯನ್ನು ನಾವು ಒಂದು ದೃಷ್ಟಾಂತವನ್ನಾಗಿ ಮಾಡಿದೆವು. ಅವರಿಬ್ಬರಿಗೂ ವಾಸ ಯೋಗ್ಯ, ನೀರು ಹರಿಯುವ, ಒಂದು ಎತ್ತರದ ಭೂಮಿಯಲ್ಲಿ ನಾವು ಅಭಯ ನೀಡಿದೆವು.

Verse 51

يَـٰٓأَيُّهَا ٱلرُّسُلُ كُلُوا۟ مِنَ ٱلطَّيِّبَـٰتِ وَٱعْمَلُوا۟ صَـٰلِحًا ۖ إِنِّى بِمَا تَعْمَلُونَ عَلِيمٌ

Transliteration yāayyuhā l-rusulu kulū mina l-ṭayibāti wa-iʿ'malū ṣāliḥan innī bimā taʿmalūna ʿalīmun

Kannada ಸಂದೇಶವಾಹಕರುಗಳೇ! ಶುದ್ಧ ವಸ್ತುಗಳಿಂದ ನೀವು ಉಣ್ಣಿರಿ. ಸತ್ಕರ್ಮವನ್ನು ಮಾಡಿರಿ. ನೀವು ಮಾಡುವುದನ್ನು ನಾನು ಚೆನ್ನಾಗಿ ಅರಿಯುತ್ತೇನೆ .

Verse 52

وَإِنَّ هَـٰذِهِۦٓ أُمَّتُكُمْ أُمَّةً وَٰحِدَةً وَأَنَا۠ رَبُّكُمْ فَٱتَّقُونِ

Transliteration wa-inna hādhihi ummatukum ummatan wāḥidatan wa-anā rabbukum fa-ittaqūni

Kannada ನಿಶ್ಚಯವಾಗಿಯೂ ಇದು ನಿಮ್ಮ ಧರ್ಮ - ಏಕೈಕ ಧರ್ಮ. ನಾನು ನಿಮ್ಮ ಪ್ರಭುವಾಗಿರುತ್ತೇನೆ. ಆದುದರಿಂದ ನನ್ನನ್ನು ಭಯಪಡಿರಿ.

Verse 53

فَتَقَطَّعُوٓا۟ أَمْرَهُم بَيْنَهُمْ زُبُرًا ۖ كُلُّ حِزْبٍۭ بِمَا لَدَيْهِمْ فَرِحُونَ

Transliteration fataqaṭṭaʿū amrahum baynahum zuburan kullu ḥiz'bin bimā ladayhim fariḥūna

Kannada ಆದರೆ ಜನರು ತಮ್ಮತಮ್ಮಲ್ಲಿ ಹರಿಹಂಚಾಗಿ ತಮ್ಮ ಧರ್ಮವನ್ನು ತುಂಡು ಮಾಡಿಬಿಟ್ಟರು. ಪ್ರತಿಯೊಂದು ವರ್ಗವೂ ತನ್ನ ಧರ್ಮತುಂಡು ಗಳಿಂದ ಹರ್ಷಗೊಂಡಿತು.

Verse 54

فَذَرْهُمْ فِى غَمْرَتِهِمْ حَتَّىٰ حِينٍ

Transliteration fadharhum fī ghamratihim ḥattā ḥīnin

Kannada ಆದ್ದರಿಂದ ಒಂದು ನಿಶ್ಚಿತ ಅವಧಿಯವರೆಗೆ ಅವರನ್ನು ತಮ್ಮ ದುರ್ಮಾರ್ಗದಲ್ಲಿ ಬಿಟ್ಟುಬಿಡಿರಿ.

Verse 55

أَيَحْسَبُونَ أَنَّمَا نُمِدُّهُم بِهِۦ مِن مَّالٍ وَبَنِينَ

Transliteration ayaḥsabūna annamā numidduhum bihi min mālin wabanīna

Kannada ಧನ - ಸಂತಾನಗಳ ಮೂಲಕ ನಾವು ಇವರಿಗೆ ಸಹಾಯ ಮಾಡುತ್ತಿರುವುದನ್ನು ಅವರು ಭಾವಿಸಿದ್ದಾರೆಯೇ?

Verse 56

نُسَارِعُ لَهُمْ فِى ٱلْخَيْرَٰتِ ۚ بَل لَّا يَشْعُرُونَ

Transliteration nusāriʿu lahum fī l-khayrāti bal lā yashʿurūna

Kannada ಒಳಿತುಗಳನ್ನು ದೃತಿಯಿಂದ ಮಾಡಿಕೊಡಲಾಗುತ್ತಿದೆಯೆಂದು. ಆದರೆ ಅವರು (ವಾಸ್ತವಿಕತೆಯನ್ನು) ಗ್ರಹಿಸುತ್ತಿಲ್ಲ.

Verse 57

إِنَّ ٱلَّذِينَ هُم مِّنْ خَشْيَةِ رَبِّهِم مُّشْفِقُونَ

Transliteration inna alladhīna hum min khashyati rabbihim mush'fiqūna

Kannada ನಿಜದಲ್ಲಿ ತಮ್ಮ ಪ್ರಭುವಿನ ಭಯದಿಂದ ನಡುಗುವವರು,

Verse 58

وَٱلَّذِينَ هُم بِـَٔايَـٰتِ رَبِّهِمْ يُؤْمِنُونَ

Transliteration wa-alladhīna hum biāyāti rabbihim yu'minūna

Kannada ತಮ್ಮ ಪ್ರಭುವಿನ ದೃಷ್ಟಾಂತಗಳಲ್ಲಿ ವಿಶ್ವಾಸ ವಿರಿಸುವವರು,

Verse 59

وَٱلَّذِينَ هُم بِرَبِّهِمْ لَا يُشْرِكُونَ

Transliteration wa-alladhīna hum birabbihim lā yush'rikūna

Kannada ತಮ್ಮ ಪ್ರಭುವಿಗೆ ಯಾರನ್ನೂ ಭಾಗೀದಾರರಾಗಿ ಮಾಡದವರು.

Verse 60

وَٱلَّذِينَ يُؤْتُونَ مَآ ءَاتَوا۟ وَّقُلُوبُهُمْ وَجِلَةٌ أَنَّهُمْ إِلَىٰ رَبِّهِمْ رَٰجِعُونَ

Transliteration wa-alladhīna yu'tūna mā ātaw waqulūbuhum wajilatun annahum ilā rabbihim rājiʿūna

Kannada ದಾನ ಕೊಡುವುದೇನಿದ್ದರೂ ತಮ್ಮ ಪ್ರಭುವಿನ ಕಡೆಗೆ ಮರಳಲಿಕ್ಕಿದೆಯೆಂಬ ಪ್ರಜ್ಞೆಯಿಂದ ಹೃದಯ ಕಂಪಿಸುತ್ತಿರುವ ಸ್ಥಿತಿಯಲ್ಲಿ ಕೊಡುವವರು.

Verse 61

أُو۟لَـٰٓئِكَ يُسَـٰرِعُونَ فِى ٱلْخَيْرَٰتِ وَهُمْ لَهَا سَـٰبِقُونَ

Transliteration ulāika yusāriʿūna fī l-khayrāti wahum lahā sābiqūna

Kannada ಅವರೇ ಒಳಿತುಗಳ ಕಡೆಗೆ ಧಾವಂತಪಡುವವರು ಮತ್ತು ಅದರೆಡೆಗೆ ಇತರರಿಗಿಂತ ಸ್ಪರ್ಧಿಸಿ ಮುನ್ನ ಡೆಯುವವರು.

Verse 62

وَلَا نُكَلِّفُ نَفْسًا إِلَّا وُسْعَهَا ۖ وَلَدَيْنَا كِتَـٰبٌ يَنطِقُ بِٱلْحَقِّ ۚ وَهُمْ لَا يُظْلَمُونَ

Transliteration walā nukallifu nafsan illā wus'ʿahā waladaynā kitābun yanṭiqu bil-ḥaqi wahum lā yuẓ'lamūna

Kannada ನಾವು ಯಾವ ವ್ಯಕ್ತಿಗೂ ಅವನ ಶಕ್ತಿಗೆ ಮೀರಿ ದ್ದನ್ನು ಹೇರುವುದಿಲ್ಲ. ನಮ್ಮ ಬಳಿಯಲ್ಲಿ ಸತ್ಯ ಸಂಧವಾಗಿ ಮಾತಾಡುವ ಒಂದು ಗ್ರಂಥವಿದೆ. ಜನರ ಮೇಲೆ ಒಂದಿಷ್ಟೂ ಅಕ್ರಮವೆಸಗಲಾಗದು.

Verse 63

بَلْ قُلُوبُهُمْ فِى غَمْرَةٍ مِّنْ هَـٰذَا وَلَهُمْ أَعْمَـٰلٌ مِّن دُونِ ذَٰلِكَ هُمْ لَهَا عَـٰمِلُونَ

Transliteration bal qulūbuhum fī ghamratin min hādhā walahum aʿmālun min dūni dhālika hum lahā ʿāmilūna

Kannada ಆದರೆ ಇವರ ಹೃದಯಗಳು ಈ ವಿಷಯದ ಬಗ್ಗೆ ಅನಾಸ್ಥೆ ತಾಳಿವೆ. ಇವರ ಕರ್ಮಗಳು (ಮೇಲೆ ಹೇಳಲಾಗಿರುವ) ಆ ಕ್ರಮದಿಂದ ಹೊರತಾಗಿವೆ. ಅದನ್ನು ಅವರು ಮಾಡುತ್ತಲೇ ಇರುವರು .

Verse 64

حَتَّىٰٓ إِذَآ أَخَذْنَا مُتْرَفِيهِم بِٱلْعَذَابِ إِذَا هُمْ يَجْـَٔرُونَ

Transliteration ḥattā idhā akhadhnā mut'rafīhim bil-ʿadhābi idhā hum yajarūna

Kannada ನಾವು ಅವರ ಪೈಕಿ ಸುಖಲೋಲುಪರನ್ನು ಶಿಕ್ಷೆಯಲ್ಲಿ ಹಿಡಿದಾಗ ಅವರು ರೋಧಿಸುವರು.

Verse 65

لَا تَجْـَٔرُوا۟ ٱلْيَوْمَ ۖ إِنَّكُم مِّنَّا لَا تُنصَرُونَ

Transliteration lā tajarū l-yawma innakum minnā lā tunṣarūna

Kannada (ಆಗ ಹೇಳಲಾಗುವುದು;) ಇಂದು ನೀವು ರೋಧಿಸಿ ಫಲವಿಲ್ಲ. ನಿಮಗೆ ನಮ್ಮಿಂದ ಯಾವ ಸಹಾಯವೂ ಖಂಡಿತ ಸಿಗಲಾರದು.

Verse 66

قَدْ كَانَتْ ءَايَـٰتِى تُتْلَىٰ عَلَيْكُمْ فَكُنتُمْ عَلَىٰٓ أَعْقَـٰبِكُمْ تَنكِصُونَ

Transliteration qad kānat āyātī tut'lā ʿalaykum fakuntum ʿalā aʿqābikum tankiṣūna

Kannada (ಏಕೆಂದರೆ) ನನ್ನ ವಚನಗಳನ್ನು ನಿಮಗೆ ಓದಿ ಹೇಳಲಾಗುತ್ತಿದ್ದಾಗ ನೀವು ಹಿಂದಿರುಗಿ ಓಡುತ್ತಿದ್ದಿರಿ.

Verse 67

مُسْتَكْبِرِينَ بِهِۦ سَـٰمِرًا تَهْجُرُونَ

Transliteration mus'takbirīna bihi sāmiran tahjurūna

Kannada ಅದರ (ಕಅïಬಾ ಭವನದ) ಬಗ್ಗೆ ಮೇಲ್ಮೆ ತೋರುತ್ತ, ರಾತ್ರಿ ಹೊತ್ತು ಪಟ್ಟಾಂಗ ಹೊಡೆಯುತ್ತ ಖುರ್‍ಆನನ್ನು ಕೈಬಿಡುತ್ತಿದ್ದೀರಿ .

Verse 68

أَفَلَمْ يَدَّبَّرُوا۟ ٱلْقَوْلَ أَمْ جَآءَهُم مَّا لَمْ يَأْتِ ءَابَآءَهُمُ ٱلْأَوَّلِينَ

Transliteration afalam yaddabbarū l-qawla am jāahum mā lam yati ābāahumu l-awalīna

Kannada (ಖುರ್‍ಆನ್) ವಚನದ ಬಗ್ಗೆ ಇವರು ಯೋಚಿಸಲಿಲ್ಲವೆ? ಅಥವಾ ಇವರ ಪೂರ್ವಜರ ಬಳಿಗೆ ಬಂದಿರದಂತಹ ವಿಷಯವೇನಾದರೂ ಇವರಿಗೆ ಬಂದಿದೆಯೇ?

Verse 69

أَمْ لَمْ يَعْرِفُوا۟ رَسُولَهُمْ فَهُمْ لَهُۥ مُنكِرُونَ

Transliteration am lam yaʿrifū rasūlahum fahum lahu munkirūna

Kannada ಅಥವಾ ಇವರಿಗೆ ತಮ್ಮ ಸಂದೇಶವಾಹಕರ ಸರಿಯಾದ ಪರಿಚಯವಿಲ್ಲದ ಕಾರಣದಿಂದ ಅವರನ್ನು ನಿರಾಕರಿಸುತ್ತಿರುವರೇ?

Verse 70

أَمْ يَقُولُونَ بِهِۦ جِنَّةٌۢ ۚ بَلْ جَآءَهُم بِٱلْحَقِّ وَأَكْثَرُهُمْ لِلْحَقِّ كَـٰرِهُونَ

Transliteration am yaqūlūna bihi jinnatun bal jāahum bil-ḥaqi wa-aktharuhum lil'ḥaqqi kārihūna

Kannada ಅಥವಾ ಅವರಿಗೆ ಹುಚ್ಚು ಹಿಡಿದಿದೆ ಎಂದು ಇವರು ಹೇಳುತ್ತಿರುವರೇ? ಆದರೆ, ಅವರು ಇವರಿಗೆ ಸತ್ಯ ವನ್ನೇ ತಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಸತ್ಯವನ್ನು ಅಸಹ್ಯಪಡುತ್ತಾರೆ.

Verse 71

وَلَوِ ٱتَّبَعَ ٱلْحَقُّ أَهْوَآءَهُمْ لَفَسَدَتِ ٱلسَّمَـٰوَٰتُ وَٱلْأَرْضُ وَمَن فِيهِنَّ ۚ بَلْ أَتَيْنَـٰهُم بِذِكْرِهِمْ فَهُمْ عَن ذِكْرِهِم مُّعْرِضُونَ

Transliteration walawi ittabaʿa l-ḥaqu ahwāahum lafasadati l-samāwātu wal-arḍu waman fīhinna bal ataynāhum bidhik'rihim fahum ʿan dhik'rihim muʿ'riḍūna

Kannada ಈ ಸತ್ಯವು ಅವರ ತನ್ನಿಚ್ಚೆಗಳನ್ನು ಹಿಂಬಾಲಿ ಸುತ್ತಿದ್ದರೆ ಭೂಮಿ-ಆಕಾಶಗಳು ಮತ್ತು ಅವುಗಳ ಲ್ಲಿರುವವರು ಹದಗೆಡುತ್ತಿದ್ದರು. ಆದರೆ ನಾವು ಅವರಿಗಿರುವ ಉಪದೇಶ (ಖುರ್‍ಆನ್) ವನ್ನು ಅವರ ಬಳಿಗೆ ತಂದಿದ್ದೇವೆ. ಆಗ ಅವರು ತಮ್ಮ ಉಪದೇಶದಿಂದ ವಿಮುಖರಾದರು.

Verse 72

أَمْ تَسْـَٔلُهُمْ خَرْجًا فَخَرَاجُ رَبِّكَ خَيْرٌ ۖ وَهُوَ خَيْرُ ٱلرَّٰزِقِينَ

Transliteration am tasaluhum kharjan fakharāju rabbika khayrun wahuwa khayru l-rāziqīna

Kannada ಅಥವಾ ನೀವು ಅವರಿಂದೇನಾದರೂ ಪ್ರತಿಫಲವನ್ನು ಕೇಳುತ್ತಿರುವಿರಾ? ಆದರೆ ನಿಮ್ಮ ಪ್ರಭುವಿನ ಪ್ರತಿ ಫಲವೇ ಶ್ರೇಷ್ಟವಾಗಿದೆ ಮತ್ತು ಕೊಡುವವರಲ್ಲಿ ಅವನೇ ಅತ್ಯುತ್ತಮನು.

Verse 73

وَإِنَّكَ لَتَدْعُوهُمْ إِلَىٰ صِرَٰطٍ مُّسْتَقِيمٍ

Transliteration wa-innaka latadʿūhum ilā ṣirāṭin mus'taqīmin

Kannada ಖಂಡಿತ ನೀವು ಅವರನ್ನು ಸನ್ಮಾರ್ಗದ ಕಡೆಗೆ ಕರೆಯುತ್ತಿರುವಿರಿ.

Verse 74

وَإِنَّ ٱلَّذِينَ لَا يُؤْمِنُونَ بِٱلْـَٔاخِرَةِ عَنِ ٱلصِّرَٰطِ لَنَـٰكِبُونَ

Transliteration wa-inna alladhīna lā yu'minūna bil-ākhirati ʿani l-ṣirāṭi lanākibūna

Kannada ಆದರೆ, ಪರಲೋಕದಲ್ಲಿ ವಿಶ್ವಾಸವಿರಿಸದವರು ಸನ್ಮಾರ್ಗದಿಂದ ಖಂಡಿತ ತಪ್ಪಿ ಹೋಗುತ್ತಾರೆ.

Verse 75

۞ وَلَوْ رَحِمْنَـٰهُمْ وَكَشَفْنَا مَا بِهِم مِّن ضُرٍّ لَّلَجُّوا۟ فِى طُغْيَـٰنِهِمْ يَعْمَهُونَ

Transliteration walaw raḥim'nāhum wakashafnā mā bihim min ḍurrin lalajjū fī ṭugh'yānihim yaʿmahūna

Kannada ಇವರಿಗೆ ನಾವು ದಯೆ ತೋರಿದರೆ ಹಾಗೂ ಇವರಿಗೆ ಬಾಧಿಸಿದ ಸಂಕಷ್ಟವನ್ನು ದೂರೀಕರಿ ಸಿದರೆ ಇವರು ತಮ್ಮ ಅತಿಕ್ರಮದಲ್ಲಿ ಅಂಧವಾಗಿ ವಿಹರಿಸುತ್ತ ಅಂಡಲೆಯುವರು.

Verse 76

وَلَقَدْ أَخَذْنَـٰهُم بِٱلْعَذَابِ فَمَا ٱسْتَكَانُوا۟ لِرَبِّهِمْ وَمَا يَتَضَرَّعُونَ

Transliteration walaqad akhadhnāhum bil-ʿadhābi famā is'takānū lirabbihim wamā yataḍarraʿūna

Kannada ಶಿಕ್ಷೆಯ ಮೂಲಕ ನಾವು ಇವರನ್ನು ಹಿಡಿದು ಬಿಟ್ಟೆವು. ಆದರೂ ಇವರು ತಮ್ಮ ಪ್ರಭುವಿಗೆ ಮಣಿ ಯಲಿಲ್ಲ ಮತ್ತು ಅವನ ಮೊರೆ ಹೋಗಲಿಲ್ಲ.

Verse 77

حَتَّىٰٓ إِذَا فَتَحْنَا عَلَيْهِم بَابًا ذَا عَذَابٍ شَدِيدٍ إِذَا هُمْ فِيهِ مُبْلِسُونَ

Transliteration ḥattā idhā fataḥnā ʿalayhim bāban dhā ʿadhābin shadīdin idhā hum fīhi mub'lisūna

Kannada ಕಠಿಣ ಶಿಕ್ಷೆಯ ಬಾಗಿಲನ್ನು ಅವರ ಮೇಲೆ ನಾವು ತೆರೆದು ಬಿಟ್ಟಾಗ, ಇವರು ಅದರಲ್ಲಿ (ಪ್ರತಿಯೊಂದು ಶುಭದ ಬಗ್ಗೆ) ನಿರಾಶರಾಗಿ ಬಿಡುವರು.

Verse 78

وَهُوَ ٱلَّذِىٓ أَنشَأَ لَكُمُ ٱلسَّمْعَ وَٱلْأَبْصَـٰرَ وَٱلْأَفْـِٔدَةَ ۚ قَلِيلًا مَّا تَشْكُرُونَ

Transliteration wahuwa alladhī ansha-a lakumu l-samʿa wal-abṣāra wal-afidata qalīlan mā tashkurūna

Kannada ಅವನೇ ನಿಮಗೆ ಶ್ರವಣ, ದೃಷ್ಟಿ ಮತ್ತು ಹೃದಯವನ್ನು ಸೃಷ್ಟಿಸಿ ಕೊಟ್ಟವನು. ಆದರೆ ನೀವು ಕೃತಜ್ಞರಾಗುವುದು ಬಹಳ ಕಡಿಮೆ.

Verse 79

وَهُوَ ٱلَّذِى ذَرَأَكُمْ فِى ٱلْأَرْضِ وَإِلَيْهِ تُحْشَرُونَ

Transliteration wahuwa alladhī dhara-akum fī l-arḍi wa-ilayhi tuḥ'sharūna

Kannada ಅವನೇ ನಿಮ್ಮನ್ನು ಭೂಮಿಯ ಮೇಲೆ ಸೃಷ್ಟಿಸಿ ಹರಡಿದವನು. ಅವನ ಕಡೆಗೇ ನೀವು ಒಟ್ಟುಗೂಡಿಸಲ್ಪಡುವಿರಿ.

Verse 80

وَهُوَ ٱلَّذِى يُحْىِۦ وَيُمِيتُ وَلَهُ ٱخْتِلَـٰفُ ٱلَّيْلِ وَٱلنَّهَارِ ۚ أَفَلَا تَعْقِلُونَ

Transliteration wahuwa alladhī yuḥ'yī wayumītu walahu ikh'tilāfu al-layli wal-nahāri afalā taʿqilūna

Kannada ಅವನೇ ಜೀವ ನೀಡುತ್ತಾನೆ ಮತ್ತು ಅವನೇ ಮರಣ ಕೊಡುತ್ತಾನೆ. ಹಗಲು ರಾತ್ರಿಯ ಮಾರ್ಪಾ ಡು ಅವನ ಆಜ್ಞೆ ಪ್ರಕಾರವಿದೆ. ಹೀಗಿದ್ದು ನೀವೇಕೆ ಚಿಂತಿಸುವುದಿಲ್ಲ?

Verse 81

بَلْ قَالُوا۟ مِثْلَ مَا قَالَ ٱلْأَوَّلُونَ

Transliteration bal qālū mith'la mā qāla l-awalūna

Kannada ಆದರೆ ಇವರು ಇವರ ಪೂರ್ವಜರು ಹೇಳಿದಂ ತೆಯೇ ಹೇಳುತ್ತಾರೆ.

Verse 82

قَالُوٓا۟ أَءِذَا مِتْنَا وَكُنَّا تُرَابًا وَعِظَـٰمًا أَءِنَّا لَمَبْعُوثُونَ

Transliteration qālū a-idhā mit'nā wakunnā turāban waʿiẓāman a-innā lamabʿūthūna

Kannada ಇವರು ಹೇಳುತ್ತಾರೆ; “ನಾವು ಸತ್ತು ಮಣ್ಣು ಮತ್ತು ಅಸ್ಥಿಯಾಗಿ ಮಾರ್ಪಟ್ಟ ಬಳಿಕ ನಮ್ಮನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲಾದೀತೇ?

Verse 83

لَقَدْ وُعِدْنَا نَحْنُ وَءَابَآؤُنَا هَـٰذَا مِن قَبْلُ إِنْ هَـٰذَآ إِلَّآ أَسَـٰطِيرُ ٱلْأَوَّلِينَ

Transliteration laqad wuʿid'nā naḥnu waābāunā hādhā min qablu in hādhā illā asāṭīru l-awalīna

Kannada ನಮಗಿಂತ ಮುಂಚೆ ನಮ್ಮ ಪೂರ್ವಜರಲ್ಲೂ ಇದನ್ನೇ ವಾಗ್ದಾನ ಮಾಡಲಾಗಿತ್ತು. ಇವೆಲ್ಲ ಪೂರ್ವಿಕರ ಕಟ್ಟುಕತೆಗಳಲ್ಲದೆ ಬೇರೇನೂ ಅಲ್ಲ”.

Verse 84

قُل لِّمَنِ ٱلْأَرْضُ وَمَن فِيهَآ إِن كُنتُمْ تَعْلَمُونَ

Transliteration qul limani l-arḍu waman fīhā in kuntum taʿlamūna

Kannada (ಪ್ರವಾದಿಯರೇ) ಕೇಳಿರಿ; “ನೀವು ಬಲ್ಲವರಾಗಿ ದ್ದರೆ ಈ ಭೂಮಿ ಮತ್ತು ಇದರಲ್ಲಿರುವವರು ಯಾರದ್ದು?

Verse 85

سَيَقُولُونَ لِلَّهِ ۚ قُلْ أَفَلَا تَذَكَّرُونَ

Transliteration sayaqūlūna lillahi qul afalā tadhakkarūna

Kannada ಅವರು `ಅಲ್ಲಾಹನದು’ ಎನ್ನುವರು. “ಹಾಗಾದರೆ ನೀವೇಕೆ ಚಿಂತಿಸುವುದಿಲ್ಲ?” ಎಂದು ಕೇಳಿರಿ.

Verse 86

قُلْ مَن رَّبُّ ٱلسَّمَـٰوَٰتِ ٱلسَّبْعِ وَرَبُّ ٱلْعَرْشِ ٱلْعَظِيمِ

Transliteration qul man rabbu l-samāwāti l-sabʿi warabbu l-ʿarshi l-ʿaẓīmi

Kannada ಕೇಳಿರಿ; ‘ಏಳು ಆಕಾಶಗಳ ಮತ್ತು ಮಹಾ ಅರ್ಶ್‍ನ ಒಡೆಯನು ಯಾರು?’

Verse 87

سَيَقُولُونَ لِلَّهِ ۚ قُلْ أَفَلَا تَتَّقُونَ

Transliteration sayaqūlūna lillahi qul afalā tattaqūna

Kannada ಅವರು `ಅಲ್ಲಾಹನು’ ಎನ್ನುವರು. ಕೇಳಿರಿ; ನೀವು ಭಯಪಡುವುದಿಲ್ಲವೇ?

Verse 88

قُلْ مَنۢ بِيَدِهِۦ مَلَكُوتُ كُلِّ شَىْءٍ وَهُوَ يُجِيرُ وَلَا يُجَارُ عَلَيْهِ إِن كُنتُمْ تَعْلَمُونَ

Transliteration qul man biyadihi malakūtu kulli shayin wahuwa yujīru walā yujāru ʿalayhi in kuntum taʿlamūna

Kannada ಕೇಳಿರಿ, “ಎಲ್ಲ ವಸ್ತುವಿನ ಪ್ರಭುತ್ವವು ಯಾರ ಕೈಯಲ್ಲಿದೆ? ಅವನು ಆಶ್ರಯ ನೀಡುತ್ತಾನೆ. ಅವನಿಗೆ ಆಶ್ರಯ ನೀಡಲಾಗದು. ನೀವು ತಿಳಿದವರಾಗಿದ್ದರೆ ಹೇಳಿರಿ.”

Verse 89

سَيَقُولُونَ لِلَّهِ ۚ قُلْ فَأَنَّىٰ تُسْحَرُونَ

Transliteration sayaqūlūna lillahi qul fa-annā tus'ḥarūna

Kannada ಅವರು ‘ಅಲ್ಲಾಹನದ್ದು’ ಎಂದು ಹೇಳುವರು . “ಮತ್ತೆ ಹೇಗೆ ನೀವು ಮೋಸ ಹೋಗುವಿರಿ?” ಎಂದು ಕೇಳಿರಿ .

Verse 90

بَلْ أَتَيْنَـٰهُم بِٱلْحَقِّ وَإِنَّهُمْ لَكَـٰذِبُونَ

Transliteration bal ataynāhum bil-ḥaqi wa-innahum lakādhibūna

Kannada ಅಲ್ಲ, ಸತ್ಯವನ್ನು ನಾವು ಅವರ ಮುಂದೆ ತಂದಿದ್ದೇವೆ. ಆದರೆ ಅವರು ಸುಳ್ಳುಗಾರರು.

Verse 91

مَا ٱتَّخَذَ ٱللَّهُ مِن وَلَدٍ وَمَا كَانَ مَعَهُۥ مِنْ إِلَـٰهٍ ۚ إِذًا لَّذَهَبَ كُلُّ إِلَـٰهٍۭ بِمَا خَلَقَ وَلَعَلَا بَعْضُهُمْ عَلَىٰ بَعْضٍ ۚ سُبْحَـٰنَ ٱللَّهِ عَمَّا يَصِفُونَ

Transliteration mā ittakhadha l-lahu min waladin wamā kāna maʿahu min ilāhin idhan ladhahaba kullu ilāhin bimā khalaqa walaʿalā baʿḍuhum ʿalā baʿḍin sub'ḥāna l-lahi ʿammā yaṣifūna

Kannada ಅಲ್ಲಾಹನು ಮಕ್ಕಳನ್ನು ಮಾಡಿಲ್ಲ. ಅವನ ಜತೆ ಬೇರೆ ದೇವನೂ ಇಲ್ಲ. ಇರುತ್ತಿದ್ದರೆ ಪ್ರತಿಯೊಬ್ಬ ದೇವನೂ ತನ್ನ ಸೃಷ್ಟಿಯನ್ನು ತೆಗೆದುಕೊಂಡು ಹೋಗಿ ಬೇರೆ ನಿಲ್ಲುತ್ತಿದ್ದನು. ಆ ಬಳಿಕ ಅವರು ಒಬ್ಬರ ಮೇಲೆ ಇನ್ನೊಬ್ಬರು ದಂಡೆತ್ತಿ ಬರುತ್ತಿದ್ದರು. ಇವರು ನೀಡುವ ವರ್ಣನೆಗಳಿಂದ ಅಲ್ಲಾಹು ಪರಿಶುದ್ಧನು.

Verse 92

عَـٰلِمِ ٱلْغَيْبِ وَٱلشَّهَـٰدَةِ فَتَعَـٰلَىٰ عَمَّا يُشْرِكُونَ

Transliteration ʿālimi l-ghaybi wal-shahādati fataʿālā ʿammā yush'rikūna

Kannada ಅವನು ದೃಶ್ಯ - ಅದೃಶ್ಯಗಳ ಜ್ಞಾನಿ. ಇವರು ಕಲ್ಪಿಸುತ್ತಿರುವ ಬಹುದೇವತ್ವದಿಂದ ಅವನು ಮೀರಿ ನಿಂತವನು.

Verse 93

قُل رَّبِّ إِمَّا تُرِيَنِّى مَا يُوعَدُونَ

Transliteration qul rabbi immā turiyannī mā yūʿadūna

Kannada (ದೂತರೇ,) ಹೀಗೆ ಪ್ರಾರ್ಥಿಸಿರಿ, “ನನ್ನ ಪ್ರಭೂ, ಇವರಿಗೆ ಎಚ್ಚರಿಕೆ ನೀಡಲಾಗುತ್ತಿರುವ ಶಿಕ್ಷೆಯನ್ನು ನೀನು ಒಂದು ವೇಳೆ ನನ್ನ ಕಣ್ಣೆದುರಲ್ಲೇ ಕಾಣಿಸುವುದಾದರೆ,

Verse 94

رَبِّ فَلَا تَجْعَلْنِى فِى ٱلْقَوْمِ ٱلظَّـٰلِمِينَ

Transliteration rabbi falā tajʿalnī fī l-qawmi l-ẓālimīna

Kannada ನನ್ನ ಪ್ರಭೂ, ನನ್ನನ್ನು ಅಕ್ರಮಿ ಜನಾಂಗದಲ್ಲಿ ಸೇರಿಸದಿರು” .

Verse 95

وَإِنَّا عَلَىٰٓ أَن نُّرِيَكَ مَا نَعِدُهُمْ لَقَـٰدِرُونَ

Transliteration wa-innā ʿalā an nuriyaka mā naʿiduhum laqādirūna

Kannada ಖಂಡಿತ ನಾವು ಅವರಿಗೆ ಎಚ್ಚರಿಕೆ ನೀಡುತ್ತಿರುವುದನ್ನು ನಿಮಗೆ ತೋರಿಸಿಕೊಡುವುದಕ್ಕೆ ಸಂಪೂರ್ಣ ಸಮರ್ಥರು.

Verse 96

ٱدْفَعْ بِٱلَّتِى هِىَ أَحْسَنُ ٱلسَّيِّئَةَ ۚ نَحْنُ أَعْلَمُ بِمَا يَصِفُونَ

Transliteration id'faʿ bi-allatī hiya aḥsanu l-sayi-ata naḥnu aʿlamu bimā yaṣifūna

Kannada (ದೂತರೇ,) ಕೆಡುಕನ್ನು ಅತ್ಯುತ್ತಮ ವಿಧಾನದಿಂದ ನೀಗಿಸಿರಿ. ಅವರು ವರ್ಣಿಸಿ ಹೇಳುತ್ತಿರುವುದರ ಕುರಿತು ನಾವು ಚೆನ್ನಾಗಿ ಬಲ್ಲೆವು.

Verse 97

وَقُل رَّبِّ أَعُوذُ بِكَ مِنْ هَمَزَٰتِ ٱلشَّيَـٰطِينِ

Transliteration waqul rabbi aʿūdhu bika min hamazāti l-shayāṭīni

Kannada ಹೀಗೆ ಪ್ರಾರ್ಥಿಸಿರಿ, “ಪ್ರಭೂ, ಶೈತಾನರ ಕೆಟ್ಟ ಆಮಿಷಗಳಿಂದ ನಾನು ನಿನ್ನ ಅಭಯ ಯಾಚಿಸುತ್ತೇನೆ.

Verse 98

وَأَعُوذُ بِكَ رَبِّ أَن يَحْضُرُونِ

Transliteration wa-aʿūdhu bika rabbi an yaḥḍurūni

Kannada ಪ್ರಭೂ, ಅವರು ನನ್ನ ಬಳಿ ಹಾಜರಾಗುವುದರಿಂದಲೂ ನಾನು ನಿನ್ನ ಅಭಯ ಯಾಚಿಸುತ್ತೇನೆ” .

Verse 99

حَتَّىٰٓ إِذَا جَآءَ أَحَدَهُمُ ٱلْمَوْتُ قَالَ رَبِّ ٱرْجِعُونِ

Transliteration ḥattā idhā jāa aḥadahumu l-mawtu qāla rabbi ir'jiʿūni

Kannada ಇವರಲ್ಲಿ ಯಾರಿಗಾದರೂ ಮರಣ ಬಂದಾಗ, “ನನ್ನ ಪ್ರಭೂ, (ಇಹ ಜೀವನಕ್ಕೆ) ನನ್ನನ್ನು ಮರಳಿಸಿ ಬಿಡು.

Verse 100

لَعَلِّىٓ أَعْمَلُ صَـٰلِحًا فِيمَا تَرَكْتُ ۚ كَلَّآ ۚ إِنَّهَا كَلِمَةٌ هُوَ قَآئِلُهَا ۖ وَمِن وَرَآئِهِم بَرْزَخٌ إِلَىٰ يَوْمِ يُبْعَثُونَ

Transliteration laʿallī aʿmalu ṣāliḥan fīmā taraktu kallā innahā kalimatun huwa qāiluhā wamin warāihim barzakhun ilā yawmi yub'ʿathūna

Kannada ನಾನು ವ್ಯರ್ಥಗೊಳಿಸಿದುದರ ಬದಲಿಗೆ ಸತ್ಕರ್ಮವನ್ನು ಮಾಡಬಲ್ಲೆನು”, ಆದರೆ ಎಷ್ಟು ಮಾತ್ರಕ್ಕೂ ಮರಳಿಸಲಾಗದು. ಇದು ಕೇವಲ ಅವನಾಡುವ ಒಂದು ಮಾತು ಮಾತ್ರ. ಅವರನ್ನು ಪುನರುಜ್ಜೀವಗೊಳಿಸುವ ದಿನದವರೆಗೆ ಅವರ ಹಿಂದೆ ಬಲವಾದ ತಡೆ ಇದೆ.

Verse 101

فَإِذَا نُفِخَ فِى ٱلصُّورِ فَلَآ أَنسَابَ بَيْنَهُمْ يَوْمَئِذٍ وَلَا يَتَسَآءَلُونَ

Transliteration fa-idhā nufikha fī l-ṣūri falā ansāba baynahum yawma-idhin walā yatasāalūna

Kannada ಕಹಳೆ ಊದಲ್ಪಟ್ಟಾಗ ಅಂದು ಅವರ ನಡುವೆ ಯಾವುದೇ ರಕ್ತ ಸಂಬಂಧವಿಲ್ಲ. ಅವರು ಪರಸ್ಪರ ವಿಚಾರಿಸಿಕೊಳ್ಳಲಾರರು.

Verse 102

فَمَن ثَقُلَتْ مَوَٰزِينُهُۥ فَأُو۟لَـٰٓئِكَ هُمُ ٱلْمُفْلِحُونَ

Transliteration faman thaqulat mawāzīnuhu fa-ulāika humu l-muf'liḥūna

Kannada ಆಗ ಯಾರ ಸತ್ಕರ್ಮದ ತೂಕವು ಭಾರವಾಗಿರುವುದೋ ಅವರೇ ವಿಜಯಿ ಗಳಾಗುವರು.

Verse 103

وَمَنْ خَفَّتْ مَوَٰزِينُهُۥ فَأُو۟لَـٰٓئِكَ ٱلَّذِينَ خَسِرُوٓا۟ أَنفُسَهُمْ فِى جَهَنَّمَ خَـٰلِدُونَ

Transliteration waman khaffat mawāzīnuhu fa-ulāika alladhīna khasirū anfusahum fī jahannama khālidūna

Kannada ಯಾರ ಸತ್ಕರ್ಮದ ತಟ್ಟೆ ಹಗುರವಿರುವುದೋ ಅವರು ತಮ್ಮನ್ನು ತಾವೇ ನಷ್ಟಕ್ಕೀಡು ಮಾಡಿ ದರು. ಅವರು ನರಕದಲ್ಲಿ ಶಾಶ್ವತರು.

Verse 104

تَلْفَحُ وُجُوهَهُمُ ٱلنَّارُ وَهُمْ فِيهَا كَـٰلِحُونَ

Transliteration talfaḥu wujūhahumu l-nāru wahum fīhā kāliḥūna

Kannada ನರಕಾಗ್ನಿಯು ಅವರ ಮುಖವನ್ನೇ ಸುಟ್ಟು ಹಾಕುವುದು. ಅವರ ಮೇಲ್ದುಟಿ ಮೇಲೇರಿ ಹಲ್ಲು ಕಿಸಿಯುವ ವಿಕಾರತೆಯಲ್ಲಿರುವರು .

Verse 105

أَلَمْ تَكُنْ ءَايَـٰتِى تُتْلَىٰ عَلَيْكُمْ فَكُنتُم بِهَا تُكَذِّبُونَ

Transliteration alam takun āyātī tut'lā ʿalaykum fakuntum bihā tukadhibūna

Kannada “ನನ್ನ ವಚನಗಳನ್ನು ನಿಮಗೆ ಓದಿ ಹೇಳಿದಾಗ ಅದನ್ನು ನೀವು ಸುಳ್ಳಾಗಿಸುತ್ತಿದ್ದೀರಲ್ಲವೇ?” (ಎಂದು ಕೇಳಲಾಗುವುದು)

Verse 106

قَالُوا۟ رَبَّنَا غَلَبَتْ عَلَيْنَا شِقْوَتُنَا وَكُنَّا قَوْمًا ضَآلِّينَ

Transliteration qālū rabbanā ghalabat ʿalaynā shiq'watunā wakunnā qawman ḍāllīna

Kannada ಆಗ ಅವರು, “ನಮ್ಮ ಪ್ರಭೂ, ನಮ್ಮ ದುರದೃಷ್ಟವು ನಮ್ಮ ಮೇಲೆ ಪ್ರಾಬಲ್ಯ ಸಾಧಿಸಿತು. ನಾವು ದಾರಿ ತಪ್ಪಿದ ಜನಾಂಗವಾಗಿದ್ದೆವು.

Verse 107

رَبَّنَآ أَخْرِجْنَا مِنْهَا فَإِنْ عُدْنَا فَإِنَّا ظَـٰلِمُونَ

Transliteration rabbanā akhrij'nā min'hā fa-in ʿud'nā fa-innā ẓālimūna

Kannada ನಮ್ಮ ಪ್ರಭೂ, ನಮ್ಮನ್ನು ಇಲ್ಲಿಂದ ಹೊರ ಹಾಕು. ಇನ್ನು ನಾವು ತಪ್ಪು ದಾರಿಗೆ ಮರಳಿದರೆ ಅಕ್ರಮಿಗಳಾಗುವೆವು” ಎನ್ನುವರು.

Verse 108

قَالَ ٱخْسَـُٔوا۟ فِيهَا وَلَا تُكَلِّمُونِ

Transliteration qāla ikh'saū fīhā walā tukallimūni

Kannada ಆಗ “ಇಲ್ಲೇ ನಿಂದ್ಯರಾಗಿ ಬಿದ್ದು ಕೊಂಡಿರಿ. ನನ್ನೊಡನೆ ಮಾತನಾಡಬೇಡಿರಿ.” (ಎಂದು ಅಲ್ಲಾಹನು ಹೇಳುವನು.)

Verse 109

إِنَّهُۥ كَانَ فَرِيقٌ مِّنْ عِبَادِى يَقُولُونَ رَبَّنَآ ءَامَنَّا فَٱغْفِرْ لَنَا وَٱرْحَمْنَا وَأَنتَ خَيْرُ ٱلرَّٰحِمِينَ

Transliteration innahu kāna farīqun min ʿibādī yaqūlūna rabbanā āmannā fa-igh'fir lanā wa-ir'ḥamnā wa-anta khayru l-rāḥimīna

Kannada ನನ್ನ ದಾಸರಲ್ಲಿ ಒಂದು ವಿಭಾಗ, “ನಮ್ಮ ಪ್ರಭೂ, ನಾವು ವಿಶ್ವಾಸವಿರಿಸಿದ್ದೇವೆ. ಆದ್ದರಿಂದ ನಮ್ಮನ್ನು ಕ್ಷಮಿಸು. ನಮಗೆ ದಯೆ ತೋರು. ನೀನು ಅತ್ಯುತ್ತಮ ದಯಾವಂತನು ಎಂದು ಹೇಳುತ್ತಿದ್ದರು.

Verse 110

فَٱتَّخَذْتُمُوهُمْ سِخْرِيًّا حَتَّىٰٓ أَنسَوْكُمْ ذِكْرِى وَكُنتُم مِّنْهُمْ تَضْحَكُونَ

Transliteration fa-ittakhadhtumūhum sikh'riyyan ḥattā ansawkum dhik'rī wakuntum min'hum taḍḥakūna

Kannada ಆಗ ನೀವು ಅವರನ್ನು ಅಪಹಾಸ್ಯ ಮಾಡಿದಿರಿ, ಎಷ್ಟರವರೆಗೆಂದರೆ ಅವರ ಅಪಹಾಸ್ಯ ಮಾಡುವ ಕೆಲಸವು ನಿಮಗೆ ನನ್ನ ಸ್ಮರಣೆಯನ್ನೇ ಮರೆಯುವಂತೆ ಮಾಡಿತು. ಅವರನ್ನು ಕಂಡು ನೀವು ನಗುತ್ತಿದ್ದೀರಿ.

Verse 111

إِنِّى جَزَيْتُهُمُ ٱلْيَوْمَ بِمَا صَبَرُوٓا۟ أَنَّهُمْ هُمُ ٱلْفَآئِزُونَ

Transliteration innī jazaytuhumu l-yawma bimā ṣabarū annahum humu l-fāizūna

Kannada ನಾನು ಅವರಿಗೆ ಉತ್ತಮ ಪ್ರತಿಫಲ ಕೊಟ್ಟಿರು ವೆನು. ಅವರು ಸಹನೆ ಪಾಲಿಸಿದ್ದಕ್ಕಾಗಿ, ನಿಜವಾಗಿಯೂ ಅವರು ಜಯಶಾಲಿಗಳು.

Verse 112

قَـٰلَ كَمْ لَبِثْتُمْ فِى ٱلْأَرْضِ عَدَدَ سِنِينَ

Transliteration qāla kam labith'tum fī l-arḍi ʿadada sinīna

Kannada ಅಲ್ಲಾಹನು ಅವರೊಡನೆ; “ಭೂಮಿಯಲ್ಲಿ ನೀವು ಎಷ್ಟು ವರ್ಷ ವಾಸಿಸಿದಿರಿ?” ಎಂದು ಕೇಳುವನು.

Verse 113

قَالُوا۟ لَبِثْنَا يَوْمًا أَوْ بَعْضَ يَوْمٍ فَسْـَٔلِ ٱلْعَآدِّينَ

Transliteration qālū labith'nā yawman aw baʿḍa yawmin fasali l-ʿādīna

Kannada ಅವರು “ಒಂದು ದಿನ ಅಥವಾ ದಿನದ ಸ್ವಲ್ಪ ಸಮಯ ನಾವು ಅಲ್ಲಿ ವಾಸಿಸಿದ್ದೆವು. ಎಣಿಕೆ ಮಾಡುವವರನ್ನು ಕೇಳಿ ನೋಡು” ಎನ್ನುವರು.

Verse 114

قَـٰلَ إِن لَّبِثْتُمْ إِلَّا قَلِيلًا ۖ لَّوْ أَنَّكُمْ كُنتُمْ تَعْلَمُونَ

Transliteration qāla in labith'tum illā qalīlan law annakum kuntum taʿlamūna

Kannada ಅವನು ಹೇಳುವನು, `ನೀವು (ಭೂಲೋಕದಲ್ಲಿ) ಸ್ವಲ್ಪ ಸಮಯ ಮಾತ್ರ ತಂಗಿದ್ದೀರಿ. ನೀವು ಇದನ್ನು ಆಗ ತಿಳಿದಿರುತ್ತಿದ್ದರೆ! (ಈ ದುರವಸ್ಥೆ ಬರುತ್ತಿರಲಿಲ್ಲ).

Verse 115

أَفَحَسِبْتُمْ أَنَّمَا خَلَقْنَـٰكُمْ عَبَثًا وَأَنَّكُمْ إِلَيْنَا لَا تُرْجَعُونَ

Transliteration afaḥasib'tum annamā khalaqnākum ʿabathan wa-annakum ilaynā lā tur'jaʿūna

Kannada ನಾವು ನಿಮ್ಮನ್ನು ನಿರರ್ಥಕವಾಗಿ ಸೃಷ್ಟಿಸಿದ್ದೇ ವೆಂದೂ ನಿಮಗೆ ನಮ್ಮ ಕಡೆಗೆ ಮರಳಲಿಕ್ಕೆ ಇಲ್ಲವೆಂದೂ ಭಾವಿಸಿದ್ದೀರಾ?”

Verse 116

فَتَعَـٰلَى ٱللَّهُ ٱلْمَلِكُ ٱلْحَقُّ ۖ لَآ إِلَـٰهَ إِلَّا هُوَ رَبُّ ٱلْعَرْشِ ٱلْكَرِيمِ

Transliteration fataʿālā l-lahu l-maliku l-ḥaqu lā ilāha illā huwa rabbu l-ʿarshi l-karīmi

Kannada ಅಲ್ಲಾಹನು ಪರಮೋನ್ನತನು, ಯಥಾರ್ಥ ಸಾಮ್ರಾಟನು. ಅವನ ಹೊರತು ಬೇರೆ ದೇವನಿಲ್ಲ. ಗೌರವಾನ್ವಿತ ಅರ್ಶ್‍ನ ಒಡೆಯನು.

Verse 117

وَمَن يَدْعُ مَعَ ٱللَّهِ إِلَـٰهًا ءَاخَرَ لَا بُرْهَـٰنَ لَهُۥ بِهِۦ فَإِنَّمَا حِسَابُهُۥ عِندَ رَبِّهِۦٓ ۚ إِنَّهُۥ لَا يُفْلِحُ ٱلْكَـٰفِرُونَ

Transliteration waman yadʿu maʿa l-lahi ilāhan ākhara lā bur'hāna lahu bihi fa-innamā ḥisābuhu ʿinda rabbihi innahu lā yuf'liḥu l-kāfirūna

Kannada ಯಾವನು ಅಲ್ಲಾಹನ ಜೊತೆಗೆ ಬೇರೆ ಆರಾಧ್ಯ ನನ್ನು ಆರಾಧಿಸುತ್ತಾನೋ, ಆತನ ಬಳಿ ಅದಕ್ಕೆ ಪುರಾವೆ ಇಲ್ಲ . ಅವನ ಪ್ರಭುವಿನ ಬಳಿಯೇ ಆತನ ಲೆಕ್ಕಾಚಾರವಿದೆ. ಸತ್ಯನಿಷೇಧಿಗಳು ಖಂಡಿತ ಯಶಸ್ವಿಯಾಗಲಾರರು.

Verse 118

وَقُل رَّبِّ ٱغْفِرْ وَٱرْحَمْ وَأَنتَ خَيْرُ ٱلرَّٰحِمِينَ

Transliteration waqul rabbi igh'fir wa-ir'ḥam wa-anta khayru l-rāḥimīna

Kannada (ಪೈಗಂಬರರೇ,) ಹೇಳಿರಿ; “ನನ್ನ ಪ್ರಭು, ನೀನು ಕ್ಷಮಿಸು ಮತ್ತು ಕರುಣೆ ತೋರು; ನೀನು ಕರುಣಾಳುಗಳಲ್ಲಿ ಅತ್ಯಂತ ಉತ್ತಮನಾಗಿರುವಿ.

Read Surah Al-Mu'minun in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.