MyDugsiStart learning

Surah Al-Mulk in Kannada: translation and audio

Surah 67 · الملك · The Sovereignty · 30 verses

Surah Al-Mulk verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Mulk word by word in English.

Verse 1

تَبَـٰرَكَ ٱلَّذِى بِيَدِهِ ٱلْمُلْكُ وَهُوَ عَلَىٰ كُلِّ شَىْءٍ قَدِيرٌ

Transliteration tabāraka alladhī biyadihi l-mul'ku wahuwa ʿalā kulli shayin qadīrun

Kannada ಆಧಿಪತ್ಯ ಯಾವನ ಕೈವಶದಲ್ಲಿದೆಯೋ ಅವನು ಪರಮ ಪರಿಶುದ್ಧನು. ಅವನು ಸಕಲ ವಸ್ತುವಿನ ಮೇಲೆ ಸರ್ವ ಸಮರ್ಥನು .

Verse 2

ٱلَّذِى خَلَقَ ٱلْمَوْتَ وَٱلْحَيَوٰةَ لِيَبْلُوَكُمْ أَيُّكُمْ أَحْسَنُ عَمَلًا ۚ وَهُوَ ٱلْعَزِيزُ ٱلْغَفُورُ

Transliteration alladhī khalaqa l-mawta wal-ḥayata liyabluwakum ayyukum aḥsanu ʿamalan wahuwa l-ʿazīzu l-ghafūru

Kannada ನಿಮ್ಮ ಪೈಕಿ ಯಾರು ಹೆಚ್ಚು ಚೆನ್ನಾಗಿ ಕರ್ಮಾಚರಣೆ ಮಾಡುತ್ತಾನೆ ಎಂದು ಪರೀಕ್ಷಿಸಿ ನೋಡಲಿಕ್ಕಾಗಿ ಅವನು ಮರಣವನ್ನೂ ಜೀವನವನ್ನೂ ಸೃಷ್ಟಿಸಿದವನಾಗಿದ್ದಾನೆ. ಅವನು ಅಜೇಯನೂ ಕ್ಷಮಾಶೀಲನೂ ಆಗಿರುತ್ತಾನೆ.

Verse 3

ٱلَّذِى خَلَقَ سَبْعَ سَمَـٰوَٰتٍ طِبَاقًا ۖ مَّا تَرَىٰ فِى خَلْقِ ٱلرَّحْمَـٰنِ مِن تَفَـٰوُتٍ ۖ فَٱرْجِعِ ٱلْبَصَرَ هَلْ تَرَىٰ مِن فُطُورٍ

Transliteration alladhī khalaqa sabʿa samāwātin ṭibāqan mā tarā fī khalqi l-raḥmāni min tafāwutin fa-ir'jiʿi l-baṣara hal tarā min fuṭūrin

Kannada ಅಂತಸ್ತುಗಳಾಗಿ ಸಪ್ತ ಗಗನಗಳನ್ನು ಉಂಟು ಮಾಡಿದವನು ಅವನೇ. ಕರುಣಾಮಯಿಯ ಸೃಷ್ಟಿಯಲ್ಲಿ ನೀನು ಯಾವುದೇ ಅಸಂಗತವನ್ನು ಕಾಣಲಾರೆ. (ಬೇಕಿದ್ದರೆ) ಇನ್ನೊಮ್ಮೆ ನೋಡು, ನಿನಗೆಲ್ಲಾದರೂ ಬಿರುಕು ಕಾಣಿಸುತ್ತಿದೆಯೇ ?

Verse 4

ثُمَّ ٱرْجِعِ ٱلْبَصَرَ كَرَّتَيْنِ يَنقَلِبْ إِلَيْكَ ٱلْبَصَرُ خَاسِئًا وَهُوَ حَسِيرٌ

Transliteration thumma ir'jiʿi l-baṣara karratayni yanqalib ilayka l-baṣaru khāsi-an wahuwa ḥasīrun

Kannada ಮತ್ತೆ ಎರಡು ಬಾರಿ ಆವರ್ತಿಸಿ ನೋಡು. ದೃಷ್ಟಿಯು ಸೋತು ಹತಾಶವಾಗಿ ನಿನ್ನಲ್ಲಿಗೆ ಮರಳಿ ಬರುವುದು.

Verse 5

وَلَقَدْ زَيَّنَّا ٱلسَّمَآءَ ٱلدُّنْيَا بِمَصَـٰبِيحَ وَجَعَلْنَـٰهَا رُجُومًا لِّلشَّيَـٰطِينِ ۖ وَأَعْتَدْنَا لَهُمْ عَذَابَ ٱلسَّعِيرِ

Transliteration walaqad zayyannā l-samāa l-dun'yā bimaṣābīḥa wajaʿalnāhā rujūman lilshayāṭīni wa-aʿtadnā lahum ʿadhāba l-saʿīri

Kannada ಅತಿ ಸಮೀಪದ ಆಕಾಶವನ್ನು ನಾವು ದೀಪಗಳಿಂದ (ನಕ್ಷತ್ರಗಳಿಂದ) ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರನ್ನು ಹೊಡೆದಟ್ಟುವ ಸಾಧನವಾಗಿ ಮಾಡಿದ್ದೇವೆ . ನಾವು ಆ ಶೈತಾನರಿಗಾಗಿ ಧಗಧಗಿಸುವ ನರಕ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿರುತ್ತೇವೆ.

Verse 6

وَلِلَّذِينَ كَفَرُوا۟ بِرَبِّهِمْ عَذَابُ جَهَنَّمَ ۖ وَبِئْسَ ٱلْمَصِيرُ

Transliteration walilladhīna kafarū birabbihim ʿadhābu jahannama wabi'sa l-maṣīru

Kannada ತಮ್ಮ ಪ್ರಭುವನ್ನು ನಿಷೇಧಿಸುವವರಿಗೆ ನರಕ ಶಿಕ್ಷೆ ಇದೆ ಮತ್ತು ಅದು ಅತ್ಯಂತ ಕೆಟ್ಟ ಸಂಕೇತವೇ ಆಗಿದೆ.

Verse 7

إِذَآ أُلْقُوا۟ فِيهَا سَمِعُوا۟ لَهَا شَهِيقًا وَهِىَ تَفُورُ

Transliteration idhā ul'qū fīhā samiʿū lahā shahīqan wahiya tafūru

Kannada ಅವರು ಆ ನರಕಕ್ಕೆ ಎಸೆಯಲ್ಪಡುವಾಗ ಅದರಿಂದ ಒಂದು ಭೋರ್ಗರೆತವನ್ನು ಕೇಳುವರು. ಅಲ್ಲದೆ ಅದು ಕುದಿಯುತ್ತಲಿರುವುದು.

Verse 8

تَكَادُ تَمَيَّزُ مِنَ ٱلْغَيْظِ ۖ كُلَّمَآ أُلْقِىَ فِيهَا فَوْجٌ سَأَلَهُمْ خَزَنَتُهَآ أَلَمْ يَأْتِكُمْ نَذِيرٌ

Transliteration takādu tamayyazu mina l-ghayẓi kullamā ul'qiya fīhā fawjun sa-alahum khazanatuhā alam yatikum nadhīrun

Kannada ಸಿಟ್ಟಿನಿಂದ ಅದು ಸಿಡಿಯುವಂತಿರುವುದು. ಪ್ರತಿ ಬಾರಿಯೂ ಒಂದೊಂದು ಕೂಟ ಜನರನ್ನು ಅದರೊಳಗೆ ಹಾಕಲ್ಪಡುವಾಗಲೆಲ್ಲಾ ಅದರ ಕಾವಲುಗಾರರು ಅವರೊಡನೆ, ‘ನಿಮ್ಮ ಬಳಿಗೆ ಎಚ್ಚರಿಕೆ ಕೊಡುವವನಾರೂ ಬಂದಿರಲಿಲ್ಲವೇ ?’ ಎಂದು ಕೇಳುವರು.

Verse 9

قَالُوا۟ بَلَىٰ قَدْ جَآءَنَا نَذِيرٌ فَكَذَّبْنَا وَقُلْنَا مَا نَزَّلَ ٱللَّهُ مِن شَىْءٍ إِنْ أَنتُمْ إِلَّا فِى ضَلَـٰلٍ كَبِيرٍ

Transliteration qālū balā qad jāanā nadhīrun fakadhabnā waqul'nā mā nazzala l-lahu min shayin in antum illā fī ḍalālin kabīrin

Kannada ಆಗ ಅವರು ಹೇಳುವರು; ಹೌದು, ಎಚ್ಚರಿಕೆ ಕೊಡುವವರು ಬಂದಿದ್ದರು. ಆದರೆ ನಾವು ಅವರನ್ನು ಸುಳ್ಳಾಗಿಸಿದೆವು ಮತ್ತು ಅಲ್ಲಾಹನು ಏನನ್ನೂ ಅವತೀರ್ಣಗೊಳಿಸಿಲ್ಲ, ನೀವು ದೊಡ್ಡ ದಾರಿಗೇಡಿನಲ್ಲಿ ಬಿದ್ದಿರುವಿರಿ’ ಎಂದು ನಾವು (ಅವರಲ್ಲಿ) ಹೇಳಿದೆವು.

Verse 10

وَقَالُوا۟ لَوْ كُنَّا نَسْمَعُ أَوْ نَعْقِلُ مَا كُنَّا فِىٓ أَصْحَـٰبِ ٱلسَّعِيرِ

Transliteration waqālū law kunnā nasmaʿu aw naʿqilu mā kunnā fī aṣḥābi l-saʿīri

Kannada ಮತ್ತು ಅವರು ಹೀಗೂ ಹೇಳುವರು; ‘ನಾವು (ದೂತರ ಮಾತು) ಕೇಳಿರುತ್ತಿದ್ದರೆ ಮತ್ತು ಗ್ರಹಿಸಿರುತ್ತಿದ್ದರೆ ನಾವು ಧಗಧಗಿಸುವ ಜನರಲ್ಲಿ ಸೇರುತ್ತಿರಲಿಲ್ಲ’.

Verse 11

فَٱعْتَرَفُوا۟ بِذَنۢبِهِمْ فَسُحْقًا لِّأَصْحَـٰبِ ٱلسَّعِيرِ

Transliteration fa-iʿ'tarafū bidhanbihim fasuḥ'qan li-aṣḥābi l-saʿīri

Kannada ಹಾಗೆ ಅವರು ತಮ್ಮ ಅಪರಾಧವನ್ನು ತಾವೇ ಒಪ್ಪಿಕೊಳ್ಳುವರು. ನರಕವಾಸಿಗಳು (ಅಲ್ಲಾಹನ ಅನುಗ್ರಹದಿಂದ) ಎಷ್ಟು ವಿದೂರ !

Verse 12

إِنَّ ٱلَّذِينَ يَخْشَوْنَ رَبَّهُم بِٱلْغَيْبِ لَهُم مَّغْفِرَةٌ وَأَجْرٌ كَبِيرٌ

Transliteration inna alladhīna yakhshawna rabbahum bil-ghaybi lahum maghfiratun wa-ajrun kabīrun

Kannada ತಮ್ಮ ಪ್ರಭುವನ್ನು ಅದೃಶ್ಯವಾಗಿ ಭಯಪಡುವವರಿಗೆ ಖಂಡಿತವಾಗಿಯೂ ಕ್ಷಮಾದಾನ ಮತ್ತು ದೊಡ್ಡ ಪ್ರತಿಫಲವಿದೆ.

Verse 13

وَأَسِرُّوا۟ قَوْلَكُمْ أَوِ ٱجْهَرُوا۟ بِهِۦٓ ۖ إِنَّهُۥ عَلِيمٌۢ بِذَاتِ ٱلصُّدُورِ

Transliteration wa-asirrū qawlakum awi ij'harū bihi innahu ʿalīmun bidhāti l-ṣudūri

Kannada ನೀವು ರಹಸ್ಯವಾಗಿ ಮಾತನಾಡಿರಿ, ಬಹಿರಂಗವಾಗಿ ಮಾತನಾಡಿರಿ, (ಹೇಗಿದ್ದರೂ) ಅವನು ಹೃದ್ಗತಗಳನ್ನು ಬಲ್ಲ ಸರ್ವಜ್ಞಾನಿಯಾಗಿರುತ್ತಾನೆ.

Verse 14

أَلَا يَعْلَمُ مَنْ خَلَقَ وَهُوَ ٱللَّطِيفُ ٱلْخَبِيرُ

Transliteration alā yaʿlamu man khalaqa wahuwa l-laṭīfu l-khabīru

Kannada ಸೃಷ್ಟಿಸಿದವನು ಅರಿಯದಿರುವನೇ ? ಅವನು ಅತ್ಯಂತ ಸೂಕ್ಷ್ಮಜ್ಞನೂ ವಿವರಪೂರ್ಣನೂ ಆಗಿರುತ್ತಾನೆ.

Verse 15

هُوَ ٱلَّذِى جَعَلَ لَكُمُ ٱلْأَرْضَ ذَلُولًا فَٱمْشُوا۟ فِى مَنَاكِبِهَا وَكُلُوا۟ مِن رِّزْقِهِۦ ۖ وَإِلَيْهِ ٱلنُّشُورُ

Transliteration huwa alladhī jaʿala lakumu l-arḍa dhalūlan fa-im'shū fī manākibihā wakulū min riz'qihi wa-ilayhi l-nushūru

Kannada ನಿಮಗೆ ಭೂಮಿಯನ್ನು ಅಧೀನಗೊಳಿಸಿ ಕೊಟ್ಟವನು ಅವನೇ. ಆದುದರಿಂದ ನೀವು ಅದರ ಪಾಶ್ರ್ವಗಳಲ್ಲಿ ನಡೆದಾಡಿರಿ ಮತ್ತು ಅಲ್ಲಾಹನ ಆಹಾರದಿಂದ ನೀವು ಭುಜಿಸಿರಿ. ಪುನಃ (ಜೀವಂತರಾಗಿ) ಮರಳುವುದು ಅವನ ಬಳಿಗೇ ಆಗಿದೆ.

Verse 16

ءَأَمِنتُم مَّن فِى ٱلسَّمَآءِ أَن يَخْسِفَ بِكُمُ ٱلْأَرْضَ فَإِذَا هِىَ تَمُورُ

Transliteration a-amintum man fī l-samāi an yakhsifa bikumu l-arḍa fa-idhā hiya tamūru

Kannada ಆಕಾಶದಲ್ಲಿ (ಆಧಿಪತ್ಯ) ಇರುವವನು ಭೂಮಿಯಲ್ಲಿ ನಿಮ್ಮನ್ನು ಹುಗಿದು ಬಿಡುವ ಕುರಿತು ನೀವು ನಿರ್ಭೀತರಾಗಿರುವಿರಾ? ಆಗ ಅದು (ಭೂಮಿ) ನಡುಗುತ್ತಲಿರುತ್ತವೆ.

Verse 17

أَمْ أَمِنتُم مَّن فِى ٱلسَّمَآءِ أَن يُرْسِلَ عَلَيْكُمْ حَاصِبًا ۖ فَسَتَعْلَمُونَ كَيْفَ نَذِيرِ

Transliteration am amintum man fī l-samāi an yur'sila ʿalaykum ḥāṣiban fasataʿlamūna kayfa nadhīri

Kannada ಅಥವಾ ಆಕಾಶದಲ್ಲಿ (ಆಧಿಪತ್ಯ) ಹೊಂದಿರುವನು ನಿಮ್ಮ ಮೇಲೆ ಒಂದು ಕಲ್ಲು ಮಳೆಯನ್ನು ಕಳುಹಿಸಿ ಬಿಡುವ ಕುರಿತು ನೀವು ನಿರ್ಭಿತರಾಗಿರುವಿರಾ? ನನ್ನ ಮುನ್ನೆಚ್ಚರಿಕೆ ಹೇಗಿರುತ್ತದೆಂಬುದು ಆಗ ನಿಮಗೆ ತಿಳಿದು ಬರುವುದು.

Verse 18

وَلَقَدْ كَذَّبَ ٱلَّذِينَ مِن قَبْلِهِمْ فَكَيْفَ كَانَ نَكِيرِ

Transliteration walaqad kadhaba alladhīna min qablihim fakayfa kāna nakīri

Kannada ಇವರಿಗಿಂತ ಮುಂಚೆ ಗತಿಸಿ ಹೋದವರು ಸತ್ಯವನ್ನು ಸುಳ್ಳಾಗಿಸಿದ್ದರು. ಆಗ ನನ್ನ ಪ್ರತಿಷೇಧವು ಹೇಗಿತ್ತು ?

Verse 19

أَوَلَمْ يَرَوْا۟ إِلَى ٱلطَّيْرِ فَوْقَهُمْ صَـٰٓفَّـٰتٍ وَيَقْبِضْنَ ۚ مَا يُمْسِكُهُنَّ إِلَّا ٱلرَّحْمَـٰنُ ۚ إِنَّهُۥ بِكُلِّ شَىْءٍۭ بَصِيرٌ

Transliteration awalam yaraw ilā l-ṭayri fawqahum ṣāffātin wayaqbiḍ'na mā yum'sikuhunna illā l-raḥmānu innahu bikulli shayin baṣīrun

Kannada ತಮ್ಮ ಮೇಲೆ ಪಕ್ಷಿಗಳು ರೆಕ್ಕೆ ಬಿಚ್ಚಿಕೊಂಡೂ ಮಡಚಿಕೊಂಡೂ ಹಾರಾಡುತ್ತಿರುವುದನ್ನು ಅವರು ನೋಡುತ್ತಿಲ್ಲವೇ ? ಪರಮದಯಾಮಯನ ಹೊರತು ಅವುಗಳನ್ನು ಹಿಡಿದಿರಿಸಿಕೊಳ್ಳುವವರು ಬೇರಾರೂ ಇಲ್ಲ. ಅವನು ಪ್ರತಿಯೊಂದು ವಸ್ತುವನ್ನೂ ಕಾಣುವವನೇ ಆಗಿದ್ದಾನೆ.

Verse 20

أَمَّنْ هَـٰذَا ٱلَّذِى هُوَ جُندٌ لَّكُمْ يَنصُرُكُم مِّن دُونِ ٱلرَّحْمَـٰنِ ۚ إِنِ ٱلْكَـٰفِرُونَ إِلَّا فِى غُرُورٍ

Transliteration amman hādhā alladhī huwa jundun lakum yanṣurukum min dūni l-raḥmāni ini l-kāfirūna illā fī ghurūrin

Kannada ಅದಲ್ಲ, ಪರಮ ದಯಾಮಯನ ಹೊರತು ನಿಮಗೆ ಸಹಾಯ ಮಾಡಬಲ್ಲಂತಹ ಒಂದು ಸೈನ್ಯವಾಗಿ ನಿಮಗೆ ಯಾರಿದ್ದಾರೆ? ಸತ್ಯನಿಷೇಧಿಗಳು ಖಂಡಿತ ಮೋಸಕ್ಕೊಳಗಾಗದೇ ಇಲ್ಲ.

Verse 21

أَمَّنْ هَـٰذَا ٱلَّذِى يَرْزُقُكُمْ إِنْ أَمْسَكَ رِزْقَهُۥ ۚ بَل لَّجُّوا۟ فِى عُتُوٍّ وَنُفُورٍ

Transliteration amman hādhā alladhī yarzuqukum in amsaka riz'qahu bal lajjū fī ʿutuwwin wanufūrin

Kannada ಅಥವಾ ಪರಮ ದಯಾಮಯನು ತನ್ನ ಜೀವನಾಧಾರಗಳನ್ನು ತಡೆ ಹಿಡಿದರೆ, ನಿಮಗೆ ಜೀವನಾಧಾರ ನೀಡಬಲ್ಲವನು ಯಾರು? ಆದರೆ ಅವರು ದರ್ಪದಲ್ಲೂ ಸತ್ಯದಿಂದ ದೂರ ಚದುರುವುದರಲ್ಲೂ ನಿರತ ರಾಗಿದ್ದಾರೆ.

Verse 22

أَفَمَن يَمْشِى مُكِبًّا عَلَىٰ وَجْهِهِۦٓ أَهْدَىٰٓ أَمَّن يَمْشِى سَوِيًّا عَلَىٰ صِرَٰطٍ مُّسْتَقِيمٍ

Transliteration afaman yamshī mukibban ʿalā wajhihi ahdā amman yamshī sawiyyan ʿalā ṣirāṭin mus'taqīmin

Kannada ತಲೆಕೆಳಗಾಗಿ ನಡೆಯುತ್ತಿರುವವನೋ ಅಥವಾ ನೇರವಾಗಿ ಸಮತಟ್ಟಾದ ಮಾರ್ಗದಲ್ಲಿ ನಡೆಯುತ್ತಿರುವವನೋ? ಯಾವನು ಸನ್ಮಾರ್ಗ ಪ್ರಾಪ್ತನು?

Verse 23

قُلْ هُوَ ٱلَّذِىٓ أَنشَأَكُمْ وَجَعَلَ لَكُمُ ٱلسَّمْعَ وَٱلْأَبْصَـٰرَ وَٱلْأَفْـِٔدَةَ ۖ قَلِيلًا مَّا تَشْكُرُونَ

Transliteration qul huwa alladhī ansha-akum wajaʿala lakumu l-samʿa wal-abṣāra wal-afidata qalīlan mā tashkurūna

Kannada (ಸಂದೇಶವಾಹಕರೇ), ಹೇಳಿರಿ; ನಿಮ್ಮನ್ನು ಸೃಷ್ಟಿಸಿದವನೂ ನಿಮಗೆ ಶ್ರವಣ ಮತ್ತು ದೃಷ್ಟಿಗಳನ್ನು ಹಾಗೂ ಹೃದಯಗಳನ್ನು ನೀಡಿದವನೂ ಅವನೇ ಆಗಿರುವನು. ಆದರೆ, ನೀವು ಸ್ವಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ’.

Verse 24

قُلْ هُوَ ٱلَّذِى ذَرَأَكُمْ فِى ٱلْأَرْضِ وَإِلَيْهِ تُحْشَرُونَ

Transliteration qul huwa alladhī dhara-akum fī l-arḍi wa-ilayhi tuḥ'sharūna

Kannada ಹೇಳಿರಿ; ‘ನಿಮನ್ನು ಭೂಮಿಯ ಮೇಲೆ ಸೃಷ್ಟಿಸಿ ಬೆಳೆಸಿದವನು ಅವನೇ (ಅಲ್ಲಾಹನೇ). ಅವನ ಕಡೆಗೇ ನೀವು ಒಟ್ಟುಗೂಡಿಸಲ್ಪಡುವಿರಿ’.

Verse 25

وَيَقُولُونَ مَتَىٰ هَـٰذَا ٱلْوَعْدُ إِن كُنتُمْ صَـٰدِقِينَ

Transliteration wayaqūlūna matā hādhā l-waʿdu in kuntum ṣādiqīna

Kannada ಈ ವಾಗ್ದಾನವು ಪೂರ್ತಿ ಗೊಳ್ಳುವುದು ಯಾವಾಗ, ನೀವು ನಿಜ ಹೇಳುವುದಾಗಿದ್ದರೆ ಎಂದು ಅವರು ಕೇಳುತ್ತಾರೆ.

Verse 26

قُلْ إِنَّمَا ٱلْعِلْمُ عِندَ ٱللَّهِ وَإِنَّمَآ أَنَا۠ نَذِيرٌ مُّبِينٌ

Transliteration qul innamā l-ʿil'mu ʿinda l-lahi wa-innamā anā nadhīrun mubīnun

Kannada ಹೇಳಿರಿ; (ಪ್ರವಾದಿಯವರೇ,) ಅದರ ಜ್ಞಾನ ಅಲ್ಲಾಹನಿಗೆ ಮಾತ್ರವಿದೆ. ನಾನು ಸ್ಪಷ್ಟವಾದ ಎಚ್ಚರಿಕೆ ನೀಡುವವನು ಮಾತ್ರ.

Verse 27

فَلَمَّا رَأَوْهُ زُلْفَةً سِيٓـَٔتْ وُجُوهُ ٱلَّذِينَ كَفَرُوا۟ وَقِيلَ هَـٰذَا ٱلَّذِى كُنتُم بِهِۦ تَدَّعُونَ

Transliteration falammā ra-awhu zul'fatan sīat wujūhu alladhīna kafarū waqīla hādhā alladhī kuntum bihi taddaʿūna

Kannada ಮುಂದೆ ಶಿಕ್ಷೆಯು ಸಮೀಪವಾಗಿರುವುದನ್ನು ಅವರು ಕಂಡಾಗ, ಸತ್ಯನಿಷೇಧಿಗಳ ಮುಖಗಳಿಗೆ ಮ್ಲಾನತೆ ಬಾಧಿಸುವುದು. ನೀವು (ಇಲ್ಲವೆಂದು) ವಾದಿಸುತ್ತಿದ್ದ ವಿಚಾರವು ಇದುವೇ ಆಗಿದೆ’ ಎಂದು (ಅವರಿಗೆ) ಹೇಳಲಾಗುವುದು.

Verse 28

قُلْ أَرَءَيْتُمْ إِنْ أَهْلَكَنِىَ ٱللَّهُ وَمَن مَّعِىَ أَوْ رَحِمَنَا فَمَن يُجِيرُ ٱلْكَـٰفِرِينَ مِنْ عَذَابٍ أَلِيمٍ

Transliteration qul ara-aytum in ahlakaniya l-lahu waman maʿiya aw raḥimanā faman yujīru l-kāfirīna min ʿadhābin alīmin

Kannada ಹೇಳಿರಿ; (ಪ್ರವಾದಿಯವರೇ,) ನೀವು ಯೋಚಿಸಿದ್ದೀರಾ? ನನ್ನನ್ನು ಮತ್ತು ನನ್ನ ಜೊತೆಗಿರುವವರನ್ನು ಅಲ್ಲಾಹನು ಶಿಕ್ಷಿಸಿದರೆ ಅಥವಾ ನಮ್ಮಲ್ಲಿ ಕರುಣೆ ತೋರಿಸಿದರೆ (ಈ ಎಡರಡರಲ್ಲೂ ನಿಮಗೇನು ಲಾಭ?) ವೇದನಾಜನಕ ಶಿಕ್ಷೆಯಿಂದ ಸತ್ಯನಿಷೇಧಿಗಳನ್ನು ಯಾರು ರಕ್ಷಿಸುವರು?’

Verse 29

قُلْ هُوَ ٱلرَّحْمَـٰنُ ءَامَنَّا بِهِۦ وَعَلَيْهِ تَوَكَّلْنَا ۖ فَسَتَعْلَمُونَ مَنْ هُوَ فِى ضَلَـٰلٍ مُّبِينٍ

Transliteration qul huwa l-raḥmānu āmannā bihi waʿalayhi tawakkalnā fasataʿlamūna man huwa fī ḍalālin mubīnin

Kannada ಹೇಳಿರಿ; ಅವನು ಪರಮ ಕಾರುಣಿಕನು. ನಾವು ಅವನಲ್ಲಿ ವಿಶ್ವಾಸವಿರಿಸಿದ್ದೇವೆ ಮತ್ತು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ಆದರೆ ಸ್ಪಷ್ಟ- ಪಥಭ್ರಷ್ಟತೆಯಲ್ಲಿರುವವನು ಯಾರೆಂದು ಸದ್ಯದಲ್ಲೇ ನಿಮಗೆ ತಿಳಿದುಬರುವುದು’.

Verse 30

قُلْ أَرَءَيْتُمْ إِنْ أَصْبَحَ مَآؤُكُمْ غَوْرًا فَمَن يَأْتِيكُم بِمَآءٍ مَّعِينٍۭ

Transliteration qul ara-aytum in aṣbaḥa māukum ghawran faman yatīkum bimāin maʿīnin

Kannada (ಪ್ರವಾದಿಯವರೇ,) ಹೇಳಿರಿ; ನಿಮ್ಮ ನೀರು ನೆಲದೊಳಕ್ಕೆ ಇಂಗಿ ಹೋದರೆ, ಹರಿಯುವ ಚಿಲುಮೆಗಳನ್ನು ನಿಮಗೆ ತಂದು ಕೊಡುವವನು ಯಾರೆಂದು ನೀವು ಹೇಳಬಲ್ಲಿರಾ?’.

Read Surah Al-Mulk in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.