MyDugsiStart learning

Surah Al-Insan in Kannada: translation and audio

Surah 76 · الانسان · The Man · 31 verses

Surah Al-Insan verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Insan word by word in English.

Verse 1

هَلْ أَتَىٰ عَلَى ٱلْإِنسَـٰنِ حِينٌ مِّنَ ٱلدَّهْرِ لَمْ يَكُن شَيْـًٔا مَّذْكُورًا

Transliteration hal atā ʿalā l-insāni ḥīnun mina l-dahri lam yakun shayan madhkūran

Kannada ಪ್ರಸ್ತಾಪಿಸತಕ್ಕ ಒಂದು ವಸ್ತುವೇ ಆಗಿರದಂತಹ ಕಾಲವೊಂದು ಮಾನವನ ಮೇಲೆ ಕಳೆದಿಲ್ಲವೇ?

Verse 2

إِنَّا خَلَقْنَا ٱلْإِنسَـٰنَ مِن نُّطْفَةٍ أَمْشَاجٍ نَّبْتَلِيهِ فَجَعَلْنَـٰهُ سَمِيعًۢا بَصِيرًا

Transliteration innā khalaqnā l-insāna min nuṭ'fatin amshājin nabtalīhi fajaʿalnāhu samīʿan baṣīran

Kannada ನಾವು ಮಾನವನನ್ನು ಒಂದು ಸಮ್ಮಿಶ್ರ ಶುಕ್ಲ ಬಿಂದುವಿನಿಂದ ಸೃಷ್ಟಿಸಿದೆವು. ಅವನನ್ನು ನಾವು ಪರೀಕ್ಷಿಸಲಿದ್ದೇವೆ. (ಈ ಉದ್ದೇಶದಿಂದ) ನಾವು ಅವನನ್ನು ಆಲಿಸುವವನಾಗಿಯೂ, ಕಾಣುವವನಾಗಿಯೂ ಮಾಡಿದೆವು.

Verse 3

إِنَّا هَدَيْنَـٰهُ ٱلسَّبِيلَ إِمَّا شَاكِرًا وَإِمَّا كَفُورًا

Transliteration innā hadaynāhu l-sabīla immā shākiran wa-immā kafūran

Kannada ನಾವು ಅವನಿಗೆ ಮಾರ್ಗದರ್ಶನ ಮಾಡಿದೆವು. ಒಂದೋ ಅವನು ಕೃತಜ್ಞತೆ ಸಲ್ಲಿಸುವವನಾಗಿರ ಬಹುದು ಅಥವಾ ಕೃತಘ್ನನಾಗಬಹುದು.

Verse 4

إِنَّآ أَعْتَدْنَا لِلْكَـٰفِرِينَ سَلَـٰسِلَا۟ وَأَغْلَـٰلًا وَسَعِيرًا

Transliteration innā aʿtadnā lil'kāfirīna salāsilā wa-aghlālan wasaʿīran

Kannada ಸತ್ಯನಿಷೇಧಿಗಳಿಗೆ ನಾವು ಕೆಲವು ಸಂಕೋಲೆಗಳನ್ನೂ ಕೋಳಗಳನ್ನೂ ಹೊತ್ತಿ ಉರಿಯುವ ನರಕವನ್ನೂ ಸಿದ್ಧಗೊಳಿಸಿಟ್ಟಿದ್ದೇವೆ.

Verse 5

إِنَّ ٱلْأَبْرَارَ يَشْرَبُونَ مِن كَأْسٍ كَانَ مِزَاجُهَا كَافُورًا

Transliteration inna l-abrāra yashrabūna min kasin kāna mizājuhā kāfūran

Kannada ಪುಣ್ಯವಂತರು (ಸುರೆ ತುಂಬಿದ) ಪಾನಪಾತ್ರೆಯಿಂದ ಕುಡಿಯುತ್ತಿರುವರು. ಅದರ ಮಿಶ್ರಿತವು ಕರ್ಪೂರವಾಗಿದೆ.

Verse 6

عَيْنًا يَشْرَبُ بِهَا عِبَادُ ٱللَّهِ يُفَجِّرُونَهَا تَفْجِيرًا

Transliteration ʿaynan yashrabu bihā ʿibādu l-lahi yufajjirūnahā tafjīran

Kannada ಅಲ್ಲಾಹನ ದಾಸರು ಪಾನ ಮಾಡುವ ಒಂದು ಚಿಲುಮೆಯ ನೀರು ಅದು. ಮತ್ತು (ತಾವಿಚ್ಛಿಸಿ ದೆಡೆಗೆ) ಅವರು ಅದನ್ನು ಚಿಮ್ಮಿಸಿ ಹರಿಸಿ ಬಿಡುವರು.

Verse 7

يُوفُونَ بِٱلنَّذْرِ وَيَخَافُونَ يَوْمًا كَانَ شَرُّهُۥ مُسْتَطِيرًا

Transliteration yūfūna bil-nadhri wayakhāfūna yawman kāna sharruhu mus'taṭīran

Kannada ಅವರು ಹರಕೆಯನ್ನು ಪೂರ್ತಿಗೊಳಿಸುತ್ತಾರೆ. ಎಲ್ಲೆಲ್ಲೂ ಸಂಕಷ್ಟಗಳೇ ವ್ಯಾಪಕವಾಗಿರುವ ಒಂದು ದಿನವನ್ನು ಅವರು ಭಯಪಡುತ್ತಾರೆ.

Verse 8

وَيُطْعِمُونَ ٱلطَّعَامَ عَلَىٰ حُبِّهِۦ مِسْكِينًا وَيَتِيمًا وَأَسِيرًا

Transliteration wayuṭ'ʿimūna l-ṭaʿāma ʿalā ḥubbihi mis'kīnan wayatīman wa-asīran

Kannada ಆಹಾರ ತಮಗೆ ಅಗತ್ಯವಿದ್ದೂ ಕೂಡಾ ಅವರು ಅಲ್ಲಾಹನಲ್ಲಿರುವ ಒಲವಿನಿಂದ ಬಡವರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಉಣ ಬಡಿಸುತ್ತಾರೆ.

Verse 9

إِنَّمَا نُطْعِمُكُمْ لِوَجْهِ ٱللَّهِ لَا نُرِيدُ مِنكُمْ جَزَآءً وَلَا شُكُورًا

Transliteration innamā nuṭ'ʿimukum liwajhi l-lahi lā nurīdu minkum jazāan walā shukūran

Kannada ನಾವು ನಿಮಗೆ ಕೇವಲ ಅಲ್ಲಾಹನ ಪ್ರೀತಿಗಾಗಿ (ಅವನ ತೃಪ್ತಿಯನ್ನು ಬಯಸಿ) ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನೋ, ಕೃತಜ್ಞತೆಯನ್ನೋ ಬಯಸುವುದಿಲ್ಲ (ಎಂದವರು ಹೇಳುವರು).

Verse 10

إِنَّا نَخَافُ مِن رَّبِّنَا يَوْمًا عَبُوسًا قَمْطَرِيرًا

Transliteration innā nakhāfu min rabbinā yawman ʿabūsan qamṭarīran

Kannada (ಕಳೆಗುಂದುವ) ಮುಖ ಸುರುಟಿ ಹೋಗುವ, ಅತ್ಯಂತ ಕಾಠಿಣ್ಯದ ಸುದೀರ್ಘ ದಿನವನ್ನು ನಮ್ಮ ಪ್ರಭುವಿನಿಂದ (ಖಂಡಿತ ನಾವು) ಭಯಪಡುತ್ತೇವೆ.

Verse 11

فَوَقَىٰهُمُ ٱللَّهُ شَرَّ ذَٰلِكَ ٱلْيَوْمِ وَلَقَّىٰهُمْ نَضْرَةً وَسُرُورًا

Transliteration fawaqāhumu l-lahu sharra dhālika l-yawmi walaqqāhum naḍratan wasurūran

Kannada ಆದುದರಿಂದ ಅಲ್ಲಾಹನು ಅವರನ್ನು ಆ ದಿನದ ಕೇಡಿನಿಂದ ರಕ್ಷಿಸುವನು ಮತ್ತು ಅವರಿಗೆ ಪ್ರಸನ್ನತೆಯನ್ನೂ ಸಂತೋಷವನ್ನೂ ನೀಡುವನು.

Verse 12

وَجَزَىٰهُم بِمَا صَبَرُوا۟ جَنَّةً وَحَرِيرًا

Transliteration wajazāhum bimā ṣabarū jannatan waḥarīran

Kannada ಅವರು ಸಹಿಸಿದ ಸಹನೆಯ ಪ್ರತಿಫಲವಾಗಿ ಅವರಿಗೆ ಸ್ವರ್ಗೋದ್ಯಾನವನ್ನೂ ರೇಶ್ಮೆಯ ಉಡುಪನ್ನೂ ದಯಪಾಲಿಸುವನು.

Verse 13

مُّتَّكِـِٔينَ فِيهَا عَلَى ٱلْأَرَآئِكِ ۖ لَا يَرَوْنَ فِيهَا شَمْسًا وَلَا زَمْهَرِيرًا

Transliteration muttakiīna fīhā ʿalā l-arāiki lā yarawna fīhā shamsan walā zamharīran

Kannada ಅಲ್ಲಿ ಅವರು ಆರಾಮ ಮಂಚಗಳ ಮೇಲೆ ಒರಗಿ ಸುಖಿಸುವರು. ಅಲ್ಲಿ ಅವರಿಗೆ ಬಿಸಿಲಿನ ಧಗೆಯಾಗಲಿ, ಚಳಿಯ ತೀವ್ರತೆಯಾಗಲಿ ಬಾಧಿಸಲಾರದು.

Verse 14

وَدَانِيَةً عَلَيْهِمْ ظِلَـٰلُهَا وَذُلِّلَتْ قُطُوفُهَا تَذْلِيلًا

Transliteration wadāniyatan ʿalayhim ẓilāluhā wadhullilat quṭūfuhā tadhlīlan

Kannada ಅದರ (ಸ್ವರ್ಗದ ಮರಗಳ) ನೆರಳು ಅವರಿಗೆ ನಿಕಟವಿರುವುದು. ಮತ್ತು ಅದರ ಹಣ್ಣು ಗೊನೆಗಳು (ಯಾವಾಗ ಕೊಯ್ಯಲೂ) ಅವರಿಗೆ ಅನುಕೂಲ ಗೊಳಿಸಲ್ಪಟ್ಟಿರುವುವು.

Verse 15

وَيُطَافُ عَلَيْهِم بِـَٔانِيَةٍ مِّن فِضَّةٍ وَأَكْوَابٍ كَانَتْ قَوَارِيرَا۠

Transliteration wayuṭāfu ʿalayhim biāniyatin min fiḍḍatin wa-akwābin kānat qawārīrā

Kannada ಬೆಳ್ಳಿಯ ಪಾತ್ರೆಗಳನ್ನೂ ನುಣುಪಿನಿಂದ ಸ್ಫಟಿಕ ದಂತಾದ ಬೆಳ್ಳಿಯ ಹೂಜಿಗಳನ್ನೂ ಅವರ ಸುತ್ತ ತರಲಾಗುವುದು.

Verse 16

قَوَارِيرَا۟ مِن فِضَّةٍ قَدَّرُوهَا تَقْدِيرًا

Transliteration qawārīrā min fiḍḍatin qaddarūhā taqdīran

Kannada ಅವು ಬೆಳ್ಳಿಯಿಂದಲೇ ನಿರ್ಮಿತವಾದ ಸ್ಫಟಿಕ ಪಾತ್ರೆಗಳು. ಅವರು (ಸೇವಕರು) ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ನಿರ್ಣಯಿಸಿರುವರು.

Verse 17

وَيُسْقَوْنَ فِيهَا كَأْسًا كَانَ مِزَاجُهَا زَنجَبِيلًا

Transliteration wayus'qawna fīhā kasan kāna mizājuhā zanjabīlan

Kannada ಅಲ್ಲಿ ಅವರಿಗೆ ಸುರೆ ತುಂಬಿದ ಪಾತ್ರೆಗಳಿಂದ ಕುಡಿಸಲಾಗುವುದು. ಅದು ಶುಂಠಿ ಬೆರೆತಿರುವಂತಹ ಮದಿರೆಯಾಗಿರುತ್ತದೆ.

Verse 18

عَيْنًا فِيهَا تُسَمَّىٰ سَلْسَبِيلًا

Transliteration ʿaynan fīhā tusammā salsabīlan

Kannada ಅದು ಸಲ್‍ಸಬೀಲ್ ಎಂಬ ಹೆಸರಿನ ಒಂದು ಚಿಲುಮೆಯಾಗಿದೆ.

Verse 19

۞ وَيَطُوفُ عَلَيْهِمْ وِلْدَٰنٌ مُّخَلَّدُونَ إِذَا رَأَيْتَهُمْ حَسِبْتَهُمْ لُؤْلُؤًا مَّنثُورًا

Transliteration wayaṭūfu ʿalayhim wil'dānun mukhalladūna idhā ra-aytahum ḥasib'tahum lu'lu-an manthūran

Kannada ಅವರ (ಸ್ವರ್ಗವಾಸಿಗಳ) ಮಧ್ಯೆ ಚಿರಕುಮಾರ ರಾದ ಕೆಲವು ಬಾಲಕರು ಸುತ್ತಾಡುತ್ತಿರುವರು. ತಾವು ಅವರನ್ನು ಕಂಡರೆ ಹರಡಿದ ಮುತ್ತುಗಳೆಂದೇ ಭಾವಿಸುವಿರಿ.

Verse 20

وَإِذَا رَأَيْتَ ثَمَّ رَأَيْتَ نَعِيمًا وَمُلْكًا كَبِيرًا

Transliteration wa-idhā ra-ayta thamma ra-ayta naʿīman wamul'kan kabīran

Kannada ಅಲ್ಲಿ ತಾವು ಎತ್ತ ನೋಡಿದರೂ ಅನುಗ್ರಹಗಳನ್ನೂ ಒಂದು ಬೃಹತ್ ಸಾಮ್ರಾಜ್ಯವನ್ನೂ ಕಾಣುವಿರಿ.

Verse 21

عَـٰلِيَهُمْ ثِيَابُ سُندُسٍ خُضْرٌ وَإِسْتَبْرَقٌ ۖ وَحُلُّوٓا۟ أَسَاوِرَ مِن فِضَّةٍ وَسَقَىٰهُمْ رَبُّهُمْ شَرَابًا طَهُورًا

Transliteration ʿāliyahum thiyābu sundusin khuḍ'run wa-is'tabraqun waḥullū asāwira min fiḍḍatin wasaqāhum rabbuhum sharāban ṭahūran

Kannada ಹಸಿರು ಬಣ್ಣದ ತೆಳು ರೇಶ್ಮೆ ಹಾಗೂ ದಪ್ಪ ರೇಷ್ಮೆಯ ಉಡುಪುಗಳು ಅವರ ಮೇಲಿರುವುದು. ಅವರಿಗೆ ಬೆಳ್ಳಿಯ ಬಳೆಗಳನ್ನು ತೊಡಿಸಲಾಗುವುದು ಮತ್ತು ಅವರ ಪ್ರಭು ಅವರಿಗೆ ನಿರ್ಮಲವಾದ ಪಾನೀಯವನ್ನು ಕುಡಿಸುವನು.

Verse 22

إِنَّ هَـٰذَا كَانَ لَكُمْ جَزَآءً وَكَانَ سَعْيُكُم مَّشْكُورًا

Transliteration inna hādhā kāna lakum jazāan wakāna saʿyukum mashkūran

Kannada (ಓ ಪುಣ್ಯವಂತರೇ!) ನಿಮಗಿರುವ ಪ್ರತಿ ಫಲವಿದು, ನಿಮ್ಮ ಪರಿಶ್ರಮವನ್ನು ಕೃತಜ್ಞತಾ ಪೂರ್ವಕ ಸ್ವೀಕರಿಸಲಾಗಿತ್ತು. (ಎಂದು ಅವರೊಂದಿಗೆ ಹೇಳಲಾಗುವುದು.)

Verse 23

إِنَّا نَحْنُ نَزَّلْنَا عَلَيْكَ ٱلْقُرْءَانَ تَنزِيلًا

Transliteration innā naḥnu nazzalnā ʿalayka l-qur'āna tanzīlan

Kannada (ಸಂದೇಶವಾಹಕರೇ,) ನಾವೇ ಈ ಖುರ್‍ಆನನ್ನು ತಮ್ಮ ಮೇಲೆ ಸ್ವಲ್ಪ ಸ್ವಲ್ಪವಾಗಿ ಅವತೀರ್ಣ ಗೊಳಿಸಿದ್ದೇವೆ.

Verse 24

فَٱصْبِرْ لِحُكْمِ رَبِّكَ وَلَا تُطِعْ مِنْهُمْ ءَاثِمًا أَوْ كَفُورًا

Transliteration fa-iṣ'bir liḥuk'mi rabbika walā tuṭiʿ min'hum āthiman aw kafūran

Kannada ಆದುದರಿಂದ ತಾವು ತಮ್ಮ ಪ್ರಭುವಿನ ತೀರ್ಪಿಗಾಗಿ ತಾಳ್ಮೆವಹಿಸಿರಿ. ಅವರ ಪೈಕಿ ಯಾವುದೇ ಪಾಪಿಯನ್ನಾಗಲಿ, ಕೃತಘ್ನನನ್ನಾಗಲಿ ತಾವು ಅನುಸರಿಸಬೇಡಿರಿ.

Verse 25

وَٱذْكُرِ ٱسْمَ رَبِّكَ بُكْرَةً وَأَصِيلًا

Transliteration wa-udh'kuri is'ma rabbika buk'ratan wa-aṣīlan

Kannada ತಾವು ಸಂಜೆ - ಮುಂಜಾನೆಗಳಲ್ಲಿ ತಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ.

Verse 26

وَمِنَ ٱلَّيْلِ فَٱسْجُدْ لَهُۥ وَسَبِّحْهُ لَيْلًا طَوِيلًا

Transliteration wamina al-layli fa-us'jud lahu wasabbiḥ'hu laylan ṭawīlan

Kannada ರಾತ್ರಿಯಲ್ಲಿ (ಸ್ವಲ್ಪ ಸಮಯ) ಅವನಿಗೆ ಸಾಷ್ಟಾಂಗವೆರಗಿರಿ. ರಾತ್ರೆಯ ದೀರ್ಘ ಸಮಯ ಅವನನ್ನು ಪ್ರಕೀರ್ತಿಸಿರಿ.

Verse 27

إِنَّ هَـٰٓؤُلَآءِ يُحِبُّونَ ٱلْعَاجِلَةَ وَيَذَرُونَ وَرَآءَهُمْ يَوْمًا ثَقِيلًا

Transliteration inna hāulāi yuḥibbūna l-ʿājilata wayadharūna warāahum yawman thaqīlan

Kannada ಅವರು ಕ್ಷಣಿಕವಾದ (ಶೀಘ್ರ ಪ್ರಾಪ್ತವಾಗುವ) ಐಹಿಕ ಜೀವನವನ್ನು ಪ್ರೀತಿಸುತ್ತಾರೆ ಮತ್ತು ಭಾರವೇರಿದ ಒಂದು ದಿನವನ್ನು ಅವರು ಉಪೇ ಕ್ಷಿಸುತ್ತಾರೆ.

Verse 28

نَّحْنُ خَلَقْنَـٰهُمْ وَشَدَدْنَآ أَسْرَهُمْ ۖ وَإِذَا شِئْنَا بَدَّلْنَآ أَمْثَـٰلَهُمْ تَبْدِيلًا

Transliteration naḥnu khalaqnāhum washadadnā asrahum wa-idhā shi'nā baddalnā amthālahum tabdīlan

Kannada ನಾವೇ ಅವರನ್ನು ಸೃಷ್ಟಿಸಿರುತ್ತೇವೆ ಮತ್ತು ಅವರ ಶರೀರ ಘಟನೆಯನ್ನು ಬಲಾಢ್ಯಗೊಳಿಸಿದ್ದೇವೆ. ನಾವಿಚ್ಛಿಸಿದರೆ ಅವರಂಥವರನ್ನು ಖಂಡಿತ ಬದಲಿಸಿ ತರಬಲ್ಲೆವು.

Verse 29

إِنَّ هَـٰذِهِۦ تَذْكِرَةٌ ۖ فَمَن شَآءَ ٱتَّخَذَ إِلَىٰ رَبِّهِۦ سَبِيلًا

Transliteration inna hādhihi tadhkiratun faman shāa ittakhadha ilā rabbihi sabīlan

Kannada ಇದೊಂದು ಉದ್ಭೋಧನೆಯಾಗಿದೆ. ಆದುದರಿಂದ ಇಚ್ಛೆಯುಳ್ಳವನು ತನ್ನ ಪ್ರಭುವಿನ ಕಡೆಗೆ ಮಾರ್ಗ ವನ್ನು ಮಾಡಿಕೊಳ್ಳಲಿ.

Verse 30

وَمَا تَشَآءُونَ إِلَّآ أَن يَشَآءَ ٱللَّهُ ۚ إِنَّ ٱللَّهَ كَانَ عَلِيمًا حَكِيمًا

Transliteration wamā tashāūna illā an yashāa l-lahu inna l-laha kāna ʿalīman ḥakīman

Kannada ಅಲ್ಲಾಹನು ಇಚ್ಛಿಸದೆ ನೀವು ಇಚ್ಛಿಸಲಾರಿರಿ. ಖಂಡಿತವಾಗಿಯೂ ಅಲ್ಲಾಹನು ಸರ್ವಜ್ಞನೂ, ಯುಕ್ತಿವಂತನೂ ಆಗಿರುತ್ತಾನೆ.

Verse 31

يُدْخِلُ مَن يَشَآءُ فِى رَحْمَتِهِۦ ۚ وَٱلظَّـٰلِمِينَ أَعَدَّ لَهُمْ عَذَابًا أَلِيمًۢا

Transliteration yud'khilu man yashāu fī raḥmatihi wal-ẓālimīna aʿadda lahum ʿadhāban alīman

Kannada ಅವನು ತಾನಿಚ್ಛಿಸಿದವರನ್ನು ತನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸುತ್ತಾನೆ. ಅಕ್ರಮಿಗಳಿಗಾಗಿ ವೇದ ನಾಜನಕವಾದ ಶಿಕ್ಷೆಯನ್ನು ಅವನು ಸಜ್ಜು ಗೊಳಿಸಿದ್ದಾನೆ.

Read Surah Al-Insan in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.