Surah Al-Hadid in Kannada: translation and audio
Surah 57 · الحديد · The Iron · 29 verses
Surah Al-Hadid verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Hadid word by word in English.
Verse 1
سَبَّحَ لِلَّهِ مَا فِى ٱلسَّمَـٰوَٰتِ وَٱلْأَرْضِ ۖ وَهُوَ ٱلْعَزِيزُ ٱلْحَكِيمُ
Transliteration sabbaḥa lillahi mā fī l-samāwāti wal-arḍi wahuwa l-ʿazīzu l-ḥakīmu
Kannada ಆಕಾಶ-ಭೂಮಿಗಳಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾ ಡಿವೆ. ಅವನು ಪರಮ ಪ್ರತಾಪಿಯೂ, ಪರಮ ಯುಕ್ತಿವಂತನೂ ಆಗಿರುತ್ತಾನೆ.
Verse 2
لَهُۥ مُلْكُ ٱلسَّمَـٰوَٰتِ وَٱلْأَرْضِ ۖ يُحْىِۦ وَيُمِيتُ ۖ وَهُوَ عَلَىٰ كُلِّ شَىْءٍ قَدِيرٌ
Transliteration lahu mul'ku l-samāwāti wal-arḍi yuḥ'yī wayumītu wahuwa ʿalā kulli shayin qadīrun
Kannada ಭೂಮಿ-ಆಕಾಶಗಳ ಆಧಿಪತ್ಯವು ಆತನಿಗೇ ಇದೆ. ಜೀವಂತಗೊಳಿಸುವವನೂ ಮರಣಗೊಳಿಸುವ ವನೂ ಅವನೇ. ಅವನು ಎಲ್ಲದರ ಮೇಲೆ ಸಾಮಥ್ರ್ಯವುಳ್ಳವನಾಗಿರುತ್ತಾನೆ.
Verse 3
هُوَ ٱلْأَوَّلُ وَٱلْـَٔاخِرُ وَٱلظَّـٰهِرُ وَٱلْبَاطِنُ ۖ وَهُوَ بِكُلِّ شَىْءٍ عَلِيمٌ
Transliteration huwa l-awalu wal-ākhiru wal-ẓāhiru wal-bāṭinu wahuwa bikulli shayin ʿalīmun
Kannada ಆದ್ಯನೂ ಅಂತ್ಯನೂ ಪ್ರತ್ಯಕ್ಷನೂ ಪರೋಕ್ಷನೂ ಅವನೇ. ಅವನು ಸಕಲ ವಿಷಯಗಳ ಕುರಿತು ಜ್ಞಾನವುಳ್ಳವನಾಗಿರುವನು.
Verse 4
هُوَ ٱلَّذِى خَلَقَ ٱلسَّمَـٰوَٰتِ وَٱلْأَرْضَ فِى سِتَّةِ أَيَّامٍ ثُمَّ ٱسْتَوَىٰ عَلَى ٱلْعَرْشِ ۚ يَعْلَمُ مَا يَلِجُ فِى ٱلْأَرْضِ وَمَا يَخْرُجُ مِنْهَا وَمَا يَنزِلُ مِنَ ٱلسَّمَآءِ وَمَا يَعْرُجُ فِيهَا ۖ وَهُوَ مَعَكُمْ أَيْنَ مَا كُنتُمْ ۚ وَٱللَّهُ بِمَا تَعْمَلُونَ بَصِيرٌ
Transliteration huwa alladhī khalaqa l-samāwāti wal-arḍa fī sittati ayyāmin thumma is'tawā ʿalā l-ʿarshi yaʿlamu mā yaliju fī l-arḍi wamā yakhruju min'hā wamā yanzilu mina l-samāi wamā yaʿruju fīhā wahuwa maʿakum ayna mā kuntum wal-lahu bimā taʿmalūna baṣīrun
Kannada ಅವನೇ ಭೂಮಿ-ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ಅನಂತರ ಅವನು ಅರ್ಶ್ನ ಮೇಲೆ ಇಸ್ತಿವಾ ಹೊಂದಿದನು. ಭೂಮಿಯೊಳಗೆ ಪ್ರವೇಶಿಸುವ ಹಾಗೂ ಅದರಿಂದ ಹೊರಬರುವ ಮತ್ತು ಆಕಾಶದಿಂದ ಇಳಿಯುವ ಮತ್ತು ಅದಕ್ಕೆ ಏರಿಹೋಗುವ ಎಲ್ಲವನ್ನೂ ಅವನು ತಿಳಿಯುವನು. ನೀವೆಲ್ಲಿದ್ದರೂ ಅವನು ನಿಮ್ಮ ಜೊತೆಗಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅಲ್ಲಾಹು ನೋಡುವವನಾಗಿದ್ದಾನೆ.
Verse 5
لَّهُۥ مُلْكُ ٱلسَّمَـٰوَٰتِ وَٱلْأَرْضِ ۚ وَإِلَى ٱللَّهِ تُرْجَعُ ٱلْأُمُورُ
Transliteration lahu mul'ku l-samāwāti wal-arḍi wa-ilā l-lahi tur'jaʿu l-umūru
Kannada ಆಕಾಶ-ಭೂಮಿಗಳ ಅಧಿಪತ್ಯ ಅವನಿಗೆ ಇರುವುದಾಗಿದೆ ಮತ್ತು ಕಾರ್ಯಗಳು ಅವನ ಕಡೆಗೆ ಮರಳಿಸಲ್ಪಡುತ್ತವೆ.
Verse 6
يُولِجُ ٱلَّيْلَ فِى ٱلنَّهَارِ وَيُولِجُ ٱلنَّهَارَ فِى ٱلَّيْلِ ۚ وَهُوَ عَلِيمٌۢ بِذَاتِ ٱلصُّدُورِ
Transliteration yūliju al-layla fī l-nahāri wayūliju l-nahāra fī al-layli wahuwa ʿalīmun bidhāti l-ṣudūri
Kannada ಅವನು ರಾತ್ರೆಯನ್ನು ಹಗಲಿನೊಳಗೂ ಹಗಲನ್ನು ರಾತ್ರೆಯೊಳಗೂ ಪ್ರವೇಶಗೊಳಿಸುತ್ತಾನೆ. ಹೃದಯಗಳ ರಹಸ್ಯಗಳನ್ನೂ ಅವನು ಬಲ್ಲನು.
Verse 7
ءَامِنُوا۟ بِٱللَّهِ وَرَسُولِهِۦ وَأَنفِقُوا۟ مِمَّا جَعَلَكُم مُّسْتَخْلَفِينَ فِيهِ ۖ فَٱلَّذِينَ ءَامَنُوا۟ مِنكُمْ وَأَنفَقُوا۟ لَهُمْ أَجْرٌ كَبِيرٌ
Transliteration āminū bil-lahi warasūlihi wa-anfiqū mimmā jaʿalakum mus'takhlafīna fīhi fa-alladhīna āmanū minkum wa-anfaqū lahum ajrun kabīrun
Kannada (ಮನುಷ್ಯರೇ) ನೀವು ಅಲ್ಲಾಹ್ ಮತ್ತು ಅವನ ದೂತರ ಮೇಲೆ ವಿಶ್ವಾಸವಿರಿಸಿರಿ. ಅವನು ಯಾವ ಸೊತ್ತುಗಳ ಮೇಲೆ ನಿಮ್ಮನ್ನು ವಾರೀಸುದಾರ ರಾಗಿ ಮಾಡಿರುವನೋ ಅವುಗಳಿಂದ ನೀವು ಖರ್ಚು ಮಾಡಿರಿ. ನಿಮ್ಮ ಪೈಕಿ ಸತ್ಯವಿಶ್ವಾಸವಿರಿ ಸುವ ಮತ್ತು ಸಂಪತ್ತನ್ನು ಖರ್ಚು ಮಾಡುವ ಜನರಿಗೆ ಮಹಾ ಪ್ರತಿಫಲವಿದೆ.
Verse 8
وَمَا لَكُمْ لَا تُؤْمِنُونَ بِٱللَّهِ ۙ وَٱلرَّسُولُ يَدْعُوكُمْ لِتُؤْمِنُوا۟ بِرَبِّكُمْ وَقَدْ أَخَذَ مِيثَـٰقَكُمْ إِن كُنتُم مُّؤْمِنِينَ
Transliteration wamā lakum lā tu'minūna bil-lahi wal-rasūlu yadʿūkum litu'minū birabbikum waqad akhadha mīthāqakum in kuntum mu'minīna
Kannada ಈ ದೂತರು ನಿಮಗೆ ನಿಮ್ಮ ಒಡೆಯನ ಮೇಲೆ ವಿಶ್ವಾಸವಿರಿಸಲು ಕರೆ ನೀಡುತ್ತಿದ್ದರೂ ನೀವು ಅಲ್ಲಾಹನ ಮೇಲೆ ವಿಶ್ವಾಸವಿರಿಸದಿರಲು ನಿಮಗೇ ನು ನ್ಯಾಯವಿದೆ? ನೀವು ಸತ್ಯವಿಶ್ವಾಸವನ್ನು ಬಯಸುವಿರಾದರೆ ಅವನು ಖಂಡಿತ ನಿಮ್ಮಿಂದ ಕರಾರು ಪಡೆದಿರುತ್ತಾನೆ.
Verse 9
هُوَ ٱلَّذِى يُنَزِّلُ عَلَىٰ عَبْدِهِۦٓ ءَايَـٰتٍۭ بَيِّنَـٰتٍ لِّيُخْرِجَكُم مِّنَ ٱلظُّلُمَـٰتِ إِلَى ٱلنُّورِ ۚ وَإِنَّ ٱللَّهَ بِكُمْ لَرَءُوفٌ رَّحِيمٌ
Transliteration huwa alladhī yunazzilu ʿalā ʿabdihi āyātin bayyinātin liyukh'rijakum mina l-ẓulumāti ilā l-nūri wa-inna l-laha bikum laraūfun raḥīmun
Kannada ನಿಮ್ಮನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ತರಲಿಕ್ಕಾಗಿ ತನ್ನ ದಾಸನ ಮೇಲೆ ಸುಸ್ಪಷ್ಟ ದೃಷ್ಟಾಂ ತಗಳನ್ನು ಅವತೀರ್ಣಗೊಳಿಸುತ್ತಿರುವವನು ಅವನೇ. ನಿಜವಾಗಿಯೂ ಅಲ್ಲಾಹನು ನಿಮ್ಮೊಂ ದಿಗೆ ಬಹಳ ಕೃಪೆ ತೋರುವವನೂ ಕರುಣಾಮಯಿಯೂ ಆಗಿರುತ್ತಾನೆ.
Verse 10
وَمَا لَكُمْ أَلَّا تُنفِقُوا۟ فِى سَبِيلِ ٱللَّهِ وَلِلَّهِ مِيرَٰثُ ٱلسَّمَـٰوَٰتِ وَٱلْأَرْضِ ۚ لَا يَسْتَوِى مِنكُم مَّنْ أَنفَقَ مِن قَبْلِ ٱلْفَتْحِ وَقَـٰتَلَ ۚ أُو۟لَـٰٓئِكَ أَعْظَمُ دَرَجَةً مِّنَ ٱلَّذِينَ أَنفَقُوا۟ مِنۢ بَعْدُ وَقَـٰتَلُوا۟ ۚ وَكُلًّا وَعَدَ ٱللَّهُ ٱلْحُسْنَىٰ ۚ وَٱللَّهُ بِمَا تَعْمَلُونَ خَبِيرٌ
Transliteration wamā lakum allā tunfiqū fī sabīli l-lahi walillahi mīrāthu l-samāwāti wal-arḍi lā yastawī minkum man anfaqa min qabli l-fatḥi waqātala ulāika aʿẓamu darajatan mina alladhīna anfaqū min baʿdu waqātalū wakullan waʿada l-lahu l-ḥus'nā wal-lahu bimā taʿmalūna khabīrun
Kannada ಆಕಾಶಗಳ ಹಾಗೂ ಭೂಮಿಯ ಉತ್ತರಾಧಿಕಾರವು ಅಲ್ಲಾಹನದ್ದಾಗಿರುವಾಗ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡದಿರಲು ನಿಮಗೇನು ನ್ಯಾಯವಿದೆ? ನಿಮ್ಮ ಪೈಕಿ (ಮಕ್ಕಾ) ವಿಜಯಪ್ರಾಪ್ತಿಯ ಮೊದಲಿನಿಂದ ಖರ್ಚು ಮಾಡಿದ ಮತ್ತು ಹೋರಾಟ ನಡೆಸಿದ ಜನರು (ಹಾಗೆ ಮಾಡದವರಿಗೆ) ಸಮಾನರಲ್ಲ. ಅವರು ಅನಂತರ ಖರ್ಚು ಮಾಡಿದ ಹಾಗೂ ಹೋರಾಟ ನಡೆಸಿದವರಿಗಿಂತ ಮಹತ್ತಾದ ಪದವಿ ಉಳ್ಳವರಾಗಿದ್ದಾರೆ. ಅದಾಗ್ಯೂ ಅಲ್ಲಾಹನು ಉಭಯತ್ರರಿಗೂ ಅತ್ಯಂತ ಉತ್ತಮ ಪ್ರತಿಫಲದ ವಾಗ್ದಾನ ಮಾಡಿರುವನು. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲವನಾಗಿದ್ದಾನೆ.
Verse 11
مَّن ذَا ٱلَّذِى يُقْرِضُ ٱللَّهَ قَرْضًا حَسَنًا فَيُضَـٰعِفَهُۥ لَهُۥ وَلَهُۥٓ أَجْرٌ كَرِيمٌ
Transliteration man dhā alladhī yuq'riḍu l-laha qarḍan ḥasanan fayuḍāʿifahu lahu walahu ajrun karīmun
Kannada ಅಲ್ಲಾಹನಿಗೆ ಶ್ರೇಷ್ಠ ಸಾಲ ಕೊಡುವವನಾರಿದ್ದಾನೆ? ಅಲ್ಲಾಹು ಅವನಿಗೆ ಅದನ್ನು ಇಮ್ಮಡಿಗೊಳಿಸಿ ಹೆಚ್ಚಿಸಿ ಕೊಡುವನು ಮತ್ತು ಅವನಿಗೆ ಅತ್ಯುತ್ತಮ ಪ್ರತಿಫಲವಿದೆ .
Verse 12
يَوْمَ تَرَى ٱلْمُؤْمِنِينَ وَٱلْمُؤْمِنَـٰتِ يَسْعَىٰ نُورُهُم بَيْنَ أَيْدِيهِمْ وَبِأَيْمَـٰنِهِم بُشْرَىٰكُمُ ٱلْيَوْمَ جَنَّـٰتٌ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا ۚ ذَٰلِكَ هُوَ ٱلْفَوْزُ ٱلْعَظِيمُ
Transliteration yawma tarā l-mu'minīna wal-mu'mināti yasʿā nūruhum bayna aydīhim wabi-aymānihim bush'rākumu l-yawma jannātun tajrī min taḥtihā l-anhāru khālidīna fīhā dhālika huwa l-fawzu l-ʿaẓīmu
Kannada ಸತ್ಯವಿಶ್ವಾಸಿಗಳನ್ನೂ ಸತ್ಯವಿಶ್ವಾಸಿನಿಯರನ್ನೂ ಅವರ ಪ್ರಕಾಶವು ಅವರ ಮುಂದೆಯೂ ಅವರ ಬಲ ಭಾಗದಲ್ಲೂ ಸಾಗುತ್ತಿರುವುದನ್ನು ತಾವು ದರ್ಶಿಸುವ ದಿನ! (ಅಂದು ಅವರಲ್ಲಿ ಹೇಳಲಾಗುವುದು;) ಇಂದು ನಿಮಗೆ ಶುಭವಾರ್ತೆ ಎಂದರೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿದ್ದು ಅವುಗಳಲ್ಲಿ ನೀವು ಸ್ಥಿರವಾಸಿಗಳಾಗಿರುವಿರಿ. ಇದುವೇ ಮಹಾ ಯಶಸ್ಸು.
Verse 13
يَوْمَ يَقُولُ ٱلْمُنَـٰفِقُونَ وَٱلْمُنَـٰفِقَـٰتُ لِلَّذِينَ ءَامَنُوا۟ ٱنظُرُونَا نَقْتَبِسْ مِن نُّورِكُمْ قِيلَ ٱرْجِعُوا۟ وَرَآءَكُمْ فَٱلْتَمِسُوا۟ نُورًا فَضُرِبَ بَيْنَهُم بِسُورٍ لَّهُۥ بَابٌۢ بَاطِنُهُۥ فِيهِ ٱلرَّحْمَةُ وَظَـٰهِرُهُۥ مِن قِبَلِهِ ٱلْعَذَابُ
Transliteration yawma yaqūlu l-munāfiqūna wal-munāfiqātu lilladhīna āmanū unẓurūnā naqtabis min nūrikum qīla ir'jiʿū warāakum fal-tamisū nūran faḍuriba baynahum bisūrin lahu bābun bāṭinuhu fīhi l-raḥmatu waẓāhiruhu min qibalihi l-ʿadhābu
Kannada ಕಪಟವಿಶ್ವಾಸಿ ಪುರುಷರು ಮತ್ತು ಕಪಟ ವಿಶ್ವಾಸಿನಿ ಸ್ತ್ರೀಯರು ಸತ್ಯವಿಶ್ವಾಸಿಗಳೊಡನೆ ಈ ರೀತಿ ಹೇಳುವ ದಿನ; ನಮ್ಮನ್ನು ನೋಡಿರಿ. ನಾವು ನಿಮ್ಮ ಪ್ರಕಾಶದಿಂದ ಒಂದಿಷ್ಟು ಹಿಡಿದು ತೆಗೆಯಲೆ?’ (ಆಗ) ಅವರೊಂದಿಗೆ ಹೇಳಲ್ಪಡುವುದು; ನೀವು ನಿಮ್ಮ ಹಿಂಭಾಗಕ್ಕೆ ಮರಳಿ ಪ್ರಕಾ ಶವನ್ನು ಹುಡುಕಿ ಪಡೆದುಕೊಳ್ಳಿರಿ! ಆಗ ಆ ಎರಡು ವಿಭಾಗದವರ ನಡುವೆ ಒಂದು ಅಡ್ಡ ಗೋಡೆಯನ್ನು ನಿರ್ಮಿಸಲಾಗುವುದು. ಅದರಲ್ಲಿ ಒಂದು ಬಾಗಿಲಿರುವುದು. ಆ ಬಾಗಿಲಿನ ಒಳಗೆ ಕರುಣೆಯೂ (ಸ್ವರ್ಗ) ಹೊರಗೆ ಅವನ ಕಡೆಯಿಂದ ಯಾತನೆಯೂ (ನರಕ) ಇರುವುದು.
Verse 14
يُنَادُونَهُمْ أَلَمْ نَكُن مَّعَكُمْ ۖ قَالُوا۟ بَلَىٰ وَلَـٰكِنَّكُمْ فَتَنتُمْ أَنفُسَكُمْ وَتَرَبَّصْتُمْ وَٱرْتَبْتُمْ وَغَرَّتْكُمُ ٱلْأَمَانِىُّ حَتَّىٰ جَآءَ أَمْرُ ٱللَّهِ وَغَرَّكُم بِٱللَّهِ ٱلْغَرُورُ
Transliteration yunādūnahum alam nakun maʿakum qālū balā walākinnakum fatantum anfusakum watarabbaṣtum wa-ir'tabtum wagharratkumu l-amāniyu ḥattā jāa amru l-lahi wagharrakum bil-lahi l-gharūru
Kannada ಅವರು (ಸತ್ಯವಿಶ್ವಾಸಿಗಳನ್ನು) ಕೂಗಿ ಕರೆಯುತ್ತ, ನಾವು (ಇಹಲೋಕದಲ್ಲಿ) ನಿಮ್ಮ ಜೊತೆಗಿರಲಿ ಲ್ಲವೇ? ಎಂದು ಕೇಳುವರು. ಆಗ ಸತ್ಯವಿಶ್ವಾಸಿ ಗಳು ಹೌದು, ಆದರೆ ಸ್ವತಃ ನೀವೇ ನಿಮ್ಮನ್ನು ಕ್ಷೋಭೆಗೆ ಒಡ್ಡಿದಿರಿ. (ಮುಸ್ಲಿಮರಿಗೆ) ಕೆಟ್ಟ ಸಂದ ರ್ಭಗಳನ್ನು ನಿರೀಕ್ಷಿಸಿದಿರಿ. (ಧರ್ಮದಲ್ಲಿ) ಸಂಶ ಯಗ್ರಸ್ತರಾದಿರಿ ಮತ್ತು ಅಲ್ಲಾಹನ ಆದೇಶ (ಮರಣ) ಬಂದು ತಲುಪುವ ತನಕ ವ್ಯಾಮೋಹಗಳು ನಿಮ್ಮನ್ನು ಮೋಸಗೊಳಿಸಿದವು, ಮತ್ತು ಅಲ್ಲಾಹನ ಕುರಿತು ಮಹಾವಂಚಕ ಪಿಶಾಚಿ ನಿಮ್ಮನ್ನು ವಂಚಿಸಿ ಬಿಟ್ಟನು.
Verse 15
فَٱلْيَوْمَ لَا يُؤْخَذُ مِنكُمْ فِدْيَةٌ وَلَا مِنَ ٱلَّذِينَ كَفَرُوا۟ ۚ مَأْوَىٰكُمُ ٱلنَّارُ ۖ هِىَ مَوْلَىٰكُمْ ۖ وَبِئْسَ ٱلْمَصِيرُ
Transliteration fal-yawma lā yu'khadhu minkum fid'yatun walā mina alladhīna kafarū mawākumu l-nāru hiya mawlākum wabi'sa l-maṣīru
Kannada ಆದುದರಿಂದ ಇಂದು ನಿಮ್ಮಿಂದಾಗಲಿ, ಸತ್ಯ ನಿಷೇಧಿಗಳಿಂದಾಗಲಿ ಯಾವ ಪ್ರಾಯಶ್ಚಿತ್ತವನ್ನೂ ಸ್ವೀಕರಿಸಲಾಗದು. ನರಕವು ನಿಮ್ಮ ನಿವಾಸವಾಗಿದೆ. ಅದೇ ನಿಮಗೆ ಅತ್ಯಂತ ಯೋಗ್ಯವಾದ ಅಭಯ ಸ್ಥಾನ ಮತ್ತು ಅತ್ಯಂತ ಕೆಟ್ಟ ಸಂಕೇತ.
Verse 16
۞ أَلَمْ يَأْنِ لِلَّذِينَ ءَامَنُوٓا۟ أَن تَخْشَعَ قُلُوبُهُمْ لِذِكْرِ ٱللَّهِ وَمَا نَزَلَ مِنَ ٱلْحَقِّ وَلَا يَكُونُوا۟ كَٱلَّذِينَ أُوتُوا۟ ٱلْكِتَـٰبَ مِن قَبْلُ فَطَالَ عَلَيْهِمُ ٱلْأَمَدُ فَقَسَتْ قُلُوبُهُمْ ۖ وَكَثِيرٌ مِّنْهُمْ فَـٰسِقُونَ
Transliteration alam yani lilladhīna āmanū an takhshaʿa qulūbuhum lidhik'ri l-lahi wamā nazala mina l-ḥaqi walā yakūnū ka-alladhīna ūtū l-kitāba min qablu faṭāla ʿalayhimu l-amadu faqasat qulūbuhum wakathīrun min'hum fāsiqūna
Kannada ಸತ್ಯವಿಶ್ವಾಸಿಗಳಿಗೆ, ಅವರ ಹೃದಯವು ಅಲ್ಲಾಹನ ಸ್ಮರಣೆಯ ಕಡೆಗೆ ಹಾಗೂ ಅವನಿಂದ ಅವತೀ ರ್ಣಗೊಂಡ ಸತ್ಯದ (ಖುರ್ಆನಿನ) ಕಡೆಗೆ ಮಣಿಯಲು ಮತ್ತು ಅವರು ಈ ಹಿಂದೆ ಗ್ರಂಥ ನೀಡಲ್ಪಟ್ಟವರಂತೆ ಆಗದಿರಲು ಕಾಲ ವಿನ್ನೂ ಕೂಡಿ ಬಂದಿಲ್ಲವೇ? ಕೊನೆಗೆ ಆ ವೇದದವರಿಗೆ ಒಂದು ದೀರ್ಘಕಾಲ ಕಳೆದು ಹೋಯಿತು. ಹೀಗಾಗಿ ಅವರ ಹೃದಯಗಳು ಕಠಿಣವಾದುವು ಮತ್ತು (ಇಂದು) ಅವರಲ್ಲಿ ಹೆಚ್ಚಿನವರು ಧಿಕ್ಕಾರಿ ಗಳಾಗಿರುವರು.
Verse 17
ٱعْلَمُوٓا۟ أَنَّ ٱللَّهَ يُحْىِ ٱلْأَرْضَ بَعْدَ مَوْتِهَا ۚ قَدْ بَيَّنَّا لَكُمُ ٱلْـَٔايَـٰتِ لَعَلَّكُمْ تَعْقِلُونَ
Transliteration iʿ'lamū anna l-laha yuḥ'yī l-arḍa baʿda mawtihā qad bayyannā lakumu l-āyāti laʿallakum taʿqilūna
Kannada ಚೆನ್ನಾಗಿ ತಿಳಿದುಕೊಳ್ಳಿರಿ. ಅಲ್ಲಾಹನು ಭೂಮಿಯನ್ನು, ಅದು ಸತ್ತ ಬಳಿಕ ಜೀವಂತಗೊಳಿಸುತ್ತಾನೆ. ನೀವು ವಿವೇಚಿಸುವಂತಾಗಲು ನಾವು ನಿಮಗೆ ನಿದರ್ಶನಗಳನ್ನು ವಿವರಿಸಿ ಕೊಟ್ಟಿದ್ದೇವೆ.
Verse 18
إِنَّ ٱلْمُصَّدِّقِينَ وَٱلْمُصَّدِّقَـٰتِ وَأَقْرَضُوا۟ ٱللَّهَ قَرْضًا حَسَنًا يُضَـٰعَفُ لَهُمْ وَلَهُمْ أَجْرٌ كَرِيمٌ
Transliteration inna l-muṣadiqīna wal-muṣadiqāti wa-aqraḍū l-laha qarḍan ḥasanan yuḍāʿafu lahum walahum ajrun karīmun
Kannada ದಾನಿಗಳಾದ ಪುರುಷರಿಗೂ, ದಾನಿಗಳಾದ ಸ್ತ್ರೀ ಯರಿಗೂ ಮತ್ತು ಅಲ್ಲಾಹನಿಗೆ ಶ್ರೇಷ್ಠ ಸಾಲವನ್ನು ನೀಡಿದವರಿಗೆ ಖಂಡಿತವಾಗಿಯೂ (ಪ್ರತಿಫಲ ವನ್ನು) ಇಮ್ಮಡಿಯಾಗಿ ಕೊಡಲಾಗುವುದು. ಅವರಿಗೆ ಮಾನ್ಯವಾದ ಪ್ರತಿಫಲವಿದೆ.
Verse 19
وَٱلَّذِينَ ءَامَنُوا۟ بِٱللَّهِ وَرُسُلِهِۦٓ أُو۟لَـٰٓئِكَ هُمُ ٱلصِّدِّيقُونَ ۖ وَٱلشُّهَدَآءُ عِندَ رَبِّهِمْ لَهُمْ أَجْرُهُمْ وَنُورُهُمْ ۖ وَٱلَّذِينَ كَفَرُوا۟ وَكَذَّبُوا۟ بِـَٔايَـٰتِنَآ أُو۟لَـٰٓئِكَ أَصْحَـٰبُ ٱلْجَحِيمِ
Transliteration wa-alladhīna āmanū bil-lahi warusulihi ulāika humu l-ṣidīqūna wal-shuhadāu ʿinda rabbihim lahum ajruhum wanūruhum wa-alladhīna kafarū wakadhabū biāyātinā ulāika aṣḥābu l-jaḥīmi
Kannada ಅಲ್ಲಾಹು ಮತ್ತು ಅವನ ದೂತರ ಮೇಲೆ ವಿಶ್ವಾಸ ವಿರಿಸಿದವರ್ಯಾರೋ ಅವರೇ ತಮ್ಮ ಪ್ರಭುವಿನ ಬಳಿ ಸಿದ್ದೀಖ್ಗಳು (ಸತ್ಯಸಂಧರು) ಮತ್ತು ಶಹೀದ್ (ಸತ್ಯಸಾಕ್ಷಿ)ಗಳಾಗಿರುತ್ತಾರೆ. ಅವರಿಗೆ ಅವರ ಪ್ರತಿಫಲವೂ ಅವರ ಪ್ರಕಾಶವೂ ಇದೆ. ಸತ್ಯನಿಷೇಧಿಗಳು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರು ನರಕದವರಾಗಿದ್ದಾರೆ.
Verse 20
ٱعْلَمُوٓا۟ أَنَّمَا ٱلْحَيَوٰةُ ٱلدُّنْيَا لَعِبٌ وَلَهْوٌ وَزِينَةٌ وَتَفَاخُرٌۢ بَيْنَكُمْ وَتَكَاثُرٌ فِى ٱلْأَمْوَٰلِ وَٱلْأَوْلَـٰدِ ۖ كَمَثَلِ غَيْثٍ أَعْجَبَ ٱلْكُفَّارَ نَبَاتُهُۥ ثُمَّ يَهِيجُ فَتَرَىٰهُ مُصْفَرًّا ثُمَّ يَكُونُ حُطَـٰمًا ۖ وَفِى ٱلْـَٔاخِرَةِ عَذَابٌ شَدِيدٌ وَمَغْفِرَةٌ مِّنَ ٱللَّهِ وَرِضْوَٰنٌ ۚ وَمَا ٱلْحَيَوٰةُ ٱلدُّنْيَآ إِلَّا مَتَـٰعُ ٱلْغُرُورِ
Transliteration iʿ'lamū annamā l-ḥayatu l-dun'yā laʿibun walahwun wazīnatun watafākhurun baynakum watakāthurun fī l-amwāli wal-awlādi kamathali ghaythin aʿjaba l-kufāra nabātuhu thumma yahīju fatarāhu muṣ'farran thumma yakūnu ḥuṭāman wafī l-ākhirati ʿadhābun shadīdun wamaghfiratun mina l-lahi wariḍ'wānun wamā l-ḥayatu l-dun'yā illā matāʿu l-ghurūri
Kannada ತಿಳಿಯಿರಿ! ಐಹಿಕ ಜೀವನವು ಕೇವಲ ಒಂದು ಆಟ, ವಿನೋದ, ಅಲಂಕಾರ ಮತ್ತು ನೀವು ಪರಸ್ಪರ ಹೆಗ್ಗಳಿಕೆ ತೋರಿಸಿಕೊಳ್ಳುವ ಪ್ರಯತ್ನ ಮತ್ತು ಸಂಪತ್ತು ಹಾಗೂ ಸಂತಾನಗಳಲ್ಲಿ ಪರಸ್ಪರ ಪೈಪೋಟಿ ಮಾತ್ರವಲ್ಲದೆ ಇನ್ನೇನೂ ಅಲ್ಲ. ಅದರ ಉಪಮೆ; ಒಂದು ಮಳೆಯಂತೆ. ಅದರಿಂದಾಗಿ ಹುಟ್ಟುವ ಸಸ್ಯಗಳು ಕೃಷಿಕರನ್ನು ಅದ್ಭುತಗೊಳಿ ಸಿತು. ತರುವಾಯ ಅದು (ಬೆಳೆಯು) ಬಲಿತಾಗ ಅದು ಹಳದಿಯಾಗಿ ಬಿಟ್ಟದ್ದನ್ನು ನೀವು ಕಾಣುತ್ತೀರಿ. ಅನಂತರ ಅದು ದ್ರವಿಸಿ ಹೊಟ್ಟಾಗಿ ಬಿಡುತ್ತದೆ. ಪರಲೋಕದಲ್ಲಿ (ಇಹಕ್ಕೆ ಪರಕ್ಕಿಂತ ಆದ್ಯತೆ ಕೊಟ್ಟವರಿಗೆ) ಕಠಿಣ ಶಿಕ್ಷೆ ಇದೆ. (ಪರಕ್ಕೆ ಇಹಕ್ಕಿಂತ ಆದ್ಯತೆ ನೀಡಿದವರಿಗೆ) ಅಲ್ಲಾಹನ ಕ್ಷಮೆ ಹಾಗೂ ಸಂಪ್ರೀತಿ ಇದೆ. ಲೌಕಿಕ ಜೀವನವು ಒಂದು ವಂಚನೆಯ ಸರಕಲ್ಲದೆ ಮತ್ತೇನೂ ಅಲ್ಲ.
Verse 21
سَابِقُوٓا۟ إِلَىٰ مَغْفِرَةٍ مِّن رَّبِّكُمْ وَجَنَّةٍ عَرْضُهَا كَعَرْضِ ٱلسَّمَآءِ وَٱلْأَرْضِ أُعِدَّتْ لِلَّذِينَ ءَامَنُوا۟ بِٱللَّهِ وَرُسُلِهِۦ ۚ ذَٰلِكَ فَضْلُ ٱللَّهِ يُؤْتِيهِ مَن يَشَآءُ ۚ وَٱللَّهُ ذُو ٱلْفَضْلِ ٱلْعَظِيمِ
Transliteration sābiqū ilā maghfiratin min rabbikum wajannatin ʿarḍuhā kaʿarḍi l-samāi wal-arḍi uʿiddat lilladhīna āmanū bil-lahi warusulihi dhālika faḍlu l-lahi yu'tīhi man yashāu wal-lahu dhū l-faḍli l-ʿaẓīmi
Kannada ನಿಮ್ಮ ಪ್ರಭುವಿನ ಕ್ಷಮೆ ಹಾಗೂ ಭೂಮಿ-ಆಕಾಶ ಗಳಷ್ಟು ವಿಶಾಲವಾಗಿರುವ ಸ್ವರ್ಗದ ಕಡೆಗೆ ನೀವು ಧಾವಿಸಿ ಬನ್ನಿರಿ. ಅದನ್ನು ಅಲ್ಲಾಹು ಮತ್ತು ಅವನ ದೂತರುಗಳ ಮೇಲೆ ವಿಶ್ವಾಸವಿರಿಸಿದವರಿಗಾಗಿ ಸಿದ್ಧಗೊಳಿಸಲಾಗಿದೆ. ಅದು ಅಲ್ಲಾಹನ ಔದಾ ರ್ಯವಾಗಿದೆ. ಅವನದನ್ನು ತಾನಿಚ್ಛಿಸಿದವರಿಗೆ ನೀಡುತ್ತಾನೆ. ಅಲ್ಲಾಹು ಮಹಾ ಔದಾರ್ಯಶಾಲಿ ಆಗಿದ್ದಾನೆ.
Verse 22
مَآ أَصَابَ مِن مُّصِيبَةٍ فِى ٱلْأَرْضِ وَلَا فِىٓ أَنفُسِكُمْ إِلَّا فِى كِتَـٰبٍ مِّن قَبْلِ أَن نَّبْرَأَهَآ ۚ إِنَّ ذَٰلِكَ عَلَى ٱللَّهِ يَسِيرٌ
Transliteration mā aṣāba min muṣībatin fī l-arḍi walā fī anfusikum illā fī kitābin min qabli an nabra-ahā inna dhālika ʿalā l-lahi yasīrun
Kannada ಭೂಮಿಯಲ್ಲಿ ಮತ್ತು ನಿಮ್ಮ ದೇಹಗಳಲ್ಲಿ ತಟ್ಟುವ ಯಾವ ಸಂಕಷ್ಟವೂ ನಾವು ಅದನ್ನು ಸೃಷ್ಟಿಸುವುದಕ್ಕೆ ಮುಂಚೆ ಒಂದು ಗ್ರಂಥದಲ್ಲಿ (ಲೌಹುಲ್ ಮಹ್ಫೂಳ್ನಲ್ಲಿ) ಬರೆದಿಟ್ಟುಕೊಳ್ಳದೆ ಇಲ್ಲ. ಖಂಡಿತವಾಗಿಯೂ ಹೀಗೆ ಮಾಡುವುದು ಅಲ್ಲಾಹನಿಗೆ ಅತ್ಯಂತ ಸುಲಭ ಕಾರ್ಯವಾಗಿದೆ.
Verse 23
لِّكَيْلَا تَأْسَوْا۟ عَلَىٰ مَا فَاتَكُمْ وَلَا تَفْرَحُوا۟ بِمَآ ءَاتَىٰكُمْ ۗ وَٱللَّهُ لَا يُحِبُّ كُلَّ مُخْتَالٍ فَخُورٍ
Transliteration likaylā tasaw ʿalā mā fātakum walā tafraḥū bimā ātākum wal-lahu lā yuḥibbu kulla mukh'tālin fakhūrin
Kannada (ನಿಮಗಿದನ್ನು ನೆನಪಿಸಿದ್ದು) ನಿಮಗುಂಟಾಗುವ ಯಾವುದೇ ನಷ್ಟಕ್ಕಾಗಿ ನೀವು ದುಃಖಿಸದಿರಲು ಮತ್ತು ಅಲ್ಲಾಹನು ನಿಮಗೆ ಏನನ್ನು ದಯಪಾಲಿಸಿರುವನೋ ಅದರ ಬಗ್ಗೆ (ನೀವು ಮೈಮರೆತು) ಹಿಗ್ಗದಿರಲು. ಅಹಂಕಾರಿಯೂ ದುರಭಿಮಾನಿಯೂ ಆದ ಯಾವನನ್ನೂ ಅಲ್ಲಾಹು ಮೆಚ್ಚಲಾರನು.
Verse 24
ٱلَّذِينَ يَبْخَلُونَ وَيَأْمُرُونَ ٱلنَّاسَ بِٱلْبُخْلِ ۗ وَمَن يَتَوَلَّ فَإِنَّ ٱللَّهَ هُوَ ٱلْغَنِىُّ ٱلْحَمِيدُ
Transliteration alladhīna yabkhalūna wayamurūna l-nāsa bil-bukh'li waman yatawalla fa-inna l-laha huwa l-ghaniyu l-ḥamīdu
Kannada ಅಂದರೆ ಸ್ವತಃ ಜಿಪುಣತೆ ತೋರುವವರನ್ನು ಮತ್ತು ಜನರಲ್ಲಿ ಜಿಪುಣತೆಗೆ ಆದೇಶಿಸುವವರನ್ನು (ಅಲ್ಲಾಹು ಮೆಚ್ಚುವುದಿಲ್ಲ). ಇನ್ನು ಯಾರಾದರೂ (ಇದನ್ನು ತಿರಸ್ಕರಿಸಿ) ವಿಮುಖರಾದರೆ, ಅಲ್ಲಾಹನು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.
Verse 25
لَقَدْ أَرْسَلْنَا رُسُلَنَا بِٱلْبَيِّنَـٰتِ وَأَنزَلْنَا مَعَهُمُ ٱلْكِتَـٰبَ وَٱلْمِيزَانَ لِيَقُومَ ٱلنَّاسُ بِٱلْقِسْطِ ۖ وَأَنزَلْنَا ٱلْحَدِيدَ فِيهِ بَأْسٌ شَدِيدٌ وَمَنَـٰفِعُ لِلنَّاسِ وَلِيَعْلَمَ ٱللَّهُ مَن يَنصُرُهُۥ وَرُسُلَهُۥ بِٱلْغَيْبِ ۚ إِنَّ ٱللَّهَ قَوِىٌّ عَزِيزٌ
Transliteration laqad arsalnā rusulanā bil-bayināti wa-anzalnā maʿahumu l-kitāba wal-mīzāna liyaqūma l-nāsu bil-qis'ṭi wa-anzalnā l-ḥadīda fīhi basun shadīdun wamanāfiʿu lilnnāsi waliyaʿlama l-lahu man yanṣuruhu warusulahu bil-ghaybi inna l-laha qawiyyun ʿazīzun
Kannada ನಾವು ನಮ್ಮ ದೂತರುಗಳನ್ನು ಸುವ್ಯಕ್ತ ನಿದರ್ಶ ನಗಳೊಂದಿಗೆ ಕಳುಹಿಸಿದೆವು. ಜನರು ನ್ಯಾಯ ದಲ್ಲಿ ಸ್ಥಿರವಾಗಿ ನಿಲ್ಲಲೆಂದು ಅವರ ಜೊತೆ ವೇದ ಗ್ರಂಥ ಮತ್ತು ನೀತಿಯನ್ನು ಅವತೀರ್ಣಗೊಳಿಸಿದೆವು ಮತ್ತು ನಾವು ಕಬ್ಬಿಣವನ್ನು ಇಳಿಸಿದೆವು. ಅದರಲ್ಲಿ ಭಾರೀ ಆಯೋಧನ ಶಕ್ತಿ ಇದೆ ಮತ್ತು ಜನರಿಗೆ ಹಲವು ಪ್ರಯೋಜನಗಳಿವೆ. ಯಾರು ಅಲ್ಲಾಹನನ್ನು ಕಾಣದೆಯೇ ಅವನಿಗೆ ಮತ್ತು ಅವನ ದೂತರುಗಳಿಗೆ ನೆರವಾಗುತ್ತಾರೆ ಎಂಬುದನ್ನು ಅಲ್ಲಾಹನು (ಪ್ರತ್ಯಕ್ಷ) ತಿಳಿಯುವಂತಾಗಲು ಹೀಗೆ ಮಾಡಲಾಗಿದೆ. ಖಂಡಿತವಾಗಿಯೂ ಅಲ್ಲಾಹನು ಅತ್ಯಂತ ಬಲಿಷ್ಟನೂ ಅಜೇಯನೂ ಆಗಿರುತ್ತಾನೆ.
Verse 26
وَلَقَدْ أَرْسَلْنَا نُوحًا وَإِبْرَٰهِيمَ وَجَعَلْنَا فِى ذُرِّيَّتِهِمَا ٱلنُّبُوَّةَ وَٱلْكِتَـٰبَ ۖ فَمِنْهُم مُّهْتَدٍ ۖ وَكَثِيرٌ مِّنْهُمْ فَـٰسِقُونَ
Transliteration walaqad arsalnā nūḥan wa-ib'rāhīma wajaʿalnā fī dhurriyyatihimā l-nubuwata wal-kitāba famin'hum muh'tadin wakathīrun min'hum fāsiqūna
Kannada ನಾವು ನೂಹರನ್ನೂ ಇಬ್ರಾಹೀಮರನ್ನೂ ದೂತರಾಗಿ ಕಳುಹಿಸಿದೆವು. ಅವರಿಬ್ಬರ ಸಂತತಿಯಲ್ಲಿ ಪ್ರವಾದಿತ್ವವನ್ನೂ ಗ್ರಂಥವನ್ನೂ ಇರಿಸಿದೆವು. ಅವರಲ್ಲಿ ಸನ್ಮಾರ್ಗ ಸ್ವೀಕರಿಸಿದವರಿದ್ದಾರೆ. ಅವರ ಪೈಕಿ ಹೆಚ್ಚಿನವರು ದುರ್ಮಾರ್ಗಿಗಳಾಗಿದ್ದಾರೆ.
Verse 27
ثُمَّ قَفَّيْنَا عَلَىٰٓ ءَاثَـٰرِهِم بِرُسُلِنَا وَقَفَّيْنَا بِعِيسَى ٱبْنِ مَرْيَمَ وَءَاتَيْنَـٰهُ ٱلْإِنجِيلَ وَجَعَلْنَا فِى قُلُوبِ ٱلَّذِينَ ٱتَّبَعُوهُ رَأْفَةً وَرَحْمَةً وَرَهْبَانِيَّةً ٱبْتَدَعُوهَا مَا كَتَبْنَـٰهَا عَلَيْهِمْ إِلَّا ٱبْتِغَآءَ رِضْوَٰنِ ٱللَّهِ فَمَا رَعَوْهَا حَقَّ رِعَايَتِهَا ۖ فَـَٔاتَيْنَا ٱلَّذِينَ ءَامَنُوا۟ مِنْهُمْ أَجْرَهُمْ ۖ وَكَثِيرٌ مِّنْهُمْ فَـٰسِقُونَ
Transliteration thumma qaffaynā ʿalā āthārihim birusulinā waqaffaynā biʿīsā ib'ni maryama waātaynāhu l-injīla wajaʿalnā fī qulūbi alladhīna ittabaʿūhu rafatan waraḥmatan warahbāniyyatan ib'tadaʿūhā mā katabnāhā ʿalayhim illā ib'tighāa riḍ'wāni l-lahi famā raʿawhā ḥaqqa riʿāyatihā faātaynā alladhīna āmanū min'hum ajrahum wakathīrun min'hum fāsiqūna
Kannada ಅವರ ಬಳಿಕ ನಾವು ಒಬ್ಬರ ನಂತರ ಒಬ್ಬರಂತೆ ಸಂದೇಶವಾಹಕರನ್ನು ಕಳುಹಿಸಿದೆವು ಮತ್ತು ಬಳಿಕ ಮರ್ಯಮರ ಪುತ್ರ ಈಸಾರನ್ನು ಕಳುಹಿಸಿದೆವು. ಅವರಿಗೆ ಇಂಜೀಲನ್ನು ದಯಪಾಲಿಸಿ ದೆವು. ಅವರ ಅನುಯಾಯಿಗಳ ಹೃದಯಗಳಲ್ಲಿ ನಾವು ಅನುಕಂಪ ಮತ್ತು ಕರುಣೆಯನ್ನಿರಿಸಿದೆವು. ಸನ್ಯಾಸವನ್ನು ಅವರು ತಾವೇ ಸೃಷ್ಟಿಸಿಕೊಂಡರು. ಅಲ್ಲಾಹನ ಸಂಪ್ರೀತಿಯ ಅಭಿಲಾಷೆಯಿಂದ ಅವರೇ ಈ ಆಚಾರವನ್ನು ಆರಂಭಿಸಿಕೊಂಡರೇ ಹೊರತು ನಾವು ಅದನ್ನವರಿಗೆ ಕಡ್ಡಾಯಗೊಳಿಸಿರಲಿಲ್ಲ. ಆದರೆ ಅವರು ಅದನ್ನು ಪಾಲಿಸಬೇಕಾದ ರೀತಿಯಲ್ಲಿ ಪಾಲಿಸಲಿಲ್ಲ. ಅವರ ಪೈಕಿ ಸತ್ಯವನ್ನು ಸ್ವೀಕರಿಸಿದವರಿಗೆ ಅವರ ಪ್ರತಿಫಲವನ್ನು ನಾವು ದಯಪಾಲಿಸಿದೆವು.ಆದರೆ ಅವರಲ್ಲಿ ಹೆಚ್ಚಿನವರು ದುರ್ಮಾರ್ಗಿಗಳಾಗಿರುತ್ತಾರೆ.
Verse 28
يَـٰٓأَيُّهَا ٱلَّذِينَ ءَامَنُوا۟ ٱتَّقُوا۟ ٱللَّهَ وَءَامِنُوا۟ بِرَسُولِهِۦ يُؤْتِكُمْ كِفْلَيْنِ مِن رَّحْمَتِهِۦ وَيَجْعَل لَّكُمْ نُورًا تَمْشُونَ بِهِۦ وَيَغْفِرْ لَكُمْ ۚ وَٱللَّهُ غَفُورٌ رَّحِيمٌ
Transliteration yāayyuhā alladhīna āmanū ittaqū l-laha waāminū birasūlihi yu'tikum kif'layni min raḥmatihi wayajʿal lakum nūran tamshūna bihi wayaghfir lakum wal-lahu ghafūrun raḥīmun
Kannada ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯ ಪಡಿರಿ ಮತ್ತು ಅವನ ದೂತರ (ಮುಹಮ್ಮದ್ ನಬಿಯರ) ಮೇಲೆ ವಿಶ್ವಾಸವಿರಿಸಿರಿ. ಅಲ್ಲಾಹನು ನಿಮಗೆ ತನ್ನ ಕೃಪೆಯಿಂದ ದುಪ್ಪಟ್ಟು ನೀಡುವನು ಮತ್ತು ನಿಮಗೆ ಪ್ರಕಾಶವನ್ನು ಪ್ರದಾನ ಮಾಡು ವನು, ನೀವು ಅದರ ಬೆಳಕಲ್ಲಿ ನಡೆಯುವಿರಿ ಮತ್ತು ಅವನು ನಿಮ್ಮ ತಪ್ಪುಗಳನ್ನು ಕ್ಷಮಿಸುವನು. ಅಲ್ಲಾಹನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.
Verse 29
لِّئَلَّا يَعْلَمَ أَهْلُ ٱلْكِتَـٰبِ أَلَّا يَقْدِرُونَ عَلَىٰ شَىْءٍ مِّن فَضْلِ ٱللَّهِ ۙ وَأَنَّ ٱلْفَضْلَ بِيَدِ ٱللَّهِ يُؤْتِيهِ مَن يَشَآءُ ۚ وَٱللَّهُ ذُو ٱلْفَضْلِ ٱلْعَظِيمِ
Transliteration li-allā yaʿlama ahlu l-kitābi allā yaqdirūna ʿalā shayin min faḍli l-lahi wa-anna l-faḍla biyadi l-lahi yu'tīhi man yashāu wal-lahu dhū l-faḍli l-ʿaẓīmi
Kannada ತಮಗೆ ಅಲ್ಲಾಹನ ಅನುಗ್ರಹದಿಂದ ಯಾವುದೇ ಒಂದನ್ನು ಗಳಿಸಲು ಸಾಧ್ಯವಿಲ್ಲವೆಂದೂ ಮತ್ತು ಅಲ್ಲಾಹನ ಅನುಗ್ರಹವು ಅವನ ಅಧೀನದಲ್ಲೇ ಇದ್ದು ಅದನ್ನು ಅವನು ತಾನಿಚ್ಛಿಸಿದವರಿಗೆ ನೀಡುತ್ತಾನೆಂದೂ ಗ್ರಂಥದವರಿಗೆ ತಿಳಿಯುವಂತಾಗಲು (ಈ ವಿಷಯ ವ್ಯಕ್ತ ಗೊಳಿಸುವುದು). ಅಲ್ಲಾಹನು ಮಹಾ ಔದಾರ್ಯದ ಒಡೆಯನಾಗಿದ್ದಾನೆ.
Read Surah Al-Hadid in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.