MyDugsiStart learning

Surah Al-Fath in Kannada: translation and audio

Surah 48 · الفتح · The Victory · 29 verses

Surah Al-Fath verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Fath word by word in English.

Verse 1

إِنَّا فَتَحْنَا لَكَ فَتْحًا مُّبِينًا

Transliteration innā fataḥnā laka fatḥan mubīnan

Kannada (ಪ್ರವಾದಿವರ್ಯರೇ,) ನಾವು ತಮಗೆ ಸುಸ್ಪಷ್ಟ ವಿಜಯವೊಂದನ್ನು ಪ್ರದಾನ ಮಾಡಿದೆವು.

Verse 2

لِّيَغْفِرَ لَكَ ٱللَّهُ مَا تَقَدَّمَ مِن ذَنۢبِكَ وَمَا تَأَخَّرَ وَيُتِمَّ نِعْمَتَهُۥ عَلَيْكَ وَيَهْدِيَكَ صِرَٰطًا مُّسْتَقِيمًا

Transliteration liyaghfira laka l-lahu mā taqaddama min dhanbika wamā ta-akhara wayutimma niʿ'matahu ʿalayka wayahdiyaka ṣirāṭan mus'taqīman

Kannada

Verse 3

وَيَنصُرَكَ ٱللَّهُ نَصْرًا عَزِيزًا

Transliteration wayanṣuraka l-lahu naṣran ʿazīzan

Kannada ಅಲ್ಲಾಹನು ತಮ್ಮ ಹಿಂದಿನ ಹಾಗೂ ಮುಂದಿನ ಎಲ್ಲ ಎಡವುಗಳನ್ನು ತಮಗೆ ಕ್ಷಮಿಸಲಿಕ್ಕಾಗಿ, ತಮ್ಮ ಮೇಲೆ ತನ್ನ ಅನುಗ್ರಹವನ್ನು ಪರಿಪೂರ್ಣಗೊಳಿಸಲಿಕ್ಕಾಗಿ, ತಮಗೆ ಸನ್ಮಾರ್ಗವನ್ನು ನೆಲೆಗೊಳಿಸಲಿಕ್ಕಾಗಿ ಮತ್ತು ತಮಗೆ ಘನವೆತ್ತ ಸಹಾಯವನ್ನು ನೀಡಲಿಕ್ಕಾಗಿ.

Verse 4

هُوَ ٱلَّذِىٓ أَنزَلَ ٱلسَّكِينَةَ فِى قُلُوبِ ٱلْمُؤْمِنِينَ لِيَزْدَادُوٓا۟ إِيمَـٰنًا مَّعَ إِيمَـٰنِهِمْ ۗ وَلِلَّهِ جُنُودُ ٱلسَّمَـٰوَٰتِ وَٱلْأَرْضِ ۚ وَكَانَ ٱللَّهُ عَلِيمًا حَكِيمًا

Transliteration huwa alladhī anzala l-sakīnata fī qulūbi l-mu'minīna liyazdādū īmānan maʿa īmānihim walillahi junūdu l-samāwāti wal-arḍi wakāna l-lahu ʿalīman ḥakīman

Kannada ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಪ್ರಶಾಂತತೆಯನ್ನು ಇಳಿಸಿದವನು ಅವನೇ. ಅವರು ತಮ್ಮ ವಿಶ್ವಾಸದ ಮೇಲೆ ವಿಶ್ವಾಸವನ್ನು ವರ್ಧಿಸಿಕೊಳ್ಳುವಂತಾಗಲಿಕ್ಕಾಗಿ, ಅಲ್ಲಾಹನಿಗೆ ಆಕಾಶಗಳಲ್ಲೂ, ಭೂಮಿಯಲ್ಲೂ ಸೇನೆಗಳಿವೆ. ಅವನು ಸರ್ವಜ್ಞನೂ, ಯುಕ್ತಿವಂತನೂ ಆಗಿರುತ್ತಾನೆ.

Verse 5

لِّيُدْخِلَ ٱلْمُؤْمِنِينَ وَٱلْمُؤْمِنَـٰتِ جَنَّـٰتٍ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا وَيُكَفِّرَ عَنْهُمْ سَيِّـَٔاتِهِمْ ۚ وَكَانَ ذَٰلِكَ عِندَ ٱللَّهِ فَوْزًا عَظِيمًا

Transliteration liyud'khila l-mu'minīna wal-mu'mināti jannātin tajrī min taḥtihā l-anhāru khālidīna fīhā wayukaffira ʿanhum sayyiātihim wakāna dhālika ʿinda l-lahi fawzan ʿaẓīman

Kannada ಸತ್ಯವಿಶ್ವಾಸಿ ಪುರುಷರನ್ನು ಮತ್ತು ಸ್ತೀಯರನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂ ತಹ ಸ್ವರ್ಗೋದ್ಯಾನಗಳಲ್ಲಿ ಸ್ಥಿರವಾಸಿಗಳಾಗಿ ಪ್ರವೇಶಗೊಳಿಸಲಿಕ್ಕಾಗಿ ಮತ್ತು ಅವರ ದೋಷಗಳನ್ನು ಕ್ಷಮಿಸಿ ಕೊಡಲಿಕ್ಕಾಗಿ. ಅಲ್ಲಾಹನ ಬಳಿ ಅದು ಮಹಾ ವಿಜಯವಾಗಿದೆ.

Verse 6

وَيُعَذِّبَ ٱلْمُنَـٰفِقِينَ وَٱلْمُنَـٰفِقَـٰتِ وَٱلْمُشْرِكِينَ وَٱلْمُشْرِكَـٰتِ ٱلظَّآنِّينَ بِٱللَّهِ ظَنَّ ٱلسَّوْءِ ۚ عَلَيْهِمْ دَآئِرَةُ ٱلسَّوْءِ ۖ وَغَضِبَ ٱللَّهُ عَلَيْهِمْ وَلَعَنَهُمْ وَأَعَدَّ لَهُمْ جَهَنَّمَ ۖ وَسَآءَتْ مَصِيرًا

Transliteration wayuʿadhiba l-munāfiqīna wal-munāfiqāti wal-mush'rikīna wal-mush'rikāti l-ẓānīna bil-lahi ẓanna l-sawi ʿalayhim dāiratu l-sawi waghaḍiba l-lahu ʿalayhim walaʿanahum wa-aʿadda lahum jahannama wasāat maṣīran

Kannada ಅಲ್ಲಾಹನ ಕುರಿತು ಕೆಟ್ಟ ಭಾವನೆಗಳನ್ನಿಟ್ಟುಕೊಂಡಿದ್ದ ಕಪಟ ವಿಶ್ವಾಸಿಗಳಾದ ಸ್ತ್ರೀ-ಪುರುಷರನ್ನೂ ಬಹುದೇವಾರಾಧಕರಾದ ಸ್ತ್ರೀ-ಪುರುಷರನ್ನೂ ಶಿಕ್ಷಿಸಲಿಕ್ಕಾಗಿ. ಅವರಿಗೆ ನಾಶವು ಸುತ್ತುವರಿದಿದೆ. ಅವರ ಮೇಲೆ ಅಲ್ಲಾಹನು ಕ್ರೋಧಗೊಂಡನು ಮತ್ತು ಅವರನ್ನು ಶಪಿಸಿದನು. ಅವರಿಗಾಗಿ ಅತ್ಯಂತ ಕೆಟ್ಟ ವಾಸಸ್ಥಾನವಾಗಿರುವ ನರಕವನ್ನು ಕಾದಿರಿಸಿದನು.

Verse 7

وَلِلَّهِ جُنُودُ ٱلسَّمَـٰوَٰتِ وَٱلْأَرْضِ ۚ وَكَانَ ٱللَّهُ عَزِيزًا حَكِيمًا

Transliteration walillahi junūdu l-samāwāti wal-arḍi wakāna l-lahu ʿazīzan ḥakīman

Kannada ಅಲ್ಲಾಹನಿಗೆ ಆಕಾಶ-ಭೂಮಿಗಳಲ್ಲಿ ಸೇನೆಗಳಿವೆ. ಅವನು ಪ್ರಬಲನೂ ಯುಕ್ತಿಜ್ಞನೂ ಆಗಿರುತ್ತಾನೆ.

Verse 8

إِنَّآ أَرْسَلْنَـٰكَ شَـٰهِدًا وَمُبَشِّرًا وَنَذِيرًا

Transliteration innā arsalnāka shāhidan wamubashiran wanadhīran

Kannada (ಸಂದೇಶವಾಹಕರೇ,) ನಾವು ತಮ್ಮನ್ನು ಸಾಕ್ಷಿ ಯಾಗಿಯೂ, (ಸ್ವರ್ಗದ) ಸುವಾರ್ತೆ ನೀಡುವವ ರಾಗಿಯೂ ಮತ್ತು (ನರಕದ) ಎಚ್ಚರಿಕೆ ನೀಡುವವರಾಗಿಯೂ ನಿಯೋಗಿಸಿದ್ದೇವೆ.

Verse 9

لِّتُؤْمِنُوا۟ بِٱللَّهِ وَرَسُولِهِۦ وَتُعَزِّرُوهُ وَتُوَقِّرُوهُ وَتُسَبِّحُوهُ بُكْرَةً وَأَصِيلًا

Transliteration litu'minū bil-lahi warasūlihi watuʿazzirūhu watuwaqqirūhu watusabbiḥūhu buk'ratan wa-aṣīlan

Kannada (ಜನರೇ,) ನೀವು ಅಲ್ಲಾಹನಲ್ಲೂ ಅವನ ದೂತರಲ್ಲೂ ವಿಶ್ವಾಸವಿರಿಸಲು, ಅವನಿಗೆ (ಅಲ್ಲಾಹನಿಗೆ) ನೆರವಾಗಲು, ಅವನನ್ನು ಗೌರವಿಸಲು ಮತ್ತು ಸಂಜೆ- ಮುಂಜಾನೆ ಅವನ ಪರಿಶುದ್ಧಿಯನ್ನು ಪ್ರಕೀರ್ತಿಸಲಿಕ್ಕಾಗಿ.

Verse 10

إِنَّ ٱلَّذِينَ يُبَايِعُونَكَ إِنَّمَا يُبَايِعُونَ ٱللَّهَ يَدُ ٱللَّهِ فَوْقَ أَيْدِيهِمْ ۚ فَمَن نَّكَثَ فَإِنَّمَا يَنكُثُ عَلَىٰ نَفْسِهِۦ ۖ وَمَنْ أَوْفَىٰ بِمَا عَـٰهَدَ عَلَيْهُ ٱللَّهَ فَسَيُؤْتِيهِ أَجْرًا عَظِيمًا

Transliteration inna alladhīna yubāyiʿūnaka innamā yubāyiʿūna l-laha yadu l-lahi fawqa aydīhim faman nakatha fa-innamā yankuthu ʿalā nafsihi waman awfā bimā ʿāhada ʿalayhu l-laha fasayu'tīhi ajran ʿaẓīman

Kannada (ಸಂದೇಶವಾಹಕರೇ,) ತಮ್ಮೊಂದಿಗೆ (ಹುದೈಬಿ ಯಾದಲ್ಲಿ) ಒಪ್ಪಂದ ಮಾಡಿಕೊಂಡವರು ವಾಸ್ತವದಲ್ಲಿ ಅಲ್ಲಾಹನೊಂದಿಗೆ ಒಪ್ಪಂದ ಮಾಡಿಕೊಂಡರು. ಅವರ ಹಸ್ತಗಳ ಮೇಲೆ ಅಲ್ಲಾಹನ ಜ್ಞಾನ ಹಸ್ತವಿದೆ . ಹೀಗಾಗಿ ಯಾರು ಈ ಒಪ್ಪಂದವನ್ನು ಉಲ್ಲಂಘಿಸುತ್ತಾರೆ ಅವನು ತನ್ನ ವಿರುದ್ಧವೇ ಆ ಉಲ್ಲಂಘನೆ ನಡೆಸುತ್ತಾನೆ. ಯಾರು ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಪಾಲಿಸುವನೋ ಅವನಿಗೆ ಅಲ್ಲಾಹನು ಶೀಘ್ರವೇ ಘನವೆತ್ತ ಪ್ರತಿಫಲವನ್ನು ದಯಪಾಲಿಸುವನು.

Verse 11

سَيَقُولُ لَكَ ٱلْمُخَلَّفُونَ مِنَ ٱلْأَعْرَابِ شَغَلَتْنَآ أَمْوَٰلُنَا وَأَهْلُونَا فَٱسْتَغْفِرْ لَنَا ۚ يَقُولُونَ بِأَلْسِنَتِهِم مَّا لَيْسَ فِى قُلُوبِهِمْ ۚ قُلْ فَمَن يَمْلِكُ لَكُم مِّنَ ٱللَّهِ شَيْـًٔا إِنْ أَرَادَ بِكُمْ ضَرًّا أَوْ أَرَادَ بِكُمْ نَفْعًۢا ۚ بَلْ كَانَ ٱللَّهُ بِمَا تَعْمَلُونَ خَبِيرًۢا

Transliteration sayaqūlu laka l-mukhalafūna mina l-aʿrābi shaghalatnā amwālunā wa-ahlūnā fa-is'taghfir lanā yaqūlūna bi-alsinatihim mā laysa fī qulūbihim qul faman yamliku lakum mina l-lahi shayan in arāda bikum ḍarran aw arāda bikum nafʿan bal kāna l-lahu bimā taʿmalūna khabīran

Kannada (ಸಂದೇಶವಾಹಕರೇ,) ನಿಮ್ಮ ಜತೆ ಬಾರದೆ ಉಳಿದ ಗುಡ್ಡಗಾಡು ಜನಾಂಗದವರು ಖಂಡಿತ ನಿಮ್ಮ ಬಳಿ ಬಂದು; “ನಮ್ಮ ಸೊತ್ತು ಮತ್ತು ಮನೆ ಮಂದಿಯ ಚಿಂತೆಯು ನಮಗೆ ತಡೆಯಾದುವು. ನಮ್ಮ ಕ್ಷಮೆಗಾಗಿ ತಾವು ಪ್ರಾರ್ಥಿಸಿರಿ” ಎಂದು ಹೇಳುವರು. ಇವರು ತಮ್ಮ ಹೃದಯಗಳಲ್ಲಿಲ್ಲದ ಮಾತುಗಳನ್ನು ನಾಲಗೆಗಳಿಂದ ಆಡುತ್ತಾರೆ. ಹೇಳಿರಿ; “ಹಾಗಾದರೆ ಅಲ್ಲಾಹನು ನಿಮಗೆ ಯಾವುದೇ ದೋಷವನ್ನು ಮಾಡಲು ಇಚ್ಛಿಸಿದರೆ, ಅಥವಾ ನಿಮಗೆ ಯಾವುದೇ ಗುಣ ವನ್ನು ಅವನು ಇಚ್ಛಿಸಿದರೆ ಅಲ್ಲಾಹನಿಂದ ಯಾವುದೇ ವಸ್ತುವನ್ನು ಅಧೀನಗೊಳಿಸಬಲ್ಲವರು ಯಾರಿದ್ದಾರೆ? ಆದರೆ ನೀವು ಮಾಡುವ ಕರ್ಮದ ಬಗ್ಗೆ ಅಲ್ಲಾಹನು ಸೂಕ್ಷ್ಮಜ್ಞಾನಿಯಾಗಿದ್ದಾನೆ.

Verse 12

بَلْ ظَنَنتُمْ أَن لَّن يَنقَلِبَ ٱلرَّسُولُ وَٱلْمُؤْمِنُونَ إِلَىٰٓ أَهْلِيهِمْ أَبَدًا وَزُيِّنَ ذَٰلِكَ فِى قُلُوبِكُمْ وَظَنَنتُمْ ظَنَّ ٱلسَّوْءِ وَكُنتُمْ قَوْمًۢا بُورًا

Transliteration bal ẓanantum an lan yanqaliba l-rasūlu wal-mu'minūna ilā ahlīhim abadan wazuyyina dhālika fī qulūbikum waẓanantum ẓanna l-sawi wakuntum qawman būran

Kannada ವಾಸ್ತವದಲ್ಲಿ ದೂತರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಕುಟುಂಬಗಳಿಗೆ ಎಂದಿಗೂ ಮರಳಲಾರರು ಎಂದು ನೀವು ಭಾವಿಸಿಕೊಂಡಿದ್ದಿರಿ. ಅದು ನಿಮ್ಮ ಮನಸ್ಸುಗಳಲ್ಲಿ ಮೆರುಗು ಮೂಡಿಸಿತು. ನೀವು ಬಹಳ ಕೆಟ್ಟ ಗುಮಾನಿಗಳನ್ನು ಮಾಡಿದಿರಿ. ನೀವು ನಾಶ ಹೊಂದಿದ ಜನಾಂಗವಾದಿರಿ”.

Verse 13

وَمَن لَّمْ يُؤْمِنۢ بِٱللَّهِ وَرَسُولِهِۦ فَإِنَّآ أَعْتَدْنَا لِلْكَـٰفِرِينَ سَعِيرًا

Transliteration waman lam yu'min bil-lahi warasūlihi fa-innā aʿtadnā lil'kāfirīna saʿīran

Kannada ಯಾರು ಅಲ್ಲಾಹು ಮತ್ತು ಅವನ ದೂತರಲ್ಲಿ ವಿಶ್ವಾಸವಿರಿಸಲಿಲ್ಲವೋ, (ಅವನು ಪರಾಜಿತನಾ ದನು. ಏಕೆಂದರೆ,) ಸತ್ಯನಿಷೇಧಿಗಳಿಗಾಗಿ ನಾವು ಕಠಿಣವಾದ ನರಕಾಗ್ನಿಯನ್ನು ಸಿದ್ಧ ಗೊಳಿಸಿಟ್ಟಿರುತ್ತೇವೆ.

Verse 14

وَلِلَّهِ مُلْكُ ٱلسَّمَـٰوَٰتِ وَٱلْأَرْضِ ۚ يَغْفِرُ لِمَن يَشَآءُ وَيُعَذِّبُ مَن يَشَآءُ ۚ وَكَانَ ٱللَّهُ غَفُورًا رَّحِيمًا

Transliteration walillahi mul'ku l-samāwāti wal-arḍi yaghfiru liman yashāu wayuʿadhibu man yashāu wakāna l-lahu ghafūran raḥīman

Kannada ಆಕಾಶಗಳು ಮತ್ತು ಭೂಮಿಯ ಆಧಿಪತ್ಯ ಅಲ್ಲಾಹನಿಗೆ. ಅವನು ತಾನಿಚ್ಛಿಸಿದವರಿಗೆ ಕ್ಷಮಿ ಸುತ್ತಾನೆ, ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅವನು ಕ್ಷಮಾಶೀಲನೂ ದಯಾಳುವೂ ಆಗಿರುತ್ತಾನೆ.

Verse 15

سَيَقُولُ ٱلْمُخَلَّفُونَ إِذَا ٱنطَلَقْتُمْ إِلَىٰ مَغَانِمَ لِتَأْخُذُوهَا ذَرُونَا نَتَّبِعْكُمْ ۖ يُرِيدُونَ أَن يُبَدِّلُوا۟ كَلَـٰمَ ٱللَّهِ ۚ قُل لَّن تَتَّبِعُونَا كَذَٰلِكُمْ قَالَ ٱللَّهُ مِن قَبْلُ ۖ فَسَيَقُولُونَ بَلْ تَحْسُدُونَنَا ۚ بَلْ كَانُوا۟ لَا يَفْقَهُونَ إِلَّا قَلِيلًا

Transliteration sayaqūlu l-mukhalafūna idhā inṭalaqtum ilā maghānima litakhudhūhā dharūnā nattabiʿ'kum yurīdūna an yubaddilū kalāma l-lahi qul lan tattabiʿūnā kadhālikum qāla l-lahu min qablu fasayaqūlūna bal taḥsudūnanā bal kānū lā yafqahūna illā qalīlan

Kannada ನೀವು ಸಮರಾರ್ಜಿತ ಸೊತ್ತನ್ನು ಪಡೆಯಲು ಹೊರಟಾಗ ಹಿಂದುಳಿದ ಈ ಜನರು-ನಮ್ಮನ್ನೂ ನೀವು (ತಡೆಯದೆ) ಬಿಟ್ಟು ಬಿಡಿರಿ. ನಿಮ್ಮ ಜೊತೆ ನಾವು ಹಿಂಬಾಲಿಸುತ್ತೇವೆ ಎಂದು ನಿಮ್ಮೊಡನೆ ಖಂಡಿತ ಹೇಳುವರು. ಇವರು ಅಲ್ಲಾಹನ ಮಾತನ್ನು ಬದಲಿಸಿ ಬಿಡಬೇಕೆಂದು ಇಚ್ಛಿಸುತ್ತಾರೆ. ಹೇಳಿರಿ; ‘ಖಂಡಿತ ನೀವು ನಮ್ಮ ಜೊತೆ ಬರುವಂತಿಲ್ಲ. ಅಲ್ಲಾಹನು ಈ ಮೊದಲೇ ಇದನ್ನು ಹೇಳಿರುತ್ತಾನೆ’. ಆಗ ಇವರು - ‘ಇಲ್ಲ, ನೀವು ನಮ್ಮ ಬಗ್ಗೆ ಅಸೂಯೆಪಡುತ್ತಿರುವಿರಿ’ ಎಂದು ಹೇಳುವರು. ಆದರೆ ಗ್ರಹಿಸಿಕೊಳ್ಳುವವರು ಇವರಲ್ಲಿ ಅಲ್ಪ ಜನ ಮಾತ್ರವೇ ಹೊರತು ಇನ್ನಾರೂ ಯೋಚಿಸುವುದಿಲ್ಲ.

Verse 16

قُل لِّلْمُخَلَّفِينَ مِنَ ٱلْأَعْرَابِ سَتُدْعَوْنَ إِلَىٰ قَوْمٍ أُو۟لِى بَأْسٍ شَدِيدٍ تُقَـٰتِلُونَهُمْ أَوْ يُسْلِمُونَ ۖ فَإِن تُطِيعُوا۟ يُؤْتِكُمُ ٱللَّهُ أَجْرًا حَسَنًا ۖ وَإِن تَتَوَلَّوْا۟ كَمَا تَوَلَّيْتُم مِّن قَبْلُ يُعَذِّبْكُمْ عَذَابًا أَلِيمًا

Transliteration qul lil'mukhallafīna mina l-aʿrābi satud'ʿawna ilā qawmin ulī basin shadīdin tuqātilūnahum aw yus'limūna fa-in tuṭīʿū yu'tikumu l-lahu ajran ḥasanan wa-in tatawallaw kamā tawallaytum min qablu yuʿadhib'kum ʿadhāban alīman

Kannada ಹಿಂಜರಿದಂತಹ ಈ ಗ್ರಾಮೀಣ ಅರಬರೊಂದಿಗೆ ಹೇಳಿರಿ: “ಶೀಘ್ರವೇ ನಿಮ್ಮನ್ನು ಬಹಳ ಬಲಿಷ್ಟರಾಗಿರುವ ಜನಾಂಗದೊಂದಿಗೆ ಯುದ್ಧ ಮಾಡಲಿಕ್ಕಾಗಿ ಕರೆಯಲಾಗುವುದು. ನೀವು ಅವರೊಂದಿಗೆ ಯುದ್ದ ಮಾಡಬೇಕಾದೀತು. ಅಥವಾ ಅವರು ಶರಣಾಗುವರು. ಆಗ ನೀವು ಆಜ್ಞೆಯನ್ನು ಪಾಲಿಸಿದರೆ, ಅಲ್ಲಾಹು ನಿಮಗೆ ಅತ್ಯುತ್ತಮ ಪ್ರತಿಫಲ ನೀಡುವನು. ನೀವು ಈ ಹಿಂದೆ ವಿಮುಖರಾದಂತೆಯೇ ಪುನಃ ವಿಮುಖರಾದರೆ ಅಲ್ಲಾಹು ನಿಮಗೆ ವೇದನಾಯುಕ್ತ ಯಾತನೆ ಕೊಡುವನು.

Verse 17

لَّيْسَ عَلَى ٱلْأَعْمَىٰ حَرَجٌ وَلَا عَلَى ٱلْأَعْرَجِ حَرَجٌ وَلَا عَلَى ٱلْمَرِيضِ حَرَجٌ ۗ وَمَن يُطِعِ ٱللَّهَ وَرَسُولَهُۥ يُدْخِلْهُ جَنَّـٰتٍ تَجْرِى مِن تَحْتِهَا ٱلْأَنْهَـٰرُ ۖ وَمَن يَتَوَلَّ يُعَذِّبْهُ عَذَابًا أَلِيمًا

Transliteration laysa ʿalā l-aʿmā ḥarajun walā ʿalā l-aʿraji ḥarajun walā ʿalā l-marīḍi ḥarajun waman yuṭiʿi l-laha warasūlahu yud'khil'hu jannātin tajrī min taḥtihā l-anhāru waman yatawalla yuʿadhib'hu ʿadhāban alīman

Kannada ಕುರುಡನ ಮೇಲೆ ತಪ್ಪಿಲ್ಲ. ಕುಂಟನ ಮೇಲೂ ತಪ್ಪಿಲ್ಲ. ಮತ್ತು ರೋಗಿಯ ಮೇಲೂ ತಪ್ಪಿಲ್ಲ. ಯಾರು ಅಲ್ಲಾಹು ಮತ್ತು ಅವನ ದೂತರ ಅನು ಸರಣೆ ಮಾಡುತ್ತಾರೋ, ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿಗೆ ಅಲ್ಲಾಹನು ಪ್ರವೇಶ ಕೊಡುವನು. ಯಾರು ವಿಮುಖನಾಗುವನೋ ಅವನಿಗೆ ಅವನು ವೇದನಾಯುಕ್ತ ಶಿಕ್ಷೆಯನ್ನು ಕೊಡುವನು.

Verse 18

۞ لَّقَدْ رَضِىَ ٱللَّهُ عَنِ ٱلْمُؤْمِنِينَ إِذْ يُبَايِعُونَكَ تَحْتَ ٱلشَّجَرَةِ فَعَلِمَ مَا فِى قُلُوبِهِمْ فَأَنزَلَ ٱلسَّكِينَةَ عَلَيْهِمْ وَأَثَـٰبَهُمْ فَتْحًا قَرِيبًا

Transliteration laqad raḍiya l-lahu ʿani l-mu'minīna idh yubāyiʿūnaka taḥta l-shajarati faʿalima mā fī qulūbihim fa-anzala l-sakīnata ʿalayhim wa-athābahum fatḥan qarīban

Kannada ಆ ವೃಕ್ಷದಡಿಯಲ್ಲಿ ನಿಮ್ಮೊಂದಿಗೆ ಸತ್ಯವಿಶ್ವಾಸಿ ಗಳು ಆಜ್ಞಾನುಸರಣೆಯ ಒಪ್ಪಂದ ಮಾಡುತ್ತಿದ್ದಾಗ ಅಲ್ಲಾಹನು ಅವರಿಂದ ಸಂತುಷ್ಟನಾದನು. ಅವನು ಅವರ ಮನಸ್ಸಿನಲ್ಲಿರುವುದನ್ನು ತಿಳಿದಿದ್ದನು. ಆದುದರಿಂದ ಅವನು ಅವರ ಮೇಲೆ ಪ್ರಶಾಂತತೆಯನ್ನು ಇಳಿಸಿದನು. ಅವರಿಗೆ ಶೀಘ್ರ ವಿಜಯವನ್ನು ಪ್ರತಿಫಲವನ್ನಾಗಿ ನೀಡಿದನು.

Verse 19

وَمَغَانِمَ كَثِيرَةً يَأْخُذُونَهَا ۗ وَكَانَ ٱللَّهُ عَزِيزًا حَكِيمًا

Transliteration wamaghānima kathīratan yakhudhūnahā wakāna l-lahu ʿazīzan ḥakīman

Kannada ಮತ್ತು ಅವರು ಪಡೆದುಕೊಳ್ಳುವಂತಹ ಧಾರಾಳ ಸಮರಾರ್ಜಿತ ಸೊತ್ತನ್ನು ನೀಡಲಿರುವನು. ಅಲ್ಲಾಹು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.

Verse 20

وَعَدَكُمُ ٱللَّهُ مَغَانِمَ كَثِيرَةً تَأْخُذُونَهَا فَعَجَّلَ لَكُمْ هَـٰذِهِۦ وَكَفَّ أَيْدِىَ ٱلنَّاسِ عَنكُمْ وَلِتَكُونَ ءَايَةً لِّلْمُؤْمِنِينَ وَيَهْدِيَكُمْ صِرَٰطًا مُّسْتَقِيمًا

Transliteration waʿadakumu l-lahu maghānima kathīratan takhudhūnahā faʿajjala lakum hādhihi wakaffa aydiya l-nāsi ʿankum walitakūna āyatan lil'mu'minīna wayahdiyakum ṣirāṭan mus'taqīman

Kannada ನೀವು ಪಡೆಯುವಂತಹ ಧಾರಾಳ ಸಮರಾರ್ಜಿತ ಸೊತ್ತಿನ ವಾಗ್ದಾನವನ್ನು ಅಲ್ಲಾಹನು ನೀಡಿರುವನು. ಇದನ್ನು (ಖೈಬರಿನ ಸಮರಾರ್ಜಿತ ಸ್ವತ್ತನ್ನು) ಅವನು ನಿಮಗೆ ಧೃತಿಯಲ್ಲಿ ಕೊಟ್ಟನು ಮತ್ತು ಜನರ ಕೈಗಳು ನಿಮ್ಮ ವಿರುದ್ಧ ಏಳದಂತೆ ತಡೆದನು. ಸತ್ಯವಿಶ್ವಾಸಿಗಳ ಪಾಲಿಗೆ ಇದು ಒಂದು ನಿದರ್ಶನವಾಗಲೆಂದು ಮತ್ತು ಅಲ್ಲಾ ಹನು ನಿಮ್ಮನ್ನು ಸನ್ಮಾರ್ಗದೆಡೆಗೆ ಸಾಗಿಸಲೆಂದು.

Verse 21

وَأُخْرَىٰ لَمْ تَقْدِرُوا۟ عَلَيْهَا قَدْ أَحَاطَ ٱللَّهُ بِهَا ۚ وَكَانَ ٱللَّهُ عَلَىٰ كُلِّ شَىْءٍ قَدِيرًا

Transliteration wa-ukh'rā lam taqdirū ʿalayhā qad aḥāṭa l-lahu bihā wakāna l-lahu ʿalā kulli shayin qadīran

Kannada ನಿಮಗಿನ್ನೂ ಗಳಿಸಲು ಸಾಧ್ಯವಾಗದ ಮತ್ತಷ್ಟು ಸಮರಾರ್ಜಿತ ಸೊತ್ತನ್ನೂ ಅವನು ನಿಮಗೆ ವಾಗ್ದಾನ ಮಾಡಿರುವನು. ಅಲ್ಲಾಹನು ಅವುಗಳನ್ನು ಸುತ್ತುವರಿದಿದ್ದಾನೆ. ಅಲ್ಲಾಹನು ಸಕಲ ವಿಷಯಗಳಿಗೆ ಸಾಮಥ್ರ್ಯವುಳ್ಳವನಾಗಿದ್ದಾನೆ.

Verse 22

وَلَوْ قَـٰتَلَكُمُ ٱلَّذِينَ كَفَرُوا۟ لَوَلَّوُا۟ ٱلْأَدْبَـٰرَ ثُمَّ لَا يَجِدُونَ وَلِيًّا وَلَا نَصِيرًا

Transliteration walaw qātalakumu alladhīna kafarū lawallawū l-adbāra thumma lā yajidūna waliyyan walā naṣīran

Kannada ಆ ಸತ್ಯನಿಷೇಧಿಗಳು ನಿಮ್ಮೊಂದಿಗೆ ಯುದ್ಧ ಮಾಡುತ್ತಿದ್ದರೆ ಖಂಡಿತ ಪಲಾಯನ ಮಾಡುತ್ತಿದ್ದರು. ನಂತರ ಅವರಿಗೆ ರಕ್ಷಕ ಮಿತ್ರರಾಗಲಿ, ಸಹಾಯಕರಾಗಲಿ ಯಾರೂ ಸಿಗುತ್ತಿರಲಿಲ್ಲ.

Verse 23

سُنَّةَ ٱللَّهِ ٱلَّتِى قَدْ خَلَتْ مِن قَبْلُ ۖ وَلَن تَجِدَ لِسُنَّةِ ٱللَّهِ تَبْدِيلًا

Transliteration sunnata l-lahi allatī qad khalat min qablu walan tajida lisunnati l-lahi tabdīlan

Kannada ಇದು ಹಿಂದಿನಿಂದಲೇ ನಡೆದು ಬರುತ್ತಿರುವ ಅಲ್ಲಾಹನ ಕಾರ್ಯವಿಧಾನವಾಗಿದೆ. ಅಲ್ಲಾಹನ ಕಾರ್ಯವಿಧಾನದಲ್ಲಿ ಯಾವ ಬದಲಾವಣೆಯನ್ನೂ ನೀವು ಕಾಣಲಾರಿರಿ.

Verse 24

وَهُوَ ٱلَّذِى كَفَّ أَيْدِيَهُمْ عَنكُمْ وَأَيْدِيَكُمْ عَنْهُم بِبَطْنِ مَكَّةَ مِنۢ بَعْدِ أَنْ أَظْفَرَكُمْ عَلَيْهِمْ ۚ وَكَانَ ٱللَّهُ بِمَا تَعْمَلُونَ بَصِيرًا

Transliteration wahuwa alladhī kaffa aydiyahum ʿankum wa-aydiyakum ʿanhum bibaṭni makkata min baʿdi an aẓfarakum ʿalayhim wakāna l-lahu bimā taʿmalūna baṣīran

Kannada ಅವರನ್ನು ನೀವು ಗೆದ್ದ ನಂತರ ಮಕ್ಕಾ ಕಣಿವೆಯಲ್ಲಿ (ಹುದೈಬಿಯಾದಲ್ಲಿ) ಅವರ ಕೈಗಳನ್ನು ನಿಮ್ಮಿಂದಲೂ ನಿಮ್ಮ ಕೈಗಳನ್ನು ಅವರಿಂದಲೂ ತಡೆದವನು ಅವನೇ, ನೀವು ಮಾಡುತ್ತಿದ್ದುದನ್ನೆಲ್ಲ ಅಲ್ಲಾಹನು ವೀಕ್ಷಿಸುತ್ತಿದ್ದನು.

Verse 25

هُمُ ٱلَّذِينَ كَفَرُوا۟ وَصَدُّوكُمْ عَنِ ٱلْمَسْجِدِ ٱلْحَرَامِ وَٱلْهَدْىَ مَعْكُوفًا أَن يَبْلُغَ مَحِلَّهُۥ ۚ وَلَوْلَا رِجَالٌ مُّؤْمِنُونَ وَنِسَآءٌ مُّؤْمِنَـٰتٌ لَّمْ تَعْلَمُوهُمْ أَن تَطَـُٔوهُمْ فَتُصِيبَكُم مِّنْهُم مَّعَرَّةٌۢ بِغَيْرِ عِلْمٍ ۖ لِّيُدْخِلَ ٱللَّهُ فِى رَحْمَتِهِۦ مَن يَشَآءُ ۚ لَوْ تَزَيَّلُوا۟ لَعَذَّبْنَا ٱلَّذِينَ كَفَرُوا۟ مِنْهُمْ عَذَابًا أَلِيمًا

Transliteration humu alladhīna kafarū waṣaddūkum ʿani l-masjidi l-ḥarāmi wal-hadya maʿkūfan an yablugha maḥillahu walawlā rijālun mu'minūna wanisāon mu'minātun lam taʿlamūhum an taṭaūhum fatuṣībakum min'hum maʿarratun bighayri ʿil'min liyud'khila l-lahu fī raḥmatihi man yashāu law tazayyalū laʿadhabnā alladhīna kafarū min'hum ʿadhāban alīman

Kannada ಇವರೇ ಅವಿಶ್ವಾಸ ತಾಳಿದವರು. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದವರು ಮತ್ತು ಬಲಿ ಪ್ರಾಣಿಗಳನ್ನು ಅವುಗಳ ನೆಲೆಗೆ ತಲುಪಲು ಬಿಡದವರು. ನಿಮಗೆ ತಿಳಿಯದ ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತ್ರೀಯರು (ಮಕ್ಕಾದಲ್ಲಿ ಇವರ ಜೊತೆ) ಇಲ್ಲದಿರುತ್ತಿದ್ದರೆ, ಅಂದರೆ (ನಿಮಗೆ ಯುದ್ಧಾನುಮತಿ ಸಿಕ್ಕಿದರೆ) ನೀವು ಅವರ ಬಗ್ಗೆ ತಿಳುವಳಿಕೆಯಿಲ್ಲದೆ (ಅವಿಶ್ವಾಸಿಗಳೊಂದಿಗೆ) ವಧಿಸಿ ಬಿಡುವ ಹಾಗೂ ಮತ್ತು ಅದರಿಂದ ನಿಮಗೆ ದೋಷ ಬರುವ ಅಪಾಯವಿಲ್ಲದಿರುತ್ತಿದ್ದರೆ, (ಮಕ್ಕಾದ ಮೇಲೆ ದಾಳಿ ಮಾಡಲು ನಿಮಗೆ ಅನುಮತಿ ನೀಡಲಾಗುತ್ತಿತ್ತು). ಇದು ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಕೃಪೆಯಲ್ಲಿ ಸೇರಿಸಿಕೊಳ್ಳುವಂತಾಗಲು. ಆ ಸತ್ಯವಿಶ್ವಾಸಿಗಳು (ಅವಿಶ್ವಾಸಿಗಳಿಂದ) ಬೇರ್ಪಟ್ಟಿರುತ್ತಿದ್ದರೆ ಸತ್ಯನಿಷೇಧಿಗಳಿಗೆ ನಾವು ಖಂಡಿತವಾಗಿಯೂ ವೇದನಾಯುಕ್ತ ಶಿಕ್ಷೆ ಕೊಡುತ್ತಿದ್ದೆವು .

Verse 26

إِذْ جَعَلَ ٱلَّذِينَ كَفَرُوا۟ فِى قُلُوبِهِمُ ٱلْحَمِيَّةَ حَمِيَّةَ ٱلْجَـٰهِلِيَّةِ فَأَنزَلَ ٱللَّهُ سَكِينَتَهُۥ عَلَىٰ رَسُولِهِۦ وَعَلَى ٱلْمُؤْمِنِينَ وَأَلْزَمَهُمْ كَلِمَةَ ٱلتَّقْوَىٰ وَكَانُوٓا۟ أَحَقَّ بِهَا وَأَهْلَهَا ۚ وَكَانَ ٱللَّهُ بِكُلِّ شَىْءٍ عَلِيمًا

Transliteration idh jaʿala alladhīna kafarū fī qulūbihimu l-ḥamiyata ḥamiyyata l-jāhiliyati fa-anzala l-lahu sakīnatahu ʿalā rasūlihi waʿalā l-mu'minīna wa-alzamahum kalimata l-taqwā wakānū aḥaqqa bihā wa-ahlahā wakāna l-lahu bikulli shayin ʿalīman

Kannada ಆ ಸತ್ಯನಿಷೇಧಿಗಳು ತಮ್ಮ ಹೃದಯಗಳಲ್ಲಿ ಅಜ್ಞಾನ ಜನ್ಯ ದುರಭಿಮಾನವನ್ನಿರಿಸಿಕೊಂಡಾಗ ಅಲ್ಲಾಹನು ತನ್ನ ದೂತರ ಮತ್ತು ಸತ್ಯವಿಶ್ವಾಸಿಗಳ ಮೇಲೆ ಪ್ರಶಾಂತತೆಯನ್ನು ಇಳಿಸಿದನು. ಮತ್ತು ಅವರನ್ನು ದೇವಭಕ್ತಿಯ ನುಡಿಗೆ ಬದ್ಧರಾಗಿರುವಂತೆ ಮಾಡಿದನು. ಏಕೆಂದರೆ ಇದಕ್ಕೆ ಅವರೇ ಹೆಚ್ಚು ಹಕ್ಕುದಾರರೂ ಅರ್ಹರೂ ಆಗಿದ್ದರು. ಅಲ್ಲಾಹನು ಸಕಲ ವಿಷಯಗಳ ಜ್ಞಾನವುಳ್ಳವನಾಗಿರುತ್ತಾನೆ.

Verse 27

لَّقَدْ صَدَقَ ٱللَّهُ رَسُولَهُ ٱلرُّءْيَا بِٱلْحَقِّ ۖ لَتَدْخُلُنَّ ٱلْمَسْجِدَ ٱلْحَرَامَ إِن شَآءَ ٱللَّهُ ءَامِنِينَ مُحَلِّقِينَ رُءُوسَكُمْ وَمُقَصِّرِينَ لَا تَخَافُونَ ۖ فَعَلِمَ مَا لَمْ تَعْلَمُوا۟ فَجَعَلَ مِن دُونِ ذَٰلِكَ فَتْحًا قَرِيبًا

Transliteration laqad ṣadaqa l-lahu rasūlahu l-ru'yā bil-ḥaqi latadkhulunna l-masjida l-ḥarāma in shāa l-lahu āminīna muḥalliqīna ruūsakum wamuqaṣṣirīna lā takhāfūna faʿalima mā lam taʿlamū fajaʿala min dūni dhālika fatḥan qarīban

Kannada ನಿಜಕ್ಕೂ ಅಲ್ಲಾಹನು ತನ್ನ ದೂತರಿಗೆ ಸ್ವಪ್ನವನ್ನು ಸಂಪೂರ್ಣ ಸತ್ಯವಾಗಿ ನಿಜಗೊಳಿಸಿದನು. ಅಂದರೆ ಅಲ್ಲಾಹನಿಚ್ಛಿಸಿದರೆ, ನೀವು ಸಮಾಧಾನ ಚಿತ್ತರಾಗಿ ಕೇಶ ಮುಂಡನ ಮಾಡಿದವರೂ, ಕೂದಲು ಕತ್ತರಿಸಿಕೊಂಡವರೂ ಆಗಿ ಯಾವುದೇ ಭಯವಿಲ್ಲದೆ ಮಸ್ಜಿದುಲ್ ಹರಾಮನ್ನು ಖಂಡಿತ ಪ್ರವೇಶಿಸುವಿರಿ ಎಂಬ ಸ್ವಪ್ನವನ್ನು. ಆದರೆ ನೀವು ಅರಿಯದಿದ್ದುದನ್ನು ಅವನು ಅರಿತಿದ್ದನು. ಆದುದರಿಂದ ಅದಕ್ಕೆ (ಮಕ್ಕಾ ಪ್ರವೇಶಕ್ಕೆ) ಹೊರತಾಗಿ ಅವನು ಸನ್ನಿಹಿತವಾದ ಒಂದು ವಿಜಯವನ್ನು (ಖೈಬರ್ ವಿಜಯವನ್ನು) ನಿಮಗೆ ದಯಪಾಲಿಸಿದನು.

Verse 28

هُوَ ٱلَّذِىٓ أَرْسَلَ رَسُولَهُۥ بِٱلْهُدَىٰ وَدِينِ ٱلْحَقِّ لِيُظْهِرَهُۥ عَلَى ٱلدِّينِ كُلِّهِۦ ۚ وَكَفَىٰ بِٱللَّهِ شَهِيدًا

Transliteration huwa alladhī arsala rasūlahu bil-hudā wadīni l-ḥaqi liyuẓ'hirahu ʿalā l-dīni kullihi wakafā bil-lahi shahīdan

Kannada ಅವನೇ ತನ್ನ ಸಂದೇಶವಾಹಕನನ್ನು ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ ಕಳುಹಿಸಿದವನು. ಅದನ್ನು ಸಕಲ ಧರ್ಮಗಳ ಮೇಲೆ ಸಮರ್ಥಿಸಿ ತೋರಿಸಲಿಕ್ಕಾಗಿ. ಸಾಕ್ಷಿಯಾಗಿ ಅಲ್ಲಾಹನೇ ಸಾಕು .

Verse 29

مُّحَمَّدٌ رَّسُولُ ٱللَّهِ ۚ وَٱلَّذِينَ مَعَهُۥٓ أَشِدَّآءُ عَلَى ٱلْكُفَّارِ رُحَمَآءُ بَيْنَهُمْ ۖ تَرَىٰهُمْ رُكَّعًا سُجَّدًا يَبْتَغُونَ فَضْلًا مِّنَ ٱللَّهِ وَرِضْوَٰنًا ۖ سِيمَاهُمْ فِى وُجُوهِهِم مِّنْ أَثَرِ ٱلسُّجُودِ ۚ ذَٰلِكَ مَثَلُهُمْ فِى ٱلتَّوْرَىٰةِ ۚ وَمَثَلُهُمْ فِى ٱلْإِنجِيلِ كَزَرْعٍ أَخْرَجَ شَطْـَٔهُۥ فَـَٔازَرَهُۥ فَٱسْتَغْلَظَ فَٱسْتَوَىٰ عَلَىٰ سُوقِهِۦ يُعْجِبُ ٱلزُّرَّاعَ لِيَغِيظَ بِهِمُ ٱلْكُفَّارَ ۗ وَعَدَ ٱللَّهُ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ مِنْهُم مَّغْفِرَةً وَأَجْرًا عَظِيمًۢا

Transliteration muḥammadun rasūlu l-lahi wa-alladhīna maʿahu ashiddāu ʿalā l-kufāri ruḥamāu baynahum tarāhum rukkaʿan sujjadan yabtaghūna faḍlan mina l-lahi wariḍ'wānan sīmāhum fī wujūhihim min athari l-sujūdi dhālika mathaluhum fī l-tawrāti wamathaluhum fī l-injīli kazarʿin akhraja shaṭahu faāzarahu fa-is'taghlaẓa fa-is'tawā ʿalā sūqihi yuʿ'jibu l-zurāʿa liyaghīẓa bihimu l-kufāra waʿada l-lahu alladhīna āmanū waʿamilū l-ṣāliḥāti min'hum maghfiratan wa-ajran ʿaẓīman

Kannada ಮುಹಮ್ಮದರು ಅಲ್ಲಾಹನ ಸಂದೇಶವಾಹಕರು. ಅವರ ಜೊತೆಗಿರುವವರು ಸತ್ಯನಿಷೇಧಿಗಳ ಪಾಲಿಗೆ ಕಠಿಣರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ. ಅಲ್ಲಾಹನ ಅನುಗ್ರಹ ಮತ್ತು ಸಂಪ್ರೀತಿಯನ್ನು ಅರಸುತ್ತ ಅವರು ರುಕೂಅï ಮತ್ತು ಸುಜೂದ್ ಮಾಡಿ ನಮಾಝ್ ಮಾಡು ವುದನ್ನು ನೀವು ಕಾಣುವಿರಿ. ಸುಜೂದ್‍ನ ಫಲ ವಾಗಿ ಅವರ ಗುರುತುಗಳು ಅವರ ಮುಖಗಳಲ್ಲಿವೆ. ಇದು ತೌರಾತ್‍ನಲ್ಲಿರುವ, ಅವರ ಗುಣ ವಿಶೇಷವಾಗಿದೆ. ಇನ್ಜೀಲ್‍ನಲ್ಲಿ ಅವರ ಉದಾಹರಣೆಯನ್ನು ಹೀಗೆ ಕೊಡಲಾಗಿದೆ. ಒಂದು ಪೈರು, ಅದು ಟಿಸಿಲೊಡೆಯಿತು. ತರುವಾಯ ಅದನ್ನು ಬಲಪಡಿಸಿಕೊಂಡಿತು. ಅನಂತರ ಅದು ಬಿರುಸುಗೊಂಡಿತು. ನಂತರ ಅದು ಕೃಷಿಕನನ್ನು ಮುದಗೊಳಿಸುತ್ತಾ ತನ್ನ ಕಾಂಡದ ಮೇಲೆ ನೆಲೆಯೂರಿತು. (ಸತ್ಯವಿಶ್ವಾಸಿಗಳಿಗೆ ಈ ಉಪಮೆ ನೀಡಿದ್ದು) ಇವರ ಮುಖಾಂತರ ಸತ್ಯನಿಷೇಧಿಗ ಳನ್ನು ಕೆರಳಿಸುವ ಸಲುವಾಗಿ. ಇವರ ಕೂಟದಲ್ಲಿ ಸತ್ಯವಿಶ್ವಾಸವಿರಿಸಿಕೊಂಡು ಸತ್ಕರ್ಮವೆಸಗಿದವರಿಗೆ ಅಲ್ಲಾಹನು ಕ್ಷಮೆ ಮತ್ತು ಘನವೆತ್ತ ಪ್ರತಿಫಲ ವಾಗ್ದಾನವಿತ್ತಿರುತ್ತಾನೆ.

Read Surah Al-Fath in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.