MyDugsiStart learning

Surah Al-Ahzab in Kannada: translation and audio

Surah 33 · الأحزاب · The Combined Forces · 73 verses

Surah Al-Ahzab verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Ahzab word by word in English.

Verse 1

يَـٰٓأَيُّهَا ٱلنَّبِىُّ ٱتَّقِ ٱللَّهَ وَلَا تُطِعِ ٱلْكَـٰفِرِينَ وَٱلْمُنَـٰفِقِينَ ۗ إِنَّ ٱللَّهَ كَانَ عَلِيمًا حَكِيمًا

Transliteration yāayyuhā l-nabiyu ittaqi l-laha walā tuṭiʿi l-kāfirīna wal-munāfiqīna inna l-laha kāna ʿalīman ḥakīman

Kannada ಓ ಪ್ರವಾದಿವರ್ಯರೇ, ಅಲ್ಲಾಹನನ್ನು ಭಯಪಡಿರಿ. ಸತ್ಯನಿಷೇಧಿಗಳು ಹಾಗೂ ಕಪಟ ವಿಶ್ವಾಸಿಗಳನ್ನು ತಾವು ಅನುಸರಿಸಬೇಡಿರಿ. ಅಲ್ಲಾಹನು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ.

Verse 2

وَٱتَّبِعْ مَا يُوحَىٰٓ إِلَيْكَ مِن رَّبِّكَ ۚ إِنَّ ٱللَّهَ كَانَ بِمَا تَعْمَلُونَ خَبِيرًا

Transliteration wa-ittabiʿ mā yūḥā ilayka min rabbika inna l-laha kāna bimā taʿmalūna khabīran

Kannada ನಿಮ್ಮ ಪ್ರಭುವಿನಿಂದ ನಿಮಗೆ ನೀಡಲಾಗುತ್ತಿರುವ ಬೋಧನೆಯನ್ನು ಅನುಸರಿಸಿರಿ. ಅಲ್ಲಾಹನು, ನೀವು ಮಾಡುತ್ತಿರುವ ಪ್ರವೃತ್ತಿಯ ಬಗ್ಗೆ ಚೆನ್ನಾಗಿ ಅರಿವುಳ್ಳವನಾಗಿದ್ದಾನೆ.

Verse 3

وَتَوَكَّلْ عَلَى ٱللَّهِ ۚ وَكَفَىٰ بِٱللَّهِ وَكِيلًا

Transliteration watawakkal ʿalā l-lahi wakafā bil-lahi wakīlan

Kannada ತಾವು ಅಲ್ಲಾಹನ ಮೇಲೆ ಭರವಸೆ ಇಡಿರಿ. ಕಾರ್ಯ ನಿರ್ವಾಹಕನಾಗಲು ಅಲ್ಲಾಹನೇ ಸಾಕು.

Verse 4

مَّا جَعَلَ ٱللَّهُ لِرَجُلٍ مِّن قَلْبَيْنِ فِى جَوْفِهِۦ ۚ وَمَا جَعَلَ أَزْوَٰجَكُمُ ٱلَّـٰٓـِٔى تُظَـٰهِرُونَ مِنْهُنَّ أُمَّهَـٰتِكُمْ ۚ وَمَا جَعَلَ أَدْعِيَآءَكُمْ أَبْنَآءَكُمْ ۚ ذَٰلِكُمْ قَوْلُكُم بِأَفْوَٰهِكُمْ ۖ وَٱللَّهُ يَقُولُ ٱلْحَقَّ وَهُوَ يَهْدِى ٱلسَّبِيلَ

Transliteration mā jaʿala l-lahu lirajulin min qalbayni fī jawfihi wamā jaʿala azwājakumu allāī tuẓāhirūna min'hunna ummahātikum wamā jaʿala adʿiyāakum abnāakum dhālikum qawlukum bi-afwāhikum wal-lahu yaqūlu l-ḥaqa wahuwa yahdī l-sabīla

Kannada ಅಲ್ಲಾಹು ಯಾವ ಮನುಷ್ಯನ ದೇಹದೊಳಗೂ ಎರಡು ಹೃದಯಗಳನ್ನಿರಿಸಿಲ್ಲ. ನೀವು ಳಿಹಾರ್ ಮಾಡುವ ನಿಮ್ಮ ಪತ್ನಿಯರನ್ನು ಅವನು ನಿಮ್ಮ ತಾಯಂದಿರನ್ನಾಗಿ ಮಾಡಿಲ್ಲ. ಅವನು ನಿಮ್ಮ ದತ್ತು ಪುತ್ರರನ್ನು ನಿಮ್ಮ ಸ್ವಂತ ಪುತ್ರರನ್ನಾಗಿ ಮಾಡಿಲ್ಲ. ಇವೆಲ್ಲ ನೀವು ನಿಮ್ಮ ಬಾಯಿಯಿಂದ ಹೇಳುವ ನಿಮ್ಮ ಮಾತುಗಳು. ಆದರೆ ಅಲ್ಲಾಹನು ಕೇವಲ ನಿಜವನ್ನು ಹೇಳುತ್ತಾನೆ. ಅವನೇ ಸನ್ಮಾರ್ಗಕ್ಕೆ ನಡೆಸುತ್ತಾನೆ.

Verse 5

ٱدْعُوهُمْ لِـَٔابَآئِهِمْ هُوَ أَقْسَطُ عِندَ ٱللَّهِ ۚ فَإِن لَّمْ تَعْلَمُوٓا۟ ءَابَآءَهُمْ فَإِخْوَٰنُكُمْ فِى ٱلدِّينِ وَمَوَٰلِيكُمْ ۚ وَلَيْسَ عَلَيْكُمْ جُنَاحٌ فِيمَآ أَخْطَأْتُم بِهِۦ وَلَـٰكِن مَّا تَعَمَّدَتْ قُلُوبُكُمْ ۚ وَكَانَ ٱللَّهُ غَفُورًا رَّحِيمًا

Transliteration id'ʿūhum liābāihim huwa aqsaṭu ʿinda l-lahi fa-in lam taʿlamū ābāahum fa-ikh'wānukum fī l-dīni wamawālīkum walaysa ʿalaykum junāḥun fīmā akhṭatum bihi walākin mā taʿammadat qulūbukum wakāna l-lahu ghafūran raḥīman

Kannada ದತ್ತು ಮಕ್ಕಳನ್ನು ಅವರ ಪಿತರಿಗೆ ಸೇರಿಸಿ ಕರೆಯಿರಿ. ಇದು ಅಲ್ಲಾಹನ ಬಳಿ ಹೆಚ್ಚು ನ್ಯಾಯೋಚಿತ. ಇನ್ನು ನಿಮಗೆ ಅವರ ಪಿತರು ಯಾರೆಂದು ತಿಳಿದಿರದಿದ್ದರೆ ಅವರು ಧರ್ಮದಲ್ಲಿ ನಿಮ್ಮ ಸಹೋದರರು ಮತ್ತು ಮಿತ್ರರು. ನೀವು ತಪ್ಪಿ ಹೇಳಿಬಿಟ್ಟ ಮಾತಿನಲ್ಲಿ ನಿಮ್ಮ ಮೇಲೆ ದೋಷ ವಿಲ್ಲ. ಆದರೆ ನೀವು ಮನಸ್ಸಾರೆ ಹೇಳಿದ ಮಾತಿನ ಬಗ್ಗೆ ದೋಷವಿದೆ. ಅಲ್ಲಾಹು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.

Verse 6

ٱلنَّبِىُّ أَوْلَىٰ بِٱلْمُؤْمِنِينَ مِنْ أَنفُسِهِمْ ۖ وَأَزْوَٰجُهُۥٓ أُمَّهَـٰتُهُمْ ۗ وَأُو۟لُوا۟ ٱلْأَرْحَامِ بَعْضُهُمْ أَوْلَىٰ بِبَعْضٍ فِى كِتَـٰبِ ٱللَّهِ مِنَ ٱلْمُؤْمِنِينَ وَٱلْمُهَـٰجِرِينَ إِلَّآ أَن تَفْعَلُوٓا۟ إِلَىٰٓ أَوْلِيَآئِكُم مَّعْرُوفًا ۚ كَانَ ذَٰلِكَ فِى ٱلْكِتَـٰبِ مَسْطُورًا

Transliteration al-nabiyu awlā bil-mu'minīna min anfusihim wa-azwājuhu ummahātuhum wa-ulū l-arḥāmi baʿḍuhum awlā bibaʿḍin fī kitābi l-lahi mina l-mu'minīna wal-muhājirīna illā an tafʿalū ilā awliyāikum maʿrūfan kāna dhālika fī l-kitābi masṭūran

Kannada ಪ್ರವಾದಿಯು ಸತ್ಯವಿಶ್ವಾಸಿಗಳಿಗೆ ಅವರ ಸ್ವಂತ ದೇಹಗಳಿಗಿಂತಲೂ ಮುಖ್ಯರು. ಪ್ರವಾದಿಯ ಪತ್ನಿಯರು ಸತ್ಯವಿಶ್ವಾಸಿಗಳ ಮಾತೆಯರು . ಆದರೆ ಅಲ್ಲಾಹನ ನಿಯಮದಲ್ಲಿ ಇತರ ಸತ್ಯವಿಶ್ವಾಸಿಗಳು ಹಾಗೂ ಮುಹಾಜಿರರಿಗಿಂತಲೂ ರಕ್ತ-ಸಂಬಂಧಿಕರು ಪರಸ್ಪರರ ಪಾಲಿಗೆ ಹೆಚ್ಚು ಹಕ್ಕುದಾರರು. ಆದರೆ ನಿಮ್ಮ ಮಿತ್ರರಿಗೆ ನೀವು ಉಪಕಾರ ಮಾಡಿದರೆ ಅಡ್ಡಿಯಿಲ್ಲ. ಇದೆಲ್ಲ ದೇವಗ್ರಂಥದಲ್ಲಿ ದಾಖಲಾಗಿದೆ.

Verse 7

وَإِذْ أَخَذْنَا مِنَ ٱلنَّبِيِّـۧنَ مِيثَـٰقَهُمْ وَمِنكَ وَمِن نُّوحٍ وَإِبْرَٰهِيمَ وَمُوسَىٰ وَعِيسَى ٱبْنِ مَرْيَمَ ۖ وَأَخَذْنَا مِنْهُم مِّيثَـٰقًا غَلِيظًا

Transliteration wa-idh akhadhnā mina l-nabiyīna mīthāqahum waminka wamin nūḥin wa-ib'rāhīma wamūsā waʿīsā ib'ni maryama wa-akhadhnā min'hum mīthāqan ghalīẓan

Kannada (ಪೈಗಂಬರರೇ,) ಪ್ರವಾದಿಗಳಿಂದಲೂ ನಿಮ್ಮಿಂದಲೂ, ನೂಹ್, ಇಬ್‍ರಾಹೀಮ್, ಮೂಸಾ ಮತ್ತು ಮರ್ಯಮರ ಪುತ್ರ ಈಸಾರಿಂದಲೂ ನಾವು ಅವರ ಕರಾರನ್ನು ಪಡೆದ ಸಂದರ್ಭವನ್ನು ನೆನಪಿಡಿರಿ. ಅವರಿಂದ ನಾವು ಬಲವಾದ ಕರಾರನ್ನು ಪಡೆದಿದ್ದೇವೆ.

Verse 8

لِّيَسْـَٔلَ ٱلصَّـٰدِقِينَ عَن صِدْقِهِمْ ۚ وَأَعَدَّ لِلْكَـٰفِرِينَ عَذَابًا أَلِيمًا

Transliteration liyasala l-ṣādiqīna ʿan ṣid'qihim wa-aʿadda lil'kāfirīna ʿadhāban alīman

Kannada ಇದು, ಸತ್ಯಸಂಧರಿಂದ ಅವರ ಸತ್ಯಸಂಧತೆಯ ಕುರಿತು ಅಲ್ಲಾಹನು ಪ್ರಶ್ನಿಸಲಿಕ್ಕಾಗಿ ಇದೆ . ಸತ್ಯನಿಷೇಧಿಗಳಿಗೆ ಅವನು ವೇದನಾಯುಕ್ತ ಶಿಕ್ಷೆಯನ್ನು ಸಿದ್ಧಪಡಿಸಿದ್ದಾನೆ.

Verse 9

يَـٰٓأَيُّهَا ٱلَّذِينَ ءَامَنُوا۟ ٱذْكُرُوا۟ نِعْمَةَ ٱللَّهِ عَلَيْكُمْ إِذْ جَآءَتْكُمْ جُنُودٌ فَأَرْسَلْنَا عَلَيْهِمْ رِيحًا وَجُنُودًا لَّمْ تَرَوْهَا ۚ وَكَانَ ٱللَّهُ بِمَا تَعْمَلُونَ بَصِيرًا

Transliteration yāayyuhā alladhīna āmanū udh'kurū niʿ'mata l-lahi ʿalaykum idh jāatkum junūdun fa-arsalnā ʿalayhim rīḥan wajunūdan lam tarawhā wakāna l-lahu bimā taʿmalūna baṣīran

Kannada ಸತ್ಯವಿಶ್ವಾಸಿಗಳೇ, ಸೈನ್ಯಗಳು ನಿಮಗೆ ಬಂದಾಗ ನಾವು ಅವರ ಮೇಲೆ ಬಿರುಗಾಳಿಯನ್ನೂ ನಿಮಗೆ ಕಾಣಿಸದಿರುವ ಸೈನ್ಯಗಳನ್ನೂ ಕಳುಹಿಸಿದ ಸಂದರ್ಭದಲ್ಲಿ ಅಲ್ಲಾಹನು ನಿಮಗೆ ಮಾಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಮಾಡುತ್ತಿದ್ದುದನ್ನು ಅಲ್ಲಾಹು ಚೆನ್ನಾಗಿ ನೋಡುತ್ತಿದ್ದನು.

Verse 10

إِذْ جَآءُوكُم مِّن فَوْقِكُمْ وَمِنْ أَسْفَلَ مِنكُمْ وَإِذْ زَاغَتِ ٱلْأَبْصَـٰرُ وَبَلَغَتِ ٱلْقُلُوبُ ٱلْحَنَاجِرَ وَتَظُنُّونَ بِٱللَّهِ ٱلظُّنُونَا۠

Transliteration idh jāūkum min fawqikum wamin asfala minkum wa-idh zāghati l-abṣāru wabalaghati l-qulūbu l-ḥanājira wataẓunnūna bil-lahi l-ẓunūnā

Kannada ಅಂದರೆ ಮೇಲಿಂದಲೂ ಕೆಳಗಿಂದಲೂ ಆ ಸೈನ್ಯಗಳು ನಿಮಗೆ ಏರಿಬಂದಾಗ, ಭಯದಿಂದ ಕಣ್ಣುಗಳು ನಿಶ್ಚಲಗೊಂಡಾಗ, ಹೃದಯಗಳು ಗಂಟಲಿಗೆ ಬಂದಾಗ ಮತ್ತು ನೀವು ಅಲ್ಲಾಹನ ವಿಷಯದಲ್ಲಿ ಕೆಲವು ಗುಮಾನಿಗಳನ್ನಿರಿಸಿದಾಗ,

Verse 11

هُنَالِكَ ٱبْتُلِىَ ٱلْمُؤْمِنُونَ وَزُلْزِلُوا۟ زِلْزَالًا شَدِيدًا

Transliteration hunālika ub'tuliya l-mu'minūna wazul'zilū zil'zālan shadīdan

Kannada ಅಲ್ಲಿ ಸತ್ಯವಿಶ್ವಾಸಿಗಳು ಚೆನ್ನಾಗಿ ಪರೀಕ್ಷಿಸಲ್ಪಟ್ಟರು ಮತ್ತು ತೀವ್ರವಾಗಿ ನಡುಗಿಸಲ್ಪಟ್ಟರು.

Verse 12

وَإِذْ يَقُولُ ٱلْمُنَـٰفِقُونَ وَٱلَّذِينَ فِى قُلُوبِهِم مَّرَضٌ مَّا وَعَدَنَا ٱللَّهُ وَرَسُولُهُۥٓ إِلَّا غُرُورًا

Transliteration wa-idh yaqūlu l-munāfiqūna wa-alladhīna fī qulūbihim maraḍun mā waʿadanā l-lahu warasūluhu illā ghurūran

Kannada ಕಪಟವಿಶ್ವಾಸಿಗಳೂ ಹೃದಯಗಳಲ್ಲಿ ರೋಗ ವಿದ್ದವರೂ ‘ಅಲ್ಲಾಹು ಮತ್ತು ಅವನ ಪ್ರವಾದಿ ನಮಗೆ ವಂಚನೆಯನ್ನಲ್ಲದೆ ಇನ್ನೇನನ್ನೂ ವಾಗ್ದಾನ ಮಾಡಿಲ್ಲ’ ಎಂದು ಹೇಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ.

Verse 13

وَإِذْ قَالَت طَّآئِفَةٌ مِّنْهُمْ يَـٰٓأَهْلَ يَثْرِبَ لَا مُقَامَ لَكُمْ فَٱرْجِعُوا۟ ۚ وَيَسْتَـْٔذِنُ فَرِيقٌ مِّنْهُمُ ٱلنَّبِىَّ يَقُولُونَ إِنَّ بُيُوتَنَا عَوْرَةٌ وَمَا هِىَ بِعَوْرَةٍ ۖ إِن يُرِيدُونَ إِلَّا فِرَارًا

Transliteration wa-idh qālat ṭāifatun min'hum yāahla yathriba lā muqāma lakum fa-ir'jiʿū wayastadhinu farīqun min'humu l-nabiya yaqūlūna inna buyūtanā ʿawratun wamā hiya biʿawratin in yurīdūna illā firāran

Kannada ಅವರಲ್ಲೊಂದು ತಂಡವು, ‘ಯಸ್ರಿಬ್‍ನವರೇ, ನಿಮಗಿನ್ನು ಯಾವುದೇ ನೆಲೆ ಇಲ್ಲ. ಆದ್ದರಿಂದ ಮರಳಿ ಹೋಗಿರಿ’ ಎಂದು ಹೇಳಿದ ಸಂದರ್ಭವೂ ಸ್ಮರಣೀಯ. ಅವರ ಒಂದು ಕೂಟವು, ನಮ್ಮ ಮನೆಗಳು ಅಪಾಯ ಕ್ಕೊಳಗಾಗಿವೆ ಎನ್ನುತ್ತ ತಮ್ಮ ಪ್ರವಾದಿಯಿಂದ (ರಣರಂಗದಿಂದ ಪರಾರಿಯಾಗಲು) ಅನುಮತಿ ಕೇಳಿದರು. ಅವು ನಿಜವಾಗಿ ಅಪಾಯದಲ್ಲಿರಲಿಲ್ಲ. ಆದರೆ ಅವರು ರಣರಂಗದಿಂದ ಪರಾರಿಯಾಗಲು ಬಯಸಿದ್ದರು.

Verse 14

وَلَوْ دُخِلَتْ عَلَيْهِم مِّنْ أَقْطَارِهَا ثُمَّ سُئِلُوا۟ ٱلْفِتْنَةَ لَـَٔاتَوْهَا وَمَا تَلَبَّثُوا۟ بِهَآ إِلَّا يَسِيرًا

Transliteration walaw dukhilat ʿalayhim min aqṭārihā thumma su-ilū l-fit'nata laātawhā wamā talabbathū bihā illā yasīran

Kannada ಮದೀನಾದ ನಾನಾ ಭಾಗಗಳಿಂದ ಶತ್ರುಗಳು ನುಗ್ಗಿ ಬರುತ್ತಿದ್ದರೆ ಹಾಗೂ ನಂತರ (ಮುಸ್ಲಿಮರ ವಿರುದ್ಧ) ಫಿತ್ನಾ ಮಾಡಲು ಇವರಲ್ಲಿ ಕೇಳಿಕೊಂಡಿದ್ದರೆ ಇವರು ಖಂಡಿತ ಹಾಗೆ ಮಾಡುತ್ತಿದ್ದರು. ಇದಕ್ಕೆ ಸ್ವಲ್ಪ ಸಮಯವನ್ನು ತೆಗೆದು ಕೊಳ್ಳುತ್ತಿದ್ದರೇ ವಿನಾ ಹೆಚ್ಚು ತಡ ಮಾಡುತ್ತಿರಲಿಲ್ಲ .

Verse 15

وَلَقَدْ كَانُوا۟ عَـٰهَدُوا۟ ٱللَّهَ مِن قَبْلُ لَا يُوَلُّونَ ٱلْأَدْبَـٰرَ ۚ وَكَانَ عَهْدُ ٱللَّهِ مَسْـُٔولًا

Transliteration walaqad kānū ʿāhadū l-laha min qablu lā yuwallūna l-adbāra wakāna ʿahdu l-lahi masūlan

Kannada ತಾವು (ರಣರಂಗದಿಂದ) ಬೆನ್ನು ತಿರುಗಿಸಿ ಹೋಗುವುದಿಲ್ಲವೆಂದು ಇದಕ್ಕೆ ಮುಂಚೆ ಇವರು ಅಲ್ಲಾಹನಲ್ಲಿ ಕರಾರು ಮಾಡಿದ್ದರು. ಅಲ್ಲಾಹನೊಂದಿಗೆ ಮಾಡಿದ ಕರಾರಿನ ಬಗ್ಗೆ ವಿಚಾರಣೆ ಮಾಡಲಾಗುವುದು.

Verse 16

قُل لَّن يَنفَعَكُمُ ٱلْفِرَارُ إِن فَرَرْتُم مِّنَ ٱلْمَوْتِ أَوِ ٱلْقَتْلِ وَإِذًا لَّا تُمَتَّعُونَ إِلَّا قَلِيلًا

Transliteration qul lan yanfaʿakumu l-firāru in farartum mina l-mawti awi l-qatli wa-idhan lā tumattaʿūna illā qalīlan

Kannada (ಪೈಗಂಬರರೇ,) ಹೇಳಿರಿ; “ನೀವು ಮರಣ ಅಥವಾ ಕೊಲೆಯನ್ನು ಹೆದರಿ ಓಡುವುದಿದ್ದರೆ ನಿಮ್ಮ ಈ ಪಲಾಯನವು ನಿಮಗೇನೂ ಫಲಕಾರಿಯಾಗದು. ನೀವು ಓಡಿಹೋದರೂ ಅಲ್ಪಕಾಲದ ಹೊರತು ನಿಮಗೆ ಜೀವನದ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ”.

Verse 17

قُلْ مَن ذَا ٱلَّذِى يَعْصِمُكُم مِّنَ ٱللَّهِ إِنْ أَرَادَ بِكُمْ سُوٓءًا أَوْ أَرَادَ بِكُمْ رَحْمَةً ۚ وَلَا يَجِدُونَ لَهُم مِّن دُونِ ٱللَّهِ وَلِيًّا وَلَا نَصِيرًا

Transliteration qul man dhā alladhī yaʿṣimukum mina l-lahi in arāda bikum sūan aw arāda bikum raḥmatan walā yajidūna lahum min dūni l-lahi waliyyan walā naṣīran

Kannada ಹೇಳಿರಿ. “ಅಲ್ಲಾಹು ನಿಮಗೆ ಕೇಡು ಮಾಡಲಿಚ್ಛಿಸಿದರೆ ಅಥವಾ ಅವನು ನಿಮ್ಮ ಮೇಲೆ ಕರುಣೆ ತೋರಲಿಚ್ಛಿಸಿದರೆ, ಅವನಿಂದ ನಿಮ್ಮನ್ನು ತಡೆ ಯುವವ ನಾರು? ಅಲ್ಲಾಹನ ಹೊರತು ಇವರು ಯಾವ ರಕ್ಷಕನನ್ನೂ ಸಹಾಯಕನನ್ನೂ ಪಡೆಯಲಾರರು.

Verse 18

۞ قَدْ يَعْلَمُ ٱللَّهُ ٱلْمُعَوِّقِينَ مِنكُمْ وَٱلْقَآئِلِينَ لِإِخْوَٰنِهِمْ هَلُمَّ إِلَيْنَا ۖ وَلَا يَأْتُونَ ٱلْبَأْسَ إِلَّا قَلِيلًا

Transliteration qad yaʿlamu l-lahu l-muʿawiqīna minkum wal-qāilīna li-ikh'wānihim halumma ilaynā walā yatūna l-basa illā qalīlan

Kannada ನಿಮ್ಮ ಪೈಕಿ ಉದಾಸೀನ ಮಾಡಿಸುವವರನ್ನೂ `ನಮ್ಮ ಕಡೆಗೆ ಬನ್ನಿರಿ’ ಎಂದು ತಮ್ಮ ಸಹೋದರ ರಿಗೆ ಹೇಳುವವರನ್ನೂ ಅಲ್ಲಾಹು ಚೆನ್ನಾಗಿ ಬಲ್ಲನು. ಅವರು ಬಹಳ ಅಪೂರ್ವವಾಗಿಯೇ ಯುದ್ಧದಲ್ಲಿ ಭಾಗವಹಿಸುವರು.

Verse 19

أَشِحَّةً عَلَيْكُمْ ۖ فَإِذَا جَآءَ ٱلْخَوْفُ رَأَيْتَهُمْ يَنظُرُونَ إِلَيْكَ تَدُورُ أَعْيُنُهُمْ كَٱلَّذِى يُغْشَىٰ عَلَيْهِ مِنَ ٱلْمَوْتِ ۖ فَإِذَا ذَهَبَ ٱلْخَوْفُ سَلَقُوكُم بِأَلْسِنَةٍ حِدَادٍ أَشِحَّةً عَلَى ٱلْخَيْرِ ۚ أُو۟لَـٰٓئِكَ لَمْ يُؤْمِنُوا۟ فَأَحْبَطَ ٱللَّهُ أَعْمَـٰلَهُمْ ۚ وَكَانَ ذَٰلِكَ عَلَى ٱللَّهِ يَسِيرًا

Transliteration ashiḥḥatan ʿalaykum fa-idhā jāa l-khawfu ra-aytahum yanẓurūna ilayka tadūru aʿyunuhum ka-alladhī yugh'shā ʿalayhi mina l-mawti fa-idhā dhahaba l-khawfu salaqūkum bi-alsinatin ḥidādin ashiḥḥatan ʿalā l-khayri ulāika lam yu'minū fa-aḥbaṭa l-lahu aʿmālahum wakāna dhālika ʿalā l-lahi yasīran

Kannada ಅವರು ನಿಮ್ಮ ವಿರುದ್ಧ ದುರಾಗ್ರಹ ಹೊಂದಿದವ ರಾಗಿ, ಭೀತಿ ಎದುರಾದರೆ ಅವರು ಪ್ರಾಣ ಸಂಕಟ ಬಂದವರಂತೆ ಕಣ್ಣು ತಿರುಗಿಸುತ್ತಾ ನಿಮ್ಮ ಕಡೆಗೆ ನೋಡುವುದನ್ನು ನೀವು ಕಾಣಬಹುದು. ಆದರೆ ಭೀತಿ ನೀಗಿದ ಬಳಿಕ ಅದೇ ಜನರು ಯುದ್ಧಾಸ್ತಿಯ ಬಗ್ಗೆ ನಿಮ್ಮ ವಿರುದ್ಧ ದುರಾಶೆ ಯಿಟ್ಟುಕೊಂಡು ಹರಿತವಾದ ನಾಲಗೆಯಿಂದ ನಿಮ್ಮ ಸ್ಥೈರ್ಯ ಕೆಡಿಸುತ್ತಾರೆ. ಅವರು ಸತ್ಯ ವಿಶ್ವಾಸವನ್ನು ಸ್ವೀಕರಿಸಲಿಲ್ಲ. ಹೀಗಾಗಿ ಅಲ್ಲಾಹನು ಅವರ ಕರ್ಮಗಳನ್ನು ಹರಿದೊಗೆದನು. ಇದು ಅಲ್ಲಾಹನಿಗೆ ಬಹಳ ಸುಲಭದ ಕಾರ್ಯ.

Verse 20

يَحْسَبُونَ ٱلْأَحْزَابَ لَمْ يَذْهَبُوا۟ ۖ وَإِن يَأْتِ ٱلْأَحْزَابُ يَوَدُّوا۟ لَوْ أَنَّهُم بَادُونَ فِى ٱلْأَعْرَابِ يَسْـَٔلُونَ عَنْ أَنۢبَآئِكُمْ ۖ وَلَوْ كَانُوا۟ فِيكُم مَّا قَـٰتَلُوٓا۟ إِلَّا قَلِيلًا

Transliteration yaḥsabūna l-aḥzāba lam yadhhabū wa-in yati l-aḥzābu yawaddū law annahum bādūna fī l-aʿrābi yasalūna ʿan anbāikum walaw kānū fīkum mā qātalū illā qalīlan

Kannada ಸಂಘ ಸೇನೆಗಳು ಇನ್ನೂ ಹೋಗಿಲ್ಲವೆಂದು ಇವರು (ಕಪಟಿಗಳು) ಭಾವಿಸುತ್ತಾರೆ. ಇನ್ನು ಸಂಘ ಸೇನೆಗಳು ಪುನಃ ದಂಡೆತ್ತಿ ಬಂದರೆ ಹಳ್ಳಿಗರ ನಡುವೆ ನೆಲೆಸಿ ನಿಮ್ಮ ಸ್ಥಿತಿಗತಿಗಳನ್ನು ವಿಚಾರಿಸಿ ಕೊಂಡು ಇರಬಹುದೆಂದು ಅವರಿಗೆ ಅನಿಸುತ್ತದೆ. ಒಂದು ವೇಳೆ ಅವರು ನಿಮ್ಮ ಜೊತೆಗಿದ್ದರೂ ಅಲ್ಪ ಮಾತ್ರವಲ್ಲದೆ ಯುದ್ಧ ಮಾಡಲಾರರು.

Verse 21

لَّقَدْ كَانَ لَكُمْ فِى رَسُولِ ٱللَّهِ أُسْوَةٌ حَسَنَةٌ لِّمَن كَانَ يَرْجُوا۟ ٱللَّهَ وَٱلْيَوْمَ ٱلْـَٔاخِرَ وَذَكَرَ ٱللَّهَ كَثِيرًا

Transliteration laqad kāna lakum fī rasūli l-lahi us'watun ḥasanatun liman kāna yarjū l-laha wal-yawma l-ākhira wadhakara l-laha kathīran

Kannada ಅಲ್ಲಾಹನ ಸಂದೇಶವಾಹಕರಲ್ಲಿ ಖಂಡಿತ ನಿಮಗೆ ಅತ್ಯುತ್ತಮ ಮಾದರಿ ಇದೆ . ಇದು ಅಲ್ಲಾಹು ಹಾಗೂ ಅಂತಿಮ ದಿನವನ್ನು ನಿರೀಕ್ಷಿಸುವವನಿಗೆ (ಭಯಪಡುವವನಿಗೆ) ಮತ್ತು ಅಲ್ಲಾಹನನ್ನು ಬಹಳವಾಗಿ ಸ್ಮರಿಸುವವನಿಗೆ.

Verse 22

وَلَمَّا رَءَا ٱلْمُؤْمِنُونَ ٱلْأَحْزَابَ قَالُوا۟ هَـٰذَا مَا وَعَدَنَا ٱللَّهُ وَرَسُولُهُۥ وَصَدَقَ ٱللَّهُ وَرَسُولُهُۥ ۚ وَمَا زَادَهُمْ إِلَّآ إِيمَـٰنًا وَتَسْلِيمًا

Transliteration walammā raā l-mu'minūna l-aḥzāba qālū hādhā mā waʿadanā l-lahu warasūluhu waṣadaqa l-lahu warasūluhu wamā zādahum illā īmānan wataslīman

Kannada ಸತ್ಯವಿಶ್ವಾಸಿಗಳು ಸಂಘ ಸೇನೆಗಳನ್ನು ಕಂಡಾಗ ``ಇದುವೇ ಅಲ್ಲಾಹು ಮತ್ತು ಪೈಗಂಬರರು ನಮಗೆ ವಾಗ್ದಾನ ಮಾಡಿದ್ದುದು. ಅಲ್ಲಾಹು ಮತ್ತು ಅವನ ಸಂದೇಶವಾಹಕರ ಮಾತು ನಿಜವಾಗಿತ್ತು” ಎಂದು ಹೇಳಿದರು. ಈ ವಾಗ್ದಾನವು ಅವರ ಸತ್ಯವಿಶ್ವಾಸವನ್ನೂ ಅವರ ಸಮರ್ಪಣೆಯನ್ನೂ ಇನ್ನಷ್ಟು ಹೆಚ್ಚಿಸಿತು .

Verse 23

مِّنَ ٱلْمُؤْمِنِينَ رِجَالٌ صَدَقُوا۟ مَا عَـٰهَدُوا۟ ٱللَّهَ عَلَيْهِ ۖ فَمِنْهُم مَّن قَضَىٰ نَحْبَهُۥ وَمِنْهُم مَّن يَنتَظِرُ ۖ وَمَا بَدَّلُوا۟ تَبْدِيلًا

Transliteration mina l-mu'minīna rijālun ṣadaqū mā ʿāhadū l-laha ʿalayhi famin'hum man qaḍā naḥbahu wamin'hum man yantaẓiru wamā baddalū tabdīlan

Kannada ಅಲ್ಲಾಹನೊಡನೆ ಮಾಡಿದ ಕರಾರನ್ನು ನಿಜ ವೆಂದು ಸಾಧಿಸಿ ತೋರಿಸಿದ ಕೆಲವು ಪುರುಷರು ಸತ್ಯವಿಶ್ವಾಸಿ ಗಳಲ್ಲಿದ್ದಾರೆ. ಅವರಲ್ಲಿ ಕೆಲವರು (ಹುತಾತ್ಮರಾಗುವೆವು ಎಂಬ) ತಮ್ಮ ಹರಕೆಯನ್ನು ಸಂದಾಯ ಮಾಡಿದರು. ಇನ್ನು ಕೆಲವರು ಸಮಯ ಕಾಯುವವರು. ಅವರು ತಮ್ಮ ಕರಾರಿನಲ್ಲಿ ಏನೂ ಬದಲಾವಣೆ ಮಾಡಲಿಲ್ಲ.

Verse 24

لِّيَجْزِىَ ٱللَّهُ ٱلصَّـٰدِقِينَ بِصِدْقِهِمْ وَيُعَذِّبَ ٱلْمُنَـٰفِقِينَ إِن شَآءَ أَوْ يَتُوبَ عَلَيْهِمْ ۚ إِنَّ ٱللَّهَ كَانَ غَفُورًا رَّحِيمًا

Transliteration liyajziya l-lahu l-ṣādiqīna biṣid'qihim wayuʿadhiba l-munāfiqīna in shāa aw yatūba ʿalayhim inna l-laha kāna ghafūran raḥīman

Kannada ಅಲ್ಲಾಹು ಸತ್ಯಸಂಧರಿಗೆ ಅವರ ಸತ್ಯಸಂಧತೆಯ ಸತ್ಫಲ ನೀಡಲಿಕ್ಕೂ ತಾನಿಚ್ಛಿಸಿದರೆ ಕಪಟವಿಶ್ವಾಸಿ ಗಳನ್ನು ಶಿಕ್ಷಿಸಲಿಕ್ಕೂ ಅಥವಾ ಅವರ ಪಶ್ಚಾತ್ತಾಪ ವನ್ನು ಸ್ವೀಕರಿಸಲಿಕ್ಕೂ (ಇಂಥ ಪರೀಕ್ಷಾ ಘಟ್ಟಗ ಳನ್ನು ಅಲ್ಲಾಹು ಏರ್ಪಡಿಸಿದನು). ನಿಶ್ಚಯವಾಗಿಯೂ ಅಲ್ಲಾಹು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ.

Verse 25

وَرَدَّ ٱللَّهُ ٱلَّذِينَ كَفَرُوا۟ بِغَيْظِهِمْ لَمْ يَنَالُوا۟ خَيْرًا ۚ وَكَفَى ٱللَّهُ ٱلْمُؤْمِنِينَ ٱلْقِتَالَ ۚ وَكَانَ ٱللَّهُ قَوِيًّا عَزِيزًا

Transliteration waradda l-lahu alladhīna kafarū bighayẓihim lam yanālū khayran wakafā l-lahu l-mu'minīna l-qitāla wakāna l-lahu qawiyyan ʿazīzan

Kannada ಅಲ್ಲಾಹನು ಸತ್ಯನಿಷೇಧಿಗಳನ್ನು ಅವರ ಕೋಪ ದೊಂದಿಗೆ (ಯುದ್ಧರಂಗದಿಂದ ಪ್ರಯೋಜನ ಪಡೆಯದೆ) ಮರಳಿ ಕಳುಹಿಸಿದನು. ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಯುದ್ಧವನ್ನು ಸಾಕು ಮಾಡಿದನು. ಅಲ್ಲಾಹು ಪ್ರಬಲನೂ ಅಜೇಯನೂ ಆಗಿರುತ್ತಾನೆ.

Verse 26

وَأَنزَلَ ٱلَّذِينَ ظَـٰهَرُوهُم مِّنْ أَهْلِ ٱلْكِتَـٰبِ مِن صَيَاصِيهِمْ وَقَذَفَ فِى قُلُوبِهِمُ ٱلرُّعْبَ فَرِيقًا تَقْتُلُونَ وَتَأْسِرُونَ فَرِيقًا

Transliteration wa-anzala alladhīna ẓāharūhum min ahli l-kitābi min ṣayāṣīhim waqadhafa fī qulūbihimu l-ruʿ'ba farīqan taqtulūna watasirūna farīqan

Kannada ಗ್ರಂಥದವರಲ್ಲಿ ಅವಿಶ್ವಾಸಿಗಳಿಗೆ ನೆರವಾದವರನ್ನು ಅಲ್ಲಾಹ್ ಅವರ ಕೋಟೆಗಳಿಂದ ಇಳಿಸಿ ತಂದನು ಮತ್ತು ಅವರ ಹೃದಯಗಳಲ್ಲಿ ಭೀತಿಯನ್ನಿರಿಸಿದನು. ಅವರ ಒಂದು ಗುಂಪನ್ನು ನೀವು ವಧಿಸಿದಿರಿ ಮತ್ತು ಇನ್ನೊಂದು ಗುಂಪನ್ನು ಸೆರೆಹಿಡಿದಿರಿ.

Verse 27

وَأَوْرَثَكُمْ أَرْضَهُمْ وَدِيَـٰرَهُمْ وَأَمْوَٰلَهُمْ وَأَرْضًا لَّمْ تَطَـُٔوهَا ۚ وَكَانَ ٱللَّهُ عَلَىٰ كُلِّ شَىْءٍ قَدِيرًا

Transliteration wa-awrathakum arḍahum wadiyārahum wa-amwālahum wa-arḍan lam taṭaūhā wakāna l-lahu ʿalā kulli shayin qadīran

Kannada ಅವರ ಜಮೀನುಗಳನ್ನು, ಅವರ ಮನೆಗಳನ್ನು ಮತ್ತು ಅವರ ಸಂಪತ್ತುಗಳನ್ನು ಹಾಗೂ ನೀವು (ಈ ತನಕ) ಕಾಲಿಟ್ಟಿರದ ಭೂಭಾಗವನ್ನು ಅವನು ನಿಮಗೆ ಉತ್ತರಾಧಿಕಾರ ಹಕ್ಕನ್ನಾಗಿ ಮಾಡಿ ಕೊಟ್ಟನು. ಅಲ್ಲಾಹನು ಸಕಲ ವಿಷಯಗಳ ಸಾಮಥ್ರ್ಯವುಳ್ಳವನು.

Verse 28

يَـٰٓأَيُّهَا ٱلنَّبِىُّ قُل لِّأَزْوَٰجِكَ إِن كُنتُنَّ تُرِدْنَ ٱلْحَيَوٰةَ ٱلدُّنْيَا وَزِينَتَهَا فَتَعَالَيْنَ أُمَتِّعْكُنَّ وَأُسَرِّحْكُنَّ سَرَاحًا جَمِيلًا

Transliteration yāayyuhā l-nabiyu qul li-azwājika in kuntunna turid'na l-ḥayata l-dun'yā wazīnatahā fataʿālayna umattiʿ'kunna wa-usarriḥ'kunna sarāḥan jamīlan

Kannada ಪೈಗಂಬರರೇ ನಿಮ್ಮ ಪತ್ನಿಯರಿಗೆ ಹೇಳಿರಿ; ನೀವು ಈ ಲೋಕ ಮತ್ತು ಇದರ ಅಲಂಕಾರವನ್ನು ಇಚ್ಛಿಸುತ್ತೀರಾದರೆ, ಬನ್ನಿರಿ. ನಾನು ನಿಮಗೆ `ಮುತ್‍ಅತ್’ (ಮುಕ್ತಿದ್ರವ್ಯ) ಕೊಡಿಸಿ ನಿಮ್ಮನ್ನು ಉತ್ತಮ ರೀತಿಯಲ್ಲಿ ಬೀಳ್ಕೊಡುತ್ತೇನೆ.

Verse 29

وَإِن كُنتُنَّ تُرِدْنَ ٱللَّهَ وَرَسُولَهُۥ وَٱلدَّارَ ٱلْـَٔاخِرَةَ فَإِنَّ ٱللَّهَ أَعَدَّ لِلْمُحْسِنَـٰتِ مِنكُنَّ أَجْرًا عَظِيمًا

Transliteration wa-in kuntunna turid'na l-laha warasūlahu wal-dāra l-ākhirata fa-inna l-laha aʿadda lil'muḥ'sināti minkunna ajran ʿaẓīman

Kannada ನೀವು ಅಲ್ಲಾಹು, ಅವನ ಸಂದೇಶವಾಹಕರು ಮತ್ತು ಪರಲೋಕವನ್ನು ಇಚ್ಚಿಸುತ್ತೀರಾದರೆ, ನಿಮ್ಮಲ್ಲಿ ಗುಣವಂತರಿಗೆ ಅಲ್ಲಾಹು ಘನ ಸತ್ಫಲ ವನ್ನು ಸಿದ್ಧಗೊಳಿಸಿದ್ದಾನೆ.

Verse 30

يَـٰنِسَآءَ ٱلنَّبِىِّ مَن يَأْتِ مِنكُنَّ بِفَـٰحِشَةٍ مُّبَيِّنَةٍ يُضَـٰعَفْ لَهَا ٱلْعَذَابُ ضِعْفَيْنِ ۚ وَكَانَ ذَٰلِكَ عَلَى ٱللَّهِ يَسِيرًا

Transliteration yānisāa l-nabiyi man yati minkunna bifāḥishatin mubayyinatin yuḍāʿaf lahā l-ʿadhābu ḍiʿ'fayni wakāna dhālika ʿalā l-lahi yasīran

Kannada ಪೈಗಂಬರರ ಪತ್ನಿಯರೇ, ನಿಮ್ಮಲ್ಲಿ ಯಾರಾದರೂ ವ್ಯಕ್ತವಾದ ಅಶ್ಲೀಲ ಕಾರ್ಯವೆಸಗಿದರೆ ಅವಳಿಗೆ ಇಮ್ಮಡಿ ಯಾತನೆ ಕೊಡಲಾಗುವುದು. ಇದು ಅಲ್ಲಾಹನಿಗೆ ಅತಿ ಸುಲಭವಾದ ಕೆಲಸ.

Verse 31

۞ وَمَن يَقْنُتْ مِنكُنَّ لِلَّهِ وَرَسُولِهِۦ وَتَعْمَلْ صَـٰلِحًا نُّؤْتِهَآ أَجْرَهَا مَرَّتَيْنِ وَأَعْتَدْنَا لَهَا رِزْقًا كَرِيمًا

Transliteration waman yaqnut minkunna lillahi warasūlihi wataʿmal ṣāliḥan nu'tihā ajrahā marratayni wa-aʿtadnā lahā riz'qan karīman

Kannada ನಿಮ್ಮಲ್ಲಿ ಯಾರು ಅಲ್ಲಾಹು ಮತ್ತು ಅವನ ಸಂದೇ ಶವಾಹಕರ ಅನುಸರಣೆ ಮಾಡುತ್ತಾರೆ, ಮತ್ತು ಸತ್ಕರ್ಮವೆಸಗುತ್ತಾರೆ, ಆಕೆಗೆ ನಾವು ಇಮ್ಮಡಿ ಸತ್ಫಲ ಕೊಡುತ್ತೇವೆ. ನಾವು ಅವಳಿಗೆ ಗೌರವ ಪೂರ್ಣ ಜೀವನಾಧಾರವನ್ನು ಸಿದ್ಧಗೊಳಿಸಿದ್ದೇವೆ.

Verse 32

يَـٰنِسَآءَ ٱلنَّبِىِّ لَسْتُنَّ كَأَحَدٍ مِّنَ ٱلنِّسَآءِ ۚ إِنِ ٱتَّقَيْتُنَّ فَلَا تَخْضَعْنَ بِٱلْقَوْلِ فَيَطْمَعَ ٱلَّذِى فِى قَلْبِهِۦ مَرَضٌ وَقُلْنَ قَوْلًا مَّعْرُوفًا

Transliteration yānisāa l-nabiyi lastunna ka-aḥadin mina l-nisāi ini ittaqaytunna falā takhḍaʿna bil-qawli fayaṭmaʿa alladhī fī qalbihi maraḍun waqul'na qawlan maʿrūfan

Kannada ಪ್ರವಾದಿಯ ಪತ್ನಿಯರೇ, ನೀವು ಬೇರೆ ಸ್ತ್ರೀಯರಂತಲ್ಲ. ನೀವು ಭಯಭಕ್ತಿ (ಸೂಕ್ಷ್ಮತೆ) ಹೊಂದಿದ್ದಲ್ಲಿ. ಆದ್ದರಿಂದ (ಪುರುಷರೊಡನೆ) ಮೃದು ಮಾತು ಆಡದಿರಿ. ಮನದಲ್ಲಿ ರೋಗ ವಿದ್ದವನು ಮೋಹಿಸಿಬಿಟ್ಟಾನು. ನೀವು ಹಸನಾ ದ ನುಡಿಯನ್ನಾಡಿರಿ.

Verse 33

وَقَرْنَ فِى بُيُوتِكُنَّ وَلَا تَبَرَّجْنَ تَبَرُّجَ ٱلْجَـٰهِلِيَّةِ ٱلْأُولَىٰ ۖ وَأَقِمْنَ ٱلصَّلَوٰةَ وَءَاتِينَ ٱلزَّكَوٰةَ وَأَطِعْنَ ٱللَّهَ وَرَسُولَهُۥٓ ۚ إِنَّمَا يُرِيدُ ٱللَّهُ لِيُذْهِبَ عَنكُمُ ٱلرِّجْسَ أَهْلَ ٱلْبَيْتِ وَيُطَهِّرَكُمْ تَطْهِيرًا

Transliteration waqarna fī buyūtikunna walā tabarrajna tabarruja l-jāhiliyati l-ūlā wa-aqim'na l-ṣalata waātīna l-zakata wa-aṭiʿ'na l-laha warasūlahu innamā yurīdu l-lahu liyudh'hiba ʿankumu l-rij'sa ahla l-bayti wayuṭahhirakum taṭhīran

Kannada ನಿಮ್ಮ ಮನೆಗಳಲ್ಲೇ ಅಡಗಿದ್ದು ಕೊಳ್ಳಿರಿ. ಗತ ಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನದಂತೆ ನೀವು ಮೈಮಾಟವನ್ನು ಪ್ರದರ್ಶಿಸಬೇಡಿರಿ. ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ, ಅಲ್ಲಾಹು ಮತ್ತು ಅವನ ರಸೂಲರನ್ನು ಅನುಸರಿಸಿರಿ. ರಸೂಲರ ಮನೆಯವರೇ, ನಿಮ್ಮಿಂದ ಮಾಲಿನ್ಯವನ್ನು ದೂರೀಕರಿಸಲು ಮತ್ತು ನಿಮ್ಮನ್ನು ಚೆನ್ನಾಗಿ ಶುದ್ಧಿಗೊಳಿಸಲು ಅಲ್ಲಾಹು ಇಚ್ಚಿಸುತ್ತಾನೆ.

Verse 34

وَٱذْكُرْنَ مَا يُتْلَىٰ فِى بُيُوتِكُنَّ مِنْ ءَايَـٰتِ ٱللَّهِ وَٱلْحِكْمَةِ ۚ إِنَّ ٱللَّهَ كَانَ لَطِيفًا خَبِيرًا

Transliteration wa-udh'kur'na mā yut'lā fī buyūtikunna min āyāti l-lahi wal-ḥik'mati inna l-laha kāna laṭīfan khabīran

Kannada ನಿಮ್ಮ ಮನೆಗಳಲ್ಲಿ ಓದಿ ಹೇಳಲಾಗುತ್ತಿರುವ ಅಲ್ಲಾಹನ ಸೂಕ್ತಗಳನ್ನೂ ಯುಕ್ತಿಪೂರ್ಣ ಜ್ಞಾನಗಳನ್ನೂ ಚೆನ್ನಾಗಿ ನೆನಪಿಡಿರಿ. ಅಲ್ಲಾಹು ಸೂಕ್ಷ್ಮಜ್ಞನೂ ವಿವರಪೂರ್ಣನೂ ಆಗಿರುತ್ತಾನೆ.

Verse 35

إِنَّ ٱلْمُسْلِمِينَ وَٱلْمُسْلِمَـٰتِ وَٱلْمُؤْمِنِينَ وَٱلْمُؤْمِنَـٰتِ وَٱلْقَـٰنِتِينَ وَٱلْقَـٰنِتَـٰتِ وَٱلصَّـٰدِقِينَ وَٱلصَّـٰدِقَـٰتِ وَٱلصَّـٰبِرِينَ وَٱلصَّـٰبِرَٰتِ وَٱلْخَـٰشِعِينَ وَٱلْخَـٰشِعَـٰتِ وَٱلْمُتَصَدِّقِينَ وَٱلْمُتَصَدِّقَـٰتِ وَٱلصَّـٰٓئِمِينَ وَٱلصَّـٰٓئِمَـٰتِ وَٱلْحَـٰفِظِينَ فُرُوجَهُمْ وَٱلْحَـٰفِظَـٰتِ وَٱلذَّٰكِرِينَ ٱللَّهَ كَثِيرًا وَٱلذَّٰكِرَٰتِ أَعَدَّ ٱللَّهُ لَهُم مَّغْفِرَةً وَأَجْرًا عَظِيمًا

Transliteration inna l-mus'limīna wal-mus'limāti wal-mu'minīna wal-mu'mināti wal-qānitīna wal-qānitāti wal-ṣādiqīna wal-ṣādiqāti wal-ṣābirīna wal-ṣābirāti wal-khāshiʿīna wal-khāshiʿāti wal-mutaṣadiqīna wal-mutaṣadiqāti wal-ṣāimīna wal-ṣāimāti wal-ḥāfiẓīna furūjahum wal-ḥāfiẓāti wal-dhākirīna l-laha kathīran wal-dhākirāti aʿadda l-lahu lahum maghfiratan wa-ajran ʿaẓīman

Kannada ನಿಶ್ಚಯವಾಗಿಯೂ ಅನುಸರಣಶೀಲರು, ಅನು ಸರಣಶೀಲೆಯರು, ಸತ್ಯವಿಶ್ವಾಸಿಗಳು, ಸತ್ಯ ವಿಶ್ವಾಸಿನಿಯರು, ಭಕ್ತರು, ಭಕ್ತೆಯರು, ಸತ್ಯವಂತರು, ಸತ್ಯವಂತೆಯರು, ಸಹನಶೀಲರು, ಸಹನ ಶೀಲೆಯರು, ವಿನಮ್ರರು, ವಿನಮ್ರೆಯರು, ದಾನಶೀಲರು, ದಾನಶೀಲೆಯರು, ವ್ರತಧಾರಿಗಳು, ವೃತ ಧಾರಿಣಿಗಳು, ತಮ್ಮ ಗುಪ್ತಾಂಗಗಳ ಚಾರಿತ್ರ್ಯ ಸಂರಕ್ಷಕರು, ಸಂರಕ್ಷಕಿಯರು, ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವ ಪುರುಷರು ಮತ್ತು ಸ್ತ್ರೀಯರಿಗೆ ಅಲ್ಲಾಹನು ಕ್ಷಮಾಧಾನ ಮತ್ತು ಅತಿ ದೊಡ್ಡ ಸತ್ಫಲವನ್ನು ಸಿದ್ಧಗೊಳಿಸಿದ್ದಾನೆ.

Verse 36

وَمَا كَانَ لِمُؤْمِنٍ وَلَا مُؤْمِنَةٍ إِذَا قَضَى ٱللَّهُ وَرَسُولُهُۥٓ أَمْرًا أَن يَكُونَ لَهُمُ ٱلْخِيَرَةُ مِنْ أَمْرِهِمْ ۗ وَمَن يَعْصِ ٱللَّهَ وَرَسُولَهُۥ فَقَدْ ضَلَّ ضَلَـٰلًا مُّبِينًا

Transliteration wamā kāna limu'minin walā mu'minatin idhā qaḍā l-lahu warasūluhu amran an yakūna lahumu l-khiyaratu min amrihim waman yaʿṣi l-laha warasūlahu faqad ḍalla ḍalālan mubīnan

Kannada ಅಲ್ಲಾಹು ಮತ್ತು ಅವನ ಸಂದೇಶವಾಹಕರು ಒಂದು ವಿಷಯದ ತೀರ್ಮಾನ ಮಾಡಿದರೆ ಆ ವಿಷಯದಲ್ಲಿ ಸ್ವತಃ ತೀರ್ಮಾನ ಕೈಗೊಳ್ಳುವ ಹಕ್ಕು ಸತ್ಯವಿಶ್ವಾಸಿಗಳಾದ ಯಾವ ಸ್ತ್ರೀ ಪುರುಷರಿಗೂ ಇಲ್ಲ. ಯಾರಾದರೂ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞೋಲ್ಲಂಘನೆ ಮಾಡಿದರೆ, ಅವನು ಸುವ್ಯಕ್ತ ಪಥಭ್ರಷ್ಟತೆಗೆ ಒಳಗಾದನು.

Verse 37

وَإِذْ تَقُولُ لِلَّذِىٓ أَنْعَمَ ٱللَّهُ عَلَيْهِ وَأَنْعَمْتَ عَلَيْهِ أَمْسِكْ عَلَيْكَ زَوْجَكَ وَٱتَّقِ ٱللَّهَ وَتُخْفِى فِى نَفْسِكَ مَا ٱللَّهُ مُبْدِيهِ وَتَخْشَى ٱلنَّاسَ وَٱللَّهُ أَحَقُّ أَن تَخْشَىٰهُ ۖ فَلَمَّا قَضَىٰ زَيْدٌ مِّنْهَا وَطَرًا زَوَّجْنَـٰكَهَا لِكَىْ لَا يَكُونَ عَلَى ٱلْمُؤْمِنِينَ حَرَجٌ فِىٓ أَزْوَٰجِ أَدْعِيَآئِهِمْ إِذَا قَضَوْا۟ مِنْهُنَّ وَطَرًا ۚ وَكَانَ أَمْرُ ٱللَّهِ مَفْعُولًا

Transliteration wa-idh taqūlu lilladhī anʿama l-lahu ʿalayhi wa-anʿamta ʿalayhi amsik ʿalayka zawjaka wa-ittaqi l-laha watukh'fī fī nafsika mā l-lahu mub'dīhi watakhshā l-nāsa wal-lahu aḥaqqu an takhshāhu falammā qaḍā zaydun min'hā waṭaran zawwajnākahā likay lā yakūna ʿalā l-mu'minīna ḥarajun fī azwāji adʿiyāihim idhā qaḍaw min'hunna waṭaran wakāna amru l-lahi mafʿūlan

Kannada (ಪೈಗಂಬರರೇ,) ಅಲ್ಲಾಹನೂ ನೀವೂ ಅನುಗ್ರಹ ನೀಡಿದ ವ್ಯಕ್ತಿಯನ್ನುದ್ದೇಶಿಸಿ ನೀವು, ‘ನಿನ್ನ ಪತ್ನಿಯನ್ನು (ತಲಾಖ್ ನೀಡದೆ) ತಡೆದಿರಿಸು ಮತ್ತು ಅಲ್ಲಾಹನನ್ನು ಭಯಪಡು’ ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಅಲ್ಲಾಹು ಬಹಿರಂಗಗೊಳಿಸಲು ಇಚ್ಚಿಸಿದ್ದ ವಿಷಯವನ್ನು ನೀವು ನಿಮ್ಮ ಹೃದಯದೊಳಗೆ ಬಚ್ಚಿಟ್ಟಿದ್ದಿರಿ. ಜನರಿಗೆ ಹೆದರಿದಿರಿ. ನಿಜವಾಗಿ ತಮಗೆ ಭಯ ಪಡಲು ಹೆಚ್ಚು ಅರ್ಹನು ಅಲ್ಲಾಹು ಆಗಿರುವನು. ತದನಂತರ ಝೈದ್ ಅವಳಿಂದ ತನ್ನ ಅಪೇಕ್ಷೆಯನ್ನು ಪೂರ್ತಿಗೊಳಿಸಿಕೊಂಡ ಬಳಿಕ ಅವಳ ವಿವಾಹವನ್ನು ನಾವು ನಿಮ್ಮೊಂದಿಗೆ ಮಾಡಿದೆವು. ಇದು ದತ್ತು ಪುತ್ರರ ಪತ್ನಿಯರನ್ನು ವಿವಾಹವಾಗುವುದರಲ್ಲಿ - ಅವರು ತಮ್ಮ ಪತ್ನಿಯರೊಂದಿಗೆ ತಮ್ಮ ಅಪೇಕ್ಷೆ ಪೂರ್ತಿಗೊಳಿಸಿಕೊಂಡ ಬಳಿಕ - ಸತ್ಯವಿಶ್ವಾಸಿಗಳಿಗೆ ಯಾವುದೇ ಅಡಚಣೆ ಇಲ್ಲದಂತಾಗಲಿಕ್ಕಾಗಿ ಆಗಿದೆ. ಅಲ್ಲಾಹನ ಆಜ್ಞೆ ಜಾರಿಗೆ ಬಂದೇ ತೀರುವುದು.

Verse 38

مَّا كَانَ عَلَى ٱلنَّبِىِّ مِنْ حَرَجٍ فِيمَا فَرَضَ ٱللَّهُ لَهُۥ ۖ سُنَّةَ ٱللَّهِ فِى ٱلَّذِينَ خَلَوْا۟ مِن قَبْلُ ۚ وَكَانَ أَمْرُ ٱللَّهِ قَدَرًا مَّقْدُورًا

Transliteration mā kāna ʿalā l-nabiyi min ḥarajin fīmā faraḍa l-lahu lahu sunnata l-lahi fī alladhīna khalaw min qablu wakāna amru l-lahi qadaran maqdūran

Kannada ತನಗೆ ಅಲ್ಲಾಹನು ನಿಶ್ಚಯಿಸಿದ (ಅನುಮತಿಸಿದ) ಕಾರ್ಯವನ್ನು ಮಾಡುವುದರಲ್ಲಿ ಪ್ರವಾದಿಗೆ ಯಾವ ತಪ್ಪೂ ಇಲ್ಲ. ಹಿಂದೆ ಗತಿಸಿಹೋಗಿದ್ದ ಪ್ರವಾದಿಗಳ ವಿಷಯದಲ್ಲೂ ಅಲ್ಲಾಹು ಜಾರಿ ಮಾಡಿದ ಆತನ ರೂಢಿ ಇದೇ ಆಗಿತ್ತು. ಅಲ್ಲಾಹನ ಆಜ್ಞೆಯು ನಿರ್ಧರಿಸಲಾದ ಖಚಿತ ತೀರ್ಪಾಗಿರುತ್ತದೆ.

Verse 39

ٱلَّذِينَ يُبَلِّغُونَ رِسَـٰلَـٰتِ ٱللَّهِ وَيَخْشَوْنَهُۥ وَلَا يَخْشَوْنَ أَحَدًا إِلَّا ٱللَّهَ ۗ وَكَفَىٰ بِٱللَّهِ حَسِيبًا

Transliteration alladhīna yuballighūna risālāti l-lahi wayakhshawnahu walā yakhshawna aḥadan illā l-laha wakafā bil-lahi ḥasīban

Kannada ಅಂದರೆ ಅಲ್ಲಾಹನ ಸಂದೇಶಗಳನ್ನು ತಲುಪಿಸುವ, ಅವನನ್ನೇ ಭಯಪಡುವ ಮತ್ತು ಅಲ್ಲಾ ಹನ ಹೊರತು ಯಾರನ್ನೂ ಭಯಪಡದವರಿಗೆ (ಇರುವ ಅಲ್ಲಾಹನ ನಿಯಮವಿದು) ನಿಗಾ ಇಟ್ಟುಕೊಳ್ಳಲು ಅಲ್ಲಾಹನೇ ಸಾಕು.

Verse 40

مَّا كَانَ مُحَمَّدٌ أَبَآ أَحَدٍ مِّن رِّجَالِكُمْ وَلَـٰكِن رَّسُولَ ٱللَّهِ وَخَاتَمَ ٱلنَّبِيِّـۧنَ ۗ وَكَانَ ٱللَّهُ بِكُلِّ شَىْءٍ عَلِيمًا

Transliteration mā kāna muḥammadun abā aḥadin min rijālikum walākin rasūla l-lahi wakhātama l-nabiyīna wakāna l-lahu bikulli shayin ʿalīman

Kannada ಮುಹಮ್ಮದರು ನಿಮ್ಮ ಪುರುಷರ ಪೈಕಿ ಯಾರದೇ ತಂದೆಯಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾ ಹಕರು ಮತ್ತು ಪ್ರವಾದಿಗಳಲ್ಲಿ ಕೊನೆಯವರು. ಅಲ್ಲಾಹು ಸಕಲ ವಸ್ತುಗಳ ಪರಿಜ್ಞಾನವುಳ್ಳವನು.

Verse 41

يَـٰٓأَيُّهَا ٱلَّذِينَ ءَامَنُوا۟ ٱذْكُرُوا۟ ٱللَّهَ ذِكْرًا كَثِيرًا

Transliteration yāayyuhā alladhīna āmanū udh'kurū l-laha dhik'ran kathīran

Kannada ಸತ್ಯವಿಶ್ವಾಸಿಗಳೇ, ಅಲ್ಲಾಹನನ್ನು ಬಹಳವಾಗಿ ಸ್ಮರಿಸಿರಿ.

Verse 42

وَسَبِّحُوهُ بُكْرَةً وَأَصِيلًا

Transliteration wasabbiḥūhu buk'ratan wa-aṣīlan

Kannada ಬೆಳಗು ಬೈಗುಗಳಲ್ಲಿ ಅವನ ಪರಿಶುದ್ಧತೆಯನ್ನು ಪ್ರಕೀರ್ತಿಸಿರಿ.

Verse 43

هُوَ ٱلَّذِى يُصَلِّى عَلَيْكُمْ وَمَلَـٰٓئِكَتُهُۥ لِيُخْرِجَكُم مِّنَ ٱلظُّلُمَـٰتِ إِلَى ٱلنُّورِ ۚ وَكَانَ بِٱلْمُؤْمِنِينَ رَحِيمًا

Transliteration huwa alladhī yuṣallī ʿalaykum wamalāikatuhu liyukh'rijakum mina l-ẓulumāti ilā l-nūri wakāna bil-mu'minīna raḥīman

Kannada ಅವನು ನಿಮಗೆ ಅನುಗ್ರಹ ನೀಡುತ್ತಿದ್ದಾನೆ. ಅವನ ದೇವಚರರು ನಿಮಗಾಗಿ ದಯಾ ಪ್ರಾರ್ಥನೆ ಮಾಡುತ್ತಿದ್ದಾರೆ. ನಿಮ್ಮನ್ನು ಕತ್ತಲೆಗಳಿಂದ ಬೆಳಕಿನೆಡೆಗೆ ಸಾಗಿಸುವ ಸಲುವಾಗಿ! ಅವನು ಸತ್ಯವಿಶ್ವಾಸಿಗಳ ಮೇಲೆ ತುಂಬಾ ಕರುಣೆ ಯುಳ್ಳವನು.

Verse 44

تَحِيَّتُهُمْ يَوْمَ يَلْقَوْنَهُۥ سَلَـٰمٌ ۚ وَأَعَدَّ لَهُمْ أَجْرًا كَرِيمًا

Transliteration taḥiyyatuhum yawma yalqawnahu salāmun wa-aʿadda lahum ajran karīman

Kannada ಅವನನ್ನು ಅವರು ಬೇಟಿಯಾಗುವ ದಿನ ಅವನಿಂದ ಅವರಿಗೆ ದೊರೆಯುವ ಅಭಿವಾದ್ಯವು `ಸಲಾಮ್’ ಆಗಿರುವುದು. ಅಲ್ಲಾಹನು ಅವರಿಗೆ ಅತ್ಯಂತ ಗೌರವಪೂರ್ಣ ಸತ್ಫಲವನ್ನು ಸಿದ್ಧಗೊಳಿಸಿದ್ದಾನೆ.

Verse 45

يَـٰٓأَيُّهَا ٱلنَّبِىُّ إِنَّآ أَرْسَلْنَـٰكَ شَـٰهِدًا وَمُبَشِّرًا وَنَذِيرًا

Transliteration yāayyuhā l-nabiyu innā arsalnāka shāhidan wamubashiran wanadhīran

Kannada ಓ ಪ್ರವಾದಿವರ್ಯರೇ, ನಾವು ನಿಮ್ಮನ್ನು ಸಾಕ್ಷಿದಾರರಾಗಿಯೂ ಸುವಾರ್ತೆಗಾರನಾಗಿಯೂ ತಾಕೀತು ಗಾರನಾಗಿಯೂ ಮಾಡಿ ಕಳುಹಿಸಿರುತ್ತೇವೆ.

Verse 46

وَدَاعِيًا إِلَى ٱللَّهِ بِإِذْنِهِۦ وَسِرَاجًا مُّنِيرًا

Transliteration wadāʿiyan ilā l-lahi bi-idh'nihi wasirājan munīran

Kannada ಅಲ್ಲಾಹನ ಅನುಮತಿಯಿಂದ ಅವನ ಕಡೆಗೆ ಕರೆ ನೀಡುವವರಾಗಿಯೂ ಪ್ರಕಾಶಮಯ ಜ್ಯೋತಿಯಾಗಿಯೂ (ಮಾಡಿ ಕಳುಹಿಸಿರುತ್ತೇವೆ.)

Verse 47

وَبَشِّرِ ٱلْمُؤْمِنِينَ بِأَنَّ لَهُم مِّنَ ٱللَّهِ فَضْلًا كَبِيرًا

Transliteration wabashiri l-mu'minīna bi-anna lahum mina l-lahi faḍlan kabīran

Kannada ಅಲ್ಲಾಹನ ಕಡೆಯಿಂದ ಅವರಿಗಾಗಿ ಮಹಾ ಔದಾರ್ಯವಿದೆ ಎಂಬ ಸುವಾರ್ತೆಯನ್ನು ಸತ್ಯ ವಿಶ್ವಾಸಿಗಳಿಗೆ ನೀಡಿರಿ.

Verse 48

وَلَا تُطِعِ ٱلْكَـٰفِرِينَ وَٱلْمُنَـٰفِقِينَ وَدَعْ أَذَىٰهُمْ وَتَوَكَّلْ عَلَى ٱللَّهِ ۚ وَكَفَىٰ بِٱللَّهِ وَكِيلًا

Transliteration walā tuṭiʿi l-kāfirīna wal-munāfiqīna wadaʿ adhāhum watawakkal ʿalā l-lahi wakafā bil-lahi wakīlan

Kannada ಸತ್ಯನಿಷೇಧಿಗಳನ್ನೂ ಕಪಟವಿಶ್ವಾಸಿಗಳನ್ನೂ ಅನುಸರಿಸಬೇಡಿರಿ. ಅವರ ಕಿರುಕುಳಗಳನ್ನು ಕಡೆಗಣಿಸಿರಿ. ಅಲ್ಲಾಹನ ಮೇಲೆ ಭರವಸೆ ಇಡಿರಿ. ಹೊಣೆ ಒಪ್ಪಿಸಲು ಅಲ್ಲಾಹನೇ ಸಾಕು.

Verse 49

يَـٰٓأَيُّهَا ٱلَّذِينَ ءَامَنُوٓا۟ إِذَا نَكَحْتُمُ ٱلْمُؤْمِنَـٰتِ ثُمَّ طَلَّقْتُمُوهُنَّ مِن قَبْلِ أَن تَمَسُّوهُنَّ فَمَا لَكُمْ عَلَيْهِنَّ مِنْ عِدَّةٍ تَعْتَدُّونَهَا ۖ فَمَتِّعُوهُنَّ وَسَرِّحُوهُنَّ سَرَاحًا جَمِيلًا

Transliteration yāayyuhā alladhīna āmanū idhā nakaḥtumu l-mu'mināti thumma ṭallaqtumūhunna min qabli an tamassūhunna famā lakum ʿalayhinna min ʿiddatin taʿtaddūnahā famattiʿūhunna wasarriḥūhunna sarāḥan jamīlan

Kannada ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿನಿಯರನ್ನು ವರಿಸಿ, ಅವರನ್ನು ಸ್ಪರ್ಶಿಸುವ ಮುನ್ನ ವಿವಾಹ ವಿಚ್ಚೇದನೆ ನೀಡಿದರೆ ಅವರ ಮೇಲೆ ಎಣಿಸಿ ಲೆಕ್ಕ ಮಾಡಬೇಕಾದ ಯಾವುದೇ ಇದ್ದತ್ ಆಚರಿಸುವ ಭಾದ್ಯತೆ ಅವರಿಗೆ ಇರುವುದಿಲ್ಲ. ಆದುದರಿಂದ ಅವರಿಗೆ ಮುಕ್ತಿ ದ್ರವ್ಯ ನೀಡಿರಿ ಮತ್ತು ಉತ್ತಮ ರೀತಿಯಿಂದ ಸಂಬಂಧ ವಿಚ್ಚೇದನೆ ಮಾಡಿ ಬೀಳ್ಕೊಡಿರಿ.

Verse 50

يَـٰٓأَيُّهَا ٱلنَّبِىُّ إِنَّآ أَحْلَلْنَا لَكَ أَزْوَٰجَكَ ٱلَّـٰتِىٓ ءَاتَيْتَ أُجُورَهُنَّ وَمَا مَلَكَتْ يَمِينُكَ مِمَّآ أَفَآءَ ٱللَّهُ عَلَيْكَ وَبَنَاتِ عَمِّكَ وَبَنَاتِ عَمَّـٰتِكَ وَبَنَاتِ خَالِكَ وَبَنَاتِ خَـٰلَـٰتِكَ ٱلَّـٰتِى هَاجَرْنَ مَعَكَ وَٱمْرَأَةً مُّؤْمِنَةً إِن وَهَبَتْ نَفْسَهَا لِلنَّبِىِّ إِنْ أَرَادَ ٱلنَّبِىُّ أَن يَسْتَنكِحَهَا خَالِصَةً لَّكَ مِن دُونِ ٱلْمُؤْمِنِينَ ۗ قَدْ عَلِمْنَا مَا فَرَضْنَا عَلَيْهِمْ فِىٓ أَزْوَٰجِهِمْ وَمَا مَلَكَتْ أَيْمَـٰنُهُمْ لِكَيْلَا يَكُونَ عَلَيْكَ حَرَجٌ ۗ وَكَانَ ٱللَّهُ غَفُورًا رَّحِيمًا

Transliteration yāayyuhā l-nabiyu innā aḥlalnā laka azwājaka allātī ātayta ujūrahunna wamā malakat yamīnuka mimmā afāa l-lahu ʿalayka wabanāti ʿammika wabanāti ʿammātika wabanāti khālika wabanāti khālātika allātī hājarna maʿaka wa-im'ra-atan mu'minatan in wahabat nafsahā lilnnabiyyi in arāda l-nabiyu an yastankiḥahā khāliṣatan laka min dūni l-mu'minīna qad ʿalim'nā mā faraḍnā ʿalayhim fī azwājihim wamā malakat aymānuhum likaylā yakūna ʿalayka ḥarajun wakāna l-lahu ghafūran raḥīman

Kannada ಓ ನಬಿವರ್ಯರೇ, ತಾವು ಮಹ್ರ್ ಕೊಟ್ಟಿರುವ ನಿಮ್ಮ ಪತ್ನಿಯರನ್ನೂ ಅಲ್ಲಾಹು ಯುದ್ಧದಲ್ಲಿ ವಶಪಡಿಸಿ ಕೊಟ್ಟವರ (ದಾಸಿಯರ) ಪೈಕಿ ನಿಮ್ಮ ಸ್ವಾಧೀನಕ್ಕೆ ಬಂದಿರುವವರನ್ನೂ ನಿಮ್ಮ ಜೊತೆ (ಮದೀನಕ್ಕೆ) ಹಿಜ್ರತ್ ಮಾಡಿರುವ ನಿಮ್ಮ ಪಿತೃವ್ಯ ಪುತ್ರಿಯ ರನ್ನೂ ನಿಮ್ಮ ಸೋದರತ್ತೆಯ ಪುತ್ರಿಯರನ್ನೂ ನಿಮ್ಮ ಸೋದರ ಮಾವನ ಪುತ್ರಿಯರನ್ನೂ ಮತ್ತು ನಿಮ್ಮ ಮಾತೃ ಸೋದರಿಯರ ಪುತ್ರಿಯರನ್ನು ನಾವು ನಿಮಗೆ ಧರ್ಮಸಮ್ಮತಗೊಳಿಸಿದ್ದೇವೆ. ಸತ್ಯವಿಶ್ವಾಸಿ ಮಹಿಳೆ ಯೊಬ್ಬಳು ತನ್ನ ದೇಹವನ್ನು ಪ್ರವಾದಿಗೆ ದಾನವಾಗಿ ನೀಡಿದರೆ, ಪ್ರವಾದಿಯು ಅವಳನ್ನು ವಿವಾಹವಾಗಲು ಇಚ್ಚಿಸಿದರೆ ಬೇರೆ ಸತ್ಯವಿಶ್ವಾಸಿಗಳಿಗೇನೂ ಅನ್ವಯವಾಗದ, ತಮಗಾಗಿ ಮಾತ್ರವಿರುವ ನೆಲೆಯಲ್ಲಿ ಅವಳನ್ನೂ ನಾವು ನಿಮಗಾಗಿ ಧರ್ಮ ಸಮ್ಮತಗೊಳಿಸಿರು ತ್ತೇವೆ. ನಾವು ಸತ್ಯವಿಶ್ವಾಸಿಗಳ ಮೇಲೆ ಅವರ ಪತ್ನಿಯರ ಹಾಗೂ ಅವರ ಸ್ವಾಧೀನವಿರುವ ದಾಸಿ ಯರ ವಿಷಯದಲ್ಲಿ ಯಾವ ನಿಯಮಗಳನ್ನು ಹೇರಿರುತ್ತೇವೆ ಎಂಬುದು ನಮಗೆ ಗೊತ್ತಿದೆ. ತಮ್ಮ ಮೇಲೆ ಯಾವ ತೊಡಕೂ ಇಲ್ಲದಿರಲು ಇದನ್ನು ಅನುಮತಿಸಲಾಗಿದೆ. ಅಲ್ಲಾಹು ಕ್ಷಮಾ ಶೀಲನೂ ದಯಾನಿಧಿಯೂ ಆಗಿರುತ್ತಾನೆ.

Verse 51

۞ تُرْجِى مَن تَشَآءُ مِنْهُنَّ وَتُـْٔوِىٓ إِلَيْكَ مَن تَشَآءُ ۖ وَمَنِ ٱبْتَغَيْتَ مِمَّنْ عَزَلْتَ فَلَا جُنَاحَ عَلَيْكَ ۚ ذَٰلِكَ أَدْنَىٰٓ أَن تَقَرَّ أَعْيُنُهُنَّ وَلَا يَحْزَنَّ وَيَرْضَيْنَ بِمَآ ءَاتَيْتَهُنَّ كُلُّهُنَّ ۚ وَٱللَّهُ يَعْلَمُ مَا فِى قُلُوبِكُمْ ۚ وَكَانَ ٱللَّهُ عَلِيمًا حَلِيمًا

Transliteration tur'jī man tashāu min'hunna watu'wī ilayka man tashāu wamani ib'taghayta mimman ʿazalta falā junāḥa ʿalayka dhālika adnā an taqarra aʿyunuhunna walā yaḥzanna wayarḍayna bimā ātaytahunna kulluhunna wal-lahu yaʿlamu mā fī qulūbikum wakāna l-lahu ʿalīman ḥalīman

Kannada ನಿಮ್ಮ ಪತ್ನಿಯರ ಪೈಕಿ ನಿಮಗೆ ಇಷ್ಟವಿದ್ದವರನ್ನು ನಿಮಗೆ ಹಿಂದೆ ನಿಲ್ಲಿಸಲಿಕ್ಕೂ ನಿಮಗೆ ಇಷ್ಟ ಬಂದವರನ್ನು ಹತ್ತಿರಗೊಳಿಸಲಿಕ್ಕೂ ಬೇರೆ ನಿಲ್ಲಿಸಿದ ಬಳಿಕ ನಿಮಗೆ ಇಷ್ಟವಿದ್ದವರನ್ನು ನಿಮ್ಮ ಬಳಿಗೆ ವಾಪಾಸು ಕರೆಸಿಕೊಳ್ಳಲಿಕ್ಕೂ ನಿಮಗೆ ಅಧಿಕಾರವಿದೆ. ನಿಮ್ಮ ಮೇಲೆ ಯಾವುದೇ ತಪ್ಪಿಲ್ಲ. ಅವರ ಕಣ್ಣುಗಳು ತಣಿದಿರಲು, ಅವರು ದುಃಖಿಸದಿರಲು ಮತ್ತು ನೀವು ಅವರಿಗೆ ಕೊಟ್ಟು ದರಲ್ಲಿ ಅವರೆಲ್ಲರೂ ತೃಪ್ತಿಪಡಲು ಅತ್ಯಂತ ಸೂಕ್ತ ದಾರಿಯಿದು. ನಿಮ್ಮ ಹೃದಯಗಳಲ್ಲಿ ಇರುವುದನ್ನು ಅಲ್ಲಾಹು ಅರಿಯುತ್ತಾನೆ. ಅಲ್ಲಾಹು ಸರ್ವಜ್ಞನೂ ಸಹನಶೀಲನೂ ಆಗಿರುತ್ತಾನೆ.

Verse 52

لَّا يَحِلُّ لَكَ ٱلنِّسَآءُ مِنۢ بَعْدُ وَلَآ أَن تَبَدَّلَ بِهِنَّ مِنْ أَزْوَٰجٍ وَلَوْ أَعْجَبَكَ حُسْنُهُنَّ إِلَّا مَا مَلَكَتْ يَمِينُكَ ۗ وَكَانَ ٱللَّهُ عَلَىٰ كُلِّ شَىْءٍ رَّقِيبًا

Transliteration lā yaḥillu laka l-nisāu min baʿdu walā an tabaddala bihinna min azwājin walaw aʿjabaka ḥus'nuhunna illā mā malakat yamīnuka wakāna l-lahu ʿalā kulli shayin raqīban

Kannada ಅವರ ನಂತರ ನಿಮಗೆ ಇತರ ಸ್ತ್ರೀಯರು ಧರ್ಮ ಸಮ್ಮತವಲ್ಲ. ಇವರಿಗೆ ಬದಲು ಇತರ ಪತ್ನಿಯರನ್ನು ಸ್ವೀಕರಿಸಿಕೊಳ್ಳುವುದು - ಅವರ ಸೌಂದರ್ಯವು ತಮ್ಮನ್ನು ಎಷ್ಟೇ ವಿಸ್ಮಯಗೊಳಿಸಿದ್ದರೂ - ಸಮ್ಮತವಲ್ಲ. ಆದರೆ ತಾವು ಅಧೀನಗೊಳಿಸಿದವರ (ದಾಸಿಯರ) ಹೊರತು. ಅಲ್ಲಾಹು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುತ್ತಾನೆ.

Verse 53

يَـٰٓأَيُّهَا ٱلَّذِينَ ءَامَنُوا۟ لَا تَدْخُلُوا۟ بُيُوتَ ٱلنَّبِىِّ إِلَّآ أَن يُؤْذَنَ لَكُمْ إِلَىٰ طَعَامٍ غَيْرَ نَـٰظِرِينَ إِنَىٰهُ وَلَـٰكِنْ إِذَا دُعِيتُمْ فَٱدْخُلُوا۟ فَإِذَا طَعِمْتُمْ فَٱنتَشِرُوا۟ وَلَا مُسْتَـْٔنِسِينَ لِحَدِيثٍ ۚ إِنَّ ذَٰلِكُمْ كَانَ يُؤْذِى ٱلنَّبِىَّ فَيَسْتَحْىِۦ مِنكُمْ ۖ وَٱللَّهُ لَا يَسْتَحْىِۦ مِنَ ٱلْحَقِّ ۚ وَإِذَا سَأَلْتُمُوهُنَّ مَتَـٰعًا فَسْـَٔلُوهُنَّ مِن وَرَآءِ حِجَابٍ ۚ ذَٰلِكُمْ أَطْهَرُ لِقُلُوبِكُمْ وَقُلُوبِهِنَّ ۚ وَمَا كَانَ لَكُمْ أَن تُؤْذُوا۟ رَسُولَ ٱللَّهِ وَلَآ أَن تَنكِحُوٓا۟ أَزْوَٰجَهُۥ مِنۢ بَعْدِهِۦٓ أَبَدًا ۚ إِنَّ ذَٰلِكُمْ كَانَ عِندَ ٱللَّهِ عَظِيمًا

Transliteration yāayyuhā alladhīna āmanū lā tadkhulū buyūta l-nabiyi illā an yu'dhana lakum ilā ṭaʿāmin ghayra nāẓirīna ināhu walākin idhā duʿītum fa-ud'khulū fa-idhā ṭaʿim'tum fa-intashirū walā mus'tanisīna liḥadīthin inna dhālikum kāna yu'dhī l-nabiya fayastaḥyī minkum wal-lahu lā yastaḥyī mina l-ḥaqi wa-idhā sa-altumūhunna matāʿan fasalūhunna min warāi ḥijābin dhālikum aṭharu liqulūbikum waqulūbihinna wamā kāna lakum an tu'dhū rasūla l-lahi walā an tankiḥū azwājahu min baʿdihi abadan inna dhālikum kāna ʿinda l-lahi ʿaẓīman

Kannada ಸತ್ಯವಿಶ್ವಾಸಿಗಳೇ, ನಿಮಗೆ ಊಟಕ್ಕೆ ಅನುಮತಿ ಸಿಕ್ಕಿದರೆ ಹೊರತು, ನೀವು ಪ್ರವಾದಿಯರ ಮನೆಗಳಿಗೆ ಪ್ರವೇಶಿಸದಿರಿ. ಅನುಮತಿ ಸಿಕ್ಕರೂ ಅನ್ನ ಬೇಯುವುದನ್ನು ನಿರೀಕ್ಷಿಸದಿರಿ. ಆದರೆ ನಿಮಗೆ ಅನುಮತಿ ಸಿಕ್ಕಿದರೆ ಪ್ರವೇಶಿಸಿರಿ. ಆಹಾರ ವುಂಡ ಬಳಿಕ ಕೂಡಲೆ ಚದುರಿ ಬಿಡಿರಿ, ಮಾತುಕತೆಯಲ್ಲಿ ಹೊತ್ತು ಕಳೆಯದಿರಿ. ನಿಮ್ಮ ಈ ವರ್ತನೆಗಳು ಪ್ರವಾದಿಯರಿಗೆ ತೊಂದರೆ ಕೊಡುತ್ತಿವೆ. ಆದರೆ ಅವರು ನಿಮ್ಮಿಂದ ಸಂಕೋಚಪಡುತ್ತಾರೆ. (ತೊಂದರೆ ಕೊಟ್ಟರೂ ಏನೂ ಹೇಳಲಾರರು.) ಆದರೆ ಅಲ್ಲಾಹು ಸತ್ಯಸಂಗತಿ ಯನ್ನು ಹೇಳಲು ನಾಚುವುದಿಲ್ಲ. ಪ್ರವಾದಿಯವರ ಸಹ ಧರ್ಮಿಣಿಯರಿಂದ ನಿಮಗೇನಾದರೂ ವಸ್ತು ವನ್ನು ಕೇಳಬೇಕಾಗಿದ್ದರೆ ತೆರೆಯ ಹಿಂದಿನಿಂದ ಪಡೆಯಿರಿ. ಇದು ನಿಮ್ಮ ಹಾಗೂ ಅವರ ಹೃದಯಗಳ ಶುದ್ಧಿಗೆ ಹೆಚ್ಚು ಸೂಕ್ತವಾದ ಕ್ರಮ ವಾಗಿದೆ. ಅಲ್ಲಾಹನ ಸಂದೇಶವಾಹಕರಿಗೆ ತೊಂದರೆ ಕೊಡುವುದು ನಿಮಗೆ ಎಷ್ಟು ಮಾತ್ರಕ್ಕೂ ಸೂಕ್ತವಲ್ಲ. ಅವರ ಕಾಲಾನಂತರ ಅವರ ಪತ್ನಿಯರನ್ನು ವಿವಾಹ ಮಾಡಿಕೊಳ್ಳುವುದು ಎಂದೆಂದಿಗೂ ನಿಮ ಗೆ ಸಮ್ಮತವಾದುದಲ್ಲ. ಇದು ಅಲ್ಲಾಹನ ಬಳಿ ಬಹಳ ಗಂಭೀರ ಕಾರ್ಯ.

Verse 54

إِن تُبْدُوا۟ شَيْـًٔا أَوْ تُخْفُوهُ فَإِنَّ ٱللَّهَ كَانَ بِكُلِّ شَىْءٍ عَلِيمًا

Transliteration in tub'dū shayan aw tukh'fūhu fa-inna l-laha kāna bikulli shayin ʿalīman

Kannada ನೀವು ಯಾವುದನ್ನಾದರೂ ಬಯಲುಗೊಳಿಸಿ ದರೂ ಬಚ್ಚಿಟ್ಟರೂ (ಅದಕ್ಕೆ ಅಲ್ಲಾಹನ ಬಳಿ ಪ್ರತಿ ಫಲವಿದೆ). ಅಲ್ಲಾಹು ಪ್ರತಿಯೊಂದು ವಿಷಯದ ಬಗ್ಗೆ ಸಂಪೂರ್ಣ ಜ್ಞಾನಿಯಾಗಿರುತ್ತಾನೆ.

Verse 55

لَّا جُنَاحَ عَلَيْهِنَّ فِىٓ ءَابَآئِهِنَّ وَلَآ أَبْنَآئِهِنَّ وَلَآ إِخْوَٰنِهِنَّ وَلَآ أَبْنَآءِ إِخْوَٰنِهِنَّ وَلَآ أَبْنَآءِ أَخَوَٰتِهِنَّ وَلَا نِسَآئِهِنَّ وَلَا مَا مَلَكَتْ أَيْمَـٰنُهُنَّ ۗ وَٱتَّقِينَ ٱللَّهَ ۚ إِنَّ ٱللَّهَ كَانَ عَلَىٰ كُلِّ شَىْءٍ شَهِيدًا

Transliteration lā junāḥa ʿalayhinna fī ābāihinna walā abnāihinna walā ikh'wānihinna walā abnāi ikh'wānihinna walā abnāi akhawātihinna walā nisāihinna walā mā malakat aymānuhunna wa-ittaqīna l-laha inna l-laha kāna ʿalā kulli shayin shahīdan

Kannada ಪ್ರವಾದಿಯವರ ಪತ್ನಿಯರ ಮೇಲೆ ಅವರ ತಂದೆಯಂದಿರಾಗಲಿ, ಪುತ್ರರಾಗಲಿ, ಸಹೋದರರಾಗಲಿ, ಸೋದರ ಪುತ್ರರಾಗಲಿ, ಸೋದರಿ ಪುತ್ರರಾಗಲಿ, ಅವರಂತಹ ಸ್ತ್ರೀಯರಾಗಲಿ ಅವರ ಅಧೀನ ವಿರುವ ಗುಲಾಮರಾಗಲಿ ಪರಸ್ಪರ ಕಾಣುವುದರಲ್ಲಿ ದೋಷವಿಲ್ಲ . (ಪ್ರವಾದಿ ಪತ್ನಿಯರೇ,) ನೀವು ಅಲ್ಲಾಹನನ್ನು ಭಯಪಡಿರಿ. ಅಲ್ಲಾಹು ಸಕಲ ವಸ್ತುಗಳ ಬಗೆಗೆ ಸಾಕ್ಷಿಯಾಗಿದ್ದಾನೆ .

Verse 56

إِنَّ ٱللَّهَ وَمَلَـٰٓئِكَتَهُۥ يُصَلُّونَ عَلَى ٱلنَّبِىِّ ۚ يَـٰٓأَيُّهَا ٱلَّذِينَ ءَامَنُوا۟ صَلُّوا۟ عَلَيْهِ وَسَلِّمُوا۟ تَسْلِيمًا

Transliteration inna l-laha wamalāikatahu yuṣallūna ʿalā l-nabiyi yāayyuhā alladhīna āmanū ṣallū ʿalayhi wasallimū taslīman

Kannada ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಮಲಕ್‍ಗಳು ಪ್ರವಾದಿಯವರಿಗೆ ಸ್ವಲಾತ್ ನಿರ್ವಹಿಸುತ್ತಾರೆ. ಸತ್ಯವಿಶ್ವಾಸಿಗಳೇ, ನೀವೂ ಅವರ ಮೇಲೆ ಸ್ವಲಾತ್ ಮತ್ತು ಸಲಾಮ್ ಸಲ್ಲಿಸಿರಿ.

Verse 57

إِنَّ ٱلَّذِينَ يُؤْذُونَ ٱللَّهَ وَرَسُولَهُۥ لَعَنَهُمُ ٱللَّهُ فِى ٱلدُّنْيَا وَٱلْـَٔاخِرَةِ وَأَعَدَّ لَهُمْ عَذَابًا مُّهِينًا

Transliteration inna alladhīna yu'dhūna l-laha warasūlahu laʿanahumu l-lahu fī l-dun'yā wal-ākhirati wa-aʿadda lahum ʿadhāban muhīnan

Kannada ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ತೊಂದರೆ ಕೊಡುವವರನ್ನು ಅಲ್ಲಾಹು ಇಹ ಲೋಕದಲ್ಲೂ ಪರಲೋಕದಲ್ಲೂ ಶಪಿಸಿರುತ್ತಾನೆ. ಅವರಿಗಾಗಿ ಅಪಮಾನಕಾರಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.

Verse 58

وَٱلَّذِينَ يُؤْذُونَ ٱلْمُؤْمِنِينَ وَٱلْمُؤْمِنَـٰتِ بِغَيْرِ مَا ٱكْتَسَبُوا۟ فَقَدِ ٱحْتَمَلُوا۟ بُهْتَـٰنًا وَإِثْمًا مُّبِينًا

Transliteration wa-alladhīna yu'dhūna l-mu'minīna wal-mu'mināti bighayri mā ik'tasabū faqadi iḥ'tamalū buh'tānan wa-ith'man mubīnan

Kannada ಸತ್ಯವಿಶ್ವಾಸಿಗಳಿಗೂ ಸತ್ಯವಿಶ್ವಾಸಿನಿಯರಿಗೂ ಅವರು ಮಾಡದ ಕರ್ಮಕ್ಕಾಗಿ ತೊಂದರೆ ಕೊಡುವವರು ಗಂಭೀರ ಸುಳ್ಳಾರೋಪ ಹಾಗೂ ಸುವ್ಯಕ್ತ ಪಾಪದ ಹೊರೆಯನ್ನು ಹೊತ್ತುಕೊಂಡರು.

Verse 59

يَـٰٓأَيُّهَا ٱلنَّبِىُّ قُل لِّأَزْوَٰجِكَ وَبَنَاتِكَ وَنِسَآءِ ٱلْمُؤْمِنِينَ يُدْنِينَ عَلَيْهِنَّ مِن جَلَـٰبِيبِهِنَّ ۚ ذَٰلِكَ أَدْنَىٰٓ أَن يُعْرَفْنَ فَلَا يُؤْذَيْنَ ۗ وَكَانَ ٱللَّهُ غَفُورًا رَّحِيمًا

Transliteration yāayyuhā l-nabiyu qul li-azwājika wabanātika wanisāi l-mu'minīna yud'nīna ʿalayhinna min jalābībihinna dhālika adnā an yuʿ'rafna falā yu'dhayna wakāna l-lahu ghafūran raḥīman

Kannada ಓ ನಬಿವರ್ಯರೇ, ತಮ್ಮ ಪತ್ನಿಯರಿಗೆ, ಪುತ್ರಿ ಯರಿಗೆ, ಸತ್ಯವಿಶ್ವಾಸಿನಿಯರಿಗೆ ಹೇಳಿರಿ, ಅವರು ತಮ್ಮ ಮೇಲೆ ತಮ್ಮ ಚಾದರಗಳ ಸೆರಗನ್ನು ಇಳಿಸಿಕೊಳ್ಳಲಿ. ಅವರು ಗುರುತಿಸಲ್ಪಡುವ ಮೂಲಕ ಸತಾಯಿಸಲ್ಪಡದಿರಲು ಇದು ಹೆಚ್ಚು ಸೂಕ್ತವಾದ ವಿಧಾನ. ಅಲ್ಲಾಹು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.

Verse 60

۞ لَّئِن لَّمْ يَنتَهِ ٱلْمُنَـٰفِقُونَ وَٱلَّذِينَ فِى قُلُوبِهِم مَّرَضٌ وَٱلْمُرْجِفُونَ فِى ٱلْمَدِينَةِ لَنُغْرِيَنَّكَ بِهِمْ ثُمَّ لَا يُجَاوِرُونَكَ فِيهَآ إِلَّا قَلِيلًا

Transliteration la-in lam yantahi l-munāfiqūna wa-alladhīna fī qulūbihim maraḍun wal-mur'jifūna fī l-madīnati lanugh'riyannaka bihim thumma lā yujāwirūnaka fīhā illā qalīlan

Kannada ಕಪಟವಿಶ್ವಾಸಿಗಳೂ ಹೃದಯದಲ್ಲಿ (ಅನೈತಿ ಕತೆಯ) ರೋಗವುಳ್ಳವರೂ ಮದೀನದಲ್ಲಿ ಭೀತಿ ಹುಟ್ಟಿಸುತ್ತಿರುವವರೂ ತಮ್ಮ ದುಷ್ಕøತ್ಯಗಳನ್ನು ಬಿಡದಿದ್ದರೆ ನಾವು ಅವರ ವಿರುದ್ಧ ಕಾರ್ಯಾಚರಣೆ ಗಾಗಿ ನಿಮ್ಮನ್ನು ಹುರಿದುಂಬಿಸುವೆವು. ಅನಂತರ ಅಲ್ಪ ಮಾತ್ರವೇ ಅವರು ಅಲ್ಲಿ ತಮ್ಮೊಡನೆ ಒಡ ನಾಡುವರು.

Verse 61

مَّلْعُونِينَ ۖ أَيْنَمَا ثُقِفُوٓا۟ أُخِذُوا۟ وَقُتِّلُوا۟ تَقْتِيلًا

Transliteration malʿūnīna aynamā thuqifū ukhidhū waquttilū taqtīlan

Kannada (ಅದೂ) ಅವರು ಶಪಿಸಲ್ಪಟ್ಟ ನೆಲೆಯಲ್ಲಿ ಅವರು ಎಲ್ಲಿ ಕಂಡರೂ ಸೆರೆಹಿಡಿಯಲ್ಪಡುವರು ಮತ್ತು ನಿರ್ಧಾಕ್ಷಿಣ್ಯವಾಗಿ ಕೊಲ್ಲಲ್ಪಡುವರು.

Verse 62

سُنَّةَ ٱللَّهِ فِى ٱلَّذِينَ خَلَوْا۟ مِن قَبْلُ ۖ وَلَن تَجِدَ لِسُنَّةِ ٱللَّهِ تَبْدِيلًا

Transliteration sunnata l-lahi fī alladhīna khalaw min qablu walan tajida lisunnati l-lahi tabdīlan

Kannada ಇದು ಹಿಂದಿನವರಲ್ಲಿ ಅಲ್ಲಾಹು ಸ್ವೀಕರಿಸಿರುವ ಸಂಪ್ರದಾಯವಾಗಿದೆ. ನೀವು ಅಲ್ಲಾಹನ ನಡಾವಳಿಯಲ್ಲಿ ಯಾವ ಬದಲಾವಣೆಯನ್ನೂ ಕಾಣಲಾರಿರಿ.

Verse 63

يَسْـَٔلُكَ ٱلنَّاسُ عَنِ ٱلسَّاعَةِ ۖ قُلْ إِنَّمَا عِلْمُهَا عِندَ ٱللَّهِ ۚ وَمَا يُدْرِيكَ لَعَلَّ ٱلسَّاعَةَ تَكُونُ قَرِيبًا

Transliteration yasaluka l-nāsu ʿani l-sāʿati qul innamā ʿil'muhā ʿinda l-lahi wamā yud'rīka laʿalla l-sāʿata takūnu qarīban

Kannada ಅಂತ್ಯಕಾಲದ ಬಗ್ಗೆ ಜನರು ನಿಮ್ಮೊಡನೆ ಕೇಳುತ್ತಾರೆ. ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ ಎಂದು ಹೇಳಿರಿ. (ಪ್ರವಾದಿಯರೇ) ತಮಗೆ ಅದರ ಬಗ್ಗೆ ಅರಿವೇನಿದೆ ? ಅಂತ್ಯ ಸಮಯವು ಪ್ರಾಯಶಃ ಹತ್ತಿರದಲ್ಲೇ ಉಂಟಾಗುವುದು.

Verse 64

إِنَّ ٱللَّهَ لَعَنَ ٱلْكَـٰفِرِينَ وَأَعَدَّ لَهُمْ سَعِيرًا

Transliteration inna l-laha laʿana l-kāfirīna wa-aʿadda lahum saʿīran

Kannada ಖಂಡಿತ ಅಲ್ಲಾಹನು ಸತ್ಯನಿಷೇಧಕರನ್ನು ಶಪಿಸಿದ್ದಾನೆ. ಅವರಿಗಾಗಿ ಜ್ವಲಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದಾನೆ.

Verse 65

خَـٰلِدِينَ فِيهَآ أَبَدًا ۖ لَّا يَجِدُونَ وَلِيًّا وَلَا نَصِيرًا

Transliteration khālidīna fīhā abadan lā yajidūna waliyyan walā naṣīran

Kannada ಅವರು ಅದರಲ್ಲಿ ಶಾಶ್ವತವಾಗಿ ಉಳಿಯುವರು. ಅವರು ಯಾವ ರಕ್ಷಕನನ್ನೂ ಸಹಾಯಕನನ್ನೂ ಪಡೆಯಲಾರರು.

Verse 66

يَوْمَ تُقَلَّبُ وُجُوهُهُمْ فِى ٱلنَّارِ يَقُولُونَ يَـٰلَيْتَنَآ أَطَعْنَا ٱللَّهَ وَأَطَعْنَا ٱلرَّسُولَا۠

Transliteration yawma tuqallabu wujūhuhum fī l-nāri yaqūlūna yālaytanā aṭaʿnā l-laha wa-aṭaʿnā l-rasūlā

Kannada ಅವರ ಮುಖಗಳು ನರಕಾಗ್ನಿಯಲ್ಲಿ ಹೊರಳಾಡಿಸಲ್ಪಡುವ ದಿನ ಅವರು, ‘ಅಯ್ಯೋ! ನಾವು ಅಲ್ಲಾಹು ಮತ್ತು ರಸೂಲರ ಅನುಸರಣೆ ಮಾಡುತ್ತಿದ್ದರೆ ಎಷ್ಟು ಚೆನ್ನಾಗಿತ್ತು!’ ಎನ್ನುವರು.

Verse 67

وَقَالُوا۟ رَبَّنَآ إِنَّآ أَطَعْنَا سَادَتَنَا وَكُبَرَآءَنَا فَأَضَلُّونَا ٱلسَّبِيلَا۠

Transliteration waqālū rabbanā innā aṭaʿnā sādatanā wakubarāanā fa-aḍallūnā l-sabīlā

Kannada ಅವರು (ಮತ್ತೂ) ಹೇಳುವರು, ‘ನಮ್ಮ ಪ್ರಭೂ, ನಾವು ನಮ್ಮ ಸರದಾರರನ್ನು ಹಾಗೂ ಹಿರಿಯರನ್ನು ಅನುಸರಿಸಿದೆವು. ಹಾಗೆ ಅವರು ನಮ್ಮನ್ನು ದಾರಿಗೆಡಿಸಿದರು.

Verse 68

رَبَّنَآ ءَاتِهِمْ ضِعْفَيْنِ مِنَ ٱلْعَذَابِ وَٱلْعَنْهُمْ لَعْنًا كَبِيرًا

Transliteration rabbanā ātihim ḍiʿ'fayni mina l-ʿadhābi wal-ʿanhum laʿnan kabīran

Kannada ನಮ್ಮ ಪ್ರಭೂ! ಅವರಿಗೆ ಇಮ್ಮಡಿ ಶಿಕ್ಷೆ ಕೊಡು ಮತ್ತು ಅವರನ್ನು ಅತ್ಯುಗ್ರವಾಗಿ ಶಪಿಸು.

Verse 69

يَـٰٓأَيُّهَا ٱلَّذِينَ ءَامَنُوا۟ لَا تَكُونُوا۟ كَٱلَّذِينَ ءَاذَوْا۟ مُوسَىٰ فَبَرَّأَهُ ٱللَّهُ مِمَّا قَالُوا۟ ۚ وَكَانَ عِندَ ٱللَّهِ وَجِيهًا

Transliteration yāayyuhā alladhīna āmanū lā takūnū ka-alladhīna ādhaw mūsā fabarra-ahu l-lahu mimmā qālū wakāna ʿinda l-lahi wajīhan

Kannada ಸತ್ಯವಿಶ್ವಾಸಿಗಳೇ, ನೀವು ಮೂಸಾರಿಗೆ ತೊಂದರೆ ಕೊಟ್ಟವರಂತೆ ಆಗಬೇಡಿರಿ. ಬಳಿಕ ಅಲ್ಲಾಹನು ಆ ಜನರು ಆರೋಪಿಸಿದ ಮಾತುಗಳಿಂದ ಅವರನ್ನು (ಮೂಸಾರನ್ನು) ಮುಕ್ತಗೊಳಿಸಿ ನಿರಪರಾಧಿತ್ವವನ್ನು ಸಾಬೀತುಪಡಿಸಿದನು. ಅವರು ಅಲ್ಲಾಹನ ಬಳಿ ಗೌರವಾನ್ವಿತರಾಗಿದ್ದರು.

Verse 70

يَـٰٓأَيُّهَا ٱلَّذِينَ ءَامَنُوا۟ ٱتَّقُوا۟ ٱللَّهَ وَقُولُوا۟ قَوْلًا سَدِيدًا

Transliteration yāayyuhā alladhīna āmanū ittaqū l-laha waqūlū qawlan sadīdan

Kannada ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ಸರಿಯಾದ ಮಾತನ್ನೇ ಆಡಿರಿ.

Verse 71

يُصْلِحْ لَكُمْ أَعْمَـٰلَكُمْ وَيَغْفِرْ لَكُمْ ذُنُوبَكُمْ ۗ وَمَن يُطِعِ ٱللَّهَ وَرَسُولَهُۥ فَقَدْ فَازَ فَوْزًا عَظِيمًا

Transliteration yuṣ'liḥ lakum aʿmālakum wayaghfir lakum dhunūbakum waman yuṭiʿi l-laha warasūlahu faqad fāza fawzan ʿaẓīman

Kannada ಅಲ್ಲಾಹು ನಿಮ್ಮ ಕರ್ಮಗಳನ್ನು ಸರಿಪಡಿಸು ವನು. ನಿಮ್ಮ ಅಪರಾಧಗಳನ್ನು ಮನ್ನಿಸುವನು. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಅನುಸರಣೆ ಮಾಡುತ್ತಾನೆ, ಅವನು ಮಹಾ ಯಶಸ್ಸನ್ನು ಪಡೆದನು.

Verse 72

إِنَّا عَرَضْنَا ٱلْأَمَانَةَ عَلَى ٱلسَّمَـٰوَٰتِ وَٱلْأَرْضِ وَٱلْجِبَالِ فَأَبَيْنَ أَن يَحْمِلْنَهَا وَأَشْفَقْنَ مِنْهَا وَحَمَلَهَا ٱلْإِنسَـٰنُ ۖ إِنَّهُۥ كَانَ ظَلُومًا جَهُولًا

Transliteration innā ʿaraḍnā l-amānata ʿalā l-samāwāti wal-arḍi wal-jibāli fa-abayna an yaḥmil'nahā wa-ashfaqna min'hā waḥamalahā l-insānu innahu kāna ẓalūman jahūlan

Kannada ಅಮಾನತ್ತನ್ನು ಆಕಾಶಗಳು, ಭೂಮಿ ಮತ್ತು ಪರ್ವತಗಳ ಮೇಲೆ ನಾವು ಎತ್ತಿ ತೋರಿಸಿದೆವು. ಆಗ ಅವು ಅದನ್ನು ವಹಿಸಿಕೊಳ್ಳಲು ನಿರಾಕರಿಸಿದವು. ಅವು ಅಂಜಿ ತತ್ತರಿಸಿದವು. ಆದರೆ, ಮಾನವನು ಅದನ್ನು ವಹಿಸಿಕೊಂಡನು. ನಿಶ್ಚಯವಾಗಿಯೂ ಅವನು ದೊಡ್ಡ ಅಕ್ರಮಿಯೂ ತಿಳಿಗೇಡಿಯೂ ಆಗಿರುತ್ತಾನೆ .

Verse 73

لِّيُعَذِّبَ ٱللَّهُ ٱلْمُنَـٰفِقِينَ وَٱلْمُنَـٰفِقَـٰتِ وَٱلْمُشْرِكِينَ وَٱلْمُشْرِكَـٰتِ وَيَتُوبَ ٱللَّهُ عَلَى ٱلْمُؤْمِنِينَ وَٱلْمُؤْمِنَـٰتِ ۗ وَكَانَ ٱللَّهُ غَفُورًا رَّحِيمًۢا

Transliteration liyuʿadhiba l-lahu l-munāfiqīna wal-munāfiqāti wal-mush'rikīna wal-mush'rikāti wayatūba l-lahu ʿalā l-mu'minīna wal-mu'mināti wakāna l-lahu ghafūran raḥīman

Kannada ಇದು ಅಲ್ಲಾಹನು ಕಪಟವಿಶ್ವಾಸಿಗಳನ್ನೂ ಕಪಟ ವಿಶ್ವಾಸಿನಿಯರನ್ನೂ ಬಹುದೇವಾರಾಧಕರಾದ ಪುರುಷರನ್ನೂ, ಸ್ತ್ರೀಯರನ್ನೂ ಶಿಕ್ಷಿಸಲಿಕ್ಕೂ ಮತ್ತು ಸತ್ಯವಿಶ್ವಾಸಿಗಳಾದ ಪುರುಷರು ಮತ್ತು ಸ್ತ್ರೀಯರ ಪಶ್ಚಾತ್ತಾಪವನ್ನು ಅಲ್ಲಾಹನು ಸ್ವೀಕರಿಸಲಿಕ್ಕೂ ಆಗಿದೆ. ಅಲ್ಲಾಹು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.

Read Surah Al-Ahzab in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.