Surah Sad in Kannada: translation and audio
Surah 38 · ص · The Letter "Saad" · 88 verses
Surah Sad verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Sad word by word in English.
Verse 1
صٓ ۚ وَٱلْقُرْءَانِ ذِى ٱلذِّكْرِ
Transliteration sad wal-qur'āni dhī l-dhik'ri
Kannada ಸ್ವಾದ್, ಉಪದೇಶವನ್ನೊಳಗೊಂಡ ಖುರ್‍ಆನಿ ನಾಣೆ .
Verse 2
بَلِ ٱلَّذِينَ كَفَرُوا۟ فِى عِزَّةٍ وَشِقَاقٍ
Transliteration bali alladhīna kafarū fī ʿizzatin washiqāqin
Kannada ನಿಜವಾಗಿ, ಸತ್ಯವನ್ನು ನಿಷೇಧಿಸಿದ ಜನರು ತೀವ್ರ ದುರಭಿಮಾನ ಮತ್ತು ಭಿನ್ನತೆಯಲ್ಲಿದ್ದಾರೆ.
Verse 3
كَمْ أَهْلَكْنَا مِن قَبْلِهِم مِّن قَرْنٍ فَنَادَوا۟ وَّلَاتَ حِينَ مَنَاصٍ
Transliteration kam ahlaknā min qablihim min qarnin fanādaw walāta ḥīna manāṣin
Kannada ಇವರಿಗಿಂತ ಮುಂಚೆ ಅದೆಷ್ಟು ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ! ಆಗ (ರಕ್ಷಣೆಗಾಗಿ) ಅವರು ಗೋಳಿಟ್ಟಿದ್ದಾರೆ. ಆದರೆ ಅದು ಓಡಿ ಪಾರಾಗುವ ಸಮಯವಾಗಿರಲಿಲ್ಲ.
Verse 4
وَعَجِبُوٓا۟ أَن جَآءَهُم مُّنذِرٌ مِّنْهُمْ ۖ وَقَالَ ٱلْكَـٰفِرُونَ هَـٰذَا سَـٰحِرٌ كَذَّابٌ
Transliteration waʿajibū an jāahum mundhirun min'hum waqāla l-kāfirūna hādhā sāḥirun kadhābun
Kannada ಇವರಿಂದಲೇ ಓರ್ವ ಎಚ್ಚರಿಕೆ ನೀಡುವಾತನು ಇವರಿಗೆ ಬಂದಾಗ ಇವರು ಅಚ್ಚರಿಗೊಂಡಿದ್ದಾರೆ. ಸತ್ಯನಿಷೇಧಿಗಳು ಹೇಳಿದರು, `ಇವನೊಬ್ಬ ಜಾದುಗಾರ, ಮಹಾ ಸುಳ್ಳುಗಾರ.
Verse 5
أَجَعَلَ ٱلْـَٔالِهَةَ إِلَـٰهًا وَٰحِدًا ۖ إِنَّ هَـٰذَا لَشَىْءٌ عُجَابٌ
Transliteration ajaʿala l-ālihata ilāhan wāḥidan inna hādhā lashayon ʿujābun
Kannada ಇವನು ದೇವರುಗಳನ್ನು ಏಕ ದೇವನಾಗಿ ಮಾಡಿ ಬಿಟ್ಟನೇ? ನಿಜಕ್ಕೂ ಇದೊಂದು ಬಹಳ ವಿಚಿತ್ರ ಸಂಗತಿ’.
Verse 6
وَٱنطَلَقَ ٱلْمَلَأُ مِنْهُمْ أَنِ ٱمْشُوا۟ وَٱصْبِرُوا۟ عَلَىٰٓ ءَالِهَتِكُمْ ۖ إِنَّ هَـٰذَا لَشَىْءٌ يُرَادُ
Transliteration wa-inṭalaqa l-mala-u min'hum ani im'shū wa-iṣ'birū ʿalā ālihatikum inna hādhā lashayon yurādu
Kannada ಜನಾಂಗದ ಸರದಾರರು ಹೀಗೆ ಹೇಳುತ್ತಾ ಹೊರ ನಡೆದರು. “ಹೊರಡಿರಿ. ನಿಮ್ಮ ಆರಾಧ್ಯರ ಮೇಲೆ ಸಹನೆಯಿಂದ ಸ್ಥಿರವಾಗಿ ನಿಲ್ಲಿರಿ. ನಿಶ್ಚಯವಾಗಿಯೂ ಇದು ನಮ್ಮ ಮೇಲೆ ಉದ್ದೇಶವಿದ್ದ ಸಂಗತಿಯಾಗಿದೆ.
Verse 7
مَا سَمِعْنَا بِهَـٰذَا فِى ٱلْمِلَّةِ ٱلْـَٔاخِرَةِ إِنْ هَـٰذَآ إِلَّا ٱخْتِلَـٰقٌ
Transliteration mā samiʿ'nā bihādhā fī l-milati l-ākhirati in hādhā illā ikh'tilāqun
Kannada ಇದನ್ನು ಕೊನೆಯ ಧರ್ಮದಲ್ಲೂ ನಾವು ಕೇಳಿಲ್ಲ. ಇದು ಕೇವಲ ಸ್ವಯಂ ಸೃಷ್ಟಿ.
Verse 8
أَءُنزِلَ عَلَيْهِ ٱلذِّكْرُ مِنۢ بَيْنِنَا ۚ بَلْ هُمْ فِى شَكٍّ مِّن ذِكْرِى ۖ بَل لَّمَّا يَذُوقُوا۟ عَذَابِ
Transliteration a-unzila ʿalayhi l-dhik'ru min bayninā bal hum fī shakkin min dhik'rī bal lammā yadhūqū ʿadhābi
Kannada ನಮ್ಮ ನಡುವೆ ಕೇವಲ ಈತನಿಗೆ ಈ ಬೋಧನೆ ಅವತೀರ್ಣಗೊಂಡಿತೆ?” ಆದರೆ ನನ್ನ ಬೋಧನೆಯ ಬಗ್ಗೆ ಇವರು ಸಂಶಯದಲ್ಲೇ ಇರುವರು. ವಾಸ್ತವದಲ್ಲಿ ಇವರು ಈ ತನಕ ನನ್ನ ಯಾತನೆಯ ರುಚಿಯನ್ನು ಸವಿದಿಲ್ಲ.
Verse 9
أَمْ عِندَهُمْ خَزَآئِنُ رَحْمَةِ رَبِّكَ ٱلْعَزِيزِ ٱلْوَهَّابِ
Transliteration am ʿindahum khazāinu raḥmati rabbika l-ʿazīzi l-wahābi
Kannada ಅಥವಾ ಮಹಾ ಪ್ರತಾಪಿಯೂ ಅತ್ಯುದಾರನೂ ಆದ ನಿಮ್ಮ ಪ್ರಭುವಿನ ಕೃಪೆಯ ಭಂಡಾರಗಳು ಇವರ ಕೈಯಲ್ಲಿವೆಯೇ?
Verse 10
أَمْ لَهُم مُّلْكُ ٱلسَّمَـٰوَٰتِ وَٱلْأَرْضِ وَمَا بَيْنَهُمَا ۖ فَلْيَرْتَقُوا۟ فِى ٱلْأَسْبَـٰبِ
Transliteration am lahum mul'ku l-samāwāti wal-arḍi wamā baynahumā falyartaqū fī l-asbābi
Kannada ಅಥವಾ ಭೂಮಿ-ಆಕಾಶಗಳ ಹಾಗೂ ಅವುಗಳ ನಡುವೆ ಇರುವ ವಸ್ತುಗಳ ಆಧಿಪತ್ಯ ಇವರಿಗಿದೆಯೇನು? ಹಾಗಿದ್ದರೆ ಇವರು ಅದರ ಮಾರ್ಗಗಳಿಗೆ ಹತ್ತಿ ನೋಡಲಿ.
Verse 11
جُندٌ مَّا هُنَالِكَ مَهْزُومٌ مِّنَ ٱلْأَحْزَابِ
Transliteration jundun mā hunālika mahzūmun mina l-aḥzābi
Kannada ಈ ನಿಷೇಧಿಗಳದ್ದು ಕೂಟಗಳ ಪೈಕಿ ಅಲ್ಲಿ ಸೋಲಿಸಲ್ಪಡುವ ಯಕಶ್ಚಿತ್ ಸಂಘ.
Verse 12
كَذَّبَتْ قَبْلَهُمْ قَوْمُ نُوحٍ وَعَادٌ وَفِرْعَوْنُ ذُو ٱلْأَوْتَادِ
Transliteration kadhabat qablahum qawmu nūḥin waʿādun wafir'ʿawnu dhū l-awtādi
Kannada
Verse 13
وَثَمُودُ وَقَوْمُ لُوطٍ وَأَصْحَـٰبُ لْـَٔيْكَةِ ۚ أُو۟لَـٰٓئِكَ ٱلْأَحْزَابُ
Transliteration wathamūdu waqawmu lūṭin wa-aṣḥābu al'aykati ulāika l-aḥzābu
Kannada ಇವರಿಗಿಂತ ಮುಂಚೆ ನೂಹರ ಜನಾಂಗ, ಆದ್, ಮೊಳೆಗಾರ ಫಿರ್‍ಔನ್, ಸಮೂದ್, ಲೂಥ್ ಜನಾಂಗ ಮತ್ತು ಐಕದವರು ಸುಳ್ಳಾಗಿಸಿದ್ದಾರೆ. ಅವರು ಸಂಘ ಪರಿವಾರದವರು.
Verse 14
إِن كُلٌّ إِلَّا كَذَّبَ ٱلرُّسُلَ فَحَقَّ عِقَابِ
Transliteration in kullun illā kadhaba l-rusula faḥaqqa ʿiqābi
Kannada ಅವರ ಪೈಕಿ ಪ್ರತಿಯೊಂದು ಕೂಟವೂ ಸಂದೇಶ ವಾಹಕರನ್ನು ಸುಳ್ಳಾಗಿಸಿತು. ಇದರಿಂದ ನನ್ನ ಶಿಕ್ಷೆಯು ಅವರ ಮೇಲೆ ನಿಜವಾಯಿತು.
Verse 15
وَمَا يَنظُرُ هَـٰٓؤُلَآءِ إِلَّا صَيْحَةً وَٰحِدَةً مَّا لَهَا مِن فَوَاقٍ
Transliteration wamā yanẓuru hāulāi illā ṣayḥatan wāḥidatan mā lahā min fawāqin
Kannada ಒಂದು ಘೋರ ಘರ್ಜನೆಯನ್ನಲ್ಲದೆ ಅವರು ನಿರೀಕ್ಷಿಸುತ್ತಿಲ್ಲ. ಅದಕ್ಕೆ ಇನ್ನು ಹೆಚ್ಚು ಕಾಲ ತಡವಿಲ್ಲ.
Verse 16
وَقَالُوا۟ رَبَّنَا عَجِّل لَّنَا قِطَّنَا قَبْلَ يَوْمِ ٱلْحِسَابِ
Transliteration waqālū rabbanā ʿajjil lanā qiṭṭanā qabla yawmi l-ḥisābi
Kannada ಇವರು, “ಓ ನಮ್ಮ ಪ್ರಭೂ, ಲೆಕ್ಕಾಚಾರದ ದಿನ ಬರುವ ಮೊದಲೇ ನಮ್ಮ ಪಾಲು ನಮಗೆ ಬೇಗನೆ ಕೊಟ್ಟುಬಿಡು” ಎನ್ನುತ್ತಾರೆ.
Verse 17
ٱصْبِرْ عَلَىٰ مَا يَقُولُونَ وَٱذْكُرْ عَبْدَنَا دَاوُۥدَ ذَا ٱلْأَيْدِ ۖ إِنَّهُۥٓ أَوَّابٌ
Transliteration iṣ'bir ʿalā mā yaqūlūna wa-udh'kur ʿabdanā dāwūda dhā l-aydi innahu awwābun
Kannada (ಸಂದೇಶವಾಹಕರೇ,) ಇವರು ಹೇಳುವ ಮಾತುಗಳನ್ನು ಸಹಿಸಿಕೊಳ್ಳಿರಿ. ಇವರಿಗೆ (ದೇವೋಪಾ ಸನೆಯಲ್ಲಿ) ಬಲಿಷ್ಠರಾಗಿದ್ದ ನಮ್ಮ ದಾಸ ದಾವೂದರ ವೃತ್ತಾಂತವನ್ನು ವಿವರಿಸಿರಿ. ಅವರು ಅಲ್ಲಾಹನ ಕಡೆಗೆ ಅತೀ ಹೆಚ್ಚು ಮರಳುವವರಾಗಿದ್ದರು.
Verse 18
إِنَّا سَخَّرْنَا ٱلْجِبَالَ مَعَهُۥ يُسَبِّحْنَ بِٱلْعَشِىِّ وَٱلْإِشْرَاقِ
Transliteration innā sakharnā l-jibāla maʿahu yusabbiḥ'na bil-ʿashiyi wal-ish'rāqi
Kannada ಪರ್ವತಗಳು ಬೆಳಗು ಬೈಗುಗಳಲ್ಲಿ ಅವರೊಂದಿಗೆ ದೇವ ಕೀರ್ತನೆ ಮಾಡುವ ಸ್ಥಿತಿಯಲ್ಲಿ ಅವುಗಳ ನ್ನು ನಾವು ಅವರಿಗೆ ನಿಯಂತ್ರಿಸಿಕೊಟ್ಟಿದ್ದೆವು.
Verse 19
وَٱلطَّيْرَ مَحْشُورَةً ۖ كُلٌّ لَّهُۥٓ أَوَّابٌ
Transliteration wal-ṭayra maḥshūratan kullun lahu awwābun
Kannada ಒಟ್ಟಾಗಿ ಬಂದು ಸೇರುತ್ತಿದ್ದ ಪಕ್ಷಿಗಳನ್ನೂ, ಅವೆಲ್ಲವೂ ಅವರಿಗೆ ಸಂಪೂರ್ಣ ವಿಧೇಯವಾಗಿದ್ದವು.
Verse 20
وَشَدَدْنَا مُلْكَهُۥ وَءَاتَيْنَـٰهُ ٱلْحِكْمَةَ وَفَصْلَ ٱلْخِطَابِ
Transliteration washadadnā mul'kahu waātaynāhu l-ḥik'mata wafaṣla l-khiṭābi
Kannada ನಾವು ಅವರ ಸಾಮ್ರಾಜ್ಯವನ್ನು ಬಲಿಷ್ಟಗೊಳಿಸಿದ್ದೆವು. ಅವರಿಗೆ ನಾವು ಯುಕ್ತಿಜ್ಞಾನವನ್ನೂ ನಿರ್ಣಾಯಕವಾಗಿ ಮಾತನಾಡುವ ಸಾಮಥ್ರ್ಯವನ್ನೂ ನೀಡಿದ್ದೆವು.
Verse 21
۞ وَهَلْ أَتَىٰكَ نَبَؤُا۟ ٱلْخَصْمِ إِذْ تَسَوَّرُوا۟ ٱلْمِحْرَابَ
Transliteration wahal atāka naba-u l-khaṣmi idh tasawwarū l-miḥ'rāba
Kannada ದಾವೂದರ ಆರಾಧನಾಲಯದ ಗೋಡೆಯ ಮೇಲೇರಿ ಇಳಿದು ಬಂದಿದ್ದ ಕಕ್ಷಿದಾರರ ಸುದ್ದಿ ನಿಮಗೆ ತಲುಪಿದೆಯೇ?
Verse 22
إِذْ دَخَلُوا۟ عَلَىٰ دَاوُۥدَ فَفَزِعَ مِنْهُمْ ۖ قَالُوا۟ لَا تَخَفْ ۖ خَصْمَانِ بَغَىٰ بَعْضُنَا عَلَىٰ بَعْضٍ فَٱحْكُم بَيْنَنَا بِٱلْحَقِّ وَلَا تُشْطِطْ وَٱهْدِنَآ إِلَىٰ سَوَآءِ ٱلصِّرَٰطِ
Transliteration idh dakhalū ʿalā dāwūda fafaziʿa min'hum qālū lā takhaf khaṣmāni baghā baʿḍunā ʿalā baʿḍin fa-uḥ'kum baynanā bil-ḥaqi walā tush'ṭiṭ wa-ih'dinā ilā sawāi l-ṣirāṭi
Kannada ಅಂದರೆ ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಬೆಚ್ಚಿದರು. ಆಗ ಅವರು `ಹೆದರಬೇಡಿರಿ, ನಾವು ಎರಡು ಕಕ್ಷಿದಾರರಾಗಿದ್ದು, ನಮ್ಮ ಪೈಕಿ ಒಬ್ಬನು ಇನ್ನೊಬ್ಬನ ಮೇಲೆ ಅನ್ಯಾಯವೆಸಗಿರುವನು. ತಾವು ನಮ್ಮ ನಡುವೆ ನ್ಯಾಯ ಪೂರ್ಣ ತೀರ್ಮಾನ ಮಾಡಿರಿ, ಅತಿ ಕ್ರಮಿಸಬೇಡಿರಿ. ಸರಿಯಾದ ದಾರಿಗೆ ನಮ್ಮನ್ನು ಮುನ್ನಡೆಸಿರಿ.
Verse 23
إِنَّ هَـٰذَآ أَخِى لَهُۥ تِسْعٌ وَتِسْعُونَ نَعْجَةً وَلِىَ نَعْجَةٌ وَٰحِدَةٌ فَقَالَ أَكْفِلْنِيهَا وَعَزَّنِى فِى ٱلْخِطَابِ
Transliteration inna hādhā akhī lahu tis'ʿun watis'ʿūna naʿjatan waliya naʿjatun wāḥidatun faqāla akfil'nīhā waʿazzanī fī l-khiṭābi
Kannada ಇವನು ನನ್ನ ಸಹೋದರ, ಇವನಿಗೆ ತೊಂಬ ತ್ತೊಂಬತ್ತು ಹೆಣ್ಣಾಡುಗಳಿವೆ. ನನಗೆ ಒಂದು ಆಡು ಮಾತ್ರ ಇದೆ. ಇವನು ಆ ಒಂದು ಆಡನ್ನೂ ನನಗೆ ಬಿಟ್ಟು ಕೊಡಬೇಕೆಂದು ನನ್ನೊಡನೆ ಹೇಳಿದನು ಮತ್ತು ಮಾತಿನಲ್ಲಿ ನನ್ನನ್ನು ಗೆದ್ದನು.
Verse 24
قَالَ لَقَدْ ظَلَمَكَ بِسُؤَالِ نَعْجَتِكَ إِلَىٰ نِعَاجِهِۦ ۖ وَإِنَّ كَثِيرًا مِّنَ ٱلْخُلَطَآءِ لَيَبْغِى بَعْضُهُمْ عَلَىٰ بَعْضٍ إِلَّا ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ وَقَلِيلٌ مَّا هُمْ ۗ وَظَنَّ دَاوُۥدُ أَنَّمَا فَتَنَّـٰهُ فَٱسْتَغْفَرَ رَبَّهُۥ وَخَرَّ رَاكِعًا وَأَنَابَ ۩
Transliteration qāla laqad ẓalamaka bisuāli naʿjatika ilā niʿājihi wa-inna kathīran mina l-khulaṭāi layabghī baʿḍuhum ʿalā baʿḍin illā alladhīna āmanū waʿamilū l-ṣāliḥāti waqalīlun mā hum waẓanna dāwūdu annamā fatannāhu fa-is'taghfara rabbahu wakharra rākiʿan wa-anāba
Kannada ಆಗ ದಾವೂದರು- ‘ಇವನು ತನ್ನ ಹೆಣ್ಣು ಆಡುಗಳೊಂದಿಗೆ ನಿನ್ನ ಆಡನ್ನು ಸೇರಿಸಿಕೊಳ್ಳಲು ಕೇಳುವ ಮೂಲಕ ನಿಜಕ್ಕೂ ನಿನ್ನ ಮೇಲೆ ಅಕ್ರಮವೆಸಗಿರುವನು. ಸಹಬಾಳುವೆ ನಡೆಸುವವರಲ್ಲಿ ಹೆಚ್ಚಿನವರೂ ಪರಸ್ಪರ ಅತಿರೇಕವೆಸಗುತ್ತಾರೆ. ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗುವವರು ಮಾತ್ರ ಇದರಿಂದ ದೂರವಿರುತ್ತಾರೆ. ಇಂತಹವರು ಬಹಳ ವಿರಳ’ ಎಂದರು. ದಾವೂದರು ಭಾವಿಸಿದರು, ‘ನಾವು ಅವರನ್ನು ಪರೀಕ್ಷಿಸುತ್ತಿದ್ದೇವೆ’ ಎಂದು. ನಂತರ ಅವರು ತಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ನಡೆಸಿದರು. ಸಾಷ್ಟಾಂ ಗವೆರಗಿದರು. ಪಶ್ಚಾತ್ತಾಪಪಟ್ಟು ಮರಳಿದರು.
Verse 25
فَغَفَرْنَا لَهُۥ ذَٰلِكَ ۖ وَإِنَّ لَهُۥ عِندَنَا لَزُلْفَىٰ وَحُسْنَ مَـَٔابٍ
Transliteration faghafarnā lahu dhālika wa-inna lahu ʿindanā lazul'fā waḥus'na maābin
Kannada ಆಗ ನಾವು ಅವರಿಗೆ ಅದನ್ನು ಕ್ಷಮಿಸಿದೆವು. ನಿಶ್ಚಯ ನಮ್ಮ ಬಳಿ ಅವರಿಗಾಗಿ ನಿಕಟ ಸ್ಥಾನ ಹಾಗೂ ಉತ್ತಮವಾದ ಅಂತಿಮ ನೆಲೆ ಇದೆ.
Verse 26
يَـٰدَاوُۥدُ إِنَّا جَعَلْنَـٰكَ خَلِيفَةً فِى ٱلْأَرْضِ فَٱحْكُم بَيْنَ ٱلنَّاسِ بِٱلْحَقِّ وَلَا تَتَّبِعِ ٱلْهَوَىٰ فَيُضِلَّكَ عَن سَبِيلِ ٱللَّهِ ۚ إِنَّ ٱلَّذِينَ يَضِلُّونَ عَن سَبِيلِ ٱللَّهِ لَهُمْ عَذَابٌ شَدِيدٌۢ بِمَا نَسُوا۟ يَوْمَ ٱلْحِسَابِ
Transliteration yādāwūdu innā jaʿalnāka khalīfatan fī l-arḍi fa-uḥ'kum bayna l-nāsi bil-ḥaqi walā tattabiʿi l-hawā fayuḍillaka ʿan sabīli l-lahi inna alladhīna yaḍillūna ʿan sabīli l-lahi lahum ʿadhābun shadīdun bimā nasū yawma l-ḥisābi
Kannada ಓ, ದಾವೂದ್! ನಾವು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಯಾಗಿ ಮಾಡಿದ್ದೇವೆ. ಆದುದರಿಂದ ನೀವು ಜನರ ನಡುವೆ ನ್ಯಾಯ ಪ್ರಕಾರ ವಿಧಿಸಿರಿ. ಸ್ವೇಚ್ಛೆಯನ್ನು ಅನುಸರಿಸಬೇಡಿರಿ. ಅದು ನಿಮ್ಮ ನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿಬಿಡುವುದು. ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುವವರಿಗೆ, ಅವರು ಲೆಕ್ಕಾಚಾರದ ದಿನವನ್ನು ಮರೆತುಬಿಟ್ಟ ಕಾರಣಕ್ಕೆ ಖಂಡಿತ ಕಠಿಣ ಶಿಕ್ಷೆ ಇದೆ.
Verse 27
وَمَا خَلَقْنَا ٱلسَّمَآءَ وَٱلْأَرْضَ وَمَا بَيْنَهُمَا بَـٰطِلًا ۚ ذَٰلِكَ ظَنُّ ٱلَّذِينَ كَفَرُوا۟ ۚ فَوَيْلٌ لِّلَّذِينَ كَفَرُوا۟ مِنَ ٱلنَّارِ
Transliteration wamā khalaqnā l-samāa wal-arḍa wamā baynahumā bāṭilan dhālika ẓannu alladhīna kafarū fawaylun lilladhīna kafarū mina l-nāri
Kannada ಆಕಾಶವನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ನಾವು ವೃಥಾ ಸೃಷ್ಟಿಸಲಿಲ್ಲ. ಅದು ಸತ್ಯನಿಷೇಧಿಗಳ ಭಾವನೆಯಾಗಿದೆ. ಹೀಗಾಗಿ ಸತ್ಯನಿಷೇಧಿಗಳಿಗೆ ನರಕಾಗ್ನಿಯ ಮೂಲಕ ಘೋರ ವಿನಾಶವಿದೆ.
Verse 28
أَمْ نَجْعَلُ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ كَٱلْمُفْسِدِينَ فِى ٱلْأَرْضِ أَمْ نَجْعَلُ ٱلْمُتَّقِينَ كَٱلْفُجَّارِ
Transliteration am najʿalu alladhīna āmanū waʿamilū l-ṣāliḥāti kal-muf'sidīna fī l-arḍi am najʿalu l-mutaqīna kal-fujāri
Kannada ಅಥವಾ ಸತ್ಯವಿಶ್ವಾಸವಿರಿಸಿ ಸತ್ಕರ್ಮ ವೆಸಗು ವವರನ್ನು ಭೂಮಿಯಲ್ಲಿ ಕ್ಷೋಭೆ ಸೃಷ್ಟಿಸುವವ ರಂತೆ ನಾವೇಕೆ ಮಾಡಬೇಕು? ಅಥವಾ ಧರ್ಮ ನಿಷ್ಠರನ್ನು ನಾವು ಧರ್ಮಭ್ರಷ್ಟರಂತೆ ಮಾಡುವುದು ಏಕೆ?
Verse 29
كِتَـٰبٌ أَنزَلْنَـٰهُ إِلَيْكَ مُبَـٰرَكٌ لِّيَدَّبَّرُوٓا۟ ءَايَـٰتِهِۦ وَلِيَتَذَكَّرَ أُو۟لُوا۟ ٱلْأَلْبَـٰبِ
Transliteration kitābun anzalnāhu ilayka mubārakun liyaddabbarū āyātihi waliyatadhakkara ulū l-albābi
Kannada (ಪೈಗಂಬರರೇ,) ಇದೊಂದು ಅನುಗ್ರಹೀತ ಗ್ರಂಥವಾಗಿದ್ದು ಇವರು ಇದರ ಸೂಕ್ತಗಳ ಕುರಿತು ಚಿಂತನೆ ನಡೆಸಲೆಂದು ಮತ್ತು ಬುದ್ಧಿಜೀವಿಗಳು ಇದರಿಂದ ಉಪದೇಶ ಪಡೆಯಲೆಂದು ನಾವಿದ ನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ.
Verse 30
وَوَهَبْنَا لِدَاوُۥدَ سُلَيْمَـٰنَ ۚ نِعْمَ ٱلْعَبْدُ ۖ إِنَّهُۥٓ أَوَّابٌ
Transliteration wawahabnā lidāwūda sulaymāna niʿ'ma l-ʿabdu innahu awwābun
Kannada ದಾವೂದರಿಗೆ ನಾವು ಸುಲೈಮಾನರನ್ನು (ಪುತ್ರ ನಾಗಿ) ದಯಪಾಲಿಸಿದೆವು. ಅವರು ಅತ್ಯು ತ್ತಮ ದಾಸರು. ತಮ್ಮ ಪ್ರಭುವಿನ ಕಡೆಗೆ ಅತಿ ಹೆಚ್ಚಾಗಿ ಮರಳುವವರು !
Verse 31
إِذْ عُرِضَ عَلَيْهِ بِٱلْعَشِىِّ ٱلصَّـٰفِنَـٰتُ ٱلْجِيَادُ
Transliteration idh ʿuriḍa ʿalayhi bil-ʿashiyi l-ṣāfinātu l-jiyādu
Kannada ಅತಿ ವೇಗದ, ಸನ್ನದ್ಧ ಯುದ್ಧಾಶ್ವಗಳನ್ನು ಅವರ ಮುಂದೆ ಸಂಜೆಯ ವೇಳೆ ಪ್ರದರ್ಶಿಸಲಾದ ಸಂದರ್ಭವು ಸ್ಮರಣೀಯ.
Verse 32
فَقَالَ إِنِّىٓ أَحْبَبْتُ حُبَّ ٱلْخَيْرِ عَن ذِكْرِ رَبِّى حَتَّىٰ تَوَارَتْ بِٱلْحِجَابِ
Transliteration faqāla innī aḥbabtu ḥubba l-khayri ʿan dhik'ri rabbī ḥattā tawārat bil-ḥijābi
Kannada ಆಗ ಅವರು ಹೇಳಿದರು, ನನ್ನ ಪ್ರಭುವಿನ ಸ್ಮರಣೆಯನ್ನು ಬಿಟ್ಟು ಸಂಪತ್ತಿನ ಪ್ರೀತಿಗೆ ಒಲಿದು ಬಿಟ್ಟೆ. ಸೂರ್ಯನು ಮರೆಯಾಗುವವರೆಗೂ!
Verse 33
رُدُّوهَا عَلَىَّ ۖ فَطَفِقَ مَسْحًۢا بِٱلسُّوقِ وَٱلْأَعْنَاقِ
Transliteration ruddūhā ʿalayya faṭafiqa masḥan bil-sūqi wal-aʿnāqi
Kannada ಆದ್ದರಿಂದ ಅವುಗಳನ್ನು ನನ್ನ ಬಳಿಗೆ ಮರಳಿ ತನ್ನಿರಿ. ಆಮೇಲೆ ಅವರು ಆ ಕುದುರೆಗಳನ್ನು ಬಲಿದಾನ ನೀಡಿದರು. ಅವುಗಳ ಮೊಣಕಾಲನ್ನು ಕಡಿದರು .
Verse 34
وَلَقَدْ فَتَنَّا سُلَيْمَـٰنَ وَأَلْقَيْنَا عَلَىٰ كُرْسِيِّهِۦ جَسَدًا ثُمَّ أَنَابَ
Transliteration walaqad fatannā sulaymāna wa-alqaynā ʿalā kur'siyyihi jasadan thumma anāba
Kannada ಸುಲೈಮಾನರನ್ನು ನಾವು ಪರೀಕ್ಷೆಗೊಳಪಡಿಸಿದೆವು. ಅವರ ಸಿಂಹಾಸನದ ಮೇಲೆ ಒಂದು ಜಡಶರೀರವನ್ನು ತಂದು ಹಾಕಿದೆವು. ಅನಂತರ ಅವರು ಪಶ್ಚಾತ್ತಾಪಪಟ್ಟು ಮರಳಿದರು.
Verse 35
قَالَ رَبِّ ٱغْفِرْ لِى وَهَبْ لِى مُلْكًا لَّا يَنۢبَغِى لِأَحَدٍ مِّنۢ بَعْدِىٓ ۖ إِنَّكَ أَنتَ ٱلْوَهَّابُ
Transliteration qāla rabbi igh'fir lī wahab lī mul'kan lā yanbaghī li-aḥadin min baʿdī innaka anta l-wahābu
Kannada ಅವರು ಪ್ರಾರ್ಥಿಸಿದರು, “ನನ್ನ ಪ್ರಭೂ, ನನ್ನನ್ನು ಕ್ಷಮಿಸು, ನನ್ನ ಬಳಿಕ ಇನ್ನಾರಿಗೂ ಸಲ್ಲದ ರಾಜ ಪದವಿಯನ್ನು ನನಗೆ ದಯಪಾಲಿಸು. ನಿಜಕ್ಕೂ ನೀನೇ ಅತೀ ಉದಾರನಾಗಿರುವೆ”.
Verse 36
فَسَخَّرْنَا لَهُ ٱلرِّيحَ تَجْرِى بِأَمْرِهِۦ رُخَآءً حَيْثُ أَصَابَ
Transliteration fasakharnā lahu l-rīḥa tajrī bi-amrihi rukhāan ḥaythu aṣāba
Kannada ಆಗ ಅವರಿಗೆ ನಾವು ಗಾಳಿಯನ್ನು ನಿಯಂತ್ರಿಸಿ ಕೊಟ್ಟೆವು. ಅದು ಅವರ ಅಪ್ಪಣೆಯಂತೆ ಅವರು ಇಚ್ಚಿಸಿದ ದಿಕ್ಕಿಗೆ ಮಂದವಾಗಿ ಬೀಸುತ್ತಿತ್ತು.
Verse 37
وَٱلشَّيَـٰطِينَ كُلَّ بَنَّآءٍ وَغَوَّاصٍ
Transliteration wal-shayāṭīna kulla bannāin waghawwāṣin
Kannada ಎಲ್ಲ ವಿಧದ ಕಟ್ಟಡ ನಿರ್ಮಾಣಗಾರರೂ ಮುಳುಗು ಪ್ರವೀಣರೂ ಆದ ಶೈತಾನರನ್ನೂ
Verse 38
وَءَاخَرِينَ مُقَرَّنِينَ فِى ٱلْأَصْفَادِ
Transliteration waākharīna muqarranīna fī l-aṣfādi
Kannada ಸಂಕೋಲೆಗಳಲ್ಲಿ ಬಿಗಿಯಲ್ಪಟ್ಟ ಇತರ ಶೈತಾನರನ್ನೂ ನಾವು ಅವರಿಗೆ ಅಧೀನಗೊಳಿಸಿದೆವು.
Verse 39
هَـٰذَا عَطَآؤُنَا فَٱمْنُنْ أَوْ أَمْسِكْ بِغَيْرِ حِسَابٍ
Transliteration hādhā ʿaṭāunā fa-um'nun aw amsik bighayri ḥisābin
Kannada “ಇದು ನಮ್ಮ ಕೊಡುಗೆ, ಆದ್ದರಿಂದ ಲೆಕ್ಕ ನೋಡದೆ ಕೊಡಿರಿ ಇಲ್ಲವೇ ತಡೆದಿರಿಸಿರಿ” (ಎಂದು ಸುಲೈಮಾನರಿಗೆ ನಾವು ಹೇಳಿದೆವು).
Verse 40
وَإِنَّ لَهُۥ عِندَنَا لَزُلْفَىٰ وَحُسْنَ مَـَٔابٍ
Transliteration wa-inna lahu ʿindanā lazul'fā waḥus'na maābin
Kannada ನಿಶ್ಚಯವಾಗಿಯೂ ಅವರಿಗೆ ನಮ್ಮ ಬಳಿ ನಿಕಟ ಸ್ಥಾನವೂ ಉತ್ಕøಷ್ಟವಾದ ಅಂತಿಮ ನೆಲೆಯೂ ಇದೆ.
Verse 41
وَٱذْكُرْ عَبْدَنَآ أَيُّوبَ إِذْ نَادَىٰ رَبَّهُۥٓ أَنِّى مَسَّنِىَ ٱلشَّيْطَـٰنُ بِنُصْبٍ وَعَذَابٍ
Transliteration wa-udh'kur ʿabdanā ayyūba idh nādā rabbahu annī massaniya l-shayṭānu binuṣ'bin waʿadhābin
Kannada ನಮ್ಮ ದಾಸ ಅಯ್ಯೂಬರನ್ನು ಸ್ಮರಿಸಿರಿ. ಸಂಕಟ ಹಾಗೂ ಪೀಡನೆಯ ಮೂಲಕ ನನ್ನನ್ನು ಶೈತಾನನು ಸ್ಪರ್ಶಿಸಿದ್ದಾನೆಂದು ಅವರು ತಮ್ಮ ಪ್ರಭುವನ್ನು ಪ್ರಾರ್ಥಿಸಿದ ಸಂದರ್ಭ.
Verse 42
ٱرْكُضْ بِرِجْلِكَ ۖ هَـٰذَا مُغْتَسَلٌۢ بَارِدٌ وَشَرَابٌ
Transliteration ur'kuḍ birij'lika hādhā mugh'tasalun bāridun washarābun
Kannada (ನಾವು ಆಜ್ಞಾಪಿಸಿದೆವು) “ನಿಮ್ಮ ಕಾಲನ್ನು ನೆಲಕ್ಕೆ ಬಡಿಯಿರಿ. ಇದೋ ಸ್ನಾನದ ತಣ್ಣೀರು, ಮತ್ತು ಕುಡಿಯುವ ನೀರು”.
Verse 43
وَوَهَبْنَا لَهُۥٓ أَهْلَهُۥ وَمِثْلَهُم مَّعَهُمْ رَحْمَةً مِّنَّا وَذِكْرَىٰ لِأُو۟لِى ٱلْأَلْبَـٰبِ
Transliteration wawahabnā lahu ahlahu wamith'lahum maʿahum raḥmatan minnā wadhik'rā li-ulī l-albābi
Kannada ಅವರ ಮನೆಯವರನ್ನೂ ಅವರೊಂದಿಗೆ ಪುನಃ ಅಷ್ಟನ್ನೂ ಅವರಿಗೆ ನಾವು ಕೊಟ್ಟೆವು. ಇದು ನಮ್ಮ ವತಿಯಿಂದ ಕರುಣೆಯಾಗಿಯೂ ಬುದ್ದಿಜೀವಿಗ ಳಿಗೆ ನೀತಿ ಪಾಠವಾಗಿಯೂ ನೀಡಿದುದಾಗಿತ್ತು.
Verse 44
وَخُذْ بِيَدِكَ ضِغْثًا فَٱضْرِب بِّهِۦ وَلَا تَحْنَثْ ۗ إِنَّا وَجَدْنَـٰهُ صَابِرًا ۚ نِّعْمَ ٱلْعَبْدُ ۖ إِنَّهُۥٓ أَوَّابٌ
Transliteration wakhudh biyadika ḍigh'than fa-iḍ'rib bihi walā taḥnath innā wajadnāhu ṣābiran niʿ'ma l-ʿabdu innahu awwābun
Kannada `ತಾವು ಒಂದು ಹಿಡಿ ಹುಲ್ಲನ್ನು ತೆಗೆದುಕೊಳ್ಳಿರಿ, ಅದರಿಂದ (ಪತ್ನಿಗೆ) ಹೊಡೆಯಿರಿ. ನಿಮ್ಮ ಶಪಥವನ್ನು ಮುರಿಯಬೇಡಿರಿ. ‘ನಾವು ಅವರನ್ನು ತಾಳ್ಮೆಗಾರರಾಗಿ ಕಂಡೆವು. ಅವರು ಅತ್ಯುತ್ತಮ ದಾಸರು, ತಮ್ಮ ಪ್ರಭುವಿನ ಕಡೆಗೆ ಬಹಳಷ್ಟು ಮರಳುವವರು.
Verse 45
وَٱذْكُرْ عِبَـٰدَنَآ إِبْرَٰهِيمَ وَإِسْحَـٰقَ وَيَعْقُوبَ أُو۟لِى ٱلْأَيْدِى وَٱلْأَبْصَـٰرِ
Transliteration wa-udh'kur ʿibādanā ib'rāhīma wa-is'ḥāqa wayaʿqūba ulī l-aydī wal-abṣāri
Kannada ಕರ್ಮ ಶಕ್ತಿ ಹಾಗೂ ಒಳದೃಷ್ಟಿಯುಳ್ಳ ನಮ್ಮ ದಾಸರಾದ ಇಬ್‍ರಾಹೀಮ್, ಇಸ್‍ಹಾಖ್ ಮತ್ತು ಯಅïಖೂಬರನ್ನು ಸ್ಮರಿಸಿರಿ.
Verse 46
إِنَّآ أَخْلَصْنَـٰهُم بِخَالِصَةٍ ذِكْرَى ٱلدَّارِ
Transliteration innā akhlaṣnāhum bikhāliṣatin dhik'rā l-dāri
Kannada ಒಂದು ವಿಶಿಷ್ಟ ಗುಣದಿಂದಾಗಿ ಅವರನ್ನು ನಾವು ಪುನೀತರಾಗಿ ಮಾಡಿದೆವು. ಅದು ಪರಲೋಕದ ಸ್ಮರಣೆಯಾಗಿತ್ತು.
Verse 47
وَإِنَّهُمْ عِندَنَا لَمِنَ ٱلْمُصْطَفَيْنَ ٱلْأَخْيَارِ
Transliteration wa-innahum ʿindanā lamina l-muṣ'ṭafayna l-akhyāri
Kannada ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆಯ್ದ ಶ್ರೇಷ್ಟರ ಸಾಲಿಗೆ ಸೇರಿದವರು.
Verse 48
وَٱذْكُرْ إِسْمَـٰعِيلَ وَٱلْيَسَعَ وَذَا ٱلْكِفْلِ ۖ وَكُلٌّ مِّنَ ٱلْأَخْيَارِ
Transliteration wa-udh'kur is'māʿīla wal-yasaʿa wadhā l-kif'li wakullun mina l-akhyāri
Kannada ಇಸ್ಮಾಈಲ್, ಅಲ್‍ಯಸಅï ಮತ್ತು ದುಲ್ ಕಿಫ್ಲರನ್ನು ಸ್ಮರಿಸಿರಿ. ಇವರೆಲ್ಲರೂ ಶ್ರೇಷ್ಟರ ಲ್ಲಾಗಿದ್ದರು.
Verse 49
هَـٰذَا ذِكْرٌ ۚ وَإِنَّ لِلْمُتَّقِينَ لَحُسْنَ مَـَٔابٍ
Transliteration hādhā dhik'run wa-inna lil'muttaqīna laḥus'na maābin
Kannada ಇದೊಂದು ಬೋಧನೆಯಾಗಿದ್ದು ಧರ್ಮನಿಷ್ಟರಿಗೆ ಖಂಡಿತ ಉತ್ಕøಷ್ಟವಾದ ಅಂತಿಮ ನೆಲೆಯಿದೆ.
Verse 50
جَنَّـٰتِ عَدْنٍ مُّفَتَّحَةً لَّهُمُ ٱلْأَبْوَٰبُ
Transliteration jannāti ʿadnin mufattaḥatan lahumu l-abwābu
Kannada ಅಂದರೆ ಶಾಶ್ವತವಾದ ಸ್ವರ್ಗೋದ್ಯಾನಗಳಿದ್ದು ಅವುಗಳ ಕದಗಳು ಅವರ ಪಾಲಿಗೆ ತೆರೆದಿಡಲಾಗಿದೆ.
Verse 51
مُتَّكِـِٔينَ فِيهَا يَدْعُونَ فِيهَا بِفَـٰكِهَةٍ كَثِيرَةٍ وَشَرَابٍ
Transliteration muttakiīna fīhā yadʿūna fīhā bifākihatin kathīratin washarābin
Kannada ಅವರು ಅದರಲ್ಲಿ ದಿಂಬುಗಳಿಗೆ ಒರಗಿ ಕುಳಿತು ಕೊಂಡು, ಹೇರಳ ಫಲಗಳನ್ನೂ ಪಾನೀಯಗಳನ್ನೂ ತರಿಸುತ್ತಿರುವರು.
Verse 52
۞ وَعِندَهُمْ قَـٰصِرَٰتُ ٱلطَّرْفِ أَتْرَابٌ
Transliteration waʿindahum qāṣirātu l-ṭarfi atrābun
Kannada ಅವರ ಬಳಿ ದೃಷ್ಟಿಯನ್ನು ನಿಯಂತ್ರಿಸುವ ಸಮವಯಸ್ಕ ಸುಂದರಿಯರಿರುವರು
Verse 53
هَـٰذَا مَا تُوعَدُونَ لِيَوْمِ ٱلْحِسَابِ
Transliteration hādhā mā tūʿadūna liyawmi l-ḥisābi
Kannada ಇವೆಲ್ಲ, ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ಮಾಡಲಾಗುತ್ತಿರುವ ವಸ್ತುಗಳು.
Verse 54
إِنَّ هَـٰذَا لَرِزْقُنَا مَا لَهُۥ مِن نَّفَادٍ
Transliteration inna hādhā lariz'qunā mā lahu min nafādin
Kannada ಇದು ನಮ್ಮ ಅನುಗ್ರಹವಾಗಿದ್ದು, ಇದೆಂದಿಗೂ ಬತ್ತಿ ಹೋಗಲಾರದು.
Verse 55
هَـٰذَا ۚ وَإِنَّ لِلطَّـٰغِينَ لَشَرَّ مَـَٔابٍ
Transliteration hādhā wa-inna lilṭṭāghīna lasharra maābin
Kannada ಇದು ಧರ್ಮನಿಷ್ಠರ ಸ್ಥಿತಿ. ಪಾಪಿಗಳಿಗೆ ಅತ್ಯಂತ ನಿಕೃಷ್ಟ ನಿವಾಸವಿದೆ.
Verse 56
جَهَنَّمَ يَصْلَوْنَهَا فَبِئْسَ ٱلْمِهَادُ
Transliteration jahannama yaṣlawnahā fabi'sa l-mihādu
Kannada ನರಕ, ಅದರಲ್ಲಿ ಅವರು ಉರಿದು ಹೋಗುವರು. ಅದೆಷ್ಟು ಕೆಟ್ಟ ಶಯ್ಯೆಯಾಗಿದೆ!
Verse 57
هَـٰذَا فَلْيَذُوقُوهُ حَمِيمٌ وَغَسَّاقٌ
Transliteration hādhā falyadhūqūhu ḥamīmun waghassāqun
Kannada ಇದು ಸ್ಥಿತಿ. ಆದುದರಿಂದ ಅವರು ಸವಿದು ಕೊಳ್ಳಲಿ, ಕುದಿಯುತ್ತಿರುವ ನೀರನ್ನು, ದುರ್ಗಂಧಪೂರಿತ ಕೀವನ್ನು
Verse 58
وَءَاخَرُ مِن شَكْلِهِۦٓ أَزْوَٰجٌ
Transliteration waākharu min shaklihi azwājun
Kannada ಇಂತಹದೇ ಬೇರೊಂದು ಜಲವನ್ನೂ, ಇನ್ನಿತರ ವಿಧಗಳ ಶಿಕ್ಷೆಯನ್ನೂ.
Verse 59
هَـٰذَا فَوْجٌ مُّقْتَحِمٌ مَّعَكُمْ ۖ لَا مَرْحَبًۢا بِهِمْ ۚ إِنَّهُمْ صَالُوا۟ ٱلنَّارِ
Transliteration hādhā fawjun muq'taḥimun maʿakum lā marḥaban bihim innahum ṣālū l-nāri
Kannada ಈ ತುಕಡಿಯು ನಿಮ್ಮ ಜೊತೆಗೇ ತಳ್ಳಿ ಬರುತ್ತಿದೆ. ಅವರಿಗೆ ಯಾವ ಕ್ಷೇಮವೂ ಇಲ್ಲ. ನಿಜವಾಗಿಯೂ ಅವರು ನರಕಕ್ಕೆ ಪ್ರವೇಶಿಸಿಯೇ ಬಿಟ್ಟರು .
Verse 60
قَالُوا۟ بَلْ أَنتُمْ لَا مَرْحَبًۢا بِكُمْ ۖ أَنتُمْ قَدَّمْتُمُوهُ لَنَا ۖ فَبِئْسَ ٱلْقَرَارُ
Transliteration qālū bal antum lā marḥaban bikum antum qaddamtumūhu lanā fabi'sa l-qarāru
Kannada ಇವರು ಹೇಳುತ್ತಾರೆ; ``ಅಷ್ಟೇ ಅಲ್ಲ, ನಿಮಗೂ ಕ್ಷೇಮವಿಲ್ಲ. ಇದನ್ನು ನೀವು ನಮ್ಮ ಮುಂದಿರಿಸಿ ಕೊಟ್ಟವರು, ಈ ತಾಣವು ಬಹಳ ನಿಕೃಷ್ಟ”.
Verse 61
قَالُوا۟ رَبَّنَا مَن قَدَّمَ لَنَا هَـٰذَا فَزِدْهُ عَذَابًا ضِعْفًا فِى ٱلنَّارِ
Transliteration qālū rabbanā man qaddama lanā hādhā fazid'hu ʿadhāban ḍiʿ'fan fī l-nāri
Kannada ಇವರು ಹೇಳುತ್ತಾರೆ; ``ನಮ್ಮ ಪ್ರಭೂ! ಇದನ್ನು ಯಾರು ನಮಗೆ ಮುಂದಿರಿಸಿಕೊಟ್ಟರೋ ಅವರಿಗೆ ಈ ಶಿಕ್ಷೆಯನ್ನು ನರಕದಲ್ಲಿ ಇಮ್ಮಡಿಯಾಗಿ ಹೆಚ್ಚಿಸಿ ಕೊಡು!
Verse 62
وَقَالُوا۟ مَا لَنَا لَا نَرَىٰ رِجَالًا كُنَّا نَعُدُّهُم مِّنَ ٱلْأَشْرَارِ
Transliteration waqālū mā lanā lā narā rijālan kunnā naʿudduhum mina l-ashrāri
Kannada ಅವರು ಹೀಗೆ ಹೇಳುವರು; ``ನಮಗೇನಾ ಯಿತು? ನಾವು ಕೆಟ್ಟವರೆಂದು ಭಾವಿಸುತ್ತಿದ್ದವರು ಇಲ್ಲೆಲ್ಲೂ ನಮಗೆ ಕಾಣುತ್ತಿಲ್ಲವಲ್ಲ?
Verse 63
أَتَّخَذْنَـٰهُمْ سِخْرِيًّا أَمْ زَاغَتْ عَنْهُمُ ٱلْأَبْصَـٰرُ
Transliteration attakhadhnāhum sikh'riyyan am zāghat ʿanhumu l-abṣāru
Kannada ನಾವು ಅವರನ್ನು ವೃಥಾ ಪರಿಹಾಸ್ಯ ಮಾಡುತ್ತಿ ದ್ದೆವೋ ಅಥವಾ ಅವರನ್ನು ಬಿಟ್ಟು ಕಣ್ಣುಗಳೂ ಕದಲಿತೇ?
Verse 64
إِنَّ ذَٰلِكَ لَحَقٌّ تَخَاصُمُ أَهْلِ ٱلنَّارِ
Transliteration inna dhālika laḥaqqun takhāṣumu ahli l-nāri
Kannada ನರಕವಾಸಿಗಳಲ್ಲಿ ಈ ತರದ ವಾಗ್ದಾನ ನಡೆಯಲಿರುವುದು. ಖಂಡಿತವಾಗಿಯೂ ಸತ್ಯ.
Verse 65
قُلْ إِنَّمَآ أَنَا۠ مُنذِرٌ ۖ وَمَا مِنْ إِلَـٰهٍ إِلَّا ٱللَّهُ ٱلْوَٰحِدُ ٱلْقَهَّارُ
Transliteration qul innamā anā mundhirun wamā min ilāhin illā l-lahu l-wāḥidu l-qahāru
Kannada (ಪೈಗಂಬರರೇ) ಹೇಳಿರಿ, ನಾನು ಕೇವಲ ಎಚ್ಚರಿಕೆ ಕೊಡುವವನು, ಏಕನೂ ಸರ್ವಾಧಿಪತಿಯೂ ಆಗಿರುವ ಅಲ್ಲಾಹನ ಹೊರತು ಯಾವುದೇ ಆರಾಧ್ಯರಿಲ್ಲ.
Verse 66
رَبُّ ٱلسَّمَـٰوَٰتِ وَٱلْأَرْضِ وَمَا بَيْنَهُمَا ٱلْعَزِيزُ ٱلْغَفَّـٰرُ
Transliteration rabbu l-samāwāti wal-arḍi wamā baynahumā l-ʿazīzu l-ghafāru
Kannada ಅವನು ಭೂಮಿ-ಆಕಾಶಗಳ ಹಾಗೂ ಅವುಗಳ ನಡುವೆ ಇರುವುದರ ಒಡೆಯನೂ ಪ್ರಬಲನೂ ಅತ್ಯಂತ ಕ್ಷಮಾಶೀಲನೂ ಆಗಿರುತ್ತಾನೆ.
Verse 67
قُلْ هُوَ نَبَؤٌا۟ عَظِيمٌ
Transliteration qul huwa naba-on ʿaẓīmun
Kannada ಹೇಳಿರಿ- “ಇದೊಂದು ಗಂಭೀರ ವಾರ್ತೆ!
Verse 68
أَنتُمْ عَنْهُ مُعْرِضُونَ
Transliteration antum ʿanhu muʿ'riḍūna
Kannada ನೀವು ಅದನ್ನು ಅವಗಣಿಸುತ್ತೀರಿ,
Verse 69
مَا كَانَ لِىَ مِنْ عِلْمٍۭ بِٱلْمَلَإِ ٱلْأَعْلَىٰٓ إِذْ يَخْتَصِمُونَ
Transliteration mā kāna liya min ʿil'min bil-mala-i l-aʿlā idh yakhtaṣimūna
Kannada ಮಲಅï ಅಅïಲಾ (ಸರ್ವೋನ್ನತ ದರಬಾರ) ದಲ್ಲಿ ಮಾತಿನ ಚಕಮಕಿ ನಡೆದಿದ್ದ ಸುದ್ದಿ ನನಗೆ ತಿಳಿದಿರಲೇ ಇಲ್ಲ.
Verse 70
إِن يُوحَىٰٓ إِلَىَّ إِلَّآ أَنَّمَآ أَنَا۠ نَذِيرٌ مُّبِينٌ
Transliteration in yūḥā ilayya illā annamā anā nadhīrun mubīnun
Kannada ನಾನು ಸುಸ್ಪಷ್ಟ ಎಚ್ಚರಿಕೆ ಕೊಡುವವನಾಗಿರುವುದರಿಂದ ಮಾತ್ರ ನನಗೆ ಸಂದೇಶ ಕೊಡಲಾಗುತ್ತದೆ.
Verse 71
إِذْ قَالَ رَبُّكَ لِلْمَلَـٰٓئِكَةِ إِنِّى خَـٰلِقٌۢ بَشَرًا مِّن طِينٍ
Transliteration idh qāla rabbuka lil'malāikati innī khāliqun basharan min ṭīnin
Kannada ನಿಮ್ಮ ಪ್ರಭು ದೇವಚರರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; “ನಾನು ಆವೆಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸುವವನಿದ್ದೇನೆ.
Verse 72
فَإِذَا سَوَّيْتُهُۥ وَنَفَخْتُ فِيهِ مِن رُّوحِى فَقَعُوا۟ لَهُۥ سَـٰجِدِينَ
Transliteration fa-idhā sawwaytuhu wanafakhtu fīhi min rūḥī faqaʿū lahu sājidīna
Kannada ಹಾಗೆ ನಾನು ಅವನನ್ನು ಪೂರ್ಣವಾಗಿ ನಿರ್ಮಿಸಿದಾಗ ಮತ್ತು ಅವನೊಳಗೆ ನನ್ನ ಆತ್ಮದಿಂದ ಊದಿ ದಾಗ, ನೀವು ಅವನ ಮುಂದೆ ಸಾಷ್ಟಾಂಗ ವೆರಗಿರಿ”.
Verse 73
فَسَجَدَ ٱلْمَلَـٰٓئِكَةُ كُلُّهُمْ أَجْمَعُونَ
Transliteration fasajada l-malāikatu kulluhum ajmaʿūna
Kannada ಆಗ ದೇವಚರರೆಲ್ಲರೂ ಸಾಷ್ಟಾಂಗವೆರಗಿದರು.
Verse 74
إِلَّآ إِبْلِيسَ ٱسْتَكْبَرَ وَكَانَ مِنَ ٱلْكَـٰفِرِينَ
Transliteration illā ib'līsa is'takbara wakāna mina l-kāfirīna
Kannada ಇಬ್‍ಲೀಸನ ಹೊರತು. ಅವನು ಅಹಂಭಾವ ತೋರಿದನು. ಅವನು ಸತ್ಯನಿಷೇಧಿಗಳ ಕೂಟಕ್ಕೆ ಸೇರಿದ್ದನು.
Verse 75
قَالَ يَـٰٓإِبْلِيسُ مَا مَنَعَكَ أَن تَسْجُدَ لِمَا خَلَقْتُ بِيَدَىَّ ۖ أَسْتَكْبَرْتَ أَمْ كُنتَ مِنَ ٱلْعَالِينَ
Transliteration qāla yāib'līsu mā manaʿaka an tasjuda limā khalaqtu biyadayya astakbarta am kunta mina l-ʿālīna
Kannada ಆಗ ಅಲ್ಲಾಹನು ಹೇಳಿದನು; “ಇಬ್‍ಲೀಸ್! ನಾನು ನನ್ನೆರಡು ಕೈಗಳಿಂದ ನಿರ್ಮಿಸಿದ್ದಕ್ಕೆ ಸಾಷ್ಟಾಂಗವೆರಗುವುದರಿಂದ ನಿನ್ನನ್ನು ತಡೆದುದೇನು? ನೀನು ಅಹಂಭಾವ ತೋರಿಸುವೆಯಾ? ಅಥವಾ ನೀನೇ ಉನ್ನತ ಮಟ್ಟದವರಲ್ಲಾಗಿರುವೆಯಾ?”
Verse 76
قَالَ أَنَا۠ خَيْرٌ مِّنْهُ ۖ خَلَقْتَنِى مِن نَّارٍ وَخَلَقْتَهُۥ مِن طِينٍ
Transliteration qāla anā khayrun min'hu khalaqtanī min nārin wakhalaqtahu min ṭīnin
Kannada ಅವನು ಹೀಗೆಂದನು; “ನಾನು ಇವನಿಗಿಂತ ಶ್ರೇಷ್ಟನು, ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿದೆ. ಮತ್ತು ಅವನನ್ನು ಆವೆಮಣ್ಣಿನಿಂದ ಸೃಷ್ಟಿಸಿದೆ”.
Verse 77
قَالَ فَٱخْرُجْ مِنْهَا فَإِنَّكَ رَجِيمٌ
Transliteration qāla fa-ukh'ruj min'hā fa-innaka rajīmun
Kannada ಆಗ ಅಲ್ಲಾಹನು ಹೇಳಿದನು; ‘ಹಾಗಿದ್ದರೆ ಇಲ್ಲಿಂದ ತೊಲಗು. ನೀನು ಬಹಿಷ್ಕøತನು.
Verse 78
وَإِنَّ عَلَيْكَ لَعْنَتِىٓ إِلَىٰ يَوْمِ ٱلدِّينِ
Transliteration wa-inna ʿalayka laʿnatī ilā yawmi l-dīni
Kannada ನ್ಯಾಯ ವಿಧಿಯ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ”.
Verse 79
قَالَ رَبِّ فَأَنظِرْنِىٓ إِلَىٰ يَوْمِ يُبْعَثُونَ
Transliteration qāla rabbi fa-anẓir'nī ilā yawmi yub'ʿathūna
Kannada ಆಗ ಅವನು, (ಇಬ್ಲೀಸ್) ಹೇಳಿದನು; “ಪ್ರಭೂ, ಹಾಗಿದ್ದರೆ ಅವರು ಪುನಃ ಎಬ್ಬಿಸಲ್ಪಡುವ ದಿನದ ವರೆಗೆ ನನಗೆ ಕಾಲಾವಕಾಶ ಕೊಟ್ಟು ಬಿಡು”.
Verse 80
قَالَ فَإِنَّكَ مِنَ ٱلْمُنظَرِينَ
Transliteration qāla fa-innaka mina l-munẓarīna
Kannada ಆಗ ಅಲ್ಲಾಹನು, ಹೇಳಿದನು; ನೀನು ಸಮಯಾ ವಕಾಶವನ್ನು ನೀಡಲ್ಪಟ್ಟವರ ಗುಂಪಿಗೆ ಸೇರಿರುವಿ.
Verse 81
إِلَىٰ يَوْمِ ٱلْوَقْتِ ٱلْمَعْلُومِ
Transliteration ilā yawmi l-waqti l-maʿlūmi
Kannada ನಿಶ್ಚಿತವಾದ ಆ ಸಮಯ ಬರುವ ದಿನದ ವರೆಗೆ
Verse 82
قَالَ فَبِعِزَّتِكَ لَأُغْوِيَنَّهُمْ أَجْمَعِينَ
Transliteration qāla fabiʿizzatika la-ugh'wiyannahum ajmaʿīna
Kannada ಆಗ ಅವನು (ಇಬ್ಲೀಸ್) ಹೇಳಿದನು “ನಿನ್ನ ಪ್ರತಿಷ್ಟೆಯಾಣೆ, ಅವರೆಲ್ಲರನ್ನೂ ನಾನು ಖಂಡಿತ ದಾರಿಗೆಡಿಸಿ ಬಿಡುವೆನು
Verse 83
إِلَّا عِبَادَكَ مِنْهُمُ ٱلْمُخْلَصِينَ
Transliteration illā ʿibādaka min'humu l-mukh'laṣīna
Kannada ಅವರ ಪೈಕಿ ನಿನ್ನ ನಿಷ್ಕಳಂಕ ದಾಸರ ಹೊರತು
Verse 84
قَالَ فَٱلْحَقُّ وَٱلْحَقَّ أَقُولُ
Transliteration qāla fal-ḥaqu wal-ḥaqa aqūlu
Kannada ಆಗ ಅಲ್ಲಾಹನು ಹೇಳಿದನು, ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.
Verse 85
لَأَمْلَأَنَّ جَهَنَّمَ مِنكَ وَمِمَّن تَبِعَكَ مِنْهُمْ أَجْمَعِينَ
Transliteration la-amla-anna jahannama minka wamimman tabiʿaka min'hum ajmaʿīna
Kannada ನಾನು ನಿನ್ನನ್ನೂ ನಿನ್ನನ್ನು ಅನುಸರಿಸುವ ಸಕಲರನ್ನೂ ನರಕಕ್ಕೆ ಖಂಡಿತ ತುಂಬಿಸಿ ಬಿಡುವೆನು.
Verse 86
قُلْ مَآ أَسْـَٔلُكُمْ عَلَيْهِ مِنْ أَجْرٍ وَمَآ أَنَا۠ مِنَ ٱلْمُتَكَلِّفِينَ
Transliteration qul mā asalukum ʿalayhi min ajrin wamā anā mina l-mutakalifīna
Kannada (ಸಂದೇಶವಾಹಕರೇ) ಹೇಳಿರಿ; ನಾನು ಇದರ ಹೆಸರಲ್ಲಿ ನಿಮ್ಮಿಂದ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನಾನು ನಿರ್ಮಿಸಿ ಹೇಳುವವರ ಸಾಲಿಗೆ ಸೇರಿದವನೂ ಅಲ್ಲ.
Verse 87
إِنْ هُوَ إِلَّا ذِكْرٌ لِّلْعَـٰلَمِينَ
Transliteration in huwa illā dhik'run lil'ʿālamīna
Kannada ಇದು ಲೋಕದವರಿಗಾಗಿ ಒಂದು ಉದ್ಭೋದನೆ ಮಾತ್ರವಾಗಿದೆ.
Verse 88
وَلَتَعْلَمُنَّ نَبَأَهُۥ بَعْدَ حِينٍۭ
Transliteration walataʿlamunna naba-ahu baʿda ḥīnin
Kannada ಒಂದು ಕಾಲಾವಧಿಯ ನಂತರ ಇದರ ವೃತ್ತಾಂತ ನಿಮಗೆ ಖಂಡಿತ ತಿಳಿಯುವುದು.
Read Surah Sad in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.