MyDugsiStart learning

Surah Qaf in Kannada: translation and audio

Surah 50 · ق · The Letter "Qaf" · 45 verses

Surah Qaf verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Qaf word by word in English.

Verse 1

قٓ ۚ وَٱلْقُرْءَانِ ٱلْمَجِيدِ

Transliteration qaf wal-qur'āni l-majīdi

Kannada ಕ್ವಾಫ್, ಘನವೆತ್ತ ಕುರ್‍ಆನಿನಾಣೆ

Verse 2

بَلْ عَجِبُوٓا۟ أَن جَآءَهُم مُّنذِرٌ مِّنْهُمْ فَقَالَ ٱلْكَـٰفِرُونَ هَـٰذَا شَىْءٌ عَجِيبٌ

Transliteration bal ʿajibū an jāahum mundhirun min'hum faqāla l-kāfirūna hādhā shayon ʿajībun

Kannada ಆದರೆ ಅವರಿಂದಲೇ ಇರುವ ಓರ್ವ ಮುನ್ನೆಚ್ಚರಿಕೆ ನೀಡುವವನು ಅವರ ಬಳಿಗೆ ಬಂದುದು ಇವರಿಗೆ ಅದ್ಭುತವೆನಿಸಿತು. ತರುವಾಯ ಸತ್ಯನಿಷೇಧಿಗಳು ಹೇಳಿದರು; `ಇದು ಸೋಜಿಗದ ವಿಷಯ’.

Verse 3

أَءِذَا مِتْنَا وَكُنَّا تُرَابًا ۖ ذَٰلِكَ رَجْعٌۢ بَعِيدٌ

Transliteration a-idhā mit'nā wakunnā turāban dhālika rajʿun baʿīdun

Kannada ನಾವು ಸತ್ತು ಮಣ್ಣಾಗಿ ಹೋದ ಬಳಿಕ (ಒಂದು ಪುನರ್ಜನ್ಮವೇ?) ಅದು ರೂಢಿಗೆ ವಿದೂರವಾದ ವಾಪಾಸಾತಿಯೇ ಸರಿ.

Verse 4

قَدْ عَلِمْنَا مَا تَنقُصُ ٱلْأَرْضُ مِنْهُمْ ۖ وَعِندَنَا كِتَـٰبٌ حَفِيظٌۢ

Transliteration qad ʿalim'nā mā tanquṣu l-arḍu min'hum waʿindanā kitābun ḥafīẓun

Kannada ಭೂಮಿಯು ಅವರ ಶರೀರದಿಂದ ಕುಂದಿಸಿ ಬಿಡುವುದನ್ನು ಖಂಡಿತ ನಾವು ಬಲ್ಲೆವು. ನಮ್ಮ ಬಳಿಯಲ್ಲೊಂದು ಸುರಕ್ಷಿತ ಗ್ರಂಥವಿದೆ.

Verse 5

بَلْ كَذَّبُوا۟ بِٱلْحَقِّ لَمَّا جَآءَهُمْ فَهُمْ فِىٓ أَمْرٍ مَّرِيجٍ

Transliteration bal kadhabū bil-ḥaqi lammā jāahum fahum fī amrin marījin

Kannada ಆದರೆ ಸತ್ಯವು ಅವರ ಬಳಿಗೆ ಬಂದು ತಲುಪಿದಾಗ ಅವರು ಅದನ್ನು ಸ್ಪಷ್ಟವಾಗಿ ನಿಷೇಧಿಸಿಬಿಟ್ಟರು. ಆದ್ದರಿಂದಲೇ ಅವರು ಚಂಚಲದಲ್ಲಿದ್ದಾರೆ.

Verse 6

أَفَلَمْ يَنظُرُوٓا۟ إِلَى ٱلسَّمَآءِ فَوْقَهُمْ كَيْفَ بَنَيْنَـٰهَا وَزَيَّنَّـٰهَا وَمَا لَهَا مِن فُرُوجٍ

Transliteration afalam yanẓurū ilā l-samāi fawqahum kayfa banaynāhā wazayyannāhā wamā lahā min furūjin

Kannada ಅವರು ತಮ್ಮ ಮೇಲಿರುವ ಆಕಾಶದ ಕಡೆಗೆ ನೋಡಿಲ್ಲವೇ? ನಾವು ಅದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿದೆವು. ಅದರಲ್ಲಿ ಎಲ್ಲೂ ಬಿರುಕಿಲ್ಲ.

Verse 7

وَٱلْأَرْضَ مَدَدْنَـٰهَا وَأَلْقَيْنَا فِيهَا رَوَٰسِىَ وَأَنۢبَتْنَا فِيهَا مِن كُلِّ زَوْجٍۭ بَهِيجٍ

Transliteration wal-arḍa madadnāhā wa-alqaynā fīhā rawāsiya wa-anbatnā fīhā min kulli zawjin bahījin

Kannada ಭೂಮಿಯನ್ನು ನಾವು ಹರಡಿದೆವು, ಅದರಲ್ಲಿ ಊರಿನಿಂತ ಪರ್ವತಗಳನ್ನು ನಾಟಿದೆವು ಮತ್ತು ಅದರಲ್ಲಿ ಸೊಗಸಾದ ಸಸ್ಯ ಜೋಡಿಗಳನ್ನು ಬೆಳೆಸಿದೆವು.

Verse 8

تَبْصِرَةً وَذِكْرَىٰ لِكُلِّ عَبْدٍ مُّنِيبٍ

Transliteration tabṣiratan wadhik'rā likulli ʿabdin munībin

Kannada (ಅಲ್ಲಾಹನ ಬಳಿಗೆ) ವಿಧೇಯತ್ವವಿರುವ ಪ್ರತಿಯೊಬ್ಬ ದಾಸನು ಕಂಡು ತಿಳಿಯಲು ಮತ್ತು ಅವನಿಗೆ ಪಾಠ ಲಭಿಸಲು (ಹೀಗೆ ಮಾಡಿರುವುದು).

Verse 9

وَنَزَّلْنَا مِنَ ٱلسَّمَآءِ مَآءً مُّبَـٰرَكًا فَأَنۢبَتْنَا بِهِۦ جَنَّـٰتٍ وَحَبَّ ٱلْحَصِيدِ

Transliteration wanazzalnā mina l-samāi māan mubārakan fa-anbatnā bihi jannātin waḥabba l-ḥaṣīdi

Kannada ನಾವು ಆಕಾಶದಿಂದ ಅನುಗ್ರಹೀತ ನೀರನ್ನಿಳಿಸಿದೆವು, ತರುವಾಯ ಅದರಿಂದ ತೋಟಗಳನ್ನೂ ಕೊಯ್ದು ತೆಗೆಯುವ ಧಾನ್ಯಗಳನ್ನೂ ನಾವು ಉತ್ಪಾದಿಸಿದೆವು.

Verse 10

وَٱلنَّخْلَ بَاسِقَـٰتٍ لَّهَا طَلْعٌ نَّضِيدٌ

Transliteration wal-nakhla bāsiqātin lahā ṭalʿun naḍīdun

Kannada ದಟ್ಟ ಗೊಂಚಲುಗಳುಳ್ಳ ಎತ್ತರದ ಖರ್ಜೂರದ ಮರಗಳನ್ನೂ ಸೃಷ್ಟಿಸಿದೆವು.

Verse 11

رِّزْقًا لِّلْعِبَادِ ۖ وَأَحْيَيْنَا بِهِۦ بَلْدَةً مَّيْتًا ۚ كَذَٰلِكَ ٱلْخُرُوجُ

Transliteration riz'qan lil'ʿibādi wa-aḥyaynā bihi baldatan maytan kadhālika l-khurūju

Kannada (ಇದು, ನಮ್ಮ) ದಾಸರಿಗೆ ಉಪಜೀವನವಾಗಿ. ಆ ನೀರಿನ ಮೂಲಕ ನಿರ್ಜೀವ ನಾಡನ್ನು ನಾವು ಸಜೀವಗೊಳಿಸುತ್ತೇವೆ. (ಸಮಾಧಿಯಿಂದ) ಹೊರ ಬರುವುದೂ ಹೀಗೆಯೇ.

Verse 12

كَذَّبَتْ قَبْلَهُمْ قَوْمُ نُوحٍ وَأَصْحَـٰبُ ٱلرَّسِّ وَثَمُودُ

Transliteration kadhabat qablahum qawmu nūḥin wa-aṣḥābu l-rasi wathamūdu

Kannada ಇವರಿಗಿಂತ ಮುಂಚೆ ನೂಹರ ಜನಾಂಗವೂ ರಸ್ಸ್‍ನವರೂ ಸಮೂದ್ ಗೋತ್ರದವರೂ ಸತ್ಯವನ್ನು ನಿಷೇಧಿಸಿದ್ದರು.

Verse 13

وَعَادٌ وَفِرْعَوْنُ وَإِخْوَٰنُ لُوطٍ

Transliteration waʿādun wafir'ʿawnu wa-ikh'wānu lūṭin

Kannada

Verse 14

وَأَصْحَـٰبُ ٱلْأَيْكَةِ وَقَوْمُ تُبَّعٍ ۚ كُلٌّ كَذَّبَ ٱلرُّسُلَ فَحَقَّ وَعِيدِ

Transliteration wa-aṣḥābu l-aykati waqawmu tubbaʿin kullun kadhaba l-rusula faḥaqqa waʿīdi

Kannada ಆದ್ ಸಮುದಾಯವೂ ಫಿರ್‍ಔನನೂ `ಲೂಥ’ ರ ಸಹೋದರರೂ, ಐಕದವರೂ, ತುಬ್ಬಅï ಜನಾಂಗದವರೂ ಕೂಡಾ. ಅವರೆಲ್ಲರೂ ದೇವ ದೂತರನ್ನು ಸುಳ್ಳಾಗಿದರು. ಕೊನೆಗೆ ನನ್ನ ಎಚ್ಚರಿಕೆಯು ಅವರಿಗೆ ನಿಜವಾಗಿ ಪರಿಣಮಿಸಿತು.

Verse 15

أَفَعَيِينَا بِٱلْخَلْقِ ٱلْأَوَّلِ ۚ بَلْ هُمْ فِى لَبْسٍ مِّنْ خَلْقٍ جَدِيدٍ

Transliteration afaʿayīnā bil-khalqi l-awali bal hum fī labsin min khalqin jadīdin

Kannada ಪ್ರಥಮ ಬಾರಿಯ ಸೃಷ್ಟಿಯಿಂದ ನಾವೇನು ಬಳಲಿದ್ದೇವೆಯೇ? (ಇಲ್ಲ) ಆದರೂ ಅವರು ಹೊಸ ಸೃಷ್ಟಿಯ ಬಗ್ಗೆ ಸಂಶಯಗ್ರಸ್ಥರಾಗಿದ್ದಾರೆ.

Verse 16

وَلَقَدْ خَلَقْنَا ٱلْإِنسَـٰنَ وَنَعْلَمُ مَا تُوَسْوِسُ بِهِۦ نَفْسُهُۥ ۖ وَنَحْنُ أَقْرَبُ إِلَيْهِ مِنْ حَبْلِ ٱلْوَرِيدِ

Transliteration walaqad khalaqnā l-insāna wanaʿlamu mā tuwaswisu bihi nafsuhu wanaḥnu aqrabu ilayhi min ḥabli l-warīdi

Kannada ನಿಶ್ಚಯ ನಾವು ಮಾನವನನ್ನು ಸೃಷ್ಟಿಸಿದೆವು. ಅವನ ಮನಸ್ಸನ್ನು ಚಂಚಲಗೊಳಿಸುತ್ತಿರುವ ದುರ್ಭಾವನೆಗಳನ್ನೂ ನಾವು ಬಲ್ಲೆವು. ನಾವು ಅವನಿಗೆ ಅವನ ಕಂಠನಾಡಿಗಿಂತಲೂ ಹೆಚ್ಚು ಸಮೀಪವಿದ್ದೇವೆ .

Verse 17

إِذْ يَتَلَقَّى ٱلْمُتَلَقِّيَانِ عَنِ ٱلْيَمِينِ وَعَنِ ٱلشِّمَالِ قَعِيدٌ

Transliteration idh yatalaqqā l-mutalaqiyāni ʿani l-yamīni waʿani l-shimāli qaʿīdun

Kannada ಬಲ ಹಾಗೂ ಎಡಭಾಗಗಳಲ್ಲಿ ಕುಳಿತು ಸ್ವೀಕರಿಸುವ (ದಾಖಲಿಸುವ) ಇಬ್ಬರು (ದೇವಚರರು) ಸ್ವೀಕರಿಸುವ ಸಂದರ್ಭ.

Verse 18

مَّا يَلْفِظُ مِن قَوْلٍ إِلَّا لَدَيْهِ رَقِيبٌ عَتِيدٌ

Transliteration mā yalfiẓu min qawlin illā ladayhi raqībun ʿatīdun

Kannada

Verse 19

وَجَآءَتْ سَكْرَةُ ٱلْمَوْتِ بِٱلْحَقِّ ۖ ذَٰلِكَ مَا كُنتَ مِنْهُ تَحِيدُ

Transliteration wajāat sakratu l-mawti bil-ḥaqi dhālika mā kunta min'hu taḥīdu

Kannada ನಿರೀಕ್ಷಕ, ಉಪಸ್ಥಿತರ (ರಖೀಬ್ - ಅತೀದ್ ಎಂಬ ದೇವಚರರ) ನಿಗಾಕ್ಕೊಳಪಡದೆ ಮನುಷ್ಯ ಒಂದು ಮಾತನ್ನೂ ಉಚ್ಛರಿಸಲಾರ. ಮರಣದ ಕಠಿಣ ಸಂಕಟವು ಸತ್ಯವನ್ನು ತಂದಿದೆ. ನೀನು ಯಾವುದರಿಂದ ತಪ್ಪಿಸಿಕೊಂಡು ಓಡುತ್ತಿದ್ದೀಯೋ ಅದುವೇ ಇದು. (ಎಂದು ಹೇಳಲಾಗುವುದು)

Verse 20

وَنُفِخَ فِى ٱلصُّورِ ۚ ذَٰلِكَ يَوْمُ ٱلْوَعِيدِ

Transliteration wanufikha fī l-ṣūri dhālika yawmu l-waʿīdi

Kannada ಸೂರ್ (ಕಹಳೆಯಿಂದ) ಊದಲ್ಪಟ್ಟಿತು. ಅದುವೇ ತಾಕೀತು ನೀಡಲ್ಪಟ್ಟ ದಿನ.

Verse 21

وَجَآءَتْ كُلُّ نَفْسٍ مَّعَهَا سَآئِقٌ وَشَهِيدٌ

Transliteration wajāat kullu nafsin maʿahā sāiqun washahīdun

Kannada ಪ್ರತಿಯೊಂದು ಶರೀರವು (ಅಂದು - ಮಹ್‍ಶರ ದಲ್ಲಿ) ಬರುವುದು. ಅಟ್ಟಿಕೊಂಡು ಬರುವ ಒಬ್ಬನೂ ಓರ್ವ ಸಾಕ್ಷಿಯೂ ಅವನ ಜೊತೆಗಿರುವರು.

Verse 22

لَّقَدْ كُنتَ فِى غَفْلَةٍ مِّنْ هَـٰذَا فَكَشَفْنَا عَنكَ غِطَآءَكَ فَبَصَرُكَ ٱلْيَوْمَ حَدِيدٌ

Transliteration laqad kunta fī ghaflatin min hādhā fakashafnā ʿanka ghiṭāaka fabaṣaruka l-yawma ḥadīdun

Kannada ನೀನು ಇದರ ಬಗ್ಗೆ ಅಲಕ್ಷ್ಯನಾಗಿದ್ದೆ. ಇದೀಗ ನಾವು ನಿನ್ನ ಮುಂದಿದ್ದ ತೆರೆಯನ್ನು ಸರಿಸಿ ಬಿಟ್ಟಿದ್ದೇವೆ. ಆದ್ದರಿಂದ ಇಂದು ನಿನ್ನ ದೃಷ್ಟಿಯು ಬಹಳ ತೀಕ್ಷ್ಣವಿದೆ (ಎಂದು ಸತ್ಯನಿಷೇಧಿಗೆ ಹೇಳಲಾಗುವುದು).

Verse 23

وَقَالَ قَرِينُهُۥ هَـٰذَا مَا لَدَىَّ عَتِيدٌ

Transliteration waqāla qarīnuhu hādhā mā ladayya ʿatīdun

Kannada ಇದು ನನ್ನ ಬಳಿ ಸಿದ್ಧಗೊಂಡ ದಾಖಲೆ ಎಂದು ಅವನ ಜೊತೆಗಾರ (ಮಲಕ್) ಹೇಳುವನು.

Verse 24

أَلْقِيَا فِى جَهَنَّمَ كُلَّ كَفَّارٍ عَنِيدٍ

Transliteration alqiyā fī jahannama kulla kaffārin ʿanīdin

Kannada

Verse 25

مَّنَّاعٍ لِّلْخَيْرِ مُعْتَدٍ مُّرِيبٍ

Transliteration mannāʿin lil'khayri muʿ'tadin murībin

Kannada ಪ್ರತಿಸ್ಪರ್ಧಿ, ಒಳಿತಿಗೆ ವಿಘ್ನಕಾರಿ, ದುಷ್ಕರ್ಮಿ ಹಾಗೂ ಸಂಶಯಗ್ರಸ್ತನಾದ ಎಲ್ಲ ಸತ್ಯನಿಷೇಧಿ ಯನ್ನೂ ನರಕಕ್ಕೆ ತಳ್ಳಿ ಬಿಡು, (ಎಂದು ನರಕ ಪಾಲಕ ರಾದ ಮಲಕ್ - ಮಾಲಿಕರಿಗೆ ಆಜ್ಞೆ ಬರುವುದು)

Verse 26

ٱلَّذِى جَعَلَ مَعَ ٱللَّهِ إِلَـٰهًا ءَاخَرَ فَأَلْقِيَاهُ فِى ٱلْعَذَابِ ٱلشَّدِيدِ

Transliteration alladhī jaʿala maʿa l-lahi ilāhan ākhara fa-alqiyāhu fī l-ʿadhābi l-shadīdi

Kannada ಅವನು ಅಲ್ಲಾಹನೊಂದಿಗೆ ಇತರರನ್ನು ದೇವ ರಾಗಿ ಮಾಡಿಕೊಂಡಿದ್ದನು. ಆದ್ದರಿಂದ ಅವನನ್ನು ಘೋರ ಶಿಕ್ಷೆಗೆ ಹಾಕಿಬಿಡು.

Verse 27

۞ قَالَ قَرِينُهُۥ رَبَّنَا مَآ أَطْغَيْتُهُۥ وَلَـٰكِن كَانَ فِى ضَلَـٰلٍۭ بَعِيدٍ

Transliteration qāla qarīnuhu rabbanā mā aṭghaytuhu walākin kāna fī ḍalālin baʿīdin

Kannada ಅವನ ಜೊತೆಗಾರನು (ಶೈತಾನ) ಹೇಳುವನು; ನಮ್ಮ ಪ್ರಭೂ, ನಾನು ಇವನನ್ನು ದಾರಿತಪ್ಪಿಸಲಿಲ್ಲ. ಅವನೇ ಅತ್ಯಂತ ಅಸಹಜವಾದ ಪಥಭೃಷ್ಟತೆಯಲ್ಲಿದ್ದನು.

Verse 28

قَالَ لَا تَخْتَصِمُوا۟ لَدَىَّ وَقَدْ قَدَّمْتُ إِلَيْكُم بِٱلْوَعِيدِ

Transliteration qāla lā takhtaṣimū ladayya waqad qaddamtu ilaykum bil-waʿīdi

Kannada ಅವನು (ಅಲ್ಲಾಹು) ಹೇಳಿದನು; ನೀವು ನನ್ನ ಸಮ್ಮುಖದಲ್ಲಿ ತರ್ಕಿಸಬೇಡಿರಿ. ನಾನು ನಿಮಗೆ (ಶಿಕ್ಷೆಯ ಬಗ್ಗೆ) ಮೊದಲೇ ಎಚ್ಚರಿಸಿದ್ದೆ.

Verse 29

مَا يُبَدَّلُ ٱلْقَوْلُ لَدَىَّ وَمَآ أَنَا۠ بِظَلَّـٰمٍ لِّلْعَبِيدِ

Transliteration mā yubaddalu l-qawlu ladayya wamā anā biẓallāmin lil'ʿabīdi

Kannada ನನ್ನಲ್ಲಿ ಮಾತು ಬದಲಾಯಿಸಲಾಗುವುದಿಲ್ಲ. ಮತ್ತು ನಾನು ನನ್ನ ದಾಸರ ಮೇಲೆ ಅಕ್ರಮವೆ ಸಗುವವನಲ್ಲ.

Verse 30

يَوْمَ نَقُولُ لِجَهَنَّمَ هَلِ ٱمْتَلَأْتِ وَتَقُولُ هَلْ مِن مَّزِيدٍ

Transliteration yawma naqūlu lijahannama hali im'talati wataqūlu hal min mazīdin

Kannada ಅಂದು ನಾವು ನರಕದೊಡನೆ - ನೀನು ತುಂಬಿ ಕೊಂಡೆಯಾ? ಎಂದು ಕೇಳುವೆವು, ಆಗ ಅದು, ಇನ್ನಷ್ಟು ಇದೆಯೇ? ಎಂದು ಕೇಳುವುದು.

Verse 31

وَأُزْلِفَتِ ٱلْجَنَّةُ لِلْمُتَّقِينَ غَيْرَ بَعِيدٍ

Transliteration wa-uz'lifati l-janatu lil'muttaqīna ghayra baʿīdin

Kannada ಧರ್ಮ ಭಕ್ತರಿಗೆ ಸ್ವರ್ಗವನ್ನು ದೂರವಾಗದ ಸ್ಥಿತಿಯಲ್ಲಿ ಹತ್ತಿರಗೊಳಿಸಲಾಗುವುದು.

Verse 32

هَـٰذَا مَا تُوعَدُونَ لِكُلِّ أَوَّابٍ حَفِيظٍ

Transliteration hādhā mā tūʿadūna likulli awwābin ḥafīẓin

Kannada ಈ ಕಾಣುತ್ತಿರುವುದು ನಿಮಗೆ ಸುವಾರ್ತೆ ನೀಡಲ್ಪಡುತ್ತಿದ್ದುದೇ ಆಗಿದೆ. ಬಹಳಷ್ಟು ಪಶ್ಚಾ ತ್ತಾಪಿಸಿ ಮರಳುತ್ತಿದ್ದ ಮತ್ತು (ಅಲ್ಲಾಹನ ವಿಧಿ- ಮೇರೆಗಳನ್ನು) ಪಾಲಿಸುತ್ತಿದ್ದ ಪ್ರತಿಯೊಬ್ಬರಿಗೂ.

Verse 33

مَّنْ خَشِىَ ٱلرَّحْمَـٰنَ بِٱلْغَيْبِ وَجَآءَ بِقَلْبٍ مُّنِيبٍ

Transliteration man khashiya l-raḥmāna bil-ghaybi wajāa biqalbin munībin

Kannada (ಅಂದರೆ) ಪರಮ ದಯಾಮಯನಾದ ಅಲ್ಲಾಹ ನನ್ನು ಕಣ್ಣಾರೆ ಕಾಣದೆಯೇ ಭಯಪಡುತ್ತಿದ್ದ ಮತ್ತು ವಿನಯಾನ್ವಿತ ಹೃದಯದೊಂದಿಗೆ ಬಂದಿರುವವನಿಗಾಗಿ.

Verse 34

ٱدْخُلُوهَا بِسَلَـٰمٍ ۖ ذَٰلِكَ يَوْمُ ٱلْخُلُودِ

Transliteration ud'khulūhā bisalāmin dhālika yawmu l-khulūdi

Kannada ಶಾಂತಿಯೊಂದಿಗೆ ನೀವು ಇದಕ್ಕೆ (ಸ್ವರ್ಗಕ್ಕೆ) ಪ್ರವೇಶಿಸಿರಿ. ಇದು ಶಾಶ್ವತ ಜೀವನದ ದಿನವಾಗಿರುವುದು.

Verse 35

لَهُم مَّا يَشَآءُونَ فِيهَا وَلَدَيْنَا مَزِيدٌ

Transliteration lahum mā yashāūna fīhā waladaynā mazīdun

Kannada ಅಲ್ಲಿ ಅವರಿಗಾಗಿ ಅವರು ಬಯಸಿದ್ದೆಲ್ಲವೂ ಲಭಿಸುವುದು ಮತ್ತು (ಅವರಿಗಾಗಿ) ಅದಕ್ಕಿಂತಲೂ ಬಹಳಷ್ಟು ನಮ್ಮಲ್ಲಿ ಕೊಡಲಿಕ್ಕಿದೆ.

Verse 36

وَكَمْ أَهْلَكْنَا قَبْلَهُم مِّن قَرْنٍ هُمْ أَشَدُّ مِنْهُم بَطْشًا فَنَقَّبُوا۟ فِى ٱلْبِلَـٰدِ هَلْ مِن مَّحِيصٍ

Transliteration wakam ahlaknā qablahum min qarnin hum ashaddu min'hum baṭshan fanaqqabū fī l-bilādi hal min maḥīṣin

Kannada ಇವರಿಗಿಂತ ಮುಂಚೆ ಅನೇಕ ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ. ಅವರು ಇವರಿಗಿಂತ ತುಂಬಾ ಬಲಶಾಲಿಗಳಾಗಿದ್ದರು. ಮತ್ತು ಅವರು ನಾಡುಗಳಲ್ಲಿ ಜಾಲಾಡಿದ್ದರು. ಆದರೆ (ನಮ್ಮ ಶಿಕ್ಷೆ ಬಂದೆರಗಿದಾಗ) ಅವರು ಯಾವುದಾದರೂ ಅಭಯ ಸ್ಥಾನವನ್ನು ಪಡೆದರೆ?

Verse 37

إِنَّ فِى ذَٰلِكَ لَذِكْرَىٰ لِمَن كَانَ لَهُۥ قَلْبٌ أَوْ أَلْقَى ٱلسَّمْعَ وَهُوَ شَهِيدٌ

Transliteration inna fī dhālika ladhik'rā liman kāna lahu qalbun aw alqā l-samʿa wahuwa shahīdun

Kannada (ಇಲ್ಲ) ಹೃದಯವುಳ್ಳ ಅಥವಾ ಹೃದಯ ಸಾನಿ ಧ್ಯದಿಂದ ಲಕ್ಷ್ಯಕೊಟ್ಟು ಕೇಳುವ ಪ್ರತಿಯೊಬ್ಬನಿಗೆ ಇದರಲ್ಲಿ ಬೋಧಪ್ರದ ಪಾಠವಿದೆ.

Verse 38

وَلَقَدْ خَلَقْنَا ٱلسَّمَـٰوَٰتِ وَٱلْأَرْضَ وَمَا بَيْنَهُمَا فِى سِتَّةِ أَيَّامٍ وَمَا مَسَّنَا مِن لُّغُوبٍ

Transliteration walaqad khalaqnā l-samāwāti wal-arḍa wamā baynahumā fī sittati ayyāmin wamā massanā min lughūbin

Kannada ನಾವು ಆಕಾಶಗಳನ್ನೂ, ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಆರು ದಿನಗಳಲ್ಲಿ (ಆರು ಹಂತಗಳಲ್ಲಿ) ಸೃಷ್ಟಿಸಿದೆವು. ಆದರೆ ನಮಗೇನೂ ದಣಿವಾಗಲಿಲ್ಲ.

Verse 39

فَٱصْبِرْ عَلَىٰ مَا يَقُولُونَ وَسَبِّحْ بِحَمْدِ رَبِّكَ قَبْلَ طُلُوعِ ٱلشَّمْسِ وَقَبْلَ ٱلْغُرُوبِ

Transliteration fa-iṣ'bir ʿalā mā yaqūlūna wasabbiḥ biḥamdi rabbika qabla ṭulūʿi l-shamsi waqabla l-ghurūbi

Kannada ಆದುದರಿಂದ (ಸಂದೇಶವಾಹಕರೇ,) ಅವರಾಡುವ ಮಾತುಗಳ ಬಗ್ಗೆ ತಾಳ್ಮೆವಹಿಸಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತ ಮಾನಕ್ಕಿಂತ ಮುಂಚೆಯೂ ನಿಮ್ಮ ಪ್ರಭುವಿನ ಸ್ತುತಿ ಮಾಡುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ .

Verse 40

وَمِنَ ٱلَّيْلِ فَسَبِّحْهُ وَأَدْبَـٰرَ ٱلسُّجُودِ

Transliteration wamina al-layli fasabbiḥ'hu wa-adbāra l-sujūdi

Kannada ಪುನಃ ರಾತ್ರಿ ವೇಳೆಯೂ ಸಾಷ್ಟಾಂಗವೆರಗಿದ ಬಳಿಕವೂ ಅವನನ್ನು ಜಪಿಸಿರಿ.

Verse 41

وَٱسْتَمِعْ يَوْمَ يُنَادِ ٱلْمُنَادِ مِن مَّكَانٍ قَرِيبٍ

Transliteration wa-is'tamiʿ yawma yunādi l-munādi min makānin qarībin

Kannada (ಓ ಮನುಷ್ಯಾ) ಕರೆಯುವವನು (ಪ್ರತಿಯೊಬ್ಬನ) ಸಮೀಪದಿಂದಲೇ ಕರೆಯುವ ದಿನವನ್ನು ಗಮನವಿಟ್ಟಿರು.

Verse 42

يَوْمَ يَسْمَعُونَ ٱلصَّيْحَةَ بِٱلْحَقِّ ۚ ذَٰلِكَ يَوْمُ ٱلْخُرُوجِ

Transliteration yawma yasmaʿūna l-ṣayḥata bil-ḥaqi dhālika yawmu l-khurūji

Kannada ಅಂದರೆ, ಆ ಘೋರ ಶಬ್ಧವನ್ನು ಅವರು ನಿಜವಾಗಿಯೂ ಕೇಳಿಸಿಕೊಳ್ಳುವ ದಿನ. ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿದೆ.

Verse 43

إِنَّا نَحْنُ نُحْىِۦ وَنُمِيتُ وَإِلَيْنَا ٱلْمَصِيرُ

Transliteration innā naḥnu nuḥ'yī wanumītu wa-ilaynā l-maṣīru

Kannada ನಾವೇ ಜೀವದಾನ ಮಾಡುತ್ತೇವೆ ಮತ್ತು ನಾವೇ ಮರಣ ಕೊಡುತ್ತೇವೆ. ನಮ್ಮ ಕಡೆಗೇ ಮರಳ ಬೇಕಾಗಿದೆ.

Verse 44

يَوْمَ تَشَقَّقُ ٱلْأَرْضُ عَنْهُمْ سِرَاعًا ۚ ذَٰلِكَ حَشْرٌ عَلَيْنَا يَسِيرٌ

Transliteration yawma tashaqqaqu l-arḍu ʿanhum sirāʿan dhālika ḥashrun ʿalaynā yasīrun

Kannada ಅಂದರೆ, ಭೂಮಿಯು ಅವರೊಂದಿಗೆ ಬಿರಿದು ಅವರು ಅತಿ ಬೇಗನೆ ಹೊರಡುವ ದಿನ. ಅದು ನಮಗೆ ಅತಿ ಸುಲಭದ ಒಟ್ಟುಗೂಡಿಸುವಿಕೆಯಾಗಿದೆ.

Verse 45

نَّحْنُ أَعْلَمُ بِمَا يَقُولُونَ ۖ وَمَآ أَنتَ عَلَيْهِم بِجَبَّارٍ ۖ فَذَكِّرْ بِٱلْقُرْءَانِ مَن يَخَافُ وَعِيدِ

Transliteration naḥnu aʿlamu bimā yaqūlūna wamā anta ʿalayhim bijabbārin fadhakkir bil-qur'āni man yakhāfu waʿīdi

Kannada (ಸಂದೇಶವಾಹಕರೇ,) ಅವರು ಹೇಳುವುದರ ಕುರಿತು ನಾವು ಚೆನ್ನಾಗಿ ಬಲ್ಲೆವು. ತಮಗೆ ಅವರ ನ್ನು ಬಲಾತ್ಕರಿಸುವ ಅಧಿಕಾರವಿಲ್ಲ. ಆದುದರಿಂದ ನನ್ನ ಎಚ್ಚರಿಕೆಯ ಭಯವಿರುವವರಿಗೆ ಈ ಖುರ್‍ಆನಿನ ಮೂಲಕ ನೀವು ಉಪದೇಶ ನೀಡಿರಿ.

Read Surah Qaf in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.