MyDugsiStart learning

Surah Maryam in Kannada: translation and audio

Surah 19 · مريم · Mary · 98 verses

Surah Maryam verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Maryam word by word in English.

Verse 1

كٓهيعٓصٓ

Transliteration kaf-ha-ya-ain-sad

Kannada ಕಾಫ್ ಹಾ ಯಾ ಐನ್ ಸ್ವಾದ್

Verse 2

ذِكْرُ رَحْمَتِ رَبِّكَ عَبْدَهُۥ زَكَرِيَّآ

Transliteration dhik'ru raḥmati rabbika ʿabdahu zakariyyā

Kannada ಇದು ನಿಮ್ಮ ಪ್ರಭು ತನ್ನ ದಾಸ ಝಕರಿಯ್ಯಾರ ಮೇಲೆ ತೋರಿದ ಕರುಣೆಯ ಕುರಿತ ಪ್ರಸ್ತಾಪ.

Verse 3

إِذْ نَادَىٰ رَبَّهُۥ نِدَآءً خَفِيًّا

Transliteration idh nādā rabbahu nidāan khafiyyan

Kannada ಅವರು ತಮ್ಮ ಪ್ರಭುವನ್ನು ರಹಸ್ಯವಾಗಿ ಕೂಗಿ ಪ್ರಾರ್ಥಿಸಿದಾಗ,

Verse 4

قَالَ رَبِّ إِنِّى وَهَنَ ٱلْعَظْمُ مِنِّى وَٱشْتَعَلَ ٱلرَّأْسُ شَيْبًا وَلَمْ أَكُنۢ بِدُعَآئِكَ رَبِّ شَقِيًّا

Transliteration qāla rabbi innī wahana l-ʿaẓmu minnī wa-ish'taʿala l-rasu shayban walam akun biduʿāika rabbi shaqiyyan

Kannada ಅವರು ಹೇಳಿದರು, "ಓ ನನ್ನ ಪ್ರಭೂ, ನನ್ನ ಎಲುಬುಗಳು ದುರ್ಬಲಗೊಂಡಿವೆ. ತಲೆಯು ನರೆಯಿಂದ ಮಿನುಗಿದೆ. ಓ ನನ್ನ ಪ್ರಭೂ, ನಿನ್ನನ್ನು ಪ್ರಾರ್ಥಿಸಿ ನಾನೆಂದೂ ಉತ್ತರ ಸಿಗದೆ ನಿರಾಶನಾಗಲಿಲ್ಲ.

Verse 5

وَإِنِّى خِفْتُ ٱلْمَوَٰلِىَ مِن وَرَآءِى وَكَانَتِ ٱمْرَأَتِى عَاقِرًا فَهَبْ لِى مِن لَّدُنكَ وَلِيًّا

Transliteration wa-innī khif'tu l-mawāliya min warāī wakānati im'ra-atī ʿāqiran fahab lī min ladunka waliyyan

Kannada ನನಗೆ ನನ್ನ ನಂತರದ ಹಿಂಬಾಲಿಗರ ಕುರಿತಂತೆ ಖಂಡಿತ ಭಯವಾಗುತ್ತಿದೆ. ನನ್ನ ಪತ್ನಿ ಬಂಜೆಯಾಗಿರುತ್ತಾಳೆ. ಆದ್ದರಿಂದ ನೀನು ನಿನ್ನ ಕಡೆಯಿಂದ ಓರ್ವ ಉತ್ತರಾಧಿಕಾರಿಯನ್ನು ನನಗೆ ಕರುಣಿಸು.

Verse 6

يَرِثُنِى وَيَرِثُ مِنْ ءَالِ يَعْقُوبَ ۖ وَٱجْعَلْهُ رَبِّ رَضِيًّا

Transliteration yarithunī wayarithu min āli yaʿqūba wa-ij'ʿalhu rabbi raḍiyyan

Kannada ಅವನು ನನ್ನ ವಾರೀಸುದಾರನೂ, ಯಅïಖೂಬರ ವಂಶದ ವಾರೀಸುದಾರನೂ ಆಗಲಿ, ಓ ನನ್ನ ಪ್ರಭೂ, ಅವನನ್ನು ನಿನ್ನ ತೃಪ್ತಿ ಪಾತ್ರನನ್ನಾಗಿ ಮಾಡು”.

Verse 7

يَـٰزَكَرِيَّآ إِنَّا نُبَشِّرُكَ بِغُلَـٰمٍ ٱسْمُهُۥ يَحْيَىٰ لَمْ نَجْعَل لَّهُۥ مِن قَبْلُ سَمِيًّا

Transliteration yāzakariyyā innā nubashiruka bighulāmin us'muhu yaḥyā lam najʿal lahu min qablu samiyyan

Kannada "ಓ ಝಕರಿಯ್ಯಾ, ನಾವು ನಿಮಗೆ ಓರ್ವ ಗಂಡು ಮಗುವಿನ ಬಗ್ಗೆ ಸುವಾರ್ತೆ ನೀಡುತ್ತೇವೆ. ಅವನ ಹೆಸರು ಯಹ್ಯಾ ಎಂದಾಗಿದ್ದು ನಾವು ಇದಕ್ಕೆ ಮುಂಚೆ ಈ ಹೆಸರಿನಿಂದ ಬೇರೆ ಯಾರನ್ನೂ ಕರೆದಿಲ್ಲ”.

Verse 8

قَالَ رَبِّ أَنَّىٰ يَكُونُ لِى غُلَـٰمٌ وَكَانَتِ ٱمْرَأَتِى عَاقِرًا وَقَدْ بَلَغْتُ مِنَ ٱلْكِبَرِ عِتِيًّا

Transliteration qāla rabbi annā yakūnu lī ghulāmun wakānati im'ra-atī ʿāqiran waqad balaghtu mina l-kibari ʿitiyyan

Kannada ಆಗ ಅವರು - "ಓ ನನ್ನ ಪ್ರಭೂ, ನನ್ನ ಪತ್ನಿಯು ಬಂಜೆಯಾಗಿದ್ದು ನಾನು ಅತಿ ಮುಪ್ಪಿನಿಂದ ಅಡರಿ ಹೋಗಿರುವಾಗ ನನಗೆ ಮಗು ಹುಟ್ಟುವು ದಾದರೂ ಹೇಗೆ?" ಎಂದು ಕೇಳಿದರು.

Verse 9

قَالَ كَذَٰلِكَ قَالَ رَبُّكَ هُوَ عَلَىَّ هَيِّنٌ وَقَدْ خَلَقْتُكَ مِن قَبْلُ وَلَمْ تَكُ شَيْـًٔا

Transliteration qāla kadhālika qāla rabbuka huwa ʿalayya hayyinun waqad khalaqtuka min qablu walam taku shayan

Kannada ಆಗ ಅಲ್ಲಾಹನು "ಅದು ಹಾಗೆಯೇ ಆಗುವುದು” ಎಂದನು. “ನನಗೆ ಇದೊಂದು ಸುಲಭದ ವಿಷಯವಾಗಿದ್ದು ಇದಕ್ಕೆ ಮುಂಚೆ ನೀವು ಏನೂ ಆಗಿಲ್ಲದಿದ್ದಾಗ ನಾನು ನಿಮ್ಮನ್ನು ಸೃಷ್ಟಿಸಿದ್ದೆನಲ್ಲವೇ?” ಎಂದು ನಿಮ್ಮ ಪ್ರಭು ಹೇಳಿದನು.

Verse 10

قَالَ رَبِّ ٱجْعَل لِّىٓ ءَايَةً ۚ قَالَ ءَايَتُكَ أَلَّا تُكَلِّمَ ٱلنَّاسَ ثَلَـٰثَ لَيَالٍ سَوِيًّا

Transliteration qāla rabbi ij'ʿal lī āyatan qāla āyatuka allā tukallima l-nāsa thalātha layālin sawiyyan

Kannada ಆಗ ಝಕರಿಯ್ಯಾ, "ಓ ನನ್ನ ಪ್ರಭೂ, ನನ ಗೊಂದು ಸಂಕೇತವನ್ನು ನಿಶ್ಚಯಿಸಿಕೊಡು" ಎಂದಾಗ "ಯಾವುದೇ ಕೇಡಿಲ್ಲದೆ ಮೂರು ದಿನ ಜನರೊಡನೆ ನಿಮಗೆ ಮಾತನಾಡಲಾಗದಿರುವುದೇ ನಿಮ್ಮ ಸಂಕೇತ" ಎಂದು ಅಲ್ಲಾಹು ಹೇಳಿದನು.

Verse 11

فَخَرَجَ عَلَىٰ قَوْمِهِۦ مِنَ ٱلْمِحْرَابِ فَأَوْحَىٰٓ إِلَيْهِمْ أَن سَبِّحُوا۟ بُكْرَةً وَعَشِيًّا

Transliteration fakharaja ʿalā qawmihi mina l-miḥ'rābi fa-awḥā ilayhim an sabbiḥū buk'ratan waʿashiyyan

Kannada ಆ ಪ್ರಕಾರ ಅವರು ಪ್ರಾರ್ಥನಾ ಮಂದಿರದಿಂದ ತನ್ನ ಜನಾಂಗದ ಕಡೆಗೆ ಹೊರಟರು. ಬೆಳಗು ಬೈಗುಗಳಲ್ಲಿ ದೇವ ಕೀರ್ತನೆ ಮಾಡಿರೆಂದು ಅವರು ಜನರಿಗೆ ಸಂಜ್ಞೆಯ ಮೂಲಕ ಸೂಚಿಸಿದರು.

Verse 12

يَـٰيَحْيَىٰ خُذِ ٱلْكِتَـٰبَ بِقُوَّةٍ ۖ وَءَاتَيْنَـٰهُ ٱلْحُكْمَ صَبِيًّا

Transliteration yāyaḥyā khudhi l-kitāba biquwwatin waātaynāhu l-ḥuk'ma ṣabiyyan

Kannada ``ಓ ಯಹ್ಯಾ! ವೇದಗ್ರಂಥವನ್ನು ಬಿಗಿಹಿಡಿಯಿರಿ”. (ಎಂದು ಅಲ್ಲಾಹನು ಹೇಳಿದನು). ನಾವು ಅವರಿಗೆ ತಮ್ಮ ಬಾಲ್ಯದಲ್ಲೇ ವೇದಜ್ಞಾನವನ್ನು ನೀಡಿದೆವು.

Verse 13

وَحَنَانًا مِّن لَّدُنَّا وَزَكَوٰةً ۖ وَكَانَ تَقِيًّا

Transliteration waḥanānan min ladunnā wazakatan wakāna taqiyyan

Kannada ನಮ್ಮ ಕಡೆಯಿಂದ ಅವರಿಗೆ ದಯಾವಾತ್ಸಲ್ಯ ಹಾಗೂ ಪಾವಿತ್ರ್ಯವನ್ನು ನೀಡಿದೆವು. ಅವರು ಮಹಾ ಧರ್ಮನಿಷ್ಠರಾಗಿದ್ದರು.

Verse 14

وَبَرًّۢا بِوَٰلِدَيْهِ وَلَمْ يَكُن جَبَّارًا عَصِيًّا

Transliteration wabarran biwālidayhi walam yakun jabbāran ʿaṣiyyan

Kannada ಅವರು ಮಾತಾಪಿತರಿಗೆ ವಿಧೇಯರಾಗಿದ್ದರು. ಅವರು ಅನುಸರಣೆಗೆಟ್ಟ ಅಹಂಕಾರಿಯಾಗಿರಲಿಲ್ಲ.

Verse 15

وَسَلَـٰمٌ عَلَيْهِ يَوْمَ وُلِدَ وَيَوْمَ يَمُوتُ وَيَوْمَ يُبْعَثُ حَيًّا

Transliteration wasalāmun ʿalayhi yawma wulida wayawma yamūtu wayawma yub'ʿathu ḥayyan

Kannada ಅವರು ಜನಿಸಿದ ದಿನವೂ ಅವರು ಮರಣ ಹೊಂದುವ ದಿನವೂ ಅವರನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲ್ಪಡುವ ದಿನವೂ ಅವರ ಮೇಲೆ ಶಾಂತಿ ಇರುವುದು.

Verse 16

وَٱذْكُرْ فِى ٱلْكِتَـٰبِ مَرْيَمَ إِذِ ٱنتَبَذَتْ مِنْ أَهْلِهَا مَكَانًا شَرْقِيًّا

Transliteration wa-udh'kur fī l-kitābi maryama idhi intabadhat min ahlihā makānan sharqiyyan

Kannada (ಓ ಪೈಗಂಬರರೇ,) ಈ ಗ್ರಂಥದಲ್ಲಿ ಮರ್ಯಮರ ವಿಷಯ ಪ್ರಸ್ತಾಪಿಸಿರಿ. ಅವರು ತನ್ನವರಿಂದ ಪೂರ್ವದಿಕ್ಕಿಗೆ ಹೋಗಿ ನೆಲೆಸಿದಾಗ.

Verse 17

فَٱتَّخَذَتْ مِن دُونِهِمْ حِجَابًا فَأَرْسَلْنَآ إِلَيْهَا رُوحَنَا فَتَمَثَّلَ لَهَا بَشَرًا سَوِيًّا

Transliteration fa-ittakhadhat min dūnihim ḥijāban fa-arsalnā ilayhā rūḥanā fatamathala lahā basharan sawiyyan

Kannada ತರವಾಯ ಆಕೆ ಅವರಿಂದ ಮರೆಯಾಗಿ ತೆರೆಯನ್ನಿಳಿಸಿದರು. ಆಗ ನಾವು ಅವರ ಬಳಿಗೆ ನಮ್ಮ ದೂತನನ್ನು ಕಳುಹಿಸಿದೆವು. ಅವನು ಅವರಿಗೆ ಓರ್ವ ಪೂರ್ಣ ಮನುಷ್ಯನಾಗಿ ರೂಪಾಂತರ ಗೊಂಡನು.

Verse 18

قَالَتْ إِنِّىٓ أَعُوذُ بِٱلرَّحْمَـٰنِ مِنكَ إِن كُنتَ تَقِيًّا

Transliteration qālat innī aʿūdhu bil-raḥmāni minka in kunta taqiyyan

Kannada ಮರ್ಯಮ್ ಥಟ್ಟನೆ, “ನಾನು ನಿನ್ನಿಂದ ದಯಾ ಮಯನಾದ ಅಲ್ಲಾಹನ ಅಭಯ ಯಾಚಿಸುತ್ತೇನೆ. ನೀನೊಬ್ಬ ತತ್ವನಿಷ್ಠೆಯುಳ್ಳವನಾಗಿದ್ದರೆ ನನ್ನಿಂದ ದೂರಸರಿ”, ಎಂದರು .

Verse 19

قَالَ إِنَّمَآ أَنَا۠ رَسُولُ رَبِّكِ لِأَهَبَ لَكِ غُلَـٰمًا زَكِيًّا

Transliteration qāla innamā anā rasūlu rabbiki li-ahaba laki ghulāman zakiyyan

Kannada ಆಗ ಅವನು, "ನಾನು ನಿಮ್ಮ ಪ್ರಭುವಿನ ದೂತ ನಾಗಿದ್ದು ನಿಮಗೆ ಓರ್ವ ಪವಿತ್ರ ಗಂಡು ಮಗುವನ್ನು ಕೊಡಲಿಕ್ಕಾಗಿ ಬಂದಿರುತ್ತೇನೆ" ಎಂದನು.

Verse 20

قَالَتْ أَنَّىٰ يَكُونُ لِى غُلَـٰمٌ وَلَمْ يَمْسَسْنِى بَشَرٌ وَلَمْ أَكُ بَغِيًّا

Transliteration qālat annā yakūnu lī ghulāmun walam yamsasnī basharun walam aku baghiyyan

Kannada ಆಗ ಮರ್ಯಮ್, "ನನ್ನನ್ನು ಮನುಷ್ಯರ್ಯಾರೂ ಮುಟ್ಟದಿರುವಾಗ ನನ್ನಲ್ಲಿ ಗಂಡು ಮಗು ಹುಟ್ಟುವುದು ಹೇಗೆ? ನಾನೇನೂ ದುರಾಚಾರಿ ಸ್ತ್ರೀಯಲ್ಲ" ಎಂದರು.

Verse 21

قَالَ كَذَٰلِكِ قَالَ رَبُّكِ هُوَ عَلَىَّ هَيِّنٌ ۖ وَلِنَجْعَلَهُۥٓ ءَايَةً لِّلنَّاسِ وَرَحْمَةً مِّنَّا ۚ وَكَانَ أَمْرًا مَّقْضِيًّا

Transliteration qāla kadhāliki qāla rabbuki huwa ʿalayya hayyinun walinajʿalahu āyatan lilnnāsi waraḥmatan minnā wakāna amran maqḍiyyan

Kannada ಆಗ ದೇವಚರನು, "ಹಾಗೆಯೇ ಆಗುವುದು. ಇದು ನನಗೆ ಬಹಳ ಸುಲಭವಾಗಿದ್ದು ಆ ಮಗು ವನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮತ್ತು ನನ್ನ ಕಡೆಯಿಂದ ಒಂದು ಕರುಣೆಯ ನ್ನಾಗಿ ಮಾಡಲಿಕ್ಕೋಸ್ಕರ ನಾನು ಹಾಗೆ ಮಾಡುತ್ತೇನೆ ಎಂದು ನಿಮ್ಮ ಪ್ರಭು ಹೇಳುತ್ತಾನೆ. ಈ ಕಾರ್ಯ ಮೊದಲೇ ನಿರ್ಧರಿಸಲಾಗಿದೆ” ಎಂದನು.

Verse 22

۞ فَحَمَلَتْهُ فَٱنتَبَذَتْ بِهِۦ مَكَانًا قَصِيًّا

Transliteration faḥamalathu fa-intabadhat bihi makānan qaṣiyyan

Kannada ತರುವಾಯ ಮರ್ಯಮರು ಆ ಮಗುವಿನ ಗರ್ಭ ಧರಿಸಿದರು. ನಂತರ ಅವರು ಆ ಗರ್ಭ ವನ್ನು ಹೊತ್ತುಕೊಂಡು ದೂರದ ಒಂದು ಸ್ಥಳಕ್ಕೆ ಹೋಗಿ ನೆಲೆಸಿದರು.

Verse 23

فَأَجَآءَهَا ٱلْمَخَاضُ إِلَىٰ جِذْعِ ٱلنَّخْلَةِ قَالَتْ يَـٰلَيْتَنِى مِتُّ قَبْلَ هَـٰذَا وَكُنتُ نَسْيًا مَّنسِيًّا

Transliteration fa-ajāahā l-makhāḍu ilā jidh'ʿi l-nakhlati qālat yālaytanī mittu qabla hādhā wakuntu nasyan mansiyyan

Kannada ತರುವಾಯ ಹೆರಿಗೆ ನೋವು ಅವರನ್ನು ಒಂದು ಖರ್ಜೂರದ ಮರದೆಡೆಗೆ ತಲುಪಿಸಿತು. ಅವರು, ``ಅಯ್ಯೋ, ನಾನು ಇದಕ್ಕಿಂತ ಮುಂಚೆ ಸತ್ತು ಹೋಗಿದ್ದರೆ ಮತ್ತು ಹೇಳ ಹೆಸರಿಲ್ಲದಂತೆ ಅಳಿದು ಹೋಗಿದ್ದರೆ ಎಷ್ಟು ಚೆನ್ನಾಗಿತ್ತು'' ಎಂದರು.

Verse 24

فَنَادَىٰهَا مِن تَحْتِهَآ أَلَّا تَحْزَنِى قَدْ جَعَلَ رَبُّكِ تَحْتَكِ سَرِيًّا

Transliteration fanādāhā min taḥtihā allā taḥzanī qad jaʿala rabbuki taḥtaki sariyyan

Kannada ದೇವಚರನು ಕೆಳಭಾಗದಿಂದ ಅವರನ್ನು ಕೂಗಿ ಇಂತೆಂದನು -“ದುಃಖಿಸಬೇಡಿರಿ, ನಿಮ್ಮ ಪ್ರಭು ನಿಮ್ಮ ತಳಭಾಗದಲ್ಲೊಂದು ಚಿಲುಮೆಯನ್ನು ಹರಿಸಿದ್ದಾನೆ.

Verse 25

وَهُزِّىٓ إِلَيْكِ بِجِذْعِ ٱلنَّخْلَةِ تُسَـٰقِطْ عَلَيْكِ رُطَبًا جَنِيًّا

Transliteration wahuzzī ilayki bijidh'ʿi l-nakhlati tusāqiṭ ʿalayki ruṭaban janiyyan

Kannada ನೀವು ಖರ್ಜೂರದ ಮರದ ಕಾಂಡವನ್ನು ನಿಮ್ಮೆಡೆಗೆ ಹಿಡಿದು ಅಲುಗಾಡಿಸಿರಿ. ಆಗ ನಿಮ್ಮ ಮೇಲೆ ಬಲಿತು ಪಕ್ವವಾದ ಖರ್ಜೂರದ ಹಣ್ಣು ಗಳು ಉದುರಿ ಬೀಳುತ್ತವೆ.

Verse 26

فَكُلِى وَٱشْرَبِى وَقَرِّى عَيْنًا ۖ فَإِمَّا تَرَيِنَّ مِنَ ٱلْبَشَرِ أَحَدًا فَقُولِىٓ إِنِّى نَذَرْتُ لِلرَّحْمَـٰنِ صَوْمًا فَلَنْ أُكَلِّمَ ٱلْيَوْمَ إِنسِيًّا

Transliteration fakulī wa-ish'rabī waqarrī ʿaynan fa-immā tarayinna mina l-bashari aḥadan faqūlī innī nadhartu lilrraḥmāni ṣawman falan ukallima l-yawma insiyyan

Kannada ಆಮೇಲೆ ನೀವು ತಿನ್ನಿರಿ, ಕುಡಿಯಿರಿ, ಕಣ್ಮನ ಗಳನ್ನು ತಣಿಸಿರಿ. ನೀವು ಮನುಷ್ಯರಲ್ಲಿ ಯಾರ ನ್ನಾದರೂ ಕಂಡರೆ ಅವರಿಗೆ ಹೀಗೆ ಹೇಳಿರಿ; “ನಾನು ಕರುಣಾ ನಿಧಿಯಾದ ಅಲ್ಲಾಹನಿಗಾಗಿ ಮೌನ ವೃತದ ಹರಕೆ ಹೊತ್ತಿರುವುದರಿಂದ ಇಂದು ನಾನು ಯಾರಲ್ಲೂ ಮಾತಾಡಲಾರೆ”.

Verse 27

فَأَتَتْ بِهِۦ قَوْمَهَا تَحْمِلُهُۥ ۖ قَالُوا۟ يَـٰمَرْيَمُ لَقَدْ جِئْتِ شَيْـًٔا فَرِيًّا

Transliteration fa-atat bihi qawmahā taḥmiluhu qālū yāmaryamu laqad ji'ti shayan fariyyan

Kannada ಆ ನಂತರ ಆಕೆ ಆ ಮಗುವನ್ನೆತ್ತಿಕೊಂಡು ತನ್ನ ಜನಾಂಗದ ಬಳಿಗೆ ಸಾಗಿದಳು. ಆಗ ಜನ ರೆಂದರು, “ಓ ಮರ್ಯಮ್! ನೀನು ಘೋರ ಪಾಪವನ್ನು ಮಾಡಿ ಬಂದಿದ್ದೀಯಾ!

Verse 28

يَـٰٓأُخْتَ هَـٰرُونَ مَا كَانَ أَبُوكِ ٱمْرَأَ سَوْءٍ وَمَا كَانَتْ أُمُّكِ بَغِيًّا

Transliteration yāukh'ta hārūna mā kāna abūki im'ra-a sawin wamā kānat ummuki baghiyyan

Kannada ಓ ಹಾರೂನರಿಗೆ ಸಾಟಿಯಾದ ಸಹೋದರಿ! ನಿನ್ನ ತಂದೆ ಕೆಟ್ಟವನಾಗಿರಲಿಲ್ಲ. ನಿನ್ನ ತಾಯಿಯೂ ದುಶ್ಯೀಲೆಯಾಗಿರಲಿಲ್ಲ”.

Verse 29

فَأَشَارَتْ إِلَيْهِ ۖ قَالُوا۟ كَيْفَ نُكَلِّمُ مَن كَانَ فِى ٱلْمَهْدِ صَبِيًّا

Transliteration fa-ashārat ilayhi qālū kayfa nukallimu man kāna fī l-mahdi ṣabiyyan

Kannada ಆಗ ಮರ್ಯಮ್, ಮಗುವಿನ ಕಡೆಗೆ ಸಂಜ್ಞೆ ಮಾಡಿದರು. ಆಗ ಜನರು ಕೇಳಿದರು; “ತೊಟ್ಟಿ ಲಲ್ಲಿ ಬಿದ್ದಿರುವ ಮಗುವಿನಲ್ಲಿ ಹೇಗೆ ನಾವು ಮಾತ ನಾಡಬೇಕು’’.

Verse 30

قَالَ إِنِّى عَبْدُ ٱللَّهِ ءَاتَىٰنِىَ ٱلْكِتَـٰبَ وَجَعَلَنِى نَبِيًّا

Transliteration qāla innī ʿabdu l-lahi ātāniya l-kitāba wajaʿalanī nabiyyan

Kannada ಮಗು ಹೇಳಿತು; “ನಾನು ಅಲ್ಲಾಹನ ದಾಸ, ಅವನು ನನಗೆ ಗ್ರಂಥ ನೀಡಿದನುಂ. ಪ್ರವಾದಿಯನ್ನಾಗಿ ಮಾಡಿದನು.

Verse 31

وَجَعَلَنِى مُبَارَكًا أَيْنَ مَا كُنتُ وَأَوْصَـٰنِى بِٱلصَّلَوٰةِ وَٱلزَّكَوٰةِ مَا دُمْتُ حَيًّا

Transliteration wajaʿalanī mubārakan ayna mā kuntu wa-awṣānī bil-ṣalati wal-zakati mā dum'tu ḥayyan

Kannada ನಾನೆಲ್ಲಿದ್ದರೂ ನನ್ನನ್ನು ಅನುಗ್ರಹೀತನಾಗಿರು ವಂತೆ ಮಾಡಿದನು. ನನ್ನ ಬಾಳಿನುದ್ದಕ್ಕೂ ನಮಾಝ್ ಮಾಡಲು ಮತ್ತು ಝಕಾತ್ ಪಾವತಿಸಲು ನನಗೆ ಆಜ್ಞೆಯಿತ್ತಿರುವನು.

Verse 32

وَبَرًّۢا بِوَٰلِدَتِى وَلَمْ يَجْعَلْنِى جَبَّارًا شَقِيًّا

Transliteration wabarran biwālidatī walam yajʿalnī jabbāran shaqiyyan

Kannada ನನ್ನನ್ನು ಅವನು ನನ್ನ ಮಾತೆಯ ಗುಣಸೇವ ಕನಾಗಿ ಮಾಡಿದನೇ ಹೊರತು ನನ್ನನ್ನು ಅದೃಷ್ಟಹೀನ, ನಿಷ್ಠುರನಾಗಿ ಮಾಡಿಲ್ಲ.

Verse 33

وَٱلسَّلَـٰمُ عَلَىَّ يَوْمَ وُلِدتُّ وَيَوْمَ أَمُوتُ وَيَوْمَ أُبْعَثُ حَيًّا

Transliteration wal-salāmu ʿalayya yawma wulidttu wayawma amūtu wayawma ub'ʿathu ḥayyan

Kannada ನಾನು ಜನಿಸಿದ ದಿನ, ತೀರಿ ಹೋಗುವ ದಿನ ಹಾಗೂ ಪುನಃ ಜೀವಂತಗೊಳಿಸಿ ಎಬ್ಬಿಸಲ್ಪಡುವ ದಿನ ನನ್ನ ಮೇಲೆ ದಿವ್ಯ ಶಾಂತಿ ಇರುವುದು”.

Verse 34

ذَٰلِكَ عِيسَى ٱبْنُ مَرْيَمَ ۚ قَوْلَ ٱلْحَقِّ ٱلَّذِى فِيهِ يَمْتَرُونَ

Transliteration dhālika ʿīsā ub'nu maryama qawla l-ḥaqi alladhī fīhi yamtarūna

Kannada ಇವರೇ ಮರ್ಯಮರ ಪುತ್ರ ಈಸಾ. ಜನರು ಯಾವ ವಿಷಯದಲ್ಲಿ ಸಂಶಯಪಡುತ್ತಿರುವರೋ ಅದರ ಕುರಿತಾಗಿರುವ ಸತ್ಯಾಂಶವಿದು.

Verse 35

مَا كَانَ لِلَّهِ أَن يَتَّخِذَ مِن وَلَدٍ ۖ سُبْحَـٰنَهُۥٓ ۚ إِذَا قَضَىٰٓ أَمْرًا فَإِنَّمَا يَقُولُ لَهُۥ كُن فَيَكُونُ

Transliteration mā kāna lillahi an yattakhidha min waladin sub'ḥānahu idhā qaḍā amran fa-innamā yaqūlu lahu kun fayakūnu

Kannada ಯಾರನ್ನಾದರೂ ಮಗನಾಗಿ ಮಾಡಿಕೊಳ್ಳುವುದು ಅಲ್ಲಾಹನಿಗೆ ಭೂಷಣವಲ್ಲ. ಅವನು ಪರಿಶುದ್ಧನು. ಅವನು, ಏನಾದರೂ ಆಗಬೇಕೆಂದು ತೀರ್ಮಾ ನಿಸಿದರೆ `ಆಗು’ ಎನ್ನುತ್ತಾನೆ. ಆಗಲೇ ಅದು ಆಗಿಬಿಡುತ್ತದೆ.

Verse 36

وَإِنَّ ٱللَّهَ رَبِّى وَرَبُّكُمْ فَٱعْبُدُوهُ ۚ هَـٰذَا صِرَٰطٌ مُّسْتَقِيمٌ

Transliteration wa-inna l-laha rabbī warabbukum fa-uʿ'budūhu hādhā ṣirāṭun mus'taqīmun

Kannada (ಈಸಾ ಹೀಗೆ ಹೇಳಿದ್ದರು;) “ನಿಶ್ಚಯವಾಗಿಯೂ ಅಲ್ಲಾಹು ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುತ್ತಾನೆ. ಆದುದರಿಂದ ನೀವು ಅವನನ್ನೇ ಆರಾಧಿಸಿರಿಃ. ಇದೇ ನೇರ ಮಾರ್ಗ.”

Verse 37

فَٱخْتَلَفَ ٱلْأَحْزَابُ مِنۢ بَيْنِهِمْ ۖ فَوَيْلٌ لِّلَّذِينَ كَفَرُوا۟ مِن مَّشْهَدِ يَوْمٍ عَظِيمٍ

Transliteration fa-ikh'talafa l-aḥzābu min baynihim fawaylun lilladhīna kafarū min mashhadi yawmin ʿaẓīmin

Kannada ಆದರೆ ಆ ಬಳಿಕ ಅವರ ನಡುವೆ ವಿವಿಧ ಪಂಗಡ ಪರಸ್ಪರ ಭಿನ್ನಾಭಿಪ್ರಾಯ ತಾಳಿತು. ಆದುದರಿಂದ ಸತ್ಯನಿಷೇಧಿಗಳಿಗೆ ಅವರು ಹಾಜರಾಗಲಿರುವ ಒಂದು ಘೋರ ದಿನದಲ್ಲಿ ವಿನಾಶಕಾರಿ ಶಿಕ್ಷೆಯಿದೆ.

Verse 38

أَسْمِعْ بِهِمْ وَأَبْصِرْ يَوْمَ يَأْتُونَنَا ۖ لَـٰكِنِ ٱلظَّـٰلِمُونَ ٱلْيَوْمَ فِى ضَلَـٰلٍ مُّبِينٍ

Transliteration asmiʿ bihim wa-abṣir yawma yatūnanā lākini l-ẓālimūna l-yawma fī ḍalālin mubīnin

Kannada ಅವರು ನಮ್ಮ ಮುಂದೆ ಹಾಜರಾಗುವ ಆ ದಿನ ಅವರ ಶ್ರವಣ ಹಾಗೂ ದೃಕ್‍ಶಕ್ತಿಗಳು ಅದೆಷ್ಟು ಪ್ರಖರವಾಗಿರುವುದು! ಆದರೆ ಇಂದು ಈ ಅಕ್ರ ಮಿಗಳು ಸುವ್ಯಕ್ತವಾದ ದುರ್ಮಾರ್ಗದಲ್ಲಿ ಬಿದ್ದಿರುತ್ತಾರೆ.

Verse 39

وَأَنذِرْهُمْ يَوْمَ ٱلْحَسْرَةِ إِذْ قُضِىَ ٱلْأَمْرُ وَهُمْ فِى غَفْلَةٍ وَهُمْ لَا يُؤْمِنُونَ

Transliteration wa-andhir'hum yawma l-ḥasrati idh quḍiya l-amru wahum fī ghaflatin wahum lā yu'minūna

Kannada (ಓ ಪೈಗಂಬರರೇ,) ವ್ಯಥೆಯ ಆ ದಿನದ ಬಗ್ಗೆ ಅವರಿಗೆ ಮುನ್ನೆಚ್ಚರಿಕೆ ಕೊಡಿರಿ. ಶಿಕ್ಷೆಯ ತೀರ್ಪು ಬಂದಾಗ! ಅವರಾದರೋ ಆ ಬಗ್ಗೆ ನಿರ್ಲಕ್ಷ್ಯರೂ ಅವಿಶ್ವಾಸಿಗಳೂ ಆಗಿರುವರು!

Verse 40

إِنَّا نَحْنُ نَرِثُ ٱلْأَرْضَ وَمَنْ عَلَيْهَا وَإِلَيْنَا يُرْجَعُونَ

Transliteration innā naḥnu narithu l-arḍa waman ʿalayhā wa-ilaynā yur'jaʿūna

Kannada ಈ ಭೂಮಿ ಹಾಗೂ ಇದರಲ್ಲಿರುವ ಸಕಲ ವಸ್ತು ಗಳನ್ನು ನಾವೇ ವಾರೀಸು ಹಕ್ಕಾಗಿ ತೆಗೆದು ಕೊಳ್ಳಲಿದ್ದೇವೆ. ಎಲ್ಲರೂ ನಮ್ಮ ಕಡೆಗೆ ಮರಳಿ ಸಲ್ಪಡುವರು.

Verse 41

وَٱذْكُرْ فِى ٱلْكِتَـٰبِ إِبْرَٰهِيمَ ۚ إِنَّهُۥ كَانَ صِدِّيقًا نَّبِيًّا

Transliteration wa-udh'kur fī l-kitābi ib'rāhīma innahu kāna ṣiddīqan nabiyyan

Kannada ಈ ಗ್ರಂಥದಲ್ಲಿ ಇಬ್ರಾಹೀಮರ ಬಗ್ಗೆ ಪ್ರಸ್ತಾಪಿಸಿರಿ. ಖಂಡಿತ, ಅವರೊಬ್ಬ ಶ್ರೇಷ್ಠ ಸತ್ಯ ಸಂಧರೂ ಪ್ರವಾದಿಯೂ ಆಗಿದ್ದರು.

Verse 42

إِذْ قَالَ لِأَبِيهِ يَـٰٓأَبَتِ لِمَ تَعْبُدُ مَا لَا يَسْمَعُ وَلَا يُبْصِرُ وَلَا يُغْنِى عَنكَ شَيْـًٔا

Transliteration idh qāla li-abīhi yāabati lima taʿbudu mā lā yasmaʿu walā yub'ṣiru walā yugh'nī ʿanka shayan

Kannada ಅವರು ತಮ್ಮ ತಂದೆಯನ್ನುದ್ದೇಶಿಸಿ ಹೀಗೆ ಹೇಳಿದರು. “ಅಪ್ಪಾ, ಆಲಿಸಲಾಗದ, ನೋಡಲಾಗದ ಮತ್ತು ತಮ್ಮ ಯಾವ ಕೆಲಸಕ್ಕೂ ಬಾರದ ವಸ್ತುಗಳನ್ನು (ವಿಗ್ರಹಗಳನ್ನು) ತಾವೇಕೆ ಆರಾಧಿಸುತ್ತೀರಿ?

Verse 43

يَـٰٓأَبَتِ إِنِّى قَدْ جَآءَنِى مِنَ ٱلْعِلْمِ مَا لَمْ يَأْتِكَ فَٱتَّبِعْنِىٓ أَهْدِكَ صِرَٰطًا سَوِيًّا

Transliteration yāabati innī qad jāanī mina l-ʿil'mi mā lam yatika fa-ittabiʿ'nī ahdika ṣirāṭan sawiyyan

Kannada ಅಪ್ಪಾ, ತಮಗೆ ಬಂದಿರದ ಜ್ಞಾನ ನನಗೆ ಬಂದಿದೆ. ತಾವು ನನ್ನನ್ನು ಅನುಸರಿಸಿರಿ. ನಾನು ತಮಗೆ ನೇರ ಮಾರ್ಗವನ್ನು ತೋರಿಸಿಕೊಡುವೆನು.

Verse 44

يَـٰٓأَبَتِ لَا تَعْبُدِ ٱلشَّيْطَـٰنَ ۖ إِنَّ ٱلشَّيْطَـٰنَ كَانَ لِلرَّحْمَـٰنِ عَصِيًّا

Transliteration yāabati lā taʿbudi l-shayṭāna inna l-shayṭāna kāna lilrraḥmāni ʿaṣiyyan

Kannada ಅಪ್ಪಾ ! ತಾವು ಶೈತಾನನನ್ನು ಆರಾಧಿಸಬೇಡಿರಿ. ಶೈತಾನನು ದಯಾನಿಧಿಯಾದ ಅಲ್ಲಾಹನ ಆಜ್ಞೋಲ್ಲಂಘಕನಾಗಿರುವನು.

Verse 45

يَـٰٓأَبَتِ إِنِّىٓ أَخَافُ أَن يَمَسَّكَ عَذَابٌ مِّنَ ٱلرَّحْمَـٰنِ فَتَكُونَ لِلشَّيْطَـٰنِ وَلِيًّا

Transliteration yāabati innī akhāfu an yamassaka ʿadhābun mina l-raḥmāni fatakūna lilshayṭāni waliyyan

Kannada ಅಪ್ಪಾ! ತಾವು ಕರುಣಾಳು ಅಲ್ಲಾಹನ ಶಿಕ್ಷೆಗೆ ಗುರಿಯಾಗುವಿರಿ ಹಾಗೂ ಶೈತಾನನ ಸಂಗಾತಿಯಾಗುವಿರಿ ಎಂಬ ಭಯ ನನಗಿದೆ” .

Verse 46

قَالَ أَرَاغِبٌ أَنتَ عَنْ ءَالِهَتِى يَـٰٓإِبْرَٰهِيمُ ۖ لَئِن لَّمْ تَنتَهِ لَأَرْجُمَنَّكَ ۖ وَٱهْجُرْنِى مَلِيًّا

Transliteration qāla arāghibun anta ʿan ālihatī yāib'rāhīmu la-in lam tantahi la-arjumannaka wa-uh'jur'nī maliyyan

Kannada ಆಗ ತಂದೆಯು “ಇಬ್ರಾಹೀಮ್, ನೀನೇನು ನನ್ನ ಆರಾಧ್ಯ ದೇವರನ್ನು ಕೈಬಿಡುವೆಯಾ ? ನೀನು ಇದರಿಂದ ಹಿಂಜರಿಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಸಾಯಿಸುವೆನು. ದೀರ್ಘಕಾಲ ನೀನು ನನ್ನಿಂದ ತೊಲಗಿಬಿಡು” ಎಂದನು.

Verse 47

قَالَ سَلَـٰمٌ عَلَيْكَ ۖ سَأَسْتَغْفِرُ لَكَ رَبِّىٓ ۖ إِنَّهُۥ كَانَ بِى حَفِيًّا

Transliteration qāla salāmun ʿalayka sa-astaghfiru laka rabbī innahu kāna bī ḥafiyyan

Kannada ಆಗ ಇಬ್‍ರಾಹೀಮರು,``ತಮಗೆ ಸಲಾಮ್, ತಮ್ಮನ್ನು ಕ್ಷಮಿಸಲಿಕ್ಕಾಗಿ ನಾನು ನನ್ನ ಪ್ರಭು ವಿನಲ್ಲಿ ಪ್ರಾರ್ಥಿಸುವೆನು. ನನ್ನ ಪ್ರಭು ನನ್ನ ಮೇಲೆ ಅತ್ಯಧಿಕ ಕೃಪೆಯುಳ್ಳವನು.

Verse 48

وَأَعْتَزِلُكُمْ وَمَا تَدْعُونَ مِن دُونِ ٱللَّهِ وَأَدْعُوا۟ رَبِّى عَسَىٰٓ أَلَّآ أَكُونَ بِدُعَآءِ رَبِّى شَقِيًّا

Transliteration wa-aʿtazilukum wamā tadʿūna min dūni l-lahi wa-adʿū rabbī ʿasā allā akūna biduʿāi rabbī shaqiyyan

Kannada ನಾನು ತಮ್ಮನ್ನೂ ತಾವೆಲ್ಲರೂ ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವ ವಸ್ತುಗಳನ್ನೂ ಬಿಟ್ಟಗಲಿ ಹೋಗುತ್ತೇನೆ. ನಾನಂತೂ ನನ್ನ ಪ್ರಭುವನ್ನು ಆರಾಧಿಸುವೆನು. ನಾನು ನನ್ನ ಪ್ರಭುವನ್ನು ಆರಾಧಿಸಿ ದೆಸೆಗೆಡಲಾರೆ ಎಂದು ನಾನು ಭರವಸೆ ತಾಳಿದ್ದೇನೆ” ಎಂದರು.

Verse 49

فَلَمَّا ٱعْتَزَلَهُمْ وَمَا يَعْبُدُونَ مِن دُونِ ٱللَّهِ وَهَبْنَا لَهُۥٓ إِسْحَـٰقَ وَيَعْقُوبَ ۖ وَكُلًّا جَعَلْنَا نَبِيًّا

Transliteration falammā iʿ'tazalahum wamā yaʿbudūna min dūni l-lahi wahabnā lahu is'ḥāqa wayaʿqūba wakullan jaʿalnā nabiyyan

Kannada ಆ ಪ್ರಕಾರ ಇಬ್‍ರಾಹೀಮರು ಆ ಜನರನ್ನೂ ಅಲ್ಲಾಹನನ್ನು ಬಿಟ್ಟು ಅವರು ಪೂಜಿಸುತ್ತಿರುವ ಆರಾಧ್ಯರನ್ನೂ ಬಿಟ್ಟಗಲಿದಾಗ ನಾವು ಅವರಿಗೆ ಇಸ್‍ಹಾಖ್ ಮತ್ತು ಯಅïಖೂಬರನ್ನು ಪುತ್ರದಾನ ಮಾಡಿದೆವು. ಮತ್ತು ಪ್ರತಿಯೊಬ್ಬನನ್ನೂ ಪ್ರವಾದಿಯನ್ನಾಗಿ ಮಾಡಿದೆವು.

Verse 50

وَوَهَبْنَا لَهُم مِّن رَّحْمَتِنَا وَجَعَلْنَا لَهُمْ لِسَانَ صِدْقٍ عَلِيًّا

Transliteration wawahabnā lahum min raḥmatinā wajaʿalnā lahum lisāna ṣid'qin ʿaliyyan

Kannada ಅವರಿಗೆ ನಮ್ಮ ಕರುಣೆಯಿಂದವರ ನೀಡಿದೆವು ಮತ್ತು ಸಮುನ್ನತವಾದ ಸತ್ಕೀರ್ತಿಯನ್ನು ಅವರಿಗೆ ದಯಪಾಲಿಸಿದೆವು.

Verse 51

وَٱذْكُرْ فِى ٱلْكِتَـٰبِ مُوسَىٰٓ ۚ إِنَّهُۥ كَانَ مُخْلَصًا وَكَانَ رَسُولًا نَّبِيًّا

Transliteration wa-udh'kur fī l-kitābi mūsā innahu kāna mukh'laṣan wakāna rasūlan nabiyyan

Kannada ಈ ಗ್ರಂಥದಲ್ಲಿ ಮೂಸಾರ ಕುರಿತು ಪ್ರಸ್ತಾಪಿಸಿರಿ. ಅವರೊಬ್ಬ ನಿರ್ಮಲ ಭಕ್ತರಾಗಿದ್ದರು. ಮತ್ತು ದೇವದೂತ ಹಾಗೂ ಪ್ರವಾದಿಯಾಗಿದ್ದರು.

Verse 52

وَنَـٰدَيْنَـٰهُ مِن جَانِبِ ٱلطُّورِ ٱلْأَيْمَنِ وَقَرَّبْنَـٰهُ نَجِيًّا

Transliteration wanādaynāhu min jānibi l-ṭūri l-aymani waqarrabnāhu najiyyan

Kannada ನಾವು ಅವರನ್ನು `ಥೂರ್ ಸೀನಾ’ ಪರ್ವತದ ಬಲಗಡೆಯಿಂದ ಕರೆದೆವು. ಅಲ್ಲಾಹನಲ್ಲಿ ಸಂಭಾಷಣೆಗಾರನೆಂಬ ನೆಲೆಯಲ್ಲಿ ಅವರಿಗೆ ಸಾಮಿ ಪ್ಯಪ್ರದಾನ ಮಾಡಿದೆವು.

Verse 53

وَوَهَبْنَا لَهُۥ مِن رَّحْمَتِنَآ أَخَاهُ هَـٰرُونَ نَبِيًّا

Transliteration wawahabnā lahu min raḥmatinā akhāhu hārūna nabiyyan

Kannada ನಮ್ಮ ಕೃಪೆಯಿಂದ ಅವರ ಸಹೋದರ ಹಾರೂನರನ್ನು ಪ್ರವಾದಿಯಾಗಿ ಅವರಿಗೆ ನಾವು ಪ್ರಧಾನ ಮಾಡಿದೆವು.

Verse 54

وَٱذْكُرْ فِى ٱلْكِتَـٰبِ إِسْمَـٰعِيلَ ۚ إِنَّهُۥ كَانَ صَادِقَ ٱلْوَعْدِ وَكَانَ رَسُولًا نَّبِيًّا

Transliteration wa-udh'kur fī l-kitābi is'māʿīla innahu kāna ṣādiqa l-waʿdi wakāna rasūlan nabiyyan

Kannada ಈ ಗ್ರಂಥದಲ್ಲಿ ಇಸ್ಮಾಈಲರ ಕುರಿತು ಪ್ರಸ್ತಾಪಿಸಿರಿ. ಅವರು ವಚನಪಾಲಕರಾಗಿದ್ದರು ಮತ್ತು ಸಂದೇಶವಾಹಕ ಹಾಗೂ ಪ್ರವಾದಿ ಆಗಿದ್ದರು

Verse 55

وَكَانَ يَأْمُرُ أَهْلَهُۥ بِٱلصَّلَوٰةِ وَٱلزَّكَوٰةِ وَكَانَ عِندَ رَبِّهِۦ مَرْضِيًّا

Transliteration wakāna yamuru ahlahu bil-ṣalati wal-zakati wakāna ʿinda rabbihi marḍiyyan

Kannada ಅವರು ತನ್ನ ಜನಾಂಗದವರಿಗೆ ನಮಾಝ್ ಮತ್ತು ಝಕಾತ್‍ನ ಆಜ್ಞೆ ನೀಡಿದರು. ಅವರು ತನ್ನ ಪ್ರಭುವಿನ ಬಳಿ ಸಂತೃಪ್ತಿಗೆ ಪಾತ್ರರಾಗಿದ್ದರು .

Verse 56

وَٱذْكُرْ فِى ٱلْكِتَـٰبِ إِدْرِيسَ ۚ إِنَّهُۥ كَانَ صِدِّيقًا نَّبِيًّا

Transliteration wa-udh'kur fī l-kitābi id'rīsa innahu kāna ṣiddīqan nabiyyan

Kannada ಈ ಗ್ರಂಥದಲ್ಲಿ ಇದ್ರೀಸರ ಕುರಿತು ಪ್ರಸ್ತಾಪಿಸಿರಿ, ಅವರೊಬ್ಬ ಸತ್ಯಸಂಧರೂ ಪ್ರವಾದಿಯೂ ಆಗಿದ್ದರು.

Verse 57

وَرَفَعْنَـٰهُ مَكَانًا عَلِيًّا

Transliteration warafaʿnāhu makānan ʿaliyyan

Kannada ನಾವು ಅವರನ್ನು ಉನ್ನತ ಸ್ಥಾನಕ್ಕೆ ಏರಿಸಿದೆವು.

Verse 58

أُو۟لَـٰٓئِكَ ٱلَّذِينَ أَنْعَمَ ٱللَّهُ عَلَيْهِم مِّنَ ٱلنَّبِيِّـۧنَ مِن ذُرِّيَّةِ ءَادَمَ وَمِمَّنْ حَمَلْنَا مَعَ نُوحٍ وَمِن ذُرِّيَّةِ إِبْرَٰهِيمَ وَإِسْرَٰٓءِيلَ وَمِمَّنْ هَدَيْنَا وَٱجْتَبَيْنَآ ۚ إِذَا تُتْلَىٰ عَلَيْهِمْ ءَايَـٰتُ ٱلرَّحْمَـٰنِ خَرُّوا۟ سُجَّدًا وَبُكِيًّا ۩

Transliteration ulāika alladhīna anʿama l-lahu ʿalayhim mina l-nabiyīna min dhurriyyati ādama wamimman ḥamalnā maʿa nūḥin wamin dhurriyyati ib'rāhīma wa-is'rāīla wamimman hadaynā wa-ij'tabaynā idhā tut'lā ʿalayhim āyātu l-raḥmāni kharrū sujjadan wabukiyyan

Kannada ಅವರೆಲ್ಲರೂ ಅಲ್ಲಾಹನು ಅನುಗ್ರಹಿಸಿದ ಪ್ರವಾದಿಗಳು. ಆದಮರ ಸಂತತಿಯಿಂದಲೂ ನಾವು ನೂಹರೊಂದಿಗೆ ನಾವೆಯಲ್ಲಿ ಏರಿಸಿದ್ದವ ರಿಂದಲೂ ಇಬ್‍ರಾಹೀಮರ ಹಾಗೂ ಇಸ್ರಾಈಲರ (ಯಅïಖೂಬರ) ಸಂತತಿಯಿಂದಲೂ ನಾವು ಸನ್ಮಾರ್ಗದರ್ಶನ ಮಾಡಿ ಆರಿಸಿ ತೆಗೆದವರಲ್ಲೂ ಅವರು ಒಳಗೊಂಡಿದ್ದರು. ಅವರಿಗೆ ಕರುಣಾನಿಧಿ ಅಲ್ಲಾಹನ ವಚನಗಳನ್ನು ಓದಿ ಹೇಳಿದಾಗ ಅವರು ಅಳುತ್ತಾ ಸಾಷ್ಟಾಂ ಗವೆರಗುತ್ತಿದ್ದರು .

Verse 59

۞ فَخَلَفَ مِنۢ بَعْدِهِمْ خَلْفٌ أَضَاعُوا۟ ٱلصَّلَوٰةَ وَٱتَّبَعُوا۟ ٱلشَّهَوَٰتِ ۖ فَسَوْفَ يَلْقَوْنَ غَيًّا

Transliteration fakhalafa min baʿdihim khalfun aḍāʿū l-ṣalata wa-ittabaʿū l-shahawāti fasawfa yalqawna ghayyan

Kannada ಅವರ ಬಳಿಕ ಅವರ ಉತ್ತರಾಧಿಕಾರಿಗಳಾಗಿ ಬಂದವರು ನಮಾಝನ್ನು ವ್ಯರ್ಥಗೊಳಿಸಿದರು ಮತ್ತು ದೇಹೇಚ್ಛೆಗಳನ್ನು ಅನುಸರಿಸಿದರು. ಆದುದರಿಂದ ಅವರು ನರಕದ ಒಂದು ಪ್ರಪಾತದಲ್ಲಿ ನೆಲೆಗೊಳ್ಳಲಿರುವರು.

Verse 60

إِلَّا مَن تَابَ وَءَامَنَ وَعَمِلَ صَـٰلِحًا فَأُو۟لَـٰٓئِكَ يَدْخُلُونَ ٱلْجَنَّةَ وَلَا يُظْلَمُونَ شَيْـًٔا

Transliteration illā man tāba waāmana waʿamila ṣāliḥan fa-ulāika yadkhulūna l-janata walā yuẓ'lamūna shayan

Kannada ಆದರೆ ಪಶ್ಚಾತ್ತಾಪಪಟ್ಟು ಸತ್ಯವಿಶ್ವಾಸ ಸ್ವೀಕರಿಸಿ, ಸತ್ಕರ್ಮ ಕೈಗೊಂಡವರ ಹೊರತು. ಅಂಥವರು ಸ್ವರ್ಗದಲ್ಲಿ ಪ್ರವೇಶ ಪಡೆಯುವರು. ಅವರಿಗೆ ಒಂದಿಷ್ಟೂ ಅನ್ಯಾಯವಾಗದು.

Verse 61

جَنَّـٰتِ عَدْنٍ ٱلَّتِى وَعَدَ ٱلرَّحْمَـٰنُ عِبَادَهُۥ بِٱلْغَيْبِ ۚ إِنَّهُۥ كَانَ وَعْدُهُۥ مَأْتِيًّا

Transliteration jannāti ʿadnin allatī waʿada l-raḥmānu ʿibādahu bil-ghaybi innahu kāna waʿduhu matiyyan

Kannada ಪರಮ ದಯಾಮಯನು ತನ್ನ ದಾಸರಿಗೆ ಪರೋಕ್ಷವಾಗಿ ವಾಗ್ದಾನ ಮಾಡಿರುವ ಸ್ಥಿರವಾಸದ ಸ್ವರ್ಗೋದ್ಯಾನಗಳಲ್ಲಿ (ಪ್ರವೇಶ ಪಡೆಯುವರು). ನಿಜವಾಗಿಯೂ ಅವನ ವಾಗ್ದಾನ ಪೂರ್ಣ ಗೊಂಡೇ ತೀರುವುದು.

Verse 62

لَّا يَسْمَعُونَ فِيهَا لَغْوًا إِلَّا سَلَـٰمًا ۖ وَلَهُمْ رِزْقُهُمْ فِيهَا بُكْرَةً وَعَشِيًّا

Transliteration lā yasmaʿūna fīhā laghwan illā salāman walahum riz'quhum fīhā buk'ratan waʿashiyyan

Kannada ಅಲ್ಲಿ ಅವರು ಸಲಾಮ್ ಅಲ್ಲದೆ, ಯಾವುದೇ, ನಿರರ್ಥಕ ಮಾತುಗಳನ್ನು ಆಲಿಸಲಾರರು. ಅಲ್ಲಿ ಅವರ ಆಹಾರವು ಬೆಳಗುಬೈಗುಗಳಲ್ಲಿ ನಿರಂತರವಿರುವುದು.

Verse 63

تِلْكَ ٱلْجَنَّةُ ٱلَّتِى نُورِثُ مِنْ عِبَادِنَا مَن كَانَ تَقِيًّا

Transliteration til'ka l-janatu allatī nūrithu min ʿibādinā man kāna taqiyyan

Kannada ನಾವು ನಮ್ಮ ದಾಸರ ಪೈಕಿ ಧರ್ಮನಿಷ್ಠ ಭಕ್ತರಿಗೆ ವಾರೀಸು ಹಕ್ಕಾಗಿ ನೀಡುವ ಸ್ವರ್ಗವಿದು.

Verse 64

وَمَا نَتَنَزَّلُ إِلَّا بِأَمْرِ رَبِّكَ ۖ لَهُۥ مَا بَيْنَ أَيْدِينَا وَمَا خَلْفَنَا وَمَا بَيْنَ ذَٰلِكَ ۚ وَمَا كَانَ رَبُّكَ نَسِيًّا

Transliteration wamā natanazzalu illā bi-amri rabbika lahu mā bayna aydīnā wamā khalfanā wamā bayna dhālika wamā kāna rabbuka nasiyyan

Kannada (ಓ ಪೈಗಂಬರರೇ,) ನಾವು (ದೇವಚರರು) ನಿಮ್ಮ ಪ್ರಭುವಿನ ಅಪ್ಪಣೆ ಇಲ್ಲದೆ ಇಳಿದು ಬರುವುದಿಲ್ಲ. ನಮ್ಮ ಮುಂದೆ, ನಮ್ಮ ಹಿಂದೆ ಮತ್ತು ಅವುಗಳ ನಡುವೆ ಏನೆಲ್ಲ ಇರುವುದೋ ಅವೆಲ್ಲವೂ ಅವನದ್ದು. ನಿಮ್ಮ ಪ್ರಭು ಮರೆತು ಬಿಡುವವನಲ್ಲ.

Verse 65

رَّبُّ ٱلسَّمَـٰوَٰتِ وَٱلْأَرْضِ وَمَا بَيْنَهُمَا فَٱعْبُدْهُ وَٱصْطَبِرْ لِعِبَـٰدَتِهِۦ ۚ هَلْ تَعْلَمُ لَهُۥ سَمِيًّا

Transliteration rabbu l-samāwāti wal-arḍi wamā baynahumā fa-uʿ'bud'hu wa-iṣ'ṭabir liʿibādatihi hal taʿlamu lahu samiyyan

Kannada ಅವನು ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆಯಿರುವ ಸರ್ವಸ್ವಗಳ ಪ್ರಭು. ಆದು ದರಿಂದ ನೀವು ಅವನಿಗೆ ಆರಾಧಿಸಿರಿ. ಅವನ ಆರಾಧನೆಗಾಗಿ ಸಹನೆಯಿಂದ ಸ್ಥಿರವಾಗಿರಿ . ಅವನಿಗೆ ಸಾಟಿಯಾದ ಬೇರೆ ಯಾರ ನ್ನಾದರೂ ತಾವು ತಿಳಿದಿದ್ದೀರಾ?

Verse 66

وَيَقُولُ ٱلْإِنسَـٰنُ أَءِذَا مَا مِتُّ لَسَوْفَ أُخْرَجُ حَيًّا

Transliteration wayaqūlu l-insānu a-idhā mā mittu lasawfa ukh'raju ḥayyan

Kannada “ನಾನು ಸತ್ತು ಹೋದ ಮೇಲೆ ನಿಜಕ್ಕೂ ಜೀವಂತವಾಗಿ ಹೊರ ತರಲ್ಪಡುವೆನೇ?” ಎಂದು ಮಾನ ವನು ಪ್ರಶ್ನಿಸುತ್ತಾನೆ.

Verse 67

أَوَلَا يَذْكُرُ ٱلْإِنسَـٰنُ أَنَّا خَلَقْنَـٰهُ مِن قَبْلُ وَلَمْ يَكُ شَيْـًٔا

Transliteration awalā yadhkuru l-insānu annā khalaqnāhu min qablu walam yaku shayan

Kannada ಮಾನವನು ಮೊದಲು ಏನೂ ಆಗಿಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದು ಅವನಿಗೆ ನೆನಪಿಲ್ಲವೇ?

Verse 68

فَوَرَبِّكَ لَنَحْشُرَنَّهُمْ وَٱلشَّيَـٰطِينَ ثُمَّ لَنُحْضِرَنَّهُمْ حَوْلَ جَهَنَّمَ جِثِيًّا

Transliteration fawarabbika lanaḥshurannahum wal-shayāṭīna thumma lanuḥ'ḍirannahum ḥawla jahannama jithiyyan

Kannada ನಿಮ್ಮ ಪ್ರಭುವಿನಾಣೆ, ನಾವು ಇವರನ್ನೂ ಶೈತಾನರನ್ನೂ ಒಟ್ಟು ಸೇರಿಸಿ ಆ ಬಳಿಕ ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ನರಕದ ಸುತ್ತಲೂ ಅವರನ್ನು ತಂದು ಹಾಜರುಗೊಳಿಸುವೆವು.

Verse 69

ثُمَّ لَنَنزِعَنَّ مِن كُلِّ شِيعَةٍ أَيُّهُمْ أَشَدُّ عَلَى ٱلرَّحْمَـٰنِ عِتِيًّا

Transliteration thumma lananziʿanna min kulli shīʿatin ayyuhum ashaddu ʿalā l-raḥmāni ʿitiyyan

Kannada ಅನಂತರ ಎಲ್ಲ ಗುಂಪುಗಳಿಂದಲೂ ಪರಮ ದಯಾಮಯನಾದ ಅಲ್ಲಾಹನ ವಿರುದ್ಧ ಹೆಚ್ಚು ದಿಕ್ಕಾರ ತೋರಿದವರ ಪೈಕಿ ಪ್ರತಿಯೊಬ್ಬನನ್ನೂ ಬೇರ್ಪಡಿಸಿ ನಿಲ್ಲಿಸುವೆವು.

Verse 70

ثُمَّ لَنَحْنُ أَعْلَمُ بِٱلَّذِينَ هُمْ أَوْلَىٰ بِهَا صِلِيًّا

Transliteration thumma lanaḥnu aʿlamu bi-alladhīna hum awlā bihā ṣiliyyan

Kannada ಇವರ ಪೈಕಿ ನರಕಕ್ಕೆ ಸೇರಿ ಉರಿಯಲು ಅತಿ ಹೆಚ್ಚು ಅರ್ಹರು ಯಾರೆಂದು ನಾವು ತಿಳಿದಿದ್ದೇವೆ.

Verse 71

وَإِن مِّنكُمْ إِلَّا وَارِدُهَا ۚ كَانَ عَلَىٰ رَبِّكَ حَتْمًا مَّقْضِيًّا

Transliteration wa-in minkum illā wāriduhā kāna ʿalā rabbika ḥatman maqḍiyyan

Kannada ನಿಮ್ಮ ಪೈಕಿ ನರಕವನ್ನು ಹಾದು ಹೋಗದವರು ಯಾರೂ ಇಲ್ಲ. ಇದು ನಿಮ್ಮ ಪ್ರಭುವಿನ ಮೇಲೆ ಪೂರ್ಣಗೊಳಿಸಬೇಕಾದ ಕಡ್ಡಾಯ ಬಾಧ್ಯತೆಯಾಗಿದೆ.

Verse 72

ثُمَّ نُنَجِّى ٱلَّذِينَ ٱتَّقَوا۟ وَّنَذَرُ ٱلظَّـٰلِمِينَ فِيهَا جِثِيًّا

Transliteration thumma nunajjī alladhīna ittaqaw wanadharu l-ẓālimīna fīhā jithiyyan

Kannada ಬಳಿಕ ನಾವು ಧರ್ಮನಿಷ್ಟರನ್ನು ರಕ್ಷಿಸಿಕೊಳ್ಳುವೆವು. ಅಕ್ರಮಿಗಳನ್ನು ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು.

Verse 73

وَإِذَا تُتْلَىٰ عَلَيْهِمْ ءَايَـٰتُنَا بَيِّنَـٰتٍ قَالَ ٱلَّذِينَ كَفَرُوا۟ لِلَّذِينَ ءَامَنُوٓا۟ أَىُّ ٱلْفَرِيقَيْنِ خَيْرٌ مَّقَامًا وَأَحْسَنُ نَدِيًّا

Transliteration wa-idhā tut'lā ʿalayhim āyātunā bayyinātin qāla alladhīna kafarū lilladhīna āmanū ayyu l-farīqayni khayrun maqāman wa-aḥsanu nadiyyan

Kannada ಇವರ ಮೇಲೆ ನಮ್ಮ ಸುವ್ಯಕ್ತ ವಚನಗಳನ್ನು ಓದಿ ಹೇಳಿದಾಗ ಸತ್ಯನಿಷೇಧಿಗಳು ಸತ್ಯ ವಿಶ್ವಾ ಸಿಗಳೊಡನೆ, “ನಮ್ಮೀ ಎರಡು ಪಂಗಡಗಳ ಪೈಕಿ ಶ್ರೇಷ್ಠ ನಿವಾಸ ಮತ್ತು ಸಭೆಯಲ್ಲಿ ಯಾರು ಉತ್ಕøಷ್ಟರು?’’ ಎಂದು ಕೇಳುತ್ತಾರೆ.

Verse 74

وَكَمْ أَهْلَكْنَا قَبْلَهُم مِّن قَرْنٍ هُمْ أَحْسَنُ أَثَـٰثًا وَرِءْيًا

Transliteration wakam ahlaknā qablahum min qarnin hum aḥsanu athāthan wari'yan

Kannada ಇವರಿಗಿಂತ ಮುಂಚೆ ಸಾಧನಾನುಕೂಲತೆಗಳಲ್ಲಿ ಹಾಗೂ ತೋರಿಕೆಯ ಸುಖಾಡಂಬರಗಳಲ್ಲಿ ಇವರಿಗಿಂತಲೂ ಮಿಗಿಲಾಗಿದ್ದ ಎಷ್ಟೋ ಜನಾಂಗಗಳನ್ನು ನಾಶಗೊಳಿಸಿರುತ್ತೇವೆ.

Verse 75

قُلْ مَن كَانَ فِى ٱلضَّلَـٰلَةِ فَلْيَمْدُدْ لَهُ ٱلرَّحْمَـٰنُ مَدًّا ۚ حَتَّىٰٓ إِذَا رَأَوْا۟ مَا يُوعَدُونَ إِمَّا ٱلْعَذَابَ وَإِمَّا ٱلسَّاعَةَ فَسَيَعْلَمُونَ مَنْ هُوَ شَرٌّ مَّكَانًا وَأَضْعَفُ جُندًا

Transliteration qul man kāna fī l-ḍalālati falyamdud lahu l-raḥmānu maddan ḥattā idhā ra-aw mā yūʿadūna immā l-ʿadhāba wa-immā l-sāʿata fasayaʿlamūna man huwa sharrun makānan wa-aḍʿafu jundan

Kannada ಹೇಳಿರಿ : ಯಾರು ದುರ್ಮಾರ್ಗದಲ್ಲಿದ್ದಾರೆ, ಅಂಥ ವರಿಗೆ ಮಾಡಲ್ಪಟ್ಟ ಮುನ್ನೆಚ್ಚರಿಕೆಯನ್ನು ಅವರು ಕಣ್ಣಾರೆ ಕಂಡುಕೊಳ್ಳುವವರೆಗೂ ಪರಮ ದಯಾಮಯನಾದ ಅಲ್ಲಾಹನು ಅವಧಿಯನ್ನು ವಿಸ್ತರಿಸುವನು. ಅದು ಯಾತನೆಯಿರಲಿ ಅಥವಾ ಅಂತಿಮ ಘಳಿಗೆಯಿರಲಿ- ಆಗ ಸ್ಥಾನದಲ್ಲಿ ಕೆಟ್ಟ ವರು ಮತ್ತು ಸೈನ್ಯದಲ್ಲಿ ದುರ್ಬಲರು ಯಾರೆಂದು ಗೊತ್ತಾಗುವುದು.

Verse 76

وَيَزِيدُ ٱللَّهُ ٱلَّذِينَ ٱهْتَدَوْا۟ هُدًى ۗ وَٱلْبَـٰقِيَـٰتُ ٱلصَّـٰلِحَـٰتُ خَيْرٌ عِندَ رَبِّكَ ثَوَابًا وَخَيْرٌ مَّرَدًّا

Transliteration wayazīdu l-lahu alladhīna ih'tadaw hudan wal-bāqiyātu l-ṣāliḥātu khayrun ʿinda rabbika thawāban wakhayrun maraddan

Kannada ಸನ್ಮಾರ್ಗವನ್ನು ಕೈಗೊಂಡವರಿಗೆ ಅಲ್ಲಾಹನು ಅವರ ಸನ್ಮಾರ್ಗದಲ್ಲಿ ವೃದ್ಧಿಯನ್ನು ದಯಪಾ ಲಿಸುತ್ತಾನೆ. ಸ್ಥಿರ ಸತ್ಕರ್ಮಗಳೇ ಸತ್ಫಲ ಹಾಗೂ ಭಕ್ತನಿಗೆ ಮರಳಿ ದೊರೆಯುವ ದೃಷ್ಟಿಯಿಂದ ನಿಮ್ಮ ಪ್ರಭುವಿನ ಬಳಿ ಶ್ರೇಷ್ಠ.

Verse 77

أَفَرَءَيْتَ ٱلَّذِى كَفَرَ بِـَٔايَـٰتِنَا وَقَالَ لَأُوتَيَنَّ مَالًا وَوَلَدًا

Transliteration afara-ayta alladhī kafara biāyātinā waqāla laūtayanna mālan wawaladan

Kannada ನಮ್ಮ ವಚನಗಳನ್ನು ನಿರಾಕರಿಸಿದ ಹಾಗೂ “ನನಗೆ ಸಂಪತ್ತು ಮತ್ತು ಸಂತತಿಯನ್ನು ಖಂಡಿತ ನೀಡಲಾಗುವುದು” ಎಂದು ಹೇಳಿದ ವ್ಯಕ್ತಿಯನ್ನು ನೀವು ಕಂಡಿರಾ?

Verse 78

أَطَّلَعَ ٱلْغَيْبَ أَمِ ٱتَّخَذَ عِندَ ٱلرَّحْمَـٰنِ عَهْدًا

Transliteration aṭṭalaʿa l-ghayba ami ittakhadha ʿinda l-raḥmāni ʿahdan

Kannada ಅವನು ಅದೃಶ್ಯವನ್ನು ಕಣ್ಣಾರೆ ಕಂಡನೇ? ಅಥವಾ ಅವನು ಕರುಣಾನಿಧಿಯಾದ ಅಲ್ಲಾಹನ ಬಳಿ ಏನಾದರೂ ಕರಾರನ್ನು ಮಾಡಿಕೊಂಡನೇ?

Verse 79

كَلَّا ۚ سَنَكْتُبُ مَا يَقُولُ وَنَمُدُّ لَهُۥ مِنَ ٱلْعَذَابِ مَدًّا

Transliteration kallā sanaktubu mā yaqūlu wanamuddu lahu mina l-ʿadhābi maddan

Kannada ಹಾಗಲ್ಲ, ಅವನು ಹೇಳುತ್ತಿರುವುದನ್ನು ನಾವು ಬರೆದಿಟ್ಟುಕೊಳ್ಳುವೆವು ಮತ್ತು ಅವನಿಗೆ ಶಿಕ್ಷೆಯನ್ನು ಇನ್ನಷ್ಟು ಹೆಚ್ಚಿಸುವೆವು.

Verse 80

وَنَرِثُهُۥ مَا يَقُولُ وَيَأْتِينَا فَرْدًا

Transliteration wanarithuhu mā yaqūlu wayatīnā fardan

Kannada ಅವನು ಹೇಳುತ್ತಿರುವುದನ್ನು ನಾವೇ ವಾರೀಸು ಪಡೆಯುವೆವು. ಮತ್ತು ಅವನು ಒಬ್ಬಂಟಿಗನಾಗಿ ನಮ್ಮ ಮುಂದೆ ಹಾಜರಾಗುವನು.

Verse 81

وَٱتَّخَذُوا۟ مِن دُونِ ٱللَّهِ ءَالِهَةً لِّيَكُونُوا۟ لَهُمْ عِزًّا

Transliteration wa-ittakhadhū min dūni l-lahi ālihatan liyakūnū lahum ʿizzan

Kannada ಅವರು ಇವರಿಗೆ ಬಲ ವೃದ್ಧಿಗಾಗಿ ಅಲ್ಲಾಹನನ್ನು ಬಿಟ್ಟು ಇತರ ಕೆಲವು ದೇವರುಗಳನ್ನು ಮಾಡಿ ಕೊಂಡರು.

Verse 82

كَلَّا ۚ سَيَكْفُرُونَ بِعِبَادَتِهِمْ وَيَكُونُونَ عَلَيْهِمْ ضِدًّا

Transliteration kallā sayakfurūna biʿibādatihim wayakūnūna ʿalayhim ḍiddan

Kannada ಹಾಗಲ್ಲ, ಅವರು ಇವರ ಆರಾಧನೆಯನ್ನು ನಿರಾಕರಿಸುವರು. ಮಾತ್ರವಲ್ಲ ಇವರ ವಿರುದ್ಧ ತಿರುಗಿಬೀಳುವರು.

Verse 83

أَلَمْ تَرَ أَنَّآ أَرْسَلْنَا ٱلشَّيَـٰطِينَ عَلَى ٱلْكَـٰفِرِينَ تَؤُزُّهُمْ أَزًّا

Transliteration alam tara annā arsalnā l-shayāṭīna ʿalā l-kāfirīna ta-uzzuhum azzan

Kannada ನಾವು ಸತ್ಯ ನಿಷೇಧಿಗಳ ಮೇಲೆ, ಅವರನ್ನು ಚೆನ್ನಾಗಿ ಕೆರಳಿಸುವ ಶೈತಾನರನ್ನು ಛೂ ಬಿಟ್ಟಿರು ವುದನ್ನು ನೀವು ಕಂಡಿಲ್ಲವೇ?

Verse 84

فَلَا تَعْجَلْ عَلَيْهِمْ ۖ إِنَّمَا نَعُدُّ لَهُمْ عَدًّا

Transliteration falā taʿjal ʿalayhim innamā naʿuddu lahum ʿaddan

Kannada ಆದುದರಿಂದ ಇವರ ಮೇಲೆ ನೀವು ಅವಸರ ಪಡಬೇಡಿ. ನಾವು ಇವರ ದಿನಗಳನ್ನು ಎಣಿಕೆ ಮಾಡುತ್ತಿದ್ದೇವೆ.

Verse 85

يَوْمَ نَحْشُرُ ٱلْمُتَّقِينَ إِلَى ٱلرَّحْمَـٰنِ وَفْدًا

Transliteration yawma naḥshuru l-mutaqīna ilā l-raḥmāni wafdan

Kannada ನಾವು ಧರ್ಮನಿಷ್ಟರನ್ನು ಕರುಣಾಮಯನಾದ ಅಲ್ಲಾಹನೆಡೆಗೆ ಸವಾರರನ್ನಾಗಿ ಒಟ್ಟುಗೂಡಿಸುವ ದಿನ,

Verse 86

وَنَسُوقُ ٱلْمُجْرِمِينَ إِلَىٰ جَهَنَّمَ وِرْدًا

Transliteration wanasūqu l-muj'rimīna ilā jahannama wir'dan

Kannada ಅಪರಾಧಿಗಳನ್ನು ದಾಹ ಪರವಶರಾಗಿ ನರಕದ ಕಡೆಗೆ ಕಾಲ್ನಡೆಯಾಗಿ ಅಟ್ಟಿಸಿಕೊಂಡು ಹೋಗುವ ದಿನ ಬರಲಿದೆ.

Verse 87

لَّا يَمْلِكُونَ ٱلشَّفَـٰعَةَ إِلَّا مَنِ ٱتَّخَذَ عِندَ ٱلرَّحْمَـٰنِ عَهْدًا

Transliteration lā yamlikūna l-shafāʿata illā mani ittakhadha ʿinda l-raḥmāni ʿahdan

Kannada ಕರುಣಾಳು ಅಲ್ಲಾಹನ ಬಳಿ ಕರಾರನ್ನು ಮಾಡಿ ಕೊಂಡವನ ಹೊರತು ಬೇರೆ ಯಾರೂ (ಅಂದು) ಶಿಫಾರಸ್ಸನ್ನು ಒಡೆತನಗೊಳಿಸುವುದಿಲ್ಲ .

Verse 88

وَقَالُوا۟ ٱتَّخَذَ ٱلرَّحْمَـٰنُ وَلَدًا

Transliteration waqālū ittakhadha l-raḥmānu waladan

Kannada ಕರುಣಾಳು ಅಲ್ಲಾಹನು ಸಂತಾನವನ್ನು ಮಾಡಿ ದನೆಂದು ಅವರು ಹೇಳುತ್ತಾರೆ.

Verse 89

لَّقَدْ جِئْتُمْ شَيْـًٔا إِدًّا

Transliteration laqad ji'tum shayan iddan

Kannada (ಓ ಜನರೇ,) ಬಹಳ ಗಂಭೀರವಾದ ಆರೋ ಪವನ್ನೇ ನೀವು ತಂದಿರುವಿರಿ.

Verse 90

تَكَادُ ٱلسَّمَـٰوَٰتُ يَتَفَطَّرْنَ مِنْهُ وَتَنشَقُّ ٱلْأَرْضُ وَتَخِرُّ ٱلْجِبَالُ هَدًّا

Transliteration takādu l-samāwātu yatafaṭṭarna min'hu watanshaqqu l-arḍu watakhirru l-jibālu haddan

Kannada ಆದ್ದರಿಂದ ಆಕಾಶಗಳು ಸಿಡಿದು ಬೀಳುವ, ಭೂಮಿ ಬಿರಿಯುವ ಮತ್ತು ಪರ್ವತಗಳು ಹರಿದು ಬೀಳುವ ಸಂಭವವಿದ್ದೀತು.

Verse 91

أَن دَعَوْا۟ لِلرَّحْمَـٰنِ وَلَدًا

Transliteration an daʿaw lilrraḥmāni waladan

Kannada ಕೃಪಾಳುವಾದ ಅಲ್ಲಾಹನಿಗೆ ಸಂತಾನವಿದೆಯೆಂದು ಅವರು ವಾದಿಸಿದ ಕಾರಣಕ್ಕೆ.

Verse 92

وَمَا يَنۢبَغِى لِلرَّحْمَـٰنِ أَن يَتَّخِذَ وَلَدًا

Transliteration wamā yanbaghī lilrraḥmāni an yattakhidha waladan

Kannada ಸಂತಾನವನ್ನು ಮಾಡಿಕೊಳ್ಳುವುದು ಕೃಪಾಳುವಾದ ಅಲ್ಲಾಹನಿಗೆ ಸಂಗತವಲ್ಲ.

Verse 93

إِن كُلُّ مَن فِى ٱلسَّمَـٰوَٰتِ وَٱلْأَرْضِ إِلَّآ ءَاتِى ٱلرَّحْمَـٰنِ عَبْدًا

Transliteration in kullu man fī l-samāwāti wal-arḍi illā ātī l-raḥmāni ʿabdan

Kannada ಭೂಮಿ-ಆಕಾಶಗಳಲ್ಲಿರುವವರೆಲ್ಲರೂ ಕರುಣಾಳು ಅಲ್ಲಾಹನೆಡೆಗೆ ಕೇವಲ ದಾಸರಾಗಿ ಬರುವವರು.

Verse 94

لَّقَدْ أَحْصَىٰهُمْ وَعَدَّهُمْ عَدًّا

Transliteration laqad aḥṣāhum waʿaddahum ʿaddan

Kannada ಅವನು ಎಲ್ಲರನ್ನೂ ನಿಖರವಾಗಿ ತಿಳಿದನು. ಅವನು ಅವರನ್ನು ಎಣಿಕೆ ಮಾಡಿಟ್ಟನು.

Verse 95

وَكُلُّهُمْ ءَاتِيهِ يَوْمَ ٱلْقِيَـٰمَةِ فَرْدًا

Transliteration wakulluhum ātīhi yawma l-qiyāmati fardan

Kannada ಪುನರುತ್ಥಾನದ ದಿನ ಎಲ್ಲರೂ ಅವನ ಮುಂದೆ ಒಂಟಿಯಾಗಿ ಹಾಜರಾಗುವರು .

Verse 96

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ سَيَجْعَلُ لَهُمُ ٱلرَّحْمَـٰنُ وُدًّا

Transliteration inna alladhīna āmanū waʿamilū l-ṣāliḥāti sayajʿalu lahumu l-raḥmānu wuddan

Kannada ನಿಶ್ಚಯವಾಗಿಯೂ ಸತ್ಯವಿಶ್ವಾಸವಿರಿಸಿ ಸತ್ಕ ರ್ಮವೆಸಗಿದವರಿಗಾಗಿ ಜನರ ಹೃದಯಗಳಲ್ಲಿ ಕಾರುಣ್ಯವಂತನಾದ ಅಲ್ಲಾಹನು ಸದ್ಯವೇ ಪ್ರೀತಿಯನ್ನು ಉಂಟುಮಾಡುವನು.

Verse 97

فَإِنَّمَا يَسَّرْنَـٰهُ بِلِسَانِكَ لِتُبَشِّرَ بِهِ ٱلْمُتَّقِينَ وَتُنذِرَ بِهِۦ قَوْمًا لُّدًّا

Transliteration fa-innamā yassarnāhu bilisānika litubashira bihi l-mutaqīna watundhira bihi qawman luddan

Kannada ಆದುದರಿಂದ (ಓ ಪೈಗಂಬರರೇ,) ನೀವು ಭಯ ಭಕ್ತಿಯುಳ್ಳ ಧರ್ಮನಿಷ್ಟರಿಗೆ ಸುವಾರ್ತೆ ಯನ್ನೀಯಲಿಕ್ಕಾಗಿ ಹಾಗೂ ಹಠಮಾರಿ ಜನಾಂಗಕ್ಕೆ ಎಚ್ಚರಿಕೆ ಕೊಡಲಿಕ್ಕಾಗಿ ನಾವು ಈ ವಾಣಿಯನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಿಸಿ ರುತ್ತೇವೆ.

Verse 98

وَكَمْ أَهْلَكْنَا قَبْلَهُم مِّن قَرْنٍ هَلْ تُحِسُّ مِنْهُم مِّنْ أَحَدٍ أَوْ تَسْمَعُ لَهُمْ رِكْزًۢا

Transliteration wakam ahlaknā qablahum min qarnin hal tuḥissu min'hum min aḥadin aw tasmaʿu lahum rik'zan

Kannada ಇವರಿಗಿಂತ ಮುಂಚೆ ನಾವು ಎಷ್ಟೋ ಜನಾಂಗಗಳನ್ನು ನಾಶಗೊಳಿಸಿದ್ದೇವೆ. ಇಂದು ನಿಮಗೆ ಅವರಲ್ಲಿ ಯಾರನ್ನಾದರೂ ಕಾಣಿಸುತ್ತಿದೆಯೇ ಅಥವಾ ಅವರ ಮೆಲುದನಿಯಾದರೂ ಕೇಳಿಸುತ್ತಿದೆಯೇ ?

Read Surah Maryam in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.