MyDugsiStart learning

Surah Ar-Ra'd in Kannada: translation and audio

Surah 13 · الرعد · The Thunder · 43 verses

Surah Ar-Ra'd verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ar-Ra'd word by word in English.

Verse 1

الٓمٓر ۚ تِلْكَ ءَايَـٰتُ ٱلْكِتَـٰبِ ۗ وَٱلَّذِىٓ أُنزِلَ إِلَيْكَ مِن رَّبِّكَ ٱلْحَقُّ وَلَـٰكِنَّ أَكْثَرَ ٱلنَّاسِ لَا يُؤْمِنُونَ

Transliteration alif-lam-meem-ra til'ka āyātu l-kitābi wa-alladhī unzila ilayka min rabbika l-ḥaqu walākinna akthara l-nāsi lā yu'minūna

Kannada ಅಲಿಫ್ ಲಾಮ್ಮೀಮ್ ರಾ, ಇವು ದೇವಗ್ರಂಥದ ಸೂಕ್ತಗಳು, ನಿಮ್ಮ ಪ್ರಭುವಿನ ಕಡೆಯಿಂದ ನಿಮಗೆ ಅವತೀರ್ಣಗೊಳಿಸಲ್ಪಟ್ಟದ್ದು (ಖುರ್‍ಆನ್) ಪರಮ ಸತ್ಯ. ಆದರೆ, ಜನರಲ್ಲಿ ಹೆಚ್ಚಿನವರು ವಿಶ್ವಾಸವಿರಿಸುತ್ತಿಲ್ಲ.

Verse 2

ٱللَّهُ ٱلَّذِى رَفَعَ ٱلسَّمَـٰوَٰتِ بِغَيْرِ عَمَدٍ تَرَوْنَهَا ۖ ثُمَّ ٱسْتَوَىٰ عَلَى ٱلْعَرْشِ ۖ وَسَخَّرَ ٱلشَّمْسَ وَٱلْقَمَرَ ۖ كُلٌّ يَجْرِى لِأَجَلٍ مُّسَمًّى ۚ يُدَبِّرُ ٱلْأَمْرَ يُفَصِّلُ ٱلْـَٔايَـٰتِ لَعَلَّكُم بِلِقَآءِ رَبِّكُمْ تُوقِنُونَ

Transliteration al-lahu alladhī rafaʿa l-samāwāti bighayri ʿamadin tarawnahā thumma is'tawā ʿalā l-ʿarshi wasakhara l-shamsa wal-qamara kullun yajrī li-ajalin musamman yudabbiru l-amra yufaṣṣilu l-āyāti laʿallakum biliqāi rabbikum tūqinūna

Kannada ಆಕಾಶಗಳನ್ನು ನೀವು ಕಾಣುವ ಆಧಾರವಿಲ್ಲದೆಯೇ ಏರಿಸಿ ನಿಲ್ಲಿಸಿದವನು ಅವನೇ. ಅನಂತರ ಅವನಿಗೆ ಸಂಗತವಾದ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನು. ಅವನು ಸೂರ್ಯನನ್ನೂ ಚಂದ್ರನನ್ನೂ ನಿಯಂತ್ರಿಸಿದನು. ಪ್ರತಿಯೊಂದು ವಸ್ತುವೂ ಒಂದು ನಿರ್ದಿಷ್ಟ ಕಾಲದವರೆಗೆ ನಡೆಯು ತ್ತಿರುತ್ತದೆ. ಕಾರ್ಯವನ್ನು ಅವನೇ ನಿಯಂತ್ರಿಸು ತ್ತಿದ್ದಾನೆ. ನೀವು ನಿಮ್ಮ ಪ್ರಭುವನ್ನು ಭೇಟಿಯಾಗಲಿರುವ ಬಗ್ಗೆ ದೃಢ ನಂಬಿಕೆ ತಾಳಲಿಕ್ಕಾಗಿ ಅವನು ದೃಷ್ಟಾಂತಗಳನ್ನು ವಿವರಿಸುತ್ತಾನೆ.

Verse 3

وَهُوَ ٱلَّذِى مَدَّ ٱلْأَرْضَ وَجَعَلَ فِيهَا رَوَٰسِىَ وَأَنْهَـٰرًا ۖ وَمِن كُلِّ ٱلثَّمَرَٰتِ جَعَلَ فِيهَا زَوْجَيْنِ ٱثْنَيْنِ ۖ يُغْشِى ٱلَّيْلَ ٱلنَّهَارَ ۚ إِنَّ فِى ذَٰلِكَ لَـَٔايَـٰتٍ لِّقَوْمٍ يَتَفَكَّرُونَ

Transliteration wahuwa alladhī madda l-arḍa wajaʿala fīhā rawāsiya wa-anhāran wamin kulli l-thamarāti jaʿala fīhā zawjayni ith'nayni yugh'shī al-layla l-nahāra inna fī dhālika laāyātin liqawmin yatafakkarūna

Kannada ಅವನೇ ಭೂಮಿಯನ್ನು ವಿಸ್ತರಿಸಿದವನೂ ಅದರಲ್ಲಿ ಊರಿನಿಂತ ಪರ್ವತಗಳನ್ನು ಮತ್ತು ನದಿಗಳನ್ನು ಉಂಟುಮಾಡಿದವನೂ. ಅವನೇ ಎಲ್ಲ ವಿಧದ ಫಲ ಮೂಲಗಳಿಂದ ಎರಡು ಜೋಡಿಗಳನ್ನು ಸೃಷ್ಟಿಸಿದವನು. ಅವನು ಹಗಲಿನ ಮೇಲೆ ಇರುಳನ್ನು ಅಚ್ಛಾದಿಸುತ್ತಾನೆ. ನಿಶ್ಚಯವಾಗಿಯೂ ಆಲೋಚಿಸುವ ವರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.

Verse 4

وَفِى ٱلْأَرْضِ قِطَعٌ مُّتَجَـٰوِرَٰتٌ وَجَنَّـٰتٌ مِّنْ أَعْنَـٰبٍ وَزَرْعٌ وَنَخِيلٌ صِنْوَانٌ وَغَيْرُ صِنْوَانٍ يُسْقَىٰ بِمَآءٍ وَٰحِدٍ وَنُفَضِّلُ بَعْضَهَا عَلَىٰ بَعْضٍ فِى ٱلْأُكُلِ ۚ إِنَّ فِى ذَٰلِكَ لَـَٔايَـٰتٍ لِّقَوْمٍ يَعْقِلُونَ

Transliteration wafī l-arḍi qiṭaʿun mutajāwirātun wajannātun min aʿnābin wazarʿun wanakhīlun ṣin'wānun waghayru ṣin'wānin yus'qā bimāin wāḥidin wanufaḍḍilu baʿḍahā ʿalā baʿḍin fī l-ukuli inna fī dhālika laāyātin liqawmin yaʿqilūna

Kannada ಭೂಮಿಯಲ್ಲಿ ಒಂದಕ್ಕೊಂದು ತಾಗಿಕೊಂಡಿರುವ ಬೇರೆಬೇರೆ ಭೂಭಾಗಗಳಿವೆ. ದ್ರಾಕ್ಷಾ ತೋಟಗಳಿವೆ. ಹೊಲಗಳಿವೆ. ಕವಲೊಡೆದ ಖರ್ಜೂರ ವೃಕ್ಷಗಳೂ, ಕವಲೊಡೆಯದವುಗಳೂ ಇವೆ. ಒಂದೇ ಜಲದಿಂದ ಅವುಗಳಿಗೆ ನೀರುಣಿಸಲಾಗುತ್ತದೆ. ರುಚಿಯಲ್ಲಿ ಕೆಲ ವನ್ನು ಇನ್ನು ಕೆಲವದಕ್ಕಿಂತ ನಾವು ಶ್ರೇಷ್ಟಗೊಳಿಸುತ್ತೇವೆ. ಖಂಡಿತ, ಇದರಲ್ಲಿ ವಿವೇಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ .

Verse 5

۞ وَإِن تَعْجَبْ فَعَجَبٌ قَوْلُهُمْ أَءِذَا كُنَّا تُرَٰبًا أَءِنَّا لَفِى خَلْقٍ جَدِيدٍ ۗ أُو۟لَـٰٓئِكَ ٱلَّذِينَ كَفَرُوا۟ بِرَبِّهِمْ ۖ وَأُو۟لَـٰٓئِكَ ٱلْأَغْلَـٰلُ فِىٓ أَعْنَاقِهِمْ ۖ وَأُو۟لَـٰٓئِكَ أَصْحَـٰبُ ٱلنَّارِ ۖ هُمْ فِيهَا خَـٰلِدُونَ

Transliteration wa-in taʿjab faʿajabun qawluhum a-idhā kunnā turāban a-innā lafī khalqin jadīdin ulāika alladhīna kafarū birabbihim wa-ulāika l-aghlālu fī aʿnāqihim wa-ulāika aṣḥābu l-nāri hum fīhā khālidūna

Kannada ನೀವು ಆಶ್ಚರ್ಯಪಡುವುದಾದರೆ ಅವರ ಈ ಮಾತು ಬಹಳ ಆಶ್ಚರ್ಯವೇ ಸರಿ. ‘ನಾವು ಮಣ್ಣಾಗಿ ಹೋದ ಬಳಿಕ ಪುನರಪಿ ಸೃಷ್ಟಿಸಲ್ಪಡುವೆವೋ?’ ಅವರು ತಮ್ಮ ಪ್ರಭುವನ್ನು ನಿಷೇಧಿಸಿದವರು. ಅವರು ಕೊರಳಲ್ಲಿ ಕೋಳ ಬಿದ್ದವರು. ಅವರೇ ನರಕದವರು ಮತ್ತು ನರಕದಲ್ಲಿ ಸದಾ ಉಳಿಯುವವರು.

Verse 6

وَيَسْتَعْجِلُونَكَ بِٱلسَّيِّئَةِ قَبْلَ ٱلْحَسَنَةِ وَقَدْ خَلَتْ مِن قَبْلِهِمُ ٱلْمَثُلَـٰتُ ۗ وَإِنَّ رَبَّكَ لَذُو مَغْفِرَةٍ لِّلنَّاسِ عَلَىٰ ظُلْمِهِمْ ۖ وَإِنَّ رَبَّكَ لَشَدِيدُ ٱلْعِقَابِ

Transliteration wayastaʿjilūnaka bil-sayi-ati qabla l-ḥasanati waqad khalat min qablihimu l-mathulātu wa-inna rabbaka ladhū maghfiratin lilnnāsi ʿalā ẓul'mihim wa-inna rabbaka lashadīdu l-ʿiqābi

Kannada ಅವರು ಒಳಿತಿಗಿಂತ (ಅನುಗ್ರಹಕ್ಕಿಂತ) ಮೊದಲು ಕೆಡುಕಿಗಾಗಿ (ಶಿಕ್ಷೆಗಾಗಿ) ದುಡುಕುತ್ತಿದ್ದಾರೆ. ಅವರಿಗಿಂತ ಮುಂಚೆ ತತ್ಸಮಾನ ಶಿಕ್ಷೆಗಳು ಗತಿಸಿ ಹೋಗಿವೆ. ವಾಸ್ತವದಲ್ಲಿ ನಿನ್ನ ಪ್ರಭು ಜನರು ಅತಿರೇಕವೆ ಸಗುತ್ತಿದ್ದರೂ ಕೂಡ ಅವರಿಗೆ ಕ್ಷಮಾದಾನ ಮಾಡುವವನು. ಖಂಡಿತಾ ನಿನ್ನ ಪ್ರಭು (ದಿಕ್ಕಾರಿಗಳನ್ನು) ಘೋರ ಶಿಕ್ಷೆಗೆ ಗುರಿಪಡಿಸುವವನು.

Verse 7

وَيَقُولُ ٱلَّذِينَ كَفَرُوا۟ لَوْلَآ أُنزِلَ عَلَيْهِ ءَايَةٌ مِّن رَّبِّهِۦٓ ۗ إِنَّمَآ أَنتَ مُنذِرٌ ۖ وَلِكُلِّ قَوْمٍ هَادٍ

Transliteration wayaqūlu alladhīna kafarū lawlā unzila ʿalayhi āyatun min rabbihi innamā anta mundhirun walikulli qawmin hādin

Kannada ಸತ್ಯನಿಷೇಧಿಗಳು - ‘ಈ ವ್ಯಕ್ತಿಯ ಮೇಲೆ ಇವನ ಪ್ರಭುವಿನ ಕಡೆಯಿಂದ ಯಾವುದೇ ದೃಷ್ಟಾಂತವನ್ನು ಇಳಿಸಲಾಗಿಲ್ಲವೇಕೆ ?’ ಎಂದು ಕೇಳುತ್ತಾರೆ. (ಪ್ರವಾದಿಯವರೇ) ನೀವು ಕೇವಲ ಎಚ್ಚರಿಕೆ ಕೊಡುವವರು ಮಾತ್ರ. ಮತ್ತು ಪ್ರತಿ ಯೊಂದು ಜನಾಂಗಕ್ಕೂ ಓರ್ವ ಮಾರ್ಗದರ್ಶಕ ನಿದ್ದಾನೆ .

Verse 8

ٱللَّهُ يَعْلَمُ مَا تَحْمِلُ كُلُّ أُنثَىٰ وَمَا تَغِيضُ ٱلْأَرْحَامُ وَمَا تَزْدَادُ ۖ وَكُلُّ شَىْءٍ عِندَهُۥ بِمِقْدَارٍ

Transliteration al-lahu yaʿlamu mā taḥmilu kullu unthā wamā taghīḍu l-arḥāmu wamā tazdādu wakullu shayin ʿindahu bimiq'dārin

Kannada ಅಲ್ಲಾಹನು ಪ್ರತಿಯೊರ್ವ ಸ್ತ್ರೀಯು ಧರಿಸುವ ಗರ್ಭವನ್ನು ಅರಿತಿರುತ್ತಾನೆ. ಗರ್ಭಾಶಯದಲ್ಲಾಗುವ ವೃದ್ಧಿ-ಕ್ಷಯಗಳನ್ನೂ ಅರಿತಿರುತ್ತಾನೆ. ಮತ್ತು ಪ್ರತಿಯೊಂದು ವಸ್ತುವಿಗೂ ಅವನಲ್ಲೊಂದು ಪ್ರಮಾಣ ನಿಶ್ಚಯವಾಗಿರುತ್ತದೆ.

Verse 9

عَـٰلِمُ ٱلْغَيْبِ وَٱلشَّهَـٰدَةِ ٱلْكَبِيرُ ٱلْمُتَعَالِ

Transliteration ʿālimu l-ghaybi wal-shahādati l-kabīru l-mutaʿāli

Kannada ಅವನು ಎಲ್ಲ ದೃಶ್ಯಾದೃಶ್ಯಗಳ ಜ್ಞಾನಿ, ಅವನು ಅತಿ ಮಹಾನನು. ಚಿರೋನ್ನತನು.

Verse 10

سَوَآءٌ مِّنكُم مَّنْ أَسَرَّ ٱلْقَوْلَ وَمَن جَهَرَ بِهِۦ وَمَنْ هُوَ مُسْتَخْفٍۭ بِٱلَّيْلِ وَسَارِبٌۢ بِٱلنَّهَارِ

Transliteration sawāon minkum man asarra l-qawla waman jahara bihi waman huwa mus'takhfin bi-al-layli wasāribun bil-nahāri

Kannada ನಿಮ್ಮ ಪೈಕಿ ಮೆಲುದನಿಯಿಂದ ಮಾತಾಡಿದವ ನಿರಲಿ, ಸ್ವರವೆತ್ತಿ ಮಾತಾಡಿದವನಿರಲಿ, ನಿಶಾಂ ಧಕಾರದಲ್ಲಿ ಅಡಗಿದವನಿರಲಿ ಮತ್ತು ಹಗಲಿನ ಬೆಳಕಿನಲ್ಲಿ ನಡೆಯುವವನಿರಲಿ ಅವನ ಜ್ಞಾನದ ಮಟ್ಟಿಗೆ ಎಲ್ಲರೂ ಸರಿಸಮಾನರು.

Verse 11

لَهُۥ مُعَقِّبَـٰتٌ مِّنۢ بَيْنِ يَدَيْهِ وَمِنْ خَلْفِهِۦ يَحْفَظُونَهُۥ مِنْ أَمْرِ ٱللَّهِ ۗ إِنَّ ٱللَّهَ لَا يُغَيِّرُ مَا بِقَوْمٍ حَتَّىٰ يُغَيِّرُوا۟ مَا بِأَنفُسِهِمْ ۗ وَإِذَآ أَرَادَ ٱللَّهُ بِقَوْمٍ سُوٓءًا فَلَا مَرَدَّ لَهُۥ ۚ وَمَا لَهُم مِّن دُونِهِۦ مِن وَالٍ

Transliteration lahu muʿaqqibātun min bayni yadayhi wamin khalfihi yaḥfaẓūnahu min amri l-lahi inna l-laha lā yughayyiru mā biqawmin ḥattā yughayyirū mā bi-anfusihim wa-idhā arāda l-lahu biqawmin sūan falā maradda lahu wamā lahum min dūnihi min wālin

Kannada ಮಾನವನಿಗೆ ಅವನ ಎದುರಿನಿಂದಲೂ ಹಿಂದಿನಿಂದಲೂ ಪಾಳಿ ಪ್ರಕಾರ ಬಂದು ಅಲ್ಲಾಹನ ಅಣತಿ ಪ್ರಕಾರ ಕಾವಲು ಕಾಯುವವರು (ದೇವ ಚರರು) ಇದ್ದಾರೆ. ಯಾವುದೇ ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿ ಕೊಳ್ಳುವ ವರೆಗೂ ಖಂಡಿತಾ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸುವುದಿಲ್ಲ. ಅಲ್ಲಾಹನು ಒಂದು ಜನಾಂಗಕ್ಕೆ ಯಾವುದೇ ಕೇಡುಂಟು ಮಾಡುವ ನಿರ್ಧಾರ ಕೈಗೊಂಡರೆ ಅದನ್ನು ಯಾರಿಂದಲೂ ತಡೆಯಲಾಗದು. ಅಲ್ಲಾಹನ ಹೊರತು ಅವರಿಗೆ ಉಸ್ತುವಾರಿದಾರನಿಲ್ಲ.

Verse 12

هُوَ ٱلَّذِى يُرِيكُمُ ٱلْبَرْقَ خَوْفًا وَطَمَعًا وَيُنشِئُ ٱلسَّحَابَ ٱلثِّقَالَ

Transliteration huwa alladhī yurīkumu l-barqa khawfan waṭamaʿan wayunshi-u l-saḥāba l-thiqāla

Kannada ಭಯ ಹಾಗೂ ಆಸೆಯನ್ನು ಹುಟ್ಟಿಸಿ ನಿಮ್ಮ ಮುಂದೆ ಮಿಂಚುಗಳನ್ನು ಮಿಂಚಿಸುವವನು ಅವನೇ. ಘನೀಕೃತ ಮೇಘಗಳನ್ನು ಉಂಟು ಮಾಡುವವನೂ ಅವನೇ.

Verse 13

وَيُسَبِّحُ ٱلرَّعْدُ بِحَمْدِهِۦ وَٱلْمَلَـٰٓئِكَةُ مِنْ خِيفَتِهِۦ وَيُرْسِلُ ٱلصَّوَٰعِقَ فَيُصِيبُ بِهَا مَن يَشَآءُ وَهُمْ يُجَـٰدِلُونَ فِى ٱللَّهِ وَهُوَ شَدِيدُ ٱلْمِحَالِ

Transliteration wayusabbiḥu l-raʿdu biḥamdihi wal-malāikatu min khīfatihi wayur'silu l-ṣawāʿiqa fayuṣību bihā man yashāu wahum yujādilūna fī l-lahi wahuwa shadīdu l-miḥāli

Kannada ಸಿಡಿಲಬ್ಬರವು (ಗುಡುಗು) ಸ್ತೋತ್ರದೊಂದಿಗೆ ಅವನ ಕೀರ್ತನೆ ಮಾಡುತ್ತದೆ . ದೇವಚರರು ಅವನಿಗೆ ಭೀತರಾಗಿ ಅವನ ಕೀರ್ತನೆ ಮಾಡು ತ್ತಾರೆ. ಅವನು ಸಿಡಿಲುಗಳನ್ನು ರವಾನಿಸುತ್ತಾನೆ. ತಾನಿಚ್ಚಿಸಿದವರ ಮೇಲೆ ಅದನ್ನು ತಾಕಿಸುತ್ತಲೂ ಇರುತ್ತಾನೆ. ಅವರಾದರೋ ಅಲ್ಲಾಹನ ವಿಚಾರದಲ್ಲಿ ವಾಗ್ವಾದದಲ್ಲಿರುತ್ತಾರೆ. ಅವನಾ ದರೋ ಕಠಿನ ದಂಡಕನು .

Verse 14

لَهُۥ دَعْوَةُ ٱلْحَقِّ ۖ وَٱلَّذِينَ يَدْعُونَ مِن دُونِهِۦ لَا يَسْتَجِيبُونَ لَهُم بِشَىْءٍ إِلَّا كَبَـٰسِطِ كَفَّيْهِ إِلَى ٱلْمَآءِ لِيَبْلُغَ فَاهُ وَمَا هُوَ بِبَـٰلِغِهِۦ ۚ وَمَا دُعَآءُ ٱلْكَـٰفِرِينَ إِلَّا فِى ضَلَـٰلٍ

Transliteration lahu daʿwatu l-ḥaqi wa-alladhīna yadʿūna min dūnihi lā yastajībūna lahum bishayin illā kabāsiṭi kaffayhi ilā l-māi liyablugha fāhu wamā huwa bibālighihi wamā duʿāu l-kāfirīna illā fī ḍalālin

Kannada ಅವನಿಗೆ ಸತ್ಯವಾದ ಕರೆ (ಏಕದೇವೋಪಾ ಸನೆಯ ವಚನ ಘೋಷಣೆ) ಇದೆ . ಅವನನ್ನು ಬಿಟ್ಟು ಇವರು ಆರಾಧಿಸುತ್ತಿರುವ ಇತರರು ಇವರಿಗೆ ಯಾವ ಉತ್ತರವನ್ನೂ ಕೊಡಲಾರರು. ನೀರು ತನ್ನ ಬಾಯಿಗೆ (ಸ್ವಯಂ) ಬರಲಿಕ್ಕಾಗಿ ನೀರಿದ್ದ ಕಡೆಗೆ ತನ್ನ ಕೈಗಳೆರಡನ್ನೂ ಚಾಚಿಕೊಂ ಡವನಂತೆ (ಇರುವ ಉತ್ತರದ) ಹೊರತು. ವಸ್ತುತಃ ನೀರು ಅವನ ಬಾಯಿಗೆ ತಲಪಲಾರದು. ಸತ್ಯ ನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೇ ಇನ್ನೇನೂ ಅಲ್ಲ.

Verse 15

وَلِلَّهِ يَسْجُدُ مَن فِى ٱلسَّمَـٰوَٰتِ وَٱلْأَرْضِ طَوْعًا وَكَرْهًا وَظِلَـٰلُهُم بِٱلْغُدُوِّ وَٱلْـَٔاصَالِ ۩

Transliteration walillahi yasjudu man fī l-samāwāti wal-arḍi ṭawʿan wakarhan waẓilāluhum bil-ghuduwi wal-āṣāli

Kannada ಆಕಾಶಗಳಲ್ಲೂ ಭೂಮಿಯಲ್ಲೂ ಇರುವವರು ಮನಸ್ಸಾರೆ ಇಲ್ಲವೇ ಅನಿವಾರ್ಯತೆಯಿಂದ ಅಲ್ಲಾಹ ನಿಗೆ ಸಾಷ್ಟಾಂಗವೆರಗುತ್ತಿರುವರು. ಅವರ ನೆರಳುಗಳು ಬೆಳಗು ಬೈಗುಗಳಲ್ಲಿ ಅವನ ಮುಂದೆ ಬಾಗುತ್ತವೆ .

Verse 16

قُلْ مَن رَّبُّ ٱلسَّمَـٰوَٰتِ وَٱلْأَرْضِ قُلِ ٱللَّهُ ۚ قُلْ أَفَٱتَّخَذْتُم مِّن دُونِهِۦٓ أَوْلِيَآءَ لَا يَمْلِكُونَ لِأَنفُسِهِمْ نَفْعًا وَلَا ضَرًّا ۚ قُلْ هَلْ يَسْتَوِى ٱلْأَعْمَىٰ وَٱلْبَصِيرُ أَمْ هَلْ تَسْتَوِى ٱلظُّلُمَـٰتُ وَٱلنُّورُ ۗ أَمْ جَعَلُوا۟ لِلَّهِ شُرَكَآءَ خَلَقُوا۟ كَخَلْقِهِۦ فَتَشَـٰبَهَ ٱلْخَلْقُ عَلَيْهِمْ ۚ قُلِ ٱللَّهُ خَـٰلِقُ كُلِّ شَىْءٍ وَهُوَ ٱلْوَٰحِدُ ٱلْقَهَّـٰرُ

Transliteration qul man rabbu l-samāwāti wal-arḍi quli l-lahu qul afa-ittakhadhtum min dūnihi awliyāa lā yamlikūna li-anfusihim nafʿan walā ḍarran qul hal yastawī l-aʿmā wal-baṣīru am hal tastawī l-ẓulumātu wal-nūru am jaʿalū lillahi shurakāa khalaqū kakhalqihi fatashābaha l-khalqu ʿalayhim quli l-lahu khāliqu kulli shayin wahuwa l-wāḥidu l-qahāru

Kannada (ಪ್ರವಾದಿಯವರೇ) ಕೇಳಿರಿ; ಆಕಾಶಗಳ ಮತ್ತು ಭೂಮಿಯ ಪ್ರಭು ಯಾರು? - ಹೇಳಿರಿ; ಅಲ್ಲಾಹನು. ಹಾಗಿದ್ದರೆ ಕೇಳಿರಿ; ‘ಹಾಗಿದ್ದೂ ನೀವು ಅವನನ್ನು ಬಿಟ್ಟು ಸ್ವತಃ ತಮಗೇ ಒಳಿತು ಕೆಡು ಕುಗಳನ್ನು ಸ್ವಾಧೀನಪಡಿಸದವುಗಳನ್ನು ರಕ್ಷಕ ಮಿತ್ರರಾಗಿ ಸ್ವೀಕರಿಸುವಿರಾ?’ ಹೇಳಿರಿ; ‘ಕುರುಡನೂ ದೃಷ್ಟಿಯುಳ್ಳವನೂ ಸರಿಸಮಾನರೇ? ಕತ್ತಲುಗಳೂ ಬೆಳಕೂ ಸರಿಸಮಾನವೇ? ಅದಲ್ಲ, ಅಲ್ಲಾಹನ ಹೊರತು ಇವರು ಮಾಡಿಕೊಂಡಿರುವ ಸಹಭಾಗಿಗಳೂ ಅಲ್ಲಾಹನು ಸೃಷ್ಟಿಸುವಂತೆ ಸೃಷ್ಟಿ ನಡೆಸಿ, ಕೊನೆಗೆ (ಎರಡು ವಿಭಾಗದ) ಸೃಷ್ಟಿಯು ಅವರಿಗೆ ಅಸ್ಪಷ್ಟವಾಗಿ ಬಿಟ್ಟಿತೇ?’ ಹೇಳಿರಿ; ಸಕಲ ವಸ್ತುಗಳ ಸೃಷ್ಟಿಕರ್ತನು ಅಲ್ಲಾಹು ಮಾತ್ರ. ಅವನು ಏಕೈಕನೂ ಅಜೇಯನೂ ಆಗಿರುತ್ತಾನೆ.

Verse 17

أَنزَلَ مِنَ ٱلسَّمَآءِ مَآءً فَسَالَتْ أَوْدِيَةٌۢ بِقَدَرِهَا فَٱحْتَمَلَ ٱلسَّيْلُ زَبَدًا رَّابِيًا ۚ وَمِمَّا يُوقِدُونَ عَلَيْهِ فِى ٱلنَّارِ ٱبْتِغَآءَ حِلْيَةٍ أَوْ مَتَـٰعٍ زَبَدٌ مِّثْلُهُۥ ۚ كَذَٰلِكَ يَضْرِبُ ٱللَّهُ ٱلْحَقَّ وَٱلْبَـٰطِلَ ۚ فَأَمَّا ٱلزَّبَدُ فَيَذْهَبُ جُفَآءً ۖ وَأَمَّا مَا يَنفَعُ ٱلنَّاسَ فَيَمْكُثُ فِى ٱلْأَرْضِ ۚ كَذَٰلِكَ يَضْرِبُ ٱللَّهُ ٱلْأَمْثَالَ

Transliteration anzala mina l-samāi māan fasālat awdiyatun biqadarihā fa-iḥ'tamala l-saylu zabadan rābiyan wamimmā yūqidūna ʿalayhi fī l-nāri ib'tighāa ḥil'yatin aw matāʿin zabadun mith'luhu kadhālika yaḍribu l-lahu l-ḥaqa wal-bāṭila fa-ammā l-zabadu fayadhhabu jufāan wa-ammā mā yanfaʿu l-nāsa fayamkuthu fī l-arḍi kadhālika yaḍribu l-lahu l-amthāla

Kannada ಅವನು ಆಕಾಶದಿಂದ ಮಳೆ ಸುರಿಸಿದನು. ಆಗ ಪರ್ವತ ತಪ್ಪಲುಗಳು ಅವುಗಳ ವಿಶಾಲತೆಗೆ ಹೊಂದಿ ಹರಿದವು. ಹರಿವ ನೀರು ಮೇಲ್ಗಡೆ ನೊರೆಯನ್ನು ವಹಿಸಿಕೊಂಡಿತು. ಇದೇ ತರದ ನೊರೆಯು ಆಭರಣ ಹಾಗೂ ಉಪಕರಣಗಳನ್ನು ಮಾಡಲಿಕ್ಕಾಗಿ ಅವರು ಬೆಂಕಿಯಲ್ಲಿ ಕರಗಿಸುವ ಲೋಹದಿಂದಲೂ ಏಳುತ್ತದೆ. ಇದೇ ಪ್ರಕಾರ ಅಲ್ಲಾಹನು ಸತ್ಯ ಮತ್ತು ಅಸತ್ಯಗಳನ್ನು ಉಪಮಿಸುತ್ತಾನೆ. ಅಂದ ಮೇಲೆ ನೊರೆಯು ತ್ಯಾಜ್ಯವಾಗಿ ಹೋಗುತ್ತದೆ. ಮಾನವನಿಗೆ ಉಪಯುಕ್ತವಾದುದು ಭೂಮಿಯಲ್ಲಿ ತಂಗಿ ಕೊಳ್ಳುತ್ತದೆ. ಹೀಗೆ ಅಲ್ಲಾಹನು ಉಪಮೆಗಳನ್ನು ವಿವರಿಸಿ ಹೇಳುತ್ತಾನೆ.

Verse 18

لِلَّذِينَ ٱسْتَجَابُوا۟ لِرَبِّهِمُ ٱلْحُسْنَىٰ ۚ وَٱلَّذِينَ لَمْ يَسْتَجِيبُوا۟ لَهُۥ لَوْ أَنَّ لَهُم مَّا فِى ٱلْأَرْضِ جَمِيعًا وَمِثْلَهُۥ مَعَهُۥ لَٱفْتَدَوْا۟ بِهِۦٓ ۚ أُو۟لَـٰٓئِكَ لَهُمْ سُوٓءُ ٱلْحِسَابِ وَمَأْوَىٰهُمْ جَهَنَّمُ ۖ وَبِئْسَ ٱلْمِهَادُ

Transliteration lilladhīna is'tajābū lirabbihimu l-ḥus'nā wa-alladhīna lam yastajībū lahu law anna lahum mā fī l-arḍi jamīʿan wamith'lahu maʿahu la-if'tadaw bihi ulāika lahum sūu l-ḥisābi wamawāhum jahannamu wabi'sa l-mihādu

Kannada ತಮ್ಮ ಪ್ರಭುವಿನ ಕರೆಗೆ ಓಗೊಟ್ಟವರಿಗೆ ಉತ್ತಮ ಪ್ರತಿಫಲವಿದೆ (ಸ್ವರ್ಗವಿದೆ). ಅವನ ಕರೆಗೆ ಓ ಗೊಡದವರು, ಭೂಮಿಯ ಸಕಲ ಸಂಪತ್ತಿನ ಒಡೆಯ ರಾಗಿದ್ದರೂ ಅಷ್ಟೇ ಇನ್ನೂ ಒದಗಿಸಿಕೊಂ ಡರೂ ಅದೆಲ್ಲವನ್ನೂ (ಅಲ್ಲಾಹನಿಂದ ಪಾರಾಗಲಿಕ್ಕಾಗಿ) ಅವರು ಪ್ರಾಯಶ್ಚಿತ್ತವಾಗಿ ತೆರುತ್ತಿದ್ದರು. ಅವರಿಗೆ ಕೆಟ್ಟ ರೀತಿಯ ವಿಚಾರಣೆಯಿದೆ. ಮತ್ತು ಅವರ ತಾಣವು ನರಕವಾಗಿದೆ. ಅತ್ಯಂತ ನಿಕೃಷ್ಟ ವಾಸ್ತವ್ಯವದು.

Verse 19

۞ أَفَمَن يَعْلَمُ أَنَّمَآ أُنزِلَ إِلَيْكَ مِن رَّبِّكَ ٱلْحَقُّ كَمَنْ هُوَ أَعْمَىٰٓ ۚ إِنَّمَا يَتَذَكَّرُ أُو۟لُوا۟ ٱلْأَلْبَـٰبِ

Transliteration afaman yaʿlamu annamā unzila ilayka min rabbika l-ḥaqu kaman huwa aʿmā innamā yatadhakkaru ulū l-albābi

Kannada ನಿಮ್ಮ ಪ್ರಭುವಿನಿಂದ ನಿಮ್ಮ ಮೇಲೆ ಅವತೀರ್ಣ ಗೊಳಿಸಲಾದ ಈ ಗ್ರಂಥವನ್ನು ಸತ್ಯವೆಂದು ತಿಳಿಯುವ ವ್ಯಕ್ತಿಯೊಬ್ಬನು, ಅಂಧನಾಗಿರುವ ವ್ಯಕ್ತಿಯಂತೆ ಆಗಬಲ್ಲನೆ? ಖಂಡಿತಾ ಬುದ್ಧಿ ಜೀವಿಗಳು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.

Verse 20

ٱلَّذِينَ يُوفُونَ بِعَهْدِ ٱللَّهِ وَلَا يَنقُضُونَ ٱلْمِيثَـٰقَ

Transliteration alladhīna yūfūna biʿahdi l-lahi walā yanquḍūna l-mīthāqa

Kannada ಅವರು ಅಲ್ಲಾಹನ ಪ್ರತಿಜ್ಞೆಯನ್ನು ಪಾಲಿಸುತ್ತಾರೆ. ಒಪ್ಪಂದವನ್ನು ಮುರಿದು ಬಿಡುವುದಿಲ್ಲ.

Verse 21

وَٱلَّذِينَ يَصِلُونَ مَآ أَمَرَ ٱللَّهُ بِهِۦٓ أَن يُوصَلَ وَيَخْشَوْنَ رَبَّهُمْ وَيَخَافُونَ سُوٓءَ ٱلْحِسَابِ

Transliteration wa-alladhīna yaṣilūna mā amara l-lahu bihi an yūṣala wayakhshawna rabbahum wayakhāfūna sūa l-ḥisābi

Kannada ಅಲ್ಲಾಹನು (ಯಾವ ಸಂಬಂಧಗಳನ್ನು) ಬೆಸೆ ಯಲು ಆಜ್ಞೆ ಕೊಟ್ಟಿರುವನೋ ಅವುಗಳನ್ನು ಬೆಸೆಯುತ್ತಾರೆ. ತಮ್ಮ ಪ್ರಭುವನ್ನು ಭಯಪಡುತ್ತಾರೆ. ಕೆಟ್ಟ ರೀತಿಯ ವಿಚಾರಣೆಯನ್ನು ಹೆದರುತ್ತಾರೆ.

Verse 22

وَٱلَّذِينَ صَبَرُوا۟ ٱبْتِغَآءَ وَجْهِ رَبِّهِمْ وَأَقَامُوا۟ ٱلصَّلَوٰةَ وَأَنفَقُوا۟ مِمَّا رَزَقْنَـٰهُمْ سِرًّا وَعَلَانِيَةً وَيَدْرَءُونَ بِٱلْحَسَنَةِ ٱلسَّيِّئَةَ أُو۟لَـٰٓئِكَ لَهُمْ عُقْبَى ٱلدَّارِ

Transliteration wa-alladhīna ṣabarū ib'tighāa wajhi rabbihim wa-aqāmū l-ṣalata wa-anfaqū mimmā razaqnāhum sirran waʿalāniyatan wayadraūna bil-ḥasanati l-sayi-ata ulāika lahum ʿuq'bā l-dāri

Kannada ಅವರು ತಮ್ಮ ಪ್ರಭುವಿನ ಸಂಪ್ರೀತಿಯನ್ನು ಬಯಸಿ ಕ್ಷಮೆ ಪಾಲಿಸುತ್ತಾರೆ. ನಮಾಝನ್ನು ಸಂಸ್ಥಾಪಿಸುತ್ತಾರೆ. ನಾವು ನೀಡಿರುವ ಸಂಪತ್ತಿನಿಂದ ಬಹಿರಂಗವಾಗಿಯೂ ರಹಸ್ಯವಾಗಿಯೂ ವ್ಯಯಿಸುತ್ತಾರೆ. ಕೆಡುಕುಗಳನ್ನು ಒಳಿತುಗಳಿಂದ ತಡೆಗಟ್ಟುತ್ತಾರೆ. ಅವರಿಗೇ ಇರುವುದು ಶ್ರೇಷ್ಠ ಪರ್ಯಾವಸಾನದ ಬೀಡು.

Verse 23

جَنَّـٰتُ عَدْنٍ يَدْخُلُونَهَا وَمَن صَلَحَ مِنْ ءَابَآئِهِمْ وَأَزْوَٰجِهِمْ وَذُرِّيَّـٰتِهِمْ ۖ وَٱلْمَلَـٰٓئِكَةُ يَدْخُلُونَ عَلَيْهِم مِّن كُلِّ بَابٍ

Transliteration jannātu ʿadnin yadkhulūnahā waman ṣalaḥa min ābāihim wa-azwājihim wadhurriyyātihim wal-malāikatu yadkhulūna ʿalayhim min kulli bābin

Kannada ಅಂದರೆ ಶಾಶ್ವತ ವಾಸಕ್ಕಿದ್ದ ಸ್ವರ್ಗೋದ್ಯಾನಗಳು, ಅವರೂ ಅವರ ಪೂರ್ವಿಕರು, ಅವರ ಪತ್ನಿಯರು ಹಾಗೂ ಅವರ ಸಂತತಿಗಳ ಪೈಕಿ ಸಜ್ಜನರಾದ ವರೂ ಅವುಗಳಲ್ಲಿ ಪ್ರವೇಶಿಸುವರು. ದೇವಚ ರರು ಎಲ್ಲಾ ಕವಾಟಗಳಿಂದಲೂ ಅವರ ಬಳಿ (ಸ್ವಾಗತಿಸಲು) ಬರುವರು.

Verse 24

سَلَـٰمٌ عَلَيْكُم بِمَا صَبَرْتُمْ ۚ فَنِعْمَ عُقْبَى ٱلدَّارِ

Transliteration salāmun ʿalaykum bimā ṣabartum faniʿ'ma ʿuq'bā l-dāri

Kannada ‘ನಿಮ್ಮ ಸಹನೆಯ ಫಲವಾಗಿ ನಿಮಗೆ ಶಾಂತಿ ಇರಲಿ’. (ಎನ್ನುತ್ತಾ). ಅಂತಿಮ ಗೃಹವು (ಸ್ವರ್ಗ) ಅದೆಷ್ಟು ಉತ್ತಮ!

Verse 25

وَٱلَّذِينَ يَنقُضُونَ عَهْدَ ٱللَّهِ مِنۢ بَعْدِ مِيثَـٰقِهِۦ وَيَقْطَعُونَ مَآ أَمَرَ ٱللَّهُ بِهِۦٓ أَن يُوصَلَ وَيُفْسِدُونَ فِى ٱلْأَرْضِ ۙ أُو۟لَـٰٓئِكَ لَهُمُ ٱللَّعْنَةُ وَلَهُمْ سُوٓءُ ٱلدَّارِ

Transliteration wa-alladhīna yanquḍūna ʿahda l-lahi min baʿdi mīthāqihi wayaqṭaʿūna mā amara l-lahu bihi an yūṣala wayuf'sidūna fī l-arḍi ulāika lahumu l-laʿnatu walahum sūu l-dāri

Kannada ಅಲ್ಲಾಹನ ಪ್ರತಿಜ್ಞೆಯನ್ನು ಅದು ಸ್ಥಿರಬದ್ಧವಾದ ಬಳಿಕ ಮುರಿದುಬಿಡುವವರು, ಅಲ್ಲಾಹನು ಜೋಡಿ ಸಲು ಆಜ್ಞೆ ಕೊಟ್ಟಂತಹ ಸಂಬಂಧಗಳನ್ನು ಮುರಿ ಯುವವರು ಮತ್ತು ಭೂಮಿಯ ಮೇಲೆ ಕೇಡು ಮಾಡು ವವರು ಯಾರೋ ಅವರಿಗೆ ಶಾಪವಿದೆ. ಅವರಿಗೆ (ಪರಲೋಕದಲ್ಲಿ) ಅತ್ಯಂತ ಕೆಟ್ಟ ನಿವಾಸವಿದೆ.

Verse 26

ٱللَّهُ يَبْسُطُ ٱلرِّزْقَ لِمَن يَشَآءُ وَيَقْدِرُ ۚ وَفَرِحُوا۟ بِٱلْحَيَوٰةِ ٱلدُّنْيَا وَمَا ٱلْحَيَوٰةُ ٱلدُّنْيَا فِى ٱلْـَٔاخِرَةِ إِلَّا مَتَـٰعٌ

Transliteration al-lahu yabsuṭu l-riz'qa liman yashāu wayaqdiru wafariḥū bil-ḥayati l-dun'yā wamā l-ḥayatu l-dun'yā fī l-ākhirati illā matāʿun

Kannada ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರ ವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಛಿಸಿದವರಿಗೆ ಪರಿಮಿತಗೊಳಿಸುತ್ತಾನೆ. ಇವರು ಇಹಜೀವನದಲ್ಲಿ ಆನಂದಗೊಂಡಿದ್ದಾರೆ. ವಸ್ತುತಃ ಇಹಜೀವನ ವು ಪರಲೋಕದ ಜೀವನದ ಮುಂದೆ ಅತಿ ತುಚ್ಛ ಸುಖಾನುಭವವೇ ಹೊರತು ಬೇರೇನೂ ಅಲ್ಲ.

Verse 27

وَيَقُولُ ٱلَّذِينَ كَفَرُوا۟ لَوْلَآ أُنزِلَ عَلَيْهِ ءَايَةٌ مِّن رَّبِّهِۦ ۗ قُلْ إِنَّ ٱللَّهَ يُضِلُّ مَن يَشَآءُ وَيَهْدِىٓ إِلَيْهِ مَنْ أَنَابَ

Transliteration wayaqūlu alladhīna kafarū lawlā unzila ʿalayhi āyatun min rabbihi qul inna l-laha yuḍillu man yashāu wayahdī ilayhi man anāba

Kannada ನಿಷೇಧಿಸಿದವರು, (ಪ್ರವಾದಿಯನ್ನುದ್ದೇಶಿಸಿ) ‘ಇವನ ಮೇಲೆ ಇವನ ಪ್ರಭುವಿನ ಕಡೆಯಿಂದ ಯಾವುದೇ ನಿದರ್ಶನವೇಕೆ ಅವತೀರ್ಣಗೊಳ್ಳಲಿಲ್ಲ?’ ಎಂದು ಕೇಳುತ್ತಾರೆ. (ಪ್ರವಾದಿಯವರೇ) ಹೇಳಿರಿ ‘ಅಲ್ಲಾಹನು ನಿಶ್ಚಯವಾಗಿಯೂ ತಾನಿಚ್ಛಿ ಸಿದವರನ್ನು ದಾರಿ ತಪ್ಪಿಸುತ್ತಾನೆ ಮತ್ತು ಅವನೆಡೆಗೆ ಮರಳಿದವರನ್ನು ತನ್ನ ಧರ್ಮದೆಡೆಗೆ ದಾರಿಯನ್ನು ತೋರಿಸುತ್ತಾನೆ’.

Verse 28

ٱلَّذِينَ ءَامَنُوا۟ وَتَطْمَئِنُّ قُلُوبُهُم بِذِكْرِ ٱللَّهِ ۗ أَلَا بِذِكْرِ ٱللَّهِ تَطْمَئِنُّ ٱلْقُلُوبُ

Transliteration alladhīna āmanū wataṭma-innu qulūbuhum bidhik'ri l-lahi alā bidhik'ri l-lahi taṭma-innu l-qulūbu

Kannada ಅರ್ಥಾತ್ ವಿಶ್ವಾಸವಿರಿಸಿದ ಮತ್ತು ಅಲ್ಲಾಹನ ಸ್ಮರಣೆಯಿಂದ ಹೃದಯಗಳು ಶಾಂತಗೊಂಡವರನ್ನು. ತಿಳಿಯಿರಿ : ಅಲ್ಲಾಹನ ಸ್ಮರಣೆಯಿಂದಲೇ ಹೃದಯಗಳು ಶಾಂತಗೊಳ್ಳುತ್ತವೆ.

Verse 29

ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ طُوبَىٰ لَهُمْ وَحُسْنُ مَـَٔابٍ

Transliteration alladhīna āmanū waʿamilū l-ṣāliḥāti ṭūbā lahum waḥus'nu maābin

Kannada ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮವೆಸಗಿದವರು ಯಾರೋ ಅವರಿಗೆ ಮಂಗಳವೂ ಶ್ರೇಷ್ಠ ನಿರ್ಗಮನವೂ ಇದೆ.

Verse 30

كَذَٰلِكَ أَرْسَلْنَـٰكَ فِىٓ أُمَّةٍ قَدْ خَلَتْ مِن قَبْلِهَآ أُمَمٌ لِّتَتْلُوَا۟ عَلَيْهِمُ ٱلَّذِىٓ أَوْحَيْنَآ إِلَيْكَ وَهُمْ يَكْفُرُونَ بِٱلرَّحْمَـٰنِ ۚ قُلْ هُوَ رَبِّى لَآ إِلَـٰهَ إِلَّا هُوَ عَلَيْهِ تَوَكَّلْتُ وَإِلَيْهِ مَتَابِ

Transliteration kadhālika arsalnāka fī ummatin qad khalat min qablihā umamun litatluwā ʿalayhimu alladhī awḥaynā ilayka wahum yakfurūna bil-raḥmāni qul huwa rabbī lā ilāha illā huwa ʿalayhi tawakkaltu wa-ilayhi matābi

Kannada (ಓ ಪೈಗಂಬರರೇ,) ಅದೇ ಪ್ರಕಾರ ನಿಮ್ಮನ್ನು ನಾವು ಒಂದು ಸಮುದಾಯಕ್ಕೆ ರಸೂಲರಾಗಿ ಮಾಡಿ ಕಳುಹಿಸಿರುತ್ತೇವೆ. ಅದಕ್ಕೂ ಮುನ್ನ ಅನೇಕ ಸಮುದಾಯಗಳು ಗತಿಸಿ ಹೋಗಿವೆ. ನಾವು ನಿಮಗೆ ದಿವ್ಯಸಂದೇಶವಾಗಿ ಅವತೀರ್ಣ ಗೊಳಿಸುತ್ತಿರುವ ಸಂದೇಶವನ್ನು ಅವರಿಗೆ ಓದಿ ಹೇಳಲಿಕ್ಕಾಗಿ (ನಿಮ್ಮನ್ನು ಕಳುಹಿಸಿದ್ದೇನೆ). ಅವರು ಪರಮ ಕರುಣಾಮಯಿ ಅಲ್ಲಾಹನನ್ನು ನಿಷೇಧಿಸುತ್ತಾರೆ. ಹೇಳಿರಿ, ‘ಅವನೇ ನನ್ನ ಪಾಲಕ ಪ್ರಭು, ಅವನ ಹೊರತು ಆರಾಧ್ಯನಾರೂ ಇಲ್ಲ. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ. ಅವನೆಡೆಗೇ ನನ್ನ ನಿರ್ಗಮನ’.

Verse 31

وَلَوْ أَنَّ قُرْءَانًا سُيِّرَتْ بِهِ ٱلْجِبَالُ أَوْ قُطِّعَتْ بِهِ ٱلْأَرْضُ أَوْ كُلِّمَ بِهِ ٱلْمَوْتَىٰ ۗ بَل لِّلَّهِ ٱلْأَمْرُ جَمِيعًا ۗ أَفَلَمْ يَا۟يْـَٔسِ ٱلَّذِينَ ءَامَنُوٓا۟ أَن لَّوْ يَشَآءُ ٱللَّهُ لَهَدَى ٱلنَّاسَ جَمِيعًا ۗ وَلَا يَزَالُ ٱلَّذِينَ كَفَرُوا۟ تُصِيبُهُم بِمَا صَنَعُوا۟ قَارِعَةٌ أَوْ تَحُلُّ قَرِيبًا مِّن دَارِهِمْ حَتَّىٰ يَأْتِىَ وَعْدُ ٱللَّهِ ۚ إِنَّ ٱللَّهَ لَا يُخْلِفُ ٱلْمِيعَادَ

Transliteration walaw anna qur'ānan suyyirat bihi l-jibālu aw quṭṭiʿat bihi l-arḍu aw kullima bihi l-mawtā bal lillahi l-amru jamīʿan afalam yāy'asi alladhīna āmanū an law yashāu l-lahu lahadā l-nāsa jamīʿan walā yazālu alladhīna kafarū tuṣībuhum bimā ṣanaʿū qāriʿatun aw taḥullu qarīban min dārihim ḥattā yatiya waʿdu l-lahi inna l-laha lā yukh'lifu l-mīʿāda

Kannada ಪಾರಾಯಣ ಮಾಡಲಾಗುವ ಒಂದು ಗ್ರಂಥ (ಖುರ್‍ಆನ್)ದ ಮೂಲಕ ಪರ್ವತಗಳನ್ನು ಚಲಿ ಸುವಂತೆಯೂ ಅಥವಾ ಭೂಮಿಯನ್ನು ಸೀಳಿ ಬಿಡುವಂತೆಯೂ ಅಥವಾ ಮೃತರೊಂದಿಗೆ ಮಾತಾಡುವಂತೆಯೂ ಮಾಡಲಾಗುತ್ತಿದ್ದರೂ (ಅವರು ನಂಬುತ್ತಿರಲಿಲ್ಲ) ನಿಜವಾಗಿ ಸಕಲ ಕಾರ್ಯಗಳ ಪರಮಾಧಿಕಾರ ಅಲ್ಲಾಹನ ನಿಯಂ ತ್ರಣದಲ್ಲಿದೆ. ಅಲ್ಲಾಹು ಇಚ್ಛಿಸುತ್ತಿದ್ದರೆ ಸಕಲ ಮಾನವರನ್ನೂ ಸರಿದಾರಿಗೆ ಸೇರಿಸುತ್ತಿದ್ದನೆಂದು ಸತ್ಯವಿಶ್ವಾಸಿಗಳು ತಿಳಿಯಲಿಲ್ಲವೇ? ಸತ್ಯನಿಷೇಧಿ ಗಳಿಗೆ ತಮ್ಮ ಕರ್ಮದ ಫಲವಾಗಿ ಯಾವುದೇ ವಿಪತ್ತು ಬಾದಿಸುತ್ತಲೇ ಇರುವುದು ಅಥವಾ ಅವರ ಊರ ಸಮೀಪದಲ್ಲೇ ನೀವು (ಸೈನ್ಯ ಸಮೇತ) ಬಂದಿಳಿಯಲಿದ್ದೀರಿ. ಅಲ್ಲಾಹನ ವಾಗ್ದಾನ ಬಂದು ತಲುಪುವ ತನಕ. ನಿಶ್ಚಯ ಅಲ್ಲಾಹನು ತನ್ನ ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.

Verse 32

وَلَقَدِ ٱسْتُهْزِئَ بِرُسُلٍ مِّن قَبْلِكَ فَأَمْلَيْتُ لِلَّذِينَ كَفَرُوا۟ ثُمَّ أَخَذْتُهُمْ ۖ فَكَيْفَ كَانَ عِقَابِ

Transliteration walaqadi us'tuh'zi-a birusulin min qablika fa-amlaytu lilladhīna kafarū thumma akhadhtuhum fakayfa kāna ʿiqābi

Kannada ನಿಮಗಿಂತ ಮೊದಲೂ ಅನೇಕ ದೂತರು ಪರಿ ಹಾಸ್ಯ ಕ್ಕೊಳಗಾಗಿದ್ದಾರೆ. ಆದರೆ ನಾನು ಸತ್ಯ ನಿಷೇಧಿಗಳಿಗೆ ಸಮಯವನ್ನು ಅವಕಾಶ ಮಾಡಿ ಕೊಟ್ಟೆನು. ನಂತರ ಅವರನ್ನು ಬಿಗಿ ಹಿಡಿದೆನು. ಆಗ ನನ್ನ ಶಿಕ್ಷೆ ಹೇಗಿತ್ತು!

Verse 33

أَفَمَنْ هُوَ قَآئِمٌ عَلَىٰ كُلِّ نَفْسٍۭ بِمَا كَسَبَتْ ۗ وَجَعَلُوا۟ لِلَّهِ شُرَكَآءَ قُلْ سَمُّوهُمْ ۚ أَمْ تُنَبِّـُٔونَهُۥ بِمَا لَا يَعْلَمُ فِى ٱلْأَرْضِ أَم بِظَـٰهِرٍ مِّنَ ٱلْقَوْلِ ۗ بَلْ زُيِّنَ لِلَّذِينَ كَفَرُوا۟ مَكْرُهُمْ وَصُدُّوا۟ عَنِ ٱلسَّبِيلِ ۗ وَمَن يُضْلِلِ ٱللَّهُ فَمَا لَهُۥ مِنْ هَادٍ

Transliteration afaman huwa qāimun ʿalā kulli nafsin bimā kasabat wajaʿalū lillahi shurakāa qul sammūhum am tunabbiūnahu bimā lā yaʿlamu fī l-arḍi am biẓāhirin mina l-qawli bal zuyyina lilladhīna kafarū makruhum waṣuddū ʿani l-sabīli waman yuḍ'lili l-lahu famā lahu min hādin

Kannada ಪ್ರತಿಯೊಬ್ಬನ ಗಳಿಕೆಯ ಮೇಲೆ ಮೇಲ್ನೋಟ ವಹಿಸಿರುವವನೇ? (ಏನೇನೂ ತಿಳಿಯದ ವಿಗ್ರಹ ಗಳಂತೆ?). ಅವರು ಅಲ್ಲಾಹುವಿಗೆ ಭಾಗೀದಾರರನ್ನು ನಿಶ್ಚಯಿಸಿಕೊಂಡಿದ್ದಾರೆ. (ಓ ಪೈಗಂಬರರೇ,) ಹೇಳಿರಿ - ನೀವು ಅವರ ಹೆಸರನ್ನು ಹೇಳಿ ಕೊಡಿರಿ. ಅದಲ್ಲ; ಅಲ್ಲಾಹನು ತನ್ನ ಭೂಮಿಯಲ್ಲಿ ತಿಳಿದಿರದಂತಹ ಒಂದು ವಿಷಯವನ್ನು ನೀವು ಅವನಿಗೆ ತಿಳಿಸುತ್ತೀರಾ? ಅಥವಾ ನೀವು ತಿರುಳಿಲ್ಲದ ಮಾತನ್ನು ಹೇಳಿಬಿಡುತ್ತೀg? ವಾಸ್ತವದಲ್ಲಿ ಸತ್ಯ ನಿಷೇಧಿಗಳಿಗೆ ಅವರ ಕುತಂತ್ರವನ್ನು ಮನೋ ಹರಗೊಳಿಸಲಾಗಿದೆ. ಮತ್ತು ಸನ್ಮಾರ್ಗದಿಂದ ಅವರನ್ನು ತಡೆಯಲಾಗಿದೆ. ಯಾರನ್ನು ಅಲ್ಲಾಹು ದಾರಿ ತಪ್ಪಿಸುತ್ತಾನೆ; ಅವನಿಗಾರೂ ಮಾರ್ಗ ದರ್ಶಕನಿಲ್ಲ.

Verse 34

لَّهُمْ عَذَابٌ فِى ٱلْحَيَوٰةِ ٱلدُّنْيَا ۖ وَلَعَذَابُ ٱلْـَٔاخِرَةِ أَشَقُّ ۖ وَمَا لَهُم مِّنَ ٱللَّهِ مِن وَاقٍ

Transliteration lahum ʿadhābun fī l-ḥayati l-dun'yā walaʿadhābu l-ākhirati ashaqqu wamā lahum mina l-lahi min wāqin

Kannada ಇಂತಹವರಿಗೆ ಇಹಜೀವನದಲ್ಲಿ ಶಿಕ್ಷೆ ಇದೆ ಮತ್ತು ಪರಲೋಕದ ಶಿಕ್ಷೆ ಇದಕ್ಕಿಂತಲೂ ಕಠಿಣವಾಗಿದೆ. ಅವರನ್ನು ಅಲ್ಲಾಹನಿಂದ (ಶಿಕ್ಷೆಯಿಂದ) ರಕ್ಷಿಸುವವರು ಯಾರೂ ಇಲ್ಲ.

Verse 35

۞ مَّثَلُ ٱلْجَنَّةِ ٱلَّتِى وُعِدَ ٱلْمُتَّقُونَ ۖ تَجْرِى مِن تَحْتِهَا ٱلْأَنْهَـٰرُ ۖ أُكُلُهَا دَآئِمٌ وَظِلُّهَا ۚ تِلْكَ عُقْبَى ٱلَّذِينَ ٱتَّقَوا۟ ۖ وَّعُقْبَى ٱلْكَـٰفِرِينَ ٱلنَّارُ

Transliteration mathalu l-janati allatī wuʿida l-mutaqūna tajrī min taḥtihā l-anhāru ukuluhā dāimun waẓilluhā til'ka ʿuq'bā alladhīna ittaqaw waʿuq'bā l-kāfirīna l-nāru

Kannada ದೇವಭಯವಿರಿಸಿಕೊಂಡವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಸ್ಥಿತಿ ಹೀಗಿದೆ : ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ. ಅದರಲ್ಲಿನ ಭೋಜನವು ಅನಶ್ವರ. ನೆರಳೂ! ಅದೇ ದೇವಭಯವುಳ್ಳವರ ಪರಮ ಗಮ್ಯ ತಾಣ. ಸತ್ಯನಿಷೇಧಿಗಳ ಪರಮಗಮ್ಯವು ನರಕಾಗ್ನಿಯೇ ಆಗಿದೆ.

Verse 36

وَٱلَّذِينَ ءَاتَيْنَـٰهُمُ ٱلْكِتَـٰبَ يَفْرَحُونَ بِمَآ أُنزِلَ إِلَيْكَ ۖ وَمِنَ ٱلْأَحْزَابِ مَن يُنكِرُ بَعْضَهُۥ ۚ قُلْ إِنَّمَآ أُمِرْتُ أَنْ أَعْبُدَ ٱللَّهَ وَلَآ أُشْرِكَ بِهِۦٓ ۚ إِلَيْهِ أَدْعُوا۟ وَإِلَيْهِ مَـَٔابِ

Transliteration wa-alladhīna ātaynāhumu l-kitāba yafraḥūna bimā unzila ilayka wamina l-aḥzābi man yunkiru baʿḍahu qul innamā umir'tu an aʿbuda l-laha walā ush'rika bihi ilayhi adʿū wa-ilayhi maābi

Kannada (ಓ ಪೈಗಂಬರರೇ,) ನಾವು (ಹಿಂದೆ) ಯಾರಿಗೆ ಗ್ರಂಥ ದಯಪಾಲಿಸಿದ್ದೆವೋ ಅವರು ನಿಮಗೆ ನಾವು ಅವತೀರ್ಣಗೊಳಿಸಿರುವ (ಖುರ್‍ಆನ್) ಗ್ರಂಥದಿಂದ ಸಂತುಷ್ಟರಾಗಿದ್ದಾರೆ. ಇದರ ಕೆಲವು ಭಾಗಗಳನ್ನು ನಿಷೇಧಿಸುವವರು ಸಖ್ಯ ಗುಂಪುಗಳಲ್ಲಿ ಇದ್ದಾರೆ. ಹೇಳಿರಿ; ನನಗೆ ಅಲ್ಲಾಹನನ್ನು ಆರಾಧಿಸುವಂತೆಯೂ ಅವನಿಗೆ ಪಾಲು ಸೇರಿಸದಂತೆಯೂ ಆಜ್ಞೆ ನೀಡಲಾಗಿದೆ. ಆತನ ಕಡೆಗೇ ನಾನು ಕರೆ ನೀಡುತ್ತೇನೆ ಮತ್ತು ನನ್ನ ಮರಳುವಿಕೆಯೂ ಆತನ ಕಡೆಗೇ ಇದೆ.

Verse 37

وَكَذَٰلِكَ أَنزَلْنَـٰهُ حُكْمًا عَرَبِيًّا ۚ وَلَئِنِ ٱتَّبَعْتَ أَهْوَآءَهُم بَعْدَ مَا جَآءَكَ مِنَ ٱلْعِلْمِ مَا لَكَ مِنَ ٱللَّهِ مِن وَلِىٍّ وَلَا وَاقٍ

Transliteration wakadhālika anzalnāhu ḥuk'man ʿarabiyyan wala-ini ittabaʿta ahwāahum baʿdamā jāaka mina l-ʿil'mi mā laka mina l-lahi min waliyyin walā wāqin

Kannada ಇದೇ ಪ್ರಕಾರ (ಖುರ್‍ಆನನ್ನು) ಅರಬಿ ಭಾಷೆಯಲ್ಲಿರುವ ಒಂದು ನ್ಯಾಯ ಪ್ರಮಾಣವಾಗಿ ಇದನ್ನು ನಿಮಗೆ ಅವತೀರ್ಣಗೊಳಿಸಿರುತ್ತೇವೆ. ನಿಮಗೆ ಜ್ಞಾನ ಬಂದ ಬಳಿಕವೂ ನೀವು ಜನರ ತನ್ನಿಚ್ಛೆಗಳನ್ನನುಸರಿಸಿದರೆ, ಅಲ್ಲಾಹನ ಶಿಕ್ಷೆ ಯಿಂದ ರಕ್ಷಿಸುವ ಯಾವುದೇ ಸಹಾಯಕನಾಗಲಿ, ರಕ್ಷಕನಾಗಲಿ ನಿಮಗೆ ಇರಲಾರರು .

Verse 38

وَلَقَدْ أَرْسَلْنَا رُسُلًا مِّن قَبْلِكَ وَجَعَلْنَا لَهُمْ أَزْوَٰجًا وَذُرِّيَّةً ۚ وَمَا كَانَ لِرَسُولٍ أَن يَأْتِىَ بِـَٔايَةٍ إِلَّا بِإِذْنِ ٱللَّهِ ۗ لِكُلِّ أَجَلٍ كِتَابٌ

Transliteration walaqad arsalnā rusulan min qablika wajaʿalnā lahum azwājan wadhurriyyatan wamā kāna lirasūlin an yatiya biāyatin illā bi-idh'ni l-lahi likulli ajalin kitābun

Kannada ನಿಮಗಿಂತ ಮುಂಚೆಯೂ ನಾವು ಅನೇಕ ದೂತರನ್ನು ಕಳುಹಿಸಿದ್ದೆವು. ನಾವು ಅವರಿಗೆ ಪತ್ನಿಯರನ್ನೂ ಮಕ್ಕಳನ್ನೂ ನೀಡಿದ್ದೆವು. ಯಾವ ದೂತನಿಗೂ ಅಲ್ಲಾಹನ ಅನುಮತಿಯಿಲ್ಲದೆ ಯಾವುದೇ ದೃಷ್ಟಾಂತವನ್ನು ತರಲಾಗದು . ಪ್ರತಿಯೊಂದು ಅವಧಿಗೂ ಒಂದು (ಪ್ರಮಾಣ) ಗ್ರಂಥವಿದೆ.

Verse 39

يَمْحُوا۟ ٱللَّهُ مَا يَشَآءُ وَيُثْبِتُ ۖ وَعِندَهُۥٓ أُمُّ ٱلْكِتَـٰبِ

Transliteration yamḥū l-lahu mā yashāu wayuth'bitu waʿindahu ummu l-kitābi

Kannada ಅಲ್ಲಾಹು ತಾನಿಚ್ಛಿಸಿದ್ದನ್ನು ಅಳಿಸುತ್ತಾನೆ. ಮತ್ತು ಉಳಿಸುತ್ತಾನೆ. `ಮೂಲಗ್ರಂಥ’ ಅವನ ಬಳಿಯಲ್ಲೇ ಇದೆ .

Verse 40

وَإِن مَّا نُرِيَنَّكَ بَعْضَ ٱلَّذِى نَعِدُهُمْ أَوْ نَتَوَفَّيَنَّكَ فَإِنَّمَا عَلَيْكَ ٱلْبَلَـٰغُ وَعَلَيْنَا ٱلْحِسَابُ

Transliteration wa-in mā nuriyannaka baʿḍa alladhī naʿiduhum aw natawaffayannaka fa-innamā ʿalayka l-balāghu waʿalaynā l-ḥisābu

Kannada (ಓ ಪೈಗಂಬರರೇ,) ನಾವು ಇವರಿಗೆ ಕೊಡುತ್ತಿರುವ ಮುನ್ನೆಚ್ಚರಿಕೆಯಲ್ಲಿ (ಶಿಸ್ತು ಕ್ರಮಗಳಲ್ಲಿ) ಕೆಲವನ್ನು ನಾವು ನಿಮಗೆ ತೋರಿಸಿದರೂ ಅಥವಾ ಅದು ಪ್ರಕಟವಾಗುವುದಕ್ಕೆ ಮುಂಚೆ ನಿಮ್ಮನ್ನು ಎತ್ತಿಕೊಂಡರೂ (ಮೃತ್ಯುಗೊಳಿಸಿದರೂ) ಹೇಗಿ ದ್ದರೂ ಸಂದೇಶವನ್ನು ಮುಟ್ಟಿಸುವುದು ಮಾತ್ರ ನಿಮ್ಮ ಹೊಣೆ. ಅವರ ಲೆಕ್ಕಾಚಾರ ಪಡೆಯುವುದು ನಮ್ಮ ಬಾಧ್ಯತೆ.

Verse 41

أَوَلَمْ يَرَوْا۟ أَنَّا نَأْتِى ٱلْأَرْضَ نَنقُصُهَا مِنْ أَطْرَافِهَا ۚ وَٱللَّهُ يَحْكُمُ لَا مُعَقِّبَ لِحُكْمِهِۦ ۚ وَهُوَ سَرِيعُ ٱلْحِسَابِ

Transliteration awalam yaraw annā natī l-arḍa nanquṣuhā min aṭrāfihā wal-lahu yaḥkumu lā muʿaqqiba liḥuk'mihi wahuwa sarīʿu l-ḥisābi

Kannada ನಾವು (ಅವರ) ಭೂಮಿಗೆ ಹೋಗಿ ಅದರ ನಾನಾ ದಿಕ್ಕುಗಳಿಂದಲೂ ಅದನ್ನು ಮುದುಡಿಸುತ್ತ ಬರುತ್ತಿರುವುದನ್ನು ಅವರು ನೋಡುತ್ತಿಲ್ಲವೆ? ಅಲ್ಲಾಹು ವಿಧಿಸುತ್ತಾನೆ. ಅವನ ತೀರ್ಮಾನವನ್ನು ತಿದ್ದುಪಡಿ ಮಾಡಬಲ್ಲವನು ಯಾರೂ ಇಲ್ಲ. ಅವನು ವಿಚಾರಣೆಯಲ್ಲಿ ಅತಿ ಶೀಘ್ರನು.

Verse 42

وَقَدْ مَكَرَ ٱلَّذِينَ مِن قَبْلِهِمْ فَلِلَّهِ ٱلْمَكْرُ جَمِيعًا ۖ يَعْلَمُ مَا تَكْسِبُ كُلُّ نَفْسٍ ۗ وَسَيَعْلَمُ ٱلْكُفَّـٰرُ لِمَنْ عُقْبَى ٱلدَّارِ

Transliteration waqad makara alladhīna min qablihim falillahi l-makru jamīʿan yaʿlamu mā taksibu kullu nafsin wasayaʿlamu l-kufāru liman ʿuq'bā l-dāri

Kannada ಇವರಿಗಿಂತ ಮುಂಚೆ ಗತಿಸಿದವರೂ ಕುತಂತ್ರಗಳನ್ನು ಹೂಡಿದ್ದರು. ಆದರೆ ನಿಜವಾದ ತಂತ್ರವು ಸರ್ವ ಸಂಪೂರ್ಣವಾಗಿ ಅಲ್ಲಾಹನಿಗಿದೆ. ಪ್ರತಿಯೊಬ್ಬ ದೇಹಿಯು ಪ್ರವರ್ತಿಸುವುದನ್ನು ಅವನು ತಿಳಿಯುತ್ತಾನೆ. ಲೋಕದ ಶುಭ ಪರ್ಯಾವಸಾನವು ಯಾರಿಗೆ ಎಂಬುದನ್ನು ಸತ್ಯನಿಷೇಧಿಯು ತಿಳಿಯಲಿರುವನು.

Verse 43

وَيَقُولُ ٱلَّذِينَ كَفَرُوا۟ لَسْتَ مُرْسَلًا ۚ قُلْ كَفَىٰ بِٱللَّهِ شَهِيدًۢا بَيْنِى وَبَيْنَكُمْ وَمَنْ عِندَهُۥ عِلْمُ ٱلْكِتَـٰبِ

Transliteration wayaqūlu alladhīna kafarū lasta mur'salan qul kafā bil-lahi shahīdan baynī wabaynakum waman ʿindahu ʿil'mu l-kitābi

Kannada ನೀವು ದೇವದೂತರಲ್ಲವೆಂದು ಸತ್ಯನಿಷೇಧಿಗಳು ಹೇಳುತ್ತಾರೆ. ಹೇಳಿರಿ; `ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಮತ್ತು ಯಾರ ಬಳಿ ದಿವ್ಯ ಗ್ರಂಥದ ಜ್ಞಾನವಿದೆಯೋ ಅವರೂ (ಸಾಕು.)

Read Surah Ar-Ra'd in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.