Surah An-Naml in Kannada: translation and audio
Surah 27 · النمل · The Ant · 93 verses
Surah An-Naml verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah An-Naml word by word in English.
Verse 1
طسٓ ۚ تِلْكَ ءَايَـٰتُ ٱلْقُرْءَانِ وَكِتَابٍ مُّبِينٍ
Transliteration tta-seen til'ka āyātu l-qur'āni wakitābin mubīnin
Kannada ತ್ವಾ ಸೀನ್. ಇವು ಖುರ್ಆನ್ ಮತ್ತು ಸುವ್ಯಕ್ತ ಗ್ರಂಥದ ಸೂಕ್ತಗಳು .
Verse 2
هُدًى وَبُشْرَىٰ لِلْمُؤْمِنِينَ
Transliteration hudan wabush'rā lil'mu'minīna
Kannada
Verse 3
ٱلَّذِينَ يُقِيمُونَ ٱلصَّلَوٰةَ وَيُؤْتُونَ ٱلزَّكَوٰةَ وَهُم بِٱلْـَٔاخِرَةِ هُمْ يُوقِنُونَ
Transliteration alladhīna yuqīmūna l-ṣalata wayu'tūna l-zakata wahum bil-ākhirati hum yūqinūna
Kannada ಇದು ನಮಾಝನ್ನು ಸಂಸ್ಥಾಪಿಸುವ ಹಾಗೂ ಝಕಾತ್ ಕೊಡುವ ಮತ್ತು ಪರಲೋಕದಲ್ಲಿ ದೃಢವಾಗಿ ವಿಶ್ವಾಸವನ್ನಿರಿಸಿದ ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶನ ಹಾಗೂ ಸುವಾರ್ತೆಯಾಗಿದೆ.
Verse 4
إِنَّ ٱلَّذِينَ لَا يُؤْمِنُونَ بِٱلْـَٔاخِرَةِ زَيَّنَّا لَهُمْ أَعْمَـٰلَهُمْ فَهُمْ يَعْمَهُونَ
Transliteration inna alladhīna lā yu'minūna bil-ākhirati zayyannā lahum aʿmālahum fahum yaʿmahūna
Kannada ಪರಲೋಕದ ಮೇಲೆ ವಿಶ್ವಾಸವಿಲ್ಲದವರಿಗೆ ಅವರ ಕರ್ಮಗಳನ್ನು ನಾವು ಮನೋಹರಗೊಳಿಸಿದ್ದೇವೆ. ಆದುದರಿಂದ ಅವರು ದಾರಿ ತಪ್ಪಿ ಅಲೆದಾಡುತ್ತಾರೆ.
Verse 5
أُو۟لَـٰٓئِكَ ٱلَّذِينَ لَهُمْ سُوٓءُ ٱلْعَذَابِ وَهُمْ فِى ٱلْـَٔاخِرَةِ هُمُ ٱلْأَخْسَرُونَ
Transliteration ulāika alladhīna lahum sūu l-ʿadhābi wahum fī l-ākhirati humu l-akhsarūna
Kannada ಅವರೇ ಕಠಿಣ ಶಿಕ್ಷೆಯುಳ್ಳವರು. ಮತ್ತು ಅವರೇ ಪರಲೋಕದಲ್ಲಿ ಅತ್ಯಧಿಕ ನಷ್ಟಕ್ಕೆ ಒಳಗಾಗುವರು.
Verse 6
وَإِنَّكَ لَتُلَقَّى ٱلْقُرْءَانَ مِن لَّدُنْ حَكِيمٍ عَلِيمٍ
Transliteration wa-innaka latulaqqā l-qur'āna min ladun ḥakīmin ʿalīmin
Kannada (ಪೈಗಂಬರರೇ) ನಿಶ್ಚಯವಾಗಿಯೂ ಓರ್ವ ಮಹಾ ತಂತ್ರಶಾಲಿಯೂ ಸರ್ವಜ್ಞನೂ ಆಗಿರುವ ಅಲ್ಲಾಹನ ಕಡೆಯಿಂದ ನಿಮಗೆ ಖುರ್ಆನನ್ನು ನೀಡಲಾ ಗುತ್ತಿದೆ.
Verse 7
إِذْ قَالَ مُوسَىٰ لِأَهْلِهِۦٓ إِنِّىٓ ءَانَسْتُ نَارًا سَـَٔاتِيكُم مِّنْهَا بِخَبَرٍ أَوْ ءَاتِيكُم بِشِهَابٍ قَبَسٍ لَّعَلَّكُمْ تَصْطَلُونَ
Transliteration idh qāla mūsā li-ahlihi innī ānastu nāran saātīkum min'hā bikhabarin aw ātīkum bishihābin qabasin laʿallakum taṣṭalūna
Kannada ಮೂಸಾರು ತಮ್ಮ ಕುಟುಂಬದೊಡನೆ ಹೀಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ‘ನಾನು ಒಂದು ಬೆಂಕಿಯನ್ನು ಕಂಡಿದ್ದೇನೆ. ನಾನು ಅಲ್ಲಿಂದೇನಾದರೂ ಸುದ್ದಿ ತರುತ್ತೇನೆ. ಇಲ್ಲವೇ ಅದರಿಂದ ಒಂದು ಬೆಂಕಿಯ ಕೆಂಡವನ್ನಾದರೂ ಹೆಕ್ಕಿ ತರುತ್ತೇನೆ. ನಿಮಗೆ ಚಳಿ ಕಾಯಿಸಬಹುದು’.
Verse 8
فَلَمَّا جَآءَهَا نُودِىَ أَنۢ بُورِكَ مَن فِى ٱلنَّارِ وَمَنْ حَوْلَهَا وَسُبْحَـٰنَ ٱللَّهِ رَبِّ ٱلْعَـٰلَمِينَ
Transliteration falammā jāahā nūdiya an būrika man fī l-nāri waman ḥawlahā wasub'ḥāna l-lahi rabbi l-ʿālamīna
Kannada ಅವರು ಅಲ್ಲಿ ತಲಪಿದಾಗ ಹೀಗೆ ಕರೆ ಕೇಳಿಸಿತು. ಬೆಂಕಿಯ ಸ್ಥಾನದಲ್ಲಿರುವವರು ಮತ್ತು ಇದರ ಪರಿಸರದಲ್ಲಿರುವವರು ಅನುಗ್ರಹೀತರು. ಸರ್ವಲೋಕಗಳ ಪಾಲಕ ಪ್ರಭುವಾಗಿರುವ ಅಲ್ಲಾಹನು ಪರಮ ಪಾವನನು.
Verse 9
يَـٰمُوسَىٰٓ إِنَّهُۥٓ أَنَا ٱللَّهُ ٱلْعَزِيزُ ٱلْحَكِيمُ
Transliteration yāmūsā innahu anā l-lahu l-ʿazīzu l-ḥakīmu
Kannada ಓ ಮೂಸಾ, ಪರಮಯುಕ್ತಿವಂತನೂ ಪ್ರತಾಪಿಯೂ ಆಗಿರುವ ಅಲ್ಲಾಹನೇ ನಾನು.
Verse 10
وَأَلْقِ عَصَاكَ ۚ فَلَمَّا رَءَاهَا تَهْتَزُّ كَأَنَّهَا جَآنٌّ وَلَّىٰ مُدْبِرًا وَلَمْ يُعَقِّبْ ۚ يَـٰمُوسَىٰ لَا تَخَفْ إِنِّى لَا يَخَافُ لَدَىَّ ٱلْمُرْسَلُونَ
Transliteration wa-alqi ʿaṣāka falammā raāhā tahtazzu ka-annahā jānnun wallā mud'biran walam yuʿaqqib yāmūsā lā takhaf innī lā yakhāfu ladayya l-mur'salūna
Kannada ನಿಮ್ಮ ದಂಡವನ್ನು ಕೆಳಗೆ ಹಾಕಿರಿ. ಆಗ ದಂಡವು ಸಣ್ಣ ಹಾವಿನಂತೆ ತೆವಳುತ್ತಿರುವುದನ್ನು ಕಂಡಾಗ ಮೂಸಾ ಬೆನ್ನು ತಿರುಗಿಸಿ ಓಟಕಿತ್ತರು. ತಿರುಗಿ ಬರಲೂ ಇಲ್ಲ. ಆಗ ಅಲ್ಲಾಹು ಹೇಳಿದನು, “ಮೂಸಾ, ಹೆದರಬೇಡ! ದೇವದೂತರು ನನ್ನ ಸನ್ನಿಧಿಯಲ್ಲಿ ಹೆದರಬೇಕಿಲ್ಲ’’.
Verse 11
إِلَّا مَن ظَلَمَ ثُمَّ بَدَّلَ حُسْنًۢا بَعْدَ سُوٓءٍ فَإِنِّى غَفُورٌ رَّحِيمٌ
Transliteration illā man ẓalama thumma baddala ḥus'nan baʿda sūin fa-innī ghafūrun raḥīmun
Kannada ಆದರೆ ಯಾರಾದರೂ ಅಕ್ರಮವೆಸಗಿ, ನಂತರ ಅವನು ಕೆಡುಕಿನ ಬಳಿಕ ಒಳಿತನ್ನು ಬದಲಿಯಾಗಿ ತಂದರೆ ನಾನು ಮಹಾ ಕ್ಷಮಾಶೀಲನೂ ಪರಮದಯಾಳುವೂ ಆಗಿರುವೆನು.
Verse 12
وَأَدْخِلْ يَدَكَ فِى جَيْبِكَ تَخْرُجْ بَيْضَآءَ مِنْ غَيْرِ سُوٓءٍ ۖ فِى تِسْعِ ءَايَـٰتٍ إِلَىٰ فِرْعَوْنَ وَقَوْمِهِۦٓ ۚ إِنَّهُمْ كَانُوا۟ قَوْمًا فَـٰسِقِينَ
Transliteration wa-adkhil yadaka fī jaybika takhruj bayḍāa min ghayri sūin fī tis'ʿi āyātin ilā fir'ʿawna waqawmihi innahum kānū qawman fāsiqīna
Kannada ನಿಮ್ಮ ಕೈಯನ್ನು ನಿಮ್ಮ ಜೇಬಿನೊಳಕ್ಕೆ ಹಾಕಿರಿ. ಅದು ಬೆಳ್ಳಗೆ ಬೆಳಗುತ್ತ ಹೊರಬರುವುದು. ರೋಗದ ಬಿಳುಪಲ್ಲ. ಫಿರ್ಔನ್ ಮತ್ತು ಅವನ ಜನಾಂಗದ ಕಡೆಗಿರುವ ಒಂಭತ್ತು ನಿದರ್ಶನಗಳಲ್ಲಿ ಇವು ಸೇರಿವೆ. ಅವರು ಮಹಾ ದುಷ್ಕರ್ಮಿಗಳಾದ ಜನಾಂಗವಾಗಿರುವರು.
Verse 13
فَلَمَّا جَآءَتْهُمْ ءَايَـٰتُنَا مُبْصِرَةً قَالُوا۟ هَـٰذَا سِحْرٌ مُّبِينٌ
Transliteration falammā jāathum āyātunā mub'ṣiratan qālū hādhā siḥ'run mubīnun
Kannada ಹಾಗೆ ಆ ದುಷ್ಕರ್ಮಿಗಳ ಕಡೆಗೆ ನಮ್ಮ ದೃಷ್ಟಾಂತಗಳು ಅತ್ಯಂತ ಪ್ರತ್ಯಕ್ಷವಾದ ನೆಲೆಯಲ್ಲಿ ಬಂದಾಗ ಅವರು ‘ಇದು ಸ್ಪಷ್ಟವಾದ ಜಾಲವಿದ್ಯೆ’ ಎಂದು ಹೇಳಿದರು.
Verse 14
وَجَحَدُوا۟ بِهَا وَٱسْتَيْقَنَتْهَآ أَنفُسُهُمْ ظُلْمًا وَعُلُوًّا ۚ فَٱنظُرْ كَيْفَ كَانَ عَـٰقِبَةُ ٱلْمُفْسِدِينَ
Transliteration wajaḥadū bihā wa-is'tayqanathā anfusuhum ẓul'man waʿuluwwan fa-unẓur kayfa kāna ʿāqibatu l-muf'sidīna
Kannada ಅವುಗಳ ಬಗ್ಗೆ ಅವರ ಮನಸ್ಸುಗಳಿಗೆ ದೃಢವಾದ ಪ್ರಜ್ಞೆ ಬಂದಿದ್ದರೂ ಅಕ್ರಮ ಹಾಗೂ ಅಹಂಕಾರದಿಂದ ಅವರದನ್ನು ನಿಷೇಧಿಸಿದರು. ಆಗ ಆ ಗೊಂದಲಕಾರಿಗಳ ಪರಿಣಾಮ ಹೇಗಿತ್ತೆಂದು ನೋಡಿರಿ.
Verse 15
وَلَقَدْ ءَاتَيْنَا دَاوُۥدَ وَسُلَيْمَـٰنَ عِلْمًا ۖ وَقَالَا ٱلْحَمْدُ لِلَّهِ ٱلَّذِى فَضَّلَنَا عَلَىٰ كَثِيرٍ مِّنْ عِبَادِهِ ٱلْمُؤْمِنِينَ
Transliteration walaqad ātaynā dāwūda wasulaymāna ʿil'man waqālā l-ḥamdu lillahi alladhī faḍḍalanā ʿalā kathīrin min ʿibādihi l-mu'minīna
Kannada ದಾವೂದ್ ಮತ್ತು ಸುಲೈಮಾನರಿಗೆ ನಾವು ಸುಜ್ಞಾನವನ್ನು ದಯಪಾಲಿಸಿದೆವು. ‘ತನ್ನ ಅನೇಕ ಸತ್ಯವಿಶ್ವಾಸಿ ದಾಸರಿಗಿಂತ ನಮಗೆ ಶ್ರೇಷ್ಟತೆಯನ್ನು ಕರುಣಿಸಿದ ಅಲ್ಲಾಹನಿಗೆ ಸರ್ವಸ್ತುತಿ’ ಎಂದು ಅವರಿಬ್ಬರೂ ಹೇಳಿದರು.
Verse 16
وَوَرِثَ سُلَيْمَـٰنُ دَاوُۥدَ ۖ وَقَالَ يَـٰٓأَيُّهَا ٱلنَّاسُ عُلِّمْنَا مَنطِقَ ٱلطَّيْرِ وَأُوتِينَا مِن كُلِّ شَىْءٍ ۖ إِنَّ هَـٰذَا لَهُوَ ٱلْفَضْلُ ٱلْمُبِينُ
Transliteration wawaritha sulaymānu dāwūda waqāla yāayyuhā l-nāsu ʿullim'nā manṭiqa l-ṭayri waūtīnā min kulli shayin inna hādhā lahuwa l-faḍlu l-mubīnu
Kannada ಸುಲೈಮಾನರು ದಾವೂದರ ಉತ್ತರಾಧಿಕಾರಿ ಯಾದರು. ಅವರು, ‘ಜನರೇ! ಪಕ್ಷಿಗಳ ಭಾಷೆಯನ್ನು ನಮಗೆ ಕಲಿಸಿಕೊಡಲಾಗಿದೆ . (ಅಗತ್ಯ ವಿರುವ) ಎಲ್ಲ ವಸ್ತುಗಳಿಂದ (ಬೇಕಾದುದನ್ನು) ನಮಗೆ ಕೊಡಲಾಗಿದೆ . ನಿಶ್ಚಯವಾಗಿಯೂ ಇದುವೇ ಪ್ರತ್ಯಕ್ಷವಾದ ಅನುಗ್ರಹ’ ಎಂದರು.
Verse 17
وَحُشِرَ لِسُلَيْمَـٰنَ جُنُودُهُۥ مِنَ ٱلْجِنِّ وَٱلْإِنسِ وَٱلطَّيْرِ فَهُمْ يُوزَعُونَ
Transliteration waḥushira lisulaymāna junūduhu mina l-jini wal-insi wal-ṭayri fahum yūzaʿūna
Kannada ಸುಲೈಮಾನರಿಗಾಗಿ ಜಿನ್ನ್, ಮಾನವ ಮತ್ತು ಪಕ್ಷಿಗಳ ಸೇನೆಗಳನ್ನು ಜಮಾಯಿಸಲಾಗಿತ್ತು. ಅವುಗಳನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಡಲಾಗಿತ್ತು.
Verse 18
حَتَّىٰٓ إِذَآ أَتَوْا۟ عَلَىٰ وَادِ ٱلنَّمْلِ قَالَتْ نَمْلَةٌ يَـٰٓأَيُّهَا ٱلنَّمْلُ ٱدْخُلُوا۟ مَسَـٰكِنَكُمْ لَا يَحْطِمَنَّكُمْ سُلَيْمَـٰنُ وَجُنُودُهُۥ وَهُمْ لَا يَشْعُرُونَ
Transliteration ḥattā idhā ataw ʿalā wādi l-namli qālat namlatun yāayyuhā l-namlu ud'khulū masākinakum lā yaḥṭimannakum sulaymānu wajunūduhu wahum lā yashʿurūna
Kannada ಹಾಗೆ ಅವರು ಇರುವೆಗಳ ಕಣಿವೆಗೆ ತಲುಪಿದಾಗ ಒಂದು ಇರುವೆಯು, ‘ಓ, ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ನುಗ್ಗಿಕೊಳ್ಳಿರಿ. ಸುಲೈಮಾನರೂ ಅವರ ಸೇನೆಗಳೂ ಅರಿಯದೇ ನಿಮ್ಮನ್ನು ತುಳಿದು ಬಿಡದಿರಲಿ’ ಎಂದಿತು.
Verse 19
فَتَبَسَّمَ ضَاحِكًا مِّن قَوْلِهَا وَقَالَ رَبِّ أَوْزِعْنِىٓ أَنْ أَشْكُرَ نِعْمَتَكَ ٱلَّتِىٓ أَنْعَمْتَ عَلَىَّ وَعَلَىٰ وَٰلِدَىَّ وَأَنْ أَعْمَلَ صَـٰلِحًا تَرْضَىٰهُ وَأَدْخِلْنِى بِرَحْمَتِكَ فِى عِبَادِكَ ٱلصَّـٰلِحِينَ
Transliteration fatabassama ḍāḥikan min qawlihā waqāla rabbi awziʿ'nī an ashkura niʿ'mataka allatī anʿamta ʿalayya waʿalā wālidayya wa-an aʿmala ṣāliḥan tarḍāhu wa-adkhil'nī biraḥmatika fī ʿibādika l-ṣāliḥīna
Kannada ಸುಲೈಮಾನರು ಅದರ ಈ ಮಾತಿಗೆ ಮಂದಹಾ ಸದ ನಗು ಬೀರಿದರು, ನಂತರ ಹೀಗೆ ಹೇಳಿದರು; “ನನ್ನ ಪ್ರಭೂ, ನನ್ನ ಮೇಲೂ ನನ್ನ ಮಾತಾಪಿತರ ಮೇಲೂ ನೀನು ಮಾಡಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ತೋರಲಿಕ್ಕೂ ನೀನು ಮೆಚ್ಚು ವಂತಹ ಸತ್ಕರ್ಮವೆಸಗಲಿಕ್ಕೂ ನನಗೆ ಸ್ಪೂರ್ತಿ ನೀಡು, ನಿನ್ನ ಸಜ್ಜನದಾಸರಲ್ಲಿ ನಿನ್ನ ದಯೆಯಿಂದ ನನ್ನನ್ನು ಸೇರಿಸು .
Verse 20
وَتَفَقَّدَ ٱلطَّيْرَ فَقَالَ مَا لِىَ لَآ أَرَى ٱلْهُدْهُدَ أَمْ كَانَ مِنَ ٱلْغَآئِبِينَ
Transliteration watafaqqada l-ṭayra faqāla mā liya lā arā l-hud'huda am kāna mina l-ghāibīna
Kannada ಒಮ್ಮೆ ಸುಲೈಮಾನರು ಪಕ್ಷಿಗಳ ಪರಿಶೀಲನೆ ನಡೆಸಿದರು. ಆಮೇಲೆ ಹೀಗೆ ಹೇಳಿದರು, ಏನಾಯಿತು? ಮರಕುಟಿಕವನ್ನು ಕಾಣುವುದಿಲ್ಲ ವೇಕೆ? ಅಥವಾ ಅದು ಕಣ್ಮರೆಯಾದವರಲ್ಲಿ ಸೇರಿದೆಯೇ?
Verse 21
لَأُعَذِّبَنَّهُۥ عَذَابًا شَدِيدًا أَوْ لَأَا۟ذْبَحَنَّهُۥٓ أَوْ لَيَأْتِيَنِّى بِسُلْطَـٰنٍ مُّبِينٍ
Transliteration la-uʿadhibannahu ʿadhāban shadīdan aw laādh'baḥannahu aw layatiyannī bisul'ṭānin mubīnin
Kannada ನಾನು ಅದಕ್ಕೆ ಕಠಿಣ ಶಿಕ್ಷೆ ಕೊಡುವೆನು ಇಲ್ಲವೇ ಅದನ್ನು ಕೊಯ್ದು ಬಿಡುವೆನು. ಅನ್ಯಥಾ ಅದು ನನಗೆ ಸ್ಪಷ್ಟವಾದ ಆಧಾರವನ್ನು ಕೊಡಬೇಕಾದೀತು.
Verse 22
فَمَكَثَ غَيْرَ بَعِيدٍ فَقَالَ أَحَطتُ بِمَا لَمْ تُحِطْ بِهِۦ وَجِئْتُكَ مِن سَبَإٍۭ بِنَبَإٍ يَقِينٍ
Transliteration famakatha ghayra baʿīdin faqāla aḥaṭtu bimā lam tuḥiṭ bihi waji'tuka min saba-in binaba-in yaqīnin
Kannada ಹಾಗೆ ಅದು ಅಲ್ಲಿಗೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಆಮೇಲೆ ಅದು ಹೇಳಿತು, ‘ತಾವು ಸೂಕ್ಷ್ಮವಾಗಿ ತಿಳಿಯದಿರುವಂತಹ ಒಂದು ವಿಷಯವನ್ನು ನಾನು ಸೂಕ್ಷ್ಮವಾಗಿ ತಿಳಿದುಕೊಂಡಿದ್ದೇನೆ. ನಾನು ಖಾತರಿಯಾದ ಸುದ್ದಿಯೊಂದನ್ನು ‘ಸಬಅ’ದಿಂದ ನಿಮ್ಮಲ್ಲಿಗೆ ತಂದಿರುತ್ತೇನೆ.
Verse 23
إِنِّى وَجَدتُّ ٱمْرَأَةً تَمْلِكُهُمْ وَأُوتِيَتْ مِن كُلِّ شَىْءٍ وَلَهَا عَرْشٌ عَظِيمٌ
Transliteration innī wajadttu im'ra-atan tamlikuhum waūtiyat min kulli shayin walahā ʿarshun ʿaẓīmun
Kannada ಓರ್ವ ಸ್ತ್ರೀ ಅವರನ್ನು ಆಳುತ್ತಿರುವುದನ್ನು ನಾನು ಕಂಡೆನು. ಅವಳಿಗೆ ಎಲ್ಲ ವಸ್ತುಗಳಿಂದ (ಅಗತ್ಯವಾದುದನ್ನು) ನೀಡಲಾಗಿದೆ. ಆಕೆಗೆ ಒಂದು ದೊಡ್ಡ ಸಿಂಹಾಸನವು ಇದೆ .
Verse 24
وَجَدتُّهَا وَقَوْمَهَا يَسْجُدُونَ لِلشَّمْسِ مِن دُونِ ٱللَّهِ وَزَيَّنَ لَهُمُ ٱلشَّيْطَـٰنُ أَعْمَـٰلَهُمْ فَصَدَّهُمْ عَنِ ٱلسَّبِيلِ فَهُمْ لَا يَهْتَدُونَ
Transliteration wajadttuhā waqawmahā yasjudūna lilshamsi min dūni l-lahi wazayyana lahumu l-shayṭānu aʿmālahum faṣaddahum ʿani l-sabīli fahum lā yahtadūna
Kannada ಅವಳೂ ಅವಳ ಜನಾಂಗವೂ ಅಲ್ಲಾಹನ ಬದಲು ಸೂರ್ಯನಿಗೆ ಸಾಷ್ಟಾಂಗವೆರಗುವುದನ್ನು ನಾನು ಕಂಡೆನು. ಶೈತಾನನು ಅವರಿಗೆ ಅವರ ಕರ್ಮ ಗಳನ್ನು ಸೊಗಸಾಗಿ ತೋರಿಸಿದನು. ಹಾಗೆ ಅವರನ್ನು ನೇರ ಮಾರ್ಗದಿಂದ ತಡೆದನು. ಆದುದರಿಂದ ಅವರು ನೇರ ಮಾರ್ಗಕ್ಕೆ ಬರುವುದಿಲ್ಲ.
Verse 25
أَلَّا يَسْجُدُوا۟ لِلَّهِ ٱلَّذِى يُخْرِجُ ٱلْخَبْءَ فِى ٱلسَّمَـٰوَٰتِ وَٱلْأَرْضِ وَيَعْلَمُ مَا تُخْفُونَ وَمَا تُعْلِنُونَ
Transliteration allā yasjudū lillahi alladhī yukh'riju l-khaba-a fī l-samāwāti wal-arḍi wayaʿlamu mā tukh'fūna wamā tuʿ'linūna
Kannada ಆಕಾಶಗಳಲ್ಲೂ ಭೂಮಿಯಲ್ಲೂ ಅಡಗಿರುವ ವಸ್ತುಗಳನ್ನು ಹೊರತರುವ ಮತ್ತು ನೀವು ಬಚ್ಚಿಡುವುದನ್ನೂ ಬಹಿರಂಗಪಡಿಸುವುದನ್ನೂ ಅರಿಯುವ ಅಲ್ಲಾಹನಿಗೆ ಅವರು ಸಾಷ್ಟಾಂಗ ವೆರಗುವ ಸತ್ಯದ ದಾರಿಗೆ ಅವರು ಬಾರದಿರಲೆಂದು. (ಶೈತಾನನು ಅವರ ಕುಕೃತ್ಯಗಳನ್ನು ಚಂದಗಾಣಿಸಿ ಕೊಟ್ಟಿದ್ದಾನೆ)
Verse 26
ٱللَّهُ لَآ إِلَـٰهَ إِلَّا هُوَ رَبُّ ٱلْعَرْشِ ٱلْعَظِيمِ ۩
Transliteration al-lahu lā ilāha illā huwa rabbu l-ʿarshi l-ʿaẓīmi
Kannada ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯನಿಲ್ಲ, ಘನವೆತ್ತ ಅರ್ಶ್ನ ಒಡೆಯನು.
Verse 27
۞ قَالَ سَنَنظُرُ أَصَدَقْتَ أَمْ كُنتَ مِنَ ٱلْكَـٰذِبِينَ
Transliteration qāla sananẓuru aṣadaqta am kunta mina l-kādhibīna
Kannada ಆಗ ಸುಲೈಮಾನರು ಹೀಗೆ ಹೇಳಿದರು; ‘ನೀನು ನಿಜ ಹೇಳಿದೆಯೋ ಅಥವಾ ಸುಳ್ಳಾಡುವವರಲ್ಲಿ ಸೇರಿರುವೆಯೋ ಎಂದು ನಾವು ನೋಡಲಿದ್ದೇವೆ!
Verse 28
ٱذْهَب بِّكِتَـٰبِى هَـٰذَا فَأَلْقِهْ إِلَيْهِمْ ثُمَّ تَوَلَّ عَنْهُمْ فَٱنظُرْ مَاذَا يَرْجِعُونَ
Transliteration idh'hab bikitābī hādhā fa-alqih ilayhim thumma tawalla ʿanhum fa-unẓur mādhā yarjiʿūna
Kannada ನನ್ನ ಈ ಪತ್ರವನ್ನು ಕೊಂಡು ಹೋಗು, ಆಮೇಲೆ ಅವರ ಮುಂದೆ ಹಾಕಿ ಬಿಡು. ಅನಂತರ ಅವರಿಂದ ಸರಿದು ನಿಂತು ಅವರು ಅದಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆಂದು ನೋಡು’ ಎಂದರು.
Verse 29
قَالَتْ يَـٰٓأَيُّهَا ٱلْمَلَؤُا۟ إِنِّىٓ أُلْقِىَ إِلَىَّ كِتَـٰبٌ كَرِيمٌ
Transliteration qālat yāayyuhā l-mala-u innī ul'qiya ilayya kitābun karīmun
Kannada ರಾಣಿಯು ಹೀಗೆ ಹೇಳಿದಳು - ‘ಓ, ಆಸ್ಥಾನದ ವರೇ, ನನ್ನ ಕಡೆಗೆ ಒಂದು ಮಹತ್ವಪೂರ್ಣ ಪತ್ರವನ್ನು ಹಾಕಲಾಗಿದೆ.
Verse 30
إِنَّهُۥ مِن سُلَيْمَـٰنَ وَإِنَّهُۥ بِسْمِ ٱللَّهِ ٱلرَّحْمَـٰنِ ٱلرَّحِيمِ
Transliteration innahu min sulaymāna wa-innahu bis'mi l-lahi l-raḥmāni l-raḥīmi
Kannada ಅದು ಸುಲೈಮಾನರ ಕಡೆಯಿಂದ ಬಂದಿದೆ. ಅದು ಹೀಗಿದೆ;’ ಪರಮದಯಾನಿಧಿಯೂ ಕಾರು ಣ್ಯವಂತನೂ ಆದ ಅಲ್ಲಾಹನ ನಾಮದಿಂದ.
Verse 31
أَلَّا تَعْلُوا۟ عَلَىَّ وَأْتُونِى مُسْلِمِينَ
Transliteration allā taʿlū ʿalayya watūnī mus'limīna
Kannada ನನ್ನಲ್ಲಿ ನೀವು ಅಹಂಕಾರ ತೋರಬೇಡಿ, ಮತ್ತು ಶರಣಾಗತರಾಗಿ ನನ್ನ ಬಳಿ ಬನ್ನಿರಿ”.
Verse 32
قَالَتْ يَـٰٓأَيُّهَا ٱلْمَلَؤُا۟ أَفْتُونِى فِىٓ أَمْرِى مَا كُنتُ قَاطِعَةً أَمْرًا حَتَّىٰ تَشْهَدُونِ
Transliteration qālat yāayyuhā l-mala-u aftūnī fī amrī mā kuntu qāṭiʿatan amran ḥattā tashhadūni
Kannada ರಾಣಿಯು, ‘ಪ್ರಮುಖರೇ, ನನ್ನ ಈ ವಿಷಯದ ಬಗ್ಗೆ (ನಾನು ಏನು ಮಾಡಬೇಕೆಂದು) ನನಗೆ ಸಲಹೆ ಕೊಡಿರಿ. ನೀವು ನನ್ನ ಬಳಿ ಹಾಜರಾಗಿ ಸಮಾಲೋಚಿಸದೆ ಯಾವುದೇ ಕಾರ್ಯದಲ್ಲಿ ನಾನು ದೃಢ ನಿರ್ಧಾರ ಕೈಗೊಳ್ಳುವವಳಲ್ಲ ಎಂದು ಹೇಳಿದಳು.
Verse 33
قَالُوا۟ نَحْنُ أُو۟لُوا۟ قُوَّةٍ وَأُو۟لُوا۟ بَأْسٍ شَدِيدٍ وَٱلْأَمْرُ إِلَيْكِ فَٱنظُرِى مَاذَا تَأْمُرِينَ
Transliteration qālū naḥnu ulū quwwatin wa-ulū basin shadīdin wal-amru ilayki fa-unẓurī mādhā tamurīna
Kannada ಆಗ ಅವರು, ಹೇಳಿದರು; “ನಾವು ಬಲಶಾಲಿ ಗಳೂ ರಣಶೂರರೂ ಆಗಿರುತ್ತೇವೆ. ಆಜ್ಞಾಧಿಕಾರ ನಿಮ್ಮ ಕಡೆಯಲ್ಲಿದೆ. ಏನಪ್ಪಣೆ ಕೊಡಬೇಕೆಂದು ನೀವೇ ಯೋಚಿಸಿ ನೋಡಿರಿ’’.
Verse 34
قَالَتْ إِنَّ ٱلْمُلُوكَ إِذَا دَخَلُوا۟ قَرْيَةً أَفْسَدُوهَا وَجَعَلُوٓا۟ أَعِزَّةَ أَهْلِهَآ أَذِلَّةً ۖ وَكَذَٰلِكَ يَفْعَلُونَ
Transliteration qālat inna l-mulūka idhā dakhalū qaryatan afsadūhā wajaʿalū aʿizzata ahlihā adhillatan wakadhālika yafʿalūna
Kannada ಆಗ ರಾಣಿ ಹೇಳಿದಳು; ‘ಅರಸರು ಒಂದು ನಾಡಿ ನೊಳಗೆ ಪ್ರವೇಶಿಸಿದರೆ ಅದನ್ನು ಅವರು ಹಾಳು ಗೆಡಹುತ್ತಾರೆ ಮತ್ತು ಅದರಲ್ಲಿರುವ ಮರ್ಯಾ ದಸ್ಥರನ್ನು ಅವಮಾನಗೊಳಿಸುತ್ತಾರೆ. ಇವರು ಕೂಡಾ ಹೀಗೆಯೇ ಮಾಡುತ್ತಾರೆ.
Verse 35
وَإِنِّى مُرْسِلَةٌ إِلَيْهِم بِهَدِيَّةٍ فَنَاظِرَةٌۢ بِمَ يَرْجِعُ ٱلْمُرْسَلُونَ
Transliteration wa-innī mur'silatun ilayhim bihadiyyatin fanāẓiratun bima yarjiʿu l-mur'salūna
Kannada ಆದ್ದರಿಂದ ನಾನು ಅವರಿಗೆ ಒಂದು ಉಡುಗೊರೆಯನ್ನು ಕಳುಹಿಸುತ್ತೇನೆ. ತರುವಾಯ ನನ್ನ ರಾಯಭಾರಿಗಳು ಯಾವ ಉತ್ತರದೊಂದಿಗೆ ಮರಳುತ್ತಾರೆಂದು ನೋಡುತ್ತೇನೆ’.
Verse 36
فَلَمَّا جَآءَ سُلَيْمَـٰنَ قَالَ أَتُمِدُّونَنِ بِمَالٍ فَمَآ ءَاتَىٰنِۦَ ٱللَّهُ خَيْرٌ مِّمَّآ ءَاتَىٰكُم بَلْ أَنتُم بِهَدِيَّتِكُمْ تَفْرَحُونَ
Transliteration falammā jāa sulaymāna qāla atumiddūnani bimālin famā ātāniya l-lahu khayrun mimmā ātākum bal antum bihadiyyatikum tafraḥūna
Kannada ರಾಣಿಯ ದೂತನು (ಉಡುಗೊರೆಯೊಂದಿಗೆ) ಸುಲೈಮಾನರ ಬಳಿಗೆ ಬಂದಾಗ ಅವರು ಹೇಳಿದರು; ‘ನೀವು ನನಗೆ ಧನದ ಮೂಲಕ ಸಹಾಯ ಮಾಡುವಿರಾ? ಆದರೆ ನನಗೆ ಅಲ್ಲಾಹು ನೀಡಿರುವುದು ನಿಮಗೆ ಕೊಟ್ಟಿರುವುದಕ್ಕಿಂತ ಉತ್ತಮವಾಗಿದೆ. ನಿಮ್ಮ ಉಡುಗೊರೆಯಿಂದ ನೀವು ಹರ್ಷರಾಗಿದ್ದೀರಿ.
Verse 37
ٱرْجِعْ إِلَيْهِمْ فَلَنَأْتِيَنَّهُم بِجُنُودٍ لَّا قِبَلَ لَهُم بِهَا وَلَنُخْرِجَنَّهُم مِّنْهَآ أَذِلَّةً وَهُمْ صَـٰغِرُونَ
Transliteration ir'jiʿ ilayhim falanatiyannahum bijunūdin lā qibala lahum bihā walanukh'rijannahum min'hā adhillatan wahum ṣāghirūna
Kannada (ರಾಯಭಾರಿಯೇ, ನೀನು ತಂದ ಉಡುಗೊರೆ ಯೊಂದಿಗೆ) ಅವರ ಕಡೆಗೇ ಮರಳಿ ಹೋಗು. ಅವರಿಗೆ ಎದುರಿಸಲಾಗದ ಸೇನೆಯನ್ನು ನಾವು ಅವರ ಬಳಿಗೆ ತರುವೆವು ಮತ್ತು ಅವರು ನಿಂದ್ಯರೂ ಅಪಮಾನಿತರೂ ಆದ ಸ್ಥಿತಿಯಲ್ಲಿ ಅವರನ್ನು ನಾವು ಅಲ್ಲಿಂದ ಹೊರಕ್ಕಟ್ಟುವೆವು’ .
Verse 38
قَالَ يَـٰٓأَيُّهَا ٱلْمَلَؤُا۟ أَيُّكُمْ يَأْتِينِى بِعَرْشِهَا قَبْلَ أَن يَأْتُونِى مُسْلِمِينَ
Transliteration qāla yāayyuhā l-mala-u ayyukum yatīnī biʿarshihā qabla an yatūnī mus'limīna
Kannada ಅವರು (ಸುಲೈಮಾನರು) ‘ಸರದಾರರೇ, ಅವರು ಶರಣಾಗತರಾಗಿ (ಮುಸ್ಲಿಮರಾಗಿ) ನನ್ನ ಮುಂದೆ ಹಾಜರಾಗುವುದಕ್ಕಿಂತ ಮುಂಚೆಯೇ ಅವಳ ಸಿಂಹಾಸನವನ್ನು ನನ್ನ ಬಳಿಗೆ ತಂದು ಕೊಡಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ ?’ ಎಂದು ಕೇಳಿದರು.
Verse 39
قَالَ عِفْرِيتٌ مِّنَ ٱلْجِنِّ أَنَا۠ ءَاتِيكَ بِهِۦ قَبْلَ أَن تَقُومَ مِن مَّقَامِكَ ۖ وَإِنِّى عَلَيْهِ لَقَوِىٌّ أَمِينٌ
Transliteration qāla ʿif'rītun mina l-jini anā ātīka bihi qabla an taqūma min maqāmika wa-innī ʿalayhi laqawiyyun amīnun
Kannada ಜಿನ್ನ್ಗಳ ಪೈಕಿ ಓರ್ವ ಮಲ್ಲನು, ‘ತಾವು ತಮ್ಮ (ತೀರ್ಪು ವಿಧಿಸುವ) ಈ ಸ್ಥಾನದಿಂದ ಏಳುವುದಕ್ಕೆ ಮುಂಚೆಯೇ ನಿಮಗೆ ನಾನು ಅದನ್ನು ತಂದು ಕೊಡುವೆನು. ನಾನು ಅದಕ್ಕೆ ಶಕ್ತನೂ ಪ್ರಾಮಾಣಿಕನೂ ಆಗಿದ್ದೇನೆ’ ಎಂದನು.
Verse 40
قَالَ ٱلَّذِى عِندَهُۥ عِلْمٌ مِّنَ ٱلْكِتَـٰبِ أَنَا۠ ءَاتِيكَ بِهِۦ قَبْلَ أَن يَرْتَدَّ إِلَيْكَ طَرْفُكَ ۚ فَلَمَّا رَءَاهُ مُسْتَقِرًّا عِندَهُۥ قَالَ هَـٰذَا مِن فَضْلِ رَبِّى لِيَبْلُوَنِىٓ ءَأَشْكُرُ أَمْ أَكْفُرُ ۖ وَمَن شَكَرَ فَإِنَّمَا يَشْكُرُ لِنَفْسِهِۦ ۖ وَمَن كَفَرَ فَإِنَّ رَبِّى غَنِىٌّ كَرِيمٌ
Transliteration qāla alladhī ʿindahu ʿil'mun mina l-kitābi anā ātīka bihi qabla an yartadda ilayka ṭarfuka falammā raāhu mus'taqirran ʿindahu qāla hādhā min faḍli rabbī liyabluwanī a-ashkuru am akfuru waman shakara fa-innamā yashkuru linafsihi waman kafara fa-inna rabbī ghaniyyun karīmun
Kannada ಗ್ರಂಥದಿಂದ ಜ್ಞಾನ ಪಡೆದ ವ್ಯಕ್ತಿಯೊಬ್ಬರು, ‘ತಾವು ರೆಪ್ಪೆ ಬಡಿಯುವುದಕ್ಕೆ ಮುಂಚೆ ನಾನು ಅದನ್ನು ತರುತ್ತೇನೆ’ ಎಂದರು. ಆಗಲೇ ಆ ಸಿಂಹಾಸನವು ತನ್ನ ಮುಂದೆ ಇಡಲ್ಪಟ್ಟಿರುವುದನ್ನು ಕಂಡಾಗ, ಸುಲೈಮಾನರು ಹೀಗೆ ಹೇಳಿದರು, “ನಾನು ಕೃತಜ್ಞತೆ ತೋರುವೆನೋ, ಅಥವಾ ಕೃತಘ್ನತೆ ತೋರುವೆನೋ ಎಂದು ನನ್ನನ್ನು ಪರೀಕ್ಷಿಸಲಿಕ್ಕಾಗಿ ಇದು ನನ್ನ ಪ್ರಭುವಿನ ಅನು ಗ್ರಹವಾಗಿರುತ್ತದೆ. ಯಾರು ಕೃತಜ್ಞತೆ ತೋರುತ್ತಾನೆ, ಆತನು ತನಗಾಗಿಯೇ ಕೃತಜ್ಞತೆ ತೋರುತ್ತಾನೆ. ಯಾರು ಕೃತಘ್ನತೆ ತೋರುತ್ತಾರೆ, ನನ್ನ ಪ್ರಭು ನಿರಪೇಕ್ಷನೂ ಉತ್ಕøಷ್ಟನೂ ಆಗಿರುತ್ತಾನೆ”.
Verse 41
قَالَ نَكِّرُوا۟ لَهَا عَرْشَهَا نَنظُرْ أَتَهْتَدِىٓ أَمْ تَكُونُ مِنَ ٱلَّذِينَ لَا يَهْتَدُونَ
Transliteration qāla nakkirū lahā ʿarshahā nanẓur atahtadī am takūnu mina alladhīna lā yahtadūna
Kannada ಅವರು (ಸುಲೈಮಾನರು) ‘ನೀವು ಅವಳಿಗೆ ಅವಳ ಸಿಂಹಾಸನವನ್ನು ಗುರುತು ಸಿಗದಂತೆ ರೂಪ ವ್ಯತ್ಯಾಸ ಮಾಡಿರಿ. ಅವಳು ಗುರುತು ಹಿಡಿಯುತ್ತಾಳೋ ಅಥವಾ ಗುರುತು ಹಿಡಿಯದವರ ಸಾಲಿಗೆ ಸೇರುತ್ತಾಳೋ ಎಂದು ನಾವು ನೋಡೋಣ’ ಎಂದರು .
Verse 42
فَلَمَّا جَآءَتْ قِيلَ أَهَـٰكَذَا عَرْشُكِ ۖ قَالَتْ كَأَنَّهُۥ هُوَ ۚ وَأُوتِينَا ٱلْعِلْمَ مِن قَبْلِهَا وَكُنَّا مُسْلِمِينَ
Transliteration falammā jāat qīla ahākadhā ʿarshuki qālat ka-annahu huwa waūtīnā l-ʿil'ma min qablihā wakunnā mus'limīna
Kannada ರಾಣಿಯು ಹಾಜರಾದಾಗ (ಅವಳೊಡನೆ) ‘ನಿನ್ನ ಸಿಂಹಾಸನ ಹೀಗೆಯೇ ಇದೆಯೇ?’ ಎಂದು ಕೇಳಲಾಯಿತು. ಆಗ ಅವಳು ಹೇಳಿದಳು; ಇದು ಅದುವೇ ಎಂಬಂತಿದೆ. (ಆಗ ಸುಲೈಮಾನರು ಹೇಳಿದರು) ‘ಅವಳಿಗೆ ಮೊದಲೇ ನಮಗೆ ಅರಿವು ಸಿಕ್ಕಿದೆ. ಮತ್ತು ನಾವು ಮುಸ್ಲಿಮರಾಗಿದ್ದೇವೆ .
Verse 43
وَصَدَّهَا مَا كَانَت تَّعْبُدُ مِن دُونِ ٱللَّهِ ۖ إِنَّهَا كَانَتْ مِن قَوْمٍ كَـٰفِرِينَ
Transliteration waṣaddahā mā kānat taʿbudu min dūni l-lahi innahā kānat min qawmin kāfirīna
Kannada ಅವಳು ಆರಾಧಿಸುತ್ತಿದ್ದ ಅಲ್ಲಾಹೇತರ ಆರಾಧ್ಯ ವಸ್ತುವು ಅವಳನ್ನು ತಡೆದಿರಿಸಿತ್ತು. ನಿಜಕ್ಕೂ ಅವಳು ಸತ್ಯನಿಷೇಧಿ ಜನಾಂಗದವಳಾಗಿದ್ದಳು.
Verse 44
قِيلَ لَهَا ٱدْخُلِى ٱلصَّرْحَ ۖ فَلَمَّا رَأَتْهُ حَسِبَتْهُ لُجَّةً وَكَشَفَتْ عَن سَاقَيْهَا ۚ قَالَ إِنَّهُۥ صَرْحٌ مُّمَرَّدٌ مِّن قَوَارِيرَ ۗ قَالَتْ رَبِّ إِنِّى ظَلَمْتُ نَفْسِى وَأَسْلَمْتُ مَعَ سُلَيْمَـٰنَ لِلَّهِ رَبِّ ٱلْعَـٰلَمِينَ
Transliteration qīla lahā ud'khulī l-ṣarḥa falammā ra-athu ḥasibathu lujjatan wakashafat ʿan sāqayhā qāla innahu ṣarḥun mumarradun min qawārīra qālat rabbi innī ẓalamtu nafsī wa-aslamtu maʿa sulaymāna lillahi rabbi l-ʿālamīna
Kannada ಅರಮನೆಯೊಳಗೆ ಪ್ರವೇಶಿಸು’ ಎಂದು ಅವ ಳೊಡನೆ ಹೇಳಲಾಯಿತು. ಆಗ ಅವಳು ಅದನ್ನು ಕಂಡಾಗ ಅದೊಂದು ಜಲಾಶಯವೆಂದು ಭಾವಿಸಿ ಇಳಿಯಲಿಕ್ಕಾಗಿ ಕಾಲುಗಳಿಂದ ಇಜಾರನ್ನು ಮೇಲೇರಿಸಿ ಕೊಂಡಳು. ಆಗ ಸುಲೈಮಾನರು ‘ಇದು ಸ್ಪಟಿಕ ನಿರ್ಮಿತ ನುಣುಪಾದ ಅರಮನೆ’ ಎಂದರು. ಆಗ ಅವಳು, ‘ಓ ನನ್ನ ಪ್ರಭೂ, ನಾನು ನನ್ನ ಮೇಲೆಯೇ ಅಕ್ರಮವೆಸಗಿದೆ. ನಾನು ಸುಲೈಮಾನರೊಂದಿಗೆ, ಸರ್ವ ಲೋಕಗಳ ಪಾಲಕ ಪ್ರಭುವಾದ ಅಲ್ಲಾಹನಿಗೆ ಶರಣಾಗಿದ್ದೇನೆ’ ಎಂದಳು .
Verse 45
وَلَقَدْ أَرْسَلْنَآ إِلَىٰ ثَمُودَ أَخَاهُمْ صَـٰلِحًا أَنِ ٱعْبُدُوا۟ ٱللَّهَ فَإِذَا هُمْ فَرِيقَانِ يَخْتَصِمُونَ
Transliteration walaqad arsalnā ilā thamūda akhāhum ṣāliḥan ani uʿ'budū l-laha fa-idhā hum farīqāni yakhtaṣimūna
Kannada ‘ನೀವು ಅಲ್ಲಾಹನನ್ನು ಆರಾಧಿಸಿರಿ’ ಎಂಬ ಸಂದೇಶದೊಂದಿಗೆ ಸಮೂದ್ ಗೋತ್ರದೆಡೆಗೆ ಅವರ ಸಹೋದರ ಸಾಲಿಹರನ್ನು ನಾವು ಕಳುಹಿಸಿದೆವು. ಆಗ ಅವರು ಪರಸ್ಪರ ಜಗಳಾಡುವ ಎರಡು ತಂಡಗಳಾಗಿ ಬಿಟ್ಟರು.
Verse 46
قَالَ يَـٰقَوْمِ لِمَ تَسْتَعْجِلُونَ بِٱلسَّيِّئَةِ قَبْلَ ٱلْحَسَنَةِ ۖ لَوْلَا تَسْتَغْفِرُونَ ٱللَّهَ لَعَلَّكُمْ تُرْحَمُونَ
Transliteration qāla yāqawmi lima tastaʿjilūna bil-sayi-ati qabla l-ḥasanati lawlā tastaghfirūna l-laha laʿallakum tur'ḥamūna
Kannada ಅವರು (ಸಾಲಿಹರು) ಹೇಳಿದರು, ‘ನನ್ನ ಜನಾಂಗದವರೇ, ನೀವೇಕೆ ಒಳಿತಿಗಿಂತ ಮೊದಲು ಕೆಡುಕಿಗಾಗಿ ತ್ವರೆ ಮಾಡುವಿರಿ? ನಿಮ್ಮ ಮೇಲೆ ಕೃಪೆ ತೋರುವಂತಾಗಲು ನೀವು ಅಲ್ಲಾಹನೊಡನೆ ಕ್ಷಮಾಯಾಚನೆ ಮಾಡಬಾರದೇ?’
Verse 47
قَالُوا۟ ٱطَّيَّرْنَا بِكَ وَبِمَن مَّعَكَ ۚ قَالَ طَـٰٓئِرُكُمْ عِندَ ٱللَّهِ ۖ بَلْ أَنتُمْ قَوْمٌ تُفْتَنُونَ
Transliteration qālū iṭṭayyarnā bika wabiman maʿaka qāla ṭāirukum ʿinda l-lahi bal antum qawmun tuf'tanūna
Kannada ಆಗ ಅವರು, ‘ನಾವು ನಿನ್ನ ಹಾಗೂ ನಿನ್ನ ಜೊತೆ ಗಾರರಿಂದ ಅಪಶಕುನದಲ್ಲಿ ಬಿದ್ದಿದ್ದೇವೆ’ ಎಂದ ರು. ಅದಕ್ಕೆ ಸಾಲಿಹರು ‘ನಿಮ್ಮ ಶಕುನವು ಅಲ್ಲಾ ಹನ ಬಳಿ ಇದೆ. ಆದರೆ ನೀವು ಪರೀಕ್ಷಿಸಲ್ಪಡುತ್ತಿರುವ ಒಂದು ಜನಾಂಗವಾಗಿದ್ದೀರಿ’ ಎಂದು ಉತ್ತರಿಸಿದರು.
Verse 48
وَكَانَ فِى ٱلْمَدِينَةِ تِسْعَةُ رَهْطٍ يُفْسِدُونَ فِى ٱلْأَرْضِ وَلَا يُصْلِحُونَ
Transliteration wakāna fī l-madīnati tis'ʿatu rahṭin yuf'sidūna fī l-arḍi walā yuṣ'liḥūna
Kannada ಆ ನಗರದಲ್ಲಿ ಒಂಭತ್ತು ಮಂದಿಯ ಗುಂಪೊಂದಿತ್ತು. ಅವರು ಭೂಮಿಯಲ್ಲಿ ಕೇಡು ಹರಡುತ್ತಿ ದ್ದರು. ಸುಧಾರಣೆ ಮಾಡುತ್ತಿರಲಿಲ್ಲ.
Verse 49
قَالُوا۟ تَقَاسَمُوا۟ بِٱللَّهِ لَنُبَيِّتَنَّهُۥ وَأَهْلَهُۥ ثُمَّ لَنَقُولَنَّ لِوَلِيِّهِۦ مَا شَهِدْنَا مَهْلِكَ أَهْلِهِۦ وَإِنَّا لَصَـٰدِقُونَ
Transliteration qālū taqāsamū bil-lahi lanubayyitannahu wa-ahlahu thumma lanaqūlanna liwaliyyihi mā shahid'nā mahlika ahlihi wa-innā laṣādiqūna
Kannada ಅವರು ಪರಸ್ಪರ ಹೀಗೆಂದರು; ನಾವು ಸಾಲಿಹ್ ಮತ್ತು ಅವನ ಜನರನ್ನು ರಾತ್ರಿ ಸಮಯದಲ್ಲಿ ಕೊಂದು ಹಾಕೋಣ, ಅನಂತರ ಅವನ ಹಕ್ಕುದಾರನೊಡನೆ ‘ನಿಮ್ಮ ಜನರ ನಾಶಕ್ಕೆ ನಾವು ಹಾಜರಾಗಿಲ್ಲ. ನಾವು ನಿಜವನ್ನೇ ಹೇಳುತ್ತೇವೆ’ ಎಂದು ಹೇಳೋಣ ಎಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿರಿ”.
Verse 50
وَمَكَرُوا۟ مَكْرًا وَمَكَرْنَا مَكْرًا وَهُمْ لَا يَشْعُرُونَ
Transliteration wamakarū makran wamakarnā makran wahum lā yashʿurūna
Kannada ಅವರು ಒಂದು ತಂತ್ರವನ್ನು ಹೂಡಿದರು. ಅವರು ತಿಳಿಯದಂತೆ ಒಂದು ಪ್ರತಿತಂತ್ರವನ್ನು ನಾವೂ ಹೂಡಿದೆವು.
Verse 51
فَٱنظُرْ كَيْفَ كَانَ عَـٰقِبَةُ مَكْرِهِمْ أَنَّا دَمَّرْنَـٰهُمْ وَقَوْمَهُمْ أَجْمَعِينَ
Transliteration fa-unẓur kayfa kāna ʿāqibatu makrihim annā dammarnāhum waqawmahum ajmaʿīna
Kannada ನೋಡಿರಿ! ಅವರ ಕುತಂತ್ರದ ಪರಿಣಾಮ ಏನಾ ಯಿತು? ನಾವು ಅವರನ್ನೂ ಅವರ ಇಡೀ ಜನಾಂಗವನ್ನೂ ನಾಶಗೊಳಿಸಿದೆವು!
Verse 52
فَتِلْكَ بُيُوتُهُمْ خَاوِيَةًۢ بِمَا ظَلَمُوٓا۟ ۗ إِنَّ فِى ذَٰلِكَ لَـَٔايَةً لِّقَوْمٍ يَعْلَمُونَ
Transliteration fatil'ka buyūtuhum khāwiyatan bimā ẓalamū inna fī dhālika laāyatan liqawmin yaʿlamūna
Kannada ಹೀಗೆ ಅವರು ಮಾಡುತ್ತಿದ್ದ ಅಕ್ರಮದ ಫಲವಾಗಿ ಅವರ ಮನೆಗಳು ಪಾಳುಬಿದ್ದಿವೆ. ತಿಳಿಯುವ ಜನಾಂಗಕ್ಕೆ ಖಂಡಿತ ಇದರಲ್ಲಿ ನಿದರ್ಶನವಿದೆ.
Verse 53
وَأَنجَيْنَا ٱلَّذِينَ ءَامَنُوا۟ وَكَانُوا۟ يَتَّقُونَ
Transliteration wa-anjaynā alladhīna āmanū wakānū yattaqūna
Kannada ಸತ್ಯವಿಶ್ವಾಸವಿರಿಸಿಕೊಂಡ ಹಾಗೂ ಜಾಗೃತೆ ಪಾಲಿಸಿದ ಜನರನ್ನು ನಾವು ರಕ್ಷಿಸಿದೆವು.
Verse 54
وَلُوطًا إِذْ قَالَ لِقَوْمِهِۦٓ أَتَأْتُونَ ٱلْفَـٰحِشَةَ وَأَنتُمْ تُبْصِرُونَ
Transliteration walūṭan idh qāla liqawmihi atatūna l-fāḥishata wa-antum tub'ṣirūna
Kannada ಲೂಥರನ್ನು (ಸ್ಮರಿಸಿರಿ). ಅವರು ತಮ್ಮ ಜನಾಂಗಕ್ಕೆ ಹೇಳಿದ ಸಂದರ್ಭ. ‘ನೀವು ಕಣ್ಣಾರೆ ಕಾಣುತ್ತ ಈ ನೀಚ ಕೆಲಸವನ್ನು ಮಾಡುತ್ತೀರಾ?
Verse 55
أَئِنَّكُمْ لَتَأْتُونَ ٱلرِّجَالَ شَهْوَةً مِّن دُونِ ٱلنِّسَآءِ ۚ بَلْ أَنتُمْ قَوْمٌ تَجْهَلُونَ
Transliteration a-innakum latatūna l-rijāla shahwatan min dūni l-nisāi bal antum qawmun tajhalūna
Kannada ನೀವು ಕಾಮ ತೀರಿಸಲಿಕ್ಕಾಗಿ ಸ್ತ್ರೀಯರನ್ನು ಬಿಟ್ಟು ಪುರುಷರ ಬಳಿಗೆ ಹೋಗುವುದೇ? ಮಾತ್ರವಲ್ಲ ನೀವು (ಇದರ ದುಷ್ಪರಿಣಾಮದ ಬಗ್ಗೆ) ಅರಿವಿಲ್ಲದ ಜನಾಂಗವಾಗಿದ್ದೀರಿ’.
Verse 56
۞ فَمَا كَانَ جَوَابَ قَوْمِهِۦٓ إِلَّآ أَن قَالُوٓا۟ أَخْرِجُوٓا۟ ءَالَ لُوطٍ مِّن قَرْيَتِكُمْ ۖ إِنَّهُمْ أُنَاسٌ يَتَطَهَّرُونَ
Transliteration famā kāna jawāba qawmihi illā an qālū akhrijū āla lūṭin min qaryatikum innahum unāsun yataṭahharūna
Kannada ಆಗ `ಲೂಥರ ಪರಿವಾರವನ್ನು ನಿಮ್ಮ ನಾಡಿನಿಂದ ಹೊರ ಹಾಕಿರಿ. ಮಹಾಶುದ್ಧ ಜನರಿವರು’ ಎನ್ನುವುದೇ ಹೊರತು ಅವರ ಜನಾಂಗಕ್ಕೆ ಬೇರೆ ಉತ್ತರವಿರಲಿಲ್ಲ .
Verse 57
فَأَنجَيْنَـٰهُ وَأَهْلَهُۥٓ إِلَّا ٱمْرَأَتَهُۥ قَدَّرْنَـٰهَا مِنَ ٱلْغَـٰبِرِينَ
Transliteration fa-anjaynāhu wa-ahlahu illā im'ra-atahu qaddarnāhā mina l-ghābirīna
Kannada ಕೊನೆಗೆ ನಾವು ಅವರನ್ನೂ ಅವರ ಜನರನ್ನೂ ರಕ್ಷಿಸಿದೆವು. ಆದರೆ ಅವರ ಪತ್ನಿಯನ್ನು ನಾವು ರಕ್ಷಿಸಲಿಲ್ಲ. ಶಿಕ್ಷೆಯಲ್ಲಿ ಉಳಿದವರ ಸಾಲಿಗೆ ಅವಳನ್ನು ನಾವು ಸೇರಿಸಿ ಲೆಕ್ಕ ಮಾಡಿದ್ದೆವು.
Verse 58
وَأَمْطَرْنَا عَلَيْهِم مَّطَرًا ۖ فَسَآءَ مَطَرُ ٱلْمُنذَرِينَ
Transliteration wa-amṭarnā ʿalayhim maṭaran fasāa maṭaru l-mundharīna
Kannada ಅವರ ಮೇಲೆ ನಾವು ಒಂದು ಮಳೆ ಸುರಿಸಿದೆವು. ಎಚ್ಚರಿಕೆ ನೀಡಲ್ಪಟ್ಟವರ ಪಾಲಿಗೆ ಅದು ಅತ್ಯಂತ ಕೆಟ್ಟ ಮಳೆಯಾಗಿತ್ತು .
Verse 59
قُلِ ٱلْحَمْدُ لِلَّهِ وَسَلَـٰمٌ عَلَىٰ عِبَادِهِ ٱلَّذِينَ ٱصْطَفَىٰٓ ۗ ءَآللَّهُ خَيْرٌ أَمَّا يُشْرِكُونَ
Transliteration quli l-ḥamdu lillahi wasalāmun ʿalā ʿibādihi alladhīna iṣ'ṭafā āllahu khayrun ammā yush'rikūna
Kannada (ಪೈಗಂಬರರೇ) ಹೇಳಿರಿ; ಅಲ್ಲಾಹನಿಗೆ ಸರ್ವ ಸ್ತುತಿ. ಅವನು ಆಯ್ದು ಪುನೀತಗೊಳಿಸಿದ ಅವನ ದಾಸರ ಮೇಲೆ ಶಾಂತಿ ಇರಲಿ. ಅಲ್ಲಾಹು ಉತ್ತಮ ನೋ ಅಥವಾ ಇವರು ಅವನ ಸಹಭಾಗಿಗಳಾಗಿ ಮಾಡುವ ವಸ್ತುಗಳು ಉತ್ತಮವೋ?
Verse 60
أَمَّنْ خَلَقَ ٱلسَّمَـٰوَٰتِ وَٱلْأَرْضَ وَأَنزَلَ لَكُم مِّنَ ٱلسَّمَآءِ مَآءً فَأَنۢبَتْنَا بِهِۦ حَدَآئِقَ ذَاتَ بَهْجَةٍ مَّا كَانَ لَكُمْ أَن تُنۢبِتُوا۟ شَجَرَهَآ ۗ أَءِلَـٰهٌ مَّعَ ٱللَّهِ ۚ بَلْ هُمْ قَوْمٌ يَعْدِلُونَ
Transliteration amman khalaqa l-samāwāti wal-arḍa wa-anzala lakum mina l-samāi māan fa-anbatnā bihi ḥadāiqa dhāta bahjatin mā kāna lakum an tunbitū shajarahā a-ilāhun maʿa l-lahi bal hum qawmun yaʿdilūna
Kannada ಅಥವಾ ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ ಹಾಗೂ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದ ಮತ್ತು ತನ್ಮೂಲಕ ನಿಮ್ಮಿಂದ ಬೆಳೆಸಲು ಸಾಧ್ಯವಿಲ್ಲದ ಮರಗಳಿರುವ ಸುಂದರ ತೋಟಗಳನ್ನು ಬೆಳೆಸಿದವನು ಉತ್ತಮನೋ, ಇತರರೋ? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಇಲ್ಲ! ವಾಸ್ತವದಲ್ಲಿ ಇವರು (ಅಲ್ಲಾಹನೊಂದಿಗೆ ಇತರ ವಸ್ತುಗಳನ್ನು) ಸಮಾನತೆ ಕಲ್ಪಿಸುವ ಒಂದು ಜನಾಂಗವಾಗಿರುವರು.
Verse 61
أَمَّن جَعَلَ ٱلْأَرْضَ قَرَارًا وَجَعَلَ خِلَـٰلَهَآ أَنْهَـٰرًا وَجَعَلَ لَهَا رَوَٰسِىَ وَجَعَلَ بَيْنَ ٱلْبَحْرَيْنِ حَاجِزًا ۗ أَءِلَـٰهٌ مَّعَ ٱللَّهِ ۚ بَلْ أَكْثَرُهُمْ لَا يَعْلَمُونَ
Transliteration amman jaʿala l-arḍa qarāran wajaʿala khilālahā anhāran wajaʿala lahā rawāsiya wajaʿala bayna l-baḥrayni ḥājizan a-ilāhun maʿa l-lahi bal aktharuhum lā yaʿlamūna
Kannada ಭೂಮಿಯನ್ನು ವಾಸ ಯೋಗ್ಯಗೊಳಿಸಿದ, ಅದರ ನಡುವೆ ನದಿಗಳನ್ನು ಹರಿಸಿದ, ಭೂಮಿಗೆ ಬಲ ಕೊಡುವ ಪರ್ವತಗಳನ್ನು ನಾಟಿದ ಮತ್ತು ಎರಡು ರೀತಿಯ ಜಲಾಶಯಗಳ ಮಧ್ಯೆ ತಡೆ ಯನ್ನಿರಿಸಿದವನೋ ಉತ್ತಮನು (ಅಥವಾ ಇತರರೋ?) ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಇಲ್ಲ; ಆದರೆ ಇವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
Verse 62
أَمَّن يُجِيبُ ٱلْمُضْطَرَّ إِذَا دَعَاهُ وَيَكْشِفُ ٱلسُّوٓءَ وَيَجْعَلُكُمْ خُلَفَآءَ ٱلْأَرْضِ ۗ أَءِلَـٰهٌ مَّعَ ٱللَّهِ ۚ قَلِيلًا مَّا تَذَكَّرُونَ
Transliteration amman yujību l-muḍ'ṭara idhā daʿāhu wayakshifu l-sūa wayajʿalukum khulafāa l-arḍi a-ilāhun maʿa l-lahi qalīlan mā tadhakkarūna
Kannada ಅಥವಾ ಕಷ್ಟಕ್ಕೊಳಗಾದವನು ಪ್ರಾರ್ಥಿಸಿದಾಗ ಅವನಿಗೆ ಉತ್ತರಿಸುವವನೂ ಸಂಕಷ್ಟವನ್ನು ನಿವಾರಿಸುವವನೂ ನಿಮ್ಮನ್ನು ಭೂಮಿಯಲ್ಲಿ ವಂಶ ಪರಂಪರೆಯಾಗಿ ನೆಲೆಗೊಳಿಸುವವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ನೀವು ಸ್ವಲ್ಪ ಮಾತ್ರವೇ ಯೋಚಿಸಿ ಅರ್ಥ ಮಾಡಿಕೊಳ್ಳುತ್ತೀರಿ.
Verse 63
أَمَّن يَهْدِيكُمْ فِى ظُلُمَـٰتِ ٱلْبَرِّ وَٱلْبَحْرِ وَمَن يُرْسِلُ ٱلرِّيَـٰحَ بُشْرًۢا بَيْنَ يَدَىْ رَحْمَتِهِۦٓ ۗ أَءِلَـٰهٌ مَّعَ ٱللَّهِ ۚ تَعَـٰلَى ٱللَّهُ عَمَّا يُشْرِكُونَ
Transliteration amman yahdīkum fī ẓulumāti l-bari wal-baḥri waman yur'silu l-riyāḥa bush'ran bayna yaday raḥmatihi a-ilāhun maʿa l-lahi taʿālā l-lahu ʿammā yush'rikūna
Kannada ಅಥವಾ ನೆಲ ಹಾಗೂ ಸಾಗರದ ಅಂಧಕಾರಗಳಲ್ಲಿ ನಿಮಗೆ ದಾರಿ ತೋರಿಸುವವನೂ ತನ್ನ ಕೃಪೆಗಿಂತ ಮುಂಚಿತವಾಗಿ ಮಾರುತಗಳನ್ನು ಸುಮಾರ್ತೆಯಾಗಿ ಕಳುಹಿಸುವವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಅಲ್ಲಾಹನು ಇವರು ಮಾಡುತ್ತಿರುವ ದೇವಸಹ ಭಾಗಿತ್ವದಿಂದ ಮುಕ್ತ ಮಹೋನ್ನತನು.
Verse 64
أَمَّن يَبْدَؤُا۟ ٱلْخَلْقَ ثُمَّ يُعِيدُهُۥ وَمَن يَرْزُقُكُم مِّنَ ٱلسَّمَآءِ وَٱلْأَرْضِ ۗ أَءِلَـٰهٌ مَّعَ ٱللَّهِ ۚ قُلْ هَاتُوا۟ بُرْهَـٰنَكُمْ إِن كُنتُمْ صَـٰدِقِينَ
Transliteration amman yabda-u l-khalqa thumma yuʿīduhu waman yarzuqukum mina l-samāi wal-arḍi a-ilāhun maʿa l-lahi qul hātū bur'hānakum in kuntum ṣādiqīna
Kannada ಅಥವಾ ಸೃಷ್ಟಿಯನ್ನಾರಂಭಿಸಿ ಆ ಬಳಿಕ ಅದರ ಪುನಃ ಸೃಷ್ಟಿ ಮಾಡುವವನೂ ಯಾರು? ಆಕಾ ಶದಿಂದಲೂ, ಭೂಮಿಯಿಂದಲೂ ನಿಮಗೆ - ಜೀವನಾಧಾರ ಕೊಡುವವನಾರು? ಅಲ್ಲಾಹನ ಜೊತೆ ಇತರ ದೇವರೂ ಇರುವರೇ? ಹೇಳಿರಿ ನೀವು ಸತ್ಯವಾದಿಗಳಾಗಿದ್ದರೆ ಪುರಾವೆಗಳನ್ನು ತನ್ನಿರಿ.
Verse 65
قُل لَّا يَعْلَمُ مَن فِى ٱلسَّمَـٰوَٰتِ وَٱلْأَرْضِ ٱلْغَيْبَ إِلَّا ٱللَّهُ ۚ وَمَا يَشْعُرُونَ أَيَّانَ يُبْعَثُونَ
Transliteration qul lā yaʿlamu man fī l-samāwāti wal-arḍi l-ghayba illā l-lahu wamā yashʿurūna ayyāna yub'ʿathūna
Kannada ಹೇಳಿರಿ; ಭೂಮಿ-ಆಕಾಶಗಳಲ್ಲಿ, ಇರುವ ಯಾರೂ ಪರೋಕ್ಷವನ್ನು ತಿಳಿಯುವುದಿಲ್ಲ, ಅಲ್ಲಾಹನ ಹೊರತು. ಯಾವಾಗ ಪುನರ್ಜೀವ ತಾಳಿ ಎಬ್ಬಿಸಲ್ಪಡುವರೆಂಬುದು ಈ ಸತ್ಯ ನಿಷೇಧಿಗಳಿಗೆ ಪ್ರಜ್ಞೆ ಇಲ್ಲ.
Verse 66
بَلِ ٱدَّٰرَكَ عِلْمُهُمْ فِى ٱلْـَٔاخِرَةِ ۚ بَلْ هُمْ فِى شَكٍّ مِّنْهَا ۖ بَلْ هُم مِّنْهَا عَمُونَ
Transliteration bali iddāraka ʿil'muhum fī l-ākhirati bal hum fī shakkin min'hā bal hum min'hā ʿamūna
Kannada ಪರಲೋಕದ ಬಗ್ಗೆ ಇವರಿಗೆ ಅರಿವಾದರೂ ಇದೆ ಯೇ? ಇಲ್ಲ! ಇವರು ಅದರ ಬಗ್ಗೆ ಸಂದೇಹದಲ್ಲಿದ್ದಾರೆ. ಅಲ್ಲ, ಅವರು ಅದರಿಂದ ಕುರುಡರಾಗಿದ್ದಾರೆ.
Verse 67
وَقَالَ ٱلَّذِينَ كَفَرُوٓا۟ أَءِذَا كُنَّا تُرَٰبًا وَءَابَآؤُنَآ أَئِنَّا لَمُخْرَجُونَ
Transliteration waqāla alladhīna kafarū a-idhā kunnā turāban waābāunā a-innā lamukh'rajūna
Kannada ಸತ್ಯನಿಷೇಧಿಗಳು ಹೇಳುತ್ತಾರೆ. ‘ನಾವೂ ನಮ್ಮ ಪೂರ್ವಿಕರೂ ಮಣ್ಣಾಗಿ ಹೋದರೆ ನಿಜಕ್ಕೂ ನಮ್ಮನ್ನು (ಸಮಾಧಿಗಳಿಂದ) ಹೊರತರಲಾಗು ವುದೇ?
Verse 68
لَقَدْ وُعِدْنَا هَـٰذَا نَحْنُ وَءَابَآؤُنَا مِن قَبْلُ إِنْ هَـٰذَآ إِلَّآ أَسَـٰطِيرُ ٱلْأَوَّلِينَ
Transliteration laqad wuʿid'nā hādhā naḥnu waābāunā min qablu in hādhā illā asāṭīru l-awalīna
Kannada ಇಂತಹ ವಾಗ್ದಾನಗಳು ನಮಗೆ ಮಾತ್ರವಲ್ಲ, ಹಿಂದೆ ನಮ್ಮ ಪೂರ್ವಿಕರಿಗೂ ಕೊಡಲಾಗಿತ್ತು. ಆದರೆ ಇವೆಲ್ಲ ಪೂರ್ವಿಕರ ಬರಿಯ ಕಟ್ಟುಕತೆಗಳೇ ಹೊರತು ಇನ್ನೇನಲ್ಲ’.
Verse 69
قُلْ سِيرُوا۟ فِى ٱلْأَرْضِ فَٱنظُرُوا۟ كَيْفَ كَانَ عَـٰقِبَةُ ٱلْمُجْرِمِينَ
Transliteration qul sīrū fī l-arḍi fa-unẓurū kayfa kāna ʿāqibatu l-muj'rimīna
Kannada (ಓ ಪೈಗಂಬರರೇ, ಇವರಿಗೆ ಹೀಗೆ) ಹೇಳಿರಿ, ಭೂಮಿಯ ಮೇಲೆ ಸಂಚಾರ ಮಾಡಿ. ಅಪರಾಧಿಗಳ ಪರಿಣಾಮ ಏನಾಗಿತ್ತೆಂದು ನೋಡಿರಿ.
Verse 70
وَلَا تَحْزَنْ عَلَيْهِمْ وَلَا تَكُن فِى ضَيْقٍ مِّمَّا يَمْكُرُونَ
Transliteration walā taḥzan ʿalayhim walā takun fī ḍayqin mimmā yamkurūna
Kannada ಪೈಗಂಬರರೇ, ಇವರ ಮೇಲೆ ದುಃಖಿಸಬೇಡಿರಿ, ಇವರು ಹೂಡುತ್ತಿರುವ ಸಂಚುಗಳ ಬಗ್ಗೆ ವ್ಯಾಕುಲಗೊಳ್ಳಬೇಡಿರಿ.
Verse 71
وَيَقُولُونَ مَتَىٰ هَـٰذَا ٱلْوَعْدُ إِن كُنتُمْ صَـٰدِقِينَ
Transliteration wayaqūlūna matā hādhā l-waʿdu in kuntum ṣādiqīna
Kannada ಅವರು (ಅವಿಶ್ವಾಸಿಗಳು ಪ್ರವಾದಿಯರಲ್ಲಿ) ಹೇಳಿದರು; ನೀವು ಸತ್ಯವಾದಿಗಳಾಗಿದ್ದರೆ ನಿಮ್ಮ ಎಚ್ಚರಿಕೆ ಈಡೇರುವುದು ಯಾವಾಗ?
Verse 72
قُلْ عَسَىٰٓ أَن يَكُونَ رَدِفَ لَكُم بَعْضُ ٱلَّذِى تَسْتَعْجِلُونَ
Transliteration qul ʿasā an yakūna radifa lakum baʿḍu alladhī tastaʿjilūna
Kannada ಅವರಿಗೆ ಹೀಗೆ ಹೇಳಿರಿ. ನೀವು ತವಕ ಪಡುತ್ತಿ ರುವ ಕಾರ್ಯಗಳಲ್ಲಿ ಕೆಲವು ಬಹುಶಃ ನಿಮ್ಮ ಹತ್ತಿರ ವೇ ಬಂದು ಬಿಟ್ಟಿದೆ.
Verse 73
وَإِنَّ رَبَّكَ لَذُو فَضْلٍ عَلَى ٱلنَّاسِ وَلَـٰكِنَّ أَكْثَرَهُمْ لَا يَشْكُرُونَ
Transliteration wa-inna rabbaka ladhū faḍlin ʿalā l-nāsi walākinna aktharahum lā yashkurūna
Kannada ಖಂಡಿತ ನಿಮ್ಮ ಪ್ರಭು ಜನರ ಮೇಲೆ ಔದಾರ್ಯ ವುಳ್ಳವನು. ಆದರೆ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.
Verse 74
وَإِنَّ رَبَّكَ لَيَعْلَمُ مَا تُكِنُّ صُدُورُهُمْ وَمَا يُعْلِنُونَ
Transliteration wa-inna rabbaka layaʿlamu mā tukinnu ṣudūruhum wamā yuʿ'linūna
Kannada ಅವರ ಹೃದಯಗಳು ಬಚ್ಚಿಟ್ಟುಕೊಂಡಿರುವುದನ್ನೂ ಅವರು ಪ್ರಕಟಗೊಳಿಸುತ್ತಿರುವುದನ್ನೂ ನಿಮ್ಮ ಪ್ರಭು ಚೆನ್ನಾಗಿ ಬಲ್ಲನು.
Verse 75
وَمَا مِنْ غَآئِبَةٍ فِى ٱلسَّمَآءِ وَٱلْأَرْضِ إِلَّا فِى كِتَـٰبٍ مُّبِينٍ
Transliteration wamā min ghāibatin fī l-samāi wal-arḍi illā fī kitābin mubīnin
Kannada ಆಕಾಶ ಭೂಮಿಯಲ್ಲಿ ಯಾವುದೇ ಗೌಪ್ಯ ವಸ್ತು ಒಂದು ಸುವ್ಯಕ್ತ ಗ್ರಂಥದಲ್ಲಿ ಬರೆಯಲ್ಪಡದೆ ಉಳಿದಿಲ್ಲ.
Verse 76
إِنَّ هَـٰذَا ٱلْقُرْءَانَ يَقُصُّ عَلَىٰ بَنِىٓ إِسْرَٰٓءِيلَ أَكْثَرَ ٱلَّذِى هُمْ فِيهِ يَخْتَلِفُونَ
Transliteration inna hādhā l-qur'āna yaquṣṣu ʿalā banī is'rāīla akthara alladhī hum fīhi yakhtalifūna
Kannada ಇಸ್ರಾಈಲ ಸಂತತಿಗಳು ಭಿನ್ನಾಭಿಪ್ರಾಯವಿರಿಸಿ ಕೊಂಡಿರುವ ಹೆಚ್ಚಿನ ವಿಷಯಗಳನ್ನು ಈ ಖುರ್ಆನ್ ಅವರಿಗೆ ವಿವರಿಸಿ ಕೊಡುತ್ತದೆ.
Verse 77
وَإِنَّهُۥ لَهُدًى وَرَحْمَةٌ لِّلْمُؤْمِنِينَ
Transliteration wa-innahu lahudan waraḥmatun lil'mu'minīna
Kannada ಖಂಡಿತ ಇದು ಸತ್ಯವಿಶ್ವಾಸಿಗಳ ಪಾಲಿಗೆ ಮಾರ್ಗ ದರ್ಶನವೂ ಕೃಪೆಯೂ ಆಗಿದೆ.
Verse 78
إِنَّ رَبَّكَ يَقْضِى بَيْنَهُم بِحُكْمِهِۦ ۚ وَهُوَ ٱلْعَزِيزُ ٱلْعَلِيمُ
Transliteration inna rabbaka yaqḍī baynahum biḥuk'mihi wahuwa l-ʿazīzu l-ʿalīmu
Kannada ನಿಶ್ಚಯವಾಗಿಯೂ ನಿಮ್ಮ ಪ್ರಭು ತನ್ನ ಅಪ್ಪಣೆ ಮೂಲಕ ಇವರ ನಡುವೆ ತೀರ್ಮಾನ ಮಾಡು ವನು. ಅವನು ಮಹಾ ಪ್ರತಾಪಿಯೂ ಸರ್ವಜ್ಞನೂ ಆಗಿರುತ್ತಾನೆ.
Verse 79
فَتَوَكَّلْ عَلَى ٱللَّهِ ۖ إِنَّكَ عَلَى ٱلْحَقِّ ٱلْمُبِينِ
Transliteration fatawakkal ʿalā l-lahi innaka ʿalā l-ḥaqi l-mubīni
Kannada ಆದುದರಿಂದ (ಪೈಗಂಬರರೇ,) ಅಲ್ಲಾಹನ ಮೇಲೆ ಭರವಸೆ ಇಡಿರಿ. ನಿಶ್ಚಯವಾಗಿಯೂ ನೀವು ಸುಸ್ಪಷ್ಟವಾದ ಸತ್ಯ ಮಾರ್ಗದಲ್ಲಿದ್ದೀರಿ.
Verse 80
إِنَّكَ لَا تُسْمِعُ ٱلْمَوْتَىٰ وَلَا تُسْمِعُ ٱلصُّمَّ ٱلدُّعَآءَ إِذَا وَلَّوْا۟ مُدْبِرِينَ
Transliteration innaka lā tus'miʿu l-mawtā walā tus'miʿu l-ṣuma l-duʿāa idhā wallaw mud'birīna
Kannada ನೀವು ಮೃತರಿಗೆ ಖಂಡಿತ ಕೇಳಿಸಲಾರಿರಿ ಕಿವುಡರು ಬೆನ್ನು ತಿರುಗಿಸಿ ಓಡಿ ಹೋದರೆ ಅವರಿಗೂ ನಿಮ್ಮ ಕೂಗನ್ನು ಮುಟ್ಟಿಸಲಾರಿರಿ.
Verse 81
وَمَآ أَنتَ بِهَـٰدِى ٱلْعُمْىِ عَن ضَلَـٰلَتِهِمْ ۖ إِن تُسْمِعُ إِلَّا مَن يُؤْمِنُ بِـَٔايَـٰتِنَا فَهُم مُّسْلِمُونَ
Transliteration wamā anta bihādī l-ʿum'yi ʿan ḍalālatihim in tus'miʿu illā man yu'minu biāyātinā fahum mus'limūna
Kannada ಕುರುಡರನ್ನು ಅವರ ದುರ್ಮಾಗದಿಂದ ಸರಿದಾರಿಗೆ ಕೊಂಡೊಯ್ಯಲಾರಿರಿ. ನಮ್ಮ ದೃಷ್ಟಾಂತ ಗಳಲ್ಲಿ ವಿಶ್ವಾಸವಿರಿಸಿ ಆಮೇಲೆ ಶರಣಾಗತರಾದವರಿಗೆ ಮಾತ್ರ ನಿಮ್ಮ ಮಾತನ್ನು ಕೇಳಿಸಬಲ್ಲಿರಿ.
Verse 82
۞ وَإِذَا وَقَعَ ٱلْقَوْلُ عَلَيْهِمْ أَخْرَجْنَا لَهُمْ دَآبَّةً مِّنَ ٱلْأَرْضِ تُكَلِّمُهُمْ أَنَّ ٱلنَّاسَ كَانُوا۟ بِـَٔايَـٰتِنَا لَا يُوقِنُونَ
Transliteration wa-idhā waqaʿa l-qawlu ʿalayhim akhrajnā lahum dābbatan mina l-arḍi tukallimuhum anna l-nāsa kānū biāyātinā lā yūqinūna
Kannada ಅವರ ಮೇಲೆ ವಚನವು ಪೂರ್ಣಗೊಳ್ಳುವ ಕಾಲ ಬಂದಾಗ ನಾವು ಅವರಿಗಾಗಿ ಒಂದು ಪ್ರಾಣಿ ಯನ್ನು ಭೂಮಿಯಿಂದ ಹೊರತರುವೆವು, ಜನರು ನಮ್ಮ ದೃಷ್ಟಾಂತಗಳಲ್ಲಿ ದೃಢವಿಶ್ವಾಸವಿಲ್ಲದವರಾಗಿದ್ದಾರೆ ಎಂದು ಅದು ಅವರೊಡನೆ ಮಾತಾಡುವುದು.
Verse 83
وَيَوْمَ نَحْشُرُ مِن كُلِّ أُمَّةٍ فَوْجًا مِّمَّن يُكَذِّبُ بِـَٔايَـٰتِنَا فَهُمْ يُوزَعُونَ
Transliteration wayawma naḥshuru min kulli ummatin fawjan mimman yukadhibu biāyātinā fahum yūzaʿūna
Kannada ಪ್ರತಿಯೊಂದು ಸಮುದಾಯದಿಂದ ನಮ್ಮ ಪುರಾವೆಗಳನ್ನು ಸುಳ್ಳಾಗಿಸುತ್ತಿದ್ದ ಒಂದೊಂದು ತಂಡವನ್ನು ನಾವು ಒಟ್ಟು ಸೇರಿಸುವ ದಿನವನ್ನು ಊಹಿಸಿರಿ. ತರುವಾಯ ಅವರನ್ನು ತಡೆದು ನಿಯಂತ್ರಿಸಲಾಗುವುದು.
Verse 84
حَتَّىٰٓ إِذَا جَآءُو قَالَ أَكَذَّبْتُم بِـَٔايَـٰتِى وَلَمْ تُحِيطُوا۟ بِهَا عِلْمًا أَمَّاذَا كُنتُمْ تَعْمَلُونَ
Transliteration ḥattā idhā jāū qāla akadhabtum biāyātī walam tuḥīṭū bihā ʿil'man ammādhā kuntum taʿmalūna
Kannada ಹೀಗೆ ಅವರೆಲ್ಲರೂ (ವಿಚಾರಣಾ ಸ್ಥಳಕ್ಕೆ) ಬಂದಾಗ (ಅಲ್ಲಾಹು) ಅವರನ್ನು ಕೇಳುವನು. ‘ನನ್ನ ದೃಷ್ಟಾಂತಗಳ ಬಗ್ಗೆ ಕೂಲಂಕಶವಾಗಿ ತಿಳಿಯದೆ ನೀವು ಅವುಗಳನ್ನು ನಿಷೇಧಿಸಿಬಿಟ್ಟಿರಾ? ಅದಲ್ಲ ವಾದರೆ ನೀವು ಇನ್ನೇನು ಮಾಡುತ್ತಿದ್ದಿರಿ?’ ಎಂದು ಕೇಳುವನು.
Verse 85
وَوَقَعَ ٱلْقَوْلُ عَلَيْهِم بِمَا ظَلَمُوا۟ فَهُمْ لَا يَنطِقُونَ
Transliteration wawaqaʿa l-qawlu ʿalayhim bimā ẓalamū fahum lā yanṭiqūna
Kannada ಅವರು ಮಾಡಿದ ಅಕ್ರಮದ ಕಾರಣದಿಂದ ಅವರ ಮೇಲೆ (ಯಾತನೆಯ) ವಚನವು ನಿಜಗೊಳ್ಳುವುದು. ಆಗ ಅವರು (ಏನನ್ನೂ) ಮಾತಾಡಲಾರರು.
Verse 86
أَلَمْ يَرَوْا۟ أَنَّا جَعَلْنَا ٱلَّيْلَ لِيَسْكُنُوا۟ فِيهِ وَٱلنَّهَارَ مُبْصِرًا ۚ إِنَّ فِى ذَٰلِكَ لَـَٔايَـٰتٍ لِّقَوْمٍ يُؤْمِنُونَ
Transliteration alam yaraw annā jaʿalnā al-layla liyaskunū fīhi wal-nahāra mub'ṣiran inna fī dhālika laāyātin liqawmin yu'minūna
Kannada ಅವರು ವಿಶ್ರಾಂತಿ ಪಡೆಯುವುದಕ್ಕಾಗಿ ರಾತ್ರಿ ಯನ್ನೂ ಕಣ್ಣು ಕಾಣಿಸುವ ನೆಲೆಯಲ್ಲಿ ಹಗಲನ್ನೂ ಅವರಿಗೆ ಸೃಷ್ಟಿಸಿದ್ದು ಅವರು ನೋಡುವುದಿಲ್ಲವೇ? ಸತ್ಯವಿಶ್ವಾಸವಿಟ್ಟ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.
Verse 87
وَيَوْمَ يُنفَخُ فِى ٱلصُّورِ فَفَزِعَ مَن فِى ٱلسَّمَـٰوَٰتِ وَمَن فِى ٱلْأَرْضِ إِلَّا مَن شَآءَ ٱللَّهُ ۚ وَكُلٌّ أَتَوْهُ دَٰخِرِينَ
Transliteration wayawma yunfakhu fī l-ṣūri fafaziʿa man fī l-samāwāti waman fī l-arḍi illā man shāa l-lahu wakullun atawhu dākhirīna
Kannada ಸೂರ್ (ಕಹಳೆ) ಊದಲ್ಪಡುವ ದಿನ. ಆಗ ಅಲ್ಲಾ ಹನು ಇಚ್ಛಿಸಿದವರ ಹೊರತು ಆಕಾಶಗಳಲ್ಲೂ ಭೂಮಿಯಲ್ಲೂ ಇರುವವರೆಲ್ಲರೂ ದಿಗಿಲುಗೊಳ್ಳುವರು. ಎಲ್ಲರೂ ದೈನ್ಯರಾಗಿ ಅವನ ಸನ್ನಿ ಧಿಯಲ್ಲಿ ಹಾಜರಾಗುವರು.
Verse 88
وَتَرَى ٱلْجِبَالَ تَحْسَبُهَا جَامِدَةً وَهِىَ تَمُرُّ مَرَّ ٱلسَّحَابِ ۚ صُنْعَ ٱللَّهِ ٱلَّذِىٓ أَتْقَنَ كُلَّ شَىْءٍ ۚ إِنَّهُۥ خَبِيرٌۢ بِمَا تَفْعَلُونَ
Transliteration watarā l-jibāla taḥsabuhā jāmidatan wahiya tamurru marra l-saḥābi ṣun'ʿa l-lahi alladhī atqana kulla shayin innahu khabīrun bimā tafʿalūna
Kannada ನೀವು ಪರ್ವತಗಳನ್ನು ಕಾಣುವಾಗ ಅವು ಚೆನ್ನಾಗಿ ನಾಟಿಕೊಂಡಿವೆಯೆಂದು ನೀವು ಭಾವಿಸುವಿರಿ. ಆದರೆ, ಅವು ಮೋಡಗಳು ಚಲಿಸುವಂತೆ ಚಲಿಸುವುವು. ಇದು ಸಕಲವನ್ನೂ ಸೂತ್ರಬದ್ಧ ವಾಗಿ ವ್ಯವಸ್ಥೆಗೊಳಿಸಿರುವ ಅಲ್ಲಾಹನ ಕಾರ್ಯವಾಗಿರುವುದು. ನೀವು ಮಾಡುತ್ತಿರುವುದರ ಬಗ್ಗೆ ಅವನು ಸೂಕ್ಷ್ಮವಾಗಿ ಅರಿತಿರುತ್ತಾನೆ.
Verse 89
مَن جَآءَ بِٱلْحَسَنَةِ فَلَهُۥ خَيْرٌ مِّنْهَا وَهُم مِّن فَزَعٍ يَوْمَئِذٍ ءَامِنُونَ
Transliteration man jāa bil-ḥasanati falahu khayrun min'hā wahum min fazaʿin yawma-idhin āminūna
Kannada ಯಾರು, ಒಂದು ಒಳಿತನ್ನು ತರುತ್ತಾನೆ, ಆತನಿಗೆ ಅದರ ಪ್ರತಿಫಲ ಸಿಗುವುದು. ಅವರು ಆ ದಿನದ ಭಯವಿಹ್ವಲತೆಯಿಂದ ನಿರ್ಭಯರಾಗಿರುವರು.
Verse 90
وَمَن جَآءَ بِٱلسَّيِّئَةِ فَكُبَّتْ وُجُوهُهُمْ فِى ٱلنَّارِ هَلْ تُجْزَوْنَ إِلَّا مَا كُنتُمْ تَعْمَلُونَ
Transliteration waman jāa bil-sayi-ati fakubbat wujūhuhum fī l-nāri hal tuj'zawna illā mā kuntum taʿmalūna
Kannada ಯಾರು ಕೆಡುಕನ್ನು ತರುತ್ತಾನೆ, ಅವರನ್ನು ಅಧೋಮುಖವಾಗಿ ನರಕಕ್ಕೆ ಎಸೆಯಲಾಗುವುದು. ನೀವೆಸಗುತ್ತಿದ್ದ ಕಾರ್ಯಕ್ಕಲ್ಲದೆ ನಿಮಗೆ ಪ್ರತಿಫಲ ಸಿಗುವುದೇ?
Verse 91
إِنَّمَآ أُمِرْتُ أَنْ أَعْبُدَ رَبَّ هَـٰذِهِ ٱلْبَلْدَةِ ٱلَّذِى حَرَّمَهَا وَلَهُۥ كُلُّ شَىْءٍ ۖ وَأُمِرْتُ أَنْ أَكُونَ مِنَ ٱلْمُسْلِمِينَ
Transliteration innamā umir'tu an aʿbuda rabba hādhihi l-baldati alladhī ḥarramahā walahu kullu shayin wa-umir'tu an akūna mina l-mus'limīna
Kannada
Verse 92
وَأَنْ أَتْلُوَا۟ ٱلْقُرْءَانَ ۖ فَمَنِ ٱهْتَدَىٰ فَإِنَّمَا يَهْتَدِى لِنَفْسِهِۦ ۖ وَمَن ضَلَّ فَقُلْ إِنَّمَآ أَنَا۠ مِنَ ٱلْمُنذِرِينَ
Transliteration wa-an atluwā l-qur'āna famani ih'tadā fa-innamā yahtadī linafsihi waman ḍalla faqul innamā anā mina l-mundhirīna
Kannada (ಪೈಗಂಬರರೇ ಹೇಳಿರಿ,) ಈ ನಾಡನ್ನು ಆದರಣೀಯಗೊಳಿಸಿದ ಇದರ ಪ್ರಭುವಿನ ಆರಾಧನೆ ಮಾಡಬೇಕೆಂದು ನನಗೆ ಅಪ್ಪಣೆ ಕೊಡಲಾಗಿದೆ35. ಸಕಲ ವಸ್ತುವೂ ಅವನದ್ದು. ನಾನು ಮುಸ್ಲಿಮರ ಕೂಟಕ್ಕೆ ಸೇರಬೇಕೆಂದೂ ಖುರ್ಆನನ್ನು ಓದಿ ಹೇಳಬೇಕೆಂದೂ ಆಜ್ಞಾಪಿಸಲ್ಪಟ್ಟಿದ್ದೇನೆ. ಆದ್ದರಿಂದ ಯಾರು ಸನ್ಮಾರ್ಗವನ್ನು ಸ್ವೀಕರಿಸುತ್ತಾನೆ, ಅವನು ತನ್ನ ಹಿತಕ್ಕಾಗಿಯೇ ಸನ್ಮಾರ್ಗವನ್ನು ಸ್ವೀಕರಿಸುವನು. ಯಾರು ಪಥಭ್ರಷ್ಟನಾಗುವನೋ ಅವನೊಡನೆ, ‘ನಾನು ಎಚ್ಚರಿಕೆ ನೀಡುವವನು ಮಾತ್ರ’ ಎಂದು ಹೇಳಿರಿ.
Verse 93
وَقُلِ ٱلْحَمْدُ لِلَّهِ سَيُرِيكُمْ ءَايَـٰتِهِۦ فَتَعْرِفُونَهَا ۚ وَمَا رَبُّكَ بِغَـٰفِلٍ عَمَّا تَعْمَلُونَ
Transliteration waquli l-ḥamdu lillahi sayurīkum āyātihi fataʿrifūnahā wamā rabbuka bighāfilin ʿammā taʿmalūna
Kannada ಹೇಳಿರಿ; ಸರ್ವಸ್ತುತಿ ಅಲ್ಲಾಹನಿಗೆ, ತನ್ನ ನಿದರ್ಶನಗಳನ್ನು ಅವನು ನಿಮಗೆ ತೋರಿಸಿ ಕೊಡುವನು. ಆಗ ನೀವು ಅವುಗಳನ್ನು ತಿಳಿದು ಕೊಳ್ಳುವಿರಿ. ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನಿಮ್ಮ ಪ್ರಭು ಅಶೃದ್ಧನಲ್ಲ.
Read Surah An-Naml in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.