Surah Al-Qasas in Kannada: translation and audio
Surah 28 · القصص · The Stories · 88 verses
Surah Al-Qasas verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Qasas word by word in English.
Verse 1
طسٓمٓ
Transliteration tta-seen-meem
Kannada ತ್ವಾ ಸೀನ್ ಮೀಮ್.
Verse 2
تِلْكَ ءَايَـٰتُ ٱلْكِتَـٰبِ ٱلْمُبِينِ
Transliteration til'ka āyātu l-kitābi l-mubīni
Kannada ಇವು ಸುವ್ಯಕ್ತವಾದ ವೇದಗ್ರಂಥದ ಸೂಕ್ತಗಳು.
Verse 3
نَتْلُوا۟ عَلَيْكَ مِن نَّبَإِ مُوسَىٰ وَفِرْعَوْنَ بِٱلْحَقِّ لِقَوْمٍ يُؤْمِنُونَ
Transliteration natlū ʿalayka min naba-i mūsā wafir'ʿawna bil-ḥaqi liqawmin yu'minūna
Kannada ವಿಶ್ವಾಸವಿರಿಸುವ ಜನರಿಗಾಗಿ ನಾವು ನಿಮಗೆ ಮೂಸಾ ಮತ್ತು ಫಿರ್‍ಔನರ ಕೆಲವು ವೃತ್ತಾಂತ ಗಳನ್ನು ಯಥಾರ್ಥವಾಗಿ ಓದಿ ತಿಳಿಸುತ್ತೇವೆ.
Verse 4
إِنَّ فِرْعَوْنَ عَلَا فِى ٱلْأَرْضِ وَجَعَلَ أَهْلَهَا شِيَعًا يَسْتَضْعِفُ طَآئِفَةً مِّنْهُمْ يُذَبِّحُ أَبْنَآءَهُمْ وَيَسْتَحْىِۦ نِسَآءَهُمْ ۚ إِنَّهُۥ كَانَ مِنَ ٱلْمُفْسِدِينَ
Transliteration inna fir'ʿawna ʿalā fī l-arḍi wajaʿala ahlahā shiyaʿan yastaḍʿifu ṭāifatan min'hum yudhabbiḥu abnāahum wayastaḥyī nisāahum innahu kāna mina l-muf'sidīna
Kannada ಫಿರ್‍ಔನನು ಭೂಮಿಯಲ್ಲಿ ದರ್ಪ ತೋರಿದನು. ಮತ್ತು ಅದರ ನಿವಾಸಿಗಳನ್ನು ಪಂಗಡಗಳಾಗಿ ವಿಂಗಡಿಸಿದನು. ಆ ಪೈಕಿ ಒಂದು ಪಂಗಡವನ್ನು ಅವರ ಗಂಡು ಮಕ್ಕಳನ್ನು ವಧಿಸುತ್ತ ಮತ್ತು ಹೆಣ್ಣು ಮಕ್ಕಳನ್ನು ಬದುಕಿರಲು ಬಿಡುತ್ತ ಅವನು ಬಲಹೀನಗೊಳಿಸಿದನು. ನಿಜಕ್ಕೂ ಅವನು ನಾಶಕೋರರಲ್ಲಿ ಸೇರಿ ಹೋಗಿದ್ದನು.
Verse 5
وَنُرِيدُ أَن نَّمُنَّ عَلَى ٱلَّذِينَ ٱسْتُضْعِفُوا۟ فِى ٱلْأَرْضِ وَنَجْعَلَهُمْ أَئِمَّةً وَنَجْعَلَهُمُ ٱلْوَٰرِثِينَ
Transliteration wanurīdu an namunna ʿalā alladhīna us'tuḍ'ʿifū fī l-arḍi wanajʿalahum a-immatan wanajʿalahumu l-wārithīna
Kannada ಭೂಮಿಯಲ್ಲಿ ತುಳಿಯಲ್ಪಟ್ಟವರ ಮೇಲೆ ಕೃಪೆ ತೋರಬೇಕೆಂದೂ ಅವರನ್ನು ನಾಯಕರನ್ನಾಗಿಯೂ ಉತ್ತರಾಧಿಕಾರಿಗಳನ್ನಾಗಿಯೂ ಮಾಡಬೇಕೆಂದೂ ನಾವು ಬಯಸುತ್ತೇವೆ.
Verse 6
وَنُمَكِّنَ لَهُمْ فِى ٱلْأَرْضِ وَنُرِىَ فِرْعَوْنَ وَهَـٰمَـٰنَ وَجُنُودَهُمَا مِنْهُم مَّا كَانُوا۟ يَحْذَرُونَ
Transliteration wanumakkina lahum fī l-arḍi wanuriya fir'ʿawna wahāmāna wajunūdahumā min'hum mā kānū yaḥdharūna
Kannada ಭೂಮಿಯಲ್ಲಿ ಅವರಿಗೆ ಅನುಕೂಲ ನೀಡಬೇಕೆಂದೂ ಫಿರ್‍ಔನ್, ಹಾಮಾನ್ ಮತ್ತು ಅವರ ಸೇನೆಗಳಿಗೆ (ಆ ತುಳಿತಕ್ಕೊಳಗಾದ ಜನಾಂಗದಿಂದ) ಅವರು ಏನನ್ನು ಭಯಪಟ್ಟಿರುವರೋ ಅದನ್ನು ಅವರಿಗೆ (ಅನುಭವದಲ್ಲಿ) ತೋರಿಸಿ ಕೊಡ ಬೇಕೆಂದೂ ನಾವು ಬಯಸುತ್ತೇವೆ.
Verse 7
وَأَوْحَيْنَآ إِلَىٰٓ أُمِّ مُوسَىٰٓ أَنْ أَرْضِعِيهِ ۖ فَإِذَا خِفْتِ عَلَيْهِ فَأَلْقِيهِ فِى ٱلْيَمِّ وَلَا تَخَافِى وَلَا تَحْزَنِىٓ ۖ إِنَّا رَآدُّوهُ إِلَيْكِ وَجَاعِلُوهُ مِنَ ٱلْمُرْسَلِينَ
Transliteration wa-awḥaynā ilā ummi mūsā an arḍiʿīhi fa-idhā khif'ti ʿalayhi fa-alqīhi fī l-yami walā takhāfī walā taḥzanī innā rāddūhu ilayki wajāʿilūhu mina l-mur'salīna
Kannada ನಾವು ಮೂಸಾರ ತಾಯಿಗೆ ಹೀಗೆ ಸೂಚನೆ ನೀಡಿದೆವು; ‘ಮಗುವಿಗೆ ಮೊಲೆ ಹಾಲುಣಿಸು. ಇನ್ನು ನಿನಗೆ ಈತನ ಬಗೆಗೆ ಭಯವುಂಟಾದರೆ ಇವನನ್ನು (ಒಂದು ಪೆಟ್ಟಿಗೆಯಲ್ಲಿರಿಸಿ) ನದಿಯಲ್ಲಿ ಹಾಕಿ ಬಿಡು. ಹೆದರಬೇಡ, ದುಃಖಿಸಲೂ ಬೇಡ. ನಾವು ಇವನನ್ನು ನಿನ್ನ ಬಳಿಗೇ ಮರಳಿ ತರಲಿದ್ದು ಇವನನ್ನು ಸಂದೇಶವಾಹಕರಲ್ಲಿ ಸೇರಿಸಲಿದ್ದೇವೆ’.
Verse 8
فَٱلْتَقَطَهُۥٓ ءَالُ فِرْعَوْنَ لِيَكُونَ لَهُمْ عَدُوًّا وَحَزَنًا ۗ إِنَّ فِرْعَوْنَ وَهَـٰمَـٰنَ وَجُنُودَهُمَا كَانُوا۟ خَـٰطِـِٔينَ
Transliteration fal-taqaṭahu ālu fir'ʿawna liyakūna lahum ʿaduwwan waḥazanan inna fir'ʿawna wahāmāna wajunūdahumā kānū khāṭiīna
Kannada ಕೊನೆಗೆ ಫಿರ್‍ಔನನ ಜನರು ಮಗುವನ್ನು ನದಿಯಿಂದ ಎತ್ತಿಕೊಂಡರು. ಕೊನೆಗೆ ಅದು ಅವರಿಗೆ ವೈರಿಯೂ ದುಃಖದಾಯಕವೂ ಆಗಿ ಪರಿಣಮಿಸಿತು. ಫಿರ್‍ಔನನೂ ಹಾಮಾನನೂ ಅವರಿಬ್ಬರ ಸೇನೆಗಳೂ ನಿಜಕ್ಕೂ ಪಾಪಿಗಳಾಗಿದ್ದರು.
Verse 9
وَقَالَتِ ٱمْرَأَتُ فِرْعَوْنَ قُرَّتُ عَيْنٍ لِّى وَلَكَ ۖ لَا تَقْتُلُوهُ عَسَىٰٓ أَن يَنفَعَنَآ أَوْ نَتَّخِذَهُۥ وَلَدًا وَهُمْ لَا يَشْعُرُونَ
Transliteration waqālati im'ra-atu fir'ʿawna qurratu ʿaynin lī walaka lā taqtulūhu ʿasā an yanfaʿanā aw nattakhidhahu waladan wahum lā yashʿurūna
Kannada ಫಿರ್‍ಔನನ ಪತ್ನಿಯು ಅವನೊಡನೆ ಹೀಗೆ ಹೇಳಿದಳು ‘ಈ ಮಗು ನನಗೂ, ತಮಗೂ ಕಣ್ಣಿಗೆ ತಂಪಾಗಿದೆ. ಇವನನ್ನು ನೀವು ಕೊಲ್ಲಬೇಡಿ. ಇವನು ನಮ್ಮ ಪ್ರಯೋಜನಕ್ಕೆ ಬರಬಹುದು. ಅಥವಾ ನಾವು ಇವನನ್ನು ಮಗನಾಗಿ ಮಾಡಿ ಕೊಳ್ಳಬಹುದು ಅವರು (ನಿಜಸ್ಥಿತಿಯನ್ನು) ತಿಳಿಯಲಾರರು
Verse 10
وَأَصْبَحَ فُؤَادُ أُمِّ مُوسَىٰ فَـٰرِغًا ۖ إِن كَادَتْ لَتُبْدِى بِهِۦ لَوْلَآ أَن رَّبَطْنَا عَلَىٰ قَلْبِهَا لِتَكُونَ مِنَ ٱلْمُؤْمِنِينَ
Transliteration wa-aṣbaḥa fuādu ummi mūsā fārighan in kādat latub'dī bihi lawlā an rabaṭnā ʿalā qalbihā litakūna mina l-mu'minīna
Kannada ಮೂಸಾರ ತಾಯಿಯ ಹೃದಯ ನಿರಾಳವಾಯಿತು. ಆಕೆಯ ಹೃದಯದ ಮೇಲೆ ನಾವು ಹತೋಟಿಯನ್ನು ತರದಿರುತ್ತಿದ್ದರೆ ಅವಳು ಗುಟ್ಟನ್ನು ರಟ್ಟು ಮಾಡುತ್ತಿದ್ದಳು. ಅವಳು ವಿಶ್ವಾಸಿಗರಲ್ಲಿ ಸೇರಬೇಕೆಂದು ನಾವು ಹೀಗೆ ಮಾಡಿದ್ದೇವೆ.
Verse 11
وَقَالَتْ لِأُخْتِهِۦ قُصِّيهِ ۖ فَبَصُرَتْ بِهِۦ عَن جُنُبٍ وَهُمْ لَا يَشْعُرُونَ
Transliteration waqālat li-ukh'tihi quṣṣīhi fabaṣurat bihi ʿan junubin wahum lā yashʿurūna
Kannada ಅವಳು ಮಗುವಿನ ಸಹೋದರಿಯೊಡನೆ ‘ನೀನು ಆತನ ಹಿಂದೆಯೇ ಹೋಗಿ ಅನ್ವೇಷಣೆ ಮಾಡು’ ಎಂದಳು. ಆ ಪ್ರಕಾರ ಅವಳು ಮಗುವನ್ನು ದೂರದಿಂದ ನೋಡಿ ತಿಳಿದಳು. ಶತ್ರುಗಳು ಇದನ್ನು ಗಮನಿಸಿರಲಿಲ್ಲ.
Verse 12
۞ وَحَرَّمْنَا عَلَيْهِ ٱلْمَرَاضِعَ مِن قَبْلُ فَقَالَتْ هَلْ أَدُلُّكُمْ عَلَىٰٓ أَهْلِ بَيْتٍ يَكْفُلُونَهُۥ لَكُمْ وَهُمْ لَهُۥ نَـٰصِحُونَ
Transliteration waḥarramnā ʿalayhi l-marāḍiʿa min qablu faqālat hal adullukum ʿalā ahli baytin yakfulūnahu lakum wahum lahu nāṣiḥūna
Kannada ಅದಕ್ಕೂ ಮುನ್ನ ನಾವು ಆ ಮಗುವಿನ ಪಾಲಿಗೆ ಹಾಲುಣಿಸುವ ಸ್ತ್ರೀಯರನ್ನು ನಿಷಿದ್ಧಗೊಳಿಸಿದ್ದೆವು. ಆಗ ಆ ಸ್ತ್ರೀಯು ಅವರೊಡನೆ, ‘ನಿಮಗಾಗಿ ಇದರ ಪೋಷಣೆಯ ಹೊಣೆ ವಹಿಸಬಲ್ಲ, ಮಗುವಿನ ಹಿತ ನೋಡಿಕೊಳ್ಳಬಲ್ಲ ಒಂದು ಮನೆಯವರನ್ನು ನಾನು ನಿಮಗೆ ತೋರಿಸಿ ಕೊಡಲೇ?’ ಎಂದು ಕೇಳಿದಳು.
Verse 13
فَرَدَدْنَـٰهُ إِلَىٰٓ أُمِّهِۦ كَىْ تَقَرَّ عَيْنُهَا وَلَا تَحْزَنَ وَلِتَعْلَمَ أَنَّ وَعْدَ ٱللَّهِ حَقٌّ وَلَـٰكِنَّ أَكْثَرَهُمْ لَا يَعْلَمُونَ
Transliteration faradadnāhu ilā ummihi kay taqarra ʿaynuhā walā taḥzana walitaʿlama anna waʿda l-lahi ḥaqqun walākinna aktharahum lā yaʿlamūna
Kannada ಈ ರೀತಿ ನಾವು ಆಕೆಯ ಕಣ್ಣುಗಳು ತಂಪಾಗಲಿ, ಆಕೆ ದುಃಖಿಸದಿರಲಿ ಮತ್ತು ಅಲ್ಲಾಹನ ವಾಗ್ದಾನವು ಸತ್ಯವೆಂದು ಆಕೆ ತಿಳಿಯಲಿ ಎಂದು ಮೂಸಾರನ್ನು ಅವರ ಮಾತೆಯ ಬಳಿಗೆ ಮರಳಿಸಿದ್ದೇವೆ. ಆದರೆ ಹೆಚ್ಚಿನವರು ಇದನ್ನು ತಿಳಿಯುವುದಿಲ್ಲ.
Verse 14
وَلَمَّا بَلَغَ أَشُدَّهُۥ وَٱسْتَوَىٰٓ ءَاتَيْنَـٰهُ حُكْمًا وَعِلْمًا ۚ وَكَذَٰلِكَ نَجْزِى ٱلْمُحْسِنِينَ
Transliteration walammā balagha ashuddahu wa-is'tawā ātaynāhu ḥuk'man waʿil'man wakadhālika najzī l-muḥ'sinīna
Kannada ಮೂಸಾ ತಮ್ಮ ತುಂಬು ಯೌವ್ವನಕ್ಕೆ ತಲುಪಿ ದಾಗ ಹಾಗೂ ಅವರ ಬುದ್ಧಿ ಪಕ್ವಗೊಂಡಾಗ ನಾವು ಅವರಿಗೆ ತತ್ವಜ್ಞಾನವನ್ನೂ ಸುಜ್ಞಾನವನ್ನೂ ನೀಡಿದೆವು. ನಾವು ಸಜ್ಜನರಿಗೆ ಇದೇ ರೀತಿ ಸತ್ಫಲವನ್ನು ದಯಪಾಲಿಸುತ್ತೇವೆ .
Verse 15
وَدَخَلَ ٱلْمَدِينَةَ عَلَىٰ حِينِ غَفْلَةٍ مِّنْ أَهْلِهَا فَوَجَدَ فِيهَا رَجُلَيْنِ يَقْتَتِلَانِ هَـٰذَا مِن شِيعَتِهِۦ وَهَـٰذَا مِنْ عَدُوِّهِۦ ۖ فَٱسْتَغَـٰثَهُ ٱلَّذِى مِن شِيعَتِهِۦ عَلَى ٱلَّذِى مِنْ عَدُوِّهِۦ فَوَكَزَهُۥ مُوسَىٰ فَقَضَىٰ عَلَيْهِ ۖ قَالَ هَـٰذَا مِنْ عَمَلِ ٱلشَّيْطَـٰنِ ۖ إِنَّهُۥ عَدُوٌّ مُّضِلٌّ مُّبِينٌ
Transliteration wadakhala l-madīnata ʿalā ḥīni ghaflatin min ahlihā fawajada fīhā rajulayni yaqtatilāni hādhā min shīʿatihi wahādhā min ʿaduwwihi fa-is'taghāthahu alladhī min shīʿatihi ʿalā alladhī min ʿaduwwihi fawakazahu mūsā faqaḍā ʿalayhi qāla hādhā min ʿamali l-shayṭāni innahu ʿaduwwun muḍillun mubīnun
Kannada ಒಂದು ದಿನ ನಗರವಾಸಿಗಳು ಅಲಕ್ಷ್ಯರಾಗಿದ್ದಾಗ ಅವರು ನಗರದೊಳಗೆ ಪ್ರವೇಶಿಸಿದರು. ಅಲ್ಲಿ ಅವರು ಇಬ್ಬರು ವ್ಯಕ್ತಿಗಳು ಜಗಳಾಡುತ್ತಿರುವುದನ್ನು ಕಂಡರು. ಒಬ್ಬನು ಅವರ ಸ್ವಂತ ಜನಾಂಗದವ ನಾಗಿದ್ದು ಇನ್ನೊಬ್ಬನು ಅವರ ಶತ್ರು ಜನಾಂಗಕ್ಕೆ ಸೇರಿದವನಾಗಿದ್ದನು. ಆಗ ಅವರ ಜನಾಂಗದವನು ಶತ್ರು ಜನಾಂಗದವನ ವಿರುದ್ಧ ಅವರಲ್ಲಿ ಸಹಾಯ ಬೇಡಿದನು. ಆಗ ಮೂಸಾ ಅವನಿಗೆ ಮುಷ್ಟಿಯಿಂದ ಒಂದೇಟು ಕೊಟ್ಟರು. ಹಾಗೆ ಅದು ಅವನ ಕಥೆ ಮುಗಿಸಿತು. ಮೂಸಾ ಹೇಳಿದರು, ‘ಇದು ಶೈತಾನನ ಕೆಲಸ. ಶೈತಾನನು (ಮನುಷ್ಯನನ್ನು) ದಾರಿಗೆಡಿಸುವ ಬಹಿರಂಗ ಶತ್ರುವಾಗಿರುವನು’.
Verse 16
قَالَ رَبِّ إِنِّى ظَلَمْتُ نَفْسِى فَٱغْفِرْ لِى فَغَفَرَ لَهُۥٓ ۚ إِنَّهُۥ هُوَ ٱلْغَفُورُ ٱلرَّحِيمُ
Transliteration qāla rabbi innī ẓalamtu nafsī fa-igh'fir lī faghafara lahu innahu huwa l-ghafūru l-raḥīmu
Kannada ಅವರು, ‘ನನ್ನ ಪ್ರಭೂ! ನನ್ನ ಮೇಲೆ ನಾನೇ ಅಕ್ರಮವೆಸಗಿದೆ. ಆದ್ದರಿಂದ ನನ್ನನ್ನು ಕ್ಷಮಿಸು’ ಎಂದರು. ಆಗ ಅಲ್ಲಾಹನು ಅವರನ್ನು ಕ್ಷಮಿಸಿದನು. ನಿಜಕ್ಕೂ ಅವನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ .
Verse 17
قَالَ رَبِّ بِمَآ أَنْعَمْتَ عَلَىَّ فَلَنْ أَكُونَ ظَهِيرًا لِّلْمُجْرِمِينَ
Transliteration qāla rabbi bimā anʿamta ʿalayya falan akūna ẓahīran lil'muj'rimīna
Kannada ಮೂಸಾ ಹೀಗೆ ಹೇಳಿದರು. ‘ನನ್ನ ಪ್ರಭೂ! ನೀನು ನನ್ನ ಮೇಲೆ ಅನುಗ್ರಹಿಸಿರುವ ಮೂಲಕ ನನ್ನನು ಕಾಪಾಡು ಆದರೆ, ನಾನೆಂದೂ ಅಪರಾಧಿಗಳ ಸಹಾಯಕನಾಗಲಾರೆ’.
Verse 18
فَأَصْبَحَ فِى ٱلْمَدِينَةِ خَآئِفًا يَتَرَقَّبُ فَإِذَا ٱلَّذِى ٱسْتَنصَرَهُۥ بِٱلْأَمْسِ يَسْتَصْرِخُهُۥ ۚ قَالَ لَهُۥ مُوسَىٰٓ إِنَّكَ لَغَوِىٌّ مُّبِينٌ
Transliteration fa-aṣbaḥa fī l-madīnati khāifan yataraqqabu fa-idhā alladhī is'tanṣarahu bil-amsi yastaṣrikhuhu qāla lahu mūsā innaka laghawiyyun mubīnun
Kannada ಮರುದಿನ ಬೆಳಗಾಗುತ್ತಲೇ (ಕೊಲೆಯ ಪರಿಣಾ ಮಕ್ಕೆ) ಹೆದರುತ್ತಾ, ನಿರೀಕ್ಷಿಸುತ್ತ ಅವರು ನಗರಕ್ಕೆ ಬಂದಾಗ, ನಿನ್ನೆ ಅವರಲ್ಲಿ ಸಹಾಯ ಕೇಳಿದ ವ್ಯಕ್ತಿಯೇ ಇಂದು ಪುನಃ ಸಹಾಯಕ್ಕಾಗಿ ಮೊರೆಯಿಡುತ್ತಿರುವುದನ್ನು ಕಂಡರು. ಮೂಸಾ ಅವನೊ ಡನೆ, ‘ನೀನು ಸ್ಪಷ್ಟವಾದ ದಾರಿಗೆಟ್ಟವನೇ ಸರಿ’ ಎಂದರು.
Verse 19
فَلَمَّآ أَنْ أَرَادَ أَن يَبْطِشَ بِٱلَّذِى هُوَ عَدُوٌّ لَّهُمَا قَالَ يَـٰمُوسَىٰٓ أَتُرِيدُ أَن تَقْتُلَنِى كَمَا قَتَلْتَ نَفْسًۢا بِٱلْأَمْسِ ۖ إِن تُرِيدُ إِلَّآ أَن تَكُونَ جَبَّارًا فِى ٱلْأَرْضِ وَمَا تُرِيدُ أَن تَكُونَ مِنَ ٱلْمُصْلِحِينَ
Transliteration falammā an arāda an yabṭisha bi-alladhī huwa ʿaduwwun lahumā qāla yāmūsā aturīdu an taqtulanī kamā qatalta nafsan bil-amsi in turīdu illā an takūna jabbāran fī l-arḍi wamā turīdu an takūna mina l-muṣ'liḥīna
Kannada ಅನಂತರ ಮೂಸಾ ಅವರಿಬ್ಬರ ಶತ್ರುವಾದ ವ್ಯಕ್ತಿಯನ್ನು ಹಿಡಿಯಲಿಚ್ಛಿಸಿದಾಗ ಅವನು- ‘ಮೂಸಾ, ನೀನು ನಿನ್ನೆ ಒಬ್ಬನನ್ನು ಕೊಲೆ ಮಾಡಿದಂತೆಯೇ ಇಂದು ನನ್ನನ್ನೂ ಕೊಲೆ ಮಾಡಲು ಹೊರಟಿ ರುವೆಯಾ? ನೀನು ಈ ಭೂಮಿಯಲ್ಲಿ ಒಬ್ಬ ಸ್ವೇಚ್ಛಾಧಿಕಾರಿಯಾಗ ಬಯಸುವವನೇ ಹೊರತು ಒಳಿತು ಮಾಡುವವರ ಜೊತೆ ಸೇರ ಬಯಸುವುದಿಲ್ಲ’ ಎಂದು ಕೂಗಿದನು.
Verse 20
وَجَآءَ رَجُلٌ مِّنْ أَقْصَا ٱلْمَدِينَةِ يَسْعَىٰ قَالَ يَـٰمُوسَىٰٓ إِنَّ ٱلْمَلَأَ يَأْتَمِرُونَ بِكَ لِيَقْتُلُوكَ فَٱخْرُجْ إِنِّى لَكَ مِنَ ٱلنَّـٰصِحِينَ
Transliteration wajāa rajulun min aqṣā l-madīnati yasʿā qāla yāmūsā inna l-mala-a yatamirūna bika liyaqtulūka fa-ukh'ruj innī laka mina l-nāṣiḥīna
Kannada ಅನಂತರ ಒಬ್ಬನು ನಗರದ ತುತ್ತ ತುದಿಯಿಂದ ಓಡುತ್ತಾ ಬಂದು ‘ಓ ಮೂಸಾ, ಸರದಾರರ ನಡುವೆ ನಿನ್ನನ್ನು ಕೊಲೆ ಮಾಡುವ ಸಮಾಲೋ ಚನೆ ನಡೆಯುತ್ತಿದೆ. ಆದ್ದರಿಂದ ಕೂಡಲೇ ಇಲ್ಲಿಂದ ಹೊರಟು ಹೋಗು. ನಾನು ನಿನ್ನ ಹಿತಚಿಂತಕ ನಾಗಿದ್ದೇನೆ’ ಎಂದು ಹೇಳಿದನು.
Verse 21
فَخَرَجَ مِنْهَا خَآئِفًا يَتَرَقَّبُ ۖ قَالَ رَبِّ نَجِّنِى مِنَ ٱلْقَوْمِ ٱلظَّـٰلِمِينَ
Transliteration fakharaja min'hā khāifan yataraqqabu qāla rabbi najjinī mina l-qawmi l-ẓālimīna
Kannada ಆಗ ಮೂಸಾ ಭಯಭೀತರಾಗಿ (ಇದರ ಪರಿಣಾ ಮದ ಬಗ್ಗೆ) ಜಾಗೃತೆ ವಹಿಸುತ್ತಾ ಅಲ್ಲಿಂದ ಹೊರಟರು. ‘ನನ್ನ ಪ್ರಭೂ, ನನ್ನನ್ನು ಅಕ್ರಮಿ ಜನಾಂಗದಿಂದ ರಕ್ಷಿಸು’ ಎಂದು ಪ್ರಾರ್ಥಿಸಿದರು.
Verse 22
وَلَمَّا تَوَجَّهَ تِلْقَآءَ مَدْيَنَ قَالَ عَسَىٰ رَبِّىٓ أَن يَهْدِيَنِى سَوَآءَ ٱلسَّبِيلِ
Transliteration walammā tawajjaha til'qāa madyana qāla ʿasā rabbī an yahdiyanī sawāa l-sabīli
Kannada ಮೂಸಾ ಮದ್‍ಯನಿನ ಕಡೆಗೆ ಮುಖ ಮಾಡಿ ದಾಗ ಅವರು, ‘ನನ್ನ ಪ್ರಭು ನನ್ನನ್ನು ಸರಿಯಾದ ಮಾರ್ಗಕ್ಕೆ ಮುನ್ನಡೆಸುವನು’ ಎಂದರು.
Verse 23
وَلَمَّا وَرَدَ مَآءَ مَدْيَنَ وَجَدَ عَلَيْهِ أُمَّةً مِّنَ ٱلنَّاسِ يَسْقُونَ وَوَجَدَ مِن دُونِهِمُ ٱمْرَأَتَيْنِ تَذُودَانِ ۖ قَالَ مَا خَطْبُكُمَا ۖ قَالَتَا لَا نَسْقِى حَتَّىٰ يُصْدِرَ ٱلرِّعَآءُ ۖ وَأَبُونَا شَيْخٌ كَبِيرٌ
Transliteration walammā warada māa madyana wajada ʿalayhi ummatan mina l-nāsi yasqūna wawajada min dūnihimu im'ra-atayni tadhūdāni qāla mā khaṭbukumā qālatā lā nasqī ḥattā yuṣ'dira l-riʿāu wa-abūnā shaykhun kabīrun
Kannada ಅವರು ಮದ್‍ಯನಿನ ನೀರಿನ ಬಳಿಗೆ ತಲುಪಿದಾಗ ಅದರ ಹತ್ತಿರ ಜನರ ಗುಂಪೊಂದು ತಮ್ಮ ಆಡುಗಳಿಗೆ ನೀರು ಕುಡಿಸುತ್ತಿರುವುದನ್ನೂ ಅವರಿಂದ ದೂರ ಒಂದೆಡೆ ಇಬ್ಬರು ಮಹಿಳೆಯರು ತಮ್ಮ ಆಡುಗಳನ್ನು ತಡೆದು ನಿಲ್ಲಿಸುತ್ತಿರುವುದ ನ್ನೂ ಕಂಡರು. ಮೂಸಾ, ಆ ಮಹಿಳೆಯರೊಡನೆ, ‘ನಿಮ್ಮ ಸಮಾಚಾರವೇನು?’ ಎಂದು ಕೇಳಿದರು. ಆಗ ಅವರು ‘ಈ ಕುರುಬರು ತಮ್ಮ ಆಡುಗಳಿಗೆ ನೀರು ಕುಡಿಸಿ ಮರಳಿ ಹೋಗುವವರೆಗೂ ನಾವು ನಮ್ಮ ಆಡುಗಳಿಗೆ ನೀರು ಕುಡಿಸುವಂತಿಲ್ಲ. ನಮ್ಮ ತಂದೆ ಓರ್ವ ಅತಿ ವೃದ್ಧರಾಗಿದ್ದಾರೆ’ ಎಂದರು.
Verse 24
فَسَقَىٰ لَهُمَا ثُمَّ تَوَلَّىٰٓ إِلَى ٱلظِّلِّ فَقَالَ رَبِّ إِنِّى لِمَآ أَنزَلْتَ إِلَىَّ مِنْ خَيْرٍ فَقِيرٌ
Transliteration fasaqā lahumā thumma tawallā ilā l-ẓili faqāla rabbi innī limā anzalta ilayya min khayrin faqīrun
Kannada ಆಗ ಮೂಸಾ, ಆ ಇಬ್ಬರು ಸ್ತ್ರೀಯರಿಗಾಗಿ ಅವರ ಆಡುಗಳಿಗೆ ನೀರು ಕುಡಿಸಿದರು. ತರುವಾಯ ಒಂದು (ಮರದ) ನೆರಳಿರುವ ಜಾಗಕ್ಕೆ ಹೋಗಿ ಕುಳಿತು ಹೀಗೆ ಹೇಳಿದರು. ‘ಪ್ರಭೂ, ನನಗೆ ನೀನು ಇಳಿಸಿ ಕೊಡುವ ಯಾವುದೇ ಒಳಿತಿಗೂ ನಾನು ಅಪೇಕ್ಷಕನಾಗಿದ್ದೇನೆ’.
Verse 25
فَجَآءَتْهُ إِحْدَىٰهُمَا تَمْشِى عَلَى ٱسْتِحْيَآءٍ قَالَتْ إِنَّ أَبِى يَدْعُوكَ لِيَجْزِيَكَ أَجْرَ مَا سَقَيْتَ لَنَا ۚ فَلَمَّا جَآءَهُۥ وَقَصَّ عَلَيْهِ ٱلْقَصَصَ قَالَ لَا تَخَفْ ۖ نَجَوْتَ مِنَ ٱلْقَوْمِ ٱلظَّـٰلِمِينَ
Transliteration fajāathu iḥ'dāhumā tamshī ʿalā is'tiḥ'yāin qālat inna abī yadʿūka liyajziyaka ajra mā saqayta lanā falammā jāahu waqaṣṣa ʿalayhi l-qaṣaṣa qāla lā takhaf najawta mina l-qawmi l-ẓālimīna
Kannada ಹಾಗೆ ಆ ಇಬ್ಬರು ಮಹಿಳೆಯರಲ್ಲಿ ಒಬ್ಬಳು ನಡೆಯುತ್ತಾ ಲಜ್ಜೆಯೊಂದಿಗೆ ಅವರ ಬಳಿಗೆ ಬಂದು `ನೀವು ನಮಗಾಗಿ ಆಡುಗಳಿಗೆ ನೀರು ಕುಡಿಸಿದುದರ ಪ್ರತಿಫಲವನ್ನು ನಿಮಗೆ ಕೊಡಲಿ ಕ್ಕಾಗಿ ನನ್ನ ತಂದೆ ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದಳು. ಹಾಗೆ ಮೂಸಾ ಅವರ ಬಳಿಗೆ ತಲುಪಿ ತಮ್ಮ ಸಂಪೂರ್ಣ ವೃತ್ತಾಂತವನ್ನು ಅವರಿಗೆ ವಿವರಿಸಿ ಹೇಳಿದಾಗ ಅವರು, ‘ನೀವು ಹೆದರ ಬೇಡಿರಿ. ನೀವು ಅಕ್ರಮಿಗಳಿಂದ ಪಾರಾಗಿದ್ದೀರಿ’ ಎಂದರು.
Verse 26
قَالَتْ إِحْدَىٰهُمَا يَـٰٓأَبَتِ ٱسْتَـْٔجِرْهُ ۖ إِنَّ خَيْرَ مَنِ ٱسْتَـْٔجَرْتَ ٱلْقَوِىُّ ٱلْأَمِينُ
Transliteration qālat iḥ'dāhumā yāabati is'tajir'hu inna khayra mani is'tajarta l-qawiyu l-amīnu
Kannada ಆ ಇಬ್ಬರು ಮಹಿಳೆಯರಲ್ಲಿ ಒಬ್ಬಳು ‘ಅಪ್ಪಾ! ಇವರನ್ನು ನೌಕರನಾಗಿ ಇರಿಸಿಕೊಳ್ಳಿರಿ. ನೀವು ನೌಕರನಾಗಿ ಇರಿಸಿಕೊಳ್ಳುವವರ ಪೈಕಿ ಬಲಿಷ್ಠನೂ ಪ್ರಾಮಾಣಿಕನೂ ಆದವನೇ ಉತ್ತಮನು’ ಎಂದಳು .
Verse 27
قَالَ إِنِّىٓ أُرِيدُ أَنْ أُنكِحَكَ إِحْدَى ٱبْنَتَىَّ هَـٰتَيْنِ عَلَىٰٓ أَن تَأْجُرَنِى ثَمَـٰنِىَ حِجَجٍ ۖ فَإِنْ أَتْمَمْتَ عَشْرًا فَمِنْ عِندِكَ ۖ وَمَآ أُرِيدُ أَنْ أَشُقَّ عَلَيْكَ ۚ سَتَجِدُنِىٓ إِن شَآءَ ٱللَّهُ مِنَ ٱلصَّـٰلِحِينَ
Transliteration qāla innī urīdu an unkiḥaka iḥ'dā ib'natayya hātayni ʿalā an tajuranī thamāniya ḥijajin fa-in atmamta ʿashran famin ʿindika wamā urīdu an ashuqqa ʿalayka satajidunī in shāa l-lahu mina l-ṣāliḥīna
Kannada ಅವಳ ತಂದೆಯು ನೀವು ಎಂಟು ವರ್ಷಗಳವರೆಗೆ ನನ್ನಲ್ಲಿ ನೌಕರಿ ಮಾಡಬೇಕೆಂಬ ಶರತ್ತಿನ ಮೇಲೆ ನಾನು ನನ್ನ ಈ ಇಬ್ಬರು ಪುತ್ರಿಯರಲ್ಲಿ ಒಬ್ಬಳನ್ನು ನಿಮಗೆ ವಿವಾಹ ಮಾಡಲಿಚ್ಛಿಸುತ್ತೇನೆ. ಇನ್ನು ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಇಚ್ಚೆ. ನಾನು ನಿಮಗೆ ಕಷ್ಟ ಕೊಡಲಿಚ್ಛಿಸು ವುದಿಲ್ಲ. ಅಲ್ಲಾಹನಿಚ್ಚಿಸಿದರೆ ನೀವು ನನ್ನನ್ನು ಸಜ್ಜನರಲ್ಲಿ ಒಬ್ಬನಾಗಿ ಕಾಣುವಿರಿ’ ಎಂದರು.
Verse 28
قَالَ ذَٰلِكَ بَيْنِى وَبَيْنَكَ ۖ أَيَّمَا ٱلْأَجَلَيْنِ قَضَيْتُ فَلَا عُدْوَٰنَ عَلَىَّ ۖ وَٱللَّهُ عَلَىٰ مَا نَقُولُ وَكِيلٌ
Transliteration qāla dhālika baynī wabaynaka ayyamā l-ajalayni qaḍaytu falā ʿud'wāna ʿalayya wal-lahu ʿalā mā naqūlu wakīlun
Kannada ಆಗ ಮೂಸಾ, ‘ಇದು ನನ್ನ ಮತ್ತು ನಿಮ್ಮ ನಡುವೆ ಇರುವ ತೀರ್ಮಾನವಾಗಿದ್ದು ನಾನು ಈ ಎರಡು ಅವಧಿಗಳಲ್ಲಿ ಯಾವುದನ್ನೇ ಪೂರ್ತಿ ಗೊಳಿಸಿದರೂ ನಂತರ ನನ್ನ ಮೇಲೆ ಹೆಚ್ಚಿನ ಹೊರೆ ಹೊರಿಸಬಾರದು. ನಾವು ಹೇಳುತ್ತಿರುವ ವಿಷಯದ ಮೇಲೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ’ ಎಂದು ಉತ್ತರಿಸಿದರು.
Verse 29
۞ فَلَمَّا قَضَىٰ مُوسَى ٱلْأَجَلَ وَسَارَ بِأَهْلِهِۦٓ ءَانَسَ مِن جَانِبِ ٱلطُّورِ نَارًا قَالَ لِأَهْلِهِ ٱمْكُثُوٓا۟ إِنِّىٓ ءَانَسْتُ نَارًا لَّعَلِّىٓ ءَاتِيكُم مِّنْهَا بِخَبَرٍ أَوْ جَذْوَةٍ مِّنَ ٱلنَّارِ لَعَلَّكُمْ تَصْطَلُونَ
Transliteration falammā qaḍā mūsā l-ajala wasāra bi-ahlihi ānasa min jānibi l-ṭūri nāran qāla li-ahlihi um'kuthū innī ānastu nāran laʿallī ātīkum min'hā bikhabarin aw jadhwatin mina l-nāri laʿallakum taṣṭalūna
Kannada ಮೂಸಾ, ನಿರ್ದಿಷ್ಟ ಅವಧಿ ಪೂರ್ತಿಗೊಳಿಸಿದ ನಂತರ ತನ್ನ ಕುಟುಂಬದೊಂದಿಗೆ (ಸ್ವದೇಶಕ್ಕೆ) ಹೊರಟಾಗ ಥೂರ್ ಪರ್ವತದ ಕಡೆಯಿಂದ ಅವರಿ ಗೊಂದು ಬೆಂಕಿ ಕಂಡಿತು. ಅವರು ಕುಟುಂಬದೊಂದಿಗೆ ‘ನೀವಿಲ್ಲಿ ನಿಲ್ಲಿರಿ, ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಪ್ರಾಯಶಃ ನಾನು ಅಲ್ಲಿಂದೇನಾದರೂ (ದಾರಿಯ ಬಗ್ಗೆ) ಸುದ್ದಿ ಯನ್ನಾಗಲಿ ನಿಮಗೆ ಉಪಯೋಗಕ್ಕೆ ಆ ಬೆಂಕಿಯಿಂದ ಒಂದು ಕೊಳ್ಳಿಯನ್ನಾದರೂ ತರುತ್ತೇನೆ’ ಎಂದರು.
Verse 30
فَلَمَّآ أَتَىٰهَا نُودِىَ مِن شَـٰطِئِ ٱلْوَادِ ٱلْأَيْمَنِ فِى ٱلْبُقْعَةِ ٱلْمُبَـٰرَكَةِ مِنَ ٱلشَّجَرَةِ أَن يَـٰمُوسَىٰٓ إِنِّىٓ أَنَا ٱللَّهُ رَبُّ ٱلْعَـٰلَمِينَ
Transliteration falammā atāhā nūdiya min shāṭi-i l-wādi l-aymani fī l-buq'ʿati l-mubārakati mina l-shajarati an yāmūsā innī anā l-lahu rabbu l-ʿālamīna
Kannada ಹಾಗೆ ಅವರು ಅಲ್ಲಿಗೆ ತಲಪಿದಾಗ ಅನುಗ್ರಹಿತ ಕಣಿವೆಯಲ್ಲಿ ಬಲದಿಕ್ಕಿನ ತಪ್ಪಲಿನ ಒಂದು ಮರದಿಂದ ಹೀಗೆ ಕೂಗಿ ಹೇಳಲಾಯಿತು. “ಓ ಮೂಸಾ! ನಾನು ಸರ್ವ ಲೋಕಗಳ ಪ್ರಭುವಾದ ಅಲ್ಲಾಹನಾಗಿದ್ದೇನೆ.
Verse 31
وَأَنْ أَلْقِ عَصَاكَ ۖ فَلَمَّا رَءَاهَا تَهْتَزُّ كَأَنَّهَا جَآنٌّ وَلَّىٰ مُدْبِرًا وَلَمْ يُعَقِّبْ ۚ يَـٰمُوسَىٰٓ أَقْبِلْ وَلَا تَخَفْ ۖ إِنَّكَ مِنَ ٱلْـَٔامِنِينَ
Transliteration wa-an alqi ʿaṣāka falammā raāhā tahtazzu ka-annahā jānnun wallā mud'biran walam yuʿaqqib yāmūsā aqbil walā takhaf innaka mina l-āminīna
Kannada ‘ನಿಮ್ಮ ದಂಡವನ್ನು ಕೆಳಗೆ ಹಾಕಿರಿ”. ಆಗ ದಂಡವು (ಚುರುಕಿನ) ಹಾವಿನಂತೆ ತೆವಳುತ್ತಿರುವುದನ್ನು ಕಂಡಾಗ ಮೂಸಾ ಬೆನ್ನು ತಿರುಗಿಸಿ ಓಟಕ್ಕಿತ್ತರು. ಅವರು ತಿರುಗಿ ಬರಲಿಲ್ಲ (ಆಗ ಕರೆ ಕೇಳಿಸಿತು.) ‘ಓ ಮೂಸಾ, ಮುಂದೆ ಬನ್ನಿರಿ, ಹೆದರಬೇಡಿರಿ, ನೀವು ನಿರ್ಭೀತರಲ್ಲಿ ಒಬ್ಬರಾಗಿದ್ದೀರಿ.
Verse 32
ٱسْلُكْ يَدَكَ فِى جَيْبِكَ تَخْرُجْ بَيْضَآءَ مِنْ غَيْرِ سُوٓءٍ وَٱضْمُمْ إِلَيْكَ جَنَاحَكَ مِنَ ٱلرَّهْبِ ۖ فَذَٰنِكَ بُرْهَـٰنَانِ مِن رَّبِّكَ إِلَىٰ فِرْعَوْنَ وَمَلَإِي۟هِۦٓ ۚ إِنَّهُمْ كَانُوا۟ قَوْمًا فَـٰسِقِينَ
Transliteration us'luk yadaka fī jaybika takhruj bayḍāa min ghayri sūin wa-uḍ'mum ilayka janāḥaka mina l-rahbi fadhānika bur'hānāni min rabbika ilā fir'ʿawna wamala-ihi innahum kānū qawman fāsiqīna
Kannada ನಿಮ್ಮ ಕೈಯನ್ನು ನಿಮ್ಮ ಜೇಬಿನೊಳಗೆ ಹಾಕಿರಿ, ಆಗ ಯಾವುದೇ ಕೇಡೂ ಇಲ್ಲದೆ ಬೆಳ್ಳಗೆ ಹೊಳೆಯುತ್ತ ಅದು ಹೊರಬರುವುದು. ಭೀತಿಯಿಂದ ಪಾರಾಗಲು ನಿಮ್ಮ ಕೈಯನ್ನು ದೇಹಕ್ಕೆ ಅಪ್ಪಿಕೊಳ್ಳಿರಿ. ಫಿರ್‍ಔನ್ ಮತ್ತು ಅವನ ಪರಿವಾರದ ಕಡೆಗೆ ಇವೆರಡು (ದಂಡ ಹಾಗೂ ಹಸ್ತ) ನಿಮ್ಮ ಪ್ರಭುವಿನ ಪ್ರತ್ಯಕ್ಷ ನಿದರ್ಶನ ಗಳಾಗಿವೆ. ಅವರು ಕರ್ಮಭ್ರಷ್ಟ ಜನಾಂಗವಾಗಿರುವರು’.
Verse 33
قَالَ رَبِّ إِنِّى قَتَلْتُ مِنْهُمْ نَفْسًا فَأَخَافُ أَن يَقْتُلُونِ
Transliteration qāla rabbi innī qataltu min'hum nafsan fa-akhāfu an yaqtulūni
Kannada ಆಗ ಮೂಸಾ ಹೇಳಿದರು, “ನನ್ನ ಪ್ರಭೂ, ನಾನು ಅವರಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದೇನೆ. ಆದ್ದರಿಂದ ಅವರು ನನ್ನನ್ನು ಕೊಂದು ಹಾಕುವರೆಂದು ಭಯಪಡುತ್ತಿದ್ದೇನೆ.
Verse 34
وَأَخِى هَـٰرُونُ هُوَ أَفْصَحُ مِنِّى لِسَانًا فَأَرْسِلْهُ مَعِىَ رِدْءًا يُصَدِّقُنِىٓ ۖ إِنِّىٓ أَخَافُ أَن يُكَذِّبُونِ
Transliteration wa-akhī hārūnu huwa afṣaḥu minnī lisānan fa-arsil'hu maʿiya rid'an yuṣaddiqunī innī akhāfu an yukadhibūni
Kannada ನನ್ನ ಸಹೋದರ ಹಾರೂನರು ನನಗಿಂತ ಉತ್ತಮ ಮಾತುಗಾರ. ಆದ್ದರಿಂದ ನನ್ನ ನಿಜ ಸ್ಥಿತಿಯನ್ನು ಸಮರ್ಥಿಸುವ ಒಬ್ಬ ಸಹಾಯಕನಾಗಿ ಅವರನ್ನು ನಿಯಮಿಸಿ ನನ್ನ ಜೊತೆ ಕಳುಹಿಸು, ಆ ಜನರು ನನ್ನನ್ನು ಸುಳ್ಳಾಗಿಸುವರೆಂಬ ಆಶಂಕೆ ನನಗಿದೆ’.
Verse 35
قَالَ سَنَشُدُّ عَضُدَكَ بِأَخِيكَ وَنَجْعَلُ لَكُمَا سُلْطَـٰنًا فَلَا يَصِلُونَ إِلَيْكُمَا ۚ بِـَٔايَـٰتِنَآ أَنتُمَا وَمَنِ ٱتَّبَعَكُمَا ٱلْغَـٰلِبُونَ
Transliteration qāla sanashuddu ʿaḍudaka bi-akhīka wanajʿalu lakumā sul'ṭānan falā yaṣilūna ilaykumā biāyātinā antumā wamani ittabaʿakumā l-ghālibūna
Kannada ಆಗ ಅಲ್ಲಾಹು ಹೇಳಿದನು. `ನಿಮ್ಮ ಸಹೋದರನ ಮುಖಾಂತರ ನಾವು ನಿಮ್ಮ ತೋಳಿಗೆ ಬಲ ನೀಡಲಿದ್ದೇವೆ. ಅವರು ನಿಮ್ಮ ಬಳಿಗೇನೂ ತಲುಪಲಾಗದ ವಿಜಯ ಶಕ್ತಿಯನ್ನು ನಿಮಗಿಬ್ಬರಿಗೂ ದಯಪಾಲಿಸುತ್ತೇವೆ. ನಮ್ಮ ನಿದರ್ಶನಗಳ ಮುಖೇನ ನೀವಿಬ್ಬರೂ ನಿಮ್ಮನ್ನು ಹಿಂಬಾಲಿಸಿದ ನಿಮ್ಮ ಅನುಯಾಯಿಗಳೂ ಖಂಡಿತ ಮೇಲುಗೈ ಸಾಧಿಸುವಿರಿ’.
Verse 36
فَلَمَّا جَآءَهُم مُّوسَىٰ بِـَٔايَـٰتِنَا بَيِّنَـٰتٍ قَالُوا۟ مَا هَـٰذَآ إِلَّا سِحْرٌ مُّفْتَرًى وَمَا سَمِعْنَا بِهَـٰذَا فِىٓ ءَابَآئِنَا ٱلْأَوَّلِينَ
Transliteration falammā jāahum mūsā biāyātinā bayyinātin qālū mā hādhā illā siḥ'run muf'taran wamā samiʿ'nā bihādhā fī ābāinā l-awalīna
Kannada ತರುವಾಯ ಮೂಸಾ ನಮ್ಮ ಸುವ್ಯಕ್ತ ನಿದರ್ಶನ ಗಳನ್ನು ಅವರ ಬಳಿಗೆ ತಂದರು. ಆಗ ಅವರು, ‘ಇದು ಕೃತಕ ಜಾದುವೇ ಹೊರತು ಬೇರೇನಲ್ಲ, ನಾವು ಇದನ್ನು ನಮ್ಮ ಪೂರ್ವಜರಲ್ಲಿ ಎಂದೂ ಕೇಳಿರಲಿಲ್ಲ’ ಎಂದರು.
Verse 37
وَقَالَ مُوسَىٰ رَبِّىٓ أَعْلَمُ بِمَن جَآءَ بِٱلْهُدَىٰ مِنْ عِندِهِۦ وَمَن تَكُونُ لَهُۥ عَـٰقِبَةُ ٱلدَّارِ ۖ إِنَّهُۥ لَا يُفْلِحُ ٱلظَّـٰلِمُونَ
Transliteration waqāla mūsā rabbī aʿlamu biman jāa bil-hudā min ʿindihi waman takūnu lahu ʿāqibatu l-dāri innahu lā yuf'liḥu l-ẓālimūna
Kannada ಮೂಸಾ ಹೀಗೆಂದರು, ‘ನನ್ನ ಪ್ರಭು, ತನ್ನ ವತಿಯಿಂದ ಮಾರ್ಗದರ್ಶನ ಪಡೆದು ಬಂದವರಾರೆಂದೂ ಈ ಭವನ (ಇಹಜೀವನ)ದ ಶುಭ ಪರ್ಯವಸಾನವಿರುವುದು ಯಾರಿಗೆಂದೂ ಚೆನ್ನಾಗಿ ತಿಳಿದಿರುವನು. ಅಕ್ರಮಿಗಳು ಖಂಡಿತ ಯಶಸ್ವಿಯಾಗುವುದಿಲ್ಲ’ .
Verse 38
وَقَالَ فِرْعَوْنُ يَـٰٓأَيُّهَا ٱلْمَلَأُ مَا عَلِمْتُ لَكُم مِّنْ إِلَـٰهٍ غَيْرِى فَأَوْقِدْ لِى يَـٰهَـٰمَـٰنُ عَلَى ٱلطِّينِ فَٱجْعَل لِّى صَرْحًا لَّعَلِّىٓ أَطَّلِعُ إِلَىٰٓ إِلَـٰهِ مُوسَىٰ وَإِنِّى لَأَظُنُّهُۥ مِنَ ٱلْكَـٰذِبِينَ
Transliteration waqāla fir'ʿawnu yāayyuhā l-mala-u mā ʿalim'tu lakum min ilāhin ghayrī fa-awqid lī yāhāmānu ʿalā l-ṭīni fa-ij'ʿal lī ṣarḥan laʿallī aṭṭaliʿu ilā ilāhi mūsā wa-innī la-aẓunnuhu mina l-kādhibīna
Kannada ಫಿರ್‍ಔನನು, “ಆಸ್ಥಾನಿಕರೇ, ನನ್ನ ಹೊರತು ಇನ್ನಾವ ದೇವನೂ ನಿಮಗಿರುವ ಬಗ್ಗೆ ನಾನರಿಯೆನು, ಆದ್ದರಿಂದ ಓ ಹಾಮಾನ್! ನನಗಾಗಿ ಮಣ್ಣಿನ (ಇಟ್ಟಿಗೆ ಮಾಡಿ) ಮೇಲೆ ಬೆಂಕಿ ಉರಿಸು, ನನಗಾಗಿ ಒಂದು ಎತ್ತರವಾದ ಕಟ್ಟಡವನ್ನು ನಿರ್ಮಿಸು. ಮೂಸಾನ ದೇವನನ್ನು ನಾನೊಮ್ಮೆ ಪ್ರತ್ಯಕ್ಷ ನೋಡುತ್ತೇನೆ. (ಬೇರೆ ಆರಾಧ್ಯನಿದ್ದಾನೆ ಎಂಬ ವಾದದಲ್ಲಿ) ಇವನನ್ನು ನಾನು ಸುಳ್ಳುಗಾರನೆಂದು ಭಾವಿಸುತ್ತೇನೆ” ಎಂದನು.
Verse 39
وَٱسْتَكْبَرَ هُوَ وَجُنُودُهُۥ فِى ٱلْأَرْضِ بِغَيْرِ ٱلْحَقِّ وَظَنُّوٓا۟ أَنَّهُمْ إِلَيْنَا لَا يُرْجَعُونَ
Transliteration wa-is'takbara huwa wajunūduhu fī l-arḍi bighayri l-ḥaqi waẓannū annahum ilaynā lā yur'jaʿūna
Kannada ಅವನೂ ಅವನ ಸೇನೆಗಳೂ ಭೂಮಿಯಲ್ಲಿ ಯಾವ ನ್ಯಾಯವೂ ಇಲ್ಲದೆ ಅಹಂಭಾವ ತೋರಿದರು. ಅವರಿಗೆಂದೂ ನಮ್ಮ ಕಡೆಗೆ ಮರಳಿ ಬರಲಿಕ್ಕಿಲ್ಲವೆಂದೇ ಅವರು ಭಾವಿಸಿಕೊಂಡರು.
Verse 40
فَأَخَذْنَـٰهُ وَجُنُودَهُۥ فَنَبَذْنَـٰهُمْ فِى ٱلْيَمِّ ۖ فَٱنظُرْ كَيْفَ كَانَ عَـٰقِبَةُ ٱلظَّـٰلِمِينَ
Transliteration fa-akhadhnāhu wajunūdahu fanabadhnāhum fī l-yami fa-unẓur kayfa kāna ʿāqibatu l-ẓālimīna
Kannada ಆದ್ದರಿಂದ ನಾವು ಅವನನ್ನೂ ಅವನ ಸೇನೆಗಳನ್ನೂ ಹಿಡಿದು ಸಮುದ್ರಕ್ಕೆ ಎಸೆದೆವು. ಆಗ ಅಕ್ರಮಿಗಳ ಗತಿಯೇನಾಯಿತೆಂದು ನೋಡಿರಿ.
Verse 41
وَجَعَلْنَـٰهُمْ أَئِمَّةً يَدْعُونَ إِلَى ٱلنَّارِ ۖ وَيَوْمَ ٱلْقِيَـٰمَةِ لَا يُنصَرُونَ
Transliteration wajaʿalnāhum a-immatan yadʿūna ilā l-nāri wayawma l-qiyāmati lā yunṣarūna
Kannada ಅವರನ್ನು ನರಕದ ಕಡೆಗೆ ಆಹ್ವಾನಿಸುವ ಮುಂದಾಳುಗಳನ್ನಾಗಿ ನಾವು ಮಾಡಿದೆವು. ಅವರು ಪುನರುತ್ಥಾನ ದಿನ ಯಾವ ಸಹಾಯವನ್ನೂ ಪಡೆಯಲಾರರು.
Verse 42
وَأَتْبَعْنَـٰهُمْ فِى هَـٰذِهِ ٱلدُّنْيَا لَعْنَةً ۖ وَيَوْمَ ٱلْقِيَـٰمَةِ هُم مِّنَ ٱلْمَقْبُوحِينَ
Transliteration wa-atbaʿnāhum fī hādhihi l-dun'yā laʿnatan wayawma l-qiyāmati hum mina l-maqbūḥīna
Kannada ಈ ಲೋಕದಲ್ಲಿ ನಾವು ಅವರ ಹಿಂದೆ ಶಾಪವನ್ನು ಅನುಕ್ರಮಿಸಿದೆವು. ಪುನರುತ್ಥಾನ ದಿನ ಅವರು (ನಮ್ಮ ಕಾರುಣ್ಯದಿಂದ) ದೂರ ಅಟ್ಟಲಾದವರ ಗುಂಪಿಗೆ ಸೇರುವರು.
Verse 43
وَلَقَدْ ءَاتَيْنَا مُوسَى ٱلْكِتَـٰبَ مِنۢ بَعْدِ مَآ أَهْلَكْنَا ٱلْقُرُونَ ٱلْأُولَىٰ بَصَآئِرَ لِلنَّاسِ وَهُدًى وَرَحْمَةً لَّعَلَّهُمْ يَتَذَكَّرُونَ
Transliteration walaqad ātaynā mūsā l-kitāba min baʿdi mā ahlaknā l-qurūna l-ūlā baṣāira lilnnāsi wahudan waraḥmatan laʿallahum yatadhakkarūna
Kannada ನಾವು ಹಿಂದಿನ ಪೀಳಿಗೆಗಳನ್ನು ನಾಶಗೊಳಿಸಿದ ಬಳಿಕ ಜನರಿಗೆ ಒಳದೃಷ್ಟಿ, ಮಾರ್ಗದರ್ಶನ ಮತ್ತು ಅನುಗ್ರಹವಾಗಿ ಮೂಸಾರಿಗೆ ವೇದ ಗ್ರಂಥವನ್ನು ದಯಪಾಲಿಸಿದೆವು. ಅವರು ಯೋಚಿ ಸಲಿಕ್ಕಾಗಿ,
Verse 44
وَمَا كُنتَ بِجَانِبِ ٱلْغَرْبِىِّ إِذْ قَضَيْنَآ إِلَىٰ مُوسَى ٱلْأَمْرَ وَمَا كُنتَ مِنَ ٱلشَّـٰهِدِينَ
Transliteration wamā kunta bijānibi l-gharbiyi idh qaḍaynā ilā mūsā l-amra wamā kunta mina l-shāhidīna
Kannada ಪ್ರವಾದಿಯರೇ, ನಾವು ಮೂಸಾರಿಗೆ ಈ ಧರ್ಮಾ ದೇಶವನ್ನು ನೀಡಿದಾಗ ನೀವು (ಥೂರ್ ಪರ್ವತದ) ಪಶ್ಚಿಮ ಭಾಗದಲ್ಲಿರಲಿಲ್ಲ. ನೀವು ಅದರ ಸಾಕ್ಷಿದಾರರಲ್ಲೂ ಸೇರಿರಲಿಲ್ಲ.
Verse 45
وَلَـٰكِنَّآ أَنشَأْنَا قُرُونًا فَتَطَاوَلَ عَلَيْهِمُ ٱلْعُمُرُ ۚ وَمَا كُنتَ ثَاوِيًا فِىٓ أَهْلِ مَدْيَنَ تَتْلُوا۟ عَلَيْهِمْ ءَايَـٰتِنَا وَلَـٰكِنَّا كُنَّا مُرْسِلِينَ
Transliteration walākinnā anshanā qurūnan fataṭāwala ʿalayhimu l-ʿumuru wamā kunta thāwiyan fī ahli madyana tatlū ʿalayhim āyātinā walākinnā kunnā mur'silīna
Kannada ಆದರೆ ಆ ಬಳಿಕ ನಾವು ಅನೇಕ ಪೀಳಿಗೆಗಳನ್ನು ಹೊಸತಾಗಿ ನಿರ್ಮಿಸಿದೆವು. ಅವರ ಮೇಲೆ ದೀರ್ಘಕಾಲ ಕಳೆದಿವೆ. ಮದ್‍ಯನರಿಗೆ ನಮ್ಮ ಸೂಕ್ತಗಳನ್ನು ಓದಿ ಕೇಳಿಸುವಾಗ ನೀವು ಅವರ ಮಧ್ಯೆ ತಂಗಿರಲಿಲ್ಲ. ಆದರೆ ನಾವು ನಿಮಗೆ ವಾರ್ತೆಗಳನ್ನು ಕಳುಹಿಸಿ ಕೊಡುವವರಾಗಿದ್ದೇವೆ.
Verse 46
وَمَا كُنتَ بِجَانِبِ ٱلطُّورِ إِذْ نَادَيْنَا وَلَـٰكِن رَّحْمَةً مِّن رَّبِّكَ لِتُنذِرَ قَوْمًا مَّآ أَتَىٰهُم مِّن نَّذِيرٍ مِّن قَبْلِكَ لَعَلَّهُمْ يَتَذَكَّرُونَ
Transliteration wamā kunta bijānibi l-ṭūri idh nādaynā walākin raḥmatan min rabbika litundhira qawman mā atāhum min nadhīrin min qablika laʿallahum yatadhakkarūna
Kannada ನಾವು ಮೂಸಾರನ್ನು ಕರೆದಾಗ ನೀವು ಥೂರ್ ಪರ್ವತದ ಮಗ್ಗುಲಲ್ಲೂ ಇದ್ದಿರಲಿಲ್ಲ. ಆದರೆ ತಮ್ಮ ಪ್ರಭುವಿನ ಮಹತ್ತರ ಅನುಗ್ರಹದ ಮೂಲಕ ಈ ಅರಿವನ್ನು ನಿಮಗೆ ನೀಡಲಾಗುತ್ತಿದೆ. ನಿಮಗಿಂತ ಮುಂಚೆ ಎಚ್ಚರಿಕೆ ನೀಡುವವರಾರೂ ಬಾರದಿದ್ದ ಜನರಿಗೆ ನೀವು ಎಚ್ಚರಿಕೆ ನೀಡುವ ಸಲುವಾಗಿ. ಅವರು ಯೋಚಿಸಲೆಂದು.
Verse 47
وَلَوْلَآ أَن تُصِيبَهُم مُّصِيبَةٌۢ بِمَا قَدَّمَتْ أَيْدِيهِمْ فَيَقُولُوا۟ رَبَّنَا لَوْلَآ أَرْسَلْتَ إِلَيْنَا رَسُولًا فَنَتَّبِعَ ءَايَـٰتِكَ وَنَكُونَ مِنَ ٱلْمُؤْمِنِينَ
Transliteration walawlā an tuṣībahum muṣībatun bimā qaddamat aydīhim fayaqūlū rabbanā lawlā arsalta ilaynā rasūlan fanattabiʿa āyātika wanakūna mina l-mu'minīna
Kannada ಅವರ ಕೈಗಳು ಮಾಡಿಹೋದ ಸ್ವಂತ ದುಷ್ಕøತ್ಯ ಗಳ ಫಲವಾಗಿ ಅವರಿಗೇನಾದರೂ ವಿಪತ್ತು ತಟ್ಟಿದರೆ ಅವರು, “ಪ್ರಭೂ, ನಾವು ನಿನ್ನ ಸೂಕ್ತಗಳ ಅನುಸರಣೆ ಮಾಡಲು ಹಾಗೂ ಸತ್ಯವಿಶ್ವಾಸಿಗಳಲ್ಲಿ ಸೇರಲು ನೀನು ನಮ್ಮೆಡೆಗೆ ಸಂದೇಶವಾಹ ಕನನ್ನೇಕೆ ಕಳುಹಿಸಲಿಲ್ಲ?” ಎಂದು ಹೇಳಬಾರದೆಂದೇ ನಾವು ತಮ್ಮನ್ನು ಅವರ ಕಡೆಗೆ ಕಳುಹಿಸಿದ್ದೇವೆ.
Verse 48
فَلَمَّا جَآءَهُمُ ٱلْحَقُّ مِنْ عِندِنَا قَالُوا۟ لَوْلَآ أُوتِىَ مِثْلَ مَآ أُوتِىَ مُوسَىٰٓ ۚ أَوَلَمْ يَكْفُرُوا۟ بِمَآ أُوتِىَ مُوسَىٰ مِن قَبْلُ ۖ قَالُوا۟ سِحْرَانِ تَظَـٰهَرَا وَقَالُوٓا۟ إِنَّا بِكُلٍّ كَـٰفِرُونَ
Transliteration falammā jāahumu l-ḥaqu min ʿindinā qālū lawlā ūtiya mith'la mā ūtiya mūsā awalam yakfurū bimā ūtiya mūsā min qablu qālū siḥ'rāni taẓāharā waqālū innā bikullin kāfirūna
Kannada ಆದರೆ ನಮ್ಮ ಬಳಿಯಿಂದ ಅವರಿಗೆ ಸತ್ಯವು ಬಂದಾಗ ಅವರು ಹೇಳಿದರು, `ಮೂಸಾರಿಗೆ ಕೊಡಲಾಗಿದ್ದುದನ್ನು (ದೃಷ್ಟಾಂತವನ್ನು) ಇವರಿಗೇಕೆ ಕೊಡಲಾಗಿಲ್ಲ?’ ಇದಕ್ಕಿಂತ ಮುಂಚೆ ಮೂಸಾರಿಗೆ ಕೊಡಲಾಗಿದ್ದುದನ್ನು ಅವರು ನಿರಾಕರಿಸಲಿಲ್ಲವೇ? ಅವರು ಹೇಳಿದರು, ‘ಇವೆರಡೂ (ತೌರಾತ್ ಹಾಗೂ ಖುರ್‍ಆನ್) ಪರಸ್ಪರ ಸಮರ್ಥಿಸುವ ಜಾದು ಆಗಿವೆ’. ‘ವಾಸ್ತವದಲ್ಲಿ ನಾವು ಎಲ್ಲವನ್ನು ನಿಷೇಧಿಸುತ್ತೇವೆ’ ಎಂದರವರು!
Verse 49
قُلْ فَأْتُوا۟ بِكِتَـٰبٍ مِّنْ عِندِ ٱللَّهِ هُوَ أَهْدَىٰ مِنْهُمَآ أَتَّبِعْهُ إِن كُنتُمْ صَـٰدِقِينَ
Transliteration qul fatū bikitābin min ʿindi l-lahi huwa ahdā min'humā attabiʿ'hu in kuntum ṣādiqīna
Kannada (ಪ್ರವಾದಿಯರೇ) ಹೇಳಿರಿ, “ನೀವು ಸತ್ಯವಾದಿಗಳಾಗಿದ್ದರೆ ಇವೆರಡಕ್ಕಿಂತಲೂ ಹೆಚ್ಚು ಸನ್ಮಾರ್ಗದರ್ಶನ ನೀಡುವ ಒಂದು ಗ್ರಂಥವನ್ನು ಅಲ್ಲಾಹನ ಬಳಿಯಿಂದ ತನ್ನಿರಿ. ಅದನ್ನು ನಾನು ಅನುಸರಿಸುತ್ತೇನೆ” .
Verse 50
فَإِن لَّمْ يَسْتَجِيبُوا۟ لَكَ فَٱعْلَمْ أَنَّمَا يَتَّبِعُونَ أَهْوَآءَهُمْ ۚ وَمَنْ أَضَلُّ مِمَّنِ ٱتَّبَعَ هَوَىٰهُ بِغَيْرِ هُدًى مِّنَ ٱللَّهِ ۚ إِنَّ ٱللَّهَ لَا يَهْدِى ٱلْقَوْمَ ٱلظَّـٰلِمِينَ
Transliteration fa-in lam yastajībū laka fa-iʿ'lam annamā yattabiʿūna ahwāahum waman aḍallu mimmani ittabaʿa hawāhu bighayri hudan mina l-lahi inna l-laha lā yahdī l-qawma l-ẓālimīna
Kannada ಇನ್ನು ಅವರು ನಿಮಗೆ ಉತ್ತರಿಸದಿದ್ದರೆ ಖಂಡಿತ ಅವರು ತಮ್ಮ ಸ್ವೇಚ್ಚೆಗಳ ಹಿಂಬಾಲಕರೆಂದು ತಿಳಿದುಕೊಳ್ಳಿರಿ. ಅಲ್ಲಾಹನಿಂದ ಯಾವುದೇ ಮಾರ್ಗದರ್ಶನವಿಲ್ಲದೆ ಕೇವಲ ತನ್ನ ಸ್ವೇಚ್ಛೆಯನ್ನು ಅನುಸರಿಸುವವನಿಗಿಂತ ಹೆಚ್ಚು ದಾರಿಗೆಟ್ಟವನು ಯಾರು? ವಾಸ್ತವದಲ್ಲಿ ಅಲ್ಲಾಹನು ಅಕ್ರಮಿ ಜನಾಂಗವನ್ನು ಸನ್ಮಾರ್ಗಕ್ಕೆ ಸೇರಿಸಲಾರನು.
Verse 51
۞ وَلَقَدْ وَصَّلْنَا لَهُمُ ٱلْقَوْلَ لَعَلَّهُمْ يَتَذَكَّرُونَ
Transliteration walaqad waṣṣalnā lahumu l-qawla laʿallahum yatadhakkarūna
Kannada ಅವರು ಚೆನ್ನಾಗಿ ಯೋಚಿಸುವಂತಾಗಲಿ ಎಂದು ನಾವು ಅವರಿಗೆ (ಮಕ್ಕಾದವರಿಗೆ) ಸತತವಾಗಿ ಈ ವಚನವನ್ನು (ಖುರ್‍ಆನನ್ನು) ತಲುಪಿಸಿ ದ್ದೇವೆ.
Verse 52
ٱلَّذِينَ ءَاتَيْنَـٰهُمُ ٱلْكِتَـٰبَ مِن قَبْلِهِۦ هُم بِهِۦ يُؤْمِنُونَ
Transliteration alladhīna ātaynāhumu l-kitāba min qablihi hum bihi yu'minūna
Kannada ಇದಕ್ಕೆ ಮುಂಚೆ ಯಾರಿಗೆ ನಾವು ಗ್ರಂಥ ನೀಡಿದ್ದೇವೋ ಅವರು ಈ ಖುರ್‍ಆನನ್ನು ನಂಬುತ್ತಾರೆ .
Verse 53
وَإِذَا يُتْلَىٰ عَلَيْهِمْ قَالُوٓا۟ ءَامَنَّا بِهِۦٓ إِنَّهُ ٱلْحَقُّ مِن رَّبِّنَآ إِنَّا كُنَّا مِن قَبْلِهِۦ مُسْلِمِينَ
Transliteration wa-idhā yut'lā ʿalayhim qālū āmannā bihi innahu l-ḥaqu min rabbinā innā kunnā min qablihi mus'limīna
Kannada ಅವರ ಮೇಲೆ ಇದನ್ನು ಓದಿ ಹೇಳಿದಾಗ ಅವರು, ‘ನಾವು ಇದರಲ್ಲಿ ವಿಶ್ವಾಸವಿರಿಸಿದ್ದೇವೆ. ಇದು ನಮ್ಮ ಪ್ರಭುವಿನಿಂದ ಬಂದ ಸತ್ಯವಾಗಿದ್ದು, ನಾವು ಇದಕ್ಕೆ ಮೊದಲೇ ಮುಸ್ಲಿಮರಾಗಿ (ಅಲ್ಲಾ ಹನಿಗೆ ವಿಧೇಯರಾಗಿ) ಬಿಟ್ಟಿದ್ದೇವೆ” ಎನ್ನುತ್ತಾರೆ.
Verse 54
أُو۟لَـٰٓئِكَ يُؤْتَوْنَ أَجْرَهُم مَّرَّتَيْنِ بِمَا صَبَرُوا۟ وَيَدْرَءُونَ بِٱلْحَسَنَةِ ٱلسَّيِّئَةَ وَمِمَّا رَزَقْنَـٰهُمْ يُنفِقُونَ
Transliteration ulāika yu'tawna ajrahum marratayni bimā ṣabarū wayadraūna bil-ḥasanati l-sayi-ata wamimmā razaqnāhum yunfiqūna
Kannada ಸಹನೆ ತೋರಿದ ಕಾರಣಕ್ಕೆ ಅವರಿಗೆ ಅವರ ಸತ್ಫಲವನ್ನು ಎರಡು ಬಾರಿ ಕೊಡಲಾಗುವುದು. ಅವರು ಕೆಡುಕುಗಳನ್ನು ಒಳಿತಿನಿಂದ ತಡೆಯುತ್ತಾರೆ . ಅವರಿಗೆ ನಾವು ನೀಡಿರುವುದರಿಂದ ಖರ್ಚು ಮಾಡುತ್ತಾರೆ.
Verse 55
وَإِذَا سَمِعُوا۟ ٱللَّغْوَ أَعْرَضُوا۟ عَنْهُ وَقَالُوا۟ لَنَآ أَعْمَـٰلُنَا وَلَكُمْ أَعْمَـٰلُكُمْ سَلَـٰمٌ عَلَيْكُمْ لَا نَبْتَغِى ٱلْجَـٰهِلِينَ
Transliteration wa-idhā samiʿū l-laghwa aʿraḍū ʿanhu waqālū lanā aʿmālunā walakum aʿmālukum salāmun ʿalaykum lā nabtaghī l-jāhilīna
Kannada ಅವರು ಅನಗತ್ಯ ಮಾತನ್ನು ಕೇಳಿದರೆ, ಅದರಿಂದ ವಿಮುಖರಾಗಿ ಹೀಗೆ ಹೇಳುವರು. ‘ನಮ್ಮ ಕರ್ಮ ನಮಗೆ, ನಿಮ್ಮ ಕರ್ಮ ನಿಮಗೆ, ನಿಮಗೆ ಸಲಾಮ್, ಮೂಢರ ಜೊತೆ ನಾವಿಲ್ಲ’.
Verse 56
إِنَّكَ لَا تَهْدِى مَنْ أَحْبَبْتَ وَلَـٰكِنَّ ٱللَّهَ يَهْدِى مَن يَشَآءُ ۚ وَهُوَ أَعْلَمُ بِٱلْمُهْتَدِينَ
Transliteration innaka lā tahdī man aḥbabta walākinna l-laha yahdī man yashāu wahuwa aʿlamu bil-muh'tadīna
Kannada (ಪ್ರವಾದಿಯರೇ,) ನೀವಿಷ್ಟಪಟ್ಟವರನ್ನು ಸನ್ಮಾರ್ಗಕ್ಕೆ ಸೇರಿಸಲಾರಿರಿ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ. ಸನ್ಮಾರ್ಗ ಪ್ರಾಪ್ತರನ್ನು ಅವನು ಚೆನ್ನಾಗಿ ಬಲ್ಲನು.
Verse 57
وَقَالُوٓا۟ إِن نَّتَّبِعِ ٱلْهُدَىٰ مَعَكَ نُتَخَطَّفْ مِنْ أَرْضِنَآ ۚ أَوَلَمْ نُمَكِّن لَّهُمْ حَرَمًا ءَامِنًا يُجْبَىٰٓ إِلَيْهِ ثَمَرَٰتُ كُلِّ شَىْءٍ رِّزْقًا مِّن لَّدُنَّا وَلَـٰكِنَّ أَكْثَرَهُمْ لَا يَعْلَمُونَ
Transliteration waqālū in nattabiʿi l-hudā maʿaka nutakhaṭṭaf min arḍinā awalam numakkin lahum ḥaraman āminan yuj'bā ilayhi thamarātu kulli shayin riz'qan min ladunnā walākinna aktharahum lā yaʿlamūna
Kannada “ನಾವು ನಿಮ್ಮೊಂದಿಗೆ ಈ ಸನ್ಮಾರ್ಗವನ್ನು ಅನು ಸರಿಸಿದರೆ, ನಾವು ನಮ್ಮ ನಾಡಿನಿಂದ ಅಪಹೃತರಾ ಗುತ್ತೇವೆ” ಎಂದು ಅವರು ಹೇಳುತ್ತಾರೆ. (ಅಲ್ಲಾ ಹು ಕೇಳುತ್ತಾನೆ;) ಎಲ್ಲ ತರದ ಹಣ್ಣು ಹಂಪಲುಗಳು ನಮ್ಮ ಕಡೆಯಿಂದ ಜೀವನಾಧಾರವಾಗಿ ಹರಿದು ಬರುವಂತಹ ಒಂದು ನಿರ್ಭಯದ ಹರಮನ್ನು (ಪವಿತ್ರ ಸ್ಥಳವನ್ನು) ನಾವು ಅವರಿಗೆ ಅನುಕೂಲ ಮಾಡಿಕೊಟ್ಟಿಲ್ಲವೇ? ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
Verse 58
وَكَمْ أَهْلَكْنَا مِن قَرْيَةٍۭ بَطِرَتْ مَعِيشَتَهَا ۖ فَتِلْكَ مَسَـٰكِنُهُمْ لَمْ تُسْكَن مِّنۢ بَعْدِهِمْ إِلَّا قَلِيلًا ۖ وَكُنَّا نَحْنُ ٱلْوَٰرِثِينَ
Transliteration wakam ahlaknā min qaryatin baṭirat maʿīshatahā fatil'ka masākinuhum lam tus'kan min baʿdihim illā qalīlan wakunnā naḥnu l-wārithīna
Kannada ತಮಗೆ ಲಭಿಸಿದ ಜೀವನ ವೈಭವಗಳ ಬಗೆಗೆ ಅಹಂಭಾವ ಹೊಂದಿದ್ದ ಎಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ. ಅವರ ಆ ನಿವಾಸಗಳು ಪಾಳು ಬಿದ್ದಿರುವುದನ್ನು ನೋಡಿರಿ. ಅವರ ನಂತರ ಅಪರೂಪದಲ್ಲೇ ಹೊರತು ಅಲ್ಲಿ ಜನವಾಸವಿರಲಿಲ್ಲ. ಕೊನೆಗೆ ನಾವೇ ಅದರ ವಾರೀಸುದಾರರಾದೆವು .
Verse 59
وَمَا كَانَ رَبُّكَ مُهْلِكَ ٱلْقُرَىٰ حَتَّىٰ يَبْعَثَ فِىٓ أُمِّهَا رَسُولًا يَتْلُوا۟ عَلَيْهِمْ ءَايَـٰتِنَا ۚ وَمَا كُنَّا مُهْلِكِى ٱلْقُرَىٰٓ إِلَّا وَأَهْلُهَا ظَـٰلِمُونَ
Transliteration wamā kāna rabbuka muh'lika l-qurā ḥattā yabʿatha fī ummihā rasūlan yatlū ʿalayhim āyātinā wamā kunnā muh'likī l-qurā illā wa-ahluhā ẓālimūna
Kannada ತಮ್ಮ ಪ್ರಭು, ನಾಡುಗಳ ಕೇಂದ್ರದಲ್ಲಿ, ಅವರಿಗೆ ನಮ್ಮ ಸೂಕ್ತಗಳನ್ನು ಓದಿ ಹೇಳುವ ಓರ್ವ ದೂತರನ್ನು ನಿಯೋಗಿಸುವವರೆಗೂ ಆ ನಾಡುಗಳನ್ನು ನಾಶಗೊಳಿಸುವವನಾಗಲಿಲ್ಲ. ಊರಿನವರು ಅಕ್ರಮಿಗಳಾಗಿ ಬಿಡುವಾಗಲೇ ಹೊರತು ನಾವು ಅವರನ್ನು ನಾಶಗೊಳಿಸುವವರಾಗಲಿಲ್ಲ .
Verse 60
وَمَآ أُوتِيتُم مِّن شَىْءٍ فَمَتَـٰعُ ٱلْحَيَوٰةِ ٱلدُّنْيَا وَزِينَتُهَا ۚ وَمَا عِندَ ٱللَّهِ خَيْرٌ وَأَبْقَىٰٓ ۚ أَفَلَا تَعْقِلُونَ
Transliteration wamā ūtītum min shayin famatāʿu l-ḥayati l-dun'yā wazīnatuhā wamā ʿinda l-lahi khayrun wa-abqā afalā taʿqilūna
Kannada ಸುಖ ಸವಲತ್ತುಗಳಾಗಿ ನಿಮಗೆ ಏನಾದರೂ ಕೊಡಲಾಗಿದ್ದರೆ ಅದು ಕೇವಲ ಲೌಕಿಕ ಜೀವನದ ಭೋಗ ಸಾಧನ ಹಾಗೂ ಅದರ ಅಲಂಕಾರವಾ ಗಿದೆ. ಆದರೆ ಅಲ್ಲಾಹನ ಬಳಿಯಲ್ಲಿರುವುದೇ ಇದಕ್ಕಿಂತ ಉತ್ತಮ ಹಾಗೂ ಅನಶ್ವರ. ನೀವು ಚಿಂತಿಸುವುದಿಲ್ಲವೇ?
Verse 61
أَفَمَن وَعَدْنَـٰهُ وَعْدًا حَسَنًا فَهُوَ لَـٰقِيهِ كَمَن مَّتَّعْنَـٰهُ مَتَـٰعَ ٱلْحَيَوٰةِ ٱلدُّنْيَا ثُمَّ هُوَ يَوْمَ ٱلْقِيَـٰمَةِ مِنَ ٱلْمُحْضَرِينَ
Transliteration afaman waʿadnāhu waʿdan ḥasanan fahuwa lāqīhi kaman mattaʿnāhu matāʿa l-ḥayati l-dun'yā thumma huwa yawma l-qiyāmati mina l-muḥ'ḍarīna
Kannada ಯಾರಿಗೆ ನಾವು ಉತ್ತಮ ವಾಗ್ದಾನ ಮಾಡಿದ್ದು, ಆಮೇಲೆ ಅದನ್ನವನು ಪಡೆದನೋ, ಅವನು, ನಾವು ಕೇವಲ ಲೌಕಿಕ ಜೀವನದ ಸುಖಭೋಗಗಳ ಅನುಭವ ನೀಡಿದ್ದು ಆ ಬಳಿಕ ಪರಲೋಕದಲ್ಲಿ ನರಕ ಶಿಕ್ಷೆಗಾಗಿ ಹಾಜರುಗೊಳಿಸಲ್ಪಡುವ ವ್ಯಕ್ತಿಯಂತೆ ಆಗಬಲ್ಲನೇ?
Verse 62
وَيَوْمَ يُنَادِيهِمْ فَيَقُولُ أَيْنَ شُرَكَآءِىَ ٱلَّذِينَ كُنتُمْ تَزْعُمُونَ
Transliteration wayawma yunādīhim fayaqūlu ayna shurakāiya alladhīna kuntum tazʿumūna
Kannada ಅಲ್ಲಾಹು ಅವರನ್ನು ಕೂಗಿ ಕರೆದು, “ನೀವು ಕುತರ್ಕ ಮಾಡುತ್ತಿದ್ದ ನನ್ನ ಸಹಭಾಗಿಗಳು ಎಲ್ಲಿದ್ದಾರೆ?” ಎಂದು ಕೇಳುವ ಆ ದಿನವನ್ನು ನೆನಪಿಸಿರಿ.
Verse 63
قَالَ ٱلَّذِينَ حَقَّ عَلَيْهِمُ ٱلْقَوْلُ رَبَّنَا هَـٰٓؤُلَآءِ ٱلَّذِينَ أَغْوَيْنَآ أَغْوَيْنَـٰهُمْ كَمَا غَوَيْنَا ۖ تَبَرَّأْنَآ إِلَيْكَ ۖ مَا كَانُوٓا۟ إِيَّانَا يَعْبُدُونَ
Transliteration qāla alladhīna ḥaqqa ʿalayhimu l-qawlu rabbanā hāulāi alladhīna aghwaynā aghwaynāhum kamā ghawaynā tabarranā ilayka mā kānū iyyānā yaʿbudūna
Kannada ಅಂದು ಯಾರ ಮೇಲೆ (ಶಿಕ್ಷೆಯ) ಮಾತು ನಿಜವಾಗುವುದೋ ಅವರು, “ನಮ್ಮ ಪ್ರಭೂ, ಇವರು ನಾವು ದಾರಿಗೆಡಿಸಿದ ಜನರು. ನಾವು ಸ್ವತಃ ದಾರಿಗೆಟ್ಟಂತೆಯೇ ಇವರನ್ನು ನಾವು ದಾರಿಗೆಡಿಸಿದ್ದು ನಿಜ. ಆದರೆ ನಾವು ನಿನ್ನ ಮುಂದೆ ಅವರಿಗೆ ಸಂಬಂಧಿಸಿದ ಜವಾಬ್ದಾರಿಯನ್ನು ಬಿಟ್ಟು ಕೊಡುತ್ತಿದ್ದೇವೆ. ಇವರು ನಮ್ಮನ್ನು ಆರಾಧಿಸುತ್ತಿರಲಿಲ್ಲ”ಎಂದು ಹೇಳುವರು.
Verse 64
وَقِيلَ ٱدْعُوا۟ شُرَكَآءَكُمْ فَدَعَوْهُمْ فَلَمْ يَسْتَجِيبُوا۟ لَهُمْ وَرَأَوُا۟ ٱلْعَذَابَ ۚ لَوْ أَنَّهُمْ كَانُوا۟ يَهْتَدُونَ
Transliteration waqīla id'ʿū shurakāakum fadaʿawhum falam yastajībū lahum wara-awū l-ʿadhāba law annahum kānū yahtadūna
Kannada ಇವರೊಡನೆ ‘ನಿಮ್ಮ ಸಹಭಾಗಿಗಳನ್ನು ಕರೆಯಿರಿ’ ಎನ್ನಲಾಗುವುದು. ಆಗ ಇವರು ಅವರನ್ನು ಕರೆದು ನೋಡುವರು. ಆಗ ಅವರು ಇವರಿಗೆ ಉತ್ತರ ಕೊಡಲಾರರು. ಪರಂತು ಇವರು ಶಿಕ್ಷೆಯನ್ನು ಕಣ್ಣಾರೆ ಕಾಣುವರು. ಇವರು ಸನ್ಮಾರ್ಗ ಪ್ರಾಪ್ತರಾಗಿದ್ದರೆ ಎಷ್ಟು ಚೆನ್ನಾಗಿತ್ತು!
Verse 65
وَيَوْمَ يُنَادِيهِمْ فَيَقُولُ مَاذَآ أَجَبْتُمُ ٱلْمُرْسَلِينَ
Transliteration wayawma yunādīhim fayaqūlu mādhā ajabtumu l-mur'salīna
Kannada ಅಲ್ಲಾಹು ಇವರನ್ನು ಕರೆದು, ಆಮೇಲೆ ‘ಸಂದೇಶ ವಾಹಕರಿಗೆ ನೀವೇನು ಉತ್ತರ ಕೊಟ್ಟಿದ್ದೀರಿ?’ ಎಂದು ಕೇಳುವ ದಿನವನ್ನು ನೆನೆಯಿರಿ.
Verse 66
فَعَمِيَتْ عَلَيْهِمُ ٱلْأَنۢبَآءُ يَوْمَئِذٍ فَهُمْ لَا يَتَسَآءَلُونَ
Transliteration faʿamiyat ʿalayhimu l-anbāu yawma-idhin fahum lā yatasāalūna
Kannada ಅಂದು (ಉತ್ತರಿಸಿ ಪಾರಾಗುವ) ಸಮಾಚಾರಗಳು ಇವರಿಗೆ ಕುರುಡಾಗಿ ಬಿಡುವವು. ತನ್ನಿಮಿತ್ತ ಇವರು ಪರಸ್ಪರ (ಆ ಬಗ್ಗೆ) ಕೇಳಲಾರರು.
Verse 67
فَأَمَّا مَن تَابَ وَءَامَنَ وَعَمِلَ صَـٰلِحًا فَعَسَىٰٓ أَن يَكُونَ مِنَ ٱلْمُفْلِحِينَ
Transliteration fa-ammā man tāba waāmana waʿamila ṣāliḥan faʿasā an yakūna mina l-muf'liḥīna
Kannada ಆದರೆ ಯಾರು ಪಶ್ಚಾತ್ತಾಪಪಟ್ಟು ಮರಳಿ ಸತ್ಯವಿಶ್ವಾಸ ಸ್ವೀಕರಿಸಿ ಸತ್ಕರ್ಮವೆಸಗುತ್ತಾರೋ ಅವನು ವಿಜಯಿಗಳಲ್ಲಾಗಬಹುದು.
Verse 68
وَرَبُّكَ يَخْلُقُ مَا يَشَآءُ وَيَخْتَارُ ۗ مَا كَانَ لَهُمُ ٱلْخِيَرَةُ ۚ سُبْحَـٰنَ ٱللَّهِ وَتَعَـٰلَىٰ عَمَّا يُشْرِكُونَ
Transliteration warabbuka yakhluqu mā yashāu wayakhtāru mā kāna lahumu l-khiyaratu sub'ḥāna l-lahi wataʿālā ʿammā yush'rikūna
Kannada ನಿಮ್ಮ ಪ್ರಭು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ, ತಾನಿಚ್ಛಿಸಿದ್ದನ್ನು ಆರಿಸಿಕೊಳ್ಳುತ್ತಾನೆ. ಆಯ್ಕೆ ಮಾಡುವ ಅಧಿಕಾರ ಇವರಿಗಿಲ್ಲ. ಅಲ್ಲಾಹು ಪರಮ ಪಾವನನು. ಇವರು ಪಾಲುಗೊಳಿಸುತ್ತಿರುವ ದೇವ ಸಹಭಾಗಿತ್ವದಿಂದ ಮುಕ್ತನಾದ ಪರಮೋನ್ನತನು.
Verse 69
وَرَبُّكَ يَعْلَمُ مَا تُكِنُّ صُدُورُهُمْ وَمَا يُعْلِنُونَ
Transliteration warabbuka yaʿlamu mā tukinnu ṣudūruhum wamā yuʿ'linūna
Kannada ತಮ್ಮ ಪ್ರಭು, ಇವರು ತಮ್ಮ ಹೃದಯಗಳಲ್ಲಿ ಬಚ್ಚಿಟ್ಟಿರುವುದನ್ನೂ ಪ್ರಕಟಗೊಳಿಸುವುದನ್ನೂ ತಿಳಿಯುವನು.
Verse 70
وَهُوَ ٱللَّهُ لَآ إِلَـٰهَ إِلَّا هُوَ ۖ لَهُ ٱلْحَمْدُ فِى ٱلْأُولَىٰ وَٱلْـَٔاخِرَةِ ۖ وَلَهُ ٱلْحُكْمُ وَإِلَيْهِ تُرْجَعُونَ
Transliteration wahuwa l-lahu lā ilāha illā huwa lahu l-ḥamdu fī l-ūlā wal-ākhirati walahu l-ḥuk'mu wa-ilayhi tur'jaʿūna
Kannada ಅವನೇ ಅಲ್ಲಾಹು, ಅವನ ಹೊರತು ಆರಾಧ್ಯನಿಲ್ಲ. ಇಹದಲ್ಲೂ - ಪರದಲ್ಲೂ ಸಕಲ ಸ್ತುತಿಯು ಅವನಿಗೇ ಮೀಸಲು. ಆಜ್ಞಾಧಿಕಾರವೂ ಅವನದ್ದು. ನೀವು ಅವನ ಕಡೆಗೇ ಮರಳಿ ಸಲ್ಪಡುವಿರಿ.
Verse 71
قُلْ أَرَءَيْتُمْ إِن جَعَلَ ٱللَّهُ عَلَيْكُمُ ٱلَّيْلَ سَرْمَدًا إِلَىٰ يَوْمِ ٱلْقِيَـٰمَةِ مَنْ إِلَـٰهٌ غَيْرُ ٱللَّهِ يَأْتِيكُم بِضِيَآءٍ ۖ أَفَلَا تَسْمَعُونَ
Transliteration qul ara-aytum in jaʿala l-lahu ʿalaykumu al-layla sarmadan ilā yawmi l-qiyāmati man ilāhun ghayru l-lahi yatīkum biḍiyāin afalā tasmaʿūna
Kannada (ಪ್ರವಾದಿವರ್ಯರೇ,) ಹೇಳಿರಿ, ಅಲ್ಲಾಹನು ಅಂತ್ಯ ದಿನದವರೆಗೂ ನಿಮ್ಮ ಮೇಲೆ ಶಾಶ್ವತವಾಗಿ ರಾತ್ರಿಯನ್ನೇ ನೆಲೆನಿಲ್ಲಿಸುತ್ತಿದ್ದರೆ ನಿಮಗೆ ಪ್ರಕಾಶವನ್ನು ತಂದು ಕೊಡಲು ಅಲ್ಲಾಹನ ಹೊರತು ಬೇರಾವ ದೇವನು ಇದ್ದಾನೆಂದು ನೀವು ಹೇಳಿಕೊಡುವಿರಾ ? ಹೀಗಿದ್ದು ನೀವಿದನ್ನು ಕೇಳಿ ಅರ್ಥ ಮಾಡುವುದಿಲ್ಲವೇ?
Verse 72
قُلْ أَرَءَيْتُمْ إِن جَعَلَ ٱللَّهُ عَلَيْكُمُ ٱلنَّهَارَ سَرْمَدًا إِلَىٰ يَوْمِ ٱلْقِيَـٰمَةِ مَنْ إِلَـٰهٌ غَيْرُ ٱللَّهِ يَأْتِيكُم بِلَيْلٍ تَسْكُنُونَ فِيهِ ۖ أَفَلَا تُبْصِرُونَ
Transliteration qul ara-aytum in jaʿala l-lahu ʿalaykumu l-nahāra sarmadan ilā yawmi l-qiyāmati man ilāhun ghayru l-lahi yatīkum bilaylin taskunūna fīhi afalā tub'ṣirūna
Kannada ಹೇಳಿರಿ, ಅಲ್ಲಾಹನು ನಿಮ್ಮ ಮೇಲೆ ಅಂತ್ಯ ದಿನದವರೆಗೆ ಶಾಶ್ವತವಾಗಿ ಹಗಲನ್ನೇ ನೆಲೆನಿಲ್ಲಿಸುತ್ತಿದ್ದರೆ ನೀವು ಶಾಂತರಾಗುವ ರಾತ್ರಿಯನ್ನು ನಿಮಗೆ ತಂದು ಕೊಡಲು ಅಲ್ಲಾಹನ ಹೊರತು ಬೇರಾವ ದೇವನು ಇದ್ದಾನೆಂದು ನೀವೊಮ್ಮೆ ಹೇಳಿಕೊಡುವಿರಾ? ಹೀಗಿದ್ದು ನೀವಿದನ್ನು ಕಂಡರಿಯುವುದಿಲ್ಲವೇ?
Verse 73
وَمِن رَّحْمَتِهِۦ جَعَلَ لَكُمُ ٱلَّيْلَ وَٱلنَّهَارَ لِتَسْكُنُوا۟ فِيهِ وَلِتَبْتَغُوا۟ مِن فَضْلِهِۦ وَلَعَلَّكُمْ تَشْكُرُونَ
Transliteration wamin raḥmatihi jaʿala lakumu al-layla wal-nahāra litaskunū fīhi walitabtaghū min faḍlihi walaʿallakum tashkurūna
Kannada ಅಲ್ಲಾಹನ ಕಾರುಣ್ಯದಿಂದ ಅವನು ನಿಮಗೆ ರಾತ್ರಿಯನ್ನೂ, ಹಗಲನ್ನೂ ಉಂಟುಮಾಡಿರುವನು. ನೀವು ರಾತ್ರಿ ಕಾಲದಲ್ಲಿ ವಿಶ್ರಾಂತಿ ಪಡೆಯಲಿಕ್ಕೂ, ಹಗಲು ಹೊತ್ತಿನಲ್ಲಿ ಅವನ ಅನುಗ್ರಹವನ್ನು ಅರಸಲಿಕ್ಕೂ, ನೀವು ಕೃತಜ್ಞರಾಗಲಿಕ್ಕೂ .
Verse 74
وَيَوْمَ يُنَادِيهِمْ فَيَقُولُ أَيْنَ شُرَكَآءِىَ ٱلَّذِينَ كُنتُمْ تَزْعُمُونَ
Transliteration wayawma yunādīhim fayaqūlu ayna shurakāiya alladhīna kuntum tazʿumūna
Kannada ಅಲ್ಲಾಹು ಅವರನ್ನು ಕರೆದು, ‘ನೀವು ದುರ್ವಾದ ಹೂಡುತ್ತಿದ್ದ ನನ್ನ ಸಹಭಾಗಿಗಳು ಎಲ್ಲಿದ್ದಾರೆ? ಎಂದು ಕೇಳುವ ಆ ದಿನವನ್ನು ನೆನಪಿಡಿರಿ.
Verse 75
وَنَزَعْنَا مِن كُلِّ أُمَّةٍ شَهِيدًا فَقُلْنَا هَاتُوا۟ بُرْهَـٰنَكُمْ فَعَلِمُوٓا۟ أَنَّ ٱلْحَقَّ لِلَّهِ وَضَلَّ عَنْهُم مَّا كَانُوا۟ يَفْتَرُونَ
Transliteration wanazaʿnā min kulli ummatin shahīdan faqul'nā hātū bur'hānakum faʿalimū anna l-ḥaqa lillahi waḍalla ʿanhum mā kānū yaftarūna
Kannada ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಹೊರತರುತ್ತೇವೆ. ಆಮೇಲೆ ನಿಮ್ಮ ಪುರಾವೆ ತನ್ನಿರಿ ಎಂದು (ಸತ್ಯ ನಿಷೇಧಿಗಳಲ್ಲಿ) ಹೇಳುತ್ತೇವೆ. ಆಗ (ದೇವತ್ವದ) ಹಕ್ಕು ಅಲ್ಲಾಹನಿಗೆಂದು ಅವರಿಗೆ ತಿಳಿದು ಬರುವುದು. ಅವರು ಸೃಷ್ಟಿಸಿಕೊಂಡಿರುವ ಎಲ್ಲ ಮಿಥ್ಯಗಳೂ ಅವರನ್ನು ಬಿಟ್ಟು ಮಾಯವಾಗುವುದು.
Verse 76
۞ إِنَّ قَـٰرُونَ كَانَ مِن قَوْمِ مُوسَىٰ فَبَغَىٰ عَلَيْهِمْ ۖ وَءَاتَيْنَـٰهُ مِنَ ٱلْكُنُوزِ مَآ إِنَّ مَفَاتِحَهُۥ لَتَنُوٓأُ بِٱلْعُصْبَةِ أُو۟لِى ٱلْقُوَّةِ إِذْ قَالَ لَهُۥ قَوْمُهُۥ لَا تَفْرَحْ ۖ إِنَّ ٱللَّهَ لَا يُحِبُّ ٱلْفَرِحِينَ
Transliteration inna qārūna kāna min qawmi mūsā fabaghā ʿalayhim waātaynāhu mina l-kunūzi mā inna mafātiḥahu latanūu bil-ʿuṣ'bati ulī l-quwati idh qāla lahu qawmuhu lā tafraḥ inna l-laha lā yuḥibbu l-fariḥīna
Kannada ಖಾರೂನನು, ಮೂಸಾರ ಜನಾಂಗಕ್ಕೆ ಸೇರಿದ ಒಬ್ಬ ವ್ಯಕ್ತಿಯಾಗಿದ್ದನು. ನಂತರ ಅವನು ತನ್ನ ಜನಾಂಗದ ಮೇಲೆ ದಿಕ್ಕಾರ ತೋರಿದನು. ನಾವು ಅವನಿಗೆ ದಾರಾಳ ಧನ ಭಂಡಾರಗಳನ್ನು ನೀಡಿದೆವು. ಅದರ ಬೀಗದ ಕೈಗಳೇ ಬಲಶಾಲಿಗಳ ಒಂದು ತಂಡಕ್ಕೆ ಭಾರವಾಗುವಷ್ಟಿದ್ದುವು. ಒಮ್ಮೆ ಅವನ ಜನಾಂಗದವರು ಅವನೊಡನೆ ಹೇಳಿದರು, ‘ಹಿರಿಹಿಗ್ಗದಿರು. ಹಿರಿಹಿಗ್ಗುವವರನ್ನು ಅಲ್ಲಾಹು ಮೆಚ್ಚುವುದಿಲ್ಲ’.
Verse 77
وَٱبْتَغِ فِيمَآ ءَاتَىٰكَ ٱللَّهُ ٱلدَّارَ ٱلْـَٔاخِرَةَ ۖ وَلَا تَنسَ نَصِيبَكَ مِنَ ٱلدُّنْيَا ۖ وَأَحْسِن كَمَآ أَحْسَنَ ٱللَّهُ إِلَيْكَ ۖ وَلَا تَبْغِ ٱلْفَسَادَ فِى ٱلْأَرْضِ ۖ إِنَّ ٱللَّهَ لَا يُحِبُّ ٱلْمُفْسِدِينَ
Transliteration wa-ib'taghi fīmā ātāka l-lahu l-dāra l-ākhirata walā tansa naṣībaka mina l-dun'yā wa-aḥsin kamā aḥsana l-lahu ilayka walā tabghi l-fasāda fī l-arḍi inna l-laha lā yuḥibbu l-muf'sidīna
Kannada ಅಲ್ಲಾಹನು ನಿನಗೆ ನೀಡಿರುವ ಸಂಪತ್ತಿನಿಂದ ನೀನು ಪರಲೋಕ ಗುಣವನ್ನು ಹುಡುಕು. ಇಹ ಲೋಕದಿಂದಿರುವ ನಿನ್ನ ಪಾಲನ್ನು ಮರೆಯದಿರು . ಅಲ್ಲಾಹು ನಿನಗೆ ಒಳಿತು ಮಾಡಿದಂತೆ ನೀನೂ (ಇತರರಿಗೆ) ಒಳಿತು ಮಾಡು. ಭೂಮಿಯಲ್ಲಿ ಕ್ಷೋಭೆ ಸೃಷ್ಟಿಸಲು ಹೆಣಗಬೇಡ. ಅಲ್ಲಾಹು ಕ್ಷೋಭೆ ಸೃಷ್ಟಿಸುವವರನ್ನು ಮೆಚ್ಚುವುದಿಲ್ಲ.
Verse 78
قَالَ إِنَّمَآ أُوتِيتُهُۥ عَلَىٰ عِلْمٍ عِندِىٓ ۚ أَوَلَمْ يَعْلَمْ أَنَّ ٱللَّهَ قَدْ أَهْلَكَ مِن قَبْلِهِۦ مِنَ ٱلْقُرُونِ مَنْ هُوَ أَشَدُّ مِنْهُ قُوَّةً وَأَكْثَرُ جَمْعًا ۚ وَلَا يُسْـَٔلُ عَن ذُنُوبِهِمُ ٱلْمُجْرِمُونَ
Transliteration qāla innamā ūtītuhu ʿalā ʿil'min ʿindī awalam yaʿlam anna l-laha qad ahlaka min qablihi mina l-qurūni man huwa ashaddu min'hu quwwatan wa-aktharu jamʿan walā yus'alu ʿan dhunūbihimu l-muj'rimūna
Kannada ಅದಕ್ಕೆ ಅವನು, ‘ಇದು ನನ್ನ ಬಳಿಯಿರುವ ಜ್ಞಾನ ದಿಂದಾಗಿ ನನಗೆ ಒದಗಿದೆ’ ಎಂದನು. ಇದಕ್ಕಿಂತ ಮುಂಚೆ ಅವನಿಗಿಂತಲೂ ಹೆಚ್ಚು ಶಕ್ತಿ ಹಾಗೂ ಜನಬಲವನ್ನು ಹೊಂದಿದ್ದ ತಲೆಮಾರುಗಳನ್ನು ಅಲ್ಲಾಹನು ನಾಶಗೊಳಿಸಿದ್ದನ್ನು ಅವನು ತಿಳಿದಿಲ್ಲವೇ? ಅಪರಾಧಿಗಳನ್ನು (ಶಿಕ್ಷಿಸಲು) ಅವರ ಪಾಪಗಳ ಕುರಿತು ಕೇಳಿ ತಿಳಿಯಬೇಕಿಲ್ಲ .
Verse 79
فَخَرَجَ عَلَىٰ قَوْمِهِۦ فِى زِينَتِهِۦ ۖ قَالَ ٱلَّذِينَ يُرِيدُونَ ٱلْحَيَوٰةَ ٱلدُّنْيَا يَـٰلَيْتَ لَنَا مِثْلَ مَآ أُوتِىَ قَـٰرُونُ إِنَّهُۥ لَذُو حَظٍّ عَظِيمٍ
Transliteration fakharaja ʿalā qawmihi fī zīnatihi qāla alladhīna yurīdūna l-ḥayata l-dun'yā yālayta lanā mith'la mā ūtiya qārūnu innahu ladhū ḥaẓẓin ʿaẓīmin
Kannada ಹಾಗೆ ಅವನು ತನ್ನ ಜನಾಂಗದ ಮುಂದೆ ತನ್ನ ಸೊಬಗಿನೊಂದಿಗೆ ಹೊರಟನು. ಲೌಕಿಕ ಜೀವನ ವನ್ನು ಬಯಸುವವರು `ಹಾ, ಖಾರೂನನಿಗೆ ದೊರೆತದ್ದು ನಮಗೂ ಸಿಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಇವನು ಮಹಾ ಭಾಗ್ಯಶಾಲಿ ಎಂದರು.
Verse 80
وَقَالَ ٱلَّذِينَ أُوتُوا۟ ٱلْعِلْمَ وَيْلَكُمْ ثَوَابُ ٱللَّهِ خَيْرٌ لِّمَنْ ءَامَنَ وَعَمِلَ صَـٰلِحًا وَلَا يُلَقَّىٰهَآ إِلَّا ٱلصَّـٰبِرُونَ
Transliteration waqāla alladhīna ūtū l-ʿil'ma waylakum thawābu l-lahi khayrun liman āmana waʿamila ṣāliḥan walā yulaqqāhā illā l-ṣābirūna
Kannada ಆದರೆ ಜ್ಞಾನವಿದ್ದವರು, “(ಹಾಗೆ ಹೇಳದಿರಿ). ಅಯ್ಯೋ ನಿಮ್ಮ ನಾಶವೇ! ಸತ್ಯವಿಶ್ವಾಸವನ್ನು ಸ್ವೀಕರಿಸಿ, ಸತ್ಕರ್ಮವೆಸಗಿದವರಿಗೆ ಸಿಗುವ ಅಲ್ಲಾಹನ ಪ್ರತಿಫಲವೇ ಉತ್ತಮ. ಕ್ಷಮಾ ಶೀಲರಿಗಲ್ಲದೆ ಬೇರಾರಿಗೂ ಅದನ್ನು ಕೊಡಲಾಗುವುದಿಲ್ಲ” ಎಂದು ಹೇಳಿದರು.
Verse 81
فَخَسَفْنَا بِهِۦ وَبِدَارِهِ ٱلْأَرْضَ فَمَا كَانَ لَهُۥ مِن فِئَةٍ يَنصُرُونَهُۥ مِن دُونِ ٱللَّهِ وَمَا كَانَ مِنَ ٱلْمُنتَصِرِينَ
Transliteration fakhasafnā bihi wabidārihi l-arḍa famā kāna lahu min fi-atin yanṣurūnahu min dūni l-lahi wamā kāna mina l-muntaṣirīna
Kannada ಕೊನೆಗೆ ನಾವು ಅವನನ್ನೂ ಅವನ ಮನೆಯನ್ನೂ ಭೂಮಿಯ ಆಳಕ್ಕೆ ಇಳಿಸಿದೆವು. ಆಗ ಅಲ್ಲಾಹ ನನ್ನು ಬಿಟ್ಟು ಅವನ ನೆರವಿಗೆ ಬರಲು ಅವನಿಗೆ ಯಾವ ತಂಡವೂ ಇರಲಿಲ್ಲ. ಸ್ವಯಂ ರಕ್ಷಣೆ ಪಡೆಯಲಿಕ್ಕೂ ಅವನಿಂದಾಗಲಿಲ್ಲ.
Verse 82
وَأَصْبَحَ ٱلَّذِينَ تَمَنَّوْا۟ مَكَانَهُۥ بِٱلْأَمْسِ يَقُولُونَ وَيْكَأَنَّ ٱللَّهَ يَبْسُطُ ٱلرِّزْقَ لِمَن يَشَآءُ مِنْ عِبَادِهِۦ وَيَقْدِرُ ۖ لَوْلَآ أَن مَّنَّ ٱللَّهُ عَلَيْنَا لَخَسَفَ بِنَا ۖ وَيْكَأَنَّهُۥ لَا يُفْلِحُ ٱلْكَـٰفِرُونَ
Transliteration wa-aṣbaḥa alladhīna tamannaw makānahu bil-amsi yaqūlūna wayka-anna l-laha yabsuṭu l-riz'qa liman yashāu min ʿibādihi wayaqdiru lawlā an manna l-lahu ʿalaynā lakhasafa binā wayka-annahu lā yuf'liḥu l-kāfirūna
Kannada ನಿನ್ನೆಯವರೆಗೆ ಅವನ ಸ್ಥಾನಮಾನಕ್ಕೆ ಆಶೆಪಡು ತ್ತಿದ್ದವರು ಇಂದು ಬೆಳಿಗ್ಗೆ, “ಅಯ್ಯೋ! ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಚಿಸಿದವರಿಗೆ ಆಹಾರ ವನ್ನು ಸಮೃದ್ಧವಾಗಿ ನೀಡುತ್ತಾನೆ. ಅದನ್ನು ಪರಿ ಮಿತವಾಗಿಯೂ ಕೊಡುತ್ತಾನೆ. ಅಲ್ಲಾಹು ನಮ್ಮ ಮೇಲೆ ದಯೆ ತೋರದಿರುತ್ತಿದ್ದರೆ ನಮ್ಮನ್ನೂ ಪಾತಾಳಕ್ಕೆ ಇಳಿಸಿಬಿಡುತ್ತಿದ್ದನು. ಅಯ್ಯೋ, ಸತ್ಯನಿಷೇಧಿಗಳು ಜಯಿಸುವುದಿಲ್ಲ” ಎಂದರು.
Verse 83
تِلْكَ ٱلدَّارُ ٱلْـَٔاخِرَةُ نَجْعَلُهَا لِلَّذِينَ لَا يُرِيدُونَ عُلُوًّا فِى ٱلْأَرْضِ وَلَا فَسَادًا ۚ وَٱلْعَـٰقِبَةُ لِلْمُتَّقِينَ
Transliteration til'ka l-dāru l-ākhiratu najʿaluhā lilladhīna lā yurīdūna ʿuluwwan fī l-arḍi walā fasādan wal-ʿāqibatu lil'muttaqīna
Kannada ಪರಲೋಕದ ಭವನವನ್ನು ಭೂಮಿಯಲ್ಲಿ ಮೇಲ್ಮೆಯನ್ನಾಗಲಿ, ಗೊಂದಲವನ್ನಾಗಲಿ ಬಯಸದವರಿಗಾಗಿ ನಾವು ಕಾದಿರಿಸಿದ್ದೇವೆ. ಅಂತಿಮ ವಿಜಯವು ಧರ್ಮನಿಷ್ಠರದ್ದು.
Verse 84
مَن جَآءَ بِٱلْحَسَنَةِ فَلَهُۥ خَيْرٌ مِّنْهَا ۖ وَمَن جَآءَ بِٱلسَّيِّئَةِ فَلَا يُجْزَى ٱلَّذِينَ عَمِلُوا۟ ٱلسَّيِّـَٔاتِ إِلَّا مَا كَانُوا۟ يَعْمَلُونَ
Transliteration man jāa bil-ḥasanati falahu khayrun min'hā waman jāa bil-sayi-ati falā yuj'zā alladhīna ʿamilū l-sayiāti illā mā kānū yaʿmalūna
Kannada ಯಾರು ಒಳಿತಿನೊಂದಿಗೆ ಬರುತ್ತಾನೋ ಅವನಿಗೆ ಅವನು ಮಾಡಿದುದಕ್ಕಿಂತಲೂ ಉತ್ತಮ ಪ್ರತಿಫಲವಿದೆ. ಇನ್ನು ಯಾರು ಕೆಡುಕಿನೊಂದಿಗೆ ಬರುತ್ತಾನೋ ಕೆಡುಕುಗಳನ್ನು ಮಾಡಿದವರಿಗೆ, ಅವರು ಎಸಗುತ್ತಿದ್ದುದರ ಪ್ರತಿಫಲವನ್ನಲ್ಲದೆ ಹೆಚ್ಚಿಗೆ ಕೊಡಲಾಗುವುದಿಲ್ಲ.
Verse 85
إِنَّ ٱلَّذِى فَرَضَ عَلَيْكَ ٱلْقُرْءَانَ لَرَآدُّكَ إِلَىٰ مَعَادٍ ۚ قُل رَّبِّىٓ أَعْلَمُ مَن جَآءَ بِٱلْهُدَىٰ وَمَنْ هُوَ فِى ضَلَـٰلٍ مُّبِينٍ
Transliteration inna alladhī faraḍa ʿalayka l-qur'āna larādduka ilā maʿādin qul rabbī aʿlamu man jāa bil-hudā waman huwa fī ḍalālin mubīnin
Kannada (ಪೈಗಂಬರರೇ,) ತಮ್ಮ ಮೇಲೆ ಈ ಖುರ್‍ಆ ನನ್ನು ಕಡ್ಡಾಯಗೊಳಿಸಿದವನು ತಮ್ಮನ್ನು ಖಂಡಿತ ಒಂದು ನಿರ್ಗಮನ ಸ್ಥಾನಕ್ಕೆ ಮರಳಿಸಲಿರುವನು. ತಾವು ಹೇಳಿರಿ, ‘ಸನ್ಮಾರ್ಗದೊಂದಿಗೆ ಬಂದವನು ಯಾರೆಂದೂ ಸುವ್ಯಕ್ತ ದುರ್ಮಾರ್ಗದಲ್ಲಿ ಇರುವವನು ಯಾರೆಂದೂ ನನ್ನ ಪ್ರಭು ಚೆನ್ನಾಗಿ ಬಲ್ಲನು’.
Verse 86
وَمَا كُنتَ تَرْجُوٓا۟ أَن يُلْقَىٰٓ إِلَيْكَ ٱلْكِتَـٰبُ إِلَّا رَحْمَةً مِّن رَّبِّكَ ۖ فَلَا تَكُونَنَّ ظَهِيرًا لِّلْكَـٰفِرِينَ
Transliteration wamā kunta tarjū an yul'qā ilayka l-kitābu illā raḥmatan min rabbika falā takūnanna ẓahīran lil'kāfirīna
Kannada (ಪೈಗಂಬರರೇ) ನಿಮಗೆ ವೇದಗ್ರಂಥವನ್ನು ಕೊಡಲಾಗುವುದೆಂದು ನೀವು ಖಂಡಿತ ಆಗ್ರಹಿಸಿರಲಿಲ್ಲ. ಆದರೆ ಕೇವಲ ನಿಮ್ಮ ಪ್ರಭುವಿನ ಕೃಪೆಯಿಂದ ಇದು ನಿಮಗೆ ಬಂದಿದೆ. ಆದುದರಿಂದ ಸತ್ಯನಿಷೇಧಿಗಳಿಗೆ ಖಂಡಿತ ಸಹಾಯಕ ರಾಗದಿರಿ.
Verse 87
وَلَا يَصُدُّنَّكَ عَنْ ءَايَـٰتِ ٱللَّهِ بَعْدَ إِذْ أُنزِلَتْ إِلَيْكَ ۖ وَٱدْعُ إِلَىٰ رَبِّكَ ۖ وَلَا تَكُونَنَّ مِنَ ٱلْمُشْرِكِينَ
Transliteration walā yaṣuddunnaka ʿan āyāti l-lahi baʿda idh unzilat ilayka wa-ud'ʿu ilā rabbika walā takūnanna mina l-mush'rikīna
Kannada ಅಲ್ಲಾಹನ ಸೂಕ್ತಗಳು ನಿಮ್ಮ ಮೇಲೆ ಅವತೀರ್ಣಗೊಂಡ ನಂತರ ಸತ್ಯನಿಷೇಧಿಗಳು ನಿಮ್ಮನ್ನು ಅವುಗಳಿಂದ ತಡೆಯದಿರಲಿ. ನಿಮ್ಮ ಪ್ರಭುವಿನ ಕಡೆಗೆ ಜನರನ್ನು ಅಹ್ವಾನಿಸಿರಿ . ಬಹುದೇವವಿಶ್ವಾಸಿಗಳಲ್ಲಿ ನೀವು ಸೇರಬೇಡಿರಿ.
Verse 88
وَلَا تَدْعُ مَعَ ٱللَّهِ إِلَـٰهًا ءَاخَرَ ۘ لَآ إِلَـٰهَ إِلَّا هُوَ ۚ كُلُّ شَىْءٍ هَالِكٌ إِلَّا وَجْهَهُۥ ۚ لَهُ ٱلْحُكْمُ وَإِلَيْهِ تُرْجَعُونَ
Transliteration walā tadʿu maʿa l-lahi ilāhan ākhara lā ilāha illā huwa kullu shayin hālikun illā wajhahu lahu l-ḥuk'mu wa-ilayhi tur'jaʿūna
Kannada ಅಲ್ಲಾಹನೊಂದಿಗೆ ಬೇರೆ ಯಾವುದೇ ದೇವರನ್ನು ಆರಾಧಿಸಬೇಡಿರಿ. ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅವನ ಸತ್ತೆಯ ಹೊರತು ಎಲ್ಲ ವಸ್ತುಗಳೂ ನಾಶ ಹೊಂದಲಿವೆ. ಆಜ್ಞಾಧಿಕಾರ ಅವನಿಗೇ ಮೀಸಲು. ನೀವೆಲ್ಲರೂ ಅವನ ಕಡೆಗೇ ಮರಳಲಿರುವಿರಿ .
Read Surah Al-Qasas in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.