Surah Al-Qamar in Kannada: translation and audio
Surah 54 · القمر · The Moon · 55 verses
Surah Al-Qamar verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Qamar word by word in English.
Verse 1
ٱقْتَرَبَتِ ٱلسَّاعَةُ وَٱنشَقَّ ٱلْقَمَرُ
Transliteration iq'tarabati l-sāʿatu wa-inshaqqa l-qamaru
Kannada ಅಂತ್ಯ ಸಮಯ ಸನ್ನಿಹಿತವಾಯಿತು ಮತ್ತು ಚಂದ್ರನು ಹೋಳಾದನು.
Verse 2
وَإِن يَرَوْا۟ ءَايَةً يُعْرِضُوا۟ وَيَقُولُوا۟ سِحْرٌ مُّسْتَمِرٌّ
Transliteration wa-in yaraw āyatan yuʿ'riḍū wayaqūlū siḥ'run mus'tamirrun
Kannada ಆದರೆ ಯಾವ ದೃಷ್ಟಾಂತವನ್ನು ಕಂಡರೂ ಅವರು ವಿಮುಖರಾಗುತ್ತಾರೆ ಮತ್ತು ಇದೊಂದು ಸ್ಥಾಯೀ ಮಾಟಗಾರಿಕೆ ಎನ್ನುತ್ತಾರೆ.
Verse 3
وَكَذَّبُوا۟ وَٱتَّبَعُوٓا۟ أَهْوَآءَهُمْ ۚ وَكُلُّ أَمْرٍ مُّسْتَقِرٌّ
Transliteration wakadhabū wa-ittabaʿū ahwāahum wakullu amrin mus'taqirrun
Kannada ಅವರು (ಪ್ರವಾದಿಯವರನ್ನು) ಸುಳ್ಳಾಗಿಸಿದರು ಮತ್ತು ತಮ್ಮ ಸ್ವೇಚ್ಛೆಗಳನ್ನೇ ಅನುಸರಿಸಿದರು. ಎಲ್ಲ ಕಾರ್ಯಗಳು ಸ್ಥಿರ ನಿಶ್ಚಿತವೇ ಆಗಿರುತ್ತದೆ.
Verse 4
وَلَقَدْ جَآءَهُم مِّنَ ٱلْأَنۢبَآءِ مَا فِيهِ مُزْدَجَرٌ
Transliteration walaqad jāahum mina l-anbāi mā fīhi muz'dajarun
Kannada (ದೇವ ನಿಷೇಧದಿಂದ) ತಡೆಯಬಲ್ಲಷ್ಟು ಪಾಠವುಳ್ಳ ವಾರ್ತೆಗಳು ಅವರಿಗೆ ಬಂದು ತಲುಪಿವೆ.
Verse 5
حِكْمَةٌۢ بَـٰلِغَةٌ ۖ فَمَا تُغْنِ ٱلنُّذُرُ
Transliteration ḥik'matun bālighatun famā tugh'ni l-nudhuru
Kannada ಸಂಪೂರ್ಣವಾದ ತತ್ವ. (ಅವರ ಮುಂದೆ ಬಂದಿವೆ.) ಆದರೆ ಯಾವ ಎಚ್ಚರಿಕೆಯೂ ಅವರ ಮೇಲೆ ಪರಿಣಾಮ ಬೀರುವುದಿಲ್ಲ.
Verse 6
فَتَوَلَّ عَنْهُمْ ۘ يَوْمَ يَدْعُ ٱلدَّاعِ إِلَىٰ شَىْءٍ نُّكُرٍ
Transliteration fatawalla ʿanhum yawma yadʿu l-dāʿi ilā shayin nukurin
Kannada ಆದುದರಿಂದ (ಸಂದೇಶವಾಹಕರೇ,) ಅವರಿಂದ ವಿಮುಖರಾಗಿರಿ. ಕೂಗುವಾತನು ಒಂದು ಅತ್ಯಂತ ಅನಿಷ್ಟಕರ ವಿಚಾರದ ಕಡೆಗೆ ಕೂಗುವಂದು,
Verse 7
خُشَّعًا أَبْصَـٰرُهُمْ يَخْرُجُونَ مِنَ ٱلْأَجْدَاثِ كَأَنَّهُمْ جَرَادٌ مُّنتَشِرٌ
Transliteration khushaʿan abṣāruhum yakhrujūna mina l-ajdāthi ka-annahum jarādun muntashirun
Kannada ಅವರು ತಲ್ಲಣಗೊಂಡ ದೃಷ್ಟಿಯೊಂದಿಗೆ ಕೂಟ ಚದುರಿದ ಕತ್ತರಿಗಿಳಿಗಳಂತೆ ತಮ್ಮ ಸಮಾಧಿಗಳಿಂದ ಹೊರಬರುವರು.
Verse 8
مُّهْطِعِينَ إِلَى ٱلدَّاعِ ۖ يَقُولُ ٱلْكَـٰفِرُونَ هَـٰذَا يَوْمٌ عَسِرٌ
Transliteration muh'ṭiʿīna ilā l-dāʿi yaqūlu l-kāfirūna hādhā yawmun ʿasirun
Kannada ಕೂಗುವವನ ಕಡೆಗೆ ಧಾವಿಸುತ್ತಿರುವರು. (ಅದೇ) ಸತ್ಯನಿಷೇಧಿಗಳು ಅಂದು, ಇದು ಕಠಿಣವಾದ ದಿನ ಎಂದು ಹೇಳುವರು.
Verse 9
۞ كَذَّبَتْ قَبْلَهُمْ قَوْمُ نُوحٍ فَكَذَّبُوا۟ عَبْدَنَا وَقَالُوا۟ مَجْنُونٌ وَٱزْدُجِرَ
Transliteration kadhabat qablahum qawmu nūḥin fakadhabū ʿabdanā waqālū majnūnun wa-uz'dujira
Kannada ಇವರಿಗಿಂತ ಮುಂಚೆ ನೂಹರ ಜನಾಂಗವು (ಸತ್ಯವನ್ನು) ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು (ನೂಹ್‍ರನ್ನು) ಸುಳ್ಳುಗಾರನೆಂದರು. ಇವನು ಹುಚ್ಚನೆಂದರು. ಮತ್ತು ನೂಹರು ತೀವ್ರವಾಗಿ ಅಟ್ಟಲ್ಪಟ್ಟರು.
Verse 10
فَدَعَا رَبَّهُۥٓ أَنِّى مَغْلُوبٌ فَٱنتَصِرْ
Transliteration fadaʿā rabbahu annī maghlūbun fa-intaṣir
Kannada ಕೊನೆಗೆ ಅವರು ತನ್ನ ಪ್ರಭುವಿನೊಂದಿಗೆ ನಾನು ಸೋತೆ, ಇನ್ನು ನೀನು ರಕ್ಷಾಕ್ರಮ ಕೈಗೊಳ್ಳು ಎಂದು ಪ್ರಾರ್ಥಿಸಿದರು.
Verse 11
فَفَتَحْنَآ أَبْوَٰبَ ٱلسَّمَآءِ بِمَآءٍ مُّنْهَمِرٍ
Transliteration fafataḥnā abwāba l-samāi bimāin mun'hamirin
Kannada ಆಗ ಧಾರಾಕಾರವಾಗಿ ಸುರಿಯುವ ಮಳೆಯೊಂದಿಗೆ ಆಕಾಶದ ದ್ವಾರಗಳನ್ನು ನಾವು ತೆರೆದು ಬಿಟ್ಟೆವು.
Verse 12
وَفَجَّرْنَا ٱلْأَرْضَ عُيُونًا فَٱلْتَقَى ٱلْمَآءُ عَلَىٰٓ أَمْرٍ قَدْ قُدِرَ
Transliteration wafajjarnā l-arḍa ʿuyūnan fal-taqā l-māu ʿalā amrin qad qudira
Kannada ಭೂಮಿಯನ್ನು ಸೀಳಿ ಚಿಲುಮೆಗಳಾಗಿ ಮಾರ್ಪಡಿಸಿ ಬಿಟ್ಟೆವು ಮತ್ತು ವಿಧಿಸಲ್ಪಟ್ಟಿದ್ದ ಒಂದು ಕಾರ್ಯಕ್ಕಾಗಿ ನೀರು ಸಂಧಿಸಿತು.
Verse 13
وَحَمَلْنَـٰهُ عَلَىٰ ذَاتِ أَلْوَٰحٍ وَدُسُرٍ
Transliteration waḥamalnāhu ʿalā dhāti alwāḥin wadusurin
Kannada ಹಲಗೆ ಹಾಗೂ ಮೊಳೆಗಳಿದ್ದ ಒಂದು ವಸ್ತುವಿನ (ಹಡಗಿನ) ಮೇಲೆ ಅವರನ್ನು (ನೂಹ್‍ರನ್ನು) ನಾವು ಸವಾರಿ ಮಾಡಿಸಿದೆವು.
Verse 14
تَجْرِى بِأَعْيُنِنَا جَزَآءً لِّمَن كَانَ كُفِرَ
Transliteration tajrī bi-aʿyuninā jazāan liman kāna kufira
Kannada ಅದು (ಹಡಗು) ನಮ್ಮ ಮೇಲ್ನೋಟದಲ್ಲಿ ಚಲಿಸುತ್ತಿತ್ತು. ಅದು ನಿಷೇಧಿಸಿ ತಳ್ಳಲಾದ ವ್ಯಕ್ತಿಯ (ನೂಹ್‍ರ) ಪರವಾಗಿ ಪ್ರತೀಕಾರವಾಗಿತ್ತು .
Verse 15
وَلَقَد تَّرَكْنَـٰهَآ ءَايَةً فَهَلْ مِن مُّدَّكِرٍ
Transliteration walaqad taraknāhā āyatan fahal min muddakirin
Kannada ಆ ಹಡಗನ್ನು ನಾವು ಒಂದು ದೃಷ್ಟಾಂತವಾಗಿ ಉಳಿಸಿದೆವು. ಯಾರಿದ್ದಾರೆ ಇದರಿಂದ (ಚಿಂತಿಸಿ) ಉಪದೇಶ ಪಡೆಯುವವರು ?
Verse 16
فَكَيْفَ كَانَ عَذَابِى وَنُذُرِ
Transliteration fakayfa kāna ʿadhābī wanudhuri
Kannada ಹೇಗಿತ್ತು ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು!
Verse 17
وَلَقَدْ يَسَّرْنَا ٱلْقُرْءَانَ لِلذِّكْرِ فَهَلْ مِن مُّدَّكِرٍ
Transliteration walaqad yassarnā l-qur'āna lildhik'ri fahal min muddakirin
Kannada ಖುರ್‍ಆನನ್ನು ಚಿಂತಿಸಲಿಕ್ಕಾಗಿ ನಾವು ಸರಳಗೊಳಿಸಿದ್ದೇವೆ. ಯಾರಿದ್ದಾರೆ ಯೋಚಿಸುವವರು?
Verse 18
كَذَّبَتْ عَادٌ فَكَيْفَ كَانَ عَذَابِى وَنُذُرِ
Transliteration kadhabat ʿādun fakayfa kāna ʿadhābī wanudhuri
Kannada ಆದ್ ಜನಾಂಗದವರು (ಸತ್ಯವನ್ನು) ಧಿಕ್ಕರಿಸಿದರು. ಆಗ ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು ಹೇಗಾಯಿತೆಂದು ನೋಡಿರಿ.
Verse 19
إِنَّآ أَرْسَلْنَا عَلَيْهِمْ رِيحًا صَرْصَرًا فِى يَوْمِ نَحْسٍ مُّسْتَمِرٍّ
Transliteration innā arsalnā ʿalayhim rīḥan ṣarṣaran fī yawmi naḥsin mus'tamirrin
Kannada ಒಂದು ಸ್ಥಿರವಾದ ಅಶುಭ ದಿನದಂದು ಅವರ ವಿರುದ್ಧ ತೀವ್ರ ಝೇಂಕಾರದ ಬಿರುಗಾಳಿಯನ್ನು ನಾವು ಕಳುಹಿಸಿದೆವು.
Verse 20
تَنزِعُ ٱلنَّاسَ كَأَنَّهُمْ أَعْجَازُ نَخْلٍ مُّنقَعِرٍ
Transliteration tanziʿu l-nāsa ka-annahum aʿjāzu nakhlin munqaʿirin
Kannada ಆ ಗಾಳಿಯು ಖರ್ಜೂರದ ಮರಗಳನ್ನು ಬುಡ ಕಳಚಿ ಬೀಳಿಸುವಂತೆ ಜನರನ್ನು ಎತ್ತಿ ಅಪ್ಪಳಿಸಿ ಹಾಕಿತು.
Verse 21
فَكَيْفَ كَانَ عَذَابِى وَنُذُرِ
Transliteration fakayfa kāna ʿadhābī wanudhuri
Kannada ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು!
Verse 22
وَلَقَدْ يَسَّرْنَا ٱلْقُرْءَانَ لِلذِّكْرِ فَهَلْ مِن مُّدَّكِرٍ
Transliteration walaqad yassarnā l-qur'āna lildhik'ri fahal min muddakirin
Kannada ಚಿಂತಿಸಲಿಕ್ಕಾಗಿ ಖುರ್‍ಆನನ್ನು ನಾವು ಸರಳ ಗೊಳಿಸಿರುವೆವು. ಯಾರಿದ್ದಾರೆ ಚಿಂತಿಸುವರು?
Verse 23
كَذَّبَتْ ثَمُودُ بِٱلنُّذُرِ
Transliteration kadhabat thamūdu bil-nudhuri
Kannada ಸಮೂದ್ ಜನಾಂಗದವರು ಎಚ್ಚರಿಕೆಗಳನ್ನು ಸುಳ್ಳಾಗಿಸಿದರು.
Verse 24
فَقَالُوٓا۟ أَبَشَرًا مِّنَّا وَٰحِدًا نَّتَّبِعُهُۥٓ إِنَّآ إِذًا لَّفِى ضَلَـٰلٍ وَسُعُرٍ
Transliteration faqālū abasharan minnā wāḥidan nattabiʿuhu innā idhan lafī ḍalālin wasuʿurin
Kannada ನಮ್ಮವನೇ ಆದ ವ್ಯಕ್ತಿಯೊಬ್ಬನನ್ನು ನಾವು ಅನುಸರಿಸುವುದೆ? ಹಾಗಾದರೆ ನಾವು ದಾರಿಗೆಟ್ಟವರೂ ಮರುಳರೂ ಆಗಿಬಿಡುವೆವು.
Verse 25
أَءُلْقِىَ ٱلذِّكْرُ عَلَيْهِ مِنۢ بَيْنِنَا بَلْ هُوَ كَذَّابٌ أَشِرٌ
Transliteration a-ul'qiya l-dhik'ru ʿalayhi min bayninā bal huwa kadhābun ashirun
Kannada ನಮ್ಮ ನಡುವೆ ಸಂದೇಶ (`ದಿಕ್ರ್’) ಇಳಿಸಲ್ಪಡಲು ಅವನೊಬ್ಬನೇ ಇರುವುದೇ? (ಅಲ್ಲ) ಅವನು ಮಹಾ ಸುಳ್ಳುಗಾರನೂ, ದುರಹಂಕಾರಿಯೂ ಆಗಿದ್ದಾನೆ ಎಂದು ಅವರು ಹೇಳಿದರು.
Verse 26
سَيَعْلَمُونَ غَدًا مَّنِ ٱلْكَذَّابُ ٱلْأَشِرُ
Transliteration sayaʿlamūna ghadan mani l-kadhābu l-ashiru
Kannada ಮಹಾ ಸುಳ್ಳುಗಾರನೂ ದುರಹಂಕಾರಿಯೂ ಯಾರೆಂದು ನಾಳೆ ಅವರಿಗೆ ತಿಳಿಯಲಿದೆ.
Verse 27
إِنَّا مُرْسِلُوا۟ ٱلنَّاقَةِ فِتْنَةً لَّهُمْ فَٱرْتَقِبْهُمْ وَٱصْطَبِرْ
Transliteration innā mur'silū l-nāqati fit'natan lahum fa-ir'taqib'hum wa-iṣ'ṭabir
Kannada ಒಂದು ಒಂಟೆಯನ್ನು ಅವರಿಗೆ ಪರೀಕ್ಷೆಯಾಗಿ ಕಳುಹಿಸುತ್ತಿದ್ದೇವೆ. ಆದ್ದರಿಂದ ಅವರನ್ನು ನಿರೀಕ್ಷಿಸುತ್ತಿರಿ, ಕ್ಷಮೆಗೊಳ್ಳಿರಿ.
Verse 28
وَنَبِّئْهُمْ أَنَّ ٱلْمَآءَ قِسْمَةٌۢ بَيْنَهُمْ ۖ كُلُّ شِرْبٍ مُّحْتَضَرٌ
Transliteration wanabbi'hum anna l-māa qis'matun baynahum kullu shir'bin muḥ'taḍarun
Kannada ನೀರನ್ನು ಅವರ ನಡುವೆ ಹಂಚಲ್ಪಟ್ಟದ್ದೆಂದೂ ಪ್ರತಿಯೊಬ್ಬರೂ ತನ್ನ ಜಲಪಾನದ ಪಾಳಿಯಂತೆ ಹಾಜರಾಗುವಂತೆಯೂ ಅವರಿಗೆ ತಿಳಿಸಿ. (ಎಂದು ಸಾಲಿಹ್ ನಬಿಗೆ ನಾವು ಹೇಳಿದೆವು).
Verse 29
فَنَادَوْا۟ صَاحِبَهُمْ فَتَعَاطَىٰ فَعَقَرَ
Transliteration fanādaw ṣāḥibahum fataʿāṭā faʿaqara
Kannada ಕೊನೆಗೆ ಅವರು ತಮ್ಮ ಸ್ನೇಹಿತನನ್ನು ಕೂಗಿ ಕರೆದರು. ಅವನು ಈ ಕಾರ್ಯದ ಹೊಣೆಹೊತ್ತನು ಮತ್ತು ಅದನ್ನು ಕೊಂದು ಹಾಕಿದನು.
Verse 30
فَكَيْفَ كَانَ عَذَابِى وَنُذُرِ
Transliteration fakayfa kāna ʿadhābī wanudhuri
Kannada ಅನಂತರ ನೋಡಿರಿ, ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು?
Verse 31
إِنَّآ أَرْسَلْنَا عَلَيْهِمْ صَيْحَةً وَٰحِدَةً فَكَانُوا۟ كَهَشِيمِ ٱلْمُحْتَظِرِ
Transliteration innā arsalnā ʿalayhim ṣayḥatan wāḥidatan fakānū kahashīmi l-muḥ'taẓiri
Kannada ನಾವು ಅವರ ಮೇಲೆ ಒಂದೇ ಒಂದು ಘೋರ ವಾದ ಶಬ್ಧವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ಕಟ್ಟುವವನ ತ್ಯಾಜ್ಯದಂತಾದರು.
Verse 32
وَلَقَدْ يَسَّرْنَا ٱلْقُرْءَانَ لِلذِّكْرِ فَهَلْ مِن مُّدَّكِرٍ
Transliteration walaqad yassarnā l-qur'āna lildhik'ri fahal min muddakirin
Kannada ಚಿಂತಿಸುವವರಿಗೆ ಈ ಖುರ್‍ಆನನ್ನು ನಾವು ಸುಲಭಗೊಳಿಸಿದ್ದೇವೆ. ಯಾರಿದ್ದಾರೆ ಚಿಂತಿಸುವವರು?
Verse 33
كَذَّبَتْ قَوْمُ لُوطٍۭ بِٱلنُّذُرِ
Transliteration kadhabat qawmu lūṭin bil-nudhuri
Kannada ಲೂಥರ ಜನಾಂಗವು ಎಚ್ಚರಿಕೆಗಳನ್ನು ಸುಳ್ಳಾಗಿಸಿತು.
Verse 34
إِنَّآ أَرْسَلْنَا عَلَيْهِمْ حَاصِبًا إِلَّآ ءَالَ لُوطٍ ۖ نَّجَّيْنَـٰهُم بِسَحَرٍ
Transliteration innā arsalnā ʿalayhim ḥāṣiban illā āla lūṭin najjaynāhum bisaḥarin
Kannada ನಾವು ಅವರ ಮೇಲೆ ಕಲ್ಲಿನ ಸುಳಿಗಾಳಿಯನ್ನು ಕಳುಹಿಸಿದೆವು. ಲೂಥರ ಕುಟುಂಬವನ್ನು ಅದರಿಂದ ಹೊರತುಪಡಿಸಲಾಗಿತ್ತು. ರಾತ್ರೆಯ ಅಂತಿಮ ಜಾವದಲ್ಲಿ ನಾವು ಅವರನ್ನು ಸಂರಕ್ಷಿಸಿದೆವು.
Verse 35
نِّعْمَةً مِّنْ عِندِنَا ۚ كَذَٰلِكَ نَجْزِى مَن شَكَرَ
Transliteration niʿ'matan min ʿindinā kadhālika najzī man shakara
Kannada ನಮ್ಮ ಕಡೆಯಿಂದಿರುವ ಒಂದು ಅನುಗ್ರಹವಾಗಿ. ಕೃತಜ್ಞರಾಗಿರುವವರಿಗೆ ಈ ರೀತಿ ನಾವು ಪ್ರತಿಫಲ ನೀಡುತ್ತೇವೆ.
Verse 36
وَلَقَدْ أَنذَرَهُم بَطْشَتَنَا فَتَمَارَوْا۟ بِٱلنُّذُرِ
Transliteration walaqad andharahum baṭshatanā fatamāraw bil-nudhuri
Kannada ಲೂಥರು ತಮ್ಮ ಜನಾಂಗದವರಿಗೆ ನಮ್ಮ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ಅವರು ಎಲ್ಲ ಎಚ್ಚರಿಕೆಗಳ ಬಗೆಗೆ ಕುತರ್ಕ ಹೂಡಿ ಸುಳ್ಳಾಗಿಸಿದರು.
Verse 37
وَلَقَدْ رَٰوَدُوهُ عَن ضَيْفِهِۦ فَطَمَسْنَآ أَعْيُنَهُمْ فَذُوقُوا۟ عَذَابِى وَنُذُرِ
Transliteration walaqad rāwadūhu ʿan ḍayfihi faṭamasnā aʿyunahum fadhūqū ʿadhābī wanudhuri
Kannada ತಮ್ಮ (ಲೂಥರ) ಅತಿಥಿಗಳನ್ನು (ದುರ್ಬಳಕೆಗೆ) ಬಿಟ್ಟು ಕೊಡುವಂತೆ ಅವರು ಲೂಥರಲ್ಲಿ ಅಪೇಕ್ಷಿಸಿದರು. ಆಗ ಅವರ ಕಣ್ಣುಗಳನ್ನು ಸವರಿ ಸಮತಟ್ಟು ಮಾಡಿಬಿಟ್ಟೆವು. ನನ್ನ ಶಿಕ್ಷೆ ಹಾಗೂ ಮುನ್ನೆಚ್ಚರಿಕೆಗಳ ಫಲವನ್ನು ಅನುಭವಿಸಿರಿ (ಎಂದು ಹೇಳಿದೆವು).
Verse 38
وَلَقَدْ صَبَّحَهُم بُكْرَةً عَذَابٌ مُّسْتَقِرٌّ
Transliteration walaqad ṣabbaḥahum buk'ratan ʿadhābun mus'taqirrun
Kannada ಒಂದು ಪ್ರಾತಃಕಾಲದಲ್ಲಿ ಸ್ಥಿರ ಶಿಕ್ಷೆಯು ಅವರನ್ನು ಆವರಿಸಿತು.
Verse 39
فَذُوقُوا۟ عَذَابِى وَنُذُرِ
Transliteration fadhūqū ʿadhābī wanudhuri
Kannada ನನ್ನ ಶಿಕ್ಷೆಯ ಮತ್ತು ನನ್ನ ಎಚ್ಚರಿಕೆಗಳ ರುಚಿಯನ್ನು ಸವಿಯಿರಿ (ಎಂದು ಅವರಲ್ಲಿ ಹೇಳ ಲಾಯಿತು).
Verse 40
وَلَقَدْ يَسَّرْنَا ٱلْقُرْءَانَ لِلذِّكْرِ فَهَلْ مِن مُّدَّكِرٍ
Transliteration walaqad yassarnā l-qur'āna lildhik'ri fahal min muddakirin
Kannada ನಾವು ಈ ಖುರ್‍ಆನನ್ನು ಚಿಂತಿಸಲಿಕ್ಕಾಗಿ ಸರಳಗೊಳಿಸಿರುವೆವು. ಚಿಂತಿಸುವವರು ಯಾರಾದರೂ ಇದ್ದಾರೆಯೇ?
Verse 41
وَلَقَدْ جَآءَ ءَالَ فِرْعَوْنَ ٱلنُّذُرُ
Transliteration walaqad jāa āla fir'ʿawna l-nudhuru
Kannada ಫಿರ್‍ಔನ್‍ನ ಪರಿವಾರಕ್ಕೂ ಎಚ್ಚರಿಕೆಗಳು ಬಂದಿದ್ದುವು.
Verse 42
كَذَّبُوا۟ بِـَٔايَـٰتِنَا كُلِّهَا فَأَخَذْنَـٰهُمْ أَخْذَ عَزِيزٍ مُّقْتَدِرٍ
Transliteration kadhabū biāyātinā kullihā fa-akhadhnāhum akhdha ʿazīzin muq'tadirin
Kannada ಅವರು ನಮ್ಮ ಎಲ್ಲ ದೃಷ್ಟಾಂತಗಳನ್ನು ನಿಷೇಧಿಸಿ ತಳ್ಳಿಹಾಕಿದರು. ಕೊನೆಗೆ ಪ್ರಚಂಡ ಶಕ್ತಿಶಾಲಿಯೊಬ್ಬನು ಹಿಡಿಯುವಂತೆ ಅವರನ್ನು ನಾವು ಹಿಡಿದು ಶಿಕ್ಷಿಸಿದೆವು.
Verse 43
أَكُفَّارُكُمْ خَيْرٌ مِّنْ أُو۟لَـٰٓئِكُمْ أَمْ لَكُم بَرَآءَةٌ فِى ٱلزُّبُرِ
Transliteration akuffārukum khayrun min ulāikum am lakum barāatun fī l-zuburi
Kannada (ಜನರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ (ಆ ಶಿಕ್ಷೆಗೊಳಗಾದವರಿಗಿಂತ) ಉತ್ತಮರೇ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗಾಗಿ ಏನಾದರೂ ಶಿಕ್ಷೆಯಿಂದ ವಿನಾಯಿತಿ ಲಿಖಿತವಾಗಿ ದೆಯೇ?
Verse 44
أَمْ يَقُولُونَ نَحْنُ جَمِيعٌ مُّنتَصِرٌ
Transliteration am yaqūlūna naḥnu jamīʿun muntaṣirun
Kannada ಅಥವಾ `ನಾವು ಸಹಾಯ ಪ್ರಾಪ್ತರಾದ ಸಂಘ’ ಎಂದವರು ಹೇಳಿಕೊಳ್ಳುತ್ತಿದ್ದಾರೆಯೆ?
Verse 45
سَيُهْزَمُ ٱلْجَمْعُ وَيُوَلُّونَ ٱلدُّبُرَ
Transliteration sayuh'zamu l-jamʿu wayuwallūna l-dubura
Kannada ಆದರೆ ಸದ್ಯದಲ್ಲೇ ಈ ಸಂಘವು ಸೋತು ಹೋಗುವುದು ಮತ್ತು ಅವರು ಬೆನ್ನು ತಿರುಗಿಸಿ ಓಡಿ ಹೋಗುವರು.
Verse 46
بَلِ ٱلسَّاعَةُ مَوْعِدُهُمْ وَٱلسَّاعَةُ أَدْهَىٰ وَأَمَرُّ
Transliteration bali l-sāʿatu mawʿiduhum wal-sāʿatu adhā wa-amarru
Kannada ಮಾತ್ರವಲ್ಲ, ಅವರಿಗೆ ಶಿಕ್ಷೆಯ ವಾಗ್ದಾನ ಸಮಯವು ಅಂತಿಮ ದಿನವಾಗಿರುತ್ತದೆ. ಆ ದಿನದ ಶಿಕ್ಷೆಯು ಅತ್ಯಂತ ಘೋರವೂ ಅತ್ಯಂತ ಕಹಿಯೂ ಆಗಿರುವುದು.
Verse 47
إِنَّ ٱلْمُجْرِمِينَ فِى ضَلَـٰلٍ وَسُعُرٍ
Transliteration inna l-muj'rimīna fī ḍalālin wasuʿurin
Kannada ನಿಜವಾಗಿಯೂ ಈ ಅಪರಾಧಿಗಳು ವಿನಾಶ ಹಾಗೂ ಘೋರ ಅಗ್ನಿಯಲ್ಲಿರುವರು.
Verse 48
يَوْمَ يُسْحَبُونَ فِى ٱلنَّارِ عَلَىٰ وُجُوهِهِمْ ذُوقُوا۟ مَسَّ سَقَرَ
Transliteration yawma yus'ḥabūna fī l-nāri ʿalā wujūhihim dhūqū massa saqara
Kannada ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆಯಲ್ಪಡುವ ದಿನ, ಅವರೊಡನೆ - ಈಗ ನರಕ ಸ್ಪರ್ಶವನ್ನು ಸವಿಯಿರಿ ಎನ್ನಲಾಗುವುದು.
Verse 49
إِنَّا كُلَّ شَىْءٍ خَلَقْنَـٰهُ بِقَدَرٍ
Transliteration innā kulla shayin khalaqnāhu biqadarin
Kannada ನಾವು ಪ್ರತಿಯೊಂದು ವಸ್ತುವನ್ನು ಒಂದು ನಿರ್ಣಯ ಪ್ರಕಾರ ಸೃಷ್ಟಿಸಿರುವೆವು .
Verse 50
وَمَآ أَمْرُنَآ إِلَّا وَٰحِدَةٌ كَلَمْحٍۭ بِٱلْبَصَرِ
Transliteration wamā amrunā illā wāḥidatun kalamḥin bil-baṣari
Kannada ನಮ್ಮ ಆಜ್ಞೆಯು ಕೇವಲ ಒಂದೇ ಒಂದು ಆಜ್ಞೆಯಾಗಿರುತ್ತದೆ. ಕಣ್ಣಿನ ರೆಪ್ಪೆ ಬಡಿಯುವಷ್ಟು (ವೇಗದಲ್ಲಿ ಉದ್ದೇಶಿತ ಕಾರ್ಯ ಜರುಗುವುದು).
Verse 51
وَلَقَدْ أَهْلَكْنَآ أَشْيَاعَكُمْ فَهَلْ مِن مُّدَّكِرٍ
Transliteration walaqad ahlaknā ashyāʿakum fahal min muddakirin
Kannada (ಸತ್ಯನಿಷೇಧಿಗಳೇ!) ನಿಮ್ಮಂತಹ ಅನೇಕ ಪಂಗಡಗಳನ್ನು ನಾವು ನಾಶಗೊಳಿಸಿರುತ್ತೇವೆ. ಹೀಗಿರುತ್ತ, ಚಿಂತಿಸಲು ಸಿದ್ಧರುಳ್ಳ ಯಾರಾದರೂ ಇದ್ದಾರೆಯೇ?
Verse 52
وَكُلُّ شَىْءٍ فَعَلُوهُ فِى ٱلزُّبُرِ
Transliteration wakullu shayin faʿalūhu fī l-zuburi
Kannada ಅವರು ಮಾಡಿರುವುದೆಲ್ಲವೂ ದಾಖಲೆಗಳಲ್ಲಿ ಲಿಖಿತವಿದೆ.
Verse 53
وَكُلُّ صَغِيرٍ وَكَبِيرٍ مُّسْتَطَرٌ
Transliteration wakullu ṣaghīrin wakabīrin mus'taṭarun
Kannada ಪ್ರತಿಯೊಂದು ಚಿಕ್ಕ ಮತ್ತು ದೊಡ್ಡ ವಿಷಯವನ್ನೂ ಬರೆದಿಡಲಾಗಿದೆ.
Verse 54
إِنَّ ٱلْمُتَّقِينَ فِى جَنَّـٰتٍ وَنَهَرٍ
Transliteration inna l-mutaqīna fī jannātin wanaharin
Kannada ಖಂಡಿತವಾಗಿಯೂ ಭಕ್ತರು ಸ್ವರ್ಗೋದ್ಯಾನಗಳಲ್ಲಿ ಮತ್ತು ಕಾಲುವೆಗಳಲ್ಲಿ ಇರುವರು.
Verse 55
فِى مَقْعَدِ صِدْقٍ عِندَ مَلِيكٍ مُّقْتَدِرٍۭ
Transliteration fī maqʿadi ṣid'qin ʿinda malīkin muq'tadirin
Kannada ನೈಜತೆಯ ಸೋಪಾನದಲ್ಲಿ ಪರಮ ಶಕ್ತ ಸಾಮ್ರಾಟನ ಸನ್ನಿಧಿಯಲ್ಲಿ.
Read Surah Al-Qamar in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.