MyDugsiStart learning

Surah Ibrahim in Kannada: translation and audio

Surah 14 · ابراهيم · Abraham · 52 verses

Surah Ibrahim verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ibrahim word by word in English.

Verse 1

الٓر ۚ كِتَـٰبٌ أَنزَلْنَـٰهُ إِلَيْكَ لِتُخْرِجَ ٱلنَّاسَ مِنَ ٱلظُّلُمَـٰتِ إِلَى ٱلنُّورِ بِإِذْنِ رَبِّهِمْ إِلَىٰ صِرَٰطِ ٱلْعَزِيزِ ٱلْحَمِيدِ

Transliteration alif-lam-ra kitābun anzalnāhu ilayka litukh'rija l-nāsa mina l-ẓulumāti ilā l-nūri bi-idh'ni rabbihim ilā ṣirāṭi l-ʿazīzi l-ḥamīdi

Kannada ಅಲಿಫ್ ಲಾಮ್ ರಾ, (ಓ ಮುಹಮ್ಮದ್‍ರೇ,) ಜನರನ್ನು ಅವರ ಪ್ರಭುವಿನ ಅನುಜ್ಞೆಯಂತೆ ನೀವು ಅಂಧಕಾರಗಳಿಂದ ಪ್ರಕಾಶದ ಕಡೆಗೆ ಹೊರತರಲಿಕ್ಕಾಗಿ ನಿಮಗೆ ನಾವು ಅವತೀರ್ಣಗೊಳಿಸಿರುವ ಗ್ರಂಥವಿದು. ಅರ್ಥಾತ್, ಮಹಾ ಪ್ರತಾಪಿಯೂ ಸ್ವಯಂ ಸ್ತುತ್ಯರ್ಹನೂ ಆಗಿರುವ ಅಲ್ಲಾಹನ ಮಾರ್ಗದೆಡೆಗೆ.

Verse 2

ٱللَّهِ ٱلَّذِى لَهُۥ مَا فِى ٱلسَّمَـٰوَٰتِ وَمَا فِى ٱلْأَرْضِ ۗ وَوَيْلٌ لِّلْكَـٰفِرِينَ مِنْ عَذَابٍ شَدِيدٍ

Transliteration al-lahi alladhī lahu mā fī l-samāwāti wamā fī l-arḍi wawaylun lil'kāfirīna min ʿadhābin shadīdin

Kannada ಆಕಾಶಗಳ ಹಾಗೂ ಭೂಮಿಯ ಸಕಲ ಸೃಷ್ಟಿಗಳ ಮಾಲಕನಾದ ಅಲ್ಲಾಹನ (ಮಾರ್ಗದೆಡೆಗೆ). ಸತ್ಯನಿಷೇಧಿಗಳಿಗೆ ಅತ್ಯಂತ ಕಠಿಣ ವಿನಾಶಕಾರಿ ಶಿಕ್ಷೆಯಿದೆ.

Verse 3

ٱلَّذِينَ يَسْتَحِبُّونَ ٱلْحَيَوٰةَ ٱلدُّنْيَا عَلَى ٱلْـَٔاخِرَةِ وَيَصُدُّونَ عَن سَبِيلِ ٱللَّهِ وَيَبْغُونَهَا عِوَجًا ۚ أُو۟لَـٰٓئِكَ فِى ضَلَـٰلٍۭ بَعِيدٍ

Transliteration alladhīna yastaḥibbūna l-ḥayata l-dun'yā ʿalā l-ākhirati wayaṣuddūna ʿan sabīli l-lahi wayabghūnahā ʿiwajan ulāika fī ḍalālin baʿīdin

Kannada ಅರ್ಥಾತ್ ಪಾರತ್ರಿಕ ಜೀವನಕ್ಕಿಂತ ಐಹಿಕ ಜೀವನವನ್ನು ಹೆಚ್ಚಾಗಿ ಪ್ರೀತಿಸುವ, ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುವ, ಮತ್ತು ಈ ಮಾರ್ಗಕ್ಕೆ ವಕ್ರತೆಯನ್ನು ಬಯಸುವ ಜನರಿಗೆ. ಇವರು (ಸತ್ಯದಿಂದ) ಬಹು ದೂರದ ದುರ್ಮಾರ್ಗದಲ್ಲಿದ್ದಾರೆ .

Verse 4

وَمَآ أَرْسَلْنَا مِن رَّسُولٍ إِلَّا بِلِسَانِ قَوْمِهِۦ لِيُبَيِّنَ لَهُمْ ۖ فَيُضِلُّ ٱللَّهُ مَن يَشَآءُ وَيَهْدِى مَن يَشَآءُ ۚ وَهُوَ ٱلْعَزِيزُ ٱلْحَكِيمُ

Transliteration wamā arsalnā min rasūlin illā bilisāni qawmihi liyubayyina lahum fayuḍillu l-lahu man yashāu wayahdī man yashāu wahuwa l-ʿazīzu l-ḥakīmu

Kannada ಯಾವ ಪ್ರವಾದಿಯನ್ನೂ ಅವರ ಜನತೆಯ ಭಾಷೆಯಲ್ಲಲ್ಲದೆ ನಾವು ಕಳುಹಿಸಿಲ್ಲ, ಅವರಿಗೆ ಸ್ಪಷ್ಟವಾಗಿ ವಿವರಿಸುವ ಸಲುವಾಗಿ. ಅಲ್ಲಾಹು ತಾನಿಚ್ಛಿಸಿದವರನ್ನು ಪಥಭ್ರಷ್ಟಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಸನ್ಮಾರ್ಗದರ್ಶನ ನೀಡುತ್ತಾನೆ. ಅವನು ಮಹಾ ಪ್ರತಾಪಶಾಲಿಯೂ ಧೀಮಂತನೂ ಆಗಿರುತ್ತಾನೆ.

Verse 5

وَلَقَدْ أَرْسَلْنَا مُوسَىٰ بِـَٔايَـٰتِنَآ أَنْ أَخْرِجْ قَوْمَكَ مِنَ ٱلظُّلُمَـٰتِ إِلَى ٱلنُّورِ وَذَكِّرْهُم بِأَيَّىٰمِ ٱللَّهِ ۚ إِنَّ فِى ذَٰلِكَ لَـَٔايَـٰتٍ لِّكُلِّ صَبَّارٍ شَكُورٍ

Transliteration walaqad arsalnā mūsā biāyātinā an akhrij qawmaka mina l-ẓulumāti ilā l-nūri wadhakkir'hum bi-ayyāmi l-lahi inna fī dhālika laāyātin likulli ṣabbārin shakūrin

Kannada ನಿಮ್ಮ ಜನಾಂಗವನ್ನು ಅಂಧಕಾರಗಳಿಂದ ಹೊರತೆಗೆದು ಪ್ರಕಾಶಕ್ಕೆ ತರಬೇಕೆಂದೂ ಅವರಿಗೆ ಅಲ್ಲಾಹನ (ಅನುಗ್ರಹದ) ದಿನಗಳ ಬಗ್ಗೆ ನೆನಪಿಸಬೇಕೆಂದೂ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದ್ದೆವು. ಪ್ರತಿಯೊಬ್ಬ ಸಹನಶೀಲನಿಗೂ ಕೃತಜ್ಞನಿಗೂ ಅದರಲ್ಲಿ ಖಂಡಿತ ನಿದರ್ಶನಗಳಿವೆ

Verse 6

وَإِذْ قَالَ مُوسَىٰ لِقَوْمِهِ ٱذْكُرُوا۟ نِعْمَةَ ٱللَّهِ عَلَيْكُمْ إِذْ أَنجَىٰكُم مِّنْ ءَالِ فِرْعَوْنَ يَسُومُونَكُمْ سُوٓءَ ٱلْعَذَابِ وَيُذَبِّحُونَ أَبْنَآءَكُمْ وَيَسْتَحْيُونَ نِسَآءَكُمْ ۚ وَفِى ذَٰلِكُم بَلَآءٌ مِّن رَّبِّكُمْ عَظِيمٌ

Transliteration wa-idh qāla mūsā liqawmihi udh'kurū niʿ'mata l-lahi ʿalaykum idh anjākum min āli fir'ʿawna yasūmūnakum sūa l-ʿadhābi wayudhabbiḥūna abnāakum wayastaḥyūna nisāakum wafī dhālikum balāon min rabbikum ʿaẓīmun

Kannada ಮೂಸಾ ತನ್ನ ಜನಾಂಗದೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಿಮಗೆ ಕಠಿಣ ಶಿಕ್ಷೆಯ ಅನುಭವ ಕೊಡುತ್ತಿದ್ದ ಹಾಗೂ ನಿಮ್ಮ ಗಂಡು ಮಕ್ಕಳನ್ನು ವಧಿಸಿಬಿಡುವ ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಟ್ಟು ಬಿಡುತ್ತಿದ್ದ ಫಿರ್‍ಔನನ ಜನಾಂಗದಿಂದ ನಿಮ್ಮನ್ನು ರಕ್ಷಿಸಿದ ಸಂದರ್ಭದಲ್ಲಿ ಅಲ್ಲಾಹು ನಿಮ್ಮ ಮೇಲೆ ಮಾಡಿದ ಅನುಗ್ರಹವನ್ನು ನೆನಪಿಡಿರಿ. ಇದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಮಹಾ ಪರೀಕ್ಷೆಯಿತ್ತು.

Verse 7

وَإِذْ تَأَذَّنَ رَبُّكُمْ لَئِن شَكَرْتُمْ لَأَزِيدَنَّكُمْ ۖ وَلَئِن كَفَرْتُمْ إِنَّ عَذَابِى لَشَدِيدٌ

Transliteration wa-idh ta-adhana rabbukum la-in shakartum la-azīdannakum wala-in kafartum inna ʿadhābī lashadīdun

Kannada ನೀವು ಕೃತಜ್ಞರಾಗಿದ್ದರೆ ನಾನು ನಿಮಗೆ (ಅನುಗ್ರಹವನ್ನು) ಹೆಚ್ಚಿಸುವೆನೆಂದೂ ನೀವು ಕೃತಘ್ನತೆ ತೋರಿದರೆ ನನ್ನ ಶಿಕ್ಷೆಯು ಅತ್ಯಂತ ಕಠಿಣವಾಗಿದೆಯೆಂದೂ ನಿಮ್ಮ ಪ್ರಭು ಘೋಷಿಸಿದ ಸಂದರ್ಭ ವನ್ನು ಸ್ಮರಿಸಿರಿ.

Verse 8

وَقَالَ مُوسَىٰٓ إِن تَكْفُرُوٓا۟ أَنتُمْ وَمَن فِى ٱلْأَرْضِ جَمِيعًا فَإِنَّ ٱللَّهَ لَغَنِىٌّ حَمِيدٌ

Transliteration waqāla mūsā in takfurū antum waman fī l-arḍi jamīʿan fa-inna l-laha laghaniyyun ḥamīdun

Kannada ಮೂಸಾ ಹೇಳಿದರು; ನೀವೂ ಭೂಮಿಯ ಮೇಲೆ ವಾಸಿಸುವವರೆಲ್ಲರೂ ಕೃತಘ್ನತೆ ತೋರಿದರೂ ಅಲ್ಲಾಹು ನಿರಪೇಕ್ಷನೂ ಸ್ವಯಂ ಸ್ತುತ್ಯರ್ಹನೂ ಆಗಿರುತ್ತಾನೆ (ಎಂಬುದನ್ನು ತಿಳಿದುಕೊಳ್ಳಿರಿ.)

Verse 9

أَلَمْ يَأْتِكُمْ نَبَؤُا۟ ٱلَّذِينَ مِن قَبْلِكُمْ قَوْمِ نُوحٍ وَعَادٍ وَثَمُودَ ۛ وَٱلَّذِينَ مِنۢ بَعْدِهِمْ ۛ لَا يَعْلَمُهُمْ إِلَّا ٱللَّهُ ۚ جَآءَتْهُمْ رُسُلُهُم بِٱلْبَيِّنَـٰتِ فَرَدُّوٓا۟ أَيْدِيَهُمْ فِىٓ أَفْوَٰهِهِمْ وَقَالُوٓا۟ إِنَّا كَفَرْنَا بِمَآ أُرْسِلْتُم بِهِۦ وَإِنَّا لَفِى شَكٍّ مِّمَّا تَدْعُونَنَآ إِلَيْهِ مُرِيبٍ

Transliteration alam yatikum naba-u alladhīna min qablikum qawmi nūḥin waʿādin wathamūda wa-alladhīna min baʿdihim lā yaʿlamuhum illā l-lahu jāathum rusuluhum bil-bayināti faraddū aydiyahum fī afwāhihim waqālū innā kafarnā bimā ur'sil'tum bihi wa-innā lafī shakkin mimmā tadʿūnanā ilayhi murībin

Kannada ನೂಹರ ಜನಾಂಗ, ಆದ್, ಸಮೂದ್ ಮತ್ತು ಅಲ್ಲಾಹನ ಹೊರತು ಇನ್ನಾರೂ ತಿಳಿಯದ ಅವರ ನಂತರದ ಹಲವಾರು ಜನಾಂಗಗಳೂ ಸೇರಿದಂತೆ ನಿಮ್ಮ ಪೂರ್ವಿಕರ ಸಮಾಚಾರಗಳು ನಿಮಗೆ ತಲುಪಲಿಲ್ಲವೇ? ಅವರ ಸಂದೇಶವಾಹಕರು ಅವರ ಬಳಿಗೆ ಸುವ್ಯಕ್ತ ನಿದರ್ಶನಗಳನ್ನು ತಂದಾಗ ಅವರು ತಮ್ಮ ಕೈಯನ್ನು ಬಾಯೊಳಗೆ ಒತ್ತಿಕೊಂಡು ಹೇಳಿದರು; ‘ಯಾವ ಸಂದೇಶ ಸಹಿತ ನೀವು ಕಳು ಹಿಸಲ್ಪಟ್ಟಿರುವಿರೋ ಅದನ್ನು ನಾವು ನಿಷೇಧಿಸುತ್ತೇವೆ ಮತ್ತು ನೀವು ನಮಗೆ ಯಾವುದರ ಕಡೆಗೆ ಕರೆ ನೀಡುತ್ತೀರೋ ಅದರ ಬಗ್ಗೆ ನಾವು ಕಳವಳಕಾರಿಯಾದ ಸಂಶಯಕ್ಕೊಳಗಾಗಿದ್ದೇವೆ’.

Verse 10

۞ قَالَتْ رُسُلُهُمْ أَفِى ٱللَّهِ شَكٌّ فَاطِرِ ٱلسَّمَـٰوَٰتِ وَٱلْأَرْضِ ۖ يَدْعُوكُمْ لِيَغْفِرَ لَكُم مِّن ذُنُوبِكُمْ وَيُؤَخِّرَكُمْ إِلَىٰٓ أَجَلٍ مُّسَمًّى ۚ قَالُوٓا۟ إِنْ أَنتُمْ إِلَّا بَشَرٌ مِّثْلُنَا تُرِيدُونَ أَن تَصُدُّونَا عَمَّا كَانَ يَعْبُدُ ءَابَآؤُنَا فَأْتُونَا بِسُلْطَـٰنٍ مُّبِينٍ

Transliteration qālat rusuluhum afī l-lahi shakkun fāṭiri l-samāwāti wal-arḍi yadʿūkum liyaghfira lakum min dhunūbikum wayu-akhirakum ilā ajalin musamman qālū in antum illā basharun mith'lunā turīdūna an taṣuddūnā ʿammā kāna yaʿbudu ābāunā fatūnā bisul'ṭānin mubīnin

Kannada ಅವರ ದೂತರು ಹೇಳಿದರು; ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನಾದ ಅಲ್ಲಾಹನ ಬಗ್ಗೆ ನಿಮಗೆ ಸಂಶಯವೆ? ಅವನು ನಿಮ್ಮ ಅಪರಾಧಗಳನ್ನು ಕ್ಷಮಿಸಲಿಕ್ಕಾಗಿ ಮತ್ತು ನಿಮಗೆ ಒಂದು ನಿಶ್ಚಿತ ಅವಧಿಯ ತನಕ ಸಮಯಾವಕಾಶ ನೀಡಲಿಕ್ಕಾಗಿ ನಿಮ್ಮನ್ನು ಕರೆಯುತ್ತಿದ್ದಾನೆ. ಅವರು (ಜನರು) ಹೇಳಿದರು; ‘ನೀವು ನಮ್ಮ ಹಾಗಿರುವ ಮನುಷ್ಯರಲ್ಲದೆ ಇನ್ನೇನೂ ಅಲ್ಲ. ನಮ್ಮ ಪೂರ್ವಿಕರು ಆರಾಧಿಸುತ್ತಾ ಬಂದಿರುವವುಗಳಿಂದ ನೀವು ನಮ್ಮನ್ನು ತಡೆಯಲಿಚ್ಛಿಸುತ್ತೀರಿ. ಆದ್ದರಿಂದ ನಮಗೆ ಸುವ್ಯಕ್ತ ಆಧಾರ ಪ್ರಮಾಣವನ್ನು ತನ್ನಿರಿ’.

Verse 11

قَالَتْ لَهُمْ رُسُلُهُمْ إِن نَّحْنُ إِلَّا بَشَرٌ مِّثْلُكُمْ وَلَـٰكِنَّ ٱللَّهَ يَمُنُّ عَلَىٰ مَن يَشَآءُ مِنْ عِبَادِهِۦ ۖ وَمَا كَانَ لَنَآ أَن نَّأْتِيَكُم بِسُلْطَـٰنٍ إِلَّا بِإِذْنِ ٱللَّهِ ۚ وَعَلَى ٱللَّهِ فَلْيَتَوَكَّلِ ٱلْمُؤْمِنُونَ

Transliteration qālat lahum rusuluhum in naḥnu illā basharun mith'lukum walākinna l-laha yamunnu ʿalā man yashāu min ʿibādihi wamā kāna lanā an natiyakum bisul'ṭānin illā bi-idh'ni l-lahi waʿalā l-lahi falyatawakkali l-mu'minūna

Kannada ಅವರ ದೂತರು ಅವರೊಡನೆ ಹೇಳಿದರು; ‘ನಿಜಕ್ಕೂ ನಾವು ನಿಮ್ಮಂತಹ ಮನುಷ್ಯರಲ್ಲದೆ ಇನ್ನೇ ನೂ ಅಲ್ಲ. ಆದರೆ ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಚಿಸಿದವರನ್ನು ಅನುಗ್ರಹಿಸುತ್ತಾನೆ. ಅಲ್ಲಾಹನ ಅನುಜ್ಞೆ ಯಿಂದಲೇ ಹೊರತು ನಿಮಗೆ ಯಾವುದೇ ಆಧಾರ ಪ್ರಮಾಣ ತರಲು ನಮ್ಮಿಂದಾಗದು. ಮತ್ತು ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆ ಇಡಲಿ.

Verse 12

وَمَا لَنَآ أَلَّا نَتَوَكَّلَ عَلَى ٱللَّهِ وَقَدْ هَدَىٰنَا سُبُلَنَا ۚ وَلَنَصْبِرَنَّ عَلَىٰ مَآ ءَاذَيْتُمُونَا ۚ وَعَلَى ٱللَّهِ فَلْيَتَوَكَّلِ ٱلْمُتَوَكِّلُونَ

Transliteration wamā lanā allā natawakkala ʿalā l-lahi waqad hadānā subulanā walanaṣbiranna ʿalā mā ādhaytumūnā waʿalā l-lahi falyatawakkali l-mutawakilūna

Kannada ಅಲ್ಲಾಹು ನಮ್ಮನ್ನು ನಮ್ಮ ಮಾರ್ಗಗಳಲ್ಲಿ ಸೇರಿಸಿರುವಾಗ ನಾವು ಅವನ ಮೇಲೆ ಏಕೆ ಭರವಸೆ ಇಡಬಾರದು? ನೀವು ನಮಗೆ ನೀಡುತ್ತಿರುವ ಹಿಂಸೆಯನ್ನು ನಾವು ಖಂಡಿತ ಸಹಿಸಿಕೊಳ್ಳುವೆವು. ಭರವಸೆಯಿರಿಸುವವರು ಅಲ್ಲಾಹನ ಮೇಲೆಯೇ ಭರವಸೆ ಇರಿಸಿಕೊಳ್ಳಲಿ.

Verse 13

وَقَالَ ٱلَّذِينَ كَفَرُوا۟ لِرُسُلِهِمْ لَنُخْرِجَنَّكُم مِّنْ أَرْضِنَآ أَوْ لَتَعُودُنَّ فِى مِلَّتِنَا ۖ فَأَوْحَىٰٓ إِلَيْهِمْ رَبُّهُمْ لَنُهْلِكَنَّ ٱلظَّـٰلِمِينَ

Transliteration waqāla alladhīna kafarū lirusulihim lanukh'rijannakum min arḍinā aw lataʿūdunna fī millatinā fa-awḥā ilayhim rabbuhum lanuh'likanna l-ẓālimīna

Kannada ಸತ್ಯನಿಷೇಧಿಗಳು ತಮ್ಮ ಸಂದೇಶವಾಹಕರೊಡನೆ, ಹೇಳಿದರು; ‘ನಾವು ನಿಮ್ಮನ್ನು ನಮ್ಮ ನಾಡಿನಿಂದ ಹೊರಕ್ಕಟ್ಟಿ ಬಿಡುವೆವು ಇಲ್ಲವೇ ನೀವು ನಮ್ಮ ಮತಕ್ಕೆ ಮರಳಿ ಬರಬೇಕು. ‘ಆಗ ಅವರ ಪ್ರಭು ಅವರ ಮೇಲೆ ಸಂದೇಶ ನೀಡಿದನು; ‘ನಾವು ಈ ಅಕ್ರಮಿಗಳನ್ನು ಖಂಡಿತ ನಾಶಗೊಳಿಸುವೆವು.

Verse 14

وَلَنُسْكِنَنَّكُمُ ٱلْأَرْضَ مِنۢ بَعْدِهِمْ ۚ ذَٰلِكَ لِمَنْ خَافَ مَقَامِى وَخَافَ وَعِيدِ

Transliteration walanus'kinannakumu l-arḍa min baʿdihim dhālika liman khāfa maqāmī wakhāfa waʿīdi

Kannada ಮತ್ತು ಆ ಬಳಿಕ ನಿಮ್ಮನ್ನು ಭೂಮಿಯಲ್ಲಿ ನೆಲೆ ಗೊಳಿಸುವೆವು. ಇದು ನನ್ನ ಸಾನಿಧ್ಯದ ಬಗ್ಗೆ ಭಯವಿರಿಸಿಕೊಂಡ ಹಾಗೂ ನನ್ನ ಎಚ್ಚರಿಕೆಗೆ ಹೆದರಿದವನಿಗೆ ಇರುವ ಅನುಗ್ರಹ

Verse 15

وَٱسْتَفْتَحُوا۟ وَخَابَ كُلُّ جَبَّارٍ عَنِيدٍ

Transliteration wa-is'taftaḥū wakhāba kullu jabbārin ʿanīdin

Kannada ಅವರು (ದೂತರು) (ಅಲ್ಲಾಹನಲ್ಲಿ) sಸಹಾಯ ಬೇಡಿದರು. ಪ್ರತಿಯೊಬ್ಬ ಅಹಂಕಾರಿ, ಹಠಮಾರಿಯೂ ಪರಾಜಿತನಾದನು.

Verse 16

مِّن وَرَآئِهِۦ جَهَنَّمُ وَيُسْقَىٰ مِن مَّآءٍ صَدِيدٍ

Transliteration min warāihi jahannamu wayus'qā min māin ṣadīdin

Kannada ಅವನ ಮುಂದೆ ನರಕಾಗ್ನಿ ಇದೆ. ಅಲ್ಲಿ ಅವನಿಗೆ ಕೀವು ರಕ್ತ ಮಿಶ್ರಿತ ದುರ್ಜಲವನ್ನು ಕುಡಿಸಲಾಗುವುದು.

Verse 17

يَتَجَرَّعُهُۥ وَلَا يَكَادُ يُسِيغُهُۥ وَيَأْتِيهِ ٱلْمَوْتُ مِن كُلِّ مَكَانٍ وَمَا هُوَ بِمَيِّتٍ ۖ وَمِن وَرَآئِهِۦ عَذَابٌ غَلِيظٌ

Transliteration yatajarraʿuhu walā yakādu yusīghuhu wayatīhi l-mawtu min kulli makānin wamā huwa bimayyitin wamin warāihi ʿadhābun ghalīẓun

Kannada ಅದನ್ನು ಅವನು ನುಂಗಲೆತ್ನಿಸುವನು. ಅದನ್ನು ಗಂಟಲಿನಿಂದ ಇಳಿಸಲು ಪ್ರಯಾಸವಾಗುವುದು. ಮೃತ್ಯು ಎಲ್ಲ ಕಡೆಗಳಿಂದಲೂ ಅವನನ್ನು ಆವರಿಸಿರುವುದು. ಆದರೆ ಅವನು ಸಾಯಲಾರ. ಅದರ ಮುಂದೆ ಒಂದು ಘೋರ ಶಿಕ್ಷೆಯೂ ಇದೆ.

Verse 18

مَّثَلُ ٱلَّذِينَ كَفَرُوا۟ بِرَبِّهِمْ ۖ أَعْمَـٰلُهُمْ كَرَمَادٍ ٱشْتَدَّتْ بِهِ ٱلرِّيحُ فِى يَوْمٍ عَاصِفٍ ۖ لَّا يَقْدِرُونَ مِمَّا كَسَبُوا۟ عَلَىٰ شَىْءٍ ۚ ذَٰلِكَ هُوَ ٱلضَّلَـٰلُ ٱلْبَعِيدُ

Transliteration mathalu alladhīna kafarū birabbihim aʿmāluhum karamādin ish'taddat bihi l-rīḥu fī yawmin ʿāṣifin lā yaqdirūna mimmā kasabū ʿalā shayin dhālika huwa l-ḍalālu l-baʿīdu

Kannada ತಮ್ಮ ಪ್ರಭುವನ್ನು ನಿಷೇಧಿಸಿದವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಒಂದು ಬಿರುಗಾಳಿಯ ದಿನದ ಚಂಡಮಾರುತವು ಅದನ್ನು ಹಾರಿಸಿತು. ಅವರು ತಮ್ಮ ಗಳಿಕೆಯಿಂದ ಯಾವ ಪ್ರತಿಫಲವನ್ನೂ ಪಡೆಯಲು ಶಕ್ತರಾಗರು. ಇದೇ (ನಿವಾರಣೆ) ವಿದೂರವಾದ ವಿನಾಶ.

Verse 19

أَلَمْ تَرَ أَنَّ ٱللَّهَ خَلَقَ ٱلسَّمَـٰوَٰتِ وَٱلْأَرْضَ بِٱلْحَقِّ ۚ إِن يَشَأْ يُذْهِبْكُمْ وَيَأْتِ بِخَلْقٍ جَدِيدٍ

Transliteration alam tara anna l-laha khalaqa l-samāwāti wal-arḍa bil-ḥaqi in yasha yudh'hib'kum wayati bikhalqin jadīdin

Kannada ಅಲ್ಲಾಹನು ಆಕಾಶಗಳನ್ನು ಮತ್ತು ಭೂಮಿ ಯನ್ನು ಸತ್ಯಪೂರ್ಣವಾಗಿ ಸೃಷ್ಟಿಸಿರುವುದನ್ನು ನೀವು ಕಾಣುವುದಿಲ್ಲವೇ? ಅವನು ಇಚ್ಛಿಸಿದರೆ ನಿಮ್ಮನ್ನು ಅಳಿಸಿ ಒಂದು ಹೊಸ ಸೃಷ್ಟಿಯನ್ನು (ನಿಮ್ಮ ಸ್ಥಾನದಲ್ಲಿ) ತರಬಲ್ಲನು.

Verse 20

وَمَا ذَٰلِكَ عَلَى ٱللَّهِ بِعَزِيزٍ

Transliteration wamā dhālika ʿalā l-lahi biʿazīzin

Kannada ಅಲ್ಲಾಹನ ಮೇಲೆ ಅದೇನೂ ಪ್ರಯಾಸವಲ್ಲ.

Verse 21

وَبَرَزُوا۟ لِلَّهِ جَمِيعًا فَقَالَ ٱلضُّعَفَـٰٓؤُا۟ لِلَّذِينَ ٱسْتَكْبَرُوٓا۟ إِنَّا كُنَّا لَكُمْ تَبَعًا فَهَلْ أَنتُم مُّغْنُونَ عَنَّا مِنْ عَذَابِ ٱللَّهِ مِن شَىْءٍ ۚ قَالُوا۟ لَوْ هَدَىٰنَا ٱللَّهُ لَهَدَيْنَـٰكُمْ ۖ سَوَآءٌ عَلَيْنَآ أَجَزِعْنَآ أَمْ صَبَرْنَا مَا لَنَا مِن مَّحِيصٍ

Transliteration wabarazū lillahi jamīʿan faqāla l-ḍuʿafāu lilladhīna is'takbarū innā kunnā lakum tabaʿan fahal antum mugh'nūna ʿannā min ʿadhābi l-lahi min shayin qālū law hadānā l-lahu lahadaynākum sawāon ʿalaynā ajaziʿ'nā am ṣabarnā mā lanā min maḥīṣin

Kannada ಅವರೆಲ್ಲರೂ ಒಟ್ಟಾಗಿ ಅಲ್ಲಾಹನ ಮುಂದೆ ಪ್ರತ್ಯಕ್ಷರಾಗುವಾಗ ಅಶಕ್ತರು (ಅನುಯಾಯಿಗಳು), ಅಹಂಭಾವಿಗಳಾಗಿದ್ದವರೊಡನೆ, (ಮುಖಂಡ ರೊಡನೆ) ‘ನಾವು ನಿಮ್ಮ ಅನುಯಾಯಿಗಳಾಗಿ ದ್ದೆವು. ಆದ್ದರಿಂದ ನೀವು ನಮ್ಮನ್ನು ಅಲ್ಲಾಹನ ಶಿಕ್ಷೆಯಿಂದ ಸ್ವಲ್ಪವಾದರೂ ರಕ್ಷಿಸಬಲ್ಲಿರಾ?’ ಎಂದು ಕೇಳುವರು. ಅವರು (ಮುಖಂಡರು) ಹೇಳುವರು; ‘ಅಲ್ಲಾಹನು ನಮ್ಮನ್ನು ಮೋಕ್ಷದ ದಾರಿಗೆ ಸೇರಿಸುತ್ತಿದ್ದರೆ ನಾವು ನಿಮ್ಮನ್ನೂ ಮೋಕ್ಷದ ದಾರಿಗೆ ಕರೆಯುತ್ತಿದ್ದೆವು. ನಮ್ಮ ಮಟ್ಟಿಗೆ ನಾವು ಪ್ರಲಾಪಿಸಿದರೂ ಸಹಿಸಿಕೊಂಡರೂ ಒಂದೇ. ನಮಗೆ ರಕ್ಷಣೆಯ ಯಾವ ದಾರಿಯೂ ಇಲ್ಲ’.

Verse 22

وَقَالَ ٱلشَّيْطَـٰنُ لَمَّا قُضِىَ ٱلْأَمْرُ إِنَّ ٱللَّهَ وَعَدَكُمْ وَعْدَ ٱلْحَقِّ وَوَعَدتُّكُمْ فَأَخْلَفْتُكُمْ ۖ وَمَا كَانَ لِىَ عَلَيْكُم مِّن سُلْطَـٰنٍ إِلَّآ أَن دَعَوْتُكُمْ فَٱسْتَجَبْتُمْ لِى ۖ فَلَا تَلُومُونِى وَلُومُوٓا۟ أَنفُسَكُم ۖ مَّآ أَنَا۠ بِمُصْرِخِكُمْ وَمَآ أَنتُم بِمُصْرِخِىَّ ۖ إِنِّى كَفَرْتُ بِمَآ أَشْرَكْتُمُونِ مِن قَبْلُ ۗ إِنَّ ٱلظَّـٰلِمِينَ لَهُمْ عَذَابٌ أَلِيمٌ

Transliteration waqāla l-shayṭānu lammā quḍiya l-amru inna l-laha waʿadakum waʿda l-ḥaqi wawaʿadttukum fa-akhlaftukum wamā kāna liya ʿalaykum min sul'ṭānin illā an daʿawtukum fa-is'tajabtum lī falā talūmūnī walūmū anfusakum mā anā bimuṣ'rikhikum wamā antum bimuṣ'rikhiyya innī kafartu bimā ashraktumūni min qablu inna l-ẓālimīna lahum ʿadhābun alīmun

Kannada ಕಾರ್ಯವು ತೀರ್ಮಾನವಾದಾಗ ಶೈತಾನನು ಹೇಳುವನು; “ಖಂಡಿತ ಅಲ್ಲಾಹನು ನಿಮಗೆ ಸತ್ಯ ವಾದ ವಾಗ್ದಾನವನ್ನೇ ನೀಡಿದನು. ನಾನೂ ನಿಮಗೆ ವಾಗ್ದಾನವನ್ನು ಮಾಡಿದ್ದೆನು. ಆದರೆ ಅದನ್ನು (ನಾನು ನಿಮಗೆ ಮಾಡಿದ್ದ ವಾಗ್ದಾನ) ನಾನು ಉಲ್ಲಂಘಿಸಿದ್ದೇನೆ. ನಿಮ್ಮ ಮೇಲೆ ನನಗೆ ಅಧಿಕಾರವೇನೂ ಇರಲಿಲ್ಲ. ನಾನು ನಿಮ್ಮನ್ನು ಕರೆದೆನು. ಆಗ ನೀವು ನನ್ನ ಕರೆಗೆ ಓಗೊಟ್ಟಿರಿ ಅಷ್ಟೇ, ಆದ್ದರಿಂದ ನನ್ನನ್ನು ಹಳಿಯಬೇಡಿರಿ. ನಿಮ್ಮನ್ನೇ ನೀವು ಹಳಿದುಕೊಳ್ಳಿರಿ. ನಾನು ನಿಮಗೆ ನೆರವು ನೀಡಲಾರೆ. ನೀವೂ ನನಗೆ ನೆರವು ನೀಡಲಾರಿರಿ. ನೀವು ನನ್ನನ್ನು ದೇವತ್ವದಲ್ಲಿ ಭಾಗೀದಾರನನ್ನಾಗಿ ಮಾಡಿದ್ದನ್ನು ನಾನು ಈಗ ನಿಷೇಧಿಸಿದ್ದೇನೆ”. ಅಕ್ರಮಿಗಳಿಗೆ ಖಂಡಿತ ವೇದನಾಯುಕ್ತ ಶಿಕ್ಷೆಯುಂಟು.

Verse 23

وَأُدْخِلَ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ جَنَّـٰتٍ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا بِإِذْنِ رَبِّهِمْ ۖ تَحِيَّتُهُمْ فِيهَا سَلَـٰمٌ

Transliteration wa-ud'khila alladhīna āmanū waʿamilū l-ṣāliḥāti jannātin tajrī min taḥtihā l-anhāru khālidīna fīhā bi-idh'ni rabbihim taḥiyyatuhum fīhā salāmun

Kannada ಸತ್ಯವಿಶ್ವಾಸ ಸ್ವೀಕರಿಸಿದ ಮತ್ತು ಸತ್ಕರ್ಮವೆಸಗಿದವರು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಗೊಳಿಸಲ್ಪಡುವರು. ಅಲ್ಲಿ ಅವರು ತಮ್ಮ ಪ್ರಭುವಿನ ಅನುಮತಿ ಪ್ರಕಾರ ಸದಾ ವಾಸಿಸುತ್ತಿರುವರು. ಅಲ್ಲಿ ಅವರ ಶುಭಾಶಯವು ಸಲಾಮ್ ಆಗಿರುವುದು.

Verse 24

أَلَمْ تَرَ كَيْفَ ضَرَبَ ٱللَّهُ مَثَلًا كَلِمَةً طَيِّبَةً كَشَجَرَةٍ طَيِّبَةٍ أَصْلُهَا ثَابِتٌ وَفَرْعُهَا فِى ٱلسَّمَآءِ

Transliteration alam tara kayfa ḍaraba l-lahu mathalan kalimatan ṭayyibatan kashajaratin ṭayyibatin aṣluhā thābitun wafarʿuhā fī l-samāi

Kannada ಅಲ್ಲಾಹನು ಪವಿತ್ರ ವಚನಕ್ಕೆ ಹೇಗೆ ಉಪಮೆ ಕೊಟ್ಟಿರುತ್ತಾನೆಂದು ನೀವು ನೋಡುತ್ತಿಲ್ಲವೇ? ಅದು ಒಂದು ಉತ್ತಮ ಜಾತಿಯ ಮರದಂತೆ, ಅದರ ಬುಡವು ಭದ್ರವಾಗಿದೆ. ಅದರ ಗೆಲ್ಲುಗಳು ಆಕಾಶಕ್ಕೆ ಏರಿವೆ.

Verse 25

تُؤْتِىٓ أُكُلَهَا كُلَّ حِينٍۭ بِإِذْنِ رَبِّهَا ۗ وَيَضْرِبُ ٱللَّهُ ٱلْأَمْثَالَ لِلنَّاسِ لَعَلَّهُمْ يَتَذَكَّرُونَ

Transliteration tu'tī ukulahā kulla ḥīnin bi-idh'ni rabbihā wayaḍribu l-lahu l-amthāla lilnnāsi laʿallahum yatadhakkarūna

Kannada ಅದು ತನ್ನ ಪ್ರಭುವಿನ ಅನುಜ್ಞೆಯಂತೆ ಸದಾ ಕಾಲ ತನ್ನ ಫಲಗಳನ್ನು ಕೊಡುತ್ತಿದೆ. ಜನರು ಇವುಗಳಿಂದ ಪಾಠ ಕಲಿಯಲೆಂದು ಅಲ್ಲಾಹನು ಉದಾಹರಣೆಗಳನ್ನು ಕೊಡುತ್ತಾನೆ.

Verse 26

وَمَثَلُ كَلِمَةٍ خَبِيثَةٍ كَشَجَرَةٍ خَبِيثَةٍ ٱجْتُثَّتْ مِن فَوْقِ ٱلْأَرْضِ مَا لَهَا مِن قَرَارٍ

Transliteration wamathalu kalimatin khabīthatin kashajaratin khabīthatin uj'tuthat min fawqi l-arḍi mā lahā min qarārin

Kannada ಕೆಟ್ಟ ವಚನದ ಉಪಮೆ - ಒಂದು ಕೆಟ್ಟ ಜಾತಿಯ ಮರದಂತಿದೆ. ಅದು ಭೂತಳದಿಂದ ಕಿತ್ತೆ ಸೆಯಲ್ಪಡುತ್ತದೆ. ಅದಕ್ಕೆ ಯಾವುದೇ ಸ್ಥಿರತೆ ಇಲ್ಲ.

Verse 27

يُثَبِّتُ ٱللَّهُ ٱلَّذِينَ ءَامَنُوا۟ بِٱلْقَوْلِ ٱلثَّابِتِ فِى ٱلْحَيَوٰةِ ٱلدُّنْيَا وَفِى ٱلْـَٔاخِرَةِ ۖ وَيُضِلُّ ٱللَّهُ ٱلظَّـٰلِمِينَ ۚ وَيَفْعَلُ ٱللَّهُ مَا يَشَآءُ

Transliteration yuthabbitu l-lahu alladhīna āmanū bil-qawli l-thābiti fī l-ḥayati l-dun'yā wafī l-ākhirati wayuḍillu l-lahu l-ẓālimīna wayafʿalu l-lahu mā yashāu

Kannada ಇಹಜೀವನದಲ್ಲೂ ಪರದಲ್ಲೂ ಸುಸ್ಥಿರ ವಚನದ ಮೂಲಕ ಸತ್ಯವಿಶ್ವಾಸಿಗಳನ್ನು ಅಲ್ಲಾಹು ಸ್ಥಿರ ಗೊಳಿಸುವನು. ಮತ್ತು ಅಕ್ರಮಿಗಳನ್ನು ಅಲ್ಲಾಹನು ದಾರಿಗೆಡಿಸುತ್ತಾನೆ. ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.

Verse 28

۞ أَلَمْ تَرَ إِلَى ٱلَّذِينَ بَدَّلُوا۟ نِعْمَتَ ٱللَّهِ كُفْرًا وَأَحَلُّوا۟ قَوْمَهُمْ دَارَ ٱلْبَوَارِ

Transliteration alam tara ilā alladhīna baddalū niʿ'mata l-lahi kuf'ran wa-aḥallū qawmahum dāra l-bawāri

Kannada ಅಲ್ಲಾಹನ ಅನುಗ್ರಹವನ್ನು ಕೃತಘ್ನತೆಯನ್ನಾಗಿ ಬದಲಾಯಿಸಿ, ತಮ್ಮ ಜನಾಂಗವನ್ನು ವಿನಾಶದ ಗೃಹಕ್ಕೆ ತಳ್ಳಿಬಿಟ್ಟವರನ್ನು ನೀವು ಕಂಡಿರಾ?

Verse 29

جَهَنَّمَ يَصْلَوْنَهَا ۖ وَبِئْسَ ٱلْقَرَارُ

Transliteration jahannama yaṣlawnahā wabi'sa l-qarāru

Kannada ಅರ್ಥಾತ್ ನರಕಾಗ್ನಿಗೆ. ಅದರಲ್ಲಿ ಅವರು ಕರಟುವರು. ಅದು ಅತ್ಯಂತ ನಿಕೃಷ್ಟ ತಾಣ.

Verse 30

وَجَعَلُوا۟ لِلَّهِ أَندَادًا لِّيُضِلُّوا۟ عَن سَبِيلِهِۦ ۗ قُلْ تَمَتَّعُوا۟ فَإِنَّ مَصِيرَكُمْ إِلَى ٱلنَّارِ

Transliteration wajaʿalū lillahi andādan liyuḍillū ʿan sabīlihi qul tamattaʿū fa-inna maṣīrakum ilā l-nāri

Kannada ಅಲ್ಲಾಹನ ಮಾರ್ಗದಿಂದ ಜನರನ್ನು ತಪ್ಪಿಸಲಿಕ್ಕಾಗಿ ಅವರು ಅಲ್ಲಾಹನಿಗೆ ಕೆಲವು ಭಾಗೀದಾರ ರನ್ನು ಮಾಡಿಕೊಂಡರು. ಹೇಳಿರಿ; ನೀವು ಸುಖಪಟ್ಟುಕೊಳ್ಳಿರಿ. ನಿಜವಾಗಿಯೂ ನಿಮ್ಮ ನಿರ್ಗಮ ನವು ನರಕಕ್ಕೇ ಆಗಿರುತ್ತದೆ.

Verse 31

قُل لِّعِبَادِىَ ٱلَّذِينَ ءَامَنُوا۟ يُقِيمُوا۟ ٱلصَّلَوٰةَ وَيُنفِقُوا۟ مِمَّا رَزَقْنَـٰهُمْ سِرًّا وَعَلَانِيَةً مِّن قَبْلِ أَن يَأْتِىَ يَوْمٌ لَّا بَيْعٌ فِيهِ وَلَا خِلَـٰلٌ

Transliteration qul liʿibādiya alladhīna āmanū yuqīmū l-ṣalata wayunfiqū mimmā razaqnāhum sirran waʿalāniyatan min qabli an yatiya yawmun lā bayʿun fīhi walā khilālun

Kannada (ಓ ಪೈಗಂಬರರೇ,) ಸತ್ಯವಿಶ್ವಾಸವನ್ನು ಸ್ವೀಕರಿಸಿದ ನನ್ನ ದಾಸರೊಡನೆ ಹೇಳಿರಿ; ಅವರು ನಮಾಝನ್ನು ಸಂಸ್ಥಾಪಿಸಲಿ. ಯಾವುದೇ ಕ್ರಯ ವಿಕ್ರ ಯವೂ ಗೆಳೆತನವೂ ಪ್ರಯೋಜನಕ್ಕೆ ಬಾರದ ಆ ದಿನ ಬರುವುದಕ್ಕೆ ಮುಂಚೆಯೇ ನಾವು ಅವರಿಗೆ ನೀಡಿದ ಸಂಪತ್ತಿನಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡಲಿ.

Verse 32

ٱللَّهُ ٱلَّذِى خَلَقَ ٱلسَّمَـٰوَٰتِ وَٱلْأَرْضَ وَأَنزَلَ مِنَ ٱلسَّمَآءِ مَآءً فَأَخْرَجَ بِهِۦ مِنَ ٱلثَّمَرَٰتِ رِزْقًا لَّكُمْ ۖ وَسَخَّرَ لَكُمُ ٱلْفُلْكَ لِتَجْرِىَ فِى ٱلْبَحْرِ بِأَمْرِهِۦ ۖ وَسَخَّرَ لَكُمُ ٱلْأَنْهَـٰرَ

Transliteration al-lahu alladhī khalaqa l-samāwāti wal-arḍa wa-anzala mina l-samāi māan fa-akhraja bihi mina l-thamarāti riz'qan lakum wasakhara lakumu l-ful'ka litajriya fī l-baḥri bi-amrihi wasakhara lakumu l-anhāra

Kannada ಅಲ್ಲಾಹನೇ ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದವನು. ಆಕಾಶದಿಂದ ಮಳೆ ಸುರಿಸಿದ ವನು, ಅದರ ಮೂಲಕ ನಿಮಗೆ ಉಪಜೀವನಕ್ಕಾಗಿ ಫಲ ಮೂಲಗಳನ್ನು ಉತ್ಪಾದಿಸಿದವನು, ಅವನು ತನ್ನ ಆಜ್ಞೆ ಪ್ರಕಾರ ಸಮುದ್ರದಲ್ಲಿ ಸಂಚರಿಸುವಂತೆ ಹಡಗನ್ನು ನಿಮ್ಮ ನಿಯಂತ್ರಣಕ್ಕೆ ಕೊಟ್ಟನು ಮತ್ತು ನಿಮಗಾಗಿ ನದಿಗಳನ್ನೂ ನಿಯಂತ್ರಿಸಿದನು.

Verse 33

وَسَخَّرَ لَكُمُ ٱلشَّمْسَ وَٱلْقَمَرَ دَآئِبَيْنِ ۖ وَسَخَّرَ لَكُمُ ٱلَّيْلَ وَٱلنَّهَارَ

Transliteration wasakhara lakumu l-shamsa wal-qamara dāibayni wasakhara lakumu al-layla wal-nahāra

Kannada ಅವನು ನಿರಂತರವಾಗಿ ಚಲಿಸುತ್ತಿರುವ ಸೂರ್ಯ ಚಂದ್ರರನ್ನು ನಿಮಗಾಗಿ ನಿಯಂತ್ರಿಸಿದನು ಮತ್ತು ರಾತ್ರೆ ಹಗಲುಗಳನ್ನು ನಿಮಗಾಗಿ ನಿಯಂತ್ರಿಸಿದನು.

Verse 34

وَءَاتَىٰكُم مِّن كُلِّ مَا سَأَلْتُمُوهُ ۚ وَإِن تَعُدُّوا۟ نِعْمَتَ ٱللَّهِ لَا تُحْصُوهَآ ۗ إِنَّ ٱلْإِنسَـٰنَ لَظَلُومٌ كَفَّارٌ

Transliteration waātākum min kulli mā sa-altumūhu wa-in taʿuddū niʿ'mata l-lahi lā tuḥ'ṣūhā inna l-insāna laẓalūmun kaffārun

Kannada ಅವನು ನೀವು ಬೇಡಿದುದರಿಂದೆಲ್ಲ ನಿಮಗೆ ಕೊಟ್ಟನು, ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಕೆ ಮಾಡಲಿಚ್ಛಿಸಿದರೆ ಅದನ್ನು ನೀವು ಎಣಿಸಿ ಮುಗಿಸಲಾರಿರಿ. ವಾಸ್ತವದಲ್ಲಿ ಮಾನವನು ಮಹಾ ಅಕ್ರಮಿಯೂ ಕೃತಘ್ನನೂ ಆಗಿರುತ್ತಾನೆ.

Verse 35

وَإِذْ قَالَ إِبْرَٰهِيمُ رَبِّ ٱجْعَلْ هَـٰذَا ٱلْبَلَدَ ءَامِنًا وَٱجْنُبْنِى وَبَنِىَّ أَن نَّعْبُدَ ٱلْأَصْنَامَ

Transliteration wa-idh qāla ib'rāhīmu rabbi ij'ʿal hādhā l-balada āminan wa-uj'nub'nī wabaniyya an naʿbuda l-aṣnāma

Kannada ಇಬ್‍ರಾಹೀಮರು ಪ್ರಾರ್ಥಿಸಿದ ಸಂದರ್ಭವನ್ನು ನೆನೆಯಿರಿ. ‘ಓ ನನ್ನ ಪ್ರಭೂ, ಈ ನಾಡನ್ನು ನಿರ್ಭೀತವನ್ನಾಗಿ ಮಾಡು ಮತ್ತು ನಾವು ವಿಗ್ರಹಾರಾಧನೆ ಮಾಡದಂತೆ ನನ್ನನ್ನೂ ನನ್ನ ಮಕ್ಕಳನ್ನೂ ರಕ್ಷಿಸು.

Verse 36

رَبِّ إِنَّهُنَّ أَضْلَلْنَ كَثِيرًا مِّنَ ٱلنَّاسِ ۖ فَمَن تَبِعَنِى فَإِنَّهُۥ مِنِّى ۖ وَمَنْ عَصَانِى فَإِنَّكَ غَفُورٌ رَّحِيمٌ

Transliteration rabbi innahunna aḍlalna kathīran mina l-nāsi faman tabiʿanī fa-innahu minnī waman ʿaṣānī fa-innaka ghafūrun raḥīmun

Kannada ಓ ನನ್ನ ಪ್ರಭೂ, ಈ ವಿಗ್ರಹಗಳು ಅನೇಕರನ್ನು ದಾರಿಗೆಡಿಸಿವೆ. ಆದ್ದರಿಂದ ಯಾರು ನನ್ನನ್ನು ಅನು ಸರಿಸುತ್ತಾರೆ, ಅವನು ನನ್ನವನು. ಯಾರಾದರೂ ನನಗೆ ವಿರುದ್ಧವಾದರೆ ನಿಶ್ಚಯವಾಗಿಯೂ ನೀನು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಿ.

Verse 37

رَّبَّنَآ إِنِّىٓ أَسْكَنتُ مِن ذُرِّيَّتِى بِوَادٍ غَيْرِ ذِى زَرْعٍ عِندَ بَيْتِكَ ٱلْمُحَرَّمِ رَبَّنَا لِيُقِيمُوا۟ ٱلصَّلَوٰةَ فَٱجْعَلْ أَفْـِٔدَةً مِّنَ ٱلنَّاسِ تَهْوِىٓ إِلَيْهِمْ وَٱرْزُقْهُم مِّنَ ٱلثَّمَرَٰتِ لَعَلَّهُمْ يَشْكُرُونَ

Transliteration rabbanā innī askantu min dhurriyyatī biwādin ghayri dhī zarʿin ʿinda baytika l-muḥarami rabbanā liyuqīmū l-ṣalata fa-ij'ʿal afidatan mina l-nāsi tahwī ilayhim wa-ur'zuq'hum mina l-thamarāti laʿallahum yashkurūna

Kannada ಓ ನಮ್ಮ ಪ್ರಭೂ, ನಾನು ನನ್ನ ಸಂತತಿಯಿಂದ (ಕೆಲವರನ್ನು) ಒಂದು ಬಂಜರು ಕಣಿವೆಯಲ್ಲಿ ನಿನ್ನ ಪವಿತ್ರ ಗೇಹದ (ಕಅïಬಾದ) ಬಳಿ ತಂದು ನೆಲೆಗೊಳಿಸಿದ್ದೇನೆ. ಓ ನಮ್ಮ ಪ್ರಭೂ, ಇವರು ನಮಾಝನ್ನು ಸಂಸ್ಥಾಪಿಸಲೆಂದು (ಹೀಗೆ ಮಾಡಿ ದ್ದೇನೆ.) ಆದುದರಿಂದ ನೀನು ಜನರಲ್ಲಿ ಕೆಲವರ ಮನಸ್ಸುಗಳನ್ನು ಇವರ ಕಡೆಗೆ ಒಲಿಯುವಂತೆ ಮಾಡು ಮತ್ತು ಇವರಿಗೆ ಹಣ್ಣು, ಫಲಗಳನ್ನು ನೀಡು. ಇವರು ಕೃತಜ್ಞರಾಗಲೂಬಹುದು

Verse 38

رَبَّنَآ إِنَّكَ تَعْلَمُ مَا نُخْفِى وَمَا نُعْلِنُ ۗ وَمَا يَخْفَىٰ عَلَى ٱللَّهِ مِن شَىْءٍ فِى ٱلْأَرْضِ وَلَا فِى ٱلسَّمَآءِ

Transliteration rabbanā innaka taʿlamu mā nukh'fī wamā nuʿ'linu wamā yakhfā ʿalā l-lahi min shayin fī l-arḍi walā fī l-samāi

Kannada ಓ ನಮ್ಮ ಪ್ರಭೂ, ನಾವು ಅಡಗಿಸುವುದನ್ನೂ ಬಹಿರಂಗಪಡಿಸುವುದನ್ನೂ ನೀನು ಬಲ್ಲವನಾಗಿರುತ್ತಿ. ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಯಾವುದೇ ವಸ್ತು ಅಲ್ಲಾಹನಿಂದ ಅಡಗಿರುವುದಿಲ್ಲ.

Verse 39

ٱلْحَمْدُ لِلَّهِ ٱلَّذِى وَهَبَ لِى عَلَى ٱلْكِبَرِ إِسْمَـٰعِيلَ وَإِسْحَـٰقَ ۚ إِنَّ رَبِّى لَسَمِيعُ ٱلدُّعَآءِ

Transliteration al-ḥamdu lillahi alladhī wahaba lī ʿalā l-kibari is'māʿīla wa-is'ḥāqa inna rabbī lasamīʿu l-duʿāi

Kannada ವೃದ್ಧಾಪ್ಯದಲ್ಲಿ ನನಗೆ ಇಸ್ಮಾಈಲ್ ಮತ್ತು ಇಸ್‍ಹಾಖರನ್ನು ದಯಪಾಲಿಸಿದ ಅಲ್ಲಾಹನಿಗೆ ಸರ್ವಸ್ತುತಿ. ನಿಶ್ಚಯವಾಗಿಯೂ ನನ್ನ ಪ್ರಭು ಪ್ರಾರ್ಥನೆಯನ್ನು ಚೆನ್ನಾಗಿ ಆಲಿಸುವವನು.

Verse 40

رَبِّ ٱجْعَلْنِى مُقِيمَ ٱلصَّلَوٰةِ وَمِن ذُرِّيَّتِى ۚ رَبَّنَا وَتَقَبَّلْ دُعَآءِ

Transliteration rabbi ij'ʿalnī muqīma l-ṣalati wamin dhurriyyatī rabbanā wataqabbal duʿāi

Kannada ಓ ನನ್ನ ಪ್ರಭೂ, ನೀನು ನನ್ನನ್ನು ನಮಾಝ್ ಸಂಸ್ಥಾಪಿಸುವವನನ್ನಾಗಿ ಮಾಡು. ನನ್ನ ಸಂತತಿಯಿಂದಲೂ (ಹಾಗೆ ಮಾಡು). ಓ ನಮ್ಮ ಪ್ರಭೂ, ನನ್ನ ಪ್ರಾರ್ಥನೆಯನ್ನು ಸ್ವೀಕರಿಸು.

Verse 41

رَبَّنَا ٱغْفِرْ لِى وَلِوَٰلِدَىَّ وَلِلْمُؤْمِنِينَ يَوْمَ يَقُومُ ٱلْحِسَابُ

Transliteration rabbanā igh'fir lī waliwālidayya walil'mu'minīna yawma yaqūmu l-ḥisābu

Kannada ಓ ನಮ್ಮ ಪ್ರಭೂ, ವಿಚಾರಣೆ ನಡೆಯುವ ದಿನ ನನ್ನನ್ನೂ ನನ್ನ ಮಾತಾಪಿತರನ್ನೂ ಸತ್ಯ ವಿಶ್ವಾಸಿಗಳನ್ನೂ ಕ್ಷಮಿಸಿ ಬಿಡು’.

Verse 42

وَلَا تَحْسَبَنَّ ٱللَّهَ غَـٰفِلًا عَمَّا يَعْمَلُ ٱلظَّـٰلِمُونَ ۚ إِنَّمَا يُؤَخِّرُهُمْ لِيَوْمٍ تَشْخَصُ فِيهِ ٱلْأَبْصَـٰرُ

Transliteration walā taḥsabanna l-laha ghāfilan ʿammā yaʿmalu l-ẓālimūna innamā yu-akhiruhum liyawmin tashkhaṣu fīhi l-abṣāru

Kannada ಅಕ್ರಮಿಗಳು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಅಶ್ರದ್ಧನಾಗಿರುವನೆಂದು ನೀವು ಭಾವಿಸಬೇಡಿರಿ. ಬಿಡುಗಣ್ಣುಗಳ ದಿನಕ್ಕಾಗಿ ಅವರಿಗೆ ಅಲ್ಲಾಹನು ಕಾಲಾವಕಾಶ ಕೊಡುತ್ತಿದ್ದಾನೆ ಅಷ್ಟೆ.

Verse 43

مُهْطِعِينَ مُقْنِعِى رُءُوسِهِمْ لَا يَرْتَدُّ إِلَيْهِمْ طَرْفُهُمْ ۖ وَأَفْـِٔدَتُهُمْ هَوَآءٌ

Transliteration muh'ṭiʿīna muq'niʿī ruūsihim lā yartaddu ilayhim ṭarfuhum wa-afidatuhum hawāon

Kannada (ಅಂದು) ಅವರು ತಲೆಯನ್ನು ಮೇಲೆತ್ತಿಕೊಂಡು ಧಾವಿಸುತ್ತಿರುವರು. ಅವರ ದೃಷ್ಟಿಗಳು ಅವರ ಕಡೆಗೆ ಮರಳಿ ಬರಲೊಲ್ಲದು. ಅವರ ಮನಸ್ಸುಗಳು ಶೂನ್ಯವಾಗಿರುವವು.

Verse 44

وَأَنذِرِ ٱلنَّاسَ يَوْمَ يَأْتِيهِمُ ٱلْعَذَابُ فَيَقُولُ ٱلَّذِينَ ظَلَمُوا۟ رَبَّنَآ أَخِّرْنَآ إِلَىٰٓ أَجَلٍ قَرِيبٍ نُّجِبْ دَعْوَتَكَ وَنَتَّبِعِ ٱلرُّسُلَ ۗ أَوَلَمْ تَكُونُوٓا۟ أَقْسَمْتُم مِّن قَبْلُ مَا لَكُم مِّن زَوَالٍ

Transliteration wa-andhiri l-nāsa yawma yatīhimu l-ʿadhābu fayaqūlu alladhīna ẓalamū rabbanā akhir'nā ilā ajalin qarībin nujib daʿwataka wanattabiʿi l-rusula awalam takūnū aqsamtum min qablu mā lakum min zawālin

Kannada (ಓ ಪೈಗಂಬರರೇ,) ಶಿಕ್ಷೆಯು ಬಂದೆರಗುವ ಆ ದಿವಸದ ಬಗ್ಗೆ ನೀವು ಜನರಿಗೆ ಎಚ್ಚರಿಕೆ ಕೊಡಿರಿ. ಆಗ ಅಕ್ರಮಿಗಳು, ‘ಓ ನಮ್ಮ ಪ್ರಭೂ, ನಮಗೆ ಇನ್ನೂ ಕೊಂಚ ಕಾಲಾವಕಾಶವನ್ನು ಕೊಟ್ಟು ಬಿಡು. ಹತ್ತಿರದ ಒಂದು ಅವಧಿಯವರೆಗೆ ನಮಗೆ ನೀನು ಸಮಯವನ್ನು ಮುಂದೂಡು. ನಾವು ನಿನ್ನ ಕರೆಗೆ ಓಗೊಡುವೆವು ಮತ್ತು ಸಂದೇಶವಾ ಹಕರನ್ನು ಅನುಸರಿಸುವೆವು’ ಎನ್ನುವರು. ನಿಮಗೆ ಯಾವುದೇ ಸ್ಥಳಾಂತರವಿಲ್ಲವೆಂದು ಇದಕ್ಕೆ ಮುಂಚೆ ನೀವು ಆಣೆ ಹಾಕುತ್ತ ಹೇಳುತ್ತಿದ್ದಿರಲ್ಲವೇ?

Verse 45

وَسَكَنتُمْ فِى مَسَـٰكِنِ ٱلَّذِينَ ظَلَمُوٓا۟ أَنفُسَهُمْ وَتَبَيَّنَ لَكُمْ كَيْفَ فَعَلْنَا بِهِمْ وَضَرَبْنَا لَكُمُ ٱلْأَمْثَالَ

Transliteration wasakantum fī masākini alladhīna ẓalamū anfusahum watabayyana lakum kayfa faʿalnā bihim waḍarabnā lakumu l-amthāla

Kannada ವಸ್ತುತಃ ತಮ್ಮ ಮೇಲೆ ತಾವೇ ಅಕ್ರಮವೆಸಗಿದ್ದ ಆ ಜನಾಂಗಗಳ ನಿವಾಸಗಳಲ್ಲಿ ನೀವು ವಾಸಿಸಿದ್ದಿರಿ. ನಾವು ಅವರೊಂದಿಗೆ ಹೇಗೆ ವರ್ತಿಸಿದ್ದೇವೆಂಬುದು ನಿಮಗೆ ಸ್ಪಷ್ಟವಾಗಿದೆ ಕೂಡಾ. ನಾವು ನಿಮಗೆ ಉದಾಹರಣೆಗಳನ್ನು ವಿವರಿಸಿ ಕೊಟ್ಟಿದ್ದೆವು.

Verse 46

وَقَدْ مَكَرُوا۟ مَكْرَهُمْ وَعِندَ ٱللَّهِ مَكْرُهُمْ وَإِن كَانَ مَكْرُهُمْ لِتَزُولَ مِنْهُ ٱلْجِبَالُ

Transliteration waqad makarū makrahum waʿinda l-lahi makruhum wa-in kāna makruhum litazūla min'hu l-jibālu

Kannada ಅವರು ತಮ್ಮ ಎಲ್ಲಾ ಕುತಂತ್ರಗಳನ್ನು ಹೆಣೆದರು. ಅವರ ಪ್ರತಿಯೊಂದು ಕುತಂತ್ರದ ಪ್ರತಿತಂತ್ರ ಅಲ್ಲಾಹನ ಬಳಿಯಲ್ಲಿತ್ತು. ಅವರ ಕುತಂತ್ರದಿಂದ ಪರ್ವತಗಳು ಸರಿಯಲಾರದು.

Verse 47

فَلَا تَحْسَبَنَّ ٱللَّهَ مُخْلِفَ وَعْدِهِۦ رُسُلَهُۥٓ ۗ إِنَّ ٱللَّهَ عَزِيزٌ ذُو ٱنتِقَامٍ

Transliteration falā taḥsabanna l-laha mukh'lifa waʿdihi rusulahu inna l-laha ʿazīzun dhū intiqāmin

Kannada ಆದುದರಿಂದ (ಓ ಪೈಗಂಬರರೇ) ಅಲ್ಲಾಹನು, ತನ್ನ ಸಂದೇಶವಾಹಕರೊಡನೆ ಮಾಡಿದ ವಾಗ್ದಾನಗಳನ್ನು ಉಲ್ಲಂಘಿಸುವನೆಂದು ಭಾವಿಸಬೇಡಿರಿ, ವಾಸ್ತವದಲ್ಲಿ ಅಲ್ಲಾಹನು ಮಹಾಪ್ರತಾಪಿಯೂ ಪ್ರತೀಕಾರ ಪಡೆಯುವವನೂ ಆಗಿರುತ್ತಾನೆ.

Verse 48

يَوْمَ تُبَدَّلُ ٱلْأَرْضُ غَيْرَ ٱلْأَرْضِ وَٱلسَّمَـٰوَٰتُ ۖ وَبَرَزُوا۟ لِلَّهِ ٱلْوَٰحِدِ ٱلْقَهَّارِ

Transliteration yawma tubaddalu l-arḍu ghayra l-arḍi wal-samāwātu wabarazū lillahi l-wāḥidi l-qahāri

Kannada ಭೂಮಿ ಈ ಭೂಮಿಯಲ್ಲದ ಇನ್ನೊಂದಾಗಿಯೂ ಮತ್ತು ಆಕಾಶಗಳೂ ಬದಲಾಯಿಸಲ್ಪಡುವ ಹಾಗೂ ಏಕನೂ ಪ್ರಚಂಡನೂ ಆದ ಅಲ್ಲಾಹನ ಮುಂದೆ ಸರ್ವರೂ ಪ್ರತ್ಯಕ್ಷ ಹಾಜರಾಗಲಿರುವ ದಿನ .

Verse 49

وَتَرَى ٱلْمُجْرِمِينَ يَوْمَئِذٍ مُّقَرَّنِينَ فِى ٱلْأَصْفَادِ

Transliteration watarā l-muj'rimīna yawma-idhin muqarranīna fī l-aṣfādi

Kannada ಅಂದು ಅಪರಾಧಿಗಳು ಸಂಕೋಲೆಗಳಿಂದ ಬಿಗಿಯಲ್ಪಟ್ಟಿರುವುದನ್ನು ನೀವು ನೋಡುವಿರಿ .

Verse 50

سَرَابِيلُهُم مِّن قَطِرَانٍ وَتَغْشَىٰ وُجُوهَهُمُ ٱلنَّارُ

Transliteration sarābīluhum min qaṭirānin wataghshā wujūhahumu l-nāru

Kannada ಅವರ ಉಡುಪು ಲಾಕ್ಷದಿಂದಾಗಿರುವುದು. ಅವರ ಮುಖಗಳ ಮೇಲೆ ಬೆಂಕಿ ಆವರಿಸುತ್ತಿರುವುದು.

Verse 51

لِيَجْزِىَ ٱللَّهُ كُلَّ نَفْسٍ مَّا كَسَبَتْ ۚ إِنَّ ٱللَّهَ سَرِيعُ ٱلْحِسَابِ

Transliteration liyajziya l-lahu kulla nafsin mā kasabat inna l-laha sarīʿu l-ḥisābi

Kannada ಪ್ರತಿಯೊಂದು ಜೀವಿಗೂ ಅದರ ಕರ್ಮಫಲವನ್ನು ಅಲ್ಲಾಹು ಕೊಡಲಿಕ್ಕಾಗಿ. (ಅವರು ಹಾಜರಾಗ ಲಿರುವರು). ನಿಶ್ಚಯವಾಗಿಯೂ ಅಲ್ಲಾಹನು ವಿಚಾರಣೆ ನಡೆಸುವುದರಲ್ಲಿ ಅತಿ ಶೀಘ್ರನು.

Verse 52

هَـٰذَا بَلَـٰغٌ لِّلنَّاسِ وَلِيُنذَرُوا۟ بِهِۦ وَلِيَعْلَمُوٓا۟ أَنَّمَا هُوَ إِلَـٰهٌ وَٰحِدٌ وَلِيَذَّكَّرَ أُو۟لُوا۟ ٱلْأَلْبَـٰبِ

Transliteration hādhā balāghun lilnnāsi waliyundharū bihi waliyaʿlamū annamā huwa ilāhun wāḥidun waliyadhakkara ulū l-albābi

Kannada ಇದು ಜನರಿಗಾಗಿ ಒಂದು ಸ್ಪಷ್ಟ ಸಂದೇಶ. ಇದರ ಮೂಲಕ ಅವರು ಎಚ್ಚರಿಸಲ್ಪಡಲು. ಅಲ್ಲಾಹನು ಏಕನಾದ ದೇವನು ಎಂಬುದನ್ನು ಅವರು ತಿಳಿದುಕೊಳ್ಳಲಿಕ್ಕಾಗಿಯೂ ಬುದ್ದಿವಂತರು ಯೋಚಿಸಿ ಅರ್ಥಮಾಡಿಕೊಳ್ಳಲೆಂದೂ (ಇದು ಕಳುಹಿಸಲ್ಪಟ್ಟಿರುತ್ತದೆ) .

Read Surah Ibrahim in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.