MyDugsiStart learning

Surah Ali 'Imran in Kannada: translation and audio

Surah 3 · آل عمران · Family of Imran · 200 verses

Surah Ali 'Imran verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Ali 'Imran word by word in English.

Verse 1

الٓمٓ

Transliteration alif-lam-meem

Kannada ಅಲಿಫ್ ಲಾಮ್ ಮೀಮ್

Verse 2

ٱللَّهُ لَآ إِلَـٰهَ إِلَّا هُوَ ٱلْحَىُّ ٱلْقَيُّومُ

Transliteration al-lahu lā ilāha illā huwa l-ḥayu l-qayūmu

Kannada ಅಲ್ಲಾಹನಲ್ಲದೆ ಬೇರೆ ದೇವನಿಲ್ಲ. ಅವನು ಚಿರಂಜೀವಿ. ಸ್ಥಿರನಿತ್ಯ ನಿಯಂತ್ರಕ.

Verse 3

نَزَّلَ عَلَيْكَ ٱلْكِتَـٰبَ بِٱلْحَقِّ مُصَدِّقًا لِّمَا بَيْنَ يَدَيْهِ وَأَنزَلَ ٱلتَّوْرَىٰةَ وَٱلْإِنجِيلَ

Transliteration nazzala ʿalayka l-kitāba bil-ḥaqi muṣaddiqan limā bayna yadayhi wa-anzala l-tawrāta wal-injīla

Kannada (ಓ ಪ್ರವಾದಿಯರೇ) ಅವನು ಈ ಗ್ರಂಥವನ್ನು ಸತ್ಯಸಂಧ ವಾಗಿ, ಹಿಂದಿನ ವೇದಗ್ರಂಥಗಳ ದೃಢೀಕರಣವಾಗಿ ನಿಮಗೆ ಅವತೀರ್ಣಗೊಳಿಸಿದನು. ಇದಕ್ಕೂ ಮುನ್ನ ಜನರಿಗೆ ಮಾರ್ಗ ದರ್ಶನಕ್ಕಾಗಿ ತೌರಾತ್ ಹಾಗೂ ಇಂಜೀಲನ್ನು ಅವನು ಅವತೀರ್ಣ ಗೊಳಿಸಿದ್ದನು.

Verse 4

مِن قَبْلُ هُدًى لِّلنَّاسِ وَأَنزَلَ ٱلْفُرْقَانَ ۗ إِنَّ ٱلَّذِينَ كَفَرُوا۟ بِـَٔايَـٰتِ ٱللَّهِ لَهُمْ عَذَابٌ شَدِيدٌ ۗ وَٱللَّهُ عَزِيزٌ ذُو ٱنتِقَامٍ

Transliteration min qablu hudan lilnnāsi wa-anzala l-fur'qāna inna alladhīna kafarū biāyāti l-lahi lahum ʿadhābun shadīdun wal-lahu ʿazīzun dhū intiqāmin

Kannada ಮತ್ತು ವಿವೇಚಕ ಗ್ರಂಥವನ್ನೂ ಅವನು ಅವತೀರ್ಣಗೊಳಿಸಿದನು. ಯಾರು ಅಲ್ಲಾಹನ ಪುರಾವೆಗಳನ್ನು ನಿಷೇಧಿಸುತ್ತಾರೆ, ಅವರಿಗೆ ಕಠೋರ ಶಿಕ್ಷೆಯಿದೆ. ಅಲ್ಲಾಹನು ಪ್ರತಾಪಶಾಲಿಯೂ ದಂಡಕನೂ ಆಗಿರುವನು.

Verse 5

إِنَّ ٱللَّهَ لَا يَخْفَىٰ عَلَيْهِ شَىْءٌ فِى ٱلْأَرْضِ وَلَا فِى ٱلسَّمَآءِ

Transliteration inna l-laha lā yakhfā ʿalayhi shayon fī l-arḍi walā fī l-samāi

Kannada ಭೂಮಿ, ಆಕಾಶದಲ್ಲಿರುವ ಯಾವುದೇ ವಸ್ತು ಅಲ್ಲಾಹನಿಗೆ ಮರೆಯಾಗಿಲ್ಲ.

Verse 6

هُوَ ٱلَّذِى يُصَوِّرُكُمْ فِى ٱلْأَرْحَامِ كَيْفَ يَشَآءُ ۚ لَآ إِلَـٰهَ إِلَّا هُوَ ٱلْعَزِيزُ ٱلْحَكِيمُ

Transliteration huwa alladhī yuṣawwirukum fī l-arḥāmi kayfa yashāu lā ilāha illā huwa l-ʿazīzu l-ḥakīmu

Kannada ಅವನು ತಾನಿಚ್ಛಿಸಿದಂತೆ ಗರ್ಭಕೋಶಗಳಲ್ಲಿ ನಿಮ್ಮನ್ನು ರೂಪಿಸುತ್ತಾನೆ. ಅವನಲ್ಲದೆ ಬೇರೆ ಆರಾಧ್ಯನಿಲ್ಲ. ಅವನು ಪರಮ ಪ್ರತಾಪಿಯು, ಯುಕ್ತಿಪೂರ್ಣನು.

Verse 7

هُوَ ٱلَّذِىٓ أَنزَلَ عَلَيْكَ ٱلْكِتَـٰبَ مِنْهُ ءَايَـٰتٌ مُّحْكَمَـٰتٌ هُنَّ أُمُّ ٱلْكِتَـٰبِ وَأُخَرُ مُتَشَـٰبِهَـٰتٌ ۖ فَأَمَّا ٱلَّذِينَ فِى قُلُوبِهِمْ زَيْغٌ فَيَتَّبِعُونَ مَا تَشَـٰبَهَ مِنْهُ ٱبْتِغَآءَ ٱلْفِتْنَةِ وَٱبْتِغَآءَ تَأْوِيلِهِۦ ۗ وَمَا يَعْلَمُ تَأْوِيلَهُۥٓ إِلَّا ٱللَّهُ ۗ وَٱلرَّٰسِخُونَ فِى ٱلْعِلْمِ يَقُولُونَ ءَامَنَّا بِهِۦ كُلٌّ مِّنْ عِندِ رَبِّنَا ۗ وَمَا يَذَّكَّرُ إِلَّآ أُو۟لُوا۟ ٱلْأَلْبَـٰبِ

Transliteration huwa alladhī anzala ʿalayka l-kitāba min'hu āyātun muḥ'kamātun hunna ummu l-kitābi wa-ukharu mutashābihātun fa-ammā alladhīna fī qulūbihim zayghun fayattabiʿūna mā tashābaha min'hu ib'tighāa l-fit'nati wa-ib'tighāa tawīlihi wamā yaʿlamu tawīlahu illā l-lahu wal-rāsikhūna fī l-ʿil'mi yaqūlūna āmannā bihi kullun min ʿindi rabbinā wamā yadhakkaru illā ulū l-albābi

Kannada ಅವನು ಈ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿ ದನು. ಇದರಲ್ಲಿ ಪ್ರಮಾಣ ಸ್ಪಷ್ಟ ಶ್ಲೋಕಗಳಿವೆ. ಅವೇ ಗ್ರಂಥದ ಮೂಲ. ಇದರಲ್ಲಿ ಅವ್ಯಕ್ತವಾದ ಕೆಲವು ಶ್ಲೋಕ ಗಳೂ ಇವೆ . ಕೆಲವು ವಿಕೃತ ಮನಸ್ಕರು ಪಿತೂರಿ ಎಬ್ಬಿಸಲು ಮತ್ತು ಸ್ವಂತ ವ್ಯಾಖ್ಯಾನ ನೀಡಲಿಚ್ಛಿಸಿ ಅಂಥವುಗಳ ಹಿಂದೆ ಬೀಳುತ್ತಾರೆ. ಆದರೆ ಅದರ ನಿಜಾರ್ಥ ಅಲ್ಲಾಹನ ಹೊರತು ಇನ್ನಾರಿಗೂ ತಿಳಿಯದು. ಆಳ ಜ್ಞಾನವುಳ್ಳವರು ``ಎಲ್ಲವೂ ನಮ್ಮ ಪ್ರಭುವಿನ ಕಡೆಯಿಂದಲೇ ಬಂದಿದ್ದು, ನಾವು ಅವುಗಳನ್ನು ಸರಿಯಾಗಿ ನಂಬಿದ್ದೇವೆ’’ ಎನ್ನುತ್ತಾರೆ. ಬುದ್ಧಿವಂತರು ಮಾತ್ರ ಯೋಚಿಸಿ ಗ್ರಹಿಸಬಲ್ಲರು.

Verse 8

رَبَّنَا لَا تُزِغْ قُلُوبَنَا بَعْدَ إِذْ هَدَيْتَنَا وَهَبْ لَنَا مِن لَّدُنكَ رَحْمَةً ۚ إِنَّكَ أَنتَ ٱلْوَهَّابُ

Transliteration rabbanā lā tuzigh qulūbanā baʿda idh hadaytanā wahab lanā min ladunka raḥmatan innaka anta l-wahābu

Kannada “ಓ ನಮ್ಮ ಪಾಲಕ ಪ್ರಭು! ನೀನು ನಮ್ಮನ್ನು ನೇರ ದಾರಿಗೆ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ತಪ್ಪಿಸದಿರು. ನಿನ್ನ ಕಡೆಯಿಂದ ನಮಗೆ ಅನುಗ್ರಹವನ್ನು ದಯಪಾಲಿಸು. ನೀನು ಪರಮದಾನಿಯೆಂಬುದು ದಿಟ.

Verse 9

رَبَّنَآ إِنَّكَ جَامِعُ ٱلنَّاسِ لِيَوْمٍ لَّا رَيْبَ فِيهِ ۚ إِنَّ ٱللَّهَ لَا يُخْلِفُ ٱلْمِيعَادَ

Transliteration rabbanā innaka jāmiʿu l-nāsi liyawmin lā rayba fīhi inna l-laha lā yukh'lifu l-mīʿāda

Kannada ಓ ನಮ್ಮ ಪಾಲಕ ಪ್ರಭು! ನೀನು ಮನುಷ್ಯರನ್ನು ಒಂದು ಗೂಡಿಸಲಿರುವ ದಿನದ ಬಗ್ಗೆ ನಮಗೆ ಯಾವ ಸಂಶಯವೂ ಉಳಿದಿಲ್ಲ. ಅಲ್ಲಾಹನು ಖಂಡಿತ ವಚನಭಂಗ ಮಾಡಲಾರನು”.

Verse 10

إِنَّ ٱلَّذِينَ كَفَرُوا۟ لَن تُغْنِىَ عَنْهُمْ أَمْوَٰلُهُمْ وَلَآ أَوْلَـٰدُهُم مِّنَ ٱللَّهِ شَيْـًٔا ۖ وَأُو۟لَـٰٓئِكَ هُمْ وَقُودُ ٱلنَّارِ

Transliteration inna alladhīna kafarū lan tugh'niya ʿanhum amwāluhum walā awlāduhum mina l-lahi shayan wa-ulāika hum waqūdu l-nāri

Kannada ಸತ್ಯನಿಷೇಧಿಗಳಿಗೆ ತಮ್ಮ ಸಂಪತ್ತುಗಳಾಗಲಿ ಸಂತಾನಗಳಾಗಲಿ ಅಲ್ಲಾಹನ ಶಿಕ್ಷೆಯಿಂದ ಪಾರು ಮಾಡಲು ಸ್ವಲ್ಪವೂ ಫಲಕಾರಿಯಾಗದು. ಅವರೇ ನರಕದ ಉರುವಲುಗಳು.

Verse 11

كَدَأْبِ ءَالِ فِرْعَوْنَ وَٱلَّذِينَ مِن قَبْلِهِمْ ۚ كَذَّبُوا۟ بِـَٔايَـٰتِنَا فَأَخَذَهُمُ ٱللَّهُ بِذُنُوبِهِمْ ۗ وَٱللَّهُ شَدِيدُ ٱلْعِقَابِ

Transliteration kadabi āli fir'ʿawna wa-alladhīna min qablihim kadhabū biāyātinā fa-akhadhahumu l-lahu bidhunūbihim wal-lahu shadīdu l-ʿiqābi

Kannada ಇವರ ಅವಸ್ಥೆ ನಮ್ಮ ಪುರಾವೆಗಳನ್ನು ಸುಳ್ಳಾಗಿಸಿದ ಫಿರ್‍ಔನನ ಜನಾಂಗ ಹಾಗೂ ಅವರ ಪೂರ್ವಜರ ಅವಸ್ಥೆಯಂತಿದೆ. ಅವರ ಪಾಪಗಳ ಕಾರಣದಿಂದ ಅಲ್ಲಾಹನು ಅವರನ್ನು ಶಿಕ್ಷಿಸಿದನು. ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನು.

Verse 12

قُل لِّلَّذِينَ كَفَرُوا۟ سَتُغْلَبُونَ وَتُحْشَرُونَ إِلَىٰ جَهَنَّمَ ۚ وَبِئْسَ ٱلْمِهَادُ

Transliteration qul lilladhīna kafarū satugh'labūna watuḥ'sharūna ilā jahannama wabi'sa l-mihādu

Kannada ಸತ್ಯನಿಷೇಧಕರಿಗೆ ಹೇಳಿರಿ, ನೀವು ಸೋಲುವಿರಿ. ಬಹಳ ನಿಕೃಷ್ಟ ತಾಣವಾದ ನರಕಕ್ಕೆ ನೀವು ಅಟ್ಟಲ್ಪಡುವಿರಿ.

Verse 13

قَدْ كَانَ لَكُمْ ءَايَةٌ فِى فِئَتَيْنِ ٱلْتَقَتَا ۖ فِئَةٌ تُقَـٰتِلُ فِى سَبِيلِ ٱللَّهِ وَأُخْرَىٰ كَافِرَةٌ يَرَوْنَهُم مِّثْلَيْهِمْ رَأْىَ ٱلْعَيْنِ ۚ وَٱللَّهُ يُؤَيِّدُ بِنَصْرِهِۦ مَن يَشَآءُ ۗ إِنَّ فِى ذَٰلِكَ لَعِبْرَةً لِّأُو۟لِى ٱلْأَبْصَـٰرِ

Transliteration qad kāna lakum āyatun fī fi-atayni l-taqatā fi-atun tuqātilu fī sabīli l-lahi wa-ukh'rā kāfiratun yarawnahum mith'layhim raya l-ʿayni wal-lahu yu-ayyidu binaṣrihi man yashāu inna fī dhālika laʿib'ratan li-ulī l-abṣāri

Kannada ಪರಸ್ಪರ ಎದುರುಗೊಂಡ ಎರಡು ತಂಡಗಳಲ್ಲಿ ನಿಮಗೆ ಪಾಠವಿದೆ. ಒಂದು ತಂಡವು ಅಲ್ಲಾಹನ ಮಾರ್ಗದಲ್ಲಿ ಹೋರಾಡಿತು. ಇನ್ನೊಂದು ತಂಡ ಸತ್ಯನಿಷೇಧಿಗಳಾಗಿದ್ದು ಇವರು ಅವರಿಗೆ ಇಮ್ಮಡಿಯಾಗಿ ಗೋಚರಿಸಿದರು. ಅಲ್ಲಾಹನು ತಾನಿಚ್ಛಿಸಿದವರನ್ನು ಸಹಾಯ ಮಾಡಿ ಬಲಿಷ್ಠ ಗೊಳಿಸುತ್ತಾನೆ. ಕಣ್ಣುಳ್ಳವರಿಗೆ ಇದರಲ್ಲಿ ಮಹತ್ತರ ಪಾಠವುಂಟು .

Verse 14

زُيِّنَ لِلنَّاسِ حُبُّ ٱلشَّهَوَٰتِ مِنَ ٱلنِّسَآءِ وَٱلْبَنِينَ وَٱلْقَنَـٰطِيرِ ٱلْمُقَنطَرَةِ مِنَ ٱلذَّهَبِ وَٱلْفِضَّةِ وَٱلْخَيْلِ ٱلْمُسَوَّمَةِ وَٱلْأَنْعَـٰمِ وَٱلْحَرْثِ ۗ ذَٰلِكَ مَتَـٰعُ ٱلْحَيَوٰةِ ٱلدُّنْيَا ۖ وَٱللَّهُ عِندَهُۥ حُسْنُ ٱلْمَـَٔابِ

Transliteration zuyyina lilnnāsi ḥubbu l-shahawāti mina l-nisāi wal-banīna wal-qanāṭīri l-muqanṭarati mina l-dhahabi wal-fiḍati wal-khayli l-musawamati wal-anʿāmi wal-ḥarthi dhālika matāʿu l-ḥayati l-dun'yā wal-lahu ʿindahu ḥus'nu l-maābi

Kannada ಸ್ತ್ರೀಯರು, ಪುತ್ರರು, ರಾಶಿ ಹಾಕಲಾದ ಬೆಳ್ಳಿ ಬಂಗಾರಗಳು, ಉತ್ತಮ ತಳಿಯ ಕುದುರೆಗಳು, ಜಾನುವಾರುಗಳು, ಕೃಷಿ ಜಮೀನುಗಳು ಇವೇ ಮುಂತಾದ ಕಾಮ್ಯ ವಸ್ತುಗಳ ಪ್ರೀತಿಯನ್ನು ಮನುಷ್ಯರಿಗೆ ಅಲಂಕಾರವಾಗಿ ಕಾಣಿಸಲಾಗಿದೆ. (ಆದರೆ) ಇವೆಲ್ಲವೂ ಕೇವಲ ಐಹಿಕ ಜೀವನದ ಸಾಮಗ್ರಿಗಳು ಮಾತ್ರ. ಅತ್ಯುತ್ತಮವಾದ ಅಂತ್ಯ ಫಲವು ಅಲ್ಲಾಹನ ಬಳಿಯಾಗಿರುತ್ತದೆ.

Verse 15

۞ قُلْ أَؤُنَبِّئُكُم بِخَيْرٍ مِّن ذَٰلِكُمْ ۚ لِلَّذِينَ ٱتَّقَوْا۟ عِندَ رَبِّهِمْ جَنَّـٰتٌ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا وَأَزْوَٰجٌ مُّطَهَّرَةٌ وَرِضْوَٰنٌ مِّنَ ٱللَّهِ ۗ وَٱللَّهُ بَصِيرٌۢ بِٱلْعِبَادِ

Transliteration qul a-unabbi-ukum bikhayrin min dhālikum lilladhīna ittaqaw ʿinda rabbihim jannātun tajrī min taḥtihā l-anhāru khālidīna fīhā wa-azwājun muṭahharatun wariḍ'wānun mina l-lahi wal-lahu baṣīrun bil-ʿibādi

Kannada (ಪ್ರವಾದಿಯವರೇ!) ಹೇಳಿರಿ, ಇವುಗಳಿಗಿಂತ ಉತ್ತಮವಾದವುಗಳನ್ನು ನಾನು ನಿಮಗೆ ಹೇಳಿ ಕೊಡಲೇ? ಧರ್ಮನಿಷ್ಠ ಭಕ್ತರಿಗೆ ಅವರ ಪ್ರಭುವಿನ ಬಳಿ ಕೆಲವು ಉದ್ಯಾನಗಳಿವೆ. ಅವುಗಳ ತಳ ಭಾಗದಲ್ಲಿ ನೀರ್ಝರಿಗಳು ಹರಿಯುತ್ತಿವೆ. ಅವರು ಅದರಲ್ಲಿ ಶಾಶ್ವತರು. ಅಲ್ಲಿ ಅವರಿಗೆ ನಿರ್ಮಲರಾದ ಮಡದಿಯರಿರುವರು. ಅಲ್ಲಾಹನ ಒಲುಮೆಯೂ ಅವರಿಗೆ ಇದೆ. ಅಲ್ಲಾಹನು ತನ್ನ ದಾಸರನ್ನು ಚೆನ್ನಾಗಿ ಕಾಣುವವನಾಗಿರುವನು.

Verse 16

ٱلَّذِينَ يَقُولُونَ رَبَّنَآ إِنَّنَآ ءَامَنَّا فَٱغْفِرْ لَنَا ذُنُوبَنَا وَقِنَا عَذَابَ ٱلنَّارِ

Transliteration alladhīna yaqūlūna rabbanā innanā āmannā fa-igh'fir lanā dhunūbanā waqinā ʿadhāba l-nāri

Kannada ಅವರು ಪ್ರಾರ್ಥಿಸುತ್ತಾರೆ; ನಮ್ಮ ಪ್ರಭು! ಖಂಡಿತ ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು.

Verse 17

ٱلصَّـٰبِرِينَ وَٱلصَّـٰدِقِينَ وَٱلْقَـٰنِتِينَ وَٱلْمُنفِقِينَ وَٱلْمُسْتَغْفِرِينَ بِٱلْأَسْحَارِ

Transliteration al-ṣābirīna wal-ṣādiqīna wal-qānitīna wal-munfiqīna wal-mus'taghfirīna bil-asḥāri

Kannada ಅವರು ಸಹನಾಶೀಲರು, ಸತ್ಯನಿಷ್ಠರು, ವಿನಯಾನು ಸರಣೆಯುಳ್ಳವರು, (ಉತ್ತಮ ಮಾರ್ಗದಲ್ಲಿ) ವೆಚ್ಚ ಮಾಡುವವರು, ರಾತ್ರಿಯ ಅಂತಿಮ ಯಾಮದಲ್ಲಿ ಪಾಪವಿಮೋಚನೆಗಾಗಿ ಪ್ರಾರ್ಥಿಸುವವರು.

Verse 18

شَهِدَ ٱللَّهُ أَنَّهُۥ لَآ إِلَـٰهَ إِلَّا هُوَ وَٱلْمَلَـٰٓئِكَةُ وَأُو۟لُوا۟ ٱلْعِلْمِ قَآئِمًۢا بِٱلْقِسْطِ ۚ لَآ إِلَـٰهَ إِلَّا هُوَ ٱلْعَزِيزُ ٱلْحَكِيمُ

Transliteration shahida l-lahu annahu lā ilāha illā huwa wal-malāikatu wa-ulū l-ʿil'mi qāiman bil-qis'ṭi lā ilāha illā huwa l-ʿazīzu l-ḥakīmu

Kannada ತಾನಲ್ಲದೆ ಬೇರೆ ಆರಾಧ್ಯನಿಲ್ಲವೆನ್ನುವುದಕ್ಕೆ ಅಲ್ಲಾಹನು ಸಾಕ್ಷ್ಯವಹಿಸಿದ್ದಾನೆ (ಸ್ಪಷ್ಟ ಪುರಾವೆಗಳ ಮೂಲಕ) ಮಲಕ್‍ಗಳೂ ಜ್ಞಾನವಂತರೂ ಅದಕ್ಕೆ ಸಾಕ್ಷ್ಯ ವಹಿಸಿರುತ್ತಾರೆ . ಅವನು ನೀತಿ ಪಾಲಿಸುವವನು. ಅವನಲ್ಲದೆ ಬೇರೆ ಆರಾಧ್ಯನಿಲ್ಲ. ಆತನು ಅಜೇಯನು, ಯುಕ್ತಿಪೂರ್ಣನು.

Verse 19

إِنَّ ٱلدِّينَ عِندَ ٱللَّهِ ٱلْإِسْلَـٰمُ ۗ وَمَا ٱخْتَلَفَ ٱلَّذِينَ أُوتُوا۟ ٱلْكِتَـٰبَ إِلَّا مِنۢ بَعْدِ مَا جَآءَهُمُ ٱلْعِلْمُ بَغْيًۢا بَيْنَهُمْ ۗ وَمَن يَكْفُرْ بِـَٔايَـٰتِ ٱللَّهِ فَإِنَّ ٱللَّهَ سَرِيعُ ٱلْحِسَابِ

Transliteration inna l-dīna ʿinda l-lahi l-is'lāmu wamā ikh'talafa alladhīna ūtū l-kitāba illā min baʿdi mā jāahumu l-ʿil'mu baghyan baynahum waman yakfur biāyāti l-lahi fa-inna l-laha sarīʿu l-ḥisābi

Kannada ಖಂಡಿತವಾಗಿಯೂ ಅಲ್ಲಾಹನ ಬಳಿ ಸ್ವೀಕೃತವಾಗುವ ಧರ್ಮ ಇಸ್ಲಾಮ್ ಮಾತ್ರ. ವೇದಗ್ರಂಥ ನೀಡಲ್ಪಟ್ಟವರು ಅವರಿಗೆ (ಧರ್ಮ) ಜ್ಞಾನ ನೀಡಲ್ಪಟ್ಟ ನಂತರವಲ್ಲದೆ ಭಿನ್ನಾಭಿಪ್ರಾಯ ಹೊಂದಲಿಲ್ಲ. ಂ ಅದು ಅವರ ನಡುವಿನ ಹಗೆ-ಮತ್ಸರ ನಿಮಿತ್ತವಾ ಗಿತ್ತು. ಅಲ್ಲಾಹನ ವಚನಗಳನ್ನು ಯಾರು ನಿಷೇಧಿ ಸುತ್ತಾರೆ, ಖಂಡಿತ ಅಲ್ಲಾಹನು ವಿಚಾರಣೆಯಲ್ಲಿ ಅತಿ ಶೀಘ್ರನು.

Verse 20

فَإِنْ حَآجُّوكَ فَقُلْ أَسْلَمْتُ وَجْهِىَ لِلَّهِ وَمَنِ ٱتَّبَعَنِ ۗ وَقُل لِّلَّذِينَ أُوتُوا۟ ٱلْكِتَـٰبَ وَٱلْأُمِّيِّـۧنَ ءَأَسْلَمْتُمْ ۚ فَإِنْ أَسْلَمُوا۟ فَقَدِ ٱهْتَدَوا۟ ۖ وَّإِن تَوَلَّوْا۟ فَإِنَّمَا عَلَيْكَ ٱلْبَلَـٰغُ ۗ وَٱللَّهُ بَصِيرٌۢ بِٱلْعِبَادِ

Transliteration fa-in ḥājjūka faqul aslamtu wajhiya lillahi wamani ittabaʿani waqul lilladhīna ūtū l-kitāba wal-umiyīna a-aslamtum fa-in aslamū faqadi ih'tadaw wa-in tawallaw fa-innamā ʿalayka l-balāghu wal-lahu baṣīrun bil-ʿibādi

Kannada ಇನ್ನೂ ಅವರು ನಿಮ್ಮೊಡನೆ ವಾಗ್ವಾದ ಮಾಡಿದರೆ ನೀವು ಹೇಳಿರಿ - ‘ನಾನು ನನ್ನನ್ನೇ ಅಲ್ಲಾಹನಿಗೆ ಸಂಪೂರ್ಣವಾಗಿ ಅರ್ಪಿಸಿದ್ದೇನೆ. ನನ್ನನ್ನು ಹಿಂಬಾಲಿಸಿದವರೂ. (ಹಾಗೆಯೇ) ಗ್ರಂಥದವ ರೊಂದಿಗೆ ಹಾಗೂ ನಿರಕ್ಷರಿಗಳೊಂದಿಗೆ (ಅರಬ ರೊಂದಿಗೆ) ಕೇಳಿರಿ, ‘ನೀವು ಅಲ್ಲಾಹನಿಗೆ ಶರಣಾಗಿದ್ದೀರಾ?’ ಹಾಗೆ ಅವರು ಶರಣಾದರೆ, ಅವರು ಖಂಡಿತ ಸತ್ಪಥ ಪಡೆದರು. ಇನ್ನು ಅವರು ಹಿಂಜರಿದರೆ ನಿಮ್ಮ ಬಾಧ್ಯತೆ (ದಿವ್ಯ ಸಂದೇಶ ವನ್ನು) ತಲುಪಿಸಿ ಕೊಡುವುದು ಮಾತ್ರ. ಅಲ್ಲಾಹನು ತನ್ನ ದಾಸರನ್ನು ಚೆನ್ನಾಗಿ ವೀಕ್ಷಿಸುತ್ತಿರುವನು.

Verse 21

إِنَّ ٱلَّذِينَ يَكْفُرُونَ بِـَٔايَـٰتِ ٱللَّهِ وَيَقْتُلُونَ ٱلنَّبِيِّـۧنَ بِغَيْرِ حَقٍّ وَيَقْتُلُونَ ٱلَّذِينَ يَأْمُرُونَ بِٱلْقِسْطِ مِنَ ٱلنَّاسِ فَبَشِّرْهُم بِعَذَابٍ أَلِيمٍ

Transliteration inna alladhīna yakfurūna biāyāti l-lahi wayaqtulūna l-nabiyīna bighayri ḥaqqin wayaqtulūna alladhīna yamurūna bil-qis'ṭi mina l-nāsi fabashir'hum biʿadhābin alīmin

Kannada ನಿಶ್ಚಯವಾಗಿಯೂ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುವ, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವ, ಜನರಿಗೆ ನೀತಿ ನ್ಯಾಯದ ಉಪದೇಶ ಕೊಡುವ ಜನರನ್ನು ವಧಿಸುವವರು ಯಾರೋ, ಅವರಿಗೆ ಭಾರೀ ಯಾತನಾಮಯ ಶಿಕ್ಷೆ ಕಾದಿದೆ ಎಂಬ ‘ಸುವಾರ್ತೆ’ಯನ್ನು ಕೊಡಿರಿ .

Verse 22

أُو۟لَـٰٓئِكَ ٱلَّذِينَ حَبِطَتْ أَعْمَـٰلُهُمْ فِى ٱلدُّنْيَا وَٱلْـَٔاخِرَةِ وَمَا لَهُم مِّن نَّـٰصِرِينَ

Transliteration ulāika alladhīna ḥabiṭat aʿmāluhum fī l-dun'yā wal-ākhirati wamā lahum min nāṣirīna

Kannada ಅವರು ಇಹದಲ್ಲೂ ಪರದಲ್ಲೂ ತಮ್ಮ ಕರ್ಮಗಳು ವಿಫಲಗೊಂಡವರು. ಅವರಿಗೆ ಯಾರೂ ಸಹಾಯಕರಿಲ್ಲ.

Verse 23

أَلَمْ تَرَ إِلَى ٱلَّذِينَ أُوتُوا۟ نَصِيبًا مِّنَ ٱلْكِتَـٰبِ يُدْعَوْنَ إِلَىٰ كِتَـٰبِ ٱللَّهِ لِيَحْكُمَ بَيْنَهُمْ ثُمَّ يَتَوَلَّىٰ فَرِيقٌ مِّنْهُمْ وَهُم مُّعْرِضُونَ

Transliteration alam tara ilā alladhīna ūtū naṣīban mina l-kitābi yud'ʿawna ilā kitābi l-lahi liyaḥkuma baynahum thumma yatawallā farīqun min'hum wahum muʿ'riḍūna

Kannada ವೇದಗ್ರಂಥದ ಭಾಗ್ಯವನ್ನು ನೀಡಲ್ಪಟ್ಟ ಕೆಲವರನ್ನು ನೀವು ಕಂಡಿಲ್ಲವೇ? ಅವರ ನಡುವೆ ತೀರ್ಪು ನೀಡಲು ಅಲ್ಲಾಹನ ಗ್ರಂಥದ ಕಡೆಗೆ ಅವರನ್ನು ಆಹ್ವಾನಿಸಲಾಗುತ್ತದೆ. ಆದರೂ ಕೂಡಾ ಅವರಲ್ಲಿ ಒಂದು ವಿಭಾಗವು ಅವಗಣನೆಯಿಂದ ಹಿಂಜರಿಯುತ್ತಿದೆ .

Verse 24

ذَٰلِكَ بِأَنَّهُمْ قَالُوا۟ لَن تَمَسَّنَا ٱلنَّارُ إِلَّآ أَيَّامًا مَّعْدُودَٰتٍ ۖ وَغَرَّهُمْ فِى دِينِهِم مَّا كَانُوا۟ يَفْتَرُونَ

Transliteration dhālika bi-annahum qālū lan tamassanā l-nāru illā ayyāman maʿdūdātin wagharrahum fī dīnihim mā kānū yaftarūna

Kannada ‘ಕೆಲವೇ ದಿವಸಗಳ ಹೊರತು ನರಕಾಗ್ನಿ ನಮ್ಮನ್ನು ಸ್ಪರ್ಶಿಸದು’ ಎಂದು ಅವರು ಹೇಳಿದುದರ ಕಾರಣವಿದು. ತಮ್ಮ ಮತದಲ್ಲಿ ತಾವೇ ಸೃಷ್ಟಿಸಿಕೊಂಡಿರುವ ವಾದಗಳು (ಅವರ ಧರ್ಮ ಕಾರ್ಯದಲ್ಲಿ) ಅವರನ್ನು ವಂಚಿಸಿ ಬಿಟ್ಟಿವೆ.

Verse 25

فَكَيْفَ إِذَا جَمَعْنَـٰهُمْ لِيَوْمٍ لَّا رَيْبَ فِيهِ وَوُفِّيَتْ كُلُّ نَفْسٍ مَّا كَسَبَتْ وَهُمْ لَا يُظْلَمُونَ

Transliteration fakayfa idhā jamaʿnāhum liyawmin lā rayba fīhi wawuffiyat kullu nafsin mā kasabat wahum lā yuẓ'lamūna

Kannada ಆದರೆ ಒಂದು ದಿವಸ ನಾವು ಅವರನ್ನು ಒಂದು ಗೂಡಿಸುವಾಗ ಅವರ ಅವಸ್ಥೆ ಏನಾದೀತು ? ಆ ದಿನದ ಆಗಮನದ ಬಗ್ಗೆ ಯಾವ ಸಂಶಯವೂ ಇಲ್ಲ. ಅಂದು ಪ್ರತಿಯೊಂದು ಆತ್ಮಕ್ಕೂ ಅದರ ದುಡಿಮೆಯ ಪ್ರತಿಫಲವನ್ನು ಪೂರ್ಣವಾಗಿ ಕೊಡಲಾಗುವುದು. ಅವರಿಗೆ ಏನೂ ಅನ್ಯಾಯವಾಗುವುದಿಲ್ಲ.

Verse 26

قُلِ ٱللَّهُمَّ مَـٰلِكَ ٱلْمُلْكِ تُؤْتِى ٱلْمُلْكَ مَن تَشَآءُ وَتَنزِعُ ٱلْمُلْكَ مِمَّن تَشَآءُ وَتُعِزُّ مَن تَشَآءُ وَتُذِلُّ مَن تَشَآءُ ۖ بِيَدِكَ ٱلْخَيْرُ ۖ إِنَّكَ عَلَىٰ كُلِّ شَىْءٍ قَدِيرٌ

Transliteration quli l-lahuma mālika l-mul'ki tu'tī l-mul'ka man tashāu watanziʿu l-mul'ka mimman tashāu watuʿizzu man tashāu watudhillu man tashāu biyadika l-khayru innaka ʿalā kulli shayin qadīrun

Kannada ಹೇಳಿರಿ; ರಾಜತ್ವದ ಒಡೆಯನಾದ ಅಲ್ಲಾಹನೇ! ನೀನು ಇಚ್ಛಿಸಿದವರಿಗೆ ನೀನು ರಾಜತ್ವ ಕೊಡುತ್ತೀಯೆ, ನೀನಿಚ್ಛಿಸಿದವರಿಂದ ರಾಜತ್ವವನ್ನು ತೆಗೆದು ಹಾಕುತ್ತೀಯೆ. ನೀನು ಉದ್ದೇಶಿಸಿದವರಿಗೆ ನೀನು ಪ್ರತಿಷ್ಠೆ ಕೊಡುತ್ತೀಯೆ. ನೀನುದ್ದೇಶಿಸಿ ದವರನ್ನು ನಿಕೃಷ್ಟಗೊಳಿಸುತ್ತೀಯೆ. ಒಳಿತು ನಿನ್ನ ಅಧೀನದಲ್ಲಿದೆ. ಖಂಡಿತವಾಗಿಯೂ ನೀನು ಸರ್ವ ಸಮರ್ಥನಾಗಿರುವೆ.

Verse 27

تُولِجُ ٱلَّيْلَ فِى ٱلنَّهَارِ وَتُولِجُ ٱلنَّهَارَ فِى ٱلَّيْلِ ۖ وَتُخْرِجُ ٱلْحَىَّ مِنَ ٱلْمَيِّتِ وَتُخْرِجُ ٱلْمَيِّتَ مِنَ ٱلْحَىِّ ۖ وَتَرْزُقُ مَن تَشَآءُ بِغَيْرِ حِسَابٍ

Transliteration tūliju al-layla fī l-nahāri watūliju l-nahāra fī al-layli watukh'riju l-ḥaya mina l-mayiti watukh'riju l-mayita mina l-ḥayi watarzuqu man tashāu bighayri ḥisābin

Kannada (ಹೇಳಿರಿ) : ‘ನೀನು ರಾತ್ರಿಯನ್ನು ಹಗಲೊಳಗೆ ನುಸುಳಿಸುತ್ತೀಯೆ. ಹಗಲನ್ನು ರಾತ್ರಿಯೊಳಗೂ ನುಸುಳಿಸುತ್ತೀಯೆ . ನಿರ್ಜೀವಿಯಿಂದ ಜೀವಿಯನ್ನು ನೀನು ಹೊರಡಿಸುತ್ತೀಯೆ. ಜೀವಿಯಿಂದ ನಿರ್ಜೀವಿಯನ್ನು ನೀನು ಹೊರಡಿಸುತ್ತೀಯೆ. ನೀನು ಇಚ್ಛಿಸಿದವರಿಗೆ ಜೀವನಾಧಾರವನ್ನು ಲೆಕ್ಕವಿಲ್ಲದೆ ಕೊಡುತ್ತೀಂi

Verse 28

لَّا يَتَّخِذِ ٱلْمُؤْمِنُونَ ٱلْكَـٰفِرِينَ أَوْلِيَآءَ مِن دُونِ ٱلْمُؤْمِنِينَ ۖ وَمَن يَفْعَلْ ذَٰلِكَ فَلَيْسَ مِنَ ٱللَّهِ فِى شَىْءٍ إِلَّآ أَن تَتَّقُوا۟ مِنْهُمْ تُقَىٰةً ۗ وَيُحَذِّرُكُمُ ٱللَّهُ نَفْسَهُۥ ۗ وَإِلَى ٱللَّهِ ٱلْمَصِيرُ

Transliteration lā yattakhidhi l-mu'minūna l-kāfirīna awliyāa min dūni l-mu'minīna waman yafʿal dhālika falaysa mina l-lahi fī shayin illā an tattaqū min'hum tuqātan wayuḥadhirukumu l-lahu nafsahu wa-ilā l-lahi l-maṣīru

Kannada ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳ ಹೊರತು ಸತ್ಯನಿಷೇಧಿಗಳನ್ನು ಆತ್ಮೀಯ ಮಿತ್ರರನ್ನಾಗಿ ಮಾಡಬಾರದು. ಯಾರಾದರೂ ಅದನ್ನು ಮಾಡಿದರೆ ಅವನಿಗೆ ಅಲ್ಲಾಹನ ಜೊತೆ ಯಾವುದೇ ಸಂಬಂಧವಿರುವುದಿಲ್ಲ. ಆದರೆ ನೀವು ಅವರನ್ನು ಜಾಗ್ರತೆ ಮಾಡುವ ವಿಧದಲ್ಲಿ ಜಾಗ್ರತೆ ಮಾಡಿದರೆ ಹೊರತು . ಅಲ್ಲಾಹನು ತನ್ನ (ಶಿಕ್ಷೆಯ) ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತಿದ್ದಾನೆ. ನಿಮ್ಮ ಮರಳುವಿಕೆ ಅಲ್ಲಾಹನ ಕಡೆಗೆ ಇದೆ.

Verse 29

قُلْ إِن تُخْفُوا۟ مَا فِى صُدُورِكُمْ أَوْ تُبْدُوهُ يَعْلَمْهُ ٱللَّهُ ۗ وَيَعْلَمُ مَا فِى ٱلسَّمَـٰوَٰتِ وَمَا فِى ٱلْأَرْضِ ۗ وَٱللَّهُ عَلَىٰ كُلِّ شَىْءٍ قَدِيرٌ

Transliteration qul in tukh'fū mā fī ṣudūrikum aw tub'dūhu yaʿlamhu l-lahu wayaʿlamu mā fī l-samāwāti wamā fī l-arḍi wal-lahu ʿalā kulli shayin qadīrun

Kannada ಓ ಪ್ರವಾದಿಯರೇ, ಹೇಳಿರಿ: ‘ನಿಮ್ಮ ಹೃದಯ ಗಳಲ್ಲಿರುವುದನ್ನು ನೀವು ಮರೆಮಾಚಿದರೂ ಅಥವಾ ಬಹಿರಂಗಗೊಳಿಸಿದರೂ ಅಲ್ಲಾಹನು ಅದನ್ನು ಅರಿಯುವನು. ಆಕಾಶಗಳಲ್ಲಿ ಮತ್ತು ಭೂಮಿ ಯಲ್ಲಿರುವುದನ್ನು ಅವನು ತಿಳಿಯುವನು. ಅಲ್ಲಾಹನು ಎಲ್ಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.

Verse 30

يَوْمَ تَجِدُ كُلُّ نَفْسٍ مَّا عَمِلَتْ مِنْ خَيْرٍ مُّحْضَرًا وَمَا عَمِلَتْ مِن سُوٓءٍ تَوَدُّ لَوْ أَنَّ بَيْنَهَا وَبَيْنَهُۥٓ أَمَدًۢا بَعِيدًا ۗ وَيُحَذِّرُكُمُ ٱللَّهُ نَفْسَهُۥ ۗ وَٱللَّهُ رَءُوفٌۢ بِٱلْعِبَادِ

Transliteration yawma tajidu kullu nafsin mā ʿamilat min khayrin muḥ'ḍaran wamā ʿamilat min sūin tawaddu law anna baynahā wabaynahu amadan baʿīdan wayuḥadhirukumu l-lahu nafsahu wal-lahu raūfun bil-ʿibādi

Kannada ಪ್ರತಿಯೊಬ್ಬ ವ್ಯಕ್ತಿಯೂ ತಾನು ಒಳಿತಾಗಿ ಮಾಡಿರುವ ಕರ್ಮಫಲವನ್ನು ತನ್ನ ಮುಂದೆ ಪ್ರತ್ಯಕ್ಷವಾಗಿ ಕಾಣುವ ದಿವಸ. ಕೆಡುಕು ಮಾಡಿದ ವ್ಯಕ್ತಿಯು; “ಇದರ (ದುಷ್ಕಾರ್ಯದ) ಮತ್ತು ನನ್ನ ನಡುವೆ ಖಂಡಿತವಾಗಿಯೂ ಬಹಳ ದೂರದ ಅಂತರ ಇದ್ದಿದ್ದರೆ” ಎಂದು ಆಸೆಪಡುವನು. ಅಲ್ಲಾಹನು ತನ್ನ ಶಿಕ್ಷೆಯ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಾಹನು ತನ್ನ ದಾಸರಲ್ಲಿ ಬಹಳ ದಯೆ ಯುಳ್ಳವನಾಗಿದ್ದಾನೆ.

Verse 31

قُلْ إِن كُنتُمْ تُحِبُّونَ ٱللَّهَ فَٱتَّبِعُونِى يُحْبِبْكُمُ ٱللَّهُ وَيَغْفِرْ لَكُمْ ذُنُوبَكُمْ ۗ وَٱللَّهُ غَفُورٌ رَّحِيمٌ

Transliteration qul in kuntum tuḥibbūna l-laha fa-ittabiʿūnī yuḥ'bib'kumu l-lahu wayaghfir lakum dhunūbakum wal-lahu ghafūrun raḥīmun

Kannada (ನಬಿಯೇ) ಹೇಳಿರಿ; ನೀವು ಅಲ್ಲಾಹನನ್ನು ಪ್ರೀತಿಸುವಿರಾದರೆ, ನನ್ನನ್ನು ಅನುಗಮಿಸಿರಿ. ಆಗ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು. ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲಾಹನು ಮಹಾ ಪಾಪ ಪರಿಹಾರಿಯೂ, ಕರುಣಾಮಯಿಯೂ ಆಗಿರುವನು.

Verse 32

قُلْ أَطِيعُوا۟ ٱللَّهَ وَٱلرَّسُولَ ۖ فَإِن تَوَلَّوْا۟ فَإِنَّ ٱللَّهَ لَا يُحِبُّ ٱلْكَـٰفِرِينَ

Transliteration qul aṭīʿū l-laha wal-rasūla fa-in tawallaw fa-inna l-laha lā yuḥibbu l-kāfirīna

Kannada ಹೇಳಿರಿ; ನೀವು ಅಲ್ಲಾಹು ಹಾಗೂ ದೇವದೂತರನ್ನು ಅನುಸರಿಸಿರಿ. ಇನ್ನು ಅವರು ವಿಮುಖರಾದರೆ ಅಲ್ಲಾಹು ಸತ್ಯನಿಷೇಧಿಗಳನ್ನು ಮೆಚ್ಚುವುದಿಲ್ಲ; ಖಂಡಿತ.

Verse 33

۞ إِنَّ ٱللَّهَ ٱصْطَفَىٰٓ ءَادَمَ وَنُوحًا وَءَالَ إِبْرَٰهِيمَ وَءَالَ عِمْرَٰنَ عَلَى ٱلْعَـٰلَمِينَ

Transliteration inna l-laha iṣ'ṭafā ādama wanūḥan waāla ib'rāhīma waāla ʿim'rāna ʿalā l-ʿālamīna

Kannada ಖಂಡಿತವಾಗಿಯೂ ಆದಮ್, ನೂಹ್, ಇಬ್ರಾಹೀಮರ ಕುಟುಂಬ ಮತ್ತು ಇಮ್ರಾನ್ ಕುಟುಂಬವನ್ನು ಉತ್ಕøಷ್ಟರಾಗಿ ಅಲ್ಲಾಹು ಆಯ್ಕೆ ಮಾಡಿರುವನು .

Verse 34

ذُرِّيَّةًۢ بَعْضُهَا مِنۢ بَعْضٍ ۗ وَٱللَّهُ سَمِيعٌ عَلِيمٌ

Transliteration dhurriyyatan baʿḍuhā min baʿḍin wal-lahu samīʿun ʿalīmun

Kannada ಕೆಲವರು ಕೆಲವರ ಸಂತತಿಗಳಾಗಿದ್ದುಕೊಂಡು. ಅಲ್ಲಾಹು ಸರ್ವಶ್ರುತನೂ, ಸರ್ವಜ್ಞನೂ ಆಗಿರುತ್ತಾನೆ.

Verse 35

إِذْ قَالَتِ ٱمْرَأَتُ عِمْرَٰنَ رَبِّ إِنِّى نَذَرْتُ لَكَ مَا فِى بَطْنِى مُحَرَّرًا فَتَقَبَّلْ مِنِّىٓ ۖ إِنَّكَ أَنتَ ٱلسَّمِيعُ ٱلْعَلِيمُ

Transliteration idh qālati im'ra-atu ʿim'rāna rabbi innī nadhartu laka mā fī baṭnī muḥarraran fataqabbal minnī innaka anta l-samīʿu l-ʿalīmu

Kannada ಇಮ್ರಾನರ ಪತ್ನಿ ಹೇಳಿದ ಸಂದರ್ಭ.(ವನ್ನು ನೆನೆಸಿರಿ). ನನ್ನ ರಕ್ಷಕನೇ ! ನನ್ನ ಹೊಟ್ಟೆಯಲ್ಲಿರುವ ಶಿಶುವನ್ನು ನಾನು ನಿನಗೆ ಮೀಸಲಾಗಿ ಹರಕೆ ಇಟ್ಟಿದ್ದೇನೆ ಂ. ನನ್ನಿಂದ ನೀನು ಸ್ವೀಕರಿಸು. ಖಂಡಿತವಾಗಿಯೂ ನೀನು ಸರ್ವಶ್ರುತನೂ, ಸರ್ವಜ್ಞನೂ ಆಗಿರುವೆ.

Verse 36

فَلَمَّا وَضَعَتْهَا قَالَتْ رَبِّ إِنِّى وَضَعْتُهَآ أُنثَىٰ وَٱللَّهُ أَعْلَمُ بِمَا وَضَعَتْ وَلَيْسَ ٱلذَّكَرُ كَٱلْأُنثَىٰ ۖ وَإِنِّى سَمَّيْتُهَا مَرْيَمَ وَإِنِّىٓ أُعِيذُهَا بِكَ وَذُرِّيَّتَهَا مِنَ ٱلشَّيْطَـٰنِ ٱلرَّجِيمِ

Transliteration falammā waḍaʿathā qālat rabbi innī waḍaʿtuhā unthā wal-lahu aʿlamu bimā waḍaʿat walaysa l-dhakaru kal-unthā wa-innī sammaytuhā maryama wa-innī uʿīdhuhā bika wadhurriyyatahā mina l-shayṭāni l-rajīmi

Kannada ಆದರೆ ಅವಳು ಹೆತ್ತಾಗ ಹೇಳಿದಳು, ರಕ್ಷಕನೇ! ನಾನು ಹೆತ್ತದ್ದು ಒಂದು ಹೆಣ್ಣು ಮಗುವನ್ನು! ಅವಳು ಹೆತ್ತಿರುವುದೇನೆಂದು ಅಲ್ಲಾಹನು ಹೆಚ್ಚು ಬಲ್ಲವನೇ ಆಗಿರುತ್ತಾನೆ. ಗಂಡು ಮಗು ಹೆಣ್ಣು ಮಗುವಿನಂತಲ್ಲ. ತಾನವಳಿಗೆ ಮರ್ಯಮ್ ಎಂದು ಹೆಸರಿಟ್ಟಿದ್ದೇನೆ. ಅವಳನ್ನೂ ಅವಳ ಸಂತತಿಯನ್ನೂ ಬಹಿಷ್ಕøತ ಶೈತಾನನ ಕೇಡಿನಿಂದ ರಕ್ಷಿಸುವ ಸಲುವಾಗಿ ನಿನ್ನಲ್ಲಿ ನಾನು ಅಭಯ ಬೇಡುತ್ತಿದ್ದೇನೆ .

Verse 37

فَتَقَبَّلَهَا رَبُّهَا بِقَبُولٍ حَسَنٍ وَأَنۢبَتَهَا نَبَاتًا حَسَنًا وَكَفَّلَهَا زَكَرِيَّا ۖ كُلَّمَا دَخَلَ عَلَيْهَا زَكَرِيَّا ٱلْمِحْرَابَ وَجَدَ عِندَهَا رِزْقًا ۖ قَالَ يَـٰمَرْيَمُ أَنَّىٰ لَكِ هَـٰذَا ۖ قَالَتْ هُوَ مِنْ عِندِ ٱللَّهِ ۖ إِنَّ ٱللَّهَ يَرْزُقُ مَن يَشَآءُ بِغَيْرِ حِسَابٍ

Transliteration fataqabbalahā rabbuhā biqabūlin ḥasanin wa-anbatahā nabātan ḥasanan wakaffalahā zakariyyā kullamā dakhala ʿalayhā zakariyyā l-miḥ'rāba wajada ʿindahā riz'qan qāla yāmaryamu annā laki hādhā qālat huwa min ʿindi l-lahi inna l-laha yarzuqu man yashāu bighayri ḥisābin

Kannada ಕೊನೆಗೆ ಆ ಮಗುವನ್ನು ಅವಳ ಪ್ರಭು ಬಹಳ ಚೆನ್ನಾಗಿ ಸ್ವೀಕರಿಸಿದನು. ಉತ್ಕøಷ್ಟ ರೀತಿಯಲ್ಲಿ ಅವಳನ್ನು ಬೆಳೆಸಿದನು, ಅವಳ ಪರಿಪಾಲನೆಯನ್ನು ‘ಝಕರಿಯ್ಯಾ’ರಿಗೆ ವಹಿಸಿಕೊಟ್ಟನು. ಝಕರಿಯ್ಯಾರವರು ಮಿಹ್‍ರಾಬ್‍ನಲ್ಲಿ ಆಕೆಯ ಬಳಿ ಪ್ರವೇಶಿಸಿದಾಗಲೆಲ್ಲ ಏನಾದರೊಂದು ಭಕ್ಷ್ಯವನ್ನು ಅವಳ ಬಳಿ ಕಾಣುತ್ತಿದ್ದರು. ಅವರು ಕೇಳಿದರು, ‘ಮರ್ಯಮಳೇ! ಇದು ನಿನಗೆ ಎಲ್ಲಿಂದ ಸಿಗುತ್ತದೆ’. ಅವಳು ಹೇಳಿದಳು; ‘ಇದು ಅಲ್ಲಾಹನ ಕಡೆಯಿಂದ ಸಿಕ್ಕಿದೆ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಆಹಾರವನ್ನು ಯಾವುದೇ ಲೆಕ್ಕವಿಲ್ಲದೆ ನೀಡುವನು’ .

Verse 38

هُنَالِكَ دَعَا زَكَرِيَّا رَبَّهُۥ ۖ قَالَ رَبِّ هَبْ لِى مِن لَّدُنكَ ذُرِّيَّةً طَيِّبَةً ۖ إِنَّكَ سَمِيعُ ٱلدُّعَآءِ

Transliteration hunālika daʿā zakariyyā rabbahu qāla rabbi hab lī min ladunka dhurriyyatan ṭayyibatan innaka samīʿu l-duʿāi

Kannada ಅಲ್ಲಿ ಝಕರಿಯ್ಯಾರವರು ತನ್ನ ಪ್ರಭುವಿನಲ್ಲಿ ಪ್ರಾರ್ಥಿಸುತ್ತಾ ಹೇಳಿದರು; ನನ್ನ ಪ್ರಭೂ! ನಿನ್ನ ವತಿಯಿಂದ ನನಗೆ ಉತ್ತಮವಾದ ಸಂತಾನವನ್ನು ಪ್ರದಾನ ಮಾಡು. ಖಂಡಿತವಾಗಿಯೂ ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವಿ.

Verse 39

فَنَادَتْهُ ٱلْمَلَـٰٓئِكَةُ وَهُوَ قَآئِمٌ يُصَلِّى فِى ٱلْمِحْرَابِ أَنَّ ٱللَّهَ يُبَشِّرُكَ بِيَحْيَىٰ مُصَدِّقًۢا بِكَلِمَةٍ مِّنَ ٱللَّهِ وَسَيِّدًا وَحَصُورًا وَنَبِيًّا مِّنَ ٱلصَّـٰلِحِينَ

Transliteration fanādathu l-malāikatu wahuwa qāimun yuṣallī fī l-miḥ'rābi anna l-laha yubashiruka biyaḥyā muṣaddiqan bikalimatin mina l-lahi wasayyidan waḥaṣūran wanabiyyan mina l-ṣāliḥīna

Kannada ತನ್ನಿಮಿತ್ತ ಅವರು ಮಿಹ್‍ರಾಬ್(ಮಸೀದಿ)ನಲ್ಲಿ ನಮಾಝ್ ಮಾಡುತ್ತಾ ನಿಂತಿರುವಾಗ ಮಲಕ್‍ಗಳು ಅವರನ್ನು ಕರೆದು ಹೇಳಿದರು; ಖಂಡಿತವಾಗಿಯೂ ಅಲ್ಲಾಹನು ನಿಮಗೆ ‘ಯಹ್ಯಾ’ (ಎಂಬ ಮಗುವನ್ನು ಪ್ರದಾನ ಮಾಡುವ) ಬಗ್ಗೆ ಶುಭ ವಾರ್ತೆ ಕೊಡುತ್ತಿದ್ದಾನೆ ಂ. ಅವನು (ಆ ಮಗುವು) ಅಲ್ಲಾಹ ನಿಂದಿರುವ ಒಂದು ವಚನವನ್ನು ಸತ್ಯಗೊಳಿಸು ವವನೂ ನೇತಾರನೂ ಸ್ತ್ರೀ ಮೋಹ ಮುಕ್ತನೂ ಸಜ್ಜನರಲ್ಲಿ ಸೇರಿದ ಪ್ರವಾದಿಯೂ ಆಗುವನು.

Verse 40

قَالَ رَبِّ أَنَّىٰ يَكُونُ لِى غُلَـٰمٌ وَقَدْ بَلَغَنِىَ ٱلْكِبَرُ وَٱمْرَأَتِى عَاقِرٌ ۖ قَالَ كَذَٰلِكَ ٱللَّهُ يَفْعَلُ مَا يَشَآءُ

Transliteration qāla rabbi annā yakūnu lī ghulāmun waqad balaghaniya l-kibaru wa-im'ra-atī ʿāqirun qāla kadhālika l-lahu yafʿalu mā yashāu

Kannada ಅವರು (ಝಕರಿಯ್ಯಾ ) ಕೇಳಿದರು: ನನ್ನ ರಕ್ಷಕನೇ! ನನಗೆ ಒಬ್ಬ ಪುತ್ರ ಉಂಟಾಗುವುದು ಹೇಗೆ ? ನನಗೆ ವೃದ್ಧಾಪ್ಯ ತಲಪಿದೆ. ನನ್ನ ಮಡದಿ ಬಂಜೆಯಾಗಿದ್ದಾಳೆ ! ಆಗ ಅಲ್ಲಾಹು ಹೇಳಿದನು ; ಸಂಗತಿ ಹಾಗೆಯೇ ಆಗುತ್ತದೆ. ಅಲ್ಲಾಹನು ತಾನುದ್ದೇಶಿಸಿದ್ದನ್ನು ಮಾಡುತ್ತಾನೆ.

Verse 41

قَالَ رَبِّ ٱجْعَل لِّىٓ ءَايَةً ۖ قَالَ ءَايَتُكَ أَلَّا تُكَلِّمَ ٱلنَّاسَ ثَلَـٰثَةَ أَيَّامٍ إِلَّا رَمْزًا ۗ وَٱذْكُر رَّبَّكَ كَثِيرًا وَسَبِّحْ بِٱلْعَشِىِّ وَٱلْإِبْكَـٰرِ

Transliteration qāla rabbi ij'ʿal lī āyatan qāla āyatuka allā tukallima l-nāsa thalāthata ayyāmin illā ramzan wa-udh'kur rabbaka kathīran wasabbiḥ bil-ʿashiyi wal-ib'kāri

Kannada ಅವರು (ಝಕರಿಯಾ ) ಹೇಳಿದರು; ನನ್ನ ಪಾಲಕನೇ ! ನನಗೆ ನೀನೊಂದು ಸಂಕೇತವನ್ನು ಕೊಡು. (ಆಗ ಅಲ್ಲಾಹನು) ಹೇಳಿದನು; ``ಮೂರು ದಿವಸಗಳ ಕಾಲ ಜನರೊಡನೆ ನೀವು ಸಂಜ್ಞೆ ಮೂಲಕವಲ್ಲದೆ ಮಾತಾಡದಿರುವುದೇ ನಿಮಗೆ ನಾನು ಒದಗಿಸುವ ಸಂಕೇತ. ನೀವು ನಿಮ್ಮ ಪ್ರಭುವನ್ನು ಹೆಚ್ಚು ಹೆಚ್ಚಾಗಿ ಸ್ಮರಿಸಿರಿ. ಸಂಜೆ-ಮುಂಜಾನೆಗಳಲ್ಲಿ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ''.

Verse 42

وَإِذْ قَالَتِ ٱلْمَلَـٰٓئِكَةُ يَـٰمَرْيَمُ إِنَّ ٱللَّهَ ٱصْطَفَىٰكِ وَطَهَّرَكِ وَٱصْطَفَىٰكِ عَلَىٰ نِسَآءِ ٱلْعَـٰلَمِينَ

Transliteration wa-idh qālati l-malāikatu yāmaryamu inna l-laha iṣ'ṭafāki waṭahharaki wa-iṣ'ṭafāki ʿalā nisāi l-ʿālamīna

Kannada ಮಲಕ್‍ಗಳು ಹೇಳಿದ ಸಂದರ್ಭ. ಓ ಮರ್ಯಮ್! ಖಂಡಿತವಾಗಿಯೂ ಅಲ್ಲಾಹನು ನಿಮ್ಮನ್ನು ವಿಶಿಷ್ಟವಾಗಿ ಆರಿಸಿರುವನು. ಶುದ್ಧಿಗೊಳಿಸಿರುವನು. ಹಾಗೂ ಲೋಕದ ಸ್ತ್ರೀಯರಲ್ಲಿ ನಿಮ್ಮನ್ನು ಉನ್ನತ ಸ್ಥಾನಕ್ಕೆ ಚುನಾಯಿಸಿರುವನು .

Verse 43

يَـٰمَرْيَمُ ٱقْنُتِى لِرَبِّكِ وَٱسْجُدِى وَٱرْكَعِى مَعَ ٱلرَّٰكِعِينَ

Transliteration yāmaryamu uq'nutī lirabbiki wa-us'judī wa-ir'kaʿī maʿa l-rākiʿīna

Kannada ಓ ಮರ್ಯಮ್ ! ನಿಮ್ಮ ಪ್ರಭುವಿಗೆ ಭಕ್ತಿಯೊಂದಿಗೆ ಶರಣಾಗಿರಿ. ಅವನಿಗೆ ಸಾಷ್ಟಾಂಗವೆರಗಿರಿ. ತಲೆ ಬಾಗುವವರ ಜೊತೆ ತಲೆ ಬಾಗಿರಿ .

Verse 44

ذَٰلِكَ مِنْ أَنۢبَآءِ ٱلْغَيْبِ نُوحِيهِ إِلَيْكَ ۚ وَمَا كُنتَ لَدَيْهِمْ إِذْ يُلْقُونَ أَقْلَـٰمَهُمْ أَيُّهُمْ يَكْفُلُ مَرْيَمَ وَمَا كُنتَ لَدَيْهِمْ إِذْ يَخْتَصِمُونَ

Transliteration dhālika min anbāi l-ghaybi nūḥīhi ilayka wamā kunta ladayhim idh yul'qūna aqlāmahum ayyuhum yakfulu maryama wamā kunta ladayhim idh yakhtaṣimūna

Kannada (ಓ ಪ್ರವಾದಿಯವರೇ!) ಇವೆಲ್ಲವೂ ನಾವು ನಿಮಗೆ ಬೋಧನೆ ನೀಡುತ್ತಿರುವ ಅಗೋಚರ ವಾರ್ತೆಗಳು. ಮರ್ಯಮ್‍ರ ಪಾಲನೆಯನ್ನು ಯಾರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲು ಅವರು ತಮ್ಮ ಲೆಕ್ಕಣಿಗಳನ್ನು (ನದಿಗೆ) ಹಾಕಿದಾಗ ನೀವು ಅಲ್ಲಿ ಇರಲಿಲ್ಲ. ಅವರು ಪರಸ್ಪರ ತರ್ಕ ಮಾಡಿ ದಾಗಲೂ ನೀವು ಅವರ ನಡುವೆ ಇರಲಿಲ್ಲ .

Verse 45

إِذْ قَالَتِ ٱلْمَلَـٰٓئِكَةُ يَـٰمَرْيَمُ إِنَّ ٱللَّهَ يُبَشِّرُكِ بِكَلِمَةٍ مِّنْهُ ٱسْمُهُ ٱلْمَسِيحُ عِيسَى ٱبْنُ مَرْيَمَ وَجِيهًا فِى ٱلدُّنْيَا وَٱلْـَٔاخِرَةِ وَمِنَ ٱلْمُقَرَّبِينَ

Transliteration idh qālati l-malāikatu yāmaryamu inna l-laha yubashiruki bikalimatin min'hu us'muhu l-masīḥu ʿīsā ub'nu maryama wajīhan fī l-dun'yā wal-ākhirati wamina l-muqarabīna

Kannada ಮಲಕ್‍ಗಳು ಹೇಳಿದ (ಇನ್ನೊಂದು) ಸಂದರ್ಭ (ವನ್ನು ಸ್ಮರಿಸಿರಿ.) ಓ ಮರ್ಯಮ್ ! ಅಲ್ಲಾಹನು ತನ್ನ ಕಡೆಯಿಂದ ಒಂದು ವಚನದ (ಕಾರಣದಿಂದುಂಟಾಗುವ ಮಗುವಿನ ಜನನದ) ಕುರಿತು ನಿಮಗೆ ಶುಭವಾರ್ತೆ ಕೊಡುತ್ತಿದ್ದಾನೆ. ಆ ಮಗುವಿನ ಹೆಸರು `ಮರ್ಯಮಳ ಪುತ್ರ ಈಸಾ ಮಸೀಹ್' ಎಂದಾಗಿರುವುದು. ಅವನು ಇಹಪರಗಳಲ್ಲಿ ಗಣ್ಯನೂ ಅಲ್ಲಾಹನ ನಿಕಟರಲ್ಲಿ ಸೇರಿದವನೂ ಆಗಿರುವನು.

Verse 46

وَيُكَلِّمُ ٱلنَّاسَ فِى ٱلْمَهْدِ وَكَهْلًا وَمِنَ ٱلصَّـٰلِحِينَ

Transliteration wayukallimu l-nāsa fī l-mahdi wakahlan wamina l-ṣāliḥīna

Kannada ಅವನು ತೊಟ್ಟಿಲಲ್ಲಿರುವಾಗಲೂ ನಡು ವಯಸ್ಕನಾಗಿರುವಾಗಲೂ ಜನರಲ್ಲಿ (ತತ್ವೋಪ ದೇಶವನ್ನು) ಮಾತನಾಡುವನು. ಅವನು ಸಜ್ಜನರ ಕೂಟದವನಾಗಿರುವನು.

Verse 47

قَالَتْ رَبِّ أَنَّىٰ يَكُونُ لِى وَلَدٌ وَلَمْ يَمْسَسْنِى بَشَرٌ ۖ قَالَ كَذَٰلِكِ ٱللَّهُ يَخْلُقُ مَا يَشَآءُ ۚ إِذَا قَضَىٰٓ أَمْرًا فَإِنَّمَا يَقُولُ لَهُۥ كُن فَيَكُونُ

Transliteration qālat rabbi annā yakūnu lī waladun walam yamsasnī basharun qāla kadhāliki l-lahu yakhluqu mā yashāu idhā qaḍā amran fa-innamā yaqūlu lahu kun fayakūnu

Kannada ಅವಳು ಕೇಳಿದಳು; `ಪ್ರಭೂ! ನನಗೆ ಮಗು ವುಂಟಾಗುವುದು ಹೇಗೆ? ನನ್ನನ್ನು ಯಾವನೇ ಪುರುಷ ಸ್ಪರ್ಶಿಸಿಲ್ಲವಲ್ಲ?' ಅಲ್ಲಾಹು ಹೇಳಿದನು; `ಅದು ಹಾಗೆಯೇ ಸಂಭವಿಸುವುದು.' ಅಲ್ಲಾಹು ತಾನುದ್ದೇಶಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಒಂದು ಕಾರ್ಯವನ್ನು ಉದ್ದೇಶಿಸಿದರೆ ಅದರೊಂದಿಗೆ `ಆಗು' ಎಂದಷ್ಟೇ ಹೇಳುತ್ತಾನೆ. ಆಗ ಅದು ಉಂಟಾಗುತ್ತದೆ.

Verse 48

وَيُعَلِّمُهُ ٱلْكِتَـٰبَ وَٱلْحِكْمَةَ وَٱلتَّوْرَىٰةَ وَٱلْإِنجِيلَ

Transliteration wayuʿallimuhu l-kitāba wal-ḥik'mata wal-tawrāta wal-injīla

Kannada ಆ ಪುತ್ರನಿಗೆ (ಈಸಾರವರಿಗೆ) ಅಲ್ಲಾಹು ಗ್ರಂಥ ಹಾಗೂ ತತ್ವ ಜ್ಞಾನವನ್ನೂ ತೌರಾತ್ ಮತ್ತು ಇಂಜೀಲನ್ನೂ ಕಲಿಸುವನು.

Verse 49

وَرَسُولًا إِلَىٰ بَنِىٓ إِسْرَٰٓءِيلَ أَنِّى قَدْ جِئْتُكُم بِـَٔايَةٍ مِّن رَّبِّكُمْ ۖ أَنِّىٓ أَخْلُقُ لَكُم مِّنَ ٱلطِّينِ كَهَيْـَٔةِ ٱلطَّيْرِ فَأَنفُخُ فِيهِ فَيَكُونُ طَيْرًۢا بِإِذْنِ ٱللَّهِ ۖ وَأُبْرِئُ ٱلْأَكْمَهَ وَٱلْأَبْرَصَ وَأُحْىِ ٱلْمَوْتَىٰ بِإِذْنِ ٱللَّهِ ۖ وَأُنَبِّئُكُم بِمَا تَأْكُلُونَ وَمَا تَدَّخِرُونَ فِى بُيُوتِكُمْ ۚ إِنَّ فِى ذَٰلِكَ لَـَٔايَةً لَّكُمْ إِن كُنتُم مُّؤْمِنِينَ

Transliteration warasūlan ilā banī is'rāīla annī qad ji'tukum biāyatin min rabbikum annī akhluqu lakum mina l-ṭīni kahayati l-ṭayri fa-anfukhu fīhi fayakūnu ṭayran bi-idh'ni l-lahi wa-ub'ri-u l-akmaha wal-abraṣa wa-uḥ'yī l-mawtā bi-idh'ni l-lahi wa-unabbi-ukum bimā takulūna wamā taddakhirūna fī buyūtikum inna fī dhālika laāyatan lakum in kuntum mu'minīna

Kannada ಇಸ್ರಾಈಲ ಸಂತತಿಗಳಿಗೆ ಓರ್ವ ಪ್ರವಾದಿಯನ್ನಾಗಿ ಯೂ ಮಾಡುವನು. (ಅವರು ಇಸ್ರಾಈಲರೊಂದಿಗೆ ಹೀಗೆ ಹೇಳುವರು:) `ನಿಮ್ಮ ಪ್ರಭುವಿನ ಕಡೆಯಿಂದ ಒಂದು ದೃಷ್ಟಾಂತದೊಂದಿಗೆ ನಿಮ್ಮ ಬಳಿ ನಾನು ಬಂದಿದ್ದೇನೆ.' (ದೃಷ್ಟಾಂತವೆಂದರೆ) ನಿಮಗೆ ನಾನು ಕಲಸು ಮಣ್ಣಿಂದ ಪಕ್ಷಿಯನ್ನು ರೂಪುಗೊಳಿಸಿ, ಆಮೇಲೆ ನಾನದಕ್ಕೆ ಊದುತ್ತೇನೆ. ಆಗ ಅದು ಅಲ್ಲಾ ಹನ ಆಜ್ಞೆಯಿಂದ ಜೀವಂತ ಪಕ್ಷಿಯಾಗುವುದು . ನಾನು ಅಲ್ಲಾಹನ ಅನುಮತಿಯಿಂದ ಜನ್ಮತಃ ಕುರುಡರನ್ನೂ ಪಾಂಡು ರೋಗಿಗಳನ್ನೂ ಗುಣಪಡಿಸುತ್ತೇನೆ. ಹಾಗೂ ಮೃತರನ್ನು ಜೀವಂತಗೊಳಿಸುತ್ತೇನೆ. ನೀವು ತಿನ್ನುವುದನ್ನೂ ನಿಮ್ಮ ಮನೆಗಳಲ್ಲಿ ನೀವು ಸಂಗ್ರಹಿಸಿಟ್ಟಿರುವುದನ್ನೂ ನಿಮಗೆ ನಾನು ತಿಳಿಸಿಕೊಡುತ್ತೇನೆ. ಇದರಲ್ಲಿ ನಿಮಗೆ ಖಂಡಿತ ವಾಗಿಯೂ ದೃಷ್ಟಾಂತವಿದೆ. ನೀವು ವಿಶ್ವಾಸವಿರಿ ಸುವಿರಾದರೆ.

Verse 50

وَمُصَدِّقًا لِّمَا بَيْنَ يَدَىَّ مِنَ ٱلتَّوْرَىٰةِ وَلِأُحِلَّ لَكُم بَعْضَ ٱلَّذِى حُرِّمَ عَلَيْكُمْ ۚ وَجِئْتُكُم بِـَٔايَةٍ مِّن رَّبِّكُمْ فَٱتَّقُوا۟ ٱللَّهَ وَأَطِيعُونِ

Transliteration wamuṣaddiqan limā bayna yadayya mina l-tawrāti wali-uḥilla lakum baʿḍa alladhī ḥurrima ʿalaykum waji'tukum biāyatin min rabbikum fa-ittaqū l-laha wa-aṭīʿūni

Kannada ನನಗಿಂತ ಮುಂಚಿನದಾಗಿರುವ ತೌರಾತನ್ನು ದೃಢಗೊಳಿಸುವವನಾಗಿಯೂ ಮತ್ತು ನಿಮಗೆ ನಿಷೇಧಿಸಲಾಗಿದ್ದ ಕೆಲವನ್ನು ಸಮ್ಮತಾರ್ಹ ಗೊಳಿಸಲಿಕ್ಕಾಗಿಯೂ (ನಾನು ಬಂದಿರುತ್ತೇನೆ.) ನಿಮ್ಮ ಪ್ರಭುವಿನ ಒಂದು ದೃಷ್ಟಾಂತವನ್ನು ನಿಮ್ಮಲ್ಲಿಗೆ ನಾನು ತಂದಿರುತ್ತೇನೆ. ಆದ್ದರಿಂದ ಅಲ್ಲಾಹನಿಗೆ ಭಯಪಡಿರಿ. ನನ್ನನ್ನು ಅನುಸರಿಸಿರಿ.

Verse 51

إِنَّ ٱللَّهَ رَبِّى وَرَبُّكُمْ فَٱعْبُدُوهُ ۗ هَـٰذَا صِرَٰطٌ مُّسْتَقِيمٌ

Transliteration inna l-laha rabbī warabbukum fa-uʿ'budūhu hādhā ṣirāṭun mus'taqīmun

Kannada ಖಂಡಿತವಾಗಿಯೂ ಅಲ್ಲಾಹನು ನನ್ನ ಮತ್ತು ನಿಮ್ಮ ಪ್ರಭುವಾಗಿರುವನು. ಆದ್ದರಿಂದ ಅವನನ್ನು ನೀವು ಆರಾಧಿಸಿರಿ. ಇದುವೇ ನೇರ ಮಾರ್ಗ .

Verse 52

۞ فَلَمَّآ أَحَسَّ عِيسَىٰ مِنْهُمُ ٱلْكُفْرَ قَالَ مَنْ أَنصَارِىٓ إِلَى ٱللَّهِ ۖ قَالَ ٱلْحَوَارِيُّونَ نَحْنُ أَنصَارُ ٱللَّهِ ءَامَنَّا بِٱللَّهِ وَٱشْهَدْ بِأَنَّا مُسْلِمُونَ

Transliteration falammā aḥassa ʿīsā min'humu l-kuf'ra qāla man anṣārī ilā l-lahi qāla l-ḥawāriyūna naḥnu anṣāru l-lahi āmannā bil-lahi wa-ish'had bi-annā mus'limūna

Kannada ಕೊನೆಗೆ ಈಸಾ ರವರು ಜನರಿಂದ ಸತ್ಯ ನಿಷೇಧವನ್ನು ಕಂಡರಿತಾಗ ಅವರು ಹೇಳಿದರು; ಅಲ್ಲಾಹನ ಮಾರ್ಗದಲ್ಲಿ ನನಗೆ ನೆರವಾಗುವವರು ಯಾರಿದ್ದಾರೆ? ಆಗ ಹವಾರಿಗಳು ಹೇಳಿದರು ; ‘ನಾವು ಅಲ್ಲಾಹನ ಸಹಾಯಕರು. ನಾವು ಅಲ್ಲಾಹನಲ್ಲಿ ದೃಢ ನಂಬಿಕೆ ಇಟ್ಟಿದ್ದೇವೆ. ನಾವು ಅಲ್ಲಾಹನಿಗೆ ಪೂರ್ಣವಿಧೇಯರಾದವರೆಂದು ತಾವು ಸಾಕ್ಷ್ಯ ವಹಿಸಿರಿ.

Verse 53

رَبَّنَآ ءَامَنَّا بِمَآ أَنزَلْتَ وَٱتَّبَعْنَا ٱلرَّسُولَ فَٱكْتُبْنَا مَعَ ٱلشَّـٰهِدِينَ

Transliteration rabbanā āmannā bimā anzalta wa-ittabaʿnā l-rasūla fa-uk'tub'nā maʿa l-shāhidīna

Kannada ನಮ್ಮ ಪ್ರಭೂ ! ನೀನು ಅವತೀರ್ಣಗೊಳಿಸಿದುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ನಿನ್ನ ಈ ದೂತರನ್ನು ಅನುಸರಿಸಿದ್ದೇವೆ. ನಮ್ಮನ್ನು ನೀನು (ಸತ್ಯಕ್ಕೆ) ಸಾಕ್ಷಿಗಳಾದವರ ಕೂಟಕ್ಕೆ ಸೇರಿಸು’ .

Verse 54

وَمَكَرُوا۟ وَمَكَرَ ٱللَّهُ ۖ وَٱللَّهُ خَيْرُ ٱلْمَـٰكِرِينَ

Transliteration wamakarū wamakara l-lahu wal-lahu khayru l-mākirīna

Kannada ಅವರು (ಇಸ್ರೇಲಿ ಜನಾಂಗದ ಅವಿಶ್ವಾಸಿಗಳು) ಗೂಢತಂತ್ರ ಪ್ರಯೋಗಿಸಿದರು. ಅಲ್ಲಾಹನು (ಅವರ ಗೂಢತಂತ್ರಕ್ಕೆ) ಪ್ರತಿಕ್ರಮ ಹೂಡಿದನು. ಪ್ರತಿಕ್ರಮಿಗಳಲ್ಲಿ ಅಲ್ಲಾಹನು ಪರಮ ನಿಪುಣನು .

Verse 55

إِذْ قَالَ ٱللَّهُ يَـٰعِيسَىٰٓ إِنِّى مُتَوَفِّيكَ وَرَافِعُكَ إِلَىَّ وَمُطَهِّرُكَ مِنَ ٱلَّذِينَ كَفَرُوا۟ وَجَاعِلُ ٱلَّذِينَ ٱتَّبَعُوكَ فَوْقَ ٱلَّذِينَ كَفَرُوٓا۟ إِلَىٰ يَوْمِ ٱلْقِيَـٰمَةِ ۖ ثُمَّ إِلَىَّ مَرْجِعُكُمْ فَأَحْكُمُ بَيْنَكُمْ فِيمَا كُنتُمْ فِيهِ تَخْتَلِفُونَ

Transliteration idh qāla l-lahu yāʿīsā innī mutawaffīka warāfiʿuka ilayya wamuṭahhiruka mina alladhīna kafarū wajāʿilu alladhīna ittabaʿūka fawqa alladhīna kafarū ilā yawmi l-qiyāmati thumma ilayya marjiʿukum fa-aḥkumu baynakum fīmā kuntum fīhi takhtalifūna

Kannada ಅಲ್ಲಾಹನು ಹೇಳಿದ ಸಂದರ್ಭ(ವನ್ನು ನೆನೆಸಿರಿ). ಓ ಈಸಾ ! ನಿಶ್ಚಯವಾಗಿಯೂ ನಿನ್ನನ್ನು ನಾನು ಹಿಡಿಯುವೆನು . ನನ್ನಲ್ಲಿಗೆ ಎತ್ತುವೆನು . ಸತ್ಯ ನಿಷೇಧಿಗಳಿಂದ ನಿನ್ನನ್ನು ದೂರಗೊಳಿಸುವೆನು. ನಿನ್ನ ಅನುಯಾಯಿಗಳನ್ನು ಪುನರುತ್ಥಾನದ ದಿನದ ವರೆಗೂ ಸತ್ಯನಿಷೇಧಿಗಳಿಗಿಂತ ಉನ್ನತರನ್ನಾಗಿ ಮಾಡುವೆನು. ಮುಂದೆ ನಿಮ್ಮ ವಾಪಾಸಾತಿ ನನ್ನೆಡೆಗೇ ಇರುವುದು. ಆಗ ನಾನು ನೀವು ಇಲ್ಲಿ ಪರಸ್ಪರ ಬೇಧ ತಳೆದ ವಿಷಯದಲ್ಲಿ ತೀರ್ಪು ಕೊಡುವೆನು.

Verse 56

فَأَمَّا ٱلَّذِينَ كَفَرُوا۟ فَأُعَذِّبُهُمْ عَذَابًا شَدِيدًا فِى ٱلدُّنْيَا وَٱلْـَٔاخِرَةِ وَمَا لَهُم مِّن نَّـٰصِرِينَ

Transliteration fa-ammā alladhīna kafarū fa-uʿadhibuhum ʿadhāban shadīdan fī l-dun'yā wal-ākhirati wamā lahum min nāṣirīna

Kannada ಸತ್ಯನಿಷೇಧಿಗಳನ್ನು ನಾನು ಇಹದಲ್ಲೂ ಪರದಲ್ಲೂ ಉಗ್ರ ಶಿಕ್ಷೆಗೊಳಪಡಿಸುವೆನು. ಅವರಿಗೆ ಸಹಾಯಕರಾಗಿ ಯಾರೂ ಇರಲಾರರು.

Verse 57

وَأَمَّا ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ فَيُوَفِّيهِمْ أُجُورَهُمْ ۗ وَٱللَّهُ لَا يُحِبُّ ٱلظَّـٰلِمِينَ

Transliteration wa-ammā alladhīna āmanū waʿamilū l-ṣāliḥāti fayuwaffīhim ujūrahum wal-lahu lā yuḥibbu l-ẓālimīna

Kannada ಸತ್ಯ ನಂಬಿಕೆ ತಾಳಿ, ಪುಣ್ಯ ಕಾರ್ಯಗಳನ್ನು ಯಾರು ಮಾಡುತ್ತಾರೋ ಅವರ ಪ್ರತಿಫಲವನ್ನು ಅವನು ಅವರಿಗೆ ಪೂರ್ತಿ ಮಾಡಿಕೊಡುವನು. ಅಲ್ಲಾಹು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.

Verse 58

ذَٰلِكَ نَتْلُوهُ عَلَيْكَ مِنَ ٱلْـَٔايَـٰتِ وَٱلذِّكْرِ ٱلْحَكِيمِ

Transliteration dhālika natlūhu ʿalayka mina l-āyāti wal-dhik'ri l-ḥakīmi

Kannada ಇದು ತಮಗೆ ನಾವು ಓದಿ ಹೇಳುತ್ತಿರುವ ಪುರಾವೆ ಗಳು ಹಾಗೂ ಸತ್ವ ಸಂಪೂರ್ಣವಾದ ಬೋಧನೆಗಳು.

Verse 59

إِنَّ مَثَلَ عِيسَىٰ عِندَ ٱللَّهِ كَمَثَلِ ءَادَمَ ۖ خَلَقَهُۥ مِن تُرَابٍ ثُمَّ قَالَ لَهُۥ كُن فَيَكُونُ

Transliteration inna mathala ʿīsā ʿinda l-lahi kamathali ādama khalaqahu min turābin thumma qāla lahu kun fayakūnu

Kannada ನಿಶ್ಚಯವಾಗಿಯೂ ಅಲ್ಲಾಹನ ಬಳಿ ಈಸಾರವರ ಅವಸ್ಥೆ ಆದಮರ ಅವಸ್ಥೆಯಂತೆ. ಅವರನ್ನು ಅವನು ಮಣ್ಣಿನಿಂದ ಸೃಷ್ಟಿಸಿದನು. ಆಮೇಲೆ ಮನುಷ್ಯನಾಗು ಎಂದು ಅವರೊಂದಿಗೆ ಹೇಳಿದನು. ಆಗ ಅವರು ಉಂಟಾದರು ಂ.

Verse 60

ٱلْحَقُّ مِن رَّبِّكَ فَلَا تَكُن مِّنَ ٱلْمُمْتَرِينَ

Transliteration al-ḥaqu min rabbika falā takun mina l-mum'tarīna

Kannada (ಇದು) ತಮ್ಮ ಪ್ರಭುವಿನ ಕಡೆಯ ಸತ್ಯ. ಆದ್ದರಿಂದ ತಾವು ಸಂಶಯ ಪಡುವವರ ಕೂಟಕ್ಕೆ ಸೇರಿ ಹೋಗದಿರಿ.

Verse 61

فَمَنْ حَآجَّكَ فِيهِ مِنۢ بَعْدِ مَا جَآءَكَ مِنَ ٱلْعِلْمِ فَقُلْ تَعَالَوْا۟ نَدْعُ أَبْنَآءَنَا وَأَبْنَآءَكُمْ وَنِسَآءَنَا وَنِسَآءَكُمْ وَأَنفُسَنَا وَأَنفُسَكُمْ ثُمَّ نَبْتَهِلْ فَنَجْعَل لَّعْنَتَ ٱللَّهِ عَلَى ٱلْكَـٰذِبِينَ

Transliteration faman ḥājjaka fīhi min baʿdi mā jāaka mina l-ʿil'mi faqul taʿālaw nadʿu abnāanā wa-abnāakum wanisāanā wanisāakum wa-anfusanā wa-anfusakum thumma nabtahil fanajʿal laʿnata l-lahi ʿalā l-kādhibīna

Kannada ಇನ್ನು ನಿಮಗೆ ಈ ಜ್ಞಾನ ಬಂದ ಬಳಿಕವೂ ಯಾರಾದರೂ (ಈಸಾ ನಬಿ(ಅ)ಯವರ) ವಿಷಯದಲ್ಲಿ ನಿಮ್ಮಲ್ಲಿ ತರ್ಕಕ್ಕಿಳಿದರೆ ನೀವು ಹೇಳಿರಿ; `ನೀವು ಬನ್ನಿರಿ. ನಮ್ಮ ಮಕ್ಕಳನ್ನೂ ನಿಮ್ಮ ಮಕ್ಕಳನ್ನೂ ನಮ್ಮ ಸ್ತ್ರೀಯರನ್ನೂ, ನಿಮ್ಮ ಸ್ತ್ರೀಯರನ್ನೂ ಕರೆಯೋಣ. ನಾವು ಹಾಜರಾಗೋಣ. ಆಮೇಲೆ ನಮ್ಮಲ್ಲಿ ಯಾರು ಅಸತ್ಯವಾದಿಗಳೋ ಅವರಿಗೆ ಅಲ್ಲಾಹುವಿನ ಶಾಪ ತಟ್ಟಲಿ ಎಂದು ಪ್ರಾರ್ಥಿಸೋಣ'

Verse 62

إِنَّ هَـٰذَا لَهُوَ ٱلْقَصَصُ ٱلْحَقُّ ۚ وَمَا مِنْ إِلَـٰهٍ إِلَّا ٱللَّهُ ۚ وَإِنَّ ٱللَّهَ لَهُوَ ٱلْعَزِيزُ ٱلْحَكِيمُ

Transliteration inna hādhā lahuwa l-qaṣaṣu l-ḥaqu wamā min ilāhin illā l-lahu wa-inna l-laha lahuwa l-ʿazīzu l-ḥakīmu

Kannada ಖಂಡಿತ ಇದು ಯಥಾರ್ಥ ವಾರ್ತೆ. ಅಲ್ಲಾಹನಲ್ಲದೆ ಬೇರೆ ಯಾವುದೇ ಆರಾಧ್ಯನಿಲ್ಲ. ಅವನು ಅಜೇಯನೂ ಮಹಾ ತಂತ್ರಜ್ಞಾನಿಯೂ ಆಗಿರುವನು.

Verse 63

فَإِن تَوَلَّوْا۟ فَإِنَّ ٱللَّهَ عَلِيمٌۢ بِٱلْمُفْسِدِينَ

Transliteration fa-in tawallaw fa-inna l-laha ʿalīmun bil-muf'sidīna

Kannada ಇನ್ನು ಅವರು (ಸತ್ಯವಿಶ್ವಾಸದಿಂದ ) ವಿಮುಖರಾದರೆ ಖಂಡಿತ! ಅಲ್ಲಾಹನು ಗೊಂದಲಕಾರಿಗಳನ್ನು ಚೆನ್ನಾಗಿ ಬಲ್ಲವನೇ ಆಗಿರುತ್ತಾನೆ.

Verse 64

قُلْ يَـٰٓأَهْلَ ٱلْكِتَـٰبِ تَعَالَوْا۟ إِلَىٰ كَلِمَةٍ سَوَآءٍۭ بَيْنَنَا وَبَيْنَكُمْ أَلَّا نَعْبُدَ إِلَّا ٱللَّهَ وَلَا نُشْرِكَ بِهِۦ شَيْـًٔا وَلَا يَتَّخِذَ بَعْضُنَا بَعْضًا أَرْبَابًا مِّن دُونِ ٱللَّهِ ۚ فَإِن تَوَلَّوْا۟ فَقُولُوا۟ ٱشْهَدُوا۟ بِأَنَّا مُسْلِمُونَ

Transliteration qul yāahla l-kitābi taʿālaw ilā kalimatin sawāin baynanā wabaynakum allā naʿbuda illā l-laha walā nush'rika bihi shayan walā yattakhidha baʿḍunā baʿḍan arbāban min dūni l-lahi fa-in tawallaw faqūlū ish'hadū bi-annā mus'limūna

Kannada ಹೇಳಿರಿ ; `ಓ ವೇದದವರೇ! ನಮ್ಮ-ನಿಮ್ಮೆಡೆಯಲ್ಲಿ ಸಮನಾದ ಒಂದು ವಚನ ತತ್ವದ ಕಡೆಗೆ ನೀವು ಬನ್ನಿರಿ. (ಅದೇನೆಂದರೆ) ಅಲ್ಲಾಹನ ಹೊರತು ನಾವು ಬೇರೆ ಯಾರಿಗೂ ಆರಾಧಿಸಬಾರದು. ಅವನೊಂದಿಗೆ ಬೇರೆ ಯಾವುದನ್ನೂ ಭಾಗಿಯಾಗಿಸದಿರೋಣ. ಅಲ್ಲಾಹನ ಹೊರತು ನಮ್ಮಲ್ಲಿ ಕೆಲವರು ಕೆಲವರನ್ನು ಪ್ರಭುಗಳನ್ನಾಗಿ ಮಾಡದಿರೋಣ' . (ಎಂಬ ತತ್ವದ ಕಡೆಗೆ). ಇನ್ನೂ ಅವರು ವಿಮುಖರಾದರೆ ಹೇಳಿರಿ; `ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಪೂರ್ಣ ಶರಣಾಗಿದ್ದೇವೆ ಎನ್ನುವುದಕ್ಕೆ ನೀವು ಸಾಕ್ಷಿಗಳಾಗಿರಿ’.

Verse 65

يَـٰٓأَهْلَ ٱلْكِتَـٰبِ لِمَ تُحَآجُّونَ فِىٓ إِبْرَٰهِيمَ وَمَآ أُنزِلَتِ ٱلتَّوْرَىٰةُ وَٱلْإِنجِيلُ إِلَّا مِنۢ بَعْدِهِۦٓ ۚ أَفَلَا تَعْقِلُونَ

Transliteration yāahla l-kitābi lima tuḥājjūna fī ib'rāhīma wamā unzilati l-tawrātu wal-injīlu illā min baʿdihi afalā taʿqilūna

Kannada ಓ ವೇದದವರೇ! ಇಬ್ರಾಹೀಮರ ವಿಷಯದಲ್ಲಿ ನೀವು ಯಾಕೆ ತರ್ಕಿಸುತ್ತಿದ್ದೀರಿ? ತೌರಾತ್ ಮತ್ತು ಇಂಜೀಲ್ ಅವತೀರ್ಣವಾದುದೇ ಅವರ ನಂತರ ತಾನೇ ? ನೀವು ಚಿಂತಿಸುವುದಿಲ್ಲವೇ?

Verse 66

هَـٰٓأَنتُمْ هَـٰٓؤُلَآءِ حَـٰجَجْتُمْ فِيمَا لَكُم بِهِۦ عِلْمٌ فَلِمَ تُحَآجُّونَ فِيمَا لَيْسَ لَكُم بِهِۦ عِلْمٌ ۚ وَٱللَّهُ يَعْلَمُ وَأَنتُمْ لَا تَعْلَمُونَ

Transliteration hāantum hāulāi ḥājajtum fīmā lakum bihi ʿil'mun falima tuḥājjūna fīmā laysa lakum bihi ʿil'mun wal-lahu yaʿlamu wa-antum lā taʿlamūna

Kannada ಓ ಜನರೇ! ನಿಮಗೆ ಅಲ್ಪ ಸ್ವಲ್ಪ ಗೊತ್ತೇ ಇರುವ ವಿಷಯದಲ್ಲಿ ನೀವು ತರ್ಕ ಮಾಡಿದ್ದೀರಿ. ಹಾಗಿರುವಾಗ ನೀವು ಯಾವುದೇ ಅರಿವು ಇಲ್ಲದ ವಿಷಯದಲ್ಲಿ ಏಕೆ ತರ್ಕಿಸುತ್ತಿದ್ದೀರಿ ? ಅಲ್ಲಾಹನಿಗೆ ಗೊತ್ತಿದೆ. ನಿಮಗೆ ಗೊತ್ತಿಲ್ಲ.

Verse 67

مَا كَانَ إِبْرَٰهِيمُ يَهُودِيًّا وَلَا نَصْرَانِيًّا وَلَـٰكِن كَانَ حَنِيفًا مُّسْلِمًا وَمَا كَانَ مِنَ ٱلْمُشْرِكِينَ

Transliteration mā kāna ib'rāhīmu yahūdiyyan walā naṣrāniyyan walākin kāna ḥanīfan mus'liman wamā kāna mina l-mush'rikīna

Kannada ಇಬ್‍ರಾಹೀಮರು ಯಹೂದರೋ, ಕ್ರೈಸ್ತರೋ ಆಗಿರಲಿಲ್ಲ. ಆದರೆ ಅವರು ವಕ್ರ ಮಾರ್ಗಗಳನ್ನು ತ್ಯಜಿಸಿ ಸತ್ಯಮಾರ್ಗವನ್ನು ಅನುಸರಿಸಿದ ನಿರ್ಮಲಚಿತ್ತದ ಮುಸ್ಲಿಮರಾಗಿದ್ದರು. ಅವರು ಬಹುದೇವಾರಾಧಕರಲ್ಲೂ ಸೇರಿದವರಾಗಿರಲಿಲ್ಲ.

Verse 68

إِنَّ أَوْلَى ٱلنَّاسِ بِإِبْرَٰهِيمَ لَلَّذِينَ ٱتَّبَعُوهُ وَهَـٰذَا ٱلنَّبِىُّ وَٱلَّذِينَ ءَامَنُوا۟ ۗ وَٱللَّهُ وَلِىُّ ٱلْمُؤْمِنِينَ

Transliteration inna awlā l-nāsi bi-ib'rāhīma lalladhīna ittabaʿūhu wahādhā l-nabiyu wa-alladhīna āmanū wal-lahu waliyyu l-mu'minīna

Kannada ನಿಶ್ಚಯವಾಗಿಯೂ ಜನರಲ್ಲಿ ಇಬ್ರಾಹೀಮರೊಂದಿಗೆ ಹೆಚ್ಚು ಸಂಬಂಧವುಳ್ಳವರು ಯಾರೆಂದರೆ ಅವರನ್ನು ಅನುಸರಿಸಿದವರು ಹಾಗೂ ಈ ಪ್ರವಾದಿ ಮತ್ತು ಸತ್ಯವಿಶ್ವಾಸಿಗಳು. ಅಲ್ಲಾಹನು ಸತ್ಯವಿಶ್ವಾಸಿಗಳ ರಕ್ಷಾಧಿಕಾರಿಯಾಗಿರುವನು.

Verse 69

وَدَّت طَّآئِفَةٌ مِّنْ أَهْلِ ٱلْكِتَـٰبِ لَوْ يُضِلُّونَكُمْ وَمَا يُضِلُّونَ إِلَّآ أَنفُسَهُمْ وَمَا يَشْعُرُونَ

Transliteration waddat ṭāifatun min ahli l-kitābi law yuḍillūnakum wamā yuḍillūna illā anfusahum wamā yashʿurūna

Kannada ವೇದದವರಲ್ಲಿ ಒಂದು ಪಂಗಡವು ನಿಮ್ಮನ್ನು ದಾರಿ ತಪ್ಪಿಸಲು ಆಶಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅವರು ತಮಗೆ ತಾವೇ ದಾರಿತಪ್ಪಿಸಿಕೊಳ್ಳುತ್ತಿದ್ದಾರೆ. ಇದನ್ನು ಅವರು ಗ್ರಹಿಸಿಕೊಳ್ಳುವುದಿಲ್ಲ ಅಷ್ಟೆ!

Verse 70

يَـٰٓأَهْلَ ٱلْكِتَـٰبِ لِمَ تَكْفُرُونَ بِـَٔايَـٰتِ ٱللَّهِ وَأَنتُمْ تَشْهَدُونَ

Transliteration yāahla l-kitābi lima takfurūna biāyāti l-lahi wa-antum tashhadūna

Kannada ಓ ವೇದದವರೇ! ಸತ್ಯಕ್ಕೆ ದೃಕ್ಸಾಕ್ಷಿಗಳಾಗಿಯೂ ಕೂಡಾ ನೀವು ಯಾಕೆ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದೀರಿ?

Verse 71

يَـٰٓأَهْلَ ٱلْكِتَـٰبِ لِمَ تَلْبِسُونَ ٱلْحَقَّ بِٱلْبَـٰطِلِ وَتَكْتُمُونَ ٱلْحَقَّ وَأَنتُمْ تَعْلَمُونَ

Transliteration yāahla l-kitābi lima talbisūna l-ḥaqa bil-bāṭili wataktumūna l-ḥaqa wa-antum taʿlamūna

Kannada ಓ ಗ್ರಂಥದವರೇ! ನೀವು ತಿಳಿದೂ ತಿಳಿದೂ ಸತ್ಯ ವನ್ನು ಅಸತ್ಯದೊಂದಿಗೆ ಯಾಕೆ ಬೆರೆಸುತ್ತಿದ್ದೀರಿ? ಸತ್ಯವನ್ನು ಯಾಕೆ ಮುಚ್ಚಿಡುತ್ತಿದ್ದೀರಿ?

Verse 72

وَقَالَت طَّآئِفَةٌ مِّنْ أَهْلِ ٱلْكِتَـٰبِ ءَامِنُوا۟ بِٱلَّذِىٓ أُنزِلَ عَلَى ٱلَّذِينَ ءَامَنُوا۟ وَجْهَ ٱلنَّهَارِ وَٱكْفُرُوٓا۟ ءَاخِرَهُۥ لَعَلَّهُمْ يَرْجِعُونَ

Transliteration waqālat ṭāifatun min ahli l-kitābi āminū bi-alladhī unzila ʿalā alladhīna āmanū wajha l-nahāri wa-uk'furū ākhirahu laʿallahum yarjiʿūna

Kannada ವೇದದವರಲ್ಲಿ ಒಂದು ವಿಭಾಗದವರು (ಸ್ವಂತ ಅನುಯಾಯಿಗಳೊಂದಿಗೆ) ಹೇಳಿದರು; ಈ ವಿಶ್ವಾಸಿಗಳಿಗೆ ಅವತೀರ್ಣವಾದುದನ್ನು ನೀವು ಹಗಲಿನ ಆರಂಭದಲ್ಲಿ ವಿಶ್ವಾಸವಿಡಿರಿ. ದಿನದ ಕೊನೆಯಲ್ಲಿ ಅದನ್ನು ನಿಷೇಧಿಸಿರಿ. ಹಾಗಾದರೆ ಅವರು ಮರಳಿ ಬರಬಹುದು.

Verse 73

وَلَا تُؤْمِنُوٓا۟ إِلَّا لِمَن تَبِعَ دِينَكُمْ قُلْ إِنَّ ٱلْهُدَىٰ هُدَى ٱللَّهِ أَن يُؤْتَىٰٓ أَحَدٌ مِّثْلَ مَآ أُوتِيتُمْ أَوْ يُحَآجُّوكُمْ عِندَ رَبِّكُمْ ۗ قُلْ إِنَّ ٱلْفَضْلَ بِيَدِ ٱللَّهِ يُؤْتِيهِ مَن يَشَآءُ ۗ وَٱللَّهُ وَٰسِعٌ عَلِيمٌ

Transliteration walā tu'minū illā liman tabiʿa dīnakum qul inna l-hudā hudā l-lahi an yu'tā aḥadun mith'la mā ūtītum aw yuḥājjūkum ʿinda rabbikum qul inna l-faḍla biyadi l-lahi yu'tīhi man yashāu wal-lahu wāsiʿun ʿalīmun

Kannada ನಿಮ್ಮ ಧರ್ಮವನ್ನು ಅನುಸರಿಸುವವರನ್ನು ಹೊರತು ಬೇರೆ ಯಾರನ್ನೂ ನಂಬಬೇಡಿರಿ (ಎಂದೂ ಅವರು ಹೇಳಿದರು) ಖಂಡಿತವಾಗಿಯೂ ಮಾರ್ಗದರ್ಶನವು ಅಲ್ಲಾಹನದ್ದು ಮಾತ್ರ ಎಂದು ಹೇಳಿರಿ. (ವೇದದವರು ತಮ್ಮ ಅನುಯಾಯಿಗಳಿಗೆ ತಮ್ಮ ಹೇಳಿಕೆಯನ್ನು ಹೀಗೆ ಮುಂದುವರಿಸಿದರು ನಿಮ್ಮ ಯಹೂದೀ ಧರ್ಮವನ್ನು ಅನುಸರಿಸಿದವರಿಗೆ ಸಿಕ್ಕಂತಹ ಮಾನ್ಯತೆ ಬೇರೆ ಯಾರಿಗೂ ಸಿಗ ಬಹುದೆಂದು ಭಾವಿಸಬೇಡಿರಿ. ಅವರು (ಮುಸ್ಲಿಮರು) ನಿಮ್ಮ ವಿರುದ್ಧ ನಿಮ್ಮ ಪ್ರಭುವಿನ ಬಳಿ ಜಯಗಳಿಸುವರೆಂದೂ ಭಾವಿಸಬೇಡಿರಿ. (ಪ್ರವಾದಿಯವರೇ !) ಹೇಳಿರಿ; ನಿಶ್ಚಯವಾಗಿಯೂ ಔದಾರ್ಯವಿರುವುದು ಅಲ್ಲಾಹನ ವಶದಲ್ಲಿ. ತಾನಿಚ್ಛಿಸಿದವರಿಗೆ ಅದನ್ನವನು ಕೊಡುತ್ತಾನೆ. ಅಲ್ಲಾಹನು ಪರಮ ವಿಶಾಲನೂ ಪರಮ ತಜ್ಞನೂ ಆಗಿರುತ್ತಾನೆ.

Verse 74

يَخْتَصُّ بِرَحْمَتِهِۦ مَن يَشَآءُ ۗ وَٱللَّهُ ذُو ٱلْفَضْلِ ٱلْعَظِيمِ

Transliteration yakhtaṣṣu biraḥmatihi man yashāu wal-lahu dhū l-faḍli l-ʿaẓīmi

Kannada ತಾನಿಚ್ಛಿಸಿದವರಿಗೆ ತನ್ನ ಅನುಗ್ರಹದಿಂದ ಪ್ರತ್ಯೇಕವಾಗಿ ಕೊಡುತ್ತಾನೆ. ಅಲ್ಲಾಹನು ಮಹಾ ಔದಾರ್ಯ ವಂತನಾಗಿರುವನು.

Verse 75

۞ وَمِنْ أَهْلِ ٱلْكِتَـٰبِ مَنْ إِن تَأْمَنْهُ بِقِنطَارٍ يُؤَدِّهِۦٓ إِلَيْكَ وَمِنْهُم مَّنْ إِن تَأْمَنْهُ بِدِينَارٍ لَّا يُؤَدِّهِۦٓ إِلَيْكَ إِلَّا مَا دُمْتَ عَلَيْهِ قَآئِمًا ۗ ذَٰلِكَ بِأَنَّهُمْ قَالُوا۟ لَيْسَ عَلَيْنَا فِى ٱلْأُمِّيِّـۧنَ سَبِيلٌ وَيَقُولُونَ عَلَى ٱللَّهِ ٱلْكَذِبَ وَهُمْ يَعْلَمُونَ

Transliteration wamin ahli l-kitābi man in tamanhu biqinṭārin yu-addihi ilayka wamin'hum man in tamanhu bidīnārin lā yu-addihi ilayka illā mā dum'ta ʿalayhi qāiman dhālika bi-annahum qālū laysa ʿalaynā fī l-umiyīna sabīlun wayaqūlūna ʿalā l-lahi l-kadhiba wahum yaʿlamūna

Kannada ನೀವು ಒಂದು (ಚಿನ್ನ ಬೆಳ್ಳಿಯ) ರಾಶಿಯನ್ನೇ ಅವರ ಬಳಿ ವಿಶ್ವಾಸವಿಟ್ಟು ಕೊಟ್ಟಿದ್ದರೆ ಅದನ್ನು ವಾಪಾಸು ಕೊಡುವಂತಹ ವ್ಯಕ್ತಿಗಳೂ ವೇದದವರ ಕೂಟದಲ್ಲಿದ್ದಾರೆ. ಆದರೆ ಅವರಲ್ಲಿ ಮತ್ತೆ ಕೆಲವರಿದ್ದಾರೆ. ನೀವು ಅವರ ಬಳಿ ಒಂದು ಬೆಳ್ಳಿ ನಾಣ್ಯವನ್ನು ನಂಬಿ ಇಟ್ಟರೂ ನೀವು ಅವರ ಬಳಿ ಹಠ ಹಿಡಿದು ನಿಂತರೆ ಹೊರತು ನಿಮಗೆ ವಾಪಾಸು ಕೊಡಲಾರರು. ಅದು ಯಾಕೆಂದರೆ ಈ ನಿರಕ್ಷರಿಗಳ (ಅರಬರ) ವಿಷಯದಲ್ಲಿ ನಮಗೆ ಶಿಕ್ಷೆ ದೊರಕಲು ಯಾವ ಮಾರ್ಗವೂ ಇಲ್ಲವೆಂದು ಅವರು ಹೇಳಿದ್ದಾರೆ. ಅವರು ಅರಿತು ಕೊಂಡೇ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ.

Verse 76

بَلَىٰ مَنْ أَوْفَىٰ بِعَهْدِهِۦ وَٱتَّقَىٰ فَإِنَّ ٱللَّهَ يُحِبُّ ٱلْمُتَّقِينَ

Transliteration balā man awfā biʿahdihi wa-ittaqā fa-inna l-laha yuḥibbu l-mutaqīna

Kannada ನಿಜ ಸಂಗತಿ ಹಾಗಲ್ಲ. ಯಾರು ತನ್ನ ಕರಾರನ್ನು ಪೂರ್ತಿಗೊಳಿಸುತ್ತಾರೋ ಹಾಗೂ ದೇವಭಕ್ತಿ ಇರಿಸುತ್ತಾರೋ ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಟರನ್ನು ಪ್ರೀತಿಸುತ್ತಾನೆ.

Verse 77

إِنَّ ٱلَّذِينَ يَشْتَرُونَ بِعَهْدِ ٱللَّهِ وَأَيْمَـٰنِهِمْ ثَمَنًا قَلِيلًا أُو۟لَـٰٓئِكَ لَا خَلَـٰقَ لَهُمْ فِى ٱلْـَٔاخِرَةِ وَلَا يُكَلِّمُهُمُ ٱللَّهُ وَلَا يَنظُرُ إِلَيْهِمْ يَوْمَ ٱلْقِيَـٰمَةِ وَلَا يُزَكِّيهِمْ وَلَهُمْ عَذَابٌ أَلِيمٌ

Transliteration inna alladhīna yashtarūna biʿahdi l-lahi wa-aymānihim thamanan qalīlan ulāika lā khalāqa lahum fī l-ākhirati walā yukallimuhumu l-lahu walā yanẓuru ilayhim yawma l-qiyāmati walā yuzakkīhim walahum ʿadhābun alīmun

Kannada ಅಲ್ಲಾಹನೊಂದಿಗೆ ಮಾಡಿಕೊಂಡ ಕರಾರು ಮತ್ತು (ಅಲ್ಲಾಹನ ಹೆಸರಲ್ಲಿ) ಸ್ವತಃ ಹಾಕಿದ ಆಣೆಗಳನ್ನು ತುಚ್ಛ ಬೆಲೆಗೆ ಮಾರುವವರಿಗೆ ಪರಲೋಕದಲ್ಲಿ ಯಾವುದೇ ಭಾಗ್ಯ (ಪಾಲು) ಖಂಡಿತ ಇಲ್ಲ. ಪರಲೋಕದಲ್ಲಿ ಅಲ್ಲಾಹನು ಅವರೊಂದಿಗೆ ಮಾತನ್ನೇ ಆಡಲಾರನು. ಅವರತ್ತ ಕರುಣೆಯಿಂದ ನೋಡುವುದೂ ಇಲ್ಲ. ಅವರನ್ನು (ಪಾಪ ಮಾಲಿನ್ಯಗಳಿಂದ) ಶುದ್ಧಿಗೊಳಿಸುವುದೂ ಇಲ್ಲ . ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.

Verse 78

وَإِنَّ مِنْهُمْ لَفَرِيقًا يَلْوُۥنَ أَلْسِنَتَهُم بِٱلْكِتَـٰبِ لِتَحْسَبُوهُ مِنَ ٱلْكِتَـٰبِ وَمَا هُوَ مِنَ ٱلْكِتَـٰبِ وَيَقُولُونَ هُوَ مِنْ عِندِ ٱللَّهِ وَمَا هُوَ مِنْ عِندِ ٱللَّهِ وَيَقُولُونَ عَلَى ٱللَّهِ ٱلْكَذِبَ وَهُمْ يَعْلَمُونَ

Transliteration wa-inna min'hum lafarīqan yalwūna alsinatahum bil-kitābi litaḥsabūhu mina l-kitābi wamā huwa mina l-kitābi wayaqūlūna huwa min ʿindi l-lahi wamā huwa min ʿindi l-lahi wayaqūlūna ʿalā l-lahi l-kadhiba wahum yaʿlamūna

Kannada ಖಂಡಿತವಾಗಿಯೂ ವೇದದವರಲ್ಲಿ ಕೆಲವರಿದ್ದಾರೆ. ವೇದವನ್ನು ಅವರು ನಾಲಿಗೆ ಕೊಂಕಿಸಿ ಓದುತ್ತಾರೆ ! ಅದು ಕೂಡ ಗ್ರಂಥದಲ್ಲಿದ್ದುದೆಂದು ನೀವು ಭಾವಿಸಲಿಕ್ಕಾಗಿ. ವಾಸ್ತವದಲ್ಲಿ ಅದು ಗ್ರಂಥದಲ್ಲಿರುವುದಿಲ್ಲ. ‘ಇದು ಅಲ್ಲಾಹನ ಕಡೆಯದ್ದು’ ಎಂದು ಅವರು ಹೇಳುತ್ತಾರೆ. ನಿಜದಲ್ಲಿ ಅದು ಅಲ್ಲಾಹನ ಕಡೆಯದ್ದಾಗಿರುವುದಿಲ್ಲ. ತಿಳಿದುಕೊಂಡೇ ಅವರು ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಾರೆ.

Verse 79

مَا كَانَ لِبَشَرٍ أَن يُؤْتِيَهُ ٱللَّهُ ٱلْكِتَـٰبَ وَٱلْحُكْمَ وَٱلنُّبُوَّةَ ثُمَّ يَقُولَ لِلنَّاسِ كُونُوا۟ عِبَادًا لِّى مِن دُونِ ٱللَّهِ وَلَـٰكِن كُونُوا۟ رَبَّـٰنِيِّـۧنَ بِمَا كُنتُمْ تُعَلِّمُونَ ٱلْكِتَـٰبَ وَبِمَا كُنتُمْ تَدْرُسُونَ

Transliteration mā kāna libasharin an yu'tiyahu l-lahu l-kitāba wal-ḥuk'ma wal-nubuwata thumma yaqūla lilnnāsi kūnū ʿibādan lī min dūni l-lahi walākin kūnū rabbāniyyīna bimā kuntum tuʿallimūna l-kitāba wabimā kuntum tadrusūna

Kannada ಅಲ್ಲಾಹನು ವೇದ ಗ್ರಂಥವನ್ನೂ ಸುಜ್ಞಾನವನ್ನೂ ಪ್ರವಾದಿತ್ವವನ್ನೂ ಕೊಟ್ಟಂತಹ ಒಬ್ಬ ಮನುಷ್ಯನು ‘ನೀವು ಅಲ್ಲಾಹನನ್ನು ಬಿಟ್ಟು (ನನಗೆ ಆರಾಧಿಸುವ) ನನ್ನ ದಾಸರಾಗಿರಿ'. ಎಂದು ಜನರಲ್ಲಿ ಹೇಳುವನೆನ್ನುವುದು ತಕ್ಕುದಲ್ಲ. ಪರಂತು; `ನೀವು ವೇದಗ್ರಂಥವನ್ನು ಓದುವವರೂ ಕಲಿಸುವವರೂ ಆಗಿರುವುದರಿಂದ ನೀವು ಸುಜ್ಞಾನಿಗಳಾಗಿರಿ' ಎಂದಷ್ಟೇ ಅವನು ಹೇಳುವನು.

Verse 80

وَلَا يَأْمُرَكُمْ أَن تَتَّخِذُوا۟ ٱلْمَلَـٰٓئِكَةَ وَٱلنَّبِيِّـۧنَ أَرْبَابًا ۗ أَيَأْمُرُكُم بِٱلْكُفْرِ بَعْدَ إِذْ أَنتُم مُّسْلِمُونَ

Transliteration walā yamurakum an tattakhidhū l-malāikata wal-nabiyīna arbāban ayamurukum bil-kuf'ri baʿda idh antum mus'limūna

Kannada ದೇವಚರರನ್ನೂ ಪ್ರವಾದಿಗಳನ್ನೂ ಆರಾಧ್ಯರನ್ನಾಗಿ ಮಾಡಲು ಆ ಪ್ರವಾದಿ ನಿಮಗೆ ಆಜ್ಞಾಪಿಸ ಲಾರರು. ನೀವು ಪರಿಪೂರ್ಣವಾಗಿ ಅಲ್ಲಾಹನಿಗೆ ಅನುಸರಿಸುವವರಾದ ಬಳಿಕ ಸತ್ಯ ನಿಷೇಧವನ್ನು ಅವರು ನಿಮಗೆ ಆದೇಶಿಸುವರೇ?

Verse 81

وَإِذْ أَخَذَ ٱللَّهُ مِيثَـٰقَ ٱلنَّبِيِّـۧنَ لَمَآ ءَاتَيْتُكُم مِّن كِتَـٰبٍ وَحِكْمَةٍ ثُمَّ جَآءَكُمْ رَسُولٌ مُّصَدِّقٌ لِّمَا مَعَكُمْ لَتُؤْمِنُنَّ بِهِۦ وَلَتَنصُرُنَّهُۥ ۚ قَالَ ءَأَقْرَرْتُمْ وَأَخَذْتُمْ عَلَىٰ ذَٰلِكُمْ إِصْرِى ۖ قَالُوٓا۟ أَقْرَرْنَا ۚ قَالَ فَٱشْهَدُوا۟ وَأَنَا۠ مَعَكُم مِّنَ ٱلشَّـٰهِدِينَ

Transliteration wa-idh akhadha l-lahu mīthāqa l-nabiyīna lamā ātaytukum min kitābin waḥik'matin thumma jāakum rasūlun muṣaddiqun limā maʿakum latu'minunna bihi walatanṣurunnahu qāla a-aqrartum wa-akhadhtum ʿalā dhālikum iṣ'rī qālū aqrarnā qāla fa-ish'hadū wa-anā maʿakum mina l-shāhidīna

Kannada ಅಲ್ಲಾಹನು ಪ್ರವಾದಿಗಳಿಂದ ಕರಾರು ತೆಗೆದುಕೊಂಡ ಸಂದರ್ಭ(ವನ್ನು ನೆನೆಸಿರಿ). `ನಿಮಗೆ ನಾನು ಗ್ರಂಥ ಮತ್ತು ಸುಜ್ಞಾನವನ್ನು ಕೊಟ್ಟ ಬಳಿಕ ನಿಮ್ಮಲ್ಲಿರುವುದನ್ನು ದೃಢಪಡಿಸುತ್ತಾ ಓರ್ವ ದೂತರು ನಿಮ್ಮ ಬಳಿಗೆ ಬಂದರೆ ಅಗತ್ಯವಾಗಿ ನೀವು ಅವರಲ್ಲಿ ವಿಶ್ವಾಸ ತಾಳಬೇಕು ಹಾಗೂ ಅವರಿಗೆ ಸಹಾಯ ಮಾಡಬೇಕು. (ಎಂದು ಹೇಳಿದ ಬಳಿಕ) ಅವನು (ಅಲ್ಲಾಹು) ಕೇಳಿದನು ; `ನೀವು ಇದನ್ನು ಒಪ್ಪಿಕೊಂಡಿರಾ? ನನ್ನ ಕರಾರನ್ನು ಪಾಲಿಸುವ ಹೊಣೆಯನ್ನು ವಹಿಸಿಕೊಂಡಿರಾ ?’ ಅವರು ಹೇಳಿದರು; ‘ನಾವು ಒಪ್ಪಿ ಕೊಂಡೆವು’. (ಆಗ ಅಲ್ಲಾಹು ಹೇಳಿದನು) ‘ಹಾಗಾದರೆ ನೀವು ಸಾಕ್ಷ್ಯ ವಹಿಸಿರಿ. ನಾನೂ ಕೂಡಾ ನಿಮ್ಮ ಜೊತೆ ಸಾಕ್ಷಿ’

Verse 82

فَمَن تَوَلَّىٰ بَعْدَ ذَٰلِكَ فَأُو۟لَـٰٓئِكَ هُمُ ٱلْفَـٰسِقُونَ

Transliteration faman tawallā baʿda dhālika fa-ulāika humu l-fāsiqūna

Kannada ಇನ್ನು ಇದರ ನಂತರ ಯಾರು ವಿಮುಖರಾಗು ತ್ತಾರೋ ಅವರೇ ಧರ್ಮಭ್ರಷ್ಟರು.

Verse 83

أَفَغَيْرَ دِينِ ٱللَّهِ يَبْغُونَ وَلَهُۥٓ أَسْلَمَ مَن فِى ٱلسَّمَـٰوَٰتِ وَٱلْأَرْضِ طَوْعًا وَكَرْهًا وَإِلَيْهِ يُرْجَعُونَ

Transliteration afaghayra dīni l-lahi yabghūna walahu aslama man fī l-samāwāti wal-arḍi ṭawʿan wakarhan wa-ilayhi yur'jaʿūna

Kannada ಅವರು ಅಲ್ಲಾಹನ ಧರ್ಮವನ್ನು ಹೊರತು ಬೇರೆ ಯಾವುದನ್ನಾದರೂ ಬಯಸುತ್ತಿರುವರೇ? ವಾಸ್ತವದಲ್ಲಿ ಆಕಾಶಗಳಲ್ಲಿರುವವರೂ ಭೂಮಿ ಯಲ್ಲಿರುವವರೂ ಮನಃಪೂರ್ವಕವಾಗಿ ಅಥವಾ ಅನಿವಾರ್ಯವಾಗಿ ಅವನಿಗೆ ಶರಣಾಗಿದ್ದಾರೆ. ಅವರೆಲ್ಲರೂ ಅವನ ಬಳಿಗೇ ಮರಳುವವರು.

Verse 84

قُلْ ءَامَنَّا بِٱللَّهِ وَمَآ أُنزِلَ عَلَيْنَا وَمَآ أُنزِلَ عَلَىٰٓ إِبْرَٰهِيمَ وَإِسْمَـٰعِيلَ وَإِسْحَـٰقَ وَيَعْقُوبَ وَٱلْأَسْبَاطِ وَمَآ أُوتِىَ مُوسَىٰ وَعِيسَىٰ وَٱلنَّبِيُّونَ مِن رَّبِّهِمْ لَا نُفَرِّقُ بَيْنَ أَحَدٍ مِّنْهُمْ وَنَحْنُ لَهُۥ مُسْلِمُونَ

Transliteration qul āmannā bil-lahi wamā unzila ʿalaynā wamā unzila ʿalā ib'rāhīma wa-is'māʿīla wa-is'ḥāqa wayaʿqūba wal-asbāṭi wamā ūtiya mūsā waʿīsā wal-nabiyūna min rabbihim lā nufarriqu bayna aḥadin min'hum wanaḥnu lahu mus'limūna

Kannada ಹೇಳಿರಿ. ಅಲ್ಲಾಹನಲ್ಲಿ ನಾವು ವಿಶ್ವಾಸವಿಟ್ಟೆವು. ನಮಗೆ ಅವತೀರ್ಣವಾದುದರಲ್ಲಿಯೂ ಇಬ್‍ರಾಹೀಮ್, ಇಸ್ಮಾಈಲ್, ಇಸ್ಹಾಖ್, ಯಅïಖೂಬ್ ಹಾಗೂ ಅವರ ಸಂತತಿಗಳಿಗೆ ಅವತೀರ್ಣವಾದುದರಲ್ಲಿಯೂ ಮೂಸಾ, ಈಸಾ ಹಾಗೂ ಇತರೆಲ್ಲ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತುದರಲ್ಲಿಯೂ ನಾವು ವಿಶ್ವಾಸವಿಟ್ಟೆವು. ಅವರಲ್ಲಿ ಯಾರ ಬಗ್ಗೆಯೂ ನಾವು ತಾರತಮ್ಯ ಕಲ್ಪಿಸುವುದಿಲ್ಲ. ನಾವು ಅವನಿಗೆ ಸಂಪೂರ್ಣ ಶರಣಾಗತರು.

Verse 85

وَمَن يَبْتَغِ غَيْرَ ٱلْإِسْلَـٰمِ دِينًا فَلَن يُقْبَلَ مِنْهُ وَهُوَ فِى ٱلْـَٔاخِرَةِ مِنَ ٱلْخَـٰسِرِينَ

Transliteration waman yabtaghi ghayra l-is'lāmi dīnan falan yuq'bala min'hu wahuwa fī l-ākhirati mina l-khāsirīna

Kannada ಇಸ್ಲಾಮ್ ಅಲ್ಲದೆ ಬೇರೆ ಯಾವುದೇ ಮತವನ್ನು ಯಾರಾದರೂ ಬಯಸಿದರೆ ಅವನಿಂದ ಅದನ್ನು ಖಂಡಿತ ಸ್ವೀಕರಿಸಲಾಗುವುದಿಲ್ಲ. ಪರಲೋಕದಲ್ಲಿ ಅವನು ನಷ್ಟವಂತರ ಸಾಲಿಗೆ ಸೇರುವನು.

Verse 86

كَيْفَ يَهْدِى ٱللَّهُ قَوْمًا كَفَرُوا۟ بَعْدَ إِيمَـٰنِهِمْ وَشَهِدُوٓا۟ أَنَّ ٱلرَّسُولَ حَقٌّ وَجَآءَهُمُ ٱلْبَيِّنَـٰتُ ۚ وَٱللَّهُ لَا يَهْدِى ٱلْقَوْمَ ٱلظَّـٰلِمِينَ

Transliteration kayfa yahdī l-lahu qawman kafarū baʿda īmānihim washahidū anna l-rasūla ḥaqqun wajāahumu l-bayinātu wal-lahu lā yahdī l-qawma l-ẓālimīna

Kannada ಸತ್ಯವಿಶ್ವಾಸ (ಈಮಾನ್)ವನ್ನು ಅವಲಂಬಿಸಿದ ಬಳಿಕವೂ ಅಲ್ಲಾಹನ ದೂತರು ಸತ್ಯವಂತರೆಂದು ಸಾಕ್ಷ್ಯ ವಹಿಸಿದ ಬಳಿಕವೂ ಸುವ್ಯಕ್ತ ಪುರಾವೆಗಳು ಅವರಿಗೆ ಬಂದ ಬಳಿಕವೂ ಸತ್ಯವನ್ನು ನಿಷೇಧಿಸಿದ ಒಂದು ಜನತೆಯನ್ನು ಅಲ್ಲಾಹನು ಸತ್ಯದ ಹಾದಿಗೆ ತರುವುದಾದರೂ ಹೇಗೆ? ಅಕ್ರಮಿಗಳಾದ ಜನತೆಯನ್ನು ಅಲ್ಲಾಹನು ನೇರಮಾರ್ಗಕ್ಕೆ ತರುವುದಿಲ್ಲ.

Verse 87

أُو۟لَـٰٓئِكَ جَزَآؤُهُمْ أَنَّ عَلَيْهِمْ لَعْنَةَ ٱللَّهِ وَٱلْمَلَـٰٓئِكَةِ وَٱلنَّاسِ أَجْمَعِينَ

Transliteration ulāika jazāuhum anna ʿalayhim laʿnata l-lahi wal-malāikati wal-nāsi ajmaʿīna

Kannada ಇವರ ಮೇಲೆ ಅಲ್ಲಾಹು, ಮಲಕ್‍ಗಳು ಹಾಗೂ ಎಲ್ಲ ಜನರ ಶಾಪವಿದೆ ಎನ್ನುವುದೇ ಇಂತಹವರಿಗೆ ಪ್ರತಿಫಲವಾಗಿದೆ .

Verse 88

خَـٰلِدِينَ فِيهَا لَا يُخَفَّفُ عَنْهُمُ ٱلْعَذَابُ وَلَا هُمْ يُنظَرُونَ

Transliteration khālidīna fīhā lā yukhaffafu ʿanhumu l-ʿadhābu walā hum yunẓarūna

Kannada ಅದರಲ್ಲವರು ಶಾಶ್ವತರಾಗಿರುವರು. ಅವರಿಗೆ ಶಿಕ್ಷೆ ಹಗುರಗೊಳಿಸಲಾಗುವುದಿಲ್ಲ. ಅವರಿಗೆ ಅವಧಿಯನ್ನೂ ಕೊಡಲಾಗುವುದಿಲ್ಲ.

Verse 89

إِلَّا ٱلَّذِينَ تَابُوا۟ مِنۢ بَعْدِ ذَٰلِكَ وَأَصْلَحُوا۟ فَإِنَّ ٱللَّهَ غَفُورٌ رَّحِيمٌ

Transliteration illā alladhīna tābū min baʿdi dhālika wa-aṣlaḥū fa-inna l-laha ghafūrun raḥīmun

Kannada ಆದರೆ ಆಮೇಲೆ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಹೊರತು. ಅಲ್ಲಾಹನು ಬಹಳ ಹೆಚ್ಚು ಕ್ಷಮಿಸುವವನೂ ಪರಮ ದಯಾಪರನೂ ಆಗಿರುತ್ತಾನೆ.

Verse 90

إِنَّ ٱلَّذِينَ كَفَرُوا۟ بَعْدَ إِيمَـٰنِهِمْ ثُمَّ ٱزْدَادُوا۟ كُفْرًا لَّن تُقْبَلَ تَوْبَتُهُمْ وَأُو۟لَـٰٓئِكَ هُمُ ٱلضَّآلُّونَ

Transliteration inna alladhīna kafarū baʿda īmānihim thumma iz'dādū kuf'ran lan tuq'bala tawbatuhum wa-ulāika humu l-ḍālūna

Kannada ಖಂಡಿತವಾಗಿಯೂ ಸತ್ಯವಿಶ್ವಾಸ ತಾಳಿದ ಬಳಿಕ ಕಾಫಿರಾದವರು ಹಾಗೂ ಅವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಂಡವರ ಪಶ್ಚಾತ್ತಾಪವು ಖಂಡಿತ ಸ್ವೀಕೃತವಲ್ಲ. ಅವರೇ ದಾರಿ ತಪ್ಪಿದವರು.

Verse 91

إِنَّ ٱلَّذِينَ كَفَرُوا۟ وَمَاتُوا۟ وَهُمْ كُفَّارٌ فَلَن يُقْبَلَ مِنْ أَحَدِهِم مِّلْءُ ٱلْأَرْضِ ذَهَبًا وَلَوِ ٱفْتَدَىٰ بِهِۦٓ ۗ أُو۟لَـٰٓئِكَ لَهُمْ عَذَابٌ أَلِيمٌ وَمَا لَهُم مِّن نَّـٰصِرِينَ

Transliteration inna alladhīna kafarū wamātū wahum kuffārun falan yuq'bala min aḥadihim mil'u l-arḍi dhahaban walawi if'tadā bihi ulāika lahum ʿadhābun alīmun wamā lahum min nāṣirīna

Kannada ನಿಶ್ಚಯವಾಗಿಯೂ ಸತ್ಯವನ್ನು ನಿಷೇಧಿಸುತ್ತಾ ಸತ್ಯನಿಷೇಧಿಗಳಾಗಿಯೇ ಸತ್ತವರು ಭೂಮಿ ತುಂಬ ಚಿನ್ನವನ್ನು ದಂಡವಾಗಿ ಕೊಟ್ಟರೂ ಕೂಡಾ ಅವರಲ್ಲೊಬ್ಬ ನಿಂದಲೂ ಅದನ್ನು ಖಂಡಿತವಾಗಿಯೂ ಸ್ವೀಕರಿಸಲಾಗದು. ಅವರಿಗೆ ತೀವ್ರ ಯಾತನೆಯ ಸಜೆ ಕಾದಿದೆ. ಅವರಿಗೆ ಯಾವುದೇ ಸಹಾಯಕರು ಇರಲಾರರು.

Verse 92

لَن تَنَالُوا۟ ٱلْبِرَّ حَتَّىٰ تُنفِقُوا۟ مِمَّا تُحِبُّونَ ۚ وَمَا تُنفِقُوا۟ مِن شَىْءٍ فَإِنَّ ٱللَّهَ بِهِۦ عَلِيمٌ

Transliteration lan tanālū l-bira ḥattā tunfiqū mimmā tuḥibbūna wamā tunfiqū min shayin fa-inna l-laha bihi ʿalīmun

Kannada ನಿಮಗೆ ಪ್ರಿಯವಾದ ವಸ್ತುಗಳಿಂದ ನೀವು ವೆಚ್ಚ ಮಾಡುವವರೆಗೂ ನೀವು ಪುಣ್ಯ ಪಡೆಯಲಾರಿರಿ. ನೀವು ಏನೇ ವೆಚ್ಚ ಮಾಡಿದರೂ ಅಲ್ಲಾಹನು ಅದರ ಬಗ್ಗೆ ಖಂಡಿತವಾಗಿಯೂ ಚೆನ್ನಾಗಿ ಬಲ್ಲವನಾಗಿರುತ್ತಾನೆ.

Verse 93

۞ كُلُّ ٱلطَّعَامِ كَانَ حِلًّا لِّبَنِىٓ إِسْرَٰٓءِيلَ إِلَّا مَا حَرَّمَ إِسْرَٰٓءِيلُ عَلَىٰ نَفْسِهِۦ مِن قَبْلِ أَن تُنَزَّلَ ٱلتَّوْرَىٰةُ ۗ قُلْ فَأْتُوا۟ بِٱلتَّوْرَىٰةِ فَٱتْلُوهَآ إِن كُنتُمْ صَـٰدِقِينَ

Transliteration kullu l-ṭaʿāmi kāna ḥillan libanī is'rāīla illā mā ḥarrama is'rāīlu ʿalā nafsihi min qabli an tunazzala l-tawrātu qul fatū bil-tawrāti fa-it'lūhā in kuntum ṣādiqīna

Kannada ಭಕ್ಷ್ಯ ವಸ್ತುಗಳೆಲ್ಲವೂ ಬನೂ ಇಸ್ರಾಯೀಲರಿಗೆ ಗ್ರಾಹ್ಯವಾಗಿದ್ದವು. ತೌರಾತ್ ಇಳಿಸಲ್ಪಡುವ ಮುನ್ನ ಇಸ್ರಾಈಲ್ (ಯಅïಖೂಬ್ ನಬಿ) ತನಗೆ ನಿಷಿದ್ಧಗೊಳಿಸಿದ್ದು ಹೊರತು. (ಪ್ರವಾದಿಯರೇ !) ನೀವು ಹೇಳಿರಿ; ನೀವು ತೌರಾತನ್ನು ತಂದು ಅದನ್ನೊಮ್ಮೆ ಓದಿರಿ. ನೀವು ಸತ್ಯವಾದಿಗಳಾಗಿದ್ದರೆ!

Verse 94

فَمَنِ ٱفْتَرَىٰ عَلَى ٱللَّهِ ٱلْكَذِبَ مِنۢ بَعْدِ ذَٰلِكَ فَأُو۟لَـٰٓئِكَ هُمُ ٱلظَّـٰلِمُونَ

Transliteration famani if'tarā ʿalā l-lahi l-kadhiba min baʿdi dhālika fa-ulāika humu l-ẓālimūna

Kannada ಇದರ ನಂತರವೂ ಯಾರಾದರೂ ಅಲ್ಲಾಹನ ಮೇಲೆ ಕಟ್ಟುಕತೆ ಹೊರಿಸಿದರೆ ಅವರೇ ಅಕ್ರಮಿಗಳು.

Verse 95

قُلْ صَدَقَ ٱللَّهُ ۗ فَٱتَّبِعُوا۟ مِلَّةَ إِبْرَٰهِيمَ حَنِيفًا وَمَا كَانَ مِنَ ٱلْمُشْرِكِينَ

Transliteration qul ṣadaqa l-lahu fa-ittabiʿū millata ib'rāhīma ḥanīfan wamā kāna mina l-mush'rikīna

Kannada ನೀವು ಹೇಳಿರಿ; ಅಲ್ಲಾಹು ಹೇಳಿದುದು ಸತ್ಯ. ಆದ್ದರಿಂದ ಮಿಥ್ಯ ದಾರಿಗಳನ್ನು ತ್ಯಜಿಸಿ ಸತ್ಯ ದಾರಿಯಲ್ಲಿ ಚಲಿಸುತ್ತಿರುವ ಇಬ್ರಾಹೀಮರ ಮಾರ್ಗ ವನ್ನು ಅನುಸರಿಸಿರಿ. ಅವರು ಬಹು ದೇವಾರಾಧಕರ ಕೂಟಕ್ಕೆ ಸೇರಿದವರಾಗಿರಲಿಲ್ಲ.

Verse 96

إِنَّ أَوَّلَ بَيْتٍ وُضِعَ لِلنَّاسِ لَلَّذِى بِبَكَّةَ مُبَارَكًا وَهُدًى لِّلْعَـٰلَمِينَ

Transliteration inna awwala baytin wuḍiʿa lilnnāsi lalladhī bibakkata mubārakan wahudan lil'ʿālamīna

Kannada (ಅಲ್ಲಾಹನಿಗೆ ಆರಾಧಿಸಲೆಂದು) ಖಂಡಿತವಾಗಿ ಯೂ ಮನುಷ್ಯರಿಗಾಗಿ ಸ್ಥಾಪಿತವಾದ ಮೊಟ್ಟ ಮೊದಲ ಭವನವು ಬಕ್ಕಃ(ಮಕ್ಕಾ)ದಲ್ಲಿರುವುದೇ ಆಗಿರುತ್ತದೆ. ಅದು ಅನುಗ್ರಹೀತವೂ ಲೋಕದ ವರಿಗೆ ಮಾರ್ಗದರ್ಶಕವೂ ಆಗಿರುತ್ತದೆ.

Verse 97

فِيهِ ءَايَـٰتٌۢ بَيِّنَـٰتٌ مَّقَامُ إِبْرَٰهِيمَ ۖ وَمَن دَخَلَهُۥ كَانَ ءَامِنًا ۗ وَلِلَّهِ عَلَى ٱلنَّاسِ حِجُّ ٱلْبَيْتِ مَنِ ٱسْتَطَاعَ إِلَيْهِ سَبِيلًا ۚ وَمَن كَفَرَ فَإِنَّ ٱللَّهَ غَنِىٌّ عَنِ ٱلْعَـٰلَمِينَ

Transliteration fīhi āyātun bayyinātun maqāmu ib'rāhīma waman dakhalahu kāna āminan walillahi ʿalā l-nāsi ḥijju l-bayti mani is'taṭāʿa ilayhi sabīlan waman kafara fa-inna l-laha ghaniyyun ʿani l-ʿālamīna

Kannada ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. ಇಬ್ರಾಹೀಮ್ ಮಖಾಮ್ (ಅದರಲ್ಲೊಂದು). ಈ ಮಸ್ಜಿದ್‍ಗೆ ಪ್ರವೇಶಿಸಿದವರು ನಿರ್ಭಯರಾಗುತ್ತಾರೆ. ಅಲ್ಲಿಗೆ ತಲಪುವ ತಾಕತ್ತು ಉಳ್ಳ ಮನುಷ್ಯರಿಗೆ ಆ ಗೃಹದಲ್ಲಿ ಹಜ್ಜ್ ಮಾಡುವುದು ಅಲ್ಲಾಹನೊಂ ದಿಗಿನ ಬಾಧ್ಯತೆಯಾಗಿದೆ. ಇನ್ನು ಯಾರಾದರೂ ನಿಷೇಧಿಸಿದರೆ ಅಲ್ಲಾಹನು ಖಂಡಿತವಾಗಿಯೂ ಲೋಕದವರಿಂದ ಆಶ್ರಯ ನಿರಪೇಕ್ಷನಾಗಿ ರುವನು.

Verse 98

قُلْ يَـٰٓأَهْلَ ٱلْكِتَـٰبِ لِمَ تَكْفُرُونَ بِـَٔايَـٰتِ ٱللَّهِ وَٱللَّهُ شَهِيدٌ عَلَىٰ مَا تَعْمَلُونَ

Transliteration qul yāahla l-kitābi lima takfurūna biāyāti l-lahi wal-lahu shahīdun ʿalā mā taʿmalūna

Kannada ಓ ಗ್ರಂಥದವರೇ! ಅಲ್ಲಾಹನ ವಚನಗಳನ್ನು ನೀವು ಯಾಕೆ ನಿಷೇಧಿಸುತ್ತಿದ್ದೀರಿ. ನೀವು ಮಾಡುತ್ತಿರುವ ಕರ್ಮಗಳ ಮೇಲೆ ಅಲ್ಲಾಹನು ಸಾಕ್ಷಿಯಾಗಿರುತ್ತಾನೆ ಎಂದು ಹೇಳಿರಿ (ಪ್ರವಾದಿಯರೇ!)

Verse 99

قُلْ يَـٰٓأَهْلَ ٱلْكِتَـٰبِ لِمَ تَصُدُّونَ عَن سَبِيلِ ٱللَّهِ مَنْ ءَامَنَ تَبْغُونَهَا عِوَجًا وَأَنتُمْ شُهَدَآءُ ۗ وَمَا ٱللَّهُ بِغَـٰفِلٍ عَمَّا تَعْمَلُونَ

Transliteration qul yāahla l-kitābi lima taṣuddūna ʿan sabīli l-lahi man āmana tabghūnahā ʿiwajan wa-antum shuhadāu wamā l-lahu bighāfilin ʿammā taʿmalūna

Kannada ಹೇಳಿರಿ; ಓ ಗ್ರಂಥದವರೇ, ನೀವು ತಿಳಿದವ ರಾಗಿದ್ದೂ ಕೂಡಾ ವಕ್ರ ಮಾರ್ಗವನ್ನು ಬಯಸುತ್ತಾ ಅಲ್ಲಾಹನ ಮಾರ್ಗದಿಂದ ವಿಶ್ವಾಸಿಗಳನ್ನು ಯಾಕೆ ತಡೆಯುತ್ತಿದ್ದೀರಿ? ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಖಂಡಿತ ಅಶ್ರದ್ಧನಲ್ಲ.

Verse 100

يَـٰٓأَيُّهَا ٱلَّذِينَ ءَامَنُوٓا۟ إِن تُطِيعُوا۟ فَرِيقًا مِّنَ ٱلَّذِينَ أُوتُوا۟ ٱلْكِتَـٰبَ يَرُدُّوكُم بَعْدَ إِيمَـٰنِكُمْ كَـٰفِرِينَ

Transliteration yāayyuhā alladhīna āmanū in tuṭīʿū farīqan mina alladhīna ūtū l-kitāba yaruddūkum baʿda īmānikum kāfirīna

Kannada ಓ ಸತ್ಯವಿಶ್ವಾಸಿಗಳೇ! ಗ್ರಂಥ ನೀಡಲ್ಪಟ್ಟವರಲ್ಲಿ ಒಂದು ಪಂಗಡವನ್ನು ನೀವು ಅನುಸರಿಸುವು ದಾದರೆ ನಿಮ್ಮನ್ನು ಅವರು ನಿಮ್ಮ ಸತ್ಯವಿಶ್ವಾಸದ ನಂತರ ಅವಿಶ್ವಾಸಿಗಳನ್ನಾಗಿ ತಿರುಗಿಸಿಬಿಡುವರು.

Verse 101

وَكَيْفَ تَكْفُرُونَ وَأَنتُمْ تُتْلَىٰ عَلَيْكُمْ ءَايَـٰتُ ٱللَّهِ وَفِيكُمْ رَسُولُهُۥ ۗ وَمَن يَعْتَصِم بِٱللَّهِ فَقَدْ هُدِىَ إِلَىٰ صِرَٰطٍ مُّسْتَقِيمٍ

Transliteration wakayfa takfurūna wa-antum tut'lā ʿalaykum āyātu l-lahi wafīkum rasūluhu waman yaʿtaṣim bil-lahi faqad hudiya ilā ṣirāṭin mus'taqīmin

Kannada ನೀವು ಹೇಗೆ ಅವಿಶ್ವಾಸಿಗಳಾಗುತ್ತೀರಿ? ನಿಮಗೆ ಅಲ್ಲಾಹನ ವಚನಗಳನ್ನು ಓದಿ ಹೇಳಲಾಗುತ್ತಿದೆ. ಅವನ ರಸೂಲರು ನಿಮ್ಮೊಂದಿಗೇ ಇದ್ದಾರೆ. ಯಾರು ಅಲ್ಲಾಹನ ಮಾರ್ಗದರ್ಶನವನ್ನು ಭದ್ರವಾಗಿ ಹಿಡಿದುಕೊಳ್ಳುವರೋ ಖಂಡಿತವಾಗಿಯೂ ಅವರು ಋುಜುಮಾರ್ಗದಲ್ಲಿ ಸೇರಿಸಲ್ಪಟ್ಟವರಾಗುವರು.

Verse 102

يَـٰٓأَيُّهَا ٱلَّذِينَ ءَامَنُوا۟ ٱتَّقُوا۟ ٱللَّهَ حَقَّ تُقَاتِهِۦ وَلَا تَمُوتُنَّ إِلَّا وَأَنتُم مُّسْلِمُونَ

Transliteration yāayyuhā alladhīna āmanū ittaqū l-laha ḥaqqa tuqātihi walā tamūtunna illā wa-antum mus'limūna

Kannada ಸತ್ಯವಿಶ್ವಾಸಿಗಳೇ! ದೇವಭಕ್ತಿ (ತಖ್‍ವ) ಇರಿಸಿಕೊಳ್ಳ ಬೇಕಾದ ಕ್ರಮ ಪ್ರಕಾರ ನೀವು ಅಲ್ಲಾಹನಲ್ಲಿ ಭಕ್ತಿ ಇರಿಸಿಕೊಳ್ಳಿರಿ. ಮುಸ್ಲಿಮರಾ ಗಿಯಲ್ಲದೆ ನೀವು ಖಂಡಿತ ಮರಣ ಹೊಂದ ಬಾರದು .

Verse 103

وَٱعْتَصِمُوا۟ بِحَبْلِ ٱللَّهِ جَمِيعًا وَلَا تَفَرَّقُوا۟ ۚ وَٱذْكُرُوا۟ نِعْمَتَ ٱللَّهِ عَلَيْكُمْ إِذْ كُنتُمْ أَعْدَآءً فَأَلَّفَ بَيْنَ قُلُوبِكُمْ فَأَصْبَحْتُم بِنِعْمَتِهِۦٓ إِخْوَٰنًا وَكُنتُمْ عَلَىٰ شَفَا حُفْرَةٍ مِّنَ ٱلنَّارِ فَأَنقَذَكُم مِّنْهَا ۗ كَذَٰلِكَ يُبَيِّنُ ٱللَّهُ لَكُمْ ءَايَـٰتِهِۦ لَعَلَّكُمْ تَهْتَدُونَ

Transliteration wa-iʿ'taṣimū biḥabli l-lahi jamīʿan walā tafarraqū wa-udh'kurū niʿ'mata l-lahi ʿalaykum idh kuntum aʿdāan fa-allafa bayna qulūbikum fa-aṣbaḥtum biniʿ'matihi ikh'wānan wakuntum ʿalā shafā ḥuf'ratin mina l-nāri fa-anqadhakum min'hā kadhālika yubayyinu l-lahu lakum āyātihi laʿallakum tahtadūna

Kannada ನೀವೆಲ್ಲರೂ ಒಗ್ಗಟ್ಟಾಗಿ ಅಲ್ಲಾಹನ ಪಾಶ (ಧರ್ಮ) ವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ. ನೀವು ಭಿನ್ನರಾಗದಿರಿ. ನಿಮಗೆ ಅಲ್ಲಾಹನು ನೀಡಿದ ಅನುಗ್ರಹವನ್ನು ಜ್ಞಾಪಿಸಿಕೊಳ್ಳಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಆತನು ನಿಮ್ಮ ಮನಸ್ಸುಗಳನ್ನು ಜೋಡಿಸಿದನು. ಹಾಗಾಗಿ ನೀವು ಆತನ ಅನುಗ್ರಹದಿಂದ ಸೋದರರಾದಿರಿ. ನೀವು ಅಗ್ನಿ ಪ್ರಪಾತದ ಅಂಚಿನಲ್ಲಿದ್ದಿರಿ. ಅದರಿಂದ ನಿಮ್ಮನ್ನು ಆತನು ರಕ್ಷಿಸಿದನು. ಈ ರೀತಿ ಅಲ್ಲಾಹನು ಆತನ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತಾನೆ. ನೀವು ಸತ್ಯ ಮಾರ್ಗ ಹೊಂದಲೆಂದು.

Verse 104

وَلْتَكُن مِّنكُمْ أُمَّةٌ يَدْعُونَ إِلَى ٱلْخَيْرِ وَيَأْمُرُونَ بِٱلْمَعْرُوفِ وَيَنْهَوْنَ عَنِ ٱلْمُنكَرِ ۚ وَأُو۟لَـٰٓئِكَ هُمُ ٱلْمُفْلِحُونَ

Transliteration waltakun minkum ummatun yadʿūna ilā l-khayri wayamurūna bil-maʿrūfi wayanhawna ʿani l-munkari wa-ulāika humu l-muf'liḥūna

Kannada ಒಳಿತಿನ ಕಡೆಗೆ ಕರೆಯುವ, ಒಳ್ಳೆಯ ಕಾರ್ಯ ಗಳಿಗೆ ಉಪದೇಶ ಕೊಡುವ, ಕೆಟ್ಟದ್ದನ್ನು ವಿರೋಧಿ ಸುವ ಒಂದು ವಿಭಾಗ ಜನರು ನಿಮ್ಮಲ್ಲಿ ಅಗತ್ಯ ವಾಗಿ ಇರಬೇಕು. ನಿಜವಾಗಿಯೂ ಅವರೇ ಜಯ ಶಾಲಿಗಳು.

Verse 105

وَلَا تَكُونُوا۟ كَٱلَّذِينَ تَفَرَّقُوا۟ وَٱخْتَلَفُوا۟ مِنۢ بَعْدِ مَا جَآءَهُمُ ٱلْبَيِّنَـٰتُ ۚ وَأُو۟لَـٰٓئِكَ لَهُمْ عَذَابٌ عَظِيمٌ

Transliteration walā takūnū ka-alladhīna tafarraqū wa-ikh'talafū min baʿdi mā jāahumu l-bayinātu wa-ulāika lahum ʿadhābun ʿaẓīmun

Kannada ಸ್ಪಷ್ಟವಾದ ಪುರಾವೆಗಳು ತಮಗೆ ಬಂದ ಬಳಿಕವೂ (ಧರ್ಮದಲ್ಲಿ) ಪರಸ್ಪರ ಭಿನ್ನರಾಗಿ ವಿವಿಧ ಪಕ್ಷಗಳಾದವರಂತೆ ನೀವಾಗಬಾರದು. ಅವರಿಗೆ ಖಂಡಿತವಾಗಿಯೂ ಭಾರೀ ಶಿಕ್ಷೆಯು ಕಾದಿದೆ.

Verse 106

يَوْمَ تَبْيَضُّ وُجُوهٌ وَتَسْوَدُّ وُجُوهٌ ۚ فَأَمَّا ٱلَّذِينَ ٱسْوَدَّتْ وُجُوهُهُمْ أَكَفَرْتُم بَعْدَ إِيمَـٰنِكُمْ فَذُوقُوا۟ ٱلْعَذَابَ بِمَا كُنتُمْ تَكْفُرُونَ

Transliteration yawma tabyaḍḍu wujūhun wataswaddu wujūhun fa-ammā alladhīna is'waddat wujūhuhum akafartum baʿda īmānikum fadhūqū l-ʿadhāba bimā kuntum takfurūna

Kannada ಕೆಲವು ಮುಖಗಳು ಬಿಳಿಯಾಗುವ ಮತ್ತು ಕೆಲವು ಮುಖಗಳು ಕಪ್ಪಾಗುವ ದಿನ (ಆ ಶಿಕ್ಷೆ ಅನುಭವಕ್ಕೆ ಬರುವುದು). ಮುಖವು ಕಪ್ಪಾ ದವರಲ್ಲಿ (ಹೀಗೆಂದು ಹೇಳಲಾಗುವುದು;) ನೀವು ಸತ್ಯವಿಶ್ವಾಸ ತಾಳಿದ ನಂತರ ನೀವು ಸತ್ಯ ನಿಷೇಧಿಗಳಾಗಲಿಲ್ಲವೇ? ಆದ್ದರಿಂದ ನೀವು ಅವಿಶ್ವಾಸಿಯಾದುದರ ಫಲವಾಗಿ ಶಿಕ್ಷೆಯನ್ನು ಅನುಭವಿಸಿರಿ.

Verse 107

وَأَمَّا ٱلَّذِينَ ٱبْيَضَّتْ وُجُوهُهُمْ فَفِى رَحْمَةِ ٱللَّهِ هُمْ فِيهَا خَـٰلِدُونَ

Transliteration wa-ammā alladhīna ib'yaḍḍat wujūhuhum fafī raḥmati l-lahi hum fīhā khālidūna

Kannada ಮುಖಗಳು ಬಿಳಿಯಾದವರಾರೋ ಅವರು ಅಲ್ಲಾಹನ ಕೃಪೆಯಲ್ಲಿರುತ್ತಾರೆ. ಅವರು ಅದರಲ್ಲಿ ಶಾಶ್ವತರಾಗಿರುವರು.

Verse 108

تِلْكَ ءَايَـٰتُ ٱللَّهِ نَتْلُوهَا عَلَيْكَ بِٱلْحَقِّ ۗ وَمَا ٱللَّهُ يُرِيدُ ظُلْمًا لِّلْعَـٰلَمِينَ

Transliteration til'ka āyātu l-lahi natlūhā ʿalayka bil-ḥaqi wamā l-lahu yurīdu ẓul'man lil'ʿālamīna

Kannada ಇದೆಲ್ಲವೂ ಅಲ್ಲಾಹನ ಪುರಾವೆಗಳು. ಇದನ್ನು ನಾವು ನಿಮಗೆ ಸತ್ಯಸಮೇತ ಓದಿ ಕೇಳಿಸುತ್ತಿದ್ದೇವೆ. ಅಲ್ಲಾಹನು ಲೋಕದವರನ್ನು ಅಕ್ರಮಿಸಲು ಉದ್ದೇಶಿಸುವುದಿಲ್ಲ.

Verse 109

وَلِلَّهِ مَا فِى ٱلسَّمَـٰوَٰتِ وَمَا فِى ٱلْأَرْضِ ۚ وَإِلَى ٱللَّهِ تُرْجَعُ ٱلْأُمُورُ

Transliteration walillahi mā fī l-samāwāti wamā fī l-arḍi wa-ilā l-lahi tur'jaʿu l-umūru

Kannada ಆಕಾಶಗಳಲ್ಲಿರುವುದೂ ಭೂಮಿಯಲ್ಲಿರುವುದೂ ಎಲ್ಲವೂ ಅಲ್ಲಾಹನಿಗೆ ಸೇರಿದ್ದು. ಎಲ್ಲ ಕಾರ್ಯ ಗಳೂ (ಕಟ್ಟಕಡೆಗೆ) ಅಲ್ಲಾಹನ ಕಡೆಗೇ ಮರಳು ವುದು.

Verse 110

كُنتُمْ خَيْرَ أُمَّةٍ أُخْرِجَتْ لِلنَّاسِ تَأْمُرُونَ بِٱلْمَعْرُوفِ وَتَنْهَوْنَ عَنِ ٱلْمُنكَرِ وَتُؤْمِنُونَ بِٱللَّهِ ۗ وَلَوْ ءَامَنَ أَهْلُ ٱلْكِتَـٰبِ لَكَانَ خَيْرًا لَّهُم ۚ مِّنْهُمُ ٱلْمُؤْمِنُونَ وَأَكْثَرُهُمُ ٱلْفَـٰسِقُونَ

Transliteration kuntum khayra ummatin ukh'rijat lilnnāsi tamurūna bil-maʿrūfi watanhawna ʿani l-munkari watu'minūna bil-lahi walaw āmana ahlu l-kitābi lakāna khayran lahum min'humu l-mu'minūna wa-aktharuhumu l-fāsiqūna

Kannada ಮಾನವರ ಒಳಿತಿಗಾಗಿ ನೇಮಿಸಲ್ಪಟ್ಟ ಸಮುದಾ ಯಗಳ ಪೈಕಿ ನೀವು ಅತ್ಯುತ್ತಮ ರಾಗಿರುವಿರಿ. ನೀವು ಒಳಿತನ್ನು ಆಜ್ಞಾಪಿಸುತ್ತೀರಿ. ಕೆಡುಕನ್ನು ವಿರೋಧಿಸುತ್ತೀರಿ. ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ವೇದದವರು ವಿಶ್ವಾಸ ತಾಳಿದ್ದರೆ ಅದು ಅವರಿಗೆ ಒಳ್ಳೆಯದಿತ್ತು. ಅವರ ಕೂಟದಲ್ಲೂ ಸತ್ಯವಿಶ್ವಾಸ ತಾಳಿದವರೂ ಇದ್ದಾರೆ. ಆದರೆ ಅವರಲ್ಲಿ ಬಹು ಮಂದಿ ಧರ್ಮದ್ರೋಹಿಗಳಾಗಿರುವರು.

Verse 111

لَن يَضُرُّوكُمْ إِلَّآ أَذًى ۖ وَإِن يُقَـٰتِلُوكُمْ يُوَلُّوكُمُ ٱلْأَدْبَارَ ثُمَّ لَا يُنصَرُونَ

Transliteration lan yaḍurrūkum illā adhan wa-in yuqātilūkum yuwallūkumu l-adbāra thumma lā yunṣarūna

Kannada ನಿಮಗೆ ಅವರು ಸ್ವಲ್ಪ ಕಿರುಕುಳ ಕೊಡಬಹುದೇ ಹೊರತು ನಿಮಗೆ ಏನೊಂದು ಹಾನಿ ಮಾಡಲೂ ಅವರಿಂದಾಗದು. ನಿಮ್ಮೊಂದಿಗೆ ಅವರು ಯುದ್ಧ ಮಾಡಿದರೆ ಹಿಂಜರಿದು ಓಡುವರು. ಆಮೇಲೆ (ನಿಮ್ಮ ವಿರುದ್ಧ) ಅವರಿಗೆ ಸಹಾಯ ದೊರೆಯದು

Verse 112

ضُرِبَتْ عَلَيْهِمُ ٱلذِّلَّةُ أَيْنَ مَا ثُقِفُوٓا۟ إِلَّا بِحَبْلٍ مِّنَ ٱللَّهِ وَحَبْلٍ مِّنَ ٱلنَّاسِ وَبَآءُو بِغَضَبٍ مِّنَ ٱللَّهِ وَضُرِبَتْ عَلَيْهِمُ ٱلْمَسْكَنَةُ ۚ ذَٰلِكَ بِأَنَّهُمْ كَانُوا۟ يَكْفُرُونَ بِـَٔايَـٰتِ ٱللَّهِ وَيَقْتُلُونَ ٱلْأَنۢبِيَآءَ بِغَيْرِ حَقٍّ ۚ ذَٰلِكَ بِمَا عَصَوا۟ وَّكَانُوا۟ يَعْتَدُونَ

Transliteration ḍuribat ʿalayhimu l-dhilatu ayna mā thuqifū illā biḥablin mina l-lahi waḥablin mina l-nāsi wabāū bighaḍabin mina l-lahi waḍuribat ʿalayhimu l-maskanatu dhālika bi-annahum kānū yakfurūna biāyāti l-lahi wayaqtulūna l-anbiyāa bighayri ḥaqqin dhālika bimā ʿaṣaw wakānū yaʿtadūna

Kannada ಅವರು ಎಲ್ಲಿದ್ದರೂ ಅವರಲ್ಲಿ ಹೀನತ್ವವು ಮುದ್ರಿತವಾಗಿರುವುದು. ಅಲ್ಲಾಹನಿಂದ ಮತ್ತು ಜನರಿಂದ ಒಂದು ಆಶ್ರಯದ ಹೊರತು (ಅವರಿಗೆ ರಕ್ಷೆಯಿಲ್ಲ). ಅವರು ಅಲ್ಲಾಹನ ಸಿಟ್ಟಿಗೆ ಪಾತ್ರರಾಗಿದ್ದಾರೆ. ದಾರಿದ್ರ್ಯವೂ ಅವರಲ್ಲಿ ಮುದ್ರಿತವಾಗಿದೆ. ಅವರು ಅಲ್ಲಾಹುವಿನ ವಚನಗಳನ್ನು ಧಿಕ್ಕರಿಸುತ್ತಲೂ ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಲೂ ಬಂದುದರಿಂದ (ಈ ದುರವಸ್ಥೆ ಅವರಿಗೆ ಒದಗಿದೆ.) ಇದು ಅವರು ಆಜ್ಞೋಲ್ಲಂಘನೆ ಮಾಡಿದ ಹಾಗೂ ಮೇರೆ ಮೀರಿದುದರ ಫಲವಾಗಿದೆ.

Verse 113

۞ لَيْسُوا۟ سَوَآءً ۗ مِّنْ أَهْلِ ٱلْكِتَـٰبِ أُمَّةٌ قَآئِمَةٌ يَتْلُونَ ءَايَـٰتِ ٱللَّهِ ءَانَآءَ ٱلَّيْلِ وَهُمْ يَسْجُدُونَ

Transliteration laysū sawāan min ahli l-kitābi ummatun qāimatun yatlūna āyāti l-lahi ānāa al-layli wahum yasjudūna

Kannada ಅವರು (ವೇದದವರು) ಎಲ್ಲರೂ ಸಮಾನರಲ್ಲ. ವೇದದವರ ಪೈಕಿ ಸತ್ಯದಲ್ಲಿ ನೆಲೆಗೊಂಡವರೂ ಇದ್ದಾರೆ. ಅವರು ರಾತ್ರಿಯ ತಾಸುಗಳಲ್ಲಿ ಸಾಷ್ಟಾಂಗವೆರಗುತ್ತಾ ಅಲ್ಲಾಹನ ವಚನಗಳನ್ನು ಓದುತ್ತಾರೆ.

Verse 114

يُؤْمِنُونَ بِٱللَّهِ وَٱلْيَوْمِ ٱلْـَٔاخِرِ وَيَأْمُرُونَ بِٱلْمَعْرُوفِ وَيَنْهَوْنَ عَنِ ٱلْمُنكَرِ وَيُسَـٰرِعُونَ فِى ٱلْخَيْرَٰتِ وَأُو۟لَـٰٓئِكَ مِنَ ٱلصَّـٰلِحِينَ

Transliteration yu'minūna bil-lahi wal-yawmi l-ākhiri wayamurūna bil-maʿrūfi wayanhawna ʿani l-munkari wayusāriʿūna fī l-khayrāti wa-ulāika mina l-ṣāliḥīna

Kannada ಅಲ್ಲಾಹು ಹಾಗೂ ಅಂತ್ಯ ದಿನದಲ್ಲಿ ಅವರು ನಂಬುತ್ತಾರೆ. ಒಳಿತನ್ನು ಆಜ್ಞಾಪಿಸುತ್ತಾರೆ. ಕೆಡುಕಿನಿಂದ ತಡೆಯುತ್ತಾರೆ. ಒಳಿತುಗಳಲ್ಲಿ ಮುನ್ನುಗ್ಗಿ ಧಾವಿಸುತ್ತಾರೆ. ಅಂಥವರು ಸಜ್ಜನರಲ್ಲಿ ಸೇರಿದವರು.

Verse 115

وَمَا يَفْعَلُوا۟ مِنْ خَيْرٍ فَلَن يُكْفَرُوهُ ۗ وَٱللَّهُ عَلِيمٌۢ بِٱلْمُتَّقِينَ

Transliteration wamā yafʿalū min khayrin falan yuk'farūhu wal-lahu ʿalīmun bil-mutaqīna

Kannada ಅವರು ಮಾಡುವ ಯಾವುದೇ ಒಳಿತನ್ನೂ ನಿಷೇಧಿಸಲಾಗುವುದಿಲ್ಲ. ಅಲ್ಲಾಹನು ಧರ್ಮನಿಷ್ಠರ ಬಗ್ಗೆ ಸರ್ವ ಜ್ಞಾನಿಯು.

Verse 116

إِنَّ ٱلَّذِينَ كَفَرُوا۟ لَن تُغْنِىَ عَنْهُمْ أَمْوَٰلُهُمْ وَلَآ أَوْلَـٰدُهُم مِّنَ ٱللَّهِ شَيْـًٔا ۖ وَأُو۟لَـٰٓئِكَ أَصْحَـٰبُ ٱلنَّارِ ۚ هُمْ فِيهَا خَـٰلِدُونَ

Transliteration inna alladhīna kafarū lan tugh'niya ʿanhum amwāluhum walā awlāduhum mina l-lahi shayan wa-ulāika aṣḥābu l-nāri hum fīhā khālidūna

Kannada ಸತ್ಯನಿಷೇಧಿಗಳನ್ನು ತಮ್ಮ ಸೊತ್ತಾಗಲಿ, ಸಂತಾನವಾಗಲಿ ಅಲ್ಲಾಹನ ಶಿಕ್ಷೆಯಿಂದ ಕಿಂಚಿತ್ತೂ ರಕ್ಷಿಸಲಾರವು. ಅಂಥವರು ನರಕದವರು. ಅವರು ಅದರಲ್ಲಿ ಶಾಶ್ವತರು.

Verse 117

مَثَلُ مَا يُنفِقُونَ فِى هَـٰذِهِ ٱلْحَيَوٰةِ ٱلدُّنْيَا كَمَثَلِ رِيحٍ فِيهَا صِرٌّ أَصَابَتْ حَرْثَ قَوْمٍ ظَلَمُوٓا۟ أَنفُسَهُمْ فَأَهْلَكَتْهُ ۚ وَمَا ظَلَمَهُمُ ٱللَّهُ وَلَـٰكِنْ أَنفُسَهُمْ يَظْلِمُونَ

Transliteration mathalu mā yunfiqūna fī hādhihi l-ḥayati l-dun'yā kamathali rīḥin fīhā ṣirrun aṣābat ḥartha qawmin ẓalamū anfusahum fa-ahlakathu wamā ẓalamahumu l-lahu walākin anfusahum yaẓlimūna

Kannada ಅವರು ಈ ಲೌಕಿಕ ಜೀವನದಲ್ಲಿ ಖರ್ಚು ಮಾಡು ವುದರ ಉಪಮೆ ಒಂದು ಗಾಳಿಯಂತೆ. ಆ ಗಾಳಿಯಲ್ಲಿ ಭೀಕರ ಶೀತವಿದೆ. ಸ್ವಯಂ ದೇಹಗಳನ್ನು ದ್ರೋಹಿಸಿಕೊಂಡ ಒಂದು ಜನಾಂಗದ ಕೃಷಿಯನ್ನು ಅದು ಬಾಧಿಸಿ ಅದನ್ನು ಸರ್ವನಾಶ ಮಾಡಿತು. ಅಲ್ಲಾಹು ಅವರನ್ನು ಅಕ್ರಮಿಸಲಿಲ್ಲ. ಆದರೆ ಅವರೇ ತಮ್ಮ ದೇಹಗಳನ್ನು ಅಕ್ರಮಿಸಿ ಕೊಂಡರು.

Verse 118

يَـٰٓأَيُّهَا ٱلَّذِينَ ءَامَنُوا۟ لَا تَتَّخِذُوا۟ بِطَانَةً مِّن دُونِكُمْ لَا يَأْلُونَكُمْ خَبَالًا وَدُّوا۟ مَا عَنِتُّمْ قَدْ بَدَتِ ٱلْبَغْضَآءُ مِنْ أَفْوَٰهِهِمْ وَمَا تُخْفِى صُدُورُهُمْ أَكْبَرُ ۚ قَدْ بَيَّنَّا لَكُمُ ٱلْـَٔايَـٰتِ ۖ إِن كُنتُمْ تَعْقِلُونَ

Transliteration yāayyuhā alladhīna āmanū lā tattakhidhū biṭānatan min dūnikum lā yalūnakum khabālan waddū mā ʿanittum qad badati l-baghḍāu min afwāhihim wamā tukh'fī ṣudūruhum akbaru qad bayyannā lakumu l-āyāti in kuntum taʿqilūna

Kannada ಓ ಸತ್ಯವಿಶ್ವಾಸಿಗಳೇ! ನಿಮ್ಮವರಲ್ಲದವರನ್ನು ನಿಮ್ಮ ರಹಸ್ಯಗಳಿಗೆ ತಾಣವನ್ನಾಗಿ ಮಾಡಬೇಡಿರಿ. ಅವರು ನಿಮಗೆ ಕೇಡು ಬಗೆಯುವುದಕ್ಕೆ ಹೇಸಲಾರರು. ನೀವು ತಾಪತ್ರಯಕ್ಕೀಡಾಗುವು ದನ್ನು ಅವರು ಇಷ್ಟಪಡುತ್ತಾರೆ. ನಿಮ್ಮ ಮೇಲಿನ ಅವರ ತೀವ್ರ ಕ್ರೋಧವು ಅವರ ಬಾಯಿಂದ ಪ್ರಕಟವಾಗಿದೆ. ಅದಕ್ಕಿಂತ ಹೆಚ್ಚಿನ ವೈರವನ್ನು ಮನಸ್ಸಲ್ಲಿ ಅಡಗಿಸಿಟ್ಟು ಕೊಂಡಿದ್ದಾರೆ. ನಿಮಗೆ ನಾವು ಮಾಹಿತಿಗಳನ್ನು ವಿವರಿಸಿ ಕೊಟ್ಟಿರುತ್ತೇವೆ. ನೀವು ಆಲೋಚಿಸುವುದಾದರೆ!

Verse 119

هَـٰٓأَنتُمْ أُو۟لَآءِ تُحِبُّونَهُمْ وَلَا يُحِبُّونَكُمْ وَتُؤْمِنُونَ بِٱلْكِتَـٰبِ كُلِّهِۦ وَإِذَا لَقُوكُمْ قَالُوٓا۟ ءَامَنَّا وَإِذَا خَلَوْا۟ عَضُّوا۟ عَلَيْكُمُ ٱلْأَنَامِلَ مِنَ ٱلْغَيْظِ ۚ قُلْ مُوتُوا۟ بِغَيْظِكُمْ ۗ إِنَّ ٱللَّهَ عَلِيمٌۢ بِذَاتِ ٱلصُّدُورِ

Transliteration hāantum ulāi tuḥibbūnahum walā yuḥibbūnakum watu'minūna bil-kitābi kullihi wa-idhā laqūkum qālū āmannā wa-idhā khalaw ʿaḍḍū ʿalaykumu l-anāmila mina l-ghayẓi qul mūtū bighayẓikum inna l-laha ʿalīmun bidhāti l-ṣudūri

Kannada ನೋಡಿ! ನೀವು ಅವರನ್ನು ಪ್ರೀತಿಸುವಿರಾದರೂ ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲ ವೇದ ಗ್ರಂಥಗಳಲ್ಲಿ ನಂಬಿಕೆ ಇರಿಸುತ್ತೀರಿ. (ಆದರೆ ಅವರು ನಿಮ್ಮ ವೇದದಲ್ಲಿ ನಂಬಿಕೆ ಹೊಂದುವುದಿಲ್ಲ.) ಅವರು ನಿಮ್ಮನ್ನು ಕಾಣ ಸಿಕ್ಕಾಗ ‘ನಾವು ಕೂಡಾ ವಿಶ್ವಾಸವಿಟ್ಟಿದ್ದೇವೆ’ ಎನ್ನುತ್ತಾರೆ. ನಿಮ್ಮಿಂದ ಬೇರ್ಪಟ್ಟಾಗ ನಿಮ್ಮ ಮೇಲಿನ ಕಠಿಣ ಸಿಟ್ಟಿನಿಂದ ಅವರ ಬೆರಳುಗಳನ್ನು ಕಚ್ಚಿಕೊಳ್ಳುತ್ತಾರೆ. “ನಿಮ್ಮ ಕೋಪದಿಂದಲೇ ನೀವು ಸಾಯಿರಿ” ಎಂದು ನೀವು ಹೇಳಿರಿ! ಖಂಡಿತ ಅಲ್ಲಾಹನು ಮನದೊಳಗಿರುವುದನ್ನು ಬಲ್ಲವನಾಗಿರುವನು.

Verse 120

إِن تَمْسَسْكُمْ حَسَنَةٌ تَسُؤْهُمْ وَإِن تُصِبْكُمْ سَيِّئَةٌ يَفْرَحُوا۟ بِهَا ۖ وَإِن تَصْبِرُوا۟ وَتَتَّقُوا۟ لَا يَضُرُّكُمْ كَيْدُهُمْ شَيْـًٔا ۗ إِنَّ ٱللَّهَ بِمَا يَعْمَلُونَ مُحِيطٌ

Transliteration in tamsaskum ḥasanatun tasu'hum wa-in tuṣib'kum sayyi-atun yafraḥū bihā wa-in taṣbirū watattaqū lā yaḍurrukum kayduhum shayan inna l-laha bimā yaʿmalūna muḥīṭun

Kannada ನಿಮಗೇನಾದರೂ ಹಿತ ಉಂಟಾದರೆ ಅದು ಅವರಿಗೆ ದುಃಖವನ್ನುಂಟು ಮಾಡುತ್ತದೆ. ನಿಮಗೇ ನಾದರೂ ಕೇಡು ತಟ್ಟಿದರೆ ಅದರಿಂದ ಅವರು ಆನಂದ ಪಡುತ್ತಾರೆ. ನೀವು ಸಹನೆ ಪಾಲಿಸಿದರೆ ಮತ್ತು ಅಲ್ಲಾಹನಲ್ಲಿ ಭಯಭಕ್ತಿಯಿಂದಿದ್ದರೆ ಅವರ ಕುತಂತ್ರವು ನಿಮಗೆ ಯಾವುದೇ ಹಾನಿಯನ್ನು ಮಾಡಲಾರದು. ಅವರ ಕೃತ್ಯಗಳನ್ನೆಲ್ಲ ಅಲ್ಲಾಹು ಆವರಿಸಿ ತಿಳಿಯುತ್ತಿರುತ್ತಾನೆ.

Verse 121

وَإِذْ غَدَوْتَ مِنْ أَهْلِكَ تُبَوِّئُ ٱلْمُؤْمِنِينَ مَقَـٰعِدَ لِلْقِتَالِ ۗ وَٱللَّهُ سَمِيعٌ عَلِيمٌ

Transliteration wa-idh ghadawta min ahlika tubawwi-u l-mu'minīna maqāʿida lil'qitāli wal-lahu samīʿun ʿalīmun

Kannada (ಪ್ರವಾದಿಯವರೇ!) ತಮ್ಮ ಮನೆಯಿಂದ ತಾವು ನಸುಕಿನಲ್ಲಿ ಹೊರಟು ಯುದ್ಧಕ್ಕಾಗಿ ಸತ್ಯವಿಶ್ವಾಸಿ ಗಳನ್ನು ಮರ್ಮಸ್ಥಾನಗಳಲ್ಲಿ ಅಣಿಗೊಳಿಸಿದ ಸಂದರ್ಭ . ಅಲ್ಲಾಹನು ಚೆನ್ನಾಗಿ ಆಲಿಸುವವನೂ ಚೆನ್ನಾಗಿ ತಿಳಿಯುವವನೂ ಆಗಿರುತ್ತಾನೆ.

Verse 122

إِذْ هَمَّت طَّآئِفَتَانِ مِنكُمْ أَن تَفْشَلَا وَٱللَّهُ وَلِيُّهُمَا ۗ وَعَلَى ٱللَّهِ فَلْيَتَوَكَّلِ ٱلْمُؤْمِنُونَ

Transliteration idh hammat ṭāifatāni minkum an tafshalā wal-lahu waliyyuhumā waʿalā l-lahi falyatawakkali l-mu'minūna

Kannada ನಿಮ್ಮಲ್ಲಿದ್ದ ಎರಡು ಸಂಘಗಳು ಹೆದರಿ ಹಿಂಜರಿಯ ಲೆತ್ನಿಸಿದ ಸಂದರ್ಭ . ಆದರೆ ಅಲ್ಲಾಹನು ಎರಡು ಸಂಘಗಳ ರಕ್ಷಕನಾಗಿದ್ದಾನೆ. ಸತ್ಯ ವಿಶ್ವಾಸಿಗಳು ಅಲ್ಲಾಹನಲ್ಲಿ ಭಾರವನ್ನರ್ಪಿಸಲಿ.

Verse 123

وَلَقَدْ نَصَرَكُمُ ٱللَّهُ بِبَدْرٍ وَأَنتُمْ أَذِلَّةٌ ۖ فَٱتَّقُوا۟ ٱللَّهَ لَعَلَّكُمْ تَشْكُرُونَ

Transliteration walaqad naṣarakumu l-lahu bibadrin wa-antum adhillatun fa-ittaqū l-laha laʿallakum tashkurūna

Kannada ನೀವು ದುರ್ಬಲರಾಗಿದ್ದಾಗ ಅಲ್ಲಾಹನು ನಿಮಗೆ ಬದ್‍ರ್‍ನಲ್ಲಿ ಖಂಡಿತ ಸಹಾಯ ಮಾಡಿದನು. ಆದ್ದರಿಂದ ನೀವು ಅಲ್ಲಾಹನಲ್ಲಿ ಭಕ್ತಿಯಿರಿಸಿರಿ. ನೀವು ಕೃತಜ್ಞತೆ ತೋರಿದವರಾಗಲು.

Verse 124

إِذْ تَقُولُ لِلْمُؤْمِنِينَ أَلَن يَكْفِيَكُمْ أَن يُمِدَّكُمْ رَبُّكُم بِثَلَـٰثَةِ ءَالَـٰفٍ مِّنَ ٱلْمَلَـٰٓئِكَةِ مُنزَلِينَ

Transliteration idh taqūlu lil'mu'minīna alan yakfiyakum an yumiddakum rabbukum bithalāthati ālāfin mina l-malāikati munzalīna

Kannada `ನಿಮ್ಮ ಪ್ರಭುವು ಮೂರು ಸಾವಿರ ಮಲಕ್‍ಗಳನ್ನು ಇಳಿಸಿ ಸಹಾಯ ಮಾಡಿದರೆ ನಿಮಗದು ಸಾಲದೇ? ಎಂದು ನೀವು (ಪ್ರವಾದಿಯವರು) ಸತ್ಯವಿಶ್ವಾಸಿಗಳಲ್ಲಿ ಹೇಳುತ್ತಿದ್ದ ಸಂದರ್ಭ.

Verse 125

بَلَىٰٓ ۚ إِن تَصْبِرُوا۟ وَتَتَّقُوا۟ وَيَأْتُوكُم مِّن فَوْرِهِمْ هَـٰذَا يُمْدِدْكُمْ رَبُّكُم بِخَمْسَةِ ءَالَـٰفٍ مِّنَ ٱلْمَلَـٰٓئِكَةِ مُسَوِّمِينَ

Transliteration balā in taṣbirū watattaqū wayatūkum min fawrihim hādhā yum'did'kum rabbukum bikhamsati ālāfin mina l-malāikati musawwimīna

Kannada ಹೌದು. ಅದು ಸಾಕು. (ಆದರೆ ಅಷ್ಟೇ ಅಲ್ಲ;) ನೀವು ಸಹನೆ ತಾಳುವುದಾದರೆ ಮತ್ತು ಅಲ್ಲಾಹನಲ್ಲಿ ಭಕ್ತಿಯಿರಿಸುವುದಾದರೆ ಅವರು (ವೈರಿಗಳು) ಈ ಕ್ಷಣದಲ್ಲೇ ನಿಮ್ಮ ಮೇಲೆ ಆಕ್ರಮಿಸಲು ಬಂದರೂ ಯುದ್ಧದ ವಿಶೇಷ ಚಿಹ್ನೆಗಳಿರುವ ಐದು ಸಾವಿರ ಮಲಕ್‍ಗಳ ಮೂಲಕ ನಿಮ್ಮ ಪ್ರಭುವು ನಿಮಗೆ ಸಹಾಯ ಮಾಡುವನು.

Verse 126

وَمَا جَعَلَهُ ٱللَّهُ إِلَّا بُشْرَىٰ لَكُمْ وَلِتَطْمَئِنَّ قُلُوبُكُم بِهِۦ ۗ وَمَا ٱلنَّصْرُ إِلَّا مِنْ عِندِ ٱللَّهِ ٱلْعَزِيزِ ٱلْحَكِيمِ

Transliteration wamā jaʿalahu l-lahu illā bush'rā lakum walitaṭma-inna qulūbukum bihi wamā l-naṣru illā min ʿindi l-lahi l-ʿazīzi l-ḥakīmi

Kannada ಅಲ್ಲಾಹನು ಹೀಗೆ ಮಾಡಿದ್ದು ನಿಮಗೊಂದು ಶುಭವಾರ್ತೆಯಾಗಿಯೂ ಅದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗಲೆಂದೂ ಆಗಿದೆ. (ವಾಸ್ತವದಲ್ಲಿ) ಸಹಾಯವು ಪ್ರತಾಪಿಯೂ ಪರಮ ಯುಕ್ತಿವಂತನೂ ಆದ ಅಲ್ಲಾಹನಿಂದ ಮಾತ್ರವಾಗಿರುತ್ತದೆ.

Verse 127

لِيَقْطَعَ طَرَفًا مِّنَ ٱلَّذِينَ كَفَرُوٓا۟ أَوْ يَكْبِتَهُمْ فَيَنقَلِبُوا۟ خَآئِبِينَ

Transliteration liyaqṭaʿa ṭarafan mina alladhīna kafarū aw yakbitahum fayanqalibū khāibīna

Kannada ಇದು ಸತ್ಯನಿಷೇಧಿಗಳ ಒಂದು ವಿಭಾಗವನ್ನು ನಾಶಪಡಿಸಲು ಅಥವಾ ಅವರು ಸೋತು ನಿರಾಶೆಯಿಂದ ಹಿಮ್ಮೆಟ್ಟಿ ನಿಂದ್ಯಗೊಳಿಸಲಿಕ್ಕಾಗಿ.

Verse 128

لَيْسَ لَكَ مِنَ ٱلْأَمْرِ شَىْءٌ أَوْ يَتُوبَ عَلَيْهِمْ أَوْ يُعَذِّبَهُمْ فَإِنَّهُمْ ظَـٰلِمُونَ

Transliteration laysa laka mina l-amri shayon aw yatūba ʿalayhim aw yuʿadhibahum fa-innahum ẓālimūna

Kannada (ಪ್ರವಾದಿಯರೇ) ಕಾರ್ಯಗಳಲ್ಲಿ ತಮಗೆ ಯಾವುದೇ ಅಧಿಕಾರವಿರುವುದಿಲ್ಲ. ಒಂದೋ ಅವರ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ನಿಜವಾಗಿಯೂ ಅವರು ಅಕ್ರಮಿಗಳು .

Verse 129

وَلِلَّهِ مَا فِى ٱلسَّمَـٰوَٰتِ وَمَا فِى ٱلْأَرْضِ ۚ يَغْفِرُ لِمَن يَشَآءُ وَيُعَذِّبُ مَن يَشَآءُ ۚ وَٱللَّهُ غَفُورٌ رَّحِيمٌ

Transliteration walillahi mā fī l-samāwāti wamā fī l-arḍi yaghfiru liman yashāu wayuʿadhibu man yashāu wal-lahu ghafūrun raḥīmun

Kannada ಆಕಾಶಗಳು ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದು. ಆತನು ಉದ್ದೇಶಿಸಿದವರಿಗೆ ಕ್ಷಮೆ ನೀಡುವನು. ತಾನುದ್ದೇಶಿಸಿದವರಿಗೆ ಶಿಕ್ಷೆ ನೀಡುವನು. ಅಲ್ಲಾಹನು ಪರಮ ಕ್ಷಮಾಶೀಲನೂ ದಯಾಳುವೂ ಆಗಿರುವನು.

Verse 130

يَـٰٓأَيُّهَا ٱلَّذِينَ ءَامَنُوا۟ لَا تَأْكُلُوا۟ ٱلرِّبَوٰٓا۟ أَضْعَـٰفًا مُّضَـٰعَفَةً ۖ وَٱتَّقُوا۟ ٱللَّهَ لَعَلَّكُمْ تُفْلِحُونَ

Transliteration yāayyuhā alladhīna āmanū lā takulū l-riba aḍʿāfan muḍāʿafatan wa-ittaqū l-laha laʿallakum tuf'liḥūna

Kannada ಸತ್ಯವಿಶ್ವಾಸಿಗಳೇ ! ನೀವು ಇಮ್ಮಡಿ-ಗಿಮ್ಮಡಿ ಬಡ್ಡಿ ತಿನ್ನದಿರಿ. ಅಲ್ಲಾಹನಲ್ಲಿ ಭಯಭಕ್ತಿಯಿರಿಸಿಕೊಳ್ಳಿರಿ. ನೀವು ವಿಜಯ ಹೊಂದಬಹುದು.

Verse 131

وَٱتَّقُوا۟ ٱلنَّارَ ٱلَّتِىٓ أُعِدَّتْ لِلْكَـٰفِرِينَ

Transliteration wa-ittaqū l-nāra allatī uʿiddat lil'kāfirīna

Kannada ಸತ್ಯನಿಷೇಧಿಗಳಿಗಾಗಿ ಕಾದಿರಿಸಲಾದಂತಹ ನರಕದ ಬಗ್ಗೆ ನೀವು ಎಚ್ಚರಿಕೆ ವಹಿಸಿಕೊಳ್ಳಿರಿ.

Verse 132

وَأَطِيعُوا۟ ٱللَّهَ وَٱلرَّسُولَ لَعَلَّكُمْ تُرْحَمُونَ

Transliteration wa-aṭīʿū l-laha wal-rasūla laʿallakum tur'ḥamūna

Kannada ನೀವು ಅಲ್ಲಾಹು ಮತ್ತು ರಸೂಲರನ್ನು ಅನುಸರಿಸಿರಿ. ಹಾಗಾದರೆ ನೀವು ಅನುಗ್ರಹೀತ ರಾಗುವಿರಿ.

Verse 133

۞ وَسَارِعُوٓا۟ إِلَىٰ مَغْفِرَةٍ مِّن رَّبِّكُمْ وَجَنَّةٍ عَرْضُهَا ٱلسَّمَـٰوَٰتُ وَٱلْأَرْضُ أُعِدَّتْ لِلْمُتَّقِينَ

Transliteration wasāriʿū ilā maghfiratin min rabbikum wajannatin ʿarḍuhā l-samāwātu wal-arḍu uʿiddat lil'muttaqīna

Kannada ನಿಮ್ಮ ಪ್ರಭುವಿನ ಕ್ಷಮಾದಾನ ಹಾಗೂ ಭೂಮಿ ಮತ್ತು ಆಕಾಶಗಳಷ್ಟು ವಿಶಾಲವಾದ ಸ್ವರ್ಗದ ಕಡೆಗೆ ಧಾವಿಸಿ ಮುನ್ನುಗ್ಗಿರಿ. ಸ್ವರ್ಗವನ್ನು ಧರ್ಮನಿಷ್ಟ ರಿಗಾಗಿ ಕಾದಿರಿಸಲಾಗಿದೆ.

Verse 134

ٱلَّذِينَ يُنفِقُونَ فِى ٱلسَّرَّآءِ وَٱلضَّرَّآءِ وَٱلْكَـٰظِمِينَ ٱلْغَيْظَ وَٱلْعَافِينَ عَنِ ٱلنَّاسِ ۗ وَٱللَّهُ يُحِبُّ ٱلْمُحْسِنِينَ

Transliteration alladhīna yunfiqūna fī l-sarāi wal-ḍarāi wal-kāẓimīna l-ghayẓa wal-ʿāfīna ʿani l-nāsi wal-lahu yuḥibbu l-muḥ'sinīna

Kannada ಅವರು ಸಂತೋಷದ ಸಮಯದಲ್ಲೂ ಕಷ್ಟದ ಸಮಯದಲ್ಲೂ ದಾನ-ಧರ್ಮ ಮಾಡುವವರು. ಕೋಪವನ್ನು ನುಂಗುವವರು ಮತ್ತು ಜನರಿಗೆ ಕ್ಷಮೆ ತೋರುವವರು ಆಗಿರುತ್ತಾರೆ. ಸತ್ಕರ್ಮಿಗಳನ್ನು ಅಲ್ಲಾಹು ಇಷ್ಟಪಡುತ್ತಾನೆ.

Verse 135

وَٱلَّذِينَ إِذَا فَعَلُوا۟ فَـٰحِشَةً أَوْ ظَلَمُوٓا۟ أَنفُسَهُمْ ذَكَرُوا۟ ٱللَّهَ فَٱسْتَغْفَرُوا۟ لِذُنُوبِهِمْ وَمَن يَغْفِرُ ٱلذُّنُوبَ إِلَّا ٱللَّهُ وَلَمْ يُصِرُّوا۟ عَلَىٰ مَا فَعَلُوا۟ وَهُمْ يَعْلَمُونَ

Transliteration wa-alladhīna idhā faʿalū fāḥishatan aw ẓalamū anfusahum dhakarū l-laha fa-is'taghfarū lidhunūbihim waman yaghfiru l-dhunūba illā l-lahu walam yuṣirrū ʿalā mā faʿalū wahum yaʿlamūna

Kannada ಅವರು ಅಶ್ಲೀಲ ಕೃತ್ಯವನ್ನು ಮಾಡಿದರೆ ಅಥವಾ (ಪಾಪಗಳ ಮೂಲಕ) ತಮಗೆ ತಾವೇ ದ್ರೋಹ ಮಾಡಿಕೊಂಡರೆ ಅಲ್ಲಾಹನನ್ನು ನೆನೆಸುತ್ತಾರೆ, ಕೂಡಲೇ ತಮ್ಮ ಪಾಪಗಳಿಗೆ ಕ್ಷಮೆ ಬೇಡುತ್ತಾರೆ. ಪಾಪಗಳನ್ನು ಕ್ಷಮಿಸುವವನು ಅಲ್ಲಾಹನಲ್ಲದೆ ಬೇರೆ ಯಾರಿದ್ದಾರೆ ? ಅವರು ತಿಳಿದೂ ತಮ್ಮ ಪಾಪ ಕೃತ್ಯಗಳ ಮೇಲೆ ಸ್ಥಿರವಾಗಿರುವವರಲ್ಲ .

Verse 136

أُو۟لَـٰٓئِكَ جَزَآؤُهُم مَّغْفِرَةٌ مِّن رَّبِّهِمْ وَجَنَّـٰتٌ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا ۚ وَنِعْمَ أَجْرُ ٱلْعَـٰمِلِينَ

Transliteration ulāika jazāuhum maghfiratun min rabbihim wajannātun tajrī min taḥtihā l-anhāru khālidīna fīhā waniʿ'ma ajru l-ʿāmilīna

Kannada ಅವರ ಪ್ರತಿಫಲವಾದರೋ ಅವರ ಪ್ರಭುವಿನಿಂದ ಕ್ಷಮಾದಾನವೂ ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗಗಳೂ ಆಗಿವೆ. ಅದರಲ್ಲಿ ಅವರು ಶಾಶ್ವತರು. ಆ ಸತ್ಕರ್ಮಿಗಳ ಪ್ರತಿಫಲ ಅದೆಷ್ಟು ಚೆನ್ನಾಗಿದೆ!

Verse 137

قَدْ خَلَتْ مِن قَبْلِكُمْ سُنَنٌ فَسِيرُوا۟ فِى ٱلْأَرْضِ فَٱنظُرُوا۟ كَيْفَ كَانَ عَـٰقِبَةُ ٱلْمُكَذِّبِينَ

Transliteration qad khalat min qablikum sunanun fasīrū fī l-arḍi fa-unẓurū kayfa kāna ʿāqibatu l-mukadhibīna

Kannada ನಿಮಗೂ ಹಿಂದೆ ಅನೇಕ (ದೈವಿಕ) ಕಾರ್ಯಾಚರಣೆಗಳು ನಡೆದಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿರಿ ಹಾಗೂ ಸತ್ಯವನ್ನು ಸುಳ್ಳಾಗಿಸಿದವರ ಪರ್ಯವಸಾನ ಏನಾಯಿತೆನ್ನುವುದನ್ನು ನೋಡಿರಿ.

Verse 138

هَـٰذَا بَيَانٌ لِّلنَّاسِ وَهُدًى وَمَوْعِظَةٌ لِّلْمُتَّقِينَ

Transliteration hādhā bayānun lilnnāsi wahudan wamawʿiẓatun lil'muttaqīna

Kannada ಇದು (ಖುರ್‍ಆನ್) ಎಲ್ಲ ಜನರಿಗೆ ಇರುವ ವಿವರಣೆಯೂ ಸೂಕ್ಷ್ಮಮತಿಗಳಿಗೆ ಮಾರ್ಗದರ್ಶನ ಹಾಗೂ ಸದುಪದೇಶವಾಗಿದೆ .

Verse 139

وَلَا تَهِنُوا۟ وَلَا تَحْزَنُوا۟ وَأَنتُمُ ٱلْأَعْلَوْنَ إِن كُنتُم مُّؤْمِنِينَ

Transliteration walā tahinū walā taḥzanū wa-antumu l-aʿlawna in kuntum mu'minīna

Kannada ನೀವು ದುರ್ಬಲರೋ ದುಃಖಿತರೋ ಆಗದಿರಿ. ನೀವು ನಿಜವಾದ ವಿಶ್ವಾಸಿಗಳಾಗಿದ್ದರೆ ನೀವೇ ಉನ್ನತರು.

Verse 140

إِن يَمْسَسْكُمْ قَرْحٌ فَقَدْ مَسَّ ٱلْقَوْمَ قَرْحٌ مِّثْلُهُۥ ۚ وَتِلْكَ ٱلْأَيَّامُ نُدَاوِلُهَا بَيْنَ ٱلنَّاسِ وَلِيَعْلَمَ ٱللَّهُ ٱلَّذِينَ ءَامَنُوا۟ وَيَتَّخِذَ مِنكُمْ شُهَدَآءَ ۗ وَٱللَّهُ لَا يُحِبُّ ٱلظَّـٰلِمِينَ

Transliteration in yamsaskum qarḥun faqad massa l-qawma qarḥun mith'luhu watil'ka l-ayāmu nudāwiluhā bayna l-nāsi waliyaʿlama l-lahu alladhīna āmanū wayattakhidha minkum shuhadāa wal-lahu lā yuḥibbu l-ẓālimīna

Kannada ಇಂದು ನಿಮಗೊಂದು ಗಾಯ ತಟ್ಟಿದ್ದರೆ ಅದೇ ತರದ ಗಾಯ ಅವರಿಗೂ ಖಂಡಿತ ತಟ್ಟಿತ್ತು. ಆ (ಜಯಾಪಜಯಗಳ) ದಿವಸಗಳನ್ನು ನಾವು ಜನರೆಡೆಯಲ್ಲಿ ಬದಲಿಸುತ್ತಿರುತ್ತೇವೆ . ಇದು (ಕಪಟಿಗಳಿಂದ) ಸತ್ಯವಿಶ್ವಾಸಿಗಳನ್ನು ಅಲ್ಲಾಹನು ಬೇರ್ಪಡಿಸಿ ಗುರುತಿಸಲು ಹಾಗೂ ನಿಮ್ಮಲ್ಲಿ ಕೆಲವರನ್ನು ಹುತಾತ್ಮರನ್ನಾಗಿ ಮಾಡಲಿಕ್ಕೂ ಆಗಿದೆ. ಅಲ್ಲಾಹನು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.

Verse 141

وَلِيُمَحِّصَ ٱللَّهُ ٱلَّذِينَ ءَامَنُوا۟ وَيَمْحَقَ ٱلْكَـٰفِرِينَ

Transliteration waliyumaḥḥiṣa l-lahu alladhīna āmanū wayamḥaqa l-kāfirīna

Kannada ಮತ್ತು ಸತ್ಯವಿಶ್ವಾಸಿಗಳನ್ನು ಅಲ್ಲಾಹನು ಶುದ್ಧೀಕರಿಸಲಿಕ್ಕೂ ಸತ್ಯನಿಷೇಧಿಗಳನ್ನು ನಾಶಪಡಿಸಲಿಕ್ಕೂ ಆಗಿದೆ.

Verse 142

أَمْ حَسِبْتُمْ أَن تَدْخُلُوا۟ ٱلْجَنَّةَ وَلَمَّا يَعْلَمِ ٱللَّهُ ٱلَّذِينَ جَـٰهَدُوا۟ مِنكُمْ وَيَعْلَمَ ٱلصَّـٰبِرِينَ

Transliteration am ḥasib'tum an tadkhulū l-janata walammā yaʿlami l-lahu alladhīna jāhadū minkum wayaʿlama l-ṣābirīna

Kannada ಅದಲ್ಲ; ನಿಮ್ಮ ಪೈಕಿ ಯುದ್ಧ ಮಾಡಿದವರು ಹಾಗೂ (ರಣಾಂಗಣದಲ್ಲಿ) ಸಹನೆ ಪಾಲಿಸಿದವರನ್ನು ಅಲ್ಲಾಹನು ಪರೀಕ್ಷಿಸದೆ ಸ್ವರ್ಗಕ್ಕೆ ನೀವು ಹೋಗುವಿರೆಂದು ಭಾವಿಸಿದ್ದೀರಾ?

Verse 143

وَلَقَدْ كُنتُمْ تَمَنَّوْنَ ٱلْمَوْتَ مِن قَبْلِ أَن تَلْقَوْهُ فَقَدْ رَأَيْتُمُوهُ وَأَنتُمْ تَنظُرُونَ

Transliteration walaqad kuntum tamannawna l-mawta min qabli an talqawhu faqad ra-aytumūhu wa-antum tanẓurūna

Kannada ನೀವು ಮರಣವನ್ನು ಎದುರುಗೊಳ್ಳುವ ಮುನ್ನ (ಅಲ್ಲಾಹನ ಮಾರ್ಗದಲ್ಲಿ) ಮರಣವನ್ನು ಬಯಸುವವರಾಗಿದ್ದಿರಿ. ಇದೀಗ ನೀವು ನೋಡುತ್ತಿರುವಂತೆಯೇ ಅದನ್ನು ನೀವು ಕಂಡಿರಿ. (ಆದರೂ ನೀವು ಯಾಕೆ ಓಡಿ ಹೋದಿರಿ ?)

Verse 144

وَمَا مُحَمَّدٌ إِلَّا رَسُولٌ قَدْ خَلَتْ مِن قَبْلِهِ ٱلرُّسُلُ ۚ أَفَإِي۟ن مَّاتَ أَوْ قُتِلَ ٱنقَلَبْتُمْ عَلَىٰٓ أَعْقَـٰبِكُمْ ۚ وَمَن يَنقَلِبْ عَلَىٰ عَقِبَيْهِ فَلَن يَضُرَّ ٱللَّهَ شَيْـًٔا ۗ وَسَيَجْزِى ٱللَّهُ ٱلشَّـٰكِرِينَ

Transliteration wamā muḥammadun illā rasūlun qad khalat min qablihi l-rusulu afa-in māta aw qutila inqalabtum ʿalā aʿqābikum waman yanqalib ʿalā ʿaqibayhi falan yaḍurra l-laha shayan wasayajzī l-lahu l-shākirīna

Kannada ಮುಹಮ್ಮದರು ಅಲ್ಲಾಹನ ಓರ್ವ ದೂತರು ಮಾತ್ರ. ಅವರಿಗೆ ಮೊದಲೂ ಕೆಲವು ದೂತರು ಆಗಿ ಹೋಗಿದ್ದಾರೆ. ಆದರೆ ಅವರು ಮೃತರಾದರೆ ಅಥವಾ ಹತರಾದರೆ ನೀವು ಹಿಂಜರಿದು ಓಡುವಿರೇನು? ಯಾರಾದರೂ ಹಿಂಜರಿದು ಓಡುವುದಾದರೆ ಅದರಿಂದ ಅಲ್ಲಾಹನಿಗೆ ಯಾವ ದೋಷವೂ ಇರುವುದಿಲ್ಲ. ಕೃತಜ್ಞತೆಯುಳ್ಳವರಿಗೆ ಅಲ್ಲಾಹು ತಕ್ಕ ಪ್ರತಿಫಲವನ್ನು ಕೊಡಲಿದ್ದಾನೆ.

Verse 145

وَمَا كَانَ لِنَفْسٍ أَن تَمُوتَ إِلَّا بِإِذْنِ ٱللَّهِ كِتَـٰبًا مُّؤَجَّلًا ۗ وَمَن يُرِدْ ثَوَابَ ٱلدُّنْيَا نُؤْتِهِۦ مِنْهَا وَمَن يُرِدْ ثَوَابَ ٱلْـَٔاخِرَةِ نُؤْتِهِۦ مِنْهَا ۚ وَسَنَجْزِى ٱلشَّـٰكِرِينَ

Transliteration wamā kāna linafsin an tamūta illā bi-idh'ni l-lahi kitāban mu-ajjalan waman yurid thawāba l-dun'yā nu'tihi min'hā waman yurid thawāba l-ākhirati nu'tihi min'hā wasanajzī l-shākirīna

Kannada ಅಲ್ಲಾಹನ ವಿಧಿಯ ಹೊರತು ಯಾವನಿಗೂ ಮರಣ ಸಂಭವಿಸದು. ಅದು ನಿರ್ಧರಿತ ಅವಧಿಯಾಗಿದೆ. ಯಾವನು ಇಹದ ಫಲವನ್ನು ಬಯಸುತ್ತಾನೋ ಅವನಿಗೆ ಅದನ್ನು ನಾವು ಕೊಡುತ್ತೇವೆ. ಯಾವನು ಪರದ ಫಲವನ್ನು ಬಯಸುತ್ತಾನೋ ಅವನಿಗೆ ನಾವು ಅದರಿಂದ ಕೊಡುತ್ತೇವೆ. ಕೃತಜ್ಞತೆ ಯುಳ್ಳವರಿಗೆ ತಕ್ಕುದಾದ ಫಲವನ್ನು ನಾವು ಕೊಡಲಿದ್ದೇವೆ.

Verse 146

وَكَأَيِّن مِّن نَّبِىٍّ قَـٰتَلَ مَعَهُۥ رِبِّيُّونَ كَثِيرٌ فَمَا وَهَنُوا۟ لِمَآ أَصَابَهُمْ فِى سَبِيلِ ٱللَّهِ وَمَا ضَعُفُوا۟ وَمَا ٱسْتَكَانُوا۟ ۗ وَٱللَّهُ يُحِبُّ ٱلصَّـٰبِرِينَ

Transliteration waka-ayyin min nabiyyin qātala maʿahu ribbiyyūna kathīrun famā wahanū limā aṣābahum fī sabīli l-lahi wamā ḍaʿufū wamā is'takānū wal-lahu yuḥibbu l-ṣābirīna

Kannada ಎಷ್ಟೆಷ್ಟು ಪ್ರವಾದಿಗಳ ಜೊತೆಯಲ್ಲಿ ಅನೇಕ ಕೂಟಗಳು ಯುದ್ಧ ಮಾಡಿವೆ! ಹಾಗೆಯೇ ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಬಾಧಿಸಿದ ಕಷ್ಟಗಳಿಂದ ಅವರೇನೂ ಅಂಜಿರಲಿಲ್ಲ. ದುರ್ಬಲರೂ ಆಗಿರಲಿಲ್ಲ. (ವೈರಿಗಳಿಗೆ) ಶರಣಾಗಲಿಲ್ಲ. ಅಲ್ಲಾಹನು ಸಹನಶೀಲರನ್ನು ಪ್ರೀತಿಸುತ್ತಿದ್ದಾನೆ.

Verse 147

وَمَا كَانَ قَوْلَهُمْ إِلَّآ أَن قَالُوا۟ رَبَّنَا ٱغْفِرْ لَنَا ذُنُوبَنَا وَإِسْرَافَنَا فِىٓ أَمْرِنَا وَثَبِّتْ أَقْدَامَنَا وَٱنصُرْنَا عَلَى ٱلْقَوْمِ ٱلْكَـٰفِرِينَ

Transliteration wamā kāna qawlahum illā an qālū rabbanā igh'fir lanā dhunūbanā wa-is'rāfanā fī amrinā wathabbit aqdāmanā wa-unṣur'nā ʿalā l-qawmi l-kāfirīna

Kannada `ನಮ್ಮ ಪ್ರಭೂ ! ನಮ್ಮ ಪಾಪಗಳನ್ನೂ ನಮ್ಮ ಕಾರ್ಯಗಳಲ್ಲಿ ಬಂದ ಅತಿರೇಕಗಳನ್ನೂ ಕ್ಷಮಿಸು ! (ಯುದ್ಧದಲ್ಲಿ) ನಮ್ಮ ಪಾದಗಳನ್ನು ನೆಲೆಯೂರಿಸು. ಅವಿಶ್ವಾಸಿಗಳ ವಿರುದ್ಧ ನಮಗೆ ಸಹಾಯ ಮಾಡು' ಎಂಬ ಮಾತಲ್ಲದೆ ಬೇರೆ ಮಾತು ಅವರಿಂದ ಬಂದಿರಲಿಲ್ಲ.

Verse 148

فَـَٔاتَىٰهُمُ ٱللَّهُ ثَوَابَ ٱلدُّنْيَا وَحُسْنَ ثَوَابِ ٱلْـَٔاخِرَةِ ۗ وَٱللَّهُ يُحِبُّ ٱلْمُحْسِنِينَ

Transliteration faātāhumu l-lahu thawāba l-dun'yā waḥus'na thawābi l-ākhirati wal-lahu yuḥibbu l-muḥ'sinīna

Kannada ಆದ್ದರಿಂದ ಅವರಿಗೆ ಐಹಿಕ ಪ್ರತಿಫಲವನ್ನೂ ಶ್ರೇಷ್ಠವಾದ ಪಾರತ್ರಿಕ ಫಲವನ್ನೂ ಅಲ್ಲಾಹನು ಕೊಟ್ಟನು. ಅಲ್ಲಾಹನು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ.

Verse 149

يَـٰٓأَيُّهَا ٱلَّذِينَ ءَامَنُوٓا۟ إِن تُطِيعُوا۟ ٱلَّذِينَ كَفَرُوا۟ يَرُدُّوكُمْ عَلَىٰٓ أَعْقَـٰبِكُمْ فَتَنقَلِبُوا۟ خَـٰسِرِينَ

Transliteration yāayyuhā alladhīna āmanū in tuṭīʿū alladhīna kafarū yaruddūkum ʿalā aʿqābikum fatanqalibū khāsirīna

Kannada ಸತ್ಯವಿಶ್ವಾಸಿಗಳೇ! ನೀವು ಅವಿಶ್ವಾಸಿಗಳಿಗೆ ಅನುಸರಿಸಿದರೆ ಅವರು ನಿಮ್ಮನ್ನು ಪೂರ್ವ ಸ್ಥಿತಿಗೆ ಮರಳಿಸುವರು. ಆಗ ನೀವು ನಷ್ಟ ಹೊಂದಿದವರಾಗಿ ಹಿಂತಿರುಗುವಿರಿ.

Verse 150

بَلِ ٱللَّهُ مَوْلَىٰكُمْ ۖ وَهُوَ خَيْرُ ٱلنَّـٰصِرِينَ

Transliteration bali l-lahu mawlākum wahuwa khayru l-nāṣirīna

Kannada ಆದರೆ ಅಲ್ಲಾಹನು ನಿಮ್ಮ ರಕ್ಷಾಧಿಪತಿಯಾಗಿರು ವನು. ಅವನು ಸಹಾಯಕರಲ್ಲಿ ಉತ್ತಮ ನಾಗಿರುವನು.

Verse 151

سَنُلْقِى فِى قُلُوبِ ٱلَّذِينَ كَفَرُوا۟ ٱلرُّعْبَ بِمَآ أَشْرَكُوا۟ بِٱللَّهِ مَا لَمْ يُنَزِّلْ بِهِۦ سُلْطَـٰنًا ۖ وَمَأْوَىٰهُمُ ٱلنَّارُ ۚ وَبِئْسَ مَثْوَى ٱلظَّـٰلِمِينَ

Transliteration sanul'qī fī qulūbi alladhīna kafarū l-ruʿ'ba bimā ashrakū bil-lahi mā lam yunazzil bihi sul'ṭānan wamawāhumu l-nāru wabi'sa mathwā l-ẓālimīna

Kannada ಸತ್ಯನಿಷೇಧಿಗಳ ಹೃದಯದಲ್ಲಿ ಸದ್ಯದಲ್ಲೇ ನಾವು ಭೀತಿಯನ್ನು ಹುಟ್ಟಿಸುವೆವು. ಅಲ್ಲಾಹು ತನ್ನ (ಸಹಭಾಗಿಗಳೆಂದು) ಯಾವುದೇ ಆಧಾರವನ್ನು ಅವತೀರ್ಣಗೊಳಿಸಿರದಂತಹ ವಸ್ತುಗಳನ್ನು ಅವರು ಸಹಭಾಗಿಗಳಾಗಿ ಮಾಡಿದುದರ ಫಲವಿದು. ಅವರ ವಾಸಸ್ಥಳ ನರಕವಾಗಿದೆ. ಅಕ್ರಮಿಗಳ ನಿವಾಸ ಅದೆಷ್ಟು ನೀಚ!

Verse 152

وَلَقَدْ صَدَقَكُمُ ٱللَّهُ وَعْدَهُۥٓ إِذْ تَحُسُّونَهُم بِإِذْنِهِۦ ۖ حَتَّىٰٓ إِذَا فَشِلْتُمْ وَتَنَـٰزَعْتُمْ فِى ٱلْأَمْرِ وَعَصَيْتُم مِّنۢ بَعْدِ مَآ أَرَىٰكُم مَّا تُحِبُّونَ ۚ مِنكُم مَّن يُرِيدُ ٱلدُّنْيَا وَمِنكُم مَّن يُرِيدُ ٱلْـَٔاخِرَةَ ۚ ثُمَّ صَرَفَكُمْ عَنْهُمْ لِيَبْتَلِيَكُمْ ۖ وَلَقَدْ عَفَا عَنكُمْ ۗ وَٱللَّهُ ذُو فَضْلٍ عَلَى ٱلْمُؤْمِنِينَ

Transliteration walaqad ṣadaqakumu l-lahu waʿdahu idh taḥussūnahum bi-idh'nihi ḥattā idhā fashil'tum watanāzaʿtum fī l-amri waʿaṣaytum min baʿdi mā arākum mā tuḥibbūna minkum man yurīdu l-dun'yā waminkum man yurīdu l-ākhirata thumma ṣarafakum ʿanhum liyabtaliyakum walaqad ʿafā ʿankum wal-lahu dhū faḍlin ʿalā l-mu'minīna

Kannada ಅಲ್ಲಾಹನ ಅನುಮತಿ ಪ್ರಕಾರ ಅವರೊಂದಿಗೆ ನೀವು ಹೋರಾಡುತ್ತಿರುವಾಗ ಆತನು ತನ್ನ ಸಹಾಯದ ವಾಗ್ದಾನವನ್ನು ಚೆನ್ನಾಗಿ ಪಾಲಿಸಿದನು. ಹಾಗಿದ್ದೂ ನಿಮಗೆ ಇಷ್ಟವಾದುದನ್ನು ಅಲ್ಲಾಹನು ನಿಮಗೆ ತೋರಿಸಿಕೊಟ್ಟ ನಂತರವೂ ನೀವು ಭೀರುತ್ವ ತೋರಿದಿರಿ. (ಪ್ರವಾದಿಯವರ) ಆದೇಶದ ವಿಷಯದಲ್ಲಿ ಭಿನ್ನರಾದಿರಿ ಹಾಗೂ ಆದೇಶಕ್ಕೆ ವಿರೋಧವಾಗಿ ವರ್ತಿಸಿದಿರಿ. (ಆದ್ದರಿಂದ ಅವನು ತನ್ನ ಸಹಾಯವನ್ನು ಹಿಂತೆಗೆದುಕೊಂಡನು.) ನಿಮ್ಮ ಕೂಟದಲ್ಲಿ ಇಹಲೋಕವನ್ನು ಬಯಸುವವರೂ ಪರಲೋಕವನ್ನು ಬಯಸುವವರೂ ಇದ್ದಾರೆ. ತರುವಾಯ ನಿಮ್ಮನ್ನು ಪರೀಕ್ಷಿ ಸಲೋಸುಗ ನಿಮ್ಮನ್ನು ಅವನು ಶತ್ರುಗಳಿಂದ ಹಿಂಜರಿಸಿದನು. ಖಂಡಿತ ವಾಗಿಯೂ ಅಲ್ಲಾಹನು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹನು ಸತ್ಯ ವಿಶ್ವಾಸಿಗಳ ಮೇಲೆ ಬಹಳ ಔದಾರ್ಯವುಳ್ಳವನಾಗಿರುವನು.

Verse 153

۞ إِذْ تُصْعِدُونَ وَلَا تَلْوُۥنَ عَلَىٰٓ أَحَدٍ وَٱلرَّسُولُ يَدْعُوكُمْ فِىٓ أُخْرَىٰكُمْ فَأَثَـٰبَكُمْ غَمًّۢا بِغَمٍّ لِّكَيْلَا تَحْزَنُوا۟ عَلَىٰ مَا فَاتَكُمْ وَلَا مَآ أَصَـٰبَكُمْ ۗ وَٱللَّهُ خَبِيرٌۢ بِمَا تَعْمَلُونَ

Transliteration idh tuṣ'ʿidūna walā talwūna ʿalā aḥadin wal-rasūlu yadʿūkum fī ukh'rākum fa-athābakum ghamman bighammin likaylā taḥzanū ʿalā mā fātakum walā mā aṣābakum wal-lahu khabīrun bimā taʿmalūna

Kannada ಯಾರತ್ತಲೂ ತಿರುಗಿ ನೋಡದೆ ನೀವು ಓಡಿ ಹೋದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹನ ದೂತರು ನಿಮ್ಮನ್ನು ಹಿಂದಿನಿಂದ ಕರೆಯುತ್ತಿದ್ದರು. ಆದ್ದರಿಂದ ಮೇಲಿಂದ ಮೇಲೆ ದುಃಖವನ್ನು ನಿಮಗವನು ಪ್ರತಿಫಲವಾಗಿ ಕೊಟ್ಟನು . (ಆದರೆ) ವಿಪತ್ತು ಸಂಭವಿಸಿದುದಕ್ಕೂ ವಸ್ತುಗಳು ನಷ್ಟವಾದುದಕ್ಕೂ ನೀವು ದುಃಖಿತರಾಗದಿರಲೆಂದು (ಅವನು ನಿಮಗೆ ಕ್ಷಮಿಸಿದನು). ಅಲ್ಲಾಹನು ನೀವು ಮಾಡುತ್ತಿದ್ದುದನ್ನು ಸೂಕ್ಷ್ಮವಾಗಿ ಅರಿಯುವವನಾಗಿರುತ್ತಾನೆ.

Verse 154

ثُمَّ أَنزَلَ عَلَيْكُم مِّنۢ بَعْدِ ٱلْغَمِّ أَمَنَةً نُّعَاسًا يَغْشَىٰ طَآئِفَةً مِّنكُمْ ۖ وَطَآئِفَةٌ قَدْ أَهَمَّتْهُمْ أَنفُسُهُمْ يَظُنُّونَ بِٱللَّهِ غَيْرَ ٱلْحَقِّ ظَنَّ ٱلْجَـٰهِلِيَّةِ ۖ يَقُولُونَ هَل لَّنَا مِنَ ٱلْأَمْرِ مِن شَىْءٍ ۗ قُلْ إِنَّ ٱلْأَمْرَ كُلَّهُۥ لِلَّهِ ۗ يُخْفُونَ فِىٓ أَنفُسِهِم مَّا لَا يُبْدُونَ لَكَ ۖ يَقُولُونَ لَوْ كَانَ لَنَا مِنَ ٱلْأَمْرِ شَىْءٌ مَّا قُتِلْنَا هَـٰهُنَا ۗ قُل لَّوْ كُنتُمْ فِى بُيُوتِكُمْ لَبَرَزَ ٱلَّذِينَ كُتِبَ عَلَيْهِمُ ٱلْقَتْلُ إِلَىٰ مَضَاجِعِهِمْ ۖ وَلِيَبْتَلِىَ ٱللَّهُ مَا فِى صُدُورِكُمْ وَلِيُمَحِّصَ مَا فِى قُلُوبِكُمْ ۗ وَٱللَّهُ عَلِيمٌۢ بِذَاتِ ٱلصُّدُورِ

Transliteration thumma anzala ʿalaykum min baʿdi l-ghami amanatan nuʿāsan yaghshā ṭāifatan minkum waṭāifatun qad ahammathum anfusuhum yaẓunnūna bil-lahi ghayra l-ḥaqi ẓanna l-jāhiliyati yaqūlūna hal lanā mina l-amri min shayin qul inna l-amra kullahu lillahi yukh'fūna fī anfusihim mā lā yub'dūna laka yaqūlūna law kāna lanā mina l-amri shayon mā qutil'nā hāhunā qul law kuntum fī buyūtikum labaraza alladhīna kutiba ʿalayhimu l-qatlu ilā maḍājiʿihim waliyabtaliya l-lahu mā fī ṣudūrikum waliyumaḥḥiṣa mā fī qulūbikum wal-lahu ʿalīmun bidhāti l-ṣudūri

Kannada ದುಃಖದ ನಂತರ ನಿಮ್ಮ ಮೇಲೆ ಅವನೊಂದು ಶಾಂತಿಯನ್ನು ಅಂದರೆ ಒಂದು ನಿದ್ದೆಯ ಮಂಪರನ್ನು ಇಳಿಸಿದನು. ಅದು ನಿಮ್ಮ ಪೈಕಿ ಒಂದು ವಿಭಾಗದವರನ್ನು ಆವರಿಸಿತ್ತು. ಆದರೆ ಇನ್ನೊಂದು ವಿಭಾಗದವರ ಸ್ವಂತ ಆತ್ಮಗಳು ಅವರನ್ನು ಚಿಂತೆಗೀಡುಮಾಡಿದ್ದುವು. ಅಲ್ಲಾಹನ ಬಗ್ಗೆ ಅಸತ್ಯವಾದ ಅಜ್ಞಾನಜನ್ಯ ಯೋಚನೆ ಗಳನ್ನು ಅವರು ಮಾಡಿಬಿಟ್ಟರು. ನಮಗೆ ನೆರವಿನ ಕಾರ್ಯದಲ್ಲಿ ಏನಾದರೂ ಇದೆಯೇ ಎಂದು ಅವರು ಕೇಳುತ್ತಿದ್ದರು. ತಾವು ಹೇಳಿರಿ; `ಖಂಡಿತವಾಗಿಯೂ ಕಾರ್ಯಗಳೆಲ್ಲವೂ ಅಲ್ಲಾಹನಿಗೇ ಇವೆ. “ತಮಗೆ ಎದುರಿಗೆ ತೋರಿಸದಂತಹ ಕೆಲವು ವಿಷಯಗಳನ್ನು ಅವರು ಒಳಗೆ ಅವಿತಿರಿ ಸಿಕೊಂಡಿರುತ್ತಾರೆ. ‘ನಮಗೆ ಸ್ವಾತಂತ್ರ್ಯವಿದ್ದಿದ್ದರೆ ಇಲ್ಲಿ ನಾವು ವಧಿಸಲ್ಪಡುತ್ತಿರಲಿಲ್ಲ’ ಎಂದವರು ಹೇಳುತ್ತಿದ್ದರು. ತಾವು, ಹೇಳಿರಿ; `ನೀವು ನಿಮ್ಮ ಮನೆಗಳಲ್ಲಿ ಕೂತಿದ್ದರೂ ಯಾರ ಮೇಲೆ ಸಾವಿನ ವಿಧಿ ಬಂದಿದೆಯೋ ಅವರು ಸಾಯುವ ಜಾಗಕ್ಕೆ ತಲುಪಿಯೇ ತೀರುತ್ತಿದ್ದರು. ಇದು ಅಲ್ಲಾಹನು ನಿಮ್ಮ ಹೃದಯಗಳಲ್ಲಿರುವುದನ್ನು ಪರೀಕ್ಷಿಸಲು ಮತ್ತು ನಿಮ್ಮ ಹೃದಯದ ಮಾಲಿನ್ಯವನ್ನು ಶುದ್ದೀಕರಿಸಲು ಆಗಿದೆ. ಹೃದಯಗಳಲ್ಲಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲವನಾಗಿರುತ್ತಾನೆ.

Verse 155

إِنَّ ٱلَّذِينَ تَوَلَّوْا۟ مِنكُمْ يَوْمَ ٱلْتَقَى ٱلْجَمْعَانِ إِنَّمَا ٱسْتَزَلَّهُمُ ٱلشَّيْطَـٰنُ بِبَعْضِ مَا كَسَبُوا۟ ۖ وَلَقَدْ عَفَا ٱللَّهُ عَنْهُمْ ۗ إِنَّ ٱللَّهَ غَفُورٌ حَلِيمٌ

Transliteration inna alladhīna tawallaw minkum yawma l-taqā l-jamʿāni innamā is'tazallahumu l-shayṭānu bibaʿḍi mā kasabū walaqad ʿafā l-lahu ʿanhum inna l-laha ghafūrun ḥalīmun

Kannada ಎರಡು ಬಣಗಳು ಎದುರುಬದುರಾದ ಆ ದಿನದಂದು ನಿಮ್ಮ ಕೂಟದಿಂದ ಹಿಂಜರಿದು ಓಡಿದವರು, ಅವರು ಮಾಡಿದ ಕೆಲವು ದೋಷ ಕೃತ್ಯಗಳ ಕಾರಣದಿಂದ ನಿಜವಾಗಿಯೂ ಶೈತಾನನು ಅವರನ್ನು ದಾರಿ ತಪ್ಪಿಸಿದನು. ಆದರೆ ಖಂಡಿತವಾಗಿಯೂ ಅಲ್ಲಾಹನು ಅವರಿಗೆ ಮಾಫಿ ಕೊಟ್ಟಿರುವನು. ಅಲ್ಲಾಹನು ನಿಜವಾಗಿಯೂ ಬಹಳ ಕ್ಷಮಾದಾನಿಯೂ ಬಹಳ ಹೆಚ್ಚು ಸಹನೆಯುಳ್ಳವನೂ ಆಗಿರುತ್ತಾನೆ.

Verse 156

يَـٰٓأَيُّهَا ٱلَّذِينَ ءَامَنُوا۟ لَا تَكُونُوا۟ كَٱلَّذِينَ كَفَرُوا۟ وَقَالُوا۟ لِإِخْوَٰنِهِمْ إِذَا ضَرَبُوا۟ فِى ٱلْأَرْضِ أَوْ كَانُوا۟ غُزًّى لَّوْ كَانُوا۟ عِندَنَا مَا مَاتُوا۟ وَمَا قُتِلُوا۟ لِيَجْعَلَ ٱللَّهُ ذَٰلِكَ حَسْرَةً فِى قُلُوبِهِمْ ۗ وَٱللَّهُ يُحْىِۦ وَيُمِيتُ ۗ وَٱللَّهُ بِمَا تَعْمَلُونَ بَصِيرٌ

Transliteration yāayyuhā alladhīna āmanū lā takūnū ka-alladhīna kafarū waqālū li-ikh'wānihim idhā ḍarabū fī l-arḍi aw kānū ghuzzan law kānū ʿindanā mā mātū wamā qutilū liyajʿala l-lahu dhālika ḥasratan fī qulūbihim wal-lahu yuḥ'yī wayumītu wal-lahu bimā taʿmalūna baṣīrun

Kannada ಓ ಸತ್ಯ ವಿಶ್ವಾಸಿಗಳೇ! ನೀವು ಅವಿಶ್ವಾಸಿಗಳಂತೆ ಆಗಬಾರದು. ಅವರು ತಮ್ಮ ಸೋದರರ ಬಗ್ಗೆ ಅವರು ಭೂಮಿಯಲ್ಲಿ ಯಾತ್ರೆ ಹೋದಾಗ ಅಥವಾ ಯುದ್ದಕ್ಕೆ ಹೋಗಿದ್ದಾಗ (ಮರಣಗೊಂಡಿದ್ದರೆ) `ಅವರು ತಮ್ಮ ಬಳಿ ಇರುತ್ತಿದ್ದರೆ ಸಾಯುತ್ತಿರಲಿಲ್ಲ ಅಥವಾ ಕೊಲ್ಲಲ್ಪಡುತ್ತಿರಲಿಲ್ಲ' ಎಂದು ಹೇಳಿದರು. ಇದು ಅವರ ಹೃದಯದಲ್ಲಿ ಅಲ್ಲಾಹನು ಅದನ್ನೊಂದು ಖೇದವನ್ನಾಗಿ ಉಳಿಸಲಿಕ್ಕಾಗಿದೆ. ಅಲ್ಲಾಹನು ಜೀವಕೊಡುತ್ತಾನೆ ಮತ್ತು ಮರಣಗೊಳಿಸುತ್ತಾನೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮದರ್ಶಕನು.

Verse 157

وَلَئِن قُتِلْتُمْ فِى سَبِيلِ ٱللَّهِ أَوْ مُتُّمْ لَمَغْفِرَةٌ مِّنَ ٱللَّهِ وَرَحْمَةٌ خَيْرٌ مِّمَّا يَجْمَعُونَ

Transliteration wala-in qutil'tum fī sabīli l-lahi aw muttum lamaghfiratun mina l-lahi waraḥmatun khayrun mimmā yajmaʿūna

Kannada ನೀವು ಅಲ್ಲಾಹನ ಮಾರ್ಗದಲ್ಲಿ ಕೊಲ್ಲಲ್ಪಟ್ಟರೂ ಅಥವಾ (ಬೇರೆ ವಿಧದಲ್ಲಿ) ನೀವು ತೀರಿದರೂ, ಖಂಡಿತವಾಗಿಯೂ ಅಲ್ಲಾಹನಿಂದ ದೊರೆಯುವ ಕ್ಷಮಾದಾನ ಮತ್ತು ಅನುಗ್ರಹವು ಅವರು ಶೇಖರಿಸುವುದಕ್ಕಿಂತ ಶ್ರೇಷ್ಠವಾಗಿದೆ.

Verse 158

وَلَئِن مُّتُّمْ أَوْ قُتِلْتُمْ لَإِلَى ٱللَّهِ تُحْشَرُونَ

Transliteration wala-in muttum aw qutil'tum la-ilā l-lahi tuḥ'sharūna

Kannada ನೀವು (ಸಹಜವಾಗಿ) ಮರಣ ಹೊಂದಿದರೂ ಅಥವಾ ಕೊಲ್ಲಲ್ಪಟ್ಟರೂ ನೀವು ಒಂದುಗೂಡಿಸ ಲ್ಪಡುವುದು ಅಲ್ಲಾಹನೆಡೆಗೇ ಆಗಿರುತ್ತದೆ.

Verse 159

فَبِمَا رَحْمَةٍ مِّنَ ٱللَّهِ لِنتَ لَهُمْ ۖ وَلَوْ كُنتَ فَظًّا غَلِيظَ ٱلْقَلْبِ لَٱنفَضُّوا۟ مِنْ حَوْلِكَ ۖ فَٱعْفُ عَنْهُمْ وَٱسْتَغْفِرْ لَهُمْ وَشَاوِرْهُمْ فِى ٱلْأَمْرِ ۖ فَإِذَا عَزَمْتَ فَتَوَكَّلْ عَلَى ٱللَّهِ ۚ إِنَّ ٱللَّهَ يُحِبُّ ٱلْمُتَوَكِّلِينَ

Transliteration fabimā raḥmatin mina l-lahi linta lahum walaw kunta faẓẓan ghalīẓa l-qalbi la-infaḍḍū min ḥawlika fa-uʿ'fu ʿanhum wa-is'taghfir lahum washāwir'hum fī l-amri fa-idhā ʿazamta fatawakkal ʿalā l-lahi inna l-laha yuḥibbu l-mutawakilīna

Kannada (ಪ್ರವಾದಿಯವರೇ!) ನೀವು ಅವರ ಜೊತೆ ಮೃದುವಾಗಿ ವರ್ತಿಸಿದ್ದು ಅಲ್ಲಾಹನ ಕಾರುಣ್ಯದಿಂದ ಮಾತ್ರವಾಗಿದೆ. ನೀವು ಒರಟರೂ, ಕಠಿಣ ಹೃದಯಿಯೂ ಆಗಿದ್ದರೆ ನಿಮ್ಮ ಸುತ್ತಲಿಂದ ಅವರು ಚದುರಿ ಹೋಗುತ್ತಿದ್ದರು. ಆದ್ದರಿಂದ ಅವರಿಗೆ ಮಾಫಿಕೊಡಿರಿ. ಅವರ ಪರವಾಗಿ ಪಾಪ ಮುಕ್ತಿ ಬೇಡಿರಿ. ಅವರ ಜೊತೆಗೆ (ಭಾವೀ) ಕಾರ್ಯಗಳಲ್ಲಿ ಸಮಾಲೋಚನೆ ನಡೆಸಿರಿ. ನೀವು ನಿರ್ಧಾರ ಮಾಡಿದ ಮೇಲೆ ಅಲ್ಲಾಹನ ಮೇಲೆ ಭಾರವರ್ಪಿಸಿರಿ. ಅಲ್ಲಾಹನು, ತನ್ನಲ್ಲಿ ಭಾರವರ್ಪಿಸುವವರನ್ನು ಖಂಡಿತ ಪ್ರೀತಿಸುತ್ತಾನೆ.

Verse 160

إِن يَنصُرْكُمُ ٱللَّهُ فَلَا غَالِبَ لَكُمْ ۖ وَإِن يَخْذُلْكُمْ فَمَن ذَا ٱلَّذِى يَنصُرُكُم مِّنۢ بَعْدِهِۦ ۗ وَعَلَى ٱللَّهِ فَلْيَتَوَكَّلِ ٱلْمُؤْمِنُونَ

Transliteration in yanṣur'kumu l-lahu falā ghāliba lakum wa-in yakhdhul'kum faman dhā alladhī yanṣurukum min baʿdihi waʿalā l-lahi falyatawakkali l-mu'minūna

Kannada ಅಲ್ಲಾಹನು ನಿಮಗೆ ಸಹಾಯ ಮಾಡಿದರೆ ಮತ್ತೆ ನಿಮ್ಮ ಮೇಲೆ ಜಯ ಸಾಧಿಸುವವನಿಲ್ಲ. ಆತನು ನಿಮ್ಮನ್ನು ಕೈ ಬಿಟ್ಟರೆ ಆತನಲ್ಲದೆ ನಿಮಗೆ ಸಹಾಯಕರು ಯಾರಿದ್ದಾರೆ ? ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿ ಭಾರವನ್ನರ್ಪಿಸಿಕೊಳ್ಳಲಿ.

Verse 161

وَمَا كَانَ لِنَبِىٍّ أَن يَغُلَّ ۚ وَمَن يَغْلُلْ يَأْتِ بِمَا غَلَّ يَوْمَ ٱلْقِيَـٰمَةِ ۚ ثُمَّ تُوَفَّىٰ كُلُّ نَفْسٍ مَّا كَسَبَتْ وَهُمْ لَا يُظْلَمُونَ

Transliteration wamā kāna linabiyyin an yaghulla waman yaghlul yati bimā ghalla yawma l-qiyāmati thumma tuwaffā kullu nafsin mā kasabat wahum lā yuẓ'lamūna

Kannada ಯಾವುದೇ ಒಬ್ಬ ಪ್ರವಾದಿ (ಯುದ್ಧಾಸ್ತಿಯಲ್ಲಿ) ವಂಚಿಸುವರೆನ್ನುವುದು ಸಂಭವನೀಯವಲ್ಲ. ಯಾವನಾದರೂ ವಂಚಿಸಿ ತೆಗೆದುಕೊಂಡರೆ ಅವನು ವಂಚಿಸಿ ತೆಗೆದುಕೊಂಡದ್ದನ್ನು ಪುನರುತ್ಥಾನ ದಿನದಂದು ತರುವನು. ಆಮೇಲೆ ಪ್ರತಿಯೊಬ್ಬರಿಗೂ ಅವರವರು ಮಾಡಿದುದರ ಫಲವನ್ನು ಪೂರ್ತಿಯಾಗಿ ಕೊಡಲಾಗುವುದು. ಅವರಿಗೆ ಅನ್ಯಾಯ ಮಾಡಲಾಗುವುದಿಲ್ಲ .

Verse 162

أَفَمَنِ ٱتَّبَعَ رِضْوَٰنَ ٱللَّهِ كَمَنۢ بَآءَ بِسَخَطٍ مِّنَ ٱللَّهِ وَمَأْوَىٰهُ جَهَنَّمُ ۚ وَبِئْسَ ٱلْمَصِيرُ

Transliteration afamani ittabaʿa riḍ'wāna l-lahi kaman bāa bisakhaṭin mina l-lahi wamawāhu jahannamu wabi'sa l-maṣīru

Kannada ಅಲ್ಲಾಹನ ಸಂತೃಪ್ತಿಯನ್ನು ಹಿಂಬಾಲಿಸಿದವನು ಅಲ್ಲಾಹನ ಕ್ರೋಧ ಪಡೆದು ವಾಪಾಸಾದವನಂತೆ ಆಗುವನೆ ? ಅವನ ನಿವಾಸವು ನರಕವಾಗಿರುವುದು. ಅದೆಷ್ಟು ನಿಕೃಷ್ಟ ವಾಸಸ್ಥಾನ !

Verse 163

هُمْ دَرَجَـٰتٌ عِندَ ٱللَّهِ ۗ وَٱللَّهُ بَصِيرٌۢ بِمَا يَعْمَلُونَ

Transliteration hum darajātun ʿinda l-lahi wal-lahu baṣīrun bimā yaʿmalūna

Kannada ಅವರು (ಈ ಎರಡು ತರದವರು) ಅಲ್ಲಾಹನ ಬಳಿ ವಿಭಿನ್ನ ದರ್ಜೆಗಳಲ್ಲಿರುವವರು. ಅವರು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಕಾಣುವವನಾಗಿರುತ್ತಾನೆ.

Verse 164

لَقَدْ مَنَّ ٱللَّهُ عَلَى ٱلْمُؤْمِنِينَ إِذْ بَعَثَ فِيهِمْ رَسُولًا مِّنْ أَنفُسِهِمْ يَتْلُوا۟ عَلَيْهِمْ ءَايَـٰتِهِۦ وَيُزَكِّيهِمْ وَيُعَلِّمُهُمُ ٱلْكِتَـٰبَ وَٱلْحِكْمَةَ وَإِن كَانُوا۟ مِن قَبْلُ لَفِى ضَلَـٰلٍ مُّبِينٍ

Transliteration laqad manna l-lahu ʿalā l-mu'minīna idh baʿatha fīhim rasūlan min anfusihim yatlū ʿalayhim āyātihi wayuzakkīhim wayuʿallimuhumu l-kitāba wal-ḥik'mata wa-in kānū min qablu lafī ḍalālin mubīnin

Kannada ಸತ್ಯವಿಶ್ವಾಸಿಗಳಿಗೆ ಅವರಿಂದಲೇ ಒಬ್ಬ ದೂತರನ್ನು ನಿಯೋಗಿಸುವ ಮೂಲಕ ಅಲ್ಲಾಹನು ಖಂಡಿತವಾಗಿಯೂ ಬಲು ದೊಡ್ಡ ಉಪಕಾರವನ್ನು ಮಾಡಿದ್ದಾನೆ. ಆ ದೂತರು ಅವರಿಗೆ ಆತನ ವಚನಗಳನ್ನು ಓದಿ ಹೇಳುತ್ತಾರಲ್ಲದೆ ಅವರನ್ನು ಸಂಸ್ಕರಿಸುತ್ತಾರೆ. ಅವರಿಗೆ ಗ್ರಂಥವನ್ನೂ ತತ್ವಜ್ಞಾನವನ್ನೂ ಕಲಿಸುತ್ತಾರೆ. ಇದಕ್ಕೆ (ದೂತರ ಆಗಮನಕ್ಕೆ) ಮುನ್ನ ಅವರು ನಿಜವಾಗಿಯೂ ಸ್ಪಷ್ಟ ದಾರಿಗೇಡಿ ನಲ್ಲಿದ್ದರು.

Verse 165

أَوَلَمَّآ أَصَـٰبَتْكُم مُّصِيبَةٌ قَدْ أَصَبْتُم مِّثْلَيْهَا قُلْتُمْ أَنَّىٰ هَـٰذَا ۖ قُلْ هُوَ مِنْ عِندِ أَنفُسِكُمْ ۗ إِنَّ ٱللَّهَ عَلَىٰ كُلِّ شَىْءٍ قَدِيرٌ

Transliteration awalammā aṣābatkum muṣībatun qad aṣabtum mith'layhā qul'tum annā hādhā qul huwa min ʿindi anfusikum inna l-laha ʿalā kulli shayin qadīrun

Kannada ನಿಮಗೆ (ಉಹ್ದ್‍ನಲ್ಲಿ) ಒಂದು ವಿಪತ್ತು ಸಂಭವಿ ಸಿದ್ದರೂ ನೀವು ಅದರ ಇಮ್ಮಡಿಯಾಗಿ ಅವರಿಗೆ (ಬದ್ರ್‍ನಲ್ಲಿ) ಕೊಟ್ಟಿದ್ದೀರಿ. (ಹಾಗಿದ್ದೂ) ಇದು ಹೇಗೆ ಸಂಭವಿಸಿತೆಂದು ಕೇಳುತ್ತಿದ್ದೀರಾ? ಹೇಳಿರಿ; ಇದು ನಿಮ್ಮಿಂದಲೇ ಬಂದಿದೆ. ಅಲ್ಲಾಹನು ಸರ್ವ ಸಮರ್ಥ ನಾಗಿರುವನು.

Verse 166

وَمَآ أَصَـٰبَكُمْ يَوْمَ ٱلْتَقَى ٱلْجَمْعَانِ فَبِإِذْنِ ٱللَّهِ وَلِيَعْلَمَ ٱلْمُؤْمِنِينَ

Transliteration wamā aṣābakum yawma l-taqā l-jamʿāni fabi-idh'ni l-lahi waliyaʿlama l-mu'minīna

Kannada ಎರಡು ತಂಡಗಳು ಎದುರುಗೊಂಡ ದಿನದಂದು (ಉಹ್ದ್‍ನಲ್ಲಿ) ನಿಮಗೆ ಸಂಭವಿಸಿದ್ದು ಅಲ್ಲಾಹನ ವಿಧಿ ಪ್ರಕಾರವಾಗಿದ್ದು ಸತ್ಯವಿಶ್ವಾಸಿಗಳನ್ನು (ಬೇರ್ಪಡಿಸಿ) ತಿಳಿಯಲಿಕ್ಕಾಗಿದೆ.

Verse 167

وَلِيَعْلَمَ ٱلَّذِينَ نَافَقُوا۟ ۚ وَقِيلَ لَهُمْ تَعَالَوْا۟ قَـٰتِلُوا۟ فِى سَبِيلِ ٱللَّهِ أَوِ ٱدْفَعُوا۟ ۖ قَالُوا۟ لَوْ نَعْلَمُ قِتَالًا لَّٱتَّبَعْنَـٰكُمْ ۗ هُمْ لِلْكُفْرِ يَوْمَئِذٍ أَقْرَبُ مِنْهُمْ لِلْإِيمَـٰنِ ۚ يَقُولُونَ بِأَفْوَٰهِهِم مَّا لَيْسَ فِى قُلُوبِهِمْ ۗ وَٱللَّهُ أَعْلَمُ بِمَا يَكْتُمُونَ

Transliteration waliyaʿlama alladhīna nāfaqū waqīla lahum taʿālaw qātilū fī sabīli l-lahi awi id'faʿū qālū law naʿlamu qitālan la-ittabaʿnākum hum lil'kuf'ri yawma-idhin aqrabu min'hum lil'īmāni yaqūlūna bi-afwāhihim mā laysa fī qulūbihim wal-lahu aʿlamu bimā yaktumūna

Kannada ಮತ್ತು ಕಪಟಿಗಳನ್ನು ಅವನು (ವಿಂಗಡಿಸಿ) ಅರಿಯಲೂ ಆಗಿದೆ. ‘ಬನ್ನಿ! ಅಲ್ಲಾಹನ ಮಾರ್ಗ ದಲ್ಲಿ ಯುದ್ದ ಮಾಡಿರಿ. ಇಲ್ಲವೆ ಪ್ರತಿರೋಧಿಸಿರಿ' ಎಂದು ಅವರಲ್ಲಿ ಆದೇಶಿಸಿದಾಗ, ಯುದ್ಧವನ್ನು ನಾವು ಬಲ್ಲವರಾಗಿದ್ದರೆ ನಾವು ನಿಮ್ಮ ಹಿಂದೆ ಬರುತ್ತಿದ್ದೆವು ಎಂದವರು ಹೇಳಿದರು. ಅಂದು ಅವರು ಸತ್ಯವಿಶ್ವಾಸಕ್ಕಿಂತ ಹೆಚ್ಚಾಗಿ ಅವಿಶ್ವಾಸಕ್ಕೆ ನಿಕಟವಾಗಿದ್ದರು. ಅವರ ಮನಸ್ಸಲ್ಲಿ ಇಲ್ಲದಿದ್ದು ದನ್ನು ಅವರ ಬಾಯಿಂದ ಹೇಳುತ್ತಿದ್ದರು. ಅವರು ಮರೆಮಾಚುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುವವ ನಾಗಿರುತ್ತಾನೆ.

Verse 168

ٱلَّذِينَ قَالُوا۟ لِإِخْوَٰنِهِمْ وَقَعَدُوا۟ لَوْ أَطَاعُونَا مَا قُتِلُوا۟ ۗ قُلْ فَٱدْرَءُوا۟ عَنْ أَنفُسِكُمُ ٱلْمَوْتَ إِن كُنتُمْ صَـٰدِقِينَ

Transliteration alladhīna qālū li-ikh'wānihim waqaʿadū law aṭāʿūnā mā qutilū qul fa-id'raū ʿan anfusikumu l-mawta in kuntum ṣādiqīna

Kannada ಅವರು (ಕಪಟಿಗಳು) ಕುಳಿತು ಬಿಟ್ಟು (ಯುದ್ಧಕ್ಕೆ ಹೋದ) ತಮ್ಮ ಸಹೋದರರ ಬಗ್ಗೆ; `ನಮ್ಮ ಮಾತನ್ನು ಅವರು ಕೇಳಿದ್ದರೆ ಕೊಲೆಯಾಗುತ್ತಿರಲಿಲ್ಲ’ ಎಂದು ಹೇಳಿದವರು. ನೀವು ಹೇಳಿರಿ; `ನೀವು ಸತ್ಯವಾದಿಗಳಾಗಿದ್ದರೆ ನಿಮ್ಮ ಸ್ವಂತ ದೇಹಗ

Verse 169

وَلَا تَحْسَبَنَّ ٱلَّذِينَ قُتِلُوا۟ فِى سَبِيلِ ٱللَّهِ أَمْوَٰتًۢا ۚ بَلْ أَحْيَآءٌ عِندَ رَبِّهِمْ يُرْزَقُونَ

Transliteration walā taḥsabanna alladhīna qutilū fī sabīli l-lahi amwātan bal aḥyāon ʿinda rabbihim yur'zaqūna

Kannada ಅಲ್ಲಾಹನ ಮಾರ್ಗದಲ್ಲಿ ವಧಿಸಲ್ಪಟ್ಟವರನ್ನು ಮರಣ ಹೊಂದಿದವರೆಂದು ನೀವು ಖಂಡಿತ ಭಾವಿಸಬಾರದು. ಅವರು ತಮ್ಮ ಪ್ರಭುವಿನ ಬಳಿ ಜೀವಂತವಾಗಿದ್ದಾರೆ. ಅವರಿಗೆ ಆಹಾರ ಕೊಡಲಾಗುತ್ತಿದೆ .

Verse 170

فَرِحِينَ بِمَآ ءَاتَىٰهُمُ ٱللَّهُ مِن فَضْلِهِۦ وَيَسْتَبْشِرُونَ بِٱلَّذِينَ لَمْ يَلْحَقُوا۟ بِهِم مِّنْ خَلْفِهِمْ أَلَّا خَوْفٌ عَلَيْهِمْ وَلَا هُمْ يَحْزَنُونَ

Transliteration fariḥīna bimā ātāhumu l-lahu min faḍlihi wayastabshirūna bi-alladhīna lam yalḥaqū bihim min khalfihim allā khawfun ʿalayhim walā hum yaḥzanūna

Kannada ಅಲ್ಲಾಹನು ತನ್ನ ಔದಾರ್ಯದಿಂದ ಅವರಿಗೆ ಕೊಟ್ಟಿರುವುದರಲ್ಲಿ ಅವರು ಸಂತುಷ್ಟರಾಗಿರುವರು. ತಮ್ಮ ಹಿಂದಿನಿಂದ ಅವರತ್ತ ತಲುಪದಿರುವವರ ಬಗೆಗೆ ಅವರಿಗೇನೂ ಭಯಪಡಲಿಕ್ಕಾಗಲಿ, ದುಃಖಿಸಲಿಕ್ಕಾಗಲಿ ಇರುವುದಿಲ್ಲವೆಂದು ಅವರು ಸಂತೋಷಪಡುತ್ತಾರೆ.

Verse 171

۞ يَسْتَبْشِرُونَ بِنِعْمَةٍ مِّنَ ٱللَّهِ وَفَضْلٍ وَأَنَّ ٱللَّهَ لَا يُضِيعُ أَجْرَ ٱلْمُؤْمِنِينَ

Transliteration yastabshirūna biniʿ'matin mina l-lahi wafaḍlin wa-anna l-laha lā yuḍīʿu ajra l-mu'minīna

Kannada ಅಲ್ಲಾಹನ ಕಡೆಯ ಅನುಗ್ರಹ ಮತ್ತು ಔದಾರ್ಯ ದಲ್ಲಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ವ್ಯರ್ಥಗೊಳಿಸಲಾರನು ಎನ್ನುವುದರಲ್ಲಿಯೂ ಅವರು ಆಹ್ಲಾದಗೊಳ್ಳುತ್ತಾರೆ.

Verse 172

ٱلَّذِينَ ٱسْتَجَابُوا۟ لِلَّهِ وَٱلرَّسُولِ مِنۢ بَعْدِ مَآ أَصَابَهُمُ ٱلْقَرْحُ ۚ لِلَّذِينَ أَحْسَنُوا۟ مِنْهُمْ وَٱتَّقَوْا۟ أَجْرٌ عَظِيمٌ

Transliteration alladhīna is'tajābū lillahi wal-rasūli min baʿdi mā aṣābahumu l-qarḥu lilladhīna aḥsanū min'hum wa-ittaqaw ajrun ʿaẓīmun

Kannada ಇನ್ನು (ಉಹ್ದ್‍ನಲ್ಲಿ) ಗಾಯಗೊಂಡ ಬಳಿಕವೂ ಅಲ್ಲಾಹು ಮತ್ತು ರಸೂಲರ ಕರೆಗೆ ಓಗೊಟ್ಟವರು . ಅವರ ಪೈಕಿ ಸತ್ಕರ್ಮಿಗಳು ಹಾಗೂ ದೋಷ ಬಾಧೆಯ ಬಗ್ಗೆ ಎಚ್ಚರಿಕೆ ವಹಿಸಿದವರಿಗೆ ಮಹತ್ತಾದ ಪ್ರತಿಫಲವಿದೆ.

Verse 173

ٱلَّذِينَ قَالَ لَهُمُ ٱلنَّاسُ إِنَّ ٱلنَّاسَ قَدْ جَمَعُوا۟ لَكُمْ فَٱخْشَوْهُمْ فَزَادَهُمْ إِيمَـٰنًا وَقَالُوا۟ حَسْبُنَا ٱللَّهُ وَنِعْمَ ٱلْوَكِيلُ

Transliteration alladhīna qāla lahumu l-nāsu inna l-nāsa qad jamaʿū lakum fa-ikh'shawhum fazādahum īmānan waqālū ḥasbunā l-lahu waniʿ'ma l-wakīlu

Kannada (ಮಕ್ಕಾದ ಶತ್ರುಗಳಾದ) `ಜನರು ನಿಮ್ಮ ವಿರುದ್ಧ ಒಗ್ಗಟ್ಟಾಗಿದ್ದಾರೆ. ಆದ್ದರಿಂದ ನೀವು ಅವರಿಗೆ ಭಯಪಡಿರಿ' ಎಂದು ಜನರು ಅವರಿಗೆ ಹೇಳಿದರು. ಅದು ಅವರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. ‘ನಮಗೆ ಅಲ್ಲಾಹು ಸಾಕು, ಭರವಸೆ ಇಡಲು ಅವನು ಎಷ್ಟೊಂದು ಉತ್ತಮನು!’ ಎಂದು ಅವರು ಹೇಳಿದರು.

Verse 174

فَٱنقَلَبُوا۟ بِنِعْمَةٍ مِّنَ ٱللَّهِ وَفَضْلٍ لَّمْ يَمْسَسْهُمْ سُوٓءٌ وَٱتَّبَعُوا۟ رِضْوَٰنَ ٱللَّهِ ۗ وَٱللَّهُ ذُو فَضْلٍ عَظِيمٍ

Transliteration fa-inqalabū biniʿ'matin mina l-lahi wafaḍlin lam yamsashum sūon wa-ittabaʿū riḍ'wāna l-lahi wal-lahu dhū faḍlin ʿaẓīmin

Kannada ಹಾಗೆ ಅವರು ಅಲ್ಲಾಹನ ಕಡೆಯಿಂದ ಅನುಗ್ರಹ ಮತ್ತು ಔದಾರ್ಯದೊಂದಿಗೆ ಮರಳಿದರು. ಅವರಿಗೆ ಯಾವ ಹಾನಿಯೂ ತಟ್ಟಲಿಲ್ಲ. ಅವರು ಅಲ್ಲಾಹನ ಸಂತೃಪ್ತಿಯನ್ನು ಅನುಸರಿಸಿದರು. ಅಲ್ಲಾಹನು ಭಾರೀ ಔದಾರ್ಯವುಳ್ಳವನಾಗಿರುವನು.

Verse 175

إِنَّمَا ذَٰلِكُمُ ٱلشَّيْطَـٰنُ يُخَوِّفُ أَوْلِيَآءَهُۥ فَلَا تَخَافُوهُمْ وَخَافُونِ إِن كُنتُم مُّؤْمِنِينَ

Transliteration innamā dhālikumu l-shayṭānu yukhawwifu awliyāahu falā takhāfūhum wakhāfūni in kuntum mu'minīna

Kannada ಖಂಡಿತವಾಗಿಯೂ ಶೈತಾನನು, ತನ್ನ ಮಿತ್ರರ ಬಗ್ಗೆ ಭೀತಿ ಹುಟ್ಟಿಸುತ್ತಾನೆ. ಆದ್ದರಿಂದ ನೀವು ಅವರಿಗೆ ಹೆದರಬೇಡಿರಿ. ನೀವು ಸತ್ಯವಿಶ್ವಾಸಿಗಳಾ ಗಿದ್ದರೆ ನನಗೆ ಭಯಪಡಿರಿ.

Verse 176

وَلَا يَحْزُنكَ ٱلَّذِينَ يُسَـٰرِعُونَ فِى ٱلْكُفْرِ ۚ إِنَّهُمْ لَن يَضُرُّوا۟ ٱللَّهَ شَيْـًٔا ۗ يُرِيدُ ٱللَّهُ أَلَّا يَجْعَلَ لَهُمْ حَظًّا فِى ٱلْـَٔاخِرَةِ ۖ وَلَهُمْ عَذَابٌ عَظِيمٌ

Transliteration walā yaḥzunka alladhīna yusāriʿūna fī l-kuf'ri innahum lan yaḍurrū l-laha shayan yurīdu l-lahu allā yajʿala lahum ḥaẓẓan fī l-ākhirati walahum ʿadhābun ʿaẓīmun

Kannada ಅವಿಶ್ವಾಸಕ್ಕೆ ಧಾವಿಸಿ ಹೋಗುತ್ತಿರುವವರು ನಿಮಗೆ ದುಃಖವನ್ನುಂಟುಮಾಡದಿರಲಿ. ಅವರು ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರರು. ಅವರಿಗೆ ಪರಲೋಕದಲ್ಲಿ ಯಾವುದೇ ಪಾಲು ಕೊಡದಿರಲು ಅಲ್ಲಾಹು ಉದ್ದೇಶಿಸಿದ್ದಾನೆ. ಅವರಿಗೆ ಕಠೋರ ಶಿಕ್ಷೆ ಕಾದಿದೆ.

Verse 177

إِنَّ ٱلَّذِينَ ٱشْتَرَوُا۟ ٱلْكُفْرَ بِٱلْإِيمَـٰنِ لَن يَضُرُّوا۟ ٱللَّهَ شَيْـًٔا وَلَهُمْ عَذَابٌ أَلِيمٌ

Transliteration inna alladhīna ish'tarawū l-kuf'ra bil-īmāni lan yaḍurrū l-laha shayan walahum ʿadhābun alīmun

Kannada ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಕೊಂಡುಕೊಂಡವರು ಖಂಡಿತ ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರರು. ಅವರಿಗೆ ಯಾತನಾಮಯ ಶಿಕ್ಷೆಯು ಕಾದಿದೆ.

Verse 178

وَلَا يَحْسَبَنَّ ٱلَّذِينَ كَفَرُوٓا۟ أَنَّمَا نُمْلِى لَهُمْ خَيْرٌ لِّأَنفُسِهِمْ ۚ إِنَّمَا نُمْلِى لَهُمْ لِيَزْدَادُوٓا۟ إِثْمًا ۚ وَلَهُمْ عَذَابٌ مُّهِينٌ

Transliteration walā yaḥsabanna alladhīna kafarū annamā num'lī lahum khayrun li-anfusihim innamā num'lī lahum liyazdādū ith'man walahum ʿadhābun muhīnun

Kannada ಸತ್ಯನಿಷೇಧಿಗಳಿಗೆ ನಾವು ಸಡಿಲು ಬಿಟ್ಟು ಕೊಡುತ್ತಿರುವುದು ಅವರಿಗೆ ಹಿತವೆಂದು ಅವರು ಖಂಡಿತ ಭಾವಿಸಬಾರದು. ನಾವು ಅವರ ಪಾಪ ಹೆಚ್ಚಿಸಲೆಂದೇ ಅವರಿಗೆ ಕಾಲಾವಕಾಶ ಕೊಡುತ್ತಿದ್ದೇವೆ. ಅವರಿಗೆ ಅಪಮಾನಕರವಾದ ಶಿಕ್ಷೆ ಕಾದಿದೆ.

Verse 179

مَّا كَانَ ٱللَّهُ لِيَذَرَ ٱلْمُؤْمِنِينَ عَلَىٰ مَآ أَنتُمْ عَلَيْهِ حَتَّىٰ يَمِيزَ ٱلْخَبِيثَ مِنَ ٱلطَّيِّبِ ۗ وَمَا كَانَ ٱللَّهُ لِيُطْلِعَكُمْ عَلَى ٱلْغَيْبِ وَلَـٰكِنَّ ٱللَّهَ يَجْتَبِى مِن رُّسُلِهِۦ مَن يَشَآءُ ۖ فَـَٔامِنُوا۟ بِٱللَّهِ وَرُسُلِهِۦ ۚ وَإِن تُؤْمِنُوا۟ وَتَتَّقُوا۟ فَلَكُمْ أَجْرٌ عَظِيمٌ

Transliteration mā kāna l-lahu liyadhara l-mu'minīna ʿalā mā antum ʿalayhi ḥattā yamīza l-khabītha mina l-ṭayibi wamā kāna l-lahu liyuṭ'liʿakum ʿalā l-ghaybi walākinna l-laha yajtabī min rusulihi man yashāu faāminū bil-lahi warusulihi wa-in tu'minū watattaqū falakum ajrun ʿaẓīmun

Kannada ವಿಶುದ್ಧರಿಂದ ಅಶುದ್ಧರನ್ನು ಬೇರ್ಪಡಿಸದೆ ಸತ್ಯವಿಶ್ವಾಸಿಗಳನ್ನು ನಿಮ್ಮ ಇಂದಿನ ಸ್ಥಿತಿಯಲ್ಲಿ ಅಲ್ಲಾಹು ಉಳಿಸುವುದಿಲ್ಲ. ಅದೃಶ್ಯಕಾರ್ಯಗಳನ್ನು ಅಲ್ಲಾಹು ನಿಮಗೆ ಬಹಿರಂಗಗೊಳಿಸಿ ಕೊಡುವುದೂ ಇಲ್ಲ. ಆದರೆ ತನ್ನ ದೂತರಿಂದ ತಾನುದ್ದೇಶಿಸು ವವರನ್ನು ಅಲ್ಲಾಹು ಆರಿಸಿಕೊಳ್ಳುತ್ತಾನೆ. ಆದ್ದರಿಂದ ಅಲ್ಲಾಹು ಮತ್ತು ಅವನ ರಸೂಲರಲ್ಲಿ ವಿಶ್ವಾಸ ಇಡಿರಿ. ನೀವು ವಿಶ್ವಾಸವಿಟ್ಟರೆ, ದೇವ ಭಕ್ತಿ ಇರಿಸಿದರೆ ನಿಮಗೆ ಮಹತ್ತರವಾದ ಪ್ರತಿಫಲವಿದೆ.

Verse 180

وَلَا يَحْسَبَنَّ ٱلَّذِينَ يَبْخَلُونَ بِمَآ ءَاتَىٰهُمُ ٱللَّهُ مِن فَضْلِهِۦ هُوَ خَيْرًا لَّهُم ۖ بَلْ هُوَ شَرٌّ لَّهُمْ ۖ سَيُطَوَّقُونَ مَا بَخِلُوا۟ بِهِۦ يَوْمَ ٱلْقِيَـٰمَةِ ۗ وَلِلَّهِ مِيرَٰثُ ٱلسَّمَـٰوَٰتِ وَٱلْأَرْضِ ۗ وَٱللَّهُ بِمَا تَعْمَلُونَ خَبِيرٌ

Transliteration walā yaḥsabanna alladhīna yabkhalūna bimā ātāhumu l-lahu min faḍlihi huwa khayran lahum bal huwa sharrun lahum sayuṭawwaqūna mā bakhilū bihi yawma l-qiyāmati walillahi mīrāthu l-samāwāti wal-arḍi wal-lahu bimā taʿmalūna khabīrun

Kannada ಅಲ್ಲಾಹನು ತನ್ನ ಔದಾರ್ಯದಿಂದ ಕೊಟ್ಟಂತಹ ಧನದಲ್ಲಿ ಜಿಪುಣತೆ ತೋರುವವರು ಈ ಜಿಪುಣತನವು ಅವರಿಗೆ ಒಳ್ಳೆಯದೆಂದು ಖಂಡಿತ ಭಾವಿಸಬಾರದು. ಪರಂತು, ಅದವರಿಗೆ ಬಹಳ ದೋಷಕರವಾಗಿದೆ. ಅವರು ಲೋಭ ತೋರಿಸಿದ ಧನವನ್ನು ಪುನರುತ್ಥಾನ ದಿನದಲ್ಲಿ ಅವರ ಕೊರಳಿಗೆ ಮಾಲೆ ಹಾಕಲಾಗುವುದು . ಆಕಾಶಗಳು ಮತ್ತು ಭೂಮಿಯ ಅಧಿಕಾರ ಅಲ್ಲಾಹನದ್ದು. ನಿಮ್ಮ ಪ್ರವೃತ್ತಿಗಳ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞಾನಿಯಾಗಿರುತ್ತಾನೆ.

Verse 181

لَّقَدْ سَمِعَ ٱللَّهُ قَوْلَ ٱلَّذِينَ قَالُوٓا۟ إِنَّ ٱللَّهَ فَقِيرٌ وَنَحْنُ أَغْنِيَآءُ ۘ سَنَكْتُبُ مَا قَالُوا۟ وَقَتْلَهُمُ ٱلْأَنۢبِيَآءَ بِغَيْرِ حَقٍّ وَنَقُولُ ذُوقُوا۟ عَذَابَ ٱلْحَرِيقِ

Transliteration laqad samiʿa l-lahu qawla alladhīna qālū inna l-laha faqīrun wanaḥnu aghniyāu sanaktubu mā qālū waqatlahumu l-anbiyāa bighayri ḥaqqin wanaqūlu dhūqū ʿadhāba l-ḥarīqi

Kannada `ಅಲ್ಲಾಹು ಬಡವನಾಗಿರುವನು. ನಾವು ಧನಿಕರಾಗಿದ್ದೇವೆ' ಎಂದು ಹೇಳುವವರ ಮಾತನ್ನು ಅಲ್ಲಾಹು ಖಂಡಿತ ಆಲಿಸಿರುತ್ತಾನೆ. ಅವರ ಈ ಹೇಳಿಕೆಯನ್ನೂ ಅನ್ಯಾಯವಾಗಿ ಅವರು ಪ್ರವಾದಿಗಳನ್ನು ವಧಿಸಿದ್ದನ್ನೂ ನಾವು ದಾಖಲೆಗೊಳಿಸಿಡುತ್ತೇವೆ. ‘ಕರಟಿಸುವ(ನರಕದ) ಶಿಕ್ಷೆಯ ರುಚಿ ನೋಡಿರಿ’ ಎಂದು ನಾವು ಅವರಲ್ಲಿ ಹೇಳಲಿದ್ದೇವೆ.

Verse 182

ذَٰلِكَ بِمَا قَدَّمَتْ أَيْدِيكُمْ وَأَنَّ ٱللَّهَ لَيْسَ بِظَلَّامٍ لِّلْعَبِيدِ

Transliteration dhālika bimā qaddamat aydīkum wa-anna l-laha laysa biẓallāmin lil'ʿabīdi

Kannada ಅದು (ಈ ಶಿಕ್ಷೆ) ನಿಮ್ಮ ಕೈಗಳು ಮಾಡಿದುದರ ಫಲ. ಅಲ್ಲಾಹು ತನ್ನ ದಾಸರಿಗೆ ಯಾವತ್ತೂ ಖಂಡಿತ ಅನ್ಯಾಯವೆಸಗುವವನಲ್ಲ.

Verse 183

ٱلَّذِينَ قَالُوٓا۟ إِنَّ ٱللَّهَ عَهِدَ إِلَيْنَآ أَلَّا نُؤْمِنَ لِرَسُولٍ حَتَّىٰ يَأْتِيَنَا بِقُرْبَانٍ تَأْكُلُهُ ٱلنَّارُ ۗ قُلْ قَدْ جَآءَكُمْ رُسُلٌ مِّن قَبْلِى بِٱلْبَيِّنَـٰتِ وَبِٱلَّذِى قُلْتُمْ فَلِمَ قَتَلْتُمُوهُمْ إِن كُنتُمْ صَـٰدِقِينَ

Transliteration alladhīna qālū inna l-laha ʿahida ilaynā allā nu'mina lirasūlin ḥattā yatiyanā biqur'bānin takuluhu l-nāru qul qad jāakum rusulun min qablī bil-bayināti wabi-alladhī qul'tum falima qataltumūhum in kuntum ṣādiqīna

Kannada ‘ಬಲಿಯನ್ನು ನಮ್ಮ ಮುಂದಿರಿಸಿ ಆ ಬಲಿಯನ್ನು ಅಗ್ನಿ ತಿನ್ನುವವರೆಗೆ ಯವುದೇ ಪ್ರವಾದಿಯ ಮೇಲೆ ನಾವು ನಂಬಿಕೆ ಇರಿಸಬಾರದೆಂದು ಅಲ್ಲಾಹು ನಮ್ಮಲ್ಲಿ ಕರಾರು ಮಾಡಿರುತ್ತಾನೆ’ ಎಂದು ಹೇಳಿದವರೊಡನೆ ನೀವು ಹೇಳಿರಿ; ‘ನನಗೆ ಮೊದಲು ಅದೆಷ್ಟೋ ಪ್ರವಾದಿಗಳು ಸ್ಪಷ್ಟ ಪುರಾವೆಗಳನ್ನೂ ನೀವು ಹೇಳಿದ್ದನ್ನೂ ನಿಮ್ಮಲ್ಲಿಗೆ ತಂದಿದ್ದಾರೆ. ನೀವು ಸತ್ಯವಾದಿಗಳಾಗಿದ್ದರೆ ಯಾಕೆ ಅವರನ್ನು ಹತ್ಯೆ ಮಾಡಿದಿರಿ?’

Verse 184

فَإِن كَذَّبُوكَ فَقَدْ كُذِّبَ رُسُلٌ مِّن قَبْلِكَ جَآءُو بِٱلْبَيِّنَـٰتِ وَٱلزُّبُرِ وَٱلْكِتَـٰبِ ٱلْمُنِيرِ

Transliteration fa-in kadhabūka faqad kudhiba rusulun min qablika jāū bil-bayināti wal-zuburi wal-kitābi l-munīri

Kannada ಅವರು ನಿಮ್ಮನ್ನು ನಿಷೇಧಿಸಿದರೆ (ನೀವು ದುಃಖಿಸ ಬೇಡಿರಿ; ಯಾಕೆಂದರೆ) ನಿಮ್ಮ ಮೊದಲು ವ್ಯಕ್ತ ಪುರಾವೆಗಳೊಂದಿಗೂ, ವೇದ ಪುಸ್ತಕಗಳು ಹಾಗೂ ಬೆಳಕು ಬೀರುತ್ತಿರುವ ಗ್ರಂಥದೊಂದಿಗೂ ಬಂದಿದ್ದ ಅನೇಕ ಪ್ರವಾದಿಗಳನ್ನು ಇವರು ನಿಷೇಧಿಸಿರುತ್ತಾರೆ.

Verse 185

كُلُّ نَفْسٍ ذَآئِقَةُ ٱلْمَوْتِ ۗ وَإِنَّمَا تُوَفَّوْنَ أُجُورَكُمْ يَوْمَ ٱلْقِيَـٰمَةِ ۖ فَمَن زُحْزِحَ عَنِ ٱلنَّارِ وَأُدْخِلَ ٱلْجَنَّةَ فَقَدْ فَازَ ۗ وَمَا ٱلْحَيَوٰةُ ٱلدُّنْيَآ إِلَّا مَتَـٰعُ ٱلْغُرُورِ

Transliteration kullu nafsin dhāiqatu l-mawti wa-innamā tuwaffawna ujūrakum yawma l-qiyāmati faman zuḥ'ziḥa ʿani l-nāri wa-ud'khila l-janata faqad fāza wamā l-ḥayatu l-dun'yā illā matāʿu l-ghurūri

Kannada ಎಲ್ಲ ದೇಹವೂ ಮರಣವನ್ನು ಸವಿಯುವುದು. ನಿಮ್ಮ ಪ್ರತಿಫಲಗಳನ್ನು ಪುನರುತ್ಥಾನ ದಿನದಂದು ನಿಮಗೆ ಪೂರ್ತಿಯಾಗಿ ಕೊಡಲಾಗುತ್ತದೆ. ಅಂದು ಯಾರನ್ನು ನರಕದಿಂದ ದೂರ ಮಾಡಲಾಗುವುದೋ ಹಾಗೂ ಯಾರಿಗೆ ಸ್ವರ್ಗಕ್ಕೆ ಪ್ರವೇಶಗೊಡಲಾಗುವುದೋ ಖಂಡಿತವಾಗಿಯೂ ಅವನು ಜಯಶಾಲಿಯಾದನು. ಐಹಿಕ ಜೀವನವು ಖಂಡಿತವಾಗಿಯೂ ವಂಚನೆಯ ಸರಕಾಗಿರುತ್ತದೆ.

Verse 186

۞ لَتُبْلَوُنَّ فِىٓ أَمْوَٰلِكُمْ وَأَنفُسِكُمْ وَلَتَسْمَعُنَّ مِنَ ٱلَّذِينَ أُوتُوا۟ ٱلْكِتَـٰبَ مِن قَبْلِكُمْ وَمِنَ ٱلَّذِينَ أَشْرَكُوٓا۟ أَذًى كَثِيرًا ۚ وَإِن تَصْبِرُوا۟ وَتَتَّقُوا۟ فَإِنَّ ذَٰلِكَ مِنْ عَزْمِ ٱلْأُمُورِ

Transliteration latub'lawunna fī amwālikum wa-anfusikum walatasmaʿunna mina alladhīna ūtū l-kitāba min qablikum wamina alladhīna ashrakū adhan kathīran wa-in taṣbirū watattaqū fa-inna dhālika min ʿazmi l-umūri

Kannada ಖಂಡಿತವಾಗಿಯೂ ನೀವು ನಿಮ್ಮ ಧನ ಮತ್ತು ನಿಮ್ಮ ದೇಹಗಳಲ್ಲಿ ಪರೀಕ್ಷೆಗೊಳಗಾಗುವಿರಿ. ನಿಮಗೆ ಮೊದಲು ವೇದ ಕೊಡಲ್ಪಟ್ಟವರಿಂದಲೂ ಬಹುದೇವಾರಾಧಕರಿಂದಲೂ ಹೆಚ್ಚು ನೋಯಿಸುವ ಆಕ್ಷೇಪಗಳನ್ನು ನೀವು ಕೇಳಲಿರುವಿರಿ. (ಆಗ) ನೀವು ಸಹನೆ ತೋರಿದರೆ ಮತ್ತು ದೇವ ಭಕ್ತಿ ಅವಲಂಬಿಸಿದರೆ ಖಂಡಿತವಾಗಿಯೂ ಅದು ಕೃತ ನಿಶ್ಚಯದ ಕಾರ್ಯಗಳಿಗೆ ಸೇರಿದೆ.

Verse 187

وَإِذْ أَخَذَ ٱللَّهُ مِيثَـٰقَ ٱلَّذِينَ أُوتُوا۟ ٱلْكِتَـٰبَ لَتُبَيِّنُنَّهُۥ لِلنَّاسِ وَلَا تَكْتُمُونَهُۥ فَنَبَذُوهُ وَرَآءَ ظُهُورِهِمْ وَٱشْتَرَوْا۟ بِهِۦ ثَمَنًا قَلِيلًا ۖ فَبِئْسَ مَا يَشْتَرُونَ

Transliteration wa-idh akhadha l-lahu mīthāqa alladhīna ūtū l-kitāba latubayyinunnahu lilnnāsi walā taktumūnahu fanabadhūhu warāa ẓuhūrihim wa-ish'taraw bihi thamanan qalīlan fabi'sa mā yashtarūna

Kannada ವೇದ ಕೊಡಲ್ಪಟ್ಟವರಿಂದ ಅಲ್ಲಾಹು ಕರಾರು ಮಾಡಿಕೊಂಡ ಸಂದರ್ಭ(ವನ್ನು ಜ್ಞಾಪಿಸಿಕೊಳ್ಳಿರಿ). ನೀವು ಈ ಗ್ರಂಥವನ್ನು ಜನರಿಗೆ ಖಂಡಿತ ವಿವರಿಸಿ ಕೊಡಬೇಕು ; ಅಡಗಿಸಿಡಬಾರದು (ಎಂದಾಗಿತ್ತು ಕರಾರು). ಆದರೆ ಅವರದನ್ನು ತಮ್ಮ ಬೆನ್ನ ಹಿಂದಕ್ಕೆ ಎಸೆದರಲ್ಲದೆ ಅದರ ಬದಲಿಗೆ ತುಚ್ಛ ಬೆಲೆಯನ್ನು ಪಡಕೊಂಡರು ! ಅವರು ಕೊಂಡುಕೊಳ್ಳುವುದು ಎಷ್ಟು ನಿಕೃಷ್ಟವಾದದ್ದು.

Verse 188

لَا تَحْسَبَنَّ ٱلَّذِينَ يَفْرَحُونَ بِمَآ أَتَوا۟ وَّيُحِبُّونَ أَن يُحْمَدُوا۟ بِمَا لَمْ يَفْعَلُوا۟ فَلَا تَحْسَبَنَّهُم بِمَفَازَةٍ مِّنَ ٱلْعَذَابِ ۖ وَلَهُمْ عَذَابٌ أَلِيمٌ

Transliteration lā taḥsabanna alladhīna yafraḥūna bimā ataw wayuḥibbūna an yuḥ'madū bimā lam yafʿalū falā taḥsabannahum bimafāzatin mina l-ʿadhābi walahum ʿadhābun alīmun

Kannada ತಾವು ಮಾಡಿದುದರಲ್ಲಿ ಹೆಮ್ಮೆಪಡುವ ಹಾಗೂ ತಾವು ಮಾಡದವುಗಳಲ್ಲಿ ಪ್ರಶಂಶಿಸಲ್ಪಡಲು ಬಯಸುವವರು ಶಿಕ್ಷೆಯಿಂದ ಸುರಕ್ಷಿತರೆಂದು ಖಂಡಿತ ನೀವು ಭಾವಿಸಬಾರದು. ಅವರಿಗೆ ವೇದನಾಜನಕ ಶಿಕ್ಷೆಯಿದೆ.

Verse 189

وَلِلَّهِ مُلْكُ ٱلسَّمَـٰوَٰتِ وَٱلْأَرْضِ ۗ وَٱللَّهُ عَلَىٰ كُلِّ شَىْءٍ قَدِيرٌ

Transliteration walillahi mul'ku l-samāwāti wal-arḍi wal-lahu ʿalā kulli shayin qadīrun

Kannada ಆಕಾಶಗಳು ಮತ್ತು ಭೂಮಿಯ ಅಧಿಪತ್ಯ ಅಲ್ಲಾಹನದ್ದೇ ಆಗಿದೆ. ಅಲ್ಲಾಹನು ಸರ್ವದರಲ್ಲೂ ಪರಮ ಸಮರ್ಥನಾಗಿರುವನು.

Verse 190

إِنَّ فِى خَلْقِ ٱلسَّمَـٰوَٰتِ وَٱلْأَرْضِ وَٱخْتِلَـٰفِ ٱلَّيْلِ وَٱلنَّهَارِ لَـَٔايَـٰتٍ لِّأُو۟لِى ٱلْأَلْبَـٰبِ

Transliteration inna fī khalqi l-samāwāti wal-arḍi wa-ikh'tilāfi al-layli wal-nahāri laāyātin li-ulī l-albābi

Kannada ನಿಶ್ಚಯವಾಗಿಯೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿ ಹಾಗೂ ರಾತ್ರಿ-ಹಗಲುಗಳ ಬದಲಾವಣೆಯಲ್ಲಿ ಬುದ್ಧಿಯುಳ್ಳವರಿಗೆ ಧಾರಾಳ ದೃಷ್ಟಾಂತಗಳಿವೆ.

Verse 191

ٱلَّذِينَ يَذْكُرُونَ ٱللَّهَ قِيَـٰمًا وَقُعُودًا وَعَلَىٰ جُنُوبِهِمْ وَيَتَفَكَّرُونَ فِى خَلْقِ ٱلسَّمَـٰوَٰتِ وَٱلْأَرْضِ رَبَّنَا مَا خَلَقْتَ هَـٰذَا بَـٰطِلًا سُبْحَـٰنَكَ فَقِنَا عَذَابَ ٱلنَّارِ

Transliteration alladhīna yadhkurūna l-laha qiyāman waquʿūdan waʿalā junūbihim wayatafakkarūna fī khalqi l-samāwāti wal-arḍi rabbanā mā khalaqta hādhā bāṭilan sub'ḥānaka faqinā ʿadhāba l-nāri

Kannada ಅವರು ನಿಂತುಕೊಂಡೂ ಕುಳಿತುಕೊಂಡೂ (ಎಲ್ಲ ಅವಸ್ಥೆಗಳಲ್ಲೂ) ಅಲ್ಲಾಹುವನ್ನು ಸ್ಮರಿಸುವವರಾಗಿದ್ದಾರೆ. ಅವರು ಆಕಾಶಗಳು ಮತ್ತು ಭೂಮಿಯ ಸೃಷ್ಟಿಯ ಬಗ್ಗೆ ಚಿಂತನೆ ಮಾಡುತ್ತಾರೆ. (ಅಲ್ಲದೆ ಅವರು ಹೇಳುತ್ತಾರೆ;) `ನಮ್ಮ ಪ್ರಭೂ ! ಇದೆಲ್ಲವನ್ನೂ ನೀನು ವೃಥಾ ಸೃಷ್ಟಿಸಲಿಲ್ಲ. ನೀನು ಪರಮ ಪರಿಶುದ್ಧನು. ಆದ್ದರಿಂದ ನಮ್ಮನ್ನು ನೀನು ನರಕ ಶಿಕ್ಷೆಯಿಂದ ಪಾರು ಮಾಡು .

Verse 192

رَبَّنَآ إِنَّكَ مَن تُدْخِلِ ٱلنَّارَ فَقَدْ أَخْزَيْتَهُۥ ۖ وَمَا لِلظَّـٰلِمِينَ مِنْ أَنصَارٍ

Transliteration rabbanā innaka man tud'khili l-nāra faqad akhzaytahu wamā lilẓẓālimīna min anṣārin

Kannada ನಮ್ಮ ಪ್ರಭೂ! ಯಾವನನ್ನಾದರೂ ನೀನು ನರಕಕ್ಕೆ ಪ್ರವೇಶ ಮಾಡಿಸುವುದಾದರೆ ಖಂಡಿತವಾಗಿಯೂ ನೀನು ಅವನನ್ನು ತುಂಬ ನಿಂದ್ಯಗೊಳಿಸಿದೆ. ಅಕ್ರಮಿಗಳಿಗೆ ಸಹಾಯಕರಾಗಿ ಯಾರೂ ಇರುವುದೇ ಇಲ್ಲ.

Verse 193

رَّبَّنَآ إِنَّنَا سَمِعْنَا مُنَادِيًا يُنَادِى لِلْإِيمَـٰنِ أَنْ ءَامِنُوا۟ بِرَبِّكُمْ فَـَٔامَنَّا ۚ رَبَّنَا فَٱغْفِرْ لَنَا ذُنُوبَنَا وَكَفِّرْ عَنَّا سَيِّـَٔاتِنَا وَتَوَفَّنَا مَعَ ٱلْأَبْرَارِ

Transliteration rabbanā innanā samiʿ'nā munādiyan yunādī lil'īmāni an āminū birabbikum faāmannā rabbanā fa-igh'fir lanā dhunūbanā wakaffir ʿannā sayyiātinā watawaffanā maʿa l-abrāri

Kannada ನಮ್ಮ ಪ್ರಭೂ! ‘ನಿಮ್ಮ ಪ್ರಭುವಿನಲ್ಲಿ ವಿಶ್ವಾಸ ತಾಳಿರಿ’ ಎಂದು ಸತ್ಯವಿಶ್ವಾಸಕ್ಕೆ ಆಹ್ವಾನ ಕೊಡುವ ಓರ್ವರ ಕರೆಯನ್ನು ನಾವು ಖಂಡಿತವಾಗಿಯೂ ಕೇಳಿಸಿ ಕೊಂಡಿದ್ದೇವೆ. ಹಾಗೂ ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಪ್ರಭುವೇ ! ನಮ್ಮ ಪಾಪಗಳನ್ನು ನಮಗೆ ಕ್ಷಮಿಸು. ನಮ್ಮ ಕೆಡುಕುಗಳನ್ನು ನಮ್ಮಿಂದ ಪರಿಹರಿಸು. ಪುಣ್ಯಾತ್ಮರ ಕೂಟದಲ್ಲಿ ನಮ್ಮನ್ನು ಮರಣಗೊಳಿಸು.

Verse 194

رَبَّنَا وَءَاتِنَا مَا وَعَدتَّنَا عَلَىٰ رُسُلِكَ وَلَا تُخْزِنَا يَوْمَ ٱلْقِيَـٰمَةِ ۗ إِنَّكَ لَا تُخْلِفُ ٱلْمِيعَادَ

Transliteration rabbanā waātinā mā waʿadttanā ʿalā rusulika walā tukh'zinā yawma l-qiyāmati innaka lā tukh'lifu l-mīʿāda

Kannada ನಮ್ಮ ಪ್ರಭೂ! ನಿನ್ನ ಸಂದೇಶವಾಹಕರುಗಳ ಮೂಲಕ ನೀನು ನಮಗೆ ವಾಗ್ದಾನವಿತ್ತುದನ್ನು ನಮಗೆ ದಯಪಾಲಿಸು. ಪುನರುತ್ಥಾನ ದಿನದಂದು ನಮ್ಮನ್ನು ನಿಂದನೆಗೀಡುಮಾಡದಿರು. ನಿಶ್ಚಯ ವಾಗಿಯೂ ನೀನು ವಾಗ್ದಾನವನ್ನು ಮೀರು ವವನಲ್ಲ’.

Verse 195

فَٱسْتَجَابَ لَهُمْ رَبُّهُمْ أَنِّى لَآ أُضِيعُ عَمَلَ عَـٰمِلٍ مِّنكُم مِّن ذَكَرٍ أَوْ أُنثَىٰ ۖ بَعْضُكُم مِّنۢ بَعْضٍ ۖ فَٱلَّذِينَ هَاجَرُوا۟ وَأُخْرِجُوا۟ مِن دِيَـٰرِهِمْ وَأُوذُوا۟ فِى سَبِيلِى وَقَـٰتَلُوا۟ وَقُتِلُوا۟ لَأُكَفِّرَنَّ عَنْهُمْ سَيِّـَٔاتِهِمْ وَلَأُدْخِلَنَّهُمْ جَنَّـٰتٍ تَجْرِى مِن تَحْتِهَا ٱلْأَنْهَـٰرُ ثَوَابًا مِّنْ عِندِ ٱللَّهِ ۗ وَٱللَّهُ عِندَهُۥ حُسْنُ ٱلثَّوَابِ

Transliteration fa-is'tajāba lahum rabbuhum annī lā uḍīʿu ʿamala ʿāmilin minkum min dhakarin aw unthā baʿḍukum min baʿḍin fa-alladhīna hājarū wa-ukh'rijū min diyārihim waūdhū fī sabīlī waqātalū waqutilū la-ukaffiranna ʿanhum sayyiātihim wala-ud'khilannahum jannātin tajrī min taḥtihā l-anhāru thawāban min ʿindi l-lahi wal-lahu ʿindahu ḥus'nu l-thawābi

Kannada ಆಗ ಅವರ ಪ್ರಭುವು ಅವರಿಗೆ ಉತ್ತರವಿತ್ತನು; ನಿಮ್ಮ ಪೈಕಿ ಪುರುಷನಿರಲಿ, ಸ್ತ್ರೀ ಇರಲಿ ಯಾವನೇ ಒಬ್ಬ ಪ್ರವರ್ತಕನ ಪ್ರವೃತ್ತಿಯನ್ನು ನಾನು ನಿಷ್ಫಲ ಗೊಳಿಸುವುದಿಲ್ಲ. ನಿಮ್ಮಲ್ಲಿ ಕೆಲವರು ಮತ್ತೆ ಕೆಲವರಿಂದ ಜನಿಸಿದವರು . ಆದ್ದರಿಂದ (ನನಗಾಗಿ) ಸ್ವದೇಶವನ್ನು ತ್ಯಜಿಸಿದವರು, ಸ್ವಂತ ಮನೆ ಗಳಿಂದ ಹೊರದಬ್ಬಲ್ಪಟ್ಟವರು, ನನ್ನ ಮಾರ್ಗದಲ್ಲಿ ಮರ್ದನ ಕ್ಕೊಳಗಾದವರು, ಯುದ್ಧ ಮಾಡಿದವರು ಹಾಗೂ ಮಡಿದವರಿಗೆಲ್ಲ ಖಂಡಿತ ಅವರ ಪಾಪಗಳನ್ನು ನಾನು ಕ್ಷಮಿಸುವೆನು. ಅಲ್ಲದೆ; ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ಧಾಮಗಳಿಗೆ ಖಂಡಿತವಾಗಿಯೂ ನಾನು ಅವ ರನ್ನು ಪ್ರವೇಶಗೊಳಿಸುವೆನು. (ಇದು) ಅಲ್ಲಾಹನ ಕಡೆಯಿಂದ ಪ್ರತಿಫಲವಾಗಿದೆ. ಉತ್ಕøಷ್ಟ ಪ್ರತಿಫಲ ಇರುವುದು ಅಲ್ಲಾಹನ ಬಳಿ ಮಾತ್ರ.

Verse 196

لَا يَغُرَّنَّكَ تَقَلُّبُ ٱلَّذِينَ كَفَرُوا۟ فِى ٱلْبِلَـٰدِ

Transliteration lā yaghurrannaka taqallubu alladhīna kafarū fī l-bilādi

Kannada ಸತ್ಯನಿಷೇಧಿಗಳು ನಾಡುಗಳಾದ್ಯಂತ ವಿಹರಿಸುತ್ತಿರುವುದು ಯಾವತ್ತೂ ತಮ್ಮನ್ನು ವಂಚನೆಗೀಡು ಮಾಡದಿರಲಿ.

Verse 197

مَتَـٰعٌ قَلِيلٌ ثُمَّ مَأْوَىٰهُمْ جَهَنَّمُ ۚ وَبِئْسَ ٱلْمِهَادُ

Transliteration matāʿun qalīlun thumma mawāhum jahannamu wabi'sa l-mihādu

Kannada (ಇದು) ಬಹಳ ತುಚ್ಛವಾದ ಒಂದು ಜೀವನ ಸುಖ ಮಾತ್ರ. ಆಮೇಲೆ ಅವರ ವಾಸಸ್ಥಾನ ನರಕವಾಗಿದೆ. ಅದು ಎಷ್ಟೊಂದು ನೀಚವಾದ ವಾಸಸ್ಥಾನ !

Verse 198

لَـٰكِنِ ٱلَّذِينَ ٱتَّقَوْا۟ رَبَّهُمْ لَهُمْ جَنَّـٰتٌ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا نُزُلًا مِّنْ عِندِ ٱللَّهِ ۗ وَمَا عِندَ ٱللَّهِ خَيْرٌ لِّلْأَبْرَارِ

Transliteration lākini alladhīna ittaqaw rabbahum lahum jannātun tajrī min taḥtihā l-anhāru khālidīna fīhā nuzulan min ʿindi l-lahi wamā ʿinda l-lahi khayrun lil'abrāri

Kannada ಆದರೆ ತಮ್ಮ ಪ್ರಭುವಿನಲ್ಲಿ ಭಕ್ತಿಯಿರಿಸಿ ಕೊಂಡವರಾರೋ, ಅವರಿಗೆ ಕೆಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗಧಾಮಗಳಿವೆ. ಅದರಲ್ಲಿ ಅವರು ಶಾಶ್ವತರು. ಅದು (ಅವರಿಗೆ) ಅಲ್ಲಾಹನ ಕಡೆಯಿಂದ ಒಂದು ಅತಿಥಿ ಸತ್ಕಾರ. ಅವನ ಬಳಿಯ ಪ್ರತಿಫಲವೇ ಗುಣವಂತರಿಗೆ (ಐಹಿಕ ಸುಖಕ್ಕಿಂತ) ಎಷ್ಟೋ ಉತ್ತಮವಾಗಿದೆ.

Verse 199

وَإِنَّ مِنْ أَهْلِ ٱلْكِتَـٰبِ لَمَن يُؤْمِنُ بِٱللَّهِ وَمَآ أُنزِلَ إِلَيْكُمْ وَمَآ أُنزِلَ إِلَيْهِمْ خَـٰشِعِينَ لِلَّهِ لَا يَشْتَرُونَ بِـَٔايَـٰتِ ٱللَّهِ ثَمَنًا قَلِيلًا ۗ أُو۟لَـٰٓئِكَ لَهُمْ أَجْرُهُمْ عِندَ رَبِّهِمْ ۗ إِنَّ ٱللَّهَ سَرِيعُ ٱلْحِسَابِ

Transliteration wa-inna min ahli l-kitābi laman yu'minu bil-lahi wamā unzila ilaykum wamā unzila ilayhim khāshiʿīna lillahi lā yashtarūna biāyāti l-lahi thamanan qalīlan ulāika lahum ajruhum ʿinda rabbihim inna l-laha sarīʿu l-ḥisābi

Kannada ವೇದದವರ ಕೂಟದಲ್ಲಿ; ಅಲ್ಲಾಹು ಮತ್ತು ನಿಮಗೆ ಅವತೀರ್ಣವಾದುದರಲ್ಲಿ ಹಾಗೂ ಅವರಿಗೆ ಅವತೀರ್ಣವಾದುದರಲ್ಲಿ ನಂಬಿಕೆ ತಾಳುವವರಿದ್ದಾರೆ. ಅವರು ಅಲ್ಲಾಹನನ್ನು ಭಯ ಪಡುವವರಾಗಿದ್ದು ಅಲ್ಲಾಹನ ವಚನಗಳನ್ನು ತುಚ್ಛ ಬೆಲೆಗೆ ಮಾರುವುದಿಲ್ಲ. ಅವರಿಗೆ ಅವರ ಪ್ರಭುವಿನ ಬಳಿ ಅವರ ಪ್ರತಿಫಲವುಂಟು. ಖಂಡಿತವಾಗಿಯೂ ಅಲ್ಲಾಹನು ವಿಚಾರಣೆ ನಡೆಸುವುದರಲ್ಲಿ ಅತಿ ಶೀಘ್ರನು.

Verse 200

يَـٰٓأَيُّهَا ٱلَّذِينَ ءَامَنُوا۟ ٱصْبِرُوا۟ وَصَابِرُوا۟ وَرَابِطُوا۟ وَٱتَّقُوا۟ ٱللَّهَ لَعَلَّكُمْ تُفْلِحُونَ

Transliteration yāayyuhā alladhīna āmanū iṣ'birū waṣābirū warābiṭū wa-ittaqū l-laha laʿallakum tuf'liḥūna

Kannada ಓ ಸತ್ಯವಿಶ್ವಾಸಿಗಳೇ! ನೀವು ಸಹನೆಯನ್ನು ಅವಲಂಬಿಸಿರಿ. ಸಹನೆಯಲ್ಲಿ ಇತರರನ್ನು ಮೀರಿಸಿರಿ. ಪ್ರತಿರೋಧಕ್ಕೆ ಸನ್ನದ್ಧರಾಗಿ ನಿಲ್ಲಿರಿ. ಅಲ್ಲಾಹನಲ್ಲಿ ಭಯವಿರಿಸಿಕೊಳ್ಳಿರಿ. ನೀವು ಜಯಶಾಲಿಗಳಾಗಲಿಕ್ಕಾಗಿ .

Read Surah Ali 'Imran in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.