Surah Al-Muzzammil in Kannada: translation and audio
Surah 73 · المزمل · The Enshrouded One · 20 verses
Surah Al-Muzzammil verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Muzzammil word by word in English.
Verse 1
يَـٰٓأَيُّهَا ٱلْمُزَّمِّلُ
Transliteration yāayyuhā l-muzamilu
Kannada ಓ, ಹೊದ್ದು ಕೊಂಡವರೇ! (ಪ್ರವಾದಿಯರೇ!)
Verse 2
قُمِ ٱلَّيْلَ إِلَّا قَلِيلًا
Transliteration qumi al-layla illā qalīlan
Kannada ರಾತ್ರಿ ಎದ್ದು ನಿಂತು ನಮಾಝ್ ನಿರ್ವಹಿಸಿರಿ, ಸ್ವಲ್ಪ ಹೊತ್ತು ಹೊರತುಪಡಿಸಿ.
Verse 3
نِّصْفَهُۥٓ أَوِ ٱنقُصْ مِنْهُ قَلِيلًا
Transliteration niṣ'fahu awi unquṣ min'hu qalīlan
Kannada ರಾತ್ರಿಯ ಅರ್ಧಭಾಗ ಅಥವಾ ಅದಕ್ಕಿಂತ ಸ್ವಲ್ಪ (ಸಮಯ) ಕಡಿತಗೊಳಿಸಿರಿ.
Verse 4
أَوْ زِدْ عَلَيْهِ وَرَتِّلِ ٱلْقُرْءَانَ تَرْتِيلًا
Transliteration aw zid ʿalayhi warattili l-qur'āna tartīlan
Kannada ಅಥವಾ ಅದಕ್ಕಿಂತ ತುಸು (ಸಮಯ) ವರ್ಧಿಸಿಕೊಳ್ಳಿರಿ ಮತ್ತು ಖುರ್‍ಆನನ್ನು ಸಾವಕಾಶವಾಗಿ ಪಠಿಸಿರಿ.
Verse 5
إِنَّا سَنُلْقِى عَلَيْكَ قَوْلًا ثَقِيلًا
Transliteration innā sanul'qī ʿalayka qawlan thaqīlan
Kannada ಖಂಡಿತ ನಾವು ತಮ್ಮ ಮೇಲೆ ಒಂದು ಘನವಾದ ಮಾತನ್ನು ಅವತೀರ್ಣಗೊಳಿಸಲಿದ್ದೇವೆ.
Verse 6
إِنَّ نَاشِئَةَ ٱلَّيْلِ هِىَ أَشَدُّ وَطْـًٔا وَأَقْوَمُ قِيلًا
Transliteration inna nāshi-ata al-layli hiya ashaddu waṭan wa-aqwamu qīlan
Kannada ರಾತ್ರಿ ಎದ್ದು ನಿರ್ವಹಿಸುವ ನಮಾಝ್‍ನಿಂದ ಹೃದಯ ಸಾನಿಧ್ಯಕ್ಕೆ ಬಲವೂ ಮಾತುಗಳಿಗೆ ಸ್ಪಷ್ಟತೆಯೂ ಪ್ರಾಪ್ತವಾಗುತ್ತದೆ.
Verse 7
إِنَّ لَكَ فِى ٱلنَّهَارِ سَبْحًا طَوِيلًا
Transliteration inna laka fī l-nahāri sabḥan ṭawīlan
Kannada ಹಗಲು ಹೊತ್ತಿನಲ್ಲಿ ತಮಗೆ ದೀರ್ಘವಾದ ಕೆಲಸ ಕಾರ್ಯಗಳಿರುತ್ತವೆ.
Verse 8
وَٱذْكُرِ ٱسْمَ رَبِّكَ وَتَبَتَّلْ إِلَيْهِ تَبْتِيلًا
Transliteration wa-udh'kuri is'ma rabbika watabattal ilayhi tabtīlan
Kannada ತಮ್ಮ ಪ್ರಭುವಿನ ನಾಮವನ್ನು ಜಪಿಸಿರಿ ಮತ್ತು ಸರ್ವಾತ್ಮನಾ ಅವನಲ್ಲಿಗೆ ಮನ ಸಮರ್ಪಿಸಿರಿ. (ನಿಷ್ಕಳಂಕವಾಗಿ ಆರಾಧಿಸಿರಿ)
Verse 9
رَّبُّ ٱلْمَشْرِقِ وَٱلْمَغْرِبِ لَآ إِلَـٰهَ إِلَّا هُوَ فَٱتَّخِذْهُ وَكِيلًا
Transliteration rabbu l-mashriqi wal-maghribi lā ilāha illā huwa fa-ittakhidh'hu wakīlan
Kannada ಪೂರ್ವ-ಪಶ್ಚಿಮದ ಒಡೆಯನವನು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಆದುದರಿಂದ ತಾವು ಅವನನ್ನೇ ಕಾರ್ಯಾಸಾಧಕನಾಗಿ ಸ್ವೀಕರಿಸಿರಿ.
Verse 10
وَٱصْبِرْ عَلَىٰ مَا يَقُولُونَ وَٱهْجُرْهُمْ هَجْرًا جَمِيلًا
Transliteration wa-iṣ'bir ʿalā mā yaqūlūna wa-uh'jur'hum hajran jamīlan
Kannada ಅವರು (ಸತ್ಯನಿಷೇಧಿಗಳು) ಆಡುತ್ತಿರುವ ಮಾತುಗಳ ಮೇಲೆ ತಾಳ್ಮೆವಹಿಸಿರಿ ಮತ್ತು ಸುಂದರ ರೀತಿಯಲ್ಲಿ ಅವರಿಂದ ಬೇರ್ಪಟ್ಟು ನಿಲ್ಲಿರಿ.
Verse 11
وَذَرْنِى وَٱلْمُكَذِّبِينَ أُو۟لِى ٱلنَّعْمَةِ وَمَهِّلْهُمْ قَلِيلًا
Transliteration wadharnī wal-mukadhibīna ulī l-naʿmati wamahhil'hum qalīlan
Kannada ಸುಖಲೋಲುಪರಾದ ಸತ್ಯನಿಷೇಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ನನ್ನನ್ನು ಬಿಟ್ಟು ಬಿಡಿರಿ. ಅವರಿಗೆ ಸ್ವಲ್ಪ ಸಾವಕಾಶವನ್ನು ನೀಡಿರಿ.
Verse 12
إِنَّ لَدَيْنَآ أَنكَالًا وَجَحِيمًا
Transliteration inna ladaynā ankālan wajaḥīman
Kannada ನಮ್ಮ ಬಳಿ ಭಾರವಾದ ಬೇಡಿಗಳಿವೆ ಮತ್ತು ಹೊತ್ತಿ ಉರಿಯುವ ಅಗ್ನಿಯಿದೆ.
Verse 13
وَطَعَامًا ذَا غُصَّةٍ وَعَذَابًا أَلِيمًا
Transliteration waṭaʿāman dhā ghuṣṣatin waʿadhāban alīman
Kannada ಗಂಟಲಲ್ಲಿ ಸಿಕ್ಕಿಕೊಳ್ಳುವ ಭೋಜನ ಮತ್ತು ವೇದನಾಜನಕ ಶಿಕ್ಷೆಯೂ ಇದೆ.
Verse 14
يَوْمَ تَرْجُفُ ٱلْأَرْضُ وَٱلْجِبَالُ وَكَانَتِ ٱلْجِبَالُ كَثِيبًا مَّهِيلًا
Transliteration yawma tarjufu l-arḍu wal-jibālu wakānati l-jibālu kathīban mahīlan
Kannada ಭೂಮಿ ಮತ್ತು ಪರ್ವತಗಳು ನಡುಗುವ ಹಾಗೂ ಪರ್ವತಗಳು ಕೊಚ್ಚಿ ಹೋದ ಮರಳ ರಾಶಿಯಂತೆ ಆಗಿ ಬಿಡುವ ದಿನ. (ಆ ಶಿಕ್ಷೆ ಸಂಭವಿಸುವುದು.)
Verse 15
إِنَّآ أَرْسَلْنَآ إِلَيْكُمْ رَسُولًا شَـٰهِدًا عَلَيْكُمْ كَمَآ أَرْسَلْنَآ إِلَىٰ فِرْعَوْنَ رَسُولًا
Transliteration innā arsalnā ilaykum rasūlan shāhidan ʿalaykum kamā arsalnā ilā fir'ʿawna rasūlan
Kannada (ಜನರೇ) ನಿಜವಾಗಿಯೂ ನಿಮ್ಮ ಕಡೆಗೆ, ನಿಮ್ಮ ವಿಷಯಗಳಲ್ಲಿ ಸಾಕ್ಷಿಯಾಗಿರುವ ಓರ್ವ ದೂತ ನನ್ನು ನಾವು ಕಳುಹಿಸಿರುತ್ತೇವೆ. ಫಿರ್‍ಔನನ ಕಡೆಗೆ ನಾವು ದೂತನನ್ನು ಕಳುಹಿಸಿದ್ದಂತೆ.
Verse 16
فَعَصَىٰ فِرْعَوْنُ ٱلرَّسُولَ فَأَخَذْنَـٰهُ أَخْذًا وَبِيلًا
Transliteration faʿaṣā fir'ʿawnu l-rasūla fa-akhadhnāhu akhdhan wabīlan
Kannada (ಅಂದು) ಫಿರ್‍ಔನನು ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಅತ್ಯಂತ ಉಗ್ರವಾಗಿ ಹಿಡಿದು ಬಿಟ್ಟೆವು.
Verse 17
فَكَيْفَ تَتَّقُونَ إِن كَفَرْتُمْ يَوْمًا يَجْعَلُ ٱلْوِلْدَٰنَ شِيبًا
Transliteration fakayfa tattaqūna in kafartum yawman yajʿalu l-wil'dāna shīban
Kannada ನೀವು ಅವಿಶ್ವಾಸವನ್ನು ತಾಳಿದರೆ, ಮಕ್ಕಳನ್ನು (ನೆರೆ ಕೂದಲಿನ) ವೃದ್ಧರಾಗಿ ಮಾಡಿ ಬಿಡುವ ಒಂದು ಭಯಂಕರ ದಿನ ನೀವು ಹೇಗೆ ರಕ್ಷಣೆ ಹೊಂದುವಿರಿ?
Verse 18
ٱلسَّمَآءُ مُنفَطِرٌۢ بِهِۦ ۚ كَانَ وَعْدُهُۥ مَفْعُولًا
Transliteration al-samāu munfaṭirun bihi kāna waʿduhu mafʿūlan
Kannada ಅಂದು ಆಕಾಶವು ಸಿಡಿದು ನುಚ್ಚುನೂರಾಗುವುದು. ಅಲ್ಲಾಹನ ವಾಗ್ದಾನವು ಕಾರ್ಯಗತ ಗೊಂಡೇ ತೀರುವುದು.
Verse 19
إِنَّ هَـٰذِهِۦ تَذْكِرَةٌ ۖ فَمَن شَآءَ ٱتَّخَذَ إِلَىٰ رَبِّهِۦ سَبِيلًا
Transliteration inna hādhihi tadhkiratun faman shāa ittakhadha ilā rabbihi sabīlan
Kannada ಇದೊಂದು ಉದ್ಭೋಧನೆಯಾಗಿದೆ. ಆದುದರಿಂದ ಇಚ್ಛೆಯುಳ್ಳವನು ತನ್ನ ಪ್ರಭುವಿನ ಕಡೆಗೆ ಒಂದು ದಾರಿಯನ್ನು ಮಾಡಿಕೊಳ್ಳಲಿ.
Verse 20
۞ إِنَّ رَبَّكَ يَعْلَمُ أَنَّكَ تَقُومُ أَدْنَىٰ مِن ثُلُثَىِ ٱلَّيْلِ وَنِصْفَهُۥ وَثُلُثَهُۥ وَطَآئِفَةٌ مِّنَ ٱلَّذِينَ مَعَكَ ۚ وَٱللَّهُ يُقَدِّرُ ٱلَّيْلَ وَٱلنَّهَارَ ۚ عَلِمَ أَن لَّن تُحْصُوهُ فَتَابَ عَلَيْكُمْ ۖ فَٱقْرَءُوا۟ مَا تَيَسَّرَ مِنَ ٱلْقُرْءَانِ ۚ عَلِمَ أَن سَيَكُونُ مِنكُم مَّرْضَىٰ ۙ وَءَاخَرُونَ يَضْرِبُونَ فِى ٱلْأَرْضِ يَبْتَغُونَ مِن فَضْلِ ٱللَّهِ ۙ وَءَاخَرُونَ يُقَـٰتِلُونَ فِى سَبِيلِ ٱللَّهِ ۖ فَٱقْرَءُوا۟ مَا تَيَسَّرَ مِنْهُ ۚ وَأَقِيمُوا۟ ٱلصَّلَوٰةَ وَءَاتُوا۟ ٱلزَّكَوٰةَ وَأَقْرِضُوا۟ ٱللَّهَ قَرْضًا حَسَنًا ۚ وَمَا تُقَدِّمُوا۟ لِأَنفُسِكُم مِّنْ خَيْرٍ تَجِدُوهُ عِندَ ٱللَّهِ هُوَ خَيْرًا وَأَعْظَمَ أَجْرًا ۚ وَٱسْتَغْفِرُوا۟ ٱللَّهَ ۖ إِنَّ ٱللَّهَ غَفُورٌ رَّحِيمٌۢ
Transliteration inna rabbaka yaʿlamu annaka taqūmu adnā min thuluthayi al-layli waniṣ'fahu wathuluthahu waṭāifatun mina alladhīna maʿaka wal-lahu yuqaddiru al-layla wal-nahāra ʿalima an lan tuḥ'ṣūhu fatāba ʿalaykum fa-iq'raū mā tayassara mina l-qur'āni ʿalima an sayakūnu minkum marḍā waākharūna yaḍribūna fī l-arḍi yabtaghūna min faḍli l-lahi waākharūna yuqātilūna fī sabīli l-lahi fa-iq'raū mā tayassara min'hu wa-aqīmū l-ṣalata waātū l-zakata wa-aqriḍū l-laha qarḍan ḥasanan wamā tuqaddimū li-anfusikum min khayrin tajidūhu ʿinda l-lahi huwa khayran wa-aʿẓama ajran wa-is'taghfirū l-laha inna l-laha ghafūrun raḥīmun
Kannada (ಸಂದೇಶವಾಹಕರೇ,) ತಾವು ಸರಿಸುಮಾರು ರಾತ್ರೆಯ ಮೂರರಲ್ಲಿ ಎರಡು ಭಾಗ (ಇನ್ನು ಕೆಲವೊಮ್ಮೆ) ಅರ್ಧಭಾಗ ಮತ್ತು (ಕೆಲವೊಮ್ಮೆ) ಮೂರನೆಯ ಒಂದುಭಾಗ ನಮಾಝ್ ಮಾಡು ತ್ತೀರೆಂದು ತಮ್ಮ ಪ್ರಭು ಖಂಡಿತ ತಿಳಿದಿರುತ್ತಾನೆ. ತಮ್ಮ ಸಂಗಡ ಒಂದು ಕೂಟದವರೂ. (ಹಾಗೇ ಮಾಡುತ್ತಿದ್ದಾರೆ) ರಾತ್ರಿ ಮತ್ತು ಹಗಲನ್ನು ಅಲ್ಲಾಹನು ಲೆಕ್ಕವಿಡುವನು. ನಿಮಗೆ ಕಾಲಗಣನೆ ಯನ್ನು ಸರಿಯಾಗಿ ಮಾಡಲಾಗದೆಂದು ಅವನಿಗೆ ತಿಳಿದಿದೆ. ಆದುದರಿಂದ ಅವನು ನಿಮ್ಮ ಮೇಲೆ ವಿನಾಯಿತಿ ತೋರಿದನು. ಹೀಗಾಗಿ ನೀವು ಖುರ್‍ಆನ್‍ನಿಂದ, ಸೌಕರ್ಯವಾದುದನ್ನು ಪಠಿಸಿ (ನಮಾಝ್ ಮಾಡಿ)ಕೊಳ್ಳಿರಿ. ನಿಮ್ಮ ಪೈಕಿ ರೋಗಿಗಳಿರಬಹುದೆಂದೂ, ಇನ್ನು ಕೆಲವರು ಅಲ್ಲಾಹನ ಅನುಗ್ರಹವನ್ನರಸಿ ಕೊಂಡು ಭೂಮಿಯಲ್ಲಿ ಸಂಚರಿಸಲಿರುವರೆಂದೂ ಮತ್ತೆ ಕೆಲವರು ಅಲ್ಲಾಹನ ಮಾರ್ಗದಲ್ಲಿ ಯುದ್ಧಕ್ಕೆ ಹೋಗಲಿರುವರೆಂದೂ ಅವನಿಗೆ (ಅಲ್ಲಾಹನಿಗೆ ) ತಿಳಿದಿದೆ. ಆದುದರಿಂದ ನೀವು ಖುರ್‍ಆನ್‍ನಿಂದ ಸೌಕರ್ಯವಾದುದನ್ನು ಪಠಿಸಿರಿ, ನಮಾಝ್ ಕ್ರಮಪ್ರಕಾರ ನಿರ್ವಹಿಸಿರಿ. ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನಿಗೆ ಉತ್ತಮ ಸಾಲವನ್ನು ಕೊಡಿರಿ. ನೀವು ಸ್ವಂತಕ್ಕಾಗಿ ಯಾವುದೇ ಸತ್ಕರ್ಮವನ್ನು ಮುಂದಾಗಿ ನಿರ್ವಹಿಸುತ್ತೀರೆಂದಾದರೆ, ಅಲ್ಲಾಹನ ಬಳಿ ಅದು ಅತ್ಯಧಿಕ ಗುಣಕರವಾಗಿಯೂ, ಮಹತ್ತರ ಪ್ರತಿಫಲವುಳ್ಳದ್ದಾಗಿಯೂ ನೀವು ಕಾಣುವಿರಿ. ನೀವು ಅಲ್ಲಾಹನೊಡನೆ ಪಾಪ ಮುಕ್ತಿಗೆ ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.
Read Surah Al-Muzzammil in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.