MyDugsiStart learning

Surah Al-Kahf in Kannada: translation and audio

Surah 18 · الكهف · The Cave · 110 verses

Surah Al-Kahf verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Kahf word by word in English.

Verse 1

ٱلْحَمْدُ لِلَّهِ ٱلَّذِىٓ أَنزَلَ عَلَىٰ عَبْدِهِ ٱلْكِتَـٰبَ وَلَمْ يَجْعَل لَّهُۥ عِوَجَا ۜ

Transliteration al-ḥamdu lillahi alladhī anzala ʿalā ʿabdihi l-kitāba walam yajʿal lahu ʿiwajā

Kannada ಅಲ್ಲಾಹನಿಗೆ ಸರ್ವಸ್ತುತಿಗಳು, ಅವನು ತನ್ನ ದಾಸನ ಮೇಲೆ ಈ ಗ್ರಂಥವನ್ನು ಅವತೀರ್ಣಗೊಳಿಸಿದನು. ಅದರಲ್ಲಿ ಯಾವುದೇ ವೈರುಧ್ಯವನ್ನು ಅವನು ಮಾಡಲಿಲ್ಲ.

Verse 2

قَيِّمًا لِّيُنذِرَ بَأْسًا شَدِيدًا مِّن لَّدُنْهُ وَيُبَشِّرَ ٱلْمُؤْمِنِينَ ٱلَّذِينَ يَعْمَلُونَ ٱلصَّـٰلِحَـٰتِ أَنَّ لَهُمْ أَجْرًا حَسَنًا

Transliteration qayyiman liyundhira basan shadīdan min ladun'hu wayubashira l-mu'minīna alladhīna yaʿmalūna l-ṣāliḥāti anna lahum ajran ḥasanan

Kannada ಋುಜುವಾದ ಗ್ರಂಥವಿದು. ಅವನು ತನ್ನ ಕಡೆಯಿಂದ ಸತ್ಯನಿಷೇಧಿಗಳಿಗೆ ಕಠಿಣ ಶಿಕ್ಷೆಯ ಬಗ್ಗೆ ತಾಕೀತು ಕೊಡಲಿಕ್ಕಾಗಿ ಮತ್ತು ಸತ್ಕರ್ಮವೆಸಗುವ ಸತ್ಯವಿಶ್ವಾಸಿಗಳಿಗೆ ಶ್ರೇಷ್ಠ ಪ್ರತಿಫಲವಿದೆಯೆಂಬ ಸುವಾರ್ತೆ ನೀಡಲಿಕ್ಕಾಗಿ.

Verse 3

مَّـٰكِثِينَ فِيهِ أَبَدًا

Transliteration mākithīna fīhi abadan

Kannada ಅಲ್ಲಿ ಅವರು ಚಿರಕಾಲ ವಾಸಿಸುವರು.

Verse 4

وَيُنذِرَ ٱلَّذِينَ قَالُوا۟ ٱتَّخَذَ ٱللَّهُ وَلَدًا

Transliteration wayundhira alladhīna qālū ittakhadha l-lahu waladan

Kannada ಮತ್ತು ಅಲ್ಲಾಹನಿಗೆ ಮಕ್ಕಳು ಇದ್ದಾರೆ ಎಂಬ ಮಾತನ್ನಾಡುವವರಿಗೆ ಶಿಕ್ಷೆಯ ಎಚ್ಚರಿಕೆ ನೀಡಲಿಕ್ಕಾಗಿ.

Verse 5

مَّا لَهُم بِهِۦ مِنْ عِلْمٍ وَلَا لِـَٔابَآئِهِمْ ۚ كَبُرَتْ كَلِمَةً تَخْرُجُ مِنْ أَفْوَٰهِهِمْ ۚ إِن يَقُولُونَ إِلَّا كَذِبًا

Transliteration mā lahum bihi min ʿil'min walā liābāihim kaburat kalimatan takhruju min afwāhihim in yaqūlūna illā kadhiban

Kannada ಇವರ ಬಾಯಿಂದ ಹೊರಡುತ್ತಿರುವ ಪ್ರಸ್ತುತ ಮಾತು ಬಹಳ ಘೋರವಾಗಿದ್ದು ಇವರಿಗಾಗಲಿ, ಇವರ ಹಿರಿಯರಿಗಾಗಲಿ ಈ ಬಗ್ಗೆ ಯಾವುದೇ ಅರಿವಿಲ್ಲ. ಅವರು ಕೇವಲ ಸುಳ್ಳು ಮಾತಿನ ವಿನಾ (ಇನ್ನಾ ವುದೇ ಸತ್ಯವಿಚಾರವನ್ನು) ಹೇಳುವವರಲ್ಲ.

Verse 6

فَلَعَلَّكَ بَـٰخِعٌ نَّفْسَكَ عَلَىٰٓ ءَاثَـٰرِهِمْ إِن لَّمْ يُؤْمِنُوا۟ بِهَـٰذَا ٱلْحَدِيثِ أَسَفًا

Transliteration falaʿallaka bākhiʿun nafsaka ʿalā āthārihim in lam yu'minū bihādhā l-ḥadīthi asafan

Kannada (ಓ ನಬಿಯೇ,) ಖುರ್‍ಆನನ್ನು ಇವರು ನಂಬದಿದ್ದಲ್ಲಿ ಇವರ ಬೆನ್ನ ಹಿಂದೆ ವ್ಯಥೆಯಿಂದ ತಮ್ಮ ಜೀವವನ್ನು ನಾಶಮಾಡಬೇಡಿರಿ.

Verse 7

إِنَّا جَعَلْنَا مَا عَلَى ٱلْأَرْضِ زِينَةً لَّهَا لِنَبْلُوَهُمْ أَيُّهُمْ أَحْسَنُ عَمَلًا

Transliteration innā jaʿalnā mā ʿalā l-arḍi zīnatan lahā linabluwahum ayyuhum aḥsanu ʿamalan

Kannada ಜನರಲ್ಲಿ ಯಾರು ಉತ್ತಮರಾಗಿ ಬಾಳುತ್ತಾರೆಂದು ಪರೀಕ್ಷಿಸಲಿಕ್ಕೆಂದೇ ನಾವು ಭೂಮಿ ಮೇಲಿನ ವಸ್ತುವನ್ನು ಅದಕ್ಕೊಂದು ಅಲಂಕಾರವನ್ನಾಗಿ ಮಾಡಿದ್ದೇವೆ.

Verse 8

وَإِنَّا لَجَـٰعِلُونَ مَا عَلَيْهَا صَعِيدًا جُرُزًا

Transliteration wa-innā lajāʿilūna mā ʿalayhā ṣaʿīdan juruzan

Kannada ಆದರೆ ಕೊನೆಗೆ ನಾವು ಅದರಲ್ಲಿರುವ ಸರ್ವವಸ್ತು ಗಳನ್ನು ನೆಲಸಮಗೊಳಿಸಿ ಬಂಜರು ನೆಲವನ್ನಾಗಿ ಮಾಡಲಿದ್ದೇವೆ.

Verse 9

أَمْ حَسِبْتَ أَنَّ أَصْحَـٰبَ ٱلْكَهْفِ وَٱلرَّقِيمِ كَانُوا۟ مِنْ ءَايَـٰتِنَا عَجَبًا

Transliteration am ḥasib'ta anna aṣḥāba l-kahfi wal-raqīmi kānū min āyātinā ʿajaban

Kannada ಅಲ್ಲ, ಗುಹೆ ಹಾಗೂ ರಖೀಮ್‍ನವರು ಮಾತ್ರ ನಮ್ಮ ದೃಷ್ಟಾಂತಗಳಲ್ಲಿ ವಿಸ್ಮಯವಾದುದೆಂದು ತಾವು ಭಾವಿಸಿರುವಿರಾ ?

Verse 10

إِذْ أَوَى ٱلْفِتْيَةُ إِلَى ٱلْكَهْفِ فَقَالُوا۟ رَبَّنَآ ءَاتِنَا مِن لَّدُنكَ رَحْمَةً وَهَيِّئْ لَنَا مِنْ أَمْرِنَا رَشَدًا

Transliteration idh awā l-fit'yatu ilā l-kahfi faqālū rabbanā ātinā min ladunka raḥmatan wahayyi lanā min amrinā rashadan

Kannada ಯುವಕರು ಗುಹೆಯೊಳಗೆ ಆಶ್ರಯ ಪಡೆದ ಸಂದರ್ಭವನ್ನು ನೆನಪಿಸಿರಿ. ಆಗ ಅವರು ಪ್ರಾರ್ಥಿಸಿದರು `ಓ ನಮ್ಮ ಪ್ರಭೂ, ನಿನ್ನ ಪಾಲಿನ ಮಹತ್ತರವಾದ ಕೃಪೆಯನ್ನು ನಮಗೆ ದಯಪಾಲಿಸು. ನಮ್ಮ ಸರ್ವ ಕಾರ್ಯಗಳಲ್ಲಿ ನಮಗೆ ಸನ್ಮಾರ್ಗವನ್ನೇ ಅಣಿಗೊಳಿಸು’.

Verse 11

فَضَرَبْنَا عَلَىٰٓ ءَاذَانِهِمْ فِى ٱلْكَهْفِ سِنِينَ عَدَدًا

Transliteration faḍarabnā ʿalā ādhānihim fī l-kahfi sinīna ʿadadan

Kannada ನಂತರ ಆ ಗುಹೆಯಲ್ಲಿ ಅನೇಕ ವರ್ಷಗಳವರೆಗೆ ಅವರನ್ನು ನಾವು ಗಾಢ ನಿದ್ರೆಗೆ ತಳ್ಳಿದೆವು.

Verse 12

ثُمَّ بَعَثْنَـٰهُمْ لِنَعْلَمَ أَىُّ ٱلْحِزْبَيْنِ أَحْصَىٰ لِمَا لَبِثُوٓا۟ أَمَدًا

Transliteration thumma baʿathnāhum linaʿlama ayyu l-ḥiz'bayni aḥṣā limā labithū amadan

Kannada ತರುವಾಯ ಅವರು ಗುಹೆಯಲ್ಲಿ ತಂಗಿದ ಕಾಲವನ್ನು ಸರಿಯಾಗಿ ಗಣಿಸುವುದು ಎರಡು ಕಕ್ಷಿದಾರರಲ್ಲಿ ಯಾರೆಂದು ತಿಳಿಯತಕ್ಕ ರೀತಿಯಲ್ಲಿ ನಾವು ಅವರನ್ನು ಎಬ್ಬಿಸಿದೆವು.

Verse 13

نَّحْنُ نَقُصُّ عَلَيْكَ نَبَأَهُم بِٱلْحَقِّ ۚ إِنَّهُمْ فِتْيَةٌ ءَامَنُوا۟ بِرَبِّهِمْ وَزِدْنَـٰهُمْ هُدًى

Transliteration naḥnu naquṣṣu ʿalayka naba-ahum bil-ḥaqi innahum fit'yatun āmanū birabbihim wazid'nāhum hudan

Kannada (ಓ ನಬಿಯೇ,) ನಾವು ಅವರ ವೃತ್ತಾಂತವನ್ನು ತಮಗೆ ನೈಜ ರೂಪದಲ್ಲಿ ತಿಳಿಸುತ್ತೇವೆ. ಅವರು ತಮ್ಮ ಪ್ರಭುವಿನ ಮೇಲೆ ನಂಬಿಕೆಯಿರಿಸಿದ್ದ ಕೆಲವು ಯುವಕರಾಗಿದ್ದರು. ಅವರಿಗೆ ನಾವು ಸನ್ಮಾರ್ಗ ಪ್ರಜ್ಞೆಯನ್ನು ಹೆಚ್ಚಿಸಿಕೊಟ್ಟೆವು.

Verse 14

وَرَبَطْنَا عَلَىٰ قُلُوبِهِمْ إِذْ قَامُوا۟ فَقَالُوا۟ رَبُّنَا رَبُّ ٱلسَّمَـٰوَٰتِ وَٱلْأَرْضِ لَن نَّدْعُوَا۟ مِن دُونِهِۦٓ إِلَـٰهًا ۖ لَّقَدْ قُلْنَآ إِذًا شَطَطًا

Transliteration warabaṭnā ʿalā qulūbihim idh qāmū faqālū rabbunā rabbu l-samāwāti wal-arḍi lan nadʿuwā min dūnihi ilāhan laqad qul'nā idhan shaṭaṭan

Kannada ಅವರು (ರಾಜನ ಮುಂದೆ) ಎದ್ದು ನಿಂತಾಗ ಅವರ ಹೃದಯಗಳಿಗೆ ನಾವು ಬಲ ನೀಡಿದೆವು. ಅವರು ಹೇಳಿದರು; ಭೂಮ್ಯಾಕಾಶಗಳ ಪ್ರಭುವೇ ನಮ್ಮ ಪ್ರಭುವಾಗಿದ್ದು, ನಾವು ಅವನನ್ನು ಬಿಟ್ಟು ಬೇರೆ ಯಾರನ್ನೂ ದೇವರನ್ನಾಗಿ ಮಾಡಿ ಆರಾಧಿಸಲಾರೆವು. ಹಾಗೇನಾದರೂ ನಾವು ಮಾಡಿದರೆ ನಮ್ಮದು ಅತಿರೇಕದ ಮಾತಾದೀತು.

Verse 15

هَـٰٓؤُلَآءِ قَوْمُنَا ٱتَّخَذُوا۟ مِن دُونِهِۦٓ ءَالِهَةً ۖ لَّوْلَا يَأْتُونَ عَلَيْهِم بِسُلْطَـٰنٍۭ بَيِّنٍ ۖ فَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًا

Transliteration hāulāi qawmunā ittakhadhū min dūnihi ālihatan lawlā yatūna ʿalayhim bisul'ṭānin bayyinin faman aẓlamu mimmani if'tarā ʿalā l-lahi kadhiban

Kannada ಈ ನಮ್ಮ ಜನಾಂಗವು ಅಲ್ಲಾಹನನ್ನು ಬಿಟ್ಟು ಹಲವು ಆರಾಧ್ಯರುಗಳನ್ನು ನಿರ್ಮಿಸಿದೆ. ಆದರೆ ಅವರಿಗೆ ಆರಾಧನೆ ಸಲ್ಲಿಸುವ ಬಗ್ಗೆ ಸ್ಪಷ್ಟವಾದ ಯಾವುದೇ ಪುರಾವೆಯನ್ನು ಅವರೇಕೆ ತಂದಿಲ್ಲ? ಆದ್ದರಿಂದ ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸಿ ಹೇಳುವವನಿಗಿಂತ ದೊಡ್ಡ ಅಕ್ರಮವೆಸಗುವವನು ಬೇರೆ ಇರುವನೇ?

Verse 16

وَإِذِ ٱعْتَزَلْتُمُوهُمْ وَمَا يَعْبُدُونَ إِلَّا ٱللَّهَ فَأْوُۥٓا۟ إِلَى ٱلْكَهْفِ يَنشُرْ لَكُمْ رَبُّكُم مِّن رَّحْمَتِهِۦ وَيُهَيِّئْ لَكُم مِّنْ أَمْرِكُم مِّرْفَقًا

Transliteration wa-idhi iʿ'tazaltumūhum wamā yaʿbudūna illā l-laha fawū ilā l-kahfi yanshur lakum rabbukum min raḥmatihi wayuhayyi lakum min amrikum mir'faqan

Kannada ನೀವೀಗ ಅವರಿಂದಲೂ ಅಲ್ಲಾಹನ ಹೊರತು ಅವರ ಆರಾಧ್ಯ ಮೂರ್ತಿಗಳಿಂದಲೂ ಬೇರ್ಪ ಟ್ಟಿರುವಾಗ ಇನ್ನು ಆ ಗುಹೆಯತ್ತ ಅಭಯ ಪಡೆಯಿರಿ. ನಿಮ್ಮ ಪ್ರಭು ತನ್ನ ಅನುಗ್ರಹವನ್ನು ನಿಮಗೆ ವಿಸ್ತರಿಸಿ ಕೊಡುವನು. ನಿಮ್ಮ ಕಾರ್ಯದಲ್ಲಿ ಬೇಕಾದ ಸವಲತ್ತುಗಳನ್ನು ಒದಗಿಸಿ ಕೊಡುವನು. (ಎಂದವರು ಪರಸ್ಪರ ಹೇಳಿಕೊಂಡರು).

Verse 17

۞ وَتَرَى ٱلشَّمْسَ إِذَا طَلَعَت تَّزَٰوَرُ عَن كَهْفِهِمْ ذَاتَ ٱلْيَمِينِ وَإِذَا غَرَبَت تَّقْرِضُهُمْ ذَاتَ ٱلشِّمَالِ وَهُمْ فِى فَجْوَةٍ مِّنْهُ ۚ ذَٰلِكَ مِنْ ءَايَـٰتِ ٱللَّهِ ۗ مَن يَهْدِ ٱللَّهُ فَهُوَ ٱلْمُهْتَدِ ۖ وَمَن يُضْلِلْ فَلَن تَجِدَ لَهُۥ وَلِيًّا مُّرْشِدًا

Transliteration watarā l-shamsa idhā ṭalaʿat tazāwaru ʿan kahfihim dhāta l-yamīni wa-idhā gharabat taqriḍuhum dhāta l-shimāli wahum fī fajwatin min'hu dhālika min āyāti l-lahi man yahdi l-lahu fahuwa l-muh'tadi waman yuḍ'lil falan tajida lahu waliyyan mur'shidan

Kannada ಸೂರ್ಯನು ಉದಯಿಸುವಾಗ ಅವರ ಗುಹೆಯನ್ನು ಬಿಟ್ಟು ಬಲಭಾಗಕ್ಕೆ ಸರಿಯುವಂತೆಯೂ ಅಸ್ತ ಮಿಸುವಾಗ ಎಡದಲ್ಲಾಗಿ ಅವರನ್ನು ಹಾದು ಹೋಗುವಂತೆಯೂ ತಾವು ಕಾಣುವಿರಿ. ಅವರಾದರೋ ಗುಹೆಯೊಳಗೆ ಅನುಕೂಲಕರ ಜಾಗದಲ್ಲಿದ್ದರು. ಇದೊಂದು ಅಲ್ಲಾಹನ ನಿದರ್ಶನ. ಅಲ್ಲಾಹನು ಯಾರಿಗೆ ದಾರಿ ತೋರುತ್ತಾನೆ, ಅವನು ನೇರ ಹಾದಿ ಹಿಡಿದನು. ಅಲ್ಲಾಹನು ಯಾರನ್ನು ದಾರಿ ತಪ್ಪಿಸುತ್ತಾನೆ, ಆತನಿಗೆ ದಾರಿ ತೋರುವ ಬೇರೆ ಯಾವುದೇ ಮಿತ್ರನನ್ನು ತಾವು ಕಾಣಲಾರಿರಿ.

Verse 18

وَتَحْسَبُهُمْ أَيْقَاظًا وَهُمْ رُقُودٌ ۚ وَنُقَلِّبُهُمْ ذَاتَ ٱلْيَمِينِ وَذَاتَ ٱلشِّمَالِ ۖ وَكَلْبُهُم بَـٰسِطٌ ذِرَاعَيْهِ بِٱلْوَصِيدِ ۚ لَوِ ٱطَّلَعْتَ عَلَيْهِمْ لَوَلَّيْتَ مِنْهُمْ فِرَارًا وَلَمُلِئْتَ مِنْهُمْ رُعْبًا

Transliteration wataḥsabuhum ayqāẓan wahum ruqūdun wanuqallibuhum dhāta l-yamīni wadhāta l-shimāli wakalbuhum bāsiṭun dhirāʿayhi bil-waṣīdi lawi iṭṭalaʿta ʿalayhim lawallayta min'hum firāran walamuli'ta min'hum ruʿ'ban

Kannada ಅವರು ಎಚ್ಚರವಿದ್ದಾರೆಂದು ತಾವು ಭಾವಿಸುವಿರಿ. ಆದರೆ ಅವರು ನಿದ್ರಿಸುತ್ತಿದ್ದರು. ನಾವು ಅವರನ್ನು ಬಲಕ್ಕೂ ಎಡಕ್ಕೂ ಮಗ್ಗುಲು ಬದಲಿಸುತ್ತಿದ್ದೆವು. ಅವರ ನಾಯಿಯು ಹಜಾರದಲ್ಲಿ ತನ್ನ ಮೊಣಕೈ ಗಳನ್ನು ಹರಡಿ ಕುಳಿತಿತ್ತು. ತಾವು ಅವರನ್ನು ನೋಡಿದ್ದಲ್ಲಿ ಹಿಂದಿರುಗಿ ಓಡುತ್ತಿದ್ದಿರಿ ಹಾಗೂ ಅವರಿಂದಾಗಿ ಭಯದಲ್ಲಿ ತುಂಬಿ ಹೋಗುತ್ತಿದ್ದಿರಿ.

Verse 19

وَكَذَٰلِكَ بَعَثْنَـٰهُمْ لِيَتَسَآءَلُوا۟ بَيْنَهُمْ ۚ قَالَ قَآئِلٌ مِّنْهُمْ كَمْ لَبِثْتُمْ ۖ قَالُوا۟ لَبِثْنَا يَوْمًا أَوْ بَعْضَ يَوْمٍ ۚ قَالُوا۟ رَبُّكُمْ أَعْلَمُ بِمَا لَبِثْتُمْ فَٱبْعَثُوٓا۟ أَحَدَكُم بِوَرِقِكُمْ هَـٰذِهِۦٓ إِلَى ٱلْمَدِينَةِ فَلْيَنظُرْ أَيُّهَآ أَزْكَىٰ طَعَامًا فَلْيَأْتِكُم بِرِزْقٍ مِّنْهُ وَلْيَتَلَطَّفْ وَلَا يُشْعِرَنَّ بِكُمْ أَحَدًا

Transliteration wakadhālika baʿathnāhum liyatasāalū baynahum qāla qāilun min'hum kam labith'tum qālū labith'nā yawman aw baʿḍa yawmin qālū rabbukum aʿlamu bimā labith'tum fa-ib'ʿathū aḥadakum biwariqikum hādhihi ilā l-madīnati falyanẓur ayyuhā azkā ṭaʿāman falyatikum biriz'qin min'hu walyatalaṭṭaf walā yush'ʿiranna bikum aḥadan

Kannada ಅದೇ ರೀತಿ ಅವರನ್ನು ನಾವು (ನಿದ್ದೆಯಿಂದ) ಎಬ್ಬಿಸಿದೆವು . ಅವರು ಪರಸ್ಪರ ಪ್ರಶ್ನಿಸುವ ಸ್ಥಿತಿಗೆ ತಲುಪಿದರು. ಅವರಲ್ಲೊಬ್ಬನು; ನೀವು ಎಷ್ಟು ಕಾಲ (ಇಲ್ಲಿ ನಿದ್ದೆಯಲ್ಲಿ) ತಂಗಿದಿರಿ? ಎಂದು ಕೇಳಿದನು. ಅದಕ್ಕೆ ಉಳಿದವರು ‘ಒಂದು ದಿನ ಅಥವಾ ದಿನದ ಕೊಂಚ ಹೊತ್ತು (ನಿದ್ರೆಯಲ್ಲಿ) ತಂಗಿದೆವು’ ಎಂದರು. (ಆದರೆ ಅದನ್ನು ಸರಿಯಾಗಿ ನಿರ್ಣಯಿಸಲು ಅವರಿಗೆ ಸಾಧ್ಯವಾಗಲಿಲ್ಲ.) ಅವರು ಹೇಳಿದರು ‘ನೀವು (ನಿದ್ರಿಸಿ) ತಂಗಿದ ಕಾಲಾವಧಿಯ ಬಗ್ಗೆ ಹೆಚ್ಚು ಬಲ್ಲವನು ನಿಮ್ಮ ಪ್ರಭುವೇ ಆಗಿರುವನು. ಆದ್ದರಿಂದ ನಿಮ್ಮಲ್ಲಿ ಒಬ್ಬನನ್ನು ನಿಮ್ಮ ಈ ಬೆಳ್ಳಿನಾಣ್ಯದೊಂದಿಗೆ ಪೇಟೆಗೆ ಕಳುಹಿಸಿರಿ. ಧರ್ಮಬದ್ಧ ಆಹಾರ ಎಲ್ಲಿ ಸಿಗುವುದೆಂದು ಅವನು ನೋಡಿ ಕೊಂಡು ಅದರಿಂದ ಸ್ವಲ್ಪ ಆಹಾರವನ್ನು ತರಲಿ. ಅವನು ನಯವಾಗಿ ವರ್ತಿಸಲಿ. ನಿಮ್ಮ ಬಗ್ಗೆ ಯಾವುದೇ ಮಾಹಿತಿಯನ್ನು ಅವನು ಕೊಡಬಾರದು’ .

Verse 20

إِنَّهُمْ إِن يَظْهَرُوا۟ عَلَيْكُمْ يَرْجُمُوكُمْ أَوْ يُعِيدُوكُمْ فِى مِلَّتِهِمْ وَلَن تُفْلِحُوٓا۟ إِذًا أَبَدًا

Transliteration innahum in yaẓharū ʿalaykum yarjumūkum aw yuʿīdūkum fī millatihim walan tuf'liḥū idhan abadan

Kannada ನಿಮ್ಮ ಮೇಲೆ ಅವರು ಏರಿಬಂದರೆ ನಿಮ್ಮನ್ನು ಅವರು ಕಲ್ಲೆಸೆದು ಕೊಲ್ಲುವರು. ಇಲ್ಲವೇ ಅವರ ಮಾರ್ಗಕ್ಕೆ ಬಲವಂತದಿಂದ ಮರಳಿ ಕೊಂಡೊಯ್ಯುವರು. ನೀವೇನಾದರೂ ಮರಳಿ ಹೋದರೆ ಖಂಡಿತ ನೀವು ಯಶಸ್ವಿಯಾಗಲಾರಿರಿ’.

Verse 21

وَكَذَٰلِكَ أَعْثَرْنَا عَلَيْهِمْ لِيَعْلَمُوٓا۟ أَنَّ وَعْدَ ٱللَّهِ حَقٌّ وَأَنَّ ٱلسَّاعَةَ لَا رَيْبَ فِيهَآ إِذْ يَتَنَـٰزَعُونَ بَيْنَهُمْ أَمْرَهُمْ ۖ فَقَالُوا۟ ٱبْنُوا۟ عَلَيْهِم بُنْيَـٰنًا ۖ رَّبُّهُمْ أَعْلَمُ بِهِمْ ۚ قَالَ ٱلَّذِينَ غَلَبُوا۟ عَلَىٰٓ أَمْرِهِمْ لَنَتَّخِذَنَّ عَلَيْهِم مَّسْجِدًا

Transliteration wakadhālika aʿtharnā ʿalayhim liyaʿlamū anna waʿda l-lahi ḥaqqun wa-anna l-sāʿata lā rayba fīhā idh yatanāzaʿūna baynahum amrahum faqālū ib'nū ʿalayhim bun'yānan rabbuhum aʿlamu bihim qāla alladhīna ghalabū ʿalā amrihim lanattakhidhanna ʿalayhim masjidan

Kannada ಅದೇ ರೀತಿ ಅಲ್ಲಾಹನ ವಾಗ್ದಾನವು ಸತ್ಯವೆಂದೂ ಅಂತ್ಯದಿನದಲ್ಲಿ ಯಾವುದೇ ಸಂಶಯವಿಲ್ಲವೆಂದೂ ಜನರಿಗೆ ತಿಳಿಯುವಂತಾಗಲು ನಾವು ಅವರಿಗೆ ಇವರನ್ನು ತೋರಿಸಿಕೊಟ್ಟೆವು. ಗುಹಾವಾಸಿಗಳ ಕಾರ್ಯದಲ್ಲಿ ಅವರು ತರ್ಕಿಸುತ್ತಿದ್ದಾಗ ಕೆಲವರು ‘ಇವರ ಮೇಲೊಂದು ಕಟ್ಟಡವನ್ನು ಕಟ್ಟಿಬಿಡಿರಿ. ಇವರ ಬಗ್ಗೆ ಇವರ ಪ್ರಭುವೇ ಚೆನ್ನಾಗಿ ಬಲ್ಲವನು’ ಎಂದರು. ಆದರೆ ಅವರ ಕಾರ್ಯಗಳಲ್ಲಿ ಪ್ರಾಬಲ್ಯ ಸಾಧಿಸಿದವರು, ‘ನಾವು ಇವರ ಹತ್ತಿರ ದಲ್ಲೊಂದು ಮಸೀದಿಯನ್ನು ನಿರ್ಮಿಸಿ ಬಿಡು ತ್ತೇವೆ' ಎಂದರು 7.

Verse 22

سَيَقُولُونَ ثَلَـٰثَةٌ رَّابِعُهُمْ كَلْبُهُمْ وَيَقُولُونَ خَمْسَةٌ سَادِسُهُمْ كَلْبُهُمْ رَجْمًۢا بِٱلْغَيْبِ ۖ وَيَقُولُونَ سَبْعَةٌ وَثَامِنُهُمْ كَلْبُهُمْ ۚ قُل رَّبِّىٓ أَعْلَمُ بِعِدَّتِهِم مَّا يَعْلَمُهُمْ إِلَّا قَلِيلٌ ۗ فَلَا تُمَارِ فِيهِمْ إِلَّا مِرَآءً ظَـٰهِرًا وَلَا تَسْتَفْتِ فِيهِم مِّنْهُمْ أَحَدًا

Transliteration sayaqūlūna thalāthatun rābiʿuhum kalbuhum wayaqūlūna khamsatun sādisuhum kalbuhum rajman bil-ghaybi wayaqūlūna sabʿatun wathāminuhum kalbuhum qul rabbī aʿlamu biʿiddatihim mā yaʿlamuhum illā qalīlun falā tumāri fīhim illā mirāan ẓāhiran walā tastafti fīhim min'hum aḥadan

Kannada ಇದೀಗ ಕೆಲವರು; ಅವರು ಮೂವರೆಂದೂ ನಾಲ್ಕನೆಯದು ಅವರ ನಾಯಿಯೆಂದೂ ಇನ್ನು ಕೆಲವರು ಅವರು ಐವರೆಂದೂ ಆರನೆಯದು ಅವರ ನಾಯಿಯೆಂದೂ ಹೇಳುತ್ತಾರೆ. ಹಾಗೆಂದು ಕೇವಲ ಊಹೆಯ ಆಧಾರದಲ್ಲಿ ಹೇಳುತ್ತಾರೆ. ಅವರು ಏಳು ಜನರೆಂದೂ ಎಂಟನೆಯದು ಅವರ ನಾಯಿ ಯೆಂದೂ ಬೇರೆ ಕೆಲವರು ಹೇಳುತ್ತಾರೆ. ಹೇಳಿರಿ. `ನನ್ನ ಪ್ರಭು ಅವರ ಸಂಖ್ಯೆಯ ಬಗ್ಗೆ ಚೆನ್ನಾಗಿ ಬಲ್ಲನು. ಕೆಲವು ಜನರಿಗಲ್ಲದೆ ಅವರ ಬಗ್ಗೆ ತಿಳಿದಿಲ್ಲ, ಅಂದ ಮೇಲೆ ಅವರ ಬಗ್ಗೆ ಸ್ಪಷ್ಟವಾದ ವಿಚಾರದ ಹೊರತು ವಾದಿಸಬೇಡಿರಿ. ಅವರ ಬಗ್ಗೆ ಯಾರಲ್ಲೂ ತೀರ್ಪು ಕೇಳಬೇಡಿರಿ.

Verse 23

وَلَا تَقُولَنَّ لِشَا۟ىْءٍ إِنِّى فَاعِلٌ ذَٰلِكَ غَدًا

Transliteration walā taqūlanna lishāy'in innī fāʿilun dhālika ghadan

Kannada ಯಾವುದರ ಬಗ್ಗೆಯೂ ಅದನ್ನು ನಾಳೆ ಖಂಡಿತ ಮಾಡುವೆನು ಎಂದು ಹೇಳಬೇಡಿರಿ.

Verse 24

إِلَّآ أَن يَشَآءَ ٱللَّهُ ۚ وَٱذْكُر رَّبَّكَ إِذَا نَسِيتَ وَقُلْ عَسَىٰٓ أَن يَهْدِيَنِ رَبِّى لِأَقْرَبَ مِنْ هَـٰذَا رَشَدًا

Transliteration illā an yashāa l-lahu wa-udh'kur rabbaka idhā nasīta waqul ʿasā an yahdiyani rabbī li-aqraba min hādhā rashadan

Kannada `ಇನ್‍ಶಾ ಅಲ್ಲಾಹ್' ಎಂದು ಹೇಳದೆ ನಿಮಗದು ಮರೆತು ಬಿಟ್ಟರೆ (ನೆನಪಾದಾಗ) ನಿಮ್ಮ ಪ್ರಭುವನ್ನು ಸ್ಮರಿಸು. “ನನ್ನ ಪ್ರಭು ಇದಕ್ಕಿಂತ ಹತ್ತಿರದ ನೇರ ಮಾರ್ಗದಲ್ಲಿ ನನ್ನನ್ನು ಮುನ್ನಡೆಸುವ ಭರವಸೆಯಿದೆ' ಎಂದು ಹೇಳಿ ಬಿಡಿರಿ.

Verse 25

وَلَبِثُوا۟ فِى كَهْفِهِمْ ثَلَـٰثَ مِا۟ئَةٍ سِنِينَ وَٱزْدَادُوا۟ تِسْعًا

Transliteration walabithū fī kahfihim thalātha mi-atin sinīna wa-iz'dādū tis'ʿan

Kannada ಅವರು ತಮ್ಮ ಗುಹೆಯಲ್ಲಿ ಮುನ್ನೂರು ವರ್ಷಕಾಲ ತಂಗಿದ್ದರು ಹಾಗೂ ಒಂಬತ್ತು ವರ್ಷವನ್ನು ಹೆಚ್ಚಿಸಿದರು.

Verse 26

قُلِ ٱللَّهُ أَعْلَمُ بِمَا لَبِثُوا۟ ۖ لَهُۥ غَيْبُ ٱلسَّمَـٰوَٰتِ وَٱلْأَرْضِ ۖ أَبْصِرْ بِهِۦ وَأَسْمِعْ ۚ مَا لَهُم مِّن دُونِهِۦ مِن وَلِىٍّ وَلَا يُشْرِكُ فِى حُكْمِهِۦٓ أَحَدًا

Transliteration quli l-lahu aʿlamu bimā labithū lahu ghaybu l-samāwāti wal-arḍi abṣir bihi wa-asmiʿ mā lahum min dūnihi min waliyyin walā yush'riku fī ḥuk'mihi aḥadan

Kannada ಹೇಳಿರಿ; `ಅವರು ತಂಗಿದ ಕಾಲದ ಬಗ್ಗೆ ಅಲ್ಲಾ ಹನೇ ಹೆಚ್ಚಾಗಿ ಬಲ್ಲವನು . ಆಕಾಶ ಭೂಮಿಗಳ ಅದೃಶ್ಯವು ಆತನಿಗೇ ಮೀಸಲಾಗಿದೆ. ಅವನ ದೃಷ್ಟಿ ಅತ್ಯಂತ ತೀಕ್ಷ್ಣವೂ ಶ್ರವಣ ಅತ್ಯಂತ ಸೂಕ್ಷ್ಮವೂ ಆಗಿದೆ. ಆತನ ಹೊರತು ಅವರಿಗೆ ಯಾವ ರಕ್ಷಕನೂ ಇಲ್ಲ. ಆತ ತನ್ನ ಆಜ್ಞಾಧಿಕಾರದಲ್ಲಿ ಯಾರನ್ನೂ ಜೊತೆಗೂಡಿಸಿಲ್ಲ.

Verse 27

وَٱتْلُ مَآ أُوحِىَ إِلَيْكَ مِن كِتَابِ رَبِّكَ ۖ لَا مُبَدِّلَ لِكَلِمَـٰتِهِۦ وَلَن تَجِدَ مِن دُونِهِۦ مُلْتَحَدًا

Transliteration wa-ut'lu mā ūḥiya ilayka min kitābi rabbika lā mubaddila likalimātihi walan tajida min dūnihi mul'taḥadan

Kannada (ಓ ಪ್ರವಾದಿವರ್ಯರೇ,) ತಮ್ಮ ಪ್ರಭುವಿನ ಗ್ರಂಥದಿಂದ ಬೋಧಿಸಲಾದ ವಿಷಯವನ್ನು ತಾವು ಓದಿರಿ. ದೇವ ವಾಕ್ಯವನ್ನು ಬದಲಿಸುವ ಶಕ್ತಿ ಯಾರಿಗೂ ಇಲ್ಲ. ಅವನ ಹೊರತು ಇನ್ನಾರಿಂದಲೂ ಯಾವುದೇ ಅಭಯ ಸ್ಥಾನವನ್ನು ತಾವು ಪಡೆಯಲಾರಿರಿ.

Verse 28

وَٱصْبِرْ نَفْسَكَ مَعَ ٱلَّذِينَ يَدْعُونَ رَبَّهُم بِٱلْغَدَوٰةِ وَٱلْعَشِىِّ يُرِيدُونَ وَجْهَهُۥ ۖ وَلَا تَعْدُ عَيْنَاكَ عَنْهُمْ تُرِيدُ زِينَةَ ٱلْحَيَوٰةِ ٱلدُّنْيَا ۖ وَلَا تُطِعْ مَنْ أَغْفَلْنَا قَلْبَهُۥ عَن ذِكْرِنَا وَٱتَّبَعَ هَوَىٰهُ وَكَانَ أَمْرُهُۥ فُرُطًا

Transliteration wa-iṣ'bir nafsaka maʿa alladhīna yadʿūna rabbahum bil-ghadati wal-ʿashiyi yurīdūna wajhahu walā taʿdu ʿaynāka ʿanhum turīdu zīnata l-ḥayati l-dun'yā walā tuṭiʿ man aghfalnā qalbahu ʿan dhik'rinā wa-ittabaʿa hawāhu wakāna amruhu furuṭan

Kannada ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಬೆಳ ಗು ಬೈಗುಗಳಲ್ಲಿ ದೇವೋಪಾಸನೆ ಮಾಡುತ್ತಿರುವ ಜನರ ಜತೆಗೆ ನೀವು ಸಹನೆಯೊಂದಿಗೆ ಇರಿ . ಇಹಜೀವನದ ಸೊಬಗನ್ನು ಬಯಸಿ ಅವರಿಂದ ತಮ್ಮ ಕಣ್ಣುಗಳು ತಪ್ಪದಿರಲಿ. ನಮ್ಮ ಸ್ಮರಣೆಯಿಂದ ಯಾರ ಹೃದಯವನ್ನು ನಾವು ಅಲಕ್ಷಿಸಿ ದ್ದೇವೆಯೋ ಮತ್ತು ಯಾವನು ತನ್ನಿಚ್ಚೆಯ ಹಿಂದೆ ಬಿದ್ದು ತನ್ನ ಕಾರ್ಯವು ಹತೋಟಿಗೆ ಸಿಗುವುದಿಲ್ಲವೋ ಅಂಥ ವ್ಯಕ್ತಿಯನ್ನು ತಾವು ಅನುಸರಿಸ ಬೇಡಿರಿ .

Verse 29

وَقُلِ ٱلْحَقُّ مِن رَّبِّكُمْ ۖ فَمَن شَآءَ فَلْيُؤْمِن وَمَن شَآءَ فَلْيَكْفُرْ ۚ إِنَّآ أَعْتَدْنَا لِلظَّـٰلِمِينَ نَارًا أَحَاطَ بِهِمْ سُرَادِقُهَا ۚ وَإِن يَسْتَغِيثُوا۟ يُغَاثُوا۟ بِمَآءٍ كَٱلْمُهْلِ يَشْوِى ٱلْوُجُوهَ ۚ بِئْسَ ٱلشَّرَابُ وَسَآءَتْ مُرْتَفَقًا

Transliteration waquli l-ḥaqu min rabbikum faman shāa falyu'min waman shāa falyakfur innā aʿtadnā lilẓẓālimīna nāran aḥāṭa bihim surādiquhā wa-in yastaghīthū yughāthū bimāin kal-muh'li yashwī l-wujūha bi'sa l-sharābu wasāat mur'tafaqan

Kannada ಹೇಳಿರಿ, ಇದು (ಖುರ್‍ಆನ್) ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯವಾಗಿದ್ದು ಇಷ್ಟವಿದ್ದವರು ನಂಬಲಿ, ಬೇಡದವರು ನಿರಾಕರಿಸಲಿ. ನಿಜವಾ ಗಿಯೂ ಅಕ್ರಮಿಗಳಿಗಾಗಿ ನಾವು ನರಕಾಗ್ನಿಯ ನ್ನು ಸಜ್ಜುಗೊಳಿಸಿದ್ದೇವೆ. ಅದರ ಆವರಣವು ಅವರನ್ನು ಆವರಿಸಿದೆ. ಅವರು ನೆರವು ಕೇಳಿದರೆ ಮುಖವನ್ನೇ ವಿಕೃತಿಗೊಳಿಸಿಬಿಡುವ ಹಾಗೂ ಎಣ್ಣೆ ಡಬ್ಬದ ತಳದಲ್ಲಿರುವ ಜಿಡ್ಡಿನಂತಹ ದುರ್ಜಲವನ್ನು ಅವರಿಗೆ ನೀಡಲಾಗುವುದು. ಅದೆಷ್ಟು ನಿಕೃ ಷ್ಟವಾದ ಪೇಯ! ಅದೆಷ್ಟು ಕೆಟ್ಟ ತಂಗುದಾಣ!

Verse 30

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ إِنَّا لَا نُضِيعُ أَجْرَ مَنْ أَحْسَنَ عَمَلًا

Transliteration inna alladhīna āmanū waʿamilū l-ṣāliḥāti innā lā nuḍīʿu ajra man aḥsana ʿamalan

Kannada ಯಾರು ಸತ್ಯವಿಶ್ವಾಸ ತಾಳಿ ಸತ್ಕರ್ಮಗಳನ್ನು ಕೈಗೊಳ್ಳುತ್ತಾರೋ ನಾವು ಸತ್ಕರ್ಮಿಗಳ ಪ್ರತಿ ಫಲವನ್ನು ವ್ಯರ್ಥಗೊಳಿಸಲಾರೆವು.

Verse 31

أُو۟لَـٰٓئِكَ لَهُمْ جَنَّـٰتُ عَدْنٍ تَجْرِى مِن تَحْتِهِمُ ٱلْأَنْهَـٰرُ يُحَلَّوْنَ فِيهَا مِنْ أَسَاوِرَ مِن ذَهَبٍ وَيَلْبَسُونَ ثِيَابًا خُضْرًا مِّن سُندُسٍ وَإِسْتَبْرَقٍ مُّتَّكِـِٔينَ فِيهَا عَلَى ٱلْأَرَآئِكِ ۚ نِعْمَ ٱلثَّوَابُ وَحَسُنَتْ مُرْتَفَقًا

Transliteration ulāika lahum jannātu ʿadnin tajrī min taḥtihimu l-anhāru yuḥallawna fīhā min asāwira min dhahabin wayalbasūna thiyāban khuḍ'ran min sundusin wa-is'tabraqin muttakiīna fīhā ʿalā l-arāiki niʿ'ma l-thawābu waḥasunat mur'tafaqan

Kannada ಅವರಿಗಾಗಿ ತಳಭಾಗದಲ್ಲಿ ಕಾಲುವೆ ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅಲ್ಲಿ ಅವರಿಗೆ ಬಂಗಾರದ ಕಂಕಣವನ್ನು ತೊಡಿಸಲಾಗುವುದು. ಹಸಿರು ಬಣ್ಣದ ತೆಳು ಹಾಗೂ ದೊರಗಿನ ರೇಷ್ಮೆ ಬಟ್ಟೆಗಳನ್ನು ಅವರು ಉಟ್ಟಿರುತ್ತಾರೆ. ಅಲ್ಲಿ ಅಲಂಕೃತ ಒರಗುಮಂಚದಲ್ಲಿ ಒರಗಿ ಹಾಯಾಗಿರುತ್ತಾರೆ. ಅದೆಷ್ಟು ಉತ್ತಮ ಪ್ರತಿಫಲ! ಅದೆಷ್ಟು ಉತ್ತಮ ವಿಶ್ರಾಂತಿಧಾಮ.!

Verse 32

۞ وَٱضْرِبْ لَهُم مَّثَلًا رَّجُلَيْنِ جَعَلْنَا لِأَحَدِهِمَا جَنَّتَيْنِ مِنْ أَعْنَـٰبٍ وَحَفَفْنَـٰهُمَا بِنَخْلٍ وَجَعَلْنَا بَيْنَهُمَا زَرْعًا

Transliteration wa-iḍ'rib lahum mathalan rajulayni jaʿalnā li-aḥadihimā jannatayni min aʿnābin waḥafafnāhumā binakhlin wajaʿalnā baynahumā zarʿan

Kannada (ನಬಿವರ್ಯರೇ,) ತಾವು ಅವರಿಗೆ ಇಬ್ಬರ ಬಗ್ಗೆ ಒಂದು ಉಪಮೆಯನ್ನು ಹೇಳಿರಿ. ಅವರಲ್ಲೊಬ್ಬ ನಿಗೆ ನಾವು ದ್ರಾಕ್ಷೆಯ ಎರಡು ತೋಟಗಳನ್ನು ಕೊಟ್ಟೆವು. ಅವೆರಡನ್ನು ಖರ್ಜೂರ ಮರಗಳಿಂದ ಸುತ್ತುವರಿಸಿದೆವು. ಅವೆರಡರ ಮಧ್ಯೆ ಕೃಷಿಯನ್ನು ಬೆಳೆಸಿದೆವು.

Verse 33

كِلْتَا ٱلْجَنَّتَيْنِ ءَاتَتْ أُكُلَهَا وَلَمْ تَظْلِم مِّنْهُ شَيْـًٔا ۚ وَفَجَّرْنَا خِلَـٰلَهُمَا نَهَرًا

Transliteration kil'tā l-janatayni ātat ukulahā walam taẓlim min'hu shayan wafajjarnā khilālahumā naharan

Kannada ಆ ಎರಡು ತೋಟಗಳು ಹೇರಳ ಫಲ ಕೊಟ್ಟಿತು. ಯಾವುದೇ ಕೊರತೆಯನ್ನು ಅದು ಮಾಡಲಿಲ್ಲ. ಆ ಎರಡು ತೋಟಗಳ ನಡುವೆ ನಾವು ಕಾಲುವೆಯನ್ನು ಹರಿಸಿದ್ದೆವು.

Verse 34

وَكَانَ لَهُۥ ثَمَرٌ فَقَالَ لِصَـٰحِبِهِۦ وَهُوَ يُحَاوِرُهُۥٓ أَنَا۠ أَكْثَرُ مِنكَ مَالًا وَأَعَزُّ نَفَرًا

Transliteration wakāna lahu thamarun faqāla liṣāḥibihi wahuwa yuḥāwiruhu anā aktharu minka mālan wa-aʿazzu nafaran

Kannada ಅವನಿಗೆ ಬೇರೆಯೂ ಸೊತ್ತು ಇತ್ತು. ಒಮ್ಮೆ ಅವನು ತನ್ನ ಸಂಗಡಿಗನೊಂದಿಗೆ ವಾಗ್ವಾದ ಮಾಡುತ್ತಾ; “ನಾನು ನಿನಗಿಂತ ಹೆಚ್ಚು ಶ್ರೀಮಂತನೂ ನಿನಗಿಂತ ಜನಬಲವುಳ್ಳವನೂ ಆಗಿರುತ್ತೇನೆ” ಎಂದನು.

Verse 35

وَدَخَلَ جَنَّتَهُۥ وَهُوَ ظَالِمٌ لِّنَفْسِهِۦ قَالَ مَآ أَظُنُّ أَن تَبِيدَ هَـٰذِهِۦٓ أَبَدًا

Transliteration wadakhala jannatahu wahuwa ẓālimun linafsihi qāla mā aẓunnu an tabīda hādhihi abadan

Kannada ಅವನು ತನ್ನ ತೋಟಕ್ಕೆ ಹೊಕ್ಕನು. ಅವನು ಸತ್ಯನಿಷೇಧಿಯಾಗಿದ್ದುಕೊಂಡೇ ಹೇಳಿದನು; `ಇದು ಎಂದಾದರೂ ನಾಶವಾದೀತೆಂದು ನಾನು ಭಾವಿಸುವುದಿಲ್ಲ’.

Verse 36

وَمَآ أَظُنُّ ٱلسَّاعَةَ قَآئِمَةً وَلَئِن رُّدِدتُّ إِلَىٰ رَبِّى لَأَجِدَنَّ خَيْرًا مِّنْهَا مُنقَلَبًا

Transliteration wamā aẓunnu l-sāʿata qāimatan wala-in rudidttu ilā rabbī la-ajidanna khayran min'hā munqalaban

Kannada ಪ್ರಳಯ ಉಂಟಾದೀತೆಂದು ನಾನು ಭಾವಿಸುವುದಿಲ್ಲ. ಬಹುಶಃ ನನ್ನ ಪ್ರಭುವಿನ ಕಡೆಗೆ ನನ್ನನ್ನು ಮರಳಿಸಲಾದರೂ ಇದಕ್ಕಿಂತ ಉತ್ತಮವಾದ ನಿರ್ಗಮನವನ್ನು ಪಡೆಯುವೆನು.'

Verse 37

قَالَ لَهُۥ صَاحِبُهُۥ وَهُوَ يُحَاوِرُهُۥٓ أَكَفَرْتَ بِٱلَّذِى خَلَقَكَ مِن تُرَابٍ ثُمَّ مِن نُّطْفَةٍ ثُمَّ سَوَّىٰكَ رَجُلًا

Transliteration qāla lahu ṣāḥibuhu wahuwa yuḥāwiruhu akafarta bi-alladhī khalaqaka min turābin thumma min nuṭ'fatin thumma sawwāka rajulan

Kannada ಅವನೊಂದಿಗೆ ವಾಗ್ವಾದ ಮಾಡುತ್ತಾ ಜೊತೆಗಾರನು ಕೇಳಿದನು. `ಮಣ್ಣಿನಿಂದಲೂ ಆ ಬಳಿಕ ವೀರ್ಯದಿಂದಲೂ ನಿನ್ನನ್ನು ಸೃಷ್ಟಿಸಿ ನಂತರ ನಿನ್ನನ್ನು ಓರ್ವ ಸಂಪೂರ್ಣ ಮನುಷ್ಯನನ್ನಾಗಿ ರೂಪುಗೊಳಿಸಿದ ಪ್ರಭುವನ್ನು ನೀನು ನಿರಾಕರಿಸುವೆಯಾ?

Verse 38

لَّـٰكِنَّا۠ هُوَ ٱللَّهُ رَبِّى وَلَآ أُشْرِكُ بِرَبِّىٓ أَحَدًا

Transliteration lākinnā huwa l-lahu rabbī walā ush'riku birabbī aḥadan

Kannada ಆದರೆ ಅಲ್ಲಾಹನು ನನ್ನ ಪ್ರಭುವಾಗಿದ್ದು ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಜೊತೆ ಸೇರಿಸುವುದಿಲ್ಲ.

Verse 39

وَلَوْلَآ إِذْ دَخَلْتَ جَنَّتَكَ قُلْتَ مَا شَآءَ ٱللَّهُ لَا قُوَّةَ إِلَّا بِٱللَّهِ ۚ إِن تَرَنِ أَنَا۠ أَقَلَّ مِنكَ مَالًا وَوَلَدًا

Transliteration walawlā idh dakhalta jannataka qul'ta mā shāa l-lahu lā quwwata illā bil-lahi in tarani anā aqalla minka mālan wawaladan

Kannada ನೀನು ನಿನ್ನ ತೋಟಕ್ಕೆ ಹೊಕ್ಕಾಗ `ಮಾಶಾ ಅಲ್ಲಾಹ್ ಲಾ ಖುವ್ವತ ಇಲ್ಲಾ ಬಿಲ್ಲಾಹ್' (ಕೈಗೂಡುವುದು ದೇವೇಚ್ಛೆ ಮಾತ್ರವಾಗಿದ್ದು ಅಲ್ಲಾ ಹನಿಂದ ಹೊರತು ಯಾವುದೇ ಶಕ್ತಿಯಿಲ್ಲ) ಎಂದೇಕೆ ಹೇಳಿಲ್ಲ? ಸೊತ್ತು ಸಂತತಿಗಳಲ್ಲಿ ನಾನು ನಿನಗಿಂತ ಕೀಳಾಗಿ ಕಾಣುತ್ತಿದ್ದರೆ,

Verse 40

فَعَسَىٰ رَبِّىٓ أَن يُؤْتِيَنِ خَيْرًا مِّن جَنَّتِكَ وَيُرْسِلَ عَلَيْهَا حُسْبَانًا مِّنَ ٱلسَّمَآءِ فَتُصْبِحَ صَعِيدًا زَلَقًا

Transliteration faʿasā rabbī an yu'tiyani khayran min jannatika wayur'sila ʿalayhā ḥus'bānan mina l-samāi fatuṣ'biḥa ṣaʿīdan zalaqan

Kannada ನಿನ್ನ ತೋಟಕ್ಕಿಂತ ಉತ್ತಮವಾದುದನ್ನು ನನ್ನ ಪ್ರಭು ನನಗೆ ಕೊಡಲಿಕ್ಕೂ ನಿನ್ನ ತೋಟಕ್ಕೆ ಆಕಾಶದಿಂದ ವಿಪತ್ತನ್ನು ಕಳುಹಿಸಿ ಅದನ್ನು ಜಾರುವ ನೆಲವನ್ನಾಗಿ ಮಾಡಲಿಕ್ಕೂ ಸಮರ್ಥನಿದ್ದಾನೆ.

Verse 41

أَوْ يُصْبِحَ مَآؤُهَا غَوْرًا فَلَن تَسْتَطِيعَ لَهُۥ طَلَبًا

Transliteration aw yuṣ'biḥa māuhā ghawran falan tastaṭīʿa lahu ṭalaban

Kannada ಅಥವಾ ಅದರ ನೀರು ನಿನಗೆಂದೂ ಹುಡುಕಿ ತೆಗೆಯಲು ಸಾಧ್ಯವಿಲ್ಲದ ಮಟ್ಟಿಗೆ ನೆಲಕ್ಕೆ ಇಂಗಿ ಹೋಗಲೂಬಹುದು.'

Verse 42

وَأُحِيطَ بِثَمَرِهِۦ فَأَصْبَحَ يُقَلِّبُ كَفَّيْهِ عَلَىٰ مَآ أَنفَقَ فِيهَا وَهِىَ خَاوِيَةٌ عَلَىٰ عُرُوشِهَا وَيَقُولُ يَـٰلَيْتَنِى لَمْ أُشْرِكْ بِرَبِّىٓ أَحَدًا

Transliteration wa-uḥīṭa bithamarihi fa-aṣbaḥa yuqallibu kaffayhi ʿalā mā anfaqa fīhā wahiya khāwiyatun ʿalā ʿurūshihā wayaqūlu yālaytanī lam ush'rik birabbī aḥadan

Kannada ಕೊನೆಗೆ ಆತನ ಫಲಗಳು ಸರ್ವನಾಶವಾದವು. ಅವನು ತನ್ನ ತೋಟಗಳು ತಡಿಕೆಗಳ ಮೇಲೆ ಮಗುಚಿ ಬಿದ್ದಾಗ ತಾನು ಅದಕ್ಕಾಗಿ ಮಾಡಿದ ವೆಚ್ಚವನ್ನು ನೆನೆಸಿ ಮರುಗಿದನು. `ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಜೊತೆ ಸೇರಿಸದೇ ಇರುತ್ತಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.' ಎಂದನು.

Verse 43

وَلَمْ تَكُن لَّهُۥ فِئَةٌ يَنصُرُونَهُۥ مِن دُونِ ٱللَّهِ وَمَا كَانَ مُنتَصِرًا

Transliteration walam takun lahu fi-atun yanṣurūnahu min dūni l-lahi wamā kāna muntaṣiran

Kannada . ಅಲ್ಲಾಹನ ಹೊರತು ಸಹಾಯ ಮಾಡಬಲ್ಲ ಯಾವ ತಂಡವೂ ಆತನಿಗೆ ಒದಗಿಬರಲಿಲ್ಲ. ಅವನು ಸ್ವಂತ ಸಹಾಯವನ್ನೂ ಪಡೆಯದಾದನು.

Verse 44

هُنَالِكَ ٱلْوَلَـٰيَةُ لِلَّهِ ٱلْحَقِّ ۚ هُوَ خَيْرٌ ثَوَابًا وَخَيْرٌ عُقْبًا

Transliteration hunālika l-walāyatu lillahi l-ḥaqi huwa khayrun thawāban wakhayrun ʿuq'ban

Kannada ಅಲ್ಲಿ ಅಧಿಪತ್ಯವು ಸತ್ಯಪೂರ್ಣವಾದ ಅಲ್ಲಾಹನಿಗೆ ಮಾತ್ರ. ಅವನು ಅತ್ಯುತ್ತಮ ಪ್ರತಿಫಲವನ್ನೂ ಫಲಿತಾಂಶವನ್ನೂ ನೀಡಬಲ್ಲವನಾಗಿದ್ದಾನೆ.

Verse 45

وَٱضْرِبْ لَهُم مَّثَلَ ٱلْحَيَوٰةِ ٱلدُّنْيَا كَمَآءٍ أَنزَلْنَـٰهُ مِنَ ٱلسَّمَآءِ فَٱخْتَلَطَ بِهِۦ نَبَاتُ ٱلْأَرْضِ فَأَصْبَحَ هَشِيمًا تَذْرُوهُ ٱلرِّيَـٰحُ ۗ وَكَانَ ٱللَّهُ عَلَىٰ كُلِّ شَىْءٍ مُّقْتَدِرًا

Transliteration wa-iḍ'rib lahum mathala l-ḥayati l-dun'yā kamāin anzalnāhu mina l-samāi fa-ikh'talaṭa bihi nabātu l-arḍi fa-aṣbaḥa hashīman tadhrūhu l-riyāḥu wakāna l-lahu ʿalā kulli shayin muq'tadiran

Kannada (ಓ ಪ್ರವಾದಿವರ್ಯರೇ,) ಇಹಜೀವನದ ಉಪಮೆ ಯನ್ನು ಅವರಿಗೆ ವಿವರಿಸಿ ಕೊಡಿರಿ. ಅದು ಆಕಾಶ ದಿಂದ ನಾವು ಸುರಿಸಿ ಕೊಡುವ ಮಳೆ ನೀರಿನಂತಿದೆ. ತನ್ಮೂಲಕ ಭೂಮಿಯ ಬೆಳೆಯು ದಟ್ಟವಾಗಿ ಬೆಳೆಯುತ್ತದೆ. ನಂತರ ಅದು ಗಾಳಿಯಲ್ಲಿ ಹಾರಿ ಹೋಗುವ ಹೊಟ್ಟಾಗಿ ಬಿಡುತ್ತದೆ. ಅಲ್ಲಾಹು ಸಕಲ ವಸ್ತುಗಳ ಮೇಲೆ ಸರ್ವ ಸಮರ್ಥನು.

Verse 46

ٱلْمَالُ وَٱلْبَنُونَ زِينَةُ ٱلْحَيَوٰةِ ٱلدُّنْيَا ۖ وَٱلْبَـٰقِيَـٰتُ ٱلصَّـٰلِحَـٰتُ خَيْرٌ عِندَ رَبِّكَ ثَوَابًا وَخَيْرٌ أَمَلًا

Transliteration al-mālu wal-banūna zīnatu l-ḥayati l-dun'yā wal-bāqiyātu l-ṣāliḥātu khayrun ʿinda rabbika thawāban wakhayrun amalan

Kannada ಸೊತ್ತು ಸಂತಾನವು ಲೌಕಿಕ ಜೀವನದ ಶೃಂಗಾರ. ಶಾಶ್ವತವಾಗಿ ಉಳಿಯುವ ಪುಣ್ಯ ಕಾರ್ಯ ಗಳೇ ತಮ್ಮ ಪ್ರಭುವಿನ ಬಳಿ ಸತ್ಫಲ ಹಾಗೂ ಆಸೆಪಡಲು ಯೋಗ್ಯವಾದುದು .

Verse 47

وَيَوْمَ نُسَيِّرُ ٱلْجِبَالَ وَتَرَى ٱلْأَرْضَ بَارِزَةً وَحَشَرْنَـٰهُمْ فَلَمْ نُغَادِرْ مِنْهُمْ أَحَدًا

Transliteration wayawma nusayyiru l-jibāla watarā l-arḍa bārizatan waḥasharnāhum falam nughādir min'hum aḥadan

Kannada ಪರ್ವತಗಳನ್ನು ನಾವು ಹಾರಿಸುವ ದಿನವನ್ನು ನೆನಪಿಸಿರಿ. ಅಂದು ಭೂಮಿಯನ್ನು ತಾವು ಬಟ್ಟ ಬಯಲಿನಂತೆ ಕಾಣುವಿರಿ. ಯಾರೊಬ್ಬನನ್ನೂ ಬಿಟ್ಟು ಹೋಗದಂತೆ ಸರ್ವ ಜನರನ್ನು ನಾವಲ್ಲಿ ಒಟ್ಟುಗೂಡಿಸಲಿದ್ದೇವೆ.

Verse 48

وَعُرِضُوا۟ عَلَىٰ رَبِّكَ صَفًّا لَّقَدْ جِئْتُمُونَا كَمَا خَلَقْنَـٰكُمْ أَوَّلَ مَرَّةٍۭ ۚ بَلْ زَعَمْتُمْ أَلَّن نَّجْعَلَ لَكُم مَّوْعِدًا

Transliteration waʿuriḍū ʿalā rabbika ṣaffan laqad ji'tumūnā kamā khalaqnākum awwala marratin bal zaʿamtum allan najʿala lakum mawʿidan

Kannada ತಮ್ಮ ಪ್ರಭುವಿನ ಸನ್ನಿಧಿಗೆ ಅವರೆಲ್ಲರನ್ನು ಸಾಲು ಸಾಲಾಗಿ ತರಲಾಗುವುದು. (ಓ ಪುನರು ತ್ಥಾನ ನಿಷೇಧಿಗಳೇ,) ಪ್ರಥಮ ಬಾರಿಗೆ ನಾವು ನಿಮ್ಮನ್ನು ಸೃಷ್ಟಿಸಿದ ಪ್ರಕಾರ ಇದೀಗ ನಮ್ಮೆಡೆಗೆ ನೀವು ಬಂದಿರುವಿರಿ. ಆದರೆ ಪುನರುತ್ಥಾನಕ್ಕಾಗಿ ಯಾವುದೇ ವಾಗ್ದತ್ತ ಸಮಯವನ್ನು ನಾವು ನಿಶ್ಚಯಿಸಿಲ್ಲವೆಂದು ನೀವು ಬಗೆಯುತ್ತಿದ್ದಿರಿ.

Verse 49

وَوُضِعَ ٱلْكِتَـٰبُ فَتَرَى ٱلْمُجْرِمِينَ مُشْفِقِينَ مِمَّا فِيهِ وَيَقُولُونَ يَـٰوَيْلَتَنَا مَالِ هَـٰذَا ٱلْكِتَـٰبِ لَا يُغَادِرُ صَغِيرَةً وَلَا كَبِيرَةً إِلَّآ أَحْصَىٰهَا ۚ وَوَجَدُوا۟ مَا عَمِلُوا۟ حَاضِرًا ۗ وَلَا يَظْلِمُ رَبُّكَ أَحَدًا

Transliteration wawuḍiʿa l-kitābu fatarā l-muj'rimīna mush'fiqīna mimmā fīhi wayaqūlūna yāwaylatanā māli hādhā l-kitābi lā yughādiru ṣaghīratan walā kabīratan illā aḥṣāhā wawajadū mā ʿamilū ḥāḍiran walā yaẓlimu rabbuka aḥadan

Kannada ಅಂದು ಪ್ರತಿಯೊಬ್ಬರ ಕೈಗಳಿಗೆ ಕರ್ಮಪತ್ರವನ್ನು ವಿತರಿಸಲಾಗುವುದು. ಆಗ ಅದರಲ್ಲಿರುವ ತಮ್ಮ ಕರ್ಮಗಳ ಬಗ್ಗೆ ಅಪರಾಧಿಗಳು ಅಂಜಿ ತತ್ತರಿಸು ವುದನ್ನು ತಾವು ಕಾಣುವಿರಿ. ಆಗ ಅವರು ಹೇಳು ವರು `ಅಯ್ಯೋ, ನಮ್ಮ ನಾಶವೇ, ಇದೆಂಥ ಗ್ರಂಥ! ಯಾವುದೇ ಸಣ್ಣ ಹಾಗೂ ದೊಡ್ಡ ವಿಷಯವನ್ನು ಇದರಲ್ಲಿ ಕರಾರುವಾಕ್ಕಾಗಿ ಲಿಖಿತಗೊಳಿಸದೆ ಬಿಟ್ಟಿಲ್ಲವಲ್ಲ. ಅವರು ಏನೆಲ್ಲ ಮಾಡಿದ್ದಾರೆ, ಅವ ನ್ನೆಲ್ಲ ಅವರು ಕಣ್ಣಾರೆ ಕಾಣುವರು. ತಮ್ಮ ಪ್ರಭು ಯಾರಿಗೂ ಕಿಂಚಿತ್ತೂ ಅನ್ಯಾಯ ಮಾಡಲಾರ.

Verse 50

وَإِذْ قُلْنَا لِلْمَلَـٰٓئِكَةِ ٱسْجُدُوا۟ لِـَٔادَمَ فَسَجَدُوٓا۟ إِلَّآ إِبْلِيسَ كَانَ مِنَ ٱلْجِنِّ فَفَسَقَ عَنْ أَمْرِ رَبِّهِۦٓ ۗ أَفَتَتَّخِذُونَهُۥ وَذُرِّيَّتَهُۥٓ أَوْلِيَآءَ مِن دُونِى وَهُمْ لَكُمْ عَدُوٌّۢ ۚ بِئْسَ لِلظَّـٰلِمِينَ بَدَلًا

Transliteration wa-idh qul'nā lil'malāikati us'judū liādama fasajadū illā ib'līsa kāna mina l-jini fafasaqa ʿan amri rabbihi afatattakhidhūnahu wadhurriyyatahu awliyāa min dūnī wahum lakum ʿaduwwun bi'sa lilẓẓālimīna badalan

Kannada `ನೀವು ಆದಮರಿಗೆ ಸುಜೂದ್ ಮಾಡಿರಿ' ಎಂದು ನಾವು ದೇವಚರರಿಗೆ ಹೇಳಿದಾಗ ಇಬ್ಲೀಸನ ಹೊರತು ಎಲ್ಲರೂ ಸುಜೂದ್ ಮಾಡಿದರು. ಅವನು ಖೇಚರ ವರ್ಗದವನಾಗಿದ್ದನು. ತನ್ನಿ ಮಿತ್ತ ಅವನು ತನ್ನ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದನು. (ಓ ಜನರೇ,) ಹೀಗಿರುವಾಗ ನನ್ನನ್ನು ಬಿಟ್ಟು ಅವನನ್ನೂ ಅವನ ಸಂತಾನವನ್ನೂ ನೀವು ಆಪ್ತರನ್ನಾಗಿ ಮಾಡುವುದು ಸರಿಯೇ? ನಿಜದಲ್ಲಿ ಅವರು ನಿಮ್ಮ ಶತ್ರುಗಳು. ಅಕ್ರಮಿಗಳಿಗೆ ಬದಲಿಯಾಗಿ ಅತ್ಯಂತ ಕೆಟ್ಟ ಫಲವೇ ದಕ್ಕಿದೆ.

Verse 51

۞ مَّآ أَشْهَدتُّهُمْ خَلْقَ ٱلسَّمَـٰوَٰتِ وَٱلْأَرْضِ وَلَا خَلْقَ أَنفُسِهِمْ وَمَا كُنتُ مُتَّخِذَ ٱلْمُضِلِّينَ عَضُدًا

Transliteration mā ashhadttuhum khalqa l-samāwāti wal-arḍi walā khalqa anfusihim wamā kuntu muttakhidha l-muḍilīna ʿaḍudan

Kannada ಭೂಮಿ ಮತ್ತು ಆಕಾಶಗಳ ಸೃಷ್ಟಿಯಲ್ಲಿ ಸ್ವತಃ ಅವರ ಸೃಷ್ಟಿಯಲ್ಲಿ ಕೂಡ ಅವರಾರನ್ನು ನಾನು ಸಾಕ್ಷಿಗಳನ್ನಾಗಿ ಮಾಡಿಲ್ಲ. ದಾರಿಗೆಡಿಸುವ ಪಿಶಾಚಿಗಳನ್ನು ನನ್ನ ಸಹಾಯಕರಾಗಿ ನಾನು ನಿಯ ಮಿಸಿಯೂ ಇಲ್ಲ. (ಹೀಗಿರುವಾಗ ನನ್ನ ಆರಾಧನೆಯಲ್ಲಿ ಅಂಥವರನ್ನು ಸಹಭಾಗಿಗೊಳಿಸಿದ್ದು ನ್ಯಾಯವೇ?)

Verse 52

وَيَوْمَ يَقُولُ نَادُوا۟ شُرَكَآءِىَ ٱلَّذِينَ زَعَمْتُمْ فَدَعَوْهُمْ فَلَمْ يَسْتَجِيبُوا۟ لَهُمْ وَجَعَلْنَا بَيْنَهُم مَّوْبِقًا

Transliteration wayawma yaqūlu nādū shurakāiya alladhīna zaʿamtum fadaʿawhum falam yastajībū lahum wajaʿalnā baynahum mawbiqan

Kannada `ನೀವು ಬಗೆದ ನನ್ನ ಸಹಭಾಗಿಗಳನ್ನು ಕರೆ ಯಿರಿ' ಎಂದು ಅಲ್ಲಾಹು (ಬಹುದೇವಾರಾಧಕರಿಗೆ) ಹೇಳುವ ದಿನವನ್ನು ನೆನಪಿಸಿ. ಆಗ ಅವರು ಕರೆದು ನೋಡುವರು. ಆದರೆ ಅವರಿಗೆ ಉತ್ತರ ಕೊಡಲಾರರು. ನಾವು ಅವರ ನಡುವೆ ದುರ್ಗಮ ಸ್ಥಳವನ್ನು ನಿಶ್ಚಯಿಸಿ ಕೊಡುವೆವು .

Verse 53

وَرَءَا ٱلْمُجْرِمُونَ ٱلنَّارَ فَظَنُّوٓا۟ أَنَّهُم مُّوَاقِعُوهَا وَلَمْ يَجِدُوا۟ عَنْهَا مَصْرِفًا

Transliteration waraā l-muj'rimūna l-nāra faẓannū annahum muwāqiʿūhā walam yajidū ʿanhā maṣrifan

Kannada ಅಪರಾಧಿಗಳು ನರಕವನ್ನು ಕಣ್ಣಾರೆ ಕಾಣುವರು ಮತ್ತು ನಾವು ಅದರಲ್ಲಿ ಬೀಳುವೆವೆಂದು ಅವರಿಗೆ ಮನದಟ್ಟಾಗುವುದು. ಅದರಿಂದ ಪಾರಾಗುವ ಯಾವುದೇ ದಾರಿಯನ್ನು ಅವರು ಕಂಡು ಕೊಳ್ಳಲಾರರು.

Verse 54

وَلَقَدْ صَرَّفْنَا فِى هَـٰذَا ٱلْقُرْءَانِ لِلنَّاسِ مِن كُلِّ مَثَلٍ ۚ وَكَانَ ٱلْإِنسَـٰنُ أَكْثَرَ شَىْءٍ جَدَلًا

Transliteration walaqad ṣarrafnā fī hādhā l-qur'āni lilnnāsi min kulli mathalin wakāna l-insānu akthara shayin jadalan

Kannada ನಾವು ಈ ಖುರ್‍ಆನಿನಲ್ಲಿ ಜನರಿಗೆ ಎಲ್ಲ ತರದ ಉಪಮೆಗಳನ್ನು ವಿವಿಧ ರೂಪದಲ್ಲಿ ವಿವರಿಸಿ ದ್ದೇವೆ. ಆದರೆ ಮನುಷ್ಯನು ಅಧಿಕ ವಿಷಯಗ ಳಲ್ಲೂ ಹಠಮಾರಿ ಧೋರಣೆಯನ್ನು ಹೊಂದಿರುವನು.

Verse 55

وَمَا مَنَعَ ٱلنَّاسَ أَن يُؤْمِنُوٓا۟ إِذْ جَآءَهُمُ ٱلْهُدَىٰ وَيَسْتَغْفِرُوا۟ رَبَّهُمْ إِلَّآ أَن تَأْتِيَهُمْ سُنَّةُ ٱلْأَوَّلِينَ أَوْ يَأْتِيَهُمُ ٱلْعَذَابُ قُبُلًا

Transliteration wamā manaʿa l-nāsa an yu'minū idh jāahumu l-hudā wayastaghfirū rabbahum illā an tatiyahum sunnatu l-awalīna aw yatiyahumu l-ʿadhābu qubulan

Kannada ಮನುಷ್ಯರನ್ನು ಮಾರ್ಗದರ್ಶನ ಬಂದಾಗ ಅದನ್ನು ನಂಬುವುದರಿಂದ ಹಾಗೂ ಅವರ ಪ್ರಭು ವಿನೊಡನೆ ಕ್ಷಮಾಯಾಚನೆ ಮಾಡುವುದರಿಂದ ಅವರನ್ನು ತಡೆದದ್ದು, ಗತಕಾಲದ ಜನಾಂಗಗಳ ಗತಿ ಬರುವುದು ಅಥವಾ ಮುಖಾಮುಖಿ ಶಿಕ್ಷೆ ಅವರಿಗೆ ಬರುವುದು ಎಂಬ ಅವರ ವಿಧಿ ಲಿಖಿತ ವಾಗಿತ್ತು.

Verse 56

وَمَا نُرْسِلُ ٱلْمُرْسَلِينَ إِلَّا مُبَشِّرِينَ وَمُنذِرِينَ ۚ وَيُجَـٰدِلُ ٱلَّذِينَ كَفَرُوا۟ بِٱلْبَـٰطِلِ لِيُدْحِضُوا۟ بِهِ ٱلْحَقَّ ۖ وَٱتَّخَذُوٓا۟ ءَايَـٰتِى وَمَآ أُنذِرُوا۟ هُزُوًا

Transliteration wamā nur'silu l-mur'salīna illā mubashirīna wamundhirīna wayujādilu alladhīna kafarū bil-bāṭili liyud'ḥiḍū bihi l-ḥaqa wa-ittakhadhū āyātī wamā undhirū huzuwan

Kannada ಸುವಾರ್ತೆ ಹಾಗೂ ಮುನ್ನೆಚ್ಚರಿಕೆ ಕೊಡುವವ ರನ್ನಾಗಿಯೇ ಹೊರತು ಸಂದೇಶವಾಹಕರನ್ನು ನಾವು ನಿಯೋಜಿಸುತ್ತಿಲ್ಲ. ಆದರೆ ಸತ್ಯನಿಷೇಧಿಗಳು ಸತ್ಯವನ್ನು ದಮನಿಸಲು ಮಿಥ್ಯ ಮಾರ್ಗದ ಮೂಲಕ ವಾದ ಹೂಡುತ್ತಾರೆ. ಅವರು ನನ್ನ ದೃಷ್ಟಾಂತಗಳನ್ನೂ ಅವರಿಗೆ ನೀಡಲಾದ ಮುನ್ನೆಚ್ಚರಿಕೆಯನ್ನೂ ಪರಿಹಾಸ್ಯವನ್ನಾಗಿ ಮಾಡಿದ್ದಾರೆ.

Verse 57

وَمَنْ أَظْلَمُ مِمَّن ذُكِّرَ بِـَٔايَـٰتِ رَبِّهِۦ فَأَعْرَضَ عَنْهَا وَنَسِىَ مَا قَدَّمَتْ يَدَاهُ ۚ إِنَّا جَعَلْنَا عَلَىٰ قُلُوبِهِمْ أَكِنَّةً أَن يَفْقَهُوهُ وَفِىٓ ءَاذَانِهِمْ وَقْرًا ۖ وَإِن تَدْعُهُمْ إِلَى ٱلْهُدَىٰ فَلَن يَهْتَدُوٓا۟ إِذًا أَبَدًا

Transliteration waman aẓlamu mimman dhukkira biāyāti rabbihi fa-aʿraḍa ʿanhā wanasiya mā qaddamat yadāhu innā jaʿalnā ʿalā qulūbihim akinnatan an yafqahūhu wafī ādhānihim waqran wa-in tadʿuhum ilā l-hudā falan yahtadū idhan abadan

Kannada ತನ್ನ ಪ್ರಭುವಿನ ದೃಷ್ಟಾಂತಗಳ ಬಗ್ಗೆ ಬೋಧನೆ ನೀಡಿಯೂ ಯಾರು ಅದರಿಂದ ವಿಮುಖನಾಗು ತ್ತಾನೆ ಮತ್ತು ತನ್ನ ಸ್ವಂತ ಕೈಗಳಿಂದ ಮಾಡಿದ ಪಾಪ ಕೃತ್ಯಗಳನ್ನು ಮರೆತು ಬಿಡುತ್ತಾನೆ, ಅವನಿಗಿಂತ ದೊಡ್ಡ ಅಕ್ರಮಿ ಬೇರೆ ಯಾರೂ ಇಲ್ಲ. ಖಂಡಿತ ನಾವು ಅವರ ಹೃದಯಗಳಿಗೆ ಖುರ್ ಆನ್ ಗ್ರಹಿಸದಂತೆ ಮಾಡುವ ಪರದೆಯನ್ನು ಮತ್ತು ಅವರ ಕಿವಿಗಳಿಗೆ ಕಿವುಡನ್ನು ಇರಿಸಿದ್ದೇವೆ. ಈ ಕಾರಣದಿಂದ ನೀವು ಅವರನ್ನು ನೇರದಾರಿಗೆ ಕರೆದರೆ ಅವರೆಂದಿಗೂ ಸನ್ಮಾರ್ಗವನ್ನು ಪಡೆಯಲಾರರು.

Verse 58

وَرَبُّكَ ٱلْغَفُورُ ذُو ٱلرَّحْمَةِ ۖ لَوْ يُؤَاخِذُهُم بِمَا كَسَبُوا۟ لَعَجَّلَ لَهُمُ ٱلْعَذَابَ ۚ بَل لَّهُم مَّوْعِدٌ لَّن يَجِدُوا۟ مِن دُونِهِۦ مَوْئِلًا

Transliteration warabbuka l-ghafūru dhū l-raḥmati law yuākhidhuhum bimā kasabū laʿajjala lahumu l-ʿadhāba bal lahum mawʿidun lan yajidū min dūnihi mawilan

Kannada ಮಹಾಕ್ಷಮಾಶೀಲನಾದ ನಿಮ್ಮ ಪ್ರಭುವು ಕರು ಣಾಮಯನೂ ಆಗಿರುತ್ತಾನೆ. ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯನ್ನು (ಇಹಲೋಕದಲ್ಲೇ) ಕೊಡುವುದಿದ್ದರೆ ಅವನು ಶಿಕ್ಷೆಯನ್ನು ತ್ವರಿತ ಗೊಳಿಸುತಿದ್ದನು. ಆದರೆ ಶಿಕ್ಷಾಕ್ರಮ ಕೈಗೊಳ್ಳಲು ನಿಶ್ಚಿತ ಅವಧಿಯನ್ನು ನಿಗದಿಪಡಿಸಲಾಗಿದೆ. ಆ ಅವಧಿ ತಲುಪಿಬಿಟ್ಟರೆ ಅದನ್ನು ತಪ್ಪಿಸಿ ಪಾರಾಗು ವ ಅಭಯ ಸ್ಥಾನವನ್ನು ಅವರು ಪಡೆಯಲಾರರು.

Verse 59

وَتِلْكَ ٱلْقُرَىٰٓ أَهْلَكْنَـٰهُمْ لَمَّا ظَلَمُوا۟ وَجَعَلْنَا لِمَهْلِكِهِم مَّوْعِدًا

Transliteration watil'ka l-qurā ahlaknāhum lammā ẓalamū wajaʿalnā limahlikihim mawʿidan

Kannada ಸತ್ಯವನ್ನು ನಿಷೇಧಿಸಿ ಅನ್ಯಾಯವೆಸಗಿದಾಗ ನಾವು ಅದೆಷ್ಟೋ ನಾಡಿನ ನಿವಾಸಿಗಳನ್ನು ನಾಶ ಮಾಡಿದ್ದೇವೆ. ಅವರ ನಾಶಕ್ಕೆ ನಾವು ನಿಶ್ಚಿತ ಅವಧಿಯನ್ನು ನಿಗದಿಪಡಿಸಿದ್ದೇವೆ.

Verse 60

وَإِذْ قَالَ مُوسَىٰ لِفَتَىٰهُ لَآ أَبْرَحُ حَتَّىٰٓ أَبْلُغَ مَجْمَعَ ٱلْبَحْرَيْنِ أَوْ أَمْضِىَ حُقُبًا

Transliteration wa-idh qāla mūsā lifatāhu lā abraḥu ḥattā ablugha majmaʿa l-baḥrayni aw amḍiya ḥuquban

Kannada `ಎರಡು ಸಾಗರ ಸಂಗಮಿಸುವ ಸ್ಥಾನಕ್ಕೆ ತಲು ಪುವವರೆಗೆ ನಾನು ಯಾತ್ರೆಯನ್ನು ಮುಂದುವರಿ ಸುವೆನು. ಇಲ್ಲವೇ ನಾನು ದೀರ್ಘಕಾಲದವರೆಗೆ ನಡೆಯುತ್ತಲೇ ಇರುವೆನು' ಎಂದು ಪ್ರವಾದಿ ಮೂಸಾ, ತಮ್ಮ ಜವಾನನೊಡನೆ ಹೇಳಿದ ಘಟನೆಯನ್ನು ನೆನಪಿಸಿರಿ.

Verse 61

فَلَمَّا بَلَغَا مَجْمَعَ بَيْنِهِمَا نَسِيَا حُوتَهُمَا فَٱتَّخَذَ سَبِيلَهُۥ فِى ٱلْبَحْرِ سَرَبًا

Transliteration falammā balaghā majmaʿa baynihimā nasiyā ḥūtahumā fa-ittakhadha sabīlahu fī l-baḥri saraban

Kannada ಅವರಿಬ್ಬರು ಕೂಡುಸಾಗರಕ್ಕೆ ತಲುಪಿದಾಗ ತಮ್ಮ ಮೀನನ್ನು ಜೊತೆಗೊಯ್ಯಲು ಮರೆತು ಬಿಟ್ಟರು. ಆಗ ಅದು ಸಮುದ್ರದಲ್ಲಿ ಸುರಂಗ ದಾರಿಯನ್ನು ಹಿಡಿಯಿತು.

Verse 62

فَلَمَّا جَاوَزَا قَالَ لِفَتَىٰهُ ءَاتِنَا غَدَآءَنَا لَقَدْ لَقِينَا مِن سَفَرِنَا هَـٰذَا نَصَبًا

Transliteration falammā jāwazā qāla lifatāhu ātinā ghadāanā laqad laqīnā min safarinā hādhā naṣaban

Kannada ತರುವಾಯ ಅವರು ಆ ಸ್ಥಳವನ್ನು ಬಿಟ್ಟು ಮುಂದೆ ಸಾಗಿದಾಗ ತಮ್ಮ ಜವಾನನೊಡನೆ `ನಮ್ಮ ಬೆಳಗಿನ ತಿಂಡಿ ನೀಡು, ಇಂದು ನಾವು ನಡೆದು ಸುಸ್ತಾಗಿದ್ದೇವೆ' ಎಂದರು.

Verse 63

قَالَ أَرَءَيْتَ إِذْ أَوَيْنَآ إِلَى ٱلصَّخْرَةِ فَإِنِّى نَسِيتُ ٱلْحُوتَ وَمَآ أَنسَىٰنِيهُ إِلَّا ٱلشَّيْطَـٰنُ أَنْ أَذْكُرَهُۥ ۚ وَٱتَّخَذَ سَبِيلَهُۥ فِى ٱلْبَحْرِ عَجَبًا

Transliteration qāla ara-ayta idh awaynā ilā l-ṣakhrati fa-innī nasītu l-ḥūta wamā ansānīhu illā l-shayṭānu an adhkurahu wa-ittakhadha sabīlahu fī l-baḥri ʿajaban

Kannada ಆಗ ಜವಾನನು, `ಗಮನಿಸುವಿರಾ? ನಾವು ಆ ಬಂಡೆಗಲ್ಲಿನಲ್ಲಿ ತಂಗಿದ್ದಾಗ ನಾನು ಮೀನನ್ನು ಮರೆತುಬಿಟ್ಟಿದ್ದೆ. ಅದನ್ನು ತಮ್ಮಲ್ಲಿ ಹೇಳದಂತೆ ಶೈತಾನನು ನನ್ನನ್ನು ಮರೆವೆಗೊಳಿಸಿದ್ದನು. ಮೀನು ಸಮುದ್ರದಲ್ಲಿ ವಿಸ್ಮಯದ ದಾರಿಯನ್ನು ಹಿಡಿಯಿತು' ಎಂದನು.

Verse 64

قَالَ ذَٰلِكَ مَا كُنَّا نَبْغِ ۚ فَٱرْتَدَّا عَلَىٰٓ ءَاثَارِهِمَا قَصَصًا

Transliteration qāla dhālika mā kunnā nabghi fa-ir'taddā ʿalā āthārihimā qaṣaṣan

Kannada ಆಗ ಮೂಸಾ, `ನಾವು ಇದುವರೆಗೂ ಹುಡುಕುತ್ತಿರುವ ಸ್ಥಳ ಅದುವೇ' ಎಂದರು. ನಂತರ ಅವರಿ ಬ್ಬರು ತಮ್ಮ ಕಾಲು ಹೆಜ್ಜೆಯ ಗುರುತು ಹಿಡಿದು ಹಿಂದೆ ನಡೆದರು.

Verse 65

فَوَجَدَا عَبْدًا مِّنْ عِبَادِنَآ ءَاتَيْنَـٰهُ رَحْمَةً مِّنْ عِندِنَا وَعَلَّمْنَـٰهُ مِن لَّدُنَّا عِلْمًا

Transliteration fawajadā ʿabdan min ʿibādinā ātaynāhu raḥmatan min ʿindinā waʿallamnāhu min ladunnā ʿil'man

Kannada ಆಗ ಅವರು ನಮ್ಮ ದಾಸರ ಪೈಕಿ ಓರ್ವ ದಾಸನನ್ನು ಕಂಡರು. ಆ ದಾಸನಿಗೆ ನಮ್ಮ ಪಾಲಿನ ಅನುಗ್ರಹವನ್ನು ಕೊಟ್ಟಿದ್ದೆವು. ಅಲ್ಲದೆ ನಮ್ಮ ವತಿಯಿಂದ ವಿಶೇಷ ಜ್ಞಾನವನ್ನು ಕಲಿಸಿದ್ದೆವು .

Verse 66

قَالَ لَهُۥ مُوسَىٰ هَلْ أَتَّبِعُكَ عَلَىٰٓ أَن تُعَلِّمَنِ مِمَّا عُلِّمْتَ رُشْدًا

Transliteration qāla lahu mūsā hal attabiʿuka ʿalā an tuʿallimani mimmā ʿullim'ta rush'dan

Kannada ಮೂಸಾ ಅವರೊಡನೆ; ‘ನಿಮಗೆ ಕಲಿಸಿ ಕೊಡಲಾಗಿರುವ ಸನ್ಮಾರ್ಗ ಜ್ಞಾನವನ್ನು ನನಗೂ ಕಲಿಸಿ ಕೊಡಲೆಂದು ನಾನು ನಿಮ್ಮ ಜೊತೆ ಬರಲೇ’ ಎಂದು ಕೇಳಿದರು.

Verse 67

قَالَ إِنَّكَ لَن تَسْتَطِيعَ مَعِىَ صَبْرًا

Transliteration qāla innaka lan tastaṭīʿa maʿiya ṣabran

Kannada ಆಗ ಅವರು ಹೇಳಿದರು, ‘ನನ್ನ ಜೊತೆ ನಿಲ್ಲಲು ತಮಗೆ ಖಂಡಿತ ಸಹನೆ ಬರಲಾರದು’.

Verse 68

وَكَيْفَ تَصْبِرُ عَلَىٰ مَا لَمْ تُحِطْ بِهِۦ خُبْرًا

Transliteration wakayfa taṣbiru ʿalā mā lam tuḥiṭ bihi khub'ran

Kannada ‘ತಾವು ಗ್ರಹಿಸದ ವಿಷಯದ ಬಗ್ಗೆ ತಾವು ಹೇಗೆ ಸಹಿಸುವಿರಿ ?’

Verse 69

قَالَ سَتَجِدُنِىٓ إِن شَآءَ ٱللَّهُ صَابِرًا وَلَآ أَعْصِى لَكَ أَمْرًا

Transliteration qāla satajidunī in shāa l-lahu ṣābiran walā aʿṣī laka amran

Kannada ಆಗ ಮೂಸಾ `ಇನ್‍ಶಾ ಅಲ್ಲಾಹ್, ತಾವು ನನ್ನನ್ನು ಸಹನೆಯುಳ್ಳವನಾಗಿ ಕಾಣುವಿರಿ. ನಾನು ತಮ್ಮ ಯಾವುದೇ ಆದೇಶವನ್ನು ಉಲ್ಲಂಘಿಸಲಾರೆ' ಎಂದರು.

Verse 70

قَالَ فَإِنِ ٱتَّبَعْتَنِى فَلَا تَسْـَٔلْنِى عَن شَىْءٍ حَتَّىٰٓ أُحْدِثَ لَكَ مِنْهُ ذِكْرًا

Transliteration qāla fa-ini ittabaʿtanī falā tasalnī ʿan shayin ḥattā uḥ'ditha laka min'hu dhik'ran

Kannada ಆಗ ಅವರು, ‘ತಾವು ನನ್ನ ಜತೆ ಬರುವುದಾದರೆ ನಾನು ಏನೇ ಮಾಡಿದರೂ ನಾನೇ ನಿಮಗೆ ವಿವರಿಸಿ ಕೊಡುವವರೆಗೆ ಅದರ ಬಗ್ಗೆ ಏನನ್ನೂ ಕೇಳಬಾರದು’ ಎಂದರು.

Verse 71

فَٱنطَلَقَا حَتَّىٰٓ إِذَا رَكِبَا فِى ٱلسَّفِينَةِ خَرَقَهَا ۖ قَالَ أَخَرَقْتَهَا لِتُغْرِقَ أَهْلَهَا لَقَدْ جِئْتَ شَيْـًٔا إِمْرًا

Transliteration fa-inṭalaqā ḥattā idhā rakibā fī l-safīnati kharaqahā qāla akharaqtahā litugh'riqa ahlahā laqad ji'ta shayan im'ran

Kannada ತರುವಾಯ ಅವರಿಬ್ಬರೂ (ಕಡಲತೀರದಲ್ಲಿ ನಡೆಯುತ್ತ) ಸಾಗಿದರು. ಕೊನೆಗೆ ಅವರು (ಅಲ್ಲೇ ಹಾದು ಹೋಗುತ್ತಿದ್ದ) ಹಡಗಿಗೆ ಹತ್ತಿದರು. (ನಡು ಗಡಲಿಗೆ ತಲುಪಿದಾಗ) ಆ ವ್ಯಕ್ತಿ ಹಡಗಿನ ಹಲಗೆಯನ್ನು ಕಡಿದು ತೆಗೆದರು. ಆಗ ಮೂಸಾ ಆ ವ್ಯಕ್ತಿಗೆ ಹೇಳಿದರು. ‘ನೀವು ಹಡಗಿನ ಜನರನ್ನು ಮುಳುಗಿಸಿ ಬಿಡಬೇಕೆಂದು ಇದನ್ನು ಕಡಿದು ತೆಗೆದಿರಾ? ನಿಜಕ್ಕೂ ತಾವು ಬಲು ದೊಡ್ಡ ತಪ್ಪನ್ನೇ ಮಾಡಿದಿರಿ’.

Verse 72

قَالَ أَلَمْ أَقُلْ إِنَّكَ لَن تَسْتَطِيعَ مَعِىَ صَبْرًا

Transliteration qāla alam aqul innaka lan tastaṭīʿa maʿiya ṣabran

Kannada ಆಗ ಅವರು; ‘ನನ್ನ ಜತೆಗೆ ನಿಮಗೆ ಸಹನೆ ಪಾಲಿಸಲು ಸಾಧ್ಯವಿಲ್ಲವೆಂದು ನಾನು ಮೊದಲೇ ಹೇಳಿರಲಿಲ್ಲವೇ?’ ಎಂದು ಕೇಳಿದರು.

Verse 73

قَالَ لَا تُؤَاخِذْنِى بِمَا نَسِيتُ وَلَا تُرْهِقْنِى مِنْ أَمْرِى عُسْرًا

Transliteration qāla lā tuākhidh'nī bimā nasītu walā tur'hiq'nī min amrī ʿus'ran

Kannada ಆಗ ಮೂಸಾ, ‘ಮರೆತು ಹೇಳಿದುದಕ್ಕಾಗಿ ನನ್ನ ಮೇಲೆ ಕ್ರಮ ಕೈಗೊಳ್ಳಬೇಡಿರಿ. ನನ್ನ ವಿಷಯ ದಲ್ಲಿ ನಿಷ್ಟುರವಾಗಿ ವರ್ತಿಸಬೇಡಿರಿ. ಕನಿಕರ ತೋರಿರಿ’ ಎಂದರು.

Verse 74

فَٱنطَلَقَا حَتَّىٰٓ إِذَا لَقِيَا غُلَـٰمًا فَقَتَلَهُۥ قَالَ أَقَتَلْتَ نَفْسًا زَكِيَّةًۢ بِغَيْرِ نَفْسٍ لَّقَدْ جِئْتَ شَيْـًٔا نُّكْرًا

Transliteration fa-inṭalaqā ḥattā idhā laqiyā ghulāman faqatalahu qāla aqatalta nafsan zakiyyatan bighayri nafsin laqad ji'ta shayan nuk'ran

Kannada ಅನಂತರ ಅವರಿಬ್ಬರೂ (ಹಡಗಿನಿಂದಿಳಿದು) ನಡೆಯುತ್ತ ಸಾಗಿದರು. ಕೊನೆಗೆ ಅವರು ಒಬ್ಬ ಬಾಲಕನನ್ನು ಕಂಡರು. ಕೂಡಲೇ ಆ ವ್ಯಕ್ತಿ ಅವ ನನ್ನು ಕೊಲೆ ಮಾಡಿದರು. ಮೂಸಾ ಹೇಳಿ ದರು. ‘ಪ್ರಾಯ ತುಂಬದ ಮುಗ್ಧ ಪ್ರಾಣವೊಂದನ್ನು ಮರಣ ದಂಡನೆಯ ಹೊರತು ಹತ್ಯೆ ಮಾಡಿದಿರಲ್ಲ ವೇ? ನಿಜಕ್ಕೂ ನೀವು ನೀಚ ಕಾರ್ಯವನ್ನೆಸಗಿದಿರಿ’.

Verse 75

۞ قَالَ أَلَمْ أَقُل لَّكَ إِنَّكَ لَن تَسْتَطِيعَ مَعِىَ صَبْرًا

Transliteration qāla alam aqul laka innaka lan tastaṭīʿa maʿiya ṣabran

Kannada ಆಗ ಅವರು ‘ನನ್ನ ಜೊತೆಗೆ ನಿಮಗೆ ಸಹನೆ ವಹಿಸಲು ಸಾಧ್ಯವಿಲ್ಲವೆಂದು ನಾನು ಮೊದಲೇ ಹೇಳಿರಲಿಲ್ಲವೇ?’ ಎಂದರು.

Verse 76

قَالَ إِن سَأَلْتُكَ عَن شَىْءٍۭ بَعْدَهَا فَلَا تُصَـٰحِبْنِى ۖ قَدْ بَلَغْتَ مِن لَّدُنِّى عُذْرًا

Transliteration qāla in sa-altuka ʿan shayin baʿdahā falā tuṣāḥib'nī qad balaghta min ladunnī ʿudh'ran

Kannada ಆಗ ಮೂಸಾ ‘ಇನ್ನು ಮುಂದೆ ಏನಾದರೂ ನಿಮ್ಮಲ್ಲಿ ನಾನು ಕೇಳಿದರೆ ನನ್ನೊಂದಿಗೆ ಸಹ ವಾಸ ಮಾಡದಿರಿ. ನನ್ನಿಂದ ನಿಮಗೆ (ನನ್ನನ್ನು ಬೇರ್ಪಡಿಸುವ) ಧಾರಾಳ ಕಾರಣ ಸಿಕ್ಕಿದೆ’ ಎಂದರು.

Verse 77

فَٱنطَلَقَا حَتَّىٰٓ إِذَآ أَتَيَآ أَهْلَ قَرْيَةٍ ٱسْتَطْعَمَآ أَهْلَهَا فَأَبَوْا۟ أَن يُضَيِّفُوهُمَا فَوَجَدَا فِيهَا جِدَارًا يُرِيدُ أَن يَنقَضَّ فَأَقَامَهُۥ ۖ قَالَ لَوْ شِئْتَ لَتَّخَذْتَ عَلَيْهِ أَجْرًا

Transliteration fa-inṭalaqā ḥattā idhā atayā ahla qaryatin is'taṭʿamā ahlahā fa-abaw an yuḍayyifūhumā fawajadā fīhā jidāran yurīdu an yanqaḍḍa fa-aqāmahu qāla law shi'ta lattakhadhta ʿalayhi ajran

Kannada ಅನಂತರ ಅವರು ಮುಂದೆ ಸಾಗಿದರು. ಕೊನೆಗೆ ಒಂದು ಗ್ರಾಮಕ್ಕೆ ಬಂದರು. ಅಲ್ಲಿಯ ಜನರಲ್ಲಿ ಊಟ ಕೇಳಿದರು. ಆದರೆ ಇವರನ್ನು ಸತ್ಕರಿಸಲು ಅವರು ನಿರಾಕರಿಸಿದರು. ಆಗ ಅಲ್ಲೊಂದು ಕುಸಿದು ಬೀಳಲಿಕ್ಕಾದ ಗೋಡೆಯನ್ನು ಕಂಡರು. ಆ ವ್ಯಕ್ತಿ ಅದನ್ನು ಸರಿಪಡಿಸಿ ನಿಲ್ಲಿಸಿದರು. ಮೂಸಾ ಹೇಳಿದರು; ‘ನಿಮಗೆ ಇದನ್ನು ಸರಿ ಮಾಡಲೇಬೇಕೆಂದಿದ್ದರೆ ಮಜೂರಿಯನ್ನು ಪಡೆಯಬಹುದಿತ್ತಲ್ಲ?’

Verse 78

قَالَ هَـٰذَا فِرَاقُ بَيْنِى وَبَيْنِكَ ۚ سَأُنَبِّئُكَ بِتَأْوِيلِ مَا لَمْ تَسْتَطِع عَّلَيْهِ صَبْرًا

Transliteration qāla hādhā firāqu baynī wabaynika sa-unabbi-uka bitawīli mā lam tastaṭiʿ ʿalayhi ṣabran

Kannada ಆಗ ಅವರು ಹೀಗೆ ಹೇಳಿದರು. ‘ನನ್ನ ಹಾಗೂ ನಿಮ್ಮ ನಡುವೆ ಬೇರ್ಪಡುವ ಸಮಯವಿದು. ಇನ್ನು ನಾನು ನಿಮಗೆ ತಾಳಿಕೊಳ್ಳಲಾಗದ ವಿಷಯಗಳ ಸೃಷ್ಟೀಕರಣವನ್ನು ವಿವರಿಸಿ ಕೊಡುತ್ತೇನೆ.

Verse 79

أَمَّا ٱلسَّفِينَةُ فَكَانَتْ لِمَسَـٰكِينَ يَعْمَلُونَ فِى ٱلْبَحْرِ فَأَرَدتُّ أَنْ أَعِيبَهَا وَكَانَ وَرَآءَهُم مَّلِكٌ يَأْخُذُ كُلَّ سَفِينَةٍ غَصْبًا

Transliteration ammā l-safīnatu fakānat limasākīna yaʿmalūna fī l-baḥri fa-aradttu an aʿībahā wakāna warāahum malikun yakhudhu kulla safīnatin ghaṣban

Kannada ಆ ಹಡಗು ಕಡಲಲ್ಲಿ ದುಡಿದು ಹೊಟ್ಟೆ ಹೊರೆಯುತ್ತಿದ್ದ ಬಡವರದ್ದಾಗಿತ್ತು. ಮುಂದೆ ಹೋಗುವಾಗ ದಾರಿಯಲ್ಲಿ ಅಕ್ರಮಿಯಾದ ರಾಜನೊಬ್ಬನಿದ್ದು ಅವನು (ಕೇಡಿಲ್ಲದ) ಎಲ್ಲ ಹಡಗುಗಳನ್ನು ಬಲ ವಂತವಾಗಿ ವಶಪಡಿಸಿಕೊಳ್ಳುತ್ತಿದ್ದನು. ಆದ್ದರಿಂದ ನಾನದನ್ನು ಕೇಡು ಮಾಡಲು ಬಯಸಿದೆ.

Verse 80

وَأَمَّا ٱلْغُلَـٰمُ فَكَانَ أَبَوَاهُ مُؤْمِنَيْنِ فَخَشِينَآ أَن يُرْهِقَهُمَا طُغْيَـٰنًا وَكُفْرًا

Transliteration wa-ammā l-ghulāmu fakāna abawāhu mu'minayni fakhashīnā an yur'hiqahumā ṭugh'yānan wakuf'ran

Kannada ಆ ಬಾಲಕನ ತಂದೆ ತಾಯಿಗಳು ಸತ್ಯ ವಿಶ್ವಾಸಿ ಗಳಾಗಿದ್ದರು. ಅವನು ಬೆಳೆದು ದೊಡ್ಡವನಾದರೆ ತನ್ನ ಹೆತ್ತವರನ್ನು ಅತಿಕ್ರಮ ಹಾಗೂ ಸತ್ಯ ನಿಷೇಧಕ್ಕೆ ಬಲವಂತವಾಗಿ ದೂಡಿಹಾಕುವ ಭಯ ನಮಗೆ ಕಾಡಿತು.

Verse 81

فَأَرَدْنَآ أَن يُبْدِلَهُمَا رَبُّهُمَا خَيْرًا مِّنْهُ زَكَوٰةً وَأَقْرَبَ رُحْمًا

Transliteration fa-aradnā an yub'dilahumā rabbuhumā khayran min'hu zakatan wa-aqraba ruḥ'man

Kannada ಹೀಗಾಗಿ ಆತನಿಗಿಂತ ಶುದ್ಧ ಚಾರಿತ್ರ್ಯವಂತನೂ ನಿಕಟ ದಯಾವಂತನೂ ಆದ ಸಂತಾನವನ್ನು ಅವರ ಪ್ರಭು ಅವರಿಗೆ ಕರುಣಿಸುವಂತೆ ನಾವು ಬಯಸಿದೆವು.

Verse 82

وَأَمَّا ٱلْجِدَارُ فَكَانَ لِغُلَـٰمَيْنِ يَتِيمَيْنِ فِى ٱلْمَدِينَةِ وَكَانَ تَحْتَهُۥ كَنزٌ لَّهُمَا وَكَانَ أَبُوهُمَا صَـٰلِحًا فَأَرَادَ رَبُّكَ أَن يَبْلُغَآ أَشُدَّهُمَا وَيَسْتَخْرِجَا كَنزَهُمَا رَحْمَةً مِّن رَّبِّكَ ۚ وَمَا فَعَلْتُهُۥ عَنْ أَمْرِى ۚ ذَٰلِكَ تَأْوِيلُ مَا لَمْ تَسْطِع عَّلَيْهِ صَبْرًا

Transliteration wa-ammā l-jidāru fakāna lighulāmayni yatīmayni fī l-madīnati wakāna taḥtahu kanzun lahumā wakāna abūhumā ṣāliḥan fa-arāda rabbuka an yablughā ashuddahumā wayastakhrijā kanzahumā raḥmatan min rabbika wamā faʿaltuhu ʿan amrī dhālika tawīlu mā lam tasṭiʿ ʿalayhi ṣabran

Kannada ಆ ಗೋಡೆಯು ಪಟ್ಟಣದ ಇಬ್ಬರು ಅನಾಥ ಮಕ್ಕಳದ್ದಾಗಿತ್ತು. ಅದರ ಅಡಿಯಲ್ಲಿ ಮಕ್ಕಳಿಗಾಗಿ ಕೂಡಿಟ್ಟ ನಿಕ್ಷೇಪವಿತ್ತು. ಅವರ ತಂದೆ ಓರ್ವ ಸಜ್ಜನ ವ್ಯಕ್ತಿಯಾಗಿದ್ದರು . ಆದ್ದರಿಂದ ಅವರಿಬ್ಬರು ಪ್ರೌಢಾವಸ್ಥೆಗೆ ತಲುಪಿದ ಮೇಲೆ ನಿಧಿಯನ್ನು ಅವರು ಹೊರತೆಗೆಯಲೆಂದು ನಿಮ್ಮ ಪ್ರಭು ಬಯಸಿದ್ದನು. ಇದು ನಿಮ್ಮ ರಕ್ಷಕನ ಮಹತ್ತರವಾದ ಕೃಪೆಯ ಫಲ. ನಾನಿದನ್ನು ನನ್ನ ಸ್ವಂತ ಅಭಿಪ್ರಾಯ ಪ್ರಕಾರ ಮಾಡಿಲ್ಲ. ಇವಿಷ್ಟು ನಿಮಗೆ ತಾಳಿಕೊಳ್ಳಲಾಗದ ವಿಷಯಗಳ ಸಾರಾಂಶ’ .

Verse 83

وَيَسْـَٔلُونَكَ عَن ذِى ٱلْقَرْنَيْنِ ۖ قُلْ سَأَتْلُوا۟ عَلَيْكُم مِّنْهُ ذِكْرًا

Transliteration wayasalūnaka ʿan dhī l-qarnayni qul sa-atlū ʿalaykum min'hu dhik'ran

Kannada (ಓ ಪ್ರವಾದಿವರ್ಯರೇ,) ದ್ಸುಲ್ಖರ್ನೈನ್‍ರ ಬಗ್ಗೆ ಇವರು ನಿಮ್ಮಲ್ಲಿ ಪ್ರಶ್ನಿಸುತ್ತಾರೆ. ಅವರ ಚರಿತ್ರೆ ಯಿಂದ ಕೆಲವು ವಿವರವನ್ನು ನಾನು ನಿಮಗೆ ಓದಿ ಕೊಡುವೆನೆಂದು ಹೇಳಿರಿ.

Verse 84

إِنَّا مَكَّنَّا لَهُۥ فِى ٱلْأَرْضِ وَءَاتَيْنَـٰهُ مِن كُلِّ شَىْءٍ سَبَبًا

Transliteration innā makkannā lahu fī l-arḍi waātaynāhu min kulli shayin sababan

Kannada ನಾವು ಅವರಿಗೆ ಭೂಮಿಯಲ್ಲಿ ಪ್ರಭುತ್ವವನ್ನು ದಯಪಾಲಿಸಿದ್ದೆವು. ಅವರಿಗೆ ಅಗತ್ಯವಾದ ಎಲ್ಲ ಕಾರ್ಯಕ್ಕೂ ದಾರಿಯನ್ನು ಸುಗಮಗೊಳಿಸಿದೆವು.

Verse 85

فَأَتْبَعَ سَبَبًا

Transliteration fa-atbaʿa sababan

Kannada ಒಮ್ಮೆ ಅವರು (ಪಶ್ಚಿಮ) ಮಾರ್ಗಕ್ಕೆ ಹೊರಟರು.

Verse 86

حَتَّىٰٓ إِذَا بَلَغَ مَغْرِبَ ٱلشَّمْسِ وَجَدَهَا تَغْرُبُ فِى عَيْنٍ حَمِئَةٍ وَوَجَدَ عِندَهَا قَوْمًا ۗ قُلْنَا يَـٰذَا ٱلْقَرْنَيْنِ إِمَّآ أَن تُعَذِّبَ وَإِمَّآ أَن تَتَّخِذَ فِيهِمْ حُسْنًا

Transliteration ḥattā idhā balagha maghriba l-shamsi wajadahā taghrubu fī ʿaynin ḥami-atin wawajada ʿindahā qawman qul'nā yādhā l-qarnayni immā an tuʿadhiba wa-immā an tattakhidha fīhim ḥus'nan

Kannada ಕೊನೆಗೆ ಸೂರ್ಯಾಸ್ತದ ಸ್ಥಳಕ್ಕೆ ತಲುಪಿದಾಗ ಕಪ್ಪು ಕೆಸರಿನ ಚಿಲುಮೆಯಲ್ಲಿ ಸೂರ್ಯನು ಮುಳು ಗುವಂತೆ ಅವರಿಗೆ ಕಂಡಿತು. ಅಲ್ಲೊಂದು ಜನಾಂ ಗವನ್ನೂ ಅವರು ಕಂಡರು. ನಾವು ಅವರಿಗೆ ಹೀಗೆ ಹೇಳಿದೆವು. ‘ಓ ದ್ಸುಲ್ ಖರ್ನೈನ್, ಒಂದೋ ಅವರಿಗೆ ಶಿಕ್ಷೆ ನೀಡಿರಿ, ಇಲ್ಲವೇ ಉತ್ತಮ ಕ್ರಮ ಕೈಗೊಳ್ಳಿರಿ’.

Verse 87

قَالَ أَمَّا مَن ظَلَمَ فَسَوْفَ نُعَذِّبُهُۥ ثُمَّ يُرَدُّ إِلَىٰ رَبِّهِۦ فَيُعَذِّبُهُۥ عَذَابًا نُّكْرًا

Transliteration qāla ammā man ẓalama fasawfa nuʿadhibuhu thumma yuraddu ilā rabbihi fayuʿadhibuhu ʿadhāban nuk'ran

Kannada ಆಗ ಅವರು ಹೇಳಿದರು, ‘ಯಾರು ಅನ್ಯಾಯ ವೆಸಗುತ್ತಾರೆ, ಅವನನ್ನು ನಾವು ಶಿಕ್ಷಿಸಲಿದ್ದೇವೆ. ನಂತರ ಅವನನ್ನು ತನ್ನ ಪ್ರಭುವಿನ ಕಡೆಗೆ ಮರಳಿಸಲಾಗುವುದು. ಆಗ ಪ್ರಭು ಆತನಿಗೆ ಇನ್ನಷ್ಟು ಕಠಿಣ ಶಿಕ್ಷೆ ಕೊಡುವನು’.

Verse 88

وَأَمَّا مَنْ ءَامَنَ وَعَمِلَ صَـٰلِحًا فَلَهُۥ جَزَآءً ٱلْحُسْنَىٰ ۖ وَسَنَقُولُ لَهُۥ مِنْ أَمْرِنَا يُسْرًا

Transliteration wa-ammā man āmana waʿamila ṣāliḥan falahu jazāan l-ḥus'nā wasanaqūlu lahu min amrinā yus'ran

Kannada ಆದರೆ ಯಾರು ಸತ್ಯವಿಶ್ವಾಸವಿರಿಸಿ, ಸತ್ಕರ್ಮ ಕೈಗೊಳ್ಳುತ್ತಾರೆ ಅಂಥವರಿಗೆ ಅತ್ಯಂತ ಉತ್ಕøಷ್ಟವಾದ ಪ್ರತಿಫಲವಿದೆ. ನಂತರ ಆತನಿಗೆ ಸರಳವಾದ ಆದೇಶಗಳನ್ನು ನಾವು ನೀಡಲಿದ್ದೇವೆ’.

Verse 89

ثُمَّ أَتْبَعَ سَبَبًا

Transliteration thumma atbaʿa sababan

Kannada ಅನಂತರ ಅವರು ಇನ್ನೊಂದು ದಾರಿಗೆ ಸಾಗಿದರು.

Verse 90

حَتَّىٰٓ إِذَا بَلَغَ مَطْلِعَ ٱلشَّمْسِ وَجَدَهَا تَطْلُعُ عَلَىٰ قَوْمٍ لَّمْ نَجْعَل لَّهُم مِّن دُونِهَا سِتْرًا

Transliteration ḥattā idhā balagha maṭliʿa l-shamsi wajadahā taṭluʿu ʿalā qawmin lam najʿal lahum min dūnihā sit'ran

Kannada ಕೊನೆಗೆ ಸೂರ್ಯನು ಉದಯಿಸುವ ಪೂರ್ವ ಸೀಮೆಗೆ ತಲುಪಿದರು. ಅಲ್ಲಿ ಅವರಿಗೆ ಬಿಸಿಲ ದಗೆಯನ್ನು ತಡೆಯುವ ಯಾವುದೇ ಮರೆಯನ್ನು ನಾವು ವ್ಯವಸ್ಥೆಗೊಳಿಸದಂಥ ಜನಾಂಗದ ಮೇಲೆ ಉದಯಿಸುತ್ತಿರುವ ಸೂರ್ಯನನ್ನು ಕಂಡರು.

Verse 91

كَذَٰلِكَ وَقَدْ أَحَطْنَا بِمَا لَدَيْهِ خُبْرًا

Transliteration kadhālika waqad aḥaṭnā bimā ladayhi khub'ran

Kannada ದ್ಸುಲ್‍ಖರ್ನೈನ್‍ರ ವಿಷಯ ನಾವು ಹೇಳಿದಂತೆಯೇ ಇದೆ. ಅವರ ಬಳಿ ಇರುವುದರ ಬಗ್ಗೆ ನಮಗೆ ಸಂಪೂರ್ಣ ಜ್ಞಾನವಿದೆ.

Verse 92

ثُمَّ أَتْبَعَ سَبَبًا

Transliteration thumma atbaʿa sababan

Kannada ಅನಂತರ ಅವರು ಇನ್ನೊಂದು ದಾರಿಯಲ್ಲಿ ನಡೆದರು.

Verse 93

حَتَّىٰٓ إِذَا بَلَغَ بَيْنَ ٱلسَّدَّيْنِ وَجَدَ مِن دُونِهِمَا قَوْمًا لَّا يَكَادُونَ يَفْقَهُونَ قَوْلًا

Transliteration ḥattā idhā balagha bayna l-sadayni wajada min dūnihimā qawman lā yakādūna yafqahūna qawlan

Kannada ಕೊನೆಗೆ ಎರಡು ಪರ್ವತಗಳ ನಡುವೆ ತಲುಪಿ ದಾಗ ಅದರ ಹತ್ತಿರದಲ್ಲಾಗಿ ಮಾತನ್ನು ಸರಿ ಯಾಗಿ ಗ್ರಹಿಸದ ಜನಾಂಗವನ್ನು ಕಂಡರು.

Verse 94

قَالُوا۟ يَـٰذَا ٱلْقَرْنَيْنِ إِنَّ يَأْجُوجَ وَمَأْجُوجَ مُفْسِدُونَ فِى ٱلْأَرْضِ فَهَلْ نَجْعَلُ لَكَ خَرْجًا عَلَىٰٓ أَن تَجْعَلَ بَيْنَنَا وَبَيْنَهُمْ سَدًّا

Transliteration qālū yādhā l-qarnayni inna yajūja wamajūja muf'sidūna fī l-arḍi fahal najʿalu laka kharjan ʿalā an tajʿala baynanā wabaynahum saddan

Kannada ಆಗ ಅವರು ‘ಓ ದುಲ್‍ಖರ್ನೈನ್, ಯಅï ಜೂಜ್ ಮತ್ತು ಮಅïಜೂಜರು ಈ ಭೂಪ್ರ ದೇಶದಲ್ಲಿ ಅನ್ಯಾಯವೆಸಗುತ್ತಿದ್ದಾರೆ. ಆದ್ದರಿಂದ ನಮ್ಮ ಹಾಗೂ ಅವರ ನಡುವೆ ಒಂದು ತಡೆ ಗೋಡೆಯನ್ನು ನಿರ್ಮಿಸಿಕೊಡುವ ಷರತ್ತಿನ ಮೇರೆಗೆ ನಾವು ನಿಮಗೆ ಅಪಾರ ಮೊತ್ತವನ್ನು ಪ್ರತಿಫಲವಾಗಿ ನಿಶ್ಚಯಿಸಿ ಕೊಡಲೇ?’ ಎಂದು ಕೇಳಿದರು.

Verse 95

قَالَ مَا مَكَّنِّى فِيهِ رَبِّى خَيْرٌ فَأَعِينُونِى بِقُوَّةٍ أَجْعَلْ بَيْنَكُمْ وَبَيْنَهُمْ رَدْمًا

Transliteration qāla mā makkannī fīhi rabbī khayrun fa-aʿīnūnī biquwwatin ajʿal baynakum wabaynahum radman

Kannada ಅದಕ್ಕೆ ಅವರು ‘ನನ್ನ ಪ್ರಭು ನನ್ನ ವಶಕ್ಕೆ ಕೊಟ್ಟಿರುವ ಅನುಗ್ರಹವೇ ನನಗೆ ನೀವು ಕೊಡುವ ಪ್ರತಿಫಲಕ್ಕಿಂತ ಲೇಸು. ಆದರೆ ನೀವು ನನಗೆ ಶಕ್ತಿ ಕೊಟ್ಟು ಸಹಾಯ ಮಾಡಿರಿ. ಅವರ ಮತ್ತು ನಿಮ್ಮ ನಡುವೆ ಬಲಿಷ್ಟವಾದ ತಡೆಗೋಡೆಯನ್ನು ನಾನು ನಿರ್ಮಿಸಿ ಕೊಡುತ್ತೇನೆ.

Verse 96

ءَاتُونِى زُبَرَ ٱلْحَدِيدِ ۖ حَتَّىٰٓ إِذَا سَاوَىٰ بَيْنَ ٱلصَّدَفَيْنِ قَالَ ٱنفُخُوا۟ ۖ حَتَّىٰٓ إِذَا جَعَلَهُۥ نَارًا قَالَ ءَاتُونِىٓ أُفْرِغْ عَلَيْهِ قِطْرًا

Transliteration ātūnī zubara l-ḥadīdi ḥattā idhā sāwā bayna l-ṣadafayni qāla unfukhū ḥattā idhā jaʿalahu nāran qāla ātūnī uf'righ ʿalayhi qiṭ'ran

Kannada ನನಗೆ ಕಬ್ಬಿಣದ ತುಂಡುಗಳನ್ನು ತಂದು ಕೊಡಿರಿ’ ಎಂದರು. ಹೀಗೆ ಎರಡು ಪರ್ವತಗಳ ನಡುವೆ ಸಮಾನವಾಗಿ ಆ ಗೋಡೆ ಎತ್ತರಕ್ಕೆ ಏರಿದಾಗ ‘ನೀವು ಬೆಂಕಿಯುರಿಸಿ ಊದಿರಿ’ ಎಂದರು. ಕೊನೆಗೆ ಕಬ್ಬಿಣವನ್ನು ಬೆಂಕಿಯ ಕೆಂಡ ದಂತೆ ಮಾಡಿದಾಗ ಅವರು ‘ಕುದಿಯುವ ತಾಮ್ರ ವನ್ನು ತನ್ನಿರಿ, ಅದನ್ನು ಇದರ ಮೇಲೆ ಹೊಯ್ದು ಬಿಡುತ್ತೇನೆ’ ಎಂದರು.

Verse 97

فَمَا ٱسْطَـٰعُوٓا۟ أَن يَظْهَرُوهُ وَمَا ٱسْتَطَـٰعُوا۟ لَهُۥ نَقْبًا

Transliteration famā is'ṭāʿū an yaẓharūhu wamā is'taṭāʿū lahu naqban

Kannada ನಂತರ ಈ ತಡೆಯನ್ನೇರಿ ಬರಲು ಅವರಿಗೆ (ಯಅïಜೂಜ್ - ಮಅïಜೂಜರಿಗೆ) ಸಾಧ್ಯ ವಾಗಲಿಲ್ಲ. ಅದಕ್ಕೆ ಕನ್ನ ಕೊರೆದು ಹೊರಬರಲು ಅವರು ಅಸಮರ್ಥರಾದರು.

Verse 98

قَالَ هَـٰذَا رَحْمَةٌ مِّن رَّبِّى ۖ فَإِذَا جَآءَ وَعْدُ رَبِّى جَعَلَهُۥ دَكَّآءَ ۖ وَكَانَ وَعْدُ رَبِّى حَقًّا

Transliteration qāla hādhā raḥmatun min rabbī fa-idhā jāa waʿdu rabbī jaʿalahu dakkāa wakāna waʿdu rabbī ḥaqqan

Kannada ದುಲ್‍ಖರ್ನೈನ್ ಹೇಳಿದರು. ‘ಈ ತಡೆಯು ನನ್ನ ಪ್ರಭುವಿನಿಂದ ಲಭಿಸಿದ ಒಂದು ಅನುಗ್ರಹವಾ ಗಿದ್ದು ಮುಂದೆ ಪ್ರಭುವಿನ ನಿಶ್ಚಿತ ಅವಧಿ ಬಂದಾಗ ಅವನು ಇದನ್ನು ನೆಲಸಮಗೊಳಿಸುವನು. ನನ್ನ ಪ್ರಭುವಿನ ನಿಶ್ಚಯವು ಅಚಲವಾಗಿರುತ್ತದೆ’.

Verse 99

۞ وَتَرَكْنَا بَعْضَهُمْ يَوْمَئِذٍ يَمُوجُ فِى بَعْضٍ ۖ وَنُفِخَ فِى ٱلصُّورِ فَجَمَعْنَـٰهُمْ جَمْعًا

Transliteration wataraknā baʿḍahum yawma-idhin yamūju fī baʿḍin wanufikha fī l-ṣūri fajamaʿnāhum jamʿan

Kannada ಅಂದು ಒಬ್ಬರ ಮೇಲೆ ಇನ್ನೊಬ್ಬರನ್ನು ಪರಸ್ಪರ ತೆರೆಗಳು ಅಪ್ಪಳಿಸಿ ಏರಿಬರುವಂತೆ ಬಿಟ್ಟು ಬಿಡಲಿದ್ದೇವೆ. ಕಹಳೆ ಮೊಳಗಿದ ಮೇಲೆ ಅವರೆಲ್ಲರನ್ನು ಒಟ್ಟುಗೂಡಿಸಲಿದ್ದೇವೆ.

Verse 100

وَعَرَضْنَا جَهَنَّمَ يَوْمَئِذٍ لِّلْكَـٰفِرِينَ عَرْضًا

Transliteration waʿaraḍnā jahannama yawma-idhin lil'kāfirīna ʿarḍan

Kannada ಸತ್ಯನಿಷೇಧಿಗಳ ಮುಂದೆ ಅಂದು ನಾವು ನರಕವನ್ನು ಪ್ರದರ್ಶಿಸಲಿದ್ದೇವೆ.

Verse 101

ٱلَّذِينَ كَانَتْ أَعْيُنُهُمْ فِى غِطَآءٍ عَن ذِكْرِى وَكَانُوا۟ لَا يَسْتَطِيعُونَ سَمْعًا

Transliteration alladhīna kānat aʿyunuhum fī ghiṭāin ʿan dhik'rī wakānū lā yastaṭīʿūna samʿan

Kannada ತಮ್ಮ ಕಣ್ಣುಗಳಿಗೆ ಪರದೆ ಬಿದ್ದು ನನ್ನ ಬೋಧನೆಯಿಂದ ವಿಮುಖರಾಗಿದ್ದ ಹಾಗೂ ಅದನ್ನು ಕಿವಿಗೊಟ್ಟು ಆಲಿಸಲು ಸಾಧ್ಯವಾಗದೇ ಹೋದ.

Verse 102

أَفَحَسِبَ ٱلَّذِينَ كَفَرُوٓا۟ أَن يَتَّخِذُوا۟ عِبَادِى مِن دُونِىٓ أَوْلِيَآءَ ۚ إِنَّآ أَعْتَدْنَا جَهَنَّمَ لِلْكَـٰفِرِينَ نُزُلًا

Transliteration afaḥasiba alladhīna kafarū an yattakhidhū ʿibādī min dūnī awliyāa innā aʿtadnā jahannama lil'kāfirīna nuzulan

Kannada ಸತ್ಯನಿಷೇಧಿಗಳು ನನ್ನನ್ನು ಬಿಟ್ಟು ನನ್ನ ದಾಸರನ್ನು ತಮ್ಮ ರಕ್ಷಕರನ್ನಾಗಿ ಮಾಡಲು ಬಯಸಿ ದ್ದಾರೆಯೇ? ಖಂಡಿತವಾಗಿಯೂ ನಾವು ಅವಿಶ್ವಾಸಿಗಳಿಗೆ ಸತ್ಕರಿಸಲು ನರಕವನ್ನು ಸಜ್ಜು ಗೊಳಿಸಿದ್ದೇವೆ.

Verse 103

قُلْ هَلْ نُنَبِّئُكُم بِٱلْأَخْسَرِينَ أَعْمَـٰلًا

Transliteration qul hal nunabbi-ukum bil-akhsarīna aʿmālan

Kannada (ನಬಿಯವರೇ) ಹೇಳಿರಿ, ಕರ್ಮಫಲವು ಅತ್ಯಂತ ಹೆಚ್ಚು ನಷ್ಟವಾದವರ ಬಗ್ಗೆ ನಿಮಗೆ ತಿಳಿಸಿ ಕೊಡಲೇ?

Verse 104

ٱلَّذِينَ ضَلَّ سَعْيُهُمْ فِى ٱلْحَيَوٰةِ ٱلدُّنْيَا وَهُمْ يَحْسَبُونَ أَنَّهُمْ يُحْسِنُونَ صُنْعًا

Transliteration alladhīna ḍalla saʿyuhum fī l-ḥayati l-dun'yā wahum yaḥsabūna annahum yuḥ'sinūna ṣun'ʿan

Kannada ಅಂದರೆ ಐಹಿಕ ಜೀವನದಲ್ಲಿ ಅವರ ಎಲ್ಲ ಪ್ರಯ ತ್ನಗಳು ವ್ಯರ್ಥವಾದವು. ಆದರೆ ಅವರು ತಾವು ಒಳ್ಳೆಯ ಕೆಲಸವನ್ನೇ ಮಾಡುತ್ತಿರುವುದಾಗಿ ತಪ್ಪು ತಿಳಿದಿರುವರು.

Verse 105

أُو۟لَـٰٓئِكَ ٱلَّذِينَ كَفَرُوا۟ بِـَٔايَـٰتِ رَبِّهِمْ وَلِقَآئِهِۦ فَحَبِطَتْ أَعْمَـٰلُهُمْ فَلَا نُقِيمُ لَهُمْ يَوْمَ ٱلْقِيَـٰمَةِ وَزْنًا

Transliteration ulāika alladhīna kafarū biāyāti rabbihim waliqāihi faḥabiṭat aʿmāluhum falā nuqīmu lahum yawma l-qiyāmati waznan

Kannada ಅವರು ತಮ್ಮ ಪ್ರಭುವಿನ ದೃಷ್ಟಾಂತಗಳಲ್ಲಿ ಹಾಗೂ ಆತನ ಸಾನಿಧ್ಯದಲ್ಲಿ ಬೇಟಿಯಾಗುವ ಬಗ್ಗೆ ಅವಿಶ್ವಾಸ ತಾಳಿದವರು. ಅಂತಲೇ ಅವರ ಸಕಲ ಕರ್ಮಗಳು ನುಚ್ಚುನೂರಾದವು. ಆದ್ದರಿಂದ ಪುನರುತ್ಥಾನದ ದಿನದಲ್ಲಿ ಯಾವುದೇ ತೂಕವನ್ನು ಅವರಿಗೆ ನಾವು ಕಲ್ಪಿಸಲಾರೆವು.

Verse 106

ذَٰلِكَ جَزَآؤُهُمْ جَهَنَّمُ بِمَا كَفَرُوا۟ وَٱتَّخَذُوٓا۟ ءَايَـٰتِى وَرُسُلِى هُزُوًا

Transliteration dhālika jazāuhum jahannamu bimā kafarū wa-ittakhadhū āyātī warusulī huzuwan

Kannada ಅವರು ಸತ್ಯ ನಿಷೇಧ ತಾಳಿ ನನ್ನ ವಚನಗಳನ್ನು ಮತ್ತು ನನ್ನ ಸಂದೇಶವಾಹಕರನ್ನು ಪರಿಹಾಸ್ಯ ಮಾಡಿದ ಕಾರಣಕ್ಕೆ ಅವರಿಗೆ ಸರಿಯಾದ ಪ್ರತಿಫಲ ನರಕ ಶಿಕ್ಷೆಯಾಗಿದೆ.

Verse 107

إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ كَانَتْ لَهُمْ جَنَّـٰتُ ٱلْفِرْدَوْسِ نُزُلًا

Transliteration inna alladhīna āmanū waʿamilū l-ṣāliḥāti kānat lahum jannātu l-fir'dawsi nuzulan

Kannada ಆದರೆ ಸತ್ಯವಿಶ್ವಾಸ ತಾಳಿ, ಸತ್ಕರ್ಮ ಕೈಗೊಂಡ ವಿಶ್ವಾಸಿಗಳ ನಿವಾಸವಾಗಿ ಫಿರ್‍ದೌಸ್‍ನ ಸ್ವರ್ಗಾರಾಮಗಳಿವೆ .

Verse 108

خَـٰلِدِينَ فِيهَا لَا يَبْغُونَ عَنْهَا حِوَلًا

Transliteration khālidīna fīhā lā yabghūna ʿanhā ḥiwalan

Kannada ಅವರು ಅಲ್ಲಿ ಸದಾ ಕಾಲ ನೆಲೆಸುವರು. ಅಲ್ಲಿಂದ ಬಿಟ್ಟು ಬೇರೆಡೆಗೆ ಹೋಗಲು ಅವರೆಂದೂ ಬಯಸಲಾರರು.

Verse 109

قُل لَّوْ كَانَ ٱلْبَحْرُ مِدَادًا لِّكَلِمَـٰتِ رَبِّى لَنَفِدَ ٱلْبَحْرُ قَبْلَ أَن تَنفَدَ كَلِمَـٰتُ رَبِّى وَلَوْ جِئْنَا بِمِثْلِهِۦ مَدَدًا

Transliteration qul law kāna l-baḥru midādan likalimāti rabbī lanafida l-baḥru qabla an tanfada kalimātu rabbī walaw ji'nā bimith'lihi madadan

Kannada (ನಬಿಯೇ) ಹೇಳಿರಿ, ಸಮುದ್ರದ ಜಲವು ನನ್ನ ಪ್ರಭುವಿನ ವಚನಗಳನ್ನು ಬರೆಯುವ ಮಸಿ ಯಾಗಿದ್ದರೆ ನನ್ನ ಪ್ರಭುವಿನ ವಚನಗಳು ಮುಗಿಯುವ ಮುನ್ನ ಸಮುದ್ರಜಲವು ಮುಗಿದು ಬಿಡುತ್ತಿತ್ತು. ಅದಕ್ಕೆ ಸಮಾನವಾದ ಇನ್ನೊಂದು ಸಮುದ್ರವನ್ನು ನಾವು ಸಹಾಯಕ್ಕಾಗಿ ಕೊಂಡು ಬಂದರೂ ಸರಿಯೇ.

Verse 110

قُلْ إِنَّمَآ أَنَا۠ بَشَرٌ مِّثْلُكُمْ يُوحَىٰٓ إِلَىَّ أَنَّمَآ إِلَـٰهُكُمْ إِلَـٰهٌ وَٰحِدٌ ۖ فَمَن كَانَ يَرْجُوا۟ لِقَآءَ رَبِّهِۦ فَلْيَعْمَلْ عَمَلًا صَـٰلِحًا وَلَا يُشْرِكْ بِعِبَادَةِ رَبِّهِۦٓ أَحَدًۢا

Transliteration qul innamā anā basharun mith'lukum yūḥā ilayya annamā ilāhukum ilāhun wāḥidun faman kāna yarjū liqāa rabbihi falyaʿmal ʿamalan ṣāliḥan walā yush'rik biʿibādati rabbihi aḥadan

Kannada (ನಬಿಯೇ) ಹೇಳಿರಿ, ನಾನು ನಿಮ್ಮಂತಿರುವ ಓರ್ವ ಮನುಷ್ಯ. ನಿಮ್ಮ ಆರಾಧ್ಯನು ಏಕಮಾತ್ರ ಆರಾಧ್ಯನೆಂದು ನನಗೆ ಸಂದೇಶ ನೀಡಲಾಗಿದೆ. ಆದ್ದರಿಂದ ಯಾರಿಗೆ ಪ್ರಭುವಿನ ಭೇಟಿ ಮಾಡುವ ಹಂಬಲವಿದೆಯೋ ಅವನು ಸತ್ಕರ್ಮವನ್ನು ಮಾಡಲಿ ಹಾಗೂ ತನ್ನ ಪ್ರಭುವಿನ ಆರಾಧನೆಯಲ್ಲಿ ಆತನೊಂದಿಗೆ ಯಾರನ್ನೂ ಜೊತೆಗೂಡಿಸದಿರಲಿ.

Read Surah Al-Kahf in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.