MyDugsiStart learning

Surah Al-Jinn in Kannada: translation and audio

Surah 72 · الجن · The Jinn · 28 verses

Surah Al-Jinn verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Jinn word by word in English.

Verse 1

قُلْ أُوحِىَ إِلَىَّ أَنَّهُ ٱسْتَمَعَ نَفَرٌ مِّنَ ٱلْجِنِّ فَقَالُوٓا۟ إِنَّا سَمِعْنَا قُرْءَانًا عَجَبًا

Transliteration qul ūḥiya ilayya annahu is'tamaʿa nafarun mina l-jini faqālū innā samiʿ'nā qur'ānan ʿajaban

Kannada (ಸಂದೇಶವಾಹಕರೇ,) ಹೇಳಿರಿ, ನನಗೆ ಹೀಗೆ ದಿವ್ಯ ಸಂದೇಶ ದೊರೆತಿದೆ- ಜಿನ್ನ್‍ಗಳ ಒಂದು ತಂಡವು ಖುರ್‍ಆನನ್ನು ಶ್ರದ್ಧಾಪೂರ್ವಕ ಆಲಿಸಿತು ತರುವಾಯ (ಸ್ವಂತ ಸಮೂಹದೊಡನೆ) ಹೀಗೆ ಹೇಳಿತು `ನಾವು ಒಂದು ಅತ್ಯದ್ಭುತ ಖುರ್‍ಆನನ್ನು ಆಲಿಸಿದ್ದೇವೆ.’

Verse 2

يَهْدِىٓ إِلَى ٱلرُّشْدِ فَـَٔامَنَّا بِهِۦ ۖ وَلَن نُّشْرِكَ بِرَبِّنَآ أَحَدًا

Transliteration yahdī ilā l-rush'di faāmannā bihi walan nush'rika birabbinā aḥadan

Kannada ಅದು (ಖುರ್‍ಆನ್) ಸನ್ಮಾರ್ಗದ ಕಡೆಗೆ ಮಾರ್ಗದರ್ಶನ ನೀಡುತ್ತದೆ. ಆದುದರಿಂದ ನಾವು ಅದರ ಮೇಲೆ ವಿಶ್ವಾಸವಿರಿಸಿದೆವು. ಇನ್ನು ಮೇಲೆ ನಮ್ಮ ಪ್ರಭುವಿನೊಂದಿಗೆ ಯಾರನ್ನೂ ನಾವು ಸಹಭಾಗಿಯಾಗಿ ಮಾಡಲಾರೆವು.

Verse 3

وَأَنَّهُۥ تَعَـٰلَىٰ جَدُّ رَبِّنَا مَا ٱتَّخَذَ صَـٰحِبَةً وَلَا وَلَدًا

Transliteration wa-annahu taʿālā jaddu rabbinā mā ittakhadha ṣāḥibatan walā waladan

Kannada ನಮ್ಮ ಪ್ರಭುವಿನ ಮಹತ್ವವು ಅತ್ಯುನ್ನತವಾಗಿದೆ. ಅವನು ಯಾರನ್ನೂ ತನ್ನ ಸಂಗಾತಿ ಅಥವಾ ಪುತ್ರನಾಗಿ ಮಾಡಿಕೊಂಡಿಲ್ಲ.

Verse 4

وَأَنَّهُۥ كَانَ يَقُولُ سَفِيهُنَا عَلَى ٱللَّهِ شَطَطًا

Transliteration wa-annahu kāna yaqūlu safīhunā ʿalā l-lahi shaṭaṭan

Kannada ಅಲ್ಲದೆ, ನಮ್ಮ ಕೂಟದಲ್ಲಿರುವ ತಿಳಿಗೇಡಿಗಳು ಅಲ್ಲಾಹನ ಕುರಿತು ಘೋರ ಅತಿರೇಕವನ್ನು ಹೇಳುತ್ತಿದ್ದರು.

Verse 5

وَأَنَّا ظَنَنَّآ أَن لَّن تَقُولَ ٱلْإِنسُ وَٱلْجِنُّ عَلَى ٱللَّهِ كَذِبًا

Transliteration wa-annā ẓanannā an lan taqūla l-insu wal-jinu ʿalā l-lahi kadhiban

Kannada ಜಿನ್ನ್‍ಗಳು ಮತ್ತು ಮಾನವರು ಅಲ್ಲಾಹನ ಹೆಸರಲ್ಲಿ ಎಂದೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು.

Verse 6

وَأَنَّهُۥ كَانَ رِجَالٌ مِّنَ ٱلْإِنسِ يَعُوذُونَ بِرِجَالٍ مِّنَ ٱلْجِنِّ فَزَادُوهُمْ رَهَقًا

Transliteration wa-annahu kāna rijālun mina l-insi yaʿūdhūna birijālin mina l-jini fazādūhum rahaqan

Kannada ಮಾನವರ ಪೈಕಿ ಕೆಲವು ವ್ಯಕ್ತಿಗಳು ಜಿನ್ನ್‍ಗಳ ಪೈಕಿ ಕೆಲವು ವ್ಯಕ್ತಿಗಳಲ್ಲಿ ಅಭಯ ಬೇಡುತ್ತಿದ್ದರು. ಹೀಗೆ ಅವರು ಜಿನ್ನ್‍ಗಳ ಅಹಂಕಾರವನ್ನು ಇನ್ನಷ್ಟು ಹೆಚ್ಚಿಸಿದರು.

Verse 7

وَأَنَّهُمْ ظَنُّوا۟ كَمَا ظَنَنتُمْ أَن لَّن يَبْعَثَ ٱللَّهُ أَحَدًا

Transliteration wa-annahum ẓannū kamā ẓanantum an lan yabʿatha l-lahu aḥadan

Kannada ಅವರು (ಮಾನವರು) ಕೂಡಾ ನೀವು ಭಾವಿಸಿದಂತೆಯೇ ಅಲ್ಲಾಹನು ಯಾರನ್ನೂ ಪುನರುಜ್ಜೀವಗೊಳಿಸಲಾರನೆಂದು ಭಾವಿಸಿ ಕೊಂಡಿದ್ದರು.

Verse 8

وَأَنَّا لَمَسْنَا ٱلسَّمَآءَ فَوَجَدْنَـٰهَا مُلِئَتْ حَرَسًا شَدِيدًا وَشُهُبًا

Transliteration wa-annā lamasnā l-samāa fawajadnāhā muli-at ḥarasan shadīdan washuhuban

Kannada ನಾವು ಆಕಾಶವನ್ನು ಸ್ಪರ್ಶಿಸಿ ನೋಡಿದಾಗ ಅದು ಸಶಕ್ತ ಕಾವಲುಗಾರರಿಂದ ಮತ್ತು ಅಗ್ನಿಜ್ವಾಲೆಗಳಿಂದ ತುಂಬಿರುವುದನ್ನು ಕಂಡೆವು.

Verse 9

وَأَنَّا كُنَّا نَقْعُدُ مِنْهَا مَقَـٰعِدَ لِلسَّمْعِ ۖ فَمَن يَسْتَمِعِ ٱلْـَٔانَ يَجِدْ لَهُۥ شِهَابًا رَّصَدًا

Transliteration wa-annā kunnā naqʿudu min'hā maqāʿida lilssamʿi faman yastamiʿi l-āna yajid lahu shihāban raṣadan

Kannada ಹಿಂದೆ ನಾವು ಕದ್ದಾಲಿಸಲಿಕ್ಕಾಗಿ ಆಕಾಶದ ಕೆಲವು ಕಡೆಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಯಾವನಾದರೂ ಕದ್ದಾಲಿಸಲು ಪ್ರಯತ್ನಿಸುವು ದಾದರೆ ಅವನು ತನಗಾಗಿ ಹೊಂಚು ಹಾಕುತ್ತಿರುವ ಒಂದು ಅಗ್ನಿಜ್ವಾಲೆ (ಉಲ್ಕೆ)ಯನ್ನು ಕಾಣುತ್ತಾನೆ.

Verse 10

وَأَنَّا لَا نَدْرِىٓ أَشَرٌّ أُرِيدَ بِمَن فِى ٱلْأَرْضِ أَمْ أَرَادَ بِهِمْ رَبُّهُمْ رَشَدًا

Transliteration wa-annā lā nadrī asharrun urīda biman fī l-arḍi am arāda bihim rabbuhum rashadan

Kannada ಭೂಮಿಯ ನಿವಾಸಿಗಳಿಗೆ ಕೆಡುಕನ್ನು ಉದ್ದೇಶಿ ಸಲಾಗಿದೆಯೋ? ಅಥವಾ ಅವರ ಪ್ರಭುವು ಅವರಿಗೆ ಸನ್ಮಾರ್ಗವನ್ನು ತೋರಿಸ ಬಯಸಿರುವನೋ? ಎಂದೇನೂ ನಮಗೆ ತಿಳಿಯದು.

Verse 11

وَأَنَّا مِنَّا ٱلصَّـٰلِحُونَ وَمِنَّا دُونَ ذَٰلِكَ ۖ كُنَّا طَرَآئِقَ قِدَدًا

Transliteration wa-annā minnā l-ṣāliḥūna waminnā dūna dhālika kunnā ṭarāiqa qidadan

Kannada ನಮ್ಮ ಕೂಟದಲ್ಲಿ ಸಜ್ಜನರಿದ್ದಾರೆ ಮತ್ತು ಅದರ ಕೆಳಗಿನವರೂ ನಮ್ಮಲ್ಲಿದ್ದಾರೆ. ನಾವು ನಾನಾ ದಾರಿಗಳಲ್ಲಿ ಹರಿಹಂಚಿ ಹೋಗಿದ್ದೇವೆ.

Verse 12

وَأَنَّا ظَنَنَّآ أَن لَّن نُّعْجِزَ ٱللَّهَ فِى ٱلْأَرْضِ وَلَن نُّعْجِزَهُۥ هَرَبًا

Transliteration wa-annā ẓanannā an lan nuʿ'jiza l-laha fī l-arḍi walan nuʿ'jizahu haraban

Kannada ನಮಗೆ ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲಾಗದು ಮತ್ತು ನಾವು ತಪ್ಪಿಸಿ ಓಡಿ ಹೋಗಿಯೂ ಅವನನ್ನು ಸೋಲಿಸಲಾರೆವು ಎಂದು ನಾವು ಖಚಿತಪಡಿಸಿಕೊಂಡಿರುತ್ತೇವೆ.

Verse 13

وَأَنَّا لَمَّا سَمِعْنَا ٱلْهُدَىٰٓ ءَامَنَّا بِهِۦ ۖ فَمَن يُؤْمِنۢ بِرَبِّهِۦ فَلَا يَخَافُ بَخْسًا وَلَا رَهَقًا

Transliteration wa-annā lammā samiʿ'nā l-hudā āmannā bihi faman yu'min birabbihi falā yakhāfu bakhsan walā rahaqan

Kannada ನಾವು ಸನ್ಮಾರ್ಗ (ಖುರ್‍ಆನ್)ವನ್ನು ಕೇಳಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು. ತನ್ನ ಪ್ರಭುವಿನ ಮೇಲೆ ಯಾವನು ವಿಶ್ವಾಸವಿರಿಸುವನೋ ಅವನು ಅಲ್ಲಾಹನಿಂದ ಯಾವುದೇ ನಷ್ಟವನ್ನೂ, ಅನೀತಿಯನ್ನೂ ಭಯಪಡಬೇಕಾಗಿಲ್ಲ.

Verse 14

وَأَنَّا مِنَّا ٱلْمُسْلِمُونَ وَمِنَّا ٱلْقَـٰسِطُونَ ۖ فَمَنْ أَسْلَمَ فَأُو۟لَـٰٓئِكَ تَحَرَّوْا۟ رَشَدًا

Transliteration wa-annā minnā l-mus'limūna waminnā l-qāsiṭūna faman aslama fa-ulāika taḥarraw rashadan

Kannada ನಮ್ಮ ಕೂಟದಲ್ಲಿ ವಿಧೇಯರು (ಮುಸ್ಲಿಮರು) ಇದ್ದಾರೆ. ಅನ್ಯಾಯಗಾರರೂ ನಮ್ಮಲ್ಲಿ ಇದ್ದಾರೆ. ಯಾರು ವಿಧೇಯರಾಗುತ್ತಾರೋ (ಇಸ್ಲಾಮನ್ನು ಸ್ವೀಕರಿಸಿಕೊಳ್ಳುತ್ತಾರೋ) ಅವರು ಸತ್ಪಥವನ್ನು ಕಂಡುಕೊಂಡರು.

Verse 15

وَأَمَّا ٱلْقَـٰسِطُونَ فَكَانُوا۟ لِجَهَنَّمَ حَطَبًا

Transliteration wa-ammā l-qāsiṭūna fakānū lijahannama ḥaṭaban

Kannada ಯಾರು ಅನ್ಯಾಯಗಾರರೋ ಅವರು ನರಕದ ಇಂಧನವಾಗುವರು.

Verse 16

وَأَلَّوِ ٱسْتَقَـٰمُوا۟ عَلَى ٱلطَّرِيقَةِ لَأَسْقَيْنَـٰهُم مَّآءً غَدَقًا

Transliteration wa-allawi is'taqāmū ʿalā l-ṭarīqati la-asqaynāhum māan ghadaqan

Kannada (ಅಲ್ಲಾಹು ಹೇಳುತ್ತಾನೆ) ಅವರು ಸನ್ಮಾರ್ಗದಲ್ಲಿ ಸ್ಥಿರಚಿತ್ತರಾಗಿ ನಿಲ್ಲುತ್ತಿದ್ದರೆ, ನಾವು ಅವರಿಗೆ ಕುಡಿಯಲು ಧಾರಾಳ ನೀರನ್ನು ಕೊಡುತ್ತಿದ್ದೆವು.

Verse 17

لِّنَفْتِنَهُمْ فِيهِ ۚ وَمَن يُعْرِضْ عَن ذِكْرِ رَبِّهِۦ يَسْلُكْهُ عَذَابًا صَعَدًا

Transliteration linaftinahum fīhi waman yuʿ'riḍ ʿan dhik'ri rabbihi yasluk'hu ʿadhāban ṣaʿadan

Kannada ಅದರಲ್ಲಿ (ಈ ಅನುಗ್ರಹದ ಮೂಲಕ) ಅವರನ್ನು ಪರೀಕ್ಷಿಸಲಿಕ್ಕಾಗಿ. ಯಾರು ತನ್ನ ಪ್ರಭುವಿನ ದಿಕ್‍ರ್‍ನಿಂದ (ಖುರ್‍ಆನ್‍ನಿಂದ) ವಿಮುಖ ನಾಗುವನೋ, ಅವನನ್ನು ಅವನ ಪ್ರಭುವು ಕಠಿಣ ಸಜೆಗೆ ಗುರಿಪಡಿಸುವನು.

Verse 18

وَأَنَّ ٱلْمَسَـٰجِدَ لِلَّهِ فَلَا تَدْعُوا۟ مَعَ ٱللَّهِ أَحَدًا

Transliteration wa-anna l-masājida lillahi falā tadʿū maʿa l-lahi aḥadan

Kannada ಮಸೀದಿಗಳು ಅಲ್ಲಾಹನಿಗಿರುವುದಾಗಿವೆ. ಆದುದರಿಂದ ಅವುಗಳಲ್ಲಿ ಅಲ್ಲಾಹನೊಂದಿಗೆ ಇತರ ಯಾರನ್ನೂ ಆರಾಧಿಸಬೇಡಿರಿ .

Verse 19

وَأَنَّهُۥ لَمَّا قَامَ عَبْدُ ٱللَّهِ يَدْعُوهُ كَادُوا۟ يَكُونُونَ عَلَيْهِ لِبَدًا

Transliteration wa-annahu lammā qāma ʿabdu l-lahi yadʿūhu kādū yakūnūna ʿalayhi libadan

Kannada ಅಲ್ಲಾಹನ ದಾಸನು (ಪ್ರವಾದಿ) ಅವನನ್ನು ಆರಾಧಿಸುತ್ತಾ ನಿಂತಾಗ, ಅವರು (ಜಿನ್ನ್‍ಗಳು) ಆ ದಾಸನ ಸುತ್ತ ಕೂಟ-ಕೂಟವಾಗಿ ಕಿಕ್ಕಿರಿದು ತುಂಬ ಹತ್ತಿದರು.

Verse 20

قُلْ إِنَّمَآ أَدْعُوا۟ رَبِّى وَلَآ أُشْرِكُ بِهِۦٓ أَحَدًا

Transliteration qul innamā adʿū rabbī walā ush'riku bihi aḥadan

Kannada (ಸಂದೇಶವಾಹಕರೇ,) ತಾವು ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.

Verse 21

قُلْ إِنِّى لَآ أَمْلِكُ لَكُمْ ضَرًّا وَلَا رَشَدًا

Transliteration qul innī lā amliku lakum ḍarran walā rashadan

Kannada ಹೇಳಿರಿ; ನಿಮಗೆ ಯಾವುದೇ ಹಾನಿ ಮಾಡಲಿಕ್ಕಾಗಲಿ, ಸನ್ಮಾರ್ಗ ನೀಡಲಿಕ್ಕಾಗಲಿ ನಾನು ಒಡೆತನ (ಅಧಿಕಾರ) ಹೊಂದಿಲ್ಲ.

Verse 22

قُلْ إِنِّى لَن يُجِيرَنِى مِنَ ٱللَّهِ أَحَدٌ وَلَنْ أَجِدَ مِن دُونِهِۦ مُلْتَحَدًا

Transliteration qul innī lan yujīranī mina l-lahi aḥadun walan ajida min dūnihi mul'taḥadan

Kannada ಹೇಳಿರಿ; ಅಲ್ಲಾಹನ ಶಿಕ್ಷೆಯಿಂದ ಯಾರೂ ನನ್ನನ್ನು ರಕ್ಷಿಸಲಾರರು. ಮತ್ತು ಅವನ ಹೊರತು ಯಾವುದೇ ಅಭಯ ಸ್ಥಾನವನ್ನು ನಾನೆಂದೂ ಕಂಡುಕೊಳ್ಳಲಾರೆನು.

Verse 23

إِلَّا بَلَـٰغًا مِّنَ ٱللَّهِ وَرِسَـٰلَـٰتِهِۦ ۚ وَمَن يَعْصِ ٱللَّهَ وَرَسُولَهُۥ فَإِنَّ لَهُۥ نَارَ جَهَنَّمَ خَـٰلِدِينَ فِيهَآ أَبَدًا

Transliteration illā balāghan mina l-lahi warisālātihi waman yaʿṣi l-laha warasūlahu fa-inna lahu nāra jahannama khālidīna fīhā abadan

Kannada ಅಲ್ಲಾಹನ ಸಂದೇಶಗಳನ್ನು ತಲುಪಿಸುವ ಮತ್ತು ಅವನ ದೌತ್ಯವನ್ನು ನಿರ್ವಹಿಸುವ ಹೊರತು (ಬೇರೇನೂ ನನ್ನ ಅಧೀನತೆಯಲ್ಲಿಲ್ಲ.) ಯಾರು ಅಲ್ಲಾಹನ ಮತ್ತು ಅವನ ದೂತರನ್ನು ದಿಕ್ಕರಿಸುತ್ತಾರೋ ಅವನಿಗೆ ನರಕಾಗ್ನಿ ಇದೆ. ಅದರಲ್ಲಿ ಅವರು ಚಿರವಾಸಿಗಳಾಗಿರುವರು ಎಂದೆಂದಿಗೂ.

Verse 24

حَتَّىٰٓ إِذَا رَأَوْا۟ مَا يُوعَدُونَ فَسَيَعْلَمُونَ مَنْ أَضْعَفُ نَاصِرًا وَأَقَلُّ عَدَدًا

Transliteration ḥattā idhā ra-aw mā yūʿadūna fasayaʿlamūna man aḍʿafu nāṣiran wa-aqallu ʿadadan

Kannada ಅವರಿಗೆ ತಾಕೀತು ನೀಡಲಾಗುತ್ತಿರುವುದನ್ನು (ಶಿಕ್ಷೆ) ಕಣ್ಣಾರೆ ಕಂಡುಕೊಳ್ಳುವಾಗ ಯಾರ ಸಹಾಯಕರು ಅತ್ಯಂತ ದುರ್ಬಲರು ಮತ್ತು ಸಂಖ್ಯೆಯಲ್ಲಿ ಅತ್ಯಲ್ಪರು ಎಂಬುದು ಅವರಿಗೆ ತಿಳಿದು ಬಿಡುವುದು.

Verse 25

قُلْ إِنْ أَدْرِىٓ أَقَرِيبٌ مَّا تُوعَدُونَ أَمْ يَجْعَلُ لَهُۥ رَبِّىٓ أَمَدًا

Transliteration qul in adrī aqarībun mā tūʿadūna am yajʿalu lahu rabbī amadan

Kannada ತಾವು ಹೇಳಿರಿ; ನಿಮಗೆ ಏನನ್ನು ತಾಕೀತು ನೀqಲಾಗುತ್ತಿದೆಯೋ ಅದು (ಶಿಕ್ಷೆ) ಸದ್ಯವೇ ಸಂಭವಿಸುವುದೋ ಅಥವಾ ನನ್ನ ಪ್ರಭು ಅದಕ್ಕೆ (ದೀರ್ಘವಾದ) ಅವಧಿ ನಿಶ್ಚಯಿಸುವನೋ ಎಂಬುದು ನನಗೆ ತಿಳಿದಿಲ್ಲ.

Verse 26

عَـٰلِمُ ٱلْغَيْبِ فَلَا يُظْهِرُ عَلَىٰ غَيْبِهِۦٓ أَحَدًا

Transliteration ʿālimu l-ghaybi falā yuẓ'hiru ʿalā ghaybihi aḥadan

Kannada ಅವನು ಅದೃಶ್ಯ ಜ್ಞಾನಿಯಾಗಿದ್ದಾನೆ. ಅವನು ತನ್ನ ಅದೃಶ್ಯ ಜ್ಞಾನವನ್ನು ಯಾರಿಗೂ ಬಹಿ ರಂಗಪಡಿಸುವುದಿಲ್ಲ.

Verse 27

إِلَّا مَنِ ٱرْتَضَىٰ مِن رَّسُولٍ فَإِنَّهُۥ يَسْلُكُ مِنۢ بَيْنِ يَدَيْهِ وَمِنْ خَلْفِهِۦ رَصَدًا

Transliteration illā mani ir'taḍā min rasūlin fa-innahu yasluku min bayni yadayhi wamin khalfihi raṣadan

Kannada ತಾನು ಮೆಚ್ಚಿಕೊಂಡ ಯಾವುದೇ ದೂತರಿಗೆ ಹೊರತು. ಆಗ ಆ ದೂತರ ಮುಂದೆಯೂ ಹಿಂದೆ ಯೂ ಅವನು ಕಾವಲುಗಾರರನ್ನು ಖಂಡಿತ ಏರ್ಪಡಿಸುವನು.

Verse 28

لِّيَعْلَمَ أَن قَدْ أَبْلَغُوا۟ رِسَـٰلَـٰتِ رَبِّهِمْ وَأَحَاطَ بِمَا لَدَيْهِمْ وَأَحْصَىٰ كُلَّ شَىْءٍ عَدَدًۢا

Transliteration liyaʿlama an qad ablaghū risālāti rabbihim wa-aḥāṭa bimā ladayhim wa-aḥṣā kulla shayin ʿadadan

Kannada ಅದು ಅವರು ತಮ್ಮ ಪ್ರಭುವಿನ ಸಂದೇಶಗಳನ್ನು ತಲುಪಿಸಿರುವರೆಂಬುದನ್ನು ಅವನು ಪ್ರತ್ಯಕ್ಷವಾಗಿ ತಿಳಿಯಲಿಕ್ಕಾಗಿ, ಅವರ ಬಳಿ ಇರುವುದನ್ನು ಅವನು ಸಂಪೂರ್ಣವಾಗಿ ಅರಿತಿರುತ್ತಾನೆ ಮತ್ತು ಪ್ರತಿಯೊಂದು ವಸ್ತುವನ್ನೂ ಅವನು ಲೆಕ್ಕ ಮಾಡಿಟ್ಟಿರುತ್ತಾನೆ.

Read Surah Al-Jinn in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.