Surah Al-Hujurat in Kannada: translation and audio
Surah 49 · الحجرات · The Rooms · 18 verses
Surah Al-Hujurat verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Hujurat word by word in English.
Verse 1
يَـٰٓأَيُّهَا ٱلَّذِينَ ءَامَنُوا۟ لَا تُقَدِّمُوا۟ بَيْنَ يَدَىِ ٱللَّهِ وَرَسُولِهِۦ ۖ وَٱتَّقُوا۟ ٱللَّهَ ۚ إِنَّ ٱللَّهَ سَمِيعٌ عَلِيمٌ
Transliteration yāayyuhā alladhīna āmanū lā tuqaddimū bayna yadayi l-lahi warasūlihi wa-ittaqū l-laha inna l-laha samīʿun ʿalīmun
Kannada ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹು ಮತ್ತು ಅವನ ದೂತರ ಮುಂದೆ ಮೀರಿ ನಡೆಯಬೇಡಿರಿ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಸರ್ವಶೃತನೂ ಸರ್ವಜ್ಞನೂ ಆಗಿದ್ದಾನೆ.
Verse 2
يَـٰٓأَيُّهَا ٱلَّذِينَ ءَامَنُوا۟ لَا تَرْفَعُوٓا۟ أَصْوَٰتَكُمْ فَوْقَ صَوْتِ ٱلنَّبِىِّ وَلَا تَجْهَرُوا۟ لَهُۥ بِٱلْقَوْلِ كَجَهْرِ بَعْضِكُمْ لِبَعْضٍ أَن تَحْبَطَ أَعْمَـٰلُكُمْ وَأَنتُمْ لَا تَشْعُرُونَ
Transliteration yāayyuhā alladhīna āmanū lā tarfaʿū aṣwātakum fawqa ṣawti l-nabiyi walā tajharū lahu bil-qawli kajahri baʿḍikum libaʿḍin an taḥbaṭa aʿmālukum wa-antum lā tashʿurūna
Kannada ಸತ್ಯವಿಶ್ವಾಸಿಗಳೇ, ನಿಮ್ಮ ಧ್ವನಿಗಳನ್ನು ಪ್ರವಾದಿವರ್ಯರ ಧ್ವನಿಗಿಂತ ಎತ್ತರಿಸಬೇಡಿರಿ! ನೀವು ಪರಸ್ಪರ ಸ್ವರವೆತ್ತಿ ಮಾತನಾಡುವಂತೆ ಪ್ರವಾದಿವರ್ಯರೊಡನೆ ಉಚ್ಚ ಸ್ವರದಲ್ಲಿ ಮಾತನಾಡ ಬೇಡಿರಿ. ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಸುಕೃತಗಳು ನಿಷ್ಪಲವಾಗುವ ಅಪಾಯವಿರುವುದರಿಂದ (ಈ ಆದೇಶ ನೀಡಲಾಗಿದೆ).
Verse 3
إِنَّ ٱلَّذِينَ يَغُضُّونَ أَصْوَٰتَهُمْ عِندَ رَسُولِ ٱللَّهِ أُو۟لَـٰٓئِكَ ٱلَّذِينَ ٱمْتَحَنَ ٱللَّهُ قُلُوبَهُمْ لِلتَّقْوَىٰ ۚ لَهُم مَّغْفِرَةٌ وَأَجْرٌ عَظِيمٌ
Transliteration inna alladhīna yaghuḍḍūna aṣwātahum ʿinda rasūli l-lahi ulāika alladhīna im'taḥana l-lahu qulūbahum lilttaqwā lahum maghfiratun wa-ajrun ʿaẓīmun
Kannada ಅಲ್ಲಾಹನ ದೂತರ ಸನ್ನಿಧಿಯಲ್ಲಿ ತಮ್ಮ ಧ್ವನಿಯನ್ನು ತಗ್ಗಿಸಿಕೊಳ್ಳುವವರ್ಯಾರೋ ಅವರ ಹೃದಯಗಳನ್ನು ಅಲ್ಲಾಹನು ತಕ್ವಾಕ್ಕೆ (ಭಯ ಭಕ್ತಿಗೆ) ಪರೀಕ್ಷಿಸಿ ತೆಗೆದಿರುವನು. ಅವರಿಗೆ ಪಾಪ ಮುಕ್ತಿ ಯೂ ಘನವೆತ್ತ ಪ್ರತಿಫಲವೂ ಇದೆ .
Verse 4
إِنَّ ٱلَّذِينَ يُنَادُونَكَ مِن وَرَآءِ ٱلْحُجُرَٰتِ أَكْثَرُهُمْ لَا يَعْقِلُونَ
Transliteration inna alladhīna yunādūnaka min warāi l-ḥujurāti aktharuhum lā yaʿqilūna
Kannada (ಸಂದೇಶವಾಹಕರೇ,) ತಮ್ಮನ್ನು ಕೊಠಡಿಗಳ ಹೊರಗಿನಿಂದ ಕೂಗಿ ಕರೆಯುವವರ ಪೈಕಿ ಹೆಚ್ಚಿನವರು (ತಮ್ಮ ಮಹತ್ವವನ್ನು) ಗ್ರಹಿಸಿಕೊಂಡವರಲ್ಲ.
Verse 5
وَلَوْ أَنَّهُمْ صَبَرُوا۟ حَتَّىٰ تَخْرُجَ إِلَيْهِمْ لَكَانَ خَيْرًا لَّهُمْ ۚ وَٱللَّهُ غَفُورٌ رَّحِيمٌ
Transliteration walaw annahum ṣabarū ḥattā takhruja ilayhim lakāna khayran lahum wal-lahu ghafūrun raḥīmun
Kannada ತಾವು ಅವರ ಬಳಿಗೆ ಹೊರಟು ಬರುವ ತನಕ ಅವರು ತಾಳ್ಮೆ ವಹಿಸುತ್ತಿದ್ದರೆ ಅದು ಅವರಿಗೆ ಬಹಳ ಒಳ್ಳೆಯದಿತ್ತು. ಅಲ್ಲಾಹನು ಅತಿ ಕ್ಷಮಾಶೀಲನೂ ಕರುಣಾವಾರಿಧಿಯೂ ಆಗಿರುತ್ತಾನೆ.
Verse 6
يَـٰٓأَيُّهَا ٱلَّذِينَ ءَامَنُوٓا۟ إِن جَآءَكُمْ فَاسِقٌۢ بِنَبَإٍ فَتَبَيَّنُوٓا۟ أَن تُصِيبُوا۟ قَوْمًۢا بِجَهَـٰلَةٍ فَتُصْبِحُوا۟ عَلَىٰ مَا فَعَلْتُمْ نَـٰدِمِينَ
Transliteration yāayyuhā alladhīna āmanū in jāakum fāsiqun binaba-in fatabayyanū an tuṣībū qawman bijahālatin fatuṣ'biḥū ʿalā mā faʿaltum nādimīna
Kannada ಸತ್ಯವಿಶ್ವಾಸಿಗಳೇ, ಅಶ್ರದ್ಧನೊಬ್ಬನು ನಿಮ್ಮ ಬಳಿ ಗೇನಾದರೂ ಸುದ್ದಿ ತಂದರೆ ಅದರ ಬಗ್ಗೆ ಸ್ಪಷ್ಟವಾಗಿ (ಸತ್ಯಾಸತ್ಯತೆಯನ್ನು) ತಿಳಿದುಕೊಳ್ಳಿರಿ. ನೀವು ತಿಳಿಯದೆ ಯಾವುದೇ ಒಂದು ಸಮೂಹಕ್ಕೆ ಹಾನಿ ಮಾಡಿ, ಆ ಬಳಿಕ ನಿಮ್ಮ ಕೃತ್ಯದ ಬಗ್ಗೆ ಪಶ್ಚಾ ತ್ತಾ ಪಪಡುವಂತಾಗದಿರಲು (ಈ ಆದೇಶ)
Verse 7
وَٱعْلَمُوٓا۟ أَنَّ فِيكُمْ رَسُولَ ٱللَّهِ ۚ لَوْ يُطِيعُكُمْ فِى كَثِيرٍ مِّنَ ٱلْأَمْرِ لَعَنِتُّمْ وَلَـٰكِنَّ ٱللَّهَ حَبَّبَ إِلَيْكُمُ ٱلْإِيمَـٰنَ وَزَيَّنَهُۥ فِى قُلُوبِكُمْ وَكَرَّهَ إِلَيْكُمُ ٱلْكُفْرَ وَٱلْفُسُوقَ وَٱلْعِصْيَانَ ۚ أُو۟لَـٰٓئِكَ هُمُ ٱلرَّٰشِدُونَ
Transliteration wa-iʿ'lamū anna fīkum rasūla l-lahi law yuṭīʿukum fī kathīrin mina l-amri laʿanittum walākinna l-laha ḥabbaba ilaykumu l-īmāna wazayyanahu fī qulūbikum wakarraha ilaykumu l-kuf'ra wal-fusūqa wal-ʿiṣ'yāna ulāika humu l-rāshidūna
Kannada ನಿಮ್ಮಲ್ಲಿ ಅಲ್ಲಾಹನ ಸಂದೇಶವಾಹಕರಿದ್ದಾರೆ ಎಂಬುದನ್ನು ನೀವು ಚೆನ್ನಾಗಿ ತಿಳಿದುಕೊಳ್ಳಿರಿ. ಹೆಚ್ಚಿನ ವಿಷಯಗಳಲ್ಲಿ ಅವರು ನಿಮ್ಮ ಮಾತನ್ನು ಅನುಸರಿಸಿದರೆ, ನೀವು ಸಂಕಷ್ಟಕ್ಕೊಳಗಾಗುವಿರಿ. ಆದರೆ, ಅಲ್ಲಾಹನು ನಿಮಗೆ ಸತ್ಯವಿಶ್ವಾಸವನ್ನು ಪ್ರಿಯಗೊಳಿಸಿರುವನು ಹಾಗೂ ಅದನ್ನು ನಿಮ್ಮ ಹೃದಯಗಳಲ್ಲಿ ಚಂದಗಾಣಿಸಿರುವನು. ಅವಿಶ್ವಾಸ, ಕರ್ಮಭ್ರಷ್ಟತೆ, ಆಜ್ಞೋಲ್ಲಂಘನೆಯನ್ನು ನಿಮಗೆ ಅನಿಷ್ಟಗೊಳಿಸಿದನು. ಅವರೇ ಸನ್ಮಾರ್ಗದರ್ಶಿಗಳು.
Verse 8
فَضْلًا مِّنَ ٱللَّهِ وَنِعْمَةً ۚ وَٱللَّهُ عَلِيمٌ حَكِيمٌ
Transliteration faḍlan mina l-lahi waniʿ'matan wal-lahu ʿalīmun ḥakīmun
Kannada (ಈ ವಿಜಯವು) ಅಲ್ಲಾಹನ ಔದಾರ್ಯ ಮತ್ತು ಕೃಪೆಯಿಂದಲೇ ಆಗಿದೆ. ಅಲ್ಲಾಹು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ.
Verse 9
وَإِن طَآئِفَتَانِ مِنَ ٱلْمُؤْمِنِينَ ٱقْتَتَلُوا۟ فَأَصْلِحُوا۟ بَيْنَهُمَا ۖ فَإِنۢ بَغَتْ إِحْدَىٰهُمَا عَلَى ٱلْأُخْرَىٰ فَقَـٰتِلُوا۟ ٱلَّتِى تَبْغِى حَتَّىٰ تَفِىٓءَ إِلَىٰٓ أَمْرِ ٱللَّهِ ۚ فَإِن فَآءَتْ فَأَصْلِحُوا۟ بَيْنَهُمَا بِٱلْعَدْلِ وَأَقْسِطُوٓا۟ ۖ إِنَّ ٱللَّهَ يُحِبُّ ٱلْمُقْسِطِينَ
Transliteration wa-in ṭāifatāni mina l-mu'minīna iq'tatalū fa-aṣliḥū baynahumā fa-in baghat iḥ'dāhumā ʿalā l-ukh'rā faqātilū allatī tabghī ḥattā tafīa ilā amri l-lahi fa-in fāat fa-aṣliḥū baynahumā bil-ʿadli wa-aqsiṭū inna l-laha yuḥibbu l-muq'siṭīna
Kannada ಸತ್ಯವಿಶ್ವಾಸಿಗಳಲ್ಲಿ ಎರಡು ಗುಂಪುಗಳು ಪರಸ್ಪರ ಕಾದಾಡಿದರೆ, ಅವರ ನಡುವೆ ನೀವು ಸಂಧಾನ ಮಾಡಿಸಿರಿ. ಅವರಲ್ಲಿ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿರೇಕವೆಸಗಿದರೆ, ಅತಿರೇಕವೆಸಗಿದವರು ಅಲ್ಲಾಹನ ಆದೇಶದೆಡೆಗೆ ಮರಳಿ ಬರುವವರೆಗೂ ನೀವು ಅವರ ವಿರುದ್ಧ ಹೋರಾಡಿರಿ. ಆಮೇಲೆ ಅವರು ಮರಳಿ ಬಂದರೆ, ಅವರ ಮಧ್ಯೆ ನ್ಯಾಯಬದ್ಧ ಸಂಧಾನ ಮಾಡಿಸಿರಿ ಮತ್ತು ನ್ಯಾಯವನ್ನು ಪಾಲಿಸಿರಿ. ನ್ಯಾಯ ಪರಿಪಾಲಕರನ್ನು ಅಲ್ಲಾಹು ಖಂಡಿತಾ ಪ್ರೀತಿಸುತ್ತಾನೆ.
Verse 10
إِنَّمَا ٱلْمُؤْمِنُونَ إِخْوَةٌ فَأَصْلِحُوا۟ بَيْنَ أَخَوَيْكُمْ ۚ وَٱتَّقُوا۟ ٱللَّهَ لَعَلَّكُمْ تُرْحَمُونَ
Transliteration innamā l-mu'minūna ikh'watun fa-aṣliḥū bayna akhawaykum wa-ittaqū l-laha laʿallakum tur'ḥamūna
Kannada ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಪರಸ್ಪರ ಸಹೋದರರು. ಆದುದರಿಂದ ನಿಮ್ಮ ಇಬ್ಬರು ಸಹೋದರರ ನಡುವೆ ಸಂಧಾನ ನಡೆಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ. ನೀವು ಅನುಗ್ರಹೀತರಾಗಬಹುದು.
Verse 11
يَـٰٓأَيُّهَا ٱلَّذِينَ ءَامَنُوا۟ لَا يَسْخَرْ قَوْمٌ مِّن قَوْمٍ عَسَىٰٓ أَن يَكُونُوا۟ خَيْرًا مِّنْهُمْ وَلَا نِسَآءٌ مِّن نِّسَآءٍ عَسَىٰٓ أَن يَكُنَّ خَيْرًا مِّنْهُنَّ ۖ وَلَا تَلْمِزُوٓا۟ أَنفُسَكُمْ وَلَا تَنَابَزُوا۟ بِٱلْأَلْقَـٰبِ ۖ بِئْسَ ٱلِٱسْمُ ٱلْفُسُوقُ بَعْدَ ٱلْإِيمَـٰنِ ۚ وَمَن لَّمْ يَتُبْ فَأُو۟لَـٰٓئِكَ هُمُ ٱلظَّـٰلِمُونَ
Transliteration yāayyuhā alladhīna āmanū lā yaskhar qawmun min qawmin ʿasā an yakūnū khayran min'hum walā nisāon min nisāin ʿasā an yakunna khayran min'hunna walā talmizū anfusakum walā tanābazū bil-alqābi bi'sa l-s'mu l-fusūqu baʿda l-īmāni waman lam yatub fa-ulāika humu l-ẓālimūna
Kannada ಓ ಸತ್ಯವಿಶ್ವಾಸಿಗಳೇ, ಒಂದು ವಿಭಾಗ ಇನ್ನೊಂದು ವಿಭಾಗವನ್ನು ಪರಿಹಾಸ್ಯ ಮಾಡದಿರಲಿ. ಅವರು (ಪರಿಹಾಸ್ಯಕ್ಕೊಳಗಾದವರು) ಇವರಿಗಿಂತ ಉತ್ತಮರಿರಲೂಬಹುದು. ಸ್ತ್ರೀಯರು ಇತರ ಸ್ತ್ರೀಯರನ್ನೂ ಪರಿಹಾಸ್ಯ ಮಾಡದಿರಲಿ. ಅವರು (ಪರಿಹಾಸ್ಯ ಕ್ಕೊಳಗಾದ ಸ್ತ್ರೀಯರು) ಇವರಿಗಿಂತ ಉತ್ತಮರಿರಲೂಬಹುದು. ನೀವು ನಿಮ್ಮನ್ನೇ ಹಳಿದುಕೊಳ್ಳಬೇಡಿರಿ. ಮತ್ತು ಪರಸ್ಪರ ಅಡ್ಡ ಹೆಸರಿನಿಂದ ಕರೆದುಕೊಳ್ಳದಿರಿ. ಸತ್ಯ ವಿಶ್ವಾಸ ಸ್ವೀಕರಿಸಿದ ಬಳಿಕ ಅಧಾರ್ಮಿಕ ಹೆಸರು ಎಷ್ಟೊಂದು ನಿಕೃಷ್ಟ. ಯಾರು ಇದರಿಂದ ಪಶ್ಚಾತ್ತಾಪಪಟ್ಟು ಮರಳುವುದಿಲ್ಲವೋ ಅವರೇ ಅಕ್ರಮಿಗಳು.
Verse 12
يَـٰٓأَيُّهَا ٱلَّذِينَ ءَامَنُوا۟ ٱجْتَنِبُوا۟ كَثِيرًا مِّنَ ٱلظَّنِّ إِنَّ بَعْضَ ٱلظَّنِّ إِثْمٌ ۖ وَلَا تَجَسَّسُوا۟ وَلَا يَغْتَب بَّعْضُكُم بَعْضًا ۚ أَيُحِبُّ أَحَدُكُمْ أَن يَأْكُلَ لَحْمَ أَخِيهِ مَيْتًا فَكَرِهْتُمُوهُ ۚ وَٱتَّقُوا۟ ٱللَّهَ ۚ إِنَّ ٱللَّهَ تَوَّابٌ رَّحِيمٌ
Transliteration yāayyuhā alladhīna āmanū ij'tanibū kathīran mina l-ẓani inna baʿḍa l-ẓani ith'mun walā tajassasū walā yaghtab baʿḍukum baʿḍan ayuḥibbu aḥadukum an yakula laḥma akhīhi maytan fakarih'tumūhu wa-ittaqū l-laha inna l-laha tawwābun raḥīmun
Kannada ಓ ಸತ್ಯವಿಶ್ವಾಸಿಗಳೇ, ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿ ಗಳು ಪಾಪಕರವಾಗಿವೆ. ನೀವು ಗೂಡಚಾರಿಕೆ ನಡೆಸದಿರಿ. ನೀವು ಪರಸ್ಪರ ಪರದೂಷಣೆ ಮಾಡದಿರಿ. ನೀವು ಪ್ರತಿಯೊಬ್ಬರು ತನ್ನ ಸಹೋದರ ಮೃತನಾಗಿರುವಾಗ ಅವನ ಕಳೇಬರದ ಮಾಂಸ ತಿನ್ನಲು ಇಷ್ಟಪಡುವಿರಾ? ನೀವದನ್ನು ಅನಿಷ್ಟಪಡುವಿರಿ. ಅಲ್ಲಾಹನನ್ನು ಭಯಪಡಿರಿ, ಅಲ್ಲಾಹು ಯಥೇಚ್ಚಪಶ್ಚಾತ್ತಾಪ ಸ್ವೀಕರಿಸುವವನೂ ಪರಮ ದಯಾಳುವೂ ಆಗಿರುತ್ತಾನೆ .
Verse 13
يَـٰٓأَيُّهَا ٱلنَّاسُ إِنَّا خَلَقْنَـٰكُم مِّن ذَكَرٍ وَأُنثَىٰ وَجَعَلْنَـٰكُمْ شُعُوبًا وَقَبَآئِلَ لِتَعَارَفُوٓا۟ ۚ إِنَّ أَكْرَمَكُمْ عِندَ ٱللَّهِ أَتْقَىٰكُمْ ۚ إِنَّ ٱللَّهَ عَلِيمٌ خَبِيرٌ
Transliteration yāayyuhā l-nāsu innā khalaqnākum min dhakarin wa-unthā wajaʿalnākum shuʿūban waqabāila litaʿārafū inna akramakum ʿinda l-lahi atqākum inna l-laha ʿalīmun khabīrun
Kannada ಓ ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಸೃಷ್ಟಿಸಿದೆವು. ನೀವು ಪರಸ್ಪರ ಗುರುತಿಸಿಕೊಳ್ಳುವ ಸಲುವಾಗಿ ನಾವು ನಿಮ್ಮನ್ನು ವಿವಿಧ ಜನಾಂಗಗಳಾಗಿಯೂ, ಗೋತ್ರ ಗಳಾಗಿಯೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಟನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷ್ಮಜ್ಞನೂ ಆಗಿರುತ್ತಾನೆ.
Verse 14
۞ قَالَتِ ٱلْأَعْرَابُ ءَامَنَّا ۖ قُل لَّمْ تُؤْمِنُوا۟ وَلَـٰكِن قُولُوٓا۟ أَسْلَمْنَا وَلَمَّا يَدْخُلِ ٱلْإِيمَـٰنُ فِى قُلُوبِكُمْ ۖ وَإِن تُطِيعُوا۟ ٱللَّهَ وَرَسُولَهُۥ لَا يَلِتْكُم مِّنْ أَعْمَـٰلِكُمْ شَيْـًٔا ۚ إِنَّ ٱللَّهَ غَفُورٌ رَّحِيمٌ
Transliteration qālati l-aʿrābu āmannā qul lam tu'minū walākin qūlū aslamnā walammā yadkhuli l-īmānu fī qulūbikum wa-in tuṭīʿū l-laha warasūlahu lā yalit'kum min aʿmālikum shayan inna l-laha ghafūrun raḥīmun
Kannada ಗ್ರಾಮೀಣ ಅರಬರು `ನಾವು ವಿಶ್ವಾಸವಿರಿಸಿದ್ದೇವೆ’ ಎನ್ನುತ್ತಾರೆ. (ಪ್ರವಾದಿಯರೇ,) ಹೇಳಿರಿ: `ನೀವು ವಿಶ್ವಾಸವಿರಿಸಲಿಲ್ಲ. (ಬಾಹ್ಯವಾಗಿ ಶರಣಾಗಿರು ವುದು ಮಾತ್ರ). ಆದರೆ `ನಾವು ವಿಧೇಯರಾಗಿದ್ದೇವೆ’ ಎಂದು ನೀವು ಹೇಳಿಕೊಳ್ಳಿರಿ. ಸತ್ಯ ವಿಶ್ವಾಸವು ನಿಮ್ಮ ಹೃದಯಗಳಲ್ಲಿ ಪ್ರವೇಶಿಸಿಲ್ಲ. ನೀವು ಅಲ್ಲಾಹು ಮತ್ತು ಅವನ ದೂತರನ್ನು ಅನುಸರಣೆ ಮಾಡಿದರೆ, ಅವನು ನಿಮಗೆ ನಿಮ್ಮ ಸುಕೃತಗಳ ಪ್ರತಿಫಲದಿಂದ ಒಂದಿಷ್ಟು ಕಡಿತ ಗೊಳಿಸಲಾರನು. ನಿಶ್ಚಯವಾಗಿಯೂ ಅಲ್ಲಾಹು ಮಹಾ ಕ್ಷಮಾಶೀಲನೂ ತೀವ್ರ ದಯಾಳುವೂ ಆಗಿರುತ್ತಾನೆ.
Verse 15
إِنَّمَا ٱلْمُؤْمِنُونَ ٱلَّذِينَ ءَامَنُوا۟ بِٱللَّهِ وَرَسُولِهِۦ ثُمَّ لَمْ يَرْتَابُوا۟ وَجَـٰهَدُوا۟ بِأَمْوَٰلِهِمْ وَأَنفُسِهِمْ فِى سَبِيلِ ٱللَّهِ ۚ أُو۟لَـٰٓئِكَ هُمُ ٱلصَّـٰدِقُونَ
Transliteration innamā l-mu'minūna alladhīna āmanū bil-lahi warasūlihi thumma lam yartābū wajāhadū bi-amwālihim wa-anfusihim fī sabīli l-lahi ulāika humu l-ṣādiqūna
Kannada ಅಲ್ಲಾಹು ಮತ್ತು ಅವನ ದೂತರಲ್ಲಿ ವಿಶ್ವಾಸವಿಟ್ಟು, ಆ ಬಳಿಕ ಸ್ವಲ್ಪವೂ ಸಂಶಯಗ್ರಸ್ತರಾಗದವರು ಮತ್ತು ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವರು ಯಾರೋ ಅವರೇ ವಾಸ್ತವದಲ್ಲಿ ಸತ್ಯವಿಶ್ವಾಸಿಗಳು. ಅವರೇ ಸತ್ಯಸಂಧರು.
Verse 16
قُلْ أَتُعَلِّمُونَ ٱللَّهَ بِدِينِكُمْ وَٱللَّهُ يَعْلَمُ مَا فِى ٱلسَّمَـٰوَٰتِ وَمَا فِى ٱلْأَرْضِ ۚ وَٱللَّهُ بِكُلِّ شَىْءٍ عَلِيمٌ
Transliteration qul atuʿallimūna l-laha bidīnikum wal-lahu yaʿlamu mā fī l-samāwāti wamā fī l-arḍi wal-lahu bikulli shayin ʿalīmun
Kannada (ಸಂದೇಶವಾಹಕರೇ,) ಕೇಳಿರಿ, ನಿಮ್ಮ ಧರ್ಮ ನಿಷ್ಠೆಯ ಕುರಿತು ನೀವು ಅಲ್ಲಾಹನಿಗೆ ಕಲಿಸುತ್ತಿ ರುವಿರಾ? ಭೂಮ್ಯಾಕಾಶಗಳಲ್ಲಿರುವುದನ್ನೆಲ್ಲ ಅಲ್ಲಾಹನು ಬಲ್ಲನು. ಅಲ್ಲಾಹು ಸಕಲ ವಸ್ತುಗಳ ಜ್ಞಾನವುಳ್ಳವನಾಗಿರುತ್ತಾನೆ.
Verse 17
يَمُنُّونَ عَلَيْكَ أَنْ أَسْلَمُوا۟ ۖ قُل لَّا تَمُنُّوا۟ عَلَىَّ إِسْلَـٰمَكُم ۖ بَلِ ٱللَّهُ يَمُنُّ عَلَيْكُمْ أَنْ هَدَىٰكُمْ لِلْإِيمَـٰنِ إِن كُنتُمْ صَـٰدِقِينَ
Transliteration yamunnūna ʿalayka an aslamū qul lā tamunnū ʿalayya is'lāmakum bali l-lahu yamunnu ʿalaykum an hadākum lil'īmāni in kuntum ṣādiqīna
Kannada ಅವರು ಇಸ್ಲಾಮ್ ಸ್ವೀಕರಿಸಿಕೊಂಡಿರುವುದನ್ನು ತಮಗೆ ಮಾಡಿದ ಒಂದು ಔದಾರ್ಯವನ್ನಾಗಿ ಎತ್ತಿ ತೋರಿಸುತ್ತಾರೆ. ನೀವು ಹೇಳಿರಿ. ‘ನೀವು ಇಸ್ಲಾಮ್ ಸ್ವೀಕರಿಸಿರುವುದನ್ನು ನನ್ನ ಮೇಲಿನ ಒಂದು ಔದಾರ್ಯವನ್ನಾಗಿ ಪ್ರದರ್ಶಿಸಬೇಡಿರಿ. ವಾಸ್ತವದಲ್ಲಿ ನೀವು ಸತ್ಯವಂತರಾಗಿದ್ದರೆ ನಿಮಗೆ ಸತ್ಯವಿಶ್ವಾಸದ ದಾರಿ ತೋರುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಔದಾರ್ಯ ತೋರಿದ್ದಾನೆ’.
Verse 18
إِنَّ ٱللَّهَ يَعْلَمُ غَيْبَ ٱلسَّمَـٰوَٰتِ وَٱلْأَرْضِ ۚ وَٱللَّهُ بَصِيرٌۢ بِمَا تَعْمَلُونَ
Transliteration inna l-laha yaʿlamu ghayba l-samāwāti wal-arḍi wal-lahu baṣīrun bimā taʿmalūna
Kannada ನಿಶ್ಚಯವಾಗಿಯೂ ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ಅದೃಶ್ಯವನ್ನು ಬಲ್ಲವನು ಮತ್ತು ನಿಮ್ಮ ಕಾರ್ಯ ಪ್ರವರ್ತಿಗಳನ್ನು ಕಂಡರಿಯುವವನು.
Read Surah Al-Hujurat in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.