Surah Al-Hashr in Kannada: translation and audio
Surah 59 · الحشر · The Exile · 24 verses
Surah Al-Hashr verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Hashr word by word in English.
Verse 1
سَبَّحَ لِلَّهِ مَا فِى ٱلسَّمَـٰوَٰتِ وَمَا فِى ٱلْأَرْضِ ۖ وَهُوَ ٱلْعَزِيزُ ٱلْحَكِيمُ
Transliteration sabbaḥa lillahi mā fī l-samāwāti wamā fī l-arḍi wahuwa l-ʿazīzu l-ḥakīmu
Kannada ಭೂಮಿ - ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುª ÀÇ ಅಲ್ಲಾಹನನ್ನು ಪ್ರಕೀರ್ತನೆ ಮಾಡಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.
Verse 2
هُوَ ٱلَّذِىٓ أَخْرَجَ ٱلَّذِينَ كَفَرُوا۟ مِنْ أَهْلِ ٱلْكِتَـٰبِ مِن دِيَـٰرِهِمْ لِأَوَّلِ ٱلْحَشْرِ ۚ مَا ظَنَنتُمْ أَن يَخْرُجُوا۟ ۖ وَظَنُّوٓا۟ أَنَّهُم مَّانِعَتُهُمْ حُصُونُهُم مِّنَ ٱللَّهِ فَأَتَىٰهُمُ ٱللَّهُ مِنْ حَيْثُ لَمْ يَحْتَسِبُوا۟ ۖ وَقَذَفَ فِى قُلُوبِهِمُ ٱلرُّعْبَ ۚ يُخْرِبُونَ بُيُوتَهُم بِأَيْدِيهِمْ وَأَيْدِى ٱلْمُؤْمِنِينَ فَٱعْتَبِرُوا۟ يَـٰٓأُو۟لِى ٱلْأَبْصَـٰرِ
Transliteration huwa alladhī akhraja alladhīna kafarū min ahli l-kitābi min diyārihim li-awwali l-ḥashri mā ẓanantum an yakhrujū waẓannū annahum māniʿatuhum ḥuṣūnuhum mina l-lahi fa-atāhumu l-lahu min ḥaythu lam yaḥtasibū waqadhafa fī qulūbihimu l-ruʿ'ba yukh'ribūna buyūtahum bi-aydīhim wa-aydī l-mu'minīna fa-iʿ'tabirū yāulī l-abṣāri
Kannada ಗ್ರಂಥದವರಾದ ಸತ್ಯನಿಷೇಧಿಗಳನ್ನು ಪ್ರಥಮ ಗಡೀಪಾರಿನಲ್ಲಿ ಅವರ ಮನೆಗಳಿಂದ ಹೊರ ಹಾಕಿದವನು ಅವನೇ. ಅವರು ಹೊರಟು ಬರುವರೆಂದು ನೀವು ಭಾವಿಸಿರಲಿಲ್ಲ. ತಮ್ಮ ಕೋಟೆಗಳು ತಮ್ಮನ್ನು ಅಲ್ಲಾಹನಿಂದ ಪ್ರತಿರೋಧಿಸಬಹುದೆಂದು ಅವರು ಭಾವಿಸಿದ್ದರು. ಆದರೆ ಅವರು ಊಹಿಸದ ಕಡೆಯಿಂದ ಅಲ್ಲಾಹ್ ಅವರ ಹತ್ತಿರ ಬಂದನು. ಅವನು ಅವರ ಹೃದಯದಲ್ಲಿ ಭೀತಿಯನ್ನು ಹಾಕಿದನು. ಅವರು ಸ್ವತಃ ಕೈಗಳಿಂದಲೂ ಸತ್ಯ ವಿಶ್ವಾಸಿಗಳ ಕೈಗಳಿಂದಲೂ ತಮ್ಮ ಮನೆಗಳನ್ನು ಹಾಳುಗೆಡಹಿದ್ದರು. ಆದುದರಿಂದ ಕಣ್ಣುಳ್ಳವರೇ ನೀವು ಗುಣ ಪಾಠ ಕಲಿಯಿರಿ.
Verse 3
وَلَوْلَآ أَن كَتَبَ ٱللَّهُ عَلَيْهِمُ ٱلْجَلَآءَ لَعَذَّبَهُمْ فِى ٱلدُّنْيَا ۖ وَلَهُمْ فِى ٱلْـَٔاخِرَةِ عَذَابُ ٱلنَّارِ
Transliteration walawlā an kataba l-lahu ʿalayhimu l-jalāa laʿadhabahum fī l-dun'yā walahum fī l-ākhirati ʿadhābu l-nāri
Kannada ಅಲ್ಲಾಹನು ಅವರ ಮೇಲೆ ದೇಶ ಬಿಟ್ಟು ಹೋಗುವು ದನ್ನು ವಿಧಿಸದಿರುತ್ತಿದ್ದರೆ ಇಹಲೋಕದಲ್ಲೇ ಅವರನ್ನು ಶಿಕ್ಷಿಸುತ್ತಿದ್ದನು. ಪರಲೋಕದಲ್ಲಿ ಅವರಿಗೆ ನರಕ ಶಿಕ್ಷೆಯೂ ಇದೆ.
Verse 4
ذَٰلِكَ بِأَنَّهُمْ شَآقُّوا۟ ٱللَّهَ وَرَسُولَهُۥ ۖ وَمَن يُشَآقِّ ٱللَّهَ فَإِنَّ ٱللَّهَ شَدِيدُ ٱلْعِقَابِ
Transliteration dhālika bi-annahum shāqqū l-laha warasūlahu waman yushāqqi l-laha fa-inna l-laha shadīdu l-ʿiqābi
Kannada ಅದು ಅಲ್ಲಾಹು ಮತ್ತು ಅವನ ರಸೂಲರೊಂದಿಗೆ ಅವರು ಸ್ಪರ್ಧಿಸಿ ನಿಂತುದರ ಫಲ. ಯಾರಾದರೂ ಅಲ್ಲಾಹನ ವಿರುದ್ಧ ಸ್ಪರ್ಧಿಸಿದರೆ, ಖಂಡಿತ ಅಲ್ಲಾಹನು ಶಿಕ್ಷೆ ಕೊಡುವುದರಲ್ಲಿ ಕಠೋರನು.
Verse 5
مَا قَطَعْتُم مِّن لِّينَةٍ أَوْ تَرَكْتُمُوهَا قَآئِمَةً عَلَىٰٓ أُصُولِهَا فَبِإِذْنِ ٱللَّهِ وَلِيُخْزِىَ ٱلْفَـٰسِقِينَ
Transliteration mā qaṭaʿtum min līnatin aw taraktumūhā qāimatan ʿalā uṣūlihā fabi-idh'ni l-lahi waliyukh'ziya l-fāsiqīna
Kannada (ಸತ್ಯವಿಶ್ವಾಸಿಗಳೇ,) ನೀವು ಖರ್ಜೂರದ ಮರಗಳನ್ನು ಕಡಿದರೆ ಅಥವಾ ಅವುಗಳ ಕಾಂಡಗಳಲ್ಲಿ ನಿಲ್ಲಲು ಬಿಟ್ಟರೆ ಅದು, ಅಲ್ಲಾಹನ ಅನುಮತಿ ಪ್ರಕಾರವಾಗಿದೆ. ಮತ್ತು ಅಧರ್ಮಿಗಳನ್ನು ಅಪಮಾನಿಸಲಿಕ್ಕಾಗಿಯೂ ಆಗಿದೆ.
Verse 6
وَمَآ أَفَآءَ ٱللَّهُ عَلَىٰ رَسُولِهِۦ مِنْهُمْ فَمَآ أَوْجَفْتُمْ عَلَيْهِ مِنْ خَيْلٍ وَلَا رِكَابٍ وَلَـٰكِنَّ ٱللَّهَ يُسَلِّطُ رُسُلَهُۥ عَلَىٰ مَن يَشَآءُ ۚ وَٱللَّهُ عَلَىٰ كُلِّ شَىْءٍ قَدِيرٌ
Transliteration wamā afāa l-lahu ʿalā rasūlihi min'hum famā awjaftum ʿalayhi min khaylin walā rikābin walākinna l-laha yusalliṭu rusulahu ʿalā man yashāu wal-lahu ʿalā kulli shayin qadīrun
Kannada ಅಲ್ಲಾಹನು ಅವರಿಂದ (ಯಹೂದರಿಂದ) ಪಡೆದು ತನ್ನ ಸಂದೇಶವಾಹಕರ ಕಡೆಗೆ ಮರಳಿಸಿದ ಸೊತ್ತಿಗಾಗಿ ನೀವು ಕುದುರೆಗಳನ್ನು ಮತ್ತು ಒಂಟೆಗಳನ್ನು ಓಡಿಸಿಲ್ಲ. ಆದರೆ ಅಲ್ಲಾಹನು ತನ್ನ ದೂತರುಗಳಿಗೆ ತಾನಿಚ್ಛಿಸಿದವರ ಮೇಲೆ ಅಧಿಕಾರವನ್ನು ನೀಡಿ ಬಿಡುತ್ತಾನೆ. ಅಲ್ಲಾಹನು ಸಕಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.
Verse 7
مَّآ أَفَآءَ ٱللَّهُ عَلَىٰ رَسُولِهِۦ مِنْ أَهْلِ ٱلْقُرَىٰ فَلِلَّهِ وَلِلرَّسُولِ وَلِذِى ٱلْقُرْبَىٰ وَٱلْيَتَـٰمَىٰ وَٱلْمَسَـٰكِينِ وَٱبْنِ ٱلسَّبِيلِ كَىْ لَا يَكُونَ دُولَةًۢ بَيْنَ ٱلْأَغْنِيَآءِ مِنكُمْ ۚ وَمَآ ءَاتَىٰكُمُ ٱلرَّسُولُ فَخُذُوهُ وَمَا نَهَىٰكُمْ عَنْهُ فَٱنتَهُوا۟ ۚ وَٱتَّقُوا۟ ٱللَّهَ ۖ إِنَّ ٱللَّهَ شَدِيدُ ٱلْعِقَابِ
Transliteration mā afāa l-lahu ʿalā rasūlihi min ahli l-qurā falillahi walilrrasūli walidhī l-qur'bā wal-yatāmā wal-masākīni wa-ib'ni l-sabīli kay lā yakūna dūlatan bayna l-aghniyāi minkum wamā ātākumu l-rasūlu fakhudhūhu wamā nahākum ʿanhu fa-intahū wa-ittaqū l-laha inna l-laha shadīdu l-ʿiqābi
Kannada ಅಲ್ಲಾಹನು ಅವನ ರಸೂಲರಿಗೆ ವಿವಿಧ ನಾಡುಗಳ ಜನರಿಂದ ಗಳಿಸಿಕೊಟ್ಟದ್ದೆಲ್ಲವೂ ಅಲ್ಲಾಹು ಮತ್ತು ರಸೂಲರಿಗೂ ಹಾಗೂ ರಸೂಲರ ಹತ್ತಿರದ ಸಂಬಂಧಿಕರು, ಅನಾಥರು, ಬಡವರು ಮತ್ತು ಯಾತ್ರಿಕರಿಗಾಗಿದೆ. ಆ ಸೊತ್ತು ನಿಮ್ಮ ಶ್ರೀಮಂತರ ನಡುವೆ ಮಾತ್ರ ಹಸ್ತಾಂತರಗೊಳ್ಳದಿರಲಿಕ್ಕಾಗಿ ಈ ನಿಯಮ. ರಸೂಲರು ನಿಮಗೆ ಏನು ಕೊಡುವರೋ ಅದನ್ನು ಸ್ವೀಕರಿಸಿಕೊಳ್ಳಿರಿ. ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುವರೋ ಅದರಿಂದ ದೂರವಿರಿ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿರುತ್ತಾನೆ.
Verse 8
لِلْفُقَرَآءِ ٱلْمُهَـٰجِرِينَ ٱلَّذِينَ أُخْرِجُوا۟ مِن دِيَـٰرِهِمْ وَأَمْوَٰلِهِمْ يَبْتَغُونَ فَضْلًا مِّنَ ٱللَّهِ وَرِضْوَٰنًا وَيَنصُرُونَ ٱللَّهَ وَرَسُولَهُۥٓ ۚ أُو۟لَـٰٓئِكَ هُمُ ٱلصَّـٰدِقُونَ
Transliteration lil'fuqarāi l-muhājirīna alladhīna ukh'rijū min diyārihim wa-amwālihim yabtaghūna faḍlan mina l-lahi wariḍ'wānan wayanṣurūna l-laha warasūlahu ulāika humu l-ṣādiqūna
Kannada ತಮ್ಮ ಮನೆಗಳಿಂದಲೂ ಆಸ್ತಿಪಾಸ್ತಿಗಳಿಂದಲೂ ಹೊರಹಾಕಲ್ಪಟ್ಟಿರುವ ಬಡ ಮುಹಾಜಿರರ ತ್ಯಾಗ ಆಶ್ಚರ್ಯಕರ! ಇವರು ಅಲ್ಲಾಹನಿಂದ ಅನುಗ್ರಹವನ್ನೂ ಸಂಪ್ರೀತಿಯನ್ನೂ ಬಯಸುತ್ತಾರೆ ಮತ್ತು ಅಲ್ಲಾಹು ಮತ್ತು ಅವನ ರಸೂಲರಿಗೆ ಸಹಾಯ ಮಾಡುತ್ತಾರೆ. ಅವರೇ ಸತ್ಯಸಂಧರು.
Verse 9
وَٱلَّذِينَ تَبَوَّءُو ٱلدَّارَ وَٱلْإِيمَـٰنَ مِن قَبْلِهِمْ يُحِبُّونَ مَنْ هَاجَرَ إِلَيْهِمْ وَلَا يَجِدُونَ فِى صُدُورِهِمْ حَاجَةً مِّمَّآ أُوتُوا۟ وَيُؤْثِرُونَ عَلَىٰٓ أَنفُسِهِمْ وَلَوْ كَانَ بِهِمْ خَصَاصَةٌ ۚ وَمَن يُوقَ شُحَّ نَفْسِهِۦ فَأُو۟لَـٰٓئِكَ هُمُ ٱلْمُفْلِحُونَ
Transliteration wa-alladhīna tabawwaū l-dāra wal-īmāna min qablihim yuḥibbūna man hājara ilayhim walā yajidūna fī ṣudūrihim ḥājatan mimmā ūtū wayu'thirūna ʿalā anfusihim walaw kāna bihim khaṣāṣatun waman yūqa shuḥḥa nafsihi fa-ulāika humu l-muf'liḥūna
Kannada ಅವರ (ಮುಹಾಜಿರರ) ಆಗಮನಕ್ಕೆ ಮುಂಚೆಯೇ ವಾಸಸ್ಥಳವನ್ನೂ, ಸತ್ಯವಿಶ್ವಾಸವನ್ನೂ ಸ್ವೀಕಾರ ಮಾಡಿದ್ದ (ಅನ್ಸಾರ್ಗಳ) ಸೇವೆಯು ಪ್ರಸ್ತಾಪಾರ್ಹ. ತಮ್ಮ ಬಳಿಗೆ ದೇಶತ್ಯಾಗ ಮಾಡಿ ಬಂದವರನ್ನು ಅವರು ಪ್ರೀತಿಸುತ್ತಾರೆ. ಅವರಿಗೆ (ಮುಹಾಜಿರರಿಗೆ) ನೀಡಲ್ಪಟ್ಟ ಧನದ ಕುರಿತು ಇವರು ಯಾವುದೇ ದುರಾಗ್ರಹವನ್ನು ತಮ್ಮ ಮನಸ್ಸಿನಲ್ಲಿ ಕಾಣುವುದಿಲ್ಲ. ಸ್ವತಃ ತಮಗೆ ದಾರಿದ್ರ್ಯವಿದ್ದರೂ ಇತರರಿಗೆ ಸ್ವದೇ ಹಕ್ಕಿಂತ ಪ್ರಾಶಸ್ತ್ಯನೀಡುತ್ತಾರೆ. ಯಾರು ತಮ್ಮ ಮನಸ್ಸಿನ ಲೋಭತನದಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು.
Verse 10
وَٱلَّذِينَ جَآءُو مِنۢ بَعْدِهِمْ يَقُولُونَ رَبَّنَا ٱغْفِرْ لَنَا وَلِإِخْوَٰنِنَا ٱلَّذِينَ سَبَقُونَا بِٱلْإِيمَـٰنِ وَلَا تَجْعَلْ فِى قُلُوبِنَا غِلًّا لِّلَّذِينَ ءَامَنُوا۟ رَبَّنَآ إِنَّكَ رَءُوفٌ رَّحِيمٌ
Transliteration wa-alladhīna jāū min baʿdihim yaqūlūna rabbanā igh'fir lanā wali-ikh'wāninā alladhīna sabaqūnā bil-īmāni walā tajʿal fī qulūbinā ghillan lilladhīna āmanū rabbanā innaka raūfun raḥīmun
Kannada ಅವರ ನಂತರ ಬಂದವರ ಅವಸ್ಥೆಯು ಪ್ರಶಂಸಾರ್ಹ. ಅವರು ಹೀಗೆ ಪ್ರಾರ್ಥಿಸುತ್ತಾರೆ. ನಮ್ಮ ಪ್ರಭೂ, ನಮ್ಮನ್ನೂ ನಮಗಿಂತ ಮುಂಚೆ ಸತ್ಯವಿಶ್ವಾಸ ಸ್ವೀಕಾರ ಮಾಡಿದವರನ್ನೂ-ನಿಮ್ಮ ನಮ್ಮೆಲ್ಲ ಸಹೋದರರನ್ನೂ ಕ್ಷಮಿಸಿ ಬಿಡು ಮತ್ತು ನಮ್ಮ ಮನಸ್ಸುಗಳಲ್ಲಿ ಸತ್ಯವಿಶ್ವಾಸಿಗಳ ಬಗ್ಗೆ ಯಾವುದೇ ಹಗೆತನವನ್ನಿರಿಸದಿರು. ನಮ್ಮ ಪ್ರಭೂ, ನೀನು ಮಹಾ ವಾತ್ಸಲ್ಯಪೂರ್ಣನೂ ಕೃಪಾನಿಧಿಯೂ ಆಗಿರುವೆ.
Verse 11
۞ أَلَمْ تَرَ إِلَى ٱلَّذِينَ نَافَقُوا۟ يَقُولُونَ لِإِخْوَٰنِهِمُ ٱلَّذِينَ كَفَرُوا۟ مِنْ أَهْلِ ٱلْكِتَـٰبِ لَئِنْ أُخْرِجْتُمْ لَنَخْرُجَنَّ مَعَكُمْ وَلَا نُطِيعُ فِيكُمْ أَحَدًا أَبَدًا وَإِن قُوتِلْتُمْ لَنَنصُرَنَّكُمْ وَٱللَّهُ يَشْهَدُ إِنَّهُمْ لَكَـٰذِبُونَ
Transliteration alam tara ilā alladhīna nāfaqū yaqūlūna li-ikh'wānihimu alladhīna kafarū min ahli l-kitābi la-in ukh'rij'tum lanakhrujanna maʿakum walā nuṭīʿu fīkum aḥadan abadan wa-in qūtil'tum lananṣurannakum wal-lahu yashhadu innahum lakādhibūna
Kannada ಆ ಕಾಪಟ್ಯ ತೋರಿದವರನ್ನು ನೀವು ನೋಡಿಲ್ಲವೇ? ಇವರು ಗ್ರಂಥದವರಾದ ತಮ್ಮ ಸತ್ಯ ನಿಷೇಧಿ ಸಹೋದರರೊಡನೆ, ನಿಮ್ಮನ್ನು ಹೊರ ಹಾಕಲಾದರೆ ನಿಮ್ಮ ಜೊತೆ ನಾವೂ ಹೊರಡುವೆವು ಮತ್ತು ನಿಮ್ಮ ವಿಷಯದಲ್ಲಿ ನಾವು ಖಂಡಿತ ಯಾರನ್ನೂ ಅನುಸರಿಸಲಾರೆವು ಮತ್ತು ನಿಮ್ಮ ವಿರುದ್ಧ ಯುದ್ದ ಮಾಡಲಾದರೆ ನಾವು ನಿಮಗೆ ಸಹಾಯ ಮಾಡುವೆವು ಎನ್ನುತ್ತಾರೆ. ಆದರೆ ಇವರು ಸುಳ್ಳುಗಾರರೆಂಬುದಕ್ಕೆ ಅಲ್ಲಾಹನು ಸಾಕ್ಷ್ಯವಹಿಸುವನು .
Verse 12
لَئِنْ أُخْرِجُوا۟ لَا يَخْرُجُونَ مَعَهُمْ وَلَئِن قُوتِلُوا۟ لَا يَنصُرُونَهُمْ وَلَئِن نَّصَرُوهُمْ لَيُوَلُّنَّ ٱلْأَدْبَـٰرَ ثُمَّ لَا يُنصَرُونَ
Transliteration la-in ukh'rijū lā yakhrujūna maʿahum wala-in qūtilū lā yanṣurūnahum wala-in naṣarūhum layuwallunna l-adbāra thumma lā yunṣarūna
Kannada ಅವರು (ಯಹೂದ್ಯರು) ಹೊರಹಾಕಲ್ಪಟ್ಟರೆ ಇವರು (ಕಪಟ ವಿಶ್ವಾಸಿಗಳು) ಖಂಡಿತ ಅವರ ಜೊತೆ ಹೊರಡಲಾರರು. ಅವರ ವಿರುದ್ಧ ಯುದ್ಧ ಮಾಡ ಲಾದರೆ ಇವರು ಖಂಡಿತ ಅವರಿಗೆ ಸಹಾಯ ಮಾಡಲಾರರು. ಇನ್ನು ಇವರು ಅವರಿಗೆ ಸಹಾಯಕ್ಕೆ ಮುಂದೆ ಬಂದರೂ ಬೆನ್ನು ತಿರುಗಿಸಿ ಓಡುವರು. ಅನಂತರ ಯಹೂದಿಗಳು ಯಾವ ಸಹಾಯವನ್ನೂ ಪಡೆಯಲಾರರು.
Verse 13
لَأَنتُمْ أَشَدُّ رَهْبَةً فِى صُدُورِهِم مِّنَ ٱللَّهِ ۚ ذَٰلِكَ بِأَنَّهُمْ قَوْمٌ لَّا يَفْقَهُونَ
Transliteration la-antum ashaddu rahbatan fī ṣudūrihim mina l-lahi dhālika bi-annahum qawmun lā yafqahūna
Kannada ಅವರ ಹೃದಯಗಳಲ್ಲಿ ಅಲ್ಲಾಹನಿಗಿಂತ ಅಧಿಕವಾಗಿ ನಿಮ್ಮ ಬಗ್ಗೆ ಭಯವಿದೆ. ಏಕೆಂದರೆ ಇವರು ಕಾರ್ಯವನ್ನು ಗ್ರಹಿಸದ ಜನರಾಗಿದ್ದಾರೆ.
Verse 14
لَا يُقَـٰتِلُونَكُمْ جَمِيعًا إِلَّا فِى قُرًى مُّحَصَّنَةٍ أَوْ مِن وَرَآءِ جُدُرٍۭ ۚ بَأْسُهُم بَيْنَهُمْ شَدِيدٌ ۚ تَحْسَبُهُمْ جَمِيعًا وَقُلُوبُهُمْ شَتَّىٰ ۚ ذَٰلِكَ بِأَنَّهُمْ قَوْمٌ لَّا يَعْقِلُونَ
Transliteration lā yuqātilūnakum jamīʿan illā fī quran muḥaṣṣanatin aw min warāi judurin basuhum baynahum shadīdun taḥsabuhum jamīʿan waqulūbuhum shattā dhālika bi-annahum qawmun lā yaʿqilūna
Kannada ಕೋಟೆಗಳಿಂದಾವೃತವಾದ ಪಟ್ಟಣಗಳಿಂದ ಅಥವಾ ಗೋಡೆಗಳ ಮರೆಯಲ್ಲಿ ಅವಿತುಕೊಂಡು ಮಾತ್ರವಲ್ಲದೆ ಇವರು ಒಟ್ಟಾಗಿ ನಿಮ್ಮ ವಿರುದ್ಧ ಯುದ್ಧ ಮಾಡಲಾರರು. ಇವರು ತಮ್ಮ ಒಳಜಗ ಳಗಳಲ್ಲಿ ಬಹಳ ಕಠೋರರಾಗಿದ್ದಾರೆ. ನೀವು ಇವರನ್ನು ಸಂಘಟಿತರೆಂದು ಭಾವಿಸುತ್ತೀರಿ. ಆದರೆ, ಇವರ ಮನಸ್ಸುಗಳು ಛಿದ್ರವಾಗಿವೆ. ಇದು ಇವರು ಯೋಚಿಸಿ ಗ್ರಹಿಸಲಾರದ ಒಂದು ಜನತೆ ಯಾದ ಕಾರಣಕ್ಕೆ.
Verse 15
كَمَثَلِ ٱلَّذِينَ مِن قَبْلِهِمْ قَرِيبًا ۖ ذَاقُوا۟ وَبَالَ أَمْرِهِمْ وَلَهُمْ عَذَابٌ أَلِيمٌ
Transliteration kamathali alladhīna min qablihim qarīban dhāqū wabāla amrihim walahum ʿadhābun alīmun
Kannada ಇವರ ಸ್ಥಿತಿಯು, ಇವರಿಗಿಂತ ಸ್ವಲ್ಪವೇ ಕಾಲ ಹಿಂದೆ ಗತಿಸಿಹೋದ ಜನರಂತಿದೆ. ಅವರ ಕೃತ್ಯಗಳ ದುಷ್ಪರಿಣಾಮವನ್ನು ಅವರು ಸವಿದುಬಿಟ್ಟರು. ಇವರಿಗೆ ವೇದನಾಯುಕ್ತ ಶಿಕ್ಷೆ ಕಾದಿದೆ.
Verse 16
كَمَثَلِ ٱلشَّيْطَـٰنِ إِذْ قَالَ لِلْإِنسَـٰنِ ٱكْفُرْ فَلَمَّا كَفَرَ قَالَ إِنِّى بَرِىٓءٌ مِّنكَ إِنِّىٓ أَخَافُ ٱللَّهَ رَبَّ ٱلْعَـٰلَمِينَ
Transliteration kamathali l-shayṭāni idh qāla lil'insāni uk'fur falammā kafara qāla innī barīon minka innī akhāfu l-laha rabba l-ʿālamīna
Kannada ಇವರ ಉದಾಹರಣೆಯು ಶೈತಾನನಂತಿದೆ. ಅವನು ಮನುಷ್ಯನೊಡನೆ ಸತ್ಯವನ್ನು ನಿರಾಕರಿಸು ಎಂದು ಹೇಳಿದ ಸಂದರ್ಭ. ಕೊನೆಗೆ ಮನುಷ್ಯನು ಅವಿಶ್ವಾಸ ತಾಳಿದಾಗ ಶೈತಾನನು ‘ನಾನು ನಿನ್ನಿಂದ ಮುಕ್ತನಾಗಿದ್ದೇನೆ. ಸರ್ವಲೋಕಗಳ ಪಾಲಕ ಪ್ರಭುವಾದ ಅಲ್ಲಾಹನನ್ನು ನಾನು ಭಯಪಡುತ್ತೇನೆ’ ಎಂದನು.
Verse 17
فَكَانَ عَـٰقِبَتَهُمَآ أَنَّهُمَا فِى ٱلنَّارِ خَـٰلِدَيْنِ فِيهَا ۚ وَذَٰلِكَ جَزَٰٓؤُا۟ ٱلظَّـٰلِمِينَ
Transliteration fakāna ʿāqibatahumā annahumā fī l-nāri khālidayni fīhā wadhālika jazāu l-ẓālimīna
Kannada ಕೊನೆಗೆ ಇವರೀರ್ವರ ಅಂತಿಮ ಗತಿ ಶಾಶ್ವತರಾಗಿ ನರಕದಲ್ಲಿ ಕಳೆಯುವುದೇ ಆಯಿತು. ಇದೇ ಅಕ್ರಮಿಗಳಿಗಿರುವ ಪ್ರತಿಫಲ.
Verse 18
يَـٰٓأَيُّهَا ٱلَّذِينَ ءَامَنُوا۟ ٱتَّقُوا۟ ٱللَّهَ وَلْتَنظُرْ نَفْسٌ مَّا قَدَّمَتْ لِغَدٍ ۖ وَٱتَّقُوا۟ ٱللَّهَ ۚ إِنَّ ٱللَّهَ خَبِيرٌۢ بِمَا تَعْمَلُونَ
Transliteration yāayyuhā alladhīna āmanū ittaqū l-laha waltanẓur nafsun mā qaddamat lighadin wa-ittaqū l-laha inna l-laha khabīrun bimā taʿmalūna
Kannada ಸತ್ಯವಿಶ್ವಾಸಿಗಳೇ, ಅಲ್ಲಾಹನನ್ನು ಭಯಪಡಿರಿ. ಪ್ರತಿಯೊಬ್ಬನೂ ತಾನು ನಾಳೆಗಾಗಿ ಏನನ್ನು ಸಿದ್ಧ ಪಡಿಸಿಟ್ಟಿರುವೆನೆಂಬುದನ್ನು ನೋಡಿಕೊಳ್ಳಲಿ. ನೀವು ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿ ಯೂ ನೀವು ಮಾಡುತ್ತಿರುವ ಸಕಲ ಕರ್ಮಗಳ ಕುರಿತು ಅಲ್ಲಾಹನು ಸೂಕ್ಷ್ಮ ಜ್ಞಾನಿಯಾಗಿರುತ್ತಾನೆ.
Verse 19
وَلَا تَكُونُوا۟ كَٱلَّذِينَ نَسُوا۟ ٱللَّهَ فَأَنسَىٰهُمْ أَنفُسَهُمْ ۚ أُو۟لَـٰٓئِكَ هُمُ ٱلْفَـٰسِقُونَ
Transliteration walā takūnū ka-alladhīna nasū l-laha fa-ansāhum anfusahum ulāika humu l-fāsiqūna
Kannada ಅಲ್ಲಾಹನನ್ನು ಮರೆತು ಬಿಟ್ಟ ಜನರಂತೆ ನೀವಾಗ ಬಾರದು. ತನ್ಮೂಲಕ ಅಲ್ಲಾಹನು ಅವರಿಗೆ ಅವರ ಕುರಿತೇ ಮರೆಯುವಂತೆ ಮಾಡಿದನು. ಅವರೇ ದುರ್ಮಾರ್ಗಿಗಳು.
Verse 20
لَا يَسْتَوِىٓ أَصْحَـٰبُ ٱلنَّارِ وَأَصْحَـٰبُ ٱلْجَنَّةِ ۚ أَصْحَـٰبُ ٱلْجَنَّةِ هُمُ ٱلْفَآئِزُونَ
Transliteration lā yastawī aṣḥābu l-nāri wa-aṣḥābu l-janati aṣḥābu l-janati humu l-fāizūna
Kannada ನರಕದ ಜನರೂ ಸ್ವರ್ಗದ ಜನರೂ ಎಂದೂ ಸಮಾನರಾಗಲಾರರು. ಸ್ವರ್ಗಕ್ಕೆ ಹೋಗುವವರೇ ನಿಜವಾದ ವಿಜಯಿಗಳು.
Verse 21
لَوْ أَنزَلْنَا هَـٰذَا ٱلْقُرْءَانَ عَلَىٰ جَبَلٍ لَّرَأَيْتَهُۥ خَـٰشِعًا مُّتَصَدِّعًا مِّنْ خَشْيَةِ ٱللَّهِ ۚ وَتِلْكَ ٱلْأَمْثَـٰلُ نَضْرِبُهَا لِلنَّاسِ لَعَلَّهُمْ يَتَفَكَّرُونَ
Transliteration law anzalnā hādhā l-qur'āna ʿalā jabalin lara-aytahu khāshiʿan mutaṣaddiʿan min khashyati l-lahi watil'ka l-amthālu naḍribuhā lilnnāsi laʿallahum yatafakkarūna
Kannada ಈ ಖುರ್ಆನನ್ನು ನಾವು ಒಂದು ಪರ್ವತದ ಮೇಲೆ ಇಳಿಸಿ ಬಿಡುತ್ತಿದ್ದರೆ, ಅದು (ಪರ್ವತ) ಅಲ್ಲಾಹನ ಭಯದಿಂದ ವಿನೀತಗೊಳ್ಳುವುದನ್ನು , ಅಂಜಿ ತತ್ತರಿಸಿ ನುಚ್ಚುನೂರಾಗುವುದನ್ನು ನೀವು ಕಾಣುತ್ತಿದ್ದಿರಿ. ಜನರು ಚಿಂತಿಸಲೆಂದು ನಾವು ಅವರ ಮುಂದೆ ಈ ಉಪಮೆಗಳನ್ನು ವಿವರಿಸುತ್ತೇವೆ.
Verse 22
هُوَ ٱللَّهُ ٱلَّذِى لَآ إِلَـٰهَ إِلَّا هُوَ ۖ عَـٰلِمُ ٱلْغَيْبِ وَٱلشَّهَـٰدَةِ ۖ هُوَ ٱلرَّحْمَـٰنُ ٱلرَّحِيمُ
Transliteration huwa l-lahu alladhī lā ilāha illā huwa ʿālimu l-ghaybi wal-shahādati huwa l-raḥmānu l-raḥīmu
Kannada ಅವನೇ ಅಲ್ಲಾಹನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ದೃಶ್ಯಾ- ದೃಶ್ಯಗಳ ಜ್ಞಾನಿ. ಅವನು ಪರಮ ದಯಾಮಯನೂ ಕೃಪಾನಿಧಿಯೂ ಆಗಿರುತ್ತಾನೆ.
Verse 23
هُوَ ٱللَّهُ ٱلَّذِى لَآ إِلَـٰهَ إِلَّا هُوَ ٱلْمَلِكُ ٱلْقُدُّوسُ ٱلسَّلَـٰمُ ٱلْمُؤْمِنُ ٱلْمُهَيْمِنُ ٱلْعَزِيزُ ٱلْجَبَّارُ ٱلْمُتَكَبِّرُ ۚ سُبْحَـٰنَ ٱللَّهِ عَمَّا يُشْرِكُونَ
Transliteration huwa l-lahu alladhī lā ilāha illā huwa l-maliku l-qudūsu l-salāmu l-mu'minu l-muhayminu l-ʿazīzu l-jabāru l-mutakabiru sub'ḥāna l-lahi ʿammā yush'rikūna
Kannada ಅವನೇ ಅಲ್ಲಾಹನು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನು ಸಾಮ್ರಾಟನು, ಪರಮ ಪಾವನನು, ಶಾಂತಿದಾತನು, ಸಂರಕ್ಷಕನು, ಮೇಲ್ನೋಟಗಾರನು, ಪ್ರಬಲನು, ಪರಮಾಧಿಕಾರಿ. ಸರ್ವೋನ್ನತನು, ಜನರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು.
Verse 24
هُوَ ٱللَّهُ ٱلْخَـٰلِقُ ٱلْبَارِئُ ٱلْمُصَوِّرُ ۖ لَهُ ٱلْأَسْمَآءُ ٱلْحُسْنَىٰ ۚ يُسَبِّحُ لَهُۥ مَا فِى ٱلسَّمَـٰوَٰتِ وَٱلْأَرْضِ ۖ وَهُوَ ٱلْعَزِيزُ ٱلْحَكِيمُ
Transliteration huwa l-lahu l-khāliqu l-bāri-u l-muṣawiru lahu l-asmāu l-ḥus'nā yusabbiḥu lahu mā fī l-samāwāti wal-arḍi wahuwa l-ʿazīzu l-ḥakīmu
Kannada ಅವನೇ ಅಲ್ಲಾಹು. ಸೃಷ್ಟಿಕರ್ತನು, ಶೂನ್ಯದಿಂದ ಅಸ್ತಿತ್ವಕ್ಕೆ ತರುವವನು. ರೂಪುದಾಯಕನು. ಅವನಿಗೆ ಉತ್ತಮೋತ್ತಮ ನಾಮಗಳಿವೆ. ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನ ಮಹತ್ವವನ್ನು ಕೊಂಡಾಡುತ್ತಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.
Read Surah Al-Hashr in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.